ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Geography Std 7th - ಭೂಗೋಲ 7ನೇ ತರಗತಿ ಪ್ರಶ್ನೋತ್ತರಗಳು

 Geography Std 7th - ಭೂಗೋಲ 7ನೇ ತರಗತಿ ಪ್ರಶ್ನೋತ್ತರಗಳು 

 


 

ಪಾಠ ೧ ಋತು ನಿರ್ಮಾಣ (ಭಾಗ ೧)

ಪ್ರಶ್ನೆ೧:- ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

೧) ಪೃಥ್ವಿಯ ಮೇಲೆ ಹಗಲು ಮತ್ತು ರಾತ್ರಿ ಏಕೆ ಆಗುತ್ತವೆ?

ಉತ್ತರ:- ಪೃಥ್ವಿಯ ಪರಿವಲನೆಯಿಂದ ಪೃಥ್ವಿಯ ಮೇಲೆ ಹಗಲು ಮತ್ತು ರಾತ್ರಿ ಆಗುತ್ತವೆ.

೨) ಪೃಥ್ವಿಯ ಸೂರ್ಯನ ಸುತ್ತಲೂ ಪ್ರದಕ್ಷಿಣೆ ಹಾಕುವ ಕ್ರೀಯೆಗೆ ಏನು ಅನ್ನುವರು?

ಉತ್ತರ:- ಪೃಥ್ವಿಯ ಸೂರ್ಯನ ಸುತ್ತಲೂ ಪ್ರದಕ್ಷಿಣೆ ಹಾಕುವ ಕ್ರೀಯೆಗೆ ಪರಿಭ್ರಮಣ ಎನ್ನುತ್ತಾರೆ.

೩) ಪೃಥ್ವಿಗೆ ಪರಿಭ್ರಮಣ ಕ್ರೀಯೆಗೆ ಏಷ್ಟು ಕಾಲಾವಧಿ ತಗಲುವದು?

ಉತ್ತರ:- ಪೃಥ್ವಿಯ ಪರಿಭ್ರಮಣ ಕ್ರಿಯೆಗೆ ೩೬೫ ದಿವಸ ೬ ಘಂಟೆ ತಗಲುವದು.

೪) ನಮ್ಮ ದೇಶ ಯಾವ ಗೊಲಾರ್ಧದಲ್ಲಿ ಇದೆ?

ಉತ್ತರ:- ನಮ್ಮ ದೇಶ ಉತ್ತರ ಗೋಲಾರ್ಧದಲ್ಲಿ ಇದೆ.

೫) ಪೃಥ್ವಿಯಮೆಲೆ ಸೂರ್ಯಕಿರಣ ಎಲ್ಲ ಕಡೆಗೆ ಲಂಬರೂಪವಾಗಿ ಏಕೆ ಬಿಳುವದಿಲ್ಲ?

ಉತ್ತರ:- ಪೃಥ್ವಿಯ ಪರಿವಲನೆ ಮತ್ತು ಪೃಥ್ವಿಯ ಕಲೆಯ ದಂಡೆ ಮತ್ತು ಸೂರ್ಯನ ಭಾಸಮಾನ ಭ್ರಮಣ ಇದರಿಂದ ಪೃಥ್ವಿಯಮೇಲೆ ಸೂರ್ಯಕಿರಣಗಳು ಎಲ್ಲ ಕಡೆಗೆ ಲಂಬ ರೂಪವಾಗಿ ಬಿಳುವದಿಲ್ಲ.

 

ಪಾಠ ೨ ಸೂರ್ಯ, ಚಂದ್ರ ಹಾಗೂ ಪೃಥ್ವಿ

ಪ್ರಶ್ನೆ೧:- ತಪ್ಪು ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ.

೧) ಚಂದ್ರನು ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವನು.

ಉತ್ತರ:-  ಈ ವಿಧಾನ ತಪ್ಪು ಇದೆ.

        ಚಂದ್ರ ಸೂರ್ಯನ ಸುತ್ತ ಅಪ್ರತ್ಯಕ್ಷರಿತಿಯಿಂದ ಪ್ರದಕ್ಷಿಣೆ ಹಾಕುವನು. ಆದರೆ ಪೃಥ್ವೀಗೆ ಪ್ರದಕ್ಷಣೆ ಹಾಕುವನು.

೨) ಹುಣ್ಣಿಮೆಯ ದಿನ ಚಂದ್ರ, ಸೂರ್ಯ ಹಾಗೂ ಪೃಥ್ವಿ ಇದೇ ಕ್ರಮದಲ್ಲಿ ಇರುವರು.

ಉತ್ತರ:- ಈ ವಿಧಾನ ತಪ್ಪು ಇದೆ.

        ಹುಣ್ಣಿಮೆಯ ದಿನ ಚಂದ್ರ ಪೃಥ್ವಿ ಮತ್ತು ಸೂರ್ಯ ಹೀಗೆ ಕ್ರಮದಲ್ಲಿ ಇರುವರು.

೩) ಪೃಥ್ವಿಯ ಪರಿಭ್ರಮಣ ಕಕ್ಷೆ ಹಾಗೂ ಚಂದ್ರನ ಪರಿಭ್ರಮಣ ಕಕ್ಷೆ ಒಂದೇ ಪಾತಳಿಯಲ್ಲಿ ಇರುವವು.

ಉತ್ತರ:-  ಈ ವಿಧಾನ ತಪ್ಪು ಇದೆ.

      ಪೃಥ್ವಿಯ ಪರಿಭ್ರಮಣ ಕಕ್ಷೆ ಹಾಗೂ ಚಂದ್ರನ ಪರಿಭ್ರಮಣ ಕಕ್ಷೆ ಲಂಬ ವರ್ತುಳಾಕಾರ ಇರುವವು.

೪) ಚಂದ್ರನ ಒಂದು ಪರಿಭ್ರಮಣ ಕಾಲದಲ್ಲಿ ಚಂದ್ರನ ಕಕ್ಷೆ ಪೃಥ್ವಿಯ ಕಕ್ಷೆಯನ್ನು ಒಂದೇ ಸಲ ಛೇದಿಸುತ್ತದೆ.

ಉತ್ತರ:- ಈ ವಿಧಾನ ತಪ್ಪು ಇದೆ.

     ಚಂದ್ರನ ಒಂದು ಪರಿಭ್ರಮಣ ಕಾಲದಲ್ಲಿ ಚಂದ್ರನ ಕಕ್ಷೆ ಪೃಥ್ವಿಯ ಕಕ್ಷೆಯನ್ನು ಎರಡು ಸಲ ಛೇದಿಸುತ್ತದೆ.

೫) ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಯೋಗ್ಯ.

ಉತ್ತರ:- ಈ ವಿಧಾನ ತಪ್ಪು ಇದೆ.

    ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಅಯೋಗ್ಯ ಇದೆ.

೬) ಚಂದ್ರನು ಪೃಥ್ವಿಯೊಂದಿಗೆ ಉಪಭೂಸ್ಥಿತಿಯಲ್ಲಿ ಇರುವಾಗ ಕಂಕಣಾಕೃತಿ ಸೂರ್ಯಗೃಹಣ ಸಂಭವಿಸುವದು.

ಉತ್ತರ:- ಈ ವಿಧಾನ ತಪ್ಪು ಇದೆ.

    ಚಂದ್ರನು ಪೃಥ್ವಿಯೊಂದಿಗೆ ಅಪಭೂಸ್ಥಿತಿಯಲ್ಲಿ ಇರುವಾಗ ಕಂಕಣಾಕೃತಿ ಸೂರ್ಯಗೃಹಣ ಸಂಭವಿಸುವದು.

ಪ್ರಶ್ನೆ೨:- ಯೋಗ್ಯ ವಾದ ಪರ್ಯಾಯಗಳನ್ನು ಆರಿಸಿರಿ.

೧) ಸೂರ್ಯ ಗ್ರಹಣ

 ಉತ್ತರ:- ಬ ) ಸೂರ್ಯ, ಚಂದ್ರ , ಪೃಥ್ವಿ

೨) ಕಂಕಣಾಕೃತಿ ಸೂರ್ಯಗ್ರಹಣದ ಹೊತ್ತಿನಲ್ಲಿ ಕಾಣಿಸುವ ಸೂರ್ಯಬಿಂಬ

         ಉತ್ತರ;-

೩) ಚಂದ್ರನ ಅಪಭೂಸ್ಥಿತಿ

ಉತ್ತರ;-

ಪ್ರಶ್ನೆ೩;- ಮುಂದಿನ ಕೋಷ್ಟಕ ಪೂರ್ಣಗೊಳಿಸಿರಿ.

 

 

ವಿವರಣೆ / ವೈಶಿಶ್ಟ್ಯೆಗಳು

ಚಂದ್ರಗ್ರಹಣ

ಸೂರ್ಯಗ್ರಹಣ

ತಿಥಿ ದಿವಸ

ಹುಣ್ಣಿಮೆ

ಅಮವಾಸ್ಯೆ

ಸ್ಥಿತಿ

ಚಂದ್ರ- ಪೃಥ್ವಿ – ಸೂರ್ಯ

ಪೃಥ್ವಿ – ಚಂದ್ರ –ಸೂರ್ಯ

ಗ್ರಹಣದ ಪ್ರಕಾರಗಳು

1) ಖಗ್ರಾಸ ಚಂದ್ರ ಗ್ರಹಣ

2) ಖಂಡಗ್ರಾಸ ಚಂದ್ರಗ್ರಹಣ

1) ಖಗ್ರಾಸ ಸೂರ್ಯ ಗ್ರಹಣ

2) ಖಂಡಗ್ರಾಸ ಸೂರ್ಯ ಗ್ರಹಣ

3) ಕಂಕಣಾಕೃತಿ ಸೂರ್ಯ ಗ್ರಹಣ

ಖಗ್ರಾಸದ ಹೆಚ್ಚಿನ ಕಾಲಾವಧಿ

107 ನಿಮಿಷ

7 ನಿಮಿಷ 20 ಸೆಕೆಂದು

ಪ್ರಶ್ನೆ ೪;- ಆಕೃತಿ ಬಿಡಿಸಿ ಹೆಸರು ಬರೆಯಿರಿ.

೧) ಖಗ್ರಾಸ ಹಾಗೂ ಖಂಡಗ್ರಾಸ ಸೂರ್ಯ ಗ್ರಹಣ

ಉತ್ತರ:


೨) ಖಗ್ರಾಸ ಹಾಗೂ ಖಂಡಗ್ರಾಸ ಚಂದ್ರ  ಗ್ರಹಣ

ಉತ್ತರ;- 




ಪ್ರಶ್ನೆ ೪;- ಉತ್ತರ ಬರೆಯಿರಿ.

೧) ಪ್ರತಿಯೊಂದು ಅಮವಾಸ್ಯೆ ಹಾಗೂ ಹುಣ್ಣಿಮೆಗಳಂದು ಚಂದ್ರ, ಪೃಥ್ವಿ, ಸೂರ್ಯ ಇವು ಒಂದು ಸರಳ ರೇಷೆಯಲ್ಲಿ ಏಕೆ ಬರುವದಿಲ್ಲ?

ಉತ್ತರ;- ಪೃಥ್ವಿಯ ಪರಿಭ್ರಮಣ ಕಕ್ಷೆ ಮತ್ತು ಚಂದ್ರನ ಪರಿಭ್ರಮಣ ಕಕ್ಷೆ ಯಾವಾಗಲೂ ಒಂದೇ ಪಾತಳಿಯಲ್ಲಿ ಇರುವದಿಲ್ಲ. ಚಂದ್ರನ ಪರಿಭ್ರಮಣ ಕಕ್ಷೆ ಪೃಥ್ವಿಯ ಪರಿಭ್ರಮಣ ಕಕ್ಷೆಯ ಸುಮಾರು ೫  ಅಂಶದ ಕೋನ ಇರುವದು. ಪರಿಣಾಮವಾಗಿ ಪ್ರತಿಯೊಂದು ಪರಿಭ್ರಮಣದಲ್ಲಿ ಚಂದ್ರ ಪೃಥ್ವಿಯ ಪರಿಭ್ರಮಣ ಕಕ್ಷಕ್ಕೆ ಎರಡು ಬಾರಿ ಛೆದಿಸುವದು. ಪ್ರತಿಯೊಂದು ಅಮವಾಸ್ಯೆಗೆ ಸೂರ್ಯ, ಚಂದ್ರ, ಪೃಥ್ವಿ ಇವುಗಳನ್ನು ಜೋಡಿಸುವ ರೆಷೆಯಲ್ಲಿ ಶೂನ್ಯ ಅಂಶ ಕೋನ ಇರುವದು. ಆದ್ದರಿಂದ ಹುಣ್ಣಿಮೆಗೆ ಅದು ೧೮೦ ಅಂಶ ಇರುವದು. ಆದ್ದರಿಂದ ಪ್ರತಿಯೊಂದು ಅಮವಾಸ್ಯೆ ಹಾಗೂ ಹುಣ್ಣಿಮೆಗಳಂದು ಚಂದ್ರ, ಪೃಥ್ವಿ, ಸೂರ್ಯ ಇವು ಒಂದು ಸರಳ ರೇಷೆಯಲ್ಲಿ ಬರುವದಿಲ್ಲ.

೨) ಖಗ್ರಾಸ ಸೂರ್ಯಗ್ರಹಣ ಆಗುತ್ತಿರುವಾಗ ಪೃಥ್ವಿಯ ಮೇಲೆ ಖಂಡಗ್ರಾಸ ಸೂರ್ಯ ಗ್ರಹಣವೂ ಏಕೆ ಸಂಭವಿಸುತ್ತದೆ?

ಉತ್ತರ;- ಸೂರ್ಯ ಮತ್ತು ಪೃಥ್ವಿ ಇವುಗಳ ನಡುವೆ ಚಂದ್ರ ಬಂದಾಗ ಚಂದ್ರನ ನೆರಳು ಪೃಥ್ವಿಯ ಮೇಲೆ ಬಿಳುವದು. ಇಂಥಸ್ಥಿತಿಯಲ್ಲಿ ಈ ಮೂರು ಖಗೋಲಿಯ ಸಮಪಾತಳಿಯಲ್ಲಿ ಮತ್ತು ಒಂದು ಸರಳ ರೇಷೆಯಲ್ಲಿ ಇರುವದು. ಆದ್ದರಿಂದ ಹಗಲಿನಲ್ಲಿ ಚಂದ್ರನ ನೆರಳು ಪೃಥ್ವಿಯ ಮೇಲೆ ಯಾವ ಸ್ಥಳದಲ್ಲಿ  ಬಿಳುವದು ಅಲ್ಲಿ ಸೂರ್ಯಗ್ರಹಣ  ಕಂಡು ಬರುವದು. ಇಂಥ ನೆರಳು ಎರಡು ಪ್ರಕಾರದು ಬಿಳುವದು. ಮಧ್ಯಭಾಗದಲ್ಲಿ ಅದು ದಟ್ಟ ಇರುವದು  ದಂಡೆಗೆ ವಿರಳ ಇರುವದು. ಪೃಥ್ವಿಯ ಯಾವ ಭಾಗದಲ್ಲಿ ದಟ್ಟ ನೆರಳು ಕಂಡು ಬರುವದು ಅಲ್ಲಿ ಖಗ್ರಾಸ ಸೂರ್ಯಗ್ರಹಣ ಕಂಡು ಬರುವದು. ಅದೇ ವೇಳೆಗೆ ಪೃಥ್ವಿಯ ಯಾವಭಾಗದಲ್ಲಿ ವಿರಳ ನೆರಳು ಕಂಡು ಬರುವದು ಅಲ್ಲಿ ಖಂಡಗ್ರಾಸ ಸೂರ್ಯಗ್ರಹಣ ಕಂಡು ಬರುವದು.

೩) ಗ್ರಹಣದ ಬಗೆಗಿನ ತಪ್ಪು ತಿಳುವಳಿಕೆ (ಮೂಢ ನಂಬಿಕೆ) ಗಳನ್ನು ದೂರ ಮಾಡುವಂತಹ ಉಪಾಯಗಳನ್ನು ಹೇಳಿರಿ.

ಉತ್ತರ;- ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಇವು ಕೆವಲ ಖಗೋಲಿಯ ಸ್ಥಿತಿ ಇದ್ದು ಇದರಲ್ಲಿ ಶುಭ ಮತ್ತು ಅಶುಭ ಎನೂ ಇರುವದಿಲ್ಲ. ಸೂರ್ಯ ಮತ್ತು ಚಂದ್ರ, ಪೃಥ್ವಿ ಇವು ವಿಶಿಷ್ಟ ಸ್ಥಿತಿಯಲ್ಲಿ ಬರುವ ಇದೊಂದು ಖಗೋಲಿಯ ಪರಿಣಾಮವಿದೆ. ಇಂಥ ಘಟನೆಗಳು ಅವಕಾಶದಲ್ಲಿ ಘಟಿಸುತ್ತವೆ. ಈ ಘಟನೆಗಳ ಹಿಂದೆ ಯಾವುದೇ ದೈವಿ ಕಾರಣವಿರದೇ ಇದೊಂದು ಕೇವಲ ಅಂಧಶ್ರಧೆ ಇದೆ.

೪) ಸೂರ್ಯಗ್ರಹಣವನ್ನು ನೊಡುವಾಗ ಯಾವ ಕಾಳಜಿಗಳನ್ನು ವಹಿಸಬೇಕು?

ಉತ್ತರ:- ಸೂರ್ಯಗ್ರಹಣವನ್ನು ನೋಡುವಾಗ ಕಪ್ಪು ಗಾಜು ಇಲ್ಲವೆ ವಿಶಿಷ್ಟ ಪ್ರಕಾರದ ಗಾಗಲ್ ಗಳನ್ನು ಉಪಯೋಗಿಸುವುದು ಅವಶ್ಯ. ಏಕೆಂದರೆ ಸೂರ್ಯನ ಪ್ರಖರ ಕಿರಣಗಳಿಂದ ಕಣ್ಣಿಗೆ ತೊಂದರೆ ಆಗುವ ಸಂಭವವಿದೆ.

೫) ಉಪಭೂ ಸ್ಥಿತಿಯಲ್ಲಿ ಯಾವ ಸೂರ್ಯಗ್ರಹಣಗಳು ಸಂಭವಿಸಬಲ್ಲವು?

ಉತ್ತರ:- ಉಪಭೂಸ್ಥಿತಿಯಲ್ಲಿ ಖಗ್ರಾಸ ಸೂರ್ಯಗ್ರಹಣಗಳು ಸಂಭವಿಸಬಲ್ಲವು.

  

 

ಪಾಠ ೩ ಭರತ ಇಳಿತ

ಪ್ರಶ್ನೆ೧:- ಜೋಡಿಗಳನ್ನು ಹೊಂದಿಸಿ ಸರಪಣಿ ಮಾಡಿರಿ.

ಗುಂಪು        

ಗುಂಪು

ಗುಂಪು

ಅಲೆಗಳು

 ಅಷ್ಟಮಿ

 ವಸ್ತು ಹೊರಗಡೆ ಚೆಲ್ಲಲ್ಪಡುವುದು.

ಕೇAದ್ರಗಾಮಿ ಪ್ರೇರಣೆ

   ಅಮವಾಸ್ಯೆ

 ಎಲ್ಲಕ್ಕಿಂತ ದೊಡ್ಡ ಭರತ ಆ ದಿನ ಇರುವುದು.

ಗುರುತ್ವದ ಶಕ್ತಿ

  ಪೃಥ್ವಿಯ ಭ್ರಮಣ

 ಭೂಕಂಪ ಹಾಗೂ ಜ್ವಾಲಾಮುಖಿಗಳಿಂದಲೂ ನಿರ್ಮಾಣವಾಗುವುದು.

ಆವೇಶದ ಭರತ

ಚಂದ್ರ,ಸೂರ್ಯ ಹಾಗೂ ಪೃಥ್ವಿ

ಚಂದ್ರ ಹಾಗೂ ಸೂರ್ಯರ ಪ್ರೇರಣೆ ಬೇರೆ ದಿಕ್ಕುಗಳಲ್ಲಿ ಕಾರ್ಯ ಮಾಡುವವು. 

ಕೆಳಮಟ್ಟದ ಭರತ

 ಗಾಳಿ

ಪೃಥ್ವಿಯ ಮದ್ಯದ ದಿಕ್ಕಿನಲ್ಲಿ ಕಾರ್ಯ ಮಾಡುವುದು. 

    

 ಉತ್ತರ:- ೧) ಅಲೆಗಳು ಗಾಳಿ ಭೂಕಂಪ ಹಾಗೂ ಜ್ವಾಲಾಮುಖಿಗಳಿಂದಲೂ ನಿರ್ಮಾಣವಾಗುವುದು.

          ೨) ಕೇಂದ್ರಗಾಮಿ ಪ್ರೇರಣೆ ಪೃಥ್ವಿಯ ಭ್ರಮಣ ವಸ್ತು ಹೊರಗಡೆ ಚೆಲ್ಲಲ್ಪಡುವುದು.

          ೩) ಗುರುತ್ವದ ಶಕ್ತಿ  ಎಲ್ಲಕ್ಕಿಂತ ದೊಡ್ಡ ಭರತ ಅಮವಾಸ್ಯೆ ದಿನ ಇರುವುದು.

 ೪) ಆವೇಶದ ಭರತ ಚಂದ್ರ,ಸೂರ್ಯ ಹಾಗೂ ಪೃಥ್ವಿ ಪೃಥ್ವಿಯ ಮದ್ಯದ ದಿಕ್ಕಿನಲ್ಲಿ ಕಾರ್ಯ ಮಾಡುವುದು

೫) ಕೆಳಮಟ್ಟದ ಭರತ ಅಷ್ಟಮಿ ಚಂದ್ರ ಹಾಗೂ ಸೂರ್ಯರ ಪ್ರೇರಣೆ ಬೇರೆ ದಿಕ್ಕುಗಳಲ್ಲಿ ಕಾರ್ಯ ಮಾಡುವವು.

ಪ್ರಶ್ನೆ೨:- ಭೌಗೋಲಿಕ ಕಾರಣಗಳನ್ನು ಹೇಳಿರಿ.

೧) ಭರತ-ಇಳಿತಗಳ ಮೇಲೆ ಸೂರ್ಯನಿಗಿಂತ ಚಂದ್ರನ ಪರಿಣಾಮ ಹೆಚ್ಚು ಆಗುವದು.

ಉತ್ತರ:- ಸೂರ್ಯನಕ್ಕಿಂತ ಚಂದ್ರ ಪೃಥ್ವಿಯ ಸಮೀಪ ಇರುವದರಿಂದ ಪೃಥ್ವಿಯ ಮೇಲೆ ಚಂದ್ರನ ಗುರುತ್ವಾಕರ್ಷ  ಶಕ್ತಿ ಸೂರ್ಯನ ಗುರುತ್ವಾಕರ್ಷ ಶಕ್ತಿಗಿಂತ ಹೆಚ್ಚು ಪರಿಣಾಮ ಮಾಡುವದು ಆದ್ದರಿಂದ ಭರತ-ಇಳಿತಗಳ ಮೇಲೆ ಸೂರ್ಯನಿಗಿಂತ ಚಂದ್ರನ ಪರಿಣಾಮ ಹೆಚ್ಚು ಆಗುವದು.

೨) ಕೆಲವು ಸ್ಥಳಗಳಲ್ಲಿ ದಂಡೆ ಪ್ರದೇಶದ ಆಳವಾದ ಭಾಗ ಕೆಸರು ಪ್ರದೇಶ ಆಗುವುದು.

ಉತ್ತರ:- ಸಮುದ್ರಕ್ಕೆ  ಭರತ ಬಂದ ನAತರ ಅದರಲ್ಲಿಯ ಕೆಲವು ನೀರು ದಂಡೆ ಪ್ರದೇಶದಲ್ಲಿ ಸಂಗ್ರಹ ಆಗುವವು. ಆದ್ದರಿಂದ ಕೆಲವು ಸ್ಥಳಗಳಲ್ಲಿ ದಂಡೆ ಪ್ರದೇಶದ ಆಳವಾದ ಭಾಗ ಕೆಸರು ಪ್ರದೇಶ ಆಗುವುದು.

೩) ಭರತ- ಇಳಿತದ ಸ್ಥಳಗಳ ವಿರುದ್ಧದ ರೇಖಾವೃತ್ತಗಳ ಮೇಲೂ ಭರತ-ಇಳಿತಗಳು ಸಂಭವಿಸುವವು.

ಉತ್ತರ:- ಸೂರ್ಯಕ್ಕಿಂತ ಚಂದ್ರ ಪೃಥ್ವಿಯ ಸಮೀಪ ಇರುವನು, ಅದರಿಂದ ಪೃಥ್ವಿಯ ಮೇಲೆ ಚಂದ್ರನ ಗುರುತ್ವಾಕರ್ಷ ಶಕ್ತಿ ಸೂರ್ಯನ ಗುರುತ್ವಾಕರ್ಷ ಶಕ್ತಿಗಿಂತ ಹೆಚ್ಚು ಪರಿಣಾಮ ಮಾಡುವದು. ಚಂದ್ರ, ಸೂರ್ಯ, ಮತ್ತು ಪೃಥ್ವಿ ಇವುಗಳಲ್ಲಿಯ ಸಾಪೆಕ್ಷ ಸ್ಥಿತಿಯಿಂದ ಭರತ-ಇಳಿತ ಆಗುವದು. ಪೃಥ್ವಿಯ ಮೇಲೆ ಯಾವ ಸ್ಥಳದಲ್ಲಿ ಭರತ-ಇಳಿತ ಆಗುವದು ಅದರ ವಿರುದ್ಧದ ರೇಖಾವೃತ್ತಗಳ ಮೇಲೂ ಭರತ-ಇಳಿತಗಳು ಸಂಭವಿಸುವವು. ಇದು ಪೃಥ್ವಿಯ ಕೆಂದ್ರೊತ್ಸರಿ ಶಕ್ತಿಯ ಪರಿಣಾಮವಾಗಿದೆ.

ಪ್ರಶ್ನೆ ೩:- ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

೧) ಬೆಳ್ಳಿಗ್ಗೆ ೭ ಗಂಟೆಗೆ ಭರತ ಸಂಭವಿಸಿದರೆ, ಆ ದಿನದ ಮುಂದಿನ ಇಳಿತ- ಭರತಗಳ ಸಮಯ ಯಾವದಿರಬಹುದು ಎಂಬುದನ್ನು ಹೇಳಿರಿ.

ಉತ್ತರ:- ಮುಂಜಾನೆ ೭ ಗಂಟೆಗೆ  ಭರತವಾದರೆ ಅದೇ ದಿವಸ ಮುಂದಿನ ಇಳಿತ ಆರು ತಾಸಿನ ನಂತರ ಅಂದರೆ ಮಧ್ಯಾನ್ಹ ೧.೦೦ ಗಂಟೆಗೆ ಸಂಭವಿಸುವದು. ಅದರ ಹಾಗೆ ರಾತ್ರಿ ೭.೦೦ ಗಂಟೆಗೆ ಭರತ ಸಂಭವಿಸುವದು. ಸ್ಥಳ ಅನುಸಾರ ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗುವದು.

೨) ಮುಂಬಯಿ (೭೩ ಅಂಶ ಪೂರ್ವ ರೇಖಾವೃತ್ತ) ಯಲ್ಲಿ ಗುರುವಾರ ಮಧ್ಯಾಹ್ನದಲ್ಲಿ ೧.೦೦ ಗಂಟೆಗೆ ಭರತ ಬಂದರೆ ಆಗ ಬೇರೆ ಯಾವ ರೇಖಾವೃತ್ತದ ಮೇಲೆ ಭರತ ಇರಬಹುದು ಎಂಬುದನ್ನು ಕಾರಣ ನೀಡಿ ಬರೆಯಿರಿ.

ಉತ್ತರ:- ಒಂದು ವೇಳೆ ಮುಂಬಯಿ (೭೩ ಅಂಶ ಪೂರ್ವ ರೇಖಾವೃತ್ತ) ಯಲ್ಲಿ ಗುರುವಾರ ಮಧ್ಯಾಹ್ನದಲ್ಲಿ ೧.೦೦ ಗಂಟೆಗೆ ಭರತ ಬಂದರೆ ಅದೇ ವೆಳೆ ಎರಡನೆಯ ೧೦೭ಅಂಶ ಪಶ್ಚಿಮ ಈ ರೇಖಾವೃತ್ತದ ಮೆಲೆ ಭರತ ಇರುವದು; ಕಾರಣ ಚಂದ್ರ, ಸೂರ್ಯ ಮತ್ತು ಪೃಥ್ವಿ ಇವುಗಳ ಸಾಪೆಕ್ಷ ಸ್ಥಿತಿಯಿಂದ ಭರತ-ಇಳಿತಗಳಾಗುತ್ತವೆ. ಪೃಥ್ವಿಯ ಮೇಲೆ ಯಾವ ಸ್ಥಳದಲ್ಲಿ ಭರತ-ಇಳಿತ ಆಗುವದು ಅದರ ವಿರುದ್ಧ ಸ್ಥಳದಲ್ಲಿ ಅದೇ ವೇಳೆ ಅನುಕ್ರಮವಾಗಿ ಭರತ ಅಥವಾ ಇಳಿತ ಆಗುವದು. ಇದು ಪೃಥ್ವಿಯ ಕೆಂದ್ರೊತ್ಸರಿ ಶಕ್ತಿಯ ಪರಿಣಾಮವಾಗಿದೆ.

೩) ಅಲೆಗಳು ನಿರ್ಮಾಣವಾಗಲು ಕಾರಣಗಳನ್ನು ಸ್ಪಷ್ಟ ಪಡಿಸಿರಿ.

ಉತ್ತರ:- ಗಾಳಿಯಿಂದಾಗಿ ಸಾಗರದ ನೀರು ಎತ್ತಲ್ಪಡುವದು ಹಾಗೂ ಅದರ ಎದುರಿನಲ್ಲಿ ಆಳವಾದ ಭಾಗ ತಯಾರಾಗುವುದು. ಅಲೆಯ ಎತ್ತರದ ಭಾಗಕ್ಕೆ ಶೀರ್ಷ ಹಾಗೂ ಆಳವಾದ ಭಾಗಕ್ಕೆ ದ್ರೋಣಿ ಎನ್ನುವರು. ವೇಗವಾದ ಗಾಳಿ ಒಂದೇ ದಿಕ್ಕಿನಲ್ಲಿ ಹರಿಯುತ್ತಿದ್ದರೆ ದೊಡ್ಡ ಅಲೆಗಳು ನಿರ್ಮಾಣ ಆಗುವುದು. ಶೀರ್ಷ ಹಾಗೂ ದ್ರೋಣಿ ಇವುಗಳಲ್ಲಿಯ  ಎತ್ತರವಾದ ಅಂತರ ಇದು ಅಲೆಯ ಎತ್ತರ ಇರುವುದು, ಎರಡು ಶೀರ್ಷಗಳ ಮಧ್ಯ ಅಥವಾ ಎರಡು ದ್ರೋಣಿಗಳ ಮಧ್ಯದ ಅಂತರ ಇದು ಅಲೆಯ ಉದ್ದಳತೆ ಇರುವದು.ಅಲೆಯ ಉದ್ದಳತೆ, ಎತ್ತರ ಹಾಗೂ ಅದರ ವೇಗ ಗಾಳಿಯ ವೇಗವನ್ನು ಅವಲಂಬಿಸಿರುತ್ತದೆ.

ಪ್ರಶ್ನೆ ೪:- ಭರತ-ಇಳಿತ ಸಂಬAಧ ಮುಂದಿನ ವಿಷಯಗಳ ಕುರಿತು ಹೇಗೆ ಇರಬಹುದು ಎಂಬುದನ್ನು ಬರೆಯಿರಿ.

೧) ಈಜಾಟ :- ಭರತ-ಇಳಿತಗಳ ಅಂದಾಜು ಬರದೇಇದ್ದಾಗ ಈಜಲು ಹೊದರೆ ಆ ವ್ಯಕ್ತಿಯ ಅಫಘಾತವಾಗುವ ಸಂಭವ ಇರುವದು.

೨) ಹಡಗು ನಡೆಸುವದು:- ಭರತದ ವೇಳೆಗೆ ಹಡಗು ಬಂದರದಲ್ಲಿ ತರಲು ಬರುವದು.

೩) ಮೀನು ಗಾರಿಕೆ :- ಭರತದ ವೇಳೆಗೆ ಮೀನುಗಳು ಸಮುದ್ರದಂಡೆಗೆ ಬರುವವು ಅದರ ಲಾಭ ಮೀನುಗಾರಿಕೆಗೆ ಆಗುವದು.

೪) ಉಪ್ಪಿನ ತಯಾರಿಕೆ:- ಭರತಿಯ ವೇಳೆಗೆ ಉಪ್ಪಿನ ನೀರು ಉಪ್ಪಿನ ಬಂದರದಲ್ಲಿ ಸಂಗ್ರಹಿಸಿ ಉಪ್ಪು ತಯಾರಿಸುವರು.

೫) ಸಾಗರ ತೀರದ ಪ್ರವಾಸಕ್ಕೆ ಹೋಗುವದು :- ಸಾಗರದ ದಂಡೆಗೆ ಪ್ರವಾಸಕ್ಕೆ ಹೋಗುವಾಗ ನಾವು ಭರತ-ಇಳಿತದ ಅಂದಾಜು ತಗೆದುಕೊಳ್ಳಬೇಕಾಗುವದು.ಅನ್ಯಥಾ ಗಂಭೀರ ದುರ್ಗಟನೆ ಸಂಭವಿಸುವದು. ಆದ್ದರಿಂದ ಭರತ-ಇಳಿತದ ಮಾಹಿತಿ ಮಾಡಿಕೊಳ್ಳಬೆಕು. ಸಮುದ್ರದಂಡೆಯ ಪ್ರವಾಹ ಇದರ ವಿಚಾರ ಮತ್ತು ಸ್ಥಾನಿಕರೊಂದಿಗೆ ಚರ್ಚೆಮಾಡಿ ನಂತರ ಸಮುದ್ರದಲ್ಲಿ ಆಡುವ ಆನಂದ ತಗೆದುಕೊಳ್ಳಬೆಕು. ಯಾವುದೇ ಕಾರಣಕ್ಕೆ ಅತೀ ಉತ್ಸಾಹಿ ಧೈರ್ಯ ತೊರಿಸಬಾರದು ಇದರಿಂದ ಅಪಾಯ ಸಂಭವಿಸಬಹುದು.

ಪ್ರಶ್ನೆ ೫:- ಕೆಳಮಟ್ಟದ ಭರತ-ಇಳಿತಗಳನ್ನು ಆಕೃತಿ ೩.೮ ರಲ್ಲಿ ನಿರೀಕ್ಷಿಸಿರಿ ಮತ್ತು ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರಿಯಿರಿ.

 


೧) ಆಕೃತಿ ಯಾವ ತಿಥಿಯದು ಇದೆ?

ಉತ್ತರ:- ಈ ಆಕೃತಿ ಪ್ರತಿತಿಂಗಳ ಶುಕ್ಲ ಮತ್ತು ಕೃಷ್ಣ ಪಕ್ಷದಲ್ಲಿಯ ಅಷ್ಟಮಿ ಈ ತಿಥಿಯದಿದೆ.

೨) ಚಂದ್ರ, ಸೂರ್ಯ ಹಾಗೂ ಪೃಥ್ವಿ ಇವುಗಳ ಸಾಪೇಕ್ಷ ಸ್ಥಿತಿ ಹೇಗೆ ಇದೆ?

ಉತ್ತರ:- ಚಂದ್ರ, ಸೂರ್ಯ ಹಾಗೂ ಪೃಥ್ವಿ ಇವುಗಳ ಸಾಪೇಕ್ಷ ಸ್ಥಿತಿ ಕಾಟಕೋನದಲ್ಲಿ ಇದೆ.

೩) ಈ ಸ್ಥತಿಯಿಂದ ಭರತ-ಇಳಿತಗಳಲ್ಲಿ ನಿರ್ದಿಷ್ಟವಾಗಿ ಯಾವ ಪರಿಣಾಮ ಆಗಬಹುದು?

ಉತ್ತರ:- ಪ್ರತಿತಿಂಗಳ ಶುಕ್ಲ ಮತ್ತು ಕೃಷ್ಣ ಪಕ್ಷದಲ್ಲಿಯ ಅಷ್ಟಮಿಗೆ ಅತ್ಯಂತ ಕೆಳಮಟ್ಟದ ಭರತ-ಇಳಿತಗಳು ಬರುವವು. ಈ ದಿನ ಚಂದ್ರ ಹಾಗೂ ಸೂರ್ಯರ ಪ್ರೇರಣೆ ಪೃಥ್ವಿಯಮೇಲೆ ಕಾಟಕೋನದ ದಿಕ್ಕಿನಲ್ಲಿ ಕಾರ್ಯ ಮಾಡುವವು. ಹೀಗೆ ನಿರ್ಮಾಣವಾದ ಭರತದಿಂದ ನೀರಿನ ಪಾತಳಿ ಯಾವಾಗಲೂ ಏರುವುದಕ್ಕಿಂತ ಕಡಿಮೆ ಏರುವದು.ಮತ್ತು ಯಾವಾಗಲೂ ಆಗುವ ಇಳಿತಕ್ಕಿಂತ ಕಡಿಮೆ ಇಳಿಯುವದು.

ಪ್ರಶ್ನೆ ೬:- ವ್ಯತ್ಯಾಸವನ್ನು ಸ್ಪಷ್ಟ ಪಡಿಸಿರಿ.

೧) ಭರತ ಇಳಿತ 

ಭರತ

ಇಳಿತ 

೧) ಸಮುದ್ರದನೀರು ಯಾವಾಗ ಸಮುದ್ರದಂಡೆಗೆ ಹತ್ತಿರ ಬರುವದು ಅದಕ್ಕೆ ಭರತ ಅನ್ನುವರು.

 

೨) ಪೃಥ್ವಿಯ ಮೇಲೆ ಯಾವ ಸ್ಥಳದಲ್ಲಿ ಭರತಿ ಬರುವದು ಅದರ ವಿರುದ್ದ ಸ್ಥಳದಲ್ಲಿ ಅದೇ ವೇಳೆ ಭರತಿ ಬರುವದು.

೩) ಭರತ ಕ್ರೀಯೆ ಪೂರ್ಣವಾದನಂತರ ಇಳಿತ ಕ್ರೀಯೆ ಪ್ರಾರಂಭವಾಗುವದು.

೧) ಸಮುದ್ರದನೀರು ಯಾವಾಗ ಸಮುದ್ರದಂಡೆಯಿAದ ಬಹಳ ದೂರ ಹೋಗುವದು ಆವಾಗ ಅದಕ್ಕೆ ಇಳಿತ ಅನ್ನುವರು.

೨) ಪೃಥ್ವಿಯ ಮೇಲೆ ಯಾವ ಭಾಗದಲ್ಲಿ ಇಳಿತ ಇರುವದು ಅದರ ವಿರುದ್ಧ ಸ್ಥಳದಲ್ಲಿ ಅದೇ ವೆಳೆಗೆ ಇಳಿತ ಇರುವದು.

೩) ಇಳಿತದ ಪ್ರಕ್ರೀಯೆ ಆದನಂತರ ಭರತ ಕ್ರೀಯೆ ಪ್ರಾರಂಭವಾಗುವದು.

  ೨) ಆವೇಶದ ಭರತ ಕೆಳಮಟ್ಟದ ಭರತ

  ಆವೇಶದ ಭರತ

ಕೆಳಮಟ್ಟದ ಭರತ

೧)ಚಂದ್ರ,ಸೂರ್ಯ ಇವುಗಳ ಭರತ ಬರಿಸುವ ಪ್ರೇರಣೆಗಳು ಅಮವಾಸ್ಯೆ ಹಾಗೂ ಹುಣ್ಣಿಮೆಯೆಂದುಇAದೇ ದಿಕ್ಕಿನಲ್ಲಿ ಕಾರ್ಯರತ ವಾಗಿರುವವು.ಆದುದರಿಂದ ಗುರುತ್ವಾಕರ್ಷಣದ ಪ್ರೇರಣಾಶಕ್ತಿ ಬೆಳೆಯುವದು ಆದುದರಿಂದ ಆವೇಶದ ಭರತ ಸಂಭವಿಸುವದು.

೨) ಸರಾಸರಿಗಿಂಗ ಬಹಳೇ ದೊಡ್ಡದಿರುವದು.

೧)ಯಾವ ಸ್ಥಳದಲ್ಲಿ ಸೂರ್ಯನಿಂದ ಭರತ ಸಂಭವಿಸುವುದೊ ಆ ಸ್ಥಳದ ನೀರಿನಲ್ಲಿ ಕಾಟಕೊನದಲ್ಲಿದ್ದ  ಚಂದ್ರನ ಗುರುತ್ವಾಕರ್ಷಣ ಶಕ್ತಿಯ ಪರಿಣಾಮ ಕಂಡು ಬರುವದು ಹಿಗೆ ನಿರ್ಮಾಣವಾದ ಭರತದಿಂದ ನೀರಿನ ಪಾತಳಿ ಯಾವಾಗಲೂ ಏರುವದಕ್ಕಿಂತ ಕಡಿಮೆ ಏರುವದು ಮತ್ತು ಯಾವಾಗಲೂ ಆಗುವ ಇಳಿತಕ್ಕಿಂತ ಕಡಿಮೆ ಇಳಿಯುವದು ಇದಕ್ಕೆ ಅತ್ಯಂತ ಕೆಳಮಟ್ಟದ ಇಳಿತ ಎನ್ನುವರು.

೨) ಸರಾಸರಿಕ್ಕಿಂತ ಬಹಳೇ ಕಡಿಮೆ ಇರುವದು.

 ಪ್ರಶ್ನೆ ೭:- ಭರತ-ಇಳಿತಗಳ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳು ಯಾವವು ಎಂಬುದನ್ನು ಬರೆಯಿರಿ.

ಉತ್ತರ:- ಭರತದ ನೀರಿನೊಂದಿಗೆ ಮೀನುಗಳು ಕೊಲ್ಲಿಯಲ್ಲಿ ಬರುವವು. ಅದರಿಂದ ಮೀನುಗಾರಿಕೆಗೆ ಲಾಭವಾಗುವುದು.

        ಭರತ-ಇಳಿತದಿಂದಾಗಿ ನೀರಿನಲ್ಲಿಯ ಕಸಕಡ್ಡಿಯೂ ಹರಿದು ಹೋಗಿ ದಂಡೆ ಸ್ವಚ್ಛವಾಗಿರುವುದು.

        ಬಂದರುಗಳಲ್ಲಿ ಕಸ ತುಂಬುವದಿಲ್ಲ.

        ಭರತ ಇರುವಾಗ ಹಡಗುಗಳು ಬಂದರುಗಳಲ್ಲಿ ತರಲು ಸಾಧ್ಯ.

        ಭರತದ ನೀರನ್ನು ಉಪ್ಪಿ ಮಡಿಗಳಲ್ಲಿ ಸಂಗ್ರಹಿಸಿ ಆ ನೀರಿನಿಂದ ಉಪ್ಪು ತಯಾರಿಸಬಹುದು.

        ಭರತ-ಇಳಿತದ ಕ್ರಿಯೆಯಿಂದ ವಿದ್ಯುತ್ತನ್ನು ತಯಾರಿಸಬಹುದು.

        ಭರತ-ಇಳಿತಗಳ ಸಮಯದ ಅಂದಾಜು ಇರಲಿಲ್ಲವಾದರೆ ಸಮುದ್ರದಲ್ಲಿ ಈಜಾಲು ಹೋದ ವ್ಯಕ್ತಿಗಳಿಗೆ ಅಪಘಾತ ಆಗುವ ಸಾಧ್ಯತೆ ಇದೆ.

        ಭರತ ಇಳಿತಗಳಿಂದಾಗಿ ತೀರದಲ್ಲಿರುವ ವನಗಳು, ತೀರ ಪ್ರದೇಶದ ಜೈವಿಕ ವಿವಿಧತೆ ಮುಂತಾದವುಗಳ ವಿಕಾಸವಾಗಿ ಅವು ತಾಳಿ ಬಾಳುವವು.

 

 

ಪಾಠ ೪ ಹವೆಯ ಒತ್ತಡ

ಪ್ರಶ್ನೆ೧:- ಕಾರಣ ಬರೆಯಿರಿ.

೧) ಎತ್ತರ ಬೆಳೆದಂತೆ ಹವೆಯ ಒತ್ತಡ ಕಡಿಮೆ ಆಗುವುದು.

ಉತ್ತರ:- ಹವೆಯಲ್ಲಿಯ ಧುಳಿಕಣ, ಭಾಷ್ಪ, ಭಾರವಾಯು ಇಂಥ ಘಟಕಗಳ ಪ್ರಮಾಣ ಭೂಪೃಷ್ಠದ ಹತ್ತಿ ಳಷ್ಟು ಇರುವದು. ಎತ್ತರ ಹೊದಂತೆ ಅವುಗಳ ಪ್ರಮಾಣ ಕಡಿಮೆಯಾಗುತ್ತ ಹೊಗುವದು. ಅಂದರೆ ಭೂಪೃಪ್ಠದಿಂದ ಮೇಲೆ ಹೋದಂತೆ ಹವೆ ವಿರಳವಾಗುವದು. ಆದ್ದರಿಂದ ಎತ್ತರ ಬೆಳೆದಂತೆ ಹವೆಯ ಒತ್ತಡ ಕಡಿಮೆ ಆಗುವುದು.

೨) ಹವೆಯ ಒತ್ತಡದ ಪಟ್ಟಿಗಳ ಆಂದೋಲನೆ ಆಗುವದು.

ಉತ್ತರ:- ಸೂರ್ಯನ ಉತ್ತರಾಯಣ ಮತ್ತು ದಕ್ಷಿಣಾಯನ ಈ ಕ್ರೀಯೆಯಿಂದ ಪೃಥ್ವಿಯ ಮೇಲೆ ಬಿಳುವ ಸೂರ್ಯಪ್ರಕಾಶದ  ಕಾಲಾವಧಿ ಮತ್ತು ತಿವ್ರತೆ ವಿಷವವೃತ್ತದಿಂದ ಉತ್ತರ ಮತ್ತು ದಕ್ಷಿಣ ಗೋಲಾರ್ಧಲ್ಲಿ ಬದಲಿಸುವದು; ಅಂದರೆ ಒತ್ತಡ ಪಟ್ಟಿಯ ಸ್ಥಾನದಲ್ಲಿ  ಬದಲಾವಣೆ ಆಗುವದು. ಈ ಬದಲಾವಣೆ ಸರ್ವಸಾಧಾರಣವಾಗಿ ೫ ಅಂಶ ದಿಂದ ೭ ಅಂಶ ಉತ್ತರದ ಕಡೆಗೆ ಅಥವಾ ದಕ್ಷಿಣಾಯನ ೫ ಅಂಶ ದಿಂದ ೭ ಅಂಶ ದಕ್ಷಿಣಕಡೆಗೆ ಹೀಗೆ ಇರುವದು ಇದಕ್ಕೆ ಹವೆಯ ಒತ್ತಡದ ಪಟ್ಟಿಗಳ ಆಂದೋಲನೆ ಆಗುವದು ಎಂದು ಅನ್ನುವರು.

ಪ್ರಶ್ನೆ೨:- ಕೆಳಗಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

೧) ಹವೆಯ ಒತ್ತಡದ ಮೇಲೆ ಉಷ್ಣತಾಮಾನದ ಯಾವ ಪರಿಣಾಮ ಆಗುವುದು?

ಉತ್ತರ:-ಉಷ್ಣತಾಮಾನ ಮತ್ತು ಹವೆಯ ಒತ್ತಡ  ಇವುಗಳಲ್ಲಿ ಹತ್ತಿರದ ಸಂಭAದವಿದ್ದು ಯಾವ ಸ್ಥಳದಲ್ಲಿ  ಹೆಚ್ಚು ಉಷ್ಣತಾಮಾನ ಇರುವದು ಆ ಸ್ಥಳದಲ್ಲಿ  ಹವೆಯ ಒತ್ತಡ ಕಡಿಮೆ ಇರುವದು. ಹೆಚ್ಚು ಉಷ್ಣತಾಮಾನದಿಂದ ಹವೆ ಬಿಸಿಯಾಗಿ ಪ್ರಸರಣ ವಾಗುವದು ಮತ್ತು ಹಗುರಾಗುವದು. ಭೂಮಿಯಹತ್ತಿರದ ಹವೆ ಆಕಾಶದಕಡೆ ಮೇಲೆ ಹೊಗುವದು ಇದರಿಂದಾಗಿ ಪ್ರದೇಶದಲ್ಲಿಯ ಹವೆಯ ಒತ್ತಡ ಕಡಿಮೆಯಾಗುವದು.ಉಷ್ಣತಾಮಾನದ ಪಟ್ಟಿ ಮತ್ತು ಹವೆಯ ಒತ್ತಡದ ಪಟ್ಟಿ ಇವುಗಳ ಪರಸ್ಪರ ಸಂಬAಧ ಇರುವದು; ಆದರೆ ಉಷ್ಣತಾಮಾನದ ಪಟ್ಟಿಯ ಅಕ್ಷವೃತ್ತಿಯ ವಿಸ್ತಾರ ಇದು ಬಹಳ ಇರುವದು.ಹವೆಯ ಒತ್ತಡದ ಪಟ್ಟಿ ಕಡಿಮೆ ಅಗಲದ್ದು ಇರುವದು.

೨) ಉಪಧ್ರುವದ ಭಾಗದಲ್ಲಿ ಕಡಿಮೆ ಒತ್ತಡದ ಪಟ್ಟಿ ಏಕೆ ನಿರ್ಮಾಣವಾಗುವುದು?

ಉತ್ತರ:- ಪೃಥ್ವಿಯ ,ಧ್ರುವದ ಕಡೆಗೆ ಹೋಗುವ ಭಾಗ ತುಲನಾತ್ಮಕವಾಗಿ ವಕ್ರಾಕಾರವಾಗಿದೆ.ಆದರಿಂದಾಗಿ ಧ್ರುವದ ಕಡೆಗೆ ಪ್ರದೇಶದ ಕ್ಷೆತ್ರ ಕಡಿಮೆಯಾಗುತ್ತಾ ಹೊಗುತ್ತದೆ. ಈ ಆಕಾರದಿಂದಾಗಿ ಗಾಳಿಗಳಿಗೆ ಹೊರಗೆ ಬೀಳಲು ಹೆಚ್ಚು ಅವಕಾಶ ಸಿಗುವದು.ಪೃಥ್ವಿಯ ಪೃಷ್ಠಭಾಗದ ಮೇಲಿಂದ ಹವೆಯ ಕಡಿಮೆ ಘರ್ಷಣೆಯಿಂದ,ಅದರAತೆ ಪರಿಭ್ರಮಣದ ಗತಿಯಿಂದಾಗಿ ಈ ಭಾಗದ ಹವೆ ಹೊರಚೆಲ್ಲಲ್ಪಡುವುದು ಅದರಿಂದಾಗಿ  ಉಪಧ್ರುವದ ಭಾಗದಲ್ಲಿ ಕಡಿಮೆ ಒತ್ತಡದ ಪಟ್ಟಿ  ನಿರ್ಮಾಣವಾಗುವುದು.

ಪ್ರಶ್ನೆ ೩:- ಟಿಪ್ಪಣೆ ಬರೆಯಿರಿ.

೧) ಮಧ್ಯ ಅಕ್ಷವೃತ್ತದ ಹೆಚ್ಚು ಒತ್ತಡದ ಪಟ್ಟಿಗಳು.

ಉತ್ತರ:- ವಿಷುವ ವೃತ್ತದ ಭಾಗದಿಂದ ಮೇಲೆ ಹೋದ ಉಷ್ಣ ಹಾಗೂ ಹಗುರ ಆದ ಹವೆ ಬಹಳ ಎತ್ತರದಲ್ಲಿ ಹೋದ ನಂತರ ಅದು ಧ್ರುವ ಪ್ರದೇಶದತ್ತ ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಹರಿಯಲಾರಂಭವಿಸುವದು.ಅAದರೇನೆ ಅದು ವಿಷುವವೃತ್ತದಿಂದ ಉತ್ತರ ಹಾಗೂ ದಕ್ಷಿ?ಣದತ್ತ ಸರಿಯುವದು.ಎತ್ತರದಲ್ಲಿಯ ಕಡಿಮೆ ಉಷ್ಣತಾಮಾನದಿಂದಾಗಿ ಆಕಾಶದಲ್ಲಿ ಮೇಲೆ ಹೋದ ಹವೆ ತಣ್ಣವಾಗಿ ಭಾರ ವಾಗುವದು.ಎದರಿಂದಾಗಿ ಹೆಚ್ಚು ಒತ್ತಡಪಟ್ಟಿಗಳು ನಿರ್ಮಾಣವಾದದ್ದು ಕಂಡುಬರುವದು.

೨) ಹವೆಯ ಒತ್ತಡದ ಕ್ಷಿತಿಜ ಸಮಾಂತರ ವಿತರಣೆ

ಉತ್ತರ:- ಉಷ್ಣತಾಮಾನದ ಅಸಮಾನ ವಿತರಣೆಯ ಪರಿಣಾಮ ಹವೆಯ ಒತ್ತಡದ ಮೇಲೆ ಆಗಿರುವದರಿಂದ ಪೃಥ್ವಿಯಮೇಲಿನ ವಿಷವವೃತ್ತದಿಂದ ಎರಡು ಧೃವದ ಕ್ಷಿತಿಜ ಸಮಾಂತರ ದಿಕ್ಕಿನಲ್ಲಿ ಹವೆಯ ಕಡಿಮೆ ಮತ್ತು ಹೆಚ್ಚು ಒತ್ತಡದ ಪಟ್ಟಿಗಳು ನಿರ್ಮಾಣ ವಾಗುವವು.

ಪ್ರಶ್ನೆ ೪:- ಬಿಟ್ಟ ಸ್ಥಳದಲ್ಲಿ ಯೋಗ್ಯ ಪರ್ಯಾಯಗಳನ್ನು ಬರೆಯಿರಿ.

೧) ಎತ್ತರಕ್ಕೆ ಹೊದಂತೆ ಹವೆ ವಿರಳ ಆಗುವುದು.

( ದಟ್ಟ , ವಿರಳ , ಆರ್ದ್ರ )

೨) ಹವೆಯ ಒತ್ತೆವನ್ನು ಮಿಲಿಬಾರ  ಎಂಬ ಪರಿಮಾಣದಲ್ಲಿ ಹೇಳುವರು.

( ಮಿಲಿಬಾರ, ಮಿಲಿ ಲೀಟರ, ಮಿಲಿಗ್ರಾಮ , ಮಿಲಿ ಮೀಟರ )

೩) ಪೃಥ್ವಿಯ ಮೇಲೆ ಹವೆಯ ಒತ್ತಡ ಅಸಮಾನ ಇದೆ.

( ಸಮಾನ, ಹೆಚ್ಚು, ಕಡಿಮೆ, ಅಸಮಾನ)

೪) ೫ ಅಂಶ ಉತ್ತರ ಹಾಗೂ ೫ ಅಂಶ ದಕ್ಷಿಣ ಅಕ್ಷವೃತ್ತಗಳ ನಡುವೆ ವಿಷುವವೃತ್ತಕಡಿಮೆ  ಒತ್ತಡದ ಪಟ್ಟಿ ಇದೆ.(ವಿಷುವವೃತ್ತದ ಕಡಿಮೆ, ಧ್ರಿವದ ಹೆಚ್ಚು, ಉಪಧ್ರುವದ ಕಡಿಮೆ, ಮಧ್ಯ ಅಕ್ಷವೃತ್ತಿಯ ಹೆಚ್ಚು)

ಪ್ರಶ್ನೆ ೫:- ೩೦ ಆಂಶ ಅಕ್ಷವೃತ್ತದ ಹತ್ತಿರ ಅಧಿಕ ಹವೆಯ ಒತ್ತಡದ ಪಟ್ಟಿ ಹೇಗೆ ತಯಾರಾಗುವುದು? ಆ ಭಾಗ ಏಕೆ ಮರಭೂಮಿ ಆಗಿರುತ್ತದೆ?

ಉತ್ತರ:- ವಿಷುವವೃತ್ತಿಯ ಪ್ರದೇಶದಿಂದ ಆಕಾಶದ ಕಡೆಗೆ ಹೊದ ಉಷ್ಣ ಮತ್ತು ಹಗುರಾದ ಹವೆ ಹೆಚ್ಚು ಅಂತರದ ಮೇಲೆ ಹೊದಾಗ ಧ್ರುವಿಯ ಪ್ರದೇಶದ ಕಡೆಗೆ ಉತ್ತರ ಹಾಗು ದಕ್ಷಿಣ ದಿಕ್ಕಿನಲ್ಲಿ ಬಿಸುವದು. ಎತ್ತರದಲ್ಲಿಯ ಕಡಿಮೆ ಉಷ್ಣತಾಮಾನದಿಂದ ಅದು ತಣ್ಣಗಾಗಿ ಭಾರ ವಾಗುವದು. ಭಾರವಾದ ಹವೆ ಉತ್ತರ ಹಾಗೂ ದಕ್ಷಿಣ ಗೋಲಾರ್ಧದಲ್ಲಿ ೨೫ ಆಂಶ ದಿಂದ ೩೫ ಅಂಶ ಅಕ್ಷವೃತ್ತದ ನಡುವೆ ಭೂಮಿಯ ಕಡೆಗೆ ಕೆಳಗೆ ಬರುವದು. ಪರಿಣಾಮವಾಗಿ ಉತ್ತರ ಗೋಲಾರ್ಧದಲ್ಲಿ ೨೫ ಅಂಶ ದಿಂದ ೩೫ ಅಂಶ ಅಕ್ಷವೃತ್ತಗಳ ನಡುವೆ ಹವೆಯ ಹೆಚ್ಚು ಒತ್ತಡದ ಪಟ್ಟಿ ನಿರ್ಮಾಣವಾಗುವದು. ಈ ಹವೆ ಒಣ ಇರುವದರಿಂದ ಆ ಪ್ರದೇಶದಲ್ಲಿ ಮಳೆ ಬರುವದಿಲ್ಲ. ಆದ್ದರಿಂದ ಪೃಥ್ವಿಯಮೇಲಿನ ಬಹಳಷ್ಟು ಉಷ್ಣ ಮರಭೂಮಿ ಈ ಪ್ರದೇಶದಲ್ಲಿ ಕಂಡು ಬರುವವು.

 ಪ್ರಶ್ನೆ ೬:- ಹವೆಯ ಒತ್ತಡದ ಪಟ್ಟಿಗಳನ್ನು ತೋರಿಸುವ ಚೆಂದಾದ ಆಕೃತಿ ಬಿಡಿಸಿ ಹೆಸರು ಕೊಡಿರಿ.

 


 

 

ಪಾಠ ೫ ಗಾಳಿ

ಪ್ರಶ್ನೆ೧ :- ಯೋಗ್ಯ ಪರ್ಯಾಯ ಆರಿಸಿ ವಾಕ್ಯ ಪೂರ್ಣಮಾಡಿರಿ.

೧) ಹವೆ ಪ್ರಸಾರಣವಾದರೆ------

ಅ) ಘನ ಆಗುವದು.   ಆ) ವಿರಳವಾಗುವದು.   ಇ) ಇಲ್ಲವಾಗುವದು.   ಈ) ಆರ್ದ್ರವಾಗುವದು.

ಉತ್ತರ:- ವಿರಳವಾಗುವದು. 

೨) ಗಾಳಿಯು ಹೆಚ್ಚು ಒತ್ತಡದಿಂದ ------------

ಅ) ಇನ್ನೂ ಹೆಚ್ಚಿನ ಹವೆಯ ಒತ್ತಡದತ್ತ ಬೀಸುವದು..

ಆ) ತಣ್ಣದಾದ ಒತ್ತಡದತ್ತ ಬೀಸುವದು.

ಇ) ಹವೆಯ ಕಡಿಮೆ ಒತ್ತಡದತ್ತ ಬೀಸುವವು.

ಈ) ಇದ್ದಲ್ಲಿಯೇ ಇರುವದು.

ಉತ್ತರ:- ಹವೆಯ ಕಡಿಮೆ ಒತ್ತಡದತ್ತ ಬೀಸುವವು.

೩) ಉತ್ತರ ಗೋಲಾರ್ಧದಲ್ಲಿ ವಿಷುವವೃತ್ತದತ್ತ ಬರುವ ಗಾಳಿಗಳು ಪೃಥ್ವಿಯ ಭ್ರಮಣದಿಂದಾಗಿ ------

ಅ) ದಕ್ಷಿಣದತ್ತ ತಿರುಗುವದು.   ಆ) ಪೂರ್ವದತ್ತ ತಿರುಗುವದು.

ಇ) ಪಶ್ಚಿಮದತ್ತ ತಿರುಗುವದು.   ಈ) ಉತ್ತರದತ್ತ ತಿರುಗುವದು.

ಉತ್ತರ:- ಪೂರ್ವದತ್ತ ತಿರುಗುವದು.

೪) ಭಾರತೀಯ ಉಪಖಂಡದಿAದ ಋತುಮಾನದ ಗಾಳಿಗಳ ದಿಕ್ಕು ಚಳಿಗಾಲದಲ್ಲಿ -----

ಅ) ಆಗ್ನೆಯದಿಂದ ವಾಯುವ್ಯದತ್ತ ಇರುವದು.

ಆ) ನೈಋತ್ಯದಿಂದ ಈಶಾನ್ಯ ದತ್ತ ಇರುವುದು.

ಇ) ಈಶಾನ್ಯದಿಂದ ನೈಋತ್ಯ ದತ್ತ ಇರುವುದು.

ಈ) ವಾಯುವ್ಯದಿಂದ ಆಗ್ನೇಯದತ್ತ ಇರುವುದು.

ಉತ್ತರ:- ಈಶಾನ್ಯದಿಂದ ನೈಋತ್ಯ ದತ್ತ ಇರುವುದು.

೫) ರೋಷಗೊಂಡ ನಲವತ್ತುಗಳು ಗಾಳಿ ದಕ್ಷಿಣ ಗೋಲಾರ್ಧದಲ್ಲಿ -------

ಅ) ವಿಷುವ ವೃತ್ತದತ್ತ ಬೀಸುವವು.

ಆ) ೪೦ಅಂಶ ದಕ್ಷಿಣ ಆಕ್ಷಾಂಶದ ಭಾಗದಲ್ಲಿ ಬೀಸುವದು.

ಇ) ಧ್ರುವದ ಕಡಿಮೆ ಒತ್ತಡದ ಪ್ರದೇಶದಿಂದ ಬೀಸುವವು.

ಈ) ೪೦ ಅಂಶುತ್ತರ ಆಕ್ಷಾಂಶದ ಭಾಗದಲ್ಲಿ  ಬೀಸುವವು.

ಉತ್ತರ:- ೪೦ಅಂಶ ದಕ್ಷಿಣ ಆಕ್ಷಾಂಶದ ಭಾಗದಲ್ಲಿ ಬೀಸುವದು.

ಪ್ರಶ್ನೆ೨:- ಕೆಳಗಿನ ವರ್ಣನೆಗಳಿಂದ ಗಾಳಿಗಳ ಪ್ರಕಾರಗಳನ್ನು ಗುರುತಿಸಿರಿ.

೧) ನೈಋತ್ಯದಿಂದ ಬರುವ ಗಾಳಿಗಳು ಭಾರತದ ಉಪಖಂಡದ ಮೆಲೆ ಮಳೆ ಸುರುಸುವವು. ಜೂನದಿಂದ ಸಪ್ಟೆಂಬರ ಈ ಕಾಲದಲ್ಲಿ  ಭಾರತದಲ್ಲಿ ಮಳೆ ಬೀಲುವುದು. ಈ ಕಾಲಾವಧಿಯ ನಂತರ ಈ ಗಾಳಿಗಳು ಹಿಂದಿರುಗುವವು.

ಉತ್ತರ:-ನೈಋತ್ಯ ಮಾನ್ಸೂನ ಗಾಳಿ

೨) ಉತ್ತರ ಧ್ರುವದ ಪ್ರದೇಶಗಳಿಂದ ೬೦ ಅಂಶ ಉತ್ತರದತ್ತ ಬರುವ ಈ ಗಾಳಿಗಳಿಂದ ಉತ್ತರ ಅಮೇರಿಕಾ, ಯುರೋಪ ಹಾಗೂ ರಶಿಯಾ ಈ ವಿಸ್ತಾರÀವಾದ ಪ್ರದೇಶದಲ್ಲಿ ಚಳಿಯ ತೀವ್ರತೆ ಬೆಳೆಯುವುದು.

ಉತ್ತರ:- ಧ್ರುವಿಯ ಗಾಳಿ

೩) ಗುಡ್ಡದ ಶಿಖರಗಳು ಹಗಲಿನಲ್ಲಿ  ಬೇಗ ಕಾಯುವವು. ಅಲ್ಲಿಯ ಹವೆ ಕಾಯ್ದು ಹಗುರಾಗಿ ಮೇಲೆ ಹೋಗುವುದು. ಆದುದರಿಂದ ಈ ಭಾಗದಲ್ಲಿ ಕಡಿಮೆ ಒತ್ತಡ ನಿರ್ಮಾಣ ಆಗುವುದು. ಅದೇ ಸಮಯದಲ್ಲಿ ಗುಡ್ಡಗಳ ಅಡಿಭಾಗದಲ್ಲಿ ,ಕಣಿವೆಗಳಲ್ಲಿ ಹವೆ ತಂಪಾಗಿರುವದರಿAದ ಹೆಚ್ಚು ಒತ್ತಡ ಇರುತ್ತದೆ. ಅಲ್ಲಿಯ ಹವೆ ಕಡಿಮೆ ಒತ್ತಡದತ್ತ ಬೀಸುವುದು.

ಉತ್ತರ:- ಬಿರುಗಾಳಿ

ಪ್ರಶ್ನೆ ೩:- ಮುಂದೆ ಹವೆಯ ಒತ್ತಡ ಬೇರೆ ಬೇರೆ ಮಿಲಿಬಾರಗಳಲ್ಲಿ ಕೊಡಲಾಗಿದೆ. ಅದರ ಮೇಲಿಂದ ಆವರ್ತ ಹಾಗೂ ಪ್ರತ್ಯಾವರ್ತದ ಆಕೃತಿ ತಗೆಯಿರಿ. 

೧) ೯೯೦, ೯೯೪,೯೯೬,೧೦೦೦

 


 

೨) ೧೦೩೦, ೧೦೨೦, ೧೦೧೦, ೧೦೦೦



 ಪ್ರಶ್ನೆ ೪:- ಒಂದೇ ಭೌಗೋಲಿಕ ಕಾರಣ ಬರೆಯಿರಿ.

೧) ವಿಷುವವೃತ್ತದ ಹತ್ತಿರದ ಗಾಳಿಯ ಪಟ್ಟಿ ಶಾಂತವಾಗಿರುವುದು.

ಉತ್ತರ:- ವಿಷುವವೃತ್ತದ ಉತ್ತರ ಮತ್ತು ದಕ್ಷಿಣಕ್ಕೆ  ಸುಮಾರು ೫ ಅಂಶ ಅಕ್ಷವೃತ್ತದವರೆಗೆ ವರ್ಷದಲ್ಲಿಯ ಬಹಳಷ್ಟುಕಾಲ ಹವೆ ಶಾಂತ ಇರುವದು. ಅಲ್ಲಿ ಗಾಳಿ ಬಿಸುವದಿಲ್ಲ.ಆದ್ಧರಿಂದ ವಿಷುವವೃತ್ತದ ಹತ್ತಿರ ಹವೆಯ ಪಟ್ಟಿ ಶಾಂತ ವಾಗಿರುವದು. ಅದಕ್ಕೆ ವಿಷುವವೃತ್ತದ ಶಾಂತಪಟ್ಟಿ ಅನ್ನುವರು.

೨) ಉತ್ತರ ಗೋಲಾರ್ಧದಲ್ಲಿಯ ನೈಋತ್ಯ ಗಾಳಿಗಳಿಗಿಂತ ದಕ್ಷಿಣ ಗೋಲಾರ್ಧದಲ್ಲಿ ವಾಯವ್ಯದಿಂದ ಬರುವ ಗಾಳಿಗಳು ಹೆಚ್ಚು ವೇಗದಿಂದ ಬೀಸುವವು.

ಉತ್ತರ:- ದಕ್ಷಿಣ ಗೋಲಾರ್ಧದಲ್ಲಿ ಗಾಳಿಗಳು ಬಹಳಷ್ಟು ವೇಗದಿಂದ ಬೀಸುವವು.ದಕ್ಷಿಣ ಗೋಲಾರ್ಧದಲ್ಲಿ ಜಲಭಾಗ ಬಹಳಷ್ಟು ಇದೆ. ಈ ಗೋಲಾರ್ಧದಲ್ಲಿ ಎತ್ತರದ ಅಡೆತಡೆಯ ಭಾಗಿರಲಾರದ ಕಾರಣ ಯಾವುದೇ ಪ್ರಕಾರದ ನಿಯಂತ್ರಣ ಇರಲಾರದ ಕಾರಣ ದಕ್ಷಿಣ ಗೋಲಾರ್ಧದಲ್ಲಿ ಗಾಳಿಗಳು ಉತ್ತರಗೋಲಾರ್ಧ ಕ್ಕಿಂತ ಹೆಚ್ಚು ವೇಗದಿಂದ ಬೀಸುವವು.

೩) ಬೇಸಿಗೆಯಲ್ಲಿಯ ಋತುಮಾನದ ಗಾಳಿಗಳು ಸಮುದ್ರದಿಂದ ಆದರೆ ಚಳಿಗಾಲದಲ್ಲಿಯ ಮರಳುವ ಋತುಮಾನದ ಗಾಳಿಗಳು ಭೂಮಿಯ ಕಡೆಯಿಂದ ಬೀಸುವವು.

ಉತ್ತರ:- ಬೇಸಿಗೆಯಲ್ಲಿ/ ಹಗಲಿನಲ್ಲಿ  ಸಮುದ್ರದ ನೀರಿಗಿಂತ ಸಮುದ್ರದಂಡೆಯ ಭೂಮಿ ಬೇಗನೆ ಹೆಚ್ಚುಪ್ರಮಾಣದಲ್ಲಿ  ಬಿಸಿಯಾಗುವದು.ಅಲ್ಲಿಯ ಹವೆಯು ಉಷ್ಣವಾಗುವದು ಮತ್ತು ಹವೆಯ ಒತ್ತಡ ಕಡಿಮೆಆಗುವದು. ಸಮುದ್ರದ ನೀರು ಬಹಳಷ್ಟು ವೇಳೆಯ ನಂತರ ಉಷ್ಣವಾಗುವದು ಮತ್ತು ಅಲ್ಲಿಯ ಹವೆಯು ಕಡಿಮೆ ಬಿಸಿಯಾಗುವದು.ಆದ್ದರಿಂದ ಅಲ್ಲಿ ಹವೆಯ ಒತ್ತಡ ಹೆಚ್ಚಿಗೆ ಇರುವದು. ಆದ್ದರಿಂದ ಬೇಸಿಗೆಯಲ್ಲಿಯ ಋತುಮಾನದ  ಗಾಳಿಗಳು ಹೆಚ್ಚುಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಬೀಸುವವು.ಅದರಂತೆ ಚಳಿಗಾಲದಲ್ಲಿ ರಾತ್ರಿ ಸಮುದ್ರಕ್ಕಿಂತ ಭೂಮಿ ಬೇಗನೆ ತಣ್ಣಗಾಗುವದು ಅಲ್ಲಿ ಹವೆಯ ಒತ್ತಡ ಹೆಚ್ಚಿಗೆ ಇರುವದು. ಆದುದರಿಂದ ಸಮುದ್ರದ ನೀರು ಬೇಗನೇ ಥಂಡಾಗದಿರುವದರಿAದ ಅಲ್ಲಿಯ ಹವೆಯ ಕಡಿಮೆ ಒತ್ತಡ ಕಡಿಮೆ ಇರುವದು. ಆದ್ದರಿಂದ ಚಳಿಗಾಲದಲ್ಲಿಯ ಮರಳುವ ಋತುಮಾನದ ಗಾಳಿಗಳು ಭೂಮಿಕಡೆಯಿಂದ ಸಮುದ್ರದ ಕಡೆಗೆ ಬರುವವು.

೪) ಈ ಹವೆ ಬೀಸಲು ಹವೆಯ ಒತ್ತಡದಲ್ಲಿ ವ್ಯತ್ಯಾಸ ಇರಬೇಕಾಗುತ್ತದೆ.

ಉತ್ತರ:- ಹವೆಯ ಒತ್ತಡದ ವ್ಯತ್ಯಾಸದ ಪರಿಣಾಮ ಗಾಳಿಯ ಗತಿಯಮೆಲೆ ಇರುವದು.ಹವೆಯ ಒತ್ತಡ ಎಲ್ಲಿ ಕಡಿಮಡ ಇರುವದು,ಅಲ್ಲಿ ಗಾಳಿ ಮಂದಗತಿಯಿAದ ಬಿಸುವದು.ಸರ್ವಸಾಧಾರಣವಾಗಿ ಜಾಗತಿಕ ಪಾತಳಿಯಲ್ಲಿ ಹವೆಯ ಒತ್ತಡದ ವ್ಯತ್ಯಾಸ ಎಲ್ಲಿ ಹೆಚ್ಚಿಗೆ ಇರುವದು, ಅಲ್ಲಿ ಗಾಳಿ ವೇಗದಿಂದ  ಬೀಸುವದು.

ಪ್ರಶ್ನೆ ೫:- ಮುಂದಿನ ಪ್ರವಾಹ ನಕ್ಷೆಯನ್ನು ಪೂರ್ಣಗೊಳಿಸಿರಿ.

UÁ½UÀ¼À ¥ÀæPÁgÀUÀ¼ÀÄ

 

UÀæºÀzÀ UÁ½UÀ¼ÀÄ

 

ºÀAUÁ«Ä/IÄvÀĪÀiÁ£ÀzÀ UÁ½

¸ÁܤPÀ UÁ½UÀ¼ÀÄ

¥ÀƪÀðzÀ

UÁ½

¥À²ÑªÀÄzÀ

UÁ½

zsÀÄæ«AiÀÄ

UÁ½

£ÉÊIÄvÀå IÄvÀĪÀiÁ£ÀzÀ UÁ½

F±Á£Àå IÄvÀĪÀiÁ£ÀzÀ UÁ½

¥sÁ£À

   a£ÀÄPÀ

¨ÉÆgÁ

®Æ

vÀAUÁ½

PÀAzÀgÀzÀ UÁ½

 

ಪ್ರಶ್ನೆ ೬:- ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

೧) ಧ್ರುವಿಯ ಭಾಗದಲ್ಲಿ ಎರಡೂ ಗೋಲಾರ್ಧಗಳಲ್ಲಿ ಹವೆಯ ಒತ್ತಡ ಏಕೆ ಹೆಚ್ಚಾಗಿರುತ್ತದೆ?

ಉತ್ತರ:- ಎರಡೂ ಧ್ರುವಿಯ ಪ್ರದೇಶದಲ್ಲಿ ವರ್ಷದವರೆಗೆ ಉಷ್ಣತಾಮಾನ ೦ ಅಂಶ ಸೆಲ್ಸಿಯಸಕ್ಕಿಂತ ಕಡಿಮೆ ಇರುವದರಿಂದ ಅಲ್ಲಿಯ ಹವಾಮಾನ ತಣ್ಣಗಿರುವದು.ಪರಿಣಾಮವಾಗಿ ಧ್ರುವಿಯ ಪ್ರದೇಶದಲ್ಲಿ ಪೃಥ್ವಿ ಪೃಷ್ಠಭಾಗದ ಹತ್ತಿರ ಹೆಚ್ಚು ಒತ್ತಡಪಟ್ಟಿ ತಯಾರಾಗುತ್ತದೆ.ಅದಕ್ಕೆ ಧ್ರುವಿಯ ಹೆಚ್ಚು ಒತ್ತಡದ ಪಟ್ಟಿ ಎನ್ನುವರು. ಇದರ ಅರ್ಥ ಧ್ರುವಿಯ ಭಾಗದಲ್ಲಿ ಎರಡೂ ಗೋಲಾರ್ಧದಲ್ಲಿ ಹವೆಯ ಒತ್ತಡ ಹೆಚ್ಚಿಗೆ ಇರುವದು.

೨) ಪೃಥ್ವಿಯ ಭ್ರಮಣದಿಂದಾಗಿ ಗಾಳಿಯ ಮೇಲೆ  ಯಾವ ಪರಿಣಾಮವಾಗುವದು?

ಉತ್ತರ:- ಸಂಪೂರ್ಣ ಪೃಥ್ವಿಯ ವಿಚಾರಮಾಡಲಾಗಿ, ಪೃಥ್ವಿಯ ಪರಿವಲನದ ಪರಿಣಾಮ ಗಾಳಿಯ ಬಿಸುವ ದಿಕ್ಕಿನ ಮೇಲೆ ಆಗುವದು.ಉತ್ತರ ಗೋಲಾರ್ಧದಲ್ಲಿ ಗಾಳಿಗಳು ಮೂಲದಿಕ್ಕಿನಿಂದ  ತಿರುಗುವವು; ಅದರಂತೆ ದಕ್ಷಿಣ ಗೋಲಾರ್ಧದ ಗಾಳಿಗಳು ಮೂಲ ದಿಕ್ಕಿನ ಎಡಗಡೆಯಿಂದ ತಿರುಗುವವು.ಪಶ್ಚಿಮಕಡೆಯಿಂದ ಪೂರ್ವಕಡೆ ಆಗುವ ಪೃಥ್ವಿಯ ಪರಿವಲನೆ ಯಿಂದ ಅವುಗಳ ಮೂಲದಿಕ್ಕಿನಲ್ಲಿ ಬದಲಾಗುತ್ತಿರುತ್ತವೆ.

೩) ಆವರ್ತನ ಗಾಳಿಗಳು ಚಕ್ರಾಕಾರವಾಗಿ ಏಕೆ ಬೀಸುವವು?

ಉತ್ತರ:- ಒಂದು ಸ್ಥಳದಲ್ಲಿ ಹವೆಯ ಒತ್ತಡ ಕಡಿಮೆ ಇರುವವು ಮತ್ತು ಸುತ್ತಮುತ್ತಲಿನ ಹವೆಯ ಒತ್ತಡ ಹೆಚ್ಚಿಗೆ ಇರುವದು, ಇಂಥ ವೇಳೆಗೆ ಆವರ್ತ ಗಾಳಿ ಬೀಸುವವು.ಕಡಿಮೆ ಹವೆಯ ಒತ್ತಡದ ಕಡೆಗೆಸುತ್ತಮುತ್ತಲಿನ ಪ್ರದೇಶದಲ್ಲಿಯ ಹೆಚ್ಚು ಒತ್ತಡದ ಪಟ್ಟಿಯಿಂದ ವೇಗದಿಂದ ಗಾಳಿ ಬೀಸುವವು.ಆವರ್ತದ ವೇಳೆಗೆ ಆಕಾಶ ಮೋಡತುಂಬಿದಿರುವದು. ಗಾಳಿ ವೇಗದಿಂದ ಬೀಸುವದು ಮತ್ತು ಬಹಳಷ್ಟು ಮಳೆ ಬರುವದು. ಈ ಗಾಳಿಯ ಕಾಲಾವಧಿ ,ವೇಗ, ದಿಕ್ಕು ಮತ್ತು ಕ್ಷೆತ್ರ ಬಹಳಷ್ಟು ಅನಿಶ್ಚಿತ ಇರುವದು. ಈ ಗಾಳಿಯ ಪ್ರಭಾವ ಕ್ಷೆತ್ರ ಮರ್ಯಾದಿತ ಇರುವದು.

೪) ಆವರ್ತನ ಗಾಳಿಗಳ ಕಾರಣ ಹಾಗೂ ಪರಿಣಾಮಗಳು ಬರೆಯಿರಿ?

ಉತ್ತರ:- ಯಾವುದೇ ಒಂದು ಸ್ಥಳದಲ್ಲಿ ಬವೆಯ ಒತ್ತಡ ಕಡಿಮೆ ಇರುವುದೋ ಮತ್ತು ಸುತ್ತಲೆಲ್ಲ ಹವೆಯ ಒತ್ತಡ ಹೆಚ್ಚು ಇರುವುದೋ ಆ ಸಮಯದಲ್ಲಿ ಆವರ್ತನ ಗಾಳಿಗಳ ನಿರ್ಮಾಣ ವಾಗುವವು. ಆವರ್ತ ಗಾಳಿಗಳ ಕಾಲಾವಧಿ ವೇಗ, ದಿಕ್ಕು ಹಾಗೂ ಕ್ಷೇತ್ರಗಳು ಬಹಳ ಅನಿಶ್ಚಿತವಾಗಿರುವುದು.

  

ಪಾಠ ೬ ನೈಸರ್ಗಿಕ ಪ್ರದೇಶ

ಪ್ರಶ್ನೆ೧:- ಕೆಳಗಿನ ಹೇಳಿಕೆಗಳನ್ನು ಪರೀಕ್ಷಿಸಿ, ತಪ್ಪಾದ ಹೇಳಿಕೆಯನ್ನು ಸರಿಪಡಿಸಿ ಬರೆಯಿರಿ.

೧) ಪಶ್ಚಿಮ ಯುರೋಪದ ಹವಾಮಾನ ಇರುವ ಪ್ರದೇಶದಲ್ಲಿಯ ಜನರು ಸೌಮ್ಯ ಹಾಗೂ ಬೆಚ್ಚಗಿನ ಹವಾಮಾನದಿಂದಾಗಿ ಆಲಸಿಯಾಗಿರುವರು.

ಉತ್ತರ:- ಪಶ್ಚಿಮಯುರೋಪದ ಹವಾಮಾನ ಇರುವ ಪ್ರದೇಶದಲ್ಲಿಯ ಜನರು ಸೌಮ್ಯ ಹಾಗೂ ಬೆಚ್ಚಗಿನ ಹವಾಮಾನದಿಂದಾಗಿ  ಉತ್ಸಾಹಿ ಯಾಗಿರುವರು.

೨) ಪ್ರೇಅರಿ ಪ್ರದೇಶಕ್ಕೆ ಜಗತ್ತಿನ ಗೋದಿಯ ಕಣಜಎನ್ನುವರು.

ಉತ್ತರ:- ಈ ಹೇಳಿಕೆ ಸರಿ ಇದೆ.

೩)ಭೂಮಧ್ಯ ಸಾಗರದ ಪ್ರದೇಶದಲ್ಲಿಯ ಗಿಡಗಳ ಎಲೆಗಳು ಅಂಟು ಅಂಟಾಗಿ ಇರುವವು. ಗಿಡಗಳ ತೊಗಟೆ ಹೆಚ್ಚು ದಪ್ಪವಾಗಿರುವುದು. ಈ ವೈಶಿಷ್ಟöಗಳಿಂದಾಗಿ ಗಿಡದಲ್ಲಿನ ನೀರಿನ ಬಾಷ್ಪೀಭವನ ಕ್ರಿಯೆ ಹೆಚ್ಚಿನ ಪ್ರಮಾಣದಲ್ಲಿ ಆಗುವುದು.

ಉತ್ತರ:- ಈ ಹೇಳಿಕೆ ಸರಿ ಇದೆ.

೪) ಉಷ್ಣ ಮರಭೂಮಿಯ ಪ್ರದೇಶದಲ್ಲಿ ಒಂಟೆಇದು ಮಹತ್ವದ ಪ್ರಾಣಿ ಆಗಿದೆ. ಏಕೆಂದರೆ ಅದು ಆಹಾರ, ನೀರು ಸಿಗದಿದ್ದರೂ ದೀರ್ಘಕಾಲ ಬದುಕುವುದು ಹಾಗೂ ಸಾಗಾಣಿಕೆಗಾಗಿಯೂ ಅದರ ಉಪಯೋಗ ಆಗುವುದು.

ಉತ್ತರ:- ಈ ಹೇಳಿಕೆ ಸರಿ ಇದೆ.

೫) ಹುಲಿ, ಸಿಂಹದAತಹ ಮಾಂಸಭಕ್ಷಕ ಪ್ರಾಣಿಗಳು ವಿಷುವವೃತ್ತ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದು.

ಉತ್ತರ:- ಈ ಹೇಳಿಕೆ ಸರಿ ಇದೆ.

ಪ್ರಶ್ನೆ೨:- ಭೌಗೋಲಿಕ ಕಾರಣ ನೀಡಿರಿ.

೧) ಮಾನ್ಸುನ ಪ್ರದೇಶದಲ್ಲಿಯ ಜನರು ಪ್ರಮುಖವಾಗಿ ಬೇಸಾಯ ಮಾಡುವರು.

ಉತ್ತರ:- ಮಾನ್ಸೂನ ಪ್ರದೇದಲ್ಲಿ ಜೂನದಿಂದ ಸಪ್ಟೆಂಬರ ವರೆಗೆ ಮಳೆಗಾಲ, ಅಲ್ಲಿಯ ಹವಾಮಾನ ಮತ್ತು ಈ ಭಾಗದ ಭೂಮಿ ಫಲವತ್ತಾದದ್ದು ಇರುವದರಿಂದ, ಹವಾಮಾನ ಮಳೆಗಾಲ ಬೇಸಾಯಕ್ಕೆ ಅನುಕೂಲ ಇರುವದು. ಜನರ ಮೂಖ್ಯ ವ್ಯವಸಾಯ ಬೇಸಾಯ ವಿದೆ. ಆದ್ದರಿಂದ ಮಾನ್ಸುನ ಪ್ರದೇಶದಲ್ಲಿಯ ಜನರು ಪ್ರಮುಖವಾಗಿ ಬೇಸಾಯ ಮಾಡುವರು.

೨) ವಿಷುವ ವೃತ್ತದ ಅರಣ್ಯಗಳಲ್ಲಿಯ ಮರಗಳು ಎತ್ತರವಾಗಿ ಬೆಳೆಯುವವು.

ಉತ್ತರ:-  ವಿಷುವವೃತ್ತ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಉಷ್ಣತಾಮಾನ ೩೦ ಅಂಶ ಸೇ. ಮತ್ತು ಸರಾಸರಿ ಉಷ್ಣತಾಮಾನ ೨೭ ಅಂಶ ಸೇ.ಇರುವದು. ಆ ಭಾಗದಲ್ಲಿ ಉಷ್ಣತೆ ಹೆಚ್ಚುಇದ್ದು ವರ್ಷತುಂಬ ಮಳೆ ಬೀಳುವದು. ಇಂಥ ವೇಳೆಗೆ ಆ ಅರಣ್ಯಗಳಲ್ಲಿಯ ವೃಕ್ಷಗಳು ಸೂರ್ಯಪ್ರಕಾಶದ ಸಲುವಾಗಿ ಎತ್ತರ ಬೆಳೆಯುವವು.

೩) ಟಂಡ್ರಾಪ್ರದೇಶಯ ವನಸ್ಪತಿ ಜೀವನ ಅಲ್ಪಕಾಲ ಬಾಳುವದು.

ಉತ್ತರ:- ಈ ಪ್ರದೇಶದಲ್ಲಿ ಬೇಸಿಗೆಯಲ್ಲಿ ಸರಾಸರಿ ಉಷ್ಣತಾಮಾನ ೧೦ ಅಂಶ ಸೇ,ಇರುವದು.ಆದರೆ ಚಳಿಗಾಲದಲ್ಲಿ -೨೦ ಅಂಶ ದಿಂದ -೩೦ ಅಂಶ ಸೇ. ಇರುವದು. ಹವಾಮಾನ ಬಹಳಷ್ಟು ತಂಪಾಗಿರುವದು. ಇಂಥ ಅತೀ ತಂಪಾದ ( ಥಂಡಿ) ಹವಾಮಾನದಲ್ಲಿ ವನಸ್ಪತಿಗಳು ಹೆಚ್ಚುಕಾಲ ಬದುಕಲಾರವು.ಆದ್ದರಿಂದ ಟಂಡ್ರಾಪ್ರದೇಶಯ ವನಸ್ಪತಿ ಜೀವನ ಅಲ್ಪಕಾಲ ಬಾಳುವದು.

ಪ್ರಶ್ನೆ ೩:- ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.     

೧) ತೈಗಾ ಪ್ರದೇಶದ ವಿಸ್ತಾರ ಯಾವ ಅಕ್ಷವೃತ್ತದ ನಡುವೆ ಇದೆ?

ಉತ್ತರ:- ತೈಗಾ ಪ್ರದೇಶದ ವಿಸ್ತಾರ ಸುಮಾರು ೫೫ ಅಂಶ ಉತ್ತರ ದಿಂದ ೬೫ ಅಂಶ ಉತ್ತರ ಅಕ್ಷವೃತ್ತದ ಮಧ್ಯದಲ್ಲಿ ಇದೆ.

೨) ಸುದಾನ ಪ್ರದೇಶದಲ್ಲಿಯ ಯಾವುದೇ ಮೂರು ಹುಲ್ಲು  ತಿನ್ನುವ ಪ್ರಾಣಿಗಳ ಸ್ವ-ರಕ್ಷಣೆಗಾಗಿ ನಿಸರ್ಗವು ಯಾವ ಏರ್ಪಾಡು ಮಾಡಿದೆ?

ಉತ್ತರ:- ಸುದಾನದಲ್ಲಿಯ  ಮೂರು ಹುಲ್ಲು ತಿನ್ನುವ ಪ್ರಾಣಿ-; ೧) ಜಿರಾಫ ೨) ಝೆಬ್ರಾ ೩) ಕಾಂಗರೂ ೪) ಕಾಡೆತ್ತು ೫) ಚಿಂಪಾAಝಿ ಇತ್ಯಾದಿ

ಅವುಗಳ ಸ್ವ-ಸಂರಕ್ಷಣೆ ಸಲುವಾಗಿ ನಿಸರ್ಗವು ಚಪಲವಾದ ಕಾಲು ಕೊಟ್ಟಿದೆ.

೩) ಋತು ಪ್ರದೇಶಗಳಲ್ಲಿ ಕೊಟ್ಟ ವೈಶಿಷ್ಟöಗಳು ಯಾವವು?

ಉತ್ತರ:- ೧) ಸ್ಥಾನ ಹಾಗೂ ಪ್ರದೇಶ:- ವೊಷುವವೃತ್ತದ ಉತ್ತರ ಹಾಗೂ ದಕ್ಷಿಣಕ್ಕೆ ೧೦ಅಂಶ ದಿಂದ ೩೦ಅಂಶ ಅಕ್ಷವೃತ್ತಗಳ ನಡುವೆ. ಉ.ದಾ. ಭಾರತ, ಫಿಲಿಪಾಯಿನ್ಸ,ವೆಸ್ಟವಿಂಡೀಜ ಮಧ್ಯ ಅಮೇರಿಕಾ ಮುಂತಾದವುಗಳು.

೨) ಹವಾಮಾನ:- ಬೇಸಿಗೆಯಲ್ಲಿ ಉಷ್ಣತಾಮಾನ ೨೭ ಅಂಶ ಸೆ.ದಿಂದ ೩೨ಅಂಶ ಚಳಿಗಾಲದಲ್ಲಿ ಉಷ್ಣತಾಮಾನ ೧೫ಅಂಶ ಸೆ.ದಿಂದ ೨೪ಅಂಶ ಸೆ. ಮಳೆ ೨೫೦ ರಿಂದ ೨೫೦೦ ಮಿ.ಮೀ.ಬಿಳುವದು.* ನೈಋತ್ಯ ಮನ್ಸೂನ ಗಾಳಿಗಳಿಂದ ಮಳೆ ಬಿಳುವದು.ನಿರ್ದಿಷ್ಟ ಋತುಗಳಲ್ಲಿ ಮಳೆ ಬಿಳುವದು* ಮಳೆಯ ವಿತರಣೆ ಅಸಮಾನ ಹಾಗೂ ಅನಿಶ್ಚಿತವಾಗಿದೆ.

೩) ನೈಸರ್ಗಿಕ ವನಸ್ಪತಿಗಳು:- ಎಲೆ ಉದುರುವ ಹಾಗೂ ನಿಮ್ನ ಸದಾಹರಿತ ಅರಣ್ಯಗಳು ಹಾಗೂ ಮಳೆಯ ವಿತರಣೆ ಮೇಲೆ ವನಸ್ಪತಿಗಳ ಪ್ರಕಾರ ಅವಲಂಬಿಸಿರುವವು. ಉದಾ- ಸಾಗವಾನಿ, ಶಿಸವ, ಚಂದನ,ಖೈರ, ಸಂಕೋನಾ ಬಿದಿರು ಜಾಲಿ,ಮುಳ್ಳು ಇರುವ ಗಿಡಗಳು,ಕಂಟಿ ಹಾಗೂ ಹುಲ್ಲು.

೪) ಪ್ರಾಣಿ ಜೀವನ:- ಹುಲಿ,ಸಿಂಹ,ಚಿgಚಿve,ಆನೆ, ತೋಳ,ಕಾಡುಹಂದಿ, ಮಂಗ, ಹಾವು, ನವಿಲು, ಕೋಗಿಲೆ ಮುಂತಾದ ವನ್ಯ ಪ್ರಾಣಿ ಹಾಗೂ ಪಕ್ಷಿಗಳು* ಆಕಳು, ಎಮ್ಮೆ, ಕುರಿ, ಕುದುರೆ ಮುಂತಾದ ಸಾಕು ಪ್ರಾಣಿಗಳು.

೫) ಮಾನವ ಜೀವನ:- *ಚಿಕ್ಕ ಚಿಕ್ಕ ಹಳ್ಳಿಗಳು ಅಸಂಖ್ಯವಾಗಿವೆ.* ಆಹಾರ ಹಾಗೂ ಉಡುಗೆಗಳಲ್ಲಿ ಬಹಳೇ ಭೇದ ಇದೆ.* ಜನಸಂಖ್ಯೆಯು ಮುಖ್ಯವಾಗಿ ಪ್ರಾಥಮಿಕ ವ್ಯವಸಾಯದಲ್ಲಿ ಕಂಡು ಬರುವುದು.* ಕೃಷಿಯು ಮುಖ್ಯ ವ್ಯವಸಾಯವಾಗಿದೆ.

ಪ್ರಶ್ನೆ೪:- ಜಗತ್ತಿನ ನಕಾಶೆಯ ಬಾಹ್ಯ ರೇಷೆಯಲ್ಲಿ ಮುಂದಿನ ಸ್ಥಾನಗಳನ್ನು ತೋರಿಸಿರಿ.

*ಕೊಲಾರಾಡೊ ಮರಭೂಮಿ *ಡಾಉನ್ಸ ಹುಲ್ಲುಗಾವಲು ಪ್ರದೇಶ * ಭೂಮಧ್ಯ ಸಾಗರದ ಪ್ರದೇಶ * ಬ್ರಿಟಿಷ ಕೋಲಂಬಿಯಾ * ಗ್ರೀನ ಲ್ಯಾಂಡದ ಜನವಸತಿ ಇರುವ ಭಾಗ 

 

 

 

ಪಾಠ ೭ ಮೃದೆ

ಪ್ರಶ್ನೆ ೧ :- ಮುಂದಿನ ಕೋಷ್ಟಕವನ್ನು ಪೂರ್ಣ ಗೊಳಿಸಿರಿ.

ಘಟಕ

ಮೃದೆ ನಿರ್ಮಾಣಮಾಡುವದರಲ್ಲಿ ಪಾತ್ರ

ಮೂಲ ಶಿಲೆ

ವಿದಾರಣೆ/ಕಲ್ಲಿನ ಪುಡಿ

ಪ್ರದೇಶದ ಹವಾಮಾನ

ವಿದಾರಣೆ

ಸೇಂದ್ರೀಯ ಗೊಬ್ಬರ

ಹ್ಯೂಮಸ ಮತ್ತು ಫಲವತ್ತತೆ ಹೆಚ್ಚಾಗುವದು

ಸೂಕ್ಷ್ಮ ಜೀವಾಣು

ವಿಘಟನ ಪ್ರಕ್ರೀಯೆ

ಪ್ರಶ್ನೆ ೨:- ಯಾವುದರಿಂದ ಹಿಗೆ ಆಯಿತು?

೧ ) ಸಹ್ಯಾದ್ರಿಯ ಪಶ್ಚಿಮ ಭಾಗದಲ್ಲಿ ಬೆಸಾಲ್ಟ ಬಂಡೆಗಲ್ಲಿನಿAದ ಜಾಂಭಿ ಮೃದೆ ತಯಾರಾಗುವದು?

ಉತ್ತರ:- ಸಹ್ಯಾದ್ರಿಯ ಪಶ್ಚಿಮದ ಕಿನಾರಪಟ್ಟಿಯಲ್ಲಿ ಮತ್ತು ಪೂರ್ವ ವಿಧರ್ಭದಲ್ಲಿ ಈ ಮೃದೆ ಕಂಡುಬರುವದು.ಸಹ್ಯಾದ್ರೀಯ ಪಶ್ಚಿಮ ಭಗದಲ್ಲಿ ಹವಾಮಾನ ದಮಟ ಇರುವದು.ಅಲ್ಲಿ ಬೆಸಾಲ್ಟ ಮತ್ತು ಗರಸಿನ ಅಪಕ್ಷಾಲನವಾಗಿ ಜಾಂಬಿ ಮೃದೆ ತಯಾರಾಗುವದು. ಗರಸಿನಲ್ಲಿಯ ಲೋಹವ್ಯ ವಾತಾವರಣದಲ್ಲಿಯ ಪಾಣವಾಯುವಿನಲ್ಲಿ ಸಂಯೋಗವಾಗಿ ರಾಸಾಯನಿಕ ಕ್ರೀಯೆಯಾಗಿ ಈ ಮೃದೆ ತಯಾರಾಗುವದು, ಇದರ ಬಣ್ಣ ತಾಂಬಡಾ ಬಣ್ಣದಿರುವದು.

೨) ಮೃದೆಯಲ್ಲಿ ಹ್ಯೂಮಸದ ಪ್ರಮಾಣ ಬೆಳೆಯುವದು?

ಉತ್ತರ:- ಪ್ರಾದೇಶಿಕ ವನಸ್ಪತಿ ಮತ್ತು ಪ್ರಾಣಿಗಳ ವಿಘಟನೆಯಿಂದಾಗಿ ಮೃದೆಯಲ್ಲಿ ಒಂದಾಗುವವು.ವನಸ್ಪತಿಗಳ ಬೇರುಗಳು,ಕಸಕಡ್ಡಿಗಳು,ಪ್ರಾಣಿಗಳ ಮೃತಾವಶೇಷ ಮುಂತಾದ ಅವಶೇಷಗಳು ನೀರಿನಿಂದಾಗಿ ಕೋಳೆಯುವವು.ಅದರಂತೇಯೇ ವಿವಿಧ ಜೀವಿಗಳ ಮೂಲಕ ಅವುಗಳ ವಿಘಟನೆ ಆಗುವವು.ಉದಾ. ಎರೆಹುಳ,ಸಹಸ್ರಪಾದ,ಗೆದ್ದಲು,ಜರಿ,ಇರುವೆ ಮುಂತಾದವುಗಳು ಹಿಗೆ ವಿಘಟನೆಗೊಂಡ ಜೈವಿಕ ಪದಾರ್ಥಕ್ಕೆ ಹ್ಯೂಮಸ ಎನ್ನುವರು.

೩) ವಿಷುವವೃತ್ತ ಹವಾಮಾನದ ಪ್ರದೇಶದಲ್ಲಿ ಮೃದೆಯ ನಿರ್ಮಿತಿಯ ಪ್ರಕ್ರಿಯೆ ಬೇಗ ಆಗುವುದು?

ಉತ್ತರ:- ವಿಷುವವೃತ್ತ ಪ್ರದೇಶದಲ್ಲಿ ಸೂರ್ಯಕಿರಣ ಲಂಬರೂಪವಾಗಿ ಬಿಳುವದರಿಂದ ಅಲ್ಲಿಯ ಉಷ್ಣತಾಮಾನ ಹೆಚ್ಚಿಗೆ ಇರುವದು ಅದರಂತೆ ಮಳೆ ಪ್ರಮಾನ ಹೆಚ್ಚಿಗೆ ಇರುವದು. ಹೆಚ್ಚು ಉಷ್ಣತಾಮಾನ ಹಾಗೂ ಹೆಚ್ಚು ಮಳೆ ಇರುವ ಪ್ರದೇಶದಲ್ಲಿ ಮೃದೆ ನಿರ್ಮಾಣದ ಕಾರ್ಯ ವೇಗವಾಗಿ ಆಗುವದು. ಆದ್ದರಿಂದ ವಿಷುವವೃತ್ತ ಹವಾಮಾನದ ಪ್ರದೇಶದಲ್ಲಿ ಮೃದೆಯ ನಿರ್ಮಿತಿಯ ಪ್ರಕ್ರಿಯೆ ಬೇಗ ಆಗುವುದು

೪) ಮೃದೆಯಲ್ಲಿ ಕ್ಷಾರದ ಪ್ರಮಾಣ ಬೆಳೆಯುವದು.

ಉತ್ತರ:-ಮಿತಿಮೀರಿ ಜಲಸಿಂಚನದಿAದ ಭೂಮಿಯಲ್ಲಿಯ ಕ್ಷಾರ ಮೇಲೆ ಬರುವದು ಇದರಿಂದ ಭೂಮಿ ಕ್ಷಾರ ಆಗುವದು. ರಾಸಾಯನಿಕ ದ್ರಾವುದ ಅತೀಉಪಯೋಗದಿಂದ ಆ ದ್ರವ್ಯ ಮೃದೆಯಲ್ಲಿ ವರ್ಷಾನುಗಟ್ಟಲೆ ಹಾಗೆ ಇರುವದು.ಅದರಿಂದ ಮೃದೆಯಲ್ಲಿಯ ಸೂಕ್ಷಮಜೀವಿ ನಷ್ಟವಾಗಿ ಹ್ಯೂಮಸ ಪ್ರಮಾನ ಕಡಿಮೆ ಆಗುವದು ಇದರಿಂದ ಮೃದೆಯಲ್ಲಿ ಕ್ಷಾರದ ಪ್ರಮಾಣ ಬೆಳೆಯುವದು.

೫) ಕೊಂಕಣದಲ್ಲಿಯ ಜನರ ಆಹಾರದಲ್ಲಿ ಅಕ್ಕಿಯ ಪ್ರಮಾಣ ಹೆಚ್ಚಿಗೆ ಇರುವದು.

 ಉತ್ತರ:- ಕೊಂಕಣ ವಿಭಾಗದಲ್ಲಿ ಜಾಂಭಿ ಮೃದೆಹೆಚ್ಚಿನ ಪ್ರಮಾಣದಲ್ಲಿ ಇರುವದು ಅದರಂತೆ ಅಲ್ಲಿ ಮಳೆಯ ಪ್ರಮಾಣಹೆಚ್ಚಿಗೆ ಇರುವದು. ಅಲ್ಲಿಯ ಮೃದೆಯಲ್ಲಿ ಅಕ್ಕಿಯ ಉತ್ಪಾದನೆ ಚೆನ್ನಾಗಿ ಆಗುವದು,ಸ್ಥಾನಿಕ ಉತ್ಪಾದನಾನುಸಾರ ಮಾನವನ ಆಹಾರ ನಿಶ್ಚಿತವಾಗುತ್ತದೆ.ಆದ್ದರಿಂದ ಕೊಂಕಣದಲ್ಲಿಯ ಜನರ ಆಹಾರದಲ್ಲಿ ಅಕ್ಕಿಯ ಪ್ರಮಾಣ ಹೆಚ್ಚಿಗೆ ಇರುವದು

೬) ಮೃದೆಯ ಸವಕಳಿ ಆಗುವದು

ಉತ್ತರ:- ಗಾಳಿ ಹಾಗೂ ನೀರು ಇವುಗಳಿಂದಾಗಿ ಮೃದೆಯ ಸ್ಥರ ಹರಿದು ಹೋಗುವದು ಎಂದರೆ ಮೃದೆಯ ಸವಕಳಿ ಆಗುವದು.

೭) ಮೃದೆಯ ಅವನತಿ ಆಗುವದು.

ಉತ್ತರ:- ಅಧಿಕ ಉತ್ಪಾದನೆ ಪಡೆಯುವ ಸಲುವಾಗಿ ಅತೀಯಾಗಿ ರಸಾಯನಿಗ ಗೊಬ್ಬರ,ಕೀಟನಾಸಕ ,ಹುಲ್ಲುನಾಶಕ ಮುಂತಾದವುಗಳ ಅತೀ ಉಪಯೋಗ ಮಾಡಲಾಗುವದು ಇದರಿಂದ ಮೃದೆಯ ಅವನತಿ ಆಗುವದು.

ಪ್ರಶ್ನೆ ೩:- ಮಾಹಿತಿ ಬರೆಯಿರಿ.

೧) ಮೃದೆಯ ಸಂವರ್ಧನೆಯ ಉಪಾಯಗಳು.

ಉತ್ತರ:- ಫಲವಾತ್ತಾದ ಮಣ್ಣು ಹೊಲದಿಂದ ಹರಿದು ಹೊಗಬಾರದೆಂದು ಹೊಲಗಳಿಗೆ ಒಡ್ಡು ಹಾಕುವದು,ಒಡ್ಡುಗಳ ಮೆಲೆ ಕಂಟಿಗಳನ್ನು ನೆಡುವದು. ಹೊಲದ ಇಳುಕಲು ಭಾಗದಮೇಲೆ ಕಲ್ಲುಗಳಿಂದ ಒಡ್ಡು ಹಾಕುವದು ಮತ್ತು ಗ್ಳಿಯ ವೇಗದ ಮೇಲೆ ನಿಯಂತ್ರಣ ಇಡಲು ವೃಕ್ಷನೆಡುವದು ಇದರಿಂದ ಮೃದೆಯ ಸವಕಳಿ ನಿಲ್ಲುವದು ಹಿಗೆ ವೃಕ್ಷದ ಸಂವರ್ಧನೆ ಮಾಡಲು ಬರುವದು.

೨) ಸೇಂದ್ರಿಯ ಪದಾರ್ಥ

ಉತ್ರರ:- ಮೃದೆಯ ಅವನತಿ ನಿಲ್ಲಿಸಲು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಅತೀ ಉಪಯೋಗ ನಿಲ್ಲಿಸಿ ಸೇಂದ್ರಿಯ ಎಂದರೆ ಸೆಗಣೆ ಗೊಬ್ಬರ ಎರೆಹುಳ ಗೊಬ್ಬರಗಳ ಉಪಯೋಗ ಮಾಡಿದರೆ ಮೃದೆಯ ಫಲವತ್ತತೆ ಸಮತೋಲವನ್ನು ಕಾಪಾಡಲು ಬರುವದು.ಅದರಂತೆ ಮೃದೆಯಲ್ಲಿಯ ಹ್ಯೂಮಸ ಪ್ರಮಾಣ ಬೆಳೆಸಲು ಸಹಾಯವಾಗುವದಲ್ಲದೇ ಮೃದೆಯ ಫಲವತ್ತತೆಯೂ ಕಾಪಾಡಲ್ಪದುವದು.

೩) ಹೊಲದಲ್ಲಿಯ ಮೃದೆಯ ವಿಶಿಷ್ಟ ಪ್ರಕಾರದ ಬೆಳೆ ಬೆಳೆಯಲು ಯೋಗ್ಯವಾಗಿದೆಯೇ? ಎಂಬುದರ ಮಾಹಿತಿ ಪಡೆಯುವ ಸ್ಥಳ

ಉತ್ತರ:- ಮೃದೆ ಪರಿಕ್ಷಣೆ ಕೆಂದ್ರ

೪) ವನಸ್ಪತಿ ಜೀವನದಲ್ಲಿ ಮೃದೆಯ ಮಹತ್ವ

ಉತ್ತರ:- ಕೇವಲ ಯೋಗ್ಯ ಹವಾಮಾನ ಬಹಳಷ್ಟು ನೀರು ಮತ್ತು ಸೂರ್ಯ ಪ್ರಕಾಶ ಇದ್ದರೆ ನಟೆಯುವದಿಲ್ಲ ಅದಕ್ಕಾಗಿ ಫಲವತ್ತಾದ ಮೃದೆಯ ಅವಶ್ಯಕತೆ ಇರುವದು.ವನಸ್ಪತಿಗಳ ಬೆಳವಣಿಗೆಯ ಸಲುವಾಗಿ ಘಟಕದ್ರವ್ಯ ಮೃದೆಯಿಂದ ದೊರೆಯುವದು. ಮೃದೆ ಅಂದರೆ ಮಣ್ಣು ಅಲ್ಲಾ.ಮೃದೆಯಲ್ಲಿ ಒಡೆದ ಗರಸಿನ ತುಕುಡಿ, ಕೊಳೆತ ಸೆಂದ್ರೀಯ ಪದಾರ್ಥ ಮತ್ತು ಅಸಂಖ್ಯ ಸೂಕ್ಷ್ಮ ಜೀವಿ ಇರುತ್ತವೆ.

ಪ್ರ.4. ಮೃದೆಗೆ ಸಂಬಂಧಿಸಿದ ಈ ಕೋಷ್ಟಕ ಪೂರ್ಣಗೊಳಿಸಿರಿ.

ಕ್ರಿಯೆ

ಪರಿಣಾಮ

ಫಲವತ್ತತೆ ಬೆಳೆಯುವದು. ಕಡಿಮೆ ಆಗುವದು

ಕಟ್ಟು ಒಡ್ಡು ಹಾಕುವದು

ಮೃದೆಯ ಸವಕಳಿ ಕಡಿಮೆ ಆಗುವದು

ಫಲವತ್ತತೆ ಬೆಳೆಯುವದು

ವೃಕ್ಷ ನೆಡುವದು

ಗಾಳಿಯ ವೇಗ ಕಡಿಮೆ ಆಗುವದು.

ಫಲವತ್ತತೆ ಬೆಳೆಯುವದು

ಕೆಲವುಕಾಲ ಭೂಮಿಯ ಸಾಗುವಳಿ ಬೆಳೆಯುವುದು

ಮೃದೆಯ ಫಲವತ್ತತೆ ಉಳಿಯುವದು

ಫಲವತ್ತತೆ ಬೆಳೆಯುವದು

ಸೇಂದ್ರಿಯ ಉಪಯೋಗ ಮಾಡುವದು

ಹ್ಯೂಮಸ ಪ್ರಮಾ ಬೆಳೆಯಿತು

ಫಲವತ್ತತೆ ಬೆಳೆಯುವದು

ಇಳಿಜಾರಿನಗುಂಟ ಅಡ್ಡ ತಗ್ಗುಗಳನ್ನು ತೊಡುವದು

ಭೂಮಿಯ ಸವಕಳಿ ನಿಂತು ಭೂಮಿಯಲ್ಲಿ ನೀರು ನುಂಗುವದು

ಫಲವತ್ತತೆ ಬೆಳೆಯುವದು

ಹೊಲದಲ್ಲಿ ಕಸಕಡ್ಡಿ ಸುಡುವದು

ಮಣ್ಣಿನ ಗುಣಮಟ್ಟ ಕಡಿಮೆ ಆಗುವದು

ಫಲವತ್ತತೆ ಕಡಿಮೆ ಆಗುವದು

ಕಂಪೋಸ್ಟ ಗೊಬ್ಬರ ಎರೆಹುಳ ಗೊಬ್ಬರ

ಸೋಕ್ಷ್ಮ ಜೀವಿಗಳಿಗೆ ಪೋಷಕ ವಾಗುವದು

ಫಲವತ್ತತೆ ಬೆಳೆಯುವದು

ಅತೀ ಸೊಚನ ಮಾಡುವದು

ಮಣ್ಣಿನಲ್ಲಿ ಕ್ಷಾರದ ಪ್ರಮಾಣ ಬೆಳೆಯುವದು.

ಫಲವತ್ತತೆ ಕಡಿಮೆ ಆಗುವದು

ರಾಸಾಯನಿಕ ಗೊಬ್ಬರ ಅತೀ ಬಳಕೆ ಮಾಡುವದು.

ಮೃದೆಯ ಅವನತಿ ಆಗುವದು.    

ಫಲವತ್ತತೆ ಕಡಿಮೆ ಆಗುವದು

ಪಾಠ ೮ ಋತು ನಿರ್ಮಿತಿ ( ಭಾಗ- ೨)

ಪ್ರಶ್ನೆ೧ :- ಸರಿಯಾದ ಪರ್ಯಾಯ ಆಯ್ದು ವಿಧಾನ ಪೂರ್ಣ ಮಾಡಿರಿ.

೧ ) ಸೂರ್ಯನ ಭಾಸಮಾನ ಭ್ರಮಣ ಆಗುವುದೆಂದರೆ ------

ಅ) ಸೂರ್ಯನು ಒಂದು ವರ್ಷದಲ್ಲಿ ಪೃಥ್ವಿಯ ಸುತ್ತ ತಿರುಗುವದು.

ಆ) ಸೂರ್ಯ ವರ್ಷವೀಡಿ ಉತ್ತರ ಹಾಗೂ ದಕ್ಷಿಣದತ್ತ ಸರಿಯುತ್ತಿರುವ ಹಾಗೆ ಅನಿಸುವದು.

ಇ) ಪೃಥ್ವಿಯು ಸತತವಾಗಿ ಜಾಗ ಬದಲಾಯಿಸುವದು.

ಉತ್ತರ:- ಸೂರ್ಯ ವರ್ಷವೀಡಿ ಉತ್ತರ ಹಾಗೂ ದಕ್ಷಿಣದತ್ತ ಸರಿಯುತ್ತಿರುವ ಹಾಗೆ ಅನಿಸುವದು

೨ )  ಪೃಥ್ವಿಯ ಕಕ್ಷೆ ವಾಲಿರದಿದ್ದರೆ -----

 ಅ) ಪೃಥ್ವಿಯು ತನ್ನ ಸುತ್ತ ತಿರುಗುತ್ತಿರಲಿಲ್ಲ.

ಆ) ಪೃಥ್ವಿಯು ಸೂರ್ಯನ ಸುತ್ತ ಹೆಚ್ಚು ವೇಗದಲ್ಲಿ ಸುತ್ತುತಿತ್ತು.

ಇ) ಪೃಥ್ವಿಯು ಬೇರೆ ಬೇರೆ ಅಕ್ಷವೃತ್ತ ಭಾಗಗಳಲ್ಲಿ ವರ್ಷವೀಡಿ ಒಂದೇ ತರಹದ ಹವಾಮಾನವಿರುತ್ತದೆ.

ಉತ್ತರ:- ಪೃಥ್ವಿಯು ಬೇರೆ ಬೇರೆ ಅಕ್ಷವೃತ್ತ ಭಾಗಗಳಲ್ಲಿ ವರ್ಷವೀಡಿ ಒಂದೇ ತರಹದ ಹವಾಮಾನವಿರುತ್ತದೆ.

೩ ) ೨೧ ಜೂನ ಹಾಗೂ ೨೨ ಡಿಸೆಂಬರ ಇವು ಅಯನ ದಿನಗಳಾಗಿವೆ. ಕಾರಣ -------

ಅ) ಸೂರ್ಯನು ೨೧ ಜೂನದಂದು ಕರ್ಕವೃತ್ತದಿಂದ ದಕ್ಷಿಣಕ್ಕೆ ,೨೨ ಡಿಸೆಂಬರ ದಂದು ಮಕರ ವೃತ್ತದಿಂದ ಉತ್ತರಕ್ಕೆ ದಾರಿ ಹಿಡಿಯುವದು.

ಆ) ಸೂರ್ಯನ ದಕ್ಷಿಣಾಯನ ೨೧ ಜೂನ ದಿಂದ ೨೨ ಡಿಸೆಂಬರ ಈ ಸಮಯದಲ್ಲಿ ಆಗುವದು.

ಇ) ಪೃಥ್ವಿಯ ಉತ್ತರಾಯಣ ೨೧ ಜೂನ ದಿಂದ ೨೨ ಡಿಸೆಂಬರ ಈ ಸಮಯದಲ್ಲಿ ಆಗುವುದು.

ಉತ್ತರ:- ಸೂರ್ಯನು ೨೧ ಜೂನದಂದು ಕರ್ಕವೃತ್ತದಿಂದ ದಕ್ಷಿಣಕ್ಕೆ,  ೨೨ ಡಿಸೆಂಬರದಂದು ಮಕರ ವೃತ್ತದಿಂದ ಉತ್ತರಕ್ಕೆ ದಾರಿ ಹಿಡಿಯುವದು.

೪) ಪೃಥ್ವಿಯು ಸೂರ್ಯನ ಸುತ್ತ ಪರಿಭ್ರಮಣ ಹಾಗೂ ಒಲಿದ ಕಕ್ಷೆ ಇವುಗಳ ಸಂಯುಕ್ತ ಪರಿಣಾಮದಿಂದ ಮುಂದಿನ ಋತುಗಳಲ್ಲಿ ನಿರ್ಮಾಣ ಆಗುತ್ತದೆ-----------

ಅ) ಬೇಸಿಗೆ, ಚಳಿಗಾಲ, ಮಳೆಗಾಲ, ಮಾನ್ಸೂನ, ಹಿಂದುರುಗುವ ಕಾಲ

ಆ) ಬೇಸಿಗೆ, ಚಳಿಗಾಲ, ವಸಂತ

ಇ) ಬೇಸಿಗೆ, ಚಳಿಗಾಲ

ಉತ್ತರ:- ಬೇಸಿಗೆ, ಚಳಿಗಾಲ

 ಪ್ರಶ್ನೆ ೨:- ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

೧ ) ಉತ್ತರ ಗೋಲಾರ್ಧದಲ್ಲಿ ಋತುಗಳ ನಿರ್ಮಿತಿ ಯಾವುದರಿಂದ ಆಗುವದು?

ಉತ್ತರ:- ಚಳಿಗಾಳದಲ್ಲಿ ಸೂರ್ಯಕಿರಣ ಒರೆಯಾಗಿ ಬೀಳುವದರಿಂದ ೨೩ ಸಪ್ಟೆಂಬರ ದಿಂದ ೨೧ ಮಾರ್ಚವರೆಗೆ ಉತ್ತರಗೋಲಾರ್ಧದಲ್ಲಿ ಚಳಿಗಾಲ ಇರುವದು ಹೀಗೆ ಋತುಗಳ ನಿರ್ಮಿತಿ ಆಗುವದು.

೨ ) ಸಂಪಾತ ಸ್ಥಿತಿಯಲ್ಲಿ ಪೃಥ್ವಿಯ ಮೇಲೆ ದಿನದ ಕಾಲಾವಧಿ ಹೇಗೆ ಆಗುವದು?

ಉತ್ತರ:- ಸಂಪಾತ ಸ್ಥಿತಿಯಲ್ಲಿ ಪೃಥ್ವಿಯ ಮೇಲೆ ದಿನಮಾನ ಮತ್ತು ಉಷ್ಣತಾಮಾನ ಸಮಸಮಾನ ಅಂದರೆ  ಹನ್ನೆರಡು-ಹನ್ನೆರಡು ತಾಸುಗಳದು ಇರುವದು.

೩ ) ವಿಷುವವೃತ್ತದ ಭಾಗದ ಮೇಲೆ ಋತುಗಳ ಪ್ರಭಾವ ಏಕೆ ಕಂಡುಬರುವದಿಲದಲ?

ಉತ್ತರ:- ವಿಷುವವೃತ್ತದ ಉತ್ತರ ಮತ್ತು ದಕ್ಷಿಣಕ್ಕೆ ೫ ಅಂಶ ಅಕ್ಷವೃತ್ತದ ನಡುವೆ ವಿಷುವವೃತ್ತ ಪ್ರದೇಶ ಇರುವದು.ಇಲ್ಲಿ ಸರಾಸರಿ ಉಷ್ನತಾಮಾನ ೨೭ ಅಂಶ ಇರುವದು.ಈ ಪ್ರದೇಶದಲ್ಲಿ ಉಷ್ಣತೆ ಹೆಚ್ಚಿಗೆಇದ್ದು ವರ್ಷವೀಡಿ ಮಳೆ ಬಿಳುವದು.ಆದ್ದರಿಂದ  ಇಲ್ಲಿ ಹವಾಮಾನದ ಸ್ಥಿತಿಯಲ್ಲಿ ಯಾವುದೇ  ಋತುಗಳ ಪ್ರಭಾವ ಕಂಡು ಬರುವದಿಲ್ಲ.

೪ ) ದಕ್ಷಿಣಾಯನದಲ್ಲಿ ಆಂಟಾರ್ಟಿಕ ವೃತ್ತದಿಂದ ದಕ್ಷಿಣ ದೃವದವರೆಗೆ ಸೂರ್ಯ ೨೪ ಗಂಟೆಗಿAತಲೂ ಹೆಚ್ಚು ಕಾಲದವರೆಗೆ ಕಾಣಿಸುವನು?

ಉತ್ತರ:- ಆಂಟಾರ್ಟಿಕವೃತ್ತದಿAದ ಅದು ಉತ್ತರ ಗೋಲಾರ್ಧಭಾಗದಲ್ಲಿ ೨೪ ಘಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲಾವಧಿಯಲ್ಲಿ ಸೂರ್ಯದರ್ಶನ ವಾಗುವದು.ದಕ್ಷಿಣ ಗೋಲಾರ್ಧದಲ್ಲಿಯು ಇದೇ ಪರಿಸ್ಥಿತಿ ಇರುವದು ಆದ್ದರಿಂದ ದಕ್ಷಿಣಾಯನದಲ್ಲಿ ಆಂಟಾರ್ಟಿಕ ವೃತ್ತದಿಂದ ದಕ್ಷಿಣ ದೃವದವರೆಗೆ ಸೂರ್ಯ ೨೪ ಗಂಟೆಗಿAತಲೂ ಹೆಚ್ಚು ಕಾಲದವರೆಗೆ ಕಾಣಿಸುವನು.

೫) ಪೆಂಗ್ವಿನಗಳು ಉತ್ತರ ಧ್ರುವದಲ್ಲಿ ಏಕೆ ಕಂಡು ಬರುವದಿಲ್ಲ?

ಉತ್ತರ:- ಉತ್ತರ ದೃವದಲ್ಲಿ ಹವಾಮಾನ ಬಹಳಷ್ಟು ತಂಪಾಗಿರುವದು. ಇಂಥ ತಂಪಾದ ಹವೆಯಲ್ಲಿ ಪೆಂಗ್ವೀನ ಪ್ರಜಾತಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಪೆಂಗ್ವಿನಗಳು ಉತ್ತರ ಧ್ರುವದಲ್ಲಿ ಕಂಡು ಬರುವದಿಲ್ಲ.

ಪ್ರಶ್ನೆ ೩:- ಕೆಳಗಿನ ವಿಧಾನಗಳ ತಪ್ಪನ್ನು ಸರಿಪಡಿಸಿ ಮತ್ತೆ ಬರೆಯಿರಿ.

೧ ) ಪೃಥ್ವಿಯ ಪರಿಭ್ರಮಣದ ಕಾಲಕ್ಕನುಸರಿಸಿ ಗತಿಯು ಹೆಚ್ಚು ಕಡಿಮೆ ಆಗುತ್ತಿರುವುದು.

ಉತ್ತರ:- ಈ ವಿಧಾನ ತಪ್ಪು ಇದೆ. ಪೃಥ್ವಿಯ ಪರಿಭ್ರಮಣದ ಕಾಲಕ್ಕನುಸರಿಸಿ ಋತುಗಳು ಹೆಚ್ಚು ಕಡಿಮೆ ಆಗುತ್ತಿರುವುದು.

೨ ) ನಾವು ಉತ್ತರ ಗೋಲಾರ್ಧದಿಂದ ನೋಡಿದರೆ ನಮಗೆ ಸೂರ್ಯನ ಭಾಸಮಾನ ಭ್ರಮಣ ಆದದ್ದು ಕಂಡುಬರುವದು.

ಉತ್ತರ:-  ಈ ವಿಧಾ  ಸರಿ ಇದೆ.

೩) ವಿಷುವ ದಿನದ ತಾರಿಖುಗಳು ಪ್ರತಿವರ್ಷ ಬದಲಿಸುತ್ತಿರುತ್ತವೆ.

ಉತ್ತರ:- ವಿಷುವ ದಿನದ ತಾರಿಖುಗಳು ಯಾವಾಗಲಾದರೊಮ್ಮೆ ಬದಲಿಸುತ್ತಿರುತ್ತವೆ.

೪ ) ಉತ್ತರ ಕ್ಯಾನಡಾದಲ್ಲಿ ಸಪ್ಟೆಂಬರದಿAದ ಮಾರ್ಚ ಇದು ಬೇಸಿಗೆಯ ಕಾಲಾವಧಿ ಆಗಿರುವುದು.

ಉತ್ತರ:- ಉತ್ತರ ಕ್ಯಾನಡಾದಲ್ಲಿ ಮಾರ್ಚ ದಿಂದ ಜೂನ ಬೇಸಿಗೆಯ ಕಾಲಾವಧಿ ಆಗಿರುವದು.

೫ ) ದಕ್ಷಿಣ ಆಫ್ರೀಕಾದಲ್ಲಿ ಬೇಸಿಗೆ ಇದ್ದಾಗ ಆಸ್ಟೆçÃಲಿಯಾದಲ್ಲಿ ಚಳಿಗಾಲ ಇರುತ್ತದೆ.

ಉತ್ತರ:- ದಕ್ಷಿಣ ಆಫ್ರೀಕಾದಲ್ಲಿ ಬೇಸಿಗೆ ಇದ್ದಾಗ ಆಸ್ಟೆçÃಲಿಯಾದಲ್ಲಿ ಬೇಸಿಗೆಕಾಲ ಇರುತ್ತದೆ.

 ೬) ವಸಂತ ಸಂಪಾತ ಹಾಗೂ ಶರದ ಸಂಪಾತ ಸ್ಥೀತಿಯಲ್ಲಿ ಹಗಲಿನ ಕಾಲಾವಧಿ ಚಿಕ್ಕವಿರುತ್ತದೆ.

ಉತ್ತರ:- ವಸಂತ ಸಂಪಾತ ಹಾಗೂ ಶರದ ಸಂಪಾತ ಸ್ಥೀತಿಯಲ್ಲಿ ಹಗಲು ಮತ್ತು ರಾತ್ರೀ ಸಮಾನ ಇರುತ್ತವೆ.

 ಪ್ರ.4. ಕೆಳಗಿನ ಆಕೃತಿಯಲ್ಲಿ ತಪ್ಪುಗಳನ್ನು ಕಂಡು ಹಿಡಿಯಿರಿ.

 

 

ಪಾಠ ೯  ಕೃಷಿ

ಪ್ರಶ್ನೆ೧:- ಕೆಗಿನ ವಿಧಾನಗಳಿಗಾಗಿ ಯೋಗ್ಯ ಪರ್ಯಾಯವನ್ನು ಆರಿಸಿರಿ.

೧ ) ಈ ಕೃಷಿಯಲ್ಲಿ ಬೆಳೆಗಳನ್ನು ಅದಲು ಬದಲಾಗಿ ಬೆಳೆಸುವರು.

 ಅ) ಆಳವಾದ ಬೇಸಾಯ  ಆ) ತೋಟದ ಬೇಸಾಯ  ಇ) ವ್ಯಾಪಾರಿ ಬೇಸಾಯ  ಈ ) ಹಣ್ಣಿನ ಬೇಸಾಯ

ಉತ್ತರ:- ಆಳವಾದ ಬೇಸಾಯ

೨) ಕೆಳಗಿನವುಗಳಲ್ಲಿ ಕೃಷಿಗೆ ಯೋಗ್ಯವಾದ ಪರ್ಯಾಯ.

 ಅ) ಬರೀ ನೆಗಿಲು ಹೊಡೆಯುವದು  ಆ) ಪ್ರಾಣಿ, ಸಾಮಗ್ರಿ, ಯಂತ್ರ ಹಾಗೂ ಮಾನವ ಶಕ್ತಿಯ ಉಪಯೋಗಮಾಡುವುದು.

 ಇ) ಬರೀ ಮಾನವಶಕ್ತಿಯ ಉಪಯೋಗ  ಈ) ಬರೀ ಬೆಳೆ ಬೆಳೆಸುವದು.

ಉತ್ತರ:- ಪ್ರಾಣಿ, ಸಾಮಗ್ರಿ, ಯಂತ್ರ ಹಾಗೂ ಮಾನವ ಶಕ್ತಿಯ ಉಪಯೋಗಮಾಡುವುದು.

೩) ಭಾರತದ ಕೃಷಿ ಕ್ಷೆತ್ರದಲ್ಲಿ ವಿಕಾಸವಾಗಿದೆ ಏಕೆಂದರೆ...

 ಅ) ಭರತದಲ್ಲಿ ಕೃಷಿಯ ಎರಡು ಹಂಗಮುಗಳಿವೆ.   ಆ) ಬಹುಸಂಖ್ಯಾ ಜನರು ಕೃಷಿಯ ಮೇಲೆ ಅವಲಂಬಿಸಿರುವರು.

 ಇ) ಭಾರತದಲ್ಲಿ ಪಾರಂಪಾರಿಕ ಕೃಷಿ ಮಾಡಲಾಗುವದು.  ಈ) ಭಾರತದಲ್ಲಿ ಹವಾಮಾನ,ಮಣ್ಣು,ನೀರು ಮುಂತಾದ ಅನುಕೂಲಕರವಾದ ಘಟಕಗಳು ಉಪಲಬ್ದವಾಗಿವೆ.

ಉತ್ತರ:- ಭಾರತದಲ್ಲಿ ಹವಾಮಾನ,ಮಣ್ಣು,ನೀರು ಮುಂತಾದ ಅನುಕೂಲಕರವಾದ ಘಟಕಗಳು ಉಪಲಬ್ದವಾಗಿವೆ.

೪ ) ಭಾರತದ ಕೃಷಿಯಲ್ಲಿ ಆಧುನಿಕ ಪದ್ಧತಿ ಹಾಗೂ ತಂತ್ರಜ್ಞಾನಗಳ ಉಪಯೋಗ ಮಾಡುವುದು ಅವಶ್ಯಕವಾಗಿದೆ, ಕಾರಣ..

  ಅ) ಒಳ್ಳೆಯ ತಳಿಯ ಬೀಜಗಳ ಕಾರಖಾನೆಗಳಿವೆ.  ಆ) ರಾಸಾಯನಿಕ ಗೊಬ್ಬರ ತಯಾರಿಸುವ ಉದ್ದಿಮೆಗಳಿವೆ.

  ಇ) ಜನಸಂಖ್ಯೆಯ ಬೆಳವಣಿಗೆ ಹಾಗೂ ಕೃಷಿ ಆಧಾರಿತ ಉದ್ದಿಮೆಗಳಿವೆ. ಈ)ಆಧುನಿಕ ಸಾಮಗ್ರಿಗಳು ಹಾಗೂ ಯಂತ್ರಗಳು    ಉಪಲಬ್ದವಾಗಿವೆ.

ಉತ್ತರ:- ಆಧುನಿಕ ಸಾಮಗ್ರಿಗಳು ಹಾಗೂ ಯಂತ್ರಗಳು ಉಪಲಬ್ದವಾಗಿವೆ.

ಪ್ರಶ್ನೆ ೨:- ಕೆಳಗಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

೧ ) ಕೃಷಿಗಾಗಿ ನೀರಾವರಿಯ ಮಹತ್ವದ ಬಗೆಗೆ ಬರೆಯಿರಿ.

ಉತ್ತರ:- ಬೆಳೆಯಸಲುವಾಗಿ ಮಳೆನಿರಿನಹೊರತು ಸ್ವತಂತ್ರವಾಗಿ ನೀರಿನ ವ್ಯವಸ್ಥೆಮಾಡುವುದೆಂದರೆ ನೀರಾವರಿ.ಬೇಳೆಯಸಲುವಾಗಿ ನೀರು ಅತ್ಯಂತ ಅವಶ್ಯಕವಿದೆ. ಕೇವಲ ಮಳೆಯ ಮೇಲೆ ಬೆಳೆತಗೆದುಕೊಳ್ಳುವದು ಬಹಳ ಕಸ್ಟವಾಗುವದು.ಇಂಥ ವೇಳೆಗೆ ಕಾಲುವೆ,ಬಾವಿ ,ಕೆರೆ ,ಜಲಾಶಯ ದಿಂದ ನೀರಿನ ಪೂರೈಕೆ ಮಾಡುವರು ಇದಕ್ಕೆ ನೀರಾವರಿ ಅನ್ನುವರು. ನೀರಾವರಿ ಮಾಡುವದರಿಂದ ಭೂಮಿಯಲ್ಲಿ ಬೇಳೆಯ ಉತ್ಪಾದನೆ ಹೆಚ್ಚಿಗೆ ಆಗುವದು.

೨ ) ನೀರಾವರಿಗಾಗಿ ಉಪಯೋಗಿಸುವ ಯಾವುದೇ ಎರಡು ಪದ್ದತಿಗಳ ತುಲನಾತ್ಮಕ ಮಾಹಿತಿ ಬರೆಯಿರಿ.

ಉತ್ತರ:- ನೀರಾವರಿಯ ಸಲುವಾಗಿ ಮೊದಲು ಕವಲಿಯ ಮುಖಾಂತರ ನೀರು ಕೊಡುತ್ತಿದ್ದರು ಇದರಿಂದ ನೀರಿನ ಅಪವ್ಯಯ ಆಗುತ್ತಿತ್ತು. ಆಧುನಿಕ ಪದ್ದತಿಯಿಂದ  ಅಂದರೆ ತುಷಾರ ಸಿಂಚನ ಮತ್ತು ಹನಿ ನೀರಾವರಿ ಯೋಜನೆಯಿಂದ ನೀರು ಹೆಚ್ಚಿಗೆ ವ್ಯರ್ಥವಾಗದೇ ಬೆಳೆಗೆ ಎಷ್ಟು ಬೆಕು ಅಷ್ಟೇ ನೀರು ಕೊಡಲು ಅನುಕೂಲವಾಗಿದೆ.ಹನಿನೀರಾವರಿ ಯೋಜನೆಯಿಂದ ಬೇಳೆಯ ಬಡ್ಡೆಗೆ ಹನಿಹನಿಯಾಗಿ ನೀರು ಬೀಳುವದರಿಂದ ನೀರಿನ ಉಳಿತಾಯ ವಾಗುವದು. ತುಷಾರ ಸಿಂಚನದಿAದ ಬೇಳೆಗಳಿಗೆ ನೀರು ಸಿಂಪಡಿಸಿ ನೀರಿನ ಉಳಿತಾಯ ಮಾಎಬಹುದು.

೩ ) ಕೃಷಿಯ ಪ್ರಮುಖ ಪ್ರಕಾರಗಳು ಹೇಳಿ ಆಳವಾದ ಹಾಗೂ ವಿಸ್ತಾರವಾದ ಧಾನ್ಯದ ಕೃಷಿಯ ಮಾಹಿತಿ ಬರೆಯಿರಿ.

ಉತ್ತರ:- ಕೃಷಿಯ ಪ್ರಮುಖ ಪ್ರಕಾರ ಕೆಳಗಿನಂತಿವೆ.

೧ ) ಅಲೆಮಾರಿ ಅಥವಾ ಸ್ಥಳಾಂತರ ಬೇಸಾಯ, ಆಳವಾದ ಬೇಸಾಯ ೨) ವ್ಯಾಪಾರಿ ಬೇಸಾಯ ಹಿಗೆ ಎರಡು ಪ್ರಕಾರಗಳಿವೆ.

  ವ್ಯಾಪಾರಿ ಬೇಸಾಯದಲ್ಲಿ ವಿಸ್ತಾರವಾದ ಧಾನ್ಯಗಳ ಬೇಸಾಯ, ತೋಟಗಾರಿಕೆಯ ಬೇಸಾಯ , ಹಣ್ಣಿನ /ಹೂವಿನ ಬೇಸಾಯ ಹೀಗೆ ಪ್ರಕಾರಗಳಿವೆ.

೧ ) ಆಳವಾದ ಬೇಸಾಯ ವೈಶಿಷ್ಟ ಕೆಳಗಿನಂತಿವೆ.

    ಹೆಚ್ಚು ಜನಸಂಖ್ಯೆಯಿAದಾಗಿ ಇಲ್ಲವೆ ಭೂಮಿಯ ಕ್ಷೆತ್ರವೇ ಕಡಿಮೆ ಇದ್ದಲ್ಲಿ ಪ್ರತಿಯೊಬ್ಬನ ಪಾಲಿಗೆ ಬೇಸಾಯದ ಭೂಮಿಯ ಪ್ರಮಾಣ ಕಡಿಮೆ ಇರುವುದು.

    ಇಂತಹ ಬೇಸಾಯ ಹೆಚ್ಚಾಗಿ ವಿಕಸನಶೀಲ ಪ್ರದೇಶಗಳಲ್ಲಿ ಕಂಡು ಬರುವುದು.

    ಈ ಬೇಸಾಯದಿಂದ ಬರುವ ಉತ್ಪನ್ನ ಕೇವಲ ಕುಟುಂಬದ ಆಹಾರ ಧಾನ್ಯಗಳ ಬೇಡಿಕೆಯ ಪೂರೈಕೆ ಮಾಡುವುದಷ್ಟೇ ಇರುವುದು.

    ಈ ಪ್ರಕಾರದ ಬೇಸಾಯದಲ್ಲಿ ರೈತ ಹಾಗೂ ಅವನ ಕುಟುಂಬ ಸಂಪೂರ್ಣವಾಗಿ ಬೇಸಾಯದ ಮೇಲೆಯೇ ಅವಲಂಬಿಸಿರುತ್ತದೆ. ಬೇಸಾಯದ ಉತ್ಪನ್ನ ಕಡಿಮೆ ಇರುವದರಿಂದ ಆರ್ಥಿಕ ಸ್ಥೀತಿ ಅಷ್ಟಕಷ್ಟೇ ಇರುವದು.

    ಬೇಸಾಯದಲ್ಲಿ ಪ್ರಾಣಿ ಶಕ್ತಿಯ ಉಪಯೋಗ ಹೆಚ್ಚು ಆಗುವದು.

    ಆಹಾರ ಧಾನ್ಯಗಳ ಹೊರತು ತರಕಾರಿಯನ್ನು ಬೆಳೆಸಲಾಗುವದು.

೨ ) ವಿಸ್ತಾರವಾದ ಧಾನ್ಯದ ಬೇಸಾಯ ವೈಶಿಷ್ಟ್ಯ ಕೆಳಗಿನಂತಿವೆ

    ಹೊಲದ ಕ್ಷೆತ್ರ ೨೦೦ ಹೆಕ್ಟರ ಇಲ್ಲವೆ ಅದಕ್ಕಿಂತ ಹೆಚ್ಚು ಇರುವದು.

  ವಿಸ್ತಾರವಾದ ಬೇಸಾಯದಲ್ಲಿ ಬೇಸಾಯದ ದೊಡ್ಡ ಕ್ಷೆತ್ರ ಹಾಗೂ ಕಡಿಮೆ ಜನಸಂಖ್ಯೆ ಇರುವದರಿಂದ ಈ ಬೇಸಾಯವನ್ನು ಯಂತ್ರಗಳ ಸಹಾಯದಿಂದ ಮಾಡಲಾಗುವದು.

ಉದಾ_ ನೇಗಿಲು ಹೊಡೆಯಲು ಟ್ರ್ಯಕ್ಟರ ಉಪಯೋಗಿಸುವರು.

    ಈ ಬೇಸಾಯದ ಪ್ರಮುಖ ವೈಶಿಷ್ಟö್ಯವೆಂದರೆ ಒಂದು ಬೆಳೆಯ ಪದ್ದತಿಉದಾ- ಗೋದಿ ಅಥವಾ ಗೋವಿನ ಜೋಳ ಇಂತಹ ಬೆಳೆಗಳು.

    ಇಂತಹ ಬೇಸಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ತೊಡಗಿಸುವ ಅವಶ್ಯಕತೆ ಇರುವದು.ಉದಾ- ಯಂತ್ರಗಳ ಖರೀದಿ

    ಬರಗಾಲ ಅದರಂತೆಯೇ ಮಾರುಕಟ್ಟೆಯ ಬೆಲೆಯಲ್ಲಾಗುವ ಏರಿಳಿತ ಜಿಟ್ಟೆ,ಮಿಡತೆಗಳ ಆಕ್ರಮಣ ಮುಂತಾದ ಸಮಸ್ಯೆಗಳು ವಿಸ್ತಾರವಾದ ಬೇಸಾಯಕ್ಕೆ ಸಂಬAಧಪಟ್ಟಿವೆ.

    ಸಮಶೀತೋಷ್ಣ ಹುಲ್ಲುಗಾವಲು ಪ್ರದೇಶದಲ್ಲಿ ಈ ಪ್ರಕಾರದ ಬೇಸಾಯ ಆಗುತ್ತದೆ.

೪) ತೋಟದ ಕೃಷಿಯ ವೈಶಿಷ್ಟ್ಯ ಗಳನ್ನು ಬರೆಯಿರಿ.

ಉತ್ತರ :- ತೋಟಗಾರಿಕ ಬೇಸಾಯದ ವೈಶಿಷ್ಟ್ಯಗಳು ಕೆಳಗಿನಂತಿವೆ.

   ಹೊಲದ ಕ್ಷೆತ್ರ ೪೦ ಹೆಕ್ಟರ ಅಥವಾ ಹೆಚ್ಚು ಇರುವದು.

   ಹೊಲದ ಕ್ಷಡತ್ರ ಗುಡ್ಡಗಳ ಇಳುಕಲಿನಲ್ಲಿ ಇದ್ದುದರಿಂದ ಹೆಚ್ಚಾಗಿ ಯಂತ್ರಗಳ ಬಳಸಲಾಗುವದಿಲ್ಲ,ಆದುದರಿಂದ ಮಾನವ ಶಕ್ತಿಯ ಮಹತ್ವದ್ದಾಗಿದೆ.

    ಪ್ರದೇಶದ ಭೌಗೋಲಿಕ ಸ್ಥಿತಿ ಯಾವ ಬೆಳೆಗೆ ಪೋಷಕವಾಗಿರುವೂದೋ,ಅದೇ ಬೆಳೆಯನ್ನು ಬೆಳೆಯುವರು.ಇದು ಒಂದು ಬೆಳೆಯ ಪದ್ಧತಿಯಾಗಿದೆ.ಪದ್ಧತಿಯ ಬೇಸಾಯವಾಗಿದೆ.

    ಇಂತಹ ಬೇಸಾಯದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಆಗುವದಿಲ್ಲ.ಕೇವಲ ವ್ಯಾಪಾರಿ ಬೆಳೆಗಳ ಉತ್ಪಾದನೆ ತೆಗೆದುಕೊಳ್ಳಲಾಗುವದು ಉದಾ- ಚಹ,ರಬ್ಬರ,ಕಾಫಿ ತೆಂಗು,ಕೋಕೋ,ಮಸಾಲೆ ಪಧಾರ್ಥ ಮುಂತಾದವುಗಳು.

   ಈ ಪ್ರಕಾರ ಬೇಸಾಯದ ಪ್ರಾರಂಭ ಹಾಗೂ ವಿಸ್ತಾರ ವಿಶೇಷವಾಗಿ ವಸಾಹತುಗಳ ಕಾಲದಲ್ಲಿ ಆಯಿತು.ತೋಟಗಾರಿಕೆ ಬೇಸಾಯ ಹೆಚ್ಚಾಗಿ ಉಷ್ಣಕಠಿಬಂಧದಲ್ಲಿ ಮಾಡಲಾಗುವದು.

     ದೀರ್ಘ ಕಾಲದ ಬೆಳೆಗಳು, ವೈಜ್ಞಾನಿಕ ಪದ್ದತಿಯ ಅವಲಂಬನೆ, ನಿರ್ಯಾತದ ಕ್ಷಮತೆಯುಳ್ಳ ಉತ್ಪಾದನೆ,ಪ್ರಕ್ರಿಯೆ ಮಾಡುವಿಕೆ ಮುಂತಾದವುಗಳಿAದಾಗಿ ಇಂತಹ ಬೇಸಾಯದಲ್ಲೂ ದೊಡ್ಡ ಪ್ರಮಾಣದಲ್ಲಿ ಬಂಡವಾಲ ತೊಡಗಿಸಬೇಕಾಗುವದು.

    ತೋಟಗಾರಿಕೆ ಬೇಸಾಯದಲ್ಲೂ ಹವಾಮಾನ,ಮಾನವ ಶ್ರಮದ ಕ್ಷಮತೆ,ಪರ್ಯಾವರಣದ ಮಾಲಿನ್ಯ,ಆರ್ಥಿಕ ಹಾಗೂ ವ್ಯವಸ್ಥಾಪನೆಯಲ್ಲಿ ಬರುವ ಸಮಸ್ಯೆಗಳು ಎದುರಾಗುವವು.

    ಇಂತಹ ಬೇಸಾಯ ಭಾರತ ಸಹಿತ ದಕ್ಷಿಣ ಏಶಿಯಾ,ಹಾಗೂ ಆಫ್ರಿಕಾ,ದಕ್ಷಿಣ ಹಾಗೂ ಮಧ್ಯ ಅಮೇರಿಕಾ ಮುಂತಾದ ಪ್ರದೇಶಗಳಲ್ಲಿ ಮಾಡಲಾಗುವುದು.

೫) ನಿಮ್ಮ ಸಮೀಪದ ಭಾಗಗಲ್ಲಿ ಯಾವ ಯಾವ ಬೆಳೆಗಳನ್ನು ಬೆಳೆಸುವರು? ಅದರ ಭೌಗೋಲಿಕ ಕಾರಣಗಳಾವವು?

ಉತ್ತರ:- ನಮ್ಮ ಸಮೀಪದ ಭಗದಲ್ಲಿ ಜೊಳ, ಸಜ್ಜೆ, ಗೋವಿನ ಜೋಳ, ಕಡಲೆ, ಕಬ್ಬು, ತೊಗರಿ ದ್ರಾಕ್ಷೆ ಮುಂತಾದ ಬೇಳೆ ತಗೆದುಕೊಳ್ಳುವರು. ಕಾರಣ ನಮ್ಮ ಭಾಗದಲ್ಲಿ ಮಣ್ಣು ಕಪ್ಪು ಇದ್ದು ಹವಾಮಾನ ಸಾಧಾರಣವಾಗಿ ಉಷ್ಣ ಮತ್ತು ಒಣ ಇದೆ. ಆದುದರಿಂದ ಮೇಲಿನ ಬೇಳೆಯ ಸಲುವಾಗಿ ಅನೂಕೂಲವಾಗಿದೆ. ಇತ್ತಿಚಿಗೆ ತೊಟಗಾರಿಕೆ ಬೇಸಾಯ, ಹಣ್ಣಿನ ಬೇಸಾಯ ಮಾಡುತ್ತಿದ್ದಾರೆ.

೬) ಭಾರತದ ಹಂಗಾಮಿ ಕೃಷಿ ಇರುವ ಕಾರಣವೇನು? ಹನ್ನೇರಡು ತಿಂಗಳು ಬೇಸಾಯ ಮಾಡಲು ಯಾವ ತೊಂದರೆ ಇವೆ?

ಉತ್ತರ:- ಭಾರತದ ಕೃಷಿ ಸ್ವರೂಪ ಹಂಗಾಮಿ ಆಗಿದೆ ಕಾರಣ ಭಾರತದ ಬಹಳಷ್ಟು ಕೃಷಿ ಮಳೆಯ ಮೇಲೆ ಅವಲಂಬಿಸಿದೆ. ಭಾರತದಲ್ಲಿ ಜೂನ ದಿಂದ ಸಪ್ಟೆಂಬರವರೆಗೆ ಮಳೆ ಬರುವದು ಉಳಿದ ೮ ತಿಂಗಳು ಹವಾಮಾನ ಒಣದಾಗಿರುವುದು. ಮಳೆಗಾಲದಲ್ಲಿ ಸಂಗ್ರವಾದ ನೀರು ಉಳಿದ ಎಂಟು ತಿಂಗಳು ಸಿಂಚನದ ಸಲುವಾಗಿ ಉಪಯೋಗಿಸುವರು. ಇದರಿಂದಾಗಿ  ಭಾರತದ ಕೃಷಿ ಸ್ವರೂಪ ಹಂಗಾಮಿ ಆಗಿದೆ

  

ಪಾಠ ೧೦  ಮಾನವ ವಸತಿ

ಪ್ರಸ್ನೆ ೧:- ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

೧ ) ಮಾನವ ವಸತಿಯ ವಿವಿಧ ಪ್ರಕಾರಗಳನ್ನು ಸ್ಪಷ್ಟ ಪಡಿಸಿರಿ.

ಉತ್ತರ:- ಮಾನವ ವಸತಿಯಲ್ಲಿ ಪ್ರಮುಖವಾಗಿ ಮೂರು ಪ್ರಕಾರಗಳಿವೆ. ಬಿಡಿಬಿಡಿಯಾಗಿ ಹಬ್ಬಿದ ವಸತಿ,  ಕೇಂದ್ರೀಕೃತ ವಸತಿ, ರೇಷಾಕೃತಿಯ ವಸತಿ ಹೀಗೆ ಪ್ರಕಾರಗಳಿವೆ.

ಬಿಡಿಯಾಗಿ ಬಬ್ಬಿದ ವಸತಿಯಲ್ಲಿ ಮನೆಗಳು ಕಡಿಮೆಇದ್ದು ಜನಸಂಖ್ಯೆ ಕಡಿಮೆ ಇರುವದು. ಕೇಂದ್ರೀಕೃತ ವಸತಿಯಲ್ಲಿ  ಮನೆಗಳು ಒಂದಕ್ಕೊAದು ಹತ್ತಿ ಇದ್ದು ಇಲ್ಲಿ ಎಲ್ಲ ಪ್ರಕಾರದ ಜನರು ನೆಲೆಸಿರುವರು.ರೇಷಾಕೃತಿ ವಸತಿಯಲ್ಲಿಯ ಮನೆಗಳು ಒಂದೇ ಸಾಲಿನಲ್ಲಿ ಇರುವವು .

೨ ) ಕೇಂದ್ರೀಕೃತ ಹಾಗೂ ಹಬ್ಬಿದ ವಸತಿಗಳ ವೈಶಿಷ್ಟ್ಯಗಳು ಬರೆಯಿರಿ

ಉತ್ತರ:-  ಬಿಡಿಬಿಡಿಯಾ ಗಿ ಹಬ್ಬಿದ ವಸತಿ

        ಹರಡಿದ ವಸತಿಗಳಲ್ಲಿ ಅಂ ತರ ಸ್ಪಷ್ಟವಾಗಿ ಕಂಡು ಬರುವದು.

        ಈ ವತಿಯ ಜನಸಂಖ್ಯೆ ಮರ್ಯಾದಿತವಾಗಿರುವುದು.ಉದಾ- ಚಿಕ್ಕ ಜನವಸತಿ,ಚಿಕ್ಕ ಹಳ್ಳಿ ಮುಂತಾದವುಗಳು

        ಈ ವಸತಿಗಳಲ್ಲಿ ಸೌಕರ್ಯಗಳು ಸೇವೆಗಳು ಹೆಚ್ಚಾಗಿ ಉಪಲಬ್ದವಾಗಿರುವದಿಲ್ಲ.

        ಇಂತಹ ವಸತಿಗಳು ನೈಸರ್ಗಿಕ ಪರ್ಯಾವರಣದ ಮಡಿಲಲ್ಲಿರುವವು.ಆದುದರಿಂದ ಅವು ಪ್ರದೂಷಣೆಯಿಂದ ದೂರ ಇರುವವು.

        ದೈನಂದಿನ ಅವಶ್ಯಕತೆಗಳ ಪೂರೈಕೆಗಾಗಿ ಎಲ್ಲರಿಗೆ ಸಮೀಪವಾಗಿರುವ ಹಳ್ಳಿಯ ಮೇಲೆ ಅವಲಂಬಿಸಿರುವವು.

@@ ಕೇಂದ್ರೀಕೃತ ವಸತಿ

        ಇಂತಹ ವಸತಿಗಳಲ್ಲಿ ಮನೆಗಳು ಒಂದಕ್ಕೊAದು ಸಮೀಪದಲ್ಲಿರುವವು.

        ಈ ವಸತಿಗಳಲ್ಲಿ ಸಾಮಾಜಿಕ ಸೇವೆಗಳು ಉಪಲಬ್ದವಾಗಿರುವವು.

        ಈ ವಸತಿಗಳ ಸ್ಥಳ ಹಾಗೂ ಸಮಯ ಸಾಪೆಕ್ಷಣೆ ಇರುವುದರಿಂದ ವಿಶಿಷ್ಟ ಆಕಾರ ಪ್ರಾಪ್ತವಾಗುವದು.

        ಈ ವಸತಿಗಳಲ್ಲಿ ರಸ್ತೆಗಳು ಕಡಿಮೆ ಅಗಲದ್ದು ಇರುತ್ತವೆ.

        ಇಂತಹ ವಸತಿಗಳಲ್ಲಿ ವಿವಿಧ ಜಾತಿ,ಧರ್ಮ, ಪಂಗಡ,Aಶ ಹಾಗೂ ವಿಚಾರ ಪ್ರಳಾಯಿ ಹೊಂದಿದ ಜನರು ಒಂದೆಡೆ ವಾಸಿಸುವರು.ಅದರಿಂದಾಗಿ ಇಂತಹ ವಸತಿಗಳಲ್ಲಿಯ ಸಾಮಾಜಿಕ ಜೀವನ ಚೆನ್ನಾಗಿರುವದು.

೩ )  ಮಾನವ ವಸತಿಯ ಸ್ಥಾನಗಳ ಮೇಲೆ ಪರಿಣಾಮ ಬೀರುವ ವಿವಿಧ ಘಟಕಗಳ ಸ್ಪಷ್ಟೀಕರಣೆ ಮಾಡಿರಿ.

ಉತ್ತರ:- ಮಾನವನ ವಸತಿಯ ಸ್ಥಾನಗಳ ಮೆಲೆ ಪರಿಣಾಮ ಬೀರುವ ಘಟಕಗಳು ಕೆಳಗಿನ ಹಾಗೆ ಇವೆ.

ಪ್ರಾಕೃತ್ರಿಕ    

ಸಾಂಸ್ಕೃತಿಕ

ಆರ್ಥಿಕ ಘಟಕ

೧ ) ಭೂರಚನೆ

೨ ) ನೆಲ/ಮೃದೆ

೩ ) ಹವಾಮಾನ

೪ ) ಒಣ ಭೂಮಿ

೫) ನೀರಿನ ಸರಬರಾಜು

೬) ನದಿಯ ತೀರ

 

೧) ಸಂರಕ್ಷಣೆ

೨)ಆರೋಗ್ಯ

೩) ಶಿಕ್ಷಣ

೪) ಪ್ರವಾಸ

೫) ಐತಿಹಾಸಿಕ ಸಂಧರ್ಭ

೧)ನೀರಾವರಿ

೨)ವ್ಯವಸಾಯ

೩) ಸಾರಿಗೆ ಹಾಗೂ ಸಂದೇಶವಹನ

೪)ಉದ್ದಿಮೆಗಳು

೫)ವ್ಯಾಪಾರ

೬)ರಾಜಕೀಯ ಕಾರ್ಯಾಲಯಗಳು.

 

 

೪) ಮಾನವನ ವಸತಿಯ ಆರಂಭ ಹೇಗೆ ಆಗಿರಬಹುದು ಎಂಬುದರ ಮಾಹಿತಿ ಬರೆಯಿರಿ.

ಉತ್ತರ:- ನೀರು ಉಪಲಬ್ದವಾಗಿರುವುದು,ಒಳ್ಳೆಯ ಹವಾಮಾನ,ಫಲವತ್ತಾದ ಭೂಮಿ ಮುಂತಾದ ಭೌಗೊಲಿಕ ಪರಿಸ್ಥಿತಿ ಇರುವ ಸ್ಥಳಗಳಲ್ಲಿ ಮಾನವ ವಸತಿಗಳು ವಿಕಸಿತ ವಾದವು. ವಸತಿಗಳ ಪ್ರಾರಂಭ ಕಾಲದಲ್ಲಿ ಆಯಾ ಪ್ರದೇಶದಲ್ಲಿ ಉಪಲಬ್ದವಿರುವ ಸಾಧನ ಸಂಪತ್ತುಗಳನ್ನು ಆಧರಿಸಿ ಜನರ ವ್ಯವಸಾಯಗಳು ನಿರ್ಧರಿತವಾದವು. ಅದಕ್ಕನುಸಾರವಾಗಿ ವಿಶಿಷ್ಟ ಕೆಲಸಮಾಡುವ  ಸಮೂಹಗಳ ಸ್ವತಂತ್ರ ವಸತಿಯಗಳು   ನಿರ್ಮಾಣ  ವಾಗಲಾರಂಭಿಸಿದವು.ಉದಾ- ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ ವ್ಯವಸಾಯ.ಅವರದು ಮೀನುಗಾರರ ವಸತಿ.ಫಲವತ್ತಾದ ಭೂಮಿ ಇರುವಲ್ಲಿ ಕೃಷಿ ವ್ಯವಸಾಯ ಮಾಡಲಾಗುವದು. ಒಕ್ಕಲಿಗರು ತಮ್ಮ ಕುಂಟುAಬ ಸಲುವಾಗಿ ತಮ್ಮ ಹೋಲದಲ್ಲಿಯೇ ಮನೆಕಟ್ಟಿ ವಾಸಿಸುವರು.ಇದಕ್ಕೆ ವಸತಿಎನ್ನುವರು.ಕಾಲಾಂತರದಲ್ಲಿ ವಸತಿಯ ವಿಕಾಸವಾಗಿ ಅದಕ್ಕೆ ವಾಡಿ ಎನ್ನುವರು.ಯಾವ ಮಾನವ ವಸತಿಯಲ್ಲಿಯ ಬಹುಸಂಖ್ಯಾಜನರ ವ್ಯವಸಾಯ ಸ್ಥಾನಿಕ,ನೈಸರ್ಗಿಕ ಸಾಧನ ಸಂಪತ್ತುಗಳ ಮೇಲೆ ಸಂಬAಧ ಪಟ್ಟವೋ  ಆ ವಸತಿಗೆ ಗ್ರಾಮೀಣ ವಸತಿ ಎನ್ನುವರು. ಗ್ರಾಮೀಣ ವಸತೀಯ ನಿರ್ಮಾಣ ಪಟ್ಟದಲ್ಲಿ ನಿರ್ಮಾಣವಾಗುವವು. ಪಟ್ಟಣದ ರೂಪಾಂತರ ಮಹಾನಗರದಲ್ಲಿ ಆಯಿತು.

೫) ಹಳ್ಳಿ ಹಾಗೂ ಊರು ಈ ಎರಡು ಮಾನವ ವಸತಿಗಳಲ್ಲಿಯ ಭೇದ ಸ್ಪಷ್ಟಿಕರಿಸಿರಿ.

 ಉತ್ತರ:-

ಹಳ್ಳಿ

ಊರು

೧) ಒಕ್ಕಲಿಗರು ಹೋಲದಲ್ಲಿ ವಸತಿಯ ವಿಸ್ತಾರವಾಗಿರುವದರಿಂದ ಹಳ್ಳಿ ನಿರ್ಮಾಣವಾಯಿತು.

೨) ಹಳ್ಳಿಯಲ್ಲಿಯ ಮನೆಯಸಂಖ್ಯೆ ಊರಿನಲ್ಲಿಯಕ್ಕಿಂತ ಕಡಿಮೆ ಇರುವವು.

೩) ಹಳ್ಳಿಯ ಜನಸಂಕ್ಯೆ ಊರಿನ ಜನಸಂಖ್ಯೆಕ್ಕಿAತ ಕಡಿಮೆ ಇರುವದು.

೪) ಹಳ್ಳಿಯ ರೂಪಾಂತರ ಮುಂದೆ ಊರಿನಲ್ಲಿ ಆಗುವದು.

೧) ಯಾವ ಮಾನವ ವಸತಿಯ ಬಹುಸಂಖ್ಯೆಜನರ ಮೂಲ ವ್ಯವಸಾಯ ಸ್ಥಾನಿಕ ನೈಸರ್ಗಿಕ ಸಾದನ ಸಂಪತ್ತುಗಳ ಮೇಲೆ ಅವಲಂಬಿಸಿರುತ್ತದೆ ಆ ವಸತಿಗೆ ಊರು ಎನ್ನುವರು.

೨) ಊರಿನ ಮನೆಯಸಂಖ್ಯೆ  ಹಳ್ಳಿಯ ಮನೆಯಕ್ಕಿಂತ ಹೆಚ್ಚಿಗೆ ಇರುವವು

೩) ) ಊರಿನ ಜನಸಂಕ್ಯೆಹಳ್ಳಿಯ ಜನಸಂಖ್ಯೆಕ್ಕಿAತ ಹೆಚ್ಚಿಗೆ  ಇರುವದು

೪) ಊರಿನ ರೂಪಾಂತರ ಮುಂದೆ ಪಟ್ಟಣದಲ್ಲಿ ಆಗುವದು.

 ಪ್ರಶ್ನೆ೨:- ಮುಂದೆ ಕೊಟ್ಟ ವಿಧಾನಗಳಿಂದ ಮಾನವ ವಸತಿಯ ಪ್ರಕಾರಗಳನ್ನು ಗುರುತಿಸಿ ಬರೆಯಿರಿ.

೧) ಹೊಲಗಳಲ್ಲಿ ವಾಸಿಸುವದರಿಂದ ಅದರ ಸಮಯ ಹಾಗೂ ಹಣದ ಉಳಿತಾಯ ಆಗುವುದು.

ಉತ್ತರ:- ಊರು

೨) ವಸತಿಗಳಲ್ಲಿ ಸಾಮಾಜಿಕ ಜೀವನ ಚೆನ್ನಾಗಿ ಇರುವದು.

ಉತ್ತರ:-  ಕೇಂದ್ರೀಕೃತ ವಸತಿ

೩) ರಸ್ತೆಗಳ ಎರಡೂ ಬದಿಯಲ್ಲಿ ಅಂಗಡಿಗಳು ಇರುವವು.

ಉತ್ತರ:- ರೇಷ್ಠಕೃತಿಯ ವಸತಿ

೪) ಇಂತಹ ವಸತಿ ಸಮುದ್ರದಂಡೆ ಅಥವಾ ಬೆಟ್ಟದ ಅಡಿಯಲ್ಲಿ ಇರುವುದು.

ಉತ್ತರ;- ರೇಷ್ಠಕೃತಿಯ ವಸತಿ

೫) ಪ್ರತಿಯೊಂದು ಕುಟುಂಬದ ಮನೆಗಳು ಒಂದರಿAದ ಒಂದು ದೂರದಲ್ಲಿ ಇರುವವು.

ಉತ್ತರ:- ಬಿಡಿಬಿಡಿಯಾಗಿ ಹಬ್ಬಿದ ವಸತಿ

೬) ಸಂರಕ್ಷಣೆಯ ದೃಷ್ಟಿಯಲ್ಲಿ ಈ ವಸತಿ ಚೆನ್ನಾಗಿರುವುದು.

ಉತ್ತರ:-  ಕೇಂದ್ರೀಕೃತ ವಸತಿ

೭) ಮನೆಗಳು ದೂರ ದೂರ ಇದ್ದರೆ ಆರೋಗ್ಯ ಚೆನ್ನಗಿರುವುದು.

ಉತ್ತರ:- ಬಿಡಿಬಿಡಿಯಾಗಿ ಹಬ್ಬಿದ ವಸತಿ

೮) ಮನೆಗಳು ಒಂದಕ್ಕೊAದು ಹತ್ತಿಕೊಂಡು ಇರುವವು.

ಉತ್ತರ:-  ಕೇಂದ್ರೀಕೃತ ವಸತಿ

 

ಪಾಠ ೧೧ ಸಮೋಚ್ಚರೇಖೇ ನಕಾಶೆ ಮತ್ತು ಭೂರೂಪಗಳು

ಪ್ರಶ್ನೆ ೧:- ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

೧) ಸಮೋಚ್ಚದರ್ಶಕ ನಕಾಶೆಯ ಉಪಯೋಗ ಹೇಳಿರಿ.

ಉತ್ತರ:- ಸರ್ವೊಚ್ಚದರ್ಶಕ ನಕಾಶೆಯ ಉಪಯೋಗ ಪರ್ಯಟಕ, ಗಿರ್ಯಾರೋಹಕ, ಅಲೆದಾಡುವರು, ಸಂರಕ್ಷಣ ದಳದ ಅಧಿಕಾರಿಗಳು, ಸೈನಿಕರಿಗೆ ಉಪಯೋಗ ವಾಗುವದು.

೨) ಸರ್ವೋಚ್ಚ ರೇಖೆಗಳ ನಿರೀಕ್ಷಣೆಯಿಂದ ಏನು ತಿಳುದು ಬರುವುದು?

ಉತ್ತರ:- ಸರ್ವೋಚ್ಚ ರೇಖೆಗಳ ನಿರೀಕ್ಷಣೆಯಿಂದ ಸಂಬAಧಿತ ಭೂರೂಪ ಸಮುದ್ರ ಸಪಾಟಿಯಿಂದ ಎತ್ತರ, ಆಳ, ಇಳುಕಲು, ಇಳುಕಲಿನ ದಿಕ್ಕು, ಇದರ ಮೇಲಿಂದ ಜಲ ಪ್ರವಾಹ ಇತ್ಯಾದಿ ಸಂಗತಿಗಳ ಲಕ್ಷದಲ್ಲಿ ಬರುವದು.

೩) ಬೇಸಾಯಗಾರರಿಗೆ ಸಮೋಚ್ಚ ರೇಖೆಗಳ ಉಪಯೋಗ ಹೇಗೆ ಆಗಬಲ್ಲದು?

ಉತ್ತರ:- ಬೇಸಾಯಗಾರರಿಗೆ ತಮ್ಮ ಹೋಲ /ಭೂರೂಪ ಮತ್ತು ಅದರ ಎತ್ತರದ ವಿವರಣೆ ಸರ್ವೋಚ್ಚ ರೇಷೆಯಿಂದ ತಿಳಿದುಕೊಳ್ಳಬಹುದು. ಭೂಮಿಯ ಎತ್ತರ, ಇಳುಕಲು ಮತ್ತು ಇಳುಕಲಿನ ದಿಕ್ಕು ತೀಳಿಯುವದು.

೪) ಪ್ರದೇಶದ ಭೂರೂಪ ಹಾಗೂ ಎತ್ತರದ ವಿತರಣೆ ಯಾವುದರ ಸಹಾಯದಿಂದ ತೋರಿಸಲು ಬರುವದು?

ಉತ್ತರ:- ಪ್ರದೇಶದ ಭೂರೂಪ ಹಾಗೂ ಎತ್ತರದ ವಿತರಣೆ ಸಮೋಚ್ಚದರ್ಶಕ ನಕಾಶೆಯಿಂದ ಸಹಾಯದದಿಂದ ತೋರಿಸಲು ಬರುವದು.

ಪ್ರಶ್ನೆ೨:- ಬಿಟ್ಟ ಸ್ಥಳಗಳಲ್ಲಿ ಯೋಗ್ಯವಾದ ಸ್ಥಳಗಳನ್ನು ತುಂಬಿರಿ.

೧) ಸರ್ವೋಚ್ಚ ರೆಖೆಗಳು ಒಂದಕ್ಕೊAದು ಹತ್ತಿರದಲ್ಲಿದ್ದರೆ ಅಲ್ಲಿಯ ಇಳಿಜಾರು ತೀರ್ವ  ಇರುವದು.

೨) ನಕಾಶೆಯಲ್ಲಿಯ ಸರ್ವೋಚ್ಚ ರೇಷೆಗಳು ಎತ್ತರ ಮತ್ತು ಪ್ರದೇಶದ ಎತ್ತರ ಸಖಲತನ ದ ಪ್ರತಿನಿಧಿತ್ವ ಮಾಡುವುದು.

೩) ಸರ್ವೋಚ್ಚ ರೇಷೆ  ಅಲ್ಲಿಯ ಅಂತರದಿAದ ಇಳಿಜಾರಿನ ಕಲ್ಪನೆ ಮಾಡಲು ಬರುವುದು.

೪) ಎರಡು ಸವೋಚ್ಚ ರೇಷೆಗಳಲ್ಲಿಯ ಅಂತರ ಕಡಿಮೆ ಇರುವಲ್ಲಿ  ಇಳುಕಲು ತೀವ್ರವಾಗಿರುವದು.

ಪ್ರಶ್ನೆ೩) ಕೆಳಗಿನ ನಕಾಶೆಯಲ್ಲಿ ಭೂರೂಪಗಳನ್ನು ಗುರುತಿಸಿರಿ.



   ಪುಟ ನಂ ೭೪ ರ ಮೇಲಿನ ನಕಾಶೆ ನೀರಿಕ್ಷಿಸಿರಿ.

ಉತ್ತರ:- ೧) ತೀರ್ವ ಇಳಿಜಾರು       ೨) ಮಂದ ಇಳುಕಲು          ೩) ಜಲ ಪ್ರವಾಹ

          ೪) ಸಪಾಟ ಭೂಪ್ರದೇಶ

 

 

 


 

 

ಸಮಾಪ್ತಿ

 

 

 

 

 

 

 

 

 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು