ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Geography Std 8th - ಭೂಗೋಲ 8ನೇ ತರಗತಿ ಪ್ರಶ್ನೋತ್ತರಗಳು

 

ಭೂಗೋಲ 8ನೇ ತರಗತಿ ಪ್ರಶ್ನೋತ್ತರಗಳು



ಅನುಕ್ರಮಣಿಕೆ 

        ಪಾಠದ ಹೆಸರು                                         ಕ್ಷೇತ್ರ              

1. ಸಾನಿಕ ವೇಳೆ ಹಾಗೂ ಪ್ರಮಾಣ ವೇಳೆ           ಸಾಮಾನ್ಯ ಭೂಗೋಲ   

2. ಪೃಥ್ವಿಯ ಅಂತರಂಗ                                    ಪ್ರಾಕೃತಿಕ ಭೂಗೋಲ    

3. ಆದ್ರ್ರತೆ ಹಾಗೂ ಮೋಡಗಳು                        ಪ್ರಾಕೃತಿಕ ಭೂಗೋಳು   

4. ಸಾಗರ ತಳದ ರಚನೆ                                   ಪ್ರಾಕೃತಿಕ ಭೂಗೋಳ    

5. ಸಾಗರ ಪ್ರವಾಹ                                         ಪ್ರಾಕೃತಿಕ ಭೂಗೊಲ     

6. ಭೂಮಿಯ ಬಳಕೆ                                        ಮಾನವ ಭೂಗೋಲ     

7. ಜನಸಂಖ್ಯೆ                                               ಮಾನವ ಭೂಗೋಲ     

8. ಉದ್ದಿಮೆ                                                  ಮಾನವ ಭೂಗೋಲ     

9. ನಕಾಶೆಯ ಪ್ರಮಾಣ                                ಪ್ರಾತ್ಯಕಿಕ ಭೂಗೋಲ    

10. ಕ್ಷೇತ್ರ ಭೇಟಿ                                            ಪ್ರಾತ್ಯಕಿಕ ಭೂಗೋಲ    

11. ಪರಿಶಿಷ್ಟಗಳು                                                          

 

 

1. ಸ್ಥಾನಿಕ ವೇಳೆ ಮತ್ತು ಪ್ರಮಾಣ ವೇಳೆ

ಪ್ರ. 1. ಯೋಗ್ಯ ಪರ್ಯಾಯವನ್ನು ಆಯ್ದು ವಿಧಾನಗಳನ್ನು ಪೂರ್ಣಗೊಳಿಸಿರಿ.

ಅ) ಪೃಥ್ವಿಯ ಪರಿಭ್ರಮಣಕ್ಕೆ 24 ಗಂಟೆಗಳ ಕಾಲಾವಧಿ ಬೇಕಾಗುವದು. ಒಂದು ಗಂಟೆಯಲ್ಲಿ ಪೃಥ್ವಿಯ ಮೇಲಿನ .........

(i) 05 ರೇಖಾವೃತ್ತಗಳು ಸೂರ್ಯನ ಎದುರಿನಿಂದ ಹೋಗುವವು.

(ii) 10 ರೇಖಾವೃತ್ತಗಳು ಸೂರ್ಯನ ಎದುರಿನಿಂದ ಹೋಗುವವು.

(iii) 15 ರೇಖಾವೃತ್ತಗಳು ಸೂರ್ಯನ ಎದುರಿನಿಂದ ಹೋಗುವವು.

(iv) 20 ರೇಖಾವೃತ್ತಗಳು ಸೂರ್ಯನ ಎದುರಿನಿಂದ ಹೋಗುವವು.

(ಆ) ಪೃಥ್ವಿಯ ಮೇಲಿನ ಯಾವುದೇ ಎರಡು ಸ್ಥಳಗಳ ಸ್ಥಾನಿಕ ಸಮಯದಲ್ಲಿಯ ವ್ಯತ್ಯಾಸ ತಿಳಿಯಲು

(i) ಎರಡೂ ಸ್ಥಳಗಳ ಮಧ್ಯಾಹ್ನದ ಸಮಯ ಗೊತ್ತಿರಬೇಕಾಗುವುದು.

(ii) ಎರಡೂ ಸ್ಥಳಗಳ ರೇಖಾವೃತ್ತಗಳಲ್ಲಿಯ ಅಂಶಾತ್ಮಕ ಅಂತರಗಳಲ್ಲಿಯ ವ್ಯತ್ಯಾಸ ತಿಳಿದಿರಬೇಕಾಗುವುದು.

(iii) ಎರಡೂ ಸ್ಥಳಗಳಲ್ಲಿಯ ಪ್ರಮಾಣ ವೇಳೆಯಲ್ಲಿಯ ವ್ಯತ್ಯಾಸದ ಬಗೆಗೆ ಮಾಹಿತಿ ಇರಬೇಕಾಗುವುದು.

(iv) ಅಂತಾರಾಷ್ಟ್ರೀಯ ವಾರರೇಷೆಗನುಸಾರವಾಗಿ ಬದಲಾವಣೆ ಮಾಡಬೇಕಾಗುವುದು.

(ಇ) ಸಮೀಪದ ಯಾವುದೇ ಎರಡು ರೇಖಾವೃತ್ತಗಳ ಸ್ಥಾನಿಕ ವೇಳೆಯಲ್ಲಿ..

(1) 15 ಮಿನಿಟುಗಳ ವ್ಯತ್ಯಾಸ ಇರುವುದು.

(ii) 04 ಮಿನಿಟುಗಳ ವ್ಯತ್ಯಾಸ ಇರುವುದು.

(iii) 30 ಮಿನಿಟುಗಳ ವ್ಯತ್ಯಾಸ ಇರುವುದು.

(iv) 60 ಮಿನಿಟುಗಳ ವ್ಯತ್ಯಾಸ ಇರುವುದು.

ಪ್ರಶ್ನೆ 2. ಭೌಗೋಲಿಕ ಕಾರಣಗಳನ್ನು ಬರೆಯಿರಿ.

() ಸ್ಥಾನಿಕ ವೇಳೆಯನ್ನು ಮಧ್ಯಾಹ್ನದ ಮೇಲಿಂದ ನಿಶ್ಚಿತ ಪಡಿಸಲಾಗುವುದು.

ಉತ್ತರ: 1. ಪೃಥ್ವಿ ತನ್ನ ಸುತ್ತಲೂ ಪಶ್ಚಿಮದಿಂದ ಪೂರ್ವದ ಕಡೆ ತಿರುಗುತ್ತದೆ. ಅದರಿಂದಾಗಿ ಪಶ್ಚಿಮದ ಕಡೆಗಿರುವ ರೇಖಾವೃತ್ತಗಳು ಕ್ರಮವಾಗಿ ಸೂರ್ಯನ ಎದುರಿಗೆ ಬರುತ್ತವೆ. ಹಾಗೆಯೇ ಪೂರ್ವದ ಕಡೆಗಿರುವ ರೇಖಾವೃತ್ತಗಳು ಕ್ರಮವಾಗಿ ಕತ್ತಲೆಯಲ್ಲಿ ಹೋಗುತ್ತವೆ. ಈ ಎರಡೂ ರೇಖಾವೃತ್ತಗಳ ಮಧ್ಯದ ರೇಖಾವೃತ್ತವು ನೇರವಾಗಿ  ಸೂರ್ಯನ ಎದುರಿಗೆ ಬರುತ್ತವೆ. ಇದು ಆ ರೇಖಾವೃತ್ತದ ಮಧ್ಯಾಹ್ನದ ವೇಳೆ ಹೌದು.

2. ಪೃಥ್ವಿಯ ಮೇಲೆ ಸೂರ್ಯೋದಯದ ಅಥವಾ ಸೂರ್ಯಾಸ್ತದ ಸಮಯಗಳು ಒಂದೇ ಇರುವುದಿಲ್ಲ. ಅಕ್ಷಾಂಶಗಳಿಗನುಸಾರವಾಗಿ ಅವುಗಳಲ್ಲಿ ಬದಲಾಗುತ್ತವೆ. ಆದರೆ ಮಧ್ಯಾಹ್ನದ ಸಮಯ ಒಂದೇ ರೇಖಾವೃತ್ತದ ಮೇಲೆ ಎಲ್ಲೆಡೆ ಒಂದೇ ಇರುತ್ತದೆ. 3. ಸೂರ್ಯೋದಯವಾಗುವಾಗ ನಮ್ಮ ನೆರಳು ದೊಡ್ಡದಾಗಿದ್ದು ಮಧ್ಯಾಹ್ನ ಅದು ಕಡಿಮೆಯಾಗುತ್ತ ಹೋಗುತ್ತದೆ. ಸೂರ್ಯ ಮುಳುಗುವತ್ತ ಸರಿದಂತೆ ನೆರಳು ಮತ್ತೆ ದೊಡ್ಡದಾಗುತ್ತದೆ. ನೆರಳು ಯಾವ ಸಮಯದಲ್ಲಿ ಎಲ್ಲಕ್ಕಿಂತ ಚಿಕ್ಕದಿರುತ್ತದೆಯೋ ಅದು ಆ ಸ್ಥಳದಲ್ಲಿಯ ಮಧ್ಯಾಹ್ನದ ಸಮಯವಾಗಿರುತ್ತದೆ. ಬೇರೆ ಬೇರೆ ರೇಖಾವೃತ್ತಗಳ ಮೇಲೆ ಮಧ್ಯಾಹ್ನ ಬೇರೆ ಬೇರೆ ಹೊತ್ತಿನಲ್ಲಿ ಆಗುತ್ತದೆ. 4. ಯಾವ ಸ್ಥಳದಲ್ಲಿಯ ಸಮಯ ನಾವು ಮಧ್ಯಾಹ್ನಕ್ಕನುಸಾರವಾಗಿ ಹೇಳುತ್ತೇವೆಯೋ ಅದು ಅಲ್ಲಿಯ ಸ್ಥಾನಿಕ ವೇಳೆಯಾಗಿರುತ್ತದೆ. ಆದ್ದರಿಂದ ಸ್ಥಾನಿಕ ವೇಳೆಯನ್ನು ಮಧ್ಯಾಹ್ನದ ಮೇಲಿಂದ ನಿಶ್ಚಿತ ಪಡಿಸಲಾಗುತ್ತದೆ.

() ಗ್ರೀನಿಚ್‌ ಸ್ಥಾನಿಕ ವೇಳೆಯನ್ನು ಜಾಗತಿಕ ಪ್ರಮಾಣವೇಳೆ ಎಂದು ಮನ್ನಿಸಲಾಗುವುದು.

ಉತ್ತರ: ಜಾಗತಿಕ ವ್ಯವಹಾರಕ್ಕಾಗಿ ಇಂಗ್ಲೆಂಡದಲ್ಲಿಯ ಗ್ರೀನಿಚ್ ದಲ್ಲಿಯ ಸ್ಥಾನಿಕ ವೇಳೆ ಮನ್ನಿಸಲಾಗಿದೆ. ಇತರ ದೇಶಗಳ ಪ್ರಮಾಣ ವೇಳೆಯಲ್ಲಿಯ ವ್ಯತ್ಯಾಸವನ್ನು ಗ್ರೀನಿಚ್ ವೇಳೆಗನುಸಾರವಾಗಿ ಹೇಳಲಾಗುತ್ತದೆ. ಭಾರತದ ಪ್ರಮಾಣ ವೇಳೆ ಗ್ರೀನಿಚ್ ದೇಶದ ವೇಳೆಗಿಂತ 5ತಾಸು 30ಮಿನೀಟುಗಳಿಂದ ಮುಂದೆ ಇದೆ. ಗ್ರೀನಿಚ್ದಲ್ಲಿ ಸಾಯಂಕಾಲದ 5 ಗಂಟೆಯಾಗಿದ್ದರೆ ಭಾರತದಲ್ಲಿ ರಾತ್ರಿಯ 10ಗಂಟೆ 30 ಮಿನೀಟುಗಳು ಆಗಿರುತ್ತದೆ.

(2) ಭಾರತದ ಪ್ರಮಾಣ ವೇಳೆಯನ್ನು 82°30' ಪೂರ್ವ ರೇಖಾವೃತ್ತದ ಸ್ಥಾನಿಕ ವೇಳೆಗನುಸಾರವಾಗಿ ನಿಶ್ಚಿತ ಪಡಿಸಲಾಗಿದೆ.

ಉತ್ತರ: ಭಾರತದ ಪ್ರಮಾಣ ವೇಳೆಯನ್ನು ಉತ್ತರ ಪ್ರದೇಶದ ಮಿರ್ಝಾಪುರ ಪಟ್ಟಣದಿಂದ ಹಾಯ್ದು ಹೋಗುವ 82°30' ಪೂರ್ವ ರೇಖಾವೃತ್ತದ ಮೇಲಿನ ವೇಳೆಗನುಸಾರವಾಗಿ ನಿರ್ಧರಿಸಲ್ಪಡುವುದು. ಈ ರೇಖಾವೃತ್ತವು ಭಾರತದ ರೇಖಾವೃತ್ತದ ವಿಸ್ತಾರಕ್ಕನುಗುಣವಾಗಿ ದೇಶದ ಮಧ್ಯಭಾಗದಲ್ಲಿದೆ. ಇದು ಭಾರತದ ಪ್ರಮಾಣ ವೇಳೆ ಎಂದು ಗಣಿಸಲಾಗಿದೆ. ಈ ರೇಖಾವೃತ್ತದ ಮೇಲೆ ಸೂರ್ಯ ಮಧ್ಯಾಹ್ನದ ಸ್ಥಿತಿಯಲ್ಲಿದ್ದಾಗ ಭಾರತದ ಎಲ್ಲ ಸ್ಥಳಗಳಲ್ಲಿ ಮಧ್ಯಾಹ್ನದ 12 ಗಂಟೆ ಆಯಿತು ಎಂದು ತಿಳಿಯಲ್ಪಡುತ್ತದೆ. 82°30' ಪೂರ್ವ ರೇಖಾವೃತ್ತದ ಮೇಲಿನ ಸ್ಥಾನಿಕ ವೇಳೆ ಹಾಗೂ ಭರತದಲ್ಲಿ ಇತರ ಯಾವುದೇ ಸ್ಥಳದ ಸ್ಥಾನಿಕ ವೇಳೆಯಲ್ಲಿ ಒಂದು ತಾಸಿನಕ್ಕಿಂತ ಹೆಚ್ಚು ವ್ಯತ್ಯಾಸ ವಾಗುವುದಿಲ್ಲ.

() ಕೆನಡಾ ದೇಶದಲ್ಲಿ ಆರು ಬೇರೆ ಬೇರೆ ಪ್ರಮಾಣ ವೇಳೆಗಳು ಇವೆ.

ಉತ್ತರ: ಸುಮಾರಾಗಿ ಒಂದು-ಎರಡು ತಾಸುಗಳ ಅಂತರಕ್ಕಿಂತ ಹೆಚ್ಚು ರೇಖಾವೃತ್ತದ ವಿಸ್ತಾರವಿದ್ದ ದೇಶಕ್ಕಾಗಿ ಒಂದು ಪ್ರಮಾಣ ವೇಳೆಯನ್ನು ನಿರ್ಧರಿಸಲಾಗುವುದು. ಆದರೆ ಅದಕ್ಕಿಂತ ಹೆಚ್ಚಿನ ರೇಖಾವೃತ್ತಗಳ ಪುರ್ವ-ಪಶ್ಚಿಮ ವಿಸ್ತಾರ ಇದ್ದರೆ ಅಲ್ಲಿ ಒಂದೇ ಪ್ರಮಾಣ ವೇಳೆಯು ಅನುಕೂಲಕರವಾಗಿರುವುದಿಲ್ಲ. ಆದುದರಿಂದ ಇಂತಹ ಸ್ಥಳಗಳಲ್ಲಿ ಒಂದಕ್ಕಿಂತ ಹೆಚ್ಚಿನ ಪ್ರಮಾಣವೇಳೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಕೆನಡಾ ದೇಶದಪುರ್ವ-ಪಶ್ಚಿಮ ರೇಖಾವೃತ್ತಿಯ ವಿಸ್ತಾರವು ತುಂಬಾ ದೊಡ್ಡದು ಆಗಿರುವುದರಿಂದ ಒಂದೇ ಪ್ರಮಾಣ ವೇಳೆ ಅನುಕೂಲಕರವಾಗಿರುವುದಿಲ್ಲ. ಆದ್ದರಿಂದ ಕೆನಡಾ ದೇಶದಲ್ಲಿ ಆರು ಬೇರೆ ಬೇರೆ ಪ್ರಮಾಣ ವೇಳೆಗಳು ಇವೆ.

 ಪ್ರ. 3. ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

() 60° ಪೂರ್ವ ರೇಖಾವೃತ್ತದ ಮೇಲೆ ಮಧ್ಯಾಹ್ನದ 12 ಗಂಟೆ ಆದಾಗ, 30° ಪಶ್ಚಿಮ ರೇಖಾವೃತ್ತದ ಎಷ್ಟು ಗಂಟೆ ಆಗಿರಬಹುದು ಎಂಬುದನ್ನು ಸ್ಪಷ್ಟಪಡಿಸಿರಿ.

ಉತ್ತರ: ಪೂರ್ವ ರೇಖಾವೃತ್ತದ ಮೇಲೆ 600  ಅಂದರೆ ಪಶ್ಚಿಮ ರೇಖಾವೃತ್ತ 3000 ಆಗುವುದು. ಈ ಎರಡೂ ರೇಖಾವೃತ್ತಗಳಲ್ಲಿ ಅಂಶಾತ್ಮಕ ವ್ಯತ್ಯಾಸ =300-60 =900

ಅಂದರೆ, 90X4= 360ಮಿನೀಟುಗಳು. = 60ಮಿನೀಟುಗಳು = 6 ತಾಸುಗಳು

ಪೂರ್ವದೆಡೆಯ ರೇಖಾವೃತ್ತಗಳ ಮೇಲಿನ ಸ್ಥಾನಿಕ ವೇಳೆಯು ಪಶ್ಚಿಮ ರೇಖಾವೃತ್ತಗಳ ಮೇಲಿನ ಸ್ಥಾನಿಕ ವೇಳೆಗಿಂತ ಮುಂದೆ ಇರುತ್ತದೆ.

ಅಂದರೆಯೇ, 600 ಪೂರ್ವ ರೇಖಾವೃತ್ತದ ಮೇಲೆ ಮಾಧ್ಯನ್ಹದ 12ಗಂಟೆ ಆಗಿದ್ದರೆ ಪಶ್ಚಿಮ ರೇಖಾವೃತ್ತದ ಮೇಲೆ ಮುಂಜಾವಿನ 6.00 ಗಂಟೆ ಆಗಿರುತ್ತದೆ.

() ಯಾವುದೇ ಒಂದು ಪ್ರದೇಶದ ಪ್ರಮಾಣ ವೇಳೆಯನ್ನು ಹೇಗೆ ಖಚಿತ ಪಡಿಸಲಾಗುವುದು ?

ಉತ್ತರ1. ದೇಶ/ಸ್ಥಳದ ಮಧ್ಯದಲ್ಲಿ ಹಾದುಹೋಗುವ ರೇಖಾಂಶದಲ್ಲಿನ ಸ್ಥಳೀಯ ಸಮಯವನ್ನು ಸಾಮಾನ್ಯವಾಗಿ ಆ ದೇಶ/ಸ್ಥಳದ ಪ್ರಮಾಣ ವೇಳೆ ಎಂದು ಪರಿಗಣಿಸಲಾಗುತ್ತದೆ.

2. ಒಂದು ದೇಶದ ಮೂಲಕ ಹಾದುಹೋಗುವ ಪೂರ್ವ ಮತ್ತು ಪಶ್ಚಿಮ ರೇಖಾಂಶದ ಸ್ಥಾನಿಕ ಸಮಯದ ನಡುವಿನ ವ್ಯತ್ಯಾಸವು ಒಂದು ಅಥವಾ ಎರಡು ಗಂಟೆಗಳಿಗಿಂತ ಕಡಿಮೆಯಿದ್ದರೆ, ಒಂದು ದೇಶಕ್ಕೆ ಒಂದು ಪ್ರಮಾಣ ವೇಳೆ ಇರುತ್ತದೆ. ಹೀಗಾಗಿ, ತುಲನಾತ್ಮಕವಾಗಿ ಕಡಿಮೆ ರೇಖಾಂಶದ (ಪೂರ್ವ-ಪಶ್ಚಿಮ) ವ್ಯಾಪ್ತಿಯನ್ನು ಹೊಂದಿರುವ ದೇಶದಲ್ಲಿ ಕೇವಲ ಒಂದು ಪ್ರಮಾಣ ವೇಳೆ ಇರುತ್ತದೆ.

3. ಒಂದು ದೇಶದ ಮೂಲಕ ಹಾದುಹೋಗುವ ಪೂರ್ವ ಮತ್ತು ಪಶ್ಚಿಮ ರೇಖಾಂಶದ ಸ್ಥಳೀಯ ಸಮಯದ ನಡುವಿನ ವ್ಯತ್ಯಾಸವು ಒಂದು ಅಥವಾ ಎರಡು ಗಂಟೆಗಳಿಗಿಂತ ಹೆಚ್ಚು ಇದ್ದರೆ, ದೇಶಕ್ಕೆ ಒಂದಕ್ಕಿಂತ ಹೆಚ್ಚು ಪ್ರಮಾಣಿತ ಸಮಯ ವಲಯಗಳನ್ನು ಪರಿಗಣಿಸಲಾಗುತ್ತದೆ. ಹೀಗಾಗಿ, ತುಲನಾತ್ಮಕವಾಗಿ ಹೆಚ್ಚು ರೇಖಾಂಶದ (ಪೂರ್ವ-ಪಶ್ಚಿಮ) ವ್ಯಾಪ್ತಿಯನ್ನು ಹೊಂದಿರುವ ದೇಶದಲ್ಲಿ ಒಂದಕ್ಕಿಂತ ಹೆಚ್ಚು ಪ್ರಮಾಣಿತ ಸಮಯ ವಲಯಗಳಿವೆ. 

() ಬ್ರಾಝಿಲದಲ್ಲಿಯ ಸಾವೊಪಾವದಲ್ಲಿ ಪುಟಬಾಲ ಪಂದ್ಯವು ಭಾರತದ ಪ್ರಮಾಣ ವೇಳೆಗನುಸಾರವಾಗಿ ಮುಂಜಾನೆಯ 6 ಗಂಟೆಗೆ ಪ್ರಾರಂಭವಾಗಿದೆ. ಆಗ ಸಾವೊಪಾವಲೋದ ಸ್ಥಾನಿಕ ಸಮಯ ಎಷ್ಟು ಆಗಿರಬಹುದು?

ಉತ್ತರ1. ನಿರ್ದಿಷ್ಟ ರೇಖಾವೃತ್ತದ ಪಶ್ಚಿಮಕ್ಕೆ ಇರುವ ಯಾವುದೇ ಪ್ರತಿಯೊಂದು ರೇಖಾವೃತ್ತಕ್ಕೆ ಸ್ಥಾನಿಕ ವೇಳೆಯು 4 ನಿಮಿಷಗಳಷ್ಟು ಕಡಿಮೆಯಾಗುತ್ತದೆ. (ಸಾವೊ ಪಾಲೊ ಭಾರತದ ಪಶ್ಚಿಮಕ್ಕೆ ಇದೆ)

2. ಸಾವೊ ಪಾಲೊ ಮತ್ತು ಭಾರತದ ರೇಖಾಂಶಗಳ ನಡುವಿನ ವ್ಯತ್ಯಾಸ = 127°30’.

3. ಸ್ಥಾನಿಕ ವೇಳೆಯಲ್ಲಿಯ ವ್ಯತ್ಯಾಸ     = 127.5 × 4

                                         = 510 ನಿಮಿಷಗಳು.

                                         = 510 ನಿಮಿಷಗಳು ÷ 60 ನಿಮಿಷಗಳು

                                         = 8 ಗಂಟೆ 30 ನಿಮಿಷಗಳು.

4. ಹೀಗಾಗಿ, ಭಾರತದಲ್ಲಿ ಬೆಳಿಗ್ಗೆ 6 ಗಂಟೆಯಾಗಿದ್ದರೆ, ಹಿಂದಿನ ರಾತ್ರಿ 8 ತಾಸು 30 ನಿಮಿಷ ಹಿಂದೆ ಎಣಿಸಲಾಗಿ ಸಾವೊ ಪಾಲೊದಲ್ಲಿ ಫುಟ್‌ಬಾಲ್ ಪಂದ್ಯವು 9. 30 ಕ್ಕೆ ಆರಂಭವಾಗುತ್ತದೆ. ಭಾರತದಲ್ಲಿ 6 ಗಂಟೆಗೆ ಪ್ರಾರಂಭವಾದರೆ, ಸಾವೊ ಪಾಲೊದಲ್ಲಿ ಸ್ಥಳೀಯ ಸಮಯ ರಾತ್ರಿ 9.30 ಆಗಿರುತ್ತದೆ. 

ಪ್ರ. 4. ಮೂಲ ರೇಖಾವೃತ್ತದ ಮೇಲೆ 21 ಜೂನರಂದು ರಾತ್ರಿಯ 10ಗಂಟೆ ಆದಾಗ ಅ,,ಕ ಸ್ಥಳಗಳಲ್ಲಿಯ ದಿನಾಂಕ ಹಾಗೂ ಸಮಯಗಳನ್ನು ಕೆಳಗಿನ ಕೋಷ್ಟಕದಲ್ಲಿ ಬರೆಯಿರಿ

ಉತ್ತರ:

 ಮೂಲ ರೇಖಾವೃತ್ತದಿಂದ 1200 ಅಂತರ ಎಂದರೆ ಪ್ರತಿಯೊಂದು ರೇಖಾವೃತ್ತದಿಂದ 4 ಮಿನೀಟುಗಳು

120 X 4 = 480 ಮಿನೀಟುಗಳು

480/60 = 8 ತಾಸುಗಳು

ಪ್ರ್ವ ದಿಕ್ಕಿಗೆ ಇರುವುದರಿಂದ 8 ಗಂಟೆ ಮುಂದೆ ಹೋಗಬೇಕಾಗುತ್ತದೆ. 21 ಜೂನ ರಾತ್ರಿಯ 10 ಗಂಟೆಯಿಂದ ಮುಂದೆ 8 ತಾಸು ಎಂದರೆ ಮರುದಿನ ಮುಂಜಾನೆಯ 6.00 ಗಂಟೆ ಆಗುತ್ತದೆ. 

ಸ್ಥಳ

ರೇಖಾವೃತ್ತ

ದಿನಾಂಕ

ಸಮಯ

1200 ಪೂರ್ವ

22 ಜೂನ

ಮುಂಜಾನೆ 6.00 ಗಂಟೆ

1600 ಪಶ್ಚಿಮ

21 ಜೂನ

ಮುಂಜಾನೆ 11.20

600 ಪೂರ್ವ

22 ಜೂನ

ಬೆಳ್ಳಗೆ 2.00 ಗಂಟೆ

ಪ್ರ.5. ಕೆಳಗಿನವುಗಳಲ್ಲಿ ಭಿನ್ನ ಭಿನ್ನ ಸ್ಥಿತಿಗಳು ಯಾವ ಯಾವ ಆಕೃತಿಗಳಲ್ಲಿ ಕಂಡು ಬರುವವು ಎಂಬುದನ್ನು 

ಆಕೃತಿಗಳ ಕೆಳಗಿನ ಚೌಕಟ್ಟುಗಳಲ್ಲಿ ಬರೆಯಿರಿ.

(1) ಸೂರ್ಯೋದಯ     (2) ಮಧ್ಯರಾತ್ರಿ     (3) ಮಧ್ಯಾಹ್ನ     (4) ಸೂರ್ಯಾಸ್ತ


ಉತ್ತರ: 1 ಮಧ್ಯರಾತ್ರಿ 2 ಸೂರ್ಯಾಸ್ತ 3 ಸೂರ್ಯೋದಯ 4 ಮಧ್ಯಾಹ್ನ 

ಉಪಕ್ರಮ: ಆಚಾರ್ಯ ಅತ್ರೆ ಅವರ 'ಆಜೀಚೆ ಘಡ್ಯಾಳ' ಈ ಕವಿತೆಯಲ್ಲಿಯ ಅಜ್ಜಿಯ ಗಡಿಯಾರ ನಿಶ್ಚಿತವಾಗಿ ಏನು ಇದೆ ಎಂಬುದನ್ನು ಹುಡುಕಿರಿ. ಈ ಕವಿತೆಯನ್ನು ಇಂಟರನೆಟ್ ಇಲ್ಲವೆ ಗ್ರಂಥಾಲಯದಲ್ಲಿಯ ಸಂದರ್ಭ ಸಾಹಿತ್ಯದಿಂದ ಹುಡುಕಿರಿ

ಅಂತರಿಕ್ಷದಲ್ಲಿ ಪೃಥ್ವಿಯ ಪರಿಭ್ರಮಣದ ವೇಗ ತಾಸಿಗೆ ಎಷ್ಟು ಕಿಲೋಮೀಟರ ಇರುತ್ತದೆ ಎಂಬುದನ್ನು ಹುಡುಕಿರಿ.


2. ಪೃಥ್ವಿಯ ಅಂತರಂಗ

ಪ್ರಶ್ನೆ 1ಸರಿಯಾದ ಪರ್ಯಾಯದ ಎದುರಿನ ಚೌಕಟ್ಟಿನಲ್ಲಿ ಯೋಗ್ಯ ಪರ್ಯಾಯ ಆಯ್ಕೆ ಮಾಡಿರಿ.

(ಇವು ಭೂಕವಚದ ಎರಡು ಸ್ತರಗಳಾಗಿವೆ.                                             

(1ಬಾಹ್ಯ ಹಾಗೂ ಅಂತರ್‌ ಕವಚ              (2ಖಂಡದ ಹಾಗೂ ಮಹಾಸಾಗರದ ಕವಚ

(3ಭೂಪೃಷ್ಟ ಹಾಗೂ ಮಹಾಸಾಗರದ ಕವಚ           (4ಪ್ರಾವರಣ ಹಾಗೂ ಗರ್ಭ

ಉತ್ತರ: (2ಖಂಡದ ಹಾಗೂ ಮಹಾಸಾಗರದ ಕವಚ

(ಪ್ರಾವರಣ ಹಾಗೂ ಭೂಕವಚದಲ್ಲಿ ಮುಂದಿನ ಯಾವ ಘಟಕಗಳ ಸಮಾವೇಶವಿದೆ ?

(1ಸಿಲಿಕಾ     (2ಮೆಗ್ನಶಿಯಮ್      (3ಅಲ್ಯುಮಿನಿಯಮ್           (4ಕಬ್ಬಿಣ

ಉತ್ತರ: (2ಮೆಗ್ನಶಿಯಮ್

 (ಪೃಥ್ವಿಯ ಅಂತರ್‌ ಗರ್ಭದಲ್ಲಿ ಕೆಳಗಿನವುಗಳಲ್ಲಿ ಖನಿಜ ದ್ರವ್ಯಗಳು ಕಂಡುಬರುವವು ?

(1ಕಬ್ಬಿಣ-ಮೆಗ್ನಿಶಿಯಮ್             (2ಮೆಗ್ನಿಶಿಯಮ್-ನಿಕೆಲ್    

(3ಅಲ್ಯುಮಿನಿಯಮ್-ಕಬ್ಬಣ         (4ಕಬ್ಬಿಣ-ನಿಕೆಲ್

ಉತ್ತರ: (4ಕಬ್ಬಿಣ-ನಿಕೆಲ್

(ಅಂತರ್ಗಭವು ಕೆಳಗೆ ಹೇಳಿದವುಗಳಲ್ಲಿ ಯಾವ ಅವಸ್ಥೆಯಲ್ಲಿ ಇದೆ ?

(1ವಾಯುರೂಪ     (2ಘನರೂಪ         (3ದ್ರವರೂಪ         (4ಅರ್ಧ ಘನರೂಪ

ಉತ್ತರ: (2ಘನರೂಪ

(ಬಾಹ್ಯಗರ್ಭವು ಕೆಳಗಿನ ಯಾವುದರಿಂದ ನಿರ್ಮಾಣವಾಗಿದೆ ?

 (1ಕಬ್ಬಣ            (2ಬಂಗಾರ          (3ಹಾಯಡ್ರೋಜನ್         (4ಅಕ್ಸಿಜನ್

ಉತ್ತರ:  (1ಕಬ್ಬಣ  

(ನಾವು ಪೃಥ್ವಿಯ ಮೇಲೆ ವಾಸಿಸುವ ಸ್ತರಕ್ಕೆ ಏನು ಅನ್ನುವರು ?

(1ಪ್ರಾವರಣ         (2ಗರ್ಭ      (3ಭೂಕವಚ         (4ಖಂಡದ ಕವಚ

ಉತ್ತರ: (3ಭೂಕವಚ

(ಯಾವ ಭೂಕಂಪ ತರಂಗಗಳು ದ್ರವರೂಪ ಮಾಧ್ಯಮದೊಳಗಿಂದ ಸರಿಯುವವು ?

(1ಪ್ರಾಥಮಿಕ ತರಂಗಗಳು          (2ದ್ವಿತೀಯ ತರಂಗಗಳು

(3ಪೃಷ್ಟದ ತರಂಗಗಳು              (4ಸಾಗರದ ತರಂಗಗಳು

ಉತ್ತರ: (1ಪ್ರಾಥಮಿಕ ತರಂಗಗಳು

ಪ್ರ. 2. ಸರಿಯೋ ತಪ್ಪೋ ಎಂಬುದನ್ನು ಹೇಳಿ ತಪ್ಪಾದ ವಿಧಾನಗಳನ್ನು ಸರಿಪಡಿಸಿರಿ.

(ಪೃಥ್ವಿಯ ಅಂತರಂಗದಲ್ಲಿ ವಿವಿಧ ಭಾಗಗಳಲ್ಲಿಯ ಸಾಂದ್ರತೆ ಸಮನಾಗಿಲ್ಲ.                = ಸರಿ

(ಪೃಥ್ವಿಯ ಅಂತರಂಗದ ಗರ್ಭ ಗಟ್ಟಿಯಾದ ಶಿಲೆಗಳಿಂದ ನಿರ್ಮಾಣವಾಗಿದೆ.      

ಉತ್ತರ: ತಪ್ಪು , ಪೃಥ್ವಿಯ ಅಂತರಂಗದ ಗರ್ಭ ಕಬ್ಬಿಣ-ನಿಕೆಲ್ ಇವುಗಳಿಂದ ನಿರ್ಮಾಣವಾಗಿದೆ.

(ಬಾಹ್ಯ ಗರ್ಭದಿಂದ ದ್ವಿತೀಯ ತರಂಗಗಳು ಹೋಗಲು ಸಾಧ್ಯವಿಲ್ಲ.                =ಸರಿ.

(ಖಂಡದ ಕವಚವು ಸಿಲಿಕಾ ಹಾಗೂ ಮೆಗೇಶಿಯಮ್ ಇವುಗಳಿಂದ ನಿರ್ಮಾಣವಾಗಿದೆ.    

ಉತ್ತರ: ಖಂಡದ ಕವಚವು ಸಿಲಿಕಾ ಹಾಗೂ ಅಲ್ಯೂಮಿನಿಯಂ  ಇವುಗಳಿಂದ ನಿರ್ಮಾಣವಾಗಿದೆ

ಪ್ರ. 3. ಉತ್ತರ ಬರೆಯಿರಿ.

(ಭೂಕವಚದ ಎರಡು ಭಾಗಗಳು ಯಾವುವು ಅವುಗಳವರ್ಗಿಕರಣಕ್ಕೆ ಯಾವ ಆಧಾರಗಳಿವೆ ?

ಉತ್ತರ: ಖಂಡದ ಕವಚ ಹಾಗೂ ಮಹಾಸಾಗರದ ಕವಚ ಇವು ಎರಡು ಭೂಕವಚದ ಭಾಗಗಳಾಗಿವೆ. ಅವುಗಳ ವರ್ಗೀಕರಣಕ್ಕೆ ಭೂಮಿ ಮತ್ತು ನೀರು ಆಧಾರವಾಗಿವೆ. ಭೂಕವಚದ ಮೇಲೆ ಇರುವ ವಿಸ್ತಾರವಾದ ಭೂಭಾಗ ಖಂಡದ ಕವಚವಾಗಿದೆ ಮತ್ತು ಭೂಕವಚದ ಮೇಲೆ ಇರುವ ವಿಸ್ತಾರವಾದ ಮಹಾಸಾಗರವು ಮಹಾಸಾಗರದ ಕವಚ ಎಂದು ಕರೆಯಲಾಗುತ್ತದೆ.

(ಆ) ಪ್ರಾವರಣಕ್ಕೆ ದುರ್ಬಲ ಆವರಣ ಎಂದು ಏಕೆ ಹೇಳುವರು ?

ಉತ್ತರ:ಉಚ್ಚ  ಪ್ರಾವರಣ ಹಾಗೂ ಕನಿಷ್ಠ ಪ್ರಾವರಣ ಎಂಬ ಎರಡು ಉಪವಿಭಾಗಗಳು ಪ್ರಾವರಣದಲ್ಲಿ ಮಾಡಲಾಗುತ್ತದೆ. ಉಚ್ಚ ಪ್ರವರಣ ಹೆಚ್ಚು ಪ್ರವಾಹಿಯಾಗಿದ್ದು ಈ ಭಾಗದಲ್ಲಿಯೇ ಶಿಲಾರಸದ ಸಂಗ್ರಹ ಇರುತ್ತದೆ. ಶಿಲಾರಸವು ಜ್ವಾಲಾಮುಖಿ ಉದ್ರೇಕದೊಂದಿಗೆ ಪೃಥ್ವಿಯ ಪೃಷ್ಟಭಾಗದ ಮೇಲೆ ಬರುತ್ತದೆ ಆದ್ದರಿಂದ ಈ ಪ್ರವರಣದ ಭಾಗಕ್ಕೆ ದುರ್ಬಲ ಆವರಣ ಎಂದು ಕರೆಯುತ್ತಾರೆ. ಇದು ಪೃಷ್ಠ ಭಾಗದಿಂದ 42ಕಿಮಿ ಅಳದಲ್ಲಿ ಇರುತ್ತದೆ.

(ಇ) ಪೃಥ್ವಿಯ ಚುಂಬಕಾವರಣ ಇದು ಪರಿಭ್ರಮಣದ ಪರಿಣಾಮ ಆಗಿದೆ ಎಂಬುದನ್ನು ಸ್ಪಷ್ಟಪಡಿಸಿರಿ.

ಉತ್ತರ: ಭಾಹ್ಯಗರ್ಭ ಮತ್ತು ಅಂತರಗರ್ಭ ಇವುಗಳ ಉಷ್ಣತಾಮಾನದಲ್ಲಿಯ ವ್ಯತ್ಯಾಸದಿಂದಾಗಿ ಊರ್ಧ್ವಮುಖಿ ಪ್ರವಾಹ ತಯಾರಾಗುತ್ತವೆ.ಪೃಥ್ವಿಯ ಪರಿವಲನೆದಿಂದಾಗಿ ಈ ಪ್ರವಾಹಗಳಿಗೆ ಬಗುರಿಯ ಗತಿ ಪ್ರಾಪ್ತವಾಗುತ್ತದೆ. ಬಗುರಿಯಂತೆ ಸುತ್ತುವ ಕ್ರಿಯೆಯಿಂದ ಅದಕ್ಕೆ ಚುಂಬಕಿಯ ಕ್ಷೇತ್ರ ತಯಾರಾಗುತ್ತದೆ. ಇದಕ್ಕೆ ಭೂ ಜನಿತ್ರ ಎಂದೂ ಕರೆಯುತ್ತಾರೆ.ಪೃಥ್ವಿಯ ಈ ಕುಂಬಕಿಯ ಕ್ಷೇತ್ರವು ಪೃಥ್ವಿ ಗ್ರಹದ ಹೊರಗೂ ದೂರದ ಅಂತರದ ವರೆಗೆ ಕಾರ್ಯರತವಿರುತ್ತದೆ. ಈ ಭೂ ಚುಂಬಕಿಯ ಕ್ಷೇತ್ರವಿರುವ ಪೃಥ್ವಿಯ ಅವರಣಕ್ಕೆ ಚುಂಬಕಾವರಣ ಎಂದು ಕರೆಯುವರು. 

ಪ್ರಶ್ನೆ 4. ಚಂದಾದ ಆಕೃತಿ ಬಿಡಿಸಿ ಹೆಸರು ಬರೆಯಿರಿ.

(ಅ) ಪೃಥ್ವಿಯ ಅಂತರಂಗ

(ಆ) ಚುಂಬಕದ ಧ್ರುವ ಹಾಗೂ ವಿಷುವ ವೃತ್ತ

ಪ್ರಶ್ನೆ5. ಭೌಗೋಲಿಕ ಕಾರಣ ಕೊಡಿರಿ.

(ಅ) ಪೃಥ್ವಿಯ ಅಂತರಂಗದಲ್ಲಿ ಭಿನ್ನತೆ ಕಂಡುಬರುವುದು.

ಉತ್ತರ: ಪೃಥ್ವಿಯ ಅಂತರಂಗದಲ್ಲಿ ಭೂಕವಚ, ಪ್ರಾವರಣ ಹಾಗೂ ಗರ್ಭ ಈ ಮೂರು ಸ್ತರಗಳಲ್ಲಿ ದೊರೆಯುವ ಮುಲವಸ್ತುಗಳಲ್ಲಿ, ಖನಿಜಗಳಲ್ಲಿ, ಉಷ್ಣತಾಮಾನದಲ್ಲಿ ಭಿನ್ನತೆ ಇರುವುದು. ಪೃಥ್ವಿಯ ಅಂತರಂಗದಲ್ಲಿ ಭೂಖಂಡ ಕವಚ ಮತ್ತು ಮಹಾಸಾಗರದ ಕವಚ ಇರುವುದು. ಭೂಕವಚ ಮತ್ತು ಪ್ರಾವರಣ, ಉಚ್ಚ ಪ್ರಾವರಣ ಮತ್ತು ಕನಿಷ್ಠ ಪ್ರಾವರಣ, ಬಾಹ್ಯಗರ್ಭ ಮತ್ತು ಅಂತರಗರ್ಭ ಇವುಗಳಿಗೆ ಒಂದರಿಂದ ಇನ್ನೊಂದು ಬೇರ್ಪಡಿಸುವ ಸಂಕ್ರಮಿತ ಸ್ತರಗಳಿವೆ, ಹೀಗೆ  ಪೃಥ್ವಿಯ ಅಂತರಂಗದಲ್ಲಿ ಭಿನ್ನತೆ ಕಂಡುಬರುವುದು.

(ಆ) ಖನಿಜಗಳ ಸಾಂದ್ರತೆ ಮತ್ತು ಅಂತರಂಗದಲ್ಲಿ ಅವುಗಳ ಸ್ಥಾನ ಇವುಗಳಲ್ಲಿ ಸಹಸಂಬಂಧ ಇದೆ.

ಉತ್ತರ: ಪೃಥ್ವಿಯ ಅಂತರಂಗದಲ್ಲಿ ಕಡಿಮೆ ಘನತೆವಿರುವ ಸಿಲಿಕಾ, ಅಲ್ಯೂಮಿನಿಯಂ ಮತ್ತು ಮ್ಯಾಗ್ನೆಶಿಯಮ್ ಈ ಮೂಲವಸ್ತುಗಳು ದೊರೆಯುತ್ತವೆ. ಪೃಥ್ವಿಯ ಗರ್ಭದಲ್ಲಿ ಹೆಚ್ಚು ಘನತೆ ಇರುವ ಕಬ್ಬಿಣ ಹಾಗೂ ನಿಕ್ಕೆಲ್ ಈ ಮೂಲವಸ್ತುಗಳು ದೊರೆಯುತ್ತವೆ. ಅಂದರೆ ಮೂಲವಸ್ತುಗಳ ಘನತೆ ಹೇಗೆ ಹೆಚ್ಚಾಗುತ್ತ ಹೋಗುವುದೋ ಹಾಗೆ ಅವುಗಳ ಪೃಥ್ವಿಯ ಅಂತರಂಗದಲ್ಲಿಯ ಸ್ಥಾನ ಆಳಕ್ಕೆ ಹೋಗುತ್ತದೆ. ಈ ರೀತಿಯಾಗಿ ಖನಿಜಗಳ ಸಾಂದ್ರತೆ ಮತ್ತು ಅಂತರಂಗದಲ್ಲಿ ಅವುಗಳ ಸ್ಥಾನ ಇವುಗಳಲ್ಲಿ ಸಹಸಂಬಂಧ ಇದೆ.

(ಇ) ಪ್ರಾವರಣವು ಭೂಕಂಪ ಹಾಗೂ ಜ್ವಾಲಾಮುಖಿಗಳ ಕೇಂದ್ರವಾಗಿದೆ.

ಉತ್ತರ: ಉಚ್ಚ  ಪ್ರಾವರಣ ಹಾಗೂ ಕನಿಷ್ಠ ಪ್ರಾವರಣ ಎಂಬ ಎರಡು ಉಪವಿಭಾಗಗಳು ಪ್ರವರಣದಲ್ಲಿ ಮಾಡಲಾಗುತ್ತದೆ. ಉಚ್ಚ ಪ್ರಾವರಣ ಹೆಚ್ಚು ಪ್ರವಾಹಿಯಾಗಿದ್ದು ಈ ಭಾಗದಲ್ಲಿಯೇ ಶಿಲಾರಸದ ಸಂಗ್ರಹ ಇರುತ್ತದೆ. ಶಿಲಾರಸವು ಜ್ವಾಲಾಮುಖಿ ಉದ್ರೇಕದೊಂದಿಗೆ ಪೃಥ್ವಿಯ ಪೃಷ್ಟಭಾಗದ ಮೇಲೆ ಬರುತ್ತದೆ ಆದ್ದರಿಂದ ಈ ಪ್ರವರಣದ ಭಾಗಕ್ಕೆ ದುರ್ಬಲ ಆವರಣ ಎಂದು ಕರೆಯುತ್ತಾರೆ. ಇದು ಪೃಷ್ಠ ಭಾಗದಿಂದ 42ಕಿಮಿ ಅಳದಲ್ಲಿ ಇರುತ್ತದೆ. ಪ್ರಾವರಣದಲ್ಲಿಯ ಅಂತರ್ಗತ ಶಕ್ತಿಯಿಂದಾಗುವ ಚಲನೆವಲನೆಗಳಿಂದ ಭೂಪೃಷ್ಟದ ಮೇಲೆ ಜ್ವಾಲಾಮುಖಿ, ಭೂಕಂಪಗಳಂಥಹ ಪ್ರಕ್ರಿಯೆಗಳು ಘಟಿಸುತ್ತವೆ.

(ಈ) ಭೂಪೃಷ್ಯಕ್ಕಿಂತ ಸಾಗರಪೃಷ್ಠದ ಕೆಳಗೆ ಅಂತರಂಗದ ಸ್ತರದ ದಪ್ಪಳತೆ ಕಡಿಮೆ ಇದೆ.

ಉತ್ತರ: ಭೂಖಂಡದ ಕವಚದ ಘನತೆ 2.65 ರಿಂದ 2.90 ಗ್ರಾಂ/ಘಸೇಮೀ ದಷ್ಟು ಇರುತ್ತದೆ. ಭೂಖಂಡ ಕವಚದ ಸರಾಸರಿ ದಪ್ಪಳತೆ 30ಕಿಮೀ ಇದೆ. ಮಹಾಸಾಗರದ ಕವಚದ ಘನತೆ 2.9 ಗ್ರಾಂ/ಘಸೆಮಿ ಇದ್ದು ಈ ಸ್ತರದ ದಪ್ಪಳತೆ 7 ರಿಂದ 10ಕಿಮೀ ಇದೆ. ಭೂಖಂಡ ಕವಚದ ಘನತೆ ಕಡಿಮೆ ಇರುವುದರಿಂದ ಖಂಡದ ಕವಚವು ಪ್ರಾವರಣದ ಮೇಲೆ ಸಹಜವಾಗಿ ತೇಲುತ್ತದೆ ಮತ್ತು ಅದು ಪ್ರಾವರಣದಲ್ಲಿ ವಿಲೀನವಾಗದೆ ಅದರ ದಪ್ಪಳತೆ ಹೆಚ್ಚಾಗುತ್ತದೆ. ಇದಕ್ಕೆ ವಿರುದ್ದವಾಗಿ ಮಹಾಸಾಗರ ಕವಚದ ಘನತೆ ಹೆಚ್ಚು ಇರುವುದರಿಂದ ಈ ಸ್ತರವು ಸಾತತ್ಯವಾಗಿ ಪ್ರಾವರಣದಲ್ಲಿ ವಿಲೀನವಾಗುತ್ತ ಹೋಗುತ್ತದೆ ಮತ್ತು ಅದರ ದಪ್ಪಳತೆ ಕಡಿಮೆಯಾಗುತ್ತದೆ. ಆದ್ದರಿಂದ ಭೂಪೃಷ್ಯಕ್ಕಿಂತ ಸಾಗರಪೃಷ್ಠದ ಕೆಳಗೆ ಅಂತರಂಗದ ಸ್ತರದ ದಪ್ಪಳತೆ ಕಡಿಮೆ ಇದೆ.

(ಉ) ಚುಂಬಕಾವರಣದಿಂದ ಪೃಥ್ವಿಯ ಸಂರಕ್ಷಣೆ ಆಗುವುದು.

ಉತ್ತರ: ಪೃಥ್ವಿಯ ಪರಿವಲನೆದಿಂದಾಗಿ ಪೃಥ್ವೀಗೆ ಚುಂಬಕಿಯ ಕ್ಷೇತ್ರ ಪ್ರಾಪ್ತವಾಗುತ್ತದೆ. ಪೃಥ್ವಿಯ ಈ ಕುಂಬಕಿಯ ಕ್ಷೇತ್ರವು ಪೃಥ್ವಿ ಗ್ರಹದ ಹೊರಗೂ ದೂರದ ವರೆಗೆ ಕಾರ್ಯನಿರತವಿರುತ್ತದೆ. ಈ ಭೂ ಚುಂಬಕಿಯ ಕ್ಷೇತ್ರವಿರುವ ಪೃಥ್ವಿಯ ಅವರಣಕ್ಕೆ ಚುಂಬಕಾವರಣ ಎಂದು ಕರೆಯುವರು.  ಈ ಆವರಣವು ಸೂರ್ಯನಿಂದ ಬರುವ ಸೌರಗಾಳಿಗಳಿಂದ ಸಂರಕ್ಷಣೆ ಮಾಡುತ್ತದೆ.

ಉಪಕ್ರಮ: ಪೃಥ್ವಿಯ ಅಂತರಂಗದ ಪ್ರತಿಕೃತಿ ತಯಾರಿಸಿರಿ. 

ಪೃಥ್ವಿಯ ಅಂತರಂಗದ (The interior of the earth)

1. ಅಂತರ್ಗಭ: ಇದು ಭೂಮಿಯ ಕೇಂದ್ರ ಮತ್ತು ಅತ್ಯಂತ ಬಿಸಿಯಾದ ಪದರವಾಗಿದೆ. ಒಳಭಾಗವು ಘನವಾಗಿದೆ ಮತ್ತು ಕಬ್ಬಿಣ ಮತ್ತು ನಿಕಲ್‌ನಿಂದ ಮಾಡಲ್ಪಟ್ಟಿದೆ.

2. ಬಾಹ್ಯಗರ್ಭ: ಭೂಮಿಯ ಹೊರಭಾಗವು ತುಂಬಾ ಬಿಸಿಯಾದ ಲೋಹಗಳ ಚೆಂಡಿನಂತೆಯೇ ಇರುತ್ತದೆ. ಇದು ಕಬ್ಬಿಣ ಮತ್ತು ನಿಕಲ್ನಂತಹ ಲೋಹಗಳಿಂದ ಕೂಡಿದೆ. ಬಾಹ್ಯಗರ್ಭವು ಅಂತರಗರ್ಭವನ್ನು ಸುತ್ತುವರೆದಿದೆ.

3. ಪ್ರಾವರಣ: ಪ್ರಾವರಣವು ಭೂಮಿಯ ಅತ್ಯಂತ ವಿಶಾಲವಾದ ವಿಭಾಗವಾಗಿದೆ. ಈ ಭಾಗದಲ್ಲಿ ಶಿಲಾರಸ ಕಂಡು ಬರುತ್ತದೆ. ಜ್ವಾಲಾಮುಖಿಯ ಉದ್ರೇಕವಾದಾಗ ಇಲ್ಲಿಂದಲೆ ಪೃಥ್ವಿಯ ಪೃಷ್ಠಭಾಗದ ಮೇಲೆ ಲಾವ್ಹಾರಸ ಬರುತ್ತದೆ. ಪ್ರಾವರಣದ ಅಂತರ್ಗತ ಶಕ್ತಿಯಿಂದಾಗಿ ಆಗುವ ಭೂಮಿಯ ಚಲನವಲನದಿಂದ ಭೂಪೃಷ್ಠದ ಮೇಲೆ ಪರ್ವತಗಳ ನಿರ್ಮಾಣ, ಜ್ವಾಲಾಮುಖಿ, ಭೂಕಂಪ ಮುಂತಾದ ಪ್ರಕ್ರಿಯೆಗಳು ಸಂಭವಿಸುವವು.

4. ಭೂಕವಚ(ಕ್ರಸ್ಟ್): ಪೃಥ್ವಿಯ ಎಲ್ಲಕ್ಕಿಂತ ಮೇಲಿನ ಘನರೂಪದ ಭಾಗವಿದ್ದು ಅದರ ಮೇಲೆ ನಾವು ವಾಸಿಸುತ್ತೇವೆ. ಭೂಕವಚದ ದಪ್ಪಳತೆ ಎಲ್ಲೆಡೆ ಸಮಾನವಾಗಿರುವುದಿಲ್ಲ. ಇದ್ದನ್ನು ಇನ್ನೂ ಎರಡು ಯೂ‌ಪಿ‌ಏಭಾಗಗಳನ್ನು ಮಾಡಲಾಗಿದೆ. ಖಂಡದ ಕವಚ ಹಾಗೂ ಮಹಾಸಾಗರ ಕವಚ. ಭೂಕವಚವು ಸಿಲಿಕಾ ಮತ್ತು ಅಲ್ಯೂಮಿನಿಯಂ ನಿಂದ ತಯಾರಾದ ಭೂಭಾಗವಾಗಿದ್ದು ಮಹಾಸಾಗರದ ಕವಚ ಸಿಲಿಕಾ ಮತ್ತು ಮೇಜ್ಞೆಶಿಯಮನಿಂದ ನಿರ್ಮಾಣವಾದ ಜಲಮಯ ಪ್ರದೇಶವಾಗಿದೆ. 

3. ಆರ್ದ್ರತೆ ಹಾಗೂ ಮೋಡಗಳು

ಪ್ರ.1. ಯೋಗ್ಯ ಜೋಡಿಗಳನ್ನು ಹೊಂದಿಸಿ ಸರಪಳಿಯನ್ನು ಪೂರ್ಣಗೊಳಿಸಿರಿ.

‘A’ ಗುಂಪು

‘B’ ಗುಂಪು

‘C’ ಗುಂಪು

1. ಸಿರಸ Cirrus

ii. ಅತೀ ಎತ್ತರದಲ್ಲಿಯ

d. ಹಿಮಸ್ಫಟಿಕದ ಮೋಡ

2. ಕ್ಯೂಮ್ಯುಲೋನಿಂಬಸ್

Cumulonimbus

i. ಆಕಾಶದಲ್ಲಿ ಎತ್ತರದಲ್ಲಿ ವಿಸ್ತಾರ

a. ಗುಡುಗುವ ಮೋಡ

3. ನಿಂಬೋಸ್ಟ್ರೆಟಸ್

Nimbostratus

iv.  ಕಡಿಮೆ ಎತ್ತರದಲ್ಲಿಯ

c. ಜಿಟಿಜಿಟಿ ಮಳೆ

4. ಅಲ್ಟೋಕ್ಯೂಮ್ಯುಲಸ್

Alto-cumulus

iii. ಮಧ್ಯಮ ಎತ್ತರದಲ್ಲಿಯ

b. ತೇಲುವ ಮೋಡ

 








ಪ್ರ. 2. ಕಂಸಿನಲ್ಲಿಯ ಯೋಗ್ಯ ಶಬ್ದವನ್ನಾಯ್ದು ವಾಕ್ಯ ಪೂರ್ಣಗೊಳಿಸಿರಿ.

(ಕ್ಯೂಮ್ಯುಲೋನಿಂಬಸ್, ಸಾಪೇಕ್ಷ ಆರ್ದ್ರತೆ, ನಿರಪೇಕ್ಷ ಆರ್ದ್ರತೆ, ಸಾಂದ್ರೀಭವನ, ಬಾಷ್ಪಿಭವನ, ಬಾಷ್ಪಧಾರಣೆಯ ಸಾಮರ್ಥ್ಯ)

ಅ) ಹವೆಯ ............. ಹವೆಯ ಉಷ್ಣತಮಾನದ ಮೇಲೆ ಅವಲಂಬಿಸಿರುವುದು.

ಉತ್ತರ: ಬಾಷ್ಪಧಾರಣೆಯ ಸಾಮರ್ಥ್ಯ

ಆ. ಒಂದು ಘನಮೀಟರ್ ಹವೆಯಲ್ಲಿ ಎಷ್ಟು ಗ್ರಾಮ ಬಾಷ್ಪ ಇದೆ ಎಂಬುದನ್ನು ನೋಡಿ ............ ತೆಗೆಯಲಾಗುವುದು.

ಉತ್ತರ: ನಿರಪೇಕ್ಷ ಆರ್ದ್ರತೆ.

ಇ. ಮರಳುಗಾಡಿನಲ್ಲಿ ............. ಕಡಿಮೆ ಇರುವುದರಿಂದ ಹವೆ ಒಣದಾಗಿರುವುದು.

ಉತ್ತರ: ಸಾಪೇಕ್ಷ ಆರ್ದ್ರತೆ.  

ಈ. ............ ಪ್ರಕಾರದ ಮೋಡಗಳು ಚಂಡಮಾರುತದ ಸಂಕೇತಗಳಾಗಿವೆ.

ಉತ್ತರ: ಕ್ಯೂಮ್ಯುಲೋನಿಂಬಸ್.  

ಉ) ಮುಕ್ತ ವಾತಾವರಣದಲ್ಲಿಯ ಹವೆಯ ಬಾಷ್ಪದ ............... ವಾತಾವರಣದಲ್ಲಿಯ ಧೂಳಿಕಣಗಳ ಸುತ್ತ ಆಗುವುದು.

ಉತ್ತರ: ಸಾಂದ್ರೀಭವನ.

ಪ್ರ. 3. ವ್ಯತ್ಯಾಸವನ್ನು ಸ್ಪಷ್ಟಪಡಿಸಿರಿ.

ಅ) ಆರ್ದ್ರತೆ ಹಾಗೂ ಮೋಡಗಳು

ಆರ್ದ್ರತೆ

ಮೋಡಗಳು

1. ಹವೆಯಲ್ಲಿಯ ಬಾಷ್ಪದ ಪ್ರಮಾಣವನ್ನು ಹವೆಯ ಆರ್ದ್ರತೆ ಎನ್ನುವರು.

1. ವಾತಾವರಣದಲ್ಲಿಯ ಬಾಷ್ಪವು ಸಾಂದ್ರೀಭವನವಾಗಿ ಮೋಡಗಳು ತಯಾರಾಗುತ್ತವೆ.

2. ಹವೆಯು ಒಂದು ವಿಶಿಷ್ಟ ಉಷ್ಣತಮಾನದಲ್ಲಿ ವಿಶಿಷ್ಟ ಪ್ರಮಾಣದಲ್ಲಿಯೇ ಬಾಷ್ಪಧಾರಣೆ ಮಾಡಬಲ್ಲುದು

2. ಇಬ್ಬನಿ, ಮಂಜು, ಹಿಮ ಇವು ಭೂಮಿಗೆ ಸಮೀಪವಿದ್ದರೆ ಮೋಡಗಳು ಭೂಮಿಯಿಂದ ಎತ್ತರದಲ್ಲಿ ಕಂಡು ಬರುವ ಸಾಂದ್ರೀಭವನದ ರೂಪಗಳಾಗಿವೆ.

ಆ) ಸಾಪೇಕ್ಷ ಆರ್ದ್ರತೆ ಹಾಗೂ ನಿರಪೇಕ್ಷ ಆರ್ದ್ರತೆ

ಉತ್ತರ:

ಸಾಪೇಕ್ಷ ಆರ್ದ್ರತೆ

ನಿರಪೇಕ್ಷ ಆರ್ದ್ರತೆ

ಒಂದು ವಿಶಿಷ್ಟ ಉಷ್ಣತಾಮಾನದಲ್ಲಿ ಹಾಗೂ ವಿಶಿಷ್ಟ ಘನಫಲ ಇರುವ ಹವೆಯಲ್ಲಿಯ ನಿರಪೇಕ್ಷ ಆರ್ದ್ರತೆ ಹಾಗೂ ಅದೇ ಉಷ್ಣತಾಮಾನದಲ್ಲಿಯ ಹವೆಯ ಪ್ರತ್ಯಕ್ಷ ಭಾಷ್ಪಧರಣೆಯ ಸಾಮರ್ಥ್ಯ ಇವುಗಳ ಗುಣೋತ್ತರವೇ ಸಾಪೇಕ್ಷ ಆರ್ದ್ರತೆ ಆಗಿದೆ.

ಸಾಪೇಕ್ಷ ಆರ್ದ್ರತೆ(%) = ನಿರಪೇಕ್ಷ ಆರ್ದ್ರತೆ/ ಭಾಷ್ಪಧರಣೆಯ ಸಾಮರ್ಥ್ಯ X 100

ಒಂದು ಘನಮೀಟರ್ ಹವೆಯಲ್ಲಿ ಎಷ್ಟು ಗ್ರಾಂ ಭಾಷ್ಪ ಇದೆ ಎಂಬುದರ ಮೇಲಿಂದ ನಿರಪೇಕ್ಷ ಆರ್ದ್ರತೆ ತೆಗೆಯಲಾಗುತ್ತದೆ.

ನಿರಪೇಕ್ಷ ಆರ್ದ್ರತೆ = ನೀರಿನ ಭಾಷ್ಪ/ಹವೆಯ ಘನಫಲ

ಇ) ಕ್ಯುಮ್ಯುಲಸ್ ಮೋಡ ಹಾಗೂ ಕ್ಯೂಮ್ಯುಲೋನಿಂಬಸ್ ಮೋಡ

ಕ್ಯುಮ್ಯುಲಸ್ ಮೋಡಗಳು

ಕ್ಯೂಮ್ಯುಲೋನಿಂಬಸ್ ಮೋಡಗಳು

1)ಭೂಪೃಷ್ಠದಿಂದ 500 ರಿಂದ 6000 ಮೀಟರ್ ಎತ್ತರದಲ್ಲಿ ಹವೆಯ ಪ್ರಚಂಡ ಊರ್ಧ್ವಗಾಮಿ ಪ್ರವಾಹಗಳಿಂದ ನಿರ್ಮಾಣವಾದ ಮೋಡಗಳಿಗೆ ಕ್ಯುಮ್ಯುಲಸ್ ಮೋಡಗಳು ಎನ್ನುವರು.

2) ಕ್ಯುಮ್ಯುಲಸ್ ಮೋಡಗಳು ಅಲ್ಹಾದಕರ ಹವೆಯ ನಿದರ್ಶನಗಳಾಗಿವೆ.

1)ಚಂಡಮಾರುತದ ನಿದರ್ಶಕವಿರುವ ಕಪ್ಪು ಬಣ್ಣದ ದತ್ತ ಪರ್ವತಕಾಯದ ಮೋಡಗಳಿಗೆ ಕ್ಯೂಮ್ಯುಲೋನಿಂಬಸ್ ಮೋಡಗಳು ಎನ್ನುವರು.

 

2) ಕ್ಯೂಮ್ಯುಲೋನಿಂಬಸ್ ಮೋಡಗಳು ಚಂಡಮಾರುತದ ನಿದರ್ಶನಗಳಾಗಿವೆ.

ಪ್ರ. 4. ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಒಂದು ಪ್ರದೇಶದ ಹವೆ ಒಣದಾಗಿ ಏಕೆ ಇರುವುದು?

ಉತ್ತರ: ಹವೆಯಲ್ಲಿಯ ತೇವಾಂಶ ಕಡಿಮೆಯಾಗಿ ಆಯಾ ಪ್ರದೇಶದ ಹವೆ ಒಣದಾಗಿ ಇರುವುದು.

ಆ) ಆರ್ದ್ರತೆಯನ್ನು ಹೇಗೆ ಅಳೆಯುವರು?

ಉತ್ತರ: ಒಂದು ಘನ ಮೀಟರ್ ಹವೆಯಲ್ಲಿ ಎಷ್ಟು ಗ್ರಾಮ ಬಾಷ್ಪ ಇದೆ ಎಂಬುದರ ಮೇಲಿಂದ ನಿರಪೇಕ್ಷ ಆರ್ದ್ರತೆಯನ್ನು ಅಳೆಯಲಾಗುವುದು. ಒಂದು ವಿಶಿಷ್ಟ ಉಷ್ಣತಮಾನದಲ್ಲಿ ಹಾಗೂ ವಿಶಿಷ್ಟ ಘನಫಲ ಇರುವ ಹವೆಯಲ್ಲಿಯ ನಿರಪೇಕ್ಷ ಹಾಗೂ ಅದೇ ಉಷ್ಣತಮದಲ್ಲಿ ಹವೆಯ ಪ್ರತ್ಯಕ್ಷ ಬಾಷ್ಪಧಾರಣೆಯ ಸಾಮರ್ಥ್ಯ ಇವುಗಳ ಗುಣೋತ್ತರಗಳಿಂದ ಹವೆಯ ಸಾಪೇಕ್ಷ ಆರ್ದ್ರತೆಯನ್ನು ಹೇಳಬಹುದು. ಸಾಪೇಕ್ಷ ಆರ್ದ್ರತೆಯನ್ನು ಪ್ರತಿಶತದಲ್ಲಿ ಹೇಳಲಾಗುವುದು.

ಸಾಪೇಕ್ಷ ಆರ್ದ್ರತೆ (%) = ನಿರಪೇಕ್ಷ ಆರ್ದ್ರತೆ/ಭಾಷ್ಪಧಾರಣೆಯ ಸಾಮರ್ಥ್ಯX 100

ಇ. ಸಾಂದ್ರೀಭವನಕ್ಕಾಗಿ ಯಾವ ಸಂಗತಿಗಳು ಅವಶ್ಯವಾಗಿವೆ?

ಉತ್ತರ: ಸಾಂದ್ರೀಭವನಕ್ಕಾಗಿ ಉಷ್ಣತಮಾನ ಕಡಿಮೆ ಆಗುವುದು ಹಾಗೂ ಸಾಪೇಕ್ಷ ಆರ್ದ್ರತೆ ಬೆಳೆಯುವುದು ಮುಂತಾದ ಸಂಗತಿಗಳು ಅವಶ್ಯವಾಗಿವೆ.

ಈ. ಮೋಡ ಎಂದರೇನು? ಮೋಡಗಳ ಪ್ರಕಾರಗಳನ್ನು ಬರೆಯಿರಿ.

ಉತ್ತರ: ಸಾಂದ್ರೀಭವನದಿಂದಾಗಿ ವಾತಾವರಣದಲ್ಲಿ ಹೆಚ್ಚು ಎತ್ತರದಲ್ಲಿ ಸೂಕ್ಷ್ಮ ಜಲಕಣ ಹಾಗೂ ಹಿಮಕಣಗಳು ಹವೆಯಲ್ಲಿ ತೇಲಾಗುತ್ತಿರುತ್ತವೆ. ಹವೆಯಲ್ಲಿಯ ಧೂಳಿನ ಕಣಗಳ ಸುತ್ತ ಒಂದೆಡೆ ಸೇರಿ ಅವುಗಳ ಆಕಾರ ಬೆಳೆಯುವುದು. ಆ ಗುಂಪಿಗೆ ಮೋಡ ಎನ್ನುವರು.

        ವಾತಾವರಣದಲ್ಲಿ ಬೇರೆ ಬೇರೆ ಎತ್ತರಗಳಲ್ಲಿ ಮೋಡಗಳು ನಿರ್ಮಾಣ ಆಗುವವು. ಎತ್ತರಕ್ಕನುಗುಣವಾಗಿ ಈ ಮೋಡಗಳಲ್ಲಿ ಮೂರು ಮುಖ್ಯ ಪ್ರಕಾರಗಳನ್ನು ಮಾಡಲಾಗುವುದು

1. ಎತ್ತರದ ಮೋಡಗಳು: ಮೋಡದ ಬುಡದ ಎತ್ತರದಿಂದ ಅದರ ನಿರ್ಧಾರ ಮಾಡಲಾಗುವುದು. ಮೋಡಗಳ ಎತ್ತರ ಸುಮಾರು 7000 ದಿಂದ 14000 ಮೀಟರಗಳ ನಡುವೆ ಇದ್ದರೆ ಅವುಗಳಿಗೆ ಅತೀ ಎತ್ತರದ ಮೋಡಗಳು ಎನ್ನುವರು.

2. ಮಧ್ಯಮ ಎತ್ತರದ ಮೋಡಗ: 2000 ದಿಂದ 7000 ಮೀಟರುಗಳ ನಡುವಿನ ಎತ್ತರದ ಮೋಡೆಗಳಿಗೆ ಮಧ್ಯಮ ಎತ್ತರದ ಮೋಡಗಳು ಎನ್ನವರು.  

3. ಕಡಿಮೆ ಎತ್ತರದ ಮೋಡಗಳು: 2000 ಮೀಟರುಗಳಿಂತ ಕಡಿಮೆ ಎತ್ತರದಲ್ಲಿದ್ದ ಮೋಡಗಳಿಗೆ ಕಡಿಮೆ ಎತ್ತರದ ಮೋಡಗಳು ಎನ್ನುವರು.

ಉ) ಯಾವ ಯಾವ ಪ್ರಕಾರದ ಮೋಡಗಳಿಂದ ಮಳೆ ಸುರಿಯುವುದು?

ಉತ್ತರ: ಕ್ಯೂಮ್ಯುಲೋನಿಂಬಸ್ ಹಾಗೂ ನಿಂಬೋಸ್ಟ್ರೆಟಸ್ ಪ್ರಕಾರದ ಮೋಡಗಳಿಂದ ಮಳೆಯಾಗುವುದು.

ಊ) ಸಾಪೇಕ್ಷ ಆರ್ದ್ರತೆಯ ಪ್ರತಿಶತ ಯಾವುದಕ್ಕೆ ಸಂಬಂಧವಿದೆ?

ಉತ್ತರ: ಒಂದು ವಿಶಿಷ್ಟ ಉಷ್ಣತಮಾನದಲ್ಲಿ ಹಾಗೂ ವಿಶಿಷ್ಟ ಘನಫಲ ಇರುವ ಹವೆಯಲ್ಲಿಯ ನಿರಪೇಕ್ಷ ಹಾಗೂ ಅದೇ ಉಷ್ಣತಮದಲ್ಲಿ ಹವೆಯ ಪ್ರತ್ಯಕ್ಷ ಬಾಷ್ಪಧಾರಣೆಯ ಸಾಮರ್ಥ್ಯ ಇವುಗಳ ಗುಣೋತ್ತರಗಳ ಮೇಲೆ ಹವೆಯ ಸಾಪೇಕ್ಷ ಆರ್ದ್ರತೆ ಅವಲಂಬಿಸಿದೆ.
ಪ್ರ. 5. ಭೌಗೋಳಿಕ ಕಾರಣಗಳನ್ನು ಬರೆಯಿರಿ.

1. ಮೋಡಗಳು ಆಕಾಶದಲ್ಲಿ ತೇಲುವವು.

ಉತ್ತರ: ಘನೀಭವನವಾದ ನೀರು ಅಥವಾ ಹಿಮದ ಸೂಕ್ಷ್ಮ ಕಣಗಳು ಧೂಳಿನ ಕಣಗಳ ಸುತ್ತಲೂ ಹೆಚ್ಚಿನ ಎತ್ತರದಲ್ಲಿ ಸಂಗ್ರಹಗೊಳ್ಳುವುದರಿಂದ ಮೋಡಗಳ ರಚನೆಗೆ ಕಾರಣವಾಗುತ್ತದೆ. ಮೋಡಗಳಲ್ಲಿನ ಘನೀಕೃತ ನೀರು ಅಥವಾ ಸೂಕ್ಷ್ಮ ಕಣಗಳಿಗೆ ಬಹುತೇಕ ತೂಕವಿಲ್ಲ. ಆದ್ದರಿಂದ, ಮೋಡಗಳು ಆಕಾಶದಲ್ಲಿ ತೇಲುತ್ತವೆ.

ಆ) ಸಾಪೇಕ್ಷ ಆರ್ದ್ರತೆಯ ಪ್ರಮಾಣವು ಎತ್ತರಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಉತ್ತರ: 1. ಸಮುದ್ರ ಮಟ್ಟದಲ್ಲಿರುವ ಪ್ರದೇಶಗಳಲ್ಲಿ ಉಷ್ಣತಾಮಾನವು ತುಲನಾತ್ಮಕವಾಗಿ ಹೆಚ್ಚು ಇರುತ್ತದೆ. ಹೆಚ್ಚಿನ ಉಷ್ಣತಾಮಾನದ ಕಾರಣದಿಂದಾಗಿ, ಸಮುದ್ರ ಮಟ್ಟದ ಹತ್ತಿರ ಹವೆಯ ಭಾಷ್ಪಧಾರಣೆಯ ಸಾಮರ್ಥ್ಯವು ಹೆಚ್ಚಾಗಿರುತ್ತದೆ. ಆದ್ದರಿಂದ, ಸಮುದ್ರ ಮಟ್ಟದಲ್ಲಿ ಹವೆಯ ಆರ್ದ್ರತೆಯು ಹೆಚ್ಚು ಇರುತ್ತದೆ.

     2. ಎತ್ತರದ ಪ್ರದೇಶಗಳಲ್ಲಿ ಉಷ್ಣತಾಮಾನವು ತುಲನಾತ್ಮಕವಾಗಿ ಕಡಿಮೆಯಾಗಿದೆ. ಕಡಿಮೆ ಉಷ್ಣತಾಮಾನದಿಂದಾಗಿ, ಎತ್ತರದಲ್ಲಿ ಹವೆಯ ಭಾಷ್ಪಧಾರಣೆಯ ಸಾಮರ್ಥ್ಯವು ಕಡಿಮೆಯಾಗಿದ್ದು ಕಂಡುಬರುತ್ತದೆ. ಆದ್ದರಿಂದ, ಎತ್ತರದಲ್ಲಿ ಗಾಳಿಯ ಆರ್ದ್ರತೆಯು ತುಲನಾತ್ಮಕವಾಗಿ ಕಡಿಮೆಯಾಗಿದೆ. ಈ ರೀತಿಯಾಗಿ, ಸಾಪೇಕ್ಷ ಆರ್ದ್ರತೆಯ ಪ್ರಮಾಣವು ಎತ್ತರಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಇ) ಹವೆಯು ಬಾಷ್ಪ ಸಂತೃಪ್ತವಾಗುವುದು.

ಉತ್ತರ: 1. ನಿರ್ದಿಷ್ಟ ಉಷ್ಣತಾಮಾನದಲ್ಲಿ ಹವೆಯ ಭಾಷ್ಪಧಾರಣೆಯ ಸಾಮರ್ಥ್ಯವು ಪೂರ್ಣಗೊಳ್ಳುತ್ತದೆ ಮತ್ತು ಅದು ಅದರಲ್ಲಿರುವ ತೇವಾಂಶದ ಅನುಪಾತಕ್ಕೆ ಸಮನಾಗಿರುತ್ತದೆ.

ಈ ಸ್ಥಿತಿಯಲ್ಲಿ, ಹೆಚ್ಚಿನ ತೇವಾಂಶವನ್ನು ಗಾಳಿಯಿಂದ ಹೀರಿಕೊಳ್ಳಲಾಗುವುದಿಲ್ಲ. ಹೀಗಾಗಿ, ಹವೆಯು ಸಂತೃಪ್ತ(ಸ್ಯಾಚುರೇಟೆಡ್) ಆಗುತ್ತದೆ

4. ಕ್ಯೂಮ್ಯುಲಸ್ ಮೋಡಗಳು ಕ್ಯೂಮ್ಯುಲೋನಿಂಬಸ್ ಮೋಡಗಳಲ್ಲಿ ರೂಪಾಂತರಗೊಳ್ಳುವವು.

ಉತ್ತರ: 1. ಕ್ಯುಮುಲಸ್ ಮೋಡಗಳು 500 ಮೀ ನಿಂದ 6000 ಮೀ ಎತ್ತರದಲ್ಲಿ ಕಂಡುಬರುತ್ತವೆ. ಹವೆಯ ಲಂಬ ಹರಿವಿನಿಂದಾಗಿ ಅವು ಹೆಚ್ಚಾಗಿ ರೂಪುಗೊಳ್ಳುತ್ತವೆ.

    2. ಕೆಲವೊಮ್ಮೆ, ಕ್ಯುಮುಲಸ್ ಮೋಡಗಳ ಲಂಬವಾದ ಹರವು ಹೆಚ್ಚಾಗುತ್ತದೆ ಮತ್ತು ಇದು ಬೃಹತ್ ಪರ್ವತದಂತಹ ಕ್ಯುಮುಲೋನಿಂಬಸ್ ಮೋಡಗಳ ರಚನೆಗೆ ಕಾರಣವಾಗುತ್ತದೆ. ಹೀಗಾಗಿ, ಕ್ಯುಮುಲಸ್ ಮೋಡಗಳು ಕ್ಯುಮುಲೋನಿಂಬಸ್ ಮೋಡಗಳಾಗಿ ಬದಲಾಗುತ್ತವೆ.

ಪ್ರ. 6. ಉದಾಹರಣೆಗಳನ್ನು ಬಿಡಿಸಿರಿ.

ಅ) ಹವೆಯ ಉಷ್ಣತಾಮಾನ 30 ° C ಆಗಿದ್ದರೆ, ಅದರ ಭಾಷ್ಪಧಾರಣೆಯ ಸಾಮರ್ಥ್ಯ 30.37 gms/cu.m. ಇರುವುದು. ಒಂದು ಪಕ್ಷ ನಿರಪೇಕ್ಷ ಆರ್ದ್ರತೆಯು 18 gms/cu.m ಆಗಿದ್ದರೆ, ಸಾಪೇಕ್ಷ ಆರ್ದ್ರತೆ ಎಷ್ಟು?

ಸಾಪೇಕ್ಷ ಆರ್ದ್ರತೆ (%)


ಆ) ಒಂದು ಘನಮೀಟರ್ ಹವೆಯಲ್ಲಿ
0° C ಉಷ್ಣತಮಾನದಲ್ಲಿ 4.08 ಗ್ರಾಮ ಭಾಷ್ಪ ಇದ್ದರೆ ಹವೆಯ ನಿರಪೇಕ್ಷ ಆರ್ದ್ರತೆ ಎಷ್ಟು ಇರಬಹುದು?

ಉತ್ತರ:
ನಿರಪೇಕ್ಷ ಆರ್ದ್ರತೆ = ನಿರಪೇಕ್ಷ  ಆರ್ದತೆ /ಭಾಷ್ಪಧರಣೆಯ ಸಾಮರ್ಥ್ಯ X 100

  = 4.08/1 = 4.08  ಗ್ರ್ಯಾಮ್/ಘಮೀ

ಪ್ರ. 7. ಸಮಾಚಾರ ಪತ್ರಿಕೆಯಲ್ಲಿ ದೈನಂದಿನ ಹವೆಯ ಸ್ಥಿತಿದರ್ಶಕ ಸುದ್ದಿಗಳನ್ನು ಜುಲೈ ತಿಂಗಳಲ್ಲಿ ಒಟ್ಟು ಗೂಡಿಸಿರಿ. ಗರಿಷ್ಠ ಹಾಗೂ ಕನಿಷ್ಠ ಉಷ್ಣತಾಮಾನಗಳಲ್ಲಿಯ ವ್ಯತ್ಯಾಸ ಹಾಗೂ ಹವೆಯ ಆರ್ದ್ರತೆ ಇವುಗಳಲ್ಲಿಯ ಸಂಭಂಧ ಜೋಡಿಸಿರಿ.

ಉಪಕ್ರಮ:

ಮೋಡಗಳ ಪ್ರಕಾರಗಳ ಕೋಷ್ಟಕ ತಯಾರಿಸಿರಿ. ವಿವಿಧ ಛಾಯಾಚಿತ್ರಗಳ ಉಪಯೋಗ ಮಾಡಿರಿ.





      4. ಸಾಗರ ತಳದ ರಚನೆ 

ಪ್ರ.1. ಯೋಗ್ಯ ಪರ್ಯಾಯವನ್ನು ಆರಿಸಿರಿ.

(ಅ) ಭೂಮಿಯ ಮೇಲಿನ ಭೂರೂಪಗಳಂತೆ ಸಾಗರಗಳಲ್ಲಿಯೂ ಜಲಮಗ್ನ  ಭೂರೂಪಗಳು ಕಂಡುಬರುವವು ಏಕೆಂದರೆ ....

(1) ನೀರಿನ ಕೆಳಗೆ ಭೂಮಿ ಇದೆ.

(i) ನೀರಿನ ಕೆಳಗೆ ಜ್ವಾಲಾಮುಖಿ ಇದೆ.

(ii) ಭೂಮಿ ಅಖಂಡಿತವಾಗಿದ್ದು ಅದರ ತಗ್ಗಾದ ಭಾಗದಲ್ಲಿ ನೀರು ಇದೆ.

(V) ಭೂಮಿ ಅಖಂಡಿತವಾಗಿದ್ದರೂ ನೀರಿನಂತೆ ಅದರ ಪಾತಳಿ ಎಲ್ಲೆಡೆ ಸಮನಾಗಿಲ್ಲ.

ಉತ್ತರ: (V) ಭೂಮಿ ಅಖಂಡಿತವಾಗಿದ್ದರೂ ನೀರಿನಂತೆ ಅದರ ಪಾತಳಿ ಎಲ್ಲೆಡೆ ಸಮನಾಗಿಲ್ಲ.

(ಆ) ಮಾನವನು ಸಾಗರದ ತಳದ ರಚನೆಯ ಯಾವ ಭಾಗದ ಉಪಯೋಗವನ್ನು ಮುಖ್ಯವಾಗಿ ಮಾಡುವನು ?

(1) ಭೂಖಂಡ ಮಂಚ

(ii) ಸಾಗರದ ಬಯಲು

(ii) ಖಂಡಾಂತರ ಇಳುಕಲು

(iv) ಸಾಗರದ ಕೊಳ್ಳ

ಉತ್ತರ: (1) ಭೂಖಂಡ ಮಂಚ

(ಇ) ಕೆಳಗಿನವುಗಳಲ್ಲಿ ಯಾವ ವರ್ಯಾಯವು ಸಾಗರದ ನಿಕ್ಷೇಪಕ್ಕೆ ಸಂಬಂಧಿಸಿದೆ ?

(i) ನದಿ, ಹಿಮನದಿ, ಪ್ರಾಣಿ-ವನಸ್ಪತಿಗಳ ಅವಶೇಷಗಳು.

(ii) ಜ್ವಾಲಾಮುಖಿಗಳ, ಭೂಖಂಡ ಮಂಚದ, ಪ್ರಾಣಿ –ವನಸ್ಪತಿಗಳ ಅವಶೇಷಗಳು

(iii) ಜ್ವಾಲಾಮುಖಿಯ ಬೂದಿ, ಲಾವ್ಹಾರಸ, ಮಣ್ಣಿನ ಸೂಕ್ಷ್ಮ ಕಣಗಳು.

(iv) ಜ್ವಾಲಾಮುಖಿಯ ಬೂದಿ, ಸಾಗರದ ಪ್ರಾಣಿ –ವನಸ್ಪತಿಗಳ ಅವಶೇಷ, ಸಾಗರದ ಬಯಲು

ಉತ್ತರ; (iii) ಜ್ವಾಲಾಮುಖಿಯ ಬೂದಿ, ಲಾವ್ಹಾರಸ, ಮಣ್ಣಿನ ಸೂಕ್ಷ್ಮ ಕಣಗಳು.

ಪ್ರ.2. (ಅ)ಕೆಳಗಿನ ಬಾಹ್ಯ ರೇಷೆಯಲ್ಲಿ ತೋರಿಸಿದ ಸ್ಥಳಗಳಿಗೆ ಯೋಗ್ಯ ಹೆಸರು ಕೊಡಿರಿ.

  

1.ಭೂಖಂಡ ಮಂಚ

2. ಸಾಗರ ಮಧ್ಯದ ಪರ್ವತ ಶ್ರೇಣಿ

3.ಸಾಗರದ ಬಯಲು

4. ಸಾಗರದ ಗುಳಿ

5.ಖಂಡಾಂತ ಇಳುಕಲು

6. ಭೂಖಂಡ ಮಂಚ

  (ಆ) ಮೇಲಿನ ಬಾಹ್ಯರೇಷೆಯಲ್ಲಿ ಯಾವ ಭೂರೂಪಗಳು ಸಾಗರದ ಅತಿ ಆಳದ ಸಂಶೋಧನೆಗೆ ಉಪಯುಕ್ತವಾಗಿದೆ?

ಉತ್ತರ: ಮೇಲಿನ ಬಾಹ್ಯರೇಷೆಯಲ್ಲಿ ಸಾಗರದ ಗುಳಿ ಮತ್ತು ಸಾಗರದ ಬಯಲು ಇವು ಆಳದ ಸಂಶೋಧನೆಗೆ ಉಪಯುಕ್ತವಾಗಿವೆ.

       (ಇ) ಯಾವ ಭೂರೂಪಗಳು ಸಾಗರದ ಸೀಮೆಗಳ ಹಾಗೂ ನೌಕಾಪಡೆಯ ನೆಲೆ ನಿರ್ಮಾಣ ಮಾಡಲು ಯೋಗ್ಯವಾಗಿದೆ?

ಉತ್ತರ: ಭೂಖಂಡ ಮಂಚ ಈ ಭೂರುಪಗಳು ಸಾಗರದ ಸೀಮೆಗಳ ಹಾಗೂ ನೌಕಾಪಡೆಯ ನೆಲೆ ನಿರ್ಮಾಣ ಮಾಡಲು ಯೋಗ್ಯವಾಗಿದೆ.  

ಪ್ರ 3. ಭೌಗೋಲಿಕ ಕಾರಣ ಕೊಡಿರಿ.

(ಅ) ಸಾಗರದ ತಳದ ರಚನೆಯ ಅಭ್ಯಾಸ ಮಾನವನಿಗೆ ಉಪಯೋಗಕಾರಿಯಾಗಿದೆ.

ಉತ್ತರ: ಸಾಗರದ ತಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಖನಿಜಗಳು, ಮೂಲವಸ್ತುಗಳು, ಖಡಕ, ಅತಿಸೂಕ್ಷ್ಮ ಮಣ್ಣಿನ ಕಣಗಳು ದೊರೆಯುತ್ತವೆ. ಸಾಗರದ ತಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳ ಹಾಗೂ ವನಸ್ಪತಿಗಳ ಅವಶೇಷಗಳೂ ದೊರೆಯುತ್ತವೆ. ಖನಿಜ ಸಂಪತ್ತು, ಪ್ರಾಣಿ ಸಂಪತ್ತು, ವನಸ್ಪತಿ ಅದೇ ರೀತಿ ಜ್ವಾಲಾಮುಖಿಯ ಉದ್ರೇಕ ಇವುಗಳ ಅಭ್ಯಾಸ ಮಾಡುವುದಕ್ಕಾಗಿ ಸಾಗರದ ತಳದ ಅಭ್ಯಾಸ ಮಾನವನಿಗೆ ಉಪಯುಕ್ತವಾಗಿದೆ.

(ಅ) ಭೂಖಂಡ ಮಂಚವು ಮೀನುಗಾರಿಕೆಯ ನಂದನವನವಾಗಿದೆ.

ಉತ್ತರ: ಭೂಖಂಡ ಮಂಚ ಎಂದರೆ ಸಮುದ್ರ ತೀರದ ಭಾಗ. ಸಾಗರ ತಳದಲ್ಲಿ ಹೆಚ್ಚು ಅಳವಿಲ್ಲದ ಭಾಗವಾಗಿದ್ದು ಇಲ್ಲಿ ಸೂರ್ಯನ ಕಿರಣಗಳು ಆಳದ ವರೆಗೆ ತಲುಪುತ್ತವೆ. ಅಲ್ಲಿ ಪಾಚಿ, ಪ್ಲವಂಕಗಳು, ಬೆಳೆಯುತ್ತವೆ ಮತ್ತು ಅವು ಮಿನುಗಳ ಮಹತ್ವದ ಆಹಾರವಾಗಿವೆ. ಆದ್ದರಿಂದ ಭೂಖಂಡ ಮಂಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಬರುತ್ತವೆ. ಹೆಚ್ಚು ಆಳವಿಲ್ಲದಿರುವುದರಿಂದ ಮೀನುಗಾರಿಕೆ ಧಾರಳವಾಗಿ ನಡೆಯುತ್ತದೆ. ಆದ್ದರಿಂದ ಭೂಖಂಡ ಮಂಚವು ಮೀನುಗಾರಿಕೆಯ ನಂದನವನವಾಗಿದೆ ಎಂದು ಹೇಳಲಾಗುತ್ತದೆ. . 

(ಇ) ಸಾಗರದ ಕೆಲವು ದ್ವೀಪಗಳು, ಸಾಗರಗಳ ಪರ್ವತ ಶ್ರೇಣಿಗಳಾಗಿವೆ.

ಉತ್ತರ: ಸಾಗರದ ತಳದ ಮೇಲಿನ ಪರ್ವತ ಶ್ರೇಣಿಗಳು ಜಲಮಗ್ನ ಪರ್ವತಗಳು ಎಂದು ಕರೆಯಲ್ಪಡುತ್ತವೆ. ಈ ಪರ್ವತ ಶ್ರೇಣಿಗಳು ನೂರಾರು ಕಿಮೀ ಅಗಲವಿದ್ದು ಸಾವಿರಾರು ಕಿಮೀ ಉದ್ದವಿರುತ್ತವೆ. ಜಲಮಗ್ನ ಪರ್ವತ ಶ್ರೇಣಿಗಳ ಶಿಖರದ ಭಾಗಗಳು ಕೆಲವೊಮ್ಮೆ ಸಾಗರ ಸಮತಲದಿಂದಲೂ ಮೇಲೆ ಬಂದಿರುತ್ತವೆ. ಅವುಗಳಿಗೆ ನಾವು ಸಾಗರದ ಬೆಟ್ಟಗಳು ಅನ್ನುತ್ತೇವೆ. ಉದಾ:  ಆಯಿಸ್ಲ್ಯಾಂಡ್-ಅಟ್ಲಾಂಟಿಕ್ ಮಹಾಸಾಗರ, ಅಂಡಮಾನ –ನಿಕೊಬಾರ್ ಬೆಟ್ಟಗಳು, ಬಂಗಾಳದ ಉಪಸಾಗರ. 

(ಈ) ಖಂಡಾಂತ ಇಳುಕಲುಗಳನ್ನು ಭೂಖಂಡದ ಸೀಮಾರೇಷೆಗಳಾಗಿವೆ ಎಂದು ಮನ್ನಿಸಲಾಗುವುದು.

ಉತ್ತರ: ಭೂಖಂಡ ಮಂಚದ ಭಾಗ ಮುಗಿಯುತ್ತಲೇ ಸಮುದ್ರ ತಳದ ತೀವ್ರ ಇಳುಕಲು ಬರುತ್ತದೆ. ಅದಕ್ಕೆ ಖಂಡಾಂತ ಇಳುಕಲು ಎನ್ನುತ್ತೇವೆ. ಸಮುದ್ರ ಸಪಾಟಿನಿಂದ ಅವುಗಳ ಆಳ 200ಮೀಟರ್ ದಿಂದ 3600 ಮೀಟರ್ ವರೆಗೆ ಇರುತ್ತದೆ. ಕೆಲವು ಸ್ಥಳದಲ್ಲಿ ಈ ಆಳ ಅದಕ್ಕಿಂತಲೂ ಹೆಚ್ಚು ಇದ್ದದ್ದು ಕಂಡು ಬರುತ್ತದೆ. ಖಂಡಾಂತ ಇಳುಕಲ್ಲಿನ ವಿಸ್ತಾರವು ಕಡಿಮೆ ಇರುತ್ತದೆ. ಸರ್ವಸಾಧಾರಣವಾಗಿ ಖಂಡಾಂತ ಇಳುಕಲಿನ ಇಕ್ಕಟ್ಟಾದ ಭಾಗಕ್ಕೆ ಭೂಖಂಡದ ಸೀಮಾರೇಷೆಗಳೆಂದು ತಿಳಿಯಲಾಗುತ್ತದೆ.

(ಉ) ಮಾನವನು ಎಲ್ಲ ವಸ್ತುಗಳನ್ನು ವಿಸರ್ಜಿಸುವುದರಿಂದ ಪರ್ಯಾವರಣಕ್ಕೆ ಹಾನಿ ತಗಲುತ್ತಿದೆ.

ಉತ್ತರ: ಮಾನವ ನಿರ್ಮಿತ ಕೆಲವು ವಸ್ತುಗಳ ವಿಸರ್ಜನೆ ಸಾಗರಗಳಲ್ಲಿ ಆಗುತ್ತಿರುತ್ತದೆ. ನಗರದಲ್ಲಿ ಚರಂಡಿ ನೀರು, ಕಸಕಡ್ಡಿಗಳು, ಕಿರಣೋತ್ಸರ್ಜಕ ಪದಾರ್ಥಗಳು, ಚೆಲ್ಲಲಾದ ರಸಾಯನಿಕಗಳು, ಪ್ಲಾಸ್ಟಿಕಗಳು ಮುಂತಾದ ಪದಾರ್ಥಗಳಿಂದ ಜಲಾವರಣಕ್ಕೆ ಅಥವಾ ಸಾಗರದಲ್ಲಿಯ ಜೀವಸೃಷ್ಟಿ ಪ್ರದುಷಣೆಗೆ ಒಳಗಾಗಬೇಕಾಗುತ್ತದೆ.   ಹಾಗಾಗಿ ಮಾನವನು ಎಲ್ಲ ವಸ್ತುಗಳನ್ನು ವಿಸರ್ಜಿಸುವುದರಿಂದ ಪರ್ಯಾವರಣಕ್ಕೆ ಹಾನಿ ತಗಲುತ್ತಿದೆ.

ಪ್ರ. 4. 27ನೆಯ ಪುಟದಲ್ಲಿ ನೋಡಿರಿ ಇದು ಸಾಧ್ಯವೆ' ದಲ್ಲಿಯ ನಕಾಶೆಯನ್ನು ಅಭ್ಯಸಿಸಿ ಕೆಳಗಿನ ಪ್ರಶ್ನೆಗಳ ಉತ್ತರ ಬರೆಯಿರಿ.

(ಅ) ಮಾದಾಗಾಸ್ಕರ ಹಾಗೂ ಶ್ರೀಲಂಕಾ ಇವು ಸಾಗರ ತಳದ ರಚನೆಯ ಯಾವ ಭೂರೂಪಗಳಿಗೆ ಸಂಬಂಧಪಟ್ಟಿವೆ?

ಉತ್ತರ: ಮಾದಾಗಾಸ್ಕರ ಹಾಗೂ ಶ್ರೀಲಂಕಾ ಇವು ಸಾಗರ ತಳದ ಬೆಟ್ಟ  ಎಂಬ ಭೂರೂಪಗಳಿಗೆ ಸಂಬಂಧಪಟ್ಟಿವೆ.

(ಆ) ಈ ಭೂಭಾಗ ಯಾವ ಯಾವ ಖಂಡಗಳ ಹತ್ತಿರ ಇವೆ?

ಉತ್ತರ: ಮಾದಾಗಾಸ್ಕರ ಭೂಭಾಗವು ಆಫ್ರಿಕಾ ಖಂಡದ ಹತ್ತಿರ ಇದೆ ಹಾಗೂ ಶ್ರೀಲಂಕಾ ಭೂಭಾಗವು ಆಶಿಯಾ ಖಂಡದಲ್ಲಿ ಹಿಂದೂ ಮಹಾಸಾಗರದಲ್ಲಿದೆ.

(ಇ) ನಮ್ಮ ದೇಶದ ಯಾವ ದ್ವಿಪಗಳು ಜಲಮಗ್ನ ಪರ್ವತ ಶಿಖರಗಳ ಭಾಗಗಳಾಗಿವೆ?

ಉತ್ತರ: ನಮ್ಮ ದೇಶದ ಅಂಡಮಾನ ಮತ್ತು ನಿಕೊಬಾರ್ ದ್ವಿಪಗಳು ಜಲಮಗ್ನ ಪರ್ವತ ಶಿಖರಗಳ ಭಾಗಗಳಾಗಿವೆ

ಉಪಕ್ರಮ: ಸಾಗರದ ತಳದ ರಚನೆಯ ಪ್ರತಿಕೃತಿ ತಯಾರಿಸಿರಿ. 

 

5. ಸಾಗರ ಪ್ರವಾಹ

ಪ್ರ. 1. ಯೋಗ್ಯ ಪರ್ಯಾಯ ಆರಿಸಿರಿ.

(ಅ) ಲ್ಯಾಬ್ರಾಡೋರ್ ಪ್ರವಾಹ ಯಾವ ಮಹಾಸಾಗರದಲ್ಲಿ ಇದೆ?

 (i) ಫೆಸಿಫಿಕ್       (ii) ಉತ್ತರ ಅಟ್ಲಾಂಟಿಕ್   (iii) ದಕ್ಷಿಣ ಅಟ್ಲಾಂಟಿಕ್   (iv) ಹಿಂದೀ

ಉತ್ತರ: (ii) ಉತ್ತರ ಅಟ್ಲಾಂಟಿಕ್

(ಆ) ಕೆಳಗಿನವುಗಳಲ್ಲಿ ಯಾವ ಪ್ರವಾಹ ಹಿಂದೀ ಮಹಾಸಾಗರದಲ್ಲಿ ಇದೆ?

(i) ಪೂರ್ವ ಆಸ್ಟ್ರೇಲಿಯಾ ಪ್ರವಾಹ       (ii) ಪೆರು ಪ್ರವಾಹ

(iii) ದಕ್ಷಿಣ ದ್ರುವದ ಪ್ರವಾಹ            (iv) ಸೋಮಾಲಿ ಪ್ರವಾಹ  

ಉತ್ತರ: (iv) ಸೋಮಾಲಿ ಪ್ರವಾಹ  

(ಇ) ಸಾಗರ ಪ್ರವಾಹದ ಸಮೀಪದ ದಂಡಪ್ರದೇಶದಲ್ಲಿ ಕೆಳಗಿನವುಗಳಲ್ಲಿಯ ಯಾವುರ ಪರಿಣಾಮ ಆಗುವುದಿಲ್ಲ?

(i) ಪರ್ಜನ್ಯ (ii) ಭೂಮಿಯ ಗಾಳಿ      (iii) ಉಷ್ಣತಮಾನ    (iv) ಕ್ಷಾರತೆ

ಉತ್ತರ: (ii) ಭೂಮಿಯ ಗಾಳಿ

(ಈ) ಉಷ್ಣ ಹಾಗೂ ಶೀತ ಸಾಗರ ಪ್ರವಾಹಗಳು ಒಂದೆಡೆ ಸೇರುವ ಪ್ರದೇಶಗಳಲ್ಲಿ ಕೆಳಗಿನಲ್ಲಿಯ ಯಾವುದರ ನಿರ್ಮಾಣ ಆಗುವುದು?

       (i) ಇಬ್ಬನಿ   (ii) ಹಿಮ    (iii) ಮಂಜು       (iv) ದಟ್ಟಮಂಜು

ಉತ್ತರ: (iv) ದಟ್ಟಮಂಜು

(ಉ) ಉತ್ತರ ಧ್ರುವ ಪ್ರದೇಶದಿಂದ ಅಂಟಾರ್ಕಟಿಕ್‌ ದ ವರೆಗೆ ಹರಿಯುವ ಪ್ರವಾಹಗಳು ಯಾವವು?

       (i) ಉಷ್ಣ ಸಾಗರ ಪ್ರವಾಹ (ii) ಪೃಷ್ಠದ ಸಾಗರ ಪ್ರವಾಹ

       (iii) ಶೀತ ಸಾಗರ ಪ್ರವಾಹ      (iv) ) ಆಳದ ಸಾಗರ ಪ್ರವಾಹ

ಉತ್ತರ: (iv) ) ಆಳದ ಸಾಗರ ಪ್ರವಾಹ

ಪ್ರ. 2. ಕೆಳಗಿನ ವಿಧಾನಗಳನ್ನು ಪರಿಶೀಲಿಸಿ, ಅಯೋಗ್ಯ ವಿಧಾನಗಳನ್ನು ಸರಿಪಡಿಸಿ ಬರೆಯಿರಿ.

() ಸಾಗರದ ಪ್ರವಾಹಗಳು, ನೀರಿಗೆ ವಿಶಿಷ್ಟ ದಿಕ್ಕು ಹಾಗೂ ಗತಿ ನೀಡುವವು. 

ಉತ್ತರ: ಯೋಗ್ಯ  

(ಆ) ಪೃಷ್ಠದ ಸಾಗರ ಪ್ರವಾಹಗಳ ನಿರ್ಮಾಣ ಸುಮಾರಾಗಿ ವಿಷುವವೃತ್ತದ ಪ್ರದೇಶದಲ್ಲಿ ಆಗುವುದು.

ಉತ್ತರ: ಅಯೋಗ್ಯ ವಿಧಾನ, ಪೃಷ್ಠದ ಸಾಗರ ಪ್ರವಾಹಗಳ ನಿರ್ಮಾಣ ವಿಷುವವೃತ್ತ ಹಾಗೂ ಧೃವಿಯ ಪ್ರದೇಶದಲ್ಲೂ ಆಗುವುದು.

() ಆಳದ ಸಾಗರ ಪ್ರವಾಹ ಬಹಳ ವೇಗದಿಂದ ಹರಿಯುವವು.            

ಉತ್ತರ:ಯೋಗ್ಯ   

(ಈ) ಮಾನವನ ದೃಷ್ಟಿಯಿಂದ ಸಾಗರದ ಪ್ರವಾಹಗಳಿಗೆ ಬಹಳ ಮಹತ್ವವಿದೆ.     

ಉತ್ತರ:ಯೋಗ್ಯ   

(ಉ) ಹಿಮಗಡ್ಡೆಗಳ ಹರಿತದಿಂದ ಜಲಸಾರಿಗೆಗೆ ಗಂಡಾಂತರ ಓಗುವುದಿಲ್ಲ.

ಉತ್ತರ: ಅಯೋಗ್ಯ,  ಹಿಮಗಡ್ಡೆಗಳ ಹರಿತದಿಂದ ಜಲಸಾರಿಗೆಗೆ ಗಂಡಾಂತರ ಓಗುವವು.

(ಊ) ಬ್ರಾಝಿಲದ ಹತ್ತಿರ ಸಾಗರದ ಪ್ರವಾಹಗಳಿಂದ ನೀರು ಬೆಚ್ಚಾಗುವುದು. ತದ್ದಿರುದ್ಧ ಅಫ್ರಿಕಾದ ದಂಡೆಯ ಹತ್ತಿರ ನೀರು ತಣ್ಣಾಗುವದು.

ಉತ್ತರ: ಅಯೋಗ್ಯ, ಬ್ರಾಝಿಲದ ಹತ್ತಿರ ಸಾಗರದ ಪ್ರವಾಹಗಳಿಂದ ನೀರು ಬೆಚ್ಚಾಗುವುದು. ಮತ್ತು ಅಫ್ರಿಕಾದ ದಂಡೆಯ ಹತ್ತಿರ ಕೂಡ ನೀರು ಬೆಚ್ಚಗಾಗುತ್ತದೆ.

ಪ್ರ.3. ಮುಂದಿನ ಸಂಗತಿಗಳ ಪರಿಣಾಮ ಹೇಳಿರಿ.

() ಉಷ್ಣ ಪ್ರವಾಹಗಳಿಂದ ಹವಾಮಾನದ ಮೇಲೆ ಆಗುವ ಪರಿಣಾಮ

ಉತ್ತರ: ಉಷ್ಣ ಪ್ರವಾಹಗಳು ಹರಿಯುವ ಸಾಗರ ತೀರದಲ್ಲಿಯ ಉಷ್ಣತಾಮಾನ ಹೆಚ್ಚಾಗುತ್ತದೆ. ಹಾಗೂ ಅಲ್ಲಿ ಇತರ ಸ್ಥಳಗಳಿಗಿಂತ ಹೆಚ್ಚು ಮಳೆ ಬೀಳುತ್ತದೆ.

(ಆ) ಶೀತ ಪ್ರವಾಹಗಳ ಹಿಮಡ್ಡೆಗಳ ಚಲನವಲನಗಳ ಮೇಲೆ ಆಗುವ ಪರಿಣಾಮ

ಉತ್ತರ: ಶೀತ ಪ್ರವಾಹಗಳ ಹಿಮಡ್ಡೆಗಳ ಚಲನವಲನಗಳಿಂದ ಪ್ರವಾಹ ತೀರದಲ್ಲಿಯ ಉಷ್ಣತೆ ಕಡಿಮೆ ಆಗುತ್ತದೆ. ಮತ್ತು ಅಲ್ಲಿ ಮಳೆಯ ಪ್ರಮಾಣ ಕಡಿಮೆ ಇರುತ್ತದೆ.

) ಸಾಗರಗಳಲ್ಲಿ ಮುಂದೆ ಬಂದಂತಹ ಭೂಭಾಗಗಳಿಂದ ಸಾಗರದ ಪ್ರವಾಹಗಳ ಮೇಲೆ ಆಗುವ ಪರಿಣಾಮ

ಉತ್ತರ: ಸಾಗರಗಳಲ್ಲಿ ಮುಂದೆ ಬಂದಂತಹ ಭೂಭಾಗಗಳಿಂದ ಸಾಗರ ಪ್ರವಾಹದಲ್ಲಿ ಅಡತಡೆಗಳು ಉಂಟಾಗುತ್ತವೆ. ಸಾಗರ ಪ್ರವಾಹದ ದಿಕ್ಕು ಮತ್ತು ವೇಗವು ಬದಲಾಗುತ್ತದೆ.

(ಈ) ಉಷ್ಣ ಹಾಗೂ ಶೀತ ಪ್ರವಾಹಗಳ ಸಂಗಮದ ಪ್ರದೇಶದ ಮೇಲೆ ಆಗುವ ಪರಿಣಾಮ

ಉತ್ತರ: ಉಷ್ಣ ಹಾಗೂ ಶೀತ ಪ್ರವಾಹಗಳ ಸಂಗಮದ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮಂಜುಗಡ್ಡೆಗಳು ತಯಾರಾಗುತ್ತವೆ. ಈ ಪ್ರದೇಶಗಳಲ್ಲಿಯ ವನಸ್ಪತಿಗಳು, ಪಾಚಿಗಂತಹ ಮಿನುಗಳ ಆಹಾರ ಬೆಳೆಯುತ್ತವೆ. ಅಲ್ಲಿ ಮತ್ಸ್ಯ ವ್ಯವಸಾಯ ಹೆಚ್ಚಾಗುತ್ತದೆ. 

(ಉ) ಸಾಗರ ಪ್ರವಾಹಗಳ ಹರಿಯುವ ಶಕ್ತಿಯ ಮೇಲೆ ಆಗುವ ಪರಿಣಾಮ

ಉತ್ತರ: ಪೃಷ್ಠದ ಸಾಗರ ಪ್ರವಾಹಗಳ ಹರಿಯುವ ಶಕ್ತಿಯಿಂದಾಗಿ ತೀರ ಪ್ರದೇಶದಲ್ಲಿ ಉಷ್ಣತಮಾನದಲ್ಲಿ ಮತ್ತು ಮಳೆ ಪ್ರಮಾಣದಲ್ಲಿ ಬದಲಾವಣೆಗಳು ಉಂಟಾಗುತ್ತವೆ.

(ಊ) ಳವಾದ ಸಾಗರ ಪ್ರವಾಹಗಳ ಮೇಲೆ ಆಗುವ -

ಉತ್ತರ: ಆಳವಾದ ಸಾಗರ ಪ್ರವಾಹಗಳಿಂದಾಗಿ ಸಾಗರದ ಪೃಷ್ಠದ ಮೇಲಿನ ಬೆಚ್ಚಗೆ ಇದ್ದ ನೀರು ಸಾಗರದ ತಳದ ಕಡೆಗೆ ಮತ್ತು ಸಾಗರದ ತಳದಲ್ಲಿರುವ ತಂಪು ನೀರು ಸಾಗರದ ಪೃಷ್ಠಭಾಗದ ಕಡೆಗೆ ಬರುತ್ತದೆ. ಸಾಗರ ಜಲದ ಪುನರ್ವಿತರಣೆ ಆಗುತ್ತದೆ.

ಪ್ರ. 4. ಸಾಗರ ಪ್ರವಾಹಗಳ ನಕಾಶೆ ನೋಡಿ ಮುಂದಿನ ಪ್ರಶ್ನೆಗಳ ಉತ್ತರ ಹೇಳಿರಿ.

() ಹಂಬೋಲ್ಟ ಪ್ರವಾಹವು ದಕ್ಷಿಣ ಅಮೇರಿಕಾದ ದಂಡೆಯ ಪ್ರದೇಶದ ಹವಾಮಾನದ ಮೇಲೆ ಯಾವ ಪರಿಣಾಮ ಬೀರುತ್ತಿರಬಹುದು ?

ಉತ್ತರ: ಹಂಬೋಲ್ಟ್ ಪ್ರವಾಹವು ಶೀತ ಪ್ರವಾಹ ಆಗಿರುವುದರಿಂದ ದಕ್ಷಿಣ ಅಮೆರಿಕೆಯ ಪಶ್ಚಿಮ ತೀರದ ಮೇಲೆ ಉಷ್ಣತಮಾನ ಮತ್ತು ಮಳೆಯ ಪ್ರಮಾಣ ಕಡಿಮೆ ಇರುವುದು.

(ಆ) ಪ್ರತಿ ವಿಷುವವೃತ್ತದ ಪ್ರವಾಹ ಯಾವ ಯಾವ ಮಹಾಸಾಗರಗಳಲ್ಲಿ ಕಂಡುಬರುವುದಿಲ್ಲ? ಏಕೆ?

ಉತ್ತರ: ಪ್ರತಿ ವಿಷುವವೃತ್ತಿಯ ಪ್ರವಾಹವು ಅರ್ಟಿಕ್ಟ್ ಮಹಾಸಾಗರದಲ್ಲಿ ಮತ್ತು ದಕ್ಷಿಣ ಮಹಾಸಾಗರದಲ್ಲಿ ಕಂಡು ಬರುವುದಿಲ್ಲ. ಈ ಮಹಾಸಾಗರಗಳು ಧೃವಿಯ ಪ್ರದೇಶದಲ್ಲಿ ಇರುವುದರಿಂದ ಗಾಳಿಯ ಪ್ರಭಾವ ಕಡಿಮೆ ಇರುತ್ತದೆ. ಆದ್ದರಿಂದ ಇವೆರಡೂ ಮಹಾಸಾಗರಗಳಲ್ಲಿ ಪ್ರತಿ ವಿಷುವವೃತ್ತದ ಪ್ರವಾಹ ಕಂಡುಬರುವುದಿಲ್ಲ.

() ಉತ್ತರ ಹಿಂದಿ ಮಹಾಸಾಗರದಲ್ಲಿ ಯಾವ ಪ್ರವಾಹಗಳು ಇಲ್ಲ? ಏಕೆ?

ಉತ್ತರ: ಉತ್ತರ ಹಿಂದಿ ಮಹಾಸಾಗರ ಉಷ್ಣ ಕಟಿಬಂಧದಲ್ಲಿ ಇರುವುದರಿಂದ ಅಲ್ಲಿ ಶೀತ  ಪ್ರವಾಹಗಳು ಇಲ್ಲ.

(ಈ) ಉಷ್ಣ ಹಾಗೂ ಶೀತ ಪ್ರವಾಹಗಳು ಒಂದೆಡೆ ಸೇರುವ ಕ್ಷೇತ್ರಗಳು ಎಲ್ಲಿ ಇವೆ?

ಉತ್ತರ: ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿ ಗಾಲ್ಫ್ ಪ್ರವಾಹ ಹಾಗೂ ಲ್ಯಾಂಬ್ರಾಡೋರ ಪ್ರವಾಹ, ಉತ್ತರ ಪೆಸಿಫಿಕ್ ಮಹಾಸಾಗರದಲ್ಲಿ ಕ್ಯೂರೋಶಿಯೋ ಪ್ರವಾಹ ಹಾಗೂ ಓಯಾಶಿಯೋ ಪ್ರವಾಹ, ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿ ಬ್ರಾಝಿಲ್ ಪ್ರವಾಹ ಹಾಗೂ ಫಕ್ಲ್ಯಾಂಡ್ ಪ್ರವಾಹ, ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಪೂರ್ವ ಆಸ್ಟ್ರೇಲಿಯಾ ಪ್ರವಾಹ ಹಾಗೂ ದಕ್ಷಿಣ ಧೃವೀಯ ಪ್ರವಾಹ, ದಕ್ಷಿಣ ಹಿಂದೀ ಮಹಾಸಾಗರದಲ್ಲಿ ಅಗ್ಯುಲ್ಹಾಸ್ ಪ್ರವಾಹ ಹಾಗೂ ದಕ್ಷಿಣ ಧೃವೀಯ ಪ್ರವಾಹ ಇತ್ಯಾದಿಗಳು ಉಷ್ಣ ಹಾಗೂ ಶೀತ ಪ್ರವಾಹಗಳು ಒಂದೆಡೆ ಸೇರುವ ಕ್ಷೇತ್ರಗಳು ಆಗಿವೆ.

ಪ್ರ.5. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(ಅ) ಅಳವಾದ ಸಾಗರ ಪ್ರವಾಹ ನಿರ್ಮಾಣವಾಗಲು ಕಾರಣಗಳಾವವು?

ಉತ್ತರ: 500 ಮೀಟರಿಗಿಂತ ಅಳದಲ್ಲಿರುವ ಪ್ರವಾಹಗಳಿಗೆ ಆಳದ ಪ್ರವಾಹಗಳೇನ್ನುವರು. ಆಳದಲ್ಲಿ ಹರಿಯುವ ಇ ಪ್ರವಾಹಗಳು ಸುಮಾರಾಗಿ ಮಹಾಸಾಗರದಲ್ಲಿಯ ಬೇರೆ ಬೇರೆ ಭಾಗಗಳಲ್ಲಿಯ ನೀರಿನ ಉಷ್ಣತಮಾನ ಹಾಗೂ ದಾರ್ಡ್ಯಗಳಲ್ಲಿ ಇರುವ ವ್ಯತ್ಯಾಸದಿಂದ ನಿರ್ಮಾಣವಾಗುವವು.  ಕಯ್ದ ನೀರಿನ ಕ್ಷಾರತೆ ಕಡಿಮೆ ಇರುವುದು ಅದರಿಂದಾಗಿ ಅದರ ದಾರ್ಡ್ಯವು ಕಡಿಮೆ ಇರುವುದು, ಇಂತಹ ನೀರು ಪೃಷ್ಠಭಾಗದಲ್ಲಿ ಬರುವುದು. ಹೀಗಿದ್ದಾಗ ತಣ್ಣಗಾದ ನೀರಿನ ಘನತೆ ಹೆಚ್ಚು ಇರುವುದರಿಂದ ಈ ನೀರು ಕೆಳಗೆ ಹೋಗುವುದು. ಈ ಚಲನವಲನೆಯಿಂದ ಪ್ರವಾಹಗಳು ನಿರ್ಮಾಣವಾಗುವವು. 

(ಆ) ಯಾವುದರಿ೦ದಾಗಿ ಸಾಗರದ ಲ ಗತಿಶೀಲವಾಗುವುದು?

ಉತ್ತರ: ಉಷ್ಣತೆ ಹಾಗೂ ಕ್ಷಾರತೆಗಳಿಂದ ಪ್ರೇರಿತವಾದ ಅಭಿಸರಣದಿಂದಾಗಿ ಸಾಗರದ ಜಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಚಲನೆವಲನೆ ಆಗಿ ಸಾಗರದ ಸಂಪೂರ್ಣ ಜಲವು ಪೃಷ್ಠಭಾಗದಿಂದ ತಳದ ಕಡೆಗೆ ಹಾಗೂ ತಳದಿಂದ ಪೃಷ್ಠದತ್ತ ಚಲಿಸುವುದು. ಹೀಗೆ ಗ್ರಹಗಳ ಗಾಳಿಗಳಿಂದಾಗಿ ಸಾಗರದ ಲ ಗತಿಶೀಲವಾಗುವುದು

() ಗಾಳಿಯಿಂದ ಸಾಗರದ ಪ್ರವಾಹಗಳಿಗೆ ದಿಕ್ಕು ಹೇಗೆ ಪ್ರಾಪ್ತವಾಗುವುದು?

ಉತ್ತರ: ಗಾಳಿಗಳಿಗೆ ಪೃಥ್ವಿಯ ಪರಿಭ್ರಮಣೆಯಿಂದ ಹಾಗೂ ಭೂಖಂಡದ ರಚನೆಯಿಂದಾಗಿ ದಿಕ್ಕು ಪ್ರಾಪ್ತವಾಗುತ್ತದೆ. ಉತ್ತರ ಗೋಲಾರ್ಧದಲ್ಲಿ ಗಡಿಯಾರದ ಮುಳ್ಳಿನಂತೆ ಸಾಗರ ಪ್ರವಾಹಗಳು ಚಳಿಸಿದರೆ ದಕ್ಷಿಣ ಗೋಲಾರ್ಧದಲ್ಲಿ ಅವು ಗಡಿಯಾರದ ಮುಳ್ಳಿನ ವಿರುದ್ಧ ದಿಕ್ಕುನಲ್ಲಿ ಚಲಿಸುವವು.

(ಈ) ಕೆನೆಡಾದ ಪೂರ್ವದ ದಂಡೆ ಪ್ರದೇಶದಲ್ಲಿಯ ಬಂದರುಗಳು ಚಳಿಗಾಲದಲ್ಲಿ ಏಕೆ ಹೆಪ್ಪುಗಟ್ಟುವವು?

ಉತ್ತರ: ಕೆನೆಡಾದ ಪೂರ್ವ ತೀರದ ಹತ್ತಿರ ಲ್ಯಾಂಬ್ರಾಡೋರ ಶೀತ ಪ್ರವಾಹಗಳು ಹರಿಯುತ್ತವೆ. ಇದರಿಂದಾಗಿ ಪೂರ್ವ ತೀರದಲ್ಲಿ ಸಾಗರಜಲದ ಉಷ್ಣತಮಾನದಲ್ಲಿ ಇಳಿಕೆಯಾಗುತ್ತದೆ. ಇದರಿಂದ ಸಾಗರದಲ್ಲಿಯ ನೀರು ಹೆಪ್ಪುಗಟ್ಟತೊಡಗುತ್ತದೆ. ಆದ್ದರಿಂದ ಕೆನೆಡಾದ ಪೂರ್ವದ ದಂಡೆ ಪ್ರದೇಶದಲ್ಲಿಯ ಬಂದರುಗಳು ಚಳಿಗಾಲದಲ್ಲಿ ಏಕೆ ಹೆಪ್ಪುಗಟ್ಟುವವು.

ಉಪಕ್ರಮ: ಸಾಗರ ಪ್ರವಾಹಕ್ಕೆ ಸಂಬಂಧಿಸಿದ ಭೌಗೋಲಿಕ ಮೋಜಿನ ಪ್ರಸಂಗಗಳನ್ನು ಇಂಟರನೆಟನ ಸಹಾಯದಿಂದ ಹುಡುಕಿರಿ.

***

 

6. ಭೂಮಿಯ ಬಳಕೆ

ಪ್ರ. 1. ಕೆಳಗಿನ ಹೇಳಿಕೆಗಳನ್ನು ಪರೀಕ್ಷಿಸಿರಿ, ಅಯೋಗ್ಯವಾದ ಹೇಳಿಕೆಯನ್ನು ಸರಿಪಡಿಸಿ ಬರೆಯಿರಿ.

(ಅ) ಗಣಿಗಾರಿಕೆಯು ಭೂಮಿಯ ಬಳಕೆಯ ಭಾಗವಾಗಿಲ್ಲ.            

ಉತ್ತರ:ಅಯೋಗ್ಯ, ಗಣಿಗಾರಿಕೆಯು ಭೂಮಿಯ ಬಳಕೆಯ ಭಾಗವೇ ಆಗಿದೆ.

(ಆ) ಕೇಂದ್ರದ ವ್ಯವಹಾರ ವಿಭಾಗದಲ್ಲಿ ಕಾರಖಾನೆಗಳಿರುವವು.

ಉತ್ತರ: ಅಯೋಗ್ಯ: ಕೇಂದ್ರೀಯ ವ್ಯವಹಾರ ವಿಭಾಗದಲ್ಲಿ ಅಂಗಡಿಗಳು, ಬ್ಯಾಂಕುಗಳು, ಕಾರ್ಯಾಲಯಗಳು ಇರುತ್ತವೆ.

(ಇ) ನಗರಗಳ ವಸತಿಯಲ್ಲಿ ಎಲ್ಲಕ್ಕಿಂತ ಹೆಚ್ಚು ಕ್ಷೇತ್ರ ನಿವಾಸದ ಕಾರ್ಯಕ್ಕಾಗಿ ಉಪಯೋಗಿಸಲ್ಪಡುವುದು.       

ಉತ್ತರ: ಯೋಗ್ಯ

 (ಈ) ಗ್ರಾಮ ಸೇವಕರು (7/12) ನಕಲನ್ನು ಕೊಡುವರು.      

ಉತ್ತರ: ಅಯೋಗ್ಯ: ತಲಾಟಿ ಅಥವಾ ಮಹಸೂಲ ಅಧಿಕಾರಿಗಳು ಜಾಗಿನ 7/12 ನಕಲನ್ನು ಕೊಡುವರು. 

(ಉ) ಗ್ರಾಮೀಣ ಪ್ರದೇಶಗಳಲ್ಲಿ ನಿವಾಸಿ ಕ್ಷೇತ್ರಕ್ಕೆ ಹೆಚ್ಚು ಭೂಮಿ ಇರುವುದು.

ಉತ್ತರ: ಅಯೋಗ್ಯ, ಗ್ರಾಮೀಣ ಪ್ರದೇಶಗಳಲ್ಲಿ ನಿವಾಸಿ ಕ್ಷೇತ್ರಕ್ಕೆ ಸೀಮಿತ ಭೂಮಿ ಇದ್ದು ಹೆಚ್ಚು ಭೂಮಿ ಬೇಸಾಯಕ್ಕೆ ಮೀಸಲಿರುತ್ತದೆ.

() ಕಲಮು ಕ್ರಮಾಂಕ 7 ಇದು ಅಧಿಕಾರ ಪತ್ರವಾಗಿದೆ. 

ಉತ್ತರ: ಯೋಗ್ಯ

(ಎ) ಕಲಮು ಕ್ರಮಾಂಕ 12 ಇದು ಪರಿಷ್ಕೃತ ಮಾಡಿದ ಪತ್ರವಾಗಿದೆ. 

ಉತ್ತರ: ಅಯೋಗ್ಯ, ಕಲಮು ಕ್ರಮಾಂಕ 12 ಇದು ಬೆಳೆಯ ನೋಂದಣಿ ಪತ್ರಕವಾಗಿದೆ.

ಪ್ರ. 2. ಭೌಗೋಳಿಕ ಕಾರಣಗಳನ್ನು ಬರೆಯಿರಿ.

() ನಗರದ ಭಾಗಗಳಲ್ಲಿ ಸಾರ್ವಜನಿಕ ಸೌಕರ್ಯಗಳ ಕ್ಷೇತ್ರ ಅತ್ಯವಶ್ಯಕವಾಗಿರುವುದು.

ಉತ್ತರ: ನಗರ ಭಾಗಗಳಲ್ಲಿ ದಟ್ಟ ಜನಸಂಖ್ಯೆ ಇದ್ದು ಭೂಮಿ ಸೀಮಿತವಾಗಿರುವುದು. ಆದುದರಿಂದ ಜನಸಂಖ್ಯೆಯ ವಿತರಣೆ ದಟ್ಟವಾಗಿರುವುದು. ಹೀಗೆ ದಟ್ಟವಾದ ಜನಸಂಖ್ಯೆಯ ಸೌಕರ್ಯಕ್ಕಾಗಿ ಅಲ್ಲಿ ಸ್ವರಾಜ್ಯ ಸಂಸ್ಥೆ, ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರ ಕೆಲಸ ಮಾಡುತ್ತವೆ. ಅದಕ್ಕಾಗಿ ದವಾಖಾನೆಗಳು, ಟಪಾಲ ಕಾರ್ಯಾಲಯ, ರೈಲು ಸ್ಥಾನಕ, ಬಸ್ ಸ್ಥಾನಕ, ಶಾಲೆಗಳು, ಮಹಾವಿದ್ಯಾಲಯಗಳು, ವಿದ್ಯಾಪೀಠಗಳು ಮುಂತಾದ ಕ್ಷೇತ್ರಗಳು ನಗರ ಭಾಗಗಳಲ್ಲಿ ಅತ್ಯಾವಶ್ಯಕವಾಗಿವೆ.

() ಕೃಷಿ ಭೂಮಿಯ೦ತೆ ಕೃಷಿ ಮಾಡದ ಭೂಮಿಯದೂ ನೋಂದಣಿ ಮಾಡಲಾಗುವುದು.

ಉತ್ತರ: ಕೃಷಿ ಭೂಮಿಯ ನೋಂದಣಿಯಂತೆ ಕೃಷಿ ಮಾಡದ ಭೂಮಿಯ ನೋಂದಣಿ ಕೂಡ ಸರಕಾರಿ ದಪ್ತರದಲ್ಲಿ ಮಾಡಲಾಗುತ್ತದೆ. ಒಡೆತನದ ಹಕ್ಕು ಹಾಗೂ ಕ್ಷೇತ್ರಫಲ ದರ್ಶಿಸುವ ನೋಂದಣಿ ನಗರ ಭೂಮಾಪನ ವಿಭಾಗದಲ್ಲಿ ದೊರೆಯುತ್ತದೆ. ಪ್ಲಾಟ್ ಕ್ರಮಾಂಕ, ಸಿಟಿ ಸರ್ವೇ ಕ್ರಮಾಂಕ, ತೆರಿಗೆಯ ಮಾಹಿತಿ, ಆದಾಯದ ಕ್ಷೇತ್ರಫಲ, ಇತರ ಹಕ್ಕುಗಳ ವಿವರಣೆ ಇತ್ಯಾದಿ ಮಾಹಿತಿಗಳು ಈ ದಸ್ತಾವೇಜಿನಲ್ಲಿ ಇರುತ್ತವೆ.

() ಭೂಮಿ ಬಳಕೆಗನುಸಾರವಾಗಿ ಪ್ರದೇಶಗಳನ್ನು ವಿಕಸಿತ ಹಾಗೂ ವಿಕಸನಶೀಲ ಎಂದು ವರ್ಗೀಕರಣ ಮಾಡಲಾಗುವುದು.

ಉತ್ತರ: ವಿವಿಧ ದೇಶಗಳಲ್ಲಿ ಭೂಮಿ ಉಪಯೋಜನೆಯ ಪ್ರಮಾಣವು ಬೇರೆ ಬೇರೆಯಾಗಿರುತ್ತವೆ. ಭೂಮಿಯ ಉಪಲಬ್ದತೆ, ದೇಶದ ಜನಸಂಖ್ಯೆ, ಅದರ ಗುಣಮಟ್ಟ ಹಾಗೂ ಅವಶ್ಯಕತೆಗಳು ಇತ್ಯಾದಿಗಳಿಗನುಸಾರವಾಗಿ ಭೂಮಿ ಉಪಯೋಜನೆಯ ಪ್ರಕಾರಗಳಲ್ಲಿ ವ್ಯತ್ಯಾಸಉಂಟಾಗುತ್ತದೆ. ಪ್ರದೇಶದಲ್ಲಿಯ ಭೂಮಿಯ ಬಳಕೆಯಂತೆ ವಿಕಾಸದ ಹಂತ ತಿಳಿದುಕೊಳ್ಳಲು ಬರುತ್ತದೆ. ಆದ್ದರಿಂದ ಭೂಮಿ ಬಳಕೆಗನುಸಾರವಾಗಿ ಪ್ರದೇಶಗಳನ್ನು ವಿಕಸಿತ ಹಾಗೂ ವಿಕಸನಶೀಲ ಎಂದು ವರ್ಗೀಕರಣ ಮಾಡಲಾಗುವುದು.

ಪ್ರ.3. ಉತ್ತರ ಬರೆಯಿರಿ.

(ಅ) ಗ್ರಾಮೀಣ ಭೂಮಿಯ ಬಳಕೆಯಲ್ಲಿ ಕೃಷಿ ಏಕೆ ಮಹತ್ವದ್ದಾಗಿದೆ?

ಉತ್ತರ: ಗ್ರಾಮೀಣ ಭಾಗಗಳಲ್ಲಿ ಕೃಷಿ ಇದು ಮುಖ್ಯ ಕಸಬು ಆಗಿದೆ. ಕೃಷಿ ಪೂರಕ ಕಸಬುಗಳೂ ಈ ಭಾಗಗಳಲ್ಲಿ ಕಂಡು ಬರುತ್ತವೆ. ಅವುಗಳ ಪರಿಣಾಮ ಗ್ರಾಮೀಣ ವಸತಿಯ ಮೇಲೆ ಆದದ್ದು ಕಂಡು ಬರುತ್ತದೆ. ಆದ್ದರಿಂದ ವಸತಿಗಳು ಕೃಷಿ ಕ್ಷೇತ್ರದ ಸಮೀಪಕ್ಕೆ, ಅರಣ್ಯಗಳ ಕ್ಷೇತ್ರದ ಸಮೀಪ ಕಂಡು ಬರುತ್ತವೆ. ಗ್ರಾಮೀಣ ಭಾಗಗಳಲ್ಲಿ ಭೂಮಿಯ ಉಪಲಬ್ದತೆ ಹೆಚ್ಚು ಮತ್ತು ಜನಸಂಖ್ಯೆ ವಿರಳವಾಗಿರುವುದರಿಂದ ಗ್ರಾಮೀಣ ಭೂಮಿಯ ಬಳಕೆಯಲ್ಲಿ ಕೃಷಿ ಮಹತ್ವದ್ದಾಗಿದೆ.

(ಆ) ಭೂಮಿಯ ಬಳಕೆಯ ಮೇಲೆ ಪರಿಣಾಮ ಬೀರುವ ಘಟಕಗಳನ್ನು ಹೇಳಿರಿ.

ಉತ್ತರ: ಹವಾಮಾನ, ಮಣ್ಣು, ಇಳಿಜಾರಿನ ಸ್ವರೂಪ, ನೀರಾವರಿಯ ಸೌಕರ್ಯಗಳು, ನೈಸರ್ಗಿಕ ಸಾಧನ ಸಂಪನ್ಮೂಲಗಳು ಮತ್ತು ಸರಕಾರಿ ಧೋರಣೆಗಳು ಇವು ಗ್ರಾಮೀಣ ಭೂಮಿಯ ಬಳಕೆಯ ಮೇಲೆ ಪರಿಣಾಮ ಬೀರುವ ಘಟಕಗಳಾಗಿವೆ.

       ಭೂಕ್ಷೇತ್ರದ ಸ್ಥಾನ, ನೈಸರ್ಗಿಕ ಸಾಧನ ಸಂಪತ್ತು, ಗೃಹ ನಿರ್ಮಾಣಗಳ ಧೋರಣೆ, ಸಾರಿಗೆಯ ಮಾರ್ಗ, ಔದ್ಯೋಗಿಕರಣ, ವ್ಯಾಪಾರ, ಕ್ರೀಡಾಂಗಣ ಹಾಗೂ ಮನರಂಜನೆಯ ಸೌಲಭ್ಯಗಳು ಮತ್ತು ಸರಕಾರಿ ಧೋರಣೆಗಳು ಇವು ನಗರ ಭೂಮಿಯ ಬಳಕೆಯ ಮೇಲೆ ಪರಿಣಾಮ ಬೀರುವ ಘಟಕಗಳಾಗಿವೆ.

() ಗ್ರಾಮೀಣ ಹಾಗೂ ನಗರಗಳ ಭೂಮಿಯ ಬಳಕೆಯ ವ್ಯತ್ಯಾಸವನ್ನು ಸ್ಪಷ್ಟಪಡಿಸಿರಿ.

ಉತ್ತರ: ಗ್ರಾಮೀಣ ಭಾಗದಲ್ಲಿ ಭೂಮಿಯ ಉಪಲಬ್ದತೆ ಹೆಚ್ಚು ಮತ್ತು ಜನಸಂಖ್ಯೆ ಕಡಿಮೆ ಇರುತ್ತದೆ ಆದರೆ ನಗರಗಳಲ್ಲಿ ಭೂಮಿಯ ಉಪಲಬ್ದತೆ ಕಡಿಮೆ ಮತ್ತು ಜನಸಂಕ್ಯೇ ಹೆಚ್ಚುಗೆ ಇರುತ್ತದೆ. ಗ್ರಾಮೀಣ ಭೂಮಿಯ ಉಪಾಯಯೋಜನೆ ವರ್ಗೀಕರಣ=ಹೊಲಕ್ಕಾಗಿ, ಬೀಳು ಭೂಮಿ, ವನ ಭೂಮಿ, ತೋಟಗಾರಿಕ್ರ್ಯ ಭೂಮಿ.

ನಹರದಲ್ಲಿಯ ಭೂಮಿಯ ಉಪಾಯಯೋಜನೆ- ವ್ಯವಸಾಯಿಕ ಕ್ಷೇತ್ರ, ನಿವಾಸಿ ಕ್ಷೇತ್ರ, ಸಾರಿಗೆಯ ಸೌಲತ್ತುಗಳ ಕ್ಷೇತ್ರ, ಸಾರ್ವಜನಿಕ ಸೇವೆಗಳ ಕ್ಷೇತ್ರ, ಮನರಂಜನೆಯ ಕ್ಷೇತ್ರ, ಮಿಶ್ರ ಭೂಮಿ ಉಪಾಯಯೋಜನ. 

(ಈ) ಸಾಬಾರಾ ನಕಲು ಹಾಗೂ ಆದಾಯ ಪತ್ರಿಕೆಯಲ್ಲಿಯ ಭೇದವನ್ನು ಸ್ಪಷ್ಟಪಡಿಸಿರಿ.

ಉತ್ತರ: ಸಾಬಾರಾ ನಕಲು ಮಹಸೂಲ ಖಾತೆಯಲ್ಲಿ ನೋಂದಣಿ ಮಾಡಲಾಗುತ್ತದೆ ಆದರೆ ಆದಾಯ ಪತ್ರಿಕೆಯ ಮೇಲೆ ನಗರ ಭೂಮಾಪನ ವಿಭಾಗದಿಂದ ದೊರೆಯುತ್ತದೆ.

ಉಪಕ್ರಮ:

() ನಿಮ್ಮ ಊರಿ ಸಮೀಪದ ಪಟ್ಟಣದ ಬಗೆಗೆ ಕೆಳಗಿನ ಅಂಶಗಳ ಸಂದರ್ಭದಿಂದ ಮಾಹಿತಿ ಪಡೆದು ವರ್ಗದಲ್ಲಿ ಸಾದರ ಪಡಿಸಿರಿ. (ಸ್ಥಾ, ಸ್ಥಿತಿ, ವಿಕಾಸ, ಭೂಮಿಯ ಬಳಕೆಯ ರೂಪರೇಖೆ, ಕಾರ್ಯ)

·       ಈ ನಿಮ್ಮ ವಸತಿಯ ವರ್ಗಿಕರಣವನ್ನು ನಗರದ ಹಾಗೂ ಗ್ರಾಮೀಣ ಎಂದು ಮಾಡಿರಿ.

·       ನಿಮ್ಮ ವತಿಯ ಕೇಂದ್ರ ಸ್ಥಾನದಿಂದ ಪರೀದತ್ತಲಿನ ಭೂಮಿಯ ಬಳಕೆಯ ಬಗೆಗೆ ಹಿರಿಯರೊಂದಿಗೆ ಚರ್ಚಿಸಿ ನೋಂದಾಯಿಸಿರಿ. ಅದರ ಆಕೃತಿ ಬಂಧ ತಯಾರಿಸಿರಿ.

(ಆ) ನಿಮ್ಮ ಮನೆಯ 7/12 ಇಲ್ಲವೇ ದಾಯ ಪತ್ರವನ್ನು ಓದಿ ಟಿಪ್ಪಣಿ ಬರೆಯಿರಿ


 

7.ಜನಸಂಖ್ಯೆ

ಪ್ರಶ್ನೆ 1. ಕೆಳಗಿನ ವಾಕ್ಯಗಳನ್ನು ಪೂರ್ಣಗೊಳಿಸಿರಿ.

(ಅ) ಜನನ ಪ್ರಮಾಣವು ಮರಣ ಪ್ರಮಾಣಕ್ಕಿಂತ ಹೆಚ್ಚು ಇದ್ದರೆ ಜನಸಂಖ್ಯೆ .............

(i) ಕಡಿಮೆ ಆಗುವುದು (ii) ಹೆಚ್ಚುವುದು      (iii) ಸ್ಥಿರವಾಗಿರುವುದು      (iv) ಅಧಿಕ ಆಗುವುದು

() .............  ವಯಸ್ಸಿನ ಗುಂಪಿನಲ್ಲಿಯ ಜನರ ಸಮಾವೇಶ ಕಾರ್ಯರತ ಜನಸಂಖ್ಯೆಯಲ್ಲಿ ಆಗುವುದು.

(i) 0 ದಿಂದ 14        (ii) 14 ರಿಂದ 60   (iii) 15 ರಿಂದ 60 (iv) 15 ರಿಂದ 59

(ಇ) ಸಮಾಜನದಲ್ಲಿ ಆಧುನಿಕ ತಂತ್ರಜ್ಞಾನದ ಪ್ರಸಾರ ........... ಘಟಕಗಳ ಮೇಲೆ ಹೆಚ್ಚು ಅವಲಂಬಿಸಿರುವುದು.

(i)  ಲಿಂಗ ಗುಣೋತ್ತರ        (ii)   ಜನನ ಪ್ರಮಾಣ        (iii) ಸಾಕ್ಷರತೆ  (iv) ಸ್ಥಳಾಂತರ

ಪ್ರಶ್ನೆ2. ಕೆಳಗಿನ ವಿಧಾನಗಳನ್ನು ಪರೀಕ್ಷಿಸಿ, ಅಯೋಗ್ಯವಾದವುಗಳನ್ನು ಸರಿಪಡಿಸಿರಿ.  

(ಅ) ಪ್ರದೇಶದ ಕ್ಷೇತ್ರಫಲದಿಂದ ಜನಸಂಖ್ಯೆಯ ಸಾಂದ್ರತೆ ಗೊತ್ತಾಗುವುದು.

ಉತ್ತರ: ಯೋಗ್ಯ, ಜನಸಂಖ್ಯೆಯ ಸಾಂದ್ರತೆಯು ಪ್ರದೇಶದ ಜನಸಂಖ್ಯೆ ಹಾಗೂ ಆ ಪ್ರದೇಶದ ಕ್ಷೇತ್ರಫಲದ ಗುಣೋತ್ತರದಿಂದ ಗೊತ್ತಾಗುವುದು.

(ಆ) ಸಾಕ್ಷರತೆಯು ಒಂದು ಪ್ರದೇಶದ ಗುಣವತ್ತತೆಯನ್ನು ನಿರ್ಧರಿಸುವುದು.

ಉತ್ತರ: ಯೋಗ್ಯ.  

(ಇ) ಒಂದು ಪ್ರದೇಶದ ಹೆಚ್ಚು ಆರ್ಥಿಕ ಏಳಿಗೆ ಎಂದರೆನೇ ವಿಕಾಸ.

ಉತ್ತರ: ಅಯೋಗ್ಯ. ಕೇವಲ ಆರ್ಥಿಕ ವಿಕಾಸ ಎಂದರೆ ಪ್ರದೇಶದ ವಿಕಸವಾಗುವುದಿಲ್ಲ. ಪ್ರದೇಶದ ವಿಕಸವು ಜನರ ಬದುಕು, ಆರೋಗ್ಯ, ಅಲ್ಲಿ ದೊರೆಯುವ ಅವಕಾಶ ಹಾಗೂ ಸ್ವಾತಂತ್ರ್ಯ ಇವುಗಳ ಮೇಲೆ ಅವಲಂಬಿಸಿರಿತ್ತದೆ.

(ಈ) ವಿಕಸನಶೀಲ ದೇಶದ ಮಾನವ ವಿಕಾಸ ನಿರ್ದೇಶಾಂಕವು ಒಂದು ಇರುವುದು.

ಉತ್ತರ: ಸರಿ.  

(ಉ) ಯಾವ ಪ್ರದೇಶದಿಂದ ಜನಸಂಖ್ಯೆಯ ಸ್ಥಳಾಂತರ ಆಗುತ್ತದೆಯೋ ಆ ಪ್ರದೇಶದಲ್ಲಿಯ ಮನುಷ್ಯಬಲದ ಮೇಲೆ ವಿಪರೀತ ಪರಿಣಾಮವಾಗುತ್ತದೆ.

ಉತ್ತರ: ಯೋಗ್ಯ

ಪ್ರಶ್ನೆ3. ಸಲ್ಪದರಲ್ಲಿ ಉತ್ತರ ಬರೆಯಿರಿ.

(ಅ) ಜನಸಂಖ್ಯೆಯ ರಚನೆಯ ಅಭ್ಯಾಸ ಮಾಡುವಾಗ ಯಾವ ವಿಷಯಗಳನ್ನು ವಿಚಾರದಲ್ಲಿ ತೆಗೆದುಕೊಳ್ಳಲಾಗುವುದು?

ಉತ್ತರ: . ಲಿಂಗ ಗುಣೋತ್ತರ ರಚನೆ: ಲಿಂಗ ಗುಣೋತ್ತರ ರಚನೆಯು ಲಿಂಗದ ಆಧಾರದ ಮೇಲೆ ಜನಸಂಖ್ಯೆಯ ಉಪ ವಿಭಾಗವನ್ನು ಪರಿಗಣಿಸುವ ರಚನೆಯಾಗಿದೆ.

2. ವಯಸ್ಸಿನ ರಚನೆ: ವಯಸ್ಸಿನ ರಚನೆಯು ಕಾರ್ಯನಿರತ ಜನರ ಗುಂಪು ಹಾಗೂ ಅವಲಂಬಿತರ ಗುಂಪು ಎಂದು ಜನಸಂಖ್ಯೆಯ ಉಪ ವಿಭಾಗವನ್ನು ಅಭ್ಯಾಸ ಮಾಡುವ ರಚನೆಯಾಗಿದೆ.

3. ಔದ್ಯೋಗಿಕ ರಚನೆ: ಔದ್ಯೋಗಿಕ ರಚನೆಯು ಅವಲಂಬನೆ ಮತ್ತು ಕಾರ್ಯಸಾಧ್ಯತೆಯ ಆಧಾರದ ಮೇಲೆ ಜನಸಂಖ್ಯೆಯ ಉಪ ವಿಭಾಗವನ್ನು ಪರಿಗಣಿಸುವ ರಚನೆಯಾಗಿದೆ.

4. ಗ್ರಾಮೀಣ - ನಗರ ರಚನೆ: ಗ್ರಾಮೀಣ - ನಗರ ರಚನೆಯು ವಾಸಿಸುವ ಪ್ರದೇಶದ ಆಧಾರದ ಮೇಲೆ ಜನಸಂಖ್ಯೆಯ ಅಭ್ಯಾಸ ಮಾಡಬಹುದಾಗಿದೆ.

5. ಸಾಕ್ಷರತೆಯ ರಚನೆ: ಓದುವ ಮತ್ತು ಬರೆಯುವ ಸಾಮರ್ಥ್ಯದ ಆಧಾರದ ಮೇಲೆ ಜನಸಂಖ್ಯೆಯ ಉಪ ವಿಭಾಗವನ್ನು ಪರಿಗಣಿಸುವ ರಚನೆಯು ಸಾಕ್ಷರತೆ ರಚನೆಯಾಗಿದೆ.

(ಆ) ಜನಸಂಖ್ಯೆಯ ವಿತರಣೆಯ ಮೇಲೆ ಪರಿಣಾಮ ಬೀರುವ ಅನುಕೂಲ ಹಾಗೂ ಪ್ರತಿಕೂಲಕರವಾದ ಘಟಕಗಳ ಪಟ್ಟಿ ಮಾಡಿರಿ.

ಉತ್ತರ: ಜನಸಂಖ್ಯೆಯ ವಿತರಣೆಯ ಮೇಲೆ ಪರಿಣಾಮ ಬೀರುವ ಅನುಕೂಲ ಘಟಕಗಳ ಪಟ್ಟಿ ಹೀಗಿದೆ:

1. ಸಾಕಷ್ಟು ಸೂರ್ಯನ ಬೆಳಕು, ಶುದ್ಧ ಗಾಳಿ ಮತ್ತು ನೀರಿನ ಲಭ್ಯತೆ.

2. ಕಡಿಮೆ ಎತ್ತರವಿರುವ ಪ್ರದೇಶ

3. ಸಾಧಾರಣ ಮಳೆ ಮತ್ತು ತಾಪಮಾನ

4. ಫಲವತ್ತಾದ ಮಣ್ಣು

5. ಖನಿಜಗಳ ನಿಕ್ಷೇಪಗಳು

6. ಕೈಗಾರಿಕೀಕರಣ

7. ನಗರೀಕರಣ

8. ಸಾರಿಗೆ ಸೌಲಭ್ಯಗಳ ಲಭ್ಯತೆ

9. ಮಾರುಕಟ್ಟೆಯ ಲಭ್ಯತೆ

10. ರಾಜಕೀಯ ಸ್ಥಿರತೆ

11. ಅಂತರಾಷ್ಟ್ರೀಯ ಶಾಂತಿ

12. ಅನುಕೂಲಕರ ಸರ್ಕಾರದ ಧೋರಣೆಗಳು

13. ಅನುಕೂಲಕರ ಸಾಮಾಜಿಕ ಪದ್ಧತಿಗಳು ಮತ್ತು ಸಂಪ್ರದಾಯಗಳು.

ಜನಸಂಖ್ಯೆಯ ವಿತರಣೆಯ ಮೇಲೆ ಪರಿಣಾಮ ಬೀರುವ ಅನಾನುಕೂಲಕರ ಅಂಶಗಳ ಪಟ್ಟಿ ಹೀಗಿದೆ:

1. ಸಾಕಷ್ಟು ಸೂರ್ಯನ ಬೆಳಕು, ಶುದ್ಧ ಗಾಳಿ ಮತ್ತು ನೀರಿನ ಕೊರತೆ.

2. ಎತ್ತರದ ಪ್ರದೇಶ

3. ಅತ್ಯಂತ ಕಡಿಮೆ ಅಥವಾ ಹೆಚ್ಚು ಮಳೆ ಮತ್ತು ತಾಪಮಾನ

4. ಫಲವತ್ತಾದ ಮಣ್ಣು ಇಲ್ಲದಿರುವುದು.

5. ಖನಿಜಗಳ ಕೊರತೆ

6. ಕಡಿಮೆ ಕೈಗಾರಿಕೀಕರಣ

7. ನಗರೀಕರಣದ ಕೊರತೆ

8. ಸಾರಿಗೆ ಸೌಲಭ್ಯಗಳ ಅಲಭ್ಯತೆ

9. ಮಾರುಕಟ್ಟೆಯ ಅಲಭ್ಯತೆ

10. ರಾಜಕೀಯ ಅಸ್ಥಿರತೆ

11. ಅಂತಾರಾಷ್ಟ್ರೀಯ ವಿವಾದಗಳು

12. ಪ್ರತಿಕೂಲವಾದ ಸರ್ಕಾರದ ಧೋರಣೆಗಳು

13. ದುಷ್ಟ ಸಾಮಾಜಿಕ ಪದ್ಧತಿಗಳು ಮತ್ತು ಸಂಪ್ರದಾಯಗಳು

(ಇ) ಜನಸಂಖ್ಯೆಯ ಸಾಂದ್ರತೆ ಅಧಿಕವಾಗಿದ್ದ ಪ್ರದೇಶಗಳಲ್ಲಿ ಯಾವ ಸಮಸ್ಯೆಗಳಿರಬಹುದು ?

ಉತ್ತರ: ಒಂದು ದೇಶದ ಜನಸಂಖ್ಯೆ ಹಾಗೂ ಆ ಪ್ರದೇಶದ ಕ್ಷೇತ್ರಫಲ ಇವುಗಳ ಗುಣೋತ್ತರದಿಂದ ನಮಗೆ ಜನಸಂಖ್ಯಾ ಸಾಂದ್ರತೆ ತೆಗೆಯಲು ಬರುತ್ತದೆ. ಜನಸಂಖ್ಯೆಯ ವಿತರಣೆಯನ್ನು ಚರ್ಚಿಸುವಾಗ, ಜನಸಂಖ್ಯೆಯ ಸಾಂದ್ರತೆಯನ್ನು ಸಹ ಪರಿಗಣಿಸಲಾಗುತ್ತದೆ. 1. ಮಾಲಿನ್ಯ - ಹೆಚ್ಚಿನ ಜನಸಾಂದ್ರತೆಯಿಂದಾಗಿ ಜನರು ಎದುರಿಸುವ ಪ್ರಮುಖ ಕಾರಣಗಳಲ್ಲಿ ಮಾಲಿನ್ಯವೂ ಒಂದು. ಮನೆ ಮತ್ತು ಫ್ಲಾಟ್‌ಗಳನ್ನು ನಿರ್ಮಿಸುವ ಮೂಲಕ ಭೂಮಿಯ ಅವನತಿ ಹೆಚ್ಚಾಗುವುದರಿಂದ, ಭೂಮಾಲಿನ್ಯ ಉಂಟಾಗುತ್ತದೆ, ಅಪಾರ ಸಂಖ್ಯೆಯ ಜನರಿಂದ ನೀರು ಕಲುಷಿತಗೊಳ್ಳುತ್ತದೆ, ಇದರ ಪರಿಣಾಮವಾಗಿ ಜಲಮಾಲಿನ್ಯ ಮತ್ತು ಅಪಾರ ಸಂಖ್ಯೆಯ ವಾಹನಗಳು ವಾಯುಮಾಲಿನ್ಯಕ್ಕೆ ಕಾರಣವಾಗುತ್ತವೆ.

(ಈ) ಲಿಂಗ ಗುಣೋತ್ತರ ಕಡಿಮೆ ಇದ್ದ ಪ್ರದೇಶಗಳಲ್ಲಿ ಯಾವ ಸಮಸ್ಯೆಗಳು ತಲೆದೋರುವವು ?

ಉತ್ತರ: ಯಾವ ಪ್ರದೇಶದಲ್ಲಿ ಸ್ತ್ರೀಯರ ಪ್ರಮಾಣ ಹೆಚ್ಚು ಹಾಗೂ ಪುರುಷರ ಪ್ರಮಾಣ ಕಡಿಮೆ ಇರುತ್ತದೆ ಅಥವಾ ಪುರುಷರ ಪ್ರಮಾಣ ಹೆಚ್ಚು ಹಾಗೂ ಸ್ತ್ರೀಯರ ಪ್ರಮಾಣ ಕಡಿಮೆ ಇರುತ್ತದೆ ಅಂತಹ ಪ್ರದೇಶಗಳಲ್ಲಿ ವೇಶ್ಯಾವ್ಯವಸಾಯಕ್ಕೆ ಚಾಲನೆ ದೊರೆಯುತ್ತದೆ. ಮದುವೆಗಾಗಿ ವಧು-ವರ ಸಿಗುವುದು ಕಠಿಣವಾಗುತ್ತದೆ. ಉದಾ. ಗುಜರಾತ, ರಾಜಸ್ಥಾನ, ಹರಿಯಾಣ ಗಳಂತಹ ರಾಜ್ಯಗಳಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇರುವುದರಿಂದ ಮದುವೆಯ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕಾಗಿ ಯಾವ ರಾಜ್ಯದಲ್ಲಿ ಹುಡುಗಿಯರ ಪ್ರಮಾಣ ಹೆಚ್ಚು ಇದೆ ಅಂತ ಸ್ಥಳದಿಂದ ಹುಡುಗಿಯರ ಅಪಹರಣ ಮಾಡುವ ದುಸ್ಕೃತ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ಸಾಮಾಜಿಕ ಸಮಸ್ಯೆಗಳು ನಿರ್ಮಾಣವಾಗುತ್ತವೆ. 


೮ ನೇ ಪಾಠ ಉದ್ದಿಮೆ

ಪ್ರಶ್ನೆ 1. ಸರಿಯಾದ ವಾಕ್ಯದ ಎದುರಿನ ಚೌಕಟ್ಟಿನಲ್ಲಿ ಸರಿ ಚಿನ್ಹೆ ಗುರುತು ಮಾಡಿರಿ.

 (ಅ) ಕೆಳಗಿನವುಗಳಲ್ಲಿ ಯಾವ ಘಟಕ ಔದ್ಯೋಗಿಕ ವಿಕಾಸದ ಮೇಲೆ ಪ್ರತ್ಯಕ್ಷ ಪರಿಣಾಮ ಬೀರುವುದಿಲ್ಲ?

        ) ನೀರು       ) ವಿದ್ಯುತ್ತು    ಇ) ಕೂಲಿಕಾರರು      ಈ) ಹವೆ

 ಉತ್ತರ:  (ಈ) ಹವೆ

() ಕೆಳಗಿನವುಗಳಲ್ಲಿ ಯಾವ ಉದ್ದಿಮೆ ಲಘು ಉದ್ದಿಮೆಯಾಗಿದೆ ?

() ಯಂತ್ರ ಸಾಮಗ್ರಿಯ ಉದ್ದಿಮೆ

(ಆ) ಪುಸ್ತಕಗಳನ್ನು ಕಟ್ಟುವ ಉದ್ದಿಮೆ

(ಇ) ರೇಶಿಮೆಯ ಉದ್ದಿಮೆ

(ಈ) ಸಕ್ಕರೆ ಉದ್ದಿಮೆ

 ಉತ್ತರ: (ಆ) ಪುಸ್ತಕಗಳನ್ನು ಕಟ್ಟುವ ಉದ್ದಿಮೆ

() ಕೆಳಗಿನ ಯಾವ ಪಟ್ಟಣದಲ್ಲಿ ಮಾಹಿತಿ ತಂತ್ರಜ್ಞಾನದ ಕೇಂದ್ರ ಇಲ್ಲ?

(ಅ) ಹಳೆಯ ದಿಲ್ಲಿ

(ಆ) ಹೊಸ ದಿಲ್ಲಿ

() ನೋಎಡಾ

(ಈ) ಬೆಂಗಳೂರು

 ಉತ್ತರ: ಹಳೆಯ ದಿಲ್ಲಿ

() ಉದ್ದಿಮೆಗಳಿಗೆ ಲಾಭದಲ್ಲಿಯ ಎರಡು ಪ್ರತಿಶತ ಮೊತ್ತವನ್ನು ಏತ್ತಕ್ಕಾಗಿ ಉಪಯೋಗಿಸುವುದು ಅನಿವಾರ್ಯವಾಗಿದೆ ?

(ಅ) ಆದಾಯಕರ

(ಆ) ಉದ್ದಿಮೆಗಳ ಸಾಮಾಜಿಕ ಹೊಣೆಗಾರಿಕೆ

(ಇ) ವಸ್ತು ಹಾಗೂ ಸೇವಾ ಕರ

(ಈ) ಮಾರಾಟದ ಕರ

ಉತ್ತರ: (ಆ) ಉದ್ದಿಮೆಗಳ ಸಾಮಾಜಿಕ ಹೊಣೆಗಾರಿಕೆ

ಪ್ರಶ್ನೆ. 2.  ಕೆಳಗಿನ ವಿಧಾನಗಳು ಸತ್ಯವೋ ಅಸತ್ಯವೋ ಎಂಬುದನ್ನು ಬರೆಯಿರಿ. ಅಗತ್ಯ ವಿಧಾನಗಳನ್ನು ಸರಿಪಡಿಸಿರಿ.

() ದೇಶದಲ್ಲಿಯ ಲಘು ಹಾಗೂ ಮಧ್ಯಮ ಉದ್ದಿಮೆಗಳು ಬೃಹತ್ ಉದ್ದಿಮೆಗಳ ಮೇಲೆ ಗಂಡಾಂತರವನ್ನೊಡ್ಡುವವು.

ಉತ್ತರ: ತಪ್ಪು, ದೇಶದಲ್ಲಿಯ ಲಘು ಹಾಗೂ ಮಧ್ಯಮ ಉದ್ದಿಮೆಗಳು ಬೃಹತ್ ಉದ್ದಿಮೆಗಳಿಗೆ ಪೂರಕವಾಗುತ್ತವೆ.

() ದೇಶದಲ್ಲಿಯ ಕೈಗಾರಿಕೋದ್ಯಮಗಳು ದೇಶದ ಆರ್ಥಿಕ ವಿಕಾಸದ ನಿರ್ದೇಶಕಗಳಾಗಿವೆ.

ಉತ್ತರ: ಸರಿ

 ) ಔದ್ಯೋಗಿಕ ವಿಕಾಸ ನಿಗಮದ ಸ್ಥಾಪನೆಯ ಉದ್ದೇಶವು ಉದ್ದಿಮೆ ವ್ಯವಸಾಯಗಳ ವಿಕೇಂದ್ರಿಕರಣೆ ಮಾಡುವುದಾಗಿದೆ.

ಉತ್ತರ: ಸರಿ

 ) ಉದ್ದಿಮೆಗಳ ಸಾಮಾಜಿಕ ಹೊಣೆಗಾರಿಕೆಯು ಪ್ರತಿಯೊಂದು ಉದ್ದಿಮೆ ವ್ಯವಸಾಯಗಳಿಗೆ ಅನಿವಾರ್ಯವಾಗಿದೆ.

ಉತ್ತರ: ತಪ್ಪು, ಉದ್ದಿಮೆಗಳ ಸಾಮಾಜಿಕ ಹೊಣೆಗಾರಿಕೆಯು ಪ್ರತಿಯೊಂದು ಉದ್ದಿಮೆ ವ್ಯವಸಾಯಗಳಿಗೆ ಅನಿವಾರ್ಯವಿಲ್ಲ.

 ಶ್ನೆ 3. ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ಸಾಲುಗಳಲ್ಲಿ ಉತ್ತರ ಬರೆಯಿರಿ.

() ಔದ್ಯೋಗಿಕ ಕ್ಷೇತ್ರಕ್ಕಾಗಿ ಸರಕಾರವು ಯಾವ ಸೌಲಭ್ಯಗಳನ್ನು ನೀಡುವುದು ?

ಉತ್ತರ: ಔದ್ಯೋಗೋಕ ಕ್ಷೇತ್ರಕ್ಕಾಗಿ ಸರಕಾರವು ಉದ್ದಿಮೆಗಳಿಗೆ ವಿದ್ಯುತ್ತು, ನೀರು ಹಾಗೂ ಕರಗಳ ಮೇಲೆ ವಿಶೇಷ ಸವಲತ್ತುಗಳನ್ನು ನೀಡಲಾಗುವುದು. ಔದ್ಯೋಗೋಕ ಕ್ಷೇತ್ರಕ್ಕಾಗಿ ಸರಕಾರವು ಉದ್ದಿಮೆಗಳಿಗೆ ಕಡಿಮೆ ದರದಲ್ಲಿ ಸಾಲ ಕೊಡಲಾಗುತ್ತದೆ.

() ಔದ್ಯೋಗಿಕ ವಿಕಾಸವು ರಾಷ್ಟ್ರೀಯ ವಿಕಾಸದ ಮೇಲೆ ಹೀಗೆ ಪರಿಣಾಮ ಬೀರುವುದು ಎಂಬುದನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

ಉತ್ತರ: ಯಾವುದೇ ದೇಶದ ಆರ್ಥಿಕ ವಿಕಸದಲ್ಲಿ ಔದ್ಯೋಗಿಕ ವಿಕಾಸವು ಮಹತ್ವದ ಪರಿಣಾಮ ಬಿರುತ್ತದೆ.

ದೇಶದ ನಾಗರೀಕರಿಗೆ ಕೆಲಸ ಸಿಗುವುದು ಅವರ  ಜೀವನಮಟ್ಟ ಬೆಳೆಯುವುದು. ರಾಷ್ಟ್ರೀಯ ಸ್ಥೂಲ ಉತ್ಪನ್ನ ಬೆಳೆಯುವುದು. ದೇಶದ ಪಕ್ಕಾ ಸರಕು ನಿರ್ಯಾತವಾಗಿ ಪರಕೀಯ ಚಲನದ ಮೀಸಲು ನಿಧಿಯಲ್ಲಿ ಹೆಚ್ಚಳವಾಗುವುದು. 

() ಉದ್ದಿಮೆಗಳ ಸಾಮಾಜಿಕ ಹೊಣೆಗಾರಿಕೆಯ ಉಪಯುಕ್ತತೆಯ ಬಗೆಗೆ ನಿಮ್ಮ ಅಭಿಪ್ರಾಯವನ್ನು ಸ್ವಲ್ಪದರಲ್ಲಿ ವ್ಯಕ್ತಪಡಿಸಿರಿ.

ಉತ್ತರ: ಉದ್ದಿಮೆದಾರ ವ್ಯಕ್ತಿ ಇಲ್ಲವೇ ಉದ್ದಿಮೆ ಸಮೂಹಗಳು ಸಮಜಾಹಿತಕ್ಕಾಗಿ ಮತ್ತು ಪರ್ಯವರಣದ ಸಮತೋಲನಕ್ಕಾಗಿ ಮಾಡಿದ ಕೃತಿಯೇ ಉದ್ದಿಮೆಗಳ ಸಾಮಾಜಿಕ ಹೊಣೆಗಾರಿಕೆ ಹೌದು.  ಅಂದರೆ ಉದ್ಯೋಗ ಸಮೂಹಗಳು ತಮ್ಮ ಲಾಭದಲ್ಲಿ ಶೇ.2% ಮೊತ್ತವನ್ನು ಸಮಾಜದಲ್ಲಿಯ ಅಸಹಾಯಕ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಸಹಾಯ ಮಾಡಿ ಸಮಾಜ ಹಿತದ ಕೆಲಸ ಮಾಡುತ್ತವೆ.

ಉದಾ: ಶಿಕ್ಷಣಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸಿವುದು.

        ಆರೋಗ್ಯಕ್ಕೆ ಸಂಬಂಧಿಸಿದ ಸೌಕರ್ಯಗಳನ್ನು ಒದಗಿಸುವುದು.

        ಊರು ಅಥವಾ ವಿಭಾಗದ ವಿಕಾಸ ಮಾಡುವುದು.

        ನಿರಾಧಾರ ವ್ಯಕ್ತಿಗಳಿಗಾಗಿ ನಡೆಸುವ ಕೇಂದ್ರ, ಪರ್ಯವರಣದ ವಿಕಾಸದ ಆಧಾರ ಕೇಂದ್ರ ಮುಂತಾದವುಗಳಿಗೆ ಸಹಾಯ ಮಾಡುವುದು.

        ಉದ್ದಿಮೆಗಳ ಸಾಮಾಜಿಕ ಋಣದ ಕೆಲಸಕ್ಕಾಗಿ ಮಾಡಿದ ಖರ್ಚಿನ ಮೇಲೆ ಉದ್ದಿಮೆಗಳಿಗೆ ಸರಕಾರದಿಂದ ಕರ ಸವಲತ್ತು ಸಿಗುವುದು.

(ಈ) ಲಘು ಉದ್ದಿಮೆಗಳ ಮೂರು ವೈಶಿಷ್ಟೆಗಳನ್ನು ಹೇಳಿರಿ.

ಉತ್ತರ: ಲಘು ಉದ್ದಿಮೆಗಳ ಮೂರು ವೈಶಿಷ್ಟೆಗಳು:1)   ಅತ್ಯಲ್ಪ ಬಂಡವಾಳ: ಲಘು ಉದ್ಯೋಗಗಳು ಕಡಿಮೆ ಪ್ರಮಾಣದ ಬಂಡವಾಳದಲ್ಲೂ ಆರಂಭಿಸಲಾಗುತ್ತದೆ.

2)   ಕಡಿಮೆ ಕೂಲಿಕಾರರ ಸಂಖ್ಯೆ: ಲಘು ಉದ್ಯೋಗಗಳಲ್ಲಿ ಕೂಲಿಕಾರರ ಸಂಖ್ಯೆ ಕಡಿಮೆ ಇರುತ್ತದೆ.

3)   ಸಾದಾ ನಿರ್ಮಿತಿ ಪ್ರಕ್ರಿಯೆ: ಲಘು ಉದ್ಯೋಗಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಯಂತ್ರಗಳ ಬಳಕೆ ಮಾಡಲಾಗುತ್ತದೆ. 

ಪ್ರಶ್ನೆ 4. ಕೆಳಗಿನ ಪ್ರಶ್ನೆಗಳಿಗೆ ಸವಿಸ್ತಾರವಾದ ಉತ್ತರ ಬರೆಯಿರಿ.

 (ಅ) ಔದ್ಯೋಗಿಕ ವಿಕಾಸದ ಮೇಲೆ ಪರಿಣಾಮ ಬೀರುವ ಘಟಕಗಳನ್ನು ಸ್ಪಷ್ಟಪಡಿಸಿರಿ.

ಉತ್ತರ: ಔದ್ಯೋಗಿಕ ವಿಕಾಸದ ಮೇಲೆ ಪರಿಣಾಮ  ಬೀರುವ ಘಟಕಗಳಲ್ಲಿ  ಕಚ್ಚಾ ವಸ್ತುಗಳು, ಕುಶಲ ಮಾನವ ಶಕ್ತಿ, ಕೆಲಸಗಾರರ ಪೂರೈಕೆ, ಮರುಕಟ್ಟೆ, ಸಾರಿಗೆ ಸೌಕರ್ಯ, ವಿದ್ಯುತ ಪೂರೈಕೆ, ನೀರಿನ ಪೂರೈಕೆ, ಬಂಡವಾಳ  ಹಾಗೂ ಮರುಕಟ್ಟೆ ಇತ್ಯಾದಿ ಘಟಕಗಳ ಸಮಾವೇಶವಾಗುತ್ತವೆ. 

() ಮಹಾರಾಷ್ಟ್ರ ಔದ್ಯೋಗಿಕ ವಿಕಾಸ ನಿಗಮದ ಲಾಭಗಳನ್ನು ಬರೆಯಿರಿ.

ಉತ್ತರ: 1 ಅಗಷ್ಟ 1962ರಲ್ಲಿ ಮಹಾರಾಷ್ಟ್ರ ರಾಜ್ಯ ಔದ್ಯೋಗಿಕ ವಿಕಾಸ ಮಹಾಮಂಡಳ(ನಿಗಮ) (M. I.D.C.)  ಸ್ಥಾಪನೆ ಮಾಡಲಾಯಿತು. 

        ಮಹಾರಾಷ್ಟ್ರ ಔದ್ಯೋಗಿಕ ವಿಕಾಸ ನಿಗಮದ ಲಾಭಗಳು:

        ಔದ್ಯೋಗಿಕರಣದಿಂದಾಗಿ ಒಂದು ಪ್ರದೇಶದ ಯುವಕರಿಗೆ ಕೆಲಸ ದೊರೆಯುವುದು. ಅದರಂತೆ ಆದಾಯ ಬೆಳೆಯಲು  ಸಹಾಯವಾಗುವುದು. ಕೃಷಿ ಪ್ರಧಾನ ದೇಶಗಳ ಆರ್ಥಿಕ ವಿಕಾಸಕ್ಕಾಗಿ ಬೇಸಾಯದ ಉತ್ಪಾದನೆಗಳನ್ನು ಆಧರಿಸಿದ ಉದ್ದಿಮೆಗಳು ನಿರ್ಮಾಣವಾಗಬೇಕು. ಇಂತಹ ಉದ್ದಿಮೆಗಳಿಂದ ಕೃಷಿ ಹಾಗೂ ದೇಶದ ಆರ್ಥಿಕ ವಿಕಾಸವಾಗುತ್ತಿರುತ್ತದೆ. ಜನರ ಜೀವನಮಟ್ಟ ವೂ ಸುಧಾರಿಸುತ್ತದೆ.

 ) ಮಾಹಿತಿ ತಂತ್ರಜ್ಞಾನದ ಉದ್ದಿಮೆಯ ಮಹತ್ವ ಹೇಳಿರಿ.

ಉತ್ತರ:  ಮಾಹಿತಿ ತಂತ್ರಜ್ಞಾನವು ಇಂದಿನ ಯುಗದ ಒಂದು ಮಹತ್ವಪೂರ್ಣವಾದ ಅಭಿಯಾಂತ್ರಿಕ ಶಾಖೆಯಾಗಿದೆ. ಈ ಶಾಖೆಯಲ್ಲಿಯ ಕಾರ್ಯಗಳು ಗಣಕಯಂತ್ರ, ಸಂಗಣಕಗಳ ಮೂಲಕವೇ ನಡೆಯುವುದು. ಈ ಉದ್ದಿಮೆಯಲ್ಲಿ ಭಾರತವು ಬಹಳೆ ಪ್ರಗತಿ ಸಾಧಿಸಿದೆ. ಈ ಉದ್ದಿಮೆಯಲ್ಲಿ ತಾಂತ್ರಿಕ ಮಾಹಿತಿ ಶೋಧಿಸುವುದು, ಗಳಿಸುವುದು, ವಿಶ್ಲೇಶಿಸುವುದು ಹಾಗೂ  ಸಂಗ್ರಹಿಸುವುದು, ಅಲೇಖಗಳ ಸ್ವರೂಪದಲ್ಲಿ ಮಂಡಿಸುವುದು, ಬೇಡಿಕೆಗೆ ತಕ್ಕಂತೆ ಪೂರೈಸುವುದು ಮುಂತಾದ ಕೆಲಸಗಳನ್ನು ಮಾಡಲಾಗುವುದು.

() ಭಾರತದ ಜನಸಂಖ್ಯೆಯ ವಿಚಾರ ಮಾಡಿದರೆ ಉದ್ದಿಮೆಗಳ ನಿರ್ಮಾಣವು ನಿರುದ್ಯೋಗದ ಮೇಲಿನ ಒಂದು ಒಳ್ಳೆಯ ಉಪಾಯ ಆಗಿದೆ ಎಂಬುದನ್ನು ಸ್ಪಷ್ಟಪಡಿಸಿರಿ.

ಉತ್ತರ:  ಜನಸಂಖ್ಯೆ ಇದು ದೇಶದ ಸಾಧನಸಂಪತ್ತು ಆಗಿದೆ. ದೇಶದಲ್ಲಿಯ ಸಾಧನಸಂಪತ್ತಿನ ವಿಕಾಸ ಸಾಧಿಸಲು ಆ ದೇಶದಲ್ಲಿಯ ಮನುಷ್ಯ ಬಲ ಉಪಯುಕ್ತವಾಗುತ್ತದೆ. ಭಾರತದಲ್ಲಿ ಯಾವ ಭಾಗದಲ್ಲಿ ಜನಸಂಖ್ಯೆ ಹೆಚ್ಚು ಇದೆಯೋ ಆ ಭಾಗದಲ್ಲಿ ಅನೇಕ ಉದ್ದಿಮೆಗಾಲು ನಿರ್ಮಾಣವಾಗಿವೆ. ಹೊಸ ಹೊಸ ಉದ್ದಿಮೆಗಳ ಸ್ಥಾಪನೆ ಆಗುತ್ತಿರುವುದರಿಂದ ಸಾವಿರಾರು ಯುವಕ ಯುವತಿಯರಿಗೆ ಕೆಲಸ ದೊರೆಯುತ್ತಿದೆ. ಜನಸಂಖ್ಯೆಯಲ್ಲಿಯ ಪ್ರಶಿಕ್ಷಿತ ಜನತೆಗೆ ಕೆಲಸ ಸಿಗುತ್ತಿದೆ.

 ಶ್ನೆ 5. ಕೆಳಗಿನ ವಿಧಾನಗಳಿಗಾಗಿ ಗತಿ ನಕ್ಷೆ (flow chart) ತಯಾರಿಸಿರಿ.

 ) ನಾವು ಉಪಯೋಗಿಸುವ ಬಟ್ಟೆಗಳು, ಹೊಲದಿಂದ ನಮ್ಮ ವರೆಗೆ ಬಂದು ತಲುಪುವ ಪ್ರವಾಸ ತೋರಿಸಿರಿ.

ಉತ್ತರ: ಹೊಲ --à ಮಾರುಕಟ್ಟೆ ---à ಬಟ್ಟೆ ನೇಯುವ ಕಾರಖಾನೆ---à ಬಟ್ಟೆ ಗಿರಣಿ—ಬಣ್ಣ ಕೊಡುವುದು à ಬಟ್ಟೆ ಹೊಲಸೆಲ್ ವ್ಯಾಪಾರಿಗಳು ---ಕಿರಕೊಳ್ ಅಂಗಡಿಗಳು --à ನಾವು ಅಂದರೆ  ಗ್ರಾಹಕರು

() ಯಾವುದೇ ಒಂದು ಉದ್ದಿಮೆಯ ಸ್ಥಳೀಕರಣಕ್ಕಾಗಿ ಅವಶ್ಯವಿರುವ ಘಟಕಗಳನ್ನು ಬರೆಯಿರಿ.

ಉತ್ತರ: ಯಾವುದೇ ಒಂದು ಉದ್ಯೋಗ ಸ್ಥಾಪನೆ ಮಾಡಲು ಸ್ಥಳದ ಆಯ್ಕೆ ಬಹಳ ಮುಖ್ಯವಾಗುತ್ತದೆ. ಆ ಸ್ಥಳಕ್ಕೆ ಕಚ್ಚಾ ಸರಕುಗಳು, ನೀರಿನ ಪೂರೈಕೆ, ವಿದ್ಯುತ್ತು ಪೂರೈಕೆ, ಕೂಲಿಕಾರರ ಅಗತ್ಯತೆ ಮತ್ತು ಮಾರುಕಟ್ಟೆ ಇತ್ಯಾದಿ ಘಟಕಗಳು ಹತ್ತಿರ ಇರಬೇಕಾಗುತ್ತವೆ.

ಪ್ರಶ್ನೆ 6. ವ್ಯತ್ಯಾಸ ಹೇಳಿರಿ.

ಅ) ಮಧ್ಯಮ ಉದ್ದಿಮೆ ಬೃಹತ್ ಉದ್ದಿಮೆ

ಮಧ್ಯಮ ಉದ್ದಿಮೆ

ಬೃಹತ್ ಉದ್ದಿಮೆ

1       . ಈ ಉದ್ದಿಮೆಗಳಲ್ಲಿ ಯಂತ್ರಸಾಮಗ್ರಿಗಳಿಗಾಗಿ 5 ಕ್ಕಿಂತ 10 ಕೋಟಿ ಬಂಡವಾಳ ಇರುತ್ತದೆ.

1.   ಬೃಹತ್ ಉದ್ದಿಮೆಗಳಲ್ಲಿ ಯಂತ್ರಸಾಮಗ್ರಿಗಳಿಗಾಗಿ10 ಕೋಟಿಗಿಂತ ಹೆಚ್ಚು  ಬಂಡವಾಳ ಇರುತ್ತದೆ.

2     . ಮಧ್ಯಮ ಉದ್ದಿಮೆಗಳಿಗೆ ಕಡಿಮೆ ಬಂಡವಾಳ ಹಾಗೂ ಲಾಡಿಮೆ ಕುಳಿಕಾರರು ಬೇಕಾಗುವರು.

2.   ಬೃಹತ್ ಉದ್ದಿಮೆಗಳಿಗೆ ಹೆಚ್ಚು ಬಂಡವಾಳದಂತೆ ಕೂಲಿಕಾರರು ಹೆಚ್ಚಿಗೆ ಬೇಕಾಗುವರು.

3. ಸ್ಥಳ ಹೆಚ್ಚಿಗೆ ಬೇಕಾಗುವುದಿಲ್ಲ.

3. ಬೃಹತ್ ಉದ್ದಿಮೆಗೆ ಬಹಳಷ್ಟು ಸ್ಥಳ ಬೇಕಾಗುತ್ತದೆ.

 ಆ) ಕೃಷಿ ಪೂರಕ ಉದ್ದಿಮೆ – ಮಾಹಿತಿ ತಂತ್ರಜ್ಞಾನದ ಉದ್ದಿಮೆ

ಕೃಷಿ ಪೂರಕ ಉದ್ದಿಮೆ

ಮಾಹಿತಿ ತಂತ್ರಜ್ಞಾನದ ಉದ್ದಿಮೆ

ಕೃಷಿ ಪೂರಕ ಉದ್ದಿಮೆಗಳು ಕೃಷಿಗೆ ಸಂಬಂಧಿಸಿದ್ದು ಇರುತ್ತವೆ.

ಮಾಹಿತಿ ತಂತ್ರಜ್ಞಾನದ ಉದ್ದಿಮೆ ಒಂದು ಅಭಿಯಾಂತ್ರಿಕ ಶಾಖೆಯಾಗಿದೆ.

ಕೃಷಿ ಪೂರಕ ಉದ್ದಿಮೆ ಮನುಷ್ಯನ ಮೂಲಕ ಮಾಡಲಾಗುತ್ತದೆ.

ಮಾಹಿತಿ ತಂತ್ರಜ್ಞಾನದ ಉದ್ದಿಮೆಯಲ್ಲಿಯ ಕಾರ್ಯ ಸಂಗಣಕಗಳ ಮೂಲಕ ನಡೆಯುತ್ತವೆ.

ಕೃಷಿ ಪೂರಕ ಉದ್ದಿಮೆಯಲ್ಲಿ ಕುರಿ ಸಾಕಾಣಿಕೆ, ಹಸು, ಕೋಳಿಸಾಕಾಣಿಕೆ, ಮತ್ಸ್ಯ ಪಾಲನೆ ಮುಂತಾದ ವ್ಯವಸಾಯ ಮಾಡಲು ಬರುತ್ತದೆ.

ಹೊಸ ತಲೆಮಾರಿನ ಹುಡುಗರು ತಂತ್ರಜ್ಞಾನದಲ್ಲಿಯ ಹೊಸ ಕ್ಷೇತ್ರಗಳ ಆಯ್ಕೆ ಮಾಡುತ್ತಾರೆ. ಉದಾ. ಇಂತರನೆಟ್, ತಂತ್ರಜ್ಞಾನ್, ಫೆಸಬುಕ್, ಇನ್ಸ್ಟಾಗ್ರಾಂ, ಯುಟ್ಯೂಬ್, ಕ್ಲೌಡ್ ಕಂಪ್ಯೂಟಯಿಜೀಂಗ ಇತ್ಯಾದಿ.

ಕೃಷಿ ಪೂರಕ ಉದ್ದಿಮೆಯನ್ನು ಸುಶಿಕ್ಷಿತರು ಹಾಗೂ ಅಶಿಕ್ಷಿತರೂ ಮಾಡಬಹುದಾಗಿದೆ.

ಮಾಹಿತಿ ತಂತ್ರಜ್ಞಾನದ ಉದ್ದಿಮೆಗೆ ಉಚ್ಚ ದರ್ಜೆಯ ತಾಂತ್ರಿಕ ಶಿಕ್ಷಣದ ಅಗತ್ಯ ಇರುತ್ತದೆ.

 ಉಪಕ್ರಮ : ನಿಮ್ಮ ಊರಿನಲ್ಲಿ ಅಥವಾ ಪಟ್ಟಣದಲ್ಲಿ ಉದ್ದಿಮೆಗಳ ಸಾಮಾಜಿಕ ಹೊಣೆಗಾರಿಕೆಯ ಅಂತರ್ಗತವಾಗಿ ಯಾವುದೊಂದು ಉಪಕ್ರಮ ಮಾಡಿದ್ದರೆ ಅದರ ಮಾಹಿತಿ ಪಡೆಯಿರಿ ಮತ್ತು ವರ್ಗದಲ್ಲಿ ಸಾದರ ಪಡಿಸಿರಿ.

ಉತ್ತರ: ನಮ್ಮ ಊರು ಬಬಲಾದ ತಾ. ಅಕ್ಕಲಕೋಟ ಜಿ. ಸೋಲಾಪುರ ಇಲ್ಲಿಯ ಜಿಲ್ಲಾ ಪರಿಷದ ಪ್ರಾಥಮಿಕ ಶಾಲೆಯಲ್ಲಿ ಸೊಲಪುರದಲ್ಲಿ ನೆಲೆಸಿರುವ ಪ್ರಿಸಿಜನ್ ಫೌಂಡೇಶನ್ ಎಂಬ ಅಂತರರಾಷ್ಟ್ರೀಯ ಉದ್ದಿಮೆ ವತಿಯಿಂದ 10 ಟ್ಯಾಬಗಳು, ಸೋಲಾರ ಸಿಸ್ಟಿಮ್, ಒಂದು ಲ್ಯಾಪ್ಟಾಪ್, ಪ್ರೊಜೆಕ್ಟರ್ ಸಾಮಾಜಿಕ ಹೊಣೆಗಾರಿಕೆಯ ಅಂತರ್ಗತ ನೀಡಲಾಗಿತ್ತು. ಅವುಗಳ ಉಪಯೋಗ ಶಾಲೆಯ ವಿದ್ಯಾರ್ಥಿಗಳಿಗೆ ಇಂದಿಗೂ ಆಗುತ್ತಿದೆ.   


 

ಪಾಠ 9. ನಕಾಶೆಯ ಪ್ರಮಾಣ

ಪ್ರ. 1. ಅ) ಕೆಳಗಿನ ಸಂಗತಿಗಳ ನಕಾಶೆಗಳ ಬೃಹತ್ ಪ್ರಮಾಣ ಹಾಗೂ ಲಘು ಪ್ರಮಾಣದ ನಕಾಶೆಗಳಲ್ಲಿ ವರ್ಗೀಕರಣ ಮಾಡಿರಿ.

        1) ಕಟ್ಟಡ  2) ಶಾಲೆ 3) ಭಾರತದೇಶ  4) ಚರ್ಚ  5) ಮಾಲು DMat   6) ಜಗತ್ತಿನ ನಕಾಶೆ  7) ಹೂದೋಟ 8) ದವಾಖಾನೆ  9) ಮಹಾರಾಷ್ಟ್ರದ ನಕಾಶೆ  10) ರಾತ್ರಿಯಲ್ಲಿ ಉತ್ತರ ದಿಶೆಯ ಆಕಾಶ

ಉತ್ತರ:  ಬೃಹತ್ ಪ್ರಮಾಣ ನಕಾಶೆಗಳು = ಕಟ್ಟಡ, ಶಾಲೆ, ಚರ್ಚ, ಮಾಲು, ಹೂದೋಟ, ದವಾಖಾನೆ

        ಲಘು ಪ್ರಮಾಣದ ನಕಾಶೆಗಳು = ಭಾರತದೇಶ,  ಜಗತ್ತಿನ ನಕಾಶೆ, ಮಹಾರಾಷ್ಟ್ರದ ನಕಾಶೆ , ರಾತ್ರಿಯಲ್ಲಿ ಉತ್ತರ ದಿಶೆಯ ಆಕಾಶ

        ಆ) 1 ಸೆಮೀ = 100 ಮೀ ಹಾಗೂ 1 ಸೆಮೀ = 100 ಕಿಮೀ. ಇಂತಹ ಪ್ರಮಾಣದ ಎರಡು ನಕಾಶೆಗಳಿವೆ . ಇವುಗಳಲ್ಲಿ ಬೃಹತ್ ಪ್ರಮಾಣದ ಹಾಗೂ ಲಘು ಪ್ರಮಾಣದ ನಕಾಶೆಗಳು ಯಾವುವು ಎಂಬುದನ್ನು ಕಾರಣಸಹಿತವಾಗಿ ಹೇಳಿರಿ. ಈ ನಕಾಶೆಗಳ ಪ್ರಕರಗಳನ್ನು ಗುರುತಿಸಿರಿ.

ಉತ್ತರ:- 1 ಸೆಮೀ = 100 ಮೀ  ಪ್ರಮಾಣವಿರುವ ನಕಾಶೆಗಳಲ್ಲಿ ಕಡಿಮೆ ಅಂತರ ಸೂಚಿಸಲಾಗುತ್ತದೆ ಆದ್ದರಿಂದ ಇಂತಹ ಪ್ರಮಾಣದ ನಕಾಶೆಗಳು ಲಘು ಪ್ರಮಾಣದ ನಕಾಶೆಗಳು ಇರುತ್ತವೆ. ಉದಾ: ಮನೆಯ ಕಟ್ಟಡ, ಹೂದೋಟದ ನಕಾಶೆ ಇತ್ಯಾದಿ. 

ಹಾಗೂ 1 ಸೆಮೀ = 100 ಕಿಮೀ  ಅಳತೆ ಇರುವ ನಕಾಶೆಗಳಲ್ಲಿ ಬಹಳ ದೊಡ್ಡ ಅಂತರ ತೋರಿಸಲಾಗಿರುತ್ತವೆ. ಆದ್ದರಿಂದ ಇವು ಬೃಹತ್ ಪ್ರಮಾಣದ ನಕಾಶೆಗಳು ಆಗಿವೆ ಉದಾ: ಜಗತ್ತಿನ ನಕಾಶೆ, ಭಾರತ ದೇಶದ ನಕಾಶೆ ಇತ್ಯಾದಿಗಳು. 

ಪ್ರ. 2. ನಕಾಶೆ ಸಂಗ್ರಹಗಳಲ್ಲಿಯ ಭಾರತದ ನಕಾಶೆಯಿಂದ ಕೆಳಗಿನ ಪಟ್ಟಣಗಳ ಸರಳ ರೇಷೆಯಲ್ಲಿ ನಕಾಶೆಗಳ ಪ್ರಮಾಣದ ಸಹಾಯದಿಂದ ಅಳೆದು ಕೆಳಗಿನ ಕೋಷ್ಟಕದಲ್ಲಿ ನೋಂದಾಯಿಸಿರಿ.

ಉತ್ತರ:

ಪಟ್ಟಣಗಳು

 

ನಕಾಶೆಯಲ್ಲಿಯ ಅಂತರ

ಪ್ರತ್ಯಕ್ಷ ಅಂತರ


ಮುಂಬಯಿಯಿಂದ ಬೆಂಗಳೂರು

 

0.98 ಸೇಮೀ

 

980 ಕಿಮ 

ವಿಜಯಪುರದಿಂದ ಜಯಪುರ

2 ಸೇಮೀ

2000ಕಿಮೀ

ಹೈದರಾಬಾದದಿಂದ ಸೂರತ

0.9 ಸೇಮೀ

900ಕಿಮೀ

ಉಜ್ಜೈನದಿಂದ ಶಿಮಲಾ

1.14 ಸೇಮೀ

1140ಕಿಮೀ

ಪಟನಾದಿಂದ ರಾಯಪುರ

0.75 ಸೇಮೀ

750ಕಿಮೀ

ದಿಲ್ಲಿಯಿಂದ ಕೋಲಕತ್ತಾ

1 ಸೇಮೀ

1000ಕಿಮೀ

 ಪ್ರ.3. ಆ 1 ಸೇಮೀ = 53 ಕಿಮೀ ಈ ಶಬ್ದ ಪ್ರಮಾಣವನ್ನು ಅಂಕಿ ಪ್ರಮಾಣದಲ್ಲಿ ಪರಿವರ್ತಿಸಿರಿ.

ಉತ್ತರ: 1 ಕಿಮೀ ಅಂದರೆ 100000ಸೇಮೀ 53 ಕಿಮೀ ಅಂದರೆ 5300000 ಸೇಮೀ ಹೌದು.

1 ಸೇಮೀ= 53 ಕಿಮೀ ಈ ಶಬ್ದ ಪ್ರಮಾಣವು 1:5300000 ರಂತೆ ಅಂಕಿ ಪ್ರಮಾಣವಾಗುವುದು.

ಇ. 1:100000 ಈ ಅಂಕಿ ಪ್ರಮಾಣವನ್ನು ಮೆಟ್ರಿಕ್ ಪದ್ಧತಿಯ ಶಬ್ದ ಪ್ರಮಾಣದಲ್ಲಿ ಪರಿವರ್ತಿಸಿರಿ.

ಉತ್ತರ: 100000 = 1 ಕಿಮೀ ಇದರಂತೆ 1 ಸೇಮೀ = 1 ಕಿಮೀ ಎಂಬುದು ಮೆಟ್ರಿಕ್ ಪದ್ಧತಿಯ ರೂಪಾಂತರ ವಾಗುತ್ತದೆ.


 

 

ಪಾಠ 10 ಕ್ಷೇತ್ರಭೇಟಿ

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು