ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಶೀಶು ಗೀತೆಗಳು ಹಾಗೂ ಇತರ ಹಾಡುಗಳು

 

 

ಆಯ್ದ ಕವಿತೆಗಳ ಸಂಗ್ರಹ

          ಸಂಕಲನೆ –ಶ್ರೀ.ದಿನೇಶ ಟಿ. ಚವ್ಹಾಣ (ಫೋನ್ ನಂ.೭೦೬೬೧೦೨೦೬೬)

          ಜಿ.ಪ. ಪ್ರಾಥಮಿಕ ಕನ್ನಡ ಶಾಲೆ, ಬಬಲಾದ. ತಾ. ಅಕ್ಕಲಕೋಟ

  

           ಸಪ್ರೇಮ ವಂದನೆಗಳೊಂದಿಗೆ,

ಆತ್ಮೀಯ ಶಿಕ್ಷಕ ಬಂಧು-ಭಗಿನಿಯರೆ, ನಾನು ದಿನೇಶ ಟಿ. ಚವ್ಹಾಣ (ಉಪ ಶಿಕ್ಷಕರು-ಜಿ. ಪ. ಪ್ರಾಥಮಿಕ ಕನ್ನಡ ಶಾಲೆ, ಬಬಲಾದ ತಾ. ಅಕ್ಕಲಕೋಟ ಜಿ.ಸೋಲಾಪುರ)ತಮಗೆಲ್ಲರಿಗೆ ನಮಸ್ಕಾರಗಳು.

 ಇ –ಲರ್ನಿಂಗ ಮತ್ತು ಡಿಜಿಟಲ್ ಅಭ್ಯಾಸದ ಈ ದಿನಗಳಲ್ಲಿ ಕಂಪ್ಯೂಟರ್ ಅಥವಾ ಮೊಬೈಲ್ ಮೇಲೆಯೂ ಅಧ್ಯಾಪನೆ ಮಾಡುವ ದೃಷ್ಟಿಕೋನದಿಂದ  ನಾನು ೨೦೧೮-೧೯ನೇ ಶೈಕ್ಷಣಿಕ ವರ್ಷ ಆರಂಭದಲ್ಲಿ ೨೦೦೦ ದಿಂದ ಇಲ್ಲಿಯ ವರೆಗಿನ ಕನ್ನಡ ಮಹಾರಾಷ್ಟ್ರ ರಾಜ್ಯ ಪಥ್ಯಪುಸ್ತಕ ನಿರ್ಮಿತಿ ಮತ್ತು ಅಭ್ಯಸಕ್ರಮ ಸಂಶೋಧನ ಮಂಡಲ, ಪುಣೆಯ ಬಾಲಭಾರತಿ ಪಠ್ಯಪುಸ್ತಕದಲ್ಲಿಯ ಉತ್ತಮವಾದ, ರಾಗಬದ್ದವಾಗಿ ಹಾಡಲು ಯೋಗ್ಯವಾಗುವ, ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಒಟ್ಟು ೧೦೭ ಕವಿತೆಗಳನ್ನು ಸಂಗ್ರಹಿಸಿ ಈ e-book ತಯಾರಿಸಿದ್ದೇನೆ. ಇದನ್ನು ತಮ್ಮ ಅಧ್ಯಾಪನದಲ್ಲಿ ಉಪಯೋಗಿಸಲು ಅನುಕೂಲವಾಗಲೆಂದು ಕನ್ನಡ ಶಿಕ್ಷಕರ ವಾಟ್ಸಪ್ ಗ್ರುಪಿನ ಮೇಲೆ, www.kannadadarshan.blogspot.com ಈ ಬ್ಲಾಗ್ ಮೇಲೆ  ಕಳುಹಿಸುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ, ಮಾರ್ಗದರ್ಶನ ಮತ್ತು ಸೂಚನೆಗಳಿಗೆ ಸ್ವಾಗತವಿದೆ.

ಅನುಕ್ರಮಣಿಕೆ

 

 

ಅ.ಕ್ರ

ಪದ್ಯ ಅಥವಾ ಕವಿತೆಯ ಹೆಸರು

ಕವಿಯ ಹೆಸರು

 

1

ಆಟಿಕೆ

 

 

2

ಕಾಗದ ಚಕ್ರ

 

 

3

ಬಣ್ಣದ ಚಿಟ್ಟೆ

 

 

4

ಕುದುರೆ

 

 

5

ಚಂದಾ ಮಾಮಾ

 

 

6

ಕಾಗೆ ಕಾಗೆ ಕೌವ್ವಾ

 

 

7

ಮಳೆ

 

 

8

ಗಾಳಿ ಪಟ

 

 

9

ನಾಗರ ಹಾವು

 

 

10

ಕಮಲ

 

 

11

ನವಿಲು

 

 

12

ಚಂದಪ್ಪ

 

 

13

ಗಿಳಿ

 

 

14

ರೈಲು

 

 

15

ಸೈನಿಕ

 

 

16

ಒಂದು ಎರಡು

ರಾಜರತ್ನಂ

 

17

ಮಳೆ

 

 

18

ಗಜ್ಜರಿ ತೋಟ

 

 

19

ಪುಟಿ ಚೆಂಡು

ಉಳುವಿಶ

 

20

ಚಿಗರೆಯ ಮರಿ

ಪಾ. ಭೀ. ಪಾಟೀಲ

 

21

ಮುದ್ದು ಮಗು

ಸುನೀತಾ ಉದ್ಯಾವರ

 

 

 

 

 

 22

ವಿದ್ಯುತ

 

 

23

ಪ್ರಾರ್ಥನೆ

ಶ್ರೀ ರಾಮ

 

24

ಒಂದರಿಂದ ಹತ್ತು

ರಾಜರತ್ನಂ

 

25

ನಾವು ಎಳೆಯರು ನಾವು ಗೆಳೆಯರು

ಗುಬಿಶಂ

 

26

ಬಾ ಕಂದ

ಬಿ. ಎ. ಸನದಿ

 

27

ದೇಶ ಸೇವೆ

ಮಾರುತಿ ವ್ಹಿ. ನಿಕಮ

 

28

ಮಂಗನ ನ್ಯಾಯ

ಚಂದ್ರಗೌಡ ಕುಲಕರ್ಣಿ

 

29

ಆಡೋಣ ಬಾ

ಅ.ಬ.ಚಿ.

 

30

ಋತುಗಳು

ರಸಿಕ ಪುತ್ತಿಗ

 

31

ಜೋಗುಳ ಹಾಡುಗಳು

ವಿ. ಜಿ. ಭಟ್

 

32

ಜನಪದ ಜೋಗುಳ ಹಾಡುಗಳು

 

 

33

ಕನ್ನಡ ತಾಯಿಯ ಮಕ್ಕಳು

ಬಿ. ಆರ್. ಸರ ಮೊಕ್ಕದ್ದಂ

 

34

ಕಾರ ಹುಣ್ಣಿಮೆ

ಪ. ಗು. ಸಿದ್ದಾಪುರ

 

35

ನಾಯಿ ಮರಿ

ರಾಜರತ್ನಂ

 

36

ಹುಟ್ಟು ಹಬ್ಬ

 

 

37

ಋಣ

ಬಿ. ಶೇಖರಪ್ಪ ಹುಲಿಗೇರಿ

 

38

ವನ ವಿಹಾರ

ಕಂಚ್ಯಾಣಿ ಶರಣಪ್ಪ

 

39

ಕೋಲಾಟ

 

 

40

ಸುವ್ವಾಲೆ ಹಾಡು

 

 

41

ಭಾರತ ಭೂಮಿ ನನ್ನ ತಾಯಿ

ಕುವೆಂಪು

 

42

ಪರೋಪಕಾರ

ಬಿ. ಎಸ್. ಜಗಾಪೂರ

 

43

ಯಾರು ದೇವರು

ಆರ್. ಸರಸ್ವತಿ

 

44

ದೇಶ ಸೇವೆ

ಪಾ. ಭೀ. ಪಾಟಿಲ್

 

45

ನಮ್ಮ ಶಾಲೆ

ರಾಜೇಂದ್ರ ಗಡದ್

 

46

ಉಗಿಬಂಡಿ

ಬಿ.ಎಸ್. ಕುರ್ಕಾಲ್

 

47

ಗುರುತ್ವಾಕರ್ಷಣೆ

ಎಂ. ಬಿ. ಲಿಂಗದಳ್ಳಿ

 

48

ಕಾಮನ ಬಿಲ್ಲು

ಮಹಾಂತೇಶ ಮಲ್ಲನಗೌಡರ

 

49

ಅನುಬಂಧದ ಹಣತೆ

ಚನ್ನವೀರ ಮ. ಸಗರನಾಳ

 

50

ಮೂಡಲ ದೀಪವನುರಿಸುವ

ಸು. ರಂ. ಎಕ್ಕುಂಡಿ

 

52

ಯುಗಾದಿ

ಟಿ. ಜಿ. ಪ್ರಭಾಶಂಕರ

 

53

ಏರಿಸೋಣ ಬಾವುಟ

 

 

54

ಬಾಳಿರಿ ಮಕ್ಕಳೇ

ಟಿ. ಆರ್. ಜೋಡಟ್ಟಿ

 

55

ಭಲೆರೆ ಬಹು ಚೆಂದ

ಆನಂದ ಕವಿ.

 

56

ಜಯವೆನ್ನಿ ಭಾರತಾಂಬೆಗೆ

ಸುನಿತಾ ಎಂ. ಶೆಟ್ಟಿ

 

57

ನೇತ್ರ ದಾನ

ಶ್ರೀಮತಿ ಗೌರಾ ಬಿ. ತಾಳಿಕೋಟಿಮಠ

 

58

ಹೊಸ ಇತಿಹಾಸವ

ಈಶ್ವರ ಕಮ್ಮಾರ

 

59

ಆದರ್ಶ ವಿದ್ಯಾರ್ಥಿ

ಕೆ. ನಂಜುಡಾಚಾರ್ಯ             

 

60

ನೇಗಿಲ ಯೋಗಿ

ಕುವೆಂಪು

 

61

ಸುಗ್ಗಿಯ ಹಾಡು

ದ. ರಾ. ಬಳುರಗಿ

 

62

ತುತ್ತೂರಿ

ರಾಜರತ್ನಂ

 

63

ಕೋಡಗನ ಕೋಳಿ ನುಂಗಿತ್ತಾ

ಶಿಶುನಾಳ ಶರೀಫ

 

64

ಅಕ್ಕ ಮಹಾದೇವಿಯ ವಚನಗಳು

ಅಕ್ಕ ಮಹಾದೇವಿ

 

65

ಗುಡಿಯ ನೋಡಿರಣ್ಣಾ

ಶಿಶುನಾಳ ಶರೀಫ

 

66

ತರವಲ್ಲ ತಗಿ ನಿನ್ನ ತಂಬೂರಿ

ಶಿಶುನಾಳ ಶರೀಫ

 

67

ಡೊಂಕು ಬಾಲದ ನಾಯಕರೆ

ಶ್ರೀ ಪುರಂದರದಾಸರು

 

68

ತೇರಾ ಏರಿ ಅಂಬರದಾಗೆ

ದೊಡ್ಡ ರಂಗೇಗೌಡ

 

69

ಹಕ್ಕಿ ಹಾರುತಿದೆ ನೋಡಿದಿರಾ?

ದ. ರಾ. ಬೇಂದ್ರೆ

 

70

ಇರುವೆ ಇರುವೆ ಕರಿಯ ಇರುವೆ

ಸಿ.ಸು ಸಂಗಮೇಶ

 

71

ಚಂದಿರನೇತಕೆ ಓಡುವನಮ್ಮ

ನೀ.ರೆ. ಹೀರೇಮಠ

 

72

ಗುಬ್ಬಿ

ಎ.ಕೆ. ರಾಮೇಶ್ವರ

 

73

ಗಡಿಯಾರ

ದಿನಕರ ದೇಸಾಯಿ

 

74

ಯುಗಾದಿ

ಅಂಬಿಕಾತನಯ ದತ್ತ

 

75

ಪುಣ್ಯಕೋಟಿ

 

 

76

ತಿರುಕನ ಕನಸು

ಮುಪ್ಪಿನ ಷಡಕ್ಷರಿ

 

77

ಸೋಮೇಶ್ವರ ಶತಕ

ಪುಲಿಕೆರೆಯ ಸೋಮ

 

78

ಹಸಿರು ಕಾನನ

ಕೆ. ಎಂ. ಶೆಟ್ಟಿ , ಬಳ್ಳಮಂಜ

 

79

ಶ್ರಾವಣ ಬಂತು

ಅಂಬಿಕಾತನಯದತ್ತ

 

80

ಬಸವಣ್ಣನವರ ವಚನಗಳು

ವಿಶ್ವಗುರು ಬಸವಣ್ಣ

 

81

 

 

82

ಈ ನಾಡ ಅಂದ ಈ ತಾಣ ಚಂದ

ಕೆ. ಎಸ್. ನಿಸಾರ್ ಅಹಮದ್

 

83

ನಿತ್ಯೋತ್ಸವ

ಕೆ.ಎಸ್.ನಿಸ್ಸಾರ ಅಹಮದ್

 

84

ಕನ್ನಡ ನಾಡಿನ ವೀರರಮಣಿಯ

 

 

85

ನಾವಾಡುವ ನುಡಿಯೇ ಕನ್ನಡ ನುಡಿ

 

 

86

ಕರುನಾಡ ತಾಯಿ ಸದಾ ಚಿನ್ಮಯಿ

ಹಂಸಲೇಖ

 

87

ಕನ್ನಡವೆಂದರೆ ಬರಿ ನುಡಿಯಲ್ಲ,  

ನಿಸಾರ್ ಅಹ್ಮದ್

 

88

ಕನ್ನಡ ನಾಡಿನ ಕರಾವಳಿ

 

 

89

ಇದೆ ನಾಡು ಇದೆ ಭಾಷೆ

ಆರ. ಏನ್. ಜಯಗೋಪಾಲ್       

 

90

ಕನ್ನಡ ನಾಡಿನ ಜೀವನದೀ

ಜಯಗೋಪಾಲ್ ಏನ್.ಆರ

 

91

ಈ ಭೂಮಿ ಬಣ್ಣದ ಬುಗುರಿ

ಹಂಸಲೇಖ

 

92

ಪುಟ್ಟಿಯ ಕವನ

ವಿದ್ಯಾಸಾಗರ ಕುಕ್ಕುಂದಾ

 

93

ಕುಹೂ ಕುಹೂ

ಎಚ್. ಎಸ್. ವೆಂಕಟೇಶಮೂರ್ತಿ

 

94

ತಾಯಿ ನುಡಿ

ಬಿ. ಕೆ. ರೋಹಿಣಿ

 

95

ಮಳೆರಾಯ

ಶಂ.ಗು. ಬಿರಾದಾರ

 

96

ಹಸಿರು ಕ್ರಾಂತಿ

ರಂಗನಾಥ ಅಕ್ಕಲಕೋಟೆ

 

97

ನಮ್ಮ ಬಾವುಟ

ಕಯ್ಯಾರ ಕಿಯಣ್ಣರೈ

 

98

ಜಲಚಕ್ರ

ಹ. ಮ. ಪುಜಾರ

 

99

ಶಿಕ್ಷಕ

ಪ. ಗು. ಸಿದ್ದಾಪುರ

 

100

ಈ ಮಣ್ಣು ನಮ್ಮದು

ಆರ್. ಏನ್. ಜಯಗೋಪಾಲ

 

101

ಕಲ್ಲು ಸಕ್ಕರೆ ಕೊಳ್ಳ

ಪುರಂದರದಾಸರು

 

102

ನನ್ನ ದೇಹದ ಬೂದಿ

ದಿನಕರ ದೇಸಾಯಿ

 

103

ಭಾರತ ಮಾತಾ

ಎ.ಕೆ. ರಾಮೇಶ್ವರ

 

104


ತಾಯಿ

ಎಲ್.ಗುಂಡಪ್ಪ

 


              

                                            JಆಟಿಕೆJ

ಮಾವನು ಬಂದನು ಊರಿಂದ

                              ಆಟಕೆ ತಂದನು ಬಲು ಚಂದ

ಒಂದಕ್ಕೆ ಮಿಗಿಲು ಇನ್ನೊಂದು

ದಿನದಿನ ಆಟಕ್ಕೆ ಒಂದೊಂದು

 

                                   Jಕಾಗದ ಚಕ್ರJ

ಇನ್ಧನವಿಲ್ಲ ಇನ್ಜಿನವಿಲ್ಲ

ಗರ ಗರ ತಿರುಗುವ ಕಾಗದ ಚಕ್ರ

ಕೈಯಲ್ಲಿ ಹಿಡಿದು ಓಡಲು ನಾನು

ತಿರುಗುತಲಿಹುದು ಏನು ವಿಚಿತ್ರ

 

        J ಬಣ್ಣದ ಚಿಟ್ಟೆJ

ಹೂವಿಂದ ಹೂವಿಗೆ ಹಾರುವ ಚಿಟ್ಟೆ

ಏನನು ಅದರಲ್ಲಿ ನೀ ಇಟ್ಟೆ

ತರ ತರ ಬಣ್ಣದ ಉಡುಗೆಯ ತೊಟ್ಟೆ

ತೊಡಿಸಿದರಾರು ಈ ಬಟ್ಟೆ

 

                        õಕುದುರೆ õ

ಬೆದರದ ಕುದುರೆ ಬಾಗದ ಕುದುರೆ

ಬಾಲವು ಇಲ್ಲದ ಈ ಕುದುರೆ

ಗೆಜ್ಜೆಯ ಕಟ್ಟಲು ಘಲ್ ಘಲ್ ಎನ್ನುವ

ಅಜ್ಜನ ಕೋಲು ನನ್ನೀ

 

 

             õಮೋಜಿನ ಪೆಟ್ಟಿಗೆõ

ಮುಂಬಯಿ ಬಜಾರ ನೋಡ

ಬೋರಿ ಬಂದರ ನೋಡ

ಗೋಲಗುಮ್ಮಟ ನೋಡ

ಮೋಜಿನ ಪೇಟ್ಟಿಗೆ ನೋಡ.

 

   õಚಂದಾ ಮಾಮ õ

ಚಂದಾ ಮಾಮಾ ಚಕ್ಕುಲಿ ಮಾಮಾ

ನೀ ನಮಗೆಲ್ಲ ಮುದ್ದಿನ ಮಾಮಾ!

ಬೆಳ್ಳಿಯ ಬೆಳಕು ಚೆಲ್ಲುವ ಮಾಮಾ

ಎಲ್ಲರ ಮನಸ್ಸನು ಗೆಲ್ಲುವ ಮಾಮಾ!

                     - ಶ್ರೀ. ರವಿ  

   õಕಾಗಿ ಕಾಗಿ ಕೌವಾõ

ಕಾಗಿ ಕಾಗಿ ಕೌವಾ, ಯಾರ ಬಂದರವ್ವಾ

ಮಾಮಾ ಬಂದನವ್ವಾ, ಏನ ತಂದಾನವ್ವಾ

ಬಿಸ್ಕಿಟ ತಂದಾನವ್ವಾ,

ಯಾರ ತಿಂದಾರವ್ವಾ

ನಾನೇ ತಿಂದಿನವ್ವಾ.

õಮಳೆõ

ಬಂದಿತು ಮಳೆಯು ರಪ ರಪ

ತೊಯ್ಯಿತು ಮೈಯೂ ತಪ ತಪ

ಆಣೆಕಲ್ಲಿನ ಟಪ ಟಪ

ಆರಿಸಲೇನು ಪಟ ಪಟ

      ಗಾಳಿ ಪಟ

ಎತ್ತರ ಎತ್ತರ ಬಾನಿನ ಹತ್ತಿರ

ಹಾರಿತು ನನ್ನಯ ಗಾಳಿಪಟ

ಏರುತ ಮೇಲೆ ತೋರುತ ಲೀಲೆ

ಮೆರೆಯಿತು ನನ್ನಯ ಗಾಳಿಪಟ.

õಗಾಳಿ ಪಟõ

ಅಣ್ಣನು ಮಾಡಿದ ಗಾಳಿಪಟ

ಬಣ್ಣದ ಹಾಳೆಯ ಗಾಳಿಪಟ

ನೀಲಿಯ ಬಾನಲಿ ತೇಲುವ

ಸುಂದರ ಬಾಲಂಗೋಚಿಯ ನನ್ನ ಪಟ

 

ಬಿದಿರಿನ ಕಡ್ಡಿಯ ಗಾಳಿಪಟ

ಬೆದರದ ಬೆಚ್ಚದ ಗಾಳಿಪಟ

ಉದ್ದದ ಬಾಲದ ಗಾಳಿಪಟ

ನನ್ನಯ ಮುದ್ದಿನ ಗಾಳಿಪಟ

 

  õನಾಗರ ಹಾವುõ

ನಾಗರ ಹಾವೇ ಹಾವಳ ಹೂವೆ

ಬಾಗಿಲ ಬಿಲದಲಿ ನಿನ್ನಯ ಟಾವೇ

ಕೈಗಳ ಮುಗಿಯುವೆ

ಈಗಲೇ ಹೊರಗೆ ಪೋ ಪೋ .

 www.kannadadarshan.blogspot.com  

 õಕಮಲõ

ಹೂವು ಹೂವು ಕಮಲದ ಹೂವು

ಪಕಳೆಗಳಿಂದ ತುಂಬಿದ ಹೂವು

ಚಂದದ ವಾಸನೆ ತುಂಬಿದ ಹೂವು

ಚಂದದ ಬಣ್ಣವು ತುಂಬಿದ ಹೂವು

ಎಲ್ಲರ ಮಾನವನು ಸೆಳೆಯುವ ಹೂವು.

                       

õನವಿಲು õ

ಬಾರೋ ಬಾರೋ ನವಿಲಣ್ಣ

ಥಕ್ ಥೈ ಥಕ್ ಥೈ ಕುಣಿಯೋಣ

ಹೊಳೆಯುವ ಕಣ್ಣ ಗರಿಗಳ ಕಣ್ಣ

ನೀಡಿದರ್ಯಾರು ಹೇಳಣ್ಣ?

    ƒಚಂದಪ್ಪ

ಚಂದಪ್ಪ ಚಂದಪ್ಪ ಚಾರಿಕಾಯಿ

ಬಟ್ಟಲ ತುಂಬಾ ಬಾರಿಕಾಯಿ

ಆಡಲು ನನಗೆ ಯಾರು ಇಲ್ಲ

ಬಂದರೆ ಕೊಡುವೆ ಕೊಬ್ಬರಿ ಬೆಲ್ಲ

 

õಗಿಳಿ õ

ಗಿಳಿಯೇ ಗಿಳಿಯೇ ಬಾ ಕೆಳಗೆ

ಹಣ್ಣನು ಕೊಡುವೆನು ಬಾ ಬಳಿಗೆ

ಹಾರಲು ಕಲಿಸು ನೀ ನನಗೆ

ಹಾಡಲು ಕಳಿಸುವೆ ನಾ ನಿನಗೆ

       

õರೈಲುõ

ಚುಕು ಬುಕು ಚುಕು ಬುಕು ಬಂದಿತು ಗಾಡಿ

ಕಬ್ಬಿಣ ಕಂಬಿಯ ಮೇಲಿಂದೋಡಿ

ಗರಗರ ತಿರುಗುವ ಗಾಲಿಯ ಗಾಡಿ

ಭರ ಭರ ಓಡುವ ರೈಲದು ನೋಡಿ.

 

õಸೈನಿಕõ

ನಾನೇ ಭಾರತ ವೀರ ಶಿಪಾಯಿ

ತೋರಿಸಿ ಬಿಡುವೇನು ವೈರಿಗೆ ಕೈ !!ಪ!!

ಖಾಕಿ ಪ್ಯಾಂಟವ  ಖಾಕಿ ಸರಾಯಿ

ಹಾಕುವೆ ಹೆಗಲಿಗೆ ತುಂಬಿದ ಕೋವಿ !!೧!!

ಏಕ್-ದೋ- ಏಕ್, ನೀ ಏಣಿಸಮ್ಮ

ಲೆಫ್ಟ್-ರಾಯಿಟ ಇಲ್ಲೇ ಕಲಿಯುವೆನಮ್ಮ!!೨!!

ಭಾರತ ವೀರರ ಕಥೆ ಹೇಳಮ್ಮ

ಶೂರ ಶಿಪಾಯಿ ಆಗುವೆನಮ್ಮ !!೩!!

ಸಣ್ಣವನಾದರೂ ಸೈ ಸೈ ಸೈ

ತೋರಿಸಿ ಬಿಡುವೇನು ವೈರಿಗೆ ಕೈ !!೪!!

õಒಂದು ಎರಡು õ      

ಒಂದು ಎರಡು ಬಾಳೆಲೆ ಹರಡು

ಮೂರೂ ನಾಲ್ಕು ಅನ್ನ ಹಾಕು

ಐದು ಆರು ಬೆಳೆ ಸಾರು,

ಏಳು ಎಂಟು ಪೆಪ್ಪರ ಮಿಂಟು

ಒಂಬತ್ತು ಹತ್ತು ಹೊಟ್ಟೆಯಲ್ಲಿ ಬಿತ್ತು.

ಒಂದರಿಂದ ಹತ್ತು ಹೀಗಿತ್ತು

ಊಟದ ಆಟ ಮುಗಿದಿತ್ತು.

                                      õಮಳೆõ

                                                ಗುಡುಗುಡು ಗುಡು ಗುಡು

                                                ಗುಡುಗಿತು ಮುಗಿಲು !

                                                ಗಡ ಗಡ ಒಡೆಯಿತು

                                                ಮೋಡದ ಒಡಲು!

                                                ರಪ ರಪ ಭೂಮಿಗೆ

                                                ಸುರಿಯಿತು ಮಳೆಯು !

                                                ತರ ತರ ಬೆಳೆಗೆ

                                                ಬಂದಿತು ಕಳೆಯು!

 

õಗಜ್ಜರಿ ತೋಟõ

ಮಂಗವು ಮೊಲವು ಕೂಡಿದವು

ಗಜ್ಜರಿ ತೋಟವು ಮಾಡಿದವು

ನೆಲವನು ಅಗೆದವು ಹದವಾಗಿ

ಬೀಜವ ನೆಟ್ಟವು ಸಾಲಾಗಿ

 

ನುಣ್ಣನೆ ಗೊಬ್ಬರ ಹಾಕಿದವು

ತಣ್ಣನೆ ನೀರನು ಹನಿಸಿದವು

ಗಜ್ಜರಿ ಬೆಳೆಯಿತು ಹುಲುಸಾಗಿ

ಹಂಚುತ ತಿಂದವು ಜೊತೆಯಾಗಿ .

 

õಫೋನುõ

ನಮ್ಮ ಮನೆಯಲ್ಲೊಂದು

ಫೋನು ಇರುವುದು

ಟ್ರೀನ್... ಟ್ರೀನ್ ಗಂಟೆ ಹೊಡೆದು

ನಮ್ಮ ಕರೆವದು.

ಫೋನಿನಲ್ಲಿ ಅಜ್ಜ ಅಜ್ಜಿ

ಧ್ವನಿಯು ಬರುವದು

ಅವರ ಮಾತು ಕೇಳಿ ಮನಕ್ಕೆ

ಹರುಷ ಉಕ್ಕಿ ಬರುವದು

ಹಗಲು ಇರುಳು ಹಲವು

ಸುದ್ದಿ ಹೊತ್ತು ತರುವದು.

ಬೇಗ ಕೆಲಸ ಮಾಡಿರೆಂದು

ತಿಳಿಸಿ ಬಿಡುವದು

        -ಅಶೋಕ ಚೊಳಚಗುಡ್ಡ

õಪುಟಿ ಚೆಂಡು õ

ಪುಟಿಯುವ ಚೆಂಡು ಪುಟಿಸುವೆ ಚೆಂಡು

ನನ್ನಯ ಬಣ್ಣದ ಪುಟಿಚೆಂಡು

ಸೆಟೆ ಸೆಟೆದಾಡಿ ಪುಟಿ ಪುಟಿಸಿದರೆ

ತಣ್ಣನೆ ಹಾರುವ ಪುಟಿಚೆಂಡು

        ಜಿಗಿ ಜಿಗಿದಾಡಿ ನೆಗೆ ನೆಗೆದಾಡಿ

        ಒಗೆದರೆ ಜಿಗಿಯುವ ಪುಟಿಚೆಂಡು

        ಕುಣಿ ಕುಣಿದಾಡಿ ಮಣಿ ಮಣಿದಾಡಿ

        ಕುಣಿಸಲು ಕುಣಿಯುವ ಪುಟಿಚೆಂಡು

ಅರಳೆಯಕ್ಕಿಂತ ರವದೆಯಕ್ಕಿಂತ

ಹಗುರಾಗಿರುವುದು ಈ ಚೆಂಡು

ಸೂರ್ಯನಿಗಿಂತ ಚಂದ್ರನಿಗಿಂತ

ದುಂಡಾಗಿರುವುದು ಈ ಚೆಂಡು.

              -ಉಳುವೀಶ. 

       õಚಿಗರೆಯ ಮರಿõ

ಚೆಲುವಿನ ಚಂದದ ಚಿಗರೆಯ ಮರಿಯೆ

ಒಲವಿನ ಅಂದದ ಮುದ್ದಿನ ಮರಿಯೆ!!೧!!

ನಿನ್ನನು ನೋಡಲು ಸಂತೋಷಪಟ್ಟು

ಓಡುತ ಬಂದೇನು ಆಟವ ಬಿಟ್ಟು!!೨!!

ಕರಿ ಬಿಳಿ ಚುಕ್ಕೆಯ ಮಿಂಚುವ ಬಣ್ಣ

ತುಂಬಿದ ಮೈಯ್ಯು ಹೊಳೆಯುವ ಕಣ್ಣ!!೩!!

ನಿನ್ನಯ ಜೊತೆಯಲಿ ಆಡಲು ಬರುವೆ

ರುಚಿ ರುಚಿ ಹುಲ್ಲನು ತಿನ್ನಲು ತರುವೆ !!೪!!

ನಿನ್ನಿ ನೆಗೆತವ ನನಗೂ ಕಲಿಸು

ನಿನ್ನಯ ಆಟದಿ ನನ್ನನು ನಲಿಸು!!೫!!

     -ಪಾ.ಭಿ. ಪಾಟೀಲ.

 

 

    

           õಮುದ್ದು ಮಗುõ

ಬೇಗನೆ ಏಳು ಮುದ್ದಿನ ಕಂದ

ಬೆಳಗಿನ ರವಿಯೂ ನೋಡಲು ಚಂದ

ಸಕ್ಕರೆ ಹಾಲು ಕುಡಿಯುತ ನೀನು

ನಕ್ಕರೆ ನಮ್ಮ ಬಾಳಿಗೆ ಜೇನು

ಪಾಠವನೋದಿ ಜಾಣನು ಆಗು

ಆಟವನಾಡಿ ಗಟ್ಟಿಗನಾಗು

ನಾಳೆಯ ಏಳಿಗೆ ಸಾಧಿಸು ಕಂದ

ನಾಡಿನ ದೀಪವ ಬೆಳಗಿಸು ಅಂದ

            -ಸುನಿತಿ ಉದ್ಯಾವರ

 

 

 

 

 

õವಿದ್ಯುತ õ

ನೀರಿನ ಮೂಲವು ಮಳೆಯಣ್ಣ

ಎಲ್ಲಾ ಜೀವಿಗೂ ಬೇಕಣ್ಣ

ನೀರದು ಹರಿಯಲು ನದಿಯಣ್ಣ

ಒಂದೆಡೆ ಸೇರಲು ಸಾಗರವಣ್ಣ

ಸೇರಿದ ನೀರು ರಭಸದಿ ಧುಮುಕಿ

ಚಕ್ರವು ಅಲ್ಲಿ ತಿರು ತಿರುಗಿ ಶಕ್ತಿಯೊಂದು

ತಾ ಹುಟ್ಟುವುದಲ್ಲಿ

ತಂತಿಲಿ ಹರಿದು ಬರುವುದಿಲ್ಲಿ

ಅದನ್ನೇ ಕರೆವರು ವಿದ್ಯುತ್ತೆಂದು

ಸರ್ವ ಶಕ್ತಿಲಿ ಬೇಕೇ ಬೇಕು

ಎಲ್ಲರಿಗಿಂದು ತೋರುತಿಹುದು ಎಲ್ಲೆಡೆ ಇಂದು

 

      õಪ್ರಾರ್ಥನೆ õ

ಸರ ಸರ ಕನ್ನಡ ಒದಲು ಬರೆಯಲು

ಕಲಿಸಿದ ತಾಯಿಗೆ ನಮೋ ನಮೋ !!

ಸ್ವರ ವ್ಯಂಜನಗಳ ಪರಿಚಯ ನೀಡಿದ

ಶಾರದಾಂಬೆಗೆ ನಮೋ ನಮೋ !!

ರಸವತ್ತಾದ ನುಡಿಗಳ ನುಡಿಸಿದ

ವೀಣಾಪಾಣಿಗೆ ನಮೋ ನಮೋ !!

ಕತ್ತಲೆ ಓಡಿಸಿ ಬೆಳಕನು ನೀಡಿದ

ಜ್ನ್ಯಾನದೇವತೆಗೆ ನಮೋ ನಮೋ !!

                             -ಶ್ರೀ. ರಾಮ

 

 

õಒಂದ ರಿಂದ ಹತ್ತುõ

ಒಂದು ಕಾಡಿನ ಮಧ್ಯದೊಳಗೆ
ಎರಡು ಮರಗಳ ನಡುವೆ ಕುಳಿತು
ಮೂರು ಮೊಲಗಳು ಆಡುತ್ತಿದ್ದವು.
ನಾಲ್ಕು ಮರಿಗಳ ಸೇರಿಸಿ
ಐದು ಜನರು ಆಟಗಾರರು
ಆರು ಹುಡುಗರ ಜೋತೆಗೆ ಬಂದು

ಏಳು ಮೊಲಗಳು ನೋಡಿ ಎಣಿಸದೇ
ಎಂಟು ಇರುವವು ಎಂದರು.
ಒಂಭತ್ತು ಎಂದನು ಅವರಲ್ಲೊಬ್ಬ
ಹತ್ತು ಎಂದನು ಬೇರೆಯೊಬ್ಬ

ಎಣಿಸಿ ನೋಡಲು ಏಳೆ ಏಳು

ಹತ್ತು ಅಂಕಿಗಳ ಕಥೆಯ ಕೇಳು.
ಇಲ್ಲಿಗೆ ಕಥೆ ಮುಗಿಯಿತು.

        -ಜಿ.ಪಿ. ರಾಜರತ್ನಂ

 

 

õನಾವು ಎಳೆಯರು ನಾವು ಗೆಳೆಯರುõ
       ಕವಿ ಶಂ. ಗು. ಬಿರಾದಾರ

ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದು ಸುಂದರ ||

ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರಿ
ಗೊಂದೆ ಭಾರತ ಮಂದಿರ
ಶಾಂತಿದಾತನು ಗಾಂಧಿತಾತನು
ಎದೆಯ ಬಾನಿನ ಚಂದಿರ ||

ಜಾತಿರೋಗದ ಭೀತಿ ಕಳೆಯುವ
ನೀತಿ ಮಾರ್ಗದಿ ನಡೆವೆವು
ಒಂದೇ ಮಾನವ ಕುಲವು ಎನ್ನುತ
ವಿಶ್ವಧರ್ಮವ ಪಡೆವೆವು ||

ವೈರ ಮತ್ಸರ ಸ್ವಾರ್ಥ ವಂಚನೆ
ಕ್ರಿಮಿಗಳೆಲ್ಲವ ತೊಡೆವೆವು
ದೇಶಸೇವೆಗೆ ದೇಹ ಸವೆಸುವ
ದೀಕ್ಷೆ ಇಂದೇ ತೊಡುವೆವು ||

ನಮ್ಮ ಸುತ್ತಲು ಹೆಣೆದುಕೊಳ್ಳಲು
ಸ್ನೇಹಪಾಶದ ಬಂಧನ
ಬೆಳಕು ಬೀರಲಿ, ಗಂಧ ಹರಡಲಿ
ಉರಿದು ಪ್ರೇಮ ಚಂದನ ||

ನಮ್ಮ ಶಕ್ತಿಗೆ ದಿವ್ಯ ಭಕ್ತಿಗೆ
ದೇಶವಾಗಲಿ ನಂದನ
ಅಂದು ಪ್ರೇಮದಿ ಎತ್ತಿ ಕೊಳ್ಳಲು
ಭೂಮಿ ತನ್ನ ಕಂದನ ||

õಬಾ ಕಂದõ

ಬಾ ಬಾರ ಕಂದಾ ಬಾರ ಸುನಂದ

ಬ್ಯಾಸರ ಬಂದೈತಿ ಆಡೋಣು

ಆಚಿ ಕೈ ತಾರ ಇಚಿ ಕೈ ತಾರ

ಮುತಿಗ್ಯಾಗೆನೈತಿ ನೋಡೋಣು

ಚುರುಮುರಿ ತಂದ ಕುರು ಕುರು ತಿಂದ

ಕುರಿ ಮರಿಯಾಟಾ ಆಡೋಣು

ಸಾಕಾದ ಮ್ಯಾಗ ತೊಟ್ಟಿಲ ತೂಗ

ಗೊಂಬಿ ಮಲಗಲು ಹಾಡೋಣು

           -ಬಿ. eಎ. ಸನದಿ

õದೇಶ ಸೇವೆõ

ಭಾರತ ಮಾತೆಯ ಮಕ್ಕಳು ನಾವು

ಎಲ್ಲರೂ ಒಂದೇ ಎನ್ನೋಣ

ಜಾತಿ ಮತಗಳ ಭೇದವ ಮರೆತು

ದೇಶದ ಏಳಿಗೆ ಬಯಸೋಣ!!

ಹೆಜ್ಜೆಗೆ ಹೆಜ್ಜೆಯ ಕೂಡಿಸಿ ನಾವು

ಏಕತೆ ಮಂತ್ರವ ಜಪಿಸೋಣ

ದೇಶವ ಉಳಿಸಿ ಬೆಳೆಸಲು ನಾವು

ಮಿಲಿಟರಿ ಸೈನಿಕರಾಗೋಣ

ಎಸು ಮಾಧವ ಬಸವ ಬುದ್ಧರ

ಬದುಕಿನ ರೀತಿಯ ಅರಿಯೋಣ

ಜಗ್ಗದೆ ಕುಗ್ಗದೆ ಬಗ್ಗದೆ ನಾವು

ದೇಶದ ಸೇವೆಯ ಮಾಡೋಣ

ಏಕಲವ್ಯನ ಏಕಚಿತ್ತದಿ

ವಿದ್ಯೆಯ ನಾವು ಕಲಿಯೋಣ

ಗುರುವಿಗೆ ನಮಿಸಿ, ವಿದ್ಯೆಯ ಬಯಸಿ

ವಿನಯದಿ ವಿದ್ಯೆಯ ಗಳಿಸೋಣ!!

        -ಮಾರುತಿ ವ್ಹಿ. ನಿಕ್ಕಮ್

 

 

        õಮಂಗನ ನ್ಯಾಯõ

ಜೋಡಿ ಬೆಕ್ಕು ಕೂಡಿಕೊಂಡು ಬೆನ್ನೆಗಡಿಗೆ ಕದ್ದವು.

ನನಗೆ ಹೆಚ್ಚು ತನಗೆ ಹೆಚ್ಚು ಎನುತ ಜಗಳ ಕಾದವು.

ಹೊಂಚು ಹಾಕಿ ಕುಟಿಲ ಮಂಗ ನ್ಯಾಯ ಹೇಳ ಬಂದಿತು

ತೂಕ ಮಾಡಿ ಕೊಡುವೆ ನಾನು ಪರಡಿ ತನ್ನಿ ಎಂದಿತು.

ಆಚೆ ಇಚೆ ಬೆಣ್ಣೆ ಹಚ್ಚಿ ಪರಡಿ ತೂಗಿ ನೋಡಿತು

ಅದಕೆ ಇದಕೆ ಹೆಚ್ಚು ಎನುತ ಗುಳುಂ ಗುಳುಂ ನುಂಗಿತು.

ಹಾಗೂ ಹೀಗೂ ಮಾಡಿ ಮಂಗ ತಾನೆ ತಿಂದು ತೇಗಿತು.

ಗಡಿಗೆ ಒಡೆದು ಪರಡಿ ಚೆಲ್ಲಿ ಗಿಡದ ಮೇಲೆ ಹಾರಿತು.

ಮರುಳತನದಿ ಜಗಳವಾಡಿ ಹಂಚಿಕೊಂಡು ತಿನ್ನದೆ

ಮಂಗನಿಂದ ಮೋಸ ಹೋದ ಮೇಲೆ ಬುದ್ಧಿ ಕಲಿತವು.

            -ಚಂದ್ರಗೌಡ ಕುಲಕರ್ಣಿ.

 

 

 

 

õಆಡೋಣ ಬನ್ನಿõ

ಪಾಠದ ಸಮಯ ಮುಗಿಯುವುದೇ ತಡ

ಆಟದ ಘಂಟೆ ಕೇಳುವೆವು.!!೧!!

ಆತುರದಿಂದ ನಾ ನೀ ಮುಂದ

ಎನ್ನುತರೆಲ್ಲರು ಓಡುವೆವು!!೨!!

ಸೀಸಿನ ಗುಂಡು ರಬ್ಬರ ಚೆಂಡು

ಬಗೆ ಬಗೆ ಆಟದ ಕಸರತ್ತು !!೩!!

ಕಬ್ಬಡ್ಡಿ ಆಟ ಲಗೋರಿ ಓಟ

ನೋಡಲು ಬನ್ನಿ ಗಮ್ಮತ್ತು!!೪!!

    ಕೈಯನು ಚಾಚಿ ಮೈಯನು ಮಣಿಸಿ

    ದಿಕ್ಕುಗಳೆನಣಿಸಿ ಹೇಳುವೆವು.!!೫!!

ಜೋಕಾಲಿ ಜೀಕುತ ಮಣಿಯಿಂದ ಜಾರುತ

ಹರುಷದಿ ಉಕ್ಕಿ ನಲಿಯುವೆವು.!!6!!

        -ಅ. ಬಾ. ಚಿಕ್ಕಮಣೂರ

 

õಋತುಗಳುõ      -ರಸಿಕ ಪುತ್ತಿಗೆ

ಚೈತ್ರ ವೈಶಾಕ - ವಸಂತ ಋತು

ಹೂಗಳು ಅರಳುವ ನಗುವ ಋತು
ಜ್ಯೇಷ್ಠ ಆಷಾಡ - ಗ್ರೀಷ್ಮ ಋತು

ಬಿಸಿಲಿನ ಬೇಗೆಯು ಕಳೆಯುವ ಋತು.
ಶ್ರವಣ ಭ್ರಾದ್ರಪದ - ವರ್ಷದ ಋತು

ಮಳೆ ಮೋಡಗಳು ಸುರಿಯುವ ಋತು.
ಅಷ್ವಿಜ ಕಾರ್ತಿಕ - ಶರದ್ ಋತು 

ತಿಂಡಿ ಹಬ್ಬಗಳ ಖುಶಿಯ ಋತು.
ಮಾರ್ಗಶಿರ ಪುಷ್ಯ - ಹೇಮಂತ ಋತು

ಮರದೆಲೆ ಉದುರುವ ಧಾವಂತ.
ಮಾಗ ಫಾಲ್ಗುಣ - ಶಿಶಿರ ಋತು

ಗಡ ಗಡ ನಡಗುವ ಚಳಿಯ ಋತು.                          

õಜೋಗುಳ ಹಾಡುõ

ಜೋ ಜೋ ಜೋ ಕಂದ ಜೋ ಮುದ್ದು ಕಂದ

ಜೋಯಿ ನಿದ್ದೆಯ ಮಾಡು ಆನಂದದಿಂದ (ಜೋ ಜೋ )

ಹಾಲು ಅನ್ನಾ,ಉಂಡು ದೊಡ್ಡವನಾಗು

ಶಾಲೆ ಕಾಲೇಜಿಗೆ ಲಗು ಲಗು ಹೋಗು (ಜೋ ಜೋ)

ಕಲಿತು ಡಾಕ್ಟರ್ನಾಗಿ ರೋಗಿಗಳ ಉಳಿಸು

ದೇಶದ ಮಕ್ಕಳ ಆರೋಗ್ಯ ಬೆಳೆಸು(ಜೋ ಜೋ)

ಇಂಜಿನಿಯರನಾಗಿ ಸೇತುವೆಯ ಕಟ್ಟು

ಹನುಮನ ತೆರದಲ್ಲಿ ಲಂಕೆಯ ಮುಟ್ಟು. (ಜೋ ಜೋ)

 ಗುರುವಾಗಿ ಮಂದಿಗೆ ವಿದ್ಯೆಯ ಕಲಿಸು

ಹೆತ್ತವರ ಹೆಸರನ್ನು ಶಾಶ್ವತಗೊಳಿಸು. (ಜೋ ಜೋ)

ಬೇಸಾಯ ವ್ಯವಸಾಯ ಮಾಡು ನೀ ಚಿನ್ನ

ಬೆಳೆದು ನೀ ಹಾಕು ಲೋಕಕ್ಕೆ ಅನ್ನಾ. (ಜೋ ಜೋ)

                     -  ವಿ. ಜಿ. ಭಟ್ಟ

 

õಜನಪದ ಜೊಗುಳ ಹಾಡುಗಳುõ
ಮಕ್ಕಳು ಕೊಡು ಶಿವನೆ ಮತ್ತೊಂದ ನಾನೊಲ್ಲೆ

ಹತ್ತು ಮಂದ್ಯಾಗ ಹರುನೀರ! ತರುವಂಥ

ಮುತ್ತೈದಿತನವ ಕೊಡು ಶಿವನೆ !!

ತೊಟ್ಟೀಲದಾಗೋಂದು ತೊಳದ ಮುತ್ತಿನ ಕಂಡೆ
ಹೊಟ್ಟಿ ಮ್ಯಾಲಾಗಿ ಮಲಗ್ಯಾನ/ಕಂದೈಗ
ಮುತ್ತಿನ ದೃಷ್ಠಿ ತೆಗೆದೇನ
ಬಾಲಕರಿಲ್ಲದ ಬಾಲಿದ್ಯಾತರದ ಜನ್ಮ

ಬಾಡಿಗೀ ಎತ್ತು ದುಡಿದಂಗ! ಬಾಳೆಲೆಯ

ಹಾಸುಂಡು ಬೀಸಿ ಒಗೆಧಂಗ!!

ತೊಳುದ್ದ ತಲೆದಿಂಬು ಮಾರುದ್ದ ಹಾಸಿಗೆ

ಮಾಣಿಕದಂಥ ಮಗ ಮುಂದ!ಮಲಗಿದರ

ಮಾರಯ್ರ ಗೊಡವೆ ನನಗೇನ!!

ತಾಯಿದ್ರ ತವರ್ಹೆಚ್ಚು ತಂದಿದ್ರ ಬಳಗ್ಹೆಚ್ಚು

ಸಾವಿರಕ ಹೆಚ್ಚು ಪತಿ ಪುರುಷ!ಹೊಟ್ಟೆಯ

ಮಾಣಿಕದ ಹರಳು ಮಗಹೆಚ್ಚು!!

ಅತ್ತರೆ ನಮ್ಮಗು ಮುತ್ತು ಬಾಯಿಬಿಟ್ಟಂತೆ

ಮತ್ತೆ ಕೋಗಿಲೆಯ ಸ್ವರದಂತೆ!ಕೆಂದುಟಿ

ಹಚ್ಚ ಹಸುರಿನ ಗಿಣಿಯಂತೆ!!

ಅಳುವ ಕಂದನ ತುಟಿಯು ಹವಳದ ಕುಡಿಯಂಗೆ
ಕುಡಿ ಹುಬ್ಬು ಬೆವಿನೆಸಳಂಗ/ಕಣ್ಣೋಟ
ಶಿವನ ಕೈಯಲಗು ಹೊಳೆದಂಗ

ಹಸರಂಗಿ ತೊಡಸಿದ ಹಾಲ್ಗಡಗ ಇಡಸಿದ
ಹಳ್ಳಕ್ಕೆ ನೀನು ಬರಬೇಡ /ನನ ಕಂದಯ್ಯ
ಬೆಳ್ಳಕ್ಕಿ ಹಿಂಡು ಬೆದರ್ಯಾವೆ

ಜೋಗುಳ ಹಾಡಿದರ ಆಗಳೇ ಕೇಳ್ಯಾನ
ಹಾಲ ಹಂಬಲ ಮರತಾನ/ಕಂದೈಗ
ಜೋಗುಳದಾಗ ಅತಿಮುದ್ದು

ಕುಸು ಕುಂಬಳಕಾಯಿ ರಾಸಿ ಬೋರೆ ಹಣ್ಣು

ಸೇವಂತಿಯ ಮೊಗ್ಗ ನನ್ನ ಬಾಲ /ನನ್ನ ಕಂದ

ಈಶ್ವರಗ ಕೈಯ ಮುಗದೇನ.

 

ಹಳ್ಬೇಡಿ ಅತ್ತಾನ ಕೊಲ್ಬೇಡಿ ಕುಣಿದಾನ

ಮೊಸರು ಬೇಡಿ ಕೆಸರ ತುಳಿದಾನ!ಕಂದಯನ

ಕುಸಲದ ಗೆಜ್ಜೆ ಕೆಸರಾಯ್ತು!

 

ಕೂಸು ಇದ್ದ ಮನಿಗೆ ಬಿಸಣಿಕೆ ಯಾತಕ್ಕ

ಕೂಸುಕಂದಯ್ಯ ಒಳ ಹೊರಗೆ ಆಡಿದರೆ

ಬಿಸಣಿಕೆ ಗಾಳಿ ಸುಳಿದಾವ

 

ಕೂಸು ನನ ಕಂದಯ್ಯ ಕೇಶ ಬಿಟ್ಟಾಡಾಗ

ದೇಶದೊಳಗಿನ್ದೆರಡು ಗಿಳಿ ಬಂದು ಕೇಳ್ಯಾವ

ಕೂಸು ನೀ ಯಾರ ಮಗನೆಂದು

 

ಬಾರಯ್ಯ ಬಾ ನನ್ನ ಬಾಲ ಚಕ್ರವರ್ತಿ

ನಾಲಿಗೆ ಮೇಲೆ ಸರಸೋತಿ ಇರುವಂಥ

ಬಾಲ ನೀ ಹಾಲ ಕುಡಿಬಾರೋ

 

ಎಲ್ಲರ ಇರಲವ್ವ ಹುಲ್ಲಾಗಿ ಬೆಳೆಯಲಿ

ನೆಲ್ಲಿ ಬೊಡ್ಯಾಗ ಚಿಗಿಯಲಿ ಕಂದಯ್ಯ

ಜಯವಂತನಾಗಿ ಬಾಳಲಿ!!

 

õಕನ್ನಡ ತಾಯಿಯ ಮಕ್ಕಳು ನಾವುõ

ಕನ್ನಡ ತಾಯಿ ಮಕ್ಕಳು ನಾವು

ಕನ್ನಡಕ್ಕಾಗಿಯೇ ದುಡಿಯುವೆವು

ಕನ್ನಡ ತಾಯಿಯ ಸೇವೆಯ ಮಾಡುತ

ಕನ್ನಡಕ್ಕಾಗಿಯೇ ಮಡಿಯುವೆವು

ಕನ್ನಡವಾಗಿದೆ ನನ್ನಯ ಕಣ್ಣು

ಕನ್ನಡವಾಗಿದೆ ಕೈಕಾಲು

ಕನ್ನಡವೇ ಕಿವಿ ನರನಾಡಿಗಳು

ಕನ್ನಡ ಉಸಿರೇ ಬದುಕಿರಲು.

 

ಕನ್ನಡ ತಾಯಿ ಮಕ್ಕಳು ನಾವು

ಎಂದಿಗೂ ಕೂಡಿಯೇ ಬಾಳೋಣ

ಒಂದೇ ಬಳ್ಳಿಯ ಹೂಗಳು ನಾವು

ನಂದನವನಲಿ ಅರಳೋಣ.

ಹುಟ್ಟುವುದಾದರೆ ಮಾನವರಾಗಿ

ಕನ್ನಡನಾಡಲಿ ಹುಟ್ಟೋಣ

ಇಲ್ಲದೆ ಹೋದರೆ ಕೊಗಿಲೆದುಂಬಿ

ಹಂಸಗಳಾಗಿ ಜನಿಸೋಣ.

       -ಬಂ. ರಂ. ಸರ್ ಮೊಕ್ಕದ್ದಂ

 

       õಕಾರ ಹುಣ್ಣಿವೆõ

ಬಂತು ಬಂತು  ಬಂತು ಬಂತು

ಬಂತು ಕಾರ ಹುಣ್ಣಿಮೆ!

ತಂತು ತಂತು ಹರುಷ ತಂತು

ಅಬ್ಬಾ! ಕಾರ ಹುಣ್ಣಿಮೆ!!

ಎತ್ತುಗಳನು ತಿಕ್ಕಿ ತೊಳೆದು

ಬಣ್ಣ ಹಚ್ಚಿ ರೈತರು!

ಹಣೆಯ ಮೇಲೆ ಗೊಂಡೆ ಕಟ್ಟಿ

ಜೂಲ ಹೊದಿಸಿ ಬಿಡುವರು!!

    

ಹೊನ್ನ ಹುಗ್ಗಿ ಮುನ್ನ ಉಣಿಸಿ

ಅಕ್ಕ-ತಂಗಿ ಆರತಿ!

ಎತ್ತುತಿಹರು ಎತ್ತುಗಳಿಗೆ

ಬೆಳೆಯಲೆಂದು ಕೀರುತಿ!!

ಮದ್ದು ಸಿಡಿಸಿ ಬಣ್ಣ ಎರಚಿ

ಹೆಮ್ಮೆಯಿಂದ ರೈತರು!

ಬೀದಿ ಬೀದಿಯಲ್ಲಿ ಮೆರೆಸಿ

ಹರುಷದಿಂದ ಕುಣಿವರು!!

ರಾಸುಗಳಿಗೆ ಹುಟ್ಟು ಹಬ್ಬ

ಅಹುದು ಕಾರ ಹುಣ್ಣಿಮೆ!

ಅಂತೆ ರೈತ ಕುಲಕೆ ಹರುಷ

ಬರಲು ಕಾರ ಹುಣ್ಣಿಮೆ!!

ನಮ್ಮ ಊರು ಕೇರಿಯಲ್ಲಿ

ಹೇಳದಷ್ಟು ಸಂಭ್ರಮ!

ಇರುಳ ಬಾನ ಬಯಲಿನಲ್ಲಿ

ಮುಡಿದಂತೆ ಚಂದ್ರಮ!!

    ----ಪ.ಗು. ಸಿದ್ದಾಪುರ.

õನಾಯಿ ಮರಿõ

ನಾಯಿ ಮರಿ ನಾಯಿ ಮರಿ   ತಿಂಡಿ ಬೇಕೇ?
ತಿಂಡಿ ಬೇಕು ತೀರ್ಥ ಬೇಕು  ಎಲ್ಲ ಬೇಕು.
ನಾಯಿ ಮರಿ ನಾಯಿ ಮರಿ  ... ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ  ಕಾಯಬೇಕು.
ನಾಯಿ ಮರಿ ನಾಯಿ ಮರಿ  ಕಳ್ಳ ಬಂದರೆ ಏನು ಮಾಡುವೆ?
ಬೌ ಬೌ ಎಂದು ಬೊಗಳಿ  ನಿನ್ನ ಕರೆಯುವೆ.
ಜಾಣ ಮರಿ ನಾಯಿ ಮರಿ  ತಿಂಡಿ ತರುವೆನು
ನಾ ನಿನ್ನ ಮನೆಯನ್ನು   ಕಾಯುತಿರುವೆನು ....

  

õಹುಟ್ಟು ಹಬ್ಬõ
ಹುಟ್ಟು ಹಬ್ಬ ಬಂದರೆ ನಾನೇ ಬಾನಚಂದಿರ

ಬಂಧುಬಳಗ ಮಧ್ಯದಲ್ಲಿ ಮಿನುಗುವಂಥ ಸಡಗರ.

ಹೊಸ ಹೊಸ ಬಟ್ಟೆ ತೊಟ್ಟು ಹಣೆಗೆ ತಿಲಕ ಪಡೆವೆನು

ಹಾರಧರಿಸಿ ರಾಜನಂತೆ ಅಂದು ನಾನು ಮೆರೆವೇನು.

ಹಬ್ಬಗಳಲ್ಲಿ ದೊಡ್ದದಿದು ಅಪ್ಪ ಅಮ್ಮನ ಪಾಲಿಗೆ

ಸಿಹಿಯ ಹಂಚಿ ನಲಿವರು ಸುತ್ತಮುತ್ತ ಜನರಿಗೆ.

     

 

 

õಋಣõ     

ಚಿಣ್ಣರೇ! ಚಿಣ್ಣರೇ!!

ಬೇಗನೇ ಬನ್ನಿರಿ

ಗಿಡ ಮರಗಳನ್ನು

ಬೆಳೆಸೋಣ.

ನೀರನು ಉಣಿಸುತ

ಗೊಬ್ಬರ ಹಾಕುತ

ಕುಶಲವ ಕೇಳುತ ತಣಿಯೋಣ

ಬೆಳೆದ ಮರವು

ಗಾಳಿಯ ಕೊಟ್ಟು

ಅರೋಗ್ಯ ಭಾಗ್ಯವ ನೀಡುವವು

ಉಣಿಸಿದ ಕೈಗೆ

ಫಲವನ್ನು ಕೊಟ್ಟು

ಉಪಕಾರವನದು ಗೈಯುವದು.

ಪಡೆದ ನೆರವಿಗೆ

ಕೊಡುಗೆಯ ನೀಡಿ

ಬಾಳಿಗೆ ನೆಮ್ಮದಿ ನೀಡುವದು.

ಬೀಸುವ ಗಾಳಿಯು

ಸೂಸುವ ಗಾನವು

ಋಣ ತಿರಿಸುವ ಸದ್ಗುಣವು.

         -ಬಿ. ಶೇಖರಪ್ಪ ಹುಲಿಗೆರಿ

    õವನ ವಿಹಾರõ

ಗೆಳೆಯರೆಲ್ಲ ಕೂಡಿಕೊಂಡು ಬನಕೆ ಹೋಗುವ

ಬಿಡುವಿನಲ್ಲಿ ವನವಿಹಾರ ಮಾಡಿ ತಣಿಯುವ

ಕಾಡು ಮೇಡು ದಾರಿಯಲ್ಲಿ ಸುತ್ತಿ ಸುಲಿಯುವ

ಹುರುಪಿನಿಂದ ಬೆಟ್ಟ ಹತ್ತಿ ಏರಿ ಇಳಿಯುವ !!

ಮರದ ರೆಂಬೆಯಲ್ಲಿ ಕುಳಿತು ಕೇಕೆ ಹಾಕುವ !

ಹಣ್ಣುಕಯಿಗಳನು ಹರಿದು ತಿಂದು ತೇಗುವ !!

ಹಳ್ಳ ಕೊಳ್ಳದಲ್ಲಿ ಇಳಿದು ಜಳಕ ಮಾಡುವ !

ಹಿಗ್ಗಿನಿಂದ ನೀರು ಚಿಮ್ಮಿ ಆಟ ಆಡುವ!!

ಮರದ ನೆರಳಿನಲ್ಲಿ ಕುಳಿತು ಬುತ್ತಿಬಿಚ್ಚುವ!

ತಿಂಡಿ ತಿನಿಸು ಹಂಚಿಕೊಂಡು ಉಂಡು ತಣಿಯುವ !!

                -ಕಂಚ್ಯಾಣಿ ಶರಣಪ್ಪ

 

ಕೋಲಾಟ

ಕೋಲು ಕೋಲು ಕೋಲು ಕೊಲೆನ್ನ ಕೊಲೆ

ಕೋಲು ಕೋಲು ಕೋಲು ಕೊಲೆನ್ನ ಕೊಲೆ

ಬೆಳ್ಳನ್ನು ಎರಡೆತ್ತ ಬೆಳ್ಳಿಯ ಬಾರಕೋಲ

ಹಳ್ಳದ ಹೊಲವ ಹರಗ್ಯಾನ ಕೋಲ

ಹಳ್ಳದ ಹೊಲವ ಹರಗ್ಯಾನ ಬಸವಣ್ಣ

ತೆಳ್ಳಾನ ಹೊಟ್ಟಿ ಹಸದಾವ ಕೋಲ.

ಹಾಸ ಬಂಡಿಯ ಮೇಲೆ ಹಾದುಹೋದವನಾರ

ಪಾದ ಮುಡ್ಯಾವ ಪರಿಪರಿ ಕೋಲ

ಪಾದ ಮುಡ್ಯಾವ ಪರಿಪರಿ ಬಸವಣ್ಣ

ಹಾದುಹೋಗ್ಯಾನ ಜಾಲಕ್ಕ ಕೋಲ.

 

                ಸುವ್ವಾಲೆ ಹಾಡು

ಸುಯ್ ಸುಯ್ ಸುವ್ವಾಲೆ! ಸುವ್ವಿಲಾಲಿ ಸುವ್ವಾಲೆ!!

ಓಂ ಎಂದು ಕುಟ್ಟೋಣ ! ಸೊಂ ಎಂದು ಬಿಸೋಣ !

ಓಂ ಸೊಂ ಎರಡು ತಿಳಿಯಬೇಕನಾರಿ ! ಹಾಕವ್ವ ಹೇರಿ

ಮನವೆಂಬೋ ಮನಿಯೊಳಗ ! ಅಜ್ಞ್ಯಾನವೆಂಬ  ಕತ್ತಲ

ಕಲ್ಮಶ ಕಸವು ಬಿದ್ದೈತಿ ನಾರಿ ! ಹಾಕವ್ವ ಹೇರಿ

ಹೃದಯದ ಹಣತೆಗೆ ! ಭಕ್ತಿ ಎಣ್ಣೆಯ ಸುರಿದು

ಜ್ಞ್ಯಾನದ ದೀಪವ ಬೆಳಗಿಸ ನಾರಿ! ಹಾಕವ್ವ ಹೇರಿ.

 

 

 

ಭರತ ಭೂಮಿ ನನ್ನ ತಾಯಿ 

ಭರತ ಭೂಮಿ ನನ್ನ ತಾಯಿ 

ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ ಬಿಡುತೆ 

ಗುಡಿಯ ಕಟ್ಟಲು
ತುಹಿನ ಗಿರಿಯ ಸಿರಿಯ ಮುಡಿಯ
ಹಿರಿಯ ಕಡಲು ತೊಳೆಯವಡಿಯ
ಪೈರು ಪಚ್ಚೆ ಪಸುರಿನುಡೆಯ
ಭರತ ಭೂಮಿ ನನ್ನ ತಾಯಿ, ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು

ಸಿಂಧು, ಯಮುನೆ, ದೇವಗಂಗೆ
ತಪತಿ ಕೃಷ್ಣೆ ಭದ್ರೆ ತುಂಗೆ
ಸಲಿಲ ತೀರ್ಥ ಪುಣ್ಯರಂಗೆ
ಭರತ ಭೂಮಿ ನನ್ನ ತಾಯಿ, ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು

ಮತದ ಬಿರುಕುಳನು ತೊರೆವೆ
ನುಡಿಗಳೊಡಕುಗಳನು ಮರೆವೆ
ತೊತ್ತ ತೊಡಕುಗಳನು ಬಿರಿವೆ 

ಭರತ ಭೂಮಿ ನನ್ನ ತಾಯಿ, ಎನ್ನ ಪೊರೆವ ತೊಟ್ಟಿಲು

ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು
ಸ್ವಾತಂತ್ರ್ಯದ ಸ್ವರ್ಗಕೇರೆ ಪುಣ್ಯದೇಣಿ ಮೆಟ್ಟಲು

                        -ರಾಷ್ಟ್ರಕವಿ ಕುವೆಂಪು

ßಪರೋಪಕಾರ ß

ದೀಪ ತಾನು ಸುಟ್ಟುಕೊಂಡು ಬೆಳಕು ಕೊಡುವುದು.

ನೋವು ತಿಂದು ಗಿಡವು ತಾನು ಹಣ್ಣು ಕೊಡುವುದು.

ಹಸು-ಎಮ್ಮೆ ಸಾಕುತಿರಲು ಹಾಲು ಕೊಡುವವು.

ತಂದೆ-ತಾಯಿ ನೀತಿ ಮಾತು ಸುಖ ಕೊಡುವುದು.

ಗುರುವು ನಮಗೆ ವಿದ್ಯೆ ಕಲಿಸಿ ಮುಂದೆ ತರುವರು.

ಪರೋಪಕಾರದ ನಿತ್ಯ ಝರಿಯು ಹರಿಯುತಿಹುದು.

                -ಬಿ. ಎಸ್. ಜಗಾಪೂರ

 

õಯಾರು ದೇವರುõ

ದೇವರಂತೆ ದೇವರು ! ಯಾರು ನಮ್ಮ ದೇವರು?

ಹೆತ್ತ ತಾಯಿ ದೇವರು, ಇತ್ತ ತಂದೆ ದೇವರು,

ನಮ್ಮ ಗುರು ದೇವರು, ಮುದ್ದು ಕಂದ ದೇವರು.

ದೇವರಂತೆ ದೇವರು ! ಯಾರು ನಮ್ಮ ದೇವರು?

ಬೆಳಗೋ ಸೂರ್ಯ ದೇವರು, ಹರಿವ ನೀರು ದೇವರು,

ಚಲಿಪ ಗಾಳಿ ದೇವರು, ಬೆಳೆವ ಭೂಮಿ ದೇವರು.

 

ದೇವರಂತೆ ದೇವರು ! ಯಾರು ನಮ್ಮ ದೇವರು?

ಹಸಿರು ಹಾಸು ದೇವರು, ನಗುವ ಹೂವು ದೇವರು,

ಪ್ರಾಣಿ-ಪಕ್ಷಿ ದೇವರು, ಪ್ರಕೃತಿ ಸೊಬಗು ದೇವರು.

ದೇವರಂತೆ ದೇವರು ! ಯಾರು ನಮ್ಮ ದೇವರು?

ಸತ್ಯ ವಾಣಿ ದೇವರು, ತ್ಯಾಗ ಮೂರ್ತಿ ದೇವರು,

ಸ್ವಾರ್ಥ ರಹಿತ ದೇವರು, ಪ್ರೇಮ ಹೃದಯಿ ದೇವರು.

                   -ಆರ್. ಸರಸ್ವತಿ.

 

õ ದೇಶ ಸೇವೆõ

ದೇಶ ಸೇವೆ ಮಾಡ ಬನ್ನಿ ನನ್ನ ಮಮತೆ ಮಿತ್ರರೇ !

ದೇವ ಪೂಜೆಗಿಂತ ಮಿಗಿಲು ನಾಡ ಸೇವೆ ಗೆಳೆಯರೇ !!೧!!

ದೀನ ದಲಿತ ದುಃಖಿ ಜನರ ಸೇವೆಯನ್ನು ಮಾಡಿರಿ!

ನೊಂದು ಬೆಂದ ಜನರ ಬಳಿಯೆ ದೇವನಿಹನು ನೋಡಿರಿ!!೨!!

ಕುರುಡ ಕುಂಟ ಮುಕರನ್ನು ಪ್ರೇಮದಿಂದ ಕಾಣಿರಿ!

ಕರುಣೆಯಿಂದ ಅನ್ನವಿತ್ತು ನಿತ್ಯ ಕೊಟ್ಟು ತಣಿಯಿರಿ!!೩!!

ತಂದೆ ತಾಯಿ ಗುರು-ಹಿರಿಯರ ಮಾತು ನೀವು ಕೇಳಿರಿ!

ಅವರ ಸೇವೆ ಮಾಡುವಲ್ಲಿ ಹರುಷವನ್ನು ತಳಿರಿ!!೪!!

ಸತ್ಯ, ಶಾಂತಿ ಸುವಿಚರವು ನಿಮ್ಮ ಮನದಿ ಚರಿಸಲಿ !

ಐಕ್ಯ ಪ್ರೇಮ ಬಂಧುಭಾವ ಸರ್ವರಲ್ಲಿ ನೆಲೆಸಲಿ !!೫!!

                   -ಪಾ. ಭೀ. ಪಾಟೀಲ

 

õ ನಮ್ಮ ಶಾಲೆõ  

      

ನಾನು ಕಲಿಯುವ ನಮ್ಮ ಶಾಲೆ

ಒಂದು ಚಿಕ್ಕ ರಾಜ್ಯವು

ಪಾಠ ಹೇಳುವ ನಮ್ಮಯ

ಗುರುಗಳು ರಾಜ್ಯದ ಅರಸರು!!

ನೀತಿ ಮಾರ್ಗದಿ ನಡೆಯುವ

ನಾವ್ ನಾಡ ಪ್ರಜೆಗಳು

ಅರಸರು ಹೇಳುವ ನಿತಿವಾಕ್ಯ

ನಮಗೆ ವೇದ ವಾಕ್ಯಗಳು !!

ನಮ್ಮಯ ಪ್ರತಿನಿಧಿ ಶ್ಯಾಮನು

ನಾಡ ಮಹಾಮಂತ್ರಿಯು

ರಾಮ ಭೀಮ ಗೋಪಾಲರು

ನಾಡಿನ ಮುಂದಾಳುಗಳು !!

ಓದು ಬರಹ ಆಟ ಪಾಠ

ಇಲ್ಲಿಯ ನಿತ್ಯದ ಕೃತ್ಯವು

ವಿದ್ಯೆ ಕಲಿವುದೆಮ್ಮಯ

ಮೂಲ ಧ್ಯೇಯವು!!

ಶಿಲ್ಪಿಯಂತೆ ಕಟೆದು ನಮಗೆ

ಅರಸರು ಪಾಠ ಹೇಳುತಿಹರು

ನಗಿಸಿ ರಮಿಸಿ ಮಮತೆಯಿಂದ

ಬುದ್ಧಿ ಕಲಿಸುತಿಹರು!!

ಶಿಸ್ತು ವಿದ್ಯೆ ವಿನಯದಿಂದ

ಪಾಠವಿಲ್ಲಿ ಕಲಿಯುವೆವು

ನ್ಯಾಯ ನೀತಿ ಧರ್ಮದಿಂದ

ಈ ನಾಡಿನಲ್ಲಿ ಬಾಳುವೆವು!!

ಮೇಲು ಕೀಳು ಭಾವ ಸಲ್ಲ

ಅಂದ ಚಂದ ಈ ನಾಡಿನಲ್ಲಿ

ದ್ವೇಷ ಅಸೂಯೆ ಭಾವನೆ ಇಲ್ಲ

ಪ್ರಜಾಹಿತಕೆ ದುಡಿವ ಇಲ್ಲಿ !!

ಅರಸನಾಡಿಗೆ ಸೇವೆಗೈಯುತ

ಪ್ರಗತಿ ಪಥದಲಿ ಸಾಗುವಾ

ಚೊಕ್ಕ ಚಿಕ್ಕ ರಾಜ್ಯದಲ್ಲಿ

ಹರುಷದಿಂದ ನಲಿಯುವಾ!!

             -ರಾಜೇಂದ್ರ ಗಡಾದ

 

          õ ಉಗಿಬಂಡಿ õ

 

ಬರುತಿದೆ ಬರುತಿದೆ ಉಗಿಬಂಡಿ

ಲೋಹದ ಮಾರ್ಗದಿ ಭೀಕರ ವೇಗದಿ

ಧಾವಿಸುತಿದೆ ನೋಡಿ! !ಉಗಿಬಂಡಿ!

ಜುಗು ಜುಗು ಜುಗು ಜುಗು

ಜುಗು ಜುಗು ಜುಗು ಜುಗು

ಆವೇಶದಿ ಆರ್ಭಟಿಸುತಿದೆ

ಗಡಗಡ ಬಡಬಡ ಗುಡುಗುತಿದೆ

ಬುಸುಬುಸುಗುಟ್ಟುತ

ಸದ್ದನು ಮಾಡುತ

ಹಾವಿನ ಹಾಗೆಯೆ ಹರಿಯುತಿದೆ

ಎದೆಯನು ನಡುಗಿಸಿ ಬರುತಲಿದೆ!  ! ಜುಗು ಜುಗು ಜುಗು ಜುಗು

ಸಾವಿರ ಸಾವಿರ ಜನರನ್ನು

ತುಂಬಿಸಿ ಒಯ್ಯುವ ಗಡಿಯನು

ದೂರದ ಊರಿಗೆ

ವೇಗದ  ಸಾರಿಗೆ

ಸಂಪರ್ಕದ ಉಗಿಬಂಡಿಯನು

ನೋಡಿರಿ ಬಡವರ ಬಂಧುವನು ! ಜುಗು ಜುಗು ಜುಗು ಜುಗು 

ಊರೂರಿಗೆ ಓಡುವ ಗಾಡಿ

ನಾಡಿನ ಪ್ರಗತಿಯ ನರನಾಡಿ

ಬಯಲು ಬೆಟ್ಟಗಳ

ಕಣಿವೆ ತಿಟ್ಟುಗಳ

ದಾಟುತ ಓಡುತಲಿದೆ ಬಂಡಿ

ದೇಶದ ಹೆಮ್ಮೆಯ ಉಗಿಬಂಡಿ! ಜುಗು ಜುಗು ಜುಗು ಜುಗು

           -ಬಿ.ಎಸ್. ಕುರ್ಕಾಲ್

   ಗುರುತ್ವಾಕರ್ಷಣೆ

ಝಕ್ಕ ನಕ್ಕ ನಕ್ಕ ಝಕ್ಕ

ಝಕ್ಕ ನಕ್ಕ ನಕ್ಕ ಝಕ್ಕ    !!ಪ!!

ರಂಗ ನಿಂಗ ಕೂಡಿಕೊಂಡು

ಚೆಂಡಿನಾಟ ಆಡಿದರ

ಚೆಂಡೆತ್ತಿ ರಂಗ ಒಗೆದಾನ!ನಿಂಗ

ಹಿಡಿಯಾಕ ಓಡೋಡಿ ಬಂದಾನ!!೧!!

ಮ್ಯಾಲಿನಿಂದ ಚೆಂಡು ಭೌಂವಂತ ಬಂತು

ನಿಂಗನ ಕೈಗೆ ಬಡಿದಾದ! ಚೆಂಡು

ಭರ್ರಂತ ಮ್ಯಾಲ ಜಿಗಿದಾದ!!೨!!

ರಂಗ ನಿಂಗ ಕೂಡಿಕೊಂಡು

ಚೆಂಡಿನ ಕಡೆ ನೋಡಿದಾರ

ಹಿಂಗ್ಯಾಕ ಚೆಂಡು ಜಿಗಿದಾದ!ತಿಳಿಯದೆ

ಪಿಳಿ ಪಿಳಿ ಕಣ್ಣು ಬಿಡತಾರ!!೩!!

ಗೆಳೆಯರ ಗೊಂದಲ ದೂರದಿಂದ ಕಂಡಾನ

ಓಡೋಡಿ ಸಂಗ ಬಂದಾನ !ತಾನು

ಒಗಟಾನ ಬಿಡಿಸಿ ಹೇಳ್ಯಾನ !!೪!!

ರಂಗಣ್ಣ ಕೊಟ್ಟ ಬಲದಿಂದ ಚೆಂಡು

ಗಗನಕ್ಕ ಮ್ಯಾಲ ಹಾರ್ಯಾದ! ಆಗ

ಭೂಮಿಯ ಸೆಳೆತಕ್ಕ ಸಿಕ್ಕಾದ!!೫!!

ಭೂಮಿಯ ಸೆಳೆತಕ್ಕ ಸಿಕ್ಕಂಥ ಚೆಂಡು

ವೇಗದಿ ಮ್ಯಾಲಿಂದ ಬಂದಾದ! ನೋಡು

ನಿಂಗನ ಕೈಗೆ ಬಡಿದಾದ!!6!!

ನಿಂಗನ ಕೈಯ ಹಿಮ್ಮುಖ ಬಲವು

ಚೆಂಡನ್ನ ಮರಳಿ ಕಳಿಸ್ಯಾದ!ಚೆಂಡು

ಬಂದಹಂಗೆ ತಿರುಗಿ ಹೋಗ್ಯಾದ!!7!!

ಗಿಲಿಗಿಂಚಿ ಗೊಂಬಿ ಟೊಪ್ಪಿಗಿ ಅಂಗಿ

ಒಂದೊಂದ ಮ್ಯಾಲ ಒಗೆದಾನ !ಎಲ್ಲವೂ

ಭೂಮಿಗೆ ಮರಳಿ ಬಂದಾವ!!8!!

ಮರ ಗಿಡ ಬಳ್ಳಿ, ಜನ ದನ ಪಕ್ಷಿ

ಭೂಮಿಯು ಎಲ್ಲಾನ ಸೆಳೆತಾದ!ಏನಿದ್ದರೂ

ಭೂಮಿಗೆ ಮರಳಿ ಬರತಾದ !!9!!

ಭೂಮಿಗೆ ಇರುವ ಈ ಬಲ ನೋಡಿ

ಗುರುತ್ವಾಕರ್ಷಣೆ ಎನಿಸ್ಯಾದ !ಇದನ್ನ

ನ್ಯೂಟನ್ನ ಬಿಡಿಸಿ ಹೇಳ್ಯಾನ!!10!!

         -ಎಂ. ಬಿ. ಲಿಂಗದಳ್ಳಿ

 

õ ಕಾಮನಬಿಲ್ಲು õ

 

ಕಾಮನಬಿಲ್ಲದು ನೋಡಲ್ಲಿ

ಆಕಾಶದಲಿ ತೇಲುತಿದೆ

ಭೂಮಿಗೆ ಬಿದ್ದ ಮಳೆ ಹನಿಯನ್ನು

ಆಕಾಶದಲಿ ತೋರುತಿದೆ!!

ಆಕಾಶದಿ ನೋಡಲ್ಲಿ

ಬಣ್ಣದ ತೇರದು ಸಾಗುತಿದೆ

ಜಗದ ಜನರ ಮೇಲೆ

ಬಣ್ಣದ ಹೂವನು ಸುರಿಸುತಿದೆ!!

ಸಪ್ತ ಬಣ್ಣಗಳ ಚಿತ್ರವದು

ಆಕಾಶದಲಿ ಹುಟ್ಟಿಸಿದೆ

ಸಪ್ತಸ್ವರಗಳ ಸಂಗೀತವನು

ಆಕಾಶದಲಿ ನುಡಿಸುತಿದೆ!!

ಹಣೆಯ ಮೇಲಿನ ಕುಂಕುಮದಂತೆ

ಕುಲುಕುಲು ನಗೆಯನು ಬೀರುತಿದೆ

ನಾಟ್ಯವನಾಡುವ ಕಾಲಿನ ನೀರೆಯು

ತುಳಿದು ದಾರಿಯ ಹಾಗೆ ತೋರುತಿದೆ!!

ಕಾಮನಬಿಲ್ಲದು ಬಿಲ್ಲಲ್ಲ ಜಗಕೆ ಹಬ್ಬವದು

ಕನ್ಯೆಯ ಕಣ್ಣಿನ ಮೇಲಿನ ಹುಬ್ಬವದು

ಹುಬ್ಬಿನ ಮೇಲಿನ ಹಚ್ಚಿದ ಬಣ್ಣ

ತೆಗೆಸಿದೆ ಈ ಜನರ ಕಣ್ಣ!!

      -ಮಹಾಂತೇಶ ಮಲ್ಲನಗೌಡರ                  

 

 

 õ ಅನುಬಂಧದ ಹಣತೆõ

  ದೇಶ ಬಾಂಧವರೆ ಬನ್ನಿರಿ

ಒಂದೇ ನಾವೆಲ್ಲರೂ ಎನ್ನಿರಿ !!ಪ!!

ಅಭಿಮಾನ ಬೆಳೆಯಲಿ

ಅಜ್ಞಾನ  ಅಳಿಯಲಿ

ಸಂಪ್ರೀತಿ ಸೌಗಂಧ ಸೂಸಿಹರಡಲಿ

ಭಾಷೆ ಬೇರೆಯಾದರೇನು

ಭಾವ ಒಂದೆಯಲ್ಲವೆ?

ಎಲ್ಲೆಲ್ಲೂ ಏಕತೆಯ ಧ್ವನಿಯು ಹೊರದಲಿ

ಜಾತಿ ಮತ ಪಂಗಡ

ಕಿತ್ತೊಗೆದು ಬನ್ನಿ ಸಂಗಡ

ಸೇರಿ ಉಚ್ಚರಿಸುವ ಭಾವೈಕ್ಯ ಮಂತ್ರವ

ಧರ್ಮ ಸಂಪ್ರದಾಯ ಕಚ್ಚಾಟಕೆ ವಿದಾಯ

ಸಾರು ಸಮಾನತೆಯ ನಮ್ಮ ತಂತ್ರವ

ಮೇಲು-ಕೀಳು ಸ್ತರವ ಬಿಡು

ಕೂಡಿ ಬಾಳುವ ಪಣವ ತೊಡು

ಆಗ ಮೇಲೇರುವುದು ಗೌರವ-ಘನತೆ

ದೇಶವಾಗದಿರಲಿ ಹೋಳು

ವಿಶಾಲ ಭಾವ ಮನದಿ ತಾಳು

ಆರದಿರಲಿ ಎಂದೆಂದೂ ಅನುಬಂಧದ ಹಣತೆ

           -ಚನ್ನವೀರ ಮ. ಸಗರನಾಳ

 

     õಮೂಡಲ ದೀಪವನುರಿಸುವõ

ಮೂಡಲ ದೀಪವನುರಿಸುವ ಕೈಯಿಗೆ

ಶರಣೆಂಬೆವು ನಾವು !!

ಕಡಲಿನ ಕೊಡಗಳ ಸುರಿಸುವ ಕೈಯಿಗೆ

ಶರಣೆಂಬೆವು ನಾವು !!

ಬೆಳೆದಿಂಗಳ ಕೆನೆಯುಣಿಸುವ ಕೈಯಿಗೆ

ಶರಣೆಂಬೆವು ನಾವು !!

ಒಲುಮೆಯ ಧಾನ್ಯವಾನುನಿಸುವ ಕೈಯಿಗೆ

ಶರಣೆಂಬೆವು ನಾವು !!

ಪುಣ್ಯದ ಬತ್ತವನಳೆಯುವ ಕೊಳಗಕೆ

ಶರಣೆಂಬೆವು ನಾವು !!

ಹರುಷದ ಗೂಡಿನ ಹಕ್ಕಿಯ ಬಳಗಕೆ

ಶರಣೆಂಬೆವು ನಾವು !!       

ಒಳಿತಿನ ದಾರಿಯ ಹಿಡಿಸುವ ದಾರಿಗೆ

ಶರಣೆಂಬೆವು ನಾವು !!

ಕೆಡುಕಿನ ಮಡಿಕೆಯನೋಡೆಯುವ ಕೋಲಿಗೆ

ಶರಣೆಂಬೆವು ನಾವು !!

ಪಾಪದ ಸೌದೆಯ ಸೀಳುವ ಕೊಡಲಿಗೆ

ಶರಣೆಂಬೆವು ನಾವು !!

ನೀಲಿಯ ಧೆರೆಯ ನಿಲ್ಲಿಸಿದವನಿಗೆ

ಶರಣೆಂಬೆವು ನಾವು !!

   -ಸು. ರಂ. ಎಕ್ಕುಂಡಿ


                ಯುಗಾದಿ

ಯುಗ ಯುಗಾದಿ ಕಳೆದರೂ ಯುಗಾದಿ ಮತ್ತೆ ಬರುತ್ತಿದೆ.

ನವ ಜೀವಕೆ ನವ ಚೇತನ ಹೊಸತು ಹೊಸತು ತರುತಿದೆ.

ಮನುಜ ಮನುಜರೆಲ್ಲ ಏಳಿ ಹೊಸ ಹಾಡನು ಹಾಡುವ

ಮನುಜರೆಲ್ಲ ಒಂದೇ ಎಂಬ ಸಮಕೆ ಜಗಕೆ ಸಾರುವ.

ಜೀವವಳಿಯೆ ಈ ದೇಹಕ್ಕಿಲ್ಲ ಬೆಲೆಯು ಮಾನವಾ.

ಬನ್ನಿರಣ್ಣ ಬನ್ನಿರಣ್ಣ ಬೇವು ಬೆಲ್ಲ ತಿನ್ನುವ

ಬಾಳ ಕಹಿಗೆ ಸಿಹಿಯ ಬೆರೆಸಿ ಒಮ್ಮನದಿ ಬಾಳುವ.

ಬಾಳು ಬರಿಯ ಕಗ್ಗವಲ್ಲ ಆಗಲಿ ಬಾಳ್ ಸಗ್ಗವು

ಬಾಳು ಸರಸ ವಿರಸ ಭರಿತ ಆಗಲಿ ಬಾಳ್ ಸಮರಸ.

ಸತ್ಯಶಾಂತಿ ಸಹನೆಯಿಂದ ಸರ್ವರ ಹಿತಕೆ ಬಾಳುವ

ಜಾತಿ, ಮತ, ನಾಡು-ನುಡಿ ಎಂಬ ಜಗಳ ಬಿಟ್ಟು ಬಾಳುವ.

                 -ಟಿ. ಜಿ. ಪ್ರಭಾಶಂಕರ.

 

 

 

 

 

 

 

ಏರಿಸೋಣ ಬಾವುಟ

ಬನ್ನಿ ಬನ್ನಿ ಚಿಣ್ಣರೆಲ್ಲ ಏರಿಸೋಣ ಬಾವುಟ

ಬಾನ ಬಯಲು ಗಾಳಿಯಲ್ಲಿ ಹಾರುತ್ತಿರಲಿ ಪಟಪಟ

ಅಡಿಗೆ ಮೂರೂ ನಡುವೆ ಬಿಳಿದು

ಮೇಲೆ ಬಣ್ಣ ಕೆಸರ

ನಡುವೆ ಚಕ್ರ ನೀಲಿ ಬಣ್ಣ

ಧ್ವಜವು ಏನಿತು ಸುಂದರ

ನಮ್ಮ ನಾಡ ಹಿರಿಯ ಕಥೆಯ

ಸಾರುವುದಿದು ಸಂತತ

ಇದಕೆ ಮಣಿದು ಹೊಗಳಿ ಹಾಡಿ

ಜಯ ಜಯ ಜಯ ಭಾರತ

 

 

 

ಬಾಳಿರಿ ಮಕ್ಕಳೇ

ಹಸಿದವರಿಗೆ ಹಣ್ಣನು ನೀಡಿ

ದಣಿದವರಿಗೆ ನೆರಳನು ನೀಡಿ

ಬಾಳುತಲಿರುವ ಗಿದವನು ನೋಡಿ

ಬಾಳಿರಿ ಮಕ್ಕಳೆ ಎಲ್ಲರು ಕೂಡಿ.

ಬದಿಯ ಹೊಲಕೆ ನೀರನು ನೀಡಿ

ಜಿವಿಗಳೆಲ್ಲರ ತ್ರುಷೆಯನು ದೂಡಿ

ಹರಿಯುತಲಿರುವ ಹೊಳೆಯನು ನೋಡಿ

ಬಾಳಿರಿ ಮಕ್ಕಳೆ ಎಲ್ಲರುಕೂಡಿ

ಧರೆಯಲಿ ಹಸಿರು ಹೊನ್ನನು ನೋಡಿ

ಹಗಲಿರುಳೆನ್ನದೆ ದುಡಿಯುವ ನೋಡಿ

ರೈತರ ಗೋಳಿನ ಬಾಳನು ನೋಡಿ

ಬಾಳಿರಿ ಮಕ್ಕಳೆ ಎಲ್ಲರುಕೂಡಿ

ಗಂಟೆಯ ನೆಂಟ ಗಡಿಯಾರವ ನೋಡಿ

ಚಾಚೂ ತಪ್ಪದ ಕೆಲಸದ ಮೋಡಿ

ಸಮಯವ ಸಾರುವ ಗೆಳೆಯನ ನೋಡಿ

ಬಾಳಿರಿ ಮಕ್ಕಳೆ ಎಲ್ಲರುಕೂಡಿ.

     -ಟಿ. ಆರ್. ಜೋಡಟ್ಟಿ

ಭಲೆರೆ ಬಹು ಚಂದ

ದುರುಳ ಜನರಿಗೆ ಜಗಳ ಚೆಂದವು

ಸರಳ ಜನರಿಗೆ ಸತ್ಯ ಚೆಂದವು

ಪರಮ ಪುಣ್ಯದ ಕಾರ್ಯ ಚೆಂದವು ಭಲೆರೆ ಬಹು ಚೆಂದ

 

ಜರಠ ಜನರಿಗೆ ವಿರತಿ ಚೆಂದವು

ತರುಣಿ ತರುಣರ ಮದುವೆ ಚೆಂದವು

ಸರಸ ಕನ್ನಡ ನುಡಿಯು ಚೆಂದವು ಭಲೆರೆ ಬಹು ಚೆಂದ

ಫಲವು ಇದ್ದರೆ ಹೊಲವು ಚೆಂದವು

ಒಲವು ಇದ್ದರೆ ಬಾಳ್ವೆ ಚೆಂದವು

ಉಲಿವ ಕೋಕಿಲ ದನಿಯು ಚೆಂದವು ಭಲೆರೆ ಬಹು ಚೆಂದ

 

ಎಳೆಯ ಮಕ್ಕಳ ಮಾತು ಚೆಂದವು

ಮಳೆಯು ಬಿದ್ದರೆ ಭೂಮಿ ಚೆಂದವು

ಬಿಳಿಯ ಖಾದಿಯ ಬಟ್ಟೆ ಚೆಂದವು ಭಲೆರೆ ಬಹು ಚೆಂದ

ರೊಕ್ಕ ಇದ್ದರೆ ಸಂತೆ ಚೆಂದವು

ಚಿಕ್ಕತನದಲಿ ವಿದ್ಯೆ ಚೆಂದವು

ಮಕ್ಕಳಿದ್ದರೆ ಮನೆಯು ಚೆಂದವು ಭಲೆರೆ ಬಹು ಚೆಂದ

 

ನಾದವಿದ್ದರೆ ಗಾನ ಚೆಂದವು

ವೇದ ಶಾಸ್ತ್ರದ ವಚನ ಚೆಂದವು

ಸಾಧು ಸಂತರ ಸಂಗ ಚೆಂದವು ಭಲೆರೆ ಬಹು ಚೆಂದು

ವ್ಯಾಧಿಯಿಲ್ಲದ ಬುದ್ಧಿ ಚೆಂದವು

ಓದು ಬರೆಯುವ ಶಾಲೆ ಚೆಂದವು ಭಲೆರೆ ಬಹು ಚೆಂದ

        -ಆನಂದ ಕವಿ.

 

 ಜಯವೆನ್ನಿ ಭಾರತಾಂಬೆಗೆ

ಜಯವೆನ್ನಿ ಭಾರತಾಂಬೆಗೆ

ಜಯವೆನ್ನಿ ಜಯವೆನ್ನಿ ಭಾರತಾಂಬೆಗೆ

ಜಯವೆನ್ನಿ ಜಯವೆನ್ನಿ ವಿಶ್ವಖ್ಯಾತಿಗೆ !!

 

ಉತ್ತರದ ಕಾಶ್ಮೀರ ದಕ್ಷಿಣದ ಸಾಗರವು

ಉತ್ತುಂಗ ಶಿಖರವೇ ಪುಣ್ಯನದಿಗಾಶ್ರಯವು

ಎತ್ತನೋಡಿದರತ್ತ ಸಸ್ಯ ಸ್ಯಾಮಲೆಯು

ಮತ್ತೆ ಕಾಲ್ತೊಲೆಯುವಳು ಕನ್ಯಾಕುಮಾರಿಯು !!೧!!

 

ಹಲವು ಮತ ಪಂಥಗಳು, ಜಾತಿ-ವಿಜಾತಿಗಳು

ಕಲಹಕೆಳಸದ ಒಂದೆ ತಾಯ ಮಕ್ಕಳು!

ಕೆಲವೊಮ್ಮೆ ಒಂದಿನಿತು ಹುಬ್ಬನೇರಿಸಿದರೂ

ಬಳಿಗೆ ಬಂದರೆ ಸಾಕು ತಕ್ಕೈಸುವವರು!!೨!!

 

ಕಣಿವೆಯಿಂದಿಳಿದರೂ ಗಟ್ಟ ಮೆಟ್ಟಿದರೂ

ಘನ ಕಡಲ ಅಲೆಯಲ್ಲಿ ತೇಲುತ್ತ ಬಂದರೂ!

ಧನದಾಶೆ ಅಧಿಕಾರ ಗದ್ದುಗೆಯ ಬಯಸಿದರೂ

ಮನದುಂಬಿ ಆಸರೆಯ ನೀಡಿದೆವು ನಾವು !!೩!!

 

ಪರಕೀಯ ಇಳಿಯು ತಾ ಹುಲಿಯಾಗಿ ಮೆರೆಯುತ್ತ

ಪಾರತಂತ್ರ್ಯದ ಉರುಳ ಬಿಗಿಯುವಂತಾಯ್ತು!

ಚರಕಾ ತಿರುತಿರುಗಿ ಪಂಜು ತಾ ಉರಿಯಾಗಿ

ಮರ ಮರಳಿ ಸ್ವಾತಂತ್ರ್ಯ ಕಹಳೆ ಮೊಳಗಿತ್ತು !!೪!!

 

ತಾಯಿ ಭಾರತೀಯ ಮಡಿಲ ಮಕ್ಕಳು ನಾವು

ಆಯ ತಪ್ಪದ ಬದುಕ ಹರಕೆ ಹೊತ್ತವರು!

ಕಾಯವಳಿದರು ಕೀರ್ತಿ ಉಳಿಸುವ ಹಂಬಲದಿ

ನ್ಯಾಯ, ಸೌಹಾರ್ದಗಳ ನೋಂಪಿ ಸೋತವರು !೫!!

 

ದೇಶವಿದು ಸನಾತನ, ನಿಷ್ಥೆಯೇ ಆರಾಧನಾ

ಕುಶಲವು ಸರ್ವರಿಗೆ ಇರಲಿ ಬಕುತಿ ಭಾವನಾ!

ನಿಷೆ ಹರಿದು ಉಷೆ ಬೆಳಗಿ ತೊಳಗುವಂತೆ

ಜಸದ ಕಂಪು ಪಸರಿ ತಾ ಮೆರೆಯುವಂತೆ!!6!!

                        -ಸುನಿತಾ ಎಂ. ಶೆಟ್ಟಿ

 

ನೇತ್ರದಾನ

ಅನ್ನದಾನ, ಹೊನ್ನದಾನ ಮತ್ತೆ ವಸ್ತ್ರ ದಾನವು

ಎಲ್ಲಕ್ಕಿಂತ ಮಿಗಿಲು ನಮ್ಮ ನೇತ್ರ ದಾನವು

ಸತ್ತಮೇಲೆ ದೇಹದಲ್ಲಿ ನೆತ್ರವಿದ್ದರೇನದು?

ಸಾವ ಮುನ್ನ ನೇತ್ರವನ್ನು ದಾನ ಮಾಡಿ ಲೇಸದು.

ನೆತ್ರವಿಲ್ಲದವರಿಗೆ ಅದನು ಕಸಿ ಮಾಡುವರು

ಅಂಧರಿಗೆ ಕಣ್ಣು ಕೊಟ್ಟು ಪುಣ್ಯ ನಮಗೆ ಬರುವದು.

ದೇಹವಳಿದು ನೇತ್ರ ಉಳಿದು ಜನವನೆಲ್ಲ ನೋಳ್ಪವು

ಅಂಧಕಾರದಲ್ಲಿದ್ದ ಮನುಜಗೆ ಬೆಳಕು ನೀಡಿದ ಭಾಗ್ಯವು.

ನೇತ್ರದಾನ ಮಾಡಿದವರ ಬದುಕು ಪುಣ್ಯ ಪಾವನ

ಸತ್ತಮೇಲೂ ದೃಷ್ಟಿಕೊಟ್ಟ ಹೊಸತು ಅದುವೇ ಜೀವನ.

                   - ಶ್ರೀಮತಿ ಗೌರಾ ಬಿ. ತಾಳಿಕೋಟಿಮಠ

 

 

ಹೊಸ ಇತಿಹಾಸ

 ಹೊಸ ಇತಿಹಾಸವ ಬರೆಸುವೆವು ನಾವ್

ನವ ಮನ್ವಂತರ ಬರಿಸುವೆವು !!ಪ!!

ಮನಸಿಗೆ ಮುಸುಕಿದ ಜಾಢ್ಯವ ಬಿಡಿಸಿ

ನವ ಚೈತನ್ಯವ ಸಮರವ ಸಾರಿ

ವಿಜಯದ ಭೇರಿ ಹೊದೆಯುವೆವು. !!೧!!

ನವ ಪಿಳಿಗೆಯಲಿ ಸಮದಲ ಪ್ರೀತಿಯ

ಒಳ್ಳೆಯ ಗುಣಗಳ ಬೆಳೆಸುವೆವು

ಭ್ರಷ್ಟಾಚಾರದ ಬೇರನು ಕೀಳಿಸಿ

ನವ ಜನಾಂಗವ ರಚಿಸುವೆವು !!೨!!

ಮಾನವ ಪ್ರೇಮದ ಮಂದಾರವನು

ಸರ್ವರ ಹೃದಯದಿ ಊರುವೆವು

ಅಂಥ:ಕ್ಕರಣದ ಜ್ಯೋತಿಯ ಬೆಳಗಿಸಿ

ಲೋಕಕೆ ಒಳಿತನು ಕೊರುವೆವು!!೩!!

ಸಂಪನ್ಮೂಲಗಳಟ್ಟಿಸಿಕೊಂಡು

ಅದೃಷ್ಟಶಾಲಿಗಳಾಗುವೆವು

ನಾಡಿನ ಕೀರ್ತಿಯ ದಶದಿಕ್ಕಿನಲಿ

ಹರಡಿಸಿ ಸರ್ಥಕರಾಗುವೆವು!!೪!!   -ಈಶ್ವರ ಕಮ್ಮಾರ

 ಆದರ್ಶ ವಿದ್ಯಾರ್ಥಿ

ಶಾಲೆಯಲ್ಲಿ ಒಬ್ಬ ಬಡವ

ಹುಡುಗನಿದ್ದನು

ದಿನದ ಪಾಠಗಳನು ಬಿಡದೆ

ಓದುತ್ತಿದ್ದನು.

 

ನಿಷ್ಥೆಯಿಂದ ಪಾಠಗಳನು

ಕೆಳುತ್ತಿದ್ದನು.

ಕಷ್ಟ ವಿಷಯಗಳನು ಕೇಳಿ

ತಿಳಿಯುತ್ತಿದ್ದನು.

ಒಳ್ಳೆ ಕೂಟಗಳಲ್ಲಿ ಅವನು

ಸೇರುತ್ತಿದ್ದನು .

ಸಂಜೆಯಲ್ಲಿ ಆಟಗಳನು

ಆಡುತ್ತಿದ್ದನು.

ಶಾಲೆಯಲ್ಲಿ ಹೆಚ್ಚು ಅಂಕ

ಪಡೆಯುತ್ತಿದ್ದನು.

ಗುರುಗಳೆಲ್ಲರ ಮೆಚ್ಚುಗೆಗೆ

ಪಾತ್ರನಾದನು.            

ವಿದ್ಯಾರ್ಥಿವೇತನಗಳ

ಪಡೆಯುತ್ತಿದ್ದನು.

ವಿದ್ಯೆಗಾಗಿ ಅದನು ತಾನೆ

ಬಳಸುತ್ತಿದ್ದನು

ಬಡವನೆಂಬ ಭಾವನೆಯನು

ಮರೆತು ಬಿಟ್ಟನು.

ಸಡಗರದಿ ಜ್ಞಾನದಿಂದ

ಧನಿಕನಾದನು.

     -ಕೆ. ನಂಜುಡಾಚಾರ್ಯ              

 

 

 

 

 

 

 

 

 

 

 

 

ನೇಗಿಲ ಯೋಗಿ

              -ಕುವೆಂಪು

 

ನೇಗಿಲ ಹಿಡಿದಹೊಲದೊಳು ಹಾಡುತ,
ಉಳುವ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೇ ಪೂಜೆಯು,
ಕರ್ಮವೇ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ,
ಸೃಷ್ಟಿನಿಯಮದೊಳಗವನೇ ಭೋಗಿ.
                           
ಉಳುವ ಯೋಗಿಯ....

ಲೋಕದೊಳೇನೆ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುದಿಸಲಿರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮುಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೇ ಇಲ್ಲ.
                           
ಉಳುವ ಯೋಗಿಯ.... 

ಯಾರೂ ಅರಿಯದ ನೇಗಿಲ ಯೋಗಿಯೇ 
ಲೋಕಕೆ ಅನ್ನವನೀಯುವನು.
ಹೆಸರನು ಬಯಸದೆ ಅತಿಸುಖಕೆಳಸದೆ,
ದುಡಿವನು ಗೌರವಕಾಶಿಸದೆ.
ನೇಗಿಲ ಕುಲದೊಳಗಡಗಿದೆ ಕರ್ಮ,
ನೇಗಿಲ ಮೇಲೆಯೇ ನಿಂತಿದೆ ಧರ್ಮ.
                          
ಉಳುವ ಯೋಗಿಯ....

 

    ಸುಗ್ಗಿಯ ಹಾಡು
 ರಚನೆ:  ದ. ರಾ. ಬಳುರಗಿ

ಸುಗ್ಗಿಯು ಬಂದಿತು ಹಿಗ್ಗನು ತಂದಿತು
ನಮ್ಮಯ ನಾಡಿನ ಜನಕೆಲ್ಲ
ಸಗ್ಗದ ಸುಖವನು ನೀಡುತ ರೈತಗೆ
ದುಡಿಯಲು ಹಚ್ಚುತ ದಿನವೆಲ್ಲ


ಬೆಳೆಸಿಯ ತಿನ್ನುತ ಮಜ್ಜಿಗೆ ಕುಡಿಯುತ
ಇರುವರು ರೈತರು ಹೊಲದಲ್ಲಿ ಸುಖದಲ್ಲಿ                                                                                ಜೋಳನ್ನು ಕೊಯ್ಯುತ್ತ ಗೂದನ್ನು ಹಾಕುತ್ತ                                                                                       ಕುಣಿವರು ರೈತರು ಹೊಲದಲ್ಲಿ

ಕಣವನು ಕಡಿಯುತ ನೀರನು ಹೊಡೆಯುತ
ಮೇಟಿಯ ಕುಣಿಯನು ಅಗೆಯುವರು
ತೆನೆಯನು ಮುರಿಯುತ ಹೆಸರನು ಹೇಳುತ
ಗುಂಪಿಯ ನೆಳೆಯುತ ಒಗೆಯುವರು


ಹಂತಿಯ ಹೊಡೆಯುತ ಕಂತಿಯ ತೆಗೆಯುತ
ಬೆಳಗಿನವರೆಗೂ ಹಾಡುವರು
ಕಾಳನು ತೂರುತ ಗಾಡಿಯ ಹೇರುತ
ಊರಿನ ಕಡೆಗೆ ಓಡುವರು

                      - ದ. ರಾ. ಬಳುರಗಿ

 

 

 

 

 

 

 

 

 

ತುತ್ತೂರಿ

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು

ತನಗೆ ತುತ್ತೂರಿ ಇದೆಯೆಂದು                                                                                                                  ಬೆರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ                                                                                                                 ಕಸ್ತುರಿ ನಡದನು ಬೀದಿಯಲಿ
ಜಂಬದ ಕೋಳಿಯ ರೀತಿಯಲಿ

ಜಾರಿತು ನೀರಿಗೆ ತುತ್ತೂರಿ                                                                                                              ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು                                                                                                                   ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು                                                                                                               ಜಂಬದಕೋಳಿಗೆ ಗೋಳಾಯ್ತು

 

 

 

 

ಕೋಡಗನ ಕೋಳಿ ನುಂಗಿತ್ತಾ
ಕೋಡಗನ ಕೋಳಿ ನುಂಗಿತ್ತಾ|

ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತಾ||ಪಲ್ಲ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತಾ ತಂಗಿ||||
ಕೋಡಗನ ಕೋಳಿ ನುಂಗಿತ್ತಾ||

ಒಳ್ಳು ಒನಕಿಯ ನುಂಗಿ
ಕಲ್ಲು ಗೂಟವ ನುಂಗಿ (ಬೀಸುವ)
ಮೆಲ್ಲಲು ಬಂದ ಮುದುಕಿಯ ನೆಲ್ಲು ನುಂಗಿತ್ತಾ ತಂಗಿ||||
ಕೋಡಗನ ಕೋಳಿ ನುಂಗಿತ್ತಾ||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನ ಮಣಿಯು ನುಂಗಿತ್ತಾ ತಂಗಿ||||
ಕೋಡಗನ ಕೋಳಿ ನುಂಗಿತ್ತಾ||

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ್ತಾ ತಂಗಿ||||
ಕೋಡಗನ ಕೋಳಿ ನುಂಗಿತ್ತಾ||

ಗುಡ್ಡ ಗಂವ್ಹರ ನುಂಗಿ (ಗವಿಯನು)
ಗಂವ್ಹರ ಇರಿವೆಯ ನುಂಗಿ
ಗುರುಗೋವಿಂದನ ಪಾದ ನನ್ನನೆ ನುಂಗಿತ್ತಾ ತಂಗಿ||||
(
ಗೋವಿಂದಗುರುವಿನ ಪಾದ ಆತ್ಮವ ನುಂಗಿತ್ತಾ||||)
ಕೋಡಗನ ಕೋಳಿ ನುಂಗಿತ್ತಾ||

.

ಅಕ್ಕ ಮಹಾದೇವಿಯ ವಚನಗಳು

೧.ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ ಈ ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು 

 

೨. ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು.
ಮನ, ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು.
ಭಾವ, ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು.
ಚೆನ್ನಮಲ್ಲಿಕಾರ್ಜುನಾ,
ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಲಿಂಗವಾಯಿತ್ತು.

 

೩. ಅತ್ತೆ ಮಾಯೆ, ಮಾವ ಸಂಸಾರಿ,
ಮೂವರು ಮೈದುನರು ಹುಲಿಯಂತವದಿರು,
ನಾಲ್ವರು ನಗೆವೆಣ್ಣು ಕೇಳು ಕೆಳದಿ.
ಐವರು ಭಾವದಿರನೊಯ್ವ ದೈವವಿಲ್ಲ.
ಆರು ಪ್ರಜೆಯತ್ತಿಗೆಯರ ಮೀರಲಾರೆನು.
ತಾಯೆ, ಹೇಳುವಡೆ ಏಳು ಪ್ರಜೆ ತೊತ್ತಿರ ಕಾಹು.
ಕರ್ಮವೆಂಬ ಗಂಡನ ಬಾಯ ಟೊಣೆದು,
ಹಾದರವನಾಡುವೆನು ಹರನಕೊಡೆ.
ಮನವೆಂಬ ಸಖಿಯ ಪ್ರಸಾದದಿಂದ
ಅನುಭಾವವ ಕಲಿತೆನು ಶಿವನೊಡನೆ
ಕರಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನೆಂಬ
ಸಜ್ಜನ ಗಂಡನ ಮಾಡಿಕೊಂಡೆ.

 

೪. ಯೋಗಿಗೆ ಯೋಗಿಣಿಯಾಗಿಹಳು ಮಾಯೆ

 ಜೋಗಿಗೆ ಜೋಗಿಣಿಯಾಗಿಹಳು ಮಾಯೆ

 ಶ್ರವಣಗೆ ಕಂತಿಯಾದಳು ಮಾಯೆ

 ಯತಿಗೆ ಪರಾರ್ಥವಾದಳು ಮಾಯೆ

 ಹೆಣ್ಣಿಗೆ ಗಂಡು ಮಾಯೆ

 ಗಂಡಿಗೆ ಹೆಣ್ಣು ಮಾಯೆ

 ನಿಮ್ಮ ಮಾಯೆಗೆ ನಾನಂಜುವವಳಲ್ಲ ಚೆನ್ನಮಲ್ಲಿಕಾರ್ಜುನ

 


ಗುಡಿಯ ನೋಡಿರಣ್ಣಾ

ಗುಡಿಯ ನೋಡಿರಣ್ಣಾ ದೇಹದ 
ಗುಡಿಯ ನೋಡಿರಣ್ಣಾ ||ಪಲ್ಲ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ ||ಅನುಪಲ್ಲ||

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ||||

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ||||

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ||||

 

ತರವಲ್ಲ ತಗಿ ನಿನ್ನ ತಂಬೂರಿ.

ತರವಲ್ಲ ತಗಿ ನಿನ್ನ ತಂಬೂರಿ - ಸ್ವರ

ಬರದೆ ಬಾರಿಸದಿರು ತಂಬೂರಿ ;

ಸರಸ ಸಂಗೀತದ ಕುರುಹುಗಳರಿಯದೆ

ಬರದೆ ಬಾರಿಸದಿರು ತಂಬೂರಿ.

 

ಮದ್ದಲಿ ದನಿಯೊಳು ತಂಬೂರಿ - ಅದ

ತಿದ್ದಿ ನುಡಿಸಬೇಕೊ ತಂಬೂರಿ ;

ಸಿದ್ದ ಸಧಕರ ಸುವಿದ್ಯೆಗೆ ಒದಗುವ

ಬುದ್ದಿವಂತಗೆ ತಕ್ಕ ತಂಬೂರಿ.

ಬಾಳಬಲ್ಲವರಿಗೆ ತಂಬೂರಿ - ದೇವ

ಭಾಳಾಕ್ಷ ರಚಿಸಿದ ತಂಬೂರಿ ;

ಹೇಳಲಿ ಏನಿದರ ಹಂಚಿಕೆ ತಿಳಿಯದ

ತಾಳಗೇಡಿಗೆ ಸಲ್ಲ ತಂಬೂರಿ.

 

ಸತ್ಯ ಶರಧಿಯೊಳು ತಂಬೂರಿ - ನಿತ್ಯ

ಉತ್ತಮರಾಡುವ ತಂಬೂರಿ ;

ಬತ್ತೀಸರಾಗದ ಬಗೆಯನರಿಯದಂಥ

ಕತ್ತಿಗಿನ್ಯಾತಕೆ ತಂಬೂರಿ.

 

ಹಸನಾದ ಮ್ಯಾಳಕೆ ತಂಬೂರಿ - ಇದು

ಕುಶಲರಿಗೊಪ್ಪುವ ತಂಬೂರಿ.

ಶಿಶುನಾಳಧೀಶನ ಓದುಪುರಾಣದಿ

ಹಸನಾಗಿ ಬಾರಿಸೊ ತಂಬೂರಿ.

 

 

 

 

 

 

 

ಡೊಂಕು ಬಾಲದ ನಾಯಕರೆ

         -ಶ್ರೀ ಪುರಂದರದಾಸರು

ಡೊಂಕು ಬಾಲದ ನಾಯಕರೆ
ನೀವೇನೂಟವ ಮಾಡುವಿರಿ

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಕಿ ಇಣಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕಂಞ ಕುಂಞ ಕಂಞ ಕುಂಞ ಮಾಡುವಿರಿ

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕಂಞ ಕುಂಞ ಕಂಞ ಕುಂಞ ಮಾಡುವಿರಿ

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರ ವಿಠ್ಠಲರಾಯನ ಈ ಪರಿ
ಮರೆತು ಸದಾ ನೀವು ಚಲಿಸುವಿರಿ

 

ತೇರಾ ಏರಿ ಅಂಬರದಾಗೆ

ತೇರಾ ಏರಿ ಅಂಬರದಾಗೆ ನೇಸರು ನಗುತಾನೆ
ಮರಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೇ
ಬೀರ್ಯಾವೇ, ಚೆಲುವಾ ಬೀರ್ಯಾವೇ
ಬಾ, ನೋಡಿ ನಲಿಯೋಣ ತಮ್ಮಾ
ನಾವ್, ಹಾಡಿ ಕುಣಿಯೋಣ ತಮ್ಮಾ ।। ಪಲ್ಲವಿ ।।

ಬೇಲಿ ಮ್ಯಾಗೆ ಬಣ್ಣ ಬಣ್ಣದ ಹೂವು ಅರಳ್ಯಾವೆ
ಆ ಹೂವಿನ ತುಂಬಾ ಸಣ್ಣ ಚಿಟ್ಟೆ ಕುಂತ್ಯಾವೆ
ಬಾಗಿ ಬೀಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ
ಆ ಬಾಳೇ ವನವೇ ನಕ್ಕು ಕಣ್ಣು ತಂದ್ಯಾವೆ
ಕುಂತರೆ ಸೆಳೆವ, ಸಂತಸ ತರುವ
ಕುಂತರೆ ಸೆಳೆವ, ಸಂತಸ ತರುವ
ಹೊಂಗೆ ಟೊಂಗೆ ತೂಗಿ ತೂಗಿ ಗಾಳಿ ಬೀಸ್ಯಾವೇ ।। ೧ ।।

ಭೂಮಿ ಮ್ಯಾಗೆ ಹಚ್ಚ ಹಚ್ಚಗೆ ಹಾದಿ ತೆರೆದಾವೆ
ಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳಿದ್ಯಾವೆ
ಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಆ ಮೌನದ ಗಾನ ಎಲ್ಲರ ಮನಸಾ ಸೆಳೆದಾವೆ
ಭಾವಾ ಬಿರಿದು, ಹತ್ತಿರ ಕರೆದು
ಭಾವಾ ಬಿರಿದು, ಹತ್ತಿರ ಕರೆದು
ಮಾವು ಬೇವು ತಾಳೆ ತೆಂಗು ಲಾಲಿ ಹಾಡ್ಯಾವೆ ।। ೨ ।।

ಭೇದಭಾವ ಮುಚ್ಚುಮರೆ ಒಂದು ಮಾಡ್ದೇನೆ
ಆ ಸೂರ್ಯ ಒಂದೇ ಬೆಳಕ ನಮಗೆ ನೀಡ್ಯಾನೆ
ಗಾಳಿ ನೀರು ಎಲ್ಲ ಕೊಟ್ಟು ಜಗವ ನಡೆಸ್ಯಾನೆ
ಆ ಸಿರಿಯ ಹಂಚಿಕೊಂಡರೆ ಬಾಳು ಸವಿಜೇನೆ
ಪ್ರೀತಿ ಬೆಳೆದು ಸ್ನೇಹ ಕಳೆದು
ನಗುತ ನಗುತ ನಾವು ನೀವು

ಸವಿಯುವ ಸುಖವನ್ನೇ।। ।।

              -ದೊಡ್ಡ ರಂಗೇಗೌಡ

 

ಹಕ್ಕಿ ಹಾರುತಿದೆ ನೋಡಿದಿರಾ

ಇರುಳಿರುಳಳಿದು ದಿನದಿನ ಬೆಳಗೆ
ಸುತ್ತಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದಕೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ?

    -ಸಾಹಿತ್ಯ: ದ. ರಾ. ಬೇಂದ್ರೆ

 

 

 

ಇರುವೆ ಇರುವೆ ಕರಿಯ ಇರುವೆ

ಮಗು: ಇರುವೆ ಇರುವೆ ಕರಿಯ ಇರುವೆ
ನಾನು ಜೊತೆಗೆ ಬರುವೆ
ಆಡಲಿಕ್ಕೆ ಅಮ್ಮನಿಂದ ಕರಣಿ ಬೆಲ್ಲ ತರುವೆ

ಇರುವೆ:ಮಳೆಯ ಕಾಲ ಬರುತಲಿಹುದು
ನನಗೆ ಸಮಯವಿಲ್ಲ
ಅನ್ನ ಕೂಡಿ ಹಾಕಿ ಇಟ್ಟು
ಕರೆಯ ಬರುವೆನಲ್ಲ

ಮಗು: ನಾಯಿಮರಿ ನಾಯಿಮರಿ
ನಿನ್ನ ಜೊತೆಗೆ ಆಡುವೆ
ಕುಂಯ್ ಕುಂಯ್ ರಾಗ ಕಲಿಸು
ನಿನ್ನ ಹಾಗೆ ಹಾಡುವೆ

ನಾಯಿಮರಿ: ಆಡಲಿಕ್ಕೆ ಹಾಡಲಿಕ್ಕೆ
ನನಗೆ ಸಮಯವಿಲ್ಲ
ಅನ್ನ ಹಾಕಿದವನ ಮನೆಯ
ಕಾಯುತಿರುವೆನಲ್ಲ

ಮಗು: ಜೇನು ಹುಳುವೆ ಜೇನು ಹುಳುವೆ
ಎಲ್ಲಿ ಹೋಗುತಿರುವೆ?
ಕರೆದುಕೊಂಡು ಹೋಗು ನನ್ನ
ನಿನ್ನ ಜೊತೆಗೆ ಬರುವೆ

ಜೇನು ಹುಳ: ಬನವ ಸುತ್ತಿ ಸುಳಿದು ನಾನು
ಜೇನನರಸಿ ತರುವೆ
ಈಗ ಬೇಡ ಚೈತ್ರ ಬರಲಿ
ಆಗ ನಾನು ಕರೆವೆ

ಮಗು: ಕುಹೂ ಕುಹೂ ಕೂಗುತಿರುವ
ಮಧುರ ಕಂಠ ಕೋಗಿಲೆ
ಎಲೆಯ ಬಲೆಯ ನೆಲೆಯೊಳಿರಲು
ನಾನು ಜೊತೆಗೆ ಬರುವೆ

ಕೋಗಿಲೆ:ಕಾಕ ದೃಷ್ಟಿ ತಪ್ಪಿಸಲ್ಕೆ ಹೊಂಚಿನಲ್ಲಿ ಇರುವೆ
ಚೈತ್ರ ಕಳೆಯೆ ಒಂಟಿ ಇರುವೆ ಆಗ ಕರೆಯ ಬರುವೆ

ಮಗು: ಯಾರು ಇವರು ನನ್ನ ಕೂಡೆ ಆಡಲಿಕ್ಕೆ ಒಲ್ಲರು
ತಮ್ಮ ತಮ್ಮ ಕೆಲಸದಲ್ಲಿ ವೇಳೆ ಕಳೆವರೆಲ್ಲರು
ಅವರ ಹಾಗೆ ಮೊದಲು ನನ್ನ ಕೆಲಸ ನಾನು ಮಾಡುವೆ
ಓದು ಬರಹ ಮುಗಿಸಿಕೊಂಡು ಸಮಯ ಉಳಿಯೆ ಆಡುವೆ

    ಸಾಹಿತ್ಯ: ಸಿ.ಸು ಸಂಗಮೇಶ

 

ಚಂದಿರನೇತಕೆ ಓಡುವನಮ್ಮ...

ಚಂದಿರನೇತಕೆ ಓಡುವನಮ್ಮ
ಮೋಡಕೆ ಹೆದರಿಹನೇ?
ಬೆಳ್ಳಿಯ ಮೋಡದ ಅಲೆಗಳ ಕಂಡು
ಚಂದಿರ ಬೆದರಿಹನೆ?

ಹಿಂಜಿದ ಅರಳೆಯು ಗಾಳಿಗೆ ಹಾರಿ
ಮೋಡಗಳಾಗಿಹವೇ?
ಅರಳೆಯು ಮುತ್ತಿ ಮೈಯನು ಸುತ್ತಿ
ಚಂದ್ರನ ಬಿಗಿಯುವವೇ?

ಮಂಜಿನಗಡ್ಡೆಯ ಮೋಡವು ಕರಗಲು
ಚಂದಿರ ನಗುತಿಹನು
ಕರಗಿದ ಮೋಡದ ಸೆರೆಯನು ಹರಿಯುತ
ಬಾನಲಿ ತೇಲುವನು

ಚಂದಿರನೆನ್ನಯ ಗೆಳೆಯನು ಅಮ್ಮಾ
ನನ್ನೊಡನಾಡುವನು
ನಾನೂ ಓಡಲು ತಾನೂ ಓಡುವ
ಚೆನ್ನಿಗ ಚಂದಿರನು

ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ

      -ಸಾಹಿತ್ಯ: ನೀ.ರೆ. ಹೀರೇಮಠ

 

ಗುಬ್ಬಿ

ಗುಬ್ಬಿ ಗುಬ್ಬಿ

ಚಿಂವ್ ಚಿಂವ್ ಎಂದು

ಕರೆಯುವೆ ಯಾರನ್ನು ?

ಆಚೆ ಈಚೆ

ಹೊರಳಿಸಿ ಕಣ್ಣು

ನೋಡುವೆ ಏನನ್ನು ?

ಮೇಲೆ ಕೆಳಗೆ

ಕೊಂಕಿಸಿ ಕೊರಳನು

ಹುಡುಕುವೆ ಏನಲ್ಲಿ ?

ಕಾಳನು ಹುಡುಕುತ

ನೀರನು ನೋಡುತ

ಅಲೆಯುವೆ ಏಕಲ್ಲಿ ?

ಕಾಳನು ಕೊಟ್ಟು

ನೀರನು ಕುಡಿಸುವೆ

ಆಡಲು ಬಾ ಇಲ್ಲಿ

ಹಣ್ಣು ಕೊಟ್ಟು

ಹಾಲನು ನೀಡುವೆ

ನಲಿಯಲು ಬಾ ಇಲ್ಲಿ

(ಕವಿ: ಎ.ಕೆ. ರಾಮೇಶ್ವರ )

 

ಗಡಿಯಾರ

ಗಂಟೆಯ ನೆಂಟನೆ ಓ ಗಡಿಯಾರ

ಬೆಳ್ಳಿಯ ಬಣ್ಣದ ಗೋಳಾಕಾರ

ವೇಳೆಯ ತಿಳಿಯಲು ನೀನಾಧಾರ

ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್

ಹಗಲೂ ಇರುಳೂ ಒಂದೇ ಬಾಳು

ನೀನಾವಾಗಲು ದುಡಿಯುವ ಆಳು

ಕಿವಿಯನು ಹಿಂಡಲು ನಿನಗದು ಕೂಳು
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್

ಮುಖ ಒಂದಾದರು ದ್ವಾದಶ ನೇತ್ರ !

ಮೂರು ಕೈಗಳು ಏನು ವಿಚಿತ್ರ !

ಯಂತ್ರ ಪುರಾಣದ ರಕ್ಕಸ ಪುತ್ರ !

ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್

ಟಿಕ್ ಟಿಕ್ ಎನ್ನುತ ಹೇಳುವೆಯೇನು ?

ನಿನ್ನೀ ಮಾತಿನ ಒಳಗುಟ್ಟೇನು?

"ಕಾಲವು ನಿಲ್ಲದು " ಎನ್ನುವಿಯೇನು ?

ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್

ದುಡಿಯುವುದೊಂದೇ ನಿನ್ನಯ ಕರ್ಮ

ದುಡಿಸುವುದೊಂದೇ ನಮ್ಮಯ ಧರ್ಮ

ಇಂತಿರುವುದು ಕಲಿಯುಗದೀ ಧರ್ಮ

ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್

          (ಕವಿ : ದಿನಕರ ದೇಸಾಯಿ )

 

 

 

 

 

 

ಯುಗಾದಿ
ಕವಿ : ಅಂಬಿಕಾತನಯ ದತ್ತ

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ

ವರುಷಕೊಮ್ಮೆ ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

(ಅಂಬಿಕಾತನಯದತ್ತರ  “ಗರಿಕವನ ಸಂಕಲನದಿಂದ )

ßಪುಣ್ಯಕೋಟಿ ß

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ
 
ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು....
ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಷದಿ ಗುಡುಗುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ಗುಡುಗಲೆರಗಿದ ರಭಸಕಂಜಿ
ಚೆದುರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ, ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು....
ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಇತ್ತು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ
ಎನ್ನ ತಾಯೊಡ ಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು....
ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೊ ಮಾಂಸವಿದೆಕೊ
ಗುಂಡಿಗೆಯ ಬಿಸಿರಕ್ತವಿದೆಕೊ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು.....
ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸೀತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತಾನು
ಮುನ್ನ ತಾನಿಂತೆಂದಿತು

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ

ಈವನು ಸೌಭಾಗ್ಯ ಸಂಪದ
ಭಾವಜಾಪಿತ ಕೃಷ್ಣನು

  www.kannadadarshan.blogspot.com  

 

õ ತಿರುಕನ ಕನಸುõ

ತಿರುಕನೋರ್ವನೂರ ಮುಂದೆ

ಮುರುಕು ಧರ್ಮಶಾಲೆಯಲ್ಲಿ

ಒರಗಿರುತ್ತಲೊಂದು ಕನಸ ಕಂಡನೆಂತೆನೆ

ಪುರದ ರಾಜ ಸತ್ತರವಗೆ

ವರಕುಮಾರರಿಲ್ಲದಿರಲು

ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು

ನಡೆದು ಯಾರ ಕೊರಳಿನಲ್ಲಿ

ತೊಡರಿಸುವದೊ ಅವರ ಪಟ್ಟ

ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ

ಒಡನೆ ತನ್ನ ಕೊರಳಿನಲ್ಲಿ

ತೊಡರಿಸಲ್ಕೆ ಕಂಡು ತಿರುಕ

ಪೊಡವಿಯಾಣ್ಮ ನಾದೆನೆಂದು ಹಿಗ್ಗುತಿರ್ದನು

ಪಟ್ಟವನ್ನು ಕಟ್ಟಿ ನೃಪರು

ಕೊಟ್ಟರವಗೆ ಕನ್ಯೆಯರನು

ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ

ಭಟ್ಟನಿಗಳ ಕೂಡಿ ನಲ್ಲ

ನಿಷ್ಟ ಸುಖದೊಳಿರಲವನ್ಗೆ

ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ

ಓಲಗದಲಿರುತ್ತ ತೊಡೆಯ

ಮೇಲೆ ಮಕ್ಕಳಾಡುತಿರಲು

ಲೀಲೆಯಿಂದ ಚಾತುರಂಗ ಬಲವ ನೋಡುತ

ಲೋಲನಾಗಿ ನುಡಿದನಿನಿತು

ಕೇಳು ಮಂತ್ರಿ ಸುತರುಗಳಿಗೆ

ಬಾಲೆಯರನು ನೋಡಿ ಮಾಡುವೆ ಮಾಡಬೇಕೆಲೆ

ನೋಡಿ ಬನ್ನಿರೆನಲು ಜೀಯ

ನೋಡಿ ಬಂದೆವೆನಲು ಬೇಗ

ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ

ಗಾಢವಾಗೆ ಸಂಭ್ರಮಗಳು

ಮಾಡುತಿದ್ದ ಮದುವೆಗಳನು

ಕೂಡಿದಖಿಳ ರಾಜರೆಲ್ಲ ಮೆಚ್ಚುವಂದದಿ

ಧನದ ಮದವು ರಾಜ್ಯ ಮದವು

ತನುಜಮದವು ಯುವತಿಮದವು

ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು

ಅನಿತರೊಳಗೆ ಮುನಿದ ನೃಪರ ದಂಡು

ಮನೆಯ ಮುತ್ತಿದಂತೆಯಾಗೆ

ಕನಸ ಕಾಣುತಿರ್ದ ತಿರುಕ ಹೆದರಿ ಕಣ್ಣ ತೆರೆದನು !

ಮೆರೆಯುತಿದ್ದ ರಾಜ್ಯವೆಲ್ಲ

ಹರಿದು ಹೋಯಿತೆನುತ ತಿರುಕ

ಮರಳಿ ನಾಚಿ ಬೇಡುತಿದ್ದ

ಹಿಂದಿನಂತೆಯೇ

    (ಕವಿ : ಮುಪ್ಪಿನ ಷಡಕ್ಷರಿ )

 

ಸೋಮೇಶ್ವರ ಶತಕ

ಸೋಮೇಶ್ವರ ಶತಕ ಬರೆದ ಕವಿ ಪುಲಿಕೆರೆ (ಪುಲಿಗೆರೆ) ಸೋಮ ನೆಂದು ನಂಬಲಾಗಿದೆ . ಕೆಲವರು ಪಾಲ್ಕುರಕೆ ಸೋಮ ನೆಂದು ಭಾವಿಸುತ್ತಾರೆ , ಆದರೆ ಕವಿಚರಿತೆ ಬರೆದ ನರಸಿಂಹಾಚಾರ‍್ಯರು ಭಾಷೆ , ವಿದ್ವತ್ತುಗಳ ದೃಷ್ಟಿಯಿಂದ ಅದು ಸಂಸ್ಕೃತ ವಿದ್ವಾಂಸನಾದ ಪಾಲ್ಕುರಕೆ ಸೋಮನ ದಲ್ಲವೆಂದೂ, ಭಾಷೆ ಸಡಿಲತೆ, ತಪ್ಪು ಪ್ರಯೋಗಗಳಿರುವುದರಿಂದ, ಪುಲಿಕೆರೆಯ ಸೋಮನ ಕೃತಿ ಯೆಂದೂ ನಿರ್ಧರಿಸಿದ್ದಾರೆ. ಪುಲಿಕೆರೆಯ ಸೋಮ ಕವಿಯ ಕಾಲದ ಬಗ್ಗೆ ನಿಖರತೆ ಇಲ್ಲ. ಸುಮಾರು ಕ್ರಿ. ಶ. ೧೨೦೦ -೧೩೦೦ ರಲ್ಲಿ ಇದ್ದನೆಂದು ಭಾವಿಸಲಾಗಿದೆ. ಶೋಮೇಶ್ವರ ಶತಕವು ನೀತಿ ಶಾಸ್ತ್ರವನ್ನು ಹೇಳುವ ಪದ್ಯಗಳಾಗಿವೆ

 

ಕೆಲವಂ ಬಲ್ಲವರಿಂದೆ ಕಲ್ತು ಕೆಲವಂ ಶಾಸ್ರಂಗಳಂ ಕೇಳುತಂ |

ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ ||

ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ ||

ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚನ್ನ ಸೋಮೇಶ್ವರಾ ||||

*

ಚಿಗುರೆಂದುಂ ಮೆಲೆ ಬೇವು ಸ್ವಾದುವಹುದೇ ಚೇಳ್ ಚಿಕ್ಕದೆಂದಳ್ಕರಿಂ
ತೆಗೆಯಲ್ ಕಚ್ಚದೆ ಪಾಲನೂಡಿ ಫಣಿಯಂ ಸಾಕಲ್ಕೆ ವಿಶ್ವಾಸಿಯೇ
ಖಗಮಂ ಸಾಕುವೆನೆಂದು ಗೂಗೆಮರಿಯಂ ಸಂಪ್ರೀತಿಯಿಂದೋವರೇ
ಪಗೆಯಂ ಬಾಲಕನೆಂಬರೇ ಹರಹರಾ ಶ್ರೀಚೆನ್ನಸೋಮೇಶ್ವರಾ

*

ಉಡುರಾಜಂ ಕಳೆಗುಂದಿ ಪೆರ್ಚದಿಹನೇ ? ನ್ಯಗೋಧ ಬೀಜಂ ಕೆಲಂ-

ಸಿಡಿದುಂ ಪೆರ್ಮರನಾಗದೇ ? ಎಳೆಗರೇನೆತ್ತಾಗದೇ ಲೋಕದೋಳ್ ?

ಮಿಡಿ ಪಣ್ಣಾಗದೇ ? ದೈವದೊಲ್ಮೆಯಿರೆ ತಾಂ ಕಾಲಾನುಕಾಲಕ್ಕೆ ಕೇಳ್

ಬಡವಂ ಬಲ್ಲಿದನಾಗನೇ ? ಹರಹರಾ ಶ್ರೀ ಚನ್ನ ಸೋಮೇಶ್ವರಾ |||

 

 


õ ಹಸಿರು ಕಾನನõ

ಸುತ್ತ ಮುತ್ತ ಬೆಳೆಯಬೇಕು

ತಂಪು ಹಸಿರು ಕಾನನ

ನೋಡಿ ಖುಶಿಯ ಪಡೆಯಬೇಕು

ಬಿಡದೆ ನಮ್ಮ ಮೈ ಮನ

ಮರವು ಇರದೇ ಮಳೆಯು ಬರದು

ಎಂಬ ಮಾತು ಮರೆಯದೆ

ನೆಟ್ಟು ಗಿಡವ ಉಳಿಸಬೇಕು

ಇದ್ದ ಮರವ ಕಡಿಯದೆ.

ತಂಪು ಗಾಳಿ ಬಿಸುತಿರಲು

ಒಳಿತು ನಮ್ಮ ಪರಿಸರ

ತಿಳಿದಿ ನಿತ್ಯ ಉಳಿಸಿ ನಮ್ಮ

ಸುತ್ತ ಮುತ್ತ ಗಿಡ ಮರ

ಅರಿತು ನಾವು ಬಿಡದೆ ಬೆಳೆಸಿ

ಬರಲು ಒಳಿತು ಕಾಡು

ಇಂಥ ಗುಣವು ಇರಲು ಕೆಡವು

ನಿತ್ಯ ನಮ್ಮ ನಾಡು

      -ಕೆ. ಎಂ. ಶೆಟ್ಟಿ , ಬಳ್ಳಮಂಜ

 

 

 

 

õ ಶ್ರಾವಣ ಬಂತುõ

 

ಶ್ರಾವಣ ಬಂತು ಕಾಡಿಗೆ | ಬಂತು ನಾಡಿಗೆ |
ಬಂತು ಬೀಡಿಗೆ | ಶ್ರಾವಣ ಬಂತು || ಪಲ್ಲವಿ ||
ಕಡಲಿಗೆ ಬಂತು ಶ್ರಾವಣ | ಕುಣಿದ್ಹಾಂಗ ರಾವಣಾ
ಕುಣಿದಾಗ ಗಾಳಿ | ಭೈರವನ ರೂಪತಾಳಿ || ಅನುಪಲ್ಲವಿ ||


ಶ್ರಾವಣ ಬಂತು ಘಟ್ಟಕ್ಕ | ರಾಜ್ಯಪಟ್ಟಕ್ಕ |
ಬಾನಮಟ್ಟಕ್ಕ |
ಏರ್ಯಾ್ವ ಮುಗಿಲು | ರವಿ ಕಾಣೆ ಹಾಡೆಹಗಲು ||


ಶ್ರಾವಣಾ ಬಂತು ಹೊಳಿಗಳಿಗೆ | ಅದೇ ಶುಭಗಳಿಗೆ |
ಹೊಳಿಗೆ ಮತ್ತು ಮಳಿಗೆ |
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ ||


ಶ್ರಾವಣಾ ಬಂತು ಊರಿಗೆ | ಕೇರಿಕೇರಿಗೆ |
ಹೊಡೆದ ಝೂರಿಗೆ |
ಜೋಕಾಲಿ ಏರಿ | ಅಡರ್ಯಾಭವ ಮರಕ ಹಾರಿ |


ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ |
ಮನದ ನನಿಕೊನಿಗೆ |
ಒಡೆದಾವ ಹಾಡೂ | ರಸ ಉಕ್ಕತಾವ ನೋಡು |
ಶ್ರಾವಣಾ ಬಂತು ||


ಬೆಟ್ಟ ತೊಟ್ಟಾವ ಕುತನಿಯ ಅಂಗಿ |
ಹಸಿರು ನೋಡ ತಂಗಿ |
ಹೊರಟಾವೆಲ್ಲೊ ಜಂಗಿ |
ಜಾತ್ರಿಗೇನೋ | ನೆರದsದ ಇಲ್ಲೆ ತಾನೋ ||


ಬನ ಬನ ನೋಡು ಈಗ ಹ್ಯಾಂಗ |
ಮದುವಿ ಮಗನ್ಹಾಂಗ |
ತಲಿಗೆ ಬಾಸಿಂಗ |
ಕಟ್ಟಿಕೊಂಡೂ | ನಿಂತಾವ ಹರ್ಷಗೊಂಡು ||


ಹಸಿರುಟ್ಟ ಬಸುರಿಯ ಹಾಂಗ |
ನೆಲಾ ಹೊಲಾ ಹಾಂಗ |
ಅರಿಸಿಣ ಒಡೆಧಾಂಗ |
ಹೊಮ್ಮತಾವ | ಬಂಗಾರ ಚಿಮ್ಮತಾವ ||

 

ಗುಡ್ಡ ಗುಡ್ಡ ಸ್ಥಾವರಲಿಂಗ |
ಅವಕ ಅಭ್ಯಂಗ |
ಎರಿತಾವನ್ನೋ ಹಾಂಗ |
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ ||


ನಾಡೆಲ್ಲ ಏರಿಯ ವಾರಿ |
ಹರಿತಾವ ಝರಿ |
ಹಾಲಿನ ತೊರಿ |
ಈಗ ಯಾಕs | ನೆಲಕೆಲ್ಲ ಕುಡಿಸಲಾಕ |
ಶ್ರಾವಣಾ ಬಂತು ||೧೦


ಜಗದ್ಗುರು ಹುಟ್ಟಿದ ಮಾಸ |
ಕಟ್ಟಿ ನೂರು ವೇಷ |
ಕೊಟ್ಟ ಸಂತೋಷ |
ಕುಣಿತದ | ತಾನನ ದಣಿತದ ||

ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ |
ಬಂತು ಬೀಡಿಗೆ | ಶ್ರಾವಣಾ ಬಂತು ||

       ಕವಿ: ಅಂಬಿಕಾತನಯದತ್ತ

 

 

ಬಸವಣ್ಣನವರ ವಚನಗಳು

1. ಉಳ್ಳವರು ಶಿವಾಲಯ ಕಟ್ಟುವರು

ನಾನೇನು ಮಾಡಲಿ ಬಡವನಯ್ಯ!!

ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರವೇ ಹೊನ್ನ ಕಳಶವಯ್ಯ!!

ಕೂಡಲಸಂಗಮದೇವ ಕೇಳಯ್ಯ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ

 

2. ದಯವಿಲ್ಲದ ಧರ್ಮವಾವುದಯ್ಯಾ ?

ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ

ದಯವೇ ಧರ್ಮದ ಮೂಲವಯ್ಯೂ

ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯೂ !!

 

3. ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು

ದಿಟದ ನಾಗರ ಕೊಲ್ಲೆಂಬರಯ್ಯ

ಉಂಬ ಜಂಗಮ ಬಂದರೆ ನಡೆಯೆಂಬರು

ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರು

ನಮ್ಮ ಕೂಡಲಸಂಗನ ಶರಣರ ಕಂಡು

ಉದಾಸೀನವ ಮಾಡಿದರೆ

ಕಲ್ಲತಾಗಿದ ಮಿಟ್ಟಿಯಂತಪ್ಪರಯ್ಯ

 

4. ಕಳಬೇಡ, ಕೊಲಬೇಡ, ಹುಸಿಯನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ,ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ,
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ.

 

5.ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ನಮ್ಮ ಕೂಡಲಸಂಗಮದೇವಾ.

6.ಎನ್ನ ಕಾಲೆ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ
ಕೂಡಲಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

 

7. ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರಣ್ಣ.
ಸತ್ಯವ ನುಡಿವುದೇ ದೇವಲೋಕ!
ಮಿಥ್ಯವ ನುಡಿವುದೇ ಮರ್ತ್ಯಲೋಕ!
ಆಚಾರವೇ ಸ್ವರ್ಗ! ಅನಾಚಾರವೇ ನರಕ!
ನೀವೇ ಪ್ರಮಾಣ ಕೂಡಲಸಂಗಮದೇವ.

 

8. ಏನಿ ಬಂದಿರಿ, ಹದುಳಿದ್ದಿರೆಂದರೆ
ನಿಮ್ಮ ಮೈಸಿರಿ ಹಾರಿಹೋಹುದೇ ?
ಕುಳ್ಳಿರೆಂದರೆ ನೆಲ ಕುಳಿಹೋಹುದೇ ?
ಒಡನೆ ನುಡಿದರೆ ಶಿರಹೊಟ್ಟೆ ಒಡೆವುದೆ ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿದ್ದರೆ
ಕೆಡಹಿ ಮೂಗ ಕೊಯ್ವುದ ಮಾಬನೆ ಕೂಡಲಸಂಗಯ್ಯ ?

9. ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕ್ಕೆ ಭಾನುವಿನ ಉದಯದ ಚಿಂತೆ.
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ.
ಎನಗೆ ನಮ್ಮ ಕೂಡಲಸಂಗಮದೇವರ
ನೆನೆವುದೇ ಚಿಂತೆ!

 

10.ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ?
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ ?

 

11. ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ

ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದಿನಸಯ್ಯಾ

ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ.

 

ಈ ನಾಡ ಅಂದ ಈ ತಾಣ ಚಂದ
ಈ ಸೊಬಗ ಅಂದ ಈ ನೋಟ ಚಂದ
ಈ ಬೆಡಗು ಬಿನ್ನಾಣ ಈ ಸುಗಸು ವೈಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ

ಹರಿಯುವ ಝರಿಗಳ ಧಾರೆಯ ದನಿ ಜುಳುಜುಳು
ಕಲರವ ಗುಂಪಿನ ಇಂಪಿನ ದನಿ ಕಲಕಲ
ಇದೇ ಸ್ವರ್ಗ ಸ್ವರ್ಗ ಸ್ವರ್ಗ
ಈ ಬೆಡಗು ಬಿನ್ನಾಣ ಈ ಸೊಗಸು ವೈಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ
ಈ ನಾಡ ಅಂದ ಈ ತಾಣ ಚಂದ
ಈ ಸೊಬಗ ಅಂದ ಈ ನೋಟ ಚಂದ
ಓ ಚೈತ್ರದ ಬೆಡಗು ಕೋಗಿಲೆ ಕಂಠದ ರಾಗದ ಸುಧೆಯು ಆಹಾ
ಹೇ ಸಂಚಿನ ಸುಳಿಯ ಮೋಹಕ ಬಲೆಯ ಎದುರಲಿ ಗೆಲುವನು ನೀ
ನೀಡು ನೀಡು ನೀಡು
ಈ ಬೆಡಗು ಬಿನ್ನಾಣ ಈ ಸೊಗಸು ವೈಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ
ಈ ನಾಡ ಅಂದ ಈ ತಾಣ ಚಂದ
ಈ ಸೊಬಗ ಅಂದ ಈ ನೋಟ ಚಂದ

 

      ರಚನೆ: ಕೆ. ಎಸ್. ನಿಸಾರ್ ಅಹಮದ್

ನಿತ್ಯೋತ್ಸವ
ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದಲಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ
ತಾಯೆ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ
ತಾಯೆ ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ
ಸಿಂಹಾಸನ ಮಾಲೆಯಲ್ಲಿ
ಗತ ಸಾಹಸ ಸಾರುತಿರುವ
ಶಾಸನಗಳ ಸಾಲಿನಲಿ
ಓಲೆಗರಿಯ ಸಿರಿಗಳಲ್ಲಿ
ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ
ತಾಯೆ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ
ತಾಯೆ ನಿತ್ಯೋತ್ಸವ

ಹಲವೆನ್ನದ ಸಿರಿಮೆಯೇ
ಕುಲವೆನ್ನದ ಗರಿಮೆಯೇ
ಸದ್ವಿಕಾಸ ಶೀಲ ನುಡಿಯ
ಲೋಕಾಮೃತ ಸೀಮೆಯೆ
ಈ ವತ್ಸರ ನಿರ್ಮತ್ಸರ
ಮನದುದಾರ ಮಹಿಮೆಯೆ
ನಿತ್ಯೋತ್ಸವ
ತಾಯೆ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ
ತಾಯೆ ನಿತೋತ್ಸವ

               --ಕೆ.ಎಸ್.ನಿಸ್ಸಾರ ಅಹಮದ್

 

 

 

ಕನ್ನಡ ನಾಡಿನ ವೀರರಮಣಿಯ

ಕನ್ನಡ ನಾಡಿನ ವೀರರಮಣಿಯ

ಗಂಡು ಭೂಮಿಯ ವೀರ ನಾರಿಯ

ಚರಿತೆಯ ನಾನು ಹಾಡುವೆ
ಚಿತ್ರದುರ್ಗದ ಕಲ್ಲಿನ ಕೋಟೆ

ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು

ಸಿದ್ದರು ಹರಸಿಯ ಸಿರಿನಾಡು

ವೀರಮದಕರಿ ಆಳುತಲಿರಲು

ಹೈದಾರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು

ಸತತ ದಾಳಿಯು ವ್ಯರ್ಥವಾಗಲು
ವ್ಯೆರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಗೂಡಚಾರರು ಅಲೆದು ಬಂದರು ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ

ಚರಿತೆಯ ನಾನು ಹಾಡುವೆ

ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನೆಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ ಬರುವುದ ಕಂಡಳು

 

ನಾವಾಡುವ ನುಡಿಯೇ ಕನ್ನಡ ನುಡಿ

ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ

ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ

ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ

ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ

ಹಸುರಿನ ಬನಸಿರಿಗೇ ಒಲಿದು

ಸೌಂದರ್ಯ ಸರಸ್ವತಿ ಧರೆಗಿಳಿದು
ಆಹಹಾ ಓ ಹೊ ಹೋ..ಆ‌ಆ ಓ ಹೋ
ಹರಿಯುವ ನದಿಯಲಿ ಈಜಾಡಿ

ಹೂಬನದಲಿ ನಲಿಯುತ ಓಲಾಡಿ
ಚಲುವಿನ ಬಲೆಯ ಬೀಸಿದಳು

ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ

ಈ ಕಂಗಳು ಮಾಡಿದ ಪುಣ್ಯವೋ ಓ ಹೊ ಹೋ..ಹಾಹ
ನಾವಾಡುವ ನುಡಿಯೇ ಕನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ

ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋಹೋ..

ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ

ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ

ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ

ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ

ಆ.. ಆಹ.. ಆಹ ಆ‌ಅ. ಆಹ.. ಹಾಹ..
ಚಿಮ್ಮುತ ಓಡಿವೆ ಜಿಂಕೆಗಳು

ಕುಣಿದಾಡುತ ನಲಿದಿವೆ ನವಿಲುಗಳೂ
ಆಹಹಹಾ ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ

ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ

ಈ ಭೂಮಿಗೆ ಇಳಿದ ನಾಕವೋ ಆಹಹಾ.ಓಹೋ
ನಾವಾಡುವ ನುಡಿಯೇ ಕನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ

ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋ.ಹೋ..

 

 

ಕರುನಾಡ ತಾಯಿ ಸದಾ ಚಿನ್ಮಯಿ

ಸಾಹಿತ್ಯ: ಹಂಸಲೇಖ
ಸಂಗೀತ: ಶಂಕರ್-ಗಣೇಶ್
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಲಾಲಾಲ ಲಾಲಾ
ಲಲಾ ಲಾಲಲಾ..

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ, ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

ವೀರ ಧೀರರಾಳಿದ ನಾಡು ನಿನ್ನದು
ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು
ವರ ಸಾಧು ಸಂತರಾ ನೆಲೆ ನಿನ್ನದು
ಮಹಾ ಶಿಲ್ಪಕಾರರ ಕಲೆ ನಿನ್ನದು
ಸಂಗೀತ ಸಾಹಿತ್ಯ ಸೆಲೆ ನಿನ್ನದೂ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ
ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

ಜೀವ ತಂತಿ ಮೀಟುವ ಸ್ನೇಹ ನಮ್ಮದು
ಎಲ್ಲ ಒಂದೆ ಎನ್ನುವಾ ಔದಾರ್ಯ ನಮ್ಮದು
ಸೌಂದರ್ಯ ಸೀಮೆಯಾ ಗುಡಿ ನಮ್ಮದು
ಮಾಧುರ್ಯ ತುಂಬಿದಾ ನುಡಿ ನಮ್ಮದು
ಕಸ್ತೂರಿ ಕನ್ನಡದ ಸವಿ ನಮ್ಮದು
ರೋಮರೋಮಗಳು ನಿಂತವು ತಾಯೆ
ಚೆಲುವ ಕನ್ನಡದೊಳೇನಿದು ಮಾಯೆ
ಮುಗಿಲೆ ಕಡಲೆ ಸಿಡಿಲೆ ಹೇಳಿರಿ
ಮುಗಿಲೆ ಕಡಲೆ ಸಿಡಿಲೆ ಹೇಳಿರಿ
ತನುವು ಮನವು ಧನವು ಎಲ್ಲ ಕನ್ನಡ
ತನುವು ಮನವು ಧನವು ಎಲ್ಲ ಕನ್ನಡ
ಆ ಆ ಆ ಆ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ
ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

 

 

ಕನ್ನಡವೆಂದರೆ ಬರಿ ನುಡಿಯಲ್ಲ,  
                        ಹಿರಿದಿದೆ ಅದರರ್ಥ ;  
                        ಜಲವೆಂದರೆ ಕೇವಲ ನೀರಲ್ಲ.  
                        ಅದು ಪಾವನ ತೀರ್ಥ.  
          ಕನ್ನಡವೆಂದರೆ ಬರಿ ನಾಡಲ್ಲ ;  
          ಭೂಪಟ, ಗೆರೆ, ಚುಕ್ಕೆ ;  
          ಮರವೆಂದರೆ ಬರಿ ಕಟ್ಟಿಗೆಯೆ ?  
          ಶ್ರೀಗಂಧದ ಚಕ್ಕೆ.  
                             ಕನ್ನಡ ಬರಿ ಕರ್ನಾಟಕವಲ್ಲ  
                             ಅಸೀಮ, ಅದು ಅದಿಗಂತ ;

                                        ದೇವರು ಕೇವಲ ವಿಗ್ರಹವಲ್ಲ ,  
                             ಅಂತರ್ಭಾವ ಅನಂತ.  
                    ಕನ್ನಡವೆಂದರೆ ಜನಜಂಗುಳಿಯಲ್ಲ  
                    ಜೀವನ ಶೈಲಿ, ವಿಧಾನ ;  
                    ವಾಯುವೆಂದರೆ ಬರಿ ಹವೆಯೇ ಅಲ್ಲ :  
                     ಉಸಿರದು, ಪಂಚಪ್ರಾಣ.  
        ಕನ್ನಡವಲ್ಲ ತಿಂಗಳು ನಡೆಸುವ  
        ಗುಲ್ಲಿನ ಕಾಮನಬಿಲ್ಲು ;  
        ರವಿ ಶಶಿ ತಾರೆಯ  ನಿತ್ಯೋತ್ಸವವದು,  
        ಸರಸ್ವತಿ ವೀಣೆಯ ಸೊಲ್ಲು ;

                          -ನಿಸಾರ ಅಹಮದ                                                         

 

 

   ಕನ್ನಡ ನಾಡಿನ ಕರಾವಳಿ

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ 3

ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ
ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ
ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ
ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ

ಜಗಕೆಲ್ಲ ಒಬ್ಬನೆ ಅ೦ಬಿಗನಣ್ಣ
ನಾವೆಲ್ಲ ಅವನನ್ನೆ ನ೦ಬಿದೆವಣ್ಣ
ನಾವೆಲ್ಲ ಅವನನ್ನೆ ನ೦ಬಿದೆವಣ್ಣ

ಕನ್ನಡ ನಾಡಿನ ಕರಾವಳಿ  ಕನ್ನಡ ದೇವಿಯ ಪ್ರಭಾವಳಿ

ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ (ಶ್ರೀದೇವಿ ಶ್ರೀದೇವಿ)
ಸಹ್ಯಾದ್ರಿ ವನಗಳ ಸು೦ದರ ಭೂದೇವಿ (ಭೂದೇವಿ ಭೂದೇವಿ)
ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ
ಸಹ್ಯಾದ್ರಿ ವನಗಳ ಸು೦ದರ ಭೂದೇವಿ

ಧರ್ಮವ ಸಾರುವ ಧರ್ಮಸ್ಠಳ
ಉಡುಪಿಯೇ ವೈಕು೦ಠ (ಓ೦ ನಮೋ ನಾರಾಯಣಾಯ)
ಗೋಕರ್ಣ ಕೈಲಾಸ (ಓ೦ ನಮ: ಶಿವಾಯ)

ಕನ್ನಡ ನಾಡಿನ ಕರಾವಳಿ  ಕನ್ನಡ ದೇವಿಯ ಪ್ರಭಾವಳಿ

ಯಕ್ಷಗಾನ ಮೇಳದ ನಾಟ್ಯ ತರ೦ಗ
(
ತರ೦ಗ ತರ೦ಗ ತರ೦ಗ ತರ೦ಗ ತರ೦ಗ ತರ೦ಗ ತರ೦ಗ ತರ೦ಗ)
ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ
(
ಧೊಮ್ತ ಧಿ ಧೊಮ್ತ ಧಿ ಧೊಮ್ತ ಧಿ ಧೊಮ್ತ ಧಿ)
ಯಕ್ಷಗಾನ ಮೇಳದ ನಾಟ್ಯ ತರ೦ಗ
ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ

ಶರಾವತಿ ನೇತ್ರಾವತಿ    ಶರಾವತಿ ನೇತ್ರಾವತಿ
ಪಾವನ ನದಿಗಳ ಸಾಗರ ಸ೦ಗಮ

ಕನ್ನಡ ನಾಡಿನ ಕರಾವಳಿ  ಕನ್ನಡ ದೇವಿಯ ಪ್ರಭಾವಳಿ

ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು
ಸಾವಿರ ಸ೦ಸಾರ ಬದುಕಿಗೆ ಹೊನ್ನು
ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು
ಸಾವಿರ ಸ೦ಸಾರ ಬದುಕಿಗೆ ಹೊನ್ನು

ಮ೦ಗೇಶರಾಯರು ಗೋವಿ೦ದ ಪೈಗಳು
ಜನಿಸಿದ ಕವಿಗಳ ಸಿರಿನಾಡು
ದಾಸರ ವಾಣಿಯ ಮ೦ಗಳ ಬೀಡು (ದಾಸರ ವಾಣಿಯ ಮ೦ಗಳ ಬೀಡು)

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ 3

ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ

ಚಿತ್ರ: ತಿರುಗು ಬಾಣ      ರಚನೆ: . ಏನ್. ಜಯಗೋಪಾಲ್       

ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ

ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ ೨

ಕರುನಾಡು ಸ್ವರ್ಗದ ಸೀಮೆ, ಕಾವೇರಿ ಹುಟ್ಟಿದ ನಾಡು,

ಕಲ್ಲಲಿ ಕಲೆಯನು ಕಂಡ, ಬೇಲೂರು ಶಿಲ್ಪದ ಬೀಡು

ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು

ಚಾಮುಂಡಿ ರಕ್ಷೆಯು ನಮಗೆಗೊಮಟೆಷ ಕಾವಲು ಇಲ್ಲಿ,

ಶ್ರಿಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ,

ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು

ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ,

ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿವೆ,

ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ

ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ

ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ

ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ

 

 

ಜೀವನದಿ - ಕನ್ನಡ ನಾಡಿನ ಜೀವನದಿ ಕಾವೇರಿ

|ಚಿತ್ರಗೀತೆ -ಜೀವನದಿ

ಸಾಹಿತ್ಯಜಯಗೋಪಾಲ್ ಏನ್.ಆರ

 

ಗಂಗೆಯ ತುಂಗೆಯ ಪ್ರೀತಿಯ ಸೋದರಿ
ಪಾವನೆ ಪುಣ್ಯನದಿ
ಬಳುಕುತ ಕುಲುಕುತ ಹರುಷವ ಚೆಲ್ಲುತ
ಸಾಗುವ ಧನ್ಯ ನದಿ
ತಾ ಹೆಜ್ಜೆಯ ಇಟ್ಟೆಡೆ ಅಮೃತ ಹರಿಸಿ ಕಾಯುವ ಭಾಗ್ಯನದಿ

ಕನ್ನಡ ನಾಡಿನ ಜೀವನದೀ ಈ ಕಾವೇರಿ  ಓ ಹೋ ಹೋ ಜೀವನದೀ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ   ಓ ಹೋ ಹೋ ಸುಖವ ತರೋ ಈ ಸಿಂಗಾರಿ

ಈ ತಾಯಿಯೂ ನಕ್ಕರೇ,ಸಂತೋಷದಾ ಸಕ್ಕರೇ
ಮಮತೆಯಾ ಮಾತೆಗೆ,ಭಾಗ್ಯದಾ ದಾತೆಗೆ, ಮಾಡುವೆ ಭಕ್ತಿಯಾ ವಂದನೇ ಓ...

ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ

ಪ್ರೇಮದಿ ಕಾವೇರಿ ಹರಿವಳು ನಲಿವಿಂದ
ಸಾಗರದೆಡೆ ಓಡಿ ಸಂಗಮಕೆ
ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು
ಜೀವಗಳೊಂದಾದ ಸಂಭ್ರಮದೆ
ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ
ಸ್ಪರ್ಶದ ಸುಖದ ಕಲ್ಪನೆ ತಂದಿದೆ ಏನೋ ರೋಮಾಂಚನ
ಯಾವಾ ಬಂಧವೋ, ಸೃಷ್ಟಿ ಸ್ಪಂದವೋ
ಆಯಸ್ಕಾಂತದ ಸೆಳೆತವೋ ಹರೆಯದ ತುಡಿತವೋ
ಮನಸೂ ತೇಲಾಡಿದೆ...

ಕನ್ನಡ ನಾಡಿನ ಜೀವನದೀ ಈ ಕಾವೇರಿ  ಓ ಹೋ ಹೋ ಜೀವನದೀ ಈ ಕಾವೇರಿ

ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು
ಹೊಮ್ಮಿದೆ ಭೋರೆಂದೂ ವಿರಹದಲಿ
ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ
ಕಾದಿದೆ ನೋಡೆಂದೂ ತವಕದಲಿ

ಲಜ್ಜೆಯು ಅಳಿಯದು, ಮೀರುತಾ ಸಾಗಿಸಿ
ಸಾಗರ ಹರಸಿದೆ. ತನ್ನನೆ ಮರೆತು, ಕಡಲಲೆ ಬೆರೆತು,ಧನ್ಯವು ತಾನಾಗಿದೆ
ಪ್ರಕೃತಿ ನಿಯಮವೋ, ಪ್ರೇಮದ ಧರ್ಮವೋ
ಬಳಿ ಸೇರುತ ಓಡುವ ಅಲೆಯ ತಲೆಯಲಿ, ಪ್ರೇಮಾ ಹಾಡಾಗಿದೆ

ಕನ್ನಡ ನಾಡಿನ ಜೀವನದೀ ಈ ಕಾವೇರಿ ಓ ಹೋ ಹೋ ಜೀವನದೀ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ  ಓ ಹೋ ಹೋ ಸುಖವ ತರೋ ಈ ಸಿಂಗಾರಿ
ಈ ತಾಯಿಯೂ ನಕ್ಕರೇ, ಸಂತೋಷದಾ ಸಕ್ಕರೇ
ಮಮತೆಯಾ ಮಾತೆಗೇ, ಭಾಗ್ಯದಾ ದಾತೆಗೇ, ಮಾಡುವೆ ಭಕ್ತಿಯಾ ವಂದನೇ..............

 

 

ಈ ಭೂಮಿ ಬಣ್ಣದ ಬುಗುರಿ ಆ ಶಿವನೆ ಚಾಟಿ ಕಣೋ

       -ಹಂಸಲೇಖಾ

ಈ ಭೂಮಿ ಬಣ್ಣದ ಬುಗುರಿ ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ
ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ಕಾಲ ಕ್ಷಣಿಕ ಕಣೋ ಓ ಓ ಓಹೋ
ಈ ಭೂಮಿ ಬಣ್ಣದ ಬುಗುರಿ ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ

ಮರಿಬೇಡ ತಾಯಿಯ ಋಣವ ಮರಿಬೇಡ ತಂದೆಯ ಒಲವ ಹಡೆದವರೆ ದೈವ ಕಣೋ
ಸುಖವಾದ ಭಾಷೆಯ ಕಲಿಸೋ ಸರಿಯಾದ ದಾರಿಗೆ ನಡೆಸೋ ಸಂಸ್ಕೃತಿಯೇ ಗುರುವು ಕಣೋ
ಮರೆತಾಗ ಜೀವನ ಪಾಠ ಕೊಡುತಾನೆ ಚಾಟಿಯ ಏಟ ಕಾಲ ಕ್ಷಣಿಕ ಕಣೋ ಓ ಓ ಓಹೋ
ಈ ಭೂಮಿ ಬಣ್ಣದ ಬುಗುರಿ ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ

ಮರಿಬೇಡ ಮಗುವಿನ ನಗುವ ಕಳಿಬೇಡ ನಗುವಿನ ಸುಖವ ಭರವಸೆಯೇ ಮಗುವು ಕಣೋ
ಕಳಬೇಡ ಕೊಲ್ಲಲು ಬೇಡ ನೀ ಹಾಡು ಶಾಂತಿಯ ಹಾಡ ಜೀವನವೇ ಪ್ರೀತಿ ಕಣೋ

ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ಕಾಲ ಕ್ಷಣಿಕ ಕಣೋ ಓ ಓ ಓಹೋ
ಈ ಭೂಮಿ ಬಣ್ಣದ ಬುಗುರಿ ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ

 

ಪುಟ್ಟಿಯ ಕವನ

ಪುಟ್ಟಿಯೊಮ್ಮೆ ಪುಟ್ಟದಾದ ಕವನ ಬರೆದಳು.

ಹಾಳೆ ಮೇಲೆ ತನ್ನ ಮನಸೇ ತೆರೆದೇ ಇಟ್ಟಳು.

ಅಮ್ಮನೆದುರು ರಾಗ ತೆಗೆದು ಹಾಡಿ ಬಿಟ್ಟಳು.

ಕೈಯ ಸದ್ದು ಮಾಡಿ ತಾನೆ ತಾಳ ಕೊಟ್ಟಳು.

ಅವಳ ಹಾಡು ಕೇಳಿ ಅಮ್ಮ ಹರುಷ ಪಟ್ಟಳು.

ಡಬ್ಬ ತೆರೆದು ಉಂಡಿ ಕೊಟ್ಟು ಮುತ್ತನಿಟ್ಟಳು.

      -ವಿದ್ಯಾಸಾಗರ ಕುಕ್ಕುಂದಾ

 

ಕುಹೂ ಕುಹೂ

ಎಲ್ಲ ಮರಿಗಳು ಕಾ ಕಾ ಎಂದರೆ

ಇದೊಂದು ಮಾತ್ರ ಕುಹೂ ಕುಹೂ !

ನಿಬ್ಬೆರಗಾದಳು ಹಸಿ ಬಾಣಂತಿ

ಈ ಮರಿಯೊಂದಕ್ಕೆನಾಯಿತು?

          ಹಕೀಮ ಕಾಕಾ ಬಂದನು ರಾತ್ರಿ

          ಕೂಸಿಗೆ ತಿನಿಸಿದ ಹುಣಸೇ ಹೂ!

          ಎಲ್ಲಾ ಮರಿಗಳು ಕಾ ಕಾ ಎಂದವು

          ಇದೊಂದು ಮಾತ್ರ ಕುಹೂ ಕುಹೂ !

ಕಾಗಕ್ಕನ ಗಂಡನಿಗೂ ಕಸಿವಿಸಿ

ನೆರೆಮನೆಯವರೆನೆಂದಾರು!

ಕಾಗೆಯ ಮರಿಯಿದು ಕಾ ಕಾ ಎನ್ನದೆ

ಕೂಗುತ್ತಿದ್ದರೆ ಕುಹೂ ಕುಹೂ!

         

          ಮರುದಿನ ದೂರದ ಊರಿನ ಕೋಗಿಲೆ

          ಬೇಡಿತು ಕಾಕಾಂಬಿಕೆಯನ್ನು!

ಮರಿಯೇ ಇಲ್ಲದ ಮಡಿಲಿಗೆ ನೀಡಿರಿ

ಕುಹೂ ಎನ್ನುವ ಕೂಸನ್ನು!

ಕಂಬನಿಯೋರಸುತ ಕೊಟ್ಟಳು

ರಕ್ಷಣೆ ಪಡೆಯಲಿ ಎಂದು!         

ಮಾತೆಯರಿಬ್ಬರ ಪ್ರೀತಿಯ ಕಂದ

ಕೂಗಿತು ಮೆಲ್ಲನೆ ಕುಹೂ ಕುಹೂ!

       -ಎಚ್. ಎಸ್. ವೆಂಕಟೇಶಮೂರ್ತಿ

       ತಾಯಿ ನುಡಿ

ನಮ್ಮ ತಾಯಿ ಕನ್ನಡ ನಮ್ಮ ಭಾಷೆ ಕನ್ನಡ

ನಮ್ಮ ನುಡಿ  ಕನ್ನಡ ನಮ್ಮ ನಡೆ ಕನ್ನಡ.!!ಪ!!

ಧರ್ಮವೊಂದೇ ನಮ್ಮದು, ಜಾತಿಯೊಂದೇ ನಮ್ಮದು.

ನಿತಿವೊಂದೇ ನಮ್ಮದು, ತತ್ವವೊಂದೇ ನಮ್ಮದು!!

ಭಾವವೊಂದೇ ನಮ್ಮದು, ನಾಡುವೊಂದೆ ನಮ್ಮದು

ನುಡಿವೊಂದೇ ನಮ್ಮದು, ನಡೆಯೊಂದೇ ನಮ್ಮದು.!!

ನಾವು ಕೂಡಿ ದುಡಿಯುವಾ ಭೇದ ಭಾವ ಅಳಿಸುವಾ

ದೇಶ ಸೇವೆ ಮಾಡುವಾ ಈಶ ಸೇವೆ ಮಾಡುವಾ!!

     -ಬಿ.ಕೆ. ರೋಹಿಣಿ.

ಮಳೆರಾಯ

ರಪ ರಪ ಮಳೆಯು ಬಂದಿತು ಗೆಳೆಯ

ಬಾ ಬಾ ಆಡೋಣ

ಕೈ ಕೈ ಹಿಡಿದು ಮಳೆಯಲಿ ನಡೆದು

ಥಕ ಥಕ ಕುಣಿಯೋಣ

ಕಳ್ಳೆ ಮಿಳ್ಳೆ ಆಟವನಾಡುತ

ಗಿರಿ ಗಿರಿ ತಿರುಗೋಣ

ಸುಣ್ಣವ ಕೊಡುವೆನು ಸುರಿಯಲೆ ಮಳೆಯೇ

ಎನ್ನುತ ಕೂಗೋಣ

ಬೀಳುವ ಹನಿಗಳ ಬಾಯಲಿ ಹಿಡಿದು

ರುಚಿಯನು ನೋಡೋಣ

ಆಣೆಯಕಲ್ಲುಗಳಾರಿಸಿ ನಾವು

ಮೆಲ್ಲಗೆ ಚಿಪೋಣ

ಕಾಗದದಿಂದಲಿ ದೋಣಿಯ ಮಾಡಿ

ತೇಲಿಸಿ ನಡೆಯೋಣ

ಕಾಮನ ಬಿಲ್ಲಿಗೆ ಬಣ್ಣಗಳೆನಿತು

ಎಣಿಸೇ ನೋಡೋಣ.

       -ಶಂ.ಗು. ಬಿರಾದಾರ

 

 

 

ಹಸಿರು ಕ್ರಾಂತಿ

ಪಟ ಪಟ ತಗ್ಗನು ತೆಗೆಯೋಣ

ಚಟ ಪಟ ಗೊಬ್ಬರ ಹಾಕೋಣ!!೧!!

ಸರ ಸರ ಸಸಿಗಳ ಹಚ್ಚೋಣ

ಭರ ಭರ ನೀರನು ಹನಿಸೋಣ !!೨!!

ಗಿಡ ಮರ ಬಳ್ಳಿಯ ಬೆಳೆಸೋಣ

ನಾಡಿನ ಸಿರಿಯನು ಉಳಿಸೋಣ!!೩!!

ಊರಿಗೊಂದು ವನವನು ಬೆಳೆಸೋಣ

ಮನೆಗೊಂದು ಮರವನ್ನು ಹಚ್ಚೋಣ!!೪!!

ಪರಿಸರ ಶುಚಿಯಾಗಿ ಇರಿಸೋಣ

ಪರಿಸರ ಮಾಲಿನ್ಯ ಕಳೆಯೋಣ !!೫!!

ಹಸಿರೇ ಉಸಿರೆಂದು ಅನ್ನೋಣ

ಹಸಿರು ಕ್ರಾಂತಿಯ ಮಾಡೋಣ!!೬!!

       -ರಂಗನಾಥ ಅಕ್ಕಲಕೋಟೆ

 

ನಮ್ಮ ಬಾವುಟ

ಏರುತಿಹುದು ಹಾರುತಿಹುದು

ನೋಡು ನಮ್ಮ ಬಾವುಟ!

ತೋರುತಿಹುದು ಹೊಡೆದು ಹೊಡೆದು

ಬಾನಿನಗಲ ಪಟಪಟ

ಕೇಸರಿ ಬಿಳಿ ಹಸಿರು ಮೂರೂ

ಬಣ್ಣ ನಡುವೆ ಚಕ್ರವು.

ಸತ್ಯ ಶಾಂತಿ ತ್ಯಾಗ ಮೂರ್ತಿ

ಗಾಂಧೀ ಹಿಡಿದ ಚರಕವು

ಇಂಥ ಧ್ವಜವು ನಮ್ಮ ಧ್ವಜವು

ನೋಡು ಹಾರುತಿರುವುದು.

ಧ್ವಜದ ಭಕ್ತಿ ನಮ್ಮ ಶಕ್ತಿ

ನಾಡಗುಡಿಯು ಮೆರೆವುದು.

ಕೆಂಪು ಕಿರಣ ತುಂಬಿ ಗಗನ

ಹೊನ್ನ ಬಣ್ಣವಾಗಿದೆ.

ನಮ್ಮ ನಾಡ ಗುಡಿಯ ನೋಡ

ನೋಡಿರಣ್ಣ ಹೇಗಿದೆ.!

      -ಕಯ್ಯಾರ ಕಿಯಣ್ಣರೈ

 

 

ಜಲಚಕ್ರ

ಕಡಲ ಜಲವು ಆವಿಯಾಗಿ ಗಗನದೊಡಲು ಸೇರಿತು

ತಂಪು ತಗಲಿ ಆವಿ ಕರಗಿ ನೀರು ಧರೆಗೆ ಇಳಿಯಿತು.

ಧರೆಗೆ ಇಳಿದ ಮಳೆಯ ನೀರು ಹಳ್ಳವಾಗಿ ಹರಿಯಿತು

ಹಳ್ಳದಿಂದ ಹರಿದು ಬಂದು ಕೀಯ ಸೇರಿಕೊಂಡಿತು

ಮಳೆಯ ನೀರು ಕೆಲವು ಪಾಲು ಭೂಮಿಯಲ್ಲಿ ಇಂಗಿತು

ನೆಲವ ಅಗಿಯೆ ಸೆಳೆಯು ಚಿಮ್ಮಿ ಬಾವಿ ತುಂಬಿ ತುಳುಕಿತು.

ಗಿರಿಗಳಿಂದ ಇಳಿದ ನೀರು ಹೊನಲು ಸೇರಿ ಹರಿಯಿತು.

ತಗ್ಗು, ದಿಣ್ಣೆ ದಾಟಿ ಹೊನಲು ಕಡಲ ಕುಡಿಕೊಂಡಿತು

ಕೆರೆಕುಂಟೆ ಬಾವಿ ಹೊನಲು ಮತ್ತೆ ಕಡಲು ಎಲ್ಲವು.

ಪ್ರಾಣಿಕೋಟಿ ಸಸ್ಯಕೆಲ್ಲ ಜಲವ ಕೊಡುವ ಮೂಲವು.

                     --ಹ. ಮ. ಪುಜಾರ

 

 

                      ಶಿಕ್ಷಕ

ಮಕ್ಕಳ ಜೊತೆಗೆ ಮಗು ತಾನಾಗಿ

ಅಕ್ಷರ ಕಲಿಸುವನು.

ಒಳ್ಳೇ ಪ್ರಜೆಗಳ ದೇಶಕೆ ಕೊಡುವ

ಶಿಲ್ಪಿಯು ಶಿಕ್ಷಕನು.

ಮಕ್ಕಳ ಮನದಲಿ ಉತ್ತಮ ಭಾವನೆ

ಶಿಕ್ಷಕ ಬಿತ್ತುವನು.

ಎಳೆಯರ ಎಳ್ಳಿಗೆ ಅವಿರತ ದುಡಿಯುತ

ಶಿಕ್ಷಕ ಶ್ರಮಿಸುವನು.

ನಾಡಿನ ಗಣ್ಯರ ಚರಿತೆಯ ಹೇಳುತ ಸ್ಪೂರ್ತಿಯತುಂಬುವನು

ವಿಧವಿಧ ಆಟಗಳಾಡಿಸಿ ದೇಹಕೆ

ಚೇತನ ನೀಡುವನು.

ತರ ತರ ಸುಂದರ ಚಿತ್ರವ ಬಿಡಿಸಿ

ಕಣ್ಮನ ತಣಿಸುವನು.

ಜಾತಿ ವಿಜಾತಿಯ ಭಾವನೆ ಅಳಿದು

ಭೋದನೆ ಮಾಡುವನು.

                                -ಪ.ಗು.ಸಿದ್ದಾಪುರ

 

ಈ ಮಣ್ಣು ನಮ್ಮದು

ಈ ಮಣ್ಣು ನಮ್ಮದು ಈ ಗಾಳಿ ನಮ್ಮದು

ಕಳಕಲನೆ ಹರಿಯುತಿಹ ನೀರು ನಮದು

ಕಣಕಣದಲು ಭಾರತೀಯ ರಕ್ತ ನಮ್ಮದು

 

ನಮ್ಮ ಕಾಯ್ವ ಹಿಮಾಲಯವೇ ತಂದೆ ಸಮಾನ

ಗಂಗೆ, ತುಂಗೆ, ಕಾವೇರಿ ತಾಯಿ ಸಮಾನ

ಈ ದೇಶದ ಜನರೆಲ್ಲರು ಸೋದರ ಸಮಾನ

ಈ ನಾಡಿನ ಹೃದಯವದು ದೈವ ಸನಿದಾನ

 

ಅಜಂತಾ, ಎಲ್ಲೋರಾ, ಹಳೇಬೀಡು ಬೇಲೂರು

ಶಿಲೆಗಳಿವು ಕಲೆಯ ಆಗರ

ಹಿಂದು-ಬುದ್ಧ-ಜೈನ-ಕ್ರಿಸ್ತ- ಮುಸಲ್ಮಾನ

ಧರ್ಮಗಳ ಮಹಾನ ಸಾಗರ

 

ನಡೆದು ಹೋದ ಚರಿತೆಯೋ

ನಾಳೆ ಎನುವ ಕವಿತೆಯೋ

ಈ ನಾಡ ಮಣ್ಣಿನಲ್ಲಿದೆ ಜೀವನಸಾರ

ತಂಗಾಳಿಗೆ ತಲೆ ತೂಗೋ ಪೈರಿನ ಹಾಡು

ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು

ವಿಜ್ಞಾನವು ಅಜ್ಞಾನವ ಗೆಲ್ಲುವ ಪಾಡು

ಹೊಸ ಭಾರತ ನಿರ್ಮಾಣವು ಸಾಗಿದೆ ನೋಡು.

 

           -ಆರ್. ಏನ್. ಜಯಗೋಪಾಲ

 

 ಕಲ್ಲು ಸಕ್ಕರೆ ಕೊಳ್ಳಿರೋ

ಕಲ್ಲು ಸಕ್ಕರೆ ಕೊಳ್ಳಿರೋ ,ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೋ|| ||
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಪುಲ್ಲ ಲೋಚನ ಶ್ರೀಕೃಷ್ಣ ನಾಮವೆಂಬ || ಅ.ಪ||

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತ್ಯೊತ್ತಿ ಗೋಣಿಯೋಳ್ ತುಂಬುವುದಲ್ಲ
ಎತ್ತ ಹೋದರು ಬಾಡಿಗೆ ಸುಂಕ ಇದಕಿಲ್ಲ
ಉತ್ತಮ ಸರಕಿದು ಅತೀ ಲಾಭ ಬರುವಂಥ ||

ನಷ್ಟ ಬೀಳುವುದಿಲ್ಲ ನಾತ ಹುಟ್ಟುವುದಿಲ್ಲ
ಎಷ್ಟು ಒಯ್ದರು ಬೆಲೆರೊಕ್ಕವಿದಕಿಲ್ಲ
ಕಟ್ಟಿರುವೆಯು ತಿಂದು ಕಡಿಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ಧವಾಗಿರುವಂಥ ||

ಸಂತೆ ಸಂತೆಗೆ ಹೋಗಿ ಶ್ರಮ ಪಡಿಸುವುದಲ್ಲ
ಸಂತಯೊಳಗೆ ಇಟ್ಟು ಮಾರುವುದಲ್ಲ
ಸಂತತ ಭಕ್ತರ ನಾಲಿಗೆ ಸವಿಗೊಂಬ
ಕಾಂತ ಪುರಂದರ ವಿಠ್ಠಲನಾಮವೆಂಬ ||

         - ಪುರಂದರದಾಸ್

 

 

 

 

 

          ನನ್ನ ದೇಹದ ಬೂದಿ

 ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ
 
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ;
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
 
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ
 
ತೇಲಿ ಬೀಳಲಿ ಮೀನ ಹಿಡಿಯುವಲ್ಲಿ ;
ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು
 
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಕೊಳದಲ್ಲಿ ಬೀರಿ ಬಿಡಿ
 
ತಾವರೆಯು ದಿನದಿನವು ಅರಳುವಲ್ಲಿ ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
 
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
 
ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
 
ನಿಜ ಸೇವೆಗೈಯಲಿಕೆ ಬರಲಿ ಮುಂದು.

            -ದಿನಕರ ದೇಸಾಯಿ

    

 ಭಾರತ ಮಾತೆ

ನಮ್ಮ ತಾಯಿ ಭರತ ಮಾತೆ ನಮಗೆ ಜನ್ಮ ಕೊಟ್ಟಳು

ತನ್ನ ಪುಣ್ಯ ನಮಗೆ ನೀಡಿ ನಿಜದಿ ಹರುಷ ಪಟ್ಟಳು

ಮೊಟ್ಟ ಮೊದಲು ಭರತನನ್ನು ತಾಯಿ ನೀನೆ ಆಡಿಸಿ

ಅವನ ಶಕ್ತಿ ಜಗಕ್ಕೆ ತೋರಿ ಪೋರೆದೆಯಮ್ಮ ಕರುಣಿಸಿ.

ನಿನ್ನ ಪುಣ್ಯ ಗರ್ಭದಲ್ಲಿ ಬಸವ ಜನಿಸಿ ಬಂದನು

ಎಲ್ಲರನು ಬಳಿಗೆ ಕರೆದು ಮನುಜರೊಂದೆ ಎಂದನು

ಬುದ್ಧ ಬಸವ ಭರತ ಎಲ್ಲ ನಿನ್ನ ಕರುಣೆ ಕುಡಿಗಳು

ಅವರು ಬಂದ ಮಾರ್ಗದಲ್ಲಿ ನಾವು ಬಂದ ಮಿಡಿಗಳು.

ತಾಯಿ ನಮಗೆ ಕರುಣೆತೋರಿ ಬಾಳ ದಾರಿ ತೋರಿಸು

ಮೇಲು ಕೀಳು ತೊಡೆದು ಹಾಕಿ ಪ್ರೀತಿ ಕೊಳಲು ಬಾರಿಸು.

             -ಎ. ಕೆ. ರಾಮೇಶ್ವರ

ತಾಯಿ

ತಾಯಿ ತಾಯಿ ದೇವರೆಂದು ವೇದ 

ಬಾಯಿ ಬಿಟ್ಟು ಹೇಳುತಿಹುದು

ತಾಯಿ ದೇವರೆಂದು ಹಿರಿಯ-

ರೆಲ್ಲರರಿವರು . 

ತಾಯಿ ದೇವರೆಂದು ತಿಳಿದ-

ರೆಲ್ಲರೊರೆವರು

ಮನೆಯೆ ಮೊದಲ ಪಾಠಶಾಲೆ

ಜನನಿ ತಾನೆ ಮೊದಲ ಗುರುವು

ಜನನಿಯಿಂದ ಪಾಠ ಕಲಿತ

ಜನರು ಧನ್ಯರು.

ಘನತೆಯಿಂದಲವರು ಬಾಳ್ವ-

ರೆನುತ ನುದಿವರು

ಹೊಟ್ಟೆಯಲ್ಲಿ ಹೊತ್ತು ತಾಯಿ

ಬೆಟ್ಟದಷ್ಟು ಕಷ್ಟವನ್ನು

ಗಟ್ಟಿ ಮನದಿ ತಾಳ್ವಳಲ್ತೆ

ಕಂದಗೋಸುಗ.

ಬಿಟ್ಟು ಸುಖವ ತಾಳ್ವಳವಳು

ಬಂದ ದುಃಖವ.

ಕಂದ ಬಳಲಿ ಬಂದನೆಂದು

ನೊಂದುಕೊಂಡು ಬೇಗ ಮಮತೆ

ಯಿಂದನಗುತ ನಗಿಸುತಮೃತ

ಬಿಂದುವೆರೆವಳು.

ಬೆಂದ ಮನದ ಬೆಗೆಯಳಿಸು

ತಂದಗೊಳಿಪಳು.

ಪಡೆದ ತಾಯಿ, ಜನುಮವಿತ್ತ

ಪೋಡವಿಎಂಬಿವೆರಡು ಸಗ್ಗ-

ದೆಡೆಗೆ ಮಿಗಿಲು;ಸರ್ವಸಾಧು

ವರರು ಜಗದಲಿ

ಬಿಡುವರೆಲ್ಲವನ್ನಿವಕ್ಕೆ

ಪರಮ ಹರ್ಷದಿ.

        ಎಲ್. ಗುಂಡಪ್ಪ

 www.kannadadarshan.blogspot.com  




 

 

 

 

 

 

 

 

 

 

 

 

 

 

 

 


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು