ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

History And Civics Std 6th - 6ನೇ ತರಗತಿ ಇತಿಹಾಸ ಮತ್ತು ನಾಗರಿಕಶಾಸ್ತ್ರ ಪ್ರಶ್ನೋತ್ತರಗಳು

                                                   ಪ್ರಾಚೀನ ಭಾರತದ ಇತಿಹಾಸ

ಆರನೆಯ ಇಯತ್ತೆ    


ಅನುಕ್ರಮಣಿಕೆ

ಪಾಠದ ಹೆಸರು

 

ಪುಟ ಸಂಖ್ಯೆ

 

1. ಭಾರತೀಯ ಉಪಖಂಡ ಮತ್ತು ಇತಿಹಾಸ

 

1

2. ಇತಿಹಾಸದ ಸಾಧನಗಳು

 

 

3. ಹರಪ್ಪಾ ಸಂಸ್ಕೃತಿ

 

 

4. ವೈದಿಕ ಸಂಸ್ಕೃತಿ

 

 

5. ಪ್ರಾಚೀನ ಭಾರತದಲ್ಲಿಯ ಧಾರ್ಮಿಕ ಪ್ರವಾಹ

 

 

6. ಜನಪದಗಳು ಮತ್ತು ಮಹಾಜನಪದಗಳು

 

 

7. ಮೌರ್ಯಕಾಲದ ಭಾರತ

 

 

8. ಮೌರ್ಯ ಸಾಮ್ರಾಜ್ಯದ ನಂತರದ ರಾಜ್ಯಗಳು

 

 

9. ದಕ್ಷಿಣ ಭಾರತದಲ್ಲಿಯ ಪ್ರಾಚೀನ ರಾಜ್ಯಗಳು

 

 

10. ಪ್ರಾಚೀನ ಭಾರತ: ಸಂಸ್ಕೃತಿಕ

 

 

11. ಪ್ರಾಚೀನ ಭಾರತ ಮತ್ತು ಜಗತ್ತು

 

 

 

 

 

 

 

 

 

 

 

 

 

 

 

 

 

 

 

 

1. ಭಾರತೀಯ ಉಪಖಂಡ ಮತ್ತು ಇತಿಹಾಸ

ಪ್ರ. ೧. ಪ್ರತಿಯೊಂದಕ್ಕೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

(೧) ಇತಿಹಾಸವೆಂದರೇನು ?

ಉತ್ತರ:-  ಇತಿಹಾಸವೆಂದರೆ ಮಾನವೀ ಸಂಸ್ಕೃತಿಯ ಪ್ರವಾಸದಲ್ಲಿ ಸಂಭವಿಸಿದ ಎಲ್ಲ ಪ್ರಕಾರದ ಭೂತಕಾಲದ ಘಟನೆಗಳ ಸುಸಂಗತ ರಚನೆ.

 (೨) ಮಾನವ ಸಮಾಜವು ದೀರ್ಘಕಾಲದ ವರೆಗೆ ಎಲ್ಲಿ ವಸತಿ ಮಾಡುತ್ತದೆ ?

ಉತ್ತರ:- ಬದುಕಿನ ಸಾಧನಗಳಾದ ಹವಾಮಾನ, ಪರ್ಜನ್ಯ, ಬೇಸಾಯದಿಂದ ದೊರೆಯುವ ಬೆಳೆಗಳು, ವನಸ್ಪತಿಗಳು ಮತ್ತು ಪ್ರಾಣಿಗಳು ಹೇರಳವಾಗಿ ಇದ್ದಲ್ಲಿ ಮಾನವ ಸಮಾಜವು ದೀರ್ಘಕಾಲದ ವರೆಗೆ ವಸತಿ ಮಾಡುತ್ತದೆ.

(೩) ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರಿಗೆ ಆಹಾರಕ್ಕಾಗಿ ಯಾವುದರ ಮೇಲೆ ಅವಲಂಬಿಸಿರಬೇಕಾಗುತ್ತದೆ ?

ಉತ್ತರ:- ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರಿಗೆ ಆಹಾರಕ್ಕಾಗಿ ಬೇಟೆಗಾರಿಕೆಯ ಮೇಲೆ ಹಾಗೂ ಅರಣ್ಯದಿಂದ ಸಂಗ್ರಹಿಸಿದ ಪದಾರ್ಥಗಳ ಮೇಲೆ ಹೆಚ್ಚು ಅವಲಂಬಿಸಿರಬೇಕಾಗುತ್ತದೆ.

(೪) ಭಾರತದಲ್ಲಿಯ ಅತ್ಯಂತ ಪ್ರಾಚೀನ ನಾಗರಿಕ ಸಂಸ್ಕೃತಿ ಯಾವುದು ?

ಉತ್ತರ:- ಭಾರತದಲ್ಲಿಯ ಅತ್ಯಂತ ಪ್ರಾಚೀನ ನಾಗರಿಕ ಸಂಸ್ಕೃತಿ ಹರಪ್ಪಾ ನಾಗರಿಕ ಸಂಸ್ಕೃತಿಯಾಗಿದೆ.

ಪ್ರ.೨ . ಕೆಳಗಿನ ಪ್ರಶ್ನೆಗಳಿಗೆ ಸರದಲ್ಲಿ ಉತ್ತರ ಬರೆಯಿರಿ.

(೧) ಮಾನವೀ ಸಮಾಜ ಜೀವನವು ಯಾವ ಸಂಗತಿಗಳ ಮೇಲೆ ಅವಲಂಬಿಸಿರುತ್ತದೆ ?

ಉತ್ತರ:- ಮಾನವೀ ಸಮಜಾವು ಆಹಾರ, ವೇಷಭೂಷಣ, ಗೃಹನಿರ್ಮಾಣ, ಉದ್ಯೋಗ ಮುಂತಾದ ಸಂಗತಿಗಳ ಮೇಲೆ ಅವಲಂಬಿಸಿರುತ್ತದೆ

(೨) ನಾವು ವಾಸಿಸುವ ಪ್ರದೇಶದಲ್ಲಿಯ ಯಾವ ಸಂಗತಿಗಳು ನಮ್ಮ ಬದುಕಿನ ಸಾಧನಗಳಾಗಿರುತ್ತವೆ ?

ಉತ್ತರ:- ನಾವು ವಾಸಿಸುವ ಪ್ರದೇಶದಲ್ಲಿಯ ಹವಾಮಾನ, ಪರ್ಜನ್ಯ, ಬೇಸಾಯದಿಂದ ದೊರೆಯುವ ಬೆಳೆಗಳು, ವನಸ್ಪತಿ, ಪ್ರಾಣಿ ಮುಂತಾದ ಸಂಗತಿಗಳು ನಮ್ಮ ಬದುಕಿನ ಸಾಧನಗಳಾಗಿರುತ್ತವೆ.

(೩) ಭಾರತೀಯ ಉಪಖಂಡಎಂದು  ಯಾವ ಪ್ರದೇಶವನ್ನು ಕರೆಯುತ್ತಾರೆ?

ಉತ್ತರ:- ಅಫಗಾನಿಸ್ತಾನ, ಪಾಕಿಸ್ತಾನ, ನೇಪಾಳ, ಭೂತಾನ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ನಮ್ಮ ಭಾರತ ದೇಶ ಇವೆಲ್ಲ ಕೂಡಿ ನಿರ್ಮಾಣವಾಗಿರುವ ಭೂಭಾಗವು ದಕ್ಷಿಣ ಏಷ್ಯಾ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ. ಈ ಭೂಭಾಗದಲ್ಲಿರುವ ಭಾರತ ಸೇಧದ ವಿಸ್ತಾರ ಮತ್ತು ಮಹತ್ವವನ್ನು ಗಮನಿಸಿ ಈ ಪ್ರದೇಶಕ್ಕೆ ಭಾರತೀಯ ಉಪಖಂಡ ಎಂದೂ ಕರೆಯುತ್ತಾರೆ.

ಪ್ರ. ೩. ಕಾರಣ ಕೊಡಿರಿ.

(೧) ಇತಿಹಾಸ ಮತ್ತು ಭೂಗೋಲದಸಂಬಂಧವು ಅವಿಚ್ಛಿನ್ನವಾಗಿರುತ್ತದೆ.

ಕಾರಣ:-ಭೌಗೋಲಿಕ  ಪರಿಸ್ಥಿತಿಯು ಇತಿಹಾಸದ ಮೇಲೆ ಅನೇಕ ಪ್ರಕಾರಗಳಿಂದ ಪರಿಣಾಮ ಬಿರುತ್ತಿರುತ್ತದೆ. ಸ್ಥಳ, ಕಾಲ, ವ್ಯಕ್ತಿ ಮತ್ತು ಸಮಾಜ ಇವು ಇತಿಹಾಸದ ನಾಲ್ಕುಪ್ರಮುಖ ಆಧಾರ ಸ್ತಂಭಗಳಾಗಿವೆ. ಈ ನಾಲ್ಕು ಘಟಕಗಳ ಹೊರತು ಇತಿಹಾಸ ಬರೆಯಲ್ಪಡುವುದಿಲ್ಲ. ಇವುಗಳಲ್ಲಿಯ ಸ್ಥಳ ಈ ಘಟಕವು ಭೂಗೋಲದ ಜೊತೆ ಅಂದರೆ ಭೌಗೋಲಿಕ ಪರಿಸ್ಥಿತಿಯ ಜೊತೆ ಸಂಬಂಧಿತವಾಗಿದೆ.

(೨) ಜನರು ಊರನ್ನು ಬಿಟ್ಟು ಹೋಗಬೇಕಾಗುತ್ತದೆ.

ಕಾರಣ:- ಪರಿಸರದ ಅವನತಿ, ಬರಗಾಲ, ಆಕ್ರಮಣಗಳು ಅಥವಾ ಇತರ ಕಾರಣಗಳಿಂದಾಗಿ ಬದುಕಿನ ಸಾಧನಗಳ ಕೊರತೆಯುಂಟಾದ ಕೂಡಲೇ ಜನರು ಊರನ್ನು ಬಿಟ್ಟು ಹೋಗಬೇಕಾಗುತ್ತದೆ.

ಪ್ರ. ೪. ಗುಡ್ಡುಗಾಡು ಪ್ರದೇಶದಲ್ಲಿಯ ಮತ್ತು ಬಯಲು ಪ್ರದೇಶದಲ್ಲಿಯ ಜನಜೀವನದಲ್ಲಿಯ ವ್ಯತ್ಯಾಸವನ್ನು ಸ್ಪಷ್ಟಪಡಿಸಿರಿ.

ಉತ್ತರ:-  1. ಗುಡ್ಡುಗಾಡು ಪ್ರದೇಶದಲ್ಲಿ ವಾಸಿಸುವ ಜನರ ಜೀವನವು ಬಯಲು ಪ್ರದೇಶದಲ್ಲಿ ವಾಸಿಸುವ ಜನರ ಜೀವನಕ್ಕಿಂತ ಹೆಚ್ಚು ಕಷ್ಟಮಯವಾಗಿರುತ್ತದೆ.  2. ಗುಡ್ಡುಗಾಡು ಪ್ರದೇಶದಲ್ಲಿ ಫಲವತ್ತಾದ ಭೂಮಿಯ ಉಪಲಬ್ದತೆ ಅತ್ಯಂತ ಕಡಿಮೆ ಇದ್ದರೆ ಬಯಲು ಪ್ರದೇಶದಲ್ಲಿ ಫಲವತ್ತಾದ ಭೂಮಿಯು ದೊಡ್ಡ ಪ್ರಮಾಣದಲ್ಲಿ ಲಭ್ಯವಿರುತ್ತದೆ. 3. ಅದರಿಂದಾಗಿ ಗುಡ್ಡಗಾಡು ಪ್ರದೇಶದಲ್ಲಿಯ ಜನರಿಗೆ ತೃಣಧಾನ್ಯಗಳು ಮತ್ತು ಕಾಯಿಪಲ್ಯೆಗಳು ಕಡಿಮೆ ಪ್ರಮಾಣದಲ್ಲಿ ಲಭ್ಯವಿರುತ್ತದೆ. ಆದರೆ ಬಯಲು ಪ್ರದೇಶದಲ್ಲಿಯ ಜನರಿಗೆ ಈ ಸಂಗತಿಗಳು ಸಾಕಷ್ಟು ದೊರೆಯುತ್ತವೆ. ಅದರ ಪರಿಣಾಮ ತಿಂಡಿ-ತಿನಿಸುಗಳ ಮೇಲೆ ಆದದ್ದು ಕಂಡು ಬರುತ್ತದೆ. 4. ಗುಡ್ಡುಗಾಡು ಪ್ರದೇಶದಲ್ಲಿ ವಾಸಿಸುವ ಜನರ ಆಹಾರಕ್ಕಾಗಿ ಬೇಟೆಗಾರಿಕೆ ಮತ್ತು ಅರಣ್ಯದಿಂದ ಸಂಗ್ರಹಿಸಿದ  ಪದಾರ್ಥಗಳ ಮೇಲೆ ಹೆಚ್ಚು ಅವಲಂಬಿಸಿರಬೇಕಾಗುತ್ತದೆ. 

ಪ್ರ. ೫. ಪಠ್ಯಪುಸ್ತಕದಲ್ಲಿಯ ಭಾರತ-ಪ್ರಾಕೃತಿಕ ನಕಾಶೆಯ ನಿರೀಕ್ಷಣೆ ಮಾಡಿ ಅದರ ಮೇಲೆ ಆಧಾರಿತವಾದ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(೧)  ಭಾರತದ ಉತ್ತರಕ್ಕೆ ಯಾವ ಪರ್ವತದ ಸಾಲುಗಳಿವೆ?

ಉತ್ತರ:- ಭಾರತದ ಉತ್ತರಕ್ಕೆ ಹಿಮಾಲಯ  ಪರ್ವತದ ಸಾಲುಗಳಿವೆ.

(೨) ಭಾರತದ ಉತ್ತರದ ಕಡೆಯಿಂದ ಬರುವ ಮಾರ್ಗ ಯಾವುದು?

ಉತ್ತರ:- ಭಾರತದ ಉತ್ತರದ ಕಡೆಯಿಂದ ಬರುವ ಮಾರ್ಗ ಖೈಬರ ಹಾಗೂ ಬೋಲನ್ ಕಣಿವೆಯ ಮಾರ್ಗವಾಗಿದೆ.

(3) ಗಂಗಾ-ಬ್ರಹ್ಮಪುತ್ರಾ ನದಿಗಳ ಸಂಗಮವು ಎಲ್ಲಿ ಆಗುತ್ತದೆ ?

ಉತ್ತರ:-  ಗಂಗಾ-ಬ್ರಹ್ಮಪುತ್ರಾ ನದಿಗಳ ಸಂಗಮವು ಬಾಂಗ್ಲಾದೇಶದಲ್ಲಿ  ಆಗುತ್ತದೆ.

(೪) ಭಾರತದ ಪೂರ್ವಕ್ಕೆ ಯಾವ ದ್ವೀಪಗಳು ಇವೆ ?

ಉತ್ತರ:- ಭಾರತದ ಪೂರ್ವಕ್ಕೆ ಅಂಡಮಾನ ಮತ್ತು ನಿಕೋಬಾರ ದ್ವೀಪಗಳು ಇವೆ.

(೫) ಥಾರದ ಮರುಭೂಮಿ ಭಾರತದ ಯಾವ ದಿಕ್ಕಿಗೆ ಇದೆ?

ಉತ್ತರ:- ಥಾರದ ಮರುಭೂಮಿ ಭಾರತದ ವಾಯುವ್ಯ  ದಿಕ್ಕಿಗೆ ಇದೆ.

ಉಪಕ್ರಮ:

 (೧) ನಿಮ್ಮ ಪರಿಸರದಲ್ಲಿ ಕಂಡುಬರುವ ಜಲಾಶಯಗಳನ್ನು ಕುರಿತು ಮಾಹಿತಿ ಸಂಗ್ರಹಿಸಿರಿ.

(೨) ಜಗತ್ತಿನ ನಕಾಶೆಯಲ್ಲಿ ಕೆಳಗಿನ ಸಂಗತಿಗಳನ್ನು /ಘಟಕಗಳನ್ನು ತೋರಿಸಿರಿ.

೧. ಹಿಮಾಲಯ ಪರ್ವತ

೨. ರೇಷ್ಮೆಯ ಮಾರ್ಗ

೩. ಅರಬೀ ಪ್ರದೇಶ/ಆರಭಿಸ್ತಾನ

 

2. ಇತಿಹಾಸದ ಸಾಧನಗಳು

ಪ್ರ. 1. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

(೧) ಬರೆಯುವ ಸಲುವಾಗಿ ಯಾವ ವಸ್ತುಗಳ ಉಪಯೋಗ ಮಾಡಲಾಗುತ್ತಿತ್ತು ?

ಉತ್ತರ:- ಆರಂಭದ ಕಾಲದಲ್ಲಿ ಬರೆಯುವ ಸಲುವಾಗಿ ಮಡಿಕೆಯ ಚೂರು, ಕಚ್ಚಾ ಇಟ್ಟಿಗೆ, ಗಿಡಗಳ ತೊಗಟೆ, ಭೂರ್ಜಪತ್ರಗಳಂತಹ ವಸ್ತುಗಳನ್ನು ಉಪಯೋಗ ಮಾಡಲಾಗುತ್ತಿತ್ತು.

(೨) ವೇದ ವಾಣ್ಮಯಗಳಿಂದ ಯಾವ ಮಾಹಿತಿ ದೊರೆಯುತ್ತದೆ?

ಉತ್ತರ:- ಕ್ರಿ.ಶ.ಪೂ. 1500 ರಿಂದ ಪ್ರಾಚೀನ ಇತಿಹಾಸದ ಮಾಹಿತಿಯು ವೇದ ವಾಣ್ಮಯಗಳಿಂದ ಮಾಹಿತಿ ದೊರೆಯುತ್ತದೆ.

(೩) ಮೌಖಿಕ ಪರಂಪರೆಯಿಂದ ಯಾವ ಸಾಹಿತ್ಯವನ್ನು ಕಾಯ್ದುಕೊಂಡು ಬರಲಾಗುತ್ತದೆ ?

ಉತ್ತರ:- ಬೀಸುವ ಕಲ್ಲಿನ ಹಾಡುಗಳು, ಜಾನಪದ ಗೀತೆಗಳು, ಜಾನಪದ ಕಥೆಗಳು, ದಂತಕಥೆಗಳು ಬರೆದು ಇಟ್ಟಿರುವುದಿಲ್ಲ. ಅವುಗಳನ್ನು ಮೌಖಿಕ ಸಾಧನಗಳೆಂದು ಹೇಳುತ್ತಾರೆ. ಈ ಸಾಹಿತ್ಯಗಳನ್ನು ಅನೇಕ ತಲೆಮಾರುಗಳ ವರೆಗೆ ಕಾಯ್ದುಕೊಂಡು ಬರಲಾಗುತ್ತದೆ.

ಪ್ರ.೨. ಕೆಳಗಿನ ಸಾಧನಗಳನ್ನು ಭೌತಿಕ, ಲಿಖಿತ ಹಾಗೂ ಮೌಖಿಕ ಸಾಧನಗಳಲ್ಲಿ  ವರ್ಗೀಕರಿಸಿರಿ.

ತಾಮ್ರಪಟಜಾನಪದ ಕತೆಗಳುಮಣ್ಣಿನ ಪಾತ್ರೆಮಣಿಗಳುಪ್ರವಾಸ ವರ್ಣನೆಬೀಸುವ ಕಲ್ಲಿನ ಹಾಡುಗಳುಶಿಲಾಲೇಖಗಳು,

ಲಾವಣಿ ಪದಗಳುವೈದಿಕ ಸಾಹಿತ್ಯಸ್ತೂಪಗಳುನಾಣ್ಯಗಳುಭಜನೆಪುರಾಣ ಗ್ರಂಥಗಳು,

ಭೌತಿಕ ಸಾಧನಗಳು

ಲಿಖಿತ ಸಾಧನಗಳು

ಮೌಖಿಕ ಸಾಧನಗಳು

ಮಣ್ಣಿನ ಪಾತ್ರೆ

ತಾಮ್ರಪಟ

ಜಾನಪದ ಕತೆಗಳು

ಮಣಿಗಳು

ಪ್ರವಾಸ ವರ್ಣನೆ

ಬೀಸುವ ಕಲ್ಲಿನ ಹಾಡುಗಳು

ಶಿಲಾಲೇಖಗಳು

ಪುರಾಣ ಗ್ರಂಥಗಳು

ಲಾವಣಿ ಪದಗಳು

ವೈದಿಕ ಸಾಹಿತ್ಯ

 

 

ಸ್ತೂಪಗಳುನಾಣ್ಯಗಳು

 

 

ಪ್ರ. ೩. ಪಾಠದಲ್ಲಿಯ ಮಣ್ಣಿನ ಪಾತ್ರೆಗಳನ್ನುನೋಡಿ ಅವುಗಳ ಪ್ರತಿಕೃತಿಯನ್ನು ತಯಾರಿಸಿರಿ.  

 



ಪ್ರ. ೪. ಯಾವುದಾದರೂ ನಾಣ್ಯವನ್ನು ನಿರೀಕ್ಷಿಸಿ ಅದರ ಬಗ್ಗೆ ಕೆಳಗಿನ  ಮಾಹಿತಿಯನ್ನು ಬರೆಯಿರಿ.

ನಾಣ್ಯದ ಮೇಲಿನ ಬರಹದೇವನಾಗರಿ ಲಿಪಿ ಹಾಗೂ ಇಂಗ್ಲೀಷ   

ಉಪಯೋಗಿಸಿದ ಲೋಕಾಪರ್ – ನಿಕ್ಕೆಲ್  


ನಾಣ್ಯದ ಮೇಲಿನ ವರ್ಷ: 2011

ನಾಣ್ಯದ ಮೇಲಿನ ಚಿಹ್ನೆ: ರಾಷ್ಟ್ರ ಲಾಂಛನ

ನಾಣ್ಯದ ಮೇಲಿನ ಚಿತ್ರ: ಸತ್ಯ ಮೇವ ಜಯತೆ

 ಭಾಷೆ ಹಿಂದಿ ಮತ್ತು ಇಂಗ್ಲೀಷ            ತೂಕ:  ೨ ಗ್ರಾಂ                 ಆಕಾರ: ವರ್ತುಲಾಕಾರ      ಬೆಲೆ: 2 ರೂಪಾಯಿ

ಪ್ರ. ೫. ಯಾವ ಯಾವ ಸಂಗತಿಗಳು ಮೌಖಿಕ ರೂಪದಲ್ಲಿ ನಿಮ್ಮ ನೆನಪಿನಲ್ಲಿದೆವುಗಳನ್ನು ಗುಂಪಿನಲ್ಲಿ ಸಾದರಪಡಿಸಿರಿ.

ಉದಾ: ಕವಿತೆಶೋಕಪ್ರಾರ್ಥನೆಗ್ಗಿ ಇತ್ಯಾದಿ

ಅಜ್ಜ ಅಜ್ಜಿ ಹೇಳಿದ ರಾಮಾಯಣ-ಮಹಾಭಾರತದ ಕಥೆಗಳು, ಭಜನೆ ಹಾಡುಗಳು, ಮದುವೆ-ಮುಂಜಿಯ ಹಾಡುಗಳು.

ಉಪಕ್ರಮ:

ಭೌತಿಕ ಹಾಗೂ ಲಿಖಿತ ಸಾಧನಗಳ ಚಿತ್ರಗಳನ್ನು ಸಂಗ್ರಹಿಸಿರಿ. ಬಾಲಕರ ಮೇಳದಲ್ಲಿ ಆ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿರಿ.

***

 

3. ಹರಪ್ಪಾ ಸಂಸ್ಕೃತಿ

ಪ್ರ. ೧. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

(೧) ಈ ಸಂಸ್ಕೃತಿಗೆ 'ಹರಪ್ಪಾ ಸಂಸ್ಕೃತಿಎಂಬ ಹೆಸರು ಏಕೆ ದೊರಕಿತು ?

ಉತ್ತರ:- ಕ್ರಿ.ಶ. 1921ರಲ್ಲಿ ಪಂಜಾಬದಲ್ಲಿಯ ರಾವಿ ನದಿಯ ತೀರದಲ್ಲಿ ಹರಪ್ಪಾ ಎಂಬಲ್ಲಿ ಉತ್ಖನನವು ಪ್ರಥಮ ಆರಂಭವಾಯಿತು. ಆದ್ದರಿಂದ ಈ ಸಂಸ್ಕೃತಿಗೆ ಹರಪ್ಪಾ ಸಂಸ್ಕೃತಿ ಎಂಬ ಹೆಸರು ದೊರಕಿತು.

(೨) ಹರಪ್ಪಾ ಸಂಸ್ಕೃತಿಯ ಪಾತ್ರೆಗಳ ಮೇಲಿನ ಚಿತ್ರಗಳ ನಮೂನೆಗಳಲ್ಲಿ ಯಾವ ರೇಖಾಚಿತ್ರಗಳ ಸಮಾವೇಶವಾಗುತ್ತದೆ ?

ಉತ್ತರ:- ಹರಪ್ಪಾ ಸಂಸ್ಕೃತಿಯ ಪಾತ್ರೆಗಳ ಮೇಲಿನ ರೇಖಾ ಚಿತ್ರಗಳ ನಮೂನೆಗಳಲ್ಲಿ ಮಿನುಗಳ ಚಿಪ್ಪುಗಳು, ಒಂದರಲ್ಲೊಂದು ಸೇರಿರುವ ವರ್ತುಳಗಳು ಹಾಗೂ ಅರಳೆಯ ಎಲೆಗಳ ಚಿತ್ರಗಳ ಸಮಾವೇಶವಾಗಿದೆ.

(೩) ಹರಪ್ಪಾ ಸಂಸ್ಕೃತಿಯ ವ್ಯಾಪಾರಿಗಳು ಈಜಿಪ್ಟ್ ಗೆ ಯಾವ ಬಟ್ಟೆಯನ್ನು ಪೂರೈಸುತ್ತಿದ್ದರು ?

ಉತ್ತರ:- ಹರಪ್ಪಾ ಸಂಸ್ಕೃತಿಯ ವ್ಯಾಪಾರಿಗಳು ಈಜಿಪ್ಟ್ ಗೆ ನೂಲಿನ ಬಟ್ಟೆ ಮತ್ತು ಮಲ್ ಮಲ್ ಬಟ್ಟೆಯನ್ನು ಪೂರೈಸುತ್ತಿದ್ದರು.

ಪ್ರ. ೨. ಪ್ರಾಚೀನ ಸ್ಥಳಗಳಿಗೆ ಭೇಟಿ ನೀಡುವಾಗ ಏನು ಮಾಡುವಿರಿ ?

ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸುವಿರಿಮಾಲಿನ್ಯವನ್ನು ತಡೆಯುವಿರಿಐತಿಹಾಸಿಕ ಸಾಧನಗಳನ್ನು ರಕ್ಷಣೆ ಮಾಡುವಿರಿಇತ್ಯಾದಿ.

 

ಪ್ರ. ೩. ಮೊಹೆಂಜೊದಾರೋದಲ್ಲಿಯ ಸ್ನಾನಗೃಹದ ಚಿತ್ರವನ್ನು ತೆಗೆಯಿರಿ.

ಮೊಹೆಂಜೊದಾರೋದಲ್ಲಿಯ ಸ್ನಾನಗೃಹ

ಪ್ರ. ೪ಕೆಳಗಿನ ಕೋಷ್ಟಕದಲ್ಲಿ ಹರಪ್ಪಾಕಾಲದ ಜನಜೀವನದ ಮಾಹಿತಿಯನ್ನು ಬರೆಯಿರಿ.

ಪ್ರಮುಖ ಬೆಳೆಗಳು

ವೇಷಭೂಷಣಗಳು

ಆಭರಣಗಳು/ಆಕಾರ

೧. ಗೋದಿ

ಮೊಣಕಾಲಿನ ವರೆಗಿನ ಬಟ್ಟೆ

ಬಂಗಾರ, ತಾಮ್ರ,ರತ್ನ

೨.ಬಾರ್ಲಿ

ಉತ್ತರೀಯ

ಶಿಂಪಿ

3. ರಾಗಿ

 

ಕವಡೆ

4. ಬಟಗಡಲೆ , ಎಳ್ಳು, ಚನ್ನಂಗಿ

 

ಬೀಜ

 

ಪ್ರ. ೫. ಒಂದು ಶಬ್ದದಲ್ಲಿ ಉತ್ತರ ಬರೆಯಿರಿ.  (ಇಂಥ ಪ್ರಶ್ನೆಗಳನ್ನು ಸ್ವತ: ತಯಾರಿಸಿರಿ ಹಾಗೂ ಅವುಗಳ ಉತ್ತರ ಬರೆಯಿರಿ.)

          ಅ) ಹರಪ್ಪಾ ಸಂಸ್ಕೃತಿಯಲ್ಲಿ ಮುದ್ರೆಗಳನ್ನು ತಯಾರಿಸಲು ಯಾವ ಕಲ್ಲು ಬಳಸಲಾಗುತ್ತಿತ್ತು?

ಉತ್ತರ:- ) ಹರಪ್ಪಾ ಸಂಸ್ಕೃತಿಯಲ್ಲಿ ಮುದ್ರೆಗಳನ್ನು ತಯಾರಿಸಲು ಸ್ಟಿಯೆಟೈಟ್ ಎಂಬ ಹೆಸರಿನ ಕಲ್ಲು ಬಳಸಲಾಗುತ್ತಿತ್ತು.

 

          ಆ) ಸಿಂಧೂ ನದಿಯ ಕೊಳ್ಳದಲ್ಲಿ ಯಾವ ಬೆಳೆ ಮುಖ್ಯವಾಗಿ  ಬೆಳೆಯುತ್ತಿತ್ತು?

ಉತ್ತರ:- ಸಿಂಧೂ ನದಿಯ ಕೊಳ್ಳದಲ್ಲಿ ಮುಖ್ಯವಾಗಿ ಉತ್ತಮ ದರ್ಜೆಯ ಹತ್ತಿ ಬೆಳೆ ಬೆಳೆಯುತ್ತಿತ್ತು

ಪ್ರ. ೬. ಹರಪ್ಪಾ ಸಂಸ್ಕೃತಿಯ ಕಾಲದಲ್ಲಿಯ ಇತರ ಜಾಗತಿಕ ಸಂಸ್ಕೃತಿಗಳನ್ನು ಜಗತ್ತಿನ ನಕಾಶೆಯಲ್ಲಿ ತೋರಿಸಿರಿ.

 

 

ಉಪಕ್ರಮ:

(೧) ನಿಮ್ಮ ಶಾಲೆಯ ನಕ್ಷೆಯನ್ನು ತಯಾರಿಸಿರಿ. ಅದರಲ್ಲಿ ಶಾಲೆಯಲ್ಲಿಯ ವಿವಿಧ ಸ್ಥಳಗಳನ್ನು ತೋರಿಸಿರಿ. ಉದಾ. ಗ್ರಂಥಾಲಯಆಟದ ಬಯಲು,  ಗಣಕಯಂತ್ರದ ಕೋಣೆ ಇತ್ಯಾದಿ.

(೨) ನಿಮ್ಮ ಊರಲ್ಲಿಯ ಹಾಗೂ ಮನೆಯಲ್ಲಿಯ ಧಾನ್ಯವನ್ನು ಸಂಗ್ರಹಿಸುವ ಪದ್ಧತಿಗಳನ್ನು ಕುರಿತು ಟಿಪ್ಪಣೆ ಬರೆಯಿರಿ.

 

                                            4. ವೈದಿಕ ಸಂಸ್ಕೃತಿ 

ಪ್ರ. 1. ಪಾಠದಲ್ಲಿಯ ತಾತ್ಪರ್ಯದ ವಿಚಾರ ಮಾಡಿ ಉತ್ತರ ಬರೆಯಿರಿ.

(೧) ವೈದಿಕ ಸಾಹಿತ್ಯದಲ್ಲಿಯ ವಿದುಷಿಯರು . –ಲೋಪಾಮುದ್ರಾ, ಗಾರ್ಗಿ, ಮೈತ್ರೇಯಿ

(೨) ವೇದಕಾಲದ ಮನರಂಜನೆಯ ಸಾಧನಗಳು. –ಗಾಯನ, ವಾದನ, ನೃತ್ಯ, ಪಗಡೆಯಾಟ, ರತಗಳ ಪಂದ್ಯ ಹಾಗೂ ಬೇಟೆ

(೩) ವೇದಕಾಲದಲ್ಲಿಯ ನಾಲ್ಕು ಆಶ್ರಮಗಳು.- ಬ್ರಹ್ಮಚರ್ಯ , ಗೃಹಸ್ಥಾಶ್ರಮ, ವಾನಪ್ರಸ್ಥಾಶ್ರಮ , ಸನ್ಯಾಸಾಶ್ರಮ  

ಪ್ರ. 2. ಸರಿ ಅಥವಾ ತಪ್ಪು ಎಂಬುದನ್ನು ಹೇಳಿರಿ.

(೧) ಯಜ್ಞದಲ್ಲಿ ಪಠಿಲಾಗುವ ಮಂತ್ರ-ಋಗ್ವೇದ .            = ತಪ್ಪು

(೨) ಅಥರ್ವ ಋಷಿಗಳ ಹೆಸರು ನೀಡಿದ ವೇದ – ಅಥರ್ವವೇದ .     =ಸರಿ

() ಯಜ್ಞವಿಧಿಯ ಸಮಯದಲ್ಲಿ ಮಂತ್ರಗಾಯನ ಮಾಡಲು ಮಾರ್ಗದರ್ಶನ ಮಾಡುವ ವೇದ-ಸಾಮವೇದ . =ಸರಿ

ಪ್ರ.೩. ಒಂದು ಶಬ್ದದಲ್ಲಿ ಉತ್ತರ ಬರೆಯಿರಿ.

(೧) ವೈದಿಕ ವಾನ್ಮಯದ ಭಾಷೆ.       ಸಂಸ್ಕೃತ ಭಾಷೆ

(೨) ವಿದ್ ಎಂದರೆ                         ಅರಿಯುವುದು.

(೩) ಗೋಧೂಮ ಎಂದರೆ                 ಗೋದಿ

(೪) ಮನೆಯ ಪ್ರಮುಖ ಅಂದರೆ .      ಗೃಹಪತಿ

(ಶ್ರೇಣಿಗಳ ಪ್ರಮುಖ                  ಶ್ರೇಷ್ಠಿ

ಪ್ರ. 4. ಹೆಸರುಗಳನ್ನು ಬರೆಯಿರಿ.

(೧) ನಿಮಗೆ ಗೊತ್ತಿರುವ ವಾದ್ಯಗಳು:             ಶಹನಾಯಿ, ತಬಲಾ, ಕೊಳಲು.

(೨) ಈಗಿನ ಕಾಲದ ಸ್ತ್ರೀಯರ ಕನಿಷ್ಟ ಎರಡು:    ಮುಬೂತಿ, ಕಾಲುಂಗುರು,

(೩) ಈಗಿನ ಮನರಂಜನೆಯ ಸಾಧನಗಳು:      ಚಲನಚಿತ್ರಗಳು, ಮೊಬಾಯಿಲ್

ಪ್ರ. 6. ಸಲದರಲ್ಲಿ ಉತ್ತರ ಬರೆಯಿರಿ.

(೧) ವೇದಕಾಲದ ಜನರ ಆಹಾರದಲ್ಲಿ ಯಾವು ಪದಾರ್ಥಗಳ ಸಮಾವೇಶವಾಗಿತ್ತು ?

ಉತ್ತರ:- ವೇದಕಾಲದ ಜನರ ಆಹಾರದಲ್ಲಿ ಮುಖ್ಯವಾಗಿ ಗೋದಿ, ಬಾರ್ಲಿ, ಅಕ್ಕಿ ಈ ತೃಣಧಾನ್ಯಗಳ ಸಮಾವೇಶವಿತ್ತು.

(೨) ವೇದಕಾಲದಲ್ಲಿ ಆಕಳುಗಳ ಬಗ್ಗೆ ವಿಶೇಷವಹಿಸಲಾಗುತ್ತಿತ್ತು. ಏಕೆ ?

ಉತ್ತರ:- ವೈದಿಕಕಾಲದಲ್ಲಿ ಕುದುರೆ, ಆಕಳು-ಎತ್ತು, ನಾಯಿ ಮುಂತಾದ ಪ್ರಾಣಿಗಳಿಗೆ ವಿಶೇಷ ಮಹತ್ವವಿತ್ತು. ವಸ್ತುಗಳ ವಿನಿಮಯಕ್ಕಾಗಿ  ಆಕಳುಗಳ ಉಪಯೋಗ ಮಾಡಲಾಗುತ್ತಿತ್ತು. ಅದರಿಂದಾಗಿ ಆಕಳುಗಳಿಗೆ ತುಂಬಾ ಬೆಲೆ ಬರುತ್ತಿತ್ತು. ಇತರರು ಆಕಳುಗಳನ್ನು ಕದ್ದೋಯ್ಯಬಾರದೆಂದು ವಿಶೇಷ ದಕ್ಷತೆ ವಹಿಸಲಾಗುತ್ತಿತ್ತು.

(೩) ಸನ್ಯಾಸಾಶ್ರಮದಲ್ಲಿ ಮನುಷ್ಯನು ಹೇಗೆ ವರ್ತಿಸಬೇಕು ಎಂಬ ನಿರೀಕ್ಷೆ ಇತ್ತು?

ಉತ್ತರ:- ಸನ್ಯಾಸಾಶ್ರಮದಲ್ಲಿ ಮನುಷ್ಯನು ಎಲ್ಲ ಸಂಬಂಧಗಳನ್ನು ತ್ಯಾಗಮಾಡಿ ಮಾನವ ಜನ್ಮದ ಅರ್ಥವನ್ನು ಅರಿತುಕೊಳ್ಳುವ ಸಲುವಾಗಿ ಜೀವಿಸಬೇಕು, ಹೆಚ್ಚುಕಾಲ ಒಂದೇ ಸ್ಥಳದಲ್ಲಿ ಇರಬಾರದು ಎಂಬ ಸಂಕೇತವಿತ್ತು.

ಪ್ರ. ೬. ಟಿಪ್ಪಣಿ ಬರೆಯಿರಿ

(೧) ವೇದಕಾಲದ ಧಾರ್ಮಿಕ ಕಲನೆಗಳು:ವೇದ ಕಾಲದ ಧಾರ್ಮಿಕ ಕಲ್ಪನೆಗಳಲ್ಲಿ ನಿಸರ್ಗದಲ್ಲಿಯ ಸೂರ್ಯ, ಗಾಳಿ, ಮಳೆ, ಸಿಡಿಲು, ಬಿರುಗಾಳಿ, ನದಿ ಮುಂತಾದ ನಿಸರ್ಗದಲ್ಲಿಯ ಶಕ್ತಿಗಳಿಗೆ ದೇವ ರೂಪವನ್ನು ನೀಡಲಾಗಿತ್ತು. ಅವು ಜೀವನದಾಯಿ

(೨) ವೇದಕಾಲದ ಮನೆಗಳು: ವೇದಕಾಲದಲ್ಲಿ ಮಣ್ಣಿನ ಇಲ್ಲವೇ ಹುಲ್ಲಿನ ಮನೆಗಳಿರುತ್ತಿದ್ದವು. ಹುಲ್ಲಿನ ಇಲ್ಲವೇ ಬಳ್ಳಿಯ ದಪ್ಪವಾದ ತಟ್ಟಿಯನ್ನು ಹೆಣೆದು ಅದರ ಮೇಲೆ ಸೆಗಣಿಮಣ್ಣನ್ನು ಮೆತ್ತಿ ಗೋಡೆಯನ್ನು ತಯಾರಿಸಲಾಗುತ್ತಿತ್ತು. ಈ ಮನೆಗಳಲ್ಲಿ ನೆಲವನ್ನು ಸೆಗಣಿ-ಮಣ್ಣಿನಿಂದ ಸಾರಿಸಲಾಗುತ್ತಿತ್ತು.

 (೩) ವೇದಕಾಲದ ರಾಜ್ಯಾಡಳಿತ ವ್ಯವಸ್ಥೆ: ಜನದ ಪ್ರಮುಖನಿಗೆ ನೃಪ ಇಲ್ಲವೇ ರಾಜ ಎನ್ನಲಾಗುತ್ತಿತ್ತು.  ಪ್ರಜೆಗಳ ರಕ್ಷಣೆ ಮಾಡುವುದು, ತೆರಿಗೆ ಸಂಗ್ರಹಿಸುವುದು ಹಾಗೂ ಉತ್ತಮ ರಾಜ್ಯಾಡಳಿತ ಮಾಡುವುದು ಇವು ರಾಜನ ಕರ್ತವ್ಯಗಳಾಗಿದ್ದವು. ಉತ್ತಮ ರಾಜ್ಯಾಡಳಿತ ಮಾಡಲು ರಾಜನು ಪುರೋಹಿತ ಹಾಗೂ ಸೇನಾಪತಿ ಎಂಬ ವಿಶೇಷ ಅಧಿಕಾರಿಗಳನ್ನು ನೇಮಿಸುತ್ತಿದ್ದನು. ತೆರಿಗೆ ಸಂಗ್ರಹಿಸುವ ಅಧಿಕಾರಿಗೆ ಭಾಗದುಘ ಎನ್ನುತ್ತಿದ್ದರು. ರಾಜನಿಗೆ ಮಾರ್ಗದರ್ಶನ ಮಾಡುವುದಕ್ಕಾಗಿ ಸಭಾ, ಸಮಿತಿ, ವಿದಥ ಹಾಗೂ ಜನ ಎಂಬ ನಾಲ್ಕು ಸಂಸ್ಥೆಗಳು ಇದ್ದವು.

ಉಪಕ್ರಮ

(೧) ನಿಮ್ಮ ಪರಿಸರದಲ್ಲಿಯ ಕೆಲವು ಕುಶಲಕರ್ಮಿ ಗಳನ್ನು ಸಂದರ್ಶಿಸಿಅದರ ಮಾಹಿತಿಯನ್ನು ಬರೆಯಿರಿ.

(೨) ಪಾಠದಲ್ಲಿ ಬಂದ ಹೊಸ ಶಬ್ದ ಹಾಗೂ ಅವುಗಳ ಪಟ್ಟಿ ತಯಾರಿಸಿರಿ.

ವೇದ, ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ಋಚಾ, ಬ್ರಹ್ಮಣಗ್ರಂಥ, ಅರಣ್ಯಕಗಳು, ಗೃಹಪತಿ, ವಿದುಷಿಯರು, ಗೋಧೂಮ, ವ್ರೀಹಿ, ಯವ, ನಿಷ್ಕ, ರಥ, ಅಶ್ವ, ಶ್ರೇಣಿ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಆಶ್ರಮಗಳು, ಹವಿ, ಯಜ್ಞ, ಋತಗ್ರಾಮಣಿ, ನೃಪ, ಜನಪದ, ಭಾಗದುಘ, ಪುರಾಣ, ಸ್ಮೃತಿ, ಹಿಂದೂ ಇತ್ಯಾದಿಗಳು.


5. ಪ್ರಾಚೀನ ಭಾರತದಲ್ಲಿಯ ಧಾರ್ಮಿಕ ಪ್ರವಾಹ

ಪ್ರ. ೧. ತೆರವಿದ್ದ ಸ್ಥಳಗಳಲ್ಲಿ ಯೋಗ್ಯ ಶಬ್ದಗಳನ್ನು ಬರೆಯಿರಿ.

(೧) ಜೈನ ಧರ್ಮದಲ್ಲಿ  ಅಹಿಂಸೆ  ಈ ತತ್ವಕ್ಕೆ ಮಹತ್ವ ಕೊಡಲಾಗಿದೆ.

(೨) ಸರ್ವ ಪ್ರಾಣಿಮಾತ್ರರ ವಿಷಯದಲ್ಲಿ ಕರುಣೆ ಇದು ಗೌತಮ ಬುದ್ಧರ ವ್ಯಕ್ತಿತ್ವದ ಅಸಾಧಾರಣ ವೈಶಿಷ್ಟವಾಗಿತ್ತು.

ಪ್ರ. ೨.ಸಲ್ಪದಲ್ಲಿ ತ್ತ ರೆಯಿರಿ.

(೧) ವರ್ಧಮಾನ ಮಹಾವೀರರು ಯಾವ ಉಪದೇಶವನ್ನು ಮಾಡಿದರು?

ಉತ್ತರ:- ವರ್ಧಮಾನ ಮಹಾವೀರರು ಜನರಿಗೆ ಎಲ್ಲ ಪ್ರಾಣಿಗಳನ್ನು ಪ್ರೀತಿಸಿರಿ. ಅಂತ:ಕರಣದಲ್ಲಿ ಇತರರ ಬಗ್ಗೆ ದಯೆ ಮತ್ತು ಕರುಣೆ ಇರಲಿ. ನೀವೂ ಜೀವಿಸಿರಿ ಹಾಗೂ ಮತ್ತೊಬ್ಬರಿಗೂ ಜೀವಿಸಲು ಅವಕಾಶ ಮಾಡಿಕೊಡಿ ಎಂಬ ಉಪದೇಶವನ್ನು ಮಾಡಿದರು.

(೨), ಗೌತಮ ಬುದ್ಧರ ಯಾವ ವಚನವು ವಿಖ್ಯಾತವಾಗಿದೆ? ಅದರಿಂದ ಯಾವ ಮೌಲ್ಯಗಳು ಪ್ರಕಟವಾಗುತ್ತದೆ?

ಉತ್ತರ:- ಪುಟ್ಟದಾದ ಗುಬ್ಬಿ ಕೂಡ ತನ್ನ ಗುಡಿನಲ್ಲಿ ಸ್ವೇಚ್ಛೆಯಿಂದ ಚಿಂವ್ ಚಿಂವ್ ಮಾಡುತ್ತದೆ ಎಂಬ ಗೌತಮ ಬುದ್ಧರ ವಚನವು ವಿಖ್ಯಾತವಾಗಿದೆ. ಅದು ಸ್ವಾತಂತ್ರ್ಯ ಮತ್ತು ಸಮತೆ ಈ ಮೌಲ್ಯಗಳನ್ನು ಕುರಿತು ಹೇಳುತ್ತದೆ.

(೩) ಜೂ ಧರ್ಮದ ಉಪದೇಶದಲ್ಲಿ ಯಾವ ಗುಣಗಳಿಗೆ ಮಹತ್ವ ನೀಡಲಾಗಿದೆ ?

ಉತ್ತರ:- ಜ್ಯೂ ಧರ್ಮದ ಉಪದೇಶದಲ್ಲಿ ನ್ಯಾಯ, ಸತ್ಯ, ಶಾಂತಿ, ಪ್ರೇಮ, ಕರುಣೆ, ನಮ್ರತೆ, ದಾನ ಮಾಡುವುದು, ಒಳ್ಳೆಯ ಮಾತನಾಡುವುದು ಹಾಗೂ ಸ್ವಾಭಿಮಾನ ಈ ಗುಣಗಳಿಗೆ ಮಹತ್ವ ನೀಡಲಾಗಿದೆ.

() ಕ್ರಿಶ್ಚನ್ ಧರ್ಮದಲ್ಲಿ ಏನು ಹೇಳಲಾಗಿದೆ?

ಉತ್ತರ:- ಕ್ರಿಶ್ಚನ್ ಧರ್ಮದಲ್ಲಿ ದೇವರು ಒಬ್ಬನೇ ಇದ್ದಾನೆ. ಅವನು ಎಲ್ಲರ ಪ್ರೀತಿಯ ತಂದೆಯಾಗಿದ್ದಾನೆ. ಅಲ್ಲದೆ ಎಲ್ಲರಿಗಿಂತ ಹೆಚ್ಚು ಶಕ್ತಿವಂತನಾಗಿದ್ದಾನೆ. ಏಸೂ ಕ್ರಿಸ್ತ ಇವರು ದೇವರ ಪುತ್ರರಾಗಿದ್ದು ಮಾನವಜಾತಿಯ ಉದ್ಧರಕ್ಕಾಗಿ ಪೃಥ್ವಿಯ ಮೇಲೆ ಬಂದಿದ್ದರು ಎಂದು ಊಹಿಸಲಾಗುತ್ತದೆ.

() ಇಸ್ಲಾಮ್‌ ಧರ್ಮದ ಉಪದೇಶದಲ್ಲಿ ಏನು ಹೇಳಲಾಗಿದೆ?

ಉತ್ತರ:- ಇಸ್ಲಾಮ ಇದು ಎಕೇಶ್ವರವಾದವನ್ನು ನಂಬುವ ಧರ್ಮವಾಗಿದೆ. ಅಲ್ಲಾಹನು  ಒಬ್ಬನೇ ಆಗಿದ್ದು ಮೊಹಮ್ಮದ ಪೈಗಂಬರ ಅವನ ಪ್ರವಾದಿಯಾಗಿದ್ದಾನೆ. ಇಸ್ಲಾಮ ಶಬ್ದದ ಅರ್ಥ ಶಾಂತಿ ಎಂದಾಗುತ್ತದೆ. ಅಂದರೆ ಅಲ್ಲಾಹನಿಗೆ ಶರಣು ಹೋಗುವುದು ಎಂದಾಗುತ್ತದೆ. ಎಲ್ಲ ಕಾಲದಲ್ಲಿಯೂ ಹಾಗೂ ಎಲ್ಲೆಡೆ ಕೇವಲ ಅಲ್ಲಾಹ ಇರುವನು, ಅವನು ಅತ್ಯಂತ ಶಕ್ತಿಶಾಲಿ ಹಾಗೂ ಪರಮ ಕರುಣಾಮಯಿಯಾಗಿದ್ದಾನೆ ಎಂದು ಇಸ್ಲಾಮದಲ್ಲಿ ಹೇಳಲಾಗಿದೆ.

(೬) ಫಾರಸಿ ವಿಚಾರಸರಣಿಯ ತಿರುಳು ಯಾವುದು ?

ಉತ್ತರ:- ಉತ್ತಮ ವಿಚಾರ, ಉತ್ತಮ ವಾಣಿ ಹಾಗೂ ಉತ್ತಮ ಕೃತಿ ಈ ಮೂರು ಪ್ರಮುಖ ಆಚರಣ ತತ್ವಗಳು ಪಾರಶಿ ವಿಚಾರಸರಣೀಯ ತಿರುಳಾಗಿದೆ.

ಪ್ರ.೩ . ಟಿಪ್ಪಣಿ ಬರೆಯಿರಿ.

(೧) ಆರ್ಯ ಸತ್ಯಗಳು:  ಮಾನವ ಜೀವನದಲ್ಲಿಯ ಎಲ್ಲ ವ್ಯವಹಾರಗಳ ಮೂಲದಲ್ಲಿ ನಾಲ್ಕು ಸತ್ಯಗಳಿವೆ. ಅವುಗಳಿಗೆ ಆರ್ಯಸತ್ಯಗಳು ಎನ್ನುತ್ತಾರೆ. 1. ದು:ಖ : ಮಾನವ ಜೀವನದಲ್ಲಿ ದು:ಖವಿರುತ್ತದೆ. 2. ದು:ಖದ ಕಾರಣ: ದು:ಖಕ್ಕೆ ಕಾರಣವಿರುತ್ತದೆ.  3. ದು:ಖ ನಿವಾರಣೆ: ದು:ಖವನ್ನು ದೂರ ಮಾಡಲು ಬರುತ್ತದೆ. 4. ಪ್ರತಿಪದ: ಪ್ರತಿಪದ ಎಂದರೆ ಮಾರ್ಗ. ಅದು ದು:ಖವನ್ನು ನಿವಾರಣೆ ಮಾಡುವ ಶುದ್ಧ ಆಚರಣೆಯ ಮಾರ್ಗವಾಗಿದೆ, ಇದಕ್ಕೆ ;ಅಷ್ಟಾಂಗ ಮಾರ್ಗ ಎನ್ನಲಾಗಿದೆ.

(೨) ಪಂಚಶೀಲ: ಗೌತಮ ಬುದ್ಧರು ಐದು ನಿಯಮಗಳನ್ನು ಪಾಲಿಸಲು ಹೇಳಿದರು. ಆ ನಿಯಮಗಳಿಗೆ ಪಂಚಶೀಲ ಎಂದು ಕರೆಯುತ್ತಾರೆ.

          1. ಪ್ರಾಣಿಗಳ ಕೊಲೆ ಮಾಡುವುದರಿಂದ ದೂರ ಇರುವುದು.

          2. ಕಳ್ಳತನ ಮಾಡುವುದರಿಂದ ದೂರವಿರುವುದು.

          3. ಅನೈತಿಕ ಆಚರಣೆಯಿಂದ ದೂರವಿರುವುದು.

          4. ಅಸತ್ಯ ಮಾತನಾಡುವುದರಿಂದ ದೂರ ಇರುವುದು.

          5. ಮಾದಕ ಪದಾರ್ಥಗಳ ಸೇವನೆಯಿಂದ ದೂರ ಇರುವುದು.        

ಪ್ರ. ೪. ಕೆಳಗೆ ಕೊಡಲಾದ ಪಂಚಮಹಾವ್ರತ ಹಾಗೂ ತ್ರಿರತ್ನಗಳನ್ನು ಕೆಳಗಿನ ಕೋಷ್ಟಕದಲ್ಲಿ ವರ್ಗೀಕರಣ ಮಾಡಿರಿ.

 () ಅಹಿಂಸೆ  (೨) ಸಮ್ಯಕ್ ದರ್ಶನ  (೩) ಸತ್ಯ  (೪) ಅಸ್ತೇಯ () ಸಮ್ಯಕ್‌ ಜ್ಞಾನ (೬) ಅಪರಿಗ್ರಹ  (೭) ಸಮ್ಯಕ ಚಾರಿತ್ರ್ಯ  (೮) ಬ್ರಹ್ಮಚರ್ಯ

ಪಂಚಮಹಾವ್ರತಗಳು

ತ್ರಿರತ್ನಗಳು

(೧) ಅಹಿಂಸೆ

(೧)  ಸಮ್ಯಕ್ ದರ್ಶನ  

(೨)  ತ್ಯ

(೨)  ಸಮ್ಯಕ್‌ ಜ್ಞಾನ

(೩)  ಅಸ್ತೇಯ

(೩)  ಸಮ್ಯಕ ಚಾರಿತ್ರ್ಯ 

(೪)  ಅಪರಿಗ್ರಹ

 

(೫)  ಬ್ರಹ್ಮಚರ್ಯ

 

 

 

 

 

 

ಪ್ರ. 5. ಕಾರಣ ಕೊಡಿರಿ.

(೧) ವರ್ಧಮಾನ ಮಹಾವೀರರನ್ನು 'ಜಿ' ಎಂದು ಏಕೆ ಕರೆಯಲಾಯಿತು.

ಉತ್ತರ:- ವರ್ಧಮಾನ ಮಹಾವೀರರು ಜ್ಞಾನಪ್ರಾಪ್ತಿಯ ಸಲುವಾಗಿ ಮನೆ ತ್ಯಜಿಸಿ ಹನ್ನೆರಡು ವರ್ಷ ತಪಸ್ಸು ಮಾಡಿದರು. ಶರೀರಕ್ಕೆ ಸುಖಕರವೆನಿಸುವ ಸಂಗತಿಗಳಿಂದ ದೊರೆಯುವ ಆನಂದ ಹಾಗೂ ಕಷ್ಟಕರ ಸಂಗತಿಗಳಿಂದ ಆಗುವ ದು:ಖ ಇವುಗಳ ಯಾವುದೇ ಪರಿಣಾಮವನ್ನು ಸ್ವತ:ದ ಮೇಲೆ ಆಗಗೊಡದಿರುವುದು ಎಂದರೆ ವಿಕರಗಳ ಮೇಲೆ ಜಯಗಳಿಸುವುದು. ಇಂಥ ಜಯವನ್ನು ಮಹಾವೀರರು ಗಳಿಸಿದರು. ಆದ್ದರಿಂದ ಅವರನ್ನು ಜಿನ ಎಂದು ಕರೆಯಲಾಯಿತು.

(೨) ಗೌತಮಬುದ್ಧರಿಗೆ ಬುದ್ಧ ಎಂದು ಏಕೆ ಕರೆಯಲಾಯಿತು?

ಉತ್ತರ:- ಗೌತಮ ಬುದ್ಧರಿಗೆ ಮಾನವ ಜೀವನದ ಸಂಪೂರ್ಣ ಜ್ಞಾನ ಪ್ರಾಪ್ತವಾಗಿತ್ತು. ಆದ್ದರಿಂದ ಅವರಿಗೆ ಬುದ್ಧ ಎಂದು ಕರೆಯಲಾಯಿತು.

ಉಪಕ್ರಮ:

(೧) ವಿವಿಧ ಹಬ್ಬಗಳ ಮಾಹಿತಿ ಮತ್ತು ಚಿತ್ರಗಳನ್ನು ಸಂಗ್ರಹಿಸಿರಿ.

(೨) ವಿವಿಧ ಧರ್ಮಗಳ ಪಾರ್ಥನಾ ಸ್ಥಳಗಳಿಗೆ ಭೇಟಿ ನೀಡಿರಿ ಹಾಗೂ ಪರಿಸರ ಭೇಟಿಯ ವರ್ಣನೆಯನ್ನು ನಿಮ್ಮ ವರ್ಗದಲ್ಲಿ ಕಥನ ಮಾಡಿರಿ.


6. ಜನಪದಗಳು ಮತ್ತು ಮಹಾಜನಪದಗಳು

ಪ್ರ. ೧. ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

(೧) ಜನಪದ ಎಂದರೇನು ?

ಉತ್ತರ:- ಜನಪದ ಎಂದರೆ ವೈದಿಕೋತ್ತರ ಕಾಲಖಂಡದಲ್ಲಿ ಭಾರತದಲ್ಲಿ ಚಿಕ್ಕ ಚಿಕ್ಕ ರಾಜ್ಯಗಳು ಇದ್ದವು. ಆ ಚಿಕ್ಕ ಚಿಕ್ಕ ರಾಜ್ಯಗಳಿಗೆ ಜನಪದ ಎಂದು ಅನ್ನುವರು.

(೨) ಮಹಾಜನಪದ ಎಂದರೇನು ?

ಉತ್ತರ:- ಕೆಲವು ಜನಪದಗಳು ಕ್ರಮೇಣವಾಗಿ ಅಧಿಕ ಬಲಶಾಲಿಯಾದವು. ಅವುಗಳ ಭೌಗೋಲಿಕ ಗಡಿಗಳು ವಿಸ್ತರಿಸಲ್ಪಟ್ಟವು. ಇಂಥ ಜನಪದಗಳಿಗೆ ಮಹಾಜನಪದ ಎನ್ನುವರು.

(೩) ಬೌದ್ಧಧರ್ಮದ ಪ್ರಥಮ ಪರಿಷತ್ತು ಎಲ್ಲಿ ಆಯಿತು?

ಉತ್ತರ:- ಬಿಂಬಿಸಾರನ ಮಗ ಅಜಾತಶತ್ರುವಿನ ಆಡಳಿತದಲ್ಲಿ ರಾಜಗೃಹ ಎಂಬಲ್ಲಿ ಬೌದ್ಧ ಧರ್ಮದ ಪ್ರಥಮ ಸಂಗೀತ ಅಂದರೆ ಪರಿಷತ್ತು ಆಯಿತು. 

(೪) ತೂಕ ಮತ್ತು ಅಳತೆಗಳ ಪ್ರಮಾಣಿತ ಪದ್ಧತಿಯನ್ನು ಯಾರು ಆರಂಭಿಸಿದರು ?

ಉತ್ತರ:- ಮಗಧ ಸಾಮ್ರಾಜ್ಯದ ನಂದ ರಾಜನು ತೂಕ ಮತ್ತು ಅಳತೆಗಳ ಪ್ರಮಾಣಿತ ಪದ್ಧತಿಯನ್ನು ಆರಂಭಿಸಿದರು.

ಪ್ರ. ೨. ಹೇಳಿ ನೋಡೋಣ

(೧) ಇ೦ದಿನ ಮಹಾರಾಷ್ಟ್ರದ ಕೆಲವು ಭಾಗವು ಆಗಿನ ಈ ಜನಪದದಿಂದ ವ್ಯಾಪಿಸಿತ್ತು. =ಅಶ್ಮಕ

(೨) ಜನಪದಗಳಲ್ಲಿಯ ಹಿರಿಯ ವ್ಯಕ್ತಿಗಳ ಪರಿಷತ್ತು. = ಗಣಪರಿಷತ್ತು

(೩) ಚರ್ಚೆ ನಡೆಯುತ್ತಿದ್ದಸಭಾಗೃಹ =ಸಂಥಾಗಾರ

(೪) ಗೌತಮ ಬುದ್ಧರು ಈ ಗಣರಾಜ್ಯದಲ್ಲಿದ್ದರು. = ಶಾಕ್ಯ ಗಣರಾಜ್ಯದಲ್ಲಿ

(೫) ಚತುರಂಗ ಸೈನ್ಯ =ನಂದ ರಾಜನ ಆಡಳಿತದಲ್ಲಿ ಕಾಲ್ದಳ, ಅಶ್ವದಳ, ರಥದಳ ಹಾಗೂ ಗಜದಳ

ಪ್ರ. ೩. ಹೊಂದಿಸಿ ಬರೆಯಿರಿ.

1) ಸಂಗಿತಿ                 =  ಮಹಾಗೋವಿಂದ  

2)ಧನಾನಂದ             =   ನಂದರಾಜ

3) ಪಾಟಲೀಗ್ರಾಮ        =   ಅಜಾತಶತ್ರು

ಪ್ರ. ೪. ಭಾರತದಲ್ಲಿಯ ವಿವಿಧ ಘಟಕ ರಾಜ್ಯಗಳು ಹಾಗೂ ಅವುಗಳ ರಾಜಧಾನಿಗಳ ಪಟ್ಟಿ ತಯಾರಿಸಿರಿ.

ಉತ್ತರ: ಘಟಕ ರಾಜ್ಯಗಳು                      ರಾಜಧಾನಿಗಳು

 

 

7. ಮೌರ್ಯಕಾಲದ ಭಾರತ

ಅಭ್ಯಾ

ಪ್ರ. ೧. ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

) ತ್ರಪಗಳಲ್ಲಿ ಹೋರಾಟ ಏಕೆ ಆರಂಭವಾಯಿತು?

ಉತ್ತರ: ಸಿಕಂದರನ ಮರಣದ ನಂತರ ಅವನು ಗೆದ್ದುಕೊಂಡ ಪ್ರದೇಶಗಳ ವ್ಯವಸ್ಥೆಗಾಗಿ ನೇಮಕ ಮಾಡಿದ ಗ್ರೀಕ ಅಧಿಕಾರಿಗಳು ಅಂದರೆಯೇ ಸತ್ರಪಗಳ ನಡುವೆ ಅಧಿಕಾರಕ್ಕಾಗಿ  ಹೋರಾಟ ಆರಂಭವಾಯಿತು.

) ಅಶೋಕನು ಬೌದ್ಧ ಧರ್ಮದ ಪ್ರಸಾರಕ್ಕಾಗಿ ಶ್ರೀಲಂಕಾಕ್ಕೆ ಯಾರನ್ನು ಕಳುಹಿಸಿದನು?

ಉತ್ತರ:- ಅಶೋಕನು ತನ್ನ ಮಗ ಮಹೇಂದ್ರನನ್ನು ಹಾಗೂ ಮಗಳು ಸಂಘಮಿತ್ರೆಯನ್ನು ಬೌದ್ಧ ಧರ್ಮದ ಪ್ರಸಾರಕ್ಕಾಗಿ ಶ್ರೀಲಂಕಾಕ್ಕೆ ಕಳುಹಿಸಿದನು.  

) ಮೌರ್ಯಕಾಲದಲ್ಲಿ  ಯಾವ ಯಾವ ಉದ್ಯೋಗಗಳು ಇದ್ದವು?

ಉತ್ತರ:- ಮೌರ್ಯಕಾಲದಲ್ಲಿ ಕೃಷಿ, ಕೃಷಿಯ ಜೊತೆಗೆ ವ್ಯಾಪಾರ, ಹಸ್ತಿದಂತದ ಮೇಲಿನ ಕೆತ್ತನೆಯ ಕೆಲಸ, ಬಟ್ಟೆ ನೇಯುವುದು ಮತ್ತು ಬಣ್ಣ ಕೊಡುವುದು.ಲೋಹದ ಕೆಲಸ ಮುಂತಾದ ಉದ್ಯೋಗಗಳು ಇದ್ದವು

() ಸಾಮ್ರಾಟ ಅಶೋಕನು ನಿಲ್ಲಿಸಿದ ಸ್ತಂಭದ ಮೇಲೆ ಯಾವ ಯಾವ ಪ್ರಾಣಿಗಳ ಶಿಲ್ಪಗಳಿವೆ ?

ಉತ್ತರ:- ಸಾಮ್ರಾಟ ಅಶೋಕನು ನಿಲ್ಲಿಸಿದ ಸ್ತಂಭದ ಮೇಲೆ ಸಿಂಹ, ಆನೆ, ಎತ್ತುಗಳಂಥ ಉತ್ತಮ ಶಿಲ್ಪಗಳು ಇದ್ದವು.

ಪ್ರ. ೨. ಹೇಳಿ ನೋಡೋಣ.

(೧) ಸತ್ರಪ: ಸಿಕಂದರನು ಭಾರತದಲ್ಲಿ ಗೆದ್ದುಕೊಂಡ ಪ್ರದೇಶಗಳ ವ್ಯವಸ್ಥೆಗಾಗಿ ಗ್ರೀಕ ಅಧಿಕಾರಿಗಳ ನೇಮಕ ಮಾಡಿದನು. ಅವರಿಗೆ ಸತ್ರಪ ಎಂದು ಕರೆಯುತ್ತಾರೆ.

(೨) ಸುದರ್ಶನ:ಗುಜರಾತ ರಾಜ್ಯದ ಜುನಾಗಡದ ಹತ್ತಿರ ಸಾಮ್ರಾಟ ಚಂದ್ರಗುಪ್ತನು ಸುದರ್ಶನ ಎಂಬ ಹೆಸರಿನ ಆಣೆಕಟ್ಟನ್ನು ಕಟ್ಟಿದನು.

(೩) ದೇವಾನಂ ಪಿಯೊ ಪಿಯದಸಿ’: ಅಶೋಕನು ಮಾಡಿರುವ ಅನೇಕ ಶೀಲಾಶಾಸನಗಳಲ್ಲಿ ಹಾಗೂ ಸ್ತಂಭಲೇಖಗಳಲ್ಲಿ ತನ್ನ ಉಲ್ಲೇಖವನ್ನು ) ದೇವಾನಂ ಪಿಯೊ ಪಿಯದಸಿ ಎಂದು ಮಾಡಿರುತ್ತಾನೆ. ಇದರ ಅರ್ಥ ದೇವರ ಪ್ರೀಯ ಪ್ರಿಯದರ್ಶಿ ಎಂದು ಆಗುತ್ತದೆ.

(೪) ಅಷ್ಟಪದ: ಸಾಮ್ರಾಟ ಅಶೋಕನ ಕಾಲದಲ್ಲಿ ಆಡಲಾಗುತ್ತಿದ್ದ ಚದುರಂಗದಾಟಕ್ಕೆ ಅಷ್ಟಪದ ಎಂಬ ಹೆಸರು ಇತ್ತು.

ಪ್ರ. 3. ನೆನಪಿಸಿಕೊಳ್ಳಿ ಹಾಗೂ ಬರೆಯಿರಿ.

(೧) ಚಂದ್ರಗುಪ್ತ ಮೌರ್ಯನ ಸಾಮ್ರಾಜ್ಯದ ವ್ಯಾಪ್ತಿ:

ಉತ್ತರ:ಚಂದ್ರಗುಪ್ತ ಮೌರ್ಯನು ಪಶ್ಚಿಮಕ್ಕೆ ಆವಂತಿ, ಸೌರಾಷ್ಟ್ರ ಗೆದ್ದುಕೊಂಡು ತನ್ನ ಸಾಮ್ರಾಜ್ಯ ವಿಸ್ತಾರ ಮಾಡಲು ಆರಂಭಿಸಿದನು. ಸಿಕಂದರನು ನೇಮಕ ಮಾಡಿದ ಸತ್ರಪಗಳಲ್ಲಿ ಹೋರಾಟದ ಲಾಭ ಪಡೆದು ವಾಯುವ್ಯ ಭಾರತ ಮತ್ತು ಪಂಜಾಬದ ಮೇಲೆ ಆಕ್ರಮಣ ಮಾಡಿ ಯಶಶ್ವಿಯಾದನು. ಸೆಕ್ಯುಲಸ್ ನಿಕೇಟರನನ್ನು ಸೋಲಿಸಿ ಅಫಗನಿಸ್ಥಾನದಲ್ಲಿಯ ಕಾಬೂಲ, ಕಂದಹಾರ, ಹೆರಾತ ಮುಂತಾದ ಪ್ರದೇಶಗಳು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು.

(೨) ಸಾಮ್ರಾಟ ಅಶೋಕನ ಸಾಮಾಜ್ಯದ ವ್ಯಾಪ್ತಿ

ಉತ್ತರ: ಸಾಮ್ರಾಟ ಅಶೋಕನ ಸಾಮ್ರಾಜ್ಯವು ವಾಯುವ್ಯಕ್ಕೆ ಅಫಗನಿಸ್ಥಾನದ ವರೆಗೆ, ಉತ್ತರಕ್ಕೆ ನೇಪಾಳದಿಂದ ಹಿಡಿದು ದಕ್ಷಿಣಕ್ಕೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ವರೆಗೆ, ಪೂರ್ವಕ್ಕೆ ಬಾಂಗಳದಿಂದ ಪಶ್ಚಿಮಕ್ಕೆ ಸೌರಾಷ್ಟ್ರದ ವರೆಗೆ ಹಬ್ಬಿತ್ತು.

ಪ್ರ. 4. ಹೊಂದಿಸಿ ಬರೆಯಿರಿ.

ಪಟ್ಟಿ                                                       '' ಪಟ್ಟಿ

(೧) ಸಾಮ್ರಾಟ ಅಲೆಕ್ಝಾಂಡರ್                       (ಅ) ಸೆಲ್ಯೂಕಸ್‌ ನಿಕೇಟರನ ರಾಯಭಾರಿ

(೨) ಮೆಗಸ್ತನೀಸ                                 (ಬ)  ಗ್ರೀಕ್ ಸಾಮ್ರಾಟ

(೩) ಸಾಮ್ರಾಟ ಅಶೋಕ                        (ಕ) ರೋಮದ ಸಾಮ್ರಾಟ

                                                                 (ಡ) ಮಗಧದ ಸಾಮ್ರಾಟ

ಉತ್ತರ: ( ೧ = ಕ,  ೨ = ಅ, ೩ = ಡ)

ಪ್ರ. ೪. ನಿಮಗೆ ಏನು ಅನಿಸುತ್ತದೆ ?

() ಸಿಕಂದನು  ಹಿಮ್ಮೆಟ್ಟಲೇಬೇಕಾಯಿತು.

ಉತ್ತರ: ಗ್ರೀಕ್ ಸಾಮ್ರಾಟ ಅಲೆಕ್ಝಾಂಡರ್ ಉರ್ಫ್ ಸಿಕಂದರನು ಕ್ರಿ.ಶ.ಪೂ. ೩೨೬ ರಲ್ಲಿ ಭಾರತದ ವಾಯುವ್ಯ ಪ್ರದೇಶದ ಮೇಲೆ ದಾಳಿ ಮಾಡಿದನು. ಸಿಂಧು ನದಿ ದಾಟಿ ತಕ್ಷಶಿಲೆಗೆ ಬಂದನು. ಈ ಮಾರ್ಗದಲ್ಲಿ ಕೆಲವು ಭಾರತೀಯ ರಾಜರು ಅವನೊಂದಿಗೆ ನಿಕರದ ಹೋರಾಟ ಮಾಡಿದರು. ಆದರೂ ಪಂಜಾಬಡ ವರೆಗೆ ಬಂದು ತಲುಪಿದನು. ಈ ದಾಳಿಗಳಲ್ಲಿ ಅವನ ಸೈನಿಕರು ಅಪಾರ ಕಷ್ಟನಷ್ಟಗಳನ್ನು ಅನುಭವಿಸಬೇಕಾಯಿತು. ಅವರು ತಮ್ಮ ತಾಯ್ನಾಡಿಗೆ ಮರಳಿ ಹೋಗಲು ಆತುರರಾಗಿದ್ದರು. ಅವರು ಸಿಕಂದರಣ ವಿರುದ್ಧ ಬಂಡೆದ್ದರು. ಆದ್ದರಿಂದ ಸಿಕಂದನು  ಹಿಮ್ಮೆಟ್ಟಲೇಬೇಕಾಯಿತು.

(೨) ಗ್ರೀಕ್  ರಾಜರ ನಾಣ್ಯಗಳು ವೈಶಿಷ್ಟ್ಯ ಪೂರ್ಣವಾಗಿದ್ದವು.

ಉತ್ತರ: ಗ್ರೀಕ ರಾಜರ ನಾಣ್ಯಗಳ ಒಂದು ಬದಿಗೆ ನಾಣ್ಯ ಟಂಕಿಸಿದ ರಾಜನ ಚಿತ್ರ, ಇನ್ನೊಂದು ಬದಿಗೆ ಒಬ್ಬ ಗ್ರೀಕ ದೇವತೆಯ ಚಿತ್ರವಿರುತ್ತಿತ್ತು. ನಾಣ್ಯದ ಮೇಲೆ ಆ ರಾಜನ ಹೆಸರು ಇರುತ್ತಿತ್ತು. ಈ ರೀತಿ ಗ್ರೀಕ್  ರಾಜರ ನಾಣ್ಯಗಳು ವೈಶಿಷ್ಟ್ಯ ಪೂರ್ಣವಾಗಿದ್ದವು.

(೩) ಸಾಮ್ರಾಟ  ಅಶೋಕನು ಇನ್ನು ಮುಂದೆ ಎಂದೂ ಯುದ್ಧ ಮಾಡುವುದಿಲ್ಲವೆಂದು ನಿರ್ಧರಿಸಿದನು.

ಉತ್ತರ:ಸಾಮ್ರಾಟ ಅಶೋಕನು ಕಳಿಂಗ ಯುದ್ಧದಲ್ಲಿ ಆದ ಭಯಂಕರ ರಕ್ತಪಾತವನ್ನು ಕಂಡು ಇನ್ನೂ ಮುಂದೆ ತನು ಎಂದಿಗೂ ಯುದ್ಧ ಮಾಡುವುದಿಲ್ಲವೆಂದು ನಿರ್ಧರಿಸಿದನು

ಪ್ರ. 6. ನಿಮ್ಮ ಶಬ್ದಗಳಲ್ಲಿ ವರ್ಣಿಸಿರಿ.

(೧) ಸಾಮ್ರಾಟ ಅಶೋಕನ ಜನಹಿತದ ಕಾರ್ಯಗಳು

ಉತ್ತರ: ಸಾಮ್ರಾಟ ಅಶೋಕನು ಅನೇಕ ಸ್ತೂಪ ಮತ್ತು ವಿಹಾರಗಳನ್ನು ಕಟ್ಟಿಸಿದನು. ಪ್ರಜೆಗಳಿಗೆ ಸೌಕರ್ಯಗಳನ್ನು ಒದಗಿಸುವುದಕ್ಕೆ ಮಹತ್ವ ನೀಡಿದನು. ಜನರಿಗೆ ಹಾಗೂ ಪಶುಗಳಿಗೆ ಉಚಿತವಾಗಿ ಔಷಧೋಪಚಾರ ದೊರೆಯುವಂತೆ ವ್ಯವಸ್ಥೆ ಮಾಡಿದನು. ಅನೇಕ ರಸ್ತೆಗಳನ್ನು ನಿರ್ಮಿಸಿದನು. ನೆರಳಿನ ಸಲುವಾಗಿ ರಸ್ತೆಗಳ ಎರಡೂ ಬದಿಗಳಲ್ಲಿ ನೆಡಿಸಿದನು. ಧರ್ಮಶಾಲೆಗಳನ್ನು ಕಟ್ಟಿಸಿದನು. ಬಾವಿಗಳನ್ನು ತೊಡಿಸಿದನು.

(೨) ಮೌರ್ಯಕಾಲದ ಮನೋರಂಜನೆಯ ಮತ್ತು ಆಟದ ಸಾಧನಗಳು

ಉತ್ತರ:ನಗರಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಉತ್ಸವ, ಸಮಾರಂಭಗಳು ಆಚರಿಸಲ್ಪಡುತ್ತಿದ್ದವು. ಅದರಲ್ಲಿ ಜನರ ಮನರಂಜನೆಗಾಗಿ ನೃತ್ಯ, ಗಾಯನಗಳ ಕಾರ್ಯಕ್ರಮಗಳು ಆಗುತ್ತಿದ್ದವು. ಕುಸ್ತಿ, ರಥಗಳ ಪಂದ್ಯಗಳು ಜನಪ್ರಿಯವಾಗಿದ್ದವು. ಪಗಡೆಯಾಟ ಹಾಗೂ ಚದುರಂಗದಾಟ ಆಸಕ್ತಿಯಿಂದ ಆಡುತ್ತಿದ್ದರು.

ಪ್ರ. ೭. ವಿದೇಶಿ ಪ್ರವಾಸಿಯು ನಿಮಗೆ ಭೇಟಿಯಾದರೆ ನೀವು ಏನ

ಉಪಕ್ರಮ:

(೧) ಸಾಮ್ರಾಟ ಅಶೋಕನ ಜೀವನದ ಬಗ್ಗೆ ಅಧಿ ಮಾಹಿತಿಯನ್ನು ಸಂಗ್ರಹಿಸಿ ನಾಟ್ಯಾಭಿನಯ  ನಿಮ್ಮ ವರ್ಗದಲ್ಲಿ ಸಾದರಪಡಿಸಿರಿ.





9. ದಕ್ಷಿಣ ಭಾರತದಲ್ಲಿಯ ಪ್ರಾಚೀನ  ರಾಜ್ಯಗಳು

ಪ್ರ. ೧. ಗುರುತಿಸಿರಿ ನೋಡೋಣ.

(೧) ಸಾತವಾಹನ ರಾಜರು ತಮ್ಮ ಹೆಸರಿನ ಮೊದಲು ಯಾರ ಹೆಸರನ್ನು  ಬರೆಯುತ್ತಿದ್ದರು – ತಾಯಿಯ ಹೆಸರು. ಉದಾ: ಗೌತಮಿಪುತ್ರ ಸಾತಕರ್ಣಿ .

(೨) ಕೊಲ್ಲಾಪೂರದ ಪ್ರಾಚೀನ ಕಾಲದಲ್ಲಿಯ ಹೆಸರು-ಕುಂತಲ

ಪ್ರ. ೨. ಪಾಠದಲ್ಲಿಯ ನಕಾಶೆಯ ನಿರೀಕ್ಷಣೆ ಮಾಡಿ ಕೆಳಗಿನ ಕೋಷ್ಟಕವನ್ನು ಪೂರ್ಣ ಮಾಡಿರಿ.

ಪಲ್ಲವ

ಕಾಂಚಿ

ಚಾಲುಕ್ಯ

ಐಹೊಳೆ , ಬಾದಾಮಿ, ಪಟ್ಟದಕಲ್ಲು

ಸಾತವಾಹನ

ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ

 

ಪ್ರ. ೩. ಕೆಳಗಿನ ರಾಜಪ್ರಭುತ್ವ ಹಾಗೂ ರಾಜಧಾನಿ ಇವುಗಳನ್ನು ವರ್ಗೀಕರಿಸಿರಿ.

ಸಾತವಾಹನ, ಪಾಂಡ್ಯ, ಚಾಲುಕ್ಯ, ವಾಕಾಟಕ , ಮದುರಾಯಿ, ಪ್ರತಿಷ್ಠಾನ , ಕಾಂಚಿಪುರಂ , ವಾತಾಪಿ

ಅ.ಕ್ರ.

ರಾಜಪ್ರಭುತ್ವ

ರಾಜಧಾನಿ

೧.

ಸಾತವಾಹನ

ಪ್ರತಿಷ್ಠಾನ(ಪೈಠಣ)

೨.

ಪಾಂಡ್ಯ

ಮದುರಾಯಿ

೩.

ಚಾಲುಕ್ಯ

ವಾತಾಪಿ

೪.

ವಾಕಾಟಕ

ನಂದಿವರ್ಧನ(ನಾಗಪುರ)/ವತ್ಸಗುಲ್ಮ(ವಾಸೀಮ)

೫.

ಪಲ್ಲವರು

ಕಾಂಚಿಪುರಂ

ಪ್ರ. ೪.  ಕೆಳಗಿನ ಪ್ರಶ್ನೆಗಳಲ್ಲಿ ಪ್ರತಿಯೊಂದಕ್ಕೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

(೧) ದಕ್ಷಿಣದಲ್ಲಿಯ ಪ್ರಾಚೀನ ರಾಜಪ್ರಭುತ್ವಗಳು ಯಾವವು?

ಉತ್ತರ:-  ದಕ್ಷಿಣದಲ್ಲಿಯ ಮೂರು ಪ್ರಮುಖ ರಾಜಪ್ರಭುತ್ವಗಳು ಅಸ್ಥಿತ್ವದಲ್ಲಿ ಇದ್ದವು. ಅವು: ಚೇರ, ಪಾಂಡ್ಯ ಹಾಗೂ ಚೋಳ.

(೨) ಮೌರ್ಯ ಸಾಮ್ರಾಜ್ಯದ ಅವನತಿಯ ನಂತರ ಯಾವ ಪ್ರದೇಶಗಳಲ್ಲಿಯ ಸ್ಥಳೀಯ ರಾಜರು ಸ್ವತಂತ್ರರಾದರು?

ಉತ್ತರ:- ಮೌರ್ಯ ಸಾಮ್ರಾಜ್ಯದ ಅವನತಿಯ ನಂತರ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಈ ಪ್ರದೇಶಗಳಲ್ಲಿಯ ಸ್ಥಳೀಯ ರಾಜರು ಸ್ವತಂತ್ರರಾದರು.

ಪ್ರ. 5. ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

(೧) ಮಹೇಂದ್ರವರ್ಮನ ಕಾರ್ಯಗಳನ್ನು ಬರೆಯಿರಿ.

ಉತ್ತರ:- ಮಹೇಂದ್ರವರ್ಮನು ಪಲ್ಲವ ರಾಜ್ಯದ ಕರ್ತವ್ಯ ದಕ್ಷ ರಾಜನಾಗಿದ್ದನು. ಅವನು ಸ್ವತ: ನಾಟಕಕಾರನಾಗಿದ್ದನು. ಪಲ್ಲವ ರಾಜ್ಯದ ವಿಸ್ತಾರ ಮಾಡಿದನು. ಮಹಾಬಲಿಪುರಂ ದಲ್ಲಿರುವ ರಥ ಮಂದಿರಗಳು ಅಖಂಡ ಶಿಲೆಯಲ್ಲಿ ಕೊರೆಯಿಸಿದನು.

(೨) ತ್ರಿಸಮುದ್ರತೋಯಪೀತವಾಹನ ಎಂದರೇನು? ಸ್ಪಷ್ಟಪಡಿಸಿರಿ.

ಉತ್ತರ:- ನಾಸಿಕದ ಗುಹೆಯಲ್ಲಿಯ ಒಂದು ಶಿಲಾಶಾಸನದಲ್ಲಿ ಗೌತಮಿಪುತ್ರನ ಉಲ್ಲೇಖವನ್ನು ತ್ರಿಸಮುದ್ರತೋಯಪೀತವಾಹನ ಎಂದು ಮಾಡಲಾಗಿದೆ. ತೋಯ ಅಂದರೆ ನೀರು. ಕುದುರೆ ಇದು ರಾಜನ ವಾಹನ. ಯಾರ ಕುದುರೆಗಳು ಮೂರು ಸಮುದ್ರಗಳ ನೀರು ಕುಡಿದಿವೆಯೋ ಅವನು. ಎಂದರ್ಥವಾಗುತ್ತದೆ. ಆ ಮೂರು ಸಮುದ್ರಗಳು –ಅರಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳದ ಉಪಸಾಗರ.

(೩) ಮುಝರೀ ಬಂದರದ ಮೂಲಕ ಯಾವ ವಸ್ತುಗಳು ನಿರ್ಯಾತವಾಗುತ್ತಿದ್ದವು?

ಉತ್ತರ:- ಕೇರಳ ತೀರದಲ್ಲಿದ್ದ ಮಹತ್ವದ ಬಂದರ ಮುಝರಿಸ ಮೂಲಕ ಮಸಾಲೆಯ ಪದಾರ್ಥಗಳು, ಮುತ್ತುಗಳು, ಅಮೂಲ್ಯ ರತ್ನಗಳು ಇತ್ಯಾದಿ ವಸ್ತುಗಳು ಇಟಲಿಯಲ್ಲಿಯ ರೋಮ ಮತ್ತು ಪಶ್ಚಿಮದ ಇತರ ದೇಶಗಳಿಗೆ  ನಿರ್ಯಾತವಾಗುತ್ತಿದ್ದವು.



10. ಪ್ರಾಚೀನ ಭಾರತ: ಸಾಂಸ್ಕೃತಿಕ

 

 

ಪ್ರ.1. ಕೆಳಗಿನವುಗಳಲ್ಲಿ ಪ್ರತಿಯೊಂದಕ್ಕೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

೧)  ಪ್ರಾಚೀನ ಭಾರತದಲ್ಲಿಯ ವಿಶ್ವವಿದ್ಯಾಲಯಗಳ ಪಟ್ಟಿ ತಯಾರಿಸಿರಿ.

ಉತ್ತರ: ತಕ್ಷಶಿಲಾ ವಿಶ್ವವಿದ್ಯಾಲಯ, ವಾರಣಾಸಿ, ವಲಭಿ, ನಾಲಂದಾ ವಿಶ್ವವಿದ್ಯಾಲಯ, ವಿಕ್ರಮ ವಿಶ್ವವಿದ್ಯಾಲಯ, ಕಾಂಚಿ

೨) ಯಾವ ಯಾವ ಪ್ರಾಚೀನ ಭಾರತೀಯ ವಸ್ತುಗಳಿಗೆ ದೇಶಗಳಲ್ಲಿ ಬೇಡಿಕೆ ಇರುತ್ತಿತ್ತು ಎಂಬುದರ ಪಟ್ಟಿ ತಯಾರಿಸಿರಿ.

ಉತ್ತರ: ನುಣುಪಾದ ಬಟ್ಟೆ, ಹಸ್ತಿದಂತ, ಅಮೂಲ್ಯ ರತ್ನಗಳು, ಮಶಾಲೆಯ ಪದಾರ್ಥಗಳು, ಉತ್ಕೃಷ್ಟವಾಗಿ ತಯಾರಿಸಿದ ಮಣ್ಣಿನ ಪಾತ್ರೆಗಳು ಇತ್ಯಾದಿ ಭಾರತೀಯ ವಸ್ತುಗಳಿಗೆ ವಿದೇಶಗಳಲ್ಲಿ ತುಂಬಾ ಬೇಡಿಕೆ ಇರುತ್ತಿತ್ತು.

ಪ್ರ. ೨. ಹೆಸರು ಬರೆಯಿರಿ.

ಪ್ರಾಚೀನ ಭಾರತದಲ್ಲಿಯ ಮಹಾಕಾವ್ಯಗಳು = ರಾಮಾಯಣ ಹಾಗೂ ಮಹಾಭಾರತ

ಪ್ರ. ೩. ತೆರವಿದ್ದಸ್ಥಳಗಳಲ್ಲಿ ಯೋಗ್ಯ ಶಬ್ದಗಳನ್ನು ತುಂಬಿರಿ.

(೧) ರಾಮಾಯಣ ಈ ಮಾಹಾಕಾವ್ಯವನ್ನು ವಾಲ್ಮೀಕಿ ಋಷಿಗಳು ರಚಿಸಿದರು.

(೨) ಭಾರತೀಯ ವೈದ್ಯಕೀಯ ಶಾಸ್ತ್ರಕ್ಕೆ ಆಯುರ್ವೇದ ಎಂದು ಕರೆಯಲಾಗುತ್ತದೆ.

(a). ...... ವಿಶ್ವವಿದ್ಯಾಲಯದಲ್ಲಿ ಸಾವಿರಾರು ವಿದ್ಯಾರ್ಥಿಗಳ ವಸತಿಯ ಸೌಕರ್ಯವಿತ್ತು.

ಪ್ರ. ೪. ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

(೧) ತಿಪಿಟಕ ಎಂದರೇನೆಂಬುದನ್ನು ಸ್ಪಷ್ಟಪಡಿಸಿರಿ.

ಉತ್ತರ: ತಿಪೀಟಕ ಮೂರು ಪಿಟಕಗಳ ಪೆಟ್ಟಿಗೆ ಅಂದರೆ ವಿಭಾಗ ಎಂದು ಅರ್ಥ ಆಗುತ್ತದೆ. ಇದನ್ನು ಪಾಲಿ ಭಾಷೆಯಲ್ಲಿ ಬರೆಯಲಾಗಿದೆ.     ೧) ಸುತ್ತಪಿಟಕ = ಗೌತಮ ಬುದ್ಧರ ಉಪದೇಶದ ವಚನಗಳ ಸಂಗ್ರಹ ವಿದೆ.

                   ೨)ವಿನಯಪಿಟಕ = ಇಲ್ಲಿ ವಿನಯ ಅಂದರೆ ನಿಯಮ. ಇದರಲ್ಲಿ ಬೌದ್ಧ ಸಂಘದಲ್ಲಿ ಭಿಖ್ಖು ಹಾಗೂ ಭಿಖ್ಖುಣಿ ಇವರು ದೈನಂದಿನ ಜೀವನದಲ್ಲಿ ಹೇಗೆ ವರ್ತಿಸಬೇಕು ಎಂಬುದರ ನಿಯಮಗಳನ್ನು ಕೊಡಲಾಗಿದೆ.

                   ೩) ಅಭಿಧಮ್ಮಪಿಟಕ = ಇದರಲ್ಲಿ ಬೌದ್ಧ ಧರ್ಮದ ತತ್ವಜ್ಞಾನವನ್ನು ತಿಳಿಸಿ ಹೇಳಲಾಗಿದೆ.

(೨) ಭಗವದ್ಗೀತೆಯಲ್ಲಿ ಯಾವ ಸಂದೇಶವನ್ನು ನೀಡಲಾಗಿದೆ?

ಉತ್ತರ: ಭಗವದ್ಗೀತೆಯಲ್ಲಿ ಪ್ರತಿಫಲದ ಅಪೇಕ್ಷೆಯನ್ನು ಮಾಡದೇ ಪ್ರತಿಯೊಬ್ಬನು ತನ್ನ ಕರ್ತವ್ಯಗಳನ್ನು ಮಾಡಬೇಕು ಎಂಬ ಸಂದೇಶವನ್ನು ನೀಡಲಾಗಿದೆ.

(೩) ಆಯುರ್ವೇದದಲ್ಲಿ ಯಾವ ಸಂಗತಿಗಳ ವಿಚಾರ ಮಾಡಲಾಗಿದೆ ?

ಉತ್ತರ: ಆಯುರ್ವೇದದಲ್ಲಿ ರೋಗದ ಲಕ್ಷಣಗಳು, ರೋಗದ ನಿದಾನ ಹಾಗೂ ರೋಗದ ಮೇಲಿನ ಉಪಚಾರ ಈ ಸಂಗತಿಗಳ ವಿಚಾರ ಮಾಡಲಾಗಿದೆ

(೪) ಸಂಘಮ ಸಾಹಿತ್ಯ ಎಂದರೇನು ?

ಉತ್ತರ: ಸಂಘಮ ಸಾಹಿತ್ಯ ಎಂದರೆ ವಿದ್ವನ್ಮಣಿಗಳಾದ ಸಾಹಿತಿಗಳ ಸಭೆ. ಈ ಸಭೆಗಳಲ್ಲಿ ಸಂಗ್ರಹಿತವಾದ ಸಾಹಿತ್ಯವು ಸಂಘಮ ಸಾಹಿತ್ಯ ವೆಂದು ಗುರುತಿಸಲ್ಪಡುತ್ತದೆ. ಇದು ತಮಿಳು ಭಾಷೆಯಲ್ಲಿಯ ಅತ್ಯಂತ ಪ್ರಾಚೀನ ಸಾಹಿತ್ಯವಾಗಿದೆ. ಈ ಸಾಹಿತ್ಯದಲ್ಲಿ ಸಿಲಪ್ಪಧಿಕರಮ್ ಮತ್ತು ಮಣಿಮೇಖಲೈ ಈ ಎರಡು ಮಹಾಕಾವ್ಯಗಳು ಪ್ರಸಿದ್ಧವಾಗಿವೆ.

ಪ್ರ.5. ಚರ್ಚೆ ಮಾಡಿರಿ.

ಮೌರ್ಯ ಹಾಗೂ ಗುಪ್ತ ಕಾಲದಲ್ಲಿಯ ವಾಸ್ತುಶಿಲ್ಪ ಮತ್ತು ಕಲೆ.

ಉತ್ತರ: ಮೌರ್ಯ ಮತ್ತು ಗುಪ್ತ ಕಾಲದಲ್ಲಿ ಭಾರತೀಯ ವಾಸ್ತುಶಿಲ್ಪ ಕಲೆಯ ವಿಕಸವಾಯಿತು. ಅಲ್ಲದೆ ಅದು ಊರ್ಜಿತಾವಸ್ಥೆಯನ್ನು ತಲುಪಿತು. ಸಾಮ್ರಾಟ ಅಶೋಕನು ಅಲ್ಲಲ್ಲಿ ನಿಲ್ಲಿಸಿದ ಕಲ್ಲಿನ ಸ್ತಂಭಗಳು ಭಾರತೀಯ ಶಿಲ್ಪಕಲೆಯ ಉತ್ತಮ ಉದಾಹರಣೆಗಳಾಗಿವೆ. ಸಾಂಚಿ ಎಂಬಲ್ಲಿಯ ಸ್ತೂಪಹಾಗೂ (ಉದಯಗಿರಿ, ಖಂಡಗಿರಿ) ಕಾರ್ಲೆ, ನಾಶಿಕ, ಅಜಂತಾ, ಎಲ್ಲೋರಾ ಇತ್ಯಾದಿ ಸ್ಥಳಗಳಲ್ಲಿಯ ಗುಹೆಗಳಿಂದ ಅದೇ ಪರಂಪರೆಯು ಅಧಿಕಾಧಿಕ ವಿಕಸವಾಗುತ್ತ ಹೋಯಿತು ಎಂದು ಕಾಣಿತ್ತದೆ. ಗುಪ್ತಕಾಲದಲ್ಲಿ ಭಾರತೀಯ ಮೂರ್ತಿ ಕಲೆಯ ವಿಕಸವಾಯಿತು.

 

11. ಪ್ರಾಚೀನ ಭಾರತ ಮತ್ತು ಜಗತ್ತು

ಪ್ರ. ೧. ಗುರುತಿಸಿರಿ  ನೋಡೋಣ.

 (೧) ರೋಮನ್ ರಚನೆಯ ವಸ್ತುಗಳು ದೊರಕಿದ ಸ್ಥಳಗಳು. = ತಮಿಳನಾಡುವಿನಲ್ಲಿಯ ಅರಿಕಾಮೇಡೋ, ರೋಮ, ಅಲೆಕ್ಝಾಂಡ್ರಿಯಾ

(೨) ಕುಶಾಣರ ಕಾಲದಲ್ಲಿ ಭಾರತದಲ್ಲಿ ಉದಯವಾದ ಒಂದು ಹೊಸ ಕಲಾಶೈಲಿ.= ಗಾಂಧಾರ ಕಲೆ

(೩) ಮಹಾವಂಸ ಮತ್ತು ದೀಪವಂಸ ಈ ಗ್ರಂಥಗಳ ಭಾಷೆ.= ಪಾಲಿ ಭಾಷೆ

(೪) ಪ್ರಾಚೀನ ಕಾಲಖಂಡದಲ್ಲಿ ಬೌದ್ಧ ಧರ್ಮದ ಪ್ರಸಾರವಾದ ದೇಶ.= ಮ್ಯಾನಮಾರ, ಥಾಯಲ್ಯಾಂಡ, ಇಂಡೋನೇಷಿಯಾ

ಪ್ರ. ೨. ಆಲೋಚಿಸಿರಿ ಮತ್ತು ಬರೆಯಿರಿ.

(೧) ಆಗ್ನೇಯ ಏಷ್ಯದ ಮೇಲೆ ಭಾರತೀಯ ಸಂಸ್ಕೃತಿಯ ದಟ್ಟ ಪ್ರಭಾವವಾದುದು ಕಂಡುಬರುತ್ತದೆ.

ಉತ್ತರ: ಆಗ್ನೇಯ ಏಷ್ಯದ ಕಾಂಬೋಡಿಯಾ ದೇಶದಲ್ಲಿಯ ಫುನಾನ ಎಂಬ ಪ್ರಾಚೀನ ರಾಜ್ಯವಿತ್ತು. ಫುನಾನದ ಜನರಿಗೆ ಸಂಸ್ಕೃತ ಭಾಷೆಯ ಜ್ಞಾನವಿತ್ತು. ಆ ಕಾಲದಲ್ಲಿಯ ಸಂಸ್ಕೃತ ಭಾಷೆಯಲ್ಲಿ ಕೊರೆದ ಒಂದು ಶಿಲಾಶಾಸನ ಉಪಲಬ್ದವಿದೆ. ಏಷ್ಯದಲ್ಲಿ ಇತರ ದೇಶಗಳಲ್ಲಿಯೂ ಭಾರತೀಯ ವಂಶದ ಚಿಕ್ಕ ರಾಜ್ಯಗಳು ಉದಯವಾಗಿದ್ದವು. ಇಂದಿಗೂ ರಾಮಾಯಣ ಮತ್ತು ಮಹಾಭಾರತ ಕಥೆಗಳ ಮೇಲೆ ಆಧಾರಿತ ನೃತ್ಯ ಮತ್ತು ನಾಟ್ಯಗಳು ಇಂಡೋನೇಷಿಯಾದಲ್ಲಿ ಜನಪ್ರಿಯವಾಗಿವೆ. ಹೀಗೆ ಆಗ್ನೇಯ ಏಷ್ಯದ ಕಲೆ ಮತ್ತು ಸಂಸ್ಕೃತಿಕ ಜೀವನದ ಮೇಲೆ ಭಾರತೀಯ ಸಂಸ್ಕೃತಿಯ ದಟ್ಟ ಪ್ರಭಾವವಾದುದು ಕಂಡು ಬರುತ್ತದೆ.

(೨) ಚೀನಾದಲ್ಲಿ ಬೌದ್ಧ ಧರ್ಮದ ಪ್ರಸಾರಕ್ಕೆ ಚಾಲನೆ ದೊರಕಿತು.

ಉತ್ತರ: ಕ್ರಿಸ್ತಶಕ ಒಂದನೆಯ ಶತಮಾನದಲ್ಲಿಯ ಚೀನಿ ಸಾಮ್ರಾಟನಾದ ಮಿಂಗ ಇವನ ಆಮಂತ್ರಣದ ಮೇರೆಗೆ ಧರ್ಮರಕ್ಷಕ ಹಾಗೂ ಕಶ್ಯಪ ಮಾತಂಗ ಈ ಬೌದ್ಧ ಭಿಕ್ಕುಗಳು ಚೀನಾಕ್ಕೆ ಹೋದರು. ಅವರು ಅನೇಕ ಭಾರತೀಯ ಬೌದ್ಧ ಗ್ರಂಥಗಳನ್ನು ಚೀನಿ ಭಾಷೆಗೆ ಭಾಷಾಂತರ ಮಾಡಿದರು. ಅದರ ನಂತರ ಚೀನಾದಲ್ಲಿ ಬೌದ್ಧ ಧರ್ಮದ ಪ್ರಸಾರಕ್ಕೆ ಚಾಲನೆ ದೊರಕಿತು.

ಪ್ರ.೩. ನೀವು ಏನು ಮಾಡಬಲ್ಲಿರಿ ?

ನಿಮ್ಮ ನೆಚ್ಚಿನ ಅಭಿರುಚಿಗೆ ಚಾಲನೆ ದೊರಕಿದರೆ ನೀವು ಏನು ಮಾಡಬಲ್ಲಿರಿ.

ಪ್ರ. ೪. ಚಿತ್ರ ವರ್ಣನೆ ಮಾಡಿರಿ.

 

ನಿಮ್ಮ ಪಾಠದಲ್ಲಿಯ ಅಫಗಾನಿಸ್ತಾನದ ಹಡ್ಡಾ ಎಂಬಲ್ಲಿಯ ಸ್ತೂಪದ ಮೇಲಿನ ಗಾಂಧಾರಶೈಲಿಯ ಶಿಲ್ಪಗಳ ನಿರೀಕ್ಷಣೆ

ಮಾಡಿ ಚಿತ್ರವರ್ಣನೆ ಮಾಡಿರಿ.

ಉತ್ತರ:

ಪ್ರ. ೫. ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.

(೧) ಗಾಂಧಾರ ಶೈಲಿ: ಕುಶಾಣರ ಕಾಲದಲ್ಲಿ ಭಾರತದಲ್ಲಿ ಉದಯವಾದ ಒಂದು ಹೊಸ ಕಲಾಶೈಲಿ ಗಾಂಧಾರ ಕಲೆ/ಶೈಲಿ. ಗಾಂಧಾರ ಶೈಲಿಯಲ್ಲಿ ಪ್ರಾಮುಖ್ಯವಾಗಿ ಗೌತಮ ಬುದ್ಧರ ಮೂರ್ತಿಗಳು ಕೆತ್ತಲ್ಪಟ್ಟವು. ಈ ಮೂರ್ತಿಗಳು ಮುಖ್ಯವಾಗಿ ಅಫಗಾನಿಸ್ಥಾನದಲ್ಲಿಯ ಗಾಂಧಾರ ಪ್ರದೇಶದಲ್ಲಿ ದೊರೆತವು. ಆದ್ದರಿಂದ ಆ ಶೈಲಿಗೆ ಗಾಂಧಾರ ಶೈಲಿ ಎಂದು ಕರೆಯಲಾಗುತ್ತದೆ.

(೨) ರೇಶ್ಮೆ ಮಾರ್ಗ:  

ಪ್ರ. ೬. ಪಾಠದಲ್ಲಿ ಉಲ್ಲೇಖಿಸಿರುವ ಆಗ್ನೇಯ ಏಷ್ಯದಲ್ಲಿನ ದೇಶಗಳನ್ನು ನಕಾಶೆಯಲ್ಲಿ ತೋರಿಸಿರಿ.

 

 

 

ನಾಗರಿಕಶಾಸ್ತ್ರ

ನಮ್ಮ ಸ್ಥಾನಿಕ ಆಡಳಿತ

ಅನುಕ್ರಮಣಿಕೆ

ಪಾಠದ ಹೆಸರು

1. ನಮ್ಮ ಸಾಮಾಜಿಕ ಜೀವನ

2. ಸಮಾಜದಲ್ಲಿಯ ವಿವಿಧತೆ...

3. ಗ್ರಾಮೀಣ ಸ್ಥಾನಿಕ ಸ್ವರಾಜ್ಯ ಸಂಸ್ಥೆ

4. ನಗರ ಸ್ಥಾನಿಕ ಸ್ವರಾಜ್ಯ ಸಂಸ್ಥೆ

5. ಜಿಲ್ಲಾ ಆಡಳಿತ

 

 

1. ನಮ್ಮ ಸಾಮಾಜಿಕ ಜೀವನ

 

ಪ್ರ. ೧. ತೆರವಿದ್ದ ಸ್ಥಳಗಳಲ್ಲಿ ಯೋಗ್ಯ ಶಬ್ದಗಳನ್ನು ಬರೆಯಿರಿ.

(೧) ಸಮಾಜದಲ್ಲಿಯ ದೈನಂದಿನ ವ್ಯವಹಾರಗಳು ಸುಗಮವಾಗಿ ಸಾಗುವ ಸಲುವಾಗಿ ಮನುಷ್ಯನಿಗೆ ನಿಯಮಗಳ ಅವಶ್ಯಕತೆ ಉಂಟಾಯಿತು.

(೨) ಮನುಷ್ಯನಲ್ಲಿಯ ಕೌಶಲ್ಯಗಳ ವಿಕಾಸವು ಆಗುತ್ತದೆ.

(೩) ನಮ್ಮ ಕೆಲವು ಭಾವನಾತ್ಮಕ ಹಾಗೂ ಅವಶ್ಯಕತೆಗಳೂ ಇರುತ್ತವೆ.

ಪ್ರ. ೨. ಕೆಳಗಿನವುಗಳಲ್ಲಿ ಪ್ರತಿಯೊಂದಕ್ಕೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

(೧) ನಮ್ಮ ಮೂಲಭೂತ ಅವಶ್ಯಕತೆಗಳು ಯಾವವು ?

ಉತ್ತರ: ಅನ್ನ ,ಬಟ್ಟೆ,  ವಸತಿ ಇವು   ನಮ್ಮ ಮೂಲಭೂತ ಅವಶ್ಯಕತೆಗಳು ಆಗಿವೆ.            

                         2. ಸಮಾಜದಲ್ಲಿಯ ವಿವಿಧತೆ...

 

ಪ್ರ. ೧. ತೆರವಿದ್ದ ಸ್ಥಳಗಳಲ್ಲಿ ಯೋಗ್ಯ ಶಬ್ದಗಳನ್ನು ಬರೆಯಿರಿ.

(೧) ವಿವಿಧ ಸಮೂಹಗಳ ಜೊತೆಗೆ ವಾಸಿಸುವುದೆಂದರೆ ಸ್ವಂತ ಅಸ್ತಿತ್ವ ಅನುಭವಿಸುವುದು.

(೨) ಭಾರತವು ಜಗತ್ತಿನನಲ್ಲಿಯ ಒಂದು ಮಹತ್ವದ ಧರ್ಮನಿರಪೇಕ್ಷ ರಾಷ್ಟ್ರವಾಗಿದೆ.

(೩) ಸಹಕಾರದಿಂದಾಗಿ ಸಮಾಜದಲ್ಲಿಯ ಪರಸ್ಪರಾವಲಂಬನೆ ಹೆಚ್ಚು ಸದೃಢವಾಗುತ್ತದೆ.

ಪ್ರ. ೨. ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

(೧) ಸಹಕಾರವೆಂದರೇನು ?

ಉತ್ತರ: ಯಾವುದೇ ಸಮಾಜವು ವ್ಯಕ್ತಿ ಮತ್ತು ಸಮೂಹಗಳಲ್ಲಿಯ ಪರಸ್ಪರ ಸಹಕಾರದ ಮೇಲೆ ಆಧರಿಸಿರುತ್ತದೆ. ವ್ಯಕ್ತಿ ವ್ಯಕ್ತಿಗಳ ನಡುವೆ ಅಡಚನೆಗಳನ್ನು ಬಗೆಹರಿಸುವ ಸಲುವಾಗಿ ಹಾಗೂ ಪ್ರಶ್ನೆಗಳನ್ನು ಬಿಡಿಸುವ ಸಲುವಾಗಿ ಪರಸ್ಪರರಿಗೆ ಸಹಾಯ ಮಾಡುವುದು ಎಂದರೆ ಸಹಕಾರ ಹೌದು.  

(೨) ನಾವು ಧರ್ಮನಿರಪೇಕ್ಷತೆಯ ತತ್ವವನ್ನು ಏಕೆ ಸ್ವೀಕರಿಸಿದ್ದೇವೆ?

ಉತ್ತರ: ಭಾರತವು ಜಗತ್ತಿನಲ್ಲಿಯ ಒಂದು ಮಹತ್ವದ ಧರ್ಮನಿರಪೇಕ್ಷ ರಾಷ್ಟ್ರವಾಗಿದೆ. ನಮ್ಮ ದೇಶದಲ್ಲಿ ಭಾಷಿಕ ಮತ್ತು ಧಾರ್ಮಿಕ ವಿವಿಧತೆಯು ದೊಡ್ಡ ಪ್ರಮಾಣದಲ್ಲಿದೆ. ಈ ವಿವಿಧತೆಯನ್ನು ಕಾಪಾಡುವ ಸಲುವಾಗಿ ನಾವು ಧರ್ಮನಿರಪೇಕ್ಷತೆಯ ತತ್ವವನ್ನು  ಸ್ವೀಕರಿಸಿದ್ದೇವೆ

ಪ್ರ. ೩. ಕೆಳಗಿನ ಪ್ರಶ್ನೆಗಳಿಗೆ ೨ ರಿಂದ ೩ ವಾಕ್ಯಗಳಲ್ಲಿ ಉತ್ತರ ಬರೆಯಿರಿ.

(೧) ಭಾರತೀಯ ಸಮಾಜದಲ್ಲಿಯ ಏಕತೆಯು ಯಾವುದರಿಂದ ಕಂಡುಬರುತ್ತದೆ ?

ಉತ್ತರ: ಭಾರತೀಯ ಸಮಾಜದಲ್ಲಿ ಅನೇಕ ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ರೂಢಿಗಳು ಹಾಗೂ ಪರಂಪರೆಗಳು ಇವೆ. ಈ ವಿವಿಧತೆಯು ನಮ್ಮ ಸಂಸ್ಕೃತಿಕ ವೈಭವವಾಗಿದೆ. ನಮ್ಮ ಸುತ್ತ ಮುತ್ತ ಮರಾಠಿ, ಕನ್ನಡ, ತೆಲುಗು, ಬಂಗಾಳಿ, ಹಿಂದಿ, ಗುಜರಾತಿ, ಉರ್ದು ಇತ್ಯಾದಿ ಅನೇಕ ಭಾಷೆಗಳನ್ನು ಮಾತನಾಡುವ ಜನರು ಇರುತ್ತಾರೆ. ಅವರೆಲ್ಲರೂ ಬೇರೆ ಬೇರೆ ಪದ್ಧತಿಯಿಂದ ಹಬ್ಬ, ಉತ್ಸವಗಳನ್ನು ಅಚ್ಚರಿಸುತ್ತಾರೆ. ಅವರ ಪೂಜೆ ಮತ್ತು ಉಪಾಸನೆಯ ಪದ್ಧತಿಗಳು ಬೇರೆ ಬೇರೆಯಾಗಿರುತ್ತವೆ. ನಮ್ಮ ದೇಶದಲ್ಲಿ ಈ ವಿವಿಧ ಸಮೂಹಗಳು ಅನೇಕ ವರ್ಷಗಳಿಂದ ಒಟ್ಟಿಗೆ ವಾಸಿಸುವುದರಿಂದ ನಮ್ಮ ಸಮಾಜದಲ್ಲಿ ಏಕತೆಯು ಕಂಡು ಬರುತ್ತದೆ.

(೨) ಸಮಾಜದಲ್ಲಿ ಸಂಘರ್ಷಗಳು ಯಾವಾಗ ನಿರ್ಮಾಣವಾಗುತ್ತವೆ?

ಉತ್ತರ: ಸಮಾಜದಲ್ಲಿ ಸಹಕಾರವಿರುವಂತೆ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು, ವಾದವಿವಾದ ಹಾಗೂ ಸಂಘರ್ಷಗಳು ನಿರ್ಮಾಣವಾಗುತ್ತವೆ. ವ್ಯಕ್ತಿ೦ವ್ಯಕ್ತಿಗಳಲ್ಲಿಯ ಅಭಿಪ್ರಾಯಗಳು, ವಿಚಾರಗಳು ಹಾಗೂ ದೃಷ್ಟಿಕೊನಗಳಲ್ಲಿ ಹೊಂದಾಣಿಕೆಯಾಗದಿದ್ದರೆ ವಿವಾದ ಸಂಘರ್ಷಗಳು ನಿರ್ಮಾಣವಾಗಬಹುದು. ಪರಸ್ಪರರ ವಿಷಯದಲ್ಲಿದ್ದ ಪೂರ್ವಗ್ರಹ ಇಲ್ಲವೆ ತಪ್ಪು ತಿಳುವಳಿಕೆಯಿಂದಲೂ ಸಂಘರ್ಷ ಉಂಟಾಗಬಹುದು.

(2) ಸಹಕಾರದಿಂದ ಯಾವ ಲಾಭಗಳು ಆಗುತ್ತವೆ ?

ಉತ್ತರ: ಯಾವುದೇ ಸಮಾಜವು ವ್ಯಕ್ತಿ ಮತ್ತು ಸಮೂಹಗಳಲ್ಲಿಯ ಪರಸ್ಪರ ಸಹಕಾರದ ಮೇಲೆ ಆಧರಿಸಿರುತ್ತದೆ. ವ್ಯಕ್ತಿ ವ್ಯಕ್ತಿಗಳ ನಡುವೆ ಅಡಚಣೆಗಳನ್ನು ಬಗೆಹರಿಸಲು ಹಾಗೂ ಪ್ರಶ್ನೆಗಳನ್ನು  ಬಿಡಿಸಲು ಬರುತ್ತದೆ. ಪರಸ್ಪರ ಸಹಕಾರದಿಂದ ವಿಸಮಾಜದಲ್ಲಿಯ ಪರಸ್ಪರಾವಲಂಬನೆ ಹೆಚ್ಚು ಆಗುತ್ತದೆ.  

(೪) ನಿಮ್ಮ ಎದುರಿಗೆ ಇಬ್ಬರು ಹುಡುಗರು ಜಗಳಾಡುತ್ತಿದ್ದಾರೆ, ಆಗ ನೀವು ಏನು ಮಾಡುವಿರಿ ?

ಉತ್ತರ: ಇಬ್ಬರೂ ಹುಡುಗರ ನಡುವೆ ಸಮಂಜಸ್ಯದಿಂದ ಜಗಳ ಬಿಡಿಸುವ ಪ್ರಯತ್ನ ಮಾಡುವೆನು. ಅವರಲ್ಲಿ ಬಾಂಧವ್ಯ, ಸ್ನೇಹ, ಸಹಕಾರ ಹೇಗೆ ನಿರ್ಮಾಣವಾಗುವುದು ಎಂಬುದರ ಬಗ್ಗೆ ವಿಚಾರ ಮಾಡುವೆ. ತಪ್ಪು ಮಾಡಿದವರನ್ನು ತಿಳಿ ಹೇಳುವೆ. ಮತ್ತೆ ಜಗಳ ಮಾಡದಂತೆ ನೋಡಿಕೊಳ್ಳುವೆ.

(೫) ನೀವು ಶಾಲೆಯ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಯಾಗಿದ್ದೀರಿ. ನೀವು ಯಾವ ಯಾವ ಕಾರ್ಯಗಳನ್ನು ಮಾಡುವಿರಿ?

ಉತ್ತರ: ಶಾಲೆಯ ಮುಖ್ಯಮಂತ್ರಿಯಾಗಿ ನಾನು ಮಂತ್ರಿಮಂಡಲದ ಕಾರ್ಯ ಯೋಗ್ಯ ಪದ್ಧತಿಯಿಂದ ನಡೆಯುತ್ತಿದೆಯೋ ಎಂಬುದನ್ನು ನೋಡುವೆನು. ಶಾಲೆಯ ಪ್ರತಿಯೊಂದು ಉಪಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಸಹಭಾಗಿಯಾಗುತ್ತಾರೆಯೇ ಎಂಬುದನ್ನು ನೋಡಿಕೊಳ್ಳುವೆನು. ಮಂತ್ರಿಮಂಡಲಕ್ಕೆ ತನ್ನ ಕೆಲಸಗಳಾದ ವರ್ಗ ಮತ್ತು ಶಾಲೆಯ ಪರಿಸರ ಸ್ವಚ್ಛತೆ, ನೀರಿನ ಪೂರೈಕೆ, ವೃಕ್ಷಾರೋಪಣೆ ಮತ್ತು ಸಂವರ್ಧನೆ ಇತ್ಯಾದಿ ಕಾರ್ಯಗಳಲ್ಲಿ ಮಾರ್ಗದರ್ಶನ ಮಾಡುವೆ.

ಉಪಕ್ರಮ

(೧) ಶಿಕ್ಷಕರ ಸಹಾಯದಿಂದ ಶಾಲೆಯಲ್ಲಿ ಸಹಕಾರಿ ತತ್ವದ ಮೇಲೆ ಕುಮಾರ ವಸ್ತು ಭಾಂಡಾರವನ್ನು ನಡೆಸಿರಿ. ಅದನ್ನು ಕುರಿತು ನಿಮ್ಮ ಅನುಭವಗಳನ್ನು ಬರೆಯಿರಿ.

(೨) ಶಾಲೆಯಲ್ಲಿ ಮತ್ತು ವರ್ಗದಲ್ಲಿ ನೀವು ಯಾವ ಯಾವ ನಿಯಮಗಳನ್ನು ಪಾಲಿಸುತ್ತೀರಿ. ಅವುಗಳ ಕೋಷ್ಟಕವನ್ನು ತಯಾರಿಸಿ ವರ್ಗದಲ್ಲಿ ಅಂಟಿಸಿರಿ.

 

 

3. ಗ್ರಾಮೀಣ ಸ್ಥಾನಿಕ ಸ್ವರಾಜ್ಯ ಸಂಸ್ಥೆ

 

ಪ್ರ. 1. ಯೋಗ್ಯ ಪರ್ಯಾಯದ ಮುಂದೆ (✔) ಹೀಗೆ ಗುರುತು ಹಾಕಿರಿ.

(೧) ಪ್ರತಿಯೊಂದು ಗ್ರಾಮದ ಸ್ಥಾನಿಕ ಆಡಳಿತವನ್ನು........... ನೋಡಿಕೊಳ್ಳುತ್ತದೆ.

     ಗ್ರಾಮಪಂಚಾಯತಿ [ ]    ಪಂಚಾಯತ ಸಮಿತಿ [  ]    ಜಿಲ್ಲಾ ಪರಿಷತ್ತು [ ]

(೨) ಪ್ರತಿಯೊಂದು ಆರ್ಥಿಕ ವರ್ಷದಲ್ಲಿ ಗ್ರಾಮಸಭೆಯ ಕನಿಷ್ಟ    ಸಭೆಗಳಾಗಬೇಕೆಂದು ಬಂಧನಕಾರಕವಾಗಿದೆ.

     ನಾಲ್ಕು [ ]     ಐದು [  ]      ಆರು [  ]

(೩) ಮಹಾರಾಷ್ಟ್ರದಲ್ಲಿ ಈಗ ಜಿಲ್ಲೆಗಳಿವೆ.     ೩೪ [ ]   ೩೫ [ ]  ೩೬ [ ]

ಪ್ರ. ೨.ಪಟ್ಟಿಯನ್ನು ತಯಾರಿಸಿರಿ.

ಪಂಚಾಯತ ಸಮಿತಿಯ ಕಾರ್ಯಗಳು.

1. ಜನತೆಯ ಕಾರ್ಯಗಳು: ರಸ್ತೆ, ಚರಂಡಿ, ಬಾವಿ, ಕೊಳವೆ ಬಾವಿ

2. ಆರೋಗ್ಯ: ರೋಗನಿರೋಧಕ ಲಸಿಕೆ

3. ನೀರಿನ ಪೂರೈಕೆ: ಸ್ವಚ್ಛ ಕುಡಿಯುವ ನೀರು

4. ಸ್ವಚ್ಛತೆ: ರಸ್ತೆಯ ಸ್ವಚ್ಛತೆ ಕಸದ ವಿಲೇವಾರಿ

5. ಕೃಷಿ: ಕೃಷಿ ಮತ್ತು ಪಶುಧನ ಸುಧಾರಣೆಗಾಗಿ ರೈತರಿಗೆ ಸಹಾಯ

6. ಶಿಕ್ಷಣ: ಪ್ರಾಥಮಿಕ ಶಿಕ್ಷಣ

7. ಉದ್ಯೋಗ: ಹಸ್ತಗಾರಿಕೆ ಹಾಗೂ ಗುಡಿಕೈಗಾರಿಕಕೆಗಳ ವಿಕಾಸಕ್ಕೆ ಚಾಲನೆ

8. ಜನಕಲ್ಯಾಣ: ದುರ್ಬಲ ವರ್ಗಗಳಿಗೆ ಆರ್ಥಿಕ ಸಹಾಯ ಮಾಡುವುದು

 

ಪ್ರ. ೩. ನಿಮಗೆ ಏನು ಅನಿಸುತ್ತದೆಂಬುದನ್ನು ಹೇಳಿರಿ.

(೧) ಗ್ರಾಮ ಪಂಚಾಯತಿಯು ವಿವಿಧ ತೆರಿಗೆಗಳನ್ನು ಹೇರುತ್ತದೆ.

ಉತ್ತರ: ವಿವಿಧ ತೆರಿಗೆಗಳ ಮೂಲಕ ಗ್ರಾಮ ಪಂಚಾಯತಿಯು ತನ್ನ ಉತ್ಪನ್ನವನ್ನು ಸಂಗ್ರಹ ಮಾಡಿಕೊಳ್ಳುತ್ತದೆ. ಗ್ರಾಮ ಪಂಚಾಯತಿಗೆ ಕೆಳಗಿನ ಮಧ್ಯಮದಿಂದ ತೆರಿಗೆ ವಿಧಿಸಲು ಬರುತ್ತದೆ:

1. ಮನೆಯ ಮೇಲಿನ ತೆರಿಗೆ           2. ನೀರಿನ ತೆರಿಗೆ            3. ವಾರದ ಸಂತೆಯ ಮೇಲಿನ ತೆರಿಗೆ          

4. ಜಾತ್ರೆಯ ತೆರಿಗೆ                   5. ರಾಜ್ಯ ಸರಕಾರ ಮತ್ತು ಜಿಲ್ಲಾ ಪರಿಷದ ಕಡೆಯಿಂದ ದೊರೆಯುವ ಅನುದಾನ         

(೨) ಮಹಾರಾಷ್ಟ್ರದಲ್ಲಿಯ ಒಟ್ಟು ಜಿಲ್ಲೆಯ ಸಂಖ್ಯೆಗಳಿಗಿಂತ ಜಿಲ್ಲಾ ಪರಿಷತ್ತುಗಳ ಸಂಖ್ಯೆ ಕಡಿಮೆ ಇದೆ.

ಉತ್ತರ:ಪ್ರತಿಯೊಂದು ಜಿಲ್ಲೆಗೆ ಒಂದು ಜಿಲ್ಲಾ ಪರಿಷತ್ತು ಇರುತ್ತದೆ. ಜಿಲ್ಲಾ ಪರಿಷತ್ತಿನ ಮೂಲಕ ಗ್ರಾಮೀಣ ಭಾಗದಲ್ಲಿಯ ಶಿಕ್ಷಣ, ಆರೋಗ್ಯ ಹಾಗೂ ಸ್ವಚ್ಛತೆಯ ಕಾರ್ಯಗಳು ಮಾಡಲಾಗುತ್ತದೆ. ಮಹಾರಾಷ್ಟ್ರ ರಾಜ್ಯದಲ್ಲಿ ಈಗ ಒಟ್ಟು 36 ಜಿಲ್ಲೆಗಳಿವೆ. ಆದರೆ ಮುಂಬಯಿ(ನಗರ) ಜಿಲ್ಲೆ ಮತ್ತು ಮುಂಬಯಿ ಉಪನಗರ ಜಿಲ್ಲೆ ಇವು ಗ್ರಾಮೀಣ ಜನರ ವಸತಿಯ ಭಾಗವಾಗಿಲ್ಲ. ಆದ್ದರಿಂದ ಆ ಜಿಲ್ಲೆಗಳಿಗೆ ಜಿಲ್ಲಾ ಪರಿಷತ್ತು ಇಲ್ಲ. ಕೇವಲ 34 ಜಿಲ್ಲಾ ಪರಿಷತ್ತು ಇರುವವು.

ಪ್ರ. ೪. ಕೋಷ್ಟಕವನ್ನು ಪೂರ್ಣ ಮಾಡಿರಿ.

ನನ್ನ ತಾಲೂಕು, ನನ್ನ ಪಂಚಾಯತ ಸಮಿತಿ

(೧) ತಾಲೂಕಿನ ಹೆಸರು= ಅಕ್ಕಲಕೋಟ

(೨) ಪಂಚಾಯತ ಸಮಿತಿಯ ಸಭಾಪತಿಯ ಹೆಸರು = ಮಾ. ಆನಂದರಾವ ಸೋನಕಾಂಬಳೆ

(೩) ಪಂಚಾಯತ ಸಮಿತಿಯ ಉಪಸಭಾಪತಿಯ ಹೆಸರು = ಮಾ.

(೪) ಕ್ಷೇತ್ರ ಅಭಿವೃದ್ಧಿ ಅಧಿಕಾರಿಯ ಹೆಸರು = ಮಾ. ಶ್ರೀ ಸಚಿನ ಖೇಡೆ

(೫) ಕ್ಷೇತ್ರ ಶಿಕ್ಷಣಾಧಿಕಾರಿಯ ಹೆಸರು = ಮಾ. ಶ್ರೀಮತಿ ಖುದಶಿಯಾ ಶೇಖ

ಪ್ರ. ೫. ಸ್ವಲ್ಪದರಲ್ಲಿ ಮಾಹಿತಿ ಬರೆಯಿರಿ.

(೧) ಸರಪಂಚ: ಗ್ರಾಮ ಪಂಚಾಯತಿಯ ಚುನಾವಣೆಗಳು ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತವೆ. ಆರಿಸಿ ಬಂದ ಸದಸ್ಯರು ತಮ್ಮಲ್ಲಿಯ ಒಬ್ಬನನ್ನು ಸರಪಂಚನೆಂದು ಇನ್ನೊಬ್ಬನನ್ನು ಉಪಸರಪಂಚನೆಂದು ಆಯ್ಕೆ ಮಾಡುತ್ತಾರೆ. ಗ್ರಾಮ ಪಂಚಾಯತಿನ ಸಭೆಗಳು ಸರಪಂಚನ ಅಧ್ಯಕ್ಷತೆಯಲ್ಲಿ ನಡೆಯುತ್ತವೆ. ಗ್ರಾಮದ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆ ಸರಪಂಚನದಾಗಿರುತ್ತದೆ.

(೨) ಮುಖ್ಯ ಕಾರ್ಯಕಾರಿ ಅಧಿಕಾರಿ: ಮುಖ್ಯ ಕಾರ್ಯಕಾರಿ ಅಧಿಕಾರಿಯು ಜಿಲ್ಲಾ ಪರಿಷತ್ತಿನ ಆಡಳಿತ ನೋಡಿಕೊಳ್ಳುವ ವರಿಷ್ಠ ಅಧಿಕಾರಿಯಾಗಿರುತ್ತಾನೆ. ಜಿ.ಪ. ತೆಗೆದುಕೊಂಡ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವ ಕಾರ್ಯವನ್ನು ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯಕಾರಿ ಅಧಿಕಾರಿಯು ಮಾಡುತ್ತಾನೆ. ಅವನ ನೇಮಕವನ್ನು ರಾಜ್ಯ ಸರಕಾರ ಮಾಡುತ್ತದೆ.

ಉಪಕ್ರಮ :

(೧) ಅಭಿರೂಪ ಗ್ರಾಮಸಭೆಯನ್ನು ಏರ್ಪಡಿಸಿ ಸರಪಂಚ, ಸದಸ್ಯರು, ನಾಗರಿಕರು ಮತ್ತು ಗ್ರಾಮ ಸೇವಕರ ಪಾತ್ರಗಳನ್ನು ಅಭಿನಯಿಸಿರಿ.

(೨) ಬಾಲಸಂಸತ್ತಿನ ರಚನೆಯನ್ನು ಸ್ಪಷ್ಟಪಡಿಸುವ ಕೋಷ್ಟಕವನ್ನು ತಯಾರಿಸಿರಿ. ವರ್ಗದಲ್ಲಿ ಎಲ್ಲರಿಗೂ ಕಾಣುವ ಸ್ಥಳದಲ್ಲಿ ಅದನ್ನು ಅಂಟಿಸಿರಿ.

(೩) ನಿಮ್ಮ ಪರಿಸರದಲ್ಲಿಯ ಇಲ್ಲವೆ ನಗರದ ಸಮೀಪದ ಜಿಲ್ಲಾ ಪರಿಷತ್ತಿನ ಯೋಜನೆಗಳ ಮಾಹಿತಿಯನ್ನು ಪಡೆಯಿರಿ.

 

 

4. ನಗರ ಸ್ಥಾನಿಕ ಸ್ವರಾಜ್ಯ ಸಂಸ್ಥೆಗಳು

 

ಪ್ರ. ೧. ಕೊಟ್ಟ ಪರ್ಯಾಯಗಳಿಂದ ಯೋಗ್ಯ ಪರ್ಯಾಯವನ್ನು ಗುರುತಿಸಿರಿ ಮತ್ತು ಬರೆಯಿರಿ.

 (೧) ಮಹಾರಾಷ್ಟ್ರದಲ್ಲಿ ಪ್ರಪ್ರಥಮವಾಗಿ ಮಹಾನಗರ ಪಾಲಿಕೆಯನ್ನು ಸ್ಥಾಪನೆ ಮಾಡಲಾಯಿತು. ಆ ನಗರದ ಹೆಸರು .

(ನಾಗಪೂರ, ಮುಂಬಯಿ, ಲಾತೂರ)

(೨) ನಗರದಲ್ಲಿ ರೂಪಾಂತರವಾಗುವ ಸ್ಥಿತಿಯಲ್ಲಿ ಯಾವ ಊರುಗಳು ಇರುತ್ತವೆಯೋ ಅಲ್ಲಿಯ ಆಡಳಿತವನ್ನು ನೋಡಿಕೊಳ್ಳುತ್ತದೆ

(ನಗರ ಪರಿಷತ್ತು, ಮಹಾನಗರಪಾಲಿಕೆ, ನಗರ ಪಂಚಾಯತಿ)

(೩) ನಗರ ಪರಿಷತ್ತಿನ ಆರ್ಥಿಕ ವ್ಯವಹಾರಗಳ ಮೇಲೆ ಲಕ್ಷ್ಯವಿಡುತ್ತಾನೆ.

(ಮುಖ್ಯಾಧಿಕಾರಿ, ಕಾರ್ಯಕಾರಿ ಅಧಿಕಾರಿ, ಆಯುಕ್ತ)

ಪ್ರ. ೨. ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

(೧) ನಗರಗಳಲ್ಲಿ ಯಾವ ಯಾವ ಸಮಸ್ಯೆಗಳು ಕಂಡುಬರುತ್ತವೆ?

(೨) ಮಹಾನಗರಪಾಲಿಕೆಯ ವಿವಿಧ ಸಮಿತಿಗಳ ಹೆಸರು ಬರೆಯಿರಿ.

ಪ್ರ.೩. ಕೆಳಗಿನ ಅಂಶಗಳ ಆಧಾರದಿಂದ ನಗರ ಸ್ಥಾನಿಕ ಸ್ವರಾಜ್ಯ ಸಂಸ್ಥೆಯ ವಿಷಯವಾಗಿ ಮಾಹಿತಿಯನ್ನು ನೀಡುವ ಕೋಷ್ಟಕವನ್ನು ತಯಾರಿಸಿರಿ.

ಅಂಶಗಳು

ನಗರ ಪಂಚಾಯತಿ

ನಗರ ಪರಿಷತ್ತು

ಮಹಾನಗರಪಾಲಿಕೆ

ಪದಾಧಿಕಾರಿಗಳು

 

 

 

ಸದಸ್ಯರ ಸಂಖ್ಯೆ

 

 

 

ಅಧಿಕಾರಿಗಳು

 

 

 

 

ಪ್ರ. ೪. ಹೇಳಿ ನೋಡೋಣ.

(೧) ನಗರ ಪರಿಷತ್ತಿನ ಅವಶ್ಯಕ ಕಾರ್ಯಗಳಲ್ಲಿ ಯಾವ ಯಾವ ಕಾರ್ಯಗಳ ಸಮಾವೇಶವಾಗುತ್ತದೆ ?

(೨) ನಗರ ಪಂಚಾಯತಿಯ ಯಾವ ಸ್ಥಳದಲ್ಲಿ ಇರುತ್ತದೆ ?

ಪ್ರ. ೫. ನಿಮ್ಮ ಜಿಲ್ಲೆಯಲ್ಲಿ ಎಲ್ಲೆಲ್ಲಿ ನಗರ ಪರಿಷತ್ತು, ನಗರ ಪಂಚಾಯತಿ ಮತ್ತು ಮಹಾನಗರಪಾಲಿಕೆಗಳು ಆಡಳಿತ ನಡೆಸುತ್ತವೆ ? ಅವುಗಳ ಹೆಸರುಗಳ ಪಟ್ಟಿತಯಾರಿಸಿರಿ.

ಉಪಕ್ರಮ:

(೧) ಸಾಂಕ್ರಾಮಿಕ ರೋಗಗಳ ಪ್ರಸಾರವಾಗಬಾರದೆಂದು ಆರೋಗ್ಯ ಜಾಗೃತಿಯನ್ನು ಕುರಿತು ಘೋಷಣೆಗಳನ್ನು ತಯಾರಿಸಿರಿ ಮತ್ತು ಅವುಗಳನ್ನು ವರ್ಗದಲ್ಲಿ ಅಂಟಿಸಿರಿ.

(೨) ನಿಮ್ಮ ಪರಿಸರದಲ್ಲಿಯ ಮಹಾನಗರಪಾಲಿಕೆಗೆ ಭೇಟಿ ನೀಡಿರಿ. ಅಲ್ಲಿ ಯಾವ ಹೊಸ ಉಪಕ್ರಮಗಳನ್ನು ಕೈಕೊಳ್ಳಲಾಗಿದೆ ಯೆಂಬುದರ ಮಾಹಿತಿಯನ್ನು ಪಡೆಯಿರಿ. ಅದರಲ್ಲಿ ನೀವು ಯಾವ ಕೊಡುಗೆಯನ್ನು ನೀಡಬಹುದು ಎಂಬುದರ ಬಗ್ಗೆ ವರ್ಗದಲ್ಲಿ ಚರ್ಚೆ ಮಾಡಿರಿ.

 

 

5. ಜಿಲ್ಲಾ ಆಡಳಿತ

 

ಪ್ರ. ೧. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

(೧) ಜಿಲ್ಲೆಯ ಆಡಳಿತದ ಪ್ರಮುಖನು ಯಾರು ?

ಉತ್ತರ: ಜಿಲ್ಲೆಯ ಆಡಳಿತದ ಪ್ರಮುಖನು ಜಿಲ್ಲಾಧಿಕಾರಿಯಾಗಿರುತ್ತಾರೆ.

(೨) ತಹಸೀಲ್ದಾರನ ಮೇಲೆ ಯಾವ ಜವಾಬ್ದಾರಿ ಇರುತ್ತದೆ ?

ಉತ್ತರ: ತಹಶೀಲದಾರ ತಾಲೂಕಿನಲ್ಲಿ ಶಾಂತತೆ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಇರುತ್ತದೆ.

(೩) ನ್ಯಾಯ ವ್ಯವಸ್ಥೆಯ ಅಗ್ರ ಭಾಗದಲ್ಲಿ ಯಾವ ನ್ಯಾಯಾಲಯವಿರುತ್ತದೆ ?

ಉತ್ತರ: ನ್ಯಾಯ ವ್ಯವಸ್ಥೆಯ ಅಗ್ರ ಭಾಗದಲ್ಲಿ ಸರ್ವೋಚ್ಚ ನ್ಯಾಯಾಲಯವಿರುತ್ತದೆ

(೪) ಯಾವ ಯಾವ ಆಪತ್ತುಗಳ ಪೂರ್ವ ಸೂಚನೆ ನಮಗೆ ದೊರೆಯಬಲ್ಲದು ?

ಉತ್ತರ: ತಂತ್ರಜ್ಞಾನದಲ್ಲಿಯ ಪ್ರಗತಿಯಿಂದಾಗಿ ಮಹಾಪೂರ, ಚಂಡಮಾರುತ, ಭೂಕಂಪ ಇತ್ಯಾದಿ ಅಪಟ್ಟುಗಳ ಪುರ್ವ ಸೂಚನೆ ನಮಗೆ ದೊರೆಯುತ್ತದೆ.

ಪ್ರ. ೨. ಹೊಂದಿಸಿ ಬರೆಯಿರಿ.

'' ಪಟ್ಟಿ                                        '' ಪಟ್ಟಿ

(ಅ) ಜಿಲ್ಲಾಧಿಕಾರಿ                               (೧) ತಾಲೂಕಾ ದಂಡಾಧಿಕಾರಿ

(ಆ) ಜಿಲ್ಲಾನ್ಯಾಯಾಲಯ                        (೨) ಕಾಯದೆ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು

(ಇ) ತಹಸೀಲ್ದಾರ                               (೩) ತಂಟೆಗಳನ್ನು ಬಿಡಿಸುವುದು

ಉತ್ತರ: (ಅ – ೨, ಆ – ೩, ಇ – ೧)

ಪ್ರ. ೩. ಕೆಳಗಿನ ವಿಷಯಗಳ ಮೇಲೆ ಚರ್ಚೆ ಮಾಡಿರಿ.

(೧) ಆಪತ್ತು ವ್ಯವಸ್ಥಾಪನೆ: ನಮಗೆ ಅನೇಕ ನೈಸರ್ಗಿಕ ಮತ್ತು ಮಾನವ ನಿರ್ಮಿತ ಆಪತ್ತುಗಳನ್ನು ಎದುರಿಸಬೇಕಾಗುತ್ತದೆ. ಮಹಾಪೂರ, ಬೆಂಕಿ, ಚಂಡಮಾರುತ, ಭಯಂಕರ ಮಳೆ, ಆಣೆಕಲ್ಲು ಸುರಿಯುವಿಕೆ, ಭೂಕಂಪ, ಭೂಕುಸಿತ ಇತ್ಯಾದಿ ನೈಸರ್ಗಿಕ ಆಪತ್ತುಗಳ ಜೊತೆಗೆ ಬಾಂಬ್ ಸ್ಫೋಟ, ಸಾಂಕ್ರಾಮಿಕ ರೋಗಗಳು ಕೂಡ ಎದುರಿಸಬೇಕಾಗುತ್ತದೆ. ಇಂಥ ಆಪತ್ತುಗಳಿಂದ ರಕ್ಷಣೆ ಪಡೆಯಲು ಜನರು ಸ್ಥಳಾಂತರ ಮಾಡಬೇಕಾಗುತ್ತದೆ. ಜೀವಿತ ಹಾನಿ ಮತ್ತು ವಿತ್ತಹಾನಿ ಎರಡೂ ಸಂಭವಿಸುತ್ತವೆ. ಅದರಿಂದಾಗಿ ಪುನರ್ವಸತಿಯ ಪ್ರಶ್ನೆ ಮಹತ್ವದ್ದಾಗುತ್ತದೆ. ಇಂತಹ ಆಪತ್ತುಗಳನ್ನು ಸುವ್ಯವಸ್ಥಿತ ಹಾಗೂ ಶಾಸ್ಟ್ರೀಯ ಪದ್ಧತಿಯಿಂದ ಎದುರಿಸುವ ಪದ್ಧತಿಗೆ ಆಪತ್ತು ವ್ಯವಸ್ಥಾಪನೆ ಎನ್ನುತ್ತಾರೆ.

(೨) ಜಿಲ್ಲಾಧಿಕಾರಿಗಳ ಕಾರ್ಯಗಳು:

·         ಕೃಷಿ:      ಭೂಕಂದಾಯ ಸಂಗ್ರಹಿಸುವುದು

                    ಕೃಷಿಗೆ ಸಂಬಂಧಿಸಿದ ಕಾಯ್ದೆಯನ್ನು ಜಾರಿಗೆ ತರುವುದು

                    ಬರಗಾಲ ಹಾಗೂ ಮೇವಿನ ಕೊರತೆಗಳ ಮೇಲೆ ಉಪಾಯ ಯೋಜನೆ ಮಾಡುವುದು.

·         ಕಾಯದೆ ಮತ್ತು ಸುವ್ಯವಸ್ಥೆ: ಜಿಲ್ಲೆಯಲ್ಲಿ ಶಾಂತತೆಯನ್ನು ಕಾಪಾಡುವುದು

                             ಸಾಮಾಜಿಕ ನೆಮ್ಮದಿಯನ್ನು ಕಾಪಾಡುವುದು

                             ಸಭಾ ನಿರ್ಬಂಧ ಸಂಚಾರ ನಿರ್ಬಂಧ ಜಾರಿಗೊಳಿಸುವುದು

·         ಚುನಾವಣಾ ಅಧಿಕಾರಿ: ಯೋಗ್ಯ ರೀತಿಯಿಂದ ಚುನಾವಣೆಗಳನ್ನು ನಡೆಸುವುದು

                       ಚುನಾವಣೆಯ ಸಂಧರ್ಭದಲ್ಲಿ ಅವಶ್ಯಕ ನಿರ್ಣಯ ತೆಗೆದುಕೊಳ್ಳುವುದು

                       ಸುಧಾರಿತ ಮತದಾರರ ಪಟ್ಟಿಗಳನ್ನು ತಯಾರಿಸುವುದು

ಪ್ರ. ೪. ನಿಮಗೆ ಕೆಳಗಿನವರಲ್ಲಿ ಯಾರು ಆಗಬೇಕೆನಿಸುತ್ತದೆ ಮತ್ತು ಏಕೆ ಎಂಬುದನ್ನು ಹೇಳಿರಿ.

(೧) ಜಿಲ್ಲಾಧಿಕಾರಿ: ಜಿಲ್ಲಾಧಿಕಾರಿ ಜಿಲ್ಲೆಯ ಆಡಳಿತ ಪ್ರಮುಖನಾಗಿರುತ್ತಾನೆ. ಭೂಕಂದಾಯ ಸಂಗ್ರಹಿಸಿ ಆ ವಿತ್ತದಿಂದ ಆದರ್ಶ ಜಿಲ್ಲೆಯ ಆಡಳಿತ ನಡೆಸುವೆ.

(೨) ಜಿಲ್ಲಾ ಪೋಲೀಸ ಪ್ರಮುಖ: ಜಿಲ್ಲೆಯಲ್ಲಿ ಶಾಂತತೆಯನ್ನು ಮತ್ತು ಸುವುಯಾವಸ್ಥೆಯನ್ನು ಕಾಪಾಡುವೆ

(೩) ನ್ಯಾಯಾಧೀಶ: ತನ್ನ ಪರಿಸರದಲ್ಲಿಯ ತಂಟೆಗಳನ್ನು ಬಿಡಿಸಿ ಯೋಗ್ಯ ಸಮಯದಲ್ಲಿ ಯೋಗ್ಯ ನಿರ್ಣಯ, ತೀರ್ಪು ನೀಡುವುದು ನ್ಯಾಯಾಧೀಶನ ಕರ್ತವ್ಯವಿದೆ. ಆದ್ದರಿಂದ ನಾನು ನ್ಯಾಯಾಧೀಶನಾಗುವೆ.

ಉಪಕ್ರಮ :

(೧) ನಿಮ್ಮ ಸಮೀಪದ ಪೋಲೀಸ ಠಾಣೆಗೆ ಭೇಟಿ ನೀಡಿ ಅಲ್ಲಿಯ ಕಾರ್ಯಕಲಾಪಗಳ ಬಗ್ಗೆ ಮಾಹಿತಿ ಪಡೆಯಿರಿ.

(೨) ವಿವಿಧ ಆಪತ್ತುಗಳು, ಅದರ ಬಗ್ಗೆ ವಹಿಸುವ ದಕ್ಷತೆ ಮತ್ತು ಮಹತ್ವದ ದೂರಧ್ವನಿ ಕ್ರಮಾಂಕ ಇವುಗಳ ಕೋಷ್ಟಕವನ್ನು ತಯಾರಿಸಿರಿ. ವರ್ಗದ ಕೋಣೆಯಲ್ಲಿ ಎಲ್ಲರಿಗೂ ಕಾಣುವಂತೆ ಅಂಟಿಸಿರಿ.

(೩) ಹೊಸ ವರ್ಷದ ನಿಮಿತ್ತ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ ಪ್ರಮುಖ ಹಾಗೂ ಜಿಲ್ಲಾ ಮುಖ್ಯ ನ್ಯಾಯಾಧೀಶರಿಗೆ ಶುಭಾಶಯ ಪತ್ರ ಕಳಿಸಿರಿ.

 

 ,ವಸತಿ, ಶಿಕ್ಷಣ, ಮತ್ತು ಆರೋಗ್ಯ ಇವು ನಮ್ಮ ಮೂಲಭೂತ ಅವಶ್ಯಕತೆಗಳು ಆಗಿವೆ .

 (೨) ನಮಗೆ ಯಾರ ಸಹವಾಸ ಇಷ್ಟವಾಗುತ್ತದೆ ?

ಉತ್ತರ:ನಮಗೆ ನಮ್ಮ ಕುಟುಂಬದ ಜನರು, ಸಂಬಂಧಿಕರು ಹಾಗೂ ಗೆಳೆಯ-ಗೆಳೆತಿಯರು ಮುಂತಾದವರ ಸಹವಾಸ ಇಷ್ಟವಾಗುತ್ತದೆ.

(೩) ನಮಗೆ ಸಮಾಜದಿಂದಾಗಿ ಯಾವ ಅವಕಾಶದೊರೆಯುತ್ತದೆ?

ಉತ್ತರ: ನಮಗೆ ಸಮಾಜದಿಂದಾಗಿ ವಿಚಾರಗಳನ್ನು ಮಂಡಿಸುವ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ದೊರೆಯುತ್ತದೆ.

ಪ್ರ. ೩. ನಿಮಗೆ ಏನು ಅನಿಸುತ್ತದೆ? ಪ್ರತಿಯೊಂದಕ್ಕೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

(೧) ಸಮಾಜವು ಹೇಗೆ ನಿರ್ಮಾಣವಾಗುತ್ತದೆ?

ಉತ್ತರ: ಜನರ ತಂಡ ಅಥವಾ ಸಂದಣಿ ಅಂದರೆ ಸಮಾಜವಲ್ಲ. ಕೆಲವು ಸಮಾನ ಉದ್ದೇಶಗಳನ್ನು ಸಾಧಿಸುವ ಯಾವಾಗ ಜನರು ಒಂದೆಡೆ ಬರುತ್ತಾರೋ ಆಗ ಸಮಾಜ ನಿರ್ಮಾಣವಾಗುತ್ತದೆ. ಸಮಾಜದಲ್ಲಿ ಸರ್ವ ಸ್ತ್ರೀ-ಪುರುಷರು, ಪ್ರೌಢ ವ್ಯಕ್ತಿಗಳು, ವೃದ್ಧರು, ಸಣ್ಣ ಹುಡುಗರು-ಹುಡುಗಿಯರು ಮುಂತಾದವರ ಸಮಾವೇಶವಾಗಿರುತ್ತದೆ.ಸಮಾಜದಲ್ಲಿಯ ಗುಂಪುಗಳು, ಸಂಘಗಳು, ಸಂಸ್ಥೆಗಳು ಇವುಗಳಲ್ಲಿ ಪರಸ್ಪರ ವ್ಯವಹಾರ, ಸಂಬಂಧ, ಕೊಡು-ಕೊಳ್ಳುವಿಕೆ ಇತ್ಯಾದಿಗಳು ನಡೆಯುತ್ತವೆ.

(೨) ಸಮಾಜದಲ್ಲಿ ಒಂದು ಶಾಶ್ವತವಾದ ವ್ಯವಸ್ಥೆಯನ್ನು ಏಕೆ ನಿರ್ಮಾಣ ಮಾಡಬೇಕಾಗುತ್ತದೆ?

ಉತ್ತರ: ಕೆಲವು ಸಮಾನ ಉದ್ದೇಶಗಳನ್ನು ಸಾಧಿಸುವ ಯಾವಾಗ ಜನರು ಒಂದೆಡೆ ಬರುತ್ತಾರೋ ಆಗ ಸಮಾಜ ನಿರ್ಮಾಣವಾಗುತ್ತದೆ. ಸಮಾಜದಲ್ಲಿ ಸರ್ವ ಸ್ತ್ರೀ-ಪುರುಷರು, ಪ್ರೌಢ ವ್ಯಕ್ತಿಗಳು, ವೃದ್ಧರು, ಸಣ್ಣ ಹುಡುಗರು-ಹುಡುಗಿಯರು ಮುಂತಾದವರ ಸಮಾವೇಶವಾಗಿರುತ್ತದೆ. ಅನ್ನ, ಬಟ್ಟೆ, ವಸತಿ, ಸುರಕ್ಷತೆಗಳಂತಹ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಸಮಾಜವು ಒಂದು ಶಾಶ್ವತವಾದ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಾಗುತ್ತದೆ.

(೩) ಮನುಷ್ಯನ ಸಮಾಜ ಜೀವನ ಯಾವುದರಿಂದ ಅಧಿಕ ಸಂಘಟಿತ ಹಾಗೂ ಸ್ಥಿರವಾಗುತ್ತದೆ?

ಉತ್ತರ: ಸಮಾಜದಲ್ಲಿ ಒಂದು ಶಾಶ್ವತವಾದ ವ್ಯವಸ್ಥೆಯನ್ನು ಮಾಡುವುದರಿಂದ ಅನೇಕ ಅನುಕೂಲತೆಗಳು ಆಗುವವು. ಆಹಾರದ

ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ಕೃಷಿ ಮಾಡುವುದು ಅವಶ್ಯಕವಾಗಿದೆ. ಕೃಷಿಗೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ನೆರವೇರಿಸುವ ಸಲುವಾಗಿ ವಿವಿಧ ಸಂಸ್ಥೆಗಳನ್ನು ನಿರ್ಮಿಸ ಬೇಕಾಗುತ್ತದೆ. ಕೃಷಿ ಸಲಕರಣೆಗಳನ್ನು ತಯಾರಿಸುವ ಸಲುವಾಗಿ ಕಾರ್ಖಾನೆಗಳು, ರೈತರಿಗೆ ಸಾಲ ನೀಡುವ ಸಲುವಾಗಿ ಬ್ಯಾಂಕುಗಳು, ಉತ್ಪಾದಿತ ವಸ್ತುಗಳಿಗಾಗಿ ಮಾರುಕಟ್ಟೆ ಈ ರೀತಿ ವಿಶಾಲ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇಂಥ ಅನೇಕ ವ್ಯವಸ್ಥೆಗಳ ಮೂಲಕ ಸಮಾಜವು ಸ್ಥಿರವಾಗುತ್ತದೆ.

(೪) ಸಮಾಜ ವ್ಯವಸ್ಥೆ ಅಸ್ತಿತ್ವದಲ್ಲಿ ಇರದಿದ್ದರೆ ಯಾವ ಅಡಚಣೆಗಳು ನಿರ್ಮಾಣವಾಗುತ್ತಿದ್ದವು ?

ಉತ್ತರ: ಸಮಾಜ ವ್ಯವಸ್ಥೆ ಅಸ್ಥಿತ್ವದಲ್ಲಿ ಇರದಿದ್ದರೆ ಸಮಾಜದ ದೈನಂದಿನ ವ್ಯವಹಾರಗಳು ಆಗಲಾರವು. ಸಮಾಜದ ಅಸ್ತಿತ್ವ ಶಾಶ್ವತವಾಗಿ ಉಳಿಯುವ ಸಲುವಾಗಿ ವ್ಯವಸ್ಥೆ ಅವಶ್ಯಕ ವಿರುತ್ತದೆ. ಕೃಷಿ ಇರದಿದ್ದರೆ ಆಹಾರ ದೊರೆಯುವುದಿಲ್ಲ. ಕೃಷಿ ಸಲಕರಣೆಗಳು ಕಾರಖಾನೆಗಳಿಂದ ದೊರೆಯುತ್ತವೆ. ಬ್ಯಾಂಕುಗಳು ಇರದಿದ್ದರೆ ರೈತರಿಗೆ, ಉದ್ಯೋಗಗಳಿಗೆ ಸಾಲ ದೊರೆಯುವುದಿಲ್ಲ.

ಪ್ರ.೪. ಕೆಳಗಿನ ಪ್ರಸಂಗಗಳಲ್ಲಿ ನೀವು ಏನು ಮಾಡಬಲ್ಲಿರಿ?

(೧) ನಿಮ್ಮ ಗೆಳೆಯನು/ಗೆಳತಿಯು ಶೈಕ್ಷಣಿಕ ವಸ್ತುವನ್ನು ಮನೆಯಲ್ಲಿ ಮರೆತು ಬಂದಿದ್ದಾನೆ/ಮರೆತು ಬಂದಿದ್ದಾಳೆ.

ಉತ್ತರ: ನನ್ನ ಹತ್ತಿರ ಇರುವ ಇನ್ನೊಂದು ಶಾಹಿತ್ಯ- ಪೆನ್ನು, ವಹಿ, ಪುಸ್ತಕ ಗೆಳೆಯನಿಗೆ ಕೊಡುವೆನು.

(೨) ರಸ್ತೆಯಲ್ಲಿ ಒಬ್ಬ ದೃಷ್ಟಿಹೀನ/ದಿವ್ಯಾಂಗ ವ್ಯಕ್ತಿ ಭೇಟಿಯಾದನು.

ಉತ್ತರ: ಒಬ್ಬ ದೃಷ್ಟಿಹೀನ/ ದಿವ್ಯಾಂಗ ವ್ಯಕ್ತಿ ರಸ್ತೆ ದಾಟುತ್ತಿರುವಾಗ ಕಂಡು ಬಂದರೆ ನಾನು ಅವರನ್ನು ಕೈ ಹಿಡಿದು ರಸ್ತೆ ದಾಟಿಸಿ ಬರುವೆನು.

ಉಪಕ್ರಮ

(೧) ಕೃಷಿ ಸಲಕರಣೆಗಳನ್ನು ತಯಾರಿಸುವ ಕುಶಲಕರ್ಮಿಗೆ ಭೇಟಿಯಾಗಿರಿ. ಈ ಕೆಲಸದಲ್ಲಿ ಅವನಿಗೆ ಯಾರ ಯಾರ ಸಹಾಯ ದೊರೆಯುತ್ತದೆಂಬುದರ ಪಟ್ಟಿಯನ್ನು ತಯಾರಿಸಿರಿ.

(೨) ಸಮೀಪದ ಬ್ಯಾಂಕಿಗೆ ಭೇಟಿ ನೀಡಿ ಆ ಬ್ಯಾಂಕು ಯಾವ ಯಾವ ಕಾರ್ಯಗಳಿಗಾಗಿ ಸಾಲ ನೀಡುತ್ತದೆಂಬುದರ ಮಾಹಿತಿ ಪಡೆಯಿರಿ.




ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಧನ್ಯವಾದಗಳು