ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Kannada Balbharati Std 6th - ಕನ್ನಡ ಬಾಲಭಾರತಿ ೬ನೇ ಸ್ವಾಧ್ಯಾಯಮಾಲೆ




ಡಿಜಿಟಲ್ ಸ್ವಾಧ್ಯಾಯ ಮಾಲೆ 

                                         ರಚನೆ, ಸಂಕಲನೆ ಹಾಗೂ ಲೇಖನ 

                     ಶ್ರೀ. ದಿನೇಶ ಠಾಕೂರದಾಸ ಚವ್ಹಾಣ 

ಪರಿವಿಡಿ

. ಕ್ರ.

ಪಾಠಗಳು

ಕವಿ/ಲೇಖಕರು

ಕನ್ನಡ ನುಡಿ (ಕವಿತೆ)

ಆನಂದಕA

ನಿಯತ್ತಿನ ಮೌಲ್ಯ

ನರೇಂದ್ರ

ಬ್ಯಾಂಕು

 

೪.

ಹೆಮ್ಮೆ ನನಗೆ ಅಮ್ಮ (ಕವಿತೆ)

ಎನ್.ಎಸ್. ಲಕ್ಷಿÃನಾರಾಯಣಭಟ್ಟ

ಜೋಗ ಜಲಪಾತ

 

ಅತ್ತೆಯ ಮನೆಗೆ ಆಳಿಯ ಬಂದ

 

ಮಾವಿನ ಗೊಲ್ಲೆ (ಕವಿತೆ)

 

ಸರದಾರ ವಲ್ಲಭಬಾಯಿ ಪಟೇಲ

ಎಸ್.ಆರ್. ರಾಮಸ್ವಾಮಿ

ಅಡಗಿಸಿಟ್ಟ ಚಿನ್ನ

 

೧೦

ಈ ಮಣ್ಣು ನಮ್ಮದು (ಕವಿತೆ)

ಆರ್.ಎನ್. ಜಯಗೋಪಾಲ

೧೧

ರೇಷ್ಮೆ ಸಾಕಾಣಿಕೆ

 

೧೨

ದೇವಾನಾಂಪ್ರಿಯ

ಆರ್.ಜಿ.ಡಿ.

೧೩

ಕಲ್ಲು ಸಕ್ಕರೆ (ಕವಿತೆ)

ಪುರಂದರದಾಸರು

೧೪

ಹಂಪೆ

 

೧೫

ಶಿವರಾಮ ಕಾರಂತರು

ಮಂಜುನಾಥ ಮೇಗರವಳ್ಳಿ

೧೬

ನನ್ನ ದೇಹದ ಬೂದಿ (ಕವಿತೆ)

ದಿನಕರ ದೇಸಾಯಿ

೧೭

ಪರಮವೀರ ಚಕ್ರ: ನಮ್ಮ ಮಹಾ ಸಾಹಸಿಗಳು

 

೧೮

ಬಿದಿರು ನಾನಾರಿಗಲ್ಲದವಳು(ಕವಿತೆ)

ಶಿಶುನಾಳ ಶರೀಫ ಸಾಹೇಬರು

೧೯

ಸೌರ ಕೊಡೆ

 

೨೦

ಜನಸಂಖ್ಯಾ ಸ್ಫೋಟ

 

೨೧

ಸುಗ್ಗಿ (ಕವಿತೆ)

ದಾ.ರಾ. ಬಳೂರಗಿ


೧. ಕನ್ನಡ ನುಡಿ

ಪ್ರಶ್ನೆ ೧. ಕೆಳಗಿನಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಮನವನ್ನು ತಣಿಸುವ ಸುಧೆಯು ಯಾವುದು?

ಉತ್ತರ:-ಕನ್ನಡ ನುಡಿಯು ಮನವನು ತಣಿಸುವ ಸುಧೆಯಾಗಿದೆ.

ಆ) ಕನ್ನಡ ನುಡಿಯು ಹೇಗಿದೆ?

ಉತ್ತರ:  ವೀಣೆಯ ಧ್ವನಿಯಲ್ಲಿ ಗಾನವ ಬೆರೆಯಿಸಿ ವಾಣಿಯ ನೇವುರ ನುಡಿಯುವಂತೆ ಕನ್ನಡ ನುಡಿಯಾಗಿರುತ್ತದೆ.

ಇ) ಗಿಳಿಗಳ ಮಾತುಗಳು ಹೇಗಿರುತ್ತದೆ?

ಉತ್ತರ:-ಪ್ರೇಮಿಗಳು ಉಲಿಯುವ ಮೆಲು ಮಾತುಗಳಂತೆ ಗಿಳಿಗಳ ಮಾತುಗಳು ಇರುತ್ತವೆ.

ಪ್ರಶ್ನೆ ೨. ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ತಯಾರಿಸಿ ಉತ್ತರ ಬರೆಯಿರಿ.

ಅ)ಸಂಗೀತದ ನೊರೆಗೆ ಯಾವುದಕ್ಕೆ ಹೋಲಿಸಲಾಗಿದೆ?

ಉತ್ತರ: ಸಂಗೀತದ ನೊರೆಗೆ ರಂಗನ ಮುರಲಿಗೆ ಹೋಲಿಸಲಾಗಿದೆ.

ಆ) ಕಳಕಂಠಗಳು ಅಂದರೆ ಯಾವ ಪಕ್ಷಿ?

ಉತ್ತರ:ಕೋಗಿಲೆ

ಪ್ರಶ್ನೆ ೩. ಕನ್ನಡ ನುಡಿಯು ಇಂಪು ಎಂಬುದಕ್ಕೆ ಕವಿಯು ಯಾವ ಯಾವ ಉದಾಹರಣೆಗಳನ್ನು ಕೊಟ್ಟಿದ್ದಾನೆ?

ಉತ್ತರ:  ಕನ್ನಡ ನುಡಿಯು ಮನ ತಣಿಸುವ ಮೋಹನ ಸುಧೆಯಾಗಿದೆ. ವೀಣೆಯ ಧ್ವನಿಯಂತೆ ಇಂಪಾದ ಕಾಲ್ಗೆಜ್ಜೆ ನುಡಿಸುತ್ತದೆ.  ರಂಗನ ಮುರಲಿಯಂತೆ ಹೆಣ್ಣು ಮಕ್ಕಳ ಇಂಪಾದ ಧ್ವನಿಯಂತೆ, ಸರಸ್ವತಿಯ ಸಂಗಿತದಂತೆ, ಗಿಳಿಗಳ ಮೆಲು ಮಾತುಗಳಂತೆ, ಕೋಗಿಲೆಗಳ ಇಂಚರದಂತೆ ದುಂಬಿಗಳ ರಾಗದಂತೆ ಕನ್ನಡ ನುಡಿಯಾಗಿದೆ ಎಂದು ಕವಿ ಹೇಳುತ್ತಾರೆ.

ಪ್ರಶ್ನೆ ೪. ಕೆಳಗಿನ ಕವಿತೆಯ ಸಾಲುಗಳನ್ನು ಪೂರ್ಣ ಮಾಡಿರಿ.

          ರಂಗನ ಮುರಲಿಯು

          ಹಿಂಗದ ಸ್ವರದಲ್ಲಿ

ಹೆಂಗಳೆಯರು ಬೆಳ

ದಿಂಗಳಿನಿರುಳಲಿ

ಸಂಗಿತವನೋರೆದಂಗವಿದೇನೋ

ಎನಿತು ಇನಿತು ಈ ಕನ್ನಡ ನುಡಿಯು

ಪ್ರಶ್ನೆ ೫. ಕೆಳಗಿನ ವಾದ್ಯಗಳನ್ನು ಬಳಸುವ ವಿಧಾನ ಹೇಳಿರಿ.

ಉದಾ: ವೀಣೆ – ನುಡಿಸುತ್ತಾರೆ

ಅ) ಕೊಳಲು – ನುಡಿಸುತ್ತಾರೆ.

ಆ) ತಬಲಾ – ಬಾರಿಸುತ್ತಾರೆ

ಇ) ನಗಾರಿ – ಬಾರಿಸುತ್ತಾರೆ

ಪ್ರಶ್ನೆ ೬. ಕೆಳಗೆ ಕೊಟ್ಟ ಚೌಕಟ್ಟುಗಳಲ್ಲಿ ಅದಕ್ಕೆ ಸರಿಯಾಗಿ ಹೊಂದುವ ಅಕ್ಷರಗಳನ್ನು ತುಂಬಿ ಪದ ರಚಿಸಿರಿ.

ಪಾ

ರಿ

ವಾ

  ಕೋ        

ಗಿ

ಲೆ

 

ಗಿ

ಳಿ

 

ಲಾ

 

  ತಂ         

ಬು

ರಿ

 

ಮೃ

ದಂ

 


 

೨. ನಿಯತ್ತಿನ ಮೌಲ್ಯ

ಪ್ರ. 1. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

      ಅ)  ರಮೇಶನು ರಾಜುವಿನ ಮನೆಗೆ ಏಕೆ ಬಂದಿದ್ದನು?

ಉತ್ತರ:- ಆಕ್ರಮವಾಗಿ ಸಂಪಾದನೆ ಮಾಡಿದ ರಮೇಶನ ಮನೆಗೆ ಇನಕಮ್ ಟ್ಯಾಕ್ಸ್ ಅಧಿಕಾರಿಗಳು ತನಿಖೆಗೆ ಬರುವವರಿದ್ದರು. ಆದ್ದರಿಂದ ರಮೇಶನು ತನ್ನ ಬಳಿ ಇದ್ದ ಒಂದು ಲಕ್ಷ್ಯ ರೂಪಾಯಿಗಳನ್ನು ರಾಜುವಿನ ಹತ್ತಿರ ಇಟ್ಟುಕೊಳ್ಳಲು ಹೇಳಬೇಕೆಂದು ಅವರ ಮನೆಗೆ ಬಂದಿದ್ದನು.

2.       ಆ)  ರಾಜು ಏಕೆ ಭಯಭೀತನಾದನು?

ಉತ್ತರ:- ಈ ಪಾಪಿ ಹಣ ನಮ್ಮ ಮನೆಗೆ ಬಂದಿದ್ದೆ ತನಗೆ ಅವಮಾನವಾಗಿದೆ. ಇನ್ನೂ ರಮೇಶ ಹೇಳಿದಂತೆ ಹಣ ಇಟ್ಟುಕೊಂಡರೆ ಆಗ ಅಧಿಕಾರಿಗಳಿಗೆ ಅನುಮಾನ ಬಂದು ಮನೆಯಲ್ಲಿ ಹುಡುಕಿದಾಗ ಹಣ ತನ್ನ ಮನೆಯಲ್ಲಿ ಸಿಕ್ಕರೆ ..... ಎಂಬ ವಿಚಾರದಿಂದಾಗಿ ರಾಜು ಭಯಭೀತನಾದನು.

3.        ಇ) ರಾಧಾ ಏಕೆ ಪಶ್ಚಾತ್ತಾಪ ಪಟ್ಟಳು?

ಉಉತ್ತರ:-  ಅಧಿಕಾರಿಗಳು ರಮೇಶನ ಮನೆಯ ಮೇಲೆ ರೆಡ್ ಹಾಕಿ ಬೀದಿಯಲ್ಲಿ ಮಾನ ಕಳೆದರು. ಆತನ ಅಕ್ರಮ ಸಂಪಾದನೆ ಬಗ್ಗೆ ಜನ ಅಸಹ್ಯವಾಗಿ ಮಾತನಾಡಿದನ್ನು ನೋಡಿ ರಾಧಾ ತಾನು ಗಂಡನಿಗೆ ತಪ್ಪು ದಾರಿಗೆ ತರುತ್ತಿದ್ದೆ ಎಂಬ ಅರಿವು ಆಗಿ ಪಶ್ಚಾತ್ತಾಪ ಪಟ್ಟಳು.

ಪ್ರ. 2. ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ತಯಾರಿಸಿ ಅವುಗಳ ಉತ್ತರ ಬರೆಯಿರಿ.

1.          ಅ) ರಾಜುವಿನ ಮನೆಗೆ ರಮೇಶನು ಯಾವ ದಿನದಂದು ಬಂದಿದನು?

ಉತ್ತರ:- ಭಾನುವಾರ ರಾಜುವಿನ ಮನೆಗೆ ರಮೇಶನು ಬಂದಿದನು.

2.       ಆ) ಮಕ್ಕಳಿಗೆ ಹಬ್ಬಕ್ಕೆ ಏನು ತರುವ ಬಗ್ಗೆ ರಾಧಾ ತನ್ನ ಗಂಡನಿಗೆ ಹೇಳಿದಳು?

ಉತ್ತರ:- ಮಕ್ಕಳಿಗೆ ಹಬ್ಬಕ್ಕೆ ಬಟ್ಟೆ ತರುವ ಬಗ್ಗೆ ರಾಧಾ ತನ್ನ ಗಂಡನಿಗೆ ಹೇಳಿದಳು.

ಪ್ರ. 3. ಕೆಳಗಿನ ಮಾತುಗಳನ್ನು ಯಾರು-ಯಾರಿಗೆ ಹೇಳಿದರು?

ಅ) “ಹಬ್ಬದ ದಿನ ಬಟ್ಟೆಗಳನ್ನು ತಂದುಕೊಟ್ಟರೆ ಟೇಲರ್ ಯಾವಾಗ ಹೊಲಿದು ಕೊಡುತ್ತಾನೆ”?

ಉತ್ತರ:- ರಾಧಾ ತನ್ನ ಗಂಡ ರಾಜುವಿಗೆ ಹೇಳಿದಳು.

ಆ) “ಅಕ್ರಮ ಸಂಪಾದನೆಯಲ್ಲಿ ಅನ್ನ ತಿನ್ನೋದಕ್ಕಿಂತ ನ್ಯಾಯ ನಿಯತ್ತುಗಳಿಂದ ಬಾಳಿ ಒಪ್ಪತ್ತು ಗಂಜಿ ಕೂಡಿದರೂ ಸಾಕು ನೆಮ್ಮದಿಯಾಗಿರಬಹುದು.”

ಉತ್ತರ:- ರಾಜು ರಾಧಾಳಿಗೆ ಹೇಳಿದನು.

ಇ) “ಬನ್ನಿ ಅಣ್ಣಾ ! ಬಡವರ ಮನೆಗೆ ಭಾಗ್ಯಲಕ್ಷ್ಮಿ ಬಂದಂತಾಯಿತು.”

ಉತ್ತರ:- ರಾಧಾ ರಮೇಶನಿಗೆ  ಹೇಳಿದಳು.

ಈ) “ರಾಜು ! ನಿಮ್ಮಿಂದ ನನಗೊಂದು ಸಹಾಯ ಆಗಬೇಕು ಬಂದಿದ್ದೇನೆ.”

ಉತ್ತರ :- ರಮೇಶನು ರಾಜುವಿಗೆ ಹೇಳಿದನು.

ಪ್ರ. 4. ಯೋಚಿಸಿ ಈ ಕೆಳೆಗಿನ ವಿಧಾನಗಳನ್ನು ಪುಂರಗೊಳಿಸಿರಿ.

ಅ ) ನಿಯತ್ತಿನ ಉಸಿರು ರಾಜು ಹಾಗಾದರೆ ನಿಯತ್ತು ಅಂದರೆ ಪ್ರಮಾಣಿಕತನ  

ಆ ) ಹಬ್ಬ ಹತ್ತಿರ ಬರುತ್ತಿದೆ. ಮಕ್ಕಳಿಗೆ ಹೊಸ ಬಟ್ಟೆಗಳನ್ನು ತರುವ ಯೋಚನೆ ಇದಾಯೇ? ಹಾಗಾದರೆ ನೀವು ಆಚರಿಸುವ ಹಬ್ಬಗಳು  ದೀಪಾವಳಿ , ಎಳ ಅಮಾವಾಸೆ , ಹೋಳಿ, ಯುಗಾದಿ, ಸಾಂಕ್ರಾತಿ, ಗಣೇಶ ಚತೃತಿ .

 ಇ ) ನಾಯ್ಯ, ನಿಯತ್ತುಗಳಿಂದ ಬಾಳಿ ಒಪ್ಪತ್ತು ಗಂಜಿ ಕೂಡಿದರೂ ಸಾಕು ನೆಮ್ಮದಿಯಾಗಿರಬಹುದು. ಹಾಗಾದರೆ ಗಂಜಿ  ಅಂದರೆ ಹಿಟ್ಟಿನ ಸಾರ.

ಈ ) ಬನ್ನಿ ಅಣ್ಣಾ ಬಡವರ ಮನೆಗೆ ಭಾಗ್ಯಲಕ್ಷ್ಮಿ ಬಂದ ಹಾಗಾಯಿತು . ಹಾಗಾದರೆ ಭಾಗ್ಯಲಕ್ಷ್ಮಿ ಅಂದರೆ ಹಣೆಬರಹ.

ಪ್ರ 5. ಕೆಳಗಿನ ಪಡೆನುಡಿಗಳ ಅರ್ಥ ಹೇಳಿ ಸ್ವಂತ ವಾಕ್ಯದಲ್ಲಿ ಉಪಯೋಗಿಸಿರಿ.

ಅ ) ಕಣ್ಣುತೆರೆ = ಬುದ್ಧಿಬರು : ರಾಣಿ ಅಭ್ಯಾಸ ಮಾಡದೇ ಪರೀಕ್ಷೆಯಲ್ಲಿ ಫೇಲಾದ ಮೇಲೆ ಅವಳ ಕಣ್ಣು ತೆರೆಯಿತು.

ಆ ) ಹುಬ್ಬುಗಂಟು ಹಾಕು = ಹಣೆಗೆ ಗಂಟು ಹಾಕು: ಅಮ್ಮನ ಮಾತು ಕೇಳಿ ಅತ್ತಿಗೆ ಹುಬ್ಬುಗಂಟು ಹಾಕಿದಳು. 

ಥಟ್ಟನೆ  ಹೇಳಿ:

ಎರಡು ಚಕ್ರವುಂಟು ಬಂಡಿಯಲ್ಲ

ದೀಪವುಂಟು ಶಿವಾಲಯವಲ್ಲ

ಗಂಟೆಯುಂಟು ದೇವಾಲಯವಲ್ಲ

ಸವಾರಿ ಮಾಡಬಹುದು ಕುದುರೆಯಲ್ಲ

ಹಾಗಾದರೆ ನಾನು ಯಾರು?

                                -ಸೈಕಲ್

 

೩. ಬ್ಯಾಂಕು

 ಶಬ್ದಗಳ ಅರ್ಥ

ಶಾಖಾಧಿಕಾರಿ ವ್ಯವಸ್ಥಾಪಕ;  ಅಭಿವೃದ್ಧಿ – ಪ್ರಗತಿ; ಫೋಟೋ – ಭಾವಚಿತ್ರ;

ಜಮಾ – ಕೂಡಿಡು, ಸಂಗ್ರಹಿಸು

ಶಬ್ದಕೋಶದ ಸಹಾಯದಿಂದ ಕೆಳಗಿನ ಪದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ಆದರ- ಗೌರವ;               ಆಧಿಪತ್ಯ – ವರ್ಚಸ್ವ;          ದಾಖಲೆ – ಪ್ರಮಾಣಪತ್ರ

ಕೃಷಿ – ಒಕ್ಕಲುತನ;           ಹಿಂಪಡೆ – ಹಿಂದೆ ಸರಿದುಕೊಳ್ಳು;

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

) ಬ್ಯಾಂಕು ಎಂದರೇನು?

ಉತ್ತರ: ಜನರ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ , ಇಟ್ಟ ಹಣವನ್ನು ಖಾತೆದಾರರಿಗೆ ವಿಶ್ವಾಸಪೂರ್ವಕವಾಗಿ ಹಿಂತಿರುಗಿಸುವ ಮತ್ತು ಹಣದ ಅವಶ್ಯಕತೆಯುಳ್ಳವರಿಗೆ ಸಾಲದ ರೂಪದಲ್ಲಿ ಹಣ ಪೂರೈಕೆ ಮಾಡುವ ಸಂಸ್ಥೆ ಅಥವಾ ನಾಗರಿಕರ ಸೌಲಭ್ಯ ಕೇಂದ್ರಕ್ಕೆ ಬ್ಯಾಂಕು ಎನ್ನುವರು.

೫) ಬ್ಯಾಂಕಿನಿಂದ ಹಣ ಪಡೆಯುವ ವಿಧಾನಗಳನ್ನು ವಿವರಿಸಿರಿ?

ಉತ್ತರ: ಬ್ಯಾಂಕಿನಲ್ಲಿರುವ ಹಣ ತೆಗೆಯುವ ಚಲನವನ್ನು ತುಂಬಿ ಕೊಟ್ಟರೆ ಕ್ಯಾಸಿಯರ್ ನಮಗೆ ಹಣ ಕೊಡುವರು. ಇಲ್ಲವೇ ಎ. ಟಿ. ಎಮ್. ಮೂಲಕವೂ ಸಹ ಹಣ ತೆಗೆದುಕೊಳ್ಳಬಹುದು.

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ, ಉತ್ತರ ಬರೆಯಿರಿ.

ಪ್ರ. 1. “ಎ. ಟಿ. ಎಮ್” ಅಂದರೇನು?

ಉತ್ತರ: “ಎ. ಟಿ. ಎಮ್” ಅಂದರೆ ಆಟೋಮೇಟೆಡ್ ಟೆಲ್ಲರ್ ಮಶೀನ್ ಎಂದರ್ಥ. ಅದನ್ನೇ ಎನಿ ಟೈಂ ಮನಿ ಎಂದೂ ಹೇಳುವರು.

ಪ್ರ.2. ಮಕ್ಕಳು ಎಲ್ಲಿಗೆ ಬಂದಿದ್ದಾರೆ?

ಉತ್ತರ: ಮಕ್ಕಳು ಕ್ಷೇತ್ರಭೇಟಿಗೆಂದು ಬ್ಯಾಂಕಿಗೆ ಭೇಟಿ ನೀಡಲು ಬಂದಿದ್ದಾರೆ.

ಪ್ರಶ್ನೆ ೩) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು.

ಅ). ನಿಮಗೆಲ್ಲ ನಮ್ಮ ಬ್ಯಾಂಕಿಗವತಿಯಿಂದ ಆದರದ ಸ್ವಾಗತ.

ಉತ್ತರ: ಬ್ಯಾಂಕಿನ ಶಾಖಾಧಿಕಾರಿ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕಕರಿಗೆ ಹೇಳಿದರು.

ಆ) ಸಾಹೇಬರೆ, ಇವರಿಗೆ ಉಳಿತಾಯ ಖಾತೆ ಪ್ರಾರಂಭಿಸುವ ವಿಧಾನ ಹೇಳಿರಿ

ಉತ್ತರ: ಶಿಕ್ಷಕರು ಬ್ಯಾಂಕಿನ ಶಾಖಾಧಿಕಾರಿಗೆ ಹೇಳಿದರು.

ಇ), “ಉಳಿತಾಯ ಖಾತೆ ಎಂದರೇನು ಸರ್?"

ಉತ್ತರ: ಸಂಗೀತಾ ಬ್ಯಾಂಕಿನ ಶಾಖಾಧಿಕಾರಿಗೆ ಹೇಳಿದಳು.

ಈ) ನಮಗೆ ಹಣದ ಅವಶ್ಯಕತೆಯಾದಾಗ ಅದನ್ನು ಹೇಗೆ ಹಿಂಪಡೆಯುವುದು?”

ಉತ್ತರ: ಸೌಮ್ಯ  ಬ್ಯಾಂಕಿನ ಶಾಖಾಧಿಕಾರಿಗೆ ಹೇಳಿದಳು.

ಉ) “ಎ.ಟಿ.ಎಮ್, ಅಂದರೆ ಸರ್?

ಉತ್ತರ: ಪ್ರಜ್ವಲನು ಬ್ಯಾಂಕಿನ ಶಾಖಾಧಿಕಾರಿಗೆ ಹೇಳಿದನು.

ಪ್ರಶ್ನೆ ೪) ಯೋಚಿಸಿ ಈ ಕೆಳಗಿನ ವಿಧಾನಗಳನ್ನು ಪೂರ್ಣಗೊಳಿಸಿರಿ.

ಅ) ನಮ್ಮ ವಿದ್ಯಾರ್ಥಿಗಳು ಕ್ಷೇತ್ರಭೇಟಿ ಉಪಕ್ರಮದ ಅನ್ವಯ ತಮ್ಮೊಡನೆ ಸಂಭಾಷಣೆ ನಡೆಸಲು ಬಂದಿದ್ದಾರೆ. ಹಾಗಾದರೆ ನಮ್ಮ ಶಾಲೆಯ ಉಪಕ್ರಮಗಳು= ಕ್ಷೇತ್ರಭೇಟಿ- ಬ್ಯಾಂಕು, ಪೋಸ್ಟ್ ಆಫೀಸು, ವ್ಯವಸಾಯ ಕ್ಷೇತ್ರ, ಕೃಷಿಪೂರಕ ವ್ಯವಸಾಯಗಳು, ವನಭೋಜನ, ಒನ್ ಡೇ ಪಿಕ್ನಿಕ್ ಇತ್ಯಾದಿಗಳು.

ಆ), ಗ್ರಾಮೀಣ ಬ್ಯಾಂಕುಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಮಾಡುತ್ತವೆ. ಹಾಗಾದರೆ ನಿಮ್ಮ ಪರಿಸರದಲ್ಲಿರುವ ಸಹಕಾರಿ ಸಂಘಗಳ ಹೆಸರು: ವಿವಿಧ ಕಾರ್ಯಕಾರಿ ಸೋಸಾಯಟಿ, ಮಹಿಳಾ ಉಳಿತಾಯ ಸಂಘಗಳು, ಮಲ್ಟಿಪರ್ಪಜ್ ಸೋಸಾಯಟಿ, ಇತ್ಯಾದಿಗಳು

5) ಸ್ವಲ್ಪ ಹಣ ಖರ್ಚು ಮಾಡಿ ಉಳಿದ ಹಣವನ್ನು ಉಳಿತಾಯ ಡಬ್ಬಿಯಲ್ಲಿ ಕೊಡಿಸುತ್ತೇವೆ. ಹಾಗಾದರೆ ಉಳಿತಾಯ ಮಡಬಹುದಾದ ಇತರ ವಸ್ತುಗಳು= ನೀರಿನ ಅತ್ಯಲ್ಪ ಉಪಯೋಗ, ಆಹಾರದ ಉಳಿತಾಯ, ಸಾರ್ವಜನಿಕ ಸಂಪತ್ತಿನ ರಕ್ಷಣೆ

(ಈ) ಚೆಕ್ ಮುಖಾಂತರ ಹಣಕೊಟ್ಟರೆ ದಾಖಲೆ ಸಿಗುತ್ತದೆ. ಹಾಗಾದರೆ ಮರ ಬೆಳೆಸಿದರೆ ಅದರ ನೆರಳು, ಹಣ್ಣು, ಹೂವು, ಕಟ್ಟಿಗೆ ಮತ್ತು ವಿಶೇಷವಾಗಿ ಉಸಿರಾಡಲು ಶುದ್ಧ ಗಾಳಿ ದೊರೆಯುತ್ತದೆ.

ಪ್ರಶ್ನೆ ೫) ಈ ಪಾಠದಲ್ಲಿ ಬರುವ ಇಂಗ್ಲಿಷ್ ಶಬ್ದಗಳನ್ನು ಆರಿಸಿ ಬರೆಯಿರಿ.

ಉತ್ತರ: ಸರ್, ಬ್ಯಾಂಕ್, ಸ್ಟೇಟ್ ಬ್ಯಾಂಕ್,  ಫಾರ್ಮ್, ಫೋಟೋ,  ಪಾಸಬುಕ್, ಚಲನ್, ಎ.ಟಿ.ಎಮ್., ಆಟೋಮೇಟೆಡ್, ಟೆಲ್ಲರ್, ಮಶೀನ್,’ ಎನಿ ಟೈಂ ಮನಿ’, ಬ್ಯಾಲನ್ಸ್, ಚೆಕ್ ಬುಕ್ ಇ-ಬ್ಯಾಂಕಿಂಗ್, ಮೊಬಾಯಿಲ್ ಬ್ಯಾಕಿಂಗ್,  

ಪ್ರಶ್ನೆ ೬) ಕೆಳಗಿನ ಗದ್ಯಖಂಡವನ್ನು ಓದಿ, ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

        ನೀರು ನಿಸರ್ಗದ ಕೊಡುಗೆ. ಅದು ಸೀಮಿತವಾಗಿದೆ. ಆದ್ದರಿಂದ ನೀರನ್ನು ಹಿತಮಿತವಾಗಿ ಬಳಸಬೇಕು. ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ಅವಶ್ಯಕತೆ ಕಂಡು ಬಂದರೆ ಅದರಲ್ಲಿ ಜಂತುನಾಶಕ ಔಷಧಿಯನ್ನು ಬೆರೆಸಬೇಕು. ಮನೆಯಲ್ಲಿ ಕುಡಿಯುವ ನೀರನ್ನು ಎತ್ತರ ಸ್ಥಳದಲ್ಲಿ ಇಡಬೇಕು. ಅದರಲ್ಲಿ ಧೂಳು ಬೀಳದಂತೆ ಜಾಗ್ರತೆ ವಹಿಸಬೇಕು. ಶುದ್ಧ ನೀರು ಕುಡಿಯುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ನಲ್ಲಿಯಿಂದ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಎಚ್ಚರವಹಿಸಬೇಕು. ಬಳಸಿದ ನೀರಾಗಲಿ, ಮಳೆಯ ನೀರಾಗಲಿ ನೆಲದಲ್ಲಿ ಇಂಗುವಂತೆ ವ್ಯವಸ್ಥೆ ಮಾಡಬೇಕು. ಇದರಿಂದ ಅಂತರ್ಜಲದ ಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಪ್ರಶ್ನೆ ಅ) ನೀರನ್ನು ಏಕೆ ಹಿತಮಿತವಾಗಿ ಬಳಸಬೇಕು?

ಉತ್ತರ: ನೀರು ನಿಸರ್ಗದ ಕೊಡುಗೆ. ಅದು ಸೀಮಿತವಾಗಿದೆ. ಆದ್ದರಿಂದ ನೀರನ್ನು ಹಿತಮಿತವಾಗಿ ಬಳಸಬೇಕು

ಆ) ಅಂತರ್ಜಲದ ಮಟ್ಟವು ಹೇಗೆ ಹೆಚ್ಚಾಗುತ್ತದೆ?

ಉತ್ತರ: ನಲ್ಲಿಯಿಂದ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಎಚ್ಚರವಹಿಸಬೇಕು. ಬಳಸಿದ ನೀರಾಗಲಿ, ಮಳೆಯ ನೀರಾಗಲಿ ನೆಲದಲ್ಲಿ ಇಂಗುವಂತೆ ವ್ಯವಸ್ಥೆ ಮಾಡಬೇಕು. ಇದರಿಂದ ಅಂತರ್ಜಲದ ಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಉಪಕ್ರಮ:

ಅಂಚೆ ಕಚೇರಿಗೆ ಭೇಟಿನೀಡಿ ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆಯಿರಿ.

ಇಂದಿನ ಉಳಿತಾಯ ಮುಂದಿನ ಜೀವನ ಸುಖಮಯ

ಥಟ್ಟನೆ ಹೇಳಿ:

ನೋಡುವುದಕ ಹುಡುಗ ಆಡುವುದಕೆ ಬಾಯಿಲ್ಲ ನಡೆಯುವುದಕೆ ಕಾಲಿಲ್ಲ ಮನಸ್ಸಿಗಾಗಿನ ಮಾತು ಹೇಳತಾನೆ.                                       -ಪತ್ರ

 

೪. ಹೆಮ್ಮೆ ನನಗೆ ಅಮ್ಮ

 ಶಬ್ದಗಳ ಅರ್ಥ

ಕಂದ ಮಗು;        ಧರೆ - ಭೂಮಿ;  ಧೀಮಂತ - ಬುದ್ಧಿವಂತ;     ಗರಿಮೆ ಹಿರಿಮೆ;

ಪ್ರಾಚೀನ – ಪುರಾತನ;        ಸಮಕೆ – ಸಮಾನ;       ಜ್ಞಾನ ಸುಧೆ ಜ್ಞಾನಾಮೃತ

ಶಬ್ದಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ಹೆಮ್ಮೆ – ಅಭಿಮಾನ; ಸವಿ – ರುಚಿ; ನಭ – ಗಗನ/ಆಕಾಶ;        ಧೂಪ – ಉದಬತ್ತಿ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಜೇನಿಗಿಂತಲೂ ಯಾವುದು ಸವಿಯಾಗಿದೆ?

ಉತ್ತರ: ಅಮ್ಮಳಿಗೆ ಇರುವ ಕಂದನೆಂಬ ಪ್ರೀತಿ ಜೇನಿಗಿಂತಲೂ ಸವಿಯಾಗಿದೆ.

ಆ) ಯಾವ ವಿಷಯದಲ್ಲಿ ತಾಯಿಯನ್ನು ಗೆಲ್ಲಲು ಸಾಧ್ಯವಿಲ್ಲ?

ಉತ್ತರ: ಸಹನಾಶೀಲತೆ ತಾಳುವಿಕೆಯಲ್ಲಿ ತಾಯಿಯನ್ನು ಗೆಲ್ಲಲು ಸಾಧ್ಯವಿಲ್ಲ.

ಇ) ಯಾವುದರಲ್ಲಿ ತಾಯಿ ಧೇನು ಆಗಿದ್ದಾಳೆ?

ಉತ್ತರ: ವೇದ ಮೂಲವಾದ ಜ್ಞಾನಸುಧೆಗೆ ತಾಯಿ ಧೇನು ಆಗಿದ್ದಾಳೆ.

ಈ) ಮಗುವಿ ಮನದಲ್ಲಿ ಏನು ಅರಳುತ್ತಿದೆ?

ಉತ್ತರ: ಧೂಪದ ಕಂಪು ಬೀರಿ ಸುತ್ತಲೂ ಹರಡುವಂತೆ ಮಗುವಿನ ಮನದಲ್ಲಿ ತಾಯಿಯ ರೂಪ ಅರಳುತ್ತಿದೆ.

ಪ್ರಶ್ನೆ ೨) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣ ಮಾಡಿರಿ.

ಕೋಟಿ ಕೋಟಿ ಬೆಳಗು ಅರಳಿ

ನಿನ್ನ ಪಾದ ತೊಳೆದಿವೆ

ನಿನ್ನ ಕಾಣಲೆಂದೆ ಚಂದ್ರ

ತಾರೆ ನಭದಿ ನೆರೆದಿವೆ.

ಪ್ರಶ್ನೆ ೩) ಕೆಳಗಿನ ಮುಖ್ಯಾಂಶಗಳ ಆಧಾರದ ಮೇಲೆ ಕಥೆ ರಚಿಸಿರಿ.

ಶ್ರವಣಕುಮಾರ

ಶ್ರವಣಕುಮಾರ ......... ತೀರ್ಥಯಾತ್ರ ......... ಬಾಯಾರಿಕೆ......... ಬುಡುಬುಡುಶಬ್ದ.......

ದಶರಥ ಮಹಾರಾಜ! ........ ಅಯ್ಯೋ! ಅಮ್ಮಾ! ......... ನೀರು ಕುಡಿಯಿರಿ

......... ಪುತ್ರವಿಯೋಗ ಶಾಪ.

ಪ್ರಶ್ನೆ ೪) ನಿಮಗೆ ಗೊತ್ತಿರುವ ಕವಿತೆಯ ಒಂದು ಸುಡಿ ಬರೆಯಿರಿ.

ತುತ್ತೂರಿ

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು


ಉಪಕ್ರಮ:

ಶಿವರಾಯರ ಬೆಳವಣಿಗೆಯಲ್ಲಿ ಜೀಜಾಮಾತೆಯ ಪಾತ್ರ ಕುರಿತು ಐದು ಸಾಲು ಬರೆಯಿರಿ

ತಾಯಿಯ ಒಡಲು ಮಮತಯ ಕಡಲು

ಥಟ್ಟನೆ ಹೇಳಿ:

ಎರಡಕ್ಷರ ಹೊ೦ದಿದವಳು.

ಪ್ರೀತಿಯಲಿ ಭೂಮಿಗಿಂತ ಭಾರದವಳು

ಪ್ರತಿಮಣಿಯ ಬೆಳಕಿಗಳು

ಹಾಗಾದರೆ ಇವಳಾರು?                                       -ತಾಯಿ

 

೫. ಜೋಗ ಜಲಪಾತ

ಶಬ್ದಗಳ ಅರ್ಥ

ಧುಮುಕು- ಕೆಳಗೆ ಬೀಳು; ಪ್ರಪಾತ – ಆಳ, ತಗ್ಗು;  ಮನೋಹರ – ಸುಂದರ

ಶಬ್ದಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ನಯನ – ಕಣ್ಣು        ನೊರೆ – ಬುರುಗು     ಕಂಪಿಸು – ಕಂಪನವಾಗು , ವಿಷಾದ - ದು:ಖ

ಪ್ರಶ್ನೆ: ೧) ಕೆಳಗಿಗೆ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಕರ್ನಾಟಕ ಅಂದ ಕೂಡಲೆ ನಮ್ಮ ನೆನಪಿಗೆ ಬರುವುದು ಯಾವ ಜಲಪಾತ?

ಉತ್ತರ: ಕರ್ನಾಟಕ ಅಂದ ಕೂಡಲೆ ನಮ್ಮ ನೆನಪಿಗೆ ಬರುವುದು ಜೋಗದ ಜಲಪಾತ

ಆ) ಶಿವಮೊಗ್ಗ ಜಿಲ್ಲೆಯಲ್ಲಿ ಯಾವ ಗದಿ ಇದೆ?

ಉತ್ತರ: ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಎಂಬುದೊಂದು ನದಿ ಇದೆ.

ಇ) ಯಾವುದು ನಯನ ಮನೋಹರವಾಗಿದೆ?

ಉತ್ತರ: ಜೋಗ ಜಲಪಾತದ ನೀರು ವಿಶಾಲವಾದ ಕರಿ ಬಂಡೆಯ ಮೇಲೆ ನೊರೆ ನೊರೆಯಾಗಿ ಬೀಳುವುದು ನಯನ ಮನೋಹರವಾಗಿದೆ.

ಪ್ರಶ್ನೆ: ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

ಪ್ರಶ್ನೆ ಅ) ಜೋಗದ ಜಲಪಾತದಲ್ಲಿ ಕಂಡು ಬರುವ ನಾಲ್ಕು ಕವಲುಗಳು ಯಾವುವು?

ಉತ್ತರ- ಜೋಗದ ಜಲಪಾತವು ರಾಜಾ, ರೋರರ್, ರಾಕೇಟ್, ರಾಣಿ ಹೀಗೆ ನಾಲ್ಕು ಕವಲುಗಳಾಗಿ ಧುಮುಕುತ್ತದೆ.

ಪ್ರಶ್ನೆ ) ಜೋಗದಲ್ಲಿರುವ ವಿದ್ಯುತ ಉತ್ಪಾದಿಸುವ ಆಗರಗಳು ಯಾವುವು?

ಉತ್ತರ- ಜೋಗದಲ್ಲಿ ಮಹಾತ್ಮ ಗಾಂಧಿ ವಿದ್ಯುದಾಗಾರ ಮತ್ತು ಶರಾವತಿ ವಿದ್ಯುದಾಗಾರ ಎಂಬ ಎರಡು ವಿದ್ಯುತ ಆಗಾರಗಳು ಇವೆ.

ಪ್ರಶ್ನೆ: ೩) ಕೆಳಗಿಗೆ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಜಲಪಾತದ ನಾಲ್ಕು ಕವಲುಗಳು ಯಾವುವು?

ಉತ್ತರ: ಜೋಗದ ಜಲಪಾತವು ರಾಜಾ, ರೋರರ್, ರಾಕೇಟ್, ರಾಣಿ ಹೀಗೆ ನಾಲ್ಕು ಕವಲುಗಳಾಗಿ ಧುಮುಕುತ್ತದೆ.

ಆ) ರಾಕೆಟಿನ ಸುಂದರ ನೋಟ ಯಾವುದು?

ಉತ್ತರ: ಬಂಡೆಗೆ ಬಡಿದ ನೀರು ಚಿಮ್ಮಿ ಬಿಟ್ಟ ರಾಕೆಟುಗಳ ಹಾಗೆ ಕೆಳಗೆ ಬೀಳುವುದು ಸುಂದರ ನೋಟ

ಇ) ಜಲಪಾತದ ವೀಕ್ಷಕ ತಾಣಗಳನ್ನು ಹೆಸರಿಸಿರಿ.

ಉತ್ತರ: ಜಲಪಾತವನ್ನು ವೀಕ್ಷಿಸಲು ಕೆಲವು ತಾಣಗಳನ್ನು ಮಾಡಿದ್ದಾರೆ. ಕೆಳಗಿನ ಕಣಿವೆಯಲ್ಲಿ ರಾಣಿ ಸೀಟ್, ಕರ್ಜನ್ ಸೀಟ್, ವಾಣಿವಿಲಾಸ ಪ್ಲ್ಯಾಟ್ ಫಾರ್ಮ್, ವಿಂಬಲ್ಡನ್ ಪ್ಲ್ಯಾಟ್ ಫಾರ್ಮ್ ಎಂಬೆಲ್ಲ ಸೀತುಗಳಿವೆ. ಜಲಪಾತವನ್ನು ನೋಡಲು ರಾಜಾ ಸೀಟ್, ರಾಣಿ ಸೀಟ್ ಎಂದೆಲ್ಲಾ ವೀಕ್ಷಕ ತಾಣಗಳಿವೆ.

ಪ್ರಶ್ನೆ ೪) ಯೋಚಿಸಿ ಈ ಕೆಳಗಿನ ವಿಧಾನಗಳನ್ನು ಪೂರ್ಣಗೊಳಿಸಿರಿ.

ಅ) ಶರಾವತಿ ನದಿಯು ಅರಬೀ ಸಮುದ್ರವನ್ನು ಸೇರುತ್ತದೆ. ಅದರಂತೆ ಅರಬೀ ಸಮುದ್ರ ಸೇರುವ ನದಿಗಳು=

ಆ) ಶರಾವತಿ ನದಿಯಿಂದ ಜಲವಿದ್ಯುತ್ತನ್ನು ಉತ್ಪಾದಿಸುತ್ತಾರೆ. ಹಾಗಾದರೆ ವಿದ್ಯುತ್ ಉತ್ಪಾದಿಸುವ ಇತರ ವಿಧಾನಗಳು =ಪವನ ಚಕ್ಕಿ, ಸೌರ್ ಶಕ್ತಿ, ಅಣುವಿದ್ಯುತ್, ಜಲ ವಿದ್ಯುತ

ಇ) ಶರಾವತಿ ನದಿಯು ಶಿವಮೊಗ್ಗ ಜಿಲ್ಲೆಯಲ್ಲಿದೆ. ಹಾಗಾದರೆ ನಿಮ್ಮ ಜಿಲ್ಲೆಯಲ್ಲಿ ಇರುವ ನದಿಗಳು= ಭೀಮಾ ನದಿ, ಚಂದ್ರಾಭಾಗಾ ನದಿ, ಬೋರಿ ನದಿ,

ಉಪಕ್ರಮ:  ಶೈಕ್ಷಣಿಕ ಪ್ರವಾಸದ ಮುಖಾಂತರ ಜಲಪಾತ ಹಾಗೂ ಆನೆಕಟ್ಟುಗಳನ್ನು ನಿರೀಕ್ಷಿಸಿರಿ.

ಹರಿಯುವ ಹೊಳೆ ನದಿಗೆ ಕಳೆ

ಥಟ್ಟನೆ ಹೇಳಿ:

        ಕಾಲಿಲ್ಲದೆ ನಡೆಯುವುದು ಬಾಯಿಲ್ಲದೆ ನುಡಿಯುವುದು ಎಲ್ಲರಿಗೂ ಜೀವನಾಧಾರವಾಗಿರುವುದು.              - ನದಿ

 

೬. ಅತ್ತೆಯ ಮನೆಗೆ ಅಳಿಯ ಬಂದ

ಶಬ್ದಗಳ ಅರ್ಥ

ಮುಸ್ಸಂಜೆ – ಹೊತ್ತುಮುಳುಗುವ ಸಮಯ;   ಸಾಂತ್ವನ – ಸಮಾಧಾನ;  ಬಾಗಿನ – ಉಡುಗೊರೆ

ವಿಶೇಷ ವಿಚಾರ: ಗಗ್ಗರಗಟ್ಟಿ – ಮನೆಯ ಪಡಸಾಲೆಯ ಮುಂಭಾಗ;

        ಹಗೆ – ನೆಲದಲ್ಲಿ ಧಾನ್ಯವನ್ನು ಸಂಗ್ರಹಿಸಿಡುವ ಸ್ಥಳ 

ಶಬ್ದಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ದಂಪತಿ – ಪತಿ ಪತ್ನಿಯರು;   ಯುಕ್ತಿ – ಕೌಶಲ್ಯ; ಅನ್ಯೋನ್ಯ – ಅತಿ ಪ್ರೀತಿ ತೋರು

ಪ್ರಶ್ನೆ: ೧) ಕೆಳಗಿಗೆ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಯಂಕಣ್ಣನ ಸ್ವಭಾವ ಹೇಗಿತ್ತು?

ಉತ್ತರ: ಯಂಕಣ್ಣನ ಸ್ವಭಾವ ಬಹಳ ಸರಳಸ್ವಭಾವವಿತ್ತು.

ಆ) ಅತ್ತೆಯ ಮನೆಗೆ ಯಂಕಣ್ಣನು ಏಕೆ ಹೊರಟನು?

ಉತ್ತರ: ಯಂಕಣ್ಣನ ಹೆಂಡತಿ ಕೆಂಚಮ್ಮನ ತಾಯಿ ಹೊಸದಾಗಿ ನವರಾತ್ರಿ ವ್ರತವನ್ನು ಆಚರಿಸಿದರು. ಅವರಿಗೆ ವಾಡಿಕೆಯಂತೆ ಸೀರೆ, ಕುಪ್ಪಸ ಮತ್ತು ಫರಾಳ ಮುಂತಾದ ಬಾಗಿನವನ್ನು ಕೊಡಲು ಯಂಕಣ್ಣನು ಅತ್ತೆಯ ಮನೆಗೆ ಉತ್ಸಾಹದಲ್ಲಿ ಹೊರಟನು. 

ಇ) ಎಮ್ಮೆಯ ಕರುವನ್ನು ಎಲ್ಲಿ ಕಟ್ಟಿದರು?

ಉತ್ತರ: ಎಮ್ಮೆಯ ಕರುವನ್ನುಗಗ್ಗರಗಟ್ಟೆಯ ಕೆಳಗೆ ಕಟ್ಟಿದರು.

ಈ)ಅತ್ತೆಯ ಮನೆಗೆ ಹೋಗುವಾಗ ಯಂಕಣ್ಣನು ಯಾವ ಉಡುಪು ಧರಿಸಿದನು?

ಉತ್ತರ-ಧಡಿ ಧೋತರ ಉಟ್ಟು ರೇಷ್ಮೆ ಅಂಗಿ ತೊಟ್ಟನು. ಜರತಾರಿ ರುಮಾಲು ಸುತ್ತಿದನು. ಮೀಸೆಯನ್ನು ತಿದ್ದಿ ತೀಡಿಹುರಿಮಾಡಿದನು. ಗುಲಾಬಿ ಬಣ್ಣದ ಪಂಜೆಯನ್ನು ಹೆಗಲ ಮೇಲೆ ಹಾಕಿದನು.


ಪ್ರಶ್ನೆ: ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

        ಪ್ರಶ್ನೆ ಅ) ಯಂಕಣ್ಣನ ಪತ್ನಿಯ ಹೆಸರೇನು ಇತ್ತು?

        ಉತ್ತರ:  ಕೆಂಚಮ್ಮ ಎಂಬುದು ಯಂಕಣ್ಣನ ಪತ್ನಿಯ ಹೆಸರು ಇತ್ತು.

ಪ್ರಶ್ನೆ ) ಹಗೆಯ ಮಾಲಿಕನ ಹೆಸರು ಏನಿತ್ತು?

ಉತ್ತರ- ಹಗೆಯ ಮಾಲಿಕನ ಹೆಸರು ಭೀಮಣ್ಣ ಸಾಹುಕಾರ ಇತ್ತು.

ಪ್ರಶ್ನೆ: ೩) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು?

ಅ) ಯಾಕ ಬಂದಿ ಎಲ್ಲಿಗಿ ನಡದೀ”

ಉತ್ತರ: ಯಂಕಣ್ಣನು ಹಗೆಯೊಳಗೆ ಬಿದ್ದಾಗ ಮೇಲಿನಂತೆ ಹಾಡತೊಡಗಿದನು.

ಆ) “ಏ ಯಾರಪ್ಪಾ ನೀನು? ಹಗೆಯೊಳಗೆ ಬಿದ್ದಿರುವೆಯಲ್ಲ?”

ಉತ್ತರ: ಹೊಲದಿಂದ ಮನೆಗೆ ಹೋಗುತ್ತಿರುವ ಜನರು ಹಗೆಯಲ್ಲಿ ಬಿದ್ದ ಯಂಕಣ್ಣನಿಗೆ ಹೇಳಿದರು.

ಇ) “ಅತ್ತೆ ಮಾವನ ಬಗ್ಗೆ ಎಷ್ಟೊಂದು ಗೌರವ! ಏನು ವಿನಯ”

ಉತ್ತರ: ಅತ್ತೆ – ಮಾವ ಇಬ್ಬರೂ ಖುಷಿಯಿಂದ ಅಳಿಯನನ್ನು ಕೊಂಡಾಡಿದರು.

ಈ) “ಹೋಗಿ ಅಳಿಯಂದಿರೇ ನನಗೇನು ಕೋಪವಿಲ್ಲ ಮಲಗಿಕೊಳ್ಳಿ”

ಉತ್ತರ: ಅತ್ತೆ ತನ್ನ ಅಳಿಯ ಯಂಕಣ್ಣನಿಗೆ ಹೇಳಿದರು.

ಪ್ರಶ್ನೆ ೪) ಯೋಚಿಸಿ ಈ ಕೆಳಗಿನ ವಿಧಾನಗಳನ್ನು ಪೂರ್ಣಗೊಳಿಸಿರಿ.

ಅ) ಹಗೆಯ ಒಳಗೆ ಜೋಳ ತುಂಬಿಡುತ್ತಾರೆ. ಹಾಗಾದರೆ ತಿಜೋರಿಯಲ್ಲಿ ಇಡುವ ವಸ್ತುಗಳು= ಹಣ, ಒಡವೆಗಳು, ಬಟ್ಟೆಗಳು, ಕಾಗದ ಪತ್ರಗಳು ಇತ್ಯಾದಿ.

ಆ) ನೆರೆಹೊರೆಯವರು ಓದಿ ಬಂದರು ಟಾರ್ಚ್ ಬೆಳಕು ಚೆಲ್ಲಿದರು. ಹಾಗಾದರೆ ಬೆಳಕು ಕೊಡುವ ಸಾಧನಗಳು = ಟಾರ್ಚು, ಬಲ್ಬು, ಮೊಬಯಿಲ್ ಬ್ಯಾಟರಿ, ದೀಪ, ಚಿಮಣಿ.

ಪ್ರಶ್ನೆ ೫) ಕೆಳಗಿನ ಶಬ್ದಗಳನ್ನು ಸ್ವಂತ ವಾಕ್ಯದಲ್ಲಿ ಉಪಯೋಗಿಸಿರಿ.

ಅ) ಸ್ವಭಾವ: ನನ್ನ ಗೆಳೆಯನ ಸ್ವಭಾವ ತುಂಬಾ ಮೃದು.

ಆ) ಉತ್ಸಾಹ: ಜಾತ್ರೆಯಲ್ಲಿ ಎಲ್ಲರೂ ಉತ್ಸಾಹದಿಂದ ಸಹಭಾಗಿಯಾಗುತ್ತಾರೆ.

ಇ) ಗಾಬರಿ: ರಾತ್ರಿ ತಿರುಗಾಡಲು ನನಗೆ ಗಾಬರಿಯಾಗುತ್ತದೆ.

ಈ) ಕಿರುಚು: ಅಮ್ಮ ಬೆಕ್ಕಿಗೆ ನೋಡಿ ಗಾಬರಿಯಿಂದ ಕಿರುಚಿದಳು.

ಉ) ಕೊಂಡಾಡು: ಶಿಕ್ಷಕರು ವಿದ್ಯಾರ್ಥಿಗಳ ಅಭ್ಯಾಸ ಮಾಡುವ ಗುಣವನ್ನು ಕೊಂಡಾಡಿದರು.

ಉಪಕ್ರಮ: ಜೀವನಸತ್ವಗಳ ಬಗ್ಗೆ ಶಿಕ್ಷಕರಿಂದ/ಪಾಲಕರಿಂದ ಕೇಳಿ ತಿಳಿದುಕೊಳ್ಳಿರಿ.

ಅಪೌಷ್ಟಿಕ ಆಹಾರ ಅನಾರಿಗ್ಯಕ್ಕೆ ಆಗರ

ಥಟ್ಟನೆ ಹೇಳಿ:

ಹಾರಿದರೆ ಹನುಮ, ಕೂಗಿದರೆ ರಾವಣ, ಕುಳಿತರೆ ಮುನಿರಾಮ, ಯಾರು?                   -ಕಪ್ಪೆ

 

೭. ಮಾವಿನ ಗೊಲ್ಲೆ

ಶಬ್ದಗಳ ಅರ್ಥ

ಹೀಚು – ಮಿಡಿ, ಎಳೆಗಾಯಿ; ರಕ್ಕಸರು – ರಾಕ್ಷಸರು; ದೇಟುಗಳು- ಎಲೆಗಳನ್ನು ಕುಡಿಸುವ ಭಾಗ

ಶಬ್ದಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ಕಿರಿದು –ಚಿಕ್ಕದು;      ಸಂಪ್ರೀತಿ -            ಸುರರು – ದೇವರು    ರೊಚ್ಚು – ಕೊಪ್ಪತಾಳು

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ದೇವನ ದೇಟಿನ ಕಾಯಿಗಳು ಯಾರು?

ಉತ್ತರ: ನಾವೆಲ್ಲ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ವಸ್ತುಗಳು ಎಲ್ಲವೂ ದೇವನ ದೇಟಿನ ಕಾಯಿಗಳು ಅಗಿದ್ದೇವೆ.

ಆ) ಕಾಯಿಗಳ ಗುಣಗಳನ್ನು ಹೇಳಿರಿ?

ಉತ್ತರ: ಬಲು ಹಿರಿದು, ಅತಿ ಕಿರಿದು ಅಕ್ಕರವುಳ್ಳ ದೇವರ ದೇಟಿನ ಕಾಯಿಗಳು ಕೆಲವು ಸವಿಯಾಗಿವೆ, ಕೆಲವು ಹುಳಿಯಾಗಿವೆ. ಕೆಲವು ಮೀಡಿಯಾಗಿವೆ.

ಇ) ರಕ್ಕಸರೆಂದರೆ ಯಾರು?

ಉತ್ತರ: ದುಷ್ಟಗುಣವುಳ್ಳವರು, ರೊಚ್ಚಿಗೆ ಬರುವವರು ರಕ್ಕಸರು.

ಪ್ರಶ್ನೆ: ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

ಅ) ಒಂದೇ ದೇಟಿನ ಮಾವುಗಳು ಕವಿತೆಯ ಕವಿ ಯಾರು?

ಉತ್ತರ: ಮಧುರಚೆನ್ನರು ಈ  ಒಂದೇ ದೇಟಿನ ಮಾವುಗಳು ಕವಿತೆಯ ಕವಿಗಳು.

ಆ) ಯಾರು ಯಾರಿಗೆ ದೇವರ ದೇಟಿನ ಕಾಯಿಗಳು ಎಂದು ಕವಿ ಹೇಳಿದ್ದಾರೆ?

ಉತ್ತರ:ಎಲ್ಲ ಪ್ರಾಣಿಗಳು, ಪಕ್ಷಿಗಳು, ಸಣ್ಣ ದೊಡ್ಡ ವಸ್ತುಗಳು, ಒಳ್ಳೆಯವರು ಮತ್ತು ಕೆಟ್ಟ ಗುಣವುಳ್ಳ ಜನರಿಗೂ ಕವಿ ಒಂದೇ ದೇಟಿನ ಕಾಯಿಗಳು ಇದ್ದೇವೆ ಎಂದು ಹೇಳಿದ್ದಾರೆ. 

ಪ್ರಶ್ನೆ ೩) ಕೆಳಗಿನ ಕವಿತೆಯ ಸಾಲುಗಳನ್ನು ಪೂರ್ಣ ಮಾಡಿರಿ.

ಒಂದೋ ಬಲು ಹಿರಿದು ಒಂದೋ ಅತಿ ಕಿರಿದು

ಚಿಕ್ಕದು ದೊಡ್ಡದು ಎಲ್ಲಾ

ಎಲ್ಲಾ! ಒಂದೇ ದೇಟಿನ ಮಾವುಗಳು

ನಾವು! ದೇವನ ದೇಟಿನ ಕಾಯಿಗಳು

ಪ್ರಶ್ನೆ ೪) ಕೆಳಗಿನ ಶಬ್ದಗಳನ್ನು ಸ್ವಂತ ವಾಕ್ಯದಲ್ಲಿ ಉಪಯೋಗಿಸಿರಿ.

ಅ) ಹುಳಿ: ಹುಣಸೆಕಾಯಿ ಹುಳಿಯಾಗಿರುತ್ತದೆ.

ಆ) ಕಿರಿಯ : ಅವನು ನನ್ನ ಕಿರಿಯ ಸಹೋದರ.

ಇ) ವಸ್ತ್ರ: ಅನ್ನ, ವಸ್ತ್ರ ಮತ್ತು ವಸತಿ ಇವು ಮನುಷ್ಯನ ಮೂಲಭೂತ ಅವಶ್ಯಕತೆಗಳು ಆಗಿವೆ.

ಪ್ರಶ್ನೆ ೫) ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ಮೇಲೆ x ಕೆಳಗೆ                ಹಿರಿದು X ಕಿರಿದು      ಸಿಹಿ X ಕಹಿ    ಸುರರು X ರಕ್ಕಸರು

ಪ್ರಶ್ನೆ ೬) ಕೆಳಗಿನ ಅಕ್ಷರಗಳ ಚೌಕಟ್ಟಿನಲ್ಲಿ ಕೆಲವು ಹಣ್ಣುಗಳು ಅಡಗಿವೆ. ಅವುಗಳನ್ನು ಹುಡುಕಿ ಅಲ್ಲಿಯೇ  ಗೋಳಾಕಾರದಿಂದ ಗುರುತಿಸಿರಿ.

ಅನಾನಸ           ಕಲ್ಲಂಗಡಿ           ಕಿತ್ತಳೆ        ಚೇರಿ         ಬಾಳೆ        ಸೀತಾಫಲ   ಸೇಬು        ಸೀಬೂ      ಸ್ಟ್ರಾಬೇರಿ   ಮಾವಿನಹಣ್ಣು      

ಉಪಕ್ರಮ:

ಸಮಾನತೆಯ ಸಂದೇಶ ಸಾರುವ ಕಿರುನಾಟಕವನ್ನು ನಿಮ್ಮ ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಭಿನಯಿಸಿರಿ.

ಐಕ್ಯಮತ ಲೋಕಹಿತ

ಥಟ್ಟನೆ ಹೇಳಿ:

ಬಂಗಾರ ಬಿಸಾಕ್ತಾರೆ ಬೆಳ್ಳಿ ತಿಂತಾರೆ                          -ಬಾಳೆಹಣ್ಣು

 

೮. ಸರದಾರ ವಲ್ಲಭಭಾಯಿ ಪಟೇಲ

ಶಬ್ದಗಳ ಅರ್ಥ

ಶಬ್ದಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ವಲ್ಲಭಭಾಯಿ ಪಟೇಲರ ಮನೆತನದ ವಾತಾವರಣ ಹೇಗಿತ್ತು?

ಉತ್ತರ: ವಲ್ಲಭಭಾಯಿ ಪಟೇಲರ ಮನೆಯಲ್ಲಿ ತಂದೆ-ಝೂವೇರಭಾಯಿ, ತಾಯಿ-ಲಾಡಬಾ ಇವರು ದೈವಭಕ್ತ ರಾಗಿದ್ದರು. ಇವರ ಮನೆತನದ ವಾತಾವರಣವು ಧಾರ್ಮಿಕ ಭಾವನೆಯ ಬೀಡಾಗಿತ್ತು. ಇದರಿಂದ ಮಕ್ಕಳಲ್ಲಿ ಧಾರ್ಮಿಕತೆ, ನೇತೃತ್ವತೆ ಮತ್ತು ನಿರ್ಭೀತಿಗಳು ಮನೆಮಾಡಿಕೊಂಡವು.

ಆ) ವಕೀಲ ವೃತ್ತಿಯಲ್ಲಿ ಪಟೇಲರು ವಿಚಲಿತರಾಗದ ಪ್ರಸಂಗವನ್ನು ವಿವರಿಸಿರಿ.

ಉತ್ತರ: ವಕೀಲ ವೃತ್ತಿಯಲ್ಲಿ ಪಟೇಲರದ್ದು ಕೇಸು ಗೆಲ್ಲುವುದರಲ್ಲಿ ಹೆಚ್ಚು ಆಸಕ್ತಿ ಇತ್ತು. ಒಮ್ಮೆ ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ಪಟೇಲರ ಪತ್ನಿ ತೀರಿಕೊಂಡ ಸುದ್ದಿ ಬಂದಿತು. ಆಗ ಅವರು ಸ್ವಲ್ಪವೂ ವಿಚಲಿತರಾಗದೇ ವಾದ ಮುಂದುವರೆಸಿ ಒಬ್ಬ ನಿರಪರಾಧಿಗೆ ಆಗುವ ಶಿಕ್ಷೆಯನ್ನು ತಪ್ಪಿಸಿದರು.

ಇ) ಸರದಾರ ಪಟೇಲರು ಗೃಹಮಂತ್ರಿಯಾದಾಗ ಕೈಕೊಂಡ ಮಹತ್ವದ ಕಾರ್ಯ ಯಾವುದು?  

ಉತ್ತರ: ಸರದಾರ ಪಟೇಲರು ಗೃಹಮಂತ್ರಿಯಾದಾಗ ಕೈಕೊಂಡ ಮಹತ್ವದ ಕಾರ್ಯ ಹೈದ್ರಾಬಾದ್ ಸಂಸ್ಥಾನವನ್ನು ಸ್ವಾತಂತ್ರ್ಯ ಭಾರತದಲ್ಲಿ ವಿಲೀನಿಕರಣ. ಅಖಂಡ ಭಾರತ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದರು. 

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

ಅ) ಸರದಾರ ವಲ್ಲಭಭಾಯಿ ಪಟೇಲರ ಜನ್ಮ ಯಾವಾಗ ಮತ್ತು ಎಲ್ಲಿ ಆಯಿತು?

ಉತ್ತರ: ಸರದಾರ ವಲ್ಲಭಭಾಯಿ ಪಟೇಲರ ಜನ್ಮ ಕ್ರಿ.ಶ. ೧೮೭೫ ಅಕ್ಟೋಬರ ೩೧ ರಂದು ಗುಜರಾತ್ ರಾಜ್ಯದ ಖೇಡಾ ಜಿಲ್ಲೆಯ ನದಿಯಾಡ್ ಗ್ರಾಮದಲ್ಲಿ ಆಯಿತು.

ಆ) ಸರದಾರ ವಲ್ಲಭಭಾಯಿ ಪಟೇಲರಿಗೆ ದೊರೆತ ಬಿರುದು ಯಾವುದು?

ಉತ್ತರ: ಸರದಾರ ವಲ್ಲಭಭಾಯಿ ಪಟೇಲರಿಗೆ ಭಾರತದ ಉಕ್ಕಿನ ಮನುಷ್ಯ” ಎಂಬ ಬಿರುದು ದೊರಕಿತು.

ಪ್ರಶ್ನೆ ೩) ಹೊಂದಿಸಿ ಬರೆಯಿರಿ.

        ಗುಂಪು                    ಗುಂಪು

ಅ) ಕ್ರಿ.ಶ. ೧೮೭೫                    ೧) ಭಾರತಕ್ಕೆ ಸ್ವಾತಂತ್ರ್ಯ ದೊರಕಿತು.

ಆ) ಕ್ರಿ.ಶ. ೧೮೫೭                    ೨) ಮರಣೋತ್ತರ “ಭಾರತ ರತ್ನ” ಪ್ರಶಸ್ತಿ

ಇ) ಕ್ರಿ.ಶ. ೧೯೫೦                    ೩) ಪಟೇಲರು ವಿಧಿವಶರಾದರು.

ಈ) ಕ್ರಿ.ಶ. ೧೯೧೭                    ೪) ಗುಜರಾತ್ ಸಭೆಯ ಕಾರ್ಯದರ್ಶಿ

ಉ) ಕ್ರಿ.ಶ. ೧೯೯೧                   ೫) ವಲ್ಲಭಭಾಯಿಯವರ ಜನನ

ಊ) ಕ್ರಿ.ಶ. ೧೯೪೭                   ೬) ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

ಉತ್ತರಗಳು: ( ಅ -೫, ಆ -೬, ಇ - ೩, ಈ –೪, ಉ – ೨ ಊ – ೧)

ಪ್ರಶ್ನೆ ೪) ಯೋಚಿಸಿ ಈ ಕೆಳಗಿನ ವಿಧಾನಗಳನ್ನು ಪೂರ್ಣಗೊಳಿಸಿರಿ.

ಅ) ಪಟೇಲರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಹಾಗಾದರೆ ಇವರ ಸಮಕಾಲೀನರಾಗಿದ್ದ ಇನ್ನಿತರ ಹೋರಾಟಗಾರರು = ಮಹಾತ್ಮ ಗಾಂಧೀಜಿ, ಪಂಡಿತ ಜವಾಹರಲಾಲ ನೆಹರು, ಸುಭಾಷಚಂದ್ರ ಬೋಸ್,

ಆ) ಪಟೇಲರು ಸಂಸ್ಥೆಗಳನ್ನು ಒಗ್ಗೂಡಿಸಲು ಶ್ರಮಿಸಿದರು. ಹಾಗಾದರೆ ವಿರೋಧಿಸಿದವರು = ಹೈದ್ರಾಬಾದ್ ನಿಜಾಮ, ಜುನಾಗಡದ ನವಾಬ ಮತ್ತು ಕಾಶ್ಮೀರದ ರಾಜ ವಿರೋಧಿಸಿದರು.

ಇ) ಪಟೇಲರು ಉಕ್ಕಿನ ಮನುಷ್ಯ ಎಂದು ಪ್ರಸಿದ್ಧರಾದರು. ಹಾಗಾದರೆ ಮಹಾತ್ಮ ಎಂದು ಪ್ರಸಿದ್ಧರಾದವರು = ಮೋಹನದಾಸ ಕರಮಚಂದ ಗಾಂಧಿ

ಪ್ರಶ್ನೆ ೫) ಕೆಳಗಿನ ವಾಕ್ಯಗಳಲ್ಲಿಯ ವಿಶೇಷಣಗಳನ್ನು ಗುರುತಿಸಿರಿ.

೧) ಸರದಾರ ವಲ್ಲಭಭಾಯಿ ಪಟೇಲರು ಗುಜರಾತ ರಾಜ್ಯದಲ್ಲಿ ಜನಿಸಿದರು. = ಸರದಾರ

೨) ಪಟೇಲರು ಬಾರ್ಡೋಲಿ ಕರನಿರಾಕರಣೆಯ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.  = ಸಕ್ರಿಯವಾಗಿ

೩) ಮಹಾತ್ಮ ಗಾಂಧೀಜಿಯವರು ಶಿಸ್ತುಪ್ರಿಯರಾಗಿದ್ದರು.      = ಶಿಸ್ತುಪ್ರಿಯ

ಶಕ್ತಿಗಿಂತ ಯುಕ್ತಿ ಮೇಲು

ಥಟ್ಟನೆ ಹೇಳಿ:

ಬಿಳಿ ಅಂಗಿ ತೊಟ್ಟಿರುವೆ ಕೇಸರಿ ಚಡ್ಡಿ ಉಟ್ಟಿರುವೆ

ರಾತ್ರಿ ಹೊತ್ತು ಮಾತ್ರ ಅರಳುವೆ

ಎಲ್ಲರ ಮನ ಸೆಳೆಯುವೆ                 - ಪಾರಿಜಾತದ ಹೂ 


೯. ಅಡಗಿಸಿಟ್ಟ ಚಿನ್ನ

 ಶಬ್ದಗಳ ಅರ್ಥ

ವಿಕ್ಷೇಪ - ಹುದುಗಿಟ್ಟ ನಿಧಿ;     ಸೊಪ್ಪು - ತೊಪ್ಪಲು; ಅಪೂರ್ವ - ಅಪರೂಪ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.

ಅ) ತಾಯಿಯು ಶ೦ಕರನನ್ನು ಏತಕ್ಕೆ ಕರೆದಳು?

ಉತ್ತರ: ತಾಯಿಯು ಶಂಕರನನ್ನು ಉಪಹಾರ ಮಾಡಲು ಕರೆದಳು.

ಆ) '' ಮತ್ತು 'ಸಿ' ಜೀವನಸತ್ವವುಳ್ಳ ಪದಾರ್ಥಗಳಾವುವು?

ಉತ್ತರ: ಆಲೂಗಡ್ಡೆ, ಗೆಣಸು, ಗಜ್ಜರಿ ಮುಂತಾದ ಪದಾರ್ಥಗಳಲ್ಲಿ '' ಮತ್ತು 'ಸಿ' ಜೀವನಸತ್ವಗಳು ಇರುತ್ತವೆ.

ಇ) ಸ್ನಿಗ್ಧ ಪದಾರ್ಥಗಳಾವುವು?

ಉತ್ತರ: ಸೋಯಾಬಿನ ಹಾಗೂ ಬೆಣ್ಣೆಯಲ್ಲಿ ಸ್ನಿಗ್ಧ ಪದಾರ್ಥಗಳಾಗಿವೆ.

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

ಅ) ಸಮತೋಲ ಆಹಾರ ಎಂದರೇನು?

ಉತ್ತರ: ಎಲ್ಲ ಸತ್ವಗಳಿಂದ ಕೂಡಿದ ಆಹಾರಕ್ಕೆ ಸಮತೋಲ ಆಹಾರ ಎನ್ನುತ್ತಾರೆ.

ಆ) ತರಕಾರಿಗಳಿಂದ ನಮಗೆ ಯಾವ ಲಾಭಗಳಿವೆ?

ಉತ್ತರ: ತರಕಾರಿಗಳಲ್ಲಿ ಶರೀರಕ್ಕೆ ಅಗತ್ಯವಿರುವ ಜೀವನಸತ್ವಗಳು ಇರುತ್ತವೆ. ಆಲೂಗಡ್ಡೆ, ಗೆಣಸು, ಗಜ್ಜರಿಯಲ್ಲಿ ಹಾಗೂ ಸಿ ಜೀವನಸತ್ವಗಳು ಇರುತ್ತವೆ.

ಪ್ರಶ್ನೆ ೩) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು?

ಅ) ಏನು, ನಮ್ಮ ಕೈತೋಟದಲ್ಲಿ ಬಂಗಾರದ ಗಣಿ ಇದೆಯೇ?

ಉತ್ತರ: ಶಂಕರ ತಂದೆಗೆ ಕೇಳಿದನು.

ಆ) ಅಪ್ಪ, ನಮತೋಲ ಆಹಾರ ಎಂದರೇನು?

ಉತ್ತರ: ಶಂಕರ ತಂದೆಗೆ ಕೇಳಿದನು.

) ಹೌದಪ್ಪ, ನಿಜವಾಗಿಯೂ ಇದುವೆ ಚಿನ್ನ!

ಉತ್ತರ: ತಂದೆ ಶಂಕರನಿಗೆ ಹೇಳಿದರು.

ಪ್ರಶ್ನೆ ೪) ಬಿಟ್ಟ ಸ್ಥಳಗಳನ್ನು ತುಂಬಿರಿ.

ಅ) ಏನು, ನಮ್ಮ ಕೈತೋಟದಲ್ಲಿ ಬಂಗಾರದ ಗಣಿ ಇದೆಯೇ, ಹಾಗಾದರೆ ತಮಗೆ ಗೊತ್ತಿರುವ ಇನ್ನಿತರ ಗಣಿಗಳು............

ಉತ್ತರ: ಚಿನ್ನದ ಗಣಿ, ಕಲ್ಲಿನ ಗಣಿ, ಕಲ್ಲಿದಲ್ಲ ಗಣಿ, ಗ್ರನಾಯಿಟ್ ಗಣಿ ಇತ್ಯಾದಿಗಳು

ಆ) ಬಂಗಾರ ಶರೀರಕ್ಕೆ ಶೋಭೆ ಕೊಡುತ್ತದೆ ಹಾಗಾರೆ ಶೋಭೆ ಕೊಡುವ ಬ೦ಗಾರದ ಆಭರಣಗಳು....

ಉತ್ತರ: ಕಿವಿಯೋಲೆಗಳು, ಉಂಗುರ, ಕೊರಳ ಸರಗಳು

ಇ) ಚಿನ್ನ ರಕ್ತ ಹರಿಸಲು ಕಾರಣವಾದರೆ; ಶರೀರದಲ್ಲಿ ರಕ್ತ ನಿರ್ಮಾಣ ಮಾಡುವ ಚಿನ್ನ.....

ಉತ್ತರ: ಕೆಂಪು ಗೆಣಸು, ಮೂಲಂಗಿ, ಬೀಟರೂಟ, ಗಜ್ಜರಿ.

ಪ್ರಶ್ನೆ ೫) ಕೆಳಗಿನ ಶಬ್ದಗಳಿಗೆ ಅರ್ಥ ಹೇಳಿ ವಾಕ್ಯದಲ್ಲಿ ಉಪಯೋಗಿಸಿರಿ.

ಅ) ರಮಣೀಯ = ಸುಂದರ

ವಾಕ್ಯ: ನಮ್ಮ ಶಾಲೆಯ ಕೈ ತೋಟವು ರಮಣೀಯವಾಗಿದೆ.

ಆ) ಅದ್ಭುತ =  ಆಶ್ಚರ್ಯ

ವಾಕ್ಯ: ಅವನ ಆಟದ ಶೈಲಿ ಅದ್ಭುತವಾಗಿದೆ.

ಇ) ಕೈತೋಟ =ಮನೆತೋಟ

ವಾಕ್ಯ: ನಮ್ಮ ಮನೆಯ ಒಂದು ಮೂಲೆಯಲ್ಲಿ ಸಣ್ಣ ಕೈತೋಟ ವಿದೆ.

ಚಿನ್ನಕ್ಕಿಂತ ಅನ್ನವೇ ಶ್ರೇಷ್ಠ 

ಉಪಕ್ರಮ: ಭೂಮಿಯ ಒಳಭಾಗದಲ್ಲಿ ಹಾಗೂ ಭೂಮಿಯ ಮೇಲ್ಬಾಗದಲ್ಲಿ ಬೆಳೆಯುವ ಆಹಾರ ಪದಾರ್ಥಗಳ ಪಟ್ಟಿ ತಯಾರಿಸಿರಿ.

ಥಟ್ಟನೆ ಹೇಳಿ:

        ಚಿಕ್ಕ ಚಿಕ್ಕ ಪೆಟ್ಟಿಗೆ

        ಚಿನ್ನದ ಪೆಟ್ಟಿಗೆ

        ಮುಚ್ಚಳ ತೆಗೆದರೆ

        ಮುನ್ನೂರು ಪೆಟ್ಟಿಗೆ

                                                -ದಾಳಿಂಬೆ

 

ವ್ಯಾಕರಣ

ಸಂಧಿ

ಎರಡು ಅಕ್ಷರಗಳು ಪರಸ್ಪರ ಕಾಲವಿಳಂಬವಿಲ್ಲದೆ ಕೂಡಿಕೊಳ್ಳುವುದಕ್ಕೆ `ಸಂಧಿ' ಎನ್ನುವರು.

ಉದಾ:        ಇನ್ನು + ಒಮ್ಮೆ ಇನ್ನೊಮ್ಮೆ =

                ಮರಗಳು + ಇವೆ = ಮರಗಳಿವೆ

                ಯಾರು + ಇಗೆ = ಯಾರಿಗೆ ಹಳೆ + ಕನ್ನಡ = ಹಳೆಗನ್ನಡ

ಸಂಧಿಗಳು

1.     ಕನ್ನಡ ಸಂಧಿಗಳು

2.     ಸಂಸ್ಕೃತ ಸಂಧಿಗಳು

 

1.     ಸ್ವರ ಸಂಧಿಗಳು

             ಅ. ಆಗಮ ಸಂಧಿ

             ಆ. ವ್ಯಂಜನ ಸಂಧಿ

ಆದೇಶ (ಗದಬಾದೇಶ ಸಂಧಿ)

ಯಕಾರಾಗಮು

ವಕಾರಾಗಮ

ಸಂಧಿಗಳಲ್ಲಿ ಎರಡು ಪ್ರಕಾರಗಳು:

೧) ಕನ್ನಡ ಸಂಧಿಗಳು

9) ಸಂಸ್ಕೃತ ಸಂಧಿಗಳು

೧) ಕನ್ನಡ ಸಂಧಿಗಳಲ್ಲಿ ಎರಡು ಪ್ರಕಾರಗಳು.

೧) ಸ್ವರ ಸಂಧಿ:- ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವುದಕ್ಕೆ `ಸ್ವರ ಸಂಧಿ' ಎನ್ನುವರು

9) ವ್ಯಂಜನ ಸಂಧಿ:- ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾಗುವುದಕ್ಕೆ 'ವ್ಯಂಜನ ಸಂಧಿ ಎನ್ನುವರು.

ಸ್ವರಸಂಧಿಯಲ್ಲಿ ಎರಡು ಪ್ರಕಾರ :

        ೧) ಲೋಪ ಸಂಧಿ     ೨) ಆಗಮ ಸಂಧಿ

ವ್ಯಂಜನ ಸಂಧಿಯ ಒಂದು ಪ್ರಕಾರ:

        ೧) ಆದೇಶ ಸಂಧಿ

ಸ್ವರ ಸಂಧಿಗಳು

ಲೋಪ ಸಂಧಿ: ಎರಡು ಸ್ವರಗಳು ಸೇರಿ ಸಂಧಿಯಾಗುವಾಗ ಮೊದಲನೆಯ ಪದದ ಕೊನೆಯ ಸ್ವರವು ಲೋಪವಾದರೆ ಅದು ಸ್ವರಲೋಪ ಸಂಧಿ ಆಗುವುದು.

ಉದಾ.        ಅಲ್ಲಿ + ಒ0ದು = ಅಲ್ಲೊಂದು

                ಅಲ್ಲಿ + ಅಲ್ಲಿ = ಅಲ್ಲಲ್ಲಿ

                ಆಟ + ಓಟ = ಆಟೋಟ

                ಊರು + ಊರು = ಊರೂರು

                ಇನ್ನು + ಒಮ್ಮೆ ಇನ್ನೊಮ್ಮೆ =

ಆಗಮ ಸಂಧಿ: ಎರಡು ಪದಗಳು ಸೇರಿ ಸಂಧಿ ಆಗುವಾಗ ಅವೆರಡರ ನಡುವೆ ಹೊಸದೊಂದು ಅಕ್ಷರವು ಅಂದರೆ ಯಕಾರವಾಗಲಿ, ವಕಾರವಾಗಲಿ ಆಗಮಿಸಿದರೆ ಅದು ಆಗಮಸಂಧಿ' ಎನಿಸುವುದು.

ಉದಾ:        ಗಿಡ + ಅನ್ನು = ಗಿಡವನ್ನು

                ಮನೆ + ಅಲ್ಲಿ ಮನೆಯಲ್ಲಿ =

                ಕರು + ಅನ್ನು = ಕರುವನ್ನು

                ಮೇ + ಉತ್ತ = ಮೇಯುತ್ತ

ವ್ಯಂಜನ ಸಂಧಿ

ಆದೇಶ ಸಂಧಿ: ಎರಡು ಶಬ್ದಗಳು ಸೇರಿ ಸಂಧಿ ಆಗುವಾಗ ಒಂದು ಅಕ್ಷರದ

ಬದಲಿಗೆ ಮತ್ತೊಂದು ಅಕ್ಷರ ಆದೇಶವಾಗಿ ಬಂದರೆ `ಆದೇಶ ಸಂಧಿ ಎನಿಸುವುದು. ಸಾಮಾನ್ಯವಾಗಿ ಎರಡನೇ ಪದದ ಮೊದಲಿಗೆ ಕ, , ಪ ಕಾರಗಳಿಗೆ ಗ, , ಬ ಕಾರಗಳು ಆದೇಶವಾಗಿ ಬರುತ್ತವೆ.

ಉದಾ.        ಹಳೆ + ಕನ್ನಡ = ಹಳೆಗನ್ನಡ

                ಹುಲಿ + ತೊಗಲು = ಹುಲಿದೊಗಲು

                ಕಣ್ + ಪನಿ = ಕಂಬನಿ

೧೦. ಈ ಮಣ್ಣು ನಮ್ಮದು

ಶಬ್ದಗಳ ಅರ್ಥ

ಜಾಡು – ರೀತಿ,                ಆಗರ - ಸಂಗ್ರಹ;             ಸಾರ - ತಿರುಳು, ಸತ್ವ               

ಶಬ್ದಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ಶಿಲೆ – ಕಲ್ಲು                    ಸಾಗರ – ಸಮುದ್ರ                           

ತಂಗಾಳಿ – ತಂಪು ಗಾಳಿ      ಪೈರು – ಬೆಳೆ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

ಅ) ತಂದೆಗೆ ಯಾವುದು ಸಮಾನವಾಗಿದೆ?

ಉತ್ತರ: ನಮ್ಮ ಕಾಯುವ ಹಿಮಾಲಯ ಪರ್ವತವೇ ತಂದೆಗೆ ಸಮಾನವಾಗಿದೆ.

ಆ) ಶಿಲ್ಪಕಲೆಯ ಆಗರಗಳು ಯಾವುವು?

ಉತ್ತರ: ಅಜಂತಾ, ಎಲ್ಲೋರಾ, ಹಳೇಬೀಡು, ಬೇಲೂರು ಇವು ಶಿಲ್ಪಕಲೆಯ ಆಗರಗಳಾಗಿವೆ.

ಇ) ವಿಜ್ಞಾನವು ಯಾವುದನ್ನು ಗೆಲ್ಲುತ್ತದೆ?

ಉತ್ತರ: ವಿಜ್ಞಾನವು ಅಜ್ಞಾನವನ್ನು ಗೆಲ್ಲುತ್ತದೆ.

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ

ಬರೆಯಿರಿ.

ಅ) ತಾಯಿಗೆ ಸಮಾನ ಯಾವುದಿದೆ?

ಉತ್ತರ: ಗಂಗೆ, ತುಂಗೆ, ಕಾವೇರಿ ನದಿಗಳು ತಾಯಿಗೆ ಸಮಾನ ಆಗಿವೆ.

ಆ) ಧರ್ಮಗಳ ಸಾಗರ ಯಾವುದು?

ಉತ್ತರ:ಭಾರತವು ಹಿಂದು, ಬುದ್ಧ, ಜೈನ್, ಕ್ರಿಸ್ತ ಹಾಗೂ ಮುಸಲ್ಮಾನ ಧರ್ಮಗಳ ಮಹಾನ ಸಾಗರವಾಗಿದೆ.

ಪ್ರಶ್ನೆ ೩) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣಮಾಡಿ ಸರಳಾನುವಾದ ಬರೆಯಿರಿ.

ಅಜಂತಾ, ಎಲ್ಲೋರಾ, ಹಳೇಬೀಡು ಬೇಲೂರು

ಶಿಲೆಗಳಿವು ಕಲೆಯ ಆಗರ

ಹಿಂದು, ಬುದ್ಧ, ಜೈನ್, ಕೃಸ್ತ್ ಮುಸಲ್ಮಾನ್

ಧರ್ಮಗಳ ಮಹಾನ ಸಾಗರ

ಸಾಲುಗಳ ಸರಳಾನುವಾದ:

ಭಾರತದಲ್ಲಿ ಶಿಲ್ಪಕಲೆಗಳ ಆಗರವಿರುವ ಕೆಲವು ಸುಂದರ ತಾಣಗಳಿವೆ. ಅವುಗಳಲ್ಲಿ ಅಜಂತಾ, ಎಲ್ಲೋರಾ, ಹಳೇಬೀಡು ಬೇಲೂರು ಇವು ಶಿಲ್ಪಕಲೆಗಳಿಂದ ತುಂಬಿರುವ ಕೋಟೆಗಳು, ಗುಡಿ, ದೇವಾಲಯ ಹಾಗೂ ಗುಹೆಗಳಿಂದ ನಿರ್ಮಾಣವಾಗಿವೆ. ಭಾರತ ದೇಶದಲ್ಲಿ ಅನೇಕ ಧರ್ಮಗಳಿವೆ. ಹಿಂದು, ಬುದ್ಧ, ಜೈನ್, ಕೃಸ್ತ್ ಮುಸಲ್ಮಾನ್ ಧರ್ಮಗಳ ಜನರು ಏಕತೆಯಿಂದ ಇಲ್ಲಿ ಸಹೋದರತ್ವದ ಭಾವನೆಯಿಂದ ಬಾಳುತ್ತಾರೆ.

ಪ್ರಶ್ನೆ ೪) ಕೆಳಗಿನ ಶಬ್ದಗಳ ಅರ್ಥಹೇಳಿ ಸ್ವಂತ ವಾಕ್ಯದಲ್ಲಿ ಉಪಯೋಗಿಸಿರಿ.

ಅ) ಸೋದರ= ಅಣ್ಣ ಅಥವಾ ತಮ್ಮ – ರಾಮನು ಲಕ್ಷ್ಮಣನ ಸೋದರನೀರುವನು.

ಆ) ಚರಿತ್ರೆ=ಜೀವನ ಕಥೆ – ಸತ್ಯದ ಪ್ರಯೋಗ ಈ ಗ್ರಂಥವು ಬಾಪೂಜಿಯವರ ಆತ್ಮಚರಿತ್ರೆ ಆಗಿದೆ.

ಇ) ದೇಶ = ರಾಷ್ಟ್ರ – ಭಾರತ ನನ್ನ ದೇಶವಿದೆ.

ಪ್ರಶ್ನೆ ೫) ಅ) ಕೆಳಗಿನ ಶಬ್ದಗಳ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ಅ) ಸ್ವದೇಶ X ವಿದೇಶ         ಆ) ಧರ್ಮ x ಅಧರ್ಮ

ಇ) ಜ್ಞಾನ x ಅಜ್ಞಾನ

ಆ) ಕೆಳಗಿನ ಶಬ್ದಗಳ ಸಮಾನಾರ್ಥಕ ಪದಗಳನ್ನು ಬರೆಯಿರಿ.

ಅ. ಸಾಗರ = ಕಡಲು, ಸಮುದ್ರ,

ಆ. ತಾಯಿ = ಜನನಿ, ಮಾತಾ, ಅವ್ವ

ಇ. ಕವಿತೆ = ಹಾಡು, ಪದ್ಯ, ಕವನ

ಈ. ಆಕಾಶ = ಗಗನ, ಬಾನು,

ಇ) ಉದಾಹರಣೆಯಲ್ಲಿ ತೋರಿಸಿದಂತೆ ಅಂತ್ಯಾಕ್ಷರವನ್ನು ಬಳಸಿ, ಹೊಸ ಶಬ್ದಗಳನ್ನು ರಚಿಸಿರಿ.

ಉದಾ: ಭಾರತ - ತವರು - ಚಿರತೆ -ತೆರೆರೆಂಬೆ

ಅ) ಪದಕ –ಕಮಲ –ಲಂಗ –ಗರತಿ –ತೀರಂಗಾ –ಗಾರುಡಿಗ

ಆ) ಕವನ – ನವಿಲು –ಲುನಾ –ನಾಯಕ – ಕವಿತೆ – ತೆಂಗು

ಇ) ಗುಲಾಬಿ – ಬಿರುಸು –ಸುದ್ದಿ-ದಿನಕರ –ರವಿ –ವೀರತೆ

ಉಪಕ್ರಮ:

ನಿಮ್ಮ ಪರಿಸರದಲ್ಲಿರುವ ಬೇರೆ ಬೇರೆ ಪ್ರಕಾರದ ಮಣ್ಣುಗಳನ್ನು ಸಂಗ್ರಹಿಸಿ ಅದರ ಗುಣಧರ್ಮಗಳ ಬಗ್ಗೆ ತಿಳಿದುಕೊಳ್ಳಿರಿ.

ನಮ್ಮ ನಾಡು ಸುಂದರ ಸಕಲ ಧರ್ಮ ಮಂದಿರ

                ಥಟ್ಟನೆ ಹೇಳಿ:

        ತಾತಾಗಿ೦ಡಿ ತಾಮ್ರದ ಗಿಂಡಿ

        ಮುಚ್ಚಳ ತೆಗೆದ್ರೆ ಮುನ್ನೂರು ಗಿಂಡಿ

                                        -ಈರುಳ್ಳಿ

 

೧೧. ರೇಷ್ಮೆ ಸಾಕಾಣಿಕೆ

ಶಬ್ದಗಳ ಅರ್ಥ

ಉಡುಗೊರೆ -ಕಾಣಿಕೆ, ಬಳುವಳಿ:             ಮನಮೋಹಕ - ಆಕರ್ಷಕ;

ನಯವಾಗಿತ್ತು - ನುಣುಪಾಗಿತ್ತು;              ಸೂಕ್ತ - ಯೋಗ್ಯ;

ಹಂತ - ಘಟ್ಟ;                                 ಪತಂಗ – ಚಿಟ್ಟೆ

ಶಬ್ದಕೋಶದ ಸಹಾಯದಿಂದ ಕೆಳಗಿನ ಪದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ಸಡಗರ – ಸಂಭ್ರಮ             ಸೋಜಿಗ – ಮುಜುಗರ              ವಿಧಾನ – ವಾಕ್ಯ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ರೇಷ್ಮೆ ಹುಳುಗಳ ಆಹಾರ ಯಾವುದು?

ಉತ್ತರ: ರೇಷ್ಮೆ ಹುಳುಗಳ ಆಹಾರ ರೇಷ್ಮೆ ಗಿಡಗಳ ಎಲೆಗಳೇ ಇರುತ್ತವೆ.

ಆ) ರೇಷ್ಮೆ ಹುಳಗಳ ಬೆಳವಣಿಗೆಯ ಅವಸ್ಥೆಗಳಾವುವು?

ಉತ್ತರ: ರೇಷ್ಮೆ ಹುಳಗಳ ಬೆಳವಣಿಗೆಯ ಅವಸ್ಥೆಗಳು: ಮೊಟ್ಟೆ, ಚೌಕಿಹುಳ, ಕೀಡೆ ಮತ್ತು ಪತಂಗ

ಇ) ರೇಷ್ಮೆ ಎಳೆ ಹೇಗೆ ತಯಾರಾಗುತ್ತದೆ?

ಉತ್ತರ: ಗುಡಿನೊಳಗೆ ಇದ್ದ ಕೀಡೆಯು ಪತಂಗವಾಗಿ ಗೂಡನ್ನು ಕತ್ತರಿಸಿ ಹೊರಗೆ ಬರುತ್ತದೆ. ಆ ಗೂಡನ್ನು ಬಿಸಿ ನೀರಿನಲ್ಲಿ ಹಾಕುತ್ತಾರೆ. ನಂತರ ಯಂತ್ರಗಳ ಸಹಾಯದಿಂದ ಗೂಡಿನಲ್ಲಿ ಇರುವ ಅಖಂಡವಾದ ಎಳೆಯನ್ನು ಹೊರಗೆ ತೆಗೆಯುತ್ತಾರೆ.

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

ಅ) ಸಚಿನ ಮತ್ತು ವೈಶಾಲಿ ಮಾವನ ಜೊತೆಗೆ ಎಲ್ಲಿ ಬಂದರು?

ಉತ್ತರ: ಸಚಿನ ಮತ್ತು ವೈಶಾಲಿ ಮಾವನ ಜೊತೆಗೆ ಹಳ್ಳಿಗೆ ಬಂದರು.

ಆ) ರೇಷ್ಮೆ ಮಾರಾಟದ ಕೇಂದ್ರಗಳು ಎಲ್ಲಿವೆ?

ಉತ್ತರ: ಕರ್ನಾಟಕದ ರಾಮನಗರ ಮತ್ತು ಮಹಾರಾಷ್ಟ್ರದ ಗಡಹಿಂಗ್ಲಜ ಮುಂತಾದ ಕಡೆಗಳಲ್ಲಿ ರೇಷ್ಮೆ ಮಾರಾಟದ ಕೇಂದ್ರಗಳಿವೆ.

ಪ್ರಶ್ನೆ ೩) ಯೋಚಿಸಿ ಈ ಕೆಳಗಿನ ವಿಧಾನಗಳನ್ನು ಪೂರ್ಣಗೊಳಿಸಿರಿ.

ಅ) ರೇಷ್ಮೆಯು ರೇಷ್ಮೆಹುಳದಿಂದ ತಯಾರಾಗುತ್ತದೆ. ಹಾಗಾದರೆ ಉಣ್ಣೆ ಕುರಿಗಳ ಉಣ್ಣೆಯಿಂದ ತಯಾರಾಗುತ್ತದೆ.

ಆ) ರೇಷ್ಮೆ ಬಟ್ಟೆಗಳು, ಹತ್ತಿಯ ಬಟ್ಟೆಗಳು ಇರುತ್ತವೆ. ಹಾಗಾದರೆ ನಿಮಗೆ ಗೊತ್ತಿರುವ ಇತರ ಬಟ್ಟೆಗಳು ನಾಯಲಾನ್, ಟೆರಿಕೋಟ್ ಇತ್ಯಾದಿಗಳು.

ಪ್ರಶ್ನೆ ೪) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು?

ಅ) ಹತ್ತಿಯ ನೂಲಿನಿಂದ ವೈಶಾಲಿಯ ಬಟ್ಟೆಯನ್ನು ತಯಾರಿಸಿದ್ದಾರೆ"

ಉತ್ತರ: ರಮೇಶನು ತಾಯಿಗೆ ಹೇಳಿದನು.

ಆ)ಏನು, ಹುಳಗಳಿಂದ ರೇಷ್ಮೆ ತಯಾರಿಸುತ್ತಾರೆಯೇ?!

ಉತ್ತರ: ಸಚಿನ ಮಾವ ರಮೇಶನಿಗೆ ಕೇಳಿದನು.

 ಇ) ಈ ಹುಳಗಳಿಗೆ ಚಾಕಿಹುಳು, ಅಥವಾ ಲಾರ್ವ ಎನ್ನುತ್ತಾರೆ.

ಉತ್ತರ: ನಾಗಣ್ಣ ವೈಶಾಲಿ, ಸಚಿನ ಮತ್ತು ರಮೇಶ ಇವರಿಗೆ ಹೇಳಿದನು.

ಈ) ಅಬ್ಬಾ! ಅದ್ಭುತವಾಗಿದೆ ರೇಷ್ಮೆ ತಯಾರಿಕೆಯ ವಿಧಾನ.

ಉತ್ತರ: ವೈಶಾಲಿ ನಾಗಣ್ಣನಿಗೆ ಹೇಳಿದಳು.

ಪ್ರಶ್ನೆ ೫. ರೇಷ್ಮೆಹುಳದ ಬೆಳವಣಿಗೆಯ ಹಂತಗಳನ್ನು ಅನುಕ್ರಮವಾಗಿ ಬರೆಯಿರಿ.

ಪತಂಗ, ಮರಿ, ಕೀಡೆ, ತ್ತಿ

ಉತ್ತರ: ಮೊಟ್ಟೆ, ಮರಿ, ಕೀಡೆ ಮತ್ತು ಪತಂಗ

ಪ್ರಶ್ನೆ ೬) ಉದಾಹರಣೆಯಲ್ಲಿ ತೋರಿಸಿದಂತೆ ವಿರುದ್ಧಾರ್ಥಕ ಪದಗಳನ್ನು ಬರೆದು ಅವುಗಳನ್ನು ವಾಕ್ಯದಲ್ಲಿ ಉಪಯೋಗಿಸಿರಿ.

ಉದಾ: ಹೊರಗೆ X ಒಳಗೆ

ಹಣ್ಣಾದ ಹುಳಗಳನ್ನು ಚಂದ್ರಿಕೆಯ ಒಳಗೆ ಬಿಡುತ್ತಾರೆ.

ಹೊಸ X ಹಳೆ

ಹಬ್ಬಕ್ಕೆ ಅವ್ವ ರಂಗಿಗೆ ಹೊಸ ಬಟ್ಟೆ ತಂದು ಕೊಟ್ಟಳು.

ಪ್ರತ್ಯಕ್ಷ X ಅಪ್ರತ್ಯಕ್ಷ

ಪೃಥ್ವಿ ಸೂರ್ಯನಿಗೆ ಪ್ರತ್ಯಕ್ಷ ಪ್ರದಕ್ಷಿಣೆ ಹಾಕುವಳು.

ಜೋಡಿಸು X ಬೇರ್ಪಡಿಸು

ರಾಜು ಮುರಿದ ತಂತಿಗಳನ್ನು ಜೋಡಿಸಿದನು.

ಅಖಂಡ X ತುಂಡು ತುಂಡಾದ

ದಾರದ ಎಳೆಯು ಅಖಂಡವಾಗಿದೆ.

ಮೃದು X ಜಡ

ಮೊಲದ ಚರ್ಮವು ಮೃದುವಾಗಿದೆ.

ಪ್ರಶ್ನೆ ೭) ಕೆಳಗಿನ ಚಿತ್ರವನ್ನು ನೋಡಿರಿ. ಅದನ್ನು ಕುರಿತು ೧೦ ಸಾಲು ಬರೆಯಿರಿ.

 

ಪ್ರಶ್ನೆ ೮) ಕೆಳಗಿನ ಶಬ್ದಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ

೧) ನನಗೊಂದು = ನನಗೆ + ಒಂದು

೨) ಮಗುವಿಗೆ =ಮಗು +ಅವನಿಗೆ

೩) ಮನೆಯಲ್ಲಿ =ಮನೆ +ಅಲ್ಲಿ

೪) ಮಳೆಗಾಲ.. ಮಳೆ +ಕಾಲ

೫) ಕನ್ದೆರೆ =ಕಣ್ಣು +ತೆರೆ

೬) ಬೆಂಬತ್ತು..ಬೆನ್ನು +ಹತ್ತು

ಉಪಕ್ರಮ: ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ವಿವರವಾದ ಮಾಹಿತಿ ಸಂಗ್ರಹಿಸಿರಿ.

ರೇಷ್ಮೆ ಸೀರೆ ಚೆಂದ, ಕಾಶ್ಮೀರ ಸಿರಿ ಅಂದ

ಥಟ್ಟನೆ ಹೇಳಿ:

ಬೆಲ್ಲಕ್ಕೆಲ್ಲ ಹೆಚ್ಚಿನ ಬೆಲ್ಲ ಬೇಲಿಯೊಳಗಿನ ಬೆಲ್ಲ    -ಜೇನು

೧೨. ದೇವಾನಾಂಪ್ರಿಯ

ಶಬ್ದಗಳ ಅರ್ಥ

ಶೌರ್ಯ - ಶೂರತನ;         ವರ್ತಕ - ವ್ಯಾಪಾರಿ,          ಸಮರ್ಥ ಯೋಗ್ಯ; -

ಧಾವಿಸು – ಮುನ್ನುಗ್ಗು         ಪ್ರಚಂಡ ಭಯಂಕರ;        ತತ್ತರಿಸು - ನಡುಗುತ್ತಿ

ಚಿರಋಣಿ ಸದಾ ಋಣಿ;         ದಿಗ್ಧಾಂತನಾಗು ದಿಕ್ಕುತೋಚದಂತಾಗು;

ಮುದನೀಡು ಆನಂದನೀಡು;   ವಿಹಾರ - ಬೌದ್ಧ ಮಂದಿರ

ಶಬ್ದಕೋಶದ ಸಹಾಯದಿಂದ ಕೆಳಗಿನ ಪದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ದೊರೆ – ಅರಸ/ ರಾಜ ,              ದಕ್ಷತೆ – ಕಾಳಜಿ

ವಿಧೇಯತೆ- ವಿನಮ್ರತೆ                ಜಿಗುಪ್ಸೆ –ತಿರಸ್ಕಾರ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಅಶೋಕನು ಯುದ್ಧ ಮಾಡುವುದಿಲ್ಲ ಎಂದು ಏಕೆ ಪ್ರತಿಜ್ಞೆ ಮಾಡಿದನು?

ಆ) ಅಶೋಕನ ಮನಸ್ಸಿಗೆ ಮುದನೀಡಿದ ಅಂಶಗಳು ಯಾವವು?

ಇ) ಅಶೋಕನು ತನ್ನ ಪ್ರಜೆಗಳಿಗೆ ಏನೆಂದು ಕರೆ ನೀಡಿದನು?

ಈ) ಬೌದ್ಧಧರ್ಮವು ವಿಪತ್ತಿಗೆ ಸಿಲುಕಿದಾಗ ಅಶೋಕನು ಏನು ಮಾಡಿದನು?

ಉ) ಅಶೋಕನು ತನ್ನ ಕೊನೆಯ ದಿನಗಳನ್ನು ಹೇಗೆ ಕಳೆದನು?

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

ಅ)

ಉತ್ತರ:

ಆ)

ಉತ್ತರ:

ಪ್ರಶ್ನೆ ೩) ಕೆಳಗೆ ಕೊಟ್ಟ ಪರ್ಯಾಯಗಳಿಂದ ಯೋಗ್ಯ ಉತ್ತರವನ್ನು ಆರಿಸಿ ಬಿಟ್ಟ ಸ್ಥಳ ತುಂಬಿರಿ.

ಅ) ಅಶೋಕನು ಚಂದ್ರಗುಪ್ತ ಮೌರ್ಯನ …………

೧) ಮಗ        ೨) ಮೊಮ್ಮ        ೩) ತಂದೆ      ೪) ಸಹೋದರ

ಆ) ……… ಮಗಧರಾಜ್ಯದ ರಾಜಧಾನಿಯಾಗಿತ್ತು.

೧) ತಕ್ಷಶಿಲೆ    ೨) ಆವಂತಿ    ೩) ಪಾಟಲೀಪುತ್ರ     ೪) ಕಳಿಂಗ

) ಅಶೋಕನು …………… ಧರ್ಮವನ್ನು ಸ್ವೀಕರಿಸಿದನು

೧) ಕ್ರೈಸ್ತ       ೨) ಹಿಂದು     ೩) ಸಿಖ್       ೪) ಬೌದ್ಧ

ಈ) ಬೌದ್ಧ ಧರ್ಮದ ಪ್ರಸಾರಕ್ಕಾಗಿ ಮಹೇಂದ್ರ ಮತ್ತು ಸಂಘಮಿತ್ರೆಯರನ್ನು ....... ದೇಶಕ್ಕೆ ಕಳುಹಿಸಿದನು.

೧) ಶ್ರೀಲಂಕಾ         ೨) ಈಜಿಪ್ತ     ೩) ಬರ್ಮಾ      ೪) ಸಿರಿಯಾ

ಉ) ನಮ್ಮ ರಾಷ್ಟ್ರಧ್ವಜದಲ್ಲಿರುವ ಗುರುತು ..........

೧) ಖಡ್ಗ        ೨) ಚಕ್ರ        ೩) ಪ0ಜು     ೪) ಸಿಂಹ

ಪ್ರಶ್ನೆ ೪) ಸರಿಯಾದ ಪದವನ್ನು ಹುಡುಕಿ ಬರೆಯಿರಿ.

ಅ) ೧) ಚಕವರ್ತಿ        ೨) ಚಕರವರ್ತಿ              ೩) ಚಕ್ರವರ್ತಿ          ೪) ಚಕವರ್ತಿ

ಆ) ೧) ಶಾಕಕುಮಾರಿ                 ೨) ಶಾಕ್ಯ ಕುಮಾರಿ

೩) ಶಾಕ್ರಕುಮಾರಿ            ೪) ಶ್ಯಾಕ ಕುಮಾರಿ

ಇ) ೧) ಅಂಕಷೆ        ೨) ಆರೆಅಂಕ್ಷೆ          ೩) ಆಕಾಂಕ್ಷೆ      ೪) ಆ೦ಕಾಷ

ಈ) ೧) ಸೀರಿಯಾ     ೨) ಸಿರೀಯಾ          ೩) ಶಿರಿಯಾ           ೪) ಸಿರಿಯಾ

ಉ) ೧) ವೃದ್ಧಾಪ್ಯ     ೨) ವ್ರದ್ಧಾಪ್ಯ           ೩) ವೃದಾಪ್ಯ           ೪) ವದೃಷ್ಯ

 

ಪ್ರಶ್ನೆ ೫) ಚಿತ್ರಗಳ ಸಹಾಯದಿಂದ ಗಾದೆಮಾತುಗಳನ್ನು ಪೂರ್ಣಗೊಳಿಸಿರಿ.

೧)   ತೆನೆತನ ಕೂಡಿದರೆ ರಾಶಿ

ಉತ್ತರ ಹನಿ ಹನಿ ಕುಡಿದರೆ ಹಳ್ಳ, ತೆನೆತನ ಕೂಡಿದರೆ ರಾಶಿ

 

9)  ಸಿಹಿ ಡೊಂಕ

ಉತ್ತರ: ಕಬ್ಬು ಡೊಂಕಾದರೆ ಅದರ ಸಿಹಿ ಡೊಂಕೆ?

೩) ಹಾಲು ಕಪ್ಪೇ?

ಉತ್ತರ: ಆಕಳು ಕಪ್ಪಾದರೆ ಅದರ ಹಾಲು ಕಪ್ಪೆ?

೪) ಆಳಾಗಿ ದುಡಿ

ಉತ್ತರ: ಆಳಾಗಿ ದುಡಿ ಅರಸನಾಗಿ ಉಣ್ಣು.

ಉಪಕ್ರಮ:

ಇತಿಹಾಸದಲ್ಲಿ ಆಗಿಹೋದ ಪ್ರಸಿದ್ಧ ರಾಜ ರಾಣಿಯರ ಚಿತ್ರಗಳನ್ನು ಸಂಗ್ರಹಿಸಿರಿ.

ಸಾಧನೆಯೇ ವ್ಯಕ್ತಿತ್ವದ ಕೈಗನ್ನಡಿ

 

ಥಟ್ಟನೆ ಹೇಳಿ:

ಅಕ್ಷರಗಳಿದ್ದರೂ ಪುಸ್ತಕವಲ್ಲ ಸಿಂಹವಿದ್ದರೂ ಅರಣ್ಯವಲ್ಲ ದುಂಡಾಗಿದ್ದರೂ ಚಕ್ರವಲ್ಲ ನಾನಾರು?  

                                                                -ನಾಣ್ಯ

೧೩. ಕಲ್ಲುಸಕ್ಕರೆ

                                                        -ಪುರಂದರದಾಸರು

ಶಬ್ದಗಳ ಅರ್ಥ

ಸವಿ ರುಚಿ,            ಹೇರು - ಭಾರ,         ಸುಂಕ - ತೆರಿಗೆ,        ಕಾಂತ ಸ್ವಾಮಿ -

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ)ತಿಂದರೂ ಕಡಿಮೆಯಾಗದ ಪದಾರ್ಥ ಯಾವುದು?

ಉತ್ತರ: ತಿಂದರೂ ಕಡಿಮೆಯಾಗದ ಪದಾರ್ಥ ಶ್ರೀಕೃಷ್ಣನಾಮ ವಾಗಿದೆ.

ಆ) ಕಲ್ಲುಸಕ್ಕರೆಯನ್ನು ಯಾವುದಕ್ಕೆ ಹೋಲಿಸಿದ್ದಾರೆ?

ಉತ್ತರ: ಕಲ್ಲು ಸಕ್ಕರೆಯನ್ನು ದೇವರ ನಾಮಕ್ಕೆ ಹೋಲಿಸಲಾಗಿದೆ.

ಇ)  ಕಲ್ಲುಸಕ್ಕರೆ ಕವಿತೆಯನ್ನು ಯಾರು ಬರೆದಿದ್ದಾರೆ?

ಉತ್ತರ: ಕಲ್ಲುಸಕ್ಕರೆ ಕವಿತೆಯನ್ನು ಪುರಂದರದಾಸರು ಬರೆದಿದ್ದಾರೆ. ಯಾರು ಬರೆದಿದ್ದಾರೆ

ಪ್ರಶ್ನೆ ೨) ಕವಿತೆಯ ಬಿಟ್ಟಸಾಲುಗಳನ್ನು ಪೂರ್ಣಗೊಳಿಸಿರಿ.

ಸಂತೆಗೆ ಹೋಗಿ ಶ್ರಮ ಪಡುವುದಲ್ಲ; ನಾತ ಹುಟ್ಟುವುದಲ್ಲ;

ಎಷ್ಟು ಒಯ್ದರು ಬೆಲೆ ರೊಕ್ಕವಿದಕ್ಕಿಲ್ಲ;

ಕಟ್ಟಿರುವೆಯು ತಿಂದು ಕಡಿಮೆಯಾಗುವುದಿಲ್ಲ;

ಪಟ್ಟಣದೊಳಗೆ ಪ್ರಸಿದ್ಧವಾಗಿರುವಂಥ

        ಸಂತೆಗೆ ಹೋಗಿ ಶ್ರಮಪಡಿಸುವುದಿಲ್ಲ;

        ಸಂತೆಯೊಳಗೆ ಇಟ್ಟು ಮಾರುವುದಲ್ಲ;

        ಸಂತತ ಭಕ್ತರ ನಾಲಗೆ ಸವಿಗೊಂಬ

        ಕಾಂತ ಪುರಂದರವಿಠಲ ನಾಮವೆಂಬ

ಪ್ರಶ್ನೆ ೩) ಕವಿತೆಯ ರಳಾನುವಾದ ಬರೆಯಿರಿ.

ಉತ್ತರ:

ಪ್ರಶ್ನೆ ೪) ಐದು ಸಿಹಿ ಪದಾರ್ಥಗಳ ಹೆಸರು ಬರೆಯಿರಿ.

ಉತ್ತರ: ಬೆಲ್ಲು, ಸಕ್ಕರೆ, ಜಿಲೇಬಿ, ಖವಾ, ಪೇಢೆ, ಇತ್ಯಾದಿಗಳು.

ಉಪಕ್ರಮ: ಕೆಳಗಿನ ಚಿತ್ರವನ್ನು ನೋಡಿರಿ, ಐದು ಸಾಲು ಬರೆಯಿರಿ.

ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು

                ಥಟ್ಟನೆ ಹೇಳಿ:

        ನೀರುಂಟು ಕೆರೆಯಲ್ಲ,  ಬೆಳ್ಳಗಿದೆ ಹಾಲಲ್ಲ,  ಕಪ್ಪಗಿದೆ ಕಾಗೆಯಲ್ಲ

        ರೆಕ್ಕೆಯುಂಟು ಪಕ್ಷಿಯಲ್ಲ                               - ಕಣ್ಣು

 

೧೪. ಹಂಪೆ

ಶಬ್ದಗಳ ಅರ್ಥ

ಗತಿಸಿಹೋಗು - ಆಗಿಹೋಗು,                    ಜಗದ್ವಿಖ್ಯಾತ - ಜಗತ್‌ಪ್ರಸಿದ್ಧಿ,

ಬೃಹತ್ - ದೊಡ್ಡದಾದ

ಶಬ್ದ ಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ಕುರುಹುಗುರುತು           ಸಮಗ್ರ – ಸರ್ವ /ಎಲ್ಲ

ರಮ್ಯ – ಸುಂದರ              ಮನೋಹರ – ಸುಂದರ

ಚೈತನ್ಯ – ಉತ್ಸಾಹ           ಗಜ – ಆನೆ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಬಿಷ್ಟಪ್ಪಯ್ಯನ ಗೋಪುರವೆಂದು ಯಾವುದಕ್ಕೆ ಕರೆಯುವರು?

ಉತ್ತರ: ಹಂಪೆಯಲ್ಲಿ ಭವ್ಯವಾಗಿ ಎತ್ತರವಾಗಿ ಕಂಗೊಳಿಸುವುದೇ ವಿರೂಪಾಕ್ಷ ದೇವಾಲಯದ ಗೋಪುರ ಇದೆ. ಈ ಗೋಪುರದ ಎತ್ತರ ಸುಮಾರು ೧೬೫ ಅಡಿ ಇದೆ ಮತ್ತು ೧೧ ಅಂತಸ್ತುಗಳಿಂದ ಕೂಡಿದೆ. ಈ ಗೋಪುರಕ್ಕೆ ಬಿಷ್ಟಪ್ಪಯ್ಯನ ಗೋಪುರವೆಂದು ಕರೆಯುವರು.

ಆ) ಗಣೇಶ ಹಾಗೂ ಜೈನ ಮಂದಿರಗಳು ಯಾವ ಗುಡ್ಡದಲ್ಲಿವೆ?

ಉತ್ತರ: ವಿರೂಪಾಕ್ಷ ದೇವಾಲಯದ ಬಳಿ ಹೇಮಕೂಟ ಗುಡ್ಡವಿದೆ. ಈ ಗುಡ್ಡದಲ್ಲಿ ಕೆಲವು ಅಂದವಾದ ಪ್ರಾಚೀನ ಜೈನ್ ಬಸದಿಗಳಿವೆ. ಸಮೀಪದಲ್ಲಿಯೇ ಒಂದೇ ಕಲ್ಲಿನಲ್ಲಿ ಕೊರೆದ ಹದಿನಾರು ಅಡಿ ಎತ್ತರದ ಗಣೇಶನ ವಿಗ್ರಹವಿದೆ. ಇದನ್ನು ಕಡಲೆಕಾಳು ಗಣಪ ಎಂದು ಹೇಳುವರು. ಈ ಗುಡಿಯ ಹಿಂಭಾಗದಲ್ಲಿ ಎಂಟು ಅಡಿ ಎತ್ತರದ ಸಾಸಿವೆಕಾಳು ಗಣಪನ ಆಲಯವಿದೆ.

ಇ) ಹಂಪೆಯು ಎಲ್ಲಿದೆ?

ಉತ್ತರ: ಹಂಪೆಯು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ. 

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಮೂರು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

ಅ) ಹಂಪಿಯಲ್ಲಿ ನೂರು ಕಾಲು ಮಂಟಪ ಎಲ್ಲಿ ಇದೆ?

ಉತ್ತರ:ಹಂಪಿಯಲ್ಲಿಯ ವಿಠ್ಠಲ ದೇವಾಲಯದ ರಂಗಮಂಟಪದ ದಕ್ಷಿಣ ಭಾಗದಲ್ಲಿ ಒಂದು ಸುಂದರವಾದ ಕಲ್ಯಾಣ ಮಂಟಪವಿದೆ. ಇದಕ್ಕೆ ನೂರು ಕಾಲದ ಮಂಟಪವೆಂದು ಕರೆಯುತ್ತಾರೆ.

ಆ) ಹಂಪಿಯ ಇತಿಹಾಸದಲ್ಲಿ ಎರಡನೆಯ ಶ್ರೇಷ್ಠ ದೇವಾಲಯ ಯಾವುದು?

ಉತ್ತರ: ಹಂಪಿಯ ಇತಿಹಾಸದಲ್ಲಿ ಎರಡನೆಯ ಶ್ರೇಷ್ಠ ದೇವಾಲಯವೆಂದರೆ ಹಜಾರರಾಮನ ದೇವಾಲಯ.

ಪ್ರಶ್ನೆ ೩) ಕೆಳಗಿನ ಪ್ರಶ್ನೆಗಳಿಗೆ ೩-೪ ಸಾಲುಗಳಲ್ಲಿ ಉತ್ತರ ಬರೆಯಿರಿ.

ಅ) ವಿರೂಪಾಕ್ಷ ದೇವಾಲಯದ ಕುರಿತು ಬರೆಯಿರಿ.

ಉತ್ತರ: ಹಂಪೆಯಲ್ಲಿ ಭವ್ಯವಾಗಿ ಎತ್ತರವಾಗಿ ಕಂಗೊಳಿಸುವುದೇ ವಿರೂಪಾಕ್ಷ ದೇವಾಲಯದ ಗೋಪುರ ಇದೆ. ಈ ಗೋಪುರದ ಎತ್ತರ ಸುಮಾರು ೧೬೫ ಅಡಿ ಇದೆ ಮತ್ತು ೧೧ ಅಂತಸ್ತುಗಳಿಂದ ಕೂಡಿದೆ. ಈ ಗೋಪುರಕ್ಕೆ ಬಿಷ್ಟಪ್ಪಯ್ಯನ ಗೋಪುರವೆಂದು ಕರೆಯುವರು. ವಿರೂಪಾಕ್ಷ ದೇವಾಲಯದ ಬಳಿ ಹೇಮಕೂಟ ಗುಡ್ಡವಿದೆ. ಇಲ್ಲಿ ಕೆಲವು ಅಂದವಾದ ಪ್ರಾಚೀನ ಬಸದಿಗಳಿವೆ. ಒಂದೇ ಕಲ್ಲಿನಲ್ಲಿ ಕೊರೆದ ಹದಿನಾರು ಅಡಿ ಎತ್ತರದ ಗಣೇಶನ ವಿಗ್ರಹವಿದೆ ಅದಕ್ಕೆ ಕಡಲೆಕಾಳು ಗಣಪ ಎಂದು ಕರೆಯುವರು.

ಆ) ತುಂಗಭದ್ರ ನದೀತೀರದ ಮೇಲೆ ಯಾವ ಯಾವ ಗುಡಿಗಳಿವೆ?

ಉತ್ತರ: ತುಂಗಭದ್ರ ನದೀತೀರದ ಮೇಲೆ ವಿರೂಪಾಕ್ಷ ದೇವಾಲಯ, ಮಾತಂಗ ಪರ್ವತ, ಪಂಪಾವತಿ ದೇವಾಲಯದ ಮಹಾದ್ವಾರ, ರಥಬೀದಿ, ಹೇಮಕೂಟ ಪರ್ವತ, ಅಚ್ಯುತರಾಮನ ಗುಡಿಗಳಿವೆ

ಇ) ಬಡವಿಲಿಂಗದ ಬಗ್ಗೆ ಬರೆಯಿರಿ.

ಉತ್ತರ: ಹೇಮಕೂಟದಿಂದ ಮುಂದೆ ಹೋದರೆ ಶ್ರೀಕೃಷ್ಣನ ದೇವಾಲಯ ಇದೆ. ಇದರ ಎದುರಿನಲ್ಲಿ ಉಗ್ರ ನರಸಿಂಹನ ಗುಡಿ ಇದೆ. ಒಂದೇ ಕಲ್ಲಿನಲ್ಲಿ ತಯಾರಿಸಿದ ೨೨ ಅಡಿ ಎತ್ತರದ ಭವ್ಯ ನರಸಿಂಹ ವಿಗ್ರಹ ಇದೆ. ಇದರ ಪಕ್ಕದಲ್ಲಿ ಹದಿನಾರು ಅಡಿ ಎತ್ತರದ ಬೃಹತ್ ಲಿಂಗವಿರುವ ಶಿವಾಲಯವಿದೆ. ಇದಕ್ಕೆ ಬಡವಿಲಿಂಗ ಎನ್ನುವರು.

ಪ್ರಶ್ನೆ ೪) ಯೋಚಿಸಿ ಈ ಕೆಳಗಿನ ವಿಧಾನಗಳನ್ನು ಪೂರ್ಣಗೊಳಿಸಿರಿ.

ಅ) ಹಂಪೆಯಲ್ಲಿಯ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡಲು ಬಲು ಸೊಗಸು- ಇದರಂತೆ ಇಂತಹ ಕರ್ನಾಟಕದ ಇನ್ನಿತರ ಸ್ಥಳಗಳು = ಮೊರ್ಡೇಶ್ವರ ಸಮುದ್ರ ತೀರ.

ಆ) ವಾಸ್ತುಶಿಲ್ಪದ ಶ್ರೇಷ್ಟತೆಗೆ ಹಂಪಿಯಲ್ಲಿ ವಿಜಯವಿಠಲನ ಮಂದಿರವಿದೆ. ಇದರಂತೆ ಕರ್ನಾಟಕದ ಇನ್ನಿತರ ಪ್ರಸಿದ್ಧ ವಾಸ್ತುಶಿಲ್ಪದ ದೇವಾಲಯಗಳು= ಬೇಲೂರು, ಹಳೇಬೀಡು, ಶ್ರವಣಬೆಳಗೊಳ .

ಇ) ಜೈನಧರ್ಮದ ಮಂದಿರಗಳಿಗೆ 'ದಿ' ಎಂದು ಕರೆಯುತ್ತಾರೆ. ಅದರಂತೆ ಇನ್ನಿತರ ಧರ್ಮದ ಮಂದಿರಗಳಿಗೆ = ಹಿಂದೂ –ದೇವಾಲಯ/ಮಂದಿರ, ಮುಸಲ್ಮಾನ – ಮಸಜೀದ, ಕ್ರಿಸ್ತ – ಚರ್ಚು.

ಉಪಕ್ರಮ:

ಐತಿಹಾಸಿಕ ಸ್ಥಳಗಳಾದ ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡುಗಳಿಗೆ ಭೇಟಿ ನೀಡಿ ಚಿತ್ರಗಳನ್ನು ಸಂಗ್ರಹಿಸಿರಿ.

ದೇಶ ಸುತ್ತು ಇಲ್ಲವೆ ಕೋಶ ಓದು

ಥಟ್ಟನೆ ಹೇಳಿ:

ಹಸಿರು ಗಿಡದ ಮೇಲೆ ಮೊಸರು ಚಲ್ಲಿದೆ                - ಮಲ್ಲಿಗೆ

 

ವಿಭಕ್ತಿ ಪ್ರತ್ಯಯಗಳು

ನಾಮ ಪ್ರಕೃತಿಗಳ ಮುಂದೆ ಸೇರಿಕೊಂಡು ಬೇರೆ ಬೇರೆ ಅರ್ಥವನ್ನು ಉಂಟುಮಾಡುವ ಪ್ರತ್ಯಯಗಳಿಗೆ ವಿಭಕ್ತಿ ಪ್ರತ್ಯಯ' ಎಂದು ಹೆಸರು. ವಿಭಕ್ತಿ ಪ್ರತ್ಯಯಗಳಲ್ಲಿ ಒಟ್ಟು 8 ಪ್ರಕಾರಗಳಿದ್ದು ಅವುಗಳ ಪ್ರತ್ಯಯ ಹಾಗೂ ಉದಾಹರಣಗಳು ಈ ಕೆಳಗಿನಂತಿವೆ.

ಅ. ಕ್ರ.

ವಿಭಕ್ತಿಗಳ ಹೆಸರು

ಪ್ರತ್ಯಯಗಳು

ಉದಾಹರಣೆಗಳು

ಪ್ರಥಮಾ

ರಾಜನು

ದ್ವಿತೀಯಾ

ಅನ್ನು

ರಾಜನನ್ನು

ತೃತೀಯಾ

ಇಂದ

ರಾಜನಿಂದ

ಚತುರ್ಥಿ

ಗೆ, ಇಗೆ, ಕ್ಕೆ

ರಾಜನಿಗೆ

ಪಂಚಮಿ

ದೆಸೆಯಿಂದ

ರಾಜನ ದೆಸೆಯಿಂದ

ಷಷ್ಠಿ

ರಾಜನ

ಸಪ್ತಮಿ

ಅಲ್ಲಿ

ರಾಜನಲ್ಲಿ

ಸಂಭೋಧನೆ

, ಇರಾ

ರಾಜನೇ

 

 

 

೧೫. ಶಿವರಾಮ ಕಾರಂತರು

ಶಬ್ದಗಳ ಅರ್ಥ

ವಿಸ್ಮಯ ಆಶ್ಚರ್ಯ,                  ಪ್ರತಿಭೆ - ವಿಶೇಷ ಜ್ಞಾನ;

ಅಪಾರ – ಬಹಳಷ್ಟು                   ಉತ್ಕಟ - ಬಲವಾದ

ಶಬ್ದಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ಕಂಗೊಳಿಸು – ಹೊಳೆಯುವುದು/ ಮಿಂಚುವುದು

ನಿಗೂಢ – ಗುಪ್ತವಾದ

ಅನುಕ೦ಪ -

ಪ್ರಶ್ನೆ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಶಿವರಾಮ ಕಾರಂತರು ಯಾವಾಗ ಜನಿಸಿದರು?

ಉತ್ತರ: ಶಿವರಾಮ ಕಾರಂತರು ೧೦ ಅಕ್ಟೋಬರ್ ೧೯೦೨ ರಲ್ಲಿ ಜನಿಸಿದರು.

ಆ) ಶಿವರಾಮ ಕಾರಂತರ ಪ್ರಾಥಮಿಕ ವಿದ್ಯಾಭ್ಯಾಸ ಎಲ್ಲಿ ನಡೆಯಿತು?

ಉತ್ತರ: ಶಿವರಾಮ ಕಾರಂತರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟುರಾದ ಕೋಟದಲ್ಲಿ ನಡೆಯಿತು.

ಇ) ಶಿವರಾಮ ಕಾರಂತರು ಯಾವ ಪತ್ರಿಕೆಯನ್ನು ಆರಂಭಿಸಿದರು?

ಉತ್ತರ: ಶಿವರಾಮ ಕಾರಂತರು ತಮ್ಮ ಸಂಪಾದಕತ್ವದಲ್ಲಿ ೧೯೨೪ರಲ್ಲಿ ವಸಂತ ಎಂಬ  ಪತ್ರಿಕೆಯನ್ನು ಆರಂಭಿಸಿದರು.

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

ಅ) ಬಾಲ್ಯದಲ್ಲಿ ಶಿವರಾಮ ಕಾರಂತ ಅವರ ಮೇಲೆ ಪ್ರಭಾವ ಬೀರಿದವರು ಯಾರು?

ಉತ್ತರ: ಬಾಲ್ಯದಲ್ಲಿ ಶಿವರಾಮ ಕಾರಂತರ ಮೇಲೆ ಅಚ್ಚಳಿಯದ ಪ್ರಭಾವ ಬಿರಿದ್ದು ಇವರ ತಾಯಿ, ಅಜ್ಜಿ ಮತ್ತು ಹುಟ್ಟಿದ ಕೋಟ ಗ್ರಾಮದ ಸುಂದರ ಪರಿಸರ.

ಆ) ಕಾರಂತರು ಯಾರನ್ನು ವಿವಾಹವಾದರು?  

ಉತ್ತರ: ಕಾರಂತರು ಲೀಲಾ ಅವರನ್ನು ವಿವಾಹವಾದರು.

ಪ್ರಶ್ನೆ ೩) ಹೊಂದಿಸಿ ಬರೆದು ವಾಕ್ಯ ರಚನೆ ಮಾಡಿರಿ.

ಉದಾಹರಣೆ- ಕೋಟ ಇದು ಕಾರಂತರ ಜನ್ಮ ಸ್ಥಳವಾಗಿದೆ.

"ಆ" ಗುಂಪು                   "ಬ" ಗುಂಪು

ಅ) ಕೋಟ                     ಅ) ಮಾದರಿ ಶಾಲೆ

ಆ) ವಸಂತ                    ಆ) ಮೂಕಜ್ಜಿಯ ಕನಸುಗಳು

) ಬಾಲವನ                  ಇ) ಮಾಪತ್ರಿಕೆ

ಈ) ಜ್ಞಾನಪೀಠ ಪ್ರಶಸ್ತಿ                ಈ) ಕಾರಂತರ ನಿಧನ

ಉ) ೧೯೯೭                  ಉ) ಕಾರಂತರ ಜನ್ಮಸ್ಥಳ

ಉತ್ತರಗಳು: ಅ = ಉ, ಆ = ಇ, ಇ = ಅ, ಈ = ಆ, ಉ = ಈ

ವಾಕ್ಯಗಳು:    ಅ) ಕೋಟ ಇದು ಕಾರಂತರ ಜನ್ಮ ಸ್ಥಳವಾಗಿದೆ.

                ಆ) ವಸಂತ ಎಂಬುದು ಕಾರಂತ ಅವರು ಸಂಪಾದಿಸಿದ ಮಾಸಪತ್ರಿಕೆ ಆಗಿದೆ.

                ಇ) ಕಾರಂತರು ೧೯೩೪ ರಲ್ಲಿ ಪುತ್ತೂರಿನಲ್ಲಿ ಬಾಲವನ ಎಂಬ ಮಾದರಿ ಶಾಲೆಯನ್ನು ಪ್ರಾರಂಭಿಸಿದರು.

                ಈ) ೧೯೭೮ ರಲ್ಲಿ ಕಾರಂತರ ಮುಕ್ಕಜ್ಜಿಯ ಕನಸುಗಳು ಕೃತಿಗೆ ) ಜ್ಞಾನಪೀಠ ಪ್ರಶಸ್ತಿ ಲಭಿಸಿತು.

                ಉ) ೧೯೯೭ರಲ್ಲಿ ಕಾರಂತರ ನಿಧಾನವಾಯಿತು.

ಪ್ರಶ್ನೆ ೪) ಕೆಳಗಿನ ಶಬ್ದಗಳ ವಿಭಕ್ತಿಗಳನ್ನು ಗುರುತಿಸಿರಿ.

ಅ) ಅಣ್ಣನು = ಪ್ರಥಮಾ ವಿಭಕ್ತಿ                ಆ) ಮರವನ್ನು = ದ್ವಿತೀಯಾ ವಿಭಕ್ತಿ

ಇ) ಮನೆಯಿಂದ = ತೃತೀಯಾ ವಿಭಕ್ತಿ                 ಈ) ಹೊಲಕ್ಕೆ = ಚತುರ್ಥಿ ವಿಭಕ್ತಿ

ಉ) ಮಗುವಿನ = ಷಷ್ಟಿ ವಿಭಕ್ತಿ                         ಊ) ನೆಲದಲ್ಲಿ = ಸಪ್ತಮಿ ವಿಭಕ್ತಿ

ಎ) ಮಕ್ಕಳೇ = ಸಂಭೋಧನೆ                  ಏ) ಗಿಡದಿ೦ದ = ಪಂಚಮಿ ವಿಭಕ್ತಿ

ಉಪಕ್ರಮ:

ಜ್ಞಾನಪೀಠ ಪ್ರಶಸ್ತಿ ಪಡೆದವರ ಹೆಸರು ಬರೆದು ಅವರ ಭಾವಚಿತ್ರಗಳನ್ನು ಸಂಗ್ರಹಿಸಿರಿ

ಆಡುಮುಟ್ಟದ ಸೊಪ್ಪಿಲ್ಲ ಕಾರಂತರು ರಚಿಸದ ಸಾಹಿತ್ಯವಿಲ್ಲ

ಥಟ್ಟನೆ ಹೇಳಿ:

ಮೂರು ಕಣ್ಣುಂಟು ಮುಕ್ಕಣ್ಣನಲ್ಲ

ಜುಟ್ಟು ಉಂಟು ಮನುಷ್ಯನಲ್ಲ

ನೀರು ಉಂಟು ಬಾವಿಯಲ್ಲ. ನಾನ್ಯಾರು?                      -ತೆಂಗಿನಕಾಯಿ

ವ್ಯಾಕರಣ

ಕರ್ತೃ, ಕರ್ಮ, ಕ್ರಿಯಾಪದಗಳು:-

ಒಂದು ಮಾತಿನ ಪೂರ್ಣವಿಚಾರವನ್ನು ತಿಳಿಯಪಡಿಸುವ ಪದಗಳ ನಮೂಹವೇ ವಾಕ್ಯ ಎನಿಸುವುದು. ವಾಕ್ಯದಲ್ಲಿ ಮೊದಲು ಕರ್ತೃಪದ ಆಮೇಲೆ ಕರ್ಮಪದ ಕೊನೆಗೆ ಕ್ರಿಯಾಪದ ಹೀಗೆ ಒಂದು ಬಗೆಯ ಅನುಕ್ರಮದಲ್ಲಿ ಪದಗಳು ಬರುತ್ತವೆ. ಒಂದೊಂದುಸಲ ಕರ್ತೃ ಕರ್ಮಪದಗಳಲ್ಲಿ ಸ್ಥಾನಪಲ್ಲಟವಾಗಬಹುದು.

ಉದಾ: ಹುಡುಗರು ಆಟವನ್ನು ಆಡುತ್ತಾರೆ.

ಹುಡುಗರು - ಕರ್ತೃ

ಆಟವನ್ನು - ಕರ್ಮ

ಆಡುತ್ತಾರೆ. – ಕ್ರಿಯಾಪದ

16. ನನ್ನ ದೇಹದ ಬೂದಿ

                                                                -ದಿನಕರ ದೇಸಾಯಿ

ಕೆಳಗಿನ ಶಬ್ದಗಳ ಅರ್ಥವನ್ನು ಶಬ್ದಕೋಶದ ಸಹಾಯದಿಂದ ಹುಡುಕಿ ಬರೆಯಿರಿ.

ನೆಗೆದು – ಜಿಗಿದು              ಪುಷ್ಪ – ಸುಮ/ಹೂವು

ಕೊಳ – ಸರೋವರ           ಪಂಕಜ – ಕಮಲ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಬೂದಿಯು ಭತ್ತದ ಗದ್ದೆಯಲ್ಲಿ ಬಿದ್ದರೆ ಏನಾಗುತ್ತದೆ?

ಉತ್ತರ: ಬೂದಿ ಭತ್ತದ ಗದ್ದೆಯಲ್ಲಿ ಬಿದ್ದರೆ ಭತ್ತ ಬೆಳೆಗೆ ಗೊಬ್ಬರ ದೊರೆಯುವುದು ಹಾಗೂ ತೆನೆಗಳು ನೆಗೆದು ಬಂದರೆ ಕವಿ ತನ್ನ ಹುಟ್ಟು ಸಾವಿನಲ್ಲಿಯೂ ಧನ್ಯವಾಯಿತು ಎಂದು ತಿಳಿಯುತ್ತಾರೆ.

ಆ) ಬೂದಿ ಕೆಸರಿನಲ್ಲಿ ಕೂಡಿದಾಗ ಏನಾಗುತ್ತದೆ?

ಉತ್ತರ: ಬೂದಿ ಕೇಸರಿನಲ್ಲಿ ಕೂಡಿದರೆ ಕೊಳದಲ್ಲಿಯ ಪಂಕಜವು ಮೂಡುತ್ತದೆ.

) ನರಜನ್ಮ ಯಾವಾಗ ಸಾರ್ಥಕವಾಗುತ್ತದೆ?

ಉತ್ತರ: ನಮ್ಮ ದೇಹ ಸತ್ತ ಮೇಲಾದರೂ ಪರರ ಸೇವೆಗೆ ನಿಂತರೆ ನರಜನ್ಮ ಸಾರ್ಥಕವಾಗುತ್ತದೆ.

ಪ್ರಶ್ನೆ ೨) ಕೆಳಗಿನ ಕವಿತೆಯನ್ನು ಪೂರ್ಣಗೊಳಿಸಿರಿ.

ನನ್ನ ದೇಹದ ಬೂದಿ ಕೊಳದಲ್ಲಿ ಬೀರಿ ಬಿಡಿ,

ತಾವರೆಯು ದಿನದಿನವು ಅರಳುವಳ್ಳಿ

ಬೂದಿ ಕೇಸರನು ಕೂಡಿ ಹೊಸ ಪಂಕಜವು ಮೂಡೆ

ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಪ್ರಶ್ನೆ ೩) ಕೆಳಗಿನ ಶಬ್ದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಉಪಯೋಗಿಸಿರಿ.

ಅ) ದೇಹ: ದೇಹ ಜೀವಂತವಿದ್ದಾಗ ಇನ್ನೊಬ್ಬರ ಸಹಾಯ ಮಾಡಬೇಕು.

ಆ) ಹೊಳೆ: ಆಕಾಶದಲ್ಲಿ ಸಿಡಿಲು ಮಿಂಚು ಹೊಳೆಯುತ್ತಿದೆ.

ಇ) ತಾವರೆ: ಕೊಳದಲ್ಲಿ ಸುಂದರ ತಾವರೆಯು ಅರಳುತ್ತಿದೆ.

ಈ) ಸೇವೆ: ಜನ ಸೇವೆಯೇ ಜನಾರ್ಧನನ ಸೇವೆ.

ಉಪಕ್ರಮ:

ದೇಹದಾನದ ಮಹತ್ವವನ್ನು ಶಿಕ್ಷಕ/ಪಾಲಕರಿಂದ ಕೇಳಿ ತಿಳಿದುಕೊಳ್ಳಿರಿ.

ದೇಹದಾನ ಶ್ರೇಷ್ಠದಾನ

                ಥಟ್ಟನೆ ಹೇಳಿ:

        ನೆಲವನ್ನು ಅಗೆಯಲಿಲ್ಲ ಮಣ್ಣನ್ನು ತೆಗೆಯಲಿಲ್ಲ

        ಎಂಥ ಬರ ಬಂದರೂ ಬಾವಿ ಬತ್ತಲಿಲ್ಲ.

                                                -ಬಾಯಿ

ಅರ್ಜಿ ನಮೂನೆ

                                                        ಗ್ರಾಮಸ್ಥರು,

                                                                ಬಸವೇಶ್ವರ ಕಾಲನಿ,

                                                                          ವಾರ್ಡ್ ಕ್ರಮಾಂಕ ೦೧                                                           ಕನಕಪುರ

                                                                        ದಿನಾಂಕ :20-00-9009

ಗೆ,

ಸರಪ0ಚರು,

ಗ್ರಾಮ ಪಂಚಾಯತಿ

ಕನಕಪುರ.

        ವಿಷಯ: ನಿಯಮಿತ ನೀರು ಸರಬರಾಜು ಮಾಡುವ ಕುರಿತು.

                ಮಾನ್ಯರೆ,

        ನಾವು ಬಸವೇಶ್ವರ ಕಾಲನಿಯ ವಾರ್ಡ್ ಕ್ರಮಾಂಕ -೦೧ ರಲ್ಲಿಯ ಗ್ರಾಮಸ್ಥರು. ನಮ್ಮ ಓಣಿಯಲ್ಲಿರುವ ಪ್ರತಿಯೊಂದು ನೀರಿನ ನಳಕ್ಕೆ ಸರಿಯಾಗಿ ನೀರು ಬರುತ್ತಿಲ್ಲ. ಅಲ್ಲದೆ ನೀರು ಸರಬರಾಜು ಮಾಡುವ ಕೆಲವು ಪೈಪುಗಳು ಒಡೆದಿವೆ. ಅವುಗಳಲ್ಲಿ ಹೊಲಸು ಕೂಡಿಕೊಂಡು ನೀರು ಅಶುದ್ಧವಾಗುತ್ತಿದೆ. ಇದರಿಂದ ಹಲವಾರು ಜನರು ರೋಗ-ರುಜಿನಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ತಾವುಗಳು ಪ್ರತ್ಯಕ್ಷ ನೋಡಿ, ಅವುಗಳನ್ನು ರಿಪೇರಿ ಮಾಡಿಸಿ, ನಿಯಮಿತವಾಗಿ ಸ್ವಚ್ಛ ಹಾಗೂ ಶುದ್ಧ ನೀರಿನ ಪೂರೈಕೆ ಆಗುವಂತೆ ವ್ಯವಸ್ಥೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ.

        ಧನ್ಯವಾದಗಳು

                                        ಇಂತಿ ಗ್ರಾಮಸ್ಥರು

                ಹೆಸರು                                         ಸಹಿ

        ೧.    ..................................................    ....................

        ೨.    ...................................................    ...................

        ೩.    .....................................................   ...................

೧೭. ಪರಮವೀರ ಚಕ್ರ: ನಮ್ಮ ಮಹಾ ಸಾಹಸಿಗಳು

ಶಬ್ದಗಳ ಅರ್ಥ

ಬಲಿದಾನ - ಪ್ರಾಣ ತ್ಯಾಗ;        ಅಪರೂಪ – ವಿರಳ,     ಪ್ರಾಪ್ತ- ದೊರೆತ; ಪದಕ

ಶಬ್ದಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಬರೆಯಿರಿ.

ತೋಪು – ಯುದ್ಧಕ್ಕೆ ಬಳಸುವ ಸಾಧನ                       ಕಾಳಗ-ಯುದ್ಧ

ಪಲಾಯನ- ರಣಭೂಮಿ ಬಿಟ್ಟು ಓಡಿ ಹೋಗುವುದು           ಉಡ್ಡಾಣ – ಮೇಲೆ ಹಾರು

ಪ್ರಶ್ನೆ: ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ನಮ್ಮರಕ್ಷಣೆಗಾಗಿ ಯಾರು ಪ್ರಾಣದ ಬಲಿದಾನ ನೀಡುತ್ತಿದ್ದಾರೆ?

ಉತ್ತರ: ನಮ್ಮ ರಕ್ಷಣೆಗಾಗಿ ಗಡಿಯಲಿ ನಮ್ಮ ದೇಶದ ಎಷ್ಟೋ ಶೂರ ಸೈನಿಕರು ತಮ್ಮ ಪ್ರಣಾದ ಬಲಿದಾನ ನೀಡುತ್ತಿದ್ದಾರೆ.

ಆ) ಪರಮವೀರ ಚಕ್ರ ಪದಕದ ರಚನೆಯನ್ನು ಯಾರು ಮಾಡಿದ್ದಾರೆ?

ಉತ್ತರ: ಪರಮವೀರ ಚಕ್ರ ಪದಕದ ರಚನೆಯನ್ನು ಸಾವಿತ್ರಿಬಾಯಿ ಖಾನೋಲಕರ ಮಾಡಿದ್ದಾರೆ

ಇ) ಸಾಬ್ರಿ ವಿಮಾನಗಳು ಯಾವ ನಗರದ ಮೇಲೆ ದಾಳಿ ಮಾಡಿದವು?

ಉತ್ತರ: ಸಾಬ್ರಿ ವಿಮಾನಗಳು ಶ್ರೀನಗರದ ಮೇಲೆ ದಾಳಿ ಮಾಡಿದವು.  

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

ಅ) ಸಾವಿತ್ರಿಬಾಯಿ ಖಾನೋಲಕರ ಮೂಲ ಯಾವ ದೇಶದವರು ಇದ್ದರು?

ಉತ್ತರ: ಯುರೋಪ

ಆ) ಪರಮವೀರ ಚಕ್ರ ಪ್ರಾಪ್ತ ವೀರರ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ವೆಬಸಾಯಿಟ್ ಯಾವುದು?

ಉತ್ತರ: www.paramavirchakra.com

ಪ್ರಶ್ನೆ ೩) ಕೆಳಗಿನ ಶಬ್ದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬರೆಯಿರಿ.

ಅತ್ಯುಚ್ಚ: ಭಾರತದ ವೀರರಿಗೆ ಕೊಡಲಾಗುವ ಅತ್ಯುಚ್ಚ ಪುರಸ್ಕಾರ ಪರಮವೀರ ಚಕ್ರ.

ಗೌರವ : ಶಾಲೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಗೌರವಿಸಲಾಗುತ್ತದೆ.  

ಅಸಾಮಾನ್ಯ: ಮಹಾನ ವ್ಯಕ್ತಿಗಳು ಅಪಾರವಾದ ಅಸಾಮಾನ್ಯ ಕೆಲಸಗಳನ್ನು ಮಾಡಿರುತ್ತಾರೆ.

ಸಾಹಸ: ನಮ್ಮ ಶೂರ ಸೈನಿಕರು ಸಾಹಸದಿಂದ ಗಡಿಯಲ್ಲಿ ಹೋರಾಡುವರು.

ಪ್ರಶ್ನೆ ೪) ಕೆಳಗಿನ ವಾಕ್ಯಗಳಲ್ಲಿಯ ಕರ್ತೃ, ಕರ್ಮ, ಕ್ರಿಯಾಪದಗಳನ್ನು ಗುರುತಿಸಿರಿ.

ಅ) ತಾಯಿಯು ಅಡುಗೆಯನ್ನು ಮಾಡುತ್ತಾಳೆ.

ಕರ್ತೃ – ತಾಯಿ

ಕರ್ಮ –ಅಡುಗೆ

ಕ್ರಿಯಾಪದ – ಮಾಡುತ್ತಾಳೆ

ಆ) ಶಂಕರನು ಪುಸ್ತಕವನ್ನು ಓದುತ್ತಾನೆ.

ಕರ್ತೃ – ಶಂಕರನು

ಕರ್ಮ –ಪುಸ್ತಕ

ಕ್ರಿಯಾಪದ –ಓದುತ್ತಾನೆ

ಉಪಕ್ರಮ: ಯಾವ ಯಾವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಾಗ ಈ ಕೆಳಗಿನ ಪ್ರಶಸ್ತಿಗಳನ್ನು ಕೊಡಲಾಗುತ್ತದೆ ಎಂಬುದನ್ನು ಬರೆಯಿರಿ.

ಅರ್ಜುನ ಪ್ರಶಸ್ತಿ= ಕ್ರೀಡಾ ಕ್ಷೇತ್ರದಲ್ಲಿ

ಜ್ಞಾನಪೀಠ ಪ್ರಶಸ್ತಿ = ಸಾಹಿತ್ಯ ಕ್ಷೇತ್ರದಲ್ಲಿ

ದಾದಾಸಾಹೇಬ ಫಾಲ್ಕೆ ಪ್ರಶಸ್ತಿ = ಕಲಾ/ಚಲನಚಿತ್ರ/ ನಾಟ್ಯ ಕ್ಷೇತ್ರ

ಧೈರ್ಯಂ ಸರ್ವತ್ರ ಸಾಧನಂ

                ಥಟ್ಟನೆ ಹೇಳಿ:

        ಚೋಟುದ್ದ ರಾಜ ಮೋಟುದ್ದ ಕಿರೀಟ

        ಪರಂಥ ನರಿದರೆ ಭರಂತ ಉರಿಯುವುದು.

                                                -ಉತ್ತರ: ಬೆಂಕಿಕಡ್ಡಿ

18. ಬಿದಿರು ನಾನಾರಿಗಲ್ಲದವಳು

                                                                -ಶಿಶುನಾಳ ಶರೀಫ ಸಾಹೇಬರು

ಶಬ್ದಗಳ ಅರ್ಥ

ಮಹಾತ್ಮ - ಶ್ರೇಷ್ಠ;                    ಸುಂದರ - ಆಕರ್ಷಕ;

ಹಂದರ - ಚಪ್ಪರ;                     ಅಡ್ಲಿಗಿ - ಬಿದಿರಿನ ಬುಟ್ಟಿ

ಶಬ್ದಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ಬೆತ್ತ- ಬಿದಿರಿನ ಕಟ್ಟಿಗೆ                 ಅಂಬಿಗ – ದೋಣಿಯ ಚಾಲಕ /ನಾವಿಕ

ಪತ್ರಿ – ಎಲೆ                   ಪಲ್ಲಕ್ಕಿ – ದೇವರನ್ನು ಮೆರವಣಿಗೆ ಮಾಡುವ ಸಾಧನ

ದಂಡಗಿ – ದೇವರಿಗೆ ಅರ್ಪಿಸುವ ನೈವೇದ್ಯ

ವಿಶೇಷ ವಿಚಾರ

ಹಾಲುಗಂಬ - ಮದುವೆಯ ಹಂದರದಲ್ಲಿ ನಿಲ್ಲಿಸುವ ಒಂದು ದೀಪದ ಕಂಬ.

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಹುಟ್ಟುವಾಗಿನ ಬಿದಿರಿನ ರೂಪ ಯಾವುದು?

ಉತ್ತರ: ಬಿದಿರು ಹುಟ್ಟುವಾಗ ಹುಲ್ಲು ಇತ್ತು, ಆನಂತರ ಬೆಳೆದು ಮರವಾಯಿತು. ಮುಂದೆ ಸುಂದರ ಸ್ತ್ರೀಯರ ಕೈಗೆ ಧಾನ್ಯ ಕೇರುವ ಮರ ಆಯಿತು.

ಆ) ಅಂಬಿಗನಿಗೆ ಬಿದಿರು ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ?

ಉತ್ತರ: ಅಂಬಿಗನ ಕೈಯಲ್ಲಿ ಕೋಲಾಗಿ ದೋಣಿ ಮುಂದೆ ಸಾಗಲು ಹೊಟ್ಟಿನಂತೆ ಬಿದಿರು ಅಂಬಿಗನಿಗೆ ಸಹಾಯ ಮಾಡುತ್ತದೆ.

ಇ) ಶಿಶುನಾಳ ಶರೀಫರ ಕೈಯಲ್ಲಿ ಬಿದಿರು ಏನಾಗುತ್ತೇನೆಂದು ಹೇಳುತ್ತದೆ?

ಉತ್ತರ: ಶಿಶುನಾಳ ಶರೀಫ ಸಾಹೇಬರು ಈ ಪದ್ಯದಲ್ಲಿ ಬಿದಿರಿನ ಹಲವಾರು ರೂಪಗಳ ವರ್ಣನೆಯನ್ನು ಮಾಡಿರುತ್ತಾರೆ. ಬಿದಿರು ಹುಟ್ಟುತ್ತಾ ಹುಲ್ಲಾಗಿ ಬೆಳೆಯುತ್ತಾ ಮರವಾಗಿ ಹೆಣ್ಣು ಮಕ್ಕಳ ಕೈಗೆ ಕೇರುವ ಮರವಾಯಿತು. ಮುದುಕನ ಕೈಗೆ ಬಡಿಗೆ, ಮಹಾತ್ಮರ ಕೈಯೊಳಗಿನ ಬೆತ್ತವಾಯಿತು. ಈ ಬಿದಿರು ಅಂಬಿಗನಿಗೆ ಕೋಲು, ದೇವರಿಗೆ ದಂಡಿಗೆ, ನೀಟುಳ್ಳ ಹುಡುಗರಿಗೆ ಬೇಟೆಯ ಬಡಿಗೆ ಆಯಿತು. ಪಲ್ಲಕ್ಕಿ ದಂಡಿಗಿ, ಪತ್ರಿಗೆ ಬುಟ್ಟಿ, ಎಲ್ಲಮ್ಮನ ಗುಡ್ಡದಲ್ಲಿ ಅಡ್ಲಿಗಿಯಾಗಿ ಬಿದಿರು ರೂಪಗೋಳ್ಳುತ್ತದೆ. ಹಂದರಕ್ಕೆ ಹಾಲುಗಂಬವಾಯಿತು, ದಂಡಿ ಬಾಸಿಂಗವಾಯಿತು, ಮಠದೊಳಗೆ ಕಜ್ಜಾಯ ಬುಟ್ಟಿಯಾಯಿತು. ಬಿದಿರು ತಿಪ್ಪೆಯ ಕೆಳಗೆ ಬೆಳೆದರೂ ಕೂಡ ಸಿದ್ದರಾಮ ಶಿವಯೋಗಿಗೆ ನಂದಿ ಕೋಲಾಯಿತು. ಅಷ್ಟೇ ಏಕೆ ಶ್ರೀಕೃಷ್ಣ ದೇವರ ಕೈಯಲ್ಲೂ ಏಕದಾರಿ ಕೊಳಿವೆ/ಕೊಳಲು ಆಯಿತು.

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ

ಅ) ಬಿದಿರು ನಾನಾರಿಗಲ್ಲದವಳು ಈ ಕವಿತೆಯನ್ನು ಯಾರು ಬರೆದ್ದಿದ್ದಾರೆ?

ಉತ್ತರ: ಈ ಕವಿತೆಯನ್ನು ಶಿಶುನಾಳ ಶರೀಫ ಸಾಹೇಬರು ಬರೆದ್ದಿದ್ದಾರೆ.

ಆ) ಬಿದಿರು ಮಠದೊಳಗೆ ಏನಾಯಿತು?

ಉತ್ತರ: ಬಿದಿರು ಮಠದೊಳಗೆ ಕಜ್ಜಾಯ ಬುಟ್ಟಿಆಯಿತು.

ಪ್ರಶ್ನೆ ೩) ಬಿದಿರಿನಿಂದ ಆಗುವ ಉಪಯೋಗಗಳನ್ನು ಹೆಸರಿಸಿರಿ.

ಉತ್ತರ: ಬಿದಿರು ಹುಟ್ಟುತ್ತಾ ಹುಲ್ಲಾಗಿ ಬೆಳೆಯುತ್ತಾ ಮರವಾಗಿ ಹೆಣ್ಣು ಮಕ್ಕಳ ಕೈಗೆ ಕೇರುವ ಮರವಾಯಿತು. ಮುದುಕನ ಕೈಗೆ ಬಡಿಗೆ, ಮಹಾತ್ಮರ ಕೈಯೊಳಗಿನ ಬೆತ್ತವಾಯಿತು. ಈ ಬಿದಿರು ಅಂಬಿಗನಿಗೆ ಕೋಲು, ದೇವರಿಗೆ ದಂಡಿಗೆ, ನೀಟುಳ್ಳ ಹುಡುಗರಿಗೆ ಬೇಟೆಯ ಬಡಿಗೆ ಆಯಿತು. ಪಲ್ಲಕ್ಕಿ ದಂಡಿಗಿ, ಪತ್ರಿಗೆ ಬುಟ್ಟಿ, ಎಲ್ಲಮ್ಮನ ಗುಡ್ಡದಲ್ಲಿ ಅಡ್ಲಿಗಿಯಾಗಿ ಬಿದಿರು ರೂಪಗೋಳ್ಳುತ್ತದೆ. ಹಂದರಕ್ಕೆ ಹಾಲುಗಂಬವಾಯಿತು, ದಂಡಿ ಬಾಸಿಂಗವಾಯಿತು, ಮಠದೊಳಗೆ ಕಜ್ಜಾಯ ಬುಟ್ಟಿಯಾಯಿತು. ಬಿದಿರು ತಿಪ್ಪೆಯ ಕೆಳಗೆ ಬೆಳೆದರೂ ಕೂಡ ಸಿದ್ದರಾಮ ಶಿವಯೋಗಿಗೆ ನಂದಿ ಕೋಲಾಯಿತು. ಅಷ್ಟೇ ಏಕೆ ಶ್ರೀಕೃಷ್ಣ ದೇವರ ಕೈಯಲ್ಲೂ ಏಕದಾರಿ ಕೊಳಿವೆ/ಕೊಳಲು ಆಯಿತು.

ಪ್ರಶ್ನೆ ೪)  ಕೆಳಗಿನ ಕವಿತೆಯ ಸಾಲುಗಳನ್ನು ಪೂರ್ಣ ಮಾಡಿರಿ.

ಅಂಬಿಗನಿಗೆ ಕೋಲಾದೆ ದಂಡಿಗೆ ನಾನಾದೆ

ನೀಟುಳ್ಳ ಹುಡುಗರಿಗೆ ಬೇಟೆಯ ಬಡಿಗ್ಯಾದೆ.

ಪ್ರಶ್ನೆ ೫) ಕೆಳಗಿನ ಶಬ್ದಗಳನ್ನು ವಾಕ್ಯದಲ್ಲಿ ಹೇಳಿರಿ.

೧) ನಂದಿಕೋಲು: ಸಂಕ್ರಾಂತಿ ಜಾತ್ರೆಯಲ್ಲಿ ನಂದಿಕೋಲು ಆಡಿಸುತ್ತಾರೆ.

೨) ಮಹಾತ್ಮ: ಮಹಾನ ಕಾರ್ಯ ಮಾಡಿದವರಿಗೆ ಮಹಾತ್ಮ ಎಂದು ಹೇಳುವರು.

೩) ಪಲ್ಲಕ್ಕಿ: ಜಾತ್ರೆಯಲ್ಲಿ ವೀರಭದ್ರೇಶ್ವರನ ಪಲ್ಲಕ್ಕಿ ಮೆರವಣಿಗೆ ಮಾಡುತ್ತಾರೆ.

ಉಪಕ್ರಮ: ಬಿದಿರಿನಿಂದ ಬೇರೆ ಬೇರೆ ವಸ್ತುಗಳನ್ನು ತಯಾರಿಸಿರಿ

ಉದಾ:- ಪತಂಗ, ಆಕಾಶಬುಟ್ಟಿ, ಬೀಸಣಿಕೆ ಮುಂತಾದವು.

 ಗಿಡಮರ ಬೆಳೆಸಿ ಪರಿಸರ ಉಳಿಸಿ

 

                ಥಟ್ಟನೆ ಹೇಳಿ:

        ಅಡ್ಡ ಹಾರುವುದು ಪಕ್ಷಿಯಲ್ಲ

        ಅವಕ್ಕೆರಡು ಕೊಂಬುಗಳು ಬಸವನಲ್ಲ

        ಅದಕ್ಕೊಂದೆ ಬಾಲವಿದೆ ಹನುಮನಲ್ಲ

                                        -ಉತ್ತರ: ಗಾಳಿಪಟ

19. ಸೌರ ಕೊಡೆ

ಶಬ್ದಗಳ ಅರ್ಥ

ಅನಿಲ - ಹವೆ;                 ಪರಮಾಣು - ವಿಭಜಿಸಲಾಗದ ಕಣ

ಶಬ್ದಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ವಿಭಜನೆ – ಇಬ್ಭಾಗ ಮಾಡು                   ಅಸ್ತಿತ್ವ – ಉಳಿದುಕೊಂಡು ಇರುವುದು

ಪ್ರಚಂಡ – ಬಹು ದೊಡ್ಡ                       ಕೃತಿ – ಕಾರ್ಯ/ ಕೆಲಸ/ಪುಸ್ತಕ/ಸಾಹಿತ್ಯ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಓಝೋನ್ ಪದರವು ಜೀವಸಂಕುಲಕ್ಕೆ ಹೇಗೆ ಸಹಾಯ ಮಾಡುತ್ತದೆ?

ಉತ್ತರ: ಓಝೋನ್ ಪದರವು ಭೂಮಿಗೆ ಸೂರ್ಯನ ನೆರಳಾತೀತ ಕಿರಣಗಳು ತಗುಲದಂತೆ ರಕ್ಷಿಸುತ್ತವೆ. ಸೂರ್ಯನ ಅತಿ ನೀಲ /ನೇರಳೆ ಕಿರಣಗಳಿಂದ ಜೀವಸಂಕುಲವನ್ನು ರಕ್ಷಣೆ ಮಾಡುತ್ತದೆ.

ಆ) ಓಝೋನ ಅಣುಗಳನ್ನು ನಾಶಪಡಿಸುವ ಅನಿಲಗಳು ಯಾವುವು?

ಉತ್ತರ: ನೈಸರ್ಗಿಕವಾಗಿ ವಾತಾವರಣದಲ್ಲಿ ಸಾರಜನಕ, ಜಲಜನಕ ಹಾಗೂ ಕ್ಲೋರಿನಗಳು ಓಝೋನ್ ಅಣುಗಳನ್ನು ನಾಶಪಡಿಸುತ್ತವೆ.

ಇ) ಓಝೋನ್ ಮಹತ್ವವನ್ನು ಏಕೆ ತಿಳಿದುಕೊಳ್ಳಬೇಕು?

ಉತ್ತರ: ಓಝೋನ್ ಪದರದ ನಾಶವಾದರೆ ಪೃಥ್ವಿಯ ಅಪಾರ ಹಾನಿ ಆಗುತ್ತದೆ. ಆದ್ದರಿಂದ ನಮ್ಮ ಪೃಥ್ವಿಯ ಅಸ್ತಿತ್ವದ ರಕ್ಷಣೆಗಾಗಿ ಒಝೋನದ ರಕ್ಷಣೆ ಮಹತ್ವವನ್ನು ಅರಿತುಕೊಳ್ಳಬೇಕು.

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

ಅ) ವಾಯುಮಂಡಲ ಯಾವ ಯಾವ ಅನಿಲಗಳಿಂದ ನಿರ್ಮಾಣವಾಗಿದೆ?

ಉತ್ತರ: ವಾಯುಮಂಡಲವು ಸಾರಜನಕ, ಆಮ್ಲಜನಕ ಮತ್ತು ಅರ್ಗಾನ ಆವಿಗಳಿಂದ ನಿರ್ಮಾಣವಾಗಿದೆ.

ಆ) ಓಝೋನ್ ಪದರವು ನಾಶವಾಗಲು ಕಾರಣವೇನು?

ಉತ್ತರ: ಮಾನವನ ಅಹಿತಕರ ಚಟುವಟಿಕೆಗಳಿಂದಾಗಿ ವಾಯುಮಾಲಿನ್ಯ ಹೆಚ್ಚಾಗಿ ಓಝೋನ್ ಪದರವು ವೇಗವಾಗಿ ನಾಶವಾಗುತ್ತಿದೆ.

ಪ್ರಶ್ನೆ ೩) ಸರಿಯಾದ ಪದವನ್ನು ಹುಡುಕಿ ಬಿಟ್ಟಸ್ಥಳ ತುಂಬಿರಿ.

ಅ) ............. ವು ಹಲವಾರು ಅನಿಲಗಳ ಭಂಡಾರವಾಗಿದೆ. (ಭೂಮಂಡಲ, ಸೌರಮಂಡಲ, ಚಂದ್ರಮಂಡಲ)

ಆ) ಭೂಮಿಯಿಂದ ಸುಮಾರು .......... ಕಿಮೀ ಅಂತರದಲ್ಲಿ ಓಝೋನ್ ಪದರು ಇದೆ. (೧೦೦, ೮೦, ೨೦)

ಇ) ವಿಶ್ವ ಓಝೇನ ಸಂರಕ್ಷಣೆಯ ದಿನವೆಂದು ಆಚರಿಸಲಾಗುತ್ತದೆ. (ಸೆಪ್ಟೆಂಬರ್ ೧೬, ಜುಲೈ ೧೬, ಜನೆವರಿ ೧೬)

ಈ) ೧೯೯೨ ರಲ್ಲಿ ಭಾರತವು ........... ಒಪ್ಪಂದಕ್ಕೆ ಸಹಿ ಹಾಕಿತು.

(ಜಿನವಾ, ಈಜಿಪ್ತ, ಮಾಂಟ್ರಿಯಾಲ)

ಪ್ರಶ್ನೆ ೪) ಕೆಳಗಿನ ಪದಗಳನ್ನು ವಾಕ್ಯದಲ್ಲಿ ಬಳಸಿರಿ.

ಅ) ರಕ್ಷಿಸು: ಪೊಲೀಸರು ಜನರನ್ನು ದುಷ್ಟ ಜನರಿಂದ ರಕ್ಷಿಸುತ್ತಾರೆ.

ಆ) ಅಸಮತೋಲನ : ಯಾವುದೇ ಪದಾರ್ಥ ತೂಕ ಮಾಡುವಾಗ ತಕ್ಕಡಿಯು ಅಸಮತೋಲನ ಇರಬಾರದು.

ಇ) ಇಳುವರಿ :ಮಳೆ ಚೆನ್ನಾಗಿ ಆಗಿದ್ದರೆ ಹೊಲ ಹೆಚ್ಚು ಇಳುವರಿ ನೀಡುತ್ತದೆ.

ಈ) ಸಂಶೋಧನೆ :ವಿಜ್ಞಾನಿಗಳು ಸದಾ ಕಾಲ ಏನಾದರೊಂದು ಸಂಶೋಧನೆ ಮಾಡುತ್ತಿರುತ್ತಾರೆ.

ಆರೋಗ್ಯವೇ ಸಂಪತ್ತು

ಉಪಕ್ರಮ: ಭೂಕಂಪ, ಸುನಾಮಿ, ನೆರೆಹಾವಳಿ/ಮಹಾಪೂರ, ಚಂಡಮಾರುತ ಮುಂತಾದ ನೈಸರ್ಗಿಕ ವಿಪತ್ತುಗಳು ಬಗ್ಗೆ ಶಿಕ್ಷಕರಿಂದ / ಪಾಲಕರಿಂದ ಕೇಳಿ ತಿಳಿದುಕೊಳ್ಳಿರಿ.

 

 

        ಥಟ್ಟನೆ ಹೇಳಿ:

        ಕರಿಸೀರೆ ಉಟ್ಕಂಡು,

        ಕಾಲುಂಗರ ತೊಡ್ಕೊಂಡು

        ಮೇಲೆ ಹೋಗ್ತಾಳೆ,

        ಕೆಳಗೆ ಬರ್ತಾಳೆ

                                                ಉತ್ತರ: ಒನಕೆ

20. ಜನಸಂಖ್ಯಾ ಸ್ಫೋಟ

ಚಿಕ್ಕ ಸಂಗಾರ ಚೊಕ್ಕ ಸಂಸಾರ

 

ಉಪಕ್ರಮ: ಮೂಢನಂಬಿಕೆ ನಿರ್ಮೂಲನೆ ಕುರಿತು ಶಿಕ್ಷಕರ ಸಹಾಯದಿಂದ ಒಂದು ಕೋಲಾಜನ್ನು ತಯಾರಿಸಿರಿ.

 

                ಥಟ್ಟನೆ ಹೇಳಿ:

        ತೊಲೆಗಂಬಗಳ ಅಗತ್ಯವಿಲ್ಲ

        ಕಲ್ಲು ಮಣ್ಣು ಹಾಕಿಲ್ಲ

        ಕೆಳಗೆ ಬಾಗಿಲವಿರುವ

        ತೂಗುಮಂಚದಂತಿರುವ

        ನನ್ನರಮನೆ ಯಾವುದು?

                                                ಉತ್ತರ: ಗೀಜುಗನ ಗೂಡು

21. ಸುಗ್ಗಿ

 ಶಬ್ದಗಳ ಅರ್ಥ:

ಬೆಳಸಿ - ಹಾಲುಗಾಳು, ಸೀತನಿ,

ಮೇಟಿ - ಕಣದಲ್ಲಿ ನೆಟ್ಟಿದ ಕಂಬ,

ಕಣ - ರಾಶಿ ಮಾಡುವ ಸ್ಥಳ

ಕಂಕಿ - ಕಾಳಿಲ್ಲದ ತೆನೆ

ಶಬ್ದಕೋಶದ ಸಹಾಯದಿಂದ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.

ಸುಗ್ಗಿ – ಹೊಲದ ರಾಶಿ ಮಾಡುವ ಪ್ರಸಂಗ

ರೈತ – ಒಕ್ಕಲಿಗ              ಅಗೆ – ನೆಲವನ್ನು ಅಗೆಯುವುದು

ಅಭ್ಯಾಸ:  

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಸುಗ್ಗಿಯು ಏನನ್ನು ತಂದಿತು?

ಉತ್ತರ: ಸುಗ್ಗಿಯು ನಮ್ಮ ನಾಡಿನ ಜನಕ್ಕೆಲ್ಲ ಹಿಗ್ಗನ್ನು ತಂದಿತು.

ಆ) ಸುಗ್ಗಿಯು ರೈತನಿಗೆ ಯಾವ ಸುಖವನ್ನು ನೀಡುತ್ತದೆ?

ಉತ್ತರ: ಸುಗ್ಗಿಯು ರೈತರಿಗೆ ಸಗ್ಗದ(ಸ್ವರ್ಗದ) ಸುಖವನ್ನು ನೀಡುತ್ತದೆ.

ಇ) ರೈತನು ಯಾವ ರೀತಿ ಸುಖವಾಗಿ ಇರುತ್ತಾನೆ?

ಉತ್ತರ: ರೈತನು ಬೆಳೆಸಿಯ ತಿನ್ನುತ್ತಾ ಮಜ್ಜಿಗೆ ಕುಡಿಯುತ್ತಾ ಹೊಲದಲ್ಲಿ ಬೇಸಾಯ ಮಾಡುತ್ತಾ ಸುಖದಲ್ಲಿ ಇರುತ್ತಾನೆ.

ಪ್ರಶ್ನೆ ೨) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.

ಅ) ರೈತನು ಹೊಲದಲ್ಲಿ ಮೇಟಿಯ ಕುಣಿ ಹೇಗೆ ಅಗೆಯುವನು?

ಉತ್ತರ: ಕನವನ್ನು ಕಡಿಯುತ ನೀರನ್ನು ಹೊಡೆಯುತ್ತಾ ರೈತನು ಮೇಟಿಯ ಕುಣಿಯನ್ನು ಅಗೆಯುವನು.

ಆ) ರೈತ ಹಾಡನ್ನು ಯಾವಾಗ ಹಾಡುವನು?

ಉತ್ತರ: ರೈತ ಹಂತಿ ಹೊಡೆಯುವಾಗ ಹಾಡನ್ನು ಹಾಡುವನು. 

ಸುಗ್ಗಿಯು ಬಂದಿತು ಹಿಗ್ಗನು ತಂದಿತು        ತಂದಿತು

                ಥಟ್ಟನೆ ಹೇಳಿ:

                ಹಗಲಲ್ಲಿ ಅರಳುವ ಹಕ್ಕಿ ರಾತ್ರಿಯಲ್ಲಿ ಮಲಗುವ ಹಕ್ಕಿ

                                                      -ಸೂರ್ಯಕಾಂತಿ 



ಕಾಮೆಂಟ್‌‌ ಪೋಸ್ಟ್‌ ಮಾಡಿ

3 ಕಾಮೆಂಟ್‌ಗಳು

  1. ನೀವು ಕಳಿಸುತ್ತರುವ ಪ್ರಶ್ನೋತ್ತರಗಳು ಎಲ್ಲರಿಗೂ ತುಂಬಾ ಉಪಯುಕ್ತವಾಗಿವೆ ನಿಮಗೆ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಮುಂದಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಳಿಸಿದರೆ ತುಂಬಾ ಉಪಕಾರವಾಗುತ್ತದೆ.

    ಪ್ರತ್ಯುತ್ತರಅಳಿಸಿ

ಧನ್ಯವಾದಗಳು