ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಭಾಷಣ ಕೌಶಲ್ಯ

  ಬೀಳ್ಕೊಡುವ ಸಮಾರಂಭದಲ್ಲಿ ವಿದ್ಯಾರ್ಥಿಗಳು ಹೇಗೆ ಸೂತ್ರ ಸಂಚಲನೆ ಮಾಡಬೇಕು?  ಇಲ್ಲಿ ಒಂದು ಮಾದರಿ ಸೂತ್ರ ಸಂಚಲನೆ ಕೊಡಲಾಗಿದ್ದು ವಿದ್ಯಾರ್ಥಿಗಳು-ಶಿಕ್ಷಕರು ಇದರಲ್ಲಿ ಬದಲಾವಣೆ ಮಾಡಿ ತಮ್ಮ ಶಾಲೆಯ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಬಹುದು



ಬೀಳ್ಕೊಡುವ ಸಮಾರಂಭದ ನಿರೂಪಣೆ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ

ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ

          ಆತ್ಮೀಯರೇ, .

          ವಿಘ್ನ ವಿನಾಶಕ, ಗಣಾದಿ ಗಣಗಳ ರಾಜ ಬುದ್ಧಿ ದೇವತಾ ಗಣೇಶನನ್ನು ಸ್ಮರಿಸುತ್ತ, ನಮ್ಮ ಊರಿನ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಮಾತೆಗೆ ಶಿರಬಾಗಿ ವಂದನೆಗಳನ್ನು ಸಲ್ಲಿಸುತ್ತಾ ಇಂದು ನಮ್ಮ ಶಾಲೆಯಲ್ಲಿ

ಛಾತ್ರ ಅಧ್ಯಾಪಕ ದಿನಾಚರಣೆ ಹಾಗೂ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ

ವನ್ನು ಏರ್ಪಡಿಸುತ್ತಿದ್ದೇವೆ.  

          ಒಂದನೆಯ ತರಗತಿಯಿಂದ ಎಂಟನೆಯ ತರಗತಿಯ ವರೆಗೆ ನಮ್ಮ ಜೊತೆಗಿದ್ದು ನಮ್ಮ ಒಡನಾಡಿಯಾಗಿ ನಮಗೆ ಆದರ್ಶ ಪ್ರಾಯರಾಗಿ ಮಾರ್ಗದರ್ಶಕರಾಗಿ ಹಿರಿಯ ಅಕ್ಕಂದೀರಂತೆ ಹಿರಿಯ ಸಹೋದರರಂತೆ ಇರುವ ನಮ್ಮ ಶಾಲೆಯ 8ನೇ  ವಿದ್ಯಾರ್ಥಿಗಳಿಗೆ ನಾವು 7ನೇ ತರಗತಿಯ ವಿದ್ಯಾರ್ಥಿಗಳು ಈ ಶಾಲೆಯಿಂದ ಹೃಯದಯಪೂರ್ವಕವಾಗಿ ಬೀಳ್ಕೊಡುತ್ತಿದ್ದೇವೆ.

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಾ

ಗುರು ಸಾಕ್ಷಾತ: ಪರಬ್ರಹ್ಮ

ತಸ್ಮೇ ಶ್ರೀಗುರುವೇ ನಾಮ:

          ಗು- ಅಂದರೆ ಕತ್ತಲೆ  ರು- ಅಂದರೆ ತೊಲಗಿಸು, ಕತ್ತಲೆಯನ್ನು ದೂರ ಮಾಡುವವನು, ನಮ್ಮ ಬದುಕಿನಲ್ಲಿ ಅಜ್ಞಾನದ ಕತ್ತಲೆಯನ್ನು ದೂರ ಸರಿಸಿ ಜ್ಞಾನದ ಬೆಳಕು ಚೆಲ್ಲಿ ನಮ್ಮ ಬದುಕು ಸರ್ವಾಂಗ ಸುಂದರ ಮಾಡಿರುವ ಗುರು ವೃಂದಕ್ಕೆ ಸ್ಮರಿಸುತ್ತ ನಮ್ಮ ಎಲ್ಲ ಶಿಕ್ಷಕರ ಪಾದಗಳಿಗೆ ಶಿರ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತಾ ಇಂದಿನ ಕಾರ್ಯಕ್ರಮದ ಆರಂಭ ಸ್ವಾಗತ ಮತ್ತು ಅತಿಥಿಗಳ ಸತ್ಕಾರದೊಂದಿಗೆ  ಮಾಡೋಣ.

          ಅಧ್ಯಕ್ಷರ ಆಯ್ಕೆ

          ಇಂದಿನ ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ನಮ್ಮೂರಿನ ಹಿರಿಯರು/ಸರಪಂಚರು ಶ್ರೀ/ಶ್ರೀಮತಿ ...........................

 ............................................. ಇವರು ವಹಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.

          ಅನುಮೋದನೆ:

          ಇದೀಗ ನನ್ನ ಗೆಳೆತಿ ಸೂಚಿಸಿದ ಅಧ್ಯಕ್ಷೀಯ ಸೂಚನೆಗೆ ನಮ್ಮ ಶಾಲೆಯ ಪರವಾಗಿ ಸಂಪೂರ್ಣ ಅನುಮೋದನೆ ಇರುತ್ತದೆ.

          ಪ್ರಮುಖ ಉಪಸ್ಥಿತಿ: ಈ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾಗಿ/ಪ್ರಮುಖ  ಅತಿಥಿಯಾಗಿ ಆಗಮಿಸಿದ

          1)...............................................................................

          2)............................................................................... ಇವರಿಗೆಲ್ಲರಿಗೂ ಹೃದಯಪೂರ್ವಕ ಸ್ವಾಗತವನ್ನು ಕೋರುತ್ತೇನೆ.

ದೀಪ ಪ್ರಜ್ವಲನೆ ಮತ್ತು ಫೋಟೋ ಪೂಜನ

ದೀಪದಿಂದ ದೀಪವ ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

ಮನಸಿನಿಂದ ಮನಸನು ಬೆಳಗಬೇಕು ಮಾನವ

ಮೇಲು ಕೀಳು ಭೇದ ನಿಲ್ಲಲು

ಭೇದವಿಲ್ಲ ಬೆಂಕಿಗೆ, ದ್ವೇಷವಿಲ್ಲ ಬೆಳಕಿಗೆ

ನೀ ತಿಳಿಯೋ, ನೀ ತಿಳಿಯೋ

 ಎಂಬಂತೆ ಅಜ್ಞಾನದ ಅಂಧಕರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನಮ್ಮ ಬದುಕಿನಲ್ಲಿ ಬೆಳಗಿಸಿ ನಮ್ಮನ್ನು ಉದ್ಧರಿಸಿದ ನಮ್ಮ ಪೂಜ್ಯ ಗುರುವೃಂದಕ್ಕೆ ವಂದನೆಗಳು. ,

          ಇಂದಿನ ಕಾರ್ಯಕ್ರಮದ ಅಧ್ಯಕ್ಷರು ಮತ್ತು ಮುಖ್ಯ ಅತಿಥಿಯರಿಗೆ ವಿನಂತಿಸಿಕೊಳ್ಳುವುದೇನೆಂದರೆ ಅವರು ಡಾ.ಬಾಬಾಸಾಹೇಬ ಅಂಬೇಡಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಪ್ರಜ್ವಲನೆ ಮಾಡಬೇಕು.

          (ಫೋಟೋ ಪೂಜಾಮಾಡುವಾಗ) ಶಿಕ್ಷಣ ಅನ್ನುವುದು ಹುಲಿಯ ಹಾಲು ಇದ್ದಂತೆ, ಅದನ್ನು ಕುಡಿದವರು ಗರ್ಜಿಸದೇ ಇರಲಾರದು. ಎಂದು ಹೇಳಿದ ಮಹಾಮಾನವ ಡಾ. ಬಾಬಾಸಾಹೇಬ ಅಂಬೇಡಕರ ಅವರ ವಿಚಾರದಂತೆ ನಮ್ಮ ಗುರುಗಳು ನಮಗೆ ಅನ್ಯಾಯದ ವಿರುದ್ಧ ಸಿಡಿದು ನಿಲ್ಲುವಂತೆ ಧೈರ್ಯ ತುಂಬಿದ್ದಾರೆ.  ವಿದ್ಯೆ ವಿನಯದಿಂದ ಶೋಭಿಸುತ್ತದೆ. ನಾವು ಸಮಾಜದಲ್ಲಿ  ನಯ, ವಿನಯ, ಶಾಂತಿ, ಸಹನೆ, ಸತತ ಪ್ರಯತ್ನ ಮತ್ತು ಎಲ್ಲರೊಂದಿಗೆ ಒಂದಾಗಿ ಬದುಕುವ ಭಾವನೆ ಇಟ್ಟುಕೊಳ್ಳೋಣ.              ಪೂಜೆ ಸಲ್ಲಿಸಿದ ಎಲ್ಲ ಮಹಾನಿಯರಿಗೆ ಧನ್ಯವಾದಗಳು.

ಈಗ ಪ್ರಮುಖ ಅತಿಥಿಗಳ ಸತ್ಕಾರ ಸಮಾರಂಭ

1. ಇಂದಿನ ಕಾರ್ಯಕ್ರಮದ ಅಧ್ಯಕ್ಷರಾಗಿ ಲಭಿಸಿದ ಶ್ರೀ. ................................................................. ಇವರ ಸತ್ಕಾರ ನಮ್ಮ ಶಾಲೆಯ ಹಿರಿಯ ಶಿಕ್ಷಕರು ಶ್ರೀ ............... ಸರ ಇವರು ಸನ್ಮಾನ ಮಾಡಬೇಕಾಗಿ ವಿನಂತಿ.

2. ಇಂದಿನ ಕಾರ್ಯಕ್ರಮದ ಪ್ರಮುಖ ಅತಿಥಿಯಾಗಿ ಲಭಿಸಿದ ಶ್ರೀ. ................................................................. ಇವರ ಸತ್ಕಾರ ನಮ್ಮ ನೆಚ್ಚಿನ ಶಿಕ್ಷಕರಾದ ಶ್ರೀ ................ ಸರ ಇವರು ಸನ್ಮಾನ ಮಾಡಬೇಕಾಗಿ ವಿನಂತಿ.

3. ಇಂದಿನ ಕಾರ್ಯಕ್ರಮದ ಮಾರ್ಗದರ್ಶಕರಾಗಿ ಲಭಿಸಿದ ಶ್ರೀಮತಿ. ................................................................. ಇವರ ಸತ್ಕಾರ ನಮ್ಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ .................ಮೇಡಂ ಇವರು ಸನ್ಮಾನ ಮಾಡಬೇಕಾಗಿ ವಿನಂತಿ.

          ಸ್ನೇಹಿತರೇ,

           ಮನೆಯಲ್ಲಿ ಮೂರು ಮಕ್ಕಳು ರಂಪಾಟ ಮಾಡುತ್ತಿದ್ದರೆ ನಮ್ಮ ತಾಯಿ-ತಂದೆಯರಿಗೆ ಬೇಜಾರಾಗುತ್ತದೆ. ಶಾಲೆಯಲ್ಲಿ  ನಮ್ಮಂಥ ನೂರು ಮಕ್ಕಳ ಕಿರಿಕಿರಿ ಸಹಿಸಿಕೊಂಡು ಸಮಯ ಬಂದಾಗ ಎರಡು ಛಡಿ ಏಟು ಕೊಟ್ಟು ನಮ್ಮನ್ನು ಅಕ್ಷರ ಕಲಿಸಿ ವಿವಿಧ ಕಲಾ ಕೌಶಲ್ಯಗಳನ್ನು ಕಲಿಸಿ ವ್ಯವಹಾರಜ್ಞಾನ ನೀಡಿ ಸಮಾಜದಲ್ಲಿ ಒಳ್ಳೆಯ ನಾಗರಿಕರನ್ನಾಗಿಸಲು ಹಗಲಿರುಳು ಶ್ರಮ ಪಡುವ ನಮ್ಮ ಪ್ರಾಥಮಿಕ ಶಾಲೆಯ ಎಲ್ಲ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ನೆರವೇರಿಸೋಣ. ಅವರು ನೀಡಿದ ಒಳ್ಳೆಯ ಸಂಸ್ಕಾರದಿಂದಲೇ ನಾವು ಸಮಾಜದಲ್ಲಿ ಗುರುತಿಸಿಕೊಳ್ಳುವವರಿದ್ದೇವೆ. ಈ ಮೂಲಕ ನಾವು ನಮ್ಮ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸೋಣ.  

ಗುರು ವಂದನಾ ಕಾರ್ಯಕ್ರಮ

          ಮೊದಲಿಗೆ ನಮ್ಮ ಶಾಲೆಯ ಮುಖ್ಯಾದ್ಯಾಪಕರು ಹಾಗೂ ತೊಳನುರ ಕೇಂದ್ರದ ಕೇಂದ್ರ ಪ್ರಮುಖರಾದ ನಮ್ಮ ನೆಚ್ಚಿನ ಗುರುಗಳು ಶ್ರೀ ವಿದ್ಯಾಧರ ಗುರವ ಸರ ಇವರಿಗೆ ಛಾತ್ರ ಶಿಕ್ಷಕ ಪವನ ಪೂಜಾರಿ ಹೂಗುಚ್ಛ ನೀಡಿ ಸನ್ಮಾನ ಮಾಡಬೇಕು.

          ನಮ್ಮ ಶಾಲೆಯ ಹಿರಿಯ ಶಿಕ್ಷಕಿಯರು ನಮ್ಮನ್ನು ಸದಾ ಮಾತೆಯ ಸ್ಥಾನದಲ್ಲಿದ್ದು ತಾಯಿಯ ಮಮತೆ ನೀಡಿದ ಸುನಂದಾ ಖಜುರ್ಗಿ ಮೇಡಂ ಇವರಿಗೆ ಛಾತ್ರ ಅಧ್ಯಾಪಕಿ ದಿವ್ಯಾ ಚವ್ಹಾಣ ಹೂಗುಚ್ಛ ಕೊಟ್ಟು ಸನ್ಮಾನ ಮಾಡಬೇಕು.

          ಅದೇ ರೀತಿಯಾಗಿ ನಮ್ಮ ಶಾಲೆಯ ಹಿರಿಯ ಶಿಕ್ಷಕರು ಶ್ರೀ .................................... ಸರ ಇವರ ಸನ್ಮಾನ ದರ್ಶನ  ಮಾಡಬೇಕು.

          ................................... ಗುರುಗಳ ಸನ್ಮಾನವನ್ನು ...................................ಕು. ಧರೇಶ  ಈ ಛಾತ್ರ ಅಧ್ಯಾಪಕ ಮಾಡಬೇಕು.

       ......................... ಸರ ಇವರನ್ನು ಖಾಜಪ್ಪ ..........ಸನ್ಮಾನಿಸಬೇಕು.

          ಅದೇ ರೀತಿಯಾಗಿ ಶ್ರೀ ........................... ಗುರುಗಳ ಸನ್ಮಾನ ರಾಮಚಂದ್ರ  ಮಾಡಬೇಕು.

ಸವಿ ನೆನಪಿನ ಕಾಣಿಕೆ ಅರ್ಪಣೆ

               ನಮ್ಮ ಜಿ. ಪ. ಪ್ರಾಥಮಿಕ ಕನ್ನಡ ಶಾಲೆ ಬಬಲಾದ ಇಲ್ಲಿ 1 ರಿಂದ 8ನೇ ತರಗತಿಯ ವರೆಗೆ ಶಿಕ್ಷಣ ಪಡೆದು ಇಂದು ಬೀಳ್ಕೊಡುತ್ತಿರುವ ಎಲ್ಲ ಸಹೋದರ-ಸಹೋದರಿಯರು ನಮ್ಮ ಶಾಲೆಗೆ  ತಮ್ಮ ಪ್ರೀತಿಯ ಪ್ರತೀಕವೆಂದು ಸವಿ ನೆನಪಿನ ಕಾಣಿಕೆಯಾಗಿ ಒಂದು ಒಳ್ಳೆಯ branded Sound System ಬ್ಲೂಟುತ್ ಮೈಕ್ ಇರುವ Home ಥಿಯೇಟರ್

ನೀಡುತ್ತಿದ್ದಾರೆ.  ಇದು ಎಂಟನೆಯ ತರಗತಿಯ ಎಲ್ಲ ವಿದ್ಯಾರ್ಥಿಗಳ ವತಿಯಿಂದ ಶಾಲೆಗೆ gift ಕೊಡಲಾಗುತ್ತಿದ್ದು ತುಂಬಾ ಉಪಯೋಗಕ್ಕೆ ಬರುವ ಸಾಧನವಾಗಿದೆ. ಎಲ್ಲ 8 ನೇ ತರಗತಿಯ ಬಂಧು ಭಗಿನಿಯರಿಗೆ ಧನ್ಯವಾದಗಳು.

ಈಗ ವಿದ್ಯಾರ್ಥಿಗಳ ಭಾಷಣಗಳು

          ಈಗ ತಾವು ಕಲಿತ ಶಾಲೆಯಿಂದ ಬೀಳ್ಕೊಡುವಾಗ ತಮ್ಮ ಮನದಾಳದಲ್ಲಿ ಉಕ್ಕುವ ಭಾವನೆಗಳಿಗೆ ದಾರಿ ಮಾಡಿಕೊಡಲು ಬರುತ್ತಿದ್ದಾಳೆ ಕು...............................................................................................

          ಕು. ........................................................................................................................

ಹಿರಿಯ ಭಾಂಧವರಿಗೆ ಬೀಳ್ಕೊಡುವಾಗ ನಮಗೂ ದು:ಖವಾಗುತ್ತಿದೆ. ...ನಮಗೆ ನಮ್ಮ ಶಿಕ್ಷಕರು 7ನೇ ಹಾಗೂ 8ನೇ ತರಗತಿಗಳು ಎಂದೂ ಬೇರೆ ಬೇರೆಯಾಗಿ ಕಲಿಸುತ್ತಿರಲಿಲ್ಲ. ನಾವೆಲ್ಲರೂ ಒಂದೇ ವರ್ಗದ ವಿದ್ಯಾರ್ಥಿಗಳಂತೆ. ಎರಡೂ ವರ್ಗದ ಅಭ್ಯಾಸಕ್ರಮ ಸಮಾನವಾಗಿದ್ದು ಎರಡೂ ವರ್ಗದ ವಿದ್ಯಾರ್ಥಿಗಳು ಲಕ್ಷ್ಯ ಕೊಡಿರಿ ಎಂದು ನಮ್ಮ ವರ್ಗ ಶಿಕ್ಷಕರಾದ ಶ್ರೀ ............ ಸರ್ ಹೇಳುತ್ತಿದ್ದರು. ಗಣಿತ ಹಾಗೂ ಇಂಗ್ಲೀಷ ವಿಷಯಗಳನ್ನು ಕೂಡಿಯೇ ಕಲಿಸುತ್ತಿದ್ದರು.  ಇಷ್ಟು ದಿನ ಕೂಡಿದ್ದವರು ಇನ್ನೂ ಮುಂದೆ ನೀವು ಈ ಶಾಲೆಗೆ ಬರುವುದಿಲ್ಲವಲ್ಲ ಎಂದು ನಮಗೂ ಖೇದವೆನಿಸುತ್ತಿದೆ. ನಿಮ್ಮನ್ನು ಬೀಳ್ಕೊಡುವ ಈ ಪ್ರಸಂಗದಲ್ಲಿ ಕು. ...................................   ತನ್ನ ಮನದಿಂಗೀತವನ್ನು ತೋಡಿಕೊಳ್ಳಲು ಬರುತ್ತಿದ್ದಾಳೆ.

ಈಗ ಕು. ............................................................................... ತನ್ನ ಅನಿಸಿಕೆಯನ್ನು ಹೇಳಬೇಕೆಂದು ಕೇಳಿಕೊಳ್ಳುತ್ತೇನೆ.

ಗುರುಗಳ ಮಾರ್ಗದರ್ಶನ

               ಮೊಟ್ಟ ಮೊದಲಿಗೆ ನಮ್ಮ ವರ್ಗ ಶಿಕ್ಷಕರು ಶ್ರೀ ದಿನೇಶ ಚವ್ಹಾಣ ಸರ್ ಮಾರ್ಗದರ್ಶನ ಮಾಡಬೇಕೆಂದು ಕೋರಿಕೆ.

          ಧನ್ಯವಾದಗಳು ಸರ.

          ನಮ್ಮ ಶಾಲೆಯ ಹಿರಿಯ ಶಿಕ್ಷಕಿಯರು  ಶ್ರೀಮತಿ ....................... ಮೇಡಂ  ಮಾರ್ಗದರ್ಶನ ಮಾಡಬೇಕೆಂದು ಕೋರಿಕೆ

.........................

          ಧನ್ಯವಾದಗಳು ಮೇಡಂ.

          ನಮ್ಮ ನೆಚ್ಚಿನ  ಶಿಕ್ಷಕರು ಶ್ರೀ .................................. ಸರ್ ಮಾರ್ಗದರ್ಶನ ಮಾಡಬೇಕೆಂದು ಕೋರಿಕೆ.

          ಧನ್ಯವಾದಗಳು ಸರ.

          ಇದಾದನಂತರ ಶ್ರೀ. ............................ಸರ್ ಮಾರ್ಗದರ್ಶನ ಮಾಡಬೇಕೆಂದು ಕೋರಿಕೆ.

          ಧನ್ಯವಾದಗಳು ಸರ.    

          (ಸಮಯ ನೋಡಿ ಪ್ರಮುಖ ಉಪಸ್ಥಿತಿ, ಮಾರ್ಗದರ್ಶಕರ ಭಾಷಣವನ್ನೂ ತೆಗೆದುಕೊಳ್ಳಬೇಕು)

ಅಧ್ಯಕ್ಷೀಯ ಭಾಷಣ

          ಈ ಛಾತ್ರ ಅಧ್ಯಾಪಕರ ದಿನಾಚರಣೆ ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಅಧ್ಯಕ್ಷರಾದ ಶ್ರೀ. ............................................................ ಇವರು ನಮಗೆ ಕೆಲವು ಹಿತ ನುಡಿಗಳನ್ನು ಹೇಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.

          ಧನ್ಯವಾದಗಳು ಮಹನೀಯರೆ, ನಿಮ್ಮ ಮಾರ್ಗದರ್ಶನ ನಮಗೆ ಸದಾ ದಾರಿ ದೀಪವಾಗುವುದು.

 

ವಂದನಾರ್ಪಣೆ ಕಾರ್ಯಕ್ರಮ

          ಕೊನೆಯದಾಗಿ ವಂದನಾರ್ಪಣೆ ಕಾರ್ಯಕ್ರಮ ಅಂದರೆ ಆಭಾರ ಪ್ರದರ್ಶನೆ ಕಾರ್ಯಕ್ರಮವನ್ನು ನಮ್ಮ ಸಹಪಾಠಿ ಸಹೋದರ ........................................  ನೆರೆವೇರಿಸಿ ಕೊಡಬೇಕೆಂದು ಅವನನ್ನು ಕೇಳಿಕೊಳ್ಳುತ್ತೇನೆ.   

 

 

 

 

ವಂದನಾರ್ಪಣೆ

          ಕೂಡುವುದು ಆಕಷ್ಮಿಕ ಆದರೆ ಅಗಲುವುದು ಅನಿವಾರ್ಯ. ಮಾತ್ರ ನಮ್ಮ ನಿಮ್ಮ ಸ್ನೇಹ ಒಂದೇ ಶಾಶ್ವತ. ಆತ್ಮೀಯ ಸ್ನೇಹಿತರೇ, ಕನ್ನಡ ಭಾಷೆ, ನಡೆ ನುಡಿ ಕಲಿಸಿದ ಗುರುವೃಂದಕ್ಕೆ ವಂದಿಸುತ್ತಾ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ .......................................... ಇವರಿಗೆ ತುಂಬು ಹೃದಯದ ವಂದನೆಗಳು.

          ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ, ಮಾರ್ಗದರ್ಶಕರಾಗಿ ಲಭಿಸಿದ  ಶ್ರೀ ............................... ಇವರಿಗೆ ತುಂಬು ಹೃದಯದ ವಂದನೆಗಳನ್ನು ಅರ್ಪಿಸುತ್ತೇನೆ.

          ಈ ಕಾರ್ಯಕ್ರಮದ ಸಂಯೋಜನೆ-ನಿಯೋಜನೆ ಮಾಡುವಲ್ಲಿ ನಮಗೆ ಒಳ್ಳೆಯ ಸಹಕಾರ ಮಾಡಿದ ನಮ್ಮ ಎಲ್ಲ ಗುರುಗಳಿಗೆ ಹಾಗೂ ಮುಖ್ಯದ್ಯಾಪಕರಿಗೆ ಹೃತ್ಪೂರ್ವಕ ವಂದನೆಗಳು. ಈ ಕಾರ್ಯಕ್ರಮದ ಮುಖ್ಯ ಘಟಕ 8ನೇ ತರಗತಿಯ ಎಲ್ಲ ಅಣ್ಣಂದಿರೆ ಹಾಗೂ ಅಕ್ಕಂದಿರೆ ನಿಮ್ಮ ಮುಂದಿನ ವಿದ್ಯಾರ್ಥಿ ಜೀವನ ನಗು ನಗುತಾ ನಲಿಯುತ್ತಾ ಸಾಗಲಿ ಹಾಗೂ ನೀವು ಕಂಡ ಕನಸ್ಸು ಬೇಗ ಪೂರ್ಣವಾಗಲಿ ಎಂದು ಈ ಮೂಲಕ ಹರಸುತ್ತಾ ಎಲ್ಲ ಬಾಲಕ-ಬಾಲಿಕೆಯರಿಗೆ ಈ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದು ಶೋಭೆ ತಂದಿದ್ದಕ್ಕಾಗಿ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.

          ಇಲ್ಲಿಗೆ ಈ 8ನೇ ತರಗತಿಯ ಬೀಳ್ಕೊಡುವ ಸಮಾರಂಭ ಮುಕ್ತಾಯವಾಯಿತು ಎಂದು ಜಾಹೀರು ಪಡಿಸುತ್ತೇನೆ. 

ಬೀಳ್ಕೊಡುವ ಸಮಾರಂಭದ ಭಾಷಣ

               ನನ್ನ ವಿದ್ಯಾರ್ಥಿ ಮಿತ್ರರೇ... ..ನನ್ನ ಹೆಸರು _____.  ಇಂದು ನಾವು ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಜಗತ್ತನ್ನು ಪ್ರವೇಶ ಮಾಡುತ್ತಿರುವ  ದಿನ. ಇಂದು ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನನ್ನು ರೂಪಿಸಲು ಒಂದು ಅಂಶ ಅಂದರೆ ಅದು 'ಶಿಕ್ಷಕ'. ಶಿಕ್ಷಕರು ಪ್ರಯತ್ನಿಸದಿದ್ದರೆ, ಏನೇನೂ  ಸಾಧ್ಯವಾಗುತ್ತಿರಲಿಲ್ಲ, ನೀವು ಮತ್ತು ನಾನು ಇಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ.  ಶಾಲೆಗೆ ಬಂದ  ಮೊದಲ ದಿನ ನಾನು ತುಂಬಾ ಆತಂಕದಲ್ಲಿದ್ದೆನೆಂದು ನೆನಪಿದೆ; ನಾನು ಯಾರನ್ನೂ ಗುರುತಿಸುತ್ತಿರಲಿಲ್ಲ. ಹೊಸ ಜಾಗ, ಹೊಸ ಗುರುಗಳು. ಗಾಬರಿಯಾಗಿ ಮನೆಗೆ ಓಡಿ ಹೋಗುತ್ತಿದ್ದೆ. ಆದರೆ ಇಂದು ಈ ವೇದಿಕೆಯಲ್ಲಿ ನಿಂತಿರುವ ನಾನು ಇಲ್ಲಿ ಹಾಜರಿರುವ ಪ್ರತಿಯೊಬ್ಬರನ್ನು ಹೆಸರಿಸಬಲ್ಲೆ. ಏಕೆಂದರೆ ನೀವು ನನ್ನ ನೆನಪಿನಲ್ಲಿರುತ್ತೀರಿ.  ಆದರೆ ನಾನು ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ. ಈ ಶಾಲೆಯಲ್ಲಿ ನಮಗೆ ಅನೇಕ ಅನುಭವಗಳು ಬಂದಿವೆ.  ಕೆಲವು ಕಹಿ, ಕೆಲವು ಸಿಹಿ, ಆ ಸಿಹಿ ಕಹಿಗಳ ಅನುಭವದ ಬುತ್ತಿಯೇ ನಮ್ಮ ಭವಿಷ್ಯಕ್ಕೆ ಆಧಾರವಾಗಿದೆ ಎಂಬುದನ್ನು ನಾನು ಬಲ್ಲೆ.  ನನ್ನ ಎಲ್ಲಾ ಶಿಕ್ಷಕರಿಗೆ, ಕಿರಿಯ ಸಹೋದರ-ಸಹೋದರಿಯರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಲ್ಲಿಯ ಪ್ರಯತ್ನವಾದಿ, ಸದಾಚಾರಿ ಶಿಕ್ಷಕರಿಂದಲೇ ನನ್ನ ಭಾವ ಜೀವನ ನಿರ್ಮಾಣವಾಗಿದೆ. ನಮ್ಮ ಶಾಲೆಯ ಗುರುಗಳು ನಮಗೆ ಬಾಳಿನುದ್ದಕ್ಕೂ ನೆನಪಾಗುತ್ತಾರೆ. ಏಕೆಂದರೆ ಈ ಗುರುಗಳಿಂದ ತಾನೇ ನಾವು ನಮ್ಮ ನಿಜವಾದ ಸಾಮರ್ಥ್ಯವನ್ನು ಕಂಡುಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ನನ್ನ ಆತ್ಮೀಯ ಶಿಕ್ಷಕರು ಪುಸ್ತಕ ಕಲಿಸುವುದಕ್ಕಿಂತ ಹೆಚ್ಚಿನ ವ್ಯವಹಾರ ಜ್ಞಾನವನ್ನು  ನಗೆ ಕಲಿಸಿದ್ದಾರೆ. ಅಂತಹ ಜ್ಞಾನವು ಎಲ್ಲಿಯೂ ಸಿಗುವುದಿಲ್ಲ ಅದು ಅಮೂಲ್ಯವಾಗಿದೆ. ಉತ್ತಮ ವ್ಯಕ್ತಿಯಾಗುವುದು ಹೇಗೆ ಎಂದು ನನ್ನ ಶಿಕ್ಷಕರು ನನಗೆ ಕಲಿಸಿದ್ದಾರೆ. ನಾನು ಮ್ಮ ಶಿಕ್ಷಕರಿಂದ ಹೇಗೆ ಸಹಾನುಭೂತಿ ಮತ್ತು ಕಾಳಜಿ ವಹಿಸಬೇಕು ಮತ್ತು ಒಳ್ಳೆಯ ವ್ಯಕ್ತಿ ಹೇಗೆ ಆಗಬೇಕೆಂದು  ಕಲಿತಿದ್ದೇನೆ.  ಗುರುಗಳೇ, ನೀವು ಕಲಿಸಿದ ಜ್ಞಾನದ ಭಂಡಾರ, ಪ್ರೇರಣೆ, ಮಾರ್ಗದರ್ಶನ ಹಾಗೂ ನಿಮ್ಮ ಕರುಣಾಭರಿತ ಪ್ರೀತಿ ಸದಾ ನಮ್ಮ ಹೃದಯಾಳದಲ್ಲಿ ಮನೆ ಮಾಡಿರುತ್ತದೆ. ನಿಮ್ಮನ್ನು, ನಮಗೆ ಜ್ಞಾನ ನೀಡಿದ ಶಾಲೆಗೂ ಎಂದು ಮರೆಯುವುದಿಲ್ಲ. ನಾವು ಕೇವಲ ಶಾಲೆಯಿಂದ ಹೊರಗೆ ಹೋಗಬಹುದು. ಆದರೆ ನಿಮ್ಮೆಲ್ಲರ ಮನಸ್ಸಿನಿಂದ ಹೋಗುವುದಿಲ್ಲ. ಈ ಶಾಲೆ ನಮ್ಮದು. ಭವಿಷ್ಯದಲ್ಲಿ ಈ ಶಾಲೆಯ ಬೆಳವಣಿಗೆ, ಇದರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿ ನನಗೆ ಮಾತನಾಡಲು ಅವಕಾಶ ಕೊಟ್ಟ ಸಂಯೋಜಕರಿಗೆ ಧನ್ಯವಾದಗಳನ್ನು ಹೇಳಿ ನನ್ನೆರಡು ಮಾತುಗಳನ್ನು ಮುಗಿಸುತ್ತೇನೆ.

ಜೈ ಹಿಂದ ಜೈ ಭಾರತ.

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು