ಸಂಕಲನೆ ಮತ್ತು ಲೇಖನ
ಶ್ರೀ. ದಿನೇಶ ಠಾಕೂರದಾಸ ಚವ್ಹಾಣ
ವಿಷಯ ಶಿಕ್ಷಕರು ಜಿ. ಪ. ಪ್ರಾಥಮಿಕ ಕನ್ನಡ ಶಾಲೆ, ಬಬಲಾದ
ತಾ. ಅಕ್ಕಲಕೋಟ ಜಿ. ಸೋಲಾಪುರ
ಅನುಕ್ರಮಣಿಕೆ
ಗದ್ಯ ವಿಭಾಗ |
|
ಪಾರಗಳು |
ಲೇಖಕರು |
1. ಅನಾಥ ರಕ್ಷಕ |
ಎಚ್.ವಿ. ಸಾವಿತ್ರಮ್ಮ |
2. ವಚನ ಪಿತಾಮಹ |
ಬಿ.ಎಂ. ಪಾಟೀಲ |
3. ಆದರ್ಶ ಗ್ರಾಮ |
- |
4. ಸಿಂಧುತಾಯಿ ಸಪಕಾಳ |
- |
5. ನಗೆಯ ಬಗೆ |
ಎಸ್. ರಾವ |
6. ಇರುವುದನ್ನು ಇಷ್ಟಪಡು (ಚಿತ್ರಕಥೆ) |
- |
7. ಪರಿಸರ ಮಾಲಿನ್ಯ |
ಎಸ್.ಜಿ. ಹೆಗಡೆ |
8. ಕ್ರಿಸ್ ಮಸ್ |
- |
9. ಪೋಸ್ಟಮನ್ ಬರೆದ ಪತ್ರ |
- |
10. ಯೋಗಾಸನ-ಪ್ರಾಣಾಯಾಮ |
- |
11. ಕೌಂತೇಯ |
ವಿ.ವಾ. ಶಿರವಾಡಕರ |
12. ನರಿಯ ಬಿಲನುಂ |
ದುರ್ಗಸಿಂಹ |
ಪದ್ಯ ವಿಭಾಗ |
|
1.ನೇಗಿಲಯೋಗಿ |
ಕುವೆಂಪು |
2. ಜಯವೆನ್ನಿ ಭಾರತಾಂಬೆಗೆ |
ಸುನಿತಾ ಎಂ. ಶೆಟ್ಟಿ |
3. ನೇತ್ರದಾನ |
ಗೌರಾ ಸಿ. ತಾಳಿಕೋಟಿಮಠ |
4. ಎಳೆಯು ಕಂದನ ಕೂಗು |
ಜಯದೇವಿತಾಯಿ ಲಿಗಾಡೆ |
6. ಕೆಲಸ ಮಾಡು |
ಬಾ. ಇ. ಕುಮಠೆ |
7. ನೇಸರು ನಗುತ್ತಾನೆ |
ದೊಡ್ಡರಂಗೇಗೌಡ |
8. ಮಹಾರಾಷ್ಟ್ರ ಗೀತೆ |
ಅ.ಬಾ. ಚಿಕ್ಕಮಣೂರ |
9. ಸರ್ವೋದಯ ಗೀತೆ |
|
ವ್ಯಾಕರಣ ವಿಭಾಗ |
|
ವಾಕ್ಯ ಪ್ರಕಾರಗಳು |
|
ಸಂಧಿ |
|
ಸಮಾಸ |
|
ಪ್ರಿಯಾಪದ |
|
1. ಅನಾಥ ರಕ್ಷಕ
ಲೇಖಕರು:-ಎಚ್.ವ್ಹಿ.
ಸಾವಿತ್ರಮ್ಮ
ಶಬ್ದಗಳ ಅರ್ಥ
ಫಿತೂರಿ - ಒಳಸಂಚು
ಅನಿರೀಕ್ಷಿತ - ನಿರೀಕ್ಷಿಸದೆ
ಇದ್ದ
ಪ್ರಳಯ - ಅಳಿವು
ರತ್ನಾಲಂಕೃತ- ರತ್ನದಿಂದ ಸಿಂಗರಿಸಿದ
ಅನಾಥ - ತಬ್ಬಲಿ
ನಿರಾಶ್ರಿತ - ಆಶ್ರಯ
ಇಲ್ಲದವನು
ಅಲೆದಾಡು - ತಿರುಗಾಡು
ಉದ್ವೇಗ - ಆವೇಗ
ವರ್ತಕ - ವ್ಯಾಪಾರ
ಪ್ರಶ್ನೆ ೧. ಕೆಳಗಿನ ಪ್ರಶ್ನೆಗಳಿಗೆ
ಉತ್ತರ ಬರೆಯಿರಿ.
೧)
ಯಾವ ದೇಶದ ರಾಜನು ಬಡವರ ಬಂಧು ಎಂದು ಪ್ರಸಿದ್ಧನಾಗಿದ್ದನು?
ಉತ್ತರ: ಕೋಸಲ ದೇಶದ ರಾಜನು ಬಡವರ ಬಂಧು,
ಅನಾಥ ರಕ್ಷಕ ಎಂದು ಪ್ರಸಿದ್ಧನಾಗಿದ್ದನು?
೨)
ಕಾಶಿಯ ರಾಜನು ಏನೆಂದು ಡಂಗುರ ಸಾರಿದನು?
ಉತ್ತರ: ಕಾಶಿಯ ರಾಜನು ಕೋಸಲದ ರಾಜನನ್ನು ಹಿಡಿದು
ಕೊಟ್ಟವರಿಗೆ ನೂರು ಚಿನ್ನದ ನಾಣ್ಯಗಳನ್ನು ಕೊಡುವೆನೆಂದು ಡಂಗೂರ ಸಾರಿದನು.
೩)
ವರ್ತಕನು ಸನ್ಯಾಸಿಗೆ ಏನೆಂದು ಕೇಳಿದನು?
ಉತ್ತರ: ವರ್ತಕನು ಸನ್ಯಾಸಿಗೆ ಎಲೇ ಸನ್ಯಾಸಿಯೇ,
ಕೋಸಲ ರಾಜ್ಯಕ್ಕೆ ಹೋಗುವ ದಾರಿ ಯಾವುದು ಎಂದು ಕೇಳಿದನು.
೪)
ಕಾಶಿಯ ರಾಜನ ವಿಜಯದ ನಂತರ ಕೊಸಲ ದೇಶದಲ್ಲಿ ಯಾವ ಸನ್ನಿವೇಶ ಕಂಡು ಬಂದಿತು?
ಉತ್ತರ: ಕಾಶಿಯ ರಾಜನ ವಿಜಯದ ನಂತರ ಕೊಸಲ ದೇಶದ ರಾಜನು
ಕಾಡು ಸೇರಿದನು. ಸತ್ಪುರುಷನಿಗೆ ಹಾನಿಯುಂಟಾದುದರಿಂದ ಪ್ರಳಯ ಸಮೀಪಿಸಿತು ಎಂದು ಜನರು ದು:ಖದಿಂದ
ಮಾತಡತೊಡಗಿದ್ದರು.
೫)ಸನ್ಯಾಶಿಯು
ಕಾಶಿಯ ರಾಜನ ಬಳಿಗೆ ಹೋಗಿ ಏನು ಹೇಳಿದನು?
ಉತ್ತರ: ಸನ್ಯಾಸಿಯು ಕಾಶಿಯ ರಾಜನ ಬಳಿಗೆ ಹೋಗಿ,
‘ಅರಸನೇ,
ಕೋಸಲ ದೇಶದ ರಾಜನನ್ನು ಹಿಡಿದು ತಂದವರಿಗೆ ನೂರು ಚಿನ್ನದ ನಾಣ್ಯಗಳನ್ನು ಕೊಡುವುದಾಗಿ
ಸಾರಿದ್ದೆಯಲ್ಲವೇ?
ಈಗ ನನ್ನನ್ನು ಬಂಧಿಸಿ ಆ ಬಹುಮಾನವನ್ನು ನನ್ನನ್ನು ಕರೆತಂದವಣಿಗೆ ಕೊಡು’
ಎಂದು ಹೇಳಿದನು.
೬)ಕಾಶಿಯ
ರಾಜನು ಸನ್ಯಾಶಿಯನ್ನು ಯಾವ ರೀತಿ ಸನ್ಮಾನಿಸಿದನು?
ಉತ್ತರ:ಸೋಲಿನಲ್ಲಿಯೂ ಗೆಲುವು ಸಾಧಿಸಿದ ಕೋಸಲದ ರಾಜನ
ಉದಾರತೆ ಕಂಡು ಕಾಶಿಯ ರಾಜನು ‘ರಾಜನೇ,
ನಿನ್ನ ರಾಜ್ಯವನ್ನು ಮರಳಿ ತೆಗೆದುಕೊಂಡು ನನ್ನ ಗೆಳೆತನವನ್ನು ಸ್ವೀಕರಿಸು’
ಎಂದು ಸನ್ಯಾಸಿಯ ಕೈಹಿಡಿದು ಸಿಂಹಾಸನದಲ್ಲಿ ಕುಳ್ಳರಿಸಿ ಆತನ ಧೂಳು ತುಂಬಿದ ತಲೆಯ ಮೇಲೆ
ರತ್ನಾಲಂಕಾರಕೃತವಾದ ಕಿರೀಟವನ್ನು ಇಟ್ಟನು.
ಪ್ರಶ್ನೆ ೨. ಉದಾಹರಣೆಯಲ್ಲಿ ತೋರಿಸಿದಂತೆ
ಶಬ್ದಗೋಪುರ ತಯಾರಿಸಿರಿ.
ಉದಾ: ಮನೆ
ಇದು ಮನೆ
ಇದು ನನ್ನ
ಮನೆ
ಇದು ನನ್ನ
ದೊಡ್ಡ ಮನೆ
ನನ್ನ ಈ
ಮನೆ ದೊಡ್ಡದು
ಈ ನನ್ನ
ಮನೆ ಬಹಳ ದೊಡ್ಡದು
ಅ) ರಾಜ
ಆ)ರುಚಿ
ಇವನು ರಾಜ ಜಿಲೇಬಿ ರುಚಿ ಇದೆ
ಈತ
ನಮ್ಮ ರಾಜ ಕೆಂಪು ಜಿಲೇಬಿ ರುಚಿ ಇದೆ
ನನ್ನ
ರಾಜ ತುಂಬಾ ಜಾಣ ಬಾಲಕ ಕೆಂಪು ತಾಜಾ ಜಿಲೇಬಿ ರುಚಿ ಇದೆ.
ಪ್ರಶ್ನೆ 3. ಕೆಳಗಿನ ವಾಕ್ಯಗಳನ್ನು ಓದಿ
ಕ್ರಮಬದ್ಧವಾಗಿ ಬರೆಯಿರಿ.
¶ ನೂರು ಚಿನ್ನದ ನಾಣ್ಯಗಳನ್ನು ಕೊಡುತ್ತೇವೆ.
¶ ರತ್ನಾಲಂಕೃತವಾದ ಕಿರೀಟವನ್ನಿಟ್ಟನು.
¶ ಸನ್ಯಾಸಿಯಂತೆ ಅಲೆಯುತ್ತಿದ್ದನು.
¶ ನಾನೇ ಆ ರಾಜ. ಸೈನಿಕರೇ, ಯುದ್ಧಕ್ಕೆ ಸಿದ್ಧರಾಗಿರಿ.
¶ ನಿನ್ನ ರಾಜ್ಯವನ್ನು ಹಿಂದಕ್ಕೆ ತೆಗೆದುಕೊ.
ಉತ್ತರ:
1.
ನಾನೇ ಆ ರಾಜ. ಸೈನಿಕರೇ, ಯುದ್ಧಕ್ಕೆ ಸಿದ್ಧರಾಗಿರಿ.
2.
ನೂರು
ಚಿನ್ನದ ನಾಣ್ಯಗಳನ್ನು ಕೊಡುತ್ತೇವೆ.
3.
ಸನ್ಯಾಸಿಯಂತೆ
ಅಲೆಯುತ್ತಿದ್ದನು.
4.
ನಿನ್ನ
ರಾಜ್ಯವನ್ನು ಹಿಂದಕ್ಕೆ ತೆಗೆದುಕೊ.
5.
ರತ್ನಾಲಂಕೃತವಾದ
ಕಿರೀಟವನ್ನಿಟ್ಟನು
2. ವಚನ
ಪಿತಾಮಹ
-ಬಿ.
ಎಮ್. ಪಾಟೀಲ
ಶಬ್ದಗಳ ಅರ್ಥ
ಉಜ್ವಲ – ಪ್ರಕಾಶಮಾನವಾದ; ಏಳ್ಗೆ – ಉನ್ನತಿ; ವಿರಳ - ಅಪರೂಪ; ಭೂಗತ - ಅಡಗಿಸಿಕೊಂಡ : ವಿಸ್ತಾರ - ಹರವು : ವಾನ್ಮಯ - ಸಾಹಿತ್ಯ
* ಶಬ್ದಕೋಶದ
ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.
ಜ್ಞಾನದಾಹ – ಜ್ಞಾನದ
ಹಸಿವು ವರ್ಧನತ್ಯುತ್ಸವ -
ಸುಪತ್ತಿಗೆ – ಸುಖ
ಸಂಪತ್ತುವಿನೊಂದಿಗೆ ಸಂತೋಷದಲ್ಲಿರು ಕುರುಹು- ಚಿನ್ಹೆ
ಪ್ರಶ್ನೆ 1) ಕೆಳನ ಪ್ರಶ್ನೆಗಳಿಗೆ ಉತ್ತರ
ಬರೆಯಿರಿ.
1) 'ವಚನಸಾಹಿತ್ಯ' ಎಂಬ ಅಮೃತವನ್ನು ನಮಗೆ ಯಾರು ಉಣಬಡಿಸಿದ್ದಾರೆ
?
ಉತ್ತರ: 'ವಚನಸಾಹಿತ್ಯ' ಎಂಬ ಅಮೃತವನ್ನು ನಮಗೆ ವಚನ
ಪಿತಾಮಹರೆಂದೇ ಖ್ಯಾತರಾದ ಡಾ. ಫ. ಗು. ಹಳಕಟ್ಟಿಯವರು ಉಣಬಡಿಸಿದ್ದಾರೆ
2) ಡಾ. ಫ. ಗು. ಹಳಕಟ್ಟಿಯವರು ಧಾರವಾಡದಿಂದ
ವಿಜಾಪುರಕ್ಕೆ ಬಂದು ಏಕೆ ನೆಲೆಸಿದರು ?
ಉತ್ತರ: ವಕೀಲಿ ವೃತ್ತಿ
ಪ್ರಾರಂಭಿಸಲು ಡಾ.
ಫ. ಗು. ಹಳಕಟ್ಟಿಯವರು ಧಾರವಾಡದಿಂದ ವಿಜಾಪುರಕ್ಕೆ ಬಂದು ಏಕೆ ನೆಲೆಸಿದರು ?
3) ಡಾ. ಫ. ಗು. ಹಳಕಟ್ಟಿಯವರು ಪ್ರಾರಂಭಿಸಿದ
ಪತ್ರಿಕೆಗಳು ಯಾವವು ?
ಉತ್ತರ: ಶಿವಾನುಭವ ಮಾಸಪತ್ರಿಕೆ
ಮತ್ತು ನವಕರ್ನಾಟಕ ವಾರಪತ್ರಿಕೆಗಳನ್ನು ಡಾ. ಫ. ಗು. ಹಳಕಟ್ಟಿಯವರು ಪ್ರಾರಂಭಿಸಿದರು.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ
ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.
1. ಡಾ. ಫ. ಗು. ಹಳಕಟ್ಟಿಯವರು ಯಾವಾಗ
ಹುಟ್ಟಿದರು?
ಉತ್ತರ: ಡಾ. ಫ. ಗು. ಹಳಕಟ್ಟಿಯವರು ದಿ.
02/07/1880ರಂದು ಹುಟ್ಟಿದರು.
2. ಡಾ. ಫ. ಗು. ಹಳಕಟ್ಟಿಯವರ ತಾಯಿ-
ತಂದೆಯರ ಹೆಸರೇನು?
ಉತ್ತರ: ಡಾ. ಫ. ಗು. ಹಳಕಟ್ಟಿಯವರ ತಾಯಿ
ಹೆಸರು ದಾನಮ್ಮ ಮತ್ತು ತಂದೆಯ ಹೆಸರು ಗುರುಬಸಪ್ಪ ಇತ್ತು.
ಪ್ರಶ್ನೆ 3) ಕೆಳಗಿನ ಪ್ರಶ್ನೆಗಳಿಗೆ ಉತ್ತರ
ಬರೆಯಿರಿ.
1. ಡಾ. ಫ. ಗು. ಹಳಕಟ್ಟಿಯವರು ಯಾವ-ಯಾವ
ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ ?
ಉತ್ತರ: ಡಾ. ಫ. ಗು. ಹಳಕಟ್ಟಿಯವರು ಮೊದಲು
ವಕೀಲಿ ವೃತ್ತಿ ಪ್ರಾರಂಭಿಸಿದರು. ವಚನ ಸಾಹಿತ್ಯಕ್ಕೆ ಅವರ ಮನಸ್ಸು ಆಕರ್ಷಿಸಿತು. ಕಾಲಗರ್ಭದಲ್ಲಿ
ನಾಶವಾದ ಹುಳು ಹುಪ್ಪಡಿಗಳಿಗೆ ಆಹಾರವಾದ ವಚನಸಾಹಿತ್ಯವನ್ನು ರಕ್ಷಿಸಲು ಅವರು ಮನೆ, ಮಠ, ಊರೂರು ಸುತ್ತಿದರು. ಬಸವಾದಿ ಶರಣರ ವಚನಗಳನ್ನು
ಸಂಶೋಧಿಸಿ ಪರಿಸ್ಕರಿಸಿ ಜನಸಾಮಾನ್ಯರಿಗೆ ವಚನಸಾಹಿತ್ಯವನ್ನು ತಲುಪಿಸಿದರು. ತಮ್ಮ ಇಡೀ ಬದುಕನ್ನು
ಜನಪರ ಸೇವಾಕಾರ್ಯಗಳಿಗೆ ಮಿಸಲಿಟ್ಟರು. ಶಿವಾನುಭವ ಮಾಸಪತ್ರಿಕೆ ಮತ್ತು ನವಕರ್ನಾಟಕ
ವರಪತ್ರಿಕೆಗಳನ್ನು ಪ್ರಾರಂಭಿಸಿದರು.
2. 'ವಚನಸಾಹಿತ್ಯ'ದ ಪುನರುಜ್ಜಿವನಕ್ಕಾಗಿ ಹಳಕಟ್ಟಿಯವರು ಮಾಡಿದ
ಕಾರ್ಯಗಳಾವವು?
ಉತ್ತರ: ಕಾಲಗರ್ಭದಲ್ಲಿ ನಾಶವಾದ
ಹುಳು ಹುಪ್ಪಡಿಗಳಿಗೆ ಆಹಾರವಾದ ವಚನಸಾಹಿತ್ಯವನ್ನು ರಕ್ಷಿಸಲು ಅವರು ಮನೆ, ಮಠ, ಊರೂರು ಸುತ್ತಿದರು. ಬಸವಾದಿ ಶರಣರ ವಚನಗಳನ್ನು
ಸಂಶೋಧಿಸಿ ಪರಿಸ್ಕರಿಸಿ ಜನಸಾಮಾನ್ಯರಿಗೆ ವಚನಸಾಹಿತ್ಯವನ್ನು ತಲುಪಿಸಿದರು. ತಮ್ಮ ಇಡೀ ಬದುಕನ್ನು
ಜನಪರ ಸೇವಾಕಾರ್ಯಗಳಿಗೆ ಮಿಸಲಿಟ್ಟರು.
ಪ್ರಶ್ನೆ 4) ಹೊಂದಿಸಿ ಬರೆಯಿರಿ.
1) ಬಸವಣ್ಣ
ಕೂಡಲ ಸಂಗಮದೇವ
2) ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ
3) ಜೇಡರ ದಾಸಿಮಯ್ಯ ರಾಮನಾಥಾ
4) ಅಲ್ಲಮಪ್ರಭು ಗುಹೇಶ್ವರಾ
ಪ್ರಶ್ನೆ 5) ಕೆಳಗಿನ ಗದ್ಯವನ್ನು ಓದಿರಿ.
ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.
ಉತ್ತಂಗಿ ಚೆನ್ನಪ್ಪ ಕಾಲ :ಕ್ರಿ.ಶ. 1881-1962
ಕ್ರೈಸ್ತಧರ್ಮದ
ಉಪದೇಶಕರಾಗಿದ್ದ ಅವರ ಪೂರ್ಣ ಹೆಸರು ರೆವರೆಂಡ ಚೆನ್ನಪ್ಪ ದಾನಿಯೇಲಪ್ಪ ಉತ್ತಂಗಿ. ಇವರ ಕಾವ್ಯನಾಮ
“ತಿರುಳ್ಳನ್ನಡ ತಿರುಳ ". ಧಾರವಾಡದಲ್ಲಿ
ಶ್ರಿ. ಶ. 1881 ಡಿಸೆಂಬರ ತಿಂಗಳ ಒಂಬತ್ತನೆಯ ತಾರೀಖಿನಂದು
ಜನಿಸಿದರು. ಅಸ್ತವ್ಯಸ್ತಗೊಂಡಿದ್ದ ಸರ್ವಜ್ಞನ ವಚನಗಳನ್ನು ಶಾಸ್ತ್ರೀಯವಾಗಿ ಅಣಿಗೊಳಿಸಿ ಸರ್ವಜ್ಞನ ವಾಣಿಯನ್ನು ಮನೆ ಮನೆಗೆ ತಲುಪಿಸುವ ಮೂಲಕ
ಸರ್ವಜ್ಞನ ಸಮಗ್ರ ದರ್ಶನವನ್ನು ಮಾಡಿಸಿದರು. ಕ್ರಿ. ಶ. 1911ರಲ್ಲಿ ಬರವಣಿಗೆಯನ್ನು ಆರಂಭಿಸಿದ ಇವರು ಒಟ್ಟು 18 ಕೃತಿಗಳನ್ನು ರಚಿಸಿದ್ದಾರೆ.
ಚೆನ್ನಪ್ಪನವರಿಗೆ ಶಾಶ್ವತವಾಗಿ ಸಾಹಿತ್ಯರಂಗದಲ್ಲಿ ಕೀರ್ತಿಯನ್ನು ತಂದುಕೊಟ್ಟಿದ್ದು ಅವರ
ಸಂಪಾದಿತ ಗ್ರಂಥ “ಸರ್ವಜ್ಞನ ವಚನಗಳು". ಇದರಲ್ಲಿ ಸುಮಾರು 2000 ವಚನಗಳನ್ನು
ಪರಿಷ್ಕರಿಸಿದ್ದಾರೆ. ಇವರ ಸಂಪಾದಿತ ಕೃತಿ ''ಸಿದ್ಧರಾಮ ಸಾಹಿತ್ಯ ಸಂಗ್ರಹ''ಕ್ಕೆ ದೇವರಾಜ ಬಹದ್ದೂರ ದತ್ತಿ ಬಹುಮಾನ ಲಭಿಸಿದೆ.
ಪ್ರ. 1 ರೇವರಂಡ್
ಚೆನ್ನಪ್ಪ ದಾನಿಯೇಲಪ್ಪ ಉತ್ತಂಗಿಯವರ ಜನ್ಮ ಯಾವಾಗ ಆಯಿತು?
ಉತ್ತರ: ರೇವರಂಡ್
ಚೆನ್ನಪ್ಪ ದಾನಿಯೇಲಪ್ಪ ಉತ್ತಂಗಿಯವರ ಜನ್ಮ 09 ಡಿಸೆಂಬರ 1881ರಲ್ಲಿ ಆಯಿತು.
ಪ್ರ.2. ರೇವರಂಡ್
ಚೆನ್ನಪ್ಪ ದಾನಿಯೇಲಪ್ಪ ಉತ್ತಂಗಿಯವರ ಕಾರ್ಯವೇನು?
ಉತ್ತರ: ಉತ್ತಂಗಿಯವರು ಅಸ್ತವ್ಯಸ್ತಗೊಂಡಿದ್ದ ಸರ್ವಜ್ಞನ ವಚನಗಳನ್ನು
ಶಾಸ್ತ್ರೀಯವಾಗಿ ಅಣಿಗೊಳಿಸಿ ಸರ್ವಜ್ಞನ ವಾಣಿಯನ್ನು ಮನೆ ಮನೆಗೆ ತಲುಪಿಸುವ ಮೂಲಕ
ಸರ್ವಜ್ಞನ ಸಮಗ್ರ ದರ್ಶನವನ್ನು ಮಾಡಿಸಿದರು. ಸುಮಾರು 2000 ಸರ್ವಜ್ಞನ
ವಚನಗಳ ಸಂಗ್ರಹ ಮಾಡಿರುವರು.
3. ಆದರ್ಶ ಗ್ರಾಮ
ಶಬ್ದಗಳ
ಅರ್ಥ: ಧನಿಕ – ಶ್ರೀಮಂತ; ಹಂಬಲ – ತೀವ್ರವಾದ ಆಸೆ; ವಾಲು – ಬಾಗು ಒದ್ದು – ಅಡ್ಡಗಟ್ಟು
* ಶಬ್ದಕೋಶದ ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು
ಹುಡುಕಿ ಬರೆಯಿರಿ.
ಪ್ರಶ್ನೆ 1. ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
ಅ) ಗೋವಿಂದಪುರ ದಂಪತಿಗಳ ಕುಟುಂಬ ಸುಖಿ ಕುಟುಂಬವಾಗಿತ್ತು ಏಕೆ?
ಉತ್ತರ:
ಗೋವಿಂದಪುರದ ಸುಜಾತಾ-ವಿಶಾಲ ದಂಪತಿಗೆ ಇಬ್ಬರು ಮಕ್ಕಳಿ ಇದ್ದು ಕೃಷಿ ಮಾಡಿ ಜೀವನ
ಸಾಗಿಸುತ್ತಿದ್ದರು. ಹಾಗಾಗಿ ಅವರ ಕುಟುಂಬ ಸುಖಿಯಾಗಿತ್ತು.
ಆ) ಶೈಕ್ಷಣಿಕ ಪ್ರಗತಿಯನ್ನು ಇನ್ನಷ್ಟು ಹೆಚ್ಚಿಸಲು ವಿಜಯನು ಏನು ಮಾಡಿದನು?
ಉತ್ತರ:
ಶೈಕ್ಷಣಿಕ ಪ್ರಗತಿಯನ್ನು ಇನ್ನಷ್ಟು
ಹೆಚ್ಚಿಸಲು ವಿಜಯನು ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ಶಾಲೆಗಳಿಗೆ ಆಧುನಿಕ ಪಾಠೋಪಕರಣಗಳನ್ನು
ಒದಗಿಸಿದನು.
ಈ) ಒಬ್ಬ ಸುಶಿಕ್ಷಿತ ತರುಣನ ಪ್ರಯತ್ನದ ಫಲವೇನು?
ಉತ್ತರ:
ಒಬ್ಬ ಸುಶಿಕ್ಷಿತ ತರುಣನ ಪ್ರಯತ್ನದಿಂದ ಇಡೀ
ಊರಿನ ಸರ್ವಾಂಗೀಣ ವಿಕಸವಾಯಿತು.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ
ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.
ಅ) ಕೃಷಿಯ ಜೊತೆಗೆ ಏನು ಮಾಡಬೇಕೆಂದು ವಿಜಯನ
ಹಂಬಲವಾಗಿತ್ತು?
ಉತ್ತರ:
ಕೃಷಿಯ ಜೊತೆಗೆ ಸಮಾಜಸೇವೆ ಮಾಡಬೇಕೆಂಬ ಹಂಬಲ ವಿಜಯನಲ್ಲಿ ಮೂಡಿತ್ತು.
ಆ)
ಉತ್ತರ:
ಪ್ರಶ್ನೆ 3. ವಿರುದ್ಧಾರ್ಥಕ ಶಬ್ದಗಳನ್ನು ಬರೆಯಿರಿ.
1) ಸುಖ X ದು:ಖ 2) ಆರೋಗ್ಯ X
ಅನಾರೋಗ್ಯ
3) ಸ್ವಾರ್ಥ X ನಿಸ್ವಾರ್ಥ
4) ಶುದ್ಧ X
ಅಶುದ್ಧ
ಪ್ರಶ್ನೆ 4. ಕೆಳಗಿನ ಗದ್ಯಖಂಡವನ್ನು ಓದಿ
ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಮಳೆಗಾಲ ಪ್ರಾರಂಭವಾಗಿತ್ತು. ಧಾರಾಕಾರವಾಗಿ ಮಳೆ
ಸುರಿಯುತ್ತಿತ್ತು. ನದಿಗೆ ಮಹಾಪೂರ ಬರುವ ಲಕ್ಷಣಗಳು ಕಂಡು ಬರತೊಡಗಿದವು. ನದಿತೀರದ ಜನರು
ಗ್ರಾಮಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಹೋಗಬೇಕೆಂದು ಗಂಡುರ ಸಾರಿದರು. ಮೇಲೆ ಸುರಿಯುವ
ಮಳೆ, ಕೆಳಗೆ ಹರಿಯುವ ಹೊಳೆ, ಎಲ್ಲಿಗೆ ಹೋಗಬೇಕೆಂದು
ತೋಚದಂತಾಯಿತು. ಜನರು ದಿಗ್ಭ್ರಾಂತರಾದರು. ಮರುದಿನ ಅಧಿಕಾರಿಗಳು-ಪದಾಧಿಕಾರಿಗಳು ಪ್ರತಿ ಹಲ್ಲಿಗೂ
ಭೇಟಿ ನೀಡಿ ಮಹಾಪೂರ ಪರಿಸ್ಥಿತಿಯನ್ನು ನಿರೀಕ್ಷಿಸಿದ್ದರು. ಜನರ ಸುರಕ್ಷಿತತೆಗಾಗಿ ಸೂಕ್ತ
ವ್ಯವಸ್ಥೆಯನ್ನು ಮಾಡಿದರು.
1) ಮಳೆಯು ಹೇಗೆ ಸುರಿಯುತ್ತಿತ್ತು?
ಉತ್ತರ: ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು.
2) ಏನೆಂದು ಡಂಗುರ ಸಾರಿದರು?
ಉತ್ತರ: ನದಿತೀರದ ಜನರು ಗ್ರಾಮಗಳನ್ನು ತೊರೆದು
ಸುರಕ್ಷಿತ ಸ್ಥಳಗಳಿಗೆ ಹೋಗಬೇಕೆಂದು ಗಂಡುರ ಸಾರಿದರು.
3) ಜನರು ಏಕೆ ದಿಗ್ಭ್ರಾಂತರಾದರು?
ಉತ್ತರ: ಮೇಲೆ ಸುರಿಯುವ ಮಳೆ, ಕೆಳಗೆ ಹರಿಯುವ ಹೊಳೆ, ಎಲ್ಲಿಗೆ ಹೋಗಬೇಕೆಂದು
ತೋಚದಂತಾಯಿತು. ಹಾಗಾಗಿ ಜನರು ದಿಗ್ಭ್ರಾಂತರಾದರು
ಉಪಕ್ರಮ: ಶೌಚಾಲಯದ ಅವಶ್ಯಕತೆ ಕುರಿತು ಹತ್ತು ಸಾಲು
ಬರೆಯಿರಿ.
ಅವಶ್ಯಕತೆಯೇ ಅನ್ವೇಷಣೆಯ ಜನನಿ
• ಯೋಚಿಸಿ ಉತ್ತರಿಸಿರಿ.
ಅ) ಕೆಳಗಿನ ಪದಗಳಲ್ಲಿ ಬದಲಾವಣೆಯಾಗದ ಪದವನ್ನು ಗುರುತಿಸಿರಿ.
1) ಮತ್ತು 2) ನಾನು 3) ಒಂದು 4) ಹುಲಿ
ಆ) ಹಳೆಗನ್ನಡ
ಕಾವ್ಯಗಳೆಂದರೆ ನನಗೆ ತುಂಬಾ ಇಷ್ಟ. ಗೆರೆ ಹೊಡೆದ ಪದದ ಸಂಧಿಯನ್ನು ಗುರುತಿಸಿರಿ.
1) ಸವರ್ಣದೀರ್ಘ 2) ಲೋಪ 3)
ಆಗಮ 4) ಆದೇಶ
4. ಸಿಂಧೂತಾಯಿ ಸಪಕಾಳ
ಶಬ್ದಗಳ ಅರ್ಥ: ಸಾಧಕಿ - ಸಾಧನೆ ಮಾಡಿದವಳು; ಪೋಷಕ – ರಕ್ಷಿಸುವವ; ಚಿಂದಿ - ಹರಕುಬಟ್ಟೆ; ನೆರಳು ಕೊಡು-ಆಶ್ರಯ ನೀಡು.
ಶಬ್ದಕೋಶದ
ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.
ಅನಿಷ್ಟ
– ಕೆಟ್ಟವ; ದಾಂಪತ್ಯ – ಗಂಡ-ಹೆಂಡತಿಯರು/ಪತಿ
ಪತ್ನಿ ; ಹೆರಿಗೆ – ಬಾಣಂತನ
ಅನುಮಾನ
– ಸಂಶಯ
ಅಭ್ಯಾಸ
ಪ್ರಶ್ನೆ 1) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಸಿಂಧೂ ತಾಯಿಯ ಹುಟ್ಟೂರು ಯಾವುದು ?
ಉತ್ತರ: ಮಹಾರಾಷ್ಟ್ರದ
ವಿದರ್ಭ ಪ್ರಾಂತದಲ್ಲಿನ ಪಿಂಪರಿಮೆಘೆ ಎಂಬುದು ಸಿಂಧೂತಾಯಿಯ ಹುಟ್ಟೂರು.
ಆ)
ಟೈಗರ್ ಪ್ರೊಜೆಕ್ಟನ್ನು ಎಲ್ಲಿ ಆರಂಭಿಸಲು ಉದ್ದೇಶಿಸಿದ್ದರು ?
ಉತ್ತರ: 1980ರಲ್ಲಿ
ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಗಡಿಯಲ್ಲಿದ್ದ ಅಮರಾವತಿ ಜಿಲ್ಲೆಯ ಚಿಕಲಧಾರಾದಲ್ಲಿ ಟೈಗರ್
ಪ್ರೊಜೆಕ್ಟ್ ಆರಂಭಿಸಲು ಉದ್ದೇಶಿಸಲಾಯಿತು.
ಇ) ಸಿಂಧೂತಾಯಿ ತನ್ನ ಸ್ವಂತ ಮಗಳನ್ನು ಎಲ್ಲಿ ಬಿಟ್ಟು ಬಂದಳು ?
ಉತ್ತರ:ಸಿಂಧೂತಾಯಿ
ತನ್ನ ಸ್ವಂತ ಮಗಳನ್ನು ಪುಣೆಯಲ್ಲಿದ್ದ ಒಂದು ಸೇವಾಶ್ರಮದಲ್ಲಿ ಬಿಟ್ಟು ಬಂದಳು.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು
ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.
ಅ)ಅನುಮಾನದ ಪಿಶಾಚಿ ಸಿಂಧೂತಾಯಿ ಗಂಡ
ಏನು ಮಾಡಿದನು?
ಉತ್ತರ: ಸಿಂಧೂತಾಯಿ
ಗಂಡ ಅನುಮಾನಪಟ್ಟು ಜಗಳಕ್ಕೆ ಬಂದು, ಮನಬಂದಂತೆ ಥಳಸಿದ, ದರದರನೆ ಕೊಟ್ಟಿಗೆಗೆ ಎಳೆದೊಯ್ದು ಹಸು, ಕರುಗಳ ಮಧ್ಯೆ ನೂಕಿ
ಹೋಗಿಬಿಟ್ಟನು.
ಆ) ಸಿಂಧೂತಾಯಿ ಮಡಿಲು ಸೇರಿದ ಮಕ್ಕಳ ಸಂಖ್ಯೆ ಎಷ್ಟು ?
ಉತ್ತರ:ಸವಿರಕ್ಕೂ
ಹೆಚ್ಚು ಮಕ್ಕಳು ಸಿಂಧೂತಾಯಿ ಮಡಿಲು ಸೇರಿದ್ದಾರೆ.
ಪ್ರಶ್ನೆ 3) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಸಿಂಧೂತಾಯಿ ಶಿಕ್ಷಣ ಪಡೆದ ಬಗೆಯನ್ನು ತಿಳಿಸಿರಿ.
ಉತ್ತರ:ಬಡತನದ
ಮಧ್ಯೆಯೂ ಸಿಂಧೂತಾಯಿ ಶಾಲೆಗೆ ಹೋದಳು. ಶ್ಲೇಟ್ ಖರೀದಿಸುವ ಶಕ್ತಿಯೂ ಇಲ್ಲದ ಸಿಂಧೂತಾಯಿ ಶಾಲೆಯ
ಎದುರಿಗಿದ್ದ ಆಲದ ಮರದ ಎಲೆಯನ್ನು ಚೂಪಾದ ಕಡ್ಡಿಯಿಂದ ಬರೆಯುತ್ತಾ ಅಕ್ಷರ ಕಳಿತಳು.
ಆ) ಸಹಸ್ರಾರು ಜನರಿಗೆ ಗೊತ್ತಾಗುವಂತಹ ಯಾವ ಘಟನೆ ಜರುಗಿತು
? ♡)
ಉತ್ತರ: 1980ರಲ್ಲಿ
ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಗಡಿಯಲ್ಲಿದ್ದ ಅಮರಾವತಿ ಜಿಲ್ಲೆಯ ಚಿಕಲಧಾರಾದಲ್ಲಿ ಟೈಗರ್
ಪ್ರೊಜೆಕ್ಟ್ ಆರಂಭಿಸಲು ಉದ್ದೇಶಿಸಲಾಯಿತು. ಅದಕ್ಕಾಗಿ ಈ ಭಾಗದಲ್ಲಿದ್ದ 84 ಹಳ್ಳಿಗಳ ಆದಿವಾಸಿಗಳನ್ನು
ಒಕ್ಕಲೆಬ್ಬಿಸಲಾಗಿತ್ತು. ಅವರ ಹಾಸುಗಳನ್ನು ಟೈಗರ್ ಪ್ರೊಜೆಕ್ಟಿನ ಅಧಿಕಾರಿಗಳು
ವಶಪಡಿಸಿಕೊಂಡಿದ್ದರು. ಈ ವಿಷಯ ತಿಳಿದು ಸಿಧೂತಾಯಿ ಚಿಕಲ್ಧಾರಾಕ್ಕೆ ಬಂದು ಆದಿವಾಶಿಗಳ ಪರವಾಗಿ
ಹೋರಾಟ ಮಾಡಿದಳು. ಅವರ ಪುನರ್ವಸತಿಗೆ ಏರ್ಪಾಡು ಮಾಡಲಾಯಿತು.
ಇ) ಖೋಲ್ಸೆ ಪಾಟೀಲರು ಯಾವ ರೀತಿ ಸಹಾಯ ಮಾಡಿದರು ?
ಉತ್ತರ: ಖೋಲ್ಸೆ
ಪಾಟೀಲರು ಸಿಂಧೂತಾಯಿಯ ನಿಸ್ವಾರ್ಥ ಸೇವೆಯನ್ನು ಕಂಡು ಅಹಮದನಗರ ಜಿಲ್ಲೆಯ ಗುಹಾ ಎಂಬಲ್ಲಿದ್ದ
ತಮ್ಮ 10 ಎಕರೆ ಭೂಮಿಯನ್ನು ತಾಯಿಯವರಿಗೆ ದಾನ ಮಾಡಿದರು.
ಪ್ರಶ್ನೆ 4) ಯೋಚಿಸಿ ಕೆಳಗಿನ ವಿಧಾನಗಳನ್ನು
ಪೂರ್ಣಗೊಳಿಸಿರಿ.
1) ಸಿಂಧೂತಾಯಿಯವರು
ಅನಾಥ ಮಕ್ಕಳಿಗಾಗಿ ಆಶ್ರಮಗಳನ್ನು ತೆರೆದರು. ಹಾಗಾದರೆ ಸಾವಿತ್ರಿಬಾಯಿ ಫುಲೆಯವರು
ಹೆಣ್ಣುಮಕ್ಕಳಿಗಾಗಿ ಶಾಲೆಗಳನ್ನು ತೆರೆದರು.
2) 1980ರಲ್ಲಿ
ಚಿಕಲಧಾರಾ ಟೈಗರ್ ಪ್ರೊಜೆಕ್ಟ್ಗಾಗಿ ಜನರನ್ನು ಒಕ್ಕಲೆಬ್ಬಿಸಲಾಗಿತ್ತು. ಆದರೆ 1993ರಲ್ಲಿ ಕಿಲ್ಲಾರಿ ಭೂಕಂಪ ಸಂತ್ರಸ್ತರಿಗೆ ಪುನರ್ವಸತಿಯ ಏರ್ಪಾಡು ಮಾಡಿದರು.
3) ಸಿಂಧೂತಾಯಿಯವರಿಗೆ
ಹೆರಿಗೆ ಸಮಯದಲ್ಲಿ ಮನುಷ್ಯರು ಹಿಂಸೆ ನೀಡಿದರು. ಆದರೆ ಮೂಕ ಪ್ರಾಣಿಗಳು ಕಾಪಾಡಿದರು.
ಪ್ರಶ್ನೆ 5) ಕೆಳಗಿನ ಸಂದರ್ಭದಲ್ಲಿ ನೀವು ಏನು
ಮಾಡುವಿರಿ.
ವಯೋವೃದ್ಧರಿಗೆ,
ಮಕ್ಕಳಿಗೆ, ಅಸಹಾಯಕ , ದಿವ್ಯಾಂಗ ಜನರಿಗೆ,ರಸ್ತೆ ದಾಟಿಸಲು ನಾವು ಸಹಾಯ ಮಾಡಬೇಕು. ಅವರ ಕೈ ಹಿಡಿದು ರಸ್ತೆ ದಾಟಿಸಬೇಕು. ಹೀಗೆ
ಮಾಡಿದರೆ ನಮಗೆ ಅವರ ಆಶೀರ್ವಾದ ದೊರೆಯುತ್ತದೆ. ಒಳ್ಳೆಯ ಸಂಸ್ಕಾರ ಬರುತ್ತದೆ.
ಪ್ರಶ್ನೆ 6) ಕೆಳಗಿನ ಪದಗಳ ಅರ್ಥಹೇಳಿ ವಾಕ್ಯದಲ್ಲಿ
ಉಪಯೋಗಿಸಿರಿ.
1) ಮೂಗುಮುರಿ
= ನಾದಿನಿಗೆ ನೋಡಿ ಅತ್ತಿಗೆಯು ಮೂಗುಮುರಿದಳು.
2) ಕೈಯೊಡ್ಡು
= ಬಡವನು ಶ್ರೀಮಂತರ ಎದುರಿಗೆ ಕೈಯೊಡ್ಡಿದನು.
3) ಸತ್ಕರಿಸು= ಸ್ಪರ್ಧೆಯಲ್ಲಿ
ಗೆದ್ದ ವಿದ್ಯಾರ್ಥಿಗೆ ಅತಿಥಿಗಳು ಸತ್ಕರಿಸಿದರು.
ಉಪಕ್ರಮ :
ಸಮೀಪದಲ್ಲಿರುವ ವೃದ್ಧಾಶ್ರಮಕ್ಕೆ ಭೇಟಿಕೊಟ್ಟು ಅಲ್ಲಿರುವ ಹಿರಿಯರೊಂದಿಗೆ ಸಂಭಾಷಣೆ ನಡೆಸಿ
ನಿಮ್ಮ ಶಿಕ್ಷಕರ / ಪಾಲಕರ ಸಹಾಯದಿಂದ ವಿಡಿಯೋ ಕ್ಲಿಪ ತಯಾರಿಸಿರಿ.
ಪರರ ಸೇವೆಯನ್ನು ಮಾಡಿ
ಪರಮಾನಂದವನ್ನು ಪಡೆ
• ಯೋಚಿಸಿ ಉತ್ತರಿಸಿರಿ.
ಅ) ಗುಂಪಿಗೆ ಸೇರದ ಸಂಧಿ ಪದವನ್ನು ಗುರುತಿಸಿರಿ.
1) ನೂರಾರು 2) ಮನೆಯಿಂದ 3) ಊರಿಂದೂರಿಗೆ 4) ಕಲ್ಲನ್ನು
ಆ)"ಮೂಷಕ ವಾಹನ', ಈ ಪದವು ಯಾರನ್ನು ಪ್ರತಿನಿಧಿಸುತ್ತದೆ ?
1) ವಿಷ್ಣು 2) ಶಿವ 3)
ಗಣೇಶ 4) ವೈಖರಿ
- ರೀತಿ
5. ನಗೆಯ ಬಗೆ
ವೈಖಿರಿ-ರೀತಿ, ಬೆಡಗು ; ಛಾಯೆ -ನೆರಳು, ಪ್ರತಿಬಿಂಬ ; ದೇಶಾವರಿ ನಗೆ –ತೋರಿಕೆಯ
ನಗೆ
ಧಾವನ
- ಉಜ್ಜುವಿಕೆ; ಲಾಸ್ಯ
- ಕುಣಿತ; ಪೈಪೋಟಿ
- ಸ್ಪರ್ಧೆ; ಸುಸ್ತಾಗು
- ಬಳಲು ;
ಮೋಹಕ
- ಮುಗುಳುನಗೆ.
ಶಬ್ದಕೋಶದ
ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಬರೆಯಿರಿ.
ಒರಟು – ಹರಬುರುಕ; ತಾರಕ ಸ್ವರ –ಚೀರುವ
ಧ್ವನಿ
ಅಭ್ಯಾಸ
ಪ್ರಶ್ನೆ 1) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ
ಉತ್ತರ ಬರೆಯಿರಿ.
ಅ)ಭಜನೆಗಿಂತ ಯಾವುದು ಜಾಸ್ತಿಯಾಗುತ್ತಿತ್ತು ?
ಉತ್ತರ:ಭಜನೆಗಿಂತ ನಗೆಯೇ ಜಾಸ್ತಿಯಾಗುತ್ತಿತ್ತು.
ಆ) ಉಗುಳು ನಗೆ ಎಂದರೇನು ?
ಉತ್ತರ:ಕೆಲವರು ಮಾತಾಡುತ್ತಾ ನಗುತ್ತಾರೆ. ನಗುತ್ತಾ ಕಾರಂಜಿಯಂತೆ ಉಗುಳು ಹರಿಸುತ್ತಾರೆ.
ಇದಕ್ಕೆ ಉಗುಳು ನಗು ಎನ್ನುವರು.
ಇ) ಕೆಮ್ಮು ನಗೆ ಎಂದರೇನು ?
ಉತ್ತರ:ಕೆಲವರು ನಕ್ಕು ನಕ್ಕು ನಡುವೆ ಕೆಮ್ಮುತ್ತಾರೆ. ಕೆಮ್ಮೀ ನಗುತ್ತಾರೆ. ಆಗ ಅದು
ಕೆಮ್ಮು ನಗೆ ಆಗುತ್ತದೆ.
ಈ) ಮೋಹಕ ನಗೆ ಎಂದರೇನು?
ಉತ್ತರ:ಮೋಹಕ ನಗೆಯಲ್ಲಿ ಹಲ್ಲುಗಳು
ತಮ್ಮನ್ನು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ.
ಉ) ಹುಚ್ಚು ನಗೆಯ ಬಗ್ಗೆ
ಬರೆಯಿರಿ.
ಉತ್ತರ: ಹೆಚ್ಚಾಗಿ ಶಬ್ದ ಮಾಡಿ ಬಾಯಿ ಅಗಲಿಸಿ ಗಹಗಹಿಸಿ, ಬಿದ್ದು ಬಿದ್ದು ನಗುವುದೇ ಹುಚ್ಚು ನಗೆ.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು
ರಚಿಸಿ ಉತ್ತರ ಬರೆಯಿರಿ.
ಅ)ಬೋಳು ನಗೆ ಎಂದರೇನು?
ಉತ್ತರ:ಹಲ್ಲುಗಳೇ ಇಲ್ಲದ ಬೊಚ್ಚು ಬಾಯಿಯವರು ನಗುವುದಕ್ಕೆ ಬೋಳು ನಗೆ ಎನ್ನುವರು.
ಆ) ‘ಮುಖದಲ್ಲಿ ನಗೆ ಮನದಲ್ಲಿ ಧಗೆ’ ಎಂಬುದರ ಅರ್ಥವೇನು?
ಉತ್ತರ:ಮುಖದಿಂದ ನಗುತ್ತಾ ಮಾತಾಡುವರು ಆದರೆ ಮನಸ್ಸಿನಲ್ಲಿ ಮೋಸದ ಭಾವನೆ
ಇಟ್ಟುಕೊಳ್ಳುವವರು ಕೆಲವರು ಇರುತ್ತಾರೆ. ಆಗ ಈ ಪಡೆನುಡಿ ಹೇಳಲಾಗುತ್ತದೆ.
ಪ್ರ.3. ಕೆಳಗಿನ ಶಬ್ದಗಳನ್ನು ನಿಮ್ಮ ಸ್ವಂತ
ವಾಕ್ಯಗಳಲ್ಲಿ ಬರೆಯಿರಿ.
1)
ಸಾಹಿತ್ಯ: ವಸ್ತುಗಳಿಗೆ ಸಾಹಿತ್ಯ
ಎಂದು ಹೇಳುವರು.
2)
ಜಾಹೀರಾತು: ಕಂಪನಿಗಳು ತಮ್ಮ ಉತ್ಪಾದನೆಗಳ
ಜಾಹೀರಾತು ಮಾಡುತ್ತವೆ.
3)
ಪ್ರಯತ್ನ: ಪರೀಕ್ಷೆಗಾಗಿ ಮಕ್ಕಳು ಅಪಾರ
ಪ್ರಯತ್ನ ಮಾಡಬೇಕು.
4)
ತುಂತುರು: ಮಳೆಗಾಲದಲ್ಲಿ ತುಂತುರು
ಹನಿಗಳು ಉದುರುತ್ತವೆ.
ಯೋಚಿಸಿ ಉತ್ತರಿಸಿರಿ.
ಅ) ಭರತರತ್ನ ಪ್ರಶಸ್ತಿ ಪಡೆದ
ಕರ್ನಾಟಕದ ಸಂಗೀತಗಾರ್ತಿ –
1) ಗಂಗೂಬಾಯಿ
ಹಾನಗಲ್ಲ 2) ಬಿ.ಆರ್. ಛಾಯಾ
3) ಸಂಗೀತಾ ಕಟ್ಟಿ 4) ಎಂ. ಎಸ್. ಸುಬ್ಬುಲಕ್ಷ್ಮಿ
ಆ) ಗಂಗಾವತಿ ಬೀಚಿ ಎಂದು ಕರೆಯಿಸಿಕೊಳ್ಳುವ
ಹಾಸ್ಯದಿಗ್ಗಜ –
1) ಪ್ರೋ. ಕೃಷ್ಣೇಗೌಡ 2) ನರಸಿಂಹ ಜೋಶಿ
3) ಪ್ರಾಣೇಶ 4) ರಿಚರ್ಡ್ ಲೂಯಿಸ್
6. ಇರುವುದನ್ನು ಇಷ್ಟಪಡು (ಚಿತ್ರಕಥೆ)
7. ಪರಿಸರ ಮಾಲಿನ್ಯ
ಶಬ್ದಗಳ ಅರ್ಥ
ಉಬ್ಬುಸರೋಗ – ದಮ್ಮುರೋಗ; ಕೊರೆದ ಬಾವಿ –ಕೊಳವೆ ಬಾವಿ; ಡಾಲ್ಬಿ – ಒಂದು ಧ್ವನಿವರ್ಧಕ ಸಾಧನ; ಹಿರೇಮಣಿ – ಮುಖಂಡ
ಅಭ್ಯಾಸ
ಪ್ರ. 1. ಕೆಳಗಿನ ಪ್ರಶ್ನೆಗಳಿಗೆ ಉತ್ತರ
ಬರೆಯಿರಿ.
ಅ) ಉಸಿರಾಟಕ್ಕೆ ಎಂತಹ ಹವೆ ಬೇಕು?
ಉತ್ತರ: ಉಸಿರಾಟಕ್ಕೆ ಶುದ್ಧವಾದ ಹವೆಬೇಕು.
ಆ) ‘ಪ್ರದುಷಣೆ’ ಎಂದರೇನು?
ಉತ್ತರ: ಪ್ರದುಷಣೆ ಎಂದರೆ ಮಲಿನವಾಗುವುದು, ಹೊಲಸಾಗುವುದು ಎಂದರ್ಥ.
ಇ) ವಾಹನಗಳು ಬಿಡುವ ಕಪ್ಪು ಹೊಗೆಯು ಯಾವ ಪರಿಣಾಮ ಉಂಟು
ಮಾಡುತ್ತದೆ?
ಉತ್ತರ:ವಾಹನಗಳು ಬಿಡುವ ಕಪ್ಪು ಹೊಗೆ ಹವೆಯಲ್ಲಿ
ಸೇರಿದ್ದರೆ ಅದರಿಂದ ತಲೆನೋವು, ಕಣ್ಣುರಿತ, ಉಬ್ಬಸರೋಗ, ಕೆಮ್ಮು, ರಕ್ತದ
ಒತ್ತಡ, ಚರ್ಮದ ರೋಗ ಉಂಟಾಗುತ್ತವೆ.
ಈ) ಹವೆ ದೂಷಿತವಾಗಲು ಕಾರಣವೇನು?
ಉತ್ತರ:ವಾಹನಗಳು ಬಿಡುವ ಕಪ್ಪು ಹೊಗೆ, ಅವು ಎಬ್ಬಿಸುವ ಧೂಳು, ಕೊಳಚೆಯ ಕೆಟ್ಟ ವಾಸನೆ, ಗಿರಣಿ, ಕಾರ್ಖಾನೆಗಳು ಹೊರಹಾಕುವ ಹೊಗೆ ಇವುಗಳಿಂದ
ವಿಷಪೂರಿತ ಅನಿಲಗಳು ಹವೆಯಲ್ಲಿ ಸೇರಿಕೊಂಡು ಹವೆ ದೂಷಿತವಾಗುತ್ತದೆ.
ಉ) ಪರಿಸರ ಪ್ರದುಷಣೆಯಗಳು ಕಾರಣವೇನು?
ಉತ್ತರ: ಮನೆ ಮನೆಗಳಲ್ಲಿ ಉರಿಸುವ ಹಸಿ ಸೌದೆಯ ಹೊಗೆ, ಮನೆಗೆ ತಾಗಿ ಇರುವ ದನದ ಕೊಟ್ಟಿಗೆಯ ಹೊಲಸು ವಾಸನೆ, ಬಚ್ಚಲು
ನೀರಿನ ವಾಸನೆ, ದಾರಿಯ ಎಡಬಳಗಳಲ್ಲಿಯೇ ಮಲಮೂತ್ರ ಮಾಡುವಿಕೆ, ವಾಹನಗಳ ಧೂಳು, ತಮ್ಮ ಲಾಭಕ್ಕಾಗಿ ಗಿಡಮರಗಳನ್ನು ಕಡಿಯುವುದು
ಇತ್ಯಾದಿಗಳಿಂದ ಪರಿಸರ ಪ್ರದುಷಣೆಗೊಳ್ಳುತ್ತದೆ.
ಊ) ಮಲೀನವಾದ ನೀರು ಸೇವನೆಯಿಂದ ಯಾವ ರೋಗಗಳು ಬರುತ್ತವೆ?
ಉತ್ತರ: ಮಲೀನವಾದ ನೀರಿನ ಸೇವನೆಯಿಂದ ಕಾಮಾಲೆ, ಕಾಲರಾ, ನಾರುಹುಣ್ಣು, ಆನೆಕಾಲು
ರೋಗಗಳು ಬರುತ್ತವೆ.
ಪ್ರ.2. ಒಂದೇ ವಾಕ್ಯದಲ್ಲಿ ಉತ್ತರ
ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.
ಅ) ಹವೆಯ ಪ್ರಾದುಷಣೆಯಲ್ಲಿ ಗಿಡಮರಗಳ ಪಾತ್ರವೆನು?
ಉತ್ತರ: ಗಿಡಮರಗಳ ಎಲೆಗಳು ತೇವವಾಗಿರುವುದರಿಂದ ವಾಹನಗಳ
ಓಡಾಟದಿಂದ ಮೇಲೆದ್ದ ಧೂಳು ತಪ್ಪಲುಗಾಳಿಗೆ ಅಂಟಿಕೊಳ್ಳುತ್ತದೆ.
ಆ)ಪರಿಸರವನ್ನು ಸಮತೋಲವಾಗಿ ಇಡಲು ನಾವು ಏನು ಮಾಡಬೇಕು?
ಉತ್ತರ:
ನಾವು ಪ್ರತಿವರ್ಷ ಸಾಸಿಗಳನ್ನು ನೆಡಬೇಕು ಮತ್ತು ಅವುಗಳ ರಕ್ಷಣೆ ಮಾಡಬೇಕು.
ಪ್ರ.3. ಕೆಳಗಿನ ಶಬ್ದಗಳನ್ನು ನಿಮ್ಮ
ಸ್ವಂತ ವಾಕ್ಯಗಳಲ್ಲಿ ಬರೆಯಿರಿ.
ಉಸಿರುಗಟ್ಟು:- ದೂಷಿತ
ಹವೆಯಿಂದ ನಮಗೆ ಉಸಿರುಗಟ್ಟುತ್ತದೆ.
ಮಲೀನವಾಗು: - ಬಚ್ಚಲು
ನೀರು ಮನೆ ಮುಂದೆ ಸಂಗ್ರಹವಾದರೆ ಪರಿಸರ ಮಲೀನವಾಗುತ್ತದೆ.
ಅಂಟಿಕೊಳ್ಳು:- ಬೆಕ್ಕಿನ
ಮರಿ ತಾಯಿಗೆ ಅಂಟಿಕೊಂಡು ಮಲಗುತ್ತದೆ.
ಪ್ರ.4. ಕೆಳಗಿನ ಶಬ್ದಗಳಿಗೆ ಎರಡೆರಡು
ಅರ್ಥಗಳಿವೆ, ಅವುಗಳನ್ನು ಬರೆಯಿರಿ.
ಉದಾ: ಕಪ್ಪು
= ಕಪ್ಪು ಬಣ್ಣ, ಚಹಾ ಕುಡಿಯುವ ಪಾತ್ರೆ
ಬೆಳೆ = ಹೊಲದಲ್ಲಿಯ ಬೆಳೆ, ಎತ್ತರವಾಗಿ ಬೆಳೆ
ಹೊಳೆ = ಮಿಂಚುವುದು, ನೀರಿನ ಹೊಳೆ
ಏಳು = ಎದ್ದುನಿಲ್ಲು, ಏಳು ಅಂಕಿ ಸಂಖ್ಯೆ
ತೆರೆ = ಬಾಗಿಲು ತೆರೆ, ಪರದೆ
ಉಪಕ್ರಮ: ಚಿತ್ರಗಳ ಸಹಾಯದಿಂದ ಪ್ರದುಷಣೆಯ
ಪ್ರಕಾರಗಳನ್ನು ಬರೆಯಿರಿ.
1)
ವಾಯು ಪ್ರದುಷಣೆ
2)
ಹವೆಯ ಪ್ರದುಷಣೆ
3)
ನೀರಿನ ಪ್ರದುಷಣೆ
4)
ನೀರಿನ ಪ್ರದುಷಣೆ
ಯೋಚಿಸಿ ಉತ್ತರಿಸಿರಿ.
ಅ) “ದೀಪದ ಕೆಳಗೆ .................”
ಈ ಗಾದೆ ಮಾತನ್ನು ಕೆಳಗಿನ ಯಾವ ಪರ್ಯಾಯ ಬಳಸಿದರೆ ಪೂರ್ಣಗೊಳಿಸಬಹುದು?
1) ಮಲಗಿಕೋ 2) ಬೆಳಕು 3) ಕತ್ತಲೆ 4) ಎಣ್ಣೆ
1)
8. ಕ್ರಿಸಮಸ್
ಕೊಟ್ಟಿಗೆ – ದನಗಳ ವಾಸಸ್ಥಾನ/ಕಟ್ಟುವ ಸ್ಥಳ; ಸಮಾಚಾರ – ಸುದ್ದಿ;
ಆಚರಣೆ – ರೂಢಿ; ಝಗ್ಗನೆ – ಮಿಂಚುವುದು;
ಕಣ್ಮರೆ – ಕಾಣದಂತಾಗು;
ಹರುಷ – ಸಂತೋಷ; ಶುಭಾಶಯ – ಅಭಿನಂದನೆ
ಪ್ರಶ್ನೆ 1 ಕೆಳಗಿನ ಪ್ರಶ್ನೆಗಳಿಗೆ
ಉತ್ತರ ಬರೆಯಿರಿ.
ಅ) ಕುರಿ ಕಾಯುವವರು ಏಕೆ ಹೆದರಿದರು?
ಉತ್ತರ: ಮುಗಿಲಿನಲ್ಲಿ ಒಮ್ಮೆಲೇ ಝಗ್ಗನೆ ಬೆಳಕು ಬಿದ್ದಿದ್ದರಿಂದ
ಕುರಿ ಕಾಯುವವರು ಹೆದರಿದರು.
ಆ) ಕ್ರಿಸ್ ಮಸ್ ಎಂದರೇನು?
ಉತ್ತರ: ಏಸುಕ್ರಿಸ್ತನ ಹುಟ್ಟುಹಬ್ಬವೇ ಕೃಸಮಸ್. ಇದು ದೊಡ್ಡ
ಹಬ್ಬವಾಗಿದೆ.
ಇ) “ಕಿಸ್ಮಸ್” ಹಬ್ಬಕ್ಕೆ ಕ್ರೈಸ್ತರು ಮನೆಗಳನ್ನು
ಹೇಗೆ ಶೃಂಗಾರ ಮಾಡುವರು?
ಉತ್ತರ: ಕಿಸ್ಮಸ್” ಹಬ್ಬಕ್ಕೆ ಕ್ರೈಸ್ತರು ಮನೆಗಳನ್ನು ಸ್ವಚ್ಛಗೊಳಿಸಿ
ಬಣ್ಣ ಬಣ್ಣದ ಬಲೂನುಗಳಿಂದ ಸಿಂಗರಿಸುವರು. ನಕ್ಷತ್ರದಾಕಾರದ ಬಣ್ಣ ಬಣ್ಣದ ಆಕಾಶಬುಟ್ಟಿಗಳನ್ನು ಮನೆಯ
ಮುಂದೆ ತೂಗು ಹಾಕುವರು. ಅವುಗಳಲ್ಲಿ ದೀಪಗಳನ್ನು ಇಡುವರು.
ಪ್ರಶ್ನೆ.2. ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು
ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.
ಅ) ಎಷ್ಟು ಗಂಟೆಗೆ ಚರ್ಚಿನ ಗಂಟೆಗಳು ಧ್ವನಿ ಮಾಡುವವು?
ಉತ್ತರ: ಹನ್ನೆರಡು ಗಂಟೆಗೆ ಚರ್ಚಿನ ಗಂಟೆಗಳು ಧ್ವನಿ ಮಾಡುವವು.
ಆ) ಕ್ರೈಸ್ತರು ಔತಣದೂಟವನ್ನು ಯಾರಿಗೆ ನೀಡುವರು?
ಉತ್ತರ: ಕ್ರೈಸ್ತರು ಔತಣದೂಟವನ್ನು ಆಪ್ತರಿಗೆ, ಮಿತ್ರರಿಗೆ ನೀಡುವರು.
ಪ್ರಶ್ನೆ 3. ಬಿಟ್ಟ ಸ್ಥಳ ತುಂಬಿರಿ.
ಅ) ಬೆಳಕಿನಲ್ಲಿ ಒಬ್ಬ ದೇವದೂತನು ಕಾಣಿಸಿಕೊಂಡನು.
ಆ) ಜಾಣರು ದನದ ಕೊಟ್ಟಿಗೆಯಲ್ಲಿ
ಮಗುವನ್ನು ಕಂಡರು.
ಇ) ಹೊಸ ವರುಷವು ಸುಖ
ತರಲಿ.
ಈ) ಡಿಸೆಂಬರ್ ಇಪ್ಪತ್ತೈದರಂದು
ಕ್ರೈಸ್ತರ ಸಡಗರ ಹೇಳತೀರದು.
ಪ್ರಶ್ನೆ 4. ಕೆಳಗಿನ ಧರ್ಮಗಳ ಪವಿತ್ರ ಗ್ರಂಥಗಳ ಹೆಸರನ್ನು ಚೌಕಟ್ಟಿನಲ್ಲಿ ಬರೆಯಿರಿ.
ಧರ್ಮಗಳು
|
ಧರ್ಮಗಳ
ಹೆಸರು |
ಅ)
ಕ್ರೈಸ್ತ ಧರ್ಮ |
ಬಾಯಬಲ್ |
ಆ)
ಸಿಖ್ ಧರ್ಮ |
ಗುರು
ಗ್ರಂಥ ಸಾಹಿಬಾ |
ಇ)
ಇಸ್ಲಾಂ ಧರ್ಮ |
ಕುರಾನ್ |
ಈ)
ಹಿಂದೂ ಧರ್ಮ |
ಶ್ರೀಮದಭಾಗ್ವತ್ಗಿತಾ |
ಉ)
ಪಾರಸಿ ಧರ್ಮ |
ಅವೇಸ್ತಾ |
ಊ)
ಬೌದ್ಧ ಧರ್ಮ |
ತ್ರಿಪಿಟಕ |
ಹಬ್ಬ ಬಂತು ಹರುಷ ತಂತು
***
12. ನರಿ ಮತ್ತು ಬಿಲ
-ದುರ್ಗಸಿಂಹ
ಕಪಟ ಪ್ರಪಂಚ ಪರಿಣೀತವಿರುವ ಉಪಾಯ ನಿಪುಣ
ಜಂಬುಕನೆಂಬ ನರಿಯೊಂದು ಗಿರಿಯ(ಗುಡ್ಡದ) ಮೇಲೆ ಬಿಲ ಮಾಡಿಕೊಂಡು ವಾಸಿಸುತಿತ್ತು. ಅದೇ ಕಾಡಿನಲ್ಲಿ ಪುಂಡರೀಕನೆಂಬ
ಹೆಸರುಳ್ಳ ಹುಲಿ ಇರುತಿತ್ತು. ಆ ಹುಲಿ ಬೇಟೆಗೆ ಹೋಗಿ ಮಾಂಸವನ್ನು ತಂದು ತಿಂದು ಉಳಿದಿದ್ದನ್ನು
ತನ್ನ ಗುಹೆಯೊಳಗೆ ಬಚ್ಚಿತ್ತು ಮರುದಿವಸ ತಂದ ಮಾಂಸವನ್ನು ಸಮಾಧಾನದಿಂದ ತಿಂದು ಮತ್ತೆ ಬೇಟೆಗೆಂದು
ಹೋಗುತಿತ್ತು. ಉಪಾಯನಿಪುಣನೆಂಬ ನರಿಯು ಆ ಗುಹೆಯನ್ನು ಕಂಡು ಒಳಗೆ ಹೋಗಿ ಅಲ್ಲಿದ್ದ ಮಾಂಸವನ್ನು
ತಿಂದು ಹೋಗುತಿತ್ತು. ಹುಲಿ ಬಂದು ಹೊಸದಾಗಿ ತಂದಿರುವ ಮಾಂಸವನ್ನು ಬಚ್ಚಿಡುವಾಗ ಮೊದಲು ತಂದ ಮಾಂಸ
ಕಾಣದೇ ಬೆರಗಾಗಿ ಮರುದಿವಸ ಬೇಟೆಗೆ ಹೋಯಿತು. ಮತ್ತೇ ಆ ನರಿ ಬಂದು ಅಲ್ಲಿರುವ ಮಾಂಸವೆಲ್ಲವನ್ನು
ತಿಂದು ಹೋಗುತಿತ್ತು. ಈ ರೀತಿಯಾಗಿ ನಿತ್ಯವೂ ಕಳ್ಳವು ಮಾಡಿ ತಿಂದು ಹೋಗುವುದನ್ನು ಕಂಡು ಬೇಸರಿಸಿ
ಹುಲಿಯು ತನ್ನ ಮನೆಯನ್ನು ನಿತ್ಯ ಯಾರು ಬಂದು ಲೂಟಿ ಮಾಡುತ್ತಿದ್ದಾರೆ ಆ ಕಳ್ಳನನ್ನು ಹಿಡಿಯಬೇಕೆಂದು
ತನ್ನ ಗುಹೆಯ ಹೊರಗೆ ಅಡಗಿ ಕುಳಿತುಕೊಂಡಿತು. ಆಗ ಆ ನರಿ ಬಂದು ಗುಹೆಯ ಸೇರಿ ಅಲ್ಲಿದ್ದ
ಮಾಂಸವನ್ನು ತಿನ್ನುತ್ತಿರಲು ಹುಲಿ ನೋಡಿ ಇದನ್ನು ಇಲ್ಲಯೇ ಕೊಲ್ಲುವುದು ಸರಿ ಇಲ್ಲ. ಆ ನರಿ
ಹೋಗುವಾಗ ಅದರ ಜೊತೆ ಹೋಗಿ ಅದರ ಮನೆಯ ಕಂಡು ಮರುದಿವಸ ಅದು ತನ್ನ ಮನೆಗೆ ಬಂದಾಗ ತನು ಆ ನರಿಯ
ಬಿಲವನ್ನು ಸೇರಿ ಹೊಡೆಯಬೇಕು ಎಂದು ನಿರ್ಧರಿಸಿತು. ಹಾಗೆ ಅದು ನರಿಯ ಬಿಲವನು ಹೊಕ್ಕಿತು.
ಹೀಗಿರಲು ನರಿ ತನ್ನ ಮನೆಗೆ ಬಂದು ಬಾಗಿಲದಲ್ಲಿ ಹುಲಿಯ ಹೆಜ್ಜೆ ಮುಡಿರುವುದನ್ನು
ಕಂಡು ಇದಕ್ಕೆನಾದರೂ ಉಪಾಯ ಮಾಡದೆ ತಿಳಿಯದು ಎಂದು ಶಂಕಿಸಿ ನಾಲ್ಕ ಹೆಜ್ಜೆ ಹಿಂದೆ ಸರಿದು ನಿಂತು
ಕೊಂಡಿತು. ಉಪಾಯ ಮಾಡಿ ನೋಡುವೆ ಎಂದು ಬಿಲವನ್ನು ಹೆಸರು ಹೇಳಿ ಹಲವು ಸಲ ಸುಳ್ಳ ಸುಳ್ಳಾಗಿ
ಕರೆಯಿತು, ಆ ಬಿಲವು ಏನೂ ಹೇಳದಿದ್ದಾಗ, “ಬಿಲನೇ, ನೀನು ಇಷ್ಟು ದಿವಸ ನಾನು ಬರುವಾಗ ಎದುರಿಗೆ
ಬಂದು ಸ್ವಾಗತ ಮಾಡಿ ಸೇವೆಯನ್ನು ಮಾಡುತ್ತಿದ್ದೆ,
ಪದ್ಯಭಾಗ
1. ನೇಗಿಲಯೋಗಿ
ಶಬ್ದಗಳ ಅರ್ಥ
ನೇಗಿಲು - ಉಳುವ ಸಾಧನ :
ಹೊಲ – ಗದ್ದೆ, ಜಮೀನು ; -
ಫಲ - ಲಾಭ, ಪ್ರಯೋಜನ :
ಇಹಪರ – ಭೂಮಿ, ಸ್ವರ್ಗ : -
ಕುಳ – ಕುಡ, ನೇಗಿಲದ ಕಬ್ಬಿಣದ ತುದಿ -
ಶಬ್ದಕೋಶದ ಸಹಾಯದಿಂದ ಕೆಳಗಿನ
ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.
ಯೋಗಿ- ತಪಶ್ವಿ ಭೋಗಿ- ಸಂಸಾರಿ ತ್ಯಾಗಿ – ಎಲ್ಲವನ್ನೂ ತ್ಯಾಗ ಮಾಡಿದವ(ಸನ್ಯಾಶಿ)
ಅಭ್ಯಾಸ
ಪ್ರಶ್ನೆ 1) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಇಹ-ಪರದ ಸಾಧನ ಯಾವುದು?
ಉತ್ತರ: ಫಲ ಬಯಸದೆ ಮಾಡುವ ಸೇವೆ, ಕರ್ಮ ಇವು ಇಹ-ಪರದ ಸಾಧನಗಳು ಆಗಿವೆ.
ಆ) ನಮ್ಮ ನಾಗರಿಕತೆಯ ಸಿರಿ ಹೇಗೆ ಬಾಳಿತು ?
ಉತ್ತರ: ಮಣ್ಣು ಉಣ್ಣುವ/ಉಳುವ ನೇಗಿಲದ ಆಶ್ರಯದಲ್ಲಿ
ನಮ್ಮ ನಾಗರಿಕತೆಯ ಸಿರಿ ಬಾಳಿತು.
2) ನೇಗಿಲ ಬಲದಲ್ಲಿ ಯಾರು ಮೆರೆದರು ?
ಉತ್ತರ: ನೇಗಿಲ ಬಲದಲ್ಲಿ ವೀರರು ಮೆರೆದರು.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ
ಬರೆಯಿರಿ.
ಅ) ನೇಗಿಲಯೋಗಿ ಕವಿತೆಯನ್ನು ಯಾರು ಬರೆದಿದ್ದಾರೆ?
ಉತ್ತರ: ನೇಗಿಲಯೋಗಿ ಕವಿತೆಯನ್ನು ಕುವೆಂಪು
ಬರೆದಿದ್ದಾರೆ.
ಆ) ಧರ್ಮ ಯಾವುದರ ಮೇಲೆ ನಿಂತಿದೆ?
ಉತ್ತರ: ಧರ್ಮ ನೇಗಿಲ ಮೇಲೆಯೇ ನಿಂತಿದೆ.
ಪ್ರಶ್ನೆ 3) ಬಿಟ್ಟ ಸ್ಥಳಗಳನ್ನು ತುಂಬಿ
ವಾಕ್ಯ ಪೂರ್ಣಗೊಳಿಸಿರಿ.
ಅ) ಕಷ್ಟದೊಳನ್ನವ ದುಡಿವನೆ
ತ್ಯಾಗಿ.
ಬ) ನೇಗಿಲ ಹಿಡಿದ ಕೈಯಾಧಾರದಿ
ದೊರೆಗಳು ದರ್ಪದೋಳಾಳಿದರು.
ಕ) ನೇಗಿಲ ಕುಳದೊಳಗಡಗಿದೆ ಕರ್ಮ.
ಡ) ದುಡಿವನು ಗೌರವಕಾಶಿಸದೆ.
ಪ್ರಶ್ನೆ 4) ‘ಅ’ ಗುಂಪು ಮತ್ತು ‘ಬಿ’ ಗುಂಪುಗಳನ್ನು ಹೊಂದಿಸಿ ಬರೆಯಿರಿ.
‘ಅ’ ಗುಂಪು ‘ಬಿ’ ಗುಂಪು
1.
ದೊರೆಗಳು ದರ್ಪದೋಳಾಳಿದರು.
2.
ವೀರರು ಮೆರೆದರು
3.
ಶಿಲ್ಪಿಗಳು ಎಸೆದರು
4.
ಕವಿಗಳು ಬರೆದರು.
ಪ್ರಶ್ನೆ5) ಈ ಕವಿತೆಯಲ್ಲಿ ರೈತನ
ಗುಣಗಳನ್ನು ಹೇಳುವ ಪದಗಳನ್ನು ಚೌಕಟ್ಟಿನಲ್ಲಿ ಬರೆಯಿರಿ.
ಪ್ರಶ್ನೆ6) ಉದಾಹರಣೆಯಲ್ಲಿ ತೋರಿಸಿದಂತೆ
ಅಂತ್ಯಾಕ್ಷರವನ್ನು ಬಳಸಿ ಹೊಸ ಶಬ್ದ ರಚಿಸಿರಿ.
ಉದಾ: ಅಕ್ಷರ- ರವಿ-ವಿಜ್ಞಾನ-ನದಿ-ದಿನಾಂಕ-
ಕಮಲ
ಅ)
ಅರಸ- ಸರಕಾರ- ರಂಗಾಯನ- ನವಿಲು
ಆ)
ಕನಸು- ಸುಮಾ- ಮರಾಠಿ- ಠೀವಿ- ವಿಜಯಪುರ- ರತ್ನಾಕರ
ಇ)
ವಿನಯಾ- ಯಕೃತ್ತ- ತಕ್ಕಡಿ-ಡಮರು- ರುಮಾಲ
2. ಜಯವೆನ್ನಿ ಭಾರತಾಂಬೆಗೆ
ಶಬ್ದಗಳ ಅರ್ಥ
ವಿಶ್ವವಿಖ್ಯಾತ – ಜಗತ್ಪ್ರಸಿದ್ಧ; ಉತ್ತುಂಗದ-ಎತ್ತರದ, ಶ್ರೇಷ್ಠ: ಶ್ಯಾಮಲೆ – ಕಪ್ಪು
ವರ್ಣದವಳು ಪಾರತಂತ್ರ್ಯ – ಪರಾಧೀನ ; ಕಣಿವೆ – ಸಂಧಿ, ಭೂರುಪ; ಕೀರ್ತಿ-
ಪ್ರಸಿದ್ಧಿ ; ಸೌಹಾರ್ದ- ನಲುಮೆಯ
ಅಭ್ಯಾಸ
ಪ್ರಶ್ನೆ 1) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
1. ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಏನಿವೆ ?
ಉತ್ತರ: ಉತ್ತರ ದಿಕ್ಕಿಗೆ ಹಿಮಾಲಯ ಪರ್ವತವಿದೆ. ಮತ್ತು
ಕರ್ನಾಟಕ್
2. ಪಾರತಂತ್ರ್ಯದ ಉರುಳು ಬಿಗಿಯಾಗಲು ಕಾರಣವೇನು ?
ಉತ್ತರ: ಪರಕೀಯ ಇಳಿಯು ಭಾರತದಲ್ಲಿ ಬಂದು ಹುಲಿಯಾಗಿ
ಮೆರೆಯುತ್ತಾ ನಮ್ಮನ್ನು ಗುಲಾಮನನ್ನಾಗಿಸಿತು. ಆಗ ಪಾರತಂತ್ರ್ಯದ ಉರುಳು ಬಿಗಿಯುವಂತಾಯಿತು.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ
ಬರೆಯಿರಿ.
1. ಜಯವೆನ್ನಿ ಭರತಾಂಬೇಗೆ ಈ ಕವನ ಯಾರು ಬರೆದಿದ್ದಾರೆ?
ಉತ್ತರ: ಜಯವೆನ್ನಿ ಭರತಾಂಬೇಗೆ ಈ ಕವನ ಮುಂಬಯಿಸ್ಥಿತ
ಡಾ. ಸುನೀತಾ ಎಂ. ಶೆಟ್ಟಿ ಇವರು ಬರೆದಿದ್ದಾರೆ.
2. ಜಯವೆನ್ನಿ ಭರತಾಂಬೇಗೆ ಈ ಕವನ ಯಾವ ಪುಸ್ತಕದಿಂದ
ಆಯ್ದುಕೊಳ್ಳಲಾಗಿದೆ?
ಉತ್ತರ: ‘ಜಯವೆನ್ನಿ
ಭರತಾಂಬೇಗೆ’ ಈ ಕವನ ಡಾ. ಸುನೀತಾ ಎಂ. ಶೆಟ್ಟಿ ಇವರ ಮೌನದ ಕಿಟಕಿಯೊಳಗೆ
ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಪ್ರಶ್ನೆ 3) ಕಳಗಿನ ಪದ್ಯದ ಸರಳಾನುವಾದ
ಬರೆಯಿರಿ.
ತಾಯಿ ಭಾರತೀಯ ಮಡಿಲ ಮಕ್ಕಳು ನಾವು
ಆಯ ತಪ್ಪದ ಬದುಕ ಹರಕೆ ಹೊತ್ತವರು|
ಕಾಯವಳಿದರು ಕೀರ್ತಿ ಉಳಿಸುವ ಹಂಬಲದಿ
ನ್ಯಾಯ, ಸೌಹಾರ್ದಗಳ ನೋಂಪಿ ನೋಂತವರು ||
ಸರಳಾನುವಾದ:
ಪ್ರಶ್ನೆ 4) ಬಿಟ್ಟ ಸ್ಥಳಗಳನ್ನು ಯೋಗ್ಯ
ಶಬ್ದಗಳಿಂದ ತುಂಬಿರಿ.
ಅ) ಕಲಹಕೆಳಸದ ಒಂದೆ ತಾಯ್ ಮಕ್ಕಳು.
ಆ) ಪಾರತಂತ್ರ್ಯದ ಉರುಳು
ಬಿಗಿಯುವಂತಾಯ್ತು.
ಇ) ತಾಯಿ ಭಾರತೀಯ ಮಡಿಲ ಮಕ್ಕಳು
ನಾವು.
ಪ್ರಶ್ನೆ 5) ಕೆಳಗಿನ ಶಬ್ದಗಳಿಗೆ
ಸರಿಹೊಂದುವಂತೆ ಉದಾಹರಣೆಯಲ್ಲಿ ತೋರಿಸಿದಂತೆ ಇತರ ಶಬ್ದಗಳನ್ನು ಬರೆಯಿರಿ.
ಉದಾ: ಶಾಲೆ – ಪುಸ್ತಕ, ಮಕ್ಕಳು, ಘಂಟೆ, ಬೋರ್ಡು, ಚೆಂಡು, ಲಗೋರಿ, ಬೆಂಚು.
ಹೊಲ
– ಬೆಳೆ, ಹತ್ತಿ, ಮಳೆ, ಕುರಗಿ, ಬೀಜ, ತೋಟ, ಎತ್ತುಗಳು
ಅರಣ್ಯ
–ಗಿಡಮರಗಳು, ಪ್ರಾಣಿಗಳು,
ವನಸ್ಪತಿಗಳು, ರಸ್ತೆ
ಅಂಗಡಿ
– ಸಾಬೂನು, ಕಿರಾಣಿ, ರವೆ, ಗೋದಿ ಹಿಟ್ಟು, ಅಗರಬತ್ತಿ, ಬೆಲ್ಲ.
ಪ್ರಶ್ನೆ 6) ಸ್ವಾತಂತ್ರ್ಯ ದಿನಾಚರಣೆಯ
ಕುರಿತು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಸ್ವಾತಂತ್ರ್ಯವೇ ಸ್ವರ್ಗ, ಪಾರತಂತ್ರ್ಯವೇ ನರಕ
3. ನೇತ್ರದಾನ
-
ಶ್ರೀಮತಿ ಗೌರಾ ಶಿ. ತಾಳಿಕೋಟಿಮಠ
ಶಬ್ದಗಳ ಅರ್ಥ
ನೇತ್ರ – ಕಣ್ಣು ; ಅಳಿ –
ನಾಶವಾಗು ಅಂಧ - ಕುರುಡ :
ಕಸಿ – ಬೆಳೆಸು ಹೊನ್ನ
- ಬಂಗಾರ; ವಸ್ತ್ರ
- ಬಟ್ಟೆ;
ಲೇಸು - ಒಳ್ಳೆಯದು ; ಅ೦ಧಕಾರ
– ಕತ್ತಲೆ; ಮನುಜ - ಮನುಷ್ಯ
ಪ್ರಶ್ನೆ 1) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಈ ಕವಿತೆಯಲ್ಲಿ ಮೂಡಿಬಂದ ದಾನದ ಪ್ರಕಾರಗಳು ಯಾವವು ?
ಉತ್ತರ: ಈ ಕವಿತೆಯಲ್ಲಿ ಅನ್ನದಾನ, ಹೊನ್ನದಾನ, ವಸ್ತ್ರದಾನ ಹಾಗೂ ನೇತ್ರದಾನ ಇವುಗಳ ಹೆಸರುಗಳು
ಬಂದಿರುತ್ತವೆ.
ಆ) ಅಂಧರಿಗೆ ದೃಷ್ಟಿ ಬರಲು ಏನು ಮಾಡುತ್ತಾರೆ ?
ಉತ್ತರ: ಮನುಷ್ಯ ಸಾಯುವುದಕ್ಕಿಂತ ಮೊದಲು ನೇತ್ರದಾನ
ಮಾಡುತ್ತಾರೆ. ಇದರಿಂದ ಅಂಧರಿಗೆ ಕಣ್ಣು ಕಸಿ ಮಾಡಿ ದೃಷ್ಟಿ ಬರಲು ಸಹಾಯವಾಗುವುದು.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ
ಬರೆಯಿರಿ.
1. ಎಲ್ಲಕ್ಕಿಂತ ಮಿಗಿಲಾದ ದಾನ ಯಾವುದು?
ಉತ್ತರ: ಎಲ್ಲಕ್ಕಿಂತ ಮಿಗಿಲಾದ ದಾನ ನೇತ್ರದಾನವಾಗಿದೆ.
2. ನೇತ್ರದಾನ ಈ ಕವಿತೆಯನ್ನು ಯಾರು ಬರೆದಿದ್ದಾರೆ?
ಉತ್ತರ: - ಶ್ರೀಮತಿ ಗೌರಾ ಶಿ. ತಾಳಿಕೋಟಿಮಠ ಇವರು
ನೇತ್ರದಾನ ಈ ಕವಿತೆಯನ್ನು ಬರೆದಿದ್ದಾರೆ
ಪ್ರಶ್ನೆ 3) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣಮಾಡಿರಿ.
ನೇತ್ರದಾನ ಮಾಡಿದವರ ಬದುಕು ಪುಣ್ಯ ಪಾವನ
ಸತ್ತ ಮೇಲೂ ದೃಷ್ಟಿಕೊಟ್ಟ ಹೊಸತು
ಅದುವೆ ಜೀವನ.
ಪ್ರಶ್ನೆ 4) ದೇಹದಾನದ ಮಹತ್ವವನ್ನು ಕುರಿತು ಬರೆಯಿರಿ.
ಪ್ರಶ್ನೆ 5) ಕೆಳಗಿನ ವಾಕ್ಯಗಳನ್ನು
ಕ್ರಮವಾಗಿ ಬರೆಯಿರಿ.
ರಸ್ತೆಯಲ್ಲಿ ಅಪಘಾತವಾಯಿತು. ಸುತ್ತಲಿನ ಜನರು
ಸಹಾಯಕ್ಕೆ ಬಂದರು. ಪ್ರಥಮೋಪಚಾರ ಮಾಡಿದರು. ದವಾಖಾನೆಗೆ ಸೇರಿಸಿದರು. ರಕ್ತ ಹರಿಯುತ್ತಿತ್ತು.
ರಕ್ತದ ಅವಶ್ಯಕತೆ ಇತ್ತು. ಬ್ಲಡ್ ಬ್ಯಾಂಕಿನಿಂದ ರಕ್ತ ತಂದರು. ರೋಗಿಯನ್ನು ಗುಣಪಡಿಸಿದರು.
ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು
4. ಕುಹೂ ಕುಹೂ
-ಎಚ್.ಎಸ್. ವೆಂಕಟೇಶಮೂರ್ತಿ
ಶಬ್ದಗಳ ಅರ್ಥ
ನಿಬ್ಬೆರಗಾಗು - ಆಶ್ಚರ್ಯಪಡು;
ಕಸಿವಿಸಿ – ನೋವು
*
ಶಬ್ದಕೋಶದ
ಸಹಾಯದಿಂದ ಕಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.
ಕಂಬನಿ – ಕಣ್ಣೀರು ಒರೆಸು – ಅಳಿಸು ಮಾತೆ – ತಾಯಿ
ಅಭ್ಯಾಸ
ಪ್ರಶ್ನೆ 1) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಆ) ಕಾಗಕ್ಕನ ಗಂಡನಿಗೆ ಏಕೆ ಕಸಿವಿಸಿಯಾಯಿತು ?
ಉತ್ತರ: ಕಾಗಕ್ಕಳ ಒಂದು ಮರಿ ಕಾ ಕಾ ಎನ್ನದೆ ಕುಹೂ
ಕುಹೂ ಎಂದು ಕೂಗುತ್ತಿರುವುದರಿಂದ ನೆರೆಮನೆಯವರು ಏನೆಂದುಕೊಂಡಾರು ಎಂದು ಕಾಗಕ್ಕನ ಗಂಡನಿಗೆ ಕಸಿವಿಸಿಯಾಯಿತು.
ಆ) ಕೋಗಿಲೆ ಯಾರನ್ನು ಬೇಡಿತು ?
ಉತ್ತರ: ದೂರದ ಊರಿನ ಕೋಗಿಲೆಯು ಮರಿ ಇಲ್ಲದ ತನ್ನ
ಮಡಿಲಿಗೆ ಕುಹೂ ಎನ್ನುವ ಕುಸನ್ನು ನೀಡಿರಿ ಎಂದು ಕಾಕಾಂಬಿಕೆಯನ್ನು ಬೇಡಿತು.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ
ಬರೆಯಿರಿ.
ಅ) ಹಸಿಬಾಣಂತಿ ಕಾಗಕ್ಕ ಏಕೆ ನೆಬ್ಬೆರಗಾದಳು?
ಉತ್ತರ: ಎಲ್ಲ ಕಾ ಕಾ ಎನ್ನುವ ಮರಿಗಳಲ್ಲಿ ಒಂದು ಮರಿ
ಕುಹೂ ಕುಹೂ ಎನ್ನಲು ಹಸಿಬಾಣಂತಿ ಕಾಗಕ್ಕಾ ನಿಬ್ಬೆರಗಾದಳು.
ಆ) ಹಕೀಮಕಾಕಾ ಕೂಸಿಗೆ ಏನು ತಿನಿಸಿದನು?
ಉತ್ತರ: ಹಕೀಮಕಾಕಾ ಕೂಸಿಗೆ ಹುಣಸೇ ಹಣ್ಣು ತಿನಿಸಿದನು.
ಪ್ರಶ್ನೆ 3) ಬಿಟ್ಟ ಸ್ಥಳಗಳನ್ನು ಯೋಗ್ಯ
ಶಬ್ದಗಳಿಂದ ತುಂಬಿರಿ.
ಅ)
ನಿಬ್ಬೆರಗಾದಳು ಹಸಿಬಾಣಂತಿ
ಆ) ಎಲ್ಲಾ ಮರಿಗಳು ಕಾ ಕಾ ಎಂದವು.
ಇ) ಮರಿಯೇ ಇಲ್ಲದ ಮಡಿಲಿಗೆ ನೀಡಿರಿ.
ಈ) ಮಾತೆಯರಿಬ್ಬರ ಪ್ರೀತಿಯ ಕಂದ ಕೂಗಿತು
ಮೆಲ್ಲನೆ ಕುಹೂ ಕುಹೂ.
ಪ್ರಶ್ನೆ 4) ಕೆಳಗಿನ ಪಕ್ಷಿ, ಪ್ರಾಣಿಗಳು ಕೂಗುವ ರೀತಿಯನ್ನು ಬರೆಯಿರಿ.
ಕಾಗೆ =
ಕಾ ಕಾ ಗುಬ್ಬಿ = ಚಿಂವ್ ಚಿಂವ್
ಕೋಗಿಲೆ
= ಕುಹೂ
ಕುಹೂ ನಾಯಿ = ಬೌ
ಬೌ
ಬೆಕ್ಕು = ಮಿಯಾವ್
ಮಿಯಾವ್ ಕಪ್ಪೆ = ಡ್ರಾ ಡ್ರಾ
ಕೋಗಿಲೆಯ ಗಾನ ಇಂಪು, ನೀಡುವುದು ಮನಕೆ ತಂಪು
5. ಎಳೆಯ ಕಂದನ ಕೂಗು
-ಜಯದೇವಿತಾಯಿ
ಲಿಗಾಡೆ
ಶಬ್ದಗಳ ಅರ್ಥ:
ತೊರೆ – ಬಿಡು: ನೆತ್ತರ – ರಕ್ತ: ಬತ್ತು – ಬಾಡು: ಚಿತ್ತ – ಮನಸ್ಸು:
*
ಶಬ್ದಕೋಶದ
ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.
ವನ – ಕಾಡು ಅಡಿ
– ಫೂಟು ಕಕ್ಕುಲಾತಿ –
ಲಾಚಾರ/ವಿನಂತಿ
ವಿಶೇಷ ವಿಚಾರ :
ಪರಸಿ – ಜಾತ್ರೆ, ಉತ್ಸವದ
ಕಾಲದಲ್ಲಿ ಕೂಡಿದ ಜನ ಸಮೂಹ.
ಅಭ್ಯಾಸ
ಪ್ರಶ್ನೆ 1) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಶಿವಸಿದ್ದನು ಮಲ್ಲಯ್ಯನನ್ನು ಹೇಗೆ ಕರೆಯುತ್ತ
ನಡೆದನು ?
ಉತ್ತರ: ಶಿವಸಿದ್ದನು ಮಲ್ಲಯ್ಯನನ್ನು ಮಲ್ಲಯ್ಯ
ಮಲ್ಲಯ್ಯ ಎಂದು ಕರೆಯುತ ನಡೆದನು.
ಆ) ಎಂತಹ ಮನಸ್ಸಿಗೆ ಗಾಯವಾಯಿತು
?
ಉತ್ತರ: ಕಲ್ಲುಮುಳ್ಳಿನಲ್ಲಿ ಮಲ್ಲಯ್ಯನನ್ನು ನೆನೆಯುತ ಕರೆಯುತ್ತಾ
ಏಳುತ್ತ ಬೀಳುತ್ತ ಹೋರಟ ಶಿವಸಿದ್ಧನ ಮೆತ್ತನೆ ಮನಸ್ಸಿಗೆ ಗಾಯವಾಯಿತು.
ಇ) ತಂದೆ-ತಾಯಿಗಳು ಹೇಗೆ ಕರೆದು ಕೇಳಿದರು?
ಉತ್ತರ: ಬಿಕ್ಕಿ ಬಿಕ್ಕಿ ಆಳುವ ಚಿಕ್ಕ ಸಿದ್ಧನ ಕಂಡು
ತಾಯಿ-ತಂದೆ ಕಕ್ಕುಲಾತಿಯಲ್ಲಿ ಕರೆದು ಕೇಳಿದರು.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ
ಬರೆಯಿರಿ.
ಅ) ಕಾಡಿನಲ್ಲಿ ಸಿದ್ದರಾಮನು ಯಾವ ಯಾವ ಪಕ್ಷಿಗಳಿಗೆ
ಮಲ್ಲಯ್ಯನ ಬಗ್ಗೆ ಕೇಳಿದನು?
ಉತ್ತರ: ಕಾಡಿನಲ್ಲಿ ನನ್ನ ಮಲ್ಲಯ್ಯನನ್ನು ನೋಡಿದ್ದರೆ
ತೋರಿಸಿರಿ ಎಂದು ವನ ಪಕ್ಷಿಗಳಿಗೆ, ಗಿಳಿಯ ಹಿಂಡಿಗೆ ಗಿಡಗಳಿಗೆ
ಕೇಳಿದನು.
ಪ್ರಶ್ನೆ 3) ಕೆಳಗಿನ ಕವಿತೆಯನ್ನು ಪೂರ್ಣ
ಮಾಡಿರಿ.
ತನ್ನದೆಲ್ಲವ ಮರೆತು! ಚೆನ್ನಿಗನ ಹುಡುಕುತ !
ಬೆನ್ನಹತ್ತಿ ಹೊರಟನು ಪರಸಿಯ – ಜನಗೂಡೆ
ಚೆನ್ನಮಲ್ಲೇಶನಿಗೂ ತೋರಿರೋ!!
ಪ್ರಶ್ನೆ 4) ಕೆಳಗಿನ ಪದಗಳನ್ನು
ನಿಮ್ಮ ಸ್ವಂತ ವಾಕ್ಯದಲ್ಲಿ ಉಪಯೋಗಿಸಿರಿ.
ಅ) ಕಲ್ಲು ಮುಳ್ಳು: ಕಾಡಿನಲ್ಲಿ
ಕಲ್ಲುಮುಳ್ಳುಗಳು ಇರುತ್ತವೆ.
ಆ) ಬತ್ತಿ ಬಾಡು: ಬಿಸಿಲಿನಲ್ಲಿ
ಅಂಗಳದಲ್ಲಿಯ ಬತ್ತಿ ಬಾಡಿತು.
ಇ) ಕಳವಳ: ಅಮ್ಮ ಮಕ್ಕಳ
ಬಗ್ಗೆ ಕಳವಳಪಡುತ್ತಾಳೆ.
ಈ) ಕಕ್ಕುಲಾತಿ: ಕಕ್ಕುಲಾತಿಯಲ್ಲಿ
ತಾಯಿ-ತಂದೆ ಕೇಳಿದರು.
ಪ್ರಶ್ನೆ 5) ಕೆಳಗೆ ಕೊಟ್ಟ ಉದಾಹರಣೆಯಂತೆ
ಸಮಾನಾರ್ಥಕ ಪದಗಳನ್ನು ಹೇಳಿರಿ.
ಉದಾ: ನಯನ – ಕಣ್ಣು, ನೇತ್ರ
1) ಕರಿ – ಕಪ್ಪು ಬಣ್ಣ , ಕರೆ 2) ಬಾಲ – ಬಾಲಕ, ಚೆಂಡು
3) ವನ – ಕಾಡು, ತೋಟ 4) ರವಿ – ಸೂರ್ಯ, ಭಾನು
ಪ್ರಶ್ನೆ 6) ಕೆಳಗಿನ ಪದ್ಯದ ಸರಳಾನುವಾದ
ಬರೆಯಿರಿ.
ಮಾತಿನಿಂ ನಗೆ ನುಡಿಯು! ಮಾತಿನಿಂ ಹಗೆ ಕೊಳೆಯು !
ಮಾತಿನಿಂ ಸರ್ವ ಸಂಪದವು! ಲೋಕಕ್ಕೆ
ಮಾತೇ ಮಾಣಿಕ್ಯ ಸರ್ವಜ್ಞ!!
ಮಾತು ಎಂದಿಗೂ ಮಾಣಿಕ್ಯದಂತೆ ಇರಬೇಕು. ಒಳ್ಳೆಯದು
ಕೆಟ್ಟದು ಎಲ್ಲ ಮಾತಿನಿಂದಲೇ ನಡೆಯುತ್ತದೆ. ಮಾತಿನಿಂದಲೇ ನಗೆ ನುಡಿ. ಮಾತಿನಿಂದಲೇ ಹಗೆ ಕೊಲೆ
ನಡೆಯುವವು. ಎಲ್ಲವೂ ಮಾತಿನಿಂದಲೇ ಜಗತ್ತಿಗೆ ಮಾತೇ ಮಾಣಿಕ್ಯ ಎಂದು ಕವಿ ಸರ್ವಜ್ಞ ಹೇಳುತ್ತಾರೆ.
ಮಕ್ಕಳ ಆಟ ಚೆಂದ, ಹಬ್ಬದ ಊಟ ಚೆಂದ
6. ಕೆಲಸ ಮಾಡು
-ಮಾದೇವ
ಮಿತ್ರ ಬಾ.ಇ. ಕುಮಠೆ
ಶಬ್ದಗಳ ಅರ್ಥ
ಖಾಲಿ - ಕೆಲಸವಿಲ್ಲದೆ, ಸುಮ್ಮನೆ; ಅಲೆಯದಿರು - ತಿರುಗದಿರು ;
ಕಾಯಕ - ಕೆಲಸ : ಸಲೆ
- ಸರಿಯಾಗಿ ; ತೊನೆ – ತಿರುಗು
*
ಶಬ್ದಕೋಶದ
ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.
ತೋರು – ತೋರಿಸು ಸೋಂಕು – ತಾಕು ಬಾಳು – ಬದುಕು
ಅಭ್ಯಾಸ
ಪ್ರಶ್ನೆ 1) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಮಗುವಿಗೆ ಹೇಗೆ ತೊನೆಯದಿರೆಂದು ಕವಿ ಹೇಳುತ್ತಾನೆ ?
ಉತ್ತರ: ಮಗುವಿಗೆ ಬರಿಗೈಯಿಂದ ತೊನೆಯದಿರೆಂದು ಕವಿ
ಹೇಳುತ್ತಾನೆ.
ಆ) ಯಾವುದರಲ್ಲಿ ತನು-ಮನ ಬೆರೆಯಬೇಕು?
ಉತ್ತರ: ಸದಾ ಕಾಯಕದಲ್ಲಿ ತನು-ಮನ ಬೇರೆಯಬೇಕು.
2) ಇರುವೆಯು ಎಂತಹ ಕಾಳನ್ನು ಹೊರುತ್ತದೆ ?
ಉತ್ತರ: ಯತ್ನವ ಮಾಡುವ ಇರುವೆ ಚಿಕ್ಕ ಪ್ರಾಣಿಯಾದರೂ
ಹಿರಿ ಹಿರಿ ಕಾಳನು ಹೊರುತ್ತದೆ.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ
ಬರೆಯಿರಿ.
ಅ) ಯಾರಿಗೆ ಸೋಲು ಸೋಂಕುವುದಿಲ್ಲ?
ಉತ್ತರ: ಯತ್ನವ ಮಾಡುವ ಸಾಹಸಿ ಜೀವಕೆ ಸೋಲು ಎಂದಿಗೂ
ಸೋಂಕುವುದಿಲ್ಲ.
ಆ) ವೇಳೆಯನ್ನು ಹೇಗೆ ನೂಕಬಾರದು?
ಉತ್ತರ: ಪೋಲಿಯಾಗಿ ವೇಳೆಯನ್ನು ನೂಕಬಾರದು.
ಪ್ರಶ್ನೆ 3) ಕೆಳಗಿನ ಪದ್ಯದ ಸಾಲುಗಳನ್ನು
ಪೂರ್ಣ ಮಾಡಿರಿ.
ಬರಿಗೈಯಿಂದಲಿ ಮಗು ತೊನೆಯದಿರು
ಪೋಲಿಯಾಗಿ ವೇಳೆಯ ನೂಕದಿರು
ಅಂತಹ ಬಾಳಿಗೆ ಬೆಲೆಯಿಲ್ಲ ಮಗು
ಬಾರದು ಎಂದಿಗು
ಸುಖ ಶಾಂತಿ ನಗು
ಪ್ರಶ್ನೆ 4) ಕೆಳಗಿನ ಶಬ್ದಗಳನ್ನು ನಿಮ್ಮ
ವಾಕ್ಯದಲ್ಲಿ ಉಪಯೋಗಿಸಿರಿ.
ಅ) ಕಾಯಕ: ಬಸವಣ್ಣನವರು
ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ.
ಆ) ಬರಿಗೈ: ಬೀಗರ
ಮೇನೆಗೆ ಬರಿಗೈಯಿಂದ ಹೋಗಬಾರದು.
ಇ) ಯತ್ನ: ನಾವು
ಸತತ ಯತ್ನವ ಮಾಡಿದರೆ ಫಲ ದೊರೆಯುವುದು.
ಈ) ಸೋಲು: ಸೋಲು
ಗೆಲುವಿನ ಮೊದಲ ಮೆಟ್ಟಿಲು.
ಪ್ರಶ್ನೆ 5) ಕೆಳಗಿನ ಗಾದೆಮಾತುಗಳ ಅರ್ಥ
ಹೇಳಿ ಸ್ವಲ್ಪದರಲ್ಲಿ ವಿವರಿಸಿರಿ.
1) ಹಾಸಿಗೆ ಇದ್ದಷ್ಟು ಕಾಲು ಚಾಚು.
ಅರ್ಥ: ನಾವು ನಮ್ಮ ಸಾಮರ್ಥ್ಯವನ್ನು ಅರಿತು ಬದುಕಬೇಕು.
ಹಣ ಇದ್ದಷ್ಟೆ ಖರ್ಚು ಮಾಡಬೇಕು. ಅಗತ್ಯಕ್ಕಿಂತ ಹೆಚ್ಚು ವ್ಯಯ ಮಾಡಿದರೆ ಕಠಿಣ ಪರಿಸ್ಥಿತಿ
ಬರುವುದು. ಹಾಸಿಗೆ ಇದಷ್ಟು ಕಾಲು ಚಾಚಿದರೆ ಒಳ್ಳೆಯದು ಇಲ್ಲವಾದರೆ ತಂಪು ನೆಲದ ಮೇಲೆ ಕಾಲುಗಳು
ಬರುತ್ತವೆ ಎಂಬ ಅರ್ಥದಲ್ಲಿ ಈ ಗಾದೆ ಗಳಿಸಿದನ್ನು ಉಳಿಸುವ ಸಂದೇಶ ಕೊಡುತ್ತದೆ.
2) ತನ್ನ ಬೆನ್ನು ತನಗೆ ಕಾಣಿಸದು.
ಅರ್ಥ:ನಮ್ಮ ತಪ್ಪು ನಮಗೆ ತಪ್ಪು ಅನಿಸುವುದಿಲ್ಲ. ನಾವು
ನಮ್ಮ ತಪ್ಪನ್ನು ಸಹಜವಾಗಿ ಒಪ್ಪಿಕೊಳ್ಳುವುದಿಲ್ಲ. ಎಂದು ಹೇಳುವಾಗ
ತನ್ನ ಬೆನ್ನು ತನಗೆ ಕಾಣಿಸದು ಎಂದು ಹೇಳಲಾಗಿದೆ. ನಮ್ಮ ತಪ್ಪನ್ನು ತಿದ್ದಿ ಹೇಳುವ ಸ್ನೇಹಿತರು
ಇರಬೇಕು.
3) ನೀರಿನಲ್ಲಿ ಹೋಮ ಮಾಡಿದಂತೆ
ಅರ್ಥ: ಹೋಮ ಮಾಡು ಅಂದರೆ ಯಜ್ಞ ಮಾಡುವುದು. ನೀರಿನಲ್ಲಿ
ಯಜ್ಞ ಮಾಡಿದರೆ ಅದು ಸಾಧ್ಯವಾಗುದಿಲ್ಲ. ಅದೇ ರೀತಿ ಮಾಡುವ ಕೆಲಸದಿಂದ ಲಾಭವಾಗುತ್ತಿದ್ದರೆ
ಒಳ್ಳೆಯದು. ಲಾಭವಿಲ್ಲದ ಕೆಲಸ ಮಾಡಿದರೆ ನೀರಿನಲ್ಲಿ ಹೋಮ ಮಾಡಿದಂತೆ ಎಂದು ಹೇಳಲಾಗುವುದು. ಹೊಳೆಯಲ್ಲಿ
ಹುಣಸೆ ತೊಳೆದಂತೆ ಎಂಬ ಗಾದೆ ಮಾತು ಕೂಡ ಪ್ರಚಳಿತದಲ್ಲಿದೆ.
ಶಬ್ದ ಗೋಪುರ
ನಗು
ಮುಗುಳು ನಗು
ಅವಳ ನಗೆ ಮುಗುಳು ನಗೆ
ಅವಳ ಮುಗುಳು ನಗೆ ಜಾಡುವಿನ ನಗೆ
ಶ್ರಮವೇ ಜೀವನ ಶ್ರಮಿಕ ಜೀವನ ಪಾವನ
7. ನೇಸರು ನಗುತಾನೆ
-ದೊಡ್ಡ
ರಂಗೇಗೌಡ
ಶಬ್ದಗಳ ಅರ್ಥ
ಅಂಬರ – ಆಕಾಶ ; ನೇಸರು
- ಸೂರ್ಯ ; ಚಿಟ್ಟೆ
- ಪಾತರಗಿತ್ತಿ : ಬಳುಕು - ಅಲುಗಾಡು
*
ಶಬ್ದಕೋಶದ
ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.
ಭಾವ – ಭಾವನೆ ಲಾಲಿ
– ಕೆಂಪು ಬಣ್ಣ
ಅಭ್ಯಾಸ
ಪ್ರಶ್ನೆ 1) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ನೇಸರನು ಎಲ್ಲಿ ನಗುತ್ತಾನೆ?
ಉತ್ತರ: ನೇಸರನು ಅಂಬರದಲ್ಲಿಯ ತೇರನ್ನು ಏರಿ
ನಗುತ್ತಾನೆ.
ಆ) ಬಣ್ಣಬಣ್ಣದ ಹೂವು ಎಲ್ಲಿ ಅರಳಿವೆ?
ಉತ್ತರ: ಬೇಲಿ ಮ್ಯಾಲೆ ಬಣ್ಣ ಬಣ್ಣದ ಹೂವು ಅರಳಿವೆ.
2) ಯಾವವು ಮೌನ ತಳೆದಿವೆ?
ಉತ್ತರ: ಸಾಲು ಸಾಲು ಬೆಟ್ಟ ಗುಡ್ಡಗಳು ಮೌನ ತಳೆದಿವೆ.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ
ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ ಬರೆಯಿರಿ.
1) ನೇಸರು ನಗುತಾನೆ ಕವಿತೆಯನ್ನು ಯಾರು
ಬರೆದಿರುತ್ತಾರೆ?
ಉತ್ತರ: ದೊಡ್ಡ ರಂಗೇಗೌಡ
2) ಸಣ್ಣ ಚಿಟ್ಟೆಗಳು ಎಲ್ಲಿ ಕುಳಿತಿವೆ?
ಉತ್ತರ: ಬೇಲಿ ಮೇಲೆ ಅರಳಿರುವ ಹೂವುಗಳ ಮೇಲೆ ಸಣ್ಣ
ಸಣ್ಣ ಚಿಟ್ಟೆಗಳು ಕುಳಿತಿವೆ.
ಪ್ರಶ್ನೆ 3) ಕೆಳಗಿನ ಪದ್ಯದ ಸಾಲುಗಳನ್ನು
ಪೂರ್ಣ ಮಾಡಿರಿ.
ಭೂಮಿ ಮ್ಯಾಗೆ ಹಚ್ಚ ಹಚ್ಚಗೆ ಹಾದಿ ತೆರೆದಾವೆ
ಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳೆದಾವೆ ggg
ಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಆ ಮೌನದ ಗಾನ ಎಲ್ಲರ ಮನಸ ಸೆಳೆದಾವೆ
ಭಾವ ಬರಿದು ಹತ್ತಿರ ಕರೆದು
ಮಾವು ಬೇವು ತಾಳೆ ತೆಂಗು
– ಲಾಲಿ ಹಾಡ್ಯಾವೆ
ಪ್ರಶ್ನೆ 4) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ನೇಸರು ಬರುವುದನ್ನು ನೋಡಿ ಯಾರು ಯಾರಿಗೆ
ಆನಂದವಾಗುತ್ತದೆ?
ಉತ್ತರ: ನೇಸರು ಬರುವುದನ್ನು ನೋಡಿ ಮರಗಿಡಗಳು
ಆನಂದದಿಂದ ತೂಗುತ್ತವೆ, ಹಕ್ಕಿ ಹಾಡುತ್ತವೆ. ಹೂವುಗಳು
ಅರಳುತ್ತವೆ. ಹೂವಿನ ಮೇಲೆ ಕುಳಿತ ಸಣ್ಣ ಸಣ್ಣ ಚಿಟ್ಟೆಗಳು ಬಾಳೆ ವನವೇ ನಕ್ಕು ನಲಿಯುತ್ತದೆ.
ಆ) ನೇಸರು ಬಂದಾಗ ಭೂಮಿಯ ಮೇಲೆ ಏನೇನು ಆಗುತ್ತದೆ?
ಉತ್ತರ: ನೇಸರು ಬಂದಾಗ ಮರಗಿಡಗಳು ಆನಂದದಿಂದ
ತೂಗುತ್ತವೆ, ಹಕ್ಕಿ ಹಾಡುತ್ತವೆ. ಹೂವುಗಳು ಅರಳುತ್ತವೆ. ಹೂವಿನ
ಮೇಲೆ ಕುಳಿತ ಸಣ್ಣ ಸಣ್ಣ ಚಿಟ್ಟೆಗಳು ಬಾಳೆ ವನವೇ ನಕ್ಕು ನಲಿಯುತ್ತದೆ.
ಈ) ನೇಸರು ನಮಗೇನು ನೀಡುತ್ತಾನೆ?
ಉತ್ತರ: ನೇಸರು ಭೇದ-ಭಾವ ಯಾವುದನ್ನೂ ಮಾಡದೆ ಎಲ್ಲರಿಗೂ
ಸಮಾನವಾದ ಸೆಳಕು ನೀಡಿದ್ದಾನೆ.
ಪ್ರಶ್ನೆ 5) ಈ ಕವಿತೆಯಲ್ಲಿ ಬಳಕೆಯಾದ ಹತ್ತು ಗ್ರಾಮ್ಯ ಶಬ್ದಗಳನ್ನು ಆಯ್ದು
ಅವುಗಳಿಗೆ ಗ್ರಾಂಥಿಕ ರೂಪ ನೀಡಿರಿ.
1. ತುಗ್ಯಾವೆ – ತೂಗುತ್ತಿವೆ 2. ಹಾಡ್ಯಾವೆ – ಹಾಡುತ್ತಿವೆ 3. ಬಿರ್ಯಾವೆ – ಬೀರುತ್ತಿವೆ
4. ಮ್ಯಾಗೆ – ಮೇಲೆ 5. ಅರಳ್ಯಾವೆ – ಅರಳುತ್ತಿವೆ 6.
ಕುಂತಾವೇ – ಕುಳಿತಿವೆ
7. ತಂದಾವೆ – ತಂದಿರುತ್ತವೆ 8. ಬೀಸ್ಯಾವೆ – ಬೀಸುತ್ತಿವೆ 9. ಬೆಳೆದಾವೆ- ಬೆಳೆದಿವೆ
10. ಹಾಡ್ಯಾವೆ – ಹಾಡಿವೆ 11. ನೀಡ್ಯಾವೆ – ನೀಡಿವೆ
ಬಾನಿಗೆ ಸೂರ್ಯ ಚಂದ ಭೂಮಿಗೆ ಹಸಿರು ಅಂದ
8. ಮಹಾರಾಷ್ಟ್ರ ಗೀತೆ
-ಅ.
ಬಾ. ಚಿಕ್ಕಮಣುರ
ಅಭ್ಯಾಸ
ಪ್ರಶ್ನೆ 1) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಕವಿ ಯಾರಿಗೆ ವಂದಿಪನು ಎಂದು ಹೇಳುತ್ತಾನೆ ?
ಉತ್ತರ: ಕವಿಯು ಮಹಾರಾಷ್ಟ್ರ ಮಾತೆಗೆ ವಂದಿಪೇನು ಎಂದು
ಹೇಳುತ್ತಾನೆ.
ಆ) ಈ ನಾಡು ಯಾರ ಯಾರ ಅಭಂಗದ ವೇದಿಕೆಯಾಗಿದೆ ?
ಉತ್ತರ: ಈ ನಾಡು ಸಂತ ಜ್ಞಾನದೇವ, ಸಂತ ತುಕಾರಾಮ ಮತ್ತು ಸಂತ ನಾಮದೇವ ಇವರ ಅಭಂಗದ ವೇದಿಕೆಯಾಗಿದೆ
ಇ) ರಸಿಕರ ಮನ ಸೂರೆಗೊಳ್ಳುವ ಗೂಡುಗಳಾವವು ?
ಉತ್ತರ: ವೇರೂಳ,
ಎಲಿಫಂಟಾ ಅಜಂತಾ ಇವು ರಸಿಕರ ಮನ ಸೂರೆಗೊಳ್ಳುವ ಗೂಡುಗಳಾಗಿವೆ.
ಪ್ರಶ್ನೆ 2) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣ ಮಾಡಿರಿ.
ವೀರ ವಿನಾಯಕ ವಿನೋಬ ತಿಲಕ
ಫುಲೆ ಚಾಫೆಕರ ರಾಜಗುರು
ಘಟನಾ ಶಿಲ್ಪಿಯು ಅಂಬೇಡಕರ
ಅಮರ ಹುತಾತ್ಮರ
ತವರೂರು
ಪ್ರಶ್ನೆ 3) ನಿಮಗೆ ಗೊತ್ತಿರುವ ನಮ್ಮ ರಾಜ್ಯದ ಯಾವುದಾದರೂ ಒಂದು ಐತಿಹಾಸಿಕ ಸ್ಥಳವನ್ನು ಕುರಿತು
ಬರೆಯಿರಿ.
ರಾಜಗಡ ಕೋಟೆ: ಛತ್ರಪತಿ
ಶಿವಾಜಿ ಮಹಾರಾಜರು ಸ್ವರಾಜ್ಯ ಸ್ಥಾಪನೆಗಾಗಿ ಪುಣೆ, ಸುಪೆ
ಪರಿಸರದಲ್ಲಿ ಅನೇಕ ಕೋಟೆಗಳನ್ನು ಕಟ್ಟಿಸಿದರು. ಮುರುಂಬದೇವ ಕೋಟೆಯನ್ನು ದುರಸ್ತಿ ಮಾಡಿಸಿ
ಅದನ್ನು ಸುಸಜ್ಜಿತಗೊಳಿಸಿ ಅದಕ್ಕೆ ‘ರಾಜಗಡ’
ಎಂದು ಹೆಸರು ಇಟ್ಟರು. ರಾಜಗಡ ಇದು ಸ್ವರಾಜ್ಯದ ಮೊದಲನೆಯ ರಾಜಧಾನಿಯಾಗಿತ್ತು.
ಪ್ರಶ್ನೆ 4) 'ಅ' ಗುಂಪು ಮತ್ತು 'ಬ' ಗುಂಪುಗಳನ್ನು ಹೊಂದಿಸಿ ಬರೆಯಿರಿ.
‘ಅ’ ಗುಂಪು ‘ಬ’ ಗುಂಪು
1) ಜೈನ ಧರ್ಮ ಮಹಾವೀರ
2)
ಅಜಂತಾ ಗುಹೆಗಳು
3)
ಅಂಬೇಡಕರ ಸಂವಿಧಾನ ಶಿಲ್ಪಿ
4)
ತುಕಾರಾಮ ಅಭಂಗ
ಜನನಿ ಜನ್ಮ ಭೂಮಿ ಸ್ವರ್ಗಕ್ಕೆ ಸಮಾನ
9. ಸರ್ವೋದಯ ಗೀತೆ
ಶಬ್ದಗಳ
ಅರ್ಥ
ಮಕರಂದ – ಹೂವುಗಳರಸ, ಮಧು:
ಶ್ವಾಸ – ಉಸಿರು;
ಮಡಕೆ – ಪಾತ್ರೆ
*
ಶಬ್ದಕೋಶದ
ಸಹಾಯದಿಂದ ಕೆಳಗಿನ ಶಬ್ದಗಳ ಸಾಂದರ್ಭಿಕ ಅರ್ಥವನ್ನು ಹುಡುಕಿ ಬರೆಯಿರಿ.
ಭೇದಭಾವ – ಉಚ್ಚ ನೀಚ ಭಾವನೆ ಮೂಡುವುದು ಅನ್ಯ – ಬೇರೆ
ಅಭ್ಯಾಸ
ಪ್ರಶ್ನೆ 1) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ನಮ್ಮಲ್ಲಿ ಯಾವ ಭಾವನೆ ಮೂಡಬೇಕು ?
ಉತ್ತರ: ನಮ್ಮಲ್ಲಿ ಭೇದ ಭಾವ ದೂರ ಸರಿದು ನಾವೆಲ್ಲರೂ
ಭಾರತೀಯರು ಎಂಬ ಭಾವನೆ ಮೂಡಬೇಕು.
ಆ) ಹೂವುಗಳು ಏನನ್ನು ಬೀರುತ್ತವೆ ?
ಉತ್ತರ: ಹೂವುಗಳು ಮಕರಂದ ಬೀರುತ್ತವೆ.
2) ಸಂತರು ಏನು ಮಾಡಿದರು ?
ಉತ್ತರ: ಸಂತರು ಸೂರ್ಯನಂತೆ ಜಗತ್ತನ್ನು ಬೆಳಗಿದರು.
ವರುಣನ ಹಾಗೆ ಜ್ಞಾನಸುಧೆಯನ್ನು ಧರೆಗೆ ಸುರಿಸಿದರು.
ಪ್ರಶ್ನೆ 2) ಒಂದೇ ವಾಕ್ಯದಲ್ಲಿ ಉತ್ತರ ಬರುವಂತೆ ಎರಡು ಪ್ರಶ್ನೆಗಳನ್ನು ರಚಿಸಿ ಉತ್ತರ
ಬರೆಯಿರಿ.
1) ನಾವು ಮನೆ ಕಟ್ಟುವಾಗ ಭೂಮಿ ಏನು ಮಾಡುವುದಿಲ್ಲ?
ಉತ್ತರ: ನಾವು ಮನೆಯನ್ನು ಕಟ್ಟುವಾಗ ಭೂಮಿ ಜಾತಿ
ಕೇಳುವುದಿಲ್ಲ.
2) ನಮ್ಮ ದೇಶದಲ್ಲಿ ಮತಗಳು ಏನು ಮಾಡಬೇಕು?
ಉತ್ತರ: ನಮ್ಮ ದೇಶದಲ್ಲಿ ಹಲವು ಮತಗಳು ಇದ್ದು ಅವು
ತೋಟದಲ್ಲಿರುವ ಹಲವು ಬಣ್ಣ ಬಣ್ಣದ ಹೂವುಗಳಂತೆ ಮಕರಂದ ಬೀರಬೇಕು.
ಪ್ರಶ್ನೆ 3) ಕೆಳಗಿನ ಕವಿತೆಯ ಪರಿಚ್ಛೇದ
ಅರ್ಥ ಬರೆಯಿರಿ.
ನಾವು ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೆ
ನಾವು ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೆ
ಈ ಸೃಷ್ಟಿಯಲ್ಲಿ ಸರ್ವರು ಸಮನಾಗಿ ಬಾಳಲಿ
ಅರ್ಥ: ಮನುಷ್ಯನಾಗಿ
ನಾವು ಈ ಭೂಮಿಯ ಮೇಲೆ ಬದುಕುವಾಗ ಯಾವುದೇ ಭೇದ-ಭಾವ ಮಾಡಬಾರದು. ನಾವು ವಾಸಿಸುವ ಭೂಮಿ, ಕುಡಿಯುವ ನೀರು, ಶ್ವಾಸ ತೆಗೆದುಕೊಳ್ಳುವ ಹವೆ ಎಲ್ಲ
ಜೀವಿಗಳಿಗೂ ಸಮಾನವಾಗಿ ದೊರೆಯುತ್ತದೆ. ಮನೆ ಕಟ್ಟುವಾಗ ಭೂಮಿ ನಮ್ಮ ಜಾತಿ ಕೇಳುವುದಿಲ್ಲ. ಶ್ವಾಸ
ತೆಗೆದುಕೊಳ್ಳುವಾಗ ಗಾಳಿ ನಮ್ಮ ಕೂಲ ಕೇಳುವುದಿಲ್ಲ. ಅದರಂತೆ ನಾವು
ಯಾವುದೇ ಭೇದ ಭಾವ ಮಾಡದೆ ಈ ಸೃಷ್ಟಿಯಲ್ಲಿ ಎಲ್ಲರೂ ಸಮಾನವಾಗಿ ಕೂಡಿ ಹೊಂದಿಕೊಂಡು ಬಾಳಬೇಕು.
ಪ್ರಶ್ನೆ 4) ಉದಾಹರಣೆಯಲ್ಲಿ ತೋರಿಸಿದಂತೆ
ಶಬ್ದ ಗೋಪುರ ತಯಾರಿಸಿರಿ.
ಉದಾ: ಜಾಣ
ಜಾಣ ರಾಮ
ಜಾಣ ರಾಮ ಹೋದನು
ಜಾಣ ರಾಮ ಶಾಲೆಗೆ ಹೋದನು
ಜಾಣ ರಾಮ ಗೆಳೆಯರೊಡನೆ ಶಾಲೆಗೆ ಹೋದನು
ಮನೆ
ಇದು ಮನೆ
ಇದು ನನ್ನ ಮನೆ
ಇದು ನನ್ನ ತಾಯಿ-ತಂದೆಯರ ಮನೆ
ಇದು ನಮ್ಮ ಕುಟುಂಬ ವಾಸಿಸುವ ಮನೆ
ಪ್ರಶ್ನೆ 5) ವಿವಿಧತೆಯಲ್ಲಿ ಏಕತೆ- ಎಂಬ
ವಿಷಯವನ್ನು ಕುರಿತು ವಿಸ್ತರಿಸಿ ಬರೆಯಿರಿ.
ಐಕ್ಯ ಮತ ಲೋಕಹಿತ
ಸಾಮಾನ್ಯ ಜ್ಞಾನದ ಪ್ರಶ್ನೆಗಳು
ಯೋಚಿಸಿ ಉತ್ತರಿಸಿರಿ.
·
ಗುಂಪಿಗೆ ಸೇರದ ಪದವನ್ನು ಗುರುತಿಸಿರಿ.
1) ಕಣ್ಣು 2) ಕಾಲು 3)
ಕಿವಿ 4) ಬಾಯಿ =ಕಾಲು
1) ಟೇಲರ 2) ಬಡಗಿ 3)
ವ್ಯಾಪಾರಿ 4) ಕಮ್ಮಾರ = ವ್ಯಾಪಾರಿ
1) ನರಿ 2)
ತೋಳ 3) ಜಿಂಕೆ 4) ಚಿರತೆ =ಜಿಂಕೆ
1) ಜನೇವರಿ 2) ಮೇ 3)
ನವ್ಹೆಂಬರ 4) ಜುಲೈ =ನವ್ಹೆಂಬರ
1) ವಿಷ್ಣು 2) ಶಿವ 3)
ಗಣೇಶ 4) ಬ್ರಹ್ಮ = ಗಣೇಶ
1) ನೂರಾರು 2) ಮನೆಯಿಂದ 3)
ಊರಿಂದೂರಿಗೆ 4) ಕಲ್ಲನ್ನು = ನೂರಾರು
1) ಹಸು 2) ಕತ್ತೆ 3)
ಖಡ್ಗಮೃಗ 4) ಆಡು =ಖಡ್ಗಮೃಗ
1) ಕೋಳಿ 2) ಬಾತುಕೋಳಿ 3) ಪಾರಿವಾಳ 4) ನವಿಲು =ಬಾತುಕೋಳಿ
1) ಆಲದ ಮರದಲ್ಲಿ ಮಂಗಗಳು
ಕುಳಿತಿದ್ದವು. ಗೆರೆ ಹೊಡೆದ ಪದದ ಲಿಂಗ ಗುರುತಿಸಿರಿ.
ಅ) ಸ್ತ್ರೀಲಿಂಗ ಆ)
ಪುಲ್ಲಿಂಗ ಇ) ನಪುಸಕಲಿಂಗ ಈ) ಯಾವುದು ಇಲ್ಲ. =ಇ) ನಪುಸಕಲಿಂಗ
2) ಕೇಶವನು ಕಿತ್ತಳೆ ಹಣ್ಣಿನ
ಸಿಪ್ಪೆ ಸುಲಿದು ಸುಹಾಸಿತವಾದ ಹಣ್ಣಿನ ರುಚಿ ನೋಡಿದನು. ಇದರಲ್ಲಿ ಬಳಕೆಯಾಗದ ಇಂದ್ರೀಯ ಯಾವುದು?
ಅ) ಕಿವಿ ಆ) ಕಣ್ಣು ಇ) ಮೂಗು ಈ)
ನಾಲಿಗೆ =ಕಿವಿ
3) ಕೆಳಗಿನ ಪದಗಳಲ್ಲಿ ಬದಲಾವಣೆಯಾಗದ
ಪದವನ್ನು ಗುರುತಿಸಿರಿ.
ಅ) ಮತ್ತು ಆ) ನಾನು ಇ)
ಒಂದು ಈ) ಹುಲಿ =ಮತ್ತು
4) ಹಳೆಗನ್ನಡ
ಕಾವ್ಯಗಳೆಂದರೆ ನನಗೆ ತುಂಬಾ ಇಷ್ಟ.
ಅ) ಸವರ್ಣದೀರ್ಘ ಸಂಧಿ ಆ) ಲೋಪ ಸಂಧಿ ಇ) ಆಗಮ ಸಂಧಿ ಈ) ಆದೇಶ ಸಂಧಿ
= ಅ) ಸವರ್ಣ ದೀರ್ಘ ಸಂಧಿ
5) “ಮೂಷಕವಾಹನ” ಈ ಪದವು
ಯಾರನ್ನು ಪ್ರತಿನಿಧಿಸುತ್ತದೆ?
ಅ) ವಿಷ್ಣು ಆ) ಶಿವ
ಇ) ಗಣೇಶ ಈ) ಬ್ರಹ್ಮ = ಇ)
ಗಣೇಶ
6) ಭಾರತ ರತ್ನ ಪ್ರಶಸ್ತಿ ಪಡೆದ
ಕರ್ನಾಟಕದ ಸಂಗೀತಗಾರ್ತಿ -
ಅ) ಗಂಗೂಬಾಯಿ ಹಾನಗಲ್ಲ ಆ) ಬಿ. ಆರ್. ಛಾಯಾ
ಇ) ಸಂಗೀತಾ ಕಟ್ಟಿ ಈ) ಎಂ. ಎಸ್. ಛಾಯಾ = ಅ) ಗಂಗೂಬಾಯಿ ಹಾನಗಲ್ಲ
7) ಗಂಗಾವತಿ ಬೀಚಿ ಎಂದು
ಕರೆಯಿಸಿಕೊಳ್ಳುವ ಹಾಸ್ಯದಿಗ್ಗಜ-
ಅ) ಪ್ರೊ. ಕೃಷ್ಣೆಗೌಡ ಆ) ನರಸಿಂಹ ಜೋಷಿ
ಇ) ಪ್ರಾಣೇಶ ಈ) ರಿಚರ್ಡ ಲೂಯಿಸ = ಇ) ಪ್ರಾಣೇಶ
8) “ದೀಪದ ಕೆಳಗೆ
..............” ಈ ಗಾದೆಮಾತು ಕೆಳಗಿನ ಯಾವ ಪರ್ಯಾಯ ಬಳಸಿದರೆ ಪೂರ್ಣಗೊಳಿಸಬಹುದು?
ಅ) ಮಲಗಿಕೋ ಆ) ಬೆಳಕು ಇ) ಕತ್ತಲೆ ಈ)
ಎಣ್ಣೆ
9) ಭರಮನು ಆದಾಯಕ್ಕಿಂತ
ಹೆಚ್ಚಿಗೆ ಖರ್ಚು ಮಾಡಿ ಸಾಲಕ್ಕೆ ಗುರಿಯಾದನು. ಅವನ ಈ ಪ್ರವೃತ್ತಿ ಕೆಳಗಿನ ಯಾವ ಗಾದೆಮಾತನ್ನು
ಹೋಲುತ್ತದೆ?
ಅ) ಬಡವನ ಸಿಟ್ಟು ದವಡೆಗೆ ಮುಲ ಆ) ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು
ಇ) ಹಾಸಿಗೆ ಇದಷ್ಟು ಕಾಲು ಚಾಚು
ಈ) ಸಾಲವೇ ಶೂಲ
10) ವರ್ಣಮಾಲೆಯ ಕ್ರಮದಲ್ಲಿ
ಕೆಳಗಿನ ಶಬ್ದಗಳನ್ನು ಕ್ರಮವಾಗಿ ಬರೆದಾಗ ಮೂರನೆಯ ಸ್ಥಾನದಲ್ಲಿ ಬರುವ ಶಬ್ದ ಯಾವುದು?
(ಮಕ್ಕಳು, ಫಲ, ಬುಗುರಿ, ಭರಣಿ, ಪತಂಗ)
ವರ್ಣಮಾಲೆಯ ಕ್ರಮದಲ್ಲಿ: ಪತಂಗ, ಫಲ, ಬುಗುರಿ, ಭರಣಿ, ಮಕ್ಕಳು
ಮೂರನೆಯ ಸ್ಥಾನದಲ್ಲಿ ಬರುವ
ಶಬ್ದ: ಬುಗುರಿ
11) ಕೆಳಗಿನ ಪದಗಳಿಗೆ ‘ಅಪ’ ಎಂಬ ಉಪಸರ್ಗವನ್ನು
ಸೇರಿಸಿ.
ಮಾನ- ಅಪಮಾನ ರೂಪ – ಅಪರೂಪ ಸ್ವರ – ಅಪಸ್ವರ ರಾತ್ರಿ –
ಅಪರಾತ್ರಿ
12) ರಸ್ತೆಯಲ್ಲಿ ಬಾಳೆಯಹಣ್ಣಿನ
ಸಿಪ್ಪೆ ಬಿದ್ದಿದೆ. ನೀವೇನು ಮಾಡುವಿರಿ?
ಅ) ಸುಮ್ಮನೆ ಹೋಗುತ್ತೇನೆ ಆ) ಅದನ್ನು ಎತ್ತಿ ಕಸದ ತೊಟ್ಟಿಯಲ್ಲಿ ಹಾಕುತ್ತೇನೆ
ಇ) ಅದನ್ನು ತುಳಿದು
ಹೋಗುತ್ತೇನೆ ಈ) ಏನೂ ಮಾಡುವುದಿಲ್ಲ.
13) ಕೆಳಗಿನ ಗಾದೆಮಾತು ಪೂರ್ಣ
ಮಾಡಿರಿ. ದೂರದ ಬೆಟ್ಟ..........
ಅ) ಕಣ್ಣಿಗೆ ತಣ್ಣಗೆ ಆ) ಕಣ್ಣಿಗೆ ಬೆಳ್ಳಗ್ಗೆ ಇ) ಕಣ್ಣಿಗೆ ನೆಟ್ಟಗೆ ಈ) ಕಣ್ಣಿಗೆ ನುಣ್ಣಗೆ
14) ‘ಬೆಳಕು’ ಈ ಶಬ್ದದ
ವಿರುದ್ಧಾರ್ಥಕ ಶಬ್ದ ಯಾವುದು?
ಅ)ಸುಖ ಆ)ಕಹಿ ಇ)ಕತ್ತಲೆ ಈ)ಜ್ಞಾನ
15) ಪೂಜ್ಯ ............
ಅನೇಕ ನಮಸ್ಕಾರಗಳು.
ಪತ್ರ ಬರೆಯುವಾಗ ಈ
ಸಂಬೋಧನೆಯನ್ನು ಯಾರಿಗಾಗಿ ಬಳಸುತ್ತಾರೆ?
ಅ) ಅಕ್ಕನಿಗೆ ಆ) ತಮ್ಮನಿಗೆ ಇ) ನಾದಿನಿಗೆ ಈ)
ಗುರುಗಳಿಗೆ
16) ನಾರಾಯಣನು ಯಾವಾಗಲೂ
ಆಟವಾಡುತ್ತಿರುತ್ತಾನೆ. ಈ ವಾಕ್ಯದಲ್ಲಿ ‘ಆ’
ಗುಣೀತಾಕ್ಷರ ಎಷ್ಟು ಸಲ ಬಂದಿದೆ? ಅ) 5 ಆ) 6 ಇ) 7 ಈ) 8
17) ರಾಮನು ಚಿನ್ನದ
ಜಿಂಕೆಯನ್ನು ಬೆನ್ನಟ್ಟಿಕೊಂಡು ಹೋದನು. ಈ
ವಾಕ್ಯದಲ್ಲಿ ಕಾಲ ಗುರುತಿಸಿರಿ.
ಅ) ವರ್ತಮಾನಕಾಲ ಆ) ಭೂತಕಾಲ ಇ) ಭವಿಷ್ಯತ್ ಕಾಲ ಈ) ಅಕಾಲ
18) ಬಸವಣ್ಣನವರ ಕಾಲದಲ್ಲಿ
ಸಾಗರೋಪಾದಿಯಲ್ಲಿ ಹರಿದು ಬಂದ ಸಾಹಿತ್ಯ-
ಅ) ವಚನ ಆ) ತ್ರಿಪದಿ ಇ) ರಗಳೆ ಈ)
ಷಟ್ಪದಿ
19) ಶಂಕರನು ಕನ್ನಡ
ಪುಸ್ತಕವನ್ನು ಓದಿದನು. ಈ ವಾಕ್ಯದಲ್ಲಿಯ ಕರ್ಮಪದ ಗುರುತಿಸಿರಿ.
ಅ) ಶಂಕರ ಆ) ಪುಸ್ತಕವನ್ನು ಇ) ಓದಿದನು ಈ) ಕನ್ನಡ
20) ಎಲ್ಲ ವಿದ್ಯಾರ್ಥಿಗಳು
ಪ್ರವಾಸಕ್ಕೆ ಬರಲೇಬೇಕು ಈ ವಾಕ್ಯದ ವಾಕ್ಯಪ್ರಕಾರ ಗುರುತಿಸಿರಿ.
ಅ) ಪ್ರಶ್ನಾರ್ಥಕ ಆ) ಉದ್ಗಾರವಾಚಕ ಇ) ಆಜ್ಞಾರ್ಥಕ ಈ)
ಸಾರಳಾರ್ಥಕ
21) ಚುರುಕುತನಕ್ಕೆ ಅತ್ಯಂತ ಪ್ರಸಿದ್ಧವಾದ
ಪ್ರಾಣಿ- ಅ) ತೋಳ ಆ) ಹುಲಿ ಇ) ಆನೆ ಈ) ನರಿ
22) ಹುತಾತ್ಮಯೋಧನ ಪಾರ್ಥೀವ ಶರೀರ
ಸ್ವಗ್ರಾಮಕ್ಕೆ ಬಂದಿತು. ಆಗ ಗ್ರಾಮಸ್ಥರಲ್ಲಿ ಉಂಟಾದ ಭಾವನೆ. ಅ) ಸಿಟ್ಟು ಆ)
ದು:ಖ ಇ) ಭಯ ಈ) ಆತಂಕ
23) ಗುರು ಇಲ್ಲದೇ ವಿದ್ಯೆ ಕಲಿತವನು
– ಅ) ಕರ್ಣ ಆ) ಅರ್ಜುನ ಇ) ಏಕಲವ್ಯ ಈ) ಭೀಮ
24) ಗೋಪಾಲನು ಬೇಡಿದವರಿಗೆ ಬೇಡಿದ್ದನ್ನು
ಕೊಡುವ ಗುಣಹೊಂದಿದ್ದನು. ಅವನಿಗೆ ಹೋಲಿಕೆ ಆಗುವ ವ್ಯಕ್ತಿ-
ಅ) ಅರ್ಜುನ ಆ) ಭೀಮ ಇ) ಧರ್ಮರಾಜ ಈ)
ಕರ್ಣ
25) ಕಾಯಕವೇ ಕೈಲಾಸ ಎಂದು ಸಾರಿದವರು-
ಅ) ಕಬೀರದಾಸ ಆ) ಬಸವಣ್ಣ ಇ) ಸರ್ವಜ್ಞ ಈ)
ಕುವೆಂಪು
26) ಮಾವಿನ ಮರದಿಂದ ಹಣ್ಣು
ಉದುರಿತು. ಈ ವಾಕ್ಯದಲ್ಲಿ ಗೆರೆ ಹೊಡೆದ ಪದದ ವಿಭಕ್ತಿ ಗುರುತಿಸಿರಿ.
ಅ) ಪ್ರಥಮಾ ಆ) ತೃತೀಯಾ ಇ)
ಚತುರ್ಥಿ ಈ) ಪಂಚಮಿ
27) ವಿಜಯನಗರದ ಸಿಂಹಾಸನ ರತ್ನಖಚಿತವಾಗಿತ್ತು.
ಈ ವಾಕ್ಯದಲ್ಲಿ ಸಂಧಿ ಪದವನ್ನು ಗುರುತಿಸಿರಿ.
ಅ) ವಿಜಯ ಆ) ನಗರ ಇ)
ರತ್ನಖಚಿತ ಈ) ಸಿಂಹಾಸನ
ಇದು ನಿಮಗೆ ತಿಳಿದಿರಲಿ
ನಮ್ಮ ರಾಜ್ಯದ(ಮಹಾರಾಷ್ಟ್ರ ರಾಜ್ಯ) ಜ್ಞಾನಪೀಠ
ಪ್ರಶಸ್ತಿ ವಿಜೇತರು
ಸಾಹಿತಿಗಳ
ಭಾವಚಿತ್ರ |
ಸಾಹಿತಿಗಳ
ಹೆಸರು |
ಕೃತಿ |
ಪ್ರಶಸ್ತಿ
ದೊರೆತ ವರ್ಷ |
|
ವಿಷ್ಣು
ಸಖಾರಾಮ ಖಾಂಡೆಕರ |
ಯಯಾತಿ |
1974 |
|
ವಿಷ್ಣು
ವಾಮನ ಶಿರವಾಡಕರ |
ನಟಸಾಮ್ರಾಟ |
1987 |
|
ವಿಂದಾ
ಕರಂದಿಕರ |
ಅಷ್ಟದರ್ಶನ
ಕಾವ್ಯ |
2003 |
|
ಭಾಲಚಂದ್ರ
ನೇಮಾಡೆ |
ಕೋಸಲ |
2014 |
ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಹೆಸರು |
ವರ್ಷ |
ಕೃತಿ |
ಕುವೆಂಪು ( ಕೆ.ವಿ. ಪುಟ್ಟಪ್ಪ) |
೧೯೬೭ |
|
೧೯೭೩ |
||
೧೯೭೭ |
||
೧೯೮೩ |
ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕ್ಕವೀರ ರಾಜೇಂದ್ರ (ಗ್ರಂಥ) |
|
೧೯೯೦ |
ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ |
|
೧೯೯೪ |
ಸಮಗ್ರ ಸಾಹಿತ್ಯಕ್ಕೆ ಕೊಡುಗೆ |
|
೧೯೯೮ |
ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ಯಶಸ್ವಿ |
|
೨೦೧೦ |
ಸಮಗ್ರ ಸಾಹಿತ್ಯ ಕೊಡುಗೆ |
4 ಕಾಮೆಂಟ್‌ಗಳು
ಧನ್ಯವಾದಗಳು, ಒಳ್ಳೆಯ ಪ್ರಯತ್ನ ಸರ್,ಉಳಿದ ಎಲ್ಲ ಪಾಠಗಳ ಪ್ರಶ್ನೋತ್ತರ ಕಳಿಸಿರಿ.
ಪ್ರತ್ಯುತ್ತರಅಳಿಸಿಧನ್ಯವಾದಗಳು ಮುನ್ನೋಳಿ ಸರ
ಅಳಿಸಿಉಳಿದ ಪಾಠಗಳ ಪ್ರಶ್ನೋತ್ತರಗಳನ್ನು ಬರೆದಿಲ್ಲವಾ ಸರ?
ಪ್ರತ್ಯುತ್ತರಅಳಿಸಿಸರಿ ಇದು ಕನ್ನಡ ಮಕ್ಕಳಿಗೆ ಅವಶ್ಯಕತೆ ಇತ್ತು. ಒಂದು ರೀತಿಯ ಅಭ್ಯಾಸದ ದಾಹನೀಗಿಸಿದಂತಾಯಿತು.
ಪ್ರತ್ಯುತ್ತರಅಳಿಸಿಧನ್ಯವಾದಗಳು