ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಭೂಗೋಲ 6ನೇ ತರಗತಿ ಸ್ವಾಧ್ಯಾಯಮಾಲೆ Std 6th Geography Questions and Answers

 ಭೂಗೋಲ 6ನೇ ತರಗತಿ ಸ್ವಾಧ್ಯಾಯಮಾಲೆ Std 6th Geography Questions and Answers

ಸಂಕಲನ ಹಾಗೂ ಲೇಖನ

ಶ್ರೀ. ದಿನೇಶ ಠಾಕೂರದಾಸ ಚವ್ಹಾಣ

ಜಿ. ಪ. ಪ್ರಾಥಮಿಕ ಕನ್ನಡ ಶಾಲೆ, ಬಾಬಲಾದ ತಾ. ಅಕ್ಕಲಕೋಟ ಜಿ. ಸೋಲಾಪುರ

ಅನುಕ್ರಮಣಿಕೆ

ಕ್ರ.             ಪಾಠದ ಹೆಸರು               

1.      ಪೃಥ್ವಿ ಹಾಗೂ ವೃತ್ತಗಳು

2.      ಬನ್ನಿರಿ ವೃತ್ತಗಳ ಬಳಕೆ ಮಾಡೋಣ

3.      ಪೃಥ್ವಿಗೋಲ, ನಕಾಶೆ ತುಲನೆ ಹಾಗೂ ಕ್ಷೇತ್ರ ಭೇಟಿ

4.      ಹವೆ ಹಾಗೂ ಹವಾಮಾನ

5.      ಉಷ್ಣತಾಮಾನ

6.      ಮಹಾಸಾಗರಗಳ ಮಹತ್ವ

7.        ಶಿಲೆಗಳು ಹಾಗೂ ಶಿಲೆಗಳ ಪ್ರಕಾರಗಳು

8.      ನೈಸರ್ಗಿಕ ಸಂಸಾಧನೆಗಳು

9.        ಶಕ್ತಿಯ ಸಾಧನಗಳು

10.      ಮಾನವನ ವ್ಯವಸಾಯಗಳು

        ಪರಿಶಿಷ್ಟ





1.    ಪೃಥ್ವಿ ಹಾಗೂ ವೃತ್ತಗಳು

 

ಪ್ರ. ಅ. ಸರಿಯಾದ ಪರ್ಯಾಯದ ಚೌಕಟ್ಟಿನಲ್ಲಿ ಈ ಗುರುತು ಮಾಡಿರಿ

 (೧) ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಪೃಥ್ವಿಯ ಮೇಲಿನ ಕಾಲ್ಪನಿಕ ರೇಖೆಗಳಿಗೆ ಏನು ಎನ್ನುವರು?

        ರೇಖಾವೃತ್ತ [  ] ಅಂತರ ರಾಷ್ಟ್ರೀಯ ವಾರರೇಖೆ [  ]  ಅಕ್ಷವೃತ್ತ [ ]

(೨) ರೇಖಾವೃತ್ತಗಳು ಹೇಗೆ ಇರುವವು?

    ವರ್ತುಳಾಕಾರ [  ] ಅರ್ಧವರ್ತುಳಾಕಾರ []   ಬಿಂದುಸ್ವರೂಪದಲ್ಲಿ [  ]

(೩) ಅಕ್ಷವೃತ್ತ ಹಾಗೂ ರೇಖಾವೃತ್ತಗಳು ಸೇರಿ ಪೃಥ್ವಿಯ ಮೇಲೆ ಏನು ತಯಾರಾಗುವುದು?

   ಕೋನದ ಅಂತರ [  ]      ಗೋಲಾರ್ಧ [  ]      ವೃತ್ತಜಾಳಿಗೆ []

(೪) ಉತ್ತರ ಗೋಲಾರ್ಧದಲ್ಲಿ ಒಟ್ಟು ಎಷ್ಟು ಅಕ್ಷವೃತ್ತಗಳು ಇವೆ?

        90 []               89 [  ]        91 [  ]

(೫) ಪೂರ್ವ ಗೋಲಾರ್ಧ ಹಾಗೂ ಪಶ್ಚಿಮ ಗೋಲಾರ್ಧ ಯಾವ ವೃತ್ತಗಳಿಂದ ತಯಾರಾಗುವುದು?

         ° ಮೂಲ ಅಕ್ಷವೃತ್ತ ಹಾಗೂ ೧೮೦° ರೇಖಾವೃತ್ತ [  ]                              

          ಮೂಲರೇಖಾವೃತ್ತ ಹಾಗೂ ೧೮೦ ರೇಖಾವೃತ್ತ []

          ಉತ್ತರ ಹಾಗೂ ದಕ್ಷಿಣ ಧ್ರುವ ವೃತ್ತಗಳು [  ]

 (೬) ಕೆಳಗಿನವುಗಳಲ್ಲಿ ಪೃಥ್ವಿಗೋಲದ ಮೇಲಿನ ಬಿಂದು ಸ್ವರೂಪದಲ್ಲಿರುವ ವೃತ್ತ ಯಾವುದು?

        ವಿಷುವವೃತ್ತ [  ]      ಉತ್ತರ ಧ್ರುವ []    ಮೂಲ ರೇಖಾವೃತ್ತ [  ]

(೭) ಪೃಥ್ವಿಗೋಲದ ಮೇಲೆ ೪೫ ಉ. ಅಕ್ಷವೃತ್ತ ಇದು ಎಷ್ಟು ಸ್ಥಳಗಳ ಮೌಲ್ಯ ಇರಬಹುದು?

      ಒಂದು [  ]         ಅನೇಕ []    ಎರಡು []

ಪ್ರ. (ಬ) ಪೃಥ್ವಿಗೋಲವನ್ನು ನಿರೀಕ್ಷಿಸಿ ಕೆಳಗಿನ ವಿಧಾನಗಳನ್ನು ಪರೀಕ್ಷಿಸಿ, ತಪ್ಪಾದವುಗಳನ್ನು ಸರಿಪಡಿಸಿರಿ.

(೧) ಮೂಲ ರೇಖಾವೃತ್ತ ಇದು ಅಕ್ಷವೃತ್ತಗಳಿಗೆ ಸಮಾಂತರವಾಗಿ ಇರುವುದು.      

ಉತ್ತರ: ಅಯೋಗ್ಯ, ಮೂಲ ರೇಖಾವೃತ್ತ ಇದು ಅಕ್ಷವೃತ್ತಗಳಿಗೆ ಸಮಾಂತರವಾಗಿ ಇರುವುದಿಲ್ಲ.

(೨) ಎಲ್ಲ ಅಕ್ಷವೃತ್ತಗಳು ವಿಷುವ ವೃತ್ತದಲ್ಲಿ ಒಂದೆಡೆ ಸೇರುವವು.

ಉತ್ತರ: ಅಯೋಗ್ಯ, ಎಲ್ಲ ಅಕ್ಷವೃತ್ತಗಳು ವಿಷುವ ವೃತ್ತದಲ್ಲಿ ಒಂದೆಡೆ ಸೇರುವದಿಲ್ಲ.

(೩) ಅಕ್ಷವೃತ್ತ ರೇಖಾವೃತ್ತಗಳು ಕಾಲ್ಪನಿಕ ರೇಖೆಗಳಾಗಿವೆ.

ಉತ್ತರ: ಯೋಗ್ಯ

(೪) ೮°೬೫ಇದು ಉತ್ತರ ರೇಖಾವೃತ್ತವಾಗಿದೆ.

ಉತ್ತರ: ಅಯೋಗ್ಯ, °೬೫ಇದು ಉತ್ತರ ಅಕ್ಷವೃತ್ತವಾಗಿದೆ.

(೫) ರೇಖಾವೃತ್ತಗಳು ಒಂದಕ್ಕೊಂದು ಸಮಾಂತರವಾಗಿ ಇರುವವು.

ಉತ್ತರ: ಅಯೋಗ್ಯ, ರೇಖಾವೃತ್ತಗಳು ಒಂದಕ್ಕೊಂದು ಸಮಾಂತರವಾಗಿ ಇರುವದಿಲ್ಲ.

ಪ್ರ. (ಕ) ಉತ್ತರ ಬರೆಯಿರಿ.

(೧) ಉತ್ತರ ಧೃವದ ಅಕ್ಷಾಂಶ ಹಾಗೂ ರೇಖಾಂಶಗಳ ಬಗ್ಗೆ ಹೇಗೆ ಹೇಳಬಲ್ಲಿರಿ?

ಉತ್ತರ: ಉತ್ತರ ಧೃವದ ಅಕ್ಷಾಂಶ 800 ಉ. ಅಕ್ಷವೃತ್ತ ಹೀಗೆ ಹೇಳಬಹುದು ಮತ್ತು ರೇಖಾಂಶಗಳನ್ನು ಅನಂತದವರೆಗೆ ಎಂದು ಹೇಳಲು ಬರುವುದು.

(೨) ಕರ್ಕವೃತ್ತದಿಂದ ಮಕರವೃತ್ತದವರೆಗಿನ ಅಂಶಾತ್ಮಕ ಅಂತರ ಎಷ್ಟು ಇರುವುದು ?

ಉತ್ತರ: ಕರ್ಕವೃತ್ತದಿಂದ ಮಕರವೃತ್ತದವರೆಗಿನ ಅಂಶಾತ್ಮಕ ಅಂತರ 470 ಇರುವುದು.

(೩) ಪೃಥ್ವಿಗೋಲದ ಆಧಾರದಿಂದ, ಯಾವ ದೇಶಗಳಿಂದ ವಿಷುವ ವೃತ್ತ ಹಾಯ್ದು ಹೋಗಿದೆಯೋ ಆ ದೇಶಗಳ ಹೆಸರು ಬರೆಯಿರಿ.

ಉತ್ತರ: ಯಾವ ದೇಶಗಳಿಂದ ವಿಷುವ ವೃತ್ತ ಹಾಯ್ದು ಹೋಗಿದೆಯೋ ಆ ದೇಶಗಳ ಹೆಸರು:

        ಕೊಲಂಬಿಯಾ, ಬ್ರಾಝಿಲ, ಇಂಡೋನೇಷಿಯಾ, ಸೊಮಾಲಿಯ ಇತ್ಯಾದಿಗಳು.

(೪) ವೃತ್ತ ಜಾಳಿಗೆಯ ಉಪಯೋಗ ಬರೆಯಿರಿ.

ಉತ್ತರ: ಪೃಥ್ವಿಯ ಮೇಲಿನ ಸ್ಥಾನ ನಿಶ್ಚಿತಕ್ಕಾಗಿ ವೃತ್ತ ಜಾಳಿಗೆಯ ಉಪಯೋಗವಾಗುತ್ತದೆ.

ಪ್ರ.() ಮುಂದಿನ ಕೋಷ್ಟಕ ಪೂರ್ಣಗೊಳಿಸಿರಿ.

ವೈಶಿಷ್ಟ್ಯಗಳು

ಅಕ್ಷವೃತ್ತಗಳು

ರೇಖಾವೃತ್ತಗಳು

ಆಕಾರ

ಅಕ್ಷವೃತ್ತಗಳು ವರ್ತುಳಾಕಾರ ಇರುತ್ತವೆ. ಇವು ಪೃಥ್ವಿಯ ಮೇಲಿನ ಕಾಲ್ಪನಿಕ ವರ್ತುಳಾಕಾರ ರೇಷೆಗಳಾಗಿವೆ.

ರೇಖಾವೃತ್ತಗಳು ಅರ್ಧ ವರ್ತುಳಾಕಾರ ಇರುತ್ತವೆ. ಇವು ಪೃಥ್ವಿಯ ಮೇಲಿನ ಕಾಲ್ಪನಿಕ ಅರ್ಧ ವರ್ತುಳಾಕಾರ ರೇಷೆಗಳಾಗಿವೆ.

ಅಳತೆ/ ಅಂತರ

ಪ್ರತಿಯೊಂದು ಅಕ್ಷವೃತ್ತದ ಅಳತೆ ಬೇರೆ ಇರುವುದು

ಪ್ರತಿಯೊಂದು ರೇಖಾವೃತ್ತದ ಸಮಾನ  ಇರುವುದು

ದಿಕ್ಕು/ ಸಂಬಂಧ

ಹೊಂದಿದ ಎರಡು ಅಕ್ಷವೃತ್ತಗಳಲ್ಲಿ ಎಲ್ಲೆಡೆಗೆ ಸಮಾನ ಅಂತರ ಇರುತ್ತದೆ. ಅಂದರೆಯೇ ಅಕ್ಷವೃತ್ತಗಳು ಪರಸ್ಪರ ಸಮಂತರ ಇರುತ್ತವೆ.

ಎರಡು ರೇಖಾವೃತ್ತಗಳಲ್ಲಿ ವಿಷುವ ವೃತ್ತದ ಮೇಲೆ ಹೆಚ್ಚು ಅಂತರವಿದ್ದು ಎರಡೂ ಧೃವಗಳತ್ತ ಕಡಿಮೆ ಆಗುತ್ತ ಹೋಗುವುದು

 

 

2. ಬನ್ನಿರಿ ವೃತ್ತಗಳನ್ನು ಬಳಸೋಣ

ಪ್ರ. (ಅ) ಸರಿಯಾದ ಪರ್ಯಾಯದ ಚೌಕಟ್ಟಿನಲ್ಲಿ ಈ ಗುರುತು ಮಾಡಿರಿ.  

(೧) ೬೬° ೩೦' ತ್ತರ ಅಕ್ಷವೃತ್ತ ಎಂದರೇನೇ

   ಆರ್ಕ್ಟಿಕ್ ವೃತ್ತ []     ವಿಷುವ ವೃತ್ತ [  ]     ಅಂಟಾರ್ಕ್ಟಿಕ್ ವೃತ್ತ [  ]

(೨) ಯಾವ ಅಕ್ಷವೃತ್ತವು ಪೃಥ್ವಿಯನ್ನು ಎರಡು ಸಮಾನ ಭಾಗಗಳಲ್ಲಿ ವಿಂಗಡಿಸುವುದು ?

  ಕರ್ಕವೃತ್ತ  [  ]     ವಿಷುವ ವೃತ್ತ []        ಮಕರವೃತ್ತ [  ]

(೩) ಆರ್ಕ್ಟಿಕ್ ವೃತ್ತದ ಉತ್ತರ ಧೃವದಿಂದ ಕೋನದ ಅಂತರ ಎಷ್ಟು ಇದೆ ?

   ೬೬° ೩೦' [  ]      ೨೩° ೩೦' []    ೯೦°  [  ]

(೪) ೦° ಮೂಲ ರೇಖಾವೃತ್ತ ಹಾಗೂ ವಿಷುವವೃತ್ತ ಇವು ಯಾವ ಸ್ಥಳದಲ್ಲಿ ಒಂದನ್ನೊಂದು ಛೇದಿಸುವವು ?

ದಕ್ಷಿಣ ಮಹಾಸಾಗರ [  ]     ಅಟ್ಲಾಂಟಿಕ್ ಮಹಾಸಾಗರ []     ಆಫ್ರಿಕಾ ಖಂಡ [  ]

(೫) ಯಾವ ಅಕ್ಷವೃತ್ತದವರೆಗೆ ಸೂರ್ಯನ ಕಿರಣಗಳು ಲಂಬರೂಪವಾಗಿ ಬೀಳುವವು?

   ಕರ್ಕ ಹಾಗೂ ಮಕರ ವೃತ್ತ [ ]   ಆರ್ಕ್ಟಿಕ್‌ ಹಾಗೂ ಅಂಟಾರ್ಕ್ಟಿಕ್ ವೃತ್ತ [  ]

  ಉತ್ತರ ಹಾಗೂ ದಕ್ಷಿಣ ಧ್ರುವ [  ]

(೬) ದಕ್ಷಿಣ ಧ್ರುವದ ಸ್ಥಾನದ ಅಕ್ಷವೃತ್ತದ ಸ್ಥಾನ ಯಾವುದು ?

 ೯೦° ದಕ್ಷಿಣ ಅಕ್ಷವೃತ್ತ []           ೯೦° ಉತ್ತರ ಅಕ್ಷವೃತ್ತ [  ]           ಅಕ್ಷವೃತ್ತ [  ]

ಪ್ರ. (ಬ) ಕೆಳಗಿನ ವಿಧಾನಗಳನ್ನು ಅಭ್ಯಸಿಸಿ, ಅಯೋಗ್ಯವಾದುವುಗಳನ್ನು ಸರಿಪಡಿಸಿ ಬರೆಯಿರಿ.

(೧) ಯಾವುದೇ ಒಂದು ಜಾಗದ ಸ್ಥಾನ ಹೇಳುವಾಗ ಕೇವಲ ರೇಖಾವೃತ್ತ ಹೇಳಿದರೂ ಸಾಕು.

ಉತ್ತರ: ಅಯೋಗ್ಯ, ಯಾವುದೇ ಒಂದು ಜಾಗದ ಸ್ಥಾನ ಹೇಳುವಾಗ ರೇಖಾವೃತ್ತ ಹಾಗೂ ಅಕ್ಷವೃತ್ತ ಇವೆರಡರ ಉಲ್ಲೇಖ ಮಾಡಬೇಕಾಗುತ್ತದೆ.

(೨) ಯಾವುದೇ ಒಂದು ಪ್ರದೇಶದ ವಿಸ್ತಾರ ಹೇಳುವಾಗ ಹೊಂದಿಕೊಂಡ ಪ್ರದೇಶದ ಮಧ್ಯಭಾಗದ ಅಕ್ಷಾಂಶ ರೇಖಾಂಶಗಳನ್ನು ಗಣನೆಯಲ್ಲಿ ತೆಗೆದುಕೊಳ್ಳಬೇಕು.

ಉತ್ತರ: ಅಯೋಗ್ಯ, ಯಾವುದೇ ಒಂದು ಪ್ರದೇಶದ ವಿಸ್ತಾರ ಹೇಳುವಾಗ ಪ್ರದೇಶದ ಕೊನೆಯ ಗಡಿಭಾಗದ ಅಕ್ಷಾಂಶ ರೇಖಾಂಶಗಳನ್ನು ಗಣನೆಯಲ್ಲಿ ತೆಗೆದುಕೊಳ್ಳಬೇಕು.

(೩) ನಕಾಶೆಯಿಂದ ಮಾತ್ರ ಒಂದು ರಸ್ತೆಯ ಸ್ಥಾನ ಹೇಳಬಹುದು.

ಉತ್ತರ: ಅಯೋಗ್ಯ, ನಕಾಶೆಯೊಂದಿಗೆ ಭೌಗೋಳಿಕ ಮಾಹಿತಿ, ಭೌಗೋಳಿಕ ಸ್ಥಾನ ನಿಶ್ಚಿತಿಗಳಿಂದ ಯಾವುದೇ ರಸ್ತೆಯ ಸ್ಥಾನ ಹೇಳಬಹುದು.

(೪) ೦° ಪೂರ್ವ ರೇಖಾವೃತ್ತ ಹಾಗೂ ೧೮೦೦ ಪೂರ್ವ ರೇಖಾವೃತ್ತ.

ಉತ್ತರ: ಅಯೋಗ್ಯ, °  ರೇಖಾವೃತ್ತ ಹಾಗೂ ೧೮೦ ರೇಖಾವೃತ್ತ

(೫) ಒಂದು ದಾರಿ ಇಲ್ಲವೆ ನದಿಯ ಪ್ರವಾಹದ ವಿಸ್ತಾರ, ಉಗಮದಲ್ಲಿಯ ಸ್ಥಾನವನ್ನು ಅಕ್ಷಾಂಶಗಳಿಂದ ಕೊನೆಯ ಸ್ಥಾನದ ರೇಖಾಂಶದ ನಡುವೆ ಹೇಳಲಾಗುವುದು.

ಉತ್ತರ: ಅಯೋಗ್ಯ, ಒಂದು ದಾರಿ ಇಲ್ಲವೆ ನದಿಯ ಪ್ರವಾಹದ ವಿಸ್ತಾರ, ಉಗಮದಲ್ಲಿಯ ಸ್ಥಾನವನ್ನು ಅಕ್ಷಾಂಶಗಳಿಂದ ಹಾಗೂ ರೇಖಾಂಶಗಳಿಂದ ಆ ಕೊನೆಯ ಸ್ಥಾನದ ಅಕ್ಷಾಂಶದ ಹಾಗೂ ರೇಖಾಂಶದ  ನಡುವೆ ಹೇಳಲಾಗುವುದು.

(೬) ೮° ' ಉತ್ತರ ಅಕ್ಷವೃತ್ತದಿಂದ ೩೭° ೬೬' ಉತ್ತರ ಅಕ್ಷವೃತ್ತ ಇದು ಸರಿಯಾದ ಸ್ಥಾನ ನಿಶ್ಚಿತ ಪಡಿಸುವುದು.

ಉತ್ತರ: ಅಯೋಗ್ಯ, ° ' ಉತ್ತರ ಅಕ್ಷವೃತ್ತದಿಂದ ೩೭° ೬೬' ಉತ್ತರ ಅಕ್ಷವೃತ್ತ ಇದು ಸರಿಯಾದ ಸ್ಥಾನ ನಿಶ್ಚಿತವಿಲ್ಲ ಅದು ಸರಿಯಾದ ಅಕ್ಷವೃತ್ತಿಯ ವಿಸ್ತಾರವಾಗಿದೆ.

ಪ್ರ. (ಕ) ನಕಾಶೆಯ ಸಂಗ್ರಹಗಳಲ್ಲಿಯ ಜಗತ್ತಿನ ಹಾಗೂ ಭಾರತದ ನಕಾಶೆ ನೋಡಿ ಕೆಳಗಿನ ಕೆಲವು ಪಟ್ಟಣಗಳ ಸ್ಥಾನ ಹುಡುಕಿರಿ. ಅವುಗಳ ಅಕ್ಷಾಂಶ ರೇಖಾಂಶಗಳನ್ನು ಹೇಳಿರಿ.

(೧) ಮುಂಬಯಿ: ೧೯ಉತ್ತರ ಅಕ್ಷಾಂಶ ಹಾಗೂ ೭೩ ಪೂರ್ವ ರೇಖಾಂಶ                 

(೨) ಗುವಾಹಾಟಿ: ೨೬ ಉತ್ತರ ಅಕ್ಷಾಂಶ ಹಾಗೂ ೯೧ ಪೂರ್ವ ರೇಖಾಂಶ

(೩) ಶ್ರೀನಗರ: ೩೪ಉತ್ತರ ಅಕ್ಷಾಂಶ ಹಾಗೂ ೭೫ ಪೂರ್ವ ರೇಖಾಂಶ                            

(೪) ಭೋಪಾಳ: ೨೩ಉತ್ತರ ಅಕ್ಷಾಂಶ ಹಾಗೂ ೭೭ ಪೂರ್ವ ರೇಖಾಂಶ

(೫) ಚೆನ್ನಯಿ: ೧೩ಉತ್ತರ ಅಕ್ಷಾಂಶ ಹಾಗೂ ೮೦ ಪೂರ್ವ ರೇಖಾಂಶ                                            

(೬) ಓಟಾವಾ: ೪೫ಉತ್ತರ ಅಕ್ಷಾಂಶ ಹಾಗೂ ೭೬ ಪೂರ್ವ ರೇಖಾಂಶ

 (೭) ಟೋಕಿಯೋ: ೩೬ಉತ್ತರ ಅಕ್ಷಾಂಶ ಹಾಗೂ ೧೪೦ ಪೂರ್ವ ರೇಖಾಂಶ                                

(೮) ಜೋಹಾನಬರ್ಗ: ೨೬ಉತ್ತರ ಅಕ್ಷಾಂಶ ಹಾಗೂ ೨೮ ಪೂರ್ವ ರೇಖಾಂಶ

 (೯) ನ್ಯೂಯಾರ್ಕ್: ೪೧ಉತ್ತರ ಅಕ್ಷಾಂಶ ಹಾಗೂ ೭೪ ಪೂರ್ವ ರೇಖಾಂಶ                      

(೧೦) ಲಂಡನ: ೫೨ಉತ್ತರ ಅಕ್ಷಾಂಶ ಹಾಗೂ ೦೦೮ ಪುರ್ವ ರೇಖಾಂಶ

ಪ್ರ. (ಡ) ಮುಂದಿನವುಗಳ ವಿಸ್ತಾರ ನಕಾಶೆ ಇಲ್ಲವೆ ಪೃಥ್ವಿಗೋಲದ ಸಹಾಯದಿಂದ ಬರೆಯಿರಿ.

(ಮೊಬಾಯಿಲ್ ಹಾಗೂ ಇಂಟರ್‌ನೆಟ್‌ನ್ನು ಉಪಯೋಗಿಸಿ ಉತ್ತರಗಳನ್ನು ಪರೀಕ್ಷಿಸಿರಿ).

(೧) ಮಹಾರಾಷ್ಟ್ರ (ರಾಜ್ಯ) : ೧೬೦೩ ಉತ್ತರ ಅಕ್ಷಾಂಶ ದಿಂದ ೨೨ಉತ್ತರ ಅಕ್ಷಾಂಶ ಹಾಗೂ ೭೨ಪುರ್ವ ರೇಖಾಂಶ ದಿಂದ ೮೧ ಪೂರ್ವ ರೇಖಾಂಶ

(೨) ಚಿಲಿ (ದೇಶ) : ೧೬ದಕ್ಷಿಣ  ಅಕ್ಷಾಂಶ ದಿಂದ ೫೬ಉತ್ತರ ಅಕ್ಷಾಂಶ ಹಾಗೂ ೭೨೪೦ ಪಶ್ಚಿಮ  ರೇಖಾಂಶ ದಿಂದ ೭೦ ಪಶ್ಚಿಮ ರೇಖಾಂಶ

(೩) ಅಸ್ಟ್ರೇಲಿಯಾ (ಖಂಡ) : ೧೦೪೧ ದಕ್ಷಿಣ ಅಕ್ಷಾಂಶ ದಿಂದ ೪೩೩೮ ದಕ್ಷಿಣ ಅಕ್ಷಾಂಶ ಹಾಗೂ ೧೧೩೦೯ ಪೂರ್ವ ರೇಖಾಂಶ ದಿಂದ ೧೫೩೩೮ ಪೂರ್ವ ರೇಖಾಂಶ

(೪) ಶ್ರೀಲಂಕಾ (ದ್ವೀಪ) : ೬೪೮ ಉತ್ತರ ಅಕ್ಷಾಂಶ ದಿಂದ ೯೫೦ಉತ್ತರ ಅಕ್ಷಾಂಶ ಹಾಗೂ ೭೯೪೦ ಪೂರ್ವ ರೇಖಾಂಶ ದಿಂದ ೮೧೪೫ ಪೂರ್ವ ರೇಖಾಂಶ

(೫) ರಶಿಯಾದ ಟ್ರಾನ್ಸ್‌ ಸೈಬೇರಿಯನ್ ರೈಲು ಮಾರ್ಗ(ಪ್ರಾರಂಭ-ಸೇಂಟ ಪೀಟರ್ಸ್‌ಬರ್ಗ, ಮುಕ್ತಾಯ- ವೈಡಿಯೊಸ್ಟೋಕ) : ೫೯ ಉತ್ತರ ಅಕ್ಷಾಂಶ ದಿಂದ ೪೩ಉತ್ತರ ಅಕ್ಷಾಂಶ ಹಾಗೂ ೩೦ಪುರ್ವ ರೇಖಾಂಶ ದಿಂದ ೧೩೨ ಪೂರ್ವ ರೇಖಾಂಶ

ಪ್ರ. (ಈ) ಮುಂದಿನ ಕೋಷ್ಟಕದಲ್ಲಿ ಪ್ರಮುಖ ವೃತ್ತಗಳನ್ನು ಅಂಶಾತ್ಮಕ ಮೌಲ್ಯಗಳೊಂದಿಗೆ ಬರೆಯಿರಿ.



 ಪ್ರ. () ಮುಂದಿನ ಆಕೃತಿಯಲ್ಲಿ ಮಹತ್ವದ ವೃತ್ತಗಳನ್ನು ಬಿಡಿಸಿರಿ, ಹಾಗೂ ಅವುಗಳ ಅಂಶಾತ್ಮಕ ಮೌಲ್ಯಗಳನ್ನು ಬರೆಯಿರಿ. (ಕೋನಮಾಪಕ ಉಪಯೋಗಿಸಿರಿ)


ಪ್ರ. (ಗ) 'ವೈಟಿಕನ್ ಸಿಟಿ' ಟಿಪ್ಪಣೆ ಬರೆಯಿರಿ 

ಉತ್ತರ: ವೈಟಿಕನ್ ಸಿಟಿಯನ್ನು ಜಗತ್ತಿನ ಎಲ್ಲಕ್ಕಿಂತ ಚಿಕ್ಕ ದೇಶವೆಂದು ಗುರುತಿಸಲಾಗುವುದು. ಅದರ ವಿಸ್ತಾರ ೦.೪೪ ಚೌ. ಕಿಲೋ ಮೀಟರ್ ಇದೆ. ಈ ದೇಶವು ಇಟಲಿ ದ್ವಿಪಕಲ್ಪದ ಮೇಲೆ ಇದೆ. ಅದರ ಸುತ್ತ 'ಇಟಲಿ' ದೇಶ ಹಬ್ಬಿದೆ. ಆಕೃತಿಲ್ಲಿ ಈ ದೇಶದ ವಿಸ್ತಾರ ನೋಡಿರಿ. ಪಶ್ಚಿಮದಿಂದ ಪೂರ್ವದತ್ತ ಅದರಂತೆಯೇ ಉತ್ತರದಿಂದ ದಕ್ಷಿಣದತ್ತ ಇರುವ ಈ ದೇಶದ ವಿಸ್ತಾರದಲ್ಲಿಯ ಅಂಶಗಳಲ್ಲಿ ಹಾಗೂ ಮಿನಿಟುಗಳಲ್ಲಿ ಯಾವುದೇ ರೀತಿಯ ಅಂತರ ಕಂಡು ಬರುವುದಿಲ್ಲ. ಆದರೆ ಸೆಕೆಂಡುಗಳಲ್ಲಿ ಅಂತರ ಇದೆ. ಇದರಿಂದ ಅಂಶಾತ್ಮಕ ಅಂತರದಲ್ಲಿಯ ಮಿನಿಟು ಹಾಗೂ ಸೆಕೆಂಡು ಈ ಲಘು ಎಕಕಗಳ ಉಪಯೋಗವನ್ನು ತಿಳಿದುಕೊಳ್ಳಬೇಕಾಗುತ್ತದೆ.



 

3. ಪೃಥ್ವೀಗೋಲ, ನಕಾಶೆ ಹಾಗೂ ಕ್ಷೇತ್ರಭೆಟ್ಟಿ

(೧) ದ್ವಿಮಿತಿಯ ಹಾಗೂ ತ್ರಿಮಿತಿಯ ಸಾಧನಗಳ ವೈಶಿಷ್ಟ್ಯಗಳು ಯಾವುವು ?

ಉತ್ತರ: ದ್ವಿಮಿತಿಯ ಹಾಗೂ ತ್ರಿಮಿತಿಯ ಸಾಧನಗಳ ವೈಶಿಷ್ಟ್ಯಗಳು:

        ೧)  ದ್ವಿಮಿತಿಯ ಸಾಧನಗಳಿಗೆ ಉದ್ದಳತೆ ಹಾಗೂ ಅಗಳಲತೆ ಎಂಬ ಎರಡು ಮಿತಿಗಳು ಇರುತ್ತವೆ. ಆದರೆ ತ್ರೀಮಿತಿಯ ಸಾಧನಗಳಿಗೆ ಉದ್ದ, ಅಗಲ ಗಾಹು ಎತ್ತರ ಎಂಬ ಮೂರು ಮಿತಿಗಳಿರುತ್ತವೆ.

        ೨) ದ್ವಿಮಿತಿಯ ಸಾಧನಗಳಿಗೆ ಉದ್ದ ಹಾಗೂ ಅಗಲ ಕೂಡಿ ಕ್ಷೇತ್ರಫಲ ದೊರೆಯುತ್ತದೆ ಆದರೆ ತ್ರೀಮಿತಿಯ ಸಾಧನಗಳಿಗೆ ಉದ್ದ, ಅಗಲ ಗಾಹು ಎತ್ತರ ಈ  ಮೂರು ಮೂಲಮಾನಗಳಿಂದ ಕ್ಷೇತ್ರಫಲ ದೊರೆಯುತ್ತದೆ.

(೨) ಅತ್ಯಂತ ಚಿಕ್ಕದಾದ ಪೃಥ್ವಿಗೋಲದ ಮೇಲೆ ಯಾವ ಯಾವ ಸಂಗತಿಗಳನ್ನು ತೋರಿಸಲು ಬರುವುದು?

ಉತ್ತರ: ೧) ಅತ್ಯಂತ ಚಿಕ್ಕದಾದ ಪೃಥ್ವಿಗೋಲದ ಮೇಲೆ ಅಕ್ಷವೃತ್ತಗಳು ಹಾಗೂ ರೇಖಾವೃತ್ತಗಳು  ತೋರಿಸಲು ಬರುವುದು. ೨) ಪೃಥ್ವಿಯ ಮೇಲಿನ ವಿವಿಧ ಬೆಟ್ಟಗಳು, ದ್ವೀಪಗಳು, ಆಖಾತ, ಉಪಸಾಗರ, ಸಾಗರ ಹಾಗೂ ಮಹಾಸಾಗರಗಳೂ ತೋರಿಸಲು ಬರುವುದು.

(೩) ಪೃಥ್ವಿಯ ಮೇಲೆ ಆಗುವ ಹಗಲು ರಾತ್ರಿಗಳ ಸಂಕಲ್ಪನೆಯನ್ನು ಯಾವ ಸಾಧನದಿಂದ ತಿಳಿದುಕೊಳ್ಳಲು ಸುಲಭವಾಗುವುದು?

ಉತ್ತರ: ಪೃಥ್ವಿಯ ಮೇಲೆ ಆಗುವ ಹಗಲು ರಾತ್ರಿಗಳ ಸಂಕಲ್ಪನೆಯನ್ನು ಪೃಥ್ವಿಯ ಗೋಲ ಈ  ಸಾಧನದಿಂದ ತಿಳಿದುಕೊಳ್ಳಲು ಸುಲಭವಾಗುವುದು.

(೪) ನಿಮ್ಮ ಊರು/ಪಟ್ಟಣ ತೋರಿಸಲು ಯಾವ ಸಾಧನದ ಉಪಯೋಗವಾಗಬಹುದು?

ಉತ್ತರ: ನಿಮ್ಮ ಊರು/ಪಟ್ಟಣ ತೋರಿಸಲು ನಕಾಶೆ ಈ ಸಾಧನದ ಉಪಯೋಗವಾಗಬಹುದು

(೫) ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಹಜವಾಗಿ ತೆಗೆದುಕೊಂಡು ಹೋಗಬಹುದಾದ ಸಾಧನ

ಯಾವುದು ?

ಉತ್ತರ: ನಕಾಶೆ ಇದೊಂದು ಸಾಧನವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಹಜವಾಗಿ ತೆಗೆದುಕೊಂಡು ಹೋಗಬಹುದಾದ ಸಾಧನವಾಗಿದೆ.

* ಉಪಕ್ರಮ

ವರ್ಗದಲ್ಲಿಯ ಎಲ್ಲ ವಿದ್ಯಾರ್ಥಿಗಳ ಎರಡು ಗುಂಪುಗಳನ್ನು ಮಾಡಿರಿ. ಒಂದು ಗುಂಪು ಪೃಥ್ವಿಗೋಲ ತೆಗೆದುಕೊಂಡು ಇನ್ನೊಂದು ಗುಂಪಿನವರಿಗೆ ಸ್ಥಾನ ಹುಡುಕಲು ಹೇಳಬೇಕು. ಪೃಥ್ವಿಗೋಲದಂತೆ ನಕಾಶೆಯ ಉಪಯೋಗವನ್ನು ಮಾಡಬೇಕು.

 

4. ಹವೆ ಮತ್ತು ಹವಾಮಾನ

ಪ್ರ. (ಅ) ನಾನು ಯಾರು ?

(೧) ನಾನು ಯಾವಾಗಲೂ ಬದಲಾಯಿಸುತ್ತಿರುವೆ.    =ಹವೆ

(೨) ನಾನು ಎಲ್ಲೆಡೆ ಸಮನಾಗಿರುವುದಿಲ್ಲ.             = ಹವಾಮಾನ

(೩) ನಾನು ಜಲ ಬಿಂದುವಿನ ಸ್ನಾಯುರೂಪವಾಗಿರುವೆ.               = ಹಿಮ

(೪) ನಾನು ವಾತಾರವರಣದಲ್ಲಿ ಭಾಷ್ಪರೂಪದಲ್ಲಿರುವೆ.               = ಆರ್ದ್ರತೆ

ಪ್ರ. (ಆ) ಉತ್ತರ ಬರೆಯಿರಿ.

(೧) ಮಹಾಬಳೇಶ್ವರದ ಹವಾಮಾನ ತಣ್ಣಗಾಗಿದೆಯೇ? ಏಕೆ?

ಉತ್ತರ: ಹೌದು. ಮಹಾಬಳೇಶ್ವರದ ಹವಾಮಾನ ತಂಪಾಗಿದೆ. ಸಮುದ್ರ ಪಾತಾಳಿಯಿಂದ ಮೇಲೆ ಹೋದಂತೆ ಹವೆಯ ಉಷ್ಣತಾಮಾನ ಕಡಿಮೆ ಆಗುತ್ತದೆ. ಮಹಾಬಲೇಶ್ವರ ಸ್ಥಳವು ಸಹ್ಯಾದ್ರಿಯ ಪರ್ವತ ಸಾಲುಗಳಲ್ಲಿ ಎತ್ತರದಸ್ಥಳದಲ್ಲಿ ಇದೆ . ಆದ್ದರಿಂದ ಇಲ್ಲಿ ಹವಾಮಾನ ತಂಪಾಗಿದೆ.

(೨) ಸಮುದ್ರ ತೀರದ ಹತ್ತಿರ ಹವಾಮಾನ ಆದ್ರ್ರವಾಗಿರುವುದು. ಇದರ ಕಾರಣ ಏನು?

ಉತ್ತರ: ಸಮುದ್ರ ತೀರದ ಭಾಗದಲ್ಲಿ ಸಮುದ್ರದ ನೀರು ಕುದಿಯುವುದರಿಂದ ನೀರಿನ ಬಾಷ್ಪವು ಹವೆಯಲ್ಲಿ ಕೂಡಿಕೊಳ್ಳುತ್ತದೆ. ಹವೆಯಲ್ಲಿಯ ಬಾಷ್ಪದ ಪ್ರಮಾಣವು ಹೆಚ್ಚು ಇದ್ದರೆ ಹವೆಯಲ್ಲಿಯ ಆರ್ದ್ರತೆ ಹೆಚ್ಚಾಗುತ್ತದೆ. ಆದ್ದರಿಂದ ಸಮುದ್ರ ತೀರದ ಹತ್ತಿರ ಹವಾಮಾನ ಆದ್ರ್ರವಾಗಿರುವುದು.

(೩) ಹವೆ ಹಾಗೂ ಹವಾಮಾನ ಇವುಗಳಲ್ಲಿ ಭೇದ ಏನು ಇದೆ?

ಉತ್ತರ: ಹವೆ ಹಾಗೂ ಹವಾಮಾನ ಇವುಗಳಲ್ಲಿ ಭೇದ ಮುಂದಿನಂತಿದೆ.

        ಯಾವುದೇ ಒಂದು ಸ್ಥಳದ ವಿಶಿಷ್ಟ ಸಮಯದಲ್ಲಿ ಇರುವ ವಾತಾವರಣದ ಅಲ್ಪಕಾಲದ ಸ್ಥಿತಿಯನ್ನು ಆ ಸ್ಥಳದ ಹವೆ ಎಂದು ಕರೆಯುತ್ತೇವೆ. ಇದಕ್ಕೆ ವಿರುದ್ಧವಾಗಿ ಹವೆಯ ದೀರ್ಘಕಾಲದ ಸರಾಸರಿ ಸ್ಥಿತಿ ಎಂದರೆ ಆ ಪ್ರದೇಶದ ಹವಾಮಾನ ಹೌದು.

        ಹವೆಯಲ್ಲಿ ಸಾತತ್ಯದಿಂದ ಬದಲಾವಣೆ ಆಗುತ್ತದೆ ಮತ್ತು ಅದು ಸಹಜವಾಗಿ ಗೋಚರಿಸುತ್ತದೆ ಆದರೆ ಹವಮನದಲ್ಲಿ ದೀರ್ಘಕಾಲದ ನಂತರ ಬದಲಾವಣೆ ಆಗುತ್ತಿದ್ದರೂ ಅವು ಸಹಜವಾಗಿ ಗೋಚರಿಸುವುದಿಲ್ಲ.

(೪) ಹವೆಯ ಅಂಗಗಳು ಯಾವುವು ?

ಉತ್ತರ:  ಉಷ್ಣತಾಮಾನ, ಹವೆಯ ಒತ್ತಡ, ಗಾಳಿಗಳು, ಆರ್ದ್ರತೆ, ವೃಷ್ಟಿ ಇವು ಹವೆಯ ಅಂಗಗಳು ಆಗಿವೆ.

(೫) ಸಮುದ್ರ ಸಾನ್ನಿಧ್ಯ ಹಾಗೂ ಸಮುದ್ರ ಸಪಾಟಿಯಿಂದ ಎತ್ತರ ಇವುಗಳಿಂದಾಗಿ ಹವಾಮಾನದ ಮೇಲೆ ಯಾವ ಪರಿಣಾಮ ಆಗುವುದು ?

ಉತ್ತರ: ಸಮುದ್ರ ಸಾನಿಧ್ಯ ಹಾಗೂ ಸಮುದ್ರ ಸಪಾಟಿಯ ಭಾಗದಲ್ಲಿ ಸಮುದ್ರದ ನೀರು ಕುದಿಯುವುದರಿಂದ ನೀರಿನ ಬಾಷ್ಪವು ಹವೆಯಲ್ಲಿ ಕೂಡಿಕೊಳ್ಳುತ್ತದೆ. ಹವೆಯಲ್ಲಿಯ ಬಾಷ್ಪದ ಪ್ರಮಾಣವು ಹೆಚ್ಚು ಇದ್ದರೆ ಹವೆಯಲ್ಲಿಯ ಆರ್ದ್ರತೆ ಹೆಚ್ಚಾಗುತ್ತದೆ. ಆದ್ದರಿಂದ ಸಮುದ್ರ ತೀರದ ಹತ್ತಿರ ಹವಾಮಾನ ಆದ್ರ್ರವಾಗುತ್ತದೆ. ಸಮುದ್ರ ಸಾನಿಧ್ಯ ಇಲ್ಲದ ಭಾಗಗಳಲ್ಲಿ ಹವೆಯಲ್ಲಿಯ ಬಾಷ್ಪದ ಪ್ರಮಾಣ ಕಡಿಮೆ ಇರುವುದರಿಂದ ಅಲ್ಲಿ ಒಣ ಹವೆ ಇರುತ್ತದೆ.

ಪ್ರ. (ಕ) ಕೆಳಗಿನ ಹವಾಮಾನ ಸ್ಥಿತಿಯ ಸಲುವಾಗಿ ನಿಮ್ಮ ಪರಿಚಯದ ಸ್ಥಳಗಳನ್ನು ಬರೆಯಿರಿ.

ಉಷ್ಣ

ಚಂದ್ರಪುರ

ಉಷ್ಣ ಹಾಗೂ ಆದ್ರ್ರ

ಮುಂಬಯಿ

ಶೀತ

ಮುನ್ನಾರ

ಉಷ್ಣ ಹಾಗೂ ಒಣ

ನಾಗಪುರ

ಶೀತ ಹಾಗೂ ಒಣ

ಮಹಾಬಲೇಶ್ವರ

 

ಪ್ರ. (ಡ) ಕೆಳಗಿನ ಕೋಷ್ಟಕ ಪೂರ್ಣಗೊಳಿಸಿರಿ.

ವೆ

    ಹವಾಮಾನ     

ವಾತಾವರಣದ ಅಲ್ಪಕಾಲದ ಸ್ಥಿತಿ.

ಹವೆಯ ದೀರ್ಘಕಾಲಿನ ಸರಾಸರಿ ಸ್ಥಿತಿ

ಬೇಗ ಬದಲಾಗುತ್ತದೆ.

ಬೇಗ ಬದಲಾಗುವುದಿಲ್ಲ.

ವಿಶಿಷ್ಟ ಸ್ಥಾನಗಳ ಸಂದರ್ಭದಲ್ಲಿ ವ್ಯಕ್ತಪಡಿಸಲಾಗುವುದು.

ಯಾವುದೇ ಪ್ರದೇಶದಲ್ಲಿಯ ಹವೆಯ ಅನೇಕ ವರ್ಷ ನಿರೀಕ್ಷಣೆ ಮಾಡಿ ಹೇಳಲಾಗುತ್ತದೆ.

ಹವೆಯ ಅಂಗಗಳು- ಉಷ್ಣತಾಮಾನ, ಹವೆಯ ಒತ್ತಡ, ಗಾಳಿಗಳು, ಆರ್ದ್ರತೆ, ವೃಷ್ಟಿ 

ಹವಾಮಾನದ ಅಂಗಗಳು-

ಉಷ್ಣತಾಮಾನ ಗಾಳಿಗಳು ವೃಷ್ಟಿ, ಮೋಡ, ಆದ್ರ್ರತೆ, ಹವೆಯ ಒತ್ತಡ.

 

* ಉಪಕ್ರಮ

ನಿಮ್ಮ ಊರಿನ ಹವಾಮಾನ ಹೇಗೆ ಇದೆ ಎಂಬುದನ್ನು ಶಿಕ್ಷಕರ ಸಹಾಯದಿಂದ ತಿಳಿದುಕೊಳ್ಳಿರಿ.

  

5. ಉಷ್ಣತಾಮಾನ

ಪ್ರ. (ಅ) ನಾನು ಎಲ್ಲಿ ಇರುವೆನು?

(೧) ನನ್ನ ಪರಿಸರದಲ್ಲಿಯೇ O'ಸೆ. ಸಮೋಷ್ಣ ರೇಷೆ ಇದೆ. 

ಉತ್ತರ: ನಾನು ಶೀತಕಟಿಬಂಧದಲ್ಲಿಯ ಪರಿಸರದಲ್ಲಿ ಇರುವೆನು.

(೨) ನನ್ನ ಪರಿಸರದ ಸರಾಸರಿ ವಾರ್ಷಿಕ ಉಷ್ಣತಾಮಾನ ೨೫ ಸೆ. ಇದೆ.

ಉತ್ತರ: ನಾನು ಉಷ್ಣ ಕಟಿಬಂಧದಲ್ಲಿಯ ಪರಿಸರದಲ್ಲಿ ಇರುವೆನು.

(೩) ನನ್ನ ಪರಿಸರದ ಸರಾಸರಿ ವಾರ್ಷಿಕ ಉಷ್ಣತಾಮಾನ ೧೦° ಸೆ. ಇದೆ.

ಉತ್ತರ: ನಾನು ಸಮಶೀತೋಷ್ಣ ಕಟಿಬಂಧದಲ್ಲಿಯ ಪರಿಸರದಲ್ಲಿ ಇರುವೆನು.

ಪ್ರ. (ಬ) ನಾನು ಯಾರು ?

(೧) ಸಮಾನ ಉಷ್ಣತಾಮಾನವಿರುವ ಸ್ಥಳಗಳನ್ನು ನಾನು ಜೋಡಿಸುವೆ.     =ಸಮೋಷ್ಣ ರೇಷೆ

(೨) ಉಷ್ಣತಾಮಾನ ನಿರ್ದೋಷವಾಗಿ ಅಳೆಯಲು ನನ್ನ ಉಪಯೋಗ ಆಗುವುದು.    =ಉಷ್ಣಾತಾಮಾಪಮಕ

(೩) ನೆಲ ಹಾಗೂ ನೀರಿನಿಂದ ನಾನು ಕಾಯುವೆ.              = ಹವೆ

(೪) ನೆಲ ಹಾಗೂ ನೀರು ನನ್ನಿಂದಾಗಿ ಕಾಯುವವು.           =ಸೂರ್ಯ

ಪ್ರ. (ಕ) ಉತ್ತರ ಬರೆಯಿರಿ.

(೧) ಪೃಥ್ವಿಯ ಗೋಲಾಕಾರದಿಂದ ಉಷ್ಣತಾಮಾನದ ಮೇಲೆ ಖಚಿತವಾಗಿ ಆಗುವ ಪರಿಣಾಮವನ್ನು ಆಕೃತಿಯೊಂದಿಗೆ ಸ್ಪಷ್ಟ ಪಡಿಸಿರಿ.

ಉತ್ತರ: 


ಪೃಥ್ವಿಯ ಮೇಲೆ ಬರುವ ಸೂರ್ಯನ ಕಿರಣಗಳು ಸರಲ ರೇಷೆಯಲ್ಲಿ ಮತ್ತು ಒಂದಕ್ಕೊಂದು ಸಮಾಂತರವಾಗಿರುವವು. ಆದರೆ ಪೃಥ್ವಿಯ ಗೋಲಾಕಾರದಿಂದಾಗಿ ಸೂರ್ಯನ ಕಿರಣಗಳು ಪೃಥ್ವಿಯನ್ನು ಕಡಿಮೆ ಅಥವಾ ಹೆಚ್ಚು ಸ್ಥಳ ವ್ಯಾಪಿಸುತ್ತವೆ. ಇದರಿಂದ ಸೂರ್ಯನಿಂದ ಪೃಥ್ವೀಗೆ ಸಿಗುವ ಉಷ್ಣತೆಯ ವಿತರಣೆಯು ಅಸಮಾನವಾಗುವುದು. ಅದರಿಂದಾಗಿ ವಿಷುವವೃತ್ತದಿಂದ ಉತ್ತರ ಧೃವದ ಕಡೆಗೆ ಹಾಗೆಯೇ ದಕ್ಷಿಣ ಧ್ರುವದ ಕಡೆಗೆ ಉಷ್ಣತೆಯ ವಿತರಣೆಯಲ್ಲಿ ಅಸಮಾನತೆ ನಿರ್ಮಾಣವಾಗುವುದು. ಉಷ್ಣತಾಮಾನದ ವಿತರಣೆಗನುಸಾರವಾಗಿ ಪೃಥ್ವಿಯ ವಿಷುವವೃತ್ತದಿಂದ ಧೃವದ ಕಡೆಗೆ ಉಷ್ಣ, ಸಮಶೀತೋಷ್ಣ ಹಾಗೂ ಶೀತ ಎಂಬ ಮೂರು ಕಟಿಬಂಧಗಳು ಉಂಟಾಗುವವು.

ದಿಂದ ೨೩೩೦ ಉತ್ತರ ಹಾಗೂ ದಕ್ಷಿಣ ಪಟ್ಟಿಯಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ ಉಷ್ಣತಾಮಾನ ಹೆಚ್ಚು ಇರುತ್ತದೆ. ಇದಕ್ಕೆ ಉಷ್ಣಕಟಿಬಂಧ ಎಂದು ಹೇಳುವರು.  ೨೩೩೦ ದಿಂದ ೬೬೩೦ ಉತ್ತರ ಹಾಗೂ ದಕ್ಷಿಣ ಪಟ್ಟಿಯಲ್ಲಿ ಸೂರ್ಯಕಿರಣಗಳು ಓರೆಯಾಗಿ ಬೀಳುತ್ತವೆ. ಆದ್ದರಿಂದ ಇದಕ್ಕೆ ಸಮಶೀತೋಷ್ಣ ಕಟಿಬಂಧ ಎಂದು ಅನ್ನುವರು.  ೬೬೩೦ ರಿಂದ ೯೦ ಉತ್ತರ ಹಾಗೂ ದಕ್ಷಿಣ ಪಟ್ಟಿಗಳಲ್ಲಿ ಸೂರ್ಯನ ಕಿರಣಗಳು ಬಹಳಷ್ಟು ಓರೆಯಾಗಿ ಬೀಳುವುದರಿಂದ ಉಷ್ಣತಾಮಾನ ಅತ್ಯಂತ ಕಡಿಮೆ ಇರುತ್ತದೆ. ಆದ್ದರಿಂದ ಈ ಪಟ್ಟಿಗೆ ಶೀತ ಕಟಿಬಂಧ ಎನ್ನುವರು. 

(೨) ಅಕ್ಷವೃತ್ತಗಳ ವಿಸ್ತಾರದ ಸಂಬಂಧ, ಉಷ್ಣತಾಮಾನದೊಂದಿಗೆ ಇರುವದು ಎಂಬುದನ್ನು ಹೇಳಿರಿ.

ಉತ್ತರ: ಉಷ್ಣತಾಮಾನದ ವಿತರಣೆಗನುಸಾರವಾಗಿ ಪೃಥ್ವಿಯ ವಿಷುವವೃತ್ತದಿಂದ ಧೃವದ ಕಡೆಗೆ ಉಷ್ಣ, ಸಮಶೀತೋಷ್ಣ ಹಾಗೂ ಶೀತ ಎಂಬ ಮೂರು ಕಟಿಬಂಧಗಳು ಉಂಟಾಗುವವು.

ದಿಂದ ೨೩೩೦ ಉತ್ತರ ಹಾಗೂ ದಕ್ಷಿಣ ಪಟ್ಟಿಯಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ ಉಷ್ಣತಾಮಾನ ಹೆಚ್ಚು ಇರುತ್ತದೆ. ಇದಕ್ಕೆ ಉಷ್ಣಕಟಿಬಂಧ ಎಂದು ಹೇಳುವರು.  ೨೩೩೦ ದಿಂದ ೬೬೩೦ ಉತ್ತರ ಹಾಗೂ ದಕ್ಷಿಣ ಪಟ್ಟಿಯಲ್ಲಿ ಸೂರ್ಯಕಿರಣಗಳು ಓರೆಯಾಗಿ ಬೀಳುತ್ತವೆ. ಆದ್ದರಿಂದ ಇದಕ್ಕೆ ಸಮಶೀತೋಷ್ಣ ಕಟಿಬಂಧ ಎಂದು ಅನ್ನುವರು.  ೬೬೩೦ ರಿಂದ ೯೦ ಉತ್ತರ ಹಾಗೂ ದಕ್ಷಿಣ ಪಟ್ಟಿಗಳಲ್ಲಿ ಸೂರ್ಯನ ಕಿರಣಗಳು ಬಹಳಷ್ಟು ಓರೆಯಾಗಿ ಬೀಳುವುದರಿಂದ ಉಷ್ಣತಾಮಾನ ಅತ್ಯಂತ ಕಡಿಮೆ ಇರುತ್ತದೆ. ಆದ್ದರಿಂದ ಈ ಪಟ್ಟಿಗೆ ಶೀತ ಕಟಿಬಂಧ ಎನ್ನುವರು. 

 (೩) ಸಮೊಷ್ಣ ರೇಷೆಗಳ ಆಕಾರದಲ್ಲಿ ಭೂಪೃಷ್ಠದ ಮೇಲೆ ಬದಲಾವಣೆ ಆಗುವುದು. ಇದರ ಕಾರಣಗಳು ಯಾವುವು?

ಉತ್ತರ: ಭೂಪೃಷ್ಠದ ಎತ್ತರಕ್ಕನುಸಾರವಾಗಿ ಉಷ್ಣತಾಮಾನದಲ್ಲಿ ಬದಲಾವಣೆ ಆಗುತ್ತದೆ. ಭೂಪೃಷ್ಠದ ಮೇಲಿಂದ ಮೇಲಕ್ಕೆ ಹೋದಂತೆ ಉಷ್ಣತಮಾನ ಕಡಿಮೆ ಕಡಿಮೆ ಆಗುತ್ತಾ ಹೋಗುತ್ತದೆ. ಅದರಿಂದಾಗಿ ಸಮೊಷ್ಣ ರೇಷೆಗಳ ಆಕಾರದಲ್ಲಿ ಭೂಪೃಷ್ಠದ ಮೇಲೆ ಬದಲಾವಣೆ ಆಗುವುದು. ಅಲ್ಲದೆ ಅರಣ್ಯ ಆಚ್ಛಾದನೆ, ನಾಗರೀಕರಣ, ಔದ್ಯೋಗಿಕರಣ ಇತ್ಯಾದಿ ಘಟಕಗಳಿಂದಾಗಿಯೂ ಸಮೊಷ್ಣ ರೇಷೆಗಳ ಆಕಾರದಲ್ಲಿ ಭೂಪೃಷ್ಠದ ಮೇಲೆ ಬದಲಾವಣೆ ಆಗುವುದು.

* ಉಪಕ್ರಮ

(೧) ಶಾಲೆಯಲ್ಲಿಯ ಉಷ್ಣತಾಮಾಪಕ ಉಪಯೋಗಿಸಿ ದೈನಂದಿನ ಉಷ್ಣತಾಮಾನದ  ನೋಂದಣಿಗಳನ್ನು ವರ್ಗದ ಕರಿ ಹಲಗೆಯ ಮೇಲೆ ಬರೆಯಿರಿ.



(೨) ಪ್ರತಿದಿನ ವೃತ್ತ ಪತ್ರಿಕೆಯಲ್ಲಿ ಬರುವ ಹವಾಮಾನ ವಿಷಯದ ಮಾಹಿತಿಯನ್ನು ಹದಿನೈದು ದಿನಗಳವರೆಗೆ ವಹಿಯಲ್ಲಿ ನೋಂದಾಯಿಸಿರಿ. ನೀವು ನೋಂದಾಯಿಸಿದ ಮಾಹಿತಿಯ ಬಗ್ಗೆ ವರ್ಗದಲ್ಲಿ ಚರ್ಚಿಸಿರಿ.

 

೬ . ಮಹಾಸಾಗರಗಳ ಮಹತ್ವ

ಪ್ರ. (ಅ) ಗುಂಪಿಗೆ ಸೇರದ ಘಟಕ ಗುರುತಿಸಿರಿ. (ನಕಾಶೆ ಸಂಗ್ರಹದ ಉಪಯೋಗ ಮಾಡಿರಿ).

(೧) ಶಂಖ, ಮೀನು, ಏಡಿ, ಹಡಗು.            

ಉತ್ತರ =ಹಡಗು,  ಶಂಖ, ಮೀನು, ಏಡಿ ನಿಸರ್ಗ ನೀರ್ಮಿತವಾಗಿದ್ದು ಹಡಗು ಮಾನವ ನಿರ್ಮಿತಿಯಾಗಿದೆ.

(೨) ಅರಬೀ ಸಮುದ್ರ, ಭೂಮಧ್ಯ ಸಮುದ್ರ, ಮೃತ ಸಮುದ್ರ, ಕ್ಯಾಸ್ಪಿಯನ್ ಸಮುದ್ರ.        

ಉತ್ತರ = ಮೃತ ಸಮುದ್ರ. ಇದು ಆಕಾರದಿಂದ ಉಳಿದ ಸಮುದ್ರಗಳಿಗಿಂತ ಸಣ್ಣ ಸಮುದ್ರವಿದೆ

(೩) ಶ್ರೀಲಂಕಾ, ಭಾರತ, ನಾರ್ವೆ, ಪೆರು.                     

ಉತ್ತರ = ಪೆರು, ಇದು ವಿಷುವವೃತ್ತದ ದಕ್ಷಿಣಕ್ಕೆ ಇದೆ ಉಳಿದ ಎಲ್ಲ ದೇಶಗಳು ಉತ್ತರಕ್ಕೆ ಇವೆ.

(೪) ದಕ್ಷಿಣ ಮಹಾಸಾಗರ, ಹಿಂದೀ ಮಹಾಸಾಗರ, ಪೆಸಿಫಿಕ್ ಮಹಾಸಾಗರ, ಬಂಗಾಲದ ಉಪಸಾಗರ.                      

ಉತ್ತರ= ಬಂಗಾಲದ ಉಪಸಾಗರ. ಇದು ಉಪಸಾಗರವಾಗಿದೆ. ಉಳಿದವು ಎಲ್ಲ ಮಹಾಸಾಗರಗಳಿವೆ.

 (೫) ನೈಸರ್ಗಿಕ ವಾಯು, ಉಪ್ಪು, ಕಬ್ಬಿಣ, ಮ್ಯಾಂಗನೀಜ             

ಉತ್ತರ=ನೈಸರ್ಗಿಕ ವಾಯು, ಇದು ವಾಯುವಾಗಿದೆ. ಉಳಿದವುಗಳು ನೈಸರ್ಗಿಕ ಖನಿಜಗಳಿವೆ.

ಪ್ರ. (ಬ) ಪ್ರಶ್ನೆಗಳ ಉತ್ತರ ಬರೆಯಿರಿ

(೧) ಮಾನವನು ಮಹಾಸಾಗರದಿಂದ ಯಾವ ಯಾವ ಸಂಗತಿಗಳನ್ನು ಪಡೆಯುವನು?

ಉತ್ತರ: ೧) ಕಬ್ಬಿಣ, ಶಿಸ, ಪಾರಜ, ಸೋಡಿಯಮ್, ಮ್ಯಾಂಗನಿಜ್, ಬಂಗಾರ ಇತ್ಯಾದಿ ಖನಿಜಗಳು

೨) ಮುತ್ತುರತ್ನಗಳಂತಹ ಮೌಲ್ಯವಿರುವ ವಸ್ತುಗಳು

೩) ಶಂಖಗಳು ಮತ್ತು ಶಿಂಪಲಿಗಳು

೪) ಔಷಧಿ ವನಸ್ಪತಿಗಳು

೫) ಕೊಳಂಬಿ, ಏಡಿಗಳು, ಸುರ್ಮಾ , ಬಂಗಡಾ, ಪಾಪಲೇಟ್,ಮೋರಿ(ಶಾರ್ಕ್) , ರಾವಸ್ ಮತ್ತು ಇತರ ಅನೇಕ ಆಹಾರಪದಾರ್ಥಗಳು ಸಹ ಮನುಷ್ಯನು ಮಹಾಸಾಗರದಿಂದ ಪಡೆಯುವನು.

(೨) ಜಲಮಾರ್ಗದ ಸಾಗಾಣಿಕೆ ಏಕೆ ಅಗ್ಗವಾಗಿದೆ ?

ಉತ್ತರ: 1) ಜಲಮಾರ್ಗದಿಂದ ದೊಡ್ಡ ಪ್ರಮಾಣದಲ್ಲಿ ಭಾರವಾದ ಸಾಗಾಣಿಕೆ ಸುಲಭವಾಗಿ ಮಾಡಲಾಗುತ್ತದೆ. 2) ಸಮುದ್ರ ಪ್ರವಾಹಕ್ಕನುಸಾರವಾಗಿ ಜಲಸಾರಿಗೆ ಮಾಡಿದರೆ ಹಡಗುಗಳ ವೇಗವು ನೈಸರ್ಗಿಕವಾಗಿ ಹೆಚ್ಚಾಗುವುದು ಮತ್ತು ಇಂಧನದ ಉಳಿತಾಯ ವಾಗುವುದು. ಆದ್ದರಿಂದ ಜಲಮಾರ್ಗದ ಸಾಗಾಣಿಕೆ ಲಾಭದಾಯಕವಾಗಿದೆ.

(೪) ಸಮುದ್ರ ಸಾನಿಧ್ಯದಲ್ಲಿ ಇರುವ ಹಾಗೂ ಖಂಡಾಂತರ ಪ್ರದೇಶಗಳಲ್ಲಿಯ ಹವಾಮಾನದಲ್ಲಿ ಯಾವ ಭೇದ ಇರುವುದು ? ಏಕೆ ?

ಉತ್ತರ: 1) ಸಮುದ್ರ ಸಾನಿಧ್ಯದಲ್ಲಿರುವ ಪ್ರದೇಶಗಳಲ್ಲಿ ಬಾಷ್ಪದ ಪ್ರಮಾಣವು ಹೆಚ್ಚು ಇರುತ್ತದೆ. ಬಾಷ್ಪವು ಹವೆಯಲ್ಲಿಯ ಉಷ್ಣತೆಯನ್ನು ಹಿರಿಕೊಳ್ಳುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿಯ ಇಡೀ ದಿನದ ಕನಿಷ್ಠ ಹಾಗೂ ಗರಿಷ್ಠ ಉಷ್ಣತಮಾನದಲ್ಲಿ ವಿಶೇಷವಾಗಿ ಬದಲಾವಣೆಯಾಗುವುದಿಲ್ಲ. ಆದ್ದರಿಂದ ಇಲ್ಲಿಯ ಹವಾಮಾನ ಸಮ ಇರುತ್ತದೆ.  2) ಖಂಡಾಂತರ್ಗತ ಪ್ರದೇಶಗಳಲ್ಲಿ ಬಾಷ್ಪದ ಪ್ರಮಾಣ ಕಡಿಮೆ ಇರುತ್ತದೆ. ಆದ್ದರಿಂದ ಇಡೀ ದಿನದ ಉಷ್ಣತಾಮನದಲ್ಲಿ ಬಹಳಷ್ಟು ವ್ಯತ್ಯಾಸ ಉಂಟಾಗುವುದರಿಂದ ಅಲ್ಲಿಯ ಹವಾಮಾನ ವಿಷಮವಾಗಿರುತ್ತದೆ.

(೫) ಪೆಸಿಫಿಕ್‌ ಮಹಾಸಾಗರದ ತೀರ ಯಾವ ಯಾವ ಖಂಡಗಳಿಗೆ ಹೊಂದಿಕೊಂಡಿದೆ ?

ಉತ್ತರ: ಪೆಸಿಫಿಕ್‌ ಮಹಾಸಾಗರದ ತೀರ ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಆಶಿಯಾ ಹಾಗೂ ಅಷ್ಟ್ರೇಲಿಯಾ ಈ ಖಂಡಗಳಿಗೆ ಹೊಂದಿಕೊಂಡಿದೆ.

ಉಪಕ್ರಮ: ಜಗತ್ತಿನ ನಕಾಶೆಯ ರೂಪರೇಷೆಯಲ್ಲಿ ವಿವಿಧ ಮಹಾಸಾಗರಗಳ ಭಾಗ ಬೇರೆ ಬೇರೆ ಬಣ್ಣಗಳಿಂದ ಬಣ್ಣಿಸಿರಿ ಹಾಗೂ ಸೂಚಿ ತಯಾರಿಸಿರಿ.

 

7. ಶಿಲೆಗಳು ಹಾಗೂ ಶಿಲೆಗಳ ಪ್ರಕಾರಗಳು

ಪ್ರ. (ಅ) ನದಿಗಳ ಮೂಲಕ ಹರಿದು ಬರುವ ಉಸುಕು ಹೇಗೆ ತಯಾರಾಗುವುದು, ಅದು ಎಲ್ಲಿಂದ ಬರುವುದು ಎಂಬುದರ ಬಗೆಗೆ ಮಾಹಿತಿ ಪಡೆಯಿರಿ.

ಉತ್ತರ: ಉಷ್ಣತಮಾನದಿಂದ ಸತತವಾಗಿ ಆಗುವ ವ್ಯತ್ಯಾಸಗಳಿಂದ ಶಿಲೆಗಳು ಒಡೆಯುತ್ತವೆ. ಶಿಲೆಗಳ ಅಪಕ್ಷಯ ಆಗಿ ಶಿಲೆಗಳು ಸಣ್ಣ ಕನಗಳಲ್ಲಿ ಪರಿವರ್ತನೆ ಆಗುವವು. ಅವುಗಳ ಪುಡಿ ಆಗುವವು. ನದಿ, ಹಿಮನದಿ, ಗಾಳಿ ಮುಂತಾದ ಪ್ರವಾಹಗಳ ಜೊತೆಗೆ ಶಿಲೆಗಳ ಸವಕಳಿ ಆಗಿ ಅದರಿಂದ ಗೋಳಾಕಾರದ ಉಸುಕು ತಯಾರಾಗುವುದು. ತಯಾರಾದ ಉಸುಕು ನೀರಿನ ಮೂಲಕ ಅಥವಾ ಹಿಮನದಿಗಳ ಮೂಲಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಿದು ಹೋಗುವುದು ಮತ್ತು ಅಲ್ಲಿ ಸಂಗ್ರಹ ಆಗುವುದು.

ಪ್ರ. (ಬ) ಕೆಳಗಿನ ಯಾವ ವಾಸ್ತುವಿನ ಶಿಲೆ ಅಗ್ನಿಜನ್ಯ ಈ ಪ್ರಕಾರದ ಶಿಲೆ ಆಗಿದೆ?

(೧) ತಾಜ ಮಹಾಲ                   (೨) ರಾಯಗಡ ಕೋಟೆ                              

(೩) ಕೆಂಪು ಕೋಟೆ                    (೪) ಎಲ್ಲೋರಾದ ಗುಹೆಗಳು

ಪ್ರ. (ಕ) ಭೇದ ಬರೆಯಿರಿ.

(೧) ಅಗ್ನಿ ಜನ್ಯ ಶಿಲೆ ಹಾಗೂ ಪದರು ಶಿಲೆ

ಅಗ್ನಿ ಜನ್ಯ ಶಿಲೆ

ಪದರು ಶಿಲೆ

1 ಶಿಲಾರಸ ಹಾಗೂ ಲಾವ್ಹಾರಸ ಇವುಗಳ ಘನೀಭವನದಿಂದ ಅಗ್ನಿಜನ್ಯ ಶಿಲೆಗಳು ನಿರ್ಮಾಣವಾಗುತ್ತವೆ.

1 ನದಿ, ಹಿಮನದಿ ಹಾಗೂ ಹವೆ ಇವುಗಳ ಮೂಲಕ ಶಿಲೆಗಳ ಸಂಚಯ ಆಗಿದ್ದರೆ ಆ ಕಣಗಳಿಂದ ಪದರು ಶಿಲೆ ನಿರ್ಮಾಣವಾಗುತ್ತದೆ. 

2 ಅಗ್ನಿಜನ್ಯ ಶಿಲೆಗಳು ಭಾರವಾಗಿರುತ್ತವೆ.

2 ಪದರು ಶಿಲೆಗಳು ಹಗುರವಾಗಿರುತ್ತವೆ.

(೨) ಪದರು ಶಿಲೆ ಹಾಗೂ ರೂಪಾಂತರ ಶಿಲೆ

ಪದರು ಶಿಲೆ

ರೂಪಾಂತರ ಶಿಲೆ

1 ನದಿ, ಹಿಮನದಿ ಹಾಗೂ ಹವೆ ಇವುಗಳ ಮೂಲಕ ಶಿಲೆಗಳ ಸಂಚಯ ಆಗಿದ್ದರೆ ಆ ಕಣಗಳಿಂದ ಪದರು ಶಿಲೆ ನಿರ್ಮಾಣವಾಗುತ್ತದೆ. 

1 ಅಗ್ನಿಜನ್ಯ ಶಿಲೆಗಳು ಹಾಗೂ ಪದರು ಶಿಲೆಗಳು ಇವುಗಳ ಮೇಲೆ ಬಿದ್ದ ಒತ್ತಡದಿಂದಾಗಿ ಹಾಗೂ ಅತಿ ಹೆಚ್ಚು ಉಷ್ಣತೆಯಿಂದ ರೂಪಾಂತರಿತ ಶಿಲೆಗಳು ನಿರ್ಮಾಣವಾಗುವವು.

2 ಪದರು ಶಿಲೆಗಳು ಹಗುರವಾಗಿರುತ್ತವೆ.

 

 

(೩) ಅಗ್ನಿಜನ್ಯ ಶಿಲೆ ಹಾಗೂ ರೂಪಾಂತರ ಶಿಲೆ

ಅಗ್ನಿಜನ್ಯ ಶಿಲೆ

ರೂಪಾಂತರ ಶಿಲೆ

1 ಶಿಲಾರಸ ಹಾಗೂ ಲಾವ್ಹಾರಸ ಇವುಗಳ ಘನೀಭವನದಿಂದ ಅಗ್ನಿಜನ್ಯ ಶಿಲೆಗಳು ನಿರ್ಮಾಣವಾಗುತ್ತವೆ.

1 ಅಗ್ನಿಜನ್ಯ ಶಿಲೆಗಳು ಹಾಗೂ ಪದರು ಶಿಲೆಗಳು ಇವುಗಳ ಮೇಲೆ ಬಿದ್ದ ಒತ್ತಡದಿಂದಾಗಿ ಹಾಗೂ ಅತಿ ಹೆಚ್ಚು ಉಷ್ಣತೆಯಿಂದ ರೂಪಾಂತರಿತ ಶಿಲೆಗಳು ನಿರ್ಮಾಣವಾಗುವವು.

2 ಅಗ್ನಿಜನ್ಯ ಶಿಲೆಗಳು ಪ್ರಾಥಮಿಕ ಶಿಲೆಗಳಿರುತ್ತವೆ.

2 ರೂಪಾಂತರಿತ ಶಿಲೆಗಳು ಪ್ರಾಥಮಿಕ ಶಿಲೆಗಳು ಇರುವುದಿಲ್ಲ.

 

ಪ್ರ. (ಡ) ಮಹಾರಾಷ್ಟ್ರದಲ್ಲಿ ಕೆಳಗಿನ ಸ್ಥಳಗಳಲ್ಲಿ ಯಾವ ಪ್ರಕಾರದ ಶಿಲೆ ಪ್ರಮುಖವಾಗಿ ಕಂಡು ಬರುವುದು?

(೧) ಮಧ್ಯ ಮಹಾರಾಷ್ಟ್ರ : ಬೇಸಾಲ್ಟ್ ಶಿಲೆಗಳು

(೨) ದಕ್ಷಿಣ ಕರಾವಳಿ : ಜಾಂಭಾ ಶಿಲೆಗಳು

(೩) ವಿದರ್ಭ: ಗ್ರೇನಾಯಿಟ್ ಶಿಲೆಗಳು

* ಉಪಕ್ರಮ

(ಅ) ನಿಮ್ಮ ಪರಿಸರದಲ್ಲಿ ಸಿಗುವ ಶಿಲೆಗಳ ನಮೂನೆಗಳನ್ನು ಸಂಗ್ರಹಿಸಿರಿ, ಶಿಕ್ಷಕರ ಸಹಾಯದಿಂದ ಅವುಗಳ ವಿಂಗಡಣೆ ಮಾಡಿರಿ. ನಿಮ್ಮ ಶಾಲೆಗಾಗಿ ಶಿಲೆಗಳ ಸಂಗ್ರಹಾಲಯ ತಯಾರಿಸಿರಿ ಹಾಗೂ ಆ ನಮೂನೆಗಳನ್ನು ಸರಿಯಾಗಿ ಹೊಂದಿಸಿಡಿರಿ. ಶಿಲೆಗಳನ್ನು ಯಾವ ಭಾಗದಿಂದ ತಂದಿರಿ ಎಂಬುದನ್ನು ಅಲ್ಲಿ ಬರೆದಿಡಿರಿ.

 (ಬ) ನಿಮ್ಮ ಪರಿಸರದಲ್ಲಿ ಇರುವ ಹಳೆಯ ಐತಿಹಾಸಿಕ ವಾಸ್ತುಗಳಾದ ಕೋಟೆ, ಕಲ್ಲಿನ ಆಣೆಕಟ್ಟು, ನೆಲದ ಮೇಲಿನ ಕೋಟೆ, ಬುರುಜು, ವಾಡೆ, ಗುಡಿ, ಮಸೀದಿ, ಮುಂತಾದುವುಗಳಿಗೆ ಭೇಟಿ ನೀಡಿರಿ ಹಾಗೂ ಆ ಕಟ್ಟಡಗಳನ್ನು ಯಾವ ಶಿಲೆಗಳಿಂದ ಕಟ್ಟಲಾಗಿದೆ ಎಂಬುದರ ಶಿಕ್ಷಕರಿಂದ ಪಡೆಯಿರಿ.

 

8. ನೈಸರ್ಗಿಕ ಸಂಸಾಧನೆಗಳು

ಪ್ರ. (ಅ) ಕೆಳಗಿನ ನೈಸರ್ಗಿಕ ಸಂಸಾಧನಗಳ ಉಪಯೋಗವೇನು ?

(೧) ನೀರು: ನೀರು ಕುಡಿಯಲು, ಮನೆಯಲ್ಲಿ ಬಳಸಲು, ಮೀನುಗಾರಿಕೆಗಾಗಿ, ಉಪ್ಪು ತಯಾರಿಸಲು, ಸ್ನಾನ ಹಾಗೂ ಸ್ವಚ್ಛತೆಗಾಗಿ, ಜಲಚರ ಪ್ರಾಣಿಗಳ ವಾಸ್ತವ್ಯಕ್ಕಾಗಿ ಹಾಗೂ ಬೇಸಾಯಕ್ಕಾಗಿ ಉಪಯೋಗಿಸಲಾಗುತ್ತದೆ.

(೨) ಅರಣ್ಯಗಳು: ಹೂವು, ಹಣ್ಣು, ಅಂಟು, ಕಟ್ಟಿಗೆ, ಔಷಧಗಳು, ರಬ್ಬರ ಇತ್ಯಾದಿಗಳ ಉತ್ಪಾದನೆಗಾಗಿ ಉಪಯೋಗವಿದೆ. ಪ್ರಾಣಿಗಳ ವಾಸ್ತವ್ಯಕ್ಕಾಗಿ ಮನೆ ಕಟ್ಟಲು ಅರಣ್ಯದ ಕಟ್ಟಿಗೆಗೆಗಳ ಬಳಕೆ ಆಗುವುದು.

(೩) ಪ್ರಾಣಿಗಳು: ಬೇಸಾಯ ಮಾಡಲು, ಸಾರಿಗೆಯ ಸಲುವಾಗಿ, ಪ್ರವಾಸಕ್ಕಾಗಿ ಹಾಗೂ ಹಾಲು, ಮೊಟ್ಟೆ, ಮಾಂಸ, ಉಣ್ಣೆ, ಚರ್ಮ, ಎಲುಬಿನ ಪುಡಿ ಇತ್ಯಾದಿಗಳ ಉತ್ಪಾದನೆಗಾಗಿ

(೪) ಖನಿಜಗಳು: ಖನಿಜಗಳಿಂದ ಧಾತುಗಳನ್ನು ಪಡೆಯಲು, ಆಧಾತುಗಳಿಂದ ರಸಯಂಮಗಳನ್ನು ದೊರಕಿಸಲು ಖನಿಜಗಳ ಬಳಕೆ ಮಾಡಲಾಗುವುದು.

(೫) ಭೂಮಿ: ಮಣ್ಣು, ಖನಿಜಗಳು, ವನಸ್ಪತಿಗಳು ಇತ್ಯಾದಿ ನೈಸರ್ಗಿಕ ಸಂಸಾಧನೆಗಳನ್ನು ದೊರಕಿಸಲು, ಕಟ್ಟಡ ಕಟ್ಟಲು, ಉದ್ದಿಮೆಯ ಸಲುವಾಗಿ, ಮಾರಾಟದ- ಖರೆದಿ ಮಾಡಲು, ವ್ಯಾಪಾರಕ್ಕಾಗಿ, ಸಜೀವಗಳ ವಾಸ್ತವ್ಯಕ್ಕಾಗಿ , ಬೇಸಾಯ ಮಾಡಲು ಮಣ್ಣಿನ ಉಪಯೋಗವಾಗುವುದು.

(ಬ) ಕೆಳಗಿನ ತೂಗು ಫಲಕವನ್ನು ಪೂರ್ಣ ಮಾಡಿರಿ.



ಪ್ರ. (ಕ) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(೧) ಮಣ್ಣು ತಯಾರಾಗುವುದು ಯಾವ ಘಟಕಗಳ ಮೇಲೆ ಅವಲಂಬಿಸಿದೆ?

ಉತ್ತರ:  ಮಣ್ಣಿನ ನಿರ್ಮಾಣವು ಪ್ರಮುಖವಾಗಿ ಬಂಡೆಗಲ್ಲು, ಹವಾಮಾನ, ಜೈವಿಕ ಘಟಕ, ಭೂಮಿಯ ಇಳಿತ ಹಾಗೂ ಕಾಲಾವಧಿ ಈ ಘಟಕಗಳ ಮೇಲೆ ಅವಲಂಬಿಸಿದೆ.

(೨) ಅರಣ್ಯದಿಂದ ಯಾವ ಯಾವ ಉತ್ಪಾದನೆಗಳು ಸಿಗುವವು?

ಉತ್ತರ: ಅರಣ್ಯಗಳಿಂದ ರಬ್ಬರ, ಅಂಟು, ಹಣ್ಣು, ಹೂವು, ಔಷಧಗಳು, ಪ್ರಾಣಿಗಳ ವಾಸ್ತವ್ಯಕ್ಕಾಗಿ ಮನೆ ಕಟ್ಟಲು ಅರಣ್ಯದ ಕಟ್ಟಿಗೆಗೆಗಳ ಬಳಕೆ ಆಗುವುದು.

(೩) ಖನಿಜಗಳ ಉಪಯೋಗಗಳು ಯಾವುವು ?

ಉತ್ತರ: ಖನಿಜಗಳಿಂದ ನಮಗೆ ವಿವಿಧ ಧಾತು, ರಸಾಯನಗಳು ಸಿಗುವವು. ಕೆಲವು ರಸಾಯನಗಳನ್ನು ಔಷಧ ತಯಾರಿಕೆಗಾಗಿ ಬಳಸುವರು. ಕಬ್ಬಿಣ, ಬಾಕ್ಸಾಯಿಟ್, ಜಿಪ್ಸಮ್, ಸೈಂಧವ, ಕೆಲಸಾಯಿಟ್ ಮುಂತಾದ ಧಾತು –ಆಧಾತುಗಳನ್ನು ಮಾನವನು ಉಪಯೋಗ ಮಾಡುವನು.

(೪) ಭೂಮಿಯ ಉಪಯೋಗ ಹೇಗೆ ಮಾಡುವರು?

ಉತ್ತರ: ಬೇಸಾಯಕ್ಕಾಗಿ ರೈತರು ಭೂಮಿಯ ಉಪಯೋಗ ಮಾಡುವರು. ಮಣ್ಣು, ಖನಿಜಗಳು, ವನಸ್ಪತಿಗಳು ಇತ್ಯಾದಿ ನೈಸರ್ಗಿಕ ಸಂಸಾಧನೆಗಳನ್ನು ದೊರಕಿಸಲು, ಕಟ್ಟಡ ಕಟ್ಟಲು, ಉದ್ದಿಮೆಯ ಸಲುವಾಗಿ, ಮಾರಾಟದ- ಖರೆದಿ ಮಾಡಲು, ವ್ಯಾಪಾರಕ್ಕಾಗಿ, ಸಜೀವಗಳ ವಾಸ್ತವ್ಯಕ್ಕಾಗಿ , ಬೇಸಾಯ ಮಾಡಲು ಭೂಮಿಯ ಉಪಯೋಗವಾಗುವುದು.

೫) ನೈಸರ್ಗಿಕ ಸಂಸಾಧನಗಳ ಸಂವರ್ಧನೆಯನ್ನು ಏಕೆ ಮಾಡಬೇಕು?

ಉತ್ತರ: ನೈಸರ್ಗಿಕ ಸಾಧನಗಳು ನೈಸರ್ಗಿಕವಾಗಿಯೇ ಉಪಲಬ್ಧವಾಗಿರುವವು. ಈ ಸಂಸಾಧನಗಳ ಉಪಯೋಗವನ್ನು ಪ್ರತಿಯೊಂದು ಸಜೀವಿಯು ತನ್ನ ಯೋಗ್ಯತೆಯ ಮೇಲೆ ಮಾಡುವುದು. ಮಾನವನು ತನ್ನ ಭೌದ್ಧಿಕ ಶಕ್ತಿಯಂತೆ ಅನೇಕ ನೈಸರ್ಗಿಕ ಸಾಧನಗಳನ್ನು ಸ್ವಂತಕ್ಕಾಗಿ ಉಪಯೋಗಿಸಲು ಪ್ರಾರಂಭಿಸಿದ. ನಂತರ ಜನಸಂಖ್ಯೆಯ ಬೆಳವಣಿಗೆ ಹಾಗೂ ಮಾನವನ ಹವ್ಯಾಸ ಇವುಗಳಿಂದಾಗಿ ನೈಸರ್ಗಿಕ ಸಂಸಾಧನಗಳ ಅಮರ್ಯಾದಿತ ಬಳಕೆ ಆಗುತ್ತ ಹೋಯಿತು. ಇದರ ಅರ್ಥವೇನೆಂದರೆ, ಮಾನವನ್ನು ನೈಸರ್ಗಿಕ ಸಾಧನಗಳ ಬಳಕೆಯನ್ನು ಅವಶ್ಯಕತೆಗೆ ತಕ್ಕಂತೆ ಹಾಗೂ ತಾರತಮ್ಯದಂತೆ ಮಾಡುವುದು ಅವಶ್ಯವಾಗಿದೆ. ಆದ್ದರಿಂದ ನೈಸರ್ಗಿಕ ಸಂಸಾಧನಗಳ ಸಂವರ್ಧನೆಯನ್ನು ಮಾಡುವುದು ಕೂಡ ಅವಶ್ಯಕವಾಗಿದೆ.

9. ಶಕ್ತಿಯ ಸಾಧನಗಳು

ಪದಾರ್ಥಗಳನ್ನಾಧರಿಸಿದ ಶಕ್ತಿಯ ಸಾಧನಗಳು

ಕಟ್ಟಿಗೆ, ಇದ್ದಿಲು, ಖನಿಜತೈಲ, ನೈಸರ್ಗಿಕ ಅನಿಲ, ಕಸ, ಅಣು,

ಪದಾರ್ಥಗಳು ಶಾಶ್ವತವಾಗಿ ಉಳಿಯುವುದಿಲ್ಲ.

ಪದಾರ್ಥವನ್ನು ಒಂದು ಸಲ ಉಪಯೋಗಿಸಿದ ನಂತರ ಅವು ಮುಗಿದು ಹೋಗುವವು.

ಪುನರುಪಯೋಗ ಆಗುವುದಿಲ್ಲ.

ಮರ್ಯಾದಿತ ಸ್ವರೂಪದಲ್ಲಿ ಉಪಲಬ್ಧ ಇರುವವು.

ನೈಸರ್ಗಿಕವಾಗಿ ಮತ್ತು ತಯಾರಾಗಲು ಸಾವಿರಾರು ವರ್ಷಗಳ ಕಾಲಾವಧಿ ಬೇಕಾಗುವುದು.

ಅಣುಶಕ್ತಿ ಬಿಟ್ಟರೆ ಉಳಿದೆಲ್ಲ ಸಾಧನಗಳು ಜೈವಿಕ ಶಕ್ತಿಗಳಾಗಿವೆ.

ಶಕ್ತಿಯ ನಿರ್ಮಾಣದ ಸಮಯದಲ್ಲಿ ಪ್ರದೂಷಣೆ ಆಗುವುದು.

ಅಣುಶಕ್ತಿಯ ಹೊರತು ಉಳಿದೆಲ್ಲ ಶಕ್ತಿಯ ಸಾಧನಗಳಿಗೆ ಪಾರಂಪಾರಿಕ ಶಕ್ತಿಯ ಸಾಧನೆಗಳೆನ್ನುವರು.

ಶಕ್ತಿಯ ಸಾಧನಗಳ ನಿರ್ಮಾಣ ಮಿತವ್ಯಯಕಾರಿಯಾಗಿದೆ.

ದೂರದೃಷ್ಟಿಯಿಂದ ವಿಚಾರ ಮಾಡಿದರೆ ಈ ಶಕ್ತಿಯ ಸಾಧನಗಳು ಜ್ವಲನಶೀಲವಾಗಿರುವುದರಿಂದ ಪರ್ಯಾವರಣದ ದೃಷ್ಟಿಯಿಂದ ಹಾನಿಕಾರಕವಾಗಿವೆ.

ಪ್ರಕ್ರಿಯೆಗಳನ್ನಾಧರಿಸಿದ ಶಕ್ತಿಯ ಸಾಧನಗಳು

ಉದಾ., ಸೌರ, ಪವನ (ಗಾಳಿ), ನೀರು, ಭರತ-ಇಳಿತ ಹಾಗೂ ಭೂಗರ್ಭದ ಉಷ್ಣತೆ.

ನೈಸರ್ಗಿಕ ಪ್ರಕ್ರಿಯೆಗಳು ಶಾಶ್ವತವಾಗಿ ಉಳಿಯುವವು.

ಸತತವಾಗಿ ಉಪಲಬ್ಧವಾಗಿರುವವು.

ಪುನ: ಉಪಯೋಗಿಸಲು ಸಾಧ್ಯವಿದೆ.

ಅಮರ್ಯಾದಿತ ಸ್ವರೂಪದಲ್ಲಿ ಉಪಲಬ್ಧ ಇರುವವು.

ನೈಸರ್ಗಿಕವಾಗಿ ಸಹಜವಾಗಿ ಉಪಲಬ್ಧವಾಗಿರುವವು.

ಪ್ರಕ್ರಿಯೆಯನ್ನಾಧರಿಸಿ ಶಕ್ತಿಯ ಸಾಧನಗಳು ನೈಸರ್ಗಿಕವಾಗಿವೆ.

ಪ್ರದೂಷಣೆ ಆಗದ ಸ್ವಚ್ಛವಾದ ಶಕ್ತಿಯ ಸಾಧನಗಳು,

ಈ ಎಲ್ಲ ಶಕ್ತಿಯ ಸಾಧನಗಳು ಅಪಾರಂಪರಿಕವಾಗಿವೆ.

ಈ ಶಕ್ತಿಯ ಸಾಧನಗಳ ಉಪಯೋಗಕ್ಕೆ ಬೇಕಾದ ತಂತ್ರಜ್ಞಾನದ ವಿಕಾಸ ದುಬಾರಿಯಾಗಿದೆ.

ದೂರದೃಷ್ಟಿಯಿಂದ ವಿಚಾರ ಮಾಡಿದರೆ ಈ ಸಾಧನಗಳು ಪರ್ಯಾವರಣಕ್ಕೆ ಅನುಕೂಲಕರವಾಗಿವೆ.

ವಿದ್ಯುತ್‌ ನಿರ್ಮಾಣದ ಪ್ರಕಾರ : ಔಷ್ಠಿಕ ಹಾಗೂ ಅಣು

ವಿದ್ಯುತ್ ನಿರ್ಮಾಣದ ಪ್ರಕಾರ : ಔಷ್ಠಿಕ ಹಾಗೂ ಗತಿಜ

ಪ್ರ. 1. (ಅ) ಕೆಳಗೆ ಹೇಳಿದ ಕಾರ್ಯಗಳಿಗಾಗಿ ಯಾವ ಸಾಧನದ ಉಪಯೋಗ ಮಾಡಬೇಕಾಗಬಹುದು?

(೧) ರೋಹನನಿಗೆ ಗಾಳಿಪಟ ಹಾರಿಸುವುದಿದೆ.

ಉತ್ತರ:  ಹವೆ

(೨) ಆದಿವಾಸಿಗಳ ವಸತಿಗಳಲ್ಲಿಯ ಜನರನ್ನು ಚಳಿಯಿಂದ ಸಂರಕ್ಷಣೆ ಮಾಡುವುದಿದೆ.

ಉತ್ತರ:  ಕಟ್ಟಿಗೆ

 (೩) ಪ್ರವಾಸದಲ್ಲಿ ಸಹಜವಾಗಿ ಬಳಕೆ ಮಾಡಬಹುದಾದಂತಾದ ಅಡುಗೆಯ ಸಲಕರಣೆಗಳು.

ಉತ್ತರ: ಕಟ್ಟಿಗೆ, ಇದ್ದಿಲು

 (೪) ಸಲಮಾಳಿಗೆ ಬಟ್ಟೆಯ ಇಸ್ತ್ರಿ ಮಾಡುವುದಿದೆ.

ಉತ್ತರ: ಇದ್ದಿಲು, ವಿದ್ಯುತ್

 (೫) ರೈಲಿನ ಇಂಜಿನನ್ನು ನಡೆಸುವುದಿದೆ.

ಉತ್ತರ: ಇದ್ದಿಲು, ವಿದ್ಯುತ್

  (೬) ಸ್ನಾನಕ್ಕಾಗಿ ನೀರು ಬಿಸಿ ಮಾಡುವುದಿದೆ.

ಉತ್ತರ: ಇದ್ದಿಲು, ವಿದ್ಯುತ್, ಕಟ್ಟಿಗೆ, ಬಯೋಗ್ಯಾಸ್

 (೭) ಸೂರ್ಯಾಸ್ತದ ನಂತರ ಮನೆಯಲ್ಲಿ ಬೆಳಕು ಬೇಕಾಗಿದೆ.

ಉತ್ತರ: ರಾಕೆಲ್, ವಿದ್ಯುತ್

ಪ್ರ. (ಬ) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(೧) ಮಾನವನು ಯಾವ ಶಕ್ತಿಯ ಸಾಧನದ ಬಳಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುವನು ?

ಉತ್ತರ: ಮಾನವನು ಇದ್ದಿಲು ಈ ಶಕ್ತಿಯ ಸಾಧನದ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಾನೆ. ಏಕೆಂದರೆ ಇದು ಎಲ್ಲೆಡೆ ಸಹಜವಾಗಿ ಉಪಲಬ್ದವಾಗುತ್ತದೆ.

(೨) ಶಕ್ತಿಯ ಸಾಧನಗಳ ಆವಶ್ಯಕತೆ ಏಕೆ ಇದೆ?

ಉತ್ತರ: ದೈನಂದಿನ ಉಪಯೋಗಕ್ಕಾಗಿ ಶಕ್ತಿಯ ಸಾಧನಗಳ ಅವಶ್ಯಕತೆ ಇರುತ್ತದೆ. ಅಡುಗೆ ಮಾಡಲು, ನೀರು ಬಿಸಿ ಮಾಡಲು, ಉದ್ದಿಮೆಗಾಗಿ, ವಾಹನ ಚಲಿಸುವುದಕ್ಕಾಗಿ ಹೀಗೆ ಅನೇಕ ಕಾರಣಗಳಿಗಾಗಿ ಶಕ್ತಿಯ ಸಾಧನಗಳ ಆವಶ್ಯಕತೆ ಇದೆ.

(೩) ಪರ್ಯಾವರಣಕ್ಕೆ ಅನುಕೂಲವಾದ ಶಕ್ತಿಯ ಸಾಧನಗಳ ಬಳಕೆಯ ಅವಶ್ಯಕತೆ ಏಕೆ ಇದೆ ?

ಉತ್ತರ: ಜೈವಿಕ ಶಕ್ತಿಗಳ ಸಾಧನಗಳನ್ನು ಬಳಸಿದರೆ ದೊಡ್ಡ ಪ್ರಮಾಣದ ಮೇಲೆ ಹವೆಯ ಪ್ರಾದುಷಣೆ ಆಗುತ್ತದೆ. ಪ್ರಾದುಷಣೆ ಹೆಚ್ಚಾಗುವುದರಿಂದ ಪರ್ಯವರಣದ ಹಾನಿ ಆಗುತ್ತದೆ. ಅದರ ಮಾನವನ ಮೇಲೆ, ಪ್ರಾಣಿಗಳ ಮೇಲೆ ಹಾಗೂ ವನಸ್ಪತಿಗಳ ಮೇಲೆ ವಿಪರಿತವಾದ ಪರಿಣಾಮ ಆಗುತ್ತದೆ. ಆದ್ದರಿಂದ ಪರ್ಯವರಣಕ್ಕೆ ಅನುಕೂಲವಾದ ಶಕ್ತಿಯ ಸಾಧನಗಳ ಬಳಕೆಯ ಅಗತ್ಯವಿದೆ.

ಪ್ರ. (ಕ) ಕೆಳಗಿನ ಅಂಶಗಳ ಸಹಾಯದಿಂದ ಭೇದಗಳನ್ನು ಸ್ಪಷ್ಟಪಡಿಸಿರಿ. (ಉಪಲಬ್ಧತೆ, ಪರ್ಯಾವರಣಕ್ಕೆ ಅನುಕೂಲತೆ, ಲಾಭ-ಹಾನಿಗಳು)

(೧) ಖನಿಜತೈಲ ಹಾಗೂ ಸೌರಶಕ್ತಿ

ಖನಿಜತೈಲ

ಸೌರಶಕ್ತಿ

ಖನಿಜ ತೈಲ ಮರ್ಯಾದಿತ ಪ್ರಮಾಣದಲ್ಲಿ ಉಪಲಬ್ದವಿದೆ. 

ಸೌರ ಶಕ್ತಿ ವಿಪುಲ ಪ್ರಮಾಣದಲ್ಲಿ ಉಪಲಬ್ಧವಿದೆ.

ಖನಿಜ ತೈಲದ ಬಳಕೆ ಪರ್ಯಾವರಣಕ್ಕೆ ಅನುಕೂಲವಿರುವುದಿಲ್ಲ.

ಸೌರಶಕ್ತಿಯ ಉಪಯೋಗ ಪರ್ಯಾವರಣಕ್ಕೆ ಪೂರಕವಿದೆ.

ಹೆಚ್ಚಿನ ಪ್ರಮಾಣದಲ್ಲಿ ಖನಿಜ ತೈಲ ಉಪಯೋಗಿಸಿದರೆ ದೊಡ್ಡ ಪ್ರಮಾಣದಲ್ಲಿ ಪ್ರದುಷಣೆಯಾಗುತ್ತದೆ. 

ಸೌರಶಕ್ತಿಯನ್ನು ಎಷ್ಟೇ ಹೆಚ್ಚು  ಪ್ರಮಾಣದಲ್ಲಿ  ಉಪಯೋಗಿಸಿದರೂ ಯಾವುದೇ ಪ್ರಮಾಣದಲ್ಲಿ ಪ್ರದುಷಣೆಯಾಗುವುದಿಲ್ಲ. 

 

(೨) ಜಲಶಕ್ತಿ ಹಾಗೂ ಭೂಗರ್ಭದ ಶಕ್ತಿ

ಜಲಶಕ್ತಿ

ಭೂಗರ್ಭದ ಶಕ್ತಿ

ಜಲಶಕ್ತಿ ಕಡಿಮೆ ಪ್ರಮಾಣದಲ್ಲಿ ಉಪಲಬ್ಧವಿದೆ.

ಭೂಗರ್ಭದ ಶಕ್ತಿಯು ಎಲ್ಲೆಡೆ ವಿಪುಲ ಪ್ರಮಾಣದಲ್ಲಿ ಉಪಲಬ್ಧವಿದೆ.

ಜಲಶಕ್ತಿಯ ಉಪಯೋಗ ಪರ್ಯವರಣಕ್ಕೆ ಪೂರಕವಿದೆ.

ಭೂಗರ್ಭದ ಶಕ್ತಿಯ ಬಳಕೆ ಪರ್ಯಾವರಣಕ್ಕೆ ಅನುಕೂಲವಿರುವುದಿಲ್ಲ.

ಜಲಶಕ್ತಿಯ ನಿರ್ಮಿತಿ ಕಡಿಮೆ ಖರ್ಚಿನದ್ದಾಗಿದೆ.

ಭೂಗರ್ಭದ ಶಕ್ತಿಯ ನಿರ್ಮಿತಿ ಹೆಚ್ಚು ಖರ್ಚಿನದ್ದಾಗಿದೆ.

* ಉಪಕ್ರಮ

ನಕಾಶೆಯಲ್ಲಿ ಭಾರತದಲ್ಲಿಯ ವಿದ್ಯುತ್ ನಿರ್ಮಾಣ ಕೇಂದ್ರಗಳನ್ನು ತೋರಿಸಿರಿ .

 

10. ಮಾನವನ ವ್ಯವಸಾಯಗಳು

ಪ್ರ. 1. (ಅ) ಯೋಗ್ಯ ಪರ್ಯಾಯದ ಆಯ್ಕೆ ಮಾಡಿರಿ.

(1) ....... ಈ ಕೆಲಸ ತೃತೀಯ ವ್ಯವಸಾಯದಲ್ಲಿ ಬರುವುದು.

(ಅ) ಬಸ್ ಕಂಡಕ್ಟರ   (ಆ) ಪಶು ವೈದ್ಯ       (ಇ) ಇಟ್ಟಂಗಿ ಮಾಡುವ ಕೆಲಸಗಾರ

(2) ಉಷ್ಣ ಕಟಿಬಂಧದ ದೇಶಗಳಲ್ಲಿ ಪ್ರಮುಖವಾಗಿ ವ್ಯವಸಾಯಗಳು ಕಂಡು ಬರುವವು.

(ಅ) ಪ್ರಾಥಮಿಕ        (ಇ) ತೃತೀಯ         (ಆ) ದ್ವಿತೀಯ

(3) ಮೂಲನ ಅಜ್ಜಿ ಹಪ್ಪಳ, ಉಪ್ಪಿನಕಾಯಿ ಮಾರುವಳು ಇದು ಯಾವ ವ್ಯವಸಾಯ ?

(ಅ) ಪ್ರಾಥಮಿಕ        (ಆ) ದ್ವಿತೀಯ          (ಇ) ತೃತೀಯ

(ಬ) ಕಾರಣ ಬರೆಯಿರಿ.

 (೧) ವ್ಯವಸಾಯದ ಪ್ರಕಾರಗಳು ವ್ಯಕ್ತಿಯ ಉತ್ಪನ್ನವನ್ನು ನಿಶ್ಚಿತಪಡಿಸುವವು.

ಉತ್ತರ: ಪ್ರಾಥಮಿಕ ವ್ಯವಸಾಯಗಳಲ್ಲಿ ಎಲ್ಲಕ್ಕಿಂತ ಕಡಿಮೆ ವಿಶೇಷ ಪ್ರಾವೀಣ್ಯದ ಅವಶ್ಯಕತೆ ಇರುತ್ತದೆ. ಉದಾ. ಕಟ್ಟಿಗೆ ಕಡಿಯುವುದು, ಪಶುಪಾಲನೆ, ಮೀನುಗಾರಿಕೆ. ಆದ್ದರಿಂದ ಪ್ರಾಥಮಿಕ ವ್ಯವಸಾಯದಲ್ಲಿ ಕಡಿಮೆ ಉತ್ಪನ್ನ ದೊರೆಯುತ್ತದೆ.

        ಇದಕ್ಕೆ ವಿರುಧ್ಧವಾಗಿ ಚತುರ್ಥ ವ್ಯವಸಾಯದಲ್ಲಿ ಸೇವೆ ಮಾಡಲು ವಿಶೇಷ ಪ್ರಾವೀಣ್ಯದ ಅವಶ್ಯಕತೆ ಇದೆ. ಉದಾ. ಸಂಶೋಧನೆ, ವೈದ್ಯಕೀಯ ಸೇವೆ. ಇದರಿಂದ ಚತುರ್ಥ ವ್ಯವಸಾಯಗಳಲ್ಲಿಯ ವ್ಯಕ್ತಿಗೆ ಹೆಚ್ಚಿಗೆ ಉತ್ಪನ್ನವು ದೊರೆಯುವುದು. ಈ ರೀತಿಯಾಗಿ ವ್ಯವಸಾಯದ ಪ್ರಕಾರಗಳು ವ್ಯಕ್ತಿಯ ಉತ್ಪನ್ನವನ್ನು ನಿಶ್ಚಿತಪಡಿಸುವವು.

(೨) ಪ್ರಾಥಮಿಕ ವ್ಯವಸಾಯ ಇರುವ ದೇಶಗಳು ವಿಕಸನಶೀಲವಾದರೆ ತೃತೀಯ ವ್ಯವಸಾಯ ಇರುವ ದೇಶಗಳು ವಿಕಸಿತವಾಗಿರುವವು.

ಉತ್ತರ: ಪ್ರಾಥಮಿಕ ವ್ಯವಸಾಯ ನಿಸರ್ಗದ ಮೇಲೆ ಅವಲಂಬಿಸಿರುವುದರಿಂದ ಕಡಿಮೆ ಉತ್ಪನ್ನ ನೀಡುತ್ತವೆ. ಆದ್ದರಿಂದ ಪ್ರಾಥಮಿಕ ವ್ಯವಸಾಯ ಇರುವ ದೇಶಗಳ ರಾಷ್ಟ್ರೀಯ ಉತ್ಪನ್ನವು ಕಡಿಮೆ ಇರುತ್ತದೆ. ತೃತೀಯ ವ್ಯವಸಾಯ ಪ್ರಾಥಮಿಕ ವ್ಯವಸಾಯದ ಮೇಲೆ ಪ್ರಕ್ರಿಯೆ ಮಾಡಿ ಮಾಡಲಾಗುತ್ತದೆ. ಆದ್ದರಿಂದ ಈ ವ್ಯವಸಾಯಗಳಿಂದ ಉತ್ಪನ್ನ ಹೆಚ್ಚಿಗೆ ದೊರೆಯುತ್ತದೆ. ಆದ್ದರಿಂದ ತೃತೀಯ ವ್ಯವಸಾಯ ಮಾಡುವ ದೇಶಗಳಿಗೆ ವಿಕಸಿತ ದೇಶವೆಂದು ಮತ್ತು ಪ್ರಾಥಮಿಕ ವ್ಯವಸಾಯವಿರುವ ದೇಶಗಳಿಗೆ ವಿಕಸನಶೀಲದೇಶಗಳೆಂದೂ ಕರೆಯುವರು.

(೩) ಚತುರ್ಥ ವ್ಯವಸಾಯಗಳು ಎಲ್ಲೆಡೆ ಕಂಡು ಬರುವುದಿಲ್ಲ.

ಉತ್ತರ: ಚತುರ್ಥ ವ್ಯವಸಾಯಗಳು ತೃತೀಯ ವ್ಯವಸಾಯದಂತೆ ಸರ್ವಸಾಮಾನ್ಯ ಸೇವೆಯಾಗಿರುವುದಿಲ್ಲ. ಈ ಕೆಲಸ ಮಾಡಲು ವಿಶೇಷ ಪ್ರಾವೀಣ್ಯತೆ, ಕೌಶಲ್ಯ, ಪ್ರಶಿಕ್ಷಣ  ಪಡೆಯಬೇಕಾಗುತ್ತದೆ. ಆದ್ದರಿಂದ ಚತುರ್ಥ ವ್ಯವಸಾಯಗಳು ಎಲ್ಲೆಡೆ ಕಂಡು ಬರುವುದಿಲ್ಲ.

* ಉಪಕ್ರಮ

ನಿಮ್ಮ ಪರಿಸರದಲ್ಲಿಯ ದ್ವಿತೀಯ ವ್ಯವಸಾಯಕ್ಕೆ ಭೇಟಿ ನೀಡಿರಿ. ಕೆಳಗಿನ ಅಂಶಗಳ ಮೇಲೆ ಆಧರಿಸಿದ, ಈ ವ್ಯವಸಾಯದ ಮಾಹಿತಿ ಪಡೆದು ಬರೆಯಿರಿ.

  •         ವ್ಯವಸಾಯದ ಹೆಸರು ಏನು

ದ್ವಿತೀಯ ವ್ಯವಸಾಯದ ಹೆಸರು: ಹಾಲಿನ ಪ್ರಕ್ರಿಯೆ ಉದ್ದಿಮೆ

  •         ಕಚ್ಚಾ ಸರಕು ಯಾವುದು ?

ಕುರಿ, ಆಕಳು, ಎಮ್ಮೆ ಇವುಗಳ ಹಾಲು.

  •        ಕಚ್ಚಾ ಸರಕು ಎಲ್ಲಿಂದ ಬಂದಿತು ?

ಪಶುಪಾಲನೆಯಿಂದ ಹಾಲನ್ನು ಸಂಗ್ರಹಿಸಲಾಗುತ್ತದೆ.

  •         ಯಾವ ಪಕ್ಕಾ ಸರಕು ತಯಾರಾಯಿತು ?

ಹಾಲಿನಿಂದ ಪೇಢೆ, ಶ್ರೀಖಂಡ, ಬೆಣ್ಣೆ, ಚೀಜ, ಖವಾ ಮುಂತಾದ ಪದಾರ್ಥಗಳು ತಯಾರಿಸಲಾಗುವುದು.

  • ·        ಪಕ್ಕಾ ಮಾಲಿನ ಮಾರಾಟ ಎಲ್ಲಿ ಮಾಡಲಾಗುವುದು ?

ನಗರದಲ್ಲಿ, ಹೋಟೆಲುಗಳಿಗೆ, ಬೇಕರಿಯಲ್ಲಿ ಹಾಲಿನಿಂದ ತಯಾರಿಸಲಾಗುವ ಪದಾರ್ಥಗಳನ್ನು ಮಾರಾಟ ಮಾಡಲಾಗುವುದು.

  • ·       ತೃತೀಯ ವ್ಯವಸಾಯದ ಉಪಯೋಗ ಯಾವ ಯಾವ ಸ್ಥಳದಲ್ಲಿ ಆಗುವುದು?

ಹಾಲು ಶೇಖರಣೆಮತ್ತು ಮಾರಾಟ, ಹಾಲಿನ ಸಾಗಾಣಿಕೆ, ಹಾಲಿನ ಪದಾರ್ಥಗಳ ಮಾರಾಟ ಇವು ಪ್ರಾಥಮಿಕ ಮತ್ತು ದ್ವಿತೀಯ ವ್ಯವಸಾಯಕ್ಕೆ ಸಂಬಂಧಿಸಿದ ತೃತೀಯ ವ್ಯವಸಾಯವಾಗಿವೆ. ಈ ವ್ಯವಸಾಯಗಳು ಎರಡೂ ವ್ಯವಸಾಯಗಳಿಗೆ ಪೂರಕವಾದ ಸೇವೆ ಪೂರೈಸುವ ಕೆಲಸ ಮಾಡುವಾವು. ಇವುಗಳಲ್ಲಿ ಸರಕು ಸಾಗಾಣಿಕೆ, ಸಾರಿಗೆ ಸರಕುಗಳನ್ನು ಹೆರುವುದು, ಇಳಿಸುವುದು, ಸರಕುಗಳ ಮಾರಾಟ ಮುಂತಾದವುಗಳ ಸಮಾವೇಶವಾಗುತ್ತದೆ.

 

 

ಶಬ್ದಗಳು – ಭೌಗೋಳಿಕ ಶಬ್ದಗಳ ಸವಿಸ್ತಾರವಾದ ಅರ್ಥ

ಅಗ್ನಿಜನ್ಯ ಶಿಲೆ (igneous rock) : ಲಾವಾರಸ ತಣ್ಣಗಾದ ನಂತರ ತಯಾರಾದ ಶಿಲೆ. ಈ ಶಿಲೆಗಳ ನಿರ್ಮಾಣ ಭೂಪೃಷ್ಠದ ಮೇಲೆ ಅಥವಾ ಭೂಪೃಷ್ಠದ ಕೆಳಗೆ ಆಗುವುದು. ಶಿಲೆಗಳಲ್ಲಿಯ ರಾಸಾಯನಿಕ ಘಟಕಗಳ ಅನುಸಾರವಾಗಿ ಇವುಗಳಲ್ಲಿ ಪ್ರಕಾರಗಳು ಇರುವವು. ಉದಾ-ಗ್ರಾನಾಯಿಟ್, ಬೆಸಾಲ್ಟ್ ಡೊಲೆಮಾಯಿಟ್ ಇತ್ಯಾದಿ.

ಅಜೈವಿಕ (abiotic) : ಪರ್ಯಾವರಣದಲ್ಲಿಯ ನಿರ್ಜಿವ ಘಟಕಗಳು ಉದಾ- ಹವೆ, ನೀರು, ಖನಿಜಗಳು ಇತ್ಯಾದಿ.

* ಅಣುಶಕ್ತಿ (atomic energy) : ಅಣುವಿನ ವಿಭಜನೆಯಿಂದ ನಿರ್ಮಾಣ ಆಗುವ ಶಕ್ತಿ ನಿಸರ್ಗದಿಂದ ಸಿಗುವ ಕೆಲವು ಖನಿಜಗಳ ಉಪಯೋಗ ಮಾಡಿ ಶಕ್ತಿಯನ್ನು ಪಡೆಯಲಾಗುವುದು. ಯುರೇನಿಯಮ್, ರೇಡಿಯಮ್, ಥೋರಿಯಮ್ ಇತ್ಯಾದಿ. ಉದಾ-

ಅಕ್ಷವೃತ್ತ (Parallel of latitude) : ಪೃಥ್ವಿಯ ಪೃಷ್ಠಭಾಗದ ಮೇಲಿನ ಕಾಲ್ಪನಿಕ ವರ್ತುಳಾಕಾರ ರೇಖೆಗಳು. ಈ ವರ್ತುಳಗಳ ಪಾತಳಿ ಪೃಥ್ವಿಯ ಅಕ್ಷಕ್ಕೆ ಕಾಟಕೋನದಲ್ಲಿ ಛೇದಿಸುವುದು. ಈ ವರ್ತುಳಗಳು ಒಂದಕ್ಕೊಂದು ಸಮಾಂತರವಾಗಿರುವವು.

ಅಕ್ಷಾಂಶ (latitude) : ಯಾವುದೇ ಒಂದು ಸ್ಥಳದ ವಿಷುವವೃತ್ತದಿಂದ ಇರುವ ಅಂಶಾತ್ಮಕ ಅಂತರ. ಈ ಅಂಶಾತ್ಮಕ ಅಂತರವನ್ನು ಪೃಥ್ವಿಯ ಕೇಂದ್ರದ ಹತ್ತಿರ ಅಳೆಯಲಾಗುವುದು. ಅಕ್ಷಾಂಶಗಳನ್ನು ವಿಷುವವೃತ್ತದ ಉತ್ತರ ಇಲ್ಲವೆ ದಕ್ಷಿಣದಲ್ಲಿ ಅಳೆಯಲಾಗುವುದು.

ಅಂಟಾರ್ಕ್ಟಿಕ ವೃತ್ತ (Antarctic Circle) : ದಕ್ಷಿಣ ಗೋಲಾರ್ಧದಲ್ಲಿಯ ೬೬° ೩೦' ದ ಅಕ್ಷವೃತ್ತ ಈ ಅಕ್ಷವೃತ್ತದಿಂದ ಸೂರ್ಯದರ್ಶನದ ಕಾಲದ ಪರಿಮಿತಿ ನಿಶ್ಚಿತವಾಗುವುದು. ೬೬ ೩೦' ದ ಅಕ್ಷವೃತ್ತದ ಧ್ರುವದ ಮೇಲೆ ಉತ್ತರದಲ್ಲಿ ಸೂರ್ಯನ ದರ್ಶನವು ಹೆಚ್ಚೆಂದರೆ ೨೪ ಗಂಟೆಗಳವರೆಗೆ ಇರುತ್ತದೆ. ಆದರೆ ದಕ್ಷಿಣಕ್ಕೆ ಸೂರ್ಯದರ್ಶನದ ಕಾಲ ಹೆಚ್ಚಂದರೆ ೨೪ ಗಂಟೆಗಳಿಗಿಂತಲೂ ಹೆಚ್ಚು ಬೆಳೆಯುತ್ತ ಹೋಗಿ ಧ್ರುವದ ಮೇಲೆ ಆರು ತಿಂಗಳುಗಳವರೆಗೆ ಇರುವುದು.

ಆರ್ಥಿಕ ವ್ಯವಹಾರ (economic transaction) : ಹಣದ ಇಲ್ಲವೆ ಹಣ ಹಾಗೂ ವಸ್ತುಗಳಲ್ಲಿ ಆಗುವ ಕೂಡು ತೆಗೆದುಕೊಳ್ಳು ಅಥವಾ ವ್ಯವಹಾರ ಶೇರ ವ್ಯವಹಾರ, ಬ್ಯಾಂಕು, ಮಾರುಕಟ್ಟೆ ಮುಂತಾದ ಸ್ಥಳಗಳಲ್ಲಿ ಇಂತಹ ವ್ಯವಹಾರಗಳು ನಡೆಯುವವು.

* ಆರ್ಕ್ಟಿಕ್ ವೃತ್ತ (Arctic Circle) : ಉತ್ತರ ಗೋಲಾರ್ಧದಲ್ಲಿಯ ೬೬ ೩೦'ನ ಅಕ್ಷವೃತ್ತ. ಈ ಅಕ್ಷವೃತ್ತದಿಂದಾಗಿ ಸೂರ್ಯದರ್ಶನದ ಅವಧಿಯ ಪರಿಮಿತಿ ನಿಶ್ಚಿತವಾಗುವುದು. ೬೬° ೩೦' ಅಕ್ಷವೃತ್ತದ ದಕ್ಷಿಣಕ್ಕೆ ಸೂರ್ಯದರ್ಶನವು ಹೆಚ್ಚೆಂದರೆ ೨೪ ಗಂಟೆಗಳ ವರೆಗೆ ಇರುವವು, ಆದರೆ ಉತ್ತರದಲ್ಲಿ ಸೂರ್ಯದರ್ಶನದ ಅವಧಿ ೨೪ ಗಂಟೆಗಳ ಮುಂದೆ ಹೋಗಿ ಧ್ರುವಗಳ ಮೇಲೆ ಆರು ತಿಂಗಳುಗಳವರೆಗೆ ಆಗುವುದು.

* ಉತ್ತರ ಧ್ರುವ (North Pole) : ಪೃಥ್ವಿಯ ಕಕ್ಷೆಯ ಧ್ರುವ ನಕ್ಷತ್ರಗಳತ್ತ ಇರುವ ತುದಿ.

* ಉತ್ಪನ್ನ (yield) : ವಿನಿಯೋಗದ ತುಲನೆಯಲ್ಲಿ ಪ್ರಾಪ್ತವಾದ ಉತ್ಪನ್ನ. ಉದಾ- ಪ್ರತೀ ಹೆಕ್ಟೇರಿನಲ್ಲಿ ಬಂದ ಗೋದಿಯ ಬೆಳೆ, ಮಾನವ ಗಂಟೆಗಳ ತುಲನೆಯಲ್ಲಿ ಸಿಗುವ ಉತ್ಪನ್ನ.

*ಉತ್ಪಾದನೆ (production) : (೧) ಕಚ್ಚಾವಸ್ತುಗಳ ಮೇಲೆ ಪ್ರಕ್ರಿಯೆ ಇಲ್ಲವೆ ಹೊಂದಿಸುವಿಕೆ ಅಥವಾ ಪ್ರಕ್ರಿಯೆಯಿಂದ ಪೂರ್ಣವಾಗಿ ಒಂದು ಹೊಸ ವಸ್ತುವಿನ ನಿರ್ಮಾಣದ ಕ್ರಿಯೆ. ಉದಾ-ಕಬ್ಬಿನಿಂದ ಬೆಲ್ಲ ಕಬ್ಬಿಣದಿಂದ ಸ್ಟೀಲಿನ ಉತ್ಪಾದನೆ, ಬಿಡಿ ಭಾಗಗಳಿಂದ ಮೋಟಾರು ಇಂಜಿನಿನ ತಯಾರಿಕೆ. (೨) ಕೃಷಿ ವ್ಯವಸಾಯದಲ್ಲಿ ತೊಡಗಿಸಿದ ಬಂಡವಾಳದಿಂದ ದೊರೆತ ಕೃಷಿ ಉತ್ಪಾದನೆ.

*ಉತ್ತರ ಗೋಲಾರ್ಧ (Northern Hemisphere) : ವಿಷುವವೃತ್ತದಿಂದ ಉತ್ತರದ ಕಡೆಗೆ ಧ್ರುವದ ವರೆಗಿನ ಪಸರಿಸಿದ ಪೃಥ್ವಿಯ ಅರ್ಧಗೋಲ.

ಶಕ್ತಿಯ ಸಾಧನಗಳು (energy resoures) : ಶಕ್ತಿಯನ್ನು ನಿರ್ಮಿಸಲು ಬರುವಂತಹ ಸಾಧನಗಳು, ಉದಾ- ಇದ್ದಿಲು, ಖನಿಜತೈಲ, ಗಾಳಿ, ಜಲ ಮುಂತಾದವು.

ಔದ್ಯೋಗೀಕರಣ (industrialization): ವಿವಿಧ ಪ್ರಕಾರಗಳ ಸರಕು ನಿರ್ಮಾಣದ ಹಾಗೂ ಜೋಡಿಸುವ ಕೆಲಸ ಮಾಡುವ ಕಾರಖಾನೆಗಳ ಪ್ರದೇಶಗಳಲ್ಲಿ ಆದ ಕೇಂದ್ರೀಕರಣ, ಉದ್ದಿಮೆಗಳ ಬೆಳವಣಿಗೆಯ ಆರ್ಥಿಕ ಹೆಗ್ಗಳಿಕೆಯ ಹಾಗೂ ಜೀವನ ವಿಧಾನದಲ್ಲಿ ಆದ ಸುಧಾರಣೆಯನ್ನು ಅಳೆಯುವ ಪ್ರಮಾಣವಾಗಿರುವುದು. ಆದರೆ ಅದರೊಂದಿಗೆ ಪ್ರದೂಷಣ, ಪರ್ಯಾವರಣದ ಅವನತಿ ಇವೂ ಕೂಡ ಔದ್ಯೋಗೀಕರಣದ ಜೊತೆಗೆ ಆಗುವವು.

ಕರ್ಕವೃತ್ತ (Tropic of Cancer) : ಉತ್ತರ ಗೋಲಾರ್ಧದಲ್ಲಿಯ ೨೩ ೩೦' ಅಕ್ಷವೃತ್ತ, ವಿಷುವವೃತ್ತದಿಂದ ಈ ಅಕ್ಷವೃತ್ತದ ವರೆಗೆ ಸೂರ್ಯನ ಕಿರಣಗಳು ಲಂಬರೂಪವಾಗಿ ಬೀಳುವವು. ವಿಷುವವೃತ್ತದಿಂದ ಕರ್ಕವೃತ್ತದ ವರೆಗೆ ಪೃಥ್ವಿಯ ಮೇಲಿನ ಎಲ್ಲ ಸ್ಥಾನಗಳು ವರ್ಷದಲ್ಲಿ ಎರಡು ಸಲ ಸೂರ್ಯನ ಲಂಬರೂಪ ಕಿರಣಗಳನ್ನು ಅನುಭವಿಸುವವು. ಪೃಥ್ವಿಯ ಮೇಲಿಂದ ಕಾಣಿಸುವ ಸೂರ್ಯನ ಉತ್ತರದ ಕಡೆಯ ಭಾಸಮಾನ ಭ್ರಮಣ ಇದು ಹೆಚ್ಚು ಹೆಚ್ಚು ಈ ವೃತ್ತದವರೆಗೆ ಹೋಗುತ್ತದೆ. ಆ ನಂತರ ಸೂರ್ಯನು ಮತ್ತೆ ದಕ್ಷಿಣದ ಕಡೆ ಹೋಗುವ ಭಾಸ ಆಗುತ್ತದೆ.

ಖನಿಜ (mineral) : ನೈಸರ್ಗಿಕವಾಗಿ ಅಸೇಂದ್ರಿಯ ಪ್ರಕ್ರಿಯೆಯಿಂದ ತಯಾರಾದ ವಿವಿಧ ಸಂಯುಗಗಳು. ಗ್ರಾಫಾಯಿಟ್ ಇಲ್ಲವೆ ರತ್ನದಂತಹ ಕೆಲವು ಖನಿಜಗಳು ಮಾತ್ರ ಮೂಲದ್ರವ್ಯಗಳ ಸ್ವರೂಪದಲ್ಲಿ ಇರುವವು. ಖನಿಜಗಳಿಗೆ ವೈಶಿಷ್ಟ್ಯಪೂರ್ಣವಾದ ರಾಸಾಯನಿಕ ಸಂಜ್ಞೆ ಇರುವುದು.

ಶಿಲೆ (rock) : ಬೇರೆ ಬೇರೆ ಖನಿಜಗಳ ಅಖಂಡ ಮಿಶ್ರಣಕ್ಕೆ ಶಿಲೆ ಎನ್ನುವರು.

ಖಂಡಾಂತರ್ಗತ (continentality) : ಖಂಡಗಳ ಅಂತರ್ಗತ ಭಾಗಗಳಲ್ಲಿ ಇರುವ ಸ್ಥಿತಿ. ಇಂತಹ ಪ್ರದೇಶಗಳಲ್ಲಿ ಭಾಷೆ ಕಡಿಮೆ ಇರುವುದರಿಂದ ಹವೆಯು ಯಾವಾಗಲೂ ಒಣದಾಗಿ ಇರುವುದು. ಆದುದರಿಂದ ಹವಾಮಾನ ವಿಷಮವಾಗಿ ಇರುತ್ತದೆ. ಇಲ್ಲಿಯ ಹಗಲು ಹಾಗೂ ರಾತ್ರಿಗಳ ಉಷ್ಣತಾಮಾನದಲ್ಲಿ (ಉಷ್ಣತಾಮಾನದ ಕಕ್ಷೆ) ಬಹಳೇ ಅಂತರ ಇರುವುದು. ಬೇಸಿಗೆ ಹಾಗೂ ಚಳಿಗಾಲಗಳಲ್ಲಿಯ ಉಷ್ಣತಾಮಾನದಲ್ಲಿ ಬಹಳೇ ಹೆಚ್ಚು ಅಂತರ ಇರುವುದು.

ಗೋಲಾರ್ಧ (hemisphere) : ಗೋಲದ ಅರ್ಧಭಾಗ, ವಿಷುವ ವೃತ್ತದಿಂದಾಗಿ ಪೃಥ್ವಿಯ ಉತ್ತರ ಹಾಗೂ ದಕ್ಷಿಣ ಗೋಲಾರ್ಧಗಳು ಆಗಿವೆ. 00ಹಾಗೂ 1800 ರೇಖಾವೃತ್ತಗಳ ವಿಚಾರ ಮಾಡಿದರೆ ಪೃಥ್ವಿಯ ಪೂರ್ವ ಹಾಗೂ ಪಶ್ಚಿಮ ಹೀಗೆ ಇನ್ನೂ ಎರಡು ಗೋಲಾರ್ಧಗಳು ನಿರ್ಮಾಣ ಆಗುವವು.

ಗೃಹೀಯ ಗಾಳಿ (planetary winds) : ಹೆಚ್ಚು ಒತ್ತಡದ ಪಟ್ಟಿಗಳಿಂದ ಕಡಿಮೆ ಒತ್ತಡದ ಪಟ್ಟಿಯತ್ತ ಬೀಸುವ, ವಿಸ್ತೀರ್ಣವಾದ ಕ್ಷೇತ್ರವನ್ನು ವ್ಯಾಪಿಸುವ ಹಾಗೂ ನಿಯಮಿತವಾಗಿ ಬೀಸುವ ಗಾಳಿ, ಇದರಲ್ಲಿ ಪೂರ್ವದ ಕಡೆಯ (ವ್ಯಾಪಾರಿ ಗಾಳಿ) ಪಶ್ಚಿಮದ ಹಾಗೂ ಧ್ರುವ ಪ್ರದೇಶದ ಗಾಳಿಗಳ ಸಮಾವೇಶ ಆಗುವುದು.

ಚತುರ್ಥ ವ್ಯವಸಾಯ (quaternary occupations) : ಇದು ಸೇವಾ ವ್ಯವಸಾಯಗಳ ಒಂದು ವಿಶೇಷ ವರ್ಗ. ತೃತೀಯ ಸೇವೆಗಳಿಗಿಂತ ಈ ಸೇವೆಗಳಲ್ಲಿ ವಿಶೇಷ ಕೌಶಲ್ಯಗಳು ಬೇಕಾಗುವವು. ಅದಕ್ಕಾಗಿ ಒಳ್ಳೆಯ ಪ್ರಶಿಕ್ಷಣೆ ಪಡೆದ ಮಾನವಶಕ್ತಿ ಬೇಕಾಗುವುದು. ಈ ಸೇವೆಗಳಿಂದ ಸಿಗುವ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಇರುವುದು. ಉದಾ- ಡಾಕ್ಟರ, ಇಂಜಿನಿಯರ, ಶಿಕ್ಷಕ, ಸಾಫ್ಟ್‌ವೇರ ಇಂಜಿನಿಯರ ಮುಂತಾದವು.

* ಜಾಗತಿಕ ಸ್ಥಾನ ನಿಶ್ಚಿತಪಡಿಸುವ ಪ್ರಣಾಳಿ (Global Positioning System, GPS) : ಸಂಗಣಕ, ಕೃತ್ರಿಮ ಉಪಗ್ರಹಗಳ ಆಧಾರದಿಂದ ಪೃಥ್ವಿಯ ಮೇಲಿನ ಯಾವುದೇ ಸ್ಥಳದ ಸ್ಥಾನ ನಿಶ್ಚಿತಪಡಿಸುವ ತಂತ್ರಜ್ಞಾನ. ಇದಕ್ಕಾಗಿ GIS ಪ್ರಣಾಳಿಯ ಸಹಾಯ ತೆಗೆದುಕೊಳ್ಳಲಾಗುವುದು.

ಜೈವಿಕ (biotic) : ಪರ್ಯಾವರಣದಲ್ಲಿರುವ ಸಜೀವ ಘಟಕಗಳು. ಇವುಗಳಲ್ಲಿ ವನಸ್ಪತಿ, ಪ್ರಾಣಿ ಹಾಗೂ ಸೂಕ್ಷ್ಮಜೀವಿಗಳ ಸಮಾವೇಶ ಆಗುವುದು.

* ಉಷ್ಣತಾಮಾನದ ಕಕ್ಷೆ (range of temperature) : ಯಾವುದೇ ಬಿಂದು ಸ್ಥಳದ ಉಷ್ಣತಾಮಾನದಲ್ಲಿಯ ಗರಿಷ್ಠ ಹಾಗೂ ಕನಿಷ್ಠ ಅಂತರ. ಪ್ರತಿ ದಿನಕ್ಕಾಗಿ ಅಳತೆ ಮಾಡಿದ ಅಂತರಕ್ಕೆ ದೈನಂದಿನ ಉಷ್ಣತಾಮಾನದ ಕಕ್ಷೆ ಎನ್ನುವರು. ಸಂಪೂರ್ಣ ವರ್ಷದ ಸರಾಸರಿ ಗರಿಷ್ಠ ಸಾಗೂ ಕನಿಷ್ಠ ಉಷ್ಣತಾಮಾನದಲ್ಲಿಯ ಅಂತರಕ್ಕೆ ವಾರ್ಷಿಕ ಸರಾಸರಿ ಉಷ್ಣತಾಮಾನದ ಕಕ್ಷೆ ಎನ್ನುವರು.

*ಉಷ್ಣತಾಮಾನದ ಪಟ್ಟಿಗಳು/ಕಟಬಂಧಗಳು (thermal belts) : ಪೃಥ್ವಿಯ ಗೋಲಾಕಾರ ಹಾಗೂ ಅದರಿಂದಾಗಿ ಸೂರ್ಯನಿಂದ ಪ್ರಾಪ್ತವಾಗುವ ಉಷ್ಣತೆಯ ಅಸಮಾನ ವಿತರಣೆ ಇವುಗಳಿಂದಾಗಿ ಪೃಥ್ವಿಯ ಮೇಲೆ ನಿರ್ಮಾಣವಾಗುವ ಹೆಚ್ಚು, ಅಲ್ಪ ಹಾಗೂ ಅತ್ಯಲ್ಪ ಉಷ್ಣತೆಗಳ ಪ್ರದೇಶ. ಇದರಿಂದಾಗಿ ಉಷ್ಣ, ಸಮಶೀತೋಷ್ಣ ಹಾಗೂ ಶೀತಕಟಿಬಂಧಗಳ ಅಥವಾ ಉಷ್ಣತಾಮಾನದ ಪಟ್ಟಿಗಳ ವಿಚಾರ ಮಾಡಲಾಗುವುದು. ಈ ಉಷ್ಣತಾಮಾನದ ಪಟ್ಟಿಗಳ ಪರಿಣಾಮವು ಹವೆಯ ಒತ್ತಡ, ಪರ್ಜನ್ಯ ಹಾಗೂ ಹವೆಗಳ ಮೇಲೆ ಆಗುವುದು.

* ತೃತೀಯ ವ್ಯವಸಾಯಗಳು (tertiary occupation) : ಇದು ಪ್ರಾಥಮಿಕ ಹಾಗೂ ದ್ವಿತೀಯ ವ್ಯವಸಾಯಗಳಿಗೆ ಪೂರಕವಾದ ವ್ಯವಸಾಯ. ಈ ವ್ಯವಸಾಯದಿಂದ ವಸ್ತುಗಳ ನಿರ್ಮಾಣ ಆಗುವುದಿಲ್ಲ. ಆದರೆ ಈ ವ್ಯವಸಾಯದಿಂದ ಸಮಾಜಕ್ಕೆ ವಿವಿಧ ಸೇವೆಗಳು ಸಿಗುವವು. ಪಾತ್ರೆಗಳಿಗೆ ಕಲಾಯಿ ಹಾಕುವುದು. ಚಾಕು-ಕತ್ತರಿಗಳನ್ನು ಮೊನಚು ಮಾಡುವುದು. ಮುಂತಾದವುಗಳು ಇದರಲ್ಲಿ ಸಮಾವೇಶವಾಗುವವು.

*ದಕ್ಷಿಣ ಗೋಲಾರ್ಧ (Southern Hemisphere) : ವಿಷುವ ವೃತ್ತದಿಂದ ದಕ್ಷಿಣದತ್ತ ದಕ್ಷಿಣ ಧ್ರುವದವರೆಗೆ ಪಸರಿಸಿದ ಭಾಗ.

ದಕ್ಷಿಣ ಧ್ರುವ (South Pole) : ಪೃಥ್ವಿಯ ಕಕ್ಷೆಗಳ ಉತ್ತರ ಧ್ರುವದ ವಿರುದ್ಧ ದಿಕ್ಕಿನ ತುದಿ.

ದ್ವಿತೀಯ ವ್ಯವಸಾಯ (secondary occupation) ಪ್ರಾಥಮಿಕ ವ್ಯವಸಾಯಗಳಿಂದ ದೊರೆತ ಇಲ್ಲವೆ ಸಂಗ್ರಹಿಸಿದ ವಸ್ತುಗಳ ಮೇಲೆ ಪ್ರಕ್ರಿಯೆ ಮಾಡಿ ಹೊಸ ಮತ್ತು ಹೆಚ್ಚು ಉಪಯೋಗ ಇರುವ ವಸ್ತುಗಳ ನಿರ್ಮಾಣ ಮಾಡುವ ವ್ಯವಸಾಯ. ಧಾತು, ಖನಿಜಗಳಿಂದ ಶುದ್ಧ ಧಾತುಗಳನ್ನು ಪಡೆಯುವುದು, ಕಟ್ಟಿಗೆಯನ್ನು ಉಪಯೋಗಿಸಿ ಫರ್ನಿಚರ ತಯಾರಿಸುವುದು ಮುಂತಾದ ಎಲ್ಲ ನಿರ್ಮಿತಿಯ ಉದ್ದಿಮೆಗಳ ಸಮಾವೇಶ ಈ ಗುಂಪಿನಲ್ಲಿ ಆಗುವುದು. ಜೋಡಣೆಯ ಉದ್ದಿಮೆಗಳೂ ಈ ಗುಂಪಿನಲ್ಲಿ ಬರುವವು.

ನಗರೀಕರಣ (urbanization) : ಊರು ಅಥವಾ ವಸತಿಗಳು ಪಟ್ಟಣದಲ್ಲಿ  ಪಾಂತರವಾಗುವುದು. ಪ್ರದೇಶ ಹಾಗೂ ಜನಸಂಖ್ಯೆ ಇವುಗಳಿಗೆ ಹೊಂದಿಕೊಂಡು ಈ ಬದಲಾವಣೆ ಆಗುತ್ತಿರುತ್ತದೆ. ಆಧುನಿಕ ವಿಚಾರಗಳ ಪ್ರಸಾರ, ದ್ವಿತೀಯ ಹಾಗೂ ತೃತೀಯ ವ್ಯವಸಾಯಗಳಲ್ಲಿ ಆದ ವೃದ್ಧಿ, ನಗರೀಕರಣದಲ್ಲಿ ಚಿಕ್ಕ ಊರುಗಳು ದೊಡ್ಡ ಪಟ್ಟಣಗಳಲ್ಲಿ ರೂಪಾಂತರಗೊಳ್ಳುವವು. ಇಲ್ಲವೆ ಚಿಕ್ಕ ಊರುಗಳು ದೊಡ್ಡ ಪಟ್ಟಣಗಳ ಭಾಗಗಳು ಆಗುವವು. ಇಂತಹ ಪ್ರಕ್ರಿಯೆ ನಗರೀಕರಣದಲ್ಲಿ ಆಗುತ್ತ ಇರುವುದು.

ನೈಸರ್ಗಿಕ ಸಂಸಾಧನೆಗಳು (natural resources) : ನಿಸರ್ಗದಲ್ಲಿ ಉಪಲಬ್ಧ ಇರುವ ಅನೇಕ ಸಾಧನಗಳಲ್ಲಿ ಮಾನವನು ಉಪಯೋಗಿಸಬಹುದಾದ ಸಾಧನಗಳು, ಉದಾ- ಕಟ್ಟಿಗೆ ಖನಿಜಗಳು ಮುಂತಾದವು. ನೈಸರ್ಗಿಕ ಸಾಧನ ಸಂಪತ್ತಿನ ಆಧಾರದಿಂದ ಮಾನವನು ತನ್ನ ಬೇಡಿಕೆಗಳನ್ನು ಪೂರೈಸಿಕೊಳ್ಳುವನು.

ಪರಂಪರಾಗತ (traditional) : ಪರಂಪರಾಗತವಾಗಿ ನಡೆದುಬಂದ

ಮೊದಲಿನಿಂದ ಉಪಯೋಗದಲ್ಲಿ ಇರುವ ಸಂಗತಿಗಳು, ಉದಾ- ಶಕ್ತಿಯ ಸಾಧನಗಳಾದ ಕಟ್ಟಿಗೆ, ಇದ್ದಿಲು, ಖನಿಜ ತೈಲ ಮುಂತಾದವುಗಳ ಉಪಯೋಗವನ್ನು ನಾವು ಅನೇಕ ಶತಮಾನಗಳಿಂದ ಮಾಡುತ್ತಿರುವೆವು. ಆದುದರಿಂದ ಇವು ಪಾರಂಪಾರಿಕ ಶಕ್ತಿಯ ಸಾಧನಗಳು ಆಗಿವೆ.

ಪೃಥ್ವಿಗೋಲ (globe) : ಪೃಥ್ವಿಯ ಘನಗೋಲಾಕಾರದ ಪ್ರತಿಕೃತಿ.

ಪ್ರಾಥಮಿಕ ವ್ಯವಸಾಯ (primary occupation): ನೇರವಾಗಿ ನಿಸರ್ಗಕ್ಕೆ ಸಂಬಂಧಪಟ್ಟ ಹಾಗೂ ಪೂರ್ಣವಾಗಿ ನೈಸರ್ಗಿಕ ಸಾಧನ ಸಂಪತ್ತುಗಳ ಮೇಲೆ ಆಧರಿಸಿದ ವ್ಯವಸಾಯ. ಇಂತಹ ವ್ಯವಸಾಯಗಳಿಂದ ನೈಸರ್ಗಿಕ ಸಾಧನ ಸಂಪತ್ತಿನ ಸಂಗ್ರಹಣೆ ಮಾತ್ರ ಮಾಡಲಾಗುವುದು. ಈ ವ್ಯವಸಾಯದಿಂದ ಆಗುವ ಉತ್ಪಾದನೆ ನೈಸರ್ಗಿಕವಾಗಿಯೇ ಆಗುವುದು. ಕೃಷಿ, ಪಶುಪಾಲನೆ, ಗಣಿಗಾರಿಕೆ, ಅರಣ್ಯದ ಉತ್ಪಾದನೆಗಳ ಸಂಗ್ರಹಣೆ ಮುಂತಾದವುಗಳ ಸಮಾವೇಶ ಈ ಗುಂಪಿನಲ್ಲಿ ಆಗುವುದು.

ಪ್ರಾಕೃತಿಕ ರಚನೆ (physiography) : ಭೂಮಿಯ ಪೃಷ್ಠಭಾಗದಲ್ಲಿ ಆದ ಏರು-ಇಳಿತಗಳಿಂದಾಗಿ ಆಗುವ ರಚನೆ. ಬಯಲು, ದಿನ್ನೆ, ಗುಡ್ಡ, ಕಂದರ, ಪರ್ವತ, ಶಿಖರ ಮುಂತಾದ ಭೂರೂಪಗಳಿಂದ ಪ್ರದೇಶದ ಪ್ರಾಕೃತಿಕ ರಚನೆ ತಯಾರಾಗುವುದು. ಇಳಿಜಾರಿನ ತೀವ್ರತೆ ಹಾಗೂ ಸಮುದ್ರ ಸಪಾಟಿಯಿಂದ ಇರುವ ಎತ್ತರ ಇವುಗಳಿಂದಾಗಿ ಪ್ರಾಕೃತಿಕ ರಚನೆಯಲ್ಲಿಯ ಭೇದ ತಿಳಿದು ಬರುವುದು.

ಪ್ಲವಂಕ(plankton): ಸಾಗರಜಲದಲ್ಲಿ ತೇಲುವ ಅವಸ್ಥೆಯಲ್ಲಿರುವ ಅಥವಾ ಅತ್ಯಂತ ಮಂದಗತಿಯಿಂದ ಮುಂದೆ ಸಾಗುವ ವನಸ್ಪತಿಜ ಹಾಗೂ ಪ್ರಾಣಿಜ ಜೀವಗಳು. ಇದು ಮೀನಿನ ಆಹಾರವಾಗಿರುವುದು, ಆದುದರಿಂದ ಸಾಗರದ ಯಾವ ಭಾಗದಲ್ಲಿ ಪ್ಲವಂಕ ಹೆಚ್ಚು ಪ್ರಮಾಣದಲ್ಲಿ ಬೆಳೆಯುವುದೋ ಅಲ್ಲಿ ಮೀನುಗಳೂ ದೊಡ್ಡ ಪ್ರಮಾಣದಲ್ಲಿ ಕಂಡು ಬರುವವು.

ಬಾಯೋಗ್ಯಾಸ್ (biogas) : ಜೈವಿಕ ಕಸದಿಂದ ತಯಾರಾಗುವ ವಾಯು, ಕಸಕಡ್ಡಿ, ಪ್ರಾಣಿಗಳ ಮಲಮೂತ್ರ ಇತ್ಯಾದಿಗಳಿಂದ ಬಾಯೊಗ್ಯಾಸನ್ನು ತಯಾರಿಸಬಹುದು. ಬಾಯೋಗ್ಯಾಸ ಇದು ಜ್ವಲನಶೀಲ ವಾಯು ಆಗಿದ್ದು ಶಕ್ತಿಯ ಸಾಧನವೆಂದು ಮನೆಯ ಕೆಲಸಗಳಿಗಾಗಿ ಉಪಯೋಗಿಸಲಾಗುವುದು.

ಬೆಸಾಲ್ಟ (basalt) : ಇದು ಅಗ್ನಿಜನ್ಯ ಶಿಲೆಯ ಒಂದು ಪ್ರಕಾರವಾಗಿದೆ. ಜ್ವಾಲಾಮುಖಿಯ ಉದ್ರೇಕದಿಂದ ಹೊರಬಂದ ಲಾವಾರಸದಿಂದ ಈ ಶಿಲೆ ತಯಾರಾಗುತ್ತದೆ. ಈ ಶಿಲೆ ಅಛಿದ್ರ, ಭಾರವಾದ ಹಾಗೂ ಕಠಿಣವಾದದ್ದಾಗಿದೆ. ಈ ಶಿಲೆಯಲ್ಲಿ ಕಬ್ಬಿಣ ದೊಡ್ಡ ಪ್ರಮಾಣದಲ್ಲಿ ಕಂಡು ಬರುವುದು.

ಸಮುದ್ರದ ಏರಿಳಿತ (tides) : ಸೂರ್ಯ, ಚಂದ್ರರ ಗುರುತ್ವಾಕರ್ಷಣೆ ಹಾಗೂ ಪೃಥ್ವಿಯ ಕೇಂದ್ರದಿಂದ ಹೊರ ಬೀಳುವ ಬಲ ಇವುಗಳ ಸಂಯುಕ್ತ ಪ್ರಭಾವದಿಂದ ಸಾಗರ ಜಲದ ಪಾತಳಿಯಲ್ಲಿ ಆಗುವ ಹೆಚ್ಚಳಕ್ಕೆ ಭರತ, ಇಳಿತಕ್ಕೆ ಇಳಿತ ಎನ್ನುವರು.

* ಭುವನ (Bhuvan) : ನಕಾಶೆ ಹಾಗೂ ಸೂದೂರ ಸಂವೇದನೆ ಈ ತಂತ್ರಗಳ ಆಧಾರದಿಂದ ಭಾರತ ಸರಕಾರವು ನಿರ್ಮಿಸಿದ ಸಂಗಣಕದ ಪ್ರಣಾಲಿ, ಗೂಗಲ್ ಮ್ಯಾಪಿಯಾ, ವಿಕಿಮ್ಯಾಪಿಯಾ ವುಗಳಂತೆಯೇ ಈ ಪ್ರಣಾಲಿ ಕೆಲಸ ಮಾಡುವುದು. ಈ ಪ್ರಣಾಲಿ ಸಂಪೂರ್ಣವಾಗಿ ಭಾರತೀಯ ಆಗಿದೆ. ನಕಾಶೆಗಳ ತಯಾರಿಕೆಗಾಗಿ ಸ್ಥಾನ ನಿಶ್ಚಿತತೆಗಾಗಿ ಈ ಪ್ರಣಾಲಿಯ ಉಪಯೋಗ ಮಾಡಿಕೊಳ್ಳಬಹುದು.

ಭೌಗೋಲಿಕ ಮಾಹಿತಿ ಪ್ರಣಾಲಿ (Geographic Information System, GIS) : ಭೌಗೋಲಿಕ ಮಾಹಿತಿಯನ್ನು ಸಂಗಣಕದಲ್ಲಿ ಸಂಖ್ಯೆಗಳ ಪದ್ದತಿಯಲ್ಲಿ ಮಾಡಿದ ಸಂಗ್ರಹ. ಈ ಮಾಹಿತಿಯ ಉಪಯೋಗ ಮಾಡಿ ಪೃಥ್ವಿ ಅಥವಾ ಇತರ ಗ್ರಹಗಳ ಬಗೆಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಬಹುದು. ಈ ಸಾಧನದ ಉಪಯೋಗವನ್ನು ಪ್ರಮುಖವಾಗಿ ಮೊದಲಬಾರಿಗೆ ಸೂದೂರ ಸಂವೇದನೆಗಾಗಿ ಮಾಡಲಾಯಿತು.

ಮಕರ ವೃತ್ತ (Tropic of Capricorn) : ದಕ್ಷಿಣ ಗೋಲಾರ್ಧದಲ್ಲಿಯ ೨೩ ೩೦' ಅಕ್ಷವೃತ್ತ. ಈ ಅಕ್ಷವೃತ್ತದವರೆಗೆ ಸೂರ್ಯನ ಕಿರಣಗಳು ಲಂಬರೂಪವಾಗಿ ಬೀಳುವವು. ವಿಷುವವೃತ್ತದಿಂದ ಮಕರ ವೃತ್ತದ ವರೆಗಿನ ಎಲ್ಲ ಸ್ಥಾನಗಳು ವರ್ಷದಲ್ಲಿ ಎರಡು ದಿನ ಸೂರ್ಯನ ಲಂಬಕಿರಣಗಳ ಅನುಭವ ಪಡೆಯುವವು, ಪೃಥ್ವಿಯ ಮೇಲಿಂದ ಕಾಣಿಸುವ ಸೂರ್ಯನು ದಕ್ಷಿಣದ ಕಡೆಯ ಭಾಸಮಾನ ಭ್ರಮಣವು ಹೆಚ್ಚೆಂದರೆ ಈ ವೃತ್ತದವರೆಗೆ ಆಗುವುದು. ಆ ನಂತರ ಸೂರ್ಯ ಮತ್ತೆ ಉತ್ತರದ ಕಡೆಗೆ ಬರುತ್ತಿರುವುದು ಕಂಡು ಬರುವುದು.

* ಉಪ್ಪಿನ ಮಡಿಗಳು (salt pans) : ಯಾವ ಸ್ಥಳದಲ್ಲಿ ಸಮುದ್ರದ ಉಪ್ಪು ನೀರಿನಿಂದ ಉಪ್ಪಿನ ನಿರ್ಮಾಣ ಮಾಡುವರೋ ಅಂತಹ ಮಡಿಗಳು.

ಮಣ್ಣು (soil) : ಭೂಪೃಷ್ಠದ ಎಲ್ಲಕ್ಕಿಂತ ಮೇಲಿನ ತೆಳುವಾದ ಥರ. ಇದರ ದಪ್ಪಳತೆ ಸುಮಾರಾಗಿ ಒಂದು ಮೀಟರಗಿಂತ ಕಡಿಮೆ ಇರುವುದು. ಈ ಥರದಲ್ಲಿ ಖನಿಜ ಹಾಗೂ ಜೈವಿಕ ಘಟಕಗಳು ಇರುವವು. ಮಣ್ಣಿನಲ್ಲಿಯ ಉಸುಕು ಹಾಗೂ ಮಣ್ಣು ಇವು ಶಿಲೆಗಳ ಸವಕಳಿಯಿಂದ ತಯಾರಾಗುವವು, ಆದರೆ 'ಹೂಮಸ್‌' ಇದು ಜೈವಿಕ ಘಟಕಗಳ ವಿಘಟನೆಯಿಂದಾಗಿ ಸಿಗುವುದು. ಮಣ್ಣು ತಯಾರಾಗುವ ಕ್ರಿಯೆ ಬಹಳೇ ಸಾವಕಾಶವಾಗಿ ಆಗುವುದು. ವನಸ್ಪತಿಗಳ ಬೆಳವಣಿಗೆಗಾಗಿ ಮಣ್ಣಿನ ಆವಶ್ಯಕತೆ ಇದೆ. ಪ್ರದೇಶದ ಹವಾಮಾನ, ಮೂಲ ಶಿಲೆ ಇವು ಮಣ್ಣಿನ ನಿರ್ಮಾಣ ಹಾಗೂ ಮಣ್ಣಿನ ಪ್ರಕಾರಗಳ ಮೇಲೆ ಪರಿಣಾಮ ಬೀರುವವು.

ರೇಖಾಂಶ (longitude) : ಯಾವುದೇ ಒಂದು ಸ್ಥಳದ ಮೂಲ ರೇಖಾವೃತ್ತದಿಂದ ಅಂಶಾತ್ಮಕ ಅಂತರ. ಈ ಅಂತರವನ್ನು ಆ ಸ್ಥಳದ ರೇಖಾವೃತ್ತದ ಪಾತಳಿಯವರೆಗೆ ಅಳೆಯಲಾಗುವುದು.

ರೇಖಾವೃತ್ತ (meridian of longitude) : ಪೃಥ್ವಿಯ ಪೃಷ್ಠಭಾಗದ ಮೇಲಿನ ಉತ್ತರ ಹಾಗೂ ದಕ್ಷಿಣ ಧ್ರುವಗಳನ್ನು ಜೋಡಿಸುವ ಕಾಲ್ಪನಿಕ ರೇಖೆ. ಈ ಎಲ್ಲ ರೇಖೆಗಳು ಅರ್ಧ ವರ್ತುಳಾಕಾರವಾಗಿ ಇರುವವು.

ರೂಪಾಂತರಿತ ಶಿಲೆ (metamorphic rock) : ಅಗ್ನಿಜನ್ಯ ಇಲ್ಲವೆ ಪದರುಜನ್ಯ ಶಿಲೆಗಳ ಮೇಲೆ ಹೆಚ್ಚು ಉಷ್ಣತೆ ಹಾಗೂ ಅತೀ ಹೆಚ್ಚು ಒತ್ತಡ ಬಿದ್ದುದರಿಂದ ಶಿಲೆಗಳಲ್ಲಿಯ ಖನಿಜಗಳಲ್ಲಿ ಪುನ: ಸ್ಪಟಿಕೀಕರಣವಾಗಿ ತಯಾರಾದ ಶಿಲೆ.

ಅಲೆಗಳು (waves) : ಶಕ್ತಿಯ ವಹನ ಆಗುವಾಗ, ಅದರ ವಹನ ಯಾವ ಮಾಧ್ಯಮದಿಂದ ಆಗುವುದೋ ಅವುಗಳಲ್ಲಿ ಬದಲಾವಣೆ ಆಗುವುದು. ಇಂತಹ ಬದಲಾವಣೆಗಳಿಂದ ಕೆಲವು ಭಾಗದಲ್ಲಿ ಸರಾಸರಿ ಪಾತಳಿ ಎತ್ತರಕ್ಕೆ ಹೋಗುವುದು, ಆ ಎತ್ತರದ ಭಾಗದ ಎರಡೂ ಬದಿಗಳಲ್ಲಿ ಆಳವಾದ ಸ್ಥಾನ ನಿರ್ಮಾಣವಾಗುವುದು. ಇದಕ್ಕೆ ಅಲೆ ಎನ್ನುವರು. ಸಾಗರದ ಪೃಷ್ಠಭಾಗದ ಮೇಲೆ ಗಾಳಿಯಿಂದಾಗಿ ಅಲೆಗಳು ನಿರ್ಮಾಣ ಹೊಂದುವವು. ಅಲ್ಲಿ ಶಕ್ತಿಯ ವಹನ ಆಗುವುದು. ಮಾಧ್ಯಮದ ವಹನ ಆಗುವುದಿಲ್ಲ.

ಲಾವಾರಸ (lava) : ಜ್ವಾಲಾಮುಖಿಯ ಉದ್ರೇಕದ ನಂತರ ಭೂಪೃಷ್ಠದ ಮೇಲೆ ಹರಿದು ಬರುವ ತಪ್ತ ಪದಾರ್ಥ. ಲಾವಾರಸವು ಅರ್ಧ ಪ್ರವಾಹ ಸ್ವರೂಪದಲ್ಲಿ ಇರುವುದು. ಇದರಿಂದ ಬಹಿರ್ನಿಮರ್ಾಣದ ಅಗ್ನಿಜನ್ಯ ಶಿಲೆ ತಯಾರಾಗುವುದು.

ವನ ಆಚ್ಚಾದನೆ (forest cover) : ಅರಣ್ಯಗಳಿಂದ ಆವರಿಸಲ್ಪಟ್ಟ ಭೂಭಾಗ. ಕೆಲವೊಂದು ಪ್ರದೇಶದಲ್ಲಿ ಸುಮಾರಾಗಿ ನೈಸರ್ಗಿಕವಾಗಿಯೇ ಅರಣ್ಯಗಳು ಬೆಳೆದು ಆವರಣ ತಯಾರಾಗುವುದು, ಈ ಅರಣ್ಯದ ಆವರಣ ತಯಾರಾಗಲು ಅನೇಕ ವರ್ಷಗಳ ಕಾಲಾವಧಿ ಬೇಕಾಗುವುದು. ಪ್ರಮುಖವಾಗಿ ಅರಣ್ಯಗಳಲ್ಲಿ ಆ ಪ್ರದೇಶದ ಮೂಲ ವನಸ್ಪತಿಗಳು ನೈಸರ್ಗಿಕವಾಗಿಯೇ ಬೆಳೆಯುವವು.

* ಹವೆಯ ಒತ್ತಡದ ಪಟ್ಟಿ (pressure belts) : ವಾತಾವರಣದಲ್ಲಿಯ ಹವೆಯು ಉಷ್ಣತಾಮಾನದ ಪಟ್ಟಿಗಳಿಗನುಸಾರವಾಗಿ ಹಾಗೂ ಸಮುದ್ರ ದಂಡೆಯ ಪ್ರದೇಶ ಹಾಗೂ ಖಂಡಾಂತರ್ಗತ ಪ್ರದೇಶಕ್ಕನುಸಾರವಾಗಿ ಹೆಚ್ಚು ಕಡಿಮೆ ಬಿಸಿಯಾಗುವುದು. ಕಡಿಮೆ ಉಷ್ಣತಾಮಾನ ಇರುವ ಪ್ರದೇಶದಲ್ಲಿ ಹವೆಯ ಪ್ರಸರಣ ಕಡಿಮೆ ಇರುವುದು. ಇಂತಹ ಭಾಗಗಳಲ್ಲಿ ಹವೆಯ ಒತ್ತಡ ಹೆಚ್ಚು ಇರುವುದು. ಹೆಚ್ಚು ಉಷ್ಣತೆ ಇರುವ ಪ್ರದೇಶದಲ್ಲಿ ಹವೆ ಹೆಚ್ಚು ಕಾಯುವುದು ಹಾಗೂ ಪ್ರಸರಣ ಹೊಂದುವುದು. ಇದರಿಂದ ಇಂತಹ ಹವೆ ಅವಕಾಶದಲ್ಲಿ ಹೋಗಿ ಬಿಡುವುದು. ಆಗ ನಿರ್ಮಾಣವಾದ ಪೊಳ್ಳುತನದಿಂದಾಗಿ ಆ ಪ್ರದೇಶದ ಹವೆಯ ಒತ್ತಡ ಕಡಿಮೆ ಇರುವುದು. ಇಂತಹ ಹೆಚ್ಚು ಒತ್ತಡದ ಪಟ್ಟಿಯಿಂದ ಕಡಿಮೆ ಹವೆಯ ಒತ್ತಡದ ಪಟ್ಟಿಯತ್ತ ಗಾಳಿ ಬೀಸುವುದು.

ವೃತ್ತಜಾಳಿಗೆ (graticule) : ಪೃಥ್ವಿಯ ಪೃಷ್ಠಭಾಗದ ಮೇಲಿನ ಅಕ್ಷವೃತ್ತಗಳ ಹಾಗೂ ರೇಖಾವೃತ್ತಗಳ ಕಾಲ್ಪನಿಕ ರೇಖೆಗಳ ಜಾಳಿಗೆ.

ವಿಷುವವೃತ್ತ (equator) : ಅಕ್ಷವೃತ್ತ ಇದಕ್ಕೆ ಮೂಲ ಅಕ್ಷವೃತ್ತ ಎಂದೂ ಅನ್ನುವರು. ಈ ಅಕ್ಷವೃತ್ತದಿಂದಾಗಿ ಪೃಥ್ವಿಯ ಉತ್ತರ ಹಾಗೂ ದಕ್ಷಿಣ ಎಂಬ ಎರಡು ಸಮಾನ ಭಾಗಗಳಾಗಿರುವವು. ವಿಷುವ ವೃತ್ತ ಇದು ಎಲ್ಲಕ್ಕಿಂತ ದೊಡ್ಡ ಅಕ್ಷವೃತ್ತ (ಬೃಹತ್‌ ವೃತ್ತ)ವಾಗಿದೆ.

ಶಿಲಾರಸ (magma) : ಭೂಪೃಷ್ಠದ ಕೆಳಗೆ ಕರಗಿದ ಸ್ಥಿತಿಯಲ್ಲಿ ತಪ್ತ ಸ್ವರೂಪದಲ್ಲಿ ಇರುವ ಪದಾರ್ಥ. ಈ ಪದಾರ್ಥವು ಸಾಕಷ್ಟು ಸಲ ಅರ್ಧ ಪ್ರವಾಹ ಸ್ವರೂಪದಲ್ಲಿ ಇರುವುದು. ಭೂ ಕವಚದ ಭಾಗದಲ್ಲಿ ಶಿಲಾರಸ ತಣ್ಣಗಾಗುವುದು. ಅದರಿಂದ ಅಂತರ್‌ನಿರ್ಮಿತ ಅಗ್ನಿಜನ್ಯ ಶಿಲೆಗಳು ನಿರ್ಮಾಣವಾಗುವವು.

ಸಾಗರದ ಪ್ರವಾಹ (ocean current) : ಮಹಾಸಾಗರದ ನೀರಿನಲ್ಲಿ ವೇಗದಿಂದ ಹರಿಯುವ ನೀರಿನ ಪ್ರವಾಹ. ಈ ಪ್ರವಾಹಗಳು ವಿಷುವವೃತ್ತದಿಂದ ಉತ್ತರ ಹಾಗೂ ದಕ್ಷಿಣ ಧ್ರುವಗಳ ಮಧ್ಯ ವಕ್ರಾಕಾರ ದಿಕ್ಕಿನಲ್ಲಿ ಹರಿಯುವವು. ಸಾಗರ ಪ್ರವಾಹಗಳಲ್ಲಿ ಉಷ್ಣ ಹಾಗೂ ಶೀತ ಎಂಬ ಎರಡು ಪ್ರಕಾರಗಳಿವೆ. ಉಷ್ಣ ಪ್ರವಾಹಗಳು ಉತ್ತರ ಹಾಗೂ ದಕ್ಷಿಣ ಧ್ರುವದಿಂದ ವಿಷುವವೃತ್ತದ ಕಡೆಗೆ ಹರಿಯುವವು. ಪೃಥ್ವಿಯ ಮೇಲಿನ ಉಷ್ಣತೆಯ ಸಮತೋಲನೆ ಕಾಪಾಡುವಲ್ಲಿ ಈ ಪ್ರವಾಹಗಳ  ಸಹಭಾಗ ಪ್ರಮುಖವಾಗಿರುತ್ತದೆ. ಗಾಳಿಯ ಗತಿ, ಸಾಗರದ ನೀರಿನ ಉಷ್ಣತಾಮಾನದಲ್ಲಿಯ ಹಾಗೂ ಘನತೆಯಲ್ಲಿಯ ಅಂತರ ಇರುವುದೇ ಈ ಸಾಗರ ಪ್ರವಾಹಗಳ ನಿರ್ಮಾಣದ ಪ್ರಮುಖ ಕಾರಣಗಳಾಗಿವೆ.

* ಸಮುದ್ರದ ಸಾನಿಧ್ಯ (nearness to the sea): ಸಾಗರದ ಸಂದರ್ಭದಲ್ಲಿಯ ಸಾನಿಧ್ಯ. ಸಾಗರ ತೀರದ ಪ್ರದೇಶದ ಉಷ್ಣತಾಮಾನದ ಮೇಲೆ ಸಾಗರ ನೀರಿನ ಸಾನಿಧ್ಯದ ಪರಿಣಾಮ ಆಗುವುದು. ಸಾಗರದ ನೀರಿನ ಭಾಷೀಭವನದಿಂದ ತೀರದ ಪ್ರದೇಶದಲ್ಲಿ ಗರಿಷ್ಠ ಹಾಗೂ ಕನಿಷ್ಠ ಉಷ್ಣತಾಮಾನದಲ್ಲಿ ಹೆಚ್ಚು ಅಥವಾ ಕಡಿಮೆ ಆಗುತ್ತದೆ. ಇಲ್ಲಿಯ ಹವಾಮಾನ ಸಮ ಇರುತ್ತದೆ.

ಹರಿತಗೃಹ ವಾಯು (green house gases) : ಯಾವ ವಾಯುಗಳು ವಾತಾವರಣದಲ್ಲಿಯ ಉಷ್ಣತೆಯನ್ನು ಸಂಗ್ರಹಿಸಿ ಇಡುವವೋ ಅವುಗಳು. ಈ ವಾಯುಗಳಿಂದ ವಾತಾವರಣದ ಉಷ್ಣತಾಮಾನ ಹೆಚ್ಚಾಗುವುದು. ವಾತಾವರಣದಲ್ಲಿಯ ಕಾರ್ಬನ್ ಡೈ ಆಕ್ಸೆಡ್, ಕ್ಲೋರೋಫ್ಲೋರೋ ಕಾರ್ಬನ್ (CFC), ಆರ್ಗನ್ ಬಾಷ್ಪ ಇತ್ಯಾದಿ ವಾಯುಗಳು ಈ ಹರಿತಗೃಹ ವಾಯುವಿನ ಗುಂಪಿನಲ್ಲಿ ಬರುವವು. ಪೃಥ್ವಿಯ ಮೇಲಿನ ವಾತಾವರಣದಲ್ಲಿ ಈ ವಾಯುಗಳ ಉತ್ಸರ್ಜನೆ ಹೆಚ್ಚಾದುದರಿಂದ ಪೃಥ್ವಿಯ ಉಷ್ಣತಾಮಾನ ಬೆಳೆಯುತ್ತದೆ.

ಮೋಡ (cloud) : ವಾತಾವರಣದಲ್ಲಿ ತೇಲುತ್ತಿರುವ ಅವಸ್ಥೆಯಲ್ಲಿ ಇರುವ ಅತಿ ಸೂಕ್ಷ್ಮ ಅಥವಾ ಹಿಮ ಕಣ ಇವುಗಳ ಸಮುದಾಯ.

ಉಷ್ಣತಾಮಾನ (temperature) : ಯಾವುದೇ ಒಂದು ವಸ್ತುವಿನ ಅಥವಾ ಸ್ಥಳದ ಉಷ್ಣತೆಯ ಪ್ರಮಾಣ.

ಆದ್ರ್ರತೆ (humidity) : ಹವೆಯಲ್ಲಿಯ ಭಾಷ್ಯದ ಪ್ರಮಾಣ. ಆದ್ರ್ರತೆಯನ್ನು ಶೇಕಡಾ ಪ್ರಮಾಣದಲ್ಲಿ ಹೇಳಲಾಗುವುದು.

ಮೂಲಮಾನ (unit) : ಒಂದು ನಿರ್ಧಾರಿತ ಪ್ರಮಾಣಿತ ಸಂಖ್ಯೆ ಅಥವಾ ರಾಶಿ. ಇದರ ಉಪಯೋಗ ರಾಶಿಯ ಮಾಪನಕ್ಕಾಗಿ ಮಾಡಲಾಗುತ್ತದೆ. ಉದಾ: ಗ್ರಾಂ ಇದು ತೂಕದ ಮೂಲಮಾನ ಹಾಗೂ ಸೆಮೀ ಇದು ಉದ್ದಳತೆಯ ಮೂಲಮಾನವಾಗಿದೆ.

*ಸಮೋಸ್ಟ ರೇಖೆ (isotherms) : ನಕಾಶೆಯಲ್ಲಿಯ ಸಮಾನ ಉಷ್ಣತಾಮಾನವನ್ನು ಹೊಂದಿದ ಸ್ಥಳಗಳನ್ನು ಜೋಡಿಸುವ ರೇಖೆಗೆ ಸಮೋಷ್ಣ ರೇಖೆ ಎನ್ನುವರು.

ಹ್ಯುಮಸ್ (humus) : ಮಣ್ಣಿನಲ್ಲಿ ಕೊಳೆತ ಜೈವಿಕ ಪದಾರ್ಥ ಇದರಲ್ಲಿ ಗಿಡಗಳ ಬೇರು, ಕಸಕಡ್ಡಿ, ಇವುಗಳಲ್ಲದೆ ಅರ್ಧ ಮರ್ದ ಅಥವಾ ಪೂರ್ಣವಾಗಿ ಕೊಳೆತ ಜೈವಿಕ ಪದಾರ್ಥಗಳ ಸಮಾವೇಶ ಆಗುವುದು.

ವೃಷ್ಟಿ (precipitation) : ಜಲಕಣಗಳ ಅಥವಾ ಹಿಮಕಣಗಳ, ವಾತಾವರಣದಿಂದ ಪೃಥ್ವಿಯ ಸೃಷ್ಠಭಾಗದ ಮೇಲೆ ಆಗುವ ಮಳೆ, ಪರ್ಜನ್ಯ, ಹಿಮವೃಷ್ಠಿ, ಅಲೆಕಲ್ಲುಗಳು ಮುಂತಾದವು ವೃಷ್ಠಿಯ ರೂಪಗಳು ಆಗಿವೆ.

 

 

 

ಧನ್ಯವಾದಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು