ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Balbharati Std 8th - 8ನೇ ತರಗತಿ ಬಾಲಭಾರತಿ ಪ್ರಶ್ನೋತ್ತರಗಳು

 




ಅನುಕ್ರಮಣಿಕೆ

ಗದ್ಯ ವಿಭಾಗ

  ಪಾಠಗಳು

ಲೇಖಕರು

ಪುಟ

1. ವಿದ್ಯಾರತ್ನ

 

 

2. ಭಾರತದ ಪ್ರಮುಖ ನದಿಗಳು

 

 

3. ಆದರ್ಶ ಮಹಿಳೆಯರು

 

 

4. ದುರಗ ಮುರಗಿಯರು

ಗೀತಾ ನಾಭೂಷಣ

 

5. ಅಜ್ಜಿ ಹೇಳಿದ ಕಥೆ

ಸಂಧ್ಯಾ ಪೈ

 

6. ಪರನಾರಿ  ಸಹೋದರ

ಕವಿತಾ ಕೃಷ್ಣ

 

7. ಅರಣ್ಯ ಸಂಪತ್ತು

 

 

8. ಗೆಲಿಲಿಯೊ

 

 

9. ಪ್ರಜ್ಞಾವಂತ ಪ್ರಜೆ

 

 

10. ರೆಡ್ ಕ್ರಾಸ್ ಸಂಸ್ಥೆ

 

 

11. ಗಂಭೀರ

ಶಿವಕೋಟ್ಯಾಚಾರ್ಯ

 

ಪದ್ಯ ವಿಭಾಗ

. ನಂ         ಪದ್ಯಗಳು

ಕವಿ

ಪುಟ

1. ಒಲುಮೆ

ಆರ್ಎನ್ಜಯಗೋಪಾಲ

 

2. ಆಷಾಢಮಾಸ ಬಂದೀತವ್ವ

ಜನಪದರು

 

3.  ರಾಷ್ಟ್ರ ಧ್ವಜ

ಗಂಗಪ್ಪ ವಾಲಿ 

 

4.  ಯುದ್ಧ ಬಂತು ಮನೆಯವರೆಗೆ

ರಾಬೇಂದ್ರೆ

 

5. ಮನೆಯೇ ಗುಡಿಯಮ್ಮ

ಚಿಉದಯ ಶಂಕರ

 

6. ಸಲ್ಲದು

ಸರೋಜಿನಿ ಭದ್ರಾಪೂರ

 

7. ಆಧ್ಯಾತ ಶಿಖರ

ಶಿವಾನಂದ ಕಲಗೊಂಡ

 

8. ಉದರ ವೈರಾಗ್ಯ

ಪುರಂದರ ದಾಸರು

 

9. ಚಲಿತಮಾದುದು ಚಿತ್ತಂ

ನಾಗಚಂದ್ರ

 

೧. ವಿದ್ಯಾರತ್ನ

ಶಬ್ದಗಳ ಅರ್ಥ

ಕೃತಜ್ಞನು - ಉಪಕಾರ ಸ್ಮರಿಸುವವನುಓಲಗ - ಸಭಾಮಂಟಪಲವಣಉಪ್ಪ;

ಕೃತಜ್ಞರು - ಉಪಕಾರಕ್ಕೆ ಅಪಕಾರ ಮಾಡುವವರು

ಅಭ್ಯಾಸ

ಕೃತಿ-1 ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ,

) ಚಕ್ರವರ್ತಿ ಅಕಬರನ ಆಸ್ಥಾನದಲ್ಲಿಯ ವಿದ್ಯಾರತ್ನಯಾರು?

ಉತ್ತರ:- ಚಕ್ರವರ್ತಿ ಅಕಬರನ ಆಸ್ಥಾನದಲ್ಲಿ ವಿದ್ಯಾರತ್ನ ಬೀರಬಲ್ಲ ಆಗಿದ್ದರು.

೨) ಮಣ್ಣಿನ ಹರಿವಾಣದಲ್ಲಿ ಏನಿತ್ತು?

ಉತ್ತರ:- ಮಣ್ಣಿನ ಹರಿವಾಣದಲ್ಲಿ ಉಪ್ಪು ಇತ್ತು.

) ಕೃತಘ್ನರ ಹೆಸರನ್ನು ಹೇಳಲು ಬೀರಬಲನು ಹಿಂದೇಟು ಹಾಕಲು ಕಾರಣವೇನು?

ತ್ತರ:- ಕೃತಘ್ನರ ಹೆಸರು ಹೇಳಿದರೆ ತನ್ನ ಜೀವಕ್ಕೆ ಸಂಚಕಾರ ಬಂದಿತ್ತೆಂದು ಹೆದರಿ ಬೀರಬಲ್ಲನು ಹಿಂದೇಟು ಹಾಕುತ್ತಿದ್ದನು. 

೪) ಉತ್ತರಗಳನ್ನು ಕೇಳಿ ತೃಪ್ತನಾದ ಬಾದಶಹ ಏನು ಮಾಡಿದನು?

ಉತ್ತರ:- ಬೀರಬಲ್ಲನ ಉತ್ತರ ಕೇಳಿ ಬಾದಶಹಾ ನಕ್ಕನು. ಆತನಿಗೆ ವಿಶೇಷ ಮಾನ ಸನ್ಮಾನಗಳನ್ನು ಮಾಡಿದನು. ಸಾವಿರಾರು ಮೊಹರುಗಳ ಬಹುಮಾನವನ್ನೂ ಸಲ್ಲಿಸಿದನು.

ಕೃತಿ-2.  ಕೆಳಗಿನ ಚೌಕಟ್ಟುಗಳನ್ನು ಪೂರ್ಣಗೊಳಿಸಿರಿ.

ನೀರಿನ ಉಪಯೋಗಗಳು:-1) ಬಟ್ಟೆ ತೊಳೆಯಲು 2) ನೀರು ಕುಡಿಯಲು 3) ಪಾತ್ರೆ ತೊಳೆಯಲು  4) ಸ್ನಾನ ಮಾಡಲು  5) ಗಿಡ ಮರಗಳಿಗೆ- ಬೇಸಾಯಕ್ಕೆ   6) ವಿವಿಧ ಕಾರಖಾನೆಗಳಿಗೆ ನೀರು ಬೇಕಾಗುವುದು.

ಕೃತಿ-4 'ಕೃತಘ್ನ' ಉತ್ತರಕ್ಕೆ ಬೀರಬಲನು ಕೊಟ್ಟ ಉತ್ತರವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

ಉತ್ತರ:- ಕೃತಘ್ನ ಯಾರು ಎಂಬ ಪ್ರಶ್ನೆಗೆ ಬೀರಬಲ್ಲನು ಚೆನ್ನಾಗಿ ಉತ್ತರಿಸುತ್ತಾನೆ. ಕೃತಘ್ನ ವ್ಯಕ್ತಿ ಬೇರೆ ಯಾರೂ ಇರುವುದಿಲ್ಲ. ನಮ್ಮ ಪಕ್ಕದಲ್ಲಿ ಕುಳಿತು ಮೋಸ ಮಾಡುತ್ತಿರುತ್ತಾರೆ. ನಾಯಿ ಕೃತಜ್ಞ ಪ್ರಾಣಿಯಾದರೆ ಅಳಿಯಂದಿರು ಎಲ್ಲರೂ ಕೃತಘ್ನರಾಗಿರುವರು. ಏಕೆಂದರೆ ಅವರಿಗೆ ಇಡೀ ರಾಜ್ಯವೇ ಕೊಟ್ಟರೂ ಅವನೇನು ಮಹಾ ಕೊಟ್ಟಿರುವುದು ಎಂದು ಹೇಳುತ್ತಾರೆ. ನವಗ್ರಹಗಳೆಲ್ಲ ಜಪ ತಪಗಳಿಂದ ಶಾಂತಗೊಳಿಸಬಹುದು ಆದರೆ ಅಳಿಯನಿಗೆ ಯಾವುದರಿಂದಲೂ ಶಾಂತಗೊಳಿಸಲು ಸಾಧ್ಯವಿಲ್ಲ.

ಕೃತಿ-5. ಅಕಬರ ಬೀರಬಲರ ವಿನೋದ ಕಥೆಯನ್ನು ಅಂತರ್ಜಾಲದ ಮುಖಾಂತರ ಮನೆಯವರಿಗೆಲ್ಲ ತೋರಿಸಿರಿ.

 ಹಸಿರು ಕುದುರೆಯ ಕಥೆ

ಒಂದು ದಿನ ಸಂಜೆ ರಾಜ ಅಕ್ಬರ್ ತನ್ನ ಪ್ರೀತಿಯ ಬೀರಬಲ್‌ನೊಂದಿಗೆ ತನ್ನ ರಾಯಲ್ ಗಾರ್ಡನ್ಗೆ ಭೇಟಿ ನೀಡಲು ಹೊರಟನು. ಆ ಉದ್ಯಾನ ಅದ್ಭುತವಾಗಿತ್ತು. ಸುತ್ತಲೂ ಹಸಿರಿನಿಂದ ಕೂಡಿದ್ದು, ಹೂವಿನ ಸುವಾಸನೆ ವಾತಾವರಣವನ್ನು ಇನ್ನಷ್ಟು ಸುಂದರಗೊಳಿಸುತ್ತಿತ್ತು.

ಅಂತಹ ಪರಿಸ್ಥಿತಿಯಲ್ಲಿ ರಾಜನು ಬೀರಬಲ್‌ಗೆ ಹೇಳಿದನು, “ಬೀರಬಲ್‌! ಈ ಹಚ್ಚಹಸಿರಿನ ಉದ್ಯಾನದಲ್ಲಿ ನಾವು ಹಸಿರು ಕುದುರೆಯಲ್ಲಿ ತಿರುಗಬೇಕು ಎಂದು ನಾವು ಬಯಸುತ್ತೇವೆ. ಆದ್ದರಿಂದ ಏಳು ದಿನಗಳಲ್ಲಿ ನಮಗೆ ಹಸಿರು ಕುದುರೆಯನ್ನು ವ್ಯವಸ್ಥೆ ಮಾಡಲು ನಾನು ನಿಮಗೆ ಆದೇಶಿಸುತ್ತೇನೆ. ಮತ್ತೊಂದೆಡೆ ನೀವು ಈ ಆದೇಶವನ್ನು ಪೂರೈಸಲು ವಿಫಲವಾದರೆ, ನೀವು ಎಂದಿಗೂ ನಿಮ್ಮ ಮುಖವನ್ನು ನನಗೆ ತೋರಿಸಬಾರದು.

ಇಲ್ಲಿಯವರೆಗೆ ಜಗತ್ತಿನಲ್ಲಿ ಹಸಿರು ಕುದುರೆ ಇರಲಿಲ್ಲ ಎಂದು ರಾಜ ಮತ್ತು ಬೀರಬಲ್‌ ಇಬ್ಬರಿಗೂ ತಿಳಿದಿತ್ತು. ಆದರೂ ರಾಜನು ಬೀರಬಲ್‌ ತನ್ನ ಸೋಲನ್ನು ಒಪ್ಪಿಕೊಳ್ಳಬೇಕೆಂದು ಬಯಸಿದನು. ಅದಕ್ಕೇ ಅವನು ಬೀರಬಲ್ ಗೆ ಇಂಥದ್ದೊಂದು ಅಪ್ಪಣೆ ಕೊಟ್ಟ. ಆದರೆ ಬೀರಬಲ್ ಕೂಡ ತುಂಬಾ ಬುದ್ಧಿವಂತನಾಗಿದ್ದ. ರಾಜನು ತನ್ನಿಂದ ಏನನ್ನು ಬಯಸುತ್ತಾನೆಂದು ಅವನಿಗೆ ಚೆನ್ನಾಗಿ ತಿಳಿದಿತ್ತು. ಅದಕ್ಕೇ ಅವನೂ ಕುದುರೆ ಸಿಗುವ ನೆಪದಲ್ಲಿ ಏಳು ದಿನ ಅಲ್ಲಿ ಇಲ್ಲಿ ಸುತ್ತಾಡಿದ್ದ.

ಎಂಟನೆಯ ದಿನದಲ್ಲಿ ಬೀರಬಲ್ ರಾಜನ ಮುಂದೆ ಆಸ್ಥಾನದಲ್ಲಿ ಬಂದು, “ಮಹಾರಾಜರೇ! ನಿಮ್ಮ ಅಪ್ಪಣೆಯ ಪ್ರಕಾರ ನಾನು ನಿಮಗಾಗಿ ಒಂದು ಹಸಿರು ಕುದುರೆಯನ್ನು ಏರ್ಪಡಿಸಿದ್ದೇನೆ. ಆದರೆ ಅದರ ಮಾಲೀಕರಿಗೆ ಎರಡು ಷರತ್ತುಗಳಿವೆ.

ರಾಜನು ಕುತೂಹಲದಿಂದ ಎರಡೂ ಷರತ್ತುಗಳನ್ನು ಕೇಳಿದನು. ಆಗ ಬೀರಬಲ್ ಉತ್ತರಿಸಿದ, “ಮೊದಲ ಶರತ್ತು ಆ ಹಸಿರು ಕುದುರೆಯನ್ನು ತರಲು ನೀವೇ ಹೋಗಬೇಕು.” ರಾಜನು ಈ ಷರತ್ತಿಗೆ ಒಪ್ಪಿದನು.

ನಂತರ ಅವರು ಎರಡನೇ ಸ್ಥಿತಿಯ ಬಗ್ಗೆ ಕೇಳಿದರು. ಆಗ ಬೀರಬಲ್‌ ಹೇಳಿದರು, “ಕುದುರೆ ಮಾಲೀಕರ ಎರಡನೇ ಷರತ್ತು ಎಂದರೆ ನೀವು ಕುದುರೆಯನ್ನು ತೆಗೆದುಕೊಳ್ಳಲು ವಾರದ ಏಳು ದಿನಗಳನ್ನು ಹೊರತುಪಡಿಸಿ ಬೇರೆ ದಿನವನ್ನು ಆರಿಸಿಕೊಳ್ಳಬೇಕು.”

ಇದನ್ನು ಕೇಳಿದ ರಾಜನು ಆಶ್ಚರ್ಯದಿಂದ ಬೀರಬಲ್‌ನತ್ತ ನೋಡಿದನು. ಆಗ ಬೀರಬಲ್‌ ಸರಳವಾಗಿ ಉತ್ತರಿಸಿದ, “ಮಹಾರಾಜರೇ! ಹಸಿರು ಬಣ್ಣದ ವಿಶೇಷ ಕುದುರೆಯನ್ನು ತರಲು, ಅವರು ಈ ವಿಶೇಷ ಷರತ್ತುಗಳನ್ನು ಅನುಸರಿಸಬೇಕು ಎಂದು ಕುದುರೆಯ ಮಾಲೀಕರು ಹೇಳುತ್ತಾರೆ.

ಬೀರಬಲ್‌ನ ಈ ಬುದ್ಧಿವಂತ ಮಾತನ್ನು ಕೇಳಿ ರಾಜ ಅಕ್ಬರನು ಸಂತೋಷಪಟ್ಟನು ಮತ್ತು ಬೀರಬಲ್‌ ಅವನನ್ನು ಸೋಲಿಸಲು ನಿಜವಾಗಿಯೂ ತುಂಬಾ ಕಷ್ಟಕರವಾದ ಕೆಲಸವೆಂದು ಒಪ್ಪಿಕೊಂಡನು.

ಕೃತಿ-6 ಅಂತರ್ಜಾಲದ ಮುಖಾಂತರ ನೋಡಿದ, ಅಥವಾ ನೀವು ಕೇಳಿದ ಒಂದು ವಿನೋದ ಕಥೆಯನ್ನು ಬರೆಯಿರಿ.

ಉತ್ತರ:- ಟೀಚರ :  ಗುಂಡ, ಆನೆ ದೊಡ್ಡದೋ ಅಥವಾ ಕೋಳಿ ದೊಡ್ಡದೋ?

ಗುಂಡ:  ಹಾಗೆಲ್ಲಾ ಹೇಳೋಕೆ ಆಗಲ್ಲಟೀಚರ, date of birth ಬೇಕು. 

ಕೃತಿ-7 ಸುಳಿವುಗಳನ್ನಾಧರಿಸಿ ಶಬ್ದ ರಚಿಸಿರಿ.

ಪಕ್ಷಿಗಳಿರುವ ಮನೆಗಳು               -       ಗೂಡು

ಗಿಡಮರಗಳಿಂದ ತು೦ಬಿದ ಪ್ರದೇಶ   -       ಕಾಡು

ವೀಕ್ಷಣೆಗೆ ಇನ್ನೊಂದು  ಪದ           -       ನೋಡು

ಜನವಸತಿ ಪ್ರದೇಶ                    -       ನಾಡು

ಪ್ರಾಣಿಗಳ ಕೊಂಬು                    -       ಕೋಡು

ಕವಿತೆಗೆ ಹೆಸರು                       -       ಹಾಡು


  ************************************************************   

೨. ಭಾರತದ ಪ್ರಮುಖ ನದಿಗಳು  

 

 


 ************************************************************   

3. ಆದರ್ಶ ಮಹಿಳೆ

ಶಬ್ದಗಳ ಅರ್ಥ

ಧಾತ್ರಿ – ಸಾಕುತಾಯಿ ; ಪಚ್ಚೆ – ಹಸಿರು ರತ್ನ ; ಅಮೂಲ್ಯ – ಬೆಲೆ ಕಟ್ಟಲಾಗದ; ವಿಶ್ರುತೆ – ಹೆಸರುವಾಸಿ; ಇಹಲೋಕ ತ್ಯಜಿಸು – ಮರಣ     ; ಮನೋರಥ – ಬಯಕೆ; ಕುತಂತ್ರ – ದುಷ್ಟಾಲೋಚನೆ; ನಾಪಿತ – ಕ್ಷೌರಿಕ; ಚರ್ಯೆ – ಹಾವಭಾವ ; ಪ್ರಚ್ಛನ್ನ – ಮುಸುಕುದಾರಿ

ಅಭ್ಯಾಸ

ಕೃತಿ - 2 ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

1) ಮೇವಾಡದ ರಾಜನ ಹೆಸರು ಏನಿತ್ತು?

ಉತ್ತರ : ಮೇವಾಡದ ರಾಜನ ಹೆಸರು ಸಂಗ್ರಾಮಸಿಂಹ ಇತ್ತು.

2) ಬನವೀರನು ರಾಜ್ಯಪರಿಪಾಲಕನಾಗಲು ಕಾರಣವೇನು?

ಉತ್ತರ :- ಬನವೀರನು ಸಮರ್ಥನಾದುದರಿಂದಲೂ ರಾಜ್ಯ ಮನೆತನಕ್ಕೆ ಹತ್ತಿರದವನಾದುದರಿಂದಲೂ ಹಾಗೂ ಉಯದಯಸಿಂಹ ಬಾಲಕನಾಗಿರುವುದರಿಂದ ಉದಯಸಿಂಹನ ಹೆಸರಿನಲ್ಲಿ ಬನವೀರ ರಾಜ್ಯ ಕಾರಭಾರ ಮಾಡುವುದೆಂದು ಏರ್ಪಾಡಾಯಿತು.

3) ಬನವೀರನಲ್ಲಿದ್ದ ದುರ್ವಿಚಾರ ಯಾವುದು?

ಉತ್ತರ :- ಬನವೀರನು ಸಮರ್ಥನಾದರೂ, ರಾಜನೀತಿ ವಿಶಾರದನಾದರೂ ಅವನ ಹೃದಯ ಮಾತ್ರ ನಿರ್ಮಲವಾಗಿರಲಿಲ್ಲ. ರಾಜ್ಯಾಧಿಕಾರವು ಶಾಶ್ವತವಾಗಿ ತನ್ನ ಪಾಲಿಗೆ ಬರುವಂತಾಗಲು ಯೋಚಿಸಿ ರಾಜಕುಮಾರನನ್ನು ಕೊಲ್ಲುವ ಹುನ್ನಾರ ನಡೆಸುತ್ತಾನೆ.  

4) ರಾಜಕುಮಾರನನ್ನು ಅರಮನೆಯಿಂದ ಹೊರಗೆ ಒಯ್ದವರುಯಾರು?

ಉತ್ತರ :- ಮೇವಾಡದ ಸಿಂಹಾಸನ ಭದ್ರವಾಗಿ ಉಳಿಸಲು ಪಚ್ಚೆಯು ರಾಜಕುಮಾರನಿಗೆ ಒಬ್ಬ ನಾಪಿತನಿಗೆ ಅರ್ಪಿಸುತ್ತಾಳೆ. ಹಾಗಾಗಿ ರಾಜಕುಮಾರನನ್ನು ಅರಮನೆಯಿಂದ ಹೊರಗೆ ಒಯ್ದವರು ನಾಪಿತ.

5) ಪ್ರಜೆಗಳು ಪನಾಧಾತ್ರಿಯನ್ನು ಮಹಾಮಾತೆ ಎಂದು ಸಂಬೋಧಿಸಲು ಕಾರಣವೇನು?

ಉತ್ತರ :- ವೀರ ಪಚ್ಚೆ ತನ್ನ ಪುತ್ರ ಬಲಿದಾನದ ಮೂಲಕ ರಾಜಕುಮಾರನನ್ನು ಉಳಿಸಿದ ಅತುಲ ತ್ಯಾಗವನ್ನು ಕೊಂಡಾಡಿ ಪ್ರಜೆಗಳು ಅವಳನ್ನು ಮಹಾಮಾತೆ ಎಂದು ಸಂಬೋಧಿಸಿದರು.

ಕೃತಿ - 3 ಮೇವಾಡದ ರಾಜವಂಶ ಉಳಿಸಲು ಪನ್ನಾಧಾತ್ರಿ ಮಾಡಿದ ಕಾರ್ಯವನ್ನು ಬರೆಯಿರಿ.

ಉತ್ತರ :- ಮೇವಾಡದ ರಾಜವಂಶ ಉಳಿಸಲು ಪನ್ನಾಧಾತ್ರಿಯು ತನ್ನ ಸ್ವಂತ ಮಗನಿಗೆ ಬಲಿ ಕೊಟ್ಟಳು. ಬನವೀರ ರಾಜಕುಮಾರನನ್ನು ಕೊಲ್ಲಲು ಬರುವಾಗ ಒಬ್ಬ ನಾಪಿತನಿಗೆ ರಾಜಕುಮಾರನನ್ನು ಅರಮನೆಯಿಂದ ಹೊರಗೆ ಒಯ್ದು ಆರೈಕೆ ಮಾಡಲು ಬಿನ್ನವಿಸಿ ತನ್ನ ಮಗನನ್ನು ರಾಜಕುಮಾರನ ತೊಟ್ಟಿಲಲ್ಲಿ ಮಲಗಿಸಿದಳು. ಮಲಗಿರುವ ಮಗು ರಾಜಕುಮಾರನೀರುನೆಂದು ಬನವೀರ ಅವನ ಕೊಲೆ ಮಾಡುತ್ತಾನೆ.  

ಕೃತಿ- 4 ಪಾಠದಲ್ಲಿ ಬಂದ ಹೆಸರುಗಳನ್ನು ಕ್ರಮವಾಗಿ ಬರೆಯಿರಿ.

ಉತ್ತರ:- ಪನ್ನಾಧಾತ್ರಿ(ಪಚ್ಚೆ), ರಾಜ ಸಂಗ್ರಾಮ ಸಿಂಹ, ಉದಯಸಿಂಹ , ಬನವೀರ, ನಾಪಿತ.

ಕೃತಿ - 5 ಪನ್ನಾಧಾತ್ರಿ ಮತ್ತು ಬಲವೀರನ ನಡುವೆ ನಡೆದ ಸಂಭಾಷಣೆಯನ್ನು ವರ್ಗದಲ್ಲಿ ಅಭಿನಯಿಸಿರಿ.

ನಾಟಕ

        (ಪನ್ನಾಧಾತ್ರಿ ತೊಟ್ಟಿಲಲ್ಲಿ ತೂಗುತ್ತಿರುವ ರಾಜಕುಮಾರ-ಉಯದಯಸಿಂಹನಿಗೆ ಭಾರವಾದ ಮನಸ್ಸಿನಿಂದ ನಾಪಿತನಿಗೆ ನೀಡಿ ಅವನನ್ನು ಬೇಗ ಹೊರಗೆ ಕಳುಹಿಸಿ ತನ್ನ ಮಗನನ್ನು ತೊಟ್ಟಿಲಲ್ಲಿ ಮಲಗಿಸಿ ತೊಟ್ಟಿಲು ತೂಗುತ್ತಿರಲು ಹೊರಗಿನಿಂದ ಹೆಜ್ಜೆ ಸಪ್ಪಳ ಸಮೀಪಿಸಿದಂತೆ ಬಾಗಿಲು ಬಡಿಯುವ ಸದ್ದು ಆಗುವುದು. ಬನವೀರ ಕೈಯಲ್ಲಿ ಖಡ್ಗ ಹಿಡಿದು ರಾಕ್ಷಸನಂತೆ ಒಳನುಗ್ಗುವನು.)

ಬನವೀರ:- (ಹೆದರಿಸುತ್ತಾ) ಉಸಿರೆತ್ತಿದ್ದರೆ ಉಳಿಯಲಾರೆ. ಹೇಳು, ಎಲ್ಲಿರುವನು ರಾಜಕುಮಾರ?

ಪಚ್ಚೆ:- ಎಲೈ ಘಾತುಕೀಯೆ, ನೀನಾರೆಂದು ನಾನು ಬಲ್ಲೆ. ನಿನ್ನ ಮಾರು ವೇಷದಲ್ಲೂ ನೀನು ಎದ್ದು ಕಾಣುತ್ತಿರುವೆ. ಹೀಗಿದ್ದರೂ ಒಂದು ಮಾತು ಹೇಳುವೆ, ತಾಯಿಯಾಗಿ ಸೆರಗೊಡ್ಡಿ ಬೇಡಿಕೊಳ್ಳುವೆ, ದಯವಿಟ್ಟು ಈ ಕೊಲೆ ಮಾಡಬೇಡ.  

ಬನವೀರ:- ಛೆ, ಯಾವುದೇ ಬೇಡಿಕೆಯನ್ನು ನಾನು ನನ್ನ ಕಿವಿಯಲ್ಲಿ ಹಾಕಿಕೊಳ್ಳಲಾರೆ. ಆದರೆ ಒಂದು ಮಾತು ನೆನಪಿರಲಿ, ಎಂದಾದರೂ ಯಾರಿಗಾದರೂ ಈ ವಿಚಾರ ತಿಳಿತೆಂದರೆ ಅಲ್ಲಿಗೆ ತೀರಿತು ನಿನ್ನ ಭೂಮಿಯ ಋಣ.(ಅನ್ನುತ್ತ ಅಡ್ಡ ಬರುವ ಅವಳನ್ನು ತಳ್ಳಿ ತೊಟ್ಟಿಲಲ್ಲಿ ಮಲಗಿದ ಮಗುವಿನ ಎದೆಗೆ ಖಡ್ಗ ಚುಚ್ಚಿ ಅಲ್ಲಿಂದ ಮರೆಯಾಗಿ ಹೋಗಿ ಬಿಡುವನು.)

        (ಪಚ್ಚೆ ಮಗುವನ್ನು ನೋಡಿ ಶೋಕ ಮಾಡುವಳು)


ಕೃತಿ
- 6 ಕೆಳಗಿನ ತರಂಗಾಕೃತಿಯನ್ನು ಪೂರ್ಣ ಮಾಡಿರಿ.
 ಆದರ್ಶ  ಮಹಿಳೆಯರು   ಮನೆತನದ ಹೆಸರು  

ವೀರ ಮಾತೆ ಜೀಜಾಬಾಯಿ                           ಮರಾಠಾ ಭೋಸಲೆ                          

ಕಾಶಿಬಾಯಿ ಬಾಜಿರಾವ ಪೇಶವೆ   ಪೇಶವೇ                     

ಅಹಿಲ್ಯಾಬಾಯಿ ಹೊಳಕರ                             ರಾಷ್ಟ್ರಕೂಟ                                   

ಚಾಂದ ಬೀಬಿ/ ರಜಿಯಾ ಬೇಗಮ ಸುಲ್ತಾನ ವಂಶ 

ಕಿತ್ತೂರ ರಾಣಿ ಚೆನ್ನಮ್ಮ                               ಕದಂಬ ಮನೆತನ          

ಝಾಂಸಿ ರಾಣಿ ಲಕ್ಷ್ಮೀಬಾಯಿ                        ಝಾಂಸಿ ಮನೆತನ   

 ಕೃತಿ -7 ಕೆಳಗಿನ ಚಿತ್ರವನ್ನು ನಿರೀಕ್ಷಿಸಿರಿ ನಿಮ್ಮ ಸ್ವಅಭಿಪ್ರಾಯವನ್ನು ಬರೆಯಿರಿ.

                            ಬನವಿರನ ನಡತೆ ಉಚಿತವೆ? 


************************************************************   

೪. ದುರಗ ಮುರಗಿಯರು

 ಅಭ್ಯಾಸ

ಕೃತಿ: 1 - ಕೆಳಗಿನ ಪ್ರಶ್ನೆಗಳಗೆ ಉತ್ತರ ಬರೆಯಿರಿ.

1. ಹಳ್ಳಿಯ ಕಸಬುದಾರರ ಹೆಸರು ಬರೆಯಿರಿ.

ಉತ್ತರ :-  ಡಿಗ, ನೇಕಾರ,. ಕುಂಭಾರ,  ಚಮ್ಮಾರ,. ಹೂವಾಡಗಿತ್ತಿ, ಗೌಳಿಗ, ಕಂಭಾರ,  ಮಾಂಗ, ಮಾದೀಗ, ತಳವಾರ, ತೇಲಿ.

2. ದುರುಗ ಮುರಗಿಯರ ಜೀವನೋಪಾಯದ ವಿಧಾನ ಹೇಳಿರಿ.

ಉತ್ತರ:- ದುರಗ ಮುರಗಿಯರು ಅಲೆಮಾರಿ ಜೀವನ ನಡೆಸುವ ಒಂದು ಬುಡಕಟ್ಟು ಜನಾಂಗ. ಇವರು ಊರ ಹೊರಗೆ ಮತ್ತು ಅಡವಿಯಲ್ಲಿ ಗುಡಿಸಲು ಅಥವಾ ಡೇರೆಗಳಲ್ಲಿ ವಾಸಿಸುತ್ತಾರೆ. ಮಾಲೆಗಳದಲ್ಲಿ ಒಂದೆಡೆ ಇದ್ದು ಚಳಿಗಳದಲ್ಲಿ ದವಸ ಧಾನ್ಯಗಳ ರಾಶಿಯ ಸಲುವಾಗಿ ಹಳ್ಳಿ, ಹಳ್ಳಿಗಳಲ್ಲಿ ತಿರುಗುತ್ತಾರೆ. ಬೇಸಿಗೆಯಲ್ಲಿ ಊರ ನಡುವೆಯೇ ಜನರ ಮುಂದೆ ಆಟಕತ್ತಿ ಕುಣಿದು ಉದರಪೋಷಣೆ ಮಾಡಿಕೊಳ್ಳುತ್ತಾರೆ. ಇವರು ಮುಖವಾಡ ಧರಿಸಿ, ವೇಷಕತ್ತಿ ಪೋತರಾಜ ರಾಜಿ ಕುಣಿಯಲು ಊರೂರಿಗೆ ಹೋಗುತ್ತಾರೆ. ಅವರ ಹೆಂಡತಿಯರು ಬುರು ಬುರು ವಾದ್ಯ ಬಾರಿಸುತ್ತಾ ಊರಿನಲ್ಲಿ ತಿರುಗಾಡಿ ಹಣ, ದವಸ ಧಾನ್ಯ ಮತ್ತು ಆಹಾರ ಸಂಗ್ರಹ ಮಾಡುವರು. ಮಕ್ಕಳಿಗೂ ಕುಣಿಯುವ ತರಬೇತಿ ಕೊಟ್ಟಿರುತ್ತಾರೆ.      

3, ಪೋತರಾಜನು ಏನೆಂದು ಅರ್ಭಟಿಸುವನು?

ಉತ್ತರ :-  ಪೋತರಾಜನು, ಅಹಾಹಾ.... ಮರಗ ಮರಗಮ್ಮ   ದುರಗ ದುರಗಮ್ಮ ತಾಯಿ ದ್ಯಾಮವ್ವ, ಎಲ್ಲಾರ ರೋಗ ಎಲ್ಲಾರ ಪೀಡಾ ಇಲ್ಲದಂಗ ಮಾಡವ್ವ. ಎಂದು ಆರ್ಭಟಿಸುವನು.

4. ಮರಗಮ್ಮನ ವಿಶೇಷ ಪೂಜೆಯನ್ನು ಯಾವಾಗ ಮಾಡುತ್ತಾರೆ?

ಉತ್ತರ :- ದುರಗ ಮುರಗಿಯವರು ಮಂಗಳವಾರ ಹಾಗೂ ಶುಕ್ರವಾರಗಳಂದು ಮರಗಮ್ಮನ ವಿಶೇಷ ಪೂಜೆ ಮಾಡುತ್ತಾರೆ.

5. ಇತ್ತೀಚಿನ ದಿನಗಳಲ್ಲಿ ದುರುಗ ಮುರಗಿಯರಲ್ಲಾದ ಬದಲಾವಣಿಗಳೇನು?

ಉತ್ತರ :- ಇತ್ತಿತ್ತಲಾಗಿ ಈ ಜನರು ಸಮಾಜದ ಮುಖ್ಯ ವಾಹಿನಿಗೆ ಬರತೊಡಗಿದ್ದಾರೆ. ಸರಕಾರವು ಇವರ ನೆರವಿಗೆ ನಿಂತಿದೆ. ಶಿಕ್ಷಣದ ಪ್ರಭಾವದಿಂದ ಜನ ಜೀವನ ಬದಲಾಗುತ್ತಿದೆ. ಸುಶಿಕ್ಷಿತರು ಮುಂದೆ ಬರುತ್ತಿದ್ದಾರೆ. ವ್ಯಾಪಾರ ಉದ್ಯೋಗಗಳಲ್ಲಿ ಸಹಭಾಗಿಗಳಾಗುತ್ತಿದ್ದಾರೆ. ಹಳೆಯ ಸಂಪ್ರದಾಯಗಳನ್ನೆಲ್ಲ ಬದಿಗೊತ್ತಿ ಎಲ್ಲರಂತೆ ಸಾಮಾನ್ಯ ಜೀವನ ನಡೆಸಲು ಪ್ರಯತ್ನ ಮಾಡುತ್ತಿದ್ದಾರೆ. ಕಾಲಾಂತರದಲ್ಲಿ ದೊಡ್ಡ ಬದಲಾವಣೆಯಾಗುವ ಮುನ್ಸೂಚನೆಗಳೂ ಕಂಡು ಬರುತ್ತಿವೆ.

ಕೃತಿ: 2 - ಕೆಳಗಿನ ಜಾಲಾಕೃತಿಯನ್ನು ಬಿಡಿಸಿರಿ.

ಪ್ರಾಣಘಾತಕ  ರೋಗಗಳು: 1. ಕ್ಯಾನ್ಸರ್    2. ಎಡ್ಸ   3. ಕ್ಷಯರೋಗ   4. ಕೋರೋನಾ

ಕೃತಿ: 3 - ಪೆಟ್ಟಿಗೆ ದುರುಗ ಮುರಗಿಯರ ಜೀವನೋಪಾಯದ ವಿಧಾನವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

ಉತ್ತರ :ಉತ್ತರ : ದುರುಗ ಮುರಗಿಯರು ಒಂದು ಅಲೆಮಾರಿ ಜನಾಂಗ. ಪೆಟ್ಟಿಗೆ ದುರುಗ ಮುರುಗಿಯರು ತಮ್ಮ ಕುಲದೇವಿಯನ್ನು ಪೆಟ್ಟಿಗೆಯಲ್ಲಿಟ್ಟು ಊರಿಂದ ಊರಿಗೆ ಅಲೆಯುತ್ತ ಆಟ ಕಟ್ಟಿ ಬರುವ ದೇಣಿಗೆಯಲ್ಲಿ ತಮ್ಮ ಜೀವನೋಪಾಯ ಕಂಡು ಕೊಳ್ಳುತ್ತಾರೆ.

ಕೃತಿ: 4 - ಯೋಗೇಶನ ಅನುಮಾನಕ್ಕೆ ನಿಮ್ಮ ಸಲಹೆ ಏನು?

ದೇವಿಗೆ ಶಾಂತಿ ಮಾಡುವುದರಿಂದ ಪ್ರಾಣಘಾತಕ ರೋಗಗಳು ಯಾಗಬಲ್ಲವೆ?

ಉತ್ತರ:- ಭಕ್ತಿ ಇದು ನಮ್ಮ ಮನಸ್ಸಿನಲ್ಲಿ ಇರಬೇಕು. ತೋರಿಕೆಗೆ ಭಕ್ತಿ ಮಾಡಬಾರದು. ದೇವಿಗೆ ಶಾಂತಿ ಮಾಡುವುದರಿಂದ ಯಾವುದೇ ಪ್ರಾಣಘಾತಕ ರೋಗಗಳು ಗುಣಮುಖ ಆಗುವುದಿಲ್ಲ. ಅದನ್ನು ಒಳ್ಳೆಯ ವೈದ್ಯರ ಹತ್ತಿರ ಉಪಚಾರ ಪಡೆದರೆ ಮಾತ್ರ ರೋಗ ಗುಣವಾಗುತ್ತದೆ. ಅಂಧಶ್ರದ್ಧೆ ಬಿಟ್ಟು ವೈಜ್ಞಾನಿಕ ದೃಷ್ಟಿಕೋನದಿಂದ ಬಾಳುವೆ ಮಾಡುವುದನ್ನು ಕಲಿತುಕೊಳ್ಳಬೇಕು.

ಕೃತಿ: 5 - ಪ್ರತ್ಯಕ್ಷ ನೋಡಿ ಅಥವಾ ಅಂತರ್ಜಾಲದ ಮುಖಾಂತರ ದುರುಗ ಮುರಗಿಯರ ವೇಷಕಟ್ಟಿ ಕುಣಿಯುವ ಸನ್ನಿವೇಶದ ವಿವರಣೆ ಬರೆಯಿರಿ,

ಉತ್ತರ :

 

 

 

ಕೃತಿ: 6 - ಬಿಟ್ಟ ಸ್ಥಳ ತುಂಬಿರಿ

1) ಅಲೆಮಾರಿ ಜೀವನ ನಡೆಸುವ ಈ ಜನರು ಬುಡಕಟ್ಟು ಜಾಂಗದವರು.

2) ದುರುಗ ಮುರಗಿಯರು ಅಂದರೆ ದುರಗಮ್ಮನ ಆರಾಧಕರು.

3) ದೇವಿಯ ಶಾಂತಿಗಾಗಿ ಶಾಖಾಹಾರಿ ಮತ್ತು ಮಾಂಸಾಹಾರಿ  ನೈವೇದ್ಯ ಕೊಡುತ್ತಿದ್ದರು.

4) ಇತ್ತಿತ್ತಲಾಗಿ ಜನರು ಸಮಾಜದ ಮುಖ್ಯವಾಹಿನಿಗೆ ಬರತೊಡಗಿದ್ದಾರೆ.

ಕೃತಿ: 7 - ಕೆಳಗಿನ ಶಬ್ದಗಳನ್ನು ಅನುಕ್ರಮವಾಗಿ ಬರೆದು ಅರ್ಥಪೂರ್ಣವಾಕ್ಯ ತಯಾರಿಸಿರಿ.

!) ದುರುಗ ದುರ್ಗಾದೇವಿ ಅಂದರೆ ಮರಗಮ್ಮ    

ಉತ್ತರ: ದುರ್ಗಾದೇವಿ ಅಂದರೆ ದುರಗ ಮರಗಮ್ಮ.

2) ಕಿಚಡಿ ಹಿಡಿಯುತ್ತಿದ್ದರು ಅಂಬಲಿ ನೈವೇದ್ಯ ಮತ್ತು ಮೊಸರನ್ನ

ಉತ್ತರ: ಕಿಚಡಿ, ಅಂಬಲಿ ಮತ್ತು ಮೊಸರನ್ನ ನೈವೇದ್ಯ ಹಿಡಿಯುತ್ತಿದ್ದರು.

ಕೃತಿ:  8 - ಅಲೆಮಾರಿಗಳು ನೆಲೆನಿಂತು ಬದುಕಲು ಸರಕಾರವು ನೀಡುತ್ತಿರುವ ಸವಲತ್ತುಗಳನ್ನು ಶಿಕ್ಷಕರಿಂದ/ಅಧಿಕಾರಿಗಳಿಂದ, ಅಂತರ್ಜಾಲದಿಂದ ಪಡೆದುಕೊಂಡು ಬರೆಯಿರಿ.

ಉತ್ತರ:- ಸರಕಾರವು ಅಲೆಮಾರಿ ಜನಾಂಗಗಳಿಗೆ ಹಾಗೂ ಅವರ ಮಕ್ಕಳಿಗೆ ಶಿಕ್ಷಣ ಪಡೆಯಲು ಅನೇಕ ಒಳ್ಳೆಯ ಯೋಜನೆಗಳನ್ನು ತಂದಿದೆ. ಶಿಕ್ಷಣಕ್ಕಾಗಿ ಶಿಷ್ಯವೃತ್ತಿ ವೇತನ ನೀಡಲಾಗುತ್ತದೆ. ಉಚಿತ ಧಾನ್ಯ ಮತ್ತು ಭತ್ತೆಗಳನ್ನು ನೀಡಿ ಅಲೆಮಾರಿ ಜನಾಂಗ ನೆಲೆನಿಂತು ಬದುಕಲು ಅನುಕೂಲಮಾಡಿರುತ್ತದೆ.

 


ಹಳ್ಳಿಯ ಕಸಬುದಾರರು  

ಕೃತಿ: 9 - ಜಾಲಾಕೃತಿಯನ್ನು ಬಿಡಿಸಿರಿ.

              ಡಿಗ                  ನೇಕಾರ               ಕುಂಭಾರ             ಚಮ್ಮಾರ                            ಹೂವಾಡಗಿತ್ತಿ            ಗೌಳಿಗ                ಕಂಭಾರ           ಮಾಂಗ                                                 ಮಾದೀಗ                ತಳವಾರ              ತೇಲಿ.

 

10 - ಕೆಳಗಿನ ಪರಿಚ್ಛೇದದಲ್ಲಿ ಕಂಡುಬರುವ ಗ್ರಾಮ್ಯ ಶಬ್ದಗಳ ಬದಲಿಗೆ ಗ್ರಾಂಥಿ ಶಬ್ದಗಳನ್ನು ಬಳಸಿ ಪರಿಚ್ಛೇದ ಪುನಃ ಬರೆಯಿರಿ.

ಬರ್ರೆವ್ಹಾ ಬರ್ರೀ         .................. ನಮ್ಮವ್ವಗೋಳ್ಯಾಬರ್ರೀ...................... ನಿಮ್ಮ ಕೇರಿಗೆ ಸುಖಾ....... ನಿಮ್ಮ ಊರಿಗೀ ಸುಖಾ......... ಆಡಾ ಮಕ್ಕಳಿಗೆ ಸುಖಾ............................ ತೂಗಾ ......... ತೊಟ್ಟಿಲೀಗಿಸುಖಾ...........   ಬರ್ರೆವ್ಹಾ ಬರ್ರೀ ........... ನಮ್ಮವ್ವಗೋಳ್ಯಾ ಬರ್ರೀ .............. ನಿರಾಕ್ರೀ …….. ಕಾಯಿಒಡೀರಿ………… ಜೋಡಸರ್ರೀ..............

ಉತ್ತರ: ಬನ್ನಿ ಅಮ್ಮ ಬನ್ನಿ.  ನಮ್ಮ ತಾಯಂದಿರಾ, ಬನ್ನಿ. ನಿಮ್ಮ ಊರಿಗೆ, ಕೆರಿಗೆ ಸುಖ ಸಿಗಲಿ. ಆಡುವ ಮಕ್ಕಳಿಗೆ, ತೂಗೋ ತೊಟ್ಟಿಲಲ್ಲಿ ಮಲಗಿರುವ ಕಂದನಿಗೆ ಸುಖ ದೊರೆಯಲಿ. ಬನ್ನಿ ಅಮ್ಮ ಬನ್ನಿ.  ನಮ್ಮ ತಾಯಂದಿರಾ, ಬನ್ನಿ.ದೇವಿಗೆ ನೀರು ಹಾಕಿರಿ, ತೆಂಗಿನ್ ಕಾಯಿ ಒಡೆಯಿರಿ. ಕೈ ಜೋಡಿಸಿ (ಕೈ ಮುಗಿದು) ನಮಸ್ಕಾರ ಮಾಡಿ ಆಶೀರ್ವಾದ ಪಡೆಯಿರಿ.

ಕೃತಿ: 11 - ಕೆಳಗಿನ ಭಿತ್ತಿ ಪತ್ರವನ್ನು ಓದಿ ಅದರ ಕೆಳಗಿನ ಪ್ರಶ್ನೆಗೆ ಉತ್ತರ ಬರೆಯಿರಿ.

 

 

 ಶ್ನೆ 1. ಸರ್ಕಸ್ ಎಲ್ಲಿ ಆಗಮಿಸಿದೆ?

ಉತ್ತರ: ನಗರದ ಆಝಾದ ಮೈದಾನದಲ್ಲಿ ಖ್ಯಾತ ಜಂಬೋ ಸರ್ಕಸ್ ಆಗಮಿಸಿದೆ.

ಪ್ರಶ್ನೆ 2. ದಿನಾಲು ಎಷ್ಟು ಆಟಗಳಿವೆ ?

ಉತ್ತರ : ದಿನಾಲೂ ಮೂರು ಆಟಗಳಿವೆ.

ಪ್ರಶ್ನೆ 3. ಚಿಕ್ಕ ಮಕ್ಕಳಿಗಾಗಿ ಹಾಗೂ ಹಿರಿಯ ನಾಗರಿಕಾಗಿ ಯಾವ ರಿಯಾಯಿತಿ ಇದೆ?

ಉತ್ತರ : ಚಿಕ್ಕ ಮಕ್ಕಳಿಗಾಗಿ ಹಾಗೂ ಹಿರಿಯ ನಾಗರಿಕಾಗಿ ಟಿಕೇಟ ದರದಲ್ಲಿ ಶೇ. 10% ರಿಯಾಯತಿ ಇದೆ.

ಪ್ರಶ್ನೆ 4. ಸರ್ಕಸ್ ಹೆಸರು ಏನು?

ಉತ್ತರ : ಸರ್ಕಸ್ ಹೆಸರು  ಜಂಬೋಸರ್ಕಸ್

                        

 *******************************************************************   

೫. ಅಜ್ಜಿ ಹೇಳಿದ ಕಥೆ

ಶಬ್ದಗಳ ಅರ್ಥ :

ಉಪ್ಪಾರ - ಗೌಂಡಿ; ಬಲಹೀನ - ಶಕ್ತಿ ಕುಂದಿದ, ಬೆರಗು - ಆಶ್ಚರ್ಯ, ಚಿನಿವಾರ - ಅಕ್ಕಸಾಲಿಗ, ಸುರ್ಕಿ- ಸುಣ್ಣಬೆಲ್ಲದ ಮಿಶ್ರಣ

ಅಭ್ಯಾಸ

ಕೃತಿ- 1 ಕೆಳಗಿನ ಜಾಲಾಕೃತಿಯನ್ನು ಬಿಡಿಸಿರಿ.

ಅನುಮಾನದ ಅಪರಾಧಿಗಳು  ಕಾಳ್ಯಾ ಮತ್ತು ಅವನ ಗುಂಪಿನವರು

                                ಉಪ್ಪಾರ ಭೀಮಣ್ಣ

                                ರಾಮಣ್ಣ –ಸುಣ್ಣ ಮತ್ತು ಬೆಲ್ಲದ ಮಿಶ್ರಣ ಮಾಡುವ ವ್ಯಕ್ತಿ

                                ಚೆಂದದ ಸುಂದರ ಹುಡುಗಿ

                                ಚೆನೀವಾರ –ಅಕ್ಕಸಾಲಿಗ

                                ಶಿಕ್ಷೆ ಮಾತ್ರ ಕೊಬ್ಬಿದ ಕೋಣಕ್ಕೆ

ಕೃತಿ - 2 ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1) ರಾಜಸಭೆಯಲ್ಲಿ ಯಾವ ವಿಷಯದ ಕುರಿತು ವಿಚಾರಣೆ ನಡೆದಿತ್ತು?

ಉತ್ತರ : ಒಂದು ರಾತ್ರಿ ಅರಮನೆಯಲ್ಲಿ ಕಳ್ಳತನವಾಗಿತ್ತು. ರಾಜನ ಕೊತ್ವಾಲ ಮೂರು ದಿನಗಳಲ್ಲಿ ಕಳ್ಳರನ್ನು ಹಿಡಿದು ತಂದು ರಾಜನ ಎದುರಿಗೆ ನಿಲ್ಲಿಸಿದ. ರಾಜಸಭೆಯಲ್ಲಿ ಕಳ್ಳತನದ ವಿಷಯವಾಗಿ ವಿಚಾರಣೆ ನಡೆದಿತ್ತು.

2) ಉಪ್ಪಾರ ನೀಡಿದ ವಿವರಣೆ ಏನು?

ಉತ್ತರ : ಉಪ್ಪಾರನು ತಾನು ಭಂಡಾರದ ಗೋಡೆ ಕಟ್ಟಿದ್ದು ನಿಜ ಆದರೆ ಗೋಡೆ ಕಟ್ಟಲು ಬೇಕಾಗುವ ಸುಣ್ಣ ಮತ್ತು ಬೆಲ್ಲದ ಮಿಶ್ರಣದ ಕೆಲಸ ಮಾಡಿದ ರಾಮಣ್ಣ ಸರಿಯಾಗಿ ಮಾಡಿಲ್ಲ ಎಂದು ಹೇಳಿದನು.

3) ಚಿನಿವಾರ ಮಾಡಿದ ತಪ್ಪೇನು?

ಉತ್ತರ : ಚಿನಿವಾರ ಸುಂದರವಾದ ಹುಡುಗಿಯ ಬಂಗಾರದ ಒಡವೆಗಳನ್ನು ಸಮಯಕ್ಕೆ ಸರಿಯಾಗಿ ಕೊಡದೆ ಇವತ್ತು ಬಾ, ನಾಳೆ ಬಾ ಅಂತ ಸತಾಯಿಸ್ತಾ ಇದ್ದನು. 

4) ಕೊನೆಗೆ ಯಾರನ್ನು ತಪ್ಪುಗಾರನನ್ನಾಗಿ ಮಾಡಲಾಯಿತು?

ಉತ್ತರ : ಕೊನೆಗೆ ಒಂದು ಕೊಬ್ಬಿದ ಕೋಣಕ್ಕೆ ತಪ್ಪುಗಾರನನ್ನಾಗಿ ಮಾಡಲಾಯಿತು.

 ಕೃತಿ ೩ ನಿಮಗೆ ಗೊತ್ತಿರುವ ಒಂದು ವಿನೋದ ಪ್ರಸಂಗವನ್ನು ಬರೆಯಿರಿ.

 

 

ಕೃತಿ ೪ ಕಟ್ಟಡ ಕಟ್ಟಲು ಬೇಕಾಗುವ ಸಾಮಗ್ರಿಗಳು ಯಾವುವು?

ಉತ್ತರ: ಕಟ್ಟಡ ಕಟ್ಟಲು ಉಸುಕು, ಕಲ್ಲು, ಸಿಮೆಂಟು, ನೀರು, ಇಟ್ಟಿಗೆಗಳು, ಕಬ್ಬಿಣದ ಸಲಾಕೆಗಳು, ಖಡಿ ಮಣ್ಣು ಇತ್ಯಾದಿಗಳು ಬೇಕಾಗುತ್ತವೆ.

   ************************************************************   

6. ಪರನಾರಿ – ಸಹೋದರ

ಶಬ್ದಗಳ ಅರ್ಥ

ಅರಿಕೆ - ವಿಜ್ಞಾಪನೆ;    ಅಣತಿ- ಆಜ್ಞೆ

ಸಮರ - ಯುದ್ಧ;

ಲೇಸು - ಒಳ್ಳೆಯತನ;

ಅಭ್ಯಾಸ

ಕೃತಿ -1.  ಕೆಳಗಿನ ಜಾಲಾಕೃತಿಯನ್ನು ಪೂರ್ಣ ಗೊಳಿಸಿರಿ.

         ಶಿವಾಜಿ ಮಹಾರಾಜರ ಆಸ್ಥಾನದಲ್ಲಿ  ಉಪಸ್ಥಿತರಿದ್ದವರು

        ಛತ್ರಪತಿ ಶಿವಾಜಿ ಮಹಾರಾಜರು, ಮಂತ್ರಿಗಳು  ಸಾಮಂತರು, ಸೇವಕರು, ಆಬಾಜಿ ಸೋನದೇವ ಮತ್ತು ಬೀಬಿ

ಕೃತಿ-2 ಮಾಹಿತಿ ತುಂಬಿರಿ.

ಅಬಾಜಿಸೋನದೇವ ಹೇಳಿದ ಸಮರ ಸುದ್ದಿ 

1.     ತಾಯಿ ತುಳಜಾ ಭವಾನಿಯ ಕೃಪೆಯಿಂದ ಎಲ್ಲರೂ ಕ್ಷೇಮ

2.    ಕಲ್ಯಾಣಕ್ಕೆ ಹೋಗಿ ದುರಾಚಾರಿ ಮಹಮ್ಮದ ಎದುರಾದಾಗ ಕದನಕ್ಕೆ ಸಿದ್ದರಾದದ್ದು.

3.    ಹೋರಾಟದಲ್ಲಿ ಕಲಿಗಳಂತೆ ಕಾದಿದ್ದು. ಜಯಕಾರದೊಂದಿಗೆ ಮರಳಿದ ಸುದ್ದಿ ಹೇಳಿದನು.

4.   ಅರಮನೆ ಭಂಡಾರ ದೋಚಿ ತಂದಿದ್ದೇವೆ.

5.   ಕಲ್ಯಾಣದಿಂದ ನಗ, ನಾಣ್ಯ ಮುತ್ತು-ರತ್ನಗಳನ್ನು ತಂದಿದ್ದೇವೆ. ಹಾಗೆಯೇ ಅಮೂಲ್ಯ ಸ್ತ್ರೀ ರತ್ನವೊಂದನ್ನು ತಂದಿರುವುದಾಗಿ ಅದನ್ನು ಮಹಾಪ್ರಭು ಸ್ವೀಕರಿಸಬೇಕಾಗಿ ವಿನಂತಿಸಿಕೊಳ್ಳುತ್ತಾನೆ. ಆ ಸ್ತ್ರೀ ರತ್ನ ಕಲ್ಯಾಣದ ಪ್ರಾಂತಾಧಿಕಾರಿ ಮಹಮ್ಮದನ ಮಡದಿ ಬೀಬಿಯಾಗಿರುತ್ತಾಳೆ.

ಕೃತಿ-3 ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1) ಶಿವಾಜಿ ಮಹಾರಾಜರ ಸೈನಿಕರು ಯಾರೊಡನೆ ಯುದ್ಧಮಾಡಲು ಹೋಗಿದ್ದರು?

ಉತ್ತರ : ಶಿವಾಜಿ ಮಹಾರಾಜರ ಸೈನಿಕರು ಕಲ್ಯಾಣದ ಪ್ರಾಂತಾಧಿಕಾರಿ ಮಹಮ್ಮದನ ಜೊತೆಗೆ ಯುದ್ಧ ಮಾಡಲು ಹೋಗಿದ್ದರು.

2) ಆಬಾಜಿ ಸೋನದೇವನು ಕಲ್ಯಾಣದಿಂದ ಏನೇನು ತಂದಿದ್ದನು ?

ಉತ್ತರ : ಆಬಾಜಿ ಸೋನದೇವನು ಕಲ್ಯಾಣದಿಂದ ನಗ, ನಾಣ್ಯ, ಮುತ್ತು-ರತ್ನಗಳನ್ನು ಹಾಗೂ ಮಹಾರಾಜರ ಸೇವೆಗೆಂದು ಕಲ್ಯಾಣದ ಪ್ರಾಂತಾಧಿಕಾರಿ ಮಹಮ್ಮದನ ಮಡದಿ ಬೀಬಿಯನ್ನು ಸ್ತ್ರೀ ರತ್ನವೆಂದು ತಂದಿದ್ದನು.

3) ಶಿವಾಜಿ ಮಹಾರಾಜರು ಬೀಬಿಯನ್ನು ಹೇಗೆ ಸಮಾಧಾನ ಪಡಿಸಿದರು?

ಉತ್ತರ : ಅಳಬೇಡ ತಂಗಿ. ಈತ ಮಾಡಿದ ತಪ್ಪಿಗೆ ನಾನು ಕ್ಷಮೆ ಕೇಳುವೆ. ಹಿಂದೂಗಳು ಧರ್ಮಾಭಿಮಾನಿಗಳು, ಪರನಾರಿ ಸಹೋದರರು. ಇದು ನಿನ್ನ ಅಣ್ಣನ ಮನೆ. ನಿನ್ನ ಗಂಡನ ಬಳಿ ಕಳುಹಿಸುವುದು ನನ್ನ ಧರ್ಮವೆಂದು ಶಿವಾಜಿ ಮಹಾರಾಜರು ಬೀಬಿಯನ್ನು ಸಮಾಧಾನಪಡಿಸಿದ್ದನು.

4) ಆತಿಥ್ಯದ ಕುರಿತು ಮಹಾರಾಜರು ಆಬಾದೇವನಿಗೆ ಏನು ಹೇಳಿದರು?

ಉತ್ತರ : ಶಿವಾಜಿ ಮಹಾರಾಜರು ಬೀಬಿಯನ್ನು ಕಳುಹಿಸಿ ಕೊಡುವಾಗ ಹಿಂದೂ ನಾಡಿನಿಂದ ಹೋಗುವಾಗ ತಂಗಿ ಅಳುತ್ತಾ ಹೋಗಬಾರದು. ನಗು ನಗುತ್ತಾ ಹೋಗಬೇಕು. ಆದ್ದರಿಂದ ಅರಮನೆಯಲ್ಲಿಯ ಹೆಂಗಸರಲ್ಲಿಗೆ ಕರೆದೊಯ್ದು ಯೋಗ್ಯ ಸತ್ಕಾರ ಮಾಡಿ ಕಳುಹಿಸಿರಿ ಎಂದು ಸೋನದೇವನಿಗೆಆಜ್ಞೆ ಮಾಡಿದರು.

5) ನಾಟಕದಿಂದ ತಿಳಿದು ಬರುವ ನೀತಿಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ?

ಉತ್ತರ : ಈ ನಾಟಕದಿಂದ ಛತ್ರಪತಿ ಶಿವಾಜಿ ಮಹಾರಾಜರ ಸ್ತ್ರೀ ವಿಷಯದಲ್ಲಿ ಇರುವ ಬಾಂಧವ್ಯ ಕಂಡು ಬರುತ್ತದೆ. ಅವರು ಪರನಾರಿಯನ್ನು ಸದಾ ತಾಯಿ, ತಂಗಿಯರಂತೆ ನೋಡಿಕೊಳ್ಳುತ್ತಿದ್ದರು. ಸ್ತ್ರೀಯರ ಗೌರವ ಮಾಡುತ್ತಿದ್ದರು.

ಕೃತಿ - 4 ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು?

1) “ಕಲ್ಯಾಣಹೋರಾಟದಲ್ಲಿ ಜಯ ನಮ್ಮದಾಗಿದೆ''

ಉತ್ತರ : ಸೇವಕನು ಶಿವಾಜಿ ಮಹಾರಾಜರಿಗೆ ಹೇಳಿದನು.

2) “ಹಾಗೆಯೇ ಸಂಗಡ ಅಮೂಲ್ಯವಾದ ರತ್ನವೊಂದನ್ನು ತಂದಿದ್ದೇವೆ?”

ಉತ್ತರ : ಆಬಾಜಿ ಸೋನದೇವ ಶಿವಾಜಿ ಮಹಾರಾಜರಿಗೆ ಹೇಳಿದನು.

3) “ಈಕೆ ಶಿವಾಜಿ ಮಹಾರಾಜರ ಸಹೋದರಿ, ಒಡಹುಟ್ಟಿದತಂಗಿ."

ಉತ್ತರ : ಶಿವಾಜಿ ಮಹಾರಾಜರು ಆಬಾಜಿ ಸೋನದೇವನಿಗೆ ಹೇಳಿದರು.

4) “ನೀನು ಪರನಾರಿ ಸಹೋದರನಾಗಿ ಬದುಕು ಅಲ್ಲಾ ಒಳ್ಳೆಯದು ಮಾಡುವನು.

ಉತ್ತರ : ಬೀಬಿಯು ಛ. ಶಿವಾಜಿ ಮಹಾರಾಜರಿಗೆ ಹೇಳಿದಳು.

5) ತಂಗಿ ನನ್ನೊಡನೆ ಬಾ ನಿನ್ನ ಊರಿಗೆ ಮುಟ್ಟಿಸಿ ಬರುವೆನು."

ತ್ತರ : ಆಬಾಜಿ ಸೋನದೇವನು ಬೀಬಿಗೆ ಹೇಳಿದನು.

ಕೃತಿ -5 ಸುಳಿವನ್ನು ಆಧರಿಸಿ ಮಾಹಿತಿ ಬರೆಯಿರಿ,

ಶಿವಾಜಿ ಮಹಾರಾಜರು ಬೀಬಿಯನ್ನು ಕುರಿತು ಹೇಳಿದ ಮಾತುಗಳು

1.     ಈಕೆ ಈ ಶಿವಾಜಿಯ ಸಹೋದರಿ. ಒಡ ಹುಟ್ಟಿದ ತಂಗಿ.

2.   ಹಿಂದೂಗಳು ಧರ್ಮಾಭಿಮಾನಿಗಳು, ಪರನಾರಿ ಸಹೋದರರು. ಇದು ನಿನ್ನ ಅಣ್ಣನ ಮನೆ. ನಿನ್ನ ಗಂಡನ ಬಳಿ ಕಳುಹಿಸುವುದು ನನ್ನ ಧರ್ಮವೆಂದು ಶಿವಾಜಿ ಮಹಾರಾಜರು ಬೀಬಿಯನ್ನು ಕುರಿತು ಹೇಳಿದರು.

ಕೃತಿ 6- ಶಿಕ್ಷಕ/ಪಾಲಕ/ಗ್ರಂಥಾಲಯ ಅಥವಾ ಅಂತರ್ಜಾಲವನ್ನು ಬಳಸಿಕೊಂಡು ಕೆಳಗಿನ ಮಾಹಿತಿ ಬರೆಯಿರಿ.

ಶಿವಾಜಿ ಮಹಾರಾಜರ ಕೋಟೆಗಳು

ದುರ್ಗಕೋಟೆ       ರಾಯಗಡ               ಸಿಂಹಗಡ       ಪ್ರತಾಪ ಗಡ   ತೋರಣಾ ಗಡ

 ****************************************************************   

7. ಅರಣ್ಯ ಸಂಪತ್ತು

ಶಬ್ದಗಳ ಅರ್ಥ

ಕಂಗೊಳಿಸು - ಸುಂದರವಾಗಿಕಾಣು; ಅಪರಿಮಿತ - ಮಿತಿಯಿಲ್ಲದ; ಭರತ -ಕಡಲು ಉಕ್ಕುವ ಸಮಯ;

ಅಭ್ಯಾಸ

ಕೃತಿ: 1- ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1.    ಭೂಮಿಯನ್ನು ವಸುಂಧರೆ ಎಂದು ಕರೆಯಲು ಕಾರಣವೇನು ?

ಉತ್ತರ : ಭೂದೇವಿಯ ಪುಣ್ಯಗರ್ಭದಲ್ಲಿ ಅಸಂಖ್ಯಾತ ವಸ್ತುಗಳು ವಸ್ತುಗಳು ಅಡಗಿರುತ್ತವೆ. ಗಿಡ ಮೂಲಿಕೆಗಳು, ಮರಬಳ್ಳಿಗಳು ಅನೇಕ ಇರುತ್ತವೆ. ಸಾವಿರಾರು ನದಿಗಳು ಈ ಭೂಮಿತಾಯಿ ಹೊಟ್ಟೆಯಲ್ಲಿ ಹುಟ್ಟಿ ಹರಿಯುತ್ತಿವೆ. ಈ ಸಂಪತ್ಸಮೂಹವನ್ನು ಧರಿಸಿರುವುದರಿಂದಲೇ ಭೂಮಿಯನ್ನು ರತ್ನಗರ್ಭೆ, ವಸುಮತಿ ವಸುಂಧರೆ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

2.   ಜಗತಪ್ರಸಿದ್ಧವಾದ ಕಾಡುಗಳು ಎಲ್ಲಿಲ್ಲಿ ಇವೆ?

ಉತ್ತರ : ಅಮೇರಿಕಾದಲ್ಲಿ ಎಮೆಜೋನ್ ನದಿ ಪ್ರದೇಶದ ಮಹಾರಣ್ಯ, ಆಫ್ರಿಕಾದ ಕಾಂಗೋ ನದಿ ಪ್ರದೇಶದ ಮಹಾಟವಿಗಳು, ಭಾರತದ ದಟ್ಟಡವಿಗಳು ಜಗತಪ್ರಸಿದ್ಧವಾಗಿವೆ.

3.   ಗೊಂಡಾರಣ್ಯ ಎಂದರೇನು?

ಉತ್ತರ : ಗಗನವನ್ನು ಮುಟ್ಟಲು ಯತ್ನಿಸುವ ಭಾರಿ ಬೆಲೆಬಾಳುವ ದೈತ್ಯಾಕಾರದ ಮರಗಳು, ಕಡುನಿಬಿಡವಾಗಿ ಬೆಳೆಯುವ ನಾನಾ ಗಾತ್ರದ ಗಿಡಬಳ್ಳಿಗಳು, ಬೆತ್ತಬಿದಿರುಗಳ ಮೆಳೆಗಳು ಬಗೆಬಗೆಯ ಪೊದರುಗಳು ಬೆಳೆಯುವ ಅರಣ್ಯಗಳಿಗೆ ಗೊಂಡಾರಣ್ಯ ಎನ್ನುವರು.

4.   ಮರುಭೂಮಿ ಪ್ರದೇಶದ ಗಿಡಗಳ ವೈಶಿಷ್ಟ್ಯಗಳೇನು?

ಉತ್ತರ : ಮರುಭೂಮಿ ಪ್ರದೇಶವಿರುವ ಪಂಜಾಬಿನಲ್ಲಿ ಕಡಿಮೆ ಮಳೆಯಿಂದ ದಪ್ಪವಾದ ಕಾಂಡಗಳು, ಎಲೆಗಳು ಇರುವ ಗಿಡಗಳಿಂದ ಕೂಡಿದ ಪೊದರುಗಳು ಹಾಗೂ ಗಿಡ್ಡ ಮರಗಳು ತುಂಬಿರುತ್ತವೆ.

5.   ವನ ಮಹೋತ್ಸವದ ಉದ್ದೇಶವೇನು?

ಉತ್ತರ : ಧಾರಳವಾಗಿ ಮಳೆ ಬೀಳುವಂತೆ ಮಾಡಿ ನೀರಿನ ಕೊರತೆಯನ್ನು ನಿಗಿಸುವ, ಹಣ್ಣು ಹಂಪಲು ನೀಡುವ ಸಸ್ಯಗಳ ಮಹತ್ವವನ್ನು ಜನತೆಗೆ ತಿಳಿಸುವುದಕ್ಕಾಗಿ ವನಮಹೋತ್ಸವ, ಸಸಿ ಸಪ್ತಾಹ ಮೊದಲಾದ ಉತ್ಸವಗಳು ಆಚರಿಸಲಾಗುತ್ತದೆ.

ಕೃತಿ: 2 - ಕೆಳಗಿನ ಜಾಲಾಕೃತಿಯನ್ನು ಪೂರ್ಣಗೊಳಿಸಿರಿ.

ಪರಿಸರ ಸಂರಕ್ಷಣೆಯಲ್ಲಿ ಅರಣ್ಯ ಪಾತ್ರ

 ಕೃತಿ: 3 ಪಶ್ಚಿಮ ಘಟ್ಟದ ಕಾಡುಗಳ ವೈಶಿಷ್ಟ್ಯವನ್ನು ಕುರಿತು ನಿಮ್ಮ ಅನಿಸಿಕೆ ಬರೆಯಿರಿ.

ಉತ್ತರ : ಪಶ್ಚಿಮ ಘಟದ ಕಾಡುಗಳಲ್ಲಿ ಗಗನವನ್ನು ಮುಟ್ಟಲು ಯತ್ನಿಸುವ ಭಾರಿ ಬೆಲೆಬಾಳುವ ದೈತ್ಯಾಕಾರದ ಮರಗಳು, ಕಡುನಿಬಿಡವಾಗಿ ಬೆಳೆಯುವ ನಾನಾ ಗಾತ್ರದ ಗಿಡಬಳ್ಳಿಗಳು, ಬೆತ್ತ ಬಿದಿರುಗಳ ಮೆಳೆಗಳು ಬಗೆಬಗೆಯ ಪೊದರುಗಳು ಬೆಳೆಯುವ ಅರಣ್ಯಗಳು ಬೆಳೆಯುತ್ತವೆ.

 ಕೃತಿ: 4 ಜಾಲಾಕೃತಿಯನ್ನು ಪೂರ್ಣಗೊಳಿಸುಸಿರಿ

ದಕ್ಷಿಣ ಭಾರತದಲ್ಲಿ ಬೆಳೆಯುವ ಪ್ರಸಿದ್ಧ ಮರಗಳು: ಸಾಗುವಾನಿ     ಬೀಟೆ          ಹಲಸು

                                         ಹೆಬ್ಬೆಲಸು         ಬಣಪು         ಕಿರಾಲಭೋಗಿ                  ಗಂಧದ ಮರ

ದಕ್ಷಿಣ ಭಾರತದಲ್ಲಿ ಬೆಳೆಯುವ ಪ್ರಸಿದ್ಧ ಮರಗಳು: ದೇವದಾರು     ಮಹಾಗನಿ    

ಕೃತಿ: 5 - ಶಾಮನ ಪ್ರಶ್ನೆಗೆ ಉತ್ತರ ಬರೆಯಿರಿ.

ಸಸ್ಯಜನ್ಯ ತೈಲಗಳು ಯಾವವು?

ಕುಸುಬಿ ಎಣ್ಣೆ, ಸೂರ್ಯಕಾಂತಿ, ಸೋಯಾಬಿನ, ಪುನ್ದಿಪಲ್ಯ ಎಣ್ಣೆ, ನೆಲಗಡಲೆ, ನೀಲಗಿರಿ, ಗಂಧದೆಣ್ಣೆ  ಇತ್ಯಾದಿಗಳು.

ಕೃತಿ: 6 - ಬಿಟ್ಟ ಸ್ಥಳ ತುಂಬಿರಿ

1) ಭಾರತದಲ್ಲಿ ಸುಮಾರು                  ರಷ್ಟು ಭಾಗದಲ್ಲಿ ಮಾತ್ರ ಅರಣ್ಯಗಳಿವೆ.

2) ವಸಂತ ಕಾಲವು ಬಂದೊಡನೆ ಸಸ್ಯಗಳೆಲ್ಲ ಚಿಗುರಿ ನವ ಚೈತನ್ಯ ಪಡೆಯುತ್ತವೆ.  

3) ಕಾಗದ ರೇಯನ್ ಮೊದಲಾದವು ಸಸ್ಯಲೋಕದ ಕೊಡುಗೆಗಳು.

4) ................ಆರ್ಥಿಕ ಲಾಭವೂ ದೊರಕುತ್ತದೆ.

5) ಅರಣ್ಯ ವಿಜ್ಞಾನದ ವಿದ್ಯಾಲಯಗಳು ಡೆಹ್ರಾಡೂನ್   ಮತ್ತು ಕೋಹಿಮತ್ತೂರ ದಲ್ಲಿವೆ.

 

ಕೃತಿ: 10 - ಶಾಲೆಯ ಪರಿಸರದಲ್ಲಿ ವೃಕ್ಷಾರೋಪಣಮಾಡಲು ಸಸಿಗಳನ್ನು ಕೋರಿ ಕೃಷಿ ಅಧಿಕಾರಿಗಳಿಗೆ ಒಂದು ವಿನಂತಿ ಪತ್ರವನ್ನು ಬರೆಯಿರಿ.

                                    ಪತ್ರ ಲೇಖನ

ದಿನಾಂಕ: ೨೪/೦೧/೨೦೨೩

ಇವರಿಗೆ,

ಮಾ. ಕೃಷಿ ಅಧಿಕಾರಿಗಳು,

ತಾಲುಕಾ ಅಕ್ಕಲಕೋಟ.

ವಿಷಯ: ವೃಕ್ಷಾರೋಪಣೆ ಮಾಡಲು ಸಸಿಗಳನ್ನು ಪೂರೈಕೆ ಮಾಡುವ ಕುರಿತು ವಿನಂತಿ ಪತ್ರ.

ಅರ್ಜಿದಾರರು:೮ನೇ ತರಗತಿಯ ವಿದ್ಯಾರ್ಥಿಗಳು ಜಿ.ಪ.ಪ್ರಾಥಮಿಕ ಕನ್ನಡ ಶಾಲೆ ಬಬಲಾದ

        ಮಾನ್ಯರೇ,  

                ಈ ಪತ್ರದ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ ನಮ್ಮ ಶಾಲೆಯ ಪರಿಸರದಲ್ಲಿ ಹಾಗೂ ಊರಿನ ಪರಿಸರದಲ್ಲಿ ಈ ವರ್ಷ ವೃಕ್ಷಾರೋಪಣೆ ಮಾಡುವ ಸಂಕಲ್ಪ ಮಾಡಿದ್ದೇವೆ. ಆದ್ದರಿಂದ ತಾವು ದಯವಿಟ್ಟು ನಮ್ಮ ಶಾಲೆಯ ವಿಳಾಸಕ್ಕೆ ೧೦೦ ವಿವಿಧ ಗಿಡಗಳ ಸಸಿಗಳನ್ನು ಪೂರೈಕೆ ಮಾಡಬೇಕಾಗಿ ವಿನಂತಿ ಇರುತ್ತದೆ.

        ಧನ್ಯವಾದಗಳೊಂದಿಗೆ,       

                                                                ಇಂತಿ ವಿದ್ಯಾರ್ಥಿಗಳು,

                                                                   ೮ನೇ ತರಗತಿ

                          8. ಗೆಲೇಲಿಯೋ

ಕೃತಿ -1 . ಗೆಲೇಲಿಯೋ ಇವರ ಸಿದ್ಧಾಂತಗಳನ್ನು ಬರೆಯಿರಿ.

ಉತ್ತರ: ದೀಪವು ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಿ ತಿರುಗಿ ಮೊದಲಿನ ಸ್ಥಳಕ್ಕೆ ಬರಲು ಹಿಡಿಯುವ ವೇಳೆಯು ಯಾವಾಗಲೂ ಸಮಾನವಾಗಿರುತ್ತದೆ ಎಂಬುದು ಗೆಲೆಲಿಯೋನ ಸಿದ್ಧಾಂತವಾಗಿತ್ತು.   

ಕೃತಿ -2. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1)     ಗೆಲೇಲಿಯೋನ ಬಾಲ್ಯದ ಹವ್ಯಾಸಗಳು ಯಾವುವು?

ಉತ್ತರ : ಗೆಲೇಲಿಯೋನಿಗೆ ಬಾಲ್ಯದಲ್ಲಿ ಯಂತ್ರಗಳಲ್ಲಿ ಹೆಚ್ಚು ಆಸಕ್ತಿ ಇತ್ತು. ಸಣ್ಣ ಸಣ್ಣ ಯಂತ್ರಗಳನ್ನು ಬಿಚ್ಚಿ ಜೋಡಿಸುತ್ತಿದ್ದನು.  ಅವನಿಗೆ ಗಣಿತ ವಿಷಯ ಹೆಚ್ಚು ಸೇರುತ್ತಿತ್ತು.

   2) ಗೆಲಿಲಿಯೊ ಪೀಸಾ ನಗರದ ಗೋಪುರದ ಬಳಿ ಯಾವ ಕೃತಿ ಮಾಡಿದನು?

ಉತ್ತರ : ಮೇಲಿನಿಂದ ಕೆಳಗೆ ಬೀಳುವ ವಸ್ತು ಭಾರವಾಗಿರಲಿ ಹಗುರವಾಗಿರಲಿ ಅವುಗಳಿಗೆ ಗಾಳಿಯ ಒತ್ತಡ ಸಮಾನವಿದ್ದರೆ ಅವು ಒಂದೇ ವೇಗದಿಂದ ಕೆಳಗೆ ಬೀಳುವವು ಎಂಬ ಸಿದ್ಧಾಂತವನ್ನು ಜನರಿಗೆ ತೋರಿಸಲು ಗೆಲೇಲಿಯೋ ಪಿಶಾ ನಗರದ ಓಲು ಗೋಪುರದ ತುದಿಗೆ ಹೋಗಿ ಅಲ್ಲಿಂದ ಒಂದು ಪೌಂಡು ಮತ್ತು ನೂರು ಪೌಂಡು ತೂಕದ ಎರಡು ಗುಂಡುಗಳನ್ನು ಒಂದೇ ವೇಳೆಗೆ ಕೆಳಗೆ ಉರಿಸಿದನು. ಎರಡೂ ಗುಂಡುಗಳು ಒಂದೇ ಸಮಯದಲ್ಲಿ ನೆಲವನ್ನು ಮುಟ್ಟಿದವು.

3) ಗೆಲಿಲಿಯೊ ರಚಿಸಿದ ಯಂತ್ರ ಯಾವುದು?

ಉತ್ತರ : ಗೆಲೇಲಿಯೋ ನಕ್ಷತ್ರಗಳನ್ನು ವೀಕ್ಷಿಸಲು ದೂರದರ್ಶಕ (ದುರ್ಬೀನ್) ಯಂತ್ರವನ್ನು ತಯಾರಿಸಿದನು.

4) ಬೈಬಲ್ನಲ್ಲಿ ಹೇಳಿದ ವಿಚಾರ ಯಾವುದು ?

ಉತ್ತರ : ಸೂರ್ಯ ಹುಟ್ಟುತ್ತಾನೆ ಭೂಮಿಯನ್ನು ಸುತ್ತಿ, ಮುಳುಗಿ ಮತ್ತೆ ಹುಟ್ಟುತ್ತಾನೆ ಎಂಬುದು ಬೈಬಲನಲ್ಲಿ ಹೇಳಿದೆ.

5) ಧರ್ಮಗುರುಗಳು ಸಂತಾಪಗೊಳ್ಳಲು ಕಾರಣವೇನು ?

ಉತ್ತರ : ಸೂರ್ಯ ಹುಟ್ಟುತ್ತಾನೆ ಭೂಮಿಯನ್ನು ಸುತ್ತಿ, ಮುಳುಗಿ ಮತ್ತೆ ಹುಟ್ಟುತ್ತಾನೆ ಎಂಬುದು ಬೈಬಲನಲ್ಲಿ ಹೇಳಿದ ವಿಚಾರವನ್ನು ಖಂಡಿಸಿ ಗೆಲೇಲಿಯೋ ಇದು ತಪ್ಪು ಸೂರ್ಯ ಹುಟ್ಟುವುದೂ ಇಲ್ಲ ಮತ್ತು ಮುಳುಗುವುದೂ ಇಲ್ಲ ತೋರಿಕೆಗೆ ಹಾಗೆ ಕಂಡರೂ ಭೂಮಿಯೇ ತಿರುಗುತ್ತದೆ ಎಂದು ಹೇಳಿದಾಗ ಧರ್ಮಗುರುಗಳು ಸಂತಾಪಗೊಂಡರು.

ಕೃತಿ: 3 - ಬಿಟ್ಟ  ಸ್ಥಳ ತುಂಬಿರಿ.

1.    ಗೆಲಿಲಿಯೊ ಇಟಲಿಯ ಪೀಸಾನಗರದ ಶ್ರೀಮಂತ ಕುಟುಂಬದಲ್ಲಿ ಕ್ರಿ.ಶ.1564 ರಲ್ಲಿ ಜನಿಸಿದನು.

2.   ಆಂದೋಲಕದ ಕಲ್ಪನೆ ತಲೆದೋರಿ ಗಡಿಯಾರ ನಿರ್ಮಾಣವಾಗಲು ಅನುಕುಲವಾಯಿತು.

3.   ಬಾಲ್ಯದಿಂದಲೂ ಗೆಲಿಲಿಯೊನಿಗೆ ನಕ್ಷತ್ರಗಳನ್ನುನೋಡುವುದರಲ್ಲಿ ಬಹಳ ಆಸಕ್ತಿ.

4.   ನಕ್ಷತ್ರಗಳನ್ನು ನೋಡುವ ಆಶೆ ಅಂದಿಗೆ ಅಳಿಸಿ ಹೋಯಿತು.

5.   ಎಲ್ಲಾ ದೇಶಗಳೂ ಅವನನ್ನು ಜ್ಯೋತಿಷಶಾಸ್ತ್ರದ ಪಿತಾಮಹನೆಂದು ಗೌರವಿಸುತ್ತಿವೆ.

ಕೃತಿ: 4 - ಗುಂಪಿಗೆ ಸೇರದ ಶಬ್ದಗಳನ್ನು ಗುರುತಿಸಿರಿ.

1.  1. ನ್ಯೂಟನ್               2. ಮಾರ್ಕ್ಕೊನಿ       3. ಗೆಲಿಲಿಯೊ         4. ಕುವೆಂಪು         

ಉತ್ತರ: ಕುವೆಂಪು

2) 1. ಮಂಗಳ        2. ಬುಧ               3. ಗುರು               4. ಚಂದ್ರ

ಉತ್ತರ: ಚಂದ್ರ

ಕೃತಿ: 5 - ಕೆಳಗಿನ ವಾಕ್ಯಗಳಲ್ಲಿ ಗೆರೆ ಹೊಡೆದ ಶಬ್ದದ ವಿರುದ್ಧಾರ್ಥಕ ಶಬ್ದಗಳನ್ನು ಬಳಸಿ ಅರ್ಥಕೆದಂತೆ ವಾಕ್ಯ ರಚಿಸಿರಿ.

1) ಗೆಲಿಲಿಯೊ ಒಳ್ಳೆಯ ಮಾತುಗಳನ್ನೇ ಹೇಳಿದನು.

ಉತ್ತರ :ಗೆಲೇಲಿಯೋ ಕೆಟ್ಟ ಮಾತುಗಳನ್ನು ಹೇಳಲಿಲ್ಲ.

2) ರಾತ್ರಿಯಲ್ಲಿ ನಕ್ಷತ್ರಗಳು ಮಿನುಗುತ್ತವೆ.

ಉತ್ತರ : ಹಗಲಿನಲ್ಲಿ ನಕ್ಷತ್ರಗಳು ಮಿನುಗುವುದಿಲ್ಲ.

ಕೃತಿ: 6 - ದೂರದರ್ಶಕ ಯಂತ್ರವನ್ನು ತಯಾರಿಸಲು ಪ್ರಯತ್ನಿಸಿರಿ.

  ****************************************************************   

9 . ಪ್ರಜ್ಞಾವಂತ ಪ್ರಜೆ

 ಶಬ್ದಗಳ ಅರ್ಥ

ಕುರುಹು – ಗುರುತು; ಆಧುನಿಕ – ಇಂದಿನ; ಜೀವಚ್ಛವ - ಇದ್ದೂ ಇಲ್ಲದಂತೆ

ಅಭ್ಯಾಸ

ಕೃತಿ: 1 ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1. ಪ್ರಜೆಯಾದವನ ಜವಾಬ್ದಾರಿಯ ಪರಿಕಲ್ಪನೆಗಳಾವವು?

ಉತ್ತರ :ಆಧುನಿಕ ಸಮಾಜದಲ್ಲಿ ಪ್ರಜೆಯಾದವನು ತನ್ನ ಜವಾಬ್ದಾರಿಯ ಪರಿಕಲ್ಪನೆಗಳನ್ನು ತಿಳಿದುಕೊಳ್ಳಬೇಕು. ಕರ್ತವ್ಯ, ಉತ್ತಮ ವರ್ತನೆ, ನಿಸ್ವಾರ್ಥತೆ ಮತ್ತು ಸಾಮುದಾಯಿಕ ಜೀವನದ ಜವಾಬ್ದಾರಿಗಳು ಸ್ವೀಕಾರ ಮಾಡುವುದು ಪ್ರಜ್ಞಾವಂತ ಪ್ರಜೆಯ ಕಲ್ಪನೆಗೆ ಬುನಾದಿಯಾಗಿವೆ.

2. ರಾಷ್ಟ್ರೀಯ ಅಭಿವೃದ್ಧಿಯ ಗುರಿಯನ್ನು ಯಾವಾಗ ಸಾಧಿಸಬಹುದು?

ಉತ್ತರ :ನಮ್ಮನ್ನು ನಾವು ವಿಶ್ವಕುಟುಂಬ ಅಥವಾ ಸಮುದಾಯ ಸದಸ್ಯರಾಗಿ ಭಾವಿಸಿ ಅದಕ್ಕನುಸಾರವಾಗಿ ವರ್ತಿಸಿ, ಜಗತ್ತಿನಿಂದ ನಮಗೆ ಅಗತ್ಯವಿರುವುದನ್ನು ಮಾತ್ರ ತೆಗೆದುಕೊಂಡು ನಮ್ಮ ಸಾಮರ್ಥ್ಯವಿರುವಷ್ಟು ಕೊಡುಗೆಗಳನ್ನು ಜಗತ್ತಿಗೆ ನೀಡಿದರೆ ಮಾತ್ರ  ನಾವು ರಾಷ್ಟ್ರೀಯ ಅಭಿವೃದ್ಧಿಯ ಗುರಿಯನ್ನು ಸಾಧಿಸಬಹುದು.

3. ಸೇವೆ ಎಂದರೇನು?

ಉತ್ತರ :ಅಗತ್ಯವಿರುವ ಜನರಿಗೆ ಅರ್ಥಪೂರ್ಣವಾದ ಸಹಾಯವನ್ನು ಮಾಡುವ ಕಾರ್ಯವೇ ಸೇವೆ.  ಯಾವ ಫಲವನ್ನು ಅಪೇಕ್ಷಿಸದೇ ನಿಸ್ವಾರ್ಥತೆಯಿಂದ ಸಹಾಯ ಮಾಡಬೇಕು.

4. ಪರಿಸರದ ವಿಷಯದಲ್ಲಿ ನಾವು ಹೇಗಿರಬೇಕು?

ಉತ್ತರ : ನಮ್ಮ ಮನೆಯ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ತೋಟಗಾರಿಕೆ ಮಾಡಿ ಆ ಸ್ಥಳವನ್ನು ಸೌಂದರ್ಯದಿಂದ ಸಮೃದ್ಧಗೊಳಿಸಿಸಬೇಕು.  

ಕೃತಿ: 2 ಕೆಳಗಿನ ಜಾಲಾಕೃತಿಯನ್ನು ಪೂರ್ಣಗೊಳಿಸಿರಿ.

ಅಮೂಲ್ಯವಾದ ಭಾವನಿಕ ಕಾಣಿಕೆಗಳು

ಪ್ರೀತಿ ಸ್ಫೂರ್ತಿ        ಕರುಣೆ             ಪ್ರೋತ್ಸಾಹ    ಕ್ಷಮೆ   ಉತ್ತಮ ಆಲೋಚನೆಗಳು  ಆದರ್ಶ

ಕೃತಿ; 3 ರಸ್ತೆಯಲ್ಲಿ ನರಳುತ್ತಿರುವ ವ್ಯಕ್ತಿಯನ್ನು ಕಂಡಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ರೆಯಿರಿ.

ಉತ್ತರ :- ರಸ್ತೆಯಲ್ಲಿ ವ್ಯಕ್ತಿ ನರಳುತ್ತಿರುವುದನ್ನು ಕಂಡರೆ ಮನಸ್ಸಿಗೆ ನೋವಾಗುತ್ತದೆ. ಆ ವ್ಯಕ್ತಿಯ ಬಗ್ಗೆ ಕನಿಕರ ಹುಟ್ಟುತ್ತದೆ. ಅವನ ಸಮಸ್ಯೆ ಅಳಿಸಿಕೊಂಡು ಪರಿಹಾರ ಹುಡುಕಲು ನೆರವಾಗುತ್ತೇನೆ.

ಕೃತಿ: 4 ಬಿಟ್ಟ ಸ್ಥಳ ತುಂಬಿರಿ.

1) ಆಧುನಿಕ ಸಮಾಜದಲ್ಲಿ ಪ್ರಜೆಯಾದವನು ತನ್ನ ಜವಾಬ್ದಾರಿಯ ಪರಿಕಲ್ಪನೆಯನ್ನು ತಿಳಿದುಕೊಳ್ಳಬೇಕು.

2) ತ್ಯಾಗವಿಲ್ಲದ ಸೇವೆಯು ಭಕ್ತಿಯಿಲ್ಲದ ಪ್ರಾರ್ಥನೆಯಂತೆ.

3) ಸಾಮಾಜಿಕ ಸೇವೆಯ ಹಿಂದೆ ವೈಯಕ್ತಿಕ ಲಾಭ ಅಥವಾ ಅಧಿಕಾರದ ಆಸೆ ಇರಬಾರದು.

4) ಒಳ್ಳೆಯ ಪ್ರಜೆಗಳಾಗಿ ಇತರರ ಜೀವನವನ್ನು ಸಂತೋಷಕರವನ್ನಾಗಿಸಲು ಮಾಡಲು ನಾವು ಶ್ರಮಿಸಬೇಕು

5)ಸ್ವಾವಲಂಬಿಗಳಾಗಿರಲು ವಿದೇಶಗಳ ಸಾಧನೆಗಳನ್ನು ಅಧ್ಯಯನಮಾಡಿ ಕಲಿಯಬೇಕು

ಕೃತಿ: 5 ವೈಶಾಲಿಯ ಸಮಸ್ಯೆಗೆ ಪರಿಹಾರ ಹೇಳಿರಿ.  

ನಾನು  ಅರ್ಥಪೂರ್ಣಸೇವೆ ಹೇಗೆ ಮಾಡಬಹುದು? 
ಉತ್ತರ: 

 ಕೃತಿ 6- ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸಂದರ್ಭದಲ್ಲಿ ಪ್ರಜ್ಞಾವಂತ ಪ್ರಜೆಯಾಗಿ ನೀವೇನು ಮಾಡಬಲ್ಲಿರಿ ನಿಮ್ಮ ಮನೋಗತವನ್ನು ವ್ಯಕ್ತಪಡಿಸಿರಿ.

ಉತ್ತರ :

ಕೃತಿ: 7 ಪ್ರಜ್ಞಾವಂತ ಪ್ರಜೆಯಾಗಿ ಬೇಠಿಬಚಾವೊ ಉಪಕ್ರಮವನ್ನು ಹೇಗೆ ಪ್ರಸಾರ ಮಾಡಬಲ್ಲಿರಿ  ಎಂಬುದನ್ನು 10 ಸಾಲುಗಳಲ್ಲಿ ಬರೆಯಿರಿ.

ಉತ್ತರ :

 

ಕೃತಿ: 8 ಕೆಳಗಿನ ಅಂಶಗಳ ಆಧಾರದಿಂದ ಕಥೆ ಪೂರ್ಣ ಮಾಡಿರಿ.

       ಒಂದು ಕಾಡು..... ಕೊಳದಲ್ಲಿ ಆಮೆ ಚಿಗರೆ ಇಲಿ ಗೆಳೆಯರು..... ಬೇಟೆಗಾರ ಆಮೆಯನ್ನು ಹಿಡಿದ

ಗೋಣಿಚೀಲದಲ್ಲಿ ಹಾಕುವುದು.......... ಗೆಳೆಯರು. ಆಮೆಯನ್ನು ಉಳಿಸಲು ಉಪಾಯ.........

ಬೇಡನ ಮುಂದೆ ಮುಂದೆ ಓಡುವುದು,

....... ಬೇಟೆಗಾರ ಆಮೆಯನ್ನು ಅಲ್ಲಿಯೇ ಬಿಟ್ಟು

ಇತ್ತ ಇಲಿ ಗೋಣಿಚೀಲ ಕತ್ತರಿಸುವಿಕೆ......... ಆಮೆಯನ್ನು ಮುಕ್ತಗೊಳಿಸುವುದು ಆಮೆ ಕೊಳಸೇರುತ

ಚಿಗರೆ ಓಡಿಹೋಗುವುದು...

ಬೇಟೆಗಾರ ನಿರಾಶೆ ಗೆಳೆಯರಾಗಿ ಕೊಡಿ ಬಾಳುವಿಕೆ.

ಗೆಳೆತನ

        ಒಂದು ಕಾಡಿನಲ್ಲಿ ಚಿಗರೆ ಕೊಳದಲ್ಲಿ ಇರುವ ಆಮೆ ಮತ್ತು ಇಲಿ ಇವು ಮೂವರು ಗೆಳೆಯರು ಇರುತ್ತಾರೆ. ಒಮ್ಮೆ ಒಬ್ಬ ಬೇಟೆಗಾರ ಕೊಳದಿಂದ ಅಮೆಯನ್ನು ಹಿಡಿದು ತನ್ನ ಗೋಣಿಚೀಲದಲ್ಲಿ ಹಾಕಿಕೊಂಡು ಮನೆಗೆ ಹೊರಡುತ್ತಾನೆ. ಗೆಳೆಯರಿಬ್ಬರಿಗೂ ದು:ಖ ವಾಗುತ್ತದೆ. ಅವು ತಮ್ಮ ಗೆಳೆಯನನ್ನು ಉಳಿಸಲು ಉಪಾಯ ಮಾಡುತ್ತಾರೆ. ಚಿಗರೆ ಬೇಟೆಗಾರನ ಎದುರಿಗೆ ಸ್ವಲ್ಪವೇ ಅಂತರದಲ್ಲಿ ಒಡತೊಡಗುತ್ತದೆ. ಆಗ ಬೇಟೆಗಾರನು ಗೋಣಿಚೀಲ ಕೆಳಗಿಟ್ಟು ಚಿಗರೆಯ ಬೆನ್ನಟ್ಟುವನು. ಆಗ ಇಲಿ ಬಂದು ಅಮೆಗೆ ಕಟ್ಟಿರುವ ದರವನ್ನು ತನ್ನ ಹಲ್ಲಿನಿಂದ ಕಡಿದು ಅಮೆಯನ್ನು ಮುಕ್ತಗೊಳಿಸುತ್ತದೆ. ಆಮೆ ಕೊಳದಲ್ಲಿ ಹೋಗಿ ಬಿಡುತ್ತದೆ. ಚಿಗರೆ ಓಡಿ ಹೋಗುತ್ತದೆ. ಬೇಟೆಗಾರನಿಗೆ ಇಟ್ಟ ಅಮೆಯೂ ಸಿಗುವುದಿಲ್ಲ ಅತ್ತ ಚಿಗರೆ ಕೂಡ ಸಿಗದೇ ನಿರಾಶನಾಗಿ ಮನೆಗೆ ಹಿಂತಿರುಗುತ್ತಾನೆ. ಗೆಳೆಯರು ಸಂತೋಷದಿಂದ ಕೂಡಿ ಬಾಳುತ್ತಾರೆ.

ತಾತ್ಪರ್ಯ:- ಒಕ್ಕಟೇ ಬಲ  

  ****************************************************************   

1.    ರೆಡ್ ಕ್ರಾಸ್ ಸಂಸ್ಥೆ

ಶಬ್ದಗಳ ಅರ್ಥ

ಕಳೇಬರ - ;  ಅಸುನೀಗು - ಮರಣಹೊಂದು;  ದಾರುಣ - ಭಯಂಕರ; ಸಮರ - ಯುದ್ಧ;

ಅಭ್ಯಾಸ

ಕೃತಿ: 1) ಕೆಳಗಿನ ಜಾಲಾಕೃತಿಯನ್ನು ಪೂರ್ಣಮಾಡ

  


 ಕೃತಿ: 2) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1) 1859ನೇ ಇಸವಿಯಲ್ಲಿ ಸೋಲ್ ಫೆರಿನೋ ಪ್ರಾಂತದಲ್ಲಿ ಯಾವ ಅನಾಹುತವಾಗಿತ್ತು.

ಉತ್ತರ: 1859ನೇ ಇಸವಿಯಲ್ಲಿ ಸೋಲ್ ಫೆರಿನೋ ಪ್ರಾಂತದಲ್ಲಿ ಆಷ್ಟ್ರೀಯಾ ಹಾಗೂ ಫ್ರೆಂಚ್ ಇಟಲಿ ಈ ದೇಶಗಳ ನಡುವೆ ಭೀಕರವಾದ ಯುದ್ಧ ನಡೆದಿತ್ತು. ಈ ಯುದ್ಧದಲ್ಲಿ ಸಾವಿರಾರು ಜನರು ಆಸು ನೀಗಿದರು. ಕಳೇಬರಗಳ ಮಧ್ಯದಲ್ಲಿ ಬಿದ್ದು ನರಳುತ್ತಿರುವವರ ಸಂಖ್ಯೆ ಅದಕ್ಕಿಂತಲೂ ಹೆಚ್ಚಾಗಿತ್ತು.

2) ಹೆಡ್ಯೂನಾನ್ ಹೃದಯ ಕರಗಿಸಿದ ಸಂಗತಿಗಳು ಯಾವುದು?

ಉತ್ತರ: ಯುದ್ಧದಲ್ಲಿ ಸಿಲುಕಿ ಪ್ರಾಣ ಕಳೆದವರನ್ನು ನೋಡಿ, ಪ್ರಾಣಾಂಚಿನಲ್ಲಿ ಸಿಲುಕಿದವರನ್ನು ನೋಡಿ ಬಾಳಿನ ಅಸಹಾಯಕ ಸ್ಥಿತಿಯಲ್ಲಿ ತೊಳಲಾಡುತ್ತಿದ್ದ ಬಂಧುಗಳ ಆಕಾಂಕ್ಷೆಯನ್ನು ಹೆನ್ರಿ ಡ್ಯೂನಾನ ಅರಿತನು. ಅವರ ದು:ಖದ ಆಳವನ್ನು ಹೆನ್ರಿಯವರ ಹೃದಯ ಕರಗಿಸಿದವು. 

3) ಹೆನ್ರಿಡ್ಯೂನಾನ್ ರಚಿಸಿದ ಸ್ವಯಂ ಸೇವಕರಲ್ಲಿ ಯಾರು ಯಾರು ಇದ್ದರು ?

ಉತ್ತರ: ಹೆನ್ರಿಡ್ಯೂನಾನ್ ರಚಿಸಿದ ಸ್ವಯಂ ಸೇವಕರಲ್ಲಿ ಬ್ರಿಟಿಷ್ ಪ್ರವಾಸಿಗರೂ, ಒಬ್ಬ ಇಟಲಿಯ ಗುರು, ಮೂವರು ಆಷ್ಟ್ರೀಯಾದ ವೈದ್ಯರು ಇದ್ದರು.

4) ಜಿನೇವಾ ಸಮ್ಮೇಳನದಲ್ಲಿ ಯಾವ ನಿರ್ಣಯ ಕೈಗೊಳ್ಳಲಾಯಿತು?

ಉತ್ತರ: ಜಿನೇವಾ ಸಮ್ಮೇಳನದಲ್ಲಿ ಯುದ್ಧಪಿಡಿತ ಮತ್ತು ಅಸಹಾಯ ಸೈನಿಕರ ಯೋಗಕ್ಷೇಮವನ್ನು ಕುರಿತು ಚರ್ಚಿಸಲಾಯಿತು. ಇದರ ಫಲವಾಗಿ ಎಲ್ಲ ರಾಷ್ಟ್ರಗಳಲ್ಲೂ ಆರ್ತರ ಶುಶ್ರೂಷೆಗಾಗಿ ಸಮರ್ಥವಾದ ಸ್ವಯಂಸೇವಕರ ದಳವನ್ನು ನಿರ್ಮಿಸಬೇಕೆಂಬ ನಿರ್ಣಯ ಕೈಕೊಳ್ಳಲಾಯಿತು.

5) ರೆಡ್ಕ್ರಾಸ್ ಸಂಸ್ಥೆಯ ಧೈಯವನ್ನು ಸ್ಪಷ್ಟ ಪಡಿಸಿರಿ.

ಉತ್ತರ:ಅಂತರರಾಷ್ಟ್ರೀಯಯ ರೆಡ್ ಕ್ರಾಸ್ ಸಂಸ್ಥೆಯು ಯಾವುದೇ ರೀತಿಯ ಸಾಮಾಜಿಕ, ಜಾತಿಯ, ಆರ್ಥಿಕ ಹಾಗೂ ರಾಜಕೀಯ ಭೇದಭಾವವಿಲ್ಲದೆ ಯುದ್ಧಸಂತ್ರಸ್ತರಾದ ಸೈನಿಕರಿಗೆ ಅವಶ್ಯಕವಾದ ಸಹಾಯವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಮಾತ್ರವಲ್ಲ ಶಾಂತಿಕಾಲದಲ್ಲೂ ಭೂಕಂಪ, ಬೆಂಕಿಯ ಅನಾಹುತ, ನೆರೆಯ ಉಪಟಳ, ಸಾಂಕ್ರಾಮಿಕ ರೋಗಗಳ ಹಾವಳಿ ಮುಂತಾದ ಸಂಕಷ್ಟದ ಸನ್ನಿವೇಶಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಮಾನವ ಸಮುದಾಯದ ಸೇವೆಗಾಗಿ ಸರ್ವದಾ ಸಿದ್ಧವಿರುತ್ತದೆ.

ಕೃತಿ: 3 - ಕೆಳಗಿನ ಚಿತ್ರವನ್ನು ನೋಡಿರಿ ಯೋಗ್ಯವಾದ ಉತ್ತರ ಬರೆಯಿರಿ.

1) ಜಾಗತಿಕ ರೆಡ್ಕ್ರಾಸ್ ದಿನವನ್ನು ಮೇ 8 ರಂದೇ ಏಕೆ ಆಚರಿಸುತ್ತಾರೆ?

ಉತ್ತರ:- ರೆಡ್ ಕ್ರಾಸ್ದಂತಹ ವಿಶ್ವಾವ್ಯಾಪಿಯಾದ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದ ಹೆನ್ರಿಡ್ಯೂನಾನ್ ಅವರ ಸ್ಮರಣೆಗೋಸ್ಕರ ಅವರ ಜನ್ಮದಿನವಾದ 8 ಮೇ ತಾರೀಕವನ್ನೇ ರೆಡ್ ಕ್ರಾಸ್ ದಿನ ಎಂದು ಅಚ್ಚರಿಸುತ್ತೇವೆ.

2) ಎಳೆಯರ ಶಾಖೆಯ ಉದ್ದೇಶಗಳು ಯಾವುವು?

ಉತ್ತರ:- 1917 ರಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಎಳೆಯರ ಶಾಖೆಯು ಸ್ಥಾಪನೆಯಾಯಿತು. ಚಿಕ್ಕ ಮಕ್ಕಳಲ್ಲಿ ಪರಸ್ಪರ ಸಹಕಾರ, ಸೇವಾ ಮನೋಧರ್ಮ ಮತ್ತು ಶಾಂತಿ ಸೌಹಾರ್ದಗಳನ್ನು ಬೆಳೆಸುವುದೇ ಈ ಶಾಖೆಯ ಉದ್ದೇಶವಾಗಿದೆ. ನಮ್ಮ ಭಾರತ ದೇಶದಲ್ಲಿ ರೆಡ್ ಕ್ರಾಸ್ ಸಂಸ್ಥೆಯು 1920 ಕ್ಕೆ ಅಸ್ತಿತ್ವಕ್ಕೆ ಬಂದಿತು.

3) ಅವಯವ ದಾನ ಎಂದರೇನು? ಅವಯವ ದಾನ ಏಕೆ ಮಾಡಬೇಕು?

ಉತ್ತರ:-ಅಗತ್ಯವಿದ್ದವರಿಗೆ ಅಥವಾ ಗಾಯಗೊಂಡವರಿಗೆ  ಹೃದಯ, ರಕ್ತ,  ಕಣ್ಣು  ದಾನ ಮಾಡಲಾಗುವುದು ಇದಕ್ಕೆ ಅವಯವದಾನ ಎನ್ನುವರು. 

ಕೃತಿ – 4 ಕೆಳಗಿನ ಶಬ್ದಗಳ ಸಹಾಯ ಪಡೆದು ಅರ್ಥಪೂರ್ಣ ವಾಕ್ಯ ತಯಾರಿಸಿರಿ.

ಅಂತರರಾಷ್ಟ್ರೀಯ ಶುಶ್ರೂಷೆ: ರೆಡ್ ಕ್ರಾಸ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಔಷಧೋಪಚಾರ ಮಾಡುತ್ತದೆ. ಇದಕ್ಕೆ ಅಂತರರಾಷ್ಟ್ರೀಯ  ಶುಶ್ರೂಷೆ ಎನ್ನುವರು.

ನಿರ್ಧಾರ:- ಯಾವುದೇ ಕೆಲಸ ಮಾಡುವುದಕ್ಕಿಂತ ಮೊದಲು ಅದರ ಉದ್ದೇಶಗಳನ್ನು ನಿರ್ಧರಿಸಬೇಕು.

ತಾರತಮ್ಯ : ತಾಯಿ ತಂದೆ ತಮ್ಮ ಹುಡುಗ-ಹುಡುಗಿಯರಲ್ಲಿ ತಾರತಮ್ಯ ಮಾಡಬಾರದು.

  

  ****************************************************************   

2.  ಗಂಭೀರೆ

                                                                               -ಶಿವಕೋಟಚಾರ್ಯ

ಕಠಿಣ ಪದಗಳ ಅರ್ಥ:


   




[8ನೇ ತರಗತಿಯ 11ನೇ ಪಾಠ ಗಂಭೀರೆ ಇದನ್ನು ಶಿವಕೋಟ್ಯಾಚಾರ್ಯ ಇವರು ಬರೆದ ವಡ್ಡಾರಾಧನೆಯಿಂದ ತೆಗೆದುಕೊಳ್ಳಲಾಗಿದೆ. ಆದಿಕವಿ ಪಂಪನಿಗಿಂತ ಮೊದಲು ಸುಮಾರು ಕ್ರಿ.ಶ. 920-930 ರಲ್ಲಿ ಈ ಕಾವ್ಯ ಹುಟ್ಟಿರಬಹುದು ಎಂದು ಪಂಡಿತರ ಅಭಿಪ್ರಾಯವಾಗಿದೆ. ವಡ್ಡಾರಾಧನೆ ವೃದ್ಧರಾಧನೆ ಅಂದರೆ ಹಿರಿಯರ ಪೂಜೆ ಎಂಬಾರ್ಥದ ಜೈನಮಹಾತ್ಮರ ಜೀವನಕ್ಕೆ ಸಂಬಂಧಿಸಿದ ಕಥೆಗಳು ಈ ಕೃತಿಯಲ್ಲಿವೆ. ಅವುಗಳಲ್ಲಿ ಮೊದಲನೆಯ ಸುಕುಮಾರಸ್ವಾಮಿಯ ಕಥೆಇಲ್ಲಿ ಪ್ರಸ್ತುತ.ವಿದ್ದು ಕಥೆಗಳಲ್ಲಿ ಉಪಕಥೆಗಳು, ಉಪಕತೆಗಳಲ್ಲಿ ಇನ್ನೊಂದು ಸಣ್ಣ-ಸಣ್ಣ ಕಥೆಗಳು ಈ ಕೃತಿಯಲ್ಲಿ ಸಮಾವೇಶವಾಗಿವೆ. ಸುಕುಮಾರಸ್ವಾಮಿ ತನ್ನ ಹಿಂದಿನ ಜನ್ಮದಲ್ಲಿ ನಾಗಶ್ರೀ ಎಂಬ ಹೆಣ್ಣಾಗಿ ಹುಟ್ಟಿದಳು. ತನ್ನ ತಂದೆಯೊಂದಿಗೆ ದೇವಾಲಯಕ್ಕೆ ಹೋದಾಗ ಸೂರ್ಯಾಮಿತ್ರಾಚಾರ್ಯರಿಂದ ಐದು ವರದಾನ(ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು, ಪರಸ್ತ್ರೀ ಬಯಸಬಾರದು, ಪರಧನ ಬಯಸಬಾರದು, ಇನ್ನೊಬ್ಬರಿಗೆ ಮೋಸ ಮಾಡಬಾರದು)ಗಳನ್ನು ಪಡೆದಿರುತ್ತಾಳೆ. ಆದರೆ ಅರಸನಾದ ತಂದೆಯು ತಾವು ಆಚರಣೆ ಮಾಡದ ವರಗಳನ್ನು ಮುನಿಗಳಿಂದ ಈ ರೀತಿ ಪಡೆಯಬಾರದು. ಅದನ್ನು ಮರಳಿ ಕೊಟ್ಟು ಬರೋಣ ಎಂದು ಮತ್ತೇ ಸೂರ್ಯಾಮಿತ್ರಾಚಾರ್ಯರಲ್ಲಿಗೆ ಹೋಗುವಾಗ ದಾರಿಯಲ್ಲಿ ರಾಜಭಟ್ಟರು ಒಬ್ಬ ವ್ಯಕ್ತಿಯನ್ನು ಹೆಡೆಮುರಿಗಿ ಕಟ್ಟಿ ಎಳೆದುಕೊಂಡು ಹೋಗುತ್ತಿರುತ್ತಾರೆ. ಅದನ್ನು ಕಂಡು ನಾಗಶ್ರೀಯು ತನ್ನ ತಂದೆಗೆ ಹೀಗೇಕೆ ಎಳೆದುಕೊಂಡು ಹೋಗುತ್ತಿದ್ದಾರೆ?’ ಎಂದು ಕೇಳಲು, ತಂದೆಯು ಅವರನ್ನು ವಿಚಾರಿಸಿ ಆ ರಾಜಭಟ್ಟರು ಹೇಳಿದ ಕಾರಣದ ಕಥೆಯನ್ನು ನಾಗಶ್ರೀಗೆ ಹೇಳುತ್ತಾರೆ. ಆ ಐದು ವರದಾನಗಳನ್ನೊಳಗೊಂಡ ಮೊದಲ ವರದಾನಕ್ಕೆ ಸಂಬಂಧಿಸಿದ ಕಥೆಯೇ ಈ ಗಂಭೀರೆಯ ಕತೆಯಾಗಿದೆ.]

   ಅಭ್ಯಾಸ

ಕೃತಿ: 1) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಪ್ರಶ್ನೆ 1. ಮುದುಕಿಯು ಕಳ್ಳರನ್ನು ಕಂಡಾಗ ಎಲ್ಲಿಗೆ ಹೊರಟಿದ್ದಳು? ಏಕೆ ಹೊರಟಿದ್ದಳು?  ಕಳ್ಳರಿಂದ ತಪ್ಪಿಸಿಕೊಳ್ಳಲು ಅವಳು ಮಾಡಿದ ಉಪಾಯವೇನು?

ಉತ್ತರ: ಗಂಭೀರೆ ಮುದುಕಿಯು ಕಳ್ಳರನ್ನು ಕಂಡಾಗ ತನ್ನ ಮಗಳ ಊರಾದ ಜಯಂತಪೂರಕ್ಕೆ ಹೋಗುತ್ತಿದ್ದಳು. ಕಳ್ಳರಿಂದ ತಪ್ಪಿಸಿಕೊಳ್ಳಲು ಅವರಲ್ಲಿಯ ಒಬ್ಬನನ್ನು ತನ್ನ ಮಗನಂತೆಯೇ ಕಾಣಿಸುತ್ತೀಯಾ ಮಗು, ನನ್ನ ಮಗ ಹನ್ನೆರಡು ವರ್ಷವಾಯಿತು ಮನೆಯಿಂದ ಓಡಿ ಹೋಗಿ ಎಂದು ಮಾತಿಗೆಳೆದಳು.  

ಪ್ರಶ್ನೆ 2. ಮನೆಗೆ ಕನ್ನವಿಟ್ಟ ಕಳ್ಳರನ್ನು ಬಿರ್ದ್ದಿಯು ಹೇಗೆ ಶಿಕ್ಷಿಸಿದಳು?

ಉತ್ತರ: ಮಗಳ ಮನೆಗೆ ಕನ್ನವಿಟ್ಟ ಕಳ್ಳರಿಗೆ ಮುದುಕಿಯು ಬಾಗಿಲ ಮರೆಯಲ್ಲಿ ಕಟ್ಟಿ ಹಿಡಿದು ಒಳಗೆ ನುಸುಳಿ ಬರುವವರ ಮೂಗು ಕೊಯ್ದು ಶಿಕ್ಷಿಸಿದಳು.

ಪ್ರಶ್ನೆ 3. ಮುದುಕಿಯು ಆಲದ ಮರವನೇಕೆ ಏರಿದಳು?

ಉತ್ತರ: ಕಳ್ಳರಿಂದ ತಪ್ಪಿಸಿಕೊಳ್ಳಲು ಮುದುಕಿಯು ಆಲದ ಮರವನ್ನೇರಿದಳು.

ಪ್ರಶ್ನೆ 4. ತನ್ನನ್ನು ಮದುವೆಯಾಗು ಎಂದ ಕಳ್ಳನಿಂದ ಮುದುಕಿಯು ಹೇಗೆ ಪಾರಾದಳು?

ಉತ್ತರ: ತನ್ನನ್ನು ಮದುವೆಯಾಗು ಎಂದು ಕಳ್ಳ ಹೇಳಿದಾಗ ಮುದುಕಿಯು ಸುಟ್ಟ ಮೌಂಸವನ್ನು ಯಾರು ತನಗೆ ತನ್ನ ನಾಲಿಗೆಯಿಂದ ತಿನ್ನಿಸುವರೋ ಅವನೊಂದಿಗೆ ಮದುವೆಯಾಗುವೆ ಎಂದು ಹೇಳುತ್ತಾಳೆ. ಮೌಂಸ ನಾಲಿಗೆಯಿಂದ ತಿನ್ನಿಸಲು ಬರುವವರ ನಾಲಿಗೆಯನ್ನು ಕಚ್ಚಿ ಬಿಡುತ್ತಾಳೆ. ಎಲ್ಲ ಕಳ್ಳರು ಈಕೆ ಮರದಲ್ಲಿರುವ ಯಕ್ಷದೇವತೆಯೇ ಎಂದು ಹೆದರಿ ಓಡಿ ಹೋಗುತ್ತಾರೆ.

ಪ್ರಶ್ನೆ 5. ಕಥೆಯಿಂದ ತಿಳಿದುಬರುವ ನೀತಿಯೇನು?

ಉತ್ತರ: ಕಳ್ಳತನ ಮಾಡಬಾರದು. ಒಂಟಿ ಹೆಣ್ಣು ನೋಡಿ ಕೇಣಕಬಾರದು.

ಕೃತಿ: 2) ಕೆಳಗಿನ ಶಬ್ದಗಳನ್ನು ಹೊಸಗನ್ನಡದಲ್ಲಿ ಬರೆಯಿರಿ.

1.    ಪರದ =ವ್ಯಾಪಾರ 

2.   ಪಾಂಗಿಲ =ರೀತಿ 

3.   ಪೊಱಮಡು   = ಹೊರಡು  

4.   ಪಾಪೆ =ಬೊಂಬೆ / ಗೊಂಬೆ 

ಕೃತಿ: 3) ಕೆಳಗಿನ ಪ್ರತಿ ಅಕ್ಷರಗಳಿಂದ ಒಂದು ಹೊಸ ಶಬ್ದವನ್ನು ಬರೆಯಿರಿ.

ಸಿಂಹಾಸನ: 1) ಸಿಂಹ                 2)ಹಾಸನ      3)ಸರಕಾರ    4) ನವಿಲು

ಕೃತಿ: 4) ಇವು ಯಾವ ವಿಭಕ್ತಿಗಳಲ್ಲಿವೆ ತಿಳಿಸಿರಿ

) ಪೊಟಲೊಳ್= ಷಷ್ಟಿ , ಹರಿಪುರದಿಂ(ಹರಿಪುರದಿಂದ)= ಪಂಚಮಿ, ಕಲೆಯಂ(ಕಲೆಯನ್ನು)=ಸಪ್ತಮಿ, ಕಳ್ಳನ=ಷಷ್ಟಿ, ಪರದಂಗೆ= ಚತುರ್ಥಿ, ಮರಕ್ಕೆ=ಚತುರ್ಥಿ.

) ಕಥೆಯನ್ನು ನಿಮ್ಮ ಸ್ವಂತಮಾತಿನಲ್ಲಿ ಬರೆಯಿರಿ.

ಗಂಭೀರೆ ಪಾಠದ ಹೊಸಗನ್ನಡದಲ್ಲಿ ಕಥಾನುವಾದ

     ಹರಿಪುರವೆಂಬ ಪಟ್ಟಣದಲ್ಲಿ ಗಂಭೀರೆ ಎಂಬ ಒಬ್ಬ ಮುದುಕಿ ಇರುತ್ತಿದ್ದಳು. ಆಕೆ ತನ್ನ ಮಗಳಾದ ಹರಿಣಿ ಎಂಬವಳನ್ನು ಜಯಂತವೆಂಬ ಪಟ್ಟಣದಲ್ಲಿರುವ ವಸುದತ್ತನೆಂಬ ವ್ಯಾಪಾರಿಗೆ ಕೊಟ್ಟು ಮದುವೆ ಮಾಡಿದ್ದಳು. ಆಕೆ ಗರ್ಭವತಿಯಾಗಲು ಮೊದಕಾದಿ ಪದಾರ್ಥಗಳನ್ನು ತಿನ್ನುವ ಬಯಕೆಯಾಗಿದ್ದರಿಂದ ತಾಯಿಯು ಹಲವು ಬಗೆಯ ಲಡ್ಡು, ಮಂಡಿಗೆ/ಕಡಬು, ಮೋದಕ ಇತ್ಯಾದಿ ಭಕ್ಷಗಳನ್ನು ಮಾಡಿಕೊಂಡು ಗಂಭೀರೆಯೆಂಬ ವೃದ್ಧೆ ಹರಿಪುರದಿಂದ ತನ್ನ ಮಗಳಿದ್ದ ಊರಿಗೆ ಹೋಗುತ್ತಾಳೆ. ಅಷ್ಟರಲ್ಲಿ ದಾರಿಯಲ್ಲಿ ಎಂಟು ಜನರು ಕಳ್ಳರು ಬರುತ್ತಾರೆ. ಅವರನ್ನು ಕಂಡು ಮುದುಕಿಯು, ಮಗನೆ, ನನ್ನ ಮಗ ನಿನ್ನ ಹಾಗೇ ಕಾಣುತ್ತಾನೆ. ಹನ್ನೆರಡು ವರುಷಗಳಿಂದ ಮನೆಬಿಟ್ಟು ಹೋದವನು ಮರಳಿ ಬಂದೇ ಇಲ್ಲ. ಅವನ ಕಾಳಜಿಯಿಂದ ಅತ್ತು ಅತ್ತು ನನ್ನ ಕಂಗಳು ಬಾತಿಕೊಂಡಿವೆ. ನಿನ್ನನ್ನು ಕಂಡು ಅವನೇ ಬಂದಷ್ಟು ಸಂತೋಷವಾಯಿತು. ಮಗು, ನೀವೆಲ್ಲರೂ ಬನ್ನಿ, ಸಮೀಪದಲ್ಲಿಯೇ ಊರು ಇದೆ. ಸ್ನಾನ ಮಾಡಿ ವಿಶ್ರಮಿಸಿ ನಾಳೆ ಹೋಗುವಿರಂತೆ.” ಎಂದು ಹೇಳಿ ಅವರನ್ನೆಲ್ಲ ಮಗಳ ಮನೆಗೆ ಕರೆದುಕೊಂಡು ಬರುತ್ತಾಳೆ. ಅವರಿಗೆ ಸ್ನಾನಕ್ಕೆ ನೀರು ಕೊಟ್ಟು ತಲೆಗೆ ಎಣ್ಣೆ ಮಜ್ಜನ ಮಾಡಿಸಿ ಸ್ನಾನ ಮಾಡಿಸಿ ಹೊಸ ಹೊಸ ಧೋತರಗಳನ್ನು ಉಡಲು ನೀಡುತ್ತಾಳೆ. ತಲೆ ಒರೆಸಲು ಬಟ್ಟೆ ಕೊಟ್ಟು ಮನೆಯಲ್ಲಿ ಬಂಧಿಸಿ ಮನೆಯ ಮಾಳಿಗೆಯ ಮೇಲೆ ಏರಿ ಕಳ್ಳರು ಬಂದಿದ್ದಾರೆ.” ಎಂದು ಕೂಗಿಕೊಳ್ಳುತ್ತಾಳೆ. ಎಂಟು ಜನ ಕಳ್ಳರು ಗಾಬರಿಯಾಗಿ, ಅವಮಾನಿತರಾಗಿ ಈ ಮುದುಕಿಯೂ ನಮ್ಮನ್ನು ಮೋಸ ಮಾಡಿದ್ದಾಳೆ, ಓಡಿರಿ.  ಎಂದು ಮುದುಕಿಯ ಮೇಲೆ ದ್ವೇಷ ಸಾಧಿಸುವುದಾಗಿ ನಿಶ್ಚಯಿಸುತ್ತಾರೆ. ಕಳ್ಳರು ಮತ್ತೆ ಮನೆಗೆ ಬಂದೇ ಬರುವರು ಎಂದು ಅರಿತುಕೊಂಡು ತಾನು ಮಲಗಿರುವ ಕೋಣೆಯ ಬಾಗಿಲದಲ್ಲಿ ಹರಿತವಾದ ಕತ್ತಿಯನ್ನು ಅಡ್ಡವಾಗಿ ಇಟ್ಟಳು. ಹೀಗಿದ್ದು ರಾತ್ರಿ ಕಳ್ಳರು ಬಂದು ಒಬ್ಬ ಕಳ್ಳ ಒಳಗೆ ಇಣುಕಿದಾಗ ಅವನ ಮೂಗು ಕೊಯ್ದುಕೊಂಡಿತು. ಹಿಂದೆ ತಿರುಗಿ ನನಗೆ ಒಳಗೆ ಹೋಗಲಾಗುತ್ತಿಲ್ಲ ನೀನು ಹೋಗು ಎಂದಾಗ ಇನ್ನೊಬ್ಬ ಹೋಗಲು ಅವನ ಮೂಗು ಕೂಡಾ ಕತ್ತರಿಸಿಕೊಂಡಿತು. ಹೀಗೆ ಸರದಿಯಂತೆ ಎಲ್ಲರೂ ಒಳಗೆ ಹೋಗಲು ಬಯಸಿ ತಮ್ಮ ಮುಗುಗಳನ್ನು ಕೊಯ್ದುಕೊಂಡು ಓಡಿದರು. ಊರಿನಲ್ಲೊಬ್ಬ ಇಂದ್ರಜಾಲಿಗನ(ಜಾದುಗಾರನ) ಮನೆ ಕನ್ನ ಹಾಕಿ ಒಂದು  ಪೆಟ್ಟಿಗೆ ಹೊತ್ತುಕೊಂಡು ಊರಿನ ಶ್ಮಶಾನದಲ್ಲಿ ಹೋಗಿ ಇಳಿಸುತ್ತಾರೆ. 

          ಆರು ಜನ ಕಳ್ಳರು ಊರಿನಲ್ಲಿಯ ಕುರಿಯೊಂದನ್ನು ಕದ್ದು ತಂದು ಮೈಮರೆತು ಮಲಗಿರುತ್ತಾರೆ. ಇಬ್ಬರು ಕಾಯ್ದುಕೊಳ್ಳುತ್ತ ಮಸಣದ ಕಿಚ್ಚಿನಲ್ಲಿ ತಂದ ಕುರಿಯನ್ನು ಕೊಂದು ಸುಡುತ್ತಾರೆ. ಕತ್ತಲೆಯಲ್ಲಿ ಒಬ್ಬ ಕಳ್ಳ ಆ ಇಂದ್ರಜಾಲಿಗನ ಪೆಟ್ಟಿಗೆಯನ್ನು ತೆರೆದು ಅದರಲ್ಲಿರುವ ಗೊಂಬೆಗಳನ್ನು ತೆಗೆದು ಅದಕ್ಕೆ ಚರ್ಮದಿಂದ ಮಾಡಿದ ರವಿಕೆ ತೊಡಿಸಿ ಸೀರೆಗಳನ್ನು ಉಡಿಸಿ ಹುಲಿಯ ಚರ್ಮ ಮತ್ತು ಮುಖವಾಡ ಧರಿಸಿಕೊಂಡು ಶ್ಮಶಾನದ ಕಿಚ್ಚಿನ ಬದಿಗೆ ನಿಂತಿರಲು ಪಕ್ಕದಲ್ಲಿ ಮಲಗಿರುವರೆಲ್ಲರೂ ಎಚ್ಚರವಾದಂತೆ ಇವರನ್ನು ಕಂಡು ಬೇತಾಳವೇ ಬಂದಿದೆ ಎಂದು ಹೆದರಿಕೊಂಡು ಪ್ರಾಣ ಭಯದಿಂದ ಓಡತೊಡಗುತ್ತಾರೆ. ಇತನು ಸುಟ್ಟ ಮೌಂಸ ತಿನ್ನಲು ಮುಂದೆ ಕರೆಯಲು ನಾವು ಮೌಂಸ ಸ್ವೀಕರಿಸಲು ಹೋದರೆ ಎಲ್ಲರಿಗೂ ಬೇತಾಳ ಬಲಿತೆಗೆದುಕೊಳ್ಳುತ್ತದೆ ಎಂದು ಓಡಲು ಈತ ತಾನು ಹಾಕಿಕೊಂಡಿರುವ ಮುಖವಾಡವನ್ನು ಚರ್ಮದ ಸೀರೆ ರವಿಕೆಗಳನ್ನು ಕಳೆದು ಬಿಸಾಕಿ ತಾನು ನಿಮ್ಮವನೆಂದು ತನ್ನ ಹೆಸರು ಹೇಳಿದಾಗ ಎಲ್ಲರೂ ನಿಲ್ಲುತ್ತಾರೆ. ತಾನು ಮಾಡಿದ ಮೌಂಸವನ್ನು ಎಲ್ಲರಿಗೂ ಹಂಚಿ ತಿಂದು ಮನೆಗೆ ಹೋಗಲು ಅಣಿಯಾಗುತ್ತಾರೆ.

               ಇತ್ತ ಗಂಭೀರೆಯು ಬೆಳಗಿನ ಜಾವದಲ್ಲಿ ಬೇಗನೆ ಎದ್ದು ತನ್ನ ಊರಿಗೆ ಹೋಗಲು ಅಣಿಯಾಗುತ್ತಾಳೆ. ದಾರಿಯಲ್ಲಿ ಕಳ್ಳರಿಗೆ ಹೆದರಿ ಒಂದು ಆಲದ ಮರದ ಮೇಲೆ ಎತ್ತರದ ತುದಿಯಲ್ಲಿ ಕುಳಿತುಕೊಳ್ಳುತ್ತಾಳೆ. ಕಳ್ಳರು ಆಕೆ ಏರಿದ ಮರದ ದಾರಿಯಲ್ಲಿಯೇ ಬರುತ್ತಿರಲು ಮುದುಕಿಯು, “ಜನರೇ, ಮೇಲೆ ನೋಡಬೇಡಿ.” ಎಂದಾಗ ಅವರೆಲ್ಲರು ಮೇಲೆ ನೋಡಿ ಅಲ್ಲೊಬ್ಬ ವೃದ್ಧ ಸ್ತ್ರೀ ಮರದ ತುತ್ತುತುದಿಯಲ್ಲಿ ಕುಳಿತಿರುವುದನ್ನು ಕಂಡು ನೀನು ಯಾರು?” ಎಂದು ಕೇಳಿದಾಗ ಅವಳು ಈ ಮರದಲ್ಲಿರುವ ಯಕ್ಷದೇವತೆ ಎನ್ನುವಳು. ಆಗ ನೀನು ನಮ್ಮವರಲ್ಲಿ ಯಾರಿಗೆ ಹೆಂಡತಿಯಾಗುತ್ತಿಯಾ? ಎಂದು ಕೇಳಿದಾಗ ಆಕೆಯು ಯಾರು ಸುಟ್ಟ ಮಾಂಸದ ತುಂಡನ್ನು ತನ್ನ ನಾಲಿಗೆಯಿಂದ ಹಿಡಿದು ನನ್ನ ಬಾಯಿಯೊಳಗೆ ಇಡುತ್ತಾರೆಯೋ ಅವನೊಂದಿಗೆ ಮದುವೆಯಾಗುವೆನು” ಎಂದು ಹೇಳುತ್ತಾಳೆ. ಒಬ್ಬ ಕಳ್ಳನು ಸುಟ್ಟಿದ ಖಂಡವನ್ನು (ಪಿಶಿತದ ಖಂಡವನ್ನು) ಬಾಯಿಯಲ್ಲಿಟ್ಟು ಮರದ ಮೇಲೆ ಹೋಗಿ ಅವಳ ಬಾಯಿಯಲ್ಲಿ ಇಡುವ ಸಲುವಾಗಿ ನಾಲಿಗೆ ಚಾಚಿದಾಗ ಆಕೆ ಅವನ ನಾಲಿಗೆ ಕತ್ತರಿಸಿ ಬಿಡುವಳು. ಕೂಗಾಡುತ್ತ ಕೆಳಗೆ ಬಿದ್ದು ಬಿಡುವನು. ಅದನ್ನು ನೋಡಿ ಉಳಿದವರು ಭಯದಿಂದ ಓಡತೊಡಗುವರು. ವೃದ್ಧ ಸ್ತ್ರೀಯು ಆಗ, “ನಿಲ್ಲಿ, ನೀವು ಕಳವು ಮಾಡಿದುದರಲ್ಲಿ ಎಂಟನೆಯ ಪಾಲನ್ನು ನನಗಾಗಿ ತಂದು ಈ ಮರದ ಪೊಟರೆಯಲ್ಲಿ ಇಟ್ಟಿರೆಂದರೆ ನೀವು ಬದುಕುಳಿಯುತ್ತಿರಿ. ಇಲ್ಲದಿದ್ದರೆ ನಿಮ್ಮೆಲ್ಲರನ್ನೂ ತಿಂದು ಬಿಡುವೆನು.” ಎನ್ನಲು ಕಳ್ಳರು ಹೆದರಿಕೊಂಡು ಒಪ್ಪಿಕೊಂಡು ಅದರಂತೆ ದಿನಾಲು ಮಾಡಿದ ಕಳ್ಳತನದಲ್ಲಿ ಎಂಟನೆಯ ಭಾಗವನ್ನು ಮರದಡಿಯಲ್ಲಿ ಇಟ್ಟು ಹೋಗತೊಡಗಿದರು. ಮುದುಕಿಯು ದಿನಾಲು ತನ್ನೂರಿನಿಂದ ಬಂದು ಬಂಗಾರ, ಬೆಳ್ಳಿ, ಹಣವನ್ನು ತೆಗೆದುಕೊಂಡು ಹೋಗತೊಡಗಿದ್ದಳು.

 ) ಮಾತುಗಳನ್ನು ವ್ಯಾಕಗಳಲ್ಲಿ ಪ್ರಯೋಗಿಸಿರಿ

ಪೊಮಡು=ಹೊರಡು- ಗಂಭೀರೆಯು ತನ್ನ ಮಗಳು ಹರಿಣಿಯ ಊರಿಗೆ ಪೊರಟಳು.

ಸೋಳ್=

ಪೊಅದಿಕ್ಕು=

ಮಅಲುಂದು=ಮರದ ಮೇಲೆ =ಮುದುಕಿಯು ಮರದ ಮೇಲೆ ಏರಿದಳು.

ತುತ್ತತುದಿ= ಮುದುಕಿ ಮರದ ತೊಂಗೆಯ ತುತ್ತುತುದಿಯ ಮೇಲೆ ಕುಳಿತಳು.

ಪಾಂಗು= ರೀತಿ – ಕಳ್ಳನ  ರೀತಿಯಲ್ಲಿ ಮನೆಗೆ ನುಗ್ಗಬಾರದು.

ಒಡಂಬಡ=

****

ಕಾಯಕವೇ ಕೈಲಾಸ 

***************************************************** 


ಪದ್ಯ ವಿಭಾಗ

 

1. ಒಲುಮೆ

                                                                -ಆರ್. ಎನ್. ಜಯಗೋಪಾಲ

ಶಬ್ದಗಳ ಅರ್ಥ

ಕಾನನ - ಕಾಡು; ಕುಸುಮ- ಹೂವು; ಸೌರಭ-ಸುಗಂಧ; ಒಲುಮೆ-ದಯೆ ; ಸಿರಿ- ಶ್ರೀಮಂತಿಕೆ ; ಎದೆಗುಂದು- ಗಾಬರಿ ಪಡು

ಅಭ್ಯಾಸ

ಕೃತಿ -1 ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1. ನಮ್ಮ ಬದುಕು ಯಾವ ರೀತಿ ಆಗಬೇಕೆಂದು ಕವಿ ಪ್ರಾರ್ಥಿಸುತ್ತಾನೆ?

ಉತ್ತರ: ಜ್ಯೋತಿಯು ತಾನು ಉರಿದು ಜಗಕ್ಕೆ ಬೆಳಕುಕೊಡುವ ಹಾಗೆ ದೇವರೇ, ನೀನು ನಮ್ಮನ್ನು ಅನುಗೊಳಿಸು. ಕಾಡಿನಲ್ಲಿಯ ಹೂವು ತನ್ನ ಸುಗಂಧವ ನಾಲ್ದೆಸೆಗೆ ಚೆಲ್ಲುವ ಹಾಗೆ ನಮ್ಮ ಕೆಲಸದ ಸುಗಂಧ ಪಸರಿಸಲಿ ಎಂದು ಕವಿ ಪ್ರಾರ್ಥಿಸುತ್ತಾನೆ.

2. 'ನನ್ನು' ಕೊಡು ಎಂದು ಕವಿ ಬೇಡಿಕೊಳ್ಳುತ್ತಾನೆ?

ಉತ್ತರ: ಸಿರಿ ಸಂಪತ್ತು ಬೇಡ, ಯಾವ ವೈಭವ ಬೇಡ ಕೇವಲ ದೇವರ ಕರುಣೆಯು ಸಾಕು ಎಂದು ಕವಿ ಬೇಡಿಕೊಳ್ಳುತ್ತಾನೆ.

3. ಮನೆಯ ಹೇಗಿರಬೇಕು?

ಉತ್ತರ:- ಈ ಮನೆಯೂ ಎಂದೆಂದೂ ನಗುವಂತೆ ಇರಬೇಕು.

4. ನಾವು ಎಂತಹ ಮಾರ್ಗದಲ್ಲಿ ನಡೆಯಬೇಕು?

ಉತ್ತರ:- ನಾವು ಸದೈವ ಸತ್ಯ ಮಾರ್ಗದಿ ನಡೆಯಬೇಕು.

ಕೃತಿ -2 ಬಿಟ್ಟಸ್ಥಳ ತುಂಬಿರಿ.

1. ನಿನ್ನೊಲುಮೆ ನಮಗಿರಲಿ ತಂದೆ

2. ಕಾನನದ ಕುಸುಮವೊಂದು ಸೌರಭವ ತಾ ಸೊಸಿ.

3. ಸಫಲತೆಯ ಪಡೆವಂತೆ ಮಾಡೆಮ್ಮ ತಂದೆ.

4. ಯಾವ ನೋವೇ ಬರಲಿ ಎದೆಗುಂದದಿರಲಿ.

ಕೃತಿ -3 ವಾಕ್ಯದಲ್ಲಿ ಉಪಯೋಗಿಸಿರಿ.

ಅಂಬಿಗ: ದೋಣಿ ನಡೆಸುವವನು ಅಂಬಿಗ.

ಸೌರಭ:- ಸುಮವು ಸುಮಧುರ ಸೌರಭವ ಸೂಸುತಿದೆ.

ಸಂಪದ: ಅವನು ಹಣ, ಆಸ್ತಿ, ಅಂತಸ್ತಿನಿಂದ ಸಂಪದ ಭರಿತನಾಗಿದ್ದಾನೆ.

ಕರುಣೆ: ಮೂಕ ಪ್ರಾಣಿಗಳ ಮೇಲೆ ಕರುಣೆ ತೋರಬೇಕು.

ಕೃತಿ -4 ಕೆಳಗಿನ ಜಾಲವನ್ನು ಪೂರ್ಣಗೊಳಿಸಿರಿ.

ಅರಣ್ಯ ಪದದ ಸಮಾನಾರ್ಥ ಶಬ್ದಗಳು= ಕಾನನ, ಕಾಡು, ವನ, ಗೊಂಡಾರಣ್ಯ,

ಕೃತಿ -5 ಪ್ರಾಚೀನಕಾಲದಲ್ಲಿ ಬಳಸುತ್ತಿದ್ದ ಬೆಳಕು ಕೊಡುವ ಸಾಧನಗಳ ಚಿತ್ರ ಬರೆಯಿರಿ

 

2 ಆಷಾಢ ಮಾಸ ಬಂದೀತವ್ವ

ಶಬ್ದಗಳ ಅರ್ಥ

ತವರು = ತಾಯಿಯ ಮನೆ; ಸರಕಾನೆ = ಬೇಗನೆ; ಬಾವಲಿ - ಕಿವಿಯ ಒಂದು ಆಭರಣ: ಬೇಗೆ = ಸುಡುವಿಕೆ

ಅಭ್ಯಾಸ

ಕೃತಿ 1) ಬಿಟ್ಟ ಹೋದ ಹಿಂದೂ ತಿಂಗಳುಗಳನ್ನು ಬರೆಯಿರಿ.

ಚೈತ್ರ          ವೈಶಾಖ       ಜ್ಯೇಷ್ಠ          ಆಷಾಢ                ಶ್ರಾವಣ                ಭಾದ್ರಪದ     ಆಶ್ವೀನ                 ಕಾರ್ತಿಕ               ಮಾರ್ಗಶಿರ    ಪೌಷ್ಯ          ಮಾಘ                 ಫಾಲ್ಗುಣ

2) ಕೆಳಗಿನ ಚೌಕಟ್ಟಿನಲ್ಲಿ ನಾಲ್ಕು ಗ್ರಾಮ್ಯ ಶಬ್ದಗಳನ್ನು ಬರೆಯಿರಿ.

ಗ್ರಾಮ್ಯ ಶಬ್ದಗಳು 1) ತೌರಿಂದ        2) ನೆನೆಯಾಲಿ         3)ತಕೊಂಡು   4)ತೆಗೆಸಣ್ಣ

 

3)   ತವರುಮನೆಗೆ ತನ್ನನ್ನು ಅಣ್ಣನು ಹೇಗೆ ಕರೆಯಲು ಬರುವನೆಂದು ಹೇಳುವಳು?

ಉತ್ತರ:- ಕೆಂಪಂಗಿ ಉಟ್ಟುಕೊಂಡು ಎತ್ತು ಗಾಡಿ ಹುಡಿಕೊಂಡು ತಂಗಿಯನ್ನು ಕರೆಯಲು ಅಣ್ಣ ತವರಿಗೆ ಬರುತ್ತಾನೆ.

ಕೃತಿ 2) ೧. ಪದ್ಯದಲ್ಲಿ ಬಂದಿರುವ ಊರುಗಳು=ಅರಕೇರಿ,  ಬನ್ನೂರು

೨.  ತವರೂರ ದಾರಿಯು ಹೇಗೆ ಇರಬೇಕು ಎಂಬುದು ಜಾನಪದ ಹೆಣ್ಣಿನ ಮಾತುಗಳಿಂದ ವ್ಯಕ್ತಪಡಿಸಿರಿ.

ಉತ್ತರ:- ತವರೂರ ದಾರಿಯಲ್ಲಿ ಅಕ್ಕ ತಂಗಿಯರು ನೀರು ಕುಡಿಯಲು ಕಲ್ಯಾಣದ ಬಾವಿ ತೊಡಿಸಬೇಕು ಎಂದು ಜಾನಪದ ಹೆಣ್ಣಿನ ಮಾತಿನಿಂದ ತಿಳಿಯುತ್ತದೆ.

೩. ನಿಮ್ಮತಾಯಿ ಕುರಿತು 8 ರಿಂದ 10 ವಾಕ್ಯಗಳಲ್ಲಿ ನಿಮ್ಮ ಮಾತುಗಳಲ್ಲಿ ಬರೆಯಿರಿ.

ನಿಬಂಧ - ನನ್ನ ತಾಯಿ  

ತಾಯಿಯೇ ದೇವರು ನನಗೆ ನನ್ನ ತಾಯಿ ಎಂದರೆ ಬಹಳ ಪ್ರೀತಿ ನಮಗೆ ಓದಲು ಸಹಾಯ ಮಾಡುತ್ತಾಳೆ ನನ್ನ ತಾಯಿ ನನ್ನ ಆತ್ಮೀಯ ಸ್ನೇಹಿತೇ ನನ್ನ ಗುರು ನನ್ನ ಶಕ್ತಿ ಮತ್ತು ನನಗೆ ನನ್ನ ತಾಯಿ ನೇ ಎಲ್ಲಾ ಪ್ರತಿಯೊಂದು ಜೀವಿಗೂ ತಾಯಿಯ ಪ್ರೀತಿಗಿಂತ ದೊಡ್ಡ ಪ್ರೀತಿ ಯಾವುದು ಇಲ್ಲ ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ಬಣ್ಣ ಬದಲಾಗುವುದು ಗುಣಬದಲಾಗುವದಿಲ್ಲ  ನೂರು ಜನರ ಋುಣ ತೋರಿಸಬಹುದು ಆದರೆ ತಾಯಿ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ ತಾಯಿಯ ಬಗ್ಗೆ ಎಷ್ಟೇ ಬರೆದರು ಅಷ್ಟೇ ತಾಯಿಯೇ ಎಲ್ಲಾ ತಾಯಿ ಇಲ್ಲದೆ ಏನು ಇಲ್ಲ.

ಕೃತಿ 3) 1 ನಿಮ್ಮ ಕುಟುಂಬದಲ್ಲಿ ಬರುವ ವ್ಯಕ್ತಿಗಳು

ನಾನು== ಅಮ್ಮ, ಅಪ್ಪ, ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ. ಚಿಕ್ಕಮ್ಮ, ಚಿಕ್ಕಪ್ಪ, ಅಣ್ಣ, ತಂಗಿ, ಅಕ್ಕ ತಮ್ಮ

2. ಕೆಳಗಿನ ಶಬ್ದಗಳನ್ನು ಗ್ರಾಂಥಿಕ ರೂಪದಲ್ಲಿ ಬರೆಯಿರಿ.

ಸರಕಾನೆ = ಸರಸರನೆ

ತಿರುಗಾಡೋ = ತಿರುಗಾಡುವ

ತಕ್ಕೊಂಡು = ತೆಗೆದುಕೊಂಡು

3.   ನಿಮ್ಮ ಶಾಲಿಯಲ್ಲಿ ಏರ್ಪಡಿಸಿದ ವಿಜ್ಞಾನ ಪ್ರದರ್ಶನದ ಕುರಿತು ನಿಮ್ಮ ಅಣ್ಣನಿಗೆ ಒಂದು ಪತ್ರ ಬರೆಯಿರಿ.

ಪತ್ರ ಲೇಖನ 

                                                                    ದಿನಾಂಕ ೨೪/೦೧/೨೦೨೩ 

ಪ್ರೀತಿಯ ಅಣ್ಣನಿಗೆ ನಮಸ್ಕಾರಗಳು,

        ಪತ್ರ ಬರೆಯಲು ಕಾರಣವೇನೆಂದರೆ ಹಿಂದಿನ ವಾರದಲ್ಲಿ ನಮ್ಮ ಶಾಲೆಯಲ್ಲಿ ತಾಲುಕಾ ಮಟ್ಟದ ವಿಜ್ಞ್ಯಾನ ಪ್ರದರ್ಶನ ಏರ್ಪಡಿಸಲಾಗಿತ್ತು. ತಾಲೂಕಿನ ಮೂಲೆ ಮೂಲೆಗಳಲ್ಲಿರುವ ಶಾಲೆಗಳಿಂದ ವೈಜ್ಞ್ಯಾನಿಕ ಸಾಹಿತ್ಯಗಳು ಪ್ರದರ್ಶನದಲ್ಲಿ ಬಂದಿದವು. ಅದರಲ್ಲಿ ಪವನ ಚಕ್ಕಿ ವಿದ್ಯುತ ನಿರ್ಮಿತಿ, ಸ್ವಚ್ಚ ಭಾರತ ಅಭಿಯಾನ, ಸೇಂದ್ರಿಯ ಗೊಬ್ಬರ ನಿರ್ಮಿತಿ ಮಾಡುವುದು, ಮೊಬಾಯಿಲ್ ಅಪ್, ಮನೋರಂಜಕ ಗಣಿತ ಮುಂತಾದ ಅನೇಕ ಸಾಧನಗಳು ನೋಡುಗರಾದ ನಮ್ಮ ಮನಸೆಳೆದವು. ಮುಂದಿನ ವರುಷದ ವಿಜ್ಞಾನ ಪ್ರದರ್ಶನ ನೋಡಲು ನೀನೂ ಬರಬೇಕು ಎಂಬುದು ನನ್ನ ಆಶೆಯಾಗಿದೆ.

ಮನೆಯಲ್ಲಿ ಅಪ್ಪ-ಅಮ್ಮರಿಗೆ ನನ್ನ ನಮಸ್ಕಾರಗಳನ್ನು ತಿಳಿಸು.

ನಿನ್ನ ಪ್ರೀತಿಯ ತಮ್ಮ

        ರಾಜು

 

4.   ನಿಮಗೆ ಗೊತ್ತಿರುವ ಯಾವುದಾದರೂ ಎರಡು ಜಾನಪದ ತ್ರಿಪದಿಗಳನ್ನು ಬರೆಯಿರಿ.

ಕೂಸು ಕುಂಬಳಕಾಯಿ ರಾಸಿ ಬೋರೆಹಣ್ಣು!

ಸೇವಂತಿಗೆ ಮುಗ್ಗಿ ನನ ಬಾಳ! ನನ ಕಂದ!

ಈಶ್ವರಗ ಕೈಯ ಮುಗಿದೆನ!!

 

3 ರಾಷ್ಟ್ರಧ್ವಜ

 -ಗಂಗಪ್ಪ ವಾಲಿ

ಕಠಿಣ ಶಬ್ದಗಳ ಅರ್ಥ

ಬಿತ್ತರ = ವಿಸ್ತಾರ, ಅರುಣ-ಸೂರ್ಯ, ಮರಕತೆ - ಹಸಿರು, ಪಾವಿತ್ರ್ಯ-ಪವಿತ್ರ

ಅಭ್ಯಾಸ

ಕೃತಿ-1 ಕೆಳಗಿನ ಅಂಶಗಳನ್ನು ಹೊಂದಿಸಿ ಬರೆಯಿರಿ.

1) ಮರಕತವೇ                ಅ) ಕಾರುಣ್ಯವು

2) ಶುಭ್ರತೆಯ                ಬ) ಪ್ರಗತಿಯಚಿತ್ರ

3) ಅರುಣಿಮೆಯೇ             ಕ) ಪಾವಿತ್ರ್ಯ

) ವೈಫಲ್ಯವು

ಉತ್ತರಗಳು:(1= ಡ, 2 = ಕ, 3 = ಅ)

ಕೃತಿ 2) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1)   ಕವಿಯು ಏನನ್ನು ಹರಿದೊಗೆಯಿರಿ ಎಂದು ಹೇಳುತ್ತಾನೆ?

ಉತ್ತರ: ಕವಿಯು ಒಳದಾಸ್ಯದ ಪ್ರಗ್ರಹಗಳ ಹರಿದೊಗೆಯಿರಿ ಹೇಳುತ್ತಾನೆ.

2) ಕವಿಯು ಮನೆಮನೆಯೊಳು ಯಾವ ಸಂಗೀತವನ್ನು ಹಾಡಲು ಹೇಳುವನು?

ಉತ್ತರ: ಕವಿಯು ಮನೆಮನೆಯೊಳು ಸಂತೃಪ್ತಿ ಸಂಗೀತವನ್ನು ಹಾಡಲು ಹೇಳುವನು. 

3) ಭಾರತವು ಯಾವ ಶಿಖರವನ್ನು ಏರಲೆಂದು ಕವಿ ಬಯಸುತ್ತಾನೆ?

ಉತ್ತರ: ಭಾರತವು ವಿಜ್ಞಾನದ ಮತ್ತು ಸುಜ್ಞಾನದ ಶಿಖರವನ್ನು ಏರಲೆಂದು ಬಯಸುತ್ತಾನೆ.

 4) ನಾವು ನಮ್ಮ ಸಂಸ್ಕೃತಿಯನ್ನು ಹೇಗೆ ಬೆಳೆಸಬೇಕು?

ಉತ್ತರ: ಚಲುವು ಒಲುವಿನ ಸಂಸೃತಿಯನ್ನು ನಡೆನುಡಿಯಲ್ಲಿ ಬೆಳಸಬೇಕು.  

5) ನಮ್ಮ ರಾಷ್ಟ್ರಧ್ವಜವು ಏನನ್ನು ಸಾರುತಿದೆ?

ಉತ್ತರ: ನಮ್ಮ ರಾಷ್ಟ್ರಧ್ವಜವು ಮಾನವತೆಯ ತತ್ವಗಳನ್ನು ಸಾರುತಿದೆ.

ಕೃತಿ 3) ಕವಿಯು ಯಾವುದನ್ನು ಸ್ವಾತಂತ್ರ್ಯವೆಂದು ಕರೆಯುತ್ತಾರೆ? ಎಂಬುದನ್ನು ನಿಮ್ಮ ಮಾತುಗಳನ್ನು ವಿವರಿಸಿರಿ.

ಉತ್ತರ:  

ಕೃತಿ  4) ಕೆಳಗಿನ ಅಂಶಗಳ ಕುರಿತಾದ ಹೆಸರುಗಳನ್ನು ಕೆಳಗಿನ ಜಾಲಾಕೃತಿಯಲ್ಲಿ ತುಂಬಿರಿ.


             



   

 

                                     ೪. ಯುದ್ಧ ಬಂತು ಮನೆಯವರೆಗೆ

                                                              -ದ. ರಾ. ಬೇಂದ್ರೆ

 

ಅಭ್ಯಾಸ

ಕೃತಿ 1 ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

) ನಾವು ಏನನ್ನು ನಿಲ್ಲಿಸಬೇಕು?

ಉತ್ತರ: ನಾವು ಒಳಜಗಳವ ನಿಲ್ಲಿಸಬೇಕು.

) ಯಾವ ಗೀತೆಯನ್ನು ಕವಿ ಹಾಡೆಂದು ಹೇಳುತ್ತಾನೆ?

ಉತ್ತರ: ಕವಿಯು ನಾಮಕರ್ಮ ಗೀತೆ ಹಾಡೆಂದು ಹೇಳುತ್ತಾನೆ.   

) ನಾವು ಏನನ್ನು ಕಂಡು ನೋಯಬೇಕು?

ಉತ್ತರ: ನಾವು ನೋವನ್ನು ಕಂಡು ನೋಯಬೇಕು.

) ನಮ್ಮ ಬಂಧುಗಳು ಯಾರು?

ಉತ್ತರ: ಹೆಣ್ಣು ನಮಗೆ ಬಂಧು.

ಕೃತಿ 2: ಕೆಳಗಿನ ಪದಗಳಿಗೆ ಎರಡೆರಡು ಅಂತ್ಯಾಕ್ಟರಿ ಪದಗಳನ್ನು ಕವಿತೆಯಿಂದ ಆಯ್ದು ಬರೆಯಿರಿ.

ಜಾತಿ ನೀತಿ, ಗೀತಿ 

ಸಾಗಿರಿ ನೋಯಿರಿ, ಕಾಯಿರಿ

ಕೃತಿ -3 ಕವಿತೆಯ ಸಾರವನ್ನು ನಿನ್ನ ಮಾತುಗಳಲ್ಲಿ ಬರೆಯಿರಿ.

 

ಕೃತಿ 4: ಕೆಳಗಿನ ಪದಗಳಿಗೆ ತತ್ಸಮ-ತದ್ಭವ ಬರೆಯಿರಿ.

ಯುದ್ಧ -

ಕ್ಷಣ ಕಣ

 

೫. ಮನೆಯೇ ಗುಡಿಯಮ್ಮ

                                                      -ಚಿ. ಉದಯಶಂಕರ

ಕೃತಿ 1 ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1)  ಯಾರನ್ನು ದೇವರೆಂದು ಸಂಬೋಧಿಸಲಾಗಿದೆ?

ಉತ್ತರ: ಪತಿಯನ್ನು ದೇವರೆಂದು ಸಂಭೋದಿಸಲಾಗಿದೆ.

2) ಯಾವ ಜ್ಯೋತಿಯನ್ನು ಬೆಳಗಬೇಕು?

ಉತ್ತರ: ಕಿರುನಗೆಯ ಜ್ಯೋತಿಯನ್ನು ಬೆಳಗಬೇಕು. 

3)ಬಾಳಿನ ಪಲ್ಲವಿ ಯಾವುದಾಗಿರಬೇಕು?

ಉತ್ತರ: ಬಾಳಿನ ಪಾಳವಿ ತ್ಯಾಗವಾಗಿರಬೇಕು

4)ಯಾವ ಭಾಗ್ಯ ನಿನ್ನದಾಗಿರಬೇಕು?

ಉತ್ತರ: ಸಾಂಸಾರವೆ ಸುಖ ಸಾಗರ ವೆನಿಸು ಭಾಗ್ಯ ನಿನದಾಗಿರಬೇಕು.

5)ಯಾವುದನ್ನು ಹರುಷದಿಂದ ಸ್ವೀಕರಿಸಬೇಕು?

ಉತ್ತರ: ಯಾರಿಗೆ ಏನನು ಕೊಡುವನೋ ಅವನು ಅದನ್ನೇ ಹರುಷದಿಂದ ಸ್ವೀಕರಿಸಬೇಕು.

 ಕೃತಿ 2 ಬಿಟ್ಟ ಸ್ಥಳ ತುಂಬಿರಿ.

1)     ಮನೆಯೇ ಗುಡಿಯಮ್ಮ .       

2)    ಸೇವೆಯೇ ನಿನ್ನ ಉಸಿರಾಗಿರಲಿ.

3)    ಹಾಡುವ ಕೊರಳು ಕೋಗಿಲೆಗಾಯ್ತು. 

4)   ಆಡುವ ಅಂದ ನವಲಿನದಾಯ್ತು.

ಕೃತಿ 3. ಗುಂಪಿಗೆ ಸೇರದ ಪದವನ್ನು ಹುಡುಕಿ ಬರೆಯಿರಿ.

1)   1) ಕೋಗಿಲೆ 2) ಕಾಗೆ 3) ಗಿಳಿ 4) ಬಾತುಕೋಳಿ               =ಬಾತುಕೋಳಿ

2)   1) ತಂದೆ 2) ತಾಯಿ 3) ಅಣ್ಣ 4) ಪತಿ                         =ತಾಯಿ

3)   1) ಮನೆ 2) ಅರಮನೆ 3) ಗೂಡು 4) ಗುಡಿಸಲು              =ಗೂಡು

 ಕೃತಿ 4. ನಿಮ್ಮ ಊರದೇವರ ಜಾತ್ರೆಯ ನೋಟವನ್ನು ಕಲ್ಪಿಸಿಕೊಂಡು ವರದಿ ಬರೆಯಿರಿ.

ಅಕ್ಕಲಕೋಟ: (ವರದಿಗಾರರು)

 

ಕೃತಿ 5. ಕೆಳಗಿನ ವಾಕ್ಯಗಳಲ್ಲಿ ಗೆರೆಹೊಡೆದ ಶಬ್ದದ ವಿರುದ್ಧಾರ್ಥಕ ಶಬ್ದವನ್ನು ಅರ್ಥಕೆಡದಂತೆ ಪುನ: ಬರೆಯಿರಿ.

1.   ಸಂಸಾರವು ಸುಖಿ ಯಾಗಿರಲಿ         ಉತ್ತರ: ಸಂಸಾರವು ದು:ಖಿಯಾಗದಿರಲಿ.

2.   ದಿನವಿಡೀ ಸಂತೋಷದಿಂದರಬೇಕು.   ಉತ್ತರ: ದಿನವಿಡೀ ಅಸಂತೋಷದಿಂದ ಇರಬಾರದು.

ಕೃತಿ 6. ಕೆಳಗಿನ ಗಾದೆಮಾತುಗಳನ್ನು ಪೂರ್ಣಗೊಳಿಸಿರಿ.

1)   ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.

2)   ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು.

ಕೃತಿ 7. ಪದ್ಯದಲ್ಲಿರುವ ಚಿತ್ರವನ್ನು ನೋಡಿ 10 ಸಾಲು ಬರೆಯಿರಿ.


೬. ಸಲ್ಲದು

                                                - ಸರೋಜನಿ ಭದ್ರಾಪೂರ

  ಶಬ್ದಗಳ ಅರ್ಥ

ರುಂಡ ಕುತ್ತಿಗೆ; ಮಮತೆ- ಪ್ರೀತಿ, ಹೆದರದೆ - ಅ೦ಜದೆ; ಗರ್ಭ- ಹೊಟ್ಟೆ,

ಅಭ್ಯಾಸ

 ಕೃತಿ - 1 ಕೆಳಗಿನ ಸಂಗತಿಗಳನ್ನು ಹೊಂದಿಸಿರಿ. 

 ಕಲ್ಪನಾಚಾವಲಾ               ಗಗನಯಾತ್ರಿ

 ಇಂದಿರಾಗಾಂಧಿ               ಪ್ರಿಯದರ್ಶಿನಿ

ಕಿರಣ ಬೇಡಿ                    ಪೋಲೀಸ್ ಅಧಿಕಾರಿ

ವೀರ ಮಹಿಳೆ                  ಕಿತ್ತೂರ ಚೆನ್ನಮ್ಮ

ಸಿಂಧು ಸಾಕ್ಷಿ                   ಕ್ರೀಡಾಪಟು

 ಕೃತಿ - 2 ಕೆಳಗಿನ ಗಾದೆಮಾತುಗಳನ್ನು ಪೂರ್ಣಮಾಡಿರಿ.

1) ತೊಟ್ಟಿಲು ತೂಗುವ ಕೈ ಜಗತ್ತನೇ ತೂಗಬಲ್ಲದು.

2) ನಾರಿ ಮುನಿದರೆ ಮಾರಿ.

3) ಹೆಣ್ಣು ಜಗದ ಕಣ್ಣು.

4) ಸ್ತ್ರೀ ಶಿಕ್ಷಣ ದೇಶದ ರಕ್ಷಣ.  

ಕೃತಿ- 3 ಕೊಟ್ಟ ಅಕ್ಷರದಿಂದ ಶಬ್ದಗಳನ್ನು ತಯಾರಿಸಿರಿ.

1) ಕಿ—ಕಿರಾಣಿ

2) ಪ್ರಿ- ಪ್ರಿಯತಮೆ

3) ಅ- ಅರಮನೆ

4) ರ-ರಂಗಪ್ಪ

 

  ******

೭.ಆಧ್ಯಾತ್ಮ ಶಿಖರ

                                                        - ಶಿವಾನಂದ ಕಲಗೊಂಡ

ಅಭ್ಯಾಸ

 ಕೃತಿ- 1 ಕೆಳಗಿನ ಪ್ರಶ್ನೆಗಳಿಗೆ ಉತ್ತರಬರೆಯಿರಿ

) ಉಡುತಡಿ ಎಂಬ ಊರು ಏನನ್ನು ಕೊಟ್ಟಿದೆ?

ಉತ್ತರ :ಉಡುತಡಿ ಎಂಬ ಊರು ಜಗಕ್ಕೆ ಶರಣೆ ಅಕ್ಕ ಮಹಾದೇವಿಯ ರೂಪದಲ್ಲಿ ಆಧ್ಯಾತ್ಮದ ಅದ್ಭುತ ಉಡುಗೊರೆ ಕೊಟ್ಟಿದೆ.

2) ಕನ್ನಡ ಭಾಷೆಯ ಮೊದಲ ಕವಯಿತ್ರಿ ಯಾರು?

ಉತ್ತರ : ಅಕ್ಕ ಮಹಾದೇವಿ ಇವರು ಕನ್ನಡ ಭಾಷೆಯ ಮೊದಲ ಕವಿಯಿತ್ರಿಯಾಗಿದ್ದರು.

3) ಅನುಭವ ಮಂಟಪದಲ್ಲಿ ಏನನ್ನು ಎತ್ತಿ ತೋರಿಸಿದರು?

ಉತ್ತರ :ಅಕ್ಕ ಮಹಾದೇವಿ ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುಗಳು ಕೇಳಿದ ಪ್ರಶ್ನೆಗಳಿಗೆ ದಿಟ್ಟತನದಿಂದ ಉತ್ತರ ನೀಡಿ ತಾನು ಜ್ಞಾನನಿಧಿ ಎಂಬುದನ್ನು ತೋರಿಸಿದರು.

4) ಯಾವ ರೀತಿ ಅನುಭವದ ಶಿಖರವನ್ನು ಎಂದರು?

ಉತ್ತರ : ಅರಮನೆಯನ್ನು ತೊರೆದು ಅಧ್ಯಾತ್ಮ ಶಿಖರವನ್ನು ಏರಿದ ಅಕ್ಕ ಮಹಾದೇವಿ ವಿಶ್ವಗುರು ಬಸವಣ್ಣನ ಕೃಪೆಯನ್ನು ಪಡೆದು ಕಲ್ಯಾಣದಲ್ಲಿ ಅನುಭವ ಶಿಖರವನ್ನು ಏರಿದರು.

5) ಮಹಾದೇವಿ ಅಮರತ್ವವನ್ನು ಎಲ್ಲಿ ಪಡೆದರು?

ಉತ್ತರ : ಮಹಾದೇವಿ ಚೆನ್ನಮಲ್ಲಿಕಾರ್ಜುನನನ್ನು ಒಲಿದು ಕದಳಿಯ ಬನದಲ್ಲಿ ಅಮರತ್ವವನ್ನು ಪಡೆದರು.

ಕೃತಿ-2 ಕವಿತೆಯ ಬಿಟ್ಟ ಸಾಲುಗಳನ್ನು ತುಂಬಿರಿ. 

ಅರಮನೆಯ ತೊರೆದು ಅಧ್ಯಾತ್ಮ ಶಿಖರವೇರಿದ ಅಕ್ಕ

ಬೆಟ್ಟದ ಮೇಲಿದ್ದರೂ ಮೃಗಗಳಿಗೆ ಅಂಜದಾ ತಾಯಿ

ವಿಶ್ವಗುರು ಬಸವಣ್ಣನಾ ಕೃಪೆಯನ್ನು ಪಡೆದು

ಕಲ್ಯಾಣದಲಿ ಅನುಭವ ಶಿಖರವೇರಿದ ತಾಯಿ.

ಕೃತಿ-3 ಕೆಳಗಿನ ಜಾಲಾಕೃತಿಯನ್ನು ಬಿಡಿಸಿರಿ.

12ನೆಯ ಶತಮಾನದಲ್ಲಿ ಆಗಿಹೋದ ಶಿವಶರಣರು

ವಿಶ್ವಗುರು ಬಸವಣ್ಣ            ಅಕ್ಕ ಮಹಾದೇವಿ              ಗಂಗಾಂಬಿಕಾ-ನೀಲಾಂಬಿಕಾ

ಅಲ್ಲಮ ಪ್ರಭು                  ದೇವರ ದಾಶಿಮಯ್ಯ           ಅಂಬಿಗರ ಚೌಡಯ್ಯ

 

೮. ಉದರ ವೈರಾಗ್ಯ

                                                        -ಪುರಂದರದಾಸರು

ಉದರ- ಹೊಟ್ಟೆ, ವೈರಾಗ್ಯ - ವಿರಕ್ತಿ; ಮದ - ಸೂಕು, ಕಂಚುಗಾರ- ಕಂಚಿನ ಪಾತ್ರೆ ಮಾಡುವವ

ಅಭ್ಯಾಸ

ಕೃತಿ-1 ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1) ಉದಯಕಾಲದಲೆದ್ದು ಏನುಮಾಡುತ್ತಾರೆ?

ಉತ್ತರ: ಉದಯಕಾಲದಲ್ಲಿ ಎದ್ದು ನದಿಯಲ್ಲಿ ತಣ್ಣೀರ ಜಳಕವ ಮಾಡಿ ಗಡಗಡ ನಡುಗುತ ಮದ, ಮತ್ಸರ, ಮೋಹ ಮನಸ್ಸಿನಲ್ಲಿ ತುಂಬಿಕೊಂಡು ಜನರಿಗೆ ಸಜ್ಜನರಾಗಿ ತೋರುವರು.

2) ಮನದೊಳಗೆ ಏನು ತುಂಬಿಟ್ಟು ಕೊಂಡಿರುತ್ತಾರೆ?

ಉತ್ತರ: ಮನದೊಳಗೆ ಮದ, ಮತ್ಸರ, ಮೋಹಗಳೆಲ್ಲ ತುಂಬಿಟ್ಟು ಕೊಂಡಿರುತ್ತಾರೆ.

3) ಘನ ಪೂಜೆಯನ್ನು ಹೇಗೆ ಮಾಡುತ್ತಾರೆ?

ಉತ್ತರ: ಕಂಚುಗಾರರ ಅಂಗಡಿಯಿಂದ ಕಂಚು ಹಿತ್ತಾಳೆಯ ಮೂರ್ತಿಯನ್ನು ತಂದು ಅದನ್ನು ಮಿಂಚಲೆಂದು ಅನೇಕ ದೀಪಗಳನ್ನು ಹಚ್ಚಿ ಆತ್ಮವಂಚನೆಯಲಿ ಘನಪೂಜೆ ಮಾಡುತ್ತಾರೆ.

4)ವೈರಾಗ್ಯದ ಮೂರ್ತಿ ಎನಿಸಿಕೊಳ್ಳಲು ಏನು ಮಾಡುವರು?

ಉತ್ತರ: ಕೈಯಲ್ಲಿ ಜಪಮಣಿ, ಬಾಯಿಯಲ್ಲಿ ಮಂತ್ರ ವನ್ನು ಹೇಳುತ್ತ ಪರಸತಿ, ಪರಾಧನಕ್ಕಾಗಿ ಚಿಂತಿಸುತ್ತಾ ವೈರಾಗ್ಯದ ಮೂರ್ತಿಎನಿಸಿಕೊಳ್ಳುವರು.

5) ಯಾವರೀತಿ ಬದುಕಬೇಕೆಂದು ಕವಿ ಹೇಳುತ್ತಾರೆ?

ಉತ್ತರ: ನಾನು ಎಂಬ ಅಹಂಕಾರವ ಬಿಟ್ಟುಸಿ ಜ್ಞಾನಿಗಳ ಜೊತೆಯಾಗಿದ್ದು ಆಗುವುದೆಲ್ಲ ದೇವರ ಪ್ರೇರಣೆ ಎಂದು ತಿಳಿದು ಧ್ಯಾನದಲ್ಲಿ, ಮೌನದಲ್ಲಿ ಪುರಂದರವಿಠಲನ ನೆನೆಯಬೇಕೆಂದು ಕವಿ ಹೇಳುತ್ತಾನೆ.

ಕೃತಿ-2 ಬಿಟ್ಟ ಸ್ಥಳ ತುಂಬಿರಿ.

1)     ಪದುಮನಾಭನಲಿ ಲೇಶ ಭಕುತಿಯಿಲ್ಲ.

2)    ನದಿಯೊಳು ಮಿಂದೆವೆಂದು ಹೇಳುತಲಿ

3)    ಮಿಂಚಲೆನುತೆ ಬಹು  ಜೋತಿಗಳನೆ ಹಚ್ಚಿ

4)   ಕರದೊಳು ಜಪಮಣಿ ಬಾಯೊಳು ಮಂತ್ರವು

5)    ಬೂಟಿಕತನದಲ್ಲಿ ಬಹಳ ಬಕುತಿ ಮಾಡಿ.

 ಕೃತಿ -3 ಗುಂಪಿಗೆ ಸೇರದ ಶಬ್ದವನ್ನು ಗುರುತಿಸಿರಿ.

1 ಬಾವಿ   2. ಹಳ್ಳ 3. ಹೊಳೆ 4. ಕಾಲುವೆ                     =ಬಾವಿ

1  ಕಟ್ಟಿಗೆ  2. ಹಿತ್ತಾಳೆ  3. ಕಂಚು  4 ತಾಮ್ರ                  ಕಟ್ಟಿಗೆ

ಕೃತಿ –4 ವಾಕ್ಯದಲ್ಲಿ ಉಪಯೋಗಿಸಿರಿ.

1)   ಪರನಾರಿ: ಛತ್ರಪತಿ ಶಿವಾಜಿ ಮಹಾರಾಜ ಪರನಾರಿಯರನ್ನು ಸಹೋದರಿ ಎಂದು ತಿಳಿಯುತ್ತಿದ್ದರು.

2)   ಜ್ಯೋತಿ: ಗರ್ಭಗುಡಿಯಲ್ಲಿ ಜ್ಯೋತಿಯೊಂದು ಮಂದವಾಗಿ ಉರಿಯುತ್ತಿತ್ತು.

3)   ಬಕುತಿ: ಶರಣರಂತೆ ದೇವರ ಬಕುತಿ ಮಾಡಬೇಕು. 

 

 

9. ಚಲಿತಮಾದುದು ಚಿತ್ತಂ

                                                                                                    -ನಾಗಚಂದ್

ಕೃತಿ-1 ಕೆಳಗಿನ ಪದಗಳಿಗೆ ಹೊಸಗನ್ನಡದ ರೂಪ ಬರೆಯಿರಿ.

1 . ಚಲಿತವಾದುದು – ಚಂಚಲವಾಯಿತು

2 . ಚಳನಯನ – ಚಂಚಲವಾದ ನಯನ

ಕೃತಿ-2 ಕೆಳಗಿನ ಅಲಂಕಾರಗಳನ್ನು ಗುರುತಿಸಿ ಬರೆಯಿರಿ.

1)   ಸಿಡಿಲು ಱಿವಿಡಿದು ಪೊಳೆವ ಕುಡುಮಿಂಚಿನಂತೆ ಬಲಭದ್ರನ ಕೆಲದೊಳಿರ್ದ ಸೀತೆಯಂ ಕಂಡು.

ಉತ್ತರ: ಉಪಮೇಯ: ಬಲಭದ್ರನ ಕೆಲದೊಳಿರ್ದ ಸೀತೆಯಂ

         ಉಪಮಾನ: ಸಿಡಿಲು ಱಿವಿಡಿದು ಪೊಳೆವ ಕುಡುಮಿಂಚಿ

         ವಾಚಕಪದ: ಅಂತೆ

         ಸಮಾನಧರ್ಮ: ಕಾಣುವುದು

2)  ಪದ್ಮಪತ್ರದ ಜಲಬಿಂದುವಿನಂತೆ ಚಲಿತವಾದುದು ಚಿತ್ತಂ

ಉತ್ತರ: ಉಪಮೇಯ: ಚಲಿತವಾದುದು ಚಿತ್ತಂ

         ಉಪಮಾನ: ಪದ್ಮಪತ್ರದ ಜಲಬಿಂದು

         ವಾಚಕಪದ: ಅಂತೆ

         ಸಮಾನಧರ್ಮ: ಚಲಿತವಾದುದು

3)   ವಿಷಾಹಿಯ ಪಡೆಯ ಮಣಿಶಲಾಕೆಗೆ ಕೈನೀಡುವ ಗಾಂಪನಂತೆ.

ಉತ್ತರ: ಉಪಮೇಯ: ಮಣಿಶಲಾಕೆಗೆ ಕೈನೀಡುವ ಗಾಂಪ

         ಉಪಮಾನ: ವಿಷಾಹಿಯ ಪಡೆ

     ವಾಚಕಪದ: ನಂತೆ

     ಸಮಾನಧರ್ಮ: ನೀಡುವುದು.

 ಕೃತಿ-3 ಕೆಳಗಿನ ಪದಗಳ ಸಮಾಸ ವಿಗ್ರಹಿಸಿ ಹೆಸರಿಸಿರಿ.

        ದಶಾಸ್ಯ = ದಶಗಳಾದ + ಆಸ್ಯ =ದ್ವಿಗು ಸಮಾಸ

        ಕುಡುಮಿಂಚು =

        ಎಳವಾಳೆ = ಎಳೆಯಳಾದ + ಬಾಲೆ = ಬಹುರ್ವಿಹಿ ಸಮಾಸ

          ದಶಮುಖ = ದಶಗಳಾದ + ಮುಖ

ಕೃತಿ-4 ಪದ್ಯದಲ್ಲಿ ಬಂದ ಹೆಸರು ಬರೆಯಿರಿ.

ಉತ್ತರ: ಸೀತೆ, ಜಾನಕಿ, ರಘುವೀರ, ದಶಾಸ್ಯ (ದಶಕಂಠ- ರಾವಣ), ದಶಮುಖ

ಕೃತಿ-5) 1. ಚಕ್ರವರ್ತಿಯ ಚಿತ್ತವು ಚಲಿತವಾದುದು ಹೇಗೆ?

ಉತ್ತರ: ಸೀತೆಯನ್ನು ಕಂಡು ಖಚರ ಚಕ್ರವರ್ತಿ ರಾವಣನ ಚಿತ್ತವು ತಾವರೆಯ ಎಲೆಯ ಮೇಲಿನ ನೀರಿನ ಹನಿಯಂತೆ ಚಂಚಲವಾಯಿತು.

        ಸೀತೆಯ ಕಣ್ಣಿನ ಹೊಳಪು ರಾವಣನ ಹೃದಯವನ್ನು ಅಲ್ಲೋಲಕಲ್ಲೋಲವಾಗಿಸಿತು. ಅವನ ಮನಸ್ಸು ಕೊಳದೊಳಗೆ ಬಳಬಳನೆ ಈಜಾಡುವ ಎಳೆಯ ಮೀನುಗಳಂತೆ ಚಂಚಲವಾಯಿತು.

2. ಜಾನಕಿಯ ರೂಪಸಂಪತ್ತು ಹೇಗಿತ್ತೆಂದು ಕವಿ ವರ್ಣಿಸಿದ್ದಾನೆ?

ಉತ್ತರ: ರಾಮನ ಪಕ್ಕದಲ್ಲಿದ್ದ ಸೀತೆಯ ರೂಪ ಅವಳ ಮೇಲೆಯೇ ಕಣ್ಣುಗಳು ನೆಲೆಯಾಗಿ ನಿಲ್ಲುವಂತಿತ್ತು. ಅವಳ ರೂಪವು ಹೃದಯಕ್ಕೆ ವಜ್ರದ ಸಂಕೋಲೆಯಂತೆ ಇತ್ತು. ಇದರಿಂದ ನೋಡುಗರ ನೋಟ ಬೇರೆಡೆಗೆ ಚಲಿಸದೇ ಆಕೆಯಲ್ಲಿಯೇ ಅನುರಕ್ತವಾಗಿರುವಂತೆ ಇತ್ತು.

3. ರಾವಣನ ಹೃದಯವು ಕಲಂಕಿದುದನ್ನು ಕವಿ ಹೇಗೆ ವರ್ಣಿಸಿದ್ದಾನೆ?

ಉತ್ತರ: ಸ್ವಾಭಾವಿಕವಾಗಿ ಸತ್ಪುರುಷನಾದ ರಾವಣನು ಸೀತೆಯ ಸೌಂದರ್ಯವನ್ನು ನೋಡಿ ತಪ್ಪು ದಾರಿ ತುಳಿದುದನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ.  ಸೀತೆಯ ಕಣ್ಣಿನ ಹೊಳಪು ರಾವಣನ ಹೃದಯವನ್ನು ಅಲ್ಲೋಲಕಲ್ಲೋಲವಾಗಿಸಿತು. ಅವನ ಮನಸ್ಸು ಕೊಳದೊಳಗೆ ಬಳಬಳನೆ ಈಜಾಡುವ ಎಳೆಯ ಮೀನುಗಳಂತೆ ಚಂಚಲವಾಯಿತು. ಸೀತೆಯನ್ನು ಕಂಡು ಖಚರ ಚಕ್ರವರ್ತಿ ರಾವಣನ ಚಿತ್ತವು ತಾವರೆಯ ಎಲೆಯ ಮೇಲಿನ ನೀರಿನ ಹನಿಯಂತೆ ಚಂಚಲವಾಯಿತು.


4. ರಘುವೀರನ ವಧುವಾದ ಜನಕಜೆಯಲ್ಲಿ ಮೋಹಗೊಂಡುದು ಏಕೆ ಮೂಢತನ?

ಉತ್ತರ:

 

 

 

ಕೃತಿ 6) ಈ ಪದ್ಯವನ್ನು ಸರಳಾನುವಾದ ಮಾಡಿ ಬರೆಯಿರಿ.

 

 

 

 

 

 

 

ಕೃತಿ 7) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು?

1. ''ಪದ್ಮಪತ್ರದ ಜಲಬಿಂದುವಿನಂತೆ ಚಲಿತವಾದುದು ಚಿತ್ತ''

ಉತ್ತರ:

 

 

 

2. ''ಆಭಿಯುಮೊರ್ಮೆ ಕಾಲವಶದಿಂ ಮಯ್ಯಾದೆಯಂ ದಾಂಟದೆ ?''

ಉತ್ತರ:

 

3. “ವಿಷಾಹಿಯ ಪೆಡೆಯ ಮಣಿಶಲಾಕೆಗೆ ಕೈನೀಡುವ ಗಾಂಪನಂತೆ''

ಉತ್ತರ:

 

4. ''ಕೊಳದೊಳಗಳವಾಳ ತೆ೦ಬೊಳೆವಂತ'

ಉತ್ತರ:

 

 

 

ವ್ಯಾಕರಣ ವಿಭಾಗ

 

1. ಲೇಖನ ಚಿಹ್ನೆಗಳು

 ಬರವಣಿಗೆಯಲ್ಲಿ ಲೇಖನ ಚಿಹ್ನೆಗಳ ಪಾತ್ರ ಅತ್ಯಂತ ಮುಖ್ಯವಾದುದು. ಲೇಖನ ಚಿಹ್ನೆಗಳಿಲ್ಲದ ಬರವಣಿಗೆ ಸಮರ್ಥವನ್ನು ಕೊಡದೆ ತೊಡಕುಗಳಿಗೆ ಕಾರಣವಾಗುವುದುಂಟು. ಹಾಗಾಗಿ ಲೇಖನ ಚಿಹ್ನೆಗಳು ಅತ್ಯಂತ ಅಗತ್ಯ. ಇಲ್ಲಿ ಕೊಟ್ಟಿರುವ ವಿವರಗಳನ್ನು ಗಮನಿಸಿ.

 ಪೂರ್ಣ ವಿರಾಮ : (.) ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಪೂರ್ಣವಿರಾಮ ಚಿಹ್ನೆಯನ್ನು ಬಳಸಬೇಕು.

ಉದಾ :- ವಿದ್ಯಾರ್ಥಿಗಳು ಪದ್ಯವನ್ನು ಹಾಡುತ್ತಾರೆ.

 ಅರ್ಧ ವಿರಾಮ : (,) : (1) ಅನೇಕ ಉಪವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಆಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಚಿಹ್ನೆಯನ್ನು ಬಳಸಲಾಗುವುದು.

ಉದಾ :- ಬಟ್ಟೆಗಿರಣಿ, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಗಿದೆ.


ಅಲ್ಲವಿರಾಮ : (;)  ಸಂಬೋಧನೆಯ ಮುಂದೆ ಹಾಗೂ ಕರ್ತೃ, ಕರ್ಮ, ಕ್ರಿಯಾಪದಗಳಿಗೆ ಬೇರೆ ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇಷಣ ಬಿಟ್ಟು ಉಳಿದವುಗಳ ಮುಂದೆ ಅಲ್ಪವಿರಾಮ ಬಳಸಬೇಕು.

ಉದಾ :- ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.

 ಪ್ರಶ್ನಾರ್ಥಕ: (?) ಪ್ರಶ್ನೆರೂಪದ ಪದ ಮತ್ತು ವಾಕ್ಯಗಳ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸಲಾಗುವುದು.

ಉದಾ :-ದಾಶರಥಿ ಯಾರು?

 ಭಾವಸೂಚಕ : (!) ಹರ್ಷ, ಆಶ್ಚರ್ಯ, ಸಂತೋಷ, ವಿಷಾದ, ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಪದಗಳ

ಮುಂದೆ ಚಿಹ್ನೆಯನ್ನು ಬಳಸಲಾಗುವುದು.

ಉದಾ :- ಅಯ್ಯೋ! ಹೀಗಾಗಬಾರಿದಿತ್ತು!

ಉದ್ಧರಣ ಚಿಹ್ನೆ : ("      “) ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಚಿಹ್ನೆಯನ್ನು ಬಳಸಲಾಗುವುದು.

ಉದಾ :- "ಶಿಕ್ಷಣವು ಕೇಲವೇ ಜನರ ಸತ್ತಾಗದ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ

ಹಕ್ಕಾಗಬೇಕು'' ಎಂದು ಸರ್ ಎಂ. ವಿಶ್ವೇಶ್ವರಯ್ಯನವರು ಹೇಳಿದರು.

 ವಾಕ್ಯವೇಷ್ಟನ ಚಿಹ್ನೆ : (*) ಪಾರಿಭಾಷಿಕ ಪದಗಳನ್ನು ಬಳಸುವಾಗ, ಅನ್ಯಭಾಷೆಯ ಪದಗಳನ್ನು ಬಳಸುವಾಗ, ಪ್ರಮುಖ ಪದಗಳನ್ನು ಸೂಚಿಸುವಾಗ ಚಿಹ್ನೆಯನ್ನು ಬಳಸಲಾಗುವುದು.

ಉದಾ :- ಕನ್ನಡ ಭಾಷೆಯಲ್ಲಿ 'ಇಂಗ್ಲೀಷ್', 'ಪರ್ಷಿಯನ್', 'ಪೋರ್ಚ್ಗೀಸ್', ಭಾಷೆಗಳ

ಪದಗಳನ್ನು ಬಳಸಲಾಗುತ್ತದೆ.

ಆವರಣ ಚಿಹ್ನೆ : () ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮಾನಾರ್ಥಕ ಪದವನ್ನೋ ವಾಕ್ಯವನ್ನೋ ಹೇಳುವಾಗ ಚಿಹ್ನೆಯನ್ನು ಬಳಸಲಾಗುತ್ತದೆ.

ಉದಾ :- ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್) ಜಲಜನಕ (ಹೈಡೋಜನ್)ಗಳು

ಉತ್ಪತ್ತಿಯಾಗುತ್ತವೆ.

 (1) ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ

ಚಿಹ್ನೆಯನ್ನು ಬಳಸಲಾಗುತ್ತದೆ.

 ವಿವರಣಾತ್ಮಕ ಚಿಹ್ನೆ :

ಉದಾ :- ಪಂಚಮಹಾವಾದ್ಯಗಳು: ತಾಳ, ಹಳಗ, ಗಂಟೆ, ಮೌರಿ, ಸನಾದಿ,

 


ಧನ್ಯವಾದಗಳು


ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಧನ್ಯವಾದಗಳು