ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಕನ್ನಡ ಬಾಲಭಾರತಿ ಮೂರನೆಯ ಇಯತ್ತೆ ಸ್ವಾಧ್ಯಾಯಮಾಲೆ std 3rd Kannada Balabharati

 

ಕನ್ನಡ ಬಾಲಭಾರತಿ ಮೂರನೆಯ ಇಯತ್ತೆ

ಪರಿವಿಡಿ

ಅ.ಕ್ರ.

ಪಾಠಗಳು

ಕವಿ/ಲೇಖಕರು

*

ಮಕ್ಕಳ ಹಕ್ಕು (ಶ್ರವಣಗೀತೆ)

……..

*

ಶಬರಿ (ಚಿತ್ರಕಥೆ)

……..

*

ಹಾಲಿನ ಡೇರಿ (ಸಂಭಾಷಣೆ)

……..

*

ಸಂಜೀವನ ಆಸ್ಪತ್ರೆ (ಭಿತ್ತಿ ಫಲಕವಾಚನ)

……..

೧.

ಶಾಲೆಯ ಬಾಲಕ (ಕವಿತೆ)

ಚಂದ್ರಶೇಖರ ಹಿರೇಮಠ

೨.

ಅಕಬರನ ಸೇತುವೆ

……..

೩.

ವೀರ ಬಾಲಕ

……..

೪.

ಚೆಲುವಿನ ಚೇತನ (ಕವಿತೆ)

ಶರಣಪ್ಪ ಕಂಚ್ಯಾಣಿ

೫.

ಮೂವರು ಮಕ್ಕಳು

ಮನೋಹರ

೬.

ಹೋದ ಮಳೆ ಬಂತು

ಸಂಗಮೇಶ ಗುಜಗೊಂಡ

೭.

ವಂದನ (ಕವಿತೆ)

ಕೂಡ್ಲಯ್ಯಸ್ವಾಮಿ ಸೊಪ್ಪಿಮಠ

೮.

ಜೀನಪ್ಪ

……..

೯.

ರಾಜನ ಮೂರು ಪ್ರಶ್ನೆ

……..

೧೦.

ವೀರ ಕಂಕಣ (ಕವಿತೆ)

………

೧೧.

ಪ್ರೀತಿಯ ಗುಬ್ಬಿ

ಸತ್ಯ ಕಲಾಧ್ವನಿ

೧೨.

ಮನೆಯಲ್ಲಿ ಕಾಮನ ಬಿಲ್ಲು

……..

೧೩.

ಮನೆಯ ಜ್ಯೋತಿ (ಕವಿತೆ)

ಸಿದ್ದಾರಾಮ ಬಿರಾದಾರ

೧೪.

ಬುದ್ದಿವಾದ

ಡಬ್ಲ್ಯು.  ಬಸವರಾಜ

೧೫.

ಸಂಶೋಧನೆ

……..

೧೬.

ರಂಗನ ಓಕುಳಿ (ಕವಿತೆ)

ಜಾನಪದ

೧೭.

ಯುಕ್ತಿ

ಪ. ರಾಮಕೃಷ್ಣ ಶಾಸ್ತ್ರಿ

೧೮.

ಅನಾಥರ ನಾಥ

ಜಿ. ಪಿ. ರಾಜರತ್ನಂ

೧೯.

ಆಟ-ಪಾಠ (ಕವಿತೆ)

ವಿಮಲಾ ಇನಾಮದಾರ

೨೦.

ಕಲ್ಪವೃಕ್ಷ

……..

 

೧. ಶಾಲೆಯ ಬಾಲಕ (ಕವಿತೆ)

                                                                - ಚಂದ್ರಶೇಖರ ಹಿರೇಮಠ

ಶಬ್ದಗಳ ಅರ್ಥ:

ಮೆಚ್ಚಿಗೆ ಗಳಿಸು - ಪ್ರೀತಿಗೆ ಪಾತ್ರನಾಗು; ಅಕ್ಕರೆ ಪ್ರೀತಿ; ಪೋಷಣೆ - ರಕ್ಷಿಸು, ಕಾಪಾಡು ;

ನೀರು - ಜಲ, ಉದಕ ; ಜಗ - ವಿಶ್ವ, ಜಗತ್ತು, ಲೋಕ, ಪ್ರಪಂಚ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಬಾಲಕನು ಯಾರ ಜೊತೆಯಲಿ ಶಾಲೆಗೆ ಹೋಗುವನು?

ಉತ್ತರ:ಬಾಲಕನು ದಿನಾಲು ತಪ್ಪದೆ ಗೆಳೆಯರ ಜೊತೆಗೆ ಶಾಲೆಗೆ ಹೋಗುವನು. 

ಆ) ಗುರುಗಳ ಮೆಚ್ಚಿಗೆ ಪಡೆಯಲು ಏನು ಮಾಡಬೇಕು?

ಉತ್ತರ: ಗುರುಗಳ ಮೆಚ್ಚಿಗೆ ಪಡೆಯಲು ಅವರು ಹೇಳಿದ ಕೆಲಸ, ಮನೆ ಪಾಠ ಮಾಡಬೇಕು

ಇ) ಬಾಲಕನು ಸಸಿಗಳನ್ನು ಯಾವ ರೀತಿ ಪೋಷಣೆ ಮಾಡುವನು?

ಉತ್ತರ: ಬಾಲಕನು ಶಾಲೆಯ ಸುತ್ತಲೂ ಬೆಳೆಸಿದ ಸಸಿಗಳ ಕಾಳಜಿ ವಹಿಸುತ್ತಾ ನಿಗದಿತ ಸಮಯದಲ್ಲಿ ನೀರನ್ನು ಹಾಕುತ್ತಾ ಅವುಗಳ ಪಾಲನೆ ಪೋಷಣೆ ಮಾಡುವನು.

ಈ) ಬಾಲಕನು ಯಾವ ಭಾವನೆಯನ್ನು ಬೆಳೆಸಿಕೊಳ್ಳುವನು?

ಉತ್ತರ: ಬಾಲಕನು ಶಾಲೆಯ ಎಲ್ಲ ಮಕ್ಕಳು ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳುವನು.

ಉ) ಉತ್ತಮ ಬಾಲಕನಾಗಲು ಏನು ಮಾಡುವನು?

ಉತ್ತರ: ಉತ್ತಮ ಬಾಲಕನಾಗಲು ಎಲ್ಲರ ಪ್ರೀತಿ ಗಳಿಸುತ್ತ ಶಾಲೆಯ ಹೇಸರು ಜಾಗದಲ್ಲಿ ಬೆಳೆಸಲು ಪ್ರಯತ್ನ ಮಾಡಬೇಕು.

ಪ್ರಶ್ನೆ ೨) ಕವಿತೆಯ ಬಿಟ್ಟ ಸಾಲುಗಳನ್ನು ಪೂರ್ಣ ಮಾಡಿರಿ.

ಶಾಲೆಯ ಎಲ್ಲ ಗೆಳೆಯರ ಜೊತೆಯಲಿ ಸ್ನೇಹ ಪ್ರೀತಿ ತೋರುವೆನು

ಶಾಲೆಯ ಮಕ್ಕಳು ಒಂದೇ ಎಂಬ ಭಾವನೆ ಜೊತೆಗೆ ಬೆಳೆಸುವೆನು ||

೩) ಕವಿತೆಯಲ್ಲಿ ಶಬ್ದದ ಕೊನೆಗೆ 'ನು' ಬರುವ ಶಬ್ದಗಳನ್ನು ಆರಿಸಿ ಬರೆಯಿರಿ.

ಉದಾ.: ಹೋಗುವೆನು

        ಗಳಿಸುವೆನು

        ತೋರುವೆನು

        ಮಾಡುವೆನು

        ಬೆಳೆಸುವೆನು

        ಬಾಲಕನಾಗುವೆನು

ಉಪಕ್ರಮ

) ನಿಮ್ಮ ಪರಿಸರದಲ್ಲಿ ಕಂಡುಬರುವ ಐದು ಮರಗಳ ಹೆಸರು ಬರೆಯಿರಿ.

ಬೇವಿನ ಮರ, ಆಲದ ಮರ, ಹುಣಸೆ ಮರ, ಮಾವಿನ ಮರ, ಬೋರೆ ಹಣ್ಣು .

) ಬೇರೆ ಬೇರೆ ಪ್ರಕಾರದ ಎಲೆಗಳನ್ನು ಸಂಗ್ರಹಿಸಿ ಅವುಗಳಲ್ಲಿಯ ವ್ಯತ್ಯಾಸಗಳನ್ನು ಬರೆಯಿರಿ.

ನುಡಿಮುತ್ತು

ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ

ಶಾಲೆಯು ಜೀವಂತ ದೇವರ ಗುಡಿ

 

ನಿಮಗಿದು ತಿಳಿದಿರಲಿ

೧) ಆಗ ತಾನೇ ಆದ ಗಾಯಕ್ಕೆ ಬೇವಿನ ಎಲೆಗಳನ್ನು ಪುಡಿ ಮಾಡಿ ಕಟ್ಟುವದರಿಂದ ಗಾಯ ಬೇಗನೆ ವಾಸಿಯಾಗುತ್ತದೆ.

೨) ಬೇವು ಕಫ ನಾಶಕ ಹಾಗೂ ಪಿತ್ತ ನಾಶಕವಾಗಿ ಕೆಲಸ ಮಾಡುತ್ತದೆ.

೩) ಬೇವಿನ ಎಲೆಗಳನ್ನು ಅರೆದು ಕೈ-ಕಾಲುಗಳಿಗೆ ಹಚ್ಚಿಕೊಂಡರೆ ಉರಿ ಶಾಂತವಾಗುತ್ತದೆ.

೪) ಬೇವಿನ ಎಲೆಗಳನ್ನು ಅರೆದು ಅದರ ರಸಕ್ಕೆ ಜೇನುತುಪ್ಪ ಬೆರೆಸಿ ತಿನ್ನುವದರಿಂದ ಹೊಟ್ಟೆಯಲ್ಲಿನ ಜಂತುಗಳು ನಾಶವಾಗುವವು.

೫) ಬೇವಿನ ಎಲೆಗಳನ್ನು ನೀರಿನಲ್ಲಿ ಅರೆದು ಸೇವಿಸಿದರೆ ರಕ್ತದಲ್ಲಿಯ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.

೨. ಆಕಬರನ ಸೇತುವೆ

ಶಬ್ದಗಳ ಅರ್ಥ:

ತೀರ- ದಂಡೆ; ಉದಾರ - ಧಾರಾಳ, ಔದಾರ್ಯ;  ಕರ್ಣ - ಕಿವಿ; ಭೇದಿಸು ಭಾಗ ಮಾಡು;

ವಾಡಿಕೆ - ನಿಯಮ; ಲೋಕಾರ್ಪಣೆ - ಜನ ಸೇವೆಗೆ ಅರ್ಪಿಸು; ನಿಧಾನ ಸಾವಕಾಶ;

ಸ್ಮರಣೆ - ನೆನಪು; ಪ್ರೇರಣೆ – ಹುರಿದುಂಬಿಸು

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ರಾಜನು ವೇಷ ಬದಲಿಸಿಕೊಂಡು ಎಲ್ಲಿಗೆ ಹೋದನು?

ಉತ್ತರ: ರಾಜನು ವೇಷ ಬದಲಿಸಿಕೊಂಡು ಯಮುನಾ ನದಿಯ ತೀರಕ್ಕೆ ಹೋದನು.

ಆ) ಅಜ್ಜಿ ಏಕೆ ನದಿ ದಾಟಬೇಕಾಗಿತ್ತು ?

ಉತ್ತರ: ನದಿಯ ಆಚೆಗೆ ಕೆಲಸ ಮಾಡುತ್ತಿದ್ದ ತನ್ನ ಮಗನಿಗೆ ಊಟ ಕೊಡುವುದಕ್ಕಾಗಿ ಅಜ್ಜಿಗೆ ನದಿ ದಾಟಬೇಕಾಗಿತ್ತು.

ಇ) ದೋಣಿಯು ಬುಡ ಮೇಲಾಗಲು ಕಾರಣವೇನು ?

ಉತ್ತರ: ಬಿರುಗಾಳಿ ಬೀಸಿದುದರಿಂದ ದೋಣಿಯು ಸೆಳವಿನಲ್ಲಿ ಸಿಕ್ಕು ಬುಡಮೇಲಾಯಿತು.

ಈ) ಅಜ್ಜಿಯು ಏನೆಂದು ಉದ್ಗಾರ ತೆಗೆದಳು ?

ಉತ್ತರ: ನೀನು ಎಷ್ಟೊಂದು ಉದಾರಿ? ಇಂತಹ ಔದಾರ್ಯ ನಮ್ಮ ರಾಜನಾದ ಆಕಬರನಿಗೂ ಇದ್ದಿದ್ದರೆ ಇಷ್ಟು ಹೊತ್ತಿಗೆ ಇಲ್ಲಿ ಒಂದು ಸೇತುವೆ ನಿರ್ಮಾಣವಾಗುತ್ತಿತ್ತು ಎಂಬ ಉದ್ಗಾರವನ್ನು ಅಜ್ಜಿ ತೆಗೆದಳು.

ಉ) ರಾಜನು ಅಜ್ಜಿಯನ್ನು ಯಾವ ರೀತಿ ಪ್ರಶಂಸೆ ಮಾಡಿದನು ?

ಉತ್ತರ: ಅಜ್ಜಿ, ನೀನು ಅಂದು ಆ ಮಾತುಗಳನ್ನು ಹೇಳಿರದ್ದಿದ್ದರೆ ಇಂದು ಈ ಸೇತುವೆ ನಿರ್ಮಾಣವಾಗುತ್ತಿರಲಿಲ್ಲ. ಇದಕ್ಕೆಲ್ಲ ನೀನೇ ಸ್ಪೂರ್ತಿ ಎಂದು ರಾಜನು ಅಜ್ಜಿಯನ್ನು ಪ್ರಶಂಸಿಸಿದನು. 

ಪ್ರಶ್ನೆ ೨) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು.

ಅ) ಈ ನದಿಗೆ ಒಂದು ಸೇತುವೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.

ಉತ್ತರ: ಅಜ್ಜಿ ಆಕಬರ ರಾಜನಿಗೆ ಹೇಳಿದಳು.

ಆ) ನಿನಗೆ ಸಹಾಯ ಮಾಡುವುದರಲ್ಲಿಯೇ ನನಗೆ ಆನಂದವಿದೆ.

ಉತ್ತರ:  ಆಕಬರ ಮಹಾರಾಜನು ಅಜ್ಜಿಗೆ ಹೇಳಿದನು.

ಪ್ರಶ್ನೆ ೩) ಬಿಟ್ಟ ಸ್ಥಳಗಳನ್ನು ತುಂಬಿರಿ.

ಅ) ಅಕಬರನು ಪ್ರಸಿದ್ಧ ರಾಜನಾಗಿದ್ದನು.

ಆ) ನಿಮ್ಮಂಥವರಿಗೆ ಸಹಾಯ ಮಾಡುವುದರಲ್ಲಿ ನನಗೆ ಆನಂದವಿದೆ.

ಇ) ಅಜ್ಜಿಯ ಮಾತುಗಳು ಮಹಾರಾಜನ ಕರ್ಣಗಳನ್ನು ಭೇದಿಸಿದವು.

ಈ) ಸೇತುವೆಯ ಲೋಕಾರ್ಪಣ ಕಾರ್ಯಕ್ರಮಕ್ಕೆ ಮಹಾರಾಜರು ಬಂದರು.

ಉಪಕ್ರಮ

೧) ಈ ಕಥೆಯನ್ನು ನಿಮ್ಮ ಮನೆಯಲ್ಲಿ ಎಲ್ಲರಿಗೂ ಹೇಳಿರಿ.

೨) ಕೆಳಗಿನ ಪ್ರಸಂಗಗಳಲ್ಲಿ ನೀವು ಏನು ಮಾಡುವಿರಿ?

ಅ) ಪರೀಕ್ಷೆಯ ವೇಳೆಯಲ್ಲಿ ಗೆಳೆಯನ ಪೆನ್ನು ಸರಿಯಾಗಿ ಬರೆಯುತ್ತಿಲ್ಲ.

ಉತ್ತರ:ಅವನಿಗೆ ನನ್ನ ಹತ್ತಿರವಿರುವ ಪೆನ್ನು ಕೊಡುವೆನು.  

ಆ) ಪೇಟೆಗೆ ಹೋಗುವಾಗ ದಾರಿಯಲ್ಲಿ ಹಣ ಸಿಕ್ಕಿತು.

ಉತ್ತರ: ಹಣ ಯಾರದು ಎಂಬುದನ್ನು ಹುಡುಕಿ ಅವರಿಗೆ ಮರಳಿಸುವೆ ಅಥವಾ ಪೊಲೀಸ್ ಸ್ಟೇಷನ್ ಹತ್ತಿರವಿದ್ದರೆ ಅವರಿಗೆ ಕೊಡುವೆನು.

ಇ) ಕುರುಡನ ತಟ್ಟೆಯಿಂದ ಹಣ ಕೆಳಗೆ ಬಿದ್ದಿದೆ.

ಉತ್ತರ: ಆ ಹಣವನ್ನು ಎತ್ತಿ ಅವನ ತಟ್ಟೆಯಲ್ಲಿ ಇಡುವೆ.

ಈ) ಪ್ರವಾಸಕ್ಕೆ ಹೋಗಲು ಗೆಳೆಯನ ಬಳಿ ಹಣವಿಲ್ಲ.

ಉತ್ತರ: ನನ್ನ ತಂದೆಗೆ ಹೇಳಿ ಅವನಿಗೂ ಪ್ರವಾಸಕ್ಕೆ ಬರುವಂತೆ ಹಣದ ವ್ಯವಸ್ಥೆ ಮಾಡಿಸುವೆ.

ಉ) ನಿಮ್ಮ ವರ್ಗಮಿತ್ರನು ನಿಯಮಿತವಾಗಿ ಶಾಲೆಗೆ ಬರುತ್ತಿಲ್ಲ.

ಉತ್ತರ: ವರ್ಗ ಮಿತ್ರನ ಸಮಸ್ಯೆಯನ್ನು ತಿಳಿದು ಅದನ್ನು ಬಗೆಹರಿಸಲು ಗೆಳೆಯನಿಗೆ ಹುರಿದುಂಬಿಸಿ ಶಾಲೆಗೆ ಬರುವಂತೆ ಮಾಡುವೆನು.

ನುಡಿಮುತ್ತು

ಜೀವನ ಒಂದು ಕರ್ತವ್ಯ, ಅದನ್ನು ಸರಿಯಾಗಿ ನಿರ್ವಹಿಸು.

ಕರ್ತವ್ಯವೇ ದೇವರು

 

೩. ವೀರ ಬಾಲಕ

ಶಬ್ದಗಳ ಅರ್ಥ  

ಅನ್ಯೋನ್ಯ – ಪ್ರೀತಿ; ಕಂಗೊಳಿಸು – ಶೋಭಿಸು; ತಾಪಸಿ – ತಪಶ್ವಿನಿ, ಆಶ್ರಮದಲ್ಲಿ ಇರುವವರು; ವಿಸ್ಮಯ – ಬೆರಗು; ಕಣ್ಮಣಿ – ಅಚ್ಚುಮೆಚ್ಚಿನ; ಆರೈಕೆ – ಉಪಕಾರ; ವಿಮೋಚನೆ – ಬಿಡುಗಡೆ;

ಅಚ್ಚರಿ – ಆಶ್ಚರ್ಯ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಆಶ್ರಮದ ಸುತ್ತಲಿನ ಪರಿಸರ ಹೇಗಿತ್ತು?

ಉತ್ತರ: ಆಶ್ರಮದಲ್ಲಿ ಎಲ್ಲ ಪ್ರಾಣಿ-ಪಕ್ಷಿಗಳು ಪ್ರೀತಿಯಿಂದ ಅನ್ಯೋನ್ಯವಾಗಿ ಜೀವಿಸುತ್ತಿದ್ದವು. ತಂಪಾದ ನೆರಳು ಪಕ್ಷಿಗಳ ಚಿಲಿಪಿಲಿನಾದ, ಹೂಬಳ್ಳಿಗಳ ಸುಗಂಧ ವಾಸನೆಯಿಂದ ಆಶ್ರಮದ ಸುತ್ತಲಿನ ಪರಿಸರ ತುಂಬಾ ಪುಳಕಿತವಾಗಿತ್ತು. 

ಆ) ಭರತನು ಶಾಸ್ತ್ರವಿದ್ಯೆಯಲ್ಲಿ ಏನೇನು ಕಲಿತನು?

ಉತ್ತರ: ಭರತನು ಶಾಸ್ತ್ರವಿದ್ಯೆಯಲ್ಲಿ ಬಿಲ್ಲುವಿದ್ಯೆ, ಕುದುರೆ ಸವಾರಿ, ಖಗ್ಡ ಬೀಸುವುದು, ಕುಸ್ತಿ ಹಿಡಿಯುವುದು ಹೀಗೆ ಎಲ್ಲ ವಿದ್ಯೆಗಳನ್ನು ಕಲಿತನು.

ಇ) ಭರತನ ತಂದೆ ತಾಯಿಗಳ ಹೆಸರು ಹೇಳಿರಿ.

ಉತ್ತರ: ಭರತನ ತಂದೆ ದುಶಂತ ರಾಜ ಮತ್ತು ತಾಯಿ ಶಕುಂತಲಾ.

ಈ) ದುಷ್ಯಂತ ಮಹಾರಾಜನು ಆಶ್ರಮದಲ್ಲಿಯ ಯಾವ ನೋಟವನ್ನು ಕಂಡು ಆಶ್ಚರ್ಯಗೊಂಡನು ?

ಉತ್ತರ: ಒಬ್ಬ ಬಾಲಕ ಸಿಂಹದ ಬಾಯಿ ತೆರೆದು ಹಲ್ಲುಗಳನ್ನು ಎಣಿಸುತ್ತಿದ್ದನು. ಈ ಧೀರ ಬಾಲಕನನ್ನು ನೋಡಿ ದುಶಂತ ಮಹಾರಾಜನು ಆಶ್ಚರ್ಯಗೊಂಡನು.

ಉ) ಭರತನು ಇತಿಹಾಸ ಪ್ರಸಿದ್ಧ ರಾಜನಾಗಲು ಕಾರಣವೇನು?

ಉತ್ತರ: ಭರತನು ತನ್ನ ಆಳ್ವಿಕೆಯ ಕಾಲದಲ್ಲಿ ಪ್ರಜೆಯನ್ನು ಪ್ರೀತಿಯಿಂದ ನೋಡಿಕೊಂಡನು.  ಜನರ ಕಲ್ಯಾಣಕ್ಕಾಗಿ ಅನೇಕ ಸುಧಾರಣೆಗಳನ್ನು ಮಾಡಿದನು. ಆದ್ದರಿಂದ ಭರತ ಇತಿಹಾಸ ಪ್ರಸಿದ್ಧ ರಾಜನಾದನು.

ಪ್ರಶ್ನೆ ೨) ಕೆಳಗಿನ ಬಿಟ್ಟ ಸ್ಥಳ ತುಂಬಿರಿ.

ಅ) ಒಂದು ಅರಣ್ಯದಲ್ಲಿ ಮಾರೀಚ ಋಷಿಗಳ ಆಶ್ರಮವಿತ್ತು.

ಆ) ಒಂದು ಶುಭ ಮುಹೂರ್ತದಲ್ಲಿ ಶಕುಂತಲೆ ಪುತ್ರರತ್ನಕ್ಕೆ ಜನ್ಮವಿತ್ತಳು.

ಇ) ಎಲ್ಲ ವಿದ್ಯೆಗಳನ್ನು ಕಲಿತು ಭರತನು ವೀರ ಬಾಲಕನೆನಿಸಿದನು.

4) ದುಷ್ಯಂತ ರಾಜನಿಗೆ ತನ್ನ ಹೆಂಡತಿಯ ನೆನಪಾಯಿತು.

ಉ) ತನ್ನ ಮಗನಾದ ಭರತನಿಗೆ ಪಟ್ಟಾಭಿಷೇಕ ಮಾಡಿದನು.

ಪ್ರಶ್ನೆ ೩) ಶಬ್ದಗಳನ್ನು ಸರಿಪಡಿಸಿ ಬರೆಯಿರಿ.

ಅ) ಚಮಾಋರೀಷಿ = ಮಾರೀಚ ಋಷಿ

ಆ) ಲೆಕುಂತಶ = ಶಕುಂತಲೆ

ಇ) ರತಭ = ಭರತ

ಈ) ತಾಸಿಪ = ತಾಪಸಿ

ಉ) ತಿಸಇಹಾ = ಇತಿಹಾಸ

ಪ್ರಶ್ನೆ ೪) ಕೆಳಗಿನ ಶಬ್ದಗಳನ್ನು ವಾಕ್ಯದಲ್ಲಿ ಉಪಯೋಗಿಸಿರಿ.

ಅ) ಸೂರ್ಯ: ಸೂರ್ಯ ನಮಗೆ ಬೆಳಕು ಕೊಡುವನು.

ಆ) ಋಷಿ: ಋಷಿ ಆಶ್ರಮದಲ್ಲಿ ವಾಸಿಸುತ್ತಿದ್ದರು.

ಇ) ಆಡು: ಮಕ್ಕಳು ಅಂಗಳದಲ್ಲಿ ಆಟವನ್ನು ಆಡುತ್ತಿದ್ದಾರೆ.

ಈ) ಆನಂದ: ಮಕ್ಕಳು ಆನಂದದಿಂದ ನಲಿಯುತ್ತಿದ್ದಾರೆ.

ಉಪಕ್ರಮ

ವಿಶ್ವಾಮಿತ್ರ ಮೇನಕೆಯರ ಕಥೆಯನ್ನು ಶಿಕ್ಷಕರಿಂದ /ಪಾಲಕರಿಂದ ಕೇಳಿ ಮಾಹಿತಿ ಪಡೆಯಿರಿ.

ನುಡಿಮುತ್ತು

ಬೆಂಕಿ ಚಿನ್ನವನ್ನು ಪರೀಕ್ಷಿಸಿದರೆ, ಸಂಕಟಗಳು ಧೈರ್ಯಶಾಲಿಗಳನ್ನು ಪರೀಕ್ಷಿಸುತ್ತವೆ.

ಬೆಳೆಯ ಸಿರಿ, ಮೊಳಕೆಯಲ್ಲಿ ನೋಡು

ಗಮನಿಸಿರಿ

ಪೂರ್ಣ ವಿರಾಮ : (.) ಪೂರ್ಣ ಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಈ ಪೂರ್ಣ ವಿರಾಮ ಚಿಹ್ನೆಯನ್ನು ಬಳಸಲಾಗುತ್ತದೆ.

ಉದಾ. :

ಅ) ಸೂರ್ಯನು ಪೂರ್ವ ದಿಕ್ಕಿನಲ್ಲಿ ಮೂಡುತ್ತಾನೆ.

ಆ) ರಾಮನು ಶಾಲೆಯಿಂದ ಮನೆಗೆ ಬಂದನು.

ಇ) ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸಿದನು.

ಈ) ಅಜಯನು ಜಾಣ ಬಾಲಕನಾಗಿದ್ದನು.

೪. ಚೆಲುವಿನ ಚೇತನ

ಶಬ್ದಗಳ ಅರ್ಥ :

ಮಲಿನ ಕೊಳೆ; ಶುಚಿ - ಸ್ವಚ್ಛ; ತರುಲತೆ - ಮರ ಬಳ್ಳಿಗಳು ; ಮಿಗೆ ಅಧಿಕ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಮನೆಯು ನಂದನ ಯಾವಾಗ ಆಗುವುದು ?

ಉತ್ತರ: ಮನೆ ಅಂಗಳದಲ್ಲಿ ಮರ ಒಂದು ಇದ್ದರೆ ಮನೆಯು ನಂದನವಾಗುವುದು.

ಆ) ಪರಿಸರದ ಮಲಿನತೆ ಯಾವಾಗ ಕಳೆಯುವುದು?

ಉತ್ತರ: ಪರಿಸರದಲ್ಲಿ ಗಿಡಮರಗಳು ಇದ್ದರೆ ಮೋಡಕ್ಕೆ ತಂಪನು ತಗುಲಿಸಿ ಮಳೆ ಬಾರಿಸಿದಾಗ ಪರಿಸರ ಮಲಿನತೆ ಕಳೆಯುವುದು.

ಇ) ಪಶುಪಕ್ಷಿಗಳಿಗೆ ಯಾವುದು ಆಸರೆ ನೀಡುವುದು?

ಉತ್ತರ: ಪರಿಸರದಲ್ಲಿಯ ಗಿಡಮರಗಳು ಪಶುಪಕ್ಷಿಗಳಿಗೆ ಆಸರೆ ನೀಡುವದು.

ಈ) ಮಕ್ಕಳು ಯಾವ ರೀತಿ ಕುಣಿಕುಣಿದಾಡುವರು?

ಉತ್ತರ: ಮಕ್ಕಳು ನವಿಲಿನ ನರ್ತನ, ದುಂಬಿಯ ಗಾಯನದಂತೆ ಕುಣಿಕುಣಿದಾಡುವರು.

 ಉ) ತರುಲತೆಗಳು ಏನು ಮಾಡುತ್ತವೆ?

ಉತ್ತರ: ತರುಲತೆಗಳು ಕಾಡನ್ನು ಬೆಸೆಯುತ್ತವೆ. ಪರಿಸರದ ಸಮತೋಲನ ಕಯ್ದುಕೊಳ್ಳುವ ಕೆಲಸ ತರುಲತೆಗಳು ಮಾಡುತ್ತವೆ.

ಪ್ರಶ್ನೆ ೨) ಕೆಳಗಿನ ಬಿಟ್ಟ ಸ್ಥಳದಲ್ಲಿ ಪರ್ಯಾಯ ಶಬ್ದ ತುಂಬಿ ವಾಕ್ಯ ಪೂರ್ಣ ಮಾಡಿರಿ.

ಅ) ಊರಿನ ಬದಿಯಲ್ಲಿ ............. ವೊಂದಿದ್ದರೆ ಊರೇ ಗೋಕುಲವು.  ( ಕಾಡು, ಮರ, ಬನ, ಜಲ)

ಆ) .......... ಬಣ್ಣದ ಹೂಗಳನರಳಿಸಿ ಹಣ್ಣನು ಸುರಿಸುವವು. (ಬೇರೆ ಬೇರೆ, ತರ ತರ, ಬಗೆ ಬಗೆ, ಹೊಸ ಹೊಸ)

ಇ) ನಾಡನು ಕಾಡನು .......... ತರುಲತೆ ಮಿಗೆ ಸಮತೋಲನವು.

 (ತಿಳಿಯುವ, ಬೆಸೆಯುವ, ಸವೆಸುವ, ಸುರಿಸುವ)

ಉಪಕ್ರಮ

ಕೆಳಗಿನ ಚಿತ್ರಗಳನ್ನು ಗುರುತಿಸಿ ಹೆಸರು ಬರೆಯಿರಿ.



 

೫. ಮೂವರು ಮಕ್ಕಳು

ಶಬ್ದಗಳ ಅರ್ಥ

ಶಕುನ - ಭವಿಷ್ಯ ; ಜಟ್ಟಿ - ಕುಸ್ತಿ ಪಟು ; ಹೀಯಾಳಿಸು - ನಿಂದಿಸು ; ಜುಲುಮೆ – ಒತ್ತಾಯ; ತಾಯಿ - ಅಮ್ಮ, ಜನನಿ, ಮಾತೆ; ಹರ್ಷ - ಸಂತಸ, ಆನಂದ, ಉಲ್ಲಾಸ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಮೂವರು ಮಹಿಳೆಯರು ಎಲ್ಲಿಗೆ ಬಂದರು ?

ಉತ್ತರ: ಮೂವರು ಮಹಿಳೆಯರು ನೀರು ತರುವುದಕ್ಕಾಗಿ ನದಿ ತೀರಕ್ಕೆ ಬಂದರು.

ಆ) ನದಿ ತೀರದಲ್ಲಿ ಯಾರು ಕುಳಿತಿದ್ದರು ?

ಉತ್ತರ: ನದಿ ತೀರದಲ್ಲಿ ಒಬ್ಬ ಯಾತ್ರಿಕ ಕುಳಿತ್ತಿದ್ದರು.

ಇ) ಯಾರ ಮಗ ಶಾಸ್ತ್ರಿಯಾಗಿದ್ದನು ?

ಉತ್ತರ: ತುಂಗಾಳ ಮಗ ಶಾಸ್ತ್ರಿಯಾಗಿದ್ದನು.

ಈ) ಭೀಮನು ಯಾವುದರಲ್ಲಿ ನಿಪುಣನಾಗಿದ್ದನು ?

ಉತ್ತರ: ಗಂಗಾಳ ಮಗ ಭೀಮ ಜಟ್ಟಿಗನಾಗಿದ್ದನು. ಬೆಳಗಿನಲ್ಲಿ ಮತ್ತು ಸಾಯಂಕಾಲದಲ್ಲಿ ವ್ಯಾಯಾಮ ಮಾಡಿ ಜಟ್ಟಿಗಳಲ್ಲಿ ಹೆಸರು ಪದೆದ್ದಿದ್ದನು.

ಉ) ಸೋಮನಲ್ಲಿ ಯಾವ ಒಳ್ಳೆಯ ಗುಣಗಳಿದ್ದವು ?

ಉತ್ತರ:ಸೋಮ ಬಲು ಸರಳ ಸ್ವಭಾವದವನು ಇದ್ದನು. ಹೆಸರು ಪಡೆಯುವ ಆಸೆ ಅವನಿಗೆ ಇರಲಿಲ್ಲ. ಹಗಲೆಲ್ಲ ಹೊಲದಲ್ಲಿ ದುಡಿದು ಸಾಯಂಕಾಲ ಮನೆಗೆ ಬಂದಾಗ ತಾಯಿಗೆ ನೆರವಾಗುತ್ತಿದ್ದನು.

ಪ್ರಶ್ನೆ ೨) ಕೆಳಗಿನ ಬಿಟ್ಟ ಸ್ಥಳಗಳನ್ನು ತುಂಬಿರಿ.

ಅ) ರಾಮನು ಪ್ರಸಿದ್ಧ ಶಾಸ್ತ್ರಿಯಾಗಿಯೇ ಹಿಂತಿರುಗಿ ಬಂದನು.

ಆ) ನನಗಂತೂ ನನ್ನ ಮಗ ಪ್ರಯೋಜನಕಾರಿ ಆಗಿದ್ದಾನೆ.

ಇ) ನೆರೆಯ ಹಳ್ಳಿಯ ಜಾತ್ರೆಗೆಂದು ಹೋದವರು ಮರಳಿ ಬರುತ್ತಿದ್ದರು.

ಈ) ನಿಮ್ಮ ನಿಮ್ಮ ಮಕ್ಕಳನ್ನು ನೀವು ಹೊಗಳಿಕೊಳ್ಳುವದು ಸ್ವಭಾವಿಕವೇ.

2) ದೇಹ ಎರಡು ಉಸಿರೊಂದು.

ಪ್ರಶ್ನೆ ೩) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು.

ಅ) ಜಟ್ಟಿಗಳಲ್ಲಿ ಅವನಷ್ಟು ಹೆಸರು ಪಡೆದವರೇ ಇಲ್ಲ.

ಉತ್ತರ:ಗಂಗಾ ತುಂಗಾ ಮತ್ತು ಯಮುನಾಳಿಗೆ ಹೇಳಿದಳು.

ಆ) ಇವತ್ತು ನಾನೆ ಜುಲುಮೆ ಮಾಡಿದ ಮೇಲೆ ಜಾತ್ರೆ ನೋಡಲು ಹೋಗಿದ್ದಾನೆ.

ಉತ್ತರ: ಯಮುನಾ ಗಂಗಾ ಮತ್ತು ತುಂಗಳಿಗೆ ಹೇಳಿದಳು.

ಇ) ಅಮ್ಮಾ, ನೀನೇಕೆ ನೀರು ತರಲು ಬಂದೆ ?

ಉತ್ತರ: ಸೋಮ ತನ್ನ ತಾಯಿ ಯಮುನಾಳಿಗೆ ಹೇಳಿದನು.

ಈ) ಮೊದಲು ಮಾತನಾಡಿದ ಇಬ್ಬರಂತೂ ಕೇವಲ ಹೆಸರಿಗೆ ಮಾತ್ರ ಮಕ್ಕಳು.

ಉತ್ತರ: ಯಾತ್ರಿಕನು ಮೂವರು ಹೆಣ್ಣು ಮಕ್ಕಳಿಗೆ ಹೇಳಿದನು.

ಪ್ರಶ್ನೆ ೪) ಕೆಳಗಿನ ಶಬ್ದಗಳನ್ನು ವಾಕ್ಯದಲ್ಲಿ ಉಪಯೋಗಿಸಿರಿ.

ಅ) ಯಾತ್ರಿಕ: ಯಾತ್ರಿಕ ಹಿಂದೆ ಹಿಂದೆ ಊರಿನಲ್ಲಿ ಬಂದನು.

ಆ) ಕೀರ್ತಿ: ಜಟ್ಟಿಗನು ಕುಸ್ತಿಯಲ್ಲಿ ಗೆದ್ದು ನಾಡಿನಲ್ಲಿ ಕೀರ್ತಿ ಪಡೆದ್ದಿದ್ದನು.

ಇ) ಜಾತ್ರೆ: ರಾಜು ಜಾತ್ರೆಗೆ ಹೋಗಿದ್ದನು.

ಈ) ಹೊಗಳು:ರಾಮ ಸೀತೆಯ ಸೌಂದರ್ಯವನ್ನು ಹೊಗಳಿದನು.

ಉ) ವಾತ್ಸಲ್ಯ: ತಾಯಿ ಮಗುವಿಗೆ ವಾತ್ಸಲ್ಯ ತೋರುವಳು.

ಉಪಕ್ರಮ:

ಮಹಾತ್ಮಾ ಜ್ಯೋತಿರಾವ ಫುಲೆ ಮತ್ತು ರಾಜರ್ಷಿ ಶಾಹೂ ಮಹಾರಾಜರ ಆದರ್ಶಗಳನ್ನು ಶಿಕ್ಷಕರಿಂದ/ಪಾಲಕರಿಂದ ಕೇಳಿ ತಿಳಿದುಕೊಳ್ಳಿರಿ.

ನುಡಿಮುತ್ತು

ತಾಯಿ ದೇವರಷ್ಟೇ ಪೂಜ್ಯಳು

ಮಾತೆಯ ಒಡಲು, ಮಮತೆಯ ಕಡಲು

೬. ಹೋದ ಮಳೆ ಬಂತು

ಶಬ್ದಗಳ ಅರ್ಥ

ಪಾದ - ತಳ; ಪಾಳು - ಹಾಳು; ಇಳುವರಿ - ಉತ್ಪನ್ನ; ವಿಪುಲ - ಬಹಳ; ಕಲೆಹಾಕು ಸಂಗ್ರಹಿಸು; ಬೇಸಾಯ - ಒಕ್ಕಲುತನ ; ಅಧಿಕ - ಹೆಚ್ಚು; ಖೇದ - ದು:ಖ; ಖಗ - ಪಕ್ಷಿ; ಮೃಗ - ಪ್ರಾಣಿ; ಅಪರಾಧ- ತಪ್ಪು; ಕ್ಷಾಮ - ಬರಗಾಲ; ಪಾಳು- ಹಾಳು -

ವಿರುದ್ಧಾರ್ಥಕ ಶಬ್ದಗಳು: ಲಾಭ x ಹಾನಿ, ತಪ್ಪು x ಸರಿ, ಅಳಿಸು x ಉಳಿಸು, ಸುಖ x ದು:ಖ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಹಳ್ಳಿಯ ಜನರು ಅರಣ್ಯದಿಂದ ಏನೇನು ಸಂಗ್ರಹಿಸುತ್ತಿದ್ದರು ?

ಉತ್ತರ:

ಆ) ಹಳ್ಳಿಯ ಜನರು ಗಿಡಮರಗಳನ್ನು ಏಕೆ ಕಡಿಯತೊಡಗಿದರು ?

ಉತ್ತರ:

ಇ) ಅರಣ್ಯ ನಾಶದಿಂದ ಯಾವ ಪರಿಣಾಮಗಳಾದವು ?

ಉತ್ತರ:

ಈ) ಉತ್ಸವದ ಹಿಂದಿದ್ದ ಉದ್ದೇಶ ಯಾವುದು ?

ಉತ್ತರ:

ಉ) ನಗರದಿಂದ ಬಂದವರು ಜನರಿಗೆ ಯಾವ ಎಚ್ಚರಿಕೆ ನೀಡಿದರು ?

ಉತ್ತರ:

ಪ್ರಶ್ನೆ ೨) ಕೆಳಗಿನ ಬಿಟ್ಟ ಸ್ಥಳಗಳನ್ನು ತುಂಬಿರಿ.

ಅ) ಹಳ್ಳಿಯ ಜನರ ಪಾಲಿಗೆ ಅರಣ್ಯವೇ ಸರ್ವಸ್ವವಾಗಿತ್ತು. ........

ಆ) ಜನರು ತಮ್ಮ ....... ಬಿಡಲಾರಂಭಿಸಿದರು.

ಇ) ಅವರ ಕೈಯಲ್ಲಿ ........

ಈ) .......... ತಡೆದು ಮಳೆ ತರಿಸುವ ಶಕ್ತಿ ಗಿಡಗಳಿಗಿದೆ.

ಉ) ಊರ ಸುತ್ತ-ಮುತ್ತ ಮತ್ತೆ ......... ಕಂಗೊಳಿಸಿತು.

ಪ್ರಶ್ನೆ ೩) ಸರಿ/ತಪ್ಪು ಗುರುತಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ.

ಅ) ಹಳ್ಳಿಯ ಬಹುಭಾಗವು ಅರಣ್ಯದಿಂದ ಸುತ್ತುವರಿದಿತ್ತು.     ಸರಿ

ಆ) ಒಕ್ಕಲುತನದಿಂದ ಅಧಿಕ ಹಾನಿಯಾಗಿ ಶ್ರೀಮಂತರಾದರು.      ತಪ್ಪು

ಇ) ಜನರ ದುರಾಸೆಗೆ ಅರಣ್ಯವೆಲ್ಲ ಅಳಿದು ನಾಶವಾಯಿತು.   ಸರಿ

ಈ) ಅವರು ಪ್ರಾಣಿಶಾಸ್ತ್ರಜ್ಞರಾಗಿದ್ದರು.

ಉ) ಮತ್ತೆ ಮೊದಲಿನಂತೆ ಸಾಕಷ್ಟು ಮಳೆ ಸುರಿಯಲಾರಂಭಿಸಿತು.    ಸರಿ

ಪ್ರಶ್ನೆ ೪) ಉದಾಹರಣೆಯಲ್ಲಿ ತೋರಿಸಿದಂತೆ ಶಬ್ದಗಳನ್ನು ಬರೆಯಿರಿ.

ಉದಾ: ದವಸ –ಧಾನ್ಯ

       ಅ) ಗುಡ್ಡ –ಗಾಡು          ಆ) ಹೊಳೆ- ಕೆರೆ    ಇ) ಖಗ –

       ಈ) ಮನೆ –ಮಠ           ಉ) ಗಿಡ –ಮರ

ಪ್ರಶ್ನೆ ೫) ಶಬ್ದಗಳನ್ನು ಸರಿಪಡಿಸಿ ಬರೆಯಿರಿ.

       ಅ) ಲಪುವಿ  - ವಿಪುಲ            ಆ) ಡಿಜೀನಾವ - ಜೀವನಾಡಿ   

       ಇ) ಸಾಬೇಯ - ಬೇಸಾಯ       ಈ) ಲಗಾರಬ – ಬರಗಾಲ

       ಉ) ಜ್ಞಸ್ತ್ರಕ್ಷಿಶಾಪ - ಪಕ್ಷಿಶಾಸ್ತ್ರಜ್ಞ   

ಉಪಕ್ರಮ:

೧) ಕಾಡು ಪ್ರಾಣಿಗಳ ಚಿತ್ರಗಳನ್ನು ಸಂಗ್ರಹಿಸಿರಿ.

೨) ಕೆಳಗಿನ ಚಿತ್ರಕ್ಕೆ ಬಣ್ಣ ತುಂಬಿರಿ.


ನುಡಿಮುತ್ತು

ನಿಸರ್ಗದ ಚೆಲುವು, ನಮ್ಮೆಲ್ಲರ ನಲಿವು

ಕಾಡು ಬೆಳೆಸಿ, ನಾಡು ಉಳಿಸಿ

ಗಮನಿಸಿರಿ

ಆವತರಣಿಕೆ ಚಿಹ್ನೆ: ಒಬ್ಬರು ಹೇಳಿದ ಮಾತನ್ನು ಇದ್ದಕ್ಕಿದ್ದಂತೆ ನೇರವಾಗಿ ಹೇಳುವುದಕ್ಕೆ ಈ ಚಿಹ್ನೆಯನ್ನು ಬಳಸುತ್ತಾರೆ. ಮಾತಿನ ಅಥವಾ ವಾಕ್ಯದ ಮೊದಲು, ಕೊನೆಯಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ.

ಉದಾ.: ಅ) “ಪಂಡಿತರೇ, ಇದು ಒಳಸಿಹಿ.”

          ಆ) “ಅಪ್ಪಾ, ಹೀಗೇಕೆ ಗಾಬರಿಯಾಗಿ ಕುಳಿತಿರುವಿರಿ?”

         ಇ) ಬಸವಣ್ಣನವರು “ದಯವೇ ಧರ್ಮದ ಮೂಲವಯ್ಯಾ.” ಎಂದರು.

೭. ವಂದನ

ಶಬ್ದಗಳ ಅರ್ಥ:

ಪೊರೆ - ಕಾಪಾಡು; ಹೊನ್ನ -ಬಂಗಾರ; ಭಾತೃಭಾವ - ಸಹೋದರತೆ; ಬನ್ನಕಷ್ಟ;

ಮ್ರ ವಿನಯ; ಮಾಳ್ಪೆ - ಮಾಡುವೆ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ತಾಯಿ ಪ್ರೀತಿಗೆ ಯಾವುದು ಸಮವಲ್ಲ?

ಉತ್ತರ: ಜಗದ ಸಿರಿ ಸಂಪತ್ತುಗಳೆಲ್ಲ ತಾಯಿ ಪ್ರೀತಿಗೆ ಸಮವಲ್ಲ.  

ಆ) ಕನ್ನಡಾಂಬೆಯ ಗುಣ ಎಂತಹದು?

ಉತ್ತರ: ಕನ್ನಡಾಂಬೆಯ ಗುಣ ಹೊನ್ನಿನಂತಹದ್ದಾಗಿದೆ.

ಇ) ಭಾರತಾಂಬೆ ನಮ್ಮಲ್ಲಿ ಎಂತಹ ಭಾವನೆ ಬೆಳೆಸಿದ್ದಾಳೆ?

ಉತ್ತರ: ಭಾರತಾಂಬೆ ನಮ್ಮಲ್ಲಿ ಭಾತೃಭಾವನೆ ಬೆಳೆಸಿದ್ದಾಳೆ.

ಈ) ಹೃದಯ ಹೃದಯಗಳನ್ನು ಯಾರು ಬೆಸೆಯುತ್ತಾರೆ?

ಉತ್ತರ: ಹೃದಯ ಹೃದಯಗಳನ್ನು ವಿಶ್ವಮಾತೆಯು ಬೆಸೆಯುತ್ತಾಳೆ.

ಉ) ಕಂದನು ಏನೆಂದು ಬೇಡಿಕೊಳ್ಳುತ್ತಾನೆ?

ಉತ್ತರ: ಕಂದನು ನಮ್ರಭಾವದಿಂದ ವಂದಿಸುತ್ತ ನಿನ್ನ ಕಂದಮ್ಮರನ್ನು ರಕ್ಷಿಸು ಎಂದು ಬೇಡಿಕೊಳ್ಳುತ್ತಾನೆ.

ಪ್ರಶ್ನೆ ೨) ಕವಿತೆಯ ಬಿಟ್ಟ ಸಾಲುಗಳನ್ನು ಪೂರ್ಣಗೊಳಿಸಿರಿ.

ಹೊನ್ನಿನಂಥ ಗುಣದ ನನ್ನ ಕನ್ನಡಾಂಬೆಗೆ

ನನ್ನನೆತ್ತಿ ಹಿಡಿದ ಪೂಜ್ಯ ತಾಯ ಕರುಣೆಗೆ

ಭಾತೃಭಾವ ಬೆಳೆಸಿದಂಥ ಭಾರತಾಂಬೆಗೆ

ಬನ್ನ ಬಿಡಿಸಿ ಭಾಗ್ಯವಿರಿಸಿದಂಥ ಮಾತೆಗೆ

ಪ್ರಶ್ನೆ ೩) ವಿರುದ್ಧಾರ್ಥಕ ಶಬ್ದ ಬರೆಯಿರಿ.

ಅ) ವೈರ x ಸ್ನೇಹಿತ       ಆ) ಸುಗುಣ x ದುರ್ಗುಣ

ಇ) ಅಶಾಂತಿ x ಶಾಂತಿ    ಈ) ಒಳ್ಳೆಯ x ಕೆಟ್ಟ

ಉಪಕ್ರಮ

೧) ರಾಮಾಯಣದಲ್ಲಿ ಬರುವ ಭರತನ ಭಾತೃಪ್ರೇಮದ ಬಗ್ಗೆ ಶಿಕ್ಷಕ/ಪಾಲಕರಿಂದ ಮಾಹಿತಿ ಪಡೆದುಕೊಳ್ಳಿರಿ.

೨) ಯೋಗ್ಯ ಅಕ್ಷರ ತುಂಬಿ ಶಬ್ದ ರಚಿಸಿರಿ.

       ಬಿ     ಗ     ಬ     ಅ     ಉ

       ಜಗ  ಗಜ  ಬನ್ನ  ಅನ್ನ  ಉತ್ತು  ಬಿತ್ತು

ನುಡಿಮುತ್ತು

ಮಾತೆಯ ಮಮತೆ ತುಂಬಿದ ಒರತೆ

ಜನನಿ, ಜನ್ಮಭೂಮಿ ಸರ್ವಕ್ಕೂ ಮಿಗಿಲು

ಗಮನಿಸಿರಿ

ಉದ್ಧಾರವಾಚಕ - ! : ಈ ಚಿಹ್ನೆಯನ್ನು ಹರ್ಷ, ಸಂತಸ, ದುಃಖ, ಕೋಪ, ಆಶ್ಚರ್ಯ, ತಿರಸ್ಕಾರ ಮೊದಲಾದ ಭಾವಗಳನ್ನು ವ್ಯಕ್ತಪಡಿಸುವ ಸಂದರ್ಭಗಳಲ್ಲಿ ಬಳಸುವ ಚಿಹ್ನೆ.

ಉದಾ. :

ಅ) ಆಹಾ ! ಎಷ್ಟೊಂದು ಸುಂದರ ದೃಶ್ಯ ಇದು.

ಆ) ಅಯ್ಯೋ ಪಾಪ ! ನಿನಗೆ ಸ್ವಲವೂ ಕರುಣೆ ಬರಲಿಲ್ಲವೆ ?

ಇ) ಅಬ್ಬಾ! ಎಷ್ಟೊಂದು ಜನದಟ್ಟಣೆ ಇದೆ.

 

೮. ಜೀನಪ್ಪ

ಶಬ್ದಗಳ ಅರ್ಥ

ಉಚಿತ ಪುಕ್ಕಟೆ; ಇನ್ನೂರು - ಎರಡುನೂರು; ನೇತಾಡು - ಜೋತಾಡು; ನೆರವು - ಸಹಾಯ; ಮಾವುತ - ಆನೆಯನ್ನು ನಡೆಸುವವ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಜೀನಪ್ಪನು ಪೇಟೆಗೆ ಏಕೆ ಹೋದನು ?

ಉತ್ತರ:

ಆ) ತೋಟಗಾರನು ಜೀನಪ್ಪನಿಗೆ ಏನು ಹೇಳಿದನು ?

ಉತ್ತರ:

ಇ) ಜೀನಪ್ಪನು ಆನೆ ಮಾವುತನಿಗೆ ಏನೆಂದು ಬೇಡಿಕೊಂಡನು ?

ಉತ್ತರ:

ಈ) ಜೀನಪ್ಪನು ಟೊಂಗೆಯಿಂದ ಏಕೆ ಕೈಬಿಟ್ಟನು ?

ಉತ್ತರ:

ಉ) ಜೀನಪ್ಪನಿಗೆ ಈ ಸ್ಥಿತಿ ಬರಲು ಕಾರಣವೇನು ?

ಉತ್ತರ:

ಪ್ರಶ್ನೆ ೨) ವಿರುದ್ಧಾರ್ಥಕ ಶಬ್ದ ಬರೆಯಿರಿ.

ಅ) ಉದಾರ  x ಅನುದಾರ

ಈ) ಸುರಕ್ಷಿತ x ಅಸುರಕ್ಷಿತ

ಉ) ಸಂತೋಷ x ಅಸಂತೋಷ

ಉಪಕ್ರಮ

ಚೌಕಟ್ಟಿನಲ್ಲಿಯ ಅಕ್ಷರಗಳನ್ನು ಬಳಸಿ ಹಣ್ಣುಗಳ ಹೆಸರು ಬರೆಯಿರಿ.

ದ್ರಾ

ಪೇ

ಸೇ

ಳೆ

ಮಾ

ಕಿ

ದಾ

ಕ್ಕು

ಮೋ

ಸೀ

ವು

ತ್ತ

ತಾ

ಚಿ

ಕ್ಷೆ

ನೇ

ಬಾ

ಬಿ

ಬು

ಳಿಂ

ಸಂ

 

ನುಡಿಮುತ್ತು

ಆಸೆಯೇ ದುಃಖಕ್ಕೆ ಮೂಲ

ಅತಿ ಆಸೆ ಗತಿ ಗೇಡು




 

೧೭. ಯುಕ್ತಿ

ಶಬ್ದಗಳ ಅರ್ಥ:

ಅಚ್ಚುಮೆಚ್ಚು - ಪ್ರೀತಿ;  ಹಾವಳಿ - ತೊಂದರೆ; ಕಾಸು - ಹಣ; ನಿವೇದಿಸು- ಹೇಳು, ವಿವರಿಸು; ಹುರಿದುಂಬಿಸು - ಪ್ರೇರಣೆ ನೀಡು; ಭಕ್ಷ್ಯ - ಆಹಾರ; ಔದಾರ್ಯ - ಉದಾರತನ; ಋಣಿ - ಉಪಕಾರ ಸ್ಮರಿಸು; ಆರ್ತನಾದ - ದುಃಖ, ಅಳು; ಬಾಧೆ - ಕಾಟ; ನಾಯಕ - ಪ್ರಮುಖ; ಕೊರಕಲು - ತಗ್ಗು; ಬಳಲಿಕೆ ದಣಿವು; ಹುರಿದುಂಬಿಸು - ಪ್ರೋತ್ಸಾಹಿಸು

ವಿರುದ್ಧಾರ್ಥಕ ಶಬ್ದಗಳು :

ಕಷ್ಟ x ಸುಖ                       ಆರೋಗ್ಯ x ಅನಾರೋಗ್ಯ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ರೈತರಿಗೆ ವೀರಯ್ಯ ಅಂದರೆ ಎಕೆ ಅಚ್ಚುಮೆಚ್ಚು ?

ಉತ್ತರ: ವೀರಯ್ಯ ಹೆಚ್ಚು ಕಲಿತವನಲ್ಲ ಆದರೂ ತಕ್ಕಮಟ್ಟಿಗೆ ಓದು-ಬರಹ ಕಲಿತವ. ಕಷ್ಟ ಎದುರಾದರೆ ಬುದ್ಧಿವಂತಿಕೆಯಿಂದ ಪಾರಾಗುತ್ತಿದ್ದನು. ಬೇರೆ ರೈತರಿಗೆ ಕಷ್ಟ ಬಂದಾಗಲೂ ನೆರವಾಗುವ ಅವನ ಜಾಣತನದಿಂದ ಅವನು ಎಲ್ಲ ರೈತರಿಗೆ ಅಚ್ಚುಮೆಚ್ಚು ಆಗಿದ್ದನು. 

ಆ) ಎಲ್ಲ ರೈತರು ಕೂಡಿಕೊಂಡು ಎಲ್ಲಿಗೆ ಹೊರಟರು ?

ಉತ್ತರ: ಒಂದು ಸಲ ಕೀಟಗಳ ಹಾವಳಿಯಿಂದ ಎಲ್ಲ ಬೆಳೆ ಹಾಳಾಯಿತು. ಆದರೂ ಅಧಿಕಾರಿಗಳು ಕಂದಯಕ್ಕಾಗಿ ನಿರ್ದಯೆಯಿಂದ ಪೀಡಿಸುತ್ತಿದ್ದರು. ಆಗ ರೈತರೆಲ್ಲರೂ ಕೂಡಿ ರಾಜನ ಬಳಿಗೆ ಹೊರಟರು.

ಇ) ವೀರಯ್ಯನು ರೈತರಿಗೆ ಯಾವ ರೀತಿ ಹುರಿದುಂಬಿಸಿದನು ?

ಉತ್ತರ: ನಮ್ಮಲ್ಲಿ ಊಟ ಇಲ್ಲವಾದರೇನಂತೆ ನಡಿಗೆ ಬರಗಾಲ ಬಂದಿಲ್ಲವಲ್ಲ? ಯಾರಾದರೂ ಪುಣ್ಯಾತ್ಮರು ಊಟ ಹಾಕುತ್ತಾರೆ ಎಂದು ವೀರಯ್ಯನು ರೈತರಿಗೆ ಹುರಿದುಂಬಿಸಿದನು

ಈ) ವೈದ್ಯರು ಏಕೆ ಬರಲಿಲ್ಲ?

ಉತ್ತರ: ರಾತ್ರಿ ಹೊತ್ತಿನಲ್ಲಿ ಗಿಡ ಮೂಲಿಕೆಗಳು ಸಿಗುವುದಿಲ್ಲ ಎಂದು ಹೇಳುತ್ತಾ ವೈದ್ಯರು ರಾತ್ರಿ ಬರಲಿಲ್ಲ.

ಉ) ವೀರಯ್ಯನು ದನಗಳ ಬಾಯಿಯ ಉರಿ ಶಾಂತಗೊಳಿಸಲು ಏನು ಮಾಡಿದನು ?

ಉತ್ತರ:

ಪ್ರಶ್ನೆ ೨) ಬಿಟ್ಟ ಸ್ಥಳದಲ್ಲಿ ಯೋಗ್ಯ ಶಬ್ದಗಳನ್ನು ತುಂಬಿ ವಾಕ್ಯ ಪೂರ್ಣ ಮಾಡಿರಿ.

ಅ) ಕಷ್ಟ ಎದುರಾದರೆ ಬುದ್ಧಿವಂತಿಕೆಯಿಂದ ಪಾರಾಗುತ್ತಿದ್ದನು.

ಆ) ಯಾರಾದರೂ ಊಟ ಹಾಕುತ್ತಾರೆ.

ಇ) ನಿಮ್ಮ. ನಾವು ಋಣಿಗಳು.

ಈ) ಅರೆಕ್ಷಣದಲ್ಲಿ ದನಗಳು

2) ಮರಳುವಾಗಲೂ ಇಲ್ಲಿಗೆ ಬರಲು ಪ್ರಾರ್ಥಿಸಿದನು.

ಪ್ರಶ್ನೆ ೩) ಉದಾಹರಣೆಯಲ್ಲಿ ತೋರಿಸಿದಂತೆ ಕೆಳಗಿನ ಶಬ್ದಗಳನ್ನು ಬರೆಯಿರಿ.

ಉದಾ. : ಬುದ್ದಿ + ವಂತ = ಬುದ್ದಿವಂತ

ಅ) ಗುಣ + =

)  +

3) 83 + =

4) 3 + =

ಮಳೆಗಾಲದ ಸಮಯ. ಧೋಧೋ ಎಂದು ಮಳೆ ಸುರಿಯುತ್ತಿತ್ತು. ತಗ್ಗುಗಳಲ್ಲಿ ನೀರು ನಿಂತಿತ್ತು. ಕಪ್ಪೆಗಳು ಒಂದೇಸವನೆ ಒಟಗುಡುತ್ತಿದ್ದವು. ಅತ್ಯಂತ ಶೀತ ವಾತಾವರಣ. ಇಂಥ ಸಮಯದಲ್ಲಿ ರಮೇಶನಿಗೆ ಅತಿಯಾದ ಶೀತವಾಯಿತು. ಚಳಿಯಿಂದ ಮೈ ನಡುಗಲಾರಂಭಿಸಿತು. ಆಗ ರಮೇಶನ ತಾಯಿ ನೆರೆಮನೆಯ ನಿಂಗವ್ವಳಿಗೆ ಈ ವಿಷಯ ಹೇಳಿದಳು. ಮಗುವಿಗೆ ಕೆಟ್ಟ ಗಾಳಿ ಆಗಿದೆ. ಆದ್ದರಿಂದ ಸಮೀಪದಲ್ಲಿ ಮಾರಮ್ಮನ ಗುಡಿ ಇದೆ. ಅಲ್ಲಿಗೆ ಕರೆದುಕೊಂಡು ಹೋಗು. ದೇವಿಯ ಪ್ರಸಾದ ಹಚ್ಚಿ ತಾಯಿತ ಕಟ್ಟಿಸು ಎಂದಳು ನಿಂಗವ್ವ. ಆಗಲಿ ಎಂದಳು ಗಂಗಮ್ಮ. ಸ್ವಲ್ಪ ಸಮಯದ ನಂತರ ಗಂಗಮ್ಮಳ ಸಹೋದರ ಬಂದನು. ಅವನು ರಮೇಶನನ್ನು ದವಾಖಾನೆಗೆ ಕರೆದುಕೊಂಡು ಹೋಗಲು ಹೇಳಿದನು. ಈಗ ಗಂಗಮ್ಮನಿಗೆ ನೀವು ಯಾವ ಸಲಹೆ ಕೊಡುತ್ತೀರಿ ?

೨) ಕೆಳಗಿನ ಚಿತ್ರಗಳನ್ನು ನೋಡಿರಿ. ಬೀರಬಲ್ಲನ ಜಾಣತನದ ಬಗ್ಗೆ ಶಿಕ್ಷಕರಿಂದ/ಪಾಲಕರಿಂದ

 

೧೮. ಅನಾಥರ ನಾಥ

ಶಬ್ದಗಳ ಅರ್ಥ :

ನಾಥ - ರಕ್ಷಕ; ಕೃಶ - ಸಣಕಲು, ತೆಳ್ಳಗೆ; ಸಂತೈಸು - ಸಮಾಧಾನ ಹೇಳು; ಕನಿಕರ - ಕರುಣೆ, ದಯೆ; ದಂಪತಿ ಗಂಡ ಹೆಂಡತಿ; ಅಕ್ಕರೆ - ಪ್ರೀತಿ

ವಿಶೇಷ ವಿಚಾರ: ಕುಣಿದು ಕುಪ್ಪಳಿಸು – ಸಂತೋಷಭರಿತನಾಗು, ಕೇಕೆ ಹಾಕು - ಆನಂದದಿಂದ ಕುಣಿದಾಡು

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಯಾವ ನಗರದಲ್ಲಿ ಹಬ್ಬದ ಸಂಭ್ರಮವಿತ್ತು?

ಉತ್ತರ: ಅರೇಬಿಯಾದ ಮದಿನಾ ನಗರದಲ್ಲಿ ಹಬ್ಬದ ಸಂಭ್ರಮವಿತ್ತು.

ಆ) ಜನರು ಪ್ರಾರ್ಥನೆ ಸಲ್ಲಿಸಲು ಎಲ್ಲಿಗೆ ಹೊರಟಿದ್ದರು?

ಉತ್ತರ: ಜನರು ಪ್ರಾರ್ಥನೆ ಸಲ್ಲಿಸಲು ಮೈದಾನಕ್ಕೆ ಹೊರಟಿದ್ದರು

ಇ) ಮಕ್ಕಳು ಏನು ಮಾಡುತ್ತಿದ್ದರು?

ಉತ್ತರ: ಮಕ್ಕಳು ತಮ್ಮ ಪಾಡಿಗೆ ತಾವು ಕುಣಿದು ಕುಪ್ಪಳಿಸುತ್ತಾ ಕೇಕೆ ಹಾಕುತ್ತಿದ್ದರು.

ಈ) ಆಯೇಶಾ ಮಗುವನ್ನು ಹೇಗೆ ಉಪಚರಿಸಿದಳು?

ಉತ್ತರ: ಆಯೇಶಾ ಮಗುವನ್ನು ಪ್ರೀತಿಯಿಂದ ಬರಮಾಡಿಕೊಂಡಳು. ಆತನಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ, ಪ್ರೀತಿಯಿಂದ ಊಟ ಮಾಡಿಸಿ ಉಪಚಾರಿಸಿದಳು.

ಪ್ರಶ್ನೆ ೨) ಕೆಳಗಿನ ಬಿಟ್ಟ ಸ್ಥಳದಲ್ಲಿ ಯೋಗ್ಯ ಶಬ್ದಗಳನ್ನು ತುಂಬಿ ವಾಕ್ಯ ಪೂರ್ಣ ಮಾಡಿರಿ.

ಅ) ಈದ ಅಂದರೆ ಹಬ್ಬ

ಆ) ಹುಡುಗನ ಮಾತು ಕೇಳಿ ಹಜರತ್ ಮಹಮ್ಮದರಿಗೆ ಕನಿಕರ ಬಂದಿತು.

ಇ) ಮಗು ನೀನು ಅನಾಥನೆಂದು ದುಃಖಿಸಬೇಡ.

ಈ) ದಂಪತಿಗಳಿಬ್ಬರೂ ಹುಡುಗನನ್ನು ಅಕ್ಕರೆಯಿಂದ ಬೆಳೆಸಿದರು.

ಪ್ರಶ್ನೆ ೩) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು.

ಅ) ನನಗೆ ತಂದೆ-ತಾಯಿ ಯಾರೂ ಇಲ್ಲ.

ಉತ್ತರ: ಮಗು ಹಜರತ್ ಮಹಮ್ಮದ್ ರಿಗೆ ಹೇಳಿದನು.

ಆ) ಮಗು, ನಾನೂ ನಿನ್ನ ಹಾಗೆಯೇ ಅನಾಥ.

ಉತ್ತರ: ಹಜರತ್ ಮಹಮ್ಮದ್ ಮಗುವಿಗೆ ಹೇಳಿದರು.

ಇ) ಫಾತಿಮಾ, ಇಂದಿನಿಂದ ಈತನು ನಿನ್ನ ಸಹೋದರ.

ಉತ್ತರ: ಆಯೇಶಾ ತನ್ನ ಮಗಳು ಫಾತಿಮಾಳಿಗೆ ಹೇಳಿದಳು.

ಪ್ರಶ್ನೆ ೪) ಕೆಳಗಿನ ಅಕ್ಷರಗಳನ್ನು ಸರಿಪಡಿಸಿ ಅರ್ಥಪೂರ್ಣ ಶಬ್ದ ತಯಾರಿಸಿರಿ.

ಅ) ರಾದಸದಸರಾ             ಆ) ಗಾಯುದಿಯುಗಾದಿ

ಇ) ಚಪಂಮಿಪಂಚಮಿ           ಈ) ಪಾಳಿದೀವದೀಪಾವಳಿ

ಉ) ಸ್ ಮ ಕ್ರಿಸ್ – ಕ್ರಿಸ್ ಮಸ್    ಊ) ಮಜಾನರರಮಜಾನ

ಉಪಕ್ರಮ

ಬೇರೆ ಬೇರೆ ಧರ್ಮಗಳ, ಧರ್ಮಗ್ರಂಥಗಳ ಹೆಸರುಗಳನ್ನು ಮತ್ತು ಪ್ರಾರ್ಥನಾ ವಿಧಾನಗಳನ್ನೂ ಶಿಕ್ಷಕರಿಂದ/ಪಾಲಕರಿಂದ ತಿಳಿದುಕೊಳ್ಳಿರಿ.

ನುಡಿಮುತ್ತು

ಮಾನವೀಯತೆ ಮನುಷ್ಯನ ಶ್ರೇಷ್ಠ ಗುಣ

ವಾತ್ಸಲ್ಯ, ಕರುಣೆಗಳೇ ಸರ್ವ ಧರ್ಮಗಳ ತಿರುಳು

 

೧೯. ಆಟ- ಪಾಠ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ನಾವು ಹೇಗೆ ಜಿಗಿಯೋಣ?

ಉತ್ತರ:ನಾವು ಕಪ್ಪೆಯ ಹಾಗೆ ಕುಪ್ಪಳಿಸುತ್ತಾ ಕುಣಿಯುತ ಜಿಗಿಯೋಣ.

ಆ) ಏನನ್ನು ನೋಡುತ ನಲಿಯೋಣ?

ಉತ್ತರ:ಬುಗುರಿ ನೆಲಕ್ಕೆ ಬಿಟ್ಟು ಅದು ತಿರುಗುವ ಗುಟ್ಟು ನೋಡುತ್ತಾ ನಲಿಯೋಣ.

ಇ) ಆಟದ ಜೊತೆಗೆ ನಾವು ಏನು ಮಾಡೋಣ?

ಉತ್ತರ:ನಾವು ಆಟದ ಜೊತೆಗೆ ಪಾಠವು ಮಾಡೋಣ.

ಈ) ಬೇಸರ ಕಳೆಯಲು ಏನು ಮಾಡೋಣ?

ಉತ್ತರ:ದಿನಾಲೂ ಸಂಜೆ ಆಟವ ಆಡಿ ನಾವು ಬೇಸರ ಕಳೆಯೋಣ.

ಪ್ರಶ್ನೆ ೨) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣ ಮಾಡಿರಿ.

ಕಣ್ಣಾಮುಚ್ಚೆ ಕಾಡೆ ಗೂಡೇ ಆಟವನಾಡೋಣ

ಚಂದ್ರನ ನೋಡಿ ಬೆಳದಿಂಗಳ ಓಡಿಯೇ ಓಡೋಣ

ಪ್ರಶ್ನೆ ೩) ಉದಾಹರಣೆಯಲ್ಲಿ ತೋರಿಸಿದಂತೆ ಕೊನೆಗೆ '' ಅಕ್ಷರ ಬರುವ ಶಬ್ದಗಳನ್ನು ಬರೆಯಿರಿ.

ಉದಾ. : ಆಡೋಣ

ಜಿಗಿಯೋಣ, ಸೇರೋಣ, ನಲಿಯೋಣ, ಓಡೋಣ, ಕಳೆಯೋಣ, ಹೋಗೋಣ     

ನುಡಿಮುತ್ತು

ಮಾನವೀಯತೆ ಮನುಷ್ಯನ ಶ್ರೇಷ್ಠ ಗುಣ

ವಾತ್ಸಲ್ಯ, ಕರುಣೆಗಳೇ ಸರ್ವ ಧರ್ಮಗಳ ತಿರುಳು

೨೦. ಕಲ್ಪವೃಕ್ಷ

ಶಬ್ದಗಳ ಅರ್ಥ :

ಸಂಭ್ರಮ - ಸಂತೋಷ; ಬಳಲಿಕೆ - ಆಯಾಸ, ದಣಿವು; ಸೋಗೆ -ತೆಂಗುಗಳ ಗರಿ;

ಗೊನೆ - ಗೊಂಚಲು

ವಿಶೇಷ ವಿಚಾರ :

ಮೇಜವಾನಿ - ಸಂತೋಷ ಕೂಟ.       ಕಲ್ಪವೃಕ್ಷ - ಬಹು ಉಪಯೋಗಿ ಮರ.

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ರಾಮಣ್ಣನಿಗೆ ತೆಂಗಿನ ಕಾಯಿಗಳನ್ನು ಯಾರು ಒದಗಿಸುತ್ತಿದ್ದರು?

ಉತ್ತರ: ಅಂಕೋಲೆಯ ಹೆಗ್ಗಡೆ ಮಂಜಪ್ಪನು ರಾಮಣ್ಣನಿಗೆ ತೆಂಗಿನ ಕಾಯಿಗಳನ್ನು ಒದಗಿಸುತ್ತಿದ್ದರು.

ಆ) ರಾಮಣ್ಣನು ಒಮ್ಮೆ ಎಲ್ಲಿಗೆ ಹೋಗಿದ್ದನು?

ಉತ್ತರ: ರಾಮಣ್ಣನು ಒಮ್ಮೆ ಗೋಕರ್ಣ ಯಾತ್ರೆಗೆ ಹೋಗಿದ್ದನು.

ಇ) ರಾಮಣ್ಣನು ಅಂಕೋಲೆಯಲ್ಲಿ ಏಕೆ ಇಳಿದನು?

ಉತ್ತರ: ರಾಮಣ್ಣನು ಗೋಕರ್ಣದಿಂದ ಮರಳಿ ಬರುವಾಗ ಮಂಜಪ್ಪನನ್ನು ಕಾಣಲೆಂದು ಅಂಕೋಲೆಯಲ್ಲಿ ಇಳಿದನು.

ಈ) ಮಂಜಪ್ಪನಿಗೆ ಏಕೆ ಸಂಭ್ರಮವಾಯಿತು?

ಉತ್ತರ: ರಾಮಣ್ಣನು ಬಂದನೆಂದು ಮಂಜಪ್ಪನಿಗೆ ಸಂಭ್ರಮವಾಯಿತು.

ಉ) ತೆಂಗಿನಕಾಯಿಯ ಉಪಯೋಗಗಳನ್ನು ಹೇಳಿರಿ.

ಉತ್ತರ: ತೆಂಗಿನಕಾಯಿ ದೇವರಿಗೆ ಒಡೆಯಿಸುವರು, ಅಡುಗೆಗಳಲ್ಲಿ ಕೊಬ್ಬರಿ ಹಾಕುವರು, ತೆಂಗಿನ ಕಡ್ಡಿಯ ಕಸಭಾರಿಗೆ, ಚಾಪೆ, ತಲೆಗೆ ಹಚ್ಚಿಕೊಳ್ಳಲು ಕೊಬ್ಬರಿ ಎಣ್ಣೆ, ನೀರು ಸೇದಲು ಕಾತ್ತ್ಯಾ ಹಗ್ಗ, ಮನೆ ಮೇಲಿನ ಛಾವಣಿ ಇತ್ಯಾದಿಗಳಿಗೆ ತೆಂಗಿನಕಾಯಿಯನ್ನು ಬಳಸುವರು.

ಊ) ತೆಂಗಿನ ಮರಗಳು ವರ್ಷದಲ್ಲಿ ಎಷ್ಟು ಬಾರಿ ಗೊನೆ ಬಿಡುವವು ?

ಉತ್ತರ: ತೆಂಗಿನ ಮರಗಳು ವರ್ಷದಲ್ಲಿ ಎರಡು ಮೂರು ಬಾರಿ ಗೊನೆ ಬಿಡುವವು.

ಪ್ರಶ್ನೆ ೨) ಕೆಳಗಿನ ಪ್ರಶ್ನೆಗಳಿಗೆ ವಾಕ್ಯಗಳಲ್ಲಿ ಉತ್ತರ ಬರೆಯಿರಿ.

ಅ) ಮಂಜಪ್ಪನು ರಾಮಣ್ಣನನ್ನು ಹೇಗೆ ಸತ್ಕರಿಸಿದನು?

ಉತ್ತರ: ರಾಮಣ್ಣನು ಬಂದನೆಂದು ಮಂಜಪ್ಪನಿಗೆ ಸಂಭ್ರಮವಾಯಿತು. ರಾಮಣ್ಣನಿಗೆ ಕೈಕಾಲು ತೊಳೆಯಲು ಹೇಳಿ ಏಳೆಂಟು ಎಳಗಾಯಿಗಳನ್ನು ಇಳಿಸಿದನು. ಅವುಗಳ ಕಣ್ಣಿಗೆ ಕುಕ್ಕಿ ಎರಡು ಮೂರು ಎಲೆಗಾ ಯಿಗಳನ್ನು ಕುಡಿಯಲಿಕ್ಕೆ ಕೊಟ್ಟನು.

ಆ) ತೆಂಗಿನ ಮರಗಳನ್ನು ಬೆಳೆಸುವ ರೀತಿ ಬರೆಯಿರಿ.

ಉತ್ತರ: ತೆಂಗಿನ ಕಾಯಿಗೆ ಕಣ್ಣಿಂದ ಮೊಳಕೆ ಹೊರಬಿದ್ದಾಗ ಅದನ್ನು ಕುಣಿಯಲ್ಲಿ ನೆಡಬೇಕು. ಆಗಾಗ ಉಪ್ಪು ಬೆರೆತ ಗೊಬ್ಬರವನ್ನು ಹಾಕುತ್ತಿರಬೇಕು. ನಾಲ್ಕೈದು ವರ್ಷಗಳಲ್ಲಿ ಮರವು ೧೦-೧೨ ಮೊಳ ಎತ್ತರ ಆಗುವುದು.

ಇ) ರಾಮಣ್ಣನು ಸವಿದ ಮೇಜವಾನಿ ಕುರಿತು ಬರೆಯಿರಿ.

ಉತ್ತರ:ರಾಮಣ್ಣನಿಗೆ ಮಂಜಪ್ಪನ ಮನೆಯಲ್ಲಿ ಕೊಬ್ಬರಿ ಅಡುಗೆಯ ಮೇಜವಾನಿ. ಕೊಬ್ಬರಿಯ ಕಡಬು, ಅನ್ನಕ್ಕೆ ಕೊಬ್ಬರಿಯ ಗೊಜ್ಜು, ದೋಸೆಗೆ ಕೊಬ್ಬರಿ ತಿರುವಿ ಮಾಡಿದ ಹಾಲು, ಬಡಿಸಿಕೊಳ್ಳಲಿಕ್ಕೆ ಕೊಬ್ಬರಿಯ ಚಟ್ನಿ, ತಾಜಾ ಕೊಬ್ಬರಿ ಎಣ್ಣೆಯಲ್ಲಿ ಕರಿದ ಹಪ್ಪಳ ಸಂಡಿಗೆ ಈ ರೀತಿಯಾಗಿ ಮೇಜವಾನಿ ದೊರೆಯಿತು.  

ಈ) ಮಂಜಪ್ಪನ ಮನೆಯ ಕುರಿತು ಬರೆಯಿರಿ.

ಉತ್ತರ: ಮಂಜಪ್ಪನ ಮನೆ ತೆಂಗಿನವೇ ಇದೆ. ತೊಲೆ, ಕಂಬ, ಜಂತಿ, ಬಾಗಿಲು ಕಿಡಕಿಗಳ ಚೌಕಟ್ಟು ತೆಂಗಿನವು ಇವೆ. ಕೂಡುವ ಕಾತಿಯ ತಟ್ಟು, ತಕ್ಕೆ ಎಲ್ಲವೂ ತೆಂಗಿನ ಆಗಿವೆ.

ಪ್ರಶ್ನೆ ೩) ಕೆಳಗಿನ ಬಿಟ್ಟ ಸ್ಥಳಗಳನ್ನು ಯೋಗ್ಯ ಶಬ್ದದಿಂದ ತುಂಬಿರಿ.

ಅ) ರಾಮಣ್ಣನು ಗದುಗಿನಲ್ಲಿ ತೆಂಗಿನಕಾಯಿ ಅಂಗಡಿಯನ್ನು ಇಟ್ಟಿರುವನು.

ಆ) ಮಂಜಪ್ಪನು ತೆಂಗಿನ ಗಿಡಗಳಿಗೆ ಗೊಬ್ಬರ ಹಾಕುತ್ತಿದ್ದನು.

ಇ) ಬಲಿತ ತೆಂಗಿನಕಾಯಿಯ ಕಣ್ಣಿನಿಂದ ಮೊಳಕೆ ಹೊರಬೀಳುವದು.

ಈ) ಸೋಗೆಗಳ ಮಗ್ಗುಲಿಗೆ ಸಣ್ಣ ಕೊಂಬೆಯ ಹಾಗೆ ಹೂವಿನ ಗೊನೆ

ಹೊರಡುವದು.

ಉ) ಇಂದು ರಾಮಣ್ಣನಿಗೆ ಕೊಬ್ಬರಿ ಅಡುಗೆಯ ಮೇಜವಾನಿ.

ಪ್ರಶ್ನೆ ೪) ತೆಂಗಿನ ಮರದ ಉಪಯೋಗಗಳನ್ನು ೫ ಸಾಲುಗಳಲ್ಲಿ ಬರೆಯಿರಿ.

ಉತ್ತರ: ತೆಂಗಿನ ಮರದಿಂದ ಮನೆಯ ಜಂತಿ, ಕಂಬ, ತೊಲೆ ಮಾಡಲು ಬರುತ್ತದೆ. ಮನೆಯ ಚೌಕಟ್ಟು, ಕಿಡಕಿ, ಚಾಪೆ, ಕಾತಾ ಹಗ್ಗ, ಕಡ್ಡಿ ಕಸಬಾರಿಗೆ ಎಲ್ಲವೂ ತೆಂಗಿನ ಮರದ ಎಲೆ, ತೊಗಟುಗಳಿಂದ ಮಾಡಲಾಗುತ್ತದೆ.

ಉಪಕ್ರಮ

೧) ಶಿಕ್ಷಕರ ಸಹಾಯದಿಂದ ಪರಿಸದಲ್ಲಿಯ ಬೇರೆ ಬೇರೆ ಗಿಡ ಮರಗಳ ಉಪಯೋಗಗಳ ಕುರಿತು ಮಾಹಿತಿ ಪಡೆಯಿರಿ.

೨) ಬಿದಿರಿನ ವಿವಿಧ ಉಪಯೋಗಗಳ ಪಟ್ಟಿ ಮಾಡಿರಿ.

೩) ಕೆಳಗಿನ ಹಸ್ತಲಿಖಿತ ಭಾಗವನ್ನು ಓದಿರಿ.

రాముణనిగా ఇచ్చు చిత్తు మంజడైన మనాయ శడిగా లక్షను మాహేంగిరఅల్ల, ఈగ నేడుత్తానే- తేలా, శంబ, జంతి ఇదల్ల తొంగినవల్ల, బాగిల రిజెరిగిళ దేశబ్బు తంగినవు తాను గుళితదు శాతియు తెచ్చిన చులా, బాన్నిగా రాతి తుంబిద తక్కే రాముణను " తొంగిన మెరపు భూతేది శిల్పవృక్ష " ఎంబ దూతను రోరిజెను, ఈగే అతనిగి నిజవనివీతం.

ನುಡಿಮುತ್ತು

ಎಲ್ಲರಿಗೂ ಉಪಕಾರಿ ಈ ಮರ. ಬಹುಪಯೋಗಿ ಇದು ನಿಸರ್ಗದ ವರ.

ಪ್ರಕೃತಿ ಮಾತೆ ಸಕಲ ಜೀವನದಾತೆ



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು