ಪರಿಸರ ಅಭ್ಯಾಸ ಭಾಗ 1 5ನೇ ಇಯತ್ತೆ
5Th std Environment Study Part One
ಅನುಕ್ರಮಣಿಕೆ
ಕ್ರ.ಸಂ. ಪಾಠಗಳ ಹೆಸರು ಪುಟಸಂಖ್ಯೆ
೧. ನಮ್ಮ
ಪೃಥ್ವಿ-ನಮ್ಮ ಸೂರ್ಯಮಾಲೆ.
೨. ಪೃಥ್ವಿಯ ಪರಿಭ್ರಮಣ. 2
3. ಪೃಥ್ವಿ ಹಾಗೂ
ಜೀವಸೃಷ್ಟಿ ...
4.ಪರ್ಯಾವರಣದ ಸಮತೋಲನ
೫. ಕುಟುಂಬದಲ್ಲಿಯ
ಮೌಲ್ಯಗಳು .
6. ನಿಯಮಗಳು
ಎಲ್ಲರಿಗಾಗಿ
7. ನಾವೇ ಬಿಡಿಸೋಣ ನಮ್ಮ
ಪ್ರಶ್ನೆಗಳನ್ನು..
8. ಸಾರ್ವಜನಿಕ ಸೌಕರ್ಯಗಳು ಹಾಗೂ
ನನ್ನ ಶಾಲೆ
9. ನಕಾಶೆಗಳು : ನಮ್ಮ
ಸಂಗಡಿಗರು.
೧೦. ಭಾರತದ
ಪರಿಚಯ..
೧೧. ನಮ್ಮ ಮನೆ
ಹಾಗೂ ಪರ್ಯಾವರಣ
೧೨. ಎಲ್ಲರಿಗಾಗಿ
ಆಹಾರ
೧೩. ಆಹಾರ ಕಾಪಾಡುವ
ಪದ್ಧತಿಗಳು.
೧೪. ಸಾರಿಗೆ
೧೫. ಸಂದೇಶವಹನ
ಹಾಗೂ ಪ್ರಸಾರ ಮಾಧ್ಯಮಗಳು.
೧೬. ನೀರು.
೧೭. ಬಟ್ಟೆ- ನಮ್ಮ
ಅವಶ್ಯಕತೆ...
೧೮. ಪರ್ಯಾವರಣ
ಮತ್ತು ನಾವು
೧೯. ಆಹಾರ ಘಟಕಗಳು
೨೦. ನಮ್ಮ
ಭಾವನಾತ್ಮಕ ಜಗತ್ತು .
೨೧. ಕೆಲಸದಲ್ಲಿ
ಮಗ್ನವಾಗಿರುವ ನಮ್ಮ ಅಂತರೇಂದ್ರಿಯಗಳು
೨೨. ಬೆಳವಣಿಗೆ
ಹಾಗೂ ವ್ಯಕ್ತಿತ್ವ ವಿಕಾಸ
೨೩. ಸಂಸರ್ಗಜನ್ಯ
ರೋಗಗಳು ಹಾಗೂ ರೋಗ ಪ್ರತಿಬಂಧಕ
೨೪. ಪದಾರ್ಥ, ವಸ್ತು ಮತ್ತು ಶಕ್ತಿ.
೨೫. ಸಾಮಾಜಿಕ
ಆರೋಗ್ಯ
೧. ನಮ್ಮ ಪೃಥ್ವಿ-ನಮ್ಮ ಸೂರ್ಯಮಾಲೆ
ಪ್ರ. 1. ಏನು ಮಾಡುವಿರಿ?
ಲಘುಗ್ರಹಗಳಲ್ಲಿಯ
ಪಟ್ಟಿಯಲ್ಲಿಯ ಖಗೋಲದ ಒಂದು ವಸ್ತು ಕುಸಿದು ಬಿದ್ದಿದೆ. ಅದು ಈಗ ಸೂರ್ಯನತ್ತ ವೇಗವಾಗಿ
ಹೋಗುತ್ತಿದೆ. ನಮ್ಮ ಪೃಥ್ವಿ ಅದರ ದಾರಿಯಲ್ಲಿ ಅಡ್ಡಬರಲಿದೆ. ಆ ವಸ್ತು ನಮ್ಮ ಪೃಥ್ವಿಗೆ ಡಿಕ್ಕಿ
ಹೊಡೆಯಲಿದೆ. ಇದನ್ನು ನಿಲ್ಲಿಸಲು ನೀವು ಯಾವ ಉಪಾಯವನ್ನು ಯೋಚಿಸಿ ಹೇಳಬಲ್ಲಿರಿ ?
ಉತ್ತರ: ಪೃಥ್ವಿಯನ್ನು ಉಳಿಸುವ
ಮೊದಲನೆಯ ಉಪಾಯವೆಂದರೆ ಕುಸಿದು ಬಿದ್ದ ಖಗೋಲದ ವಸ್ತುವನ್ನು ಕ್ಷೇಪಣಾಸ್ತ್ರದಿಂದ ಆಕ್ರಮಣ
ಮಾಡುವುದು. ಕ್ಷೇಪಣಾಸ್ತ್ರವು ಅದನ್ನು ಸಣ್ಣ ತುಂಡುಗಳಾಗಿ ಒಡೆಯಬಲ್ಲುದು.
ಎರಡನೆಯ ಉಪಾಯವೆಂದರೆ ಪೃಥ್ವಿಯತ್ತ ಬರುತ್ತಿರುವ ಖಗೋಲಿಯ ವಸ್ತುವಿನ
ಮಾರ್ಗವನ್ನು ಬದಲಾಯಿಸುವುದು. ಖಗೋಲಿಯ ವಸ್ತುವಿನ ಮಾರ್ಗವನ್ನು ಬದಲಾಯಿಸಲು ಅಂತರಾಳ ಯಾನ ಅಥವಾ
ಕ್ಷೇಪಣಾಸ್ತ್ರಗಳ ಸಹಾಯದಿಂದ ಅದನ್ನು ಬಾಡಿಗೆ ನೂಕುವುದು.
ಖಗೋಲಿಯ
ವಸ್ತುವಿನ ಪಕ್ಕದಲ್ಲಿ ಕನ್ನಡಿಗಳು ಅಳವಡಿಸಲಾದ ಅಂತರಾಳ ನೌಕೆ ಬಳಸುವುದು. ಇದರಿಂದ ಕನ್ನಡಿಯಿಂದ
ಪರವರ್ತನೆಯಾದ ಸೂರ್ಯನ ಕಿರಣಗಳು ಖಗೋಲಿಯ ವಸ್ತುವಿನ ಮೇಲೆ ಬೀಳುವವು, ಇದರಿಂದ ಅಲ್ಲಿ ಒತ್ತಡವು
ನಿರ್ಮಾಣವಾಗಿ ಖಗೋಲಿಯ ವಸ್ತುವಿನ ಮಾರ್ಗ ಬದಲಾಯಿಸಬಹುದು.
ಇನ್ನೊಂದು
ಉಪಾಯವೇನೆಂದರೆ ಲೇಸರ್ ಕಿರಣಗಳ ಬಳಕೆಯಿಂದ ಖಗೋಲಿಯ ವಸ್ತುವಿನ ಮೇಲ್ಮೈಯನ್ನು ಭಾಷ್ಪೀಭವನಕ್ಕೆ
ಒಳಪಡಿಸುವುದು. ಇದು ಖಗೋಲಿಯ ವಸ್ತುವಿನ ದ್ರವ್ಯರಾಶಿಯಲ್ಲಿ ಬದಲಾವಣೆಯನ್ನು ತರುವುದು. ನಾವು
ಪೃಥ್ವೀಯಿಂದ ಹೆಚ್ಚುವರಿ ವಸ್ತುಗಳನ್ನು ಕೂಡ ಖಗೋಲಿಯ ವಸ್ತುವಿನ ಕಳುಹಿಸಬಹುದು. ಇದರಿಂದ ಖಗೋಲಿಯ
ವಸ್ತುವಿನ ದ್ರವ್ಯರಾಶಿಯಲ್ಲಿ ಬದಲಾವಣೆಯಾಗಿ ಅದರ ಕಕ್ಷೆ ಹಾಗೂ ಮಾರ್ಗವನ್ನು ಬದಲಾಯಿಸಲು
ಬರುತ್ತದೆ.
ಈ
ಖಗೋಲಿಯ ವಸ್ತುವಿನ ಸಮೀಪದಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸುವ ಮೂಲಕ ಗುರುತ್ವಾಕರ್ಷಣ ಶಕ್ತಿಯನ್ನು
ನಿರ್ಮಿಸಲು ಬರುವುದು. ಇದರಿಂದ ಖಗೋಲಿಯ ವಸ್ತುವಿನ ವೇಗ ಮತ್ತು ಕಕ್ಷೆ ಬದಲಾಯಿಸುವುದು. ಖಗೋಳ
ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರವು ಈಗ ತುಂಬಾ ಮುಂದುವರೆದಿದೆ. ಭವಿಷ್ಯದಲ್ಲಿ ಇಂತಹ
ಹೆದರಿಕೆಯ ಸಂಗತಿಗಳು ಉದ್ಭವಿಸಿದರೂ ನಮ್ಮ ಭೂನಿವಾಸಿಗಳನ್ನು ನಾವು ಸುಲಭವಾಗಿ ರಕ್ಷಿಸಬಹುದು.
ಪ್ರ. ೨. ಸ್ವಲ್ಪ ತಲೆ
ಓಡಿಸಿರಿ.
(೧) ಸೂರ್ಯ ಒಮ್ಮೆಲೆ
ಕಾಣದಾದರೆ,. ನಮ್ಮ
ಸೂರ್ಯಮಾಲೆಯದು ಏನಾಗಬಹುದು?
ಉತ್ತರ:
ಸೂರ್ಯ ಒಮ್ಮೆಲೇ ಕಾಣದಾದರೆ,
1)
ಎಲ್ಲೆಡೆ ಕತ್ತಲೆ ಆವರಿಸುವುದು
2)
ವನಸ್ಪತಿಗಳು ದ್ಯುತಿಸಂಶ್ಲೇಷಣೆ ಕ್ರಿಯೆ ಮಾಡದೆ ನಷ್ಟವಾಗುವವು ಹಾಗಾಗಿ ಅವು ಬಿಡುವ ಶುಧ್ಧ
ಆಕ್ಸಿಜನ್ ಮಾನವನಿಗೆ ಸಿಗದಂತಾಗುವುದು.
3) ಎಲ್ಲ
ಗ್ರಹಗಳು ಪರಿಭ್ರಮಣೆ ಮಾಡುವುದನ್ನು ನಿಲ್ಲಿಸುವುದು.
4) ಹಗಲು
ಮತ್ತು ರಾತ್ರಿಗಳು ತಿಳಿಯದೆ ವಾರ, ತಿಂಗಳು, ವರ್ಷಗಳ ಲೆಕ್ಕ ತಿಳಿಯದಂತಾಗುವುದು.
5)
ಪೃಥ್ವಿಯ ಮೇಲಿನ ಋತುಚಕ್ರ ನಿಂತು ಹೋಗುವುದು.
6) ಸೌರ
ಶಕ್ತಿಯ ಮೇಲೆ ಕಾರ್ಯ ಮಾಡುವ ಎಲ್ಲ ಉಪಕರಣಗಳು ಕಾರ್ಯನಿರ್ವಹಿಸುವುದಿಲ್ಲ.
7)
ಪೃಥ್ವಿಯ ಮೇಲೆ ಯಾವುದೇ ತರಹದ ಉಷ್ಣತೆ ಉಳಿಯುವುದಿಲ್ಲ. ಭೂಮಿ ತಂಪಾಗುವುದು.
8)
ಪೃಥ್ವಿಯ ಮೇಲೆ ಜಲಚಕ್ರ ನಿಂತು ಹೋಗುವುದು, ಭಾಷ್ಪೀಭವನ, ಮೋಡಗಳ ನಿರ್ಮಾಣ,
ಮಳೆ ಬೀಳುವುದು ಮುಂತಾದ ಕ್ರಿಯೆಗಳು ನಿಂತು ಹೋಗುವವು.
9)
ಸೂಕ್ಷ್ಮಜೀವಿಗಳು ವೇಗವಾಗಿ ಬೆಳೆಯುವವು, ಇದರಿಂದಾಗಿ ರೋಗ ರುಜಿನುಗಳು ನಿರ್ಮಾಣವಾಗುವವು.
(೨) ಮಂಗಳ ಗ್ರಹದ ಮೇಲಿನ ನಿಮ್ಮ ಗೆಳೆಯ ಗೆಳತಿಗೆ ನಿಮ್ಮ
ವಿಳಾಸ ತಿಳಿಸಬೇಕಾಗಿದೆ ಎಂದು ಕಲ್ಪನೆ ಮಾಡಿರಿ. ನೀವು ಎಲ್ಲಿ ಇರುವಿರಿ ಎಂಬುದು
ನಿಮ್ಮ ಗೆಳೆಯ/ ಗೆಳತಿಗೆ ಸರಿಯಾಗಿ ತಿಳಿಯಬೇಕು. ಹಾಗಾದರೆ ನೀವು ನಿಮ್ಮ ವಿಳಾಸವನ್ನು
ಹೇಗೆ ಬರೆಯುವಿರಿ?
ಉತ್ತರ: ನನ್ನ ವಿಳಾಸ
ಹೆಸರು: ಕುಮಾರ/ಕುಮಾರಿ
........................................................
ಊರು: ಬಬಲಾದ ತಾ. ಅಕ್ಕಲಕೋಟ ಜಿ. ಸೋಲಾಪುರ
ರಾಜ್ಯ: ಮಹಾರಾಷ್ಟ್ರ , ದೇಶ:
ಭಾರತ , ಖಂಡ: ಏಶಿಯಾ ಖಂಡ ,
ವಿಶ್ವ: ಜಗತ್ತು-ಪೃಥ್ವಿ ಮೇಲಿನ ಅಕ್ಷಾಂಶಗಳು ಮತ್ತು ರೇಖಾಂಶಗಳು
೩.
ಸೂರ್ಯಮಾಲೆಯಲ್ಲಿಯ ಯಾವ ಗ್ರಹದ ಕ್ರಮ ತಪ್ಪಿದೆ ಎಂಬುದನ್ನು ಗುರುತಿಸಿ, ಸೂರ್ಯನಿಂದ ಇರುವ ಗ್ರಹಗಳ ಕ್ರಮವನ್ನು ಸರಿಯಾಗಿ ಹಚ್ಚಿರಿ.
ಗ್ರಹಗಳ ಸರಿಯಾದ ಕ್ರಮ = ಬುಧ - ಶುಕ್ರ - ಪೃಥ್ವಿ - ಮಂಗಳ - ಗುರು - ಶನಿ - ಯುರೇನಸ್ - ನೆಪ್ಚೂನ್ - ಪ್ಲೂಟೊ (ಬಟು ಗ್ರಹ)
ಪ್ರ. 4. ನಾನು ಯಾರು?
(ಅ) ಪೃಥ್ವಿಯ ಮೇಲಿಂದ ನೀವು
ನನ್ನನ್ನು ನೋಡುವಿರಿ. ನಿಮಗೆ ಕಾಣಿಸುವ ನನ್ನ ಪ್ರಕಾಶಮಯವಾದ ಭಾಗವು ನಿಯಮಿತವಾಗಿ ಬದಲಾಗುತ್ತದೆ. = ಚಂದ್ರ
(ಆ) ನಾನು ಸ್ವಯಂಪ್ರಕಾಶಮಾನನಾಗಿರುವೆ. ನನ್ನಿಂದ
ಹೊರಬೀಳುವ ಪ್ರಕಾಶದಿಂದಲೇ ಗ್ರಹಗಳಿಗೆ ಪ್ರಕಾಶ ಸಿಗುವುದು. = ಸೂರ್ಯ
(ಇ) ನಾನು ಸ್ವತಃದ ಸುತ್ತ, ಗ್ರಹದ ಸುತ್ತ ಹಾಗೂ ತಾರೆಯ ಸುತ್ತ ತಿರುಗುವೆ. = ಉಪಗ್ರಹ
(ಈ) ನಾನು ಸ್ವತಃದ ಸುತ್ತ ಹಾಗೂ ತಾರೆಯ ಸುತ್ತಲೂ
ಪ್ರದಕ್ಷಿಣೆ ಹಾಕುವೆ. =ಗ್ರಹ
(ಉ) ನನ್ನ ಮೇಲೆ ಇರುವಂತಹ ಜೀವಸೃಷ್ಟಿ ಇನ್ನಿತರ ಯಾವುದೇ
ಗ್ರಹದ ಮೇಲೆ ಇಲ್ಲ. = ಪೃಥ್ವಿ
(ಊ) ನಾನು ಪೃಥ್ವಿಯ, ಎಲ್ಲಕ್ಕಿಂತ
ಹತ್ತಿರ ಇರುವ ತಾರೆಯಾಗಿರುವೆ.= ಬುಧ ಗ್ರಹ
ಪ್ರ. ೫. (ಅ) ಅಂತರಾಳ
ಪ್ರಕ್ಷೇಪಣೆಯಲ್ಲಿ ರಾಕೆಟನ್ನು ಏಕೆ ಉಪಯೋಗಿಸುವರು?
ಉತ್ತರ: ಪೃಥ್ವಿಯ ಮೇಲಿಂದ ಯಾವುದೇ
ವಸ್ತುವನ್ನು ಅಂತರಳದಲ್ಲಿ ಕಳುಹಿಸಲು ಅದನ್ನು ಪೃಥ್ವಿಯ ಗುರುತ್ವಾಕರ್ಷಣ ಶಕ್ತಿಯ ವಿರುಧ್ಧ
ಶಕ್ತಿ ಕೊಡಬೇಕಾಗುತ್ತದೆ. ರಾಕೆಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಇಂಧನವನ್ನು ಬಳಸಿ ಸಾವಿರಾರು ಟನ್ನುಗಳ ಭಾರದ ಅಂತರಾಳ ಯಾನ ನಿರ್ಮಾಣ
ಮಾಡಲಾಗುತ್ತದೆ. ಅಂತರಾಳ ಪ್ರಕ್ಷೇಪಣೆಯ ತಂತ್ರವನ್ನು ಬಳಸಿ ಅವುಗಳಲ್ಲಿ ರಾಕೇಟನ್ನು ಉಪಯೋಗ
ಮಾಡುವರು.
(ಆ) ಕೃತ್ರಿಮ
ಉಪಗ್ರಹಗಳು ಯಾವ ಯಾವ ಮಾಹಿತಿಯನ್ನು ಕೊಡುವವು ?
ಉತ್ತರ: ಬೇಸಾಯ, ಪರ್ಯವರಣದ ನಿರೀಕ್ಷಣೆ, ಹವಮನದ ಅಂದಾಜು, ನಕಾಶೆ ತಯಾರಿಕೆ, ಪೃಥ್ವಿಯ ಮೇಲಿನ ನೀರು ಹಾಗೂ ಖನಿಜ
ಸಂಪತ್ತಿನ ಶೋಧ ಹಾಗೂ ಸಂದೇಶ ವಾಹನ ಮಾಡುವ ಮಾಹಿತಿಗಳನ್ನು ಕೃತ್ರಿಮ ಉಪಗ್ರಹಗಳು ಕೊಡುವವು.
೨. ಪೃಥ್ವಿಯ
ಪರಿಭ್ರಮಣ.
ಪ್ರ. 1. ಏನು ಮಾಡುವಿರಿ?
ಅಮಿತನಿಗೆ ಅವನ
ಅಜ್ಜಿಯನ್ನು ಕರೆದುಕೊಂಡು ಆಸ್ಟ್ರೇಲಿಯಾಗೆ ಹೋಗುವುದಿದೆ. ಅಜ್ಜಿಗೆ ಚಳಿಯಿಂದ ಬಹಳ ತೊಂದರೆ
ಯಾಗುವುದು. ಹಾಗಾದರೆ ಅವರು ಆಸ್ಟ್ರೇಲಿಯಾಗೆ ಯಾವಾಗ ಹೋಗಬೇಕು?
......................
ಪ್ರ. ೨. ಸ್ವಲ್ಪತಲೆ ಓಡಿಸಿರಿ.
(ಅ) ಪೃಥ್ವಿಯ ಒಂದು
ಪರಿಭ್ರಮಣದಲ್ಲಿ ಎಷ್ಟು ಪರಿವಲನೆಗಳು ಆಗುವವು?
ಉತ್ತರ: ಪೃಥ್ವಿಯ ಪರಿವಲನೆ ಎಂದರೆ ತನ್ನ ಸುತ್ತ ತಿರುಗುವುದು.
ಇದಕ್ಕೆ 24ಗಂಟೆಗಳು –ಅಂದರೆ ಒಂದು ದಿವಸ ತಗಲುತ್ತದೆ. ಆದರೆ ಪರಿಭ್ರಮಣೆಯಲ್ಲಿ ಪೃಥ್ವಿ ತನ್ನ
ಸುತ್ತ ತಿರುಗುತ್ತಲೇ ಸೂರ್ಯನ ಸುತ್ತ ಕೂಡ ತಿರುಗುತ್ತದೆ. ಇದಕ್ಕೆ ಒಂದು ವರ್ಷ ಅಥವಾ 365
ದಿವಸಗಳು ತಗಲುತ್ತವೆ. ಹಾಗಾಗಿ ಪೃಥ್ವಿಯ ಒಂದು ಪರಿಭ್ರಮಣೆಯಲ್ಲಿ ಒಟ್ಟು 365 ಅಥವಾ 366
ಪರಿವಲನೆಗಳು ಆಗುವವು.
(ಆ) ಅರುಣಾಚಲ ಪ್ರದೇಶದಲ್ಲಿಯ
ಇಟಾ ನಗರದಲ್ಲಿ ಸೂರ್ಯೋದಯವಾಗಿದೆ. ಮುಂದಿನ ಪಟ್ಟಣಗಳಲ್ಲಿ ಆಗುವ ಸೂರ್ಯೋದಯದ ಕ್ರಮವನ್ನು ಅವುಗಳ
ಮುಂದೆ ಬರೆಯಿರಿ.
ಮುಂಬಯಿ
(ಮಹಾರಾಷ್ಟ್ರ),
ಕೋಲಕತಾ (ಪಶ್ಚಿಮ ಬಂಗಾಲ),
ಭೋಪಾಳ
(ಮಧ್ಯಪ್ರದೇಶ),
ನಾಗಪೂರ
(ಮಹಾರಾಷ್ಟ್ರ).
ಪ್ರ. ೩. ತೆರವಾದ ಸ್ಥಳಗಳಲ್ಲಿ ಯೋಗ್ಯವಾದ ಶಬ್ದ
ತುಂಬಿರಿ.
(ಅ) ಪೃಥ್ವಿಯು ತನ್ನ ಸುತ್ತ ತಿರುಗುವುದಕ್ಕೆ ಪರಿವಲನೆ ಎನ್ನುವರು.
(ಆ) ಪೃಥ್ವಿಯು ಸೂರ್ಯನ ಸುತ್ತ ತಿರುಗುವವುದಕ್ಕೆ ಪರಿಭ್ರಮಣೆ ಎನ್ನುವರು.
ಪ್ರ. ೪. ಯಾವುದಕ್ಕೆ ಎನ್ನುವರು?
(ಅ) ಹುಣ್ಣಿಮೆ:- ನಮಗೆ ಪೃಥ್ವಿಯ ಮೇಲಿಂದ ಚಂದ್ರನ ಒಂದೇ ಬದಿಯ ದರ್ಶನವಾಗುತ್ತದೆ. ಶುಲ್ಕಪಕ್ಷದಿಂದ
ಕೃಷ್ಣಪಕ್ಷದ ವರೆಗೆ ಚಂದ್ರನ ಕಲೆ ಬೆಳೆಯುತ್ತಾ ಸಂಪೂರ್ಣ ಚಂದ್ರ ಕಾಣಿಸುವ ದಿನವೇ ಹುಣ್ಣಿಮೆ
ಹೌದು.
(ಆ)
ಅಮಾವಾಸ್ಯೆ :- ಕೃಷ್ಣ ಪಕ್ಷದಿಂದ ಶುಕ್ಲ ಪಕ್ಷದ ವರೆಗಿನ ಹದಿನೈದು ತಿಥಿಗಳ ನಂತರ ಅಮವಾಸೆ ಆಗುತ್ತದೆ.
ಅಮವಾಸೆ ದಿನ ಚಂದ್ರ ಕಾಣಿಸುವುದಿಲ್ಲ.
(ಇ)
ಚಂದ್ರಮಾಸ :- ಒಂದು ಅಮಾವಾಸೆಯಿಂದ ಮುಂದಿನ ಅಮಾವಾಸೆಯ ವರೆಗಿನ 28-30 ದಿನಗಳ ಕಾಲಾವಧಿಗೆ ಚಂದ್ರಮಾಸ
ಎನ್ನುವರು.
(ಈ) ತಿಥಿ: ಚಂದ್ರಮಾಸದ ಪ್ರತಿಯೊಂದು ದಿವಸಕ್ಕೆ ‘ತಿಥಿ’ ಎನ್ನುತ್ತಾರೆ.
೫.
ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(ಅ) ವಿಷುವವೃತ್ತ ಎಂದರೇನು ?
ಉತ್ತರ: ಉತ್ತರ ಹಾಗೂ ದಕ್ಷಿಣ ಧ್ರುವಗಳ ಮಧ್ಯದಲ್ಲಿ ಪೃಥ್ವಿಯ ಪೃಷ್ಠಭಾಗದ
ಮೇಲೆ ಒಂದು ವರ್ತುಳ ತೆಗೆದರೆ ಪೃಥ್ವಿಯ ಎರಡು ಸಮಾನ ಭಾಗಗಳು ಆಗುವವು. ಪೃಥ್ವಿಯ ಮೇಲಿನ ಈ ಕಾಲ್ಪನಿಕ ವರ್ತುಳಕ್ಕೆ ‘ವಿಷುವವೃತ್ತ’ ಎನ್ನುವರು.
(ಆ) ವಿಷುವವೃತ್ತದಿಂದಾಗಿ
ನಿರ್ಮಾಣವಾಗುವ ಪೃಥ್ವಿಯ ಎರಡು ಭಾಗಗಳು ಯಾವವು ?
ಉತ್ತರ: ವಿಷುವವೃತ್ತದಿಂದಾಗಿ ನಿರ್ಮಾಣವಾಗುವ ಪೃಥ್ವಿಯ ಎರಡು ಭಾಗಗಳು: ದಕ್ಷಿಣ ಗೋಲಾರ್ಧ ಹಾಗೂ ಉತ್ತರ ಗೋಲಾರ್ಧ
ಉಪಕ್ರಮ:
ಕನ್ನಡ
ದಿನದರ್ಶಿಕೆಯಲ್ಲಿ ಯಾವುದೇ ಒಂದು ತಿಂಗಳ ಅಮಾವಾಸ್ಯೆಯಿಂದ ಹುಣ್ಣಿಮೆಯ ವರೆಗಿನ ಅದರಂತೆಯೆ
ಹುಣ್ಣಿಮೆಯಿಂದ ಅಮವಾಸ್ಯೆಯ ವರೆಗಿನ ತಿಥಿಗಳು ಹೆಸರು ಬರೆದು ಅವುಗಳ ಬಗೆಗೆ ಹೆಚ್ಚಿನ ಮಾಹಿತಿ
ಪಡೆಯಿರಿ.
***
3. ಪೃಥ್ವಿ ಹಾಗೂ
ಜೀವಸೃಷ್ಟಿ ...
ಪ್ರ. 1. ಏನು ಮಾಡುವಿರಿ?
1.ಬಿಸಿಲಿನಲ್ಲಿ
ತಿರುಗಿದರೆ ತ್ವಚೆಗೆ ಕಲೆಗಳು ಬೀಳುವವು.
ಉತ್ತರ: ತೀವ್ರ ಬಿಸಿಲಲ್ಲಿ ತಿರುಗಿದರೆ ನಮ್ಮ ತ್ವಚೆಗೆ ಕಲೆಗಳು
ಬೀಳುತ್ತವೆ. ಹಾಗೆ ಆಗಬಾರದೆಂದು ಮುಂದಿನ ಉಪಾಯಗಳನ್ನು ಮಾಡಬಹುದು.
1) 2. ಬಿರು ಬಿಸಿಲಲ್ಲಿ
ತಿರುಗಬಾರದು
2)
ಹೊರಗೆ ಹೋಗುವುದಾದರೆ ಛತ್ರಿ, ಟೊಪ್ಪಿಗೆ, ಮೈ ಮುಚ್ಚುವಷ್ಟು ಬಟ್ಟೆ, ಕಣ್ಣಿಗೆ ಕನ್ನಡಕ, ತಲೆಗೆ ಕೈವಸ್ತ್ರದಿಂದ
ಕಟ್ಟಿಕೊಳ್ಳಬೇಕು.
3)
ಬಿಸಿಲಿಂದ ಮನೆಗೆ ಬಂದಾಗ
ತಂಪು ನೀರಿನಿಂದ ಕೈ-ಕಾಲು-ಮುಖ ತೊಳೆದುಕೊಂಡು ವಿಶ್ರಾಂತಿ ಪಡೆಯಬೇಕು.
ಪ್ರ. 2. ಸ್ವಲ್ಪ ತಲೆ
ಓಡಿಸಿರಿ.
(ಅ) ಸೂಕ್ಷ್ಮಜೀವಿಗಳು ಏಕೆ ಮಹತ್ವದ್ದಾಗಿರುವವು?
ಉತ್ತರ: ಪೃಥ್ವಿಯ ಮೇಲಿರುವ ಶಿಲಾವಾರಣ ಹಾಗೂ ಜಲಾವರಣ ಇವುಗಳಲ್ಲಿ
ಸೂಕ್ಷ್ಮಜೀವಿಗಳು ಕಂಡು ಬರುತ್ತವೆ. ಜೈವಿಕ ಕಸ
ಕಡ್ಡಿಗಳ ವಿಘಟನೆ ಮಾಡುವುದು ಈ ಸೂಕ್ಷ್ಮ ಜೀವಿಗಳ ಮುಖ್ಯ ಕೆಲಸವಾಗಿದೆ. ಆಹಾರ ಸರಪಳಿಯಲ್ಲಿ
ಸೂಕ್ಷ್ಮಜೀವಿಗಳು ಮಹತ್ವದ ಪಾತ್ರ ವಹಿಸುತ್ತವೆ.
(ಆ) ಸಮುದ್ರದಿಂದ ದೊರೆಯುವ ಆಹಾರ ಇದರ ಮೇಲೆ ವಿಚಾರ
ಮಾಡಿರಿ, ಮಾಹಿತಿ ಪಡೆಯಿರಿ ಮತ್ತು
ಅದನ್ನು ಹತ್ತು ಸಾಲುಗಳಲ್ಲಿ ಬರೆಯಿರಿ.
ಉತ್ತರ: ಸಮುದ್ರದಲ್ಲಿ ಜಲಚರ ಜೀವಿಗಳು ಇರುತ್ತವೆ. ಅವುಗಳಲ್ಲಿ ಕೆಲವು
ಜಲಚರ ಜೀವಿಗಳು ಮನುಷ್ಯನ ಆಹಾರವಾಗಿವೆ. ಮೀನುಗಳಿಗೆ ಮನುಷ್ಯ ಖಾದ್ಯ ಎಂದು ಬಳಸುತ್ತಾನೆ. ಅಡುಗೆಗೆ
ಬಳಸುವ ಉಪ್ಪು ಕೂಡ ಸಮುದ್ರದಿಂದ ದೊರೆಯುತ್ತದೆ.
ಪ್ರ. 3. ಕೆಳಗಿನ
ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(ಅ) ಮೋಡಗಳು ಯಾವುದರಿಂದ
ತಯಾರಾಗುವವು?
ಉತ್ತರ: ಸೂರ್ಯನ ಉಷ್ಣತೆಯಿಂದ ಪೃಥ್ವಿಯ ಮೇಲಿನ ನೀರು ಸತತವಾಗಿ
ಭಾಷ್ಪೀಭವನವಾಗುತ್ತಿರುತ್ತದೆ. ಭೂಮಿಯ ಒಳಗೆ ಇಂಗಿದ ನೀರು ಸಹ ಸೂರ್ಯನ ಉಷ್ಣತೆಯಿಂದ
ಭಾಷ್ಪವಾಗುತ್ತ ಹವೆಯಲ್ಲಿ ಕೂಡಿಕೊಳ್ಳುತ್ತದೆ. ಭಾಷ್ಪವು ಹವೆಗಿಂತ ಹಗುರವಾಗಿರುವುದು. ಆದ್ದರಿಂದ
ಅದು ವಾತಾವರಣದಲ್ಲಿ ತೇಲುತ್ತ ಎತ್ತರದಲ್ಲಿ ಹೋಗಿ ಸಂಘಟನ ಆಗುತ್ತದೆ. ಇದೇ ಮೋಡವಿರುತ್ತದೆ.
(ಆ) ಜೀವಾವರಣ ಎಂದು
ಯಾವುದಕ್ಕೆ ಹೇಳುವರು?
ಉತ್ತರ:ಪೃಥ್ವಿಯ ಮೇಲೆ ಎಲ್ಲೆಡೆಗೂ ವಿವಿಧ ಪ್ರಕಾರದ ವನಸ್ಪತಿ, ಪ್ರಾಣಿ ಹಾಗೂ ಸೂಕ್ಷ್ಮಜೀವಿಗಳು, ನೆಲದ ಮೇಲೆ, ನೀರಿನಲ್ಲಿ ಹಾಗೂ ಹವೆಯಲ್ಲಿಯೂ ಇರುತ್ತವೆ. ಶಿಲಾವಾರಣ,
ಜಲಾವರಣ ಮತ್ತು ವಾತಾವರಣಗಳಲ್ಲಿ ಸಜೀವಿಗಳ ಅಸ್ತಿತ್ವ ಇರುತ್ತದೆ. ಈ ಆವರಣದಲ್ಲಿಯ ಸಿಜೀವಿ ಹಾಗೂ
ಅವುಗಳಿಂದ ವ್ಯಾಪಿಸಿದ ಭಾಗಕ್ಕೆ ‘ಜೀವಾವರಣ’
ಎನ್ನುವರು.
(ಇ) ನಿಮ್ಮ ಪರಿಸರದಲ್ಲಿ ಇರುವ
ವಿವಿಧ ಭೂರೂಪಗಳ ಯಾದಿ ಮಾಡಿರಿ. ಅದರಲ್ಲಿಯ ಯಾವುದೇ ಎರಡು ಭೂರೂಪಗಳ ವರ್ಣನೆ ಮಾಡಿರಿ.
ಉತ್ತರ:
ಪರ್ವತ: ಅನೇಕ ಗುಡ್ಡ, ದಿಬ್ಬಗಳ
ಸಾಲುಗಳು ಎತ್ತರವಾಗಿದ್ದರೆ ಅವು ಪರ್ವತಗಳ ಸಾಲು ಎನಿಸುತ್ತವೆ.
ಬಯಲು: ಭೂಮಿಯು ಸಪಾಟಾಗಿ ಇರುತ್ತದೆ.
*(ಈ) ಪೃಥ್ವೀಯು ಎಷ್ಟು ಖಂಡಗಳಲ್ಲಿ ವಿಭಾಗಿಸಲ್ಪಟ್ಟಿದೆ? ಅವು ಯಾವುವು?
ಉತ್ತರ: ಪೃಥ್ವೀಯು ಏಳು ಖಂಡಗಳಲ್ಲಿ ವಿಭಾಗಿಸಲ್ಪಟ್ಟಿದೆ – ಅವು
ಏಶಿಯಾ, ಯುರೋಪ, ಆಫ್ರಿಕಾ, ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಅಂಟಾರ್ಕ್ಟಿಕಾ ಹಾಗೂ ಆಷ್ಟ್ರೇಲಿಯಾ.
*(ಉ) ಮಹಾಸಾಗರಗಳ ಹೆಸರು ಬರೆಯಿರಿ.
ಉತ್ತರ: ಅಟಲಾಂಟಿಕ, ಫೆಸಿಫಿಕ, ಆರ್ಕಟಿಕ್, ಹಿಂದೂ ಮಹಾಸಾಗರ.
ಪ್ರ. ೪. ಮುಂದಿನ ಎರಡು
ವಾಕ್ಯಗಳಲ್ಲಿಯ ಭೂರೂಪ ತೋರಿಸುವ ಶಬ್ದಗಳನ್ನು ಅಧೋರೇಖಿತ ಮಾಡಿರಿ.
(ಅ) ಜಮೀನನ ಮನೆ ಗುಡ್ಡದ ಅಡಿಯಲ್ಲಿದೆ.
(ಆ) ರಿಯಾ ತಪ್ಪಲು ಪ್ರದೇಶದಲ್ಲಿ ಇರುವಳು.
ಪ್ರ. ೫. ಮಾಹಿತಿ
ಬರೆಯಿರಿ.
(ಅ) ಬಾಷೀಭವನ : ಉಷ್ಣತೆಯಿಂದಾಗಿ ಭೂಮಿಯ ಮೇಲೆ ಇರುವ ನೀರು ಉಗಿಯಲ್ಲಿ ರೂಪಾಂತರವಾಗುತ್ತದೆ. ಈ ಕ್ರಿಯೆಗೆ
ಭಾಷ್ಪೀಭವನ ಎನ್ನುವರು. ಸೂರ್ಯನ ಉಷ್ಣತೆಯಿಂದ ಭೂಮಿ ಮೇಲಿನ ಹಾಗೂ ಭೂಮಿ ಒಳಗಿನ ನೀರು ಭಾಷ್ಪೀಭವನವಾಗುತ್ತದೆ.
ಅದರ ಉಗಿ ಆಗಿ ಹವೆಯಲ್ಲಿ ಕೂಡಿಕೊಳ್ಳುತ್ತದೆ. ಈ ಭಾಷ್ಪವು ಎತ್ತರಕ್ಕೆ ಹೋದಾಗ ಸಂಘನನವಾಗಿ ಮಳೆಯ ರೂಪದಲ್ಲಿ
ಭೂಮಿ ಮೇಲೆ ಬೀಳುತ್ತದೆ.
ಆ) ಸಂಘನನ: ಬಾಷ್ಪವು ತಣ್ಣಗಾಗಿ ಅದು ದ್ರವದಲ್ಲಿ ರೂಪಾಂತರವಾಗುವ ಕ್ರಿಯೆಗೆ ಸಂಘನನ ಎನ್ನುವರು. ಸೂರ್ಯನ ಉಷ್ಣತೆಯಿಂದ ಭೂಮಿ ಮೇಲಿನ ಹಾಗೂ ಭೂಮಿ ಒಳಗಿನ ನೀರು ಭಾಷ್ಪೀಭವನವಾಗುತ್ತದೆ. ಅದರ ಉಗಿ ಆಗಿ ಹವೆಯಲ್ಲಿ ಕೂಡಿಕೊಳ್ಳುತ್ತದೆ. ಈ ಭಾಷ್ಪವು ಎತ್ತರಕ್ಕೆ ಹೋದಾಗ ಸಂಘನನವಾಗಿ ಮಳೆಯ ರೂಪದಲ್ಲಿ ಭೂಮಿ ಮೇಲೆ ಬೀಳುತ್ತದೆ.
(ಇ) ಜಲಚಕ್ರ: ಭಾಷ್ಪೀಭವನದಿಂದ ಭೂಮಿಯ ಮೇಲಿನ ನೀರು ಮೇಲೆ ಹೋಗುತ್ತದೆ ಹಾಗೂ ಸಂಘನನ ಪ್ರಕ್ರಿಯೆಯಿಂದ ಅದು ತಂಪಾಗಿ
ಮಳೆಯ ರೂಪದಲ್ಲಿ ಭೂಮಿಗೆ ಇಳಿಯುತ್ತದೆ. ಹೀಗೆ ನೀರಿನ ಭಾಷ್ಪೀಭವನ, ಸಂಘನನ ಮತ್ತು ಮಳೆ ಬೀಳುವ ಪ್ರಕ್ರಿಯೆ ಸತತವಾಗಿ ಚಕ್ರದಂತೆ ನಡೆಯುತ್ತದೆ.
ಇದಕ್ಕೆ ಜಲಚಕ್ರ ಎಂದು ಕರೆಯುತ್ತಾರೆ.
ಪ್ರ. ೬. ಯಾವುದೇ ಎರಡು
ಉದಾಹರಣೆಗಳನ್ನು ಬರೆಯಿರಿ.
(ಅ) ಹವಾಮಾನಕ್ಕೆ ಸಂಬಂಧಿಸಿದ ಸಂಗತಿಗಳು.
ಉತ್ತರ: ಸುಂಟರಗಾಳಿಗಳು, ಮೋಡ ಒಡೆಯುವುದು, ಮೋಡ ತಯಾರಾಗಿ ಮಳೆ ಬೀಳುವುದು.
(ಆ) ನೀರು ಉಪಲಬ್ಧವಾಗಿರುವ ಸ್ಥಳಗಳು.
ಉತ್ತರ: ನದಿಗಳು, ಕೆರೆ, ಕಾಲುವೆ, ಸರೋವರ, ಸಮುದ್ರ.
ಪ್ರ. ೭. ಜಲಚಕ್ರದ
ಹೆಸರುಗಳನ್ನು ಬರೆದ ಆಕೃತಿ ತೆಗೆಯಿರಿ.
4.ಪರ್ಯಾವರಣದ
ಸಮತೋಲನ
ಪ್ರ. 1. ಏನು ಮಾಡುವಿರಿ ?
ಕೀಟನಾಶಕಗಳ ಉಪಯೋಗ
ಮಾಡದೇ ಮನೆಯಲ್ಲಿಯ ಕೀಟಕಗಳ ನಿವಾರಣೆ ಮಾಡುವುದಿದೆ.
ಉತ್ತರ: ಕೀಟನಾಶಕಗಳ ಉಪಯೋಗ ಮಾಡದೇ ಮನೆಯಲ್ಲಿಯ ಕೀಟಕಗಳ ನಿವಾರಣೆ
ಮಾಡಬೇಕಾಗಿದ್ದರೆ ನಾವು ನಮ್ಮ ಮನೆಯನ್ನು ಸ್ವಚ್ಛವಾಗಿ ಇಡಬೇಕು.
ಧಾನ್ಯಗಳನ್ನು ಬಿಸಲಿನಲ್ಲಿ ಒದಗಿಸಬೇಕು. ಧಾನ್ಯಗಳಲ್ಲಿ ಕೀಟಕಗಳು
ಆಗದಂತೆ ಹವೆ ಬಾರದ ಜಾಗಕ್ಕೆ ಧಾನ್ಯ ಇಡಬೇಕು.
ಪ್ರ. ೨. ಸ್ವಲ್ಪತಲೆ
ಓಡಿಸಿರಿ.
ಆಹಾರ ಸರಪಳಿ
ತಯಾರಿಸಿರಿ. ಕಪ್ಪೆ, ಹದ್ದು, ಹುಳು, ಹಾವು, ಹುಲ್ಲು
ಪ್ರ. ೩. ಕೆಳಗಿನ
ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(ಅ) ಆಹಾರ ಸರಪಳಿ ಎಂದರೇನು ? ಉದಾಹರಣೆಗಳನ್ನು ಬರೆಯಿರಿ.
ಉತ್ತರ: ಹುಲ್ಲು, ಜಿಗಟೆ, ಪಕ್ಷಿ- ಪ್ರಾಣಿ ಮುಂತಾದ ಬೇರೆ ಬೇರೆ ಘಟಕಗಳು ಒಂದು ನಿರ್ದಿಷ್ಟ ಕ್ರಮದಿಂದ ಒಂದು ಘಟಕ
ಒನ್ನೊಂದು ಘಟಕದ ಮೇಲೆ ಆಹಾರಕ್ಕಾಗಿ ಅವಲಂಬಿಸಿರುತ್ತದೆ. ಇವೆಲ್ಲವೂ ಆಹಾರಕ್ಕಾಗಿ ಒಂದನ್ನೊಂದು
ಜೋಡಿಸಲ್ಪಟ್ಟಿವೆ. ಇಂತಹ ಸರಪಳಿಗೆ ಆಹಾರ ಸರಪಳಿ ಎಂದು ಹೇಳುವರು.
(ಆ) ಪರ್ಯಾವರಣದ
ಸಮತೋಲನೆಯನ್ನು ಹೇಗೆ ಕಾಪಾಡಲಾಗುವುದು ?
ಉತ್ತರ: ಪರ್ಯವರಣದಲ್ಲಿ ಅನೇಕ
ಆಹಾರ ಸರಪಳಿಗಳು ಇರುತ್ತವೆ. ಪರ್ಯವರಣದ ಆಹಾರ ಸರಪಳಿಯಿಂದ ಪ್ರತಿಯೊಂದು ಜೀವಿಯ ಅವಶ್ಯಕತೆ
ಪೂರ್ಣವಾಗುತ್ತದೆ. ಪರ್ಯವರಣದಲ್ಲಿ ಇರುವ ಅನೇಕ ಚಕ್ರಗಳು ಅಖಂಡವಾಗಿ ನಡೆಯುತ್ತಿದರೆ ಪರ್ಯವರಣದ
ಸಂತುಲನೆ ಅಭಧಿತವಾಗಿ ಇಡಲಾಗುತ್ತದೆ.
ಪ್ರ. ೪. ವನಸ್ಪತಿಗಳ
ಬೆಳವಣಿಗೆಗಾಗಿ, ಭೂಮಿಯಲ್ಲಿಯ ಯಾವ
ಪದಾರ್ಥಗಳ ಉಪಯೋಗ ಅವಶ್ಯಕವಾಗಿದೆ ?
ಉತ್ತರ: ವನಸ್ಪತಿಗಳ ಬೆಳವಣಿಗೆಗಾಗಿ ಭೂಮಿಯಲ್ಲಿಯ ಪೋಷಕ ಪದಾರ್ಥಗಳ
ಅವಶ್ಯಕತೆ ಇರುತ್ತದೆ. ಕಸ-ಕಡ್ಡಿಗಳು, ಪ್ರಾಣಿಗಳ ಮೃತ ಶರೀರ, ಮಲಮೂತ್ರಗಳು ಇತ್ಯಾದಿಗಳನ್ನು ವಿಘಟನೆ ಮಾಡುವ ಕೆಲಸ ಮಣ್ಣಿನಲ್ಲಿರುವ
ಸೂಕ್ಷ್ಮಜೀವಿಗಳು ಮಾಡುತ್ತವೆ. ಆದ್ದರಿಂದ ಮಣ್ಣು ಫಲವತ್ತಾಗಿ ಆಗುವುದು.
ಪ್ರ. ೫. ಸರಿಯೋ ತಪ್ಪೋ
ಹೇಳಿರಿ.
(ಅ) ಪರ್ಯಾವರಣದಲ್ಲಿ ಸೂಕ್ಷ್ಮಜೀವಿಗಳ ಸಮಾವೇಶ
ಇರುತ್ತದೆ. = ಸರಿ
(ಆ) ಜೈವ ವೈವಿಧ್ಯತೆಯನ್ನು ಕಾಪಾಡುವುದು ಅವಶ್ಯವಾಗಿದೆ. = ಸರಿ
(ಇ) ಜಿಟ್ಟೆಯು ಪಕ್ಷಿಯನ್ನು ತಿನ್ನುತ್ತದೆ. =ತಪ್ಪು
ಉಪಕ್ರಮ:
೧. ನಮ್ಮ
ಸುತ್ತಮುತ್ತ ಕಂಡುಬರುವ ಪಕ್ಷಿಗಳ ಮಾಹಿತಿ ಸಂಗ್ರಹಿಸಿರಿ.
೫. ಕುಟುಂಬದಲ್ಲಿಯ
ಮೌಲ್ಯಗಳು
ಪ್ರ. ೧. ಬಿಟ್ಟ ಸ್ಥಳಗಳಲ್ಲಿ
ಯೋಗ್ಯವಾದ ಶಬ್ದ ಬರೆಯಿರಿ.
(ಅ) ಪ್ರಾಮಾಣಿಕತೆಯು
ನಮ್ಮ ............. ಆಗಿದೆ.
ಉತ್ತರ: ತಾಕತ್ತು
(ಆ) ಸಾಮಾಜಿಕ ಜೀವನದಲ್ಲಿ
ಎಲ್ಲರಿಗೆ ............ ಇರುವುದು ಅವಶ್ಯಕತೆ ಇರುವುದು.
ಉತ್ತರ: ಸಹಕಾರ
(ಇ) ನಮ್ಮ ದೇಶದಲ್ಲಿ .................
ವೃತ್ತಿಗೆ ವಿಶೇಷ ಮಹತ್ವ ಇದೆ. ಉತ್ತರ:
ಸಹನಶೀಲತೆಯ
(ಈ) ಸಮಾನತೆಯ ಭಾವನೆಯ
ಬೆಳವಣಿಗೆ ಆದುದರಿಂದ ಎಲ್ಲರಿಗೆ .............. ಮಾಡಲು ಬರುವುದು.
ಉತ್ತರ: ಪ್ರಗತಿ
ಪ್ರ. 2. ಕೆಳಗಿನ
ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ಪರಿಸರದಲ್ಲಿಯ
ಬದಲಾವಣೆಗಳ ವಿಷಯದಲ್ಲಿ ಯಾರು ನಿರ್ಣಯ ತೆಗೆದುಕೊಳ್ಳಬೇಕು?
ಉತ್ತರ: ನಮ್ಮ ಕುಟುಂಬ
ಸೇರಿದಂತೆ ಪರಿಸರದಲ್ಲಿಯ ಅನೇಕ ಚಿಕ್ಕ ಪುಟ್ಟ ಬದಲಾವಣೆಗಳ ವಿಷಯದಲ್ಲಿ ಎಲ್ಲರೂ ಕೂಡಿ
ನಿರ್ಣಯಗಳನ್ನು ತೆಗೆದುಕೊಳ್ಳಬೇಕು.
(ಆ) ಸಹನಶೀಲತೆ ಎಂದರೇನು?
ಉತ್ತರ: ನಾಮಗಿಂತ ಬೇರೆಯವರ
ಅಭಿಪ್ರಾಯಗಳ ಆದರ ಮಾಡುವುದೆಂದರೆ ಸಹನಶೀಲತೆ.
(ಇ) ಸ್ತ್ರೀ-ಪುರುಷ ಸಮಾನತೆ
ಎಂದರೇನು?
ಉತ್ತರ: ಹುಡುಗ-ಹುಡುಗಿ ಎಂಬ
ಭೇದಭಾವ ಮಾಡದೇ ಇಬ್ಬರಿಗೂ ಸಮಾನವಾಗಿ ನೋಡಿಕೊಳ್ಳುವುದೇ ಸ್ತ್ರೀ-ಪುರುಷ ಸಮಾನತೆ.
(ಈ) ಸ್ತ್ರೀ-ಪುರುಷರ ಸಮಾನ
ಬೇಡಿಕೆಗಳು ಯಾವವು?
ಉತ್ತರ: ಆಹಾರ, ಬಟ್ಟೆ, ವಸತಿ, ಆರೋಗ್ಯ ಹಾಗೂ ಶಿಕ್ಷಣ ಇವು ಸ್ತ್ರೀ-ಪುರುಷರ ಸಮಾನ ಬೇಡಿಕೆಗಳು ಆಗಿವೆ.
ಪ್ರ.3. ಕೆಳಗಿನ
ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
(ಅ) ಕುಟುಂಬದಲ್ಲಿಯ ನಿರ್ಣಯ
ಪ್ರಕ್ರಿಯೆಯಲ್ಲಿ ನಾವು ಹೇಗೆ ಸಹಭಾಗಿಯಾಗುವೆವು?
ಉತ್ತರ: ಕುಟುಂಬದಲ್ಲಿ ನಾವುಲ್ಲರೂ ಒಟ್ಟಿಗೆ ಇರುವೆವು.
ಪ್ರತಿಯೊಬ್ಬರ ಅಭಿರುಚಿಗಳು ಬೇರೆ ಬೇರೆ ಇರುತ್ತವೆ. ವಿಚಾರ, ಅಭಿಪ್ರಾಯಗಳೂ ಭಿನ್ನವಾಗಿರಬಹುದು. ನಾವು ಸಹ ಇತರರಿಗಿಂತ ಬೇರೆ
ಇರುವೆವು. ಹೀಗಿದ್ದರೂ ಅನೇಕ ವಿಷಯಗಳಲ್ಲಿ ನಮ್ಮ ವಿಚಾರ ಹಾಗೂ ಅಭಿಪ್ರಾಯಗಳು ಪರಸ್ಪರ
ಸರಿಹೊಂದಬಹುದು. ನಮ್ಮಲ್ಲಿ ಒಬ್ಬರಿನ್ನೊಬ್ಬರ ಬಗೆಗೆ ಪ್ರೀತಿ, ತನ್ನತನ
ಇರಬಹುದು. ನಾವು ಪರಸ್ಪರರ ಕಾಳಜಿ ವಹಿಸುವೆವು, ವಿಚಾರಣೆ ಮಾಡುವೆವು.
ಮನೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ಎಲ್ಲರನ್ನು ಕೇಳುವೆವು. ಪರಸ್ಪರೊಂದಿಗೆ ಮಾತನಾಡಿ
ಎಲ್ಲರಿಗೂ ಒಪ್ಪಿಗೆಯಾಗುವಂತೆ ನಿರ್ಣಯ ತೆಗೆದುಕೊಳ್ಳುವೆವು. ಈ ತರಹ ನಾವು ಕುಟುಂಬದ
ನಿರ್ಣಯದಲ್ಲಿ ಎಲ್ಲರೂ ಸಹಭಾಗಿಯಾಗುವೆವು.
(ಆ) ಸಹನಶೀಲತೆಯ ಭಾವನೆ ಹಾಗೆ
ನಿರ್ಮಾಣವಾಗುವುದು?
ಉತ್ತರ: ನಾವು ಹೇಳಿದ್ದೆ ನಿಜ
ಎಂದು ಹೇಳದೇ ಕೆಲವೊಮ್ಮೆ ಇತರರ ಭಾವನೆಗಳನ್ನೂ ಅರಿತು ಅವರು ಹೇಳುವುದನ್ನು ಕೇಳಬೇಕು. ತಮಗಿಂತ
ಬೇರೆಯವರ ಅಭಿಪ್ರಾಯಗಳ ಆದರ ಮಾಡುವುದು ಎಂದರೆ ಸಹನಶೀಲತೆ. ಸಹನಶೀಲತೆಯಿಂದ ವಿವಿಧತೆಯನ್ನು
ಕಾಪಾಡಹಬುದು ಹಾಗೂ ಸಹನಶೀಲತೆಯ ಭಾವನೆ ನಿರ್ಮಾಣವಾಗುವುದು.
೬. ನಿಯಮಗಳು ಎಲ್ಲರಿಗಾಗಿ
ಪ್ರ. ೧.
ತೆರವಾದ ಸ್ಥಳಗಳಲ್ಲಿ ಯೋಗ್ಯವಾದ ಶಬ್ದ ಬರೆಯಿರಿ.
(ಅ) ನಮ್ಮ ಸಾಮಾಜಿಕ ಜೀವನ ನಿಯಮಗಳ ಆಧಾರದಿಂದ
ನಡೆಯುವುದು.
(ಆ) ಸ್ವತಂತ್ರ ಭಾರತದ ಸಂವಿಧಾನವು ಅಶ್ಪೃಶತೆಯ ಪದ್ಧತಿ ನಷ್ಟ ಮಾಡಿತು.
(ಇ) ತಪ್ಪಾದ ರೂಢಿ ಪರಂಪರೆಗಳಿಂದ ಸಮಾಜದಲ್ಲಿಯ ಕೆಲವು ಜನರ ಪಾಲಿಗೆ ಉಪೇಕ್ಷಿತತನ ಬರುವದು.
ಪ್ರ. ೨.
ಮುಂದಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ನಿಯಮಗಳನ್ನು ಏಕೆ ತಯಾರಿಸಬೇಕಾಗುವುದು ?
ಉತ್ತರ: ಸಾಮಾಜಿಕ ಜೀವನದಲ್ಲಿ
ಶಿಸ್ತು ನಿರ್ಮಾಣವಾಗಲೆಂದು ನಿಯಮಗಳನ್ನು ತಯಾರಿಸಬೇಕಾಗುವುದು. ನಮ್ಮ ದೈನಂದಿನ ವ್ಯವಹಾರದಲ್ಲಿ
ಶಿಸ್ತು ಬಂದು ಕಾರ್ಯದಲ್ಲಿ ಹೆಚ್ಚು ಕಾರ್ಯಕ್ಷಮತೆ ಬರುತ್ತದೆ. ಪ್ರತಿಯೊಬ್ಬರ ಜವಾಬ್ದಾರಿ ಹಾಗೂ
ಕರ್ತವ್ಯಗಳು ಏನು ಇವೆ ಎಂಬುದನ್ನು ತಿಳಿಯಲು ನಿಯಮಗಳು ತಯಾರಿಸಬೇಕು.
(ಆ) ನಮ್ಮ ಸಾಮಾಜಿಕ ಜೀವನದಲ್ಲಿ ಯಾವ ಮೌಲ್ಯಗಳು
ಪ್ರಾಚೀನ ಕಾಲದಿಂದಲೂ ಇವೆ?
ಉತ್ತರ: ನಮ್ಮ ಸಾಮಾಜಿಕ
ಜೀವನದಲ್ಲಿ ಅನೇಕ ರೂಢಿ,
ಪರಂಪರೆಗಳನ್ನು ಪಾಲಿಸುತ್ತೇವೆ. ತಾಯಿ-ತಂದೆ, ಅಜ್ಜ-ಅಜ್ಜಿ ನೆಂಟರು
ಮಾಡುವುದನ್ನು ನೋಡಿ ನಾವೂ ಕಲಿಯುತ್ತೇವೆ. ಅನೇಕ ಒಳ್ಳೆಯ ರೂಢಿ-ಪರಂಪರೆಗಳು, ಹಬ್ಬ-ಹರಿದಿನಗಳು ನಾವು ಎಲ್ಲರೂ ಸೇರಿ ಆನಂದದಿಂದ ಅಚ್ಚರಿಸುತ್ತೇವೆ. ಮನೆಗೆ ಬಂದ
ಅತಿಥಿಗೆ ಸ್ವಾಗತಿಸಿ ಅವರ ಸನ್ಮಾನ ಮಾಡುತ್ತೇವೆ. ಪ್ರಾಣಿಗಳ ಬಗೆಗೆ ಪ್ರೀತಿ ಹಾಗೂ ಕೃತಜ್ಞತೆ
ವ್ಯಕ್ತಪಡಿಸುವೆವು. ಅಹಿಂಸೆ ಹಾಗೂ ಶಾಂತತೆ ಈ ಮೂಲ್ಯಗಳನ್ನು ಪ್ರಾಚೀನ ಕಾಲದಿಂದಲೂ ನಮ್ಮ
ಸಾಮಾಜಿಕ ಜೀವನದಲ್ಲಿ ಇವೆ.
(ಇ) ನಮ್ಮ ಸಾಮಾಜಿಕ ಜೀವನದಲ್ಲಿಯ ದೊಡ್ಡ ಅಡೆತಡೆಗಳು
ಯಾವವು ?
ಉತ್ತರ: ನಮ್ಮ ಸಾಮಾಜಿಕ
ಜೀವನದಲ್ಲಿ ಒಳ್ಳೆಯ ರೂಢಿ-ಪರಂಪರೆಗಳು ಇರುವಂತೆ ಅನಿಷ್ಟ ರೂಢಿಗಳೂ ಅಸ್ಥಿತ್ವದಲ್ಲಿ ಇವೆ. ಬಾಲ್ಯ
ವಿವಾಹ, ಸತಿ ಪದ್ಧತಿ, ಮಂತ್ರ-
ತಂತ್ರ, ಜಾತಿಭೇಧ ಮುಂತಾದ ತಪ್ಪು ರೂಢಿಗಳಿಂದಾಗಿ ಕೆಲವು ಜನರು ಸಮಾಜದ
ಮುಖ್ಯ ವಾಹಿನಿಗೆ ಬರಲು ಶಕ್ಯವಾಗುವುದಿಲ್ಲ. ಶಿಕ್ಷಣದ ಕೊರತೆಯಿಂದ ರೋಜಗಾರ(ದಿನಗೂಲಿ)
ಸಿಗುವುದಿಲ್ಲ. ಬಡತನ ಅವರ ಪಾಲಿಗೆ ಬರುವುದು. ಹೀಗೆ ಬಡತನ ಹಾಗೂ ಶಿಕ್ಷಣದ ಅಭಾವ ಇವು ನಮ್ಮ
ಸಾಮಾಜಿಕ ಜೀವನದಲ್ಲಿ ದೊಡ್ಡ ಅಡತಡೆಗಳಾಗಿವೆ.
ಪ್ರ. ೩.
ಮುಂದಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
(ಅ) ಯಾವ ಅನಿಷ್ಠ ಪದ್ಧತಿಗಳನ್ನು ಕಾಯ್ದೆಯ ಮೂಲಕ ನಿಲ್ಲಿಸಲಾಯಿತು?
ಉತ್ತರ: ನಮ್ಮ ದೇಶದಲ್ಲಿ
ಇದ್ದ ಅನಿಷ್ಟ ರೂಢಿಗಳಾದ ಸತಿ, ಬಾಲ್ಯ
ವಿವಾಹ ಇವುಗಳ ಮೇಲೆ ಕಾಯ್ದೆಯ ಮಾಡಿ ನಿರ್ಬಂಧ ತರಲಾಯಿತು. ಮಂತ್ರ-ತಂತ್ರ ಮಾಡಿ ಜನರಿಗೆ ಮೋಸ
ಮಾಡುವವರ ಮೇಲೆ ನಿರ್ಬಂಧ ಹಾಕುವ ಕಾಯ್ದೆ ಮಾಡಲಾಯಿತು. ವರದಕ್ಷಿಣೆಯ ಕಾಯ್ದೆಯ ಮಾಡಲಾಯಿತು.
ಸ್ವಾತಂತ್ರ್ಯ ಭಾರತದ ಸಂವಿಧಾನವು ಅಸ್ಪೃಶತೆಯ ಪದ್ಧತಿಯನ್ನು ನಷ್ಟ ಮಾಡಿತು.
(ಆ) ಪರ್ಯಾವರಣದ ರಕ್ಷಣೆಗಾಗಿ ನಿಯಮಗಳನ್ನು ಏಕೆ
ಮಾಡಬೇಕಾಗುವದು?
ಉತ್ತರ: ಸಮಾಜದಲ್ಲಿ ಸಮಾನತೆ
ಹಾಗೂ ನ್ಯಾಯಗಳನ್ನು ಪ್ರಸ್ತಾಪಿಸಲು ಹೇಗೆ ಕಾಯ್ದೆಯ ಅವಶ್ಯಕತೆ ಇರುವುದೋ ಅದೇ ತರಹ ಪರ್ಯವರಣದ
ರಕ್ಷಣೆಗಾಗಿ ಕೂಡ ಕಾಯ್ದೆಗಳ ಅವಶ್ಯಕತೆ ಇದೆ. ನಿಸರ್ಗದಿಂದ ನಮಗೆ ಅನೇಕ ಸಂಗತಿಗಳ ಪೂರೈಕೆ
ಆಗುತ್ತದೆ. ನಮ್ಮ ನಂತರ ಬರುವ ಪೀಳಿಗೆಗೆ ನೈಸರ್ಗಿಕ ಸಾಧನ ಸಂಪತ್ತುಗಳ ಉಪಲಬ್ದತೆ ಆಗಬೇಕು
ಅದಕ್ಕಾಗಿ ನಾವು ಈ ಸಾಧನ ಸಂಪತ್ತ್ಗಳನ್ನು ಜೋಪಾನವಾಗಿ ಸುರಕ್ಷಿತವಾಗಿ ಇಡಬೇಕು. ಅದನ್ನು
ಜಾಗೃತತೆಯಿಂದ ಹಿತ ಮಿತವಾಗಿ ಬಳಸಬೇಕು.
|
ಉಪಕ್ರಮ: ಕೆಳಗಿನ ಪ್ರಸಂಗಗಳಲ್ಲಿ
ಶಾಲೆಯಲ್ಲಿ ನೀವು ಯಾವ ನಿಯಮಗಳನ್ನು ಅನುಸರಿಸುವಿರಿ ಎಂಬುದರ ಯಾದಿ ಮಾಡಿರಿ. (೧) ಪರಿಪಾಠದ ಸಮಯದಲ್ಲಿ: ಶಿಸ್ತು, ಶಾಂತತೆ, ಎಲ್ಲರಿಗೂ
ಸಮಾನ ಅವಕಾಶ (೨) ಮಧ್ಯಾಹ್ನದ ಭೋಜನದ
ಸಮಯದಲ್ಲಿ: ಶಿಸ್ತು, ಶಾಂತತೆ, ಕೈ ತೊಳೆದು ಊಟ ಮಾಡುವುದು, ಸಾಲಾಗಿ ಆಹಾರ
ತೆಗೆದುಕೊಳ್ಳುವುದು. (೩) ಕ್ರೀಡಾಂಗಣದಲ್ಲಿ: : ಶಿಸ್ತು, ಶಾಂತತೆ, ಕ್ರೀಡಾ
ನಿಯಮಗಳ ಪಾಲನೆ. (೪) ಶಾಲೆಯ ವಾಚನಾಲಯದಲ್ಲಿ: : ಶಿಸ್ತು, ಶಾಂತತೆ, |
೭. ನಾವೇ ಬಿಡಿಸೋಣ ನಮ್ಮ ಪ್ರಶ್ನೆಗಳನ್ನು
ಪ್ರ.1 . ತೆರವಾದ
ಸ್ಥಳಗಳಲ್ಲಿ ಯೋಗ್ಯವಾದ ಶಬ್ದ ಬರೆಯಿರಿ.
(ಅ) ಸಮಸ್ಯೆಗಳು ಲಕ್ಷ್ಯ ಕೊಡದಿದ್ದರೆ ಅವು ಅಧಿಕ ತೀವ್ರ ಆಗುವವು.
(ಆ) ಪರಿಸರದಲ್ಲಿಯ ಸಮಸ್ಯೆಗಳನ್ನು ಗುರುತಿಸುವುದು ಸಹ ಮಹತ್ವದ ಸಂಗತಿ ಆಗಿದೆ.
ಪ್ರ. ೨.
ಮುಂದಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ಸಾರ್ವಜನಿಕ
ಸಮಸ್ಯೆ ಎಂದರೇನು ?
ಉತ್ತರ: ನಮ್ಮ ಊರುಗಳಲ್ಲಿ
ಅಥವಾ ಪಟ್ಟಣಗಳಲ್ಲಿಯ ಜನರಿಗೆ ಯಾವ ಸಮಸ್ಯೆಗಳು ಅಥವಾ ಪ್ರಶ್ನೆಗಳು ತೊಂದರೆ ಕೊಡುವವೋ ಅವುಗಳಿಗೆ
ಸಾರ್ವಜನಿಕ ಸಮಸ್ಯೆಗಳು ಎಂದು ಹೇಳುವರು.
(ಆ) ಸಾರ್ವಜನಿಕ
ಸಮಸ್ಯೆಗಳು ಹೇಗೆ ನಿವಾರಣೆ ಆಗಬಲ್ಲವು?
ಉತ್ತರ: ಸಾರ್ವಜನಿಕ
ಸಮಸ್ಯೆಗಳು ಒಬ್ಬ ವ್ಯಕ್ತಿಯಿಂದ ನಿವಾರಣೆ ಆಗಲಾರವು. ಅವುಗಳನ್ನು ಬಗೆಹರಿಸಲು ಸಮಾಜದ ಸಹಕಾರ ಅವಶ್ಯಕ ಇರುತ್ತದೆ. ಎಲ್ಲರ
ಸಹಭಾಗ ಮತ್ತು ಪ್ರಯತ್ನಗಳಿಂದ ಸಾರ್ವಜನಿಕ ಸಮಸ್ಯೆಗಳ ನಿವಾರಣೆ ಸಾಧ್ಯ.
(ಇ) ಸ್ವಚ್ಛತೆಯ
ಮಹತ್ವವನ್ನು ಯಾವ ಸಂತರು ಮನವರಿಕೆ ಮಾಡಿಕೊಟ್ಟರು ?
ಉತ್ತರ: ಸ್ವಚ್ಛತೆಯ
ಮಹತ್ವವನ್ನು ಸಂತ ಗಾಡಗೆಬಾಬಾ ಇವರು ಕೀರ್ತನೆಗಳಿಂದ ಜನರಿಗೆ ಮನವರಿಕೆ ಮಾಡಿ ಕೊಟ್ಟರು.
ಪ್ರ. ೩.
ಮುಂದಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
(ಅ) 'ಶ್ರಮದಾನದಿಂದ ಗ್ರಾಮ ಸ್ವಚ್ಛತೆ' ಈ ಸಂಕಲ್ಪನೆಯನ್ನು ಸ್ಪಷ್ಟಗೊಳಿಸಿರಿ.
ಉತ್ತರ: ಉಸ್ಮಾನಾಬಾದ
ಜಿಲ್ಲೆಯ ಖುದಾವಾಡಿ ಎಂಬ ಊರಿನಲ್ಲಿಯ ಜನರು ಶ್ರಮದಾನದಿಂದ ಗ್ರಾಮಸ್ವಚ್ಛತೆ ಮಾಡಿದರು. ಊರಿನ
ಸ್ವಚ್ಛತೆಯನ್ನು ಊರಿನ ಜನರೆಲ್ಲ ಸೇರಿ ಮಾಡೋಣ ಎಂದು ಊರಿನವರು ನಿರ್ಧರಿಸಿದರು. ಊರಿನ ಸ್ವಛ್ತೆಯನ್ನು
ಎಲ್ಲ ಜನರು ಸಾಮೂಹಿಕವಾಗಿ ಮಾಡಿದರೆ ಕಡಿಮೆ ಸಮಯದಲ್ಲಿ ಊರು ಸ್ವಚ್ಛವಾಗುತ್ತದೆ. ಅದರಲ್ಲಿ ಪ್ರತಿಯೊಂದು
ಮನೆಗೆ ಶೌಚಾಲಯ ಕಟ್ಟುವಿಕೆ, ಚರಂಡಿ ಸ್ವಚ್ಛತೆಯ
ನಿಯೋಜನೆ, ರಸ್ತೆಯ ಸ್ವಚ್ಛತೆ, ತಿಪ್ಪೆ ಗುಂಡಿಗಳ
ಸ್ವಚ್ಛತೆ ಸಾಮೂಹಿಕವಾಗಿ ಮಾಡಲಾಗುವುದು. ತಿಪ್ಪೆಯಲ್ಲಿಯ ಕಸವನ್ನು ಉಪಯೋಗಿಸಿ ಎರೆಹುಳದ ಗೊಬ್ಬರ
ತಯಾರಿಸುವ ಪ್ರಕಲ್ಪ ಸಹಿತ ಮಾಡಲು ಬರುತ್ತದೆ. ಸಂತ ಗಾಡಗೆ ಬಾಬಾ ಕೀರ್ತನೆಗಳ ಮೂಲಕ ಊರುರೂ
ಸ್ವಚ್ಛತೆಯ ಮಹತ್ವ ಸಾರುತ್ತಿದ್ದರು. ರಾಷ್ಟ್ರಸಂತ ತೂಕಡೋಜಿ ಮಹಾರಾಜರೂ ಸಹ ಗ್ರಾಮಗೀತೆಗಳ ಮೂಲಕ
ಸ್ವಚ್ಛತೆಯ ಮಹತ್ವ ಸಾರಿದರು.
(ಆ) ಶಾಂತತೆಗೆ ಪೂರಕವಾದ ವಾತಾವರಣವನ್ನು
ಹೇಗೆ ನಿರ್ಮಾಣ ಮಾಡಬಹುದು?
ಉತ್ತರ: ಶಾಂತತೆಗೆ ಪೂರಕವಾದ ವಾತಾವರಣವನ್ನು
ನಿರ್ಮಾಣ ಮಾಡಲು- 1) ಸಮಾಜದಲ್ಲಿಯ ಎಲ್ಲ ಘಟಕಗಳ ಮೂಲಭೂತ ಅವಶ್ಯಕತೆಗಳು ಪೂರ್ಣವಾಗಬೇಕಾಗುತ್ತದೆ.
2) ಪ್ರತಿಯೊಬ್ಬರಿಗೆ ಅವಶ್ಯಕ ಸಂರಕ್ಷಣೆ ದೊರೆಯಬೇಕು. 3) ಸಮಾಜದಲ್ಲಿಯ ಶೋಷಣೆ ನಿಲ್ಲಬೇಕು. 3) ಸಮಾಜದಲ್ಲಿಯ
ವಿಷಮತೆ ಕಡಿಮೆಯಾಗಬೇಕು. 4) ಪ್ರತಿಯೊಬ್ಬರಿಗೆ ಸಾರ್ವಜನಿಕ ಜೀವನದಲ್ಲಿ ಸಹಭಾಗಿ ಆಗುವ ಅವಕಾಶ ದೊರೆಯಬೇಕು.
ಪ್ರ. 4. ಮುಂದಿನ ಪ್ರಸಂಗಗಳಲ್ಲಿ ನೀವು ಏನು ಮಾಡುವಿರಿ?
(ಅ) ವರ್ಗ ಪ್ರಮುಖನಿಗೆ ವರ್ಗದಲ್ಲಿ ಶಾಂತತೆ ನಿರ್ಮಾಣ
ಮಾಡುವುದಿದೆ.
ಉತ್ತರ: ವಿದ್ಯಾರ್ಥಿಗಳಿಗೆ ಅವರ
ಇಷ್ಟವಾದ ಕೃತಿಯಲ್ಲಿ ತೊಡಗಿಸಬಹುದು ಅಥವಾ ಅಪೂರ್ಣ ಅಭ್ಯಾಸ ಪೂರ್ಣ ಮಾಡಲು ಹೇಳಬಹುದು.
(ಆ) ಗಣಿತದ ಶಿಕ್ಷಕರಿಗೆ ಅಪರಿಹಾರ ಕಾರಣದಿಂದಾಗಿ ಇಂದು
ವರ್ಗದಲ್ಲಿ ಬರಲು ಆಗುವುದಿಲ್ಲ.
ಉತ್ತರ: ಹಿಂದಿನ ತಸಿಕೆಯಲ್ಲಿ ಹೇಳಿದ
ಗಣಿತದ ರೂಢಿ ಮಾಡುವೆನು. ವರ್ಗ ಪ್ರಮುಖ ನೀಡಿದ ಸೂಚನೆಗಳ ಪಾಲನೆ ಮಾಡುವೆನು. ಕಠಿಣ ಎನಿಸುವ ಉದಾಹರಣೆಗಳನ್ನು
ಸ್ನೇಹಿತರಿಂದ ಕೇಳಿ ತಿಳಿದುಕೊಳ್ಳುವೆನು.
(ಇ) ಕ್ರೀಡಾಂಗಣದಲ್ಲಿ ಆಟದ ಸ್ಪರ್ಧೆಯಲ್ಲಿ ಎರಡು ತಂಡಗಳಲ್ಲಿ
ವಾದ ನಿರ್ಮಾಣವಾಗಿದೆ.
ಉತ್ತರ: ಆಗಿರುವ ವಾದ ವಿವಾದ ಸರಿಯಾಗಿ
ವಿಶ್ಲೇಷಣೆ ಮಾಡಿ ತಪ್ಪು ಯಾರದು ಎಂಬುದನ್ನೂ ನಿಷ್ಪಕ್ಷಪಾತದಿಂದ ಹೇಳುವೇನು. ಎರಡು ತಂಡಗಳಲ್ಲಿ ಸಾಮರಸ್ಯ
ನಿರ್ಮಾಣ ಮಾಡಿ ಆಟ ಮುಂದುವರೆಸಲು ಅನುಕೂಲ ವಾತಾವರಣ ನಿರ್ಮಿತಿ ಮಾಡುವೆನು.
೮. ಸಾರ್ವಜನಿಕ ಸೌಕರ್ಯಗಳು ಹಾಗೂ ನನ್ನ ಶಾಲೆ
ಪ್ರ. (೧) ತೆರವಾದ ಸ್ಥಳಗಳಲ್ಲಿ ಯೋಗ್ಯವಾದ ಶಬ್ದ ಬರೆಯಿರಿ.
(ಅ) ಸೌಕರ್ಯಗಳ
ಉಪಯೋಗವನ್ನು ನಾವು ಜವಾಬ್ದಾರಿಯಿಂದ ಮಾಡಬೇಕು.
(ಆ) ನಮ್ಮಶಾಲೆ
ಎಂದರೆ ನಮ್ಮ ಮನೆಯ ಹೊರಗಿನ ವಿಶ್ವ ಆಗಿರುವದು.
(ಇ) ಶಾಲೆಯ
ಆಗುಹೋಗುಗಳಲ್ಲಿ ಸಮಾಜದ ಪಾಲು ಇರುವದು.
ಪ್ರ. (೨)
ಮುಂದಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ಮಹತ್ವದ ಸಾರ್ವಜನಿಕ ಸೇವೆಗಳು ಯಾವವು?
ಉತ್ತರ: ನೀರಿನ ಪೂರೈಕೆ, ವಿದ್ಯುತ್ ಪೂರೈಕೆ,
ಆರೋಗ್ಯ ಸೇವೆ, ಶಿಕ್ಷಣ ಹಾಗೂ ಸಾರಿಗೆ
(ಆ) ಸಾರ್ವಜನಿಕ
ವ್ಯವಸ್ಥೆ ಹೇಗೆ ನಿರ್ಮಾಣವಾಗುವದು?
ಉತ್ತರ: ಸಾರ್ವಜನಿಕ ಸೇವೆಗಳು ಸೇವೆ ನೀಡುವ ಸಂಸ್ಥೆಗಳು ಹಾಗೂ ಸೇವೆ ಉಪಭೋಗಿಸುವ ನಾವೆಲ್ಲ
ಜನರು ಕೂಡಿಕೊಂಡು ಸಾರ್ವಜನಿಕ ವ್ಯವಸ್ಥೆ ನಿರ್ಮಾಣವಾಗಿದೆ.
(ಇ) ಪ್ರತಿಯೊಬ್ಬ ಹುಡುಗ
ಹುಡುಗಿಯ ಹಕ್ಕು ಯಾವುದು?
ಉತ್ತರ: ಪ್ರತಿಯೊಬ್ಬ ಹುಡುಗ
ಹುಡುಗಿಗೆ ಶಿಕ್ಷಣ ತೆಗೆದುಕೊಳ್ಳುವ ಹಕ್ಕು ಇದೆ.
ಪ್ರ. (೩)
ಮುಂದಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
(ಅ) ನಾವು ಯಾವ ಯಾವ
ಸಾರ್ವಜನಿಕ ಸೌಕರ್ಯಗಳ ಉಪಯೋಗ ಮಾಡುವೆವು?
ಉತ್ತರ:೧) ನಾವು ಬಸ ಸೇವೆ, ರೈಲು ಸೇವೆ, ವಿಮಾನ
ಸೇವೆಗಳನ್ನು ಸಾರ್ವಜನಿಕ ಸರಿಗೆಯ ಸೌಕರ್ಯಗಳೆಂದು ತೆಗೆದುಕೊಳ್ಳುತ್ತೇವೆ. ೨) ಟಪಾಲ, ದೂರಧ್ವನಿ, ಅಗ್ನಿಶಾಮಕ ಯಂತ್ರ,
ಪೋಲಿಸದಳ, ಬ್ಯಾಂಕುಗಳು, ನತ್ಯಗೃಹಮ್
ಹೂದೋಟಗಳಂತಹ ಸೇವೆಗಳ ಉಪಯೋಗ ಮಾಡುತ್ತೇವೆ.
(ಆ) ಶಾಲೆಯಲ್ಲಿ
ಶಿಕ್ಷಕ-ಪಾಲಕ ಹಾಗೂ ಮಾತಾ-ಪಾಲಕ ಸಂಘಗಳು ಏಕೆ ಇರಬೇಕು ?
ಉತ್ತರ: ೧) ಶಾಲೆಯಲ್ಲಿಯ ಶಿಕ್ಷಕ-ಪಾಲಕ ಹಾಗೂ ಮಾತಾ ಪಾಲಕ ಸಂಘ ಇವುಗಳಿಂದ ಶಿಕ್ಷಕರು ಹಾಗೂ
ಪಾಲಕರು ಇವುಗಳಲ್ಲಿ ಸಂವಾದ ನಿರ್ಮಾಣವಾಗುತ್ತದೆ. ೨) ಶಾಲೆಯ ವಿವಿಧ ಉಪಕ್ರಮಗಳಲ್ಲಿ ಪಾಲಕರ
ಸಹಭಾಗವಿರುತ್ತದೆ. ೩) ಪರಸ್ಪರರ ಮತ-ವಿಚಾರಗಳ ವಿನಿಮಯ ಮಾಡಿಕೊಳ್ಳಲಾಗುವುದು.
ಪ್ರ. (೪) ಏನು
ಆಗಬಹುದು ಎಂಬುದನ್ನು ಬರೆಯಿರಿ.
(ಅ)
ಹುಡುಗ-ಹುಡುಗಿಯರಿಗೆ ಶಿಕ್ಷಣದ ಸಮಾನ ಹಕ್ಕುಗಳನ್ನು ಕೊಡದಿದ್ದರೆ.
ಉತ್ತರ: ಶಿಕ್ಷಣ ಎಲ್ಲರ ಹಕ್ಕು, ಅದನ್ನು ಹುಡುಗಿಯರಿಗೆ ನಿರಾಕರಿಸಿದರೆ ಲಿಂಗ ಆಧಾರಿತ
ಸಮಸ್ಯೆಗಳು ನಿರ್ಮಾಣವಾಗುವವು. ಮಹಿಳಾ ಸಬಲಿಕರಣಕ್ಕೆ ಅಡ್ಡಿಯಾಗುವುದು. ಸಮಾಜದಲ್ಲಿ ನಿರಕ್ಷರತೆಯ
ಪ್ರಮಾಣ ಹೆಚ್ಚುವುದು. ಶಿಕ್ಷಣ ಪಡೆದ ತಾಯಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಚೆನ್ನಾಗಿ ನೋಡಿಕೊಳ್ಳುತ್ತಾಳೆ.
(ಆ) ಸಮಾಜವು ಶಾಲೆಗೆ ಸಹಾಯ
ಮಾಡದಿದ್ದರೆ.
ಉತ್ತರ: ಶಾಲೆಗೆ ಊರಿನ ಆಧಾರವಾಗಿರಬೇಕು.
ಸಮಾಜಕ್ಕೆ ಶಾಲೆಯ ಅಭಿಮಾನವಿರಬೇಕು. ಸಮಜಾವು ಶಾಲೆಗೆ ಸಹಾಯ ಮಾಡದಿದ್ದರೆ ಶಾಲೆ, ಶಿಕ್ಷಣ ವ್ಯವಸ್ಥೆ ಅಥವಾ ಮಕ್ಕಳ ವಿಕಾಸ ಕುಂಠಿತವಾಗುತ್ತದೆ.
(ಇ) ಸಾರ್ವಜನಿಕ ಸೇವೆಗಳ ಉಪಯೋಗವನ್ನು
ಜವಾಬ್ದಾರಿಯಿಂದ ಮಾಡಿದರೆ,
ಉತ್ತರ: ಸರಕಾರ ನಮಗೆ ಕೆಲವು ಸಾರ್ವಜನಿಕ
ಸೇವೆಗಳು ಪೂರೈಸುತ್ತದೆ. ಆ ಸೇವೆಗಳು ನಾಗರೀಕರ ಹಣದಿಂದಲೇ ಪೂರೈಕೆ ಆಗುತ್ತಿರುತ್ತದೆ. ಅವುಗಳ ಉಪಯೋಗವನ್ನು
ನಾವು ಜವಾಬ್ದಾರಿಯಿಂದ ಮಾಡಿದರೆ ಸಮಾಜದ ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸಿದಂತೆ ಆಗುತ್ತದೆ.
ಉಪಕ್ರಮ
ನಿಮ್ಮ ಶಾಲೆಗೆ ಸಹಾಯ ಮಾಡುವ ವ್ಯಕ್ತಿಗಳ ಮಾಹಿತಿ ತಿಳಿದುಕೊಳ್ಳಿರಿ
ಹಾಗೂ ಅವರಿಂದ ನಿಮಗೆ ಯಾವ ಯಾವ ಲಾಭಗಳು ದೊರಕಿದವು ಎಂಬುದರ ಬಗೆಗೆ ಬರೆಯಿರಿ.
9. ನಕಾಶೆ: ನಮ್ಮ ಸಂಗಡಿಗರು
ಪ್ರ.೧. ನಿಮ್ಮ
ಪರಿಸರದಲ್ಲಿ ಇರುವ ವಿವಿಧ ಭೂರೂಪಗಳ ಯಾದಿ ಮಾಡಿರಿ. ಅವುಗಳಲ್ಲಿಯ ಯಾವುದೇ ಭೂರೂಪಗಳ ವರ್ಣನೆ
ಮಾಡಿರಿ.
ಉತ್ತರ: ನಮ್ಮ ಪರಿಸರದಲ್ಲಿ
ಪರ್ವತ, ಕಂದರ, ತಪ್ಪಲು, ಬಯಲು, ಕಣಿವೆ, ದ್ವೀಪಗಳು
ಇತ್ಯಾದಿ ಭೂರುಪಗಳು ಕಂಡು ಬರುತ್ತವೆ.
ಪ್ರ. ೨. ಕೆಳಗಿನ ಎರಡು
ವಾಕ್ಯಗಳಲ್ಲಿಯ ಭೂರೂಪ ದರ್ಶಕ ಶಬ್ದಗಳನ್ನು ಅಧೋರೇಖಿತ ಮಾಡಿರಿ ಹಾಗೂ ಅದಕ್ಕಾಗಿ ಚಿಹ್ನೆ ಹಾಗೂ
ಗುರುತು ನಕಾಶೆಗಳನ್ನು ಮಾಡಿರಿ.
(ಅ) ಸೋನಾಲಿ ಟಕ
ಮಕ ಗುಡ್ಡದ ಆಚೆ ಇರುವಳು. (ಆ) ನಿಮೇಶ ಘಾರಾಪುರಿ ದ್ವೀಪದ ಪ್ರವಾಸಕ್ಕೆ
ಹೋಗಿರುವನು.
2. ಕೆಳಗಿನ
ಸಂಗತಿಗಳಿಗಾಗಿ ಚಿಹ್ನೆ ಹಾಗೂ ಗುರುತುಗಳನ್ನು ತಯಾರಿಸಿರಿ. ಮನೆ, ಆಸ್ಪತ್ರೆ, ಕಾರಖಾನೆ, ಹೂದೋಟ, ಆಟದ ಮೈದಾನ, ರಸ್ತೆ, ಗುಡ್ಡ, ನದಿ.
|
ಸಂಗತಿಗಳು |
ಚೆಹ್ನೆಗಳು |
ಗುರುತು |
|
ಮನೆ |
|
|
|
ಆಸ್ಪತ್ರೆ |
|
|
|
ಕಾರಖಾನೆ |
|
|
|
ಹೂದೋಟ |
|
|
|
ಆಟದ ಮೈದಾನ |
|
|
|
ರಸ್ತೆ |
|
|
|
ಗುಡ್ಡ |
|
|
|
ನದಿ |
|
|
|
ಕೋಟೆಗಳು |
|
|
|
ರೈಲಿನ ಹಳಿ |
|
|
|
ಊರು |
|
|
೪. ಪಕ್ಕದ ನಕಾಶೆ ಬಣ್ಣಗಳ ಸಹಾಯದಿಂದ ಎತ್ತರವನ್ನು ತೋರಿಸುವುದು.
ಆದರೆ ಅದರಲ್ಲಿಯ ಕೆಲವು ಬಣ್ಣಗಳು ತಪ್ಪಿವೆ ಅವುಗಳನ್ನು ಗುರುತಿಸಿರಿ. ಆ ಜಾಗದಲ್ಲಿ ಯಾವ ಸರಿಯಾದ
ಬಣ್ಣಗಳು ಇರಬೇಕು ಎಂಬುದನ್ನು ಬರೆಯಿರಿ.
ಉಪಕ್ರಮ : ನಿಮಗೆ ಪರಿಚಿತವಿರುವ ಮೇಲೆತ್ತುವಿಕೆ ನಕಾಶೆಗಳನ್ನು
ನೋಡಿರಿ. ಶಿಕ್ಷಕರ ಸಹಾಯದಿಂದ ಕಾಗದದ ಮೇಲೆ ದ್ವಿಮಿತೀಯ ನಕಾಶೆ ತಯಾರಿಸಿರಿ.
10. ಭಾರತದ ಪರಿಚಯ
ಪ್ರ. 1. ಮುಂದಿನ ವಿಧಾನಗಳಲ್ಲಿಯ
ತಪ್ಪನ್ನು ಸರಿಪಡಿಸಿ ಅವುಗಳನ್ನು ಟಿಪ್ಪಣಿ ಪುಸ್ತಕದಲ್ಲಿ ಬರೆಯಿರಿ.
(ಅ) ಹಿಮಾಚಲ ಪ್ರದೇಶದಲ್ಲಿ
ಕಾಫಿಯ ತೋಟಗಳು ಇವೆ.
ಉತ್ತರ: ತಪ್ಪು, ಕೇರಳದಲ್ಲಿ
ಕಾಫಿಯ ತೋಟಗಳು ಇವೆ.
(ಆ) ಕೊಂಕಣ ಪ್ರದೇಶವು ಭಾರತದ
ಪೂರ್ವ ಭಾಗದಲ್ಲಿ ಇದೆ.
ಉತ್ತರ: ಕೊಂಕಣ ಪ್ರದೇಶವು
ಭಾರತದ ಪಶ್ಚಿಮ ಭಾಗದಲ್ಲಿ ಇದೆ.
(ಇ) ತ್ರಿಪುರಾ ರಾಜ್ಯ
ಆಕಾರದಿಂದ ಎಲ್ಲಕ್ಕೂ ಚಿಕ್ಕ ರಾಜ್ಯವಾಗಿದೆ.
ಉತ್ತರ: ಗೋವಾ ರಾಜ್ಯ ಆಕಾರದಿಂದ ಎಲ್ಲಕ್ಕೂ ಚಿಕ್ಕ ರಾಜ್ಯವಾಗಿದೆ.
(ಈ) ಸಾಬರಮತಿ ನದಿ
ಮಧ್ಯಪ್ರದೇಶದಿಂದ ಹರಿಯುತ್ತದೆ.
ಉತ್ತರ:ಸಾಬರಮತಿ ನದಿ ಗುಜರಾತದಿಂದ
ಹರಿಯುತ್ತದೆ.
(ಉ) ಸಹ್ಯಾದ್ರಿ ಪರ್ವತ ಆಂಧ್ರ
ಪ್ರದೇಶದಲ್ಲಿದೆ.
ಉತ್ತರ: ಸಹ್ಯಾದ್ರಿ ಪರ್ವತ
ಮಹಾರಾಷ್ಟ್ರದಲ್ಲಿದೆ.
ಪ್ರ.2. ೪೪ನೇ ಹಾಗೂ ೪೫ನೇ
ಪುಟಗಳಲ್ಲಿಯ ನಕಾಶೆಯ ಅಭ್ಯಾಸ ಮಾಡಿ ಯಾವ ನದಿಗಳು ಯಾವ ರಾಜ್ಯದಿಂದ ಹರಿದು ಹೋಗುವವು ಎಂಬುದನ್ನು
ಟಿಪ್ಪಣಿ ಪುಸ್ತಕದಲ್ಲಿ ಬರೆಯಿರಿ.
ಉತ್ತರ: ನದಿಗಳು ಹಾಗೂ ಅವು
ಹರಿಯುತ್ತಿರುವ ರಾಜ್ಯಗಳು
ಗಂಗಾ: ಉತ್ತರಾಖಂಡ, ಉತ್ತರ
ಪ್ರದೇಶ, ಬಿಹಾರ, ಝಾರಖಂಡ, ಪಶ್ಚಿಮ ಬಂಗಾಲ
ನರ್ಮದಾ: ಮಧ್ಯಪ್ರದೇಶ,
ಮಹಾರಾಷ್ಟ್ರ, ಗುಜರಾತ
ಬಿಯಾಸ: ಪಂಜಾಬ,
ಹಿಮಾಚಲಪ್ರದೇಶ
ಕಾವೇರಿ: ಕರ್ನಾಟಕ, ತಮಿಳನಾಡು
ಕೃಷ್ಣಾ : ಮಹಾರಾಷ್ಟ್ರ
ಮತ್ತು ಕರ್ನಾಟಕ
ಬ್ರಹ್ಮಪುತ್ರ : ಆಸಾಮ ಮತ್ತು ಅರುಣಾಚಲ ಪ್ರದೇಶ
ಗೋದಾವರಿ : ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ
, ಛತ್ತೀಸಗಡ
ಸಾಬರಮತಿ : ರಾಜಸ್ಥಾನ ಮತ್ತು ಗುಜರಾತ.
11.ನಮ್ಮ ಮನೆ ಹಾಗೂ ಪರ್ಯಾವರಣ
ಪ್ರ.1. (ಅ) ಪರ್ವತ ಪ್ರದೇಶದಲ್ಲಿ
ಕೆಳಗಿನವುಗಳಲ್ಲಿಯ ಯಾವ ಮನೆ ಯೋಗ್ಯವಾಗಿದೆ? ಯೋಗ್ಯವಾದುದಕ್ಕೆ “ಸರಿ” ಗುರುತು
ಮಾಡಿರಿ. ಅದಕ್ಕಾಗಿ ಇರುವ ಕಾರಣ ಬರೆಯಿರಿ.
ಉತ್ತರ: ಪರ್ವತ ಪ್ರದೇಶದಲ್ಲಿ ಮಳೆ
ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಚಳಿ ಹಾಗೂ ಗಾಳಿ ಹೆಚ್ಚು ಇರುತ್ತದೆ. ಭೂಮಿ ಕೂಡ ಬಯಲು
ಆಗಿರದೆ ಮೇಲೆ-ಕೆಳಗೆ ಇರುತ್ತದೆ. ಹೀಗಾಗಿ ಚಪ್ಪರದ ಮನೆಗಳು ಪರ್ವತದ ಪ್ರದೇಶದಲ್ಲಿ ತಾಳಿಕೆಗೆ
ಬರುವುದಿಲ್ಲ. ಆದ್ದರಿಂದ ಇಂತಹ ಸ್ಥಳದಲ್ಲಿ ಕೊಂಕ್ರಟ ಮಾಡಿದ ಪಕ್ಕಾ ಮನೆಗಳು
ಕಟ್ಟಬೇಕಾಗುತ್ತದೆ.
(ಆ) ಬಹುಮಜಲುಗಳ ಮನೆ ಕಟ್ಟುವಾಗ ಮುಖ್ಯವಾಗಿ ಯಾವ
ಸಾಮಾನುಗಳನ್ನು ಉಪಯೋಗಿಸುವರು ? ಯೋಗ್ಯ ಪರ್ಯಾಯ ಆರಿಸಿರಿ.
(ಅ) ಉಸುಕು/ಇದ್ದಿಲು/ಸಿಮೆಂಟ/ಇಟ್ಟಂಗಿಗಳು.
(ಬ) ಸಿಮೆಂಟ/ಇಟ್ಟಂಗಿಗಳು/ಹತ್ತಿ/ಕಬ್ಬಿಣ.
(ಕ) ಕಬ್ಬಿಣ/ಸಿಮೆಂಟ/ಉಸುಕು/ಇಟಂಗಿಗಳು.
ಉತ್ತರ: (ಕ)
ಕಬ್ಬಿಣ/ಸಿಮೆಂಟ/ಉಸುಕು/ಇಟಂಗಿಗಳು.
ಪ್ರ. ೨.
ಮನೆಗಳನ್ನು ಕಟ್ಟುವಾಗ ಕೆಳಗಿನ ಸಂಗತಿಗಳಿಗೆ ನೀವು ಹೇಗೆ ಕ್ರಮ ಕೊಡಬಲ್ಲಿರಿ ?
(ಅ) ಆರಾಮ (ಆ) ರಚನೆ (ಇ)
ಹವಾಮಾನ
ಉತ್ತರ: ಕ್ರಮ- (ಇ) ಹವಾಮಾನ (ಅ) ಆರಾಮ (ಆ) ರಚನೆ
ಪ್ರ. ೩.
ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(ಅ) ನಿಮ್ಮ ಮನೆಯಲ್ಲಿಯ ಯಾವ ಸಂಗತಿಗಳು ಪರ್ಯಾವರಣಕ್ಕೆ
ಅನುಕೂಲವಾಗಿವೆ ? ಅವುಗಳ ಯಾದಿ ಮಾಡಿರಿ.
ಉತ್ತರ: ನಮ್ಮ ಮನೆಯಲ್ಲಿಯ ಕೆಳಗಿನ ಸಂಗತಿಗಳು
ಪರ್ಯಾವರಣಕ್ಕೆ ಅನುಕೂಲಕರ ಆಗಿರುತ್ತವೆ:
ಹವೆ ಮನೆಯಲ್ಲಿ ಬರಲೆಂದು
ದೊಡ್ಡ ದೊಡ್ಡ ಕಿಡಕಿಗಳು
ಸೌರ ಶಕ್ತಿಯ ಮೇಲಿನ ಲೈಟುಗಳು
ಮಣ್ಣಿನ ಪಾತ್ರೆಗಳು
ಕಟ್ಟಿಗೆಯಿಂದ ತಯಾರಿಸಿದ
ವಸ್ತುಗಳು
ಕಿಡಕಿಯಲ್ಲಿಟ್ಟ ಸಾಸಿಗಳು/
ಹೂದಾನಿಗಳು
(ಆ) ಮನೆಯಲ್ಲಿ ಯಾವ ಉಪಕರಣಗಳು
ಸೌರಶಕ್ತಿಯ ಸಹಾಯದಿಂದ ಉಪಯೋಗಿಸ -ಬಲ್ಲಿರಿ?
ಉತ್ತರ: ಮನೆಯಲ್ಲಿ ಕೆಳಗಿನಉಪಕರಣಗಳನ್ನು ನಾವು ಸೌರಶಕ್ತಿಯ ಸಹಾಯದಿಂದ ಉಪಯೋಗಿಸಬಹುದು.
ಮನೆಯಲ್ಲಿಯ ಲೈಟುಗಳು, ಬೀಸಣಿಕೆ, ಬಾವಿಯಿಂದ ನೀರು ಸೇದುವ ಯಂತ್ರ
ಗಿಝರ
ಟೀವ್ಹಿ ಹಾಗೂ ಲೈಟ್ ಮೇಲೆ
ನಡೆಯುವ ಇತರ ಉಪಕರಣಗಳು
ಪ್ರ.೪. ಕಟ್ಟಡ
ಕಟ್ಟುವ ಜಾಗದಲ್ಲಿ ಯಾವ ಯಾವ ಪ್ರಕಾರದ
ಪ್ರದೂಷಣೆಗಳು
ಕಂಡು ಬರುವವು ?
ಉತ್ತರ: ಕಟ್ಟಡ ಕಟ್ಟುವ
ಜಾಗದಲ್ಲಿ ಜಲಪ್ರದುಷಣೆ, ಮಣ್ಣಿನ
ಪ್ರದುಷಣೆ, ಧ್ವನಿ ಪ್ರದುಷಣೆ, ವಾಯು
ಪ್ರದುಷಣೆ ಕಂಡು ಬರುತ್ತವೆ.
ಉಪಕ್ರಮ:
(೧) ಪರ್ಯಾವರಣಕ್ಕೆ ಅನುಕೂಲವಾದ ಮನೆಗಳ ಪ್ರತಿಕೃತಿ ತಯಾರಿಸಿರಿ.
(೨) ಪರ್ಯಾವರಣದ ಹಾನಿಯಾಗಬಾರದೆಂದು ಜನಜಾಗೃತಿ ಮಾಡಲು ಶಿಕ್ಷಕರ
ಸಹಾಯದಿಂದ ಪಥನಾಟ್ಯ ತಯಾರಿಸಿ ಸಾದರಪಡಿಸಿರಿ.
(೩) ಜನರ ಸಹಭಾಗದಿಂದ ನಿಮ್ಮ ಪರಿಸರದಲ್ಲಿಯ ಜೈವ ವೈವಿಧ್ಯತೆಯ
ಮಹತ್ವವನ್ನು ತೋರಿಸುವ ಪ್ರದರ್ಶನವನ್ನು ಏರ್ಪಡಿಸಿರಿ.
ನಿಮಗೆ ಈ ಸ್ವಾಧ್ಯಾಯ ಇಷ್ಟವಾದರೆ ಕಾಮೆಂಟ್ ಮಾಡಿ ತಿಳಿಸಿರಿ.
ಅದರಂತೆ ನಿಮ್ಮ ಸ್ನೇಹಿತರಿಗೂ ಸ್ವಾಧ್ಯಾಯ
ಶೇಅರ್ ಮಾಡಿ
12. ಎಲ್ಲರಿಗಾಗಿ ಆಹಾರ
ಪ್ರ. ೧. ಏನು ಮಾಡುವಿರಿ?
ಹೂದಾನಿಯಲ್ಲಿಯ ಸಸಿ ಬೆಳವಣಿಗೆಯಾಗುವದಿಲ್ಲ.
ಉತ್ತರ: ಹೂದಾನಿಯಲ್ಲಿ ಸಸಿ ಬೆಳವಣಿಗೆ ಆಗದಿದ್ದರೆ ಅದಕ್ಕೆ ಪೋಷಕ ಸೇಂದ್ರಿಯ ಗೊಬ್ಬರವನ್ನು ಹಾಕಬೇಕು.
ಅದಕೇಕ್ ದಿನಾಲು ಸಾಕಾಗುವಷ್ಟು ನೀರು ಹಾಕಬೇಕು. ಆ
ಸಸಿಗೆ ಯೋಗ್ಯ ಪ್ರಮಾಣದಲ್ಲಿ ಸೂರ್ಯ ಪ್ರಕಾಶ ದೊರೆಯುವಂತೆ ಅದನ್ನು ಇಡಬೇಕು. ಹೂದಾನಿಯಲ್ಲಿ ಸಸಿಗೆ
ರೋಗಜಂತುಗಳ ಅಥವಾ ಕೀಟಕಗಳ ಉಪದ್ರವ ಆಗುತ್ತಿದೆಯೇ ಎಂಬುದನ್ನು ನೋಡಿ ಕೀಟನಾಶಕ ಸಿಂಪಡಿಸಬೇಕು. ಹೀಗೆ
ಕಾಳಜಿ ವಹಿಸಿದರೆ ಹೂದಾನಿಯಲ್ಲಿಯ ಸಸಿಗಳು ಚೆನ್ನಾಗಿ ಬೆಳೆಯುತ್ತವೆ.
ಪ್ರ. ೨.
ಸ್ವಲ್ಪ ತಲೆ ಓಡಿಸಿರಿ
ಮನೆಯಲ್ಲಿ ದೈನಂದಿನ ಅವಶ್ಯಕತೆಗಿಂತ ಹೆಚ್ಚು ಆಹಾರ ಧಾನ್ಯಗಳ ಸಂಗ್ರಹ
ಏಕೆ ಮಾಡಲಾಗುತ್ತದೆ?
ಉತ್ತರ: ಯಾವುದೇ ಆಪತ್ತುಗಳು ಹೇಳಿ ಕೇಳಿ ಬರುವುದಿಲ್ಲ. ಒಮ್ಮೊಮ್ಮೆ ಮಹಾಪೂರ, ಬರಗಾಲ, ಸುಂಟರಗಾಳಿ,
ಭೂಕಂಪಗಳು ಒದಗಿಬಂದರೆ ಕೃಷಿಯ ಹಾನಿ ಅಪಾರವಾಗುತ್ತದೆ. ಒಂದು ವರ್ಷದ ಬೆಳೆಗಳು ನಷ್ಟವಾಗುತ್ತವೆ. ಆದ್ದರಿಂದ
ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅವಶ್ಯಕತೆಗಿಂತ ಹೆಚ್ಚು ಧಾನ್ಯಗಳನ್ನು ಸಂಗ್ರಹಿಸಿ ಇಟ್ಟರೆ ಇಂಥ
ಆಪತ್ತಿನ ಪ್ರಸಂಗದಲ್ಲಿ ಉಪಯೋಗಕ್ಕೆ ಬರುತ್ತದೆ.
ಪ್ರ. ೩. ಸರಿ
ಅಥವಾ ತಪ್ಪು ಹೇಳಿರಿ. ತಪ್ಪಾಗಿರುವ ವಿಧಾನಗಳನ್ನು ಸರಿಪಡಿಸಿ ಬರೆಯಿರಿ.
(ಅ) ಕೃಷಿ ಮಾಡುವ ಕೇವಲ ಒಂದು ಪದ್ಧತಿ ಇದೆ.
ಉತ್ತರ: ತಪ್ಪು, ಕೃಷಿ ಮಾಡಲು ಅನೇಕ ಪದ್ಧತಿಗಳು ಇವೆ.
(ಆ) ನಮ್ಮ ಭಾರತ
ದೇಶವು ಕೃಷಿ ಪ್ರಧಾನ ಆಗಿದೆ.
ಉತ್ತರ: ಸರಿ
ಇ) ಸುಧಾರಿತ ಬೀಜಗಳ ಬಳಕೆಯಿಂದ ಉತ್ಪಾದನೆ ಹೆಚ್ಚಾಗುವದಿಲ್ಲ.
ಉತ್ತರ: ತಪ್ಪು, ಸುಧಾರಿತ ಬೀಜಗಳ ಬಳಕೆಯಿಂದ ಉತ್ಪಾದನೆ ಹೆಚ್ಚು ಆಗುತ್ತದೆ.
ಪ್ರ. ೪.
ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(ಅ) ಸುಧಾರಿತ ಬೀಜಗಳನ್ನು
ಉಪಯೋಗಿಸುವುದರಿಂದ ಯಾವ ಯಾವ ಲಾಭ ಆಗುತ್ತವೆ ?
ಉತ್ತರ: ಸುಧಾರಿತ
ಬೀಜಗಳನ್ನು ಉಪಯೋಗಿಸುವುದರಿಂದ ಮುಂದಿನಂತೆ ಲಾಭಗಳು ಆಗುತ್ತವೆ: ೧) ಸುಧಾರಿತ ಬೀಜಗಳ ಬಳಕೆಯಿಂದ ಹೆಚ್ಚು ಇಳುವರಿ ತೆಗೆದುಕೊಳ್ಳಲು ಬರುತ್ತದೆ. ೨) ಸುಧಾರಿತ ಬೀಜಗಳ
ಬೆಳೆಗಳು ಕೀಟಕಗಳಿಗೆ ಬಲಿಯಾಗುವುದಿಲ್ಲ. ೩) ಅದರಂತೆ ಈ ಬೀಜಗಳಿಂದ ಬೆಳೆಗಳು ವೇಗವಾಗಿ ಬೆಳೆಯುತ್ತವೆ.
೪) ಕೆಲವು ಬೀಜಗಳು ಕಡಿಮೆ ನೀರಿನಲ್ಲಿಯೂ ಸಾಕಷ್ಟು ಇಳುವರಿ ಕೊಡುತ್ತವೆ
(ಆ) ಸಿಂಚನದ ಸುಧಾರಿತ ಪದ್ಧತಿಗಳು
ಯಾವವು? ಅವುಗಳ ಲಾಭ ಹೇಳಿರಿ.
ಉತ್ತರ: ಹನಿ ನೀರಾವರಿ ಮತ್ತು ತುಷಾರ ಸಿಂಚನಗಳು ಇವು ಸಿಂಚನದ ಸುಧಾರಿತ ಪದ್ಧತಿಗಳಾಗಿವೆ. ೧)
ಇವುಗಳ ಮೂಲಕ ಬೆಳೆಗಳ ಬೇರುಗಳಿಗೆ ಅವಶ್ಯ ಇರುವಷ್ಟು ನೀರು ದೊರೆಯುತ್ತದೆ. ೨)ನೀರಿನ ಅಪವ್ಯಯ ಆಗುವುದಿಲ್ಲ.
೩) ಉಪಲಬ್ಧ ಇರುವಷ್ಟು ನೀರಿನ ಯೋಗ್ಯ ಬಳಕೆ ಮಾಡಲಾಗುತ್ತದೆ.
(ಇ) ಹನಿ ನೀರಾವರಿ
ಪದ್ಧತಿಯನ್ನು ವಿವರಿಸಿರಿ.
ಉತ್ತರ: ಹನಿ ನೀರಾವರಿ ಪದ್ಧತಿಯಲ್ಲಿ ಸಣ್ಣ ಸಣ್ಣ ಛಿದ್ರಗಳಿರುವ ಪಾಯಿಪು ಉಪಯೋಗಿಸುತ್ತಾರೆ.
ಇದರಿಂದ ಬೆಳೆಗಳ ಬೇರುಗಳುಗೆ ನೇರವಾಗಿ ಮತ್ತು ಅವಶ್ಯಕವಿರುವಷ್ಟು ಮಾತ್ರ ನೀರು ಹನಿಸುತ್ತದೆ. ಇದರಿಂದ
ಉಪಲಬ್ಧ ಇರುವಷ್ಟು ನೀರಿನ ಯೋಗ್ಯ ಬಳಕೆ ಮಾಡಲಾಗುತ್ತದೆ ಮತ್ತು ನೀರಿನ ಹಾಳಾಗುವಿಕೆ ತಡೆಯಲಾಗುತ್ತದೆ.
(ಈ) ಯಾವ ಯಾವ ಕಾರಣಗಳಿಂದ ಬೆಳೆಯುವ ಬೆಳೆಗಳ ಹಾನಿ ಆಗುತ್ತದೆ ?
ಉತ್ತರ: ಕಿಡಿಗಳ ಪ್ರಾದುರ್ಭಾವದಿಂದ ಬೆಳೆಯುವ ಬೆಳೆಗಳ ಹಾನಿ ಆಗುತ್ತದೆ. ಬೆಳೆಗಳ ಮೇಲೆ ರೋಗಗಳು
ಬಿದ್ದರೂ ಹಾಳಾಗುತ್ತವೆ. ಬೆಳೆಯುವ ಬೆಳೆಗಳಿಗೆ ಯೋಗ್ಯ ಪ್ರಮಾಣದಲ್ಲಿ ಗೊಬ್ಬರ ಹಾಗೂ ಯೋಗ್ಯ ಸಮಯದಲ್ಲಿ
ನೀರು ದೊರೆಯದಿದ್ದರೆ ಕೂಡ ಬೆಳೆಗಳು ನಷ್ಟವಾಗುತ್ತವೆ.
(ಉ) ಬೆಳೆಗಳಿಗೆ ಆಗುವ
ಹಾನಿಯನ್ನು ತಪ್ಪಿಸಲು ಮಾಡುವ ಉಪಾಯಗಳನ್ನು ಯಾವವು ?
ಉತ್ತರ: ಬೆಳೆಗಳಿಗೆ ಕೀಟಕಗಳಿಂದ ಹಾಗೂ ವಿವಿಧ ರೋಗಜಂತುಗಳಿಂದ ರಕ್ಷಿಸಲು ಕೀಟಕ ಮತ್ತು ರೋಗಜಂತುಗಳು
ಸಾಯುವ ಕೀಟನಾಶಕಗಳನ್ನು ಬೆಳೆಗಳ ಮೇಲೆ ಸಿಂಪಡಿಸುತ್ತಾರೆ. ಅಥವಾ ಬೀಜಗಳನ್ನು ಬಿತ್ತುವ ಮೊದಲು ಅವುಗಳ
ಮೇಲೆ ಔಷಧಗಳನ್ನು ಲೇಪಿಸುತ್ತಾರೆ.
(ಊ) ಜಮೀನಿನ ಫಲವತ್ತತೆ ಯಾವುದರಿಂದ ಕಡಿಮೆ ಆಗುತ್ತದೆ?
ಉತ್ತರ: ೧) ಜಮೀನಿನಲ್ಲಿ ಅವೇ ಅವೇ ಬೆಳೆಗಳನ್ನು ಬೆಳೆಸುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತ
ಹೋಗುತ್ತದೆ. ೨) ರಾಸಾಯನಿಕ ಗೊಬ್ಬರಗಳ ಉಪಯೋಗ ಹೆಚ್ಚು ಮಾಡಿದರೂ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ.
೩) ನೀರು ಅತಿಯಾಗಿ ಬಳಸಿದರೂ ಜಾಮೀನು ಕ್ಷಾರವಾಗುತ್ತದೆ
(ಎ) ಆಧುನಿಕ ತಂತ್ರಜ್ಞಾನದಿಂದ ಕೃಷಿ ಪದ್ಧತಿಯಲ್ಲಿ ಯಾವ ಬದಲಾವಣೆಗಳು
ಆಗಿವೆ?
ಉತ್ತರ:ಆಧುನಿಕ ತಂತ್ರಜ್ಞಾನದಿಂದ
ಕೃಷಿ ಪದ್ಧತಿಯಲ್ಲಿ ಮುಂದಿನಂತೆ ಬದಲಾವಣೆಗಳು ಆಗಿದ್ದು ಕಂಡು ಬರುತ್ತದೆ: ೧) ಕೃಷಿಗಾಗಿ ಸುಧಾರಿತ ಬೀಜಗಳ ಬಳಕೆ ಆರಂಭವಾಯಿತು. ಇದರಿಂದ
ಬೆಳೆಗಳ ಬೆಳವಣಿಗೆ ವೇಗವಾಗಿ ಆಗಿ ಹೆಚ್ಚು ಇಳುವರಿ ಬರಲು ಶಕ್ಯವಾಯಿತು. ೨) ಬೆಳೆಗಳಿಗೆ ನೀರುಣಿಸಲು
ಹನಿ ನೀರಾವರಿ, ತುಷಾರ ಸಿಂಚನಗಳಂತಹ ಆಧುನಿಕ ಸಿಂಚನ ಪದ್ಧತಿಗಳು ಉಪಯೋಗಿಸಲಾಯಿತು. ಇದರಿಂದ ಬೆಳೆಗಳಿಗೆ
ಯೋಗ್ಯ ಸಮಯದಲ್ಲಿ ಯೋಗ್ಯ ಪ್ರಮಾಣದಲ್ಲಿ ನೀರು ಕೊಡಲು ಶಕ್ಯವಾಯಿತು. ೩) ಸಮಯಕ್ಕೆ ಸರಿಯಾಗಿ ಕೀಟನಾಶಕಗಳನ್ನು
ಸಿಂಪಡಿಸಿ ರೋಗಜಂತುಗಳು ಹಾಗೂ ಕೀಟಕಗಳ ನಾಶ ಮಾಡಿ ಬೆಳೆಯ ಸಂರಕ್ಷಣೆ ಮಾಡಲು ಅನುಕೂಲವಾಯಿತು.
(ಏ) ಧಾನ್ಯ ನಾಶವಾಗದಂತೆ
ಸಂಗ್ರಹಿಸಿಡುವ ಪದ್ಧತಿಗಳು ಯಾವವು?
ಉತ್ತರ: ೧) ಬೇಸಿಗೆಯಲ್ಲಿ ಧಾನ್ಯವನ್ನು ಒಣಗಿಸಿ ಗೋಣಿ ಚೀಲಗಳಲ್ಲಿ ತುಂಬಿಡಲಾಗುತ್ತದೆ. ೨) ಕೀಟಕ-ಇರುವೆಗಳ
ಉಪದ್ರವ ಆಗಬಾರದು ಎಂದು ಧಾನ್ಯ ಸಂಗ್ರಹಿಸುವ ಸ್ಥಳದಲ್ಲಿ ಯೋಗ್ಯ ಔಷಧಗಳನ್ನು ಸಿಂಪಡಿಸುತ್ತಾರೆ. ೩)
ಅಲ್ಲದೆ ಸಂಗ್ರಾಹಕದಲ್ಲಿ ಬೇವಿನ ಮರದ ಎಲೆಗಳನ್ನೂ ಹಾಕುತ್ತಾರೆ. ಅವುಗಳ ವಾಸನೆಯಿಂದ ಕೀಟಕಗಳು ಹತ್ತುವುದಿಲ್ಲ.
೪)
ಧಾನ್ಯಗಳಲ್ಲಿ ಹಾಕಿ ಇಡಲು ಕೆಲವು ಔಷಧಗಳು ಮರುಕಟ್ಟೆಯಲ್ಲಿ ದೊರೆಯುತ್ತವೆ. ಅವುಗಳ ಬಳಕೆಯೂ ಮಾಡಲಾಗುತ್ತದೆ.
೫) ಧಾನ್ಯಕ್ಕೆ ಬುರುಸು ತಾಗಬಾರದೆಂದು ಧಾನ್ಯ ಸಂಗ್ರಹಿಸುವ ಸ್ಥಳವನ್ನು ಯಾವಾಗಲೂ ಒಣದಾಗಿ ಇರಿಸುತ್ತಾರೆ.
ಆ ಸ್ಥಳ ಹವೆಯಾಡುತ್ತಿರುವಂತೆ ಕಾಳಜಿ ತೆಗೆದುಕೊಳ್ಳುತ್ತಾರೆ.
(ಐ) ಕೃಷಿಗಾಗಿ ನೀರನ್ನು ಎಲ್ಲಿಂದ ಉಪಲಬ್ದ ಮಾಡುತ್ತಾರೆ?
ಉತ್ತರ: ೧) ಮಳೆಯ ನೀರಿನ ಜೊತೆಗೆ ನದಿಗಳು, ಸರೋವರ, ಕೆರೆಗಳು, ಬಾವಿ ಇವುಗಳಲ್ಲಿಯ ನೀರು ಕೃಷಿಗಾಗಿ ಬಳಸಲಾಗುತ್ತದೆ.
೨) ನದಿಗಳ ಮೇಲೆ ಅಣೆಕಟ್ಟು ಕಟ್ಟಿ ನೀರನ್ನು ಸಂಗ್ರಹ ಮಾಡಲಾಗುತ್ತದೆ. ೩) ಮಳೆಯ ನೀರು ಅಡ್ಡಗಟ್ಟಿ
ನೀರು ಭೂಯಿಮಿಯಲ್ಲಿ ಸಂಗ್ರಹವಾಗುವಂತೆ ಮಾಡಲಾಗುತ್ತದೆ. ಇದರಿಂದ ಭೂಮಿಯ ಭೂಜಲ ಪಾತಳಿಯು ಹೆಚ್ಚುತ್ತದೆ.
ಪ್ರ. 5. ಹೊಂದಿಸಿ ಬರೆಯಿರಿ.
|
'ಅ' ಗುಂಪು |
'ಬ' ಗುಂಪು |
|
(೧) ಆರ್ದ್ರ ಹವೆಯಲ್ಲಿ ಆಹಾರ ಧಾನ್ಯ
ಸಂಗ್ರಹ |
(ಅ) ಧಾನ್ಯಕ್ಕೆ
ಬರುಸು ತಾಗುವುದಿಲ್ಲ. |
|
(೨) ಒಣದಾದ
ಹವೆಯಲ್ಲಿ ಆಹಾರ ಧಾನ್ಯ ಸಂಗ್ರಹ |
(ಆ)
ಕೀಟಕ-ಇರುವೆಗಳು ಹತ್ತುವುದಿಲ್ಲ.
|
|
(೩) ಧಾನ್ಯ
ಸಂಗ್ರಾಹಕದಲ್ಲಿ ಇಡುವ ಔಷಧಗಳು. |
(ಇ) ಬುರುಸು
ತಾಗುವದು.
|
ಉತ್ತರ: ೧ – ಇ, ೨ –
ಅ, ೩ –ಆ
ಉಪಕ್ರಮ:
೧. ಮನೆಯಲ್ಲಿ ಸಂಗ್ರಹ ಮಾಡಿ ಇಟ್ಟಿರುವ ವಸ್ತುಗಳು ನಿಮ್ಮ ಪಾಲಕರು
ಯಾವಾಗ ಖರೀದಿಸಿದ್ದಾರೆ ಎಂಬುದನ್ನು ನೋಂದಾಯಿಸಿರಿ.
೨. ಐದು ಪ್ರಕಾರದ ಧಾನ್ಯದ ಬೀಜಗಳನ್ನು ಸಂಗ್ರಹಿಸಿ ಚಿಕ್ಕ ಪಾಕೀಟು
ಮಾಡಿ ದೊಡ್ಡ ಪುಟ್ಟದ ಮೇಲೆ ಅಂಟಿಸಿರಿ ಹಾಗೂ ಧಾನ್ಯಗಳ ಬಗ್ಗೆ ಸವಿಸ್ತಾರ ಮಾಹಿತಿ ಪಡೆಯಿರಿ.
೩. ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಮಾಡುತ್ತಿರುವ ಸ್ಥಳಕ್ಕೆ ನಿಮ್ಮ
ಶಿಕ್ಷಕರೊಂದಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿರಿ.
13. ಆಹಾರ ಕಾಪಾಡುವ ಪದ್ಧತಿಗಳು
ಪ್ರ. ೧. ಏನು
ಮಾಡಬೇಕು?
(ಅ) ಹಪ್ಪಳ ತೇವವಾಗಿದೆ.
ಉತ್ತರ: ತೇವಾಗಿರುವ ಹಪ್ಪಳವನ್ನು
ಬಿಸಲಿನಲ್ಲಿ ಒನಗಿಸಲು ಇಡಬೇಕು. ಮೂರು-ನಾಲ್ಕು ದಿನ ಬಿಸಿಲು ತಿಂದ ಬಳಿಕ ಹಪ್ಪಳಗಳನ್ನು ಹವೆಯಾಡದ
ಡಬ್ಬಿಯಲ್ಲಿ ಹಾಕಿ ಇಡಬೇಕು.
(ಆ) ಮಾವು, ಹಸಿಮಾವು, ನೆಲ್ಲಿಕಾಯಿ, ಪೇರು ಇಂತಹ ಹಣ್ಣುಗಳಾದರೆ ವಠಾಣೆ, ಮೆಂತೆ, ಈರುಳ್ಳಿ, ಟೋಮ್ಯಾಟೋ ಇಂಥ ಪಲ್ಯೆಗಳು ನಿರ್ದಿಷ್ಟ ಸಮಯದಲ್ಲಿ
ಹೆಚ್ಚಿನ ಪ್ರಮಾಣದಲ್ಲಿ ಉಪಲಬ್ಧವಿರುತ್ತವೆ. ಇವು ವರ್ಷವಿಡೀ ಉಪಯೋಗಿಸಲು ಬರುತ್ತವೆ.
ಉತ್ತರ: ಮಾವಿನ ಆಮರಸ ಮಾಡಿ
ವರ್ಷವಿಡೀ ಸಂಗ್ರಹ ಮಾಡಿ ಬಳಸಲು ಬರುತ್ತದೆ. ಹಸಿಮಾವು ಮತ್ತು ನೆಲ್ಲಿಕಾಯಿ ಇವುಗಳಿಂದ
ಉಪ್ಪಿನಕಾಯಿ ಮಾಡಿದರೆ ವರ್ಷವಿಡೀ ಬಳಸಲು ಬರುತ್ತದೆ. ಅದೇ ರೀತಿಯಾಗಿ ಪೇರು, ನೆಲ್ಲಿಕಾಯಿ ಇವುಗಳಿಂದ ಸರಬತ್ ಮಾಡಿ ವರ್ಷವಿಡೀ
ನಾಶವಾಗದಂತೆ ಇಡಲು ಬರುತ್ತದೆ. ವಠಾಣೆ ಸುಲಿದು ಅದರ ಕಾಲುಗಳನ್ನು ಹವೆ ಆಡದ ಡಬ್ಬಿಯಲ್ಲಿ
ಇಡಬಹುದು. ಮೆಂತಿಯಿಂದ ಪರಾಠಾ ಮಾಡಿ ಇಟ್ಟರೆ ಬಹಳ ದಿವಸ ಉಳಿಯುತ್ತದೆ. ಟೋಮ್ಯಾಟೋ ದಿಂದ ಸ್ವೋಸ್
ಮಾಡಿ ಇಟ್ಟರೆ ವರ್ಷವಿಡೀ ಹಾಳಾಗದಂತೆ ಉಳಿಯುತ್ತದೆ.
ಪ್ರ. ೨. ಸ್ವಲ್ಪ ತಲೆ ಓಡಿಸಿರಿ.
ಶಾವಿಗೆ ಅನೇಕ ದಿವಸ ಚೆನ್ನಾಗಿ ಇರುತ್ತವೆ. ಆದರೆ
ಶಾವಿಗೆಯ ಖೀರು ಬೇಗನೆ ಹಾಳಾಗುತ್ತದೆ, ಹೀಗೆ ಏಕೆ?
ಉತ್ತರ: ಶಾವಿಗೆ ಮಾಡುವಾಗ ಅವು ಬಹಳ ದಿವಸ ತಾಳಬೇಕೆಂದು
ಅವುಗಳನ್ನು ಬಿರು ಬಿಸಿಲಿನಲ್ಲಿ ಬಹಳ ದಿವಸ ಒಣಗಿಸಲಾಗುತ್ತದೆ. ಅದರಿಂದಾಗಿ ಶಾವಿಗೆಯೊಳಗಿಂದ
ನೀರು ಹೋಗಿರುತ್ತದೆ. ನೀರು ಇಲ್ಲದಿರುವುದರಿಂದ ಅವು ಅನೇಕ ದಿವಸ ಹಾಳಾಗುವುದಿಲ್ಲ. ಆದರೆ ಶಾವಿಗೆ
ಖೀರು ಮಾಡಿದಾಗ ಅದರಲ್ಲಿ ನೀರು, ಹಾಲು ಬಳಸುತ್ತಾರೆ. ನೀರು, ಹಾಲು ಇವು ಹೆಚ್ಚು ದಿವಸ ಸರಿಯಾಗಿ ಇಲ್ಲದಿರುವುದರಿಂದ ಖೀರು ಬೇಗ ಹಾಳಾಗುತ್ತದೆ.
೪. ಕೆಳಗಿನ ಪಶ್ನೆಗಳಿಗೆ ಉತ್ತರ
ಬರೆಯಿರಿ.
(ಆ) ಆಹಾರವನ್ನು ಕೆಡದಂತೆ ಇಡುವ
ಪದ್ದತಿಗಳು
(ಆ) ಹಳಸಿದ ಆಹಾರವನ್ನು ನಾವು
ಸೇಪಿಸುವದಿಲ್ಲ, ಏಕೆ ?
(2) ಹಣ್ಣುಗಳ ಮುರಬ್ಬ ಏಕೆ
ಮಾಡಲಾಗುತ್ತದೆ ?
(ಈ) ಪರಿರಕ್ಷಣೆಗಳನ್ನು
ಯಾವುದಕ್ಕಾಗಿ ಉಪಯೋಗಿಸುತ್ತಾರೆ?
(ಉ) ಮಸಾಲೆಯ ವಿವಿಧ ಪದಾರ್ಥಗಳು
ಯಾವವು ? ಅವು ವನಸ್ಪತಿಗಳ ಯಾವ ಭಾಗವಾಗಿರುತ್ತದೆ ?
ಉಪಕ್ರಮ: ಭಟ್ಟಿಕೊಡಿರಿ, ಮಾಹಿತಿ ಸಂಗ್ರಹಿಸಿಸಿ ಹಾಗೂ ಇತರರಿಗೆ
೧. ಉಪ್ಪಿನಕಾಯಿ, ಹಪ್ಪಳ, ಶರಬತ್ತು
ತಯಾರಿಸುವ ಗೃಹ ಉದ್ಯೋಗ.
೨. ಹಾಲು, ಮೀನು ಅಥವಾ ಹಣ್ಣುಗಳ ಶೀತೀಕರಣ ಕೇಂದ್ರ
ಪ್ರ. ೧.
ಸಾರಿಗೆ ವ್ಯವಸ್ಥೆಯಿಂದ ನಿಮಗೆ ಆದ ಲಾಭಗಳು, ಇದರ
ಮೇಲೆ ಐದು ವಾಕ್ಯಗಳನ್ನು ಬರೆಯಿರಿ.
ಉತ್ತರ: ೧) ಸಾರಿಗೆಯ ವ್ಯವಸ್ಥೆಯಿಂದ ನನಗೆ ನಗರದ ಶಾಲೆಗೆ ಕಡಿಮೆ
ಸಮಯದಲ್ಲಿ ಹೋಗಲು ಸಾಧ್ಯವಾಯಿತು.
೨) ಅಮ್ಮ ಸಂತೆಯಿಂದ ಸರಕುಗಳನ್ನು
ತರಲು ಹೇಳಿದಾಗ ಬೇಗ ಹೋಗಿ ತರಲು ಶಕ್ಯವಾಯಿತು. ಹೀಗೆ ಕಡಿಮೆ ಸಮಯದಲ್ಲಿ ಕೆಲಸಗಳು ವೇಗವಾಗಿ ಆಗುತ್ತವೆ.
೩) ಸಾರಿಗೆಯಿಂದಾಗಿ ದೂರದ ಸ್ಥಳಗಳಿಗೆ
ಪ್ರವಾಸಕ್ಕೆ ಹೋಗಲು ಅನುಕೂಲವಾಗಿದೆ.
೪) ಮನೆಯಲ್ಲಿ ಯಾರಾದರೂ ರೋಗದಿಂದ
ಬಳಲಿದ್ದರೆ ಬೇಗ ಆಸ್ಪತ್ರೆಗೆ ಕರೆದೊಯ್ಯಲು ಸಾರಿಗೆಯಿಂದ ಅನುಕೂಲವಾಗಿದೆ.
೫) ಸೂಟಿ ಇದ್ದಾಗ ಸ್ನೇಹಿತರೊಂದಿಗೆ
ತಿರುಗಾಡಲು ಸಾರಿಗೆಯಿಂದ ಸುಲಭವಾಗಿದೆ. ಹೀಗೆ ವಿವಿಧ ಪ್ರಕಾರದ ಸಾರಿಗೆಯ ಸೌಕರ್ಯಗಳಿಂದ ಜಗತ್ತು ಸಮೀಪ
ಬಂದಿದೆ.
ಪ್ರ. ೨. ಸಾರಿಗೆ
ಸೌಲಭ್ಯದಿಂದಾಗಿ ನಿಮ್ಮ ಪರಿಸರದಲ್ಲಿ ಅಪಲಬ್ಧವಾಗಿರುವ ನಾಲ್ಕು ಸೌಕರ್ಯಗಳನ್ನು ಬರೆಯಿರಿ.
ಉತ್ತರ: ೧) ನಮ್ಮ ಊರಿಗೆ ಮೊದಲು
ಸರಕಾರಿ ಬಸ್ಸು ಬರುತ್ತಿರಲಿಲ್ಲ. ರಸ್ತೆಗಳ ದುರುಸ್ತಿಯ ನಂತರ ತಾಲೂಕಿನ ಸ್ಥಳದಿಂದ ಊರಿಗೆ ಬಸ್ಸುಗಳು
ನಿಯಮಿತವಾಗಿ ಬರುತ್ತಿವೆ. ೨) ಇದರಿಂದ ತಾಲೂಕಿಗೆ ಅಥವಾ ಬೇರೆ ಊರಿಗೆ ಉಚ್ಚ ಶಿಕ್ಷಣಕ್ಕೆ ಹೋಗುವ ವಿದ್ಯಾರ್ಥಿಗಳಿಗೆ
ಅನುಕೂಲವಾಗಿದೆ. ೩) ಏನೇ ಕೆಲಸವಿದ್ದರೂ ಖಾಸಗಿ ವಾಹನ ತೆಗೆದುಕೊಂಡು ಬೇಗ ತಾಲೂಕಿಗೆ ಹೋಗಿ ಬರಲು ಸುಲಭ
ಸಾಧ್ಯವಾಗಿದೆ. ೪) ಆಸ್ಪತ್ರೆಗಳಿಗೆ, ಪರ್ಯಟನೆಗೆ, ಶಿಕ್ಷಣಕ್ಕಾಗಿ ಈ ಸಾರಿಗೆಯ ವ್ಯವಸ್ಥೆ ತುಂಬಾ ಉಪಯೋಗಕ್ಕೆ ಬರುತ್ತಿದೆ.
ಪ್ರ. ೩. ನಿಮ್ಮ ಪರಿಸರದಲ್ಲಿ
ಸಾರಿಗೆ ಸಂಚಾರದ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ನಾಲ್ಕು ಉಪಾಯಗಳನ್ನು ಬರೆಯಿರಿ.
ಉತ್ತರ: ನಮ್ಮ ಪರಿಸರದಲ್ಲಿ ಸಾರಿಗೆ ಸಂಚಾರದ ಮೇಲಿನ ಒತ್ತಡ ಕಡಿಮೆ
ಮಾಡುವ ಸಲುವಾಗಿ ಮುಂದಿನಂತೆ ಉಪಾಯಗಳನ್ನು ಮಾಡಬಹುದು:
೧) ಶಕ್ಯವಾದಷ್ಟು ಸಾರ್ವಜನಿಕ ವಾಹನಗಳ
ಬಳಕೆ ಮಾಡಬೇಕು. ಖಾಸಗಿ ವಾಹನಗಳನ್ನು ಹೆಚ್ಚು ಬಳಸಬಾರದು.
೨) ಸಮೀಪದ ಅಂತರ ಹೋಗಬೇಕಾಗಿದ್ದರೆ
ನಡೆದುಕೊಂಡು ಹೋಗಬೇಕು.
೩) ರಸ್ತೆಯ ನಿಯಮಗಳನ್ನು ನಿಯಮಿತವಾಗಿ
ಹಾಗೂ ಕಡ್ಡಾಯವಾಗಿ ಪಾಲಿಸಬೇಕು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು.
೪) ಒಂದೇ ಸ್ಥಳದಲ್ಲಿ ಕೆಲಸ ಮಾಡುವ
ಜನರು ಸ್ವತಂತ್ರ ವಾಹನ ಬಳಸದೆ ಎಲ್ಲರೂ ಕೂಡಿ ಒಂದೇ ವಾಹನದಲ್ಲಿ ಪ್ರವಾಸ ಮಾಡಬೇಕು.
ಪ್ರ. ೪.
ನಿಮ್ಮ ಪರಿಸರದಲ್ಲಿಯ ಎಲ್ಲಕ್ಕಿಂತ ಕಡಿಮೆ ಪ್ರದೂಷಣೆಯುಳ್ಳ ಸ್ಥಳವನ್ನು ಶೋಧಿಸಿರಿ. ಆ ಸ್ಥಳವು
ಕಡಿಮೆ ಪ್ರದೂಷಿತ ಏಕೆ ಇದೆ, ಎಂಬ ಕಾರಣ ಬರೆಯಿರಿ.
ಉತ್ತರ: ನಮ್ಮ ಪರಿಸರದಲ್ಲಿ ಎಲ್ಲಕ್ಕಿಂತ
ಕಡಿಮೆ ಪ್ರದೂಷಣೆ ಇರುವ ಭಾಗವೆಂದರೆ ಕಾಡಿನ ಪ್ರದೇಶ.
ಏಕೆಂದರೆ ಈ ಪ್ರದೇಶದಲ್ಲಿ ಜನಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಇರುತ್ತಾರೆ. ಯಾವುದೇ ವಾಹನಗಳ ಓಡಾಟ ಇರುವುದಿಲ್ಲ.
ಅಲ್ಲದೆ ಗಿಡ-ಮರಗಳ ಎಲೆಗಳಿಂದ ಶುದ್ಧವಾದ ಆಕ್ಸಿಜನ್ ಕಾಡಿನಲ್ಲಿ ಪಸರಿಸಿರುತ್ತದೆ.
ಪ್ರ. ೫. CNG ಮತ್ತು LPGಯ ವಿಸ್ತಾರಿತ ರೂಪ
ಬರೆಯಿರಿ.
ಉತ್ತರ: CNG ಮತ್ತು LPG ಯ ವಿಸ್ತಾರಿತ ರೂಪ ಮುಂದಿನತೆ ಇದೆ.
CNG: Compressed Natural Gas.
LPG: Liquefied Pertolium Gas.
ಪ್ರ. 6. (ಅ) ಕೆಳಗಿನ ಚಿತ್ರದಲ್ಲಿಯ
ಪ್ರಾದುಷಣೆ ಮಾಡುವ ವಾಹನ ಯಾವುದು?
ಉತ್ತರ: ಮೇಲಿನ ಚಿತ್ರದಲ್ಲಿ ಪ್ರಾದುಷಣೆ
ಮಾಡುವ ವಾಹನ ಬಸ್ಸು ಆಗಿದೆ.
(ಆ) ಈ ವಾಹನದ ಪ್ರದೂಷಣೆ
ಕಡಿಮೆ ಮಾಡುವ ಸಲುವಾಗಿ ನೀವು ಯಾವ ಉಪಾಯಗಳನ್ನು ಸೂಚಿಸುವಿರಿ ?
ಉತ್ತರ: ಈ ವಾಹನದ ಪ್ರದೂಷಣೆ ಕಡಿಮೆ
ಮಾಡುವ ಸಲುವಾಗಿ ಬಸ್ಸಿನ ಇಂಜಿನ್ ತಪಾಸಣಿ ಮಾಡಿ ದುರುಸ್ತಿ ಮಾಡಿಕೊಳ್ಳಬೇಕು. ಅದರಂತೆ ಈ ವಾಹನದಲ್ಲಿ ಸಿಎನ್‌ಜಿ
ಬಳಕೆ ಮಾಡುವ ಸೌಕರ್ಯ ಅಳವಡಿಸಬೇಕು.
ಉಪಕ್ರಮ
೧. ಪಥನಾಟ್ಯದ ಮೂಲಕ ಪ್ರದೂಷಣೆ ತಡೆಗಟ್ಟುವ ಸಂದೇಶವನ್ನು ಸಮಾಜದಲ್ಲಿ
ತಲುಪಿಸಿರಿ.
೨. ಸೌರಶಕ್ತಿ ಮತ್ತು ವಿದ್ಯುತ್ ಶಕ್ತಿಯ ಮೇಲೆ ನಡೆಯುವ ಸಾರಿಗೆ
ಸಾಧನಗಳ ಚಿತ್ರಗಳನ್ನು ಸಂಗ್ರಹಿಸಿರಿ.
15. ಸಂದೇಶವಹನ ಮತ್ತು ಪ್ರಸಾರ ಮಾಧ್ಯಮಗಳು
1. ಪ್ರಸಾರ ಮಾಧ್ಯಮಗಳ ಶೈಕ್ಷಣಿಕ ಉಪಯೋಗ ಬರೆಯಿರಿ.
ಉತ್ತರ: 1) ಪ್ರಸಾರ ಮಾಧ್ಯಮದ
ಸಹಾಯದಿಂದ ವಿದ್ಯಾರ್ಥಿಗಳಿಗೆ ಬೇಕಾಗುವ ಶೈಕ್ಷಣಿಕ ಮಾಹಿತಿ ಮನೆಯಲ್ಲಿಯೇ ಉಪಲಬ್ಧವಾಗುತ್ತದೆ.
2) ಪ್ರಸಾರಮಾಧ್ಯಮದಿಂದಾಗಿ ಮನೆಯಿಂದಲೇ
ಶಿಕ್ಷಣ ಪಡೆಯಬಹುದು.
3) ವಿದ್ಯಾರ್ಥಿಗಳ ಉಪಲಬ್ಧ ವೇಳೆಯಂತೆ
ಎಲ್ಲಿಯೂ, ಯಾವಾಗಲೂ ಶಿಕ್ಷಣ ತೆಗೆದುಕೊಳ್ಳಲು ಬರುತ್ತದೆ.
4) ಆಕಾಶವಾಣಿ, ವೃತ್ತಪತ್ರಿಕೆ, ದೂರದರ್ಶನ, ಇಂಟರ್ನೆಟ್ ಮೂಲಕ ಹಳ್ಳಿ ಹಳ್ಳಿಗಳಲ್ಲೂ ಶೈಕ್ಷಣಿಕ ಮಾಹಿತಿ ಉಪಲಬ್ಧ ಸಹಜವಾಗಿ ಆಗುತ್ತದೆ.
9. ದೂರಧ್ವನಿಯು ಬಳಕೆಗೆ ಬರುವ ಮೊದಲು ಸಂದೇಶಗಳನ್ನು ಕಳುಹಿಸಲು ಯಾವ
ಸಾಧನಗಳನ್ನು ಉಪಯೋಗಿಸಲಾಗುತ್ತಿತ್ತು?
ಉತ್ತರ: ದೂರಧ್ವನಿಯು
ಬಳಕೆಗೆ ಬರುವ ಮೊದಲು ಸಂದೇಶಗಳನ್ನು ಕಳುಹಿಸಲು ಲಿಖಿತ ಸ್ವರೂಪದ ಪಾತ್ರ ಲೇಖನ ಸಂದೇಶಗಳನ್ನು ಕಳುಹಿಸಲು ಬಳಸಲಾಗುತ್ತಿತ್ತು.
2. ಸಂಗಣಕದಿಂದ ನಿಮ್ಮ ಜೀವನದಲ್ಲಿ ಆದ ಬದಲಾವಣೆಗಳು ಯಾವವು ?
ಉತ್ತರ:ಸಂಗಣಕದಿಂದ ಶಾಲೆಯ ಪಠ್ಯಪುಸ್ತಕದ
ಹೊರತಾಗಿ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಸಂಗಣಕದಿಂದಾಗಿ ಮನೆಯಲ್ಲಿ ಕುಳಿತ ಸ್ಥಳದಲ್ಲಿ ಶಿಕ್ಷಣ
ತೆಗೆದುಕೊಳ್ಳಲು ಶಕ್ಯವಾಯಿತು. ಕಠಿಣ ಸಂಕಲ್ಪನೆಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಶಕ್ಯವಾಯಿತು.
ಸಂಗಣಕದಿನ ಜಗತ್ತು ತುಂಬಾ ಹತ್ತಿರ ಬಂದ ಹಾಗೆ ಆಗಿರುತ್ತದೆ.
ಉಪಕ್ರಮ :
|
೧. ದೂರದರ್ಶನದ ಮೇಲಿನ ಬೇರೆ ಬೇರೆ ವಾಹಿನಿಗಳಿಂದ ನಿಮಗೆ ಯಾವ ಯಾವ
ಮಾಹಿತಿ ದೊರೆಯುತ್ತದೆ ಎಂಬುದನ್ನು ಕೆಳಗಿನಂತೆ ಕೋಷ್ಟಕ ತಯಾರಿಸಿ ನಿಮ್ಮ ವಹಿಯಲ್ಲಿ ಬರೆಯಿರಿ. |
|||
|
ಅ.ಕ್ರ. |
ವಾಹಿನಿಯ ಹೆಸರು/ ಚಾನೆಲದ ಹೆಸರು |
ಕಾರ್ಯಕ್ರಮದ/ಧಾರಾವಾಹಿಯ ಹೆಸರು |
ಉಪಯೋಗ |
|
D. D. ಸಹ್ಯಾದ್ರಿ |
ಟಿಲಿ ಮಿಲಿ 5ನೇ |
5ನೇ ವರ್ಗದ ಪಠ್ಯಪುಸ್ತಕದಲ್ಲಿಯ ಪಾಠಗಳ ವಿವರಣೆ |
|
|
Zee 24 |
ವಾರ್ತೆಗಳು |
ಜಗತ್ತಿನಲ್ಲಿಯ ವಿವಿಧ ವಾರ್ತೆಗಳು
ಹಾಗೂ ಆಗುಹೋಗುಗಳು |
|
|
ZEE ಕನ್ನಡ, ಕಲರ್ಸ್ ಸ್ಟಾರ್
ಪ್ರವಾಹ, |
ಚಲನಚಿತ್ರಗಳು, ಧಾರಾವಾಹಿಗಳು
|
ಮನೋರಂಜನೆ |
|
೧೬.
ನೀರು.
ಪ್ರ.೧. ಏನು
ಮಾಡುವಿರಿ ?
ಇಳಿಜಾರು, ನೆಲವಿರುವುದರಿಂದ ತೋಟದಲ್ಲಿಯ ಮಣ್ಣು ನೀರಿನೊಂದಿಗೆ ಹರಿದು
ಹೋಗುತ್ತಿದೆ.
ಉತ್ತರ : ಹರಿಯುವ ನೀರಿನ
ಮುಂದೆ ಕಲ್ಲಿನಿಂದ ಒಡ್ಡನ್ನು ಕಟ್ಟಿದರೆ ಮಣ್ಣು ಹರಿದು ಹೋಗುವುದಿಲ್ಲ.
ಪ್ರ. ೨.
ಸ್ವಲ್ಪತಲೆ ಓಡಿಸಿರಿ.
ಮಳೆಯ ನೀರು ನೆಲದಲ್ಲಿ
ಇಂಗುವುದಕ್ಕಾಗಿ ರಸ್ತೆಗಳನ್ನು ಹಾಗೂ ಪಾದಚಾರಿ ಮಾರ್ಗಗಳನ್ನು ಹೇಗೆ ತಯಾರಿಸಬೇಕು?
ಉತ್ತರ: ಮಳೆಯ ನೀರು
ನೆಲದಲ್ಲಿ ಇಂಗುವುದಕ್ಕೆ ಅನೇಕ ಪ್ರಕಾರದ ವ್ಯವಸ್ಥೆ ಮಾಡಲಾಗುತ್ತದೆ. ರಸ್ತೆಯ ಮೇಲೆ ಹರಿಯುವ
ನೀರು ಹಾಗೂ ಪಾದಚಾರಿ ಮಾರ್ಗದಲ್ಲಿ ಹರಿಯುವ ನೀರು ತಡೆಗಟ್ಟಲು ಅಲ್ಲಲ್ಲಿ ಒಡ್ಡುಗಳನ್ನು
ಕಟ್ಟಬೇಕು. ಚಿಕ್ಕ ಚಿಕ್ಕ ಒಡ್ಡುಗಳಿಂದಾಗಿ ನೀರು ಹೆಚ್ಚು ದೂರ ಹೋಗದೆ ನೆಲದಲ್ಲಿ ಇಂಗಲು
ಸಹಾಯವಾಗುವುದು.
ಪ್ರ. ೩.
ಪ್ರಶ್ನೆಗಳಿಗೆ ಉತ್ತರಿಸಿರಿ.
(ಅ) ಬರಗಾಲದಲ್ಲಿ ಎಂತಹ
ಪರಿಸ್ಥಿತಿ ನಿರ್ಮಾಣವಾಗುತ್ತದೆ?
ಉತ್ತರ : ಭೂಮಿಯಲ್ಲಿಯ ನೀರು
ಬಾಷ್ಪೀಭವನದಿಂದ ಕಡಿಮೆಯಾಗಿ ಬರಗಾಲ ಉಂಟಾಗುತ್ತದೆ. ಮಳೆ ಸರಿಯಾಗಿ ಆಗದೆ ನದಿ, ಕೆರೆ, ಸರೋವರ, ಬಾವಿ, ಹೊಂಡ, ಅಣೆಕಟ್ಟುಗಳಲ್ಲಿಯ
ನೀರು ಕಡಿಮೆ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮತ್ತು ನಮಗೂ ಸಹ ಕುಡಿಯುವ
ನೀರಿನ ಕೊರತೆ ಉಂಟಾಗುತ್ತದೆ. ಕೃಷಿಗಾಗಿ ನೀರು ಸಿಗುವುದಿಲ್ಲ. ಬರಗಾಲವು ಒಂದು ನೈಸರ್ಗಿಕ
ಆಪತ್ತು ಆಗಿದೆ. ಬರಗಾಲದಲ್ಲಿ ಧಾನ್ಯ ಮತ್ತು ಹುಲ್ಲು ದೊರೆಯುವುದಿಲ್ಲ.
(ಆ) ಮಳೆಗಾಲದ ನಂತರವೂ ನೀರು ಉಪಲಬ್ದವಾಗುವಂತೆ ಸರಕಾರ ಮತ್ತು
ನಾಗರಿಕರು ಯಾವ ಯಾವ ಕೆಲಸ ಮಾಡುತ್ತಾರೆ ?
ಉತ್ತರ: ಸರ್ವಸಾಧಾರಣವಾಗಿ
ವರ್ಷದ ನಾಲ್ಕು ತಿಂಗಳು ಮಳೆಗಾಲ ಇರುತ್ತದೆ. ಮಳೆಗಾಲದ ನೀರನ್ನು ಮಳೆಗಾಲದ ನಂತರವೂ ಉಪಲಬ್ದವಾಗಲು
ಮಳೆಯ ನೀರನ್ನು ಭೂಮಿಯಲ್ಲಿ ಇಂಗಿಸಬೇಕಾಗುತ್ತದೆ. ಇದರಿಂದ ಭೂಮಿಯ ಭೂಜಲ ಸಂಗ್ರಹ ಹೆಚ್ಚಾಗಿ ಗಿಡಮರಗಳಿಗೆ, ಬಾವಿಗಳಿಗೆ ನೀರು ಸಿಗುತ್ತದೆ. ಸರಕಾರವು ನೀರನ್ನು
ಇಂಗಿಸಲು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿಸುತ್ತದೆ. ಎಲ್ಲಿ ಅಣೆಕಟ್ಟು ಕಟ್ಟಿಸಲು
ಸಾಧ್ಯವಾಗುವುದಿಲ್ಲವೋ ಅಲ್ಲಿ ಸಣ್ಣ ಸಣ್ಣ ಸರೋವರಗಳು, ಚಿಕ್ಕ ಕೆರೆಗಳು, ಇಳಿಜಾರಿನಲ್ಲಿ ಸಣ್ಣ ಸಣ್ಣ ಒಡ್ಡುಗಳನ್ನು ಕಟ್ಟುವುದು,
ಕಂದಕ ತೊಡುವುದು, ಊರುಗಳಲ್ಲಿಯ ಹಳ್ಳ, ನಾಲೆಗಳ
ಮೇಲೆ ಬಂದರು ಹಾಕಿ ನೀರು ತಡೆಗಟ್ಟುವ ಕೆಲಸಗಳನ್ನು ಸರಕಾರ ಮತ್ತು ನಾಗರಿಕರು ಒಟ್ಟಾಗಿ
ಮಾಡುತ್ತಾರೆ.
(2) ಮಳೆಯ ನೀರನ್ನು
ಯಾವುದಕ್ಕಾಗಿ ತಡೆಗಟ್ಟಬೇಕು?
ಉತ್ತರ: ಮಳೆಯ ನೀರು
ಭೂಮಿಯಲ್ಲಿ ಇಂಗಿಸಲು ಹರಿಯುವ ನೀರನ್ನು ತಡೆಗಟ್ಟಬೇಕಾಗುತ್ತದೆ. ದೊಡ್ಡ ದೊಡ್ಡ ಅಣೆಕಟ್ಟುಗಳ
ಮುಖಾಂತರ ನೀರು ತಡೆಗಟ್ಟಲು ಬರುತ್ತದೆ. ಕೆಲವು ಸ್ಥಳಗಳಲ್ಲಿ ನದಿ ಪಾತ್ರದಲ್ಲಿ ಬಾವಿಗಳನ್ನು
ಅಗೆದು ಅಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡುತ್ತಾರೆ. ಮನೆಯ ಮಾಳಿಗೆಯ ಮೇಲೆ ಬೀಳುವ ಮಳೆಯ
ನೀರನ್ನು ಪನ್ಹಾಳೆಗಳ ಸಹಾಯದಿಂದ ಅಂಗಳದಲ್ಲಿ ಇಡಲಾದ ಟಕಿಗಳಲ್ಲಿ ಸಂಗ್ರಹಿಸಲಾಗುತ್ತದೆ.
(ಈ) ಜಲವ್ಯವಸ್ಥಾಪನೆ ಯಾವುದಕ್ಕೆ ಹೇಳುತ್ತಾರೆ?
ಉತ್ತರ: ಉಪಲಬ್ದವಿರುವ ನೀರನ್ನು
ಮಿತವ್ಯಯದಿಂದ ಉಪಯೋಗಿಸುವುದು, ಅದರಂತೆ
ಮಳೆಯ ನೀರನ್ನು ತಡೆಗಟ್ಟಿ ನೆಲದೊಳಗೆ ಇಂಗಿಸಬೇಕು ಅಥವಾ ಟಾಕಿಗಳಲ್ಲಿ ಸಂಗ್ರಹಿಸುವುದು
ಮಹತ್ವದಾಗಿದೆ. ಈ ರೀತಿ ಮಳೆಗಾಲದ ನಂತರದ ಕಾಲದಲ್ಲಿಯೂ ನೀರು ಉಪಲಬ್ದವಾಗುವಂತೆ ವ್ಯವಸ್ಥೆ
ಮಾಡುವುದಕ್ಕೆ ‘ಜಲವ್ಯವಸ್ತಾಪನೆ’
ಎನ್ನುತ್ತಾರೆ.
ಪ್ರ. ೪. ಸರಿ
ಅಥವಾ ತಪ್ಪು ಹೇಳರಿ. ತಪ್ಪಾಗಿರುವ ವಿಧಾನಗಳನ್ನು ಸರಿಪಡಿಸಿ ಪುನಃ ಬರೆಯಿರಿ.
(ಆ) ಮಳೆಯ ನೀರು ನಮಗೆ
ವರ್ಷವಿಡೀ ದೊರೆಯುತ್ತದೆ. =ತಪ್ಪು, ಮಳೆಯ ನೀರು ವರ್ಷವಿಡೀ ದೊರೆಯದೆ ಕೇವಲ ನಾಲ್ಕು ತಿಂಗಳು ಮಾತ್ರ ದೊರೆಯುತ್ತದೆ.
ವರ್ಷವಿಡೀ ನೀರು ದೊರೆಯಬೇಕಾದರೆ ಮಳೆಯ ನೀರನ್ನು ತಡೆಹಿಡಿಯಬೇಕಾಗುತ್ತದೆ.
(ಆ) ಸರಕಾರದ ವತಿಯಿಂದ ಬರಗಾಲ
ಪೀಡಿತ ಭಾಗದಲ್ಲಿಯ ನಾಗರಿಕರಿಗೆ ಮತ್ತು ಪ್ರಾಣಿಗಳನ್ನು ತಾತ್ಕಾಲಿಕವಾಗಿ ಸುರಕ್ಷಿತವಾದ ಭಾಗಕ್ಕೆ
ಸ್ಥಳಾಂತರಿಸಲಾಗುತ್ತದೆ. = ತಪ್ಪು ಬರಗಾಲ ಪೀಡಿತ ಭಾಗದಲ್ಲಿಯ ನಾಗರಿಕರಿಗೆ ಮತ್ತು
ಪ್ರಾಣಿಗಳಿಗೆ ಆಹಾರದ ಮತ್ತು ಮೇವು ನೀರಿನ ಪೂರೈಕೆ ಸರಕಾರದ ವತಿಯಿಂದ ಮಾಡಲಾಗುತ್ತದೆ.
ಉಪಕ್ರಮ:
೧. ನಿಮ್ಮ ಪಾಲಕರೊಂದಿಗೆ ಅಥವಾ
ಗೆಳೆಯರೊಂದಿಗೆ ಮಾತನಾಡಿ ವರ್ತಮಾನಪತ್ರದಿಂದ ಅಥವಾ ಸಂಕೇತ ಸ್ಥಳದ ಮೇಲಿಂದ ನಮ್ಮ ರಾಜ್ಯದಲ್ಲಿ ಯಾವ
ವರ್ಷ ಬರಗಾಲ ಬಿದ್ದಿತ್ತು, ಮತ್ತು
ಬರಗಾಲದ ಸಂಕಟದಿಂದ ಪಾರಾಗಲು ಯಾವ ಉಪಾಯಗಳನ್ನು ಯೋಜಿಸಲಾಗಿತ್ತು, ಎಂಬುದರ ಮಾಹಿತಿ ಪಡೆಯಿರಿ.
೨. ವರ್ತಮಾನಪತ್ರಗಳಲ್ಲಿ
ಪ್ರಕಟವಾಗಿ ಬಂದ ಹರಿಯುವ ನೀರಿನ, ನಿಂತ ನೀರಿನ ಛಾಯಾಚಿತ್ರಗಳನ್ನು ಸಂಗ್ರಹಿಸಿರಿ.
೧೭.
ಬಟ್ಟೆ- ನಮ್ಮ ಅವಶ್ಯಕತೆ
ಪ್ರ. ೧.
ಕೆಳಗಿನವುಗಳಲ್ಲಿ ಯಾವ ವಸ್ತುಗಳು ನಿಮ್ಮ ಹತ್ತಿರ ಇರಬಹುದು ಎಂದು ಅನಿಸುವುದೋ ಆ ವಸ್ತುಗಳ
ಹೆಸರುಗಳನ್ನು ಟಿಪ್ಪಣಿ ಪುಸ್ತಕದಲ್ಲಿ ಬರೆಯಿರಿ.
೧) ನೀರಿನ ಬಾಟಲಿ ೨)
ಚೆಂಡು ೩) ಗೋಠಿ ೪) ಲ್ಯಾಪ್ ಟಾಪ್
೫) ಪ್ಲಾವರ್ ಪಾಟ್ ೬)
ಮೊಬಯಿಲ್ ೭) ಸಾಯಕಲ್ಲು ೮) ಸ್ಕೂಟರ್
೯) ಫೋಟೋಫ್ರೇಮ್ ೧೦)
ಊಟದ ಡಬ್ಬಿ
ಇವುಗಳಲ್ಲಿ ನೀವು ಯಾವ
ವಸ್ತುಗಳನ್ನು ನೀವು ಸ್ವತ: ಉಪಯೋಗಿಸುವಿರಿ?
ಪ್ರ. ೨. ಪಾರಂಪರಿಕ
ವೇಷಭೂಷಣ ಸ್ಪರ್ಧೆಗಾಗಿ ನೀವು ಯಾವ ಯಾವ ಬಟ್ಟೆಗಳನ್ನು ಆರಿಸುವಿರಿ. ಅವುಗಳನ್ನು ಟಿಪ್ಪಣಿ
ಪುಸ್ತಕದಲ್ಲಿ ಬರೆಯಿರಿ.
ಉತ್ತರ: ಪಾರಂಪರಿಕ
ವೇಷಭೂಷಣ ಸ್ಪರ್ಧೆಗಾಗಿ ಮಹಾರಾಷ್ಟ್ರದಲ್ಲಿ ನಾವು ನಮ್ಮ ಪಾರಂಪರಿಕ ವೇಷಭೂಷಣ ಧೋತರ, ಸದರಾ,
ಟೊಪ್ಪಿಗೆ, ಶಾಲು ಇತ್ಯಾದಿ ಬಟ್ಟೆಗಳ ಆಯ್ಕೆ ಮಾಡುತ್ತೇವೆ.
ಪ್ರ. ೩. ಕೆಳಗಿನ
ಕೋಷ್ಟಕದಲ್ಲಿ ನಮ್ಮ ದೇಶದಲ್ಲಿಯ ಕೆಲವು ರಾಜ್ಯಗಳ ಹೆಸರುಗಳನ್ನು ಕೊಡಲಾಗಿದೆ. ಅಲ್ಲಿಯ ಪ್ರಸಿದ್ಧ
ಬಟ್ಟೆಗಳ ಪ್ರಕಾರಗಳನ್ನು ಕೋಷ್ಟಕದಲ್ಲಿ ಬರೆಯಿರಿ.
ಉತ್ತರ:
|
ರಾಜ್ಯದ ಹೆಸರು |
ಬಟ್ಟೆ |
|
ಮಹಾರಾಷ್ಟ್ರ |
ಧೋತರ, ರೇಷ್ಮೆ ಸೀರೆ, ಪೈಠಣಿ, |
|
ಓಡಿಶಾ |
ಕಟಕಿ ಸೀರೆ, ಕುರ್ತಾ, ಗಮಾಚಾ, ಸಂಬಳಪುರಿ ಸೀರೆ |
|
ಪಶ್ಚಿಮ ಬಂಗಾಳ |
ಧೋತರ, ಢಾಕಾ, ಸಿಲ್ಕ ಸೀರೆ, ಬಲುವಾರ ಸೀರೆ |
|
ಕರ್ನಾಟಕ |
ಧೋತರ, ಕುರ್ತಾ, ರೇಷ್ಮೆ ಸೀರೆ, ಲುಂಗಿ |
|
ಗುಜರಾತ |
ಘಾಘರಾ ಚೋಲಿ, ಒಡಣಿ, ಸೀರೆ |
|
ಪಂಜಾಬ |
ಸಲವಾರ ಕಮೀಜ್, ಕುಡತಾ, ಪಾಯಜಾಮ, ಹೂವಿನಾಕಾರ ಸೀರೆ |
|
ಕಾಶ್ಮೀರ |
ಸಿಲ್ಕ್ , ಕಡಿಯಲ್ ಪೀತಾಂಬರ್ |
ಪ್ರ. ೪. ಮಹಾರಾಷ್ಟ್ರ
ರಾಜ್ಯದಲ್ಲಿಯ ವೈಶಿಷ್ಟ್ಯಪೂರ್ಣವಾದ ವಸ್ತ್ರಗಳನ್ನು ಸರಿಯಾಗಿ ಹೊಂದಿಸಿ ಬರೆಯಿರಿ.
1) ಪೈಠಣ = ಪೈಠಣಿ
2) ಯೆವಲಾ = ಸೀರೆ
3) ಔರಂಗಾಬಾದ = ಹಿಮರೂ
ಶಾಲು
4) ಸೋಲಾಪುರ = ಚಾದರ
5) ಇಚಲಕರಂಜಿ = ಕೈಮಗ್ಗ
ಹಾಗೂ ಯಂತ್ರ ಮಗ್ಗ
ಉಪಕ್ರಮ: ಸಮೀಪದ ಬಟ್ಟೆಗಳ ಪ್ರದರ್ಶನಕ್ಕೆ ಭೇಟಿ ನಿಡಿರಿ.
ಅಲ್ಲಿ ಇಟ್ಟ ಬಟ್ಟೆಗಳ ಉಪಯೋಗದ ಬಗೆಗೆ ಅಧಿಕ ಮಾಹಿತಿ ಪಡೆಯಿರಿ.
ಕ್ಷೇತ್ರ
ಭೇಟಿ: ವಿದ್ಯಾರ್ಥಿಗಳಿಗೆ ಹತ್ತಿರವಿರುವ
ವಸ್ತ್ರೋದ್ಯೋಗ ಕೇಂದ್ರಕ್ಕೆ ಕರೆದೊಯ್ಯಿರಿ. ಅಲ್ಲಿಯ ಕುಶಲ ಕೆಲಸಗಾರನ ಸಂದರ್ಶನ ತೆಗೆದುಕೊಂಡು
ಮಾಹಿತಿ ಪಡೆದು ಬರೆಯಿರಿ,
೧)
೨)
೧೮.
ಪರ್ಯಾವರಣ ಮತ್ತು ನಾವು
ಪ್ರ. ೧. ಏನು
ಮಾಡುವಿರಿ?
ನದಿ, ಕೆರೆಗಳಲ್ಲಿ
ಜಲಪರ್ಣಿಯ ಹಾಸಿಗೆ ಪಸರಿಸಿದೆ.
ಜಲಪರ್ಣಿ ಹಾಸಿದ ನದಿಯಲ್ಲಿ
ಅಥವಾ ಕೆರೆಯಲ್ಲಿ ಇಳಿಯುವಾಗ ಕಾಳಜಿಪೂರ್ವಕ ಇಳಿಯಬೇಕು. ಆಗಾಗ ಈ ಜಲಪರ್ಣಿ ವನಸ್ಪತಿಗಳನ್ನು
ತೆಗೆಯುತ್ತಿರಬೇಕು.
ಪ್ರ. ೨. ಸ್ವಲ್ಪ
ತಲೆ ಓಡಿಸಿರಿ.
ಯಾವುದೊಂದು
ಸ್ಥಳದಲ್ಲಿ ಹದ್ದು ವಾಸಿಸದಿದ್ದರೆ ಏನಾಗುವದು? ಯಾವ ಸಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವದು? ಯಾವ
ಸಜೀವಿಗಳ ಸಂಖ್ಯೆಯಲ್ಲಿ ಕಡಿಮೆಯಾಗುವದು?
ಉತ್ತರ: ಹದ್ದುಗಳು ಸಣ್ಣ
ಸಣ್ಣ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತದೆ. ಹದ್ದುಗಳ ಸಂಖ್ಯೆ ಕಡಿಮೆಯಾದರೆ ಇಲಿ, ಹೆಗ್ಗಣ, ಸಣ್ಣ
ಪಕ್ಷಿಗಳು, ಹಾವುಗಳಂತಹ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತದೆ. ಅದರಂತೆ
ಹದ್ದುಗಳ ಮೇಲೆ ಆಹಾರಕ್ಕಾಗಿ ಅವಲಂಬಿಸಿರುವ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆ ಕೂಡ ಕಡಿಮೆ
ಆಗುವುದು.
ಪ್ರ. ೩. ಕೆಳಗಿನ
ಪ್ರಶ್ನೆಗಳಿಗೆ ಉತ್ತರಿಸಿರಿ.
(ಅ)
ಸ್ಥಳಾಂತರ ಎಂದರೇನು?
ಉತ್ತರ: ಪ್ರಾಣಿಗಳು ಅಥವಾ
ಪಕ್ಷಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೆಲವು ಸಮಯದ ಸಲುವಾಗಿ ಅಥವಾ ಕಾಯಮಸ್ವರೂಪಿ
ವಾಸ್ತವ್ಯಕ್ಕೆ ಹೋಗುವುದಕ್ಕೆ ಸ್ಥಳಾಂತರ ಎನ್ನುವರು.
(ಆ)
ಪಕ್ಷಿಗಳ ಜೀವನಕ್ರಮ ಬರೆಯಿರಿ.
ಉತ್ತರ: ಹೆಣ್ಣು ಪಕ್ಷಿ
ಗುಡಿನಲ್ಲಿ ಮೊಟ್ಟೆ ಇಡುತ್ತದೆ. ಕೆಲವು ಸಮಯ ಈ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಮೊಟ್ಟೆಯಿಂದ
ಮರಿಗಳು ಹೊರಗೆ ಬಂದಾಗ ಪಕ್ಷಿ ಮರಿಗಳ ಕಾಳಜಿ ತೆಗೆದುಕೊಳ್ಳುತ್ತದೆ. ಅವುಗಳಿಗೆ ಆಹಾರ
ತಿನ್ನಿಸುತ್ತದೆ. ಮರಿಗಳು ಬೆಳೆದು ಅವುಗಳ ರೆಕ್ಕೆಗಳಲ್ಲಿ ಶಕ್ತಿ ಬಂದರೆ ಅವು ಗೂಡಿನಿಂದ ಹಾರಿ
ಹೋಗುತ್ತವೆ.
(ಇ) ಹವೆಯ ಪ್ರದೂಷಣೆಯ ಎರಡು ಕಾರಣ ಬರೆಯಿರಿ.
ಉತ್ತರ: ೧. ಕಾರಖಾನೆಗಳಿಂದ
ಹೊರ ಹೊಮ್ಮುವ ಕಾರ್ಬನ್ ಡೈ ಆಕ್ಸೈಡಯುಕ್ತ ರಸಾಯನಗಳು ವಾತಾವರಣದಲ್ಲಿ ಕೂಡಿಕೊಂಡು ಹವೆ
ದೂಷಿತವಾಗುತ್ತದೆ.
೨. ದೂಷಿತ
ನೀರು ನೆಲದಲ್ಲಿ ಸೇರಿದಾಗ ಮಣ್ಣು ಪ್ರದುಷಣೆ ಆಗುತ್ತದೆ.
(ಈ) ಜಮೀನಿನ
ಮೇಲಿನ ಉಪಲಬ್ಧವಿರುವ ವನಕ್ಷೇತ್ರದ ಉಪಯೋಗ ನಾವು ಯಾವುದಕ್ಕಾಗಿ ಮಾಡುತ್ತೇವೆ?
ಉತ್ತರ: ಭೂಮಿಯ ಮೇಲಿರುವ
ವನಕ್ಷೇತ್ರವನ್ನು ಮಾನವನು ಹಲವಾರು ಕಾರಣಗಳಿಗಾಗಿ ಉಪಯೋಗಿಸುತ್ತಾ ಬಂದಿದ್ದಾನೆ. ಹೊಲ, ವಸಾಹತು, ಉದ್ಯೋಗಗಳು, ಅದರಂತೆ ರಸ್ತೆ ಮತ್ತು ರೈಲುಮಾರ್ಗ ತಯಾರಿಸಲು
ದೊಡ್ಡ ಪ್ರಮಾಣದಲ್ಲಿ ಅರಣ್ಯಗಳನ್ನು ಕಾಡಿಯಲಾಗುತ್ತದೆ.
ಪ್ರ. ೪. ಕಾರಣ
ಬರೆಯಿರಿ.
(ಅ) ಜೈವಿಕ
ಘಟಕಗಳ ಸಂವರ್ಧನೆ ಮಾಡುವದು ಮಹತ್ವದ್ದಾಗಿದೆ.
ಉತ್ತರ: ಜೈವಿಕ ಘಟಕಗಳು
ನಷ್ಟವಾದರೆ ಪರ್ಯಾವರಣದಲ್ಲಿಯ ಆಹಾರ ಸರಪಳಿ ಖಂಡಿತವಾಗುವುದು ಮತ್ತು ಕೆಲವು ಪ್ರಜಾತಿಗಳು
ನಾಮಶೇಷವಾಗುವವು. ನಿಸರ್ಗದ ಸಮತೋಲನ ಕಳೆದರೆ ಮಾನವನ ಮೇಲೆ ಕೂಡ ಪರಿಣಾಮವಾಗುತ್ತದೆ. ಆದ್ದರಿಂದ
ಜೈವಿಕ ಘಟಕಗಳ ಸಂವರ್ಧನೆ ಮಾಡುವುದು ಮಹತ್ವದ್ದಾಗಿದೆ.
(ಆ)
ದಿನದಿಂದ ದಿನಕ್ಕೆ ವನ್ಯಪ್ರಾಣಿಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದೆ.
ಉತ್ತರ: ಮನುಷ್ಯನು ತನ್ನ
ಉಪಯೋಗಕ್ಕಾಗಿ ಅರಣ್ಯಗಳನ್ನು ಕಡಿದು ಅಲ್ಲಿಯ ಜೈವ ವಿವಿಧತೆ ನಷ್ಟಮಾಡುತ್ತಿದ್ದಾನೆ.
ಅರಣ್ಯಗಳಲ್ಲಿ ವಿವಿಧ ಪ್ರಕಾರದ ಪ್ರಾಣಿಗಳು, ಪಕ್ಷಿಗಳು ವಾಸಿಸುತ್ತವೆ. ಅರಣ್ಯ ಇಲ್ಲದೆ ಅಲ್ಲಿ ದೊರೆಯುವ ಆಸರೆ ಸಿಗದೇ ದಿನದಿಂದ
ದಿನಕ್ಕೆ ವನ್ಯ ಪ್ರಾಣಿಗಳ ಸಂಖ್ಯೆಯಲ್ಲಿ ಕಡಿಮೆ ಆಗುತ್ತಿದೆ.
ಪ್ರ. ೫. ಸರಿ
ಅಥವಾ ತಪ್ಪ ಎಂಬುದನ್ನು ಬರೆಯಿರಿ.
(ಆ) ಅಜೈವಿಕ ಘಟಕಗಳಲ್ಲಿ ಮೃತ
ವನಸ್ಪತಿ ಹಾಗೂ ಪ್ರಾಣಿಗಳ ಸಮಾವೇಶವಾಗುತ್ತದೆ. = ತಪ್ಪು
(ಆ) ಜೈವ ವೈವಿಧ್ಯತೆಯನ್ನು
ಕಾಯ್ದುಕೊಳ್ಳುವದು ಅವಶ್ಯಕವಿದೆ. = ಸರಿ
ಪ್ರ. ೬. ಕೆಳಗೆ
ಕೊಟ್ಟಿರುವ ವಸ್ತು/ಪದಾರ್ಥ/ಘಟಕ ಇವುಗಳನ್ನು ಮಾನವ ನಿರ್ಮಿತ ಮತ್ತು ನಿಸರ್ಗ ನಿರ್ಮಿತ ಎಂದು
ಗುಂಪುಗಳಲ್ಲಿ ವಿಂಗಡಿಸಿರಿ.
ಮಣ್ಣು, ಕುದುರೆ, ಕಲ್ಲು ಜಲಪರ್ಣಿ, ಪುಸ್ತಕ, ಸೂರ್ಯಪ್ರಕಾಶ, ಡಾಲಿನ್, ಪೆನ್ನು, ಕುರ್ಚಿ, ನೀರು, ಹತ್ತಿ, ಮೇಜು, ಗಿಡ, ಇಟ್ಟಿಗೆ.
|
ವಸ್ತು/ಪದಾರ್ಥ/ಘಟಕ |
ವಸ್ತುಗಳು |
|
ಮಾನವ ನಿರ್ಮಿತ |
ಪುಸ್ತಕ, ಡಾಲಿನ್, ಪೆನ್ನು,
ಕುರ್ಚಿ, ಮೇಜು, ಇಟ್ಟಿಗೆ |
|
ನಿಸರ್ಗ ನಿರ್ಮಿತ |
ಮಣ್ಣು, ಕುದುರೆ, ಕಲ್ಲು ಜಲಪರ್ಣಿ, ಸೂರ್ಯಪ್ರಕಾಶ, ನೀರು, ಹತ್ತಿ, ಗಿಡ, |
ಉಪಕ್ರಮ:
೧. ವರ್ಲ್ಡ್ ವಾಯಿಡ ಫಂಡ ಫಾರ
ನೇಚರ (WWE)
ಈ ಅಂತರರಾಷ್ಟ್ರೀಯ ಸಂಸ್ಥೆಯ ಕಾರ್ಯಗಳ ಬಗ್ಗೆ ಮಾಹಿತಿ ದೊರಕಿಸಿರಿ.
೨. ಸಜೀವಿಗಳ ಮೇಲೆ ಆಗುವ
ದುಷ್ಪರಿಣಾಮಗಳನ್ನು ತಡೆಗಟ್ಟಲು ನಿಮ್ಮ ಪರಿಸರದಲ್ಲಿ ಏನು ಮಾಡಲಾಗುತ್ತದೆ? ಎಂಬುದರ ಮಾಹಿತಿ ಪಡೆಯಿರಿ.
೧೯.
ಆಹಾರ ಘಟಕಗಳು
ಪ್ರ. ೧. ಏನು ಮಾಡುವಿರಿ ?
ಶರೀರಕ್ಕೆ ಸಾಕಷ್ಟು
ಪ್ರೋಟೀನುಗಳು ದೊರೆಯಬೇಕು.
ಉತ್ತರ: ಶರೀರದ ರಚನೆಗಾಗಿ, ಬೆಳವಣಿಗೆಗಾಗಿ ಮತ್ತು ಸವಕಳಿ ತುಂಬಿ ಬರಲೆಂದು ಹೆಚ್ಚು
ಪ್ರಮಾಣದಲ್ಲಿ ಪ್ರೊಟೀನುಗಳು ಆಹಾರದಲ್ಲಿ ಇರಬೇಕಾಗುತ್ತದೆ. ಅದಕ್ಕಾಗಿ ಮೊಟ್ಟೆ, ಮಾಂಸ, ಮೀನುಗಳಂಥ ಪ್ರೊಟೀನುಗಳು ಇರುವ ಆಹಾರ ಪದಾರ್ಥಗಳನ್ನು
ತಿನ್ನಬೇಕು. ಮೊಳಕೆ ಬಂದ ಉಸಳಿ, ಹಾಲಿನ ಪದಾರ್ಥಗಳು ನಮ್ಮ ಆಹಾರದಲ್ಲಿ ಇರಬೇಕು.
ಪ್ರ. ೨. ಸ್ವಲ್ಪ
ತಲೆ ಓಡಿಸಿರಿ.
ದಿನಾಲು ಹಾಲು ಕುಡಿಯಲು ಏಕೆ
ಹೇಳುತ್ತಾರೆ ?
ಉತ್ತರ: ಹಾಲಿನಲ್ಲಿ ಪ್ರೊಟೀನ್
ಇರುತ್ತದೆ. ಶರೀರಕ್ಕೆ ಸಾಕಷ್ಟು ಪ್ರೋಟೀನುಗಳುಸ್ನಿಗ್ಧ ಪದಾರ್ಥಗಳು ಹಾಲಿನಲ್ಲಿ ಇರುತ್ತದೆ. ಹಾಲಿನಲ್ಲಿ
ಕ್ಯಾಲ್ಸಿಯಮ್ ಇದ್ದು ಎಲುಬುಗಳಿಗೆ ಶಕ್ತಿ ಕೊಡುತ್ತದೆ. ಹಾಲಿನಿಂದ ಶರೀರದ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಆದ್ದರಿಂದ
ಮಕ್ಕಳಿಗೆ ದಿನಾಲು ಹಾಲು ಕುಡಿಯಲು ಹೇಳುತ್ತಾರೆ
ಪ್ರ. ೩. ಕೆಳಗಿನ
ಪ್ರತಿಯೊಂದು ಆಹಾರ ಘಟಕದ ಎರಡು ಮೂಲಗಳನ್ನು ಹೇಳಿರಿ.
(ಅ) ಖನಿಜಗಳು: ತರಕಾರಿ
ಪಲ್ಲ್ಯೆಗಳು, ಹಣ್ಣುಗಳು ಲೋಹ, ಕ್ಯಾಲ್ಸಿಯಮ್, ಸೋಡಿಯಮ್,
ಪೊಟ್ಯಾಶಿಯಮ್
(ಆ)
ಪ್ರೋಟೀನುಗಳು: ಹಾಲು, ಮೊಸರು, ಮೊಟ್ಟೆ, ಮಾಂಸ, ಪನಿರ
(ಇ) ಪಿಷ್ಟಮಯ
ಪದಾರ್ಥಗಳು: ಜೋಳ, ಸಜ್ಜೆ, ಗೋದಿ, ಅಕ್ಕಿ, ಬಟಾಟೆ
ಇತ್ಯಾದಿಗಳಲ್ಲಿ ಪಿಷ್ಟ ಇರುತ್ತದೆ.
ಪ್ರ. ೪. ಬಿಟ್ಟ ಸ್ಥಳಗಳಲ್ಲಿ
ಯೋಗ್ಯ ಶಬ್ದ ತುಂಬಿರಿ.
(1) ಪಿಷ್ಟಮಯ ಪದಾರ್ಥ/ಜೀವನಸತ್ವಗಳಿಂದಾಗಿ ನಮ್ಮ ಶರೀರಕ್ಕೆ
ರೋಗಗಳ ಪ್ರತಿಕಾರ ಮಾಡುವ ಶಕ್ತಿ ದೊರೆಯುತ್ತದೆ.
(ಆ) ಕ್ಯಾಲ್ಸಿಯಮ್‌ನಿಂದಾಗಿ
ನಮ್ಮ ಎಲುಬುಗಳು ಬಲಿಷ್ಟ ಆಗುತ್ತವೆ.
(ಇ) ಸಿಹಿ ಯಾಗಿರುವ ಆಹಾರ
ಪದಾರ್ಥಗಳಲ್ಲಿ ವಿವಿಧ ಪ್ರಕಾರದ ಶರ್ಕರಾಗಳು
ಇರುತ್ತವೆ.
(ಈ) ಸರ್ವ ಆಹಾರ ಘಟಕಗಳ ಯೋಗ್ಯ
ಪ್ರಮಾಣದಲ್ಲಿ ಪೂರೈಸುವ ಆಹಾರಕ್ಕೆ ‘ಸಮತೋಲ ಆಹಾರ’ ಎನ್ನುತ್ತಾರೆ.
ಪ್ರ. ೫.
ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(ಆ) ಪಿಷ್ಟಮಯ ಪದಾರ್ಥಗಳ
ಪಚನದಿಂದ ದೊರೆಯುವ ಶರ್ಕರೆಯ ಶರೀರಕ್ಕೆ ಯಾವ ಉಪಯೋಗ ಆಗುತ್ತದೆ?
ಉತ್ತರ: ಪಿಷ್ಟಮಯ ಪದಾರ್ಥಗಳ ಪಚನದಿಂದ
ದೊರೆಯುವ ಶರ್ಕರೆಯ ಶರೀರದಲ್ಲಿ ಮಂದ ಜ್ವಲನ ಆಗುತ್ತದೆ. ಈ ಜ್ವಲನದಿಂದ ನಿರ್ಮಾಣ ವಾಗುವ ಶಕ್ತಿಯ ಉಪಯೋಗ
ಶರೀರದ ವಿವಿಧ ಕೆಲಸಕ್ಕಾಗಿ ಆಗುತ್ತದೆ. ಶರೀರವನ್ನು ಬೆಚ್ಚಗೆ ಇಡುವ ಸಲುವಾಗಿ ಈ ಶಕ್ತಿ ಉಪಯೋಗವಾಗುತ್ತದೆ.
(ಆ) ತಂತುಮಯ ಪದಾರ್ಥಗಳ ಮೂಲ
ಯಾವವು?
ಉತ್ತರ: ಗೋದಿ, ಜೋಳ, ಸಜ್ಜೆ, ತರಕಾರಿಗಳ ಸೊಟ್ಟಿ, ಕಾಯಿಪಲ್ಲ್ಯೆಗಳು ಇವು ತಂತುಮಯ
ಪದಾರ್ಥಗಳ ಮೂಲವಾಗಿವೆ.
(ಇ) ಯಾವುದಕ್ಕೆ ಕಾರ್ಬೋದಕಗಳು
ಎನ್ನುತ್ತಾರೆ?
ಉತ್ತರ: ಶರೀರಕ್ಕೆ ಶಕ್ತಿ ಕೊಡುವ
ಪಿಷ್ಟಮಯ ಪದಾರ್ಥಗಳು, ಶರ್ಕರಾಗಳು
ಹಾಗೂ ತಂತುಮಯ ಪದಾರ್ಥ ಇವುಗಳನ್ನು ಒಟ್ಟಿನಲ್ಲಿ ಕಾರ್ಬೊದಕಗಳು ಎಂದು ಕರೆಯುತ್ತಾರೆ.
(ಈ) ನ್ಯೂನಪೋಷಣೆ ಎಂದರೇನು?
ಉತ್ತರ: ಶರೀರದ ಯೋಗ್ಯ ಪೋಷಣೆ
ಆಗಲು ಆಹಾರದಲ್ಲಿ ಸರ್ವ ಆಹಾರ ಘಟಕಗಳು ಸಾಕಷ್ಟು ಮತ್ತು ಯೋಗ್ಯ ಪ್ರಮಾಣದಲ್ಲಿ ದೊರೆಯುವುದು
ಆವಶ್ಯಕವಿರುತ್ತದೆ. ವ್ಯಕ್ತಿಗೆ ಪೋಷಕ ಆಹಾರ ಘಟಕಗಳು ಯೋಗ್ಯ ಪ್ರಮಾಣದಲ್ಲಿ ಮತ್ತು ಸಾಕಷ್ಟು
ಪ್ರಮಾಣದಲ್ಲಿ ಸಿಗದಿದ್ದರೆ ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಆಗುತ್ತವೆ. ಇದಕ್ಕೆ
ನ್ಯೂನ ಪೋಷಣೆ ಎಂದು ಎನ್ನುತ್ತಾರೆ.
ಪ್ರ. ೬. ಹೊಂದಿಸಿ
ಬರೆಯಿರಿ.
(೧) ಸಿಗ್ನಪದಾರ್ಥ (ಅ) ಜೋಳ
(೨) ಪ್ರೋಟೀನ್‌ಗಳು (ಆ) ಎಣ್ಣೆ
(೩) ಜೀವನಸತ್ವಗಳು (ಇ) ಧಾನ್ಯದ ಹೊಟ್ಟು
(೪) ಖನಿಜಗಳು (ಈ) ಬೇಳೆ ಕಾಳುಗಳು
(೫) ಪಿಷ್ಟಮಯ ಪದಾರ್ಥ (ಉ) ಲೋಹ
ಉತ್ತರ: ೧ – ಆ, ೨ – ಇ, ೩ - ಈ, ೪ - ಉ , ೫ - ಅ
ಉಪಕ್ರಮ: ಯಾವ
ಪದಾರ್ಥಗಳಿಂದ ವಿವಿಧ ಆಹಾರ ಘಟಕಗಳು ದೊರೆಯುತ್ತವೆಯೋ ಅಂತಹ ಆಹಾರ ಪದಾರ್ಥಗಳ ಚಿತ್ರಗಳನ್ನು
ಸಂಗ್ರಹ ಮಾಡಿರಿ.
೨. ಅಂಗಣವಾಡಿಯಲ್ಲಿ ಕೊಡುವ
ಪೂರಕ ಆಹಾರದ ಬಗ್ಗೆ ಮಾಹಿತಿ ದೊರಕಿಸಿರಿ. ಅದನ್ನು ವರ್ಗದಲ್ಲಿ ಹೇಳಿರಿ.
೨೦.
ನಮ್ಮ ಭಾವನಾತ್ಮಕ ಜಗತ್ತು.
ಪ್ರ. ೧. ಬಿಟ್ಟ ಸ್ಥಳದಲ್ಲಿ
ಯೋಗ್ಯ ಶಬ್ದ ತುಂಬಿರಿ.
(ಅ) ಮಾನವನು ವಿಚಾರಶೀಲನಾಗಿದ್ದಾನೆ, ಹಾಗೆಯೇ ಭಾವನಾಶೀಲನೂ ಆಗಿದ್ದಾನೆ.
(ಆ) ನಮ್ಮ ಗೆಳೆಯ ಗೆಳತಿಯರಲ್ಲಿ ಯಾವ ಒಳ್ಳೆಯ ಗುಣಗಳಿವೆಯೋ ಅವುಗಳ ಬಗ್ಗೆ
ಮೊದಲು ವಿಚಾರ ಮಾಡಬೇಕು.
ಪ್ರ. ೨.
ಮುಂದಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ಸಮತೋಲ
ವ್ಯಕ್ತಿತ್ವವು ಹೇಗೆ ಆಗುತ್ತದೆ ?
ಉತ್ತರ: ಭಾವನೆಗಳ ಯೋಗ್ಯ
ಹೊಂದಾಣಿಕೆ, ಸಾಮರಸ್ಯ ಸಾಧಿಸಿದರೆ
ನಮ್ಮ ವ್ಯಕ್ತಿತ್ವ ಸಮತೋಲ ಆಗುವುದು.
(ಆ) ವಿವೇಕತನ ಮತ್ತು ಸಹಕಾರದ ವೃತ್ತಿ ಯಾವುದರಿಂದ ಕಡಿಮೆ ಆಗುತ್ತದೆ ?
ಉತ್ತರ: ನಾವು ನಮ್ಮ ಸಿಟ್ಟಿನ
ಮೇಲೆ ನಿಯಂತ್ರಣೆ ಇಡದಿದ್ದರೆ ವಿವೇಕತನ ಮತ್ತು ಸಹಕಾರದ ವೃತ್ತಿ ಕಡಿಮೆ ಆಗುತ್ತದೆ.
(2) ನಮ್ಮ ಸ್ವಭಾವಗಳಲ್ಲಿಯ ದೋಷಗಳ ಅರಿವು ಆದನಂತರ ಏನು ಮಾಡಬೇಕು ?
ಉತ್ತರ: ನಮ್ಮ
ಸ್ವಭಾವಗಳಲ್ಲಿಯ ದೋಷಗಳು ನಮಗೆ ಮತ್ತು ಇತರರಿಗೆ ಹಿಡಿಸದೆ ಇದ್ದರೆ ಆ ಸಂಗತಿಗಳನ್ನು
ಪ್ರಯತ್ನಪೂರ್ವಕ ಬದಲಿಸಲು ಪ್ರಯತ್ನ ಮಾಡಬೇಕು.
ಪ್ರ. ೩. ಮುಂದಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ
ಉತ್ತರಿಸಿರಿ.
(ಅ) ಭಾವನೆಗಳ
ಸಮಾಯೋಜನೆ ಎಂದನೇನು?
ಉತ್ತರ: ಮನುಷ್ಯ ವಿಚಾರಶೀಲ ಪ್ರಾಣಿಯಾಗಿದ್ದಾನೆ.
ಅದರಂತೆ ಅವನು ಭಾವನಾಶೀಲನೂ ಆಗಿದ್ದಾನೆ. ಭಾವನೆಗಳ ಮೇಲೆ ನಿಯಂತ್ರಣೆ ಇಡುವುದು, ಭಾವನೆಗಳ ಐಕ್ಯ ಸಾಧಿಸಲು ಬರುವುದು, ಅವುಗಳನ್ನು ಯೋಗ್ಯ ರೀತಿಯಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ವ್ಯಕ್ತ ಪಡಿಸಲು
ಬರುವುದಕ್ಕೆ ‘ಭಾವನೆಗಳ ಸಮಾಯೋಜನೆ’
ಎನ್ನುತ್ತಾರೆ.
(ಆ) ಸಿಟ್ಟಿನ ಯಾವ ದುಷ್ಪರಿಣಾಮಗಳಾಗುತ್ತವೆ?
ಉತ್ತರ: ಸಿಟ್ಟಿನಲ್ಲಿ
ಕೆಳಗಿನ ದುಷ್ಪರಿಣಾಮಗಳು ಆಗುತ್ತವೆ:
1) ನಮ್ಮ ಶಾರೀರಿಕ ಮತ್ತು ಮಾನಸಿಕ ದುಷ್ಪರಿಣಾಮ ಆಗುತ್ತದೆ.
2) ನಾವು ಹಟಮಾರಿ ಮತ್ತು ಸಿಡುಕು ಸ್ವಭಾವದವರಾಗುತ್ತೇವೆ.
3) ವಿವೇಕತನ ಮತ್ತು ಸಹಕಾರದ ವೃತ್ತಿ ಕಡಿಮೆ ಆಗುತ್ತದೆ.
4) ಸಿಟ್ಟಿನಲ್ಲಿ ನಾವು ಇತರರ ಮನಸ್ಸನ್ನು ನೋಯಿಸುತ್ತೇವೆ.
5) ತಲೆನೋವು,
ನಿದ್ರಾನಾಶ, ನಿರುತ್ಸಾಹಗಳಂತಹ ಕೆಲವು ಪರಿಣಾಮಗಳು ಆಗುತ್ತವೆ.
(ಇ) ನಮ್ಮಲ್ಲಿಯ ದೋಷಗಳ ಅರಿವು ಏಕೆ ಇರಬೇಕು?
ಉತ್ತರ: ನಮ್ಮ ಸ್ವಭಾವದಲ್ಲಿಯ
ದೋಷಗಳು ನಮಗೆ ಗೊತ್ತಿರಬೇಕು. ನಮಗೆ ಮತ್ತು ಇತರರಿಗೆ ಹಿಡಿಸದ ಸಂಗತಿಗಳನ್ನು
ಪ್ರಯತ್ನಪೂರ್ವಕವಾಗಿ ಬದಲಿಸಲು ಪ್ರಯತ್ನ ಮಾಡಬೇಕು. ಆ ದೋಷಗಳ ಅರಿವು ನಮಗೆ ಇರದಿದ್ದರೆ ನಮ್ಮ
ವ್ಯಕ್ತಿತ್ವದಲ್ಲಿಯ ದೋಷಗಳು ಹಾಗೇ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ.
ಪ್ರ. ೪.
ನಿಮಗೆ ಏನು ಅನಿಸುತ್ತದೆ ಎಂಬುದನ್ನು ಬರೆಯಿರಿ.
(ಅ) ನಿಮ್ಮ
ಮಾತುಗಳನ್ನು ಶಿಕ್ಷಕರು ಕೇಳಿಸಿಕೊಳ್ಳುವದಿಲ್ಲ.
ಉತ್ತರ: ನನಗೆ ಸಿಟ್ಟು
ಬಂದಿತು ಮತ್ತು ನಿರಾಶೆಯಾಯಿತು.
(ಆ) ಮನೆಯಲ್ಲಿಯ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ತಾಯಿ-ತಂದೆ
ನಿಮ್ಮನ್ನೇ ವಿಚಾರಿಸುವರು.
ಉತ್ತರ: ನನ್ನನ್ನು
ಕೇಳುತ್ತಾರಲ್ಲ ಎಂದು ತಾಯಿ-ತಂದೆಯರ ಬಗ್ಗೆ ಅಭಿಮಾನವೆನಿಸುತ್ತದೆ.
(ಇ) ಗೆಳೆಯನಿಗೆ ದೊಡ್ಡ ಬಹುಮಾನ ದೊರೆತಿದೆ.
ಉತ್ತರ: ನಾನು ಸಂತೋಷಪಟ್ಟು
ಗೆಳೆಯನಿಗೆ ಅಭಿನಂದನೆ ಸಲ್ಲಿಸುತ್ತೇನೆ.
(ಈ) ವರ್ಗದಲ್ಲಿಯ ವಿದ್ಯಾರ್ಥಿಗಳು ನಿಮ್ಮ ಗುಣಗಾನ ಮಾಡುತ್ತಾರೆ.
ಉತ್ತರ: ನನಗೆ ಆನಂದವಾಯಿತು
ಮತ್ತು ಎಲ್ಲರ ಜೊತೆಗೆ ಚೆನ್ನಾಗಿ ಹೊಂದಿಕೊಂಡು ಇರಬೇಕು ಎಂಬ ಪ್ರೇರಣೆ ದೊರೆಯಿತು.
(ಉ) ರೋಹನನು ವರ್ಗದಲ್ಲಿ ನಿಮ್ಮ ಅವಮಾನ ಮಾಡಿದನು.
ಉತ್ತರ: ನನಗೆ
ನಿರಾಶೆಯಾಯಿತು. ನಾನು ಅವನೊಂದಿಗೆ ಮಾತು ಆಡುವುದನ್ನು ಬಿಟ್ಟೆನು.
ಪ್ರ. 5. ನೀವು ಈ
ಪ್ರಸಂಗದಲ್ಲಿ ಏನು ಮಾಡುವಿರಿ.
(ಅ)
ರೋಹಿಣಿಗೆ ನಿಬಂಧ ಸ್ಪರ್ಧೆಯಲ್ಲಿ ಪುರಸ್ಕಾರ ದೊರೆತಿದೆ.
ಉತ್ತರ: ನಾನು ರೋಹಿಣಿಗೆ
ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
(ಆ) ಕವಿತಾಳಿಗೆ ಸಿಟ್ಟು
ಬಂದಿರುವುದರಿಂದ ಅವಳು ತನ್ನ ಉಪಹಾರ ಸೇವಿಸಲಿಲ್ಲ.
ಉತ್ತರ: ನಾನು ಕವಿತಾಳನ್ನು
ತಿಳಿಸಿ ಹೇಳಿ ಉಪಹಾರ ಮಾಡಲು ಅಥವಾ ಊಟ ಮಾಡಲು ಹೇಳುವೇನು.
(ಇ) ವೀಣಾಳು ಶಾಲೆಯಲ್ಲಿ
ಒಬ್ಬಂಟಿಗಳಾಗಿ ಇರುತ್ತಾಳೆ.
ಉತ್ತರ: ವೀಣಾಳೊಂದಿಗೆ ಸ್ನೇಹ
ಬೆಳೆಸಿ ಅವಳ ದು:ಖಕ್ಕೆ ಕಾರಣ ಕೇಳಿ ಪರಿಹಾರ ಮಾಡಲು ಪ್ರಯತ್ನ ಮಾಡುತ್ತೇನೆ.
(ಈ) 'ನನ್ನದು ಹಟವಾದಿ
ಸ್ವಭಾವ ಇದೆ' ಎಂದು ಮಕರಂದ ಹೇಳುತ್ತಾನೆ.
ಉತ್ತರ: ಮಕರಂದನಿಗೆ ವಿವಿಧ
ಶಾಲಾ ಉಪಕ್ರಮದಲ್ಲಿ ತೊಡಗಿಸಿ ಹಟಮಾರಿತನ ಮರೆಯಲು ಪ್ರಯತ್ನಿಸುವೆ.
೨೧.
ಕೆಲಸದಲ್ಲಿ ಮಗ್ನವಾಗಿರುವ ನಮ್ಮ ಅಂತರೇಂದ್ರಿಯಗಳು
ಪ್ರ. ೧. ಏನು
ಮಾಡುವಿರಿ?
ತಲೆಸುತ್ತಿ ಒಬ್ಬ ವ್ಯಕ್ತಿಯ ಬಿದ್ದಿದ್ದಾನೆ, ಆಗ ಜನರು ಅವನ
ಸುತ್ತಲು ನೆರೆದಿದ್ದಾರೆ.
ಉತ್ತರ: ಆ ವ್ಯಕ್ತಿಯನ್ನು
ಮರದ ನೆರಳಿನಲ್ಲಿ ಶುದ್ಧ ಹವೆ ಇರುವಲ್ಲಿಗೆ ತೆಗೆದುಕೊಂಡು ಹೋಗಬೇಕು. ಜನರು ಗುಂಪುಗಟ್ಟಿ
ನಿಂತುಕೊಳ್ಳಬಾರದು. ಅವನ ಮುಖದ ಮೇಲೆ ನೀರು ಸಿಂಪಡಿಸಬೇಕು ನಂತರ ಕುಡಿಯಲು ನೀರು ಕೊಡಬೇಕು. ನಂತರ
ಆಸ್ಪತ್ರೆಗೆ ಕಳುಹಿಸಬೇಕು.
ಪ್ರ. ೨.
ಸ್ವಲ್ಪತಲೆ ಓಡಿಸಿರಿ.
(ಅ) ಅವಸರದಿಂದ ಊಟ ಮಾಡುವಾಗ ನಮಗೆ ಒಣ ಕೆಮ್ಮು ಏಕೆ
ಹತ್ತುತ್ತದೆ ?
ಉತ್ತರ: ನಮ್ಮ ಶರೀರದಲ್ಲಿ
ಅನ್ನ ನಳಿಕೆ ಮತ್ತು ಶ್ವಾಸನಳಿಕೆ ಇವುಗಳ ಆರಂಭ ಒಂದೇ ತುದಿಯಿಂದ ಆಗುತ್ತದೆ. ಅವುಗಳ ನಡುವೆ ಒಂದು
ಪರದೆ ಇದೆ. ಅನ್ನ ನುಂಗುವಾಗ ಶ್ವಾಸನಳಿಕೆಯ ಬಾಯಿ ಮುಚ್ಚಿರುತ್ತದೆ. ನಾವು ಅವಸರದಲ್ಲಿ ಊಟ
ಮಾಡಿದರೆ ಅನ್ನವು ಶ್ವಾಸನಳಿಕೆಯಲ್ಲಿ ಹೋಗುತ್ತದೆ. ಶರೀರದ ಸಮನ್ವಯ ಸಾಧಿಸುವ ಪ್ರವೃತ್ತಿಯಿಂದಾಗಿ
ತನ್ನಿಂದ ತಾನೇ ನಮಗೆ ಠಸಕಿ/ಕೆಮ್ಮು ಹತ್ತುತ್ತದೆ.
(ಆ) ಶ್ವಾಸದ ಮೂಲಕ
ಶರೀರದಲ್ಲಿ ಬರುವ ಹವೆಯ ಶುದ್ದೀಕರಣ ಹೇಗೆ ಆಗುತ್ತದೆ?
ಉತ್ತರ: ಶ್ವಸನಇಂದ್ರಿಯ
ಅಂದರೆ ಮೂಗಿನ ಒಳಗಿನ ತ್ವಚೆಯ ಮೇಲೆ ಅತಿ ಚಿಕ್ಕ ಹಾಗೂ ಸೂಕ್ಷ್ಮ ಲವಗಳು/ಕೂದಲು ಇರುತ್ತವೆ.
ಇವುಗಳಿಂದ ಹವೆಯಲ್ಲಿಯ ಧೂಳಿನ ಕಣಗಳು ಶೋಷಿಸಲಾಗುತ್ತವೆ. ಅಲ್ಲದೆ ಒಳಗಡೆ ದ್ರವರೂಪದ ಶ್ಲೇಷ್ಮ
ಇದ್ದು ಇತರ ಹವೆಯಲ್ಲಿಯ ಅಶುದ್ಧ ಸಂಗತಿಗಳು ಅಂಟಿಕೊಳ್ಳುತ್ತವೆ.ಹೀಗೆ ಶ್ವಾಸದ ಮೂಲಕ
ಶರೀರದಲ್ಲಿ ಬರುವ ಹವೆಯ ಶುದ್ದೀಕರಣ ಆಗುತ್ತದೆ.
ಪ್ರ. ೩. ಕೆಳಗಿನ
ಬಿಟ್ಟಸ್ಥಳಗಳನ್ನು ಯೋಗ್ಯ ಶಬ್ದದಿಂದ ತುಂಬಿರಿ.
(ಅ)
ಆಕ್ಸಿಜನ್ ವಾಯು ಶರೀರದ ಎಲ್ಲ ಭಾಗಗಳ ವರೆಗೆ ತಲುಪಿಸಲಾಗುತ್ತದೆ.
(ಆ), ಜಠರವು ಚೀಲದಂತಹ ಇಂದ್ರಿಯ ಇದೆ.
ಪ್ರ. ೪.
ಹೊಂದಿಸಿ ಬರೆಯಿರಿ.
‘ಅ’ ಗುಂಪು ‘ಬ’ ಗುಂಪು
(೧) ಪುಪ್ಪಸ (ಅ) ರಕ್ತಾಭಿಸರಣ
(೨) ಜಠರ (ಆ) ಶ್ವಸನ ಸಂಸ್ಥೆ
(೩) ಹೃದಯ (ಇ) ನರವ್ಯೂಹ
ಸಂಸ್ಥೆ
(೪) ಮೆದುಳು (ಈ) ಪಚನ ಸಂಸ್ಥೆ
ಉತ್ತರ: ೧ – ಆ, ೨ –
ಈ, ೩ – ಅ, ೪ - ಇ
ಪ್ರ. ೫.
ಸ್ವಲ್ಪದರಲ್ಲಿ ಉತ್ತರಿಸಿರಿ.
(ಅ) ಶರೀರದಲ್ಲಿ ಕಾರ್ಯ ಮಾಡುವ ಸಂಸ್ಥೆಗಳ ಹೆಸರು
ಬರೆಯಿರಿ.
ಉತ್ತರ: ನಮ್ಮ ಶರೀರದಲ್ಲಿ
ಶ್ವಸನ ಸಂಸ್ಥೆ, ಪಚನ ಸಂಸ್ಥೆ, ನರವ್ಯೂಹ ಸಂಸ್ಥೆ, ರಕ್ತಾಭಿಸರಣ ಸಂಸ್ಥೆ, ಉತ್ಸಾರ್ಜನ ಸಂಸ್ಥೆ ಮುಂತಾದ ಸಂಸ್ಥೆಗಳು ಇರುತ್ತವೆ.
(ಆ) ಪುಪ್ಪುಸದಲ್ಲಿ
ಆಕ್ಸಿಜನ್ ಮತ್ತು ಕಾರ್ಬನ್ ಡೈಆಕ್ಸಾಯಿಡಗಳ ಕೊಡಕೊಳ್ಳುವಿಕೆ ಹೇಗೆ ನಡೆಯುತ್ತದೆ?
ಉತ್ತರ: ವಾಯುಕೋಶಗಳಲ್ಲಿ
ಹೊರಗಿನ ಹವೆಯು ತಲುಪಿದಾಗ ಹವೆಯಲ್ಲಿಯ ಆಕ್ಸಿಜನವು ವಾಯುಕೋಶದ ಸುತ್ತಲು ಇರುವ ಸೂಕ್ಷ್ಮ
ರಕ್ತವಾಹಿನಿಗಳಲ್ಲಿ ಹೋಗುತ್ತದೆ ಮತ್ತು ರಕ್ತದ ಮೂಲಕ ಶರೀರದ ಸರ್ವ ಭಾಗಗಳಿಗೆ ತಲುಪುತ್ತದೆ. ಅದೇ
ವೇಳೆಯಲ್ಲಿ ಶರೀರದ ಸರ್ವ ಭಾಗಗಳಿಂದ ರಕ್ತದ ಮೂಲಕ ಬಂದಿರುವ ಕಾರ್ಬನ್ ಡೈ ಆಕ್ಸೈಡವು
ವಾಯುಕೋಶಗಳಲ್ಲಿಯ ಹವೆಯಲ್ಲಿ ಕೂಡಿಕೊಳ್ಳುತ್ತದೆ. ಉಚ್ಚಾಸದ ಸಮಯದಲ್ಲಿ ಅದು ಶರೀರದ ಹೊರಗೆ
ಹಾಕಲಾಗುತ್ತದೆ. ಈ ರೀತಿಯಲ್ಲಿ ವಾಯುಕೋಶದಲ್ಲಿ ಅಂದರೆ ಪುಪ್ಪುಸದಲ್ಲಿ
ಆಕ್ಸಿಜನ್ ಮತ್ತು ಕಾರ್ಬನ್ ಡೈಆಕ್ಸಾಯಿಡಗಳ ಕೊಡಕೊಳ್ಳುವಿಕೆ
ಹೇಗೆ ನಡೆಯುತ್ತದೆ
(2) ಲಾಲಾರಸ ಈ ದ್ರವವು
ಪಾಚಕರಸ ಇದೆ, ಏಕೆ ?
ಉತ್ತರ: ಪಚನ ಕ್ರಿಯೆಯಲ್ಲಿ
ಕೆಲವು ಗ್ರಂಥಿಗಳು ಸಹಾಯ ಮಾಡುತ್ತವೆ. ಅಂತಹ ದ್ರವಗಳಿಗೆ ಪಾಚಕ ರಸ ಎನ್ನುವರು. ಲಾಲಾರಸವು
ಬಾಯಿಯಲ್ಲಿ ಇರುವ ಲಾಲಾಗ್ರಂಥಿಯಲ್ಲಿದ್ದು ಅದರಲ್ಲಿ ಟಾಯಲಿನ್ ಎಂಬ ಪಾಚಕ ರಸ ಇರುತ್ತದೆ. ಆಹಾರ
ಸೇವಿಸುವಾಗ ರಸ ಸ್ರವಿಸುತ್ತದೆ. ಹೀಗೆ ರಸವು ಆಹಾರದಲ್ಲಿ ಸೇರಿಕೊಂಡು ಪಿಷ್ಟಮಯ ಪದಾರ್ಥ ಗ್ಲುಕೋಜನಲ್ಲಿ
ರೂಪಾಂತರವಾಗುತ್ತದೆ. ಮತ್ತು ಆಹಾರ ಪಚನಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದಲೇ ಲಾಲಾರಸವನ್ನು
ಪಾಚಕರಸ ಎಂದು ಹೇಳಲಾಗುತ್ತದೆ.
ಪ್ರ. ೬.
ಯಾವುದಕ್ಕೆ ಹೇಳುತ್ತಾರೆ ಎಂಬುದನ್ನು ಕಂಸದಲ್ಲಿಂದ ಹುಡುಕಿರಿ ಮತ್ತು ಬರೆಯಿರಿ.
(ರಕ್ತಾಭಿಸರಣ, ಶ್ವಸನ ನಳಿಕೆ, ಶ್ವಾಸ ಪಟಲ)
(ಆ) ಇದರ ಮೇಲೆ
ಕೆಳಗೆ ಆಗುವ ಚಲನ ವಲನೆಯಿಂದ ಶ್ವಾಸೋಚ್ಛಾಸ ಆಗುತ್ತದೆ - ಶ್ವಾಸ ಪಟಲ
(ಆ) ಶರೀರದಲ್ಲಿ
ನಿರಂತರವಾಗಿ ರಕ್ತವನ್ನು ಹರಿಯುವಂತೆ ಇಡುವ ಪ್ರಕ್ರಿಯೆ - ರಕ್ತಾಭಿಸರಣ
(2) ಮೂಗಿನಿಂದ ಬಂದ
ಹವೆಯು ನಳಿಕೆಯಲ್ಲಿ ಬರುತ್ತದೆ- ಶ್ವಸನ ನಳಿಕೆ
ಉಪಕ್ರಮ:
ವರ್ಗದಲ್ಲಿ ಗುಂಪುಗಳನ್ನು ತಯಾರಿಸಿ, ಇಂದ್ರಿಯಗಳು ಮತ್ತು
ಅವುಗಳ ಕಾರ್ಯ ಇವುಗಳ ಮೇಲೆ ಆಧಾರಿಸಿದ ರಸ ಪ್ರಶ್ನೆಗಳ ಸ್ಪರ್ಧೆ ತೆಗೆದುಕೊಳ್ಳಿರಿ.
೨೨. ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಾಸ
ಪ್ರ. ೧. ಏನು
ಮಾಡುವಿರಿ?
ಕಬೀರನಿಗೆ ಪ್ರಾಣಿಶಾಸ್ತ್ರ ವಿಷಯದ ಪ್ರಾಧ್ಯಾಪಕ ಆಗುವದಿದೆ.
ಅದಕ್ಕಾಗಿ ಅವನು ಈಗಿನಿಂದಲೇ ಯಾವ ತಯಾರಿ ಮಾಡಬೇಕು?
ಉತ್ತರ: ಕಬೀರನಿಗೆ
ಪ್ರಾಣಿಶಾಸ್ತ್ರ ವಿಷಯದ ಪ್ರಾಧ್ಯಾಪಕ ಆಗುವದಿದೆ. ಅದಕ್ಕಾಗಿ ಅವನು ಈಗಿನಿಂದಲೇ ವಿವಿಧ ಪುಸ್ತಕಗಳಿಂದ ಹಾಗೂ ಮಾಸಿಕಪತ್ರಿಕೆಗಳಿಂದ ಪ್ರಾಣಿ ಶಾಸ್ತ್ರದ
ಬಗ್ಗೆ ಲೇಖನಗಳನ್ನು ಓದಬೇಕು. ಪ್ರಾಣಿ ಹಾಗೂ ಪಕ್ಷಿಗಳ ನಿರೀಕ್ಷಣ ಮಾಡಲು ತೊಡಗಬೇಕು. ಪ್ರಾಣಿಗಳ
ಬಗ್ಗೆ ಅನ್ಹ್ಯಸ ಮಾಡುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು.
ಪ್ರ. ೨.
ಸ್ವಲ್ಪ ತಲೆ ಓಡಿಸಿ.
(ಅ) ಸಾಯಕಲ ನಡೆಸಲು ಕಲಿಯುವ ಪೂರ್ವದಲ್ಲಿ ನಮ್ಮಲ್ಲಿ ಇತರ ಯಾವ
ಯಾವ ಕೌಶಲ್ಯಗಳು ವಿಕಸಿತ ಆಗಿರುತ್ತವೆ?
ಉತ್ತರ: ಸಾಯಕಲ ನಡೆಸಲು ಕಲಿಯುವ ಪೂರ್ವದಲ್ಲಿ ನಮ್ಮ ಚಳವಲನೆಗಳ ಮೇಲೆ ನಿಯಂತ್ರಣೆ ಇಡಲು ಕಲಿತುಕೊಳ್ಳಬೇಕು. ಕಣ್ಣುಗಳನ್ನು
ನೆಟ್ಟಗೆ ಇತ್ತು ಮುಂದಿನಿಂದ ಬರುವ ವಾಹನಗಳ ಮೇಲೆ ಲಕ್ಷ್ಯವಿಡಲು ಬರಬೇಕು. ಬದಿಯ ರಸ್ತೆಗಳಿಂದ ಬರುವ
ವಾಹನಗಳ ಕಡೆ, ಇತ್ತ-ಅತ್ತ ಬೇಗ
ನೋಡುವುದು ಅವಶ್ಯಕವಿದೆ. ನಾವು ಸತತ ಸಾವಧಾನದಲ್ಲಿರಬೇಕು.
(ಆ) ಸುಮನಳಿಗೆ
ಮುಂದೆ ಸ್ವಂತದ ಹೋಟೆಲ ನಡೆಸುವುದೆ. ಅವಳ ಮುಂದಿನ
ಜೀವನದಲ್ಲಿಯ ಕೆಲಸದಲ್ಲಿ ಈಗ ಅವಳು ಕಲಿಯುತ್ತಿರುವ ಯಾವ ಕೌಶಲ್ಯಗಳು ಅವಳಿಗೆ ಉಪಯೋಗಕ್ಕೆ ಬರಲಿವೆ?
ಉತ್ತರ: 1) ಹೊಟೇಲ್
ಮ್ಯಾನೇಜಮೆಂಟ್ ಕೌಶಲ್ಯ,
2) ಚೆನ್ನಾಗಿ ಅಡುಗೆ ಮಾಡಲು ಬರಬೇಕು,
3) ಗ್ರಾಹಕರನ್ನು ಸಂಬಳಿಸುವ ಕಲೆ ಗೊತ್ತಿರಬೇಕು.
4) ಭಾಷಣ ಮತ್ತು ಸಂವಾದ ಸಾಧಿಸುವ ಕೌಶಲ್ಯ
ಪ್ರ. ೩.
ಮುಂದಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(ಅ) ಅನುವಂಶಿಕತೆ ಎಂದರೇನು?
ಉತ್ತರ: ನಮ್ಮ ಕಾಣಿಸುವಿಕೆ, ದೇಹರಚನೆ, ಮೈಕಟ್ಟು
ಇಂತಹ ಅನೇಕ ಲಕ್ಷಣಗಳು ಸಾಧಾರಣವಾಗಿ ನಮ್ಮ ತಾಯಿ-ತಂದೆಯವರಂತೆ ಇರುತ್ತವೆ. ನಮ್ಮ ಕುಟುಂಬದವರ
ಹಾಗೆ ನಮ್ಮಲ್ಲಿ ಜನ್ಮದಿಂದಲೇ ಅನೇಕ ಲಕ್ಷಣಗಳು ಜನ್ಮದಿಂದಲೇ ಬರುವುದಕ್ಕೆ ‘ಅನುವಂಶಿಕತೆ’ ಎನ್ನುತ್ತಾರೆ.
(ಆ) ಬಾಲವಾಡಿಯಲ್ಲಿಯ
ಮಕ್ಕಳು ಮತ್ತು ಐದನೆಯ ಇಯತ್ತೆಯ ವಿದ್ಯಾರ್ಥಿ, ಇವರಲ್ಲಿ ಕಂಡುಬರುವ ವ್ಯತ್ಯಾಸ ಹೇಳಿರಿ.
ಉತ್ತರ:
|
ಬಾಲವಾಡಿಯಲ್ಲಿಯ
ಮಕ್ಕಳು |
ಐದನೆಯ ಇಯತ್ತೆಯ
ವಿದ್ಯಾರ್ಥಿ |
|
1) 3 ರಿಂದ ನಾಲ್ಕು ವರ್ಷದ ಬಾಲಕರು
ಬಾಲವಾಡಿಯಲ್ಲಿರುತ್ತಾರೆ. 2) ಎತ್ತರ ಮತ್ತು ಶರೀರದ ತಾಕತ್ತು ಕಡಿಮೆ ಇರುತ್ತದೆ.
3) ಕೌಶಲ್ಯಗಳ ಅಭಾವ
4) ಶಾಲೆಗೆ ಹೋಗುವಾಗ ಇನ್ನೊಬ್ಬರ ಸಹಾಯ
ಬೇಕಾಗುತ್ತದೆ. |
1) 9 ರಿಂದ 11 ವರ್ಷ ವಯಸ್ಸಿನ ಬಾಲಕರು ಇಯರುತ್ತಾರೆ. 2) ಎತ್ತರ ಮತ್ತು ಶಾರೀರಿಕ ತಾಕತ್ತು ಬಾಲವಾಡಿ
ಮಕ್ಕಳಿಗಿಂತ ಹೆಚ್ಚು ಇರುತ್ತದೆ. 3) ಕೆಲವು ಪ್ರಮಾಣದಲ್ಲಿ
ಹೆಚ್ಚಿನ ಕೌಶಲ್ಯಗಳು ವಿಕಸಿತ ಆಗಿರುತ್ತವೆ 4) ಶಾಲೆಗೆ ಒಬ್ಬಂಟಿಗರಾಗಿ ಹೋಗಬಹುದು.
|
(2) ಜನ್ಮದಿಂದ ಪ್ರೌಢಾವಸ್ಥೆಯವರೆಗೆ ನಮ್ಮಲ್ಲಿ ಯಾವ ಯಾವ ಬದಲಾವಣೆಗಳು
ಆಗುತ್ತವೆ?
ಉತ್ತರ: ಮಗು ಚಿಕ್ಕವನಿರುವಾಗ
ಅವನಿಗೆ ತನ್ನ ಸ್ವಂತ ಕೆಲಸ ಮಾಡಲು ಬರುವುದಿಲ್ಲ. ಅಂಬೆಗಾಲು ಇತ್ತು ನಡೆಯಲು ಕಲಿಯುತ್ತದೆ.
ತೊದಲು ಮಾತಿನ ಮೂಲಕ ಅವ್ವ, ಅಪ್ಪ
ಎನ್ನಲು ಕಲಿಯುತ್ತದೆ. ಕೆಲವು ದಿನಗಳ ನಂತರ ತನ್ನ ಚಲನವಲನೆಗಳ ಮೇಲೆ ನಿಯಂತ್ರಣೆ ಇಡಲು
ಕಲಿಯುತ್ತದೆ. ಅನೇಕ ಕೌಶಲ್ಯಗಳನ್ನು ಮಗು ಕಲಿಯುತ್ತದೆ. ದಿನದಿಂದ ದಿನಕ್ಕೆ ಮಗು ಬಹಳಷ್ಟು
ಕಲಿಯುತ್ತದೆಜನ್ಮದಿಂದ ಪ್ರೌಢಾವಸ್ಥೆಯವರೆಗೆ ನಮ್ಮ ಎತ್ತರ ಮತ್ತು ತೂಕವು ಬೆಳೆಯುತ್ತದೆ.
(ಈ) ನೀವು
ಮೈಗೂಡಿಸಿಕೊಂಡಿರುವ ಯಾವದೇ ಮೂರು ಕೌಶಲ್ಯಗಳನ್ನು ಬರೆಯಿರಿ.
ಉತ್ತರ: ಅನೇಕ ಕೌಶಲ್ಯಗಳ
ಕಲಿಕೆ- ಸಾಯಕಲ್ಲು ನಡೆಸುವುದು,
ಈಜುವುದು, ಕ್ರಿಕೆಟ್ ಆಟ ಆಡುವುದು, ಖೋ-ಖೋ
ಆಟದಲ್ಲಿ ಸಹಭಾಗ ಆಗುವುದು ಮುಂತಾದವುಗಳು.
(ಉ) ಶಾರೀರಿಕ
ಬೆಳವಣಿಗೆ ಯಾವುದಕ್ಕೆ ಅನ್ನುತ್ತಾರೆ?
ಉತ್ತರ: ದಿನಗಳು ಕಳೆದಂತೆ
ನಮ್ಮ ಶರೀರದ ಎತ್ತರ ಹಾಗೂ ತೂಕ ಹೆಚ್ಚಾಗುತ್ತದೆ. ಅದೇ ರೀತಿಯಾಗಿ ನಮ್ಮ ವಯಸ್ಸು
ಹೆಚ್ಚಾಗುತ್ತಿದಂತೆ ಶಾರೀರಿಕ ಶಕ್ತಿ ಕೂಡ ಹೆಚ್ಚುತ್ತಾ ಹೋಗುತ್ತದೆ. ಇದಕ್ಕೆ ಶಾರೀರಿಕ
ಬೆಳವಣಿಗೆ ಎನ್ನುತ್ತಾರೆ.
ಪ್ರ. ೪. ಸರಿ
ಅಥವಾ ತಪ್ಪು ಹೇಳಿರಿ.
(ಆ) ಹೊಸದಾಗಿ ಕಲಿತಿರುವ ಕೆಲಸಗಳನ್ನು ಮಗುವು ಸಾವಕಾಶವಾಗಿ
ತಪ್ಪದೆ ಮಾಡತೊಡಗುತ್ತದೆ. = ಸರಿ
(ಆ) ಜನ್ಮದಿಂದಲೇ ನಾವು ಕೌಶಲ್ಯಗಳನ್ನು ಮೈಗೂಡಿಸಿಕೊಂಡಿರುತ್ತೇವೆ. =ತಪ್ಪು
(ಇ) ಸ್ವಂತದ ಎಲ್ಲ
ಕೆಲಸಗಳನ್ನು ನಾವು ಸ್ವಂತ ಮಾಡುವದಿಲ್ಲ. = ಸರಿ
(ಈ) ಜನ್ಮದಿಂದ ವೃದ್ಧಾವಸ್ಥೆಯವರೆಗೆ ನಮ್ಮ ಎತ್ತರ ಬೆಳೆಯುತ್ತಿರುತ್ತದೆ. =ತಪ್ಪು
ಉಪಕ್ರಮ:
ಮನೆಯಲ್ಲಿಯು ಬೆಕ್ಕು, ನಾಂದಿ
ಅಥವಾ ಪರಿಸರದಲ್ಲಿರು ಪಕ್ಷಿ, ಕೀಟಕ, ಪ್ರಾಣಿಗಳ ಮರಿಗಳ ಜನ್ಮದಿಂದ
ಪ್ರೌಢಾವಸ್ಥೆಯ ವರೆಗೆ ನಿರೀಕ್ಷಣೆ ಮಾಡಿರಿ, ನೋಂದಾಯಿಸಿ ಐಡಿರಿ. ಈ ಉಪಕ್ರಮಕ್ಕಾಗಿ
ಕಳಗಿನ ಸಂಗತಿಗಳನ್ನು ಗಮನಿಸಿ. ಬೆಳವಣಿಗೆ, ಎತ್ತರ, ವಿಕಾಸ, ಕೌಶಲ್ಯಗಳು
ಇತ್ಯಾದಿ. ನಿಮ್ಮ ನೋಂದಣಿಯ ಆಧಾರದಿಂದ ಒಂದು ಸೊಗಸಾದ ಕಥೆ ಬರೆಯಿರಿ.
೨೩. ಸಂಸರ್ಗಜನ್ಯ ರೋಗಗಳು ಮತ್ತು ರೋಗ ಪ್ರತಿಬಂಧ
ಪ್ರ. ೧. ಏನು
ಮಾಡುವಿರಿ?
(ಅ) ಬಹಳ ಹಸಿವೆಯಾಗಿದೆ; ಆದರೆ ಆಹಾರ ಪದಾರ್ಥ
ತೆರೆದಿಡಲಾಗಿದೆ.
ಉತ್ತರ: ತೆರೆದಿಡಲಾದ ಆಹಾರ
ಪದಾರ್ಥದ ಮೇಲೆ ಅನೇಕ ರೋಗಜಂತುಗಳು ಕುಳಿತಿರುತ್ತವೆ. ಅಂತಹ ಆಹಾರ ತಿಂದರೆ ನಮಗೆ ರೋಗಗಳು ತಗಲುವ
ಸಾಧ್ಯತೆ ಇರುತ್ತದೆ. ಆದ್ದರಿಂದ ಎಷ್ಟೇ ಹಸಿವೆಯಾದರೂ ತೆರೆದಿಟ್ಟ ಆಹಾರ ಪದಾರ್ಥ ಸೇವಿಸಬಾರದು.
ಪ್ರ. ೨.
ಸ್ವಲ್ಪ ತಲೆ ಓಡಿಸಿರಿ.
ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಲು ಕೀಟನಾಶಕಗಳನ್ನು ಸಿಂಪಡಿಸುವದು, ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವದು ಇವುಗಳಲ್ಲಿ ಯಾವುದು ಹೆಚ್ಚು ಒಳ್ಳೆಯ
ಉಪಾಯ ಆಗಿದೆ? ಏಕೆ?
ಉತ್ತರ: ಯಾವುದೇ ರೋಗವನ್ನು
ಗುಣಪಡಿಸುವುದಕ್ಕಿಂತ ಅದನ್ನು ಬರದಂತೆ ನೋಡಿಕೊಳ್ಳುವುದು ಒಳ್ಳೆಯದಿರುತ್ತದೆ. ಬಹಳ ದಿನಗಳವರೆಗೆ
ನೀರು ಸಂಗ್ರಹ ಇದ್ದರೆ ಅದರಲ್ಲಿ ಅನೇಕ ಸೊಳ್ಳೆಗಳು ಉತ್ಪತ್ತಿ ಆಗುತ್ತವೆ. ಅವುಗಳನ್ನು
ತಡೆಗಟ್ಟಲು ಕೀಟನಾಶಕ ಸಿಂಪಡಿಸುವುದಕ್ಕಿಂತ ನೀರು ಸಂಗ್ರಹವಾಗದಂತೆ ನೋಡಿಕೋಲೂವುದೇ
ಶ್ರೇಷ್ಟವಿರುವುದು.
ಪ್ರ. ೩.
ಮುಂದಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(ಅ) ಸಂಸರ್ಗಜನ್ಯ ರೋಗ ಎಂದರೇನು?
ಉತ್ತರ:ಕೆಲವು ರೋಗಗಳು ಒಬ್ಬ
ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸೋಂಕು ತಗಲಿ ಹರಡುತ್ತವೆ. ಅಂತಹ ರೋಗಗಳಿಗೆ ಸಂಸರ್ಗಜನ್ಯ
ರೋಗಗಳು ಎಂದು ಹೇಳುವರು.
ಉದಾ: ಫ್ಲ್ಯೂ, ನೆಗಡಿ, ಗಜಕರ್ಣ, ಕಜ್ಜಿ, ಸಿಡುಬು, ಗೊಬ್ಬರ
ಇತ್ಯಾದಿಗಳು.
(ಆ) ರೋಗಪ್ರಸಾರದ
ಮಾಧ್ಯಮಗಳು ಯಾವವು?
ಉತ್ತರ: ರೋಗಗಳ ಪ್ರಸರವು
ಹವೆಯ ಮೂಲಕ, ದೂಷಿತ ನೀರಿನಿಂದ, ದೋಷವುಳ್ಳ ಆಹಾರ ಪದಾರ್ಥಗಳ ಮೂಲಕ ಹಾಗೂ ಕೀಟಕಗಳ ಮೂಲಕ ಹರಡುತ್ತವೆ.
(ಇ) ರೋಗ ಹಬ್ಬಿದಾಗ
ಏನಾಗುತ್ತದೆ?
ಉತ್ತರ: ರೋಗ ಹಬ್ಬಿದಾಗ ಒಂದೇ
ಸ್ಥಳದಲ್ಲಿಯ ಅನೇಕ ಜನರಿಗೆ ಒಂದೇ ಸಮಯದಲ್ಲಿ ಆ ರೋಗ ತಗಲುವ ಸಾಧ್ಯತೆ ಹೆಚ್ಚು ಇರುತ್ತದೆ.
ಉದಾ. ಕೋರೋನಾ ರೋಗ
(ಈ) ಲಸೀಕರಣ ಎಂದರೇನು?
ಉತ್ತರ: ರೋಗಗಳು ಹರಡದಂತೆ ರೋಗ ಪ್ರತಿಬಂಧಕ ಲಸಿಕೆ
ಚುಚ್ಚಲಾಗುತ್ತದೆ. ಲಸಿಕರಣದಿಂದ ಶರೀರದಲ್ಲಿ ಕೆಲವು ನಿರ್ದಿಷ್ಟ ರೋಗಗಳ ವಿರುಧ್ಧ ರೋಗ
ಪ್ರತಿಕಾರಕ ಕ್ಷಮತೆ ವಿಕಸಿತ ಆಗುತ್ತದೆ.
(ಈ) ನವಜಾತ
ಬಾಲಕನಿಗೆ ಕೊಡಲಾಗುವ ಲಸಿಕೆಗಳ ಯಾದಿ ಮಾಡಿರಿ.
ಉತ್ತರ: 1. ಜನ್ಮವಾದ ಕೂಡಲೇ
ಕ್ಷಯರೋಗ ಪ್ರತಿಬಂಧಕ ಲಸಿಕೆ ಚುಚ್ಚಲಾಗುತ್ತದೆ.
2. ಮಗು ಒಂದು ವರೆ ತಿಂಗಳು ಆದಾಗ ಘಟಸರ್ಪ, ನಾಯಿಕೆಮ್ಮು, ಧನುರ್ವಾತ
ಮತ್ತು ಪೋಲಿಯೋ ಪ್ರತಿಬಂಧಕ ಲಸಿಕೆಗಳ ಮೂರು ಡೋಸ ತಿಂಗಳ ಅಂತರದಲ್ಲಿ ಕೊಡಲಾಗುತ್ತದೆ.
3. ಘಟಸರ್ಪ,
ನಾಯಿಕೆಮ್ಮು ಮತ್ತು ಧನುರ್ವಾತ ಪ್ರತಿಬಂಧಕ ಲಸಿಕೆಯನ್ನು ಏಕತ್ರಿತ ತಯಾರಿಸಿರುವುದರಿಂದ ಅದಕ್ಕೆ
ತ್ರಿಗುಣಿ ಲಸಿಕೆ ಎಂದು ಅನ್ನುವರು.
4. ಪೋಲಿಯೋ ಪ್ರತಿಬಂಧಕ ಲಸಿಕೆಯನ್ನು ಐದು ವರ್ಷದ ವರೆಗೆ ವರ್ಷದಲ್ಲಿ ಎರಡು
ಸಲ ಕೊಡಲಾಗುತ್ತದೆ.
ಪ್ರ. ೪.
ಮುಂದಿನ ವಿಧಾನಗಳು ಸರಿ ಅಥವಾ ತಪ್ಪು ಎಂಬುದನ್ನು ಬರೆಯಿರಿ.
(ಅ) ಕರಳು ರೋಗಗಳ ಪ್ರಸಾರ ಹವೆಯ ಮೂಲಕ ಆಗುತ್ತದೆ. = ತಪ್ಪು
(ಆ) ಕೆಲವು ರೋಗಗಳು
ದೈವೀಪ್ರಕೋಪದಿಂದ ಆಗುತ್ತವೆ. = ತಪ್ಪು
ಪ್ರ. ೫.
ಮುಂದೆ ಕೆಲವು ರೋಗ ಕೊಡಲಾಗಿದೆ. ಅವುಗಳನ್ನು ಆಹಾರದ ಮೂಲಕ ಪ್ರಸಾರ, ನೀರಿನ
ಮೂಲಕ ಪ್ರಹಾರ ಮತ್ತು ಹವೆಯ ಮೂಲಕ ಪ್ರಸಾರ ಹೀಗೆ ವರ್ಗಿಕರಿಸಿರಿ.
ಮಲೇರಿಯಾ, ಟಾಯಫಾಯಿಡ, ಕಾಲರಾ, ಕ್ಷಯ, ಕಾಮಾಲೆ, ಗಾಸ್ಟೋ, ಭೇದಿ, ಘಟಸರ್ಪ,
|
ರೋಗಗಳು ಹರಡುವ
ಮಾಧ್ಯಮಗಳು |
ರೋಗಗಳು |
|
ಆಹಾರದ ಮೂಲಕ ಪ್ರಸಾರ |
ಗಾಸ್ಟೋ, ಭೇದಿ, |
|
ನೀರಿನ ಮೂಲಕ ಪ್ರಹಾರ |
ಕಾಲರಾ, ಭೇದಿ, ಕಾಮಾಲೆ |
|
ಹವೆಯ ಮೂಲಕ ಪ್ರಸಾರ |
ಕ್ಷಯ, ಮಲೇರಿಯಾ, ಟಾಯಫಾಯಿಡ |
ಪ್ರ. 6. ಕಾರಣ
ಕೊಡಿರಿ
(ಅ) ಊರಲ್ಲಿ ಕಾಲರಾ ಹಬ್ಬಿದಾಗ ನೀರನ್ನು ಕುದಿಸಿ
ಕುಡಿಯಬೇಕು.
ಉತ್ತರ: ಕಾಲರಾ ರೋಗವು ದೂಷಿತ
ನೀರು ಕುಡಿಯುವುದರಿಂದ ಹರಡುತ್ತದೆ. ದೂಷಿತ ನೀರಿನಲ್ಲಿ ಇರುವ ರೋಗಜಂತುಗಳು ಕರುಳಿನಲ್ಲಿ
ಹೋಗುತ್ತವೆ. ನೀರು ಕುಡಿಸುವುದರಿಂದ ಅದರಲ್ಲಿಯ ರೋಗಜಂತುಗಳು ಸಾಯುತ್ತವೆ. ರೋಗ ಹರಡುವ ಶಕ್ಯತೆ
ಕಡಿಮೆಯಾಗುತ್ತದೆ. ಆದ್ದರಿಂದ ಊರಲ್ಲಿ ಕಾಲರಾ ಹಬ್ಬಿದಾಗ ನೀರನ್ನು ಕುದಿಸಿ
ಕುಡಿಯಬೇಕು.
(ಆ) ಪರಿಸರದಲ್ಲಿ
ನೀರಿನ ಹೊಂಡ ಆಗದಂತೆ ನೋಡಿಕೊಳ್ಳಬೇಕು.
ಉತ್ತರ: ನೀರಿನ ಹೊಂಡದಲ್ಲಿ
ನೀರು ಸಂಗ್ರಹವಾಗಿ ಉಳಿದರೆ ಅದರಲ್ಲಿ ರೋಗಾಣುಗಳು, ಕೀಟಾಣುಗಳು ಹಾಗೂ ಸೊಳ್ಳೆಗಳು ಉತ್ಪನ್ನ ಆಗುತ್ತವೆ. ಆ ಸೊಳ್ಳೆಗಳ ಕಡಿಯುವುದರಿಂದ
ವಿಷಮಜ್ವರ, ಕಾಲರಾ, ಭೇದಿಯಂತಹ ರೋಗಗಳು
ಉಂಟಾಗುತ್ತವೆ. ಆದ್ದರಿಂದ ನಮ್ಮ ಪರಿಸರದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.
ಉಪಕ್ರಮ:
ನೀವು ವಾಸಿಸುವ ಸ್ಥಳದಲ್ಲಿ ಹಬ್ಬಿರುವ ಯಾವುದೊಂದು ಅಂಟುರೋಗದ ಬಗ್ಗೆ
ಕೆಳಗಿನ ಸಂಗತಿಗಳ ಆಧಾರದಿಂದ ಮಾಹಿತಿ ಬರೆಯಿರಿ.
ರೋಗದ ಹೆಸರು:
ರೋಗಜಂತುವಿನ ಹೆಸರು:
ಪ್ರಸಾರದ ಮಾಧ್ಯಮ:
ಪ್ರತಿಬಂಧಿಸಲು ಮಾಡಿದ ಉಪಾಯಗಳು:
೨೪. ಪದಾರ್ಥ, ವಸ್ತು ಮತ್ತು ಶಕ್ತಿ
ಪ್ರ. ೧. ಏನು
ಮಾಡುವಿರಿ?
(ಆ) ಅತಿಥಿಗಳಿಗಾಗಿ
ಬೇಗನ ಶರಬತ್ತು ಮಾಡುವದಿದೆ. ಮನೆಯಲ್ಲಿ ಕೇವಲ ಕಲ್ಲು ಸಕ್ಕರೆ ಇದೆ.
ಉತ್ತರ: ಮನೆಯಲ್ಲಿ ಕೇವಲ
ಕಲ್ಲು ಸಕ್ಕರೆ ಇದೆ. ಅತಿಥಿಗಳು ಬಂದಿದ್ದಾರೆ. ಬೇಗ ಶರಬತ್ತು ಮಾಡುವುದಿದೆ. ಕಲ್ಲು ಸಕ್ಕರೆ
ಕುಟ್ಟಿದರೆ ಸಣ್ಣ ಸಣ್ಣ ತುಂಡುಗಳು ಆಗುತ್ತವೆ. ಆ ತುಂಡುಗಳು ನೀರಿನಲ್ಲಿ ಬೇಗ ಕರಗುತ್ತವೆ.
(ಆ) ಮೆಕ್ಕೆ ತೆನೆಯ ಮೇಲೆ ಹಚ್ಚುವುದಕ್ಕಾಗಿ
ಉಪ್ಪು ಬೇಕಾಗಿದೆ. ಆದರೆ ಕೇವಲ ಹರಳುಪ್ಪು ಉಪಲಬ್ಬ ಇದೆ.
ಉತ್ತರ: ಹರಳುಪ್ಪು
ಕುಟ್ಟಿದರೆ ಸಣ್ಣ ಉಪ್ಪಿನ ರೀತಿಯಲ್ಲಿ ಪಾವಡರ್ ಆಗುತ್ತದೆ. ಈ ಉಪ್ಪಿನ ಪಾವಡರ ಮೆಕ್ಕೆ ತೆನೆ
ಮೇಲೆ ಹಚ್ಚಿ ತಿನ್ನಲು ರುಚಿದಾಯಕ ಇರುತ್ತದೆ.
ಪ್ರ. ೨.
ಸ್ವಲ್ಪ ತಲೆ ಓಡಿಸಿರಿ.
(ಅ) ಕರ್ಪೂರದ ತುಂಡುಗಳ ಆಕಾರ ಸಾವಕಾಶವಾಗಿ ಕಡಿಮೆ
ಆಗುತ್ತ ಹೋಗುವುದು ಕಂಡುಬರುವದು.
ಉತ್ತರ: ಯಾವುದೇ ಪದಾರ್ಥಗಳು
ಸೂಕ್ಷ್ಮ ಕಣಗಳಿಂದ ತಯಾರಾಗಿರುತ್ತದೆ. ಸಮಯ ಕಳೆದಂತೆ ಆ ಪದಾರ್ಥದಿಂದ ಕಣಗಳು
ಬೇರ್ಪಟ್ಟಿಕೊಳ್ಳುತ್ತವೆ. ಕರ್ಪುರದ ತುಂಡುಗಳೂ ಸಹ ದಿನಕಳೆದಂತೆ ಕಣಗಳು ಕರಗಿ ಕರ್ಪುರದ ಆಕಾರ
ಕಡಿಮೆ ಆಗುತ್ತದೆ.
(ಆ) ಸಾರ್ವಜನಿಕ ವಾಹನಗಳ
ಉಪಯೋಗ ಮಾಡಿದಾಗ ಇಂಧನದ ಉಳಿತಾಯ ಹೇಗೆ ಆಗುವದು?
ಉತ್ತರ: ಮೋಟರ್ ಸೈಕಲ್
ಪೆಟ್ರೋಲ್ ಮತ್ತು ಡಿಜೆಲ್ ಜ್ವಲನದಿಂದ ನಡೆಯುತ್ತದೆ. ಅಂದರೆ ವಾಹನಗಳು ನಡೆಯಲು ಇಂಧನದ ಅವಶ್ಯಕತೆ
ಇರುತ್ತದೆ. ಒಂದೇ ಸಮಯದಲ್ಲಿ ಅನೇಕ ಜನರು ಬೇರೆ ಬೇರೆ ವಾಹನಗಳನ್ನು ಬಳಸದೇ ಒಂದೇ ವಾಹನದ ಬಳಕೆ
ಮಾಡಿದರೆ ಇಂಧನವು ಉಳಿತಾಯವಾಗಲು ಸಹಾಯವಾಗುವುದು.
ಪ್ರ. ೩.
ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(ಅ) ಡಾಂಬರ ಗುಳಿಗೆಗಳು
ಇಟ್ಟಿರುವ ಬಟ್ಟೆಗಳಿಗೆ ಡಾಂಬರ ಗುಳಿಗೆಗಳ ವಾಸನೆ ಯಾವುದರಿಂದ ಬರುತ್ತದೆ ?
ಉತ್ತರ: ಡಾಂಬರ ಗುಳಿಗೆಯು
ಸತತವಾಗಿ ವಾಯುರೂಪದಲ್ಲಿ ಸಣ್ಣ ಸಣ್ಣ ಕನಗಳಲ್ಲಿ ರೂಪಾಂತರವಾಗುತ್ತದೆ. ಬಟ್ಟೆಗಳಲ್ಲಿ
ಇಡುವುದರಿಂದ ಸಣ್ಣ ಕಣಗಳು ಬಟ್ಟೆಯಲ್ಲಿ ಪಸರಿಸಿ ವಾಸನೆ ಬರುತ್ತದೆ.
(ಆ) ನಿಸರ್ಗದಲ್ಲಿ ನೀರು ಯಾವ
ಯಾವ ಅವಸ್ಥೆಗಳಲ್ಲಿ ಕಂಡು ಬರುತ್ತದೆ ?
ಉತ್ತರ: ನಿಸರ್ಗದಲ್ಲಿ ನೀರು
ಘನ, ದ್ರವ ಹಾಗೂ ವಾಯು ಅವಸ್ಥೆಯಲ್ಲಿ ಕಂಡು ಬರುತ್ತದೆ.
(2) ಪದಾರ್ಥಗಳ ಘನ, ದ್ರವ, ವಾಯು ಈ ಅವಸ್ಥೆಗಳು
ಯಾವುದರಿ೦ದ ನಿಶ್ಚಯವಾಗುತ್ತದೆ ?
ಉತ್ತರ: ಪದಾರ್ಥಗಳ ಘನ, ದ್ರವ, ವಾಯು ಈ ಅವಸ್ಥೆಗಳು
ಅವುಗಳಲ್ಲಿ ಇರುವ ಕಣಗಳ ಮಂಡಣೆಯಿಂದಾಗಿ ನಿಶ್ಚಯವಾಗುತ್ತದೆ.
(ಈ) ಶಕ್ತಿ ಎಂದರೇನು?
ಉತ್ತರ: ಕೆಲಸ ಮಾಡುವ ಅಥವಾ
ಕಾರ್ಯ ಮಾಡುವ ಕ್ಷಮತೆಗೆ ‘ಶಕ್ತಿ’ ಎನ್ನುತ್ತಾರೆ.
ಉಪಕ್ರಮ:
೧. ಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸಿರಿ.
೨. ಕಟ್ಟಿಗೆಯ ವಸ್ತು ತಯಾರಿಸುವ ಸ್ಥಳಕ್ಕೆ ಭೇಟಿ ಕೊಡಿರಿ ಮತ್ತು
ನಿರೀಕ್ಷಣೆ ಮಾಡಿರಿ.
೩. ಮಹಾರಾಷ್ಟ್ರದಲ್ಲಿಯ ವಿವಿಧ ವಿದ್ಯುತ್ ನಿಮಾರ್ಣ ಕೇಂದ್ರಗಳ ಬಗ್ಗೆ
ಮಾಹಿತಿ ದೊರಕಿಸಿರಿ ಮತ್ತು ವರ್ಗದಲ್ಲಿ ಹೇಳಿರಿ.
25. ಸಾಮಾಜಿಕ ಆರೋಗ್ಯ
ಪ್ರ. 1. ಬಿಟ್ಟಸ್ಥಳದಲ್ಲಿ
ಯೋಗ್ಯ ಶಬ್ದ
ತುಂಬಿರಿ.
(ಅ) ನಿರಾಮಯತೆಯಿಂದ
ನಮ್ಮಲ್ಲಿಯ ಮಿತ್ರತ್ವದ ಭಾವನೆಗಳು ಹೆಚ್ಚಾಗುತ್ತವೆ.
(ಆ) ತಂಬಾಕು
ಸತತವಾಗಿ ಹೊಟ್ಟೆಯಲ್ಲಿ ಹೋಗುತ್ತ ಇದ್ದರೆ ಆಹಾರ ನಳಿಕೆಯ ಕರ್ಕರೋಗ ಆಗುವದು.
(ಇ) ಅತೀ ಮಧ್ಯಪಾನದಿಂದ ಯಕೃತ್ತಿನ, ಕರುಳಿನ ಅದರಿಂತೆ ಮೂತ್ರಾಶಯದ ರೋಗ ಆಗುತ್ತವೆ.
(ಈ) ದೇಶದ ಪ್ರಗತಿ
ಮತ್ತು ವಿಕಾಸ ಇವುಗಳಲ್ಲಿಯ ಎಲ್ಲಕ್ಕಿಂತಲೂ ಮಹತ್ವದ ಘಟಕ ಎಂದರೆ ಜನರ
ಸ್ವಾಸ್ಥ್ಯ ಚೆನ್ನಾಗಿ ಇರುವುದಾಗಿದೆ.
(ಉ) ವೈಯಕ್ತಿಕ
ಆರೋಗ್ಯ ಮತ್ತು ರೂಢಿಗಳಿಂದ ನಮಗೆ ಸಮಾಜದ ಮತ್ತು ಸಾರ್ವಜನಿಕ ..... ಪ್ರಾಪ್ತ ಮಾಡಲು ಬರುತ್ತದೆ.
ಪ್ರ. ೨. ಕೆಳಗಿನ ವಾಕ್ಯಗಳು ಸರಿ ಅಥವಾ ತಪ್ಪು
ಎಂಬುದನ್ನು ಹೇಳಿರಿ. ತಪ್ಪು ಇರುವ ವಿಧಾನಗಳನ್ನು ಸರಿಪಡಿಸಿ ಬರೆಯಿರಿ.
(ಅ) ಪ್ರದೂಷಣೆ,
ಅಸ್ವಚ್ಛತೆ, ಹಬ್ಬುವ ರೋಗಗಳು, ವ್ಯಸನಾಧನತೆ, ಕೀಟಕಗಳ ಧ್ವಂಸದಿಂದ ಆಗುವ ರೋಗಗಳು, ಸಾಮಾಜಿಕ ಆರೋಗ್ಯವನ್ನು ಒಳ್ಳೆಯದಾಗಿ ಮಾಡುತ್ತವೆ. (ತಪ್ಪು)
ಸರಿಯಾದ ವಿಧಾನ: ಪ್ರದೂಷಣೆ, ಅಸ್ವಚ್ಛತೆ,
ಹಬ್ಬುವ ರೋಗಗಳು, ವ್ಯಸನಾಧನತೆ, ಕೀಟಕಗಳ ಧ್ವಂಸದಿಂದ ಆಗುವ ರೋಗಗಳು, ಸಾಮಾಜಿಕ ಆರೋಗ್ಯವನ್ನು ಅಪಾಯಕ್ಕಿಡು ಮಾಡುತ್ತವೆ
(ಆ) ಸಾರ್ವಜನಿಕ
ಸ್ಥಳಗಳಲ್ಲಿ ಉಗುಳಲು ಕಾಯಿದೆಯಿಂದ ನಿಷೇಧಿಸಲಾಗಿದೆ. (ಸರಿ)
(ಇ) ಪೋಷಕ ಆಹಾರ,
ವೈಯಕ್ತಿಕ ಸ್ವಚ್ಛತೆ,
ವ್ಯಾಯಾಮ ಮತ್ತು ಹವ್ಯಾಸಗಳ
ಪೋಷಣೆ ಇವುಗಳಿಂದ ಉತ್ತಮ ಆರೋಗ್ಯ ದೊರೆಯುತ್ತದೆ. (ಸರಿ)
(ಈ) ನಮ್ಮ
ಆರೋಗ್ಯವನ್ನು ಉತ್ತಮ ಪ್ರಕಾರದಲ್ಲಿ ಸಂಭಾಳಿಸಿಕೊಂಡು ನಿರಾಮಯ ಜೀವನವನ್ನು ಜೀವಿಸಲು ಬರುತ್ತದೆ. (ಸರಿ)
ಪ್ರ. ೩. ಕೆಳಗಿನ ಪ್ರಶ್ನೆಗಳಿಗೆ ಉತ್ತರ
ಬರೆಯಿರಿ.
(ಅ) ಉತ್ತಮ
ಆರೋಗ್ಯವನ್ನು ಹೇಗೆ ದೊರಕಿಸಲು ಬರುತ್ತದೆ?
ಉತ್ತರ: ಪೋಷಕ ಆಹಾರ,
ವೈಯಕ್ತಿಕ ಸ್ವಚ್ಛತೆ,
ವ್ಯಾಯಾಮ ಮತ್ತು ಹವ್ಯಾಸಗಳ
ಪೋಷಣೆ ಇವುಗಳಿಂದ ಉತ್ತಮ ಆರೋಗ್ಯ ದೊರಕಿಸಲು ಬರುತ್ತದೆ.
(ಆ) ಸಾಮಾಜಿಕ
ಆರೋಗ್ಯವನ್ನು ಅಪಾಯಕ್ಕೀಡು ಮಾಡುವ ಘಟಕಗಳು ಯಾವವು?
ಉತ್ತರ: ಪ್ರದೂಷಣೆ,
ಅಸ್ವಚ್ಛತೆ, ಹಬ್ಬುವ ರೋಗಗಳು, ವ್ಯಸನಾಧನತೆ, ಕೀಟಕಗಳ ಧ್ವಂಸದಿಂದ ಆಗುವ ರೋಗಗಳು ಇತ್ಯಾದಿ
ಘಟಕಗಳು ಸಾಮಾಜಿಕ
ಆರೋಗ್ಯವನ್ನು ಅಪಾಯಕ್ಕಿಡು ಮಾಡುತ್ತವೆ
(ಆ) ತಂಬಾಕು
ತಿನ್ನುವ ಘಾತಕ ಪರಿಣಾಮಗಳು ಯಾವವು?
ಉತ್ತರ: ತಂಬಾಕು ತಿನ್ನುವ
ಘಾತಕ ಪರಿಣಾಮಗಳು:
1. ಮೊದಲಿಗೆ ಇನ್ನೊಬ್ಬರ ಅಗ್ರಹದಿಂದ ತಿನ್ನಲು ಆರಂಭಿಸಿದ ತಂಬಾಕುವಿನ
ವ್ಯಸನ ನಮ್ಮ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತದೆ. 2. ಬಾಯಿಯಲ್ಲಿ ತಂಬಾಕು
ಹಾಕಿಕೊಳ್ಳದಿದ್ದರೆ ಯಾವುದೇ ಕೆಲಸದಲ್ಲಿ ಲಕ್ಷ್ಯ ಹತ್ತುವುದಿಲ್ಲ. 3. ತಂಬಾಕು ತಿಂದರೆ ಬಾಯಿ
ಕರ್ಕರೋಗ ಆಗುವುದು. 4. ಹೊಟ್ಟೆಯಲ್ಲಿ ಈ ಪದಾರ್ಥ ಹೋಗುವುದರಿಂದ ಆಹಾರ ನಾಳಿಕೆಯ ಕರ್ಕರೋಗ ಕೂಡ
ಆಗುತ್ತದೆ. 5. ಬಾಯಿಯಲ್ಲಿ ವ್ರಣ ಆಗಿ ಸತತ ರಕ್ತಸ್ರಾವ ಆಗುತ್ತದೆ. 6. ಕರ್ಕರೋಗ ಆದ ವ್ಯಕ್ತಿಗೆ
ಔಷಧೋಪಚಾರದ ತೊಂದರೆಯೂ ಆಗುತ್ತದೆ. ಇಷ್ಟು ಆದರೂ ಕರ್ಕರೋಗ ಗುಣವಾಗುತ್ತದೆ ಎಂಬ ನಿಶ್ಚಿತತೆ
ಇರುವುದಿಲ್ಲ. ವ್ಯಕ್ತಿ ಬದುಕುತಾನೆ ಎಂಬುದರ ಖಾತ್ರಿ ಇರುವುದಿಲ್ಲ.
(ಈ) ಮದ್ಯಪಾನದ
ಘಾತಕ ಪರಿಣಾಮಗಳು ಯಾವವು?
ಉತ್ತರ: ಮಧ್ಯಾಪನ ಅಂದರೆ ಸರಾಯಿ ಕುಡಿಯುದು . ಮಧ್ಯಪಾನದಿಂದ ಆಗುವ ಘಾತಕ ಪರಿಣಾಮಗಳು:
1. ಮಧ್ಯಪಾನದಿಂದ ಮಬ್ಬು ಬರುತ್ತದೆ. ಮೆದುಳಿನ ಮೇಲಿನ ನಿಯಂತ್ರಣೆ
ತಪ್ಪಿ ಹೋಗುತ್ತದೆ.
2. ಅತೀ ಮಧ್ಯಪಾನದಿಂದ ಯಕೃತ್ತಿನ, ಕರುಳಿನ ಅದರಿಂತೆ ಮೂತ್ರಾಶಯದ ರೋಗ ಆಗುತ್ತವೆ.
3. ಮದ್ಯಪಾನದ ಮತ್ತು
ತಂಬಾಕು ಸೇವನೆ ಇವು ಆರೋಗ್ಯಕ್ಕೆ ಘಾತಕ. ಇವುಗಳಿಂದ ನಾವು ದೂರ ಇರಬೇಕು.
4. ಕೂಡಿದ ನಶೆಯಲ್ಲಿ ಮನೆಯಲ್ಲಿ ರಾದ್ಧಾಂತ ಉಂಟಾಗಿ ಕುಟುಂಬದಲ್ಲಿ
ಕಲಹ ನಿರ್ಮಾಣವಾಗುತ್ತದೆ ಮತ್ತು ಪರಿವಾರದ ಶಾಂತಿ, ನೆಮ್ಮದಿ ಹಾಳಾಗುತ್ತದೆ.
5. ಕುಟುಂಬ ನಷ್ಟವಾಗುತ್ತದೆ. ವ್ಯಕ್ತಿ ಸಾಲ ಹೆಚ್ಚಾಗಿ ಭಿಕಾರಿ ಆಗುತ್ತಾನೆ.
ಉಪಕ್ರಮ
ಸಮಾಜದಲ್ಲಿಯ
ವ್ಯಸನಾಧೀನತೆಯನ್ನುದೂರ ಮಾಡುವುದಕ್ಕಾಗಿ ಒಂದು ನಾಟಕವನ್ನು ಬರೆದು ಸಾದರಪಡಿಸಿರಿ.
ಧನ್ಯವಾದಗಳು
ಈ ಸ್ವಾಧ್ಯಾಯ ಇಷ್ಟವಾದರೆ ಲಿಂಕ್ ನಿಮ್ಮ ಸ್ನೇಹಿತರಿಗೆ
ಶೇಅರ ಮಾಡಿ, ಬ್ಲಾಗವನ್ನು follow ಮಾಡಿ. ನಿಮ್ಮ ಅಮೂಲ್ಯ ಅನಿಸಿಕೆಗಳನ್ನು
ಕಾಮೆಂಟ್ ಮಾಡಿ ತಿಳಿಸಿರಿ.





0 ಕಾಮೆಂಟ್‌ಗಳು
ಧನ್ಯವಾದಗಳು