8ನೆಯ ತರಗತಿ
ಇತಿಹಾಸ ಮತ್ತು ನಾಗರಿಕಶಾಸ್ತ್ರ
ಸ್ವಾಧ್ಯಾಯ ಪುಸ್ತಕ
ಉಪ ಶಿಕ್ಷಕರು: ಜಿ. ಪ. ಪ್ರಾಥಮಿಕ ಕನ್ನಡ ಶಾಲೆ ಬಬಲಾದ
ತಾ. ಅಕ್ಕಲಕೋಟ ಜಿ. ಸೋಲಾಪುರ
1. ಇತಿಹಾಸದ ಸಾಧನಗಳು |
ಪ್ರ.1. ಕೆಳಗೆ ಕೊಟ್ಟ
ಪರ್ಯಾಯಗಳಲ್ಲಿ ಯೋಗ್ಯ ಪರ್ಯಾಯವನ್ನು ಆಯ್ಕೆ ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ಇತಿಹಾಸದ ಸಾಧನಗಳಲ್ಲಿಯ ........ ಸಾಧನಗಳು ಆಧುನಿಕ
ತಂತ್ರಜ್ಞಾನದ ಮೇಲೆ ಆಧಾರಿತವಾಗಿವೆ.
ಅ) ಲಿಖಿತ ಆ)
ಮೌಖಿಕ ಇ) ಭೌತಿಕ ಈ) ದೃಶ್ಯ-ಶ್ರಾವ್ಯ
ಉತ್ತರ :- ದೃಶ್ಯ-ಶ್ರಾವ್ಯ
2. ಪುಣೆಯಲ್ಲಿಯ ........ ಈ ಗಾಂಧಿ ಸ್ಮಾರಕ ಸಂಗ್ರಹಾಲಯದಲ್ಲಿ
ಗಾಂಧೀಜಿಯವರ ಇತಿಹಾಸದ ವಿಷಯವಾಗಿ ಮಾಹಿತಿ ದೊರೆಯುತ್ತದೆ.
ಅ) ಆಗಾಖಾನ ಪ್ಯಾಲೇಸ್
ಆ) ಸಬಾರಮತಿ ಆಶ್ರಮ ಇ) ಸೆಲ್ಯೂಲರ ಜೈಲು ಈ) ಲಕ್ಷ್ಮಿ ವಿಲಾಸ ಪ್ಯಾಲೇಸ್
ಉತ್ತರ:-ಆಗಖಾನ ಪ್ಯಾಲೇಸ್
3. ಇಪ್ಪತ್ತನೆಯ ಶತಮಾನದಲ್ಲಿಯ ಆಧುನಿಕ ತಂತ್ರಜ್ಞಾನದ ಒಂದು
ಅದ್ವಿತೀಯ ಆವಿಷ್ಕರಣ ವೆಂದರೆ .........
ಅ) ಲಾವಣಿ ಆ)
ಛಾಯಾಚಿತ್ರ ಇ) ಸಂದರ್ಶನ ಈ) ಚಲನ
ಚಿತ್ರ
ಉತ್ತರ:- ಚಲನ ಚಿತ್ರ
ಪ್ರ. 2. ಕೆಳಗಿನ ವಿಧಾನಗಳನ್ನು ಕಾರಣಸಹಿತ
ಸ್ಪಷ್ಟಪಡಿಸಿರಿ.
1. ಬ್ರಿಟಿಶ ಕಾಲದಲ್ಲಿ ವರ್ತಮಾನ ಪತ್ರಗಳು ಸಾಮಾಜಿಕ
ಜ್ಞಾನೋದಯದ ಸಾಧನಗಳೆಂದೂ ಕಾರ್ಯಮಾಡುತ್ತಿದ್ದವು.
ಉತ್ತರ:- ವರ್ತಮಾನ ಪತ್ರಗಳಿಂದ ಸಮಕಾಲೀನ ಘಟನೆಗಳ ವಿಷಯವಾಗಿ ಮಾಹಿತಿ
ದೊರೆಯುತ್ತದೆ. ಅದರ ಜೊತೆಗೆ ಯಾವುದೊಂದು ಘಟನೆಯ ಆಳವಾದ ವಿಶ್ಲೇಷಣೆ,
ಮಾನನಿಯರ ಅಭಿಪ್ರಾಯ ಹಾಗೂ ವಿರೋಧಿ ಅಭಿಪ್ರಾಯಗಳು, ಆಗ್ರಲೇಖಗಳು
ಪ್ರಕಾಶಿತವಾಗುತ್ತಿರುತ್ತದೆ. ನಮಗೆ ಆ ಕಾಲದಲ್ಲಿಯ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಘಟನೆಗಳ ಮಾಹಿತಿ ದೊರೆಯುತ್ತದೆ. ಜ್ಞಾನ ಪ್ರಕಾಶ, ಕೇಸರಿ, ದೀನಬಂಧು , ಅಮೃತ ಬಜಾರ
ಪತ್ರಿಕೆ ಇತ್ಯಾದಿ ವರ್ತಮಾನ ಪತ್ರಗಳು ಜನಜಾಗೃತಿಯ ಮಹತ್ವದ ಸಾಧನಗಳಾಗಿದ್ದವು. ಈ ವರ್ತಮಾನ
ಪಾತ್ರಗಳ ಮೂಲಕ ನಮಗೆ ಭಾರತದ ಬಗೆಗಿನ ಬ್ರಿಟಿಶ ಸರಕಾರದ ನೀತಿ, ಭಾರತದ
ಮೇಲಿನ ಅದರ ಪರಿಣಾಮ ಮುಂತಾದವುಗಳ ಅಭ್ಯಾಸ ಮಾಡಲು ಬರುತ್ತದೆ. ಬ್ರಿಟಿಶ ಕಾಲದಲ್ಲಿ ವರ್ತಮಾನ
ಪತ್ರಗಳು ಕೇವಲ ರಾಜಕೀಯ ಅಷ್ಟೇ ಅಲ್ಲ ಸಾಮಾಜಿಕ ಜ್ಞಾನೋದಯದ ಸಾಧನಗಳೆಂದೂ ಕಾರ್ಯಮಾಡುತ್ತಿದ್ದವು.
2. ಚಿತ್ರ ಧ್ವನಿ ಸುರುಳಿಯನ್ನು ಭಾರತದ
ಇತಿಹಾಸದ ಅಭ್ಯಾಸದಲ್ಲಿ ಅತ್ಯಂತ ವಿಶ್ವಾಸಾರ್ಹ ಸಾಧನವೆಂದು ತಿಳಿಯಲಾಗುತ್ತದೆ.
ಉತ್ತರ:- ಧ್ವನಿ
ಸುರುಳಿಗಿಂತ ಚಿತ್ರ ಧ್ವನಿ ಸುರುಳಿ ಅಂದರೆಯೇ ಛಾಯಾಚಿತ್ರಗಳನ್ನು ಹೆಚ್ಚು ವಿಶ್ವಶಾರ್ಹ ಇತಿಹಾಸದ
ಸಾಧನಗಳೆಂದು ತಿಳಿಯಲಾಗುತ್ತದೆ. ವ್ಯಕ್ತಿಗಳ ಛಾಯಾಚಿತ್ರಗಳಿಂದ ಆ ವ್ಯಕ್ತಿಯು ಹೇಗೆ
ಕಾಣಿಸುತ್ತಿತ್ತು, ಆ ವ್ಯಕ್ತಿಯ ವೇಷ ಭೂಷಣ ಹೇಗಿತ್ತು ಎಂಬುದರ ಬಗ್ಗೆ ಮಾಹಿತಿ
ದೊರೆಯುತ್ತದೆ. ಪ್ರಸಂಗದ ಛಾಯಾಚಿತ್ರದಿಂದ ಸಂಬಂಧಿತ ಪ್ರಸಂಗವು ಕಣ್ಮುಂದೆ ನಿಲ್ಲುತ್ತದೆ.
ಪ್ರ. 3. ಟಿಪ್ಪಣೆ ಬರೆಯಿರಿ.
1. ಛಾಯಾಚಿತ್ರಗಳು:-ಛಾಯಾಚಿತ್ರಗಳು
ಆಧುನಿಕ ಭಾರತದ ದೃಶ್ಯ ಸ್ವರೂಪದ ಸಾಧನಗಳಾಗಿವೆ. ಛಾಯಾಚಿತ್ರಣ ಕಲೆಯ ಶೋಧವಾದ ನಂತರ ವಿವಿಧ
ವ್ಯಕ್ತಿ, ಘಟನೆ ಅದರಂತೆ ವಸ್ತು ಮತ್ತು ಕಟ್ಟಡಗಳ ಛಾಯಾಚಿತ್ರಗಳನ್ನು ತೆಗೆಯಲು
ಆರಂಭವಾಯಿತು. ಈ ಛಾಯಾಚಿತ್ರಗಳಿಂದ ನಮಗೆ ವ್ಯಕ್ತಿಗಳು ಹಾಗೂ ಪ್ರಸಂಗಗಳು ಹೇಗೆ ಸಂಭವಿಸಿದ್ದವೋ ಆ
ಸ್ವರೂಪದಲ್ಲಿ ಮಾಹಿತಿ ದೊರೆಯುತ್ತದೆ. ಚಿತ್ರಗಳಿಗಿಂತ ಛಾಯಾಚಿತ್ರಗಳು ಹೆಚ್ಚು ವಿಶ್ವಾಸಾರ್ಹವೆಂದು
ತಿಳಿಯಲಾಗುತ್ತದೆ.
2. ವಸ್ತು ಸಂಗ್ರಹಾಲಯಗಳು ಮತ್ತು ಇತಿಹಾಸ:- ಇತಿಹಾಸದ ಅಭ್ಯಾಸಕ್ಕಾಗಿ ವಸ್ತು ಸಂಗ್ರಹಾಲಯಗಳಲ್ಲಿ ವಿವಿಧ ವಸ್ತು,
ಚಿತ್ರ, ಛಾಯಾಚಿತ್ರ ಮುಂತಾದ ವಿವಿಧ ಸಂಗತಿಗಳನ್ನು ಸಂರಕ್ಷಿಸಿ
ಇಡಲಾಗಿರುತ್ತದೆ. ಪುಣೆಯಲ್ಲಿ ಆಗಾಖಾನ ಪ್ಯಾಲೇಸನಲ್ಲಿ ಗಾಂಧಿ ಸ್ಮಾರಕವಿದೆ. ಅದರಲ್ಲಿ ಮಹಾತ್ಮಾ
ಗಾಂಧೀಜಿಯವರ ಬಳಕೆಯ ಅನೇಕ ವಸ್ತುಗಳು, ಕಾಗದಪತ್ರಗಳು ನೋಡಲು
ಸಿಗುತ್ತವೆ.
3. ಶ್ರಾವ್ಯ ಸಾಧನಗಳು: ಇದೊಂದು
ಇತಿಹಾಸದ ಸಾಧನವಾಗಿದೆ. ಛಾಯಾಚಿತ್ರ ಕಲೆಯಂತೆ ಧ್ವನಿ ಮುದ್ರಣ ತಂತ್ರದ ಶೋಧ ಕೂಡ
ಮಹತ್ವದ್ದಾಗಿದೆ. ರಿಕಾರ್ಡುಗಳು ಇತಿಹಾಸದ ಶ್ರಾವ್ಯ ಸ್ವರೂಪದ ಸಾಧನವಾಗಿದೆ. ಆಧುನಿಕ ಕಾಲದಲ್ಲಿ
ನೇತಾರರು ಮಾಡಿದ ಭಾಷಣ ಇಲ್ಲವೇ ಮಹತ್ವದ ವ್ಯಕ್ತಿಗಳು ಮಾಡಿದ ಭಾಷಣ,
ಗೀತೆಗಳು, ಸಂಭಾಷಣೆಗಳು ರಿಕಾರ್ಡುಗಳ ರೂಪದಲ್ಲಿ ಲಭ್ಯವಾಗಿವೆ. ಉದಾ.
ಸ್ವತ: ರವೀಂದ್ರನಾಥ ಟಾಗೋರರು ಹಾಡಿದ ‘ಜನ ಗಣ ಮನ’ ಈ ರಾಷ್ಟ್ರಗೀತೆ ಇಲ್ಲವೇ ನೇತಾಜಿ
ಶುಭಾಷಚಂದ್ರ ಭೋಸ ಇವರ ಭಾಷಣ ಇವುಗಳ ಉಪಯೋಗ ಆಧುನಿಕ ಭಾರತದ ಇತಿಹಾಸದ ಅಭ್ಯಾಸದಲ್ಲಿ ಶ್ರಾವ್ಯ ಸಾಧನಗಳೆಂದು
ಮಾಡಲು ಬರುತ್ತದೆ.
ಪ್ರ. 4. ಕೆಳಗಿನ ಕಲ್ಪನಾಚಿತ್ರವನ್ನು ಪೂರ್ಣ ಮಾಡಿರಿ.
ಭೌತಿಕ ಸಾಧನಗಳು :-ವಿವಿಧ ವಸ್ತುಗಳು,
ವಾಸ್ತುಶಿಲ್ಪಗಳು, ನಾಣ್ಯಗಳು, ವಿಗ್ರಹಗಳು
ಮತ್ತು ಪದಕಗಳು,
ಕಟ್ಟಡಗಳು
ಮತ್ತು ವಾಸ್ತುಶಿಲ್ಪಗಳು – ಕಟ್ಟಡಗಳು, ಸೇತುವೆಗಳು, ರಸ್ತೆಗಳು, ಅರವಟ್ಟಿಗೆಗಳು,
ಬುಗ್ಗೆಗಳು, ಕ್ರಾಂತಿಕಾರರ ನಿವಾಸಗಳು,
ಸಂಸ್ಥಾನಿಕರ ಅರಮನೆಗಳು, ಕೋಟೆಗಳು,
ಸೆರೆಮನೆಗಳು, ವಸ್ತು ಸಂಗ್ರಹಾಲಯಗಳು,
ಪುತ್ತಳಿಗಳು ಮತ್ತು ಸ್ಮರಕಗಳು ಇವೆಲ್ಲ ಇತಿಹಾಸದ ಭೌತಿಕ ಸಾಧನಗಳಾಗಿವೆ.
2. ಯುರೋಪ ಮತ್ತು ಭಾರತ |
ಪ್ರ.1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ ಪರ್ಯಾಯವನ್ನು ಆಯ್ಕೆ
ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ಕ್ರಿ.ಶ. 1453 ರಲ್ಲಿ ಆಟೋಮನ ತುರ್ಕರು.........ಪಟ್ಟಣವನ್ನು
ಗೆದ್ದುಕೊಂಡರು. (ಕಾನಸ್ಟಂಟಿನೋಪಲ್ )
2. ಔದ್ಯೋಗಿಕ ಕ್ರಾಂತಿಯು ....... ನಲ್ಲಿ ಆರಂಭವಾಯಿತು. (ಇಂಗ್ಲೆಂಡ)
3. ಇಂಗ್ಲಿಷರ ಕಾನೂನುಬಾಹಿರ ವ್ಯಾಪಾರವನ್ನು
ನಿಯಂತ್ರಿಸುವ ಪ್ರಯತ್ನವನ್ನು ....... ನು ಮಾಡಿದನು. (ಮೀರ ಕಾಸೀಮ)
ಪ್ರ. 2. ಕೆಳಗಿನ ಕಲ್ಪನೆಗಳನ್ನು ಸ್ಪಷ್ಟಪಡಿಸಿರಿ.
1.
ವಸಹಾತುವಾದ:- ಒಂದು ದೇಶದಲ್ಲಿಯ ಕೆಲವು ಜನರು ಬೇರೆ ಭೂಪ್ರದೇಶದಲ್ಲಿಯ ವಿಶಿಷ್ಟ್ಯ
ಭಾಗದಲ್ಲಿ ವಸತಿ ಮಾಡುವುದೆಂದರೆ ವಸಾಹತು ಸ್ಥಾಪನೆ ಮಾಡುವುದು ಎಂದರ್ಥ. ಆರ್ಥಿಕ ಮತ್ತು ಸೈನಿಕ
ದೃಷ್ಟಿಯಿಂದ ಬಲಶಾಲಿಯಾದ ದೇಶವು ತನ್ನ ಸಾಮರ್ಥ್ಯದ ಬಲದಿಂದ ಯಾವುದೊಂದು ಭೂಪ್ರದೇಶವನ್ನು
ವ್ಯಾಪಿಸುವುದು ಹಾಗೂ ಆ ಸ್ಥಳದಲ್ಲಿ ತನ್ನ ರಾಜಕೀಯ ವರ್ಚಸ್ಸನ್ನು ಸ್ಥಾಪಿಸುವುದೆಂದರೆ ವಸಾಹತುವಾದ
ಹೌದು.
2. ಸಾಮ್ರಾಜ್ಯವಾದ :- ವಿಕಸಿತ
ರಾಷ್ಟ್ರವು ಆವಿಕಸಿತ ರಾಷ್ಟ್ರದ ಮೇಲೆ ತನ್ನ ಸರ್ವಾಂಗೀಣ ವರ್ಚಸ್ಸನ್ನು ಸ್ಥಾಪಿಸುವುದು ಮತ್ತು
ಅನೇಕ ಹೊಸ ವಸಹಾತುಗಳನ್ನು ಸ್ಥಾಪಿಸುವುದು ಎಂದರೆ ಸಾಮ್ರಾಜ್ಯವಾದ ಹೌದು. ಏಶಿಯಾ ಮತ್ತು ಆಫ್ರಿಕಾ
ಖಂಡಗಳಲ್ಲಿಯ ಅನೇಕ ರಾಷ್ಟ್ರಗಳು ಯೂರೋಪಿಯನ್ ರಾಷ್ಟ್ರಗಳ ಈ ಸಾಮ್ರಾಜ್ಯವಾದಿ ಆಕಾಂಕ್ಷೆಗೆ
ಬಲಿಯಾದವು.
3. ಪುನರುಜ್ಜೀವನ ಯುಗ :- ಕ್ರಿ.ಶ. 13 ರಿಂದ 16 ನೇ ಶತಮಾನವು
ಪುನರುಜ್ಜೀವನ ಯುಗವೆಂದು ಗುರುತಿಸಲ್ಪಡುತ್ತದೆ. ಈ ಕಾಲಖಂಡದಲ್ಲಿ ಪುನರುಜ್ಜೀವನ,
ಧರ್ಮ ಸುಧಾರಣೆಯ ಚಳುವಳಿ ಹಾಗೂ ಭೌಗೋಳಿಕ ಶೋಧ ಈ ಘಟನೆಗಳಿಂದಾಗಿ ಆಧುನಿಕ ಯುಗದ ಅಡಿಪಾಯವನ್ನು
ಹಾಕಲಾಯಿತು. ಆದ್ದರಿಂದಲೇ ಈ ಕಾಲಕ್ಕೆ ಪುನರುಜ್ಜೀವನ ಯುಗ ವೆಂದು ಕರೆಯುತ್ತಾರೆ.
4. ಬಂಡವಾಳಶಾಹಿ:ಹೊಸ ಸಮುದ್ರ ಮಾರ್ಗದ ಶೋಧದ ನಂತರ ಯುರೋಪ ಮತ್ತು ಎಷಿಯಾದ ದೇಶಗಳಲ್ಲಿಯ ವ್ಯಾಪಾರದ ಹೊಸ ಅಧ್ಯಾಯ ಆರಂಭವಾಯಿತು. ಸಮುದ್ರ ಮಾರ್ಗದಿಂದ ಪೂರ್ವದ ಕಡೆಗೆ ವ್ಯಾಪಾರ ಮಾಡಲು ಅನೇಕ ವ್ಯಾಪಾರಿಗಳು ಬಂದರು. ಆದರೆ ಒಬ್ಬ ವ್ಯಾಪಾರಿಗೆ ಹಡಗಿನಿಂದ ವಸ್ತುಗಳನ್ನು ವಿದೇಶಗಳಿಗೆ ಕಳಿಸುವುದು ಸಾಧ್ಯವಿರಲಿಲ್ಲ. ಅದರಿಂದಾಗಿ ಅನೇಕ ವ್ಯಾಪಾರಿಗಳು ಒಂದೆಡೆ ಬಂದು ವ್ಯಾಪಾರವನ್ನು ಆರಂಭಿಸಿದರು. ಇಂದರಿಂದಲೇ ಬಂಡವಾಳ ಹೊಂದಿದ ಅನೇಕ ವ್ಯಾಪಾರಿ ಕಂಪನಿಗಳು ಉದಯವಾದವು. ಪೂರ್ವದ ದೇಶಗಳೊಡನೆ ನಡೆಯುವ ವ್ಯಾಪಾರವು ಲಾಭದಾಯಕವಾಗಿತ್ತು. ಈ ವ್ಯಾಪಾರದಿಂದ ಪಶ್ಚಿಮದ ದೇಶಗಳ ಆರ್ಥಿಕ ಅಭಿವೃದ್ಧಿಯಾಗುತ್ತಿತ್ತು. ಅದರಿಂದಾಗಿ ಯುರೋಪಿನಲ್ಲಿಯ ರಾಜರು ವ್ಯಾಪಾರಿ ಕಂಪನಿಗಳಿಗೆ ಸೈನಿಕ ಸಂರಕ್ಷಣೆ ಮತ್ತು ವ್ಯಾಪಾರಿ ಸವಲತ್ತುಗಳನ್ನು ನೀಡತೊಡಗಿದ್ದರು. ಈ ವ್ಯಾಪಾರದಿಂದ ಯುರೋಪದ ದೇಶಗಳಲ್ಲಿ ಧನಸಂಚಯ ಹೆಚ್ಚಾಗತೊಡಗಿತು. ಈ ಸಂಪತ್ತಿನ ಬಳಕೆಯನ್ನು ಬಂಡವಾಳದ ರೂಪದಲ್ಲಿ ವ್ಯಾಪಾರ ಮಾಡಲು ಆರಂಭವಾಯಿತು. ಇದರಿಂದಾಗಿ ಯೂರೋಪಿಯನ್ ದೇಶಗಳಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ಉದಯವಾಯಿತು.
ಪ್ರ. 3. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ.
1. ಪ್ಲಾಸಿ ಯುದ್ಧದಲ್ಲಿ ಸಿರಾಜ ಉದ್ದೌಲನ ಪರಾಭವವಾಯಿತು.
ಉತ್ತರ:- ಕ್ರಿ.ಶ. 1756ರಲ್ಲಿ ಸಿರಾಜ ಉದ್ದೌಲನು ಬಂಗಾಲದ
ನವಾಬನಾದನು. ಈಸ್ಟ ಇಂಡಿಯಾ ಕಂಪನಿಯ ಅಧಿಕಾರಿಗಳು ಮುಘಲ ಬಾದಷಹಾನ ಕಡೆಯಿಂದ ಬಂಗಾಲ ಪ್ರಾಂತದಲ್ಲಿ
ದೊರೆತ ವ್ಯಾಪಾರಿ ಸವಲತ್ತುಗಳ ದುರುಪಯೋಗ ಮಾಡುತ್ತಿದ್ದರು. ಇಂಗ್ಲೀಷರು ನವಾಬನ ಅನುಮತಿ ಪಡೆಯದೆ
ಕೋಲಕತ್ತಾದಲ್ಲಿ ತಮ್ಮ ಮಳಿಗೆಗಳ ಸುತ್ತಲೂ ರಕ್ಷಣಾ ಗೋಡೆಕಟ್ಟಿದರು. ಇದರಿಂದಾಗಿ ಸಿರಾಜ
ಉದ್ದೌಲನು ಇಂಗ್ಲೀಷರ ಮೇಲೆ ದಾಳಿ ಮಾಡಿ ಕೋಲಕತ್ತಾದ ಮಳಿಗೆಗಳನ್ನು ವಶಪಡಿಸಿಕೊಂಡನು ಈ ಘಟನೆಯಿಂದ
ಇಂಗ್ಲೀಷರಲ್ಲಿ ಅಸಂತೋಷ ನಿರ್ಮಾಣವಾಯಿತು. ರಾಬರ್ಟ್ ಕ್ಲೈವನು ಮುತ್ಸದ್ದಿತನದಿಂದ ನವಾಬನ ಸೇನಾಪತಿ
ಮೀರ ಜಾಫರನಿಗೆ ನವಾಬ ಪದವಿ ಕೊಡುವ ಅಮಿಶವನ್ನು ತೋರಿಸಿ ಅವನನ್ನು ತನ್ನಕಡೆಗೆ ಸೆಳೆದುಕೊಂಡನು.
ಕ್ರಿ.ಶ. 1757ರಲ್ಲಿ ಪ್ಲಾಸಿ ಎಂಬಲ್ಲಿ ನವಾಬ ಸಿರಾಜ ಉದ್ದೌಲ ಮತ್ತು ಇಂಗ್ಲೀಷ ಸೈನಿಕರ ನಡುವೆ
ಯುದ್ದವಾಯಿತು. ಆದರೆ ಮೀರಜಾಫರನ ನೇತೃತ್ವದಲ್ಲಿ ನವಾಬನ ಸೈನ್ಯವು ಯುದ್ದಕ್ಕೆ ಇಳಿಯಲಿಲ್ಲ.
ಇದರಿಂದಾಗಿ ಸಿರಾಜ ಉದ್ದೌಲನ ಪರಾಭವವಾಯಿತು.
2. ಯೂರೋಪಿಯನ್ ದೇಶಗಳಿಗೆ ಏಷಿಯಾದ ಕಡೆಗೆ ಹೋಗುವ ಹೊಸ ಮಾರ್ಗವನ್ನು ಶೋಧಿಸುವುದು
ಅವಶ್ಯಕವೇಣಿಸತೊಡಗಿತು.
ಉತ್ತರ:- ಕ್ರಿ.ಶ. 1453 ರಲ್ಲಿ ಆಟೋಮನ್ ತುರ್ಕರು ಬೈಝಂಟೈನ್
ಸಾಮ್ರಾಜ್ಯದ ರಾಜಧಾನಿಯಾದ ಕಾನಸ್ಟಾಂಟಿನೋಪಲ್ ಗೆದ್ದುಕೊಂಡರು. ಏಶಿಯಾ ಮತ್ತು ಯುರೋಪಗಳನ್ನು
ಜೋಡಿಸುವ ವ್ಯಾಪಾರದ ಭೂಮಾರ್ಗವು ಈ ಪಟ್ಟಣದೊಳಗಿಂದ ಹೋಗುತ್ತಿತ್ತು. ತುರ್ಕರು ಈ ಮಾರ್ಗವನ್ನು
ತಡೆಗಟ್ಟಿದ್ದರಿಂದ ಯೂರೋಪಿಯನ್ ದೇಶಗಳಿಗೆ ಏಷಿಯಾದ ಕಡೆಗೆ ವ್ಯಾಪಾರಕ್ಕಾಗಿ ಹೋಗುವ ಮಾರ್ಗ ಕಾಣದೆ
ಹೊಸ ಮಾರ್ಗ ಶೋಧಿಸುವುದು ಅವಶ್ಯಕವೆನಿಸತೊಡಗಿತು.
3. ಯೂರೋಪಿಯನ್ ರಾಜರು ವ್ಯಾಪಾರಿ ಕಂಪನಿಗಳಿಗೆ ಸೈನಿಕ
ಸಂರಕ್ಷಣೆ ಮತ್ತು ವ್ಯಾಪಾರಿ ಸವಲತ್ತುಗಳನ್ನು ನೀಡತೊಡಗಿದ್ದರು.
ಉತ್ತರ:- ಸಮುದ್ರ ಮಾರ್ಗದಿಂದ ಪೂರ್ವದ ಕಡೆಯ ದೇಶಗಳೊಡನೆ ವ್ಯಾಪಾರ
ಮಾಡಲು ಅನೇಕ ವ್ಯಾಪಾರಿಗಳು ಮುಂದೆ ಬಂದರು. ಆದರೆ ಒಬ್ಬ ವ್ಯಾಪಾರಿಯೂ ಹಡಗಿನಿಂದ ವಸ್ತುಗಳನ್ನು
ವಿದೇಶಗಳಿಗೆ ಕಳುಹಿಸುವುದು ಸಾಧ್ಯವಿರಲಿಲ್ಲ. ಅದರಿಂದಾಗಿ ಅನೇಕ ವ್ಯಾಪಾರಿಗಳು ಒಂದೆಡೆ ಬಂದು
ವ್ಯಾಪಾರವನ್ನು ಆರಂಭಿಸಿದರು. ಇದರಿಂದಲೇ ಬಂಡವಾಳವನ್ನು ಹೊಂದಿದ ಅನೇಕ ವ್ಯಾಪಾರಿ ಕಂಪನಿಗಳು
ಉದಯವಾಗತೊಡಗಿದ್ದವು. ಪೌರ್ವಾತ್ಯ ದೇಶಗಳೊಡನೆ ನಡೆಯುವ ವ್ಯಾಪಾರವು ಲಾಭದಾಯಕವಾಗಿತ್ತು. ಈ
ವ್ಯಾಪಾರದಿಂದ ದೇಶಗಳ ಆರ್ಥಿಕ ಅಭಿವೃದ್ಧಿಯಾಗತೊಡಗಿತ್ತು. ಅದರಿಂದಾಗಿ ಯುರೋಪಿನಲ್ಲಿಯ ರಾಜರು
ವ್ಯಾಪಾರಿ ಕಂಪನಿಗಳಿಗೆ ಸೈನಿಕ ಸಂರಕ್ಷಣೆ ಮತ್ತು ವ್ಯಾಪಾರಿ ಸವಲತ್ತುಗಳನ್ನು ನೀಡತೊಡಗಿದ್ದರು.
ಪ್ರ. 4. ಪಾಠದ ಸಹಾಯದಿಂದ ಕೆಳಗಿನ ಕೋಷ್ಟಕವನ್ನು ಪೂರ್ಣ ಮಾಡಿರಿ.
ನಾವಿಕ |
ಕಾರ್ಯ |
ಕ್ರಿ.ಶ. 1487 ರಲ್ಲಿ ಬಾರ್ಥೋಲೋಮ್ಯು ಡಾಯಸ್ |
ಆಫ್ರಿಕಾದ ದಕ್ಷಿಣ ತುದಿಯವರೆಗೆ ತಲುಪಿದರು. |
ಕ್ರಿ.ಶ. 1492 ರಲ್ಲಿ ಖ್ರಿಸ್ತೋಫರ್ ಕೋಲಂಬಸ್ |
ಭಾರತ ಶೋಧಿಸುವ ಪ್ರಯತ್ನದಲ್ಲಿ ಅಮೆರಿಕಾ ಖಂಡದ ಪೂರ್ವದ ದಂಡೆಯನ್ನು ತಲುಪಿದನು. |
ಕ್ರಿ.ಶ. 1498 ರಲ್ಲಿ ವಾಸ್ಕೋ –ದ –ಗಾಮಾ |
ಭಾರತದ ಪಶ್ಚಿಮದ ದಂಡೆಯ ಕಾಲಿಕತ ಬಂದರವನ್ನು ತಲುಪಿದನು. |
3. ಬ್ರಿಟಿಶ ಆಡಳಿತದ ಪರಿಣಾಮ |
ಪ್ರ.1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ
ಪರ್ಯಾಯವನ್ನು ಆಯ್ಕೆ ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ಪೋರ್ತುಗೀಜ್, ............. ,
ಫ್ರೆಂಚ್, ಬ್ರಿಟಿಶ ಇವರು ಭಾರತದ ಮಾರುಕಟ್ಟೆಯನ್ನು
ಸ್ವಾಧೀನಪಡಿಸಿಕೊಳ್ಳುವ ಅಧಿಕಾರದ ಪೈಪೋಟಿಗೆ ಇಳಿದರು. (ಡಚ್)
2. 1802 ರಲ್ಲಿ ........ ಪೇಶವೆಯು ಇಂಗ್ಲಿಷರ ಜೊತೆ ಸಹಾಯಕ ಸೈನ್ಯದ
ಒಪ್ಪಂದವನ್ನು ಮಾಡಿಕೊಂಡನು. (ಎರಡನೆಯ ಬಾಜಿರಾವ)
3. ಜಮಶೇದಜಿ ಟಾಟಾ ಇವರು ........ ಎಂಬಲ್ಲಿ ಟಾಟಾ ಆಯರ್ನ್ and
ಸ್ಟೀಲ್ ಕಂಪನಿಯ ಉಕ್ಕು ನಿರ್ಮಿತಿಯ ಕಾರ್ಖಾನೆಯನ್ನು ಸ್ಥಾಪಿಸಿದರು. (ಜಮಶೇದಪುರ)
ಪ್ರ. 2. ಕೆಳಗಿನ ಕಲ್ಪನೆಗಳನ್ನು ಸ್ಪಷ್ಟಪಡಿಸಿರಿ.
1. ನಾಗರಿಕ ಆಡಳಿತ ವರ್ಗ :- ಭಾರತದಲ್ಲಿ ಇಂಗ್ಲೀಷರ ಆಡಳಿತವನ್ನು ಧೃಢಪಡಿಸುವುದಕ್ಕಾಗಿ ಇಂಗ್ಲೀಷರಿಗೆ ನೌಕರವರ್ಗದ
ಅವಶ್ಯಕತೆಯಿತ್ತು. ಲಾರ್ಡ್ ಕಾರ್ನವಾಲಿಸನು ನೌಕರಶಾಹಿಯನ್ನು ನಿರ್ಮಿಸಿದನು. ನಾಗರಿಕ
ನೌಕರಶಾಹಿಯು ಇಂಗ್ಲೀಷ ಆಡಳಿತದ ಮಹತ್ವದ ಘಟಕವಾಯಿತು. ಕಂಪನಿಯ ಅಧಿಕಾರಿಗಳು ಖಾಸಗಿ ವ್ಯಾಪಾರ
ಮಾಡಕೂಡದೆಂಬ ಕಟ್ಟಳೆಯನ್ನು ಅವನು ಮಾಡಿದನು. ಅದಕ್ಕಾಗಿ ಅವನು ಅಧಿಕಾರಿಗಳ ವೇತನವನ್ನು
ಹೆಚ್ಚಿಸಿದನು. ಹೊಸ ಜಿಲ್ಲೆಗಳ ನಿರ್ಮಾಣಮಾಡಲಾಯಿತು. ಇಂಡಿಯನ್ ಸಿವ್ಹಿಲ್
ಸರ್ವಿಸೆಸ್(ಆಯ್.ಸಿ.ಎಸ್.) ಎಂಬ ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ಅಧಿಕಾರಿಗಳ ನೇಮಕ
ಮಾಡಲಾಗುತ್ತಿತ್ತು.
2. ಕೃಷಿಯ ವ್ಯಾಪಾರಿಕರಣ:- ಮೊದಲು
ರೈತರು ಮುಖ್ಯವಾಗಿ ಆಹಾರ ಧಾನ್ಯಗಳನ್ನು ಬೆಳೆಸುತ್ತಿದ್ದರು. ಈ ಆಹಾರ ಧಾನ್ಯಗಳು ಅವರಿಗೆ ಮನೆಯ
ಬಳಕೆಗಾಗಿ ಮತ್ತು ಊರಿನ ಆವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಉಪಯೋಗಕ್ಕೆ ಬರುತ್ತಿದ್ದವು. ಹತ್ತಿ,
ನೀಲಿ, ತಂಬಾಕು, ಚಹಾ ಇತ್ಯಾದಿ ನಗದು
ಬೆಳೆಗಳಿಗೆ ಬ್ರಿಟಿಶ ಸರಕಾರವು ಉತ್ತೇಜನ ನೀಡಲಾರಂಭಿಸಿತು. ಆಹಾರ ಧಾಂಯ್ಗಳ ಸಾಗುವಳಿ
ಮಾಡುವುದಕ್ಕಿಂತ ಲಾಭವನ್ನು ತಂದುಕೊಡುವ ವಾಣಿಜ್ಯ ಬೆಳೆಗಳನ್ನು ಬೆಳೆಯುವುದಕ್ಕೆ ಬ್ರಿಟಿಶ
ಸರಕಾರವು ಮಹತ್ವ ನೀಡತೊಡಗಿತು. ಈ ಪ್ರಕ್ರಿಯೆಗೆ ‘ಕೃಷಿಯ ವ್ಯಾಪಾರಿಕರಣ’ ಎಂದು ಕರೆಯುತ್ತಾರೆ.
3. ಇಂಗ್ಲಿಷರ ಆರ್ಥಿಕ ನೀತಿ:- ಪ್ರಾಚೀನ ಕಾಲದಿಂದ ಭಾರತದ ಮೇಲೆ ಆಕ್ರಮಣಗಳು ಆಗುತ್ತಿದ್ದವು. ಅನೇಕ ಆಕ್ರಮಣಕಾರರು
ಭರತದಲ್ಲಿ ನೆಲೆಸಿದರು. ಅವರು ಭಾರತೀಯ ಸಂಸ್ಕೃತಿಯೊಂದಿಗೆ ಬೆರೆತರು. ಅವರು ಇಲ್ಲಿ ರಾಜ್ಯಡಳಿತ
ಮಾಡಿದರೂ ಭಾರತದ ಅರ್ಥ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ಮಾಡಲಿಲ್ಲ. ಇಂಗ್ಲೀಷರು ಮಾತ್ರ
ಹಾಗಿರಲಿಲ್ಲ. ಆಧುನಿಕ ರಾಷ್ಟ್ರವಾದ ಇಂಗ್ಲೆಂಡ ಔದ್ಯೋಗಿಕ ಕ್ರಾಂತಿಯಿಂದ ಅಲ್ಲಿ ಬಂಡವಾಳಶಾಹಿ
ಅರ್ಥವ್ಯವಸ್ಥೆಯನ್ನು ಜಾರಿಯಲ್ಲಿ ತಂದಿತ್ತು. ಈ ಅರ್ಥ ವ್ಯವಸ್ಥೆಗೆ ಪೋಷಕವಾದ
ಅರ್ಥವ್ಯವಸ್ಥೆಯನ್ನು ಅವರು ಭಾರತದಲ್ಲಿ ಜಾರಿಗೊಳಿಸಿದರು. ಇದರಿಂದಾಗಿ ಇಂಗ್ಲೆಂಡಿಗೆ ಲಾಭವಾಯಿತು;
ಆದರೆ ಭಾರತೀಯರ ಆರ್ಥಿಕ ಶೋಷಣೆಯಾಗತೊಡಗಿತು.
ಪ್ರ. 3. ಕೆಳಗಿನ ವಿಧಾನಗಳನ್ನು ಕಾರಣ ಸಹಿತ ವಿವರಿಸಿರಿ.
1. ಭಾರತದಲ್ಲಿ ರೈತರು ಸಾಲಗಾರರಾದರು.
ಉತ್ತರ:- ಹೊಸ ಭೂಕಂದಾಯ ವ್ಯವಸ್ಥೆಯ ದುಸ್ಪರಿಣಾಮ ಗ್ರಾಮೀಣ ಜೀವನದ
ಮೇಲೆ ಆಗತೊಡಗಿತು. ಭೂಕಂದಾಯ ತುಂಬುವ ಸಲುವಾಗಿ ರೈತರು ಬೆಳೆಗಳನ್ನು ಬಂದಷ್ಟು ಬೆಲೆಗೆ
ಮಾರತೊಡಗಿದರು. ವ್ಯಾಪಾರಿ ಮತ್ತು ದಲ್ಲಾಳಿಗಳು ಯೋಗ್ಯ ಬೆಲೆಗಿಂತ ಕಡಿಮೆ ಬೆಲೆಗೆ ಅವರ
ವಸ್ತುಗಳನ್ನು ಖರೀದಿಸತೊಡಗಿದ್ದರು . ಕೆಲವೊಮ್ಮೆ ಕಂದಾಯವನ್ನು ತುಂಬುವ ಸಲುವಾಗಿ ರೈತರು ತಮ್ಮ
ಹೊಲಗಳನ್ನು ಸಾಹುಕಾರರ ಹತ್ತಿರ ಅಡವು ಇಟ್ಟು ಸಾಲ ಪಡೆಯಬೇಕಾಗುತ್ತಿತ್ತು. ಇದರಿಂದಾಗಿ ಭಾರತದಲ್ಲಿಯ
ರೈತರು ಸಾಲಗಾರರಾದರು.
2. ಭಾರತದಲ್ಲಿಯ
ಹಳೆಯ ಉದ್ಯೋಗ ಧಂದೆಗಳ ಅವನತಿಯಾಯಿತು.
ಉತ್ತರ:- ಭಾರತದಿಂದ
ಇಂಗ್ಲೆಂಡಿಗೆ ನಿರ್ಯಾತವಾಗುತ್ತಿದ್ದ ವಸ್ತುಗಳ ಮೇಲೆ ಬ್ರಿಟಿಶ ಸರಕಾರವು ಭಯಂಕರ ಕರವನ್ನು
ಹೇರುತ್ತಿತ್ತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡಿನಿಂದ ಭಾರತಕ್ಕೆ ಆಯಾತವಾಗುವ ವಸ್ತುಗಳ ಮೇಲೆ
ಅತ್ಯಂತ ಕಡಿಮೆ ಕರವನ್ನು ಹೇರಲಾಗುತ್ತಿತ್ತು. ಅದರಂತೆ ಇಂಗ್ಲೆಂಡಿನಿಂದ ಬರುವ ವಸ್ತುಗಳು
ಯಂತ್ರಗಳ ಮೂಲಕ ತಯಾರಾಗುತ್ತಿದ್ದವು. ಹೀಗಾಗಿ ಅವುಗಳ ಉತ್ಪಾದನೆಯು ದೊಡ್ಡ ಪ್ರಮಾಣದಲ್ಲಿ ಹಾಗೂ
ಕಡಿಮೆ ಖರ್ಚಿನಲ್ಲಿ ಆಗುತ್ತಿತ್ತು. ಇಂಥ ಅಗ್ಗದ ವಸ್ತುಗಳೊಂದಿಗೆ ಪೈಪೋಟಿ ನಡೆಸುವುದು,
ಭಾರತೀಯ ಕರಕುಶಲ ಕೆಲಸಗಾರರಿಗೆ ಅಸಾಧ್ಯವಾಯಿತು. ಇದರ ಪರಿಣಾಮವಾಗಿ ಭಾರತದಲ್ಲಿಯ ಪರಂಪರಾಗತ
ಉದ್ಯೋಗಧಂದೆಗಳು ನಿಂತುಹೋದವು. ಹಾಗೂ ಅನೇಕ ಕರಕುಶಲ ಕೆಲಸಗಾರರು ನಿರುದ್ಯೋಗಿಗಳಾದರು.
ಪ್ರ.4. ಪಾಠದ ಸಹಾಯದಿಂದ ಕೆಳಗಿನ ಕೋಷ್ಟಕವನ್ನು ಪೂರ್ಣ
ಮಾಡಿರಿ.
ವ್ಯಕ್ತಿ |
ಕಾರ್ಯಗಳು |
ಲಾರ್ಡ್ ಕಾರ್ನವಾಲಿಸ |
ನೌಕರ ಶಾಹಿ ನಿರ್ಮಿಸಿದನು. |
1829 ರಲ್ಲಿ ಲಾರ್ಡ್ ಬೇಂಟಿಕ |
ಸತಿಸಹಗಮನ ಪದ್ಧತಿ ನಿಷೇಧ ಕಾನೂನು ಮಾಡಿದನು.
|
ಲಾರ್ಡ್ ಡಾಲಹೌಸಿ |
ವಿಧವಾ ಪುನರ್ವಿವಾಹಕ್ಕೆ ಮಾನ್ಯತೆ ನೀಡುವ ಕಾನೂನು ಮಾಡಿದನು. |
4. 1857 ರ ಸ್ವಾತಂತ್ರ್ಯ ಹೋರಾಟ |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ
ಪರ್ಯಾಯವನ್ನು ಆಯ್ಕೆ ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ಸ್ವಾತಂತ್ರ್ಯ ವೀರ ಸಾವರಕರ ಇವರು 1857 ರ ಹೋರಾಟಕ್ಕೆ
............ ಎಂಬ ಹೆಸರು ನೀಡಿದರು. (1857 ರ ಸ್ವಾತಂತ್ರ್ಯ ಸಮರ)
2. ರಾಮೋಶಿ ಬಾಂಧವರನ್ನು ಸಂಘಟಿತಗೊಳಿಸಿ ........ ಇವರು ಇಂಗ್ಲಿಷರ
ವಿರುಧ್ದ ಬಂದೆದ್ದರು. (ಉಮಾಜಿ ನಾಯಿಕ)
3. 1857 ರ ಬಂಡಾಯದ ನಂತರ ಭಾರತದ ಬಗೆಗಿನ ಆಡಳಿತವನ್ನು ನೋಡಿಕೊಳ್ಳುವ
ಸಲುವಾಗಿ ........... ಎಂಬ ಪದವನ್ನು ಇಂಗ್ಲೆಂಡ್ ಸರಕಾರದಲ್ಲಿ ನಿರ್ಮಾಣ ಮಾಡಲಾಯಿತು. (ವೈಸರಾಯ್/ಭಾರತ
ಮಂತ್ರಿ)
4. ............ ಈ ಗವ್ಹರ್ನರ ಜನರಲ್ ನು ಭಾರತದಲ್ಲಿಯ
ಸಂಸ್ಥಾನಗಳನ್ನು ವಿಲೀನಗೊಳಿಸಿದನು. (ಡಾಲಹೌಸಿ)
ಪ್ರ. 2. ಕೆಳಗಿನ ವಿಧಾನಗಳನ್ನು ಕಾರಣಸಹಿತ ವಿವರಿಸಿರಿ.
1. ಪಾಯಿಕರು ಇಂಗ್ಲಿಷರ ವಿರುದ್ಧ ಸಶಸ್ತ್ರ ದಂಗೆ ಎದ್ದರು.
ಉತ್ತರ:- ಕ್ರಿ.ಶ. 1803 ರಲ್ಲಿ ಇಂಗ್ಲೀಷರು ಓಡಿಶಾ ಗೆದ್ದುಕೊಂಡರು.
ಇಂಗ್ಲಿಶರು ಪಾಯಿಕರ ವಂಶಪರಂಪರಾಗತ ಭೂಮಿಗಳನ್ನು ಕಸಿದುಕೊಂಡರು. ಅದರಿಂದಾಗಿ ಪಾಯಿಕರು
ರೊಚ್ಚಿಗೆದ್ದರು. ಅದಲ್ಲದೆ ಇಂಗ್ಲಿಶರು ಹೇರಿದ ಕರಗಳಿಂದಾಗಿ ಉಪ್ಪಿನ ಬೆಲೆಯಲ್ಲಿ ವೃದ್ದಿಯಾಗಿ
ಸಾಮಾನ್ಯ ಜನರ ಜೀವನವು ಅಸಹನೀಯವಾಯಿತು. ಇದರ ಪರಿಣಾಮವಾಗಿ ಕ್ರಿ.ಶ. 1817ರಲ್ಲಿ ಪಾಯಿಕರು
ಇಂಗ್ಲಿಷರ ವಿರುದ್ಧ ಸಶಸ್ತ್ರ ದಂಗೆಯೆದ್ದರು.
2. ಹಿಂದೂ ಮತ್ತು ಮುಸಲ್ಮಾನ ಸೈನಿಕರಲ್ಲಿ ಅಸಂತೋಷ ಹರಡಿತು.
ಉತ್ತರ:- ಬ್ರಿಟಿಶರು 1856 ರಲ್ಲಿ ಹಿಂದೀ ಸೈನಿಕರಿಗೆ ದೂರದ ಮರೆಗೆ
ಹಾರುವ ಎನ್ಫೀಲ್ಡ್ ಬಂದೂಕುಗಳನ್ನು ಕೊಟ್ಟರು. ಅದರಲ್ಲಿಯ ಕಾಡತೂಸುಗಳ ಮೇಲಿನ ಅವರಣವನ್ನು
ಹಲ್ಲುಗಳಿಂದ ಕಚ್ಚಿ ತೆಗೆಯಬೇಕಾಗುತ್ತಿತ್ತು. ಈ ಆವರಣಕ್ಕೆ ಆಕಳು ಮತ್ತು ಹಂದಿಯ ಕೊಬ್ಬನ್ನು
ಸವರಲಾಗಿದೆ ಎನ್ನುವ ಸುದ್ದಿ ಎಲ್ಲ ಕಡೆಗೆ ಹರಡಿತು. ಅದರಿಂದಾಗಿ ಹಿಂದೂ-ಮುಸಲ್ಮಾನರ ಧಾರ್ಮಿಕ
ಭಾವನೆಗಳಿಗೆ ನೋವುಂಟಾಗಿ ಸೈನಿಕರಲ್ಲಿ ಅಸಂತೋಷ ಹರಡಿತು.
3. ಇಂಗ್ಲೀಷ ಸೈನ್ಯದ ಮುಂದೆ ಭಾರತೀಯ ಸೈನಿಕರು ಹತಬಲರಾದರು.
ಉತ್ತರ:- ಭಾರತೀಯ ಸೈನಿಕರಲ್ಲಿ ಶೌರ್ಯವಿತ್ತು,
ಆದರೆ ಯೋಗ್ಯ ಸಮಯದಲ್ಲಿ ಯೋಗ್ಯ ವ್ಯೂಹ ರಚನೆಯನ್ನು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.
ದಿಲ್ಲಿಯನ್ನು ಗೆದ್ದ ನಂತರ ಅದನ್ನು ಉಳಿಸಿಕೊಳ್ಳಲಾಗಲಿಲ್ಲ. ಅದರಂತೆ ಬಂಡಾಯಗಾರರ ಹತ್ತಿರ
ಸಾಕಷ್ಟು ಶಸ್ತ್ರಾಸ್ತ್ರಗಳಿರಲಿಲ್ಲ. ಇಂಗ್ಲಿಷರ ಕಡೆಗೆ ಪ್ರಚಂಡ ಆರ್ಥಿಕ ಬಲ, ಶಿಸ್ತುಬದ್ಧ ಸೈನ್ಯ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು
ಮತ್ತು ಅನುಭವಿ ಸೇನಾನಿಗಳು ಇದ್ದರು. ಸಂಪರ್ಕದ ಸಾಧನಗಳು ಇಂಗ್ಲಿಷರ ಸ್ವಾಧೀನದಲ್ಲಿ ಇದ್ದುದರಿಂದ
ತ್ವರಿತ ಸಂಪರ್ಕ ಸಾಧಿಸಲಾಗುತ್ತಿತ್ತು. ಹಾಗೂ ಸೈನ್ಯವನ್ನು ಶೀಘ್ರ ಸ್ಥಾಳಾಂತರಿಸಲಾಗುತ್ತಿತ್ತು.
ಇದರಿಂದಾಗಿ ಅವರ ಮುಂದೆ ಭಾರತೀಯ ಸೈನಿಕರು ಹತಬಲರಾದರು.
4. ಸ್ವಾತಂತ್ರ್ಯ ಹೋರಾಟದ ನಂತರ ಭಾರತೀಯ ಸೈನಿಕರ ಪಡೆಗಳನ್ನು ಜಾತಿಯ
ಆಧಾರದ ಮೇಲೆ ವಿಭಾಗಿಸಲಾಯಿತು.
ಸ್ವಾತಂತ್ರ್ಯ ಹೋರಾಟದ ನಂತರ ಬ್ರಿಟಿಶರು ಕೆಲವು ಧೋರಣಾತ್ಮಕ ಬದಲಾವಣೆಗಳನ್ನು
ಮಾಡಿದರು. ಭಾರತೀಯ ಸೈನ್ಯದಲ್ಲಿ ಬದಲಾವಣೆ ಮಾಡಿ ಫಿರಂಗಿ ಪಡೆಯನ್ನು ಸಂಪೂರ್ಣವಾಗಿ ಇಂಗ್ಲೀಷ
ಅಧಿಕಾರಿಗಳ ಅಧೀನದಲ್ಲಿಡಲಾಯಿತು. ಭಾರತೀಯ ಸೈನಿಕರು ಒಂದೆಡೆ ಬಂದು ಇಂಗ್ಲೀಷ ಅಧಿಪತ್ಯದ ವಿರುದ್ಧ
ದಂಗೆ ಏಳದಂತೆ ಸೈನಿಕರ ಪಡೆಗಳನ್ನು ಜಾತಿಯ ಆಧಾರದ ಮೇಲೆ ವಿಂಗಡಣೆ ಮಾಡಲಾಯಿತು
5. ಇಂಗ್ಲೀಷರು ಭಾರತೀಯ ಉದ್ಯೋಗ ಧಂದೆಗಳ ಮೇಲೆ ಭಾರವಾದ ಕರಗಳನ್ನು
ಹೆರಿದರು.
ಉತ್ತರ:- ಇಂಗ್ಲಿಶರು ಆರ್ಥಿಕ ಅದಯವನ್ನು ಹೆಚ್ಚಿಸುವ ಸಲುವಾಗಿ ಹೊಸ
ಕಂದಾಯ ಪದ್ಧತಿಯನ್ನು ಜಾರಿಗೆ ತಂದರು. ರೈತರ ಕಡೆಯಿಂದ ಒತ್ತಾಯದಿಂದ ಕರ ವಸೂಲಿ
ಮಾಡಲಾಗುತ್ತಿತ್ತು. ಇದರಿಂದ ಕೃಷಿ ವ್ಯವಸ್ಥೆ ಕುಸಿದುಬಿದ್ದಿತು. ಇಂಗ್ಲೆಂಡಿನ
ಮಾರುಕಟ್ಟೆಯಲ್ಲಿಯ ವಸ್ತುಗಳನ್ನು ಭರತದಲ್ಲಿ ಮಾರಾಟಮಾಡಿ ಆರ್ಥಿಕ ಲಾಭ ಪಡೆಯುವುದು ಬ್ರಿಟಿಷರ
ನೀತಿಯಾಗಿತ್ತು. ಅವರು ಇಲ್ಲಿಯ ಉದ್ಯೋಗ ಧಂದೆಗಳ ಮೇಲೆ ಭಾರವಾದ ಕರಗಳನ್ನು ಹೇರಿದರು.
ಪ್ರ. 3 ಕೆಳಗಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ
ಬರೆಯಿರಿ.
1. 1857 ರ ಸ್ವಾತಂತ್ರ್ಯ ಹೋರಾಟದ ಹಿಂದೆ ಯಾವ ಸಾಮಾಜಿಕ
ಕಾರಣಗಳಿದ್ದವು?
ಉತ್ತರ:- ಇಂಗ್ಲಿಶರು
ತಮ್ಮ ರೀತಿ-ನೀತಿ, ರೂಢಿ-ಪರಂಪರೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರೆಂದು ಭಾರತೀಯರಿಗೆ
ಅನಿಸತೊಡಗಿತು. ಸತಿಸಹಗಮನ ಪದ್ಧತಿ ನಿಷೇದ ಕಾನೂನು ಮತ್ತು ವಿಧವಾ ವಿವಾಹ ಕಾನೂನುಗಳು ಸಾಮಾಜಿಕ
ದೃಷ್ಟಿಯಿಂದ ಯೋಗ್ಯವಾಗಿದ್ದರೂ ಅವರು ತಮ್ಮ ಜೀವನ ಪದ್ಧತಿಯನ್ನು ಹಸ್ತಕ್ಷೇಪ ಮಾಡುತ್ತಿದ್ದಾರೆ
ಎಂಬ ತಿಳುವಳಿಕೆ ಭಾರತೀಯರಿಗಾಯಿತು. ಅದರಿಂದಾಗಿ ಅವರು ಅಸಂತುಷ್ಟರಾದರು.
2. 1857 ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರು
ಏಕೆ ಅಯಸ್ವಿಯಾದರು?
ಉತ್ತರ:- 1857 ರ ಸ್ವಾತಂತ್ರ್ಯ ಹೋರಾಟವು ಕೆಳಗಿನ ಕಾರಣಗಳಿಂದ
ಅಯಶಸ್ವಿಯಾಯಿತು.
·
ಬಂಡಾಯದ ಪ್ರಸಾರವು ಭಾರತದ ತುಂಬೆಲ್ಲ ಏಕಕಾಲಕ್ಕೆ ಆಗಲಿಲ್ಲ. ಉತ್ತರ
ಭಾರತದಲ್ಲಿ ಹೋರಾಟದ ತೀವ್ರತೆ ಅಧಿಕವಾಗಿತ್ತು. ರಜಪುತಾನಾ, ಪಂಜಾಬ, ಬಂಗಾಲದ ಕೆಲವು ಭಾಗ, ಈಶಾನ್ಯ ಭಾರತ ಈ ಹೋರಾಟದಿಂದ
ಅಲಿಪ್ತವಾಗಿ ಉಳಿದವು.
·
ಸರ್ವಸಮ್ಮತ ನಾಯಕರ ಅಭಾವ: ಇಂಗ್ಲೀಷರ ವಿರೋಧದಲ್ಲಿ ಸರ್ವಸಮ್ಮತ
ನೇತೃತ್ವ ಭಾರತೀಯ ಸೈನ್ಯದಲ್ಲಿ ಇರಲಿಲ್ಲ.
·
ಬ್ರಿಟಿಷ ಆಧಿಪತ್ಯದಿಂದ ಸಾಮಾನ್ಯ ಜನರ ಜೊತೆಗೆ ಸಂಸ್ಥಾನಿಕರಿಗೂ
ತೊಂದರೆಯಾಗುತ್ತಿತ್ತು. ಸಂಸ್ಥಾನಿಕರಲ್ಲಿ ಕೆಲವನ್ನು ಬಿಟ್ಟರೆ ಉಳಿದವರು ಇಂಗ್ಲೀಷರೊಡನೆ
ಏಕನಿಷ್ಠರಾಗಿ ಉಳಿದರು.
·
ಸೈನಿಕರಲ್ಲಿ ಯುದ್ಧ ಕೌಶಲ್ಯದ ಅಭಾವ: ಭಾರತೀಯ ಸೈನ್ಯರಲ್ಲಿ,
ಶೌರ್ಯವಿತ್ತು, ಆದರೆ ಯೋಗ್ಯ ಸಮಯದಲ್ಲಿ ಯೋಗ್ಯ ವ್ಯೂಹ ರಚನೆಯನ್ನು
ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ದಿಲ್ಲಿಯನ್ನು ಗೆದ್ದ ನಂತರ ಅದನ್ನು ಉಳಿಸಿಕೊಳ್ಳಲಾಗಲಿಲ್ಲ.
ಅದರಂತೆ ಬಂಡಾಯಗಾರರ ಹತ್ತಿರ ಸಾಕಷ್ಟು ಶಸ್ತ್ರಾಸ್ತ್ರಗಳಿರಲಿಲ್ಲ. ಇಂಗ್ಲಿಷರ ಕಡೆಗೆ ಪ್ರಚಂಡ
ಆರ್ಥಿಕ ಬಲ, ಶಿಸ್ತುಬದ್ಧ ಸೈನ್ಯ,
ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಅನುಭವಿ ಸೇನಾನಿಗಳು ಇದ್ದರು. ಸಂಪರ್ಕದ ಸಾಧನಗಳು
ಇಂಗ್ಲಿಷರ ಸ್ವಾಧೀನದಲ್ಲಿ ಇದ್ದುದರಿಂದ ತ್ವರಿತ ಸಂಪರ್ಕ ಸಾಧಿಸಲಾಗುತ್ತಿತ್ತು. ಹಾಗೂ
ಸೈನ್ಯವನ್ನು ಶೀಘ್ರ ಸ್ಥಾಳಾಂತರಿಸಲಾಗುತ್ತಿತ್ತು. ಇದರಿಂದಾಗಿ ಅವರ ಮುಂದೆ ಭಾರತೀಯ ಸೈನಿಕರು
ಹತಬಲರಾದರು.
·
ಆಂತರರಾಷ್ಟ್ರೀಯ ಪರಿಸ್ಥಿತಿ ಇಂಗ್ಲೀಷರಿಗೆ ಅನುಕೂಲವಾಗಿತ್ತು.
ಈ
ಎಲ್ಲ ಕಾರಣಗಳಿಂದ 1857 ರ ಬಂಡಾಯವು ಅಯಶಸ್ವಿಯಾಯಿತು.
3. 1857 ರ ಸ್ವಾತಂತ್ರ್ಯ ಹೋರಾಟದ ಪರಿಣಾಮಗಳನ್ನು ಬರೆಯಿರಿ.
ಉತ್ತರ:- 1857 ರ ಸ್ವಾತಂತ್ರ್ಯ ಹೋರಾಟದ ಪರಿಣಾಮಗಳು :
1.
ಈಸ್ಟ ಇಂಡಿಯಾ ಕಂಪನಿಯ ಅಡಳಿತವು ಕೊನೆಗೊಂಡಿತು: ಕಂಪನಿಯ ಆಡಳಿತದಿಂದ
ಭಾರತೀಯರಲ್ಲಿ ಅಸಂತೋಷ ಹೆಚ್ಚಾಗಿ 1857 ರ ಬಂಡಾಯ ಎದುರಿಸಬೇಕಾಯಿತು. ಇದರ ಅರಿವು ರಾಣಿ
ವಿಕ್ಟೋರಿಯಾಗೆ ಆಯಿತು. ಭಾರತದಲ್ಲಿಯ ಬ್ರಿಟಿಷ ಆಡಳಿತವು ಕಂಪನಿ ಕೈಯಲ್ಲಿ
ಸುರಕ್ಷಿತವಾಗಿಲ್ಲವೆಂದು ಅನಿಸಿದ್ದರಿಂದ 1858 ರಲ್ಲಿ ಬ್ರಿಟಿಷ ಪಾರ್ಲಿಮೆಂಟು ಕಾನೂನು ಪಾಸು
ಮಾಡಿ ಈಸ್ಟ ಇಂಡಿಯಾ ಕಂಪನಿಯ ಆಡಳಿತವನ್ನು ವಿಸರ್ಜಿಸಲಾಯಿತು.
2.
ರಾಣಿಯ ಜಾಹೀರುನಾಮೆ: ರಾಣಿ ವಿಕ್ಟೋರಿಯಾ ಭಾರತೀಯ ಜನತೆಗೆ ಉದ್ದೇಶಿಸಿ ಒಂದು
ಜಾಹೀರುನಾಮೆಯನ್ನು ಹೊರಡಿಸಿದಳು. ಎಲ್ಲ ಭಾರತೀಯರು ನಮ್ಮ ಪ್ರಜೆಗಳಾಗಿದ್ದಾರೆ. ವಂಶ,
ಧರ್ಮ, ಜಾತಿ ಇಲ್ಲವೇ ಜನ್ಮಸ್ಥಳಗಳ ಮೇಲಿಂದ ಪ್ರಜೆಗಳಲ್ಲಿ ಭೇದಭಾವ
ಮಾಡಲಾಗುವುದಿಲ್ಲ. ಪ್ರತಿಭೆಯ ಆಧಾರದ ಮೇಲೆ ಸರಕಾರಿ ನೌಕರಿಗಳನ್ನು ನೀಡಲಾಗುವುದು. ಧಾರ್ಮಿಕ
ವಿಷಯದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಸಂಸ್ಥಾನಿಕರ ಜೊತೆ ಮಾಡಿಕೊಂಡ
ಕರಾರುಗಳನ್ನು ಪಾಲಿಸಲಾಗುವುದು. ಅದರಂತೆ ಸಂಸ್ಥಾನಗಳನ್ನು ಯಾವುದೇ ಕಾರಣಕ್ಕಾಗಿ
ವಿಲೀನಗೊಳಿಸಲಾಗುವುದಿಲ್ಲ. ಎಂಬ ಭರವಸೆಯನ್ನು ಈ ಜಾಹೀರುನಾಮೆಯಲ್ಲಿ ನೀಡಲಾಯಿತು.
3.
ಭಾರತೀಯ ಸೈನ್ಯದ ಪುನರ್ರಚನೆ: ಸ್ವಾತಂತ್ರ್ಯ ಹೋರಾಟದ ನಂತರ ಬ್ರಿಟಿಶರು ಕೆಲವು ಧೋರಣಾತ್ಮಕ
ಬದಲಾವಣೆಗಳನ್ನು ಮಾಡಿದರು. ಭಾರತೀಯ ಸೈನ್ಯದಲ್ಲಿ ಬದಲಾವಣೆ ಮಾಡಿ ಫಿರಂಗಿ ಪಡೆಯನ್ನು
ಸಂಪೂರ್ಣವಾಗಿ ಇಂಗ್ಲೀಷ ಅಧಿಕಾರಿಗಳ ಅಧೀನದಲ್ಲಿಡಲಾಯಿತು. ಭಾರತೀಯ ಸೈನಿಕರು ಒಂದೆಡೆ ಬಂದು
ಇಂಗ್ಲೀಷ ಅಧಿಪತ್ಯದ ವಿರುದ್ಧ ದಂಗೆ ಏಳದಂತೆ ಸೈನಿಕರ ಪಡೆಗಳನ್ನು ಜಾತಿಯ ಆಧಾರದ ಮೇಲೆ ವಿಂಗಡಣೆ
ಮಾಡಲಾಯಿತು
4.
ಧೋರಣಾತ್ಮಕ ಬದಲಾವಣೆಗಳು: ಭಾರತೀಯರ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ
ಮಾಡುವುದಿಲ್ಲವೆಂಬ ಧೋರಣೆಯನ್ನು ಇಂಗ್ಲೀಷರು ಸ್ವೀಕರಿಸಿದರು. ಅದರ ಜೊತೆಗೆ ಭಾರತೀಯ ಸಮಜಾವು
ಸಾಮಾಜಿಕ ದೃಷ್ಟಿಯಿಂದ ಸಂಘಟಿತವಾಗಬಾರದೆಂದು ಕಾಳಜಿ ವಹಿಸಿತು,
ಜಾತಿ, ಧರ್ಮ, ವಂಶ,
ಪ್ರದೇಶಗಳ ಕಾರಣದ ಮೇಲಿಂದ ಯಾವಾಗಲೂ ಸಂಘರ್ಷ ನಿರ್ಮಾಣವಾಗಬೇಕು. ಪರಸ್ಪರರ ವಿಷಯದಲ್ಲಿ ಭಾರತೀಯರ
ಮನಸ್ಸು ಕಲುಷಿತವಾಗಬೇಕು ಎಂಬ ಧೋರಣೆ ಅನುಸರಿಸಿ ‘ವಿಭಜಿಸಿ ಆಳು’ ಎಂಬ ಸೂತ್ರವನ್ನು ಅನುಸರಿಸಿದರು.
4. 1857 ರ ಸ್ವಾತಂತ್ರ್ಯ ಹೋರಾಟದ ನಂತರ ಇಂಗ್ಲೀಷರು ಯಾವ ಧೋರನಾತ್ಮಕ
ಬದಲಾವಣೆಗಳನ್ನು ಮಾಡಿದರು?
ಉತ್ತರ:- ಸ್ವಾತಂತ್ರ್ಯ ಹೋರಾಟದ ನಂತರ ಬ್ರಿಟಿಶರು ಕೆಲವು ಧೋರಣಾತ್ಮಕ
ಬದಲಾವಣೆಗಳನ್ನು ಮಾಡಿದರು. ಭಾರತೀಯ ಸೈನ್ಯದಲ್ಲಿ ಬದಲಾವಣೆ ಮಾಡಿ ಫಿರಂಗಿ ಪಡೆಯನ್ನು
ಸಂಪೂರ್ಣವಾಗಿ ಇಂಗ್ಲೀಷ ಅಧಿಕಾರಿಗಳ ಅಧೀನದಲ್ಲಿಡಲಾಯಿತು. ಭಾರತೀಯ ಸೈನಿಕರು ಒಂದೆಡೆ ಬಂದು ಇಂಗ್ಲೀಷ
ಅಧಿಪತ್ಯದ ವಿರುದ್ಧ ದಂಗೆ ಏಳದಂತೆ ಸೈನಿಕರ ಪಡೆಗಳನ್ನು ಜಾತಿಯ ಆಧಾರದ ಮೇಲೆ ವಿಂಗಡಣೆ
ಮಾಡಲಾಯಿತು.
ಭಾರತೀಯರ
ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂಬ ಧೋರಣೆಯನ್ನು ಇಂಗ್ಲೀಷರು
ಸ್ವೀಕರಿಸಿದರು. ಅದರ ಜೊತೆಗೆ ಭಾರತೀಯ ಸಮಜಾವು ಸಾಮಾಜಿಕ ದೃಷ್ಟಿಯಿಂದ ಸಂಘಟಿತವಾಗಬಾರದೆಂದು ಕಾಳಜಿ
ವಹಿಸಿತು, ಜಾತಿ, ಧರ್ಮ, ವಂಶ, ಪ್ರದೇಶಗಳ ಕಾರಣದ ಮೇಲಿಂದ ಯಾವಾಗಲೂ ಸಂಘರ್ಷ ನಿರ್ಮಾಣವಾಗಬೇಕು. ಪರಸ್ಪರರ ವಿಷಯದಲ್ಲಿ
ಭಾರತೀಯರ ಮನಸ್ಸು ಕಲುಷಿತವಾಗಬೇಕು ಎಂಬ ಧೋರಣೆ ಅನುಸರಿಸಿ ‘ವಿಭಜಿಸಿ
ಆಳು’ ಎಂಬ ಸೂತ್ರವನ್ನು ಅನುಸರಿಸಿದರು.
ಪಾಠ 5. ಸಾಮಾಜಿಕ ಮತ್ತು ಧಾರ್ಮಿಕ
ಪುನರುಜ್ಜೀವನ |
ಪ್ರ. 1. . ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ
ಪರ್ಯಾಯವನ್ನು ಆಯ್ಕೆ ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ರಾಮಕೃಷ್ಣ ಮಿಶನದ ಸ್ಥಾಪನೆಯನ್ನು ಸ್ವಾಮಿ ವಿವೇಕಾನಂದ
ಇವರು ಮಾಡಿದರು.
2. ಸರ್ ಸಯ್ಯದ ಅಹಮದ ಇವರು ಆಂಗ್ಲೊ ಓರಿಯಂಟಲ್
ಕಾಲೇಜ ಸ್ಥಾಪಿಸಿದರು.
3. ಡಿಪ್ರೆಸ್ಡ್ ಕ್ಲಾಸೆಸ್ ಮಿಶನನ ಸ್ಥಾಪನೆಯನ್ನು ಮಹರ್ಷಿ
ವಿಠ್ಠಲ ರಾಮಜಿ ಶಿಂದೆ ಇವರು ಮಾಡಿದರು.
ಪ್ರ.2. ಕೆಳಗಿನ ಕೋಷ್ಟಕವನ್ನು ಪೂರ್ಣಮಾಡಿರಿ.
ಸಮಾಜ ಸುಧಾರಕರ ಹೆಸರು |
ಸಂಸ್ಥೆ |
ವರ್ತಮಾನ ಪತ್ರ/ಪುಸ್ತಕ |
ಸಂಸ್ಥೆಯ ಕಾರ್ಯಗಳು |
ರಾಜ ರಾಮಮೋಹನ ರಾಯ |
ಬ್ರಹ್ಮೋ ಸಮಾಜ |
ಸಂವಾದ ಕೌಮುದಿ |
ಕರ್ಮಕಾಂಡ ವಿರೋಧ, ಬಾಲವಿವಾಹ ನಿಷೇಧ, ವಿಧವಾ ವಿವಾಹ ಸಮರ್ಥನೆ |
ಸ್ವಾಮಿ ದಯಾನಂದ ಸರಸ್ವತಿ |
ಆರ್ಯ ಸಮಾಜ |
ಸತ್ಯಾರ್ಥ ಪ್ರಕಾಶ |
ಸ್ತ್ರೀ-ಪುರುಷ ಸಮಾನತೆ, ಅನೇಕ
ಶಿಕ್ಷಣ ಸಂಸ್ಥೆಗಳ ಸ್ಥಾಪನೆ |
ಮಹಾತ್ಮಾ ಜ್ಯೋತಿಬಾ ಫುಲೆ |
ಸತ್ಯ ಶೋಧಕ ಸಮಾಜ |
ಗುಲಾಮಗಿರಿ/ ಶೇತಕಾರ್ಯಾಂಚೆ ಆಸೂಡ |
ಸ್ಪೃಶ-ಅಸ್ಪೃಶ ವಿರೋಧ, ಸ್ತ್ರೀ ಶಿಕ್ಷಣ ಸಮರ್ಥನೆ |
ಪ್ರ. 3. ಕೆಳಗಿನ ವಿಧಾನಗಳನ್ನು ಕಾರಣಸಹಿತ
ಸ್ಪಷ್ಟಪಡಿಸಿರಿ.
1. ಭಾರತದಲ್ಲಿ ಸಾಮಾಜಿಕ, ಧಾರ್ಮಿಕ ಪರಿವರ್ತನೆಯ
ಚಳುವಳಿ ಆರಂಭವಾಯಿತು.
ಉತ್ತರ: ಭಾರತೀಯ ಸಮಾಜದಲ್ಲಿಯ ಅಂಧಶ್ರದ್ಧೆ ,
ರೂಢಿಪ್ರೀಯತೆ, ಜಾತಿಭೇದ, ಉಚ್ಚ-ನೀಚ
ಭೇದಭಾವದ ಭ್ರಾಮಕ ಕಲ್ಪನೆಗಳು, ವಿಮರ್ಶಾತ್ಮಕ ಪ್ರವೃತ್ತಿಯ
ಅಭಾವಗಳಿಂದಾಗಿ ಅದು ಹಿಂದುಳಿದಿದೆ ಎಂಬುದರ ಅರಿವು ಸುಶಿಕ್ಷಿತ ಸಮಾಜದಲ್ಲಿ ಆಗತೊಡಗಿತು. ದೇಶವನ್ನು
ಪ್ರಗತಿಪಥದಲ್ಲಿ ಸಾಗಿಸುವ ಸಲುವಾಗಿ ಭಾರತೀಯ ಸಮಾಜದಲ್ಲಿಯ ದೋಷಗಳನ್ನು ಮತ್ತು ಅನಿಷ್ಟ
ಪ್ರವೃತ್ತಿಗಳನ್ನು ನಿರ್ಮೂಲನಗೊಳಿಸಿ ಮಾನವತೆ, ಸಮಾನತೆ, ಬಂಧುತ್ವ ಈ ತತ್ವಗಳ ಮೇಲೆ ಆಧರಿತವಾದ ಹೊಸ ಸಮಾಜವನ್ನು ನಿರ್ಮಾಣ ಮಾಡುವ ಅವಶ್ಯಕತೆ
ಇತ್ತು. ಭಾರತೀಯ ಸಮಾಜದಲ್ಲಿಯ ವಿವಿಧ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಸುಶಿಕ್ಷಿತ
ವಿಚಾರವಂತರು ತಮ್ಮ ಬರವಣಿಗೆಯ ಮೂಲಕ ಜನಜಾಗೃತಿಯನ್ನುಂಟುಮಾಡತೊಡಗಿದ್ದರು. ಹೀಗೆ ಭಾರತದಲ್ಲಿ
ಸಾಮಾಜಿಕ, ಧಾರ್ಮಿಕ ಪರಿವರ್ತನೆಯ ಚಳುವಳಿ ಆರಂಭವಾಯಿತು.
2. ಮಹಾತ್ಮಾ
ಫುಲೆಯವರು ಕ್ಷೌರಿಕರ ಮುಷ್ಕರವನ್ನು
ಮಾಡಿಸಿದರು.
ಉತ್ತರ: ಮಹಾತ್ಮ ಜ್ಯೋತಿಬಾ ಫುಲೆಯವರು ಒಬ್ಬ ಮಹಾಮಾನವತಾವಾದಿ
ಸಮಾಜಸುಧಾರಕರಾಗಿದ್ದರು. 1848ರಲ್ಲಿ ಪುಣೆಯಲ್ಲಿ ಮೊದಲ ಹುಡುಗಿಯರಿಗಾಗಿ ಶಿಕ್ಷಣದ
ಹೆಬ್ಬಾಗಿಲನ್ನು ತೆರೆದರು. ಅಂದಿನ ಸಮಾಜದಲ್ಲಿ ಗಂಡ ಸತ್ತು ಹೆಣ್ಣು ಮಕ್ಕಳು ವಿಧವೆಯರಾದಾಗ ತಲೆ
ಮುಂಡನ ಮಾಡಲಾಗುತ್ತಿತ್ತು. ಇದು
ಕಡ್ಡಾಯವಾಗಿತ್ತು. ಈ ಅನಿಷ್ಟ ಪದ್ಧತಿಯನ್ನು ತೊರೆದು ಹಾಕಲು ಜ್ಯೋತಿಬಾ ಫುಲೆ ಕ್ಷೌರಿಕರ ಮುಸ್ಕರವನ್ನು
ಮಾಡಿಸಿದರು.
ಪ್ರ.4. ಟಿಪ್ಪಣಿ ಬರೆಯಿರಿ.
1. ರಾಮಕೃಷ್ಣ ಮಿಶನ್: ರಾಮಕೃಷ್ಣರ ಶಿಷ್ಯರಾದ ಸ್ವಾಮಿ ವಿವೇಕಾನಂದ ಇವರು
ಕ್ರಿ. ಶ. 1897ರಲ್ಲಿ ರಾಮಕೃಷ್ಣ ಮಿಷನ್ ಸ್ಥಾಪನೆ ಮಾಡಿದರು. ರಾಮಕೃಷ್ಣ ಮಿಷನ್ ಇದು ಜನಸೇವೆಯ
ಕಾರ್ಯ ಮಾಡಿತು. ಬರಗಾಲ ಪೀಡಿತರಿಗೆ ನೆರವು, ರೋಗಿ, ದೀನ-ದುರ್ಬಲರಿಗೆ
ಔಷಧೋಪಚಾರ, ಸ್ತ್ರೀ-ಶಿಕ್ಷಣ, ಅಧ್ಯಾತ್ಮಿಕ
ಉನ್ನತಿ ಮುಂತಾದ ಕ್ಷೇತ್ರಗಳಲ್ಲಿ ಈ ಮಿಷನ್ ಕಾರ್ಯ ಮಾಡಿತು. ಮತ್ತು ಇಂದಿಗೂ ಮಾಡುತ್ತಿದೆ.
1. ಭಾರತ ಸೇವಕ ಸಮಾಜದ ಸ್ಥಪನೆಯನ್ನು ………. ಇವರು ಮಾಡಿದರು.
ಅ) ಗಣೇಶ
ವಾಸುದೇವ ಜೋಶಿ ಬ) ಭಾವೂ ದಾಜಿ ಲಾಡ
ಕ) ಮ. ಗೋ.
ರಾನಡೆ ಡ) ಗೋಪಾಳ ಕೃಷ್ಣ ಗೋಖಲೆ
2. ರಾಷ್ಟ್ರೀಯ ಸಭೆಯ ಪ್ರಥಮ ಅಧಿವೇಶನವು ...... ಯಲ್ಲಿ ಜರುಗಿತು.
ಅ) ಪುಣೆ ಬ)
ಮುಂಬಯಿ ಕ) ಕೋಲಕಾತಾ ಡ)
ಲಖನೌ
3. ಗೀತಾ ರಹಸ್ಯ ಎಂಬ ಗ್ರಂಥವನ್ನು ......... ಇವರು ಬರೆದರು.
ಅ)
ಲೋಕಮಾನ್ಯ ಟಿಳಕ ಬ)
ದಾದಾಭಾಯಿ ನೌರೋಜಿ
ಕ) ಲಾಲಾ
ಲಜಪತರಾಯ ಡ) ಬಿಪಿನಚಂದ್ರ ಪಾಲ
ಬ) ಹೆಸರುಗಳನ್ನು ಬರೆಯಿರಿ.
1) ಸೌಮ್ಯವಾದಿ ಮುಖಂಡರು :-ಗೋಪಾಲಕೃಷ್ಣ ಗೋಖಲೆ, ಫಿರೋಜಶಹಾ ಮೇಹತಾ, ಸುರೇಂದ್ರನಾಥ ಬ್ಯಾನರ್ಜಿ
2) ಉಗ್ರವಾದಿ ಮುಖಂಡರು:-ಲಾಲಾ ಲಜಪತರಾಯ, ಬಾಳ ಗಂಗಾಧರ ತಿಲಕ ಮತ್ತು ಬಿಪಿನಚಂದ್ರ ಪಾಲ
ಪ್ರ. 2. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ.
1. ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರಲ್ಲಿ ಸ್ವಾಭಿಮಾನ
ಜಾಗೃತವಾಯಿತು.
1. ಉತ್ತರ: ಬ್ರಿಟಿಷರ ಆಡಳಿತದಲ್ಲಿ ಅನೇಕ ಭಾರತೀಯ ಹಾಗೂ ಪಾಶ್ಚಾತ್ಯ ವಿದ್ವಾಂಸರು ಭಾರತೀಯ ಸಂಸ್ಕೃತಿಯ ಅಭ್ಯಾಸವನ್ನು ಮಾಡಿದರು. ಸಂಸ್ಕೃತ, ಪಾರಸಿ ಮತ್ತು ಅನ್ಯ ಭಾರತೀಯ ಭಾಷೆಗಳಲ್ಲಿಯ ಹಸ್ತಲಿಖಿತಗಳನ್ನು ಪರೀಕ್ಷಿಸಿ ಅವುಗಳ ಮೇಲಿನ ಶಂಶೋಧನೆಗಳನ್ನು ಪ್ರಸಿದ್ಧಗೊಳಿಸಿದರು. ಡಾ. ಭಾವೂ ದಾಜಿ ಲಾಡ, ಡಾ. ರಾ. ಗೋ. ಭಾಂಡಾರಕರ ಮುಂತಾದ ಭಾರತೀಯ ವಿದ್ವಾಂಸರು ಪ್ರಾಚೀನ ಭಾರತೀಯ ಸಂಸ್ಕೃತಿಯ ಆಳವಾದ ಅಭ್ಯಾಸ ಮಾಡಿದರು. ತಮಗೆ ಸಮೃದ್ಧ ಪರಂಪರೆ ಲಭಿಸಿದೆ ಎಂಬುದು ತಿಳಿದುದರಿಂದ ಭಾರತೀಯರಲ್ಲಿ ಸ್ವಾಭಿಮಾನ ಜಾಗೃತವಾಯಿತು.
2. 2. ಭಾರತೀಯ ರಾಷ್ಟ್ರೀಯ ಸಭೆಯಲ್ಲಿ ಎರಡು ಗುಂಪುಗಳು ನಿರ್ಮಾಣವಾದವು.
ಉತ್ತರ: ರಾಜಕೀಯ ದೃಷ್ಟಿಯಿಂದ ಜಾಗೃತರಾದ ಭಾರತೀಯ ರಾಷ್ಟ್ರೀಯ ಸಭೆಯ ಮುಖಂಡರ ಘಟನಾತ್ಮಕ ಮಾರ್ಗದಿಂದ
ಚಳುವಳಿ ಮುಂದುವರೆಸುವುದರಲ್ಲಿ ಒಮ್ಮತವಿದ್ದರೂ ಅವರ ಕಾರ್ಯ ಪದ್ಧತಿಯ ವಿಷಯವಾಗಿ ಭಿನ್ನಾಭಿಪ್ರಾಯಗಳಿದ್ದವು.
ರಾಜಕೀಯ ಚಳುವಳಿಯಲ್ಲಿಯ ಈ ತಾತ್ವಿಕ ಭಿನ್ನಾಭಿಪ್ರಾಯಗಳ ಮೇಲಿಂದ ಶಾಂತತೆಯ ಘಟನಾತ್ಮಕ ಮಾರ್ಗದ ಸಮರ್ಥನೆ
ಮಾಡುವ ಸೌಮ್ಯವಾದಿಗಳು ಹಾಗೂ ಸ್ವಾತಂತ್ರ್ಯದ ಸಲುವಾಗಿ ಅಧಿಕ ತೀವ್ರ ಸಂಘರ್ಷ ಮಾಡಬೇಕು ಎಂದು ತಿಳಿಯುವ
ಉಗ್ರವಾದಿ ಎಂಬ ಎರಡು ಗುಂಪುಗಳು ನಿರ್ಮಾಣವಾದವು.
3. 3. ಲಾರ್ಡ್ ಕರ್ಝನನ ಬಂಗಾಲದ ವಿಭಜನೆ ಮಾಡುವುದಾಗಿ ನಿರ್ಧರಿಸಿದನು.
ಉತ್ತರ: ಹಿಂದೂ-ಮುಸ್ಲಿಂ ಸಮಾಜದಲ್ಲಿ ಒಡಕಿನ ಬೀಜಗಳನ್ನು ಬಿತ್ತಿ ‘ವಿಭಜಿಸಿ
ಆಳು’ ಎಂಬ ನೀತಿಯನ್ನು ಅನುಸರಿಸಲು ನಿರ್ಧರಿಸಿದರು. ಬಂಗಾಳ ಇದು ದೊಡ್ಡ
ಪ್ರಾಂತವಾಗಿತ್ತು. ಇಷ್ಟು ದೊಡ್ಡ ಪ್ರಾಂತದ ಆಡಳಿತ ನೋಡಿಕೊಳ್ಳುವುದು ಕಠಿಣವಾಗಿದೆ ಎಂಬ ಕಾರಣವನ್ನು
ಮುಂದಿತ್ತು ತತ್ಕಾಲೀನ ವ್ಹಾಸರಾಯ ಲಾರ್ಡ್ ಕರ್ಝನನು 1905ರಲ್ಲಿ ಬಂಗಾಳ ಪ್ರಾಂತದ ವಿಭಜನೆ ಮಾಡುವುದಾಗಿ
ನಿರ್ಧರಿಸಿದನು.
ಪ್ರ.3. ಟಿಪ್ಪಣೆ
ಬರೆಯಿರಿ.
1) ರಾಷ್ಟ್ರೀಯ ಸಭೆಯ ಉದ್ದೇಶಗಳು: ಧರ್ಮ,
ವಂಶ, ಜಾತಿ, ಭಾಷೆ,
, ಭೌಗೋಳಿಕ ಪ್ರದೇಶ ಮುಂತಾದ ಭೇದಗಳನ್ನು ಮರೆತು ಭಾರತದ ಬೇರೆ ಬೇರೆ
ಭಾಗದ ಜನರನ್ನು ಒಂದುಗೂಡಿಸುವುದು, ಪರಸ್ಪರ ಸಮಸ್ಯೆಗಳನ್ನು
ಅರಿತುಕೊಂಡು ವಿಚಾರ ವಿನಿಮಯ ಮಾಡುವುದು, ರಾಷ್ಟ್ರದ ಉನ್ನತಿಗಾಗಿ
ಪ್ರಯತ್ನ ಮಾಡುವುದು ಇವು ರಾಷ್ಟ್ರೀಯ ಸಭೆಯ ಉದ್ದೇಶಗಳಾಗಿದ್ದವು.
2) ವಂಗಭಂಗ ಚಳುವಳಿ: ಸಂಪೂರ್ಣ ಭಾರತದಲ್ಲಿ ಬಂಗಾಲದ ವಿಭಜನೆಯ ವಿರುದ್ಧ ಜನಮತವ
ಜಾಗೃತವಾಯಿತು. 16 ಅಕ್ಟೋಬರ ಈ ವಿಭಜನೆಯ ದಿನವನ್ನು ರಾಷ್ಟ್ರೀಯ ಶೋಕದಿನವೆಂದು ಆಚರಿಸಲಾಯಿತು.
ಭಾರತದ ತುಂಬೆಲ್ಲ ನಿಷೇಧ ಸಭೆಗಳ ಮುಖಾಂತರ ಸರಕಾರವನ್ನು ಧಿಕ್ಕರಿಸಲಾಯಿತು. ಎಲ್ಲೆಡೆ
ಜನರು 'ಒಂದೇ
ಮಾತರಂ' ಗೀತೆಯನ್ನು
ಹಾಡತೊಡಗಿದರು. ಐಕ್ಯತೆಯ ಪ್ರತೀಕವೆಂದು ರಕ್ಷಾಬಂಧನದ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಸರಕಾರಿ ಶಾಲೆ, ಮಹಾವಿದ್ಯಾಲಯಗಳ
ಮೇಲೆ ಬಹಿಷ್ಕಾರ ಹಾಕಿ ಬೃಹತ್ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಚಳುವಳಿಯಲ್ಲಿ ಭಾಗವಹಿಸಿದರು.
ವಂಗಭಂಗ ಚಳುವಳಿಯ ನೇತೃತ್ವವನ್ನು ಸುರೇಂದ್ರನಾಥ ಬ್ಯಾನರ್ಜಿ, ಆನಂದ ಮೋಹನ ಬೋಸ,
ರವೀಂದ್ರನಾಥ ಟಾಗೋರ ಮು೦ತಾದವರು ವಹಿಸಿದರು. ವಂಗಭಂಗ ಚಳುವಳಿಯಿಂದ ಭಾರತೀಯ ರಾಷ್ಟ್ರೀಯ
ಸಭೆಯ ವ್ಯಾಪ್ತಿ ಹೆಚ್ಚಿತು. ಅದು ಒಂದು ರಾಷ್ಟ್ರೀಯ ಚಳುವಳಿಯಾಯಿತು. ಅಸಂತೋಷದ ತೀವ್ರತೆಯನ್ನು
ಕಂಡು 1911ರಲ್ಲಿ ಬ್ರಿಟಿಶರು ಬಂಗಾಲದ ವಿಭಜನೆಯನ್ನು ರದ್ದುಪಡಿಸಿದರು.
3) ರಾಷ್ಟ್ರೀಯ ಸಭೆಯ ಚತು:ಸೂತ್ರಗಳು: ಸ್ವರಾಜ್ಯ, ಸ್ವದೇಶಿ, ರಾಷ್ಟ್ರೀಯ ಶಿಕ್ಷಣ ಹಾಗೂ
ಬಹಿಷ್ಕಾರ ಈ ಚತು:ಸೂತ್ರಗಳನ್ನು ರಾಷ್ಟ್ರೀಯ ಸಭೆಯು 1905 ರ ರಾಷ್ಟ್ರೀಯ ಸಭೆಯ ಅಧಿವೇಶನದಲ್ಲಿ
ಸ್ವೀಕರಿಸಿತು.
ಪ್ರ. 4. ಭಾರತೀಯ ರಾಷ್ಟ್ರೀಯ ಸಭೆಯ ಹಿನ್ನೆಲೆಯಲ್ಲಿ ಕೆಳಗಿನ ಅಂಶಗಳ
ಆಧಾರದಿಂದ ಸ್ಪಷ್ಟಪಡಿಸಿರಿ.
1. ಆಡಳಿತದ ಕೇಂದ್ರೀಕರಣ: ಬ್ರಿಟಿಷ
ಆಡಳಿತದಿಂದಾಗಿ ಭಾರತದಲ್ಲಿ ನಿಜವಾದ ಅರ್ಥದಲ್ಲಿ
ಕೇಂದ್ರೀಕೃತ ಆಡಳಿತ ಆರಂಭವಾಯಿತು. ದೇಶದ ತುಂಬೆಲ್ಲ ಸಮಾನ ನೀತಿ,
ಕಾನೂನಿನ ಎದುರಿಗೆ ಸಮಾನ ದರ್ಜೆ ಇವುಗಳಿಂದಾಗಿ ಜನರಲ್ಲಿ ರಾಷ್ಟ್ರೀಯತ್ವದ ಭಾವನೆ
ವಿಕಸಿತವಾಯಿತು. ಬ್ರಿಟಿಷರು ತಮ್ಮ ಆಡಳಿತದ ಅನುಕೂಲತೆಗಾಗಿ ಮತ್ತು ಸೈನ್ಯದ ಸ್ಥಳಾಂತರಕ್ಕಾಗಿ
ರೇಲ್ವೆ ಮತ್ತು ರಸ್ತೆಗಳನ್ನು ನಿರ್ಮಾಣ ಮಾಡಿದರು. ಆದರೆ ಈ ಭೌತಿಕ ಸೌಕರ್ಯದ ಲಾಭ ಭಾರತಿಯರಿಗೂ
ಆಯಿತು. ಭಾರತದಲ್ಲಿಯ ವಿವಿಧ ಪ್ರಾಂತದಲ್ಲಿಯ ಜನರಲ್ಲಿ ಪರಸ್ಪರ ಸಂಬಂಧ ನಿರ್ಮಾಣವಾಗಿ ಅವರಲ್ಲಿ
ಸಂವಾದ ಬೆಳೆಯಿತು. ಮತ್ತು ರಾಷ್ಟ್ರಭಾವನೆ ವಿಕಸಿತವಾಯಿತು. ಈ ರೀತಿಯಾಗಿ ಭಾರತೀಯರಲ್ಲಿ ಸ್ವಾಭಿಮಾನ ಜಾಗೃತವಾಯಿತು
2. ಆರ್ಥಿಕ ಶೋಷಣೆ: ಇಂಗ್ಲೆಂಡಿನ
ಸಾಮ್ರಾಜ್ಯಶಾಹಿ ಧೋರಣೆಯಿಂದ ಭಾರತದ ಆರ್ಥಿಕ ಶೋಷಣೆಯಾಗತೊಡಗಿತು. ಅನೇಕ ಮಾರ್ಗಗಳಿಂದ ಭಾರತದ
ಸಂಪತ್ತು ಇಂಗ್ಲೆಂಡಿಗೆ ಹರಿದು ಹೋಗತೊಡಗಿತು. ರೈತರಿಗೆ ಕಡ್ಡಾಯವಾಗಿ ನಗದು ಬೆಳೆಗಳನ್ನು ಬೆಳೆಯಲು
ಹಚ್ಚುವುದು, ಭೂಕಂದಾಯದ ಹೊರೆ, ಸತತ ತಲೆದೋರುವ ಕ್ಷಾಮ
ಇವುಗಳಿಂದಾಗಿ ಭಾರತದ ಬೆನ್ನೆಲುಬೇ ಮುರಿದುಹೋಗಿತ್ತು. ಪರಂಪರಾಗತ ಉದ್ಯೋಗಗಳು ನಾಶವಾಗಿದ್ದರಿಂದ
ನಿರುದ್ಯೋಗ ಹೆಚ್ಚಿತು. ಬಂಡವಾಳದಾರರಿಂದ ಕೂಲಿಕಾರರ ಶೋಷಣೆಯಾಗುತ್ತಿತ್ತು. ಮಾಧ್ಯಮ ವರ್ಗದ ಜನರ
ಮೇಲೆ ಹೊಸ ಹೊಸ ಕರಗಳನ್ನು ಹೆರಲಾಯಿತು. ಇದರಿಂದಾಗಿ ಜನರ ಮನಸ್ಸಿನಲ್ಲಿ ಅಸಂತೋಷ
ಉಕ್ಕುತ್ತಿತ್ತು.
3. ಪಾಶ್ಚಾತ್ಯ ಶಿಕ್ಷಣ: ಪಾಶ್ಚಾತ
ಶಿಕ್ಷಣದ ಪ್ರಸಾರದಿಂದ ಭಾರತಿಯರಿಗೆ ನ್ಯಾಯ, ಸ್ವಾತಂತ್ರ್ಯ, ಸಮತೆ, ಪ್ರಜಾಪ್ರಭುತ್ವ ಮುಂತಾದ ಹೊಸ ಕಲ್ಪನೆಗಳ ಪರಿಚಯವಾಯಿತು. ಬುದ್ಧಿನಿಷ್ಠೆ, ವಿಜ್ಞಾನ ನಿಷ್ಠೆ, ಮಾನವತೆ,
ರಾಷ್ಟ್ರವಾದ ಇತ್ಯಾದಿ ಮೌಲ್ಯಗಳನ್ನು ಭಾರತೀಯರು ಕರಗತ ಮಾಡಿಕೊಂಡರು. ಅದರಿಂದಾಗಿ ನಮ್ಮ ದೇಶದ
ಆಡಳಿತವನ್ನು ನಡೆಸುವುದಕ್ಕೆ ನಾವು ಸಮರ್ಥರಾಗಿದ್ದು ಈ ಮೌಲ್ಯಗಳ ಆಧಾರದ ಮೇಲೆ ನಮ್ಮ ದೇಶ ಉನ್ನತಿ
ಸಾಧಿಸಬೇಕು ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡತೊಡಗಿತು.
4. ಭಾರತದ ಪ್ರಾಚೀನ ಇತಿಹಾಸದ ಅಭ್ಯಾಸ: ಅನೇಕ ಭಾರತೀಯ ಮತ್ತು ಪಾಶ್ಚಾತ ವಿದ್ವಾಂಸರು ಭಾರತೀಯ ಸಂಸ್ಕೃತಿಯ ಅಭ್ಯಾಸವನ್ನು
ಆರಂಭಿಸಿದರು. ಸಂಸ್ಕೃತ, ಪಾರಸಿಮತ್ತು ಅನ್ಯ ಭಾರತೀಯ ಭಾಷೆಗಳಲ್ಲಿ
ಹಸ್ತಲಿಖಿತಗಳನ್ನು ಪರೀಕ್ಷಿಸಿ ಅವುಗಳ ಮೇಲಿನ ಸಂಶೋಧನೆಗಳನ್ನು ಪ್ರಸಿದ್ಧಗೊಳಿಸಿದರು. ಡಾ. ರಾ.
ಗೋ. ಭಾಂಡಾರಕರ, ಡಾ. ಭಾವೂ ಲಾಡ ಮುಂತಾದ ಭಾರತೀಯ ವಿದ್ವಾಂಸರು
ಪ್ರಾಚೀನ ಭಾರತೀಯ ಸಂಸ್ಕೃತಿಯ ಆಳವಾದ ಅಭ್ಯಾಸ ಮಾಡಿದರು.
5. ವರ್ತಮಾನಪತ್ರಗಳ ಕಾರ್ಯ : ಇದೇ ಕಾಲದಲ್ಲಿ ಇಂಗ್ಲೀಷ ಮತ್ತು ಪ್ರದೇಶಿಕ ಭಾಷೆಗಳಲ್ಲಿ ವರ್ತಮಾನ ಮಾತ್ರಗಳು ಮತ್ತು
ನಿಯತಕಾಲಿಕೆಗಳು ಪ್ರಸಿದ್ಧವಾಗತೊಡಗಿದ್ದವು. ಈ ವರ್ತಮಾನ ಪಾತ್ರಗಳ ಮೂಲಕ ರಾಜಕೀಯ ಮತ್ತು
ಸಾಮಾಜಿಕ ಜಾಗೃತಿಯಾಗತೊಡಗಿತು. ದರ್ಪಣ, ಪ್ರಭಾಕರ, ಹಿಂದೂ, ಅಮೃತ ಬಜಾರ ಪತ್ರಿಕಾ, ಕೇಸರಿ,
ಮರಾಠಾ ಇತ್ಯಾದಿ ವರ್ತಮಾನ ಪತ್ರಗಳಲ್ಲಿ ಸರಕಾರದ ನೀತಿಯ ಬಗ್ಗೆ ಟೀಕೆಯಾಗತೊಡಗಿತು.
7ನೇ ಪಾಠ
ಅಸಹಕಾರ ಚಳುವಳಿ
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ ಪರ್ಯಾಯವನ್ನು ಆಯ್ಕೆ ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ಗಾಂಧೀಜಿಯವರು ತಮ್ಮ ಕಾರ್ಯದ ಆರಂಭವನ್ನು ............... ಈ ದೇಶದಿಂದ ಮಾಡಿ
ಅ) ಭಾರತ ಬ) ಇಂಗ್ಲೆಂಡ್ ಕ) ದಕ್ಷಿಣ ಆಫ್ರಿಕಾ ಡ)
ಮ್ಯಾನಮಾರ
2. ರೈತರು .....
ಜಿಲ್ಹೆಯಲ್ಲಿ ಭೂಕಂದಾಯ ನಿರಾಕರಣೆಯ ಚಳುವಳಿಯನ್ನು ಆರಂಭಿಸಿದರು.
ಅ) ಗೋರಖಪುರ
ಬ) ಖೇಡಾ ಕ) ಸೋಲಾಪುರ ಡ) ಅಮರಾವತಿ
3. ಜಾಲಿಯನವಾಲಾ ಬಾಗ ಹತ್ಯಾಕಾಂಡದ ನಿಷೇಧವೆಂದು ರವೀಂದ್ರನಾಥ
ಠಾಗೋರರು ಸರಕಾರವು ನೀಡಿದ ....... ಪದವಿಯನ್ನು ತ್ಯಾಗಮಾಡಿದರು. ಅ) ಲಾರ್ಡ್
ಬ) ಸರ ಕ) ರಾವಬಹದ್ದೂರ ಡ) ರಾವಸಾಹೇಬ
ಪ್ರ. 2. ಕೆಳಗಿನ ಪ್ರಶ್ನೆಗಳಲ್ಲಿ ಪ್ರತಿಯೊಂದಕ್ಕೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
1. ದಕ್ಷಿಣ
ಆಫ್ರಿಕೆಯಲ್ಲಿ 1906 ರ ಆದೇಶದ ಪ್ರಕಾರ ಕಪ್ಪು ವರ್ಣಿಯರ ಮೇಲೆ ಯಾವ ಬಂಧನವನ್ನು ಹಾಕಲಾಯಿತು?
ಉತ್ತರ:- ದಕ್ಷಿಣ
ಆಫ್ರಿಕಾ ಇದು ಇಂಗ್ಲಂಡದ ಒಂದು ವಸಾಹತುಆಗಿತ್ತು. ಆಲೀಯ ಹಿಂದಿ ಜನರನ್ನು ಅಪರಾಧಿಗಳಂತೆ
ನಡೆಸಲಾಗುತ್ತಿತ್ತು. ಕಪ್ಪು ವರ್ಣಿಯ ಜನರಿಗೆ ಗುರುತಿನ ಚೀಟಿ ಇಟ್ಟುಕೊಳ್ಳುವುದನ್ನು
ಕಡ್ಡಾಯವನ್ನಾಗಿ ಮಾಡಿತು. ಅವರ ಸ್ವಾತಂತ್ರ್ಯದ ಮೇಲೆ ಬಂಧನಗಳನ್ನು ಹಾಕಿತ್ತು.
2. ಗಾಂಧೀಜಿಯವರು
ಭಾರತದಲ್ಲಿ ಮೊದಲನೆಯ ಸತ್ಯಾಗ್ರಹವನ್ನು ಎಲ್ಲಿ ಮಾಡಿದರು?
ಉತ್ತರ:-
ಗಾಂಧೀಜಿಯವರು ಭಾರತದಲ್ಲಿ ತಮ್ಮ ಮೊದಲನೆಯ ಸತ್ಯಾಗ್ರಹವನ್ನು ಬಿಹಾರದ ಚಂಪಾರಣ್ಯ ಪ್ರದೇಶದಲ್ಲಿ ಮಾಡಿದರು
3. ಜಾಲಿಯನವಾಲಾ
ಬಾಗನಲ್ಲಿ ಗೋಲಿಬಾರಿನ ಆದೇಶವನ್ನು ನೀಡುವ ಅಧಿಕಾರಿ ಯಾರು?
ಉತ್ತರ:-
ಜಾಲಿಯನವಾಲಾ ಬಾಗನಲ್ಲಿ ಗೋಲಿಬಾರಿನ ಆದೇಶವನ್ನು ನೀಡುವ ಅಧಿಕಾರಿ ಜನರಲ ಡಾಯರ್.
ಪ್ರ. 3. ಕೆಳಗಿನ
ಪ್ರಶ್ನೆಗಳಿಗೆ 25 ರಿಂದ30 ಶಬ್ದಗಳಲ್ಲಿ ಉತ್ತರ ಬರೆಯಿರಿ.
1. ಸತ್ಯಾಗ್ರಹದ
ತತ್ವಜ್ಞಾನವನ್ನು ಸ್ಪಷ್ಟಪಡಿಸಿರಿ.
ಉತ್ತರ:- ಮಹಾತ್ಮಾ
ಗಾಂಧೀಜಿಯವರು ಜನರ ಚಳುವಳಿಯಲ್ಲಿ ಸತ್ಯಾಗ್ರಹದ ಹೊಸ ತಂತ್ರವನ್ನು ತಂದರು. ಸತ್ಯಾಗ್ರಹವೆಂದರೆ
ಸತ್ಯಕ್ಕಾಗಿ, ನ್ಯಾಯಕ್ಕಾಗಿ ಆಗ್ರಹ ಮಾಡುವುದು. ಅನ್ಯಾಯ ಮಾಡುವ ವ್ಯಕ್ತಿಗೆ ಸಂಯಮದಿಂದ
ಮತ್ತು ಅಹಿಂಸೆಯ ಮಾರ್ಗದಿಂದ ಸತ್ಯ ಮತ್ತು ನ್ಯಾಯಗಳ ಅರಿವು ಮಾಡಿಕೊಡುವುದು ಹಾಗೂ ಅವನ ವಿಚಾರ
ಪರಿವರ್ತನೆ ಮಾಡುವುದು ಇವು ಸತ್ಯಾಗ್ರಹದ ಉದ್ದೇಶಗಳಾಗಿದ್ದವು. ಸತ್ಯಹ್ರಗವನ್ನು ಮಾಡುವ
ವ್ಯಕ್ತಿಯು ಹಿಂಸೆ ಮತ್ತು ಅಸತ್ಯ ಇವುಗಳನ್ನು ಬಳಸಕೂಡದು ಎಂಬುದು ಗಾಂಧೀಜಿಯವರ ಉಪದೇಶವಾಗಿತ್ತು.
2. ಸ್ವರಾಜ್ಯ ಪಕ್ಷದ
ಸ್ಥಾಪನೆಯನ್ನು ಏಕೆ ಮಾಡಲಾಯಿತು.
ಉತ್ತರ: ಬ್ರಿಟಿಷ
ಸರಕಾರದ ಕಾರ್ಯಕಲಾಪಗಳಲ್ಲಿ ಅಡ್ಡಿ-ಆತಂಕಗಳನ್ನು ತಂದೊಡ್ಡುವ ಸಲುವಾಗಿ ಶಾಸಕಾಂಗವನ್ನು ಪ್ರವೇಶ
ಮಾಡಬೇಕು ಎಂಬ ಕಲ್ಪನೆಯನ್ನು ಮೋತಿಲಾಲ ನೆಹರು, ಚಿತ್ತರಂಜನದಾಸ ಇವರು ರಾಷ್ಟ್ರೀಯ ಸಭೆಯಲ್ಲಿ
ಮಂಡಿಸಿದರು. ಹಾಗಾಗಿ 1922ರಲ್ಲಿ ರಾಷ್ಟ್ರೀಯ ಸಭೆಯ ಅಂತರ್ಗತವಾಗಿ ಸ್ವರಾಜ್ಯ ಪಕ್ಷದ ಸ್ಥಾಪನೆ
ಮಾಡಿದರು.
ಪ್ರ. 4. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ.
1. ಕಾಲೇಟ್ ಕಾನೂನನ್ನು(ಕಾಯ್ದೆಯನ್ನು) ಭಾರತೀಯ ಜನತೆ ವಿರೋಧಿಸಿತು.
ಉತ್ತರ: ಸರ್ ಸಿಡನಿ ರೌಲಟ್ ಎಂಬ ಬ್ರಿಟಿಷ ಅಧಿಕಾರಿಯ ನೇತೃತ್ವದಲ್ಲಿ
ಭಾರತೀಯ ಜನರಲ್ಲಿರುವ ಅಸಂತೋಷವನ್ನು ಹತ್ತಿಕ್ಕುವ ಸಲುವಾಗಿ ಸರಕಾರ ರೌಲಟ್ ಕಾಯ್ದೆ ಜಾರಿಗೆ
ತಂದಿತು.ಈ ಕಾನೂನಿನ ಪ್ರಕಾರ ಯಾವುದೇ ಭಾರತೀಯ ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ಬಂಧಿಸುವ,
ನ್ಯಾಯಾಲಯದಲ್ಲಿ ಖಟ್ಲೆಯನ್ನು ಹಾಕದೆ ಸೆರೆಮನೆಯಲ್ಲಿಡುವ ಅಧಿಕಾರವನ್ನು ಸರಕಾರಕ್ಕೆ ನೀಡಲಾಯಿತು.
ಈ ಕಾನೂನು ನೀಡಿದ ಶಿಕ್ಷೆಯ ವಿರುದ್ಧ ಮೇಲ್ಮನವಿ
ಮಾಡಲು ಪ್ರತಿಬಂಧಿಸಲಾಯಿತು. ಭಾರತೀಯರು ಈ ಕಾನೂನಿಗೆ ಕಪ್ಪು ಕಾನೂನು ಎಂದು ಕರೆದರು ಮತ್ತು
ಇದನ್ನು ವಿರೋಧ ಮಾಡಿದರು.
2. ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು.
ಉತ್ತರ: ಉತ್ತರ ಪ್ರದೇಶದ ಗೋರಖಪುರ ಜಿಲ್ಲೆಯಲ್ಲಿಯ ಚೌರಿಚೌರಾ
ಎಂಬಲ್ಲಿ ಫೆಬ್ರುವರಿ 1922ರಲ್ಲಿ ಶಾಂತತಾಪೂರ್ಣ ಮೆರವಣಿಗೆಯ ಮೇಲೆ ಪೊಲೀಸರು ಗೋಲಿಬಾರು
ಮಾಡಿದರು. ಇದರಿಂದ ಸಂತಪ್ತರಾದ ಜನಸಮೂಹ ಪೋಲಿಸ ಚೌಕಿಗೆ ಬೆಂಕಿ ಹಚ್ಚಿತು. ಅದರಲ್ಲಿ ಒಬ್ಬ ಪೋಲಿಸ
ಅಧಿಕಾರಿಸಹಿತ 22 ಪೊಲೀಸರು ಕೊಲ್ಲಲ್ಪಟ್ಟರು. ಈ ಘಟನೆಯಿಂದ ಗಾಂಧೀಜಿಯವರು ತುಂಬಾ ವ್ಯಥೆಗೊಂಡರು.
ಅವರ ಸತ್ಯ,ಶಾಂತಿ ಮತ್ತು ಅಹಿಂಸೆಯ ತತ್ವಕ್ಕೆ
ವಿರುದ್ಧ ಘಟನೆ ಜನರಿಂದ ನಡೆದಿದಕ್ಕಾಗಿ ಅವರು 12 ಫೆಬ್ರುವರಿ 1922ರಂದು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು.
3. ಭಾರತೀಯರು ಸೈಮನ್ ಕಮಿಷನ್ನಿನ ಮೇಲೆ ಬಹಿಷ್ಕಾರ ಹಾಕಿದರು.
ಉತ್ತರ: 1919ರ ಮಾಂಟೆಗೋ-ಚೆಮ್ಸಫರ್ಡ್ ಕಾನೂನು ನೀಡಿದ ಸುಧಾರಣೆಗಳು ಅಸಮಾಧಾನಕಾರಕವಾಗಿದ್ದವು.
ಅದರಿಂದಾಗಿ ಭಾರತೀಯರು ಅಸಂತುಷ್ಟರಾಗಿದ್ದರು. ಈ ಹಿನ್ನೆಲೆಯಲ್ಲಿ ಇಂಗ್ಲೀಷ ಸರಕಾರವು 1927ರಲ್ಲಿ
ಸರ್ ಜಾನ್ ಸೈಮನ್ ಇವರ ಅಧ್ಯಕ್ಷತೆಯಲ್ಲಿ ಒಂದು ಕಮಿಷನ್ ನೇಮಿಸಿತು. ಏಳು ಜನ ಸದಸ್ಯವುಳ್ಳ ಈ ಕಮಿಶನದಲ್ಲಿ ಒಬ್ಬನೂ ಭಾರತೀಯ ಸದಸ್ಯನಿರಲಿಲ್ಲ.
ಆದ್ದರಿಂದ ಭಾರತದಲ್ಲಿಯ ರಾಜಕೀಯ ಪಕ್ಷಗಳು ಕಮಿಷನ್ನಿನ
ಮೇಲೆ ಬಹಿಷ್ಕಾರ ಹಾಕಿದರು.
4. ಭಾರತದಲ್ಲಿ ಖಿಲಾಪತ ಚಳುವಳಿಯನ್ನು ಆರಂಭಿಸಲಾಯಿತು.
ಉತ್ತರ: ಜಗತ್ತಿನಲ್ಲಿಯ ಎಲ್ಲ ಮುಸಲ್ಮಾನರ ಧರ್ಮ ಪ್ರಮುಖನಿಗೆ ಖಲೀಫ ಎನ್ನುತ್ತಾರೆ.
ಈ ಖಲೀಫ ತುರ್ಕಸ್ಥಾನದಲ್ಲಿದನು. ತುರ್ಕಸ್ಥಾನವು ಮೊದಲನೆಯ ಮಹಾಯುದ್ಧದಲ್ಲಿ ಇಂಗ್ಲೆಂಡಿನ ವಿರುದ್ಧ
ಗುಂಪಿನಲ್ಲಿತ್ತು. ಭಾರತೀಯ ಮುಸ್ಲಿಮರ ಸಹಾಯ ತೆಗೆದುಕೊಳ್ಳುವ ಸಲುವಾಗಿ ಯುದ್ಧ ಮುಗಿದ ನಂತರ ಖಲೀಫನ
ಸಾಮ್ರಾಜ್ಯಕ್ಕೆ ಅಪಾಯ ಮಾಡುವುದಿಲ್ಲ ಎಂಬ ಭರವಸೆಯನ್ನು ಇಂಗ್ಲೆಂಡಿನ ಪ್ರಧಾನಮಂತ್ರಿಗಳು ನೀಡಿದರು.
ಆದರೆ ಯುದ್ಧ ಸಮಾಪ್ತಿಯ ನಂತರ ಇಂಗ್ಲೆಂಡ ಈ ಆಶ್ವಾಸನೆಯನ್ನು ಪಾಲಿಸಲಿಲ್ಲ. ಖಲೀಫನಿಗೆ ಬೆಂಬಲ ನಿಡುವುದಕ್ಕಾಗಿ
ಭರತದಲ್ಲಿ ಖಿಲಾಪತ ಚಳುವಳಿಯನ್ನು ಆರಂಭಿಸಲಾಯಿತು.
8 ನೇ ಪಾಠ
ಸವಿನಯ ಕಾಯ್ದೆಭಂಗ ಚಳುವಳಿ |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ ಪರ್ಯಾಯವನ್ನು ಆಯ್ಕೆ
ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
(ಮಹಾತ್ಮಾ ಗಾಂಧಿ, ಖುದಾ-ಇ-ಖಿದಮತಗಾರ,
ರ್ಯಾಮಸೆ ಮ್ಯಾಕ್ಡೋನಾಲ್ಡ್ . ಸರೋಜಿನಿ ನಾಯಡು )
1. . ರ್ಯಾಮಸೆ ಮ್ಯಾಕ್ಡೋನಾಲ್ಡ್ ಇವರು ಲಂಡನ್ನಿನಲ್ಲಿ ದುಂಡುಮೇಜಿನ ಪರಿಷತ್ತನ್ನು
ಆಯೋಜಿಸಿದ್ದರು.
2. ಖಾನ ಅಬ್ದುಲ ಗಫಾರಖಾನ ಇವರು ಖುದಾ-ಇ-ಖಿದಮತಗಾರ ಈ ಸಂಘಟನೆಯನ್ನು
ಸ್ಥಾಪಿಸಿದರು.
3. ಧಾರಾಸನಾ ಸತ್ಯಾಗ್ರಹದ ನೇತೃತ್ವವನ್ನು ಸರೋಜಿನಿ ನಾಯಡು ಇವರು ವಹಿಸಿದರು.
4. ಎರಡನೆಯ ದುಂಡುಮೇಜಿನ ಪರಿಷತ್ತಿಗೆ ರಾಷ್ಟ್ರೀಯ ಸಭೆಯ ಪ್ರತಿನಿಧಿಯಾಗಿ ಮಹಾತ್ಮಾ ಗಾಂಧಿ ಇವರು ಹಾಜರಾದರು.
ಪ್ರ. 2. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ.
1. ಚಂದ್ರಸಿಂಗ ಠಾಕೂರ ಇವರಿಗೆ ಸೈನಿಕ ನ್ಯಾಯಾಲಯವು ಕಠೋರ
ಶಿಕ್ಷೆಯನ್ನು ವಿಧಿಸಿತು.
ಉತ್ತರ:- 23 ಏಪ್ರಿಲ್ 1930 ರಂದು ಖಾನ ಅಬ್ದುಲ ಗಫರಖಾನ ಇವರು
ಪೇಶಾವರ ಎಂಬಲ್ಲಿ ಸತ್ಯಾಗ್ರಹವನ್ನು ಆರಂಭಿಸಿದರು. ಸುಮಾರು ಒಂದು ವಾರದ ವರೆಗೆ ಪೇಶಾವರವು
ಸತ್ಯಾಗ್ರಹಿಗಳ ವಶದಲ್ಲಿತ್ತು. ಸರಕಾರವು ಸತ್ಯಾಗ್ರಹಿಗಳ ಮೇಲೆ ಗೋಳಿಬಾರ ಮಾಡುವಂತೆ ಗಢವಾಳ
ಪಡೆಗೆ ಆದೇಶ ಮಾಡಿತು. ಆದರೆ ಗಢವಾಳ ಪಡೆಯ ಅಧಿಕಾರಿಯಾದ ಚಂದ್ರಸಿಂಗ ಠಾಕೂರ ಈತನು ಸತ್ಯಾಗ್ರಹಿಗಳ
ಮೇಲೆ ಗುಂಡು ಹಾರಿಸಲು ನಿರಾಕರಿಸಿದನು. ಆದ್ದರಿಂದ ಅವನಿಗೆ ಸೈನಿಕ ನ್ಯಾಯಾಲಯವು ಕಠೋರವಾದ
ಶಿಕ್ಷೆ ವಿಧಿಸಿತು.
2. ಸೋಲಾಪುರದಲ್ಲಿ ಸರಕಾರವು ಮಾರ್ಷಲ್ ಲಾ ಅಂದರೆ ಸೈನಿಕ ಕಾಯ್ದೆಯನ್ನು
ಜಾರಿಗೊಳಿಸಿತು.
ಉತ್ತರ:- ಸೋಲಾಪುರದಲ್ಲಿಯ ಸತ್ಯಾಗ್ರಹದಲ್ಲಿ ಕಾರ್ಮಿಕರು
ಮುಂಚೂಣಿಯಲ್ಲಿ ಇದ್ದರು. 6 ಮೇ 1930 ರಂದು ಸೊಲಪುರದಲ್ಲಿ ಹರತಾಳ ಆಚರಿಸಲಾಯಿತು. ಸೊಲಪುರದಲ್ಲಿ
ಪ್ರಚಂಡ ಮೋರ್ಚಾ ತೆಗೆಯಲಾಯಿತು. ತತ್ಕಾಲೀನ ಕಲೆಕ್ಟರ್ ಮೋರ್ಚಾದ ಮೇಲೆ ಗೋಳಿಬಾರು ಮಾಡುವಂತೆ
ಆಜ್ಞೆ ನೀಡಿದನು. ಇದರಲ್ಲಿ ಶಂಕರ ಶಿವದಾನೆಯವರ ಜೊತೆಗೆ ಅನೇಕ ಸ್ವಯಂಸೇವಕರು ಮಡಿದರು. ಇದರ
ಪರಿಣಾಮವಾಗಿ ರೊಚ್ಚಿಗೆದ್ದ ಜನರು ಪೊಲೀಸ್ ಸ್ಟೇಷನ್, ರೇಲ್ವೆ ನಿಲ್ದಾಣ,
ನ್ಯಾಯಾಲಯ, ನಗರ ಪರಿಷತ್ತಿನ ಕಟ್ಟಡ ಮುಂತಾದವುಗಳ ಮೇಲೆ ದಾಳಿ
ಮಾಡಿದರು. ಈ ಆಂದೋಲನವನ್ನು ಹತ್ತಿಕ್ಕಲು ಸರಕಾರವು ಮಾರ್ಷಲ್ ಲಾ ಅಂದರೆ ಸೈನಿಕ ಕಾಯ್ದೆಯನ್ನು
ಜಾರಿಗೊಳಿಸಿತು.
3. ಮೊದಲನೆಯ ದುಂಡುಮೇಜಿನ ಪರಿಷತ್ತಿನಲ್ಲಿಯ ಚರ್ಚೆಯೂ
ನಿಷ್ಫಲವಾಯಿತು.
ಉತ್ತರ:- ಸವಿನಯ ಕಾಯ್ದೆ ಭಂಗ ಚಳುವಳಿ ನಡೆದಾಗ ಭಾರತಕ್ಕೆ ಸಂಬಂಧಿತ
ಘಟನಾತ್ಮಕ ಸಮಸ್ಯೆಗಳನ್ನು ಕುರಿತು ವಿಚಾರ ಮಾಡಬೇಕು ಎಂಬುದು ಬ್ರಿಟನ್ನಿನ ಪ್ರಧಾನ ಮಂತ್ರಿ
ರ್ಯಾಮಸೆ ಮ್ಯಾಕ್ಡೋನಾಲ್ಡ್ ಇವರ ಅಭಿಪ್ರಾಯವಾಗಿತ್ತು. ಅದಕ್ಕಾಗಿ ಅವರು ಲಂಡನ್ನಿನಲ್ಲಿ ದುಂಡುಮೇಜಿನ
ಪರಿಷತ್ತನ್ನು ಆಯೋಜಿಸಿದರು. 1930 ರಿಂದ 1932 ರ ಕಲಾವಧಿಯಲ್ಲಿ ಮೂರು ದುಂಡು ಮೇಜಿನ
ಪರಿಷತ್ತುಗಳನ್ನು ಆಯೋಜಿಸಲಾಗಿತ್ತು. ಮೊದಲನೆಯ ಗುಂಡು ಮೇಜಿನ ಪರಿಷತ್ತಿನಲ್ಲಿ ಇಂಗ್ಲೆಂಡ್ ಹಾಗೂ
ಭಾರತದ ವಿವಿಧ ಪ್ರತಿನಿಧಿಗಳು ಹಾಜರಿದ್ದರು. ಅವರಲ್ಲಿ ಡಾ. ಬಾಬಾಸಾಹೇಬ ಅಂಬೇಡಕರ,
ಸರ ತೇಜಬಹದ್ದೂರ ಸಪ್ರೊ, ಬ್ಯಾರಿಸ್ಟರ್ ಜಿನ್ನಾ ಮುಂತಾದವರು
ಉಪಸ್ಥಿತರಿದ್ದರು. ಕೇಂದ್ರ ಮಟ್ಟದಲ್ಲಿ ಜವಾಬ್ದಾರ ಸರಕಾರ ಪದ್ಧತಿ,
ಒಕ್ಕೂಟ ಸರಕಾರ ಸ್ಥಾಪನೆ ಇತ್ಯಾದಿ ವಿವಿಧ ವಿಷಯಗಳ ಮೇಲೆ ಚರ್ಚೆಯಾಯಿತು. ಈ ಪರಿಷತ್ತಿನಲ್ಲಿ
ವಿವಿಧ ರಾಷ್ಟ್ರೀಯ ಪಕ್ಷಗಳು ಹಾಗೂ ಸಂಸ್ಥಾನಿಕರ ಪ್ರತಿನಿಧಿಗಳು ಉಪಸ್ಥಿತರಿದ್ದರು. ಆದರೆ
ರಾಷ್ಟ್ರೀಯ ಸಭೆಯ ಪ್ರತಿನಿಧಿಗಳು ಯಾರೂ ಬಂದಿರಲಿಲ್ಲ. ರಾಷ್ಟ್ರೀಯ ಸಭೆಯು ದೇಶದ ಪ್ರಾತಿನಿಧಿಕ
ಸಂಸ್ಥೆಯಾಗಿತ್ತು. ಅದರ ಸಹಭಾಗದ ಹೊರತು ಮೊದಲ ದುಂಡು ಮೇಜಿನ ಪರಿಷತ್ತನಲ್ಲಿಯ ಚರ್ಚೆಯು ನಿಸ್ಫಲವಾಯಿತು.
4. ಗಾಂಧೀಜಿಯವರು ಯೆರವಡಾ ಸೆರೆಮನೆಯಲ್ಲಿ ಆಮರಣ ಉಪವಾಸ
ಆರಂಭಿಸಿದರು.
ಉತ್ತರ:-ಡಾ. ಬಾಬಾಸಾಹೇಬ ಅಂಬೇಡಕರ ಇವರು ದುಂಡು ಮೇಜಿನ
ಪರಿಷತ್ತಿನಲ್ಲಿ ದಲಿತರ ಪ್ರತಿನಿಧಿತ್ವಮಾಡಿದರು. ಅಲ್ಲಿ ಅವರು ದಲಿತರಿಗಾಗಿ ಸ್ವತಂತ್ರ
ಮತಕ್ಷೇತ್ರಗಳ ಬೇಡಿಕೆ ಮಾಡಿದರು. ಎರಡನೆಯ ದುಂಡು ಮೇಜಿನ ಪರಿಷತ್ತಿನ ನಂತರ ಬ್ರಿಟಿಶ ಪ್ರಧಾನ
ಮಂತ್ರಿ ರ್ಯಾಮಸೆ ಮ್ಯಾಕ್ಡೋನಾಲ್ಡ್ ಇವರು ಜಾತಿಯ ಕೊಡುಗೆಯನ್ನು ಜಾಹೀರುಪಡಿಸಿದರು.
ಅದಕ್ಕನುಸಾರವಾಗಿ ದಲಿತರಿಗಾಗಿ ಸ್ವತಂತ್ರ ಮತಕ್ಷೇತ್ರಗಳನ್ನು ಜಾಹೀರು ಮಾಡಲಾಯಿತು. ಜಾತಿಯ
ಕೊಡುಗೆಯು ಮಾಡಿದ ಹಿಂದೂ ಸಮಾಜದ ವಿಭಜನೆಯು ಗಾಂಧೀಜಿಯವರಿಗೆ ಮಾನ್ಯವಿರಲಿಲ್ಲ. ಆದ್ದರಿಂದ
ಗಾಂಧೀಜಿಯವರು ಈ ಕೊಡುಗೆಯ ವಿರುದ್ಧ ಯೆರವಡಾ ಸೆರೆಮನೆಯಲ್ಲಿ ಆಮರಣ ಉಪವಾಸ ಆರಂಭಿಸಿದರು.
ಪ್ರ. 3. ಕೆಳಗಿನ
ಪ್ರಶ್ನೆಗಳಿಗೆ 25 ರಿಂದ30 ಶಬ್ದಗಳಲ್ಲಿ ಉತ್ತರ ಬರೆಯಿರಿ.
1. ಗಾಂಧೀಜಿಯವರು ಉಪ್ಪಿನ ಕಾಯ್ದೆಯನ್ನು ಉಲ್ಲಂಘಿಸಿ ದೇಶದ ತುಂಬೆಲ್ಲ
ಸತ್ಯಾಗ್ರಹ ಮಾಡಬೇಕೆಂದು ಏಕೆ ನಿರ್ಧರಿಸಿದರು?
ಉತ್ತರ:- ಸವಿನಯ ಕಾಯ್ದೆಭಂಗ ಚಳುವಳಿ ಆರಂಭಿಸುವ ಮೊದಲು ಗಾಂಧೀಜಿಯವರು
ಬ್ರಿಟಿಶ ಸರಕಾರದ ಕಡೆಗೆ ವಿವಿಧ ಬೇಡಿಕೆಗಳನ್ನು ಮಾಡಿದರು. ಇವುಗಳಲ್ಲಿ ಉಪ್ಪಿನ ಮೇಲಿನ ಕರವನ್ನು
ರದ್ದುಪಡಿಸಬೇಕೆಂಬ ಬೇಡಿಕೆ ಇತ್ತು. ಆದರೆ ಸರಕಾರವು ಗಾಂಧೀಜಿಯವರ ಬೇಡಿಕೆಯನ್ನು ತಿರಸ್ಕರಿಸಿತು.
ಆದ್ದರಿಂದ ಗಾಂಧೀಜಿಯವರು ಉಪ್ಪಿನ ಕಾಯ್ದೆಯನ್ನು ಉಲ್ಲಂಘಿಸಿ ದೇಶದ ತುಂಬೆಲ್ಲ ಸತ್ಯಾಗ್ರಹ
ಮಾಡಬೇಕೆಂದು ನಿರ್ಧರಿಸಿತು.
2. ರಾಷ್ಟ್ರೀಯ ಸಭೆಯು ಸವಿನಯ ಕಾಯ್ದೆಭಂಗ ಚಳುವಳಿಯನ್ನು ಏಕೆ
ಹಿಂತೆಗೆದುಕೊಂಡಿತು?
ಉತ್ತರ:- ಎರಡನೆಯ ದುಂಡುಮೇಜಿನ ಮೂರನೆಯ ಪರಿಷತ್ತಿನಿಂದ ಉದ್ವಿಘ್ನ
ಮನಸ್ಸಿನಿಂದ ಗಾಂಧೀಜಿಯವರು ಭಾರತಕ್ಕೆ ಬಂದರು ಮತ್ತು ಸವಿನಯ ಕಾಯ್ದೆಭಂಗ ಚಳುವಳಿಯನ್ನು ಮತ್ತೇ
ಆರಂಭಿಸಿದರು. ಸರಕಾರವು ಗಾಂಧೀಜಿಯವರನ್ನು ಬಂಧಿಸಿತು. ಆದ್ದರಿಂದ ಜನತೆಯಲ್ಲಿ ಅಸಂತೋಷ
ನಿರ್ಮಾಣವಾಯಿತು. ಸರಕಾರವು ಈ ಚಳುವಳಿಗೆ ಅಮಾನವೀಯ ದಬ್ಬಾಳಿಕೆಯಿಂದ ಉತ್ತರ ನೀಡಿತು. ಎಲ್ಲೆಡೆ
ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ರಾಷ್ಟ್ರೀಯ ಸಭೆ ಮತ್ತು ಅದರ ಸಹಯೋಗಿ
ಸಂಘಟನೆಗಳನ್ನು ಕಾನೂನುಬಾಹಿರವೆಂದು ಘೋಷಿಸಲಾಯಿತು. ಅವುಗಳ ಕಚೇರಿ ಮತ್ತು ಸಂಪತ್ತನ್ನು ವಶಪಡಿಸಿಕೊಳ್ಳಲಾಯಿತು. ರಾಷ್ಟ್ರೀಯ ವರ್ತಮಾನಪತ್ರ ಮತ್ತು ಸಾಹಿತ್ಯಗಳ ಮೇಲೆ
ನಿರ್ಬಂಧ ಹಾಕಲಾಯಿತು. ಇವೆಲ್ಲ ಕಾರಣಗಳಿಂದಾಗಿ ಮಹಾತ್ಮ ಗಾಂಧೀಜಿಯವರು ಏಪ್ರಿಲ್ 1934ರಲ್ಲಿ
ಸವಿನಯ ಕಾಯ್ದೆಭಂಗ ಚಳುವಳಿಯನ್ನು
ಹಿಂತೆಗೆದುಕೊಂಡರು.
ಪ್ರ. 4. ಸವಿನಯ ಕಾಯ್ದೆಭಂಗ ಚಳುವಳಿಯ ಕೆಳಗಿನ ಕಾಲರೇಷೆಯನ್ನು ಪೂರ್ಣ
ಮಾಡಿರಿ.
- 12 ಮಾರ್ಚ 1930 :ಉಪ್ಪಿನ ಸತ್ಯಾಗ್ರಹ ಆರಂಭ
- 6 ಏಪ್ರಿಲ್ 1930 : ದಾಂಡಿ ಯಾತ್ರೆ ಸಮುದ್ರ ತೀರದಲ್ಲಿ
- 23 ಏಪ್ರಿಲ್ 1930 :ಖುದಾ-ಇ-ಖಿದಮತಗಾರ ಸಂಘಟನೆಯಿಂದ ಪೆಶಾವರ ಎಂಬಲ್ಲಿ ಸತ್ಯಾಗ್ರಹ
- 4 ಮೇ 1930 :ಗಾಂಧೀಜಿಯವರನ್ನು ಬ್ರಿಟಿಷ ಸರಕಾರ ಬಂಧಿಸಿತು
- 6 ಮೇ 1930 :ಸೋಲಾಪುರದಲ್ಲಿ ಗಿರಣಿ ಕಾರ್ಮಿಕರ ಹರತಾಳ
9ನೇ ಪಾಠ
ಸ್ವಾತಂತ್ರ್ಯ ಹೋರಾಟದ
ಅಂತಿಮ ಅಧ್ಯಾಯ |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ ಪರ್ಯಾಯವನ್ನು ಆಯ್ಕೆ
ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ......... ಇವರು ವೈಯಕ್ತಿಕ ಸತ್ಯಾಗ್ರಹದ ಪ್ರಥಮ ಸತ್ಯಾಗ್ರಹಿಯಾಗಿದ್ದರು. = ವಿನೋಬಾ ಭಾವೆ
2. 1942 ರ ರಾಷ್ಟ್ರವ್ಯಾಪಿ ಆಂದೋಲನವನ್ನು ........ ಎಂದೂ
ಕರೆಯಲಾಗುತ್ತದೆ. =
3. ನವಂಬರ 1943 ರಲ್ಲಿ ಜಪಾನ, ......... ಮತ್ತು .......... ದ್ವೀಪಗಳನ್ನು ಗೆದ್ದುಕೊಂಡು ಅವುಗಳನ್ನು ಆಝಾದ ಹಿಂದ ಸರಕಾರಕ್ಕೆ ಒಪ್ಪಿಸಿತು. = ಅಂಡಮಾನ ಮತ್ತು ನಿಕೊಬಾರ್
(ಅಂಡಮಾನ ಮತ್ತು ನಿಕೊಬಾರ್, ಅಗಷ್ಟ ಕ್ರಾಂತಿ, ವಿನೋಬಾ ಭಾವೆ )
ಪ್ರ. 2. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ.
1. ನವಂಬರ 1939 ರಲ್ಲಿ ರಾಷ್ಟ್ರೀಯ ಸಭೆಯ ಪ್ರಾಂತೀಯ ಮಂತ್ರಿ
ಮಂಡಳಗಳು ರಾಜೀನಾಮೆ ನೀಡಿದವು.
ಉತ್ತರ:- 1939ರಲ್ಲಿ ಯುರೋಪದಲ್ಲಿ ಎರಡನೆಯ ಮಹಾಯುದ್ದ ಆರಂಭವಾಯಿತು.
ತತ್ಕಾಲೀನ ವೈಸರಾಯ್ ಲಾರ್ಡ್ ಲಿನ ಲಿಥಗೊ ಇವರು ಇಂಗ್ಲೆಂಡ ಪರವಾಗಿ ಭಾರತ ಕೂಡ ಯುದ್ದದಲ್ಲಿ
ಭಾಗವಹಿಸುತ್ತದೆ ಎಂದು ಸಾರಿದರು. ತಾವು ಪ್ರಜಾಪ್ರಭುತ್ವದ ರಕ್ಷಣೆ ಮಾಡುವುದಕ್ಕಾಗಿ
ಹೊರಡುತ್ತೇವೆ ಎಂದು ವಾದಿಸಿದರು. ಆ ವಾದವು
ನಿಜವಾಗಿದ್ದರೆ ಭಾರತೀಯ ಪ್ರಜೆಗಳ ಸ್ವಾತಂತ್ರ್ಯವನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆಯು
ರಾಷ್ಟ್ರೀಯ ಸಭೆ ಮಾಡಿತು. ಆದರೆ ಈ ಬೇಡಿಕೆಯನ್ನು ಪೂರ್ಣಮಾಡಲು ಇಂಗ್ಲೆಂಡ್ ನಿರಾಕರಿಸಿದರಿಂದ
ನವ್ಹೆಂಬರ್ 1939ರಲ್ಲಿ ರಾಷ್ಟ್ರೀಯ ಸಭೆಯ ಪ್ರಾಂತೀಯ ಮಂತ್ರಿಮಂಡಳಗಳು ರಾಜೀನಾಮೆ ನೀಡಿದವು.
2. ಆಝಾದ ಹಿಂದ ಸೇನೆಯು ಶಸ್ತ್ರಗಳನ್ನು ಕೆಳಗಿಡಬೇಕಾಯಿತು.
ಉತ್ತರ:- 1944ರಲ್ಲಿ ಆಝಾದ ಹಿಂದ ಸೇನೆಯು ಮ್ಯಾನಮಾರದಲ್ಲಿಯ ಆರಾಕಾನ
ಪ್ರದೇಶವನ್ನು ಗೆದ್ದುಕೊಂಡಿತು. ಆಸಮಾದ ಪೂರ್ವ ಸೀಮೆಯಲ್ಲಿಯ ಠಾಣೆಗಳನ್ನು ಗೆದ್ದಿತು. ಇದೇ
ಕಾಲಕ್ಕೆ ಜಪಾನದಿಂದ ದೊರೆಯುತ್ತಿರುವ ನೆರವು ನಿಂತುಹೋದುದರಿಂದ ಇಂಫಾಲಮೇಲಿನ ದಾಳಿ ಅರ್ಧಕ್ಕೆ
ಉಳಿಯಿತು. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಆಝಾದ ಹಿಂದ ಸೇನೆಯ ಸೈನಿಕರು ಶೌರ್ಯದಿಂದ
ಹೋರಾಡಿದರು. ಆದರೆ ಜಪಾನ ಶರಣಾಗತವಾಯಿತು. 18 ಅಗಷ್ಟ 1945ರಲ್ಲಿ ವಿಮಾನ ಅಪಘಾತದಲ್ಲಿ
ಶುಭಾಷಚಂದ್ರ ಬೋಸ ನಿಧನಹೊಂದಿದರು. ಈ ಹಿನ್ನೆಲೆಯಲ್ಲಿ ಆಝಾದ ಹಿಂದ ಸೇನೆಯು ಶಸ್ತ್ರಗಳನ್ನು
ಕೆಳಗಿಡಬೇಕಾಯಿತು.
3. ಪ್ರತಿಸರಕಾರಗಳು ಜನತೆಯ ಪ್ರೇರಣಾ ಸ್ಥಾನಗಳಾದವು.
ಉತ್ತರ:- ದೇಶದ ಕೆಲವು ಭಾಗಗಳಲ್ಲಿ ಬ್ರಿಟಿಶ ಅಧಿಕಾರಿಗಳನ್ನು
ಹೊರದಬ್ಬಿ ಅಲ್ಲಿ ಲೋಕಾಭಿಮುಖ ಸರಕಾರಗಳನ್ನು ಸ್ಥಾನಿಕ ನಾಯಕರು ಸ್ಥಾಪಿಸಿದರು. ಇವುಗಳಿಗೆ ಪ್ರತಿ
ಸರಕಾರ ಎನ್ನುವರು. ಈ ಪ್ರತಿ ಸರಕಾರಗಳು ತೆರಿಗೆ ಸಂಗ್ರಹ ಮಾಡುವುದು,
ಕಾಯ್ದೆ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧಿಗಳಿಗೆ
ಶಿಕ್ಷೆ ವಿಧಿಸುವುದು ಇತ್ಯಾದಿ ಕಾರ್ಯಗಳನ್ನು ಮಾಡುತ್ತಿದ್ದವು. ಈ ಸರಕಾರದ ನ್ಯಾಯದಾನ ಮಾಡುವ
ವಿಧಾನಕ್ಕೆ ಜನರು ಸ್ವೀಕಾರ ಮಾಡಿದರು. ಸಾಹುಕಾರಶಾಹಿಗೆ ವಿರೋಧ,
ಜಾತಿಭೇಧ ನಿರ್ಮೂಲನೆ, ಮುಂತಾದ ರಚನಾತ್ಮಕ ಕಾರ್ಯಗಳನ್ನು ಪ್ರತಿ
ಸರಕಾರಗಳು ಮಾಡಿದವು. ಅದರಿಂದಾಗಿ ಪ್ರತಿಸರಕಾರಗಳು ಜನತೆಯ ಪ್ರೇರಣಾ ಸ್ಥಾನಗಳಾದವು.
ಪ್ರ.3. ಕೆಳಗಿನ ಕೋಷ್ಟಕವನ್ನು ಪೂರ್ಣಮಾಡಿರಿ.
ಸಂಘಟನೆ |
ಸಂಸ್ಥಾಪಕರು |
ಫಾರ್ವರ್ಡ್ ಬ್ಲಾಕ್ |
|
ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ |
|
ತೂಫಾನ ಸೇನೆ |
|
ಪ್ರ.4. ಕೆಳಗಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
1. ಶಿರೀಶಕುಮಾರನ ಕಾರ್ಯವು ನಿಮಗೆ ಹೇಗೆ ಪ್ರೇರಣಾದಾಯಕವಾಗಿದೆ?
ಉತ್ತರ:- ಸ್ವತಂತ್ಯ್ರ ಚಳುವಳಿಯಲ್ಲಿ ಶಾಲೆಯ ವಿದ್ಯಾರ್ಥಿಗಳೂ ತಮ್ಮ
ಅಮೂಲ್ಯ ಕೊಡುಗೆ ನೀಡಿದ್ದಾರೆ. ನಂದುರಬಾರ ಎಂಬಲ್ಲಿ ಶಿರೀಷಕುಮಾರನ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು
ತ್ರಿವರ್ಣ ಧ್ವಜ ಹಿಡಿದು ಹೋರಾಟ ಮಾಡಿದರು. ‘ಒಂದೇ ಮಾತರಂ’ ಎನ್ನುತ
ನಡೆದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕೇರಳಿ ಗೋಲಿಬಾರ ಮಾಡಿದರು. ಶಿರೀಷಕುಮಾರನ ಕಾರ್ಯವು ದೇಶಭಕ್ತಿಯ ಜಾಜ್ವಲ್ಯ
ಪ್ರತೀಕವಾಗಿದೆ. ಯುವಕರಿಗೆ, ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ.
2. ಇಂಗ್ಲೆಂಡಿನ ಪ್ರಧಾನ ಮಂತ್ರಿ ವಿಂಸ್ಟನ್ ಚರ್ಚಿಲ್ಲರು ಸ್ಟಾಫರ್ಡ್
ಕೃಪ್ಸ್ ಇವರನ್ನು ಭಾರತಕ್ಕೆ ಏಕೆ ಕಳುಹಿಸಿದರು?
ಉತ್ತರ:- ಎರಡನೆಯ ಮಹಾಯುದ್ಧದಲ್ಲಿ ಜಪಾನ ಭಾರತದ ಮೇಲೆ ದಾಳಿ ಮಾಡಿದರೆ
ಅದನ್ನು ಪ್ರತಿಭಟಿಸಲು ಇಂಗ್ಲಂಡ ಗೆ ಭಾರತೀಯರ ಸಹಕಾರದ ಅವಶ್ಯಕತೆಯಾಗಿತ್ತು. ಆದ್ದರಿಂದ ಇಂಗ್ಲಂಡ ಪ್ರಧಾನ ಮಂತ್ರಿ ವಿನ್ಸ್ಟನ್
ಚರ್ಚಿಲರು ಭಾರತಕ್ಕೆ ಸಂಬಂಧಿಸಿದ ಯೋಜನೆಯ ಬಗ್ಗೆ ಚರ್ಚೆ ಮಾಡಲು ಸ್ಟ್ರಾಫರ್ಡ್ ಕ್ರಿಪ್ಸ್
ಇವರನ್ನು ಭಾರತಕ್ಕೆ ಕಳುಹಿಸಿದರು.
3. ರಾಷ್ಟ್ರೀಯ ಸಭೆಯ ಪ್ರಮುಖ ಮುಖಂಡರನ್ನು ಬಂಧಿಸಿದ ಸುದ್ದಿಯು ದೇಶದ
ತುಂಬೆಲ್ಲ ಹರಡಿದಾಗ ಯಾವ ಪ್ರತಿಕ್ರಿಯೆ ಉಂಟಾಯಿತು?
ಉತ್ತರ:- ರಾಷ್ಟ್ರೀಯ ಸಭೆಯ ಪ್ರಮುಖ ಮುಖಂಡರನ್ನು ಬಂಧಿಸಿದ ಸುದ್ದಿಯು
ದೇಶದ ತುಂಬೆಲ್ಲ ಹರಡಿದಾಗ ರೋಷಗೊಂಡ ಜನರು ಎಲ್ಲೆಡೆ ಮೆರವಣಿಗೆಗಳನ್ನು ಮಾಡಿದರು. ಪೊಲೀಸರು ಜನರ
ಮೇಲೆ ಗೋಲಿಬಾರ ಮತ್ತು ಲಾಠಿಪ್ರಹಾರ ಮಾಡಿದರು ಜನ ಹೆದರಲಿಲ್ಲ. ಕೆಲವು ಕಡೆ ಬ್ರಿಟಿಶ ಸರಕಾರದ
ದಬ್ಬಾಳಿಕೆಯ ಪ್ರತಿಕವಾದ ಸೆರೆಮನೆ, ಪೋಲಿಸ ಠಾಣೆ, ರೇಲ್ವೆ
ನಿಲ್ದಾಣ ಮುಂತಾದವುಗಳ ಮೇಲೆ ದಾಳಿ ಮಾಡಿದರು. ಸರಕಾರಿ ಕಚೇರಿಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ
ಮಾಡಿದರು.
10 ನೇ ಪಾಠ
ಸಶಸ್ತ್ರ ಕ್ರಾಂತಿಕಾರಿ ಚಳುವಳಿ |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ ಪರ್ಯಾಯವನ್ನು ಆಯ್ಕೆ
ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
(ಪಂಡಿತ ಶ್ಯಾಮಜಿ ಕೃಷ್ಣ ವರ್ಮಾ, ಮಿತ್ರಮೇಳ , ರಾಮಸಿಂಹ ಕುಕಾ)
1. ಸ್ವಾತಂತ್ರ್ಯವೀರ್ ಸಾವರಕರ ಇವರು ಮಿತ್ರಮೇಳ ಎಂಬ ಕ್ರಾಂತಿಕಾರರ ಗುಪ್ತ ಸಂಘಟನೆಯನ್ನು
ಸ್ಥಾಪಿಸಿದರು.
2. ರಾಮಸಿಂಹ ಕುಕಾ ಇವರು ಪಂಜಾಬಿನಲ್ಲಿ ಸರಕಾರದ ವಿರುದ್ಧ ದಂಗೆಯನ್ನು ಆಯೋಜಿಸಿದ್ದರು.
3. ಇಂಡಿಯಾ ಹೌಸದ ಸ್ಥಾಪನೆಯನ್ನು ಪಂಡಿತ ಶ್ಯಾಮಜಿ ಕೃಷ್ಣ ವರ್ಮಾ ಇವರು ಮಾಡಿದರು.
ಪ್ರ.2. ಕೆಳಗಿನ ಕೋಷ್ಟಕವನ್ನು ಪೂರ್ಣಮಾಡಿರಿ.
ಕ್ರಾಂತಿಕಾರರು |
ಸಂಘಟನೆ |
ಸ್ವಾತಂತ್ರ್ಯ ವೀರ ಸಾವರಕರ |
ಅಭಿನವ ಭಾರತ |
ಬಾರಿಂದ್ರಕುಮಾರ ಘೋಷ |
|
ಚಂದ್ರಶೇಖರ ಆಝಾದ |
|
ಪ್ರ. 3. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ.
1. ಚಾಫೆಕರ ಬಂಧುಗಳು ರ್ಯಾಂಡನ ಕೊಲೆ ಮಾಡಿದರು.
ಉತ್ತರ: 1847ರಲ್ಲಿ ಪುಣೆಯಲ್ಲಿ ಪ್ಲೇಗ್ ರೋಗವನ್ನು ನಿಯಂತ್ರಣೆ ಮಾಡುವಾಗ ಕಮಿಷನರನಾದ
ರ್ಯಾಂಡನು ಅನ್ಯಾಯ, ಅತ್ಯಾಚಾರ ಮಾಡಿದನು.ಅದರ ಸೇಡು ತೀರಿಸಿಕೊಳ್ಳಲು ದಾಮೋದರ ಮತ್ತು
ಬಾಲಕೃಷ್ಣ ಈ ಚಾಫೇಕರ ಬಂಧುಗಳು 22 ಜೂನ 1897 ರಂದು ರ್ಯಾಂಡನ ಕೊಲೆ ಮಾಡಿದರು.
2. ಖುದೀರಾಮ ಬೋಸ ಇವರನ್ನು ಗಲ್ಲಿಗೆರಿಸಲಾಯಿತು.
ಉತ್ತರ: ಬಂಗಾಳದಲ್ಲಿ ಕ್ರಾಂತಿಕಾರಕರು ‘ಅನುಶೀಲನ ಸಮಿತಿಯನ್ನು ಸ್ಥಾಪನೆ ಮಾಡಿದರು. ಈ ಸಮಿತಿಯ
ಸದಸ್ಯರಾದ ಖುದೀರಾಮ ಬೋಸ ಹಾಗೂ ಪ್ರಫುಲ್ಲ ಇವರು ಕಿಂಗ್ಸ್ಫೋರ್ಡ್ ಎಂಬ ನ್ಯಾಯಾಧೀಶನ ಕೊಲೆ ಮಾಡುವ
ಯೋಜನೆಯನ್ನು ರೂಪಿಸಿದರು. ಆದರೆ ಯಾವ ಗಾಡಿಯ ಮೇಲೆ ಅವರು ಬಾಂಬ್ ಎಸೆದರೋ ಆ ಗಾಡಿ ಕಿಂಗ್ಸ್ಫೋರ್ಡನದಾಗಿರಲಿಲ್ಲ.
ಈ ಹಲ್ಲೆಯಲ್ಲಿ ಗಡಿಯಲ್ಲಿ ಕುಳಿತ ಇಬ್ಬರು ಇಂಗ್ಲೀಷ ಮಹಿಳೆಯರು ಮರಣಹೊಂದಿದರು. ಇಂಗ್ಲೀಷ ಪೊಲೀಸರ
ಕೈಗೆ ಸಿಗಬಾರದೆಂದು ಪ್ರಫುಲ್ಲ ಚಾಕಿ ಸ್ವತ: ತನ್ನ ಮೇಲೆ ಗುಂಡು ಹಾರಿಸಿಕೊಂಡರು.
ಖುದೀರಾಮ ಬೋಸ ಇವರು ಪೊಲೀಸರ ಕೈಗೆ ಸಿಕ್ಕರೂ. ಹಾಗಾಗಿ ಅವರನ್ನು ಗಲ್ಲಿಗೆರಿಸಲಾಯಿತು.
3. ಭಗತಸಿಂಗ ಮತ್ತು ಬಟುಕೇಶ್ವರ ದತ್ತ ಇವರು ಕೇಂದ್ರ ಶಾಸಕಾಂಗದಲ್ಲಿ ಬಾಂಬು ಎಸೆದರು.
ಉತ್ತರ: ಬ್ರಿಟಿಷ ಸರಕಾರವು ನಾಗರೀಕರ ಹಕ್ಕುಗಳನ್ನು ಮೂಲೆಗುಂಪು ಮಾಡುವ ಎರಡು ಮಸೂದೆಗಳನ್ನು ಕೇಂದ್ರ ಶಾಸಕಾಂಗದಲ್ಲಿ ಮಂಡಿಸಿತು. ಅವುಗಳನ್ನು ನಿಷೇಧಿಸುವ ಸಲುವಾಗಿ ಭಗತಸಿಂಗ ಮತ್ತು ಬಟುಕೇಶ್ವರ ದತ್ತ ಇವರು ಶಾಸಕಾಂಗದಲ್ಲಿ ಬಾಂಬು ಎಸೆದರು.
ಪ್ರ. 4. ಕೆಳಗಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
1. ಚಿತಗಾವ ಶಸ್ತ್ರಾಗಾರದ ಮೇಲಿನ ದಾಳಿಯ ವೃತ್ತಾಂತವನ್ನು
ಸ್ಪಷ್ಟಪಡಿಸಿರಿ.
ಉತ್ತರ: ಸೂರ್ಯಸೇನ ಇವರು ಬಂಗಾಲದ ಚಿತಗಾವದಲ್ಲಿಯ ಕ್ರಾಂತಿಕಾರಿ ಗುಂಪಿನ ಪ್ರಮುಖರಾಗಿದ್ದರು.
ಅವರು ತಮ್ಮ ಪಡೆಯ ಸಹಾಯದಿಂದ ಚಿತಗಾವದಲ್ಲಿಯ ಶಸ್ತ್ರಾಗಾರದ ಮೇಲೆ ದಾಳಿ ಮಾಡುವ ಯೋಜನೆಯನ್ನು ರೂಪಿಸಿದರು.
ಆ ಯೋಜನೆಯ ಪ್ರಕಾರ 18 ಏಪ್ರಿಲ್ 1930 ರಂದು ಕ್ರಾಂತಿಕಾರರು ಚಿತಗಾವದಲ್ಲಿಯ ಎರಡು ಶಸ್ತ್ರಾಗಾರಗಳಲ್ಲಿಯ
ಶಸ್ತ್ರಗಳನ್ನು ವಶಪಡಿಸಿಕೊಂಡರು. ಟೆಲಿಫೋನ್ ಮತ್ತು ಟೆಲಿಗ್ರಾಫ್ ತಂತಿಗಳನ್ನು ಕಡಿದು ಹಾಕಿದರು.
ಸಂದೇಶ ವಾಹನದ ವ್ಯವಸ್ಥೆ ನಷ್ಟಪಡಿಸಿದರು. ನಂತರ ಬ್ರಿಟಿಷರೊಂದಿಗೆ ಒಂದು ರೋಮಾಂಚಕಾರಿ ಹೋರಾಟ ಮಾಡಿದರು.
2. ಸ್ವಾ. ಸಾವರಕರ ಸಶಸ್ತ್ರ ಕ್ರಾಂತಿಯಲ್ಲಿಯ ಕೊಡುಗೆಯನ್ನು ಸ್ಪಷ್ಟಪಡಿಸಿರಿ.
ಉತ್ತರ: ಕ್ರಿ.ಶ. 1900ರಲ್ಲಿ ಸ್ವಾತಂತ್ರ್ಯವೀರ ಸಾವರಕರ ಇವರು ನಾಶಿಕದಲ್ಲಿ ‘ಮಿತ್ರಮೇಳಾ’ ಎಂಬ ಕ್ರಾಂತಿಕಾರಕರ ಗುಪ್ತ ಸಂಘಟನೆ ಸ್ಥಾಪಿಸಿದರು. ಮುಂದೆ ಈ ಸಂಘಟನೆಗೆ ‘ಅಭಿನವ ಭಾರತ’ ಎಂಬ ಹೆಸರು ನೀಡಲಾಯಿತು. ಉನ್ನತ ಶಿಕ್ಷಣವನ್ನು
ಪಡೆಯುವ ಸಲುವಾಗಿ ಸಾವರಕರ ಇಂಗ್ಲೆಂಡಿಗೆ ಹೋದರೂ. ಅಲ್ಲಿಂದ ಅವರು ಅಭಿನವ ಭಾರತ ಸಂಘಟನೆಯ ಭರತದಲ್ಲಿದ್ದ
ಸದಸ್ಯರಿಗೆ ಕ್ರಾಂತಿಕಾರಕ ಸಾಹಿತ್ಯ, ಪಿಸ್ತೂಲಗಳನ್ನು ಕಳುಹಿಸಲು ಆರಂಭಿಸಿದರು.
ಅವರು ಜೋಸೆಫ್ ಮ್ಯಾಝಿನಿ ಎಂಬ ಇಟಾಲಿಯನ್ ಕ್ರಾಂತಿಕಾರನ ಸ್ಫೂರ್ತಿದಾಯಕ ಚರಿತ್ರೆಯನ್ನು ಬರೆದರು.
1857ರ ಬಂಡಾಯವು ಭಾರತೀಯ ಸ್ವಾತಂತ್ರ್ಯದ ಮೊದಲ ಯುದ್ಧವಾಗಿತ್ತು. ಅವರು 1857ರ ಸ್ವಾತಂತ್ರ್ಯ ಸಮರ’ ಎಂಬ ಗ್ರಂಥವನ್ನು ಬರೆದರು. ಈ ಗ್ರಂಥದಿಂದ ಅನೇಕ ಭಾರತೀಯ ಯುವಕರು ಸ್ವಾತಂತ್ರ್ಯ ಚಳುವಳಿಯಲ್ಲಿ
ಧುಮುಕಿದರು.
11 ನೇ ಪಾಠ
ಸಮಾನತೆಯ ಹೋರಾಟ |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ ಪರ್ಯಾಯವನ್ನು ಆಯ್ಕೆ
ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
(ಲಾಲಾ ಲಜಪತರಾಯ , ಸಾನೆ ಗುರೂಜಿ,
ರಖಮಾಬಾಯಿ ಜನಾರ್ದನ ಸಾವೆ)
1.ರಾಜಕೋಟ ಎಂಬಲ್ಲಿ ರೆಡ್ ಕ್ರಾಸ್ ಸೊಸೈಟಿಯ ಶಾಖೆಯನ್ನು ...... ಇವರು ಸ್ಥಾಪಿಸಿದರು. =
2. ............ ಇವರು ಅಮಳನೇರ ಗಿರಣಿ ಕಾರ್ಮಿಕ ಯೂನಿಯನ್ನಿನ
ಅಧ್ಯಕ್ಷರಾಗಿದ್ದರು. =
3. ........... ಇವರು ಆಯ್ ಟಕದ ಮೊದಲನೆಯ ಅಧಿವೇಶನದ
ಅಧ್ಯಕ್ಷರಾಗಿದ್ದರು. =
ಪ್ರ. 2. ಟಿಪ್ಪಣಿ ಬರೆಯಿರಿ.
1. ಮಹರ್ಷಿ ವಿಠ್ಠಲ ರಾಮಜಿ ಶಿಂದೆಯವರ ಸಾಮಾಜಿಕ ಕಾರ್ಯಗಳು.
ಉತ್ತರ:- ಮಹರ್ಷಿ ವಿಠ್ಠಲ್ ರಾಮ ಜಿ ಶಿಂದೆಯವರು ದಲಿತರ ಪ್ರಗತಿಗಾಗಿ 1906ರಲ್ಲಿ 'ಡಿಪ್ರೀಸ್ಡ್ ಕ್ಲಾಸೆಸ್ ಮಿಷಿನ್' ಎಂಬ ಸಂಸ್ಥೆಯನ್ನು ಆರಂಭಿಸಿದರು. ದಲಿತರನ್ನು ಸ್ವಾಭಿಮಾನಿ, ಸುಕ್ಷೇತ್ರ ಮತ್ತು ಉದ್ಯಮಶೀಲರನ್ನಾಗಿ ಮಾಡುವುದು ಅವರ ಕಾರ್ಯದ ಮಹತ್ವದ ಭಾಗವಾಗಿತ್ತು ಹಾಗೂ ಉಚ್ಚವರ್ಣಿಯರ ಮನದಲ್ಲಿಯ ದಲಿತರ ಬಗೆಗಿನ ಭ್ರಾಮಕ ತಿಳುವಳಿಕೆಯನ್ನು ವ್ಯಕ್ತಪಡಿಸುವುದು ಆ ಕಾರ್ಯದ ಎರಡನೇಯ ಭಾಗವಾಗಿತ್ತು. ಅದಕ್ಕಾಗಿ ಅವರು ಮುಂಬೈಯ ಪರಳ ಮತ್ತು ದೇವ್ನಾರ್ ಭಾಗಗಳಲ್ಲಿ ಮರಾಠಿ ಶಾಲೆ ಮತ್ತು ಉದ್ಯೋಗ ಶಾಲೆಗಳನ್ನು ಆರಂಭಿಸಿದರು ಅವರು ಪುಣೆಯ ಪರ್ವತಿ ಮಂದಿರದಲ್ಲಿ ಪ್ರವೇಶಿ ಸತ್ಯಾಗ್ರಹ, ದಲಿತರ ಕೃಷಿ ಪರಿಷತ್ತು, ಸಂಯುಕ್ತ ಮತಕ್ಷೇತ್ರ ಯೋಜನೆ ಇತ್ಯಾದಿಗಳನ್ನು ಕುರಿತು ದಲಿತ ವರ್ಗದ ಹಿತದ ದೃಷ್ಟಿಯಿಂದ ಸಕ್ರಿಯವಾಗಿ ಭಾಗವಹಿಸಿದ್ದರು.
2. ರಾಜರ್ಷಿ ಶಾಹೂ ಮಹಾರಾಜರು ಕೊಲ್ಲಾಪುರ ಸಂಸ್ಥಾನದಲ್ಲಿ ಮಾಡಿದ
ಸುಧಾರಣೆಗಳು
ಉತ್ತರ:- 1. ರಾಜರ್ಷಿ ಶಾಹು ಮಹಾರಾಜರು ಕೊಲ್ಲಾಪುರ ಸಂಸ್ಥಾನದಲ್ಲಿ ಮೀಸಲಾತಿಯ ಕ್ರಾಂತಿಕಾರಿ ಜಾಹಿರುನಾಮೆ ಹೊರಡಿಸಿದರು.
2. ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣದ ಕಾನೂನು ಮಾಡಿದರು.
3. ಜಾತಿ ಭೇದ
ನಿರ್ಮೂಲನೆಗಾಗಿ ಗಣನೀಯ ಕಾರ್ಯ ಮಾಡಿದರು ರೋಟಿ ಬಂದಿ, ಬೇಟಿ ಬಂದಿ ಮತ್ತು ವ್ಯವಸಾಯ ಬಂದಿ ಎಂಬ
ಮೂರು ನಿರ್ಬಂಧಗಳು ಜಾತಿ ವ್ಯವಸ್ಥೆಯಲ್ಲಿದ್ದವು. ಈ ಸಂದರ್ಭದಲ್ಲಿ ಸಭೆ ಪರಿಷತ್ತುಗಳ ಮೂಲಕ
ದಲಿತ ಜನರ ಕೈಯಿಂದ ಅನ್ನವನ್ನು ಸ್ವೀಕರಿಸಿ ಶಾಹು ಮಹಾರಾಜರು ರೋಟಿ ಬಂಧನವನ್ನು ಬಹಿರಂಗವಾಗಿ
ವಿರೋಧಿಸಿದರು.
4. ಬೇಟಿ ಬಂದಿಯ ನಿರ್ಬಂಧವನ್ನು ಸಮಾಜದಲ್ಲಿ ಎಲ್ಲಿಯವರೆಗೂ ಪಾಲಿಸಲಾಗುತ್ತಿದೆಯೋ ಅಲ್ಲಿಯವರೆಗೂ ಜಾತಿಭೇದ ನಷ್ಟವಾಗಲಾರದು ಎಂಬುದು ಶಾಹೂ ಮಹಾರಾಜರ ಊಹೆಯಾಗಿತ್ತು.
5. ಅವರು ತಮ್ಮ ಸಂಸ್ಥಾನದಲ್ಲಿ ಅಂತರ ಜಾತಿಯ ವಿಹಾಹಕ್ಕೆ ಕಾನೂನು ಬದ್ದ ಮಾನ್ಯತೆ ನೀಡುವ ಕಾಯ್ದೆಯನ್ನು ಮಂಜೂರು ಮಾಡಿದರು.
6. 22 ಫೆಬ್ರವರಿ 1918 ರಂದು ಕೊಲ್ಲಾಪುರ ಸರಕಾರ ಗ್ಯಾಜೆಟಿನಲ್ಲಿ ಜಾಹಿರನಾಮೆ ಪ್ರಸಿದ್ಧಮಾಡಿ ಸಂಸ್ಥಾನದಲ್ಲಿಯ ಬಲೂತೆದಾರಿ ಪದ್ಧತಿಯನ್ನು ನಷ್ಟ ಪಡಿಸಲಾಯಿತು.
ಪ್ರ. 3. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ.
ಉತ್ತರ:-
ಸರಕಾರಕ್ಕೆ ಸಾಮ್ಯವಾದಿ ಚಳುವಳಿಯಿಂದ ಅಪಾಯವೇನಿಸತೊಡಗಿತು. ಸರಕಾರವು ಈ ಚಳುವಳಿಯನ್ನು
ಹತ್ತಿಕ್ಕಬೇಕೆಂದು ನಿರ್ಧರಿಸಿತು. ಶ್ರೀಪಾದ್ ಅಮೃತ ಢಾoಗೆ, ಮುಝಫ್ಫರ ಅಹಮದ್, ಕೇಶವ ನೀಲಕಂಠ
ಜೋಗಳೇಕರ ಮುಂತಾದವರನ್ನು ಬಂಧಿಸಲಾಯಿತು. ಬ್ರಿಟಿಷ್ ಆಡಳಿತವನ್ನು ಕಿತ್ತುಹಾಕುವ ಒಳಸಂಚು
ಮಾಡಿದ್ದಾರೆಂಬ ಆಪಾದನೆಯನ್ನು ಅವರ ಮೇಲೆ ಹೊರಿಸಲಾಯಿತು. ಅವರಿಗೆ ಬೇರೆ ಬೇರೆ ಶಿಕ್ಷೆಗಳನ್ನು
ವಿಧಿಸಲಾಯಿತು. ಈ ಖಟ್ಲೆಯನ್ನು ಮಿರತನಲ್ಲಿ ನಡೆಸಲಾಯಿತು. ಆದ್ದರಿಂದ ಇದಕ್ಕೆ ಮೀರತ್ 'ಒಳಸಂಚಿನ ಖಟ್ಲೆ ' ಎಂದು
ಕರೆಯಲಾಗುತ್ತದೆ.
2. ಡಾ. ಬಾಬಾಸಾಹೇಬ ಅಂಬೇಡಕರ ಇವರು ಮೂಕನಾಯಕ,
ಬಹಿಷ್ಕೃತ ಭಾರತ ಮುಂತಾದ ವರ್ತ್ಮನ ಪತ್ರಗಳನ್ನು ಆರಂಭಿಸಿದರು.
ಉತ್ತರ:- ವರ್ತಮಾನ ಪತ್ರಗಳು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್
ಅವರ ಚಳುವಳಿಯ ಅವಿಭಾಜ್ಯ ಅಂಗಗಳಾಗಿದ್ದವು. ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡಲು ಮತ್ತು ದಲಿತರ
ದುಃಖವನ್ನು ಸಮಾಜಕ್ಕೆ ತೋರಿಸಿಕೊಡಲು ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರರು 'ಮೂಕ ನಾಯಕ' 'ಬಹಿಷ್ಕೃತ' ಭಾರತ, ಜನತಾ ' ' ಸಮತಾ' ಎಂಬ ವರ್ತಮಾನ
ಪತ್ರಗಳನ್ನು ಆರಂಭಿಸಿದರು.
3. ರಾಷ್ಟ್ರವ್ಯಾಪಿ ಕಾರ್ಮಿಕ ಸಂಘಟನೆಗಳ ಅವಶ್ಯಕತೆ ಉಂಟಾಗತೊಡಗಿತು.
ಉತ್ತರ:-
ಆಸಾಮದಲ್ಲಿ ಚಹಾದ ತೋಟದಲ್ಲಿಯ ಕೆಲಸಗಾರರ ದಾರುಣ ಅವಸ್ಥೆಯ ವಿರುದ್ಧ ಆಂದೋಲನ ಮಾಡಲಾಯಿತು. 1899ರಲ್ಲಿ ಗ್ರೇಟ್ ಇಂಡಿಯನ್ ಪೆನಿನ್ಸುಲರ್ ( ಜಿ. ಐ. ಪಿ.) ರೈಲ್ವೆ ಕಾರ್ಮಿಕರು ತಮ್ಮ ಬೇಡಿಕೆಗಳಿಗಾಗಿ
ಮುಷ್ಕರ ಹೊಡೆದರು. ವಂಗಭಂಗ ಚಳುವಳಿಯ ಕಾಲದಲ್ಲಿ ಸ್ವದೇಶಿಗೆ ಬೆಂಬಲ ನೀಡುವ ಸಲುವಾಗಿ ಕಾರ್ಮಿಕರು
ಆಗಾಗ ಮುಷ್ಕರಗಳನ್ನು ಮಾಡಿದರು. ಮೊದಲನೇ ಮಹಾಯುದ್ಧದ ನಂತರ ಭಾರತದಲ್ಲಿ ಓದ್ಯೋಗಿಕರಣದಿಂದಾಗಿ
ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಆಗ ಮಾತ್ರ ರಾಷ್ಟ್ರವಾಪಿ ಕಾರ್ಮಿಕ ಸಂಘಟನೆ.ಗಳ ಅವಶ್ಯಕತೆ ಉಂಟಾಗತೊಡಗಿತ್ತು.
ಪ್ರ.4. ಕೆಳಗಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
1) ಆಧುನಿಕ ಭಾರತದ ನಿರ್ಮಾಣ ಕಾರ್ಯದಲ್ಲಿ ಸಮತೆಯ ಸಲುವಾಗಿ ಮಾಡಿದ ಹೋರಾಟವು ಏಕೆ
ಮಹತ್ವದ್ದಾಗಿದೆ?
ಉತ್ತರ: . ಬಾಬಾಸಾಹೇಬ ಅಂಬೇಡಕರರ ನೇತೃತ್ವದಲ್ಲಿ ದಲಿತರ ಸಂಘರ್ಷ ಆರಂಭವಾಯಿತು. ಸ್ವಾತಂತ್ರ್ಯ, ಸಮತೆ ಮತ್ತು ಬಂಧುತ್ವ ಈ ತತ್ವಗಳ ಮೇಲೆ ಸಮಾಜದ ನಿರ್ಮಿತಿ ಮಾಡುವುದು ಡಾ. ಅಂಬೇಡಕರರ ಧ್ಯೇಯವಾಗಿತ್ತು. ಜಾತಿ ಸಂಸ್ಥೆಯು ಸಮೂಲ ನಷ್ಟವಾಗದ ಹೊರತು ದಲಿತರ ಮೇಲಿನ ಅನ್ಯಾಯ ಮತ್ತು ವಿಷಮತೆ ಕೊನೆಗೊಳ್ಳಲಾರದು ಎಂಬ ಭರವಸೆ ಅವರಿಗಿತ್ತು. ಸಾಮಾಜಿಕ ಸಮತೆಯೂ ದಲಿತರ ಹಕ್ಕಾಗಿದೆ ಎಂಬುದು ಅವರ ನಂಬಿಕೆಯಾಗಿತ್ತು. ಹಾಗಾಗಿ ಜುಲೈ 1924ರಲ್ಲಿ ‘ಬಹಿಷ್ಕೃತ ಹಿತಕಾರಿಣಿ ಸಭೆ’ಯನ್ನು ಸ್ಥಾಪಿಸಿದರು. ತಮ್ಮ ಅನುಯಾಯಿಗಳಿಗೆ ‘ಕಲಿಯಿರಿ, ಸಂಘಟಿತರಾಗಿರಿ ಮತ್ತು ಸಂಘರ್ಷ ಮಾಡಿರಿ’ ಎಂಬ ಸ್ಪೂರ್ತಿದಾಯಕ ಸಂದೇಶವನ್ನು ನೀಡಿದರು. ದಳಿತರಿಗಾಗಿ ಜಲಾಶಯ ಮುಕ್ತಗೊಳಿಸುವ ಚವದಾರ ಕೆರೆಯ ಸತ್ಯಾಗ್ರಹ ಮಾಡಿದರು. ಅವರು ವಿಷಮತೆಯನ್ನು ಪುರಸ್ಕರಿಸುವ ಮನುಸ್ಮೃತಿ ಗ್ರಂಥವನ್ನು ಸುತ್ತು ಹಾಕಿದರು. ಮಂದಿರದಲ್ಲಿ ದಳಿತರಿಗೆ ಪ್ರವೇಶ ಕೊಡುವ ಸಲುವಾಗಿ ನಾಶಿಕದ ಕಾಳಾರಾಮ ಮಂದಿರದಲ್ಲಿ ಸತ್ಯಾಗ್ರಹ ಮಾಡಿದರು. ಡಾ. ಬಾಬಾಸಾಹೇಬ ಅಂಬೇಡಕರರು ಸಂವಿಧಾನದ ಮುಖಾಂತರ ಮಹತ್ವದ ಕೊಡುಗೆಯನ್ನು ನೀಡಿದರು. ಆಧುನಿಕ ಭಾರತದ ನಿರ್ಮಾಣ ಕಾರ್ಯದಲ್ಲಿ ಸಮತೆಯ ಸಲುವಾಗಿ ಮಾಡಿದ ಹೋರಾಟಕ್ಕೆ ಮಹತ್ವದ ಸ್ಥಾನವಿದೆ. ಪತ್ರಿಕೆಗಳಲ್ಲಿ ಸಮತೆ ಸಾರಿದರು.
2) ಪೂರ್ವ ಖಾನದೇಶದಲ್ಲಿ ಸಾನೆ ಗುರೂಜಿಯವರು ಮಾಡಿದ ಕಾರ್ಯಗಳನ್ನು ಬರೆಯಿರಿ.
ಉತ್ತರ: 1938ರಲ್ಲಿ ಪೂರ್ವ ಖಾನದೇಶದಲ್ಲಿ ಅತಿವೃಷ್ಟಿಯಾಗಿ ಬೆಳೆಗಳು ನಷ್ಟವಾದವು. ರೈತರ ಸ್ಥಿತಿ
ಚಿಂತಾಜನಕವಾಯಿತು. ಭೂಕಂದಾಯಮನ್ನಾ ಮಾಡಿಸಿಕೊಳ್ಳುವ ಸಲುವಾಗಿ ಸಾನೆ ಗುರೂಜಿಯವರು ಅಲ್ಲಲ್ಲಿ ಮೆರವಣಿಗೆಗಳನ್ನು
ನಡೆಸಿದರು. ಕಲೆಕ್ಟರ್ ಕಚೇರಿಯ ವರೆಗೆ ಮೋರ್ಚಾ ತೆಗೆದರು. 1942ರ ಕ್ರಾಂತಿಪರ್ವದಲ್ಲಿ ರೈತರು ದೊಡ್ಡ
ಸಂಖ್ಯೆಯಲ್ಲಿ ಭಾಗವಹಿಸಿದರು.
3) ಕಾರ್ಮಿಕರ ಹೋರಾಟಗಳು ರಾಷ್ಟ್ರೀಯ ಚಳುವಳಿಗೆ ಹೇಗೆ ಪೂರಕವಾದವು?
ಉತ್ತರ: 19ನೇ ಶತಮಾನದಲ್ಲಿ ಭರತದಲ್ಲಿ ಬಟ್ಟೆಯ ಗಿರಣಿ, ರೇಲ್ವೆ ಕಂಪನಿಗಳಂತಹ ಕೈಗಾರಿಕೆಗಳಲ್ಲಿ
ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಬಹಳ ಪ್ರಯತ್ನಗಳು ಆದವು. ಕಾರ್ಮಿಕ ವರ್ಗದಲ್ಲಿ ಸಮಾಜವಾದಿ
ವಿಚಾರಗಳನ್ನು ಪ್ರಸಾರ ಮಾಡಿ ಕಾರ್ಮಿಕರಿಗಾಗಿ ಹೋರಾಟ ಮಾಡುವ ಸಂಘಟನೆಗಳನ್ನು ಸ್ಥಾಪಿಸುವ ಕಾರ್ಯವನ್ನು
ಶ್ರೀಪಾದ ಅಮೃತ ಡಾಂಗೆ, ಮುಝಪ್ಫರ್ ಅಹಮದ ಮುಂತಾದ ಸಮಾಜವಾದಿ ಮುಖಂಡರು ಮಾಡಿದರು.
1928ರಲ್ಲಿ ಮುಂಬಯಿಯಲ್ಲಿಯ ಗಿರಣಿ ಕಾರ್ಮಿಕ ಸಂಘವು ಆರು ತಿಂಗಳು ಮುಷ್ಕರ ಹೂಡಿತು. ಇಂತಹ ಅನೇಕ ಮುಷ್ಕರಗಳನ್ನು
ಕಾರ್ಮಿಕರು ಮಾಡಿದರು. ಕಾರ್ಮಿಕ ಚಳುವಳಿಯ ಹೆಚ್ಚುತ್ತಿರುವ ಶಕ್ತಿಯನ್ನು ಕಂಡು ಸರಕಾರವು ಅಸ್ವಸ್ಥವಾಯಿತು.
ಈ ಚಳುವಳಿಯನ್ನು ಹತ್ತಿಕ್ಕುವ ಸಲುವಾಗಿ ಕಾನೂನುಗಳನ್ನು ಮಾಡಲಾಯಿತು. ಹೀಗೆ ಕಾರ್ಮಿಕ ಹೋರಾಟಗಳು ರಾಷ್ಟ್ರೀಯ
ಚಳುವಳಿಗೆ ಪೂರಕವಾದವು.
4) ಸ್ತ್ರೀಯರ ಬಗೆಗಿನ ಸುಧಾರಣಾ ಚಳುವಳಿಯ ಸ್ವರೂಪವನ್ನು ಸ್ಪಷ್ಟಪಡಿಸಿರಿ.
ಉತ್ತರ: ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ ದ್ವಿತೀಯ ಸ್ಥಾನವಿತ್ತು. ಅನೇಕ ಅನಿಷ್ಟ
ರೂಢಿ-ಪರಂಪರೆಗಳಿಂದಾಗಿ ಅವರ ಮೇಲೆ ಅನ್ಯಾಯವಾಗುತ್ತಿತ್ತು. ಆದರೆ ಆಧುನಿಕ ಯುಗದಲ್ಲಿ ಇದರ ವಿರುದ್ಧ
ಜಾಗೃತಿಯಾಗತೊಡಗಿತು. ಸ್ತ್ರೀಯರ ಬಗೆಗಿನ ಸುಧಾರಣಾ ಚಳುವಳಿಯಲ್ಲಿ ಕೆಲವು ಪುರುಷ ಸುಧಾರಕರು ನೇತೃತ್ವವಹಿಸಿತು.
ಕಾಲಾಂತರದಲ್ಲಿ ಸ್ತ್ರೀಯರು ನೇತೃತ್ವ ವಹಿಸಿ ಮುಂದೆ ಬರತೊಡಗಿದ್ದರು. ಅವರ ಸಂಘ-ಸಂಸ್ಥೆಗಳು ಸ್ಥಾಪನೆಯಾಗತೊಡಗಿತು.
ಪಂಡಿತಾ ರಮಾಬಾಯಿ ‘ಆರ್ಯ ಮಹಿಳಾ ಸಮಾಜ’ ಮತ್ತು ‘ಶಾರದಾ ಸದನ’ ಸಂಸ್ಥೆಗಳು ಸ್ಥಾಪಿಸಿದವು. ರಮಾಬಾಯಿ ರಾನಡೆಯವರು
ಸ್ಥಾಪಿಸಿದ ‘ಸೇವಾಸದನ’ ಸಂಸ್ಥೆ ‘ಭಾರತ ಮಹಿಲಾ ಪರಿಷತ್ತು’ ಇತ್ಯಾದಿ ಸಂಸ್ಥೆಗಳ ಕಾರ್ಯವು ರಾಷ್ಟ್ರ
ಮಟ್ಟದ ವರೆಗೆ ಹೋಗಿ ತಲುಪಿತು. ವಾರಸಾ ಹಕ್ಕು, ಮತದಾನದ ಹಕ್ಕು ಮುಂತಾದ
ಸಮಸ್ಯೆಗಳನ್ನು ಕುರಿತು ಈ ಸಂಘಟನೆಗಳ ಮುಖಾಂತರ ಸ್ತ್ರೀಯರು ಸಂಘರ್ಷ ಮಾಡತೊಡಗಿದರು.
12 ನೇ ಪಾಠ
ಸ್ವಾತಂತ್ರ್ಯ ಪ್ರಾಪ್ತಿ |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ ಪರ್ಯಾಯವನ್ನು ಆಯ್ಕೆ
ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ............ ಇವರು ಹಂಗಾಮಿ ಸರಕಾರದ ಪ್ರಮುಖರಾಗಿದ್ದರು.
ಅ)
ವಲ್ಲಭಭಾಯಿ ಪಟೇಲ ಬ) ಮಹಾತ್ಮಾ ಗಾಂಧಿ
ಕ) ಪಂಡಿತ
ಜವಹರಲಾಲ ನೆಹರು ಡ) ಬ್ಯಾರಿಸ್ಟರ ಜಿನ್ನಾ
2. ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳನ್ನು
ನಿರ್ಮಿಸುವ ಯೋಜನೆಯನ್ನು .............. ಇವರು ಸಿದ್ಧಗೊಳಿಸಿದರು. ಅ) ಲಾರ್ಡ್ ವೆವೆಲ್ ಬ) ಸ್ಟಾಫರ್ಡ್ ಕ್ರಿಪ್ಸ್ ಕ) ಲಾರ್ಡ್ ಮೌಂಟಬ್ಯಾಟನ್ ಡ) ಪ್ಯಾಥಿಕ ಲಾರೆನ್ಸ್
ಪ್ರ. 2. ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ
ಬರೆಯಿರಿ.
1. ಬ್ಯಾ. ಜಿನ್ನಾ ಇವರು ಯಾವ ಬೇಡಿಕೆಯ ಆಗ್ರಹ ಮಾಡಿದರು?
ಉತ್ತರ: ಶಿಮ್ಲಾ ಎಂಬಲ್ಲಿ ವೇವೆಲ್ ಯೋಜನೆಯಡಿಯಲ್ಲಿ ಸರ್ವಪಕ್ಷಗಳ ಸಭೆ ಆಯೋಜಿಸಲಾಗಿತ್ತು. ವೈಸರಾಯನ ಕಾರ್ಯನಿರ್ವಾಹಕ ಮಂಡಲದಲ್ಲಿಯ ಮುಸ್ಲಿಂ ಪ್ರತಿನಿಧಿಗಳ ಹೆಸರುಗಳನ್ನು ಸೂಚಿಸುವ ಅಧಿಕಾರವು ಕೇವಲ ಮುಸ್ಲಿಂ ಲೀಗಗೆ ಮಾತ್ರ ಇರಬೇಕು ಎಂದು ಬ್ಯಾ. ಜಿನ್ನಾ ಇವರು ಯಾವ ಬೇಡಿಕೆಯ ಆಗ್ರಹ ಮಾಡಿದರು.
2. ತ್ರಿಮಂತ್ರಿ ಯೋಜನೆಯಲ್ಲಿದ್ದ ಮಂತ್ರಿಗಳ ಹೆಸರು ಬರೆಯಿರಿ.
ಉತ್ತರ:-
ಪ್ರ. 3. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ.
1. ರಾಷ್ಟ್ರೀಯ ಸಭೆಯು ವಿಭಜನೆಗೆ ಒಪ್ಪಿಗೆ ನೀಡಿತು.
ಉತ್ತರ: ವೈಸರಾಯ್ ಮೌಂಟ್ ಬ್ಯಾಟನ್ ಭರತದಲ್ಲಿಯ ಪ್ರಮುಖರೊಂದಿಗೆ ವಿಚಾರ ವಿನಿಮಯ ಮಾಡಿದರು. ಎರಡು ಸ್ವತಂತ್ರ ರಾಷ್ಟ್ರಗಳನ್ನು ನಿರ್ಮಿಸುವ ಯೋಜನೆಗೆ ಮಾನ್ಯತೆ ನೀಡಿದರು. ದೇಶದ ಐಕ್ಯತೆಯನ್ನು ವಿಭಜಿಸುವ ಯೋಜನೆಯಿಂದಾಗಿ ರಾಷ್ಟ್ರೀಯ ಸಭೆಯು ಇದಕ್ಕೆ ಒಪ್ಪಲಿಲ್ಲ ಆದರೆ ಮುಸ್ಲಿಮ ಲೀಗವು ಪಾಕಿಸ್ತಾನ ನಿರ್ಮಿತಿಗಾಗಿ ಹಟ ಹಿಡಿದು ಕುಳಿತಿತು. ರಾಷ್ಟ್ರೀಯ ಸಭೆಯು ಬೇರೆ ಉಪಾಯ ಕಾಣದೆ ವಿಭಜನೆಗೆ ಒಪ್ಪಿಗೆ ನೀಡಿತು.
2. ಹಂಗಾಮಿ ಸರಕಾರದ ಆಡಳಿತವು ಸುಗಮವಾಗಿ ಸಾಗಲಿಲ್ಲ.
ಉತ್ತರ: ದೇಶದಲ್ಲಿ ಹಿಂಸಾಚಾರ ಹೆಚ್ಚಾದಾಗ ವೈಸರಾಯ ವೇವೆಲ್ ಇವರು ಹಂಗಾಮಿ ಸರಕಾರದ ಸ್ಥಾಪನೆ ಮಾಡಿದರು. ಆರಂಭದಲ್ಲಿ ಈ ಸರಕಾರದಲ್ಲಿ ಸಹಭಾಗಿಯಾಗದಿರುವ ನಿರ್ಣಯ ಮುಸ್ಲಿಂ ಲೀಗ್ ಮಾಡಿತು. ಅನಂತರದಲ್ಲಿ ಸರಕಾರದಲ್ಲಿ ಸೇರ್ಪಡೆಯಾಗಿದ್ದರೂ ಸರಕಾರವನ್ನು ತಡೆಯುವ ನಿಲುವು ಕೈಕೊಂಡಿವುದರಿಂದ ಹಂಗಾಮಿ ಸರಕಾರದ ಆಡಳಿತವು ಸುಗಮವಾಗಿ ಸಾಗಲಿಲ್ಲ.
3. ವೆವೆಲ್ ಯೋಜನೆಯು ಯಶಸ್ವಿಯಾಗಲಿಲ್ಲ.
ಉತ್ತರ: ಭಾರತದ ವೈಸರಾಯ್ ಲಾರ್ಡ್ ವೇವೆಲ್ ಇವರು ಜೂನ 1945ರಲ್ಲಿ ವಿವಿಧ ಏರ್ಪಾಟುಗಳನ್ನು
ಮಾಡಿದ ಯೋಜನೆಯನ್ನು ತಯಾರಿಸಿದರು. ಈ ಯೋಜನೆಯಲ್ಲಿ ಕೇಂದ್ರೀಯ ಮತ್ತು ಪ್ರಾಂತೀಯ ಶಾಸನ
ಸಭೆಗಳಲ್ಲಿಯ ಮುಸ್ಲಿಮ, ದಲಿತ ಮತ್ತು ಅಲ್ಪಸಂಖ್ಯಾತರಿಗೆ ಯೋಗ್ಯ
ಪ್ರತಿನಿಧಿತ್ವವನ್ನು ನೀಡಲಾಗುವುದು, ವೈಸರಾಯನ ಕಾರ್ಯನಿರ್ವಾಹಕ
ಮಂಡಳದಲ್ಲಿ ಹಿಂದೂ ಮತ್ತು ಮುಸ್ಲಿಮ ಸದಸ್ಯರ ಸಂಖ್ಯೆ ಸಮಾನವಾಗಿರುವುದು ಎಂಬ ಏರ್ಪಾಟುಗಳಿದ್ದವು.
ಈ ಯೋಜನೆಯ ಬಗ್ಗೆ ವಿಚಾರ ಮಾಡಲು ಶಿಮ್ಲಾದಲ್ಲಿ ಭಾರತದ ಪ್ರಮುಖ ರಾಜಕೀಯ ಪಕ್ಷಗಳ ಸಭೆಯನ್ನು ಆಯೋಜಿಸಲಾಗಿತ್ತು.
ವೈಸರಾಯನ ಕಾರ್ಯನಿರ್ವಾಹಕ ಮಂಡಳದಲ್ಲಿ ಮುಸ್ಲಿಮ ಪ್ರತಿನಿಧಿಗಳ ಹೆಸರು ಸೂಚಿಸುವ ಅಧಿಕಾರ ಕೇವಲ ಮುಸ್ಲಿಮ
ಲೀಗ್ ಗೆ ಮಾತ್ರ ಇರಬೇಕು ಎಂದು ಬ್ಯಾರಿಷ್ಟರ್ ಜೀನಾ ಆಗ್ರಹ ಮಾಡಿದರು. ಅದಕ್ಕೆ ರಾಷ್ಟ್ರೀಯ ಸಭೆಯೂ
ವಿರೋಧಿಸಿತು. ಅದರಿಂದಾಗಿ ವೇವೆಲ್ ಯೋಜನೆ ಯಶಸ್ವಿಯಾಗಲಿಲ್ಲ.
*4. ಬ್ರಿಟಿಷ ಸರಕಾರ ಭಾರತಕ್ಕೆ ಸ್ವಾತಂತ್ರ್ಯ ನಿಡುವುದಕ್ಕೆ ತಯಾರಾಯಿತು.
ಉತ್ತರ: ಎರಡನೆಯ ಮಹಾಯುದ್ಧದ ಕಾಲದಲ್ಲಿ ಭಾರತದ ಸ್ವತತ್ರ್ಯ ಹೋರಾಟವು ವ್ಯಾಪಕವಾಗಿತ್ತು. ಸ್ವಾತಂತ್ರ್ಯದ ಬೇಡಿಕೆ ಹೆಚ್ಚುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಬ್ರಿಟಿಷ ಸರಕಾರ ಭಾರತಕ್ಕೆ ಸ್ವಾತಂತ್ರ್ಯ ಕೊಡುವುದಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸತೊಡಗಿತು.
ಪ್ರ. 4. ಕೆಳಗೆ ಕೊಟ್ಟ ಕಾಲ ರೇಷೆಯ ಮೇಲೆ ಘಟನಾಕ್ರಮವನ್ನು ಬರೆಯಿರಿ.
|
|
|
ಪ್ರ.5. ಕೆಳಗಿನ ಪ್ರಶ್ನೆಗಳಿಗೆ ಸವಿಸ್ತಾರ ಉತ್ತರ ಬರೆಯಿರಿ.
1. ಬ್ರಿಟಿಶರು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡುವ ಸಲುವಾಗಿ ಏಕೆ
ಸಿದ್ಧರಾದರು?
ಉತ್ತರ: ಎರಡನೆಯ ಮಹಾಯುದ್ಧದ ಕಾಲದಲ್ಲಿ ಭಾರತದ ಸ್ವಾತಂತ್ರ್ಯ ಹೊರಟವು ವ್ಯಾಪಕವಾಗಿತ್ತು. ಭಾರತದ ಸ್ವಾತಂತ್ರ್ಯದ ಬೇಡಿಕೆಯ ಆವೇಶವು ಹೆಚ್ಚುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸುವುದರ ಅವಶ್ಯಕತೆಯಿದೆ ಎಂಬ ಅರಿವು ಬ್ರಿಟಿಷ್ ಆಡಳಿತಗಾರರಿಗೆ ಆಯಿತು. ಆ ದೃಷ್ಟಿಯಿಂದ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡುವ ಸಲುವಾಗಿ ಸಿದ್ಧವಾದರು.
2. ಮೌಂಟಬ್ಯಾಟನ್ ಯೋಜನೆಯನ್ನು ಕುರಿತು ಮಾಹಿತಿ ಬರೆಯಿರಿ.
ಉತ್ತರ: ಜೂನ 1948ಕ್ಕಿಂತ ಮೊದಲು ಇಂಗ್ಲಂಡ ಭಾರತದ ಮೇಲಿನ ತಮ್ಮ ಅಧಿಕಾರವನ್ನು ಬಿಟ್ಟು ಕೊಡುವುದು
ಎಂದು ಸಾರಿತ್ತು. ಭಾರತದ ಆಡಳಿತದ ಹಸ್ತಾಂತರದ ಹಿನ್ನೆಲೆಯಲ್ಲಿ ಲಾರ್ಡ್ ಮೌಂಟಬ್ಯಾಟನ್ ಭಾರತದ ವೈಸರಾಯರೆಂದು
ನೇಮಕ ಮಾಡಲಾಯಿತು. ಲಾರ್ಡ್ ಮೌಂಟಬ್ಯಾಟನ್ ಭಾರತದ ಪ್ರಮುಖ ಮುಖಂಡರೊಡನೆ ವಿಚಾರ ವಿನಿಮಯ ಮಾಡಿದರು.
ಆನಂತರ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳನ್ನು ನಿರ್ಮಿಸುವ ಯೋಜನೆಯನ್ನು
ಸಿದ್ದಗೊಳಿಸಿದರು. ಮೌಂಟಬ್ಯಾಟನ್ ಯೋಜನೆಯ ಆಧಾರದ ಮೇಲಿಂದ 18 ಜುಲೈ 1947 ರಂದು ಬ್ರಿಟಿಷ್ ಪಾರ್ಲಿಮೆಂಟು
ಭಾರತದ ಸ್ವಾತಂತ್ರ್ಯದ ಕಾಯ್ದೆಯನ್ನು ಪಾಸು ಮಾಡಿತ್ತು. 15 ಅಗಷ್ಟ 1947 ರಂದು ಭಾರತ ಮತ್ತು ಪಾಕಿಸ್ತಾನಗಳೆಂಬ
ಎರಡು ಸ್ವತಂತ್ರ ರಾಷ್ಟ್ರಗಳು ಅಸ್ಥಿತ್ವದಲ್ಲಿ ಬರುವವು. ಆ ನಂತರ ಅವುಗಳ ಮೇಲೆ ಬ್ರಿಟಿಷ ಪಾರ್ಲಿಮೆಂಟಿನ
ಯಾವ ಅಧಿಕಾರವೂ ಉಳಿಯಲಾರದು ಎಂದು ಈ ಯೋಜನೆಯ ಎರ್ಪಾಟುಗಳು ಆಗಿದ್ದವು.
3. 16 ಅಗಷ್ಟ 1946 ಈ ದಿನವನ್ನು ನೇರ ಕಾರ್ಯಾಚರಣೆಯ ದಿನವೆಂದು ಆಚರಿಸುವುದಾಗಿ ಮುಸ್ಲಿಮ
ಲೀಗ್ ಏಕೆ ಜಾಹೀರುಪಡಿಸಿತು? ಅದರಿಂದ ಯಾವ ಪರಿಣಾಮಗಳಾದವು?
ಉತ್ತರ: ಪಾಕಿಸ್ತಾನದ ಬೇಡಿಕೆಯು ಪೂರ್ಣವಾಗದಿರುವುದನ್ನು ಕಂಡು ಮುಸ್ಲಿಮ ಲೀಗ ನೇರ ಕಾರ್ಯಾಚರಣೆ
ಮಾಡಬೇಕೆಂದು ನಿರ್ಧರಿಸಿತು. ಅದಕ್ಕನುಸಾರವಾಗಿ 16 ಅಗಷ್ಟ 1946 ಈ ದಿನವನ್ನು ನೇರ ಕಾರ್ಯಾಚರಣೆಯ
ದಿನವೆಂದು ಆಚರಿಸುವುದಾಗಿ ಮುಸ್ಲಿಮ ಲೀಗ ಜಾಹೀರು ಪಡಿಸಿತು. ಈ ದಿನ ಮುಸ್ಲಿಮ ಲೀಗನ ಅನುಯಾಯಿಗಳು
ಹಿಂಸಾತ್ಮಕ ಮಾರ್ಗವನ್ನು ಅನುಸರಿಸಿದರು. ದೇಶದ ವಿವಿಧ ಸ್ಥಳಗಳಲ್ಲಿ ಹಿಂದೂ-ಮುಸ್ಲಿಮ ದಂಗೆಗಳಾದವು.
ಬಂಗಾಳ ಪ್ರಾಂತದ ನೊಆಖಾಲಿ ಭಾಗದಲ್ಲಿ ಭೀಷಣ ಹತ್ಯಾಕಾಂಡ ನಡೆಯಿತು. ಈ ಹಿಂಸಾಚಾರವನ್ನು ತಡೆಗಟ್ಟಲು
ಮ. ಗಾಂಧೀಜಿಯವರು ತಮ್ಮ ಜೀವದ ಹಂಗು ತೊರೆದು ಅಲ್ಲಿಗೆ ಹೋದರೂ. ಅಲ್ಲಿ ಶಾಂತತೆಯನ್ನು ಸ್ಥಾಪಿಸುವ
ಸಲುವಾಗಿ ಅವರು ಶಕ್ತಿ ಮೀರಿ ಪ್ರಯತ್ನ ಮಾಡಿದರು.
13 ನೇ ಪಾಠ
ಸ್ವಾತಂತ್ರ್ಯ ಹೋರಾಟದ
ಪರಿಪೂರ್ಣತೆ |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ ಪರ್ಯಾಯವನ್ನು ಆಯ್ಕೆ
ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ಭಾರತದಲ್ಲಿ ಚಿಕ್ಕ-ದೊಡ್ಡ ಆರು ನೂರಕ್ಕಿಂತ ಹೆಚ್ಚು ........
ಇದ್ದವು.
ಅ)
ರಾಜ್ಯಗಳು ಬ) ಹಳ್ಳಿಗಳು ಕ) ಸಂಸ್ಥಾನಗಳು ಡ) ಪಟ್ಟಣಗಳು
2. ಜುನಾಗಡ, .......... ಮತ್ತು ಕಶ್ಮೀರ ಈ ಸಂಸ್ಥಾನಗಳನ್ನು
ಹೊರತುಪಡಿಸಿ ಉಳಿದೆಲ್ಲ ಸಂಸ್ಥಾನಗಳು ಭಾರತದಲ್ಲಿ ವಿಲೀನವಾದವು. ಅ) ಔಂಧ ಬ)
ಝಾಶಿ ಕ) ವಡೋದರಾ ಡ) ಹೈದರಾಬಾದ
ಪ್ರ. 2. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ.
1. ಜುನಾಗಡವು ಭಾರತದಲ್ಲಿ ವಿಲೀನವಾಯಿತು.
2. ಭಾರತ ಸರಕಾರವು ನಿಜಾಮನ ವಿರುದ್ಧ ಪೋಲಿಸ ಕಾರ್ಯಾಚರಣೆ
ಆರಂಭಿಸಿತು.
3. ಹರಿಸಿಂಗನು ಭಾರತದಲ್ಲಿ ವಿಲೀನವಾಗುವ ಒಪ್ಪಂದದ ಮೇಲೆ ಸಹಿ
ಹಾಕಿದನು.
ಪ್ರ.3. ಸ್ವಲ್ಪದರಲ್ಲಿ
ಉತ್ತರ ಬರೆಯಿರಿ.
1. ಸಂಸ್ಥಾನಗಳ ವಿಲೀನಿಕರಣದಲ್ಲಿಯ ಸರದಾರ ವಲ್ಲಭಭಾಯಿ ಪಟೇಲರ
ಕೊಡುಗೆಯನ್ನು ಸ್ಪಷ್ಟಪಡಿಸಿರಿ.
2. ಹೈದರಾಬಾದ ಮುಕ್ತಿ ಸಂಗ್ರಾಮದಲ್ಲಿಯ ಸ್ವಾಮಿ ರಾಮಾನಂದ ತೀರ್ಥರ
ಕೊಡುಗೆಯನ್ನು ಸ್ಪಷ್ಟಪಡಿಸಿರಿ.
14 ನೇ ಪಾಠ
ಮಹಾರಾಷ್ಟ್ರ ರಾಜ್ಯದ ನಿರ್ಮಿತಿ
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ ಪರ್ಯಾಯವನ್ನು ಆಯ್ಕೆ
ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1) 1 ಮೇ 1960 ರಂದು ಮಹಾರಾಷ್ಟ್ರ ರಾಜ್ಯದ
ನಿರ್ಮಿತಿಯಾಯಿತು.
2) ಮುಂಬಯಿ ಮಹಾನಗರ ಪಾಲಿಕೆಯಲ್ಲಿ ಮುಂಬಯಿಸಹಿತ ಸಂಯುಕ್ತ
ಮಹಾರಾಷ್ಟ್ರದ ಠರಾವನ್ನು ............ ಇವರು ಮಂಡಿಸಿದರು.
ಗ.ತ್ರ್ಯ. ಮಾಡಖೋಲಕರ , ಆಚಾರ್ಯ ಆತ್ರೇ , ದ.
ವಾ. ಪೋತದಾರ , ಶಂಕರರಾವ ದೇವ
3) ಮಹಾರಾಷ್ಟ್ರದ ಪ್ರಥಮ ಮುಖ್ಯಮಂತ್ರಿಯಾಗಿ ಯಶವಂತರಾವ ಚವ್ಹಾಣ
ಇವರು ಜವಾಬ್ದಾರಿಯನ್ನು ಸ್ವೀಕರಿಸಿದರು.
ಪ್ರ. 2. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ.
1. ಸಂಯುಕ್ತ ಮಹಾರಾಷ್ಟ್ರ ಸಮಿತಿಯ ಸ್ಥಾಪನೆ ಮಾಡಲಾಯಿತು.
ಉತ್ತರ:-
2. ಸಂಯುಕ್ತ ಮಹಾರಾಷ್ಟ್ರದ ಹೋರಾಟದಲ್ಲಿ ವರ್ತಮಾನ ಪತ್ರಗಳ ಪಾತ್ರ
ಮಹತ್ವದ್ದಾಗಿತ್ತು.
ಉತ್ತರ:-
ಪ್ರ.3. ಟಿಪ್ಪಣಿ ಬರೆಯಿರಿ.
1. ಸಂಯುಕ್ತ ಮಹಾರಾಷ್ಟ್ರ ಪರಿಷತ್ತು
2. ಸಂಯುಕ್ತ ಮಹಾರಾಷ್ಟ್ರ ಸಮಿತಿಯ ಕೊಡುಗೆ
ಪ್ರ.4. ಕೆಳಗಿನ ಕಲ್ಪನಚಿತ್ರವನ್ನು ಪೂರ್ಣಮಾಡಿರಿ.
|
|
|
ಸಂಯುಕ್ತ ಮಹಾರಾಷ್ಟ್ರ
ಸಮಿತಿ |
ನಾಗರಿಕ ಶಾಸ್ತ್ರ (ಸಂಸದೀಯ ಸರಕಾರ ಪದ್ಧತಿ)
ಎಂಟನೆಯ ತರಗತಿ
ಪಾಠ 1. ಸಂಸದೀಯ ಸರಕಾರ ಪದ್ಧತಿಯ ಪರಿಚಯ |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿಯ ಯೋಗ್ಯ ಪರ್ಯಾಯವನ್ನು ಆಯ್ಕೆ ಮಾಡಿ ವಾಕ್ಯಗಳನ್ನು ಪುನ:
ಬರೆಯಿರಿ.
1. ಸಂಸದೀಯ ಸರಕಾರ ಪದ್ಧತಿಯು ........... ವಿಕಸಿತವಾಯಿತು.
ಅ) ಇಂಗ್ಲೆಂಡಿನಲ್ಲಿ ಬ) ಫ್ರಾನ್ಸ್ ದಲ್ಲಿ ಕ)
ಅಮೇರಿಕಾದಲ್ಲಿ ಡ) ನೇಪಾಳದಲ್ಲಿ
2. ಅಧ್ಯಕ್ಷೀಯ ಸರಕಾರ ಪದ್ಧತಿಯಲ್ಲಿ ............ ಇವರು ಕಾರ್ಯಾಂಗ
ಪ್ರಮುಖನಿರುತ್ತಾರೆ.
ಅ)
ಪ್ರಧಾನಮಂತ್ರಿ ಬ) ಲೋಕಸಭಾ
ಅಧ್ಯಕ್ಷರು ಕ)
ರಾಷ್ಟ್ರಾಧ್ಯಕ್ಷರು ಡ) ರಾಜ್ಯಪಾಲರು
ಪ್ರ.2. ಕೆಳಗಿನ ಕೋಷ್ಟಕದಲ್ಲಿಯ ಮಾಹಿತಿಯನ್ನು ಪೂರ್ಣಮಾಡಿರಿ.
ಅ. ನಂ. |
ಅಂಗದ ಹೆಸರು |
ಕಾರ್ಯಗಳು |
1. |
ಶಾಸಕಾಂಗ |
ಕಾಯ್ದೆಗಳ ನಿರ್ಮಿತಿ ಮಾಡುವುದು |
2. |
ಕಾರ್ಯಾಂಗ |
ಆ ಕಾಯ್ದೆಗಳನ್ನು ಜಾರಿಗೊಳಿಸುತ್ತದೆ |
3. |
ನ್ಯಾಯಾಂಗ |
ನ್ಯಾಯದಾನದ ಕೆಲಸ ಮಾಡುತ್ತದೆ |
ಪ್ರ. 3. ಕೆಳಗಿನ ವಿಧಾನಗಳನ್ನು ಕಾರಣಸಹಿತ
ಸ್ಪಷ್ಟಪಡಿಸಿರಿ.
1. ಭಾರತವು ಸಂಸದೀಯ ಸರಕಾರ ಪದ್ಧತಿಯನ್ನು ಸ್ವೀಕರಿಸಿತು.
ಉತ್ತರ:-ಸಂಸದೀಯ ಸರಕಾರ ಪದ್ಧತಿಯು ಮೊದಲು ಇಂಗ್ಲೆಂಡದಲ್ಲಿ
ವಿಕಸಿತವಾಯಿತು. ಈ ಪಾರ್ಲಿಮೆಂಟರಿ ಸರಕಾರ ಪದ್ಧತಿಯನ್ನು
ಭಾರತದಲ್ಲಿ ಸ್ವೀಕರಿಸಿದ್ದೇವೆ. ಇದು ಕೇಂದ್ರೀಯ ಆಡಳಿತ ವ್ಯವಸ್ಥೆಯಾಗಿದ್ದು ಇದರಲ್ಲಿ
ರಾಷ್ಟ್ರಪತಿ, ಲೋಕಸಭೆ ಮತ್ತು ರಾಜ್ಯಸಭೆ ಕೂಡಿ ಸಂಸತ್ತು ನಿರ್ಮಾಣವಾಗಿದೆ.
ಲೋಕಪ್ರತಿನಿಧಿಗಳು ಜನರಿಂದ ನೇರವಾಗಿ ಆಯ್ಕೆಮಾಡಲಾಗುವ ಸಂಸದೀಯ ಪದ್ಧತಿಯಾಗಿದೆ.
2. ಸಂಸದೀಯ ಸರಕಾರ ಪದ್ಧತಿಯಲ್ಲಿ ಚರ್ಚೆ ಮತ್ತು ವಿಚಾರ
ವಿನಿಮಯಗಳು ಮಹತ್ವದ್ದಾಗಿರುತ್ತವೆ.
ಉತ್ತರ:-ಸಂಸತ್ತಿನಲ್ಲಿ ಸಾರ್ವಜನಿಕ ಹಿತದ
ಪ್ರಶ್ನೆಗಳ ಮೇಲೆ ಚರ್ಚೆಯಾಗುತ್ತದೆ. ಈ ಚರ್ಚೆಯಲ್ಲಿ ವಿರೋಧಿ ಪಕ್ಷದ ಸದಸ್ಯರು ಕೂಡ
ಭಾಗವಹಿಸುತ್ತಾರೆ. ಯೋಗ್ಯ ವಿಷಯದಲ್ಲಿ ಸರಕಾರಕ್ಕೆ ಸಹಕಾರ ನೀಡುವುದು,
ಧೋರಣೆಗಳಲ್ಲಿಯ ಇಲ್ಲವೆ ಕಾಯ್ದೆಗಳಲ್ಲಿಯ ದೋಷಗಳನ್ನು ತೋರಿಸಿ ಕೊಡುವುದು, ಅಭ್ಯಾಸಪೂರ್ಣ ರೀತಿಯಿಂದ ಪ್ರಶ್ನೆಗಳನ್ನು ಮಂಡಿಸುವ ಕಾರ್ಯಗಳನ್ನು ವಿರೋಧಿ ಪಕ್ಷಗಳು
ಮಾಡುತ್ತವೆ. ಇದರಿಂದಾಗಿ ಸಂಸತ್ತಿಗೆ ದೋಷರಹಿತ ಕಾಯ್ದೆಗಳನ್ನು ಮಾಡಲು ಸಾಧ್ಯವಾಗುತ್ತದೆ.
ಆದ್ದರಿಂದ ಸಂಸದೀಯ ಸರಕಾರ ಪದ್ಧತಿಯಲ್ಲಿ ಚರ್ಚೆ
ಮತ್ತು ವಿಚಾರ ವಿನಿಮಯಗಳು ಮಹತ್ವದ್ದಾಗಿರುತ್ತವೆ
ಪ್ರ. 4. ಕೆಳಗಿನ ಪ್ರಶ್ನೆಗಳಿಗೆ 25 ರಿಂದ 30
ಶಬ್ದಗಳಲ್ಲಿ ಉತ್ತರ ಬರೆಯಿರಿ.
1. ಜವಾಬ್ದಾರ ಸರಕಾರ ಪದ್ಧತಿ ಎಂದರೇನು?
ಉತ್ತರ:-ಪ್ರಧಾನಮಂತ್ರಿ ಮತ್ತು ಅವರ ಮಂತ್ರಿಮಂಡಳವು ತಮ್ಮ ಎಲ್ಲ ಕೃತಿ
ಮತ್ತು ಧೋರಣೆಗಳಿಗಾಗಿ ಪುನ: ಶಾಸಕಾಂಗಕ್ಕೆ ಜವಾಬ್ದಾರರಾಗಿರುತ್ತಾರೆ. ಇದರ ಅರ್ಥವೇನೆಂದರೆ
ಮಂತ್ರಿ ಮಂಡಳವು ಶಾಸಕಾಂಗದ ಜೊತೆಗೆ ರಾಜ್ಯಾಡಾಳಿತ ಮಾಡಬೇಕಾಗುತ್ತದೆ. ಆದ್ದರಿಂದಲೇ ಸಂಸದೀಯ
ಸರಕಾರ ಪದ್ಧತಿಗೆ ಜವಾಬ್ದಾರ ಸರಕಾರ ಪದ್ಧತಿ ಎನ್ನುತ್ತಾರೆ.
2. ಅಧ್ಯಕ್ಷೀಯ ಸರಕಾರ ಪದ್ಧತಿಯ ವೈಶಿಶ್ತ್ಯಾಗಳನ್ನು
ಸ್ಪಷ್ಟಪಡಿಸಿರಿ.
ಉತ್ತರ:-*ಅಧ್ಯಕ್ಷೀಯ ಸರಕಾರ ಪದ್ಧತಿಯಲ್ಲಿ ಶಾಸಕಾಂಗ ಮತ್ತು
ಕಾರ್ಯಾಂಗಗಳು ನೇರವಾಗಿ ಪರಸ್ಪರರ ಮೇಲೆ ಅವಲಂಬಿಸಿರುವುದಿಲ್ಲ. ಶಾಸಕಾಂಗದ ಎರಡೂ ಸದನಗಳು ಮತ್ತು
ರಾಷ್ಟ್ರಾಧ್ಯಕ್ಷರು ಜನರಿಂದ ಚುನಾಯಿತರಾಗುತ್ತಾರೆ. ರಾಷ್ಟ್ರಾಧ್ಯಕ್ಷರು ಕಾರ್ಯಾಂಗ
ಪ್ರಮುಖರಾಗಿರುತ್ತಾರೆ. ಅವರ ಕೈಯಲ್ಲಿ
ಕಾಯ್ದೆಗಳನ್ನು ಜಾರಿಯಲ್ಲಿ ತರುವುದನ್ನು ಹಿಡಿದು ಇತರ ಅನೇಕ ಅಧಿಕಾರಗಳು ಇರುತ್ತಾರೆ.
*ಅಧ್ಯಕ್ಷೀಯ ಸರಕಾರ ಪದ್ಧತಿಯಲ್ಲಿ ಯೂ ಇಂಥ ಪ್ರಕಾರದ ರಚನೆಯಿದ್ದರೂ
ಕೂಡ ಶಾಸಕಾಂಗ ಮತ್ತು ಕಾರ್ಯಾಂಗಗಳು ಪರಸ್ಪರರ ಮೇಲೆ ನಿಯಂತ್ರಣವನ್ನು ಇಡುತ್ತವೆ. ಪರಸ್ಪರರ
ಮೇಲಿನ ನಿಯಂತ್ರಣೆಯಿಂದ ರಾಜ್ಯಾಡಾಳಿತವು ಜವಾಬ್ದಾರಿಯಿಂದ ಸಾಗುತ್ತದೆ.
ಪ್ರ. 5. ವಿರೋಧಿ ಪಕ್ಷಗಳ ಪಾತ್ರವು ಏಕೆ
ಮಹತ್ವದ್ದಾಗಿರುತ್ತದೆ? ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವನ್ನು
ಬರೆಯಿರಿ.
ಉತ್ತರ:- ಸಂಸತ್ತಿನಲ್ಲಿ ಸಾರ್ವಜನಿಕ ಹಿತದ
ಪ್ರಶ್ನೆಗಳ ಮೇಲೆ ಚರ್ಚೆಯಾಗುತ್ತದೆ. ಈ ಚರ್ಚೆಯಲ್ಲಿ ವಿರೋಧಿ ಪಕ್ಷದ ಸದಸ್ಯರು ಕೂಡ
ಭಾಗವಹಿಸುತ್ತಾರೆ. ಯೋಗ್ಯ ವಿಷಯದಲ್ಲಿ ಸರಕಾರಕ್ಕೆ ಸಹಕಾರ ನೀಡುವುದು,
ಧೋರಣೆಗಳಲ್ಲಿಯ ಇಲ್ಲವೆ ಕಾಯ್ದೆಗಳಲ್ಲಿಯ ದೋಷಗಳನ್ನು ತೋರಿಸಿ ಕೊಡುವುದು, ಅಭ್ಯಾಸಪೂರ್ಣ ರೀತಿಯಿಂದ ಪ್ರಶ್ನೆಗಳನ್ನು ಮಂಡಿಸುವ ಕಾರ್ಯಗಳನ್ನು ವಿರೋಧಿ ಪಕ್ಷಗಳು
ಮಾಡುತ್ತವೆ. ಇದರಿಂದಾಗಿ ಸಂಸತ್ತಿಗೆ ದೋಷರಹಿತ ಕಾಯ್ದೆಗಳನ್ನು ಮಾಡಲು ಸಾಧ್ಯವಾಗುತ್ತದೆ.
ಆದ್ದರಿಂದ ಸಂಸದೀಯ ಸರಕಾರ ಪದ್ಧತಿಯಲ್ಲಿ ಚರ್ಚೆ
ಮತ್ತು ವಿಚಾರ ವಿನಿಮಯಗಳು ಮಹತ್ವದ್ದಾಗಿರುತ್ತವೆ.
2ನೇ ಪಾಠ
ಭಾರತದ ಸಂಸತ್ತು |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ
ಪರ್ಯಾಯವನ್ನು ಆಯ್ಕೆ ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1) .......... ಪದ್ಧತಿಯಿಂದ ಲೋಕಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ
ಮಾಡಿ ಕಳುಹಿಸಲಾಗುತ್ತದೆ.
ಅ) ಭೌಗೋಲಿಕ ಮತಕ್ಷೇತ್ರ ಬ) ಧಾರ್ಮಿಕ ಮತಕ್ಷೇತ್ರ
ಕ)
ಸ್ಥಾನಿಕ ಸ್ವರಾಜ್ಯ ಸಂಸ್ಥೆಯ ಮತಕ್ಷೇತ್ರ ಡ)
ಪ್ರಮಾಣಬದ್ಧ ಪ್ರತಿನಿಧಿತ್ವ
2. ಭಾರತದ ........... ರಾಜ್ಯಸಭೆಯ ಪದಸಿದ್ಧ ಸಭಾಪತಿಯಾಗಿರುತ್ತಾರೆ.
ಅ)
ರಾಷ್ಟ್ರಪತಿಗಳು ಬ) ಉಪ ರಾಷ್ಟ್ರಪತಿಗಳು
ಕ) ಪ್ರಧಾನ
ಮಂತ್ರಿಗಳು ಡ) ಮುಖ್ಯ ನ್ಯಾಯಾಧೀಶರು
ಪ್ರ. 2. ಹುಡುಕಿರಿ ಹಾಗೂ ಬರೆಯಿರಿ.
1. ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನು ಈ ಹೆಸರಿನಿಂದ
ಕರೆಯುತ್ತಾರೆ.ಖಾಸದಾರ.
2. ಕಾಯ್ದೆ ನಿರ್ಮಿತಿಯ ಜವಾಬ್ದಾರಿಯು ಇವರದಾಗಿದೆ. ಶಾಸಕಾಂಗ.
ಪ್ರ. 3. ಕೆಳಗಿನ ವಿಧಾನಗಳನ್ನು ಕಾರಣಸಹಿತ
ಸ್ಪಷ್ಟಪಡಿಸಿರಿ.
1. ರಾಜ್ಯಸಭೆಯು ಶಾಶ್ವತ ಸದನವಾಗಿದೆ.
ಉತ್ತರ:- ರಾಜ್ಯಸಭೆಯು ಎಂದೂ ಒಮ್ಮೆಲೇ ವಿಸರ್ಜನೆಯಾಗುವುದಿಲ್ಲ.
ಅಂದರೆ ಪ್ರತಿ ಎರಡು ವರ್ಷಕ್ಕೊಮ್ಮೆ ಆರು ವರ್ಷದ ಕಾಲಾವಧಿಯನ್ನು ಪೂರ್ಣ ಮಾಡಿದ ರಾಜ್ಯಸಭೆಯ 1/3
ರಷ್ಟು ಸದಸ್ಯರು ನಿವೃತ್ತರಾಗುತ್ತಾರೆ. ಹಾಗೂ ಅಷ್ಟೇ ಸದಸ್ಯರು ಆಯ್ಕೆಯಾಗುತ್ತಾರೆ. ಹಂತಹಂತವಾಗಿ
ಕೆಲವೇ ಸದಸ್ಯರು ನಿವೃತ್ತರಾಗುವುದರಿಂದ ರಾಜ್ಯಸಭೆಯು ಸತತ ಕಾರ್ಯನಿರತವಾಗಿರುತ್ತದೆ. ಆದ್ದರಿಂದ
ರಾಜ್ಯಸಭೆಗೆ ಶಾಶ್ವತ ಸದನವೆಂದು ಕರೆಯುವರು.
2. ಲೋಕಸಭೆಗೆ ಪ್ರಥಮ ಸದನವೆನ್ನುತ್ತಾರೆ.
ಉತ್ತರ: ಲೋಕಸಭೆಯು ಭಾರತೀಯ ಸಂಸತ್ತಿನ ಕನಿಷ್ಠ ಹಾಗೂ ಪ್ರಥಮ
ಸದಾನವಾಗಿದೆ. ಲೋಕಸಭೆಯ ಚುನಾವಣೆಗಾಗಿ ಭೌಗೋಲಿಕ ಮತಕ್ಷೇತ್ರಗಳನ್ನು ನಿರ್ಮಿಸಲಾಗಿದೆ. ಲೋಕಸಭೆಯ
ಕಾಲಾವಧಿಯು ಐದು ವರ್ಷ ಇರುತ್ತದೆ.
ಪ್ರ.4. ಕೆಳಗಿನ ಪ್ರಶ್ನೆಗಳಿಗೆ 25 ರಿಂದ 30
ಶಬ್ದಗಳಲ್ಲಿ ಉತ್ತರ ಬರೆಯಿರಿ.
1. ಲೋಕಸಭೆಯ ಸದಸ್ಯರ ಆಯ್ಕೆ ಹೇಗೆ ಆಗುತ್ತದೆ?
ಉತ್ತರ:-ಭಾರತೀಯ ಸಂಸತ್ತಿನ ಕನಿಷ್ಠ ಹಾಗೂ ಪ್ರಥಮ ಸದನವೆಂದರೆ
ಲೋಕಸಭೆ. ಲೋಕಸಭೆಯು ಜನರಿಂದ ನೇರವಾಗಿ ಆಯ್ಕೆಯಾಗುವ ಸಂಸತ್ತಿನ ಸದನವಾಗಿದೆ. ಲೋಕಸಭೆಗೆ ಪ್ರಥಮ ಸಭಾಗೃಹ ಎಂದೂ ಕರೆಯುತ್ತಾರೆ.
ಭೌಗೋಲಿಕ ಮತಕ್ಷೇತ್ರಗಳಲ್ಲಿ ಪ್ರತಿ ಐದು ವರ್ಷಗಳಲ್ಲಿ ಸಾರ್ವತ್ರಿಕ ಚುನಾವಣೆಗಳಾಗುತ್ತವೆ.
ಕೆಲವೊಮ್ಮೆ ಐದು ವರ್ಷಗಳ ಕಾಲಾವಧಿ ಪೂರ್ಣವಾಗುವ ಮೊದಲೇ ಲೋಕಸಭೆಯು ವಿಸರ್ಜಿತವಾದ ಸಮಯದಲ್ಲಿ
ಮಧ್ಯಾವಧಿ ಚುನಾವಣೆಗಳು ಆಗುತ್ತವೆ.
ಲೋಕಸಭೆಯು ದೇಶದಲ್ಲಿಯ ಜನತೆಯ ಪ್ರತಿನಿಧಿತ್ವ ಮಾಡುವ ಸದನವಾಗಿದೆ. ಲೋಕಸಭೆಯ ಸದಸ್ಯರ ಸಂಖ್ಯೆಯು ಸಂವಿಧಾನಕ್ಕನುಸಾರವಾಗಿ ಗರಿಷ್ಠ 552 ಇರುತ್ತದೆ. ನಮ್ಮ ದೇಶದಲ್ಲಿಯ ಸಮಾಜದ ಎಲ್ಲ ಘಟಕಗಳಿಗೆ ಪ್ರತಿನಿಧಿತ್ವ ದೊರೆಯಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಾತಿಯನ್ನು ನೀಡಲಾಗಿದೆ. ಅದರಂತೆ ಆಂಗ್ಲೊ ಇಂಡಿಯನ್ ಸಮಾಜಕ್ಕೆ ಸಾಕಷ್ಟು ಪ್ರತಿನಿಧಿತ್ವ ದೊರೆತಿರದಿದ್ದರೆ ಆ ಸಮಾಜದ ಇಬ್ಬರು ಪ್ರತಿನಿಧಿಗಳನ್ನು ರಾಷ್ಟ್ರಪತಿಗಳು ನೇಮಕ ಮಾಡಬಹುದು. ಈ ರೀತಿಯಲ್ಲಿ ಲೋಕಸಭೆಯ ಸದಸ್ಯರ ಆಯ್ಕೆ ಜನರಿಂದ ನೇರವಾಗಿ ಚುನಾವಣೆ ಮುಲಕ ಆಗುತ್ತದೆ
2. ಲೋಕಸಭೆಯ ಅಧ್ಯಕ್ಷರ ಕಾರ್ಯಗಳನ್ನು ಸ್ಪಷ್ಟಪಡಿಸಿರಿ.
ಉತ್ತರ:-ಲೋಕಸಭೆಯ ಕಾರ್ಯಕಲಾಪಗಳು ಲೋಕಸಭಾ ಅಧ್ಯಕ್ಷನ ಮಾರ್ಗದರ್ಶನಕ್ಕನುಸಾರವಾಗಿ ಹಾಗೂ ಅವನ ನಿಯಂತ್ರಣದಲ್ಲಿ ನಡೆಯುತ್ತದೆ. ಸಂಪೂರ್ಣ ಸದನದ ಕಾರ್ಯಕಲಾಪಗಳನ್ನು ಅತ್ಯಂತ ನಿಷ್ಪಕ್ಷಪಾತವಾಗಿ ನಡೆಸಬೇಕಾಗುತ್ತದೆ. ಜನತೆಯ ಪ್ರತಿನಿಧಿ ಎಂದು ಲೋಕಸಭೆಯ ಸದಸ್ಯರಿಗೆ ಕೆಲವು ಹಕ್ಕುಗಳು ಮತ್ತು ವಿಶೇಷಾಧಿಕಾರಗಳು ಇರುತ್ತವೆ. ಅವುಗಳ ರಕ್ಷಣೆಯನ್ನು ಅಧ್ಯಕ್ಷರು ಮಾಡುತ್ತಾರೆ. ಸದನದ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸುವುದು, ಸದನದ ಪ್ರತಿಷ್ಠೆಯನ್ನು ಕಾಪಾಡುವುದು. ಕಾರ್ಯಕಲಾಪಗಳ ಬಗೆಗಿನ ನಿಯಮಗಳ ಅರ್ಥವಿವರಣೆ ಮಾಡಿ ಅದಕ್ಕನುಸಾರವವಾಗಿ ಅವುಗಳನ್ನು ನಡೆಸುವುದು ಇತ್ಯಾದಿ ಕಾರ್ಯಗಳು ಅಧ್ಯಕ್ಷರು ಮಾಡುತ್ತಾರೆ.
ಪ್ರ.5. ಕಾಯ್ದೆ ನಿರ್ಮಿತಿಯ ಪ್ರಕ್ರಿಯೆಯಲ್ಲಿಯ
ಹಂತಗಳನ್ನು ಸ್ಪಷ್ಟಪಡಿಸಿರಿ.
ಉತ್ತರ:-ನಮ್ಮ ದೇಶದಲ್ಲಿ ಸಂಸತ್ತಿಗೆ ಕಾಯ್ದೆ ಮಾಡುವ ಅಧಿಕಾರವಿದೆ.
ಕಾಯ್ದೆಯ ಕಚ್ಚಾ ಮಸೂದೆಯನ್ನು ತಯಾರಿಸಿ ಅದನ್ನು ಕಾಯ್ದೆಯಲ್ಲಿ ರೂಪಾಂತರವಾಗಬೇಕಾದರೆ ಅದು
ಕೆಳಗಿನ ಪ್ರಕ್ರಿಯೆಗಳನ್ನು ದಾಟಬೇಕಾಗುತ್ತದೆ.
ಪ್ರಥಮ ವಾಚನ: ಸಂಬಂಧಿತ
ಇಲಾಖೆಯ ಮಂತ್ರಿ ಇಲ್ಲವೇ ಸಂಸತ್ತಿನ ಸದಶ್ಯಾನು ಮಸೂದೆಯನ್ನು ಸಾದರಪಡಿಸುತ್ತಾನೆ. ಅದರ ಸ್ವರೂಪ,
ಉದ್ದೇಶ ಸ್ವಲ್ಪದರಲ್ಲಿ ಸ್ಪಷ್ಟಪಡಿಸುತ್ತಾನೆ. ಇದಕ್ಕೆ ಮಸೂದೆಯ ‘ಪ್ರಥಮ
ವಾಚನ’ ಎನ್ನುತ್ತಾರೆ.
ದ್ವಿತೀಯ ವಾಚನ:- ದ್ವಿತೀಯ ವಾಚನದ ಎರಡು ಹಂತಗಳಿರುತ್ತವೆ.
ಪ್ರಥಮ ಹಂತದಲ್ಲಿ ಮಸೂದೆಯ ಉದ್ದೇಶಗಳ ಮೇಲೆ ಚರ್ಚೆಯಾಗುತ್ತದೆ. ಸದಸ್ಯರು ಮಸೂದೆಯನ್ನು ಕುರಿತು
ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಮಸೂದೆಯ ಸಮರ್ಥಕರು ಮಸೂದೆಯ ಪರವಾಗಿ ತಮ್ಮ
ವಿಚಾರಗಳನ್ನು ವ್ಯಕ್ತಪಡಿಸಿದರೆ ವಿರೋಧಿ ಪಕ್ಷದವರು ಮಸೂದೆಯಲ್ಲಿಯ ನ್ಯೂನತೆಮತ್ತು ದೋಷಗಳನ್ನು
ತೋರಿಸುತ್ತಾರೆ. ತಿದ್ದುಪಡಿ ಸೂಚಿಸುವ ಒಂದು ಸಮಿತಿ ಮಾಡಿ ಮಸೂದೆಯನ್ನು ಸಮಿತಿಗೆ
ಕಳುಹಿಸಲಾಗುತ್ತದೆ. ಮಸೂದೆಯು ದೋಷರಹಿತ ವಾಗಬೇಕೆಂದು ತಿದ್ದುಪಡಿಮಾಡಿದ ಮೇಲೆ ಸಮಿತಿ
ಮಸೂದೆಯನ್ನು ಸದನಕ್ಕೆ ಕಳುಹಿಸುತ್ತದೆ.
ಆ ನಂತರ
ದ್ವಿತೀಯ ವಾಚನದ ದ್ವಿತೀಯ ಹಂತವು ಆರಂಭವಾಗುತ್ತದೆ. ಈ ಹಂತದಲ್ಲಿ ಮಸೂದೆಯನ್ನು ಕುರಿತು ಕಲಮುಗಳಿನುಸಾರ
ಚರ್ಚೆಯಾಗುತ್ತದೆ. ಸದಸ್ಯರು ತಿದ್ದುಪಡಿ ಸೂಚಿಸಬಹುದು. ಆ ನಂತರ ಸದನದಲ್ಲಿ ಅದರ ಮೇಲೆ ಮತದಾನ
ತೆಗೆದುಕೊಳ್ಳಲಾಗುತ್ತದೆ.
ತೃತೀಯ ವಾಚನ:- ತೃತೀಯ ವಾಚನದ ಸಮಯದಲ್ಲಿ ಮಸೂದೆಯ ಮೇಲೆ
ಪುನ: ಸ್ವಲ್ಪದರಲ್ಲಿ ಚರ್ಚೆಯಾಗುತ್ತದೆ. ಮಸೂದೆಯನ್ನು ಮಂಜೂರು ಮಾಡುವ ಠರಾವಿನ ಮೇಲೆ
ಮತದಾನವಾಗುತ್ತದೆ. ಮಸೂದೆಗೆ ಅವಶ್ಯಕ ಬಹುಮತದಿಂದ ಮಂಜೂರಿ ದೊರಕಿದರೆ ಸದನವು ಮಸೂದೆಯನ್ನು
ಸಮ್ಮತಿಸಿತು ಎಂದು ತಿಳಿಯಲಾಗುತ್ತದೆ.
ಸಂಸತ್ತಿನ
ಎರಡನೆಯ ಸದನದಲ್ಲಿಯೂ ಮಸೂದೆಯನ್ನು ಮೇಲಿನ ಎಲ್ಲ ಪ್ರಕ್ರಿಯೆಗಳನ್ನು ದಾಟುತ್ತದೆ. ಎರಡೂ ಸದನಗಳು
ಮಸೂದೆಗೆ ಸಮ್ಮತಿ ನೀಡಿದ ನಂತರ ಅದನ್ನು ರಾಷ್ಟ್ರಪತಿಗಳ ಸಮ್ಮತಿಗಾಗಿ ಕಳುಹಿಸಲಾಗುತ್ತದೆ.
ಕೇಂದ್ರದಲ್ಲಿ
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆಯನ್ನು ಕುರಿತು ಭಿನ್ನಾಭಿಪ್ರಾಯ ಉಂಟಾದರೆ ಎರಡೂ ಸದನಗಳ
ಸಂಯುಕ್ತ ಅಧಿವೇಶನದಲ್ಲಿ ವಿಚಾರಣೆ ಮಾಡಲಾಗುತ್ತದೆ.
ರಾಷ್ಟ್ರಪತಿಗಳ
ಸಮ್ಮತಿಯ ನಂತರ ಮಸೂದೆಯು ಕಾಯ್ದೆಯಾಗಿ ರೂಪಾಂತರ ಹೊಂದುತ್ತದೆ. ಮತ್ತು ಕಾಯ್ದೆ ನಿರ್ಮಿತಿ
ಆಗುತ್ತದೆ.
3ನೇ ಪಾಠ
ಕೇಂದ್ರೀಯ ಕಾರ್ಯಾಂಗ |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ
ಪರ್ಯಾಯವನ್ನು ಆಯ್ಕೆ ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ಭಾರತದಲ್ಲಿ ಕಾರ್ಯಾಂಗದ ಅಧಿಕಾರವು....... ಗಳ ಕೈಯಲ್ಲಿ
ಇರುತ್ತದೆ.
(ರಾಷ್ಟ್ರಪತಿ,
ಪ್ರಧಾನಮಂತ್ರಿ, ಸಭಾಪತಿ)
2. ರಾಷ್ಟ್ರಪತಿಗಳ ಅಧಿಕಾರಾವಧಿ...... ವರ್ಷ ಇರುತ್ತದೆ. (ಮೂರು,
ನಾಲ್ಕು, ಐದು)
3. ಮಂತ್ರಿ ಮಂಡಳದ ನೇತೃತ್ವವನ್ನು ……. ಮಾಡುತ್ತಾರೆ.
ಪ್ರ. 2. ಗುರುತಿಸಿರಿ ಮತ್ತು ಬರೆಯಿರಿ.
1. ರಾಷ್ಟ್ರಪತಿ, ಪ್ರಧಾನಮಂತ್ರಿ ,
ಮಂತ್ರಿಮಂಡಳ- ಇವು ಯಾವ ಅಂಗದಲ್ಲಿ ಸಮಾವೇಶವಾಗುತ್ತವೆಯೋ ಆ ಅಂಗದ ಹೆಸರು-ಕಾರ್ಯಾಂಗ
2. ಅಧಿವೇಶನ ಕಾಲದಲ್ಲಿ ಮಧ್ಯಾಹ್ನ 12 ರ ಸಮಯವು ಈ ಹೆಸರಿನಿಂದ
ಗುರುತಿಸಲ್ಪಡುತ್ತದೆ. – ಶೂನ್ಯ ಪ್ರಹರ.
ಪ್ರ. 3 ಕೆಳಗಿನ ಕಲ್ಪನೆಗಳನ್ನು ನಿಮ್ಮ ಶಬ್ದಗಳಲ್ಲಿ
ಬರೆಯಿರಿ.
1) ಮಹಾಭಿಯೋಗ ಪ್ರಕ್ರಿಯೆ:
2) ಅವಿಶ್ವಾಸದ ಗೊತ್ತುವಳಿ :- ಮಂತ್ರಿಮಂಡಲದ ಮೇಲೆ
ನಿಯಂತ್ರಣವನ್ನಿಡುವ ಒಂದು ಅತ್ಯಂತ ಪ್ರಭಾವಶಾಲಿ ಅಸ್ತ್ರವಾಗಿದೆ. ಲೋಕಸಭೆಯಲ್ಲಿ ಎಲ್ಲಿಯವರೆಗೆ
ಬಹುಮತವಿರುತ್ತದೋ ಅಲ್ಲಿಯ ವರೆಗೆ ಸರಕಾರವು ಕಾರ್ಯನಿರ್ವಹಿಸುವುದು. ಈ ಬಹುಮತವನ್ನು ಸಂಸತ್ತಿನ
ಸದಸ್ಯರು ಹಿಂತೆಗೆದುಕೊಂಡರೆ ಸರಕಾರ ಅಥವಾ ಮಂತ್ರಿಮಂಡಲ ಅಧಿಕಾರದಲ್ಲಿ ಉಳಿಯುವುದಿಲ್ಲ.
3) ಜಂಬೋ ಮಂತ್ರಿಮಂಡಳ :- ಜಂಬೊ ಮಂತ್ರಿಮಂಡಲ ಅಂದರೆ ತುಂಬಾ ದೊಡ್ಡ
ಮಂತ್ರಿಮಂಡಲ.
ಪ್ರ.4. ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
1. ಮಂತ್ರಿಮಂಡಳದ ಕಾರ್ಯವನ್ನು ಸ್ಪಷ್ಟಪಡಿಸಿರಿ.
ಉತ್ತರ:- 1) ಸಂಸದೀಯ ಸರಕಾರ ಪದ್ಧತಿಯಲ್ಲಿ ಮಂತ್ರಿಮಂಡಲವು ಕಾಯ್ದೆ ನಿರ್ಮಿತಿಯ ಕಾರ್ಯ ಮಾಡುತ್ತದೆ.
ಅದರ ಕರಡು ಪ್ರತಿಯನ್ನು ತಯಾರಿಸಿ ಅದರ ಮೇಲೆ ಚರ್ಚೆ ಮಾಡುತ್ತದೆ ಹಾಗೂ ಸಂಸತ್ತಿನಲ್ಲಿ
ಮಂಡಿಸುತ್ತದೆ.
2) ಶಿಕ್ಷಣ,
ಕೃಷಿ, ಕೈಗಾರಿಕೆ, ಆರೋಗ್ಯ, ವಿದೇಶ ವ್ಯವಹಾರಗಳಂತಹ ಅನೇಕ ವಿಷಯಗಳ ಕುರಿತು ಮಂತ್ರಿಮಂಡಲವು ಒಂದು ನಿಶ್ಚಿತ
ಧೋರಣೆಯನ್ನು ನಿರ್ಧರಿಸಬೇಕಾಗುತ್ತದೆ. ಈ ಧೋರಣೆಯ ಬಗೆಗೆ ಸಂಸತ್ತಿನಲ್ಲಿ ವಿಶ್ವಾಸ
ಮಡೆಯಬೇಕಾಗುತ್ತದೆ.
3) ಧೋರಣೆಗಳನ್ನು
ಜಾರಿಗೊಳಿಸಿವುದು ಮುಖ್ಯ ಜವಾಬ್ದಾರಿಯಾಗಿರುತ್ತದೆ. ಧೋರಣೆಗಳಿಗೆ ಇಲ್ಲವೆ ಮಸೂದೆಗಳಿಗೆ ಸಂಸತ್ತು
ಮಾನ್ಯತೆ ನೀಡಿದ ನಂತರ ಮಂತ್ರಿಮಂಡಲವು ಅವುಗಳನ್ನು ಜಾರಿಯಲ್ಲಿ ತರುತ್ತದೆ.
2. ಸಂಸತ್ತು ಮಂತ್ರಿಮಂಡಳದ ಮೇಲೆ ಹೇಗೆ ನಿಯಂತ್ರಣವನ್ನು ಇಡುತ್ತದೆ?
ಉತ್ತರ:- ಸಂಸದೀಯ ಸರಕಾರ ಪದ್ಧತಿಯಲ್ಲಿ ಮಂತ್ರಿಮಂಡಲದ ಮೇಲೆ ಸಂಸತ್ತು ನಿಯಂತ್ರಣೆ
ಇಡುತ್ತದೆ. ಈ ನಿಯಂತ್ರಣೆ ಇಡುವ ಮಾರ್ಗಗಳು ಕೆಳಗಿನಂತಿವೆ:
1)
ಚರ್ಚೆ ಮತ್ತು ವಿಚಾರ ವಿನಿಮಯ:ಕಾಯ್ದೆ ನಿರ್ಮಿತಿಯ ಕಾಲದಲ್ಲಿ ಸಂಸತ್ತಿನ ಸದಸ್ಯರು ಚರ್ಚೆ
ಮತ್ತು ವಿಚಾರ ವಿನಿಯಮ ಮಾಡಿ ಮಂತ್ರಿಮಂಡಲಕ್ಕೆ ಧೋರಣೆಯಲ್ಲಿಯ ಅಥವಾ ಕಾಯ್ದೆಗಳಲ್ಲಿಯ ಕೊರತೆಗಳನ್ನು
ತೋರಿಸುತ್ತಾರೆ. ಕಾಯ್ದೆ ದೋಷರಹಿತ ವಾಗುವ ದೃಷ್ಟಿಯಿಂದ ಈ ಚರ್ಚೆ ತುಂಬಾ ಮುಖ್ಯವಾಗಿದೆ.
2)
ಪ್ರಶ್ನೋತ್ತರಗಳು:ಸಂಸತ್ತಿನ ಅಧಿವೇಶನ ನಡೆದಾಗ ಕಾರ್ಯಕಲಾಪಗಳ ಆರಂಭವು ಸಂಸತ್
ಸದಸ್ಯರು ಕೇಳಿದ ಪ್ರಶ್ನೆಗಳಿಂದ ಆಗುತ್ತದೆ. ಈ
ಪ್ರಶ್ನೆಗಳಿಗೆ ಸಂಬಂಧಿಸಿದ ಮಂತ್ರಿಗಳಿಗೆ ಸಮಾಧಾನಕರಕ ಉತ್ತರ ಕೊಡಬೇಕಾಗುತ್ತದೆ. ಈ ಸಮಯದಲ್ಲಿ
ಸರಕಾರವನ್ನು ಟೀಕಿಸುವುದು, ತಮ್ಮ ವಿವಿಧ ಸಮಸ್ಯೆಗಳನ್ನು ಕುರಿತು
ಪ್ರಶ್ನೆಗಳನ್ನು ಮಂಡಿಸಲಾಗುತ್ತದೆ. ತಮ್ಮ ನಿಷೇಧವನ್ನು ವ್ಯಕ್ತಪಡಿಸಲು ಕೆಲವೊಮ್ಮೆ ಸದಸ್ಯರು
ಸಭಾತ್ಯಾಗ ಮಾಡುತ್ತಾರೆ. ಇಲ್ಲವೇ ಘೋಷಣೆಗಳನ್ನು ಕೂಗುತ್ತ ಸಭಾಗೃಹದ ಮಧ್ಯಭಾಗದಲ್ಲಿ
ಸೇರುತ್ತಾರೆ.
3)
ಶೂನ್ಯಪ್ರಹಾರ:ಅಧಿವೇಶನ ಕಾಲದಲ್ಲಿ ಮಧ್ಯಾಹ್ನ 12ರ ಸಮಯವನ್ನು ಶೂನ್ಯ ಪ್ರಹರವೆಂದು
ಗುರುತಿಸಲಾಗುತ್ತದೆ.ಈ ಸಮಯದಲ್ಲಿ ಸಾರ್ವಜನಿಕ ದೃಷ್ಟಿಯಿಂದ ಮಹತ್ವದ ಯಾವುದೇ ಪ್ರಶ್ನೆಗಳನ್ನು
ಕುರಿತು ಚರ್ಚೆ ಮಾಡಲಾಗುತ್ತದೆ.
4)
ಅವಿಶ್ವಾಸದ ಗೊತ್ತುವಳಿ:ಇದು ಮಂತ್ರಿಮಂಡಲದ ಮೇಲೆ ನಿಯಂತ್ರನೆಯನ್ನಿಡುವ ಅತ್ಯಂತ
ಪ್ರಭಾವಶಾಲಿ ಮಾರ್ಗವಾಗಿದೆ. ಲೋಕಸಭೆಯಲ್ಲಿ ಎಲ್ಲಿಯವರೆಗೆ ಬಹುಮತವಿರುತ್ತದೋ ಅಲ್ಲಿಯವರೆಗೆ
ಸರಕಾರ ಕಾರ್ಯ ನಿರ್ವಹಿಸಬಹುದು. ಸಂಸತ್ತಿನ ಸದಸ್ಯರು ಬಹುಮತವನ್ನು ಹಿಂತೆಗೆದುಕೊಂಡರೆ ಸರಕಾರವು
ಅಥವಾ ಮಂತ್ರಿಮಂಡಲವು ಅಧಿಕಾರದಲ್ಲಿ ಉಳಿಯಲಾರದು. ಮಂತ್ರಿಮಂಡಲದ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಹೇಳಿ
ಸಂಸತ್ತಿನ ಸದಸ್ಯರು ಅವಿಶ್ವಾಸದ ಗೊತ್ತುವಳಿಯನ್ನು ಮಂಡಿಸಬಲ್ಲರು. ಅದು ಬಹುಮತದಿಂದ ಮಂಜೂರಾದರೆ
ಮಂತ್ರಿಮಂಡಲ ರಾಜೀನಾಮೆ ನೀಡಬೇಕಾಗುತ್ತದೆ.
ಪ್ರ. 5. ಭಾರತದ ರಾಷ್ಟ್ರಪತಿಯವರ ಕಾರ್ಯಗಳ ಬಗ್ಗೆ ಬರೆಯಿರಿ.
ಉತ್ತರ:-ಸಂವಿಧಾನವು ರಾಷ್ಟ್ರಪತಿಗಳಿಗೆ ಅನೇಕ ಕಾರ್ಯಗಳನ್ನು ನೀಡಿದೆ. ಅವುಗಳಲ್ಲಿ ಕೆಲವು
ಕಾರ್ಯಗಳು ಕೆಳಗಿನಂತಿವೆ.
(1) ಸಂಸತ್ತಿನ ಅಧಿವೇಶನಗಳನ್ನು ಕರೆಯುವುದು, ಸ್ಥಗಿತಗೊಳಿಸುವುದು, ಸಂಸತ್ತಿಗೆ
ಸಂದೇಶಗಳನ್ನು ಕಳಿಸುವುದು, ಲೋಕಸಭೆಯನ್ನು ಅದರ ಕಾಲಾವಧಿಯ ನಂತರ ಇಲ್ಲವೆ ಕಾಲಾವಧಿಗಿಂತ ಮೊದಲು ವಿಸರ್ಜಿತಗೊಳಿಸುವುದು. ಮುಂತಾದ
ಎಲ್ಲ ಅಧಿಕಾರಗಳು ರಾಷ್ಟ್ರಪತಿಗಳಿಗೆ ಇರುತ್ತವೆ.
(2) ಲೋಕಸಭೆ ಮತ್ತು
ರಾಜ್ಯಸಭೆಗಳು ಪಾಸು ಮಾಡಿದ ಮಸೂದೆಗಳಿಗೆ ರಾಷ್ಟ್ರಪತಿಗಳ ಅಂಕಿತ ಅವಶ್ಯಕವಾಗಿರುತ್ತದೆ. ಅವರ ಅಂಕಿತವಿಲ್ಲದೆ
ಮಸೂದೆಯು ಕಾಯ್ದೆ ಆಗಲಾರದು.
(3) ಪ್ರಧಾನ
ಮಂತ್ರಿಗಳ ನೇಮಕಾತಿಯನ್ನು ರಾಷ್ಟ್ರಪತಿಗಳು ಮಾಡುತ್ತಾರೆ. ಹಾಗೂ ಅವರು ಸೂಚಿಸಿದ ವ್ಯಕ್ತಿಗಳನ್ನು
ಮಂತ್ರಿ ಸ್ಥಾನಕ್ಕೆ ನೇಮಕವನ್ನು ಮಾಡುತ್ತಾರೆ.
(4) ಸರ್ವೋಚ್ಚ
ನ್ಯಾಯಾಲಯದ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯನ್ನು ರಾಷ್ಟ್ರಪತಿಗಳು ಮಾಡುತ್ತಾರೆ. ಅದೇ
ರೀತಿ ಸರ್ವ ರಾಜ್ಯಗಳ ರಾಜ್ಯಪಾಲರು, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಅನ್ಯ ಮಹತ್ವದ ಸ್ಥಾನದಲ್ಲಿಯ
ವ್ಯಕ್ತಿಗಳ ನೇಮಕವನ್ನು ರಾಷ್ಟ್ರಪತಿಗಳು ಮಾಡುತ್ತಾರೆ.
(5) ರಾಷ್ಟ್ರಪತಿಗಳು
ಸಂರಕ್ಷಣ ದಳಗಳ ಮಹಾದಂಡನಾಯಕರಾಗಿರುತ್ತಾರೆ. ಯುದ್ಧ ಮತ್ತು ಶಾಂತತೆ ಇವುಗಳನ್ನು ಕುರಿತು ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ.
6) ರಾಷ್ಟ್ರಪತಿಗಳಿಗೆ ಕೆಲವು ನ್ಯಾಯಾಂಗ ವಿಷಯದ ಅಧಿಕಾರಗಳೂ
ಇರುತ್ತವೆ. ಉದಾ., ಯಾವುದೊಬ್ಬ
ವ್ಯಕ್ತಿಯ ಶಿಕ್ಷೆಯನ್ನು ಕಡಿಮೆ ಮಾಡುವುದು,
ಶಿಕ್ಷೆಯ ತೀವ್ರತೆಯನ್ನು ಕಡಿಮೆ ಮಾಡುವುದು ಇಲ್ಲವೆ ಅಪವಾದಾತ್ಮಕ ಪರಿಸ್ಥಿತಿಯಲ್ಲಿ ಮಾನವತೆಯ
ದೃಷ್ಟಿಕೋನದಿಂದ ಶಿಕ್ಷೆಯನ್ನು ಕಡಿಮೆ ಮಾಡುವ ಅಥವಾ ರದ್ದು ಪಡಿಸುವ ಅಧಿಕಾರ
ರಾಷ್ಟ್ರಪತಿಗಳಿಗಿದೆ.
(7) ದೇಶದಲ್ಲಿಸಂಕಟಕಾಲದ ನಿರ್ಮಾಣವಾದರೆ ತುರ್ತು ಪರಿಸ್ಥಿತಿಯನ್ನು ಜಾಹೀರುಪಡಿಸುವ ಅಧಿಕಾರವು ರಾಷ್ಟ್ರಪತಿಗಳಿಗಿದೆ. ಸಂವಿಧಾನದಲ್ಲಿ ಮೂರು
ಪ್ರಕಾರದ ತುರ್ತು ಪರಿಸ್ಥಿತಿಯನ್ನು ಕೊಡಲಾಗಿದೆ. (1) ರಾಷ್ಟ್ರೀಯ ತುರ್ತು ಪರಿಸ್ಥಿತಿ (2) ಘಟಕ
ರಾಜ್ಯಗಳಲ್ಲಿಯ ತುರ್ತು ಪರಿಸ್ಥಿತಿ ಇಲ್ಲವೆ ರಾಷ್ಟ್ರಪತಿ ಆಡಳಿತ (3) ಆರ್ಥಿಕ ತುರ್ತು
ಪರಿಸ್ಥಿತಿ.
ರಾಷ್ಟ್ರಪತಿಗಳ ಅನುಪಸ್ಥಿತಿಯಲ್ಲಿ ಅವರ ಕಾರ್ಯಗಳನ್ನು ಉಪರಾಷ್ಟ್ರಪತಿಗಳು
ನಿರ್ವಹಿಸುತ್ತಾರೆ. ಉಪರಾಷ್ಟ್ರಪತಿಗಳ ಆಯ್ಕೆಯನ್ನು ಸಂಸತ್ತಿನ ಉಭಯ ಸದನಗಳ ಸದಸ್ಯರು
ಮಾಡುತ್ತಾರೆ.
4ನೇ ಪಾಠ
ಭಾರತದಲ್ಲಿಯ ನ್ಯಾಯಾಂಗ
ವ್ಯವಸ್ಥೆ |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ
ಪರ್ಯಾಯವನ್ನು ಆಯ್ಕೆ ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ….. ಕಾಯ್ದೆಗಳನ್ನು ನಿರ್ಮಿಸುತ್ತದೆ. ಅ) ಶಾಸಕಾಂಗ ಬ)
ಮಂತ್ರಿಮಂಡಳ ಕ) ನ್ಯಾಯಾಂಗ ಡ) ಕಾರ್ಯಾಂಗವು
ಉತ್ತರ:- ಅ) ಶಾಸಕಾಂಗ
2. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯನ್ನು .......
ಮಾಡುತ್ತಾರೆ.
ಅ) ಪ್ರಧಾನ
ಮಂತ್ರಿಗಳು ಬ) ರಾಷ್ಟ್ರಪತಿಗಳು ಕ) ಗೃಹಮಂತ್ರಿಗಳು ಡ)
ಮುಖ್ಯ ನ್ಯಾಯಾಧೀಶರು
ಉತ್ತರ:- ಬ) ರಾಷ್ಟ್ರಪತಿಗಳು
ಪ್ರ.2. ಕಲ್ಪನೆಗಳನ್ನು ಸ್ಪಷ್ಟಪಡಿಸಿರಿ.
1. ನ್ಯಾಯಾಂಗ ಮರುಪರಿಶೀಲನೆ:- ಸಂವಿಧಾನದ ಸಂರಕ್ಷಣೆ
ಮಾಡುವುದು ಸರ್ವೋಚ್ಚ ನ್ಯಾಯಾಲಯದ ಮತ್ತೊಂದು ಮಹತ್ವದ ಜವಾಬ್ದಾರಿಯಾಗಿದೆ. ಸಂವಿಧಾನವು ದೇಶದ
ಮೂಲಭೂತ ಕಾನೂನಾಗಿರುತ್ತದೆ. ಈ ಕಾನೂನಿನ
ಭಂಗವಾಹುವಂತಹ ಅಥವಾ ಅದರ ವಿರೋಧಿ ಕಾಯ್ದೆಯನ್ನು ಸಂಸತ್ತಿಗೆ ಮಾಡಲು ಬರುವುದಿಲ್ಲ. ಕಾರ್ಯಾಂಗದ
ಪ್ರತಿಯೊಂದು ಧೋರಣೆ ಹಾಗೂ ಕೃತಿಯು ಕೂಡ ಸಂವಿಧಾನದ ಜೊತೆ ಸುಸಂಗತವಾಗಿರಬೇಕಾಗುತ್ತದೆ. ಸಂಸತ್ತಿನ
ಯಾವುದೊಂದು ಕಾನೂನು ಅಥವಾ ಕಾರ್ಯಾಂಗದ ಯಾವುದೊಂದು ಕೃತಿಯು ಸಂವಿಧಾನದಲ್ಲಿಯ ನಿಯಮಗಳನ್ನು
ಉಲ್ಲಂಘಿಸುತ್ತಿದ್ದರೆ ಆ ಕಾನೂನನ್ನು ಅಥವಾ ಕೃತಿಯನ್ನು ನ್ಯಾಯಾಲಯವು ಕಾನೂನುಬಾಹಿರವೆಂದು
ನಿರ್ಧರಿಸಿ ಅದನ್ನು ರದ್ದುಪಡಿಸುತ್ತದೆ. ನ್ಯಾಯಾಲಯದ ಈ ಅಧಿಕಾರಕ್ಕೆ ನ್ಯಾಯಾಂಗ ಮರುಪರಿಶೀಲನೆ
ಅಧಿಕಾರ ಎನ್ನುತ್ತಾರೆ.
2. ಜನಹಿತಾರ್ಥ ಮನವಿ:-ಜನಹಿತಾರ್ಥ ಮನವಿ
ಎಂದರೆ ಸಾರ್ವಜನಿಕ ಪ್ರಶ್ನೆಗಳನ್ನು ಬಿಡಿಸುವ ಸಲುವಾಗಿ ಪ್ರಯತ್ನಶೀಲವಿರುವ ನಾಗರಿಕರು,
ಸಾಮಾಜಿಕ ಸಂಘಟನೆಗಳು ಇಲ್ಲವೇ ಸರಕಾರೇತರ ಸಂಘಟನೆಗಳು ಸಂಪೂರ್ಣ ಜನತೆಯ ವತಿಯಿಂದ ನ್ಯಾಯಾಲಯದಲ್ಲಿ
ದಾಖಲು ಮಾಡಿದ ಮನವಿಗಳ ಮೇಲೆ ನ್ಯಾಯಾಲಯವು ವಿಚಾರ ಮಾಡಿ ತೀರ್ಪು\
ಕೊಡುತ್ತದೆ.
3. ದಿವಾಣಿ ಮತ್ತು ಫೌಜದಾರಿ ಕಾಯ್ದೆ:- ದಿವಾಣಿ
ಕಾಯ್ದೆ ಮತ್ತು ಫೌಜದಾರಿ ಕಾಯ್ದೆ ಇವು ಭಾರತದಲ್ಲಿಯ ಕಾಯ್ದೆ ಪದ್ಧತಿಯ ಎರಡು ಶಾಖೆಗಳಿವೆ.
ದಿವಾಣಿ ಕಾಯ್ದೆ : ವ್ಯಕ್ತಿಯ ಹಕ್ಕುಗಳ
ಮೇಲೆ ಗಂಡಾಂತರ ತರುವ ತಂಟೆಗಳು ಈ ಕಾಯ್ದೆಯ ಕಕ್ಷೆಯಲ್ಲಿ ಬರುತ್ತವೆ. ಉದಾ. ಭೂಮಿಗೆ ಸಂಬಂಧಿಸಿದ
ತಂಟೆಗಳು, ಬಾಡಿಗೆ ಕರಾರು, ವಿವಾಹ ವಿಚ್ಛೇದನೆ, ಇತ್ಯಾದಿ ಸಂಬಂಧಿತ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ನಂತರ ನ್ಯಾಯಾಲಯವು ಅದರ ಮೇಲೆ
ತೀರ್ಪು ನೀಡುತ್ತದೆ.
ಫೌಜದಾರಿ ಕಾಯ್ದೆ: ಗಂಭೀರ ಸ್ವರೂಪದ
ಅಪರಾಧಗಳನ್ನು ಈ ಕಾಯ್ದೆಯ ಆಧಾರದಿಂದ ಬಗೆಹರಿಸಲಾಗುತ್ತದೆ. ಉದಾ. ಕಳ್ಳತನ,
ಮನೆಗೆ ಕನ್ನ ಹಾಕುವುದು, ವರದಕ್ಷಿಣೆಗಾಗಿ ಕಾಡುವುದು, ಕೊಲೆ, ಗಳಂಥ ವಿಷಯದಲ್ಲಿ ಪ್ರಥಮ ಪೊಲೀಸರಲ್ಲಿ ಪ್ರಥಮ
ಮಾಹಿತಿಯ ವರದಿ(F.I.R.) ದಾಖಲು ಮಾಡಲಾಗುತ್ತದೆ. ಪೊಲೀಸರು ಅದರ ತನಿಖೆ
ಮಾಡುತ್ತಾರೆ. ಹಾಗೂ ಕೋರ್ಟಿನಲ್ಲಿ ಖಟ್ಲೆ ದಾಖಲಾಗುತ್ತದೆ. ಅಪರಾಧವು ಸಿದ್ಧವಾದರೆ ಶಿಕ್ಷೆಯ
ಸ್ವರೂಪ ಕೂಡ ಗಂಭೀರವಾಗಿರುತ್ತದೆ.
4. ನ್ಯಾಯಾಲಯದ ಕ್ರಿಯಾಶೀಲತೆ : ತಂಟೆಗಳು ಹೋದರೆ
ಮಾತ್ರ ನ್ಯಾಯಾಲಯ ಅವುಗಳನ್ನು ಬಗೆಹರಿಸುವ ಪ್ರಕ್ರಿಯೆ ಪರಂಪರಾಗತವಾಗಿದೆ. ಕಳೆದ ಕೆಲವುದಶಕಗಳಿಂದ
ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಿದ್ದು ನ್ಯಾಯಾಲಯವು ಕ್ರಿಯಾಶೀಲವಾಗಿದೆ. ಇದರರ್ಥ
ನ್ಯಾಯಾಲಯವು ಈಗ ಸಂವಿಧಾನದಲ್ಲಿಯ ನ್ಯಾಯ ಮತ್ತು ಸಮತೆಯ ಸಲುವಾಗಿ ಮುಂದೆ ಬರುತ್ತಿದೆ. ಸಮಾಜದಲ್ಲಿಯ
ದುರ್ಬಲ ಘಟಕಗಳು, ಮಹಿಳೆಯರು, ಆದಿವಾಸಿಗಳು, ಕಾರ್ಮಿಕರು, ರೈತರು, ಮಕ್ಕಳು
ಮುಂತಾದವರಿಗೆ ಕಾಯ್ದೆಯ ಸಂರಕ್ಷಣೆ ನೀಡುವ ಪ್ರಯತ್ನವನ್ನು ನ್ಯಾಯಾಲಯವು ಮಾಡಿದೆ. ಅದರ ಸಲುವಾಗಿ ಜನಹಿತಾರ್ಥ
ಮನವಿಗಳು ಮಹತ್ವದಾಗಿವೆ.
ಪ್ರ.4. ಕೆಳಗಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ
ಬರೆಯಿರಿ.
1. ಸಮಾಜದಲ್ಲಿ ಕಾಯ್ದೆಯ ಅವಶ್ಯಕತೆ ಏಕೆ ಇರುತ್ತದೆ?
ಉತ್ತರ:-ನಾಗರಿಕರ ಸ್ವಾತಂತ್ರ್ಯ, ಸಮತೆ, ನ್ಯಾಯ ಹಾಗೂ ಪ್ರಜಾಪ್ರಭುತ್ವದಲ್ಲಿಯ ಅವರ ಅಧಿಕಾರಗಳು ಅಭಾಧಿತವಾಗಿ ಉಳಿಯಬೇಕು.
ಅದಕ್ಕಾಗಿ ವ್ಯಕ್ತಿ-ವ್ಯಕ್ತಿಗಳಲ್ಲಿ ಮತಭೇದ ಉಂಟಾದರೆ ಸಂಘರ್ಷ ನಿರ್ಮಾಣವಾಗಬಾರದು. ಸಹಿಷ್ಣುತೆ
ಪಾಲಿಸಿದರೆ ಸಂಘರ್ಷ, ಭಿನಾಭಿಪ್ರಾಯ ಉಂಟಾಗುವುದಿಲ್ಲ. ಆದರೆ ಭಿನಾಭಿಪ್ರಾಯ ವಿಕೋಪಕ್ಕೆ ಹೋದರೆ ಸಂಘರ್ಷ ನಿರ್ಮಾಣವಾಗುತ್ತದೆ. ಅವುಗಳ
ನಿವಾರಣೆಯು ಕಾಯ್ದೆಯ ಆಧಾರದಿಂದ ಮತ್ತು ನಿಷ್ಪಕ್ಷಪಾತ ದೃಷ್ಟಿಯಿಂದ ಆಗುವ ಅಗತ್ಯವಿರುತ್ತದೆ. ಅದರ
ಸಲುವಾಗಿ ನ್ಯಾಯಾಂಗದ ಅವಶ್ಯಕತೆ ಸಮಾಜದಲ್ಲಿ ಅಗತ್ಯವಾಗಿದೆ.
2. ಸರ್ವೋಚ್ಚ ನ್ಯಾಯಾಲಯದ ಕಾರ್ಯಗಳನ್ನು
ಸ್ಪಷ್ಟಪಡಿಸಿರಿ.
ಉತ್ತರ:-1. ಒಕ್ಕೂಟ
ರಾಜ್ಯದ ನ್ಯಾಯಾಲಯ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತು ಘಟಕ ರಾಜ್ಯಗಳ ನಡುವಿನ,
ಘಟಕ ರಾಜ್ಯ ಮತ್ತು ಘಟಕ ರಾಜ್ಯಗಳ ನಡುವಿನ , ಕೇಂದ್ರ ಸರಕಾರ ಮತ್ತು
ಘಟಕ ರಾಜ್ಯಗಳ ವಿರುದ್ಧ ಬೇರೆ ಘಟಕ ರಾಜ್ಯಗಳ ನಡುವಿನ ತಂಟೆಗಳನ್ನು ಬಗೆಹರಿಸುವುದು.
2. ನಾಗರಿಕರ
ಮೂಲಭೂತ ಹಕ್ಕುಗಳ ರಕ್ಷಣೆ ಮಾಡುವುದು, ಅದರ ಸಲುವಾಗಿ ಆದೇಶ ನೀಡುವುದು.
3. ಕನಿಷ್ಠ
ನ್ಯಾಯಾಲಯಗಳು ನೀಡಿದ ತೀರ್ಪುಗಳ ಪುನರ್ವಿಚಾರ ಮಾಡುವುದು, ತನ್ನ ತೀರ್ಪುಗಳ
ಪುನರ್ವಿಚಾರವನ್ನೂ ಮಾಡುವುದು.
4. ಸಾರ್ವಜನಿಕ
ದೃಷ್ಟಿಯಲ್ಲಿ ಮಹತ್ವದ ಪ್ರಶ್ನೆಗಳಲ್ಲಿಯ ಕಾನೂನಿನ ಅಂಗವನ್ನು ತಿಳಿದುಕೊಳ್ಳುವ ಸಲುವಾಗಿ
ರಾಷ್ಟ್ರಪತಿಗಳು ಸಲಹೆಯನ್ನು ಕೇಳಿದರೆ ಅವರಿಗೆ ಸಲಹೆ ನೀಡುವುದು.
3. ಭಾರತದಲ್ಲಿ ನ್ಯಾಯಾಂಗವನ್ನು ಸ್ವತಂತ್ರವಾಗಿಡುವ
ಸಲುವಾಗಿ ಯಾವ ಏರ್ಪಾಟುಗಳನ್ನು ಮಾಡಲಾಗಿದೆ?
ಉತ್ತರ:- ನ್ಯಾಯಾಧೀಶರ ಆಯ್ಕೆಯು ರಾಷ್ಟ್ರಪತಿಗಳು ಮಾಡುತ್ತಾರೆ.
ಆದ್ದರಿಂದ ರಾಜಕೀಯ ಒತ್ತಡಗಳಿಂದ ದೂರವಾಗಿಸಲಾಗುತ್ತದೆ. ನ್ಯಾಯಾಧೀಶರಿಗೆ ಸೇವಾ ಶಾಶ್ವತಿ
ಇರುತ್ತದೆ. ಕಿರಕುಳ ಕಾರಣಗಳಿಂದ ಅಥವಾ ರಾಜಕೀಯ ಉದ್ದೇಶದಿಂದ ಅವರನ್ನು ಹುದ್ದೆಯಿಂದ
ಕೆಳಗಿಳಿಸಲಾಗುವುದಿಲ್ಲ. ನ್ಯಾಯಾಧೀಶರ ಕೃತಿ ಮತ್ತು ತೀರ್ಪುಗಳ ಮೇಲೆ ವೈಯಕ್ತಿಕ ಟೀಕೆ ಮಾಡಲು
ಬರುವುದಿಲ್ಲ. ನ್ಯಾಯಾಲಯದ ಅವಮಾನ ಮಾಡುವುದು ಕೂಡ ಅಪರಾಧವಾಗಿದ್ದು ಅದಕ್ಕಾಗಿ ಶಿಕ್ಷೆ
ಆಗುತ್ತದೆ. ಈ ಏರ್ಪಾಟುಗಳಿಂದ ನ್ಯಾಯಾಧೀಶರಿಗೆ ಸಂರಕ್ಷಣೆ ದೊರೆಯುತ್ತದೆ ಅಲ್ಲದೆ ನ್ಯಾಯಾಂಗದ
ಸ್ವಾತಂತ್ರ್ಯವೂ ಅಬಾಧಿತವಾಗಿ ಉಳಿಯುತ್ತದೆ.
ಪ್ರ.5. ಕೆಳಗಿನ ಕೋಷ್ಟಕವನ್ನು ಪೂರ್ಣಮಾಡಿರಿ.
ನ್ಯಾಯಾಂಗದ ರಚನೆ
1. ಸರ್ವೋಚ್ಚ ನ್ಯಾಯಾಲಯ ಮುಖ್ಯ ನ್ಯಾಯಾಧೀಶರು
2. ಉಚ್ಚ ನ್ಯಾಯಾಲಯ ನ್ಯಾಯಾಧೀಶರು
3. ಜಿಲ್ಹಾ ನ್ಯಾಯಾಲಯ ಜಿಲ್ಹಾ ನ್ಯಾಯಾಧೀಶರು
|
5ನೇ ಪಾಠ
ರಾಜ್ಯ ಸರಕಾರ |
ಪ್ರ. 1. ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ
ಪರ್ಯಾಯವನ್ನು ಆಯ್ಕೆ ಮಾಡಿ ವಾಕ್ಯಗಳನ್ನು ಪುನ: ಬರೆಯಿರಿ.
1. ಮಹಾರಾಷ್ಟ್ರ ಶಾಸಕಾಂಗದ ಚಳಿಗಾಲದ
ಅಧಿವೇಶನವು .......... ದಲ್ಲಿ ನಡೆಯುತ್ತದೆ.
ಅ) ಮುಂಬಯಿ ಬ) ನಾಗಪುರ ಕ) ಪುಣೆ ಡ) ಔರಂಗಾಬಾದ
2. ರಾಜ್ಯಪಾಲರ ನೇಮಕಾತಿಯನ್ನು .......... ಮಾಡುತ್ತಾರೆ.
ಅ) ಮುಖ್ಯ
ಮಂತ್ರಿಗಳು ಬ) ಪ್ರಧಾನ ಮಂತ್ರಿಗಳು ಕ)
ರಾಷ್ಟ್ರಪತಿಗಳು ಡ)
ಮುಖ್ಯ ನ್ಯಾಯಾಧೀಶರು
3. ರಾಜ್ಯ ಶಾಸಕಾಂಗದ ಅಧಿವೇಶನಗಳನ್ನು ಕರೆಯುವ ಅಧಿಕಾರವು .....
ಇದೆ.
ಅ) ಮುಖ್ಯ
ಮಂತ್ರಿಗಳಿಗೆ ಬ) ರಾಜ್ಯಪಾಲರಿಗೆ
ಕ)
ರಾಷ್ಟ್ರಪತಿಗಳಿಗೆ ಡ)
ಸಭಾಪತಿಗಳಿಗೆ
ಪ್ರ. 2. ಕೆಳಗಿನ ಕೋಷ್ಟಕವನ್ನು ಪೂರ್ಣಮಾಡಿರಿ.
ಅ. ನಂ. |
ಸದನಗಳು |
ಕಾಲಾವಧಿ |
ಸದಸ್ಯರ ಸಂಖ್ಯೆ |
ಚುನಾವಣೆಯ ಸ್ವರೂಪ |
ಪ್ರಮುಖ |
1. |
ವಿಧಾನ ಸಭೆ |
5 ವರ್ಷಗಳು |
288 |
ಸಾರ್ವತ್ರಿಕ ಚುನಾವಣೆ |
ಮುಖ್ಯಮಂತ್ರಿಗಳು |
2. |
ವಿಧಾನ ಪರಿಷತ್ತು |
5 ವರ್ಷಗಳು |
78 |
ಪ್ರತಿ ಎರಡು ವರ್ಷಗಳಲ್ಲಿ |
ಸಭಾಪತಿಗಳು |
ಪ್ರ. 3. ಟಿಪ್ಪಣಿ ಬರೆಯಿರಿ.
1) ರಾಜ್ಯಪಾಲರು:-ರಾಜ್ಯ ಸರಕಾರದ
ಕಾರ್ಯಾಂಗದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಮಂತ್ರಿ ಮಂಡಲದ ಸಮಾವೇಶ
ವಾಗುತ್ತದೆ. ಕೇಂದ್ರದಲ್ಲಿ ರಾಷ್ಟ್ರಪತಿ ಹೇಗೆ ನಾಮಮಾತ್ರ ಪ್ರಮುಖರಾಗಿರುತ್ತಾರೆಯೋ ಅದೇ
ರೀತಿಯಾಗಿ ಘಟಕ ರಾಜ್ಯದಲ್ಲಿ ರಾಜ್ಯಪಾಲರು ನಾಮಮಾತ್ರ ಪ್ರಮುಖರಾಗಿರುತ್ತಾರೆ. ರಾಜ್ಯಪಾಲರ
ನೇಮಕಾತಿಯನ್ನು ರಾಷ್ಟ್ರಪತಿಗಳು ಮಾಡುತ್ತಾರೆ ಹಾಗೂ ರಾಷ್ಟ್ರಪತಿಗಳ ಇಚ್ಛೆ ಇರುವವರೆಗೆ ಅವರು
ಅಧಿಕಾರದಲ್ಲಿ ಇರಬಲ್ಲರು. ಕಾನೂನು ವಿಷಯದಲ್ಲಿ ರಾಜ್ಯಪಾಲರಿಗೂ ಕೆಲವು ಮಹತ್ವದ ಅಧಿಕಾರಗಳಿವೆ. ಉದಾ.
ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಪಾಸು ಮಾಡಿದ ಮಸೂದೆಯನ್ನು ರಾಜ್ಯಪಾಲರ ಸಹಿಯಾದ ನಂತರವೇ
ಕಾನೂನಿನಲ್ಲಿ ರಾಪಾಂತರವಾಗುತ್ತದೆ. ರಾಜ್ಯ
ಶಾಸಕಾಂಗದ ಅಧಿವೇಶನಗಳನ್ನು ಕರೆಯುವ ಅಧಿಕಾರವು ರಾಜ್ಯಪಾಲರಿಗಿದೆ. ರಾಜ್ಯ ಶಾಸಕಾಂಗದ ಅಧಿವೇಶನವಿಲ್ಲದಿದ್ದಾಗ ತ್ವರಿತವಾಗಿ
ಕಾನೂನು ರಚಿಸುವ ಅವಶ್ಯಕತೆ ನಿರ್ಮಾಣವಾದರೆ ರಾಜ್ಯಪಾಲರು ಸುಗ್ರೀವಾಜ್ಞೆ ಹೊರಡಿಸಬಹುದು.
2) ಮುಖ್ಯ ಮಂತ್ರಿಗಳ ಕಾರ್ಯಗಳು:- ಬಹುಮತ
ಸಿದ್ಧವಾದ ನಂತರ ಮುಖ್ಯಮಂತ್ರಿಗಳು ಪ್ರಥಮವಾಗಿ ತಮ್ಮ ಮಂತ್ರಿಮಂಡಳ ತಯಾರಿಸಬೇಕಾಗುತ್ತದೆ. ಈ
ಕೆಲಸ ಆಹ್ವಾನಾತ್ಮಕವಾಗಿದ್ದು ವಿವಿಧ ಸಾಮಾಜಿಕ
ಘಟಕಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಇತರ
ಹಿಂದುಳಿದ ವರ್ಗ, ಮಹಿಳೆಯರು,
ಅಲ್ಪಸಂಖ್ಯಾತರು ಇತ್ಯಾದಿ ಘಟಕಗಳಿಂದ ಮಂತ್ರಿಮಂಡಲದ ರಚನೆ ಮಾಡಬೇಕಾಗುತ್ತದೆ. ಆನಂತರ ವಿವಿಧ
ಖಾತೆಗಳ ಹಂಚಿಕೆಯನ್ನು ಮಾಡಬೇಕಾಗುತ್ತದೆ. ಇಲ್ಲಿ ಮಂತ್ರಿಗಳ ರಾಜಕೀಯ ಅನುಭವ, ಆಡಳಿತದ ಕೌಶಲ್ಯ, ಜನಮತದ ಅರಿವು,
ನೇತೃತ್ವ ಇತ್ಯಾದಿ ಸಂಗತಿಗಳ ವಿಚಾರ ಮಾಡಬೇಕಾಗುತ್ತದೆ. ಖಾತೆ-ಖಾತೆಗಳಲ್ಲಿ ಸಹಕಾರ ಮತ್ತು
ಸಮನ್ವಯ ಇಟ್ಟುಕೊಳ್ಳಬೇಕಾಗುತ್ತದೆ.
ಮುಖ್ಯಮಂತ್ರಿಗಳಿಗೆ ಎಲ್ಲ ಖಾತೆಗಳಲ್ಲಿ ವಿವಾದಗಳು ಉಂಟಾಗದಂತೆ ನೋಡಿಕೊಳ್ಳಬೇಕಾಗುತ್ತದೆ.
ಪ್ರಧಾನಮಂತ್ರಿಗಳು ಯಾವ ರೀತಿಯಲ್ಲಿ ದೇಶದ ನೇತೃತ್ವ ಮಾಡುತ್ತಾರೋ ಅದೇ ರೀತಿ ಮುಖ್ಯಮಂತ್ರಿಗಳು
ತಮ್ಮ ರಾಜ್ಯದ ನೇತೃತ್ವವನ್ನು ಮಾಡುತ್ತಾರೆ. ತಮ್ಮ ರಾಜ್ಯದಲ್ಲಿಯ ಜನರ ಹಿತ, ಅವರ ಸಮಸ್ಯೆಗಳನ್ನು ಗಮನದಲ್ಲಿರಿಸಿ ಅದಕ್ಕನುಸಾರವಾಗಿ ಹೊಸ ಧೋರಣೆಗಳ ನಿರ್ಮಿತಿ
ಮಾಡಬೇಕಾಗುತ್ತದೆ.
ಪ್ರ.4. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
1. ವಿಧಾನಸಭೆಯ ಅಧ್ಯಕ್ಷರ ಕಾರ್ಯಗಳನ್ನು
ಸ್ಪಷ್ಟಪಡಿಸಿರಿ.
ಉತ್ತರ:-ವಿಧಾನಸಭೆಯ ಕಾರ್ಯಕಲಾಪಗಳು ಅಧ್ಯಕ್ಷರ ನಿಯಂತ್ರಣೆ ಹಾಗೂ
ಮಾರ್ಗದರ್ಶನದಲ್ಲಿ ನಡೆಯುತ್ತದೆ. ಸಭೆಯ ಕಾರ್ಯಕಲಾಪಗಳು ಶಿಸ್ತುಬದ್ಧ ರೀತಿಯಿಂದ ಜರುಗಬೇಕೆಂದು
ಕಾರ್ಯಕ್ರಮ ಪತ್ರಿಕೆ ತಯಾರಿಸುವುದನ್ನು ಹಿಡಿದು ಅಸಂಸದಿಯ ವರ್ತನೆ ಮಾಡುವ ಸದಷ್ಯರನ್ನು
ಅಮಾನತ್ತುಗೊಳಿಸುವ ವರೆಗಿನ ಅನೇಕ ಕಾರ್ಯಗಳನ್ನು ಅಧ್ಯಕ್ಷರು ಮಾಡಬೇಕಾಗುತ್ತದೆ.
2. ಸಂವಿಧಾನವು ಭಾರತಕ್ಕಾಗಿ ಒಕ್ಕೂಟ ರಾಜ್ಯ
ವ್ಯವಸ್ಥೆಯಯನ್ನು ಏಕೆ ಸ್ವೀಕರಿಸಿತು?
ಉತ್ತರ:-ಭಾರತದ ಭೌಗೋಳಿಕ ವಿಸ್ತಾರವು ದೊಡ್ಡದಾಗಿದೆ. ಹಾಗೂ
ಜನಸಂಖ್ಯೆಯ ಸ್ವರೂಪವೂ ವಿವಿಧಾಂಗಿ ಆಗಿದೆ. ಭಾಷೆ, ಧರ್ಮ, ನಡೆ-ನುಡಿ ಮತ್ತು
ಪ್ರದೇಶಿಕ ಸ್ವರೂಪ ಇವುಗಳಲ್ಲಿ ವಿವಿಧತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಒಂದೇ ಕೇಂದ್ರೀಯ
ಸ್ಥಳದಿಂದ ರಾಜ್ಯಕಾರಭಾರ ಮಾಡುವುದು ಸುಲಭವಾಗುವುದಿಲ್ಲ.
ಆದ್ದರಿಂದ ಭಾರತದ ಸಂವಿಧಾನವು ಸಂಘಾರಾಜ್ಯಕ್ಕಾಗಿ ಒಕ್ಕೂಟ ರಾಜ್ಯ ವ್ಯವಸ್ಥೆಯನ್ನು
ಸ್ವೀಕಾರ ಮಾಡಿತು.
3. ಖಾತೆಗಳನ್ನು ಹಂಚುವಾಗ ಮುಖ್ಯ ಮಂತ್ರಿಗಳಿಗೆ ಯಾವ
ಸಂಗತಿಗಳ ವಿಚಾರ ಮಾಡಬೇಕಾಗುತ್ತದೆ?
ಉತ್ತರ:- ಬಹುಮತ ಸಿದ್ಧವಾದ ನಂತರ ಮುಖ್ಯಮಂತ್ರಿಗಳು ಪ್ರಥಮವಾಗಿ ತಮ್ಮ
ಮಂತ್ರಿಮಂಡಳ ತಯಾರಿಸಬೇಕಾಗುತ್ತದೆ. ಈ ಕೆಲಸ ಆಹ್ವಾನಾತ್ಮಕವಾಗಿದ್ದು ವಿವಿಧ ಸಾಮಾಜಿಕ ಘಟಕಗಳಾದ ಪರಿಶಿಷ್ಟ ಜಾತಿ,
ಪರಿಶಿಷ್ಟ ಪಂಗಡ , ಇತರ ಹಿಂದುಳಿದ ವರ್ಗ,
ಮಹಿಳೆಯರು, ಅಲ್ಪಸಂಖ್ಯಾತರು ಇತ್ಯಾದಿ ಘಟಕಗಳಿಂದ ಮಂತ್ರಿಮಂಡಲದ ರಚನೆ
ಮಾಡಬೇಕಾಗುತ್ತದೆ. ಆನಂತರ ವಿವಿಧ ಖಾತೆಗಳ ಹಂಚಿಕೆಯನ್ನು ಮಾಡಬೇಕಾಗುತ್ತದೆ. ಇಲ್ಲಿ ಮಂತ್ರಿಗಳ
ರಾಜಕೀಯ ಅನುಭವ, ಆಡಳಿತದ ಕೌಶಲ್ಯ, ಜನಮತದ
ಅರಿವು, ನೇತೃತ್ವ ಇತ್ಯಾದಿ ಸಂಗತಿಗಳ ವಿಚಾರ ಮಾಡಬೇಕಾಗುತ್ತದೆ.
ಖಾತೆ-ಖಾತೆಗಳಲ್ಲಿ ಸಹಕಾರ ಮತ್ತು ಸಮನ್ವಯ ಇಟ್ಟುಕೊಳ್ಳಬೇಕಾಗುತ್ತದೆ.
ಮಹಾರಾಷ್ಟ್ರ
ರಾಜ್ಯದ ವಿಧಿ ಮಂಡಲದ ರಚನೆ
ಮಹಾರಾಷ್ಟ್ರದಲ್ಲಿ ವಿಧಾನ
ಸಭೆ ಮತ್ತು ವಿಧಾನ ಪರಿಷತ್ತು ಎಂಬ ಎರಡು ಸದನಗಳಿವೆ.
ವಿಧಾನ ಸಭೆ 288 ಸದಸ್ಯರು-
ಮುಖ್ಯ ಮಂತ್ರಿಗಳು, ಯೂಪಿಏ ಮುಖ್ಯಮಂತ್ರಿಗಳು
ವಿಧಾನ ಪರಿಷತ್ತು- 78
ಸದಸ್ಯರು -ಅಧ್ಯಕ್ಷರು
6 ನೇ ಪಾಠ ನೌಕರಶಾಹಿ |
ಪ್ರ. 1. ಕೆಳಗಿನ ವಾಕ್ಯಗಳು ಸರಿ ಅಥವಾ ತಪ್ಪು
ಎಂಬುದನ್ನು ಗುರುತಿಸಿ ತಪ್ಪಾದ ವಾಕ್ಯಗಳನ್ನು ತಿದ್ದಿ ಬರೆಯಿರಿ.
1) ಸಂಸದೀಯ ಪ್ರಜಾಪ್ರಭುತ್ವದಲ್ಲಿ ಜನರಿಂದ
ಆಯ್ಕೆಯಾದ ಪ್ರತಿನಿಧಿ ಮತ್ತು ಮಂತ್ರಿಗಳ ಮೇಲೆ ಆಡಳಿತದ ಜಾವಾಬ್ದಾರಿಯಿರುತ್ತದೆ. – ಸರಿ
2. ಕೇಂದ್ರೀಯ ಲೋಕಸೇವಾ ಆಯೋಗವು (UPSC) ಮಹಾರಾಷ್ಟ್ರದಲ್ಲಿಯ ನಾಗರಿಕ ಸೇವೆಗಳಿಗಾಗಿ ಸ್ಪರ್ಧಾ ಪರೀಕ್ಷೆಯ ಮುಖಾಂತರ
ಅಭ್ಯರ್ಥಿಗಳ ಆಯ್ಕೆ ಮಾಡುತ್ತದೆ.- ಸರಿ
ಪ್ರ. 2. ಕೆಳಗಿನ ವಿಧಾನಗಳನ್ನು ಕಾರಣಸಹಿತ
ಸ್ಪಷ್ಟಪಡಿಸಿರಿ.
1. ನಾಗರಿಕ ಸೇವೆಗಳಲ್ಲಿಯೂ ಮೀಸಲಾತಿ ಧೋರಣೆಯಿದೆ.
ಉತ್ತರ:- ಸಮಾಜವನ್ನು
ಪ್ರಜಾಪ್ರಭುತ್ವವಾದಿಯನ್ನಾಗಿಸಲು ನೌಕರಶಾಹಿಯು ಮಹತ್ವದ ಪಾತ್ರ ವಹಿಸುತ್ತದೆ. ಮೀಸಲಾತಿ
ದೋರಣೆಹಮ್ಮಿಕೊಂಡಿರುವುದರಿಂದ ಅನೇಕ ದುರ್ಲಕ್ಷಿತ ಸಮಾಜ ಘಟಕಗಳು ಮುಖ್ಯ ಪ್ರವಾಹದಲ್ಲಿ ಬಂದಿವೆ.
ಆದ್ದರಿಂದ ನಾಗರಿಕ ಸೇವೆಗಳಲ್ಲಿ ಮೀಸಲಾತಿ ಧೋರಣೆಯಿದೆ.
2. ನಾಗರಿಕ ಸೇವಕರು ರಾಜಕೀಯ
ದೃಷ್ಟಿಯಿಂದ ತಟಸ್ಥರಾಗಿರುವುದು ಅವಶ್ಯಕವಾಗಿದೆ.
ಉತ್ತರ:- ನೌಕರಶಾಹಿಯು ಒಂದು ಶಾಶ್ವತ
ಸ್ವರೂಪದ ವ್ಯವಸ್ಥೆಯಾಗಿದ್ದು ಹೊಸ ಸರಕಾರ ರಚನೆಯಾದಾಗ ತಮ್ಮ ಯಾವುದೇ ರಾಜಕೀಯ ವಿಚಾರಗಳನ್ನು
ಬಳಸದೆಆಯಾ ಪಕ್ಷದ ಸರಕಾರದ ಧೋರಣೆಗಳನ್ನು ಅತೀ ದಕ್ಷತೆಯಿಂದ ಹಾಗೂ ನಿಷ್ಠೆಯಿಂದ
ಜಾರಿಗೊಳಿಸಬೇಕಾಗುತ್ತದೆ. ಆದ್ದರಿಂದ ನಾಗರಿಕ
ಸೇವಕರು ರಾಜಕೀಯ ದೃಷ್ಟಿಯಿಂದ ತಟಸ್ಥರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು.
ಪ್ರ.3. ಕೆಳಗಿನ ಪ್ರಶ್ನೆಗಳಿಗೆ 25 ರಿಂದ 30
ಶಬ್ದಗಳಲ್ಲಿ ಉತ್ತರ ಬರೆಯಿರಿ.
1. ಖಾತೆಯ ಆಡಳಿತವು ಸಮರ್ಥವಾಗಿ ನಡೆಯುವುದರ ಹಿಂದಿನ
ಮಂತ್ರಿ ಮತ್ತು ನಾಗರಿಕ ಸೇವಕರ ಪಾತ್ರವನ್ನು ಸ್ಪಷ್ಟಪಡಿಸಿರಿ.
Ans :
2. ನೌಕರಶಾಹಿಯಿಂದ ರಾಜ್ಯ ವ್ಯವಸ್ಥೆಗೆ ಸ್ಥೈರ್ಯ ಹೇಗೆ
ದೊರೆಯುವುದೆಂಬುದನ್ನು ಸ್ಪಷ್ಟಪಡಿಸಿರಿ.
ಉತ್ತರ:- ನೌಕರಶಾಹಿಯ ರಚನೆ ಅತ್ಯಂತ ವ್ಯಾಪಕ ಹಾಗೂ ಜಟಿಲವಾಗಿದೆ. ಸ್ವಾತಂತ್ರೋತ್ತರ ಕಾಲದಿಂದ ಉಂಟಾದ ಅನೇಕ ಮಹತ್ವದ ಬದಲಾವಣೆಗಳನ್ನು ಈ ವ್ಯವಸ್ಥೆಯು ಜಾರಿಯಲ್ಲಿ ತಂದಿದೆ. ನೌಕರಶಾಹಿಯಿಂದ ರಾಜ್ಯವ್ಯವಸ್ಥೆಗೆ ಸ್ಥೈರ್ಯ ದೊರೆಯುತ್ತದೆ. ನೀರು ಸರಬರಾಜು, ಸಾರ್ವಜನಿಕ ಸ್ವಚ್ಛತೆ, ಸಾರಿಗೆ ಸಂಪರ್ಕ, ಆರೋಗ್ಯ, ಕೃಷಿ ಸುಧಾರಣೆ, ಪ್ರದುಷಣೆಗೆ ಪ್ರತಿಬಂಧ ಇಂತಹ ಅನೇಕ ಸೇವೆಗಳು ನಮಗೆ ಸತತವಾಗಿ ತಡೆಯಿಲ್ಲದೆ ದೊರೆಯುತ್ತವೆ. ಅದರಿಂದಾಗಿ ಸಮುದಾಯದ ದೈನಂದಿನ ಜೀವನಕ್ಕೆ ಸ್ಥೈರ್ಯ ಲಭಿಸುತ್ತದೆ.
ನಾಗರಿಕ ಸೇವೆಗಳ ಪ್ರಕಾರಗಳು 1. ಅಖಿಲ ಭಾರತೀಯ ಸೇವೆ- ಭಾರತೀಯ ಆಡಳಿತಾತ್ಮಕ ಸೇವೆ(IAS) ಭಾರತೀಯ ಪೋಲಿಸ ಸೇವೆ(IPS) ಭಾರತೀಯ ಅರಣ್ಯ ಸೇವೆ(IFS) |
2. ಕೇಂದ್ರೀಯ ಸೇವೆ- ಭಾರತೀಯ ವಿದೇಶಿ ಸೇವೆ(IFS)
ಭಾರತೀಯ ಕಂದಾಯ ಸೇವೆ(IRS)
3. ರಾಜ್ಯ ಸೇವೆ - ಜಿಲ್ಹಾಧಿಕಾರಿ , ಉಪಜೀಲ್ಹಾಧಿಕಾರಿ
ಗಟ ವಿಕಾಸಅಧಿಕಾರಿ , ತಹಶೀಲದಾರ
ಪ್ರ. 5. ನೌಕರಶಾಹಿಯ ಸ್ವರೂಪವನ್ನು ಸ್ಪಷ್ಟಪಡಿಸಿರಿ.
ನೌಕರಶಾಹಿಯ ಸ್ವರೂಪ:
1)ಶಾಶ್ವತ
ವ್ಯವಸ್ಥೆ:- ನೌಕರಶಾಹಿಯೂ ಶಾಶ್ವತ ಸ್ವರೂಪದ್ದಾಗಿರುತ್ತದೆ. ಪ್ರತಿಯೊಂದು
ಚುನಾವಣೆಯ ನಂತರ ಹೊಸ ಪ್ರಧಾನ ಮಂತ್ರಿ ಬರಬಹುದು ಆದರೆ ಅವರ ನಿಯಂತ್ರಣದಲ್ಲಿಯ ನೌಕರಶಾಹಿಯು
ಬದಲಾಗುವುದಿಲ್ಲ. ಅದರ ಅಸ್ತಿತ್ವ ಶಾಶ್ವತ ಸ್ವರೂಪದ್ದಾಗಿರುತ್ತದೆ.
2)ರಾಜಕೀಯ ದೃಷ್ಟಿಯಿಂದ ತಟಸ್ಥ:- ನೌಕರಶಾಹಿಯು ರಾಜಕೀಯ
ದೃಷ್ಟಿಯಿಂದ ತಟಸ್ಥವಾಗಿರುತ್ತದೆ. ಅಂದರೆ ಯಾವುದೇ ಪಕ್ಷದ ಅಧಿಕಾರ ಬಂದರೂ ಸರಕಾರದ ಧೋರಣೆಗಳನ್ನು
ಅಷ್ಟೇ ದಕ್ಷತೆಯಿಂದ ಮತ್ತು ನಿಷ್ಠೆಯಿಂದ ಜಾರಿಗೆ ತರಲಾಗುತ್ತದೆ. ಆ ಸಂಧಾರ್ಭದಲ್ಲಿ ನಾಗರಿಕ
ಸೇವಕರು ಯಾವುದೇ ರಾಜಕೀಯ ಪಾತ್ರವನ್ನು ವಹಿಸಬಾರದು ಅಥವಾ ತಮ್ಮ ರಾಜಕೀಯ ವಿಚಾರದಂತೆ ಕಾರ್ಯ
ನಿರ್ವಹಿಸಬಾರದು.
3) ಅನಾಮಿಕತೆ:- ಅಂದರೆ ಯಾವುದೊಂದು ಧೋರಣೆಯ ಯಶ-ಅಪಯಶಕ್ಕೆ
ನೌಕರಶಾಹಿಯನ್ನು ನೇರವಾಗಿ ಜವಾಬ್ದಾರರನ್ನಾಗಿ ಮಾಡದೇ ಅದರ ಸ್ವರೂಪವನ್ನು ಅನಾಮಿಕವಾಗಿಡುವುದು
ಎಂದರ್ಥ. ತಮ್ಮ ತಮ್ಮ ಖಾತೆಗಳ ಆಡಳಿತವನ್ನು ದಕ್ಷತೆಯಿಂದ ನಡೆಸುವುದು ಮಂತ್ರಿಗಳ
ಜವಾಬ್ದಾರಿಯಾಗಿರುತ್ತದೆ. ಖಾತೆಗಳ ದುರಾಡಳಿತಕ್ಕೆ ನಾಗರಿಕ ಸೇವಕರು ಹೊಣೆಗಾರರಗುವುದಿಲ್ಲ. ಆಯಾ
ಖಾತೆಗಳ ಮಂತ್ರಿಗಳು ಜವಾಬ್ದಾರಿ ಸ್ವೀಕರಸಿಕೊಂಡು ನೌಕರಶಾಹಿಗೆ ಸಂರಕ್ಷಣೆ ನೀಡುತ್ತಾರೆ.
ಪ್ರ. 6. ನೌಕರಶಾಹಿಯ ಮಹತ್ವ
ಸ್ಪಷ್ಟಪಡಿಸಿರಿ.
ಉತ್ತರ:- 1)ನೌಕರಶಾಹಿಯ ರಚನೆ ಅತ್ಯಂತ
ವ್ಯಾಪಕ ಹಾಗೂ ಜಟಿಲವಾಗಿದೆ. ಸ್ವಾತಂತ್ರೋತ್ತರ ಕಾಲದಿಂದ ಉಂಟಾದ ಅನೇಕ ಮಹತ್ವದ ಬದಲಾವಣೆಗಳನ್ನು
ಈ ವ್ಯವಸ್ಥೆಯು ಜಾರಿಯಲ್ಲಿ ತಂದಿದೆ. ನೌಕರಶಾಹಿಯಿಂದ ರಾಜ್ಯವ್ಯವಸ್ಥೆಗೆ ಸ್ಥೈರ್ಯ
ದೊರೆಯುತ್ತದೆ. ನೀರು ಸರಬರಾಜು, ಸಾರ್ವಜನಿಕ ಸ್ವಚ್ಛತೆ,
ಸಾರಿಗೆ ಸಂಪರ್ಕ, ಆರೋಗ್ಯ, ಕೃಷಿ ಸುಧಾರಣೆ, ಪ್ರದುಷಣೆಗೆ ಪ್ರತಿಬಂಧ ಇಂತಹ ಅನೇಕ
ಸೇವೆಗಳು ನಮಗೆ ಸತತವಾಗಿ ತಡೆಯಿಲ್ಲದೆ ದೊರೆಯುತ್ತವೆ. ಅದರಿಂದಾಗಿ ಸಮುದಾಯದ ದೈನಂದಿನ ಜೀವನಕ್ಕೆ
ಸ್ಥೈರ್ಯ ಲಭಿಸುತ್ತದೆ.
2)
ನೌಕರಶಾಹಿಯೂ ಕೂಡ ಸಮಾಜ ಪರಿವರ್ತನೆಯ ಒಂದು ಸಾಧನವಾಗಿದೆ. ಮಹಿಳೆಯರ ಸಬಲಿಕರಣ,
ಮಕ್ಕಳ ಸಂರಕ್ಷಣೆ, ದುರ್ಬಲ ಘಟಕಗಳನ್ನು ಕುರಿತು ಯೋಜನೆಗಳು ಇತ್ಯಾದಿಗಳ
ವಿಷಯದಲ್ಲಿ ಸರಕಾರವು ಕಾಯ್ದೆಗಳನ್ನು ಜಾರಿಗೊಳಿಸುವ ಕೆಲಸವನ್ನು ನೌಕರಶಾಹಿ ಮಾಡುತ್ತದೆ.
3)
ಸಮಾಜವನ್ನು ಪ್ರಜಾಪ್ರಭುತ್ವವಾದಿಯನ್ನಾಗಿ ಮಾಡುವ ಪ್ರಕ್ರಿಯೆಯಲ್ಲಿ ನೌಕರಶಾಹಿಯೂ ಮಹತ್ವದ ಪಾತ್ರ
ವಹಿಸುತ್ತದೆ. ಮೀಸಲಾತಿ ಧೋರಣೆಯನ್ನು
ಹಮ್ಮಿಕೊಂಡಿದ್ದರಿಂದ ಅನೇಕ ದುರ್ಲಕ್ಷಿತ ಸಮಾಜ ಘಟಕಗಳು ನೌಕರಶಾಹಿಯಿಂದ ಮುಖ್ಯ ಪ್ರವಾಹದಲ್ಲಿ
ಬಂದಿವೆ.
0 ಕಾಮೆಂಟ್‌ಗಳು
ಧನ್ಯವಾದಗಳು