ಪರಿಸರ ಅಭ್ಯಾಸ ಭಾಗ 2 = Environment StudyPart 2 5th Class
ಅನುಕ್ರಮಣಿಕೆ
ಪಾಠದ ಹಸರು ಪುಟ
೧. ಇತಿಹಾಸ
ಎಂದರೇನು?
೨. ಇತಿಹಾಸ ಮತ್ತು
ಕಾಲ ಸಂಕಲ್ಪನೆ
೩. ಪೃಥ್ವಿಯ ಮೇಲಿನ
ಸಜೀವಿಗಳು
೪. ಉತ್ಕಾಂತಿ
೫. ಮಾನವನ ಪ್ರಗತಿ
೬. ಶಿಲಾಯುಗ:
ಕಲ್ಲಿನ ಆಯುಧಗಳು
೭. ಆಶ್ರಯದಿಂದ
ಊರು- ವಸಾಹತು
೮. ಸ್ಥಿರ ಜೀವನದ
ಆರಂಭ
೯. ಸ್ಥಿರ ಜೀವನ
ಮತ್ತು ನಗರ ಸಂಸ್ಕೃತಿ
೧೦. ಐತಿಹಾಸಿಕ ಕಾಲ
ಭಾರತದ ಸಂವಿಧಾನ
ಪೀಠಿಕೆ
ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು
ಸಾರ್ವಭೌಮ ಸಮಾಜವಾದಿ ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ನಿರ್ಮಿಸಲು ಹಾಗೂ ಅದರ
ಸಮಸ್ತ ನಾಗರಿಕರಿಗೆ: ಸಾಮಾಜಿಕ,
ಆರ್ಥಿಕ ಮತ್ತು
ರಾಜಕೀಯ ನ್ಯಾಯ ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಶ್ರದ್ಧೆ ಸ್ಥಾನಮಾನ
ಹಾಗೂ ಅವಕಾಶ ಸಮಾನತೆಯು;
ಮತ್ತು ಉಪಾಸನಾ
ಸ್ವಾತಂತ್ರ್ಯ ನಿಶ್ಚಿತವಾಗಿ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿಗೌರವವನ್ನು ಹಾಗೂ ರಾಷ್ಟ್ರದ
ಐಕ್ಯತೆ ಮತ್ತು ಏಕಾತ್ಮತೆಯನ್ನು ವೃದ್ಧಿಗೊಳಿಸಲು ದೃಢಸಂಕಲ್ಪದ ನಿರ್ಧಾರ ಮಾಡಿ; ಆಶ್ವಾಸನೆ ನೀಡುವ
ಬಂಧುತ್ವವನ್ನು ನಮ್ಮ ಸಂವಿಧಾನ ಸಭೆಯಲ್ಲಿ ಇಂದು
ದಿನಾಂಕ ಇಪ್ಪತ್ತಾರನೆಯ ನವೆಂಬರ, ೧೯೪೯ ನೆಯ ಇಸವಿ ಈ ಮೂಲಕ ಈ
ಸಂವಿಧಾನವನ್ನು ಅಂಗೀಕರಿಸಿ ಮತ್ತು ಅಧಿನಿಯಮಿತಗೊಳಿಸಿ ಸ್ವತ: ಅರ್ಪಿಸಿಕೊಂಡಿದ್ದೇವೆ.
ಪ್ರ. ೧. ಬಿಟ್ಟಸ್ಥಳಗಳಲ್ಲಿ ಯೋಗ್ಯ ಶಬ್ದವನ್ನು ಬರೆಯಿರಿ.
(ಅ) ಭೂತಕಾಲದಲ್ಲಿ
ಘಟಿಸಿದ ಘಟನೆಗಳನ್ನು ತಿಳಿದುಕೊಳ್ಳುವ ಶಾಸ್ತ್ರಕ್ಕೆ ಇತಿಹಾಸ ಎನ್ನುತ್ತಾರೆ.
(ಆ) ಇತಿಹಾಸವನ್ನು ಕೇವಲ ಕಲ್ಪನೆಗಳ ಆಧಾರದಿಂದ ಬರೆಯಲಾಗುವುದಿಲ್ಲ.
(ಅ) ವೈಜ್ಞಾನಿಕ
ಪದ್ಧತಿ ಎ೦ದರೇನು?
ಉತ್ತರ: ಇತಿಹಾಸದ ಪ್ರತಿಯೊಂದು
ಪುರಾವೆಯನ್ನು ವಿವಿಧ ಪರೀಕ್ಷೆಗಳಿಂದ ತಪಾಸಣೆ ಮಾಡಿ ಅದು ವಿಶ್ವಾಸವಿಡಲು ಯೋಗ್ಯವಾಗಿದೆಯೋ ಅಥವಾ
ಇಲ್ಲವೋ ಎಂಬುದನ್ನು ನಿರ್ಧರಿಸುವ ಪದ್ಧತಿಗೆ ವೈಜ್ಞಾನಿಕ ಪದ್ಧತಿ ಎಂದು ಕರೆಯುತ್ತಾರೆ.
(ಆ) ಸ್ವಾತಂತ್ರ್ಯ ಪ್ರಾಪ್ತಿ ಎಂಬ ಘಟನೆಯು ಯಾವ ಕೃತಿಯ ಪರಿಣಾಮವಾಗಿದೆ?
ಉತ್ತರ: ಸ್ವಾತಂತ್ರ್ಯ
ಪ್ರಾಪ್ತಿ ಎಂಬ ಘಟನೆಯು ಸ್ವಾತಂತ್ರ್ಯ ಹೋರಾಟ ಎಂಬ ಕೃತಿಯ
ಪರಿಣಾಮವಾಗಿದೆ?
(ಇ) ಇತಿಹಾಸದ ಅಭ್ಯಾಸದಿಂದ ಯಾವ ಸ೦ಗತಿಯು ಸಾಧ್ಯವಾಗುತ್ತದೆ?
ಉತ್ತರ: ಇತಿಹಾಸದ
ಅಭ್ಯಾಸದಿಂದ ಭೂತಕಾಲದ ಘಟನೆಗಳ ಅಭ್ಯಾಸ ಮಾಡಲಾಗುತ್ತದೆ. ಭೂತಕಾಲದಲ್ಲಿಯ ಮಾನವೀ
ಸಮಾಜದ ವಿಚಾರ, ಕೃತಿ ಹಾಗೂ ಕೃತಿಯ
ಪರಿಣಾಮಗಳ ಶೋಧ ಮಾಡಿ, ಅನೇಕ ಸಮಸ್ಯೆಗಳ ಉತ್ತರಗಳನ್ನು ಇತಿಹಾಸ
ಶೋಧಿಸುತ್ತದೆ. ಇತಿಹಾಸದ ಅಭ್ಯಾಸದಿಂದ ಮಾನವೀ
ಸಮಾಜದ ಪ್ರಗತಿಗಾಗಿ ಇಷ್ಟವೇನು, ಅನಿಷ್ಟವೇನು
ಇವುಗಳ ಅಭ್ಯಾಸ ಮಾಡುವುದು ಸಾಧ್ಯವಾಗುತ್ತದೆ. ಭೂತಕಾಲದಲ್ಲಿ ಆಗಿ ಹೋದ ಮಹಾನ್ ವ್ಯಕ್ತಿಗಳ
ಚರಿತ್ರೆಯಿಂದ ಸ್ಫೂರ್ತಿ ಹಾಗೂ ಪ್ರೇರಣೆ ಸಿಗುತ್ತದೆ.
೩. ಮುಂದಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ
ಬರೆಯಿರಿ.
(ಅ) ಇತಿಹಾಸವು ಒಂದು
ವಿಜ್ಞಾನವಾಗಿದೆ ಎಂದು ಏಕೆ ಹೇಳಲಾಗುತ್ತದೆ?
ಉತ್ತರ: ಇತಿಹಾಸವನ್ನು ಕೇವಲ
ಕಲ್ಪನೆಗಳ ಆಧಾರದಿಂದ ಬರೆಯಲಾಗುವುದಿಲ್ಲ. ಭೂತಕಾಲದ ಘಟನೆಗಳನ್ನು ಅದೇ ರೀತಿಯಾಗಿ ಮತ್ತೆ ನಿರ್ಮಿಸಲು
ಶಕ್ಯವಿಲ್ಲದಿದ್ದರೂ ಆ ಘಟನೆಗಳ ಪುರಾವೆಗಳನ್ನು ಶೋಧಿಸಲು, ತಪಾಸಣೆ ಮಾಡಲು ವೈಜ್ಞಾನಿಕ ಪದ್ಧತಿಯನ್ನೇ ಬಳಸಲಾಗುತ್ತದೆ. ಅವಶ್ಯಕತೆಯಂತೆ ಇತರ
ಶಸ್ತ್ರಗಳ ಅಭ್ಯಾಸವನ್ನೂ ಮಾಡಲಾಗುತ್ತದೆ. ಆದ್ದರಿಂದ ಇತಿಹಾಸವನ್ನು ಒಂದು ವಿಜ್ಞಾನವಾಗಿದೆ ಎಂದು
ಹೇಳಲಾಗುತ್ತದೆ.
(ಆ) ಊರಿನ
ವಿಕಾಸದಲ್ಲಿ ಅಡೆತಡೆಗಳು ಹೇಗೆ ನಿರ್ಮಾಣವಾಗುತ್ತವೆ?
ಉತ್ತರ: ಊರಿನ ಜನರಲ್ಲಿ
ಯಾವುದಾದರೂ ಕಾರಣದಿಂದ ಒಮ್ಮತವಾಗದ್ದಿದ್ದರೆ ಊರಿನ ವಿಕಸದಲ್ಲಿ ಅಡೆತಡೆಗಳು ನಿರ್ಮಾಣವಾಗುತ್ತವೆ.
ಪ್ರ. ೪.
ಕಲ್ಪನಾಚಿತ್ರವನ್ನು ತಯಾರಿಸಿರಿ.
ಪ್ರ. ೫.
ಮುಂದಿನ ಕೋಷ್ಠಕದಲ್ಲಿ ಇತಿಹಾಸದ ಸಾಧನಗಳ ವರ್ಗಿಕರಣ ಮಾಡಿರಿ.
ಇತಿಹಾಸದ ಸಾಧನಗಳು- ನಾಣ್ಯ, ಪತ್ರಗಳು, ಕೋಟೆಗಳು, ಬೀಸುವಕಲ್ಲಿನ
ಹಾಡುಗಳು, ಪಾತ್ರೆಗಳು, ತಾಮ್ರಪಟ, ಅರಮನೆಗಳು, ಶಿಲಾಶಾಸನ, ಜಾನಪದ ಗೀತೆ, ಸ್ತಂಭ, ಚರಿತ್ರೆಗ್ರಂಥ, ಗುಹೆ, ಜಾನಪದ ಕಥೆ.
ಭೌತಿಕ |
ಲಿಖಿತ |
ಮೌಖಿಕ |
ನಾಣ್ಯ ಕೋಟೆಗಳು ಪಾತ್ರೆಗಳು ಅರಮನೆಗಳು ಶಿಲಾಶಾಸನ ಸ್ತಂಭ ಗುಹೆ |
ಪತ್ರಗಳು ತಾಮ್ರಪಟ ಶಿಲಾಶಾಸನ ಚರಿತ್ರ ಗ್ರಂಥ |
ಬೀಸುವ ಕಲ್ಲಿನ ಹಾಡುಗಳು ಜಾನಪದ ಗೀತೆ ಜಾನಪದ ಕಥೆ |
ಉಪಕ್ರಮ:
(ಅ) ನಿಮ್ಮ ಊರಿನಲ್ಲಿಯ/ಪರಿಸರದಲ್ಲಿಯ
ಐತಿಹಾಸಿಕ ಕಟ್ಟಡಗಳ ಹಾಗೂ ಪ್ರಾಚೀನ ಧಾರ್ಮಿಕ ಸ್ಥಳಗಳ ಮಾಹಿತಿ ಮತ್ತು ಚಿತ್ರಗಳನ್ನು
ಸಂಗ್ರಹಿಸಿರಿ.
(ಆ) ನಿಮ್ಮ ಶಾಲೆಯ ಇತಿಹಾಸವನ್ನು ತಿಳಿದುಕೊಳ್ಳಲು ನೀವು
ಯಾವ ಯಾವ ಸಾಧನಗಳನ್ನು ಉಪಯೋಗ ಮಾಡುವಿರಿ, ಅದರ ಪಟ್ಟಿಯನ್ನು ತಯಾರಿಸಿರಿ ಮತ್ತು ಸಾಧನಗಳಿಂದ ನಿಮಗೆ ಯಾವ ಮಾಹಿತಿ
ಸಿಗಬಹುದು ಎಂಬುದನ್ನು ಬರೆಯಿರಿ. ಉದಾ.: ಶಾಲೆಯ ಅಡಿಗಲ್ಲು :- ಶಾಲೆಯ ಸ್ಥಾಪನೆ, ಉದ್ಘಾಟಕರು
ಇತ್ಯಾದಿ.
೨.
ಇತಿಹಾಸ ಮತ್ತು ಕಾಲ ಸಂಕಲ್ಪನೆ
ಪ್ರ. ೧.
ಬಿಟ್ಟಸ್ಥಳಗಳಲ್ಲಿ ಯೋಗ್ಯ ಶಬ್ದವನ್ನು ಬರೆಯಿರಿ.
(ಅ) ನಾವು ಉಪಯೋಗಿಸುವ ದಿನದರ್ಶಿಕೆಯು ಕ್ರಿಸ್ತಶಕದ ಮೇಲೆ ಆಧರಿಸಿರುತ್ತದೆ.
(ಆ) ಕ್ರಿಸ್ತಶಕ ಪ್ರಾರಂಭವಾಗುವುದಕ್ಕಿಂತ ಮೊದಲಿನ ಕಾಲವನ್ನು ಕ್ರಿಸ್ತಶಕ ಪುರ್ವ ಎಂದು
ಕರೆಯಲಾಗುತ್ತದೆ.
ಪ್ರ. ೨.
ಪ್ರತಿಯೊಂದಕ್ಕೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ಕಾಲಮಾಪನಮಾಡುವುದಕ್ಕಾಗಿ ಯಾವ ವೈಜ್ಞಾನಿಕ ಪದ್ಧತಿಗಳನ್ನು
ಉಪಯೋಗಿಸಲಾಗುತ್ತದೆ?
ಉತ್ತರ: ಕಾಲಮಾಪನಮಾಡುವುದಕ್ಕಾಗಿ
'ಕರ್ಬ ೧೪ ಪದ್ಧತಿ’ ವೈಜ್ಞಾನಿಕ ಪದ್ಧತಿಗಳನ್ನು ಉಪಯೋಗಿಸಲಾಗುತ್ತದೆ?
(ಆ) ಕ್ರಿಸ್ತಶಕದ
ಮೊದಲಿನ ನೂರು ವರ್ಷಗಳ ಕಾಲವನ್ನು ಹೇಗೆ ಬರೆಯಲಾಗುತ್ತದೆ?
ಉತ್ತರ: ಕ್ರಿಸ್ತಶಕದ
ಮೊದಲಿನ ನೂರು ವರ್ಷಗಳ ಕಾಲವನ್ನು ಕ್ರಿ. ಶ.
೧ -೧೦೦’ ಎಂದು ಬರೆಯಲಾಗುತ್ತದೆ
ಪ್ರ. ೩.
ಮುಂದಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
(ಅ) ಕಾಲದ ಏಕರೇಖೆಯ ವಿಭಜನೆ ಎ೦ದರೇನು?
ಉತ್ತರ: ವರ್ಷದ ಮೇಲೆ ವರ್ಷಗಳು ಉರುಳುತ್ತಾ ಉರುಳುತ್ತಾ ನೂರು
ವರ್ಷಗಳ ಕಾಲ ಕಳೆದರೆ ಒ೦ದು ಶತಮಾನ ಪೂರ್ಣವಾಗುತ್ತದೆ. ಇಂತಹ ಹತ್ತು ಶತಮಾನಗಳು ಎಂದರೆ ಒಂದು
ಸಾವಿರ ವರ್ಷಗಳು ಕಳೆದರೆ ಒಂದು ಸಹಸ್ರಮಾನವು ಪೂರ್ಣವಾಗುತ್ತದೆ. ಕಾಲದ ಈ ರೀತಿಯ ವಿಭಜನೆಯನ್ನು
ಏಕರೇಖೆಯ ವಿಭಜನೆ ಎಂದು ಕರೆಯುತ್ತಾರೆ.
(ಆ) ಕಾಲಗಣನೆಯನ್ನು
ಮಾಡುವ ಘಟಕಗಳು ಯಾವುವು?
ಉತ್ತರ: ಕಾಲಗಣನೆ ಮಾಡುವು ಅಥವಾ
ಅಳೆಯುವ ಘಟಕಗಳು ಮುಂದಿನಂತಿವೆ: ಸೆಕಂಡು, ನಿಮಿಷ, ಗಂಟೆ, ದಿವಸ, ವಾರ, ಪಕ್ಷ, ತಿಂಗಳು, ವರ್ಷ, ಶತಮಾನ
ಹಾಗೂ ಸಹಸ್ರಮಾನ. ಸಕೆಂಡು
ಇವುಗಳಲ್ಲಿ ಅತ್ಯಂತ ಚಿಕ್ಕ ಘಟಕವಾಗಿದೆ.
ಕ್ರಿಸ್ತಶಕದ ಪ್ರಾರಂಭವು ಏಸು
ಕ್ರಿಸ್ತನ ಸ್ಮರಣಾರ್ಥಕವಾಗಿ ಆಯಿತು. ಒಂದು ವಿಶೇಷ ಘಟನೆಯ ಸ್ಮರಣಾರ್ಥವಾಗಿ ಹೊಸ ಕಾಲಗಣನೆಯನ್ನು
ಪ್ರಾರಂಭ ಮಾಡುವ ಪರಂಪರೆಯು ಮೊದಲಿನಿಂದಲೂ ಅಸ್ತಿತ್ವದಲ್ಲಿತ್ತು. ಉದಾ.: ಒಬ್ಬ ಪರಾಕ್ರಮಿ ರಾಜನ
ಪಟ್ಟಾಭಿಷೇಕದ ಘಟನೆ. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಪಟ್ಟಾಭಿಷೇಕದ ನಿಮಿತ್ತವಾಗಿ ಕ್ರಿ.ಶ.
೧೬೭೪ರಲ್ಲಿ 'ರಾಜ್ಯಾಭಿಷೇಕ ಶಕ' ಎಂಬ ಶಕೆಯನ್ನು ಆರ೦ಭಿಸಿದ್ದರು. ಎಂಬುದು ನಮಗೆ ತಿಳಿದಿದೆ.
ಪ್ರ. ೪.
ಮುಂದಿನ ಕೋಷ್ಠಕವನ್ನು ಪೂರ್ಣ ಮಾಡಿರಿ.
ಇದು ನಿಮಗೆ ಗೊತ್ತಿದೆಯೇ?
ಅಬ್ಬ: ಒಂದು ಅಬ್ಬ ಎಂದರೆ
ಎಷ್ಟು ವರ್ಷಗಳು ಎಂದು ಗೊತ್ತಿದೆಯಾ? ಒಂದರ ಮುಂದೆ ಮೂರು ಸೊನ್ನೆ ಎಂದರೆ ೧೦೦೦ ಹಾಗೂ ಒಂದರ
ಮುಂದೆ ನಾಲ್ಕು ಸೊನ್ನೆ ಎಂದರೆ ೧೦೦೦೦ ಎಂಬುದು ನಮಗೆ ಗೊತ್ತಿದೆ. ಅನಂತರ ೧೦೦ X ೧೦ = ೧೦೦೦ ಹಾಗೂ
೧೦೦೦ X ೧೦ = ೧೦೦೦೦ ಎ೦ಬ ಗಣಿತವೂ ನಮಗೆ ತಿಳಿದಿದೆ. ಅದೇ ಪದ್ಧತಿಯಿಂದ
ಏರಿಕೆಯ ಕ್ರಮದಲ್ಲಿ ಸಂಖ್ಯೆಗಳು ಹೇಗೆ ತಯಾರಾಗುತ್ತವೆ ಎಂಬುದನ್ನು ನೋಡೋಣ.
(ನೂರು) X (ಹತ್ತು) = (ಒಂದು ಸಾವಿರ)
(ಒಂದು ಸಾವಿರ) X (ಹತ್ತು) = (ಹತ್ತು
ಸಾವಿರ)
(ಹತ್ತು ಸಾವಿರ) X (ಹತ್ತು) = (ಒಂದು
ಲಕ್ಷ)
(ಒಂದು ಲಕ್ಷ) X (ಹತ್ತು) = (ಹತ್ತು
ಲಕ್ಷ)
(ಹತ್ತು ಲಕ್ಷ) X (ಹತ್ತು) = (ಒಂದು
ಕೋಟಿ)
(ಒಂದು ಕೋಟಿ) X (ಹತ್ತು) - (ಹತ್ತು
ಕೋಟಿ)
(ಹತ್ತು ಕೋಟಿ) X (ಹತ್ತು) = (ಒಂದು ಅಬ್ಬ)
ಕಾಲನಿರ್ಣಯದ ಪದ್ಧತಿ: ಕರ್ಬ ೧೪ ಎಂಬ ಘಟಕ
ಎಲ್ಲ ಸಜೀವಿಗಳ ಶರೀರದಲ್ಲಿರುತ್ತದೆ. ಸಜೀವಿಗಳ ಮರಣದ ನಂತರ ಅವುಗಳ ಅವಶೇಷಗಳಲ್ಲಿಯ ಕರ್ಬ ೧೪ರ
ಪ್ರಮಾಣವು ಕಡಿಮೆಯಾಗುತ್ತ ಹೋಗುತ್ತದೆ. ಪ್ರಾಗೈತಿಹಾಸಿಕ ಕಾಲದಲ್ಲಿಯ ಕಟ್ಟಿಗೆ, ಇದ್ದಿಲು. ಮೂಳೆಗಳು, ಪಳೆಯುಳಿಕೆಗಳು
ಇತ್ಯಾದಿ ವಸ್ತುಗಳಲ್ಲಿ ಕಡಿಮೆಯಾಗುತ್ತ ಹೋಗಿ, ಈಗ ಅದು ಎಷ್ಟು
ಪ್ರಮಾಣದಲ್ಲಿ ಉಳಿದಿದೆ ಎಂಬುದನ್ನು ಪ್ರಯೋಗ ಶಾಲೆಯಲ್ಲಿ ಅಳೆಯಲಾಗುತ್ತದೆ. ಬಾಕಿ ಉಳಿದಿರುವ
ಕರ್ಬ ೧೪ರ ಆಧಾರದಿಂದ ಆ ವಸ್ತುವಿನ ವಯಸ್ಸನ್ನು ಅಳೆಯಲು ಸಾಧ್ಯವಾಗುತ್ತದೆ. ಒಂದು ವಸ್ತುವಿನ
ವಯಸ್ಸನ್ನು ನಿರ್ಧರಿಸುವ ಈ ವೈಜ್ಞಾನಿಕ ಪದ್ಧತಿಗೆ 'ಕರ್ಬ ೧೪ ಪದ್ಧತಿ' ಎನ್ನುತ್ತಾರೆ.
ಕಾಲಮಾಪನದ ಇತರ ಅನೇಕ ಪದ್ಧತಿಗಳಿವೆ. ಆದರೆ 'ಕರ್ಬ ೧೪' ಈ ಪದ್ಧತಿಯು
ಹೆಚ್ಚು ಉಪಯೋಗಿಸಲಾಗುವ ಪದ್ಧತಿಯಾಗಿದೆ. ಇದು ಹಾಗೂ ಇತರ ಕಾಲಮಾಪನ ಪದ್ಧತಿಗಳ ಆಧಾರದಿಂದ
ವಸ್ತುಗಳ ಕಾಲ ನಿರ್ಣಯವಾದರೆ ಆ ವಸ್ತುವನ್ನು ಯಾವ ಸಂಸ್ಕೃತಿಯ ಜನರು ನಿರ್ಮಾಣ ಮಾಡಿದರೋ ಆ
ಸಂಸ್ಕೃತಿಯ ಕಾಲವನ್ನು ಏಕರೇಖೆಯ ಕಾಲರೇಖೆಯ ಮೇಲೆ ತೋರಿಸಲು ಬರುತ್ತದೆ.
ಗಿಡವು ಬೆಳೆಯುತ್ತಿರುವಾಗ ಗಿಡದ ಕಾಂಡದ ಒಂದೊಂದು ವರ್ತುಳವು
ಪ್ರತಿವರ್ಷ ಹೆಚ್ಚಾಗುತ್ತ ಹೋಗುತ್ತದೆ. ಈ ವರ್ತುಳಗಳನ್ನು ಎಣಿಸಿದಾಗ ಗಿಡದ ವಯಸ್ಸನ್ನು ಎಣಿಸಲು
ಬರುತ್ತದೆ. ಕಟ್ಟಿಗೆಯ ವಸ್ತುಗಳ ವಯಸ್ಸನ್ನು ಎಣಿಸಲೂ ಸಹ ಅದರ ಸಹಾಯವಾಗುತ್ತದೆ. ಈ ಪದ್ಧತಿಗೆ 'ವೃಕ್ಷಾಧಾರಿತ
ಕಾಲನಿರ್ಣಯ ಪದ್ಧತಿ' ಎನ್ನುತ್ತಾರೆ.
೩.
ಪೃಥ್ವಿಯ ಮೇಲಿನ ಸಜೀವಿಗಳು
ಪ್ರ. ೧.
ಪ್ರತಿಯೊಂದಕ್ಕೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ಏಕಜೀವ ಕೋಶ ನೋಡುವುದಕ್ಕಾಗಿ
ಯಾವುದರ ಅವಶ್ಯಕತೆ ಇರುತ್ತದೆ?
ಉತ್ತರ: ಏಕಜೀವ ಕೋಶ ಸಜೀವಿಗಳು ಅಂದರೆ ಆದಿಜಿವಿಗಳು ಅತ್ಯಂತ ಸೂಕ್ಷ್ಮವಾಗಿದ್ದು ಅವು
ಬರಿಗಣ್ಣಿಗೆ ಕಾಣಿಸುವುದಿಲ್ಲ ಆದ್ದರಿಂದ ಅವುಗಳನ್ನು ನೋಡಲು ಸೂಕ್ಷ್ಮದರ್ಶಕ ಯಂತ್ರದ ಅವಶ್ಯಕತೆ
ಇರುತ್ತದೆ.
(ಆ) ಏಕಜೀವ ಕೋಶ
ಸಜೀವಿಗಳು ಹೇಗೆ ನಿರ್ಮಾಣವಾದವು?
ಉತ್ತರ: ಪೃಥ್ವಿಯ ಉಗಮದ ನಂತರ
ಅದರ ಮಲ್ಮೈ ತಂಪಾಗಿ ಅದರ ಮೇಲೆ ಜಲರಾಶಿ ನಿರ್ಮಾಣವಾಗಲು ಸುಮಾರು ೮೦ ಕೋಟಿ ವರ್ಷಗಳು ಬೇಕಾದವು. ಈ
ಜಲರಾಶಿಯ ಆಧಾರದಿಂದ ಮೊದಲಿಗೆ ಅನೇಕ ಪ್ರಕಾರದ ಏಕಾಕೋಶಿಯ ಸಜೀವಿಗಳು ನಿರ್ಮಾಣವಾದವು.
ಪ್ರ. ೨.
ಮುಂದಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
(ಅ) ಸೂರ್ಯ ಹಾಗೂ ಸೂರ್ಯನ ಸುತ್ತಲೂ ತಿರುಗುವ ಗ್ರಹಗಳು ಹೇಗೆ
ನಿರ್ಮಾಣವಾದವು?
ಉತ್ತರ: ವೈಜ್ಞಾನಿಕ ಸಂಶೋಧನೆಗಳ
ಆಧಾರದಿಂದ ಸುಮಾರು ನಾಲ್ಕುವರೆ ಅಬ್ಜ ವರ್ಷಗಳ ಹಿಂದೆ ಅತ್ಯಂತ ಉಷ್ಣವಾಯು ಹಾಗೂ ಧೂಳು ಸೇರಿಕೊಂಡು
ಪ್ರಚಂಡ ಬೃಹತ್ ಗಾತ್ರದ ಗತಿಶೀಲ ಮೋಡವು ಅಂತರಿಕ್ಷದಲ್ಲಿ ನಿರ್ಮಾಣವಾಯಿತು. ಅದರ ಅತ್ಯಂತ ವೇಗವಾದ, ಚಕ್ರಾಕಾರದ ವೇಗದ ಪ್ರಮಾಣದಿಂದ ವಿಭಜನೆಯಾಗಿ, ಸೂರ್ಯ ಹಾಗೂ ಸೂರ್ಯನ ಸುತ್ತಲೂ ತಿರುಗುವ ಗ್ರಹಗಳು ನಿರ್ಮಾಣವಾದವು.
(ಆ) ಪ್ರಾಣಿಗಳ ಎರಡು ವೈಶಿಷ್ಟ್ಯಗಳನ್ನು ಬರೆಯಿರಿ.
ಉತ್ತರ: ಪ್ರಾಣಿಗಳ ಎರಡು
ವೈಶಿಷ್ಟ್ಯಗಳು ಮುಂದಿನಂತಿವೆ:
೧) ಪ್ರಾಣಿಗಳು ಶ್ವಾಸೋಚ್ಛಾಸ ಮಾಡುತ್ತವೆ.
೨) ಪ್ರಾಣಿಗಳು ಆಹಾರವನ್ನು ಪಡೆಯುವುದಕ್ಕಾಗಿ ಅಥವಾ ಇತರ ಕಾರಣಗಳಿಗಾಗಿ
ಸಂಚಾರ ಮಾಡುತ್ತವೆ.
೩. ಕೆಲವು ಪ್ರಾಣಿವರ್ಗದಲ್ಲಿಯ ಪ್ರಾಣಿಗಳು ಮೊಟ್ಟೆ ಇಡುತ್ತವೆ. ಅದರಿಂದ
ಮರಿಗಳು ಹುಟ್ಟಿಕೊಳ್ಳುತ್ತವೆ. ಕೆಲವು ಪ್ರಾಣಿ ವರ್ಗದಲ್ಲಿಯ ಪ್ರಾಣಿಗಳು ಸಂತತಿಗೆ ಜನ್ಮ
ನೀಡುತ್ತವೆ.
ಪ್ರ. ೩. ಮುಂದಿನ ಚೌಕಟ್ಟಿನಲ್ಲಿ ಅಡಗಿದ ಐದು ಗ್ರಹಗಳ ಹೆಸರುಗಳನ್ನು ಶೋಧಿಸಿ, ಅವುಗಳ ಸುತ್ತಲೂ ವೃತ್ತಗಳನ್ನು ಮಾಡಿರಿ.
ಉತ್ತರ: ಮಂಗಳ
ಪ್ರ. ೪.
ಮುಂದಿನ ಘಟನೆಗಳನ್ನು ಕಾಲಾನುಕ್ರಮವಾಗಿ ಬರೆಯಿರಿ.
(ಅ) ಪೃಥ್ವಿಯ ಮೇಲೆ ಜಲರಾಶಿಯ ನಿರ್ಮಾಣವಾಯಿತು.
(ಆ) ಸೂರ್ಯ ಮತ್ತು ಸೂರ್ಯನ ಸುತ್ತಲೂ ತಿರುಗುವ ಗ್ರಹಗಳು
ನಿರ್ಮಾಣವಾದವು.
(ಇ) ಅನೇಕ ಪ್ರಕಾರದ ಏಕಜೀವಿಕೋಶ ಸಜೀವಿಗಳು ನಿರ್ಮಾಣವಾದವು.
(ಈ) ಉಷ್ಣವಾಯು ಹಾಗೂ ಧೂಳು ಇವು ಸೇರಿಕೊಂಡು ರೂಪುಗೊಂಡ ಒಂದು ಪ್ರಚಂಡ
ಬೃಹತ್ ಗಾತ್ರದ ಗತಿಶೀಲ ಮೋಡವು ಅಂತರಿಕ್ಷದಲ್ಲಿ ನಿರ್ಮಾಣವಾಯಿತು.
ಉತ್ತರ: (೧) ಉಷ್ಣವಾಯು ಹಾಗೂ
ಧೂಳು ಇವು ಸೇರಿಕೊಂಡು ರೂಪುಗೊಂಡ ಒಂದು ಪ್ರಚಂಡ ಬೃಹತ್ ಗಾತ್ರದ ಗತಿಶೀಲ ಮೋಡವು ಅಂತರಿಕ್ಷದಲ್ಲಿ
ನಿರ್ಮಾಣವಾಯಿತು.
(೨) ಸೂರ್ಯ ಮತ್ತು
ಸೂರ್ಯನ ಸುತ್ತಲೂ ತಿರುಗುವ ಗ್ರಹಗಳು ನಿರ್ಮಾಣವಾದವು.
(೩) ಪೃಥ್ವಿಯ ಮೇಲೆ
ಜಲರಾಶಿಯ ನಿರ್ಮಾಣವಾಯಿತು.
(೪) ಅನೇಕ ಪ್ರಕಾರದ
ಏಕಜೀವಿಕೋಶ ಸಜೀವಿಗಳು ನಿರ್ಮಾಣವಾದವು.
ಕೃತಿ: ವಿವಿಧ ಆಕಾರದ ಚೆಂಡುಗಳ ಸಹಾಯದಿಂದ ಸೌರಮಾಲೆಯ ಪ್ರತಿಕೃತಿಯನ್ನು
ತಯಾರಿಸಿರಿ.
ಉಪಕ್ರಮ
ಹತ್ತಿರದ ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡಿರಿ ಅಥವಾ ನಿಮ್ಮ ಪರಿಸರದಲ್ಲಿ
ಕಂಡುಬರುವ ಪ್ರಾಣಿಗಳ ಪಟ್ಟಿಯನ್ನು ಮಾಡಿರಿ ಮತ್ತು ಅವುಗಳ ವೈಶಿಷ್ಟ್ಯಗಳನ್ನು ಬರೆಯಿರಿ.
೪.
ಉತ್ಕಾಂತಿ
ಪ್ರ. ೧. ಬಿಟ್ಟ
ಸ್ಥಳಗಳಲ್ಲಿ ಕಂಸದಲ್ಲಿಯ ಯೋಗ್ಯ ಪರ್ಯಾಯ ಬರೆಯಿರಿ.
(ಅ) ಉತ್ಕ್ರಾಂತಿಯ ಸಂಕಲ್ಪನೆಯನ್ನು ಪ್ರಪ್ರಥಮವಾಗಿ............ ಎಂಬ ವಿಜ್ಞಾನಿಯು ಮಂಡಿಸಿದನು.
(ಚಾರ್ಲ್ಸ್
ಡಾರ್ವಿನ್, ಎಲಾರ್ಡ ಲಿಬಿ, ಲೂಯಿ ಲಿಕಿ)
(ಆ) ಕಶೇರುಕ ಪ್ರಾಣಿ ವರ್ಗದಲ್ಲಿ ಎಲ್ಲಕ್ಕಿಂತ ಹೆಚ್ಚು ಏಕಸಿತಗೊಂಡ
ಹಂತ ಎಂದರೆ .......... ಪ್ರಾಣಿಯಾಗಿದೆ. (ಜಲಚರ, ಉಭಯಚರ, ಸಸ್ತನಿ)
ಪ್ರ. ೨.
ಪ್ರತಿಯೊಂದಕ್ಕೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ನೀರು ಮತ್ತು
ಭೂಮಿ ಎರಡರಲ್ಲೂ ವಾಸಿಸುವ ಪ್ರಾಣಿಗಳಿಗೆ ಏನೆಂದು ಕರೆಯುತ್ತಾರೆ?
ಉತ್ತರ: ನೀರು ಮತ್ತು ಭೂಮಿ
ಎರಡರಲ್ಲೂ ವಾಸಿಸುವ ಪ್ರಾಣಿಗಳಿಗೆ ಉಭಯಚರ
ಪ್ರಾಣಿ ಎಂದು ಕರೆಯುತ್ತಾರೆ.
(ಆ) ಆದಿ ಮಾನವನ
ಪ್ರಭೇದವು ಪ್ರಥಮವಾಗಿ ಎಲ್ಲಿ
ಅಸ್ತಿತ್ವಕ್ಕೆ ಬಂದಿತು?
ಉತ್ತರ: ಆದಿ ಮಾನವನ
ಪ್ರಭೇದವು ಪ್ರಥಮವಾಗಿ ಆಫ್ರಿಕಾದಲ್ಲಿ ಅಸ್ತಿತ್ವಕ್ಕೆ
ಬಂದಿತು.
ಪ್ರ. ೩.
ಮುಂದಿನ ವಿಧಾನಗಳ ಬಗ್ಗೆ ಕಾರಣ ಬರೆಯಿರಿ.
(ಅ) ಡೈನೊಸಾರ್‌ಗಳ ದೈತ್ಯಗಾತ್ರದ ಪ್ರಭೇದವು ನಾಶವಾಯಿತು.
ಉತ್ತರ: ಹಿಂದೆ ಡೈನೊಸಾರ್
ವರ್ಗದ ಪ್ರಾಣಿಗಳ ಅನೇಕ ದೈತ್ಯಗಾತ್ರದ ಪ್ರಭೇದಗಳಿದ್ದವು. ಆ ಪ್ರಭೇದಗಳು ಒಮ್ಮೆ ಆಕಸ್ಮಾತ ಉಂಟಾದ
ನೈಸರ್ಗಿಕ ವಿಪತ್ತು ಅಥವಾ ಪರ್ಯವರಣದಲ್ಲಿ ಉಂಟಾದ ಆಕಸ್ಮಿಕ ಬದಲಾವಣೆಗಳು ಈ ಡೈನೊಸಾರಗಳ
ದೈತ್ಯಗಾತ್ರದ ಪ್ರಭೇದಗಳು ನಾಶವಾಗಲು ಕಾರಣವಾಗಿರಬಹುದು.
(ಆ) ಮೂಲ ಪ್ರಭೇದಕ್ಕಿಂತ
ಕೆಲವು ವಿಭಿನ್ನ ವೈಶಿಷ್ಟ್ಯಗಳಿರುವ ಒಂದು ಹೊಸ ಪ್ರಭೇದ ಉದಯವಾಗುತ್ತದೆ.
ಉತ್ತರ: ಪರ್ಯವರಣದಲ್ಲಿಯ
ಬದಲಾವಣೆಗಳೊಂದಿಗೆ ಹೊಂದಾಣಿಕೆಯಾಗುವ ಹಾಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ
ಪ್ರಯತ್ನದಲ್ಲಿ ಒಂದು ವಿಶಿಷ್ಟ ಪ್ರಾಣಿ ವರ್ಗದಲ್ಲಿಯ ಪ್ರಾಣಿಯ ಶರೀರ ರಚನೆಯಲ್ಲಿ ಕೆಲವು ಆಂತರಿಕ
ಬದಲಾವಣೆಗಳು ಉಂಟಾಗುತ್ತವೆ. ಕಾಲಾಂತರದಲ್ಲಿ ಅದೇ ಬಡಲವನೆಯು ಆ ಪ್ರಾಣಿವರ್ಗದಲ್ಲಿ ಮುಂದಿನ
ಪೀಳಿಗೆಯಲ್ಲಿ ಅನುವಂಶಿಕತೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಈ ರೀತಿ ಮುಲ
ಪ್ರಾಣಿವರ್ಗಕ್ಕಿಂತ ಕೆಲವು ವಿಭಿನ್ನ ವೈಶಿಷ್ಟ್ಯವಿರುವ ಒಂದು ಹೊಸ ಪ್ರಭೇದ ಉದಯವಾಗುತ್ತದೆ.
ಪ್ರ. ೪.
ಕೊಟ್ಟಿರುವ ಕಲ್ಪನಾ ಚಿತ್ರದಲ್ಲಿಯ ಬಿಟ್ಟಸ್ಥಳಗಳನ್ನು ತುಂಬಿರಿ.
ಕೃತಿ: ಡೈನೊಸಾರ್
ಪ್ರತಿಕೃತಿಯನ್ನು ತಯಾರಿಸಿರಿ.
ಉಪಕ್ರಮ:
ಅಕಶೇರುಕ ವಂಶದ ಸಜೀವಿಗಳ ಹಾಗೂ ಕಶೇರುಕ ವಂಶದ ಸಜೀವಿಗಳ ಚಿತ್ರಗಳನ್ನು
ಸಂಗ್ರಹಿಸಿರಿ ಮತ್ತು ಅವುಗಳನ್ನು ಸರಿಯಾಗಿ ವಹಿಯಲ್ಲಿ ಅಂಟಿಸಿ ಪ್ರಾಣಿಗಳ ವೈಶಿಷ್ಟ್ಯಗಳನ್ನು
ಬರೆಯಿರಿ.
೫.
ಮಾನವನ ಪ್ರಗತಿ
ಪ್ರ. ೧. ಬಿಟ್ಟ
ಸ್ಥಳಗಳಲ್ಲಿ ಯೋಗ್ಯ ಶಬ್ದವನ್ನು ಬರೆಯಿರಿ.
(ಅ) ಲ್ಯಾಟಿನ್
ಭಾಷೆಯಲ್ಲಿ ಶಬ್ದದ ಹೊಮೋ ಅರ್ಥ ಮಾನವ ಎಂದು ಇದೆ.
(ಆ) ಬಲಿಷ್ಠ ಮಾನವನು ಪ್ರಾಮುಖ್ಯವಾಗಿ ಗುಹೆಗಳಲ್ಲಿ ವಸತಿ
ಮಾಡುತ್ತಿದ್ದನು.
ಪ್ರ. ೨.
ಪ್ರತಿಯೊಂದಕ್ಕೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ಕೈಕೊಡಲಿಯನ್ನು
ಯಾರು ತಯಾರಿಸಿದರು?
ಉತ್ತರ: ಕೈಕೊಡಲಿಯನ್ನು ಕುಶಲ ಮಾನವ ತಯಾರಿಸಿದರು.ಉತ್ತರ: ಸ್ವಾತಂತ್ರ್ಯ
ಪ್ರಾಪ್ತಿ ಎಂಬ ಘಟನೆಯು ಸ್ವಾತಂತ್ರ್ಯ ಹೋರಾಟ ಎಂಬ ಕೃತಿಯ
ಪರಿಣಾಮವಾಗಿದೆ?
(ಆ) ಆನುವಂಶಿಕತೆ
ಎಂದರೆ ಏನು?
ಉತ್ತರ:
ಪ್ರ. ೩. ಕೆಳಗಿನ ವಿಧಾನಗಳಿಗೆ
ಕಾರಣಗಳನ್ನು ಬರೆಯಿರಿ.
(ಅ) ಬಲಿಷ್ಠ ಮಾನವನ
ಅಸ್ತಿತ್ವವು ಅಳಿದು ಹೋಯಿತು.
(ಆ) ಬುದ್ದಿವಂತ ಮಾನವನು ವಿವಿಧ ಧ್ವನಿಯಲ್ಲಿ ಏರಿಳಿತಗಳನ್ನು ಮಾಡಲು
ಶಕ್ತನಾಗಿದ್ದನು.
೧. ನೇರ ಬೆನ್ನೆಲುಬಿನ ಮಾನವ XX XXXX.
೨. ನೇರ ಬೆನ್ನೆಲುಬಿನ ಮನುಷ್ಯನಿಗೆ Xx ನಿರ್ಮಾಣ ಮಾಡುವ
ತಂತ್ರ ಸಾಧಿಸಿರಲಿಲ್ಲ.
೩. ಬಲಿಷ್ಠ ಮಾನವನ ಅವಶೇಷಗಳು ಪ್ರಪ್ರಥಮವಾಗಿ ಈ ದೇಶದಲ್ಲಿ
ದೊರಕಿದುವು XXX.
೭. ಬುದ್ಧಿವಂತ ಮಾನವನು ನಿರೀಕ್ಷಣೆ ಮತ್ತು ಕಲ್ಪನಾಶಕ್ತಿಯ ಆಧಾರದಿಂದ
XXX ತೆಗೆಯ ತೊಡಗಿದನು.
೯. XXXX
ಎಂದರೆ ಬುದ್ಧಿವಂತ
ಮೇಲಿನಿಂದ ಕೆಳಕ್ಕೆ
೧. ಕುಶಲ ಮಾನವ XX XXXX.
೪. ಕುಶಲ ಮಾನವನ ಅಸ್ತಿತ್ವದ ಪುರಾವೆಯು XXX ದೇಶದ ಪರಿಸರದಲ್ಲಿ
ದೊರಕಿತು.
೫. ನೇರ ಬೆನ್ನೆಲುಬಿನ ಮಾನವನು XXXXX ಗಳಂತಹ ಆಯುಧಗಳನ್ನು ತಯಾರಿಸುತ್ತಿದ್ದನು.
೬. ಬುದ್ಧಿವಂತ ಮಾನವವನ್ನು ಯುರೋಪದಲ್ಲಿ XXXX ಹೆಸರಿನಿಂದ
ಗುರುತಿಸಲಾಗುತ್ತಿತ್ತು.
೮. ಬಲಿಷ್ಠ ಮಾನವನು ಚಿಕ್ಕ ಧ್ವನಿ ತೆಗೆದು XXX ಸಾಧಿಸುತ್ತಿದ್ದನು.
೧೦. ಬಲಿಷ್ಠ ಮಾನವನು ತನ್ನ ಆಯುಧಗಳನ್ನು XXX ದಿಂದ ತಯಾರಿಸಿದನು.
ಕೃತಿ: ಕುಶಲ ಮಾನವನಿಂದ
ವಿಕಸಿತ ಬುದ್ಧಿಯ ಮಾನವ-ಇವರ ಪ್ರಗತಿಯ ವಿವಿಧ ಹಂತಗಳಲ್ಲಿಯ ಮಾನವನ ಪ್ರಗತಿಯ ತುಲನಾತ್ಮಕ ಕೋಷ್ಟಕ
ತಯಾರಿಸಿರಿ.
೬.
ಶಿಲಾಯುಗ: ಕಲ್ಲಿನ ಆಯುಧಗಳು
ಪ್ರ. ೧. ಬಿಟ್ಟ ಸ್ಥಳಗಳಲ್ಲಿ
ಕಂಸದಲ್ಲಿಯ
ಯೋಗ್ಯ ಪರ್ಯಾಯವನ್ನು ಬರೆಯಿರಿ.
(ಆ) ಯಾವ ಕಾಲದ ಆಯುಧಗಳಲ್ಲಿ
ಪ್ರಾಮುಖ್ಯವಾಗಿ ಕಲ್ಲಿನ ಆಯುಧಗಳು ದೊರೆಯುತ್ತವೆಯೋ ಆ ಕಾಲಕ್ಕೆ ನಾವು .......... ಎನ್ನುತ್ತೇವೆ.
(ತಾಮ್ರಯುಗ, ಲೋಹಯುಗ, ಶಿಲಾಯುಗ)
(ಆ) ಮಹಾರಾಷ್ಟ್ರದ
ಪುರಾತನ ಶಿಲಾಯುಗದ ಸ್ಥಳಗಳಲ್ಲಿ ನಾಶಿಕ ಹತ್ತಿರದ ........... ಈ ಸ್ಥಳವು ಪ್ರಸಿದ್ಧವಾಗಿದೆ. (ಗಂಗಾಪೂರ, ಸಿನ್ನರ, ಚಾ೦ದವಡ)
ಪ್ರ. ೨. ಕೆಳಗಿನವುಗಳಲ್ಲಿ
ಮಧ್ಯ ಶಿಲಾಯುಗದ ಸ್ಥಳಗಳಲ್ಲಿಯ ತಪ್ಪಾದ ಜೊತೆಯನ್ನು ಗುರುತಿಸಿರಿ.
(ಅ) ರಾಜಸ್ಥಾನ -
ಬಾಗೋರ
(ಆ) ಮಧ್ಯ ಪ್ರದೇಶ – ಭೀಮಬೇಟಕಾ
(ಇ)
ಗುಜರಾತ - ಶಾಂಘಣಜ
(ಈ) ಮಹಾರಾಷ್ಟ್ರ – ವಿಜಾಪೂರ, ವಿಜಾಪುರ
ಕರ್ನಾಟಕದಲ್ಲಿ ಇದೆ.
ಪ್ರ. ೩.
ಕೆಳಗಿನ ಪ್ರಶ್ನೆಗಳಿಗೆ ಸಲ್ಲದರಲ್ಲಿ ಉತ್ತರ ಬರೆಯಿರಿ.
(ಅ) ಆಘಾತ ತಂತ್ರದ ಬಳಕೆಯನ್ನು
ಮಾನವನ್ನು ಹೇಗೆ ಮಾಡಿದನು?
(ಆ) ಬುದ್ಧಿವಂತ ಮಾನವನು
ಕಲ್ಲಿನ ಆಯುಧಗಳನ್ನು ತಯಾರಿಸುವ ತಂತ್ರದಲ್ಲಿ ಯಾವ ಕ್ರಾಂತಿಯನ್ನು ಮಾಡಿದನು?
ಉತ್ತರ:
ಪ್ರ. ೫. ಕೆಳಗಿನ
ಯಾವ ಆಧುನಿಕ ಯಂತ್ರಗಳಲ್ಲಿ ಕಲ್ಲಿನ ಉಪಯೋಗ ಮಾಡಲಾಗುತ್ತದೆ?
(ಆ) ಮಿಕ್ಸರ: ವಿದ್ಯುತ ಬಳಕೆ
(ಆ) ಹಿಟ್ಟಿನ ಗಿರಣಿ:
ಹಿಟ್ಟಿನ ಗಿರಣಿಯಲ್ಲಿ ಬೀಸುವ ಕಲ್ಲುಗಳ ಉಪಯೋಗ ಮಾಡುವರು.
(ಇ) ಮಸಾಲೆಯನ್ನು
ಕುಟ್ಟುವ ಯಂತ್ರ: ಒಳ್ಳು
ಮತ್ತು ಕಲ್ಲು /ಈಗೀಗ ವಿದ್ಯುತ ಮಿಕ್ಸರ್ ಬಳಸುವರು
ಪ್ರ. ೬. ಕೆಳಗಿನ
ಸ್ಥಳಗಳನ್ನು ಭಾರತದ ನಕಾಶೆಯಲ್ಲಿ ತೋರಿಸಿರಿ.
(ಅ)
ಪುರಾತನ ಶಿಲಾಯುಗದ
ಮಹಾರಾಷ್ಟ್ರದಲ್ಲಿಯ ಒಂದು ಸ್ಥಳ.
(ಆ)
ಸಂಸ್ಕೃತಿಯ
ಅವಶೇಷಗಳು ದೊರೆಯುವ ನದಿಯ ಕೊಳ್ಳ.
(ಇ)
ಮಧ್ಯ ಶಿಲಾಯುಗದ
ಅವಶೇಷಗಳು ದೊರೆತ ಮಧ್ಯ ಪ್ರದೇಶದಲ್ಲಿಯ ಒಂದು ಸ್ಥಳ.
ಉಪಕ್ರಮ
ನಿಮ್ಮ ಪರಿಸರದಲ್ಲಿಯ ವಿವಿಧ ಉದ್ಯಮಗಳಿಗೆ ಭೇಟಿನೀಡಿ ಅಲ್ಲಿ ಉಪಯೋಗಿಸಲಾಗುವ
ಅಯುಧಗಳ ಮಾಹಿತಿ ಪಡೆಯಿರಿ ಹಾಗೂ ಅವುಗಳ ವರ್ಗಿಕರಣ ಮಾಡಿರಿ.
೭.
ಆಶ್ರಯದಿಂದ ಊರು- ವಸಾಹತು
ಪ್ರ. ೧. ಪ್ರತಿಯೊಂದಕ್ಕೆ
ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ಬುದ್ಧಿವಂತ
ಮಾನವನು ಯಾವ ಪ್ರಾಣಿಗಳ ಬೇಟೆಗೆ ಪ್ರಾಧಾನ್ಯ ನೀಡಿದನು ?
(ಆ) ನವ ಶಿಲಾಯುಗದ
ಸಂಸ್ಕೃತಿಯ ವೈಶಿಷ್ಟ್ಯ ಯಾವುದು ?
ಪ್ರ. ೨.
ಕೆಳಗಿನ ವಿಧಾನಗಳ ಕಾರಣಗಳನ್ನು ಬರೆಯಿರಿ.
(ಅ) ಮಧ್ಯ ಶಿಲಾಯುಗದ
ಬುದ್ಧಿವಂತ ಮಾನವನ ಆಹಾರಪದ್ಧತಿಯಲ್ಲಿ ಬದಲಾವಣೆಯಾಗುತ್ತಿತ್ತು.
(ಆ) ಮಾನವರು ಒಂದು
ಸ್ಥಳದಲ್ಲಿ ದೀರ್ಘಕಾಲದ ವರೆಗೆ ವಸತಿ ಮಾಡುತ್ತಿದ್ದರು.
ಪ್ರ. ೩.
ಮಧ್ಯ ಶಿಲಾಯುಗದ ತಾತ್ಕಾಲಿಕ ಬಿಡಾರದ ಕಲ್ಪನಾ ಚಿತ್ರದ ನಿರೀಕ್ಷಣೆ ಮಾಡಿ ಕೆಳಗಿನ ಪ್ರಶ್ನೆಗಳಿಗೆ
ಉತ್ತರ ಬರೆಯಿರಿ.
(ಅ) ಚಿತ್ರದಲ್ಲಿಯ
ಮನೆಗಳ ರಚನೆ ಹೇಗಿದೆ ?
(ಆ) ಚಿತ್ರದಲ್ಲಿಯ
ಮನೆಗಳನ್ನು ಕಟ್ಟುವುದಕ್ಕಾಗಿ ಯಾವ ಸಾಧನ ಸಲಕರಣೆಗಳ ಬಳಕೆ ಕಂಡುಬರುತ್ತದೆ?
(ಇ)
ತಾತ್ಕಾಲಿಕ
ಬಿಡಾರದಲ್ಲಿಯ ವ್ಯಕ್ತಿಗಳು ಯಾವ ಉದ್ಯೋಗ ಮಾಡುತ್ತಿರಬಹುದು ?
ಪ್ರ. ೪. ವಿವಿಧ ಋತುಗಳಲ್ಲಿ
ಉಂಟಾಗುವ ಹವಾಮಾನದಲ್ಲಿಯ ಬದಲಾವಣೆಯಿಂದ ನಿಮ್ಮ ಬದುಕಿನ ಮೇಲೆ ಹೇಗೆ ಪರಿಣಾಮವಾಗುತ್ತದೆಂಬುದನ್ನು
ಬರೆಯಿರಿ.
೫. ನವಶಿಲಾಯುಗದ ಹಳ್ಳಿ ಮತ್ತು ಆಧುನಿಕ ಶಿಲಾಯುಗದ ಹಳ್ಳಿ-ಅವುಗಳ
ಹೋಲಿಕೆ ಮಾಡಿರಿ.
ಕೃತಿ: ವಿವಿಧ ಪ್ರಕಾರದ
ಮನೆಗಳ ಪ್ರತಿಕೃತಿಯನ್ನು ತಯಾರಿಸಿರಿ.
೮.
ಸ್ಥಿರ ಜೀವನದ ಆರಂಭ
ಪ್ರ. ೧. ಬಿಟ್ಟ
ಸ್ಥಳಗಳಲ್ಲಿ ಕಂಸದಲ್ಲಿಯ ಯೋಗ್ಯ ಪರ್ಯಾಯವನ್ನು ಬರೆಯಿರಿ.
(ಅ) ಸುಮಾರು
ಹನ್ನೊಂದು ಸಾವಿರ ವರ್ಷಗಳ ಹಿಂದಿನ ಬೇಸಾಯದ ಪುರಾವೆಗಳು ಮೊದಲು ಇಸ್ರಾಯಿಲ ಮತ್ತು ...... ದಲ್ಲಿ
ದೊರೆತಿವೆ. (ಇರಾಣ, ಇರಾಕ, ದುಬೈ)
(ಆ) ನವ ಶಿಲಾಯುಗದ
ಆರಂಭದಲ್ಲಿ..... ಮನೆಗಳನ್ನು ಕಟ್ಟಲಾಗುತ್ತಿತ್ತು. (ಮಣ್ಣಿನ, ಇಟ್ಟಿಗೆಯ, ನೆರಕೆಯ)
ಪ್ರ. ೨.
ಕೆಳಗಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
(ಆ) ಯಾವುದೊಂದು
ಪ್ರಾಣಿಯನ್ನು ಪಳಗಿಸುವ ಪದ್ಧತಿಯಲ್ಲಿಯ ಮೂರು ಮುಖ್ಯ
ಹಂತಗಳಾವವು ?
(ಆ) ಸಮೂಹದಲ್ಲಿಯ
ಸ್ತ್ರೀ-ಪುರುಷರೊಳಗಿಂದ ಕಸಬುದಾರರು ಹೇಗೆ ನಿರ್ಮಾಣವಾದರು?
ಪ್ರ. ೪. ಯಾವುದೇ
ಐದು ಸಾಕುಪ್ರಾಣಿಗಳ ಉಪಯೋಗವನ್ನು ಬರೆಯಿರಿ.
ಪ್ರ. ೫.
ಇಂದಿನ ಕಾಲದಲ್ಲಿ ಪೋಲೀಸ ದಳದಲ್ಲಿ ಯಾವ ಪ್ರಾಣಿಯ ಉಪಯೋಗ ಮಾಡಲಾಗುತ್ತದೆ ?
ಹೇಗೆ ?
ಉಪಕ್ರಮ
ನಿಮ್ಮ ಪರಿಸರದಲ್ಲಿಯ ಐದು ಉದ್ಯಮಿಗಳ ಸ್ಥಳಗಳಿಗೆ ಭೇಟಿ ನೀಡಿ ಅವರ
ಕಾರ್ಯದ ಬಗ್ಗೆ ಮಾಹಿತಿ ಪಡೆಯಿರಿ.
000
೯.
ಸ್ಥಿರ ಜೀವನ ಮತ್ತು ನಗರ ಸಂಸ್ಕೃತಿ
(ಆ) ಕಲ್ಲಿನ ಆಯುಧಗಳು ......... ಯುಗ =ಶಿಲಾಯುಗ
(ಆ) ತಾಮ್ರದ ಆಯುಧಗಳು ಮತ್ತು ವಸ್ತುಗಳು ಯುಗ=ತಾಮ್ರ
(2) ಕಬ್ಬಿಣದ ಆಯುಧಗಳು ಮತ್ತು ವಸ್ತುಗಳು =ಲೋಹಯುಗ
ಪ್ರ. ೨.
ಕೆಳಗಿನ ಘಟಕಗಳನ್ನು ಕಾಲಕ್ಕನುಸಾರವಾಗಿ ಯೋಗ್ಯ ಕ್ರಮದಲ್ಲಿ ಬರೆಯಿರಿ.
(ಅ) (೧) ತಾಮ್ರ (೨)
ಬ೦ಗಾರ (೩) ಕಬ್ಬಿಣ
ಉತ್ತರ: ತಾಮ್ರ, ಕಬ್ಬಿಣ, ಬಂಗಾರ
(ಆ) (೧) ತಾಮ್ರಯುಗ (೨) ಲೋಹಯುಗ (೩) ಶಿಲಾಯುಗ
ಉತ್ತರ:
ಪ್ರ. ೩.
ಕೆಳಗಿನ ಘಟನೆಗಳ ಪರಿಣಾಮವನ್ನು ಬರೆಯಿರಿ.
(ಆ) ತಾಮ್ರ- ಈ ಲೋಹದ ಶೋಧ :
(ಆ) ಚಕ್ರದ ರೋಧ :
(ಇ) ಲಿಪಿಯ ಜ್ಞಾನ :
ಪ್ರ. ೪. ಟಿಪ್ಪಣಿ
ಬರೆಯಿರಿ.
(ಅ) ಲೋಹದ ಬಳಕೆ:
(ಆ) ನಗರಗಳ ಸಮಾಜ ವ್ಯವಸ್ಥೆ:
೧೦.
ಐತಿಹಾಸಿಕ ಕಾಲ
ಪ್ರ. ೧. ಪ್ರತಿಯೊಂದಕ್ಕೆ
ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ನವ ಶಿಲಾಯುಗದ ಸಂಸ್ಕೃತಿಯ ವಿಕಾಸವು ಎಲ್ಲಿ ಆಯಿತು?
(ಆ) ಹರಪ್ಪಾ ಸಂಸ್ಕೃತಿಯ
ಕಸಬುದಾರರು ಯಾವ ವಸ್ತುಗಳನ್ನು ತಯಾರಿಸುವುದರಲ್ಲಿ ಕುಶಲರಾಗಿದ್ದರು?
ಪ್ರ. ೨. ಸ್ವಲ್ಪದರಲ್ಲಿ
ಉತ್ತರ ಬರೆಯಿರಿ.
(ಅ) ಹರಪ್ಪಾ ಸಂಸ್ಕೃತಿಯ ನಗರ ರಚನೆ ಯಾವ ಪ್ರಕಾರದ್ದಾಗಿತ್ತು ?
(ಆ) ನೈಲ ನದಿ ತೀರದ ಭೂಮಿಯು ಏಕೆ ಫಲವತ್ತಾಗಿತ್ತು ?
ಪ್ರ. ೩. ಕೆಳಗಿನ ಕಲ್ಪನಾ
ಚಿತ್ರವನ್ನು ಪೂರ್ಣ ಮಾಡಿರಿ.
ಕೃತಿ: ಭಾರತದ ನಕಾಶದಲ್ಲಿ ಹರಪ್ಪಾ ಸಂಸ್ಕೃತಿಯಲ್ಲಿಯ ಸ್ಥಳಗಳನ್ನು
ತೋರಿಸಿರಿ.
ಉಪಕ್ರಮ
(ಅ) ನಿಮ್ಮ
ಪರಿಸರದಲ್ಲಿ ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರನ್ನು ಭೇಟಿ ಮಾಡಿ ಅವರಿಂದ ವಾದ್ಯಗಳ ವಿಷಯದ
ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.
(ಆ) ನಿಮ್ಮ
ಪರಿಸರದಲ್ಲಿಯ ಹಿರಿಯ ನಾಗರಿಕರನ್ನು ಭೇಟಿ ಮಾಡಿ ಅವರ ಕಾಲದಲ್ಲಿಯ ಪರಂಪರಾಗತ ಆಟಗಳ ಮಾಹಿತಿ
ಪಡೆಯಿರಿ.
ಇದು ನಿಮಗೆ ಗೊತ್ತಿದೆಯೆ ?
ಮೊಸೊಪೋಟೆಮಿಯಾದಲ್ಲಿ ನೆಲೆಸಿದ ನಗರ ಸಂಸ್ಕೃತಿಗಳಲ್ಲಿಯ ನಾಲ್ಕು
ಮಹತ್ವದ ಸಂಸ್ಕೃತಿಗಳ ಹೆಸರುಗಳು ಮುಂದಿನಂತಿವೆ: (೧) ಸುಮೇರಿಯನ್ (೨) ಅಕ್ಕೇಡಿಯನ್ (೩)
ಬ್ಯಾಬಿಲೋನಿಯನ್ (೪) ಆಸೀರಿಯನ್. ಕ್ರಿ.ಶ.ಪೂ ೨೩೫೦ ರ ಸುಮಾರಿಗೆ ಅಕ್ಕಡದ ಸಾಮ್ರಾಜ್ಯವು
ಉದಯಕ್ಕೆ ಬಂದಿತು. ಅಕ್ಕಡದ ಸಮ್ರಾಟನಾದ ಸಾರ್ಗನ್‌ನ ಕಾಲದಲ್ಲಿ ಹರಪ್ಪಾ ಸಂಸ್ಕೃತಿ ಮತ್ತು
ಮೆಸೊಪೋಟೆಮಿಯಾಗಳ ನಡುವಿನ ವ್ಯಾಪಾರವು ಅಭಿವೃದ್ಧಿ ಹೊಂದಿತ್ತು. ಬ್ಯಾಬಿಲೋನದ ರಾಜನಾದ
ಹಮ್ಮುರಾಬಿ ಕ್ರಿ.ಶ.ಪೂ. ೧೭೯೨ ರಿಂದ ೧೭೫೦ರ ಕಾಲದಲ್ಲಿ ಆಗಿ ಹೋದನು. ಅವನು ತನ್ನ ಪ್ರಜೆಗಳಿಗೆ
ಲಿಖಿತ ರೂಪದಲ್ಲಿ ಸುವ್ಯವಸ್ಥಿತ ಕಾನೂನುಗಳನ್ನು ನೀಡುವ ಜಗತ್ತಿನಲ್ಲಿಯ ಪ್ರಪ್ರಥಮ
ರಾಜನಾಗಿದ್ದನು.
ಪ್ರಾಚೀನ ಇಜಿಪ್ತದಲ್ಲಿಯ ಜನರು ಸಾಧಿಸಿದ ಕಾರ್ಯಗಳಲ್ಲಿ
(ಸಂಗತಿಗಳಲ್ಲಿ) ವಿಶೇಷ ಕಾರ್ಯವೆಂದರೆ ಅವರ ಸ್ಥಾಪತ್ಯ ಶಾಸ್ತ್ರ (ವಾಸ್ತುಶಿಲ್ಪ ಶಾಸ್ತ್ರ)
ಅಲ್ಲಿಯ ಪಿರಾಮಿಡ್ಡುಗಳ ಹಾಗೂ ಮಂದಿರಗಳ ಭವ್ಯತೆಯಿಂದ ಇದರ ಕಲ್ಪನೆ ಬರುತ್ತದೆ. ಅವರು
ಕಟ್ಟಡಗಳನ್ನು ಕಟ್ಟುವುದಕ್ಕಾಗಿ ಮುಖ್ಯವಾಗಿ ಮಣ್ಣಿನ ಕಚ್ಚಾ ಇಟ್ಟಿಗೆ ಮತ್ತು ಕಲ್ಲುಗಳ ಬಳಕೆ
ಮಾಡಿದರು. ಗಣಿತ, ವೈದ್ಯಕೀಯ ಶಾಸ್ತ್ರ, ನೀರಾವರಿಯ ಪದ್ಧತಿ
ಈ ಕ್ಷೇತ್ರಗಳಲ್ಲಿ ಅವರು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದರು. ಅಲ್ಲಿ ಉತ್ತಮ ಹಡಗುಗಳನ್ನು
ಕಟ್ಟಲಾಗುತ್ತಿತ್ತು. ನೀಲಿಬಣ್ಣದ ಮೆರುಗನ್ನು ಕೊಟ್ಟ ಮಣ್ಣಿನ ವಸ್ತುಗಳ ಉತ್ಪಾದನೆ, ಪಪಾಯರಸ್ ಎಂಬ
ಹೆಸರಿನ ವನಸ್ಪತಿಯಿಂದ ಕಾಗದವನ್ನು ತಯಾರಿಸುವುದು ಮುಂತಾದ ಕ್ಷೇತ್ರಗಳಲ್ಲಿಯೂ ಅವರು ವಿಶೇಷ
ಪ್ರಗತಿಯನ್ನು ಮಾಡಿದ್ದರು.
1 ಕಾಮೆಂಟ್‌ಗಳು
Kannada
ಪ್ರತ್ಯುತ್ತರಅಳಿಸಿಧನ್ಯವಾದಗಳು