ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Science Std 8th - ಸಾಮಾನ್ಯ ವಿಜ್ಞಾನ ಪ್ರಶ್ನೋತ್ತರಗಳು 8ನೇ ತರಗತಿ

ಸಾಮಾನ್ಯ ವಿಜ್ಞಾನ ಎಂಟನೆಯ ಇಯತ್ತೆ


ಅನುಕ್ರಮಣಿಕೆ

              ಪಾಗಳ ಹಸರು

1.   ಸಜೀವ ಸೃಷ್ಟಿ ಮತ್ತು ಸೂಕ್ಷ್ಮಜೀವಿಗಳ ವರ್ಗೀಕರಣ......

     2. ಆರೋಗ್ಯ ಮತ್ತು ರೋಗ

     3. ಪ್ರೇರಣೆ ಮತ್ತು ಒತ್ತಡ.

    4. ಪ್ರವಾಹೀ ವಿದ್ಯುತ್ತು ಮತ್ತು ಚುಂಬಕತ್ವ..

   ೫. ಪರಮಾಣುವಿನ ಅಂತರಂಗ

   6.  ದ್ರವ್ಯದ ಸಂಘಟನೆ

   7. ಧಾತು - ಅಧಾತುಗಳು .

   8. ಪ್ರದೂಷಣೆ..

  9. ಆಪತ್ತು ವ್ಯವಸ್ಥಾಪನ

10. ಕೋಶ ಮತ್ತು ಕೋಶ ಅಂಗಕಗಳು

11. ಮಾನವ ಶರೀರ ಮತ್ತು ಇಂದ್ರಿಯ ಸಂಸ್ಥೆ..

12. ಆಮ್ಲ ಮತ್ತು ಪ್ರತ್ಯಾಮ್‌ಗಳ ಪರಿಚಯ

13. ರಾಸಾಯನಿಕ ಬದಲಾವಣೆ ಮತ್ತು ರಾಸಾಯನಿಕ ಬಂಧ..

14. ಉಷ್ಣತೆಯ ಮಾಪನೆ ಮತ್ತು ಪರಿಣಾಮ

15.  ಧ್ವನಿ ..

೧೬. ಪ್ರಕಾಶದ ಪರಾವರ್ತನ

17. ಮಾನವ ನಿರ್ಮಿತ ಪದಾರ್ಥಗಳು

18. ಪರಿಸಂಸ್ಥೆ ..

19. ನಕ್ಷತ್ರಗಳ ಜೀವನ ಯಾತ್ರೆ

 

 

1. ಸಜೀವ ಸೃಷ್ಠಿ ಮತ್ತು ಸೂಕ್ಷ್ಮಜೀವಿಗಳ ವರ್ಗೀಕರಣ

ಪ್ರ.೧. ಜೀವಾಣು, ಆದಿಜೀವಿ, ಅಣಬೆ, ಪಾಚಿ, ಆದಿ ಕೇಂದ್ರಕದ  ದೃಶ್ಯಕೇಂದ್ರಕದ, ಸೂಕ್ಷ್ಮ ಜೀವಿಗಳ ವರ್ಗೀಕರಣವನ್ನು ವ್ಹಿಟಾಕರ ಪದ್ಧತಿಯಿಂದ ಮಂಡಿಸಿರಿ.

ಉತ್ತರ:- ಒಂದೇ ಜಾತಿಯ ಸಜೀವಿಗಳಲ್ಲಿಯೂ ಸಹ ಅನೇಕ ವಿವಿಧಾಂಗಿ ಬದಲಾವಣೆಗಳು ಕಂಡು ಬರುತ್ತವೆ. ಜಗತ್ತಿನಲ್ಲಿಯ ಸುಮಾರು ೮೭ ದಶಲಕ್ಷ ಸಜೀವಿಗಳ ಜಾತಿಗಳಿದ್ದು ಇಷ್ಟೊಂದು ಪ್ರಚಂಡ ಸಂಖ್ಯೆಯ ಜೀವಿಗಳ ಅಭ್ಯಾಸ ಮಾಡಲು ಸುಲಭವಾಗಲೆಂದು ಅವುಗಳನ್ನು ಗುಂಪು ಹಾಗೂ ಉಪಗುಂಪುಗಳಲ್ಲಿ ವಗೀಕರಿಸಲಾಯಿತು.

       ಸಜೀವಿಗಳನ್ನು ಗುಂಪು ಹಾಗೂ ಉಪಗುಂಪುಗಳಲ್ಲಿ ವರ್ಗೀಕರಣ ಮಾಡುವ ಪ್ರಕ್ರಿಯೆಗೆ ಜೈವಿಕ ವರ್ಗೀಕರಣ ಎನ್ನುತ್ತಾರೆ. ರಾಬರ್ಟ್ ಹಾರ್ಡಿಂಗ ವ್ಹಿಟಾಕರ(೧೯೨೦-೧೯೮೦) ಎಂಬ ಅಮೇರಿಕನ್ ಜೀವ ವಿಜ್ಞಾನಿ ಕ್ರಿ.ಶ.೧೯೬೯ರಲ್ಲಿ ಸಜೀವಿಗಳನ್ನು ಐದು ಗುಂಪುಗಳಲ್ಲಿ ವರ್ಗೀಕರಣ ಮಾಡಿದನು.

೧.     ಜೀವಾಣು 

ಏಕಕೋಶಿಯ ಸಜೀವಿ

ಆದಿಕೇಂದ್ರಕ

ಸೃಷ್ಠಿ: ೧ ಮೋನೆರಾ

ಉದಾ: ಬ್ಯಾಕ್ಟೋರಿಯೋಫಾಜ್

  ೨.     ಆದಿ ಜೀವಿ

ಏಕಕೋಶಿಯ

ದೃಶ್ಯಕೇಂದ್ರಕಗಳು

ಸೃಷ್ಠಿ:೨ ಮೋನೇರಾ

ಉದಾ:ಅಮೀಬಾ, ಪ್ಯಾರಾಮೇಶಿಯಂ

  ೩.     ಅಣಬೆ                             

ಸೃಷ್ಠಿ:೩ ಅಣಬೆ

ದೃಶ್ಯಕೇಂದ್ರಕ

ಏಕಕೋಶೀಯ

ಉದಾ:ಯಿಷ್ಟ, ಕ್ಯಾಂಡಿಡಾ, ನಾಯಿಕೊಡೆ(ಮುಶ್ರೂಮ)

  ೪.     ಪಾಚಿ

ಸೃಷ್ಠಿ:೨ ಪ್ರೋಟಿಸ್ಟಾ

ದೃಶ್ಯಕೇಂದರಕ

ಏಕಕೋಶಿಯ

ಉದಾ:ಯುಗ್ಲಿನಾ, ಕ್ಲೊರೆಲ್ಲಾ, ಕ್ಲ್ಯಾಮಿಡೋ ಮೋನಾಸ್

  ಪ್ರ. ೨. ನನ್ನ ಜೊತೆಗಾರನನ್ನು ಶೋಧಿಸಿರಿ.

          ಅಣಬೆ         -       ಕ್ಯಾಂಡಿಡಾ

        ಪ್ರೊಟೊಝೂವಾ      -ಅಮೀಬಾ

        ವಿಷಾಣು       -       ಆದಿಕೇAದ್ರಕದ

        ಪಾಚಿ          -       ಕ್ಲೊರೆಲ್ಲಾ

        ಜೀವಾಣು      -       ಬ್ಯಾಕ್ಟೋರಿಯೊಫಾಜ್

ಪ್ರ.೩. ಕೆಳಗಿನ ವಿಧಾನಗಳನ್ನು ಸರಿಯೋ ಅಥವಾ ತಪ್ಪೋ ಎಂಬುದನ್ನು ಬರೆದು ಅವುಗಳ ಸ್ಪಷ್ಟೀಕರಣ ಮಾಡಿರಿ.

೧.     ಲ್ಯಾಕ್ಟೋಬ್ಯಾಸಿಲಾಯಗಳು ಅಪಾಯಕಾರಕ ಜೀವಾಣುಗಳಾಗಿವೆ.

ಉತ್ತರ:- ತಪ್ಪು , ಲ್ಯಾಕ್ಟೋಬ್ಯಾಸಿಲಾಯಗಳು ಉಪಯುಕ್ತ ಜೀವಾಣುಗಳಾಗಿವೆ. ಹಾಲಿನಿಂದ ಒಸರು ತಯಾರಿಸಲು ಸಹಾಯಕಾರಿ ಆಗಿವೆ.

೨.     ಅಣಬೆಗಳ ಕೋಶಭಿತ್ತಿಕೆಯು ಕಾಯಟಿನ್‌ದಿಂದ ತಯಾರಿಸಲಾಗಿರುತ್ತದೆ.

ಉತ್ತರ:- ಸರಿ. ಕೆಲವು ಅಣಬೆಗಳು ತಂತುಮಯವಾಗಿದ್ದು ಅವುಗಳ ಕೋಶಭಿತ್ತಿಕೆ ಕಾಯಟಿನ್ಎಂಬ ಸಂಕೀರ್ಣ ಶರ್ಕರಾದಿಂದ ತಯಾರಿಸಲಾಗಿರುತ್ತದೆ.

೩.     ಅಮೀಬಾವು ಮಿಥ್ಯಾಪಾದಗಳ ಸಹಾಯದಿಂದ ಚಲನೆ ವಲನೆ ಮಾಡುತ್ತದೆ.

ಉತ್ತರ:- ಸರಿ. ಅಮೀಬಾ, ಪ್ಯಾರಾಮೇಶಿಯಂಗಳಂತಹ ಪ್ರೊಟಿಸ್ಟಾ/ಆದಿಜೀವಿಗಳಿಗೆ ಚಲನೆವಲನೆಗಾಗಿ ಮಿಥ್ಯಾಪಾದ ಅಂದರೆ ರೋಮಕ ಅಥವಾ ಮೀಸೆಗಳು ಇರುತ್ತವೆ.

೪.     ಪ್ಲಾಸ್ಮೋಡಿಯಂದಿಂದ ಅಮಾಂಶ ಉಂಟಾಗುತ್ತದೆ.

ಉತ್ತರ:-ತಪ್ಪು, ಪ್ಲಾಸ್ಮೋಡಿಯಂದಿಂದ ಮಲೇರಿಯಾ ಉಂಟಾಗುತ್ತದೆ.

೫.     ಟೊಮ್ಯಾಟೋ ವಿಲ್ಡ ಇದು ಜೀವಾಣಿಜನ್ಯ ರೋಗವಿದೆ.

ಉತ್ತರ:- ತಪ್ಪು, ಟೊಮ್ಯಾಟೋ ವಿಲ್ಡ ಇದು ವಿಷಾಣುಜನ್ಯ ರೋಗವಿದೆ

ಪ್ರ.೪. ಉತ್ತರ ಬರೆಯಿರಿ.

೧.     ವಿಷಾಣುಗಳ ವೈಶಿಷ್ಟ್ಯಗಳನ್ನು ಬರೆಯಿರಿ.

ಉತ್ತರ:- ವಿಷಾಣುಗಳ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

•       ವಿಷಾಣುಗಳು ಆಕಾರದಲ್ಲಿ ತುಂಬ ಚಿಕ್ಕದಾಗಿರುತ್ತವೆ. ಅವುಗಳನ್ನು ಕೇವಲ ಇಲೆಕ್ಟ್ರಾನ್ ಸೂಕ್ಷ್ಮದರ್ಶಕ ಯಂತ್ರದಿಂದಲೇ ನೋಡಲು ಶಕ್ಯವಿದೆ.

•       ಇವು ಸ್ವತಂತ್ರ ಕಣಗಳ ರೂಪದಲ್ಲಿ ಕಂಡು ಬರುತ್ತವೆ. ಅಂದರೆ ಡಿಎನ್‌ಎ ಅಥವಾ ಅರ್ ಎನ್ ಎ ಗಳಿಂದ ತಯಾರಾದ ದೀರ್ಘಕಾಲದ ಅಣುವಾಗಿದ್ದು ಅದಕ್ಕೆ ಪ್ರೋಟಿನುಗಳ ಆಚ್ಛಾದನೆ ಇರುತ್ತದೆ.

•       ಇವು ಸಸ್ಯ ಮತ್ತು ಪ್ರಾಣಿಗಳ ಜಿವಂತ ಕೋಶಗಳಲ್ಲಿಯೇ ಇರಲು ಸಾಧ್ಯ. ಈ ಕೋಶಗಳ ಸಹಾಯದಿಂದ ವಿಷಾಣುಗಳು ಸ್ವಂತ ಪ್ರೋಟಿನುಗಳನ್ನು ತಯಾರಿಸುತ್ತವೆ.

•       ವಿಷಾಣುಗಳಿಂದ ಸಸ್ಯ ಮತ್ತು ಪ್ರಾಣಿಗಳಿಗೆ ವಿವಿಧ ರೋಗಗಳುಂಟಾಗುತ್ತವೆ. ಉದಾ:ಬ್ಯಾಕ್ಟೋರಿಯಾಫಾಜ್, ಎಡ್ಸ, ಪಿಕೊರ್ನಾ ಇತ್ಯಾದಿಗಳು.

೨.     ಅಣಬೆಗಳ ಪೋಷಣೆ ಹೇಗೆ ಆಗುತ್ತದೆ?

ಉತ್ತರ:- ಯಿಷ್ಟ, ಕ್ಯಾಂಡಿಡಾಗಳಂತಹ ಅಣಬೆಗಳು ಕೊಳೆಯುತ್ತಿರುವ ಪದಾರ್ಥ, ವನಸ್ಪತಿ ಮತ್ತು ಪ್ರಾಣಿಗಳ ಶರೀರ, ಕಾರ್ಬನಿಯ ಪದಾರ್ಥಗಳಲ್ಲಿ ಕಂಡು ಬರುತ್ತವೆ. ದೃಶ್ಯಕೇಂದ್ರಕದ ಏಕಕೋಶೀಯ ಜೀವಿಗಳಾಗಿದ್ದು ಮೃತೋಪಜೀವಿಯಾಗಿವೆ. ಅಣಬೆಗಳು ಕಾರ್ಭನೀಯ ಪದಾರ್ಥಗಳಿಂದ ಆಹಾರ ಶೋಷಣೆ ಮಾಡುತ್ತವೆ.

೩.     ಮೋನೆರಾ ಈ ಸೃಷ್ಠಿಯಲ್ಲಿ ಯಾವ ಯಾವ ಸಜೀವಿಗಳು ಸಮಾವೇಷವಾಗುತ್ತವೆ?

ಉತ್ತರ:- ಮೋನೆರಾ ಈ ಸೃಷ್ಠಿಯಲ್ಲಿ ಏಕಕೋಶಿಯ, ಆದಿಕೇಂದ್ರಕವುಳ್ಳ ಸಜೀವಿಗಳ ಸಮಾವೇಷವಾಗುತ್ತವೆ.

        ಉದಾ: ಬ್ಯಾಕ್ಟೋರಿಯೋಫಾಜ್, ಅಮೀಬಾ, ಪ್ಯಾರಾಮೇಶಿಯಂ

೪. ವ್ಹಿಟಾಕರ ವರ್ಗೀಕರಣ ಪದ್ಧತಿಯ ಲಾಭಗಳನ್ನು ಹೇಳಿರಿ.

ಉತ್ತರ: ಪೃಥ್ವಿಯ ಮೇಲೆ ಭೂಮಿ ಹಾಗೂ ಸಮುದ್ರಗಳಲ್ಲಿಯ ಎಲ್ಲ ಸಜೀವಿಗಳು ಕೂಡಿ ಸುಮಾರು 87ದಶಲಕ್ಷ ಜಾತಿಗಳಿವೆ. ಇಷ್ಟೊಂದು ಪ್ರಚಂಡ ಸಂಖ್ಯೆಗಳಲ್ಲಿರುವ ಸಜೀವಿಗಳನ್ನು ಅಭ್ಯಾಸ ಮಾಡಲು ಅವುಗಳನ್ನು ವಿವಿಧ ಗುಂಪುಗಳಲ್ಲಿ ಮತ್ತು ಉಪಗುಂಪುಗಳಲ್ಲಿ ವರ್ಗೀಕರಣ ಮಾಡಲಾಗಿದೆ. ಇದಕ್ಕೆ ಜೈವಿಕ ವರ್ಗೀಕರಣ ಎನ್ನುತ್ತಾರೆ. ರಾಬರ್ಟ್ ಹಾರ್ಡಿಂಗ್ ವ್ಹಿಟಾಕರ್ ಎಂಬ ಅಮೆರಿಕನ್ ಜೀವವಿಜ್ಞಾನಿ ಸಜೀವಿಗಳನ್ನು ಐದು ಗುಂಪುಗಳಲ್ಲಿ ವರ್ಗೀಕರಣ ಮಾಡಿರುತ್ತಾರೆ.  ಇದಕ್ಕೆ ವ್ಹಿಟಾಕರ ವರ್ಗೀಕರಣ ಪದ್ಧತಿ ಎನ್ನುತ್ತಾರೆ. ಈ ಪದ್ಧತಿಯಿಂದಾಗಿ ಸಜೀವಿಗಳ ಗುಣಧರ್ಮಗಳಿಗನುಸಾರವಾಗಿ ಅಭ್ಯಾಸ ಮಾಡಲು ಸುಲಭವಾಗುತ್ತದೆ.ಪ್ರ. 

ಪ್ರ. ೫.  ನಾನು ಯಾರು ಎಂಬುದನ್ನು ಗುರುತಿಸಿರಿ.

೧) ನನಗೆ ಕೇಂದ್ರ, ಪ್ರದ್ರವ್ಯಪಟಲ ಅಥವಾ ಕೋಶಾಂಗಕಗಳು ಇರುವುದಿಲ್ಲ. 

ಉತ್ತರ: ಮೊನೇರಾದ ಸೂಕ್ಷ್ಮಜಿವಿಗಳು

೨)  ನನಗೆ ಕೇಂದ್ರ, ಪ್ರದ್ರವ್ಯಪಟಲ ಅಥವಾ ಕೋಶಾಂಗಕಗಳು ಇರುತ್ತದೆ. 

ಉತ್ತರ: ಪ್ರೋಟೋಝೋವಾ , ಏಕಾಕೋಶಿಯ ಜೀವಿ

೩) ನಾನು ಕೊಳೆತ ಸೇಂದ್ರಿಯ(ಕಾರ್ಬನಿಯ) ಪದಾರ್ಥಗಳ ಮೇಲೆ ಬದುಕುತ್ತೇನೆ. 

ಉತ್ತರ: ಅಣಬೆಗಳು(ಫಂಗಸ್)

೪) ನನ್ನ ಪ್ರಜನನವು ಬಹುಶ: ವಿಭಜನೆಯಿಂದ ಉಂಟಾಗುತ್ತದೆ. 

ಉತ್ತರ: ಬ್ಯಾಕ್ಟೆರಿಯಾ ಮತ್ತು ಕೆಲವು ಪ್ರೋಟೋಝೋವಾಗಳು

೫) ನಾನು ನನ್ನಂತಹ ಪ್ರತಿಕೃತಿಯನ್ನು ನಿರ್ಮಿಸುತ್ತೇನೆ. 

ಉತ್ತರ: ವಿಷಾಣುಗಳು

೬) ನನ್ನ ದೇಹವು ನಿರಯವದ್ದು ಇದೆ ಮತ್ತು ನಾನು ಹಸಿರು ಬಣ್ಣದವನಾಗಿದ್ದೇನೆ. 

ಉತ್ತರ: ಅಲ್ಗಿ 

 ಪ್ರ. ೬. ಯೋಗ್ಯವಾದ ಆಕೃತಿ ತೆಗೆದು ಹೆಸರಿಸಿರಿ.

1.     ಜೀವಾಣುಗಳ ವಿವಿಧ ಪ್ರಕಾರಗಳು


2.     ಜೀವಾಣುಗಳು/

ಬ್ಯಾಕ್ಟೋರಿಯೋಫಾಜ್,

 


3.     ಪ್ಯಾರಾಮೇಷಿಯಮ

\


4.     ಅಮೀಬಾ

 


5.     ಯುಗ್ಲಿನಾ



6.      


ಪಾಠ ೨. ಆರೋಗ್ಯ ಮತ್ತು ರೋಗ

 ಪ್ರ.೧. ವ್ಯತ್ಯಾಸ ಸ್ಪಷ್ಟೀಕರಿಸಿರಿ.

    ೧  ಸಂಸರ್ಗಜನ್ಯ ರೋಗಗಳು  ಮತ್ತು  ಅಸಂಸರ್ಗಜನ್ಯ ರೋಗಗಳು


ಸಂಸರ್ಗಜನ್ಯ ರೋಗಗಳು

ಅಸಂಸರ್ಗಜನ್ಯ ರೋಗಗಳು

 

೧.ದೂಷಿತ ಹವೆ, ನೀರು, ಆಹಾರ ಅಥವಾ ವಾಹಕ(ಕಿಟಕಗಳು ಮತ್ತು ಪ್ರಾಣಿಗಳು)ಇವುಗಳ ಮುಖಾಂತರ ಹರಡುವ ರೋಗಗಳಿಗೆ ಸಂಸರ್ಗಜನ್ಯ ರೋಗ ಎನ್ನುವರು.

೧. ಯಾವ ರೋಗಗಳು ಸಂಸರ್ಗದಿಂದ ಅಥವಾ ಸಂಕ್ರಮಣದಿಂದ ಹರಡುವುದಿಲ್ಲವೋ ಆ ರೋಗಗಳಿಗೆ ಅಸಂಸರ್ಗಜನ್ಯ ರೋಗಗಳೆನ್ನುವರು.

 

೨.ಈ ರೋಗಗಳು ಸಂಸರ್ಗದಿಂದಲೇಲೇ ಹರಡುತ್ತವೆ.

 

೨. ಈ ರೋಗಗಳು ವಿಶಿಷ್ಟ ಕಾರಣಗಳಿಂದ ವ್ಯಕ್ತಿಯ ಶರೀರದಲ್ಲಿಯೇ ಉದ್ಭವಿಸುತ್ತವೆ.

೩.ಉದಾ:ಶೀತ, ಫ್ಯೂಲ, ಡೆಂಗ್ಯು ಇ.

         

೩. ಉದಾ:ಮಧುಮೇಹ, ಹೃದಯವಿಕಾರ, ಕ್ಯಾನ್ಸರ ಇ.

    ೨. ಜೆನೆರಿಕ್ ಔಷಧಿಗಳು ಹಾಗೂ ಬ್ರಾಂಡೆಡ್ ಔಷಧಿಗಳು

ಜೆನೆರಿಕ್ ಔಷಧಿಗಳು 

ಬ್ರಾಂಡೆಡ್ ಔಷಧಿಗಳು

 

೧.     ಯಾವುದೇ ಪೆಟೆಂಟ್ ಇಲ್ಲದೇ ನಿರ್ಮಾಣವಾಗುವ ಔಷಧಗಳೇ ಜೆನೆರಿಕ್ ಔಷಧಗಳು.

 

೧.     ಪೆಟೆಂಟವುಳ್ಳ ನಿರ್ದಿಷ್ಠ ಕಂಪನಿಯಲ್ಲಿ ನಿರ್ಮಾಣವಾಗುವ ಔಷಧಿಗಳಿಗೆ ಬ್ರಾಂಡೆಡ್ ಔಷಧಿಗಳೆನ್ನುವರು.

 

೨.     ಇವು ಸಾಮಾನ್ಯ ಔಷಧಿಗಳಾಗಿವೆ.

 

೨.     ಇವು ಅಸಾಮಾನ್ಯ ಔಷಧಿಗಳಾಗಿವೆ. 

 

೩.     ಸಂಶೋಧನೆಗಳ ಮೇಲಿನ ಖರ್ಚು ಕಡಿಮೆ ಬರುತ್ತದೆ.

 

೩.     ನಿರ್ಮಿತಿ ಮತ್ತು ಪ್ಯಾಕಿಂಗ ಮಾಡಲು ಖರ್ಚು ಹೆಚ್ಚಿಗೆ ಬರುತ್ತದೆ.

 

೪.     ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಜೆನೆರಿಕ್ ಔಷಧಗಳು ಲಭ್ಯವಿರುತ್ತವೆ.

 

೪.     ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಬ್ರಾಂಡೆಡ್ ಔಷಧಿಗಳು ಉಪಲಬ್ದವಿರುವವು

೫.     ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರ್ಮಿತಿಗೊಂಡು ನಿರ್ಯಾತವಾಗುತ್ತವೆ. ಅಮೇರಿಕೆಯಲ್ಲಿ ೮೦%ಈ ಔ಼ಧಿಗಳನ್ನು ಬಳಸಲಾಗುತ್ತದೆ.     

 

೫.     ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುತ್ತವೆ.

 

ಪ್ರ.೨. ಭಿನ್ನ ಶಬ್ದವನ್ನು ಗುರುತಿಸಿ.

೧.     ಚಳಿಜ್ವರ, ಕಾಮಾಲೆ, ಆನೆಕಾಲು, ಡೆಂಗ್ಯು

ಉತ್ತರ:-ಚಳಿಜ್ವರ, ಇದು ವಿಷಾಣುವಿನಿಂದ ಹರಡುತ್ತದೆ. ಉಳಿದ ರೋಗಗಳು ಸೊಳ್ಳೆಗಳಿಂದ ಉಂಟಾಗುತ್ತವೆ.

೨.     ಪ್ಲೇಗ್, ಎಡ್ಸ, ಕಾಲರಾ, ಕ್ಷಯ

ಉತ್ತರ:-ಎಡ್ಸ, ಇದು ಮಾನವೀ ರಕ್ತಗಳ ಮಿಶ್ರಣದಿಂದ ಬರುತ್ತದೆ.

ಪ್ರ.೩. ಒಂದರಿಂದ ಎರಡು ವಾಕ್ಯಗಳಲ್ಲಿ ಉತ್ತರಿಸಿರಿ.

೧.     ಸಂಸರ್ಗಜನ್ಯ ರೋಗಗಳನ್ನು ಹಬ್ಬಿಸುವ ಮಾಧ್ಯಮಗಳು ಯಾವುವು?

ಉತ್ತರ:-ಸಂಸರ್ಗಜನ್ಯ ರೋಗಗಳನ್ನು ಹಬ್ಬಿಸುವ ಮಾಧ್ಯಮಗಳು:

            ೧.     ದೂಷಿತ ಹವೆ-ಕೃಷ್ಠರೋಗ, ಸಾರ್ಸ, ಎಚ್೧ಎನ್೧, ಕ್ಷಯರೋಗ, ಗೋವರ

            ೨.     ದೂಷಿತ ನೀರು-ಅತಿಸಾರ/ಭೇಧಿ, ಕಾಲರಾ, ಕಾಮಾಲೆ, ಪೋಲಿಯೋ

            ೩.     ಕಿಟಕ ಮತ್ತು ಪ್ರಾಣಿಗಳು-ಇವು ಆಹಾರ ವಾಹಕಗಳು ಹೌದು. ಪ್ಲೇಗ್, ಆನೆಕಾಲು, ಚಳಿಜ್ವರ ಇ.

೨.     ಪಾಠದ ಹೋರತಾಗಿ ಅಸಂಸರ್ಗಜನ್ಯ ರೋಗಗಳ ಯಾವ ಹೆಸರುಗಳು ನಿಮಗೆ ಹೇಳಲು ಬರುತ್ತವೆ?

ಉತ್ತರ:- ಪಾಠದಲ್ಲಿ ಬಂದಿರುವ ಅಸಂಸರ್ಗಜನ್ಯ ರೋಗಗಳ ಹೆಸರುಗಳು:

        ೧.     ಕರ್ಕರೋಗ ೨. ಮಧುಮೇಹ, ೩. ಹೃದಯವಿಕಾರ, ೪. ಉಚ್ಚ ರಕ್ತದೊತ್ತಡ, ೫. ಹೃದಯರೋಗ

        ೨.     ಪಾಠದ ಹೊರತಾಗಿ ಇರುವ ಅಸಂಸರ್ಗಜನ್ಯ ರೋಗಗಳ ಹೆಸರುಗಳು:

            ೧.     ಪಾರ್ಶ್ವವಾಯು/ಲಕವಾ  ೨. ಪ್ರಾಣಿ ದಂಶ/ಅಪಘಾತಗಳು.

    ೩.     ಮಾನಸಿಕ ರೋಗಗಳು.  ೪. ಅಂಧತ್ವ/ಕುರುಡತನ ೫. ದೃಷ್ಠಿ ದೋಷಗಳು.

೩. ಮಧುಮೇಹ ಮತ್ತು ಹೃದಯವಿಕಾರ ಇವುಗಳ ಮುಖ್ಯ ಕಾರಣಗಳು ಯಾವುವು?

       ಉತ್ತರ:- ಮಧುಮೇಹ ರೋಗದ ಕಾರಣಗಳು

1.    ಅನುವಂಶಿಕತೆ, ಅತಿಸ್ಥೂಲತ್ವ, ವ್ಯಾಯಾಮದ ಅಭಾವ, ಮಾನಸಿಕ ಒತ್ತಡ ಅಥವಾ ತಿಣುಕಾಟ ಇವುಗಳಿಂದಾಗಿ ಮಧುಮೇಹ ಉಂಟಾಗುತ್ತದೆ.

2.   ಹೃದಯವಿಕಾರ: ಧೂಮ್ರಪಾನ ಮಾಡುವುದು, ಮಧ್ಯಪಾನ, ಮಧುಮೇಹ, ಉಚ್ಚ ರಕ್ತದ ಒತ್ತಡ, ಸ್ಥೂಲತ್ವ, ಶಾರೀರಿಕ ಶ್ರಮದ ಅಭಾವ, ವ್ಯಾಯಾಮದ ಅಭಾವ, ಸತತವಾಗಿ ಕುಳಿತು ಕೆಲಸ ಮಾಡುವುದು ಅನುವಂಶಿಕತೆ, ತಿಣುಕಾಟ, ಸಿಟ್ಟುತನ ಮತ್ತು ವಿನಾಕಾರಣ ಚಿಂತೆ ಮಾಡುವುದು.

೩.  ಪ್ರ. 4. ಹಾಗಾದರೆ ಏನು ಸಾಧ್ಯವಾಗುವುದು?/ಹಾಗಾದರೆ ಏನನ್ನು ತಪ್ಪಿಸಬಹುದು? ಹಾಗಾದರೆ ಯಾವ ರೋಗಗಳನ್ನು ನಿಯಂತ್ರಿಸಬಹುದು?

ಅ) ನೀರನ್ನು ಕುದಿಸಿ ಮತ್ತು ಶೋಧಿಸಿ ಕುಡಿಯಬೇಕು.

ಉತ್ತರ: ನೀರನ್ನು ಕುದಿಸಿದರೆ ಅದರಲ್ಲಿರುವ ವಿಷಾಣುಗಳು, ಜೀವಾಣುಗಳು ಮತ್ತು ಕೀಟನಾಶಕಗಳು ನಾಶವಾಗುತ್ತವೆ ಮತ್ತು ಅದನ್ನು ಶೋಧಿಸಿ ಕುಡಿಯುವುದರಿಂದ ಶೀಗೆಲ್ಲಾಬ್ಯುಸಿಲಸ್, ಎಂಟಮೀಬಾ ಹಿಸ್ಟೋಲಿಕಾ ಅತಿಸಾರ್(ಭೇದಿ) ಗಳಂತಹ ರೋಗಗಳನ್ನು ತಪ್ಪಿಸಬಹುದು.

ಆ) ಧೂಮ್ರಪಾನ, ಮಧ್ಯಪಾನ ಮಾಡದಿರುವುದು.

ಉತ್ತರ: ಧೂಮ್ರಪಾನ, ಮಧ್ಯಪಾನ ಮಾಡಿದರೆ ಕ್ಯಾನ್ಸರ್ ಆಗಬಹುದು.

ಇ) ನಿಯಮಿತವಾಗಿ ಸಮತೋಲಿತ ಆಹಾರವನ್ನು ಸೇವಿಸುವುದು ಮತ್ತು ವ್ಯಾಯಾಮವನ್ನು ಮಾಡುವುದು.

ಉತ್ತರ: ನಿಯಮಿತವಾಗಿ ಸಮತೋಲ ಆಹಾರ ಸೇವಿಸುವುದರಿಂದ ನಾವು ಆರೋಗ್ಯವಂತರಾಗುತ್ತೇವೆ. ಶಾರೀರಿಕ ಕ್ಷಮತೆ ಯೋಗ್ಯವಾಗುತ್ತದೆ. ವ್ಯಾಯಾಮ ಮಾಡಿದರೆ ಬಟ್ಟಿಮುಟ್ಟಾಗಿ ಬಲಶಾಲಿ ಆಗುತ್ತೇವೆ.

ಈ) ರಕ್ತದಾನದ ಮುಂಚೆ ರಕ್ತದ ಯೋಗ್ಯ ಪ್ರಕಾರಗಳನ್ನು ತಪಾಸಿಸಲಾಯಿತು.

ಉತ್ತರ: ರಕ್ತದಾನ ಮಾಡುವಾಗ ಆ ವ್ಯಕ್ತಿಯ ರಕ್ತವು ಯಾವುದಾದರೂ ರೋಗಾಣುಗಳಿಂದ ಕೂಡಿದೆಯೇ ಎಂಬುದನ್ನು ಪರೀಕ್ಷಿಸಲು ರಕ್ತದಾನ ಮಾಡುವುದಕ್ಕಿಂತ ಮುಂಚೆ ತಪಾಸಣೆ ಮಾಡಲಾಗುವುದು.

ಪ್ರ. 6. ಕೆಳಗಿನ ರೋಗಗಳ ಮೇಲಿನ ಪ್ರತಿಬಂಧಕ ಉಪಾಯಗಳನ್ನು ಬರೆಯಿರಿ.

ಅ. ಡೆಂಗ್ಯೂ: ನಿಂತ ನೀರಿನಲ್ಲಿ ಸೊಳ್ಳೆಗಳು ತತ್ತಿ ಹಾಕುತ್ತವೆ ಮತ್ತು ಅವು ಬೆಳೆದು ಅವುಗಳ ಸಂಖ್ಯೆ ಹೆಚ್ಚಾಗುತ್ತದೆ ಸೊಳ್ಳೆಗಳ ವಿವಿಧ ಪ್ರಭೇದಗಳು ಭಿನ್ನ-ಭಿನ್ನ ರೋಗಗಳನ್ನು ಹಬ್ಬಿಸುತ್ತವೆ. ಹಾಗಾಗಿ ನೀರು ಸಂಗ್ರಹವಾಗುವುದನ್ನು ತಡೆಗಟ್ಟಬೇಕು. ಮನೆಯ ಸುತ್ತಮುತ್ತಲು ಕಸ ಕಡ್ಡಿಗಳು ನೀರಿನ ಸಂಗ್ರಹ ಹಳೆಯ ಟೈಯರ್ ವಾಟರ್ ಬಾಟಲ್ ಪ್ಲಾಸ್ಟಿಕ್ ಟ್ಯಾಂಕ್ ತುಂಬಿರುವುದನ್ನು ನೋಡಿ ತೆಗೆದು ಹಾಕಬೇಕು.
ಆ. ಕರ್ಕ ರೋಗ:  ಕರ್ಕ ರೋಗದ ರೋಗ ನಿಧಾನ ಮಾಡುವುದಕ್ಕಾಗಿ ಟಿಶ್ಯೂ ಡಯಾಗ್ನೋಸಿಸ್ ಕಾಮ ಸಿಟಿ ಸ್ಕ್ಯಾನ್, ಎಂ ಆರ್ ಐ, ಮೇಮೋ ಗ್ರಾಫಿಕ್, ಬೈ ಎಫ್ ಸಿ ಮುಂತಾದ ತಂತ್ರಗಳ ಬಳಕೆ ಮಾಡುತ್ತಾರೆ.  ಆದರೆ ಉಪಚಾರದಲ್ಲಿ ರಸಾಯನ ಉಪಚಾರ ಕಿರಣೋಪಚಾರ ಶಲ್ಯ ಚಿಕಿತ್ಸೆ, ಇಂತಹ ಪ್ರಚಲಿತ ಪದ್ಧತಿಗಳೊಂದಿಗೆ ರೋಬೋಟಿಕ್ ಸರ್ಜರಿ.  ಲ್ಯಾಪ್ರೋಸ್ಕೋಪಿಕ್ ಸರ್ಜರಿ ಇಂತಹ ಉಚ್ಚಾರ ಪದ್ಧತಿಗಳು ಬಳಸಲಾಗುತ್ತವೆ.
ಇ. ಏಡ್ಸ್ : ಏಡ್ಸ್ ರೋಗದ ಉಪಾಯ ಮಾಡಲು ELISA ಎಂಬ ನಿಧಾನವನ್ನು ಪರೀಕ್ಷೆ ಮಾಡಬೇಕು. ರಕ್ತದಾನ ಮಾಡುವಾಗ ಕಡ್ಡಾಯವಾಗಿ ರಕ್ತವನ್ನು ಪರೀಕ್ಷೆ ಮಾಡಿಕೊಳ್ಳಬೇಕು.
ಪ್ರ. 7. ಮಹತ್ವವನ್ನು ಸ್ಪಷ್ಟಪಡಿಸಿರಿ.
ಅ. ಸಮತೋಲನ ಆಹಾರ:
ಆಹಾರ ದಿಂದ ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ಏಕೆಂದರೆ ಸಮತೋಲನ ಆಹಾರದಲ್ಲಿ ತರಕಾರಿ ಕಾಯಿಪಲ್ಲೆ ಹಣ್ಣು ಹಂಪಲುಗಳು ಮೋಸ ಮೊಟ್ಟೆ ಇತ್ಯಾದಿ ಘಟಕಗಳು ಇದ್ದು ನಮ್ಮ ಶರೀರಕ್ಕೆ ಶಕ್ತಿಯನ್ನು ಕೊಡುತ್ತವೆ.

ಆ. ವ್ಯಾಯಾಮ್ /ಯೋಗಾಸನ:
ವ್ಯಾಯಾಮ ಮಾಡುವುದರಿಂದ ನಮ್ಮ ಶರೀರ ಗಟ್ಟಿಮುಟ್ಟಿ ಆಗುತ್ತದೆ ಮತ್ತು ನಮ್ಮ ಶರೀರದ ಎಲ್ಲಾ ಕ್ರಿಯೆಗಳು ಸುರಳಿತವಾಗಿ ನಡೆಯುತ್ತವೆ ಯೋಗಾಸನದಿಂದ ಲಕ್ಷ ಕೇಂದ್ರೀಕೃತವಾಗಿ ನಾವು ಮಾಡುವ ಕೆಲಸ ವ್ಯವಸ್ಥಿತವಾಗಿ ಆಗುತ್ತದೆ.
ಪ್ರ. 8. ಯಾದಿ ತಯಾರಿಸಿರಿ.

ಅ. ವಿಷಾಣುಜನ್ಯ ರೋಗಗಳು - ಕಾಮಾಲೆ  ಎಚ್ಐವಿ, ಸ್ವಾಯಿನ್ ಫ್ಲ್ಯೂ, ರೇಬಿಜ್

ಆ. ಜೀವಾಣುಜನ್ಯ ರೋಗಗಳು – ಕ್ಷಯ ರೋಗ, ಅತಿಸಾರ, ಕಾಲರಾ , ವಿಷಮಜ್ವರ

ಇ. ಕೀಟಕಗಳ ಮುಖಾಂತರ ಪಸರಿಸುವ ರೋಗಗಳು-ಡೆಂಗ್ಯೂ, ಈ. ಆನುವಂಶಿಕತೆಯಿಂದ ಬರುವ ರೋಗಗಳು 

 

3. ಪ್ರೇರಣೆ ಮತ್ತು ಒತ್ತಡ

ಪ್ರ. 1. ಬಿಟ್ಟ ಸ್ಥಳಗಳಲ್ಲಿ ಯೋಗ್ಯಶಬ್ದವನ್ನು ಬರೆಯಿರಿ.

ಅ. SI ಪದ್ಧತಿಯಲ್ಲಿ ಪ್ರೇರಣೆಯ ಮೂಲಮಾನ .......... ಇದು ಇದೆ.

(ಡೈನ, ನ್ಯೂಟನ, ಜ್ಯೂಲ)

ಅ. ನಮ್ಮ ಶರೀರದ ಮೇಲೆ ಹವೆಯ ಒತ್ತಡವು............. ಒತ್ತಡದಷ್ಟು ಇರುತ್ತದೆ.

(ವಾತಾವರಣದ, ಸಮುದ್ರದ ತಳದಲ್ಲಿಯ, ಅವಕಾಶದಲ್ಲಿಯ)

ಇ. ಯಾವುದೊಂದು ವಸ್ತುವಿನ ಸಲುವಾಗಿ ಭಿನ್ನ ಭಿನ್ನ ........... ದ್ರವಗಳಲ್ಲಿ ಉದ್ಧರಣ ಪ್ರೇರಣೆಯು

............ಇರುತ್ತದೆ. (ಏಕಸಮಾನ, ದಾರ್ಡ್ಯದ, ಭಿನ್ನ, ಕ್ಷೇತ್ರಫಲದ)

ಉತ್ತರ: ದಾರ್ಡ್ಯದ, ಭಿನ್ನ

ಈ. ಒತ್ತಡ SI ಪದ್ಧತಿಯಲ್ಲಿಯ ಮೂಲಮಾನವು.......... ಇದೆ.

(N/m³, N/m², kg/m², Pa/m²)

ಪ್ರ. 2. ಹೇಳಿರಿ ನೋಡೋಣ ನನ್ನ ಜತೆಗಾರನನ್ನ?

ಗುಂಪು                     ಬ ಗುಂಪು

1. ದ್ರಾಯು                    1. ಹೆಚ್ಚು ಒತ್ತಡ

2. ಹರಿತವಲ್ಲದ ಚೂರಿ         2. ವಾತಾವರಣ ಒತ್ತಡ

3. ಮೊನಚಾದ ಸೂಜಿ         3. ವಿಶಿಷ್ಟಗುರುತ್ವ

4. ಸಾಪೇಕ್ಷದಾರ್ಡ್ಯ            4. ಕಡಿಮೆ ಒತ್ತಡ

5. ಹೆಕ್ಟೋಪಾಸ್ಕಲ್            5. ಎಲ್ಲ ದಿಶೆಗಳಲ್ಲಿ ಸಮಾನ ಒತ್ತಡ.

ಉತ್ತರ: 1 – 5, 2 – 4, 3 – 1 , 4 – 2, 5 - 3

ಪ್ರ. 3. ಕೆಳಗಿನ ಪ್ರಶ್ನೆಗಳನ್ನು ಸ್ವಲ್ಪದರಲ್ಲಿ ಉತ್ತರಿಸಿರಿ.

ಅ. ನೀರಿನ ಕೆಳಗೆ ಪ್ಲಾಸ್ಟಿಕದ ತುಂಡನ್ನು ಬಿಟ್ಟು ಕೊಡಲಾಯಿತು. ಅದು ನೀರಿನಲ್ಲಿ ಮುಳುಗುವುದೋ ಅಥವಾ ನೀರಿನ ಪೃಷ್ಠಭಾಗದ ಮೇಲೆ ಬರುವುದು? ಕಾರಣ ಬರೆಯಿರಿ.

ಉತ್ತರ: ನೀರಿನಲ್ಲಿ ಬಿದ್ದ ಪ್ಲಾಸ್ಟಿಕದ ತುಂಡು ನೀರಿನಲ್ಲಿ ತೇಲುತ್ತದೆ ಏಕೆಂದರೆ ನೀರಿನಲ್ಲಿ ಬಿದ್ದ ವಸ್ತುವಿಗೆ ಮೇಲಿನಿಂದ ಉದ್ಧರಣ ಪ್ರೇರಣೆಯು ಕಾರ್ಯ ಮಾಡುತ್ತದೆ.ಪ್ಲಾಸ್ಟಿಕದ ತುಂಡಿನ ದಾರ್ಡ್ಯವು ನೀರಿನ ದಾರ್ಡ್ಯಕ್ಕಿಂತ ಕಡಿಮೆ ಇರುತ್ತದೆ. 

ಆ. ಸರಕನ್ನು ಹೊತ್ತು ಒಯ್ಯುವ ಭಾರವುಳ್ಳ ವಾಹನಗಳ ಚಕ್ರಗಳ ಸಂಖ್ಯೆಯು ಹೆಚ್ಚಿಗೆ ಏಕೆ ಇರುತ್ತದೆ?

ಉತ್ತರ: ಒತ್ತಡವು ಮೂಲಮಾನ ಕ್ಷೇತ್ರಫಲದ ಮೇಲೆ ಹೆರಿದ ಪ್ರೇರಣೆಯಷ್ಟು ಇರುತ್ತದೆ. ಕ್ಷೇತ್ರಫಲ ಹೆಚ್ಚು ಇದಷ್ಟು ಒತ್ತಡ ಅಥವಾ ವಸ್ತುವಿನ ಭಾರ ಕಡಿಮೆ ಆಗುವುದು ಆದ್ದರಿಂದ ಭಾರ ಹೊತ್ತು ಒಯ್ಯುವ ವಾಹನಕ್ಕೆ ಚಕ್ರಗಳ ಸಂಖ್ಯೆ ಹೆಚ್ಚು ಇರುವುದರಿಂದ ಭಾರವು ಎಲ್ಲ ಚಕ್ರಗಳ ಮೇಲೆ ಸಮಾನ ಒತ್ತಡ ಉಂಟಾಗಿ ವಾಹನ ಸಲೀಸಾಗಿ ಓಡಾಡಲು ಸುಲಭವಾಗುತ್ತದೆ.

ಇ. ನಮ್ಮ ತಲೆಯ ಮೇಲೆ ಸುಮಾರು ಎಷ್ಟು ಹವೆಯ ಭಾರ ಇರುವುದು? ಅದು ನಮಗೆ ಏಕೆ ಗೊತ್ತಾಗುವದಿಲ್ಲ?

ಉತ್ತರ:ನಮ್ಮ ತಲೆಯ ಮೇಲೆ ಸುಮಾರು 10X103 Pa ದಷ್ಟು ವಾತಾವರಣದ ಒತ್ತಡ ಇರುತ್ತದೆ. ನಮ್ಮ ಶರೀರದೊಳಗೆ ಇರುವ ಪೊಳ್ಳುಗಳಲ್ಲಿ ಹವೆಯು ಇರುತ್ತದೆ. ಮತ್ತು ರಕ್ತವಾಹಿನಿಗಳ ಪೊಳ್ಳುಗಳಲ್ಲಿ ಯ ಹವೆಯು ಇರುತ್ತದೆ. ಇವುಗಳ ಒತ್ತಡದಲ್ಲಿ ತಲೆಯ ಮೇಲಿನ ವಾತಾವರಣದ ಒತ್ತಡ ನಾಲ್ಕೂ ದಿಕ್ಕಿನಿಂದ ಉದ್ಧರಣ ಪ್ರೇರಣೆ ಪ್ರೇರಣೆ ಕಾರ್ಯ ಪ್ರಯುಕ್ತ ಆಗುತ್ತಿರುವುದರಿಂದ ನಮಗೆ ಹವೆಯು ಭಾರ ಎನಿಸುವುದಿಲ್ಲ. 

4. ಹೀಗೆ ಏಕೆ ಘಟಿಸುತ್ತದೆ?

ಅ. ಸಮುದ್ರದ ನೀರಿಗಿಂತ ಸಿಹಿ ನೀರಿನಲ್ಲಿ ಹಡಗವು ಹೆಚ್ಚು ಆಳದ ವರೆಗೆ ಮುಳುಗುತ್ತದೆ?

ಉತ್ತರ: ಸಿಹಿ ನೀರಿನ ದಾರ್ಡ್ಯ ಸಮುದ್ರ ನೀರಿನ ದಾರ್ಡ್ಯಗಿಂತ ಕಡಿಮೆ ಇರುತ್ತದೆ. ಸಿಹಿ ನೀರಿನ ದಾರ್ಡ್ಯ ಕಡಿಮೆ ಇರುವುದರಿಂದ ದೋಣಿ, ವಸ್ತುಗಳು, ಹಡಗು ಮುಂತಾದವುಗಳು ಸಿಹಿನೀರಿನಲ್ಲಿ ಆಳದ ವರೆಗೆ ಮುಳುಗುತ್ತವೆ.

ಆ. ಹರಿತವಾದ ಚೂರಿಯಿಂದ ಹಣ್ಣುಗಳನ್ನು ಸಹಜವಾಗಿ ತುಂಡರಿಸಲು ಬರುವುದು.

ಉತ್ತರ: ಹರಿತವಾದ ಚೂರಿಯ ಕ್ಷೇತ್ರಫಲ ಕಡಿಮೆ ಇರುತ್ತದೆ.ಕ್ಷೇತ್ರಫಲ ಕಡಿಮೆ ಇರುವುದರಿಂದ ಹಣ್ಣುಗಳ ಮೇಲೆ ಹಾಕಲಾದ ಒತ್ತಡ ಹೆಚ್ಚು ಇರುತ್ತದೆ. ಹಾಗಾಗಿ ಹಣ್ಣುಗಳು ಸಹಜವಾಗಿ ಕತ್ತರಿಸಲ್ಪಡುತ್ತದೆ.

ಇ. ಆಣೆಕಟ್ಟಿನ ಗೋಡೆಗಳು ತಳದಲ್ಲಿ ಅಗಲ ಇರುತ್ತವೆ,

ಉತ್ತರ: ಆಣೆಕಟ್ಟಿನ ಗೋಡೆಗಳು ತಾಳದಲ್ಲಿ ಹೆಚ್ಚು ಅಗಲವಾಗಿ ಇರುವುದರಿಂದ ಅದರ ಕ್ಷೇತ್ರಫಲ ಹೆಚ್ಚು ಆಗುತ್ತದೆ. ಮತ್ತು ಮೇಲಿನಿಂದ ಬೀಳುವ ಒತ್ತಡ ಕಡಿಮೆ ಆಗಿ ಅಣೆಕಟ್ಟು ಸುರಕ್ಷಿತವಾಗಿ ಉಳಿಯುತ್ತದೆ.

ಈ. ನಿಂತ ಬಸ್ಸಿನಿಂದ ಆಕಸ್ಮಾತ್ ವೇಗವನ್ನು ಪಡೆದರೆ ಪ್ರವಾಸಿಗರು ಹಿಂದಿನ ದಿಶೆಯಲ್ಲಿ ತಳ್ಳಲ್ಪಡುತ್ತಾರೆ.

ಉತ್ತರ: ಬಸ್ಸು ನಿಂತಿರುವಾಗ ಒಳಗೆ ಕುಳಿತುಕೊಂಡ ನಮ್ಮ ಮೇಲೆ ವಾತಾವರಣದ ಒತ್ತಡ ಶೂನ್ಯ ಇರುತ್ತದೆ. ಆಕಸ್ಮಾತ ಬಸ್ಸು ವೇಗ ಪಡೆದುಕೊಳ್ಳುವಾಗ ನಮ್ಮ ಮೇಲೆ ಬಸ್ಸಿನ್ ಗತಿಯ ವಿರುದ್ಧ ಪ್ರೇರಣೆ ಅಂದರೆಯೇ ಉದ್ಧರಣ ಪ್ರೇರಣೆಯು ಕಾರ್ಯ ಮಾಡುತ್ತದೆ. ಹೀಗಾಗಿ ಬಸ್ಸಿನಲ್ಲಿ ಕುಳಿತ ನಾವು ಒಮ್ಮೆಲೇ ಹಿಂದಿನ ದಿಶೆಯಲ್ಲಿ ತಳಲ್ಪಡುತ್ತೇವೆ.  

ಪ್ರ. 5. ಕೆಳಗಿನ ಕೋಷ್ಟಕವನ್ನು ಪೂರ್ಣಮಾಡಿರಿ.

ದ್ರವ್ಯರಾಶಿ (kg)

ಘನಪರಿಮಾಣ (m3)

ದಾರ್ಡ್ಯ (kg/m³)

350

175

-

 

190

4

ನಮಗೆ ಗೊತ್ತಿದೆ, ದಾರ್ಡ್ಯ = ದ್ರವ್ಯರಾಶಿ/ಘನ ಪರಿಮಾಣ.

1.                                 = 350/175 = 2Kg/m3

2.     ದ್ರವ್ಯರಾಶಿ = 190X4 = 760 kg

  1)    4 = ದ್ರವ್ಯರಾಶಿ /190

ದ್ರವ್ಯರಾಶಿ = 4 X 190 = 760 kg

ಧಾತುವಿನ ದಾರ್ಡ್ಯ

(kg/m3)

ನೀರಿನ ದಾರ್ಡ್ಯ

(kg/m3)

ಸಾಪೇಕ್ಷದಾರ್ಡ್ಯ

 

-

103

5

8.5x103

103

 

 1)    ಸಾಪೇಕ್ಷ ದಾರ್ಡ್ಯ = ಪದಾರ್ಥದ ದಾರ್ಡ್ಯ/ನೀರಿನ ದಾರ್ಡ್

5   = ಧಾತುವಿನ ದಾರ್ಡ್ಯ/103 

ಧಾತುವಿನ ದಾರ್ಡ್ಯ = 5X103 = 5000 kg/m3

1)    ಸಾಪೇಕ್ಷ ದಾರ್ಡ್ಯ = ಪದಾರ್ಥದ ದಾರ್ಡ್ಯ/ನೀರಿನ ದಾರ್ಡ್

                   = 8.5 X103/103 = 85X103

ತೂಕ (N)

ಕ್ಷೇತ್ರಫಲ (m2)

ಒತ್ತಡ (Nim2)

-

0.04

20000

1500

500

 

 1)    ಒತ್ತಡ = ತೂಕ / ಕ್ಷೇತ್ರಫಲ

20000 = ತೂಕ/0.04

        ತೂಕ = 20000 X 0.04 = 800

2)    ಒತ್ತಡ = 1500/500 = 3 N/m2

ದಾರ್ಡ್ಯ = ದ್ರವ್ಯರಾಶಿ/ಘನ ಪರಿಮಾಣ.

ದಾರ್ಡ್ಯದ ಮೌಲ್ಯಮಾನವು SI ಪದ್ಧತಿಯಲ್ಲಿ kg/m3ಇದೆ. ಪದಾರ್ಥಗಳ ಶುದ್ಧತೆಯನ್ನು ನಿರ್ಧರಿಸುವಾಗ ದಾರ್ಡ್ಯದ ಗುಣಧರ್ಮವು ಉಪಯೋಗಕರವಾಗಿದೆ. ಪದಾರ್ಥದ ಸಾಪೇಕ್ಷದಾರ್ಡ್ಯವನ್ನು ನೀರಿನ ದಾರ್ಡ್ಯದ ಹೋಲಿಕೆಯಲ್ಲಿ ವ್ಯಕ್ತಪಡಿಸಲಾಗುತ್ತದೆ.

ಸಾಪೇಕ್ಷದಾರ್ಡ್ಯ = ಪದಾರ್ಥದ ದಾರ್ಡ್ಯ/ನೀರಿನ ದಾರ್ಡ್

ಸಮಾನ ರಾಶಿಗಳ ಗುಣೋತ್ತರ ಪ್ರಮಾಣ ಇದಾಗಿರುವುದರಿಂದ ಇದಕ್ಕೆ ಮೂಲಮಾನವು ಇರುವುದಿಲ್ಲ. ಸಾಪೇಕ್ಷದಾರ್ಡ್ಯಕ್ಕೇನ ಪದಾರ್ಥದ 'ವಿಶಿಷ್ಟ ಗುರುತ್ವ' ಎನ್ನುತ್ತಾರೆ.

ಬಿಡಿಸಿದ ಉದಾಹರಣೆಗಳು

ಉದಾಹರಣೆ 1: ಫಲಕದ ಮೇಲಿಟ್ಟ ತಿಂಡಿಯ ಡಬ್ಬಿಯ ತಳದ ಕ್ಷೇತ್ರಫಲವು 0.25 cm2ಇದ್ದು ಅದರ ತೂಕ 50 N ಇದೆ. ಹಾಗಾದರೆ ಆ ಡಬ್ಬಿಯು ಫಲಕದ ಮೇಲೆ ಪ್ರಯುಕ್ತ ಮಾಡಿದ ಒತ್ತಡವನ್ನು ತೆಗೆಯಿರಿ.

ಕೊಟ್ಟದ್ದು:  ಕ್ಷೇತ್ರಫಲ = 0.25 cm2, ಡಬ್ಬಿಯ ತೂಕ = 50 N, ಒತ್ತಡ = ?

                                         =200 N/m²

 ಕ್ಷೇತ್ರಫಲ = ಉದ್ದX ಅಗಲ = 50 cm x 20 cm = 1000 cm² = 0.1

ಉದಾಹರಣೆ 2: ಒಂದು ಪಕ್ಷ ನೀರಿನ ದಾರ್ಡ್ 10 kg/m3ಮತ್ತು ಕಬ್ಬಿಣದ ದಾರ್ಡ್ಯ 7.85 x 103 kg/m³ ಇದ್ದರೆ ಕಬ್ಬಿಣದ ಸಾಪೇಕ್ಷ ದಾರ್ಡ್ಯತೆಗೆಯಿರಿ.

ಕೊಟ್ಟದ್ದು: ನೀರಿನ ದಾರ್ಡ್ಯ = 103 kg/m³

ಕಬ್ಬಿಣದ ದಾರ್ಡ್ಯ = 7.85 x 103 kg/m2ಕಬ್ಬಿಣದ ಸಾಪಕ್ಷದಾರ್ಥ್ಯ = ?

 

                                                        =

                                                        = 7.85

ಉದಾಹರಣೆ 3: ಸ್ಕ್ರೂದ ಅಗ್ರದ ಕ್ಷೇತ್ರಫಲ 0.5 mm2ಇದ್ದು ದರ ತೂಕ 0.5 N ಇದೆ, ಹಾಗಾದರೆ ಸ್ಕ್ರೂವು ಕಟ್ಟಿಗೆಯ ಫಲಕದ ಮೇಲೆ ಪ್ರಯುಕ್ತಗೊಳಿಸಿದ ಒತ್ತಡವನ್ನು ಕಂಡು ಹಿಡಿಯಿರಿ (Pa ದಲ್ಲಿ).

ಕೊಟ್ಟದ್ದು: ಕ್ಷೇತ್ರಫಲ = 05 x 10-6 m2ಸ್ಕ್ರೂದ ತೂಕ 0.5 N, ಒತ್ತಡ = ?

                                               

                                                =106N/m2= 108Pa

- 4000 Pa ಹೆಚ್ಚಿಗಿನ ಒತ್ತಡ

* ಸಂಪರ್ಕಕ್ಷೇತ್ರಫಲ ಕಡಿಮೆ ಇದ್ದಷ್ಟು ಒತ್ತಡ ಹೆಚ್ಚು

= 10 N/m²

ಒತ್ತಡ = 

= 10" Pa

ಉದಾಹರಣೆ 4: ಧಾತುವಿನ ಒಂದು ಆಯತಾಕೃತಿ ದ್ರವ್ಯರಾಶಿ 10 kg ಇದ್ದು ಅದರ ಉದ್ದ 50 cm,ಎತ್ತರ 10 cm ಮತ್ತು ಅಗಲ 20 cnಇದೆ. (ಆಕೃತಿ) ಟೇಬಲ್ಲಿನ ಮೇಲೆ ಧಾತುವಿನ ತುಂಡನ್ನು ಕೆಳಗಿನ ಪೃಷ್ಠಭಾಗಗಳ ಮೇಲೆ ಇಟ್ಟರೆ ಅದು ಪ್ರಯುಕ್ತ ಮಾಡಿದ ಒತ್ತಡವನ್ನು ಕಂಡು ಹಿಡಿಯಿರಿ. ABCD, CDEF ಮತ್ತು BCFG ಯಾವ ಸ್ಥಿತಿಯಲ್ಲಿ ಒತ್ತಡವು ಹೆಚ್ಚು ಇರುವುದೆಂಬುದನ್ನು ಹೇಳಿರಿ.

ಕೊಟ್ಟದ್ದು: ಧಾತುವಿನ ತುಂಡಿನ ತೂಕ = 10 X 9.8 N = 98N

ಪೃಷ್ಠಭಾಗ ABCDಗಾಗಿ ಉದ್ದ 50cm, ಅಗಲ = 20cm

ಕ್ಷೇತ್ರಫಲ = ಉದ್ದ X ಅಗಲ = 50 X 20 = 1000cm2= 0.1 m2

                                                 = 98/0.1

                                                 = 980Pa

 

ಪೃಷ್ಠಭಾಗ CDEF ಗಾಗಿ, ಉದ್ದ = 50 cm, ಅಗಲ = 10 cm

ಕ್ಷೇತ್ರಫಲ = ಉದ್ದ Xಅಗಲ = 50 cm x 10 cm-500 cm=0.05 m²

                                                = 98/0.05

                                                = 9800/5 = 1960Pa

 

ಪೃಷ್ಠಭಾಗ BCFG ಗಾಗಿ, ಉದ್ದ = 20 cm ಅಗಲ =10 cm

ಕ್ಷೇತ್ರಫಲ - ಉದ್ದx ಅಗಲ = 20 cm x 10 cm = 200 cm² = 0.02 m2 =

                                                = 98/0.02

                                                = 4900Pa

ಆದ್ದರಿಂದ ಸಂಪರ್ಕ ಕ್ಷೇತ್ರಫಲ ಕಡಿಮೆ ಇದ್ದಷ್ಟು ಒತ್ತಡ ಹೆಚ್ಚು ಇರುತ್ತದೆ.

ಉದಾಹರಣೆ 5: ಒಂದು ಸಂಗಮರವರಿ ರಸಿ ಕಲ್ಲಿನ ತುಂಡಿನ ತೂಕ ಹವೆಯಲ್ಲಿ 100 gmಇದೆ ದರ ದಾರ್ಡ್ಯ 2.5 g/ccದಷ್ಟು ಇದ್ದರೆ ಅದರ ನೀರಿನಲ್ಲಿಯ ತೂಕವು ಎಷ್ಟು ಆಗಬಲ್ಲದು?

ಕೊಟ್ಟದ್ದು: ಹವೆಯಲ್ಲಿಯ ತೂಕ 100 gm

ದಾರ್ಡ್ಯ = 2.5 g/cc ಘನ ಪರಿಮಾಣ

ಆದ್ದರಿಂದ,ಘನ ಪರಿಮಾಣ = ತೂಕ/ದಾರ್ಡ್ಯ

                              = 100 gm/2.5 g/cc =40 cc

ಆದ್ದರಿಂದ ಆರ್ಕಿಮಿಡಿಸನ ತತ್ವಕ್ಕನುಸಾರ ನೀರಿನಲ್ಲಿ ಮುಳುಗಿಸಿದಾಗ ತುಂಡಿನ ಘನಪರಿಮಾಣದಷ್ಟು 40 cc ದಷ್ಟು ನೀರು ಬದಿಗೆ ಹೊರ ಚೆಲ್ಲಲಾಗುವುದು. ಈ ನೀರಿನ ತೂಕದಷ್ಟು ಅಂದರೆ 40 g ದಷ್ಟು ಇಳಿತ ತುಂಡಿನ ತೂಕದಲ್ಲಿ ಬರುವುದು.

ಆದ್ದರಿಂದ ನೀರಿನಲ್ಲಿಯ ಫರಸಿ ಕಲ್ಲಿನ ತುಂಡಿನ ತೂಕ  = 100 g - 40 g = 60 g.

 

 

 

ಕೊಟ್ಟದ್ದು: ಧಾತುವಿನ ತು೦ಡಿನ ತೂಕ = mg = 10 x 9.8 N = 98 N, ವೈದ್ಯಭಾಗ ABCD ಗಾಗಿ, ಉದ್ದ = 50 cm ಅಗಲ = 20 em

 

ಉದಾಹರಣೆ 6. ಒಂದು ಧಾತುವಿನ ದಾರ್ಡ್ಯ 10.8 x 103 kg/m³ ಇದೆ. ಹಾಗಾದರೆ ಧಾತುವಿನ ಸಾಪೇಕ್ಷ ದಾರ್ಡ್ಯವನ್ನು ತೆಗೆಯಿರಿ. (ಉತ್ತರ: 10.8)


ಉಪಕ್ರಮ:

ಪಾಠದಲ್ಲಿ ಕೊಡಲಾದ ಎಲ್ಲ ಕೃತಿಗಳನ್ನು ಮೊಬೈಲ್ ಫೋನಿನ ನೆರವಿನಿಂದ ಚಿತ್ರೀಕರಿಸಿರಿ ಮತ್ತು ಇತರರಿಗೆ ಕಳಿಸಿಕೊಡಿರಿ.

 

 

 

 

4. ಪ್ರವಾಹೀ ವಿದ್ಯುತ್ತು ಮತ್ತು ಚುಂಬಕತ್ವ

ಪ್ರ. 1. ಬಿಟ್ಟ ಸ್ಥಳಗಳಲ್ಲಿ ಕೆಳಗಿನ ಶಬ್ದ ಸಮೂಹದೊಳಗಿನ ಯೋಗ್ಯ ಶಬ್ದವನ್ನು ಬರೆಯಿರಿ.

(ಚುಂಬಕತ್ವ, 4.5V, 3.0V ಗುರುತ್ವಾಕರ್ಷಣೆ, ವಿಭವಾಂತರ, ವಿಭವ, ಅಧಿಕ, ಕಡಿಮೆ, 0V)

. ತಡಸಲಿನ ನೀರು ಮೇಲಿನ ಪಾತಳಿಯಿಂದ ಕೆಳಗಿನ ಪಾತಾಳಿಯ ಮೇಲೆ ಬೀಳುತ್ತದೆ ಇದರ ಕಾರಣ ..........

ಉತ್ತರ: ಗುರುತ್ವಾಕರ್ಷಣೆ

ಆ. ಒಂದು ಪರಿಪಥದಲ್ಲಿ ಇಲೆಕ್ಟ್ರಾನುಗಳು .......... ವಿಭ ಇರುವ ಬಿಂದುವಿನಿಂದ .......... ವಿಭವ ಇರುವ ಬಿಂದುವಿನ ಕಡೆಗೆ ಹರಿಯುತ್ತವೆ.

ಉತ್ತರ: ಅಧಿಕ, ಕಡಿಮೆ

ಇ. ವಿದ್ಯುತ್ ಕೋಶದ ಧನ ಅಗ್ರ ಮತ್ತು ಋಣ ಅಗ್ರ ಇವುಗಳ ವಿದ್ಯುತ್‌ ಸ್ಥಿತಿಕ ವಿಭವಗಳಲ್ಲಿಯ ವ್ಯತ್ಯಾಸವೆಂದರೆ ಆ ಕೋಶದ …………. ಅಹುದು.

ಉತ್ತರ: ವಿಭವಾಂತರ

ಈ. 1.5V ವಿಭವಾಂತರದ ಮೂರು ವಿದ್ಯುತ್ ಕೋಶಗಳನ್ನು ಬ್ಯಾಟರಿ ಸ್ವರೂಪದಲ್ಲಿ ಜೋಡಣೆ ಮಾಡಲಾಗಿದೆ. ಈ ಬ್ಯಾಟರಿಯ ವಿಭವಾಂತರವು ..... V ದಷ್ಟು ಇರುತ್ತದೆ.

ಉತ್ತರ: 4.5V

ಉ. ಒಂದು ವಿದ್ಯುತ್ ವಾಹಕ ತಂತಿಯೊಳಗಿಂದ ಹರಿಯುವ ವಿದ್ಯುತ್‌ ಪ್ರವಾಹವು ತಂತಿಯಸುತ್ತ ............ ನಿರ್ಮಾಣ ಮಾಡುತ್ತದೆ.

ಉತ್ತರ: ಚುಂಬಕತ್ವ

ಪ್ರ.2. ಮೂರು ಶುಷ್ಕ ವಿದ್ಯುತ್ ಕೋಶಗಳನ್ನು ಜೋಡಣೆಯ ತಂತಿಗಳಿಂದ ಬ್ಯಾಟರಿ ಮಾಡುವುದು ಇದೆ, ತಂತಿಗಳನ್ನು ಹೇಗೆ ಜೋಡಿಸುವಿರಿ. ಎಂಬುದನ್ನು ಆಕೃತಿಸಹಿತ ತೋರಿಸಿರಿ.

ಉತ್ತರ:  ಕೋಶಗಳ ಜೋಡಣೆ: ವಿದ್ಯುತ್ ಪರಿಪಾತದಲ್ಲಿ ಒಂದಕ್ಕಿಂತ ಹೆಚ್ಚು ಕೋಶಗಳನ್ನು ಜೋಡಿಸಲಾಗುತ್ತದೆ. ಟ್ರಾಂಝೀಸ್ಟರ ರೇಡಿಯೋಗಳಲ್ಲೋ 2-3 ಶುಷ್ಕ ಕೋಶಗಳನ್ನು ಏಕಸರ ಜೋಡಣೆಯಲ್ಲಿ ಜೋಡಿಸಿರುವುದು ಕಾಣುತ್ತದೆ. ಹೀಗೆ ಮಾಡುವ ಉದ್ದೇಶ ಒಂದು ಕೋಶದ ವಿಭವಾಂತರಕ್ಕಿಂತ ಅಧಿಕ ವಿಭವಾಂತರವನ್ನು ದೊರಕಿಸುವುದು ಆಗಿರುತ್ತದೆ. ಕೆಳಗಿನ ಆಕೃತಿಯಲ್ಲಿ ಮೂರು ಶುಷ್ಕ ವಿದ್ಯುತ ಕೋಶಗಳನ್ನು ಏಕಸರ ಜೋಡಣೆಯಲ್ಲಿ ಜೋಡಿಸಲಾಗಿದೆ.

 

         ಈ ಏಕಸರ ಜೋಡಣೆಯಲ್ಲಿ ಒಂದು ಕೋಶದ ಧನ ಅಗ್ರಾವನ್ನು ಎರಡನೆಯ ಕೋಶದ ಋಣ ಅಗ್ರಕ್ಕೆ ಮತ್ತು ಎರಡನೆಯದರ ಧನ ಅಗ್ರವನ್ನು ಮೂರನೆಯದರ ಋಣ ಅಗ್ರಕ್ಕೆ ಜೋಡಿಸುತ್ತಾರೆ. ಅದರಿಂದ ಒಂದು ವೇಳೆ ಪ್ರತಿಯೊಂದು ಕೋಶದ ವಿಭವಾಂತರವು 1V ಇದ್ದರೆ ಮೂರೂ ಕೋಶಗಳ ಒಟ್ಟು ವಿಭವಾಂತರ 3V ಆಗುವುದು. 

 

6. ದ್ರವ್ಯದ ಸಂಘಟನೆ

ಪ್ರ. 1. ಯೋಗ್ಯ ಪರ್ಯಾಯಗಳನ್ನು ಆರಿಸಿ ಕಳಗಿನ ವಿಧಾನಗಳನ್ನು ಪುನಃ ಬರೆಯಿರಿ.

. ಘನ ಪದಾರ್ಥದ ಕಣಗಳಲ್ಲಿ ಅಂತ‌ ಅಣುಗಳ ಪ್ರೇರಣೆಯು........  ಇರುತ್ತದೆ.

(i) ಕನಿಷ್ಠ       (ii) ಮಧ್ಯಮ            (iii) ಹೆಚ್ಚಿಗೆ ಹೆಚ್ಚು     (iv) ಅನಿಶ್ಚಿತ

ಉತ್ತರ: (iii) ಹೆಚ್ಚಿಗೆ ಹೆಚ್ಚು

ಆ. ಘನ ಪದಾರ್ಥಗಳ ಮೇಲೆ ಬಾಹ್ಯ ಒತ್ತಡವನ್ನು ಹಾಕಿದರೂ ಕೂಡ ಅವುಗಳ ಘನ ಪರಿಮಾಣವು ಸ್ಥಿರವಾಗಿ ಉಳಿಯುತ್ತದೆ ಈ ಗುಣಧರ್ಮಕ್ಕೆ .................... ಎನ್ನುತ್ತಾರೆ.

(i) ಜಿಗುಟುತನ                (ii) ಅಸ೦ಕೋಚತ್ವ           (iii) ಪ್ರವಾಹಿ           (iv) ಸ್ಥಿತಿಸ್ಥಾಪಕತ್ವ

ಉತ್ತರ: (ii) ಅಸ೦ಕೋಚತ್ವ

ಇ. ದ್ರವ್ಯಗಳ ವರ್ಗಿಕರಣವನ್ನು ಮಿಶ್ರಣ, ಸಂಯುಕ್ತ ಮತ್ತು ಮೂಲವಸ್ತು ಪ್ರಕಾರಗಳಲ್ಲಿ ಮಾಡುವಾಗ

................ ಪ್ರಮಾಣವನ್ನು ಹಚ್ಚಲಾಗುತ್ತದೆ.

(i) ದ್ರವದ ಅವಸ್ಥೆ    (ii) ದ್ರವದ ಪ್ರಾವಸ್ಥೆ     (iii) ದ್ರವ್ಯದ ರಾಸಾಯನಿಕ ಸಂಘಟನೆ

(iv) ಇವುಗಳಲ್ಲಿನ ಎಲ್ಲವೂ

ಉತ್ತರ: iii) ದ್ರವ್ಯದ ರಾಸಾಯನಿಕ ಸಂಘಟನೆ

ಈ. ಎರಡು ಅಥವಾ ಹೆಚ್ಚು ಘಟಕ ಪದಾರ್ಥಗಳು ಇರುವ ದ್ರವ್ಯಕ್ಕೆ .......... ಎನ್ನುತ್ತಾರೆ.

(i) ಮಿಶ್ರಣ     (ii) ಸಂಯುಕ್ತ  (iii) ಮೂಲವಸ್ತು       (iv) ಧಾತುಸದೃಶ

ಉತ್ತರ: (i) ಮಿಶ್ರಣ

ಉ. ಹಾಲು ಇದು ದ್ರವ್ಯದ .......... ಈ ಪ್ರಕಾರದ ಉದಾಹರಣೆ ಆಗಿದೆ.

(i) ದ್ರಾವಣ    (ii) ಏಕವಿಧ ಮಿಶ್ರಣ   (iii) ನೈಕವಿಧ ಮಿಶ್ರಣ           (iv) ಜೋಲಾಡುವಿಕೆ

ಉತ್ತರ: (ii) ಏಕವಿಧ ಮಿಶ್ರಣ

ಎ. ನೀರು, ಪಾರಜ ಮತ್ತು ಬ್ರೆಮಿನ್ ಇವುಗಳಲ್ಲಿ ಸಾಧರ್ಮ ಇವೆ. ಕಾರಣ ಮೂರು ........... ಗಳಿವೆ.

(i) ದ್ರವಪದಾರ್ಥ      (ii) ಸಂಯುಕ್ತ  (iii) ಅಧಾತು (iv) ಮೂಲವಸ್ತುಗಳು

ಉತ್ತರ: (i) ದ್ರವಪದಾರ್ಥ

ಏ. ಕಾರ್ಬನದ ಸಂಯೋಗ ಸಾಮರ್ಥ್ಯ 4 ಇದೆ ಮತ್ತು ಆಕ್ಸಿಜನ ಸಂಯೋಗ ಸಾಮರ್ಥ್ಯ 2 ಇದೆ. ಇದರ ಮೇಲಿಂದ ತಿಳಿಯುವುದೇನೆಂದರೆ ಕಾರ್ಬನ ಡೈಆಕ್ಸೆಡ್ ಈ ಸಂಯುಕ್ತದಲ್ಲಿ ಕಾರ್ಬನ ಪರಮಾಣು ಮತ್ತು ಒಂದು ಆಕ್ಸಿಜನ ಪರಮಾಣು ಇವುಗಳಲ್ಲಿ ........ ರಾಸಾಯನಿಕ ಬಂಧಗಳು ಇರುತ್ತವೆ.

(i)1    (ii) 2                (iii) 3               (iv) 4

ಉತ್ತರ: (ii) 2 

ಪ್ರ. 2. ಗುಂಪಿನಲ್ಲಿ ಸೇರ್ಪಡೆಯಾಗದ ಶಬ್ದವನ್ನು ಗುರುತಿಸಿ ಸೃಷ್ಟಿಕರಣ ಕೊಡಿರಿ.

ಅ. ಬಂಗಾರ, ಬೆಳ್ಳಿ, ತಾಮ್ರ, ಹಿತ್ತಾಳೆ         

ಉತ್ತರ: ಹಿತ್ತಾಳೆ, ಇದು ಧಾತುವಿನ ಮಿಶ್ರಣವಿದೆ. ಉಳಿದವುಗಳು ಸಂಯುಕ್ತಗಳಾಗಿವೆ.

ಆ. ಹೈಡ್ರೋಜನ, ಹೈಡೋಜನ ಪೆರಾಕ್ಸಾಯಿ, ಕಾರ್ಬನ ಡೈ ಆಕ್ಸೆಡ್, ನೀರಿನ ಉಗಿ

ಉತ್ತರ: ಹೈಡ್ರೋಜನ್, ಕಾರಣ ಇದು ಧಾತುವಿದೆ. ಉಳಿದವುಗಳು ಸಂಯುಕ್ತಗಳಾಗಿವೆ.

, ಹಾಲು, ನಿಂಬೆರಸ, ಕಾರ್ಬನ, ಉಕ್ಕು

ಉತ್ತರ: ಕಾರ್ಬನ, ಕಾರ್ಬನ್ ಇದು ಮೂಲವಸ್ತುವಾಗಿದೆ. ಉಳಿದವುಗಳು ಸಂಯುಕ್ತಗಳಾಗಿವೆ.

ಈ. ನೀರು, ಪಾರಜ, ಟ್ರೋಮಿನ್, ಪೆಟ್ರೋಲ್

ಉತ್ತರ: ಪೆಟ್ರೋಲ್, ಇದು ಜ್ವಾಲಾಗ್ರಾಹಿ ಪದಾರ್ಥವಾಗಿದೆ. ಇಳುದವುಗಳು ಜ್ವಾಲಾಗ್ರಾಹಿಗಳಿಲ್ಲ.

ಉ. ಸಕ್ಕರೆ, ಉಪ್ಪು, ತಿನ್ನುವ ಸೋಡಾ, ನೀಲಿತುತ್ತೆ

ಉತ್ತರ:ನಿಲೀತುತ್ತೆ, ನೀರಿನಲ್ಲಿ ಹಾಕಿದರೆ ಇದು ನೀಲಿಬಣ್ಣಕ್ಕೆ ರೂಪಾಂತರವಾಗುತ್ತದೆ. ಆದರೆ ಉಳಿದವುಗಳ ಬಣ್ಣ ಹಾಗೇ ಉಳಿಯುತ್ತವೆ. 

ಊ. ಹೈಡ್ರೋಜನ್, ಸೋಡಿಯಮ್, ಪೋಟ್ಯಾಶಿಯಮ್, ಕಾರ್ಬನ್

ಉತ್ತರ: ಹೈದ್ರೋಜನ್ , ಇದು ವಾಯುವಾಗಿದೆ, ಉಳಿದವುಗಳು ಘನಪದಾರ್ಥಗಳಿವೆ.

ಪ್ರ. 3. ಕೆಳಗಿನ ಪ್ರಶ್ನೆಗಳ ಉತ್ತರಗಳನ್ನು ಬರೆಯಿರಿ.

ಅ. ಸಸ್ಯಗಳು ಸೂರ್ಯಪ್ರಕಾಶದಲ್ಲಿ ಕ್ಲೋರೋಫಿಲದ ಸಹಾಯದಿಂದ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರು ಇವುಗಳಿಂದ ಗ್ಲುಕೋಜ್ ತಯಾರಿಸುತ್ತವೆ. ಮತ್ತು ಆಕ್ಸಿಜನ್ ವನ್ನು ಹೊರಹಾಕುತ್ತವೆ.  ಈ ಪ್ರಕ್ರಿಯೆಯಲ್ಲಿಯ ನಾಲ್ಕು ಸಂಯುಕ್ತಗಳು ಯಾವುವು ಎಂಬುದನ್ನು ಗುರುತಿಸಿ ಅವುಗಳ ಪ್ರಕರಗಳನ್ನು ಬರೆಯಿರಿ.

ಉತ್ತರ:        1. ಸೂರ್ಯಪ್ರಕಾಶ -ಕ್ಲೋರೋಫಿಲ್- ಜಟಿಲ ಸಂಯುಕ್ತ

2. ಕಾರ್ಬನ್ ಡೈ ಆಕ್ಸೈಡ್-ಆಕರ್ಬನಿಯ ಸಂಯುಕ್ತ  CO2  + H2O

3. ನೀರು – ಆಕರ್ಬನಿಯ ಸಂಯುಕ್ತ

4. ಗ್ಲುಕೋಜ್ – ಕರ್ಬನಿಯ ಸಂಯುಕ್ತ (C6H12O6)

ಆ. ಹಿತ್ತಾಳೆ ಈ ಸಮ್ಮಿಶ್ರದ ಒಂದು ಮಾದರಿಯಲ್ಲಿ ಮುಂದಿನ ಘಟಕಗಳು ಕಾಣಿಸಿದವು: ತಾಮ್ರ (70%) ಮತ್ತು ಸತುವು (30%) ಇವುಗಳಲ್ಲಿ ದ್ರಾವಕ, ದ್ರಾವ್ಯ ಮತ್ತು ದ್ರಾವಣಗಳು ಯಾವುವು ಎಂಬುದನ್ನು ಬರೆಯಿರಿ.

ಉತ್ತರ: ದ್ರಾವಕ- ತಾಮ್ರ     ದ್ರಾವ್ಯ- ಸತುವು       ದ್ರಾವಣ -ಹಿತ್ತಾಳೆ

ಇ. ಕರಗಿರುವ ಲವಣಗಳಿಂದ ಸಮುದ್ರದ ನೀರಿಗೆ ಉಪ್ಪಿನ ರುಚಿ ಇರುತ್ತದೆ. ಕೆಲವು ಜಲ ಸಂಗ್ರಹಗಳ ನೋಂದಾಯಿಸಲ್ಪಟ್ಟ ಲವಣಾಂಶತೆ (ನೀರಿನೊಳಗಿನ ಲವಣಗಳ ಪ್ರಮಾಣ) ಕೆಳಗಿನಂತೆ ಇವೆ ಲೋಣಾರ ಸರೋವರ: 7.9%, ಪೆಸಿಫಿಕ ಮಹಾಸಾಗರ: 3.5%, ಭೂಮಧ್ಯ ಸಮುದ್ರ: 3.8%, ಮೃತ ಸಮುದ್ರ: 33.7%, ಈ ಮಾಹಿತಿಯ ಮೇಲಿಂದ ಮಿಶ್ರಣದ ಎರಡು ವೈಶಿಷ್ಟ್ಯಗಳನ್ನು ಸಷ್ಟಿಕರಿಸಿರಿ.

ಉತ್ತರ: ಉಪ್ಪು ನೀರು ಅಥವಾ ಸಿಹಿನೀರು ಇರಲಿ ಎಲ್ಲ ನೀರಿನಲ್ಲಿ ಲವಣಗಳು ಕರಗಿರುತ್ತವೆ. ಲವಣಗಳು ಮತ್ತು ಎಲ್ಲ ನೀರಿನ ಸಂಗ್ರಹಗಳು ಉಪ್ಪುಪ್ಪಾಗಿವೆ. ಇದರ ಅರ್ಥವೆನೆಂದರೆ ಮಿಶ್ರಣಗಳಲ್ಲಿ ಅವುಗಳ ಘಟಕ ಪದಾರ್ಥಗಳ ಗುಣಧರ್ಮಗಳು ಹಾಗೆಯೇ ಉಳಿದುಕೊಳ್ಳುತ್ತವೆ.

 ಎಲ್ಲ ಜಲಸಂಗ್ರಹಗಳಲ್ಲಿ ಲವಣಗಳ ಪ್ರಮಾಣಗಳು ಭಿನ್ನವಾಗಿವೆ, ಅಂದರೆಯೇ ಮಿಶ್ರಣಗಳಲ್ಲಿ ಘಟಕಗಳ ಪ್ರಮಾಣ ಬದಲಾಗಬುಹುದು. ಮಾತ್ರ ಗುಣಧರ್ಮಗಳು ಕಾಯಾಮವಾಗಿ ಉಳಿಸಿಕೊಳ್ಳಲಾಗುತ್ತದೆ.

ಪ್ರ. 4. ಪ್ರತಿಯೊಂದಕ್ಕೆ ಎರಡು ಉದಾಹರಣೆಗಳನ್ನು ಕೊಡಿರಿ.

ಅ. ದ್ರವರೂಪ ಮೂಲವಸ್ತು = ಪಾರಜ, ಬ್ರೋಮೀನ್

ಆ. ವಾಯುರೂಪ ಮೂಲವಸ್ತು = ಆಕ್ಸಿಜನ್, ಕ್ಲೋರಿನ್, ಹೈಡ್ರೋಜನ್

ಇ. ಘನರೂಪ ಮೂಲವಸ್ತು = ಕಬ್ಬಿಣ, ಬಂಗಾರ, ಬೆಳ್ಳಿ

ಈ. ಏಕವಿಧ ಮಿಶ್ರಣ = ಹವೆ, ಸಮುದ್ರದ ನೀರು, ನೀರಿನಲ್ಲಿ ಕರಗಿದ ಉಪ್ಪು

ಉ. ಕಲಿಲ =ಹೊಗೆಗಳು, ಹಾಲು+ ನೀರು, ರಕ್ತ

ಊ. ಸೇಂದ್ರಿಯ ಸಂಯುಕ್ತ =ಮಿಥೆನ್, ಇಥೆನ್

ಎ. ಜಟಿಲ ಸಂಯುಕ್ತ =ಕ್ಲೋರೋಫಿಲ್, ಹಿಮೋಗ್ಲೋಬಿನ್

ಏ. ಅಸೇಂದ್ರಿಯ ಸಂಯುಕ್ತ = ನೀಲಿತುತ್ತೆ, ಉಪ್ಪು, ಸುಣ್ಣದ ಕಲ್ಲು

ಐ. ಧಾತುಸದೃಶ = ಸಿಲಿಕಾನ್,ಆರ್ಸೆನಿಕ್

ಒ. ಸಂಯೋಗ ಸಾಮರ್ಥ್ಯ 1 ಇರುವ ಮೂಲವಸ್ತು = ಸೋಡಿಯಮ್, ಕ್ಲೋರಿನ್

ಓ. ಸಂಯೋಗ ಸಾಮರ್ಥ್ಯ 2 ಇರುವ ಮೂಲವಸ್ತು =ಆಕ್ಸಿಜನ್, ಮ್ಯಾಗ್ನೆಶಿಯಮ್

ಪ್ರ. 5. ಕೆಳಗೆ ಕೊಟ್ಟ ಅಣುಸೂತ್ರಗಳ ಮೇಲಿಂದ ಆಯಾ ಸಂಯುಕ್ತದಲ್ಲಿಯ ಘಟಕ ಮೂಲವಸ್ತುಗಳ ಹೆಸರು ಮತ್ತು ಸಂಜ್ಞೆಗಳನ್ನು ಮತ್ತು ಅವುಗಳ ಸಂಯೋಗ ಸಾಮರ್ಥ್ಯವನ್ನು ಗುರುತಿಸಿರಿ.

KCl, HBr, MgBr, K,O, NaH, CaCl, CC, HI, HS, Na,S. FeS and BaCl,

ಅಣುಸೂತ್ರಗಳು

ಸಂಯುಕ್ತಗಳು

ಘಟಕ ಮೂಲವಸ್ತುಗಳು

ಸಂಜ್ಞೆಗಳು

KCl

ಪೊಟ್ಯಾಶಿಯಮ್ ಕ್ಲೋರೈಡ್

ಪೊಟ್ಯಾಶಿಯಮ್

ಕ್ಲೋರಿನ್

K-1

Cl - 1

HBr

ಹೈಡ್ರೋಜನ್

ಬ್ರೋಮೈಡ್

ಹೈಡ್ರೋಜನ್

ಬ್ರೋಮೀನ್

H-1

Br-1

MgBr2

ಮಗ್ನೇಶಿಯಮ್ ಬ್ರೋಮೈಡ್

ಮಗ್ನೇಶಿಯಮ್

ಬ್ರೋಮೀನ್

Mg - 2

Br -1

K2O

ಪೊಟ್ಯಾಶಿಯಮ್ ಆಕ್ಸೈಡ್

ಪೊಟ್ಯಾಶಿಯಮ್

ಆಕ್ಸಿಜನ್

K – 1

O -2

NaH

ಸೋಡಿಯಮ್ ಹೈಡ್ಡ್ರಾಯಿಡ್

ಸೋಡಿಯಮ್

ಹೈಡ್ರೋಜನ್

Na – 1

H – 1

CaCl2

ಕ್ಯಾಲ್ಸಿಯಮ್

ಕ್ಲೋರೈಡ್

ಕ್ಯಾಲ್ಸಿಯಮ್

ಕ್ಲೋರಿನ್

Ca – 2

Cl -1

CCl4

 ಕ್ಲೋರೋಫಾರ್ಮ್

ಕಾರ್ಬನ್

ಕ್ಲೋರಿನ್

C -4

Cl -1

HI

ಹೈಡ್ರೋಜನ್

ಅಯೋಡೈಡ್

ಹೈಡ್ರೋಜನ್

ಆಯೋಡಿನ್

H1

I - 1

H2S

ಹೈಡ್ರೋಜನ್

ಸಲ್ಫಾಯಿಡ್

ಹೈಡ್ರೋಜನ್

ಸಲ್ಫರ್

H -1

S -2

Na2S

ಸೋಡಿಯಮ್

ಸಲ್ಫಾಯಿಡ್

ಸೋಡಿಯಮ್

ಸಲ್ಫರ್

Na – 1

S - 2

FeS

ಫೇರಸ್

ಸಲ್ಫಾಯಿಡ್

ಫೇರಸ್

ಸಲ್ಫರ್

Fe – 2

S - 2

BaCl,

ಬೋರಿಯಮ್ ಕ್ಲೋರೈಡ್

ಬೋರಿಯಮ್

ಕ್ಲೋರಿನ್

Ba – 2

Cl - 1

 

ಪ್ರ. 6. ಕೆಳಗೆ ಕೆಲವು ದ್ರವ್ಯಗಳ ರಾಸಾಯನಿಕ ಸಂಘಟನೆಗಳನ್ನು ಕೋಷ್ಠಕದಲ್ಲಿ ಕೊಟ್ಟಿದೆ ಅದರ ಮೇಲಿಂದ ಆ ದ್ರವ್ಯಗಳ ಮುಖ್ಯ ಪ್ರಕಾರಗಳನ್ನು ನಿರ್ಧರಿಸಿರಿ.

ದ್ರವ್ಯದ ಹೆಸರು

ರಾಸಯನಿಕ ಸಂಘಟನೆ

ದ್ರವ್ಯದ ಮುಖ್ಯ ಪ್ರಕಾರ

ಸಮುದ್ರದ ನೀರು

H2O+NaC1+MgCl2, + ....

 

ಊರ್ಧ್ವ ಪಾತಿತ ಜಲ

H₂O

 

ಬಲೂನಿನಲ್ಲಿ ತುಂಬಿದ ಹಾಯಡೋಜನ ವಾಯು

H

 

LPG ಸಿಲಿಂಡರದಲ್ಲಿಯ ಅನಿಲ

C4H10+C3H8

 

ತಿನ್ನುವ ಸೋಡಾ

NaHCO,

 

ಶುದ್ಧ ಬಂಗಾರ

Au

 

ಆಕ್ಸಿಜನದ ಸಿಲಿಂಡರದಲ್ಲಿಯ ವಾಯು

 

O2

 

ಕಂಚು (ಬ್ರಾಂಝ)

Cu + Sn

 

ವಜ್ರ

C

 

ನೀಲಿತುತ್ತೆ

CuSO4

 

ಸುಣ್ಣದ ಕಲ್ಲು

CaCO3

 

ಸೌಮ್ಯ ಹಾಯಡೋಕ್ಲೋರಿಕ ಆಮ್ಲ

HCl+H₂O

 

 ಪ್ರ. 7. ಶಾಸ್ತ್ರೀಯ ಕಾರಣ ಕೊಡಿರಿ.

ಅ. ಹೈಡೋಜನ ಜ್ವಾಲಾಗ್ರಾಹಿ ಇದೆ, ಆಕ್ಸಿಜನ ಜ್ವಲನಕ್ಕೆ ಸಹಾಯ ಮಾಡುವುದು ಆದರೆ ನೀರು ಬೆಂಕಿಯನ್ನು ನಂದಿಸಲು ಸಹಾಯ ಮಾಡುತ್ತದೆ.

ಉತ್ತರ: ಹೈಡ್ರೋಜನ್ ಮತ್ತು ಆಕ್ಸಿಜನ್ ಈ ಮೂಲವಸ್ತುಗಳ ರಾಸಾಯನಿಕ ಅಭಿಕ್ರಿಯೆ ಆಗಿ ನೀರು ಸಂಯುಕ್ತ ನಿರ್ಮಾಣವಾಗುತ್ತದೆ. ಸಂಯುಕ್ತಗಳ ಗುಣಧರ್ಮಗಳು ಮೂಲವಸ್ತುವಿಗಿಂತ ಬೇರೆ ಇರುತ್ತದೆ. ಆದ್ದರಿಂದ ಹೈಡ್ರೋಜನ ಮತ್ತು ಆಕ್ಸಿಜನ್ ಜ್ವಾಲಾಗ್ರಾಹಿಯಾಗಿದ್ದರೂ ನೀರು ಬೆಂಕಿ ನಂದಿಸಲು ಸಹಾಯ ಮಾಡುತ್ತದೆ.

ಆ. ಕಲಿಲದ ಘಟಕ ಪದಾರ್ಥಗಳನ್ನು ಸೋಸುವ ಕ್ರಿಯೆಯಿಂದ ಬೇರ್ಪಡಿಸಲು ಬರುವದಿಲ್ಲ.

ಉತ್ತರ: ಕಲಿಲದ ಘಟಕ ಪದಾರ್ಥಗಳ ಕಣಗಲ ವ್ಯಾಸಕ್ಕಿಂತ ಸಾಮಾನ್ಯ ಸೋಸುಕಾಗದದ ಛಿದ್ರಗಳು ದೊಡ್ಡವು ಇರುವುದರಿಂದ ಸೋಸುವ ಕ್ರಿಯೆಯಿಂದ ಕಲಿಲ ಈ ನೈಕವಿಧ ಮಿಶ್ರಣದ ವಿಂಗಡಣೆ ಆಗುವುದಿಲ್ಲ.

ಇ. ನಿಂಬೆ ಪಾನಕಕ್ಕೆ (ಶರ್ಬತ್ತಿಗೆ) ಸಿಹಿ, ಹುಳಿ, ಉಪ್ಪು ಹೀಗೆ ಎಲ್ಲ ರುಚಿಗಳು ಇರುತ್ತವೆ ಮತ್ತು ಅದನ್ನು ಲೋಟದಲ್ಲಿ ಸುರುವಲು ಬರುತ್ತದೆ.

ಉತ್ತರ: ನಿಂಬೆ ಶರಬತ್ತು ಒಂದು ಮಿಶ್ರಣವಾಗಿದೆ. ನಿಂಬೆರಸವು ನೀರು, ಉಪ್ಪು ಮತ್ತು ನೀರು ಇವುಗಳಿಂದ ತಯಾರಾಗುತ್ತದೆ. ಶರಬತ್ತು ತಯಾರಾಗುವಾಗ ಯಾವುದೇ ರಾಸಾಯನಿಕ ಅಭಿಕ್ರಿಯೆ ಆಗುವುದಿಲ್ಲ. ಮಿಶ್ರಣದಲ್ಲಿಯ ಮೂಲಘಟಕದ ಗುಣಧರ್ಮಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದ್ದರಿಂದ ಪಾನಕಕ್ಕೆ ಸಿಹಿ, ಹುಳಿ, ಉಪ್ಪು ಹೀಗೆ ಎಲ್ಲ ರುಚಿಗಳು ಇದ್ದರೂ ಅದನ್ನು ಲೋಟದಲ್ಲಿ ಸುರುವಲು ಬರುತ್ತದೆ.

ಈ. ಘನರೂಪ ದ್ರವ್ಯಕ್ಕೆ ನಿಶ್ಚಿತ ಆಕಾರ ಮತ್ತು ಘನಪರಿಮಾಣ ಈ ಗುಣಧರ್ಮಗಳು ಇರುತ್ತವೆ.

ಉತ್ತರ: ಘನರೂಪ ದ್ರವದಲ್ಲಿ ಆಂತರ ಅಣುವಿನ ಕಣಗಳು ಒಂದಕ್ಕೊಂದು ಬಹಳ ಸಮೀಪದಲ್ಲಿ ಇರುತ್ತವೆ. ಅವು ತಮ್ಮ ತಮ್ಮ ಸ್ಥಳಗಳಲ್ಲಿ ನಿಶ್ಚಿತವಾಗಿ ಸ್ಪಂದಿಸುತ್ತವೆ. ಆದ್ದರಿಂದ ಘನರೂಪ ದ್ರವ್ಯಕ್ಕೆ ನಿಶ್ಚಿತ ಆಕಾರ ಮತ್ತು ಘನಪರಿಮಾಣ ಈ ಗುಣಧರ್ಮಗಳು ಇರುತ್ತವೆ.

ಪ್ರ. 8. ಮುಂದಿನ ಮೂಲವಸ್ತುಗಳ ಜೋಡಿಗಳಿಂದ ದೊರಕುವ ಸಂಯುಕ್ತಗಳ ಅಣುಸೂತ್ರಗಳನ್ನು ಓರೆ (ಕಾರಿ) ಗುಣಾಕಾರ ಪದ್ಧತಿಯಿಂದ ಶೋಧಿಸಿ ತೆಗೆಯಿರಿ.

ಅ. C (ಸಂಯೋಗ ಸಮರ್ಥ್ಯ 4) ಮತ್ತು C (ಸಂಯೋಗ ಸಮರ್ಥ್ಯ 1)

ಆ. N (ಸಂಯೋಗ ಸಮರ್ಥ್ಯ 3) ಮತ್ತು H (ಸಂಯೋಗ ಸಮರ್ಥ್ಯ 1)

ಇ. C (ಸಂಯೋಗ ಸಮರ್ಥ್ಯ 4) ಮತ್ತು 0 (ಸಂಯೋಗ ಸಮರ್ಥ್ಯ 2)

ಈ. Ca (ಸಂಯೋಗ ಸಮರ್ಥ್ಯ 2) ಮತ್ತು 0 (ಸಂಯೋಗ ಸಮರ್ಥ್ಯ 2)

 ಉಪಕ್ರಮ

ಭಿನ್ನ ಭಿನ್ನ ಸಿದ್ಧ ಖಾದ್ಯಪದಾರ್ಥಗಳ ವೇಷಣ (ಹೊದಿಕೆ) ಗಳನ್ನು ಸಂಗ್ರಹಿಸಿರಿ. ಅದರ ಮೇಲೆ ಕೊಟ್ಟ ಮಾಹಿತಿಯನ್ನು ಉಪಯೋಗಿಸಿ ಖಾದ್ಯಪದಾರ್ಥ ಮತ್ತು ಅದರೊಳಗಿನ ಘಟಕಗಳ ಕೋಷ್ಟಕ ತಯಾರಿಸಿರಿ, ಯಾವ ಘಟಕಗಳನ್ನು ದೊರಕಿಸಲು ಸಾಧ್ಯವೋ ಅವುಗಳನ್ನು ದೊರಕಿಸಿರಿ. ಮಿತ್ರ ಮತ್ತು ಶಿಕ್ಷಕರ ಮೇಲ್ವಿಚಾರಣೆಯಲ್ಲಿ ದೊರಕಿಸಿದ ಘಟಕಗಳ ಜ್ವಲನಪರೀಕ್ಷೆ ಮಾಡಿರಿ ಮತ್ತು ಈ ಘಟಕಗಳು ಸೇಂದ್ರಿಯ ಅಥವಾ ಅಸೇಂದ್ರಿಯ ಎಂಬುದನ್ನು ನಿರ್ಧಸಿರಿ. 

7. ಧಾತು-ಅಧಾತು

ಪ್ರ. 1. ಕೋಷ್ಟಕವನ್ನು ಪೂರ್ಣ ಮಾಡಿರಿ.

ಅ.ಕ್ರ

ಧಾತುಗಳ ಗುಣಧರ್ಮಗಳು

ನಿತ್ಯ ಜೀವನದಲ್ಲಿ ಉಪಯೋಗಗಳು

1.

ತಂತುಶೀಲತ್ವ

ಬೆಳ್ಳಿ ಬಂಗಾರದ ಆಭರಣಗಳು

2.

ಪತ್ರಶೀಲತ್ವ

ಅಲ್ಯೂಮಿಮಿಯಮ್,

3.

ಉಷ್ಣತೆಯ ವಹನ

ತಾಮ್ರದ ಭಾಂಡೆಗಳು, ಸ್ಟೇನಲೆಸ್ ಸ್ಟೀಲ್ ಭಾಂಡೆ

4.

ವಿದ್ಯುತ್ ವಹನ

ತಾಮ್ರದ ತಂತಿಗಳು

5.

ನಾದಮಯತೆ

ಹಿತ್ತಾಳೆಯ ವಸ್ತುಗಳು

ಪ್ರ.  2. ಗುಂಪಿಗೆ ಸೇರದ ಶಬ್ದವನ್ನು ಗುರುತಿಸಿರಿ.

ಅ. ಬೆಳ್ಳಿ, ಬಂಗಾರ, ಕಬ್ಬಿಣ, ವಜ್ರ  = ವಜ್ರ- ಇತರ ಎಲ್ಲವೂ ಧಾತುಗಳಿವೆ.

ಆ. ತಂತುಶೀಲತ್ವ, ಪೆಡಸುತನ, ನಾದಮಯತೆ, ಪತ್ರಶೀಲತ್ವ

ಉತ್ತರ: ಪೆಡಸುತನ (ಉಳಿದವು ಎಲ್ಲ ಧಾತುವಿನ ಗುಣಧರ್ಮಗಳಿವೆ)

ಇ. C, Br S, P    = Br (ಉಳಿದವುಗಳು ಘನ ರೂಪಗಳಿವೆ)

ಈ. ಹಿತ್ತಾಳೆ, ಕಂಚು, ಕಬ್ಬಿಣ, ಉಕ್ಕು.   = ಕಬ್ಬಿಣ, ಇತರ ಸರ್ವ ಮಿಶ್ರಣಗಳಿವೆ

ಪ್ರ. 3. ಶಾಸ್ತ್ರೀಯ ಕಾರಣಗಳನ್ನು ಕೊಡಿರಿ.

ಅ. ಅಡುಗೆಯ ಸ್ಟೇನಲೆಸ್ ಸ್ಟೀಲ ಪಾತ್ರೆಗಳ ಕೆಳಗಿನ ಭಾಗದ ಮೇಲೆ ತಾಮ್ರದ ಮುಲಾಮು ಕೊಡಲಾಗಿರುತ್ತದೆ.

ಉತ್ತರ: ತಾಮ್ರದ ಉಷ್ಣತೆಯನ್ನು ಸಂವಹನೆ ಮಾಡುವ ಕ್ಷಮತೆ ಸ್ಟೇನಲೆಸ್ ಸ್ಟೀಲಗಿಂತ ಹೆಚ್ಚು ಇರುತ್ತದೆ. ಅದರಿಂದಾಗಿ ಅಡುಗೆ ತಯಾರಿಸಲು, ಕುದಿಸಲು ಕಡಿಮೆ ಸಮಯ ತಗಲುತ್ತದೆ. ಅದೇ ರೀತಿ ಇಂಧನದ ಉಳಿತಾಯವಾಗುತ್ತದೆ.

ಆ. ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳನ್ನು ನಿಂಬೆಯಿಂದ ಏಕೆ ಉಜ್ಜುತ್ತಾರೆ?

ಉತ್ತರ: ಲಿಂಬೆಯ ರಸದಲ್ಲಿ ಆಮ್ಲವಿರುತ್ತದೆ. ತಾಮ್ರ ಆಕ್ಸಿಜನದೊಂದಿಗೆ ಅಭಿಕ್ರಿಯೆ ಆಗಿ ಕಾಪರ್ ಆಕ್ಸೈಡ್ ತಯಾರಾಗುತ್ತದೆ. ಕಾಪರ್ ಆಕ್ಸೈಡ್ ಹವೆಯಲ್ಲಿಯ ಕಾರ್ಬನ್ ಡೈ ಆಕ್ಸೈಡ್ ಜೊತೆ ಅಭಿಕ್ರಿಯೆ ಆಗಿ ತಾಮ್ರದ ಕಾಪರ್ ಕಾರ್ಬೊನೆಟ್ ದ  ಹಸಿರಾದ ಥರ ಸಂಗ್ರಹವಾಗುತ್ತದೆ. ನಿಂಬೆಯ ರಸದಲ್ಲಿ ಆಮ್ಲ ಇರುವುದರಿಂದ ಕಾಪರ್ ಕಾರ್ಬೊನೆಟದ ಥರ ಕರಗುತ್ತದೆ ಮತ್ತು ಪಾತ್ರೆಗಳು ಸ್ವಚ್ಛವಾಗುತ್ತವೆ.   

ಇ. ಸೋಡಿಯಮ್ ಧಾತುವನ್ನು ಸೀಮೆ ಎಣ್ಣೆಯಲ್ಲಿ ಇಡುತ್ತಾರೆ.

ಉತ್ತರ: ಸೋಡಿಯಮ್ ಹವೆಯಲ್ಲಿಯ ಆಕ್ಸಿಜನ್, ಬಾಷ್ಪ, ಕಾರ್ಬನ್ ಡೈ ಆಕ್ಸೈಡ್ ಜೊತೆಗೆ ಅಭಿಕ್ರಿಯೆ ಆಗಿ ಹೊತ್ತಿಕೊಳ್ಳುತ್ತದೆ. ಆದರೆ ಸೀಮೆ ಎಣ್ಣೆಯೊಂದಿಗೆ ಸೋಡಿಯಮ್ ಯಾವುದೇ ಅಭಿಕ್ರಿಯೆ ಆಗುವುದಿಲ್ಲ ಆದ್ದರಿಂದ ಸೋಡಿಯಮ್ ಧಾತುವನ್ನು ಸೀಮೆ ಎಣ್ಣೆಯಲ್ಲಿ ಇಡುತ್ತಾರೆ.

ಪ್ರ. 4. ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ.

ಅ. ಧಾತುಗಳಿಗೆ ತುಕ್ಕು ಹಿಡಿಯಬಾರದೆಂದು ನೀವು ಏನು ಮಾಡುವಿರಿ?

8.ಪ್ರದೂಷಣೆ

 ಪ್ರ. 1. ಕೆಲವು ವಾಕ್ಯಗಳನ್ನು ಕೆಳಗೆ ಕೊಡಲಾಗಿವೆ, ಅವು ಯಾವ ಪ್ರಕಾರದ ಪ್ರದೂಷಣೆಯಲ್ಲಿ ಸಹಭಾಗಿಯಾಗುತ್ತವೆ ಎಂಬುದನ್ನು ಹೇಳಿರಿ,

ಅ. ದಿಲ್ಲಿಯಲ್ಲಿ ಹಾಡಹಗಲೇ ಮಂಜು ಇರುತ್ತಿರುವುದು ತಿಳಿಯುತ್ತದೆ.                          =ವಾಯು/ಗಾಳಿ ಪ್ರದೂಷಣೆ

. ಪಾಣಿಪುರಿ ತಿಂದೊಡನೆ ಅನೇಕ ಸಲ ವಾಂತಿ ಮತ್ತು ಭೇದಿಗಳ ತೊಂದರೆ ಆಗುತ್ತವೆ.   = ನೀರಿನ ಪ್ರದೂಷಣೆ

ಇ. ಅನೇಕ ಸಲ ಉದ್ಯಾನದಲ್ಲಿ ತಿರುಗಾಟಕ್ಕೆ ಹೋದಾಗ ಸೀನುಗಳ ತೊಂದರೆ ಆಗುತ್ತದೆ.   = ಗಾಳಿ ಪ್ರದೂಷಣೆ

ಈ. ಕೆಲ ಭಾಗಗಳಲ್ಲಿಯ ಮಣ್ಣಿನಲ್ಲಿ ಬೆಳೆಗಳ ಬೆಳವಣಿಗೆ ಆಗುವುದಿಲ್ಲ.        =ಮಣ್ಣಿನ ಪ್ರದೂಷಣೆ

ಉ. ಹೆಚ್ಚು ಸಾರಿಗೆ ಇರುವ ವೃತ್ತಗಳಲ್ಲಿ ಕೆಲಸ ಮಾಡುವ ಬಹಳಷ್ಟು ವ್ಯಕ್ತಿಗಳಿಗೆ ಶಸನದ ರೋಗ, ಉಬ್ಬಸ  ಬರುವದು. ಇಂತಹ ತೊಂದರೆಗಳು ಆಗುತ್ತವೆ.    =ವಾಹನಗಳ ಹೊಗೆಯಿಂದಾಗಿ ವಾಯು ಪ್ರದೂಷಣೆ

ಪ್ರ. 2. ಪರಿಚ್ಛೇದವನ್ನು ಓದಿ ಅದರಲ್ಲಿ ಯಾವ ಯಾವ ಪ್ರದೂಷಣೆಗಳ ವಿವಿಧ ಪ್ರಕಾರಗಳು ಬಂದಿವೆ ಮತ್ತು ಯಾವ ವಾಕ್ಯಗಳಲ್ಲಿ ಬಂದಿವೆ ಎಂಬುದನ್ನು ನೋಂದಾಯಿಸಿ

        ನೀಲೇಶನು ನಗರ ಭಾಗದಲ್ಲಿ ಇರುವ ಮತ್ತು ಎಂಟನೆಯ ತರಗತಿಯಲ್ಲಿ ಕಲಿಯುವ ಹುಡುಗನಿದ್ದಾನೆ. ಪ್ರತಿನಿತ್ಯ ಆತನ ಶಾಲೆಗೆ ಬಸ್ಸಿನಿಂದ ಹೋಗುತ್ತಾನೆ, ಶಾಲೆಗೆ ಹೋಗಲು ಅವನಿಗೆ ಒಂದು ತಾಸು ಬೇಕಾಗುತ್ತದೆ. ಶಾಲೆಗೆ ಹೋಗುವಾಗ ಅವನಿಗೆ ದಾರಿಯಲ್ಲಿ ಅನೇಕ ನಾಲ್ಕು  ಚಕ್ರವುಳ್ಳ,  ಎರಡು ಚಕ್ರವುಳ್ಳ ವಾಹನಗಳು, ರಿಕ್ಷಾ, ಬಸ್ ಈ ವಾಹನಗಳ ಸಾರಿಗೆ ನಡೆಯುವುದು ತೋರುತ್ತದೆ. ಕೆಲದಿವಸಗಳ ತರುವಾಯ ಅವನಿಗೆ ಉಬ್ಬಸದ (ದಮ್ಮು) ತ್ರಾಸು ಆಗತೊಡಗಿತು. ಡಾಕ್ಟರರು ಅವನಿಗೆ ಪಟ್ಟಣದಿಂದ ದೂರ ಇರಲು ಹೇಳಿದರು. ಆಗ ಆತನ ತಾಯಿಯು ಅವನನ್ನು ಆತನ ಮಾವನ ಊರಿಗೆ ಕಳಿಸಿದಳು. ನೀಲೇಕನು ಯಾವಾಗ ಊರಲ್ಲಿ ತಿರುಗಿದನೋ ಆಗ ಅವನಿಗೆ ಅನೇಕ ಸ್ಥಳಗಳಲ್ಲಿ ಕಸದ ರಾಶಿ ಕಂಡಿತು ಅನೇಕ ಸ್ಥಳಗಳಲ್ಲಿ ಪ್ರಾಣಿ ಮತ್ತು ಮಾನವನ ಮಲಮೂತ್ರಗಳ ದುರ್ಗಂಧ ಬರುತ್ತಿತು. ಕೆಲವೊಂದು ಭಾಗಗಳಲ್ಲಿ ಸಣ್ಣ ಚರಂಡಿಗಳಲ್ಲಿಂದ ದುರ್ಗಂಧ ಬರುವ ಕಪ್ಪು ನೀರು ಹರಿಯುತ್ತಿರುವುದು ತೋರಿತು. ಕೆಲವು ಸ್ಥಳಗಳಲ್ಲಿ ಸಣ್ಣ ಚರಂಡಿಗಳಲ್ಲಿಂದ ದುರ್ಗಂಧ ಬರುವ ಕಪ್ಪು ನೀರು ಹರಿಯುತ್ತಿರುವುದು ತೋರಿತು. ಕೆಲವು ದಿನಗಳ ಬಳಿಕ ಅವನಿಗೆ ಹೊಟ್ಟೆಯ ವಿಕಾರಗಳ ತೊಂದರೆ ಆಗತೊಡಗಿತು.

ಉತ್ತರ: ಪರೀಕ್ಷೆದದಲ್ಲಿ ಬಂದಿರುವ ಪ್ರದೂಷಣೆಯ ಪ್ರಕಾರಗಳು:

1.       ಟ್ರಾಫಿಕ್ ಜಾಮ್ ಆಗಿರುವುದರಿಂದ ವಾಹನಗಳ ಹೊಗೆಮಿಶ್ರಿತ ಹವೆ ಉಸಿರಾಡಲು ತೊಂದರೆಮಾಡುತ್ತದೆ. ಇದು ಹವೆಯ ಪ್ರದೂಷಣೆ

2.    ಅಸ್ತಮಾದಿಂದ ನರಳುತ್ತಿದ್ದಾನೆ. ಹವೆಯ ಪ್ರದೂಷಣೆ ಆರೋಗ್ಯಕ್ಕೆ ಘಾತಕ ವಿದೆ.

3.     ಊರಿನಲ್ಲಿ ತಿರುಗಾಡುವಗ ಅಲ್ಲಲ್ಲಿ ಕಸದ ರಾಶಿ ಕಂಡು ಬಂದಿತು. ಅಸ್ವಚ್ಛತೆ ಅನಾರೋಗ್ಯಕ್ಕೆ ಕಾರಣ. ಮಣ್ಣಿನ ಪ್ರದೂಷಣೆ

 ಪ್ರ. 3. '' ಮತ್ತು '' ಸ್ತಂಭಗಳ ಯೋಗ ಹೊಂದಿಕೆಗಳನ್ನು ಜೋಡಿಸಿ ಪ್ರದೂಷಿ ಘಟಕವು ಮಾನವನ ಸ್ವಾಸ್ಥ್ಯದ ಮೇಲೆ ಯಾವ ಪರಿಣಾಮ ಆಗುತ್ತದೆ ಎಂಬುದನ್ನು ಸ್ಪಷ್ಟಿಕರಿಸಿರಿ.

ಸ್ತಂಭ                              '' ಸ್ತಂಭ                                     

1  ಕೊಬಾಲ್ಟ ಮಿಶ್ರಿತ ನೀರು           ಅ. ಮತಿಮಂದತ್ವ

2 ಮಿಥೇನ್ ಅನಿಲ                    ಬ. ಅರ್ಧಾಂಗವಾಯು/ಪಾರ್ಶ್ವವಾಯು      

3 ಸೀಸು ಮಿಶ್ರಿತ ನೀರು               ಕ. ಶ್ವಾಸಕೋಶದ ಮೇಲೆ ಬಾವು ಬರುವುದು

4 ಸಲ್ಫರ್ ಡೈ ಆಕ್ಟಡ್                      ಡ. ತ್ವಚೆಯ ಕ್ಯಾನ್ಸರ

5 ನೈಟ್ರೋಜನ್ ಡೈ ಆಕ್ಸೆಡ್          ಇ, ಕಣ್ಣುಗಳು ಉರಿಯುವುದು

ಉತ್ತರ: 1 - ಬ, 2 - ಡ , 3 - ಅ , 4- ಇ, 5 - ಕ

ಪ್ರ. 4. ತಪ್ಪು ಅಥವಾ ಸರಿ ಎಂಬುದನ್ನು ನಿರ್ಧರಿಸಿರಿ.

ಅ. ನದಿಯ ಹರಿಯುವ ನೀರಿನಲ್ಲಿ ಬಟ್ಟೆಗಳನ್ನು ಒಗೆದರೆ ನೀರು ಪ್ರದೂಷಿತ ಆಗುವುದಿಲ್ಲ.

ಉತ್ತರ: ತಪ್ಪು, ಹರಿಯುವ ನೀರಿನಲ್ಲಿ ಬಟ್ಟೆ ಒಗೆಯುವುದರಿಂದ ಹೊಲಸು ಹರಿದು ಹೋಗಲಾರದು, ಕೊಳೆಯಾದ ಕಣಗಳು ನೀರಿನಲ್ಲಿ ಕರಗದೇ ಮಿಶ್ರಣವಾಗಿ ನೀರಿನ ಪ್ರದೂಷಣೆ ಆಗುತ್ತದೆ.

ಆ. ವಿದ್ಯುತ್ತಿನ ಮೇಲೆ ಚಲಿಸುವ ಯಂತ್ರಗಳನ್ನು ಎಷ್ಟು ಹೆಚ್ಚು ಬಳಸುವೆಯೋ ಅಷ್ಟೇ ಪ್ರದೂಷಣೆ ಹೆಚ್ಚಾಗುತ್ತದೆ.

ಉತ್ತರ: ಸರಿ, ವಿದ್ಯುತ್ ನಿರ್ಮಿತಿ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದಲ್ಲು ಬಳಕೆ ಆಗುತ್ತಿರುತ್ತದೆ ಆದ್ದರಿಂದ ವಿದ್ಯುತ್ತಿನ ಮೇಲೆ ಚಲಿಸುವ ಯಂತ್ರಗಳ ಬಳಕೆಯಿಂದಲೂ ಪ್ರದೂಷಣೆ ಆಗುವುದು.

ಪ್ರ. 5. ಕೆಳಗಿನ ಪ್ರಶ್ನೆಗಳ ಉತ್ತರಗಳನ್ನು ಬರೆಯಿರಿ:

ಅ. ಪ್ರದೂಷಣೆ ಮತ್ತು ಪ್ರದೂಷಗಳು ಅಂದರೆ ಏನು?

ಉತ್ತರ: ಪರಿಸಂಸ್ಥೆಗೆ ಹಾನಿಕಾರಕವಾಗುವಂತಹ ನೈಸರ್ಗಿಕ ಪರ್ಯಾವರಣದ ದೂಷಿಕರಣ (ದೂಷಿತಗೊಳ್ಳುವಿಕೆ) ಅಂದರೆ ಪ್ರದೂಷಣೆ ಅಥವಾ ಮಾಲಿನ್ಯತೆ ಹೌದು.

ಪರಿಸಂಸ್ಥೆಯ ನೈಸರ್ಗಿಕ ಕಾರ್ಯದಲ್ಲಿ ಅಡತಡೆ ಉಂಟು ಮಾಡುವ ಅಜೈವಿಕ ಮತ್ತು ಜೈವಿಕ ಘಟಕಗಳು(ಸಸ್ಯ, ಪ್ರಾಣಿ ಮತ್ತು ಮನುಷ್ಯನ) ಮೇಲೆ ಅಪಾಯಕಾರಕ ಪರಿಣಾಮಗಳನ್ನು ಸಂಭವಿಸುವ ಘಟಕಗಳಿಗೆ ಪ್ರದೂಷಕಗಳು ಎನ್ನುತ್ತಾರೆ.

ಆ. ಆಮ್ಲಪರ್ಜನ್ಯ ಅಂದರೆ ಏನು?

ಉತ್ತರ:ಕಲ್ಲಿದಲ್ಲು, ಕಟ್ಟಿಗೆ, ಖನಿಜ ಎಣ್ಣೆಗಳಂತಹ ಜ್ವಲನದಿಂದ ಸಲ್ಫರ್ ಮತ್ತು ನೈಟ್ರೋಜನ್ ಆಕ್ಸೈಡ್ ತಯಾರಾಗುತ್ತವೆ. ಇವು ಮಳೆಯ ನೀರಿನಲ್ಲಿ ಕೂಡಿಕೊಳ್ಳುತ್ತವೆ. ಮತ್ತು ಅದರಿಂದ ಸಲ್ಫ್ಯುರಿಕ್ ಆಮ್ಲ, ನೈಟ್ರಸ್ ಆಮ್ಲ ಹಾಗೂ ನಾಯಟ್ರಿಕ್ ಆಮ್ಲ ತಯಾರಾಗುತ್ತವೆ. ಈ ಆಮ್ಲಗಳು ಮಳೆ ಹನಿಗಳಲ್ಲಿ ಅಥವಾ ಹಿಮಕಣಗಳಲ್ಲಿ ಮಿಶ್ರಣವಾಗಿ ಮಳೆಯಾಗುತ್ತದೆ. ಅಂತಹ ಮಳೆಗೆ ಆಮ್ಲಪರ್ಜನ್ಯ ಎನ್ನುತ್ತಾರೆ.

ಇ. ಹರಿತಗೃಹ ಪರಿಣಾಮ ಅಂದರೆ ಏನು?

ಉತ್ತರ: ವಾತಾವರಣದಲ್ಲಿಯ CO2 ವಾಯುವು ಸೂರ್ಯನಿಂದ ಉತ್ಸರ್ಜಿತವಾಗುವ ಶಕ್ತಿಯನ್ನು ಶೋಸಿಕೊಳ್ಳುವ ಮಹತ್ವದ ಕಾರ್ಯ ಮಾಡುತ್ತದೆ. ಆದರೆ ಪೃಥ್ವಿಯ ಮೇಲೆ ಬೆಳೆಯುತ್ತಿರುವ ಔದ್ಯೋಗಿಕರಣದಿಂದ ವಾತಾವರಣದಲ್ಲಿಯ CO2 ನ ಪ್ರಮಾಣವು ಹೆಚ್ಚಾಗಿದೆ. ಪೃಥ್ವಿಯ ಉಷ್ಣತಾಮಾನದ ಮೇಲೆ ಕಾರ್ಬನ್ ಡೈ ಆಕ್ಸೈಡ್ದ ಪರಿಣಾಮವೆಂದರೆಯೇ ಹರಿತಗೃಹ ಪರಿಣಾಮ ಹೌದು.

ಈ. ದೃಶ್ಯ ಪ್ರದೂಷಕ ಮತ್ತು ಅದೃಶ್ಯ ಪ್ರದೂಷಕಗಳು ಯಾವುವು?

ಉತ್ತರ: ಪ್ರದುಷಣೆಯನ್ನುಂಟು ಮಾಡುವ ಯಾವ ಘಟಕಗಳು ಬರಿಗಣ್ಣಿಗೆ ಕಾಣಿಸುತ್ತವೆಯೋ ಅವುಗಳನ್ನು ದೃಶ್ಯ ಪ್ರದೂಷಕಗಳು ಎಂದು ಕರೆಯುತ್ತಾರೆ. ಉದಾ. ತ್ಯಾಜ್ಯ ಘನ ಪದಾರ್ಥಗಳು, ಪ್ಲಾಸ್ಟಿಕ್ ವಸ್ತುಗಳು, ಬ್ಯಾಗುಗಳು, ನೀರಿನಲ್ಲಿ ಬಿಡಲಾದ ಕೊಳಚೆ ನೀರು, ವಿಘಟಕಗಳು, ಇತ್ಯಾದಿಗಳು.

        ಕೆಲವು ಪ್ರದೂಷಕಗಳು ನೀರಿನಲ್ಲಿ ಕರಗುತ್ತವೆ ಮತ್ತು ಗಾಳಿಯಲ್ಲಿ ಮಿಶ್ರಣಗೊಳ್ಳುತ್ತವೆ ಅವು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಅವುಗಳಿಗೆ ಅದೃಶ್ಯ ಪ್ರದೂಷಕಗಳು ಎನ್ನುವರು. ಉದಾ. ಅಪಾಯಕಾರಕ ಅನಿಲಗಳು, ವಿಷಕಾರಕ ಪದಾರ್ಥಗಳು, ಇತ್ಯಾದಿಗಳು.

ಪ್ರ. 6. ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ.

ಅ. ನಿಮ್ಮ ಅಕ್ಕಪಕ್ಕದ ಭಾಗದಲ್ಲಿ ಕಂಡು ಬಂದ ಹವೆ ಪ್ರದೂಷಣೆ, ಜಲ ಪ್ರದೂಷಣೆ ಮತ್ತು ಮೃತ್ತಿಕಾ ಪ್ರದೂಷಣೆಯ ಪ್ರತಿಯೊಂದರ ಎರಡು ಉದಾಹರಣೆಗಳನ್ನು ಕೊಡಿರಿ.

ಉತ್ತರ: ಹವೆ ಪ್ರದೂಷಣೆ: 1. ಹಳೆಯ ಕಟ್ಟಡ ಕೆಡವಿ ಹೊಸದಾದ ಕಟ್ಟಡ ಕಟ್ಟುವಾಗ ಧೂಳು ಬಹಳ ಏಳುತ್ತದೆ ಮತ್ತು ಗಾಳಿ ಪ್ರಾದುಷಣೆಗೆ ಕಾರಣವಾಗುತ್ತದೆ.  2. ಹೆಚ್ಚುತ್ತಿರುವ ವಾಹನಗಳಿಂದ ಬಿಡುಗಡೆಗೊಳ್ಳುವ ಹೊಗೆ.

         ಜಲ ಪ್ರದೂಷಣೆ: ಕಾರಖಾನೆಗಳಿಂದ ಬಿಡುಗಡೆ ಆಗುವ ರಸಾಯನ ಮಿಶ್ರಿತ ನೀರು, ಸಮುದ್ರ ದಂಡೆಯಲ್ಲಿ ಹಾಕಲಾಗುವ ತ್ಯಾಜ್ಯ ಪದಾರ್ಥಗಳು.

        ಮೃತ್ತಿಕಾ ಪ್ರದೂಷಣೆಯ: ಮಹಾಪಾಲಿಕೆ, ನಗರಪಾಲಿಕೆ ತಂದು ಹಾಕುವ ನಗರದ ತ್ಯಾಜ್ಯ ಪದಾರ್ಥಗಳ ಸಂಗ್ರಹ, ಒಕ್ಕಲುತನದಲ್ಲಿ ಇತ್ತೀಚೆಗೆ ಬಳಸಲಾಗುತ್ತಿರುವ ರಾಸಾಯನಿಕ ಔಷಧಗಳ ಹೆಚ್ಚಳ ಮಣ್ಣಿನ ಫಲವತ್ತತೆ ಕುಂಠಿತಗೊಳಿಸುತ್ತಿದೆ.

ಆ. ವಾಹನಗಳಿಂದ ಪ್ರದೂಷಣೆ ಹೇಗೆ ಸಂಭವಿಸುತ್ತದೆ? ಕನಿಷ್ಠ ಪ್ರದೂಷಣೆ ಯಾವುದರಿಂದ ಸಂಭವಿಸುತ್ತದೆ. ಇಂತಹ ಕೆಲವು ವಾಹನಗಳ ಹೆಸರುಗಳನ್ನು ಹೇಳಿರಿ.

ಉತ್ತರ: 1. 50% ಗಿಂತ ಹೆಚ್ಚಿನ ಪ್ರದೂಷಣೆ ವಾಹನಗಳ ಹೊಗೆಯಿಂದಾಗಿ ಸಂಭವಿಸುತ್ತದೆ. ವಾಹನಗಳ ವಿಷಕಾರಿ ಹೊಗೆಯಲ್ಲಿ ಅವಿಘಟಕ ಹೈಡ್ರೋಕಾರ್ಬನಗಳು, ಕಾರ್ಬನ್ ಡೈ ಆಕ್ಸೈಡ್, ನೈಟ್ರೋಜನ್ ಆಕ್ಸೈಡ್, ಇತ್ಯಾದಿ ಘಟಕಗಳು ಸಮಾವೇಶವಾಗಿರುತ್ತವೆ. ಪೆಟ್ರೋಲ್, ದಿಜೇಲ್, ನೈಸರ್ಗಿಕ್ ಅನಿಲ, CNG ಮುಂತಾದ ಇಂಧನಗಳನ್ನು ವಾಹನದಲ್ಲಿ ಬಳಸಲಾಗುತ್ತದೆ. ಅವು ಸುಟ್ಟು ಕಾರ್ಬನ್ ಡೈ ಆಕ್ಸೈಡ್ವನ್ನು ವಾತಾವರಣದಲ್ಲಿ ಬಿಡುತ್ತದೆ. ಆದ್ದರಿಂದ ವಾಹನಗಳಿಂದ ಮಾತ್ರ ಹೆಚ್ಚಿನ ಪ್ರದೂಷಣೆ ಸಂಭವಿಸುತ್ತದೆ ಎಂದು ಹೇಳಬಹುದು.ಪ್ರದೂಷಣೆ ಮಾಡದ ವಾಹನ ಎಂದರೆ ಕೇವಲ ಸೈಕಲು ಮಾತ್ರ. ಉಳಿದ ಎಲ್ಲ ವಾಹನಗಳಿಂದ ಪ್ರದೂಷಣೆ ಆಗುತ್ತದೆ.

ಇ. ಜಲ ಪ್ರದೂಷಣೆಯ ನೈಸರ್ಗಿಕ ಕಾರಣಗಳು ಯಾವುವು ಎಂಬುದನ್ನು ಬರೆಯಿರಿ.

ಉತ್ತರ: ಜಲ ಪ್ರದೂಷಣೆಯ ನೈಸರ್ಗಿಕ ಕಾರಣಗಳು:

1. ನೀರಿನಲ್ಲಿ ಜಲಪರ್ಣಿಕೆಗಳ ಬೆಳವಣಿಗೆ 2. ಕೊಳೆಯುತ್ತಿರುವ ಪದಾರ್ಥಗಳು 3. ಮಳೆಯ, ನೀರಿನ ರಾಡಿಯಿಂದ 4. ಭೂಮಿಯ ಕೊರೆತ(ಸವಕಳಿ) 5. ಅಣಬೆಗಳು, 6. ಪಾಚಿಗಳು ಮತ್ತು 7. ಕ್ರಿಮಿಕೀಟಗಳು

ಈ. ಹವೆಯ ಪ್ರದೂಷಣೆ ಮೇಲೆ ಯಾವುದೇ ನಾಲ್ಕು ಪ್ರತಿಬಂಧಕ ಉಪಾಯಗಳನ್ನು ಸೂಚಿಸಿರಿ.

ಉತ್ತರ: ಹವೆಯ ಪ್ರದೂಷಣೆ ಮೇಲೆ ಕೆಳಗಿನಂತೆ ಪ್ರತಿಬಂಧಕ ಉಪಾಯಗಳನ್ನು ಮಾಡಬಹುದು:

1.     ಕಾರಖಾನೆಗಳಿಂದ ಹೊರ ಬೀಳುವ ಹೊಗೆಯನ್ನು ಎತ್ತರದ ಚಿಮಣಿ ಮಾಡಿ ಬಿಡಬೇಕು.

2.     ಹವೆಯ ಪ್ರಾದುಷಣೆಯನ್ನು ನಿಯಂತ್ರಿಸುವ ಯಂತ್ರಣದ ಬಳಕೆಯು ಬಂಧನಕಾರಕ ಮಾಡಬೇಕು. ಉದಾ. ನಿರೋಧಕ ಯಂತ್ರಣ, ಸೋಸುವ ಯಂತ್ರಣ ಬಳಸಬೇಕು.

3.     ಪಟ್ಟಣದಲ್ಲಿ ದುರ್ಗಂಧವನ್ನು ಪಸರಿಸುವ ಕಸದ ಯೋಗ್ಯ ವಿಲೇವಾರಿ ಸಮಯಕ್ಕನುಸಾರವಾಗಿ ಮಾಡುವುದು.

4.     ಪರಮಾಣು ಪರೀಕ್ಷಣೆ, ರಾಸಾಯನಿಕ ಅಸ್ತ್ರಗಳ ಬಳಕೆಯ ಮೇಲೆ ಯೋಗ್ಯ ನಿಯಂತ್ರಣೆ ಇರಬೇಕು.

ಉ. ಹರಿತಗೃಹ ಪರಿಣಾಮ ಮತ್ತು ಜಾಗತಿಕ ತಾಪಮಾನ ಹೆಚ್ಚಳ ಸಂಬಂಧವನ್ನು ಸೃಷ್ಟಿಕರಿಸಿರಿ/ಪರಿಣಾಮ ಹೇಳಿರಿ.

ಉತ್ತರ: ಹರಿತಗೃಹ ಪರಿಣಾಮದಿಂದಾಗಿ ಜಾಗತಿಕ ಉಷ್ಣತಾಮಾನದಲ್ಲಿ ಹೆಚ್ಚಳವಾಗುತ್ತದೆ.

 

ಊ. ಹವೆ ಪ್ರದೂಷಣೆ ಮತ್ತು ಮೃತ್ತಿಕಾ ಪ್ರದೂಷಣೆ ಮತ್ತು ನೀರು ಪ್ರದೂಷಣೆ ಇವುಗಳ ಮೇಲೆ ಪ್ರತಿಯೊಂದರ ಎರಡೆರಡು ಘೋಷ ವಾಕ್ಯಗಳನ್ನು ತಯಾರಿಸಿರಿ.

ಉತ್ತರ: ವೆ ಪ್ರದೂಷಣೆ(Air pollution):

1.     ನಾವು ಪ್ರೀತಿ ಇಲ್ಲದೆ ಬದುಕಬಹುದು, ಆದರೆ ಶುದ್ಧ ಹವೆ ಇಲ್ಲದೆ ಬದುಕಲು ಸಾಧ್ಯವಿಲ್ಲ.

2.     ರಸಾಯನಗಳ ಸುಡದಿರಿ, ಹವೆಯ ಪ್ರದುಷಿತ ಮಾಡದಿರಿ.

ನೀರು ಪ್ರದೂಷಣೆ(Water pollution):

1.     ನೀರು ಉಳಿಸಿ, ಜೀವ ಉಳಿಸಿ. / ನೀವು ನೀರನ್ನು ಉಳಿಸಿ, ಅದು ನಿಮ್ಮನ್ನು ಉಳಿಸುತ್ತದೆ.

2.     ನೀರಿನಲ್ಲಿ ಪ್ಲಾಸ್ಟಿಕ್, ಕಸ ಚೆಲ್ಲಬೇಡಿ, ಜಲ ಸಂಪತ್ತು ನಾಶ ಮಾಡಬೇಡಿ.

ಮೃತ್ತಿಕಾ ಪ್ರದೂಷಣೆ (Soil Pollution):

1.     ರಸಾಯನಗಳ ಬಳಕೆ ನಿಲ್ಲಿಸಿ, ಭೂಮಿ ತಾಯಿಯನ್ನು ರಕ್ಷಿಸಿ.

2.     ಪರ್ಯವರಣ ರಕ್ಷಣೆ, ನಮ್ಮೆಲ್ಲರ ಹೊಣೆ. 

ಪ್ರ. 7. ಕೆಳಗಿನ ಪ್ರದೂಷಣೆಗಳನ್ನು ಮಾನವ ನಿರ್ಮಿತ ಮತ್ತು ನಿಸರ್ಗ ನಿರ್ಮಿತ ಈ ಗುಂಪುಗಳಲ್ಲಿ ವರ್ಗೀಕರಣ ಮಾಡಿರಿ.

ಕೊಳಚೆ ನೀರು, ಧೂಳು, ಪರಾಗಕಣ, ರಾಸಾಯನಿಕ ಗೊಬ್ಬರಗಳು, ವಾಹನಗಳ ಹೊಗೆ, ಪಾಚಿ, ಜಂತುನಾಶಕಗಳು, ಪಶುಪಕ್ಷಿಗಳ ಮಲ.

ಉತ್ತರ:

ಮಾನವ ನಿರ್ಮಿತ ಪ್ರದೂಷಣೆಗಳು

ನಿಸರ್ಗ ನಿರ್ಮಿತ ಪ್ರದೂಷಣೆಗಳು

ಕೊಳಚೆ ನೀರು

ರಾಸಾಯನಿಕ ಗೊಬ್ಬರಗಳು

ವಾಹನಗಳ ಹೊಗೆ

ಜಂತುನಾಶಕಗಳು

ಧೂಳು

 ಪರಾಗಕಣ

ಪಾಚಿ

ಪಶುಪಕ್ಷಿಗಳ ಮಲ.

ಉಪಕ್ರಮ

1. ನಿಮ್ಮ ಭಾಗದಲ್ಲಿ ಇರುವ ನೀರಿನ ಶುದ್ಧತೆಯ ಪರೀಕ್ಷೆ ಮಾಡುವ ಪ್ರಯೋಗ ಶಾಲೆಗೆ ಭೇಟಿ ಕೊಡಿರಿ, ಮತ್ತು ಕುಡಿಯುವ ನೀರಿನ ಪ್ರದೂಷಣೆಯನ್ನು ಗುರುತಿಸುವ ಪರೀಕ್ಷೆಗಳ ಮಾಹಿತಿಯನ್ನು ದೊರಕಿಸಿರಿ.

2. ನಿಮ್ಮ ಭಾಗದಲ್ಲಿಯ ಎಲ್ಲಕ್ಕೂ ಹೆಚ್ಚು ಸಾರಿಗೆಯ ವೃತ್ತಕ್ಕೆ ಭೇಟಿ ಕೊಡಿರಿ ಮತ್ತು ಅಲ್ಲಿಯ ಭಿನ್ನ ಭಿನ್ನ ಸಮಯಗಳಲ್ಲಿ ತಿಳಿದು ಬರುವ ಹವೆಯ ಪ್ರದೂಷಣೆಯನ್ನು ಅನುಭವಿಸಿರಿ. ಮತ್ತು ಯಾವ ಹೊತ್ತಿನಲ್ಲಿ ಎಲ್ಲಕ್ಕೂ ಹೆಚ್ಚು ಮತ್ತು ಯಾವ ವೇಳೆಯಲ್ಲಿ ಎಲ್ಲಕ್ಕೂ ಕಡಿಮೆ ಹವೆಯ ಪ್ರದೂಷಣೆ ಇದೆ ಎಂಬುದರ ನೋಂದಣಿ ಮಾಡಿರಿ.

9. ಆಪತ್ತು ವ್ಯವಸ್ಥಾಪನೆ

ಪ್ರ. 1. ಕೆಳಗಿನ ಪ್ರಶ್ನೆಗಳ ಉತ್ತರಗಳನ್ನು ನಿಮ್ಮ ಶಬ್ದಗಳಲ್ಲಿ ಬರೆಯಿರಿ.

ಅ. ಬಹು ಹೊತ್ತು ದೊಡ್ಡಮಳೆ ಮತ್ತು ಬಂಡೆಗಲ್ಲು ಕುಸಿಯುವುದು ಇವುಗಳಲ್ಲಿಯ ಸಂಬಂಧ ಮತ್ತು ಕಾರಣಗಳನ್ನು ಸ್ಪಷ್ಟಿಕರಿಸಿರಿ.

ಉತ್ತರ: ಬಂಡೆಗಲ್ಲುಗಳಲ್ಲಿ ನೈಸರ್ಗಿಕವಾಗಿ ಸಂಧಿಗಳು ಇರುತ್ತವೆ. ಬಹು ಹೊತ್ತು ದೊಡ್ಡ ಪ್ರಮಾಣದ ಮಳೆಯಾದರೆ ಇಂತಹ ಬಂಡೆಗಲ್ಲುಗಳ ಸಂಧಿಗಳಲ್ಲಿ ಮಳೆಯ ನೀರು ಸೇರಿ ಕಲ್ಲುಗಳ ಕೊರೆತ ಉಂಟಾಗುತ್ತದೆ. ಇದರಿಂದ ಅವುಗಳ ಸವಕಳಿ ಆಗಿ ಗುರುತ್ವ ಮಧ್ಯ ಬದಲಾಗುತ್ತದೆ ಮತ್ತು ಬಂಡೆಗಲ್ಲು ಇಳುಕಲಿಗೆ ಜಾರುತ್ತವೆ. ಇದಕ್ಕೆ ಬಂಡೆಗಲ್ಲು ಕುಸಿಯುವುದು ಎಂದು ಹೇಳುತ್ತಾರೆ. ನಾಲ್ಕೈದು ವರ್ಷಗಳ ಹಿಂದೆ ಪುಣೆ ಹತ್ತಿರದ ಮಾಳಿಣ ಎಂಬ ಹಳ್ಳಿ ಮಳೆಯಲ್ಲಿ ಬಂಡೆಗಲ್ಲುಗಳ ಕುಸಿತದಿಂದ ಸಂಪೂರ್ಣ ಮಣ್ಣಿನಲ್ಲಿ ಮುಳುಗಿ ಹೋಗಿತ್ತು.

ಆ. ಭೂಕಂಪ ಆಪತ್ತಿನ ಪ್ರಸಂಗದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಇವುಗಳ ಸೂಚನೆಗಳ ಕೋಷ್ಟಕವನ್ನು ತಯಾರಿಸಿರಿ.

ಉತ್ತರ:

ಭೂಕಂಪ ಆಪತ್ತಿನ ಪ್ರಸಂಗದಲ್ಲಿ ಏನು ಮಾಡಬೇಕು?

ಭೂಕಂಪ ಆಪತ್ತಿನ ಪ್ರಸಂಗದಲ್ಲಿ ಏನು ಮಾಡಬಾರದು?

ಇದ್ದ ಜಾಗದಲ್ಲಿಯೇ ಶಾಂತವಾಗಿ ಇರಬೇಕು.

ಮಂಚ ಇಲ್ಲವೇ ಟೇಬಲ್ ಕೆಳಗೆ ಕುಳಿತುಕೊಳ್ಳಬೇಕು.

ವಿದ್ಯುತ ಶಾರ್ಟ್ ಸರ್ಕೀಟ್ದಿಂದ ಬೆಂಕಿ ಹತ್ತಬಹುದು ಆದ್ದರಿಂದ ಕಾಳಜಿಪೂರ್ವಕವಾಗಿ ಮೆನ್ ಸ್ವೀಚ್ ತೆಗೆದುಬಿಡಬೇಕು.

ಭೂಕಂಪ ಆಗುವಾಗ ಗಾಬರಿಗೊಳ್ಳದೇ ದಿಕ್ಕೆಟ್ಟು ಅತ್ತಿತ್ತ ಓಡಬಾರದು.

ಗಿಡ, ಕಟ್ಟಡ, ವಿದ್ಯುತ ತಂತಿಯ ಹತ್ತಿರ ನಿಂತುಕೊಳ್ಳಬಾರದು.

ಮಹಡಿ ಮನೆಗಳಲ್ಲಿ ಲಿಫ್ಟ್ ಬಳಕೆ ಮಾಡಬಾರದು.

ಇ. ಭೂಕಂಪರೋಧಕ ಕಟ್ಟಡಗಳ ವೈಶಿಷ್ಟ್ಯಗಳು ಯಾವುವು?

ಉತ್ತರ: ಭೂಮಿಯ ನಿರ್ದಿಷ್ಟ ಮರ್ಯಾದೆಯವರೆಗೆ ಚಲನವಲನ ಉಂಟಾದರೂ ಅಪಾಯ ಆಗುವುದಿಲ್ಲ. ಇಂತಹ ಕಟ್ಟಡಗಳನ್ನು ಭೂಕಂಪರೋಧಕ ಕಟ್ಟಡಗಳು ಎಂದು ಹೇಳುತ್ತಾರೆ. ಇಂತಹ ಕಟ್ಟಡಗಳನ್ನು ಕಟ್ಟುವ ಸಲುವಾಗಿ ಭಾರತೀಯ ಪ್ರಮಾಣಿತ ಸಂಸ್ಥೆಯ ಕೋಡ್ ಆಯ್. ಎಸ್. 456, ಭೂಕಂಪ ರೋಧಕ ಅರೇಖನ ಸಂರಚನೆಗಳ ಪ್ರಮಾಣಿತಗಳನ್ನು ಬಳಸಲಾಗುತ್ತದೆ. ಭೂಕಂಪದ ಮುನ್ಸೂಚನೆ ಸಿಗುವುದಕ್ಕೆ ಲೇಸರ್ ರೇಂಜಿಂಗ್, ವ್ಹೆರಿ ಲಾಂಗ್, ಬೇಸ್ ಲಾಯಿನ್, ಗಾಯಗರ್ ಕೌಂಟರ್, ಕ್ರಿಪ್ ಮೀಟರ್, ಸ್ಟ್ರೆನ್ ಮೀಟರ್, ಟಾಯಿಡ್ ಗೇಜ್, ಟಿಲ್ಟ್ ಮೀಟರ್, ವ್ಹ್ಯಾಲ್ಯುಮೆಟ್ರಿಕ್ ಸ್ಟ್ರೆನ್ ಗೇಜ ಇವುಗಳಂತಹ ಆಧುನಿಕ ಸಾಧನಗಳನ್ನು ಬಳಸುತ್ತಾರೆ.

ಈ. ಬಂಡೆಗಲ್ಲು ಕುಸಿಯುವುದರಿಂದ ಯಾವ ಪರಿಣಾಮಗಳು ಆಗುತ್ತವೆ ಎಂಬುದನ್ನು ಸ್ಪಷ್ಟಿಕರಿಸಿರಿ.

ಉತ್ತರ:  ಬಂಡೆಗಲ್ಲುಗಳ ಕುಸಿತದಿಂದ ಉಂಟಾಗುವ ಪರಿಣಾಮಗಳು

     1.     ನದಿಗಳಿಗೆ ಆಕಸ್ಮಾತ ಮಹಾಪೂರ ಬರುತ್ತದೆ. ನದಿಗಳ ಮಾರ್ಗಗಳು ಬದಲಾಗುತ್ತವೆ.

2.    ಜಲಪಾತದ ಸ್ಥಳಾಂತರ ಆಗುತ್ತದೆ. ಕೃತ್ರಿಮ ಜಲಾಶಯಗಳು ನಿರ್ಮಾಣವಾಗುತ್ತವೆ.
3.    ಭೂಸ್ಖಲನ ಉಂಟಾಗಿದ್ದರಿಂದ ಪಾದದಡಿಯಲ್ಲಿನ ಗಿಡಮರಗಳು ಉರುಳಿ ಬೀಳುತ್ತವೆ. ಇಳಿಜಾರು ಪ್ರದೇಶದಲ್ಲಿ ಕಟ್ಟಿದ ಮನೆಗಳು ಬಿದ್ದು ದೊಡ್ಡ ಪ್ರಮಾಣದಲ್ಲಿ ಜೀವಿತ ಹಾನಿ ಮತ್ತು ವಿತ್ತ ಹಾನಿ ಉಂಟಾಗುತ್ತದೆ.
4.   ಸಾರಿಗೆಯ ರಸ್ತೆಗಳ ಮೇಲೆ ರೈಲು ಮಾರ್ಗದ ಮೇಲೆ ಬಂಡೆಗಲ್ಲುಗಳು ಕುಸಿದೊಡನೆ ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತದೆ.
5.    ಭೂಸ್ಖಲನ ಆಗುವಾಗ ಅದರ ಮೇಲಿನ ವನಸ್ಪತಿಗಳ ಜೀವನ ನಷ್ಟವಾಗುತ್ತದೆ.

ಉ. ಆಣೆಕಟ್ಟು ಮತ್ತು ಭೂಕಂಪ ಇವುಗಳಲ್ಲಿ ಏನಾದರೂ ಸಂಬಂಧವಿದೆಯೇ ಎಂಬುದನ್ನು ಸ್ಪಷ್ಟಪಡಿಸಿರಿ.

ಉತ್ತರ: ಆಣೆಕಟ್ಟು ಮತ್ತು ಭೂಕಂಪ ಇವುಗಳಲ್ಲಿ ಸಂಬಂಧವಿದೆ. ಆಣೆಕಟ್ಟಿನ ನೀರು ಭೂಮಿಯಲ್ಲಿ ಇಂಗುತ್ತದೆ. ಭೂಮಿಯಲ್ಲಿ ಇಂಗಿದ ನೀರು ಭಾಷ್ಪೀಭವನವಾಗಿ ಮೇಲೆ ಬರಲು ಪ್ರಯತ್ನ ಮಾಡುತ್ತದೆ. ಈ ಪ್ರಯತ್ನದಿಂದಾಗಿ ಭೂಮಿಗೆ ಧಕ್ಕೆ ತಗುಲುತ್ತದೆ ಮತ್ತು ಭೂಕಂಪ ಆಗುವ ಶಕ್ಯತೆ ಉಂಟಾಗುತ್ತದೆ.

ಪ್ರ. 2 . ಶಾಸ್ತ್ರೀಯ ಕಾರಣಗಳನ್ನು ಕೊಡಿರಿ.

ಅ. ಭೂಕಂಪ ಕಾಲದಲ್ಲಿ ಮಂಚ, ಟೇಬಲ್‌ಗಳಂತಹ ವಸ್ತುಗಳ ಕೆಳಗೆ ಆಶ್ರಯವನ್ನು ಪಡೆಯುವುದು ಹೆಚ್ಚು ಸುರಕ್ಷಿತ ಇರುತ್ತದೆ. 

ಉತ್ತರ: ಭೂಕಂಪದ ಸಮಯದಲ್ಲಿ ಭೂಮಿಯ ಚಲನವಲನೆ ಆಗುತ್ತದೆ. ಸುತ್ತಮುತ್ತಲಿನ ವಸ್ತುಗಳು ಕೆಳಗೆ ಬೀಳಬಹುದು. ಉರುಳಬಹುದು. ಅವು ನಮ್ಮ ಮೇಲಾಗಲಿ, ತಲೆಯ ಮೇಲಾಗಲಿ ಬಿದ್ದರೆ ಅಪಾಯವಾಗುವುದು. ಅವುಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಮನೆಯಲ್ಲಿ ಮಂಚ, ಟೇಬಲಗಳಂತಹ ವಸ್ತುಗಳ ಕೆಳಗೆ ಆಶ್ರಯ ಪಡೆದರೆ ಹೆಚ್ಚು ಸುರಕ್ಷಿತ ಇರುತ್ತದೆ.

ಆ. ಮಳೆಗಾಲದಲ್ಲಿ ಗುಡ್ಡದ ಪಾದದಡಿಯಲ್ಲಿ ಆಶ್ರಯ ತೆಗೆದುಕೊಳ್ಳಬಾರದು.

ಉತ್ತರ: ಮಾಲೆಗಳದಲ್ಲಿ ದೊಡ್ಡ ದೊಡ್ಡ ಬಂಡೆಗಲ್ಲುಗಳ ಕುಸಿಯುವ ಶಕ್ಯತೆ ಇರುತ್ತದೆ. ಆದ್ದರಿಂದ ಗುಡ್ಡಗಳ ಕೆಳಗೆ ಆಶ್ರಯ ತೆಗೆದುಕೊಳ್ಳಬಾರದು.

ಇ. ಭೂಕಂಪದ ಸಮಯದಲ್ಲಿ ಲಿಫ್ಟ ಬಳಕೆ ಮಾಡಕೂಡದು.

ಉತ್ತರ:  ಭೂಕಂಪದ ಸಮಯದಲ್ಲಿ ಎಲ್ಲ ವಸ್ತುಗಳಲ್ಲಿ ಕಂಪನ ನಿರ್ಮಾಣವಾಗಿರುತ್ತದೆ. ಈ ಕಂಪನದ ಪರಿಣಾಮವು ಲಿಫ್ಟದ ಮೇಲಾಗಿ ಲಿಫ್ಟ್ ಕುಸಿದು ಬೀಳಬಹುದು. ಅಥವಾ ನಿಂತುಕೊಳ್ಳಬಹುದು ಮತ್ತು ನಾವು ಅದರ ಒಳಗಡೆ ಸಿಲುಕಿಕೊಂಡು ಅಪಾಯವಾಗಬಹುದು. ಆದ್ದರಿಂದ ಭೂಕಂಪದ ಸಮಯದಲ್ಲಿ ಲಿಫ್ಟದ ಬಳಕೆ ಮಾಡಬಾರದು.

ಈ ಭೂಕಂಪರೋಧಕ ಕಟ್ಟಡದ ಭೂಭಾಗದಿಂದ ಪ್ರತ್ಯೇಕಿಸಲಾಗಿರುತ್ತದೆ.

ಉತ್ತರ: ಭೂಕಂಪರೋಧಕ ಕಟ್ಟಡದ ಸುತ್ತಲೂ ಕಟ್ಟಿರುವ ಕಟ್ಟಡಗಳು ಭೂಕಂಪದಲ್ಲಿ ಬೀಳುತ್ತವೆ. ಅವುಗಳ ಪರಿಣಾಮ ಭೂಕಂಪರೋಧಕ ಕಟ್ಟಡದ ಮೇಲೆ ಕೂಡ ಆಗಿ ಅದಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂತಹ ಕಟ್ಟಡದ ಹಾನಿ ತಡೆಗಟ್ಟುವ ಸಲುವಾಗಿ ಭೂಕಂಪರೋಧಕ ಕಟ್ಟಡವು ಇತರ ಕಟ್ಟಡಗಳ ಭೂಭಾಗದಿಂದ ಪ್ರತ್ಯೇಕಿಸಲಾಗೀರುತ್ತದೆ. 

 

11. ಮಾನವನ ಶರೀರ ಮತ್ತು ಇಂದ್ರಿಯ ಸಂಸ್ಥೆ

ಪ್ರ. 1. ನನ್ನ ಜೊತೆಗಾರನನ್ನು ಹುಡುಕಿರಿ

 

ಗುಂಪು

ಗುಂಪು

1.

ಹೃದಯದ ಬಡಿತ

72

2.

RBC

50 ರಿಂದ60ಲಕ್ಷ ಪ್ರತಿ ಘನ ಮಿಲಿಲೀಟರ

3.

WBC

5000 do 10000 ಪ್ರತಿ ಘನ ಮಿಲಿಲೀಟರ

4.

ರಕ್ತದಾನ

350ml

5.

ನಿರೋಗಿ ವ್ಯಕ್ತಿಯ ಶರೀರದ ತಾಪಮಾನ

370C

6.

ಆಕ್ಸಿಜನಯುಕ್ತ ರಕ್ತದ pH

7.4

 ಪ್ರ. 2. ಕೆಳಗಿನ ಕೋಷ್ಠಕ ಪೂರ್ಣ ಗೊಳಿಸಿರಿ.

ಇಂದ್ರಿಯ ಸಂಸ್ಥೆ

ಇಂದ್ರಿಯಗಳು

ಕಾರ್ಯಗಳು

1. ಶಸನ ಸಂಸ್ಥೆ

ಮೂಗು, ಗಂಟಲು, ಶ್ವಾಸನಳಿಕೆ, ಪುಫ್ಫುಸ , ಶ್ವಾಸಪಟಲ

ಮುಗಿನಿಂದ ಸ್ವಾಶ್ಚೋಶ್ವಾಸ ಮಾಡಲಾಗುತ್ತದೆ. ಶ್ವಾಸನಳಿಕೆ ಮೂಲಕ ಹವೆಯನ್ನು ಪುಪ್ಪುಸದ ವರೆಗೆ ತಲುಪಿಸಲಾಗುತ್ತದೆ.

2. ರಕ್ತಾಭಿಸರಣ ಸಂಸ್ಥೆ

ಹೃದಯ, ರೋಹಿಣಿಗಳು, ನಿಲೆಗಳು,ರಕ್ತನಾಳಗಳು

ರಕ್ತ ಶುದ್ಧೀಕರಣ, ಶರೀರದ ಎಲ್ಲ ಅವಯವಗಳಿಗೆ ಶುದ್ಧ ರಕ್ತ ಪೂರೈಕೆ ಮಾಡಲಾಗುತ್ತದೆ ಮತ್ತು ಅಶುದ್ಧ ರಕ್ತವನ್ನು ಮರಳಿ ಹೃದಯಕ್ಕೆ ತಲುಪಿಸಲಾಗುತ್ತದೆ.

ಪ್ರ. 3. ನಾಮನಿರ್ದೇಶಿತ ಅಂದವಾದ ಆಕೃತಿಗಳನ್ನು ತೆಗೆಯಿರಿ.

ಅ. ಶ್ವಸನ ಸಂಸ್ಥೆ



ಆ. ಹೃದಯದ ಅಂತರರಚನೆ. 


ಪ್ರ. 4. ಸಕಾರಣ ಸ್ಪಷ್ಟ ಮಾಡಿರಿ.

ಅ. ಮಾನವನ ರಕ್ತ ಕೆಂಪು ಬಣ್ಣದ್ದು ಇರುತ್ತದೆ.

ಉತ್ತರ:ರಕ್ತದಲ್ಲಿ ಪ್ರಾಮುಖ್ಯವಾಗಿ ಎರಡು ಘಟಕಗಳು ಇರುತ್ತವೆ. ರಕ್ತದ್ರವ ಹಾಗೂ ರಕ್ತಕಣಗಳು. ರಕ್ತಕಣಗಳಲ್ಲಿ ಇರುವ ಕೆಂಪು ರಕ್ತ ಕೋಶಗಳಲ್ಲಿ ಹಿಮೋಗ್ಲೋಬಿನ್ ಎಂಬ ಕೆಂಪು ಬಣ್ಣದ ಘಟಕ ಇರುತ್ತದೆ. ಇದರಿಂದಾಗಿ ರಕ್ತಕ್ಕೆ ಕೆಂಪು ಬಣ್ಣ ಬಂದಿರುತ್ತದೆ.

ಆ. ಶ್ವಾಸಪಟಲದ ಮೇಲೆ-ಕೆಳಗೆ ಆಗುವ ಕ್ರಿಯೆ ಒಂದರ ನಂತರ ಒಂದು ಆಗುತ್ತವೆ.

ಉತ್ತರ:ಎದೆಯ ಪಂಜರದ ಕೆಳಗಿನ ಭಾಗದಲ್ಲಿ ಒಂದು ಸ್ನಾಯುವಿನ ಪರದೆ ಇರುತ್ತದೆ. ಅದಕ್ಕೆ ಶ್ವಾಸಪಟಲ ಎನ್ನುತ್ತಾರೆ. ಶ್ವಾಸಪಟಲವು ಉದರ ಪೊಳ್ಳು ಮತ್ತು ಎದೆಯ ಪೊಳ್ಳು ಇವುಗಳ ಮಧ್ಯದಲ್ಲಿ ಇರುತ್ತದೆ. Ribs ಮೇಲೆತ್ತುಕೊಳ್ಳುವುದು ಹಾಗೂ ಶ್ವಾಸಪಟಲ ಕೆಳಗೆ ಹೋಗುವ ಕ್ರಿಯೆ ಒಮ್ಮೆಲೇ ಆಗುವುದರಿಂದ ಪುಪ್ಪುಸದ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಹಾಗಾಗಿ ಹೊರಗಿನ ಹವೆ ಮೂಗಿನ ಮೂಲಕ ಪುಪ್ಪುಸದಲ್ಲಿ ಎಳೆದುಕೊಳ್ಳುತ್ತದೆ. Ribs ಗಳು ಮತ್ತೆ ತನ್ನ ಮೂಲ ಸ್ಥಾನಕ್ಕೆ ಬಂದಾಗ ಶ್ವಾಸಪಟಲ ಮತ್ತೆ ಮೇಲೆಟ್ಟಲ್ಪಡುತ್ತದೆ. ಆಗ ಪುಪ್ಪುಸದ ಮೇಲೆ ಒತ್ತಡ ಬೀಳುತ್ತದೆ. ಆಗ ಪುಪ್ಪುಸದಲ್ಲಿಯ ಹವೆಯು ಹೊರಗೆ ಹಾಕಲಾಗುತ್ತದೆ. ಶ್ವಾಸಪಟಲ ಮೇಲೆ-ಕೆಳಗೆ ಆಗುವ ಕ್ರಿಯೆ ಸ್ವಾಶೋಶ್ವಾಸ ನಡೆಸಲು ಅತ್ಯಾವಶ್ಯಕವಾಗಿದೆ.

ಇ. ರಕ್ತದಾನಕ್ಕೆ ಸರ್ವಶ್ರೇಷ್ಠ ದಾನವೆಂದು ಕರೆಯಲಾಗುವದು.

ಉತ್ತರ: ರಕ್ತದಾನ ಒಂದು ಸೇವೆಯಾಗಿದೆ. ಯಾವುದೇ ಅಪೇಕ್ಷೆ ಇಲ್ಲದೆ ಮಾಡಲಾದ ರಕ್ತದಾನವು ಜೀವನದಾನವಾಗಿದೆ. ಅಪಘಾತದಲ್ಲಿ ರಕ್ತಸ್ರಾವ, ಪ್ರಸೂತಿ ವೇಳೆ ಮತ್ತು ಶಸ್ತ್ರಕ್ರಿಯೆ ಇಂತಹ ಸ್ಥಿತಿಗಳಲ್ಲಿ ವ್ಯಕ್ತಿಗೆ ರಕ್ತದ ಅವಶ್ಯಕತೆ ಇರುತ್ತದೆ. ನಿರೋಗಿ ವ್ಯಕ್ತಿಯಿಂದ ಮಾಡಲಾದ ರಕ್ತದಾನದಿಂದ ರೋಗಿಯ ಜೀವ ಉಳಿಸಲು ಉಪಯೋಗಿಸಲಾಗುತ್ತದೆ. ಇದರಿಂದಾಗಿಯೇ ರಕ್ತದಾನಕ್ಕೆ ಸರ್ವಶ್ರೇಷ್ಠ ದಾನವೆಂದು ಕರೆಯಲಾಗುವುದು.

ಈ. 'O' ರಕ್ತಗುಂಪಿನ ವ್ಯಕ್ತಿಗೆ 'ಸಾರ್ವತ್ರಿಕ ದಾನಿ' ಎನ್ನುವರು.

ಉತ್ತರ: ‘O’ ರಕ್ತ ಗುಂಪಿನ ವ್ಯಕ್ತಿ ಇತರ ಎಲ್ಲ ರಕ್ತ ಗುಂಪಿನ ವ್ಯಕ್ತಿಗಳಿಗೆ ರಕ್ತವನ್ನು ಕೊಡಲು ಬರುತ್ತದೆ. ಆದ್ದರಿಂದ ‘O’ ರಕ್ತಗುಂಪಿಗೆ ಸಾರ್ವತ್ರಿಕ ದಾನಿ ಎಂದು ಎನ್ನುವರು.

ಉ. ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಇರಬೇಕು.

ಉತ್ತರ:ಉಪ್ಪಿನಲ್ಲಿ ಸೋಡಿಯಮ್ ಆಯನುಗಳನ್ನು ಶರೀರದಲ್ಲಿ ತೆಗೆದುಕೊಳ್ಳಲಾಗುತ್ತದೆ. ಸೋದಿಯಮದಿಂದ ರಕ್ತದ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ರಕ್ತದ ಒತ್ತಡದ ತೊಂದರೆ ಉಂಟಾಗದಿರಲು ಅಡುಗೆಯಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಇರಬೇಕು.

ಪ್ರ. 5. ಕೆಳಗಿನ ಪ್ರಶ್ನೆಗಳ ಉತ್ತರಗಳನ್ನು ನಿಮ್ಮ ಶಬ್ದಗಳಲ್ಲಿ ಬರೆಯಿರಿ.

ಅ. ರಕ್ತಾಭಿಸರಣ ಸಂಸ್ಥೆಯ ಶ್ವಸನ, ಪಚನ ಮತ್ತು ಉತ್ಸರ್ಜನ ಸಂಸ್ಥೆಯೊಂದಿಗೆ ಇರುವ ಸಂಬಂಧವನ್ನು ಕಾರ್ಯದ ರೂಪದಲ್ಲಿ ಬರೆಯಿರಿ.

ಉತ್ತರ: ಪಚನ ಸಂಸ್ಥೆಯು ಆಹಾರ ಪದಾರ್ಥವನ್ನು ಪೋಷಣದ್ರವದಲ್ಲಿ ರೂಪಾಂತರ ಮಾಡುತ್ತದೆ. ಶ್ವಸನ ಸಂಸ್ಥೆಯ ಕಾರ್ಯದಂತೆ ಹವೆಯಲ್ಲಿಯ ಆಕ್ಸಿಜನ ರಕ್ತದಲ್ಲಿ ಶೋಷಿಸಲಾಗುತ್ತದೆ. ಮತ್ತು ಚಯಾಪಚಯದಿಂದ ನಿರ್ಮಾಣವಾದ ಕಾರ್ಬನ್ ಡೈ ಆಕ್ಸೈಡ್ ಶರೀರದ ಹೊರಗೆ ಹಾಕಲಾಗುತ್ತದೆ. ಶೋಷಿಸಿದ ಪೋಷಣದ್ರವಗಳು, ಗ್ಲುಕೋಜ್ ಇವುಗಳನ್ನು ಆಕ್ಸಿಜನದ ಸಹಾಯದಿಂದ ಮಂದ ಜ್ವಲನ ಉಂಟಾಗಿ ಶಕ್ತಿ (ಅಸ್ಕಿಡಿಕರಣ) ತಯಾರಾಗುತ್ತದೆ.

ಆ. ಮಾನವಿ ರಕ್ತದ ಸಂರಚನೆ ಮತ್ತು ಕಾರ್ಯಗಳನ್ನು ಬರೆಯಿರಿ.

ಉತ್ತರ: ರಕ್ತವು ಕೆಂಪು ಬಣ್ಣದ ಒಂದು ಪ್ರವಾಹಿ ಪದಾರ್ಥವಿದೆ. ಸಂಯೋಗಿ ಕೋಶಖಂಡವಿದ್ದು ಅದರ ರುಚಿಯು ಉಪ್ಪುಪ್ಪು ಇರುತ್ತದೆ. ಅದರ pH 7.4 ಇರುತ್ತದೆ. ರಕ್ತವು ಎರಡು ಪ್ರಮುಖ ಘಟಕಗಳಿಂದ ತಯಾರಾಗಿರುತ್ತದೆ. 1) ರಕ್ತದ್ರವ 2) ರಕ್ತಕಣ

 1) ರಕ್ತದ್ರವ(Plasma): ಅ)ರಕ್ತದ್ರವವು ತಿಳಿ ಹಳದಿ ಬಣ್ಣ ಹೊಂದಿದ್ದು ಕೆಲವು ಪ್ರಮಾಣದಲ್ಲಿ ಪ್ರತ್ಯಾಮ್ಲಿಯ ಗುಣಧರಮಾಡ ದ್ರವವಿರುತ್ತದೆ. ಇದರಲ್ಲಿ 90 ರಿಂದ 92% ನೀರು, 6 ರಿಂದ 8% ಪ್ರೊಟೀನುಗಳು, 1 ರಿಂದ 2% ಅಸೇಂದ್ರಿಯ ಲವಣ ಮತ್ತು ಇತರ ಘಟಕಗಳು ಇರುತ್ತವೆ.

ಆ) ಅಲ್ಯುಮೀನ್ – ಶರೀರದ ತುಂಬೆಲ್ಲ ನೀರಿನ ಹಂಚುವಿಕೆಯ ಕೆಲಸ ಮಾಡುತ್ತದೆ.

ಇ) ಗ್ಲೋಬ್ಯುಲಿನ್ಸ್ –ಸಂರಕ್ಷಣೆ ಕೆಲಸ ಮಾಡುತ್ತವೆ.

ಈ) ಫಾಯಿಬ್ರಿನೋಜೆನ್ ಮತ್ತು ಪ್ರೋಥ್ರಾಂಬಿನ್ –ರಕ್ತ ಹೆಪ್ಪುಗಟ್ಟಿಸುವ ಕ್ರಿಯೆಯಲ್ಲಿ ಸಹಾಯ ಮಾಡುತ್ತವೆ.

ಉ) ಅಸೇಂದ್ರಿಯ ಆಯನುಗಳು-ಕ್ಯಾಲ್ಸಿಯಂ, ಸೋಡಿಯಮ್, ಪೋಟ್ಯಾಸಿಯಂ ಇವು ನರವ್ಯೂಹ ಮತ್ತು ಸ್ನಾಯುಗಳ ಕಾರ್ಯದ ನಿಯಂತ್ರಣೆವೀಡುತ್ತವೆ.

2) ರಕ್ತಕಣಗಳು/ರಕ್ತಕೋಶಗಳು(Blood Corpuscles/Cells)

ಅ) ಕೆಂಪು ರಕ್ತಕೋಶಗಳು(RBC): ಚಿಕ್ಕ ಆಕಾರದ ವರ್ತುಳಾಕಾರ, ಕೇಂದ್ರಕವಿರುವ ಕೋಶ. ಇದರಲ್ಲಿ ಹಿಮೋಗ್ಲೋಬಿನ್ ಇರುವುದರಿಂದ ರಕ್ತಕ್ಕೆ ಕೆಂಪು ಬಣ್ಣ ಪ್ರಾಪ್ತವಾಗಿರುತ್ತದೆ. RBCಗಳು ಆಸ್ತಿಮಜ್ಜೆಯಲ್ಲಿ ನಿರ್ಮಾಣವಾಗುತ್ತವೆ. ಅವು ಸುಮಾರಾಗಿ 100ರಿಂದ 127 ದಿನಗಳು ಜೀವಿಸುತ್ತವೆ.

ಆ) ಬಿಳಿರಕ್ತ ಕಣಗಳು(WBC): ದೊಡ್ಡ ಆಕಾರದ, ಬಣ್ಣರಹಿತ ಕೋಶಗಳು, ಇವು ಐದು ಪ್ರಕರದ್ದಿರುತ್ತವೆ. – ಬೇಸೋಫಿಲ್, ಇಯೋಸಿನೋಫಿಲ್, ನ್ಯೂಟ್ರೋಫಿಲ್, ಮೋನೋಸೈಟ್ಸ್, ಲಿಂಪೋಸೈಟ್ಸ್. WBCಗಳ ನಿರ್ಮಿತಿ ಕೂಡ ಅಸ್ಥಿಮಜ್ಜೆಯಲ್ಲಿ ಆಗುತ್ತದೆ.ಬಿಳಿಯ ರಕ್ತಕಣಗಳು ನಮ್ಮ ಶರೀರದಲ್ಲಿ ಸೈನಿಕರ ಕೆಲಸ ಮಾಡುತ್ತವೆ. ರೋಗಜಂತುಗಳ ಪ್ರವೇಶ ನಮ್ಮ ಶರೀರದಲ್ಲಿ ಆದೊಡನೆ ಅವುಗಳ ಮೇಲೆ ದಾಳಿ ಮಾಡುತ್ತವೆ. ಸೂಕ್ಷ್ಮಜೀವಿಗಳಿಂದಾಗುವ ರೋಗಗಳಿಂದ ನಮ್ಮ ರಕ್ಷಣೆ ಮಾಡುತ್ತವೆ.

ಇ) ರಕ್ತಬಿಂಬಿಕೆಗಳು(Platelets): ಇವು ಅತಿಶಯ ಚಿಕ್ಕ, ತಟ್ಟೆಯ ಆಕರದಂತಿರುತ್ತವೆ. ಇವು ರಕ್ತ ಹೆಪ್ಪುಗಟ್ಟಿಸುವ ಕಾರ್ಯದಲ್ಲಿ ಸಹಭಾಗಿಯಾಗುತ್ತವೆ.

ಇ. ರಕ್ತದಾನದ ಮಹತ್ವ ಮತ್ತು ಅವಶ್ಯಕತೆ ಸ್ಪಷ್ಟ ಮಾಡಿರಿ.

ಉತ್ತರ: ಒಬ್ಬ ವ್ಯಕ್ತಿ ಅಪಘಾತಕ್ಕಿಡಾದಾಗ ಗಾಯದಿಂದ ರಕ್ತಸ್ರಾವವಾಗಿ ರಕ್ತ ಕಡಿಮೆಯಾಗಿದ್ದರೆ ಅಥವಾ ಶಸ್ತ್ರಕ್ರಿಯೆಯ ಸಮಯದಲ್ಲಿಯೂ ಸಹ ರೋಗಿಗೆ ರಕ್ತ ಕೊಡಬೇಕಾಗುತ್ತದೆ. ಇಂತಹ ಸಮಯದಲ್ಲಿ ನಿರೋಗಿ ವ್ಯಕ್ತಿಯ ರಕ್ತವನ್ನು ತೆಗೆದು ರೋಗಿಯ ಜೀವ ಉಳಿಸಲು ಬರುತ್ತದೆ. ಅದರಿಂದ ರಕ್ತದಾನವು ಒಂದು ಸರ್ವಶ್ರೇಷ್ಠ ದಾನ ಎನಿಸಿದೆ. ಇಂದಿನ ರಕ್ತದಾನಿ ನಾಳೆಯ ರಕ್ತಗ್ರಾಹಿಯಾಗಬಹುದು. ಯಾವುದೇ ಅಪೇಕ್ಷೆ ಇಲ್ಲದೆ ರಕ್ತದಾನ ಮಾಡಿದರೆ ಭವಿಷ್ಯದಲ್ಲಿ ಆ ನಮ್ಮ 350ಮೀಲಿ ರಕ್ತವು ಅಪಘಾತಕ್ಕಿಡಾದ ವ್ಯಕ್ತಿಗೆ, ಪ್ರಸೂತಿ ಸಮಯದಲ್ಲಿ ರಕ್ತಸ್ರಾವ ಉಂಟಾದ ಮಹಿಳೆಗೆ, ಇತರ ಶಸ್ತ್ರಕ್ರಿಯೆಯ ಸಮಯದಲ್ಲೂ ರಕ್ತ ಕೊಟ್ಟು ಜೀವ ಉಳಿಸಲು ಬೇಕಾಗುತ್ತದೆ. ರಕ್ತದಾನ ಮಾಡಿದ ರಕ್ತವು ರಕ್ತ ಬ್ಯಾಂಕುಗಳಲ್ಲಿ ಅನೇಕ ದಿನಗಳ ವರೆಗೆ ಸುರಕ್ಷಿತವಾಗಿ ಇಡಲಾಗುತ್ತದೆ ಮತ್ತು ಅಗತ್ಯವಿರುವ ರೋಗಿಗೆ ಅತ್ಯಲ್ಪ ದರದಲ್ಲಿ ಅಥವಾ ಮುಕ್ತವಾಗಿ ಕೊಡಲಾಗುತ್ತದೆ.

ಪ್ರ. 6. ಭೇದ ಸ್ಪಷ್ಟಪಡಿಸಿರಿ.

ಅ. ರೋಹಿಣಿ ಮತ್ತು ನೀಲೆಗಳು

ರೋಹಿಣಿ

ನೀಲೆಗಳು

*ಹೃದಯದಿಂದ ಶರೀರದ ಕಡೆಗೆ ಹೋಗುವ ರಕ್ತವಾಹಿನಿಗಳಿಗೆ ರೋಹಿಣಿಗಳೆನ್ನುವರು.

*ಶರೀರದ ವಿವಿಧ ಭಾಗಗಳಿಂದ ಹೃದಯದೆಡೆಗೆ ಬರುವ ರಕ್ತವಾಹಿನಿಗಳಿಗೆ ನೀಲೆಗಳು ಎನ್ನುವರು.

*ರೋಹಿಣಿಗಳು ಶರೀರದಲ್ಲಿ ಆಳದಲ್ಲಿ ಇರುತ್ತವೆ.

*ನೀಲೆಗಳು ತ್ವಚೆಗೆ ಹೊಂದಿಕೊಂಡು ಮಾತ್ರ ಇರುತ್ತವೆ.

*ರೋಹಿಣಿಗಳ ಭಿತ್ತಿಕೆಗಳು ದಪ್ಪ ಇರುತ್ತವೆ.

*ನೀಲೆಗಳ ಭಿತ್ತಿಕೆಗಳು ಸಣ್ಣ ಇರುತ್ತವೆ.

ಫುಪ್ಪುಸ ಬಿಟ್ಟು ಉಳಿದ ಎಲ್ಲ ರೋಹಿಣಿಗಳು ಆಕ್ಸಿಜನಯುಕ್ತ ರಕ್ತ ಸಾಗಿಸುತ್ತವೆ.

* ಫುಪ್ಪುಸ ಬಿಟ್ಟು ಉಳಿದ ಎಲ್ಲ ನಿಲೆಗಳಲ್ಲಿ ಕಾರ್ಬನ್ ಡೈ ಆಕ್ಸೈಡ್ ಯುಕ್ತ ರಕ್ತ ಸಾಗಿಸಲಾಗುತ್ತದೆ.

 

ಆ. ಬಾಹ್ಯಶ್ವಸನ ಮತ್ತು ಅಂತಃಶ್ವಸನ

ಬಾಹ್ಯಶ್ವಸನ

ಅಂತಃಶ್ವಸನ

*ಹೊರಗಿನಿಂದ ಹವೆಯನ್ನು ಶರೀರದಲ್ಲಿ ತೆಗೆದುಕೊಂಡು ಮತ್ತೆ ಹೊರಗೆ ಬಿಡುವ ಕ್ರಿಯೆಗೆ ಬಾಹ್ಯಶ್ವಸನ ಎನ್ನುವರು.

*ಫುಪ್ಪುಸದಲ್ಲಿ ತೆಗೆದುಕೊಂಡ ಹವೆಯಲ್ಲಿಯ ಆಕ್ಸಿಜನ್ ರಕ್ತದಲ್ಲಿ ತೆಗೆದುಕೊಂಡು ರಕ್ತವು ಶರೀರದಲ್ಲಿಯ CO2 ವನ್ನು ಫುಪ್ಪುಸಡೆಗೆ ಕಳುಹಿಸಿದಾಗ ಆ ಹವೆ ಉಚ್ಚಾಸದ ಮೂಲಕ ಹೊರಗೆ ಹಾಕಲಾಗುತ್ತದೆ.

*ಈ ಕ್ರಿಯೆ ಕೋಶಗಳು ಮತ್ತು ಬಾಹ್ಯ ವಾತಾವರಣ ಇವುಗಳ ನಡುವೆ ನಡೆಯುತ್ತದೆ.

*ಈ ಕ್ರಿಯೆ ಕೇವಲ ಶರೀರದಲ್ಲಿಯ ಕೋಶಗಳಲ್ಲಿ ನಡೆಯುತ್ತದೆ.

*ಇದರಲ್ಲಿ ಹಿಮೋಗ್ಲೋಬಿನ್ ಇದು ಆಕ್ಸಿಜನ್ ದೊಂದಿಗೆ ಸಂಯೋಗ ಹೊಂದುತ್ತದೆ.

*ಇದರಲ್ಲಿ ಕೋಶಗಳಲ್ಲಿ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಶಕ್ತಿಯ ನಿರ್ಮಿತಿ ಆಗುತ್ತದೆ.

 

ಪ್ರ. 7. ಕಂಸದಲ್ಲಿ ಕೊಟ್ಟ ಪರ್ಯಾಯಗಳ ಉಪಯೋಗವನ್ನು ಯೋಗ್ಯ ಸ್ಥಳದಲ್ಲಿ ಮಾಡಿರಿ ಮತ್ತು ರಿಕ್ತ ಸ್ಥಳ ತುಂಬಿರಿ.

(ಹಿಮೋಗ್ಲೋಬಿನ, ಪ್ರತ್ಯಾಮ್ಲ ಧರ್ಮ, ಶ್ವಾಸಪಟಲ, ಅಸ್ಥಿಮಜ್ಜೆ, ಐಚ್ಛಿಕ, ಅನೈಚ್ಛಿಕ, ಆಮ್ಲಧರ್ಮಿ,)

ಅ. ರಕ್ತದಲ್ಲಿಯ ಕೆಂಪು ಕೋಶಗಳಲ್ಲಿ ........... ಈ ಲೋಹ ಸಂಯುಕ್ತ ಇರುತ್ತದೆ.

ಉತ್ತರ: ಹಿಮೋಗ್ಲೋಬಿನ.

ಆ. ............... ಇದು ಉದರ ಪೊಳ್ಳು ಭಾಗ ಮತ್ತು ಎದೆಯ ಪೊಳ್ಳುಭಾಗ ಇವುಗಳ ನಡುವೆ ಇರುತ್ತದೆ.

ಉತ್ತರ: ಶ್ವಾಸಪಟಲ.

ಇ. ಹೃದಯ ಸ್ನಾಯು ............ ಇರುತ್ತವೆ.

ಉತ್ತರ: ಅನೈಚ್ಛಿಕ.

ಈ. ಆಕ್ಸಿಜನಯುಕ್ತ ರಕ್ತದ pH .......... ಇರುತ್ತದೆ.

ಉತ್ತರ: ಆಮ್ಲಧರ್ಮಿ  

ಉ. RBC ದ ನಿರ್ಮಿತಿ ................ ದಲ್ಲಿ ಆಗುತ್ತದೆ.

ಉತ್ತರ: ಅಸ್ಥಿಮಜ್ಜೆ

ಪ್ರ. 8. ನಮ್ಮವರಲ್ಲಿ ಬೇರೆ ಯಾರು ಎಂಬುದನ್ನು ಕಂಡು ಹಿಡಿಯಿರಿ.

. A, O, K, AB, B   = K – ಇದು ರಕ್ತದ ಗುಂಪಿನಲ್ಲಿ ಬರುವುದಿಲ್ಲ.

ಆ. ರಕ್ತದ್ರವ್ಯ, ರಕ್ತ ಪಟ್ಟಿಕೆಗಳು, ರಕ್ತ ಪರಾಧಾನ, ರಕ್ತ ಕೋಶಗಳು.  =ರಕ್ತ ಪರಾಧನ.

ಇ. ಶ್ವಾಸನಳಿಕೆ, ವಾಯುಕೋಶ, ಶ್ವಾಸಪಟಲ, ಕೇಶವಾಹಿನಿ,      = ಕೇಶವಾಹಿನಿ

ಈ. ನ್ಯೂಟ್ರೋಫಿಲ, ಗ್ಲೋಬುಲಿನ್ಸ್, ಲ್ಬುಮಿನ, ಪ್ರೋಥ್ರೋಂಬಿನ   = ನ್ಯೂಟ್ರೋಫಿಲ – ಇದು ರಕ್ತಕೋಶವಿದೆ. ಉಳಿದವುಗಳು ರಕ್ತದ್ರವದ ಘಟಕಗಳು ಇವೆ.

ಪ್ರ. 9. ರಕ್ತದಾನ ಮಾಡುವ ವ್ಯಕ್ತಿಯ ಸಲುವಾಗಿ ನಿರೋಗಿ ಇರುವದರ ಬಗ್ಗೆ ಯಾವ ಅಂಶಗಳನ್ನು ಲಕ್ಷದಲ್ಲಿ ತೆಗೆದುಕೊಳ್ಳುವಿರಿ?

ಉತ್ತರ: 1) ಕೆಂಪು ರಕ್ತಕಣಗಳು ಹಾಗೂ ಬಿಳಿಯ ರಕ್ತಕಣಗಳು ಇವುಗಳ ಪ್ರಮಾಣ ಯೋಗ್ಯವಾಗಿರಬೇಕು. 2) ರಕ್ತದಲ್ಲಿ ಯಾವುದೇ ಪರಜೀವಿ ಸೂಕ್ಷ್ಮಜೀವಿ ಇರಬಾರದು. 3) ರಕ್ತದಾನಿಗೆ ಯಾವುದೇ ವ್ಯಸನಗಳು ಇರಬಾರದು. 4) ರಕ್ತದಾನಿಯು HIV ವಾಹಕನಿರಬಾರದು. 5) ಅವನಿಗೆ ಯಾವುದೇ ರೋಗಗಳು ಇರಬಾರದು. 6) ರಕ್ತದಾನಿಯ ರಕ್ತದ ಗುಂಪು ರಕ್ತಗ್ರಾಹಿಯ ರಕ್ತದ ಗುಂಪಿನ ಜೊತೆಗೆ ಹೊಂದಿಕೊಂಡಿರಬೇಕು.

ಪ್ರ. 10. ಕೆಳಗೆ ಕೊಟ್ಟ ಗದ್ಯಭಾಗವನ್ನು ಓದಿರಿ ಮತ್ತು ರೋಗ/ವಿಕಾರ ಗುರುತಿಸಿರಿ.

        ಇಂದು ಅವಳ ಮಗವಿಗೆ ಒಂದುವರೆ ವರ್ಷ ಆಯಿತು, ಆದರೆ ಅದು ನಿರೋಗಿ, ಹಸನ್ಮುಖ ಇರಲಿಲ್ಲ, ಅದು ಯಾವಾಗಲೂ ಕಿರಿಕಿರಿ ಮಾಡುತ್ತಿತ್ತು, ದಿನಗಳೆದಂತೆ ರೋಗಿ ಮತ್ತು ಅಶಕ್ತವಾಗಿ ಕಾಣುತ್ತಿತ್ತು. ಅದಕ್ಕೆ ದಮ್ಮು ಬರುತ್ತಿತ್ತು. ಅದರ ಶ್ವಸನವು ವೇಗವಾಗಿ ಆಗುತ್ತಿತ್ತು. ಸತತವಾಗಿ ಅಳುತ್ತಿತ್ತು. ಅದರ ಉಗುರುಗಳು ನೀಲಿ ಬಣ್ಣದ್ದಾಗಿ ಕಾಣತೊಡಗಿದವು.

ಉತ್ತರ: *ಮಗುವಿನ ಉಗುರು ನೀಲಿ ಆಗಿವೆ ಅಂದರೆ ಮಗುವಿಗೆ ರಕ್ತದ ಕೊರತೆ ಇದೆ.

          *ದಮ್ಮು ಬರುತ್ತದೆ ಅಂದರೆ ಮಗುವಿಗೆ ಶ್ವಸನಕ್ಕೆ ಸಂಬಂಧಿಸಿದ ವಿಕಾರಗಳು ಇರಬಹುದು.  

ಪ್ರ. 11. ನಿಮ್ಮ ನೆರೆಮನೆಯ ಕಾಕಾರವರ ರಕ್ತದ ಒತ್ತಡದ ಸಮಸ್ಯೆಯನ್ನು ಡಾಕ್ಟರರು ಕಂಡು ಹಿಡಿದರು. ಅವರ ರಕ್ತದ ಒತ್ತಡ ನಿಯಂತ್ರಣದಲ್ಲಿ ಇರಬೇಕಾದರೆ ಅವರು ಏನು ಮಾಡಬೇಕು?

ಉತ್ತರ: 1) ಕಾಕಾ ಅವರು ಡಾಕ್ಟರ್ ಹೇಳಿದಂತೆ ಸಮಯಕ್ಕೆ ಸರಿಯಾಗಿ ಔಷಧ ಸೇವಿಸಬೇಕು. 2) ಆಹಾರದಲ್ಲಿ ಸೌಮ್ಯ ಮತ್ತು ಪೋಷಕ ಆಹಾರ ಅದು ಡಾಕ್ಟರ್ ಹೇಳಿದಂತೆ ತೆಗೆದುಕೊಳ್ಳಬೇಕು. 3) ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಇರಬೇಕು. 4) ಹೆಚ್ಚು ಜನರ ಕಿರಿಕಿರಿ, ಗದ್ದಲ ಇರುವ ಜಾಗಕ್ಕೆ ಹೋಗಬಾರದು.

ಉಪಕ್ರಮ:

ಹೃದಯದ ಕಾರ್ಯಕ್ಕೆ ಸಂಬಂಧಿಸಿದಂತೆ ಇರುವ ವಿವಿಧ ಆಧುನಿಕ ವೈದ್ಯಕೀಯ ಉಪಚಾರಗಳ ಮಾಹಿತಿ ದೊರಕಿಸಿರಿ.

12. ಆಮ್ಲ ಪ್ರತ್ಯಾಮ್ಲಗಳ ಪರಿಚಯ

 ಪ್ರ. 1. ಕೆಳಗೆ ಕೊಟ್ಟ ದ್ರಾವಣಗಳು ಆಮ್ಲವೋ ಅಥವಾ ಪ್ರತ್ಯಾಮ್ಲಗಳೋ ಗುರುತಿಸಿರಿ.

ದ್ರಾವಣ

                 ದರ್ಶಕದಲ್ಲಿ ಆದ    ಬದಲಾವಣೆ

ಆಮ್ಲ / ಪ್ರತ್ಯಾಮ್ಲ

 

ಲಿಟ್ಮಸ್

ಫಿನಾಲ್ಮಥ್ಯಾಲೀನ

ಮಿಥಿಲ್ ಆರೆಂಜ್

 

1

ನೀಲಿ ಲಿಟ್ಮಸ್ ಕೆಂಪು ಆಯಿತು

ಬದಲಾವಣೆ ಇಲ್ಲ

ಕಿತ್ತಳೆ ಬಣ್ಣ ಗುಲಾಬಿ ಆಯಿತು

ಆಮ್ಲ

2

ನೀಲಿ ಲಿಟ್ಮಸ್ ಕೆಂಪು ಆಯಿತು

ಬದಲಾವಣೆ ಇಲ್ಲ

ಕಿತ್ತಳೆ ಬಣ್ಣ ಬದಲಾಗಿ ಕೆಂಪು ಆಯಿತು

ಆಮ್ಲ

3

ಕೆಂಪು ಲಿಟ್ಮಸ್ ಕಾಗದ ನೀಲಿ ಆಯಿತು

ಬಣ್ಣ ರಹಿತ  ಫಿನಾಲ್ಮಥ್ಯಾಲೀನ ಗುಲಾಬಿ ಆಯಿತು

ಕಿತ್ತಳೆ ಬಣ್ಣ ಬದಲಾಗಿ ಹಳದಿ ಆಯಿತು

ಪ್ರತ್ಯಾಮ್ಲ

 ಪ್ರ. 2. ಕೆಳಗಿನ ಅನುಸೂತ್ರಗಳಿಂದ ರಾಸಾಯನಿಕ ಹೆಸರು ಬರೆಯಿರಿ.

        Write chemical names from given formulae.
        H2SO4= ಸಲ್ಫ್ಯುರಿಕ್ ಆಮ್ಲ

        Ca(OH)2== ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್

        HCl = ಹೈಡ್ರೋಕ್ಲೋರಿಕ್ ಆಮ್ಲ

        NaOH = ಸೋಡಿಯಂ ಹೈಡ್ರಾಕ್ಸೈಡ್

        KOH = ಪೋಟಾಶಿಯಮ ಹೈಡ್ರಾಕ್ಸೈಡ್

        NH4OH = ಅಮೋನಿಯಮ್ ಹೈಡ್ರಾಕ್ಸೈಡ್

ಪ್ರ. 3. ಸಲ್ಫ್ಯುರಿಕ್ ಆಮ್ಲಕ್ಕೆ ರಾಸಾಯನಿಕ ಉದ್ಯೋಗದಲ್ಲಿ ಎಲ್ಲಕ್ಕಿಂತ ಹೆಚ್ಚು ಮಹತ್ವ ಏಕೆ ಇದೆ?

ಉತ್ತರ:- ಸಲ್ಫ್ಯುರಿಕ್ ಆಮ್ಲಕೆ ಮುಖ್ಯವಾಗಿ ವಾಹನಗಳ ಬ್ಯಾಟರಿಗಳಲ್ಲಿ ಉಪಯೋಗಿಸುತ್ತಾರೆ. ಜಗತ್ತಿನಲ್ಲಿ ಅಪಾರ ಪ್ರಮಾಣದಲ್ಲಿ ವಾಹನಗಳ ಉದ್ಯೋಗ ಇದ್ದು ಅವುಗಳಿಗೆ ಶುಷ್ಕ ವಿದ್ಯುತ್ ಕೋಶ(ಬ್ಯಾಟರಿ) ಅಪಾರ ಪ್ರಮಾಣದಲ್ಲಿ ಬೇಕಾಗುವುದು. ರಾಸಾಯನಿಕ ಉದ್ಯಮದಲ್ಲಿ ಸಲ್ಫ್ಯೂರಿಕ್ ಆಮ್ಲವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಇದನ್ನು ಅಮೋನಿಯಂ ಸಲ್ಫೇಟ್ ಮತ್ತು ಸುಣ್ಣದ ಸೂಪರ್ಫಾಸ್ಫೇಟ್ನಂತಹ ರಸಗೊಬ್ಬರಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಹೈಡ್ರೋಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಫಾಸ್ಪರಿಕ್ ಆಮ್ಲ, ಈಥರ್, ಪ್ಲಾಸ್ಟಿಕ್ ಮತ್ತು ಲೋಹದ ಸಲ್ಫೇಟ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಬಣ್ಣಗಳು, ಔಷಧಗಳು, ಸುಗಂಧ ದ್ರವ್ಯಗಳು, ಸೋಂಕುನಿವಾರಕಗಳು ಮತ್ತು ಅಂಟು ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಆದ್ದರಿಂದ ಸಲ್ಫ್ಯುರಿಕ್ ಆಮ್ಲಕ್ಕೆ ರಾಸಾಯನಿಕ ಉದ್ಯೋಗದಲ್ಲಿ ಎಲ್ಲಕ್ಕಿಂತ ಹೆಚ್ಚು ಮಹತ್ವ ಇದೆ.

ಪ್ರ. 4.ಕಾರಣ ಕೊಡಿರಿ.

ಎ. ಕ್ಲೋರೈಡ್ ಲವಣವನ್ನು ದೊರಕಿಸಲು ಯಾವ ಆಮ್ಲವನ್ನು ಬಳಸಲಾಗುತ್ತದೆ?

ಉತ್ತರ: ಕ್ಲೋರೈಡ್ ಲವಣವನ್ನು ಪಡೆಯಲು ಹೈಡ್ರೋಕ್ಲೋರಿಕ್ ಆಮ್ಲವನ್ನು ಬಳಸಲಾಗುತ್ತದೆ.

ಬಿ. ಬಂಡೆಯ ತುಂಡಿನ ಮೇಲೆ ನಿಂಬೆಹಣ್ಣನ್ನು ಹಿಂಡುವ ಮೂಲಕ ಅನಿಲವು ಸುಣ್ಣದ ನೀರನ್ನು ಹಾಲಿನಂತಾಯಿತು. ಬಂಡೆಯಲ್ಲಿ ಯಾವ ಸಂಯುಕ್ತವಿದೆ?

ಉತ್ತರ: ಬಂಡೆಯಲ್ಲಿ ಲೋಹದ ಕಾರ್ಬೋನೇಟ್ ಇರುತ್ತದೆ.

ಸಿ. ಪ್ರಯೋಗಶಾಲೆಯಲ್ಲಿ ಒಂದು ಅಭಿಕ್ರಿಯಾಕಾರಕ ಬಾಟಲಿಯ ಮೇಲಿನ ಕಾಗದ ಹರಿದುಹೋಗಿದೆ.  ಆ ಬಾಟಲಿಯಲ್ಲಿಯ ರಾಸಾಯನಿಕವು ಆಮ್ಲೀಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ಕಂಡುಹಿಡಿಯುವಿರಿ?

ಉತ್ತರ: ರಾಸಾಯನಿಕವನ್ನು ನೀಲಿ ಲಿಟ್ಮಸ್ ಕಾಗದದಿಂದ ಪರೀಕ್ಷಿಸಲಾಗುತ್ತದೆ. ಅದು ಕೆಂಪು ಬಣ್ಣಕ್ಕೆ ತಿರುಗಿದರೆ ಅದು ಆಮ್ಲೀಯವಾಗಿರುತ್ತದೆ ಇಲ್ಲದಿದ್ದರೆ ಕೆಂಪು ಲಿಟ್ಮಸ್ ಕಾಗದದಿಂದ ಪರೀಕ್ಷಿಸಲಾಗುತ್ತದೆ ಅದು ನೀಲಿ ಬಣ್ಣಕ್ಕೆ ತಿರುಗಿದರೆ ಅದು ಕ್ಷಾರೀಯವಾಗಿರುತ್ತದೆ.

 ಪ್ರ.5. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1.     1) ಆಮ್ಲ ಮತ್ತು ಪ್ರತ್ಯಾಮ್ಲಗಳಲ್ಲಿಯ ಭೇದ ಹೇಳಿರಿ.

ಆಮ್ಲ= ಆಮ್ಲಗಳು ನೀಲಿ ಬಣ್ಣಕ್ಕೆ ರೂಪಾಂತರವಾಗುತ್ತವೆ. ಅದಕ್ಕೆ ಹುಳಿ ರೂಚಿ ಇರುತ್ತದೆ.

ಪ್ರತ್ಯಾಮ್ಲಗಳು = ಪ್ರತ್ಯಾಮ್ಲಗಳಿಗೆ ಒಗರು ರೂಚಿ ಇರುತ್ತದೆ. ಕೆಂಪು ಲಿಟ್ಮಸ್ ಕಾಗದ ಆಗುತ್ತದೆ.

       2) ದರ್ಶಕದ ಮೇಲೆ ಉಪ್ಪಿನ ಪರಿಣಾಮ ಏಕೆ ಆಗುವುದಿಲ್ಲ?

ಉತ್ತರ:- ದರ್ಶಕಗಳು ಒರ್ಗನಿಕ ಸಂಯುಕ್ತಗಳಾಗಿವೆ. ಅವು ಉಪ್ಪಿನೊಂದಿಗೆ ಅಭಿಕ್ರಿಯೆ ಹೊಂದುವುದಿಲ್ಲ.

3.       3) ತಟಸ್ತಿಕರಣದಿಂದ ಯಾವ ಪದಾರ್ಥ ತಯಾರಾಗುತ್ತವೆ?

ಉತ್ತರ:- ತಟಸ್ತಿಕರಣದಿಂದ ಕ್ಷಾರ ಮತ್ತು ನೀರು ತಯಾರಾಗುತ್ತವೆ?

4.        4) ಆಮ್ಲದ ಔದ್ಯೋಗಿಕ ಉಪಯೋಗ ಯಾವುದು?

ಉತ್ತರ:- ರಾಸಾಯನಿಕ ಗೊಬ್ಬರ ತಯಾರಿಸಲು, ಎಣ್ಣೆ ಶುದ್ಧೀಕರಣ ಮಾಡಲು, ಪೆಂಟ್ಸ್ ಕಾರಖಾನೆಯಲ್ಲಿ, ಔಷಧೀಯ ದ್ರವ್ಯಗಳಲ್ಲಿ ಆಮ್ಲದ ಉಪಯೋಗ ಮಾಡಲಾಗುತ್ತದೆ. ಬೇರೆ ಬೇರೆ ಕ್ಲೋರೈಡ್ ತಯಾರಿಸಲು HCL ಉಪಯೋಗಿಸುವರು.

ಪ್ರ. 6. ಬಿಟ್ಟ ಸ್ಥಳ ತುಂಬಿರಿ.

1.     1)  ಆಮ್ಲದಲ್ಲಿಯ ಪ್ರಮುಖ ಘಟಕ ಹೈದ್ರೋಜನ್ (H) ಇದೆ.

2.     2)  ಪ್ರತ್ಯಾಮ್ಲದಲ್ಲಿಯ ಪ್ರಮುಖ ಘಟಕ ಹೈಡ್ರಾಕ್ಸೈಡ್ (OH)  ಇದೆ.

3.    3)  ಟರ್ಟರಿಕ ಇದು ಸೌಮ್ಯ ಆಮ್ಲ ಇದೆ.

4.     4)  ಪ್ರೋಟೀನುಗಳು ಅಮಿನೋ ಆಸಿಡ್ ದಿಂದ ಮಾಡಲ್ಪಟ್ಟಿರುತ್ತವೆ.

ಪ್ರ.7. ಹೊಂದಿಸಿ ಬರೆಯಿರಿ.

        ಗುಂಪು                         ಗುಂಪು

1.                 ಹುಣಸೆ                             ಟರ್ಟರಿಕ ಆಮ್ಲ

2.                ಮೊಸರು                           ಲ್ಯಾಕ್ಟಿಕ್ ಆಮ್ಲ

3.                ನಿಂಬೆ                              ಸಾಯಟ್ರಿಕ್ ಆಮ್ಲ

4.               ವ್ಹಿನೆಗರ್ ಆಮ್ಲ                     ಎಸೆಟಿಕ್ ಆಮ್ಲ

HANS:

Gಪ್ರ. 7. ಸರಿ/ತಪ್ಪು ಎಂಬುದನ್ನು ಬರೆಯಿರಿ.

1.     1)  ಧಾತುಗಳ ಅಕ್ಸಾಯಿಡ್ ಪ್ರತ್ಯಾಮ್ಲಧರ್ಮಿ ಇರುತ್ತದೆ.   = ಸರಿ

2.    2)  ಕ್ಷಾರಗಳಿಂದ ಧಾತುವಿನ ಸವಕಳಿ ಆಗುತ್ತದೆ.             = ತಪ್ಪು

3.     3) ಕ್ಷಾರಗಳು ಉದಾಸೀನ ಇರುತ್ತವೆ.                           = ತಪ್ಪು

4.    4)  ಲವಣವು ಆಮ್ಲಧರ್ಮಿ ಇದೆ.                                   = ಸರಿ

ಪ್ರ.9. ಕೆಳಗಿನ ಪದಾರ್ಥಗಳನ್ನು ಆಮ್ಲಧರ್ಮಿ , ಪ್ರತ್ಯಾಮ್ಲಧರ್ಮಿ ಮತ್ತು ಉದಾಸೀನ(ತಟಸ್ಥ) ಈ ಗುಂಪುಗಳಲ್ಲಿ ವರ್ಗೀಕರಣ ಮಾಡಿರಿ.

HCl, NaCl, MgO, KCl, CaO, H2SO4, HNO3, H2O and Na2CO3.

ಉತ್ತರ:                

ಗುಂಪುಗಳು

ಪದಾರ್ಥಗಳು

ಆಮ್ಲಧರ್ಮಿ

HCl, H2SO4, HNO3

ಪ್ರತ್ಯಾಮ್ಲಧರ್ಮಿ

CaO, MgO, Na2CO3

ಉದಾಸೀನ

H2O, NaCl, KCl.


  13 ನೇ ಪಾಠ

ರಾಸಾಯನಿಕ ಬದಲಾವಣೆ ಮತ್ತು ರಾಸಾಯನಿಕ ಬಂಧ

ಸ್ವಾಧ್ಯಾಯ

ಪ್ರ. 1: ಕಂಸಿನಲ್ಲಿ ಕೊಟ್ಟ ಪದಗಳ ಪೈಕಿ ಯೋಗ್ಯ ಪದವನ್ನು ಬಿಟ್ಟ ಸ್ಥಳದಲ್ಲಿ ತುಂಬಿ ವಾಕ್ಯ ಪೂರ್ಣಗೊಳಿಸಿರಿ.

(ಸಾವಕಾಶ, ಬಣ್ಣದ, ಬಾಣಚಿನ್ಹೆ , ಬೇಗನೆ, ವಾಸನೆ, ಹಾಲಿನಂತೆ, ಭೌತಿ, ಉತ್ಪಾದಿತ, ಅಭಿಕಾರಕ, ರಾಸಾಯಕ, ಸಹಸಂಯೋಗ, ಆಯೋನಿಕ, ಅಷ್ಟಕ, ದ್ವಿಕ, ಆದಾನ-ಪ್ರದಾನ, ಹಂಚುವಿಕೆ, ಸಮಾನತೆಯ ಚಿನ್ಹೆ)

. ರಾಸಾಯನಿಕ ಅಭಿಕ್ರಿಯೆಯ ಸಮೀಕರಣವನ್ನು ಬರೆಯುವಾಗ ಅಭಿಕ್ರಿಯಾಕಾರಕಗಳು ಮತ್ತು ಉತ್ಪಾದಿತೆಗಳು ಇವುಗಳ ನಡುವೆ ಸಮಾನತೆಯ ಚಿನ್ಹೆ ತೆಗೆಯುತ್ತಾರೆ/ಮಾಡುತ್ತಾರೆ.

. ಕಬ್ಬಿಣದ ತುಕ್ಕುಹಿಡಿಯುವಿಕೆಯು ಸಾವಕಾಶ ರಾಸಾಯನಿಕ ಬದಲಾವಣೆ ಇದೆ.

ಇ. ಅನ್ನನಾಶವಾಗುವಿಕೆ ದು ರಾಸಾಯನಿಕ ಬದಲಾವಣೆಯಾಗಿದೆ. ಇದು ಅರಲ್ಲಿ ವಿಶಿಷ್ಟ ವಾಸನೆ  ನಿರ್ಮಿತಿಯಾಗುವುದರಿಂದ ಗುರುತಿಸಬಹುದಾಗಿದೆ.

ಈ. ಪರೀಕ್ಷಾನಳಿಕೆಯಲ್ಲಿಯ Ca(OH)2 ದ ಬಣ್ಣರಹಿತ ದ್ರಾವಣದಲ್ಲಿ ನಳಿಕೆಯಿಂದ ಊದುತ್ತಿರುವಾ ಕೆಲವು ವೇಳೆಯನಂತರ ದ್ರಾವಣವು ಹಾಲಿನಂತೆ ಆಗುವುದು.

. ನಿಂಬೆಯ ರಸದಲ್ಲಿ ಸ್ವಲ್ಪ ತಿನ್ನುವ ಸೋಡಾದ ಪುಡಿಯನ್ನು ಹಾಕಿದಾಗ ಕೆಲವು ವೇಳೆಯ ನಂತರ ಬಿಳಿಯ ಕಣಗಳು ಕಾಣದಂತಾಗುತ್ತದೆ. ಅಂದರೆ ಇದು ರಾಸಾಯಕ ಬದಲಾವಣೆ ಇದೆ.

. ಶ್ವಸನ ಕ್ರಿಯೆಯಲ್ಲಿ ಆಕ್ಸಿಜನ ಇದೊಂದು ಅಭಿಕಾರಕ ದೆ.

ಎ. NaCl ಇದು ಆಯೋನಿಕ ಸಂಯುಕ್ತವಿದೆ ಮತ್ತು HCl ಇದು ಸಹಸಂಯೋಗ ಸಂಯುಕ್ತವಿದೆ.

ಏ. ಹೈಡೋಜನದ ಅಣುವಿನಲ್ಲಿ ಪ್ರತಿಯೊಂದು ಹೈಡೋಜನದ ದ್ವಿಕ ಪೂರ್ಣ ವಿರುತ್ತದೆ.

ಓ. ಕ್ಲೋರಿನದ ಎರಡು ಪರಮಾಣುಗಳಲ್ಲಿ ಇಲೆಕ್ಟ್ರಾನಗಳ ಹಂಚುವಿಕೆ ಆಗಿ ಈ ಆಣು ತಯಾರಾಗುವುದು.

ಪ್ರ. 2. ಶಾಬ್ದಿಕ ಸಮೀಕರಣ ರೆದು ಸ್ಪಷ್ಟಮಾಡಿರಿ

ಅ.  ಶ್ವಸನವು ಒಂದು ರಾಸಾಯನಿಕ ಬದಲಾವಣೆ ಇದೆ.


ಶಾಬ್ದಿಕ ಸಮೀಕರಣ

ಗ್ಲುಕೋಜ್ + ಆಕ್ಸಿಜನ್    ✒〉(ಶ್ವಸನ)     ಕಾರ್ಬನ್ ಡೈ ಆಕ್ಸೈಡ್ + ನೀರು

ಶ್ವಸನ ಮಾಡುವಾಗ ಶ್ವಾಸದೊಂದಿಗೆ ತೆಗೆದುಕೊಂಡ ಹವೆಯಲ್ಲಿಯ ಆಕ್ಸಿಜನದೊಂದಿಗೆ ಗ್ಲುಕೋಜದ ಅಭಿಕ್ರಿಯೆಯಾಗಿ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರು ತಯಾರಾಗುತ್ತದೆ.

ಆ. ಬಟ್ಟೆ ಒಗೆಯುವ ಸೋಡಾದ ದ್ರಾವಣವನ್ನು ಕಠಿಣ ನೀರಿನಲ್ಲಿ ಬೆರೆಸಿದಾಗ ಕಠಿಣ ನೀರು ಮೃದು ಆಗುವುದು.

ಶಾಬ್ದಿಕ ಸಮೀಕರಣ

 ಕ್ಯಾಲ್ಸಿಯಮ್ ಕ್ಲೋರೈಡ್ + ಸೋಡಿಯಂ ಕಾರ್ಬೊನೆಟ್  ✒〉         ಸೋಡಿಯಂ ಕ್ಲೋರೈಡ್ + ಕ್ಯಾಲ್ಸಿಯಮ್ ಕಾರ್ಬೊನೆಟ್     CaCl2 + Na2CO3 CaCO3 + NaCl

ಕೆಲವು ಬಾವಿಗಳ ನೀರು ಅಥವಾ ಕೈ ಪಂಪುಗಳ ನೀರು ಕಠಿಣ ಇರುತ್ತದೆ. ಇಂತಹ ಕಠಿಣ ನೀರಿನಲ್ಲಿ ಕ್ಯಾಲ್ಸಿಯಮ್, ಮ್ಯಾಜ್ಞೆಶಿಯಮ್ ಮತ್ತು ಸಲ್ಫೆಟ್ ಈ ಕ್ಷಾರಗಳು ಕರಗುತ್ತವೆ. ಕಠಿಣ ನೀರನ್ನು ಮೃದು ಮಾಡಲು ಅದರಲ್ಲಿ ಒಗೆಯುವ ಸೋಡಾದ ದ್ರಾವಣ ಹಾಕುತ್ತಾರೆ.ಆದ್ದರಿಂದ ರಾಸಾಯನಿಕ ಅಭಿಕ್ರಿಯೆ ಉಂಟಾಗಿ ಕ್ಯಾಲ್ಸಿಯಮ್ ಕಾರ್ಬೊನೆಟ್ ಎಂಬ ಅದ್ರಾವಣಿಯ ಕ್ಷಾರ ಹೊರಬೀಳುತ್ತದೆ ಮತ್ತು ಸೋಡಿಯಂ ಕ್ಲೋರೈಡ್ ತಯಾರಾಗುತ್ತದೆ.

ಇ. ಸೌಮ್ಯ HCl ದಲ್ಲಿ ಸುಣ್ಣದ ಕಲ್ಲು ಹಾಕಿದಾಗ ಕಾಣದಂತಾಗುವುದು.

ಶಾಬ್ದಿಕ ಸಮೀಕರಣ

ಸೌಮ್ಯ ಹೈಡ್ರೋಕ್ಲೋರಿಕ್ ಆಮ್ಲ + ಸುಣ್ಣದ ಕಲ್ಲು(ಕ್ಯಾಲ್ಸಿಯಮ್ ಕಾರ್ಬೊನೆಟ್)   ✒〉        ಕ್ಯಾಲ್ಸಿಯಮ್ ಕ್ಲೋರೈಡ್ + ಕಾರ್ಬನ್ ಡೈ ಆಕ್ಸೈಡ್ + ನೀರು

ಸೌಮ್ಯ ಹೈಡ್ರೋಕ್ಲೋರಿಕ್ ಆಮ್ಲವು ಸುಣ್ಣದ ಕಲ್ಲಿನೊಂದಿಗೆ ಅಭಿಕ್ರಿಯೆಯಾಗಿ ಕ್ಯಾಲ್ಸಿಯಮ್ ಕ್ಲೋರೈಡ್, ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರು ತಯಾರಾಗುತ್ತದೆ. ಕ್ಯಾಲ್ಸಿಯಮ್ ಕ್ಲೋರೈಡ್ ನೀರಿನಲ್ಲಿ ಕರಗುತ್ತದೆ ಹಾಗೂ  ಕಾರ್ಬನ್ ಡೈ ಆಕ್ಸೈಡ್ ಹವೆಯಲ್ಲಿ ಕೂಡಿಕೊಳ್ಳುತ್ತದೆ ಆದ್ದರಿಂದ ಸೌಮ್ಯ HCl ದಲ್ಲಿ ಸುಣ್ಣದ ಕಲ್ಲು ಹಾಕಿದಾಗ ಕಾಣದಂತಾಗುವುದು.

 ಈ.  ತಿನ್ನುವ ಸೋಡಾದ ಮೇಲೆ ನಿಂಬೆರಸ ಹಾಕಿದಾಗ ಗುಳ್ಳೆಗಳು ಕಂಡು ಬರುತ್ತದೆ.

ಶಾಬ್ದಿಕ ಸಮೀಕರಣ 

ಸೋಡಿಯಂ ಕಾರ್ಬೊನೆಟ್ + ಸಾಯಟ್ರಿಕ್ ಆಮ್ಲ ✒〉     ಕಾರ್ಬನ್ ಡೈ ಆಕ್ಸೈಡ್ + ಸೋಡಿಯಂ ಸಾಯಟ್ರೇಟ್

ತಿನ್ನುವ ಸೋಡಾಅಂದರೆ ಸೋಡಿಯಂ ಕಾರ್ಬೊನೆಟ್, ನಿಂಬೆರಸ ಅಂದರೆ ಸಾಯಟ್ರಿಕ್ ಆಮ್ಲ, ಗುಳ್ಳೆಗಳು ಅಂದರೆ ಕಾರ್ಬನ್ ಡೈ ಆಕ್ಸೈಡ್ ಅಂದರೆಯೇ  ತಿನ್ನುವ ಸೋಡಾದ ಮೇಲೆ ನಿಂಬೆರಸ ಹಾಕಿದಾಗ ಗುಳ್ಳೆಗಳು ಕಂಡು ಬರುತ್ತವೆ.

ಪ್ರ. 3. ಹೊಂದಿಸಿ ಬರೆಯಿರಿ.

ಅ. ಪ್ರಕಾರ ಸಂಶ್ಲೇಷಣೆ                 1. ಇಲೆಕ್ಟ್ರಾನ ಕಳೆದುಕೊಳ್ಳುವ ಪ್ರವೃತ್ತಿ

ಆ. ನೀರು                                2. ಜ್ವಲನ ಪ್ರಕ್ರಿಯೆಯಲ್ಲಿಯ ಅಧಿಕಾರಕ

ಇ. ಸೋಡಿಯಂ ಕೊರೈಡ              3. ರಾಸಾಯನಿಕ ಬದಲಾವಣೆ

ಈ ನೀರಿನಲ್ಲಿ ಉಪ್ಪ ಕರಗುವಿಕೆ         4. ಸಹಸಂಯೋಗಬಂಧ

ಎ. ಕಾರ್ಬನ್                            5. ಆಯೋನಿನ ಸಂಯುಕ್ತ

ಏ. ಫ್ಲೋರಿನ್                            6. ಭೌತಿಕ ಬದಲಾವಣೆ

ಓ. ಮ್ಯಾಗ್ನೆಸಿಯಂ                       7.  ಋಣ ಅಯಾನು ಆಗುವರವೃತ್ತಿ

ಉತ್ತರ:-

ಅ. ಪ್ರಕಾರ ಸಂಶ್ಲೇಷಣೆ                 3. ರಾಸಾಯನಿಕ ಬದಲಾವಣೆ                           

ಆ. ನೀರು                                4. ಸಹಸಂಯೋಗಬಂಧ                        

ಇ. ಸೋಡಿಯಂ ಕೊರೈಡ              5. ಆಯೋನಿನ ಸಂಯುಕ್ತ

ಈ ನೀರಿನಲ್ಲಿ ಉಪ್ಪ ಕರಗುವಿಕೆ          6. ಭೌತಿಕ ಬದಲಾವಣೆ

ಎ. ಕಾರ್ಬನ್                            2. ಜ್ವಲನ ಪ್ರಕ್ರಿಯೆಯಲ್ಲಿಯ ಅಧಿಕಾರಕ

ಏ. ಫ್ಲೋರಿನ್                            1. ಇಲೆಕ್ಟ್ರಾನ ಕಳೆದುಕೊಳ್ಳುವ ಪ್ರವೃತ್ತಿ         

ಓ. ಮ್ಯಾಗ್ನೆಸಿಯಂ                       7.  ಋಣ ಅಯಾನು ಆಗುವರವೃತ್ತಿ

 

 

ಪ್ರ. 4. ಘಟಕ ಪರಮಾಣುಗಳಿಂದ ಕೆಳಗಿನ ಸಂಯುಕ್ತಗಳ ನಿರ್ಮಿತಿ ಹೇಗೆ ಆಗುವುದು ಎಂಬುದನ್ನು ಇಲೆಕ್ಟ್ರಾನ ಸಂರಚನೆಯ ರೇಖಾಟನೆಯಿಂದ ದರ್ಶಿಸಿರಿ.

ಅ. ಸೋಡಿಯಂ ಕ್ಲೋರೈಡ

ಆ. ಪೊಟ್ಯಾಶಿಯಮ್ ಫ್ಲೋರೈಡ್

ಕ. ನೀರು

ಈ.  ಹೈಡೋಜನ ಕ್ಲೋರೈಡ

 ಉಪಕ್ರಮ:

ನಿಮ್ಮ ಮನೆಯಲ್ಲಿ ಅದರಂತೆ ಪರಿಸರದಲ್ಲಿ ಕಂಡು ಬರುವ ರಾಸಾಯನಿಕ ಬದಲಾವಣೆಗಳ ಯಾದಿ ತಯಾರಿಸಿರಿ ಮತ್ತು ವರ್ಗದಲ್ಲಿ ಅದರ ಬಗ್ಗೆ ಚರ್ಚೆ ಮಾಡಿರಿ.


14. ಉಷ್ಣತೆಯ ಮಾಪನೆ ಮತ್ತು ಪರಿಣಾಮ

ಪ್ರ. 1. ಅ. ನನ್ನ ಜೋಡಿ ಯಾರೊಂದಿಗೆ?

'' ಗುಂಪು                                                                                   ‘ ಗುಂಪು

) ನಿರೋಗಿ ಮಾನವನ ಶರೀರದ ತಾಪಮಾನ                             98.6°F

ಆ) ನೀರಿನ ಕುದಿಯುವ ಬಿಂದು                                                     212 °F       

ಇ) ಕೋಣೆಯ ತಾಪಮಾನ                                                          296 k

ಈ)ನೀರಿನ ಹೆಪ್ಪು ಗಟ್ಟುವಬಿಂದು                                                  0 °C

(ಆ) ಯಾರು ಸತ್ಯ ಮಾತಾಡುತ್ತಾರೆ?

ಆ) ಉಷ್ಣತೆಯು ಉಷ್ಣವಸ್ತುವಿನ ಕಡೆಯಿಂದ ತಂಪು ವಸ್ತುವಿನ ಕಡೆಗೆ ಹರಿಯುತ್ತದೆ. =ಸರಿ

ಆ) ಪದಾರ್ಥದ ತಾಪಮಾನವನ್ನು ಜ್ಯೂಲದಲ್ಲಿ ಅಳೆಯುತ್ತಾರೆ.             =ತಪ್ಪು

ಇ) ಉಷ್ಣತೆಯ ಮೂಲಮಾನ ಜ್ಯೂಲ ಇದೆ.                  =ಸರಿ

ಈ) ಉಷ್ಣತೆ ಕೊಡಲಾಗಿ ವಸ್ತುವು ಆ ಕುಂಚನಗೊಳ್ಳುವದು.   = ತಪ್ಪು

ಉ) ಘನಪದಾರ್ಥದ ಪರಮಾಣುಗಳು ಸ್ವತಂತ್ರವಿರುತ್ತವೆ.   =ತಪ್ಪು  

ಊ) ಉಷ್ಣ ವಸ್ತುವಿನ ಪರಮಾಣುಗಳ ಸರಾಸರಿ ಗತಿಜನ್ಯ ಶಕ್ತಿಯು ತಂಪು ವಸ್ತುವಿನ ಪರಮಾಣುಗಳ ಸರಾಸರಿ ಗತಿಜನ್ಯ ಶಕ್ತಿಗಿಂತ ಕಡಿಮೆ ಇರುವದು.         = ತಪ್ಪು

(ಇ) ಹುಡುಕಿದರೆ ಸಿಗುವದು.

ಅ) ತಾಪಮಾಪಕ ಈ ಉಪಕರಣವನ್ನು ಉಷ್ಣತೆವಸ್ತುವಿನ ತಾಪಮಾನ  ಳೆಯುವ ಸಲುವಾಗಿ ಉಪಯೋಗಿಸುತ್ತಾರೆ.

ಆ) ಉಷ್ಣತೆ ಅಳೆಯುವ ಸಲುವಾಗಿ ಕೆಲರಿಮಾಪಕ ಈ ಉಪಕರಣ ಉಪಯೋಗಿಸುವರು.

ಇ) ತಾಪಮಾನ ಇದು ವಸ್ತುವಿನಲ್ಲಿಯ ಪರಮಾಣುಗಳ ಸರಾಸರಿ ಗತಿಜನ್ಯ ಶಕ್ತಿಯ ಪ್ರಮಾಣವಿರುತ್ತದೆ.

ಈ) ಈ ಒಂದು ವಸ್ತುವಿನಲ್ಲಿ ಉಷ್ಣತೆಯು ಅದರಲ್ಲಿಯ ಪರಮಾಣುಗಳ ಒಟ್ಟು ಗತಿಜನ್ಯ ಶಕ್ತಿಯ ಪ್ರಮಾಣವಿರುತ್ತದೆ.

ಪ್ರ. 2) ನಿಶಿಗಂಧಾಳು ಚಹ ತಯಾರಿಸುವ ಸಲುವಾಗಿ ಚಹದ ಘಟಕಗಳನ್ನು ಹಾಕಿ ಪಾತ್ರೆಯನ್ನು ಸೌರ ಒಲೆಯಲ್ಲಿ ಇಟ್ಟಳು. ಶಿವಾನಿಯು ಆದೇ ತರಹದ ಪಾತ್ರೆಯನ್ನು ಗ್ಯಾಸದ ಶೇಗಡಿಯ ಮೇಲೆ ಇಟ್ಟಳು, ಯಾರ ಚಹ ಬೇಗನೆ ತಯಾರಾಗುವದು ಮತ್ತು ಏಕೆ?

ಉತ್ತರ: ನಿಶಿಗಂಧಾ ಮತ್ತು ಶಿವಾನಿ ಇಬ್ಬರೂ ಮಾಡುವ ಚಹಾ ಮತ್ತು ಸಕ್ಕರೆ ಒಂದೇ ಆಗಿದ್ದು ಅವು ತಯಾರಾಗಲು ತೆಗೆದುಕೊಳ್ಳುವ ಉಷ್ಣತೆ ಸಮಾನವಿರುತ್ತದೆ. ಆದರೆ ಗ್ಯಾಸದ ಉಷ್ಣತೆಯು ಸೌರಓಲೆಗಿಂತ ಹೆಚ್ಚು ಇರುವುದು ಆದ್ದರಿಂದ ಶಿವಾನಿ ಬೇಗನೆ ಚಹಾ ಮಾಡುತ್ತಾಳೆ.

ಪ್ರ. 3) ಸ್ವಲ್ಪದರಲ್ಲಿ ಉತ್ತರಿಸಿರಿ.

) ವೈದ್ಯಕೀಯ ತಾಪಮಾಪಕದ ವರ್ಣನೆಯನ್ನು ಮಾಡಿರಿ. ಅದರ ಮತ್ತು ಪ್ರಯೋಗ ಶಾಲೆಯಲ್ಲಿ ಉಪಯೋಗವಾಗುವ ತಾಪಮಾಪಕದಲ್ಲಿ ಯಾವ ಭೇದವಿರುತ್ತದೆ?

ಉತ್ತರ: ವೈದ್ಯಕೀಯ ತಾಪಮಾಪಕದ ಉಪಯೋಗವು ಮನುಷ್ಯನ ಶರೀರದ ತಾಪಮಾನವನ್ನು ಅಳೆಯಲು ಮಾಡಲಾಗುತ್ತದೆ. ಈ ತಾಪಮಾಪಕದಲ್ಲಿ ಒಂದು ಉದ್ದ ಗಾಜಿನ ನಳಿಕೆ ಇರುತ್ತದೆ. ಅದರಲ್ಲಿ ಅಲ್ಕೋಹೋಲ್ ತುಂಬಿರುತ್ತದೆ. ಒಂದು ತುದಿಗೆ ಗೋಲಕ ಇದ್ದು ಅದನ್ನು ತಾಪಮಾನ ಅಳೆಯುವ ವಸ್ತುವಿನ ಅಥವಾ ಶರೀರದ ಸಂಪರ್ಕದಲ್ಲಿ ತಂದಾಗ ವಸ್ತುವಿನ /ಶರೀರದ ತಾಪಮಾನ ಅಳೆದುಕೊಳ್ಳುತ್ತದೆ. ಒಬ್ಬ ನಿರೋಗಿ ಶರೀರದ ತಾಪಮಾನವು ಸುಮಾರು 35 °C ದಿಂದ 40 °C ರಷ್ಟು ಇರುತ್ತದೆ. ಇಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಡಿಜಿಟಲ್ ತಾಪಾಮಪಾಕವನ್ನು ಬಳಸಲಾಗುತ್ತದೆ.

ಪ್ರಯೋಗ ಶಾಲೆಯಲ್ಲಿ ಉಪಯೋಗವಾಗುವ ತಾಪಮಾಪಕ ವೈದ್ಯಕೀಯ ತಾಪಮಾಪಕದಂತೆಯೇ ಇರುತ್ತದೆ ಆದರೆ ಅದರ ತಾಪಮಾನ ಅಳೆಯುವ ಮರ್ಯಾದೆ ದೊಡ್ಡದಿರುತ್ತದೆ. ಅದರ ಮೂಲಕ 40 °C 110 °C ರಷ್ಟು ಅಥವಾ ಅದಕ್ಕಿಂತ ಹೆಚ್ಚು ಉಷ್ಣತೆ ಅಳೆಯಲು ಬರುತ್ತದೆ. ಇದರ ಮೂಲಕ ದಿನದ ಕನಿಷ್ಠ ಮತ್ತು ಗರಿಷ್ಠ ಉಷ್ಣತಾಮನ ಅಳೆಯಲು ಕೂಡ ಬರುತ್ತದೆ.

ಆ) ಉಷ್ಣತೆ ಮತ್ತು ತಾಪಮಾನಗಳಲ್ಲಿ ಏನು ಭೇದವಿದೆ? ಅವುಗಳ ಮೂಲಮಾನ -ಗಳಾವುವು?

ಉತ್ತರ: ಉಷ್ಣತೆಯು ಒಂದು ಪ್ರಕಾರದ ಶಕ್ತಿ ಇದೆ. ಅದು ಹೆಚ್ಚು ತಾಪಮಾನವಿರುವ ವಸ್ತುವಿನ ಕಡೆಯಿಂದ ಕಡಿಮೆ ತಾಪಮಾನವಿರುವ ವಸ್ತುವಿನ ಕಡೆಗೆ ಪ್ರವಾಹಿತವಾಗುತ್ತದೆ. ಯಾವುದೇ ಒಂದು ವಸ್ತುವಿನ ತಾಪಮಾನವು ಆ ವಸ್ತು ಎಷ್ಟು ಉಷ್ಣ ಅಥವಾ ಎಷ್ಟು ತಂಪು ಇದೆ ಎಂಬುದನ್ನು ದರ್ಶಿಸುತ್ತದೆ.

 ಎಸ್. ಐ. ಪದ್ಧತಿಯಲ್ಲಿ ಉಷ್ಣತೆಯ ಮೂಲಮಾನವು ಜ್ಯೂಲ್(Joule) ಮತ್ತು CGS ಪದ್ಧತಿಯಲ್ಲಿ ಕ್ಯಾಲೊರಿ ಇದೆ.

ಇ) ಕೆಲರಿಮಾಪಕದ ರಚನೆಯನ್ನು ಆಕೃತಿಸಹ ವಿವರಿಸಿರಿ.

ಉತ್ತರ:  ವಸ್ತುವಿನ ತಾಪಮಾನ ಅಳೆಯುವ ಸಲುವಾಗಿ ತಾಪಮಾಪಕವನ್ನು ಉಪಯೋಗಿಸಲಾಗುತ್ತದೆ. ವಸ್ತುವಿನಲ್ಲಿಯ ಉಷ್ಣತೆಯನ್ನು ಅಳೆಯುವ ಸಲುವಾಗಿ ಕೆಲರಿಮಾಪಕವನ್ನು ಉಪಯೋಗಿಸಲಾಗುತ್ತದೆ. ಈ ಉಪಕರಣದ ಸಹಾಯದಿ೦ದ ಒ೦ದು ರಾಸಾಯನಿಕ ಅಥವಾ ಭೌತಿಕ ಪ್ರಕ್ರಿಯೆಯಲ್ಲಿ ಹೊರಬೀಳುವ ಅಥವಾ ಶೋಷಿಸಲ್ಪಡುವ ಉಷ್ಣತೆಯ ಮಾಪನೆಯನ್ನು ನಾವು ಮಾಡಬಹುದಾಗಿದೆ. ಕೆಳಗೆ  ಒಂದು ಕೆಲರಿ ಮಾಪಕವನ್ನು ತೋರಿಸಲಾಗಿದೆ. ಇದರಲ್ಲಿ ಒಂದು ರ್ಮಾಸ ಫ್ಲಾಸ್ಕದಂತೆಯೆ ಒಳಗೆ ಮತ್ತು ಹೊರಗೆ ಹೀಗೆ ಎರಡು ಪಾತ್ರೆಗಳು ಇರುತ್ತವೆ. ಇದರಿ೦ದ ಒಳಗಿನ ಪಾತ್ರೆಯಲ್ಲಿಟ್ಟ ವಸ್ತುವಿನ ಉಷ್ಣತೆಯು ಒಳಗಿನಿಂದ ಹೊರಗೆ ಬರುವದಿಲ್ಲ ಮತ್ತು ಉಷ್ಣತೆಯು ಹೊರಗಿನಿಂದ ಒಳಗೆ ಸಹ ಬರುವದಿಲ್ಲ. ಅಂದರೆ ಒಳಗಿನ ಪಾತ್ರೆ ಮತ್ತು ಅದರಲ್ಲಿಯ ವಸ್ತು ಇವು ಸುತ್ತ ಮುತ್ತಲಿನ ವಾತಾವರಣದಿಂದ ಔಷ್ಣಿಕ ದೃಷ್ಠಿಯಿಂದ ಅಲಿಪ್ತ ವಿರುತ್ತವೆ. ಈ ಪಾತ್ರೆಗಳು ತಾಮ್ರದ್ದು ಇರುತ್ತವೆ. ಇದರಲ್ಲಿ ತಾಪಮಾನ ಅಳೆಯುವ ಸಲುವಾಗಿ ಒಂದು ತಾಪಮಾಪಕ ಮತ್ತು ದ್ರವವನ್ನು ಅಲುಗಾಡಿಸುವ ಸಲುವಾಗಿ ಒಂದು ನಳಿಕೆ ಇರುತ್ತದೆ.


       ಕೆಲರಿ ಮಾಪಕದಲ್ಲಿ ಒಂದು ಸ್ಥಿರ ತಾಪಮಾನದ ನೀರನ್ನು ಇಡಲಾಗುತ್ತದೆ. ಅಂದರೆ ನೀರಿನ ಮತ್ತು ಒಳಗಿನ ಪಾತ್ರೆಯ ತಾಪಮಾನ ಸಮನಾಗಿರುತ್ತದೆ. ಅದರಲ್ಲಿ ಒಂದು ಉಷ್ಣ ವಸ್ತುವನ್ನು ಹಾಕಿದಾಗ ಆ ವಸ್ತು, ನೀರು ಮತ್ತು ಒಳಗಿನ ಪಾತ್ರೆ ಇವುಗಳಲ್ಲಿ ಉಷ್ಣತೆಯ ವಿನಿಮಯ ಆಗುವದು ಮತ್ತು ಆದ್ದರಿಂದ ಅವುಗಳ ತಾಪಮಾನ ಸಮಾನವಾಗುವದು. ಕೆಲರಿಮಾಪಕದಲ್ಲಿಯ ಒಳಗಿನ ಪಾತ್ರೆ ಮತ್ತು ಅದರಲ್ಲಿಯ ಪದಾರ್ಥ ಇವು ಸುತ್ತಲಿನ ಇತರ ಎಲ್ಲ ವಸ್ತುಗಳಿಂದ ಮತ್ತು ವಾತಾವರಣದಿಂದ ಔಷ್ಣಿಕವಾಗಿ ಅಲಿಪ್ತ ಇಡಲಾಗಿರುವದರಿಂದ ಉಷ್ಣವಸ್ತುವು ಕೊಟ್ಟ ಒಟ್ಟು ಉಷ್ಣತೆ ಮತ್ತು ನೀರು ಮತ್ತು ಕೆಲರಿಮಾಪಕವು ಗ್ರಹಣ ಮಾಡಿದ ಒಟ್ಟು ಉಷ್ಣತೆ ಇವು ಸಮನಾಗಿರುತ್ತವೆ.

ಇದರಂತೆಯೆ ನಾವು ಕೆಲರಿ ಮಾಪಕದಲ್ಲಿ ಉಷ್ಣ ವಸ್ತುವಿನ ಬದಲಿಗೆ ತಂಪು ವಸ್ತುವನ್ನು ಹಾಕಿದಾಗ, ಆ ವಸ್ತು ನೀರಿನಿಂದ ಉಷ್ಣತೆಯನ್ನು ಗ್ರಹಿಸುವದು ಮತ್ತು ಅದರ ತಾಪಮಾನ ಹೆಚ್ಚುವದು ನೀರಿನಲ್ಲಿಯ ಮತ್ತು ಕೆಲರಿಮಾಪಕದಲ್ಲಿಯ ಉಷ್ಣತೆಯು ಕಡಿಮೆಯಾಗುವದು ಮತ್ತು ಅವುಗಳ ತಾಪಮಾನ ಕಡಿಮೆಯಾಗುವದು.

ಈ) ರೇಲ್ವೆ ಹಳಿಯಲ್ಲಿ ವಿಶಿಷ್ಟ ಅಂತರದ ಮೇಲೆ ಸ್ಥಳಾವಕಾಶ ವಿಟ್ಟಿರುತ್ತಾರೆ. ಇದನ್ನು ಸ್ಪಷ್ಟಪಡಿಸಿರಿ.

ಉತ್ತರ: ಯಾವುದೇ ವಸ್ತುವಿಗೆ ಉಷ್ಣತೆಯನ್ನು ಕೊಟ್ಟಾಗ ಅದರ ಉಷ್ಣತಮಾನ ಹೆಚ್ಚಾಗುವುದು. ಮತ್ತು ಅದು ಪ್ರಸರಣೆಬವಾಗುವುದು. ರೇಲ್ವೆ ಹಳಿಗಳ ಜೋಡಣೆಯಲ್ಲಿ ಸ್ಥಳಾವಕಾಶ ಇಟ್ಟಿರುವುದರಿಂದ ರೈಲು ನಡೆಯಲು ಹಳಿಗಳಿಗೆ ಉಷ್ಣತೆ ದೊರೆತು ಹಳಿಗಳು ಪ್ರಸರಣ ಹೊಂದುತ್ತವೆ. ಹಾಗಾಗಿ ಜೋಡಬೆಗಳಲ್ಲಿ ಸ್ಥಳ ಬಿಟ್ಟಿರುತ್ತಾರೆ.

ಉ) ವಾಯುವಿನ ಮತ್ತು ದ್ರವದ ಪ್ರಸರಣಾಂಕ ಎಂದರೇನು ಎಂಬುದನ್ನು ಸೂತ್ರದ ಸಹಾಯದಿಂದ ಸ್ಪಷ್ಟ ಪಡಿಸಿರಿ.

ಉತ್ತರ:

ಪ್ರ. 4) ಕೆಳಗಿನ ಉದಾಹರಣೆಗಳನ್ನು ಬಿಡಿಸಿರಿ.

ಅ) ಫೆರೆನಹೈಟ ಮೂಲಮಾನದಲ್ಲಿಯ ತಾಪಮಾನವು ಎಷ್ಟು ಇದ್ದರೆ ಅದು ಸೆಲ್ಲಿಆಸ ಮೂಲಮಾನದಲ್ಲಿಯ ತಾಪಮಾನದ ಎರಡುಪಟ್ಟು ಇರುವದು? (ಉತ್ತರ: 320 °F)

 

ಅ) ಒಂದು ಸೇತುವೆಯನ್ನು 20 ಮೀ ಉದ್ದದ ಕಬ್ಬಿಣದ ಶಲಾಕೆಯಿ೦ದ ತಯಾರಿಸಲಾಗಿದೆ. ತಾಪಮಾನವು 18°C ಇದ್ದಾಗ ಎರಡು ಶಲಾಕೆಗಳಲ್ಲಿ 4 cm ಅಂತರವಿದೆ. ಎಷ್ಟು ತಾಪಮಾನದ ವರೆಗೆ ಆ ಸೇತುವೆ ಒಳ್ಳೆಯ ಸ್ಥಿತಿಯಲ್ಲಿ ಇರುವದು? (ಉತ್ತರ: 35.4 °C)

 

ಇ) ಆಯಫೇಲ ಟಾವರದ ಎತ್ತರ 15°C  ದಲ್ಲಿ 324 ಮೀ ಇದ್ದರೆ, ಮತ್ತು ಆ ಟಾವರವು ಕಬ್ಬಿಣದ್ದು ಇದ್ದರೆ, 30°C ಗೆ ಅದರ ಎತ್ತರ ಎಷ್ಟು cm ದಿಂದ ಹೆಚ್ಚುವದು? (ಉತ್ತರ: 5.6 cm)

ಈ) '' ಮತ್ತು '' ಪದಾರ್ಥಗಳ ವಿಶಿಷ್ಟ ಉಷ್ಣತೆಯು ಕ್ರಮವಾಗಿ C ಮತ್ತು 2C ಇವೆ. '' ಕ್ಕೆ Q ಮತ್ತು '' ಕ್ಕೆ 4Q ದಷ್ಟು ಉಷ್ಣತೆಯನ್ನು ಕೊಟ್ಟಾಗ ಅವುಗಳ ತಾಪಮಾನದಲ್ಲಿ ಸಮಾನ ಬದಲಾವಣೆಯಾಗುವದು. ಒಂದು ವೇಳೆ '' ದ ದ್ರವ್ಯರಾಶಿ m ಇದ್ದರೆ '' ದ ದ್ರವ್ಯರಾಶಿ ಎಷ್ಟಿರುವದು? (ಉತ್ತರ: 2 m)

 

ಈ) ಒಂದು 3 ಕೆಜಿ ದ್ರವ್ಯರಾಶಿಯ ವಸ್ತು 600 ಕೆಲರಿ ಶಕ್ತಿಯನ್ನು ಪಡೆದುಕೊಳುತ್ತದೆ. ಆಗ ಅದರ ತಾಪಮಾನವು 10°C ದಿ೦ದ 70°C ದ ವರೆಗೆ ಹೆಚ್ಚುವದು. ವಸ್ತುವಿನ ಪದಾರ್ಥದ ವಿಶಿಷ್ಟ ಉಷ್ಣತೆ ಎಷ್ಟಿದೆ? (ಉತ್ತರ: 0.0033 cal (gm °c)

 

 

ಉಪಕ್ರಮ:

ದ್ವಿ ಧಾತುಪಟ್ಟಿ (Bimetallic Strip) ಯ ಬಗ್ಗೆ ಮಾಹಿತಿ ದೊರಕಿಸಿರಿ ಮತ್ತು ಅದನ್ನು ಉಪಯೋಗಿಸಿ ಅಗ್ನಿಸೂಚಕ ಯಂತ್ರವನ್ನು ಹೇಗೆ ತಯಾರಿಸುತ್ತಾರೆ ಎಂಬುವುದರ ಬಗ್ಗೆ ವರ್ಗದಲ್ಲಿ ಚರ್ಚೆ ಮಾಡಿರಿ.

                                   15. ಧ್ವನಿ (Sound)

ಪ್ರ. 1. ಬಿಟ್ಟ ಸ್ಥಳಗಳಲ್ಲಿ ಯೋಗ್ಯ ಶಬ್ದವನ್ನು ತುಂಬಿರಿ.

ಅ. ಧ್ವನಿ ತರಂಗದಲ್ಲಿಯ ಉಚ್ಚ ಒತ್ತಡ ಮತ್ತು ದಾರ್ಡ್ಯದ ಭಾಗಕ್ಕೆ ಸಂಪೀಡನ

ಎನ್ನುತ್ತಾರೆ. ಆದರೆ ಕಡಿಮೆ ಒತ್ತಡ ಮತ್ತು ದಾರ್ಡ್ಯದ ಭಾಗಕ್ಕೆ ವಿರಲನ ಎನ್ನುತ್ತಾರೆ.

ಆ. ಧ್ವನಿಯ ನಿರ್ಮಿತಿಗೆ ಮಾಧ್ಯಮದ ಅಗತ್ಯ ಇರುತ್ತದೆ.

ಇ. ಒಂದು ಧ್ವನಿ ತರಂಗದಲ್ಲಿ ಒಂದು ಸೆಕೆಂಡಿನಲ್ಲಿ ತಯಾರಾಗುವ ವಿರಲನ ಮತ್ತು ಸಂಕೋಚನ ಇವುಗಳ ಒಟ್ಟು ಸಂಖ್ಯೆಯು 1000 ದಷ್ಟು ಇದೆ. ಈ ಧ್ವನಿ ತರಂಗದ ಆವರ್ತತೆಯು 500Hz ದಷ್ಟು ಇರುವುದು.

ಈ. ಭಿನ್ನ ಭಿನ್ನ ಸುರ (ಸ್ವರ) ಗಳಿಗಾಗಿ ಧ್ವನಿ ತರ೦ಗದ ಆವರ್ತತೆಯು ಭಿನ್ನ ಇರುತ್ತದೆ.

ಉ. ಧ್ವನಿವರ್ಧಕದಲ್ಲಿ ಯಾಂತ್ರಿಕ ಶಕ್ತಿಯ ರೂಪಾಂತರವು ಧ್ವನಿ ಶಕ್ತಿಯಲ್ಲಿ ಆಗುತ್ತದೆ.

ಪ್ರ. 2. ಶಾಸ್ತ್ರೀಯ ಕಾರಣಗಳನ್ನು ಹೇಳಿರಿ.

. ಬಾಯಿಯಿಂದ ಭಿನ್ನ ಭಿನ್ನ ಸ್ವರಗಳನ್ನು ತೆಗೆಯುವಾಗ ಸ್ವರ ತಂತುಗಳ ಮೇಲಿನ ಭಾರವನ್ನು (ಒತ್ತಡವನ್ನು) ಬದಲಿಸುವುದು ಅವಶ್ಯಕ ಇದೆ.

ಉತ್ತರ: ವಿಭಿನ್ನ ಧ್ವನಿ ಟಿಪ್ಪಣಿಗಳು ವಿಭಿನ್ನ ಆವರ್ತನಗಳಿಗೆ ಸಂಬಂಧಿಸಿವೆ. ಧ್ವನಿಯ ಆವರ್ತನವು ಗಾಯನ ಹಗ್ಗಗಳಲ್ಲಿನ ಒತ್ತಡವನ್ನು ಅವಲಂಬಿಸಿರುತ್ತದೆ. ಆದ್ದರಿಂದ, ನಮ್ಮ ಧ್ವನಿಪೆಟ್ಟಿಗೆಯಲ್ಲಿ ನಾವು ವಿಭಿನ್ನ ಧ್ವನಿ ಟಿಪ್ಪಣಿಗಳನ್ನು ಉತ್ಪಾದಿಸುವುದರಿಂದ, ಗಾಯನ ಹಗ್ಗಗಳಲ್ಲಿನ ಒತ್ತಡವನ್ನು ಬದಲಾಯಿಸುವುದು ಅತ್ಯಗತ್ಯ.

ಆ. ಚಂದ್ರನ ಮೇಲೆ ಗಗನಯಾತ್ರಿಗಳು ಪರಸ್ಪರ ನೇರವಾಗಿ ಕೇಳಲು ಸಾಧ್ಯವಿಲ್ಲ./ ಆ. ಚಂದ್ರನ ಮೇಲಿನ ಅಂತರಿಕ್ಷಕರ ಮಾತುಗಳು ಒಬ್ಬರನ್ನೊಬ್ಬರಿಗೆ ಪ್ರತ್ಯಕ್ಷವಾಗಿ ಕೇಳಿಸಲು ಸಾಧ್ಯವಿಲ್ಲ.

ಉತ್ತರ: ಚಂದ್ರನ ಮೇಲಿರುವ ಇಬ್ಬರು ಗಗನಯಾತ್ರಿಗಳು ಪರಸ್ಪರ ನೇರವಾಗಿ ಮಾತನಾಡುತ್ತಾರೆ, ಅವರು ಪರಸ್ಪರ ಹತ್ತಿರವಾಗಿದ್ದರೂ ಸಹ ಒಬ್ಬರನ್ನೊಬ್ಬರು ಕೇಳಲು ಸಾಧ್ಯವಾಗುವುದಿಲ್ಲ. ಚಂದ್ರನಿಗೆ ವಾತಾವರಣವಿಲ್ಲ. ಗಗನಯಾತ್ರಿಗಳ ನಡುವೆ ಧ್ವನಿಯ ಉತ್ಪಾದನೆ ಮತ್ತು ಪ್ರಸಾರಕ್ಕೆ ಅಗತ್ಯವಾದ ಯಾವುದೇ ಮಾಧ್ಯಮವಿಲ್ಲದ ಕಾರಣ, ಅವರ ನಡುವೆ ನೇರ ಧ್ವನಿ ಪ್ರಸಾರವು ಸಾಧ್ಯವಿಲ್ಲ. ಆದ್ದರಿಂದ, ಗಗನಯಾತ್ರಿಗಳು ಪರಸ್ಪರ ಸಂವಹನ ನಡೆಸಲು ನಮ್ಮ ಸೆಲ್ ಫೋನ್‌ಗಳಲ್ಲಿ ಬಳಸಿದಂತಹ ಕೆಲವು ತಂತ್ರಜ್ಞಾನವನ್ನು ಬಳಸುತ್ತಾರೆ. ಸೆಲ್‌ಫೋನ್‌ನಲ್ಲಿ ಬಳಸುವ ತರಂಗಗಳಿಗೆ ಪ್ರಸರಣಕ್ಕೆ ಯಾವುದೇ ಮಾಧ್ಯಮದ ಅಗತ್ಯವಿಲ್ಲ.

ಇ. ಧ್ವನಿ ತರಂಗವು ಹವೆಯೊಳಗಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಸಾರವಾಗುವಸಲುವಾಗಿ ಆ ಹವೆಯು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹರಿದು ಹೋಗುವ ಅವಶ್ಯಕತೆ ಇರುವದಿಲ್ಲ.

ಉತ್ತರ:ಗಾಳಿಯ ಮೂಲಕ ಧ್ವನಿಯ ಪ್ರಸರಣವು ಒಂದು ಪ್ರದೇಶದಲ್ಲಿ ಗಾಳಿಯ ಅಣುಗಳನ್ನು ಕಂಪಿಸುವ ಮೂಲಕ ಮೂಲದಿಂದ ಪಕ್ಕದ ಪ್ರದೇಶದಲ್ಲಿರುವವರಿಗೆ ಶಕ್ತಿಯ ವರ್ಗಾವಣೆಯಿಂದಾಗಿ ಸಂಭವಿಸುತ್ತದೆ. ಅಣುಗಳು ತಮ್ಮ ಸರಾಸರಿ ಸ್ಥಾನಗಳ ಬಗ್ಗೆ ಸರಳವಾಗಿ ಕಂಪಿಸುತ್ತವೆ. ಆದ್ದರಿಂದ, ಗಾಳಿಯು ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸುವ ಅಗತ್ಯವಿಲ್ಲ.

 ಪ್ರ. 3. ಗಿಟಾರದಂತಹ ತಂತು ವಾದ್ಯದೊಳಗಿಂದ ಮತ್ತು ಕೊಳಲಿನಂತಹ ಉದು ವಾದ್ಯದೊಳಗಿಂದ ಭಿನ್ನ ಭಿನ್ನ ಸ್ವರಗಳ ನಿರ್ಮಿತಿಯು ಹೇಗೆ ಆಗುತ್ತದೆ?

ಉತ್ತರ: ತಂತಿಯ ಕಂಪಿಸುವ ಭಾಗದ ಉದ್ದವನ್ನು ಬೆರಳುಗಳಿಂದ ಕಡಿಮೆ ಹೆಚ್ಚು ಮಾಡಿ ಕಂಪನಗಳ ಆವರ್ತತೆಯನ್ನು ಬದಲಿಸಲಾಗುತ್ತದೆ. ಇದರಿಂದ ಭಿನ್ನ ಭಿನ್ನ ಸ್ತರಗಳ ನಿರ್ಮಿತಿ ಆಗುತ್ತದೆ.

ಗಿಟಾರ: ಇದು ಸ್ಟ್ರಿಂಗ್ ಆಧಾರಿತ, ಚಪ್ಪಟೆ-ಬೆಂಬಲಿತ ವಾದ್ಯವಾಗಿದೆ. ಇದು ಸಾಮಾನ್ಯವಾಗಿ ಆರು ತಂತಿಗಳನ್ನು ಹೊಂದಿರುತ್ತದೆ, ತಂತಿಗಳನ್ನು ಎಳೆದುಕೊಳ್ಳಲಾಗುತ್ತದೆ ಅಥವಾ ಬೆರಳುಗಳಿಂದ ಅಥವಾ ಸಣ್ಣ ತುಂಡು ಪ್ಲಾಸ್ಟಿಕ್, ಮರ, ಇತ್ಯಾದಿಗಳಿಂದ ಎಳೆಯಲಾಗುತ್ತದೆ. ಇದು ಮಧ್ಯದಲ್ಲಿ ವೃತ್ತಾಕಾರದ ಧ್ವನಿ ರಂಧ್ರವನ್ನು ಹೊಂದಿರುವ ಫ್ಲಾಟ್ ಸೌಂಡಿಂಗ್ ಬೋರ್ಡ್ ಅನ್ನು ಹೊಂದಿದೆ. ಇದು fretted ಫಿಂಗರ್ಬೋರ್ಡ್ ಹೊಂದಿದೆ. ಇದರ ಆವರ್ತನ ಶ್ರೇಣಿಯು ಮೂರು ಆಕ್ಟೇವ್‌ಗಳಿಗಿಂತ ಹೆಚ್ಚು. ಸ್ಟ್ರಿಂಗ್‌ನಲ್ಲಿನ ಒತ್ತಡವನ್ನು ಬದಲಾಯಿಸುವ ಮೂಲಕ ಅಥವಾ ಸ್ಟ್ರಿಂಗ್‌ನ ಕಂಪಿಸುವ ಉದ್ದವನ್ನು ಬದಲಾಯಿಸುವ ಮೂಲಕ ಸ್ಟ್ರಿಂಗ್‌ನ ಕಂಪನದ ಆವರ್ತನವನ್ನು ಬದಲಾಯಿಸಲಾಗುತ್ತದೆ.

ಕೊಳಲು: ಕೊಳಲಿನಂತಹ ಊದುವ ವಾದ್ಯದಲ್ಲಿ ಬೆರಳುಗಳಿಂದ ಕೊಳಲಿನ ಮೇಲಿನ ರಂಧ್ರಗಳನ್ನು ಒತ್ತಿ ಅಥವಾ ತೆರೆದಿಟ್ಟು ಕೊಳಲಿನಲ್ಲಿ ಕಂಪನ ಹೊಂದುವ ಹವೆಯ ಸ್ತಂಭದ ಉದ್ದವನ್ನು ಕಡಿಮೆ ಹೆಚ್ಚು ಮಾಡಲಾಗುವತ್ತದೆ. ಇದರಿಂದ ಕಂಪನದ ಆವರ್ತತೆಯಲ್ಲಿ ಬದಲಾವಣೆ ಉಂಟಾಗಿ ಭಿನ್ನ ಭಿನ್ನ ಸ್ವರಗಳ ನಿರ್ಮಿತಿ ಆಗುತ್ತದೆ. ಇದರಂತೆ ಕೊಳಲಿನ ನುಡಿಸುವಿಕೆಗಾಗಿ (ಕೊಳಲು ವಾದನಕ್ಕಾಗಿ) ಬಳಸಲಾದ ಊದುವಿಕೆ ಬದಲಿಸಿದರೂ ಭಿನ್ನ ಸ್ವರಗಳ ನಿರ್ಮಿತಿ ಆಗುತ್ತದೆ.

ಪ್ರ. 4. ಮಾನವನ ಸ್ವರಯಂತ್ರದಿಂದ ಮತ್ತು ಧ್ವನಿ ವರ್ಧಕದಿಂದ ಧ್ವನಿಯು ಹೇಗೆ ಆಗುತ್ತದೆ?

  ಉತ್ತರ: ಮಾನವನ ಸ್ವರಯಂತ್ರ:ಮಾನವನಲ್ಲಿ ಧ್ವನಿಯು ಸ್ವರಯಂತ್ರದಲ್ಲಿ ನಿರ್ಮಾಣವಾಗುತ್ತದೆ. ತುತ್ತು ನುಂಗುವಾಗ ತಮ್ಮ ಕೈಯ ಬೆರಳುಗಳನ್ನು ಗಂಟಲಿನ ಮೇಲೆ ಇಟ್ಟಾಗ ಸ್ವಲ್ಪ ಮಟ್ಟಿಗೆ ಕದಲುವ ಒಂದು ಬುಗಟೆ (ಉಬ್ಬು) ಭಾಗವೇ ಆ ಸ್ವರಯಂತ್ರ (Larynx).  


     ಆಕೃತಿಯಲ್ಲಿ ಕಾಣಿಸಿದಂತೆ ಇದು ಶಸನ ನಲಿಕೆಯ ಮೇಲ್ಬದಿಗೆ ಇರುತ್ತದೆ. ಅದರಲ್ಲಿ ಎರಡು ಸ್ವರತಂತುಗಳು (Vocal Cords) ಇರುತ್ತವೆ. ಈ ಸ್ವರತಂತುಗಳಲ್ಲಿ ಇರುವ ಜಾಗದಲ್ಲಿಂದ ಹವೆಯು ಶ್ವಾಸನಳಿಕೆಯಲ್ಲಿ ಹೋಗಬಲ್ಲದು. ಪುಪ್ಪಸ (ಶ್ವಾಸಕೋಶ) ದಲ್ಲಿಯ ಹವೆಯು ಯಾವಾಗ ಈ ಜಾಗದಲ್ಲಿಂದ ಹೋಗುವುದೋ ಆಗ ಸ್ಥರ ತಂತುಗಳು ಕಂಪಿಸತೊಡಗುತ್ತವೆ ಮತ್ತು ಧ್ವನಿಯ ನಿರ್ಮಿತಿ ಆಗುತ್ತದೆ. ಸ್ವರತಂತುಗಳಿಗೆ ಜೋಡಿಸಿದ ಸ್ನಾಯುಗಳು  ಈ ತಂತುಗಳ ಮೇಲಿನ ಒತ್ತಡವನ್ನು ಕಡಿಮೆ ಹೆಚ್ಚು  ಮಾಡಬಲ್ಲವು. ಸ್ವರತಂತುವಿನ ಮೇಲಿನ  ಒತ್ತಡವು  ಬೇರೆ ಬೇರೆ ಇದ್ದರೆ ನಿರ್ಮಾಣವಾಗುವ ಧ್ವನಿಯೂ ಬೇರೆ ಬೇರೆ ಇರುತ್ತದೆ. 

ಧ್ವನಿ ವರ್ಧಕ: ಬದಿಯ ಆಕೃತಿಯಲ್ಲಿ ಧ್ವನಿವರ್ಧಕದ ಅಂತರ್ಗತ ರಚನೆಯ ಅಡ್ಡಛೇದ ಕೊಡಲಾಗಿದೆ. ಇದರಲ್ಲಿ ಒಂದು ಶಾಶ್ವತ ಚುಂಬಕ ಇರುತ್ತದೆ. ಅದರ ಸುತ್ತಲೂ ಸುತ್ತಿಟ್ಟ ಸುರುಳಿಯೊಳಗಿಂದ ವಿದ್ಯುತ್ ಪ್ರವಾಹ ಹರಿದೊಡನೆ ಅದರಲ್ಲಿ ಚುಂಬಕೀಯ



ಕ್ಷೇತ್ರ ತಯಾರಾಗುತ್ತದೆ. ಚುಂಬಕೀಯ ಕ್ಷೇತ್ರಕ್ಕೆ ಅನುಗುಣವಾಗಿ ಧ್ವನಿವರ್ಧಕದ ಕುಂತಲ(ಪರದೆ) ಕ್ಷೇತ್ರವು ಹಿಂದೆ ಮುಂದೆ ಕದಲುತ್ತದೆ ಮತ್ತು ಕಂಪನವುಂಟಾಗುತ್ತದೆ. ಈ ರಿತಿಯಾಗಿ ಧ್ವನಿವರ್ಧಕ ಪರದೆಯ ಹಿಂದೆ-ಮುಂದೆ ಆಗುವ ಚಲನೆವಲನದಿಂದಾಗಿ ಹವೆಯಲ್ಲಿ ಧ್ವನಿತರಂಗಗಳು ನಿರ್ಮಾಣವಾಗುತ್ತದೆ.   

ಪ್ರ. 5. ಧ್ವನಿಯ ಪ್ರಸಾರಕ್ಕಾಗಿ ಮಾಧ್ಯಮದ ಅಗತ್ಯ ಇರುತ್ತದೆ. ಇದನ್ನು ಸಿದ್ಧಪಡಿಸಲು ಆಕೃತಿಯೊಂದಿಗೆ ಪ್ರಯೋಗವನ್ನು ಸ್ಪಷ್ಟಿಕರಿಸಿರಿ.

ಉತ್ತರ: ಧ್ವನಿಯ ನಿರ್ಮಿತಿಗಾಗಿ ಮತ್ತು ಪ್ರಸಾರಕ್ಕಾಗಿ ಹವೆಯಂತಹ ಮಾಧ್ಯಮದ ಅವಶ್ಯಕತೆ ಇರುತ್ತದೆ, ಇದನ್ನು ಪ್ರಯೋಗಗದಿಂದ ಸಿದ್ಧ ಮಾಡಲು ಬರುತ್ತದೆ. ಪ್ರಯೋಗದ ರಚನೆ ಆಕೃತಿ 15.3 ರಲ್ಲಿ ತೋರಿಸಲಾಗಿದೆ. ಈ ರಚನೆಯಲ್ಲಿ ಗಾಜಿನ ಒ೦ದು ಘಂಟಾ ಪಾತ್ರ (Bell Jar) ಯನ್ನು ಸಪಾಟಾದ ಪೃಷ್ಠಭಾಗದ ಮೇಲೆ ಇಡಲಾಗಿದೆ. ಒಂದು ನಳಿಕೆಯ ಮುಖಾಂತರ ಈ ಪಾತ್ರೆಯನ್ನು ಒಂದು ನಿರ್ವಾತ ಪಂಪ (Vacuum Pump) ಕ್ಕೆ ಜೋಡಿಸಲಾಗಿದೆ. ನಿರ್ವಾತ ಪ೦ಪಿನ ಸಹಾಯದಿಂದ ನಾವು ಘಂಟಾಪಾತ್ರೆಯಲ್ಲಿನ ಹವೆಯನ್ನು ಹೊರಗೆ ತೆಗೆಯ ಬಲ್ಲೆವು, ಆಕೃತಿಯಲ್ಲಿ ತೋರಿಸಿದಂತೆ ಘಂಟಾಪಾತ್ರೆಯಲ್ಲಿ ಒಂದು ವಿದ್ಯುತ್‌ ಗಂಟೆಯು (Electric Bell) ಇದ್ದು ಅದರ ಜೋಡಣೆಯನ್ನು ಪಾತ್ರೆಯ ಮುಚ್ಚಳದ ಮುಖಾಂತರ ಮಾಡಲಾಗಿದೆ.

ಪ್ರಯೋಗದ ಆರಂಭದಲ್ಲಿ ನಿರ್ವಾತ ಪಂಪು ಕಾರ್ಯ ಮಾಡದಿದ್ದಾಗ ಪಾತ್ರೆಯಲ್ಲಿ ಹವೆ ಇರುವುದು. ಈ ಸಮಯದಲ್ಲಿ ವಿದ್ಯುತ್‌ ಗ೦ಟೆಯ ಗುಂಡಿಯನ್ನು ಒತ್ತಿದಾಗ ಅದರ ಸದ್ದು (ಧ್ವನಿ) ಘಂಟಾಪಾತ್ರೆಯ ಹೊರಗೆ ಕೇಳಿಸುವುದು. ಹವೆಯ ಪ್ರಮಾಣ ಹೇಗೆ ಹೇಗೆ ಕಡಿಮೆ ಆಗುತ್ತಾ ಹೋಗುವುದೋ ಅದಕ್ಕೆ ತಕ್ಕಂತೆ ವಿದ್ಯತ್‌ ಗಂಟೆಯ ಧ್ವನಿಯ ಪಾತಳಿಯೂ ಕಡಿಮೆ ಕಡಿಮೆ ಆಗುತ್ತಾ ಹೋಗುವುದು. ನಿರ್ವಾತ ಪಂಪು ಬಹಳಷ್ಟು ಸಮಯದವರೆಗೆ ಕಾರ್ಯಮಾಡುತ್ತಿದ್ದರೆ (ನಡೆದಾಗ) ಘಂಟಾ ಪಾತ್ರೆಯಲ್ಲಿಯ ಹವೆಯು ಬಹಳೇ ಕಡಿಮೆ ಆಗುವುದು. ಇಂತಹ ಸಮಯದಲ್ಲಿ ವಿದ್ಯುತ್‌ ಗಂಟೆಯ ಧ್ವನಿಯು (ಸಪ್ಪಳವು) ಅಂತ್ಯಂತ ಕ್ಷೀಣವಾಗಿ ಕೇಳಿಸುವುದು ಈ ಪ್ರಯೋಗದಿಂದ ಸಿದ್ಧವಾಗುತ್ತದೇನೆಂದರೇ ಧ್ವನಿಯ ನಿರ್ಮಿತಿಗಾಗಿ ಮತ್ತು ಪ್ರಸಾರಕ್ಕಾಗಿ ಮಾಧ್ಯಮದ ಅವಶ್ಯಕತೆ ಇರುತ್ತದೆ. ನಾವು ಒಂದು ವೇಳೆ ಘಂಟಾ ಪಾತ್ರೆಯಲ್ಲಿಯ ಹವೆಯನ್ನು ಪೂರ್ತಿಯಾಗಿ ಹೊರಗೆ ತೆಗೆದು ಹಾಕಿದರೆ ವಿದ್ಯುತ್ ಗಂಟೆಯ ಸಪ್ಪಳವು ನಮಗೆ ಕೇಳಿಸುವುದಿಲ್ಲ.

 

ಪ್ರ.6. ಯೋಗ್ಯ ಜೋಡಿಗಳನ್ನು ಜೋಡಿಸಿರಿ.

ಮಾನವನ ಸ್ವರಯಂತ್ರ

ಸ್ವರತಂತುಗಳ ಕಂಪನಗಳು

ಧ್ವನಿವರ್ಧಕ

ಪರದೆಯ ಕಂಪನಗಳು

ಜಲ ತರಂಗ

ಹವೆಯಸ್ತಂಭದಲ್ಲಿಯ ಕಂಪನಗಳು

ಸ್ವರದ್ವಿಶಿಖ

ಧಾತುವಿನ ಭುಜಗಳ ಕಂಪನಗಳು

ತಂಬೂರಿ

ತಂತಿಯ ಕಂಪನಗಳು

ಉಪಕ್ರಮ:-

1.  ಪ್ಲಾಸ್ಟಿಕದ ಎರಡು ಲೋಟಗಳನ್ನು ತೆಗೆದುಕೊಂಡು ಅವುಗಳ ನಡುವೆ ದಾರವನ್ನು ಕಟ್ಟೆ ಆಟದಲ್ಲಿಯ ಫೋನ ತಯಾರಿಸಿರಿ. ತಮ್ಮ ಗೆಳೆಯ/ ಗೆಳತಿಯ ಧ್ವನಿಯು ದಾರದ ಮೂಲಕ ತಮ್ಮ ತನಕ ತಲುಪುವುದೇ? ದಾರದ ತಂತಿಗಳ ಉದ್ದವನ್ನು ಕಡಿಮೆ ಹೆಚ್ಚು-ಮಾಡಿ ಈ ಪ್ರಯೋಗವನ್ನು ಮಾಡಿರಿ ಮತ್ತು ನಿಷ್ಕರ್ಷೆಯನ್ನು ತೆಗೆಯಿರಿ, ಈ ವಿಷಯದ ಬಗ್ಗೆ ಒಬ್ಬರನ್ನೊಬ್ಬರಲ್ಲಿ ಮತ್ತು ಶಿಕ್ಷಕರೊಂದಿಗೆ ಚರ್ಚಿಸಿರಿ.

   

             


2. ಒಂದು ಪ್ಲಾಸ್ಟಿಕ ಅಥವಾ ಪತ್ರದ (ತಗಡಿನ) ಲಂಬ ಅಥವಾ ಪ್ಲಾಸ್ಟಿಕ ಲೋಟವನ್ನು ತೆಗೆದುಕೊಂಡು ಅದರ ಎರಡೂ ಬದಿಗಳನ್ನು ತೆಗೆದಿಡರಿ. ಒಂದು ತೆಗೆದಿಟ್ಟ ಬದಿಯ ಮೇಲೆ ರಬ್ಬರಿನ ಸಹಾಯದಿ೦ದ ಬಲೂನಿನ ರಬ್ಬರನ್ನು ಎಳೆದು (ಜಗ್ಗಿ) ಗಟ್ಟಿಯಾಗಿ ಕೂಡ್ರಿಸಿರಿ ಮತ್ತು ಅದರ ಮೇಲೆ ಅಕ್ಕಿ ಆಕಾರದ ಚಿಕ್ಕ ಕಾಳುಗಳನ್ನು ಇಡಿರಿ. ಎರಡನೆಯ ತೆಗೆದಿಟ್ಟ ಬದಿಯ ಕಡೆಯಿಂದ ನಿಮ್ಮ ಮಿತ್ರನಿಗೆ ಹುತ್ತೇ... ಹುರೈ... ಎಂದು ಚೀರಲು ಹೇಳಿರಿ, ರಬ್ಬರಿನ ಮೇಲೆ ಕಾಳುಗಳು ಕೆಳಗೆ/ಮೇಲೆ ಜಿಗಿಯುತ್ತಿರುವುದು ಕಾಣಿಸುವುವೇ? ಹೀಗೆ ಏಕೆ ಆಗುತ್ತದೆ ಈ ಕುರಿತು ಚರ್ಚಿಸಿರಿ.

  

19. ನಕ್ಷತ್ರಗಳ ಜೀವನಯಾತ್ರೆ

ಪ್ರ. 1. ಶೋಧಿಸಿ ಅಂದರೆ ಸಿಗುವುದು.

ಅ. ನಮ್ಮ ದೀರ್ಘಿಯ ಹೆಸರು ...........ಇದು ಇದೆ.

ಉತ್ತರ: ಮಂದಾಕಿನಿ

ಆ. ಪ್ರಚಂಡ ಅಂತರಗಳನ್ನು ಅಳೆಯಲು .............. ಮೂಲಮಾನವನ್ನು ಬಳಸುತ್ತಾರೆ.

ಉತ್ತರ: ಪ್ರಕಾಶವರ್ಷ

ಇ. ಪ್ರಕಾಶದ ವೇಗವು ........km/s ದಷ್ಟು ಇದೆ

ಉತ್ತರ:300000 Km/s

ಈ. ನಮ್ಮ ಆಕಾಶಗಂಗೆಯಲ್ಲಿ ಸುಮಾರು..........  ತಾರೆ(ನಕ್ಷತ್ರ)ಗಳು ಇವೆ.

ಉತ್ತರ: 100 ಅಬ್ಜ

ಉ. ಸೂರ್ಯನ ಅಂತಿಮ ಅವಸ್ಥೆ ........ ಇರುವುದು.

ಉತ್ತರ: ಶ್ವೇತ ಬಟು

ಊ. ತಾರೆಗಳ ಜನ್ಮವು .......... ಮೇಘ (ಮೋಡ) ಗಳಿಂದ ಆಗುತ್ತದೆ.

ಉತ್ತರ: ಆಂತರತಾರಕೀಯ

ಎ. ಆಕಾಶಗಂಗೆ ಇದು ಒಂದು .......... ದೀರ್ಘಕೆ ಇದೆ.

ಉತ್ತರ: ಚಕ್ರಾಕಾರ

ವಿ. ತಾರೆಗಳು ........ ವಾಯುವಿನ ಗೋಲಗಳು ಇರುತ್ತವೆ.

ಉತ್ತರ: ತಪ್ತ

ಐ. ತಾರೆಗಳ ದ್ರವ್ಯರಾಶಿಯನ್ನು...........ದ್ರವ್ಯರಾಶಿಯ ಸಾಪೇಕ್ಷ ಅಳೆಯಲಾಗುತ್ತದೆ.

ಉತ್ತರ: ಸೂರ್ಯನ

ಒ. ಸೂರ್ಯನಿಂದ ಪೃಥ್ವಿಯವರೆಗೆ ಪ್ರಕಾಶವು ಬರಲು ದಷ್ಟು ವೇಳೆಯು ಬೇಕಾಗುತ್ತದೆ, ಆದರೆ ಚಂದ್ರನಿಂದ ವೃಥ್ವಿಯವರೆಗೆ ಪ್ರಕಾಶವು ಬರಲು ........ ದಷ್ಟು ವೇಳೆಯು ಬೇಕಾಗುತ್ತದೆ.

ಉತ್ತರ: 8 ಮಿನಿಟು, 1 ಸೆಕೆಂದು

ಓ. ತಾರೆಯ ದ್ರವ್ಯರಾಶಿಯು ಎಷ್ಟು ಹೆಚ್ಚ ಅಷ್ಟೇ ಅದರ........ ತ್ವರಿತ ಗತಿಯಿಂದ ಆಗುತ್ತದೆ.

ಉತ್ತರ: ಉತ್ಕ್ರಾಂತಿ

. ತಾರೆಯ ಜೀವನಕಾಲದಲ್ಲಿ ಎಷ್ಟು ಪ್ರಕಾರದ ಇಂಧನಗಳನ್ನು ಬಳಸಲಾಗುತ್ತವೆ ಎಂಬುದು ಅದರ ............ ವನ್ನು ಅವಲಂಬಿಸಿ ಇರುತ್ತದೆ.

ಉತ್ತರ: ದ್ರವ್ಯರಾಶಿಯ ಮೇಲೆ

ಪ್ರ. 2. ಯಾರು ನಿಜ ನುಡಿಯುತ್ತಾರೆ?

. ಪ್ರಕಾಶವರ್ಷ ಈ ಮೂಲಮಾನದಿಂದ ಸಮಯವನ್ನು ಅಳೆಯಲು ಬಳಸುತ್ತಾರೆ.  = ತಪ್ಪು

ಆ. ತಾರೆಯ ಅಂತಿಮ ಅವಸ್ಥೆಯು ಅದರ ಮೂಲ ದ್ರವ್ಯರಾಶಿಯ ಮೇಲೆ ಅವಲಂಬಿಸಿ ಇರುತ್ತದೆ.    =ಸರಿ

ಇ. ತಾರೆಯಲ್ಲಿಯ ಗುರುತ್ವ ಪ್ರೇರಣೆಯು ಅದರೊಳಗಿನ ಇಲೆಕ್ಟ್ರಾನದ ಒತ್ತಡದೊಂದಿಗೆ ಸಮತೋಲನವಾದರೆ ತಾರೆಯು ನ್ಯೂಟ್ರಾನ್ ತಾರೆ ಆಗುತ್ತದೆ.        = ತಪ್ಪು

ಈ. ಕೃಷ್ಣವಿವರದಲ್ಲಿಂದ ಕೇವಲ ಪ್ರಕಾಶವೇ ಹೊರ ಬರಬಲ್ಲದು.       = ತಪ್ಪು

ಉ. ಸೂರ್ಯನ ಉತ್ಕ್ರಾಂತಿಯ ಮಧ್ಯದಲ್ಲಿ ಸೂರ್ಯನು ಮಹಾರಾಕ್ಷಸನ ಅವಸ್ಥೆಯಲ್ಲಿಂದ ಸಾಗುವನು.      = ತಪ್ಪು

ಊ. ಸೂರ್ಯನ ಅಂತಿಮ ಅವಸ್ಥೆ ಶ್ವೇತಬಟು (ಕುಬ್ಬ) ಇದು ಇರಬಲ್ಲದು.     = ಸರಿ

ಪ್ರ. 3. ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ.

೨. ತಾರೆಗಳ ನಿರ್ಮಿಸಿ ಹೇಗೆ ಆಗುತ್ತದೆ?

ಉತ್ತರ: ತಾರೆಗಳ ನಿರ್ಮಿತಿ (Birth of Stats):

        ಧೀರ್ಘಿಕೆಗಳಲ್ಲಿಯ ತಾರೆಗಳ ಮಧ್ಯದಲ್ಲಿ ಇರುವ ಖಾಲಿ ಜಾಗಗಳಲ್ಲಿ ಸ್ಥಳಗಳಲ್ಲಿ ವಾಯು ಮತ್ತು ಧೂಳಿನ ಪ್ರಚಂಡ ಮೋಡಗಳು ಸಿಗುತ್ತವೆ, ಅವುಗಳನ್ನು ಅಂತರತಾರೆಗಳ ಮೋಡಗಳು ಅನ್ನುತ್ತಾರೆ. (ಪಠ್ಯ ಪುಸ್ತಕದಲ್ಲಿ ಆಕ್ರತಿ 19.3 ರಲ್ಲಿ ಹಬಲ ದುರ್ಬನಿನಿಂದ ತೆಗೆದ ಇಂತಹ ಮೇಘಗಳ ಒಂದು ಪ್ರಕಾಶಚಿತ್ರವನ್ನು ತೋರಿಸಲಾಗಿದೆ.) ಹಿರಿದಾದ ಅಂತರಗಳನ್ನು ಅಳೆಯುವುದಕ್ಕಾಗಿ ಶಾಸ್ತ್ರಜ್ಞರು ಪ್ರಕಾಶ ವರ್ಷ (Light Year) ಎಂಬ ಮೂಲಮಾನವನ್ನು ಬಳಸುತ್ತಾರೆ. ಒಂದು ಪ್ರಕಾಶವರ್ಷ ಅಂದರೆ, ಪ್ರಕಾಶವು ಒಂದು ವರ್ಷದಲ್ಲಿ ಕಮ್ಮಿಸಿದ ಅಂತರ, ಪ್ರಕಾಶದ ವೇಗವು 300,000 km/'s ಇರುವುದರಿಂದ ಒಂದು ಪ್ರಕಾಶ ವರ್ಷ ಈ ಅಂತರವು 9.5 x 104 km ದಷ್ಟು ಇರುತ್ತದೆ. ಅಂಶರತಾರೆಗಳ ಮೇಘಗಳ ಆಕರವು ಕೆಲವು ಪ್ರಕಾಶವರ್ಷಗಳಷ್ಟು ಇರುತ್ತದೆ ಅಂದರೆ ಪ್ರಕಾಶಕ್ಕೆ ಈ ಮೇಘಗಳ ಒಂದು ತುದಿಯಿಂದ ಇನ್ನೊಂದರ ವರೆಗೆ ಹೋಗಲು ಕೆಲವು ವರ್ಷಗಳೇ ಬೇಕಾಗುತ್ತವೆ. ಇದರ ಮೇಲಿಂದ ನೀವು ಈ ಮೋಡಗಳ ಪ್ರಚಂಡ ಆಕಾರದ ಕಲ್ಪನೆಯನ್ನು ಮಾಡಬಲ್ಲಿರಿ.

        ಒಂದು ಕ್ಷೋಭೆಯಿಂದ (Disturbance) ಈ ಅಂತರತಾರಕದ ಮೋಡಗಳು ಆಕುಂಚಿತ ಆಗತೊಡಗುತ್ತವೆ. ಈ ಆಕುಂಚನದಿಂದ ಅವುಗಳ ದಾರ್ಡ್ಯವು ಹೆಚ್ಚಾಗುತ್ತ ಹೋಗುತ್ತದೆ ಮತ್ತು ಅವುಗಳಿಂದ ಒಂದು ತಪ್ತ ವಾಯುವಿನ ಗೋಲವು ತಯಾರಾಗುತ್ತದೆ. ಅದರ ಕೇಂದ್ರದಲ್ಲಿಯ ಉಷ್ಣತಾಮಾನ ಮತ್ತು ದಾರ್ಡ್ಯ ಸಾಕಷ್ಟು ಹೆಚ್ಚಾದೊಡನೆ ಅಲ್ಲಿ ಪರಮಾಣುಶಕ್ತಿ (ಪರಮಾಣು ಕೇಂದ್ರಕಗಳ ಒಕ್ಕಟ್ಟಿನಿಂದ ನಿರ್ಮಾಣವಾದ ಶಕ್ತಿ) ನಿರ್ಮಿತಿ ಆರಂಭಗೊಳ್ಳುತ್ತದೆ. ಈ ಶಕ್ತಿಯ ನಿರ್ಮಿತಿಯಿಂದ ಈ ವಾಯುವಿನ ಗೋಲವು ಸ್ವಯಂ ಪ್ರಕಾಶಿತಗೊಳ್ಳುತ್ತದೆ. ಅಂದರೇನೆ ಈ ಪ್ರಕ್ರಿಯೆಯಿಂದ ಒಂದು ನಕ್ಷತ್ರವು ನಿರ್ಮಾಣವಾಗುತ್ತದೆ. ಅಥವಾ ಒಂದು ತಾರೆಯ ಜನ್ಮವಾಗುತ್ತದೆ ಎಂದು ನಾವು ಅನ್ನ ಬಲ್ಲೆವು. ಸೂರ್ಯನಲ್ಲಿ ಈ ಶಕ್ತಿಯು ಹೈಡೋಜನ ಕೇಂದ್ರಕಗಳ ಒಕ್ಕೂಟವುಂಟಾಗಿ ಹೀಲಿಯಮದ ಕೇಂದ್ರಕವು ತಯಾರಾಗುವುದು ಈ ಪ್ರಕ್ರಿಯೆದೊಳಗಿಂದ ಉತ್ಪನ್ನವಾಗುತ್ತದೆ ಅಂದರೆ ಸೂರ್ಯನ ಕೇಂದ್ರ ಭಾಗದಲ್ಲಿಯ ಹೈಡ್ರೋಜನ ಈ ಇಂಧನದ ಕಾರ್ಯ ಮಾಡುತ್ತದೆ.

ಆ. ತಾರೆಗಳ ಉತ್ಕ್ರಾಂತಿ ಯಾವುದರಿಂದ ಆಗುತ್ತದೆ?

ಉತ್ತರ: ಕಾಲಕ್ಕೆ ತಕ್ಕಂತೆ ನಕ್ಷತ್ರಗಳ ಗುಣಧರ್ಮಗಳಲಿ ಬದಲಾವಣೆಯಾಗಿ ಅದರ ರೂಪಾಂತರ ಬೇರೆ ಅವಸ್ಥೆಯಲ್ಲಿ ಆಗುತ್ತದೆ ಅದಕ್ಕೆ ತಾರೆಗಳ ಉತ್ಕ್ರಾಂತಿ ಅನ್ನುವರು. ತಾರೆಗಳ ಉತ್ಕ್ರಾಂತಿಯು ಕೇಂದ್ರದಲ್ಲಿಯ ಇಂಧನ ಉರಿಯುವುದರಿಂದ ಆಗುತ್ತದೆ. ಇದರಿಂದ ಅದರ ಪರಿಮಾಣ ಕಡಿಮೆ ಆಗುತ್ತದೆ. ಕೇಂದ್ರದಲ್ಲಿಯ ಇಂಧನವು ಮುಗಿಯುತ್ತ ಬಂದಂತೆ ಶಕ್ತಿಯ ನಿರ್ಮಾಣವೂ ಮುಗಿಯುತ್ತ ಬರುತ್ತದೆ. ಮತ್ತು ತಾರೆಯ ಉಷ್ಣತಾಮಾನವೂ ಕಡಿಮೆ ಆಗತೊಡಗುತ್ತದೆ. ಉಷ್ಣತಾಮಾನ ಕಡಿಮೆ ಆದೊಡನೆ ವಾಯುವಿನ ಒತ್ತಡವೂ ಕಡಿಮೆಯಾಗುತ್ತದೆ ಮತ್ತು ಅದು ಗುರುತ್ವದ ಪ್ರೇರಣೆಯೊಂದಿಗೆ ಸಮತೋಲನ ಉಳಿಸಿಕೊಳ್ಳಲು ಆಗುವುದಿಲ್ಲ. ಗುರುತ್ವದ ಪ್ರೇರಣೆಯು ಈಗ ವಾಯುವಿನ ಒತ್ತಡಕ್ಕಿಂತ ಅಧಿಕ ಇರುವುದರಿಂದ ತಾರೆಯು ಆಕುಂಚನೆ ಹೊಂದುತ್ತದೆ.ಅದರಿಂದ ಇಂಧನವು ಬಳಕೆಯಲ್ಲಿ ಬರುತ್ತದೆ.

ಇ. ತಾರೆಗಳ ಮೂರು ಅಂತಿಮ ಅವಸ್ಥೆಗಳು ಯಾವುವು?

ಉತ್ತರ: ತಾರೆಗಳ ಉತ್ಕ್ರಾಂತಿಯ ಮೂರು ಅಂತಿಮ ಅವಸ್ಥೆಗಳು ಕೆಳಗಿನಂತಿವೆ:

1)     ಸೂರ್ಯನ ದ್ರವ್ಯರಾಶಿಯ 8 ಪಟ್ಟುಗಳಿಂದ ಕಡಿಮೆ ಮೂಲದ್ರವ್ಯರಾಶಿಗಳು ಇರುವ ತಾರೆಗಳ (Mstar < Msun) ಅಂತಿಮ ಅವಸ್ಥೆ

2)    ಸೂರ್ಯನ ದ್ರವ್ಯರಾಶಿಯ 8 ರಿಂದ 25 ಪಟ್ಟು ದ್ರವ್ಯರಾಶಿ (8Msun < Mstar < 25sun) ಇರುವ ತಾರೆಗಳ ಅಂತಿಮ ಸ್ಥಿತಿ/ಅವಸ್ಥೆ.

3)    ಸೂರ್ಯನ ದ್ರವ್ಯರಾಶಿಯ 25 ಪಟ್ಟುಗಳಿಗಿಂತ ಅಧಿಕ ದ್ರವ್ಯರಾಶಿಗಳು ಇರುವ ತಾರೆಗಳ (Mstar > 25Msun) ಅಂತಿಮ ಅವಸ್ಥೆ.

ಈ ಕೃಷ್ಣವಿವರ (ಕಪ್ಪು ರಂಧ್ರ) ಈ ಹೆಸರು ಯಾವುದರಿಂದ ಬಿದ್ದಿತು?

ಉತ್ತರ: ತಾರೆಗಳ ಮಹಾಸ್ಪೋಟದ ನಂತರ ಯಾವುದೇ ಒತ್ತಡವು ಅವುಗಳ ಪ್ರಚಂಡ ಗುರುತ್ವದ ಪ್ರೇರಣೆಯೊಂದಿಗೆ ಸಮತೋಲ ಇರಿಸಲು ಸಾಧ್ಯವಿಲ್ಲ. ಅವು ಸದಾ ಆಕುಂಚನೆಯಾಗುತ್ತಿರುತ್ತದೆ. ಅವುಗಳ ಆಕಾರ ಚಿಕ್ಕದ್ದಾಗುತ್ತ ಹೋದದ್ದರಿಂದ ಅವುಗಳ ದಾರ್ಡ್ಯ ಮತ್ತು ಗುರುತ್ವದ ಪ್ರೇರಣೆಯು ಬಹಳ ಹೆಚ್ಚು ಹೆಚ್ಚಾಗುತ್ತದೆ.ಇದರಿಂದ ತಾರೆಗಳ ಹತ್ತಿರದ ಎಲ್ಲ ವಸ್ತುಗಳು ತಾರೆಯ ಕಡೆಗೆ ಆಕರ್ಷಿತ ಆಗುತ್ತವೆ. ಮತ್ತು ಇಂತಹ ತಾರೆಗಳೊಂದಿಗೆ ಏನೂ ಕೂಡ ಹೊರಗೆ ಬೀಳಲು ಸಾಧ್ಯವಿಲ್ಲ. ಪ್ರಕಾಶ ಕೂಡ ಹೊರ ಬೀಳಲು ಸಾಧ್ಯವಾಗದೆ ತಾರೆಯ ಮೇಲೆ ಬಿದ್ದ ಪ್ರಕಾಶ ಪರವರ್ತಿತ ಆಗದೆ ತಾರೆಯ ಒಳಗೆ ಶೋಷಿಸಲಾಗುತ್ತದೆ. ಇದರಿಂದ ತಾರೆ ನಮಗೆ ಕಾಣದೆ ಕೇವಲ ಒಂದು ಅತಿಶಯ ಸೂಕ್ಷ್ಮ ಛಿದ್ರವು ಕಾಣಬಲ್ಲದು. ಆದ್ದರಿಂದ ಈ ಅಂತಿಮ ಅವಸ್ಥೆಗೆ ಕೃಷ್ಣವಿವರ(Black Hole) ಎಂದು ಕರೆಯುತ್ತಾರೆ.

ಈ. ನ್ಯೂಟ್ರಾನ್ ತಾರೆ ಇದು ಯಾವ ಪ್ರಕಾರದ ತಾರೆಗಳ ಅಂತಿಮ ಸ್ಥಿತಿ ಆಗಿರುತ್ತದೆ?

ಉತ್ತರ: ನ್ಯೂಟ್ರಾನ್ ತಾರೆ ಇದು ಶ್ವೇತ ಬಟುಗಳು ಈ  ಪ್ರಕಾರದ ತಾರೆಗಳ ಅಂತಿಮ ಸ್ಥಿತಿ ಆಗಿರುತ್ತದೆ

2.     ಅ. ನೀವು ಒಂದು ಪಕ್ಷ ಸೂರ್ಯನಾಗಿದ್ದರೆ ನಿಮ್ಮ ಗುಣಧರ್ಮಗಳನ್ನು ಸ್ವಂತದ ಶಬ್ದಗಳಲ್ಲಿ ಬರೆಯಿರಿ.

ಉತ್ತರ: ರಾತ್ರಿ ಆಕಾಶದಲ್ಲಿ ನಾವು ಸುಮಾರು 4000 ತಾರೆಗಳನ್ನು ನಮ್ಮ ಕಣ್ಣುಗಳಿಂದ ನೋಡಲು ಸಾಧ್ಯ. ಅವುಗಳಲ್ಲಿ ಸೂರ್ಯನೂ ಒಬ್ಬ ಸಾಮಾನ್ಯ ನಕ್ಷತ್ರವಾಗಿದೆ. ಈ ತಾರೆ ತಪ್ತ ವಾಯುವಿನ ಪ್ರಚಂಡಗೋಳವಾಗಿದೆ. ಸೂರ್ಯನ ದ್ರವ್ಯರಾಶಿಯ 72% ಭಾಗವು ಹೈಡ್ರೋಜನ್ ಇದೆ. ಆದರೆ 26% ಭಾಗ ಹೀಲಿಯಮ್ ಇದೆ. ಇನ್ನುಳಿದ 2% ದ್ರವ್ಯರಾಶಿಯು ಹೀಲಿಯಮ್ಗಿಂತ ಅಧಿಕ ಪರಮಾಣು ಕ್ರಮಾಂಕ ಇರುವ ಪರಮಾಣುಗಳ ರೂಪದಲ್ಲಿ ಇದೆ.

   ಆ. ಶ್ವೇತ ಬಟು (ರು) ಕುರಿತಾಗಿ ಮಾಹಿತಿ ಬರೆಯಿರಿ.

ಉತ್ತರ: ಶ್ವೇತ ಬಟುಗಳ ಆಕಾರವು ಪೃಥ್ವಿಯಷ್ಟು ಚಿಕ್ಕ ಇರುವುದರಿಂದ ಅವುಗಳ ದಾರ್ಡ್ಯ ತುಂಬಾ ಹೆಚ್ಚು ಇರುತ್ತದೆ. ಅದರಲ್ಲಿಯ ಒಂದು ಚಮಚ ಪದಾರ್ಥದ ತೂಕವು ಸುಮಾರು ಕೆಲವು ಟನ್ ಇರುವುದು. ನ್ಯೂಟ್ರಾನ್ ತಾರೆಗಳ ಆಕಾರವು ಶ್ವೇತ ಕುಬ್ಜಗಳಿಗಿಂತಲೂ ಬಹಳೇ ಚಿಕ್ಕ ಇರುವುದರಿಂದ ಅವುಗಳ ದಾರ್ಡ್ಯವು ಇದಕ್ಕಿಂತ ಹೆಚ್ಚು ಇರುತ್ತದೆ. ಅದರಲ್ಲಿಯ ಒಂದು ಚಮಚ ಪದಾರ್ಥದ ತೂಕವು ಪೃಥ್ವಿಯ ಮೇಲಿನ ಎಲ್ಲ ಪ್ರಾಣಿ ಮಾತ್ರೆಗಳ ತೂಕದಷ್ಟೂ ಇರುವುದು.

ಉಪಕ್ರಮ:

1. ಕಲ್ಪನಾ ಶಕ್ತಿಯನ್ನು ಬಳಸಿ ಮಂದಾಕಿನಿ ದೀರ್ಘಿಕೆ ಮತ್ತು ಅದರಲ್ಲಿಯ ನಮ್ಮ ಸೂರ್ಯ ಮಾಲೆಯ ಪ್ರತಿಕೃತಿಯನ್ನು ತಯಾರಿಸಿರಿ.

2, ಮರಿಣಾಮ ಬರೆಯಿರಿ, ಒಂದು ಪಕ್ಷ, ಸೂರ್ಯನು ಇಲ್ಲದಂತಾದರೆ....... 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು