ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಮುಖ್ಯಾದ್ಯಾಪಕರಿಗೆ ಅಬ್ರಾಹಿಂ ಲಿಂಕನ್ ಇವರ ಪತ್ರ - Abraham Lincoln's letter to his son's Head Master

 

ಮುಖ್ಯಾಧ್ಯಾಪಕರಿಗೆ ಅಬ್ರಾಹೀಮ ಲಿಂಕನರ ಪತ್ರ


ಪ್ರೀಯ ಗುರುಗಳೆ,

ಮನುಷ್ಯರೆಲ್ಲ ನ್ಯಾಯಪ್ರೀಯರು ಇರುವುದಿಲ್ಲ,

ಎಲ್ಲರೂ ಸತ್ಯನಿಷ್ಟರೂ ಇರುವುದಿಲ್ಲ ಎಂಬುದನ್ನು         

ಒಂದಿಲ್ಲ ಒಂದು ದಿನ ನನ್ನ ಕಂದ ಕಲಿಯಬಹುದು.

ಅವನಿಗೆ ಇದೂ ಕೂಡ ಕಲಿಸಿರಿ.....

ಜಗತ್ತಿನಲ್ಲಿರುವ ಪ್ರತಿಯೊಬ್ಬ ಕಟುಕನ ಹಿಂದೆ

ಒಬ್ಬ ಸಾಧುಚರಿತ ಪುರುಷೋತ್ತಮನಿರುತ್ತಾನೆ.

ಜಗತ್ತಿನಲ್ಲಿ ಸ್ವಾರ್ಥ ರಾಜಕಾರಣಿಗಳಿರುವಂತೆ

ದೇಶಕ್ಕಾಗಿ ಇಡೀ ಆಯುಷ್ಯ ಮುಡುಪಾಗಿಡುವ

ಧರ್ಮ ಧುರಂಧರರೂ ಇರುತ್ತಾರೆ.

ಸಮಯ ಸಾಧಕ ವೈರಿಗಳಿರುವಂತೆ

ಹಿತಚಿಂತಕರೂ ಇರುತ್ತಾರೆ.

ನನಗೆ ಗೊತ್ತಿದೆ

ಎಲ್ಲವನ್ನು ಒಮ್ಮೆಲೆ ಕಲಿಸಲು ಬರುವುದಿಲ್ಲ ಎಂದು,

ಆದರೂ ಶಕ್ಯವಾದರೆ ಅವನ ಮನದ ಮೇಲೆ ಮೂಡಿಸಿ

ಬೆವರು ಸುರಿಸಿ ಗಳಿಸಿದ ಒಂದು ನಯಾಪೈಸೆ

ಅನ್ಯಾಯದಿಂದ ಕಬಳಿಸಿದ ಗಂಟಿಗಿಂತಲೂ ಶ್ರೇಷ್ಟವಿರುತ್ತದೆ.

ಸೋಲನ್ನು ಸ್ವೀಕರಿಸುವ ಬಗೆ ಹೇಳಿ ಅವನಿಗೆ, ಮತ್ತೆ ಕಲಿಸಿ-

ಗೆಲುವಿನ ಆನಂದವನ್ನು ಸ್ವಯಂಮದಿಂದ ಪಡೆಯಲು.

ನಿಮ್ಮಲ್ಲಿ ಬಲವಿದ್ದರೆ

ಅವನಿಗೆ ದ್ವೇಷ-ಮತ್ಸರಗಳಿಂದ ದೂರವಿರಲು ಕಲಿಸಿರಿ

ಮತ್ತು ತನ್ನ ಹರ್ಷವನ್ನು ಸ್ವಯಂಮದಿಂದ ವ್ಯಕ್ತಪಡಿಸಲು ಕಲಿಸಿರಿ

ಪುಂಡರಿಗೆ ಹೆದರಬೇಡವೆಂದು ಹೇಳಿ

ಪುಂಡರಿಗೆ ಹೆದರಿಸುವುದು ಬಲು ಸುಲಭ ವಿರುತ್ತದೆ!

ಶಕ್ಯವಾದಷ್ಟು ಅವನಿಗೆ ಗ್ರಂಥ ಭಂಡಾರದ

ಅದ್ಭುತ ವೈಭವವನ್ನು ತೋರಿಸಿ,

ಅದರೊಂದಿಗೆ ಮನಸ್ಸಿಗೆ ವಿರಮಿಸಲು ಸಮಯ ಕೂಡ ಒದಗಿಸಿ ಕೊಡಿ.

ಸೃಷ್ಠಿಯ ಶಾಸ್ವತ ಸೌಂದರ್ಯವನ್ನು ಅನುಭವಿಸಲು.

ಅವನಿಗೆ ತೊರಿಸಿ,

ಬಾನಂಗಳದಲ್ಲಿ ಹಾರಾಡುವ ಹಕ್ಕಿಗಳು...

ಬಂಗಾರ ಬಿಸಿಲಲ್ಲಿ ಭ್ರಮರಾಡುವ ದುಂಬಿಗಳು...

ಹಾಗೂ ಹಚ್ಚು ಹಸಿರಿನ ಗಿಡಮರ ಬಳ್ಳಿಗಳ ಮೇಲೆ

ಅರಳಿ ಪರಿಮಳಿಸುವ ಸುಂದರ, ಸುಮಧುರ ಹೂವುಗಳು...

ಶಾಲೆಯಲ್ಲಿ ಅವನಿಗೆ ಈ ಪಾಠ ಕಲಿಸಿರಿ...

ಮೋಸದಿಂದ ಗೆಲುವು ಪಡೆಯುವುದಕ್ಕಿಂತ

ಅನಾಯಾಸವಾಗಿ ಬರುವ ಸೋಲು ಲೇಸೆಂದು.

ತನ್ನ ಕಲ್ಪನೆಗಳ ಮೇಲೆ, ತನ್ನ ವಿಚಾರಗಳ ಮೇಲೆ

ಧೃಡವಿಶ್ವಾಸವಿಡಬೇಕು ಅವನು,

ಎಲ್ಲರೂ ಹುಚ್ಚರೆನ್ನುತ್ತಿದ್ದರೂ ಅವನು ಒಳ್ಳೆಯವರೊಂದಿಗೆ ಚೆನ್ನಾಗಿ ವರ್ತಿಸಲಿ,

ಹಾಗೂ ಠಕ್ಕರಿಗೆ ತಕ್ಕ ಪಾಠ ಕಲಿಸಲಿ.

ನನ್ನ ಕಂದಮ್ಮನಿಗೆ ಇದನ್ನು ತಿಳಿಸಿಕೊಡಲು ಬರುತ್ತಿದ್ದರೆ ನೋಡಿ...

ಹೆಚ್ಚು ಜನಮತಗಳಿರುವೆಡೆಗೆ ಅವಿಚಾರದಿಂದ  ಹೋಗದಿರುವ ತವÀ,

ಗದ್ದಲಗಳಲ್ಲಿ ಸಹಭಾಗಿಯಾಗದಿರುವ ಬಲ

ಆತ ಗಳಿಸಬೇಕಾಗಿದೆ ಎಂದು.

ಇದೂ ಕೂಡ ಹೇಳಿ,

ಇನ್ನೊಬ್ಬರ ಮಾತು ಕೇಳಬೇಕು ಆದರೆ

ಸತ್ಯದ ಲಾಳಿಕೆಯಿಂದ ಸೋಸಿ ಅದರೊಳಗಿನಿಂದ

ಹುರುಳುತನವ ಬಿಟ್ಟು ಅಪ್ಪಟ ಸತ್ಯವನಷ್ಟೇ ಸ್ವೀಕರಿಸಬೇಕೆಂದು.

ಶಕ್ಯವಾದರೆ ಅವನ ಮನಸ್ಸಿನ ಮೇಲೆ ಬಿಂಬಿಸಿ...

ಎದೆಯಾಳದಲ್ಲಿರುವ ನೋವನ್ನು ಮರೆತು ಸದಾ ನಗುತ್ತಿರಲಿ

ಕಣ್ಣಿರಿಡಲು ನಾಚಿಕೆ ಬಾರದಿರಲಿ.

ಹೀನರಿಗೆ ಹೀನರೆಂದು ತಿಳಿಯಲು ಹಾಗೂ

ಮೋಸಗಾರರಿಂದ ಎಚ್ಚರವಿರಲು ಅವನಿಗೆ ಕಲಿಸಿ.

ಸ್ವಬಲದಿಂದ ಹಾಗೂ ಸ್ವಬುದ್ದಿಯಿಂದ ಅವನು

ಗರಿಷ್ಠ ಗಳಿಕೆ ಮಾಡಬೇಕು ಆದರೆ,

ಹೃದಯ ಮತ್ತು ಆತ್ಮಗಳ ಮಾರಾಟ ಮಾತ್ರ ಎಂದೂ ಮಾಡಬಾರದು

ಎಂದು ತಿಳಿಸಿಕೊಡಿ ಅವನಿಗೆ.

ಧಿಕ್ಕರಿಸುವವರ ಗುಂಪು ಬಂದರೆ

ದುರ್ಲಕ್ಷ ಮಾಡಲು ಕಲಿಸಿ ಅವನಿಗೆ,

ಮತ್ತೆ ಬಿಂಬಿಸಿ ಅವನ ಮನಸ್ಸಿನ ಮೇಲೆ

ಯಾವುದು ಸತ್ಯ ಹಾಗೂ ನ್ಯಾಯವೆನಿಸುವುದೋ ಅದಕ್ಕಾಗಿ

ಎದೆ ತಟ್ಟಿ ಹೋರಾಡಬೇಕೆಂದು.

ಅವನಿಗೆ ಮಮತೆಯಿಂದಲೇ ನೋಡಿರಿ,

ಆದರೆ ಅತೀ ಅಕ್ಕರೆ ಮಾತ್ರ ತೋರಬೇಡಿ.

ಬೆಂಕಿಯಲ್ಲಿ ಬೆಂದು ನೊಂದು ಬಾರದೆ

ಕಬ್ಬಿಣದಿಂದ ಉಕ್ಕು ತಯಾರಾಗುವುದಿಲ್ಲ.

ಅವನಲ್ಲಿ ಮೂಡಿಸಿ, ಅಧಿರರಾಗುವ ಧೈರ್ಯ,

ತಾಳಬೇಕು ಆತ, ತೋರಬೇಕಾದರೆ ತನ್ನ ಶೌರ್ಯ.

ಇದೊಂದು ಮಾತು ಸದಾ ಹೇಳುತ್ತಿರಿ ಅವನಿಗೆ....

ತನ್ನ ಮೇಲೆಯೇ ತನಗೆ ಧೃಢ ವಿಶ್ವಾಸವಿರಬೇಕು

ಅಂದರೆಯೇ ಮಾನವಜಾತಿಯ ಮೇಲೆ ಉದಾತ್ತ ಶೃಧೆ ಬರುತ್ತದೆ.

ಕ್ಷಮಿಸಿ ಗುರುಗಳೆ,

ನಾನು ತುಂಬಾ ಮಾತಾಡುತ್ತಿರುವೆ,

ಏನೆಲ್ಲ ಬೇಡುತ್ತಿರುವೆ....     ಆದರೆ ನೋಡಿ....

ಶಕ್ಯವಾದಷ್ಟು ಅವಶ್ಯ ಮಾಡಿ,

    ನನ್ನ ಕಂದ-

ನಮ್ಮೆಲ್ಲರ ಮುದ್ದಿನ ಕಣ್ಮನಿಯಾಗಿದ್ದಾನೆ.                                     

                 -ಅಬ್ರಾಹಿಮ್ ಲಿಂಕನ್.

                 -ಅನುವಾದ- ದಿನೇಶ ಠಾಕೂರದಾಸ ಚವ್ಹಾಣ   

             



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು