ಐದನೆಯ ತರಗತಿ
ವಿಷಯ: ಬಾಲಭಾರತ
ಪಾಠಗಳ ಹೆಸರು
1. ಕನ್ನಡಾಂಬೆಯ ಹಿರಿಮೆ
(ಕವಿತೆ)
2. ಪ್ರಾಮಾಣಿಕತೆ
3. ತಂದೆಯ ಸಲಹೆ
4. ಆರೋಗ್ಯವೇ ಭಾಗ್ಯ (ಕವಿತೆ)
5. ಕನಸಿನ ಗುಟ್ಟು
6. ಕರುಣಾಮಯಿ
7. ಅಮ್ಮನ ಹರಕೆ (ಕವಿತೆ)
8. ಪುಣ್ಯಶ್ಲೋಕ ಅಹಿಲ್ಯಾಬಾಯಿ
ಹೋಳಕರ
9. ಪಕ್ಷಿಗಳು
10. ಬದುಕಿನ ಪಾಠ (ಕವಿತೆ)
11. ಪತ್ರಲೇಖನ
12. ಸರಕಾರಿ ಬಸ್ಸಿನ ಆತ್ಮಕಥೆ
13. ಬಯಕೆ (ಕವಿತೆ)
14. ಡಾ. ಹೋಮಿ ಜಹಾಂಗೀರ ಬಾಬಾ
15. ಪರಿಶ್ರಮ
16. ನೇತಾಜಿ (ಕವಿತೆ)
17. ಸ್ವಾಮಿ ವಿವೇಕಾಂದರು
18. ಸ್ಕೌಟ್ಸ್ ಮತ್ತು ಗೈಡ್ಸ್
19. ಗುರುವಂದನೆ (ಕವಿತೆ)
20. ಆದರ್ಶ ಸಹೋದರರು
21. ವನವಿಹಾರ (ಕವಿತೆ)
22. ಅನ್ನದ ಮಹಿಮೆ
23. ನವಯುಗಾದಿ 9ಕವಿತೆ)
-ಖಾಜಾವಲಿ ಈಚನಾಳ
ಶಬ್ದಗಳ ಅರ್ಥ :
ಶ್ರೇಷ್ಠತೆ : ದೊಡ್ಡತನ ಕಂಪು : ಸುವಾಸನೆ
ಕೇತನ : ಬಾವುಟ ಆಲಿಪ : ಆಲಿಸು, ಕೇಳು
ಬಂದ : ನೊಂದ ಪೆಂಪು : ಘನತೆ, ಗೌರವ
ಅಭ್ಯಾಸ
ಪ್ರಶ್ನೆ
: ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಕವಿಯು ಯಾರ
ಹಿರಿಮೆ ಬಣ್ಣಿಸುತ್ತಿದ್ದಾರೆ ?
ಉತ್ತರ: ಕವಿಯು
ಕನ್ನಡಾಂಬೆಯ ಹಿರಿಮೆ ಬಣ್ಣಿಸುತ್ತಿದ್ದಾರೆ.
ಆ) ಸಾಹಿತ್ಯ-ಶಿಲ್ಪಕಲೆಗಳ
ತವರೂರು ಯಾವವು?
ಉತ್ತರ: ಹಂಪೆ, ಐಹೊಳೆ ಮತ್ತು ಬೀಜಾಪುರ ಇವು
ಸಾಹಿತ್ಯ- ಶಿಲ್ಪಕಲೆಗಳ ತವರೂರು ಆಗಿವೆ.
ಉತ್ತರ:ಶ್ರೀಗಂಧ
ಸುಗಂಧದ ಕಂಪು ಬೆಂದ ಹೃದಯಕ್ಕೆ ತಂಪು ಅನಿಸುವುದು.
ಈ) ಅನುದಿನವೂ ಯಾರ
ಕವನ ನವೀನವಾಗಿವೆ ?
ಉ) ಎಲ್ಲೆಡೆ ಏನು
ತುಂಬಿದೆ ?
ಉತ್ತರ: ಎಲ್ಲೆಡೆ
ಪ್ರೀತಿ-ಪ್ರೇಮದ ಬಂಧ ಹಾಗೂ ಆನಂದ ಸ್ನೇಹಾನುಬಂಧ ತುಂಬಿದೆ.
ಪ್ರಶ್ನೆ : ೨) ಕೆಳಗಿನ ಪದ್ಯದ ಸಾಲುಗಳನ್ನು
ಪೂರ್ಣ ಮಾಡಿರಿ.
ನಾಡು-ನುಡಿಯು ಚಂದ
ಪ್ರೀತಿ ಪ್ರೇಮದ ಬಂಧ
ತುಂಬಿದೆ ಎಲ್ಲೆಡೆ ಆನಂದ
ಸ್ಥಿರವಿರಲಿ ಸ್ನೇಹಾನುಬಂಧ.
ಪ್ರಶ್ನೆ:
೩) ಉದಾಹರಣೆಯಲ್ಲಿ ತೋರಿಸಿದಂತೆ ಅಂತ್ಯಪ್ರಾಸದ ಶಬ್ದಗಳನ್ನು ಬರೆಯಿರಿ.
ಉದಾ : ಪೈರು - ತವರು
ಅ) ಕಂಪು – ತಂಪು
ಆ) ರಚನ – ನವೀನ
ಇ) ಪೆಂಪು –
ಇಂಪು
ಈ) ಚಂದ – ಬಂಧ
ಉಪಕ್ರಮ
: ಕನ್ನಡನಾಡಿನ ಹಿರಿಮೆಯನ್ನು ಬಣ್ಣಿಸುವ ಇತರ ಗದ್ಯ ಪದ್ಯಗಳ ಸಂಗ್ರಹಿಸಿ ಓದಿರಿ
ಕನ್ನಡದ
ಕಂಪು,
ಮನಸಿಗೆ
ಇಂಪು
2. ಪ್ರಾಮಾಣಿಕತೆ
ಶಬ್ದಗಳ ಅರ್ಥ
ಲೋಭಿ : ಆಸೆಬುರುಕ
ರಹಸ್ಯ - ಗುಟ್ಟು ;
ಹೇರಳ- ಬಹಳ
ಅಭ್ಯಾಸ
ಪ್ರಶ್ನೆ
೧)
ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
ಅ) ಸುಖಾರಾಮನ
ಹೆಂಡತಿಯ ಹೆಸರು ಏನಿತ್ತು?
ಉತ್ತರ: ಸುಖಾರಾಮನ ಹೆಂಡತಿಯ ಹೆಸರು ಸಾರಜಾ ಇತ್ತು.
ಆ) ಸುಖಾರಾಮನ
ಸ್ವಭಾವ ಹೇಗಿತ್ತು?
ಉತ್ತರ: ಸುಖಾರಾಮನ
ಸ್ವಭಾವ ಬಹಳ ಜಿಪುಣವಾಗಿತ್ತು.
ಇ) ಸುಶಾಂತ ಯಾರ
ಮಗನಾಗಿದ್ದನು?
ಉತ್ತರ: ಸುಶಾಂತ
ಕೃಷ್ಣ ಮತ್ತು ರಾಧಾಳ ಮಗನಾಗಿದ್ದನು.
ಈ) ಸಂಗವುಳ್ಳ
ಮನುಷ್ಯನು ಹೇಗೆ ಉದಾರಿಯಾಗುತ್ತಾನೆ?
ಉತ್ತರ: ಸತ್ಸಂಗವುಳ್ಳ
ಮನುಷ್ಯನು ಧನದ ಪ್ರಭಾವದಿಂದ ಇನ್ನಷ್ಟು ಉದಾರಿಯಾಗುತ್ತಾನೆ.
ಉ) ರಾಧಾ ಅಂಗಳದಲ್ಲಿ
ಕಸಗೂಡಿಸುವಾಗ ಏನು ಕಂಡಳು?
ಉತ್ತರ: ರಾಧಾ ಅಂಗಳದಲ್ಲಿ ಕಸಗೂಡಿಸುವಾಗ ಚೀಲವೊಂದನ್ನು ಕಂಡಳು.
ಪ್ರಶ್ನೆ
೨) ಕೆಳಗಿನ
ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಸುಖಾರಾಮನಿಗೆ ಏಕೆ ಸೋಜಿಗವಾಯಿತು?
ಉತ್ತರ: ಸುಖಾರಾಮನ ನೆರೆಮನೆಯಲ್ಲಿ ಕೃಷ್ಣ ಎಂಬ
ಗೃಹಸ್ಥನಿದ್ದನು. ಕಷ್ಟಪಟ್ಟು ದುಡಿಯುತ್ತಿದ್ದ ಕೃಷ್ಣ ದೊರೆತ ಉತ್ಪನ್ನದಲ್ಲಿಯೇ ಉಂಡು, ಉಟ್ಟು ನೆಮ್ಮದಿಯಿಂದ
ಇದ್ದನು. ದಾನ-ಧರ್ಮಗಳಲ್ಲಿ ಎತ್ತಿದ ಕೈ ಇದ್ದ ಕೃಷ್ಣನ ಜೀವನಕ್ರಮವನ್ನು ನೋಡಿ ಸುಖಾರಾಮನಿಗೆ
ಸೋಜಿಗವಾಯಿತು.
ಆ) ಕೃಷ್ಣನ ಕುಟುಂಬದ ಬದುಕಿನ ಆನಂದದ ರಹಸ್ಯ
ಯಾವುದು?
ಉತ್ತರ: ಕೃಷ್ಣನ ಕುಟುಂಬ ಇದ್ದುದರಲ್ಲಿಯೇ ತೃಪ್ತಿಪಟ್ಟುಕೊಳ್ಳುವುದು.
ದೊರೆತ ಸಂಪಾದನೆಯಲ್ಲಿ ಒಳ್ಳೆಯದನ್ನು ಉಂಡು-ಉಟ್ಟು, ದಾನ-ಧರ್ಮಾದಿಗಳನ್ನು ಮಾಡಿ ಆನಂದದಿಂದ
ಇರುತ್ತಾನೆ. ನಾಳೆಯ ಚಿಂತೆ ಅವನಿಗಿಲ್ಲ. ಇದೇ ಕೃಷ್ಣನ ಕುಟುಂಬದ ಬದುಕಿನ ಆನಂದದ ರಹಸ್ಯವಾಗಿದೆ.
ಇ) ಕೃಷ್ಣರಾಧೆಯರು
ಹಣದ ಚೀಲ ದೊರೆತಾಗ ಏನೆಂದು ನಿರ್ಧರಿಸಿದರು?
ಉತ್ತರ: ಕೃಷ್ಣರಾಧೆಯರು ಹಣದ ಚೀಲ ದೊರೆತಾಗ ಅದರಲ್ಲಿ ಒಂಬತ್ತು ಸಾವಿರ ರೂಪಾಯಿ ಇದ್ದುದನ್ನು
ನೋಡಿ ಇದು ಯಾರೋ ಪ್ರವಾಸಿಯ ಸೊಂಟದಿಂದ ಜಾರಿ ಬಿದ್ದಿರಬಹುದು. ಪಾಪ, ಹಣವಿಲ್ಲದೆ ಪ್ರಯಾಣದಲ್ಲಿ
ಅವನಿಗೆ ತೊಂದರೆಯಾಗುತ್ತದೆ. ಪರರ ಹಣವನ್ನು ಹೇಳದೇ ಕೇಳದೆ ಮುಟ್ಟಬಾರದು. ಹೇಗಾದರೂ ಮಾಡಿ ಈ ಹಣದ
ಚೀಲವನ್ನು ಕಳೆದುಕೊಂಡಾತನಿಗೆ ತಲುಪಿಸೋಣ ಎಂದು ನಿರ್ಧರಿಸಿದರು.
ಉತ್ತರ: ಸಿಕ್ಕ
ಹಣದ ಚೀಲದಲ್ಲಿ ಒಂಬತ್ತು ಸಾವಿರ ರೂಪಾಯಿ ಇತ್ತು. ಅದರಲ್ಲಿ ಒಂದು ಸಾವಿರ ರೂಪಾಯಿ ಸೇರಿಸಿ
ಅದನ್ನು ಯಾವುದೇ ಒಂದು ಶಿಕ್ಷಣ ಸಂಸ್ಥೆಗೆ ದಾನ ಮಾಡಬೇಕು ಎಂದು ಕೃಷ್ಣನಿಗೆ ಅನಿಸಿತು. ಆ ಶಿಕ್ಷಣ
ಸಂಸ್ಥೆಯಲ್ಲಿ ಕಲಿತ ಮಗು ಡಾ. ವಿಶ್ವೇಶ್ವರಯ್ಯರಂತಹ ಶ್ರೇಷ್ಠ ಇಂಜಿನಿಯರನಾದರೆ ನಮ್ಮ ನಾಡು ಸುಜಲಾಂ ಸುಫಲಾಂ
ಆಗಬಹುದು. ಸರ್ ಸಿ.ವ್ಹಿ. ರಾಮನ್ ರಂಥ ಶ್ರೇಷ್ಠ ವಿಜ್ಞಾನಿಯಾದರೆ ನಮ್ಮ ದೇಶ ಜಗತ್ತಿನಲ್ಲಿ
ಕೀರ್ತಿ ಪಡೆಯಬಹುದು ಎಂದನು. ರಾಧಾ ಪತಿಯ ಅತ್ತ್ಯುತ್ತಮ ವಿಚಾರಗಳನ್ನು ಕೇಳಿ ಅಚ್ಚರಿಗೊಂಡಳು.
ಉ) ಸುಖಾರಾಮನಿಗೆ
ಯಾವ ಅರಿವು ಮೂಡಿತು?
ಉತ್ತರ: ಮನುಷ್ಯನಿಗೆ
ಹಣದಿಂದ ಸಮಾಧಾನ ಮತ್ತು ನೆಮ್ಮದಿಗಳು ದೊರಕುವುದಿಲ್ಲ. ದುಡಿಮೆ ಮತ್ತು ನಡತೆಗಳಿಂದ ಸಮಾಧಾನ
ಸಿಗುತ್ತದೆ ಎಂಬ ಅರಿವು ಸುಖಾರಾಮನಿಗೆ ಆಯಿತು.
ಪ್ರಶ್ನೆ
:೩) ಬಿಟ್ಟ ಸ್ಥಳಗಳನ್ನು ಪೂರ್ಣಗೊಳಿಸಿರಿ.
ಅ) ಒಂದು ಊರಿನಲ್ಲಿ ಸುಖಾರಾಮ ಎಂಬ ಧನಿಕನಿದ್ದನು.
ಆ) ಕೃಷ್ಣನ ಹೆಂಡತಿಯ
ಹೆಸರು ರಾಧಾ.
ಇ) ಅದನ್ನು
ಬಿಚ್ಚಿನೋಡಿದಾಗ ಅದರಲ್ಲಿ ಒಂಬತ್ತು ಸಾವಿರ ರೂಪಾಯಿಗಳಿದ್ದವು.
ಉ) ಆ ಚೀಲವನ್ನು ಒಂದು ಶಿಕ್ಷಣ ಸಂಸ್ಥೆಗೆ ದಾನ ಕೊಡುವುದು ಒಳ್ಳೆಯದು.
ಉ) ಹಣದಿಂದ ಸಮಾಧಾನ ಮತ್ತು ನೆಮ್ಮದಿ ದೊರಕುವದಿಲ್ಲ.
ಪ್ರಶ್ನೆ
:೪) ಕೆಳಗಿನ ಪಡೆನುಡಿಗಳ ಅರ್ಥಹೇಳಿ ಸ್ವಂತ ವಾಕ್ಯದಲ್ಲಿ ಉಪಯೋಗ ಮಾಡಿರಿ. 1. ಸೋಜಿಗವಾಗು: ಆಶ್ಚರ್ಯವಾಗು
ವಾಕ್ಯ: ಎಂದೂ
ಕೆಲಸ ಮಾಡದ ತಮ್ಮ ಅವ್ವಗೆ ಸಹಾಯ ಮಾಡುತ್ತಿರುವುದನ್ನು ಕಂಡು ಗಂಗೆಗೆ ಸೋಜಿಗವಾಯಿತು.
2. ತೃಪ್ತಿಪಡು:
ಸಮಾಧಾನ
ಪಡು
ವಾಕ್ಯ: ನಾನು
ಪರೀಕ್ಷೆಯಲ್ಲಿ ಒಳ್ಳೆಯ ಗುಣಗಳಿಂದ ಉತ್ತೀರ್ಣನಾಗಿದ್ದನ್ನು ಕಂಡು ತಾಯಿ-ತಂದೆ ತೃಪ್ತಪಟ್ಟರು.
3. ಗಮನಹರಿಸು:ಲಕ್ಷ್ಯ ಕೊಡು
ವಾಕ್ಯ: ಮಕ್ಕಳು
ಗುರುಗಳ ಪಾಠದ ಕಡೆಗೆ ಗಮನಹರಿಸಬೇಕು.
4. ಅಚ್ಚರಿಗೊಳ್ಳು:
ಆಶ್ಚರ್ಯಚಕಿತನಾಗು
ವಾಕ್ಯ: ಪುಟ್ಟಿ
ಹೂದೋಟ ನೋಡಿ ಅಚ್ಚರಿಗೊಂಡಳು.
5. ದಿಗಿಲು:
ಆಶ್ಚರ್ಯ
ವಾಕ್ಯ: ರಾಮು
ಅಭ್ಯಾಸ ಮಾಡುವುದನ್ನು ನೋಡಿ ನನಗೆ ದಿಗಿಲಾಯಿತು.
ಉಪಕ್ರಮ : ಅಂಚೆ ಮತ್ತು ಬ್ಯಾಂಕುಗಳಿಗೆ ಭೆಟ್ಟಿ ನೀಡಿ ಅಲ್ಲಿರುವ ಉಳಿತಾಯ ಯೋಜನೆಗಳ ಮಾಹಿತಿಯನ್ನು ಸಂಗ್ರಹಿಸಿರಿ.
ಹಣಕ್ಕಿಂತ ಗುಣ ಮೇಲು.
*********************************************************
ಶಬ್ದಾರ್ಥ
ಮೃಷ್ಠಾನ್ನ –ಒಳ್ಳೆಯ
ಊಟ
ಮೈಗಳ್ಳ – ಕೆಲಸ
ಮಾಡಲಾರದವ
ಬಾಣಸಿಗ – ಆಚಾರಿ, ಅಡುಗೆ ಮಾಡುವವ
ಅಭ್ಯಾಸ
ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ
ಬರೆಯಿರಿ.
ಅ) ಮಹಾದೇವನಿಗೆ
ಎಷ್ಟು ಜನ ಮಕ್ಕಳು ಇದ್ದರು?
ಉತ್ತರ: ಮಹಾದೇವನಿಗೆ ಅಮರ ಮತ್ತು ಅಜಯ ಎಂಬ ಇಬ್ಬರು ಮಕ್ಕಳು ಇದ್ದರು.
ಆ) ಮಹಾದೇವನು
ಹಾಸಿಗೆ ಹಿಡಿದಾಗ ಯಾರನ್ನು ಹತ್ತಿರ ಕರೆದನು?
ಉತ್ತರ: ಮಹಾದೇವನು ಹಾಸಿಗೆ ಹಿಡಿದಾಗ ತನ್ನ ಇಬ್ಬರೂ ಮಕ್ಕಳನ್ನು ಹತ್ತಿರ ಕರೆದನು
ಇ) ಮಹಾದೇವನು ಮಕ್ಕಳಿಗೆ
ಯಾವ ಮಾತುಗಳನ್ನು ಹೇಳಿದನು?
ಉತ್ತರ: ಮಹಾದೇವನು
ತನ್ನ ಕೊನೆಯ ಗಳಿಗೆಯಲ್ಲಿ ಮಕ್ಕಳನ್ನು ಹತ್ತಿರ ಕರೆದು, “ನಿಮಗೆ ಅನುಭವದ ಕೆಲ ಮಾತುಗಳನ್ನು
ಹೇಳಬಯಸುತ್ತೇನೆ. ಕೇಳಿಸಿಕೊಂಡು ನೆನಪಿಟ್ಟು ಅದರಂತೆ ನಡೆಯಿರಿ. ಊರಿಗೊಂದು ಮನೆ ಕಟ್ಟಿರಿ, ರುಚಿಯಾದ ಊಟ ಮಾಡಿರಿ, ಸುಖವಾದ ನಿದ್ರೆ ಮಾಡಿರಿ.” ಎಂದು
ಹೇಳಿದನು.
ಈ) ತಂದೆಯ ಮೊದಲಿನ
ಮಾತನ್ನು ಈಡೇರಿಸಲು ಅಮರ ಏನು ಮಾಡಿದನು?
ಉತ್ತರ: ತಂದೆಯ
ಮೊದಲಿನ ಮಾತನ್ನು ಈಡೇರಿಸಲು ತನ್ನ ಪಾಲಿಗೆ ಬಂದ ಆಸ್ತಿಯಲ್ಲಿಯ ಹಣದಿಂದ ತನ್ನ ಊರಿನ
ಸುತ್ತಮುತ್ತಲಿನ ಊರುಗಳಲ್ಲಿ ಒಂದೊಂದು ಮನೆ ಕಟ್ಟಿಸಿದನು.
ಉ) ಅಮರ ಹೇಗೆ
ನಿರ್ಗತಿಕನಾದನು?
ಉತ್ತರ: ತಂದೆಯ
ಮಾತು ನಡೆಸಿಕೊಡುತ್ತಿದ್ದೇನೆ ಎಂದು ಆಸ್ತಿ ಮಾರಿ ದಿನಾಲೂ ಮೃಷ್ಟಾನ್ನ ಭೋಜನ ಮಾಡಿ ಸುಖದ ಸುಪ್ಪತ್ತಿಗೆಯಲ್ಲಿ
ನಿದ್ರಿಸತೊಡಗಿದ್ದನು. ದುಡಿತ ಮರೆತು ಮೈಗಳ್ಳನಾಗತೊಡಗಿದ್ದನು. “ಕುಳಿತು ಉಂಡರೆ ಕುಡಿಕೆ ಹೊನ್ನು
ಸಾಲದು’
ಎಂಬಂತೆ ಅವನಲ್ಲಿದ್ದ ಹಣ ಕಡಿಮೆಯಾಗುತ್ತ ಕೊನೆಗೆ ಅಮರ ನಿರ್ಗತಿಕನಾದನು.
ಊ) ಅಮರ ಊಟ
ತಯಾರಿಸಲು ಯಾರನ್ನು ನೇಮಿಸಿದನು?
ಉತ್ತರ: ಅಮರ ಊಟ ತಯಾರಿಸಲು ಬೇರೆ ಬೇರೆ ಬಾಣಸಿಗರನ್ನು ನೇಮಿಸಿದನು.
ಋ) ಯಾರು ಕಷ್ಟಪಟ್ಟು
ದುಡಿಯುತ್ತಿದ್ದರು?
ಉತ್ತರ: ಅಜಯ
ಕಷ್ಟಪಟ್ಟು ದುಡಿಯುತ್ತಿದ್ದನು.
ಋ) ಅಮರನಿಗೆ ಯಾರು
ಸಹಾಯ ಮಾಡಿದರು?
ಉತ್ತರ: ಅಮರನಿಗೆ ಅವನ ತಮ್ಮ ಅಜಯ ಸಹಾಯ ಮಾಡಿದರು.
ಎ) ಈ ಪಾಠದಿಂದ ಕಲಿತ
ನೀತಿ ಯಾವುದು?
ಉತ್ತರ: ‘ತಂದೆಯ ಸಲಹೆ’ ಈ ಪಾಠದಿಂದ ದುಡಿಮೆಯೇ ದೇವರು, ಹಗಲು-ರಾತ್ರಿ ಕಷ್ಟಪಟ್ಟು
ದುಡಿಯಬೇಕು. ದಣಿವಿನಿಂದ ರಾತ್ರಿ ಚಾಪೆ ಮೇಲೆ ಮಲಗಿದರೂ ಚೆನ್ನಾಗಿ ನಿದ್ರೆ ಬರುತ್ತದೆ.
ಮೈಗಳ್ಳತನ ಮಾಡಿದರೆ ನಿರ್ಗರಿಕ ನಾಗಬೇಕಾಗುವುದು
ಎಂಬ ನೀತಿ ತಿಳಿಯುತ್ತದೆ.
ಪ್ರಶ್ನೆ
೨) ಕೆಳಗಿನ ಪರ್ಯಾಯಗಳಿಂದ ಯೋಗ್ಯ ಪದಗಳನ್ನು ಆರಿಸಿ ಪೂರ್ಣಗೊಳಿಸಿರಿ. ಅ) ಮಹಾದೇವ ಕಾಯಿಲೆಯಿಂದ
ಹಾಸಿಗೆ ಹಿಡಿದನು.
(ರೂಪದಿಂದ, ಕಾಯಿಲೆಯಿಂದ, ಜ್ವರದಿಂದ)
ಆ) ಅಮರ - ಅಜಯರು ಆಸ್ತಿಯನ್ನು ಸಮವಾಗಿ ದಾನ ಮಾಡಿದರು
(ದಾನ ಮಾಡಿದರು, ಹಂಚಿಕೊಂಡರು, ಮಾರಿದರು)
ಇ) ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು
(ಮಾಗಿದರೆ, ಸುರಿಸಿದರೆ, ಉಂಡರೆ)
ಈ) ಊರುಗಳಲ್ಲಿ ಅನೇಕ
ಒಳ್ಳೆಯ ಜನರ ಸ್ನೇಹ ಮಾಡಿದೆ.
(ಒಳ್ಳೆಯ, ಸಿರಿವಂತ, ಸೋಮಾರಿ)
ಪ್ರಶ್ನೆ
೩) ಕಂಸಿನಲ್ಲಿ ಕೊಟ್ಟ ಸರಿಯಾದ ಶಬ್ದ
ಜೋಡಿಸಿ ವಾಕ್ಯ ಪೂರ್ಣಮಾಡಿರಿ.
(ಕಟ್ಟಿಸಿದನು, ಮಾಡಿದನು, ಮೈಗಳ್ಳನಾದನು, ಈಡೇರಿಸಿದನು. ನೇಮಿಸಿದನು)
ಅಮರ |
ಊರಿಗೊಂದು ಮೃಷ್ಟಾನ್ನ ತಂದೆಯ ಮೊದಲಿನ |
ಊಟ ಮಾತು ಮರೆತು ಬಾಣಸಿಗರನ್ನು ಮನೆ |
1. ಅಮರ ಊರಿಗೊಂದು ಬಾಣಸಿಗರನ್ನು ನೇಮಿಸಿದನು
2. ಅಮರ ಮೃಷ್ಟಾನ್ನ
ಊಟ ಮಾಡಿದನು.
3. ಅಮರ ತಂದೆಯ
ಮೊದಲಿನ ಮಾತು ಈಡೇರಿಸಿದನು.
4. ಅಮರ ದುಡಿತವನ್ನು ಮರೆತು ಮೈಗಳ್ಳನಾದನು.
5. ಅಮರ ಬೇರೆ
ಬೇರೆ ಮನೆ ಕಟ್ಟಿಸಿದನು.
ಉಪಕ್ರಮ: “ದುಡಿಮೆಯೇ ದೇವರು” ಈ
ವಿಷಯವನ್ನು ಕುರಿತು ಹತ್ತು ಸಾಲು ಬರೆಯಿರಿ.
ಅರಿತು
ಬಾಳಬೇಕು
***************************************************
ಶಬ್ದಗಳ ಅರ್ಥ
ಪೌಷ್ಟಿಕ -
ಸತ್ವಯುತವಾದ;
ಅನುದಿನ – ಪ್ರತಿದಿನ
ದುಶ್ಚಟ – ಕೆಟ್ಟ
ಅಭ್ಯಾಸ
ನಿರ್ಮಲ –
ಸ್ವಚ್ಛವಾದ
ಅಭ್ಯಾಸ
ಪ್ರಶ್ನೆ
೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
೧)
ಆರೋಗ್ಯವಂತರಾಗಿರಲು ಏನೇನು ಸೇವಿಸಬೇಕು?
ಉತ್ತರ:
ಆರೋಗ್ಯವಂತರಾಗಿರಲು ಹಾಲು,
ಹಣ್ಣುಗಳು ಜೊತೆಗೆ ನೀರು ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು.
೨) ಯಾವುದು ಮಿತವಾಗಿ
ಇರಬೇಕು?
ಉತ್ತರ: ಚಹಾ
ಕಾಫಿಗಳಂಥ ಉತ್ತೇಜಕ ಪೇಯಗಳು ಮಿತವಾಗಿ ಇರಬೇಕು.
೩) ಯಾವುದು
ನಿರ್ಮಲವಾಗಿರಬೇಕು?
ಉತ್ತರ:
ನೆರೆಹೊರೆಯವರ ಹತ್ತಿರ ನಮ್ಮ ಮನಸ್ಸು ನಿರ್ಮಲವಾಗಿರಬೇಕು.
೪) ಯೋಗದ
ಪ್ರಯೋಜನವೇನು?
ಉತ್ತರ: ನಮ್ಮ
ದೇಹಕ್ಕೆ ಆರೋಗ್ಯಮಯವಾಗಿರಿಸಲು ಪಾಠದ ಜೊತೆಗೆ ಆಟ ಅದಬ್ಎಕು. ದೇಹದ ಕಾಂತಿಗೆ ಯೋಗವು ಇರಬೇಕು.
ಪ್ರಶ್ನೆ
೨) ಕೆಳಗೆ ಕೊಟ್ಟ ಶಬ್ದಗಳಿಗೆ ಜೋಡು ಶಬ್ದಗಳನ್ನು ಬರೆಯಿರಿ.
೧) ಹಾಲು – ಮೊಸರು
೨) ತಿಂಡಿ -ಸಿನಿಸು
೩) ಚಹಾ -
ಬಿಸ್ಕೀತ್ತು
೪) ಆಟ - ಪಾಠ
ಪ್ರಶ್ನೆ
೩) ಕೆಳಗಿನ ಕವಿತೆಯ ಸಾಲುಗಳನ್ನು ಪೂರ್ಣಗೊಳಿಸಿರಿ.
ಊಟವು ಸಮಯಕೆ ಸರಿಯಾಗಿರಲಿ
ತಿಂಡಿ-ತಿನಿಸಿ
ಮಿತವಾಗಿರಲಿ
ದುಶ್ಚಟಗಳೆಲ್ಲ
ದೂರವೇ ಇರಲಿ
ಇದ್ದರೆ ನಮಗೆ
ಆರೋಗ್ಯ
ಅದುವೇ ನಮ್ಮ ಸೌಭಾಗ್ಯ
ಉಪಕ್ರಮ: ೧) ಈ ಕವಿತೆಯನ್ನು ಭನಯದೊಂದಿಗೆ ಹಾಡಿರಿ.
೨) ಅ, ಬ, ಕ, ಡ ಮತ್ತು ಇ ಜೀವನಸತ್ವಗಳಿರುವ ಆಹಾರಪದಾರ್ಥ
ಪಟ್ಟಿ ಮಾಡಿರಿ.
ಸದೃಢವಾದ
ಶರೀರದಲ್ಲಿ ಸದೃಢವಾದ ಮನಸ್ಸಿರುತ್ತದೆ.
******************************************************
5. ಕನಸಿನ ಗುಟ್ಟು
-ಸೋಮಯಾಜಿ
ಶಬ್ದಗಳ ಅರ್ಥ
ಆತಂಕ – ಚಿಂತೆ
ಅತ್ಯದ್ಭುತ - ಅತೀ ಆಶ್ಚರ್ಯಕರ,
ಭವಿಷ್ಯ - ಮುಂದೆ ಆಗುವ ಸಂಗತಿ;
ಛತ್ರ – ಧರ್ಮಶಾಲೆ,
ಮಹಾಜ್ಞಾನಿ - ದೊಡ್ಡ
ಜ್ಞಾನಿ,
ಪ್ರೇರೇಪಿಸು -
ಪ್ರಚೋದಿಸು
ಪರಿಶೀಲಿಸು - ಸೂಕ್ಷ್ಮವಾಗಿ ನೋಡುವುದು,
ತನ್ಮಯ - ತಲ್ಲೀನ.
ಅಭ್ಯಾಸ
ಪ್ರಶ್ನೆ
೧)
ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
೧) ಕಾಲ್ನಡಿಗೆಯ
ಪ್ರವಾಸದಲ್ಲಿ ಎಷ್ಟು ಅಪರಿಚಿತ ಯಾತ್ರಿಕರು ಭೇಟಿಯಾದರು?
ಉತ್ತರ: ಒಂದು ಕಾಲ್ನಡಿಗೆಯ ಪ್ರವಾಸದಲ್ಲಿ ಮೂವರು ಅಪರಿಚಿತ ಯಾತ್ರಿಕರು ಪರಸ್ಪರ ಭೇಟಿಯಾದರು
೨) ಅಪರಿಚಿತ
ಯಾತ್ರಿಕರು ಯಾವ ಒಪ್ಪಂದಕ್ಕೆ ಬಂದರು?
ಉತ್ತರ: ಅಪರಿಚಿತ
ಯಾತ್ರಿಕರು ತಾವು ತಂದ ಆಹಾರ-ತಿಂಡಿಗಳನ್ನು ಎಲ್ಲರೂ ಹಂಚಿಕೊಂಡು ತಿನ್ನೋಣ ಎಂದು ಒಪ್ಪಂದಕ್ಕೆ
ಬಂದರು.
3) ಮಹಾಬಯಲು ದಾಟುವಾಗ
ಉಂಟಾದ ಆತಂಕ ಯಾವುದು?
ಉತ್ತರ: ಕೆಲವು
ದಿನಗಳ ಪ್ರವಾಸದ ನಂತರ ದಾರಿಯಲ್ಲಿ ಹಳ್ಳಿ, ಮನೆಗಳು, ಛತ್ರಗಳೂ , ಜನಸಂಚಾರ ಯಾವುದೂ ಕಾಣದ ಮಹಾಬಯಲು ಬಂದಿತು. ಆ ಹೊತ್ತಿಗೆ ಅವರ ಹತ್ತಿರ ಇದ್ದ ಆಹಾರ ತಿಂಡಿಗಳೆಲ್ಲ
ಖಾಲಿಯಾಗಿತ್ತು. ಹಾಗಾಗಿ ಆ ಮಹಾಬಯಲು ದಾಟುವಾಗ ಮೂವರು ಪ್ರವಾಸಿಗರಿಗೆ ಆತಂಕ ಉಂಟಾಯಿತು.
೪) ಮೊದಲ ಯಾತ್ರಿಕನು
ಹೇಳಿದ ಕನಸನ್ನು ಬರೆಯಿರಿ.
ಉತ್ತರ: ಮೊದಲ ಪಯಣಿಗನು ತನ್ನ ಕನಸನ್ನು ಈ ರೀತಿ
ಹೇಳಿದನು. ತಾನೊಂದು ಬಹಳ ಚಂದದ ಊರಿನಲ್ಲಿದ್ದೆ. ಅದರ ಸೌಂದರ್ಯ ಬಣ್ಣಿಸಲು ಸಾಧ್ಯವಿಲ್ಲ. ಅಲ್ಲಿ
ಎಷ್ಟೆಲ್ಲ ಅದ್ಭುತ ವಸ್ತುಗಳಿದ್ದವೆಂದರೆ ತಾನು ಬೆಳಗಾಗುವವರೆಗೆ ಲೆಕ್ಕ ಹಾಕುತ್ತಲೇ ಇದ್ದೆ.
ಅಲ್ಲಿದ್ದ ಒಬ್ಬ ಮಹಾಜ್ಞಾನಿಯು ತಾನೇ ಆ ಬ್ರೆಡ್ಡಿಗೆ ಅರ್ಹನು ಎಂದು ಹೇಳಿದನು.
೫) ಮೂರನೆಯ ಪಯಣಿಗನು
ಕನಸಿನಲ್ಲಿ ಏನು ಮಾಡಿದನು?
ಉತ್ತರ: ಮೂರನೆಯ
ಪಯಣಿಗನು ಯಾರ ಜೊತೆಯೂ ಕನಸಿನಲ್ಲಿ ಮಾತನಾಡಲಿಲ್ಲ. ಯಾರ ಉಪದೇಶವನ್ನೂ ಕೇಳಲಿಲ್ಲ. ಎದ್ದು ಬ್ರೆಡ್
ತಿಂದು ನೀರು ಕುಡಿದು ಬಿಟ್ಟನು.
ಪ್ರಶ್ನೆ
೨) ಬಿಟ್ಟ ಸ್ಥಳ ಪೂರ್ಣಗೊಳಿಸಿರಿ.
೧) ದಾರಿದ್ದಕ್ಕೂ
ತನ್ನ ಬದುಕಿನ ಕಥೆಗಳನ್ನು ಹೇಳುತ್ತಾ ಆನಂದದಿಂದ ಪ್ರಮಾಣ ಮುಂದುವರೆಸಿದರು.
೨) ಹಿಂದೆ ಮಾಡಿದ
ಒಪ್ಪಂದದಂತೆ ಅದನ್ನು ಮೂರು ತುಂಡು ಮಾಡಿ ಹಂಚಿಕೊಳ್ಳೋಣ.
೩) ಪ್ರಪಂಚಕ್ಕೆ
ನನ್ನಿಂದ ತುಂಬಾ ಉಪಕಾರವಾಗಲಿದೆ.
೪) ಉಳಿದಿಬ್ಬರು ಬ್ರೆಡ್
ಇಟ್ಟ ಜಾಗವನ್ನು
ಪರಿಶೀಲಿಸಿದರು.
ಪ್ರಶ್ನೆ
೩) ಕೆಳಗಿನ ಪದಗಳಿಗೆ ವಿರುದ್ಧ ಪದ ಬರೆಯಿರಿ.
ಸ್ನೇಹ X ವೈರಿ ಕನಸು X ನನಸು ಉಪಕಾರ X ಅಪಕಾರ ಜ್ಞಾನಿ X ಅಜ್ಞಾನಿ
ಪ್ರಶ್ನೆ
೪) ಕೆಳಗಿನ ಶಬ್ದಗಳ ಅರ್ಥ ಹೇಳಿ ವಾಕ್ಯದಲ್ಲಿ ಉರಯೋಗಿಸಿರಿ.
೧) ಪಯಣಿಗ – ಪ್ರವಾಸಿಗ
ವಾಕ್ಯ: ಪಯಣಿಗರು
ಪ್ರವಾಸಕ್ಕೆ ಹೊರಟರು.
೨) ಬಣ್ಣಿಸು – ವರ್ಣನೆ ಮಾಡು
ವಾಕ್ಯ : ರಾಣಿ
ಚಿತ್ರವನ್ನು ಚೆನ್ನಾಗಿ ಬಣ್ಣಿಸುವಳು.
೩) ಭವಿಷ್ಯ –
ಮುಂದೆ ಆಗುವ ಘಟನೆ
ವಾಕ್ಯ: ನಾವು
ಕಷ್ಟಪಟ್ಟರೆ ನಮ್ಮ ಭವಿಷ್ಯ ಸಂತೋಷದಾಯಕ ವಾಗಿ ಇರಬಹುದು.
ಉಪಕ್ರಮ
:
೧)ವಿನೋದ ಪ್ರಸಂಗಗಳನ್ನು ಕೇಳಿ ಆನಂದಿಸಿರಿ.
೨)ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಸಂಗದಲ್ಲಿ ವಿನೋದ ಮತ್ತ
ಭಕ್ತಿಪ್ರಧಾನ ಸನ್ನಿವೇಶಗಳನ್ನು ಅಭಿನಯಿಸಿರಿ.
ಹಗಲುಗನಸು ಕಾಣಬಾರದು
**********************************************************
ವ್ಯಾಕರಣ
ನಾಮಪದ :
ಯಾವುದೊಂದು ವ್ಯಕ್ತಿ, ಸ್ಥಳ, ಪ್ರಾಣಿ, ಪಕ್ಷಿ, ಭಾವನೆ ಮತ್ತು ಉದ್ಯೋಗಗಳ
ಹೆಸರನ್ನು ಸೂಚಿಸುವ ಪದಗಳಿಗೆ ನಾಮಪದಗಳೆಂದು ಕರೆಯುವರು.
ನಾಮಪದದಲ್ಲಿ
ಪ್ರಕಾರಗಳು :
೧) ರೂಢನಾಮ
೨) ಅಂಕಿತನಾಮ
೩) ಅನ್ವರ್ಥಕನಾಮ
೧)
ರೂಢನಾಮ: ಪರಂಪರಾಗತವಾಗಿ
ರೂಢಿಯಲ್ಲಿ ಇರುವ ಶಬ್ದಗಳಿಗೆ “ರೂಢನಾಮ” ಎನ್ನುವರು.
ಉದಾ : ಗಿಡ, ಮಗು, ಆಕಳು, ಗಿಳಿ, ನದಿ, ಮನುಷ್ಯ,
೨)
ಅಂಕಿತನಾಮ:
ನಿರ್ದಿಷ್ಟವಾದ ಹೆಸರನ್ನು ಸೂಚಿಸುವ ಪದಕ್ಕೆ ಅಂಕಿತನಾಮ' ಎಂದು ಕರೆಯುವರು.
ಉದಾ: ಹಿಮಾಲಯ, ಗೋದಾವರಿ, ಆನೆ, ಲಕ್ಷ್ಮೀ, ರಾಮ.
೩)
ಅನ್ವರ್ಥಕನಾಮ: ಉದ್ಯೋಗ, ಸ್ವಭಾವ ಮತ್ತು ನ್ಯೂನತೆಗಳನ್ನು ಸೂಚಿಸುವ
ಪದಗಳಿಗೆ ಅನ್ವರ್ಥಕ ನಾಮ' ಎನ್ನುವರು.
ಉದಾ : ಅಂಗಡಿಕಾರ, ಕುಂಬಾರ, ಬಡಿಗ, ಮೂಕ, ದನಗಾಹಿ, ಓಲೆಕಾರ.
**********************************************************
6. ಕರುಣಾಮಯಿ
-ರಘುಸುತ
ಸಂಜೆ - ಸನ್ನೆ ; ಕ್ಷಣಿಕ – ಅಲ್ಪ ಕನಿಕರ
- ಧನ - ಹಣ ;
ಕಾಂತಿ - ಬೆಳಕು : ಕುಪಿತ
- ಸಿಟ್ಟಿಗೇಳು.
ಅಭ್ಯಾಸ
ಪ್ರಶ್ನೆ
೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
೧) ಸಿದ್ದಾರ್ಥನ
ತಂದೆಯ ಹೆಸರು ಏನು ಇತ್ತು?
ಉತ್ತರ:
ಸಿದ್ಧಾರ್ಥನ ತಂದೆಯ ಹೆಸರು ಶುದ್ಧೋದನ ಆಗಿತ್ತು.
೨) ಸಿದ್ಧಾರ್ಥನ
ಮನಸನ್ನು ಪರಿವರ್ತಿಸಲು ತಂದೆಯು ಮಾಡಿದ ಉಪಾಯ ಯಾವುದು?
ಉತ್ತರ: ಸಿದ್ಧಾರ್ಥನ ಮನಸನ್ನು ಪರಿವರ್ತಿಸಲು ತಂದೆಯು ಆತನನ್ನು ತನ್ನ ಜೊತೆಗೆ ಬೇಟೆಯಾಡಲು
ಕರೆದುಕೊಂಡು ಹೋದನು.
3) ಜಿಂಕೆಯನ್ನು ಕಂಡಾಗ
ಸಿದ್ದಾರ್ಥನ ಮನಸ್ಸಿನಲ್ಲಿ ಉಂಟಾದ ಬದಲಾವಣೆ ಏನು?
ಉತ್ತರ: ಬೇಟೆಯಾಡಲು ಕಾಡಿಗೆ ಹೋದ
ಸಿದ್ಧಾರ್ಥ ಜಿಂಕೆಯನ್ನು ಬಾಣ ಹೂಡಿದಾಗ ಕನಿಕರ ಹುಟ್ಟಿತು. ಮೃದುವಾದ ದೇಹ, ಅದರ ಕಂಗಳ ಕಾಂತಿ ಕಂಡು ಸಿದ್ಧಾರ್ಥನ ಮನ ಕರಗಿತು. ಇಂತಹ ಸುಂದರವಾದ ಪ್ರಾಣಿ
ಕೊಲ್ಲುವುದು ಸರಿಯೇ? ಎಂದೆನಿಸಿತು.
೪) ಬುದ್ಧರು ವೃದ್ಧೆ
ನೀಡಿದ ಹಣ್ಣನ್ನು ಏಕೆ ಸ್ವೀಕರಿಸಿದರು ?
ಉತ್ತರ: ಬುದ್ಧರಿಗೆ
ಹಣ್ಣನ್ನು ಅರ್ಪಿಸಲು ಬಂದ ವೃದ್ಧೆಯ ಕಣ್ಣಲ್ಲಿ ಕರುಣೆ, ಮನದಲ್ಲಿ ಭಕ್ತಿ ಹಾಗೂ ಅವಳ ಹೃದಯದಲ್ಲಿ ಶ್ರದ್ಧೆ
ಇರುವುದನ್ನು ಕಂಡು ಬುದ್ಧರು ಆ ಹಣ್ಣನ್ನು ಸಂತೋಷದಿಂದ ಸ್ವೀಕರಿಸಿದರು.
೫) ಬುದ್ಧರು
ಏತಕ್ಕಾಗಿ ದೀರ್ಘ ಯಾತ್ರೆಯನ್ನು ಕೈಕೊಂಡರು ?
ಉತ್ತರ:ಭಗವಾನ
ಬುದ್ಧರು ಶಾಶ್ವತವಾದ ಸತ್ಯ ಮತ್ತು ಆನಂದಗಳ ಅನ್ವೇಷಣೆಗೆ ದೀರ್ಘ ಯಾತ್ರೆಯನ್ನು ಕೈಕೊಂಡರು.
ಮತ್ತು ಜನರಿಗೆ ದಾರಿದೀಪವಾದರು.
ಪ್ರಶ್ನೆ
೨) ಬಿಟ್ಟ ಸ್ಥಳ ತುಂಬಿರಿ.
೧) ಕ್ಷತ್ರಿಯನಾದರೂ ಕರುಣೆ, ಪ್ರಾಣಿದಯೆಗಳಂತಹ
ಸದ್ಗುಣ ಸಂಪನ್ನನಾಗಿದ್ದನು.
೨) ಆತನಿಗೆ
ಜಿಂಕೆಯನ್ನು ಕಂಡು ಕನಿಕರ ಹುಟ್ಟಿತು.
೩) ಜೀವನದಲ್ಲಿ ಶಾಶ್ವತ ಸುಖವನ್ನು ಪಡೆಯಲು ರಾಜ್ಯ ಪರಿತ್ಯಾಗ ಮಾಡಿದರು.
೪) ಅವಳ ಕೈಯಲ್ಲಿ
ಅರ್ಧತಿಂದ ದಾಳಿಂಬೆ ಹಣ್ಣು ಇತ್ತು.
೫) ಗೌತಮಬುದ್ಧರ ಮಾರ್ಮಿಕವಾದ ನುಡಿಗಳನ್ನು ಕೇಳಿ ರಾಜ ಮಹಾರಾಜರು ಪ್ರಭಾವಿತರಾದರು.
ಪ್ರಶ್ನೆ
೩) ವಾಕ್ಯದಲ್ಲಿ ಗೆರೆಹೊಡೆದ ಪದದ ನಾಮಪದ ಗುರುತಿಸಿರಿ.
೧) ಧರ್ಮರಾಜನು
ಬಹಳ ಧರ್ಮದಿಂದ ರಾಜ್ಯವಾಳಿದನು. = ಅಂಕಿತ ನಾಮ
೨) ನಾವು ನದಿಯಲ್ಲಿ
ಈಜಾಡಿದೆವು. = ರೂಢ ನಾಮ
೩) ಈ ಆಟಿಗೆಯನ್ನು
ಬಡಿಗರ ಮಾನಪ್ಪನು ತಯಾರಿಸಿದ್ದಾನೆ. = ಅಂಕಿತನಾಮ
ಉಪಕ್ರಮ
ಸಾಮ್ರಾಟ
ಅಶೋಕನ ಚರಿತ್ರೆಯ ನ್ನು ಓದಿರಿ.
ತಾಳಿದವನು
ಬಾಳಿಯಾನು
ಅಭ್ಯಾಸ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
೧) ತಾಯಿಯು
ಮಗುವನ್ನು ಏನೆಂದು ಕರೆದಿರುವಳು?
ಉತ್ತರ: ತಾಯಿಯು ಮಗುವನ್ನು ತೊಟ್ಟಿಲದಾಗ ಇರುವ ತೊಳೆದ ಮುತ್ತು ಎಂದು ಕರೆದಿರುವಳು.
೨) ಕಂದಯ್ಯ ಏನೇನು
ಬೇಡಿ ರಂಪಾಟ ಮಾಡುವನು?
ಉತ್ತರ: ಕಂದಯ್ಯ
ಹಾಲು ಬೇಡಿ ಅಳುವನು,
ಕೋಲು ಬೇಡಿ ಕುಣಿಯುವನು, ಮೊಸರು ಬೇಡಿ ಕೇಸರ ತುಳಿದು ರಂಪಾಟಮಾಡುವನು.
೩) ಬೀಸಣಿಕೆ ಗಾಳಿ
ಯಾವಾಗ ಬೀಸುವದು?
ಉತ್ತರ: ಕೂಸು ಕಂದಯ್ಯ
ಮನೆಯ ಒಳಗೆ-ಹೊರಗೆ ಆಡುತ್ತಿದ್ದರೆ ಆ ಕೂಸು ಇರುವ ಮನೆಗೆ ಬೀಸಣಿಕೆ ಗಾಳಿ ಬೀಸುವುದು.
೪) ಗಿಣಿಗಳು ಕೂಸಿಗೆ
ಏನೆಂದು ಕೇಳುವವು ?
ಉತ್ತರ:
ದೇಶದಿಂದ ಎರಡು ಗಿಳಿ ಬಂದು ಕೂಸಿಗೆ ಮಗು, ನೀನು ಯಾರ ಮಗನೆಂದು ಕೇಳುವವು.
೫) ಬಾಲಚಕ್ರವರ್ತಿಯೆಂದು ಯಾರನ್ನು ಕರೆಯಲಾಗಿದೆ ?
ಉತ್ತರ: ನಾಲಿಗೆ ಮೇಲೆ ಸರಸೋತಿ ಇರುವಂತಹ ಬಾಲಕನಿಗೆ ಬಾಲ
ಚಕ್ರವರ್ತಿ ಎಂದು ಕರೆಯಲಾಗಿದೆ.
೬) ಅಮ್ಮ ಏನೆಂದು ಹರಸುವಳು ?
ಉತ್ತರ: ಮಗು ಎಲ್ಲೆ ಇರಲಿ, ಹುಲ್ಲಾಗಿ ಬೆಳೆಯಲಿ,
ನೆಲ್ಲಿ ಬೊಡ್ಡು ಆಗಿ ಚಿಗಿಯಲಿ ಅದರಂತೆ ಜಯವಂತನಾಗಿ ಬಾಳಲಿ ಎಂದು ಅಮ್ಮ ತನ್ನ ಮಗುವಿಗೆ
ಹರಸುವಳು.
ಪ್ರಶ್ನೆ
(೨) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣ ಮಾಡಿರಿ.
ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಯ್ಯ
ಒಳಹೊರಗೆ! ಆಡಿದರ
ಬೀಸಣಿಕೆ ಗಾಳಿ ಸುಳಿದಾವ!!
ಪ್ರಶ್ನೆ
(೩) ಹೊಂದಿಸಿ ಬರೆಯಿರಿ.
‘ಅ’ ಗುಂಪು ‘ಬ’ ಗುಂಪು(ಉತ್ತರ)
೧) ಮುತ್ತೀನ ಈ) ದೃಷ್ಟಿ
೨) ಕುಸಲದ ಉ)
ಗಜ್ಜೆ
೩) ಬೀಸಣಿಕೆ ಆ)
ಗಾಳಿ
೪) ಬಾಲ ಆ)
ಚಕ್ರವರ್ತಿ
೫) ನಾಲಿಗೆ ಇ) ಸರಸೋತಿ
ಉಪಕ್ರಮ
:
೧)
ಇಂಥ ಬೇರೆ ಬೇರೆ ಜಾನಪದ ಗೀತೆಗಳನ್ನು ಕಲಿಯಿರಿ
೨) ಈ ಗೀತೆಯನ್ನು ಸಾಭಿನಯದೊಂದಿಗೆ ರಾಗಬದ್ಧವಾಗಿ ಹಾಡಿರಿ.
ಮಾತೆಯ
ಒಡಲು ಮಮತೆಯ ಕಡಲ
8. ಪುಣ್ಯಶ್ಲೋಕ ಅಹಿಲ್ಯಾಬಾಯಿ ಹೋಳಕರ
ಶಬ್ದಗಳ
ಅರ್ಥ
ಅಮೋಘ – ಶ್ರೇಷ್ಠ;
ಅಂತರಾಳ -
ಬಾಹ್ಯಾಕಾಶ,
ಕಂಗೊಳಿಸು – ಶೋಭಿಸು,
ವೀರಗತಿ- ವೀರಮರಣ
ಕುತೂಹಲ – ಆಸಕ್ತಿ
ವಿಪ್ಪತ್ತು – ಸಂಕಟ
ರಾಜೋಚಿತ -
ರಾಜಮರ್ಯಾದೆ
ಯಾಚಕ - ಬೇಡುವವ
ಉನ್ನತಿ –
ಅಭಿವೃದ್ಧಿ
ಉಪಾದಿ –
ಪ್ರಶಸ್ತಿ
ವಿರುದ್ಧಾರ್ಥಕ
ಶಬ್ದಗಳು
ಧೈರ್ಯ X ಅಧೈರ್ಯ ;
ಅನುಭವ X ಅನಾನುಭವ
ಭಾಜ್ಯ X ಅವಿಭಾಜ್ಯ
ಆರೋಗ್ಯ X ಅನಾರೋಗ್ಯ:
ಅನುಕೂಲ X ಅನಾನುಕೂಲ
ಉನ್ನತಿ X ಅವನತಿ
ಅಭ್ಯಾಸ
ಪ್ರಶ್ನೆ
೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
೧)
ಅಹಿಲ್ಯಾಬಾಯಿಯವರು ಎಲ್ಲಿ ಮತ್ತು ಯಾವಾಗ ಜನಿಸಿದರು?
ಉತ್ತರ: ಅಹಿಲ್ಯಾಬಾಯಿಯವರು ಮಹಾರಾಷ್ಟ್ರ ರಾಜ್ಯದ ಅಹಮದನಗರ ಜಿಲ್ಲೆಯ
ಚಾಮಖೇಡ ತಾಲೂಕಿನ ಚೌಂಡಿ ಎಂಬ ಗ್ರಾಮದಲ್ಲಿ 31 ಮೇ 1725 ರಲ್ಲಿ ಜನಿಸಿದರು
೨) ಅಹಿಲ್ಯಾಬಾಯಿಯವರ
ಹವ್ಯಾಸಗಳು ಯಾವವು?
ಉತ್ತರ: ಅಹಿಲ್ಯಾಬಾಯಿಯವರಿಗೆ ಚಿಕ್ಕಂದಿನಲ್ಲಿ ರಾಜ-ರಾಣಿಯರ ಕಥೆಗಳು, ಯುದ್ಧ ಪ್ರಸಂಗಗಳು, ಕುದುರೆ ಸವಾರಿ ಮುಂತಾದ ವಿಷಯಗಳನ್ನು ಕೇಳುವ ಕುತೂಹಲವಿತ್ತು. ಗುರು-ಹಿರಿಯರಲ್ಲಿ ಭಕ್ತಿ, ಲಿಂಗ ಪೂಜೆಯಲ್ಲಿ ತಲ್ಲೀನತೆ ಇವು ಪ್ರಮುಖ ಹವ್ಯಾಸಗಳಾಗಿದ್ದವು.
೩) ಯಾರ ಜೊತೆಗೆ
ಅಹಿಲ್ಯಾಬಾಯಿಯವರ ವಿವಾಹವಾಯಿತು?
ಉತ್ತರ: ಇಂದೂರಿನ
ಅರಸರಾಗಿದ್ದ ಮಲ್ಹಾರರಾವ ಹೋಳಕರರ ಮಗನಾದ ರಾಜಕುಮಾರ ಖಂಡೇರಾವ ಅವರೊಡನೆ ಅಹಿಲ್ಯಾಬಾಯಿಯವರ ವಿವಾಹವಾಯಿತು.
೪) ಅಹಿಲ್ಯಾಬಾಯಿಯವರ
ಆಡಳಿತ ನಡೆಸುವ ವಿಧಾನ ಹೇಗಿತ್ತು?
ಉತ್ತರ: ಕೊಲೆ
ಸುಲಿಗೆಗಾರರ ಜೀವನಕ್ಕೆ ಅಗತ್ಯವಾದ ಅನುಕೂಲಗಳನ್ನು ಮಾಡಿ ಅವರನ್ನು ಸನ್ಮಾರ್ಗಕ್ಕೆ ತಂದರು.
ರಾಜ್ಯದಲ್ಲಿ ಶಾಂತಿ ಸುಭಿಕ್ಷೆಗಳು ನೆಲೆ ನಿಲ್ಲುವಂತೆ ಮಾಡಿದರು. ಗಡಿ ರಾಜ್ಯಗಳ ಅರಸರನ್ನು
ಆತ್ಮೀಯರಂತೆ ಕಾಣುವುದು ಅಹಿಲ್ಯಾಬಾಯಿ -ಯವರ ರಾಜ
ತಂತ್ರಗಳ ಪ್ರಮುಖ ಅಂಶವಾಗಿತ್ತು. ನೆರೆ ರಾಜ್ಯದಲ್ಲಿ ಆಪತ್ತು ಬಂದೊದಗಿದಾಗ ಅದರ ನಿರ್ವಹಣೆಗಾಗಿ
ಸದಾ ಸನ್ನದ್ಧರಾಗಿರುತ್ತಿದ್ದರು. ವೈರಿಗಳ ಆಕ್ರಮಣದ ಸಮಯದಲ್ಲಿ ಚಾಣಾಕ್ಷತನದಿಂದ
ವ್ಯವಹರಿಸುತ್ತಿದ್ದರು. ಸ್ವತಃ ಶಸ್ತ್ರಸಜ್ಜಿತಳಾಗಿ ರಣಭೂಮಿಯಲ್ಲಿ ಧುಮುಕಿ ರಣಚಂಡಿಯಂತೆ
ಹೋರಾಡುತ್ತಿದ್ದರು, ಈ ರೀತಿ ಅವರು ಆಡಳಿತ ನಡೆಸುವ ವಿಧಾನವೇ ಒಂದು ರೀತಿ
ವಿಶಿಷ್ಟವಾಗಿತ್ತು.
*೫) ಅಹಿಲ್ಯಾಬಾಯಿ ಹೋಳಕರ ಜನಕಲ್ಯಾಣಕ್ಕಾಗಿ ಮಾಡಿದ
ಕಾರ್ಯಗಳು ಯಾವುವು?
ಉತ್ತರ: ಕುಂಬೇರಿ
ಕದನದಲ್ಲಿ ಪತಿ ಖಂಡೇರಾವ ವೀರಗತಿ ಸೇರಿದ ಮೇಲೆ ಅಹಿಲ್ಯಾಬಾಯಿ ಹೋಳಕರ ಎದೆಗುಂಡದೆ
ಪ್ರಜಾಪರಿಪಾಲನೆ ಮಾಡತೊಡಗಿದ್ದರು. ಒಳ್ಳೆಯ ಆಡಳಿತ ನೀಡತೊಡಗಿದ್ದರು. ಪ್ರಜೆಗಳ ಕಲ್ಯಾಣಕ್ಕಾಗಿ
ಕೆರೆ,
ಕಾಲುವೆ ನಿರ್ಮಿಸಿದರು. ಕೃಷಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ದಾಸೋಹಗಳನ್ನು
ಪ್ರಾರಂಭಿಸಿದರು. ಮಠ-ಮಂದಿರಗಳನ್ನು ನಿರ್ಮಿಸಿ ಸರ್ವ ಧರ್ಮಗಳನ್ನು ಸಮಾನ ದೃಷ್ಟಿಯಿಂದ ನೋಡುತ್ತ
ದಕ್ಷ ಆಡಳಿತಗಾರರಾಗಿ ಸಮಾಜಸೇವಕರಾಗಿ ಜನಸೇವೆ ಮಾಡಿದರು.
೫)
ಅಹಿಲ್ಯಾಬಾಯಿಯವರು ಯಾವ ರೀತಿಯಾಗಿ ಜೀವನ ಸಾಗಿಸಿದರು?
ಉತ್ತರ: ರಾಣಿ
ಅಹಿಲ್ಯಾಬಾಯಿ ತಮ್ಮ ಆಡಳಿತದುದ್ದಕ್ಕೂ ಪ್ರಜೆಗಳ ಉನ್ನತಿಗಾಗಿ ಶ್ರಮಿಸಿದರು. ಸ್ವಂತ ಸಂಪತ್ತನ್ನು
ದಾನ - ಧರ್ಮಗಳಿಗಾಗಿ ಮೀಸಲಿಟ್ಟರು. ಮಹಾ | ಶಿವಶರಣೆಯಾಗಿ, ಮಹಾ ದಾಸೋಹಿಯಾಗಿ, ಲೋಕಮಾತೆಯಾಗಿ, ರಾಜಯೋಗಿನಿ ಕುಲಭೂಷಣಿ, ಮತ್ತು ಪುಣ್ಯಶ್ಲೋಕ ಮುಂತಾದ ಉಪಾದಿಗಳಿಂದ
ಭಾರತೀಯರಿಗೆ ಪೂಜ್ಯನೀಯರಾಗಿದ್ದಾರೆ. ಎಪ್ಪತ್ತರ ಇಳಿ ವಯಸ್ಸಿನಲ್ಲಿ ದಿನಾಂಕ: ೧೩ ಅಗಷ್ಟ ೧೭೯೫
ರಲ್ಲಿ ರಾಣಿ ಅಹಿಲ್ಯಾಬಾಯಿ ಲಿಂಗೈಕ್ಯರಾದರು.
ಪ್ರಶ್ನೆ:
೨) ಬಿಟ್ಟ ಸ್ಥಳ ತುಂಬಿರಿ.
೧) ಬಹುಮುಖ ಸಾಧನೆಯ
ಮಹಾನ್ ಚೇತನವಾಗಿ ಧ್ರುವತಾರೆಯಂತೆ ಇಂದೂರಿನ ರಾಣಿ ಅಹಿಲ್ಯಾಬಾಯಿ ಹೋಳಕರ ಇವರು ಕಂಗೊಳಿಸಿದರು.
೨) ಮಾಣಕೋಜಿ ಶಿಂದೆ ಚೌಂಡಿಯ ಪಾಟೀಲರಾಗಿದ್ದರು.
೩) ಅಹಿಲ್ಯಾಬಾಯಿಯವರಿಗೆ
ಮಾಲೇರಾವ ಮತ್ತು ಮುಕ್ತಾಬಾಯಿ ಎಂಬ ಇಬ್ಬರು ಮಕ್ಕಳಿದ್ದರು.
೪) ಪ್ರಜೆಗಳ
ಕಲ್ಯಾಣಕ್ಕಾಗಿ ಕೆರೆ ಕಾಲುವೆಗಳನ್ನು ನಿರ್ಮಿಸಿದರು.
೫) ಶಿವಲಿಂಗವು ಅವರ ಕೈಯಲ್ಲಿ ಕಂಗೊಳಿಸುತ್ತಿತ್ತು.
ಪ್ರಶ್ನೆ
೩. ಹೊಂದಿಸಿ ಬರೆಯಿರಿ.
೧) ರಾಜಮಾತೆ
ಜೀಜಾಬಾಯಿ = ಅಮೋಘ ಪ್ರಯತ್ನ
೨) ರಾಣಿ
ಲಕ್ಷ್ಮೀಬಾಯಿ = ವೀರತನ
೩) ಕಿತ್ತೂರ
ಚೆನ್ನಮ್ಮ = ಧೈರ್ಯ
೪) ಅಕ್ಕ ಮಹಾದೇವಿ = ಜ್ಞಾನಸುಧೆ
೫) ಕಲ್ಪನಾ
ಚಾವ್ಲಾ = ಸಾಹಸಿ
ಪ್ರಶ್ನೆ
೪) ಕೆಳಗಿನ ಶಬ್ದಗಳನ್ನು ಸ್ವಂತವಾಕ್ಯದಲ್ಲಿ ಬಳಸಿರಿ.
೧) ಹವ್ಯಾಸ = ನನಗೆ ಚಿತ್ರ ತೆಗೆಯುವ ಹವ್ಯಾಸ ಇದೆ.
೨) ಬರಸಿಡಿಲು = ಧಾರಾಕಾರ ಮಳೆಯಲ್ಲಿ ಬರಸಿಡಿಲು
ಬೀದ್ದಿತು.
೩) ವೀರಗತಿ = ನಮ್ಮ ಸೈನಿಕರು ದೇಶಕ್ಕಾಗಿ ಮಾಡಿದು ವೀರಗತಿ
ಪ್ರಾಪ್ತಿಮಾಡಿಕೊಂಡರು.
೪) ಎದೆಗುಂದು = ಯಾವುದೇ ಸಂಕಟಗಳು ಬಂದರೂ ಎದೆಗುಂದಬಾರದು.
೫) ದಯ = ದಯವೇ ಧರ್ಮದ ಮೂಲವಯ್ಯಾ.
ಪ್ರಶ್ನೆ
೫)
ಕೆಳಗಿನ ಶಬ್ದಗಳಿಗೆ ಎರಡೆರಡು ಸಮಾನಾರ್ಥಕ ಶಬ್ದಗಳನ್ನು ಬರೆಯಿರಿ.
೧) ಕಂಗೊಳಿಸು= ಮಿಂಚು, ಹೊಳೆಯು
೨) ಹವ್ಯಾಸ =ಅಭ್ಯಾಸ, ರೂಢಿ
3) ದಂಪತಿ =ಗಂಡ-ಹೆಂಡತಿ, ಪತಿ-ಪತ್ನಿ
೪) ಲಿಂಗೈಕ್ಯ = ಮಡಿ, ಸಾಯು, ಅಸುನೀಗು
೫) ಆತ್ಮೀಯತೆ = ಸ್ನೇಹ, ಅಕ್ಕರೆ
ಉಪಕ್ರಮ
೧)
ಇತಿಹಾಸದಲ್ಲಿ ಆಗಿಹೋದ ಪ್ರಸಿದ್ಧ ರಾಜ-ರಾಣಿಯರ ಚರಿತ್ರೆಗಳನ್ನು ಓದಿರಿ.
೨) ರಾಜರ್ಷಿ ಶಾಹೂ ಮಹಾರಾಜರ ಆದರ್ಶ ಕುರಿತು ಕೋಲಾಜ
ತಯಾರಿಸಿರಿ.
ಸಾಹಸ
ಯಶಸ್ಸಿಗೆ ಪೂರಕ
**************************************************************
ವ್ಯಾಕರಣ
ಸರ್ವನಾಮ
ನಾಮಪದದ ಬದಲಾಗಿ
ಉಪಯೋಗಿಸುವ ಶಬ್ದಗಳಿಗೆ ಸರ್ವನಾಮ ಎನ್ನುವರು.
ಉದಾ - ನಾನು, ನಾವು ನೀನು, ನೀವು ಅವನ್ನು ಅವರಿ, ಅದು, ನಾವ
ಸರ್ವನಾಮದಲ್ಲಿ
ಪ್ರಕಾರಗಳು :-
೧) ಪುರುಷಾರ್ಥಕ
ಸರ್ವನಾಮ
೨) ಪ್ರಶ್ನಾರ್ಥಕ
ಸರ್ವನಾಮ
೩) ಆತ್ಮಾರ್ಥಕ
ಸರ್ವನಾಮ
೧) ಪುರುಷಾರ್ಥಕ
ಸರ್ವನಾಮ: ಮಾತನಾಡುವವರ ಹೆಸರಿನ ಬದಲಾಗಿ ಉಪಯೋಗಿಸುವ ಶಬ್ದಗಳಿಗೆ ‘ಪುರುಷಾರ್ಥಕ ಸರ್ವನಾಮ’ ಎನ್ನುವರು.
ಉದಾ : ನಾನು, ನಾವು ನೀನು, ನೀವು ಅವನು ಅವಳು, ಇತ್ಯಾದಿ
೨)
ಪ್ರಶ್ನಾರ್ಥಕ ಸರ್ವನಾಮ: ಪ್ರಶ್ನೆಗಳನ್ನು ಕೇಳುವ ಶಬ್ದಗಳಿಗೆ 'ಪ್ರಶ್ನಾರ್ಥಕ ಸರ್ವನಾಮ' ಎನ್ನುವರು.
ಉದಾ : ಏಕೆ, ಹೇಗೆ, ಯಾರು, ಏನು, ಎಲ್ಲಿ, ಯಾರು ಇತ್ಯಾದಿ.
೩)
ಆತ್ಮಾರ್ಥಕ ಸರ್ವನಾಮ: ಸ್ವಂತದ ಸಲುವಾಗಿ ಉಪಯೋಗಿಸಲ್ಪಡುವ
ಸರ್ವನಾಮಗಳಿಗೆ 'ಆತ್ಮಾರ್ಥಕ ಸರ್ವನಾಮ' ಗಳೆನ್ನುವರು.
ಉದಾ : ತಾನು, ತಾವು, ತನ್ನ ತಮ್ಮ ತನಗೆ ಇತ್ಯಾದಿ
9. ಪಕ್ಷಿಗಳು
ಶಬಗಳ ಅರ್ಥ :
ತೋಕೆ - ಗರಿ, ಪುಚ್ಚ; ವಿರಳ – ಅಪರೂಪ;
ಮುಸ್ಸಂಜೆ-
ಸೂರ್ಯಾಸ್ತದ ಸಮಯ.
ಸುರಂಗ - ನಲ ಅಥವಾ ಬೆಟ್ಟವನ್ನು ಕೊರೆದು ಮಾಡಿದ
ದಾರಿ,
ಅಭ್ಯಾಸ
ಪ್ರಶ್ನೆ
೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
೧) ಹೂಪೊ ಪಕ್ಷಿಯು
ಯಾವ ಬಣ್ಣವನ್ನು ಹೊಂದಿದೆ?
೨) ಹೂಪೊ ಪಕ್ಷಿಯ
ಗೂಡಿನಿಂದ ಏಕೆ ದುರ್ವಾಸನೆ ಬರುತ್ತದೆ?
3) ಕೋಡು ಗೂಬೆ ಎಂಬ ಹೆಸರು
ಏಕೆ ಬಂದಿತು?
೪) ಬ್ಯಾಕೆಟ್ ತೋಕೆಯ
ಡ್ರಾಂಗೂ ಹಕ್ಕಿಗಳು ಎಲ್ಲಿ ವಾಸಿಸುತ್ತವೆ?
೫) ಜಾಲಗಾರ ಹಕ್ಕಿಯು
ಹೇಗಿರುತ್ತದೆ ಎಂಬುದನ್ನು ಬಣ್ಣಿಸಿರಿ?
೬) ನೈಟಿ ಹರನ್
ಪಕ್ಷಿಗಳು ಎಲ್ಲಿ ವಿಶ್ರಾಂತಿ ಪಡೆಯುತ್ತವೆ?
ಪ್ರಶ್ನೆ
೨) ಹೊಂದಿಸಿ ಬರೆಯಿರಿ.
೧. ಹೂಪೊ ಅ) ತಂತಿಯಂತಿರುವ ಎರಡು ಗರಿಗಳು
೨. ಕೋಡು ಗೂಬೆ ಆ) ಗಟ್ಟಿಯಾದ ಮತ್ತು ಚೂಪಾದ ಕೆಂಪು ಬಣ್ಣದ
ಕೊಕ್ಕು
೩. ರಾಕೆಟ್ ತೋಕೆಯ
ಡ್ರಾಂಗೊ ಇ) ಉದ್ದವಾದ ಮತ್ತು
ಬಾಗಿದ ಕೊಕ್ಕು
೪. ನೈಟ್ ಹೆರನ್ ಈ) ಕೂದಲಿನ ದೊಡ್ಡ
ಕುಚ್ಚಗಳು
೫. ಜಾಲಗಾರ ಉ) ಉದ್ದವಾದ ಕಪ್ಪು-ಬಿಳಿ
ಜುಟ್ಟುಗಳು
ಉತ್ತರ:
( ೧ - ಇ, ೨ – ಈ, ೩ – ಅ, ೪ – ಉ, ೫ – ಆ)
ಪ್ರಶ್ನೆ
೩) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
1) ಸರ್ವನಾಮ ಎಂದರೇನು?
2) ಸರ್ವನಾಮದ ಪ್ರಕಾರಗಳು ಯಾವವು?
3) ತಾನು,
ಏಕೆ – ಈ ಶಬ್ದಗಳ ಸರ್ವನಾಮ ಪ್ರಕಾರ ಗುರುತಿಸಿರಿ.
ಉಪಕ್ರಮ:
ನಿಮ್ಮ
ಪರಿಸರದಲ್ಲಿ ಕಂಡುಬರುವ ಪಕ್ಷಿಗಳನ್ನು ಸೂಕ್ಷ್ಮವಾಗಿ ನಿರೀಕ್ಷಣೆ ಮಾಡಿರಿ, ಅವುಗಳಲ್ಲಿ ಕಂಡುಬರುವ
ವೈವಿಧ್ಯತೆಗಳ ಪಟ್ಟಿ ಮಾಡಿರಿ.
ನಿಸರ್ಗವೇ ದೇವರು
10.
ಬದುಕಿನ ಪಾಠ (ಕವಿತೆ)
-ಕಿಗ್ಗಾಲು ಎಸ್. ಗಿರೀಶ್
ಶಬ್ದಗಳ ಅರ್ಥ
ಕಾಳಜಿ – ಎಚ್ಚರಿಕೆ ; ಕಜ್ಜ – ಕಾರ್ಯ
ಮೋದ - ಸಂತೋಷ :
ಬಯಸು - ಇಷ್ಟಪಡು.
ಬಾಳು – ಜೀವನ : ಕಾಲ - ಸಮಯ :
ಪ್ರಶ್ನೆ
೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
೧). ಕವಿಯು ಯಾವ
ಸೂತ್ರವನ್ನು ಹೇಳಲು ಬಯಸುತ್ತಾನೆ?
ಉತ್ತರ: ಕವಿಯು ಬಾಳನ್ನು ಬೆಳಗಲು ಮತ್ತು ನಾಳೆಯ ದಿನವನ್ನು ಸುಂದರಗೊಳಿಸಲು ಯಾವ ಕಾಳಜಿ ವಹಿಸಬೇಕು ಎಂಬ ಸೂತ್ರವನ್ನು ಹೇಳಲು ಬಯಸುತ್ತಾನೆ.
೨) ನಾವು ಹೇಗೆ ಬಾಳಬೇಕು?
ಉತ್ತರ: ಓದು ಬರಹ
ಕಲಿತು ಗೆಳೆಯರಿಗೆ ಮಾದರಿಯಾಗಿ ಬದುಕಬೇಕು ಮತ್ತು ಹಿರಿಯರ ಜೊತೆಗೆ ವಾದ ಮಾಡದೆ ಪ್ರತಿಕ್ಷಣವೂ
ಆನಂದದಿಂದ ಬಾಳಬೇಕು
೩) ನಮ್ಮ ಬದುಕಿನಿಂದ
ಸೋಲನ್ನು ಹೇಗೆ ಓಡಿಸಬೇಕು?
ಉತ್ತರ: ಪಾಲಕರ ಆಜ್ಞೆಯನ್ನು
ಶಿರಸಾ ವಹಿಸಬೇಕು,
ಎಂದಿಗೂ ಸಾಲವನ್ನು ಮಾಡಬಾರದು. ಸಾಲ ಮಾಡಿ ಬಲಳದೆ ಕಾಲಕ್ಕೆ ಸರಿಯಾಗಿ ಕೆಲಸವನ್ನು(ಕಜ್ಜ) ಮಾಡಿ ಬದುಕಿ
ಸೋಲನ್ನು ನಮ್ಮ ಬದುಕಿನಿಂದ ಓಡಿಸಬೇಕು.
ಉತ್ತರ: ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವಂತೆ ಮಾತಾಡುವ ಮುಂಚೆ ಮನದಲ್ಲಿ ಯೋಚಿಸಬೇಕು. ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕು. ಮಾತು ಇತಿಮಿತಿಯಲ್ಲಿ ಆಡಬೇಕು. ಮಾತಿನ ಗುಲಾಮನಾಗಬಾರದು. ಅಂದರೆ ಮಾತಿನ ಮಲ್ಲ ಎನಿಸಿಕೊಳ್ಳಬಾರದು.
೫) ಬಾಳಿನ ಸೊಗಸು ಯಾವುದರಲ್ಲಿದೆ?
ಉತ್ತರ: ದೊರಕದೆ ಇದ್ದ ವಸ್ತುವಿಗೆ ಆಸೆ ಪಡದೇ ಇದ್ದುದ್ದರಲ್ಲಿಯೇ ಸಮಾಧಾನಿಯಾಗಿರಬೇಕು. ಇದರಲ್ಲಿಯೇ ಬಾಳಿನ ಸೊಗಸು ಇರುವುದು.
ಪ್ರಶ್ನೆ ೨) ಕವಿತೆಯ ಬಿಟ್ಟ ಸಾಲುಗಳನ್ನು ಪೂರ್ಣ ಮಾಡಿರಿ
ಮಾತಿಗೆ ಮುನ್ನವೆ ಮನದಲಿ ಯೋಚಿಸಿ
ಮಾತನು ಕೊಟ್ಟರೆ
ಅದನುಳಿಸಿ
ಇತಿಮಿತಿಯಲಿ
ಮಾತನು ಹೇಳಿರಿ
ಮಾತಿನ ಗುಲಾಮ ಎನಿಸದಿರಿ.
ಪ್ರಶ್ನೆ
೩) - ಕೆಳಗಿನ ಶಬ್ದಗಳನ್ನು ವಾಕ್ಯಗಳಲ್ಲಿ ಬಳಸಿರಿ.
೧) ಸುಂದರ = ಊರಿನ ಹೂದೋಟ ಸುಂದರವಿದೆ.
೨) ಮಾದರಿ = ಉರಿಗೊಂದು ಮಾದರಿ ಶಾಲೆ ಇರಬೇಕು.
೩) ಸೊಗಸು = ನನಗೊಂದು ಸೊಗಸಾದ ಕನಸು ಬೀದ್ದಿತು.
೪) ಬಯಸು = ನಾನು ಪೋಲಿಸ ಅಧಿಕಾರಿಯಾಗಬಯಸುತ್ತೇನೆ.
ಸಜ್ಜನರ ಸಂಗ
ಹೆಚ್ಚೇನು ಸವಿದಂತೆ
**************************************************************
11. ಪತ್ರಲೇಖನ
ಶಬ್ದಗಳ ಅರ್ಥ
ಓಲೆ – ಪತ್ರ ವಿಶ್ಮಯ – ಅದ್ಭುತ ರಮಣೀಯ – ಸುಂದರವಾದ
ತಾಣ – ಸ್ಥಾನ ವಿಸ್ತಾರ – ಅಗಲ ಪಾರ – ದಡ, ದಂಡೆ
ಅಭ್ಯಾಸ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ಪುಣೆ ನಗರಕ್ಕೆ
ಏನೆಂದು ಕರೆಯುವರು?
ಉತ್ತರ: ಪುಣೆ
ನಗರಕ್ಕೆ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಮತ್ತು ಶಿಕ್ಷಣದ ತವರುಮನೆ ಎಂದು ಕರೆಯುವರು.
(ಆ) ಶನಿವಾರವಾಡಾ
ಅರಮನೆಯನ್ನು ಯಾರು ಕಟ್ಟಿಸಿದರು?
ಉತ್ತರ: ಕ್ರಿ.ಶ.
೧೭೩೦ರಲ್ಲಿ ಮೊದಲನೆಯ ಬಾಜೀರಾವನು ಶನಿವಾರವಾಡಾ ಅರಮನೆಯನ್ನು ಕಟ್ಟಿಸಿದರು.
(ಇ) ವಿಶ್ರಾಮಬಾಗವಾಡಾ
ಯಾವ ಕಥೆಯನ್ನು ಹೇಳುತ್ತದೆ?
ಉತ್ತರ: ವಿಶ್ರಾಮಬಾಗವಾಡಾ ಇದು ಪುಣೆಯ ಶ್ರೀಮಂತ ಸಂಸ್ಕೃತ ಹಾಗೂ ಪರಂಪರೆಗಳ ಕಥೆಯನ್ನು ಹೇಳುತ್ತದೆ
(ಈ) ಶಿಂಧೆಛತ್ರಿಯಲ್ಲಿ ಯಾರ ಸಮಾಧಿಯಿದೆ?
ಉತ್ತರ: ಶಿಂದೆಛತ್ರಿಯಲ್ಲಿ
ಛತ್ರಪತಿ ಮಹದೋಜಿ ಶಿಂಧೆಯವರ ಸಮಾಧಿಯಿದೆ.
(ಉ) ಭಾರತದ
ಸ್ವಾತಂತ್ರ್ಯ ಚಳುವಳಿಯ ರಾಷ್ಟ್ರೀಯ ಸ್ಮಾರಕ ಯಾವುದು?
ಉತ್ತರ: ಅಗಾಖಾನ
ಅರಮನೆಯು ಭಾರತದ ಸ್ವಾತಂತ್ರ್ಯ
ಚಳುವಳಿಯ ರಾಷ್ಟ್ರೀಯ ಸ್ಮಾರಕವಾಗಿದೆ.
(ಊ) ಕಾತ್ರಜ ಸರ್ಪೊದ್ಯಾನದಲ್ಲಿ ನೀವು ಏನು ಕಾಣುವಿರಿ?
ಉತ್ತರ: ಕಾತ್ರಜ ಸರ್ಪೊದ್ಯಾನದಲ್ಲಿ ವಿವಿಧ ಜಾತಿಗಳ, ಬಣ್ಣ-ಬಣ್ಣಗಳ, ಸಣ್ಣ-ದೊಡ್ಡ ಗಾತ್ರಗಳ ಆಕಾರಗಳುಳ್ಳ ಅನೇಕ ಪ್ರಕಾರದ ಜೀವಂತ ಹಾವುಗಳನ್ನು ಕಾಣುವೆವು.
ಪ್ರಶ್ನೆ
(೨) ಹೊಂದಿಸಿ ಬರೆಯಿರಿ.
(೧) ಪರ್ವತಿ (ಅ) ದೇವಾಲಯದ ಸುಂದರ ವಾಸ್ತುಶಿಲ್ಪ
(೨) ಸಾರಸಭಾಗ ಆ) ವಿವಿಧ ಪ್ರಕಾರಗಳ ಹಾವುಗಳು
(೩) ಕಾತ್ರಜ ಸರ್ಪೋದ್ಯಾನ (ಇ) ರಮಣೀಯ ಬೆಟ್ಟ
(೪) ಶಿಂಧೆಛತ್ರಿ (ಈ) ಕಸ್ತೂರಬಾ ಗಾಂಧಿಯವರ ಸಮಾಧಿ
(೫) ಆಗಾಖಾನ ಅರಮನೆ (ಉ) ಸಿದ್ಧಿವಿನಾಯಕ ಮಂದಿರ
ಉತ್ತರಗಳು: ೧ - ಇ, ೨ - ಉ , ೩ – ಆ, ೪ – ಅ, ೫ - ಈ
ಪ್ರಶ್ನೆ
(೩) ಬಿಟ್ಟ ಸ್ಥಳ ತುಂಬಿರಿ.
(ಆ) ಇತ್ತೀಚಿಗೆ
ಪುಣೆಯು ಮಾಹಿತಿ
ತಂತ್ರಜ್ಞಾನದ ಪಟ್ಟಣವೆಂದು ಅಭಿವೃದ್ಧಿಯಾಗುತ್ತಿದೆ.
(ಆ) ಪುಣೆಯಲ್ಲಿ ಪರ್ವತಿ ಎಂಬ ಹೆಸರಿನ ಅತ್ಯಂತ ರಮಣೀಯ ಬೆಟ್ಟವಿದೆ.
(ಇ) ಶಿಂದೆಛತ್ರಿ ಸ್ಥಳವು ಕೊಂಡವಾದಲ್ಲಿ ಇದೆ.
ಈ)ಆಗಾಖಾನ ಅರಮನೆಯು ಭಾರತದ ಸ್ವಾತಂತ್ರ್ಯ ಚಳುವಳಿಯ ರಾಷ್ಟ್ರೀಯ
ಸ್ಮಾರಕವಾಗಿದೆ.
ಉಪಕ್ರಮ:
ನೀವು
ಕೈಗೊಂಡ ಪ್ರವಾಸ ಕುರಿತು ನಿಮ್ಮ ಗೆಳೆಯ/ಗೆಳತಿಗೆ ಪತ್ರ ಬರೆಯಿರಿ.
ಪ್ರೀತಿಯ ಗೆಳೆಯ ರಾಜು,
ನಾನು ಚೆನ್ನಾಗಿ
ಇದ್ದೇನೆ. ನಿನ್ನ ಪತ್ರ ತಲುಪಿತು. ನೀನು ಆರಾಮವಾಗಿರುವೆ ಮತ್ತು ನಿನ್ನ ಅಭ್ಯಾಸ ಸರಿಯಾಗಿ
ನಡೆದಿದೆ ಎಂಬುದನ್ನು ಓದಿ ನನಗೆ ಸಂತೋಷವೆನಿಸಿತು.
ಗೆಳೆಯ ರಾಜು, ನಿನಗೆ ಗೊತ್ತೇ? ನಮ್ಮ
ಶಾಲೆಯ ಶೈಕ್ಷಣಿಕ ಪ್ರವಾಸ ವಿಜಯಪುರ, ಆಲಮಟ್ಟಿ ಹಾಗೂ ಕೂಡಲಸಂಗಮಕ್ಕೆ
ಹೋಗಿತ್ತು. ನಾವೆಲ್ಲ ಸ್ನೇಹಿತರು ನಮ್ಮ ಗುರುಗಳ ಜೊತೆಗೆ ಬಹಳ ಮೌಜು ಮಾಡಿದೆವು. ವಿಜಯಪುರದಲ್ಲಿ
ಗೋಳಗುಮ್ಮಟ ನೋಡಿದೆವು. ಆಲಮಟ್ಟಿ ಗಾರ್ಡನ್ದಲ್ಲಿ ಬಹಳ ಆಟ ಆಡಿದೇವು. ರಾತ್ರಿ ಸಂಗೀತ ಕಾರಂಜಿ
ಚೆನ್ನಾಗಿ ಇತ್ತು. ನೀನು ಬಂದಿದೆಯಾದರೆ ನೀನೂ ಇವುಗಳನ್ನು ನೋಡಿ ಆನಂದಿತನಾಗುತ್ತಿದ್ದೆ. ಇರಲಿ, ಮೇ ತಿಂಗಳ ಸೂಟಿಯಲ್ಲಿ ಊರಿಗೆ ಬಾ. ಅಮ್ಮ ಅಪ್ಪ ಇವರಿಗೆ ಹೇಳಿ ನಾವು ಪ್ರವಾಸದ
ನಿಯೋಜನೆ ಮಾಡೋಣ.
ಮತ್ತೇ ಭೇಟಿಯಾಗೋಣ.
ಇಂತಿ
ನಿನ್ನ ಗೆಳೆಯ,
ಪ್ರವೀಣ
ವೃತ್ತಪತ್ರ
ಎಲ್ಲರ ಮಿತ್ರ
**************************************************************
ವ್ಯಾಕರಣ
ವಾಕ್ಯ: ಪೂರ್ಣವಾದ ಅರ್ಥವನ್ನು ಕೊಡುವ ಶಬ್ದಗಳ
ಸಮೂಹಕ್ಕೆ ವಾಕ್ಯ ಎಂದು ಕರೆಯುವರು.
ಸಕರ್ಮಕ
ವಾಕ್ಯ : ಯಾವ ವಾಕ್ಯದಲ್ಲಿ
ಕರ್ಮಪದ ಇರುತ್ತದೆಯೋ ಅದು ಸಕರ್ಮಕ
ವಾಕ್ಯ.
ಉದಾ : ಹಸುವು ನೀರನ್ನು
ಕುಡಿಯುತ್ತದೆ.
ಗೋವಿಂದನು ಪುಸ್ತಕವನ್ನು ಓದುತ್ತಾನೆ.
ಆದ್ದರಿಂದ ಈ
ವಾಕ್ಯಗಳು 'ಸಕರ್ಮಕ ವಾಕ್ಯ'ಗಳಾಗಿವೆ.
ಮೇಲಿನ ವಾಕ್ಯದಲ್ಲಿ
ಗೆರೆಹೊಡೆದ ಶಬ್ದಗಳು ಕರ್ಮಪದಗಳಾಗಿವೆ.
ಅಕರ್ಮಕ
ವಾಕ್ಯ : ಯಾವ ವಾಕ್ಯದಲ್ಲಿ
ಕರ್ಮಪದ ಇರುವುದಿಲ್ಲವೋ ಅದು ಅಕರ್ಮಕ ವಾಕ್ಯ.
ಉದಾ: ಅವನಿಗೆ ದೊರಕಿತು.
ಕೋಗಿಲೆ
ಕೂಗಿತು.
12. ಸರಕಾರಿ ಬಸ್ಸಿನ ಆತ್ಮಕಥೆ
ಶಬ್ದಗಳ ಅರ್ಥ:
ಆಶಾಕಿರಣ = ನಂಬಿಕೆಯ
ಸ್ಥಾನ
ರಿಯಾಯಿತಿ = ಸವಲತ್ತು;
ಮೊಹರು= ಗುರುತು
ಜಾಯಮಾನ = ಪದ್ಧತಿ;
ಜನಾರ್ಧನ = ದೇವರು
ನಿರ್ಗಮನ = ಹೊರಗೆ
ಹೋಗುವ ದಾರಿ
ಅಗ್ನಿಶಾಮಕ = ಬೆಂಕಿಯನ್ನು
ಆರಿಸುವ
ನಿಲ್ದಾಣ = ಬಸ್ಸು ನಿಲ್ಲುವ ಸ್ಥಳ,
ಧೂಮ್ರ = ಹೊಗೆ
ಯೋಗಕ್ಷೇಮ = ಕಾಳಜಿ;
ಕಣ್ಮಣಿ = ಹೆಗ್ಗಳಿಕೆ
;
ಅಭ್ಯಾಸ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(ಆ) ಇಂದಿನ ಗಡಿಬಿಡಿ ಜೀವನದಲ್ಲಿ ಏನು
ಕಾಣೆಯಾಗಿದೆ?
ಉತ್ತರ: ಇಂದಿನ ಗಡಿಬಿಡಿ ಜೀವನದಲ್ಲಿ ಸುಖಕರ ಹಾಗೂ ಸುರಕ್ಷಿತ ಪ್ರವಾಸವು ಕಾಣೆಯಾಗಿದೆ.
(ಬ) ಇಂದಿನ ಪ್ರವಾಸಿಗರಲ್ಲಿ ಯಾವ ಭರವಸೆ ಇಲ್ಲ?
ಉತ್ತರ: ಇಂದಿನ ಪ್ರವಾಸಿಗರಲ್ಲಿ ಪ್ರವಾಸದಲ್ಲಿ ಇರುವವರು ಮರಳಿ ಮನೆಗೆ
ಬರುತ್ತಾರೆ ಎಂಬ ಭರವಸೆ ಇಲ್ಲವಾಗಿದೆ.
(ಕ) ಬಸ್ಸಿನಲ್ಲಿ ಯಾರ
ಸಲುವಾಗಿ ಆರಕ್ಷಿತ ಆಸನಗಳಿರುತ್ತವೆ?
ಉತ್ತರ:
ಬಸ್ಸಿನಲ್ಲಿ ಮಹಿಳೆಯರಿಗೆ,
ಅಂಗವಿಕಲರಿಗೆ, ಜನ ಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ಆರಕ್ಷಿತ
ಆಸನಗಳಿರುತ್ತವೆ.
(ಡ) ಬಸ್ಸು ಯಾರ
ಮೆಚ್ಚುಗೆಯ ಮಗುವಾಗಿದೆ?
ಉತ್ತರ: ಬಸ್ಸು ಜನತೆಯ ಹಾಗೂ ಸರಕಾರದ ಮೆಚ್ಚುಗೆಯ ಮಗುವಾಗಿದೆ.
(ಇ) ಬಸ್ಸಿನಲ್ಲಿ ಏನನ್ನು ಸಾಗಿಸಲು
ನಿಷೇಧಿಸಲಾಗಿದೆ?
ಉತ್ತರ: ಬಸ್ಸಿನಲ್ಲಿ
ಪ್ರವಾಸಿಗರಿಗೆ ಇಂಧನ ಇಲ್ಲವೇ ಸ್ಫೋಟಕ ವಸ್ತುಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ.
ಪ್ರಶ್ನೆ
(೨) ಕೆಳಗಿನ ಪ್ರಶ್ನೆಗಳಿಗೆ
ಮೂರರಿಂದ ನಾಲ್ಕು ಸಾಲುಗಳಲ್ಲಿ ಉತ್ತರ ಬರೆಯಿರಿ.
(ಅ) ಬಸ್ಸಿನಲ್ಲಿ ಎಂತಹ ಪ್ರವಾಸಿಗರಿಗೆ
ಪ್ರವಾಸದರದಲ್ಲಿ ರಿಯಾಯಿತಿ ಉಂಟು?
ಬಸ್ಸಿನ ಕೆಲವು
ವೈಶಿಶ್ಟ್ಯೆಗಳಿವೆ. ಬಸ್ಸಿನಲ್ಲಿ ಮಹಿಳೆಯರಿಗೆ, ಅಂಗವಿಕಲರಿಗೆ, ಜನ
ಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ಆರಕ್ಷಿತ ಆಸನಗಳಿರುತ್ತವೆ. ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ವಿಕಲಾಂಗರಿಗೆ ಪ್ರವಾಸದರದಲ್ಲಿ ರಿಯಾಯಿತಿ ಉಂಟು.
(ಆ) ಬಸಿನ ಹೊಣೆಗಾರಿಕೆ ಯಾವುದು?
ಉತ್ತರ: ಬಸ್ಸು
ಜನತೆಯ ಹಾಗೂ ಸರಕಾರದ ಮೆಚ್ಚುಗೆಯ ಮಗುವಾಗಿದೆ. ಪ್ರಸಂಗದಲ್ಲಿ ಪ್ರಥಮೋಪಚಾರ, ಆಪತ್ತಿನಲ್ಲಿ ತುರ್ತು
ನಿರ್ಗಮನ ವ್ಯವಸ್ಥೆಯೂ ಬಸ್ಸಿನಲ್ಲಿದೆ. ಬಸ್ಸಿಗೆ ಆಗಾಗ ಶಾಲಾ ಮಕ್ಕಳ ಪ್ರವಾಸ, ವಿವಾಹ ಮುಂತಾದ ಸಮಾರಂಭಗಳಿಗೂ ಹೋಗುವುದು. ಊರಿಂದೂರಿಗೆ ಅಂಚೆ ಚೀಲಗಳನ್ನು ಒಯ್ಯುವ, ಚುನಾವಣೆಯ ವೇಳೆಯಲ್ಲಿ ಮತಪೆಟ್ಟಿಗೆಗಳನ್ನು ತಲುಪಿಸುವ ಹೊಣೆಗಾರಿಕೆ ಬಸ್ಸಿಗೆ
ಇರುತ್ತದೆ.
(ಇ) ಬಸ್ಸಿನ
ಬದಲಾಗುತ್ತಿರುವ ರೂಪಗಳು ಯಾವುವು?
ಉತ್ತರ: ಬಸ್ಸಿನ
ಬದಲಾಗುತ್ತಿರುವ ರೂಪಗಳಲ್ಲಿ ನಗರದ ರಂಗುರಂಗಿನ ಸಿಟಿಬಸ್ಸು, ಹಸಿರು ಬಣ್ಣದ ಎಷಿಯಾಡ್ ಬಸ್ಸು, ಹವಾನಿಯಂತ್ರಿತ ಬಸ್ಸು ಹೀಗೆ ದಿನದಿಂದ ದಿನಕ್ಕೆ ಬಸ್ಸಿನ ರೂಪ ಬದಲಾಗುತ್ತಿದೆ.
ಬಸ್ಸಿನ ಸೇವೆಯನುಸಾರವಾಗಿ ಅದಕ್ಕೆ ‘ಶಿವನೇರಿ’, ‘ಹೀರಕಣಿ’ ಎಂಬ ಹೆಸರಿಂದ ಜನರು
ಗುರುತಿಸುವರು. ಕರ್ನಾಟಕದಲ್ಲಿ ಕನ್ನಡ ಕವಿಗಳ, ಲೇಖಕರ ಹೆಸರು ಬಸ್ಸಿಗೆ
ಇಟ್ಟಿರುತ್ತಾರೆ.
(ಈ) ಅಪಘಾತ ವಿಮಾ ಯೋಜನೆಯ ಮಹತ್ವವೇನು ?
ಉತ್ತರ: ಬಸ್ಸಿಗೆ ಆಕಷ್ಮಿಕವಾಗಿ
ಅಪಘಾತ ಸಂಭವಿಸಿದಲ್ಲಿ “ಪ್ರವಾಸಿಗರ ಅಪಘಾತ ವಿಮಾಯೋಜನೆ” ಅಡಿಯಲ್ಲಿ ಸಾರಿಗೆ ಸಂಸ್ಥೆಯು ಆರ್ಥಿಕ
ಸಹಾಯಗೈದು ಪ್ರವಾಸಿಗರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ.
(ಉ) ಬಸ್ಸು ಯಾವುದು
ತನ್ನ ಭಾಗ್ಯವೆಂದು ಹೇಳುತ್ತದೆ ?
ಉತ್ತರ: ಬಸ್ಸು
ಜನರ ಹಾಗೂ ಸರಕಾರದ ಸೇವೆಯಲ್ಲಿ ಇರುವಷ್ಟು ಕಾಲ ಜನರ, ಸಂಸ್ಥೆಯ ಹಾಗೂ ಸರಕಾರದ ಕಣ್ಮಣಿಯಾಗಿ ಜೀವನ
ಕಳೆಯಿತು ಅದನ್ನು ತನ್ನ ಭಾಗ್ಯ ಎಂಬು ಬಸ್ಸು ಹೇಳುತ್ತದೆ.
ಪ್ರಶ್ನೆ
(೩) ಟಿಪ್ಪಣಿ ಬರೆಯಿರಿ.
(೧) ಬಸ್ಸಿನ
ಪ್ರವಾಸಿಗರಿಗಾಗಿ ಇರುವ ನಿರ್ಬಂಧನೆಗಳು
ಉತ್ತರ: 1. ಬಸ್ಸಿನಲ್ಲಿ ಇಂಧನ ಇಲ್ಲವೇ ಸ್ಫೋಟಕ ವಸ್ತುಗಳನ್ನು
ಸಾಗಿಸುವುದನ್ನು ನಿಷೇಧಿಸಲಾಗಿದೆ. 2. ಪ್ರವಾಸಿಗರಿಗೆ ತೊಂದರೆಯುಂಟುಮಾಡುವ ಯಾವುದೇ ಅಹಿತಕರ
ಘಟನೆ ನಡೆಯದಂತೆ ಪ್ರವಾಸಿಗರು ನೋಡಿಕೊಳ್ಳಬೇಕು. 3. ಟಿಕೇಟು ಇಲ್ಲದೆ ಪ್ರವಾಸ ಮಾಡಬಾರದು. 4.
ಸೀಟಿನ ಮೇಲೆ, ಹಿಂದುಗಡೆ ಗೀಚುವುದು, ಹೆಸರು ಬರೆಯುವದನ್ನು
ಮಾಡಬಾರದು. 5. ವಾಹನ ಚಲಿಸುವಾಗ ಚಾಲಕರೊಂದಿಗೆ ಮಾತನಾಡಬಾರದು.
(೨) ಬಸ್ಸಿನಲ್ಲಿ ಕಂಡುಬರುವ ಸೂಚನೆಗಳು.
ಉತ್ತರ: 1.
ಸಾಲಾಗಿ ಬಸ್ಸು ಹತ್ತಿರಿ. 2. ಟಿಕೆಟ್ ಇಲ್ಲದ ಪ್ರಯಾಣ, ದಂಡಕ್ಕೆ ಆಹ್ವಾನ. 3. ವಾಹನ ಚಲಿಸುವಾಗ
ಚಾಲಕರೊಂದಿಗೆ ಮಾತನಾಡಬಾರದು. 4.
ಚಲಿಸುತ್ತಿರುವ ಬಸ್ಸಿನಿಂದ ಇಳಿಯುವುದಾಗಲಿ, ಹತ್ತುವುದಾಗಲಿ ಮಾಡಬೇಡಿ.
5. ವಯೋವೃದ್ಧರಿಗೆ, ಮಹಿಳೆಯರಿಗೆ,
ವಿಕಲಾಂಗರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಿರಿ. 6. ಚಲಿಸುವ ಬಸ್ಸಿನಿಂದ ನಿಮ್ಮ
ಕೈ-ತಲೆಗಳನ್ನು ಹೊರಗೆ ಚಾಚಬೇಡಿರಿ. 7. ಹನ್ನೆರಡು ವರ್ಷ ಪೂರ್ಣವಾದ ಮಕ್ಕಳು ಪೂರ್ಣ ಟಿಕೇಟು
ತೆಗೆದುಕೊಳ್ಳಬೇಕು.
ಪ್ರಶ್ನೆ
(೪)
ಕೆಳಗಿನ ಪ್ರಸಂಗಗಳಲ್ಲಿ ನೀವು ಏನು ಮಾಡುವಿರಿ? ಎಂಬುದನ್ನು
ಬರೆಯಿರಿ.
(ಅ) ಚಲಿಸುವ ಬಸ್ಸಿನಿಂದ ನಿಮಗೆ ಇಳಿಯಬೇಕಾಗಿದೆ.
ಉತ್ತರ: ಚಲಿಸುವ ಬಸ್ಸಿನಿಂದ ಕೆಳಗೆ ಇಳಿಯುವುದು ಅಪಾಯಕಾರಿ. ಆದ್ದರಿಂದ
ಚಲಿಸುವ ಬಸ್ಸಿನಿಂದ ಕೆಳಗೆ ಇಳಿಯದೇ ಬಸ್ಸು ನಿಲ್ಲಿಸಿ ಇಳಿಯುವೆ.
(ಆ) ಬಸ್ಸಿನಲ್ಲಿ ವಯೋವೃದ್ಧರೊಬ್ಬರು ಸೀಟು ಸಿಗದೇ ಎದ್ದು
ನಿಂತುಕೊಂಡೇ ಪ್ರವಾಸ
ಮಾಡುತ್ತಿದ್ದಾರೆ.
ಉತ್ತರ: ವಯೋವೃದ್ಧರು ಸೀಟು ಸಿಗದೇ ಬಸ್ಸಿನಲ್ಲಿ ಎದ್ದು ನಿಂತುಕೊಂಡು ಪ್ರವಾಸ
ಮಾಡುತ್ತಿರಲು ನಾನು ಅವರಿಗೆ ಸೀಟು ಬಿಟ್ಟು ಕೊಡುವೆನು.
(ಇ) ಕುರುಡ ಪ್ರವಾಸಿಗನೊಬ್ಬನಿಗೆ ಟಿಕೇಟ್ ತೆಗೆಯಬೇಕಾಗಿದೆ.
ಉತ್ತರ: ಕುರುಡ ಪ್ರವಾಸಿ
ಕಂಡಕ್ಟರನಿಗೆ ಹಣ ನೀಡುವುದರಲ್ಲಿ ಸಹಾಯ ಮಾಡಿ ಟೀಕೆಟ್ ಪಡೆದುಕೊಳ್ಳುವೆ.
(ಈ) ಶಾಲಾ ಬಾಲಕನೊಬ್ಬ ಬಸ್ ಪಾಸನ್ನು ಬಿಟ್ಟು ಬಸ್ಸು ಹತ್ತಿದ್ದಾನೆ.
ಉತ್ತರ: ಶಾಲಾ ಬಾಲಕ
ಕಂಡಕ್ಟರ ಇವರಿಗೆ ಗುರುತಿನವ ಇದ್ದರೆ ಬಸ್ ಪಾಸ್ ಇರುವುದರ ಬಗ್ಗೆ ಕಲ್ಪನೆ ಇರುವುದು. ಗುರುತಿನವ ಇಲ್ಲದಿದ್ದರೆ
ನಾನು ಆ ಬಾಲಕ ದಿನಾಲು ಶಾಲೆಗೆ ಬರುತ್ತಿದ್ದು ಅವನ ಹತ್ತಿರ ಪಾಸ್ ಇರುವುದರ ಬಗ್ಗೆ ಮನವರಿಕೆ ಮಾಡಿಕೊಡುವೆನು.
(ಉ) ಪ್ರವಾಸಿಗರೊಬ್ಬರು ಬಸ್ಸಿನಲ್ಲಿ ಪೆಟ್ರೋಲ್ ಸಾಗಿಸುತ್ತಿದ್ದಾರೆ.
ಉತ್ತರ: ಡಿಜೇಲ್, ಪೆಟ್ರೋಲ್, ರಾಕೇಲ್ ಮುಂತಾದ
ಜ್ವಲನಶೀಲ ಪದಾರ್ಥಗಳು ಬಸ್ಸಿನಲ್ಲಿ ಸಾಗಿಸಬಾರದು. ಅದರ ಬಗ್ಗೆ ಪ್ರವಾಸಿಗೆ ತಿಳಿಸಿ ಹೇಳುವೇನು. ಬಸ್ಸ್
ಕಂಡಕ್ಟರ್ ಇವರ ಗಮನಕ್ಕೂ ತಂದು ಕೊಡುವೆನು.
(ಊ) ನೀವು ಬಸ್ಸಿನಲ್ಲಿ ಅರ್ಧಟಿಕೇಟ್ ತೆಗೆದುಕೊಳ್ಳುವಿರೋ ಇಲ್ಲವೆ
ಪೂರ್ಣ
ಟಿಕೇಟ್
ತೆಗೆದುಕೊಳ್ಳುವಿರೋ?
ಉತ್ತರ: ನಾನು 5ನೇ ತರಗತಿಯ ಬಾಲಕ/ಬಾಲಕಿ ಆಗಿರುವುದರಿಂದ 12 ವರ್ಷಕ್ಕಿಂತ ಕಡಿಮೆ ವಯಸ್ಸಿದೆ. ಆದ್ದರಿಂದ ನಾನು ಅರ್ಧ ಟೀಕೆಟ್ ತೆಗೆದುಕೊಳ್ಳುವೆ.
ಪ್ರಶ್ನೆ (೫) (ಅ) ಬಿಟ್ಟ ಸ್ಥಳಗಳಲ್ಲಿ ಯೋಗ್ಯ ಶಬ್ದ ತುಂಬಿ ವಾಕ್ಯ ಪೂರ್ಣ ಮಾಡಿರಿ.
(ಅ) ನನ್ನದು ವೇಳೆಗೆ
ಸರಿಯಾಗಿ ಕೆಲಸ ಮಾಡುವ ಜಾಯಮಾನ.
(ಆ) ನನ್ನಲ್ಲಿ ಪ್ರವಾಸಿಗರು ಟಿಕೆಟ್
ರಹಿತ ಪ್ರವಾಸ ಮಾಡುವಂತಿಲ್ಲ.
(ಇ) ಪ್ರಮಾಣಿಕ ಪ್ರವಾಸಿಗರೇ ನನ್ನ ಹೆಗ್ಗುರುತು.
(ಈ) ಚಲಿಸುವ ಬಸ್ಸಿನಿಂದ ನಿಮ್ಮ
ಕೈ-ತಲೆಗಳನ್ನು ಹೊರಗೆ ಚಾಚಬೇಡಿ.
(ಉ) ನಾನು ಕಂಪನಿಯಿಂದ ಡೆವೋಕ್ಕೆ ಪ್ರವೇಶಿಸುತ್ತಿದ್ದಂತೆಯೇ ನನಗೆ ಮದುಮಕ್ಕಳಂತೆ
ಸಿಂಗಾರ ಕಾದಿತ್ತು.
(ಊ) ಆ ಹುಮ್ಮಸ್ಸಿನಲ್ಲಿ ಬಹುಕಾಲ ಹಗಲಿರುಳು ದುಡಿದು ನಾನು
ಸರಕಾರದ ಬೊಕ್ಕಸ ತುಂಬಿದ.
(ಬ) ಕೆಳಗಿನ ಪಡೆನುಡಿಗಳನ್ನು ನಿಮ್ಮ ಸ್ವಂತವಾಕ್ಯಗಳಲ್ಲಿ
ಉಪಯೋಗಿಸಿರಿ.
(೧) ಮೆಲುಕುಹಾಕು – ಚಿಂತನೆ ಮಾಡು=
ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸಿದರೆ ಅಭ್ಯಾಸವನ್ನೆಲ್ಲ ಮೆಲುಕು ಹಾಕುತ್ತಾರೆ.
(೨) ಕಣ್ಮಣಿಯಾಗು – ನಾಯಕನು ನಮ್ಮೆಲ್ಲರ ಕಣ್ಮಣಿಯಾಗಿದ್ದಾರೆ.
(೩) ಮನಸೆಳೆ –ಹೂವು ಎಲ್ಲರ ಮನ ಸೆಳೆಯಿತು.
ಪ್ರಶ್ನೆ
(೬) ಈ
ಕೆಳಗಿನ ವಾಕ್ಯಗಳಲ್ಲಿ ಅಕರ್ಮಕ, ಸಕರ್ಮಕ ವಾಕ್ಯಗಳನ್ನು ಗುರುತಿಸಿರಿ.
(೧) ಭೀಮನು ಆಟವನ್ನು ಆಡುತ್ತಾನೆ. =
ಸಕರ್ಮಕ ವಾಕ್ಯ
(೨) ಲಕ್ಷ್ಮೀಯು ಪಾಠವನ್ನು ಓದಿದಳು. =ಸಕರ್ಮಕ ವಾಕ್ಯ
(೩) ನಾಯಿ ಬೊಗಳಿತು. =
ಅಕರ್ಮಕ ವಾಕ್ಯ
(೪) ಮೀನು ನೀರಿನಲ್ಲಿ ಮುಳುಗಿ ಕಣ್ಮರೆಯಾಯಿತು. =ಸಕರ್ಮಕ ವಾಕ್ಯ
(೫) ಮಗು ಅಳುತ್ತದೆ. =ಅಕರ್ಮಕ ವಾಕ್ಯ
ಉಪಕ್ರಮ
(೧) ಈ ಪಾಠದಲ್ಲಿ ಕಂಡು ಬರುವ ಗಾದೆಮಾತುಗಳನ್ನು ಸಂಗ್ರಹಿಸಿರಿ,
ವರ್ಗದಲ್ಲಿ
ಗೋಡೆಯ ಮೇಲೆ ಅಂಟಿಸಿರಿ.
(೨) ಬಸ್ಸಿನ ಆತ್ಮಕಥೆಯನ್ನು ನಿಮ್ಮ ಮಾತಿನಲ್ಲಿ ಹೇಳಿರಿ.
(೩) ಬಸ್
ನಿಲ್ದಾಣದಲ್ಲಿ ಬರೆದ ಬಸ್ಸಿನ ವೇಳಾಪತ್ರಿಕೆಯನ್ನು ಓದಿ ತಿಳಿದುಕೊಳ್ಳಿರಿ
(೪) ಬಸ್ ನಿಲ್ದಾಣದಲ್ಲಿ ಬಸ್ ನಿಯಂತ್ರಕರು ಧ್ವನಿವರ್ಧಕದಲ್ಲಿ
ಹೇಳುವ
ಸೂಚನೆಗಳನ್ನು
ಕೇಳಿ ತಿಳಿಯಿರಿ.
(೫) ಬಸ್ಸಿನ ವಿವಿಧ ಚಿತ್ರಗಳನ್ನು ಸಂಗ್ರಹಿಸಿರಿ.
ಮುಳ್ಳಿನಲ್ಲಿ ಸುಮವು ಅರಳಿದಂತೆ ನೋವಿನಲ್ಲೂ ನಗು ಅರಳಲಿ.
13. ಬಯಕೆ (ಕವಿತೆ)
ಶಬ್ದಗಳ ಅರ್ಥ
ರಜನಿ – ರಾತ್ರಿ ತೊರೆ – ನದಿ
ಬಾನು - ಆಕಾಶ ; ಭೃಂಗ – ದುಂಬಿ
ಸೊಬಗು - ಚೆಲುವು.
ಅಭ್ಯಾಸ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(೧) ಪುಷ್ಪವು ಎಲ್ಲಿ
ಅರಳುವದು ?
ಉತ್ತರ: ಪುಷ್ಪವು
ಹರಿಯುವ ನದಿ ತೀರದಲ್ಲಿ ಮತ್ತು ಹಸಿರು ಎಲೆ ಇರುವ ಬಳ್ಳಿಯಲ್ಲಿ ಅರಳುವುದು.
(೨) ಭೃಂಗವು ಯಾವಾಗ ಮತ್ತು ಹೇಗೆ ಬರುವದು ?
ಉತ್ತರ: ಭೃಂಗವು
ಮುಂಜಾನೆಯ ಬೆಳಗಿನಲ್ಲಿ ಹೂದೋಟದಲ್ಲಿ ಹೂವನ್ನು ಅರಸುತ್ತಾ ಬರುವುದು.
(೨) ನೀಲಿ ಆಗಸದಲ್ಲಿ
ಏನು ಮೂಡುವುದು?
ಉತ್ತರ: ನೀಲಿ
ಆಗಸದಲ್ಲಿ ಚುಕ್ಕಿ ಮೂಡುವುದು.
(೪) ಕವಿತೆಯು ಹೇಗೆ ಮೂಡಿಬರುವುದೆಂದು ಕವಿ
ಹೇಳುತ್ತಾನೆ ?
ಉತ್ತರ: ಕವಿತೆಯು
ಸೃಷ್ಟಿಯ ಸೊಬಗಿನಲ್ಲಿ,
ಸೌಂದರ್ಯ ರಾಶಿಯಾಗಿ ಬರುವುದು.
(೫) ಕವಿಯು
ಕವಿತೆಯನ್ನು ಹೇಗೆ ಹಾಡುವೆನು ಎಂದು ಹೇಳುತ್ತಾನೆ?
ಉತ್ತರ: ಕವಿಯು
ತನ್ನನ್ನೇ ತಾನು ಮರೆತು ಕವಿತೆಯಲ್ಲಿ ಬೆರೆತು ಏಕರೂಪವಾಗಿ ಹಾಡುವೆನು ಎಂದು ಹೇಳುತ್ತಾನೆ.
ಪ್ರಶ್ನೆ
(೨) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣ ಮಾಡಿರಿ.
ಬಾನ ವಿಸ್ತಾರದಲಿ
ಹುಣ್ಣಿಮೆಯಾ
ರಾತ್ರಿಯಲ್ಲಿ
ನಾ ಬರುವೆ ರಜನಿಯಾಗಿ
ಉಪಕ್ರಮ:
ಕನ್ನಡದ ಪ್ರಸಿದ್ಧ ಕವಿಗಳ ಭಾವಗೀತೆಗಳನ್ನು ಸಂಗ್ರಹಿಸಿರಿ ಮತ್ತು ರಾಗಬದ್ಧವಾಗಿ ಹಾಡಲು
ಕಲಿಯಿರಿ.
ದೇವರನ್ನು
ನಿಸರ್ಗದಲ್ಲಿ ಕಾಣು.
***
14. ಡಾ. ಹೋಮಿ ಜಹಾಂಗೀರ ಬಾಬಾ
ಶಬ್ದಗಳ ಅರ್ಥ :
ವಿಕಾಸ - ಅಭಿವೃದ್ಧಿ ;
ಸಂಹಾರ - ನಾಶ,
ಉತ್ಕರ್ಷ- ಅಭಿವೃದ್ಧಿ ;
ಸನ್ಮಾನ - ಗೌರವ.
ಪ್ರತಿಭೆ - ವಿಶೇಷ
ಪ್ರಜ್ಞೆ
ಅಭ್ಯಾಸ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ
ಬರೆಯಿರಿ.
(೧) ಡಾ.ಹೋಮಿ
ಜಹಾಂಗೀರ ಬಾಬಾರವರು ಯಾವ ಮನೆತನಕ್ಕೆ ಸೇರಿದವರು ?
ಉತ್ತರ: ಡಾ.ಹೋಮಿ ಜಹಾಂಗೀರ ಬಾಬಾರವರು ಪಾರ್ಶಿ ಮನೆತನಕ್ಕೆ ಸೇರಿದವರು
(೨) ಡಾ.ಹೋಮಿ ಬಾಬಾರವರು ಯಾವ ಪ್ರೌಢಶಾಲೆಯಲ್ಲಿ
ವಿದ್ಯಾಭ್ಯಾಸ ಮಾಡಿದರು?
ಉತ್ತರ: ಡಾ.ಹೋಮಿ ಬಾಬಾರವರು ಕ್ಯಾಥೆಡ್ರಿಯಲ್ ಹಾಗೂ ಜಾನ್ ಕ್ಯಾನನ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು.
(೩) ಕ್ರಿ.ಶ. ೧೯೫೫ ರಲ್ಲಿ ಟ್ರಾಂಬೆಯಲ್ಲಿ
ಏನನ್ನು ಸ್ಥಾಪಿಸಲಾಯಿತು?
ಉತ್ತರ: ಕ್ರಿ. ಶ. ೧೯೫೫ ರಲ್ಲಿ ಮುಂಬಯಿ ಹತ್ತಿರವಿರುವ ಟ್ರಾಂಬೆಯಲ್ಲಿ ‘ಅಣು ಸಂಶೋಧನಾ ಘಟಕವನ್ನು’ ಸ್ಥಾಪಿಸಲಾಯಿತು.
(೪) ಡಾ.ಬಾಬಾ ಅವರ
ಆಸಕ್ತಿಯ ವಿಷಯಗಳಾವವು?
ಉತ್ತರ: ಡಾ.ಬಾಬಾ
ಅವರ ಆಸಕ್ತಿಯ ವಿಷಯಗಳು- ಭೌತಶಾಸ್ತ್ರ
ಹಾಗೂ ಗಣಿತ ಶಾಸ್ತ್ರ
(೫) ಡಾ. ಬಾಬಾ ಅವರು ಏನನ್ನು
ಪ್ರೀತಿಸುತ್ತಿದ್ದರು ?
ಉತ್ತರ:ಡಾ.
ಬಾಬಾ ಅವರು ನಿಸರ್ಗವನ್ನು
ಪ್ರೀತಿಸುತ್ತಿದ್ದರು
ಪ್ರಶ್ನೆ
(೨) ಹೊಂದಿಸಿ ಬರೆಯಿರಿ.
೧) ಕ್ರಿ.ಶ.೧೯೦೯ ಅ) ಇನಸ್ಟಿಟ್ಯೂಟ್ ಆಫ್ ಸೈನ್ನ ಕಾಲೇಜು
೨) ಇಂಗ್ಲಂಡ ಆ) ಕ್ರಿ.ಶ. ೧೯೩೪
೩) ಪಿಎಚ್.ಡಿ.ಪದವಿ ಇ) ಕ್ರಿ.ಶ. ೧೯೫೭
೪) ಪದ್ಮಭೂಷಣ ಈ) ಡಾ.ಬಾಬಾರವರ ಜನನ
ಉತ್ತರ: (೧ – ಈ, ೨ – ಅ, ೩ – ಆ, ೪ - ಇ)
ಉಪಕ್ರಮ: ಭಾರತೀಯ ವಿಜ್ಞಾನಿಗಳ
ಚರಿತ್ರೆಗಳನ್ನು ಕೇಳಿ ತಿಳಿದುಕೊಳ್ಳಿರಿ ಮತ್ತು ಅವರ
ಭಾವಚಿತ್ರಗಳನ್ನು
ಸಂಗ್ರಹಿಸಿರಿ.
ವಿಜ್ಞಾನದ
ಉನ್ನತಿ,
ಮಾನವನ
ಪ್ರಗತಿ
15. ಪರಿಶ್ರಮ
ಶಬ್ದಗಳ ಅರ್ಥ :
ತವಕ - ಆತುರ :
ವಾತ್ಸಲ್ಯ - ಪ್ರೀತಿ, ಮಮತೆ ;
ಶಾಶ್ವತ - ಸ್ಥಿರವಾದ;
ಪ್ರೇರಣೆ
ಹುರಿದುಂಬಿಸು.
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(೧) ಸುಂದರನಿಗೆ ಯಾವ ಆಸೆ ಇತ್ತು?
ಉತ್ತರ: ಸುಂದರನಿಗೆ ಶಾಲೆ ಕಲಿಯುವ ಆಸೆ ಇತ್ತು.
(೨) ಶಿಕ್ಷಣ ಇಲಾಖೆಯವರು ಯಾರ ಶೋಧ ಮಾಡುತ್ತಿದ್ದರು?
ಉತ್ತರ: ಶಿಕ್ಷಣ ಇಲಾಖೆಯವರು ಒಮ್ಮೆ “ಶಾಲಾ ಬಾಹ್ಯ ವಿದ್ಯಾರ್ಥಿಗಳ” ಶೋಧ ಮಾಡುತ್ತಿದ್ದರು.
(೩) ಸುಂದರನ ತಾಯಿ ಕಂಬನಿ ಏಕೆ ಮಿಡಿದಳು?
ಉತ್ತರ: ಮಗ ಸುಂದರ
ತನ್ನ ತಾಯಿ-ತಂದೆ ಕಷ್ಟಪಡುತ್ತಿರುವುದನ್ನು ಕಂಡು ತಾನೂ ಕಾಯಿಪಲ್ಲ್ಯೆ ಮಾರುತ್ತಾ ಕಷ್ಟಪಟ್ಟು ಓದಿ
ಪದವೀಧರನಾದನು. ಚಿಕ್ಕ ವಯಸ್ಸಿನಲ್ಲಿ ಪಡುತ್ತಿರುವ ಕಷ್ಟವನ್ನು ನೋಡಿ ವಾತ್ಸಲ್ಯದಿಂದ ಅವನ ತಾಯಿ ಕಂಬನಿ
ಮಿಡಿದಳು.
(೪) ಪದವೀಧರನಾದ ಸುಂದರನು ಯಾವ ಪರೀಕ್ಷೆ ಕಟ್ಟಿದನು ?
ಉತ್ತರ: ಪದವೀಧರನಾದ ಸುಂದರನು ತನ್ನ ಸ್ವಪ್ರಯತ್ನದಿಂದ ಆಯ್. ಎ.ಎಸ್. ಪರೀಕ್ಷೆ ಕಟ್ಟಿದನು.
(೫) ಸುಂದರನಿಗೆ ಯಾವ ನೌಕರಿ ದೊರಕಿತು ?
ಉತ್ತರ: ಸುಂದರನಿಗೆ ಆನಂದಗಡ ಜಿಲ್ಲೆಗೆ ಜಿಲ್ಲಾಧಿಕಾರಿ ನೌಕರಿ ದೊರಕಿತು.
ಪ್ರಶ್ನೆ
(೨) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(೧) ದಂಪತಿಗಳು ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ
ಏಕೆ ಬಂದರು?
ಉತ್ತರ: ಭರಮಪ್ಪ –ಮಲ್ಲಮ್ಮ
ದಂಪತಿಗಳು ಕಷ್ಟಪಟ್ಟು ದುಡಿಯುತ್ತಿದ್ದರು. ಬರಬರುತ್ತಾ ಸಕಲೇಶಪುರದಲ್ಲಿ ಕೆಲಸ ಸಿಗುವುದು ಕಷ್ಟಕರವಾಯಿತು.
ಜೀವನ ಸಾಗಿಸುವುದು ಕಠಿಣವಾಯಿತು. ಆದ್ದರಿಂದ ಅವರು ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ಬಂದರು.
(೨) ಸುಂದರನು ಯಾವ ರೀತಿ ದುಡಿತದಲ್ಲಿ
ಭಾಗಿಯಾದನು?
ಉತ್ತರ: “ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ” ಎಂಬಂತೆ ಸುಂದರನು ತಾಯಿ-ತಂದೆಗಳ ದುಡಿತದಲ್ಲಿ ತಾನೂ ಸಹಭಾಗಿಯಾಗಿದ್ದನು.
ಮುಂಜಾನೆ ಎದ್ದು ಮೇಣೆ ಮೇನೆಗೆ ಪೇಪರ ಮತ್ತು ಹಾಲಿನ ಪಾಕೀಟು ಹಾಕುತ್ತಿದ್ದನು. ಶಾಲೆಯ ವೇಳೆಯಲ್ಲಿ
ಶಾಲೆಗೆ ಹೋಗಿ ಲಕ್ಷ್ಯಪೂರ್ವಕ ಕಲಿಯುತ್ತಿದ್ದನು. ಒಂದು ಹಳೆಯ ಓಲೆ ಗಾಡಿಯನ್ನು ಕೊಂಡನು. ಶಾಲೆ ಬಿಟ್ಟ
ಬಳಿಕ ಓಲೆಗಾಡಿಯಲ್ಲಿ ಆಲೂಗಡ್ಡಿ, ಬದನೆ, ಬೆಂಡೆ, ಹೀರೆ, ಹಾಗಲ ಇತ್ಯಾದಿ ಕಾಯಿಪಲ್ಲ್ಯೆಗಳನ್ನು ಮಾರುತ್ತಿದ್ದನು.
(೩) ಸುಂದರನು ತಂದೆ
ತಾಯಿಗಳನ್ನು ಹೇಗೆ ಸಮಾಧಾನ ಪಡಿಸುತ್ತಿದ್ದನು?
ಉತ್ತರ: “ಅಮ್ಮ, ನೀವು ಯಾಕೆ ಚಿಂತಿಸುತ್ತಿರಿ.
ನೀವು ನಗು ನಗುತಾ ಇರಬೇಕು. ನಾನೇನು ನಿಮ್ಮ ಹಾಗೆ ಇಳಿವಯಸ್ಸಿನವನಲ್ಲ, ನನ್ನ ಬಳಿ ದುಡಿಯುವ ಶಕ್ತಿಯೂ, ಓದುವ ಯುಕ್ತಿಯೂ ಇದೆ. ಈ ವಯಸ್ಸಿನಲ್ಲಿ ನನಗೆ
ಪರಿಶ್ರಮದ ರೂಢಿಯಾದರೆ ಅದು ಶಾಶ್ವತವಾಗಿ ಉಳಿಯುತ್ತದೆ. ನೀವು ನನ್ನ ಪರಿಶ್ರಮಕ್ಕೆ ಪ್ರೇರಣೆ ಕೊಡಬೇಕು.” ಎಂದು ಮಾರ್ಮಿಕವಾಗಿ ಉತ್ತರಿಸಿ ತಂದೆ ತಾಯಿಗಳನ್ನು ಸಮಾಧಾನಪಡಿಸುತ್ತಿದ್ದನು.
(೪) ತಂದೆತಾಯಿಗಳು ಮಗನ
ಛಲಗಾರಿಕೆಗೆ ಹೇಗೆ ಹೆಮ್ಮೆಪಟ್ಟರು?
ಉತ್ತರ: ಸುಂದರ ಕಡು
ಬಡತನದಲ್ಲಿಯೂ ತನ್ನನ್ನು ಓದಿಸಿದ ತಂದೆ ತಾಯಿಗಳ ಶ್ರಮಕ್ಕೆ ಋಣ ವ್ಯಕ್ತಪಡಿಸುತ್ತಾ ತಂದೆ ತಾಯಿಗಳ
ಪಾದ ಮುಟ್ಟಿ ನಮಸ್ಕಾರ ಮಾಡಿದನು. ಕಷ್ಟದಲ್ಲಿಯೂ ಕೆಲಸ
ಮಾಡುತ್ತಾ ಶಿಕ್ಷಣ ಮುಗಿಸಿ ಜಿಲ್ಲಾಧಿಕಾರಿಯಾಗಿ ನೌಕರಿಗೆ ಸೇರಿದ ಮಗನ ಛಲಗಾರಿಕೆಗೆ ತಂದೆ ತಾಯಿಗಳು
ಹೆಮ್ಮೆ ಪಟ್ಟರು.
(೫) ಸುಂದರನು ದಕ್ಷ ಅಧಿಕಾರಿಯಾಗಿ ಎಲ್ಲರಿಗೂ
ಹೇಗೆ ಮೆಚ್ಚುಗೆಯಾದನು?
ಉತ್ತರ:. ಅತ್ಯಂತ
ಪರಿಶ್ರಮದಿಂದ ಜಿಲ್ಹಾಧಿಕಾರಿಯಾದ ಸುಂದರ ನಿಸ್ವಾರ್ಥತನದಿಂದ
ಕೆಲಸಮಾಡತೊಡಗಿದನು. ಸರಕಾರದ ಎಲ್ಲ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಮುಟ್ಟಿಸತೊಡಗಿದನು.
ಕೆಲಸದಲ್ಲಿ ಬಿಡುವು ಮಾಡಿಕೊಂಡು ಕಾಲೇಜುಗಳಿಗೆ ಭೇಟಿಕೊಡುತ್ತಿದ್ದನು. ಶಿಕ್ಷಣದ ಮಹತ್ವ ಮತ್ತು
ಅದನ್ನು ಸಾಧಿಸುವ ವಿಧಾನಗಳ ಬಗ್ಗೆ ತಿಳುವಳಿಕೆ ನೀಡುತ್ತಿದ್ದನು. ದಕ್ಷ ಅಧಿಕಾರಿಯಾಗಿ ಕೆಲಸ
ನಿರ್ವಹಿಸುತ್ತ ಎಲ್ಲರ ಮೆಚ್ಚುಗೆಗೆ ಪಾತ್ರನಾದನು.
ಪ್ರಶ್ನೆ
(೩) ಬಿಟ್ಟ ಸ್ಥಳ ತುಂಬಿರಿ.
(೧) ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯಿತು.
(೨) ಪರಿಶ್ರಮ
ಪಡುವವರಿಗೆ ಫಲ ಸಿಗುವುದು ನಿಶ್ಚಿತ.
(೩) ಕೆಲಸದಲ್ಲಿ
ಬಿಡುವು ಮಾಡಿಕೊಂಡು ಶಾಲೆ ಕಾಲೇಜುಗಳಿಗೆ ಭೆಟ್ಟಿ ಕೊಡುತ್ತಿದ್ದನು.
ಪ್ರಶ್ನೆ
(೪) ವಿರುದ್ಧಾರ್ಥಕ ಶಬ್ದಗಳನ್ನು ಬರೆಯಿರಿ.
ಕಠಿಣ X ಮೃದು ಆಸೆ X ನಿರಾಸೆ
ಮುಂಜಾನೆ X ಸಂಜೆ ಉಳಿವು X ಅಳಿವು
ನಿಶ್ಚಿತ X ಅನಿಶ್ಚಿತ ಶಾಶ್ವತ X ಅಶಾಶ್ವತ
ಉಪಕ್ರಮ:
(೧)
ಬಡಮಕ್ಕಳಿಗೆ ಮತ್ತು ಅಸಹಾಯಕರಿಗೆ ನೀವು ಯಾವ ರೀತಿ ಸಹಾಯ ಮಾಡಬಲ್ಲಿರಿ ಎಂಬುದನ್ನು ಬರೆಯಿರಿ.
(೨)
ವಿದ್ಯಾರ್ಥಿಗಳಿಗೆ ಸರಕಾರದಿಂದ ಸಿಗುವ ಸಹಾಯ, ಸೌಲತ್ತುಗಳನ್ನು
ಶಿಕ್ಷಕರಿಂದ, ಪಾಲಕರಿಂದ ಕೇಳಿ ಮಾಹಿತಿ
ತಿಳಿದುಕೊಳ್ಳಿರಿ.
ಛಲವಿದ್ದಲ್ಲಿ
ಬಲವಿದೆ.
16. ನೇತಾಜಿ (ಕವಿತೆ)
-ಪಳಕಳ
ಸೀತಾರಾಮ ಭಟ್ಟ
ಶಬ್ದಗಳ ಅರ್ಥ:
ಕಳಚು - ಬೇರೆಮಾಡು; ಬಿಚ್ಚು
ಪೌರುಷ - ಪರಾಕ್ರಮ
ಸಮರ- ಯುದ್ಧ ;
ಒಳಿತು - ಒಳ್ಳೆಯ ;
ಸವೆಸು - ಕ್ಷೀಣಿಸು.
ಅಭ್ಯಾಸ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(೧) ನೇತಾಜಿ ಯಾವುದಕ್ಕಾಗಿ ಹೆಣಗಿದರು?
ಉತ್ತರ: ನೇತಾಜಿ ಸುಭಾಸಚಂದ್ರ
ಬೋಸ ಇವರು ದೇಶದ ಬಂಧನ ಕಳಚಲು ಹೆಣಗಿದರು.
(೨) ನೇತಾಜಿ ಮೊದಲಿಗೆ
ಹಾಡಿದ ಗೀತೆ ಯಾವುದು?
ಉತ್ತರ: ನೇತಾಜಿ ಮೊದಲಿಗೆ ಹಾಡಿದ ಗೀತೆ- ಜೈ ಹಿಂದ
(೩) ನೇತಾಜಿಯವರು
ನಮಗೆ ಏನು ಹೇಳಿದರು?
ಉತ್ತರ: ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ, ಶ್ರಮ ಮಾಡಬೇಕು ಎಂದು ನೇತಾಜಿ
ಹೇಳಿದರು.
(೪) ಅವರು ಯಾವುದಕ್ಕಾಗಿ ದೇಹ ಸವೆಸಿದರು?
ಉತ್ತರ: ನೇತಾಜಿ ಆಂಗ್ಲರ
ಸೈನ್ಯಕ್ಕೆ ಸಡ್ಡು ಹೊಡೆಯುತ ನಾಡಿನ ಒಳಿತಿಗಾಗಿ ತಮ್ಮ ದೇಹವನ್ನು ಸವೆಸಿದರು.
ಪ್ರಶ್ನೆ (೨) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣ ಮಾಡಿರಿ.
ಬಿಳಿಯರ ಗುಂಡಿಗೆ ಬೆದರದ ಗಂಡೆದೆ
ತೋರಿದ ಗಟ್ಟಿಗ ನೇತಾಜಿ
ಪ್ರತಿ ಸರಕಾರವ ರಚಿಸುವ ಪೌರುಷ
ಮೆರೆದ ಪರಾಕ್ರಮಿ ನೇತಾಜಿ!!
ಉಪಕ್ರಮ:
(೧) ಈ ಕವಿತೆಯನ್ನು
ಸಾಭಿನಯದಿಂದ ಹಾಡಿರಿ.
(೨) ದೇಶಕ್ಕಾಗಿ ಶ್ರಮಿಸಿದ ಮುಖಂಡರ ಚಿತ್ರಗಳನ್ನು
ಸಂಗ್ರಹಿಸಿ,
ಅಂಟುಪುಸ್ತಕ
ತಯಾರಿಸಿರಿ.
ದೇಶ ಸೇವೆಯೇ ಈಶ ಸೇವೆ.
17. ಸ್ವಾಮಿ ವಿವೇಕಾಂದರು
ಶಬ್ದಗಳ ಅರ್ಥ:
ನಂಬಿಕೆ - ವಿಶ್ವಾಸ;
ಕೃತಜ್ಞತೆ - ಉಪಕಾರ ಸ್ಮರಿಸು;
ಹೊಗಳು – ಕೊ೦ಡಾಡು.
ತೇಜಸ್ಸು - ಹೊಳಪು, ಘನತೆ,
ಅಮೋಘ - ಬೆಲೆಬಾಳುವ
ಅಭ್ಯಾಸ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(೧) ಸ್ವಾಮಿ
ವಿವೇಕಾನಂದರು ಯಾವಾಗ ಜನಿಸಿದರು ?
ಉತ್ತರ: ಸ್ವಾಮಿ ವಿವೇಕಾನಂದರು
12 ಜನೇವರಿ 1863 ರಲ್ಲಿ ಜನಿಸಿದರು.
(೨) ವಿಶ್ವಧರ್ಮ
ಸಮ್ಮೇಳನ ಎಲ್ಲಿ ಜರುಗಿತು?
ಉತ್ತರ: 1893ರ ಸಪ್ಟೆಂಬರ ತಿಂಗಳಲ್ಲಿ
ಅಮೇರಿಕಾದಲ್ಲಿ ವಿಶ್ವಧರ್ಮ ಸಮ್ಮೇಳನ ಜರುಗಿತು
(ಸಿ) ಸ್ವಾಮಿ
ವಿವೇಕಾನಂದರು ತಮ್ಮ ಭಾಷಣದಲ್ಲಿ ಯಾವ ಮಾತುಗಳನ್ನು ಹೇಳಿದರು?
ಉತ್ತರ: ಸ್ವಾಮಿ ವಿವೇಕಾನಂದರು ತಮ್ಮ ಭಾಷಣದಲ್ಲಿ ಸಹಿಷ್ಣುತೆ ಮತ್ತು ಸರ್ವಧರ್ಮ ಸಮಾನತೆಯನ್ನು ಜಗತ್ತಿಗೆ
ತೋರಿಸಿದ ದೇಶ ನನ್ನ ಭಾರತ ದೇಶ. ಎಲ್ಲ ಧರ್ಮ ಮತ್ತು ಭಾಷೆಗಳ ಜನರನ್ನು ತನ್ನ ಒಡಲಿನಲ್ಲಿರಿಸಿಕೊಂಡಿದೆ.
ನಾವೆಲ್ಲರೂ ಹಿಂಸೆ,
ಅಸಹನೆ, ದ್ವೇಷ ಮತ್ತು ಮನಸ್ತಾಪಗಳಿಗೆ ಕೊನೆ ಹಾಡಬೇಕು. ನಾವೆಲ್ಲ ವಿಶ್ವಬಂಧುಗಳು
ಪರಸ್ಪರ ಪ್ರೀತಿಯಿಂದ ಅನ್ಯೋನ್ಯವಾಗಿ ಬಾಳೋಣ ಎಂದು ಭಾಷಣ ಮಾಡಿದರು.
(೪) ಅಜ್ಞಾನದಲ್ಲಿ ಮೈಮರೆತ
ಜನರನ್ನು ವಿವೇಕಾನಂದರು ಹೇಗೆ ಎಚ್ಚರಿಸಿದರು ?
ಉತ್ತರ: ಸ್ವಾಮಿ ವಿವೇಕಾನಂದರು ಸಣ್ಣ ವಯಸ್ಸಿನಲ್ಲಿಯೇ ಹಿಮಾಲಯದಿಂದ ಕನ್ಯಾಕುಮಾರಿಯ
ವರೆಗೆ ಭಾರತದ ತುಂಬಾ ಸಂಚಾರ ಮಾಡಿದರು. ತಮ್ಮ ಪ್ರಭಾವಶಾಲಿ ವಾಣಿಯಿಂದ ಅಜ್ಞಾನದಲ್ಲಿ ಮೈಮರೆಯುತ್ತಿದ್ದ
ಜನರನ್ನು ಎಚ್ಚರಿಸಿದರು.
(೫) ಸ್ವಾಮಿ
ವಿವೇಕಾನಂದರ ಯಾವ ವಾಣಿ ನಮಗೆ ಸದಾ ಸ್ಫೂರ್ತಿಯನ್ನು ಕೊಡುತ್ತದೆ?
ಉತ್ತರ: ಸ್ವಾಮಿ ವಿವೇಕಾನಂದರ ಆದರ್ಶ ಉಪದೇಶ ಸದಾ ನಮಗೆ ದಾರಿದೀಪವಾಗಿದೆ. ಅವರ, “ಏಳಿ! ಎಚ್ಚರಗೊಳ್ಳಿ! ಗುರಿ
ಮುಟ್ಟುವವರೆಗೆ ನಿಲ್ಲದಿರಿ!” ಎಂಬ ವಾಣಿ ನಮಗೆ ಸದಾಕಾಲ ಸ್ಫೂರ್ತಿಯನ್ನು ಕೊಡುತ್ತದೆ.
ಪ್ರಶ್ನೆ
(೨) ಬಿಟ್ಟ ಸ್ಥಳ ತುಂಬಿರಿ.
(೧) ನರೇಂದ್ರನಿಗೆ ಭುವನೇಶ್ವರಿದೇವಿಯೇ ಮೊದಲು ಅಕ್ಷರಗಳನ್ನು ಹೇಳಿಕೊಟ್ಟಳು.
(೨) ನರೇಂದ್ರನು ತಾನು ಉಡುವ ಪಂಜೆಯನ್ನೇ ಕೊಟ್ಟು ಬಿಟ್ಟನು.
(೩) ಜಗತ್ತಿಗೆ ಸಹಿಷ್ಣುತೆ ಮತ್ತು ಸರ್ವಧರ್ಮ ಸಮಾನತೆ ಬೋಧಿಸಿದ ದೇಶ ನನ್ನದು. (೪)ಲಂಡನ್ನಿನ ಮಾರ್ಗರೇಟ್
ನೋಬೆಲ್ ಎಂಬ ಮಹಿಳೆ ಸ್ವಾಮೀಜಿಯವರ ಲೋಕಕಲ್ಯಾಣದ ವಿಚಾರಗಳಿಂದ
ಪ್ರಭಾವಿತಳಾದಳು.
(೫) ಭಾರತದ ಆಧ್ಯಾತ್ಮ ಜ್ಯೋತಿಯನ್ನು ಜಗತ್ತಿನಲ್ಲೆಲ್ಲ ಬೆಳಗಿಸಿದರು.
(೬) ವಿವೇಕಾನಂದರು
ಅಮರರಾದರೂ ಸಹಿತ ಅವರು ಬಾಳಿದ ಬದುಕು ನಮಗೆಲ್ಲ ಆದರ್ಶಪ್ರಾಯವಾಗಿದೆ.
ಪ್ರಶ್ನೆ
(ಸಿ) ಕೆಳಗಿನ ಪದಗಳನ್ನು ವಾಕ್ಯದಲ್ಲಿ ಉಪಯೋಗಿಸಿರಿ.
೧) ಕೋಮಲ = ಕೋಮಲ ಜೋಕಾಲಿ ಜೀಕುತ್ತಿದ್ದಾಳೆ.
(೨) ಸಾನಿಧ್ಯ =ಶ್ರೀ ಗುರುಗಳ ಸಾನಿಧ್ಯದಲ್ಲಿ
ಕಾರ್ಯಕ್ರಮ ಜರುಗಿತು.
(೩) ಪ್ರತಿನಿಧಿ = ಜನರ ಪ್ರತಿನಿಧಿಯಾಗಿ
ಮುಖ್ಯಮಂತ್ರಿಗಳು ಕೆಲಸ ಮಾಡುತ್ತಾರೆ.
(೪) ಸರತಿ = ಎಲ್ಲ ಮಕ್ಕಳು ಸರತಿಯಲ್ಲಿ ನಿಂತುಕೊಳ್ಳಬೇಕು.
(೫) ಅಮರ = ಹುತಾತ್ಮರು ದೇಶಕ್ಕಾಗಿ ಮಾಡಿದು ಅಮರರಾದರು.
ಧೈರ್ಯಂ
ಸರ್ವತ್ರ ಸಾಧನಂ
18. ಸ್ಕೌಟ್ಸ್ ಮತ್ತು ಗೈಡ್ಸ್
ಶಬ್ದಗಳ ಅರ್ಥ:
ಉದಾತ್ತ - ಶ್ರೇಷ್ಠವಾದ,
ನಿಷ್ಠೆ - ಭಕ್ತಿ ;
ಸ್ವೇಚ್ಛಾ – ಸ್ವಇಚ್ಛೆ
ಕರ ಕೌಶಲ - ಕೈಯಿಂದ ಮಾಡಿದ ವಸ್ತುಗಳು;
ತ್ರಿಕರಣ - ಮಾತು, ಮನಸು, ದೇಹ
ಅಭ್ಯಾಸ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ಸೌಟ್ಸ್ ಮತ್ತು
ಗೈಡ್ಸ್ ಎಂದರೇನು ?
ಉತ್ತರ: ಹತ್ತು ವರ್ಷ
ವಯಸ್ಸಿನ ಮಕ್ಕಳಿಗೆ ಒಳ್ಳೆಯ ನಡತೆ, ಉತ್ತಮ ಆರೋಗ್ಯ, ಉತ್ಕೃಷ್ಟ ಕರಕೌಶಲ ಹಾಗೂ ನಿಸ್ವಾರ್ಥಸೇವೆ
ಎಂಬ ನಾಲ್ಕು ಮೂಲಭೂತ ತತ್ವಗಳನ್ನು ಕಲಿಸುವ ಏಕೈಕ ಅಂತರರಾಷ್ಟ್ರೀಯ ಸಂಸ್ಥೆಗೆ “ಸ್ಕೌಟ್ಸ್ ಮತ್ತು
ಗೈಡ್ಸ್” ಸಂಸ್ಥೆ ಎನ್ನುವರು.
(ಆ) ಲಾರ್ಡ ಬೇಡನ್
ಪೊವೆಲ್ರವರು ಯಾವಾಗ ಜನಿಸಿದರು ?
ಉತ್ತರ: ಲಾರ್ಡ ಬೇಡನ್ ಪೊವೆಲ್ರವರು ೨೨ ಫೆಬ್ರುವರಿ ೧೮೫೭ರಲ್ಲಿ ಜನಿಸಿದರು.
(ಇ) ಸೌಟ್ಸ್ ಮತ್ತು ಗೈಡ್ಸ್‌ದಲ್ಲಿ ಎಷ್ಟು
ವಿಭಾಗಗಳಿವೆ?
ಉತ್ತರ: ಸೌಟ್ಸ್ ಮತ್ತು ಗೈಡ್ಸ್‌ದಲ್ಲಿ ಮೂರು ವಿಭಾಗಗಳಿವೆ:
1) ಅ) ಕಬ - ೬ ರಿಂದ ೧೦ ವರ್ಷದೊಳಗಿನ ಬಾಲಕರು.
ಬ) ಬುಲ್ ಬುಲ್ - ೬ ರಿಂದ ೧೦ ವರ್ಷದೊಳಗಿನ ಬಾಲಕಿಯರು.
2) ಅ) ಸ್ಕೌಟ್ಸ್ - ೧೦ ರಿಂದ ೧೬ ವರ್ಷದೊಳಗಿನ ಬಾಲಕರು
ಬ) ಗೈಡ್ಸ್ - ೧೦ ರಿಂದ ೧೬ ವರ್ಷದೊಳಗಿನ ಬಾಲಕಿಯರು
3)
ಅ) ರೋವರ್ಸ - ೧೬ ರಿಂದ ೨೧ ವರ್ಷದೊಳಗಿನ ಯುವಕರು.
ಬ) ರೇಂಜರ್ಸ - ೧೬ ರಿಂದ ೨೧ ವರ್ಷದೊಳಗಿನ ಯುವತಿಯರು
(ಈ) ಮಕ್ಕಳು ಯಾವ ಗುಣಗಳನ್ನು
ಬೆಳೆಸಿಕೊಳ್ಳತ್ತಾರೆ?
ಉತ್ತರ: ಉತ್ತಮ ನೀತಿ, ಒಳ್ಳೆಯ ಆದರ್ಶ, ಶಿಸ್ತು ಮತ್ತು ಸಹಬಾಳ್ವೆ ಮುಂತಾದ ಗುಣಗಳನ್ನು ಮಕ್ಕಳು ಬೆಳೆಸಿಕೊಳ್ಳುತ್ತಾರೆ.
(ಎ) ಸೌಟ್ಸ್ ಮತ್ತು
ಗೈಡ್ಸ್‌ಗಳಿಂದ ಏನೇನು ಆಯೋಜಿಸುತ್ತಾರೆ?
ಉತ್ತರ: ಸೌಟ್ಸ್ ಮತ್ತು ಗೈಡ್ಸ್‌ಗಳಿಂದ ಶಿಬಿರಗಳನ್ನು ಆಯೋಜಿಸುತ್ತಾರೆ. ಪ್ರಯೋಗಿಕವಾಗಿ ಕೆಲಸ ಮಾಡುವುದು, ಸಮವಸ್ತ್ರ ಧರಿಸಿ ಶಿಸ್ತಿನಿಂದ
ವ್ಯಾಯಾಮ ಮಾಡುವುದು, ಸಹಬಾಳ್ವೆ, ಸಮಾಜಸೇವಾ, ದೇಶಭಕ್ತಿ ಗೀತೆಗಳ ಆಯೋಜನೆ ಇತ್ಯಾದಿ ಈ ಶಿಬಿರಗಳಲ್ಲಿ ತೆಗೆದುಕೊಳ್ಳಲಾಗುತ್ತದೆ.
ಪ್ರಶ್ನೆ(೨)
ಕೆಳಗಿನ ಪ್ರಶ್ನೆಗಳಿಗೆ ೩ ರಿಂದ ೪ ಸಾಲುಗಳಲ್ಲಿ ಉತ್ತರ ಬರೆಯಿರಿ.
(ಅ) ಮಕ್ಕಳು ಸೌಟ್ಸ್
ಮತ್ತು ಗೈಡ್ಸಗಳಲ್ಲಿ ಯಾವ ಯಾವ ಗುಣಗಳನ್ನು
ಬೆಳೆಸಿಕೊಳ್ಳುತ್ತಾರೆ?
ಉತ್ತರ: ಸೌಟ್ಸ್ ಮತ್ತು ಗೈಡ್ಸಗಳಲ್ಲಿ ಉತ್ತಮ ನೀತಿ, ಒಳ್ಳೆಯ ಆದರ್ಶ, ಶಿಸ್ತು ಮತ್ತು ಸಹಬಾಳ್ವೆ ಮುಂತಾದ ಗುಣಗಳನ್ನು ಮಕ್ಕಳು ಬೆಳೆಸಿಕೊಳ್ಳುತ್ತಾರೆ. ಸೌಟ್ಸ್ ಮತ್ತು ಗೈಡ್ಸ್‌ಗಳಿಂದ ಶಿಬಿರಗಳನ್ನು ಆಯೋಜಿಸುತ್ತಾರೆ. ಪ್ರಯೋಗಿಕವಾಗಿ ಕೆಲಸ ಮಾಡುವುದು, ಸಮವಸ್ತ್ರ ಧರಿಸಿ ಶಿಸ್ತಿನಿಂದ
ವ್ಯಾಯಾಮ ಮಾಡುವುದು, ಸಹಬಾಳ್ವೆ, ಸಮಾಜಸೇವಾ, ದೇಶಭಕ್ತಿ ಗೀತೆಗಳ ಆಯೋಜನೆ ಇತ್ಯಾದಿ ಈ ಶಿಬಿರಗಳಲ್ಲಿ ತೆಗೆದುಕೊಳ್ಳಲಾಗುತ್ತದೆ.
(ಆ) ಸೌಟ್ಸ್ ಮತ್ತು ಗೈಡ್ಸ್ ಶಿಬಿರಗಳಿಂದ ಯಾವ
ಪ್ರಯೋಜನಗಳಾಗುವವು?
ಉತ್ತರ: ಸೌಟ್ಸ್ ಮತ್ತು ಗೈಡ್ಸ್‌ಗಳಿಂದ ಶಿಬಿರಗಳನ್ನು ಆಯೋಜಿಸುತ್ತಾರೆ. ಪ್ರಯೋಗಿಕವಾಗಿ ಕೆಲಸ ಮಾಡುವುದು, ಸಮವಸ್ತ್ರ ಧರಿಸಿ ಶಿಸ್ತಿನಿಂದ
ವ್ಯಾಯಾಮ ಮಾಡುವುದು, ಸಹಬಾಳ್ವೆ, ಸಮಾಜಸೇವಾ, ದೇಶಭಕ್ತಿ ಗೀತೆಗಳ ಆಯೋಜನೆ ಇತ್ಯಾದಿ ಈ ಶಿಬಿರಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ಶಿಬಿರಗಳ
ಮೂಲಕ ಪ್ರಥಮ ಚಿಕಿತ್ಸೆ ಸ್ವಯಂಸೇವಕನ ಹಾಗೂ ರಕ್ಷಣೆಗೆ ಸಂಬಂಧಿಸಿದ ತರಬೇತಿಗಳನ್ನು ಕೊಡಲಾಗುತ್ತದೆ.
(ಇ) ಸೌಟ್ಸ್ ಮತ್ತು
ಗೈಡ್ಸ್‌ದ ನಿಯಮಗಳು ಯಾವವು?
ಉತ್ತರ: ಸೌಟ್ಸ್ ಮತ್ತು ಗೈಡ್ಸ್‌ದ ನಿಯಮಗಳು:
1. ಅವರು ನಿಷ್ಠಾವಂತರಾಗಿರುತ್ತಾರೆ.
2. ಅವರು ಗೌರವಾರ್ಹರಾಗಿರುತ್ತಾರೆ.
3. ಎಲ್ಲರ ಜೊತೆಗೆ
ಗೆಳೆತನದಿಂದಲೂ ಮತ್ತು ಸಹೋದರತ್ವದಿಂದಲೂ ವರ್ತಿಸುತ್ತಾರೆ.
4. ಎಲ್ಲ ಜೀವಿಗಳನ್ನು
ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ.
5. ವಿನಯಶಾಲಿಗಳೂ ಮತ್ತು
ನಿಸರ್ಗ ಪ್ರೇಮಿಗಳೂ ಆಗಿರುತ್ತಾರೆ.
6. ಶಿಸ್ತಿನ ಸಿಪಾಹಿಗಳಾಗಿರುತ್ತಾರೆ.
7. ಸಾರ್ವಜನಿಕ ಆಸ್ತಿ-ಪಾಸ್ತಿಗಳ
ರಕ್ಷಣೆಗೆ ನೆರವಾಗುತ್ತಾರೆ.
8. ಧೈರ್ಯವಂತರಾಗಿದ್ದು
ತ್ರಿಕರಣ ಶುದ್ಧರಾಗಿರುತ್ತಾರೆ.
9. ಸ್ವೇಚ್ಛಾ ಮನೋಭಾವದವರಾಗಿರದೇ
ಮಿತವ್ಯಯಿಗಳಾಗಿರುತ್ತಾರೆ.
ಪ್ರಶ್ನೆ
(೩) ಬಿಟ್ಟ ಸ್ಥಳಗಳಲ್ಲಿ ಯೋಗ್ಯ ಶಬ್ದ ತುಂಬಿ ವಾಕ್ಯ ಪೂರ್ಣ ಮಾಡಿರಿ.
(ಅ) ಲಾರ್ಡ ಬೇಡನ್ ಪೊವೆಲ ಕ್ರಿ.ಶ. ೧೯೦೭ ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು.
(ಆ) `ಬಿ ಪ್ರಿಪೇಡ್' ಎಂಬುದು ಸೌಟ್ಸ್‌ನ ಧ್ಯೇಯವಾಕ್ಯವಾಗಿದೆ.
(ಇ) ಸೇವೆ ಮತ್ತು
ಪರೋಪಕಾರ ಇವರ ದಾರಿದೀಪಗಳಾಗಿವೆ.
(ಈ) ಸಮವಸ್ತ್ರ ಧರಿಸಿ ಶಿಸ್ತಿನಿಂದ ವ್ಯಾಯಾಮ ಮಾಡುವದು.
(ಉ) ವಿಶ್ವದಲ್ಲಿ
ಸೌಟ್ಸ್ ಮತ್ತು ಗೈಡ್ಸ್ ಚಳುವಳಿಯನ್ನು ಯಾವುದೇ ಮತ - ಪಂಥಗಳಿಗೆ ಸೌಟ್ಸ್ ಅನ್ವಯಿಸುವಂತೆ
ಆರಂಭಿಸಿ ಯಶಸ್ಸು ಕಂಡುಕೊಂಡವರು....
ಲಾರ್ಡ
ಬೆಡನ್ ಪೊವೆಲ್ ರವರು.
ಪ್ರಶ್ನೆ
(೪) ಹೊಂದಿಸಿ ಬರೆಯಿರಿ.
(ಅ) ಕಬ ೧) ೧೬ ರಿಂದ ೨೧ ವರ್ಷದೊಳಗಿನ ಯುವಕರು.
(ಆ) ಬುಲ್ ಬುಲ್ ೨) ೧೦ ರಿಂದ ೧೬ ವರ್ಷದೊಳಗಿನ ಬಾಲಕರು,
(ಇ) ಸ್ಕೌಟ್ಸ್ ೩) ೬ ರಿಂದ ೧೦ ವರ್ಷದೊಳಗಿನ ಬಾಲಕರು.
(ಈ) ಗೈಡ್ಸ್ ೪) ೬ ರಿಂದ ೧೦ ವರ್ಷದೊಳಗಿನ ಬಾಲಕಿಯರು.
(ಉ) ರೋವರ್ಸ ೫) ೧೬ ರಿಂದ ೨೧ ವರ್ಷದೊಳಗಿನ ಯುವತಿಯರು
(ಊ) ರೇಂಜರ್ಸ ೬) ೧೦ ರಿಂದ ೧೬ ವರ್ಷದೊಳಗಿನ ಬಾಲಕಿಯರು.
ಉತ್ತರ: ಅ – ೩, ಆ – ೪, ಇ – ೨, ಈ – ೬, ಉ - ೧, ಊ - ೫
ಉಪಕ್ರಮ
ಇನ್ನಿತರ
ಗುಂಪು ಆಟಗಳ ನಿಯಮಗಳನ್ನು ಕುರಿತು ಮಕ್ಕಳಿಗೆ ಹೇಳಿರಿ.
ಆರೋಗ್ಯವೇ
ಸಂಪತ್ತು
******************************************************
ವ್ಯಾಕರಣ
ಯಾವ ಪದಗಳನ್ನು
ವಾಕ್ಯದಲ್ಲಿ ಬಳಸುವಾಗ ಲಿಂಗ, ವಚನ, ವಿಭಕ್ತಿಯಲ್ಲಿ ವ್ಯತ್ಯಾಸ ವಾಗುವದಿಲ್ಲವೋ ಅವುಗಳನ್ನು ‘ಅವ್ಯಯಗಳು' ಎನ್ನುತ್ತಾರೆ.
ಉದಾ - ಎಲ್ಲೋರಾ
ವಾಸ್ತುಶಿಲ್ಪಕ್ಕೆ ಬಹಳ ಪ್ರಸಿದ್ಧವಾಗಿದೆ.
·
ಭಾವಬೋಧಕ ಅವ್ಯಯ - ಓಹೋ, ಆಹಾ, ಆಯ್ಯೋ, ಛೀ, ಇವುಗಳ ಮೂಲಕ
ಆಶ್ಚರ್ಯ, ಆನಂದ, ದುಃಖ, ತಿರಸ್ಕಾರ ಮುಂತಾದ
ನಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಆದ್ದರಿಂದ ಇವು 'ಭಾವಬೋಧಕ' ಅವ್ಯಯಗಳು.
ಉದಾ - ಓಹೋ, ರಾಮನು ಬಂದೇ
ಬಿಟ್ಟನಲ್ಲ !
·
ಅನುಸರ್ಗಾವ್ಯಯ - ಇಂಥ, ತನಕ, ವರೆಗೆ, ಅಂತೆ, ಗೋಸ್ಕರ/ಓಸ್ಕರ, ಸಲುವಾಗಿ, ಬಂದಿದೆ, ಈ, ಅಲ್ಲದೆ, ಮುಂತಾದ ಅವ್ಯಯಗಳು
ನಾಮಪದಕ್ಕೆ ಹೊಂದಿಕೊಂಡು ಬರುವವು. ಆದ್ದರಿಂದ ಇವು “ಅನುಸರ್ಗಾವ್ಯಯಗಳು',
ಉದಾ : “ನನ್ನ ಸಲುವಾಗಿ ಎಷ್ಟೊಂದು ತೊಂದರೆ ಪಡುವಿಯಲ್ಲ?”
·
ಸಂಬಂಧ ಸೂಚಕ ಅವ್ಯಯ - ಮತ್ತು, ಆದರೆ, ಅಥವಾ, ಆದರೂ, ಆದ್ದರಿಂದ, ಯಾಕೆಂದರೆ ಇವು ಎರಡು
ಶಬ್ದಗಳ ಇಲ್ಲವೆ ವಾಕ್ಯಗಳ ಸಂಬಂಧವನ್ನು ಸೂಚಿಸುತ್ತದೆ. ಅದ್ದುದರಿಂದ ಇವು ‘ಸಂಬಂಧಸೂಚಕ’ ಅವ್ಯಯಗಳು.
ಉದಾ: ಮಳೆ
ಸುರಿಯುತ್ತಲೇ ಇದೆ. ಆದ್ದರಿಂದ ಅವನು ಬರಲಿಕ್ಕಿಲ್ಲ.
·
ಕ್ರಿಯಾ ವಿಶೇಷಣಾತ್ಮಕ ಅಧ್ಯಯ - ಸುಯ್ಯನೆ, ಎಡೆ, ಅಲ್ಲಿ ಮೊದಲಾದವು ಕ್ರಿಯೆಯನ್ನು
ವರ್ಣಿಸುತ್ತವೆ. ಆದ್ದರಿಂದ ಇವು ಕ್ರಿಯಾ ವಿಶೇಷಣಾತ್ಮಕ ಅವ್ಯಯಗಳು.
ಉದಾ - ಸುಗಂಧ
ಎಲ್ಲೆಡೆಯಲ್ಲಿ ಪಸರಿಸಿತ್ತು.
·
ಸಂಶೋಧನಾತ್ಮಕ ಅವ್ಯಯ - ರೇ, ಎಲೋ, ಓ ಇವು ಜನರನ್ನು ಸಂಬೋಧಿಸುವುದಕ್ಕೆ ಉಪಯೋಗಿಸುವ
ಅವ್ಯಯಗಳು.
ಉದಾ: ಭಾರತೀಯರೇ ಎದ್ದೇಳಿರಿ, ಗುರಿಮುಟ್ಟುವ ತನಕ ನಿಲ್ಲದಿರಿ.
·
ಅನುಕರಣಾವ್ಯಯ - ಕಿಲಕಿಲನೆ, ಧಡಮ್ಮನೆ, ಕೊಕ್ಕೋ, ಪರಪರ, ಮ್ಯಾಂವ್ ಮ್ಯಾಂವ್
ಇವು ಮನುಷ್ಯರ, ಪಶುಪಕ್ಷಿಗಳ, ಇಲ್ಲವೆ ಯಾವುದಾದರೊಂದು ಧ್ವನಿಯನ್ನು ಅನುಕರಣ
ಮಾಡುತ್ತವೆ.
ಉದಾ - ಹುಡುಗರು ಧಡಮ್ಮನೆ ನೀರಿಗೆ ಧುಮುಕಿದರು.
·
ಅವಧಾರಣಾವ್ಯಯ- ಎ,ಏ, ಈ ಅಕ್ಷರಗಳು ಹಿಂದಿನ ಶಬ್ದದ ಅರ್ಥವನ್ನು
ನಿಶ್ಚಿತಗೊಳಿಸುತ್ತವೆ. ಆದ್ದರಿಂದ ಇವು ಅವಧಾರಣಾವ್ಯಯಗಳು.
ಉದಾ - ನಾನು ರೈಲಿನಲ್ಲಿಯೇ ಪುಣೆಗೆ ಹೋಗುವನು.
*****************************************************
19. ಗುರುವಂದನೆ (ಕವಿತೆ)
ಶಬ್ದಗಳ ಅರ್ಥ:
ಸತ್ಪಥ - ಯೋಗ್ಯ
ಮಾರ್ಗ, ಸನ್ಮಾರ್ಗ;
ಚರಣ ~ ಪಾದ
ಪ್ರತಿಭೆ -
ಬುದ್ಧಿವಂತಿಕೆ;
ತಿದ್ದು – ಸರಿಪಡಿಸು;
ವಿಶೇಷ ವಿಚಾರ: ಸುಪ್ತಪ್ರತಿಭೆ - ಮಕ್ಕಳಲ್ಲಿ ಅಡಗಿದ ಬುದ್ಧಿ,
ಅಭ್ಯಾಸ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ
ಬರೆಯಿರಿ.
(೧) ಗುರು ಶಿಷ್ಯನಿಗೆ
ಸತ್ಪಥದಿ ಹೇಗೆ ನಡೆಸುವನು?
ಉತ್ತರ: ಅರಿವು ಬೆಳಕನ್ನು ತೋರಿಸಿ ಗುರುವು ಶಿಷ್ಯನಿಗೆ
ಸತ್ಪಥದಿ ನಡೆಸುವನು.
(೨) ಗುರು ಶಿಷ್ಯನಿಗೆ ಏನೆಂದು ಧೈರ್ಯ ತುಂಬುವನು?
ಉತ್ತರ:ಗುರು ಶಿಷ್ಯನಿಗೆ ಗುರಿಯ ಸೇರು ಜಾಮೀನಿಗಾಗಿ
ಎಂದು ಧೈರ್ಯ ತುಂಬುವನು.
(೩) ಶಿಷ್ಯನು ಕಲಿಕೆಯಲ್ಲಿ ತಪ್ಪಿದಾಗ ಗುರುಗಳು
ಏನು ಮಾಡುವರು?
ಉತ್ತರ: ಶಿಷ್ಯನು ಕಲಿಕೆಯಲ್ಲಿ ತಪ್ಪಿದಾಗ ಸಹನೆಯಿಂದ ತಿದ್ದಿದರು ಮತ್ತು ಸಿಟ್ಟುಗೊಳ್ಳದೆ
ಪ್ರೀತಿಯಿಂದ ನೇರ ದಾರಿಯನ್ನು ತೋರಿದರು.
(೪) ಶಿಷ್ಯನು ಗುರುಗಳಿಂದ ಹೇಗೆ ಧನ್ಯನಾಗುವನು?
ಉತ್ತರ: ಶಿಷ್ಯನು ಗುರುಗಳ ಕರುಣೆ ಕೃಪೆಯಿಂದ
ಧನ್ಯನಾಗುವನು.
ಪ್ರಶ್ನೆ
(೨) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣಗೊಳಿಸಿರಿ.
ನಿಮ್ಮ ಪ್ರೀತಿಯಿಂದ
ನಾನು ಜಾಣನಾಗಿ ಮೆರೆದೇನು
ನಿಮ್ಮ ನುಡಿಯ ಹರಕೆಯಿಂದ
ಕೀರ್ತಿವಂತನಾದೆನು
ಉಪಕ್ರಮ
(೧)
ಗುರುಭಕ್ತಿಗೆ ಸಂಬಂಧಿಸಿದ ಕಥೆ,
ಕವಿತೆಗಳನ್ನು
ಓದಿರಿ.
(೨)
ಕೃಷ್ಣ ಸುದಾಮ,
ಏಕಲವ್ಯ
ಮುಂತಾದವರ ಗುರುಭಕ್ತಿ ಪರ ಚರಿತ್ರೆಗಳನ್ನು ಓದಿರಿ.
ಅರಿವೇ
ಗುರು
20. ಆದರ್ಶ ಸಹೋದರರು
ಶಬ್ದಗಳ ಅರ್ಥ:
ಸ್ವರ್ಗಸ್ಥ –
ಮರಣಹೊಂದು
ದು:ಸ್ಥಿತಿ –
ಕೆಟ್ಟಸ್ಥಿತಿ
ಸದ್ಗುಣ – ಒಳ್ಳೆಯ
ಗುಣ
ಕಾಡಿಗೆ ಅಟ್ಟು –
ಅರಣ್ಯಕ್ಕೆ ಕಳುಹಿಸು
ಅಭ್ಯಾಸ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(೧) ಭರತನು ತಾಯಿಗೆ ಏನು ಕೇಳಿದನು?
ಭರತನು ತನ್ನ ತಾಯಿ
ಕೈಕೈಗೆ,
ಅಮ್ಮ, ಅಯೋಧೆಯೆಲ್ಲಾ ಕಾಂತಿಹೀನವಾಗಿದೆ. ಪ್ರಜೆಗಳು ಕಳೆಗುಂದಿದ್ದಾರೆ.
ಅರಮನೆಯೂ ಬಿಕೋ ಎನ್ನುತ್ತಿದೆ. ತಂದೆಯವರು ಎಲ್ಲಿಯೂ ಕಾಣಿಸುತ್ತಿಲ್ಲ. ಅಣ್ಣ ಶ್ರೀರಾಮಚಂದ್ರನೂ ಕಾಣಿಸುತ್ತಿಲ್ಲ.
ಅತ್ತಿಗೆ ಸೀತಾ ಮಾತೆ ಎಲ್ಲಿ? ಲಕ್ಷ್ಮಣ ಅಣ್ಣ ಎಲ್ಲಿ ಹೋದನು? ಎಂಬುದಾಗಿ ಕೇಳಿದನು.
(೨) ಶ್ರೀರಾಮಚಂದ್ರನು ಎಲ್ಲಿಗೆ ಹೋಗಿದ್ದನು?
ಉತ್ತರ: ಶ್ರೀರಾಮಚಂದ್ರನು
ತಂದೆಯ ಮಾತು ನಡೆಸಿಕೊಡಲೆಂದು ಸೀತೆ ಲಕ್ಷ್ಮಣರೊಡನೆ ದಂಡಕಾರಣ್ಯಕ್ಕೆ ವನವಾಸಕ್ಕೆ ಹೋಗಿದ್ದನು.
(೩) ಕೈಕೇಯಿ ಬೇಡಿದ
ಎರಡು ವರಗಳು ಯಾವವು?
ಉತ್ತರ: ಕೈಕೈ ಅಯೋಧೇಯ
ಅರಸ ದಶರಥ ಮಹಾರಾಜನಿಂದ ಎರಡು ವರಗಳನ್ನು ಬೇಡಿದಳು. ಮೊದಲನೆಯ ವರ- ಶ್ರೀರಾಮಚಂದ್ರನಿಗೆ ಹದಿನಾಲ್ಕು
ವರ್ಷಗಳ ವನವಾಸ,
ಎರಡನೆಯ ವರ- ತನ್ನ ಮಗ ಭರತನಿಗೆ ಕೋಶಲ ದೇಶದ ರಾಜ್ಯಭಾರ, ಫಟ್ಟಾಭಿಷೇಕ.
(೪) ಭರತನು
ರಾಜ್ಯವನ್ನು ದಿಕ್ಕರಿಸಲು ಕಾರಣವೇನು?
ಉತ್ತರ: ತಾಯಿ ಬೇಡಿಕೊಂಡ
ಎರಡು ವರಗಳಿಂದಾಗಿ ಭರತನಿಗೆ ಕೋಶಲ ದೇಶದ ರಾಜ್ಯಭಾರ ಮಾಡುವ ಅವಕಾಶ ಒದಗಿ ಬಂದಿತು. ಆದರೆ ಸತ್ಯ, ಶೀಲ, ಧರ್ಮ, ನ್ಯಾಯ ಈ ಎಲ್ಲ ಗುಣಗಳು ಅಣ್ಣ ಶ್ರೀರಾಮಚಂದ್ರನ ರೂಪದಲ್ಲಿ
ಕಾಡಿಗೆ ಹೊರಟುಣ್ ಹೋಗಿತ್ತು. ಆ ಎರಡು ವರಗಳಿಂದ ಅವನ ತಂದೆ ದಶರಥ ಮಹಾರಾಜ ಮಕ್ಕಳನ್ನು ಅಗಲಿದ ಕೊರಗಿನಲ್ಲಿ
ಮರಣ ಹೊಂದಿದ್ದರು. ಇಂಥ ದು:ಖವನ್ನು ಕಟ್ಟಿಕೊಂಡು ತಾನು ಹೇಗೆ ರಾಜ್ಯಭಾರ ಮಾಡಬೇಕು ಯೊಂದು ಯೋಚಿಸಿ
ಭರತನು ರಾಜ್ಯವನ್ನು
ದಿಕ್ಕರಿಸಿದನು.
(೫) ಭರತನು ಕಾಡಿಗೆ ಏಕೆ ಹೋದನು?
ಉತ್ತರ:
ವನವಾಸದಲ್ಲಿ ಇದ್ದ ಅಣ್ಣ ಶ್ರೀರಾಮ, ಅತ್ತಿಗೆ ಸೀತಾದೇವಿ, ಲಕ್ಷ್ಮಣ ಇವರಿಗೆ ಮರಳಿ ಕರೆ
ತರಲು ಭರತನು ಕಾಡಿಗೆ ಹೋದನು.
ಪ್ರಶ್ನೆ
(೨) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು.
(೧) ಅಮ್ಮಾ
ಅಯೋಧ್ಯೆಯೆಲ್ಲಾ ಕಾಂತಿಹೀನವಾಗಿದೆ.
ಉತ್ತರ: ಭರತನು
ಕೈಕೈಗೆ ಹೇಳಿದನು.
(೨) ಹಾ ರಾಮ ! ಹಾ
ಸೀತಾ ! ಹಾ ಲಕ್ಷ್ಮಣಾ.
ಉತ್ತರ: ಕೈಕೈ
ತನ್ನ ಮಗ ಭರತನಿಗೆ ಹೇಳಿದಳು.
(೩) ಮಗೂ ಭರತಾ, ನಿನ್ನ ಅಣ್ಣ ಶ್ರೀರಾಮಚಂದ್ರ ಸೀತೆ, ಲಕ್ಷ್ಮಣರೊಡನೆ
ವನವಾಸಕ್ಕೆ ಹೋದನು.
ಉತ್ತರ: ಕೈಕೈ
ತನ್ನ ಮಗ ಭರತನಿಗೆ ಹೇಳಿದಳು.
(೪) ಇಗೋ ಈ ಕಿರೀಟ, ಈ ಖಡ್ಗ ಎಲ್ಲವನ್ನು ಧರಿಸಿ ನೀನೇ ರಾಜ್ಯಭಾರ
ಮಾಡು.
ಉತ್ತರ: ಭರತನು
ಕೈಕೈಗೆ ಹೇಳಿದನು.
ಪ್ರಶ್ನೆ
(೩) ವಿರುದ್ಧಾರ್ಥಕ ಶಬ್ದ ಬರೆಯಿರಿ.
(೧) ದು:ಸ್ಥಿತಿ X ಸುಸ್ಥಿತಿ (೨) ಕೆಟ್ಟ X ಒಳ್ಳೆಯ (೩) ಪ್ರಿಯ X ಅಪ್ರಿಯ
(೪) ಸದ್ಗುಣ X ದುರ್ಗುಣ (೫) ಧರ್ಮ X ಅಧರ್ಮ
ಪ್ರಶ್ನೆ
(೪) ಕೆಳಗಿನ ಶಬ್ದಗಳನ್ನು ಸ್ವಂತ ವಾಕ್ಯಗಳಲ್ಲಿ ಬರೆಯಿರಿ.
(೧) ಹಂಬಲಿಸು: ತಾಯಿ ಮಕ್ಕಳಿಗಾಗಿ ಹಂಬಲಿಸುವಳು.
(೨) ಮನಸ್ಸು : ನಾವು ನಮ್ಮ ಮನಸ್ಸು
ಸ್ಥಿರವಾಗಿ ಇಡಬೇಕು.
(೩) ರಾಜ್ಯಭಾರ : ರಾಮನು ಮುಂದೆ ಅನೇಕ ವರುಷ ರಾಜ್ಯಭಾರ ಮಾಡಿದನು.
(೪) ವನವಾಸ : ರಾಮನಿಗೆ ಹದಿನಾಲ್ಕು ವರುಷ ವನವಾಸ ಮಾಡಬೇಕಾಯಿತು.
ಪ್ರಶ್ನೆ (೫)
ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(೧) ಅವ್ಯಯ ಎಂದರೇನು
?
ಉತ್ತರ: ಯಾವ ಪದಗಳನ್ನು ವಾಕ್ಯದಲ್ಲಿ ಬಳಸುವಾಗ ಲಿಂಗ, ವಚನ, ವಿಭಕ್ತಿಯಲ್ಲಿ ವ್ಯತ್ಯಾಸ ವಾಗುವದಿಲ್ಲವೋ ಅವುಗಳನ್ನು ‘ಅವ್ಯಯಗಳು' ಎನ್ನುತ್ತಾರೆ.
ಉದಾ - ಎಲ್ಲೋರಾ
ವಾಸ್ತುಶಿಲ್ಪಕ್ಕೆ ಬಹಳ ಪ್ರಸಿದ್ಧವಾಗಿದೆ.
(೨) ಈ ಕೆಳಗಿನ
ಶಬ್ದಗಳು ಯಾವ ಪ್ರಕಾರದ ಅವ್ಯಯಗಳಾಗಿವೆ ?
ಅಯ್ಯೋ = ಭಾವಬೋಧಕ ಅವ್ಯಯ
ತನಕ = ಅನುಸರ್ಗಾವ್ಯಯ
ಆನಂದ = ಕ್ರಿಯಾ ವಿಶೇಷಣಾತ್ಮಕ ಅವ್ಯಯ
ಆದರೆ = ಸಂಬಂಧಸೂಚಕ ಅವ್ಯಯ
ಆದರೂ = ಸಂಬಂಧಸೂಚಕ ಅವ್ಯಯ
ಉಪಕ್ರಮ:
ಮಹಾಭಾರತದಲ್ಲಿಯ
ಸಹೋದರ ವಾತ್ಸಲ್ಯಕ್ಕೆ ಹೆಸರಾದ ಯಕ್ಷಪ್ರಶ್ನೆ ಕಥೆಯನ್ನು ಕೇಳಿ
ತಿಳಿದುಕೊಳ್ಳಿರಿ.
ನೋಡಿ ಕಲಿಯಬೇಕು, ಕೂಡಿ ಬಾಳಬೇಕು.
**************************************************************
21. ವನವಿಹಾರ (ಕವಿತೆ)
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ)
ಶಾಲೆಯ ಗೆಳೆಯರು ಯಾವ ತೋಪಿಗೆ ಹೊರಟಿಹರು?
ಉತ್ತರ: ಶಾಲೆಯ
ಗೆಳೆಯರು ಮಾವಿನ ತೋಪಿಗೆ ಹೊರಟಿಹರು.
(ಆ) ಬುಟ್ಟಿಯಲ್ಲಿ
ಏನೇನು ಕಟ್ಟಿಹರು?
ಉತ್ತರ:ಕಲಸಿದ ಅನ್ನ
ಪಾಯಸವನ್ನು ಬುತ್ತಿಯಲ್ಲಿ ಕಟ್ಟಿಹರು.
(ಇ) ಮುಳ್ಳನ್ನು ಹೇಗೆ ದಾಟಿದರು?
ಉತ್ತರ: ಗೆಳೆಯರು
ಮುಳ್ಳನ್ನು ಜತನದಿ ದಾಟಿದರು.
(ಈ) ತೋಪದಲ್ಲಿ ಅವರು ಯಾವ ಆಟ ಆಡಿದರು ?
ಉತ್ತರ: ಗೆಳೆಯರು
ಕೊಂಬೆಯ ಹಿಡಿದು ರೆಂಬೆಯನೆಳೆದು ಮರಕೋತಿ ಆಟ ಆಡಿದರು.
(ಉ) ಮಕ್ಕಳು ಎಂಥ ಹೊಳೆಯಲ್ಲಿ ಮಿಂದರು ?
ಉತ್ತರ: ಮಕ್ಕಳು
ಹರುಷದ ಹೊಳೆಯಲ್ಲಿ ಮಿಂದಿಹರು.
(ಊ) ಮಕ್ಕಳು ಯಾವಾಗ ಮನೆಯೆಡೆ ಸಾಗಿದರು ?
ಉತ್ತರ: ಸೂರ್ಯನು
ಮುಳುಗಲು ಕತ್ತಲೆ ಹರಡಲು ಎಲ್ಲರೂ ಮನೆಯಡೆ ಸಾಗಿದರು.
ಪ್ರಶ್ನೆ
(೨) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣ ಮಾಡಿರಿ.
ಬಂದೇ ಬಿಟ್ಟಿತು
ಮಾವಿನ ತೋಪು
ಮುಳ್ಳನು ಜತನದಿ
ದಾಟಿದರು
ಕೊಂಬೆಯ ಹಿಡಿದು
ರೆಂಬೆಯನೆಳೆದು
“ಮರಕೋತಿ” ಆಟ ಆಡಿದರು.
ಪ್ರಶ್ನೆ
(೩) ಉದಾಹರಣೆಯಲ್ಲಿ ತೋರಿಸಿದಂತೆ ಪದಗಳನ್ನು ರಚಿಸಿರಿ.
ಉದಾ : ಕಟ್ಟು -
ಕಟ್ಟುವರು
(ಅ) ದಾಟು - ದಾಟುವರು
(ಆ) ಹೊರಡು - ಹೊರಡುವರು
(ಇ) ಸುರಿಸು - ಸುರಿಸುವರು
(ಈ) ಮಾಡು - ಮಾಡುವರು
(ಉ) ಆಡು - ಆಡುವರು
(ಊ) ಮಿಂದು – ಮಿಂದಿಹರು/ಮೀಯುವರು.
ಉಪಕ್ರಮ:
ಮಕ್ಕಳೆ,
ಶಿಕ್ಷಕರೊಂದಿಗೆ
ನಿಮ್ಮೂರ ಸಮೀಪದ ತೋಟವೊಂದಕ್ಕೆ 'ವನಭೋಜನಕ್ಕೆ’ ಹೋಗಿರಿ.
ಮನೆಗೊಂದು
ಮರ,
ಊರಿಗೊಂದು
ವನ
22. ಅನ್ನದ ಮಹಿಮೆ
ಶಬ್ದಗಳ ಅರ್ಥ
ರಾಶಿ – ಗುಂಪು
ಅಲೆದಾಡು –
ಕಷ್ಟಪಡು
ಕುಂಟೆ – ಬೇಸಾಯದ
ಒಂದು ಉಪಕರಣ
ಕೂರಿಗೆ – ಬೀಜ
ಬಿತ್ತುವ ಉಪಕರಣ
ಸೂಡು – ಕಂತೆ
ಬುದ್ದಿವಾದ –
ಉಪದೇಶ
ಅಭ್ಯಾಸ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.
(ಅ) ರವಿಯು ತಟ್ಟೆಯಲ್ಲಿ ಅರ್ಧ ರೊಟ್ಟಿಯನ್ನು
ಏಕೆ ಬಿಟ್ಟನು?
(ಆ) ಅನ್ನದ ಮಹಿಮೆ
ಯಾರಿಗೆ ತಿಳಿದಿಲ್ಲ?
(ಇ) ಯಾರು ಮಳೆರಾಯನ
ದಾರಿ ಕಾಯುತ್ತ ಕುಳಿತು ಬಿಡುತ್ತಾರೆ?
(ಈ) ನಾವು ಏನನ್ನು ತಿಂದು ಬದುಕಲು ಸಾಧ್ಯವಿಲ್ಲ?
(ಉ) ರವಿಯು ಯಾವ ಪುಸ್ತಕವನ್ನು
ಓದುತ್ತಾ ಕುಳಿತಿರುವನು?
ಪ್ರಶ್ನೆ
(೨) ಕೆಳಗಿನ ಪ್ರಶ್ನೆಗಳಿಗೆ ಉತ್ತರ
ಬರೆಯಿರಿ.
(ಅ) ರವಿಯು ಹೇಗೆ ಊಟ ಮಾಡಿದನು?
(ಆ) ಸಂಗಪ್ಪನು ರವಿಗೆ
ಅನ್ನದ ಮಹಿಮೆಯನ್ನು ಹೇಗೆ ತಿಳಿಸಿಕೊಟ್ಟನು?
(ಇ) ರೈತರು ಜೋಳವನ್ನು ಹೇಗೆ ಬೆಳೆಯುತ್ತಾರೆ?
(ಈ) ನಾವು
ಗಿಡ-ಮರಗಳನ್ನು ಉಳಿಸಿ, ಬೆಳೆಸಿ ಏಕೆ ಪೋಷಿಸಬೇಕು?
ಪ್ರಶ್ನೆ
(೩) ಕೆಳಗಿನ ಶಬ್ದಗಳನ್ನು ಸ್ವಂತ ವಾಕ್ಯದಲ್ಲಿ ಉಪಯೋಗಿಸಿರಿ.
2. ಶ್ರಮ=ನಾವು ಶ್ರಮಪಟ್ಟು
ದುಡಿಯಬೇಕು
3. ಪರಿಸರ=ಪರಿಸರವನ್ನು ಸ್ವಚ್ಛವಾಗಿ ಇಡಬೇಕು.
4. ಹಾಲುತೆನೆ = ಜೋಳ್ಳಕ್ಕೆ ಇನ್ನೂ ಹಾಲುತೆನೆ ಬಂದಿವೆ.
5. ಜಿಪುಣತನ= ಅತೀ ಜಿಪುಣತನ
ಮಾಡಬಾರದು.
ಪ್ರಶ್ನೆ
(೪) ಬಿಟ್ಟ ಸ್ಥಳವನ್ನು ತುಂಬಿರಿ.
(ಅ) ರವಿಯು ತನ್ನ ಅಜ್ಜನಾದ ಸಂಗಪ್ಪನ ಮನೆಗೆ ಬಂದನು.
(ಆ) ಕುಂಟೆ ಹೊಡೆದು ಹೊಲವನ್ನು ಮೆತ್ತಗೆ ಮಾಡುತ್ತಾರೆ.
(ಇ) ಸುಗ್ಗಿಯ
ಸಮಯದಲ್ಲಿ ರೈತರು ಹಾಲುತೆನೆಯನ್ನು ಸುಟ್ಟು ತಿನ್ನುತ್ತಾರೆ.
(ಈ) ಮನುಷ್ಯನು
ಬದುಕಲು ಮುಖ್ಯವಾಗಿ ಹವೆ,
ಅನ್ನ ಮತ್ತು ನೀರು ಬೇಕು.
(ಉ) ತುತ್ತು ಅನ್ನದ
ಹಿಂದೆ ಸಾವಿರಾರು ರೈತರ ಶ್ರಮ
ಅಡಗಿರುತ್ತದೆ.
ಉಪಕ್ರಮ
ಕೆಳಗಿನ
ಚಿತ್ರಗಳನ್ನು ನೋಡಿ ಹತ್ತಿಯಿಂದ ಬಟ್ಟೆ ತಯಾರಾಗುವ ವಿಧಾನವನ್ನು ಶಿಕ್ಷಕರಿಂದ/ಪಾಲಕರಿಂದ
ತಿಳಿದುಕೊಳ್ಳಿರಿ.
ರೈತ ಭಾರತದ ಬೆನ್ನೆಲುಬು
23.
ನವಯುಗಾದಿ (ಕವಿತೆ)
-ಎಚ್. ಎಂ. ಮಾರುತಿ
ಶಬ್ದಗಳ ಅರ್ಥ:
ತಳಿರು - ಹಸಿರು;
ನವ - ಹೊಸ
ಚಿತ್ತಾರ - ಚಿತ್ರ;
ಸಂಪ್ರೀತ - ಅತಿ ಪ್ರೇಮ;
ಝೇಂಕಾರ - ದುಂಬಿಯ
ಧ್ವನಿ
ವಿರುದ್ಧಾರ್ಥಕ
ಶಬ್ದಗಳು:
ಆಗಮನ X ನಿರ್ಗಮನ :
ಶುಭ X ಅಶುಭ
ಪ್ರಶ್ನೆ
(೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ
ಬರೆಯಿರಿ.
(೧) ನವ ಯುಗಾದಿಯ ಆಗಮನ ಹೇಗಿದೆ?
ಉತ್ತರ: ಚಿಗುರಿದ
ಹಸಿರಿನ ತಳಿರು ತೋರಣಗಳೊಂದಿಗೆ ಯುಗಾದಿಯ ಆಗಮನ ವಾಗಿದೆ.
(೨) ಸುಗ್ಗಿಯ ಸಿರಿಯು
ಹೇಗೆ ಬಂದಿತು?
ಉತ್ತರ: ಸುಗ್ಗಿಯ
ಸಿರಿಯು ಹಿಗ್ಗಿನ ಹೊಳೆಯನ್ನು ಹರಿಸುತ್ತಾ ನಮ್ಮ ಬಳಿ ಬಂದಿತು.
(3) ಚಿಗುರಿನ ಚಿತ್ತಾರ
ಏನು ಮಾಡಿತು?
ಉತ್ತರ:
ಭೂಮಿತಾಯಿಯ ಮೈಯನ್ನು ಸಡಗರದಿಂದ ಹಚ್ಚು ಹಸಿರನ್ನು ಉಡಿಸಿತ್ತು ಚಿಗುರಿನ ಚಿತ್ತಾರ.
(೪) ಮನವು ಯಾವಾಗ
ಸಂಪ್ರೀತವಾಗುತ್ತದೆ ?
ಉತ್ತರ: ಚಿಗುರನು
ತಿನ್ನುವ ಕೋಗಿಲೆ ಕುಹುರುವ ಕೇಳಿದ ಮನವು ಸಂಪ್ರೀತವಾಗುತ್ತದೆ.
ಪ್ರಶ್ನೆ
(೨) ಬಿಟ್ಟ ಸ್ಥಳಗಳನ್ನು ತುಂಬಿರಿ.
(ಅ) ಚಿಗುರಿದ ಹಸಿರಿನ
ತಳಿರು ತೋರಣ ನವಯುಗಾದಿಯ ಆಗಮನ.
(ಆ) ಗೆಲ್ಲು ಗೆಲ್ಲಿನಲಿ ಚೆಲ್ಲಾಡುತಿಹುದು ಕೋಟಿ ಜೇನಿನ ಝೇಂಕಾರ.
(ಇ) ಸುಗ್ಗಿಯ ಸಿರಿಯು ಹಿಗ್ಗಿನ ಹೊಳೆಯು ಹರಿಯುತ ಬಂದಿದೆ ನಮ್ಮ ಬಳಿ.
(ಈ) ಹೂವಿಗೆ
ಮುತ್ತುವ ದುಂಬಿಯ ಕಲರವ ತೇಲಿ ನಲಿಯುವ ಸಂಗೀತ.
ಪ್ರಶ್ನೆ
(೩) ಕೆಳಗೆ ಕೊಟ್ಟ ಅಕ್ಷರದಿಂದ
ಕೊನೆಗೊಳ್ಳುವ ಎರಡೆರಡು ಶಬ್ದಗಳನ್ನು ಕವಿತೆಯಿಂದ ಆಯ್ದು ಬರೆಯಿರಿ.
ನ – ಹಸಿರಿನ, ಆಗಮನ
ರ - ಚಿತ್ತಾರ, ಝೇಂಕಾರ
ಳಿ - ಚಳಿ, ಬಳಿ
ತ - ಸಂಗೀತ, ಸಂಪ್ರೀತ
ಉಪಕ್ರಮ:
ಯಾವುದಾದರೊಂದು ಭಾರತೀಯ ಹಬ್ಬದ ಕುರಿತು ೧೦ ಸಾಲುಗಳಲ್ಲಿ ವರ್ಣಿಸಿರಿ.
ದೀಪಾವಳಿ
ಹಬ್ಬವು ಬಂದಿತು, ಹಿಗ್ಗನು ತಂದಿತು.
********* ********
0 ಕಾಮೆಂಟ್‌ಗಳು
ಧನ್ಯವಾದಗಳು