8 ಮಾರ್ಚ ಜಾಗತಿಕ ಮಹಿಳೆಯರ ದಿನಾಚರಣೆ- ಸೂತ್ರ ಸಂಚಲನೆ ನಮೂನೆ
ಆತ್ಮೀಯ ಶಿಕ್ಷಕ ಬಂಧು- ಭಗಿನಿಯರೇ, ವಿದ್ಯಾರ್ಥಿಗಳೇ ಹಾಗೂ ಪಾಲಕರೇ,
ಮಾರ್ಚ್ ತಿಂಗಳ 8ನೇ ತಾರೀಖಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಇದೆ. ಮಹಿಳೆಯರ ವಿಶೇಷ ದಿನವಾದ ಈ ದಿನವನ್ನು ನಿಮ್ಮ ಶಾಲಾ-ಕಾಲೇಜುಗಳಲ್ಲಿ ಎರ್ಪಡಿಸುವಾವ ವಿದ್ಯಾರ್ಥಿಗಳೇ ಸಂಪೂರ್ಣ ಕಾರ್ಯಕ್ರಮದ ಸೂತ್ರಸಂಚಲನೆ ಮಾಡಲು ಅನುಕೂಲಕರ ಮಾದರಿ ಸೂತ್ರಸಂಚಲನೆಯ ನಮೂನೆ ಕೊಡಲಾಗಿದೆ. ಇದರಲ್ಲಿ ಪ್ರಸಂಗಿಕ ವಾತಾವರಣದಂತೆ ಬದಲಾವಣೆ ಮಾಡಿ ಉತ್ಕೃಷ್ಟವಾದ ಕಾರ್ಯಕ್ರಮದ ನಿರೂಪಣೆ ಮಾಡಬಹುದು.
8 ಮಾರ್ಚ ಜಾಗತಿಕ ಮಹಿಳಾ ದಿನ ಸೂತ್ರ ಸಂಚಲನೆ
ಆತ್ಮೀಯ ಬಂಧು ಭಗಿನಿಯರೇ, ಶುಭೋದಯ, Good Morning
ವಕ್ರ ತುಂಡ ಮಹಾಕಾಯ ಕೋಟಿಸೂರ್ಯ
ಸಮಪ್ರಭ
ನಿರ್ವಿಘ್ನಂ ಕುರುಮೇ ದೇವಾ ಸರ್ವ
ಕಾರ್ಯೇಶು ಸರ್ವದಾ
ತಮಗೆಲ್ಲರಿಗೂ ಇಂದಿನ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಸ್ವಾಗತಗಳನ್ನು
ಕೋರುತ್ತೇನೆ.
ಆಗತಮ......
ಸ್ವಾಗತಮ.......... ಸುಸ್ವಾಗತಮ........ !
ಸ್ನೇಹಿತರೇ,
ಇಂದು 8 ಮಾರ್ಚ್. ಹಾಗೆ ವರ್ಷದಲ್ಲಿಯ 365 ದಿನಗಳು ಒಂದೊಂದು ವಿಶೇಷತೆಗಳಿಂದ ಕೂಡಿರುತ್ತವೆ.
ಅದರಂತೆ ಇಂದಿನ ದಿನ ಮಹಿಳೆಯರಿಗಾಗಿ, ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ
ಮಾಡಿ ಸಂಯುಕ್ತ ಸಂಸ್ಥಾನದಲ್ಲಿ ಸಾವಿರಾರು ಮಹಿಳಾ ರತ್ನಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ
ಮಾಡಿದರು. ಅದರ ಫಲಸ್ವರೂಪವೇ ಇಂದಿನ ಜಾಗತಿಕ ಮಹಿಳಾ ದಿನಾಚರಣೆ. ಮಹಿಳಾ ರತ್ನಗಳ ಸಾಧನೆಗಳಿಗೆ
ಗೌರವ, ಸನ್ಮಾನ, ಪ್ರೀತಿ ಹಾಗೂ ಪ್ರೇರಣೆ
ನಿಡುವುದಕ್ಕಾಗಿ ಜಾಗತಿಕ ದಿನಾಚರಣೆ ಇಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ.
ಕಾರ್ಯಕ್ರಮದ ಆರಂಭವನ್ನು ಅತಿಥಿಗಳ ಸ್ವಾಗತ
ಮತ್ತು ಸತ್ಕಾರದೊಂದಿಗೆ ಮಾಡೋಣ. ಇಂದಿನ
ಕಾರ್ಯಕ್ರಮಕ್ಕೆ ಅಧ್ಯಕ್ಷ ಸ್ಥಾನವನ್ನು ನಮ್ಮ ಊರಿನ ಹಿರಿಯರಾದ ಶ್ರೀ/ ಶ್ರೀಮತಿ.
......................................................................... ಇವರು ಅಲಂಕರಿಸಬೇಕೆಂದು
ನಾನು ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ.
ನನ್ನ
ಸಹಪಾಠಿ ಸೂಚಿಸಿದ ಅಧ್ಯಕ್ಷರ ಆಯ್ಕೆಗೆ ನಮ್ಮ ಶಾಲೆಯ ಹಾಗೂ ಗುರುಗಳ ಪರವಾಗಿ ಸಂಪೂರ್ಣ ಅನುಮೋದನೆ
ಇರುತ್ತದೆ.
ಈ
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ನಮ್ಮ ಊರಿನ ಸಮಾಜಸೇವಕರು
ಶ್ರೀ........................................................... ಇವರಿಗೆ
ಹಾರ್ದಿಕ ಸ್ವಾಗತವನ್ನು ಬಯಸುತ್ತೇನೆ.
ದೀಪ ಪ್ರಜ್ವಲನೆ
ದೀಪದಿಂದ
ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ
ಪ್ರೀತಿ ಹಂಚಲು
ಮನಸಿನಿಂದ
ಮನಸನು ಬೆಳಗಬೇಕು ಮಾನವ
ಮೇಲು ಕೀಳು
ಭೇದ ನಿಲ್ಲಲು
ಭೇದವಿಲ್ಲ
ಬೆಂಕಿಗೆ, ದ್ವೇಷವಿಲ್ಲ
ಬೆಳಕಿಗೆ
ನೀ ತಿಳಿಯೋ, ನೀ ತಿಳಿಯೋ
ಎಂಬಂತೆ ಅಜ್ಞಾನದ
ಅಂಧಕರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನಮ್ಮ ಬದುಕಿನಲ್ಲಿ ಬೆಳಗಿಸಿ ನಮ್ಮನ್ನು ಉದ್ಧರಿಸಿದ
ನಮ್ಮ ಪೂಜ್ಯ ಗುರುವೃಂದಕ್ಕೆ ವಂದಿಸಿ, ಇಂದಿನ ಅಥಿತಿಯರಿಗೆ ದೀಪ ಪ್ರಜ್ವಲನೆ ಮಾಡಲು
ಕೇಳಿಕೊಳ್ಳುತ್ತೇನೆ. (ಫೋಟೋ ಪೂಜನ ಮಾಡಿದ ನಂತರ)
ಧನ್ಯವಾದಗಳು ಮಾನ್ಯರೇ.
ಮಹಿಳಾ
ದಿನಾಚರಣೆ ಆಚರಿಸುವಾಗ ಮಹಿಳೆಯರಿಗೆ ದಿವ್ಯ ತೇಜ ನೀಡಿದ, ಅಕ್ಷರಗಳ ಪರಿಚಯ ಮಾಡಿ
ಶಿಕ್ಷಣದ ಹೆಬ್ಬಾಗಿಲು ತೆರೆದ ಮಹಾತಾಯಿ ಕ್ರಾಂತಿ ಜ್ಯೋತಿ ಪ್ರತಿಮೆ ಪೂಜೆ ಮಾಡಬೇಕೆಂದು
ಅತಿಥಿಗಳಿಗೆ ವಿನಂತಿಸುತ್ತೇನೆ. (ಫೋಟೋ ಪೂಜೆ
ಮಾಡುವಾಗ ) ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು
ನಿರಾಕರಿಸಿದ ಸಮಾಜಕ್ಕೆ ಎದುರಾಗಿ ನೋವು-ಅವಮಾನಗಳನ್ನು ಮೆಟ್ಟಿ ನಿಂತು ಹೆಣ್ಣು ಮಕ್ಕಳಿಗಾಗಿ
ಶಾಲೆ ಪ್ರಾರಂಭಿಸಿ ಅಕ್ಷರ ಕಲಿಸಿದ ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಪ್ರತಿಮೆಯ ಪೂಜೆ
ಮಾಡಬೇಕೆಂದು ಸನ್ಮಾನ್ಯ ಅತಿಥಿಗಳಲ್ಲಿ ವಿನಂತಿಸಿಕೊಳ್ಳುತ್ತೇನೆ.
ಧನ್ಯವಾದಗಳು ಮಾನ್ಯರೇ,
ಈಗ
ಸತ್ಕಾರ ಸಮಾರಂಭ
·
ನಮ್ಮ ಶಾಲೆಯ ಮುಖ್ಯಗುರುಗಳು ಶ್ರೀ
.............................................. ಇವರು ಇಂದಿನ ಕಾರ್ಯಕ್ರಮದ
ಅಧ್ಯಕ್ಷರಾಗಿ ಆಗಮಿಸಿದ ಶ್ರೀ. ............................... ಇವರಿಗೆ ಪುಷ್ಪಗುಚ್ಛ
ನೀಡಿ ಸತ್ಕರಿಸಬೇಕೆಂದು ಕೇಳಿಕೊಳ್ಳುತ್ತೇನೆ.
·
ನಮ್ಮ ಶಾಲೆಯ ಮುಖ್ಯಗುರುಗಳು ಶ್ರೀ
.............................................. ಇವರು ಇಂದಿನ ಕಾರ್ಯಕ್ರಮದ ಮುಖ್ಯ
ಅತಿಥಿಯಾಗಿ ಆಗಮಿಸಿದ ಶ್ರೀ. ............................... ಇವರಿಗೆ ಪುಷ್ಪಗುಚ್ಛ ನೀಡಿ
ಸತ್ಕರಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಈಗ ನಮ್ಮ ಶಾಲೆಯ ಗುಣವಂತ ವಿದ್ಯಾರ್ಥಿನಿಯರು ಜಾಗತಿಕ ಮಹಿಳಾ
ದಿನಚರಣೆಯ ಕುರಿತು ತಮ್ಮ ಭಾಷಣವನ್ನು ಮಾಡುವವರಿದ್ದಾರೆ. 1)
2)
3)
ಗುರುಗಳ ಮಾರ್ಗದರ್ಶನ
ಮೊಟ್ಟ
ಮೊದಲಿಗೆ ನಮ್ಮ ವರ್ಗ ಶಿಕ್ಷಕರು ಶ್ರೀ ....................... ಸರ್ ಮಾರ್ಗದರ್ಶನ ಮಾಡಬೇಕೆಂದು ಕೋರಿಕೆ.
ಧನ್ಯವಾದಗಳು ಸರ.
ನಮ್ಮ ಶಾಲೆಯ ಹಿರಿಯ
ಶಿಕ್ಷಕಿಯರು ಶ್ರೀಮತಿ ..............................
ಮೇಡಂ ಮಾರ್ಗದರ್ಶನ ಮಾಡಬೇಕೆಂದು ಕೋರಿಕೆ.
ಧನ್ಯವಾದಗಳು ಸರ.
ಇದಾದನಂತರ ಶ್ರೀ. …………………………………………..
ಸರ್ ಮಾರ್ಗದರ್ಶನ ಮಾಡಬೇಕೆಂದು
ಕೋರಿಕೆ. ಧನ್ಯವಾದಗಳು ಸರ.
ಅಧ್ಯಕ್ಷೀಯ ಭಾಷಣ
ಈ ಇಂದಿನ ಜಾಗತಿಕ ಮಹಿಳಾ
ದಿನಚರಣೆಯ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ/ ಸೌ. ............................ ................................................
ಇವರು ನಮಗೆ ಕೆಲವು ಹಿತ ನುಡಿಗಳನ್ನು ಹೇಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಧನ್ಯವಾದಗಳು ಮಹನೀಯರೆ,
ನಿಮ್ಮ ಮಾರ್ಗದರ್ಶನ ನಮಗೆ ಸದಾ ದಾರಿ ದೀಪವಾಗುವುದು.
ವಂದನಾರ್ಪಣೆ ಕಾರ್ಯಕ್ರಮ
ಕೊನೆಯದಾಗಿ ವಂದನಾರ್ಪಣೆ
ಕಾರ್ಯಕ್ರಮ ಅಂದರೆ ಆಭಾರ ಪ್ರದರ್ಶನೆ ಕಾರ್ಯಕ್ರಮವನ್ನು ನಮ್ಮ ಸಹಪಾಠಿ ಸಹೋದರ ..............................
ನೆರೆವೇರಿಸಿ ಕೊಡಬೇಕೆಂದು ಅವನನ್ನು ಕೇಳಿಕೊಳ್ಳುತ್ತೇನೆ.
ಭಾಷಣ
वार नाही तलवार आहे
ती समशेरची धार आहे
स्त्री म्हणजे अबला नाही .... ती तर धगधगता अंगार आहे.
ಸನ್ಮಾನನಿಯ ವ್ಯಾಸಪೀಠ,
ವಂದನೀಯ ಗುರುಗಳೇ ಹಾಗೂ ಇಲ್ಲಿ ಉಪಸ್ಥಿತರಿರುವ ನನ್ನ ಮಹಿಳಾ ಭಗಿನಿಯರೇ, ಪ್ರಥಮವಾಗಿ ನಿಮ್ಮೆಲ್ಲರಿಗೆ ಜಾಗತಿಕ ಮಹಿಳಾ ದಿನದ ಹಾರ್ದಿಕ ಶುಭಾಷಯಗಳನ್ನು
ಕೋರುತ್ತೇನೆ.
ಛತ್ರಪತಿ
ಶಿವಾಜಿ ಮಹಾರಾಜರಿಗೆ ರೂಪ ಕೊಟ್ಟ ವೀರಮಾತೆ ಜೀಜಾವು. ನಾನು ನನ್ನ ಝಾಂಶಿ ಕೊಡಲಾರೆ ಎಂದು
ಅಬ್ಬರಿಸಿ ಬ್ರಿಟಿಷ ಸೈನ್ಯವನ್ನು ಮೆಟ್ಟಿ ಮಡಿದ ವೀರಾಂಗಿನಿ ಝಂಶಿ ರಾಣಿ ಲಕ್ಷ್ಮೀಬಾಯಿ,
ಹುಡುಗಿಯರಿಗೆ, ಮಹಿಳೆರಿಗಾಗಿ ಶಿಕ್ಷಣದ ಹೆಬ್ಬಾಗಿಲು ತೆರೆದು ಕೊಟ್ಟ ಸಾವಿತ್ರಿಬಾಯಿ
ಫುಲೆ ಇವರಂತಹ ಅನೇಕ ಸಾಧಕ ಮಹಿಳೆಯರು ಈ ಪುಣ್ಯ ಭಾರತ ಭೂಮಿಮೇಲೆ ಆಗಿ ಹೋಗಿದ್ದಾರೆ. ಅವರ
ಸಾಧನೆಗೆ ಶರಣು ಶರಣಾರ್ಥಿಗಳು.
ಪ್ರತಿ ವರುಷ
8 ಮಾರ್ಚ ಈ ದಿನವನ್ನು ಜಾಗತಿಕ ಮಹಿಳಾ ದಿನವನ್ನಾಗಿ ವಿಶ್ವದೆಲ್ಲೆಡೆ ಅತಿ ಉತ್ಸಾಹದಿಂದ
ಆಚರಿಸಲಾಗುತ್ತದೆ. 8 ಮಾರ್ಚ್ 1908 ರಲ್ಲಿ ಅಮೆರಿಕೆಯ ನ್ಯೂಯಾರ್ಕ್ ನಗರದಲ್ಲಿ ವಸ್ತ್ರೋದ್ಯೋಗ
ಮಹಿಳಾ ಕಾರ್ಮಿಕರು ಸಾವಿರಾರು ಜನ ಒಕ್ಕಟ್ಟಾಗಿ ಕೆಲಸದ ತಾಸುಗಳು ಕಡಿಮೆ ಮಾಡಲು ಮತ್ತು ತಮಗೆ
ಸಂರಕ್ಷಣೆ ಒದಗಿಸಿ ಕೊಡಬೇಕೆಂದು ಬೇಡಿ ನಿದರ್ಷನೆ ಮಾಡಿದರು. ಮಹಿಳೆಯರು ಸ್ವತ: ತಮ್ಮ
ಹಕ್ಕುಗಳಿಗಾಗಿ ಮಾಡಿದ ಮೊದಲ ಹೋರಾಟ ಇದಾಗಿತ್ತು. 1910 ರ ಆಂತರರಾಷ್ಟ್ರೀಯ ಮಹಿಳಾ ಪರಿಷದದಲ್ಲಿ
ಕ್ಲಾರಾ ಝೆಟಗಿ ಇವರು 8 ಮಾರ್ಚಈ ದಿನವನ್ನು ಜಾಗತಿಕ ಮಹಿಒಳ ದಿನಾಚರಣೆ ಆಚರಿಸಬೇಕೆಂದು ಸೂಚನೆ
ಮಂಡಿಸಿದರು. ಅಂದಿನಿಂದ ಪ್ರತಿವರುಷ 8 ಮಾರ್ಚ್ ವನ್ನು ಜಾಗತಿಕ ದಿನವೆಂದು ಆಚರಿಸುತ್ತಾರೆ.
ಜೈ ಭಾರತ ಮಾತೆ! ಜೈ ಕನ್ನಡಾಂಬೆ!!
ಜೈ ನಾರಿ ಶಕ್ತಿ !!!
0 ಕಾಮೆಂಟ್‌ಗಳು
ಧನ್ಯವಾದಗಳು