ಬಬಲಾದ ಜಿ.ಪ.ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಣರಾಜ್ಯೋತ್ಸವ ಆಚರಣೆ
ಬಬಲಾದ: ಅಕ್ಕಲಕೋಟ ತಾಲೂಕಿನ ಕೊನೆಯ ಗ್ರಾಮ ಬಬಲಾದದಲ್ಲಿ ಜಿ.ಪ.ಪ್ರಾಥಮಿಕ ಕನ್ನಡ ಶಾಲೆ, ಮರಾಠಿ ಹಾಗೂ ಉರ್ದು ಶಾಲೆಯ ಪ್ರಾಂಗಣದಲ್ಲಿ ೭೪ನೇ ಗಣರಾಜ್ಯೋತ್ಸವ ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಸ್ಥಾನಿಕ ನಿವೃತ್ತ ಶಿಕ್ಷಕರು, ತಂಟೆ ಮುಕ್ತಿ ಸಮಿತಿಯ ಮಾಜಿ ಅಧ್ಯಕ್ಷರು ಶ್ರೀ. ಕಲ್ಲಪ್ಪ ಸೋಮೇಶ್ವರ್ ಗುರೂಜಿ ಅಧ್ಯಕ್ಷ ಸ್ಥಾನದಲ್ಲಿದ್ದರು. ಮ. ಗಾಂಧೀಜಿ ಮತ್ತು ಮಹಾಮಾನವ ಡಾ. ಬಾಬಾಸಾಹೇಬ ಅಂಬೇಡ್ಕರ್ ಫೋಟೋ ಪೂಜೆಯನ್ನು ಕನ್ನಡ ಶಾಲೆಯ ಎಸ್.ಎಮ್.ಸಿ. ಅಧ್ಯಕ್ಷ ಶ್ರೀ. ಗಂಭಿರಪ್ಪ ಮಡ್ಡಿ ಮಾಡಿದರು. ಧ್ವಜಸ್ಥಂಬದ ಪೂಜೆ ಉರ್ದು ಶಾಲೆಯ ಎಸ್.ಎಮ್.ಸಿ. ಅಧ್ಯಕ್ಷ ಶ್ರೀ. ತನವೀರ್ ಕರಜಗಿ ಮಾಡಿದರೆ ಮರಾಠಿ ಶಾಲೆಯ ಎಸ್.ಎಮ್.ಸಿ. ಅಧ್ಯಕ್ಷ ಶ್ರೀ. ಭೋಗೆಶ್ವರ ಲಕಾಬಶೆಟ್ಟಿ ತಮ್ಮ ಅಮೃತ ಹಸ್ತದಿಂದ ಧ್ವಜಾರೋಹಣೆ ಮಾಡಿದರು. ವೇದಿಕೆಯಲ್ಲಿ ಊರಿನ ಗಣ್ಯಮಾನ್ಯ ವ್ಯಕ್ತಿಗಳು ಶಿವಶರಣ ಲಕಾಬಶೆಟ್ಟಿ, ರಮೇಶ ರೋಡಗೆ, ರಾಜು ಲಕಾಬಶೆಟ್ಟಿ, ಮಧು ಪೂಜಾರಿ, ಜೀವಾ ಮಡ್ಡಿ ಪೋಲಿಸ ಪಾಟೀಲ, ಮಹಾಂತ ಕಲಶೆಟ್ಟಿ ವಿ.ವಿ.ಕಾರ್ಯಕಾರಿ ಸೋಸಾಯಟಿ ಅಧ್ಯಕ್ಷರು, ತಂಟೆ ಮುಕ್ತಿ ಸಮಿತಿ ಅಧ್ಯಕರು ಶ್ರೀ. ಇರಣ್ಣ ರೋಡಗೆ, ಶಬೀರ್ ಕರಜಗಿ, ಹಸನ ಜಮಾದಾರ , ಗ್ರಾಮ ಸೇವಿಕೆ ಶ್ರೀಮತಿ ವಾಘಮೋಡೆ ಮೇಡಂ, ತಲಾಟಿ ಶ್ರೀಮತಿ ಮಿಟಕರಿ ಮೇಡಂ, ಸರಪಂಚ ಶ್ರೀಮತಿ ಅಂಬಿಕಾತಾಯಿ ಆಚಗೊಂಡ ಮೇಡಂ, ಅಂಗಣವಾಡಿ ಅಕ್ಕಂದಿರು ಮಂಗಲ ಶಹಾಬಾದೆ, ಕವಿತಾ ಪ್ಯಾಟಿ, ಆಶಾತಾಯಿ ಪ್ರಿಯೆಂಕಾ ಕ್ಷೇತ್ರಿ, ಆರತಿ ಫುಲಾರಿ, ಸೀಮಾ ಚಾಂಬಾರ ಉಪಸ್ಥಿತರಿದ್ದರು.
ಶಾಲೆಯ ಧ್ವಜಾರೋಹಣೆ ನಂತರ ಗ್ರಾಮ ಪಂಚಯಾತ ಕಾರ್ಯಾಲಯದ ಧ್ವಜಾರೋಹಣೆ ಯುವ ನಾಯಕ ರಮೇಶ ರೋಡಗೆ ಇವರ ಶುಭ ಹಸ್ತೆ ನೆರವೇರಿತು. ಫೋಟೋ ಪೂಜೆ ಮಹಾಂತ ಕಲಶೆಟ್ಟಿ ಮತ್ತು ಕಲ್ಲಪ್ಪ ಸೋಮೇಶ್ವರ ಮಾಡಿದರೆ ಧ್ವಜಸ್ಥಂಬದ ಪೂಜೆ ಹುಸೇನ್ ಜಮಾದಾರ ಮಾಡಿದರು. ಗ್ರಾಮ ಪಂಚಯಾತ ಕಾರ್ಯಾಲಯದ ಅಂಗಳದಲ್ಲಿ ಎಲ್ಲ ಶಾಲೆಯ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಗುಣದರ್ಶನವಾಯಿತು. ಮಕ್ಕಳು ತಮ್ಮ ಭಾಷಣದಲ್ಲಿ ಗಣರಾಜ್ಯದ ಅವಶ್ಯಕತೆ, ಉದ್ದೇಶ, ರಚನೆ, ಅಂಗಿಕರಿಸಿದ ಇತಿಹಾಸದ ಕುರಿತು ಮಾತನಾಡಿದರು. ಸ್ತ್ರೀ ಶಿಕ್ಷಣದ ಅವಶ್ಯಕತೆ, ಭ್ರಷ್ಟಾಚಾರದ ಭೂತ, ಸ್ತ್ರೀ ಮೇಲಿನ ದುರ್ಜನ್ಯ, ಮರ ಉಳಿಸಿ ಪರಿಸರ ಬೆಳೆಸಿ, ಶೌಚಾಲಯ ಕಟ್ಟಿ ಬಳಸುವ ಕುರಿತು ಸೂಚನೆಗಳನ್ನು ಮಂಡಿಸಿದರು. ಶ್ರೀ. ಕಲ್ಲಪ್ಪ ಸೋಮೇಶ್ವರ್ ಸರ್ ಇವರು ಎರಡು ದಿನಗಳ ಪೂರ್ವದಲ್ಲಿ ಮೂರೂ ಶಾಲೆಗಳಲ್ಲಿ ಚಿತ್ರಕಲೆ ಸ್ಪರ್ಧೆ ಆಯೋಜನೆ ಮಾಡಿ ಉತ್ತಮ ಚಿತ್ರಕಾರ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಖರ್ಚಿನಿಂದ ಶೈಕ್ಷಣಿಕ ಸಾಹಿತ್ಯಗಳನ್ನು ಉಡುಗೊರೆಯಾಗಿ ನೀಡಿದರು. ಊರಿನ ಯುವಕ ರೇಲ್ವೆ ಕರ್ಮಚಾರಿ ಶ್ರೀ ಶಿವಪುತ್ರ ಬಬಲಾದಕರ ಹಾಗೂ ಸದ್ಯಕ್ಕೆ ಕರ್ನಾಟಕ ಪೋಲಿಸರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಬಸವರಾಜ ಕುಂಭಾರ ಇಬ್ಬರೂ ಪ್ರತಿವರ್ಷದಂತೆ ಮೂರೂ ಶಾಲೆ ಮಕ್ಕಳಿಗೆ ವಹಿಗಳನ್ನು ವಿತರಣೆ ಮಾಡಿದರು. ಸರಪಂಚರು ಅಂಬಿಕಾತಾಯಿ ಮಕ್ಕಳಿಗೆ ಸಿಹಿ ಹಂಚಿದರು. ಕಾರ್ಯಕ್ರಮದ ನಿರೂಪಣೆ ಶ್ರೀ. ದಿನೇಶ ಚವ್ಹಾಣ ಸರ ಮಾಡಿದರು ಹಾಗೂ ವಂದನಾರ್ಪಣೆ ಮರಾಠಿ ಶಾಲೆಯ ಮುಖ್ಯಾಧ್ಯಾಪಕ ಶ್ರೀ ಸುಧಾಕರ್ ಗವಳಿ ಮಾಡಿದರು. ಮುಖ್ಯಾದ್ಯಾಪಕ ಶ್ರೀ ಪರಮೇಶ್ವರ್ ವಾಗೋಲಿ, ಹಿರಿಯ ಶಿಕ್ಷಕಿ ಶ್ರೀಮತಿ ಸುನಂದಾ ಖಜುರ್ಗಿ, ಮಹೇಶ್ ನರುಣಿ, ಗಣಪತಿ ಕಿಣಗಿ, ಜಯ ಫಂಡ್, ಕಿರಣ್ ಹುಕಿರೆ, ಕೊರಬು ಸರ್, ಕು.ವೈಷ್ಣವಿ ಖಾನಾಪುರೆ ಕಾರ್ಯಕ್ರಮ ಯಶಶ್ವಿಯಾಗಲು ಸಹಕರಿಸಿದರು.
0 ಕಾಮೆಂಟ್‌ಗಳು
ಧನ್ಯವಾದಗಳು