ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ತೊಳನುರ ಕೇಂದ್ರದಲ್ಲಿ ಶಿಕ್ಷಣ ಪರಿಷತ್ತು, ಸೇವಾನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಸಂಪನ್ನ farewell program of retired teacher in Tolanur Cluster of Akkalakot

ತೊಳನುರ ಕೇಂದ್ರದಲ್ಲಿ ಶಿಕ್ಷಣ ಪರಿಷತ್ತು, ಸೇವಾನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಸಂಪನ್ನ




        ಶೈಕ್ಷಣಿಕ ವರ್ಷ 2024-25ರ ತೊಳಣುರ ಕೇಂದ್ರದ ಪ್ರಥಮ ಶಿಕ್ಷಣ ಪರಿಷದ ಜಿ.ಪ.ಪ್ರಾಥಮಿಕ ಕನ್ನಡ ಶಾಲೆ, ತೊಳಣುರದಲ್ಲಿ ಸಂಪ್ಪನ್ನವಾಯಿತು.  ಸದರೀ ಪರಿಷದದಲ್ಲಿ ತಮ್ಮ ಆಯುಷ್ಯದ ಪ್ರದೀರ್ಘ ಕಾಲಾವಧಿ ಮಕ್ಕಳ ಅಭಿವೃಧ್ಧಿಗಾಗಿ ಮೀಸಲಿರಿಸಿ ಮಕ್ಕಳ ಸರ್ವಾಂಗೀಣ ವಿಕಾಸವೇ ತಮ್ಮ ಉದ್ದೇಶವನ್ನಾಗಿ ಇಟ್ಟುಕೊಂಡು ಕರ್ತವ್ಯದಿಂದ ಸೇವಾನಿವೃತ್ತರಾದ ಶಿಕ್ಷಕರ ಸನ್ಮಾನ ಸಮಾರಂಭ ಹಾಗೂ ಕೇಂದ್ರದಿಂದ ಬೇರೆ ಶಾಲೆಗಳಿಗೆ ವರ್ಗಾವಣೆಯಾದ ಶಿಕ್ಷಕರ ನಿರೋಪ ಸಮಾರಂಭ ಆಯೋಜಿಸಲಾಯಿತು.  ಶಾಲಾ ವ್ಯವಸ್ತಾಪನೆ ಸಮಿತಿಯ ಅಧ್ಯಕ್ಷರಾದ ಶ್ರೀ. ಚೀದಾನಂದ ಮುಗಳಿಮಠ ಕಾರ್ಯಕ್ರಮದ ಅಧ್ಯಕ್ಷರಾಗಿ ಲಭಿಸಿದರು. ಮೊದಲಿಗೆ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಪ್ರತಿಮೆ ಪೂಜೆ ಸಲ್ಲಿಸಿ, ತೊಳಣುರ ಕನ್ನಡ ಶಾಲೆಯ ವಿದ್ಯಾರ್ಥಿನಿಯರಿಂದ ಸ್ವಾಗತ ಗೀತೆ ಮತ್ತು ಈಶಸ್ತವನ ಗಾಯನ ಮಾಡಿ ಕಾರ್ಯಕ್ರಮ ಆರಂಭಿಸಲಾಯಿತು.

          ತೊಳಣುರ ಕೇಂದ್ರದಿಂದ ಬೇರೆ ಕೇಂದ್ರಗಳ ಶಾಲೆಗಳಿಗೆ ವರ್ಗಾವಣೆಯಾದ ವೇದಮೂರ್ತಿ ಶ್ರೀ ವಿರೂಪಾಕ್ಷಿ ಸ್ವಾಮಿ ಸರ್, ಗಣಪತಿ ಕಿಣಗಿ ಸರ್, ಮಹೇಶ ಗಾಯಕವಾಡ ಸರ್, ಆಫರಿನ್ ಶೇಖ್ ಮೇಡಂ, ಸುಧಾಕರ ಗವಳಿ ಸರ್, ಕಿರಣ ಹುಕೇರಿ ಸರ್ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.  ತೊಳಣುರ ಜಿ.ಪ.ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಉಪಶಿಕ್ಷಕರಾಗಿ ಸೇವೆ ಸಲ್ಲಿಸಿ, ಕೇಂದ್ರೀಯ ಮುಖ್ಯಾದ್ಯಾಪಕರಾಗಿ ಸೇವಾ ನಿವೃತ್ತರಾದ ಶ್ರೀ ಸಿದ್ಧರಾಯ ಶಿವಪ್ಪ ಬಿರಾಜದಾರ ಸರ್, ಉಪಶಿಕ್ಷಕರಾಗಿ, ವಿಷಯ ಶಿಕ್ಷಕರಾಗಿ, ಕೇಂದ್ರಪ್ರಮುಖರಾಗಿಯೂ  ಕಾರ್ಯನಿರ್ವಹಿಸಿದ  ಶ್ರೀ ಬಸವರಾಜ ಗೌಡನಳ್ಳಿ ಸರ್, ಮಲ್ಲಪ್ಪ ಕವಠೆ ಸರ್, ಬಾಗವಾನ್ ಸರ್ ಇವರನ್ನು ಸೇವಾನಿವೃತ್ತಿಯ ನಿಮಿತ್ಯವಾಗಿ ಸಹ ಪರಿವಾರ ಬಂಧು ಬಳಗದ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು. ತೊಳಣುರ ಕೇಂದ್ರದಲ್ಲಿ ಇರುವ ಎಲ್ಲ ಶಾಲೆಗಳ ಪರವಾಗಿ, ಕೇಂದ್ರೀಯ ಶಾಲೆ ತೊಳನುರ, ತೊಳನುರ   ಗ್ರಾಮದ ಆಪ್ತಮಿತ್ರರಿಂದ, ಎಸ್‌ಎಮ್‌ಸಿ ಪದಾಧಿಕಾರಿಗಳ ಪರವಾಗಿ, ವಿದ್ಯಾರ್ಥಿಗಳ ಪರವಾಗಿ ಸಹಿತ ಎಲ್ಲ ನಿವೃತ್ತ ಶಿಕ್ಷಕರನ್ನು ಸನ್ಮಾನ ಮಾಡಿ ಉಳಿದ ಬದುಕು ನಗು ನಗುತಾ ಸಾಗಿಸಲೆಂದು ಶುಭಾಶಯ ಕೋರಲಾಯಿತು.   

          ಸಹಶಿಕ್ಷಕರಾದ ಶ್ರೀ ರತ್ನಾಕರ್ ಇವರು ಮಾತನಾಡಿ ತಾನು ಕಿರಿಯವನಾದರೂ ಹಿರಿಯರಾದ ಗುರುಗಳಿಗೆ ಶಾಲೆಯ ವ್ಯವಸ್ತಾಪನೆಯ ವಿಷಯದಲ್ಲಿ ಏನಾದರೂ ಮನಸ್ತಾಪವಾಗಿದ್ದರೆ ಮನ್ನಿಸಬೇಕು ಎಂದು ಹೇಳಿ ಉರ್ವರಿತ ಬದುಕು ಸಮಾಜದ ಕಲ್ಯಾಣಕ್ಕಾಗಿ ವಿನಿಯೋಸಲಿ, ತಮಗೆ ಗ್ರಾಮ ದೇವರಾದ ಶ್ರೀ ಸಿದ್ದರಾಮೇಶ್ವರ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಭಾವುಕರಾಗಿ ಮಾತನಾಡಿದರು.  ಶ್ರೀ. ಆರ್.ಕೆ. ಪಾಟೀಲ ಗುರುಗಳು ತಾವು ನಡೆದ ದಾರಿಯಲ್ಲಿ ನಡೆದುಕೊಳ್ಳುವ ಮನದಿಚ್ಚೆ ವ್ಯಕ್ತಪಡಿಸಿ ಎಲ್ಲ ಹಿರಿಯ ನಿವೃತ್ತ ಶಿಕ್ಷಕ ಬಾಂಧವರಿಗೆ ಶುಭಾಶಯ ಕೋರಿದರು.

          ತಮ್ಮನ್ನು ಸನ್ಮಾನ ಮಾಡಿದಕ್ಕೆ ಉತ್ತರ ನೀಡಿದ ಶ್ರೀ ಬಾಗವಾನ ಸರ್ ತಮ್ಮ ಸೇವಾಕಾಲದಲ್ಲಿ ಘಟಿಸಿದ ಎಲ್ಲ ಸಿಹಿ-ಕಹಿ ನೆನಪುಗಳನ್ನು ಹಂಚಿಕೊಂಡರು. ಸೋಲಾಪುರ ಜಿಲ್ಲೆಯ ಬಾರ್ಶಿ ತಾಲೂಕು, ಅಕ್ಕಲಕೋಟ, ಸೋಲಾಪುರ ಪಟ್ಟಣದಲ್ಲಿ ಅನೇಕ ಸಲ ವರ್ಗಾವಣೆಯಾಗಿ ಅಕ್ಕಲಕೋಟ ತಾಲೂಕಿನ ಕೊನೆಯ ಊರು ತೊಳನೂರು ಉರ್ದು ಶಾಲೆಗೆ ಬಂದಾಗ ಮನಸ್ಸು ಬರುತ್ತಿರಲಿಲ್ಲ. ಆದರೆ ಇಲ್ಲಿಯ ಒಳ್ಳೆಯ ಶಿಕ್ಷಕರ ಸಹವಾಸದಲ್ಲಿ ಯಾವಾಗ ಒಂದಾದೆ ಎಂಬುದು ತಿಳಿಯಲೇ ಇಲ್ಲ. ತಾವೆಲ್ಲರೂ ಅತಿ ಉತ್ತಮವಾಗಿ ಸಹಕರಿಸಿದಕ್ಕೆ ವಂದನೆಗಳು ಎಂದು ನುಡಿದರು. ಸಿದ್ಧರಾಯ ಬಿರಾಜದಾರ ಸರ್ ತಮ್ಮ ಸಹ ಶಿಕ್ಷಕರಿಗೆ ತನ್ನನ್ನು ಅರ್ಥಮಾಡಿಕೊಂಡು ಸಹಕಾರ ನೀಡಿದಕ್ಕೆ, ಸನ್ಮಾನ ಮಾಡಿದಕ್ಕೆ ಋಣ ವ್ಯಕ್ತಮಾಡಿದರು. ಬಸವರಾಜ ಗೌಡನಳ್ಳಿ ಸರ್, ಇಂದಿನ ವರೆಗೆ ನಾವೆಲ್ಲ ಒಂದೇ ಹಕ್ಕಿಯ ಗುಡಿನಲ್ಲಿ ಹಾಯಾಗಿ ಇದ್ದೆವು. ಶಿಕ್ಷಕರ ಸಹವಾಸ ವರ್ಣಿಸಲು ಅಸದಳವಾದ ಹಕ್ಕಿಯ ಗೂಡು ಇದ್ದ ಹಾಗೆ. ಆ ಗೂಡಿನಿಂದ ಇಂದು ನಾನು ಹೊರಗೆ ಹೊರಟಿದ್ದೇನೆ ಎಂದು ಹೇಳಿಕೊಳ್ಳಲು ಮನಸ್ಸಿಗೆ ನೋವಾಗುತ್ತಿದೆ. ಮತ್ತೆ ಕೆಲವು ವರ್ಷ ಸೇವೆ ಮಾಡಬೇಕಾಗಿತ್ತು ಎಂದು ಅನ್ನಿಸುತ್ತಿದೆ ಎಂದು ಭಾವುಕರಾಗಿ ನುಡಿದರು. ಅದಲ್ಲದೆ ತಮ್ಮ ಕಾಲದ ಶಿಕ್ಷಕ ವೃತ್ತಿ ಹಾಗೂ ಇಂದಿನ ಶಿಕ್ಷಕರ ವೃತ್ತಿಯಲ್ಲಿ ಬಹಳಷ್ಟು ಬದಲಾವಣೆ ಆಗಿದ್ದು ಮೊದಲು ಕೇವಲ ಮುಖ್ಯದ್ಯಾಪಕರಿಗೆ ತಿಂಗಳ ಕೊನೆಯ ದಿನ ಮಾತ್ರ ಎಲ್ಲ ಮಾಹಿತಿಗಳನ್ನು ಕೇಳಲಾಗುತ್ತಿತ್ತು. ಆದರೆ ಇಂದು ಪ್ರತಿ ದಿನದ ಪ್ರತಿ ಘಂಟೆಯಲ್ಲೂ ಏನಾದರೊಂದು ಮಾಹಿತಿ ಕೊಡಲು ಕೇಳಲಾಗುತ್ತದೆ ಮತ್ತು ಅದನ್ನು ಆನ್ಲೈನ್ ಲಿಂಕ್ ದಲ್ಲಿ ತುಂಬಲು ಹೇಳಲಾಗುತ್ತದೆ. ಶಿಕ್ಷಕರಿಗೆ ಅಧ್ಯಾಪನೆ ಮಾಡಲು ಸಮಯವೇ ಸಿಗುವುದಿಲ್ಲ. ಇಂತಹ ಕಠಿಣ ಕಾಲದಲ್ಲಿ ನಾವು ನಿವೃತ್ತ ಹೊಂದಿದ್ದೇವೆ ನೀವೆಲ್ಲರೂ ಜಾಗರೂಕರಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

          कर्म तेरे अच्छे है तो किस्मत तेरी दासी है

       नियत तेरी अच्छा है तो घर मे मथुरा काशी है  

      ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕೇಂದ್ರ ಪ್ರಮುಖ ಶ್ರೀ ಲಕ್ಕಪ್ಪ ಪೂಜಾರಿ, ವಿದ್ಯಾಧರ ಗುರವ, ಚಿದಾನಂದ ಮಠಪತಿ, ಶರಣಪ್ಪ ಫುಲಾರಿ, ಎಸ್‌ಎಮ್‌ಸಿ ಅಧ್ಯಕ್ಷ ಚಿದಾನಂದ ಮುಗಳಿಮಠ, ಉಪಾಧ್ಯಕ್ಷ ಆಶ್ವಿನಿತಾಯಿ ಖೇರೂರ, ಎಸ್‌ಎಮ್‌ಸಿ ಮಾಜಿ ಉಪಾಧ್ಯಕ್ಷ ಶ್ರೀಶೈಲ ಬಿರಾಜದಾರ, ವಿರೂಪಾಕ್ಷಿ ಸ್ವಾಮಿ, ಹಡಪದ ಸರ್, ಸುಧಾಕರ ಗವಳಿ, ಪರಮೇಶ್ವರ ಉಣ್ಣದ, ಮಲ್ಲಿನಾಥ ಉಣ್ಣದ, ಅನ್ನಪ್ಪಣ್ಣಾ ಶಿವಮೂರ್ತಿ, ವಿಶ್ವನಾಥ ಪೂಜಾರಿ, ರಮೇಶ, ಬಸವರಾಜ ಸಕ್ಕರಗಿ, ಲತಾತಾಯಿ ಉಣ್ಣದ, ಸಂಗೀತಾ ಕೋಳಿ, ಡೊಂಗರಿತೋಟ ಮೇಡಂ, ಸುನಂದಾ ಖಜುರ್ಗಿ ಮೇಡಂ, ಸುವರ್ಣ ಕುಸಗಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ಚನ್ನಾಗಿ ನೆರವೇರಿಸಲು ಕನ್ನಡ, ಮರಾಠಿ ಹಾಗೂ ಉರ್ದು ಶಾಲೆಯ ಎಲ್ಲ ಶಿಕ್ಷಕ ಬಾಂಧವರು ಸಹಕರಿಸಿದರು. ಕೇಂದ್ರದ ಎಲ್ಲ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಸ್ವಾಗತ ಮತ್ತು ನಿರೂಪಣೆ ಶ್ರೀ ಆರ್. ಡಿ. ಪವಾರ ಸರ್ ಮಾಡಿದರು ಮತ್ತು ಆರ್.ಕೆ. ಪಾಟಿಲ್ ಸರ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

ಧನ್ಯವಾದಗಳು