(14 ನವ್ಹೆಂಬರ್ ರಂದು
ಭಾರತದ ಪ್ರಥಮ ಪ್ರಧಾನಿಗಳಾದ ಪಂಡಿತ ಜವಾಹರಲಾಲ ನೆಹರು ಅವರ ಜನ್ಮ ದಿನ. ಭಾರತದಲ್ಲಿ ಈ ದಿನವನ್ನು ಬಾಲಕರ ದಿನವನ್ನಾಗಿ ಆಚರಿಸಲಾಗುತ್ತದೆ..
ಪಂಡಿತ ನೆಹರು ಅವರಿಗೆ ಮಕ್ಕಳೆಂದರೆ ಪಂಚ ಪ್ರಾಣ. ಅವರು ತಮ್ಮ ವಿಶ್ರಾಮದ ವೇಳೆಯನ್ನು ಮಕ್ಕಳೊಂದಿಗೆ
ಕಳೆಯುತ್ತಿದ್ದರು. ನಿಮ್ಮ ಶಾಲೆಗಳಲ್ಲಿ ಬಾಲ ದಿನ ಆಚರಣೆ ಮಾಡಿದರೆ ವಿದ್ಯಾರ್ಥಿಗಳಿಗೆ ಈ ರೀತಿ ಭಾಷಣ
ಮಾಡಲು ಹೇಳಿ. )
ಸನ್ಮಾನ್ಯ ಮುಖ್ಯಾದ್ಯಾಪಕರೆ, ಪೂಜ್ಯ ಗುರುಗಳೇ ಹಾಗೂ ನನ್ನ ಸಹಪಾಠಿಗಳೇ.
ತಮಗೆಲ್ಲರಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಷಯಗಳು.
ಇಂದು 14 ನವ್ಹೆಂಬರ್.
ನಮ್ಮ ದೇಶ ಸ್ವಾತಂತ್ರ್ಯವಾದ ನಂತರ ದೇಶದ ಪ್ರಥಮ ಪ್ರಧಾನಿಗಳಾದ
ಪಂಡಿತ ಜವಾಹರಲಾಲ ನೆಹರು ಅವರ ಜನ್ಮ ದಿನ. ಭಾರತದಲ್ಲಿ
ಈ ದಿನವನ್ನು ಬಾಲಕರ ದಿನವನ್ನಾಗಿ ಆಚರಿಸಲಾಗುತ್ತದೆ ಪ್ರಧಾನಿ ನೆಹರು ಅವರು ಒಬ್ಬ
ಖ್ಯಾತ ಲೇಖಕರು ಅದೇ ರೀತಿ ಇತಿಹಾಸಕಾರರೂ ಆಗಿದ್ದರು. ಆಧುನಿಕ ಭಾರತದ ರಚನೆಯಲ್ಲಿ ಅವರದ್ದು ಮಹತ್ವದ
ಪಾತ್ರವಿತ್ತು. ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಇತ್ತು. ಆ ವೇಳೆಯಲ್ಲಿ ಮಕ್ಕಳು ಸಹ ಅವರಿಗೆ
ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು.
ನೆಹರು ಜನ್ಮ ದಿನದಂದು ನಾವು ಕೇವಲ ಅವರನ್ನು ಸ್ಮರಿಸುವುದಿಲ್ಲ ಮಕ್ಕಳಿಗೆ ಸಂಬಂಧಿಸಿದ
ಹಲವಾರು ವಿಷಯಗಳ ಬಗೆಗೆ ಚರ್ಚೆ ಮಾಡುತ್ತೇವೆ. ಎಲ್ಲ ಬಾಲಕರಿಗೆ ಅವರ ಹಕ್ಕುಗಳು ದೊರೆಯಬೇಕೆಂದು ನಾವು
ಶಾಸನದ ವಿವಿಧ ಯೋಜನೆಗಳ ಕುರಿತು ಅಭ್ಯಾಸ ಮಾಡುತ್ತೇವೆ. ಚರ್ಚೆ ಮಾಡುತ್ತೇವೆ. ಆಯಾ ಯೋಜನೆಗಳು ಮಕ್ಕಳಿಗಾಗಿ
ಯೋಗ್ಯ ಕಾರ್ಯ ಮಾಡುತ್ತಿವೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಿತ್ತೇವೆ.
ಪ್ರಧಾನಿ ಜವಾಹರಲಾಲ ನೆಹರು ಅವರು ಮಕ್ಕಳು ದೇಶದ ಭವಿಷ್ಯ ಮತ್ತು ಅವರು
ಉದ್ಯಾನದಲ್ಲಿ ಅರಳುವ ಹೂವುಗಳು. ನಾವು ಅವರನ್ನು ನೋಡಿಕೊಳ್ಳಬೇಕು ಮತ್ತು ಅವರಿಗೆ ಪ್ರೀತಿಯನ್ನು
ನೀಡಬೇಕು. ಏಕೆಂದರೆ ಮಕ್ಕಳು ಮಾತ್ರ ನಮ್ಮ ದೇಶವನ್ನು ಮುಂದೆ ಸಾಗಿಸುತ್ತಾರೆ ಎಂದು ಹೇಳುತ್ತಿದ್ದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಪ್ರಮುಖ ಪಾತ್ರ ವಹಿಸಿದ್ದರು.
ಭಾರತವನ್ನು ಬಲಿಷ್ಠ ಮತ್ತು ಪ್ರಜಾಸತ್ತಾತ್ಮಕ ದೇಶವನ್ನಾಗಿ ಮಾಡಲು ಅವರು ಶ್ರಮಿಸಿದರು.
ಭಾರತ ಸ್ವತಂತ್ರ್ಯವಾದಾಗ ಹಲವು ಸವಾಲುಗಳನ್ನು ಎದುರಿಸಿತು. ನೆಹರೂ ಜಿ ಅವರು ಪಂಚವಾರ್ಷಿಕ
ಯೋಜನೆಗಳ ನೆರವಿನಿಂದ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು.
ಇಂದು ಸರ್ಕಾರ ಮತ್ತು ಅನೇಕ ಎನ್‌ಜಿಒಗಳು ಮಕ್ಕಳ ಬೆಳವಣಿಗೆಯಲ್ಲಿನ ಅಡೆತಡೆಗಳನ್ನು ನಿವಾರಿಸಲು ಕೆಲಸ ಮಾಡುತ್ತಿವೆ. ಮಧ್ಯಾಹ್ನದ ಊಟ, ಉಚಿತ ಶಿಕ್ಷಣ, ಮಕ್ಕಳಿಗೆ ಶಿಷ್ಯವೇತನದಂತಹ ಹಲವು ಯೋಜನೆಗಳನ್ನು ಸರ್ಕಾರ ಆರಂಭಿಸಿದ್ದರೂ ಇನ್ನೂ ಸಾಕಷ್ಟು ಮಾಡಬೇಕಿದೆ.
ಸ್ನೇಹಿತರೇ, ಸ್ವಾತಂತ್ರ್ಯ
ಬಂದು ಇಷ್ಟು ವರ್ಷಗಳ ನಂತರವೂ ಅನೇಕ ಮಕ್ಕಳು ಬಾಲಕಾರ್ಮಿಕ ಮತ್ತು ಶೋಷಣೆಗೆ
ಬಲಿಯಾಗುತ್ತಿದ್ದಾರೆ. ಅನೇಕ ಮಕ್ಕಳಿಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಎಂಬುದರ ಬಗ್ಗೆ
ಇಂದು ನಾವು
ಯೋಚಿಸಬೇಕು
ಮಕ್ಕಳ ಕಳ್ಳಸಾಗಾಣಿಕೆ, ಬಾಲ್ಯವಿವಾಹ, ಲೈಂಗಿಕ ಶೋಷಣೆ ಮತ್ತು ಬಾಲಕಾರ್ಮಿಕರಂತಹ ದುಶ್ಚಟಗಳಿಂದ ಮಕ್ಕಳನ್ನು
ರಕ್ಷಿಸಬೇಕು ಮತ್ತು ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಸಿಗುವಂತೆ
ನೋಡಿಕೊಳ್ಳಬೇಕು.
ಅವರ ಉಜ್ವಲ
ಭವಿಷ್ಯಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಏಕೆಂದರೆ ನಾವು ಮಕ್ಕಳೇ ದೇಶದ ಭವಿಷ್ಯ. ಇಷ್ಟು
ಹೇಳಿ ನನ್ನ ಚಿಕ್ಕ ಭಾಷಣ ಮುಗಿಸುತ್ತೇನೆ.
ಜೈ ಹಿಂದ!
0 ಕಾಮೆಂಟ್‌ಗಳು
ಧನ್ಯವಾದಗಳು