8ನೆಯ ವಿದ್ಯಾರ್ಥಿಗಳ ನಿರೋಪ ಹಾಗೂ ಒಂದನೆಯ ತರಗತಿಯ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಆಯೋಜನೆ
ಜಿಲ್ಲಾ ಪರಿಷದ ಪ್ರಾಥಮಿಕ ಕನ್ನಡ ಶಾಲೆ ಬಬಲಾದ ತಾ. ಅಕ್ಕಲಕೋಟ ಜಿ. ಸೋಲಾಪೂರ ದಲ್ಲಿ 8ನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡಲಾಯಿತು. ಅದೇ ರೀತಿ ನೂತನವಾಗಿ ಒಂದನೆಯ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತಪರ ಉಪಕ್ರಮ ಪ್ರವೇಶೋತ್ಸವ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಹಿರಿಯ ಪಾಲಕರು ಶ್ರೀ ವಿಠ್ಠಲ ತಳವಾರ ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಪಾರಪ್ಪ ಖೀರಗೊಂಡ, ಅಶೋಕ ಶಿಂಗೆ ಸರ್, ಮಲ್ಲಿನಾಥ ತಳವಾರ , ಲಕ್ಷ್ಮೀಬಾಯಿ ಗಾಯಕವಾಡ, ರೂಪಾ ಮಡ್ಡಿ ಉಪಸ್ಥಿತರಿದ್ದರು. ಸರ್ವ ಪ್ರಥಮ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಪೂಜೆ ಮಾಡಿ ಕಾರ್ಯಕ್ರಮ ಆರಂಭ ಮಾಡಲಾಯಿತು. ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುವಾಗ ಏಳನೆಯ ತರಗತಿಯ ವಿದ್ಯಾರ್ಥಿಗಳು ತಮ್ಮ ಭಾಷಣಗಳಲ್ಲಿ ಶುಭಾಶಯ ಕೋರಿದರು. ಎಂಟನೆಯ ತರಗತಿಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಆರು ಕುರ್ಚಿಗಳನ್ನು ಉಡುಗೊರೆ ನೀಡಿ ಎಲ್ಲ ಶಿಕ್ಷಕರಿಗೆ ಗುರುವಂದನೆಯನ್ನು ಪುಷ್ಪಗುಚ್ಛ ನೀಡುವ ಮೂಲಕ ಸಲ್ಲಿಸಿದರು. ಶಾಲೆಯ ಮುಖ್ಯಾಧ್ಯಾಪಕ ಶ್ರೀ ದಿನೇಶ ಚವ್ಹಾಣ ಸರ್ ಎಲ್ಲಾ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಯಲೆಂದು ಒಳ್ಳೆಯ ಕಾದಂಬರಿ, ಕಥೆ, ಕವಿತೆಗಳ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.
ಕುಮಾರಿ ಕೀರ್ತಿ ಪೂಜಾರಿ, ಅರುಣಕುಮಾರ ಗಾಯಕವಾಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯಗುರುಗಳು ದಿನೇಶ ಚವ್ಹಾಣ ಸರ್ ಮಾರ್ಗದರ್ಶನ ಮಾಡಿದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ವರ್ಷ 2025-26 ರ ಪಟ ನೊಂದಣಿ ಮಾಡಲಾದ ನೂತನ ಪ್ರವೇಶ ಪಡೆದ ಒಂದನೆಯ ತರಗತಿಯ ಮುದ್ದು ವಿದ್ಯಾರ್ಥಿಗಳಿಗೆ ಎಲ್ಲಾ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯರಿಂದ ಹೂಗುಚ್ಛ, ಬಲೂನು, ಪಾಠಿ ಹಾಗೂ ಬಣ್ಣ ಬಣ್ಣದ ಚಿತ್ರವುಳ್ಳ ಅಂಕಲಿಪಿ ನೀಡಿ ಸ್ವಾಗತವನ್ನು ಕೋರಲಾಯಿತು. ಸರಕಾರಿ ಶಾಲೆ ಹಾಗೂ ಈ ಶಾಲೆಯ ಶಿಕ್ಷಕರ ಮೇಲೆ ವಿಶ್ವಾಸವಿಟ್ಟು ದಾಖಲು ಮಾಡಿರುವ ಪೋಷಕರಿಗೆ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಭರವಸೆ ನೀಡಿ ಎಲ್ಲಾ ಅತಿಥಿಯರಿಗೆ ಸನ್ಮಾನ ಮಾಡಲಾಯಿತು. ಇಡೀ ಕಾರ್ಯಕ್ರಮದ ಸಂಚಲನೆಯನ್ನು ಏಳನೆಯ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ವಿದ್ಯಾ ಸುರೇಶ ರೋಡಗೆ ಮತ್ತು ಕುಮಾರಿ ಸಾವಿತ್ರಿ ನಿಂಗಪ್ಪ ಮಣುರೆ ನಿರ್ವಹಿಸಿದರು. ವಂದನಾರ್ಪಣೆಯನ್ನು ಕುಮಾರಿ ವರ್ಷಾ ಸತೀಶ ಗಾಯಕವಾಡ ಸಲ್ಲಿಸಿದಳು.
ಈ ಸಂದರ್ಭದಲ್ಲಿ ಪಾಲಕರೂ, ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರು, ಶಾಲೆಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮ ನಿಯೋಜನಬದ್ಧವಾಗಿ ಹಾಗೂ ಸುಸೂತ್ರವಾಗಿ ನಡೆಯಲು ಶಾಲಾ ಶಿಕ್ಷಕರಾದ ಶ್ರೀ ರಮೇಶ ಶಿವಮೂರ್ತಿ ಸರ, ಸುನಂದಾ ಖಜುರ್ಗಿ ಮೇಡಂ, ಸುಜಾತಾ ಕಾಂಬಳೆ ಮೇಡಂ ಹಾಗೂ ಗಜರಾಬಾಯಿ ಕಲಶೆಟ್ಟಿ ಶ್ರಮಿಸಿದ್ದರು. ಕಾರ್ಯಕ್ರಮದ ಕೊನೆಗೆ ಅಲ್ಪೋಪಹಾರ ನೀಡಲಾಯಿತು.
1 ಕಾಮೆಂಟ್‌ಗಳು
ಕಾರ್ಯಕ್ರಮವನ್ನು ಒಳ್ಳೆಯ ರೀತಿಯಾಗಿ ಮಾಡಿದ್ದೀರಿ ಸರ.ಸ್ವಾಗತ ಹಾಗು ನಿರೋಪ ಸಮಾರಂಭ ಕೂಡಿದ ಕಾರ್ಯಕ್ರಮ ಕ್ಕೆ ಹಾರ್ದಿಕ ಅಭಿನಂದನೆಗಳು 💐💐💐💐💐💐💐💐🙏
ಪ್ರತ್ಯುತ್ತರಅಳಿಸಿಧನ್ಯವಾದಗಳು