“ನನ್ನ ಮಗುವಿಗೆ ಛಡಿ ಏಟು ಕೊಟ್ಟೆ ಕಲಿಸಿರಿ, ಗುರುಗಳೇ,” ಶಾಲಾ ಶಿಕ್ಷಕರಿಗೊಂದು ಪೋಷಕರ ಪತ್ರ
ನಮಸ್ಕಾರ
ಗುರುಗಳೇ...
ಇಂದು ಸಂಜೆ, ನಾನು ಹೊಲದಿಂದ
ಮನೆಗೆ ಬಂದಾಗ, ಮನೆಯಲ್ಲಿದ್ದ ಮಕ್ಕಳು ಟಿ.ವ್ಹಿ.ಯಲ್ಲಿ ವಾರ್ತೆ
ನೋಡುತ್ತಾ ಉನ್ಮಾದದಿಂದ ನಗುತ್ತಿದ್ದರು. ನಾನು ಕೇಳಿದೆ, 'ಏನಾಯಿತು?' ಕಿರಿಯವನು ಹೇಳಿದ, 'ಇನ್ನೂ ಮುಂದೆ ಗುರುಗಳು ನಮ್ಮ ಮೇಲೆ ಕೋಪಗೊಳ್ಳಲು ಸಾಧ್ಯವಿಲ್ಲ, ಹೊಡೆಯುವುದೂ
ಆಗುವುದಿಲ್ಲ. ಅವರು
ಕಣ್ಣು ತಿರುಗಿಸಿ ನೋಡಿದರೂ ಸಹ ಅವರು ತಮ್ಮ
ನೌಕರಿ ಕಳೆದುಕೊಳ್ಳುತ್ತಾರೆ.' ಇದನ್ನು ಕೇಳಿ, ನನ್ನ ಕಣ್ಣ ಮುಂದೆ ಕತ್ತಲೆ ಬಂದಿತು. ನನ್ನ ಮನಸ್ಸಿಗೆ
ಗರಬಡಿದಂತಾಯಿತು. ಗುರುಗಳ ಹೆಸರನ್ನು ಕೇಳಿ ನಡುಗುತ್ತಿದ್ದ ಮಕ್ಕಳು, ಇಂದು ಅದೇ ಮಕ್ಕಳು ಗುರುಗಳ
ಅಸಹಾಯಕತೆಯನ್ನು ಕಂಡು
ಗಹಗಹಿಸಿ ನಗುತ್ತಿದ್ದಾರೆ.
ಈ ಘಟನೆಯ ಸಂಕೇತವೇನು? ಗೊತ್ತಾಗುತ್ತಿದೆಯೇ?
ಗುರುಗಳೇ, ನಾವು ಈ ಮಕ್ಕಳನ್ನು ರಾತ್ರಿ ಮತ್ತು ಹಗಲು ಒಂದು
ಮಾಡುವ ಮೂಲಕ, ಬಿಸಿಲಿನಲ್ಲಿ ನಮ್ಮದೇ ಆದ ರಕ್ತವನ್ನು ಚೆಲ್ಲುವ
ಮೂಲಕ ಶಾಲೆಗೆ ಕಲಿಸುತ್ತಿದ್ದೇವೆ. ಯಾವುದಕ್ಕಾಗಿ? ನಮ್ಮ ಹಣೆಯ ಮೇಲಿನ ಈ ದಾರಿದ್ರ್ಯತನ ಅವರ ಹಣೆಯಿಂದ ಅಳಿಸಿಹಾಕಲು. ನಾವು ಸರಳಜೀವಿ
ಜನ, ಕಾನೂನಿನ
ಬಗ್ಗೆ ನಮಗೆ ಏನು ಗೊತ್ತು? ನಮಗೆ ಒಂದು ಮಾತ್ರ ಗೊತ್ತು, ಛಡಿ ಛಮ್ ಛಮ್ ವಿದ್ಯೆ ಘಮ್ ಘಮ್. ಅಂದರೆ ಶಿಕ್ಷಕರ ಕೈಯಲ್ಲಿ ಕೋಲು ಇದ್ದರೆ ಮಾತ್ರ ಮಕ್ಕಳಿಗೆ
ಶಿಕ್ಷಣ ಆಕಲನೆ ಆಗುತ್ತದೆ ಎಂದು.' ನಿಮ್ಮ ಎರಡೇಟುಗಳಿಂದಲೇ
ನಮ್ಮ ಪೀಳಿಗೆ ಯೋಗ್ಯ
ಮಾರ್ಗಕ್ಕೆ ಸಾಗುತ್ತಿದೆ. ಆದ್ದರಿಂದಲೇ
ಇಂದು ನಾವು ಸಮಾಜದಲ್ಲಿ ಉನ್ನತ ಸ್ನಾನದಲ್ಲಿ
ನಿಂತಿದ್ದೇವೆ.
ಹೇಳಿ ಗುರುಗಳೇ,
ಕುಂಬಾರನು
ಮಡಕೆ ಮಾಡುವಾಗ, ಹೊರಗಿನಿಂದ
ಅದರ ಮೇಲೆ ಒತ್ತಡ ಹೇರುವುದರಿಂದ
ತಾನೆ ಒಳಗಿನಿಂದ ಅದಕ್ಕೆ
ಯೋಗ್ಯ ಆಕಾರ ಕೊಡಲು ಬರುತ್ತದೆ. ಮಡಕೆ ಎಲ್ಲಿ ರೂಪುಗೊಳ್ಳುತ್ತದೆ? ಕುಂಬಾರನು ಒತ್ತಡ ಹೇರದಿದ್ದರೆ, ಆ ಮಣ್ಣಿನ ಮುದ್ದೆಗೆ
ಯೋಗ್ಯ ಆಕಾರ ಕೊಡಲು ಆಗುವುದೇ?
ಇಂದು ನಿಮಗೆ ಮಕ್ಕಳ
ಮೇಲೆ ಕೈ ಎತ್ತಬೇಡಿ ಎಂದು
ಸರಕಾರ ಹೇಳುತ್ತಿದೆ.
ಹಾಗಾದರೆ ನಾಳೆ ನನ್ನ ಮಗು ದಾರಿ ತಪ್ಪಿದರೆ, ಮಾದಕ
ದ್ರವ್ಯಗಳಿಗೆ ವ್ಯಸನಿಯಾದರೆ?
ಹಿರಿಯರನ್ನು ಗೌರವಿಸಲು ಮರೆತರೆ? ಅವನನ್ನು ಶಾಲೆಗೆ ಯಾರು ಕರೆತರುತ್ತಾರೆ? ವಾಮಮಾರ್ಗ
ಹಿಡಿದು ಪೊಲೀಸರಿಗೆ ಸೆರೆ ಸಿಕ್ಕರೆ? ಪೊಲೀಸರು ಒದೆ ಕೊಟ್ಟರೆ? ಆಗ ಬಹುಶಃ
ತುಂಬಾ ತಡವಾಗಿರಬಹುದು. ನನ್ನ ಮಗು ಶಾಲೆ ತಪ್ಪಿಸಿ ತನ್ನ ಅಧ್ಯಯನದಲ್ಲಿ ಹಿಂದುಳಿದರೆ, 'ಅವನನ್ನು ಖಾರವಾಗಿ
ಬೆದರಿಸಿರಿ! ಬೇಫಿಕೀರ್
ಆಗಿ ಬೆನ್ನಿನ ಮೇಲೆ ಹೊಡೆಯಿರಿ. ಅವನ ಬೆನ್ನಿನ ಮೇಲೆ ಮೂಡುವ ಪೆಟ್ಟಿನ ಓರೆ ಕೊರೆಗಳನ್ನು
ಕಂಡು ಈ ತಂದೆಯ ಹೃದಯ ಮರಗುವುದಿಲ್ಲ.
ಇದಕ್ಕೆ ವಿರುದ್ಧವಾಗಿ, ನನ್ನ ಮಗನನ್ನು ರೂಪಿಸಿದ ನಿಜವಾದ ವ್ಯಕ್ತಿ
ಶಾಲೆಯಲ್ಲಿ ಕುಳಿತಿದ್ದಾನೆ ಎಂದು ನಾನು ಹೆಮ್ಮೆಪಡುತ್ತೇನೆ.
ನಿಮ್ಮ
ಬೆತ್ತ ನಮಗೆ ಶಿಕ್ಷೆಯಲ್ಲ, ಆದರೆ ನಮ್ಮ ಗೌರವವನ್ನು ಉಳಿಸುವ
ಮಾರ್ಗವಾಗಿದೆ. ಗುರುಗಳೇ, ನಿಮ್ಮ ವಿರುದ್ಧ ಕಾನೂನು ಇದೆ ಎಂದು ನೀವು ನನ್ನ ಮಗನ ತಪ್ಪುಗಳಿಗೆ ದುರ್ಲಕ್ಷ
ಮಾಡಿದರೆ ಅದು
ನನಗೆ ಆಗುವ ದೊಡ್ಡ ದ್ರೋಹವಾಗುತ್ತದೆ. ಮಕ್ಕಳು ಒದ್ದೆಯಾದ ಮಣ್ಣಿನ ಮುದ್ದೆಯಂತೆ, ಅವುಗಳನ್ನು ಈಗ ರೂಪಿಸದಿದ್ದರೆ, ನಾಳೆ
ಈ ಮಣ್ಣು ಚೆಲ್ಲುತ್ತದೆ. ಗಿಡವಾಗಿ ಬಗ್ಗದು ಮರವಾಗಿ ಬಗ್ಗುವುದೇ? ಮಂತ್ರಾಲಯದ ಎ.ಸಿ.ಯಲ್ಲಿ ಕುಳಿತುಕೊಳ್ಳುವ
ಅಧಿಕಾರಿಗಳು-ಮಂತ್ರಿಗಳು ಮಕ್ಕಳ ಹಕ್ಕುಗಳ ರಕ್ಷಿಸಬೇಕು ಎಂದು ಭಾವಿಸಬಹುದು. ಆದರೆ ನಮ್ಮ ಹೊಲಗಳಲ್ಲಿ ಕೆಲಸ ಮಾಡುವ ತಂದೆಗೆ ಬೆಳೆಯಲ್ಲಿನ ಕಳೆಗಳನ್ನು ಸಮಯಕ್ಕೆ
ಸರಿಯಾಗಿ ಕೀಳದಿದ್ದರೆ, ಇಡೀ ಬೆಳೆ ನಾಶವಾಗುತ್ತದೆ
ಎಂಬುದು
ಸರಿಯಾಗಿ ಗೊತ್ತಿದೆ.
ನಾನು
ನಿಮ್ಮನ್ನು ವಿನಮ್ರವಾಗಿ ವಿನಂತಿಸುತ್ತೇನೆ... ಈ ಸರ್ಕಾರಿ ಕಾಗದಪತ್ರಗಳನ್ನು ಪಕ್ಕಕ್ಕೆ ಇರಿಸಿ.
ಬಡವರ
ಮಕ್ಕಳನ್ನು ನಿಮ್ಮ ಕೈಗೆ ವಹಿಸಲಾಗಿದೆ, ಪ್ರೀತಿಯಿಂದ ಅವನಿಗೆ ಹೇಳಿ, ಅವನು ಕೇಳದಿದ್ದರೆ, ಭಯ ತೋರಿಸಿ
ಹೇಳಿ, ಬೆದರಿಸಿ
ಹೇಳಿ ಅವನನ್ನು ಸರಿ ದಾರಿಗೆ ಕರೆತನ್ನಿ, ಅವನು ಇಂದು ನಿಮ್ಮ ಮಾತಿಗೆ ಮತ್ತು ಬೆತ್ತಕ್ಕೆ ಹೆದರದಿದ್ದರೆ, ನಾಳೆ ಅವನು ಯಾರಿಗೂ ಹೆದರುವುದಿಲ್ಲ. ಕೂಲಿ
ಕೆಲಸ ಮಾಡುವ ತಂದೆಯ ಕನಸುಗಳನ್ನು ಗಾಳಿಗೋಪುರವನ್ನಾಗಿಸಲು ಬಿಡಬೇಡಿ.
ಗುರುಗಳೇ, ಮಕ್ಕಳನ್ನು ಶಿಕ್ಷಿಸಿ ಅವರ ಬದುಕನ್ನು
ರೂಪಿಸಿ. ಅವನನ್ನು ಕೋಪದಿಂದ ಕೂಗಿ, ಬೆದರಿಸಿ ತಿಳಿ ಹೇಳಿ ... ಆದರೆ ಅವನನ್ನು ಮನುಷ್ಯನನ್ನಾಗಿ ಮಾಡಿ. ಈ ಶಾಲೆಯಿಂದ ಹೊರಗೆ ಹೋಗುವ
ಮುನ್ನ ಅವನು ಮಾನವತೆಯನ್ನು ಗೌರವಿಸುವ, ಗುರು ಹಿರಿಯರಿಗೆ ಸನ್ಮಾನಿಸುವ
ಸ್ನೇಹಿತರೊಂದಿಗೆ ಸೌಜನ್ಯದಿಂದ ವ್ಯವಹಾರಿಸುವ ಕೌಶಲ್ಯವನ್ನು ಬೆಳೆಸಿಕೊಂಡು ಹೋಗಲಿ. ಇದು ನಿಮ್ಮ ಪಾದದಲ್ಲಿ ಈ ಬಡ ತಂದೆಯ
ಪ್ರಾಮಾಣಿಕ ವಿನಂತಿ!
-ಇಂತಿ ತಮ್ಮ ವಿದ್ಯಾರ್ಥಿಯ
ಕೂಲಿ ಕೆಲಸ ಮಾಡುವ ಬಡ ತಂದೆ

0 ಕಾಮೆಂಟ್‌ಗಳು
ಧನ್ಯವಾದಗಳು