ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಜಿಲ್ಹಾ ಪರಿಷತ ಪ್ರಾಥಮಿಕ ಕನ್ನಡ ಶಾಲೆ ಸಣ್ಣ ಉಮದಿ ತಾ. ಜತ ಶಾಲೆಯ 75ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮದಿಂದ ಆಚರಣೆ.

 

!!ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!!

ಜಿಲ್ಹಾ ಪರಿಷತ ಪ್ರಾಥಮಿಕ ಕನ್ನಡ ಶಾಲೆ ಸಣ್ಣ ಉಮದಿ ತಾ. ಜತ ಶಾಲೆಯ 75ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮದಿಂದ ಆಚರಣೆ.



        ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ ತಾಲೂಕಿನಲ್ಲಿರುವ ಸಣ್ಣ ಉಮದಿ ಗ್ರಾಮದಲ್ಲಿ ಶಾಲೆಯ 75ನೇ ಅಮೃತ ಮಹೋತ್ಸವದ ಅಂಗವಾಗಿ ಗಡಿನಾಡು ಕನ್ನಡಿಗರ ಬೃಹತ್ ಜಾಗೃತಿ ಸಮಾವೇಶ, ಮಾಜಿ ಶಿಕ್ಷಕರ ಗುರುವಂದನೆ, ಮಾಜಿ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ, ಶಾಲಾ ವಾರ್ಷಿಕ ಸಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿನೂತನವಾಗಿ ಕನ್ನಡ ಶಾಲೆಗಳ ಬೆಳವಣಿಗೆಯಲ್ಲಿ ನಿಷ್ಠೆಯಿಂದ ಕರ್ತವ್ಯ ಪರಿಪಾಲಿಸುವ ಗುಣವಂತ ಪ್ರಾಥಮಿಕ ಶಿಕ್ಷಕರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

        ಸಂಪೂರ್ಣ ಕಾರ್ಯಕ್ರಮ ಕನ್ನಡ ನಾಡಿನ ಖ್ಯಾತ ಹಾಸ್ಯ ಕಲಾವಿದರು, ಹಿರಿಯ ನಟ, ಕರ್ನಾಟಕ ಕಲಾವಿದರ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ದೊಡ್ಡಣ್ಣನವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಗಡಿನಾಡು ಪ್ರತಿಭೆ ವಿಶೇಷ ಚೇತನ, ಝೀ ಟಿ.ವ್ಹಿ. ಕನ್ನಡ ಸರಿಗಮಪ ಲೀಟಲ್ ಚ್ಯಂಪ್ ಸಿಜನ್-19 ರ ವಿಜೇತ ಶ್ರೀ ರೇವಣಸಿದ್ಧ ಫುಲಾರಿ ಉಪಸ್ಥಿತರಿದ್ದರು. ಸಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ನಾಯಕ, ಉಮದಿ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷರು ಶ್ರೀ ದುಂಡಪ್ಪ (ಮುತ್ತು) ತೇಲಿ ಇವರ ಅಮೃತ ಹಸ್ತದಿಂದ ಮಾಡಲಾಯಿತು. ವಿಸ್ತಾರ ಅಧಿಕಾರಿ ಶ್ರೀ ಅನ್ಸಾರ ಶೇಖ ಸಾಹೇಬರು ಉಪಸ್ಥಿತರಿದ್ದರು. ಗ್ರಾಮದ ಸಮಸ್ತ ಜನತೆಗೆ ಸಾಕ್ಷಿಯನ್ನಿಟ್ಟುಕೊಂಡು ಶಾಲೆಯ ಏಕಮೇವ ಶಿಕ್ಷಕಿ ಹಾಗೂ ಮುಖ್ಯಾದ್ಯಾಪಕಿ ಸೌ. ಮಹಾನಂದಾ ಹುಣಚಳಗಿ ಮೇಡಂ ಪ್ರಸ್ತಾವನೆಯಲ್ಲಿ ಎಲ್ಲ ಮಹನೀಯರನ್ನು ಸ್ವಾಗತಿಸುತ್ತ ತಾವು ನಡೆದು ಬಂದ ದಾರಿಯಲ್ಲಿ ಮಕ್ಕಳ ಪಾಲಕರ ಸಹಕಾರ ಎಷ್ಟು ಮಹತ್ವದ್ದಿತ್ತು ಎಂಬುದನ್ನು ಕುರಿತು ಸೊಗಸಾಗಿ ಮಾತನಾಡಿದರು. ಈ ಸಂಧರ್ಭದಲ್ಲಿ ಇದೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಮಾಜಿ ಶಿಕ್ಷಕರನ್ನು ಗುರುನಮನ ಸಲ್ಲಿಸಿ ಸನ್ಮಾನ ಮಾಡಲಾಯಿತು. ಶಾಲೆಯ  ಮಾಜಿ ವಿದ್ಯಾರ್ಥಿಗಳ ಸತ್ಕಾರ ಮಾಡಲಾಯಿತು . ಅದೇ ರೀತಿಯಲ್ಲಿ ಜತ್ತ ಹಾಗೂ ಅಕ್ಕಲಕೋಟ ತಾಲೂಕಿನಲ್ಲಿ ಕನ್ನಡ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗುಣವಂತ ಶಿಕ್ಷಕರನ್ನು ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಯಿತು. ನಂತರ ಪುಟ್ಟ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಕೂಡಿದ ಜನರ ಮನ ತಣಿಸಿ ರಂಗೇರಿಸಿತು. ಉದ್ಘಾಟನೆ ಬಳಿಕ ಸನ್ಮಾನ್ಯ ಶ್ರೀ ದೊಡ್ಡಣ್ಣನವರು ತಮ್ಮ ಭಾಷಣದಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವುದು ತುಂಬಾ ಅಗತ್ಯವಾಗಿದೆ. ದೇವರ ಗುಡಿಗೆ ಹೋಗುವ ಬದಲಾಗಿ ಗ್ರಂಥಾಲಯಕ್ಕೆ ಹೋಗಬೇಕು. ರಾಮಾಯಣ-ಮಹಾಭಾರತದ ದೃಷ್ಟಾಂತದೊಂದಿಗೆ ಅನೇಕ ಕಿವಿ ಮಾತುಗಳನ್ನು ಹೇಳಿದರು. ಕನ್ನಡ ಭಾಷೆಯ ಇತಿಹಾಸ ಆದಿಕವಿಗಳ ಕಾವ್ಯಗಳ ಉದಾಹರಣೆ ನೀಡುತ್ತಾ ಎಷ್ಟು ಪ್ರಾಚೀನವಾಗಿದೆ ಎಂಬುದನ್ನು ತಿಳಿಸಿದರು.ಇತಿಹಾಸದ ಅಭ್ಯಾಸ ಎಲ್ಲರೂ ಮಾಡಬೇಕು ಎಂದು ಹೇಳಿದರು. ಶಿಕ್ಷಣ, ಆರೋಗ್ಯ, ಸಾಮಾಜಿಕ ಹೊಂದಾಣಿಕೆ, ಸಂಸ್ಕಾರ ಇವುಗಳ ಸಂಯೋಗ ನಮ್ಮ ಬದುಕಾಗಬೇಕು ಎಂದು ಹೇಳುತ್ತಾ ಗಡಿಭಾಗದಲ್ಲಿಯ ಕನ್ನಡ ಶಾಲೆಗಳ ಬೆಳವಣಿಗೆಗೆ ಶಿಕ್ಷಕರೂ ಸೇರಿದಂತೆ ಪೋಷಕರು ಸಹಕರಿಸಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು.  

'ಕನ್ನಡ ಸೇವಾ ರತ್ನ' ಪ್ರಶಸ್ತಿ ಪುರಸ್ಕೃತರು (ಜತ್ತ ತಾಲುಕಾ)

ಶ್ರೀ ವಿಠ್ಠಲ ಬಿರಾದಾರ (ರಡ್ಡೆವಸ್ತಿ, ಉಮದಿ); ಶ್ರೀ. ಸುನೀಲ ಭೀ. ಮುಚ್ಚಂಡಿ (M.V.ಪ್ರಶಾಲೆ ಉಮದಿ)

ಶ್ರೀ. ಮಲಿಕಜಾನ ಶೇಖ (ತಿಳಿನ ವಕ್ತಿ,ಸಂಖ); ಕು. ಅನೀತಾ ಕಾರಾಜನಗಿ (ಅಂಕಲಗಿ)

ಶ್ರೀ. ರವಿಂದ್ರ ವಾರದ (ಕುರಣವಸ್ತಿ ಸಿಂದುರ); ಶ್ರೀ. ಮಲ್ಲಿನಾಥ ಪ್ಯಾಟಿ (ಗುಗವಾಡ)

ಶ್ರೀ. ಬಸಪ್ಪ ಭೀ. ಅಲಬಾಳ (ಕಳ್ಳಿವಸ್ತಿ, ಉಟಗಿ);       ಶ್ರೀ. ಸಿದ್ದಣ್ಣ ಶ್ರೀಶೈಲ ಬಿರಾದಾರ (ಸೋನ್ಯಾಳ)

ಶ್ರೀ. ಶಶಿಕಾಂತ ಹೋರ್ತಿ(ಕೋಳಿವಸ್ತಿ ಬೆಳ್ಳುಂಡಗಿ);    ಶ್ರೀ. ಸಂದೀಪ ಪಾತ್ರುಟ (ಹಳ್ಳಿ)

ಶ್ರೀ. ಪ್ರಶಾಂತ ವಾಘೋಲಿ (ಮೋರಬಗಿ);             ಶ್ರೀ. ಚಂದ್ರಶೇಖರ ಕಾರಕಲ (ತಿಕ್ಕುಂಡಿ)

ಶ್ರೀ. ಗುರುನಾಥ ಜುಂಜಾ ಸರ (ಉಮರಾಣಿ);         ಶ್ರೀ ಖೂಷಾಬಾ ಸೋಲನಕರ (ಜತ್ತ)

ಸೌ. ಕನ್ಯಾಕುಮಾರಿ ವಿ. ಪಾಟೀಲ್ (ಮುಚ್ಚಂಡಿ);       ಶ್ರೀ. ಭೀಮಾಶಂಕರ ಪರೀಟ (ಓರಾಳವಸ್ತಿ)

ಸೌ. ಗುರುದೇವಿ ಅರಸಗೊಂಡ (ಕೊ. ಬಬಲಾದ);     ಶ್ರೀ. ಚಿದಾನಂದ ಗೌರಗೋಂಡ  (ರಾ.ಗುಂಡವಾಡಿ)  ಸೌ. ಭಾಗ್ಯ ಶ್ರೀ ಹೋರ್ತಿಕರ (ಹಿಪ್ಪರಗಿವಸ್ತಿ) ;  ಶ್ರೀ. ರೂಪೇಶ ಕಾಟೆ (ಬಿರಾದಾರ ಸ್ತಿ ಜಾ. ಬ);  ಸೌ. ಕವಿತಾ ಜಾವಳಕೋಟಿ (ರವಿ ಮಾಡ್ಯಾಳ ವಸ್ತಿ) ;  ಶ್ರೀ. ಸಿದ್ದಪ್ಪ ಚಂದಪ್ಪ ಪೂಜಾರಿ (ಸುಸಲಾದ)ಶ್ರೀ.ಮಹಂತೇಶ ಪುಟಾಣಿ (ಶಂಖ);    ಶ್ರೀ. ವಿಠ್ಠಲ ಮುಚ್ಚಂಡಿ(ಮಂಡಿಗೇರಿ);  ಶ್ರೀ ಸಾತಲಿಂಗಪ್ಪ ಕಿಟ್ಟದ (ಬೀಳೂರ);                    ಶ್ರೀ. ಸಿದ್ದಣ್ಣ ಮುಚ್ಚಂಡಿ (ಉಟಗಿ)                 ಸೌ.ಕವಿತಾ ದುಂಡಪ್ಪ ಅರಗೆ (ಬೇಡರ ವಸ್ತಿ);        ಶ್ರೀ.  ಬಸಪ್ಪ ಅಲಬಾಳ (ಕಳ್ಳಿ ವಸ್ತಿ ಉಟಗಿ)  

'ಕನ್ನಡ ಸೇವಾ ರತ್ನ' ಪ್ರಶಸ್ತಿ ಪುರಸ್ಕೃತರು (ಅಕ್ಕಲಕೋಟ ತಾಲುಕಾ)

  ಶ್ರೀ. ಸುರೇಶ ಶಟಗಾರ(ದುಧನಿ); ಶ್ರೀ. ಶರಣಪ್ಪ ಫುಲಾರಿ(ನಾಗಣಸುರ); ಸೌ. ಶಶಿರೇಖಾ ಸಲಗರ (ಮೈಂದರ್ಗಿ); ಶ್ರೀ. ಶ್ರೀಶೈಲ ವಿ. ಖಾನಾಪೂರೆ(ಸಿನ್ನುರ); ಸೌ. ಅಶ್ವಿನಿ ಹಿಟ್ನಳ್ಳಿ(ಮುಗಳಿ); ಶ್ರೀ ದಿನೇಶ ಚವಾಣ (ಬಬಲಾದ); ಶ್ರೀ. ಸಿದ್ದು ಧರ್ಮಾ ರಾಠೋಡ (ಅಂಕಲಗೆ); ಶ್ರೀ ಗಣಪತಿ ಕಿಣಗಿ (ಗೌಡಗಾಂವ);   ಶ್ರೀ. ಮಹಾದೇವ ಪಾಟೀಲ (ಮೈಂದರ್ಗಿ); ಶ್ರೀ. ಶ್ರೀಶೈಲ ಸ. ವಾಡೆದ(ನಾವದಗಿ); ಶ್ರೀ. ಅಶೋಕ ಕೋಗನೂರೆ(ಶಿರವಳ); ಸೌ. ರಾಜಶ್ರೀ ಕ. ಬಿರಾದಾರ(ಮೈಸಲಗೆ)

  ಪ್ರಮುಖ ಉಪಸ್ಥಿತಿಯಲ್ಲಿ ಶಿಕಂದರ ಶೇಖ (ಕೇಂದ್ರ ಪ್ರಮುಖರು,ಜಾಡರಬಬಲಾದ), ಶ್ರೀ. ದಾದಾಸೋ ಅ. ಶಿತೋಳೆ (ಚಡಚಣ),, ಸೌ. ವಾಣಿ ಶ್ರೀ ಮ. ಅಂಕಲಗಿ (ಜಾಡರ ಬಬಲಾದ) ಶ್ರೀ. ದಶರಥ ಶೇಜಾಳ, ಶ್ರೀ. ಆರ್. ಡಿ. ಪವಾರ(ಅಕ್ಕಲಕೋಟ), ಶ್ರೀ. ಎಮ್.ಎಲ್. ಇಮ್ಮನವರ (ಚೇರಮನರು, ಉಮದಿ ಪತಸಂಸ್ಥೆ), ಶ್ರೀ.ಸಿದ್ದಾರಾಮ ಅಂಬಿಗರ (ತಡವಳ) ಶ್ರೀ. ರಾಜೇಂದ್ರ ಗಿ. ಬಿರಾದಾರ (ಉಟಗಿ) ಸೌ. ಆಶಾ ಬ. ವಾಲೆ (ವಳಸಂಗ) ಸೌ. ನಾಗಮ್ಮಾ ಸ್ವಾಮಿ (ಅಕ್ಕಲಕೋಟ) ಶ್ರೀ. ಬಸವಂತರಾಯ ಪಿ. ಬಗಲಿ (ಉಟಗಿ) ಶ್ರೀ. ಕುಮಾರ ಕರ್ಕಿ (ಬಾಲಗಾಂವ), ರಾಜಶೇಖರ ಗೊಬ್ಬುರ(ಅಕ್ಕಲಕೋಟ), ಶ್ರೀ. ಗಣಪತಿ ಪವಾರ(ದುಧನಿ), ಶ್ರೀ ಭೂಸಣಗಿ(ವಳಸಂಗ) ಸೇರಿದಂತೆ ಸುತ್ತ ಮುತ್ತಲಿನ ಊರುಗಳಿಂದ ಅಪಾರ ಜನಸಂಖ್ಯೆ ನೆರೆದಿತ್ತು. ಸಣ್ಣ ಉಮದಿ ಗ್ರಾಮದ ಶಿಕ್ಷಣ ಪ್ರೇಮಿ ಪಾಲಕರು, ಮಾತಾ ಪಾಲಕರು, ಉಮದಿ ಕೇಂದ್ರದ ಕೇಂದ್ರ ಪ್ರಮುಖರು, ಎಲ್ಲ ಮುಖ್ಯಾದ್ಯಾಪಕರು, ಕೇಂದ್ರದ ಎಲ್ಲ ಶಿಕ್ಷಕವೃಂದ, ಶಾಲೆ ವ್ಯವಸ್ತಾಪನೆ ಸಮಿತಿಯ ಎಲ್ಲ ಸದಸ್ಯರು,ಉಮದಿ ಗ್ರಾಮ ಪಂಚಾಯತಿ ಸದಸ್ಯರು,  ಗುರು ಹಿರಿಯರು ಹಾಗೂ ಶ್ರೀ ಬಸವೇಶ್ವರ ಗಣೇಶ ತರುಣ ಮಂಡಳ, ಶ್ರೀ ಅಕ್ಕಮಹಾದೇವಿ ಅಕ್ಕನ ಬಳಗ ಸಣ್ಣ ಉಮದಿ ಇವರೆಲ್ಲರ ಸಹಕಾರ ಲಭಿಸಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು