10th Science Part 1 Kannada Medium
ವಿಜ್ಞಾನ ಮತ್ತು ತಂತ್ರಜ್ಞಾನ
ಹತ್ತನೆಯ ಇಯತ್ತೆ
ಅನುಕ್ರಮಣಿಕೆ
ಅ.ಕ್ರ. |
ಪಾಠದ
ಹೆಸರು |
ಪೃ.ಕ್ರ.
|
1. |
ಅನುವಂಶೀಯತೆ
ಮತ್ತು ಉತ್ಕಾಂತಿ. |
|
2. |
ಸಜೀವಿಗಳಲ್ಲಿಯ
ಜೀವನ ಪ್ರಕ್ರಿಯೆ ಭಾಗ-I |
|
3. |
ಸಜೀವಿಗಳಲ್ಲಿಯ
ಜೀವನ ಪ್ರಕ್ರಿಯೆ ಭಾಗ-II. |
|
4. |
ಪರ್ಯಾವರಣದ
ವ್ಯವಸ್ಥಾಪನೆ. |
|
5. |
ಹಸಿರು
ಶಕ್ತಿಯ ದಿಶೆಯಲ್ಲಿ |
|
6. |
ಪ್ರಾಣಿಗಳ
ವರ್ಗಿಕರಣ |
|
7. |
ಸೂಕ್ಷ್ಮ
ಜೀವಶಾಸ್ತ್ರದ ಪರಿಚಯ |
|
8. |
ಕೋಶ
ವಿಜ್ಞಾನ ಮತ್ತು ಜೈವ ತಂತ್ರಜ್ಞಾನ |
|
9. |
ಸಾಮಾಜಿಕ
ಆರೋಗ್ಯ |
|
10. |
ಆಪತ್ತು
ವ್ಯವಸ್ಥಾಪನೆ |
|
1.
ಅನುವಂಶಿಯತೆ ಮತ್ತು ಉತ್ಕಾಂತಿ
ಪ್ರಶ್ನೆ 1.
ಕೆಳಗಿನ ಆಕೃತಿ ಪೂರ್ಣ ಮಾಡಿರಿ.
ಪ್ರಶ್ನೆ 2) ಕೆಳಗಿನ ವಿಧಾನಗಳನ್ನು ಓದಿ
ಅವುಗಳಲ್ಲಿ ಸಮರ್ಥನೆಗಾಗಿ ಯೋಗ್ಯ ಉದಾಹರಣೆ ಗಳೊಂದಿಗೆ ಉತ್ತರಗಳನ್ನು ನಿಮ್ಮ ಶಬ್ದಗಳಲ್ಲಿ
ಬರೆಯಿರಿ.
ಅ) ಮಾನವನ ಉತ್ಕಾಂತಿಗೆ ಸುಮಾರು 7 ಕೋಟಿ ವರ್ಷಗಳ ಮೊದಲು
ಆರಂಭವಾಯಿತು.
ಉತ್ತರ: 1)
ಸುಮಾರು 7 ಕೋಟಿ ವರ್ಷಗಳ ಮೊದಲು ಪೃಥ್ವಿಯ ಮೇಲೆ
ಹಿಮಯುಗ ಪ್ರಾರಂಭವಾಗಿತ್ತು ಈ ಅವಧಿಯ ಪರಿಸ್ಥಿತಿಯಲ್ಲಿ ಡೈನೊಸಾರ ಪ್ರಾಣಿ ಇಲ್ಲದಂತಾಯಿತು.
2) ಆಧುನಿಕ ಲೊಮೊರದಂತೆ ಕಂಡುಬರುವ
ಪ್ರಾಣಿಗಳಿಂದ ಮಂಗನಂತಿರುವ ಪ್ರಾಣಿಗಳು ವಿಕಸಿತವಾದವು.
3) 4 ಕೋಟಿ ವರ್ಷಗಳ ಮೊದಲು
ಆಫ್ರಿಕಾದಲ್ಲಿಯ ಈ ಮಂಗಗಳಂತಹ ಪ್ರಾಣಿಯ ಬಾಲ ಇಲ್ಲವಾಯಿತು. ಮೆದುಳಿನ ಆಕಾರ ದೊಡ್ಡದಾಗಿ ಅವುಗಳ
ವಿಕಾಸವಾಗಿ ಒಂದೇ ಪ್ರಕಾರದ ಪ್ರಾಣಿಗಳಾದವು.
4) ಮೇಲೆ ಅವುಗಳ ಶಾರೀರಿಕ ಮತ್ತು
ಮೆದುಳಿನ ಆಕಾರದಲ್ಲಿ ಬದಲಾವಣೆ ಆಗುತ್ತಾ ಹೋಗಿ ಮಾನವ ಸದೃಶ್ಯ (ಪ್ರಾಣಿಗಳ) ವಿಕಾಸವಾಗಿ ಗಿಡಗಳ
ಮೇಲೆ ವಾಸಿಸುವ ಮಂಗಗಳಿಂಡಿ ಕಪಿ ಮತ್ತು ಮಾನವ ಹೀಗೆ ಎರಡು ಬೇರೆ ಬೇರೆ ಉತ್ಕಾಂತಿ ಮಾರ್ಗಗಳು
ನಿರ್ಮಾಣ ಆದವು.
5) ಮಾನವನ ಮೆದುಳು ವಿಕಾಸವಾಗುತ್ತಾ
ಹೋದಂತೆ ನೇರವಾಗಿ ನೆಲದ ಮೇಲೆ ನಿಲ್ಲುವ ಸಾಮರ್ಥ್ಯ ಮತ್ತು ಕೈಗಳನ್ನು ಉಪಯೋಗಿಸಿ ನಡೆಯುವ
ಸಾಮರ್ಥ್ಯ ನೇರವಾಗಿ ನೆಲದ ಮೇಲೆ ನಡೆದಾಡುವ ಮಾನವನ ಉತ್ಕಾಂತಿ ಆಯಿತು.
6) ಈ ಎಲ್ಲ ಪ್ರವಾಸವು 7 ಕೋಟಿ ವರ್ಷಗಳಿಂದ ಆರಂಭವಾಯಿತು. ಆದರೆ 50 ಸಾವಿರ ವರ್ಷಗಳ
ಪೂರ್ವದಲ್ಲಿ ಬುದ್ಧಿವಂತ ಮಾನವ (ಹೊಮೊ-ಸೆಫಿಯನ್) ಸದಸ್ಯ ನೆನೆಸಿಕೊಳ್ಳಲು ಯೋಗ್ಯನಾದನು.
7) 50 ಸಾವಿರ ವರ್ಷಗಳ ಮೊದಲಿನ
"ಕ್ರೋಮ್ಯಾಗ್ನಾನ್" ಮಾನವ ನಂತರ "ನಿಆಂಡರ್‌ಥಾಲ್ ಮಾನವ" ಇವನನ್ನು
ಬುದ್ದಿವಂತ ಮಾನವನೆಂದು ಪರಿಗಣಿಸಲಾಗುವದು.
ಬ) ಸಜೀವಿಗಳ ಭೌಗೋಲಿಕ ಮತ್ತು
ಪುನರುತ್ಪಾದನೆಯ ಪೃಥಕರಣ ಆದರೆ ಕಾಲಾಂತರದಿಂದ ಜಾತಿಭೇದ/ ಜಾತಿ ಉದ್ಭವ ಆಗುತ್ತದೆ.
ಉತ್ತರ: 1)
ಉತ್ಕ್ರಾಂತಿಯ ಪರಿಣಾಮದಿಂದ ಬೇರೆ-ಬೇರೆ ಪ್ರಕಾರದ ವನಸ್ಪತಿ ಮತ್ತು ಪ್ರಾಣಿಗಳ ಉತ್ಪತ್ತಿಯಾಗಿವೆ. ನೈಸರ್ಗಿಕ ಫಲನದಿಂದ ಫಲನಕ್ಷಮತೆ
ಸಂತತಿ ನಿರ್ಮಾಣ ಮಾಡುವ ಸಜೀವಿಗಳ ಗುಂಪಿಗೆ ಜಾತಿ ಎನ್ನುವರು. 2) ಪ್ರತಿಯೊಂದು
ಜಾತಿಯ ವಿಶಿಷ್ಟ ಭೌಗೋಲಿಕ ಪರಿಸ್ಥಿತಿಯಲ್ಲಿ ವೃದ್ಧಿಸುತ್ತದೆ. ಅದರ ಆಹಾರ, ವಿಹಾರ, ಫಲನಕ್ಷಮತೆ ಇತ್ಯಾದಿ ಬೇರೆ ಬೇರೆ ಇರುತ್ತದೆ ಅಂದರೆ
ಜಾತಿಯ ವೈಶಿಷ್ಟ್ಯಗಳು ಸ್ಥಿರವಾಗಿ ಇರುತ್ತವೆ. 3) ಇಂಥಹ ಸಜೀವಿಗಳು
ಎರಡನೆಯ ಜಾತಿಯ ಸಜೀವಿಗಳೊಂದಿಗೆ ಪುನರುತ್ಪಾದನೆ ಮಾಡಲಾರವು. 4) ಈ
ಎರಡು ಬೇರೆ-ಬೇರೆ ಜಾತಿಯ ಪೂರ್ವಜರು ಒಬ್ಬರೆ ಇರಲು ಸಾಧ್ಯವಿದೆ. ಆದರೆ ಅನಿವಾರ್ಯ ಕಾರಣದಿಂದ ಈ
ಜಾತಿಯ ಎರಡು ಗುಂಪು ಆಗಿ ಮತ್ತು ಬಹಳ ಕಾಲಾವಧಿಯವರೆಗೆ ಅವು ಭೌಗೋಲಿಕ ಮತ್ತು ಪುನಃರುತ್ಪಾದನೆ
ದೃಷ್ಟಿಯಿಂದ ಆಗಿರುವ ಕಾರಣ ಅವುಗಳ ಅನುವಂಶಿಕತೆಯ ಗುಣಧರ್ಮದಲ್ಲಿ ಬದಲಾವಣೆಯಾಗಿ ಅವುಗಳಿಂದ ಎರಡು
ಹೊಸ ಜಾತಿಗಳ ನಿರ್ಮಾಣವಾಗಿವೆ.
ಕ) ಜೀವಾಶ್ಮಗಳ ಅಭ್ಯಾಸವು ಉತ್ಕ್ರಾಂತಿಯ
ಅಭ್ಯಾಸದ ಒಂದು ಮಹತ್ವದ ಅಂಗವಾಗಿವೆ.
ಉತ್ತರ: 1
) ಜೀವಾಶ್ಮ ಇದು ಪುರಾತನ ಕಾಲದಲ್ಲಿ ಅಸ್ಥಿತ್ವದಲ್ಲಿರುವ ಸಜೀವಿಗಳ
ಪುರಾವೆಯಾಗಿದ್ದು ಇದರ ನಿಗೂಢ ರಹಸ್ಯವು ಭೂಮಿಯಲ್ಲಿ ಅಡಕವಾಗಿವೆ. ಕೆಲವು ನೈಸರ್ಗಿಕ ಆಪತ್ತುಗಳಾದ ಮಹಾಪೂರ, ಜ್ವಾಲಾಮುಖಿ, ಭೂಕಂಪ ಇತ್ಯಾದಿಗಳಿಂದ ಅವು ಭೂಮಿಯ ಅಂತರ
ಭಾಗದಲ್ಲಿ ಅಡಕವಾಗಿವೆ. (ಹುಗಿಯಲ್ಪಟ್ಟಿವೆ) ಮತ್ತು ಅವು ಸುರಕ್ಷಿತವಾಗಿವೆ. ಇವುಗಳಿಗೆ ಜೀವಾಶ್ಮ
ಎನ್ನುವರು.2) ಅವುಗಳ ಅವಶೇಷ, ಅವುಗಳ ಆಕಾರದ
ನಕ್ಷೆಯ ಗುರುತು ಇತ್ಯಾದಿಗಳ ಅಭ್ಯಾಸ ಮಾಡಲಾಗಿ ಅದರಿಂದ ಪುರಾತನ ಕಾಲದಲ್ಲಿಯ ಸಜೀವಿಗಳ
ವೈಶಿಷ್ಟ್ಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿವೆ.3) ಪುರಾತನ
ಕಾರ್ಬನ್ ವಯೋಮಾಪನ ಪದ್ಧತಿ (C-14), (C-12) ಜೊತಗಿನ ಗುಣೋತ್ತರದಿಂದ
ಕಾಲಮಾಪನ ಮಾಡಲು ಬರುತ್ತದೆ. ಇದಕ್ಕೆ ಕಾರ್ಬನ್ ವಯಸ್ಸಿನ ಮಾಪನ ಎನ್ನುವರು. ಇದರ ಉಪಯೋಗ ಪುರಾತನ
ಅವಶೇಷಶಾಸ್ತ್ರ ಮತ್ತು ಮಾನವ ವಂಶಶಾಸ್ತ್ರದಲ್ಲಿ ಮಾನವನ ಅವಶೇಷ ಅಥವಾ ಜೀವಾಶ್ಮ ಮತ್ತು
ಹಸ್ತಲಿಖಿತ ಇವುಗಳ ಕಾಲ ನಿರ್ಧರಿಸಲಾಗುತ್ತದೆ. ಈ ರೀತಿಯ ತಂತ್ರದಿಂದ ಜೀವಾಶ್ಮಗಳ ಕಾಲನಿಶ್ಚಿತ
ಮಾಡಲು ಬರುತ್ತದೆ. ಆದ್ದರಿಂದ ಜೀವಾಶ್ಮಗಳ ಅಭ್ಯಾಸವು ಉತ್ಕ್ರಾಂತಿಯ ಅಭ್ಯಾಸದ ಒಂದು ಮಹತ್ವದ
ಅಂಗವಾಗಿವೆ.
ಡ)' ಕಶೇರುಕ ಪ್ರಾಣಿಗಳಲ್ಲಿ ಬ್ರೂಣ ವಿಜ್ಞಾನ ಬಗೆಗಿನ ಪುರಾವೆಗಳು
ಕಾಣಿಸಿಗುತ್ತವೆ.
ಉತ್ತರ: 1)
ಕಶೇರುಕ ಪ್ರಾಣಿಗಳಾದ ಮೀನು, ಸಲಮಂಡರ, ಆಮೆ, ಕೋಳಿ, ಹಂದಿ, ಆಕಳು, ಮೊಲ, ಮಾನವ ಇವುಗಳ ತುಲನಾತ್ಮಕ
ಅಭ್ಯಾಸ ಮಾಡಲಾಗಿ, ಪ್ರಾರಂಭಿಕ ಹಂತದಲ್ಲಿ ಈ ಬ್ರೂಣಗಳಲ್ಲಿ ಸಾಕಷ್ಟು
ಸಾಮ್ಯತೆ (ಸರಿ ಸಮಾನತೆ) ಇದ್ದದ್ದು ಕಂಡು ಬರುತ್ತದೆ.2) ವಿಕಾಸದ
ಮುಂದಿನ ಹಂತದಲ್ಲಿ ಅವು ಕಡಿಮೆ ಆಗುತ್ತ ಹೊಗುತ್ತದೆ ಇದರಿಂದ ಈ ಎಲ್ಲ ಪ್ರಾಣಿಗಳ ಪೂರ್ವಜರು
ಒಬ್ಬರೇ ಇರಬಹುದೆಂದು ಪುರಾವೆ ದೊರಕುತ್ತಿದೆ.
ಪ್ರಶ್ನೆ 3) ಕಂಸದಲ್ಲಿಯ ಕೊಟ್ಟ ಪರ್ಯಾಯಗಳಲ್ಲಿ
ಯೋಗ್ಯ ಪರ್ಯಾಯ ಆರಿಸಿ ವಿಧಾನ ಪುನಃ ಬರೆಯಿರಿ.
ಮೀನು, ಜನುಕ, ಜೀವಾಶ್ಮ, ಉತ್ಪರಿವರ್ತನ,
ಸ್ಥಾನಾಂತರಣ, ನಕಲು, ಕ್ರಮವಿಕಾಸ,
ಕರಳುಬಾಲ)
1)
ಆಕಸ್ಮಾತಾಗಿ
ಉಂಟಾಗುವ ಬದಲಾವಣೆಗಳ ಕುರಿತಾದ ಕಾರ್ಯಕಾರಣಭಾವ ಹ್ಯುಗೋದ ವ್ಹ್ರೀಸ ಇವರ ..................
ಸಿದ್ಧಾಂತದಿಂದ ಗಮನಕ್ಕೆ ಬಂದಿತು.
ಉತ್ತರ: "ಉತ್ಪರಿವರ್ತನ"
2)
ಪ್ರೋಟಿನುಗಳ
ನಿರ್ಮಿತಿ .................. ಮುಖಾಂತರ ಉಂಟಾಗುತ್ತದೆ
ಎಂದು ಜಾರ್ಜ ಬಿಡಲ ಮತ್ತು ಎಡ್ವರ್ಡ ಟೆಟಮ ಇವರು ತೋರಿಸಿಕೊಟ್ಟರು.
ಉತ್ತರ: "ಜನುಕ"
3)
D.N.A ಎಳೆಯ ಮೇಲಿನ ಮಾಹಿತಿ RNA ಎಳೆಯ ಮೇಲೆ ಕಳಿಸಿ ಕೊಡುವ
ಪ್ರಕ್ರಿಯೆ...............ಎನ್ನುತ್ತಾರೆ.
ಉತ್ತರ:ನಕಲು
(ಮಾರ್ಚ್ 2020)
4)
ಉತ್ಕ್ರಾಂತಿ ಎಂದರೆ ........... ಆಗಿದೆ. ಉತ್ತರ: ಕ್ರಮವಿಕಾಸ
3)
ಮಾನವನ ಶರೀರದಲ್ಲಿ ಕಂಡು ಬರುವ .................ಇದು ಅವಶೇಷಾಂಗಾತ್ಮಕ ಉತ್ಕ್ರಾಂತಿಯ
ಪುರಾವೆಯಾಗಿದೆ. ಉತ್ತರ: ಕರಳುಬಾಲ
ಪ್ರಶ್ನೆ
4) ದೊರೆತ ಮಾಹಿತಿಯ ಆಧಾರದ ಮೇಲಿಂದ ಪರಿಚ್ಛೇದ ಬರೆಯಿರಿ.
ಅ) ಲೆಮಾರ್ಕವಾದ :
1) ಉತ್ಕ್ರಾಂತಿ ಉಂಟಾಗುತ್ತಿರುವಾಗ ಸಜೀವಿಗಳ ಶರೀರ ರಚನೆಯಲ್ಲಿ ಬದಲಾವಣೆ ಉಂಟಾಗುತ್ತದೆ
ಇದಕ್ಕೆ ಕಾರಣ ಆ ಸಜೀವಿ ಮಾಡಿದ ಪ್ರಯತ್ನ ಅಥವಾ ಆಲಸ್ಯತನ ಎಂದು ಲೆಮಾರ್ಕ ಮಂಡಿಸಿದರು. ಇದನ್ನು ಇಂದ್ರಿಯಗಳ
ಉಪಯೋಗ ಅಥವಾ ಉಪಯೋಗಿಸದಿರುವ ಸಿದ್ಧಾಂತ(Use or disuse of
organs) ಎಂದೂ ಹೇಳುವರು. 2) ಸಜೀವದ ಜೀವನ ಕಾಲದಲ್ಲಿ ಯಾವ ಕಾಲದಲ್ಲಿ ಯಾವ
ಗುಣಗಳು ಅವು ಸಂಪಾದನ ಮಾಡಿರುತ್ತದೆಯೋ ಅವು ಆ ಸಂತತಿಯ ಕಡೆಗೆ ಸಂಕ್ರಮಿತ ಮಾಡಲು ಬರುತ್ತವೆ.
ಇದಕ್ಕೆ 'ಸಂಪಾದಿತ ಗುಣಗಳ ಅನುವಂಶಿಯತೆ' ಎನ್ನುವರು.
3) ಉದಾ - (1) ಜಿರಾಭವು ಪಿಡಿಯಿಂದ ಪಿಡಿಗೆ
ಕತ್ತನ್ನು ಎತ್ತಿ ಗಿಡದ ಎಲೆಗಳನ್ನು ತಿನ್ನುವದರಿಂದ ಅದರ ಕುತ್ತಿಗೆಯ ಉದ್ದವಾಯಿತು. (2)
ಕಮ್ಮಾರನ ಬಲಿಷ್ಠ ಬಾಹುಗಳು ಸುತ್ತಿಗೆಯಿಂದ ಪೆಟ್ಟು ಹಾಕಿ ಬಿಲಿಷ್ಠವಾದವು. (3)
ಹಲವು ಪಕ್ಷಿಗಳು ರೆಕ್ಕೆಗಳು ಉಪಯೋಗಿಸದೆಯೇ ಇರುವದರಿಂದ ಅವು ದುರ್ಬಲಗೊಂಡವು. (4)
ಹಂಸ ಬಾತುಕೋಳಿಗಳ ಕಾಲುಗಳು ನೀರಿನಲ್ಲಿ ಇದ್ದು ಈಜುವುದಕ್ಕೆ ಉಪಯೋಗ ಆದವು. (5)
ಹಾವುಗಳು ಬೀಲದಲ್ಲಿ ಹೋಗಲು ಯೋಗ್ಯ ಶರೀರ ರಚನೆಯನ್ನು ಮಾಡುವಾಗ ಕಾಲುಗಳು
ಕಳೆದುಕೊಂಡವು.
4) ಇವು ಒಂದು ಪಿಡಿಯಿಂದ ಇನ್ನೊಂದು ಪಿಡಿಗೆ ವರ್ಗಾವಣೆ ಮಾಡುವದರಿಂದ ಇದಕ್ಕೆ ವರ್ಗಾವಣೆ
ಸಿದ್ಧಾಂತ 'ಎನ್ನುವರು. ಇದುವೆ ಲೆಮಾರ್ಕವಾದ ಆಗಿದೆ.
ಬ)
ಡಾರ್ವಿನರ ನೈಸರ್ಗಿಕ ಆಯ್ಕೆಯ ಸಿದ್ಧಾಂತ :- 1)
ಚಾರ್ಲ್ಸ ಡಾರ್ವಿನರು ನೈಸರ್ಗಿಕ ಆಯ್ಕೆಯ ಸಿದ್ಧಾಂತವನ್ನು ಮಂಡಿಸಿದರು.
ಇದಕ್ಕಾಗಿ ಅವರು ಬೇರೆ-ಬೇರೆ ಪ್ರದೇಶದಲ್ಲಿಯ ವನಸ್ಪತಿ ಮತ್ತು ಪ್ರಾಣಿಗಳ ಅಸಂಖ್ಯ ಪ್ರಕಾರಗಳನ್ನು
ತೆಗೆದುಕೊಂಡು ಅವುಗಳ ನಿರೀಕ್ಷೆಯನ್ನು ಮಾಡಿದರು. 2) ಅವರು ಯಾವ ಪ್ರಾಣಿ ಮತ್ತು ವನಸ್ಪತಿಗಳು
ನಿಸರ್ಗಕ್ಕೆ ಹೊಂದಿಕೊಂಡು ಹೋಗಲು ಸಕ್ಷಮ ಇರುತ್ತವೆಯೋ ಅವು ಜೀವಂತವಾಗಿ ಉಳಿಯುತ್ತವೆ.
ಹೊಂದಿಕೊಂಡು ಹೋಗದೆ ಇರುವ ಸಜೀವಿಗಳು ಸಾವನ್ನು ಅಪ್ಪುತ್ತವೆ. 3) ಜೀವಿಸುವ ಸಜೀವಿಗಳು
ಪುನರುತ್ಪಾದನೆ ಮಾಡಲು ಶಕ್ತಿ ಹೊಂದಿದ್ದು ತಮ್ಮ ಬೇರೆ ಬೇರೆ ವೈಶಿಷ್ಟ್ಯ, ಸಹಿತ ಹೊಸ ಪ್ರಜಾತಿ ನಿರ್ಮಾಣ ಮಾಡುತ್ತವೆ. 4) ಡಾರ್ವಿನರು
ಅದಕ್ಕಾಗಿ 'ಓರಿಜನ್ ಆಫ್ ಸ್ಪೆಶಿಜ" ಎಂಬ ಪುಸ್ತಕದಲ್ಲಿ
ಪ್ರಸಿದ್ಧ ಪಡಿಸಿದ್ದಾರೆ. ಈ ಸಿದ್ಧಾಂತವು ಸಾಕಷ್ಟು ಅವಧಿಯವರೆಗೆ ಸರ್ವಸಾಮಾನ್ಯ ಆಗಿರುತ್ತದೆ.
ಕ)
"ಭ್ರೂಣ-ವಿಜ್ಞಾನ" :- ಭ್ರೂಣ
ವಿಜ್ಞಾನದಲ್ಲಿ ವಿವಿಧ ಪ್ರಜಾತಿಗಳ ಭ್ರೂಣಗಳ ತುಲನಾತ್ಮಕ ಅಭ್ಯಾಸ ಮಾಡಲಾಗುತ್ತದೆ. 1) ಕಶೇರುಕ ಪ್ರಾಣಿಗಳಾದ ಮೀನು,
ಸಲಮಂಡಲ, ಆಮೆ, ಕೋಳಿ,
ಹಂದಿ, ಆಕಳು, ಮೊಲ,
ಮಾನವ ಈ ಎಲ್ಲ ಪ್ರಜಾತಿಗಳ ಅಭ್ಯಾಸ ಮಾಡಲಾಗಿ ಪ್ರಾರಂಭಿಕ ಹಂತದಲ್ಲಿ ಈ
ಭ್ರೂಣಗಳಲ್ಲಿ ಸಾಕಷ್ಟು ಸಾಮ್ಯತೆ ಕಂಡು ಬರುತ್ತದೆ. 2) ವಿಕಾಸದ
ಮುಂದಿನ ಹಂತದಲ್ಲಿ ಅವು ಕಡಿಮೆ ಆಗುತ್ತ ಹೋಗುತ್ತವೆ. ಇದರಿಂದ ಈ ಎಲ್ಲ ಪ್ರಾಣಿಗಳ ಪೂರ್ವಜರು
ಒಬ್ಬರೆ ಇರಬಹುದೆಂದು ಪುರಾವೆ ದೊರಕುತ್ತದೆ.
ಕ) 'ಉತ್ಕಾಂತಿ' :- 1) ನೈಸರ್ಗಿಕ ಆಯ್ಕೆಗೆ ಪ್ರತಿಕ್ರಿಯೆಯಂತೆ
ಸಜೀವಿಗಳ ಲಕ್ಷಣಗಳಲ್ಲಿ ಅನೇಕ ಪಿಡಿಯವರೆಗೆ ಬದಲಾವಣೆ ಆಗಿ ಹೊಸ ಜೀವ ಜಾತಿ ನಿರ್ಮಾಣವಾಗುವ
ಪ್ರಕ್ರಿಯೆಯನ್ನು ಉತ್ಕ್ರಾಂತಿ ಎನ್ನುತ್ತಾರೆ. 2) ಉತ್ಕ್ರಾಂತಿ ಎಂದರೆ
ಕ್ರಮ ವಿಕಾಸವಾಗಿದೆ. ಇದು ಅತ್ಯಂತ ಸಾವಕಾಶ ಉಂಟಾಗುವ ಪ್ರಕ್ರಿಯೆ ಆಗಿದೆ. ಇದಕ್ಕೆ ಕೋಟಿ ವರ್ಷಗಳ
ಕಾಲಾವಕಾಶ ಬೇಕಾಗುತ್ತದೆ. 3) ಅಂತರಿಕ್ಷದಲ್ಲಿಯ ಗ್ರಹ-ನಕ್ಷತ್ರಗಳಿಂದ
ಪೃಥ್ವಿಯ ಮೇಲಿರುವ ಜೀವ ಸೃಷ್ಟಿಯಲ್ಲಿಯ ಬದಲಾವಣೆಯವರೆಗಿನ ಅನೇಕ ಹಂತಗಳ ವಿಚಾರ ಉತ್ಕ್ರಾಂತಿಯಲ್ಲಿ
ಮಾಡುವುದು ಅವಶ್ಯಕವಿದೆ. 4) ಉತ್ಕ್ರಾಂತಿಯಿಂದ ಸಜೀವಿಗಳು ಅತ್ಯಂತ
ಸಕ್ಷಮ ಆಗುತ್ತವೆ. ಇದರಿಂದ ಹೋಸ ಜೀವ-ಜಾತಿಗಳ ನಿರ್ಮಾಣವಾಗುತ್ತದೆ.
ಡ)
ಜೋಡಣೆಯ ಕೊಂಡಿ :- 1) ಕೆಲವು ವನಸ್ಪತಿ ಮತ್ತು ಪ್ರಾಣಿಗಳಲ್ಲಿ ಕೆಲವು ಶಾರೀರಿಕ ಲಕ್ಷಣಗಳು ಎರಡು ಬೇರೆ- ಬೇರೆ
ಸಂಘಗಳನ್ನು ಜೋಡಿಸುತ್ತವೆ. ಅವುಗಳನ್ನು ಜೋಡಣೆಕೊಂಡಿ ಎನ್ನುವರು. 2) ಉದಾ
:- (1) ಪೆರಿಪೆಟಸ್ ಇದು ಅನೆಲಿಡಾ ಮತ್ತು ಸಂಧಿಪಾದಿ ಪ್ರಾಣಿ ಈ
ಎರಡನ್ನು ಜೋಡಿಸುವ ಕೊಂಡಿಯಾಗಿದೆ.
ಪೆರೆಪೆಟಸ್ ಈ
ಪ್ರಾಣಿಯಲ್ಲಿ ವಲಯಾಂಕಿತ ಶರೀರ, ತೀಳುವಾದ ಉಪಚರ್ಮ, ಪಾರ್ಶ್ವ (ಬದಿಗಳ ಅದಲು ಬದಲು) ಪಾದ ದಂತಹ
ಅವಯವ ಕಂಡು ಬರುತ್ತವೆ. ಇದರಂತೆ ಈ ಪ್ರಾಣಿಗಳಲ್ಲಿ ಸಂಧಪಾದಿ ಪ್ರಾಣಿಗಳಂತಹ ಶ್ವಾಸನಳಿಕೆಗಹಳು
ಮತ್ತು ಮುಕ್ತ ರಕ್ತಾಭಿಸರಣ ಸಂಸ್ಥೆ ಕಂಡು ಬರುತ್ತದೆ. (2) ಡಕ್‌ಬಿಲ್,
ಪ್ಲಾಟಿಪಸ್ ಈ ಪ್ರಾಣಿಗಳು ಸರಿಸೃಪ ಪ್ರಾಣಿಗಳಂತೆ ಮೊಟ್ಟೆಯನ್ನಿಡುತ್ತವೆ ಆದರೆ
ದುಗ್ಧಗ್ರಂಥಿ ಮತ್ತು ಶರೀರದ ಮೇಲಿನ ರೋಮ ಇವುಗಳಿಂದ ಸಸ್ತನಿ ಪ್ರಾಣಿ ಜೊತೆಗಿನ ಸಂಬಂಧ
ತಿಳಿಯುತ್ತಿದೆ. (3) ಲಂಗ್‌ಫಿಶ್ ಇದು ಮೀನಾಗಿದ್ದರೂ ಪುಪ್ಪುಸದಿಂದ
ಶ್ವಸನ ಮಾಡುತ್ತದೆ. (ಕಿವಿರುಗಳಿಂದ ಇಲ್ಲ) ಅಂದರೆ ಸಸ್ತನಿ
ಪ್ರಾಣಿಗಳು ಇವು ಸರಿಸೃಪ ಪ್ರಾಣಿಗಳಿಂದ ಆಗಿದ್ದರೆ ಉಭಯಚರ ಇವು
ಮತ್ಯಸ್ಸಿ ಹಾಲೆದುದರ ಇಷ್‌ಗೆ ಸರಿದೇಶನ ಮಾಡುತ್ತಿವೆ. ಅಂದರೆ ಲಂಗಫಿರ್ ಈ ಪ್ರಾಣಿಯು ಮತ್ತೆನ್ನು
ಮತ್ತು ಸಸ್ತಿನ ಈ 2
ಪ್ರಾಣಿಗಳಿಗೆ ಜೋಡಿಸುವ ಕೊಂಡಿ ಆಗಿದೆ.
ಪ್ರಶ್ನೆ 5) ಅನುವಂಶಿಯತೆ ಎಂದರೇನು ? 'ಎಂಬುದನ್ನು ಹೇಳಿ ಅನುವಂಶಿಕ ಬದಲಾವಣೆ ಹೇಗೆ ಉಂಟಾಗುತ್ತದೆ ಎಂಬುದನ್ನು ಸ್ಪಷ್ಟ
ಮಾಡಿರಿ.
ಉತ್ತರ: ಅನುವಂಶಿಯತೆ :- ಒಂದು ಸಂತತಿಯಿಂದ ಜೈವಿಕ ಲಕ್ಷಣಗಳು ಜೀನುಗಳಿಂದ
(ಜನುಕಗಳಿಂದ) ಎರಡನೆ ಸಂತತಿಯ ಕಡೆಗೆ ಸಂಕ್ರಮಿತ (ವರ್ಗಾವಣೆ) ಆಗುವ ಪ್ರಕ್ರಿಯೆಯನ್ನು
ಅನುವಂಶಿಯತೆ ಎನ್ನುವರು.
* ಅನುವಂಶಿಕ ಬದಲಾವಣೆ :- 1) ಉತ್ಪರಿವರ್ತನ - ಆಕಸ್ಮಿಕವಾಗಿ
ಯಾವುದೇ ಒಂದು ಕಾರಣದಿಂದ ಜನುಕಗಳಿಂದ D.N.A. ದಲ್ಲಿ ಬದಲಾವಣೆಯಾಗಿ
ಅನುವಂಶಿಕ ಬದಲಾವಣೆ ಆಗುತ್ತದೆ.
"ಕೆಲವೊಮ್ಮೆ ಜನುಕಗಳಲ್ಲಿ ಆಕಸ್ಮಿಕ ಬದಲಾವಣೆ ಉಂಟಾಗುತ್ತದೆ. ಜನುಕಗಳಲ್ಲಿಯ ಒಂದು
ನ್ಯೂಕ್ಲಿಯೋ ಟೈರು' ಆಕಸ್ಮಿಕವಾಗಿ ತನ್ನ ಸ್ಥಾನವನ್ನು ಬದಲಿಸುತ್ತದೆ
ಇದರಿಂದಾಗಿ ಚಿಕ್ಕ ಬದಲಾವಣೆ ಉಂಟಾಗುತ್ತದೆ ಇದಕ್ಕೆ ಉತ್ಪರಿವರ್ತ ಎನ್ನುವರು.
2) ಯುಗ್ಮಕಗಳು ತಯಾರಾಗುವಾಗ ಅರ್ಧಸೂತ್ರಣ ವಿಭಜನೆ ಪ್ರಕ್ರಿಯೆಯಲ್ಲಿ ಜನುಕಗಳು
ಕೂಡಿಕೊಳ್ಳುತ್ತವೆ. ಇದರಿಂದ ಅನುವಂಶಿಕತೆಯಲ್ಲಿ ಬದಲಾವಣೆ ಕಾಣಬಹುದು.
ಪ್ರಶ್ನೆ 6) ಅವಶೇಷಾಂಗಗಳು ಎಂದರೇನು? ಎಂಬುದನ್ನು ಹೇಳಿ ಮಾನವನ ಶರೀರದಲ್ಲಿಯ ಕೆಲವು ಅವಶೇಷಾಂಗಗಳ ಹೆಸರು ಬರೆಯಿರಿ ಮತ್ತು
ಅದೇ ಅವಶೇಷಾಂಗ ಇತರ ಯಾವ ಪ್ರಾಣಿಗಳಿಗಾಗಿ ಉಪಯೋಜನಕಾರಿಯಾಗಿವೆ ತಿಳಿಸಿರಿ.
ಉತ್ತರ: ಅವಶೇಷಾಂಗಗಳು
:- ಸಜೀವಿಗಳಲ್ಲಿಯ ನಾಶಹೊಂದಿದ ಅಥವಾ ಅಪೂರ್ಣ ಬೆಳವಣಿಗೆ ಹೊಂದಿದ ನಿರುಪಯೋಗಿ
ಇಂದ್ರಿಯಗಳಿಗೆ ಅಥವಾ ಅಂಗಗಳಿಗೆ ಅವಶೇಷಾಂಗಗಳು ಎನ್ನುವರು.
ಮಾನವನ
ಶರೀರದಲ್ಲಿಯ ಅವಶೇಷಾಂಗಗಳು :- ಬಾಲ್ಯದ ಎಲುಬು,
ವಿವೇಕದ ಹಲ್ಲು, ಶರೀರದ ಮೇಲಿನ
ರೋಮ (ಕುದಲು)
ಇತ್ಯಾದಿ. ಸಜೀವಿಗಳಲ್ಲಿಯ ಇಂಥಹ ಅವಯವ ಆ ಸಜೀವಿಯಲ್ಲಿ ಯಾವುದೇ ಕಾರ್ಯ ಮಾಡುತ್ತಿದ್ದರೂ
ಇನ್ನೊಂದು ಸಜೀವಿಯಲ್ಲಿ ಕಾರ್ಯರತವಾಗಿರುತ್ತವೆ. ಅಂದರೆ ಅವು ಇನ್ನೊಂದು ಸಜೀವಿಗಳಿಗೆ ಉಪಯೋಗಕ್ಕೆ
ಬರುತ್ತವೆ. ಉದಾ :- (1) ಮಾನವನಿಗೆ ನಿರುಪಯುಕ್ತವಾದ ಕರಳುಬಾಲ ಇದು ಮೊಲಕು ಹಾಕುವ ಮತ್ತು ಸೆಲ್ಯುಲೋಜ ಪಚನ
ಮಾಡುವ ಪ್ರಾಣಿಗಳಿಗಾಗಿ ಉಪಯುಕ್ತ ಅವಯವವಿದೆ. (2) ಮಾನವರಲ್ಲಿ
ಉಪಯೋಗಕ್ಕೆ ಬರದ ಕಿವಿಯ ಸ್ನಾಯು ಮಂಗಗಳಲ್ಲಿ ಮಾತ್ರ ಕಿವಿ ಅಲುಗಾಡಿಸಲು ಉಪಯುಕ್ತ ಆಗಿವೆ. (3)
ಮಾನವನ ಶರೀರದಲ್ಲಿಯ ನಿರುಪಯುಕ್ತ ವಿವೇಕದ ಹಲ್ಲು ಮಾಂಸಾಹಾರಿ ಪ್ರಾಣಿಗಳಿಗೆ
ಇದು ಉಪಯುಕ್ತ ಆಗಿವೆ. (4) ಮಾನವನ ಶರೀರದ ಮೇಲೆ - ಕುದುಲುಗಳು
ನಿರುಪಯುಕ್ತ ಆಗಿದ್ದರೂ ಕುರಿ ಆಡುಗಳಂತೆ ಪ್ರಾಣಿಗಳಿಗೆ (ಕರಡಿ) ಹಿಮಕರಡಿ ಇತ್ಯಾದಿಗಳಿಗೆ
ಛಳಿಯಿಂದ ರಕ್ಷಿಸಿಕೊಳ್ಳಲು ಉಪಯುಕ್ತ ಆಗಿವೆ.
ಪ್ರಶ್ನೆ 7 ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1) ಉತ್ಕ್ರಾಂತಿಗೆ ಅನುವಂಶಿಕ ಬದಲಾವಣೆ ಹೇಗೆ ಕಾರಣಿಭೂತವಾಗಿವೆ ?
0 ಕಾಮೆಂಟ್‌ಗಳು
ಧನ್ಯವಾದಗಳು