ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಭೂಗೋಳ 11ನೇ ಇಯತ್ತೆ = 11th Geography

 ಭೂಗೋಳ 11ನೇ ಇಯತ್ತೆ


ಅನುಕ್ರಮಣಿಕೆ

ಅ. ಕ್ರ.

ಪಾಠಗಳ ಹೆಸರು

ಪೃಷ್ಠ ಕ್ರ.

1.

ಭೂಮಿಯ ಚಲನೆ ವಲನೆ

 

2.

ಶೀಥಿಲೀಕರಣ ಮತ್ತು ವಿಸ್ತಾರವಾದ ಸವೆತ

 

3.

ಅಪಕ್ಷರಣೆಯ ಕಾರಕಗಳು

 

4.

ಹವಾಮಾನ ಪ್ರದೇಶ

 

5.

ಜಾಗತಿಕ ಹವಾಮಾನದಲ್ಲಿ ಬದಲಾವಣೆ

 

6.

ಮಹಾಸಾಗರ ಸಾಧನ ಸಂಪತ್ತುಗಳು

 

7.

ಹಿಂದಿ ಮಹಾಸಾಗರ-ತಳದ ರಚನೆ ಮತ್ತು ಶಾಮರಿಕ ಮಹತ್ವ 

 

8.

ಜೀವ ಸಂಪತ್ತು

 

9.

ಆಪತ್ತು ವ್ಯವಸ್ಥಾಪನೆ

 

10.

ಪ್ರಾತ್ಯಕ್ಷಿಕೆ

 

 

1. ಭೂಮಿಯ ಚಲನೆ ವಲನೆ

ಪ್ರ. 1. ಕೋಷ್ಟಕ ಪೂರ್ಣ ಮಾಡಿರಿ.

1) ವಿಸ್ತೀರ್ಣ ಕ್ಷೇತ್ರದ ಮೇಲಿನ ಜ್ವಾಲಾಮುಖಿಯ ಉದ್ರೇಕ 

ಸೀಳಿಕೆಯ ಉದ್ರೇಕ

ಡೆಕ್ಕನ್ ಟ್ರಾಪ್

2) ಅಂದಮಾನ ಮತ್ತು ನಿಕೋಬಾರ ದ್ವೀಪಗಳು

ವಿಭಾಗ-V

ಅತಿ ಉಚ್ಚ ಭೂಕಂಪಿಯ ಸಂವೇದನಶೀಲತೆ

3) ಮಾರ್ಕೆಲಿ ಮಾಪನ

ತೀವ್ರತೆ

I ರಿಂದ  XII

4) ಮಂದ ಚಲನ ವಲನೆ

ವಿಭಂಗ /ಬಿರುಕು ಬಿಡುವುದು

ಬ್ಲಾಕ್ ಪರ್ವತ

5) ಫಿಲಿಪಾಯಿನ್ಸ್

ಪ್ಯಾಸಿಫಿಕ ಅಗ್ನಿಜನ್ಯ ಶಿಲೆಗಳು

ಮಯೋನ್

6) ಜ್ವಾಲಾಮುಖಿಯ ಪದಾರ್ಥಗಳು

ಜ್ವಾಲಾಮುಖಿಯ ಬಾಂಬ್

ಘನರೂಪ

ಪ್ರ. 2. ಯೋಗ್ಯವಾದ ಸಹಸಂಬಂಧ ಗುರುತಿಸಿರಿ.

A : ವಿಧಾನ,  R : ಕಾರಣ

1)     A : ವಿಭಂಗದಿಂದ ವಲಿ ಪರ್ವತಗಳ ನಿರ್ಮಿತಿ ಆಗುತ್ತದೆ.   R : ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಒತ್ತಡವಿರುವ ಪ್ರೇರಣೆಯಿಂದ ವಿಭಂಗ ನಿರ್ಮಾಣವಾಗುತ್ತದೆ.

ಅ) ಕೇವಲ A ಸರಿ                 ಬ) ಕೇವಲ R ಸರಿ  ಕ) A ಮತ್ತು R ಎರಡೂ ಸರಿ  ಡ) A ಮತ್ತು R ಎರಡೂ ತಪ್ಪು

ಉತ್ತರ:   ಬ) ಕೇವಲ R ಸರಿ 

2)     A – ಭೂಕಂಪದ ತೀವ್ರತೆಯು ಭೂಕಂಪದ ಸಮಯದಲ್ಲಿ ಬಿಡುಗಡೆಯಾಗುವ ಶಕ್ತಿಯ ಅಳತೆಯಾಗಿದೆ.

           R – ಭೂಕಂಪದ ತೀವ್ರತೆಯನ್ನು ಅಳೆಯಲು ಮೆರ್ಕಾಲಿಸ್ ಮಾಪಕವನ್ನು ಬಳಸಲಾಗುತ್ತದೆ.

(a) A ಮಾತ್ರ ಸರಿಯಾಗಿದೆ.

(b) R ಮಾತ್ರ ಸರಿಯಾಗಿದೆ.

(c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A ದ ಸರಿಯಾದ ವಿವರಣೆಯಾಗಿದೆ.

(d) A ಮತ್ತು R ಎರಡೂ ಸರಿಯಾಗಿವೆ ಆದರೆ R ಇದು A ದ ಸರಿಯಾದ ವಿವರಣೆಯಲ್ಲ.

ಉತ್ತರ: (c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A ದ ಸರಿಯಾದ ವಿವರಣೆಯಾಗಿದೆ.

3)    A- ಭೂಕಂಪದಿಂದಾಗಿ ಹೊರಬೀಳುವ ಶಕ್ತಿಯ ಮಾಪನವು ಭೂಕಂಪದ ತೀವ್ರತೆಯಾಗಿರುತ್ತದೆ. 
R – ಭೂಕಂಪದ ಅಳತೆ ಅಳೆಯಲು ಮಾರ್ಕೊಲಿ ಪ್ರಮಾಣ ಬಳಸುತ್ತಾರೆ. 

(a) A ಮಾತ್ರ ಸರಿಯಾಗಿದೆ.

(b) R ಮಾತ್ರ ಸರಿಯಾಗಿದೆ.

(c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A ದ ಸರಿಯಾದ ವಿವರಣೆಯಾಗಿದೆ.

(d) A ಮತ್ತು R ಎರಡೂ ಸರಿಯಾಗಿವೆ ಆದರೆ R ಇದು A ದ ಸರಿಯಾದ ವಿವರಣೆಯಲ್ಲ.

4)    A – ಆಗ್ನೇಯ ಏಷ್ಯಾ, ಜಪಾನ್ ಮತ್ತು ಪೆಸಿಫಿಕ್ ಮಹಾಸಾಗರದಲ್ಲಿಯ ದ್ವೀಪಗಳು ಭೂಕಂಪ ಮತ್ತು ಜ್ವಾಲಾಮುಖಿ ಉದ್ರೇಕವಾಗಲು ಹೆಚ್ಚು ಸಂವೇದನಶೀಲಗಳಾಗಿವೆ. 
R – ಅವು 'ರಿಂಗ್ ಆಫ್ ಫೈರ್' ನಲ್ಲಿವೆ.
(a) A ಮಾತ್ರ ಸರಿ.
(b) R ಮಾತ್ರ ಸರಿ.
(c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A  ಸರಿಯಾದ ವಿವರಣೆಯಾಗಿದೆ.
(d) A ಮತ್ತು R ಎರಡೂ ಸರಿಯಾಗಿವೆ ಆದರೆ R ಇದು A  ಸರಿಯಾದ ವಿವರಣೆಯಲ್ಲ.
ಉತ್ತರ: (c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A  ಸರಿಯಾದ ವಿವರಣೆಯಾಗಿದೆ.

ಪ್ರ.3 ಸರಿಯಾದ ಗುಂಪು ಅಥವಾ ಘಟಕವನ್ನು ಗುರುತಿಸಿರಿ.

ಅ) 1) ಸಮಾನತೆಯ ಮಡಿಕೆ           2) ಅಸಮಾನತೆಯ ಮಡಿಕೆ           

    3) ಮೇಲ್ಭಾಗದಲ್ಲಿಯ ಮಡಿಕೆ       4) ಪ್ರಸ್ತರ ಭಂಗ

ಬ) 1) ಬ್ಲಾಕ್ ಫಾರೆಸ್ಟ್          2) ಹಿಮಾಲಯ         3) ಸಾತಪುಡಾ         4) ವ್ಹ್ಯಾಸ್ಜೇಸ್

ಕ) 1) ನರ್ಮದಾ ನದಿ          2) ತಾಪಿ ನದಿ         3) ನೈಲ್ ನದಿ   4) ಆಫ್ರಿಕೆಯ ಕಣಿವೆ ಪ್ರದೇಶ

ಡ) 1) ಜ್ವಾಲಾಮುಖಿಯ ತಬ್ಬುಗಳು     2) ಜ್ವಾಲಾಮುಖಿಯ ಶಂಖ ಪರ್ವತ   

    3) ರಾವಾ ಪ್ರಸ್ಥ ಭೂಮಿ            4) ಮಡಿಕೆ ಆಗುವ ಪ್ರಕ್ರಿಯೆ

ಉತ್ತರ: ಡ ಗುಂಪು ತಪ್ಪಾಗಿದೆ.

ಪ್ರ. 4. ಭೌಗೋಳಿಕ ಕಾರಣ ಕೊಡಿರಿ.

1)     ಮೃತ ಜ್ವಾಲಾಮುಖಿಗಳು/ಅಳಿವಿನಂಚಿನಲ್ಲಿರುವ ಶಂಕುವಿನಾಕಾರದ ಜ್ವಾಲಾಮುಖಿಗಳು ಸಾಮಾನ್ಯವಾಗಿ ಕುಳಿ ಸರೋವರಗಳನ್ನು ರೂಪಿಸುತ್ತವೆ.
ಉತ್ತರ: ಅಳಿವಿನಂಚಿನಲ್ಲಿರುವ ಶಂಕುವಿನಾಕಾರದ ಜ್ವಾಲಾಮುಖಿಗಳು ಸಾಮಾನ್ಯವಾಗಿ ಕುಳಿ ಸರೋವರಗಳನ್ನು ರೂಪಿಸುತ್ತವೆ ಏಕೆಂದರೆ-
1. ಮೃತ ಜ್ವಾಲಾಮುಖಿಗಳು ಅಥವಾ ಅಳಿವಿನಂಚಿನಲ್ಲಿರುವ ಜ್ವಾಲಾಮುಖಿಗೆ ಕನಿಷ್ಠ 10,000 ವರ್ಷಗಳ ಕಾಲ ಜ್ವಾಲಾಮುಖಿ ಸ್ಫೋಟ ಸಂಭವಿಸುವುದಿಲ್ಲ ಮತ್ತು ಭವಿಷ್ಯದಲ್ಲಿ ಮತ್ತೆ ಸ್ಫೋಟಗೊಳ್ಳುವ ನಿರೀಕ್ಷೆಯಿರುವುದಿಲ್ಲ.
2. ಸ್ಫೋಟದ ನಂತರ ಆ ಪ್ರದೇಶದಲ್ಲಿ ದೊಡ್ಡ ಮತ್ತು ಆಳವಾದ ಕಣಿವೆ ತಯಾರಾಗುತ್ತವೆ. ಅವುಗಳಿಗೆ ಜ್ವಾಲಾಮುಖಿಯ ಕುಳಿಗಳು ಎಂದು ಕರೆಯಲಾಗುತ್ತದೆ.
3. ಮಳೆ, ಅಂತರ್ಜಲ ಹರಿಯುವಿಕೆ ಅಥವಾ ಕರಗಿದ ಬರ್ಫ್/ಮಂಜುಗಡ್ಡೆಯಿಂದ ನೀರು ಈ ಕುಳಿಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ಕುಳಿಗಳು ಕಾಲಾಂತರದಲ್ಲಿ ನೀರಿನಿಂದ ತುಂಬಿ ಸರೋವರಗಳಲ್ಲಿ ರೂಪಾಂತರವಾಗುತ್ತವೆ. 
4. ಮಳೆ, ಅಂತರ್ಜಲ ಪರಿಚಲನೆ ಅಥವಾ ಕರಗಿದ ಮಂಜುಗಡ್ಡೆಯಿಂದ ನೀರು ಬರಬಹುದು.
2. ಹಿಮಾಲಯದಲ್ಲಿ ವಾಸಿಸುವ ಜನರು ಭೂಕಂಪಗಳಿಗೆ ಹೆಚ್ಚು ಗುರಿಯಾಗುತ್ತಾರೆ.
ಉತ್ತರ: ಹಿಮಾಲಯವು ಒಂದು ಮಡಿಕೆ ಪರ್ವತವಾಗಿದ್ದು ಅದು ಮಡಿಕೆ ಪ್ರಕ್ರಿಯೆಯ ಮೂಲಕ ರೂಪಗೊಂಡಿದೆ. ಅಲ್ಲದೆ ಹಿಮಾಲಯ ಪರ್ವತ ಶ್ರೇಣಿಗಳು ಭಾರತ -ಆಸ್ಟ್ರೇಲಿಯನ್ ಫಲಕ ಮತ್ತು ಯುರೇಷಿಯನ್ ಫಲಕ ಇವುಗಳ ಘರ್ಷಣೆಯ ಪರಿಣಾಮವಾಗಿ ರೂಪುಗೊಳ್ಳುತ್ತವೆ. ಪ್ಲೇಟ್ ಟೆಕ್ಟೋನಿಕ್ ಸಿದ್ಧಾಂತದ ಪ್ರಕಾರ, ಈ ಎರಡೂ ಫಲಕಗಳ ನಡುವೆ ನಿರಂತರ ಒತ್ತಡ ಮತ್ತು ಒತ್ತಡದ ಕ್ರಿಯೆಗಳು ನಡೆಯುತ್ತಿರುತ್ತವೆ ಹೀಗಾಗಿ, ಹಿಮಾಲಯದಲ್ಲಿ ವಾಸಿಸುವ ಜನರು ಮೆಲಿಂದ ಮೇಲೆ ಭೂಕಂಪಕ್ಕೆ ಗುರಿಯಾಗುತ್ತಾರೆ. 
3. ಭೂಪೃಷ್ಟ ಅಲೆಗಳಿಗೆ ಭೂಕಂಪ ಛಾಯಾ ಪ್ರದೇಶ ಇರುವುದಿಲ್ಲ.
ಉತ್ತರ: ಭೂಕಂಪ ಕೇಂದ್ರದಿಂದ ಉತ್ಸಾರ್ಜಿತವಾಗುವ ಭೂಕಂಪದ ಅಲೆಗಳು ಎಲ್ಲೆಡೆ ಪಸರಿಸುತ್ತವೆ. ಅವುಗಳಲ್ಲಿ ಪ್ರಾಥಮಿಕ ಅಲೆಗಳು ಮತ್ತು ದ್ವಿತೀಯ ಅಲೆಗಳ ಸಮಾವೇಶವಾಗುತ್ತವೆ. ಭೂಪೃಷ್ಟ ಅಲೆಗಳು ಪ್ರಾಥಮಿಕ ಹಾಗೂ ದ್ವಿತೀಯ ಭೂಕಂಪ ಅಲೆಗಳು ಬಂದ ನಟರ ನಿರ್ಮಾಣವಾಗುತ್ತವೆ. ಇವು ಕೇವಲ ಭೂಪೃಷ್ಟದಿಂದಲೇ ಪ್ರವಾಸ ಮಾಡುತ್ತವೆ. ಅವು ಪೃಥ್ವಿಯ ಅಂತರಂಗದಲ್ಲಿ ಮತ್ತೆ ಪ್ರವೇಶಿಸುವುದಿಲ್ಲ. ಆದ್ದರಿಂದ ಈ ಭೂಪೃಷ್ಟ ಅಲೆಗಳಿಗೆ ಭೂಕಂಪ ಛಾಯಾ ಪ್ರದೇಶ ಇರುವುದಿಲ್ಲ. 
3. ಭೂಕಂಪದ ಮೂಲವು ಭೂಮಿಯ ಪೃಷ್ಟಭಾಗಕ್ಕೆ ಹತ್ತಿರದಲ್ಲಿದ್ದಾಗ L-ತರಂಗಗಳು ಸಾಮಾನ್ಯವಾಗಿ ಉತ್ಪತ್ತಿಯಾಗುತ್ತವೆ. 

4) ಮೃದು  ಶಿಲೆಗಳಲ್ಲಿ ಕುಳಿಗಳು ಬೀಳುತ್ತವೆ ಆದರೆ ಕಠಿಣ ಶಿಲೆಗಳಲ್ಲಿ ವಿಭಂಗ ಉಂಟಾಗುತ್ತವೆ.

ಉತ್ತರ: ಭೂಕವಚದಲ್ಲಿ ಕ್ಷಿತಿಜಕ್ಕೆ ಸಮಾಂತರ ದಿಕ್ಕಿನಲ್ಲಿ ಭೂಮಿಯ ಚಳವಲನೆಗಳು ಕಾರ್ಯ ಮಾಡುತ್ತವೆ. ಪ್ರೇರಣೆಯ ದಿಕ್ಕಿಗನುಸಾರವಾಗಿ ಈ ಚಲನೆವಲನೆಗಳಿಂದಾಗಿ ಮೃದು ಶಿಲೆಗಳಲ್ಲಿ ಕುಳಿಗಳು ಬೀಳುತ್ತವೆ. ಈ ಕುಳಿಗಳ ಸ್ವರೂಪವು ಭೂಕವಚದಲ್ಲಿಯ ಶಿಲೆಗಳ/ಕಲ್ಲುಗಳ ಸ್ವರೂಪ, ಪ್ರೇರಣೆಗಳಿಂದಾಗುವ ತೀವ್ರತೆ ಮತ್ತು  ಕಾಲಾವಧಿಯ ಮೇಲೆ ಅವಲಂಬಿಸಿರುತ್ತದೆ. ಯಾವಾಗ ಶಿಲೆಗಳ ಸ್ತರಗಳಿಂದ ಶಕ್ತಿಯ ಅಲೆಗಳು ದೊಡ್ಡ ಪ್ರಮಾಣದಲ್ಲಿ ಪ್ರವಾಸ ಮಾಡಿದ್ದಾಗ ಈ ಕುಳಿಗಳ ನಿರ್ಮಿತಿಯಾಗುತ್ತವೆ. ಉದಾ. ಹಿಮಾಲಯ, ಆಲ್ಪ್ಸ್ , ರಾಕಿ, ಅಂಡಿಜ್. ಇತ್ಯಾದಿಗಳು. ಅದರಂತೆ ಭೂಕವಚದಲ್ಲಿಯ ಪ್ರೇರಣೆಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಕಾರ್ಯ ಮಾಡಿದಾಗ ಶಿಲೆಗಳ ಸ್ತರಗಳಲ್ಲಿ ಒತ್ತಡ ನಿರ್ಮಾಣವಾದಿ ಶಿಲೆಗಳು ಬಿರುಕು ಬಿಡುತ್ತವೆ. ಹೀಗೆ ಪ್ರೇರಣೆಯ ಪರಿಣಾಮದಿಂದಾಗಿ ಮೃದು ಶಿಲೆಗಳಲ್ಲಿ ಕುಳಿಗಳು ನಿರ್ಮಾಣ ಆಗುತ್ತವೆ ಮತ್ತು ಕಠಿಣ ಶಿಲೆಗಳಿಗೆ ವಿಭಂಗ ಉಂಟಾಗುತ್ತವೆ.

5) ಕುಳಿಗಳು ಶಿಲೆಗಳ ಶಕ್ತಿ ಮತ್ತು ಪ್ರೇರಣೆಯ ತೀವ್ರತೆಯ ಮೇಲೆ ಅವಲಂಬಿಸಿರುತ್ತವೆ.

ಉತ್ತರ: ಭೂಕವಚದಲ್ಲಿ ಇರುವ ಶಿಲೆಗಳ ಸ್ತರಗಳ ಮೇಲೆ ಒತ್ತಡ ನಿರ್ಮಾಣ ಮಾಡುವ ಪ್ರೇರಣೆಯಿಂದಾಗಿ ಶಿಲೆಗಳು ಪರಸ್ಪರ ತಳ್ಳಲ್ಪಡುತ್ತವೆ. ಅದರಂತೆ ಆ ಭಾಗವು ಸಂಕುಚಿತ ಮತ್ತು ದಪ್ಪ ಆಗುತ್ತದೆ. ಪ್ರೇರಣೆಯ ವೇಗ ಹಾಗೂ ಶಿಲೆ ಎಷ್ಟು ಕಠಿಣವಾಗಿದೆ ಎಂಬುದರ ಮೇಲೆ ಕುಳಿಗಳ ನಿರ್ಮಿತಿ ಅವಲಂಬಿಸಿರುತ್ತವೆ. ಯಾವಾಗ ಶಿಲೆಗಳು ಲವಚಿಕ/ಮೃದುವಾಗಿರುತ್ತವೆಯೋ ಆಗ ಕುಳಿಗಳು ಬೀಳುತ್ತವೆ. ಮೃದು ಶಿಲೆಗಳು ಸಹಜವಾಗಿ ಒಡೆಯುವುದಿಲ್ಲ. ಆದ್ದರಿಂದ ಪ್ರೇರಣೆಯ ತೀವ್ರತೆ ಮತ್ತು ಶಿಲೆಗಳ ಕಾಠಿನ್ಯತೆ ಇವುಗಳ ಮೇಲೆ ಕುಳಿಗಳ ನಿರ್ಮಿತಿಯು ಅವಲಂಬಿಸಿರುತ್ತವೆ.

ಪ್ರ. 5. ಸವಿಸ್ತಾರವಾಗಿ ಉತ್ತರ ಬರೆಯಿರಿ.

(1) ಛಿದ್ರಗಳ/ವಿಭಂಗಗಳ  ವಿವಿಧ ಪ್ರಕಾರಗಳು ಯಾವುವು?

ಉತ್ತರ:ಭೂಕವಚದಲ್ಲಿಯ ಅಂತರ್ಗತ ಪ್ರೇರಣೆಯಿಂದ ಶಿಲೆಗಳಲ್ಲಿ ಒತ್ತಡ ಮತ್ತು ಘರ್ಷಣೆ ನಿರ್ಮಾಣವಾಗಿ ಮೃದು ಶಿಲೆಗಳಿಗೆ ಕುಳಿಗಳು ಬೀಳುತ್ತವೆ ಮತ್ತು ಕಠಿಣ ಶಿಲೆಗಳಲ್ಲಿ ಬಿರುಕು ಬಿಡುತ್ತವೆ. ಈ ಬಿರುಕುಗಳು ಕೆಳಮುಖವಾಗು(ಉಧ್ವಗಾಮಿ), ಮೇಲ್ಮುಖವಾಗಿ(ಅಧೋಗಾಮಿ) ಮತ್ತು ಕ್ಷಿತಿಜಕ್ಕೆ ಸಮಾಂತರ ದಿಕ್ಕಿನಲ್ಲಿ ಬಿಡುತ್ತವೆ. ಶಿಲೆಗಳ ಬಿರುಕು ಬಿಡುವ ವ್ಯವಸ್ಥೆಯ ಮೇಲಿಂದ ಸಾಮಾನ್ಯ ಛಿದ್ರ, ಉತ್ಕ್ರಮ ಛಿದ್ರ ಹಾಗೂ ಪ್ರಾಣೋದ ಛಿದ್ರಗಳೆಂಬ ಮೂರು ಪ್ರಕರಗಳು ಉಂಟಾಗುತ್ತವೆ.   

(2) ಜ್ವಾಲಾಮುಖಿಯ ಸ್ಪೋಟದಿಂದ ನಿರ್ಮಾಣಗೊಳ್ಳುವ ವಿವಿಧ ಭೂ-ಸ್ವರೂಪಗಳ ಬಗ್ಗೆ ಮಾಹಿತಿಯನ್ನು ಬರೆಯಿರಿ.

ಉತ್ತರ: ಜ್ವಾಲಾಮುಖಿಯ ಸ್ಪೋಟದಿಂದ ನಿರ್ಮಾಣಗೊಳ್ಳುವ ವಿವಿಧ ಭೂ-ಸ್ವರೂಪಗಳು:

1) ಜ್ವಾಲಾಮುಖಿಯ ಶಂಕು: ಜ್ವಾಲಾಮುಖಿಯ ಸ್ಪೋಟದಿಂದ ಶಂಕಿವಿನಾಕಾರದ ಶಿಖರಗಳು ನಿರ್ಮಾಣಗೊಳ್ಳುತ್ತವೆ. ದೊಡ್ಡ ಪ್ರಮಾಣದಲ್ಲಿ ಘಾನ ಪದಾರ್ಥಗಳು ಹೊರಗೆ ಬೀಳುವುದರಿಂದ ಪದಾರ್ಥಗಳ ಸಂಚಿಕೆಯಾಗಿ ಶಂಕು ಆಕಾರದ ಗುಡ್ಡ ಅಥವಾ ಬೆಟ್ಟ ನಿರ್ಮಾಣಗೊಳ್ಳುತ್ತವೆ.

2) ಲಾವ್ಹಾ ಗುಮ್ಮಟ: ಜ್ವಾಲಾಮುಖಿಯಿಂದ ಮ್ಯಾಗ್ಮಾ ಪದಾರ್ಥ ಹೊರಬಂದು ಘನರೂಪಗೊಂದು ಗುಮ್ಮಟ ಆಕಾರದ ಶಿಖರ ತಯಾರಾಗುತ್ತದೆ. ಲಾವ್ಹಾ ರಸದ ಪ್ರವಾಹದ ಮೇಲೆ ಈ ಗುಮ್ಮಟಾಕಾರ ಶಿಖರಗಳ ನಿರ್ಮಿತಿ ನಿರ್ಧರಿಸಲ್ಪಡುತ್ತದೆ.

3) ಲಾವ್ಹಾ ಪ್ರಸ್ಥ ಭೂಮಿ: ಭೂಪೃಷ್ಟದ ಮೇಲೆ ಆಗುವ ನಿರಂತರ ಶಿಲಾರಸಗಳ ಉದ್ರೇಕ ಸಮತಲವಾದ ಪ್ರದೇಶದ ಮೇಲೆ ಹರಡಿಲೋಕ್ಕುತ್ತದೆ. ಈ ಭೂ-ಸ್ವರೂಪಕ್ಕೆ ಪ್ರಸ್ತಭೂಮಿ ಅಥವಾ ಟೇಬಲ್ ಲ್ಯಾಂಡ್ ಎಂದು ಕರೆಯುತ್ತಾರೆ. ಈ ಪ್ರಸ್ಥ ಭೂಮಿಯ ವಿಶೇಷತೆ ಏನೆಂದರೆ ಮೇಲೀನ ಭಾಗ ಟೇಬಲ್ ತರಹ ಇದ್ದು ನಾಲ್ಕು ಬದಿಯಿಂದ ತೀವ್ರವಾದ ಇಳಿಜಾರಿನಿಂದ ಕೂಡಿರುತ್ತದೆ.

4) ಜ್ವಾಲಾಮುಖಿಯ ತಗ್ಗು ಅಥವಾ ಕುಂಡ: ಕೆಲವೊಮ್ಮೆ ಜ್ವಾಲಾಮುಖಿಯ ಉದ್ರೇಕದಿಂದ ದೊಡ್ಡ ಪ್ರಮಾಣದಲ್ಲಿ ಪದಾರ್ಥಗಳು ಹೊರಗೆ ಬೀಳುತ್ತವೆ. ಅದೇ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಒತ್ತಡ ಮುಕ್ತವಾಗುತ್ತವೆ. ಇದರಿಂದ ಉದ್ರೇಕದಲ್ಲಿ ಬೀಳುವ ಪದಾರ್ಥಗಳಲ್ಲಿ ಆಳವಾದ ತಗ್ಗುಗಳು ಅಥವಾ ಕುಂಡಗಳು ನಿರ್ಮಾಣವಾಗುತ್ತವೆ. ಇದರ ಅಗಲ 10km ಕ್ಕಿಂತಲೂ ಹೆಚ್ಚು ಮತ್ತು ಅಳವು 100 km ಕಿಂತ ಹೆಚ್ಚು ತಗ್ಗುಗಳು ನಿರ್ಮಾಣವಾಗುತ್ತವೆ. ಕಾಲಾಂತರದಲ್ಲಿ ಈ ತಗ್ಗು ಅಥವಾ ಕುಂಡ ಸ್ಥಳಗಳಲ್ಲಿ ಮಳೆಯ ನೀರು ಸಂಗ್ರಹವಾಗುತ್ತದೆ.     

3) ಭೂಕಂಪದ ಅಲೆಗಳ ವೈಶಿಷ್ಟ್ಯೆಗಳನ್ನು ಬರೆಯಿರಿ.  

ಉತ್ತರ: ಭೂಪೃಷ್ಟ ಕಂಪನಗೊಳ್ಳುವುದಕ್ಕೆ ಭೂಕಂಪ ಎಂಡ್ಉ ಕರೆಯುತ್ತಾರೆ. ಭೂಕವಚದಲ್ಲಿಯ ಶೀಲಗಳ ಸ್ತರಗಳಲ್ಲಿ ಪ್ರಚಂದವಾದ ಒತ್ತಡ ನಿರ್ಮಾಣವಾಗಿ ಅಲೆಗಳ ಸ್ವರೂಪದಲ್ಲಿ ಹೊರಗೆ ಬೀಳುತ್ತವೆ. ಇವುಗಳಿಗೆ ಭೂಕಂಪದ ಅಲೆಗಳು ಎಂದು ಕರೆಯುತ್ತಾರೆ.

ಭೂಕಂಪ ನಾಭಿ ಅಥವಾ ಭೂಕಂಪ ಕೇಂದ್ರ:  ಭೂಕಂಪದ ಅಲೆಗಳು ಅಥವಾ ಭೂಕಂಪ ಆರಂಭಗೊಳ್ಳುವ ಸ್ಥಳಕ್ಕೆ ಭೂಕಂಪ ನಾಭಿ ಅಥವಾ ಭೂಕಂಪ ಕೇಂದ್ರ ಎಂದು ಹೇಳುವರು. ಭೂಕಂಪದ ಅಧ್ಯಯನ ಮಾಡುವ ಶಾಸ್ತ್ರಕ್ಕೆ ಭೂಕಂಪ ಶಾಸ್ತ್ರ(seismology) ಎಂದು ಕರೆಯುತ್ತಾರೆ. ಭೂಕಂಪದ ಅಲೆಗಳಲ್ಲಿ ಮುಖ್ಯವಾಗಿ ಮೂರು ಪ್ರಕಾರಗಳಿವೆ: ಪ್ರಾಥಮಿಕ ಅಲೆಗಳು (P-ಅಲೆಗಳು), ದ್ವಿತೀಯ/ಸೆಕೆಂಡರಿ ಅಲೆಗಳು (S-ಅಲೆಗಳು), ಮತ್ತು ಭೂಪೃಷ್ಟದ ಅಲೆಗಳುL- ಅಲೆಗಳು

1) ಪ್ರಾಥಮಿಕ ಅಲೆಗಳು (P-ಅಲೆಗಳು):

ಭೂಕಂಪನ ಸಂಭವಿಸುವಾಗ ಮೊತ್ತ ಮೊದಲು ಭೂಕಂಪ ಕೇಂದ್ರದಿಂದ ಹೊರ ಬೀಳುವ ಅಲೆಗಳಿಗೆ ಪ್ರಾಥಮಿಕ ಅಲೆಗಳು ಎನ್ನುವರು. ಈ ಅಲೆಗಳ ವೇಗ ಪ್ರತಿ ಸೆಕೆಂದಿಗೆ 5ರಿಂದ 9 ಕಿಮೀ ಇರುತ್ತವೆ.ಈ ಅಲೆಗಳು ಘಾನ, ದ್ರವ ಮತ್ತು ವಾಯು ಹೀಗೆ ಮೂರು ಅವಸ್ಥೆಗಳಲ್ಲಿ ಸಂಚರಿಸುತ್ತವೆ.

2) ಸೆಕೆಂಡರಿ ಅಲೆಗಳು (S-ಅಲೆಗಳು):

ಇವು P-ಅಲೆಗಳ ನಂತರ ಸ್ವಲ್ಪ ನಿಧಾನವಾಗಿ ಭೂಮಿಗೆ ಬಂದು ತಲುಪುತ್ತವೆ. ಇವುಗಳ ವೇಗ ಪ್ರತಿ ಸೆಕೆಂದಿಗೆ 3 ರಿಂದ 6 ಕಿಮೀ. ಇರುತ್ತದೆ. ದ್ವಿತೀಯ ಅಲೆಗಳು ಕೇವಲ ಘಾನ ಪದಾರ್ಥದಲ್ಲಿ ಮಾತ್ರ ಚಲಿಸುತ್ತವೆ. ದ್ರವ ಮತ್ತು ವಾಯುವಿನಲ್ಲಿ ಚಲಿಸಲಾರವು.  

3) ಭೂಪೃಷ್ಟದ ಅಲೆಗಳು (L – ಅಲೆಗಳು) :

ದ್ವಿತೀಯ ಅಲೆಗಳ ನಂತರ ಭೂಮಿಯ ಮೇಲೆ ಭೂಪೃಷ್ಟದ ಅಲೆಗಳು ತಲುಪುತ್ತವೆ. ಇವು ಅತಿ ಹೆಚ್ಚು  ವಿನಾಶವನ್ನುಂಟುಮಾಡುತ್ತವೆ. ಈ ಅಲೆಗಳ ವೇಗ ಪ್ರತಿ ಸೆಕೆಂದಿಗೆ 3 ರಿಂದ 4 ಕಿಮೀ. ಇರುತ್ತದೆ.  

4) ಭೂಕಂಪ ಛಾಯೆಯ ಪ್ರದೇಶ ಈ ಸಂಕಲ್ಪನೆಯನ್ನು ಸ್ಪಷ್ಟೀಕರಿಸಿರಿ.

ಉತ್ತರ: ಪೃಥ್ವಿಯ ಮೇಲೆ ಯಾವ ಸ್ಥಳದಲ್ಲಿ ಭೂಕಂಪದ ಅಲೆಗಳು ತಲುಪುವುದಿಲ್ಲವೋ ಆ ಪ್ರದೇಶಕ್ಕೆ ಭೂಕಂಪ ಛಾಯೆಯ ಪ್ರದೇಶವೆಂದು ಕರೆಯುತ್ತಾರೆ. ಪ್ರಾಥಮಿಕ ಅಲೆಗಳು ಘನರೂಪ, ದ್ರವರೂಪ ಹಾಗೂ ವಾಯುರೂಪ ಈ ಮಧ್ಯಮದಿಂದ ಪ್ರವಾಸ ಮಾಡುತ್ತವೆ. ಆದರೆ ಒಂದು ಮಧ್ಯಮದಿಂದ ಇನ್ನೊಂದು ಮಧ್ಯಮದಲ್ಲಿ ಪ್ರವೇಶ ಮಾಡಿದಾಗ ಅವು ವಕ್ರಿಭವನ ಆಗುತ್ತವೆ. ದ್ವಿತೀಯ ಅಲೆಗಳು ಕೇವಲ ಘನರೂಪದಿಂದ ಪ್ರವಾಸ ಮಾಡುತ್ತದೆ. ದ್ರವರೂಪದಿಂದ ಪ್ರವಾಸ ಮಾಡಿದರೆ ಅವು ಶೋಷಿಸಿಕೊಳ್ಳುತ್ತವೆ. ಅಂದರೆ ಪ್ರಾಥಮಿಕ ಹಾಗೂ ದ್ವಿತೀಯ ಅಲೆಗಳ ಈ ವೈಶಿಶ್ಟ್ಯೆಗಳಿಂದ ಭೂಕಂಪ ಛಾಯೆಯ ಪ್ರದೇಶ ನಿರ್ಮಾಣವಾಗುತ್ತದೆ. ಭೂಕಂಪ ಕೇಂದ್ರದಿಂದ ಉತ್ಸರ್ಜನೆಗೊಂಡ ಭೂಕಂಪ ಅಲೆಗಳು ಪೃಥ್ವಿಯ 1050  ರ ವರೆಗೆ ಎಲ್ಲೆಡೆ ತಾಳುವುತ್ತವೆ. ಆದರೆ 105 ರಿಂದ 140 ರ ಮಧ್ಯದಲ್ಲಿರುವ ಪಟ್ಟಿಯಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಅಲೆಗಳು ನೋಂದಣಿ ಆಗುವುದಿಲ್ಲ. ಆದ್ದರಿಂದ ಈ ಪಟ್ಟಿಗೆ ಭೂಕಂಪ ಛಾಯೆಯ ಪ್ರೇದೇಶ ಎನ್ನಲಾಗುತ್ತದೆ. 1400 ರ ನಂತರ ಪ್ರಾಥಮಿಕ ಅಲೆಗಳು ತಲುಪುತ್ತವೆ ಆದರೆ ದ್ವಿತೀಯ ಅಲೆಗಳು ತಲುಪುವುದಿಲ್ಲ ಆದ್ದರಿಂದ 1050 ರ ನಂತರದ ಪ್ರದೇಶಕ್ಕೆ ದ್ವಿತೀಯ ಅಲೆಗಳ ಭೂಕಂಪ ಛಾಯೆಯ ಪ್ರದೇಶ ಎನ್ನಲಾಗುತ್ತದೆ.

5) ಭೂಕಂಪದ ಕಾರಣ ಮತ್ತು ಅದರ ಪರಿಣಾಮಗಳ ಬಗ್ಗೆ ಸ್ಪಷ್ಟೀಕರಿಸಿರಿ.

ಉತ್ತರ: ಭೂಕಂಪ ನಿರ್ಮಿತಿಗೆ ಅನೇಕ ಘಟಕಗಳು ಕರಣೀಭೂತವಾಗುತ್ತವೆ. ಪ್ರಮುಖವಾಗಿ ಭೂಕವಚದಲ್ಲಿ ನಿರ್ಮಾಣಗೊಂಡಿರುವ ಒತ್ತಡದಿಂದ ಭೂಕಂಪಗಳು ಸಂಭವಿಸುತ್ತವೆ. ಪ್ರಮುಖ ಕಾರಣಗಳು:

1) ಜ್ವಾಲಾಮುಖಿಯ ಕಾರ್ಯಾಚರಣೆ: ಭೂಕಂಪ ನಿರ್ಮಿತಿಗೆ ಕೆಲವೊಮ್ಮೆ ಜ್ವಾಲಾಮುಖಿಯ ಕಾರ್ಯಾಚರಣೆ ಕರಣೀಭೂತವಾಗುತ್ತದೆ. ಜ್ವಾಲಾಮುಖಿ ಉದ್ರೇಕಗೊಂಡ ಪ್ರದೇಶಗಳಲ್ಲಿ ಮೇಲಿಂದ ಮೇಲೆ ಭೂಕಂಪ ಸಂಭವಿಸುತ್ತದೆ. ಉದಾ. ಯುರೋಪದಲ್ಲಿಯ ಜಾಗೃತ ಜ್ವಾಲಾಮುಖಿಯ ಪರ್ವತಗಳ ಸುತ್ತ ಮುತ್ತಲಿನ ಪ್ರದೇಶದಲ್ಲಿ ಆಗಾಗ ಭೂಕಂಪ ಆಗುತ್ತದೆ. 1981ರಲ್ಲಿ ಯುರೋಪದಲ್ಲಿ ಈ ರೀತಿಯ ಭೂಕಂಪಗಳು ಸಂಭವಿಸೀದ್ದವು.

2) ಭೂ-ಸ್ತರ ಚಾಲನೆವಲನೆ: ಪೃಥ್ವಿಯ ಭೂಕವಚವು ಅನೇಕ ಸಣ್ಣ –ದೊಡ್ಡ ಭೂ-ಸ್ತರಗಳಿಂದ ನಿರ್ಮಾಣಗೊಂಡಿದೆ. ಈ ಭೂ-ಸ್ತರಗಳು ಅಸ್ಥಿರ ಇರುತ್ತವೆ. ಭಾರವಾದ ಭೂ-ಸ್ತರಗಳು ಮಧ್ಯಾವರಣದ ಮೇಲೆ ತಾಳುಪ್ದಾಗ ಸೀಮೆಯ ಹತ್ತಿರ ಮೇಲಿಂದ ಮೇಲೆ ಭೂಕಂಪನ ಸಂಭವಿಸುತ್ತವೆ.  ಉದಾ. ಅಮೇರಿಕಾದ ಕಾಲಿಫೋರ್ನಿಯಾ ರಾಜ್ಯದಲ್ಲಿಯ ಭೂಕಂಪ, ಉತ್ತರ ಕಾಶಿ ಮತ್ತು ಅಸಾಮ ರಾಜ್ಯದಲ್ಲಿಯ ಭೂಕಂಪಗಳು ಭೂ-ಸ್ತರಗಳ ಸೀಮೆಯ ಹತ್ತಿರ ಮೇಲಿಂದ ಮೇಲೆ ಸಂಭವಿಸುತ್ತವೆ. 

 3) ಮಾನವ ನಿರ್ಮಿತ ಕಾರಣಗಳು: ಇತ್ತೀಚೆಗೆ ಕೆಲವು ಭೂಕಂಪಗಳು ಮಾನವ ನಿರ್ಮಿತ ಚಟುವಟಿಕೆಗಳು ಮತ್ತು ಸಂಶೋಧನೆಗಳಿಂದ ನಡೆಸಲಾಗುವ ಅಣುಪರೀಕ್ಷೆ, ವಿಶಾಲವಾದ ಅಣೆಕಟ್ಟು ನಿರ್ಮಿತಿ ಹಾಗೂ ಅತೀ ಆಳವಾದ ಗಣಿಗಾರಿಕೆ ಇತ್ಯಾದಿ ಕಾರಣಗಳಿದ ಭೂಕಂಪಗಳು ಸಂಭವಿಸುತ್ತವೆ.

 ಭೂಕಂಪಗಳ ಪರಿಣಾಮಗಳು:

1) ಸರ್ವಸಾಧಾರಣವಾಗಿ ಭೂಕಂಪಗಳಿಂದ ಭೂ-ಸ್ಖಲನ ಸಂಭವಿಸುತ್ತವೆ. ಪೃಥ್ವಿಯ ಅಂತರಂಗದಲ್ಲಿ ಪ್ರಸ್ತರ ಭಂಗ, ಸೆಳೆತ ಮತ್ತು ಒತ್ತಡಗಳಿಂದ ಶಿಲೆಗಳ ಸ್ಥಾನಪಲ್ಲಟಗೊಳ್ಳುತ್ತವೆ. ಇದರ ಪರಿಣಾಮ ಅಂತರ್ಜಲದ ಪದ್ಧತಿಯ ಮೇಲೆ ಆಗುತ್ತದೆ.

2) ಪರ್ವತಗಳ ಇಳಿಜಾರಿನಲ್ಲಿ ಅಪಾರ ಭೂ-ಸ್ಖಲನದಿಂದ ದೊಡ್ಡ ದೊಡ್ಡ ಕಲ್ಲು ಬಂಡೆಗಳು ಉರುಳಿ ಬೀಳುತ್ತವೆ. ಇದರಿಂದ ನದಿಗಳು ಕೆರೆಗಳಲ್ಲಿ ರೂಪಾಂತರವಾಗುತ್ತವೆ.

3) ಸಮುದ್ರದ ಅಳದಲ್ಲಿ ಭೂಕಂಪಗಳು ಸಂಭವಿಸಿದಾಗ ದೊಡ್ಡ ಆಕಾರದ ಅತಿಶಯ ಎತ್ತರದ ತ್ಸುನಾಮಿ ಅಲೆಗಳು ನಿರ್ಮಾಣಗೊಳ್ಳುತ್ತವೆ.

4) ದೊಡ್ಡ ಭೂಕಂಪಗಳಿಂದ ದೊಡ್ಡ ಪ್ರಮಾಣದಲ್ಲಿ ಜೀವಿತ ಹಾನಿ ಹಾಗೂ ಆರ್ಥಿಕ ಹಾನಿ ಉಂಟಾಗುತ್ತದೆ. ರಸ್ತೆಗಳು ಹಾಳಾಗುತ್ತವೆ. ಅಣೆಕಟ್ಟುಗಳುಒಡೆಯುತ್ತವೆ. ಸೇತುವೆ, ಕಟ್ಟಡಗಳು ಉರುಳಿ ಬೀಳುತ್ತವೆ. ವಿದ್ಯುತ್ ಕಂಬಗಳು ಕೆಳಗೆ ಬೀಳುತ್ತವೆ. ಭೂಗರ್ಭದಲ್ಲಿಯ ನೈಸರ್ಗಿಕ ಅನಿಲ(LPG ಗ್ಯಾಸ್)ಕೊಳವೆ ಮಾರ್ಗಗಳಲ್ಲಿ ಘರ್ಷಣೆ ಉಂಟಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ.    

6) ಜ್ವಾಲಾಮುಖಿಯ ಬಗ್ಗೆ ಸವಿಸ್ತಾರವಾಗಿ ಟಿಪ್ಪಣಿ ಬರೆಯಿರಿ.

ಉತ್ತರ: ಇತಿಹಾಸ ಪುರ್ವ ಕಾಲದಿಂದಲೂ ಮಾನವನು ಜ್ವಾಲಾಮುಖಿಯ ನೈಸರ್ಗಿಕ ಸಂಕಟಗಳಿಗೆ ಭಯಭಿತವಾಗಿರುವ ಉದಾಹರಣೆಗಳು ದೊರೆತಿವೆ. ಜ್ವಾಲಾಮುಖಿ ಎಂಬ ಪದ ವೋಲ್ಕಾನೋ ಸೀಸಲಿ ದ್ವಿಪದಲ್ಲಿರುವ ಬೆಟ್ಟದಿಂದ ನಿರ್ಮಾಣಗೊಂಡಿದೆ. ಜ್ವಾಲಾಮುಖಿಯು ಭೂಮಿಯ ಹೊರಗಿನ ಪಾದರಿಗೆ ಒಂದು ರಂಧ್ರ ಅಥವಾ ಕೊಳವೆ ಮಾರ್ಗದ ಮೂಲಕ ಭೂಮಿಯ ಒಳಭಾಗದಿಂದ ಶಿಲಾರಸ ನೀರಿನ ಭಾಷ್ಪ ಅಥವಾ ಉಗಿ ಬೆಂಕಿಯ ಬಂಡೆಗಲ್ಲುಗಳು ಮತ್ತು ವಿಷಕಾರಕ ವಿವಿಧ ಅನಿಲಗಳು ಭೂಗರ್ಭದಿಂದ ಹೊರಗೆ ಹಾಕಲಾಗುತ್ತದೆ. ಕಾಲಾಂತರದಲ್ಲಿ ಹೊರಗೆ ಹಾಕಲ್ಪಟ್ಟ ಶಿಲಾರಸ ತಂಪಾಗುತ್ತ ಗಟ್ಟಿಯಾದ ಆಗ್ನೀಜನ್ಯ ಶಿಲೆಗಳಲ್ಲಿ ರೂಪಾಂತರಗೊಂಡು ಜ್ವಾಲಾಮುಖಿಯ ಪರ್ವತಗಳಾಗಿ ರೂಪಗೊಳ್ಳುತ್ತವೆ. ಭೂಗರ್ಭದಿಂದ ಶಿಲಾರಸ ಹೊರಗೆ ಬರುವ ಮಾರ್ಗಕ್ಕೆ ಜ್ವಾಲಾಮುಖಿಯ ನಾಳ ಎಂದು ಕರೆಯಲಾಗುತ್ತದೆ. ಈ ಜ್ವಾಲಾಮುಖಿಯ ನಾಳದ ಮೇಲ್ಭಾಗದಲ್ಲಿ ಅರ್ಧಗೋಲಾಕಾರದ ತಗ್ಗು ನಿರ್ಮಾಣಗೊಳ್ಳುತ್ತದೆ. ಈ ಆಕಾರಕ್ಕೆ ಜ್ವಾಲಾಮುಖಿಯ ಬಾಯಿ ಅಥವಾ ಕೂಲಿ ಎಂದು ಕರೆಯುತ್ತಾರೆ. ಭೂಮಿಯ ಒಳಭಾಗಕ್ಕೆ ಹೋದಂತೆ ಉಷ್ಣತೆಯಲ್ಲಿ ಹೆಚ್ಚಳವಾಗುತ್ತ ಒತ್ತಡವು ಹೆಚ್ಚಾಗುತ್ತದೆ. ಹೆಚ್ಚು ಒತ್ತಡದಿಂದ ಶಿಲೆಗಳು ಕರಗುತ್ತವೆ. ಇದಕ್ಕೆ ಮ್ಯಾಗ್ಮಾ ಎನ್ನುವರು. ಶಿಲಾರಸದಲ್ಲಿ ಅನೇಕ ಖನಿಜ ದ್ರವ್ಯಗಳು ಮಿಶ್ರಣಗೊಂಡಿರುತ್ತವೆ. ಕೆಲವೊಮ್ಮೆ ಲಾವ್ಹಾರಸ ಗಟ್ಟಿಯಾಗಿದ್ದು ಕೆಲವೊಮ್ಮೆ ತಿಳಿಯಾಗಿರುತ್ತದೆ.

ಜ್ವಾಲಾಮುಖಿಯ ಕಾರಣಗಳು:

ವಿಜ್ಞಾನಿಗಳಿಗೆ ಇದುವರೆಗೆ ಜ್ವಾಲಾಮುಖಿಯ ಸ್ಫೋಟದ ಕಾರಣಗಳ ಬಗ್ಗೆ ನಿಖರವಾದ ಮಾಹಿತಿ ಉಪಲಬ್ಧವಾಗಿದೆ. ಆದರೆ ಕೆಲವೊಂದು ಪುರಾವೆಗಳ ಆಧಾರದ ಮೇಲಿಂದ ಭೂಗರ್ಭ ವಿಜ್ಞಾನಿಗಳು ಜ್ವಾಲಾಮುಖಿಯ ಸ್ಫೋಟದ ವಿವರಣೆಯನ್ನು ಈ ಕೆಳಗಿನಂತೆ ವರ್ಣಿಸಲಾಗಿದೆ.

1) ಪೃಥ್ವಿಯ ಅಂತರಂಗದಲ್ಲಿ ಪ್ರತಿ 32m ಆಳಕ್ಕೆ ಹೋದಂತೆ 10C ಉಷ್ಣತೆ ಹೆಚ್ಚಳವಾಗುತ್ತದೆ. 60ರಿಂದ 65Km ಆಳದಲ್ಲಿ ಕಲ್ಲು ಬಂಡೆಗಳು ಕರಗುತ್ತವೆ. ಇದಕ್ಕೆ ಕರಾಗಿರುವ ಕಲ್ಲುಬಂಡೆಗಳ ಶಿಲಾಪಾತ(ಮ್ಯಾಗ್ಮಾ) ಎಂದು ಕರೆಯುತ್ತಾರೆ.

2) ಪೃಥ್ವಿಯ ಅಂತರಂಗದಲ್ಲಿ ಅನೇಕ ವಿಕಿರಣಹೊಂದಿರುವ ಖನಿಜಗಳಾದ ಯುರೇನಿಯಂ, ಥೋರೇನಿಯಮ್, ಫೋಟೆನಿಯಂ ಮುಂತಾದ ಅನೇಕ ವಿಕಿರಣಶೀಲ ಖನಿಜಗಳು ನಿರಂತರವಾಗಿ ಶಕ್ತಿ ಅಥವಾ ಉಷ್ಣತೆಯ ಪ್ರಮಾಣದಲ್ಲಿ ಹೊರಗೆ ಬೀಳುತ್ತವೆ. ಇದರಿಂದ ಕಠಿಣವಾದ ಶಿಲೆಗಳು ದ್ರವ ಸ್ವರೂಪದಲ್ಲಿ(ಲಾವ್ಹಾ) ಪರಿವರ್ತನೆ ಆಗುತ್ತವೆ.

ಜ್ವಾಲಾಮುಖಿಯ ಪ್ರಕಾರಗಳು:

1) ಜಾಗೃತ ಜ್ವಾಲಾಮುಖಿ

2) ಅಜಾಗೃತ ಜ್ವಾಲಾಮುಖಿ

3) ಮೃತ ಜ್ವಾಲಾಮುಖಿ 

ಪ್ರ. 6. ವ್ಯತ್ಯಾಸಗಳನ್ನು ಸ್ಪಷ್ಟಪಡಿಸಿರಿ.

1.  ಸಮಮಿತಿ ಕುಳಿಗಳು ಹಾಗೂ ಅಸಮಮಿತಿ ಕುಳಿಗಳು

ಸಮಮಿತಿ ಕುಳಿಗಳು

ಅಸಮಮಿತಿ ಕುಳಿಗಳು

ಸಮಮಿತಿಯ ಕುಳಿಗಳು ಎಂದರೆ ಅವುಗಳ ಎರಡು ಬದಿಗೆ ಸಮಾನ ಇಳುಕಲು ಇರುತ್ತವೆ.  

ಈ ಕುಳಿಗಳ ಒಂದು ಕಡೆ ತೀವ್ರ ಇಳಿಜಾರು ಇದ್ದರೆ ಇನ್ನೊಂದು ಕಡೆ ಮಂದವಾದ ಇಳುಕಲ್ಲು ಇರುತ್ತದೆ.

ಸಮಮಿತ ಕುಳಿಗಳ ಪೃಷ್ಠಭಾಗಗಳು ಊರ್ಧ್ವಗಾಮಿ ಇರುತ್ತವೆ.

ಅಸಮಮಿತ ಕುಳಿಗಳ ಪೃಷ್ಠಭಾಗಗಳು ಅಧೋಗಾಮಿ ಇರುತ್ತವೆ.

2. ಮಂದ ಚಲನ ವಲನೆ ಹಾಗೂ ಶೀಘ್ರ ಚಲನವಲನೆ

ಮಂದ ಚಲನ ವಲನೆ

ಶೀಘ್ರ ಚಲನವಲನೆ

ಭೂಮಿ ಮೇಲಿನ ಬಂಡೆಗಳ ಪದರುಗಳಲ್ಲಿಯ ಒತ್ತಡ ಮತ್ತು ಪ್ರೇರಣೆಯಿಂದಾಗಿ ಭೂಮಿಯ ಒಳಗಡೆ ಮಂದವಾದ ಚಲನವಲನೆ ಆಗುತ್ತಿರುತ್ತದೆ.

ಭೂಮಿಯ ಬಂಡೆಗಳ ಪದರುಗಳಲ್ಲಿಯ ಒತ್ತಡದಿಂದ ಶಕ್ತಿಯ ಬಿಡುಗಡೆಯಾದಾಗ ಭೂರುಪದಲ್ಲಿ ಬದಲಾವಣೆ ಉಂಟಾಗಿ ಆಗುವ ಚಲನೆವಲನೆಗಳು ಶೀಘ್ರವಾಗಿರುತ್ತವೆ.

ಮಂದವಾದ ಚಲನೆವಾಲನೆಯಿಂದ ಭೂ ಖಂಡಗಳು ಹಾಗೂ ಪರ್ವತಗಳು ರೂಪಗೊಳ್ಳುತ್ತವೆ.

ಶೀಘ್ರ ಚಲನೆವಲನೆಯಿಂದ ಭೂಕಂಪಗಳು ಹಾಗೂ ಜ್ವಾಲಾಮುಖಿಗಳು ಉಂಟಾಗುತ್ತವೆ.

ಮಡಿಕೆಗಳು ಮಂದ ಚಲನೆವಲನೆಯ ಉದಾಹರಣೆಯಾಗಿದ್ದು ಇದರಿಂದ ಬಂಡೆಗಳಲ್ಲಿ ಮಡಿಕೆ ರೂಪಗೊಳ್ಳುತ್ತವೆ.

ಭೂಕಂಪಗಳಿಂದ ಅಪಾರ ಪ್ರಮಾಣದಲ್ಲಿ ಶಕ್ತಿಯ ಬಿಡುಗಡೆಯಾಗುತ್ತದೆ. ದೊಡ್ಡ ಪಾಮನದ ವಿತ್ತ ಹಾಗೂ ಜೀವ ಹಾನಿ ಸಂಭವಿಸುತ್ತವೆ.

3. ಮಾರ್ಕೆಲಿ ಪ್ರಮಾಣ ಮತ್ತು ರಿಸ್ಟರ್ ಪ್ರಮಾಣ

ಮಾರ್ಕೆಲಿ ಪ್ರಮಾಣ

ರಿಸ್ಟರ್ ಪ್ರಮಾಣ

ಮಾರ್ಕೆಲಿ ಇದು ಭೂಕಂಪ ಮಾಪನದ ಪ್ರಮಾಣವಾಗಿದ್ದು ಅದು ಭೂಕಂಪದ ತೀವ್ರತೆಯನ್ನು ತೋರಿಸುತ್ತದೆ.

ರಿಸ್ಟರ್ ಪ್ರಮಾಣವು ಭೂಕಂಪದ ಅಳತೆ ಮಾಡುತ್ತದೆ.

ಮಾರ್ಕೆಲಿ ಇದು ರೇಷಿಯ ಪರಿಮಾಣವಾಗಿದೆ.

ರಿಸ್ಟರ್ ಪ್ರಮಾಣವು logarithmic ಪರಿಮಾಣವಾಗಿದೆ.

I ರಿಂದ  XII ಇವು ಭೂಕಂಪದ ತೀವ್ರತೆ ಅಳೆಯುವ ಅಂಕಗಳಾಗಿವೆ.

ರಿಸ್ಟರ್ ಪ್ರಮಾಣದಲ್ಲಿ < 2.0 ದಿಂದ 10.0+ ವರೆಗೆ ಅಂಕಿಗಳು ಇರುತ್ತವೆ.

ಮಾರ್ಕೆಲಿ ಪ್ರಮಾಣದಲ್ಲಿ I ತೀವ್ರತೆಯ ಅಂಕಿಯ ಭೂಕಂಪದ ಅರಿವು ಆಗುವುದಿಲ್ಲ. ಆದರೆ XII ರ ಭೂಕಂಪ ಎಲ್ಲವನ್ನೂ ನಾಶಪಡಿಸುತ್ತದೆ.

ರಿಸ್ಟರ್ ಪ್ರಮಾಣದಲ್ಲಿ 2ಕ್ಕಿಂತ ಕಡಿಮೆ ಕ್ಷಮತೆಯ ಭೂಕಂಪದ ನೋಂದಣಿ ಮಾಡುವುದಿಲ್ಲ. ಅದು ಅರಿವು ಕೂಡ ಆಗುವುದಿಲ್ಲ. 5ಕ್ಕಿಂತ ಹೆಚ್ಚಿನ ಕ್ಷಮತೆಯ ಭೂಕಂಪ ವಿಧ್ವಂಶಕರಿ ಇರುತ್ತವೆ.  

 

 

 

2. ಶೀಥಿಲೀಕರಣ ಮತ್ತು ವಿಸ್ತಾರವಾದ ಸವೆತ

ಪ್ರ.1. ಸರಪಳಿ ಪೂರ್ಣ ಮಾಡಿರಿ.

ಶಿಲೆಗಳ ಪ್ರಕಾರಗಳು

ಶಿಲೆಗಳ ಹೆಸರು

ಕಾರ್ಯ ಮಾಡುವ ಶಿಥಿಲೀಕರಣದ ಪ್ರಕಾರಗಳು

ಅಗ್ನಿಜನ್ಯ ಶಿಲೆಗಳು

ಬೇಸಾಲ್ಟ್, ಗ್ರೇನೈಟ್

ಭೌತಿಕ ಶಿಥಿಲೀಕರಣ

ಪದರು ಶಿಲೆ

ಸುಣ್ಣದ ಕಲ್ಲು, ಡೋಲೋಮಾಯಿಟ್

ರಾಸಾಯನಿಕ ಶಿಥಿಲೀಕರಣ

ರೂಪಾಂತರಿತ ಶಿಲೆ

ಪಾಟಿಯ ಕಲ್ಲು

 

ಪ್ರ.2. ಯೋಗ್ಯವಾದ ಸಹಸಂಬಂಧವನ್ನು ಗುರುತಿಸಿರಿ.

A: ವಿಧಾನ     R: ಕಾರಣ

1) A: ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಸತತವಾಗಿ ಸವಕಳಿ ಆಗುತ್ತದೆ.

  R: ವಿಸ್ತಾರವಾದ ಸವಕಳಿ ಆಗುವ ಪ್ರಕಾರವು ಪ್ರದೇಶದ ಹವಾಮಾನದ ಮೇಲೆ ಅವಲಂಬಿಸಿರುತ್ತದೆ.   (a) A ಮಾತ್ರ ಸರಿಯಾಗಿದೆ.

(b) R ಮಾತ್ರ ಸರಿಯಾಗಿದೆ.

(c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A ದ ಸರಿಯಾದ ವಿವರಣೆಯಾಗಿದೆ.

(d) A ಮತ್ತು R ಎರಡೂ ಸರಿಯಾಗಿವೆ ಆದರೆ R ಇದು A ದ ಸರಿಯಾದ ವಿವರಣೆಯಲ್ಲ.

ಉತ್ತರ: (c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A ದ ಸರಿಯಾದ ವಿವರಣೆಯಾಗಿದೆ.

2) A: ಗುರುತ್ವಾಕರ್ಷಣೆ ಪ್ರೇರಣೆಯು ವಿಸ್ತಾರಿತ ಸವಕಳಿಯ ಮೇಲೆ ಪರಿಣಾಮಬೀರುವ ಮಹತ್ವದ ಕಾರಕವಾಗಿದೆ.

   R: ಗುರುತ್ವಾಕರ್ಷಣೆ ಪ್ರೇರಣೆಯಿಂದ ಎಲ್ಲ ವಸ್ತುಗಳು ಭೂಮಿಯಕಡೆಗೆ ಆಕರ್ಷಿಸುತ್ತವೆ.  

(a) A ಮಾತ್ರ ಸರಿಯಾಗಿದೆ.

(b) R ಮಾತ್ರ ಸರಿಯಾಗಿದೆ.

(c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A ದ ಸರಿಯಾದ ವಿವರಣೆಯಾಗಿದೆ.

(d) A ಮತ್ತು R ಎರಡೂ ಸರಿಯಾಗಿವೆ ಆದರೆ R ಇದು A ದ ಸರಿಯಾದ ವಿವರಣೆಯಿಲ್ಲ.

ಉತ್ತರ: (c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A ದ ಸರಿಯಾದ ವಿವರಣೆಯಿಲ್ಲ.

3) A: ಗಟ್ಟಿಯಾಗುವಿಕೆ ಮತ್ತು ಕರಗುವಿಕೆ ಈ ಪ್ರಕ್ರಿಯೆಗಳು  ಮರುಭೂಮಿ ಪ್ರದೇಶದಲ್ಲಿ ಸತತವಾಗಿ ನಡೆಯುತ್ತವೆ.

    R: ಶಿಲೆಗಳ ಛಿದ್ರಗಳಲ್ಲಿ ನೀರು ಒಳಗಡೆ ಸೇರಿದಾಗ ಶಿಲೆಗಳು ಒಡೆಯುತ್ತವೆ.

(a) A ಮಾತ್ರ ಸರಿಯಾಗಿದೆ.

(b) R ಮಾತ್ರ ಸರಿಯಾಗಿದೆ.

(c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A ದ ಸರಿಯಾದ ವಿವರಣೆಯಾಗಿದೆ.

(d) A ಮತ್ತು R ಎರಡೂ ಸರಿಯಾಗಿವೆ ಆದರೆ R ಇದು A ದ ಸರಿಯಾದ ವಿವರಣೆಯಿಲ್ಲ.

ಉತ್ತರ: (c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A ದ ಸರಿಯಾದ ವಿವರಣೆಯಾಗಿದೆ.  

4) A: ಸಮತಲ ಪೃಷ್ಟಭಾಗದ ಮೇಲಿನ ವಿಸ್ತಾರವಾದ ಸವಕಳಿಯ ಪ್ರಕ್ರಿಯೆಗೆ ನೀರು ಸಹಾಯ ಮಾಡುತ್ತದೆ.

  R: ನೀರಿನ ಪಾಟಾಳಿ ಇದಕ್ಕೆ ಕರಣೀಭೂತವಾಗಿರುತ್ತದೆ.

(a) A ಮಾತ್ರ ಸರಿಯಾಗಿದೆ.

(b) R ಮಾತ್ರ ಸರಿಯಾಗಿದೆ.

(c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A ದ ಸರಿಯಾದ ವಿವರಣೆಯಾಗಿದೆ.

(d) A ಮತ್ತು R ಎರಡೂ ಸರಿಯಾಗಿವೆ ಆದರೆ R ಇದು A ದ ಸರಿಯಾದ ವಿವರಣೆಯಿಲ್ಲ.

ಉತ್ತರ: (c) A ಮತ್ತು R ಎರಡೂ ಸರಿಯಾಗಿವೆ ಮತ್ತು R ಇದು A ದ ಸರಿಯಾದ ವಿವರಣೆಯಾಗಿದೆ.  

ಪ್ರ.3 ಸರಿಯಾದ ಗುಂಪು ಅಥವಾ ಘಟಕವನ್ನು ಗುರುತಿಸಿರಿ.

ಅ) 1) ಭಶ್ಮಿಕರಣ

ಆ) 1) ದ್ರಾವಣಿಕರಣ

2) ಕಾರ್ಬನನ

2) ಶೀಥಿಲೀಕರಣ

3) ಗಟ್ಟಿಯಾಗುವಿಕೆ ಮತ್ತು ಕರಗುವಿಕೆ

3) ಭಶ್ಮಿಕರಣ

4) ವಿಖಂಡಿತಗೊಳ್ಳುವುದು

4) ಕಾರ್ಬನನ

ಕ) 1) ಉರುಳುವಿಕೆ

ಡ) 1) ಒತ್ತಡ

2) ಸರಿಯುವಿಕೆ

2) ಉಷ್ಣತೆ

3) ಭೂ-ಸ್ಖಲನ

3) ಇಳಿಜಾರು

4) ಸಾಗಾಣಿಕೆ

4) ಮಳೆ

ಉತ್ತರ: ಕ ಗುಂಪು ಸರಿಯಾಗಿದೆ.

ಪ್ರ. 4. ಭೌಗೋಳಿಕ ಕಾರಣ ಕೊಡಿರಿ.                                  

1) ಉಷ್ಣತೆಯು ಭೌತಿಕ ಶಿಥಿಲೀಕರಣದ ಮುಖ್ಯವಾದ ಘಟಕವಾಗಿದೆ.
ಉತ್ತರ: ಉಷ್ಣತೆಯು ಒಣ ಪ್ರದೇಶದಲ್ಲಿಯ ಶಿಥಿಲೀಕರಣದ ಪೃಕ್ರಿಯೆಯಲ್ಲಿ ಮಹತ್ವದ ಘಟಕವಾಗಿದೆ. ಉಷ್ಣತೆಯಿಂದ ಶಿಲೆಗಳು ಬಿಸಿಯಾಗುತ್ತವೆ. ಕೆಲವೊಮ್ಮೆ ಎಲ್ಲೆಡೆ ಸಮಾನವಾಗಿ ಬಿಸಿಯಾಗದೆ ಶಿಲೆಗಳಲ್ಲಿಯ ಖನಿಜ ಮತ್ತು ಸಂಯುಕ್ತಕ್ಕನುಸಾರವಾಗಿ ಭಿನ್ನ ಭಿನ್ನವಾಗಿ ಬಿಸಿಯಾಗುತ್ತವೆ. ಹಗಲಿನ ಸಮಯದಲ್ಲಿ ಶಿಲೆಗಳು ಪ್ರಸರಣಗೊಳ್ಳುತ್ತದೆ ಮತ್ತು ರಾತ್ರಿ ಸಮಯದಲ್ಲಿ ಆಕುಂಚನೆಗೊಳ್ಳುತ್ತದೆ. ಈ ಪ್ರಕ್ರಿಯೆಗಳಿಂದ ಶಿಲೆಗಳು ಬಿರುಕುಗಳು ಮತ್ತು ಛಿದ್ರಗಳು ಉಂಟಾಗುತ್ತವೆ. ಈ ಕ್ರಿಯೆ ಸತತವಾಗಿ ಉಷ್ಣತೆಯಿಂದಾಗಿ ನಡೆಯುವುದರಿಂದ ಉಷ್ಣತೆ ಇದು ಭೌತಿಕ ಶಿಥಿಲೀಕರಣದ ಮುಖ್ಯವಾದ ಘಟಕವಾಗಿದೆ ಎಂದು ಹೇಳಲಾಗುತ್ತದೆ.

2) ಮಾನವನು ಕೂಡ ಶಿಥಿಲೀಕರಣದ ಅಥವಾ ಸವೆತದ ಘಟಕವಾಗಿದ್ದಾನೆ.

ಉತ್ತರ: ಮಾನವನ ಚಟುವಟಿಕೆಗಳಿಂದ ಉಂಟಾಗುವ ಸವೆತವು ಅತ್ಯಂತ ವೇಗವಾಗಿ ಮತ್ತು ವ್ಯಾಪಕವಾಗಿ ಸಂಭವಿಸುತ್ತದೆ ಎಂದು ಕಂಡು ಬರುತ್ತದೆ. ನೈಸರ್ಗಿಕವಾಗಿ ಸಂಭವಿಸಲು ಸಾವಿರಾರು ಮಿಲಿಯನ್ ವರುಷಗಳು ಬೇಕಾಗಿದ್ದನ್ನು ಮಾನವನು ತಮ್ಮ ತಾಂತ್ರಿಕ ಜ್ಞಾನದ ಸಹಾಯದಿಂದ ಕೆಲವೇ ತಿಂಗಳಿನಲ್ಲಿ ಮಾಡುತ್ತಿದ್ದರೆ. ಗಣಿಗಾರಿಕೆ, ರಸ್ತೆ ನಿರ್ಮಾಣ, ಅಣೆಕಟ್ಟು ನಿರ್ಮಾಣ, ಖನಿಜ ಉತ್ಖನನ, ಸುರಂಗ ಸ್ಪೋಟ್, ಮುಂತಾದ ಕೆಲಸಗಳು ನಿತ್ಯವೂ ಮಾಡುತ್ತಿದ್ದಾನೆ. ಇದರಿಂದ ಶಿಲೆಗಳು ತೆರೆದುಕೊಳ್ಳುತ್ತವೆ ಮತ್ತು ಶಿಲೆಗಳ ಶಿಥಿಲೀಕರಣ ಆಗುತ್ತದೆ. ಆದ್ದರಿಂದ ಮಾನವನು ಕೂಡ ಶಿಥಿಲೀಕರಣದ ಅಥವಾ ಸವೆತದ ಘಟಕವಾಗಿದ್ದಾನೆ.

3) ಇಳಿಜಾರು ಇದು ವಿಸ್ತಾರವಾದ ಸವೆತದಲ್ಲಿಯ ಮುಖ್ಯ ಘಟಕವಾಗಿದೆ.

ಉತ್ತರ: ಸವೆತಕ್ಕೊಳಗಾದ ವಸ್ತುವು ಗುರುತ್ವಾಕರ್ಷಣೆಯ ಪ್ರೇರಣೆಯಿಂದ ಇಳಿಜಾರಿನತ್ತ ಚಲಿಸುತ್ತವೆ. ಇದನ್ನು ವಿಸ್ತೃತ ಸವೆತ ಎಂದು ಕರೆಯುತ್ತಾರೆ. ಈ ಸವೆತವು ಮುಖ್ಯವಾಗಿ ನೀರು, ಗುರುತಾಕರ್ಷಣೆ ಶಕ್ತಿ ಹಾಗೂ ಇಳಿಜಾರಿನ ತೀವ್ರತೆಯಿಂದ ಪ್ರಭಾವಿತವಾಗಿರುತ್ತದೆ. ಇಳಿಜಾರಿನ ಸ್ವರೂಪ ಮತ್ತು ತೀವ್ರತೆ ಹೆಚ್ಚು ಇದ್ದರೆ ಸವೆತ ವ್ಯಾಪಕವಾಗುತ್ತದೆ. ಜಾರುವ ಪ್ರಕ್ರಿಯೆಯು ಸೌಮ್ಯವಾದ ಇಳಿಜಾರಿನಲ್ಲಿ ಕಂಡು ಬರುತ್ತದೆ. ಆದರೆ ಬೀಳುವುದು, ಕುಸಿಯುವುದು ಪ್ರಕ್ರಿಯೆಗಳು ತೀವ್ರವಾದ ಇಳಿಜಾರಿನಲ್ಲಿ ನಡೆಯುತ್ತದೆ. ಇದರರ್ಥ ಇಳಿಜಾರು ಇದು ವಿಸ್ತಾರವಾದ ಸವೆತದಲ್ಲಿಯ ಮುಖ್ಯವಾದ ಘಟಕವಾಗಿದೆ.

4) ಭಶ್ಮಿಕರಣ ಪ್ರಕ್ರಿಯೆಯಿಂದ ಶಿಲೆಗಳ ಆಕಾರ ಮತ್ತು ಬಣ್ಣದಲ್ಲಿ ಬದಲಾವಣೆಯಾಗುತ್ತದೆ.

ಉತ್ತರ: ಶಿಲೆಗಳಲ್ಲಿರುವ ಖನಿಜಗಳ ಮೇಲೆ ನೀರಿನಲ್ಲಿಯ ಅಥವಾ ಹವೆಯಲ್ಲಿಯ ಆಕ್ಸಿಜನದ ಸಂಯೋಗದಿಂದಾಗಿ ಭಶ್ಮಿಕರಣವಾಗುತ್ತದೆ.  ಭಶ್ಮಿಕರಣವು ಶಿಲೆಗಳನ್ನು ದುರ್ಬಲಗೊಳಿಸುತ್ತವೆ. ಅದರ ಪರಿಣಾಮ ಬಂಡೆ ಸವೆದು ಬಂಡೆಯ ಆಕಾರ ಬದಲಾಗುತ್ತದೆ. ಕಬ್ಬಿಣದ ಭಶ್ಮಿಕರಣಕ್ಕೆ ಕೆಂಪು ಬಣ್ಣವನ್ನು ನೀಡುತ್ತದೆ ಆದರೆ ಅಲ್ಯೂಮಿನಿಯಂ ಭಶ್ಮಿಕರಣಕ್ಕೆ ಹಳದಿ ಬಣ್ಣವನ್ನು ನೀಡುತ್ತದೆ. ಆದ್ದರಿಂದ ಭಶ್ಮಿಕರಣ ಪ್ರಕ್ರಿಯೆಯಿಂದ ಶಿಲೆಗಳ ಆಕಾರ ಮತ್ತು ಬಣ್ಣದಲ್ಲಿ ಬದಲಾವಣೆ ಆಗುತ್ತದೆ.

5) ಸಹ್ಯಾದ್ರಿಯ ಪಶ್ಚಿಮ ಇಳಿಜಾರಿನ ವಿಸ್ತೃತ ಸವೆತದ ಪ್ರಭಾವವು ಪುರ್ವ ಇಳಿಜಾರಿಗಿಂತ ಹೆಚ್ಚು ಇರುತ್ತದೆ.

ಉತ್ತರ:  ಗುರುತ್ವಾಕರ್ಷಣೆಯ ಪ್ರೇರಣೆಯಿಂದ ಸವೆತದ ವಸ್ತುವಿನ ಕೆಲಮುಖ ಚಲನೆಗೆ ವಿಸ್ತೃತ ಸವೆತ ಎಂದು ಕರೆಯಲಾಗುತ್ತದೆ. ಭೂಮಿಯ ಮೇಲೆ ಎಲ್ಲೆಡೆ ಗುರುತ್ವಾಕರ್ಷಣೆ ಸಮಾನವಾಗಿರುತ್ತದೆ. ಇದರರ್ಥ ಇಳಿಜಾರು ವ್ಯಾಪಕ ಸವೆತದ ಮೇಲೆ ಹೆಚ್ಚಿನ ಪರಿಣಾಮ ಬಿರುತ್ತದೆ. ಸಹ್ಯಾದ್ರಿ ಪರ್ವತಗಳ ರಚನೆಯನ್ನು ನೋಡಿದರೆ ಸಹ್ಯಾದ್ರಿಯ ಇಳಿಜಾರಿನಲ್ಲಿ ವೇಗೆದಿಂದ ಚಲಿಸುವ ಸವೆತ ಪುರ್ವ ಇಳಿಜಾರಿನಲ್ಲಿ ಈ ಚಲನೆ ತುಲನಾತ್ಮಕವಾಗಿ ನಿಧಾನವಾಗಿರುತ್ತದೆ. ಅಂದರೆ ಸಹ್ಯಾದ್ರಿಯ ಪಶ್ಚಿಮ ಇಳಿಜಾರಿನಲ್ಲಿ ವ್ಯಾಪಕ ಸವೆತದ ಪರಿಣಾಮವು ಪುರ್ವ ಇಳಿಜಾರಿಗಿಂತ ಹೆಚ್ಚಾಗಿರುತ್ತದೆ.  

ಪ್ರ.5. ಕೋಷ್ಟಕವನ್ನು ತುಂಬಿರಿ. 

ಪ್ರ.6. ಟಿಪ್ಪಣೆ ಬರೆಯಿರಿ.

1) ಜೈವಿಕ ಶಿಥಿಲಿಕರಣ: ಸಸ್ಯಗಳು, ಪ್ರಾಣಿಗಳು, ಮಾನವನ ಚಟುವಟಿಕೆಗಳಿಂದ ಶಿಲೆಗಳು ಒಡೆದು ಚೂರಾಗುತ್ತವೆ. ಛಿದ್ರವಾಗುತ್ತವೆ. ಇದಕ್ಕೆ ಜೈವಿಕ ಶಿಥಿಲಿಕರಣ ಎನ್ನುತ್ತಾರೆ. ವಿವಿಧ ಪ್ರಕಾರದ ಸಸ್ಯಗಳು ತಮಗೆ ಅವಶ್ಯಕವಿರುವ ನೀರು ಮತ್ತು ಖನಿಜಗಳನ್ನು ಪಡೆದುಕೊಳ್ಳಲು ಶಿಲೆಗಳಲ್ಲಿ ಇರುವ ಬಿರುಕು ಮತ್ತು ಛಿದ್ರಗಳೊಂದಿಗೆ ಅತೀ ಆಲದ ವರೆಗೆ ಪ್ರವೇಶಿಸುತ್ತವೆ. ಭೂಮಿಯ ಕೊರೆದು ಅಥವಾ ಕುಳಿಗಳನ್ನು ನಿರ್ಮಿಸಿ ಕೆಲವು ಪ್ರಾಣಿಗಳು ಅಡಗು ಸ್ಥಾನ ನಿರ್ಮಿಸಿತ್ತವೆ. ಉದಾ. ಇಲಿ, ಮೊಲ, ಇರುವೆ, ಎರೆಹುಳ ಇತ್ಯಾದಿಗಳು, ಪ್ರಾಣಿಗಳು, ಕ್ರಿಮಿಕೀಟಗಳು ಅತೀ ಆಳದವರೆಗೆ ಭೂಮಿಯನ್ನು ಕೊರೆಯುತ್ತವೆ. ಇದರಿಂದ ಶಿಲೆಗಳು ವಿಘಟನೆಗೊಳ್ಳುತ್ತವೆ. ಮಾನವನ ಆಧುನಿಕ ತಂತ್ರಜ್ಞಾನವನ್ನು ಬಳಸಿ ಶಿಥಿಲೀಕರಣದ ಪ್ರಕ್ರಿಯೆಯನ್ನು ಮಾಡುತ್ತಾನೆ. ಉದಾ. ಆಳವಾದ ಗಣಿಗಾರಿಕೆ, ಖನಿಜ ಎಣ್ಣೆ, ಬಾವಿಗಳ ನಿರ್ಮಾಣ, ರಸ್ತೆಗಳ ನಿರ್ಮಾಣ ಸುರಂಗ ನಿರ್ಮಾಣ ಇತ್ಯಾದಿ ಪ್ರಕ್ರಿಯೆಯಿಂದ ಶಿಥಿಕರಣ ಪ್ರಕ್ರಿಯೆ ವೇಗವಾಗಿ ಆಗುತ್ತದೆ.  

2) ವಿಸ್ತಾರವಾದ ಸವೆತ:

3) ರಾಸಾಯನಿಕ ಶಿಥಿಲಿಕರಣ:

4) ಶಿಥಿಲೀಕರಣದ ಮಹತ್ವ:

ಪ್ರ.7. ಆಕೃತಿಗಳನ್ನು ತೆಗೆದು ಅದಕ್ಕೆ ಹೆಸರನ್ನು ಕೊಡಿರಿ.

1) ಶಿಲೆಗಳ ವಿಘಟನೆ

2) ಶಿಲೆಗಳ ಚಕ್ರ  


ಪ್ರ.8. ಸವಿಸ್ತಾರವಾಗಿ ಉತ್ತರಿಸಿರಿ.

1) ಮಹಾರಾಷ್ಟ್ರದಲ್ಲಿಯ ಕೊಂಕಣ ಪ್ರದೇಶದಲ್ಲಿಯ ಶಿಥಿಲೀಕರಣದಪ್ರಕ್ರಿಯೆ ಉದಾಹರಣೆಯೊಂದಿಗೆ ಸ್ಪಷ್ಟೀಕರಿಸಿರಿ.

ಉತ್ತರ: ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಪ್ರಾಂತಕ್ಕೆ ಕೊಂಕಣ ಎನ್ನುತ್ತಾರೆ. ಇದು ಅರಬಿ ಸಮುದ್ರದ ತೀರ ಪ್ರದೇಶವಾಗಿದೆ. ಮಹಾರಾಷ್ಟ್ರ ರಾಜ್ಯದ ಬಗ್ಗೆ ಹೇಳಬೇಕಾದರೆ ಪಾಲಘರ, ಮುಂಬಯಿ, ಠಾಣೆ, ರಾಯಗಡ, ರತ್ನಾಗಿರಿ, ಸಿಂಧುದುರ್ಗ ಈ ಜಿಲ್ಲೆಗಳು ಕೊಂಕಣದಲ್ಲಿ ಸಮಾವೇಶವಾಗುತ್ತವೆ. ಸಮುದ್ರತೀರ ಇರುವುದರಿಂದ ಇಲ್ಲಿಯ ವಾತಾವರಣ ಉಷ್ಣ ಮತ್ತು ಆದ್ರವಾಗಿದೆ. ಉಷ್ಣ ಮತ್ತು ಆದ್ರ ಹವಾಮಾನದಿಂದಾಗಿ ಪ್ರತಿರೋಧ ಪ್ರಕಾರದ ಮಳೆ ಬೀಳುತ್ತದೆ. ಆದ್ರ ಹವಾಮಾನದಲ್ಲಿ ಶಿಥಿಲೀಕರಣದ ಪ್ರಕ್ರಿಯೆಯಲ್ಲಿ ನೀರು ಮಹತ್ವದ ಘಟಕವಾಗಿದೆ. ನೀರು ಆಕ್ಸಿಜನ್ ಹಾಗೂ ಕಾರ್ಬನ್ ಡೈ ಆಕ್ಸೈಡ್ ಜೊತೆಗೆ ಅಭಿಕ್ರಿಯೆ ಉಂಟಾದರೆ ರಾಸಾಯನಿಕ ಶಿಥಿಲಿಕರಣ ಉಂಟಾಗುತ್ತದೆ. ಸಾಮಾನ್ಯವಾಗಿ ಕಬ್ಬಿಣ ಹಾಗೂ ಅಲ್ಯೂಮಿನಿಯಂದಂತಹ ಖನಿಜಗಳು ಸಂಯೋಗಹೊಂದಿದರೆ ಅವುಗಳ ಭಶ್ಮಿಕರಣವಾಗುತ್ತದೆ. ಭಶ್ಮಿಕರಣದಿಂದ ಕಬ್ಬಿಣದ ಬಣ್ಣ ಕೆಂಪಾಗುತ್ತದೆ. ಮತ್ತು ಅಲ್ಯೂಮಿನಿಯಂ ಹಳದಿ ಬಣ್ಣದ್ದು ಆಗುತ್ತದೆ. ಉದಾ. ಸಹ್ಯಾದ್ರಿ ಪರ್ವತಗಳ ಸಾಲುಗಳಲ್ಲಿ ಇಂತಹ ಪ್ರಕಾರದ ಕ್ರಿಯೆ ನಡೆದದ್ದು ಕಂಡು ಬರುತ್ತದೆ.

2) ಹಿಮಾಲಯ ಮತ್ತು ವಿಸ್ತಾರವಾದ ಸವೆತ ಇವುಗಳ ಸಹಸಂಬಂಧವನ್ನು ಸ್ಪಷ್ಟೀಕರಿಸಿರಿ.

ಉತ್ತರ: ಪರಿಚಯ: ಮೂಲ ಶಿಲೆಯಿಂದ ಬೇರ್ಪಟ್ಟ ಕಣಗಳು ಮತ್ತು ತುಣುಕುಗಳು ಗುರುತ್ವಾಕರ್ಷಣೆಯ ಬಲದಿಂದಾಗಿ ಬಂಡೆಯ ತುಣುಕುಗಳು ಇಳಿಜಾರಿನಲ್ಲಿ ಚಲಿಸುವುದಕ್ಕೆ ವಿಸ್ತೃತ ಸವೆತ ಎನ್ನುತ್ತಾರೆ. ವ್ಯಾಪಕ ಸವೆತದ ಮೇಲೆ ಪರಿಮಾಣ ಬೀರುವ ಅಂಶಗಳು ಗುರುತ್ವಾಕರ್ಷಣೆ, ಇಳಿಜಾರಿನ ಸ್ವರೂಪ ಮತ್ತು ತೀವ್ರತೆ, ಬಂಡೆಗಳ ಸಂಯೋಜನೆ ಮತ್ತು ಪ್ರಕಾರ, ನೀರು ಇವು ಹಿಮಾಲಯವು ವ್ಯಾಪಕ ಸವೆತಕ್ಕೆ ಹೊಂದಿರುವ ಸಹಸಂಬಂಧವನ್ನು ತಿಳಿದುಕೊಳ್ಳಲು ಹಿಮಾಲಯದ ಭೌಗೋಳಿಕ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

ಹಿಮಾಲಯ ಪರ್ವತಗಳ ಭೌಗೋಳಿಕ ಹಿನ್ನೆಲೆ: ಹಿಮಾಲಯಗಳು ಪ್ರಾಚೀನ ಪರ್ವತ ಶ್ರೇಣಿಗಳ ಸವೆತದ ಪ್ರಕ್ರಿಯೆಯು ಬಹಳ ನಿಧಾನವಾಗಿ ನಡೆಯುತ್ತದೆ. ಹಿಮಾಲಯದಲ್ಲಿಯ ಹೆಚ್ಚಿನ ಬಂಡೆಗಳು ಪದರು ಪದರುಗಳಾಗಿ ಉದುರು ಕಣಗಲ ಸ್ವರೂಪದಲ್ಲಿ ಬಿದ್ದಿವೆ. ಅದರಿಂದ ಅವುಗಳಲ್ಲಿ ಅನೇಕ ಬಿರುಕುಗಳು ಬಿದ್ದಿರುತ್ತವೆ. ಹಿಮಾಲಯದ ಎತ್ತರ ತುಂಬಾ ಹೆಚ್ಚು ಆಗಿದೆ. ಅದರ ಇಳಿಜಾರು ಕೂಡ ತುಂಬಾ ಕಡಿದಾದ ಇಳಿಜಾರು ಇದೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಮಳೆಯ ಪ್ರಮಾಣ ಹೆಚ್ಚು ಇರುವುದರಿಂದ ಹಾಗೂ ಹಿಮ ಕರಗುವುದರಿಂದ ಅಲ್ಲಲ್ಲಿ ನೀರು ಇರುತ್ತದೆ.  ಕಡಿಮೆ ಉಷ್ಣತಾಮಾನದಿಂದ ನೆಲವು ಹೆಪ್ಪುಗಟ್ಟುತ್ತದೆ. ಇದರಿಂದ ನೀರು ಅಂತಹ ಮಣ್ಣಿನಲ್ಲಿ ಇಂಗುವುದಿಲ್ಲ.

ಹಿಮಾಲಯದಲ್ಲಿ ವ್ಯಾಪಕ ಸವೆತ: ಅಂತಹ ಭೌಗೋಳಿಕ ಪರಿಸ್ಥಿತಿಗಳು ಇರುವುದರಿಂದ ಈ ಕೆಳಗಿನಂತೆ ವ್ಯಾಪಕ ಸವೆತಗಳು ಕಂಡು ಬರುತ್ತವೆ. A) ಕುಸಿತ ಅಥವಾ ಬೀಳುವಿಕೆ ಕಡಿದಾದ ಇಳಿಜಾರಿನಲ್ಲಿ ಹಿಮಾಲಯದಲ್ಲಿಯ ಶಿಖರಗಳು ವೇಗದಿಂದ ಕೆಳಗೆ ಬೀಳುತ್ತವೆ. B) ಸ್ಫೋಟ/ಭೂ-ಕುಸಿತ: ಶೀಲಾಖಂಡಗಳು, ಬಂಡೆಗಳು, ಮಣ್ಣು ಮತ್ತು ಕೊಳೆತ ವಸ್ತುವಿನ ತೂಕವು ನೀರಿನ ಸೇರ್ಪಡೆಯೊಂದಿಗೆ ಸೇರಿ ತೀವ್ರ ಇಳಿಜಾರಿನಲ್ಲಿ ಜಾರುತ್ತದೆ. ಉತ್ತರಾಖಂಡ ರಾಜ್ಯದಲ್ಲಿ ಪ್ರತಿ ವರ್ಷ ಇಂತಹ ಭೂಕುಸಿತಗಳು ಸಂಭವಿಸುತ್ತವೆ. C) ಮ್ಯಾಟ್ಲಟ್: ಶೀತ ಪ್ರದೇಶದಲ್ಲಿ ಹೆಪ್ಪುಗಟ್ಟಿದ ನೆಲದ ಮೇಲಿನ ಮಣ್ಣು, ಪದರುಗಳು ಸಂಗ್ರಹವಾಗುತ್ತದೆ ಮತ್ತು ಗುರುತ್ವಾಕರ್ಷಣೆಯ ಬಲದಿಂದ ಅದು ಕೆಳಮುಖವಾಗಿ ಜಾರುತ್ತದೆ. ಹಿಮಾಚಲ ಪ್ರದೇಶದಲ್ಲಿ ಇಂತಹ ಭೂಕುಸಿತಗಳು ಕಂಡು ಬರುತ್ತವೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು