ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಚಟ ಬಿಡೋ ಚಟಗೇಡಿ ಅಂದ್ರೆ ಮಾಡಿಕೊಂಡ ಹೆಂಡ್ತಿನ ಬಿಟ್ಟೆನು ಆದ್ರೆ ಚಟ ಮಾತ್ರ ಬಿಡಾಕ್ಕಿಲ್ಲ = No smoke

 

 ಚಟ ಬಿಡೋ ಚಟಗೇಡಿ ಅಂದ್ರೆ ಮಾಡಿಕೊಂಡ ಹೆಂಡ್ತಿನ ಬಿಟ್ಟೆನು ಆದ್ರೆ ಚಟ ಮಾತ್ರ ಬಿಡಾಕ್ಕಿಲ್ಲ



       ಚಟ ಬಿಡೋ ಚಟಗೇಡಿ ಅಂದ್ರೆ ಮಾಡಿಕೊಂಡ ಹೆಂಡ್ತಿನ ಬಿಟ್ಟೆನು ಆದ್ರೆ ಚಟ ಮಾತ್ರ ಬಿಡಾಕ್ಕಿಲ್ಲ ಅನ್ನುವಂತ ಗಾದೆ ಮಾತು ಚಟವುಳ್ಳವಾರ ಕುರಿತು ತಲೆ ತಲಾಂತರದಿಂದ ಕೇಳಿಕೊಂಡು ಬಂದಿದ್ದೇವೆ. ಜಗತ್ತಿನಲ್ಲಿ ಚಟವಿಲ್ಲದೆ ಇರುವವರು ಯಾರೂ ಇರಲಾರದು. ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ತರಹದ ಚಟವಿರುತ್ತದೆ. ಚಟ, ತಲಬು, ಹವ್ಯಾಸ, ಛಂದ, ಆಶೆ, ಆಕಾಂಕ್ಷೆ ಇತ್ಯಾದಿಗಳನ್ನೆಲ್ಲ ನಾವು ವಿಂಗಡಣೆ ಮಾಡಬಹುದು.  ಆದರೆ ಸಾಮಾನ್ಯವಾಗಿ ಚಟ ಇರೋದು ಅಂದ್ರೆ ತಂಬಾಖು, ಗುಟಖಾ, ಪಾನ ಮಸಾಲಾ, ಚಹಾ, ಕಾಫಿ, ಕಳ್ಳ ಭಟ್ಟಿ ಸಾರಾಯಿ, ದುರ್ಜನರ ಸಂಗ ಮುಂತಾದವುಗಳು ಆಗುವವು.

          ಕೋರೋನಾ ರೋಗ ಕಳೆದ ಎರಡು ವರ್ಷಗಳಲ್ಲಿ ಇಡೀ ವಿಶ್ವಾವನ್ನೇ ತಲ್ಲಣಗೊಳಿಸಿದೆ. ಪ್ರತಿಯೊಬ್ಬ ವ್ಯಕ್ತಿ ಈ ರೋಗದ ವೈಶಾಣು ಹೊಡೆದೋಡಿಸಲು ಪಣತೊಟ್ಟು ನಿಂತಿದ್ದಾನೆ. ಸರಕಾರಿ ಯಂತ್ರಣೆ ಲಾಕ್ ಡೌನ್ ಅನ್ನುವ ಲಕ್ಷ್ಮಣ ರೇಖೆಯ ಒಳಗೆ ಜನ ಜೀವನವನ್ನು ಬಂದಿಸಿ ಬಿಟ್ಟಿದೆ. ತಂಬಾಖು, ಎಲೆ ಅಡಿಕೆ, ಗುಟಖಾಗಳ ಚಟವಿರುವ ಆಸಾಮಿಗಳ ಪಾಡು ಹೇಳ ತಿರದು. ಸೋಷಿಯಲ್ ದೀಸ್ಟನ್ಸ ಇಟ್ಟುಕೊಂಡು ಮೊದ ಮೊದಲಿಗೆ ಅಂಗಡಿಗಳಲ್ಲಿ ಮಾರುತ್ತಿದ್ದ ಮಾದಕ ಪದಾರ್ಥಗಳ ಬೆಲೆ ದಿನಗಳೆದಂತೆ ಮುಗಿಲು ಮುಟ್ಟತೊಡಗಿದೆ. ಲಾಕ್ ಡೌನ್ ಇರುವುದರಿಂದ ಅದನ್ನು ತಾಲೂಕಿನ ಪಟ್ಟಣಗಳಿಂದ ಆಗಲಿ, ಬೇರೆ ನಗರಗಳಿಂದ ತರಲು ಆಗದೆ ಮಾರ್ಕೆಟ್ ಸ್ಥಗಿತವಾಗಿ ಬಿಟ್ಟಿದೆ. ಆದರೆ ಕೆಲವರಿಗೆ ತಂಬಾಖು ತಿನ್ನದೇ ಮಲ ಮೂತ್ರ ವಿಸರ್ಜನೆ ಸಹ ಆಗುವುದಿಲ್ಲ. ಕೆಲವರಿಗೆ ಬೀಡಿ –ಸಿಗರೇಟ್ ಸೇದದಿದ್ದರೆಎನೋಂದೂ ಕೆಲಸವಾಗುವುದಿಲ್ಲವಂತೆ. ಪರಸ್ಪರ ವಿನಿಮಯ ಮಾಡುತ್ತಾ, ನಾಲ್ಕು ಊರಿನ ಪಂಚಾಯತಿ ಚರ್ಚೆ ಮಾಡುತ್ತಾ ನಾಲ್ಕು ಮನೆಗಳ ಸುದ್ದಿ ಚರ್ವಿತ ಚರ್ವಣ ಮಾಡುವ ಧಾಂಡಿಗರ  ಗುಂಪು ಈ ಪದಾರ್ಥಗಳು ಸಿಗದೇ ಕಂಗಲಾಗಿ ಹೋಗಿದ್ದಾರೆ. ಸುತ್ತ ಹಳ್ಳಿಗಳಲ್ಲಿ ಹೆಚ್ಚುವರಿ ಉಳಿದ ಮಾದಕ ಪದಾರ್ಥಗಳನ್ನು ತಂದು ಸಾವಿರಾರು ರೂಪಾಯಿಗೆ ಮಾರುವ ಮಹಾನುಭಾವರ ವ್ಯಾಪಾರ ಚೆನ್ನಾಗಿ ನಡೆದಿದೆ. ಬ್ಲಾಕ್ ರೇಟಿನಲ್ಲಿ ಮಾರಾಟ ಮಾಡಲಾಗುತ್ತಿದೆ.  ನಾಲಿಗೆ ಚಪಲ ತೀರಿಸಿಕೊಳ್ಳಲು ವ್ಯಸನಿ ಜನ ಸಾವಿರ ರೂ. ಕಿಲೋಗ್ರಾಂ ತಂಬಾಖು ಕೊಂಡು ತಿನ್ನುವರೆಂದರೆ ಅದೆಂತಹ ಚಟವಾದಿತನ.

          ಈ ಚಟ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಅದನ್ನು ಬಿಡಲು ತಯಾರಾಗುವುದಿಲ್ಲ. ಚಟ ಒಂದು  ದಿನ ಚಟ್ಟ ಕಟ್ಟುವುದು ಗ್ಯಾರೆಂಟಿ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಧನ್ಯವಾದಗಳು