ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಗುರ್ಸಾಳೆ ದಿಂದ ರಾಷ್ಟ್ರಪತಿ ಭವನದ ವರೆಗೆ ಆರೋಗ್ಯ ಪರಿಚಾರಿಕೆಯ ಕೃತಜ್ಞತೆಯ ಪ್ರಯಾಣ


ಗುರ್ಸಾಳೆ  ದಿಂದ  ರಾಷ್ಟ್ರಪತಿ ಭವನದ ವರೆಗೆ  ಆರೋಗ್ಯ ಪರಿಚಾರಿಕೆಯ  ಕೃತಜ್ಞತೆಯ ಪ್ರಯಾಣ

ಸೊಲ್ಲಾಪುರ ಜಿಲ್ಲೆಯ ಮೊರೊಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆ ಮನೀಶಾ ಭಾವುಸಾಹೇಬ ಜಾಧವ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಮಾಡಿದರು. ಆ ಸಂದರ್ಭದಲ್ಲಿ.. 

          


ಹೊಸ ದೆಹಲಿಯ ರಾಷ್ಟ್ರಪತಿ ಭವನದ ಅಶೋಕ ಸಭಾಂಗಣದಲ್ಲಿ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಇತರ ಎಲ್ಲ ಗಣ್ಯರೊಂದಿಗೆ ರಾಷ್ಟ್ರಪತಿಗಳಿಂದ ಪುರಸ್ಕಾರ ಪಡೆದ ಭಾವನೆಯಿಂದ ಮನ ತುಂಬಿ ಬಂದಿತು.  17 ವರ್ಷಗಳ ಕೆಲಸದ ಘಟನೆಗಳೆಲ್ಲ  ಈ ಸಮಯದಲ್ಲಿ ಕಣ್ಣೆದುರಿಗೆ ಸುಳಿದವು. ನಾನು ಭೇಟಿಯಾದ ಜನರು ಮತ್ತು ನಡೆದ ಘಟನೆಗಳು ನನ್ನ ಮನಲ್ಲಿಮೂಡಿದವು.

          ಸೊಲ್ಲಾಪುರ ಜಿಲ್ಲೆಯ ಪಂಢರಪುರ ತಾಲೂಕಿನ ಗುರಸಾಳೆ ನನ್ನ ಗ್ರಾಮ.ನಾನು  10 ನೇ ತರಗತಿಯಲ್ಲಿದ್ದಾಗ ನನ್ನ  ಮದುವೆಯಾಯಿತು. ಆದರೆ ನಾನು ಬುದ್ಧಿವಂತನಿರುವುದರಿಂದ  ನನಗೆ ಓದುವ ಒಲವು ಮತ್ತು ಛಲವಿತ್ತು. ಆದ್ದರಿಂದ  ಮುಂದೆ ಓದಲು ನಿರ್ಧರಿಸಿದೆ. ಹುಡುಗಿಯರು ಸರಳ ಶಿಕ್ಷಕಿಯಾಗಬೇಕು  ಎಂಬುದು ಹಿರಿಯರ ಮನ್ನಣೆ ಇತ್ತು.  D.ed. ಮಾಡಿದೆ. ಆದರೆ ಆಗ ಶಿಕ್ಷಕರ ನೇಮಕಾತಿಯನ್ನು ಸ್ಥಗಿತಗೊಳಿಸಲಾಗಿತ್ತು ಆದ್ದರಿಂದ ನರ್ಸಿಂಗ್ ಕೋರ್ಸ್ ಮಾಡಿದೆ. ಆದರೆ ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ನನ್ನ ನಿರ್ಧಾರ ದೃಢವಾಗಿತ್ತು 2000 ದಲ್ಲಿ ಮುಂಬಯಿಯ ಕಾಮಾ ಆಸ್ಪತ್ರೆಯಲ್ಲಿ 18ತಿಂಗಳ ನರ್ಸಿಂಗ್ ಕೋರ್ಸ್ ಮುಗಿಸಿದೆ. ನರ್ಸಿಂಗ್ ಓದಲು ಹಟ ತೊಟ್ಟು ಮನೆ ಬಿಟ್ಟ  ಪ್ರಯಾಣ ಮಾಡುವುದು ಸುಲಭವಲ್ಲ, ಆದರೆ ಅದನ್ನು ಸಾಧಿಸಿ ನಾನು ಕೃತಜ್ಞನಾಗಿದ್ದೇನೆ.

           2004ರಲ್ಲಿ ಒಂದು ವರ್ಷ ಸೊಲ್ಲಾಪುರ ಮಹಾ ಪಾಲಿಕೆಯಲ್ಲಿ ಕೆಲಸ. ಅದೇ ಸಮಯದಲ್ಲಿ ಜಿಲ್ಲೆಯ ಆರೋಗ್ಯ ವಿಭಾಗದಲ್ಲಿ ಆಯ್ಕೆ ಆದೆ.  ನನ್ನ ಗಂಡನ ಮನೆ ಇರುವ ಮಾಳಸಿರಸ್ ತಾಲೂಕಿನ ಮಕಿ ಊರಿನಲ್ಲಿ ಕೆಲಸಕ್ಕೆ ಸೇರಿಕೊಂಡೆ. 2005 ರಿಂದ 12 ರವರೆಗೆ ಅಲ್ಲಿ ಕೆಲಸ ಮಾಡಿದೆ. ನಂತರ ಪುರುಂದಾವಡೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಈಗ ಮೊರೊಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಮಾಡುತ್ತಿದ್ದೇನೆ.

          ನಾನು ಆರೋಗ್ಯಪರಿಚಾರಿಕೆಯಾಗಿ  ನೌಕರಿ ಮಾಡಲು ಪ್ರಾರಂಭಿಸಿದ ಸಮಯ ಮತ್ತು ಈಗ ಬಹಳಷ್ಟು ಬದಲಾಗಿದೆ. ಆರೋಗ್ಯ ಸೇವಿಕೆಗೂ ಸ್ಮಾರ್ಟ್ ತಂತ್ರಜ್ಞಾನವನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ. ನಾನು  ಅದನ್ನೂ ಕಲಿತೆ. ನಾನು  ಜಿಲ್ಲಾ  ಪರಿಷತ್ತಿನ ಯಾವುದೇ ತರಬೇತಿಗೆ ಹೋಗುತ್ತೇನೆ. ಸೇವಾಭಾವನೆ ಹಾಗೂ ಜನರ ಪ್ರೀತಿಯ ಶಕ್ತಿಯ ಮೇಲೆಯೇ ಈ ಸುಂದರ ದಿನ ಕಾಣುತ್ತಿದ್ದೇನೆ. ಜನರ  ಪ್ರೀತಿಗಾಗಿ ನೈಟಿಂಗೇಲ್ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ.  ಸೇವಾ ವೃತ್ತಿಯಲ್ಲಿ ಅನೇಕ ನೋವುಗಳನ್ನು ಮರೆಯುವ ಶಕ್ತಿ ಜನರ ಪ್ರೀತಿಯಿಂದ ಮಾತ್ರ ದೊರಕಿದೆ.  ನನ್ನ ಪತಿ  ಸೈನ್ಯದಲ್ಲಿ ಇದ್ದು  ಕಾರ್ಗಿಲ್ ಯುದ್ಧ ಮತ್ತು ಸಿಯಾಚಿನ್‌ ಗಡಿಯಲ್ಲಿ  ಸೇವೆ ಮಾಡಿದರು. 2017 ರಲ್ಲಿ ಹೃದಯಾಘಾತ ದಿಂದ ಸಾವಿಗೆ ಶರಣಾದರು.  ಆ ಕ್ಷಣದಿಂದ ಮನೆಯ ಜವಾಬ್ದಾರಿ ನನ್ನ ಹೆಗಲ ಮೇಲಿದೆ.  

          ಆರೋಗ್ಯ ಸೇವಿಕೆಯಾಗಿ ಪ್ರತಿ ದಿನವೂ ಮನಸಾರೆ ಸೇವೆ ಮಾಡಬೇಕಾಗುತ್ತದೆ. ಮನಸ್ತಾಪ, ಆಲಸ್ಯ ಮಾಡದೆ ಉರಿ ಬಿಸಿಲಲ್ಲಿ ಹಗಲಿರುಳು ಅರೆಹೊಟ್ಟೆಯಲ್ಲಿದ್ದು ಕರ್ತವ್ಯ ನಿರ್ವಹಿಸುವುದು ನಮ್ಮ ಕೆಲಸದ ಭಾಗವೇ ಆಗಿದೆ. ಆದರೆ ನಮ್ಮ ಕೆಲಸ ಜನರ ಸಾವು ಬದುಕಿನೊಂದಿಗೆ ಸಂಬಂಧ ಇರುವುದರಿಂದ ಕರ್ತವ್ಯದಿಂದ ದೂರ ಹೋಗಲು ಆಗುವುದಿಲ್ಲ. ಸತ್ವ ಪರೀಕ್ಷೆಯ ಅದೆಷ್ಟೋ ಕ್ಷಣಗಳು ನೌಕರಿಯಲ್ಲಿ ಬಂದಿವೆ, ಇನ್ನೂ ಬರುತ್ತಲೇ ಇರುತ್ತವೆ. ಆದರೆ ಸದಾ ಕರ್ತವ್ಯ ಮಾಡುವುದೇ ನಮ್ಮ ವ್ರತವಾಗಿದೆ.

          7 ನವ್ಹೆಂಬರ 2022 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಇವರ ಕರಕಮಲಗಳಿಂದ ನನಗೆ ರಾಷ್ಟ್ರೀಯ ಫ್ಲೋರೆನ್ಸ್ ನೈಟಿಂಗಲ್ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ನೀಡುವಾಗ ಆಯುಷ್ಯವಿಡೀ ಸೇವೆ ಮಾಡುತ್ತಲೇ ಇರಬೇಕೆಂಬ ಕಿವಿಮಾತು ಅವರು ಹೇಳಿದರು. ನಿಜ ಹೇಳಬೇಕೆಂದರೆ ಫಿಲ್ಮನಲ್ಲಿಯ ಹೀರೋಕ್ಕಿಂತ ಸುಂದರ ಕ್ಷಣ ಎನಿಸಿತು. ರಾಷ್ಟ್ರಪತಿಗಳು ಕೊಟ್ಟ ಸೇವೆಯ ಮಂತ್ರವನ್ನು ಆಯುಷ್ಯವಿಡೀ ಕಾಯ್ದುಕೊಳ್ಳುವ ಸಂಕಲ್ಪ  ಮಾಡಿದ್ದೇನೆ.    

-ಮನೀಶಾ ಭಾವುಸಾಹೇಬ ಜಾಧವ 

                                                                 ಶಬ್ದ ರಚನೆ - ಡಾ. ಸಮೀರ್ ಇನಾಮದಾರ


 

ಬದುಕನ್ನು ಸಾರ್ಥಕಗೊಳಿಸುವ ಅನುಭವಗಳು

          ಎಂಟರಿಂದ ಒಂಬತ್ತು ವರ್ಷಗಳ ಹಿಂದೆ ಮಾಳಶಿರಸ ತಾಲೂಕಿನ ಪುರುಂದಾವಡೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದೆ. ಶಿಂಗಣಾಪುರ ಕಣಿವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. ನಾವು ಆಂಬ್ಯುಲೆನ್ಸ್‌ ತೆಗೆದುಕೊಂಡು  ಅಪಘಾತ ಸ್ಥಳಕ್ಕೆ ಹೋಗಿದೆವು. ನಮ್ಮ ಆಂಬ್ಯುಲೆನ್ಸ್‌ನಲ್ಲಿ ಅಷ್ಟು ಜನರನ್ನು ಸಾಗಿಸಲು ಸಾಧ್ಯವಾಗದೆ  ಇನ್ನೊಂದು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಅದರಲ್ಲಿ  ಗಾಯಾಳುಗಳನ್ನು ಕರೆದುಕೊಂಡು ಹೋಗುವಾಗ ನಾನು ಮತ್ತು ವೈದ್ಯರು ಸೇರಿ ಆಂಬುಲೆನ್ಸ್‌ನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದೆವು. ಹತ್ತು ಜನರ ಪ್ರಾಣ ರಕ್ಷಣೆ ಮಾಡುವ  ಕಾರ್ಯದಲ್ಲಿ ನಾನೂ ತೊಡಗಿಕೊಂಡಿದ್ದೇನೆ ಎಂದು ನನಗೆ ತುಂಬಾ ಸಂತೋಷವಾಯಿತು. ಒಂದು ವಸತಿಯಲ್ಲಿ  ಒಬ್ಬ ಮಹಿಳೆಗೆ ಕಷ್ಟದ ಹೆರಿಗೆ ಇತ್ತು.  ಬೆಳಗಿನ ಜಾವ ಮೂರು ಗಂಟೆಗೆ ನರ್ಸ್ ಒಬ್ಬಳಿಗೆ  ಕರೆದುಕೊಂಡು ಹೋಗಿ ಗರ್ಭಿಣಿಯನ್ನು ಪಿಎಚ್‌ಸಿಗೆ ಕರೆದುಕೊಂಡು ಹೋಗುವ ಪೂರ್ವದಲ್ಲಿಯೇ ಅವಳ ಹೆರಿಗೆ ಆಂಬುಲೆನ್ಸ್ ನಲ್ಲಿ ಸುರಕ್ಷಿತವಾಗಿ ಮಾಡಿದೆವು. ನಂತರ, ಮಗು ಮತ್ತು ತಾಯಿಯನ್ನೂ  ಆಸ್ಪತ್ರೆಗೆ ಕರೆತಂದು  ಚಿಕಿತ್ಸೆ ನೀಡಿದೇವು. ಇಂದಿಗೂ ಆ ವಸತಿಯ ಜನರು ನನ್ನನ್ನು ನೆನಪಿಸಿಕೊಳ್ಳುತ್ತಾರೆ.

- ಸೌ. ಮನಿಷಾ ಭಾವುಸಾಹೇಬ ಜಾಧವ

ಪರಿಚಾರಿಕೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಮೊರೋಚಿ .    ತಾ. ಮಾಳಸಿರಸ ಜಿ. ಸೋಲಾಪುರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು