ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Gambhire = ಗಂಭೀರೆ

 


   

          [8ನೇ ತರಗತಿಯ 11ನೇ ಪಾಠ ಗಂಭೀರೆ ಇದನ್ನು ಶಿವಕೋಟ್ಯಾಚಾರ್ಯ ಇವರು ಬರೆದ ‘ವಡ್ಡಾರಾಧನೆ’ ಯಿಂದ ತೆಗೆದುಕೊಳ್ಳಲಾಗಿದೆ. ಆದಿಕವಿ ಪಂಪನಿಗಿಂತ ಮೊದಲು ಸುಮಾರು ಕ್ರಿ.ಶ. 920-930 ರಲ್ಲಿ ಈ ಕಾವ್ಯ ಹುಟ್ಟಿರಬಹುದು ಎಂದು ಪಂಡಿತರ ಅಭಿಪ್ರಾಯವಾಗಿದೆ. ವಡ್ಡಾರಾಧನೆ –ವೃದ್ಧರಾಧನೆ ಅಂದರೆ ಹಿರಿಯರ ಪೂಜೆ ಎಂಬಾರ್ಥದ ಜೈನಮಹಾತ್ಮರ ಜೀವನಕ್ಕೆ ಸಂಬಂಧಿಸಿದ ಕಥೆಗಳು ಈ ಕೃತಿಯಲ್ಲಿವೆ. ಅವುಗಳಲ್ಲಿ ಮೊದಲನೆಯ ‘ಸುಕುಮಾರಸ್ವಾಮಿಯ ಕಥೆ’ ಇಲ್ಲಿ ಪ್ರಸ್ತುತ.ವಿದ್ದು ಕಥೆಗಳಲ್ಲಿ ಉಪಕಥೆಗಳು, ಉಪಕತೆಗಳಲ್ಲಿ ಇನ್ನೊಂದು ಸಣ್ಣ-ಸಣ್ಣ ಕಥೆಗಳು ಈ ಕೃತಿಯಲ್ಲಿ ಸಮಾವೇಶವಾಗಿವೆ. ಸುಕುಮಾರಸ್ವಾಮಿ ತನ್ನ ಹಿಂದಿನ ಜನ್ಮದಲ್ಲಿ ನಾಗಶ್ರೀ ಎಂಬ ಹೆಣ್ಣಾಗಿ ಹುಟ್ಟಿದಳು. ತನ್ನ ತಂದೆಯೊಂದಿಗೆ ದೇವಾಲಯಕ್ಕೆ ಹೋದಾಗ ಸೂರ್ಯಾಮಿತ್ರಾಚಾರ್ಯರಿಂದ ಐದು ವರದಾನ(ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು, ಪರಸ್ತ್ರೀ ಬಯಸಬಾರದು, ಪರಧನ ಬಯಸಬಾರದು, ಇನ್ನೊಬ್ಬರಿಗೆ ಮೋಸ ಮಾಡಬಾರದು)ಗಳನ್ನು ಪಡೆದಿರುತ್ತಾಳೆ. ಆದರೆ ಅರಸನಾದ ತಂದೆಯು ತಾವು ಆಚರಣೆ ಮಾಡದ ವರಗಳನ್ನು ಮುನಿಗಳಿಂದ ಈ ರೀತಿ ಪಡೆಯಬಾರದು. ಅದನ್ನು ಮರಳಿ ಕೊಟ್ಟು ಬರೋಣ ಎಂದು ಮತ್ತೇ ಸೂರ್ಯಾಮಿತ್ರಾಚಾರ್ಯರಲ್ಲಿಗೆ ಹೋಗುವಾಗ ದಾರಿಯಲ್ಲಿ ರಾಜಭಟ್ಟರು ಒಬ್ಬ ವ್ಯಕ್ತಿಯನ್ನು ಹೆಡೆಮುರಿಗಿ ಕಟ್ಟಿ ಎಳೆದುಕೊಂಡು ಹೋಗುತ್ತಿರುತ್ತಾರೆ. ಅದನ್ನು ಕಂಡು ನಾಗಶ್ರೀಯು ತನ್ನ ತಂದೆಗೆ ‘ಹೀಗೇಕೆ ಎಳೆದುಕೊಂಡು ಹೋಗುತ್ತಿದ್ದಾರೆ?’ ಎಂದು ಕೇಳಲು, ತಂದೆಯು ಅವರನ್ನು ವಿಚಾರಿಸಿ ಆ ರಾಜಭಟ್ಟರು ಹೇಳಿದ ಕಾರಣದ ಕಥೆಯನ್ನು ನಾಗಶ್ರೀಗೆ ಹೇಳುತ್ತಾರೆ. ಆ ಐದು ವರದಾನಗಳನ್ನೊಳಗೊಂಡ ಮೊದಲ ವರದಾನಕ್ಕೆ ಸಂಬಂಧಿಸಿದ ಕಥೆಯೇ ಈ ಗಂಭೀರೆಯ ಕತೆಯಾಗಿದೆ.]

ಹರಿಪುರವೆಂಬ ಪಟ್ಟಣದಲ್ಲಿ ಗಂಭೀರೆ ಎಂಬ ಒಬ್ಬ ಮುದುಕಿ ಇರುತ್ತಿದ್ದಳು. ಆಕೆ ತನ್ನ ಮಗಳಾದ ಹರಿಣಿ ಎಂಬವಳನ್ನು ಜಯಂತವೆಂಬ ಪಟ್ಟಣದಲ್ಲಿರುವ ವಸುದತ್ತನೆಂಬ ವ್ಯಾಪಾರಿಗೆ ಕೊಟ್ಟು ಮದುವೆ ಮಾಡಿದ್ದಳು. ಆಕೆ ಗರ್ಭವತಿಯಾಗಲು ಮೊದಕಾದಿ ಪದಾರ್ಥಗಳನ್ನು ತಿನ್ನುವ ಬಯಕೆಯಾಗಿದ್ದರಿಂದ ತಾಯಿಯು ಹಲವು ಬಗೆಯ ಲಡ್ಡು, ಮಂಡಿಗೆ/ಕಡಬು, ಮೋದಕ ಇತ್ಯಾದಿ ಭಕ್ಷಗಳನ್ನು ಮಾಡಿಕೊಂಡು ಗಂಭೀರೆಯೆಂಬ ವೃದ್ಧೆ ಹರಿಪುರದಿಂದ ತನ್ನ ಮಗಳಿದ್ದ ಊರಿಗೆ ಹೋಗುತ್ತಾಳೆ. ಅಷ್ಟರಲ್ಲಿ ದಾರಿಯಲ್ಲಿ ಎಂಟು ಜನರು ಕಳ್ಳರು ಬರುತ್ತಾರೆ. ಅವರನ್ನು ಕಂಡು ಮುದುಕಿಯು, ಮಗನೆ, ನನ್ನ ಮಗ ನಿನ್ನ ಹಾಗೇ ಕಾಣುತ್ತಾನೆ. ಹನ್ನೆರಡು ವರುಷಗಳಿಂದ ಮನೆಬಿಟ್ಟು ಹೋದವನು ಮರಳಿ ಬಂದೇ ಇಲ್ಲ. ಅವನ ಕಾಳಜಿಯಿಂದ ಅತ್ತು ಅತ್ತು ನನ್ನ ಕಂಗಳು ಬಾತಿಕೊಂಡಿವೆ. ನಿನ್ನನ್ನು ಕಂಡು ಅವನೇ ಬಂದಷ್ಟು ಸಂತೋಷವಾಯಿತು. ಮಗು, ನೀವೆಲ್ಲರೂ ಬನ್ನಿ, ಸಮೀಪದಲ್ಲಿಯೇ ಊರು ಇದೆ. ಸ್ನಾನ ಮಾಡಿ ವಿಶ್ರಮಿಸಿ ನಾಳೆ ಹೋಗುವಿರಂತೆ.” ಎಂದು ಹೇಳಿ ಅವರನ್ನೆಲ್ಲ ಮಗಳ ಮನೆಗೆ ಕರೆದುಕೊಂಡು ಬರುತ್ತಾಳೆ. ಅವರಿಗೆ ಸ್ನಾನಕ್ಕೆ ನೀರು ಕೊಟ್ಟು ತಲೆಗೆ ಎಣ್ಣೆ ಮಜ್ಜನ ಮಾಡಿಸಿ ಸ್ನಾನ ಮಾಡಿಸಿ ಹೊಸ ಹೊಸ ಧೋತರಗಳನ್ನು ಉಡಲು ನೀಡುತ್ತಾಳೆ. ತಲೆ ಒರೆಸಲು ಬಟ್ಟೆ ಕೊಟ್ಟು ಮನೆಯಲ್ಲಿ ಬಂಧಿಸಿ ಮನೆಯ ಮಾಳಿಗೆಯ ಮೇಲೆ ಏರಿ “ಕಳ್ಳರು ಬಂದಿದ್ದಾರೆ.” ಎಂದು ಕೂಗಿಕೊಳ್ಳುತ್ತಾಳೆ. ಎಂಟು ಜನ ಕಳ್ಳರು ಗಾಬರಿಯಾಗಿ, ಅವಮಾನಿತರಾಗಿ ಈ ಮುದುಕಿಯೂ ನಮ್ಮನ್ನು ಮೋಸ ಮಾಡಿದ್ದಾಳೆ, ಓಡಿರಿ.  ಎಂದು ಮುದುಕಿಯ ಮೇಲೆ ದ್ವೇಷ ಸಾಧಿಸುವುದಾಗಿ ನಿಶ್ಚಯಿಸುತ್ತಾರೆ. ಕಳ್ಳರು ಮತ್ತೆ ಮನೆಗೆ ಬಂದೇ ಬರುವರು ಎಂದು ಅರಿತುಕೊಂಡು ತಾನು ಮಲಗಿರುವ ಕೋಣೆಯ ಬಾಗಿಲದಲ್ಲಿ ಹರಿತವಾದ ಕತ್ತಿಯನ್ನು ಅಡ್ಡವಾಗಿ ಇಟ್ಟಳು. ಹೀಗಿದ್ದು ರಾತ್ರಿ ಕಳ್ಳರು ಬಂದು ಒಬ್ಬ ಕಳ್ಳ ಒಳಗೆ ಇಣುಕಿದಾಗ ಅವನ ಮೂಗು ಕೊಯ್ದುಕೊಂಡಿತು. ಹಿಂದೆ ತಿರುಗಿ ನನಗೆ ಒಳಗೆ ಹೋಗಲಾಗುತ್ತಿಲ್ಲ ನೀನು ಹೋಗು ಎಂದಾಗ ಇನ್ನೊಬ್ಬ ಹೋಗಲು ಅವನ ಮೂಗು ಕೂಡಾ ಕತ್ತರಿಸಿಕೊಂಡಿತು. ಹೀಗೆ ಸರದಿಯಂತೆ ಎಲ್ಲರೂ ಒಳಗೆ ಹೋಗಲು ಬಯಸಿ ತಮ್ಮ ಮುಗುಗಳನ್ನು ಕೊಯ್ದುಕೊಂಡು ಓಡಿದರು. ಊರಿನಲ್ಲೊಬ್ಬ ಇಂದ್ರಜಾಲಿಗನ(ಜಾದುಗಾರನ) ಮನೆ ಕನ್ನ ಹಾಕಿ ಒಂದು  ಪೆಟ್ಟಿಗೆ ಹೊತ್ತುಕೊಂಡು ಊರಿನ ಶ್ಮಶಾನದಲ್ಲಿ ಹೋಗಿ ಇಳಿಸುತ್ತಾರೆ. 

          ಆರು ಜನ ಕಳ್ಳರು ಊರಿನಲ್ಲಿಯ ಕುರಿಯೊಂದನ್ನು ಕದ್ದು ತಂದು ಮೈಮರೆತು ಮಲಗಿರುತ್ತಾರೆ. ಇಬ್ಬರು ಕಾಯ್ದುಕೊಳ್ಳುತ್ತ ಮಸಣದ ಕಿಚ್ಚಿನಲ್ಲಿ ತಂದ ಕುರಿಯನ್ನು ಕೊಂದು ಸುಡುತ್ತಾರೆ. ಕತ್ತಲೆಯಲ್ಲಿ ಒಬ್ಬ ಕಳ್ಳ ಆ ಇಂದ್ರಜಾಲಿಗನ ಪೆಟ್ಟಿಗೆಯನ್ನು ತೆರೆದು ಅದರಲ್ಲಿರುವ ಗೊಂಬೆಗಳನ್ನು ತೆಗೆದು ಅದಕ್ಕೆ ಚರ್ಮದಿಂದ ಮಾಡಿದ ರವಿಕೆ ತೊಡಿಸಿ ಸೀರೆಗಳನ್ನು ಉಡಿಸಿ ಹುಲಿಯ ಚರ್ಮ ಮತ್ತು ಮುಖವಾಡ ಧರಿಸಿಕೊಂಡು ಶ್ಮಶಾನದ ಕಿಚ್ಚಿನ ಬದಿಗೆ ನಿಂತಿರಲು ಪಕ್ಕದಲ್ಲಿ ಮಲಗಿರುವರೆಲ್ಲರೂ ಎಚ್ಚರವಾದಂತೆ ಇವರನ್ನು ಕಂಡು ಬೇತಾಳವೇ ಬಂದಿದೆ ಎಂದು ಹೆದರಿಕೊಂಡು ಪ್ರಾಣ ಭಯದಿಂದ ಓಡತೊಡಗುತ್ತಾರೆ. ಇತನು ಸುಟ್ಟ ಮೌಂಸ ತಿನ್ನಲು ಮುಂದೆ ಕರೆಯಲು ನಾವು ಮೌಂಸ ಸ್ವೀಕರಿಸಲು ಹೋದರೆ ಎಲ್ಲರಿಗೂ ಬೇತಾಳ ಬಲಿತೆಗೆದುಕೊಳ್ಳುತ್ತದೆ ಎಂದು ಓಡಲು ಈತ ತಾನು ಹಾಕಿಕೊಂಡಿರುವ ಮುಖವಾಡವನ್ನು ಚರ್ಮದ ಸೀರೆ ರವಿಕೆಗಳನ್ನು ಕಳೆದು ಬಿಸಾಕಿ ತಾನು ನಿಮ್ಮವನೆಂದು ತನ್ನ ಹೆಸರು ಹೇಳಿದಾಗ ಎಲ್ಲರೂ ನಿಲ್ಲುತ್ತಾರೆ. ತಾನು ಮಾಡಿದ ಮೌಂಸವನ್ನು ಎಲ್ಲರಿಗೂ ಹಂಚಿ ತಿಂದು ಮನೆಗೆ ಹೋಗಲು ಅಣಿಯಾಗುತ್ತಾರೆ.

               ಇತ್ತ ಗಂಭೀರೆಯು ಬೆಳಗಿನ ಜಾವದಲ್ಲಿ ಬೇಗನೆ ಎದ್ದು ತನ್ನ ಊರಿಗೆ ಹೋಗಲು ಅಣಿಯಾಗುತ್ತಾಳೆ. ದಾರಿಯಲ್ಲಿ ಕಳ್ಳರಿಗೆ ಹೆದರಿ ಒಂದು ಆಲದ ಮರದ ಮೇಲೆ ಎತ್ತರದ ತುದಿಯಲ್ಲಿ ಕುಳಿತುಕೊಳ್ಳುತ್ತಾಳೆ. ಕಳ್ಳರು ಆಕೆ ಏರಿದ ಮರದ ದಾರಿಯಲ್ಲಿಯೇ ಬರುತ್ತಿರಲು ಮುದುಕಿಯು, “ಜನರೇ, ಮೇಲೆ ನೋಡಬೇಡಿ.” ಎಂದಾಗ ಅವರೆಲ್ಲರು ಮೇಲೆ ನೋಡಿ ಅಲ್ಲೊಬ್ಬ ವೃದ್ಧ ಸ್ತ್ರೀ ಮರದ ತುತ್ತುತುದಿಯಲ್ಲಿ ಕುಳಿತಿರುವುದನ್ನು ಕಂಡು “ನೀನು ಯಾರು?” ಎಂದು ಕೇಳಿದಾಗ ಅವಳು ಈ ಮರದಲ್ಲಿರುವ ಯಕ್ಷದೇವತೆ ಎನ್ನುವಳು. ಆಗ ನೀನು ನಮ್ಮವರಲ್ಲಿ ಯಾರಿಗೆ ಹೆಂಡತಿಯಾಗುತ್ತಿಯಾ? ಎಂದು ಕೇಳಿದಾಗ ಆಕೆಯು ಯಾರು ಸುಟ್ಟ ಮಾಂಸದ ತುಂಡನ್ನು ತನ್ನ ನಾಲಿಗೆಯಿಂದ ಹಿಡಿದು ನನ್ನ ಬಾಯಿಯೊಳಗೆ ಇಡುತ್ತಾರೆಯೋ ಅವನೊಂದಿಗೆ ಮದುವೆಯಾಗುವೆನು” ಎಂದು ಹೇಳುತ್ತಾಳೆ. ಒಬ್ಬ ಕಳ್ಳನು ಸುಟ್ಟಿದ ಖಂಡವನ್ನು (ಪಿಶಿತದ ಖಂಡವನ್ನು) ಬಾಯಿಯಲ್ಲಿಟ್ಟು ಮರದ ಮೇಲೆ ಹೋಗಿ ಅವಳ ಬಾಯಿಯಲ್ಲಿ ಇಡುವ ಸಲುವಾಗಿ ನಾಲಿಗೆ ಚಾಚಿದಾಗ ಆಕೆ ಅವನ ನಾಲಿಗೆ ಕತ್ತರಿಸಿ ಬಿಡುವಳು. ಕೂಗಾಡುತ್ತ ಕೆಳಗೆ ಬಿದ್ದು ಬಿಡುವನು. ಅದನ್ನು ನೋಡಿ ಉಳಿದವರು ಭಯದಿಂದ ಓಡತೊಡಗುವರು. ವೃದ್ಧ ಸ್ತ್ರೀಯು ಆಗ, “ನಿಲ್ಲಿ, ನೀವು ಕಳವು ಮಾಡಿದುದರಲ್ಲಿ ಎಂಟನೆಯ ಪಾಲನ್ನು ನನಗಾಗಿ ತಂದು ಈ ಮರದ ಪೊಟರೆಯಲ್ಲಿ ಇಟ್ಟಿರೆಂದರೆ ನೀವು ಬದುಕುಳಿಯುತ್ತಿರಿ. ಇಲ್ಲದಿದ್ದರೆ ನಿಮ್ಮೆಲ್ಲರನ್ನೂ ತಿಂದು ಬಿಡುವೆನು.” ಎನ್ನಲು ಕಳ್ಳರು ಹೆದರಿಕೊಂಡು ಒಪ್ಪಿಕೊಂಡು ಅದರಂತೆ ದಿನಾಲು ಮಾಡಿದ ಕಳ್ಳತನದಲ್ಲಿ ಎಂಟನೆಯ ಭಾಗವನ್ನು ಮರದಡಿಯಲ್ಲಿ ಇಟ್ಟು ಹೋಗತೊಡಗಿದರು. ಮುದುಕಿಯು ದಿನಾಲು ತನ್ನೂರಿನಿಂದ ಬಂದು ಬಂಗಾರ, ಬೆಳ್ಳಿ, ಹಣವನ್ನು ತೆಗೆದುಕೊಂಡು ಹೋಗತೊಡಗಿದ್ದಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು