ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಹೆಚ್ಚುತ್ತಿರುವ ವ್ಯಸನಕ್ಕೆ ಬಲಿಯಾದ ಯುವಕರು ಸಮಾಜಕ್ಕೆ ಗಂಭೀರ ಸಮಸ್ಯೆ! _drinkers are more dengerous to our society

ಯುವಕರಲ್ಲಿ ಹೆಚ್ಚಿದ ವ್ಯಸನಾಧಿನತೆ.......

    ಹೆಚ್ಚುತ್ತಿರುವ ವ್ಯಸನಕ್ಕೆ ಬಲಿಯಾದ ಯುವಕರು ಸಮಾಜಕ್ಕೆ ಗಂಭೀರ ಸಮಸ್ಯೆ!



              ಇಂದು ಈ ವಿಷಯದ ಕುರಿತು ಬರೆಯುವುದು ಕೂಡ ತುಂಬಾ ನೋವು ಕೊಡುತ್ತಿದೆ. ಆದರೆ ನಮ್ಮ ಸಮಾಜಕ್ಕೆ ವ್ಯಸನ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇಪ್ಪತೈದು - ಮೂವತ್ತರ ಅಂಚಿನಲ್ಲಿರುವ ಯುವಕರು, ಹದಿಹರೆಯದ ಹುಡುಗರು ಇಂದು ಚಟಕ್ಕೆ ಬಲಿಯಾಗುತ್ತಿದ್ದಾರೆ.  ಸಮಾಜದಲ್ಲಿ ಇದರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಸಾರದ ಭಾರವನ್ನು ಹೆಗಲ ಮೇಲೆ ಹೊರಬೇಕಾದ ಯುವಕರು ಇಂದು ವ್ಯಸನಕ್ಕೆ ಬಲಿಯಾಗಿ ಅವರ ಕುಟುಂಬ, ಸಂಸಾರವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ವ್ಯಸನದ ಪರಿಣಾಮಗಳು ಭೀಕರವಾಗಿವೆ. ಇದರ ಪರಿಣಾಮಗಳನ್ನು ಸ್ವತಃ ಅನುಭವಿಸುವುದು ಮಾತ್ರವಲ್ಲ, ಪ್ರೀತಿಪಾತ್ರರು, ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರು ಸಹ ಅನುಭವಿಸುತ್ತಾರೆ.

    ಹೆಚ್ಚುತ್ತಿರುವ ಮಾನಸಿಕ ನೋವು, ಹಣದ ದುರ್ಬಳಕೆ, ನೆಮ್ಮದಿ ನಾಶ, ಪ್ರಯತ್ನದ ಕೊರತೆ, ಬದುಕಿನ ಹೋರಾಟಕ್ಕೆ

ಆತ್ಮವಿಶ್ವಾಸದ ಕೊರತೆ, ಯಾವುದೇ ಪರಿಸ್ಥಿತಿಯಲ್ಲಿ ಬದುಕುವ ಮನಸ್ಥಿತಿಯ ಕೊರತೆ ಇವು ಚಟಕ್ಕೆ ಕಾರಣಿಭೂತವಾಗುತ್ತಿವೆ. ಇಂತಹ ಚಟದಿಂದ ಯುವ ಪೀಳಿಗೆ ಇಂದು ನಾಶವಾಗುತ್ತಿದೆ. ಇಂದಿನ ಯುವಕರು ಚಟ ಮತ್ತು ಅದರ ದೂರಗಾಮಿ ಪರಿಣಾಮಗಳಿಂದ ದೂರವಿರಲು ಒಲವು ತೋರುತ್ತಿಲ್ಲ.

     ವ್ಯಸನವು ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಹೆಚ್ಚಿನ ನೋವನ್ನು ಉಂಟುಮಾಡುವ ಒಂದು ದರಾಭ್ಯಾಸವಾಗಿದೆ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ವ್ಯಸನಿಯಾಗಲು ಯಾರೂ ಮದ್ಯ ಸೇವಿಸುವುದಿಲ್ಲ. ಕಾಲ್ಪನಿಕ ಅಥವಾ ನೈಜ ಸಮಸ್ಯೆಗಳಿಂದ ಪಾರಾಗಲು ಮದ್ಯ ಅಥವಾ ಮಾದಕ ಔಷಧಗಳನ್ನು ಬಳಸಲಾಗುತ್ತದೆ. ವ್ಯಸನವು ವಿನಾಶಕಾರಿ ಚಂಡಮಾರುತವಾಗಿದೆ. ಇಂದು ನಮ್ಮ ದೇಶದ ಯುವ ಪೀಳಿಗೆ ಈ ಚಂಡಮಾರುತದಲ್ಲಿ ಸಿಲುಕಿದೆ. ಈ ವಿಧ್ವಂಸಕ ಚಂಡಮಾರುತವನ್ನು ಈಗಲೇ ನಿಲ್ಲಿಸದಿದ್ದರೆ ಹಲವಾರು ಯುವಕ-ಯುವತಿಯರು ಬಲಿಯಾಗುತ್ತಾರೆ. ವ್ಯಸನಿ ಎಂದರೆ ಮೆದುಳನ್ನು ಸ್ತಬ್ಧಗೊಳಿಸುವ ಯಾವುದೇ ಔಷಧವನ್ನು ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿ. ಈ ವ್ಯಕ್ತಿ ತನ್ನ ಸ್ವಂತ ಕಾಲಿನಿಂದ ಒಂದೊಂದೇ ಮೆಟ್ಟಿಲು ಇಳಿಯುತ್ತಾ ಒಂದು ದಿನ ಸಾವಿನ ಕೂಪಕ್ಕೆ ಬೀಳುತ್ತಾನೆ. 

ಡ್ರಗ್ಸ್ ಎಂದರೆ ತಂಬಾಕು, ಸಿಗರೇಟ್, ಆಲ್ಕೋಹಾಲ್, ಗಾಂಜಾ, ಹೇರಾನ್, ನಿದ್ರೆ ಮಾತ್ರೆಗಳು ಇತ್ಯಾದಿ. ಅಂತಹ ಯಾವುದೇ ವಸ್ತುವನ್ನು ಅತಿಯಾಗಿ ಸೇವಿಸುವ ವ್ಯಕ್ತಿಯು ವ್ಯಸನಿ ಎಂಬ ಬಿರುದನ್ನು ಪಡೆಯುತ್ತಾನೆ. ವ್ಯಸನಿ ಸ್ವಯಂ ವಿನಾಶದ ಹಾದಿಯಲ್ಲಿದ್ದಾನೆ ಮತ್ತು ಅದರೊಂದಿಗೆ ಹೆಂಡತಿ, ಮಕ್ಕಳು, ತನ್ನ ಇಡೀ ಕುಟುಂಬ, ಸ್ನೇಹಿತರು ಮುಂತಾದ ಅಸಂಖ್ಯಾತ ಕುಟುಂಬಗಳು ನರಳುತ್ತಿವೆ.

      ಇದೆಲ್ಲವನ್ನೂ ಯೋಚಿಸಿದಾಗ, ವ್ಯಸನದ ವಿನಾಶಕಾರಿ ಬಿರುಗಾಳಿಯ ತೀವ್ರತೆ ಎಷ್ಟು ಭಯಾನಕವಾಗಿದೆ ಎಂದು ನಿಮಗೆ ಅರ್ಥವಾಗುತ್ತದೆ. ಇಚ್ಛಾಶಕ್ತಿಯಿಂದ ಮಾತ್ರ ಮದ್ಯಪಾನವನ್ನು ಜಯಿಸಲು ಸಾಧ್ಯವಿದೆ. ಯುವಕರು ತಮ್ಮನ್ನು ಹೊತ್ತು ಹೆತ್ತು ಜೋಪಾನ ಮಾಡಿದ ತಾಯಿ ತಂದೆಯರ ಕಷ್ಟಗಳ ಬಗ್ಗೆ ಚಿಂತನೆ ಮಾಡುವಂತಾಗಬೇಕು. ಬದುಕಿನಲ್ಲಿ ಯೋಗ್ಯ ಗುರಿ ಇಟ್ಟುಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ತನ್ನ ಕಾಲಿನ ಮೇಲೆ ತಾನು ನಿಂತುಕೊಂಡು ಹಡೆದವರು ಅಭಿಮಾನ ಪಡುವಂತೆ ಬದುಕಬೇಕು. ಪ್ರತಿ ಹಳ್ಳಿಯಲ್ಲಿ ಸಮಾಜ ಸೇವಾ ಸಂಸ್ಥೆಗಳು, ಹಿರಿಯರು, ನಾಯಕರು, ಶೈಕ್ಷಣಿಕ ಸಂಸ್ಥೆಗಳು ಈ ವಿಷಯ ಕೈಗೆತ್ತಿಕೊಳ್ಳಬೇಕು. ಯುವಕರಿಗೆ ವ್ಯಸನದಿಂದ ದೂರ ಮಾಡಲು ಪ್ರಯತ್ನ ಮಾಡಬೇಕು.ಇಲ್ಲದಿದ್ದರೆ, ವ್ಯಸನದ ವಿನಾಶಕಾರಿ ಜಾಲದಲ್ಲಿ ಸಿಲುಕಿರುವ ಇಂದಿನ ಯುವ ಪೀಳಿಗೆಯು ಈ ಮಹಾನ ದೇಶವನ್ನು ಇಪ್ಪತ್ತೊಂದನೇ ಶತಮಾನಕ್ಕೆ ಎಳೆಯುವ ಮೊದಲು ಸಾಯುತ್ತದೆ.

     ಈ ಕಾರಣಕ್ಕಾಗಿ, ಸಮಾಜವು ವ್ಯಸನವನ್ನು ಪ್ರೋತ್ಸಾಹಿಸುವ ಯಾವುದೇ ಸಂಸ್ಕೃತಿ ಅಥವಾ ಸಂಪ್ರದಾಯವನ್ನು ಮುಂದುವರೆಸಬಾರದು. ವ್ಯಸನವು ಇಂದು ಇನ್ನೊಬ್ಬರ ಬಾಗಿಲಲ್ಲಿದ್ದರೂ, ಅದು ಯಾವಾಗ ನಮ್ಮ ಬಾಗಿಲನ್ನು ತಟ್ಟುತ್ತದೆ ಎಂದು ಹೇಳಲಾಗುವುದಿಲ್ಲ. ಆದ್ದರಿಂದ ನಮ್ಮ ಮನೆಯಲ್ಲಿ ಅಥವಾ ನಮ್ಮ ಬಾಗಿಲಲ್ಲಿ, ನಮ್ಮ ನೆರೆಹೊರೆಯಲ್ಲಿ ಅಥವಾ ನಮ್ಮ ಸುತ್ತಮುತ್ತ ಶಾಶ್ವತವಾಗಿ ಬಾರದಂತೆ ನೋಡಿಕೊಳ್ಳುವುದೆ ನಮ್ಮ ಹೊಣೆಗಾರಿಕೆಯಾಗಿದೆ. ನಮ್ಮ ಆಹಾರಕ್ರಮ, ನಮ್ಮ ಸ್ನೇಹಿತರು, ನಮ್ಮ ಸಹಚರರು ಮತ್ತು ನಮ್ಮ ಸಂಗವನ್ನು ಉತ್ತಮವಾಗಿ ಇರಿಸಿಕೊಳ್ಳಬೇಕಾಗಿದೆ. ಸಜ್ಜನರ ಸಂಗವದೂ ಹೆಜ್ಜೇನು ಸವಿದಂತೆ ಎನ್ನುವಂತೆ ಹೆಜ್ಜೇನಿನ ಸವಿ ಸಂಸಾರದಲ್ಲಿ ತಂದು ಸುಸಂಸ್ಕೃತ ಬದುಕು ಬಾಳೋಣ. 

ಬನ್ನಿ ನಿರ್ಣಯ ಮಾಡೋಣ..

    ವ್ಯಸನವನ್ನು ಶಾಶ್ವತವಾಗಿ ತೊಲಗಿಸೋಣ!



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು