ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Prime Minister's List Of India ಭಾರತದ ಪ್ರಧಾನ ಮಂತ್ರಿಗಳ ಹೆಸರುಗಳು

Prime Minister' List Of India ಭಾರತದ ಪ್ರಧಾನ ಮಂತ್ರಿಗಳ ಹೆಸರುಗಳು 

ಪ್ರಧಾನ ಮಂತ್ರಿಗಳು ಒಂದು ದೇಶದ ರಾಜಕೀಯ ಹಿರಿಮೆಯ ಪದವಿಯಾಗಿದೆ. ಭಾರತದ ಪ್ರಧಾನ ಮಂತ್ರಿ ಭಾರತ ಸರ್ಕಾರದ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಅವರು ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ ಮತ್ತು ಸರ್ಕಾರ ನಡೆಸುವ ಪಾಲಿಸಿಗಳನ್ನು ನಿರ್ಧರಿಸುತ್ತಾರೆ. ಪ್ರಧಾನ ಮಂತ್ರಿಗಳು ಸಾಮಾನ್ಯವಾಗಿ ದೇಶದ ಆಡಳಿತ ನಡೆಸುವ ಮುಖ್ಯ ಹುದ್ದೆಯಲ್ಲಿರುತ್ತಾರೆ. ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದ ಒಬ್ಬ ಸದಸ್ಯನನ್ನು ಪ್ರಧಾನ ಮಂತ್ರಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಸ್ವಾತಂತ್ರ್ಯ ಭಾರತದ ಎಲ್ಲ ಪ್ರಧಾನ ಮಂತ್ರಿಗಳ ಹೆಸರುಗಳನ್ನು ಅವರ ಕಾರ್ಯಕಲಾದ ಅವಧಿಯೊಂದಿಗೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಭಾರತದ ಆಡಳಿತದ ಬಗ್ಗೆ, ಇತಿಹಾಸದ ಬಗ್ಗೆ ಅಭ್ಯಾಸ ಮಾಡುವಾಗ ಈ ಮಾಹಿತಿ ಉಪಯೋಗಕ್ಕೆ ಬರುತ್ತದೆ. 

Prime Minister' List Of India ಭಾರತದ ಪ್ರಧಾನ ಮಂತ್ರಿಗಳ ಹೆಸರುಗಳು 

ಅ. ಕ್ರ.

ಹೆಸರು

ಜನನ- ಮರಣ

ಕಾರ್ಯ ಕಾಲಾವಧಿ

ವಿವರಣೆ

1

ಪಂಡಿತ ಜವಾಹರಲಾಲ ನೆಹರು

(1889–1964)

15 ಅಗಷ್ಟ 1947 ರಿಂದ 27 ಮೇ  1964

ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಅತಿ ಹೆಚ್ಚು ಕಾಲಾವಧಿಯಲ್ಲಿ ಪ್ರಧಾನಿಯಾಗಿದ್ದವರು.

16 ವರ್ಷ, 286 ದಿನಗಳು

2

ಗುಲಜಾರಿಲಾಲ್ ನಂದಾ

4 ಜುಲೈ 1898-15 ಜನೇವರಿ 1998

27 ಮೇ 1964 ರಿಂದ 9 ಜೂನ  1964,

ಪಂಡಿತ ನೆಹರು ಅವರ ಮೃತ್ಯುವಿನ ನಂತರ ಪ್ರಥಮ ಬಾರಿಗೆ ಕಾರ್ಯವಾಹಕ ಪ್ರಧಾನಿಯಾಗಿ ಆಯ್ಕೆಯಾದರು.

13 ದಿನಗಳು

3

ಲಾಲ್ ಬಹಾದ್ದೂರ ಶಾಸ್ತ್ರಿ

(1904–1966)

9 ಜೂನ 1964 ದಿಂದ  

11 ಜನೇವರಿ  1966

1 ವರ್ಷ, 216 ದಿನಗಳು

  ಭಾರತ-ಪಾಕ ಯುದ್ಧದಲ್ಲಿ 

ಜಯ ಜವಾನ, ಜಯ ಕಿಸಾನ್ ಘೋಷಣೆ ಮಾಡಿದರು.

 

4.

ಗುಲಜಾರಿಲಾಲ್ ನಂದಾ

4 ಜುಲೈ 1898-15 ಜನೇವರಿ 1998

11 ಜನೇವರಿ  1966 ದಿಂದ  24 ಜನೇವರಿ 1966

ಲಾಲ್ ಬಹಾದ್ದೂರ ಶಾಸ್ತ್ರೀಯವರ ಮೃತ್ಯುವಿನ ನಂತರ ಎರಡನೆಯ ಬಾರಿಗೆ ಕಾರ್ಯವಾಹಕ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

13 ದಿನಗಳು

5

ಇಂದಿರಾ ಗಾಂಧಿ

(1917–1984)

24 ಜನೇವರಿ 1966 ದಿಂದ  24 ಮಾರ್ಚ 1977

ಪ್ರಥಮ ಮಹಿಳಾ ಪ್ರಧಾನಮಂತ್ರಿ

11 ವರ್ಷ, 59 ದಿನಗಳು

6

ಮೊರಾರಜಿ ದೇಸಾಯಿ

(1896–1995)

24 ಮಾರ್ಚ 1977 ರಿಂದ  28 ಜುಲೈ  1979 2ವರ್ಷ, 126 ದಿನಗಳು

81 ನೇ ಇಳಿವಯಸ್ಸಿನಲ್ಲಿ ಪ್ರಧಾನಿಯಾದವರು. ಕಾರ್ಯಾಲದಲ್ಲಿಯೇ ರಾಜೀನಾಮೆ ನೀಡಿದರು.

7

        ಚರಣಸಿಂಗ

(1902–1987)

28 ಜುಲೈ 1979 ದಿಂದ 14 ಜನೇವರಿ  1980

ಜಾತ್ಯಾತೀತ ಜನತಾ ಪಕ್ಷದ ನಾಯಕರು  

170 ದಿನಗಳು

8

ಇಂದಿರಾ ಗಾಂಧಿ

(1917–1984)

14 ಜನೇವರಿ 1980 ದಿಂದ 31 ಅಕ್ಟೋಬರ 1984

ಎರಡನೆಯ ಬಾರಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. 

4 ವರ್ಷ, 291 ದಿನಗಳು

9

ರಾಜೀವ ಗಾಂಧಿ

(1944–1991)

31 ಅಕ್ಟೋಬರ  1984 ದಿಂದ 2 ಡಿಸೆಂಬರ  1989

ಯುವಕ ಪ್ರಧಾನಿ 40 ವರ್ಷದಲ್ಲಿ

5 ವರ್ಷ, 32 ದಿನಗಳು

10


ವ್ಹಿ. ಪಿ. ಸಿಂಗ

(1931–2008)

2 ಡಿಸೆಂಬರ 1989 ದಿಂದ  10 ನವ್ಹೆಂಬರ  1990

First PM to step down after a vote of no confidence

343 ದಿನಗಳು

11

ಚಂದ್ರಶೇಖರ

(1927–2007)

10 ನವ್ಹೆಂಬರ  1990 ದಿಂದ 21 ಜೂನ 1991

ಸಮಾಜವಾದಿ ಪಾರ್ಟಿ ವತಿಯಿಂದ

223 ದಿನಗಳು

12

ಪಿ. ವ್ಹಿ. ನರಸಿಂಗರಾವ

(1921–2004)

21 ಜೂನ 1991 ದಿಂದ 16 ಮೇ  1996

ದಕ್ಷಿಣ ಭಾರತದಿಂದ ಪ್ರಥಮ ಆಯ್ಕೆ

4 ವರ್ಷ, 330 ದಿನಗಳು

13


ಅಟಲ್ ಬಿಹಾರಿ ವಾಜಪೇಯಿ

(1924- 2018)

16 ಮೇ 1996 ದಿಂದ 1 ಜೂನ 1996

ಅಲ್ಪ ಕಾಲಾವಧಿಯ ಪ್ರಧಾನಮಂತ್ರಿ

16 ದಿನಗಳು

14


ಎಚ್. ಡಿ. ದೇವೇಗೌಡ

(ಜನನ 1933)

1 ಜೂನ 1996 ದಿಂದ 21 ಎಪ್ರಿಲ 1997

ಜನತಾ ದಳ

324 ದಿನಗಳು

15

ಇಂದ್ರ ಕುಮಾರ ಗುಜರಾಲ

(1919–2012)

21 ಏಪ್ರಿಲ್ 1997 ದಿಂದ 19 ಮಾರ್ಚ  1998 

------

332 ದಿನಗಳು

16


ಅಟಲ್ ಬಿಹಾರಿ ವಾಜಪೇಯಿ

(1924-2018)

19 ಮಾರ್ಚ್  1998 ದಿಂದ  22 ಮೇ 2004 

 ಭಾರತೀಯ ಜನತಾ ಪಕ್ಷದ ಪ್ರಧಾನ ಮಂತ್ರಿ

6 ವರ್ಷ, 64 ದಿನಗಳು

17


ಮನ ಮೋಹನ ಸಿಂಗ

(born 1932)

22 ಮೇ 2004 ದಿಂದ 26 ಮೇ  2014   

 ಪ್ರಥಮ ಶಿಖ್ ಪ್ರಧಾನಮಂತ್ರಿ

10 ವರ್ಷ, 4 ದಿನಗಳು

18

ನರೇಂದ್ರ ದಾಮೋದರ ಮೋದಿ

(born 1950)

26 ಮೇ 2014 – ವರ್ತಮಾನದ ವರೆಗೆ

ಎರಡು ಸಲ ಪ್ರಧಾನ ಮಂತ್ರಿ ಪದಕ್ಕೆ ಆಯ್ಕೆಯಾದ ನಾಲ್ಕನೆಯ ವ್ಯಕ್ತಿ ಹಾಗೂ ವಿಶ್ವ ಮಾನ್ಯ ನಾಯಕ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು