Teacher’s Day Special ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಸೆಪ್ಟೆಂಬರ್ 05 ಶಿಕ್ಷಕರ ದಿನಾಚರಣೆ & ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ 135ನೇ ಜನ್ಮದಿನಾಚರಣೆ ಪ್ರಯುಕ್ತ ಹಾರ್ದಿಕ ಶುಭಾಶಯಗಳು Happy Teachers Day. It’s Teacher’s Day
ನಮ್ಮ ದೇಶದ ಶಿಕ್ಷಣ ವ್ಯವಸ್ಥೆಗೆ ಅಮೂಲ್ಯ
ಕೊಡುಗೆ ನೀಡಿದ ಶ್ರೇಷ್ಠ ಶಿಕ್ಷಕರು, ಶಿಕ್ಷಣ ತಜ್ಞರು ಹಾಗೂ ಮಾಜಿ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ
ರಾಧಾಕೃಷ್ಣನ್ ಅವರ ಜನ್ಮದಿನವನ್ನು ದೇಶಾದ್ಯಂತ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ.
ಸಮಾಜದ ಪ್ರತಿಯೊಬ್ಬ ಸಾಧಕನ ಹಿಂದೆಯು ಶಿಕ್ಷಕನ
ಶ್ರಮ ಇದ್ದೆ ಇರುತ್ತದೆ. ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೊ, ಮಕ್ಕಳ ಬೌದ್ಧಿಕ ಜ್ಞಾನವನ್ನು ವೃದ್ಧಿಸುವಲ್ಲಿ
ಶಿಕ್ಷಕನ ಪಾತ್ರವೂ ಸಹ ಅಷ್ಟೇ ಮುಖ್ಯ. ಜಾತಿ, ಲಿಂಗ,
ಧರ್ಮ ಮತ್ತು
ಪ್ರಾಂತ್ಯ ಮುಂತಾದವುಗಳನ್ನು ಲೆಕ್ಕಿಸದೆ ಎಲ್ಲಾ ಮಕ್ಕಳನ್ನು ಸಮಾನ ರೀತಿಯಲ್ಲಿ ನೋಡುವನೇ ಆದರ್ಶ
ಶಿಕ್ಷಕ. ಶಿಕ್ಷಕರ ದಿನಾಚರಣೆಯು ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಸರ್ವಪಲ್ಲಿ
ರಾಧಾಕೃಷ್ಣನ್ ಅವರ ಜನ್ಮದಿನದ ಗೌರವಾರ್ಥವಾಗಿ ಪ್ರತಿ ವರ್ಷ ಭಾರತದಾದ್ಯಂತ ಸೆಪ್ಟೆಂಬರ್ 05 ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಆದರೆ ವಿಶ್ವ ಶಿಕ್ಷಕರ ದಿನಾಚರಣೆಯನ್ನು ಅಕ್ಟೋಬರ್ 05 ರಂದು ಆಚರಿಸುವರು.
"Teaching is a very noble profession
that shapes the character, calibre and future of an individual." - Dr. APJ
Abdul Kalam.
ಇಂದು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ದೇಶದ
ಶೂದ್ರ, ಅಸ್ಪೃಶ್ಯರ ಹೆಣ್ಣು ಮಕ್ಕಳಿಗೆ ಶಾಲೆಯನ್ನು
ತೆರೆದು, ಶಿಕ್ಷಣ ನೀಡಿ ಇಂದಿನ ಗ್ರೂಪ್ "ಡಿ"
ಹಿಡಿದು ರಾಷ್ಟ್ರಪತಿ ಹುದ್ದೆಯವರೆಗೆ ಹೆಣ್ಣು ಮಕ್ಕಳು ಉನ್ನತ ಹುದ್ದೆಯನ್ನು
ಅಲಂಕರಿಸಿದ್ದಾರೆ,,, ಎಂದರೆ ಅದಕ್ಕೆ ನನ್ನವ್ವ ಅಕ್ಷರದಾತೆ ಮಾತೆ, ಕ್ರಾಂತಿಜ್ಯೋತಿ ಸಾವಿತ್ರಿಬಾಯಿಫುಲೆಯೇ ಕಾರಣ. ಆದ್ದರಿಂದ, ಇಂದಿನ ಶಿಕ್ಷಕರ
ದಿನಾಚರಣೆಯ ಸಂದರ್ಭದಲ್ಲಿ ಎಲ್ಲಾ ಮಹಿಳಾ ಶಿಕ್ಷಕರು ಮತ್ತು ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕಿಯರೆಲ್ಲರೂ
ಈ ತಾಯಿಯನ್ನು ನೆನಪು ಮಾಡಿಕೊಳ್ಳದಿದ್ದರೆ ಶಿಕ್ಷಕರ ದಿನಾಚರಣೆ ಪೂರ್ಣವಾಗುವುದಿಲ್ಲ. ಹಾಗಾಗಿ ಅಕ್ಷರದ ಅವ್ವನ
ನೆನಪಿನೊಂದಿಗೆ ನನ್ನೆಲ್ಲಾ ಶಿಕ್ಷಕ ಬಂಧುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
-Article By VILAS R. RATHOD.
0 ಕಾಮೆಂಟ್‌ಗಳು
ಧನ್ಯವಾದಗಳು