ಆಗಷ್ಟ ತಿಂಗಳ ಶಿಕ್ಷಣ ಪರಿಷದ ತೋಳಣೂರಉರ್ದು ಶಾಲೆಯಲ್ಲಿ ಆಯೋಜನೆ
ತೋಳಣೂರ ಕೇಂದ್ರ
ಅಕ್ಕಲಕೋಟ: ಇಂದು ದಿನಾಂಕ 29/08/2023 ರಂದು ತೋಳಣೂರ ಕೇಂದ್ರದ ಆಗಷ್ಟ 2023 ರ ಮಾಸಿಕ ಶಿಕ್ಷಣ ಪರಿಷದವು ಜಿ. ಪ. ಪ್ರಾಥಮಿಕ ಉರ್ದು ಶಾಲೆ, ತೋಳಣೂರದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ವಿಸ್ತಾರ ಅಧಿಕಾರಿ ಶ್ರೀ. ಭೀಮಾಶಂಕರ ವಾಲೆ ಸಾಹೇಬರು ವಹಿಸಿದರು. ಮುಖ್ಯ ಉಪಸ್ಥಿತಿಯಲ್ಲಿ ಕೇಂದ್ರ ಪ್ರಮುಖ ಶ್ರೀ. ಬಸವರಾಜ ಗೌಡನಳ್ಳಿ ಸರ್, ಸಿದ್ದರಾಯ್ ಬಿರಜಾದಾರ್, ವಿರೂಪಾಕ್ಷಿ ಸ್ವಾಮಿ ಸರ್, ಶ್ರೀ ಸಿದ್ಧಾರಾಮೇಶ್ವರ್ ಪ್ರಶಾಲೆಯ ಮುಖ್ಯ ಗುರುಗಳು ಚಲಗೆರಿ ಸರ್, ಸುಧಾಕರ ಗವಳಿ ಇವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪ್ರಥಮದಲ್ಲಿ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಪ್ರತಿಮೆಗೆ ಅತಿಥಿಗಳ ಅಮೃತ ಹಸ್ತದಿಂದ ಪೂಜೆ ಮಾಡಲಾಯಿತು. ಜಿ. ಪ. ಪ್ರಾಥಮಿಕ ಕನ್ನಡ ಶಾಲೆ ತೋಳಣೂರ ಶಾಲೆಯ ವಿದ್ಯಾರ್ಥಿನಿಯರು ಸ್ವಾಗತ ಗೀತೆಯೊಂದಿಗೆ ಅತಿಥಿಗಳ ಸ್ವಾಗತ ಮಾಡಿದರು. ಶ್ರೀ ಬಸವರಾಜ್ ಗೌಡನಳ್ಳಿ ಸರ್ ಇವರು ಪ್ರಶಾಸಕಿಯ ಸೂಚನೆಗಳನ್ನು ಅನುಸರಿಸಿ ಮಾರ್ಗದರ್ಶನ ಮಾಡಿದರು. ಶ್ರೀ. ಗುಂಡಪ್ಪ ಪೋತದಾರ ಇವರು ಗಣಿತ ಪೆಟ್ಟಿಗೆಯ ಉಪಯೋಗದ ಕುರಿತು ಮಾರ್ಗದರ್ಶನ ಮಾಡಿದರು. ಶ್ರೀ ಭುಜಬಳ ಸರ್ ಇವರು ಪಠ್ಯ ಪುಸ್ತಕದಲ್ಲಿರುವ ಬಿಳಿ ಪೃಷ್ಠಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಶ್ರೀ. ದಿನೇಶ ಚವ್ಹಾಣ ಸರ್ ಇವರು ಉತ್ಕೃಷ್ಟ ವಿಡಿಯೋ ನಿರ್ಮಿತಿ ಸ್ಪರ್ಧೆ ಕುರಿತು ಮಾರ್ಗ ದರ್ಶನ ಮಾಡಿದರು. ಶ್ರೀಮತಿ ರಾಜಶ್ರೀ ಸಲಗರೆ ಇವರು ನವೋಪಕ್ರಮ ಕುರಿತು ಮಾರ್ಗದರ್ಶನ ಮಾಡಿದರು. ಅಧ್ಯಕ್ಷ ಸ್ಥಾನದಲ್ಲಿ ಶ್ರೀ ವಾಲೆ ಸಾಹೇಬರು ವೇಳೆಗೆ ಸರಿಯಾಗಿ ಶಾಲೆಗೆ ಬನ್ನಿ, ಎಲ್ಲ ಅಭಿಲೇಖಗಳನ್ನು ಪೂರ್ಣಮಾಡಿಕೊಳ್ಳಿ, ಆಧಾರ ಕಾರ್ಡ್ update, ಸರಳ ಪೋರ್ಟಲ್ ಅಪಡೆಟ್, udise plus ಅಪಡೆಟ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಕಳೆದ ವರ್ಷದಲ್ಲಿ ಶಿಷ್ಯವೃತ್ತಿ ಪರೀಕ್ಷೆಯಲ್ಲಿ ಜಿಲ್ಲೆಯ ಮೇರಿಟನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದೀಕ್ಷನರಿ ಹಾಗೂ ಹೂಗುಚ್ಛ ನೀಡಿ ಸನ್ಮಾನ ಮಾಡಲಾಯಿತು. ಉರ್ದು ಶಾಲೆಯ ಮುಖ್ಯಾದ್ಯಾಪಕರು ಶ್ರೀ ಬೇಪಾರಿ ಸರ್ ಇವರು ನಿರೂಪಣೆ ಮಾಡಿದರೆ ಕನ್ನಡ ಶಾಲೆಯ ಶಿಕ್ಷಕರಾದ ಶ್ರೀ. ರಾಜೇಂದ್ರ ಪವಾರ ಸರ್ ವಂದನಾರ್ಪಣೆ ಮಾಡಿದರು.
1 ಕಾಮೆಂಟ್‌ಗಳು
Super writing sirji
ಪ್ರತ್ಯುತ್ತರಅಳಿಸಿಧನ್ಯವಾದಗಳು