ಬಾಲಭಾರತಿ ನಾಲ್ಕನೆಯ ಇಯತ್ತೆ ಸ್ವಾಧ್ಯಾಯ ಮಾಲೆ
ಪಾಠ 2. ೨ ಗೆಳೆತನ 2. GELETANA
೨ ಗೆಳೆತನ
ಶಬ್ದಗಳ ಅರ್ಥ
ಬೃಹದಾಕಾರ - ದೊಡ್ಡ ಆಕಾರ; ತಾಗಿಸಿ- ಅಂಟಿಸಿ; ಬೆರಗಾಗು- ಅಚ್ಚರಿಯಾಗು; ಅನ್ನೋನ್ಯ-
ಪ್ರೀತಿಯಿಂದ
ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ
ಉತ್ತರ ಬರೆಯಿರಿ.
ಅ) ಪಟ್ಟದಾನೆಯ ಲಾಯಕ್ಕೆ ಯಾರು ಬಂದರು?
ಉತ್ತರ: ಪಟ್ಟದಾನೆಯ ಲಾಯಕ್ಕೆ ನಾಯಿಯೊಂದು ಬಂದಿತು.
ಆ) ನಾಯಿ ಏಕೆ ಬಡಕಲಾಗಿತ್ತು?
ಉತ್ತರ: ನಾಯಿಗೆ ಸರಿಯಾಗಿ ಅನ್ನ ದೊರಕದೇ ಇದ್ದುದರಿಂದ ಅದು
ಬಡಕಲಾಗಿತ್ತು.
ಇ) ನಾಯಿ ಅನ್ನ ತಿನ್ನುವಾಗ ಆನೆ ಏನು ಮಾಡುತ್ತಿತ್ತು?
ಉತ್ತರ: ನಾಯಿ ಅನ್ನ ತಿನ್ನುವಾಗ ಆನೆ ಪ್ರೀತಿಯಿಂದ ಅದರ
ಬೆನ್ನು ಸವರುತ್ತಿತ್ತು.
ಈ) ನಾಯಿಯನ್ನು ಯಾರು ಒಯ್ದರು?
ಉತ್ತರ: ಮಾವುತನ ಸ್ನೇಹಿತ ನಾಯಿಯನ್ನು ತನ್ನ ಮನೆಗೆ
ಒಯ್ದರು.
ಉ) ರಾಜನು ಮಂತ್ರಿಗೆ ಏನೆಂದು ಆಜ್ಞೆ ಮಾಡಿದನು?
ಉತ್ತರ: ಹೇಗಾದರೂ ಮಾಡಿ
ಪಟ್ಟದ ಆನೆಯನ್ನು ಗುಣಪಡಿಸುವಂತೆ ರಾಜನು ಮಂತ್ರಿಗೆ ಆಜ್ಞೆ ಮಾಡಿದನು.
ಪ್ರಶ್ನೆ ೨) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಆನೆಯು ತನ್ನ ಅನ್ನದ ಮುದ್ದೆಗಳನ್ನು ನಾಯಿಯ ಕಡೆಗೆ ಏಕೆ ಸರಿಸಿತು ?
ಉತ್ತರ: ಒಂದು ದಿವಸ ಪಟ್ಟದ ಆನೆಯ ಬಳಿಗೆ ಬಂದ ಬಡಕಲು ದೇಹದ
ನಾಯಿಯನ್ನು ಕಂಡು ಆನೆಗೆ ಕನಿಕರ ಬಂದಿತು. ಹಸಿದ ನಾಯಿ ಆಶಾಭಾವದಿಂದ ನೋಡುತ್ತಿದ್ದ ನಾಯಿಯ ಮೇಲೆ
ಕನಿಕರ ಹುಟ್ಟಿ ಆನೆಯು ತಾನು ತಿನ್ನುತ್ತಿದ್ದ ಅನ್ನದ ಮುದ್ದೆಗಳನ್ನು ನಾಯಿಯ ಕಡೆಗೆ ಸರಿಸಿತು.
ಆ) ಆನೆ ಮತ್ತು ನಾಯಿಯ ಸ್ನೇಹದ ಬಗ್ಗೆ ಬರೆಯಿರಿ ?
ಉತ್ತರ: ಆನೆ ತನ್ನ ಅನ್ನದ ಮುದ್ದೆಗಳಲ್ಲಿ ಒಂದೆರಡು ಅನ್ನದ
ಮುದ್ದೆಗಳನ್ನು ದಿನಾಲು ನಾಯಿಗೆ ಕೊಡುತ್ತಿತ್ತು. ನಾಯಿ ತಿನ್ನುವಾಗ ಆನೆ ಪ್ರೀತಿಯಿಂದ ಅದರ
ಬೆನ್ನು ಸವರುತ್ತಿತ್ತು. ನಾಯಿ ಸಹ ಸೊಂಡಿಲನ್ನು ನೆಕ್ಕುತ್ತಿತ್ತು.ಅನ್ನ ತಿಂದ ನಂತರ ಒಂದು
ಗಳಿಗೆ ಮೈಗೆ ಮೈ ತಾಗಿಸಿ ಮಲಗಿ ನಿದ್ರೆ ಮಾಡುತ್ತಿದ್ದವು. ಬೃಹದಾಕಾರದ ಆನೆಯೂ, ಅಲ್ಪಾಕಾರದ ನಾಯಿಯೂ ಆತ್ಮೀಯತೆಯಿಂದ ಆಟವಾಗುತ್ತಿದ್ದವು.
ಇ) ಆನೆ ಅನ್ನದ ಮುದ್ದೆಗಳನ್ನು ಏಕೆ ಮುಟ್ಟಲಿಲ್ಲ ?
ಉತ್ತರ: ಮಾವುತನ ಸ್ನೇಹಿತ ನಾಯಿಯನ್ನು ಒಯ್ದ ನಂತರ ಅದು
ಮರುದಿನ ಊಟದ ವೇಳೆಯಾದರೂ ಬರಲಿಲ್ಲ. ಅದಕ್ಕೆ ಏನಾದರೂ ಕೇಡು ಆಗಿದೆ ಎಂದು ಆನೆಗೆ ಅನಿಸಿತು. ತನ್ನ
ಸ್ನೇಹಿತ ಬಾರದ್ದನ್ನು ನೆನೆದು ಸಂಕಟಪಡತೊಡಗಿತು. ಮಾವುತ ತಂದಿಟ್ಟ ಅನ್ನದ ಮುದ್ದೆಗಳನ್ನು
ಮುತ್ತಲಿಲ್ಲ.
ಈ) ಮಾವುತನು ಮಂತ್ರಿಗೆ ಏನೆಂದು ಉತ್ತರಿಸಿದನು ?
ಉತ್ತರ: ಮಾವುತನು ಮಂತ್ರಿಗೆ ಇಲ್ಲಿ ದಿನಾಲು ಒಂದು ನಾಯಿ
ಬರುತ್ತಿತ್ತು. ಈಗ ಎರಡು ಮೂರು ದಿನಗಳಿಂದ ಅದು ಇಲ್ಲಿಗೆ ಬಂದಿಲ್ಲ ಎಂದು ಉತ್ತರಿಸಿದನು.
ಉ) ಮರಳಿ ಬಂದ ನಾಯಿಯನ್ನು ಕಂಡು ಆನೆಗೆ ಆದ ಸಂತೋಷವನ್ನು ವರ್ಣಿಸಿರಿ.
ಉತ್ತರ: ತನ್ನ ಪ್ರಾಣ ಸ್ನೇಹಿತ ಮರಳಿ ಬಂದುದನ್ನು ನೋಡಿ
ಆನೆಗೆ ಬಹಳ ಆನಂದವಾಯಿತು. ನಾಯಿಯನ್ನು ಸೊಂಡಿಲಿನಿಂದ ಎಳೆದು ತಬ್ಬಿಕೊಂಡಿತ್ತು. ನಾಯಿ ಆನೆಯ
ಮೈಗೆ ಅಪ್ಪಿಕೊಂಡಿತು. ಅಗಲಿದ ಎರಡು ಜೀವಗಳು ಒಂದಾಗಿ ಆನಂದಭಾಷ್ಪ ಸುರಿಸಿದವು.
ಪ್ರಶ್ನೆ ೩) ಕೆಳಗಿನ ಬಿಟ್ಟ ಸ್ಥಳ ತುಂಬಿರಿ.
ಅ) ನಾಯಿ ಅನ್ನ ತಿನ್ನುವಾಗ ಆನೆ ಪ್ರೀತಿಯಿಂದ ಅದರ ಬೆನ್ನು ಸವರುತ್ತಿತ್ತು.
ಆ) ಆನೆಯ ದುಸ್ಥಿತಿ ಕಂಡು ಹಿಡಿಯುವಲ್ಲಿ
ರಾಜ ವೈದ್ಯರೂ ವಿಫಲರಾದರು.
2) ಡಂಗುರದ ವಿಷಯವನ್ನು ಕೇಳಿ ಮಾವುತನ ಸ್ನೇಹಿತನು ಗಾಬರಿಯಾದನು.
ಈ) ಆನೆ ಮತ್ತು ನಾಯಿ ಅನ್ಯೋನ್ಯವಾಗಿ ಬಾಳಿದವು.
ಪ್ರಶ್ನೆ ೪) ಕೆಳಗಿನ ವಾಕ್ಯಗಳಲ್ಲಿ ಯಾವ ವಿರಾಮ ಚಿಹ್ನೆಗಳು ಬರುತ್ತವೆ? ಚಿಹ್ನೆಗಳನ್ನು ಬಳಸಿ ವಾಕ್ಯ ಪುನ: ಬರೆಯಿರಿ.
ಅ) ಶಂಕರ ಸುಂದರ ಮತ್ತು ಕೇಶವ ಮೂವರು ಗೆಳೆಯರು ಕೂಡಿಕೊಂಡು ಜಾತ್ರೆಗೆ
ಹೋದರು
ಉತ್ತರ: ಶಂಕರ, ಸುಂದರ ಮತ್ತು ಕೇಶವ ಮೂವರು ಗೆಳೆಯರು ಕೂಡಿಕೊಂಡು ಜಾತ್ರೆಗೆ
ಹೋದರು.
ಆ) ಅಬ್ಬಾ ತಾಜಮಹಲ ಅದೆಷ್ಟು ಸುಂದರವಾಗಿದೆ.
ಉತ್ತರ: ಅಬ್ಬಾ! ತಾಜಮಹಲ
ಅದೆಷ್ಟು ಸುಂದರವಾಗಿದೆ.
ಇ) ಆಕಾಶ ನೀನು ರಜೆಯಲ್ಲಿ ಅಜ್ಜಿಯ ಊರಿಗೆ ಹೋಗುವೆಯಾ
ಉತ್ತರ: ಆಕಾಶ, ನೀನು ರಜೆಯಲ್ಲಿ ಅಜ್ಜಿಯ ಊರಿಗೆ ಹೋಗುವೆಯಾ?
ಈ) ಅಬ್ಬಾ ಈ ಅಲ್ಪಾಯುಷಿಗಳಿಗೆ ಅದೆಂಥ ಆಲೋಚನೆ ಅದೆಂಥ ಅವಿವೇಕ
ಉತ್ತರ: ಅಬ್ಬಾ! ಈ
ಅಲ್ಪಾಯುಷಿಗಳಿಗೆ ಅದೆಂಥ ಆಲೋಚನೆ ಅದೆಂಥ ಅವಿವೇಕ?
ಉಪಕ್ರಮ
ಜಿಂಕೆ, ಆಮೆ,
ಕಾಗೆ ಮತ್ತು ಇಲಿ
ಇವುಗಳ ಗೆಳೆತನದ ಕಥೆಯನ್ನು ಶಿಕ್ಷಕರಿಂದ/ಪಾಲಕರಿಂದ ಕೇಳಿ ತಿಳಿದುಕೊಳ್ಳಿರಿ.
• ನುಡಿಮುತ್ತು
•
·
ಸ್ನೇಹ ಮತ್ತು ಪ್ರೀತಿ ಇವು ಜೀವನದ ಅಮೂಲ್ಯ ರತ್ನಗಳು
·
ಗುಣವರಿತು ಗೆಳೆತನ ಮಾಡು
0 ಕಾಮೆಂಟ್‌ಗಳು
ಧನ್ಯವಾದಗಳು