ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ನಾಲ್ಕನೆಯ ಇಯತ್ತೆ Kannada ಪಾಠ 1. ೧ ನನ್ನ ಬಯಕೆ (ಕವಿತೆ) NANNA BAYAKE

 ಬಾಲಭಾರತಿ ನಾಲ್ಕನೆಯ ಇಯತ್ತೆ  Kannada ಪಾಠ 1. ೧ ನನ್ನ ಬಯಕೆ (ಕವಿತೆ) NANNA BAYAKE 


೧ ನನ್ನ ಬಯಕೆ (ಕವಿತೆ)

ಶಬ್ದಗಳ ಅರ್ಥ

ವೈದ್ಯ - ಡಾಕ್ಟರ್ : ಮದ್ದು - ಔಷಧಿ; ಮಾತ್ರೆ, ಗುಳಿಗೆ ; ಸದಾಚಾರ - ಒಳ್ಳೆಯ ಆಚಾರ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.

) ಜಗದಲ್ಲಿ ಶಾಂತಿಯನ್ನು ನೆಲೆಸಲು ಯತ್ನಿಸುವವ ಯಾರು?

ಉತ್ತರ: ಜಗದಲ್ಲಿ ಶಾಂತಿಯನ್ನು ನೆಲೆಸಲು ಯತ್ನಿಸುವವ ಪೊಲೀಸರು.

ಆ) ನ್ಯಾಯಕ್ಕಾಗಿ ದುಡಿಯುವವ ಯಾರು ?

ಉತ್ತರ: ನ್ಯಾಯಕ್ಕಾಗಿ ದುಡಿಯುವವ ಕಪ್ಪು ಕೋಟು ಧರಿಸುವ ವಕೀಲರು.

ಇ) ಜಗಕೆ ಅನ್ನವನ್ನು ನೀಡುವವನು ಯಾರು?

ಉತ್ತರ: ಜಾಗಕ್ಕೆ ಅನ್ನವನ್ನು ನೀಡುವ ಅನ್ನದಾತ ರೈತ.

ಪ್ರಶ್ನೆ ೨) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ವೈದ್ಯರ ಕಾರ್ಯಗಳನ್ನು ತಿಳಿಸಿರಿ.

ಉತ್ತರ: ವೈದ್ಯರು ರೋಗಿಗಳ ಸೇವೆ ಮಾಡುವರು. ರೋಗಿಗೆ ಮದ್ದು, ಮಾತ್ರೆ ಕೊಟ್ಟು ರೋಗವನ್ನು ದೂರ ಮಾಡುವರು.

ಆ) ಪೋಲೀಸರ ಉಡುಪಿನ ಬಗ್ಗೆ ಬರೆಯಿರಿ.

ಉತ್ತರ: ಪೊಲೀಸರು ಖಾಕಿ ಬಟ್ಟೆ ಧರಿಸುತ್ತಾರೆ.

ಇ) ಮಗುವಿನ ಬಯಕೆಗಳು ಯಾವವು?

ಉತ್ತರ: ಮಗುವಿಗೆ ವೈದ್ಯನಾಗುವ, ಪೊಲೀಸನಾಗಿ ಶಾಂತಿ ನೆಲೆಸುವ, ಶಿಕ್ಷಕಿಯಾಗಿ ಮಕ್ಕಳೊಡನೆ ಬೆರೆಯುವ, ವಕೀಲನಾಗಿ ನ್ಯಾಯ ಕೊಡುವ ಹಾಗೂ ರೈತನಾಗಿ ಜಾಗಕ್ಕೆ ಅನ್ನವನ್ನು ನೀಡುವ ಬಯಕೆಗಳು ಇವೆ.

ಪ್ರಶ್ನೆ ೩) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣಗೊಳಿಸಿರಿ.

        ನಾನು ಶಿಕ್ಷಕಿಯಾಗುವೆ

        ಸದಾಚಾರದಿ ನಡೆಯುವೆ

        ಮಕ್ಕಳೊಡನೆ ಬೆರೆಯುವೆ

        ವಿದ್ಯೆಬುದ್ದಿ ಕಲಿಸುವೆ.

ಪ್ರಶ್ನೆ ೪) ಉದಾಹರಣೆಯಲ್ಲಿ ತೋರಿಸಿದಂತೆ ಕೆಳಗಿನ ಶಬ್ದ ಸಮೂಹಗಳಿಗೆ ಒಂದೇ ಶಬ್ದ బరేయిరి.

ಉದಾ. : ದವಸ ಧಾನ್ಯ ಬೆಳೆಯುವವರು - ರೈತರು

ಅ) ಸತ್ಯವಾದ ಮಾಡುವವರು – ವಕೀಲ

ಆ) ವಿದ್ಯೆ ಬುದ್ದಿ ಕಲಿಸುವವರು – ಶಿಕ್ಷಕರು

ಇ) ಕಳ್ಳರನ್ನು ಹಿಡಿಯುವವರು – ಪೊಲೀಸರು

ಈ) ರೋಗಿಯ ಸೇವೆ ಮಾಡುವವರು – ವೈದ್ಯರು

ಉಪಕ್ರಮ

ಕೆಳಗೆ ಕೊಟ್ಟ ಚೌಕಟ್ಟಿನಲ್ಲಿಯ ಅಕ್ಷರಗಳಿಂದ ವೃತ್ತಿಗಳ ಹೆಸರು ಬರೆಯಿರಿ.


ಉದಾ. : ವೈದ್ಯ

ಚಾ

ರೈ

ಕ್ಷ

 ವೈ

ವಾ

ಶಿ

ಪೋ

ಕಿ

ನಿ

ಕೀ

ದ್ಯ

ಮಾ

ಲೀ

 

ನುಡಿಮುತ್ತು

·        ಗುರಿ ಇಲ್ಲದ ಜೀವನ ಚುಕ್ಕಾಣಿಯಿಲ್ಲದ ಹಡಗಿನಂತೆ

·        ಇಂದಿನ ಬಾಲಕ ನಾಳಿನ ನಾಗರಿಕ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು