ಪಾಠ ೨
ಶಿವಪೂರ್ವಕಾಲದ ಭಾರತ
ಪ್ರಶ್ನೆ೧:- ಹೆಸರು
ಬರೆಯಿರಿ.
೧) ಗೊಂಡವನದ ರಾಣಿ – ರಾಣಿ ದುರ್ಗಾವತಿ
೨) ಉದಯಸಿಂಹನ ಮಗ – ಮಹಾರಾಣಾ ಪ್ರತಾಪ
೩) ಮುಘಲ ಸಾಮ್ರಾಜ್ಯದ ಸಂಸ್ಥಾಪಕ- ಬಾಬರ
೪) ಬಹಮನಿ ರಾಜ್ಯದ ಮೊದಲನೇಯ ಸುಲ್ತಾನ- ಹಸನ ಗಂಗು
೫) ಗುರು ಗೊವಿಂದ ಸಿಂಗರು ಸ್ಥಾಪಿಸಿದ ದಳ – ಖಾಲಸಾದಳ
ಪ್ರಶ್ನೆ೨:-
ಗುಂಪಿನಲ್ಲಿ ಸೇರದ ಪರ್ಯಾಯವನ್ನು ಬರೆಯಿರಿ.
೧) ಸುಲ್ತಾನ ಮಹಮ್ಮದ, ಕುತುಬುದ್ಧಿನ ಐಬಕ, ಮಹಮ್ಮದ ಘೋರಿ, ಬಾಬರ
ಉತ್ತರ:- ಬಾಬರ
೨) ಆದಿಲಶಾಹಿ, ನಿಜಾಮಶಾಹಿ,ಸುಲ್ತಾನಶಾಹಿ,ಬರೀದಶಾಹಿ
ಉತ್ತರ:- ಸುಲ್ತಾನ ಶಾಹಿ
೩) ಅಕಬರ, ಹುಮಾಯೂನ,ಶೇರಶಾಹ,ಔರಂಗಜೇಬ
ಉತ್ತರ:- ಶೇರಶಾಹ
ಪ್ರಶ್ನೆ೩:- ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
೧) ವಿಜಯನಗರ ಮತ್ತು ಬಹಮನಿ ಈ ರಾಜ್ಯಗಳು ಏಕೆ ಉದಯವಾದವು?
ಉತ್ತರ:- ದಿಲ್ಲಿಯ ತುಘಲಕನ
ಕಾಲದಲ್ಲಿ ದಕ್ಷಿಣದಲ್ಲಿಯ ರಾಜಕೀಯ ಅಸ್ಥಿರತೆಯ ಲಾಭವನ್ನು ಪಡೆದು ವಿಜಯನಗರ ಮತ್ತು ಬಹಮನಿ ಈ
ರಾಜ್ಯಗಳು ಉದಯಕ್ಕೆ ಬಂದವು.
೨) ಮಹಮೂದ ಗಾವಾನನು ಯಾವ ಸುಧಾರಣೆಗಳನ್ನು ಮಾಡಿದನು?
ಉತ್ತರ:- ಇವನು ಬಹಮನಿ
ರಾಜ್ಯದ ಪ್ರಧಾನ ಮಂತ್ರಿಯಾಗಿದ್ದು
ಉತ್ತಮ ಆಡಳಿತಗಾರನಾಗಿದ್ದನು.ಅವನು ಬಹಮನಿ ರಾಜ್ಯಕ್ಕೆ ಆರ್ಥಿಕ ಸಾಮರ್ಥ್ಯವನ್ನು
ದೊರಕಿಸಿಕೊಟ್ಟನು. ಸೈನಿಕರಿಗೆ ಜಹಗೀರುಗಳನ್ನು ನೀಡುವ ಬದಲಾಗಿ ನಗದು ಸಂಬಳ ಕೊಡಲು ಆರಂಭಿಸಿದನು.
ಸೈನ್ಯದಲ್ಲಿ ಶಿಸ್ತು ಸ್ಥಾಪಿಸಿದನು.ಭೂಕಂದಾಯ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿದನು.ಅವನು
ಬೀದರದಲ್ಲಿ ಅರಬಿ ಮತ್ತು ಫಾರ್ಸಿ ಭಾಷೆಗಳ ಅಭ್ಯಾಸಕ್ಕಾಗಿ ಮದರಸಾ ಸ್ಥಾಪಿಸಿದನು.
೩) ಮುಘಲರಿಗೆ ಆಸಾಮದಲ್ಲಿ ತಮ್ಮ ಆಡಳಿತವನ್ನು ಸ್ಥಿರ ಪಡಿಸುವುದು ಏಕೆ
ಅಸಾಧ್ಯವಾಯಿತು?
ಉತ್ತರ:-ಔರಂಗಜೇಬನ
ಕಾಲದಲ್ಲಿ ದೀರ್ಘಕಾಲದವರೆಗೆ ಮುಘಲರೊಡನೆ ಆಹೋಮರ ಸಂಘರ್ಷ ನಡೆಯಿತು.ಮುಘಲರು ಆಹೋಮರ ಪ್ರದೇಶಗಳ
ಮೇಲೆ ಆಕ್ರಮಣ ಮಾಡಿದರು.ಗದಾಧರಸಿಂಹನ ನೇತೃತ್ವದಲ್ಲಿ ಆಹೋಮರು ಸಂಘಟಿತರಾದರು.ಲಾಚ್ಛಿತ ಬಡಫೂಕನ್
ಎಂಬ ಸೇನಾನಿಯು ವಿರುದ್ಧ ತೀವ್ರ ಸಂಘರ್ಷ ಮಾಡಿದನು. ಆಹೋಮರು ಮುಘಲರ ವಿರುದ್ದದ ಸಂಘರ್ಷದಲ್ಲಿ
ಕೂಟ ಯುದ್ಧನೀತಿಯನ್ನು ಅವಲಂಬಿಸಿದರು.ಮುಘಲರಿಗೆ ಆಸಾಮದಲ್ಲಿ ತಮ್ಮ ಆಡಳಿತವನ್ನು ಸ್ಥಿರಪಡಿಸುವದು
ಅಸಾಧ್ಯವಾಯಿತು.
ಪ್ರಶ್ನೆ ೪:- ನಿಮ್ಮ
ಶಬ್ದಗಳಲ್ಲಿ ಸ್ವಲ್ಪದರಲ್ಲಿ ಬರೆಯಿರಿ.
೧) ಕೃಷ್ಣದೇವರಾಯ
ಉತ್ತರ:-ಕೃಷ್ಣದೇವರಾಯನು
ಕ್ರಿ.ಶ. ೧೫೦೦ ರಲ್ಲಿ ವಿಜಯನಗರ ಸಾಮ್ರಾಜ್ಯದ ಪಟ್ಟಕ್ಕೆ ಬಂದನು. ಅವನು ವಿಜಯವಾಡಾ ಮತ್ತು
ರಾಜಮಹೆಂದ್ರೀ ಎಂಬ ಪ್ರದೇಶವನ್ನು ಗೆದ್ದು ತನ್ನ ಸಾಮ್ರಾಜ್ಯಕ್ಕೆ ಜೋಡಿಸಿದನು. ಬಹುಮನಿ ಸುಲ್ತಾನ
ಮಹಮೂದಶಾಹ ಇವನ ನೇತೃತ್ವದಲ್ಲಿ ಒಂದೂಗೂಡಿದ ಸುಲ್ತಾನರ ಸಂಯುಕ್ತ ಸೈನ್ಯವನ್ನು ಅವನು
ಸೋಲಿಸಿದನು.ಕೃಷ್ಣದೇವರಾಯನ ಆಡಳಿತದಲ್ಲಿ ವಿಜಯನಗರ ಸಾಮ್ರಾಜ್ಯವು ಪೂರ್ವದಲ್ಲಿ ಕಟಕದಿಂದ ಹಿಡಿದು
ಪಶ್ಚಿಮದಲ್ಲಿ ಗೋವಾದ ವರೆಗೆ ಹಾಗೂ ಉತ್ತರದಲ್ಲಿ ರಾಯಚೂರ ದೋಆಬದಿಂದ ಹಿಡಿದು ದಕ್ಷಿಣದಲ್ಲಿ
ಹಿಂದೀ ಮಹಾಸಾಗರದವರೆಗೆ ಹಬ್ಬಿತು.ಕ್ರಿ.ಶ.೧೫೩೦ ರಲ್ಲಿ ಅವನು ಮರಣ ಹೊಂದಿದನು.
೨) ಚಾಂದಬೀಬಿ
ಉತ್ತರ:- ಕ್ರಿ.ಶ.೧೯೫೯
ರಲ್ಲಿ ಮುಘಲರು ನಿಜಾಮಶಾಹಿಯ ರಾಜಧಾನಿಯಾದ ಅಹಮದನಗರದ ಮೇಲೆ ದಾಳಿ ಮಾಡಿದರು. ಮುಘಲ ಸೈನ್ಯವು
ಅಹಮದನಗರದ ಕೋಟೆಗೆ ಮುತ್ತಿಗೆಹಾಕಿತು. ಅಹಮದನಗರದ ಹುಸೇನ ನಿಜಾಮಶಾಹನ ಸಾಮರ್ಥ್ಯಶಾಲಿ ಮಗಳಾದ
ಚಾಂದಬೀಬಿ ಇವಳು ಅತ್ಯಂತ ಧೈರ್ಯದಿಂದ ಮುಘಲ ಸೈನಿಕರ ವಿರುದ್ಧ ಹೋರಾಡಿದಳು. ಆ ಸಮಯದಲ್ಲಿ
ನಿಜಾಮಶಾಹಿಯಲ್ಲಿಯ ಸರದಾರರಲ್ಲಿ ಒಡಕು ನಿರ್ಮಾಣವಾಯಿತು. ಈ ಅಂತಃಕಲಹಗಳಿಂದ ಚಾಂದಬೀಬಿಯನ್ನು
ಕೊಲ್ಲಲಾಯಿತು.
೩) ರಾಣಿ ದುರ್ಗಾವತಿ
ಉತ್ತರ:- ವಿದರ್ಭದ
ಪೂರ್ವಭಾಗ,ಅದರ ಉತ್ತರದ ಕಡೆಯ
ಮಧ್ಯ ಪ್ರದೇಶದ ಭಾಗ, ಇಂದಿನ ಛತ್ತಿಸಗಡದ
ಪಶ್ಚಿಮ ಭಾಗ ,ಆಂದ್ರಪ್ರದೇಶದ
ಉತ್ತರ ಭಾಗ ಹಾಗೂ ಓಡಿಶಾದ ಪಶ್ಚಿಮ ಭಾಗ ಇದು ಸ್ಥೂಲವಾಗಿ ಗೊಂಡವನದ ವಿಸ್ತಾರವಾಗಿತ್ತು.ಚಂದೇಲ
ರಾಜಪೂತ ಮನೆತನದಲ್ಲಿಯ ಜನಿಸಿದ ದುರ್ಗಾವತಿಯು ಮದುವೆಯ ನಂತರ ಗೊಂಡವನದ ರಾಣಿಯಾದಳು. ಅವಳು ಉತ್ತಮ
ರೀತಿಯಿಂದ ರಾಜ್ಯಾಡಳಿತ ಮಾಡಿದಳು.ಮಧ್ಯಯುಗಿನ ಮುಘಲರ ವಿರುದ್ಧ ಮಾಡಿದ ಹೋರಾಟವು ತುಂಬಾ
ಮಹತ್ವದ್ದಾಗಿದೆ. ದುರ್ಗಾವತಿಯು ಪತಿಯ ನಿಧನದ ನಂತರ ಅಕಬರನ ವಿರುದ್ಧ ಹೋರಾಡುವಾಗ ಪ್ರಾಣಾರ್ಪಣೆ
ಮಾಡಿದಳು. ಆದರೆ ಅವನಿಗೆ ಶರಣಾಗಲಿಲ್ಲ.
ಪ್ರಶ್ನೆ೫:- ಕಾರಣ
ಸಹಿತ ಬರೆಯಿರಿ.
೧) ಬಹಮನಿ ರಾಜ್ಯದ ಐದು ಶಾಖೆಗಳಾದವು.
ಉತ್ತರ:- ಬಹಮನಿ ರಾಜ್ಯದ
ವಜೀರ ಮತ್ತು ಉತ್ತಮ ಪ್ರಶಾಸಕ ಮಹಮೂದ ಗಾವಾನನಂತರ ಬಹಮನಿ ಸರದಾರರಲ್ಲಿ ಗುಂಪುಗಾರಿಕೆ ಹೆಚ್ಚಿತು.
ವಿಜಯನಗರ ಮತ್ತು ಬಹಮನಿಗಳಲ್ಲಿಯ ಸಂಘರ್ಷದ ಪ್ರತಿಕೂಲ ಪರಿಣಾಮವು ಬಹಮನಿ ರಾಜ್ಯದ
ಮೇಲಾಯಿತು.ವಿವಿಧ ಪ್ರಾಂತಗಳಲ್ಲಿಯ ಅಧಿಕಾರಿಗಳು ಸ್ವತಂತ್ರವಾಗಿ ವರ್ತಿಸತೊಡಗಿದರು. ಬಹಮನಿ ರಾಜ್ಯವು
ಒಡೆಯಿತು. ಅದರೊಳಗಿಂದ ವರ್ಹಾಡದ ಇಮಾದಶಹಿ,ಬೀದರದ ಬರೀದಶಾಹಿ, ವಿಜಾಪೂರದ ಆದಿಲಶಾಹಿ,ಅಹಮದನಗರದ ನಿಜಾಮಶಾಹಿ,ಗೋವಳಕೊಂಡದ ಕುತುಬಶಾಹಿ ಹಿಗೆ ಬಹಮನಿ ರಾಜ್ಯದ ಐದು ಶಾಖೆಗಳಾದವು.
೨) ರಾಣಾಸಂಗನ ಸೈನ್ಯದ ಪರಾಭವವಾಯಿತು.
ಉತ್ತರ:- ಬಾಬರ ಮತ್ತು ರಾಣಾ
ಸಂಗ ಇವರಲ್ಲಿ ಖಾನುಆ ಈ ಸ್ಥಳದಲ್ಲಿ ಯುದ್ಧವಾಯಿತು. ಈ ಯುದ್ಧದಲ್ಲಿ ಬಾಬರನ ತೋಪುಖನೆ ಮತ್ತು
ಸೈನ್ಯ ಇವು ಪ್ರಭಾವಿ ಕೆಲಸಮಾಡಿದವು. ಇದರೀಮದ ರಾಣಾಸಂಗನ ಪರಾಭವವಾಯಿತು.
೩) ರಾಣಾಪ್ರತಾಪಸಿಂಹನು ಇತಿಹಾಸದಲ್ಲಿ ಅಜರಾಮರನಾಗಿದ್ದಾನೆ.
ಉತ್ತರ:- ರಾಣಾ ಪ್ರತಾಪನು
ಪರಾಕ್ರಮಿ, ಧೈರ್ಯ, ಸ್ವಾಭಿಮಾನ, ತ್ಯಾಗ ಇತ್ಯಾದಿ
ಗುಣದಿಂದ ಇತ ಇತಿಹಾಸದಲ್ಲಿ ಅಜರಾಮರನಾದನು.
೪) ಔರಂಗಜೇಬನು
ಗುರು ತೇಗಬಹಾದ್ದೂರರನ್ನು ಬಂಧಿಸಿದನು.
ಉತ್ತರ:-
೫) ರಜಪೂತರು
ಮುಘಲರ ವಿರುದ್ಧ ಸಂಘರ್ಷ ಮಾಡಿದರು.
ಉತ್ತರ:-
ಪ್ರಶ್ನೆ ೬:-ಕಾಲರೇಷೆಯನ್ನು
ಪೂರ್ಣ ಮಾಡಿರಿ.
ಕ್ರಿ.ಶ.೧೩೩೬ ಕ್ರಿ.ಶ.೧೩೪೭ ಕ್ರಿ.ಶ.೧೫೦೯
ಕ್ರಿ.ಶ. ೧೫೨೬
ವಿಜಯನಗರ ಬಹಮನಿ
ವಿಜಯನಗರದ ಮುಘಲ
ಸಾಮ್ರಾಜ್ಯದ
ಸಾಮ್ರಾಜ್ಯದ
ರಾಜ್ಯದ ರಾಜ್ಯ ಸ್ಥಾಪನೆ
ಪ್ರಶ್ನೆ೬:-
ಹೊಂದಿಸಿ ಬರೆಯಿರಿ.
‘ಅ‘ ಗುಂಪು ಉತ್ತರ
೧) ಸುಲತಾನ ಮಹಮದ ಸುಲತಾನಶಾಹಿ
೨) ಹಸನ ಗಂಗು ಬಹಮನಿ
ರಾಜ್ಯ
೩) ಬಾಬರ ಮುಘಲ
೪) ಮಹಾರಾಣಾ ಪ್ರತಾಪ ಮೆವಾಡ
0 ಕಾಮೆಂಟ್‌ಗಳು
ಧನ್ಯವಾದಗಳು