ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ನಾಲ್ಕನೆಯ ಇಯತ್ತೆ ಸ್ವಾಧ್ಯಾಯಮಾಲೆ ಪಾಠ ೪ ಉಕ್ಕಿನ ಮನುಜ (ಕವಿತೆ) Chapter 4 ೪ ಉಕ್ಕಿನ ಮನುಜ (ಕವಿತೆ)

ಬಾಲಭಾರತಿ ನಾಲ್ಕನೆಯ ಇಯತ್ತೆ ಸ್ವಾಧ್ಯಾಯಮಾಲೆ ಪಾಠ ೪ ಉಕ್ಕಿನ ಮನುಜ (ಕವಿತೆ) Chapter 4 ೪ ಉಕ್ಕಿನ ಮನುಜ (ಕವಿತೆ)


೩ ಗುಳ್ಳವ್ವನ ಪೂಜೆ

ಶಬ್ದಗಳ ಅರ್ಥ

ಅರಲು - ಕೆಸರು; ಕಸೂತಿ - ನಕ್ಷೆ; ಅರಳೆ - ಹಿಂಜಿದ ಹತ್ತಿ

ವಿಶೇಷ ವಿಚಾರ : ಜವೆ ಒಂದು ಬಗೆಯ ಧಾನ್ಯ; ಗವಲಿ - ಪಾಯಸ ಮಾಡುವ ಶಾವಿಗೆಯಂತಹ ಒಂದು ಪದಾರ್ಥ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಗುಳ್ಳವ್ವನ ಪೂಜೆಯನ್ನು ಯಾವ ಮಾಸದಲ್ಲಿ ಮಾಡುವರು?

ಉತ್ತರ: ಗುಳ್ಳವ್ವನ ಪೂಜೆಯನ್ನು ಆಷಾಢ ಮಾಸದಲ್ಲಿ ಮಾಡುವರು.

ಆ) ಹುಡುಗಿಯರು ಅರಲು ತರುವುದಕ್ಕೆ ಎಲ್ಲಿಗೆ ಹೋಗುತ್ತಾರೆ?

ಉತ್ತರ: ಹುಡುಗಿಯರು ಅರಲು ತರುವುದಕ್ಕೆ ಹಳ್ಳದ ಕಡೆಗೆ ಹೋಗುತ್ತಾರೆ.

ಇ) ಹುಡುಗಿಯರು ಅರಲಿನಿಂದ ಯಾವ ಯಾವ ಮೂರ್ತಿಗಳನ್ನು ತಯಾರಿಸುತ್ತಾರೆ?

ಉತ್ತರ: ಹುಡುಗಿಯರು ನೆರೆಮನೆಯ ಗೆಳೆತಿಯರೊಂದಿಗೆ ಕೂಡಿಕೊಂಡು ಅರಲಿನಿಂದ ಗುಳ್ಳವ್ವ ಅಂದರೆ ಬಸವಣ್ಣ, ಗೌರಿ, ಆನೆ, ನವಿಲು ಮುಂತಾದ ಮೂರ್ತಿಗಳನ್ನು ತಯಾರಿಸುತ್ತಾರೆ.  

ಈ) ಗುಳ್ಳವ್ವನನ್ನು ಹೇಗೆ ಅಲಂಕರಿಸುತ್ತಾರೆ?

ಉತ್ತರ: ಮಾಡಿದ ಮೂರ್ತಿ ಇನ್ನಷ್ಟು ಚೆಂದ ಕಾಣಲೆಂದು ಗುಲಗಂಜಿ, ಕುಸುಬೆ, ಜವೆ ಉಪಯೋಗಿಸಿ ಗುಳ್ಳವ್ವನನ್ನು ಸಿಂಗರಿಸುವರು. ಎತ್ತಿನ ಕೊರಳಿಗೆ ಸುತ್ತಲೂ ಕುಸುಬೆ ಕಾಳುಗಳನ್ನು ಸಾಲಾಗಿ ಚುಚ್ಚಿ ಸರಗಂಟೆ ಮಾಡುವರು.

ಉ) ಗುಳ್ಳವ್ವನ ನೈವೇದ್ಯಕ್ಕೆ ಏನು ಮಾಡುತ್ತಾರೆ ?

ಉತ್ತರ:ಗುಳ್ಳವ್ವನ ನೈವೇದ್ಯಕ್ಕೆ ಶಾವಿಗೆ ಇಲ್ಲವೇ ಗವಲಿಯನ್ನು ಮಾಡುತ್ತಾರೆ. ಇಲ್ಲವಾದರೆ ಕಡುಬಿನಿಂದಲೂ ಗುಳ್ಳವ್ವನ ನೈವೇದ್ಯವಾಗುತ್ತದೆ.

ಪ್ರಶ್ನೆ ೨) ಕೆಳಗಿನ ಬಿಟ್ಟ ಸ್ಥಳಗಳನ್ನು ತುಂಬಿರಿ.

ಅ) ಕ್ಷಣ ಕ್ಷಣಕ್ಕೂ ತುಂತುರ ಮಳೆ ಹನಿಗಳು ಬೀಳುವವು.

3) ಆಷಾಢ ಮಾಸದ ಪ್ರತಿ ಮಂಗಳವಾರ ಗುಳ್ಳವ್ವನ ಹಬ್ಬವನ್ನು ಆಚರಿಸುತ್ತಾರೆ.

ಇ) ಗೊಗ್ಗವ್ವನು ದೀಪದೊಡನೆ ತೂಗುಲೋಕದಲ್ಲಿ ಮೈಮರೆತಂತೆ ಕಾಣುತ್ತಾಳೆ.

4) ಅರಲಿನ ಕೈಕೆಲಸದ ಅಭ್ಯಾಸವು ಇದರಿಂದ ಅವರಿಗೆ ತಾನಾಗಿಯೇ ಸಾಧಿಸುವದು.

ಪ್ರಶ್ನೆ ೩) ಕೆಳಗಿನ ಶಬ್ದಗಳನ್ನು ವಾಕ್ಯದಲ್ಲಿ ಉಪಯೋಗಿಸಿರಿ.

ಅರಲು: ಹುಡುಗಿಯರು ಅರಲಿನ ಮಣ್ಣು ತರಲು ಹೋದರು.

ಗುಲಗಂಜಿ: ಗುಳ್ಳವ್ವನನ್ನು ಗುಲಗಂಜಿ ಹಚ್ಚಿ ಅಲಂಕಾರ ಮಾಡುವರು.

ಅಲಂಕರಿಸು: ಗುಳ್ಳವ್ವನನ್ನು ಗುಲಗಂಜಿ ಹಚ್ಚಿ ಅಲಂಕಾರ ಮಾಡುವರು

ಉಪಕ್ರಮ

ಅರಲಿನಿಂದ ಬೇರೆ ಬೇರೆ ಪ್ರಕಾರದ ಪ್ರಾಣಿ, ಪಕ್ಷಿ ಮತ್ತು ಇತರ ಮಾದರಿಗಳನ್ನು ತಯಾರಿಸಿರಿ.

ಕೆಳಗಿನ ಜಾನಪದ ಹಾಡನ್ನು ರಾಗಬದ್ಧವಾಗಿ ಹಾಡಿರಿ.

ಗುಳ್ಳವ್ವನ ಮಣ್ಣು ತರಲಿಲ್ಲ.

ಗುಲಗಂಜಿ ಹಚ್ಚಿ ಆಡಲಿಲ್ಲ

ಸುಳ್ಳೇ ಬಂತಲ್ಲವ್ವ ನಾಗರಪಂಚಮಿ ||ಸುವ್ವನಾರಿ||

ದಪಾಟಿ-ಗಿಪಾಟಿ ಮಾಡಿಕೊಂಡು

ಎತ್ತಿನ ಮ್ಯಾಲ ಹೇರಿಕೊಂಡು

ಯಾವಾಗ ನೋಡಲೆವ್ವ ತಾಯಿ ಮಾರಿ ||ಸುವ್ವನಾರಿ|

ರೊಟ್ಟಿ-ಗಿಟ್ಟಿ ಮಾಡಿಕೊಂಡು

ಒಂಟಿಮ್ಯಾಲ ಹೇರಿಕೊಂಡು

ಯಾವಾಗ ನೋಡಲೆವ್ವ ತಂದೆ ಮಾರಿ ||ಸುವ್ವನಾರಿ|

ನುಡಿಮುತ್ತು

·        ಜನಪದ ಸಂಸ್ಕೃತಿಯು ಜನಜೀವನದ ಜೀವಾಳ

·        ಸಂಸ್ಕೃತಿಯ ಪರಿಚಯ ಜ್ಞಾನದ ಪರಿಚಯ

ಗಮನಿಸಿರಿ

ನಾಮಪದ : ಯಾವುದೊಂದು ವ್ಯಕ್ತಿ, ವಸ್ತು, ಸ್ಥಳ, ಪ್ರಾಣಿ, ಪಕ್ಷಿ, ಭಾವನೆ ಮತ್ತು ಉದ್ಯೋಗಗಳ ಹೆಸರನ್ನು ಸೂಚಿಸುವ ಪದಕ್ಕೆ 'ನಾಮಪದ'ವೆನ್ನುವರು.

ಉದಾ. :

೧) ರಾಮನು ಜಾಣ ಬಾಲಕ.

೨) ಪಂಢರಪುರವು ಒಂದು ಪುಣ್ಯಕ್ಷೇತ್ರವಾಗಿದೆ.

೩) ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿಯಾಗಿದೆ.

೪) ಸರ್ಕಸನ್ನು ನೋಡಿದಾಗ ಮಕ್ಕಳಿಗೆ ಬಹಳ ಆನಂದವಾಯಿತು.

೫) ಬಡಿಗನು ಕಟ್ಟಿಗೆಯಿಂದ ಆಟಿಗೆಗಳನ್ನು ತಯಾರಿಸುತ್ತಾನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು