ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ನಾಲ್ಕನೆಯ ಇಯತ್ತೆ ಸ್ವಾಧ್ಯಾಯ ಮಾಲೆ ಪಾಠ 5. ನಿಜವಾದ ಸಂಪತ್ತು Chapter 5. Nijavada Sampattu

 ಬಾಲಭಾರತಿ ನಾಲ್ಕನೆಯ ಇಯತ್ತೆ ಸ್ವಾಧ್ಯಾಯ ಮಾಲೆ ಪಾಠ 5. ನಿಜವಾದ ಸಂಪತ್ತು Chapter 5. Nijavada Sampattu

·         


೫. ನಿಜವಾದ ಸಂಪತ್ತು

ಶಬ್ದಗಳ ಅರ್ಥ

ವೃದ್ಧ – ಅಜ್ಜ, ಮುದುಕ; ಬೊಕ್ಕಸ – ಖಜಾನೆ; ಸುಭಿಕ್ಷೆ – ಸಮೃದ್ಧಿ; ನೇತ್ರ – ಕಣ್ಣು; ಮೃದು – ಮೆತ್ತನೆಯ; ಆಕರ್ಷಕ – ಮನ ಸೆಳೆಯುವ; ಅಪೂರ್ವ – ಅಪರೂಪವಾದ; ನಿಧಿ – ಸಂಪತ್ತು; ಸಮಾಲೋಚನೆ –ವಿಚಾರ ವಿನಿಮಯ

ಪಡೆನುಡಿ

ಕೈಕಾಲು ತಣ್ಣಗಾಗು – ಗಾಬರಿಯಾಗು; ಹೆಡೆಯಾಡು –ಆಶೆಪಡು; ಹೊಂಚು ಹಾಕು – ಸಮಯ ಸಾಧಿಸು

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಖಜಾನೆ ಏಕೆ ಖಾಲಿಯಾಗತೊಡಗಿತು?

ಉತ್ತರ: ಯುವಕ ಚಂದ್ರಸೇನ ರಾಜನಾದ ತಕ್ಷಣ ಹೆಳೆಯರು ಹೆಚ್ಚಾದರು. ಸಭ್ಯತೆ ತಿಳಿಯದ, ದುರ್ವರ್ತನೆಗೆ ಹೆಸರಾದ ಸ್ನೇಹಿತರು ರಾಜನಿಗೆ ಒಂದೊಂದೇ ಚಟಗಳನ್ನು ಕಲಿಸಿದರು. ಇದರಿಂದಾಗಿ ಖಜಾನೆ ಖಾಲಿಯಾಗತೊಡಗಿತು.

ಆ) ರತ್ನಪುರ ರಾಜ್ಯಕ್ಕೆ ಯಾರು ಬಂದರು?

ಉತ್ತರ:ರತ್ನಪುರ ರಾಜ್ಯಕ್ಕೆ ಸಾಧು ಒಬ್ಬ ಬಂದರು.  

ಇ) ಖಜಾನೆ ದೊರಕಬೇಕಾದರೆ ಯಾವ ನಿಯಮಗಳನ್ನು ಪಾಲಿಸಬೇಕಾಗಿತ್ತು?

ಉತ್ತರ:ಕಾಡಿನಲ್ಲಿರುವ ಖಜಾನೆ ಬೇಕಾಗಿದ್ದರೆ ಸಾಧುವಿನ ಹಿಂದೆ ಕಾಡಿಗೆ ಹೋಗಬೇಕಾಗುತ್ತದೆ. ಹೋಗುವಾಗ ದಾರಿಯಲ್ಲಿ ಬಡವರು, ನಿರ್ಗತಿಕರು, ರೋಗಿಗಳು, ಅಸಹಾಯಕ ವ್ಯಕ್ತಿಗಳು ಕಾಣಬಾರದು ಎಂಬ ನಿಯಮಗಳನ್ನು ಪಾಲಿಸಬೇಕಾಗಿತ್ತು.

 

ಈ) ರಾಜನು ನಿಯಮಗಳನ್ನು ಹೇಗೆ ಪಾಲಿಸಿದನು?

ಉತ್ತರ:ರಾಜನು ಸಾಧು ಹೇಳಿದ ಅಪೂರ್ವ ನಿಧಿ ಪಡೆಯಲು ರೈತರ ಮತ್ತು ವ್ಯಾಪಾರಿಗಳ ಮೇಲೆ ಹೆರಿದ ತೆರಿಗೆಯನ್ನು ಹಿಂದೆ ತೆಗೆದುಕೊಂಡನು. ಪ್ರಜೆಗಳಿಗೆ ಬೊಕ್ಕಸದಿಂದ ಹಣದ ಸಹಾಯ ಸಿಕ್ಕಿತು. ಎಲ್ಲ ರೀತಿಯ ಸುಧಾರಣೆಗಳು ಆದವು. ಇದರಿಂದ ಪ್ರಜೆಗಳಿಗೆ ಸಂತೋಷವಾಯಿತು. ಈ ರೀತಿಯಾಗಿ ರಾಜನು ಸಾಧುವಿನ ನಿಯಮಗಳನ್ನು ಪಾಲಿಸಿದನು.

ಉ) ರತ್ನಸೇನನು ತನ್ನ ಮಗನಿಗೆ ಹೇಳಿದ ಬುದ್ಧಿವಾದವೇನು?

ಉತ್ತರ: ಪ್ರಜೆಗಳ ನೆಮ್ಮದಿ ರಾಜನ ಆಭರಣ. ಅವರ ವಿಶ್ವಾಸ, ಸ್ನೇಹ ಕಳೆದುಕೊಂಡರೆ ಆಪತ್ತು ಕಟ್ಟಿಟ್ಟ ಬುತ್ತಿ. ಆಗ ರಾಜ್ಯಕ್ಕೆ ಅರಾಜಕತೆ, ದಾರಿದ್ರ್ಯ ತಂಡವವಾಡುತ್ತದೆ. ಅಂತಹ ಸಮಯದಲ್ಲಿ ಹೊಂಚು ಹಾಕಿ ಕುಳಿತ ಶತ್ರುಗಳು ದಾಳಿ ಮಾಡುತ್ತಾರೆ. ಪ್ರಜೆಗಳ ಪ್ರೀತಿ, ವಿಶ್ವಾಸದಿಂದ ತುಂಬಿದ ಅಮೂಲ್ಯ ಖಜಾನೆ ಶ್ರದ್ಧಾಪೂರ್ವಕ ಉಳಿಸಿಕೊಳ್ಳಬೇಕು ಎಂದು ರತ್ನಸೇನ ತನ್ನ ಮಗನಿಗೆ ಬುದ್ಧಿವಾದ ಹೇಳಿದನು.

ಪ್ರಶ್ನೆ ೨) ಬಿಟ್ಟ ಸ್ಥಳಗಳನ್ನು ತುಂಬಿರಿ.

ಅ) ರತ್ನಸೇನ ರಾಜನ ಮಗನ ಹೆಸರು ಚಂದ್ರಸೇನ.

ಆ) ಸುಭಿಕ್ಷವಾಗಿದ್ದ ರತ್ನಪುರ ರಾಜ್ಯವು ದಾರಿದ್ರ್ಯ, ರೋಗರುಜಿನಗಳಿಗೆ ತುತ್ತಾಯಿತು.

ಇ) ನನ್ನ ಹತ್ತಿರ ಅಪೂರ್ವ ವಸ್ತುವೊಂದು ಇದೆ.

ಈ) ಪ್ರಜೆಗಳ ನೆಮ್ಮದಿ ರಾಜನ ಆಭರಣ.

ಉ) ಚಂದ್ರಸೇನನಿಗೆ ತನ್ನ ತಪ್ಪಿನ ಅರಿವಾಯಿತು.

ಪ್ರಶ್ನೆ ೩) ಪಡೆನುಡಿಗಳನ್ನು ವಾಕ್ಯದಲ್ಲಿ ಬಳಸಿರಿ.

ಅ) ಕೈಕಾಲು ತಣ್ಣಗಾಗು- ಕಾಡಿನಲ್ಲಿ ಹುಲಿ ಇದೆ ಎಂಬ ಸುದ್ದಿ ಕೇಳಿ ನನ್ನ ಕೈಕಾಲು ತಣ್ಣಗಾದವು.

ಆ) ಹೊಂಚುಹಾಕು- ರಾಜನ ಮೇಲೆ ದಾಳಿ ಮಾಡಲು ಶತ್ರು ಸೈನ್ಯ ಹೊಂಚು ಹಾಕಿ ಕುಳಿತಿತ್ತು.

ಪ್ರಶ್ನೆ ೪) ವಿರುದ್ಧಾರ್ಥಕ ಶಬ್ದಗಳನ್ನು ಬರೆಯಿರಿ.

ಸುಭಿಕ್ಷೆ X ದುರ್ಭಿಕ್ಷೆ    ದೌರ್ಭಾಗ್ಯ X ಸೌಭಾಗ್ಯ       ಸಂತೋಷ X ಅಸಂತೋಷ  

ಆಸೆ X ನಿರಾಸೆ        ವಿಶ್ವಾಸ X ವಿಶ್ವಾಸ

ಪ್ರಶ್ನೆ ೫) ಸಮಾನರ್ಥಕ ಶಬ್ದಗಳನ್ನು ಬರೆಯಿರಿ.

ರಾಜ = ದೊರೆ, ಅರಸ;        ಅರಣ್ಯ = ಕಾನನ, ಅಡವಿ;    

ನೇತ್ರ = ಕಣ್ಣು, ನಯನ;       ನಿಧಿ = ಸಂಪತ್ತು

ಉಪಕ್ರಮ

ನೀತಿಬೋಧಕ ಕತೆಗಳನ್ನು ಶಿಕ್ಷಕರಿಂದ/ಪಾಲಕರಿಂದ ಕೇಳಿ ತಿಳಿದುಕೊಳ್ಳಿರಿ.

ನುಡಿಮುತ್ತು

ಅಟ್ಟ ಮೇಲೆ ಒಲೆ ಉರಿಯಿತು ಕೆಟ್ಟ ಮೇಲೆ ಬುದ್ಧಿ ಬಂತು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು