ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ತತ್ಸಮ ತದ್ಭವ ಶಬ್ದಗಳು TATSAM - TADBHAV SHABDAGALU

 

ತತ್ಸಮ ತದ್ಭವ ಶಬ್ದಗಳು

TATSAM - TADBHAV SHABDAGALU

          ಬೇರೆ ಬೇರೆ ಭಾಷೆಗಳಿಂದ ಕನ್ನಡಕ್ಕೆ ಸೇರಿಕೊಂಡಿರುವ ಅನೇಕ ಶಬ್ದಗಳಿವೆ. ಸಂಸ್ಕೃತ ಮತ್ತು ಇತರ ಭಾಷೆಗಳಿಂದ ಶಬ್ದಗಳನ್ನು ಕನ್ನಡಕ್ಕೆ ಪಡೆದುಕೊಂಡಾಗ ಅಲ್ಪಸ್ವಲ್ಪ ಬದಲಾವಣೆಗೆ, ಬಹಳಷ್ಟು ಬದಲಾವಣೆಗೆ ಒಳಪಟ್ಟ ಅನೇಕ ಶಬ್ದಗಳಿವೆ. ಅವುಗಳನ್ನು ತತ್ಸಮ ಹಾಗೂ ತದ್ಭವಗಳೆಂಬ ಎರಡು ಭಾಗಗಳಲ್ಲಿ ವಿಗಡಿಸಲಾಗಿದೆ.

1.      ತತ್ಸಮ:  ತತ್ ಎಂದರೆ ಅದಕ್ಕೆ ಸಮ. ಅಂದರೆ ಸಮಾನ ಎಂದರ್ಥ. ಹಾಗಾಗಿ ಸಂಸ್ಕೃತಕ್ಕೆ ಸಮಾನವಾದುದು ಎಂದರ್ಥ.

2.     ತದ್ಭವ: ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ಅಥವಾ ಪೂರ್ಣ ಬದಲಾವಣೆ ಹೊಂದಿರುವ ಪದಗಳಿಗೆ ತದ್ಭವ ಪದಗಳು ಎನ್ನುವರು. ತತ್ ಅಂದರೆ ಅದರಿಂದ ಅಂದರೆ ಸಂಸ್ಕೃತದಿಂದ ಎಂದರೆ ಹುಟ್ಟಿದ ಶಬ್ದಗಳು ಎಂಬರ್ಥವಾಗುತ್ತದೆ.

    ತತ್ಸಮ ಶಬ್ದಗಳು ತದ್ಭಗಳಾಗುವ ಪ್ರಕ್ರಿಯೆಯಲ್ಲಿ ಈ ಕೆಳಕಂಡ ಅಂಶಗಳನ್ನು ಗಮನಿಸಿರಿ.

1. ‘ ಕಾರಾಂತಗಳು, ‘ ಕಾರಾಂತಗಳಾಗುತ್ತವೆ .

ಉದಾ : ದಯಾ ದಯೆ, ಬಾಲಾ ಬಾಲೆ, ಗಂಗಾ ಗಂಗೆ. 

2. ಕಾರಾಂತಗಳು ಕಾರಾಂತಗಳಾಗುತ್ತವೆ.

ಉದಾ : ನದೀ ನದಿ , ಕಾವೇರೀ ಕಾವೇರಿ , ಗೌರೀ ಗೌರಿ

3. ಪದಗಳ ಆರಂಭದಲ್ಲಿರುವ ಅಕ್ಷರವು ರಿ ‘ , ‘ ರು ಆಗಿ ಬದಲಾಗುವುದು !

ಉದಾ : ಋತು ರುತು , ರಿತು , ಋಣ ರಿಣ , ರುಣ .

4 , ‘ ಕಾರಗಳು ಅರ್ , ಆರ್ ‘ , ಕಾರಗಳಾಗುವುವು .

ಉದಾ : ಕತೃ ಕರ್ತಾರ , ದಾತೃ ದಾತಾರ , ನೇತೃ ನೇತಾರ

5. ‘ ನ್ ಕಾರಾಂತ ಶಬ್ದಗಳಲ್ಲಿ- ನ್ ಕಾರ ಲೋಪವಾಗುತ್ತದೆ .

ಉದಾ : ರಾಜನ್ ರಾಜ , ಕರಿನ್- ಕರಿ , ಬ್ರಹ್ಮನ್ ಬ್ರಹ್ಮ , ವಿಷ್ಣುನ್ ವಿಷ್ಣು , ಮಹೇಶ್ವರನ್ -ಮಹೇಶ್ವರ

6. ವರ್ಗದ ಮೊದಲ ಅಕ್ಷರಕ್ಕೆ ಬದಲಾಗಿ ಮೂರನೆಯ ಅಕ್ಷರ ಬರುತ್ತದೆ .

ಉದಾ : ಚತುರ ಚದುರ , ದೀಪಿಕಾ ದೀವಿಗೆ , ಆಕಾಶ ಆಗಸ .

7. ಮಹಾಪ್ರಾಣಾಕ್ಷರಗಳು ಅಲ್ಪಪ್ರಾಣಾಕ್ಷರಗಳಾಗುತ್ತವೆ .

ಉದಾ : ಘಂಟಾ ಗಂಟೆ , ತೂಕ ಗೂಗೆ , ಅರ್ಥ್ಯ ಅಗ್ಗ :

8. ‘ ಅಕ್ಷರಕ್ಕೆ ಬದಲಾಗಿ ಅಕ್ಷರವು ಬರುವುದು .

ಉದಾ : ಯಶ ಜಸ , ಯಜ್ಞ -ಜನ್ನ , ಯೋಗಿ ಜೋಗಿ ,

9 , ‘ ಹಾಗೂ ಅಕ್ಷರಗಳು ಕಾರಕ್ಕೆ ಬದಲಾಗುತ್ತವೆ .

ಉದಾ : ಪಶು ಪಸು , ಹರ್ಷ ಹರುಸ , ಶೇಷಾ ಸೇಸೆ .

10. ಕ್ಷ ಅಕ್ಷರವು ದ್ವಿತ್ವ ಕದ್ವಿತ್ವ ಆಗಿ ಬದಲಾಗುವುದು.

ಉದಾ : ಅಕ್ಷ ಅಚ್ಚ, ಅಕ್ಷರ ಅಕ್ಕರ, ಲಕ್ಷ ಲಕ್ಕ

11. ಸಂಯುಕ್ತಾಕ್ಷರಗಳು ಸರಳರೂಪ ಹೊಂದುತ್ತವೆ.          

ಉದಾ : ಚಂದ್ರ- ಚಂದಿರ, ತಾಣ ತರಣ, ಭಕ್ತ ಬಕುತ

 


ತತ್ಸಮ

ತದ್ಭವ

ತತ್ಸಮ

ತದ್ಭವ:

ತತ್ಸಮ

ತದ್ಭವ

ಪ್ರಯಾಣ

ಪಯಣ

ಅಟವಿ

ಅಡವಿ

ಪುಸ್ತಕ

ಹೊತ್ತಿಗೆ

ಆಶಾ

ಆಸೆ

ಆಕಾಶ

ಆಗಸ

ಆಶ್ಚರ್ಯ

ಅಚ್ಚರಿ

ಪ್ರಾಣ

ಹರಣ

ಉದ್ಯೋಗ

ಉಜ್ಜುಗ

ತ್ರಿಶೂಲಿ

ತಿಸೂಲಿ

ಪ್ರಗ್ರಹ

ಹಗ್ಗ

ಸ್ನುಷಾ

ಸೊಸೆ

ಸ್ವಯಂಭೂ

ಸ್ವಯಂಭು

ಮಾಲಾ

ಮಾಲೆ

ಬಾಲಾ

ಬಾಲೆ

ಕ್ರೀಡಾ

ಕ್ರೀಡೆ

ಶಾಲಾ

ಶಾಲೆ

ಜಂಬೂ

ಜಂಬು

ಕಂಡೂ

ಕಂಡು

ಪಿತೃ

ಪಿತಾರ

ಭಾತೃ

ಭಾರ್ತಾರ

ಕತೃ

ಕರ್ತಾರ

ಊಹ

ಊಹೆ

ದರ್ಭ

ದರ್ಭೆ

ಅಭಿಲಾಷ

ಅಭಿಲಾಸೆ

ವೈಶಾಖ

ಬೇಸಗೆ

ಸೌರಾಷ್ಟ್ರ

ಸೊರಭ

ಬ್ರಹ್ಮ

ಬೊಮ್ಮ

ಭೈರ

ಬೋರ

ಬಿಕ್ಷಾ

ಭಿಕ್ಷೆ

ಹರ್ಷ

ಹರುಷ/ಹರಿಸ

ಕ್ಷೀರ

ಕೀರ

ಹಂಸ

ಅಂಚೆ

ಅಕ್ಷರ

ಅಕ್ಕರ

ಸ್ಪಟಿಕ

ಪಟಿಕ

ಅಗ್ನಿ

ಅಗ್ಗಿ

ಐಶ್ವರ್ಯ

ಐಸಿರಿ

ಕಾಕ

ಕಾಗೆ

ಕನ್ಯಾ

ಕನ್ನೆ

ಕೃತಕ

ಗತಕ

ಕುಮಾರ

ಕುವರ

ಕ್ಷಣ

ಚಣ

ಗ್ರಾಮ

ಗಾವ

ಆರ್ಯ

ಅಜ್ಜ

ಆಶ್ರದ್ದಾ

ಅಸಡ್ಡೆ

ಅಂಗಣ

ಅಂಗಳ

ಕಥಾ

ಕಥೆ

ಖಡ್ಗ

ಖಡುಗ

ಗ್ರಂಥ

ಗಂಟು

ಘಟಕ

ಘಳಿಗೆ

ಚಮರ

ಚವರಿ

ಅಮೃತ

ಅಮರ್ದ

ಋಷಿ

ರಿಸಿ

ಕಾಮ

ಕಾವ

ಕಾವ್ಯ

ಕಬ್ಬ

ಕೀರ್ತಿ

ಕೀರುತಿ

ಕ್ರಾಂಚೆ

ಕೊಂಚೆ

ಖನಿ

ಗನಿ

ಗ್ರಹ

ಗರ

ಚಂದ್ರ

ಚಂದಿರ

ಜಾವ

ಯಾಮ

ಜ್ಯೋತಿಷ್ಯ

ಜೋಯಿಸ

ಜಳ

ಜಲ

ಕಾಲಿ

ಕಾಳಿ

ದೃಷ್ಟಿ

ದಿಟ್ಟಿ

ಪತಿವೃತಾ

ಹದಿಬದೆ

ವಿಜ್ಞಾಪನೆ

ಬಿನ್ನಹ

ಸಂಕೋಲೆ

ಬೇಡಿ

ಸ್ತಂಭ

ಕಂಬ

ಕುದ್ದಾಲ

ಗುದ್ದಲಿ

ಸ್ವರ್ಗ

ಸಗ್ಗ

ರತ್ನ

ರನ್ನ/ರತುನ

ಮುಖ

ಮೊಗ

ಶಯ್ಯಾ

ಸಜ್ಜೆ

ಸಾಹಸ

ಸಾಸ

ಭ್ರಮೆ

ಬೆಮೆ

ಕಾರ್ಯ

ಕಜ್ಜ

ಸ್ನೇಹ

ನೇಹ

ವಿಧಿ

ಬಿದಿ

ಪ್ರತಿ

ಪಡಿ

ಪೃಥ್ವಿ

ಪೊಡವಿ

ಧ್ವನಿ

ದನಿ

ವನ

ಬನ

ಲಕ್ಷ್ಮಿ

ಲಕುಮಿ

ತಟ

ದಡ

ಪಲ್ಲಯಣ

ಹಲ್ಲಣ

ಸಂಧ್ಯಾ

ಸಂಜೆ

ರಾಕ್ಷಸ

ರಕ್ಕಸ

ಬೀದಿ

ವೀಡಿ

ಅದ್ಭುತ

ಅದಬುತ

ಪಕ್ಷಿ

ಪಕ್ಕಿ/ಹಕ್ಕಿ

ಮುಸುಳಿದ

ಮುಬ್ಬಾದ

ಮಂಟಪ

ಮಂಡಪ

ಅಪ್ಪಣೆ

ಅಣತಿ

ಶೃಂಗಾರ

ಸಿಂಗಾರ

ವಿದ್ಯಾ

ಬಿಜ್ಜೆ

ವೇದ

ಬೇದ

ತಪಸ್ವಿ

ತವಸಿ

ದಾಳಿಂಬೆ

ದಾಳಿಂಬ

ನಿತ್ಯ

ನಿಚ್ಚ

ಶಿಲಾ

ಶಿಲೆ

ಚೀರಾ(ವಸ್ತ್ರ)

ಸೀರೆ

ಪರ್ವ

ಹಬ್ಬ

ಘೋಷಣೆ

ಗೋಸನೆ

ಶಿರಿ

ಸಿರಿ

ಮತ್ಸರ

ಮಚ್ಚರ

ವರ್ಷ

ವರುಷ

ಶುಂಠಿ

ಸುಂಟಿ

ಯುಗ

ಜುಗ

ವ್ಯೆಂತರ

ಬೆಂತರ

ಶರ್ಕರಾ

ಸಕ್ಕರೆ

ಕಲಮಾ

ಕಳವೆ

ಅಬ್ದಿ

ಅಬುದಿ

ಪ್ರಸಾದ

ಹಸಾದ

ದಾತೃ

ದಾತಾರ

ಶೂನ್ಯ

ಸೊನ್ನೆ

ಚಂಪಕ

ಸಂಪಿಗೆ

ಶಂಖ

ಸಂಕು

ಉದ್ಯೋಗ

ಉಜ್ಜುಗ

ಧ್ಯಾನ

ಜಾನ

ಪಟ್ಟಣ

ಪತ್ತನ

ವೀರ

ಬೀರ

ಜಟಾ

ಜಡೆ

ಪರವಶ

ಪಲವಸ

ಶೇಷ

ಸೇಸ

ಯಶಸ್

ಯಶಸ್ಸು

ಸರಸ್ವತಿ

ಸರಸತಿ

ಭಂಗ

ಬನ್ನ

ಮೂರ್ತಿ

ಮೂರುತಿ

ಯಜ್ಞ

ಜನ್ನ

ಮೂಗ

ಮೂಕ

ವಂಧ್ಯಾ

ಬಂಜೆ

ಸೌದೆ

ಸವದೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು