ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ನಾಗಣಸೂರಿನ ಶ್ರೀ ಬಸವಲಿಂಗೇಶ್ವರ ತುಪ್ಪಿನ ಮಠದಲ್ಲಿ ಐತಿಹಾಸಿಕ ಜಿಲ್ಲಾಸ್ತರಿಯ ವಚನ ಕಂಠಪಾಠ ಸ್ಪರ್ಧೆ

ನಾಗಣಸೂರಿನ ಶ್ರೀ ಬಸವಲಿಂಗೇಶ್ವರ ತುಪ್ಪಿನ ಮಠದಲ್ಲಿ ಐತಿಹಾಸಿಕ ಜಿಲ್ಲಾಸ್ತರಿಯ ವಚನ ಕಂಠಪಾಠ ಸ್ಪರ್ಧೆ


 

          
ಅಕ್ಕಲಕೋಟ: ಸೋಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ಸುಕ್ಷೇತ್ರ ನಾಗಣಸೂರಿನಲ್ಲಿ ಶ್ರೀ ಜಗದ್ಗುರು ಬಸವಲಿಂಗೇಶ್ವರ ಮಹಾಸ್ವಾಮಿಗಳವರ 91ನೇ ಪುಣ್ಯಸ್ಮರಣೆಯ ನಿಮಿತ್ತ್ಯವಾಗಿ ಜಿಲ್ಲಾಸ್ತರಿಯ ವಚನ ಕಂಠಪಾಠ ಸ್ಪರ್ಧೆಯನ್ನು ಸ್ಥಳೀಯ ಸಂಸ್ಥೆ ಶ್ರೀರಾಮ ಬಹುದ್ದೇಶಿಯ ಸಮಾಜಸೇವಿ ಸಂಸ್ಥೆ,(ರಿ) ನಾಗಣಸೂರ ವತಿಯಿಂದ ಪ್ರತಿವರ್ಷದಂತೆ ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು. ಈ ವಚನ ಕಂಠ ಪಾಠ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಯ ಸುಮಾರು 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ. ನಿ. ಪ್ರ. ಬಸವಲಿಂಗ ಮಹಾಸ್ವಾಮಿಗಳು, ನಾಗಣಸೂರ ಇವರು ವಹಿಸಿದರು. ಅಧ್ಯಕ್ಷತೆ ಶ್ರೀ ಮಹಾದೇವ ಚವ್ಹಾಣ, ಸರಪಂಚರು, ನಾಗಣಸೂರ ವಹಿಸಿದರು. ದೀಪ ಪ್ರಜ್ವಲನೆ ಜಿ.ಪ. ಸದಸ್ಯರಾದ ಶ್ರೀ ಮಲ್ಲಿನಾಥ ಭಾಸಗಿ ಮಾಡಿದರೆ ಶ್ರೀ ಧನರಾಜ ಧನಶೆಟ್ಟಿ(ಉಪಸರಪಂಚರು) ಹಾಗೂ ಶ್ರೀ ಓಂಕಾರ ಗಂಗೋಡಾ(ಗ್ರಾ.ಪಂ. ಸದಸ್ಯರು) ಇವರು ಫೋಟೋ ಪೂಜೆ ಮಾಡಿದರು.  ಉದ್ಘಾಟನೆ ಸಮಾರಂಭದಲ್ಲಿ ಅಕ್ಕಲಕೋಟ ಶಿಕ್ಷಣ ವಿಭಾಗದ ವಿಸ್ತಾರ ಅಧಿಕಾರಿಗಳು ಶ್ರೀ ಭೀಮಾಶಂಕರ ವಾಲೆ, ಕೇಂದ್ರ ಪ್ರಮುಖರು ಶ್ರೀ ಗುರುನಾಥ ನರುಣೆ, ತೊಳನುರ ಕೇಂದ್ರದ ಕೇಂದ್ರ ಪ್ರಮುಖರು ಶ್ರೀ ಬಸವರಾಜ ಗೌಡನಳ್ಳಿ, ಶಿಕ್ಷಕ ಸಮಿತಿಯ ನಾಯಕ ಶ್ರೀ ಶಂಕರ ಅಜಗೊಂಡೆ, ಶಿಕ್ಷಕ ಸಂಘದ ಅಧ್ಯಕ್ಷರು ಶ್ರೀ ಬಸವರಾಜ ಖಿಲಾರಿ, ಶ್ರೀ ಮಹಾದೇವ ದೊಡ್ಡಮನಿ(ಮಾಜಿ ವಿಸ್ತಾರ ಅಧಿಕಾರಿಗಳು), ಶ್ರೀ ಧರ್ಮರಾಜ ಪ್ರಚಂಡೆ(ಮಾಜಿ ವಿಸ್ತಾರ ಅಧಿಕಾರಿಗಳು), ಮಾಜಿ ಮುಖ್ಯದ್ಯಾಪಕರು ಶ್ರೀ ಗಂಗಪ್ಪ ಹಡಪದ, ಸೋಮಶೇಖರ ಕೊನಾಪುರೆ, ಶ್ರೀ ನೀಲಕಂಠ ಕವಟಗಿ, ಶ್ರೀ ಗುರುಸಿದ್ಧಯ್ಯ ಸ್ವಾಮಿ, ಶ್ರೀ ಶಿವಾನಂದ ತಡವಳ, ಶ್ರೀ ರಾಮಚಂದ್ರ ಸುತಾರ ಆದಿಯಾಗಿ ಮುಖ್ಯ ಅತಿಥಿಯಾಗಿ ಆಗಮಿಸಿದರು.

          ಮಕ್ಕಳ ಅಭಿವ್ಯಕ್ತಿ ವಿಕಸಕ್ಕೆ ಪೂರಕವಾದ ವಚನ ಕಂಠ ಪಾಠ ಸ್ಪರ್ಧೆಯಲ್ಲಿ ವಿದ್ಯಾರ್ಥಿಯರು ಅತಿ ಉತ್ಕೃಷ್ಟ ರೀತಿಯಿಂದ ವಚನಗಳ ಸಾದರಿಕರಣ ಮಾಡಿದರು. ಒಂದನೆಯ ತರಗತಿಯಿಂದ ಐದನೆಯ ತರಗತಿ ಸಣ್ಣ ಗುಂಪು ಹಾಗೂ ಆರನೆಯ ತರಗತಿಯಿಂದ 10ನೇ ತರಗತಿ ದೊಡ್ಡ ಗುಂಪು ಹೀಗೆ ಎರಡು ಗುಂಪಿನಲ್ಲಿ ತಲಾ ಹತ್ತು ಹತ್ತು ವಚನಗಳನ್ನು ಕಂಠ ಪಾಠ ಮಾಡಲು ಹೇಳಿ ಅವುಗಳಲ್ಲಿ ಪರೀಕ್ಷಕರು ಕೇಳಿದ ಮೂರು ವಚನಗಳ ಸಾದರಿಕರಣ ಮಾಡಲು ಸ್ಪರ್ಧಾಕರಿಗೆ ಹೇಳಲಾಗಿತ್ತು. ಎಲ್ಲ ಉಕೃಷ್ಟ ನಿರೂಪಣೆ ಮಾಡಿದ ವಿದ್ಯಾರ್ಥಿಗಳಲ್ಲಿ ದೊಡ್ಡ ಗುಂಪಿನಲ್ಲಿ

ಪ್ರಥಮ ಕ್ರಮಾಂಕ            :ಕು. ಸಾವಲಿ  ವೀರಭದ್ರ ನರುಣೆ, ಎಚ್.ಜಿ. ಪ್ರಚಂಡೆ ಪ್ರಶಾಲೆ, ನಾಗಣಸೂರ

                                    :ದೀಪಾಲಿ ವಿಠ್ಠಲ ಬಿರಾಜದಾರ, ಜಿ. ಪ. ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ, ನಾಗಣಸೂರ

ದ್ವಿತೀಯ ಕ್ರಮಾಂಕ          :ಕು. ಸಾವಿತ್ರಿ ನಿಂಗಪ್ಪ ಮಣುರೆ, ಜಿ. ಪ. ಪ್ರಾಥಮಿಕ ಕನ್ನಡ ಶಾಲೆ, ಬಬಲಾದ

                                    :ಕು. ಭಾಗ್ಯಶ್ರೀ ಬಸವರಾಜ ಧನಶೆಟ್ಟಿ, ಎಚ್.ಜಿ. ಪ್ರಚಂಡೆ ಪ್ರಶಾಲೆ, ನಾಗಣಸೂರ

ತೃತೀಯ ಕ್ರಮಾಂಕ         :ಕು. ಶ್ವೇತಾ ಅಶೋಕ ಕಾಟಗಾಂವ, ಶ್ರೀ. ಕಾಶಿ ವಿಶ್ವೇಶ್ವರ ಹೈಸ್ಕೂಲ್ ಜೇವೂರ

                                    :ಕು. ವಿದ್ಯಾಶ್ರೀ ನಿಂಗಯ್ಯ ಸ್ವಾಮಿ , ಜಿ.ಪ.ಪ್ರಾಥಮಿಕ ಕನ್ನಡ ಶಾಲೆ, ನಾವದಗಿ

ಯಶಸ್ವಿಯನ್ನು ಪಡೆದಿರುತ್ತಾರೆ. ಭವಾನಿ ಹಣಮಂತ ಟೊಣೆ(ಇಬ್ರಾಹಿಮಪುರ), ಕೋಮಲ ಭೀಮಾಶಂಕರ ಗೊಬ್ಬುರ(ಮೈಂದರ್ಗಿ), ಕಲಿಕಾ ಗುಂಡಪ್ಪಾ ಪೋತದಾರ(ತೊಳನುರ), ಪೂರ್ಣಿಮಾ ನಿಲೇಶ ಪ್ರಚಂಡೆ(ನಾಗಣಸೂರ), ಮಹಾದೇವ ಮಲಕಪ್ಪಾ ಹಿಪ್ಪರಗಿ(ನಾಗಣಸೂರ), ಅಂಬಿಕಾ ರಾಮೇಶ್ವರ ಪಾಟೀಲ(ಗೌಡಗಾಂವ BK) ಹಾಗೂ ರೋಹಿಣಿ ಸಿದ್ಧರಾಮ ಪೂಜಾರಿ(ಮೈಸಲಗಿ)  ಮುಂತಾದ ವಿದ್ಯಾರ್ಥಿಗಳು ಉತ್ತೇಜನಾರ್ಥಕ ಬಹುಮಾನ ಪಡೆದಿರುತ್ತಾರೆ.



 ಇನ್ನು ಸಣ್ಣ ಗುಂಪಿನಲ್ಲಿ

ಪ್ರಥಮ ಕ್ರಮಾಂಕ              :ಶರಣಬಸು ಪಾವದ್ಯಾ ನಂದಿಕೋಲ್ , ಜಿ.ಪ.ಪ್ರಾಥಮಿಕ ಕನ್ನಡ ಶಾಲೆ, ನಾಗಣಸೂರ

                                      :ಅಂಬಿಕಾ ಚನ್ನಪ್ಪಾ ಬಿರಾಜದಾರ , ಜಿ.ಪ.ಪ್ರಾಥಮಿಕ ಕನ್ನಡ ಶಾಲೆ ಸೂಲೆರಜೇವಳಗಿ

ದ್ವಿತೀಯ ಕ್ರಮಾಂಕ          :ಪ್ರತಿಕ್ಷಾ ಶರಣಪ್ಪಾ ಮಣುರೆ ಜಿ.ಪ.ಪ್ರಾಥಮಿಕ ಕನ್ನಡ ಶಾಲೆ, ನಾಗಣಸೂರ

                                    :ಸಂಕೇತ ಸಿದ್ರಾಮಪ್ಪ ಭೈರಾಮಡಗಿ ಜಿ.ಪ.ಪ್ರಾಥಮಿಕ ಕನ್ನಡ ಶಾಲೆ, ತೊಳನುರ

ತೃತೀಯ ಕ್ರಮಾಂಕ         :ಅಥರ್ವ ಇರಯ್ಯ ಘಿರಡಿ, ಜಿ.ಪ.ಪ್ರಾಥಮಿಕ ಕನ್ನಡ ಶಾಲೆ, ನಾಗಣಸೂರ

                                    :ಭಾಗ್ಯಶ್ರೀ ಹೀರೊಳ್ಳಿ, ಜಿ.ಪ.ಪ್ರಾಥಮಿಕ ಕನ್ನಡ ಶಾಲೆ, ಹೈದ್ರಾ

ಈ ರೀತಿಯಾಗಿ ಯಶ ಸಾಧಿಸಿರುತ್ತಾರೆ. ಶ್ರೀಧರ ಸಿದ್ಧರಾಮ ಕೋಟನೂರ(ವಳಸಂಗ), ಗಂಗಾಂಬಿಕಾ ಅಶೋಕ ಹೂಗಾರ(ದೇಸಾಯಿ ಕಲ್ಲೂರ), ಶ್ರೀಕಾಂತ ಮಲ್ಲಿನಾಥ ದಾರಗೊಂಡಾ(ನಾಗಣಸೂರ), ಸಂಜನಾ ಸೋಮಲಿಂಗ ಖರಾಡೆ(ಸೋಲಾಪುರ), ಲಕ್ಷ್ಮೀ ಮನೋಜ ಗದ್ದಿ(ದುಧನಿ), ಮಹೇಶ ಕಲ್ಲಪ್ಪಾ ಚಲಗೇರಿ(ಜಿ.ಪ.ಪ್ರಾಥಮಿಕ ಕನ್ನಡ ಶಾಲೆ (ತೋರಣಿ) ಮತ್ತು ಸುಮಿತ ಸೂರ್ಯಕಾಂತ ಜಮಾದಾರ(ಗೌಡಗಾಂವ BK) ಮುಂತಾದ ಮುದ್ದು ಪುಟಾಣಿಗಳು ಉತ್ತೇಜನಾರ್ಥ ಬಹುಮಾನಕ್ಕೆ ಅರ್ಹರಾಗಿದ್ದಾರೆ.  ಎರಡೂ ಗುಂಪಿನಲ್ಲಿ ಪ್ರಥಮ, ದ್ವಿತೀಯ, ತೃತೀಯ ಕ್ರಮಾಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ಉತ್ತೇಜನಾರ್ಥಕ ಬಹುಮಾನಕ್ಕೆ ಪಾತ್ರರಾದ ಉತ್ಕೃಷ್ಟ ವಚನ ಸಾದರಪಡಿಸಿದ ವಿದ್ಯಾರ್ಥಿಗಳಿಗೆ ತುಪ್ಪಿನ ಮಠದ ಮಠಾಧಿಪತಿಗಳಾದ ಶ್ರೀ. ಮ. ನಿ. ಪ್ರ. ಬಸವಲಿಂಗ ಮಹಾಸ್ವಾಮಿಗಳು, ನಾಗಣಸೂರ ಹಾಗೂ ಊರ ಹಿರಿಯರ ಶುಭ ಹಸ್ತದಿಂದ ನಗದು ಹಣ, ಸನ್ಮಾನ್ ಚಿನ್ಹೆ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಸಹಭಾಗಿಯಾದ ಎಲ್ಲ ಮುದ್ದು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಸಂಯೋಜಕರು ತಿಳಿಸಿರುತ್ತಾರೆ.

          ತಾಲೂಕಿನಲ್ಲಿ ಇಂತಹ ದೊಡ್ಡ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆ ಆಯೋಜನೆ ಮಾಡಿದ್ದು ಸುತ್ತ ಹಳ್ಳಿಗರ ಕೌತುಕಕ್ಕೆ ಕಾರಣವಾಗಿದ್ದು ಸ್ಥಳೀಯ ಎಲ್ಲ ಯುವಕರು, ಹಿರಿಯರು, ಮುದ್ದು ಮಕ್ಕಳೂ ಸೇರಿದಂತೆ ಮಠದ ಸಿಬ್ಬಂದಿವರ್ಗ, ಸ್ಥಳೀಯ ಎಚ್.ಜಿ‌. ಪ್ರಚಂಡೆ ಪ್ರಶಾಲೆಯ ಮುಖ್ಯದ್ಯಾಪಕರು ಹಾಗೂ ಶಿಕ್ಷಕವೃಂದ, ಜಿ.ಪ.ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಹೆಣ್ಣು ಮಕ್ಕಳ ಶಾಲೆಯ  ಮುಖ್ಯದ್ಯಾಪಕರು ಹಾಗೂ ಶಿಕ್ಷಕವೃಂದ, ಎಲ್ಲ ಶಾಲೆಯ ವ್ಯವಸ್ತಾಪನ ಸಮಿತಿಯ ಪದಾಧಿಕಾರಿಗಳು, ಪಂಚಾಯತ ಸಮಿತಿ ಅಕ್ಕಲಕೋಟ ಶಿಕ್ಷಣ ವಿಭಾಗದ ಅಧಿಕಾರಿ-ಕರ್ಮಚಾರಿವರ್ಗ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲು ಸಹಕಾರ ನೀಡಿರುತ್ತಾರೆ. ಚನ್ನಯ್ಯ ಸ್ವಾಮಿ ಸರ್, ಓಂಕಾರ್ ಗಂಗೊಂಡ ಸರ್, ಬಸಯ್ಯ ಸ್ವಾಮಿ, ವಿದ್ಯಾಧರ್ ಗುರವ, ಬಸವರಾಜ ಧನಶೆಟ್ಟಿ, ಕಲ್ಯಾಣಿ ಗಂಗೊಂಡ, ಕಾಶಿನಾಥ ಪ್ರಚಂಡೆ, ವಿಶ್ವನಾಥ ದೇವರಮನಿ, ಚಿದಾನಂದ ಮಠಪತಿ, ಸೋಮಶೇಖರ್ ಕಳಸಗೋಂಡಾ, ಪ್ರಶಾಂತ ನಾಗುರೆ, ಇರಣ್ಣ ಧನಶೆಟ್ಟಿ, ಶಂಕರ್ ವ್ಹನಮಾನೆ, ರಾಮ ಸೋಲಾಪುರೆ, ಪ್ರಶಾಂತ ಬಿರಾಜದಾರ, ಪ್ರದೀಪ ಕಲ್ಯಾಣ, ಖಾಜಪ್ಪ ಕಿಣಗಿ, ದಯಾನಂದ ಖಿಲಾರಿ, ಕಾಶಿನಾಥ ಪಾನಶೆಟ್ಟಿ, ದೇವೇಂದ್ರ ಶಿವಮೂರ್ತಿ, ಶರಣಪ್ಪ ಮಣುರೆ, ಶರಣಪ್ಪ ಫುಲಾರಿ ಶ್ರೀಶೈಲ್ ವಾಡೇದ ಆದಿಯಾಗಿ ಪರಿಶ್ರಮ ಪಟ್ಟರು. ಕಾರ್ಯಕ್ರಮದ ನಿರೂಪಣೆ ಶ್ರೀ ವಿದ್ಯಾಧರ ಗುರವ ಸರ್ ಮಾಡಿದರು.    

                                       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು