ನಾಲ್ಕನೆಯ ಇಯತ್ತೆ ಇಯತ್ತೆ ಪಾಠ 18 ಸಚಿನ ರಮೇಶ ತೆಂಡೂಲ್ಕರ್
೧೮. ಸಚಿನ ರಮೇಶ
ತೆಂಡೂಲ್ಕರ
ಪೂರ್ಣ ಹೆಸರು : ಸಚಿನ ರಮೇಶ
ತೆಂಡೂಲ್ಕರ್
ಜನ್ಮ ದಿನಾಂಕ : ೨೪ ಎಪ್ರಿಲ್, ೧೯೭೩,
ಪ್ರಥಮ ಟೆಸ್ಟ್ ಮ್ಯಾಚ್ : ೧೫ ನವೆಂಬರ್, ೧೯೮೯
ಪ್ರಥಮ ಒನ್ ಡೇ ಮ್ಯಾಚ್: ೧೮
ಡಿಸೆಂಬರ್, ೧೯೮೯
ONE DAY ಶತಕಗಳು ೪೯
ONE DAY ಅರ್ಧಶತಕಗಳು ೬೯
ಟೆಸ್ಟ್ ಶತಕಗಳು: ೫೧
ಟೆಸ್ಟ್ ರನ್ನುಗಳು ೧೫೯೨೧
One ಡೇ ರನ್ನುಗಳು ೧೮೪೨೬
ಕೊನೆಯ ಟೆಸ್ಟ್ ಮ್ಯಾಚ್ :೧೪ ನವೆಂಬರ್, ೨೦೧೩
ಕೊನೆಯ ಓಡಿಐಯ್ :೧೮ ಮಾರ್ಚ, ೨೦೧೨
ಸಚಿನ ತೆಂಡೂಲ್ಕರ ಅವರಿಗೆ 'ಭಾರತ
ರತ್ನ' ಈ
ಸರ್ವೋಚ್ಚ ನಾಗರಿಕ ಸನ್ಮಾನವನ್ನು ಕೊಟ್ಟು ಗೌರವಿಸಲಾಯಿತು.
ಜಾಗತಿಕ
ದಾಖಲೆಗಳು
• ಪುರುಷರ ಏಕದಿನದ ಅಂತರರಾಷ್ಟ್ರೀಯ
ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಪ್ರಥಮ ಕ್ರೀಡಾಪಟು.
• ಟೆಸ್ಟ್ ಮತ್ತು
ಓಡಿಐಯ್‌ಗಳಲ್ಲಿ ಅತೀ ಹೆಚ್ಚು ಆಟಗಳನ್ನು ಆಡಿದ ಕ್ರೀಡಾಪಟು.
•ಅಂತರರಾಷ್ಟ್ರೀಯ
ಕ್ರಿಕೆಟ್ ಪಂದ್ಯದಲ್ಲಿ ನೂರು ಶತಕಗಳನ್ನು ಆಡಿದ ಏಕಮೇವ ಕ್ರೀಡಾಪಟು.
• ಟೆಸ್ಟ್ ಕ್ರಿಕೆಟ್
ಪಂದ್ಯಗಳಲ್ಲಿ ಐವತ್ತು ಶತಕಗಳನ್ನು ಬಾರಿಸಿದ ಏಕಮೇವ ಕ್ರೀಡಾಪಟು
• ಟೆಸ್ಟ್ ಕ್ರಿಕೆಟ್
ಪಂದ್ಯದಲ್ಲಿ ೧೫,೦೦೦ ರನ್ನುಗಳನ್ನು
ಮಾಡಿದ ಪ್ರಥಮ ಬ್ಯಾಟ್ಸ್‌ಮನ,
• ಹೆಚ್ಚು ಜಾಗತಿಕ
ದಾಖಲೆಗಳನ್ನು ಮಾಡಿದ ಜಾಗತಿಕ ದಾಖಲೆಯ ಪ್ರಥಮ ಕ್ರೀಡಾಪಟು.
ಕೆಲವು
ಪುರಸ್ಕಾರಗಳು
* ಅರ್ಜುನ ಪ್ರಶಸ್ತಿ
* ರಾಜೀವಗಾಂಧಿ ಖೇಲರತ್ನ ಪುರಸ್ಕಾರ
* ಪದ್ಮಶ್ರೀ ಪ್ರಶಸ್ತಿ
* ಮಹಾರಾಷ್ಟ್ರ ಭೂಷಣ
* ಪದ್ಮವಿಭೂಷಣ
* ಭಾರತರತ್ನ
ನನ್ನ
ನೆಚ್ಚಿನ ಕ್ರಿಕೆಟ್ ಪಟು
ಬೀಳ್ಕೊಡುವ ಸಮಾರಂಭದಲ್ಲಿ ಮಾಡಿದ ಮನಮುಟ್ಟುವ ಭಾಷಣ ಸಚಿನ್ ಅವರ
ಜೀವನದಲ್ಲಿ ಅವರಿಗೆ ಸಹಾಯ ಮಾಡಿದ - ಅವರ ತಂದೆ ತಾಯಿಗಳು, ಬಳಗದವರು, ಸಂಬಂಧಿಕರು, ಮಿತ್ರರು, ಮಾರ್ಗ ದರ್ಶಕರು, ಡಾಕ್ಟರಗಳು, ತರಬೇತಿಗಾರರು, ನಿರ್ವಹಣೆಗಾರರು, ಎಲ್ಲ ಮಾಧ್ಯಮಗಳು
ಮತ್ತು ಅವರನ್ನು ಹುರಿದುಂಬಿಸಿದ ಎಲ್ಲರಿಗೂ ಅವರು ಧನ್ಯವಾದಗಳನ್ನು ಸಲ್ಲಿಸಿದರು.
ಹೆಮ್ಮೆ
ಪಡುವೆವು.
ಸಚಿನ ತೆಂಡೂಲ್ಕರ ಅವರ ತಂದೆ ಪ್ರೊ. ರಮೇಶ ತೆಂಡೂಲ್ಕರ ಅವರು ೧೯೯೯
ರಲ್ಲಿ ಕ್ರಿಕೆಟ್ ವಿಶ್ವಕಪ್‌ದ ಆಟಗಳು ನಡೆಯುತ್ತಿರುವಾಗ ನಿಧನರಾದರು. ಸಚಿನ ಅವರು
"ಸ್ವಲ್ಪ ಅವಧಿಯ ಸಲುವಾಗಿ ಇಂಗ್ಲೆಂಡದಿಂದ ಭಾರತಕ್ಕೆ ಬಂದು ಮತ್ತೆ ಮರಳಿ ಹೋದರು. ಅವರ
ಮುಂದಿನ ಆಟ ಕೀನ್ಯಾದ ವಿರುದ್ದ ಇದ್ದಿತು. ಅದರಲ್ಲಿ ಅವರು ಶತಕ (೧೦೧ ಬಾಲ್‌ಗಳಲ್ಲಿ ೧೪೦
ರನ್ನುಗಳನ್ನು) ಬಾರಿಸಿದರು. ಈ ಶತಕವನ್ನು ಅವರು ತಮ್ಮ ತಂದೆಗೆ ಅರ್ಪಿಸಿದರು.
ಸಚಿನ ಅವರು ತಮ್ಮ ಬೀಳ್ಕೊಡುವ ಸಮಾರಂಭದಲ್ಲಿ ತಮ್ಮ 'ಸರ ರಮಾಕಾಂತ
ಆಬ್ರೇಕರ ಅವರ ಬಗೆಗೆ ಹೀಗೆ ಎಂದಿದ್ದಾರೆ.
ಮೋಜಿನಿಂದ ಹೇಳುವದಾದರೆ ಕಳೆದ ೨೯ ವರ್ಷಗಳಲ್ಲಿ ಸರ ಅವರು ನನಗೆ, ''ತುಂಬಾ ಚೆನ್ನಾಗಿ
ಆಡಿದೆ'' ಎಂದು ಎಂದೂ
ಹೇಳಲಿಲ್ಲ. ಏಕೆಂದರೆ ಹೀಗೆ ಹೇಳಿದ ನಂತರ ಬಹುಶ: ಅಷ್ಟಕ್ಕೇ ಸಂತೃಪ್ತನಾಗಿ ನಾನು ಮುಂದೆ
ಕಷ್ಟಪಟ್ಟು ಆಡಲಿಕ್ಕಿಲ್ಲ ಎಂದು ಅವರಿಗೆ ಅನಿಸಿರಬಹುದು. ಬಹುಶ: ಈಗ, 'ಚೆನ್ನಾಗಿ ಮಾಡಿದೆ
!' ಎಂದು ನನ್ನ
ಇಲ್ಲಿಯವರೆಗಿನ ಆಟದ ಬಗ್ಗೆ ಹೇಳಿ, ನೀವು ನಿಮ್ಮ ಭಾಗ್ಯಕ್ಕೆ ಅಭಿನಂದನೆ ಸಲ್ಲಿಸಬಹುದು. ಏಕೆಂದರೆ ಇನ್ನು
ಮುಂದೆ ಮ್ಯಾಚ್ ಗಳೇ ಇಲ್ಲವಲ್ಲ ಸರ, ನನ್ನ ಜೀವನದಲ್ಲಿ ಇನ್ನು ಮೇಲೆ ಕ್ರಿಕೆಟ್ ಇದು ಯಾವಾಗಲೂ ನನ್ನ
ಹೃದಯದಲ್ಲಿ ಇರುವುದು, ಮತ್ತು ನಾನು ಬರೀ ಒಬ್ಬ
ಪ್ರೇಕ್ಷಕನಾಗಿರುವೆನು. ಆದರೆ ನನ್ನ ಜೀವನದಲ್ಲಿ ನಿಮ್ಮ ಕೊಡುಗೆ ಬಹಳ ಶ್ರೇಷ್ಠವಾದುದು ಆಗಿದೆ.
ಅದಕ್ಕಾಗಿ ನಾನು ನಿಮಗೆ ಚಿರಋಣಿಯಾಗಿದ್ದೇನೆ.
ಉಪಕ್ರಮ
ಕೋಲಾಜ್ ಕೆಲಸ
ಕೊಲಾಜ್ ಎಂದರೆ ಕಾಗದವನ್ನು ಚಿತ್ರಗಳನ್ನು ಫೋಟೊಗಳನ್ನು ಹಾಗೂ ಕೆಲವು ಬರಹಗಳನ್ನು ಕತ್ತರಿಸಿ ಒಂದೆಡೆಗೆ ಅಂಟಿಸುವ ಕಲಾವಿಷ್ಠಾರ. ನೀವು ಕೊಲಾಜನ್ನು ಒಂದು ಶಿರ್ಷಿಕೆಗಾಗಿ ಅಥವಾ ಹೆಚ್ಚು ಶಿರ್ಷಿಕೆಗಳನ್ನು ಒಂದೆಡೆ ಸೇರಿಸಿ ಮಾಡಬಹುದು.
ಸಚಿನ ತೆಂಡೂಲ್ಕರ ಅವರ ಒಬ್ಬ ತರುಣಿ ಅಭಿಮಾನಿ, ಅವರ ಜೀವನ ಹಾಗೂ
ಎಲ್ಲ ಆಟಗಳ ಮೇಲೆ ಆಧರಿಸಿದ 'ನನ್ನ ನೆಚ್ಚಿನ
ಕ್ರಿಕೆಟ್ ಕ್ರೀಡಾಪಟು' ಎಂಬ ವಿಷಯದ ಮೇಲೆ ಈ
ಕೊಲಾಜನ್ನು ಮಾಡಿರುವಳು. ನೀವೂ ಸಹ ಇಂತಹ ಕೊಲಾಜನ್ನು ನಿಮ್ಮ ನೆಚ್ಚಿನ ವ್ಯಕ್ತಿಯ ಮೇಲೆ
ಮಾಡಬಹುದು.
'ಭಾರತರತ್ನ' ನಾಗರಿಕ
ಸನ್ಮಾನ
'ಭಾರತರತ್ನ' ಇದು ಭಾರತದ ಸರ್ವೋಚ್ಚ ನಾಗರಿಕ ಸನ್ಮಾನವಾಗಿದೆ. ಈ ಸನ್ಮಾನವನ್ನು ರಾಷ್ಟ್ರೀಯ ಸೇವೆಗಾಗಿ
ಕೊಡಲಾಗುತ್ತದೆ. ಈ ರಾಷ್ಟ್ರೀಯ ಸೇವೆಯಲ್ಲಿಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಹಾಗೂ ಕ್ರೀಡೆ ಇವುಗಳ ಸಮಾವೇಶವಿದೆ.
ಈ ಸನ್ಮಾನದ ಸ್ಥಾಪನೆಯು ೨ ಜನೇವರಿ ೧೯೫೪ ರಲ್ಲಿ ಅಂದಿನ ಭಾರತದ ರಾಷ್ಟ್ರಪತಿ ಡಾ. ರಾಜೇಂದ್ರ
ಪ್ರಸಾದ ಅವರ ಮೂಲಕ ಮಾಡಲಾಯಿತು.
ಆರಂಭದಲ್ಲಿ ಈ
ಸರ್ವೋಚ್ಚ ನಾಗರಿಕ ಸನ್ಮಾನವನ್ನು ಮರಣೋತ್ತರವಾಗಿ ಕೊಡುವ ಪದ್ಧತಿಯು ಇರಲಿಲ್ಲ. ಕ್ರಿ.ಶ. ೧೯೫೫
ರಲ್ಲಿ ಈ ನಾಗರಿಕ ಸನ್ಮಾನವನ್ನು ಮರಣೋತ್ತರವಾಗಿಯೂ ಕೊಡುವ ಯೋಜನೆ ಯನ್ನು ಜಾರಿಯಲ್ಲಿ ತರಲಾಯಿತು.
ಈ ನಾಗರಿಕ ಸನ್ಮಾನವನ್ನು ಒಂದು ವರ್ಷದಲ್ಲಿ ಹೆಚ್ಚಿಗೆ ಹೆಚ್ಚು ಅಂದರೆ ಮೂವರು ವ್ಯಕ್ತಿಗಳಿಗೆ
ಕೊಡಲು ಬರುತ್ತದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಕ್ರಿ.ಶ. ೧೯೫೪ ರಲ್ಲಿ
ಪ್ರಪ್ರಥಮವಾಗಿ ಭಾರತರತ್ನ ನಾಗರಿಕ ಸನ್ಮಾನವನ್ನು ಕೊಟ್ಟು ಗೌರವಿಸಲಾಯಿತು.
'ಭಾರತರತ್ನ' ನಾಗರಿಕ ಸನ್ಮಾನವನ್ನು ಪಡೆದ
ಕರ್ನಾಟಕದ ಸನ್ಮಾನನೀಯ ವ್ಯಕ್ತಿಗಳು
ಕ್ರ |
ಹೆಸರು |
ಇಸ್ವಿ |
ಕ್ಷೇತ್ರ |
೧. ೨. ೩. |
ಸರ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಪಂಡಿತ ಭೀಮಸೇನ
ಜೋಶಿ ಡಾ. ಸಿ. ಎನ್.
ಆರ್. ರಾವ್ |
೧೯೫೫ ೨೦೦೮ ೨೦೧೪ |
ವಿಜ್ಞಾನ ಕಲೆ ವಿಜ್ಞಾನ |
'ಭಾರತರತ್ನ' ಪ್ರಶಸ್ತಿ
ಪಡೆದ ಎಲ್ಲ ಗಣ್ಯ ವ್ಯಕ್ತಿಗಳ ಹೆಸರುಗಳ ಯಾದಿ ತಯಾರಿಸಿರಿ.
ವರ್ಷ |
ಚಿತ್ರ |
ಸಮ್ಮಾನಿತರು |
ರಾಜ್ಯ / ರಾಷ್ಟ್ರ |
1954 |
|
ಸಿ. ರಾಜಗೋಪಾಲಾಚಾರಿ |
ತಮಿಳುನಾಡು |
|
ಸರ್ವೆಪಲ್ಲಿ ರಾಧಾಕೃಷ್ಣನ್ |
ಆಂಧ್ರಪ್ರದೇಶ |
|
|
ಚಂದ್ರಶೇಖರ ವೆಂಕಟರಾಮನ್ |
ತಮಿಳುನಾಡು |
|
1955 |
|
ಭಗವಾನ್ ದಾಸ್ |
ಉತ್ತರ ಪ್ರದೇಶ |
|
ಮೋಕ್ಷಗುಂಡಂ ವಿಶ್ವೇಶ್ವರಯ್ಯ |
ಕರ್ನಾಟಕ |
|
|
ಜವಾಹರಲಾಲ್ ನೆಹರು |
ಉತ್ತರ ಪ್ರದೇಶ |
|
1957 |
|
ಜಿ. ಬಿ. ಪಂತ್ |
ಉತ್ತರ ಪ್ರದೇಶ |
ಯಾದಿ ಮುಂದು ವರೆದಿದೆ.....
• ನುಡಿಮುತ್ತು
•
·
ಸಾಧನೆಯೇ ಯಶಸ್ಸಿನ ಗುಟ್ಟು
·
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಗಮನಿಸಿರಿ
ಕಾಲಗಳು : ಕಾಲಗಳಲ್ಲಿ ಮೂರು
ಪ್ರಕಾರಗಳಿವೆ. ವರ್ತಮಾನ ಕಾಲ,
ಭೂತಕಾಲ ಮತ್ತು
ಭವಿಷತ್ ಕಾಲ.
ವರ್ತಮಾನ ಕಾಲ : ಈಗ ನಡೆಯುವ
ಕ್ರಿಯೆಯನ್ನು ಸೂಚಿಸುವ ಕಾಲಕ್ಕೆ 'ವರ್ತಮಾನ ಕಾಲ'ದ ವಾಕ್ಯ ಎನ್ನುವರು.
ಉದಾ. : ಪಲ್ಲವಿ ಸುಂದರ ಚಿತ್ರ ತೆಗೆಯುತ್ತಿದ್ದಾಳೆ.
ಭೂತಕಾಲ : ಆಗಿ ಹೋದ ಕ್ರಿಯೆಯನ್ನು
ಸೂಚಿಸುವ ಕಾಲಕ್ಕೆ 'ಭೂತಕಾಲ'ದ ವಾಕ್ಯ
ಎನ್ನುವರು.
ಉದಾ. : ಅರ್ಜುನನು ಯುದ್ಧದಲ್ಲಿ ಹೋರಾಡಿದ್ದನು.
ಭವಿಷತ್ ಕಾಲ : ಮುಂದೆ ಆಗಲಿರುವ
ಕ್ರಿಯೆಯನ್ನು ಸೂಚಿಸುವ ಕಾಲಕ್ಕೆ 'ಭವಿಷತ್ ಕಾಲ'ದ ವಾಕ್ಯ ಎನ್ನುವರು.
ಉದಾ. : ನಾಳೆ ಸರೋಜಾ ಪುಣೆಯಿಂದ ಬರುವವಳಿದ್ದಾಳೆ.
0 ಕಾಮೆಂಟ್‌ಗಳು
ಧನ್ಯವಾದಗಳು