ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 17 ಪ್ರಥಮ ಚಿಕಿತ್ಸೆ
CHAPTER 17 PRATHAM CHIKITSE std 4rth
೧೭. ಪ್ರಥಮ ಚಿಕಿತ್ಸೆ
ಶಬ್ದಗಳ ಅರ್ಥ
ಮೂರ್ಛ - ಎಚ್ಚರ ತಪ್ಪು; ಅಮುಕು - ಒತ್ತುವದು ; ನಿರ್ಜಲೀಕರಣ - ನೀರಿಲ್ಲದ
ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಪ್ರಥಮ ಚಿಕಿತ್ಸೆ ಎಂದರೇನು?
ಉತ್ತರ: ನಾವು ಆಕಸ್ಮಿಕವಾಗಿ
ಬಿದ್ದಾಗ, ಸುಟ್ಟಾಗ, ಅಪಘಾತವಾದಾಗ, ನೀರಿನಲ್ಲಿ ಮುಳುಗಿ ಉಸಿರು ಕಟ್ಟಿದಾಗ, ಸೂಕ್ತವಾದ
ವೈದ್ಯಕೀಯ ನೆರವು ಸಿಗುವ ಮುನ್ನ ನೀಡುವ ತುರ್ತುಚಿಕಿತ್ಸೆ ಅಥವಾ ಉಪಚಾರವನ್ನು ಪ್ರಥಮ ಚಿಕಿತ್ಸೆ
ಎಂದು ಎನ್ನುತ್ತೇವೆ.
ಆ) ಓ. ಆರ್. ಎಸ್. ಎಂದರೇನು?
ಉತ್ತರ: ಓ.ಆರ್.ಎಸ್. ಎಂದರೆ
ಓ-ಓರಲ್, ಆರ್-ರೀಹೈಡ್ರೆಷನ್,
ಎಸ್-ಸೋಲ್ಯೂಷನ್ಅಂದರೆ ಬಾಯಿಯ ಮೂಲಕ ಕುಡಿಸುವ ಜಲೀಕರಣ ಉಪ್ಪಿನ ದ್ರಾವಣ ಅಥವಾ ಲಿಂಬೇಕಾಯಿ
ಉಪ್ಪಿನ ಶರಬತ್ತು ಅನ್ನಬಹುದು.
ಇ) ದೇಹದ ನಿರ್ಜಲೀಕರಣ ಎಂದರೇನು?
ಉತ್ತರ: ಸಣ್ಣ ಮಕ್ಕಳಿಗೆ
ಕೆಲವೊಮ್ಮೆ ಭೇದಿ-ಅತಿಸಾರ ಆಗಿ ದೇಹದ ನೀರಿನ ಅಂಶವೆಲ್ಲಾ ಕಡಿಮೆ ಆಗುತ್ತದೆ. ಅದಕ್ಕೆ ದೇಹದ
ನಿರ್ಜಲೀಕರಣ ಎನ್ನುತ್ತೇವೆ.
ಈ) ನೀರಿನಲ್ಲಿ ಮುಳುಗಿದಾಗ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು?
ಉತ್ತರ: ನೀರಿನಲ್ಲಿ
ಮುಳುಗಿದಾಗ ಹೆಚ್ಚು ನೀರು ಕುಡಿದಿದ್ದರೆ ಆತನನ್ನು ಅಂಗಾತ ಮಲಗಿಸಿ ಹೊಟ್ಟೆಯ ಭಾಗವನ್ನು
ನಿಧಾನವಾಗಿ ಅಮೂಕಬೇಕು. ಆಗ ಕುಡಿದ ನೀರು ನಿಧಾನವಾಗಿ ಹೊರಬರುತ್ತದೆ. ನಂತರ ಬಾಯಿಂದ ರೋಗಿಯ
ಬಾಯಿಗೆ ಕೃತಕ ಉಸಿರಾಟ ಉಂಟಾಗಲು ಸಹಕರಿಸಬೇಕು.
ಪ್ರಶ್ನೆ ೨) ಕೆಳಗಿನ ವಾಕ್ಯಗಳ ಸರಿ / ತಪ್ಪು ಬರೆಯಿರಿ.
ಅ) ಓ. ಆರ್. ಎಸ್. ದ್ರಾವಣ ನಿರ್ಜಲೀಕರಣ ತಪ್ಪಿಸುತ್ತದೆ. =ಸರಿ
ಆ) ಅತಿ ಹೆಚ್ಚು ರಕ್ತಸ್ರಾವವಾದಾಗ ವೈದ್ಯರಲ್ಲಿಗೆ ಹೋಗುವ
ಅಗತ್ಯವಿರುವುದಿಲ್ಲ. =ತಪ್ಪು
ಇ) ಮೂಳೆ ಮುರಿತಕ್ಕೆ ಪ್ರಥಮ ಚಿಕಿತ್ಸೆ ಸುಲಭ. =ತಪ್ಪು
ಈ) ಪ್ರಥಮ ಚಿಕಿತ್ಸೆ ನಡೆಸಲು ತರಬೇತಿ ಅಗತ್ಯ. = ಸರಿ
• ನುಡಿಮುತ್ತು
•
·
ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು
·
ಆರೋಗ್ಯವೇ ಭಾಗ್ಯ
0 ಕಾಮೆಂಟ್‌ಗಳು
ಧನ್ಯವಾದಗಳು