ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಶಿಕ್ಷಣ ವಿಸ್ತಾರಾಧಿಕಾರಿ ಶ್ರೀ ಭೀಮಾಶಂಕರ ವಾಲೆ ಇವರ ನಿವೃತ್ತಿ ನಿಮಿತ್ತ ಬೀಳ್ಕೊಡುಗೆ ಸನ್ಮಾನ

 

ಶಿಕ್ಷಣ ವಿಸ್ತಾರಾಧಿಕಾರಿ ಶ್ರೀ ಭೀಮಾಶಂಕರ ವಾಲೆ ಇವರ ನಿವೃತ್ತಿ ನಿಮಿತ್ತ ಬೀಳ್ಕೊಡುಗೆ ಸನ್ಮಾನ

ತೋಳಣುರ್, ಉಡಗಿ ಮತ್ತು ಗೌಡಗಾವ ಕೇಂದ್ರಗಳ ಸಾಮೂಹಿಕ ಶಿಕ್ಷಣ ಪರಿಷದ ಜೆ.ಪಿ. ಹೈಸ್ಕೂಲ್ ಗೌಡಗಾವ್ ಆಯೋಜನೆ

                                 




ಅಕ್ಕಲಕೋಟ: ಅಕ್ಕಲಕೋಟ ತಾಲೂಕಿನ ತೋಳಣುರ್, ಉಡಗಿ ಹಾಗೂ ಗೌಡಗಾವ ಕೇಂದ್ರಗಳ ಜನೇವರಿ2024 ರ ಶಿಕ್ಷಣ ಪರಿಷದವು ಜೆ.ಪಿ. ಹೈಸ್ಕೂಲ್ ಗೌಡಗಾವದಲ್ಲಿ  ಸಂಪನ್ನವಾಯಿತು. ತಾಲೂಕು ಪಂಚಾಯತ ಸಮಿತಿ ಅಕ್ಕಲಕೋಟ ಶಿಕ್ಷಣ ವಿಭಾಗದಲ್ಲಿ ಅಕ್ಕಲಕೋಟ ಬೀಟದ ಶಿಕ್ಷಣ ವಿಸ್ತಾರ ಅಧಿಕಾರಿಗಳಾದ ಶ್ರೀ. ಭೀಮಾಶಂಕರ ವಾಲೆ ಸಾಹೇಬರು ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಯುಕ್ತ ಬೀಳ್ಕೊಡುವ ಸಮಾರಂಭ ನೆರವೇರಿತು.

        ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಹಿರಿಯ ವಿಸ್ತಾರ ಅಧಿಕಾರಿಗಳಾದ ಶ್ರೀ ಹರೀಶ ಗಾಯಕವಾಡ ಇವರು ವಹಿಸಿದರು. ಪ್ರಮುಖ ಉಪಸ್ಥಿತಿ ಶ್ರೀ ಭೀಮಾಶಂಕರ ಧಡಕೆ(ಕೇಂದ್ರ ಪ್ರಮುಖ- ಉಡಗಿ ಹಾಗೂ ಗೌಡಗಾವ), ಶ್ರೀ. ಲಕ್ಕಪ್ಪಾ ಪೂಜಾರಿ (ಕೇಂದ್ರ ಪ್ರಮುಖ- ತೋಳಣುರ್), ಜೆ.ಪಿ. ಹೈಸ್ಕೂಲಿನ ಮುಖ್ಯ ಅದ್ಯಾಪಕರು ಶ್ರೀ. ಕಲ್ಯಾಣಿ ದೆಶೆಟ್ಟಿ ಸರ ಉಪಸ್ಥಿತರಿದ್ದರು. ಎಲ್ಲ ಕೇಂದ್ರ ಪ್ರಮುಖರು ತಮ್ಮ ಕೇಂದ್ರ(cluster)ದ ಶಿಕ್ಷಕವೃಂದದ ವತಿಯಿಂದ ಫೇಟೆ, ಶಾಲ, ನೆನಪಿನ ಕಾಣಿಕೆ ಹಾಗೂ ಹೂಮಾಲೆಯೊಂದಿಗೆ ಶ್ರೀ. ಭೀಮಾಶಂಕರ ವಾಲೆ ಸಾಹೇಬ ಇವರ ಸಹಕುಟುಂಬ ಸಹಪರಿವಾರ ಸನ್ಮಾನ ಮಾಡಿ ಬೀಳ್ಕೊಟ್ಟರು. ಜೆ.ಪಿ. ಹೈಸ್ಕೂಲ್ ಗೌಡಗಾವ ಶಾಲೆಯ ಮುಖ್ಯ ಗುರುಗಳು ಶ್ರೀ ಕಲ್ಯಾಣಿ ದೆಶೆಟ್ಟಿ ಸರ ಹಾಗೂ ಶ್ರೀ. ಶಿದ್ಧರಾಮೇಶ್ವರ ಹೈಸ್ಕೂಲ್ ತೋಳಣುರ್ ದ ಮುಖ್ಯ ಗುರುಗಳು ಶ್ರೀ. ಚಲಗೇರಿ ಸರ್ ಇವರು ಶಾಲ ಮತ್ತು ನೆನಪಿನ ಕಾಣಿಕೆಯೊಂದಿಗೆ ವಾಲೆ ಸಾಹೇಬ ಇವರ ಸನ್ಮಾನ ಮಾಡಿದರು.

        ವಿಸ್ತಾರ ಅಧಿಕಾರಿ ಶ್ರೀ ಹರೀಶ ಗಾಯಕವಾಡ ಕಾರ್ಯಕ್ರಮದಲ್ಲಿ ಮಾತನಾಡಿ ತಮ್ಮ ಒಡನಾಡಿ ಶ್ರೀ. ವಾಲೆ ಸಾಹೇಬರಿಗೆ ಶುಭ ಹಾರೈಕೆ ನೀಡಿದರು. ಮಿತ ಭಾಷಿ, ವಿದ್ಯಾರ್ಥಿಪ್ರಿಯ, ಶಿಕ್ಷಕ ಪ್ರಿಯ ಅಧಿಕಾರಿ ಎಂದು ಹೆಸರುವಾಸಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಇಂದು ನಿವೃತ್ತರಾಗುತ್ತಿರುವ ಮಿತ್ರನಿಗೆ ಆಯುರಾರೋಗ್ಯಭಾಗ್ಯ ಲಭಿಸಲಿ ಎಂದು ಹರಿಸಿದರು. ಸನ್ಮಾನಕ್ಕೆ ಉತ್ತರ ನೀಡಿದ ಶ್ರೀ ಭೀಮಾಶಂಕರ ವಾಲೆ ಸಾಹೇಬರು ಪ್ರಥಮದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಇವರನ್ನು ಸ್ಮರಿಸಿ, ಜನ್ಮ ನೀಡಿದ ತಾಯಿ-ತಂದೆಯರನ್ನ, ವಿದ್ಯೆ ಕಲಿಸಿದ ಗುರುಗಳಿಗೆ ನೆನೆಸುತ್ತಾ ಮಾತನಾಡಲು ಆರಂಭಿಸಿದರು. ತಮ್ಮ ಬಾಳಿನ ಕಥೆಯನ್ನು ಶಿಕ್ಷಕ ಬಾಂಧವರಿಗೆ ಹೇಳಿ ತನ್ನನ್ನು ಸನ್ಮಾನ ಮಾಡಿದಕ್ಕೆ ಋಣ ವ್ಯಕ್ತಪಡಿಸಿದರು. ತಾನು ಕಲಿಸಿದ ವಿದ್ಯಾರ್ಥಿಗಳಲ್ಲಿ 100ಕ್ಕಿಂತ ಹೆಚ್ಚು ಜನರು ಉಚ್ಚ ಪದದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾವು ಶಿಕ್ಷಕ ವೃತ್ತಿ ನಿರ್ವಹಿಸುವಾಗ ಗುಣಮಟ್ಟಕ್ಕೆ ಆದ್ಯತೆ ಕೊಡಬೇಕು. ನಾನು ಸಹ ಬಂಗಾರ, ಬೆಳ್ಳಿಗೆ ಆಸೆ ಪಡದೇ ವಿದ್ಯಾರ್ಥಿಯರ ಕಲ್ಯಾಣ ಹೇಗೆ ಆಗುತ್ತದೆ ಎಂಬುದರತ್ತ ಗಮನ ನಿಡಿದ್ದೇನೆ. ಈ ವೃತ್ತಿಯಲ್ಲಿ ಸಮಾಧಾನಿಯಾಗಿರಬೇಕು. ನಿಮ್ಮಂಥಹ ಸ್ನೇಹಶೀಲ ಸಹಕಾರಿಗಳು ದೊರೆಯಬೇಕಾದರೆ ನಾನು ಪುಣ್ಯ ಮಾಡಿದ್ದೇನೆ, ಸಮಾಧಾನಿಯಾಗಿದ್ದೇನೆ. ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಅವರ ಪತ್ನಿ ಸೌ ಸಂಗೀತಾ ಮೇಡಂ, ಮಗ ಮತ್ತು ಮಗಳು, ತಾಯಿ ಮತ್ತು ಸಹೋದರ ಪ್ರಕಾಶ ವಾಲೆ ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನೆರೆಯ ನಾಗಣಸುರ ಕೇಂದ್ರದ ಗುರುನಾಥ ನರುಣೆ, ವಿದ್ಯಾಧರ ಗುರವ, ಶರಣಪ್ಪ ಫುಲಾರಿ, ಸಿದ್ಧರಾಮ ತೆಗ್ಗೆಳ್ಳಿ ಮತ್ತು ಇತರ ಅನೇಕ ಶಿಕ್ಷಕ ಬಾಂಧವರು ಸಹ ಶ್ರೀ ವಾಲೆ ಸಾಹೇಬರಿಗೆ ಸನ್ಮಾನ ಮಾಡಿ ಶುಭಾಶಯ ಕೋರಿದರು.

         ಕಾರ್ಯಕ್ರಮದಲ್ಲಿ ರಾಜಕುಮಾರ ಉಮರಾಣಿಕರ, ಕಲ್ಯಾಣಿ ಗಂಗೋಂಡಾ, ಸತ್ಯವಾನ ಜೈನಜಾಂಗಡೆ, ಬಸವರಾಜ ಗೌಡನಳ್ಳಿ, ಶಿದ್ರಾಯ ಬಿರಾಜದಾರ, ಗುರುನಾಥ ನರುಣೆ, ವಿದ್ಯಾಧರ ಗುರವ, ಶರಣಪ್ಪ ಫುಲಾರಿ,ವೆಂಕಟ ಧರ್ಮಸಾಲೆ, ಸುನಂದಾ ಖಜುರ್ಗಿ, ಲಕ್ಷ್ಮಣ ವಾಗಮೋಡೆ, ಗುರುನಾಥ ನರುಣೆ, ಗೋರೆ, ಫಟಾಟೆ, ದೇಸಾಯಿ ಸರ್, ಎಳಮೆಳಿ, ಹೊಸೂರೆ ಸರ, ಬಸವರಾಜ ಧನಶೆಟ್ಟಿ, ಸಿದ್ಧಾರಾಮ ತೆಗ್ಗೆಳ್ಳಿ, ಸಂತೋಷ ಪರಿಟ, ಕರಪೆ ಸರ್ ಸಹಿತ ತೋಳಣುರ್, ಉಡಗಿ ಹಾಗೂ ಗೌಡಗಾವ ಕೇಂದ್ರಗಳ ಎಲ್ಲ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ಸೂತ್ರ ಸಂಚಲನವನ್ನು ಶ್ರೀಮತಿ ನೀಲೋಫರ್ ಫಣಿಬಂದ ಮೇಡಂ ಮಾಡಿದರೆ ಮಂಗಲಾರ್ಪಣೆ ಶ್ರೀಮತಿ ಜಯಶ್ರೀ ಕಲಬುರ್ಗಿ ನೆರವೇರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

ಧನ್ಯವಾದಗಳು