ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ದುಧನಿಯಲ್ಲಿ ದ. ರಾ.ಬೇಂದ್ರೆ ಅವರ ಜನ್ಮದಿನಾಚರಣೆ

 ವರ ಕವಿ ದ. ರಾ.ಬೇಂದ್ರೆ ಅವರ ಜನ್ಮದಿನಾಚರಣೆ




           ಕನ್ನಡದ ವರ ಕವಿ ದ. ರಾ.ಬೇಂದ್ರೆ ಅವರ ಜನ್ಮದಿನಾಚರಣೆಯನ್ನು ಮಾತೋಶ್ರೀ ಲಕ್ಷ್ಮಿಬಾಯಿ.ಸಾತಲಿಂಗಪ್ಪಾ ಮ್ಹೆತ್ರೆ ಪ್ರಶಾಲೆ ದುಧನಿಯಲ್ಲಿ ಆಚರಿಸಲಾಯಿತು . ಅಧ್ಯಕ್ಷತೆಯನ್ನು ಸಂಸ್ಥೆಯ ಸಹ ಸಚಿವರಾದ ಮಹಾದೇವ ಖೇಡ ಸರ್ ವಹಿಸಿಕೊಂಡಿದರು. ಪ್ರತಿಮೆಯ ಪೂಜೆಯನ್ನು ಅವರು ಮಾಡಿದರು.ಕನ್ನಡದ ದಿನದ ಬಗ್ಗೆ ಕನ್ನಡ ಶಿಕ್ಷಕರಾದ ಸಿದ್ಧರಾಮ ಪಾಟೀಲ್ ಸರ್ ಪಟ್ಟಣ ಶೆಟ್ಟಿ ಸರ್ ರಾಮ ಗದ್ದಿ ಸರ್ ಶ್ರೀಶೈಲ್ ಮಾಳಿ ಸರ್ ಕನ್ನಡ ಮರಾಠಿ ಭಾಷಾ ಬಾಂಧವ್ಯ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಬೇಂದ್ರೆ ಕುರಿತು ಮಾತನಾಡಿ. ಕನ್ನಡ ಹಾಡಿಗೆ ನೃತ್ಯವನ್ನು ಮಾಡಿ ಕನ್ನಡದ ಕಂಪನ್ನು ಗಡಿನಾಡಲ್ಲಿ ಹರಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಕಲ್ಯಾಣಿ ಕರಡೆ ಸರ್ ಮಾಡಿದರು.ವಿದ್ಯಾರ್ಥಿಗಳಾದ ಪ್ರಕೃತಿ . ರಾಮ. ಸುಗಲಾಬಾಯಿ. ರೇಣುಕಾ . ತಾಯಮ್ಮ.ಪವಿತ್ರ. ರಾಧಿಕಾ ಕನ್ನಡ ಹಾಡಿಗೆ ನೃತ್ಯವನ್ನು ಮಾಡಿದರು.ಸುನೀಲ ಅಡವಿತೋಟೆ ಸರ್ ಶರಣಗೌಡ ಪಾಟೀಲ್ ಸರ್ ಸೌ ಕಲಬುರ್ಗಿ ಶಿಕ್ಷಕಿ .ಮಹದೇವ ಹುಳ್ಳಿ ಸರ್ ಶಿಕ್ಷಕ ಶಿಕ್ಷಕರು ಬಳಗ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು.ಕನ್ನಡ ಮತ್ತು ಮರಾಠಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅದರಂತೆ 

     20ನೇ ಶತಮಾನದ ಶ್ರೇಷ್ಠ ಕನ್ನಡದ ಕವಿ ಪದ್ಮಶ್ರೀ ಹಾಗೂ ಸಾಹಿತ್ಯ ಕ್ಷೇತ್ರದ ಅತ್ಯುನ್ನತವಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವರಕವಿ ದ. ರಾ. ಬೇಂದ್ರೆಯವರ ಜನ್ಮ ದಿನಾಚರಣೆಯನ್ನು ಶ್ರೀ ಗುರುಶಾಂತಲಿಂಗೇಶ್ವರ ಕಾಲೇಜು ದುಧನಿಯಲ್ಲಿ ಆಚರಿಸಲಾಯಿತು

ಇವರ ಜೀವನ,ಕವಿತೆಗಳು ಮತ್ತು ಇವರ ಸಾಹಿತ್ಯ ಎಲ್ಲಾ ಕಾಲಕ್ಕೂ ಮಾರ್ಗದರ್ಶಕ ಸ್ಪೂರ್ತಿಯನ್ನು ನೀಡುತ್ತವೆ ಮೇತ್ರೆ ಪ್ರಶಾಲೆಯ ವಿಜ್ಞಾನದ ಶಿಕ್ಷಕರಾದ ಶ್ರೀಯುತ ಅಡವಿತೋಟೆ ಸರ್ ಅವರು ಪ್ರತಿಮೆ ಪೂಜೆ ಮಾಡಿ, ಮಾತನಾಡಿದರು,ಅದರಂತೆ ಕನ್ನಡದ ಅಧ್ಯಾಪಕರಾದ ಗೊಗಾವ ಸರ್ ರವರು ಕವಿ ಬೇಂದ್ರೆಯವರ ಬಗ್ಗೆ ಮಾತನಾಡಿದರು ಮತ್ತು ಬಿರಾಜದಾರ್ ಸರ್ ದ.ರಾ. ಬೇಂದ್ರೆಯವರ ಪದ್ಯವನ್ನು ಅತ್ಯಂತ ಮಧುರವಾಗಿ ಹಾಡಿ ಮಕ್ಕಳನ್ನು ರಂಜಿಸಿದರು

ಈ ಸಮಯದಲ್ಲಿ ಕಾಲೇಜಿನ ಶಿಕ್ಷಕ ಶಿಕ್ಷಕರೆತರ್ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು