ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Geography 10th Kannada Medium Guide 10ನೇ ತರಗತಿ ಭೂಗೋಲ ಗೈಡ್

 

ಭೂಗೋಳ 10 ನೇ ತರಗತಿ ಮಹಾರಾಷ್ಟ್ರ

ಲೇಖನ ಮತ್ತು ಸಂಕಲನ : ಶ್ರೀ ದಿನೇಶ ಠಾಕೂರದಾಸ ಚವ್ಹಾಣ



ಅನುಕ್ರಮಣಿಕೆ

ಅ.ಕ್ರ.

ಪಾಠದ ಹೆಸರು

ಕ್ಷೇತ್ರ

ಪುಟ ಕ್ರಮಾಂಕ

1

ಕ್ಷೇತ್ರಭೇಟಿ

ಪ್ರಾತ್ಯಕ್ಷಿಕ ಭೂಗೋಲ

 

2

ಸ್ಥಾನ-ವಿಸ್ತಾರ

ಸಾಮಾನ್ಯ ಭೂಗೋಲ

 

3

ಪ್ರಾಕೃತಿಕ ರಚನೆ ಹಾಗೂ ಜಲ ಪ್ರಣಾಳಿ

ಪ್ರಾಕೃತಿಕ ಭೂಗೋಲ

 

4

ಹವಾಮಾನ

ಪ್ರಾಕೃತಿಕ ಭೂಗೋಲ

 

5

ನೈಸರ್ಗಿಕ ವನಸ್ಪತಿ ಹಾಗೂ ಪ್ರಾಣಿಗಳು

ಪಾಕೃತಿಕ ಭೂಗೋಲ

 

6

ಜನಸಂಖ್ಯೆ

ಮಾನವ ಭೂಗೋಲ

 

7

ಮಾನವನ ವಸತಿ

ಮಾನವ ಭೂಗೋಲ

 

8

ಅರ್ಥವ್ಯವಸ್ಥೆ ಹಾಗೂ ವ್ಯವಸಾಯಗಳು

ಮಾನವ ಭೂಗೋಲ

 

9

ಪ್ರವಾಸ ಸಾರಿಗೆ ಮತ್ತು ಸಂದೇಶವಹನ

ಮಾನವ ಭೂಗೋಲ

 

 

 

 

   

1.     ಕ್ಷೇತ್ರಭೇಟಿ


ಪ್ರಶ್ನೆ 1. ಕ್ಷೇತ್ರಭೇಟಿಯ ವರದಿಯನ್ನು ಯಾವ ಸಂಗತಿಗಳ ಆಧಾರದಿಂದ ತಯಾರಿಸುವಿರಿ?

ಉತ್ತರ : ಕ್ಷೇತ್ರಭೇಟಿಯ ವರದಿ ತಯಾರಿಸುವಾಗ ಕೆಳಗಿನ ಸಂಗತಿಗಳ ಆಧಾರವನ್ನು ತೆಗೆದುಕೊಳ್ಳಬೇಕಾಗುವುದು.

·         ಪರಿಚಯ

·         ಭೌಗೋಲಿಕ ಉದ್ದೇಶಗಳು

·         ಸ್ಥಳ ಹಾಗೂ ರಸ್ತೆಯ ನಕಾಶೆ

·                ಹವಾಮಾನ

·                ಪ್ರಾಣಿ ಮತ್ತು ವನಸ್ಪತಿಗಳ ಅಧಿವಾಸ

·                ಜನ ವಸತಿಯ ಮಾಹಿತಿ

·                ವ್ಯವಸಾಯಗಳು

·                ಭೂರಚನೆ, ಭೂಮಿಯ ಬಳಕೆ, ಕೃಷಿ ಅಥವಾ ಬೆಳೆಗಳ ಪ್ರಕಾರಗಳು

·                ಮಹತ್ವದ ಐತಿಹಾಸಿಕ ಸ್ಥಳಗಳು

·                ಪರ್ಯವರಣದ ಸಮಸ್ಯೆಗಳು ಹಾಗೂ ಉಪಾಯಗಳು

·                ಉಪಸಂಹಾರ

·                ಆಕೃತಿಗಳ ಬಳಕೆ, ನಕಾಶೆಗಳು, ಚಿತ್ರಗಳು ಇತ್ಯಾದಿಗಳ ಆಧಾರವನ್ನು ತೆಗೆದುಕೊಂಡು ಯಾವುದೇ ಕ್ಷೇತ್ರದ ಭೇಟಿ ಮಾಡಿದಾಗ ವಿವರಣವಾಗಿ ಅಹವಾಲ/ವರದಿಯನ್ನು ತಯಾರಿಸಬೇಕು.

 

ಪ್ರಶ್ನೆ 2 ಕಾರಖಾನೆಗೆ ನೀಡುವ ಕ್ಷೇತ್ರಭೇಟಿಗಾಗಿ ಪ್ರಶ್ನಾವಲಿ ತಯಾರಿಸಿರಿ.

ಉತ್ತರ : ಕಾರಖಾನೆಗೆ ಭೇಟಿ ನೀಡುವಾಗ ವಿದ್ಯಾರ್ಥಿಗಳು ಆ ಕಾರಖಾನೆಯ ಬಗ್ಗೆ ತಿಳಿದುಕೊಳ್ಳಲು ಕೆಳಗಿನಂತೆ ಪ್ರಶ್ನೆಗಳನ್ನು ಕೇಳಬಹುದು.
     1) ಈ ಕಾರಖಾನೆಯ ಹೆಸರು ಏನು?

     2) ಈ ಕಾರಖಾನೆಯ ಸ್ಥಳದ ವಿಳಾಸವೇನಿದೆ?

     3) ಯಾವ ಯಾವ ಉತ್ಪಾದನೆಗಳು ಕಾರಖಾನೆಯಲ್ಲಿ ತಯಾರಿಸಲಾಗುತ್ತವೆ?

     4) ಯಾವ ಯಾವ ಕಚ್ಚಾ ಪದಾರ್ಥಗಳನ್ನು ಉಪಯೋಗಿಸಲಾಗುವವು?

    5) ಕಚ್ಚಾ ಪದಾರ್ಥಗಳು ಎಲ್ಲಿಂದ ಉಪಲಬ್ದ ಆಗುತ್ತವೆ?

    6) ಪಕ್ಕಾ ಸರಕುಗಳನ್ನು/ಉತ್ಪಾದನೆಯ ಪದಾರ್ಥಗಳನ್ನು ಯಾವ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವಿರಿ?

    7)  ಈ ಕಾರಖಾನೆಯಲ್ಲಿ ಎಷ್ಟು ಜನ ಕಾರ್ಮಿಕರು ಇದ್ದಾರೆ?

    8) ಕಾರ್ಮಿಕರು ಕೆಲಸ ಮಾಡುವ ವೇಳೆ ಯಾವುದಿದೆ? ಎರಡು ಶಿಫ್ಟ್ನಲ್ಲಿ ಕೆಲಸ ಮಾಡಲಾಗುತ್ತದೆಯೇ?

    9) ಕಾರ್ಮಿಕರ ಸಂರಕ್ಷಣೆಗೋಸ್ಕರ ಯಾವ ಮುಂಜಾಗ್ರತೆ ಕಾರಖಾನೆ ವಹಿಸುತ್ತದೆ?

    10) ನೈಸರ್ಗಿಕ ಅನಾಹುತಗಳು ಸಂಭವಿಸಿದರೆ ಯಾವ ಮುಂಜಾಗ್ರತೆ ವಹಿಸಲಾಗುವುದು?

ಪ್ರಶ್ನೆ 3 ಕ್ಷೇತ್ರಭೇಟಿಗಾಗಿ ಯಾವ ಸಲಕರಣೆಗಳನ್ನು/ಸಾಹಿತ್ಯಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವಿರಿ?

ಉತ್ತರ : ನಾವು ಕ್ಷೇತ್ರಭೇಟಿಗೆ ಹೋಗುವಾಗ ಕೆಳಗಿನ ಸಲಕರಣೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವೆವು:

·                ನೋಟಬುಕ್, ಪೆನ್, ಪೆನ್ಸಿಲ್, ಕ್ಯಾಮೆರಾ, ದೂರದರ್ಶಕ ಯಂತ್ರ ಮೊಬೈಲ್ ಮುಂತಾದ ಸಾಹಿತ್ಯಗಳು ಮಾಹಿತಿ ಸಂಗ್ರಹಿಸಲು ಬೇಕಾಗುವವು.

·                ಚುಂಬಕೀಯ ಕಂಪಾಸ್, GPS ಸೌಲಭ್ಯ ಇರುವ ಮೊಬೈಲ್ ಹಾಗೂ ನಕಾಶೆಗಳು ಕ್ಷೇತ್ರದ ದಿಕ್ಕು ತಿಳಿದುಕೊಳ್ಳಲು ಸಹಾಯವಾಗುತ್ತವೆ.

·                ಆಯ್ ಕಾರ್ಡ್, ನೀರಿನ ಬಾಟಲಿ, ಟೊಪ್ಪಿಗೆ, ಪ್ರಥಮೋಪಚಾರ ಪೆಟ್ಟಿಗೆ ಅವಶ್ಯಕ ಇರಬೇಕು

·                ಅಲ್ಲಿಂದ ಏನಾದರೂ ತೆಗೆದುಕೊಂಡು ಬರಲು Ziplock ಇರುವ ಬ್ಯಾಗ್

·                ಮಾಹಿತಿ ಕೇಳಿ ತಿಳಿದುಕೊಳ್ಳಲು ಯೋಗ್ಯ ಪ್ರಶ್ನಾವಲಿ ತಯಾರಿಸಿಕೊಂಡಿರಬೇಕು.

·                ಊಟದ ಡಬ್ಬಿ, ನೀರು, ಮುಂತಾದವುಗಳು.

ಪ್ರಶ್ನೆ 4 ಕ್ಷೇತ್ರ ಭೇಟಿಯ ಅವಶ್ಯಕತೆಯನ್ನು ಸ್ಪಷ್ಟಪಡಿಸಿರಿ.

ಅಥವಾ
ಕ್ಷೇತ್ರಭೇಟಿಯ ಮೂಲಕ ಭೌಗೋಲಿಕ ಜ್ಞಾನವನ್ನು ಹೇಗೆ ಬೆಳೆಸಿಕೊಳ್ಳಹಬುದು?
ಉತ್ತರ :
(i)
ಭೂಗೋಲ ಇದೊಂದು ನಿರೀಕ್ಷಣೆಯಿಂದ ಕಲಿಯಬಹುದಾದ ವಿಜ್ಞಾನವಾಗಿದೆ.
(ii)
ಕ್ಷೇತ್ರಭೇಟಿಯಿಂದ ಆ ಕ್ಷೇತ್ರದ ಯೋಗ್ಯ ಮಾಹಿತಿ ಕಣ್ಣಾರೆ ನೋಡಿ ಕಲಿಯಲು, ಅನುಭವಿಸಲು ಬರುತ್ತದೆ. ಹೊಸ ಸ್ಥಳದ ಬಗ್ಗೆ, ಅಲ್ಲಿಯ ವಾತಾವರಣದ ಬಗ್ಗೆ ತಿಳಿದುಕೊಳ್ಳಬಹುದು.

(iii) ವಿದ್ಯಾರ್ಥಿಗಳು ಭೌಗೋಲಿಕ ಹಾಗೂ ಸಂಸ್ಕೃತಿಕ ಸಂಗತಿಗಳ ಸಂಬಂಧಗಳ ಮಾಹಿತಿ ಮಾಡಿಕೊಳ್ಳುತ್ತಾರೆ. ಮನುಷ್ಯರು ಭೌಗೋಲಿಕ ವಾತಾವರಣಕ್ಕನುಸರಿಸಿ ಬದುಕಲು ಉಪಾಯಯೋಜನೆ ಮಾಡಿಕೊಳ್ಳುತ್ತಾರೆ.
(iv)
ಇತರ ಸ್ಥಾನಿಕ ಜನರ ಜೊತೆಗೆ ಸಂವಾದ ಸಾಧಿಸಿ ಅವರ ಸಂಸ್ಕೃತಿ, ಭಾಷೆ, ರೀತಿ-ನೀತಿಗಳ ಕಲ್ಪನೆ ತಿಳಿಕೊಳ್ಳಲು ಅನುಕೂಲವಾಗುತ್ತದೆ.

ಪ್ರಶ್ನೆ 4 ಪ್ರದೇಶಗಳು ಮತ್ತು ಅವಶ್ಯಕತೆಗಳು ಜೀವನೋಪಾಯದ ವಿಧಾನಗಳಲ್ಲಿಯ ವ್ಯತ್ಯಾಸದ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ನೀವು ಒಪ್ಪುತ್ತೀರಾ?

ಉತ್ತರ: 1) ಒಬ್ಬ ವ್ಯಕ್ತಿಯ ಜೀವನೋಪಾ ಯವು ಅವರ ಜೀವನದ ಮೂಲಭೂತ ಅವಶ್ಯಕತೆಗಳಾದ – ಆಹಾರ, ನೀರು, ವಸತಿ ಮತ್ತು ಬಟ್ಟೆಗಳನ್ನು ಭದ್ರಪಡಿಸುವ ಸಾಧನಗಳನ್ನು ಸೂಚಿಸುತ್ತದೆ.  

2) ಮೇಲಿನ ಅಗತ್ಯಗಳನ್ನು ಪಡೆಯಲು ಜನರು ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ವಯಕ್ತಿಕವಾಗಿ ಮತ್ತು ಗುಂಪಾಗಿ ಕೆಲಸ ಮಾಡುತ್ತಾರೆ. ಕೆಲಸ ನಿರಂತರ  ನಡೆಸಲಾಗುತ್ತದೆ.

3) ಉದಾ. ಮೀನುಗಾರರ ಜೀವನೋಪಾಯವು ಮೀನಿನ ಉಪಲಬ್ದತೆಯ ಮೇಲೆ ಅವಲಂಬಿತವಾಗಿದೆ ಮತ್ತು ಇದನ್ನು ಅವಲಂಬಿಸಿ ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ವೃತ್ತಿಗಳು ಅಭಿವೃಧ್ಧಿಗೊಳ್ಳುತ್ತವೆ, ಉದಾ ದೋಣಿಗಳು, ಬಲೆಗಳು, ಮೀನು ಕ್ಯಾನಿಂಗ್, ಸಾರಿಗೆ ಇತ್ಯಾದಿ.

4) ಆದ್ದರಿಂದ, ಖಂಡಿತವಾಗಿಯೂ ಪ್ರದೇಶಗಳು ಮತ್ತು ಅವಶ್ಯಕತೆಗಳು ಜೀವನೋಪಾಯದ ವಿಧಾನಗಳಲ್ಲಿಯ ವ್ಯತ್ಯಾಸವನ್ನು ಪ್ರಭಾವಿಸುತ್ತವೆ. 

 

  

 

2       ಸ್ಥಾನ – ವಿಸ್ತಾರ

ಪ್ರಶ್ನೆ 1 ಕೆಳಗಿನ ವಿಧಾನಗಳು ಯೋಗ್ಯವೋ ಅಥವಾ ಅಯೋಗ್ಯವೋ ಎಂಬುದನ್ನು ಬರೆಯಿರಿ. ಅಯೋಗ್ಯ ವಿಧಾನಗಳನ್ನು ಸರಿಪಡಿಸಿ ಬರೆಯಿರಿ. 

(1) ಬ್ರಾಝಿಲ ದೇಶವು ದಕ್ಷಿಣ ಗೋಲಾರ್ಧದಲ್ಲಿ ಇದೆ                            = ಯೋಗ್ಯ
(2) ಮಕರ ವೃತ್ತವು ಭಾರತದ ಮಧ್ಯದಿಂದ ಹಾಯ್ದು ಹೋಗಿದೆ.            = ಅಯೋಗ್ಯ.  ಕರ್ಕವೃತ್ತವು ಭಾರತದ ಮಧ್ಯದಿಂದ ಹಾಯ್ದು ಹೋಗಿದೆ.

(3) ಬ್ರಾಝಿಲದ ರೇಖಾವೃತ್ತದ ವಿಸ್ತಾರ ಭಾರತಕ್ಕಿಂತ ಕಡಿಮೆ ಇದೆ.            = ಅಯೋಗ್ಯ     ಬ್ರಾಝಿಲದ ರೇಖಾವೃತ್ತದ ವಿಸ್ತಾರ ಭಾರತಕ್ಕಿಂತ ಹೆಚ್ಚು ಇದೆ.

(4) ಬ್ರಾಝಿಲ್ ದೇಶದ ಉತ್ತರ ಭಾಗದೊಳಗಿಂದ ವಿಷುವವೃತ್ತ ಹಾಯ್ದು ಹೋಗಿದೆ.     = ಯೋಗ್ಯ

(5) ಬ್ರಾಝಿಲ ದೇಶಕ್ಕೆ ಫೆಸಿಫಿಕ್ ಮಹಾಸಾಗರದ ದಂಡೆ ಲಭಿಸಿದೆ.             =ಅಯೋಗ್ಯ.       ಬ್ರಾಝಿಲ ದೇಶಕ್ಕೆ ಅಟ್ಲಾಂಟಿಕ ಮಹಾಸಾಗರದ ದಂಡೆ ಲಭಿಸಿದೆ.

(6) ಪಾಕಿಸ್ತಾನ ಇದು ಭಾರತದ ಆಗ್ನೇಯ ಭಾಗದಲ್ಲಿಯ ದೇಶವಾಗಿದೆ.         = ಅಯೋಗ್ಯ  ಪಾಕಿಸ್ತಾನ ಇದು ಭಾರತದ ವಾಯುವ್ಯ ಭಾಗದಲ್ಲಿಯ ದೇಶವಾಗಿದೆ.                                                                                 (7) ಭಾರತದ ದಕ್ಷಿಣದ ಭೂಭಾಗಕ್ಕೆ ದ್ವೀಪಕಲ್ಪ ಎನ್ನುವರು.          = ಯೋಗ್ಯ

ಪ್ರಶ್ನೆ 2 ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

1 )  ಸ್ವಾತಂತ್ರ್ಯೋತ್ಸವ ಕಾಲದಲ್ಲಿ ಭಾರತ ಹಾಗೂ ಬ್ರಾಝಿಲ್ ದೇಶಗಳು ಯಾವ ಸಮಸ್ಯೆಗಳನ್ನು ಎದುರಿಸಿದ್ದವು?
ಉತ್ತರ :
(i)
ಭಾರತವು ಸುಮಾರು ಒಂದು ನೂರಾ ಐವತ್ತು ವರ್ಷಗಳವರೆಗೆ ಬ್ರಿಟಿಷರ ಆಳ್ವಿಕೆಯಲ್ಲಿ ಇತ್ತು. 15 ಅಗಷ್ಟ 1947ರಲ್ಲಿ ಸ್ವಾತಂತ್ರ್ಯಗೊಂಡಿತು. ii) ಸ್ವಾತಂತ್ರ್ಯೋತ್ತರ ಕಾಲದಲ್ಲಿ ಮೊದಲ ಇಪ್ಪತ್ತು ವರ್ಷ ಮೂರು ಯುದ್ಧಗಳನ್ನು ಎದುರಿಸಿದೆ. ದೇಶದ ಸಾಕಷ್ಟು ಭಾಗ ಬರಗಾಲಗಳಂತಹ ಸಮಸ್ಯೆಗಳನ್ನು ಎದುರಿಸಿದರೂ ಕೂಡ ಇಂದು ಭಾರತ ಜಗತ್ತಿನ ಪ್ರಮುಖ ವಿಕಸನಶೀಲ ದೇಶವಾಗಿದೆ. (iii) ಬ್ರಝಿಲ್ ದೇಶ ಮೂರು ಶತಕಗಳಿಗಿಂತ ಹೆಚ್ಚಿನ ಕಾಲಾವಧಿ ಪೋರ್ತುಗೀಜರ ವಶದಲ್ಲಿತ್ತು. 1822ರಲ್ಲಿ ಬ್ರಾಝಿಲ  ಸ್ವಾತಂತ್ರ್ಯಗೊಂಡಿತು. (iv) 1930 ರಿಂದ 1985 ರ ವರೆಗಿನ ಅರ್ಧಶತಕಕ್ಕಿಂತ ಹೆಚ್ಚು ಕಾಲ ಜನಪ್ರಿಯ ಸೈನ್ಯ ಆಡಳಿತದಲ್ಲಿ ಇದ್ದಿತು.

2) ಭಾರತ ಹಾಗೂ ಬ್ರಾಝಿಲ ದೇಶಗಳ ಸ್ಥಾನಗಳಿಗೆ ಸಂಬಂಧಪಟ್ಟ ಯಾವ ಅಂಶಗಳು ಭಿನ್ನವಾಗಿವೆ? ಉತ್ತರ :
 (1) ಬ್ರಾಝಿಲದ ರೇಖಾವೃತ್ತದ ವಿಸ್ತಾರ ಭಾರತಕ್ಕಿಂತ ಹೆಚ್ಚು ಇದೆ. (2) ಬ್ರಾಝಿಲ ದೇಶವು ದಕ್ಷಿಣ ಅಮೇರಿಕಾದ ಉತ್ತರ ಭಾಗದಲ್ಲಿದ್ದರೆ ಭಾರತವು ಏಶಿಯಾ ಖಂಡದ ದಕ್ಷಿಣ ಭಾಗದಲ್ಲಿದೆ. (3) ಬ್ರಾಝಿಲ ದೇಶ ಉತ್ತರ ಗೋಲಾರ್ಧದಲ್ಲಿ ಸ್ವಲ್ಪ ಮತ್ತು ಹೆಚ್ಚಿನ ಭಾಗ ದಕ್ಷಿಣ ಗೋಲಾರ್ಧದಲ್ಲಿ ಇದೆ. ಭಾರತವು ಉತ್ತರ ಗೋಲಾರ್ಧದಲ್ಲಿ ಇದೆ. (4) ಬ್ರಾಝಿಲ ದೇಶದಲ್ಲಿ 26 ರಾಜ್ಯಗಳು ಇವೆ ಮತ್ತು ಭಾರತದಲ್ಲಿ 28 ಸಂಘಾರಾಜ್ಯಗಳು ಹಾಗೂ 8 ಕೇಂದ್ರಶಾಷಿತ  ಪ್ರದೇಶಗಳು ಇವೆ.

3) ಭಾರತ ಹಾಗೂ ಬ್ರಾಝಿಲಗಳ ಅಕ್ಷವೃತ್ತದ ಹಾಗೂ ರೇಖಾವೃತ್ತದ ಕಕ್ಷೆಗಳನ್ನು ಹೇಳಿರಿ.           ಉತ್ತರ :
(i)
ಭಾರತದ ಅಕ್ಷವೃತ್ತ 8°4’ಉದಿಂದ 37°6’ ಹಾಗೂ ರೇಖಾವೃತ್ತ 68°7’ಪೂ. ದಿಂದ 97°25’ಪೂ ಇದೆ.
(ii)
ಇಂದಿರಾ ಪಾಯಿಂಟ್ ಇದು ಭಾರತದ ದಕ್ಷಿಣ ತುದಿಯಲ್ಲಿದೆ. (iii) ಇದು 6°45’ಉ ಸಮಾಂತರ ಸ್ಥಾನವಾಗಿದೆ.
(iv)
ಬ್ರಾಝಿಲ ದೇಶದ ಅಕ್ಷವೃತ್ತ 5°15’ಉ ದಿಂದ 33°45′ ದ ಇದ್ದು ರೇಖಾವೃತ್ತ 34°47’ಪ. ದಿಂದ  73°48’ಪ. ಆಗಿರುತ್ತದೆ.

ಪ್ರಶ್ನೆ 3  ಸರಿಯಾದ ಪರ್ಯಾಯ ಆಯ್ದು ವಾಕ್ಯ ಪೂರ್ಣಮಾಡಿ ಬರೆಯಿರಿ.

1)     ಭಾರತದ ಎಲ್ಲಕ್ಕಿಂತ ದಕ್ಷಿಣದ ತುದಿಯನ್ನು ................. ಹೆಸರಿನಿಂದ ಗುರುತಿಸಲಗುವುದು.

ಉತ್ತರ: ಇಂದಿರಾ ಪಾಯಿಂಟ್

2)   ದಕ್ಷಿಣ ಅಮೇರಿಕಾ ಖಂಡದಲ್ಲಿಯ ಈ ಎರಡು ದೇಶಗಳು ಬ್ರಾಝಿಲದ ಸೀಮೆಗೆ ಹತ್ತಿಕೊಂಡಿಲ್ಲ.

ಉತ್ತರ: ಚಿಲಿ  ಇಕ್ವೆಡೋರ್

3)   ಎರಡು ದೇಶಗಳಲ್ಲಿಯ ಆಡಳಿತವು ………… ಪ್ರಕಾರದ್ದಿದೆ.     

ಉತ್ತರ: ಪ್ರಜಾಸತ್ತಾತ್ಮಕ

4)   ಕೆಳಗಿನವುಗಳಲ್ಲಿ ಯಾವ ಆಕಾರವು ಬ್ರಾಝಿಲದ ತೀರ ಪ್ರದೇಶವನ್ನು ಸಮರ್ಪಕವಾಗಿ ತೋರಿಸುವುದು?

ಉತ್ತರ


5)   ಕೆಳಗಿನವುಗಳಲ್ಲಿ ಯಾವ ಆಕಾರವು ಭಾರತದ ತೀರ ಪ್ರದೇಶವನ್ನು ಸಮರ್ಪಕವಾಗಿ ತೋರಿಸುವುದು?

ಉತ್ತರ :

6)   ಗೋಲಾರ್ಧಗಳ ವಿಚಾರ ಮಾಡಿದಾಗ, ಕೆಳಗಿನ ಪರ್ಯಾಯಗಳಲ್ಲಿ ಭಾರತ ಯಾವ ಗೋಲಾರ್ಧದಲ್ಲಿ ಇದೆ?

ಉತ್ತರ :

7)   ಗೋಲಾರ್ಧಗಳ ವಿಚಾರ ಮಾಡಿದಾಗ, ಕೆಳಗಿನ ಪರ್ಯಾಯಗಳಲ್ಲಿ ಬ್ರಾಝಿಲ  ಯಾವ ಗೋಲಾರ್ಧದಲ್ಲಿ ಇದೆ?   

ಉತ್ತರ :

ಸರಿಯಾದ ವಿಧಾನಗಳು

1) ಬ್ರಾಝಿಲ ದೇಶವು ಆಕಾರದಲ್ಲಿ ದೊಡ್ಡದಾಗಿದೆ.

2) ಬ್ರಾಝಿಲದ ರೇಖಾವೃತ್ತದ ವಿಸ್ತಾರ ಭಾರತಕ್ಕಿಂತ ಹೆಚ್ಚು ಇದೆ.

3) ಬ್ರಾಝಿಲ ದೇಶವು ದಕ್ಷಿಣ ಅಮೇರಿಕಾದ ಉತ್ತರ ಭಾಗದಲ್ಲಿದ್ದರೆ ಭಾರತವು ಏಶಿಯಾ ಖಂಡದ ದಕ್ಷಿಣ ಭಾಗದಲ್ಲಿದೆ.

4) ಬ್ರಾಝಿಲ ದೇಶದಲ್ಲಿ 26 ರಾಜ್ಯಗಳು ಇವೆ ಮತ್ತು ಭಾರತದಲ್ಲಿ 28 ಸಂಘಾರಾಜ್ಯಗಳು ಹಾಗೂ 8 ಕೇಂದ್ರಶಾಷಿತ  ಪ್ರದೇಶಗಳು ಇವೆ.

5) ಭಾರತದಲ್ಲಿ ಗೋವಾ, ದೀವ ಮತ್ತು ದಮಣ, ದಾದರಾ ಮತ್ತು ನಗರ ಹವೇಲಿ ಇವು ಪೋರ್ತುಗೀಜರ ವಶದಲ್ಲಿ ಇದ್ದವು. ಈ ಪ್ರಾಂತಗಳು 19 ಡಿಸೆಂಬರ್ 1961 ರಲ್ಲಿ ಸ್ವಾತಂತ್ರ್ಯಗೊಂಡಿದ್ದವು. 

 

ಪ್ರಶ್ನೆ 4 ಹೊಂದಿಸಿ ಬರೆಯಿರಿ.

ಗುಂಪು

ಗುಂಪು ’ (ಉತ್ತರಗಳು) 

1)     ಬ್ರಾಝಿಲದ ನೃತ್ಯ

2)    ಭಾರತದ ರಾಜಧಾನಿ

3)    ಬ್ರಾಝಿಲದ ರಾಜಧಾನಿ

4)   ಜಗತ್ತಿನ ಕಾಫಿ ಕಣಜ

ಸಾಂಬಾ

ಹೊಸ ದಿಲ್ಲಿ

ಬ್ರಶೀಲಿಯಾ

ಬ್ರಾಝಿಲ

 

ಪ್ರಶ್ನೆ 5. ಪೃಷ್ಠ 10 ರ ಮೇಲಿನ ಭಾರತದ ನಕಾಶೆ ನೋಡಿ ನಮ್ಮ ದೇಶದ ನೆರೆಹೊರೆಯ ದೇಶಗಳು ಹಾಗೂ ಮಹಾಸಾಗರಗಳ ಯಾದಿ ಮಾಡಿರಿ.  

 

ದಿಕ್ಕುಗಳು

ನೆರೆಹೊರೆಯ ದೇಶಗಳು/ಸಾಗರ/ಮಹಾಸಾಗರ

1)           ಪೂರ್ವ

ಮ್ಯಾನಮಾರ, ಬಾಂಗ್ಲಾದೇಶ, ಬಂಗಾಳದ ಉಪಸಾಗರ

2)           ಪಶ್ಚಿಮ

ಅರಬಿ ಸಮುದ್ರ, ಪಾಕಿಸ್ತಾನ, ಅಫಗಾನಿಸ್ತಾನ

3)           ದಕ್ಷಿಣ

ಹಿಂದಿಮಹಾಸಾಗರ, ಶ್ರೀಲಂಕಾ, ಮಾಲದೀವ, ಇಂಡೋನೇಷಿಯಾ

4)           ಉತ್ತರ

ಚೀನಾ, ಭೂತಾನ, ನೇಪಾಳ

 

    ಪ್ರಶ್ನೆ 6 ಬ್ರಾಝಿಲದ ನೆರೆಯ ದೇಶಗಳು/ಮಹಾಸಾಗರಗಳ ಹೆಸರು ಬರೆಯಿರಿ.

   


ದಿಕ್ಕುಗಳು

ನೆರೆಹೊರೆಯ ದೇಶಗಳು/ಸಾಗರ/ಮಹಾಸಾಗರ

1.     ಪೂರ್ವ

ಅಟ್ಲಾಂಟಿಕ್ ಮಹಾಸಾಗರ

2.    ಪಶ್ಚಿಮ

ಪೆರು, ಕೊಲಂಬಿಯಸ್, ಬೊಲಿವ್ಹಿಯಾ, ಅಜೈಂಟೀನಾ, ಪೇರಾಗ್ವೆ

3.    ದಕ್ಷಿಣ

ಉರುಗ್ವೆ, ದಕ್ಷಿಣ ಅಟ್ಲಾಂಟಿಕ್ ಮಹಾಸಾಗರ

4.   ಉತ್ತರ

ವ್ಹೆನಝುಲಾ, ಗಿಯಾನಾ, ಸುರಿನಾಮಾ, ಫ್ರೆಂಚ್, ಉತ್ತರ ಅಟ್ಲಾಂಟಿಕ್ ಮಹಾಸಾಗರ

 

 ಪ್ರಶ್ನೆ 7 ಭೌಗೋಲಿಕ ಕಾರಣ ಕೊಡಿರಿ.

1.ಬ್ರಾಝೀಲ ದೇಶವು ಕಾಫಿ ಕಣಜ ಎಂದು ಕರೆಯಲಾಗುತ್ತದೆ.

ಉತ್ತರ: (i)ಕಾಫಿ ಬೆಳೆಯುವುದರಲ್ಲಿ ಜಗತ್ತಿನಲ್ಲಿ ಬ್ರಝಿಲ್ ದೇಶ ಮುಂಚೂಣಿಯಲ್ಲಿದೆ.
(ii)
ಈ ದೇಶದಲ್ಲಿ ಜಗತ್ತಿನ 40% ಕಾಫಿ ಬೆಳೆಯಲಾಗುತ್ತದೆ. (iii) ಈ ದೇಶ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ನಿರ್ಯಾತ ಮಾಡುತ್ತದೆ. ಆದ್ದರಿಂದ ಬ್ರಾಝಿಲ್ ದೇಶಕ್ಕೆ ಕಾಫಿ ಕಣಜ ಎಂದು ಕರೆಯಲಾಗುತ್ತದೆ.



3.  ಪ್ರಕೃತಿಕ ರಚನೆ ಹಾಗೂ ಜಲಪ್ರಣಾಲಿ

ಪ್ರಶ್ನೆ 1 ಸರಿಯಾದ ಪರ್ಯಾಯ ಆರಿಸಿ ವಾಕ್ಯ ಬರೆಯಿರಿ. 

(ಅ) ಬ್ರಾಝಿಲದ ಸರ್ವಾಧಿಕ ಭಾಗ ............ 

(i) ಉಚ್ಚ ಭೂಮಿಯಾಗಿದೆ.                   (ii) ಬಯಲು ಆಗಿದೆ

(iii) ಪರ್ವತ ಪ್ರದೇಶವಾಗಿದೆ.          (iv) ಖಂಡಿತಗೊಂಡ ದಿನ್ನೆಗಳಿಂದ ಆಗಿದೆ.

(ಆ) ಬಾಝಿಲದಂತೆ ಭಾರತದಲ್ಲಿಯೂ...............

(i) ಎತ್ತರದ ಪರ್ವತಗಳಿವೆ             (ii) ಪ್ರಾಚೀನ ತಪ್ಪಲುಗಳಿವೆ.

(iii) ಪಶ್ಚಿಮವಾಹಿನಿ ನದಿಗಳಿವೆ.                (iv) ಹಿಮಾಚ್ಛಾದಿತ ಗುಡ್ಡಗಳಿವೆ.

(ಇ) ಅಮೆಝಾನ ನದಿಯ ಕೊಳ್ಳ ...................

(i) ಬರಗಾಲ ಪೀಡಿತವಾಗಿದೆ.          (ii) ಜವುಳು ಪ್ರದೇಶವಾಗಿದೆ.

(iii) ದಟ್ಟ ಅರಣ್ಯಗಳಿಂದ ವ್ಯಾಪಿಸಿದೆ.   (iv) ಫಲವತ್ತಾಗಿದೆ.

(ಈ) ಅಮೆಝಾನ ಇದು ಜಗತ್ತಿನ ಒಂದು ದೊಡ್ಡ ನದಿಯಾಗಿದೆ. ಈ ನದಿಯ ಮುಖದಲ್ಲಿ.............

(i) ತ್ರಿಭುಜ ಪ್ರದೇಶಗಳಿವೆ.             (ii) ತ್ರಿಭುಜ ಪ್ರದೇಶಗಳಿಲ್ಲ.

(iii) ವಿಸ್ತಾರವಾದ ಕೊಳ್ಳಗಳಿವೆ.        (iv) ಮೀನುಗಾರಿಕೆಯ ವ್ಯವಸಾಯ ನಡೆಯುವುದು.

(ಈ) ಅರಬೀ ಸಮುದ್ರದಲ್ಲಿಯ ಲಕ್ಷದ್ವೀಪ ದ್ವೀಪಗಳು.............

(i) ಮುಖ್ಯ ಭೂಭಾಗದಿಂದ ತುಂಡರಿಸಿದ ಭೂಭಾಗದಿಂದ ತಯಾರಾಗಿವೆ.

(ii) ಹವಳದ ದ್ವೀಪಗಳಾಗಿವೆ.               

(iii) ಜ್ವಾಲಾಮುಖಿಯ ದ್ವೀಪಗಳಾಗಿವೆ.

(iv) ಖಂಡಿತಗೊಂಡ ದ್ವೀಪಗಳಿವೆ.

(ಊ) ಅರವಲಿ ಪರ್ವತದ ಉತ್ತರದಲ್ಲಿ .................

(i) ಬುಂದೇಲಖಂಡದ ತಪ್ಪಲು ಇದೆ.           (ii) ಮೇವಾಡದ ತಪ್ಪಲು ಇದೆ.

(iii) ಮಾಳವಾದ ತಪ್ಪಲು ಇದೆ.                (iv) ಖ್ಖನದ ತಪ್ಪಲು ಇದೆ.

ಪ್ರಶ್ನೆ 2 ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1 )  ಭಾರತ ಹಾಗೂ ಬ್ರಾಝಿಲ ದೇಶಗಳ ಪ್ರಕೃತಿಕ ರಚನೆಯಲ್ಲಿಯ ಭೇಧ ಹೇಳಿರಿ.

ಭಾರತ ದೇಶದ ಪ್ರಕೃತಿಕ ರಚನೆ

ಬ್ರಾಝಿಲ್ ದೇಶದ ಪ್ರಕೃತಿಕ ರಚನೆ

1 .  ಭಾರತದ ಪ್ರಕೃತಿಕ ರಚನೆಯಲ್ಲಿ ಹಿಮಾಲಯ, ಉತ್ತರ ಭಾರತದ ಬಯಲು ಪ್ರದೇಶ, ಪಂಜಾಬದ ಬಯಲು ಪ್ರದೇಶ, ದ್ವೀಪಕಲ್ಪ, ಸಮುದ್ರ ದಂಡೆಯ ಪ್ರದೇಶ ಹಾಗೂ ದ್ವೀಪಸಮೂಹಗಳು ಬರುತ್ತವೆ. 

1 . ಬ್ರಾಝಿಲ್ ದೇಶದ ಪ್ರಕೃತಿಕ ರಚನೆಯಲ್ಲಿ ಉಚ್ಚಭೂಮಿ, ಪ್ರಚಂಡವಾದ ಪ್ರಪಾತ, ದಂಡೆಯ ಪ್ರದೇಶ, ಬಯಲು ಪ್ರದೇಶ ಹಾಗೂ ದ್ವೀಪಸಮೂಹಗಳು ಬರುತ್ತವೆ.

2 . ಹಿಮಾಲಯ ಇದು ಅನೇಕ ಸಮಾಂತರ ಪರ್ವತ ಸಾಲುಗಳಿಂದ ಕೂಡಿದೆ.  ಪಶ್ಚಿಮದಲ್ಲಿ ಕಾಶ್ಮೀರ್ ಹಿಮಾಲಯ, ಮಧ್ಯಕ್ಕೆ ಕುಮಾವು ಹಿಮಾಲಯ, ಪೂರ್ವಕ್ಕೆ ಆಸಾಮ ಹಿಮಾಲಯ ಹೀಗೆ ಭಾಗಗಳನ್ನು ಮಾಡಲಾಗಿದೆ. ಗ್ರೇಟರ್ ಹಿಮಾಲಯದ ಸರಾಸರಿ ಎತ್ತರ ಸುಮಾರು 6000 ಮೀ. ಇದೆ.

2 . ಬ್ರೆಜಿಲ್ನಲ್ಲಿ ಯಾವುದೇ ಎತ್ತರದ ಮತ್ತು ನಿರಂತರ ಪರ್ವತ ಸಾಲುಗಳು ಇಲ್ಲ. ಎಸ್ಕಾರ್ಪ್ಮೆಂಟ್ನಿಂದಾಗಿ ಹೈಲ್ಯಾಂಡ್ಸ್ ಪೂರ್ವ ಭಾಗವನ್ನು ಗುರುತಿಸಲಾಗಿದೆ. ಹೈಲ್ಯಾಂಡ್ಸ್ ಆಗ್ನೇಯ ಭಾಗದಲ್ಲಿರುವ ಗ್ರೇಟ್ ಎಸ್ಕಾರ್ಪ್ಮೆಂಟ್ ಪ್ರದೇಶದಲ್ಲಿ 790 ಮೀ ಎತ್ತರವನ್ನು ಹೊಂದಿದೆ ಮತ್ತು ಎತ್ತರವು ಕ್ರಮೇಣ ಕಡಿಮೆಯಾಗುತ್ತಿದೆ.

3 . ಭಾರತದ ಬಯಲು ಪ್ರದೇಶ ವಿಶಾಲವಾಗಿದ್ದು ರಾಜಸ್ಥಾನ-ಪಂಜಾಬದಿಂದ ಆಸಮಾದ ವರೆಗೆ ಹಬ್ಬಿದೆ. ಪಶ್ಚಿಮ ಬಂಗಾಳ ರಾಜ್ಯದ ದಕ್ಷಿಣಕ್ಕೆ ಗಂಗ-ಬ್ರಹ್ಮಪುತ್ರ ನದಿಗಳ ತ್ರಿಭುಜ ಪ್ರದೇಶವಿದೆ. ಈ ಪ್ರದೇಶದ ಹೆಸರು ಸುಂದರಬನ ಇದೆ.

3 . ಬ್ರೆಜಿಲ್‌ನಲ್ಲಿ ಉತ್ತರದಲ್ಲಿ ಅಮೆಜಾನ್ ಜಲಾನಯನ ಪ್ರದೇಶ ಮತ್ತು ನೈಋತ್ಯಕ್ಕೆ ಪರಾನಾ-ಪರಾಗ್ವೆ ಜಲಾನಯನ ಪ್ರದೇಶಗಳು ಬಯಲು ಪ್ರದೇಶಗಳಾಗಿವೆ. ಅಲ್ಲದೆ ಕಿರಿದಾದ ಕರಾವಳಿ ಬಯಲು ಉತ್ತರ ಮತ್ತು ಪೂರ್ವಕ್ಕೆ ಸೀಮಿತವಾಗಿದೆ.

2) ಭಾರತದಲ್ಲಿ ನದಿಗಳ ಪ್ರದುಷಣೆಯನ್ನು ನಿಯಂತ್ರಣೆಯಲ್ಲಿಡಲು ಯಾವ ಉಪಾಯಗಳನ್ನು ಮಾಡಲಾಗುತ್ತಿದೆ?

ಉತ್ತರ: ಭಾರತದಲ್ಲಿನ ನದಿಗಳಲ್ಲಿ ಕೊಳಚೆನೀರು ಸೇರುವುದರಿಂದ ನದಿಗಳು ಕಲುಷಿತಗೊಳ್ಳುತ್ತಿವೆ ಮತ್ತು ಅದರ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿನ ನದಿಗಳಲ್ಲಿನ ಮಾಲಿನ್ಯವನ್ನು ನಿಯಂತ್ರಿಸಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

(i) ಕೊಳಚೆ ನೀರನ್ನು ನದಿಗಳಿಗೆ ಹರಿಸುವ ಮೊದಲು ಸಂಸ್ಕರಿಸುವುದು.

(ii) ಕೀಟನಾಶಕಗಳು ನೀರಿನ ಮೂಲಗಳಿಗೆ ಹರಿದು ಅದನ್ನು ಕಲುಷಿತಗೊಳಿಸುವುದರಿಂದ ಅವುಗಳ ಬಳಕೆಯನ್ನು ಕಡಿಮೆ ಮಾಡುವುದು.

(iii) ಕೈಗಾರಿಕಾ ತ್ಯಾಜ್ಯಗಳನ್ನು ಸರಿಯಾದ ಸಂಸ್ಕರಣೆಯಿಲ್ಲದೆ ನದಿಗಳಿಗೆ ಬಿಡುವುದನ್ನು ಈಗ ನಿಯಂತ್ರಿಸಲಾಗಿದೆ.

(iv) ವಿವಿಧ ಉದ್ದೇಶಗಳಿಗಾಗಿ ನೀರನ್ನು ಮರುಬಳಕೆ ಮಾಡುವುದು ನೀರಿನ ಅತಿಯಾದ ಬಳಕೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

(v) ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆ (NRCP) ಅಡಿಯಲ್ಲಿ ನದಿ ನೀರಿನ ಸಂಗ್ರಹ ಮತ್ತು ಶುದ್ಧೀಕರಣವನ್ನು ಕೈಗೊಳ್ಳುವುದು.

(vi) ನದಿಗಳ ಪ್ರಾಮುಖ್ಯತೆ ಮತ್ತು ಮಾಲಿನ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.

(vii) ಮಾಲಿನ್ಯವನ್ನು ನಿಗ್ರಹಿಸಲು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸುವುದು.

(ಇ) ಭಾರತದ ಬಯಲು ಪ್ರದೇಶಗಳ ವೈಶಿಷ್ಟ್ಯಗಳಾವವು?

ಉತ್ತರ: (i) ಈ ಬಯಲು ಪ್ರದೇಶಗಳು ಹಿಮಾಲಯ ಪರ್ವತದಿಂದ ದಕ್ಷಿಣದ ಪೇನೀನ್ಸುಲ ಬಯಲಿನವರೆಗೆ ಹಬ್ಬಿದೆ. (ii) ಅದರಂತೆ, ರಾಜಸ್ಥಾನ-ಪಂಜಾಬದಿಂದ ಪೂರ್ವದ ಅಸಾಮವರೆಗೆ ಹಬ್ಬಿದೆ. (iii) ಪಶ್ಚಿಮ ಬಂಗಾಲದಲ್ಲಿರುವ ಬಯಲಿನಲ್ಲಿ ಗಂಗಾ-ಬ್ರಹ್ಮಪುತ್ರ ನದಿ ಪ್ರಣಾಳಿಗಳ ತ್ರಿಭುಜ ಪ್ರದೇಶವಿದೆ ಇದಕ್ಕೆ ಸುಂದರಬನ ಎನ್ನುವರು. (iv) ಪಂಜಾಬದ ಬಯಲು ಅರವಲಿ ಪರ್ವತ ಹಾಗೂ ದಿಲ್ಲಿ ಗುಡ್ಡಗಳ ಸಾಲುಗಳ ಪಶ್ಚಿಮದ ಆಳವಾದ ಪ್ರದೇಶವಿದೆ. ಇದರ ಸರ್ವಸಾಧಾರಣ ಇಳಿಕೆ ಪಶ್ಚಿಮದತ್ತ ಇರುತ್ತದೆ.

(ಈ) ಪೆಂಟಾನಲ ಈ ವಿಸ್ತಾರವಲ್ಲದ ಖಂಡಾಂತರ್ಗತ ಪ್ರದೇಶದಲ್ಲಿ ಜವಳು ಪ್ರದೇಶ ನಿರ್ಮಾಣವಾಗುವ ಕಾರಣಗಳಾವವು?

ಉತ್ತರ: ಪೆಂಟಾನಲ ಇದು ಜಗತ್ತಿನ ಉಷ್ಣಕಟಿಬಂಧದ ಜಲಮ0ಯ ಭೂಮಿಯ ಒಂದು ಪ್ರದೇಶವಾಗಿದೆ. ಈ ಪ್ರದೇಶವು ಬ್ರಾಝಿಲದ ಉಚ್ಚಭೂಮಿಯ ನೈಋತ್ಯಭಾಗದಲ್ಲಿ ಹಬ್ಬಿದೆ. ಪೆಂಟಾನಲ ಇದು ಜವುಳು ಪ್ರದೇಶವಾಗಿದೆ.

(ಉ) ಭಾರತದ ಪ್ರಮುಖ ಜಲವಿಭಾಜಕಗಳು ಯಾವವು ಎಂಬುದನ್ನು ಉದಾಹರಣೆ ಸಹಿತ ಸ್ಪಷ್ಟಪಡಿಸಿರಿ.

ಉತ್ತರ:  ಎರಡು ನದಿಘಟ್ಟಗಳನ್ನು ಖಂಡಿಸುವ ಅಥವಾ ಜಲಾನಯನ ಪ್ರದೇಶಗಳನ್ನು ಬೇರ್ಪಡಿಸುವ ಪರ್ವತ ಅಥವಾ ಎತ್ತರದ ಪ್ರದೇಶವನ್ನು ಜಲವಿಭಾಜಕಗಳು(ವಾಟರ್ ಡಿವೈಡ್)  ಎಂದು ಕರೆಯಲಾಗುತ್ತದೆ. 
ಭಾರತದ ಪ್ರಮುಖ ನೀರಿನ ವಿಭಾಗಗಳು:

ಪಶ್ಚಿಮ ಘಟ್ಟಗಳು: ಪಶ್ಚಿಮ ಘಟ್ಟಗಳು ನೀರಿನ ವಿಭಜನೆಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಪಶ್ಚಿಮಕ್ಕೆ ಹರಿಯುವ ಜುವಾರಿ, ಮಾಂಡವಿ, ವೈತರಣಾ ಮುಂತಾದ ನದಿಗಳನ್ನು ಅರಬ್ಬಿ ಸಮುದ್ರಕ್ಕೆ ಹರಿಸುತ್ತವೆ, ಪೂರ್ವದಿಂದ ಹರಿಯುವ ಗೋದಾವರಿ, ಕೃಷ್ಣ ಮತ್ತು ಕಾವೇರಿಯಂತಹ ನದಿಗಳಿಂದ ಬಂಗಾಳ ಕೊಲ್ಲಿಗೆ ಹರಿಸುತ್ತವೆ.

ವಿಂಧ್ಯ ಶ್ರೇಣಿಗಳು: ಇದು ಗಂಗಾ ನದಿ ಮತ್ತು ನರ್ಮದಾ ನದಿಯ ಜಲಾನಯನ ಪ್ರದೇಶವನ್ನು ವಿಭಜಿಸುತ್ತದೆ.

ಅರವಲಿ ಶ್ರೇಣಿಗಳು: ಅರವಲಿ ಶ್ರೇಣಿಗಳು ಪಶ್ಚಿಮಕ್ಕೆ ಹರಿಯುವ ಲುನಿ ನದಿಯನ್ನು ಪೂರ್ವಕ್ಕೆ ಹರಿಯುವ ಬನಾಸ್ ನದಿಯಿಂದ ಪ್ರತ್ಯೇಕಿಸುತ್ತದೆ.

ಸಾತ್ಪುಡ  ಶ್ರೇಣಿಗಳು: ಸಾತಪುಡಾ ಶ್ರೇಣಿಗಳು ನರ್ಮದಾ ಘಟ್ಟದ ಜಲಾನಯನ ಪ್ರದೇಶ ಮತ್ತು ತಾಪಿ ನದಿಯ ಜಲಾನಯನ ಪ್ರದೇಶವನ್ನು ಪ್ರತ್ಯೇಕಿಸುತ್ತವೆ.

ಪ್ರಶ್ನೆ 2 ಟಿಪ್ಪಣೆ ಬರೆಯಿರಿ.

(ಅ) ಅಮೆಝಾನ ನದಿಯ ಕೊಳ್ಳ: ಆಂಡಿಜ ಪರ್ವತ ಸಾಲುಗಳ ಪೂರ್ವದ ಇಳಿಜಾರಿನಿಂದ ಹರಿಯುವ ಪ್ರವಾಹಗಳು ಸೇರಿ ಅಮೆಝಾನ್ ನದಿಯ ಪ್ರವಾಹ ಆರಂಭವಾಗುತ್ತದೆ.ಅಮೇಝಾನ್ ನದಿಯ ಹರಿವಿನ ಪ್ರಮಾಣವು ಪ್ರಚಂಡವಾಗಿದೆ. ಎರಡು ಲಕ್ಷ ಘನಮೀಟರ್ ಪ್ರತಿ ಸೆಕೆಂದಿನಷ್ಟು ಹರಿವು ನದಿಯ ಮುಖದತ್ತ ಸರಿಯುತ್ತದೆ. ವೇಗವಾದ ನೀರಿನ ಹರಿವಿನಿಂದ ನದಿಕೊಳ್ಳಗಳ ಬಾಯಿಯಲ್ಲಿ ಸಂಗ್ರಹವಾಗುವ ರಾಡಿಯು ಹರಿದು ಹೋಗುತ್ತದೆ. ಸುಮಾರಾಗಿ ನದಿಯ ಮುಖದಲ್ಲಿ ಅನೇಕ ಶಾಖೆಗಳು ಕಾಣಿಸುತ್ತವೆ ಆದರೆ ಇಂತಹ ಮುಖಗಳು ಅಮೆಝಾನ ನದಿಕೊಳ್ಳಗಳಲ್ಲಿ ಕಾಣುವುದಿಲ್ಲ. ಆದರೆ ಅದರ ಬದಲಾಗಿ ಅಮೆಝಾನದ ಮುಖದ ಹತ್ತಿರ ಅಟ್ಲಾಂಟಿಕ್ ಮಹಾಸ್ಸಾಗರದಲ್ಲಿ ದಂಡೆಯ ಹತ್ತಿರ ಅನೇಕ ದ್ವೀಪಗಳು ತಯಾರಾಗಿರುವುದು ಕಾಣಿಸುತ್ತವೆ.   

(ಆ) ಹಿಮಾಲಯ: ಹಿಮಾಲಯವು ಆರ್ವಾಚೀನ ನಿರಿಗೆ ಪರ್ವತವಾಗಿದೆ. ಹಿಮಾಲಯವು ತಾಝೀಕಿಸ್ತಾನದಲ್ಲಿನ ಪಾಮೀರ ತಪ್ಪಲಿನಿಂದ ಪೂರ್ವದತ್ತ ಹಬ್ಬಿದೆ. ಇದು ಏಶಿಯಾ ಖಂಡದ ಪ್ರಮುಖ ಪರ್ವತ ಪ್ರಣಾಲಿ ಆಗಿದೆ. ಭಾರತದಲ್ಲಿ ಜಮ್ಮು-ಕಾಶ್ಮೀರದಿಂದ ಆಸಾಮದ ವರೆಗೆ ಹಿಮಾಲಯ ಹಬ್ಬಿದೆ.   ಹಿಮಾಲಯ ಇದು ಒಂದೇ ಪರ್ವತದ ಸಾಲಾಗಿರದೆ ಅದರಲ್ಲಿ ಸಮಾಂತರವಾದ ಅನೇಕ ಪರ್ವತದ ಸಾಲುಗಳು ಸಮಾವೇಶಗೊಂಡಿವೆ. ಎಲ್ಲಕ್ಕಿಂತ ದಕ್ಷಿಣದಲ್ಲಿ ಶಿವಾಲಿಕ ಪರ್ವತದ ಸಾಲು ಇದೆ. ಅದರಂತೆಯೇ ಇದು ಎಲ್ಲಕ್ಕಿಂತ ಹೊಸದಾದ (ಆರ್ವಾಚೀನ) ಪರ್ವತದ ಸಾಲಾಗಿದೆ. ಈ ಸಾಲಿನಿಂದ ಉತ್ತರಕ್ಕೆ ಹೋದಂತೆ ನಮಗೆ ಲಘು ಹಿಮಾಲಯ, ಬೃಹತ್ ಹಿಮಾಲಯ ಹಾಗೂ ಹಿಮಾದ್ರಿ ಈ ಸಾಲುಗಳು ಕಂಡುಬರುವುವು

ಇದೇ ಪರ್ವತಸಾಲುಗಳಲ್ಲಿ ಪಶ್ಚಿಮ ಹಿಮಾಲಯ (ಕಾಶ್ಮೀರ ಹಿಮಾಲಯ), ಮಧ್ಯ ಹಿಮಾಲಯ (ಕುಮಾವು ಹಿಮಾಲಯ) ಹಾಗೂ ಪೂರ್ವ ಹಿಮಾಲಯ (ಆಸಾಮ ಹಿಮಾಲಯ) ಎಂಬ ಭಾಗಗಳನ್ನೂ ಮಾಡಲಾಗಿದೆ.

(ಇ) ಬ್ರಾಝಿಲದ ಕರಾವಳಿ ಪ್ರದೇಶ: ಬ್ರಝಿಲಿಗೆ ಸುಮಾರು 7400ಕಿ.ಮೀ. ಉದ್ದದ ದಂಡೆ ಲಭಿಸಿದೆ.  

(i) ಪೆರುವಿನಲ್ಲಿರುವ ಆಂಡಿಸ್ ಪರ್ವತಗಳ ಪೂರ್ವ ಇಳಿಜಾರುಗಳಿಂದ ಅಮೆಜಾನ್ ತನ್ನ ತಲೆಯ ನೀರನ್ನು ಸಂಗ್ರಹಿಸುತ್ತದೆ.

(ii) ಅಮೇಝಾನ್ ನದಿಯ ಹರಿವಿನ ಪ್ರಮಾಣವು ಪ್ರಚಂಡವಾಗಿದೆ. ಎರಡು ಲಕ್ಷ ಘನಮೀಟರ್ ಪ್ರತಿ ಸೆಕೆಂದಿನಷ್ಟು ಹರಿವು ನದಿಯ ಮುಖದತ್ತ ಸರಿಯುತ್ತದೆ. (iii) ಪರಿಣಾಮವಾಗಿ, ವೇಗವಾದ ನೀರಿನ ಹರಿವಿನಿಂದ ನದಿಕೊಳ್ಳಗಳ ಬಾಯಿಯಲ್ಲಿ ಸಂಗ್ರಹವಾಗುವ ರಾಡಿಯು ಹರಿದು ಹೋಗುತ್ತದೆ. (iv) ಪರಿಣಾಮವಾಗಿ, ಕೆಸರುಗಳು ಬಾಯಿಯಲ್ಲೂ ಕೂಡ ಸಂಗ್ರಹವಾಗುವುದಿಲ್ಲ.

(v) ದಟ್ಟವಾದ ವಿತರಣಾ ಜಾಲ, ಇದು ನದಿ ಮುಖದ ಪ್ರದೇಶಗಳ ವಿಶಿಷ್ಟ ಲಕ್ಷಣವಾಗಿದೆ, ಇದು ಅಮೆಜಾನ್‌ನ ಮುಖದ ಪ್ರದೇಶದಲ್ಲಿ ಹೆಚ್ಚಾಗಿ ಇರುವುದಿಲ್ಲ.

(vi) ಬದಲಾಗಿ, ಅಮೆಜಾನ್‌ನ ಮುಖದ ಉದ್ದಕ್ಕೂ, ಕರಾವಳಿಯನ್ನು ಮೀರಿ ಅಟ್ಲಾಂಟಿಕ್ ಮಹಾಸಾಗರಕ್ಕೆ ದ್ವೀಪಗಳ ಸಾಲುಗಳು ಹೊಂದಿವೆ.

(vii) ಮುಖದಲ್ಲಿ , ಅಮೆಜಾನ್ ನದಿ ಕೊಳ್ಳಗಳ ಅಗಳಲತೆ 150 ಕಿ.ಮೀ.

(viii) ಅಮೆಜಾನ್ ನದಿಯ ಸಂಪೂರ್ಣ ಪಾತ್ರ ಜಲಸಾರಿಗೆಗೆ ಸೂಕ್ತವಾಗಿದೆ.

(ಈ) ಭಾರತದ ದ್ವೀಪಕಲ್ಪದ ಭಾಗ: ಉತ್ತರ ಭಾರತದ ಬಯಲು ಪ್ರದೇಶದ ದಕ್ಷಿಣಕ್ಕೆ ಹಬ್ಬಿದ ಹಾಗೂ ಹಿಂದೀ ಮಹಾಸಾಗರದತ್ತ ಚೂಪಾಗುತ್ತ ಹೋಗುವ ಪ್ರದೇಶವನ್ನು ಭಾರತದ ದ್ವೀಪಕಲ್ಪವೆಂದು ಗುರುತಿಸುವರು. ಇದರಲ್ಲಿ ಅನೇಕ ಚಿಕ್ಕದೊಡ್ಡ ಪರ್ವತ, ತಪ್ಪಲು ಪ್ರದೇಶಗಳು ಇವೆ. ಇದರಲ್ಲಿಯ ಉತ್ತರದ ಅರವಲಿ ಪರ್ವತ ಎಲ್ಲಕ್ಕಿಂತ ಪ್ರಾಚೀನ ನಿರಿಗೆ ಪರ್ವತವಾಗಿದೆ. ಈ ಭಾಗದಲ್ಲಿ ಸಪಾಟಾದ ಬಯಲುಗಳು, ಸೀಮಾಂಕಿತ ಮಾಡುವಂತಹ ತಪ್ಪಲುಗಳ ಶೃಂಖಲೆ, ಮಧ್ಯಭಾಗದಲ್ಲಿ ವಿಂಧ್ಯ-ಸಾತಪುಡಾ ಪರ್ವತಗಳು ಮತ್ತು ಪಶ್ಚಿಮ ಘಟ್ಟ ಮತ್ತು ಪುರ್ವ ಘಟ್ಟ ಮುಂತಾದ ಪರ್ವತ ಪ್ರದೇಶಗಳು ಇವೆ.

(ಈ) ಪ್ರಚಂಡವಾದ ಪ್ರಪಾತ: 

(i) ಪ್ರಪಾತ(ಎಸ್ಕಾರ್ಪ್ಮೆಂಟ್) ಈ ಪ್ರಾಕೃತಿಕ ಭಾಗ ಕ್ಷೇತ್ರವಿಸ್ತಾರದ ದೃಷ್ಟಿಯಿಂದ ಚಿಕ್ಕದಾಗಿದ್ದರೂ ಅದರ ಇಳಿಜಾರಿನ ಸ್ವರೂಪದಿಂದಾಗಿ ಮತ್ತು ಹವಾಮಾನದ ಮೇಲೆ ಅದು ಉಂಟುಮಾಡುವ ರಿಣಾಮದಿಂದಾಗಿ  ಅದೊಂದು ಸ್ವತಂತ್ರ ವಿಭಾಗವೆಂದು ಗುರುತಿಸಲಾಗುತ್ತದೆ.

(ii) ಉಚ್ಚಭೂಮಿಯ ಪೂರ್ವದ ಭಾಗ ಈ ಪ್ರಪಾತಗಳಿಂದ ಸುತ್ತುವರೆದಿದೆ. (iii) ಬ್ರೆಜಿಲಿಯನ್ ಹೈಲ್ಯಾಂಡ್‌ನ ಪೂರ್ವ ಭಾಗವು ಪ್ರಪಾತದಿಂದಲೇ ಗುರುತಿಸಲ್ಪಟ್ಟಿದೆ.

(iv) ಈ ಪ್ರದೇಶದಲ್ಲಿ, ಉಚ್ಚಭೂಮಿಯ ಎತ್ತರವು 790 ಮೀ.ದಷ್ಟು ಇದೆ.

(v) ಕೆಲವು ಪ್ರದೇಶಗಳಲ್ಲಿ, ಎತ್ತರವು ಕ್ರಮೇಣ ಕಡಿಮೆಯಾಗುತ್ತದೆ.

(vi) ಸಾವೊ ಪಾಲೊದಿಂದ ಪೋರ್ಟೊ ಅಲೆಗ್ರಾ ವರೆಗೆ ಎತ್ತರವು ಒಂದೇ ಇಳಿಜಾರಿನಲ್ಲಿ ಮುಗಿಯುತ್ತದೆ.

(vii) ಪ್ರಚಂಡ ಪ್ರಪಾತಗಳಿಂದ ಆಗ್ನೇಯ ವ್ಯಾಪಾರಿಗಳಿಗಳು ತಡೆಯಲ್ಪಡುವವು. ಆದ್ದರಿಂದ ಈ ಪ್ರಪಾತಗಳ ಆಚೆ ಪ್ರಜನ್ಯ ಛಾಯೆಯ ಪ್ರದೇಶ ತಯಾರಾಗುವವು. ಈ ಪ್ರದೇಶದ ಉತ್ತರಕ್ಕಿರುವ ಪ್ರದೇಶವನ್ನು ಬರಗಾಲದ ಚತುಷ್ಕೋನ ಅಥವಾ ಬರ ಚತುರ್ಭುಜಎಂದು ಕರೆಯಲಾಗುತ್ತದೆ.

ಪ್ರಶ್ನೆ 4 ಭೌಗೋಲಿಕ ಕಾರಣಗಳನ್ನು ಬರೆಯಿರಿ.

(ಅ) ಬ್ರಾಝಿಲದಲ್ಲಿ ಪಶ್ಚಿಮ ವಾಹಿನಿ ನದಿಗಳು ಕಂಡುಬರುವುದಿಲ್ಲ,

ಉತ್ತರ: (i) ಬ್ರೆಜಿಲಿಯನ್ ಎತ್ತರದ ಪ್ರದೇಶಗಳ ಅಂಚಿನಿಂದ ಹುಟ್ಟುವ ಅನೇಕ ನದಿಗಳು ಅಮೆಜಾನ್ ನದಿಯನ್ನು ಸೇರಲು ಮಾಡಲು ಉತ್ತರಕ್ಕೆ ಹರಿಯುತ್ತವೆ ಮತ್ತು ಅಂತಿಮವಾಗಿ ಅಟ್ಲಾಂಟಿಕ್ ಸಾಗರದಲ್ಲಿ ಕೊನೆಗೊಳ್ಳುತ್ತವೆ.

(ii) ಸಾವೊ ಫ್ರಾನ್ಸಿಸ್ಕೋ ನದಿಯು ಉತ್ತರದ ಕಡೆಗೆ 1000 ಕಿಮೀ ಹರಿಯುತ್ತದೆ ಮತ್ತು ನಂತರ ಅಟ್ಲಾಂಟಿಕ್ ಸಾಗರವನ್ನು ಸೇರಲು ಪೂರ್ವಕ್ಕೆ ತಿರುಗುತ್ತದೆ.

(iii) ಬ್ರೆಜಿಲಿಯನ್ ಎತ್ತರದ ಪ್ರದೇಶದ ದಕ್ಷಿಣ ಭಾಗದಿಂದ ಹುಟ್ಟುವ ಪರಾನಾ, ಪರಾಗ್ವೆ ಮತ್ತು ಉರುಗ್ವೆ ನದಿಗಳು ನೈಋತ್ಯಕ್ಕೆ ಹರಿದು ಅರ್ಜೆಂಟೀನಾವನ್ನು ಪ್ರವೇಶಿಸುತ್ತವೆ.

(iv) ಪಶ್ಚಿಮದಲ್ಲಿ ಆಂಡಿಸ್ ಪರ್ವತದಿಂದ ಹುಟ್ಟುವ ಅಮೆಜಾನ್ ನದಿಯು ಅಟ್ಲಾಂಟಿಕ್ ಸಾಗರವನ್ನು ಭೇಟಿಯಾಗಲು ಪೂರ್ವಕ್ಕೆ ಹರಿಯುತ್ತದೆ.

(v) ಹೀಗಾಗಿ, ಬ್ರೆಜಿಲ್‌ನಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳಿಲ್ಲ.

(ಆ) ಭಾರತದ ಪಶ್ಚಿಮ ಹಾಗೂ ಪೂರ್ವ ಕರಾವಳಿಗಳಲ್ಲಿ ವಿಷಮತೆ ಕಂಡುಬರುತ್ತದೆ.

ಉತ್ತರ: (i) ಪಶ್ಚಿಮ ಕರಾವಳಿಯು ಅರೇಬಿಯನ್ ಸಮುದ್ರ ಮತ್ತು ಪೂರ್ವ ಕರಾವಳಿಯು ಬಂಗಾಳ ಕೊಲ್ಲಿಯ ಗಡಿಯಾಗಿದೆ.

(ii) ಪಶ್ಚಿಮ ಕರಾವಳಿಯು ದೊಡ್ಡ ಬಂಡೆಕಲ್ಲಿನ ಕರಾವಳಿಯಾಗಿದೆ.ಇಲ್ಲಿ ಪಶ್ಚಿಮ ಘಟ್ಟಗಳಿಂದ ಪ್ರಾರಂಭವಾಗುವ ಬೆಟ್ಟದ ಸಾಲುಗಳು ಪಶ್ಚಿಮ ಕರಾವಳಿಯವರೆಗೂ ವಿಸ್ತರಿಸಿದೆ. (iii) ಪಶ್ಚಿಮ ಕರಾವಳಿಯ ಅಗಲವು ಕಿರಿದಾಗಿದೆ, ಆದರೆ ಪೂರ್ವ ಕರಾವಳಿಯ ಅಗಲ ವಿಸ್ತಾರವಾಗಿದೆ. 

(iv) ಪಶ್ಚಿಮ ಘಟ್ಟಗಳಿಂದ ಹುಟ್ಟುವ ಸಣ್ಣ ಮತ್ತು ವೇಗದ ನದಿಗಳು ಪಶ್ಚಿಮ ಕರಾವಳಿಯಲ್ಲಿ ಅಖಾತಗಳನ್ನು ರೂಪಿಸುತ್ತವೆ, ಆದರೆ ಸೌಮ್ಯವಾದ ಇಳಿಜಾರಿನ ಕಾರಣದಿಂದಾಗಿ ಪೂರ್ವಕ್ಕೆ ಹರಿಯುವ ನದಿಗಳು ಕಡಿಮೆ ವೇಗದಲ್ಲಿ ಹರಿಯುತ್ತವೆ ಮತ್ತು ಪೂರ್ವ ಕರಾವಳಿಯಲ್ಲಿ ತ್ರಿಭುಜ ಪ್ರದೇಶಗಳು  ರೂಪಿಸುತ್ತವೆ.

(v) ಹೀಗೆ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳ ನಡುವೆ ವ್ಯತ್ಯಾಸಗಳಿವೆ.

(ಇ) ಭಾರತದ ಪೂರ್ವದ ದಂಡೆಯಲ್ಲಿ ನೈಸರ್ಗಿಕ ಬಂದರುಗಳು ಕಡಿಮೆ ಇವೆ.

(i) ಪೂರ್ವ ಕರಾವಳಿಯು ಬಂಗಾಳ ಕೊಲ್ಲಿಯ ಗಡಿಯನ್ನು ಹೊಂದಿದೆ. ಇದು ನದಿಗಳ ಶೇಖರಣೆಯ ಕೆಲಸದ ಪರಿಣಾಮವಾಗಿ ರೂಪುಗೊಂಡಿದೆ.

(ii) ಪೂರ್ವಕ್ಕೆ ಹರಿಯುವ ಅನೇಕ ನದಿಗಳು ಸೌಮ್ಯವಾದ ಇಳಿಜಾರಿನ ಕಾರಣದಿಂದಾಗಿ ತಮ್ಮ ಬಾಯಿಯಲ್ಲಿ ತ್ರಿಭುಜ ಪ್ರದೇಶಗಳನ್ನು ರಚಿಸಿಕೊಂಡಿವೆ.

(iii) ನದಿಯಿಂದ ಸಂಗ್ರಹವಾದ ಕೆಸರುಗಳು ಕರಾವಳಿಯನ್ನು ಆಳವಿಲ್ಲದಂತೆ ಮಾಡುತ್ತದೆ.

(ಈ) ಅಮೆಝಾನ ನದಿಗೆ ಹೋಲಿಸಿದರೆ ಗಂಗಾ ನದಿಯ ಜಲ ಪ್ರದೂಷಣೆಯಿಂದ, ಜನರ ಮೇಲಾಗುವ ಪರಿಣಾಮ ಹೆಚ್ಚು ಇದೆ.

ಉತ್ತರ: (i) ಅಮೆಜಾನ್ ಜಲಪ್ರಣಾಲಿಯ ಪ್ರದೇಶವು ಬ್ರೆಜಿಲ್‌ನ ವಿರಳ ಜನಸಂಖ್ಯೆಯ ಪ್ರದೇಶವಾಗಿದೆ.. ಪ್ರತಿಕೂಲವಾದ ಹವಾಮಾನ, ಭಾರೀ ಮಳೆ, ದುರ್ಗಮತೆ ಮತ್ತು ದಟ್ಟವಾದ ಅರಣ್ಯವು ಇಲ್ಲಿ ಮಾನವ ವಸಾಹತುಗಳ ಅಭಿವೃದ್ಧಿ ಮತ್ತು ಕೈಗಾರಿಕೀಕರಣಕ್ಕೆ ಅಡ್ಡಿಯಾಗಿದೆ.

(ii) ಮತ್ತೊಂದೆಡೆ, ಗಂಗಾ ಬಯಲು ಪ್ರದೇಶವು ಭಾರತದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ.

(iii) ಸಮತಟ್ಟಾದ ಫಲವತ್ತಾದ ಬಯಲು ಪ್ರದೇಶದಿಂದಾಗಿ, ನೀರಿನ ಲಭ್ಯತೆ, ಸೂಕ್ತವಾದ ಹವಾಮಾನ, ದಟ್ಟವಾದ ಮಾನವ ವಸತಿಗಳು ಈ ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟಿವೆ.

(iv) ಅಮೆಜಾನ್ ಜಲಾನಯನ ಪ್ರದೇಶದಲ್ಲಿನ ಗಣಿಗಾರಿಕೆ ಚಟುವಟಿಕೆಗಳು ಅಮೆಜಾನ್ ನದಿಯಲ್ಲಿ ಮಾಲಿನ್ಯವನ್ನು ಉಂಟುಮಾಡುತ್ತವೆ, ಆದರೆ ಕೈಗಾರಿಕಾ ಮತ್ತು ದೇಶೀಯ ಕೊಳಚೆನೀರು ಮಾಲಿನ್ಯಕ್ಕೆ ಸೇರಿಸುತ್ತದೆ

  ಹೀಗಾಗಿ ಅಮೆಜಾನ್‌ಗೆ ಹೋಲಿಸಿದರೆ, ಗಂಗಾ ನದಿಯ ಮಾಲಿನ್ಯವು ಮಾನವ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ, ಏಕೆಂದರೆ ಅಮೆಜಾನ್ ಬಯಲು ಪ್ರದೇಶಕ್ಕೆ ಹೋಲಿಸಿದರೆ ಗಂಗಾ ಬಯಲು ಹೆಚ್ಚು ಜನನಿಬಿಡವಾಗಿದೆ.

ಪ್ರಶ್ನೆ 5 ಸರಿಯಾದ ಗುಂಪನ್ನು ಗುರುತಿಸಿರಿ.

(ಅ) ಬ್ರಾಝಿಲದ ವಾಯವ್ಯದಿಂದ ಆಗ್ನಿಯದತ್ತ ಹೋಗುವಾಗ ಕಂಡುಬರುವ ಪ್ರಾಕೃತಿಕ ರಚನೆಯ ಕ್ರಮ.

(i) ಪೆರಾನಾ ನದಿ ಕೊಳ್ಳ- ಗಿಯಾನಾ ಉಚ್ಚಭೂಮಿ - ಬ್ರಾಝಿಲ ಉಚ್ಚಭೂಮಿ

(ii) ಗಿಯಾನಾ ಉಚ್ಚಭೂಮಿ - ಅಮೆಝಾನ ಕೊಳ್ಳ - ಬ್ರಾಝಿಲದ ಉಚ್ಚಭೂಮಿ

(iii) ಕರಾವಳಿ ಪ್ರದೇಶ - ಅಮೆಝಾನ ಕೊಳ್ಳ - ಬಾಝಿಲದ ಉಚ್ಚಭೂಮಿ.

(ಆ) ಇವು ಬ್ರಾಝಿಲದ ಉತ್ತರವಾಹಿನಿ ನದಿಗಳಾಗಿವೆ.

(i) ಜುರುಕಾ – ಝಿಂಗೂ – ಅರಾಗುಆ

(ii) ನಿಗ್ರೋ – ಬ್ರಾಂಕಾ – ಪಾರು

(iii) ಜಾಪುರಾ – ಜಾರುಆ – ಪುರಸ

(ಇ) ಭಾರತದ ದಕ್ಷಿಣದಿಂದ ಉತ್ತರಕ್ಕೆ ಹೋಗುವಾಗ ಕಂಡು ಬರುವ ಪ್ರಾಕೃತಿಕ ರಚನೆಗಳ ಕ್ರಮ

(i) ಕರ್ನಾಟಕ – ಮಹಾರಾಷ್ಟ್ರ – ಬುಂದೇಲಖಂಡ

(ii) ಛೋಟಾನಾಗಪುರ –ಮಾಳವಾ – ಮಾರವಾಡ

 (iii) ತೆಲಂಗಾಣ –ಮಹಾರಾಷ್ಟ್ರ - ಮಾರವಾಡ    

ಹೊಂದಿಸಿ ಬರೆಯಿರಿ .

ಗುಂಪು

ಗುಂಪು

(1)     ಪಶ್ಚಿಮ ಹಿಮಾಲಯ

(2)     ಮಧ್ಯ ಹಿಮಾಲಯ

(3)     ಪೂರ್ವ ಹಿಮಾಲಯ

(a)      ಶಿವಾಲಿಕ್ಸ್

(b)     ಆಸಾಮ ಹಿಮಾಲಯ

(c)      ಕಾಶ್ಮೀರ್ ಹಿಮಾಲಯ

(d)     ಕುಮಾವು ಹಿಮಾಲಯ

ಉತ್ತರ: 1-c,  2-d,   3-b


4. ಹವಾಮಾನ

ಪ್ರ.1. ಕೆಳಗಿನ ಪ್ರದೇಶಗಳನ್ನು ಕೋಷ್ಟಕದಲ್ಲಿ ಯೋಗ್ಯ ಸ್ಥಳದಲ್ಲಿ ಬರೆಯಿರಿ.

(ಬಿಹಾರ, ಟ್ಯಾಕ್ಯಾನ್ಸ್ ಪರ್ನಾಬ್ಯುಕಾ, ಅಲಾಗ್ವಾಸ್, ಪೂರ್ವ ಮಹಾರಾಷ್ಟ್ರ, ರಾಜಸ್ಥಾನದ ಪಶ್ಚಿಮ ಭಾಗ, ಗುಜರಾತ, ರಿಓ ಗ್ರಾಂದೆ. ದೊನೊತೆ, ಪರಇಬಾ, ಪಶ್ಚಿಮ ಘಟ್ಟ, ಪೂರ್ವ ಹಿಮಾಲಯ, ಪಶ್ಚಿಮ ಆಂಧ್ರಪ್ರದೇಶ, ರೊರಾಇಮಾ, ಅಮೆಝಾನಾಸ, ಪಶ್ಚಿಮ ಬಂಗಾಲ, ರಿಓ ಗ್ರಾಂಡೆ ದ್ವೊಸುಲ, ಸಾಂತಾ ಕಟರಿನಾ, ಗೋವಾ.)

ಪ್ರದೇಶ

ಭಾರತ

ಬ್ರಾಝಿಲ್

ಹೆಚ್ಚು ಮಳೆಯ

ಪಶ್ಚಿಮ ಘಟ್ಟ, ಪೂರ್ವ ಹಿಮಾಲಯ,ಗೋವಾ, ಪೂರ್ವ ಮಹಾರಾಷ್ಟ್ರ  

ಅಮೆಝಾನಾಸ,  ರಿಓ ಗ್ರಾಂಡೆ ದ್ವೊಸುಲ

ಮಧ್ಯಮ ಮಳೆಯ

 

ಪಶ್ಚಿಮ ಬಂಗಾಲ,  ಪಶ್ಚಿಮ ಆಂಧ್ರಪ್ರದೇಶ,

ಸಾಂತಾ ಕಟರಿನಾ, ರೊರಾಇಮಾ

ಕಡಿಮೆ ಮಳೆಯ

 

ಬಿಹಾರ, ರಾಜಸ್ಥಾನದ ಪಶ್ಚಿಮ ಭಾಗ, ಗುಜರಾತ

ಟ್ಯಾಕ್ಯಾನ್ಸ್ ಪರ್ನಾಬ್ಯುಕಾ, ಅಲಾಗ್ವಾಸ್, ಪರಇಬಾ, ರಿಓ ಗ್ರಾಂದೆ ದೊನೊತೆ

ಪ್ರ 2. ಸರಿಯೋ ತಪ್ಪೋ ಹೇಳಿ ತಪ್ಪಾದ ಹೇಳಿಕೆಗಳನ್ನು ಸರಿಪಡಿಸಿ ಬರೆಯಿರಿ,

(ಆ) ಬ್ರಾಝಿಲ್ ದೇಶ ವಿಷುವ ವೃತ್ತದ ಮೇಲೆ ಇದೆ. ಇದರ ಪರಿಣಾಮ ಬ್ರಾಝಿಲದ ಹವಾಮಾನದ ಮೇಲೆ ಬಹಳ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ.

ಉತ್ತರ: ಸರಿ.

(ಆ) ಬ್ರಾಝಿಲ್ ಹಾಗೂ ಭಾರತ ಈ ಎರಡೂ ದೇಶಗಳಲ್ಲಿ ಒಂದೇ ಸಮಯದಲ್ಲಿ ಸಮಾನ ಋತುಗಳು ಇರುವುವು.

ಉತ್ತರ:ತಪ್ಪು, ಬ್ರಾಝಿಲ್ ಹಾಗೂ ಭಾರತ ಈ ಎರಡೂ ದೇಶಗಳಲ್ಲಿ ಒಂದೇ ಸಮಯದಲ್ಲಿ ಸಮಾನ ಋತುಗಳು ಇರುವುದಿಲ್ಲ.

(ಇ) ಭಾರತದಲ್ಲಿ ಮೇಲಿಂದ ಮೇಲೆ ಉಷ್ಣ ಕಟಿಬಂಧದ ಚಂಡಮಾರುತಗಳು ಸಂಭವಿಸುವುವು.

ಉತ್ತರ: ಸರಿ.

(ಈ) ಬ್ರಾಝಿಲ್ ದೇಶದಲ್ಲಿ ನೈಋತ್ಯ ಮಾನ್ಸೂನ ಗಾಳಿಗಳಿಂದ ದೊಡ್ಡ ಪ್ರಮಾಣದಲ್ಲಿ ಮಳೆ ಬೀಳುವುದು.

ಉತ್ತರ:ತಪ್ಪು, ಬ್ರಾಝಿಲ್ ದೇಶದಲ್ಲಿ ಆಗ್ನೇಯ ಮತ್ತು ಈಶಾನ್ಯ ದಿಕ್ಕಿನಿಂದ ಬೀಸುವ ಪೂರ್ವದ  ಮಾನ್ಸೂನ ಗಾಳಿಗಳಿಂದ ದೊಡ್ಡ ಪ್ರಮಾಣದಲ್ಲಿ ಮಳೆ ಬೀಳುವುದು.

ಪ್ರ.3. ಭೌಗೋಲಿಕ ಕಾರಣ ಕೊಡಿರಿ.

(ಅ) ಬ್ರಾಝಿಲ್ ದೇಶದ ಉಚ್ಚಭೂಮಿಯ ಈಶಾನ್ಯ ಭಾಗದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವುದು.

ಉತ್ತರ: ಬ್ರಾಝಿಲ್ ದೇಶದಲ್ಲಿ ಆಗ್ನೇಯ ಹಾಗೂ ಈಶಾನ್ಯ ದಿಕ್ಕುಗಳಿಂದ ಬರುವ ಪೂರ್ವದ ಗಾಳಿಗಳಿಂದ ಮಳೆ ಬೀಳುತ್ತದೆ. ಬ್ರಾಝಿಲದ ಉಚ್ಚಭೂಮಿಯ ಕೆಲವು ಭಾಗ ಉತ್ತರದ ದಂಡೆ ಪ್ರದೇಶದ ವರೆಗೆ ಇದೆ. ಸಮುದ್ರದಿಂದ ಬೀಸುವ ಗಾಳಿಗಳಿಂದ ಈ ದಂಡೆ ಪ್ರದೇಶದಲ್ಲಿ ಪ್ರತಿರೋಧ ಮಳೆ ಬೀಳುವುದು. ಆದರೆ ಉಚ್ಚಭೂಮಿಯ ಆಚೆಗೆ ಈ ಗಾಳಿಗಳ ಪ್ರಭಾವ ಕಡಿಮೆ ಆಗುವುದು. ಆದ್ದರಿಂದ ಇಲ್ಲಿ ಅತಿ ಕಡಿಮೆ ಮಳೆ ಬೀಳುವುದು.    

(ಆ) ಬ್ರಾಝಿಲಿನಲ್ಲಿ ನಿಯಮಿತವಾಗಿ ಹಿಮವೃಷ್ಟಿ ಆಗುವುದಿಲ್ಲ.

ಉತ್ತರ: ಬ್ರಾಝಿಲ್ ಇದು ಉಷ್ಣಕಟಿಬಂಧದ ದೇಶವಾಗಿದೆ. ಆದ್ದರಿಂದ ಈ ಭಾಗದಲ್ಲಿ ನಿಯಮಿತವಾಗಿ ಹಿಮವೃಷ್ಟಿ ಆಗುವುದಿಲ್ಲ. ಆದರೆ ಆಕಸ್ಮಿಕವಾಗಿ ಕೆಲವುಸಲ ದಕ್ಷಿಣ ಧ್ರುವದ ಗಾಳಿಗಳು ಬ್ರಾಝಿಲದ ದಕ್ಷಿಣ ಭಾಗದವರೆಗೆ ತಲುಪುವವು. ಇಂತಹ ಸಮಯದಲ್ಲಿ ಈ ಪ್ರದೇಶದಲ್ಲಿ ಆಗಾಗ ಅನಿಯಮಿತವಾಗಿ ಹಿಮವೃಷ್ಟಿ ಆಗುವುದು.

(ಇ) ಭಾರತದಲ್ಲಿ ಅಭಿಸರಣ ಪ್ರಕಾರದ ಮಳೆ ಕಡಿಮೆ ಪ್ರಮಾಣದಲ್ಲಿ ಆಗುವುದು.

ಉತ್ತರ: ವಿಷುವವೃತ್ತ ಪ್ರದೇಶದಲ್ಲಿ ಹೆಚ್ಚು ಉಷ್ಣತಾಮಾನದಿಂದ ಮಳೆಗೆ ಪೋಷಕ ಸ್ಥಿತಿ ತಯಾರಾಗುತ್ತದೆ. ಅಭಿಸರಣ ಮಳೆಯು ಮುಖ್ಯವಾಗಿ ವಿಷುವವೃತ್ತ ಪ್ರದೇಶದ ಮೇಲೆ ಬೀಳುತ್ತದೆ. 

(ಈ) ಬ್ರಾಝಿಲದಲ್ಲಿ ಉಷ್ಣ ಕಟಿಬಂಧದ ಚಂಡ ಮಾರುತಗಳು ಕಡಿಮೆ ಪ್ರಮಾಣದಲ್ಲಿ ಸಂಭವಿಸುವುವು.

ಉತ್ತರ: ಬ್ರಾಝಿಲದ ದಂಡೆ ಭಾಗದಲ್ಲಿ ವಿಷುವವೃತ್ತದ ಹತ್ತಿರ ಉಷ್ಣತಾಮನದಲ್ಲಿ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಈ ಪ್ರದೇಶದಲ್ಲಿ ಗಾಳಿಯು ಊರ್ಧ್ವ ದಿಶೆಯಲ್ಲಿ ಬೀಸುತ್ತದೆ. ಈ ಭಾಗದಲ್ಲಿಯ ಉಷ್ಣಕಟಿಬಂದದ ಏಕತ್ರಿಕರಣ ವಿಭಾಗವು ಕ್ಷೀಣ ಸ್ವರೂಪದ್ದು ಆಗಿರುವುದರಿಂದ ಆವರ್ತಿಗಳು ಉಂಟಾಗುವುದಿಲ್ಲ. ಆದ್ದರಿಂದ ಬ್ರಾಝಿಲದಲ್ಲಿ ಉಷ್ಣ ಕಟಿಬಂಧದ ಚಂಡ ಮಾರುತಗಳು ಕಡಿಮೆ ಪ್ರಮಾಣದಲ್ಲಿ ಸಂಭವಿಸುತ್ತವೆ.

(ಉ) ಮನೂಸ ಪಟ್ಟಣದ ಉಷ್ಣತಾಮಾನದ ಕಕ್ಷೆಯಲ್ಲಿ ಹೆಚ್ಚು ಬದಲಾವಣೆ ಆಗುವುದಿಲ್ಲ.

ಉತ್ತರ: ಮನಾಸ್ ಪಟ್ಟಣದ ಸ್ಥಾನವು ವಿಷುವವೃತ್ತದ ಬಳಿ ಇದೆ. ಈ ಪಟ್ಟಣದ ಹತ್ತಿರ ಸೂರ್ಯಕಿರಣಗಳು ಸದಾಕಾಲ ಲಂಬರೂಪವಾಗಿ ಬೀಳುತ್ತವೆ. ಹಾಗಾಗಿ ಮನಾಸ್ ಪಟ್ಟಣದ ವಾರ್ಷಿಕ ಕನಿಷ್ಠ ಉಷ್ಣತಾಮಾನದಲ್ಲಿ ಹಾಗೂ ಗರಿಷ್ಠ ಉಷ್ಣತಾಮಾನದಲ್ಲಿ ವಿಶೇಷ ಬದಲಾವಣೆಯಾಗುವುದಿಲ್ಲ. ಆದ್ದರಿಂದ ಮನಾಸ ಪಟ್ಟಣದ ಉಷ್ಣತಾಮಾನದ ಕಕ್ಷೆಯಲ್ಲಿ ಹೆಚ್ಚು ಬದಲಾವಣೆ ಆಗುವುದಿಲ್ಲ.

 

(ಊ) ಈಶಾನ್ಯ ಮಾನ್ಸೂನ ಗಾಳಿಗಳಿಂದಲೂ ಭಾರತದಲ್ಲಿ ಮಳೆ ಬೀಳುವುದು.

ಉತ್ತರ:ನೈಋತ್ಯ ಮನ್ಸೂನ್ ಗಾಳಿಗಳು ಭಾರತದ ದಕ್ಷಿಣ ಭಾಗದಿಂದ ಬಿಸುತ್ತಾ ಹಂತ ಹಂತವಾಗಿ ಉತ್ತರದಕಡೆಗೆ ಹರಿಯುತ್ತವೆ. ಹಿಮಾಲಯದ ಉತ್ತರದ ಕಡೆಯಿಂದ ಬರುವ ಅತಿಶೀತ ಗಾಳಿಗೆ ಹಿಮಾಲಯದ ಶಿವಲಿಕ್ ಪರ್ವತ ಸಾಲುಗಳು ತಡೆಯುತ್ತವೆ ಮತ್ತು ಆದ್ದರಿಂದ ಒತ್ತಡದ ಪಟ್ಟಿ ನಿರ್ಮಾಣವಾಗಿ ಹಿಂದಿ ಮಹಾಸಾಗರದಲ್ಲಿಯ ಹೆಚ್ಚು ಒತ್ತಡದ ಪಟ್ಟಿಗಳಿಂದ ಭಾರತದ ಮುಖ್ಯ ಭೂಮಿಯತ್ತ ಗಾಳಿಗಳು ಬಿಸಲಾರಂಭಿಸುತ್ತವೆ.  ಇವು ಭಾಷ್ಪಯುಕ್ತ ಗಾಳಿಗಳು ಇರುತ್ತವೆ. ಆದ್ದರಿಂದ ಭರತದಲ್ಲಿ ಈಶಾನ್ಯ ಮನ್ಸೂನ್ ಗಾಳಿಗಳಿಂದ ಮಳೆ ಬೀಳುತ್ತದೆ.  

ಪ್ರ. 4.. ಕಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(ಅ) ದಕ್ಷಿಣದಿಂದ ಉತ್ತರದ ಕಡೆಗೆ ಭಾರತದ ಹವಾಮಾನದಲ್ಲಿ ಆಗುವ ಬದಲಾವಣೆಗಳನ್ನು ಸ್ವಲ್ಪದರಲ್ಲಿ ಹೇಳಿರಿ.

ಉತ್ತರ: ಭಾರತದಲ್ಲಿ ದಕ್ಷಿಣದಿಂದ ಉತ್ತರದ ಕಡೆಗೆ ಹೋಗುವ ಹಾಗೆ ಉಷ್ಣತಮಾನದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಉದಾ. ದಕ್ಷಿಣದಲ್ಲಿಯ ದ್ವೀಪಕಲ್ಪ ಪ್ರದೇಶದಲ್ಲಿಯ ಸರಾಸರಿ ಉಷ್ಣತಾಮಾನ 250ದಿಂದ 300 ಇರುತ್ತದೆ ಇದಕ್ಕೆ ವಿರುದ್ಧವಾಗಿ ಉತ್ತರದ ಪರ್ವತಿಯ ಪ್ರದೇಶದ ಹೆಚ್ಚಿನ ಭೂಭಾಗದಲ್ಲಿ 50 ರಿಂದ 100 ರಷ್ಟು ಮಾತ್ರ ಉಷ್ಣತಮಾನ ಇರುತ್ತದೆ. ಭಾರತದಲ್ಲಿ ದಕ್ಷಿಣದಿಂದ ಉತ್ತರದ ಕಡೆಗೆ ಮಳೆಯ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಉದಾ. ದಕ್ಷಿಣದ ಚೆನ್ನಯಿ ಸ್ಥಳದಲ್ಲಿ ನವ್ಹೆಂಬರ ತಿಂಗಳಿನಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಅಂದರೆ ಸುಮಾರು 410 ಮಿಮೀ ಇರುತ್ತದೆ. ಅದೇ ಉತ್ತರದಲ್ಲಿಯ ದಿಲ್ಲಿ ಈ ಸ್ಥಳದಲ್ಲಿ ಅಗಷ್ಟ ತಿಂಗಳಿನಲ್ಲಿ ಮಳೆಯ ಪ್ರಮಾಣ ಸುಮಾರು 250 ಮಿಮೀ ಇರುತ್ತದೆ.   

(ಆ) ಭಾರತದ ಹವಾಮಾನದ ಮೇಲೆ ಹಿಂದೀ ಮಹಾಸಾಗರ ಹಾಗೂ ಹಿಮಾಲಯದ ಮಹತ್ವಗಳನ್ನು ಸ್ವಲ್ಪದರಲ್ಲಿ ಹೇಳಿರಿ.

ಉತ್ತರ: ಹಿಮಾಲಯದ ಉತ್ತರದ ಕಡೆಯಿಂದ ಬರುವ ಅತಿಶೀತ ಗಾಳಿಗಳನ್ನು ಹಿಮಾಲಯವು ತಡೆಯುವುದು. ಥರದ ಮರುಭೂಮಿಯ ಉಷ್ಣ ಹವಾಮಾನದಿಂದಾಗಿ ಈ ಭಾಗದಲ್ಲಿ ಕಡಿಮೆ ಒತ್ತಡದ ಪಟ್ಟಿ ನಿರ್ಮಾಣವಾಗುವುದುಡ್, ಆದುದರಿಂದ ಹಿಂದಿ ಮಹಾಸಾಗರದಲ್ಲಿಯ ಹೆಚ್ಚು ಒತ್ತಡದ ಪಟ್ಟಿಗಳಿಂದ ಗಾಳಿಗಳು ಭಾರತದ ಮುಖ್ಯ ಭೂಮಿಯತ್ತ ಬಿಸಲಾರಂಭಿಸುವವು. ಈ ಭಾಷಯುಕ್ತ ಗಾಳಿಗಳಿಂದ ಭಾರತದಲ್ಲಿ ಮಳೆ ಬೀಳುತ್ತದೆ.  ಭಾರತದ ನೈಋತ್ಯ ದಿಕ್ಕಿನಿಂದ ಬೀಸುವ ಗಾಳಿಗಳು ಶಿವಲಿಕ್ ಹಾಗೂ ಹಿಮಾಲಯ ಪರ್ವತ ಸಾಲುಗಳಿಂದ ತಡೆಯಲ್ಪಟ್ಟು ದಿಕ್ಕು ಬದಲಿಸುತ್ತವೆ. ಮತ್ತು ಅವು ಹಿಂದೀ ಮಹಾಸಾಗರದತ್ತ ಬಿಸಲಾರಂಭಿಸುತ್ತವೆ. ಈಶಾನ್ಯ ದಿಕ್ಕಿನಿಂದ ಬೀಸುವ ಮಾನ್ಸೂನ ಗಾಳಿಗಳಿಂದಲೂ ಭಾರತದಲ್ಲಿ ಮಳೆ ಬೀಳುವುದು.

(ಇ) ಬ್ರಾಝಿಲದ ಹವಾಮಾನದ ಮೇಲೆ ಪರಿಣಾಮ ಬೀರುವ ಘಟಕಗಳ ಬಗೆಗೆ ಬರೆಯಿರಿ.

ಉತ್ತರ: ಬ್ರಾಝಿಲದ ಹವಾಮಾನದ ಮೇಲೆ ವಿಷುವವೃತ್ತಿಯ ಸಾನಿಧ್ಯ, ಉಚ್ಚಭೂಮಿ, ದಂಡೆಯ ಪ್ರದೇಶ ಇವು ಪರಿಣಾಮ ಬೀರುತ್ತವೆ.ವಿಷುವವೃತ್ತದ ಹತ್ತಿರ ಉಷ್ಣವಿದ್ದರೆ ಮಕರವೃತ್ತದ ದಕ್ಷಿಣದಲ್ಲಿ ಸಮಶೀತೋಷ್ಣ ಹವಾಮಾನ ಇರುತ್ತದೆ. ಬ್ರಾಝಿಲದ ಉಚ್ಚಭೂಮಿಯ ಕೆಲವು ಭಾಗ ಉತ್ತರದ ಕಡೆಗಿನ ದಂಡೆ ಪ್ರದೇಶದ ವರೆಗೆ ಇದೆ. ಸಮುದ್ರದಿಂದ ಬೀಸುವ ಗಳಿಗಳಿಂದ ಈ ದಂಡೆ ಪ್ರದೇಶದಲ್ಲಿ ಪ್ರತಿರೋಧ ಮಳೆ ಬೀಳುವುದು. ಆದರೆ ಉಚ್ಚಭೂಮಿಯ ಆಚೆ ಈ ಗಳಿಗಳ ಪ್ರಭಾವ ಕಡಿಮೆ ಆಗುವುದು, ಆದ್ದರಿಂದ ಇಲ್ಲಿ ಅತ್ಯಲ್ಪ ಮಳೆ ಬೀಳುವುದುದು. ಇದು ಬ್ರಾಝಿಲದಲ್ಲಿಯ ಪರ್ಜನ್ಯ ಛಾಯೆಯ ಪ್ರದೇಶವಾಗಿದೆ. ಇದು ಈಶಾನ್ಯ ದಿಕ್ಕಿನಲ್ಲಿದೆ. ಈ ಪ್ರದೇಶಕ್ಕೆ ಬರಗಾಲದ ಚತುಷ್ಕೋನ ಎಂದು ಸಹ ಕರೆಯುತ್ತಾರೆ.

(ಈ) ಭಾರತ ಹಾಗೂ ಬ್ರಾಝಿಲ್ ದೇಶಗಳಲ್ಲಿಯ ಹವಾಮಾನದ ತುಲನೆಯನ್ನು ಸ್ವಲ್ಪದರಲ್ಲಿ ಮಾಡಿರಿ.

ಉತ್ತರ: ಭಾರತ ಮತ್ತು ಬ್ರಾಝೀಲ್ ನಡುವಿನ ಹವಾಮಾನ ವ್ಯತ್ಯಾಸವು ಈ ಕೆಳಗಿನಂತಿದೆ:

1. ಭಾರತವು ಮಾನ್ಸೂನ್ ಪ್ರಕಾರದ ಹವಾಮಾನವನ್ನು ಹೊಂದಿದೆ. ಇದಕ್ಕೆ ವಿರುದ್ಧವಾಗಿ, ಬ್ರಾಝಿಲ್  ಉಪೋಷ್ಣವಲಯದ ಹವಾಮಾನವನ್ನು ಹೊಂದಿದೆ.

2. ಸಾಮಾನ್ಯವಾಗಿ, ಭಾರತದ ದಕ್ಷಿಣ ಭಾಗವು ತುಲನಾತ್ಮಕವಾಗಿ ಹೆಚ್ಚಿನ ಉಷ್ಣತಾಮಾನವನ್ನು ಹೊಂದಿರುತ್ತದೆ ಮತ್ತು ಉತ್ತರ ಭಾಗವು ತುಲನಾತ್ಮಕವಾಗಿ ಕಡಿಮೆ ಉಷ್ಣತಮಾನವನ್ನು ಹೊಂದಿರುತ್ತದೆ. ಇದಕ್ಕೆ ವಿರುದ್ಧವಾಗಿ, ಬ್ರೆಜಿಲ್ ಉತ್ತರದಲ್ಲಿ ತುಲನಾತ್ಮಕವಾಗಿ ಹೆಚ್ಚಿನ ಉಷ್ಣತಮಾನವನ್ನು ಹೊಂದಿದೆ ಮತ್ತು ದಕ್ಷಿಣದಲ್ಲಿ ತುಲನಾತ್ಮಕವಾಗಿ ಕಡಿಮೆ ಉಷ್ಣತಮಾನವನ್ನು ಹೊಂದಿದೆ.

3. ಭಾರತದ ದಕ್ಷಿಣ ಭಾಗವು ಹೆಚ್ಚು ಮಳೆಯನ್ನು ಹೊಂದಿದೆ ಮತ್ತು ಉತ್ತರ ಭಾಗವು ತುಲನಾತ್ಮಕವಾಗಿ ಕಡಿಮೆ ಮಳೆಯನ್ನು ಹೊಂದಿದೆ.

ಇದಕ್ಕೆ ವಿರುದ್ಧವಾಗಿ, ಬ್ರೆಜಿಲ್‌ನ ಉತ್ತರ ಭಾಗವು ಹೆಚ್ಚಿನ ಮಳೆಯನ್ನು ಹೊಂದಿದೆ ಮತ್ತು ದಕ್ಷಿಣ ಭಾಗವು ತುಲನಾತ್ಮಕವಾಗಿ ಕಡಿಮೆ ಮಳೆಯನ್ನು ಹೊಂದಿದೆ.

4. ಸಾಮಾನ್ಯವಾಗಿ, ಭಾರತದ ಕರಾವಳಿ ಪ್ರದೇಶಗಳು ಬಿಸಿ ಮತ್ತು ಆರ್ದ್ರ ವಾತಾವರಣವನ್ನು ಹೊಂದಿವೆ. ಇದಕ್ಕೆ ವಿರುದ್ಧವಾಗಿ, ಬ್ರೆಜಿಲ್‌ನ ಪೂರ್ವ ಕರಾವಳಿ ಪ್ರದೇಶವು ತುಲನಾತ್ಮಕವಾಗಿ ಸೌಮ್ಯ ಮತ್ತು ಸಮಶೀತೋಷ್ಣ ಹವಾಮಾನವನ್ನು ಹೊಂದಿದೆ.

***

 

5.ನೈಸರ್ಗಿಕ ವನಸ್ಪತಿ ಹಾಗೂ ಪ್ರಾಣಿಗಳು

ಪ್ರ.1. ಪಾಠದಲ್ಲಿಯ, ಆಕೃತಿಗಳು ಹಾಗೂ ನಕಾಶೆಗಳ ಆಧಾರದಿಂದ ಕೋಷರದಲ್ಲಿ ಮಾಹಿತಿ ತುಂಬಿರಿ.

ಅ.ಕ್ರ.

ಅರಣ್ಯಗಳ ಪ್ರಕಾರಗಳು

ಗುಣಧರ್ಮ

ಭಾರತದಲ್ಲಿಯ ಪ್ರದೇಶ

ಬ್ರಾಝಿಲದಲ್ಲಿಯ ಪ್ರದೇಶ

1.      

ಉಷ್ಣಕಟಬಂಧದ ಅರಣ್ಯಗಳು

1.ಅಗಲ ಎಲೆಗಳ ಸದಾಹಗಿತ ವೃಕ್ಷ


ಅಂಡಮಾನ ಮತ್ತು ನಿಕೋಬಾರ್ ದ್ವೀಪಗಳು, ಪಶ್ಚಿಮ ಘಟ್ಟ. ಆಸಾಮ ಇತ್ಯಾದಿಗಳು

ಗಿಯಾನಾ ಉಚ್ಚಭೂಮಿ ಹಾಗೂ ಅಮೆಝಾನ್ ನದಿಯ ಕೊಳ್ಳಗಳು

2.     

ಅರೆ ಮರುಭೂಮಿಯ ಮುಳ್ಳು ಕಂಟಿಯ ಅರಣ್ಯಗಳು

1. ವನಸ್ಪತಿಯ ಎಲೆಗಳು ಆಕಾರದಿಂದ ಸನ್ನಡಿರುತ್ತವೆ.

2. ಕಡಿಮೆ ಎತ್ತರದ ವನಸ್ಪತಿಗಳು

ಗುಜರಾತ, ರಾಜಸ್ಥಾನ

ಬ್ರಾಝಿಲದಲ್ಲಿಯ ಪರ್ಜನ್ಯ ಛಾಯೆಯ ಪ್ರದೇಶದ ಭಾಗ -ಬರಗಾಲದ ಚತುಷ್ಕೋನ

3.     

“ಸವ್ಹಾನಾ”

1.ವಿರಳವಾದ ಪೊದೆಯಂತಹ ಗಿಡಗಳು/ವಿರಳ ಪೊದೆಗಳು ಹಾಗೂ ಬರಗಾಲ ಪ್ರತಿಕಾರಕ ಹುಲ್ಲು

ರಾಜಸ್ಥಾನದಲ್ಲಿಯ ಮರುಭೂಮಿ ಪ್ರದೇಶ

ಬ್ರಾಝಿಲದ ಉಚ್ಚಭೂಮಿ

4.    

ಉಷ್ಣ ಕಟಿಬಂಧದ ಆರೆ ಎಲೆ ಉದುರುವ ಮರಗಳು

ಮಿಶ್ರ ಸ್ವರೂಪದ ವನಸ್ಪತಿಗಳು

ಪಂಜಾಬ, ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ, ಮಧ್ಯ ಪ್ರದೇಶ ಇತ್ಯಾದಿಗಳು

ಪರಾಗ್ವೆ- ಪರಾನಾ ನದಿ ಕೊಳ್ಳಗಳ ಪ್ರದೇಶ

5.     

ಹುಲ್ಲುಗಾವಲು

ಅರ್ಜೆಂಟಿನಾದಲ್ಲಿಯ 'ಪಂಪಾಸ' ದಂತಹ ಹುಲ್ಲುಗಾವಲು ಪ್ರದೇಶ

ಹಿಮಾಚಲ ಪ್ರದೇಶ, ಹರಿಯಾಣಾ, ಉತ್ತರಾಖಂಡ, ಬಿಹಾರ, ಪಶ್ಚಿಮ ಬಂಗಾಳ, ಆಸಾಮ

ಬ್ರಾಝಿಲದ ಅತಿ ದಕ್ಷಿಣ ದಂಡೆಯ ಪ್ರದೇಶ

ಪ್ರ. 2. ಸರಿಹೊಂದದ ಘಟಕ ಗುರುತಿಸಿರಿ.

(ಅ) ಬ್ರಾಝಿಲದ ಅರಣ್ಯಗಳ ಪ್ರಕಾರಗಳು.

(i) ಮುಳ್ಳುಕಂಟಿಯ ಅರಣ್ಯಗಳು                 (ii) ಸದಾಹರಿತ ಅರಣ್ಯಗಳು

(iii) ಹಿಮಾಲಯದ ಅರಣ್ಯಗಳು                 (iv) ಎಲೆ ಉದುರುವ ಅರಣ್ಯಗಳು

ಉತ್ತರ: ಬ್ರಾಝಿಲದ ಅರಣ್ಯಗಳ ಪ್ರಕಾರಗಳು:- ಹಿಮಾಲಯದ ಅರಣ್ಯಗಳು     

(ಆ) ಭಾರತದ ಅರಣ್ಯದ ಪ್ರಕಾರಗಳು

(ii) ಮ್ಯಾಂಗ್ರೂವ್ವ ಅರಣ್ಯಗಳು                  (ii) ಭೂಮಧ್ಯೆ ಸಮುದ್ರದ ಅರಣ್ಯಗಳು

(iii) ಮುಳ್ಳು ವನಸ್ಸತಿ                           (iv)ವಿಡುವ ವೃತ್ತದ ಅರಣ್ಯಗಳು

ಉತ್ತರ: ಭಾರತದ ಅರಣ್ಯದ ಪ್ರಕಾರಗಳು:- ಭೂಮಧ್ಯೆ ಸಮುದ್ರದ ಅರಣ್ಯಗಳು

(ಇ) ಬ್ರಾಝಿಲದ ವನ್ಯ ಪ್ರಾಣಿಗಳು

(ii) ಅನಾಕೊಂಡಾ              (ii) ತಾಮರಿನ

(iii) ಮಕಾವು                   (iv) ಸಿಂಹ

ಉತ್ತರ: ಬ್ರಾಝಿಲದ ವನ್ಯ ಪ್ರಾಣಿಗಳು:- ಸಿಂಹ

(ಇ) ಭಾರತದ ವನಸ್ಪತಿಗಳು

(i) ದೇವದಾರು         (ii) ಅಂಜನ            (iii) ಪಾವ ಬ್ರಾಝಿಲ            (iv) ಆಲ

ಉತ್ತರ: ಭಾರತದ ವನಸ್ಪತಿಗಳು:- ಪಾವ ಬ್ರಾಝಿಲ

ಪ್ರ. 3. ಜೋಡಿಗಳನ್ನು ಹೊಂದಿಸಿರಿ.

(ಅ) ಸದಾಹಂತ ಅರಣ್ಯಗಳು                           (i) ಸುಂದ್ರಿ

(ಆ) ಎಲೆಉದುರುವ ಅರಣ್ಯಗಳು                       (ii) ಪಾಇನ

(ಇ) ಸಮುದ್ರ ದಂಡೆಯ ಅರಣ್ಯಗಳು                   (iii) ಪಾಉ ಬ್ರಾಝಿಲ್

(ಈ) ಹಿಮಾಲಯದ ಅರಣ್ಯಗಳು                        (iv) ಖೇಜಡಿ

(ಉ) ಮುಳ್ಳು ಕಂಟಿಯ ಪೊದೆಗಳ ಅರಣ್ಯಗಳು          (v) ತೇಗು

                                                        (vi) ಅಮರ

                                                        (vii) ಸಾಲ

ಉತ್ತರ: (ಅ) ಸದಾಹಂತ ಅರಣ್ಯಗಳು  =   ಪಾಉ ಬ್ರಾಝಿಲ್

(ಆ) ಎಲೆಉದುರುವ ಅರಣ್ಯಗಳು       =   ತೇಗು       

(ಇ) ಸಮುದ್ರ ದಂಡೆಯ ಅರಣ್ಯಗಳು   =   ಸುಂದ್ರಿ       

(ಈ) ಹಿಮಾಲಯದ ಅರಣ್ಯಗಳು        =  ಪಾಇನ 

(ಉ) ಮುಳ್ಳು ಕಂಟಿಯ ಪೊದೆಗಳ ಅರಣ್ಯಗಳು  = ಖೇಜಡಿ

ಪ್ರ. 4. ಸಲ್ಪದರಲ್ಲಿ ಉತ್ತರಿಸಿರಿ.

(ಅ) ಭಾರತ ಹಾಗೂ ಬ್ರಾಝಿಲದ ನೈಸರ್ಗಿಕ ಅರಣ್ಯಗಳಲ್ಲಿ ಇರುವ ಭೇದ ಹೇಳಿರಿ.

ಉತ್ತರ:

ಉತ್ತರ: ಸದಾಹರಿತ ಅರಣ್ಯಗಳು: ಬ್ರಾಝಿಲ್ ದೇಶದ ವಿಷುವವೃತ್ತದ ಹತ್ತಿರ ಉತ್ತರ ಭಾರತದಲ್ಲಿ ವರ್ಷವಿಡೀ ಮಲೆಯಾಗುವುದರಿಂದ ಅಲ್ಲಿ ಸದಾ ಹರಿತ ಅರಣ್ಯಗಳು ಕಂಡು ಬರುತ್ತವೆ. ಭಾರತ ವಿಷುವವೃತ್ತದಿಂದ ದೂರ ಇರುವುದರಿಂದ ಬ್ರಾಝಿಲದಲ್ಲಿ ಕಂಡು ಬರುವ ಅರಣ್ಯಗಳು ಭಾರತದಲ್ಲಿ ಕಾಣಿಸುವುದಿಲ್ಲ. ಬ್ರಾಝಿಲದಲ್ಲಿ ರಬರ್, ಮಹಾಗನಿ, ರೋಜವುಡ್ ಮುಂತಾದ ವೃಕ್ಷಗಳು ಕಂಡು ಬರುತ್ತವೆ. ಭಾರತದಲ್ಲಿ ಸಾಗವಾನಿ, ಬಿದಿರು, ಅತ್ತಿ, ಅರಳೆ ಮುಂತಾದ ವನಸ್ಪತಿಗಳು ಕಂಡು ಬರುತ್ತವೆ.

ಹಿಮಾಲಯದ ಅರಣ್ಯಗಳು: ಭಾರತದ ಉತ್ತರ ಭಾಗದ ಹಿಮಾಲಯ ಪರ್ವತ ಸಾಲುಗಳಲ್ಲಿ ಎತ್ತರಕ್ಕನುಸರಿಸಿ ಹಾಗೂ ಋತುಗಳಿಗನುಸಾರಿಸಿ ಹೂ ಬಿಡುವ ಮರಗಳ ಅರಣ್ಯಗಳು, ಮಾಧ್ಯಮ ಎತ್ತರದ ಪ್ರದೇಶಗಳಲ್ಲಿ ಪಾಯಿನ್, ದೇವದಾರು, ಫರ್ ಮುಂತಾದ ಸೂಚಿಪರ್ಣದ ವೃಕ್ಷಗಳು ಮಿಶ್ರ ಅರಣ್ಯಗಳು ಇವೆ. ಬ್ರಾಝಿಲದಲ್ಲಿ ಅತಿ ಎತ್ತರದ ಹಾಗೂ ಬರ್ಫಾಚ್ಛಾದಿತ ಪರ್ವತಗಳು ಕಂಡು ಬರುವುದಿಲ್ಲ ಹಾಗಾಜಿ‌ಐ ಭಾರತದಲ್ಲಿ ಕಂಡು ಬರುವ ಹಿಮಾಲಯಿನ ಅರಣ್ಯಗಳು ಬ್ರಾಝಿಲದಲ್ಲಿ ಕಂಡು ಬರುವುದಿಲ್ಲ. 

(ಆ) ವನ್ಯ ಪ್ರಾಣಿ ಜೀವನ ಹಾಗೂ ನೈಸರ್ಗಿಕ ವನಸ್ಪತಿಗಳಲ್ಲಿಯ ಸಹಸಂಬಂಧಗಳನ್ನು ಸ್ಪಷ್ಟಪಡಿಸಿರಿ.

ಉತ್ತರ: ನೈಸರ್ಗಿಕ ವನಸ್ಪತಿಗಳು ತೃಣಭಕ್ಷಕ ಪ್ರಾಣಿಗಳು ಮತ್ತು ಪಕ್ಷಿಗಳ ಆಹಾರವಾಗಿರುತ್ತವೆ. ತೃಣಭಕ್ಷಕ ಪ್ರಾಣಿಗಳು ಮಾಂಸಾಹಾರಿ ಪ್ರಾಣಿಗಳ ಆಹಾರವಾಗಿರುತ್ತವೆ. ವಿಶಿಷ್ಟ್ಯ ಪ್ರಕಾರದ ವನಸ್ಪತಿಗಳು ಬೆಳೆಯುವ ಪ್ರದೇಶದಲ್ಲಿ ತೃಣಭಕ್ಷಕ ಪ್ರಾಣಿಗಳು ಮತ್ತು ಪಕ್ಷಿಗಳು ಕಂಡು ಬರುತ್ತವೆ. ಆದ್ದರಿಂದ ಇಂತಹ ಕಾಡುಗಳಲ್ಲಿ ಮಾಂಸಾಹಾರಿ ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಉದಾ: ಬ್ರಾಝಿಲದ ಹುಲ್ಲುಗಾವಲು ಪ್ರದೇಶದಲ್ಲಿ ವಿವಿಧ ಜಾತಿಗಳ ಜಿಂಕೆಗಳು ಹಾಗೂ ಜಿಂಕೆಗಳ ಬೇಟೆಯಾಡುವ ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ. ಭಾರತದಲ್ಲಿ ನೀರು ಇರುವ ಪ್ರದೇಶದಲ್ಲಿ ಬಾತುಕೋಳಿ, ಬಕಪಕ್ಷಿಗಳಿದ್ದರೆ ಹುಲ್ಲುಗಾವಲುಗಳಲ್ಲಿ ಮಾಳಢೋಕದಂತಹ ಪಕ್ಷಿಗಳು ಕಂಡು ಬರುತ್ತವೆ. ಭಾರತವನ್ನು ವೈಶಿಷ್ಟ್ಯಪೂರ್ಣ ಪ್ರಾಣಿಗಳುಳ್ಳ ದೇಶವೆಂದು ಗುರುತಿಸಲಾಗುತ್ತದೆ.

(ಇ) ಬ್ರಾಝಿಲ್ ಹಾಗೂ ಭಾರತ ದೇಶಗಳಿಗೆ ಪರ್ಯಾವರಣದ ಯಾವ ಸಮಸ್ಯೆಗಳನ್ನು ಎದುರಿಸಬೇಕಾಗುವುದು?  

ಉತ್ತರ: ಬ್ರಾಝಿಲ್ ಹಾಗೂ ಭಾರತಕ್ಕೆ ಪರ್ಯಾವರಣದ ಕೆಳಗಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ:

ಹೆಚ್ಚುತ್ತಿರುವ ಜನಸಂಖ್ಯೆಯ ನಿವಾಸಕ್ಕಾಗಿ, ಇಂಧನಕ್ಕಾಗಿ ಹಾಗೂ ಸ್ಥಳಾಂತರಕ್ಕಾಗಿ ಎರಡೂ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ಕಡಿಯಲಾಗಿದೆ. ಆದ್ದರಿಂದ ಎರಡೂ ದೇಶಗಳಲ್ಲಿ ಕಾಡು ಇಲ್ಲದಂತೆ ಆಗಿರುವುದು ಒಂದು ಪರ್ಯಾವರಣದ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ನಗರೀಕರಣದಿಂದ ಪ್ರದುಷಣೆಯ ಸಮಸ್ಯೆ ಹೆಚ್ಚಾಗಿದೆ. ಹೆಚ್ಚುತ್ತಿರುವ ಪ್ರದುಷಣೆ, ಕಾಡು ಇಲ್ಲದಂತಾಗುವುದು, ಇತ್ಯಾದಿ ಕಾರಣಗಳಿಂದ ಎರಡೂ ದೇಶಗಳಿಗೆ ಪರ್ಯಾವರಣದ ಹಾನಿಯಾಗುತ್ತಿದೆ. ಹೀಗಾಗಿ ಎರಡೂ ದೇಶಗಳಲ್ಲಿಯ ವಿವಿಧ ಪ್ರಜಾತಿಗಳ ವನಸ್ಪತಿಗಳು, ಪ್ರಾಣಿಗಳು ಹಾಗೂ ಪಕ್ಷಿಗಳು ಇವುಗಳ ಅಸ್ತಿತ್ವಕ್ಕೆ ಧಕ್ಕೆ ತಗಲುವುದು.  

(ಈ) ಬ್ರಾಝಿಲ್ ಹಾಗೂ ಭಾರತದಲ್ಲಿನ ಅರಣ್ಯಗಳ ನಾಶವಾಗಲು ಕಾರಣಗಳಾವುವು ?

ಉತ್ತರ: ಬ್ರಾಝಿಲ್ ಹಾಗೂ ಭಾರತದಲ್ಲಿನ ಅರಣ್ಯಗಳ ನಾಶವಾಗಲು ಕಾರಣಗಳು:

ಭಾರತ ಹಾಗೂ ಬ್ರಾಝಿಲ್ ಈ ಎರಡೂ ದೇಶಗಳಲ್ಲಿ ಔದ್ಯೋಗಿಕ ವಿಕಸಕ್ಕಾಗಿ ಜನಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ನಗರೀಕರಣದಿಂದಾಗಿ ಅನೇಕ ಹೊಸ ನಗರಗಳು ಉದಯವಾಗುತ್ತಿದ್ದು ಅವು ವಿಸ್ತಾರ ಹೊಂದುತ್ತಿವೆ. ಪಟ್ಟಣಗಳ ವಿಕಸಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಅರಣ್ಯಗಳು ನಾಶವಾಗುತ್ತಿವೆ. ಭಾರತದಲ್ಲಿ ಕಳ್ಳ ಸಾಗಾಣಿಕೆ ಮತ್ತು ವೇಗದಿಂದ ಆಗುತ್ತಿರುವ ಅರಣ್ಯನಾಶ ಇವುಗಳಿಂದ ಅನೇಕ ಪ್ರಜಾತಿಗಳ ಪ್ರಾಣಿಗಳು ನಷ್ಟವಾಗಿವೆ.

        ಉದರನಿರ್ವಹಣೆ ಸ್ವರೂಪದ ಬೇಸಾಯಕ್ಕೆ ತಗಲುವ ಭೂಮಿ ಅರಣ್ಯಗಳನ್ನು ಕಡಿದು ಬಯಲು ಮಾಡಲಾಗುತ್ತಿದೆ. ಅನಂತರ ಕೆಲವು ವರ್ಷಗಳವರೆಗೆ ಉದರನಿರ್ವಹಣೆ ಮಾಡಲಾಗುತ್ತದೆ. ಇಂತಹ ಬೇಸಾಯಕ್ಕೆ ಬ್ರಾಝಿಲದಲ್ಲಿ ರೋಕಾ ಎನ್ನುವರು. ಅದನ್ನು ಭಾರತದಲ್ಲಿ ಝುಮ ಎನ್ನುತ್ತಾರೆ. ಇಂತಹ ಬೇಸಾಯ ಮಾಡುವುದರಿಂದ ಅರಣ್ಯ ನಾಶವಾಗುತ್ತವೆ.    

 (ಉ) ಭಾರತದ ಹೆಚ್ಚಿನ ಭಾಗ ಎಲೆ ಉದುರುವ ಅರಣ್ಯಗಳಿಂದ ವ್ಯಾಪಿಸಿರಲು ಕಾರಣವೇನು ?

ಉತ್ತರ:ಮಳೆ ಹಾಗೂ ಹವಾಮಾನ ಇವು ವನಸ್ಪತಿ ಜೀವನದ ಮೇಲೆ ಪರಿಣಾಮ ಬೀರುವ ಮುಖ್ಯ ಘಟಕಗಳಾಗಿವೆ. ಭಾರತ ಉಷ್ಣಕಟಿಬಂಧದಲ್ಲಿಯ ದೇಶವಿದೆ. ಇಲ್ಲಿ ಮನ್ಸೂನ್ ಪ್ರಕಾರದ ಮಳೆ ಬೀಳುತ್ತದೆ. ಭಾರತದ ತುಂಬಾ ಇಡಿವರ್ಷ ಹೆಚ್ಚಿನ ಉಷ್ಣತಮಾನ ಇರುತ್ತದೆ. ಹೀಗಾಗಿ ಎಲೆ ಉದುರುವ ಅರಣ್ಯಗಳು ಭಾರತದ ಭೂಮಿಯಲ್ಲಿ ಕಂಡು ಬರುತ್ತವೆ. ಭಾರತದಲ್ಲಿ 1000 ರಿಂದ 2000 ಮಿಮೀ ಪರ್ಜನ್ಯದ ಪ್ರದೇಶದಲ್ಲಿ ಎಲೆ ಉದುರುವ ಅರಣ್ಯಗಳು ಕಂಡು ಬರುತ್ತವೆ. ಒಣ ಋತುವಿನಲ್ಲಿ ಭಾಷ್ಪೀಭವನ ಕ್ರಿಯೆಯಿಂದಾಗಿ ನೀರು ಕಡಿಮೆ ಆಗಬಾರದೆಂದು ವನಸ್ಪತಿಗಳ ಎಲೆಗಳು ಉದುದ್ರುವವು. ಉದಾ: ಸಾಗವಾನಿ, ಬಿದಿರು, ಅತ್ತಿ, ಅರಳೆ ಮುಂತಾದ ವನಸ್ಪತಿಗಳು ಈ ಅರಣ್ಯಗಳಲ್ಲಿ ಕಂಡು ಬರುತ್ತವೆ. 

ಪ್ರ. 5. ಭೌಗೋಲಿಕ ಕಾರಣಗಳನ್ನು ಬರೆಯಿರಿ.

(ಅ) ಬ್ರಾಝಿಲದ ಉತ್ತರದ ಭಾಗ ನಿಬಿಡವಾದ ಅರಣ್ಯಗಳಿಂದ ವ್ಯಾಪಿಸಿದೆ.

ಉತ್ತರ: ಬ್ರಾಝಿಲದ ಉತ್ತರ ಭಾಗದಲ್ಲಿ ಅಮೆಝಾನ್ ನದಿ ಹರಿಯುತ್ತಿದ್ದು ಬ್ರಾಝಿಲದ ಅರ್ಧಕ್ಕಿಂತ ಹೆಚ್ಚು ಭೂಭಾಗ ವ್ಯಾಪಿಸಿದೆ. ಅಲ್ಲಿಯ ಉಷ್ಣತಾಮಾನ ಉಷ್ಣವಾಗಿದ್ದು ವರ್ಷವಿಡೀ ಮಳೆ ಬರುತ್ತದೆ. ವನಸ್ಪತಿಗಳ ಬೆಲೆವಣಿಗೆಗಾಗಿ ಅಲ್ಲಿಯ ಹವಾಮಾನ ತುಂಬಾ ಅನುಕೂಲವಾಗಿದೆ. ಅಲ್ಲದೆ ವರ್ಷವಿಡೀ ಮಳೆ, ಕುಡಿಯುವ ನೀರಿನ ಸೌಕರ್ಯ, ಒಳ್ಳೆಯ ಸೂರ್ಯ ಪ್ರಕಾಶ, ಉಷ್ಣ  ಮತ್ತು ಆರ್ದ್ರ ಹವಾಮಾನ ಮತ್ತು ದುರ್ಗಮ ಭಾಗಗಳಿಂದಾಗಿ ಮಾನವನ ಹಸ್ತಕ್ಷೇಪ ಕಡಿಮೆ ಇರುವುದರಿಂದ ಬ್ರಾಝಿಲದ ಉತ್ತರ ಭಾಗದಲ್ಲಿ ನಿಬಿಡವಾದ ಅರಣ್ಯಗಳಿಂದ ಕೂಡಿರುತ್ತದೆ.

(ಆ) ಹಿಮಾಲಯದ ಎತ್ತರದ ಭಾಗದಲ್ಲಿ ವನಸ್ಪತಿಗಳ ಸಂಖ್ಯೆಯು ವಿರಳವಾಗಿ ಕಂಡುಬರುತ್ತದೆ.

ಉತ್ತರ: ಹಿಮಾಲಯದ ಎತ್ತರದ ಭಾಗದಲ್ಲಿ ಕಡಿಮೆ ಉಷ್ಣತಮಾನ ಇರುತ್ತದೆ. ಎಲ್ಲೆಡೆ ಹಿಮದ ಸ್ತರಗಳು ನಿರ್ಮಾಣವಾಗಿರುತ್ತವೆ. ಅತಿ ತಂಪು ಹಾಗೂ ಹಿಮದ ಸ್ತರದಿಂದಾಗಿ ವನಸ್ಪತಿಗಳ ಬೆಳವಣಿಗೆ ಚೆನ್ನಾಗಿ ಆಗುವುದಿಲ್ಲ. ಬೇಸಿಗೆಯಲ್ಲಿ ಹಿಮಾಲಯದಲ್ಲಿ ಉಷ್ಣ ಹವೆ ಇರುವುದರಿಂದ ಹಿಮ ಕರಗತೊಡಗುತ್ತದೆ. ಆದ್ದರಿಂದ ಹಿಮಾಲಯದಲ್ಲಿ ಋತುಗನುಸರಿಸಿ ಹೂವು ಬಿಡುವ ಮರಗಳಾದ ಪಾಯಿನ್, ದೇವದಾರು ಮುಂತಾದ ಸೂಚಿಪರ್ಣ ವೃಕ್ಷಗಳು ಬೆಳೆಯುತ್ತವೆ. ಆದರೆ ಚಳಿಗಳದಲ್ಲಿ ಈ ವನಸ್ಪತಿಗಳು ನಾಶಹೊಂದುತ್ತವೆ   ಆದ್ದರಿಂದ  ಹಿಮಾಲಯದ ಎತ್ತರದ ಭಾಗದಲ್ಲಿ ವನಸ್ಪತಿಗಳ ಸಂಖ್ಯೆಯು ವಿರಳವಾಗಿ ಕಂಡುಬರುತ್ತದೆ

(ಇ) ಬ್ರಾಝಿಲದಲ್ಲಿ ಕೃಮಿ ಕೀಟಕಗಳ ಸಂಖ್ಯೆ ಹೆಚ್ಚು ಇದೆ.

ಉತ್ತರ: ಬ್ರಾಝಿಲದ ಅಮೆಝಾನ್ ನದಿಯ ಕೊಳ್ಳ ಹಾಗೂ ವಿಷುವವೃತ್ತಿಯ ಉಷ್ಣ ಹಾಗೂ ಆರ್ದ್ರ ಹವೆಯಿಂದಾಗಿ ಅಲ್ಲಿ ವರ್ಷವಿಡೀ ಮಳೆ ಇರುತ್ತದೆ.  ವರ್ಷವಿಡೀ ಮಳೆ, ಕುಡಿಯುವ ನೀರಿನ ಸೌಕರ್ಯ, ಒಳ್ಳೆಯ ಸೂರ್ಯ ಪ್ರಕಾಶ, ಉಷ್ಣ ಮತ್ತು ಆರ್ದ್ರ ಹವಾಮಾನ ಇರುವುದರಿಂದ ವನಸ್ಪತಿಗಳು ಹೆಚ್ಚು ಬೆಳೆದಿರುತ್ತವೆ. ವರ್ಷವಿಡೀ ಮಳೆ ಆರ್ದ್ರ –ಉಷ್ಣ ಹವೆಯಿಂದ ಜವುಳು ಪ್ರದೇಶ ಉಂಟಾಗಿ  ದಟ್ಟ ಅರಣ್ಯಗಳಲ್ಲಿ ಕೀಟಕಗಳ ಬೆಳವಣಿಗೆಗೆ ಪೋಷಕ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಬ್ರಾಝಿಲದಲ್ಲಿ ಕೃಮಿ ಕೀಟಕಗಳ ಸಂಖ್ಯೆ ಹೆಚ್ಚು ಇರುತ್ತದೆ.

(ಈ) ಭಾರತದಲ್ಲಿಯ ವನ್ಯ ಪ್ರಾಣಿಗಳ ಸಂಖ್ಯೆ ದಿನೇದಿನೇ ಕಡಿಮೆ ಆಗುತ್ತಿದೆ.

ಉತ್ತರ: ಭಾರತದಲ್ಲಿ ದಿನ ದಿನಕ್ಕೂ ಹೆಚ್ಚುತ್ತಿರುವ ಜನಸಂಖ್ಯೆಯ ನಿವಾಸಕ್ಕಾಗಿ, ಇಂಧನಕ್ಕಾಗಿ ಹಾಗೂ ಸ್ಥಳಾಂತರಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ಕಡಿಯಲಾಗುತ್ತಿದೆ. ಆದ್ದರಿಂದ ಕಾಡು ನಾಶವಾಗಿ ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ಕಡಿಮೆಯಾಗಿತ್ತಿವೆ. ಹೆಚ್ಚುತ್ತಿರುವ ನಗರೀಕರಣದಿಂದ ಪ್ರದುಷಣೆಯ ಸಮಸ್ಯೆ ಹೆಚ್ಚಾಗಿದೆ. ಪ್ರದುಷಣೆಯಿಂದ ಪ್ರಾಣಿಗಳ ಆರೋಗ್ಯಕ್ಕೆ ಹಾನಿ ಇದೆ. ವನ್ಯ ಕಳ್ಳ ಸಾಗಾಣಿಕೆ ಮತ್ತು ವೇಗದಿಂದ ಆಗುತ್ತಿರುವ ಅರಣ್ಯನಾಶ ಇವುಗಳಿಂದಾಗಿ ಅನೇಕ ಪ್ರಜಾತಿಯ ಪ್ರಾಣಿಗಳು ನಷ್ಟವಾಗಿವೆ.

(ಉ) ಭಾರತಕ್ಕೆ ಇರುವಂತೆ ಬ್ರಾಝಿಲದಲ್ಲಿಯೂ ಪ್ರಾಣಿ ಹಾಗೂ ಅರಣ್ಯ ಸಂವರ್ಧನೆಯ ಅವಶ್ಯಕತೆ ಇದೆ.

ಉತ್ತರ: ಭಾರತದಲ್ಲಿದ್ದಂತೆ ಬ್ರಾಝಿಲದಲ್ಲಿ ಕೂಡ ಅರಣ್ಯಗಳ ನಾಶ ಮಾಡಲಾಗುತ್ತದೆ. ಜನವಸತಿ ಅಥವಾ ನಗರೀಕರಣದಿಂದಾಗಿ ಪ್ರದುಷಣೆಯಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದ ಪ್ರಾಣಿಗಳ ಆರೋಗ್ಯಕ್ಕೆ ಹಾನಿಯುಂಟಾಗಿ ದಿನದಿನಕ್ಕೆ ಪ್ರಾಣಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಭಾರತದಲ್ಲಿ ನಡೆಯುವ ಹಾಗೆ ಮರಗಳ ಮತ್ತು ಪ್ರಾಣಿಗಳ ಕಳ್ಳ ಸಾಗಾಣಿಕೆ ಹೆಚ್ಚುತ್ತಿದೆ. ಭಾರತದಲ್ಲಿ ಝುಮ ಕೃಷಿ ಮಾಡುವ ಹಾಗೆ ಬ್ರಾಝಿಲದಲ್ಲಿ ರೋಕಾ ಎಂಬ ಬೇಸಾಯದ ಪದ್ಧತಿ ಮಾಡಲಾಗುತ್ತದೆ. ಈ ರೀತಿಯ ಬೇಸಾಯ ಮಾಡಲು ಅರಣ್ಯ ನಾಶ ಮಾಡಲಾಗುತ್ತದೆ. ಇದರಿಂದ ಪ್ರಾಣಿಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಪ್ರಾಣಿಗಳ ಪ್ರಜಾತಿಗಳ ಸಂರಕ್ಷಣೆಗಾಗಿ ಮತ್ತು ಸಂವರ್ಧನೆಗಾಗಿ ಈ ದೇಶಗಳಲ್ಲಿ ಪ್ರಾಣಿ ಹಾಗೂ ಅರಣ್ಯಗಳ ಸಂವರ್ಧನೆಯ ಅವಶ್ಯಕತೆ ಇರುತ್ತದೆ.    

***

ಬ್ರಾಝೀಲದಲ್ಲಿ ಸ್ಥಳಾಂತರಿತ ಬೇಸಾಯಕ್ಕೆ ರೂಕಾ(Roca) ಎನ್ನುವರು. ಈ ಪದ್ಧತಿಯಲ್ಲಿ ಅರಣ್ಯದಲ್ಲಿ ಇರುವ ವೃಕ್ಷ ಕಡಿತ ಮಾಡಿ ಅಥವಾ ಸುತ್ತು ಭೂಮಿ ಬರಿದು ಮಾಡಿ ಆ ಭೂಮಿಯಲ್ಲಿ ಕೆಲವು ವರ್ಷಗಳ ವರೆಗೆ ಉದರನಿರ್ವಹಣೆಗಾಗಿ ಬೇಸಾಯ ಮಾಡಲಾಗುತ್ತದೆ.

 

6.ಜನಸಂಖ್ಯೆ

ಪ್ರ. 1. ಕೆಳಗಿನ ವಿಧಾನಗಳು ತಪ್ಪು ಅಥವಾ ಸರಿ ಎಂಬುದನ್ನು ಹೇಳಿರಿ.

(ಅ) ಭಾರತಕ್ಕಿಂತ ಬ್ರಾಝಿಲದಲ್ಲಿಯ ಸಾಕ್ಷರತೆಯ ಪ್ರಮಾಣ ಹೆಚ್ಚು ಇದೆ.      =ಸರಿ

(ಆ) ಬ್ರಾಝಿಲದಲ್ಲಿಯ ಜನರು ಈಶಾನ್ಯ ಭಾಗಕ್ಕಿಂತ ಆಗೇಯ ಭಾಗದಲ್ಲಿ ಇರಲು ಹೆಚ್ಚು ಇಷ್ಟಪಡುತ್ತಾರೆ. =ಸರಿ

(ಇ) ಭಾರತದಲ್ಲಿಯ ಜನರ ಆಯುರ್ಮಾನವು ಕಡಿಮೆ ಆಗುತ್ತಿದೆ.

ಉತ್ತರ: ತಪ್ಪು,  ಭಾರತದಲ್ಲಿಯ ಜನರ ಆಯುರ್ಮಾನವು ಹೆಚ್ಚಾಗುತ್ತಿದೆ.

(ಈ) ಭಾರತದ ವಾಯುವ್ಯ ಸೀಮೆಯ ಹತ್ತಿರ ದಟ್ಟ ಜನವಸತಿ ಇದೆ.

ಉತ್ತರ: ತಪ್ಪು, ಭಾರತದ ವಾಯುವ್ಯ ಸೀಮೆಯ ಹತ್ತಿರ ವಿರಳ ಜನವಸತಿ ಇದೆ

(ಉ) ಬ್ರಾಝಿಲದ ಪಶ್ಚಿಮ ಭಾಗದಲ್ಲಿ ದಟ್ಟ ಜನವಸತಿ ಇದೆ.

ಉತ್ತರ: ತಪ್ಪು, ಬ್ರಾಝಿಲದ ಪಶ್ಚಿಮ ಭಾಗದಲ್ಲಿ ವಿರಳವಾದ ಜನವಸತಿ ಇದೆ.

ಪ್ರ.2. ಕೊಟ್ಟ ಸೂಚನೆಗನುಸಾರ ಪ್ರಶ್ನೆಗಳ ಉತ್ತರ ಬರೆಯಿರಿ.

(ಅ) ಭಾರತದಲ್ಲಿಯ ರಾಜ್ಯಗಳನ್ನು ಜನಸಂಖ್ಯೆಗನುಸಾರ ಇಳಿಕೆಯ ಕ್ರಮದಲ್ಲಿ ಹೊಂದಿಸಿರಿ.

ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ಮಧ್ಯೆ ಪ್ರದೇಶ, ಆಂಧ್ರ ಪ್ರದೇಶ.

ಉತ್ತರ:ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಹಿಮಾಲಯ ಪ್ರದೇಶ, ಅರುಣಾಚಲ ಪ್ರದೇಶ. 

(ಆ) ಬ್ರಾಝೀಲದಲ್ಲಿನ ರಾಜ್ಯಗಳನ್ನು ಅವುಗಳ ಜನಸಂಖ್ಯೆಗನುಸಾರವಾಗಿ ಏರಿಕೆಯ ಕ್ರಮದಲ್ಲಿ ಹೊಂದಿಸಿರಿ. ಅಮೆಝಾನಸ್, ರಿಓ ದಿ ಜನೆರಿಓ, ಸಾವೂ ಪಾವಲೊ, ಪರಾನಾ, ಅಲಾಗ್ತಾಸ್,

ಉತ್ತರ: ಅಮೆಝಾನಸ್, ಅಲಾಗ್ತಾಸ್, ಸಾವೂ ಪಾವಲೊ, ಪರಾನಾ, ರಿಓ ದಿ ಜನೆರಿಓ

(ಇ) ಭಾರತ ಮತ್ತು ಬ್ರಾಝೀಲ್ ಇವುಗಳಲ್ಲಿಯ ದಟ್ಟ ಮತ್ತು ವಿರಳ ಜನಸಂಖ್ಯೆಗಾಗಿ ಕಾರಣೀಭೂತವಾಗಿರುವ ಕೆಳಗಿನ ಘಟಕಗಳನ್ನು ವರ್ಗೀಕರಿಸಿರಿ.

ಸಾಗರಸಾನ್ನಿಧ್ಯ, ರಸ್ತೆಗಳ ಕೊರತೆ, ಸಮಶೀತೋಷ್ಣ ಹವಾಮಾನ, ಉದ್ಯೋಗಗಳ ಅಭಾವ, ಹೊಸ ಪಟ್ಟಣಗಳು ಮತ್ತು ನಗರಗಳು, ಉಷ್ಣಕಟಿಬಂಧದ ಆರ್ದ್ರ ಅರಣ್ಯಗಳು, ಖನಿಜಗಳು, ಅರೆಒಣ ಹವಾಮಾನ, ಬೇಸಾಯಕ್ಕಾಗಿ ಉಪಯುಕ್ತವಾದ ಭೂಮಿ.

ಉತ್ತರ:

ಜನಸಂಖ್ಯೆಯ ಮೇಲೆ ಪರಿಣಾಮಬೀರುವ ಅನುಕೂಲ ಘಟಕಗಳು/ದಟ್ಟ ಜನಸಂಖ್ಯೆಗಾಗಿ

ಜನಸಂಕ್ಯೆಯ ಮೇಲೆ ಪರಿಣಾಮಬೀರುವ ಪ್ರತಿಕೂಲ ಘಟಕಗಳು/ವಿರಳ ಜನಸಂಖ್ಯೆಗಾಗಿ

ಸಾಗರಸಾನ್ನಿಧ್ಯ, ಸಮಶೀತೋಷ್ಣ ಹವಾಮಾನ, ಹೊಸ ಪಟ್ಟಣಗಳು ಮತ್ತು ನಗರಗಳು, ಖನಿಜಗಳು, ಬೇಸಾಯಕ್ಕಾಗಿ ಉಪಯುಕ್ತವಾದ ಭೂಮಿ.

ರಸ್ತೆಗಳ ಕೊರತೆ, ಉದ್ಯೋಗಗಳ ಅಭಾವ, ಉಷ್ಣಕಟಿಬಂಧದ ಆರ್ದ್ರ ಅರಣ್ಯಗಳು, ಅರೆಒಣ ಹವಾಮಾನ.

 ಪ್ರ.3. ಕೆಳಗಿನ ಪ್ರಶ್ನೆಗಳ ಉತ್ತರಗಳನ್ನು ಬರೆಯಿರಿ.

(ಅ) ಭಾರತ ಮತ್ತು ಬ್ರಾಝೀಲ್ ಈ ದೇಶಗಳ ಜನಸಂಖ್ಯೆಯ ಹರಡಿಕೆಯಲ್ಲಿ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಸ್ಪಷ್ಟಿಕರಿಸಿರಿ.

ಉತ್ತರ: ಭಾರತ ಮತ್ತು ಬ್ರಾಝಿಲ್ ದೇಶಗಳ ಜನಸಂಖ್ಯೆಯ ಹರಡಿಕೆಯಲ್ಲಿ/ವಿತರಣೆಯಲ್ಲಿಯ ಸಂಯಗಳು:

1)     ಎರಡೂ ದೇಶಗಳ ಉತ್ತರಕ್ಕೆ, ಮಧ್ಯಭಾಗದಲ್ಲಿ ಹಾಗೂ ವಾಯುವ್ಯ ಭಾಗದಲ್ಲಿ ಜನಸಂಖ್ಯೆ ವಿತರಣೆ ವಿರಳವಾಗಿದೆ.

2)      ಭಾರತದ ಅತಿ ಉತ್ತರದ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಹಾಗೂ ಬ್ರಾಝಿಲದ ಉತ್ತರದ ಅಮಾಪಾ ರಾಜ್ಯದಲ್ಲಿ ಜನಸಂಖ್ಯೆ ವಿರಳವಾಗಿದೆ.  

3)    ಭಾರತದ ಪೂರ್ವ ಹಾಗೂ ಪಶ್ಚಿಮ ಕರಾವಳಿ ಪಟ್ಟಿಯಲ್ಲಿಯ ಪ್ರದೇಶಗಳಲ್ಲಿ ಮತ್ತು ಬ್ರಾಝಿಲದ ಪೂರ್ವ ಕರಾವಳಿಯ ಆಗ್ನೇಯ ಭಾಗದಲ್ಲಿ ಜನಸಂಖ್ಯೆ ದಟ್ಟಾವಾಗಿದೆ.

ಭಾರತ ಮತ್ತು ಬ್ರಾಝಿಲ್ ದೇಶಗಳ ಜನಸಂಖ್ಯೆಯ ಹರಡಿಕೆಯಲ್ಲಿ/ವಿತರಣೆಯಲ್ಲಿಯ ಸಂಯಗಳು:  

1)     ಭಾರತದಲ್ಲಿಯ ಗಂಗಾ ಹಾಗೂ ಇತರ ನದಿಗಳ ಕೊಳ್ಳಗಳ ಪ್ರದೇಶಗಳಲ್ಲಿ ಜನಸಂಖ್ಯೆ ದಟ್ಟವಾಗಿದ್ದು, ಬ್ರಾಝಿಲದಲ್ಲಿಯ ಅಮೆಝಾನ್ ನದಿ ಕೊಳ್ಳದ ಪ್ರದೇಶಗಳಲ್ಲಿ ಜನಸಂಖ್ಯೆ ವಿರಳವಾಗಿದೆ.

2)     2011 ರ ಜನಗಣನೆಯಂತೆ ಭಾರತದ ಜನಸಂಖ್ಯೆಯ ಸರಾಸರಿ  ಸಾಂದ್ರತೆ ಪ್ರತಿ ಚೌ.ಕಿ.ಮೀ. ಗೆ 382 ವ್ಯಕ್ತಿಗಳಂತೆ ಇತ್ತು ಆದರೆ, ಬ್ರಾಝಿಲದ ಜನಸಂಖ್ಯೆ ಸಾಂದ್ರತೆ ಪ್ರತಿ ಚೌ.ಕಿ.ಮೀ.ಗೆ ಬರೀ 32 ವ್ಯಕ್ತಿಗಳಂತೆ ಇತ್ತು.  

(ಆ) ಜನಸಂಖ್ಯೆಯ ವಿತರಣೆ ಮತ್ತು ಹವಾಮಾನ ಇವುಗಳ ಸಹಸಂಬಂಧವನ್ನು ಉದಾಹರಣೆಗಳನ್ನು ಕೊಟ್ಟು ಸ್ಪಷ್ಟಪಡಿಸಿರಿ.

ಉತ್ತರ: ಜನಸಂಖ್ಯೆ ಹಾಗೂ ಹವಾಮಾನ ಇವುಗಳಲ್ಲಿ ಬಹಳ ಹತ್ತಿರದ ಸಂಬಂಧ ಇರುತ್ತದೆ. ದೇಶದ ಪ್ರಕೃತಿಕ ರಚನೆ, ಹವಾಮಾನ, ಜೀವನ ನಡೆಸುವ ಸುಲಭತೆ ಈ ಬಾಬತ್ತುಗಳ ಪರಿಣಾಮ ಜನಸಂಖ್ಯೆಯ ವಿತರಣೆಯ ಮೇಲೆಯಾಗುತ್ತದೆ. ಫಲವತ್ತಾದ ಭೂಮಿ, ಬಯಲು ಪ್ರದೇಶ, ನೀರಿನ ಉಪಲಬ್ಧತೆ ಇರುವ ಭಾಗಗಳಲ್ಲಿ ಮಾನವನ ವಸತಿ ದಟ್ಟವಾಗಿದ್ದು ಕಂಡು ಬರುತ್ತದೆ.  ಅದೇ ಅತಿಶಯ ಮಳೆ ಅಥವಾ ಕಡಿಮೆ ಮಳೆ ಇರುವ ಹಾಗೂ ಅತಿ ತಂಪು ಅಥವಾ ಅತಿಶಯ ಉಷ್ಣವಾದ ಪ್ರತಿಕೂಲ ಹವಾಮಾನದ ಪ್ರದೇಶಗಳಲ್ಲಿ ಜನಸಂಖ್ಯೆಯು ವಿರಳವಾಗಿರುತ್ತದೆ. ಭಾರತದಲ್ಲಿಯ ಸೌಮ್ಯ ಹವಾಮಾನ ಹಾಗೂ ಪರ್ಜನ್ಯವಿರುವ ಗಂಗಾನದಿಯ ಕೊಳ್ಳದಲ್ಲಿ ಹಾಗೂ ಬ್ರಾಝಿಲದ ಸಮಶೀತೋಷ್ಣ ಹವಾಮಾನವಿರುವ ಆಗ್ನೇಯ ಕಡಲು ತೀರಪ್ರದೇಶದಲ್ಲಿಯ ಅನುಕೂಲ ಹವಮನದಲ್ಲಿ ಜನಸಂಖ್ಯೆ ದಟ್ಟವಿರುತ್ತದೆ.

ಪ್ರ. 4. ಭೌಗೋಲಿಕ ಕಾರಣಗಳನ್ನು ಬರೆಯಿರಿ.

(ಅ) ಜನಸಂಖ್ಯೆಯು ಒಂದು ಮಹತ್ವದ ಸಾಧನ ಸಂಪತ್ತು ಆಗಿದೆ.

ಉತ್ತರ: ಯಾವುದೇ ದೇಶದ ಆರ್ಥಿಕ ಮತ್ತು ಸಾಮಾಜಿಕ ವಿಕಸವು ಆ ದೇಶದ ಜನಸಂಖ್ಯೆ ಹಾಗೂ ಜನಸಂಖ್ಯೆಯ ಗುಣಮಟ್ಟ ಈ ಘಟಕಗಳ ಮೇಲೆ ಅವಲಂಬಿಸಿರುತ್ತದೆ. ಯಾವುದೇ ದೇಶದ ಜನಸಂಖ್ಯೆ ಪ್ರಮಾಣಕ್ಕಿಂತ ಹೆಚ್ಚು ಇದ್ದು ಜನಸಂಖ್ಯೆಯ ಗುಣಮಟ್ಟ ಕೀಳುಮಟ್ಟದ್ದು ಇದ್ದರೆ ಆ ದೇಶದ ಆರ್ಥಿಕ ಮತ್ತು ಸಾಮಾಜಿಕ ವಿಕಾಸ ಸಂತಗತಿಯಿಂದ ಆಗುತ್ತದೆ. ಅದೆ ಯಾವುದೇ ದೇಶದ ಜನಸಂಖ್ಯೆ ಮರ್ಯಾದಿತವಾಗಿದ್ದು, ಜನಸಂಖ್ಯೆಯ ಗುಣಮಟ್ಟ ಉಚ್ಚವಾಗಿದ್ದರೆ ಇಂತಹ ದೇಶಗಳ ವಿಕಾಸ ವೇಗವಾಗಿ ಆಗುತ್ತದೆ. ಆದ್ದರಿಂದ ಜನಸಂಖ್ಯೆಗೆ ಒಂದು ಮಹತ್ವದ ಸಾಧನ ಸಂಪತ್ತು ಎಂದು ಹೇಳಲಾಗುತ್ತದೆ.  

(ಆ) ಬ್ರಾಝಿಲದ ಜನಸಂಖ್ಯೆಯ ಸರಾಸಿರಿ ಸಾಂದ್ರತೆ ಬಹಳ ಕಡಿಮೆ ಇದೆ.

ಉತ್ತರ: 2010ರ ಜನಗಣನೆಯನುಸರಿಸಿ ಸುಮಾರು 19ಕೋಟಿ ಜನಸಂಖ್ಯೆ ಹೊಂದಿದ ಬ್ರಾಝಿಲವು ಜಗತ್ತಿನಲ್ಲಿ ಐದನೆಯ ಕ್ರಮಾಂಕವನ್ನು ಹೊಂದಿದೆ. ಕ್ಷೇತ್ರಫಲದ ದೃಷ್ಟಿಯಿಂದ ಕೂಡ ಬ್ರಾಝಿಲ್ ಐದನೆಯ ಕ್ರಮಾಂಕದಲ್ಲಿದೆ. ಪೃಥ್ವಿಯ ಭೂಭಾಗದ ಶೇ.5.6 ರಷ್ಟು ಭಾಗ ಬ್ರಾಝಿಲ್ ವ್ಯಾಪಿಸಿಕೊಂಡಿದೆ. ಆದರೆ ಜಗತ್ತಿನ ಜನಸಂಖ್ಯೆಯಲ್ಲಿಯ ಕೇವಲ 2.78% ಜನಸಂಖ್ಯೆ ಈ ದೇಶದಲ್ಲಿದೆ. ಇದರಿಂದ ಈ ದೇಶದಲ್ಲಿ ಜನಸಂಖ್ಯೆಯ ಸರಾಸರಿ ಸಾಂದ್ರತೆ ಪ್ರತಿ ಚೌ.ಕಿ.ಮೀ.ಗೆ 23 ದಷ್ಟು ಇದೆ. ಅಂದರೆ ಬಹಳ ಕಡಿಮೆ ಇದೆ.  

(ಇ) ಭಾರತದ ಜನಸಂಖ್ಯೆಯ ಸರಾಸರಿ ಸಾಂದ್ರತೆ ಹೆಚ್ಚು ಇದೆ.

ಉತ್ತರ: ಜನಸಂಖ್ಯೆಯ ಬಾಬತ್ತಿನಲ್ಲಿ ಭಾರತವು ಜಗತ್ತಿನ ಒಟ್ಟು ಕ್ಷೇತ್ರದ ಕೇವಲ 2.41% ದಷ್ಟೂ ಭೂಕ್ಷೇತ್ರವನ್ನು ವ್ಯಾಪಿಸಿದೆ. ಆದರೆ ಜಗತ್ತಿನ ಒಟ್ಟು ಜನಸಂಖ್ಯೆಯ ಪೈಕಿ 17.5%ದಷ್ಟೂ ಜನಸಂಖ್ಯೆ ಭಾರತದಲ್ಲಿ ಇದೆ. 2011ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆಯ ಸರಾಸರಿ ಸಾಂದ್ರತೆ 382 ವ್ಯಕ್ತಿಗಳು ಪ್ರತಿ ಚೌ.ಕಿ.ಮೀ. ಇತ್ತು. ಅಂದರೆ ಭಾರತದಲ್ಲಿ ಭೂಭಾಗವು ಕಡಿಮೆಯಿದ್ದು ಅದರ ತುಲನೆಯಲ್ಲಿ ಹೆಚ್ಚು ಜನಸಂಖ್ಯೆ ಇರುವುದು ಕಂಡು ಬರುತ್ತದೆ ಹಾಗಾಗಿ ಭಾರತದ ಸರಾಸರಿ ಸಾಂದ್ರತೆ ಹೆಚ್ಚು ಇರುವುದು.

(ಈ) ಅಮೆಝಾನ್ ನದಿಯ ಕೊಳ್ಳದಲ್ಲಿ ಜನಸಂಖ್ಯೆ ವಿರಳವಾಗಿದೆ.

ಉತ್ತರ: ಬ್ರಾಝಿಲ್ ದೇಶದ ಉತ್ತರ ಭಾಗದಲ್ಲಿಯ ಅಮೆಝಾನ್ ನದಿಯ ಕೊಳ್ಳದ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನ, ಹೆಚ್ಚು ಪರ್ಜನ್ಯಮಾನ, ದುರ್ಗಮ ಕ್ಷೇತ್ರ ಹಾಗೂ ದಟ್ಟ ಕಾಡು ಇರುವುದರಿಂದ ಅಮೆಜಾನ್ ನದಿ ಕೊಳ್ಳದ ಪ್ರದೇಶಗಳು ಮಾನವನ ವಸತಿ ವಿರಹಿತ ಅಗಿದ್ದಂತೆ ಕಾಣುತ್ತದೆ. ನದಿಕೊಳ್ಳದಲ್ಲಿ ಜನವಸತಿಗೆ ಪ್ರತಿಕೂಲ ವಾತಾವರಣ ಇರುವುದರಿಂದ ಜನಸಂಖ್ಯೆ ವಿರಳವಾಗಿದ್ದು ಕಂಡು ಬರುತ್ತದೆ.

(ಉ) ಗಂಗೆಯ ಕೊಳ್ಳದಲ್ಲಿ ಜನವಸತಿಯು ದಟ್ಟವಾಗಿದೆ.

ಉತ್ತರ: ಭಾರತದ ಗಂಗಾನದಿ ಕೊಳ್ಳದಲ್ಲಿ ಬಯಲು ಪ್ರದೇಶವಿದೆ. ಗಂಗಾನದಿ ಕೊಳ್ಳದಲ್ಲಿ ಪೂರ್ಣ ಪ್ರಮಾಣದ ಮಳೆ, ಫಲವತ್ತಾದ ಭೂಮಿ,ಬಯಲು ಪ್ರದೇಶ, ನೀರಿನ ಉಪಲಬ್ಧತೆ ಇರುವುದರಿಂದ ಬೇಸಾಯಕ್ಕೆ, ನಗರೀಕರಣಕ್ಕೆ, ಸರಿಗೆಗೆ ಅನುಕೂಲ ವಾತಾವರಣ ಇರುತ್ತದೆ. ಹಾಗಾಗಿ ಗಂಗಾ ನದಿ ಕೊಳ್ಳದಲ್ಲಿ ದಟ್ಟವಾದ ಜನವಸತಿ ಇರುತ್ತದೆ.

ಪ್ರ. 5 (ಅ) ಚೌ.ಕಿ.ಮೀ. ಕ್ಷೇತ್ರ ಸೂಚಿಸುವ ಚೌಕೋನದಲ್ಲಿ ಜನಸಂಖ್ಯೆಯ ತುಲನೆ ಮಾಡಿ ವರ್ಗಿಕರಣ ಮಾಡಿರಿ.

 
ಉತ್ತರ: ಚೌಕೊನದಲ್ಲಿ ಒಟ್ಟು 7 ವ್ಯಕ್ತಿ ಪ್ರತಿ ಚೌ.ಕಿ.ಮೀ. ಇರುವುದರಿಂದ ಜನಸಂಖ್ಯೆಯ ಸಾಂದ್ರತೆ ವಿರಳವಾಗಿದೆ. 

(ಆ) ಆಕೃತಿ '' ದಲ್ಲಿಯ ಒಂದು ಚಿಹ್ನೆ = 200 ಎಂದು ಪ್ರಮಾಣವಾಗಿದ್ದರೆ ಸ್ತ್ರೀ-ಪುರುಷರ ಪ್ರಮಾಣವನ್ನು ಹೇಳಿರಿ.

ಉತ್ತರ: : ಚೌಕೊನದಲ್ಲಿ ಒಟ್ಟು 18 ವ್ಯಕ್ತಿ ಪ್ರತಿ ಚೌ.ಕಿ.ಮೀ. ಇರುವುದರಿಂದ ಜನಸಂಖ್ಯೆಯ ಸಾಂದ್ರತೆ ದಟ್ಟವಾಗಿದೆ.  ಅಂದರೆ ಈ ಪ್ರದೇಶ ದಟ್ಟ ಜನಸಾಂದ್ರತೆ ಇರುವ ಜನಸಂಖ್ಯೆಯದ್ದಾಗಿದೆ.

        ಈ ಆಕೃತಿಯಲ್ಲಿ ಒಂದು ಚಿನ್ಹೆ =100 ವ್ಯಕ್ತಿಗಳು ಆಗಿದ್ದರೆ ಸ್ತ್ರೀಯರ ಸಂಖ್ಯೆ= 10 X 100 =1000

                                                                ಪುರುಷರ ಸಂಖ್ಯೆ =8 X 100 =800

ಒಂದು ವೇಳೆ ಪುರುಷರ ಸಂಖ್ಯೆ 1000 ಇದ್ದಾಗ ಸ್ತ್ರೀಯರ ಸಂಖ್ಯೆ = 1000/800X1000= 1250 ಆಗುತ್ತದೆ.

ಆದ್ದರಿಂದ ಲಿಂಗ ಗುಣೋತ್ತರ= 1000/800 X 1000 = 1250

ಅಂದರೆ ಸ್ತ್ರೀಯರ ಸಂಖ್ಯೆ ಪುರುಷರ ತುಲನೆಯಲ್ಲಿ ಹೆಚ್ಚ್ಕು ಇದೆ.

ಪ್ರ. 6. ಆಕೃತಿ 6.1 ಆದಲ್ಲಿಯ ಜನಸಂಖ್ಯೆಯ ಸಾಂದ್ರತೆಯ ಬಗೆಗೆ ಹೇಳಿರಿ.


ಜನಸಂಖ್ಯೆಯ ಸಾಂದ್ರತೆ ಅಂದರೆ ಪ್ರತಿ ಚೌ.ಕಿ.ಮೀ. ಕ್ಷೇತ್ರದಲ್ಲಿ ಜನಸಂಖ್ಯೆಯ ವಿತರಣೆಯಾಗಿದೆ.

ಆಕೃತಿಯಲ್ಲಿ ಭಾರತದ ಜನಸಂಖ್ಯೆಯ ಅಸಮಾನ ಸಾಂದ್ರತೆಯ ವಿತರಣೆ ತೋರಿಸಲಾಗಿದೆ. ಉತ್ತರದ ಜಮ್ಮು ಕಾಶ್ಮೀರ, ಪೂರ್ವದ ಅರುಣಾಚಲ ಪ್ರದೇಶ ಹಾಗೂ ಈಶಾನ್ಯದ ರಾಜ್ಯಗಳಲ್ಲಿ ಕಡಿಮೆ ಜನಸಂಖ್ಯೆಯ ಸಾಂದ್ರತೆ ಇರುತ್ತದೆ. ಪಂಜಾಬದಿಂದ ಪಶ್ಚಿಮ ಬಂಗಾಳದ ಉತ್ತರದ ಭಾಗದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಇದ್ದದ್ದು ಕಂಡು ಬರುತ್ತದೆ. ಮಧ್ಯೆ ಪ್ರದೇಶ, ಪಶ್ಚಿಮ ಮತ್ತು ಈಶಾನ್ಯ ರಾಜ್ಯಗಳಲ್ಲಿ ಜನಸಂಖ್ಯೆಯ ಸಾಂದ್ರತೆ ಕಡಿಮೆ ಇರುತ್ತದೆ. ಕೇರಳ, ತಮಿಳನಾಡು ಗಳಂತಹ ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚು ಇರುತ್ತದೆ.  

  

 

7.ಮಾನವನ ವಸತಿ

ಪ್ರ.1. ಸರಿಯಾದ ಪರ್ಯಾಯಗಳ ಮುಂದಿನ ಚೌಕಟ್ಟಿನಲ್ಲಿ ಇಂತಹ ಗುರುತ ಮಾಡಿರಿ.

(ಅ) ವಸತಿಗಳ ಕೇಂದ್ರೀಕರಣವು ಕಳಗಿನ ಮುಖ್ಯ ಸಂಗತಿಗಳೊಂದಿಗೆ ಸಂಬಂಧಿಸಿರುತ್ತದೆ.

(i) ಸಮುದ್ರ ಸಾನ್ನಿಧ್ಯ          (ii) ಬಯಲು ಪ್ರದೇಶ

(iii) ನೀರಿನ ಉಪಲಬ್ಧತೆ             (iv) ಹವಾಮಾನ

(ಆ) ಬ್ರಾಝಿಲದ ಆಗ್ನೆಯ ಭಾಗದಲ್ಲಿ ಮುಖ್ಯವಾಗಿ ಯಾವ ಪ್ರಕಾರದ ವಸತಿ ಕಂಡುಬರುತ್ತದೆ ?

(i) ಕೇಂದ್ರಿತ          (ii) ರೇಷಾಕೃತಿ         (iii) ಚದುರಿ ಹೋದ    (iv) ತಾರಾಕೃತಿ

(ಇ) ಭಾರತದಲ್ಲಿಯ ಚೆದುರಿ ಹೋಗಿರುವ ವಸತಿಗಳ ಪ್ರಕಾರವು ಎಲ್ಲಿ ಕಂಡುಬರುತ್ತದೆ ?

(i) ನದಿ ದಂಡೆಗಳಲ್ಲಿ                   (ii) ಸಾರಿಗೆ ಮಾರ್ಗಗಳ ಬದಿಗೆ

(iii) ಗುಡ್ಡುಗಾಡು ಪ್ರದೇಶದಲ್ಲಿ                         (iv) ಉದ್ದಿಮೆಯ ಕ್ಷೇತ್ರಗಳಲ್ಲಿ

(ಈ) ನರ್ಮದಾ ನದಿಯ ಕೊಳ್ಳದಲ್ಲಿ ಕೇಂದ್ರಿತ ವಸತಿಯು ಕಾಣಸಿಗುತ್ತದೆ.

(i) ವನಾಚ್ಛಾದಿತ                       (ii) ಕೃಷಿಗೆ ಯೋಗ್ಯ ಭೂಮಿ

(iii) ಎತ್ತರ ತಗ್ಗು ಭೂಮಿ                (iv) ಉದ್ದಿಮೆಗಳು

(ಉ) ಬ್ರಾಝಿಲದಲ್ಲಿ ಕಡಿಮೆ ನಗರೀಕರಣ ಇರುವ ರಾಜ್ಯ ಯಾವುದು ?

(i) ಪಾರಾ                  (ii)  ಅಮಾಪಾ         (iii) ಎಸ್ಪಿರಿತೊ ಸಾಂತೊ       (iv) ಪರಾನಾ

ಪ್ರ. 2. ಭೌಗೋಲಿಕ ಕಾರಣಗಳನ್ನು ಬರೆಯಿರಿ.

(ಅ) ನೀರಿನ ಉಪಲಬ್ದತೆಯು ಜನವಸತಿಗೆ ಬೆಂಬಲ ನೀಡುವ ಘಟಕವಾಗಿದೆ.

ಉತ್ತರ:ಮಾನವನ ದೈನಂದಿನ ಜೀವನದಲ್ಲಿ ಕುಡಿಯಲು ಮತ್ತು ಇತರ ಅನೇಕ ಕಾರಣಗಳಿಗಾಗಿ ನೀರು ಅತ್ಯಂತ ಅವಶ್ಯಕವಾಗಿದೆ. ಕೃಷಿ ಹಾಗೂ ಇತರ ಅನೇಕ ವ್ಯವಸಾಯಗಳು ಮಾಡಲು ನೀರು ಅಗತ್ಯವಾಗಿದೆ. ನೀರಿನ ಉಪಲಬ್ಧತೆ ಇಲ್ಲದಿದ್ದರೆ ಮಾನವನ ವಸತಿಯ ಹಾಗೂ ಇತರ ವ್ಯವಸಾಯಗಳ ವಿಕಾಸ ಆಗುವುದಿಲ್ಲ. ಕೃಷಿಗೆ ಪೂರಕ ವಾತಾವರಣ ಇಲ್ಲದೆ ಕೃಷಿ ನಡೆಯುವುದಿಲ್ಲ. ನೀರಿನ ಉಪಲಬ್ಧತೆಯಿಂದಾಗಿ ಕೃಷಿಯ ವಿಕಸವಾಗುತ್ತದೆ, ಇತರ ವ್ಯವಸಾಯಗಳು ಹಾಗೂ ಜನವಸತಿಯ ವಿಕಾಸ ವಾಗುತ್ತದೆ. ಆದ್ದರಿಂದ ನೀರಿನ ಉಪಲಬ್ಧತೆಯೂ ಜನವಸತಿಗೆ ಬೆಂಬಲ ನೀಡುವ ಘಟಕವಾಗಿದೆ ಎನ್ನಲಾಗುತ್ತದೆ.

(ಆ) ಬ್ರಾಝಿಲದಲ್ಲಿ ಬಹಳಷ್ಟು ಜನವಸತಿಯು ಪೂರ್ವದ ಕಡೆಗಿನ ಕಡಲಂಚಿನಲ್ಲಿ ಕಂಡುಬರುತ್ತದೆ.

ಉತ್ತರ: ಆರಂಭದ ಕಾಲದಲ್ಲಿ ಯುರೋಪದಲ್ಲಿಯ ಅನೇಕ ವಸಹಾತುವಾದಿಯರು ಬ್ರಾಝಿಲದ ಕಡಲ ಅಂಚಿನಲ್ಲಿ ಜನವಸತಿಗಳನ್ನು ನಿರ್ಮಾಣ ಮಾಡಿದರು. ಬ್ರಾಈಗ ಈ ವಸಹಾತುಗಳು/ವಸತಿಗಳು ವಿಕಸಿತಗೊಂಡಿದ್ದು ದಟ್ಟ ಸಾಂದ್ರತೆಯುಳ್ಳವು ಆಗಿವೆ. ಕರಾವಳಿ ಭಾಗದಲ್ಲಿಯ ಸಮ ಮತ್ತು ಆರ್ದ್ರ  ಹವಾಮಾನ, ಫಲವತ್ತಾದ ಮಣ್ಣು, ಸಾಕಷ್ಟು ಪ್ರಮಾಣದಲ್ಲಿ ನೀರಿನ ಉಪಲಬ್ಧತೆ ಹಾಗೂ ಸಾಧನಸಂಪತ್ತುಗಳ ಸಂಗ್ರಹ ಹೊಂದಿರುವ ಪ್ರದೇಶವಾಗಿದೆ. ಹಾಗಾಗಿ ಬ್ರಾಝಿಲದ ಪುರ್ವ ದಂಡೆಯ ಪ್ರದೇಶದಲ್ಲಿ ಕೃಷಿ ಹಾಗೂ ಇತರ ವ್ಯವಸಾಯಗಳ ವಿಕಸವಾಗಿದೆ. ಆದ್ದರಿಂದ ಈ ಪ್ರದೇಶದಲ್ಲಿ ಜನವಸತಿ ಹೆಚ್ಚು ಇದ್ದದ್ದು ಕಂಡು ಬರುತ್ತದೆ.

 (ಇ) ಭಾರತದಲ್ಲಿ ನಗರೀಕರಣವು ಹೆಚ್ಚಾಗುತ್ತಿದೆ.       

ಉತ್ತರ:ಕೃಷಿಯಲ್ಲಿ ಪ್ರಗತಿ, ಉಯೋಗಗಳ ವಿಕಾಸ, ಶಿಕ್ಷಣದ ಪ್ರಸಾರ, ಸರಿಗೆಯ ಸೌಲಭ್ಯಗಳು, ಶೈಕ್ಷಣಿಕ ಸೌಕರ್ಯಗಳ ಉಪಲಬ್ಧತೆ ಇತ್ಯಾದಿ ಕರಣಗಳಿಂದ ಭರತದಲ್ಲಿ ಹೊಸ ಹೊಸ ನಗರಗಳು ಉದಯವಾಗುತ್ತಿವೆ. ಈ ಪಟ್ಟಣಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಕೆಲಸ/ನೌಕರಿಗಳು ದೊರೆಯುತ್ತವೆ. ಈ ಪಟ್ಟಣಗಳಲ್ಲಿ ಭಾರತದ ವಿವಿಧ ಭಾಗಗಳಿಂದ ತಮ್ಮ ಉದರನಿರ್ವಹಣೆಯ ಸಲುವಾಗಿ ವಲಸೆ ಬಂದ ಜನರ್ಉ ನೆಲೆಸಿರುತ್ತಾರೆ. ಆದ್ದರಿಂದ ಭರತದಲ್ಲಿ ನಗರೀಕರಣ ಹೆಚ್ಚಾಗುತ್ತಿದೆ.   

 (ಈ) ಈಶಾನ್ಯ ಬ್ರಾಝಿಲದಲ್ಲಿ ವಸತಿಗಳು ವಿರಳವಾಗಿದೆ.

ಉತ್ತರ: ಬ್ರಾಝಿಲದ ಈಶಾನ್ಯ ಭಾಗವು ಉಚ್ಚಭೂಮಿಯ ಆಚೆ ಇರುವ ಪರ್ಜನ್ಯ ಛಾಯೆ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಮಳೆಯ ಪ್ರಮಾಣವು ಕೇವಲ 600ಮಿಮೀ. ಇದೆ. ಈ ಭಾಗಕ್ಕೆ ಬರಗಾಲದ ಚತುಷ್ಕೋನ ಎಂದು ಗುರುತಿಸಲಾಗುತ್ತದೆ. ಅಲ್ಪ ಮಳೆಯಿಂದಾಗಿ ಕೃಷಿಯ ವಿಕಾಸ ಆಗಿರುವುದಿಲ್ಲ. ಹೀಹಾಗಿ ಜನವಸತಿಯು ಚದುರಿದ ಅವಸ್ಥೆಯಲ್ಲಿ ಅಂದರೆ ವಿರಳಾವಸ್ಥೆಯಲ್ಲಿ ಕಂಡು ಬರುತ್ತದೆ. 

 (ಈ) ಉತ್ತರ ಭಾರತದಲ್ಲಿ ಅನ್ಯ ರಾಜ್ಯಗಳಿಗಿಂತ ಚಂದಿಗಡ ಮತ್ತು ದಿಲ್ಲಿಯಲ್ಲಿ ನಗರೀಕರಣದ ಪ್ರಮಾಣವು ಹೆಚ್ಚು ಇದೆ.

ಉತ್ತರ: ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಹಿಮಾಲಯ ಪರ್ವತ ಸಾಲುಗಳು ಇರುವುದರಿಂದ ಇಲ್ಲಿ ಕೃಷಿ ಹಾಗೂ ಇತರ ಉದ್ಯೋಗಗಳ ವಿಕಾಸ ಸಾಕಷ್ಟು ಪ್ರಮಾಣದಲ್ಲಿ ಆಗಿರುವುದಿಲ್ಲ. ಆದ್ದರಿಂದ ಉತ್ತರ ಭಾರತದಲ್ಲಿ ನಗರೀಕರಣದ ವೇಗ ಕಡಿಮೆ ಇದೆ. ಇದಕ್ಕೆ ವಿರುದ್ಧವಾಗಿ ದಿಲ್ಲಿ ಹಾಗೂ ಚಂಡೀಗಡ ಪಟ್ಟಣಗಳು ಸಪಾಟಾದ ಪ್ರದೇಶದಲ್ಲಿ ಇವೆ. ದಿಲ್ಲಿ ಇದು ಭಾರತದ ರಾಜಧಾನಿಯಾಗಿದ್ದು ಚಂಡೀಗಡವು ಪಂಜಾಬ ಮತ್ತು ಹರಿಯಾಣಾ ರಾಜ್ಯಗಳ ರಾಜಧಾನಿ ಪಟ್ಟಣವಿದೆ. ಈ ಎರಡೂ ಪಟ್ಟಣಗಳಲ್ಲಿ ಅನೇಕ ಸರಕಾರಿ ಕಾರ್ಯಾಲಯಗಳು, ವಿವಿಧ ಉದ್ಯೋಗಗಳು, ಬ್ಯಾಂಕುಗಳು, ಕರ್ತಖಾನೆಗಳು, ನಾಗರಿ ಸೌಕರ್ಯಗಳು ಉಪಲಬ್ಧ ಇರುತ್ತವೆ. ಆದ್ದರಿಂದ ಉತ್ತರ ಭಾರತದ ಇತರ ರಾಜ್ಯಗಳಿಗಿಂತ ದಿಲ್ಲಿ ಮತ್ತು ಚಂಡೀಗಡ ದಲ್ಲಿ ನಗರೀಕರಣದ ಪ್ರಮಾಣ ಹೆಚ್ಚು ಇದೆ.  ಪ್ರ.3. ಸ್ವಲ್ಪದರಲ್ಲಿ ಉತ್ತರಿಸಿರಿ.

(ಅ) ಭಾರತ ಮತ್ತು ಬ್ರಾಝಿಲ ಈ ದೇಶಗಳಲ್ಲಿ ನಗರೀಕರಣದ ತುಲನಾತ್ಮಕ ಅಭ್ಯಾಸ ಮಾಡಿರಿ.

ಉತ್ತರ: ಭಾರತ ಹಾಗೂ ಬ್ರಾಝಿಲ್ ದೇಶಗಳಲ್ಲಿ ಬ್ರಾಝಿಲದಲ್ಲಿ ಹೆಚ್ಚು ನಗರೀಕರಣವಾಗಿದೆ ಅದರ ತುಲನೆಯಲ್ಲಿ ಭಾರತದಲ್ಲಿ ಕಡಿಮೆ ನಗರಿಕರಣವಾಗಿದ್ದು ಕಂಡು ಬರುತ್ತದೆ. ಬ್ರಾಝಿಲದ ಸುಮಾರು 86% ಜನಸಂಖ್ಯೆಯು ಪಟ್ಟಣಗಳ ಭಾಗಗಳಲ್ಲಿ ಇರುತ್ತದೆ. ಭಾರತದಲ್ಲಿ ಈ ಪ್ರಮಾಣ 62% ಇದೆ. ಭಾರತದಲ್ಲಿ ಉತ್ತರ ಭಾಗಕ್ಕಿಂತ ದಕ್ಷಿಣ ಭಾಗದಲ್ಲಿ ನಗರೀಕರಣ ಹೆಚ್ಚಾಗಿದ್ದು ಕಂಡು ಬರುತ್ತದೆ. ಗೋವಾ, ಮಹಾರಾಷ್ಟ್ರ, ತಮಿಳನಾಡು, ಗುಜರಾತ ಮತ್ತು ಕೇರಳ ಈ ರಾಜ್ಯಗಳಲ್ಲಿ ನಗರಿಕರಣವೂ ಹೆಚ್ಚು ಇದೆ. ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ್, ಬಿಹಾರ ಮತ್ತು ರಾಜಸ್ಥಾನ ಈ ರಾಜ್ಯಗಳಲ್ಲಿ ನಗರೀಕರಣ ಕಡಿಮೆ ಆಗಿದ್ದುದು ಕಂಡು ಬರುತ್ತದೆ.ಬ್ರಾಝಿಲದ ಮುಖ್ಯವಾಗಿ ದಕ್ಷಿಣ ಮತ್ತು ಆಗ್ನೇಯ ಭಾಗಗಳಲ್ಲಿ ಸಾವೋ ಪಾವಲೊ ಎಂಬ ಮಹಾನಗರದಲ್ಲಿ ಔದ್ಯೋಗಿಕ ಪ್ರದೇಶವಿರುವುದರಿಂದ ನಗರೀಕರಣ ಹೆಚ್ಚಳ ತೀವ್ರವಾಗಿದೆ.

(ಆ) ಗಂಗಾ ನದಿಯ ಕೊಳ್ಳ ಮತ್ತು ಅಮೆಝಾನ್ ನದಿಯ ಕೊಳ್ಳ ಇವುಗಳಲ್ಲಿನ ಮಾನವನ ವಸತಿಗಳ ಕುರಿತಾಗಿ ಇರುವ ವ್ಯತ್ಯಾಸವನ್ನು ಸ್ಪಷ್ಟಿಕರಿಸಿರಿ.

ಉತ್ತರ: ಗಂಗ ನದಿಯ ಕೊಳ್ಳದಲ್ಲಿ ಸೌಮ್ಯ ಹವಾಮಾನ ಇದೆ. ಗಂಗನದಿ ಮತ್ತು ಅದರ ಉಪನದಿಗಳು ತಂದ ಮಣ್ಣು ನದಿಯ ಕೊಳ್ಳದ ಪ್ರದೇಶವನ್ನು ಫಲವತ್ತಾಗಿ ಮಾಡಿದೆ. ಹಾಗಾಗಿ ಇಲ್ಲಿಯ ಕೃಷಿಯಲ್ಲಿ ವಿಕಸವಾಗಿದೆ. ಗಂಗಾನದಿಯ ಕೊಳ್ಳದಲ್ಲಿ ಸರಿಗೆಯ ಸೌಲಭ್ಯಗಳು ದೊಡ್ಡ ಪ್ರಮಾಣದಲ್ಲಿ ಉಪಲಬ್ಧವಿದೆ. ಆದ್ದರಿಂದ ಗಂಗಾನದಿಯ ಕೊಳ್ಳದಲ್ಲಿ ದಟ್ಟ ಮತ್ತು ಕೇಂದ್ರಿತ ಸ್ವರೂಪದ ಜನವಸತಿ ಕಂಡು ಬರುತ್ತದೆ.

        ಅಮೆಝಾನ್ ನದಿಯ ಕೊಳ್ಳದಲ್ಲಿ ಪ್ರತಿಕೂಲ ಹವಾಮಾನ ಇದೆ. ಅಮೆಝನ್ ನದಿ ಕೊಳ್ಳದಲ್ಲಿ ದಟ್ಟ ಅರಣ್ಯಗಳಿಂದ ಅಲ್ಲಿಯ ಪ್ರದೇಶ ದುರ್ಗಮವಾಗಿದೆ. ಅಲ್ಲಿಯ ನೈಸರ್ಗಿಕ ಸಾಧನಸಂಪತ್ತುಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಅಮೆಝಾನ್ ನದಿಯ ಕೊಳ್ಳದಲ್ಲಿ ಸಾರಿಗೆಯ ಸೌಕರ್ಯಗಳು  ಉಪಲಬ್ಧವಿರುವುದಿಲ್ಲ ಆದ್ದರಿಂದ ಇಲ್ಲಿ ವಿರಳ ಹಾಗೂ ಚದುರಿದ ಸ್ವರೂಪದ ಜನವಸತಿ ಕಂಡು ಬರುತ್ತದೆ.

(ಇ) ಮಾನವನ ವಸತಿಗಳ ಬೆಳವಣಿಗೆ ವಿಶಿಷ್ಟ ಸ್ಥಾನಗಳಲ್ಲಿಯೇ ಆಗಿದ್ದುದು ಏಕೆ ಕಂಡುಬರುತ್ತದೆ ?

ಉತ್ತರ:ಮಾನವನ ವಸತಿಗಾಗಿ ಸಾಕಷ್ಟು ನೀರಿನ ಪೂರೈಕೆ, ಸಮೃಧ್ಧವಾಗಿರುವ ಸಾಧನ ಸಂಪತ್ತು, ಕೃಷಿಗೆ ಪೂರಕ ಫಲವತ್ತಾದ ಭೂಮಿ ಇತ್ಯಾದಿಗಳ ಅವಶ್ಯಕತೆ ಇರುತ್ತದೆ. ಹಾಗಾಗಿ ಇವೆಲ್ಲ ಘಟಕಗಳು ಇರುವ ವಿಶಿಷ್ಟ ಸ್ಥಾನದಲ್ಲಿಯೇ ಮಾನವನ ವಸತಿ ಬೆಳವಣಿಗೆ ಆಗಿದ್ದು ಕಂಡು ಬರುತ್ತದೆ.  

 

8. ಅರ್ಥವ್ಯವಸ್ಥೆ ಮತ್ತು ವ್ಯವಸಾಯಗಳು

ಪ್ರಶ್ನೆ 1 ಸರಿಯಾದ ಪರ್ಯಾಯ ಆರಿಸಿ ವಾಕ್ಯ ಬರೆಯಿರಿ.

(ಅ) ಭಾರತದ ತಲಾ ಉತ್ಪನ್ನವು ಬ್ರಾಝಿಲಗಿಂತ ಕಡಿಮೆ ಇದೆ, ಏಕೆಂದರೆ.............

(i) ಕಡಿಮೆ ರಾಷ್ಟ್ರೀಯ ಉತ್ಪನ್ನವಿದೆ.            (ii) ಪ್ರಚಂಡ ಜನಸಂಖ್ಯೆ ಇದೆ

(iii) ದೊಡ್ಡ ಕುಟುಂಬಗಳಿವೆ                     (iv) ಆಹಾರಧಾನ್ಯ ಉತ್ಪಾದನೆಗಳ ಕೊರತೆ ಇದೆ.

(ಆ) ಬ್ರಾಝಿಲ್ ದೇಶದ ಅರ್ಥವ್ಯವಸ್ಥೆಯು ಪ್ರಾಮುಖ್ಯವಾಗಿ ಅಲ್ಲಿಯ ........ ವ್ಯವಸಾಯಗಳ ಮೇಲೆ ಅವಲಂಬಿಸಿದೆ.

(i) ಪ್ರಾಥಮಿಕ          (ii) ತೃತೀಯ           (iii) ದ್ವಿತೀಯ           (iv) ಚತುರ್ಥ

(ಇ) ಭಾರತ ಮತ್ತು ಬ್ರಾಝಿಲ್ ಇವೆರಡೂ ದೇಶಗಳು.............. ಆಗಿವೆ.

(i) ಅವಿಕಸಿತ           (ii) ವಿಕಸನಶೀಲ                   (iii)ವಿಕಸಿತ     (iv) ಅತಿವಿಕಸಿತ

ಪ್ರ. 2. ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ.

(ಅ) ಬ್ರಾಝಿಲದ ಪಶ್ಚಿಮಭಾಗದಲ್ಲಿ ಗಣಿಗಾರಿಕೆಯ ವಿಕಾಸ ಅಲ್ಪ ಪ್ರಮಾಣದಲ್ಲಿ ಆಗಿದೆ.

ಉತ್ತರ: ಬ್ರಾಝಿಲದ ಪಶ್ಚಿಮಭಾಗದಲ್ಲಿ ಅಮೆಝಾನ್ ನದಿಯ ಕೊಳ್ಳಗಳಿವೆ. ದುರ್ಗಮ ಕ್ಷೇತ್ರ, ಘನನಿಬಿಡ ಅರಣ್ಯಗಳು, ಸುಪ್ತ ಖನಿಜ ನಿಕ್ಷೇಪಗಳ ಅಜ್ಞಾನ ಇತ್ಯಾದಿ ಪ್ರತಿಕೂಲ ಘಟಕಗಳಿಂದಾಗಿ ದೇಶದಲ್ಲಿಯ ಅಂತರ್ಗತ ಭಾಗದಲ್ಲಿಯ ಗಣಿಗಾರಿಕೆ ವ್ಯವಸಾಯಗಳ ಮೇಲೆ ಮರ್ಯಾದೆಗಳು ಬಂದಿವೆ. ಈ ಪ್ರದೇಶಗಳಲ್ಲಿ ಜನಸಂಖ್ಯೆ ವಿರಳವಿರುವುದರಿಂದ ಖನಿಜಗಳ ಬೇಡಿಕೆಯು ಅಷ್ಟಾಗಿ ಇರುವುದಿಲ್ಲ. ಈ ಪ್ರದೇಶಗಳಲ್ಲಿ ಸರಿಗೆಯ ಸಾಧನೆಗಳು ಅಷ್ಟೊಂದು ಪ್ರಮಾಣದಲ್ಲೂ ಉಪಲಬ್ಧವಿರುವುದಿಲ್ಲ. ಇವೆಲ್ಲ ಕರಣಗಳಿಂದಾಗಿ ಬ್ರಾಝಿಲದ ಪಶ್ಚಿಮಭಾಗದಲ್ಲಿ ಗಣಿಗಾರಿಕೆಯ ವಿಕಾಸ ಅಲ್ಪ ಪ್ರಮಾಣದಲ್ಲಿ ಆಗಿದೆ.

(ಆ) ಭಾರತ ಮತ್ತು ಬ್ರಾಝಿಲ್ ಈ ದೇಶಗಳಲ್ಲಿ ನಡೆಯುವ ಮೀನುಗಾರಿಕೆ ವ್ಯವನಾಯದಲ್ಲಿಯ ಸಾಮ್ಯತೆ ಮತ್ತು ವ್ಯತ್ಯಾಸಗಳು ಯಾವುವು ?

ಉತ್ತರ: ಭಾರತ ಮತ್ತು ಬ್ರಾಝಿಲ್ ಈ ದೇಶಗಳಲ್ಲಿ ನಡೆಯುವ ಮೀನುಗಾರಿಕೆ ವ್ಯವನಾಯದಲ್ಲಿಯ ಸಾಮ್ಯತೆ: ಭಾರತ ಮತ್ತು ಬ್ರಾಝಿಲ್ ಈ ದೇಶಗಳಲ್ಲಿಯ ಕಡಲು ತೀರ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಯುತ್ತದೆ. ಎರಡೂ ದೇಶಗಳಲ್ಲಿ ಉಪ್ಪು ನೀರಿನಲ್ಲಿಯೂ ಮೀನುಗಾರಿಕೆ ಮಾಡಲಾಗುತ್ತದೆ.

ಭಾರತ ಮತ್ತು ಬ್ರಾಝಿಲ್ ಈ ದೇಶಗಳಲ್ಲಿ ನಡೆಯುವ ಮೀನುಗಾರಿಕೆ ವ್ಯವನಾಯದಲ್ಲಿಯ ವ್ಯತ್ಯಾಸಗಳು : ಭಾರತದಲ್ಲಿ ನದಿಗಳು, ಕಾಲುವೆ, ಜಲಾಶಯ, ಕೆರೆ ಮುಂತಾದವುಗಳಲ್ಲಿ ಸಿಹಿ ನೀರಿನಲ್ಲಿಯ ಮೀನುಗಾರಿಕೆ ನಡೆಯುತ್ತದೆ. ಆದರೆ ಬ್ರಾಝಿಲದಲ್ಲಿ ಪ್ರಕೃತಿಕ ರಚನೆ, ಘನನಿಬಿಡ ಅರಣ್ಯಗಳು, ನಿಡಿಯ ನೀರಿನ ವೇಗ ಹೆಚ್ಚು ಇರುವುದರಿಂದ ಸಿಹಿ ನೀರಿನ ಮಿನ್ನುಗಾರಿಕೆ ನಡೆಯುವುದಿಲ್ಲ. ಬ್ರಾಝಿಲ ಹತ್ತಿರ ಉಷ್ಣ ಹಾಗೂ ಸಾಗರಿ ಪ್ರವಾಹಗಳು ಸಂಗಮವಾಗುವುದರಿಂದ ಅಲ್ಲಿ ಪ್ಲವಕ ಬೆಳೆಯುತ್ತವೆ. ಈ ಪ್ಲವಕ ಮೀನುಗಳ ಆಹಾರವಾಗಿದೆ. ಅದನ್ನು ತಿನ್ನಲೆಂದು ತಿರಕ್ಕೆ ಬಂದಾಗ ಅವುಗಳನ್ನು ಹಿಡಿಯಲಾಗುತ್ತದೆ. 

ಪ್ರ. 3. ಕಾರಣಗಳನ್ನು ಕೊಡಿರಿ.

(ಅ) ಬ್ರಾಝಿಲದಲ್ಲಿಯ ತಲಾ ಭೂಮಿಧಾರಣೆಯು ಭಾರತದ ಹೋಲಿಕೆಯಲ್ಲಿ ಹೆಚ್ಚಿಗಿದೆ.

ಉತ್ತರ: ಭಾರತದ ಭೂಭಾಗವು ಜಗತ್ತಿನ ಒಟ್ಟು ಕ್ಷೇತ್ರದಲ್ಲಿ ಬರೀ 2.41% ಇದ್ದು ಜನಸಂಖ್ಯೆ ಜಗತ್ತಿನ ತುಲನೆಯಲ್ಲಿ 17.5% ಇದೆ. ಬ್ರಾಝಿಲದ ಭೂಭಾಗ ಜಗತ್ತಿನ ತುಲನೆಯಲ್ಲಿ 5.6% ಇದ್ದು ಜನಸಂಖ್ಯೆ ಕೇವಲ 2.78% ಇದೆ. 2011 ರ ಜನಗಣನೆಯನುಸಾರವಾಗಿ ಭಾರತದ ಜನಸಂಖ್ಯೆಯ ಸಾಂದ್ರತೆ 382 ಚೌಕಿಮೀ. ಪ್ರತಿ ವ್ಯಕ್ತಿ ಇದ್ದು 2010 ರ ಬ್ರಾಝಿಲದ ಜನಗಣನೆಯಂತೆ ಬ್ರಾಝಿಲದ ಜನಸಂಖ್ಯೆಯ ಸಾಂದ್ರತೆ 23 ಚೌಕಿಮೀ. ಪ್ರತಿ ವ್ಯಕ್ತಿ ಇದೆ. ಇದರ ಅರ್ಥ ಭಾರತದ ಜನಸಂಖ್ಯೆ ಸಾಂದ್ರತೆ ಬ್ರಾಝಿಲದ ಜನಸಂಖ್ಯೆಯ ಸಾಂದ್ರತೆಗಿಂತ ಹೆಚ್ಚು ಇರುವುದರಿಂದ ಭಾರತದಲ್ಲಿ ಪ್ರತಿ ವ್ಯಕ್ತಿಗೆ ದೊರೆಯುವ ಭೂಭಾಗ ಬ್ರಾಝಿಲದ ತುಲನೆಯಲ್ಲಿ ಬಹಳಷ್ಟು ಕಡಿಮೆ ಇದೆ. ಅಂದರೆ ) ಬ್ರಾಝಿಲದಲ್ಲಿಯ ತಲಾ ಭೂಮಿಧಾರಣೆಯು ಭಾರತದ ಹೋಲಿಕೆಯಲ್ಲಿ ಹೆಚ್ಚಿಗಿದೆ.

 (ಆ) ಭಾರತ ಮತ್ತು ಬ್ರಾಝಿಲ್ ಇವರಡೂ ದೇಶಗಳಲ್ಲಿ ಮಿಶ್ರ ಅರ್ಥವ್ಯವಸ್ಥೆ ಇದೆ.

ಉತ್ತರ: ಮಿಶ್ರ ಅರ್ಥವ್ಯವಸ್ಥೆಯಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಕ್ಷೇತ್ರಗಳೂ ಸಮಾವೇಶವಾಗುತ್ತವೆ. ಭಾರತ ಮತ್ತು ಬ್ರಾಝಿಲದಲ್ಲಿಯ ರೈಲು, ಬ್ಯಾಂಕುಗಳ ವ್ಯವಸಾಯ, ವಿದ್ಯುತನಿರ್ಮಿತಿ, ಆರೋಗ್ಯ ಕಬ್ಬಿಣ ಮತ್ತು ಉಕ್ಕು ಉದ್ಯೋಗ ಇತ್ಯಾದಿ ಕ್ಷೇತ್ರಗಳಲ್ಲಿಯ ವ್ಯವಸಾಯಗಳು ಖಾಸಗಿ ಹಾಗೂ ಸಾರ್ವಜನಿಕ ವ್ಯವಸ್ತಾಪನೆಯದ್ದು ಇದ್ದು ಅವುಗಳ ಮೇಲೆ ಶಾಸನದ ನಿಯಂತ್ರಣೆ ಇರುತ್ತದೆ. ಹೀಗೆ ಎರಡೂ ದೇಶಗಳಲ್ಲಿಯ ಹಲವಾರು ವ್ಯವಸಾಯಗಳು ಖಾಸಗಿ, ಸಾರ್ವಜನಿಕ ಸ್ವರೂಪದ ಹಾಗೂ ಸರಕಾರದ ಆಸ್ಥಾಪನೆಯಲ್ಲಿ ಇರುವುದರಿಂದ ಈ ದೇಶಗಳಲ್ಲಿ ಮಿಶ್ರಅರ್ಥವ್ಯವಸ್ಥೆ  ಇರುತ್ತದೆ.  

ಪ್ರ.4. ಕೆಳಗಿನ ಅಲೇಖವನ್ನು ಅಭ್ಯಾಸಿಸಿ ಅದರ ವಿಶ್ಲೇಷಣೆಯನ್ನು ಸ್ವಲ್ಪದರಲ್ಲಿ ಬರೆಯಿರಿ. 

ಉತ್ತರ: ಭಾರತದಲ್ಲಿ ಸುಮಾರು 48% ಜನಸಂಖ್ಯೆ ಪ್ರಾಥಮಿಕ ಕ್ಷೇತ್ರದಲ್ಲಿ, 23% ಜನಸಂಖ್ಯೆ ದ್ವಿತೀಯ ಕ್ಷೇತ್ರದಲ್ಲಿ ಹಾಗೂ 26% ಜನಸಂಖ್ಯೆ ತೃತೀಯ ಕ್ಷೇತ್ರದಲ್ಲಿ ತೊಡಗಿದ್ದು ಕಂಡು ಬರುತ್ತದೆ.

        ಬ್ರಾಝಿಲದಲ್ಲಿಯ ಸುಮಾರು 10% ಜನಸಂಖ್ಯೆ ಪ್ರಾಥಮಿಕ, 19% ಜನಸಂಖ್ಯೆ ದ್ವಿತೀಯ ಹಾಗೂ 71% ಜನಸಂಖ್ಯೆ ತೃತೀಯ ಕ್ಷೇತ್ರದಲ್ಲಿ ತೊಡಗಿರುವುದು ಕಂಡು ಬರುತ್ತದೆ.

        ಒಟ್ಟು ರಾಷ್ಟ್ರೀಯ ಉತ್ಪಾದನೆಯಲ್ಲಿ ಭಾರತ ಪ್ರಾಥಮಿಕ ಕ್ಷೇತ್ರದಲ್ಲಿ 17%, ದ್ವಿತೀಯ ಕ್ಷೇತ್ರದಲ್ಲಿ 26% ಹಾಗೂ ತೃತೀಯ ಕ್ಷೇತ್ರದಲ್ಲಿ 57% ರಷ್ಟು ಯೋಗದಾನ ನೀಡಿದ್ದು ಕಂಡು ಬರುತ್ತದೆ.

        ಬ್ರಾಝಿಲ್ ದೇಶ ಒಟ್ಟು ರಾಷ್ಟ್ರೀಯ ಉತ್ಪಾದನೆಯಲ್ಲಿ ಪ್ರಾಥಮಿಕ  ಕ್ಷೇತ್ರದಲ್ಲಿ 5.5%, ದ್ವಿತೀಯ ಕ್ಷೇತ್ರದಲ್ಲಿ 27% ಹಾಗೂ ತೃತೀಯ ಕ್ಷೇತ್ರದಲ್ಲಿ 67% ಯೋಗದಾನ ನೀಡಿದೆ ಎಂದು ಈ ಅಲೇಖದ ಮೇಲಿಂದ ತಿಳಿದು ಬರುತ್ತದೆ.

 

   

 

9. ಪ್ರವಾಸ, ಸಾರಿಗೆ ಮತ್ತು ಸಂದೇಶವಹನ

ಪ್ರ. 1. ತಪ್ಪೋ ಅಥವಾ ಸರಿಯೋ ಎಂಬುದನ್ನು ಕಾರಣದೊಂದಿಗೆ ಹೇಳಿರಿ.

(ಅ) ಭಾರತದಲ್ಲಿಯ ನೈಸರ್ಗಿಕ ವೈವಿಧ್ಯತೆಗಳಿಂದಾಗಿ ಪ್ರವಾಸದ ವ್ಯವಸಾಯದ ಭವಿಷ್ಯವು ಉಜ್ವಲವಾಗಿದೆ.

ಉತ್ತರ: ಸರಿ, ಭಾರತದ ನೈಸರ್ಗಿಕ ವೈವಿಧ್ಯತೆಗಳಿಂದಾಗಿ ಭಾರತದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ ಆದ್ದರಿಂದ ಪರ್ಯಟನ ವ್ಯವಸಾಯದ ಜೊತೆಗೆ ಪರ್ಯಟನಕ್ಕೆ ಸಂಬಧಿಸಿದ ಇತರ ಅನೇಕ ವ್ಯವಸಾಯಗಳಿಗೆ ಚಾಲನೆ ದೊರೆಯುತ್ತದೆ. ಆದ್ದರಿಂದ ಭಾರತದಲ್ಲಿಯ ನೈಸರ್ಗಿಕ ವೈವಿಧ್ಯತೆಗಳಿಂದಾಗಿ ಪ್ರವಾಸದ ವ್ಯವಸಾಯದ ಭವಿಷ್ಯವು ಉಜ್ವಲವಾಗಿದೆ.

(ಆ) ಪ್ರವಾಸದ ಅದೃಶ್ಯ ಸ್ವರೂಪದ ವ್ಯಾಪಾರ ಇದೆ.

ಉತ್ತರ: ಸರಿ, ಪರ್ಯಟನೆ ಇದು ತೃತೀಯ ಸ್ವರೂಪದ ವ್ಯವಸಾಯವಾಗಿದೆ. ಇದರಲ್ಲಿ ಪ್ರತ್ಯಕ್ಷ ವಸ್ತುಗಳ ಕೊಂಡುಕೊಳ್ಳುವಿಕೆ ಆಗದೆ ಅದೃಶ್ಯ ಸ್ವರೂಪದ ಸಾರಿಗೆಯ ಸೇವೆಯ ಖರೆದಿ ಮಾಡಲಾಗುತ್ತದೆ.

(ಇ) ಯಾವುದೇ ದೇಶದ ವಿಕಾಸದ ನಿರ್ದೇಶಾಂಕವು ಆ ದೇಶದೊಳಗಿನ ಸಾರಿಗೆ ಮಾರ್ಗಗಳ ವಿಕಾಸ ಆಗಿರುತ್ತದೆ.

ಉತ್ತರ: ಸರಿ, ದೇಶದೊಳಗಿನ ಸಾರಿಗೆ ಮಾರ್ಗಗಳ ವಿಕಾಸವಾಗಿದ್ದರೆ ದೇಶಡ್ಆ ವಿಕಾಸ ಹೆಚ್ಚು ಆಗುತ್ತದೆ. ಆದರೆ ಸಾರಿಗೆಯ ಮಾರ್ಗಗಳು ಕಡಿಮೆ ಇದ್ದರೆ ದೇಶದ ವಿಕಸವು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಆದ್ದರಿಂದ ಯಾವುದೇ ದೇಶದ ವಿಕಾಸದ ನಿರ್ದೇಶಾಂಕ ಆ ದೇಶದ ಸಾರಿಗೆಯ ವಿಕಾಸದ ಮೇಲೆ ಅವಲಂಬಿಸಿರುತ್ತದೆ.  

(ಈ) ಬ್ರಾಝಿಲ್ ದೇಶದ ವೇಳೆಯು ಭಾರತೀಯ ವೇಳೆಗಿಂತ ಮುಂದೆ ಇದೆ.

ಉತ್ತರ: ತಪ್ಪು, ಬ್ರಾಝಿಲ್ ದೇಶದ ವೇಳೆಯು ಭಾರತೀಯ ವೇಳೆಗಿಂತ 8 ತಾಸು 30 ಮಿನೀಟುಗಳು ಹಿಂದೆ ಇರುತ್ತದೆ. ಭಾರತವು ಆಂತರರಾಷ್ಟ್ರೀಯ ವಾರರೇಷೆಯ ಪೂರ್ವಕ್ಕೆ ಇದ್ದು ಭಾರತದ ಪ್ರಮಾಣ ವೇಳೆ ಗ್ರೀನಿಚ್ ವೇಳೆಗಿಂತ 5 ಗಂಟೆ 30 ಮಿನೀಟುಗಳು ಮುಂದೆ ಇದೆ. ಆದೇರೀತಿಯಾಗಿ ಬ್ರಾಝಿಲ್ ಆಂತರರಾಷ್ಟ್ರೀಯ ವಾರರೇಷೆಯ ಪಶ್ಚಿಮಕ್ಕೆ ಇದ್ದು ಬ್ರಾಝಿಲದ ಪ್ರಮಾಣ ವೇಳೆ ಗ್ರೀನಿಚ್ ವೇಳೆಗಿಂತ 3 ಗಂಟೆ ಹಿಂದೆ ಇರುತ್ತದೆ. 

(ಉ) ಭಾರತದಲ್ಲಿ ಪರ್ಯಟನೆ ಪ್ರವಾಸ ವಿಕಾಸವು ಹೊಸದಾಗಿಯೇ ಆರಂಭಗೊಂಡಿದೆ.

ಉತ್ತರ:ಸರಿ, ಪ್ರಾಚೀನಕಾಲದಿಂದಲೂ ಪರ್ಯಟನೆ ವ್ಯವಸಾಯ ನಡೆಯುತ್ತಿದರೂ ಆಧುನಿಕ ಪರ್ಯಟನೆ ವ್ಯವಸಾಯ ಹೊಸ ದೃಷ್ಟಿಕೋನದಿಂದ ಮಾಡಲಾಗುತ್ತದೆ. ಸದ್ಯ ಸ್ಥಿತಿಯಲ್ಲಿ ವಿವಿಧ ಪರ್ಯಟನೆ, ಪ್ರವಾಸಿಗರಿಗೆ ಕೊಡಲಾಗುವ ವಿವಿಧ ಸೌಕರ್ಯಗಳು ಇತ್ಯಾದಿಗಳಿಂದಾಗಿ ಭಾರತದಲ್ಲಿ ಪರ್ಯಟನೆ ವ್ಯವಸಾಯ ಹೆಚ್ಚಾಗುತ್ತಿದೆ.  

ಪ್ರ. 2. ಸ್ವಲ್ಪದರಲ್ಲಿ ಉತ್ತರ ಬರೆಯಿರಿ,

(ಅ) ಬ್ರಾಝಿಲದಲ್ಲಿಯ ಯಾವ ಘಟಕಗಳು ಪರ್ಯಟಕರನ್ನು ಹೆಚ್ಚಾಗಿ /ಅಧಿಕವಾಗಿ ಆಕರ್ಷಿಸುತ್ತದೆ ?

ಉತ್ತರ: ಬ್ರಾಝಿಲ್ ದೇಶದಲ್ಲಿ ನೈಸರ್ಗಿಕ ವಿವಿಧತೆ ಇದ್ದು ಬಿಳಿ ಮರಳಿನ ನದಿಗಳು, ಆಕರ್ಷಕ ಹಾಗೂ ಸ್ವಚ್ಛವಾದ ಕಡಲ ತೀರ, ನಿಸರ್ಗರಮ್ಯವಾದಂತಹ ಬೆಟ್ಟಗಳು, ವಿವಿಧ ಉದ್ಯಾನಗಳು, ದಟ್ಟವಾದ ಅರಣ್ಯಗಳು, ವಿವಿಧ ಪ್ರಕಾರದ ಪಶು-ಪಕ್ಷಿಗಳು ಕಂಡು ಬರುತ್ತವೆ. ಇವೆಲ್ಲ ಪರ್ಯವರಣದ ಘಟಕಗಳು ಪರ್ಯವರಣ ಪ್ರೇಮಿಗಳಿಗೆ ಆಕರ್ಷಿಸುತ್ತವೆ. ಬ್ರಾಝಿಲದ ರಾಜಧಾನಿ ಬ್ರಾಝೀಲಿಯಾ, ರಿಓ ದಿ ಜನೇರಿಓ ಮತ್ತು ಸಾವೊ ಪಾವಲೋ ಮುಂತಾದ ನಗರಗಳು ಸಹ ಹೆಚ್ಚಿನ ಪರ್ಯಟಕರಿಗೆ ಆಕರ್ಷಿಸುತ್ತವೆ.

(ಅ) ಬ್ರಾಝಿಲದ ಅಂತರ್ಗತ ಭಾಗದಲ್ಲಿ ರೈಲುಮಾರ್ಗಗಳ ವಿಕಾಸದಲ್ಲಿ ಯಾವ ಅಡಚಣೆಗಳು ಇವೆ ?

ಉತ್ತರ: ಬ್ರಾಝಿಲದಲ್ಲಿ ಸಾಮಾನ್ಯವಾಗಿ ಎಲ್ಲ ಕಡೆಗೆ ರಸ್ತೆ ಸಾರಿಗೆ ಕಂಡು ಬರುತ್ತದೆ. ದೇಶದೊಳಗಿನ ಸಾರಿಗೆ ಮಾರ್ಗಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ರಸ್ತೆ ಮಾರ್ಗಗಳದ್ದು ಇದೆ. ಪೃವದಲ್ಲಿ ನಿಬಿಡವಾದ ರಸ್ತೆಗಳು, ಉತ್ತರಕ್ಕೆ ಅಮೆಝಾನ್ ನದಿಕೊಳ್ಳದಲ್ಲಿಯ ವನಾಚ್ಛಾದಿತ ಪ್ರದೇಶ ಮತ್ತು ಜವುಳು ಭೂಮಿ ಇವುಗಳಿಂದ ಈ ಪ್ರದೇಶದಲ್ಲಿ ರಸ್ತೆಗಳ ವಿಕಾಸ ಹಾಗೂ ರೈಲು ಮಾರ್ಗಗಳ ವಿಕಾಸ ಮರ್ಯಾದಿತವಾಗಿದೆ. ಅಮೆಝಾನ್ ನದಿ ಕೊಳ್ಳದಲ್ಲಿ ವ್ಯಾಪಾರಿ ತತ್ವದ ಮೇಲೆ ಜಲಸಾರಿಗೆ ಮಾಡಲಾಗುತ್ತದೆ. ರೈಲು ಸರಿಗೆಯು ಅಗ್ಗವಾಗಿದ್ದರೂ ಅದರ ಉಪಯೋಗ ಕೆಲವೇ ನಗರಗಳಲ್ಲಿ ಆಗುತ್ತದೆ. ಬ್ರಾಝಿಲದಲ್ಲಿ ರೈಲು ಮಾರ್ಗಗಳ ವಿಕಾಸ ಹೆಚ್ಚಾಗಿ ಆಗಿಲ್ಲ.  

(ಇ) ಯಾವ ಸಾಧನಗಳಿಂದ ಸಂದೇಶ ವಹನವು ಬಹಳೇ ವೇಗವಾಗಿ ಆಗಿವೆ?

ಉತ್ತರ: ಸಂದೇಶ ವಹನದಲ್ಲಿ ದೂರಧ್ವನಿ, ಭ್ರಮಣಧ್ವನಿ(ಮೊಬೈಲ್ ಫೋನ್), ಆಕಾಶವಾಣಿ ಮತ್ತು ಇಂಟರ್ನೆಟ್ ಇವುಗಳ ಸಮಾವೇಶವಾಗುತ್ತದೆ. ಬ್ರಾಝಿಲ್ ಮತ್ತು ಭಾರತ ಇವೆರಡೂ ದೇಶಗಳ ತುಲನೆಯಲ್ಲಿ ಬ್ರಾಝಿಲದಲ್ಲಿ ದೂರಸಂಚಾರ ಸೇವೆ ವಿಕಸಿತ ಹೊಂದಿದ್ದು ಸುಮಾರು 45% ರಷ್ಟು ಜನರು ಆಂತರಜಾಲ(ಇಂಟರ್ನೆಟ್) ಬಳಸುತ್ತಾರೆ. ಭರತದಲ್ಲಿ ಇಲೇಕ್ಟ್ರೋನಿಕ್ಸ್ ಮಾಧ್ಯಮದ ಪ್ರಗತಿಯಿಂದಾಗಿ ದೂರಸಂಚಾರ ಅತಿ ವೇಗದಿಂದ ಸಾಗುವ ಕ್ಷೇತ್ರವಾಗಿದೆ. ಭ್ರಮಣಧ್ವನಿ, ಸಂಗಣಕ, ಇಂಟರ್ನೆಟ್ ಇವುಗಳಂತಹ ಡಿಜಿಟಲ್ ಸಾಧನೆಗಳಿಂದಾಗಿ ಸಂದೇಶ ವಹನ ಬಹಳೆ ವೇಗವಾಗಿ ಸಾಗುತ್ತಿದೆ. 

(ಈ) ೨೦೧೦ ರ ನಂತರದಲ್ಲಿ ಭಾರತದಲ್ಲಿಯ ವಿದೇಶಿ ಪರ್ಯಟಕರು ಹೆಚ್ಚಾಗಲು ಕಾರಣ ಏನು ಇದ್ದಿರಬಹುದು?

ಉತ್ತರ: ಪರ್ಯಟನೆ ವ್ಯವಸಾಯಕ್ಕೆ ಸಂಬಂಧಿಸಿದ ವ್ಯವಸಾಯಿಕ ದೃಷ್ಟಿಕೋನಹಾಗು ವಿದೇಶಿ ಪರ್ಯಟಕರಿಗೆ ಕೊಡಲಾಗುವ ಸೌಕರ್ಯಗಳಲ್ಲಿ ಹೆಚ್ಚಳ ಇವು ೨೦೧೦ರ ನಂತರದ ಭರತದಲ್ಲಿಯ ವಿದೇಶಿ ಪ್ರವಾಸಿಗರ ಹೆಚ್ಚಳಕ್ಕೆ ಕಾರಣ ಇರಬಹುದು.  

ಪ್ರ.3. ಬ್ರಾಝಿಲಿಯಾದಿಂದ 31 ಡಿಸೆಂಬರದ ಬೆಳಗ್ಗೆ 11 ಗಂಟೆಗೆ ವಿಮಾನ ಹೊರಡಿದುದನ್ನು ಕೆಳಗಿನ ಆಕೃತಿಯಲ್ಲಿ ತೋರಿಸಿದೆ. ಈ ವಿಮಾನ 0 ರೇಖಾವೃತ್ತ ದಾಟಿ ಹೊಸ ದಿಲ್ಲಿಯ ಮಾರ್ಗವಾಗಿ ವೈಲಿಡಿಓಸ್ಟಾಕ ಈ ಸ್ಥಳಕ್ಕೆ ಹೋಗಲಿದೆ. ಯಾವಾಗ ವಿಮಾನ ಹೊರಟಿತ್ತೋ ಆಗ ಹೊಸದಿಲ್ಲಿ ಹಾಗೂ ವೈಲಿಡಿಓಸ್ಟಾಕ್ ದಲ್ಲಿಯ ಸ್ಥಾನಿಕವೇಳೆ, ದಿನಾಂಕ, ದಿವಸ ಯಾವುದು ಇರಬಹುದು ಎಂಬುದನ್ನು ಹೇಳಿರಿ.

ಉತ್ತರ: ಸೂರ್ಯ ಪೂರ್ವಕ್ಕೆ ಉದಯವಾಗಿ ಪಶ್ಚಿಮಕ್ಕೆ ಅಸ್ತವಾಗುತ್ತಾನೆ. ಪೃಥ್ವೀಯು ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ. ಪೃಥ್ವಿ 3600 ಅಂಶ ಹೊಂದಿದ್ದು ಗೋಲಾಕಾರವಾಗಿ ತಿರುಗುವಾದ ಅದರ ಅಕ್ಷಾಂಶಗಳು 3600 ಅಂಶದಲ್ಲಿ ಮುಂದೆ ಸರಿಯುತ್ತವೆ. ಅಂದರೆ 24ತಾಸುಗಳಲ್ಲಿ ಪೃಥ್ವಿ 3600 ದ ಗೋಳಾಕಾರದಲ್ಲಿ ತಿರುಗುತ್ತದೆ.

1 ತಾಸಿನಲ್ಲಿ ಪೃಥ್ವಿಯ ತಿರುಗುವಿಕೆ =360/24 = 150

ಬ್ರಾಝಿಲದಿಂದ ವಿಮಾನವು 31 ಡಿಸೆಂಬರ, ರವಿವಾರ ಮುಂಜಾನೆ 11 ಗಂಟೆಗೆ ಹೋರಾಟ .......

ಪ್ರ. 4. ಯೋಗ ಜೋಡಿಗಳನ್ನು ಹೊಂದಿಸಿರಿ.

(ಅ) ಟ್ರಾನ್ಸ ಅಮೆಝಾನಿಯನ್ ಮಾರ್ಗ         (i) ಪ್ರವಾಸ ಸ್ಥಳ

(ಆ) ರಸ್ತೆ ಸಾರಿಗೆ                                  (ii) ಭಾರತದಲ್ಲಿಯ ರೈಲು ನಿಲ್ದಾಣ

(ಇ) ರಿಓ ದಿ ಜನೆರಿಓ                           (iii) ಸುವರ್ಣ ಚತುರ್ಭುಜ ಮಹಾಮಾರ್ಗ

(ಈ) ಮನಮಾಡ                               (iv) ಪ್ರಮುಖ ರಸ್ತೆ ಮಾರ್ಗ

                                                        (v) 40 ಪಶ್ಚಿಮ ರೇಖಾವೃತ್ತ

ಉತ್ತರ:

(ಅ) ಟ್ರಾನ್ಸ ಅಮೆಝಾನಿಯನ್ ಮಾರ್ಗ         = ಪ್ರಮುಖ ರಸ್ತೆ ಮಾರ್ಗ

(ಆ) ರಸ್ತೆ ಸಾರಿಗೆ                               = ಸುವರ್ಣ ಚತುರ್ಭುಜ ಮಹಾಮಾರ್ಗ

(ಇ) ರಿಓ ದಿ ಜನೆರಿಓ                           = ಪ್ರವಾಸ ಸ್ಥಳ

(ಈ) ಮನಮಾಡ                               = ಭಾರತದಲ್ಲಿಯ ರೈಲು ನಿಲ್ದಾಣ              

ಪ್ರ. 5. ಭೌಗೋಲಿಕ ಕಾರಣಗಳನ್ನು ಬರೆಯಿರಿ.

 (ಅ) ಬ್ರಾಝಿಲದಲ್ಲಿ ಪರ್ಯಾವರಣದೊಂದಿಗೆ ಸ್ನೇಹ ಮಾಡುವ ಪ್ರವಾಸದ ವ್ಯವಸಾಯವನ್ನು ಹೆಚ್ಚು ವಿಕಸಿತಗೊಳಿಸಲಾಗುತ್ತಿದೆ.

ಉತ್ತರ:

(ಆ) ಬ್ರಾಯಿಲದಲ್ಲಿ ಜಲಮಾರ್ಗಗಳ ವಿಕಾಸವು ಆಗಿಲ್ಲ.

ಉತ್ತರ: ಬ್ರಾಝಿಲದಲ್ಲಿ ಎಲ್ಲೆಡೆ ರಸ್ತೆಗಳು ಕಂಡು ಬರುತ್ತವೆ. ಪ್ಪ್ರ್ವದ ಭಾಗದಲ್ಲಿ ಅಮೆಝಾನ್ ನದಿ ಕೊಳ್ಳದಲ್ಲಿ ವನಚ್ಛಾದಿತ ಪ್ರದೇಶ, ಜವುಳು ಭೂಮಿ ಇದೆ. ನದಿಯಿಂದ ವ್ಯಾಪಾರಿ ತತ್ವದ ಮೇಲೆ ಆಂತರರಾಷ್ಟ್ರೀಯ ಜಲಸರಿಗೆ ನಡೆಯುತ್ತದೆ. ಪ್ರಾಕೃತಿಕ ರಚನೆ, ಪ್ರದೇಶದ ಏರಿಳಿತ ಭಾಗಗಳು,  ನದಿಗಳಲ್ಲಿ ಇರುವ ದಿನ್ನೆಗಳು-ಕೊಳ್ಳಗಳು, ಕೆರೆಗಳ ಅಗಲವಿರದ ಪಾತ್ರಗಳು, ನದಿಗಳ ನೀರಿನ ಹೆಚ್ಚಾದ ವೇಗ, ಜಲಪಾತಗಳು, ಮಹಾಪೂರ ಇತ್ಯಾದಿ ಘಟಕಗಳಿಂದಾಗಿ ಜಲಸಾರಿಗೆಗೆ ತೊಂದರೆಗಳಗುತ್ತವೆ. ಹಾಗಾಗಿ ಬ್ರಾಯಿಲದಲ್ಲಿ ಜಲಮಾರ್ಗಗಳ ವಿಕಾಸವು ಹೆಚ್ಚು ಆಗಿಲ್ಲ.

( ಇ) ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ರೈಲು ಮಾರ್ಗಗಳ ಜಾಳಿಗೆ ವಿಕಸಿತವಾಗಿದೆ.

ಉತ್ತರ: ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ರೈಲುಮಾರ್ಗ ಮತ್ತು ರಸ್ತೆ ಸಾರಿಗೆ ಜಾಲಗಳು ದಟ್ಟವಾಗಿವೆ. ಉತ್ತರ ಭಾರತದ ಬಯಲು ವಿಸ್ತಾರವಾಗಿರುವುದರಿಂದ ಅಲ್ಲಿಯ ರೈಲು ಮಾರ್ಗಗಳ ಜಾಳಿಗೆ ವಿಕಸಿತವಾಗಿದೆ.

(ಈ) ದೇಶದ ಸರ್ವಾಂಗೀಣ ವಿಕಾಸಕ್ಕಾಗಿ ಸಾರಿಗೆ ಮಾರ್ಗಗಳ ವಿಕಾಸವು ಉಪಯುಕ್ತ ಎನಿಸುತ್ತದೆ.

ಉತ್ತರ: ರೈಲು ಮಾರ್ಗಗಳ ಹಾಗೂ ರಸ್ತೆ ಮಾರ್ಗಗಳ ವಿಕಸದಿಂದ ಪ್ರವಾಸಿ ಮತ್ತು ಸರಕು ಸಾಗಾಣಿಕೆಯು ಸುಲಭವಾಗುತ್ತದೆ. ಭಾರತೀಯ ಅರ್ಥವ್ಯವಸ್ಥೆಯ ಬೆಳವಣಿಗೆಗಾಗಿ ರೈಲು ಮಾರ್ಗ, ರಸ್ತೆ ಸಾರಿಗೆ, ಜಲಸಾರಿಗೆ ಹಾಗೂ ಹವಾಯಿ ಮಾರ್ಗಗಳು ಅತಿಶಯ ಉಪಯುಕ್ತ ಎನಿಸಿರುತ್ತವೆ.

(ಉ) ಅಂತ‌ರ್ ರಾಷ್ಟ್ರೀಯ ವ್ಯಾಪಾರಕ್ಕಾಗಿ ಸಾಗರದ ಮಾರ್ಗಗಳನ್ನು ಅವಲಂಬಿಸಬೇಕಾಗುತ್ತದೆ.

ಉತ್ತರ: ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವ್ಯಾಪಾರ, ವ್ಯವಸಾಯ ಬೆಳೆಯಬೇಕಾದರೆ ಅಂತರ್ಗತ ಸಂಭಂಧಗಳು ನೀರ್ಮಾನವಾಗಬೇಕು. ಸಾಗರಗಳ ಆಚೆಗಿರುವ ಇತರ ದೇಶಗಳಲ್ಲಿ ವ್ಯಾಪಾರ ಮಾಡಲು ಜಲಸಾರಿಗೆಗಿಂತ ಅಗ್ಗದ ಸಾರಿಗೆ ವ್ಯವಸ್ಥೆ ಬೇರೊಂದಿಲ್ಲ. ಆದ್ದರಿಂದ ಅಂತ‌ರ್ ರಾಷ್ಟ್ರೀಯ ವ್ಯಾಪಾರಕ್ಕಾಗಿ ಸಾಗರದ ಮಾರ್ಗಗಳನ್ನು ಅವಲಂಬಿಸಬೇಕಾಗುತ್ತದೆ.

ಪ್ರ. 6. ವ್ಯತ್ಯಾಸಗಳನ್ನು ಸ್ಪಷ್ಟಪಡಿಸಿರಿ.

(ಅ) ಅಮೆಝಾನ್ ಮತ್ತು ಗಂಗಾ ನದಿಗಳಲ್ಲಿನ ಜಲಸಾರಿಗೆ.

ಉತ್ತರ:

ಅಮೆಝಾನ್ ನದಿಯಲ್ಲಿಯ ಜಲಸಾರಿಗೆ

ಗಂಗಾ ನದಿಯಲ್ಲಿಯ ಜಲಸಾರಿಗೆ

ಅಮೆಝಾನ್ ನದಿಯಿಂದ ಪ್ರಮುಖವಾಗಿ ವ್ಯಾಪಾರಿ ತತ್ವದ ಮೇಲೆ ಆಂತರರಾಷ್ಟ್ರೀಯ ಜಲಸಾರಿಗೆ ಮಾಡಲಾಗುತ್ತದೆ.

ಗಂಗಾ ನದಿಯಲ್ಲಿ ಮುಖ್ಯವಾಗಿ ಅಂತರ್ಗತ ಜಲಸಾರಿಗೆ ಮಾಡಲಾಗುತ್ತದೆ.  

ಅಮೆಝಾನ್ ನದಿಯಿಂದ ಮಾಡಲಾಗುವ ಜಲಸಾರಿಗೆಯ ಪ್ರಮಾಣವು ಹೆಚ್ಚು ಇದೆ.

ಗಂಗಾ ನದಿಯಿಂದ ಮಾಡಲಾಗುವ ಜಲಸಾರಿಗೆಯ ಪ್ರಮಾಣವು ಅತ್ಯಲ್ಪವಾಗಿದೆ.

 

(ಅ) ಬ್ರಾಝಿಲದಲ್ಲಿಯ ಸಂದೇಶವಹನ ಮತ್ತು ಭಾರತದಲ್ಲಿಯ ಸಂದೇಶವಹನ

ಉತ್ತರ:

ಬ್ರಾಝಿಲದಲ್ಲಿಯ ಸಂದೇಶವಹನ

ಭಾರತದಲ್ಲಿಯ ಸಂದೇಶವಹನ

ಬ್ರಾಝಿಲದಲ್ಲಿಯ ಸಂದೇಶವಹನವು ಹೆಚ್ಚು ವಿಕಸಿತವಾಗಿದ್ದು ಹೆಚ್ಚು ಕಾರ್ಯಕ್ಷಮವಾಗಿದೆ.

ಭಾರತದಲ್ಲಿಯ ಸಂದೇಶವಹನ ಕಡಿಮೆ ವಿಕಸಿತವಾಗಿದ್ದು ಕಡಿಮೆ ಪ್ರಮಾಣದಲ್ಲಿ ಕಾರ್ಯಕ್ಷಮವಾಗಿದೆ.

ಬ್ರಾಝಿಲದಲ್ಲಿಯ ಸುಮಾರು 45% ಕ್ಕಿಂತ ಹೆಚ್ಚು ಜನರು ಸಂದೇಶವಹನಕ್ಕಾಗಿ ಇಂಟರ್ನೆಟ ಬಳಸುತ್ತಾರೆ.  

ಭರತದಲ್ಲಿ ಸುಮಾರು 30% ಜನರು ಮಾತ್ರ  ಸಂದೇಶವಹನಕ್ಕಾಗಿ ಇಂಟರ್ನೆಟ ಬಳಸುತ್ತಾರೆ.  

ಬ್ರಾಝಿಲದಲ್ಲಿಯ ಪ್ರದೇಶ ರಚನೆ, ವಿಸ್ತೀರ್ಣ ಜನಸಂಖ್ಯೆ  ಕಡಿಮೆ ಇರುವ ಪ್ರದೇಶ, ದಟ್ಟವಾದ ಅರಣ್ಯಗಳು ಮುಂತಾದ ಅಡತಡೆಗಳಿದ್ದರೂ ದೂರಸಂಚಾರ ಸೇವೆಯ ವಿಸ್ತಾರ ಮಾಡುವುದುದು ಬ್ರಾಝಿಲಗಾಗಿ ಒಂದು ಅವ್ಹಾಹನೆಯಾಗಿದೆ.

ಭಾರತದಲ್ಲಿ ಭ್ರಮಣಧ್ವನಿ, ಇಂಟರನೆಟ್ ಜಾಲದಿಂದಾಗಿ ಡಿಜಿಟಲ್ ಸಾಧನಗಳ ಪ್ರಭಾವ ಹೆಚ್ಚಾಗುತ್ತಿದ್ದು ಸ್ಮಾರ್ಟ್ ಫೋನ್ ಬಳಕೆದಾರರು ಹೆಚ್ಚು ಜನ ಇದ್ದಾರೆ.

ತಂತ್ರಜ್ಞಾನದ ಆಧಾರದಿಂದ ಬ್ರಾಝಿಲ್ ಅವಕಾಶದಲ್ಲಿ ಉಪಗ್ರಹ ಉಡ್ಡಾಣ ಮಾಡುವ ತಯಾರಿಯಲ್ಲಿದೆ.

ಸ್ವಯಂವಿಕಸಿತ ತಂತ್ಯ್ರಜ್ಞಾನದ ಆಧಾರದಿಂದ ತಯಾರಿಸಿದ ಉಪಗ್ರಹಗಳ ಪ್ರಕ್ಷೇಪಣೆಯಿಂದ ಸಂದೇಶವಹನ ಕ್ಷೇತ್ರದಲ್ಲಿ ಭಾರತ ದೇಶಕ್ಕೆ ಒಳ್ಳೆಯ ಭವಿಷ್ಯವಿದೆ.  

(ಇ) ಭಾರತೀಯ ಪ್ರಮಾಣವೇಳೆ ಮತ್ತು ಬ್ರಾಝಿಲದ ಪ್ರಮಾಣವೇಳೆ.

ಉತ್ತರ:

ಭಾರತೀಯ ಪ್ರಮಾಣವೇಳೆ

ಬ್ರಾಝಿಲದ ಪ್ರಮಾಣವೇಳೆ

ಭಾರತದಲ್ಲಿ ಒಂದೇ ಪ್ರಮಾಣ ವೇಳೆ ಇದೆ.

ಬ್ರಾಝಿಲ್ ದೇಶಕ್ಕೆ ಒಟ್ಟು ನಾಲ್ಕು ಪ್ರಮಾಣ ವೇಳೆ ಇದೆ.

ರೇಖಾವೃತ್ತದ ವಿಸ್ತಾರ ನೋಡಲಾಗಿ ಅತಿ ಪೂರ್ವ ಹಾಗೂ ಅತಿ ಪಶ್ಚಿಮ ಬಿಂದುವಿನ ವೇಳೆಯಲ್ಲಿಯ ವ್ಯತ್ಯಾಸ 120 ಮಿನೀಟುಗಳು(2 ಗಂಟೆಗಳು) ಇವೆ.

ರೇಖಾವೃತ್ತದ ವಿಸ್ತಾರ ನೋಡಲಾಗಿ ಅತಿ ಪೂರ್ವ ಹಾಗೂ ಅತಿ ಪಶ್ಚಿಮ ಬಿಂದುವಿನ ವೇಳೆಯಲ್ಲಿಯ ವ್ಯತ್ಯಾಸ 168 ಮಿನೀಟುಗಳು(2 ಗಂಟೆಗಳು ಹಾಗೂ 48 ಮಿನೀಟುಗಳು) ಇವೆ.   

ಭಾರತವು ಪೂರ್ವ ಗೋಲಾರ್ಧದಲ್ಲಿ ಇರುವುದರಿಂದ ಭಾರತದ ಪ್ರಮಾಣ ವೇಳೆ ಗ್ರೀನಿಚ್ ವೇಳೆಯ 5 ಗಂಟೆ 30 ಮಿನಿಟು ಮುಂದೆ ಇದೆ.

ಬ್ರಾಝಿಲ್ ದೇಶ ಪಶ್ಚಿಮ ಗೋಲಾರ್ಧದಲ್ಲಿ ಇರುವುದರಿಂದ ಅಲ್ಲಿಯ ಪ್ರಮಾಣ ವೇಳೆಗಳು ಗ್ರೀನಿಚ್ ವೇಳೆಯ ಕ್ರಮವಾಗಿ 2, 3, 4, ಹಾಗೂ 5 ಗಂಟೆಗಳಿಂದ ಹಿಂದೆ ಇರುವವು.

 ಪ್ರ. 7. ಟಿಪ್ಪಣೆ ಬರೆಯಿರಿ.

(ಅ) ಆಧುನಿಕ ಸಂದೇಶವಹನ: ಆಧುನಿಕ ಸಂದೇಶವಹನದಲ್ಲಿ ದೂರಧ್ವನಿ, ಭ್ರಮಣಧ್ವನಿ, ದೂರದರ್ಶನ, ಆಕಾಶವಾಣಿ ಹಾಗೂ ಇಂಟರನೆಟ್ ಇವುಗಳ ಸಮಾವೇಶವಾಗುತ್ತದೆ. ಆಧುನಿಕ ಸಂದೇಶವಹನ ಕಡಿಮೆ ಖರ್ಚುವುಳ್ಳ ಅಧಿಕ ಪರಿಣಾಮಕಾರಕ ಸಾಧನವಾಗಿದೆ. ಬ್ರಾಝಿಲ್ ಹಾಗೂ ಭಾರತ ದೇಶಗಳ ತುಲನೆಯಲ್ಲಿ ಬ್ರಾಝಿಲದಲ್ಲಿ ದೂರಸಂಚಾರ ಸೇವೆ ಹೆಚ್ಚು ವಿಕಸಿತವಾಗಿದ್ದು ಅಲ್ಲಿಯ ಸುಮಾರು 45% ಜನಸಂಖ್ಯೆ ಇಂಟರನೆಟ್ ಬಳಸುತ್ತಾರೆ. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮಾಧ್ಯಮದ ಪ್ರಗತಿಯಿಂದಾಗಿ ದೂರಸಂಚಾರ ಕ್ಷೇತ್ರ ಅತಿ ವೇಗದಿಂದ ಸಾಗುತ್ತಿದೆ. ಸಂಗಣಕ, ಭ್ರಮಣಧ್ವನಿ ಹಾಗೂ ಇಂಟರನೆಟಗಳಂತಹ ಡಿಜಿಟಲ್ ಸಾಧನೆಗಳಿಂದ ಅತಿ ಹೆಚ್ಚು  ಸ್ಮಾರ್ಟ್ ಫೋನ್ ಬಳಸುವ ದೇಶವಾಗಿದೆ.  

(ಆ) ಭಾರತದೊಳಗಿನ ವಿಮಾನ ಸಾರಿಗೆ: ಬ್ರಾಝಿಲ ದೇಶದ ತುಲನೆಯಲ್ಲಿ ಭಾರತದಲ್ಲಿಯ ಆಂತರರಾಷ್ಟ್ರೀಯ ಸಾರಿಗೆಯು ಅಧಿಕ ಪ್ರಮಾಣದಲ್ಲಿ ವಿಕಾಸ ಹೊದಿರುತ್ತದೆ. ಅಂತರರಾಷ್ಟ್ರೀಯ ಹವಾಯಿ ಮಾರ್ಗದ ಜೊತೆಗೆ ಅಂತರ್ಗತ ಹವಾಯಿ ಬಳಕೆಯಲ್ಲಿಯೂ ಪ್ರಗತಿಯಾಗುತ್ತಿದೆ. ಭಾರತದಲ್ಲಿಯ ಮಹತ್ವದ ನಗರಗಳು ಹಾಗೂ ಇತರ ದೇಶಗಳಲ್ಲಿರುವ ಮಹತ್ವದ ನಗರಗಳಿಗೆ ಅಂತರರಾಷ್ಟ್ರೀಯ ಹವಾಯಿ ಮಾರ್ಗದಿಂದ ಜೋಡಿಸಲಾಗಿದೆ. ಮುಂಬಯಿ, ಪುಣೆ, ಚೆನ್ನಯಿ, ಬೆಂಗಳೂರು, ಕೋಲಕತ್ತಾ, ವಿಶಾಖಾಪಟ್ಟಣಂ ಇತ್ಯಾದಿ ನಗರಗಳಲ್ಲಿ ಭಾರತದ ವಿಮಾನ ನಿಲ್ದಾಣಗಳಿವೆ.  

(ಇ) ಪ್ರಾಕೃತಿಕ ರಚನೆ ಮತ್ತು ಅಂತರ್ಗತ ಜಲಸಾರಿಗೆ: ಪ್ರಾಕೃತಿಕ ರಚನೆ ಹಾಗೂ ಅಂತರ್ಗತ ಜಲಸಾರಿಗೆ ಇವುಗಳಲ್ಲಿ ಅತ್ಯಂತ ಹತ್ತಿರದ ಸಂಬಂಧವಿದೆ.  ಪ್ರದೇಶದ ಏರಿಳಿತಗಳು, ನದಿಗಳಲ್ಲಿ ಇರುವ ದಿನ್ನೆಗಳು-ಕೊಳ್ಳಗಳು, ಕೆರೆಗಳ ಅಗಲವಿರದ ಪಾತ್ರಗಳು, ನದಿಗಳ ನೀರಿನ ಹೆಚ್ಚಾದ ವೇಗ, ಜಲಪಾತಗಳು, ಮಹಾಪೂರ ಇತ್ಯಾದಿ ಘಟಕಗಳಿಂದಾಗಿ ಜಲಸಾರಿಗೆಗೆ ತೊಂದರೆಗಳಗುತ್ತವೆ. ನದಿಗಳ ಅಗಲವಾದ ಪಾತ್ರ, ಸಂತವಾಗಿ ಹರಿಯುವ ನೀರು, ಆಳವಾದ ನದಿ ಇದ್ದಾರೆ ಜಲಸಾರಿಗೆ ದೊಡ್ಡ ಪ್ರಮಾಣದಲ್ಲಿ ವಿಕಸಿತವಾಗುತ್ತದೆ. ಭಾರತದ ಮಹತ್ವದ ನದಿಗಳಿಂದ ಜಸಾರಿಗೆ ಮಾಡಲಾಗುತ್ತದೆ.    

(ಈ) ಪ್ರಮಾಣವೇಳೆಯ ಉಪಯುಕ್ತತೆ: ದೇಶದ ರೇಖಾವೃತ್ತಗಳ ವಿಸ್ತರದ ವಿಚಾರ ಮಾಡಿ ಎಲ್ಲ ದೇಶಗಳ ಕಾರ್ಯಕಲಾಪಗಳಲ್ಲಿ ಏಕಸೂತ್ರತೆ ಬರಬೇಕು ಎಂದು ದೇಶದ ಪ್ರಮಾಣ ವೇಳೆ ನಿಶ್ಚಿತ ಮಾಡಲಾಗಿದೆ. ಬ್ರಾಝಿಲ್ ದೇಶದ ರೇಖಾವೃತ್ತಿಯ ವಿಸ್ತಾರಕ್ಕನುಸಾರವಾಗಿ ಅತೀ ಪೂರ್ವದ ಹಾಗೂ ಅತೀ ಪಶ್ಚಿಮದ ಬಿಂದುಗಳಲ್ಲಿ 168 ಮಿನುತುಗಳ ವ್ಯತ್ಯಾಸವಿದೆ. ಆದರೆ 2ಗಂಟೆ 48 ಮಿನೀಟುಗಳು. ಒಂದೇ ದೇಶದಲ್ಲಿಯ ವೇಳೆಯಲ್ಲಿಯ ಇಷ್ಟೊಂದು ವ್ಯತ್ಯಾಸ ಲಕ್ಷದಲ್ಲಿ ತೆಗೆದುಕೊಂಡು ಬ್ರಾಝಿಲ್ ದೇಶದ ಭಿನ್ನ ಭಿನ್ನ ಕಾಲಕ್ಷೇತ್ರ್ಅಗಳನ್ನು ಮಾಡಲಾಗಿದೆ. ಹಾಗಾಗಿ ಬ್ರಾಝಿಲದಲ್ಲಿ ನಾಲ್ಕು ಪ್ರಮಾಣವೇಳೆಗಳು ಇರುತ್ತವೆ. ಭಾರತದ ವಿಸ್ತಾರದ ಅತೀ ಪೂರ್ವ ಮತ್ತು ಅತೀ ಪಶ್ಚಿಮದ ರೇಖಾವೃತ್ತಗಳ ಬಿಂದುಗಳಲ್ಲಿ 120 ಮಿನೀಟುಗಳು ಅಂದರೆ 2 ಗಂಟೆಗಳ ವ್ಯತ್ಯಾಸವಿದೆ. ಸಾಧಾರಣವಾಗಿ ಭಾರತದ ಮಧ್ಯದಲ್ಲಿಂದ ಅಲಾಹಾಬಾದ ನಗರದಿಂದ ಹಾಯ್ದು ಹೋಗುವ 82030 ರೇಖಾವೃತ್ತದ ಮೇಲೆ ಈ ಸ್ಥಾನಿಕ ವೇಳೆಯ ಬಿಂದು ಇರುತ್ತದೆ. ಈ ವೇಳೆಗೆ ಅನುಸರಿಸಿ ಭಾರತದಲ್ಲಿಯ ಎಲ್ಲ ಸ್ಥಳಗಳಲ್ಲಿಯ ವ್ಯವಹಾರ ಮಾಡಲಾಗುತ್ತದೆ. ಪ್ರಮಾಣ ವೇಳೆಯಿಂದಾಗಿ ದೇಶದಲ್ಲಿ ವೇಳೆಯ ಬಗೆಗೆ ಗೊಂದಲ ಉಂಟಾಗುವುದಿಲ್ಲ.

 

***

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು