ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಮಹಾರಾಷ್ಟ್ರ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಆದರ್ಶ ಶಿಕ್ಷಕರಿಗೆ ಸನ್ಮಾನ

ಮಹಾರಾಷ್ಟ್ರ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಆದರ್ಶ ಶಿಕ್ಷಕರಿಗೆ ಸನ್ಮಾನ 

 ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಶಾಖೆಯ ವತಿಯಿಂದ ಕೊಡಮಾಡುವ ಶಿಕ್ಷಕರ ಗುಣಗೌರವ ಸನ್ಮಾನ ಸಮಾರಂಭ ಅಕ್ಕಲಕೋಟ ತಾಲೂಕಿನ ವಿಕಾಸರತ್ನ ಶಾಸಕರಾದ ಸಚಿನ್ ದಾದಾ ಕಲ್ಯಾಣಶೆಟ್ಟಿ ಹಾಗೂ ಶ್ರೀ. ಷ.ಬ್ರ.ನಿ. ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಶಿಕ್ಷಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮ . ಜ. ಮೋರೆ ಇವರ ಅಧ್ಯಕ್ಷತೆಯಲ್ಲಿ ಪಾನ ಮಂಗರುಳ ದ ಮಹಾದೇವ ದೇವಸ್ಥಾನದಲ್ಲಿ ಸಂಪನ್ನವಾಯಿತು.



 ಈ ಸಂದರ್ಭದಲ್ಲಿ ರಾಜ್ಯ ಸಲಹಾ ಮಂಡಳಿ ಅಧ್ಯಕ್ಷ ಲಹು ಕಾಂಬಳೆ, ಶಿಕ್ಷಕರ ಒಕ್ಕೂಟದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಬಬ್ರುವಾಹನ ಕಾಶಿದ್, ರಾಷ್ಟ್ರೀಯ ಕಾರ್ಯಾಧ್ಯಕ್ಷ ತಾತ್ಯಾಸಾಹೇಬ ಯಾದವ, ನಪಾ/ಮನಪಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜಯ ಚೇಳೇಕರ, ಮಂಗರುಳ ಪಂಚಕ್ರೋಶಿಯಲ್ಲಿಯ ಖ್ಯಾತ ಡಾ. ಅಶೋಕ ಹಿಪ್ಪರಗಿ, ಸರಪಂಚ ಮಹಾದೇವ ಮಹಾಜನ, ಉಪ ಸರಪಂಚ ಸತೀಶ ಪವಾರ, ಸನ್ಮಾನ್ಯ ಮಾಜಿ ಸರಪಂಚ ಲಕ್ಷ್ಮಣ ಪೂಜಾರಿ, ರಾಜ್ಯ ಸಂಘದ ಉಪಾಧ್ಯಕ್ಷ ವಿಜಯಕುಮಾರ ತಡಕಲಕರ, ಹರಿಭಾವು ಜಾಧವ, ಜಿಲ್ಲಾಧ್ಯಕ್ಷ ಅನಿರುದ್ಧ ಪವಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಹತ್ತೂರೆ, ಜಿಲ್ಲಾ ಕಾರ್ಯಅಧ್ಯಕ್ಷ ರಂಜಿತ್ ಥಿಟೆ, ಜಿಲ್ಲಾ ಕಾರ್ಯಾಧ್ಯಕ್ಷ ದಿಲೀಪ ತಾಟೆ, ಜಿಲ್ಲಾ ಖಜಾಂಚಿ ಮಹಾದೇವ ಜಠಾರ್, ನಿವೃತ್ತ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸುಭಾಷ ಫೂಲಾರಿ, ಮಹಿಳಾ ಅಘಾಡಿ ಜಿಲ್ಲಾಧ್ಯಕ್ಷೆ ಚಂದಾರಾಣಿ ಅತ್ಕರ್, ಮಹಿಳಾ ಅಘಾಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾ ನಾಮವಾರ, ಜಿಲ್ಲಾ ಸೋಲಾಪುರ ಶಿಕ್ಷಕರ ಸಹಕಾರಿ ಪಥಸಂಸ್ಥೆಯ ನಿರ್ದೇಶಕ ಸತ್ಯವಾನ್ ಜೈಂಜಾಂಗಡೆ, ರಮೇಶ ಶಿಂಧೆ, ಮಹಾರಾಷ್ಟ್ರ ಸರಕಾರಿ ರಾಜ್ಯ ಮಟ್ಟದ ಮಾದರಿ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರಾಹುಲ್ ಸುರವಸೆ, ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಲಗರ ಶಾಲೆಯ ಪ್ರಾಚಾರ್ಯ ದತ್ತಾತ್ರೇಯ ಪೋತದಾರ, ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸೋಮನಿಂಗ್ ಪಟ್ಟಣಶೆಟ್ಟಿ, ಬ್ರಹ್ಮದೇವ ದಾದಾ ಮಾನೆ ಸಂಸ್ಥೆಯ ಅಧ್ಯಕ್ಷ ಪ್ರಕಾಶ ರಾಚೇಟಿ., ಜಿಲ್ಲಾ ಸಂಪರ್ಕ ಪ್ರಮುಖ್ ಫಿರೋಜ್ ಶೇಖ್, ಮಂಗಳವೇಢಾದ ಅಧ್ಯಕ್ಷ ಸಂಭಾಜಿ ತಂಗವಾಡೆ, ಮಾಢಾ ಅಧ್ಯಕ್ಷ ಸಂಜಯ್ ಕಾಶಿದ್, ಉಪಾಧ್ಯಕ್ಷ ಏಕನಾಥ ಭಾಲೇರಾವ್, ಮಾಳಸಿರಸ ಅಧ್ಯಕ್ಷ ಮನೋಹರ ಏಕತಪುರೆ, ಪಾಂಡುರಂಗ ಮೋಹಿತೆ, ದಗ್ದು ಪವಾರ್, ಕಾಂತಿಲಾಲ್ ಏಕತಪುರೆ, ಶಾನವಾಜ್ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

 ಆದರ್ಶ ಕೇಂದ್ರ ಪ್ರಮುಖ ಶ್ರೀ ಅಮಸಿದ್ಧ ಮ್ಹೆತ್ರೆ, ಆದರ್ಶ ವಿಷಯ ತಜ್ಞ ಗೋವಿಂದ ರಾಥೋಡ, ಆದರ್ಶ ಮುಖ್ಯಶಿಕ್ಷಕಿ ಸುರೇಖಾ ಸುಸಲಾದಿ,ಶಿವಚಲಪ್ಪ ಬಾಬಾ, ಆದರ್ಶ ಶಿಕ್ಷಕ ಸಕಲೇಶ್ವರ ಪೂಜಾರಿ, ಬಾಳಾಸಾಹೇಬ ಎಳೆಗಾಂವ, ರುಕ್ಮೊದ್ದಿನ್ ಅತ್ತಾರ್, ಶ್ರೀಶೈಲ ಮಲಗಣ. ಗಣಪತಿ ದಳವಾಯಿ, ಸುಭಾಷ ಸುರವಸೆ, ಅಶೋಕ ಗುರವ, ಕಮರುನ್ನಿಸಾ ಮುಜಾವರ, ಅನುಮಾರ ಶೇಖ್, ಮೊಹಮ್ಮದ್ ಗೌಸ್ ಪುಣೇಕರ್, ಗಂಗಾಧರನ್ ಅಣಚಿ, ಹಣಮಂತ ಬಾಗ್ಲೆ, ಮೊಹಮ್ಮದ ಇರ್ಫಾನ ಮುಲ್ಲಾ, ಸರಿತಾ ಪವಾರ, ಸಂತೋಷ ಜೋಗದೆ,ಮಲ್ಲಪ್ಪ ಕಾಂಬಳೆ, ಲತಾ ಕಾಂಬಳೆ, ಜಯಶ್ರೀ ರಾಥೋಡ, ದಾನಿಸ್ತಾ ಸೈಯದ್, ಅರ್ಚನಾ ಗಿರಿ, ದತ್ತಾತ್ರೇಯ ಅಮಿನಭಾವಿ, ದತ್ತಾತ್ರೇಯ ಕಾಳೆ, ಅಶೋಕಕುಮಾರ ಘೋಗ್ರೆ, ಆಕಾಶ ಘುಗೆ, ವಿಕಾಸ ಅಗವಾನೆ, ರಮೇಶ ಜುಜಗಾರ, ಮೊನಾಲಿಸಾ ನಾಯ್ಡು, ಬಸವರಾಜ ಪರ್ತಬಾದಿ, ಸಂತೋಷಿ ಕಟ್ಟಿಮನಿ, ವರ್ಷರಾಣಿ ಸುರವಸೆ, ಸಾಲೇಹಾಬೇಗಂ ಶೇಖ್, ರಾಜಕುಮಾರ ಬಂಡಗರ, ಶಿವರಾಯ ರತ್ನಾಕರ, ಕಲ್ಲಪ್ಪ ಆಳಗಿ, ಅಹಲ್ಯಾ ಇಂಗಳೆ, ರಮೇಶ ಜಮಾದಾರ, ಲಕ್ಷ್ಮಿಬಾಯಿ ವಾಘಮೋಡೆ, ಸುಲಭಾ ಜಿಂಗಾಡೆ, ಈರಪ್ಪ ಗಜ ಮುಂತಾದ ಸಾಧಕ ಶಿಕ್ಷಕರನ್ನು ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. 

 ಈ ಸಂದರ್ಭದಲ್ಲಿ ಜಿ . ಪ. ಪ್ರಾಥಮಿಕ ತಡವಳ ಕನ್ನಡ ಶಾಲೆ, ಮೈಸಲಗೆ ಕನ್ನಡ ಶಾಲೆ, ಹಂದರಾಳ ಕನ್ನಡ ಶಾಲೆ, ಶಾವಳ ಮರಾಠಿ ಶಾಲೆ, ಚಿಂಚೋಳಿ ಮರಾಠಿ ಶಾಲೆ, ಕೂಡಲ ಮರಾಠಿ ಶಾಲೆ, ಕುರ್ನೂರು ಮರಾಠಿ ಶಾಲೆ, ಮೈಂದರಗಿ ಉರ್ದು ಶಾಲೆ ಗಳಿಗೆ ಆದರ್ಶ ಶಾಲೆ ಎಂದು ಸಂಬಂಧಿತ ಮುಖ್ಯಾದ್ಯಾಪಕ ಮತ್ತು ಶಿಕ್ಷಕರನ್ನು ಗೌರವಿಸಲಾಯಿತು. 

         ಕಾರ್ಯಕ್ರಮದ ಯಶಸ್ಸಿಗೆ ಅಕ್ಕಲಕೋಟ ತಾಲೂಕಾ ಶಿಕ್ಷಕ ಸಹಕಾರಿ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಸೋಮೇಶ್ವರ್, ಜಿಲ್ಲಾ ಸಂಪರ್ಕ ಮುಖ್ಯಸ್ಥ ಅಭಿಜೀತ ಸುರ್ಡಿಕರ, ಜಿಲ್ಲಾ ಉಪಾಧ್ಯಕ್ಷ ಸಂಜಯ ಇರ್ವಾಡಕರ, ಜಿಲ್ಲಾ ಪ್ರಸಿದ್ಧಿ ಮುಖಂಡ ಪ್ರಮೋದ ಕುಸೇಕರ, ಶಿಕ್ಷಕ ಮುಖಂಡ ತುಕಾರಾಮ ಜವೀರ, ತಾಲೂಕಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ವಾಘಮೋಡೆ, ಶಿಕ್ಷಕ ಮುಖಂಡ ವಿಜಯಕುಮಾರ ಥೋರಾತ, ಕನ್ನಡ ಇಲಾಖೆ ಮುಖಂಡರಾದ ಲಕ್ಷ್ಮೀಕಾಂತ ತಳವಾರ, ಶಿಕ್ಷಕ ಮುಖಂಡ ವಿಜಯಕುಮಾರ ಬಂದಿಚೊಡೆ, ಬೀರಪ್ಪ ವಾಘಮಾರೆ, ಸುರೇಶ ಮಾಶಾಳೆ, ಅಶೋಕ ಗಾವಡೆ, ತುಕಾರಾಮ ಕೋಳಿ, ಮಹೆಬೂಬ ಖಾನ, ಜಮಾಲುದ್ದೀನ್ ಶೇಖ್, ತೋಲನ ಬಾಗವಾನ್, ದಯಾನಂದ ಮಾಳಿ, ಸವಿತಾ ಗಾಡೆ,ಸುನೀಲ ರಾಠೋಡ, ಅತುಲ ರಾಠೋಡ, ವರ್ಷಾತಾಯಿ ತಡಕಲಕರ, ಸುನೀತಾ ಕಿರನಳ್ಳಿ, ಪ್ರಭಾವತಿ ಅತ್ಕಳಕರ, ಪ್ರಭಾವತಿ ಬಂದಿಚೋಡೆ , ಸಿದ್ಧರಾಮ ವಾಮನೆ, ವಿನೋದ ಕೋಳಿ, ಪ್ರದಾನಿ ಬಂಡಗಾರ , ತುಕಾರಾಮ ಜಾಧವ, ಸಿದ್ಧರಾಮ ಕೋರೆ, ಯಲ್ಲಪ್ಪ ಪುಟ್ಗೆ, ಶಿವಾನಂದ ಮಂಗರುಳೆ, ಅಪ್ಪಾಸಾಹೇಬ ಕುಂಬಾರ ಮುಂತಾದವರು ಶ್ರಮಿಸಿದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು