ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಜಿಲ್ಲಾ ಮಟ್ಟದ ಸಮೂಹ ಗಾಯನ ಸ್ಪರ್ಧೆಯಲ್ಲಿ ಜೇವೂರ ಜಿ. ಪ. ಪ್ರಾಥಮಿಕ ಕನ್ನಡ ಶಾಲೆ ಮಕ್ಕಳು ಜಿಲ್ಲೆಯಲ್ಲಿ ದ್ವೀತಿಯ

 ಜಿಲ್ಲಾ ಪರಿಷದ.ಕನ್ನಡ ಪ್ರಾಥಮಿಕ ಶಾಲೆ ಜೇವೂರ

ಜಿಲ್ಲಾ ಮಟ್ಟದ ಸಮೂಹ ಗಾಯನ ಸ್ಪರ್ಧೆಯಲ್ಲಿ ಜೇವೂರ ಜಿ. ಪ. ಪ್ರಾಥಮಿಕ ಕನ್ನಡ ಶಾಲೆ ಮಕ್ಕಳು ಜಿಲ್ಲೆಯಲ್ಲಿ ದ್ವೀತಿಯ



ಅಟ್ಟಲಕೋಟ ಜಿಲ್ಲೆ. ಸೊಲ್ಲಾಪುರ

ವಿದ್ಯಾರ್ಥಿಗಳ ಗುಣವತ್ತ ಶೋಧ  2024-25 ರ ಅಡಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಮೂಹ ಗಾಯನ ಸ್ಪರ್ಧೆಯಲ್ಲಿ ಜೇವೂರ ಜಿಲ್ಲಾ ಪರಿಷದ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳು ಹಿರಿಯರ ಸಮೂಹ ಗಾಯನ ತಂಡ  ಜಿಲ್ಲೆಯಲ್ಲಿ ದ್ವೀತಿಯ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.

ಜೇವೂರ (ಅಕ್ಕಲಕೋಟ್)  ಜಿಲ್ಲಾ ಪರಿಷದ ಕನ್ನಡ ಪ್ರಾಥಮಿಕ ಶಾಲೆ 2024-25ರ ವಿದ್ಯಾರ್ಥಿಗಳ ಗುಣವತ್ತಾ ಶೋಧ ಸ್ಪರ್ದೇಯಲ್ಲಿ ಜೇವೂರ ಜಿಲ್ಲಾ ಪರಿಷದ ಕನ್ನಡ ಪ್ರಾಥಮಿಕ ಶಾಲೆಯ ಹಿರಿಯರ ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟದ ಗುಂಪು ಗಾಯನ ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ದ್ವೀತಿಯ ಸ್ಥಾನವನ್ನು ಗಳಿಸಿದೆ.

ಈ ಸ್ಪರ್ಧೆಯಲ್ಲಿ ಸೊಲ್ಲಾಪುರ ಜಿಲ್ಲೆಯ ಒಟ್ಟು 11 ತಾಲೂಕುಗಳ ತಾಲೂಕು ವಿಜೇತ ತಂಡಗಳಿದ್ದವು. ಅದರಲ್ಲಿ ಜೇವೂರ ನ (ಅಕ್ಕಲಕೋಟ) ಜಿಲ್ಲಾ ಪರಿಷದ ಕನ್ನಡ ಶಾಲೆಗೆ ಅಂದರೆ ಎರಡನೇ ರ್ಯಾಂಕ್ ಪಡೆದಿರುವುದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಶ್ರೀ. ಮಲ್ಲಿಕಾರ್ಜುನ್ ಎಂ, ಪಾಟೀಲ್ (ಕೃಷಿ ಮತ್ತು ಪಶುಸಂಗೋಪನಾ ಮಾಜಿ ಅಧ್ಯಕ್ಷರು ಜಿ.ಪಂ. ಸೋಲಾಪುರ), ಸೊಲ್ಲಾಪುರ ಜಿಲ್ಲಾ ಶಿಕ್ಷಣಾಧಿಕಾರಿ ಶ್ರೀ. ಕಾದರ್ ಶೇಖ್ ಸಾಹೇಬ್, ಅಕ್ಕಲಕೋಟ ತಾಲೂಕಾ ಕರ್ತವ್ಯದಕ್ಷ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ. ಪ್ರಶಾಂತ ಅರಬಾಳೆ ಸಾಹೇಬ್ ಮತ್ತು ಶಿಕ್ಷಣ ವಿಸ್ತರಣಾಧಿಕಾರಿ ಶ್ರೀ. ಸೋಮಶೇಖರ್ ಸ್ವಾಮಿ ಸಾಹೇಬ್ ಹಾಗೂ ಜೇವೂರ್  ಕೇಂದ್ರದ ಮುಖ್ಯಸ್ಥ ಮೋರ್ ಸಾಹೇಬ್ ,ಜೇವೂರ ಗ್ರಾಮದ ಗ್ರಾಮಪಂಚಾಯತ ಅಧ್ಯಕ್ಷರು ಶ್ರೀಮತಿ ಝಂಪಲೆ ತಾಯಿ ಮತ್ತು ಉಪಾಧ್ಯಕ್ಷರು ಶ್ರೀ.ಕಾಶೀರಾಯಾ ಕಾಕಾ ಪಾಟೀಲ  ಹಾಗೂ ಎಲ್ಲ ಗ್ರಾ.ಪಂ. ಸದಸ್ಯರು ಹಾಗೂ ಶಾಲಾ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವಿಕಾಂತ ಸ್ವಾಮಿ ಮತ್ತು ಸರ್ವ ಸದಸ್ಯರು ಹಾಗೆಯೇ ಶಾಲೆಯ ಮುಖ್ಯಗುರುಗಳಾದ ಶ್ರೀ. ವಿ.ಎಸ್. ಸ್ವಾಮಿ ಸರ್ ಹಾಗೂ ಮಾರ್ಗದರ್ಶಿ ಶಿಕ್ಷಕರಾದ ಶ್ರೀ.ಮಹೇಶ.  ಮೆತ್ರಿ ಮತ್ತು ಶ್ರೀ. ಎ. ರಾ ಗುರುವ್ ಮತ್ತು ಇತರ ಎಲ್ಲಾ ಶಿಕ್ಷಕರ ಸಹೋದರ ಸಹೋದರಿಯರಿಗೆ ಮತ್ತು ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

ಮುಖ್ಯೋಪಾಧ್ಯಾಯರು Z.P.P.ಕನ್ನಡ ಶಾಲೆ JEUR ತಾ. ಅಕ್ಕಲಕೋಟ್ ಜಿಲ್ಲೆ. ಸೊಲ್ಲಾಪುರ

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಧನ್ಯವಾದಗಳು