ಕನ್ನಡ ಶಿಷ್ಯವೃತ್ತಿ ಮಾರ್ಗದರ್ಶಿಕೆ ವಿತರಣೆ
ಕನ್ನಡ ಭಾಷೆಯಲ್ಲಿ ಕಲಿಕೆ ಮೆದುಳಿನ ವಿಕಾಸಕ್ಕೆ ಕಾರಣ
-ಶ್ರೀ ಪ್ರಶಾಂತ ಅರಬಾಳೆ, ಗಟ ಶಿಕ್ಷಣಾಧಿಕಾರಿ, ಅಕ್ಕಲಕೋಟ
ಅಕ್ಕಲಕೋಟ: ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಪರಿಷದ, ಪುಣೆ ವತಿಯಿಂದ ತೆಗೆದುಕೊಳ್ಳಲಾಗುವ ಶಿಷ್ಯವೃತ್ತಿ ಪರೀಕ್ಷೆಗೆ ಬೇಕಾಗುವ ಕನ್ನಡ ಮಾಧ್ಯಮ ಮಾರ್ಗದರ್ಶಿಕೆ ಪುಸ್ತಿಕೆಯ ಪ್ರಕಾಶನ ಹಾಗೂ ವಿತರಣೆ ಸಮಾರಂಭ ಅಕ್ಕಲಕೋಟ ಪಂಚಾಯತ್ ಸಮಿತಿ ಸಭಾಂಗಣದಲ್ಲಿ ಗಟ ಶಿಕ್ಷಣಾಧಿಕಾರಿ ಶ್ರೀ ಪ್ರಶಾಂತ ಅರಬಾಳೆ ಸಾಹೇಬರು, ವಿಸ್ತಾರ ಅಧಿಕಾರಿ ಶ್ರೀ ಸೋಮಶೇಖರ ಸ್ವಾಮಿ ಸಾಹೇಬರು, ಕೇಂದ್ರ ಪ್ರಮುಖ ಶ್ರೀ ಸುರೇಶ ಶಟಗಾರ ಸರ್, ಶ್ರೀ ಭೀಮರಾವ ಧಡಕೆ ಸಾಹೇಬರು , ರಾಜಶೇಖರ ಉಮರಾಣಿಕರ ಸರ ಇವರ ಉಪಸ್ಥಿತಿಯಲ್ಲಿ ಏರ್ಪಡಿಸಲಾಯಿತು.
ಕರ್ನಾಟಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಪ್ರಕಟಿಸಲಾಗುತ್ತಿರುವ ಶಿಕ್ಷಕರ ಕೈಪಿಡಿಯನ್ನು ಪ್ರಾಥಮಿಕ ಶಿಕ್ಷಕರಾದ ಶ್ರೀ ಚಂದ್ರಶೇಖರ ಕಾರಕಲ್ಲ ಸರ್ ಇವರು ಪರಿಶ್ರಮಪೂರ್ವಕ ರಚನೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆದರ್ಶ ಕನ್ನಡ ಬಳಗ, ಮಹಾರಾಷ್ಟ್ರ ದ ಅಧ್ಯಕ್ಷರು ಶ್ರೀ ಮಲ್ಲಿಕಜಾನ ಶೇಖ ಸರ್ ಕನ್ನಡ ಶಾಲೆಗಳ ಯಾವುದೇ ಸಮಸ್ಯೆಗಳಿರಲಿ, ನಲಿಕಲಿ ಪುಸ್ತಕಗಳ ಪೂರೈಕೆಯ ಕುರಿತು ಅಭಿವಚನ ನೀಡಿದರು. ಶ್ರೀ ಕಾರಕಲ್ ಸರ್ ತಮ್ಮ ಪುಸ್ತಕ ಬರೆಯುವ ಹಿಂದಿರುವ ಉದ್ದೇಶ, ವಿಸ್ತಾರ ಹಾಗೂ ಅಗತ್ಯತೆ, ಮಕ್ಕಳ ಬಗೆಗಿನ ಕಾಳಜಿ ತಮ್ಮ ಅನಿಸಿಕೆಯಲ್ಲಿ ಪ್ರಕಟಿಸಿದರು. ಗಟ ಶಿಕ್ಷಣಾಧಿಕಾರಿ ಶ್ರೀ ಪ್ರಶಾಂತ ಅರಬಾಳೆ ಸಾಹೇಬರು ಭಾಷೆ ಯಾವುದೇ ಇರಲಿ ನಾವೆಲ್ಲರೂ ಭಾರತ ಮಾತೆಯ ಸುಪುತ್ತರು ಇದ್ದೇವೆ. ಯಾವುದೇ ಭಾಷೆಯಲ್ಲಿ ಪ್ರಗತಿಯಾದರೂ ಇನ್ನೊಂದು ಭಾಷೆಯ ಜನತೆಗೆ ಅಭಿಮಾನವೆನಿಸಬೇಕು. ಕನ್ನಡ ಹಾಗೂ ಮರಾಠಿ ಭಾಷೆಯ ಶಾಲೆಗಳಲ್ಲಿ ಸಾ ಚೆನ್ನಾಗಿ ಮಕ್ಕಳ ವಿಕಾಸಕ್ಕೆ ಕಾರ್ಯಮಾಡುತ್ತಿವೆ. ಕನ್ನಡ ಶಾಲೆಗಳ ಕುಂದುವಿಕೆಗೆ ಸ್ವಲ್ಪ ಆತ್ಮಚಿಂತನೆ ಮಾಡಿಕೊಂಡು ಅಧ್ಯಾಪನೆ ಮಾಡುವಲ್ಲಿ ಸುಧಾರಣೆ ಮಾಡಿಕೊಳ್ಳಬೇಕು ಎಂಬ ಕಿವಿಮಾತು ಹೇಳಿದರು. ಅಕ್ಕಲಕೋಟ ತಾಲೂಕಿನಲ್ಲಿಯ ಎಲ್ಲ ಕನ್ನಡ ಶಾಲೆಯ ಮುಖ್ಯದ್ಯಾಪಕರಿಗೆ ಈ ಪುಸ್ತಿಕೆ ವಿತರಿಸಲಾಯಿತು. ಶಿಕ್ಷಕ ಸಮಿತಿ ಕನ್ನಡ ಘಟಕದ ಅಧ್ಯಕ್ಷರು ಶ್ರೀ ಬಸವರಾಜ ಗುರವ, ಶಿಕ್ಷಕ ನಾಯಕ ಶ್ರೀ ಶಂಕರ ಅಜಗೊಂಡೆ ಸರ, ಶಿವಾನಂದ ಭಂಡಾರಕವಠೆ ಸರ, ಮಹೇಶ ಮೇತ್ರೆಸರ್, ಶರಣಪ್ಪ ಫುಲಾರಿ, ಪರಮೇಶ್ವರ ದೇಗಾಂವ್ ಸರ್ , ಶ್ರೀಶೈಲ ದೊಡ್ಡಮನಿ, ಕೇಂದ್ರ ಪ್ರಮುಖ ಬಾಪುರಾವ ಚವ್ಹಾಣ, ಗುರಯ್ಯ ಸ್ವಾಮಿ, ಮುನ್ನೊಳ್ಳಿ ಸರ್, ಶಿಂದೆ ಸರ, ಬಸವರಾಜ ಧನಸೆಟ್ಟಿ ಸರ್ರ ರಾಜಶೇಖರ ಗೊಬ್ಬುರ್, ಮಹೇಶ್ ಗಾಯಕವಾಡ, ಶರಣಮ್ಮ ಚಲವಾದಿ ಮೇಡಂ, ಹಲವಾರು ಶಾಲೆಯ ಮುಖ್ಯಾ ದ್ಯಾಪಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಲನೆ ಶ್ರೀ ಶಾಂತಮಲ್ಲಯ್ಯ ಸ್ವಾಮಿ ಸರ್ ಮಾಡಿದರು. ಪ್ರಸ್ತಾವನೆ ಭಾಷಣ ಶ್ರೀ ಶಂಕರ ಅಜಗೊಂಡೆ ಸರ್ ಮಾಡಿದರು.
0 ಕಾಮೆಂಟ್‌ಗಳು
ಧನ್ಯವಾದಗಳು