ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಜೇವೂರ ಜಿ. ಪ. ಕನ್ನಡ ಶಾಲೆಯಲ್ಲಿ ಏಳನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಆಯೋಜನೆ

 ಜೇವೂರ ಜಿ. ಪ. ಕನ್ನಡ ಶಾಲೆಯಲ್ಲಿ ಏಳನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಆಯೋಜನೆ 


 ಜಿ.ಪ ಪ್ರಾಥಮಿಕ ಕನ್ನಡ ಶಾಲೆ. ಜೇವೂರನಲ್ಲಿ ಇಂದು ೭ನೆಯ ತರಗತಿಯ ವಿದಾರ್ಥಿಗಳ ಬೀಳ್ಕೊಡುವ ಸಮಾರಂಭ ಅದ್ದೂರಿಯಾಗಿ ನಡೆಯಿತು.  ಈ ಕಾರ್ಯಕ್ರಮಕ್ಕೆ ಶಾಲಾ  ವ್ಯವಸ್ಥಾಪನೆ ಸಮಿತಿಯ ಅಧ್ಯಕ್ಷ ಶ್ರೀ ರವಿಕಾಂತ ಸ್ವಾಮಿ ಮತ್ತು ಪ್ರಮುಖ ಅತಿಥಿ ಕಾಶಿವಿಶ್ವೇಶ್ವರ ಹಾಯಸ್ಕೂಲಿನ ಮುಖ್ಯ ಗುರುಗಳಾದ ಶ್ರೀ ಚಾಂದಕೋಟೆ ಸರ್ ಮತ್ತು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ವಿರುಪಾಕ್ಷಿ ಸ್ವಾಮಿ ಗುರುಗಳು ವಹಿಸಿದ್ದರು. . ಈ ಶುಭ ಸಂದರ್ಭದಲ್ಲಿ ಮಕ್ಕಳು ತಮ್ಮ ಭವಿಷ್ಯ ಒಳ್ಳೆಯ ರೀತಿಯಾಗಿ ರೂಪಿಸಿಕೊಳ್ಳಬೇಕಾದರೆ ಸಂಸ್ಕಾರ, ಬದುಕು, ಮತ್ತು ನಡೆನುಡಿ ಚೆನ್ನಾಗಿ ಅರಿತು ಬಾಳಬೇಕು ಎಂಬ ಮಾರ್ಮಿಕವಾದ ಮಾತನ್ನು ಅತಿಥಿಗಳಾದ ಚಾಂದಕೋಟೆ ಸರ್ ವಿದಾರ್ಥಿಗಳಿಗೆ ತಿಳಿಸಿಕೊಟ್ಟರು ಅದರಂತೆ ನಮ್ಮ ಶಾಲೆಯ ವ್ಯವಸ್ಥಾಪನೆಯ ಅಧ್ಯಕರು ಜಿದ್ದಿನಿಂದ ಅಭ್ಯಾಸ ಮಾಡಲುಹೇಳಿದರು.




 ವಿದಾರ್ಥಿಗಳು ಕೂಡಾ ತಮ್ಮ ಶಾಲಾ ಜೀವನದ ಅನುಭವ ಹೇಳಿದರು. ಅಧ್ಯಕ್ಷೀಯ ಭಾಷಣದಲ್ಲಿ ಮುಖ್ಯ ಗುರುಗಳಾದ ಸ್ವಾಮಿಯವರು ಪರರ ನಿಂದೆಗೆ ಮಾರು ಹೋಗದೆ ತಾವು ತಮ್ಮ ಕಾರ್ಯ ಶೃದ್ಧಾ ಭಕ್ತಿಯಿಂದ ಮಾಡಿರಿ, ಗುರುಹಿರಿಯರಿಗೆ ಗೌರವಿಸಿರಿ,ಮಾತ್ರು ದೇವತೆಗೆ ದಿನಾಲು ನಮಸ್ಕರಿಸಿ ಶಾಲೆಗೆ ಬನ್ನಿ ಎಂಬ ಹಿತನುಡಿಗಳನ್ನು ಹೇಳಿದರು ಈಕಾರ್ಯಕ್ರಮದಲ್ಲಿ ೭ನೆಯ ವಿಧ್ಯಾರ್ಥಿಗಳಿಂದ ಮಹಾಪುರುಷರ ಫೊಟೊ ಪ್ರತಿಮೆ ಯನ್ನು ಶಾಲೆಗೆ ಸಲ್ಲಿಸಿದರು ಕಾರ್ಯಕ್ರಮ ಯಶಸ್ವಿಗೊಳಿಸಲು ಶಾಲೆಯ ಸರ್ವ ಶಿಕ್ಷಕ ವೃಂದ ಮತ್ತು ೭ನೆಯ ವರ್ಗದ ಶಿಕ್ಷಕರಾದ ಶ್ರೀ.ಮಹೇಶ ಮೇತ್ರೆ ಸರ್ & ಶಾಂತಮಲ್ಲಯ್ಯಾ ಸ್ವಾಮಿ ಸರ್. ಮತ್ತು ಗುರು ಸವಳಿ, ಸುರೇಶ ಗವಳಿ. ಅನ್ನದಾತಾ ಎಲ್ಲರ ಸಹಕಾರ್ಯದಿಂದ ಆಭಾರ ಮನ್ನಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೋಳಿಸಲಾಯಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

  1. ಸುಂದರವಾದ ಉಪಕ್ರಮ ಎಲ್ಲ ಅತಿಥಿಗಳ ಅಭಿಪ್ರಾಯ ಕೂಡಾ ಚೆನ್ನಾಗಿ ಮತ್ತು ಮಕ್ಕಳಿಗೆ ಸ್ಪೋತಿದಾಯಕ್ ವಾಗಿತ್ತು ಮೇಲಿನ ಮಾಹಿತಿ ಓದಿ ಮನಸ್ಸಿಗೆ ಆನಂದ್ ವಾಯಿತು ವರ್ಗ ಶಿಕ್ಷಕರಿಗೂ ಉಳಿದೆಲ್ಲಾ ಶಿಕ್ಷಕರ ಬಳಗಕ್ಕೆ ಹಾರ್ದಿಕ್ ಅಭಿನಂದನೆಗಳು 🙏🙏

    ಪ್ರತ್ಯುತ್ತರಅಳಿಸಿ

ಧನ್ಯವಾದಗಳು