ಬಬಲಾದ ಎಂಬ ಪುಟ್ಟ ಹಳ್ಳಿಯ ದಿಟ್ಟ ಯುವಕನ ಓಟದ ಸ್ಪರ್ಧೆಯ ಕಥೆ
ಪ್ರತಿಕೂಲ ಪರಿಸ್ಥಿತಿಗೆ ಮಣಿಸಿ ಅಥ್ಲೆಟಿಕ್ಸ್
ದಲ್ಲಿ ಹಲವಾರು ಪದಕಗಳ ಗಳಿಕೆ
ಭಾರತೀಯ ವಿಶ್ವವಿದ್ಯಾಲಯ ತಂಡದಲ್ಲಿ
ಸೋಲಾಪುರ ವಿಶ್ವವಿದ್ಯಾಲಯದ ಅರುಣ ರಾಥೋಡ
ವಿಶ್ವ ವಿಶ್ವವಿದ್ಯಾಲಯ ಚಾಂಪಿಯನಶಿಪಗಾಗಿ ಹಾಫ್ ಮ್ಯಾರಥಾನ್ ವಿಭಾಗದಲ್ಲಿ ಎರಡನೇ ಬಾರಿಗೆ ಆಯ್ಕೆ
ಸೋಲಾಪುರ: ಪುಣ್ಯಶ್ಲೋಕ್ ಅಹಲ್ಯಾದೇವಿ
ಹೋಳ್ಕರ್ ಸೋಲಾಪುರ ವಿಶ್ವವಿದ್ಯಾಲಯದ ಅರುಣ ಧನಸಿಂಗ ರಾಥೋಡ ಅವರು ವಿಶ್ವ ವಿಶ್ವವಿದ್ಯಾಲಯ ಹಾಫ್
ಮ್ಯಾರಥಾನ್ ಚಾಂಪಿಯನ್‌ಶಿಪ್‌ಗಾಗಿ ಭಾರತೀಯ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶಕ ಡಾ.
ಅತುಲ್ ಲಕ್ಡೆ ಅವರು ತಮ್ಮ ಆಯ್ಕೆ ಪತ್ರವನ್ನು ವಿಶ್ವವಿದ್ಯಾಲಯ ಸ್ವೀಕರಿಸಿದೆ ಎಂದು
ತಿಳಿಸಿದ್ದಾರೆ. ಅರುಣ ರಾಥೋಡ ಅವರು ಸತತ ಎರಡನೇ ಬಾರಿಗೆ ಭಾರತೀಯ
ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ ಮತ್ತು ಜುಲೈ 16 ರಿಂದ 27 ರವರೆಗೆ ಜರ್ಮನಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ
ಭಾಗವಹಿಸಲಿದ್ದಾರೆ.
ಅಕ್ಕಲಕೋಟ
ತಾಲೂಕಿನ ಪರಮಾನಂದ ನಗರ ಬಬಲಾದ ಎಂಬ ಪುಟ್ಟ ಹಳ್ಳಿಯ ದಿಟ್ಟ ಯುವಕ ಅರುಣ ರಾಠೋಡನ ರೋಚಕ ಕಥೆ ಇದು.
ಮನೆಯ ವಾತಾವರಣ ಶಿಕ್ಷಣಕ್ಕೆ ಅನುಕೂಲಕರವಿಲ್ಲದಿದ್ದರೂ ಪರಿಸ್ಥಿತಿಗೆ ಎದುರಿಸಿ ವಯಸ್ಸಿನ
ಹನ್ನೆರಡನೆಯ ವರ್ಷದಿಂದ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಸಹಭಾಗಿಯಾಗುತ್ತ ಇಂದು ಭಾರತದಾದ್ಯಂತ
ಅಷ್ಟೇ ಅಲ್ಲದೆ ವಿಶ್ವದ ವಿಶಾಲ ಪುಟದ ಮೇಲೆ ತನ್ನ ಹಾಗೂ ಹೆತ್ತವರ ಹೆಸರನ್ನು ಸುವರ್ಣ
ಅಕ್ಷರಗಳಲ್ಲಿ ಕೊರೆಸಿರುತ್ತಾನೆ. ಈಗಿನವರೆಗೆ 200ಮೀಟರ್, 400ಮೀಟರ್, 600ಮೀಟರ್ ಓಟದ ಹಲವಾರು ಸ್ಪರ್ಧೆಗಳಲ್ಲಿ ಪ್ರಥಮ ಕ್ರಮಾಂಕ ದೊರಕಿಸುತ್ತ ವಿವಿಧ
ರಾಜ್ಯಗಳ ಹಾಗೂ ಅಂತರರಾಷ್ಟ್ರೀಯ ಮ್ಯಾರೇಥಾನ ಗಳಲ್ಲೂ ತನ್ನ ಸಹಭಾಗವನ್ನು ತೋರಿದ್ದಾನೆ. ಅರುಣ
ಚಿಕ್ಕವನಿದ್ದಾಗಲೇ ತಂದೆಯನ್ನು ಕಳೆದುಕೊಂಡು ಕುಟುಂಬದ ಜವಾಬ್ದಾರಿ ವಹಿಸಿಕೊಂಡು ತಾಯಿಯ
ದುಡಿಮೆಯಿಂದಲೇ ತಾನು ಈ ಮಟ್ಟಕ್ಕೆ ಬೆಳೆದಿರುವೆ ಎಂಬ ಅರಿವು ಅರುಣನಿಗೆ ಇದ್ದು ತಾನು ಒಳ್ಳೆಯ
ಅಧಿಕಾರಿಯಾಗಿ ತಾಯಿಯನ್ನೂ ಚೆನ್ನಾಗಿ ನೋಡಿಕೊಳ್ಳುವೆನು ಎಂದು ಆಗಾಗ ಮಾದ್ಯಮದ ಎದುರಿಗೆ
ಹೇಳುತ್ತಾನೆ. ಹತ್ತನೆಯ ತರಗತಿಯವರೆಗೆ ಊರಿನ ಸಮೀಪದ ಊರು ಬೋರೋಟಿಯ ಪೋಸ್ಟ್ ಬೇಸಿಕ್ ಆಶ್ರಮ
ಶಾಲೆಯಲ್ಲಿ ಶಿಕ್ಷಣ ಪಡೆದಿರುತ್ತಾನೆ. ಅವನ ಆಟೋಟಗಳು ಆಶ್ರಮ ಶಾಲೆ ಬೊರೊಟಿಯಿಂದ ಪ್ರಾರಂಭವಾದವು.
ಆಶ್ರಮ ಶಾಲೆಯಲ್ಲಿ ಬೊರೊಟಿಯಲ್ಲಿ ಏಳನೇ
ತರಗತಿಯಲ್ಲಿದ್ದಾಗ, ಮಹಾಬುಲೆ ಸರ್ ಅವರ ಮಾರ್ಗದರ್ಶನದಲ್ಲಿ 400 ಮತ್ತು 600 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದರು. ಅದಾದ ನಂತರ, ಅವರು ರುದ್ದೇವಾಡಿಯ ಶ್ರೀ
ಸಿದ್ಧಾರಾಮ ಮ್ಹೆತ್ರೆ
ಕನ್ನಿಷ್ಠ ಮಹಾವಿದ್ಯಾಲಯದಲ್ಲಿ ಪ್ರವೇಶ
ತೆಗೆದುಕೊಂಡು 3000 ಮತ್ತು 5000 ಮೀಟರ್ ಓಟಗಳಲ್ಲಿ ಸ್ಪರ್ಧಿಸಿದರು.
ಓಟದ ಪ್ರಾಕ್ಟೀಸ್ ಮಾಡಲು
ಯೋಗ್ಯ ವಾತಾವರಣವಿಲ್ಲದೆ ರನ್ನಿಂಗ್ ಶೂಜ್ ಹಾಗೂ ಇತರ ಸಾಹಿತ್ಯಗಳಿಗಾಗಿ ಸ್ನೇಹಿತರ, ತನ್ನ ಶಾಲಾ-ಕಾಲೇಜಿನ ಗುರುಗಳ ಸಹಾಯ ಪಡೆದು ಪ್ರಾಕ್ಟೀಸ್ ಮಾಡುವ ಸಮಯ ಅರುಣನಿಗೆ
ಬಂದಿತು. ಶ್ರೀ ಸ್ವಾಮಿ ಸಮರ್ಥ ಆಕ್ಯಡೆಮಿಯ ಪೊಲೀಸ್ ಭರತಿ ಕೇಂದ್ರದ ರೂವಾರಿ ಶ್ರೀ ರವಿ ರಾಠೋಡ
ಇವರ ಮಾರ್ಗದರ್ಶನದಲ್ಲಿ ಸ್ಪರ್ಧೆಯ ತಯಾರಿ ಮಾಡತೊಡಗಿದರು. ಪಿಆರ್‌ಏಟಿಎಚ್‌ಏಎಮ್‌ಏ
5000ಮೀಟರ್ ಕ್ರಾಸ್ ಕಂಟ್ರೀ ಸ್ಪರ್ಧೆಯಲ್ಲಿ ಯಶಶ್ವಿಯಾಗಿ ರಾಷ್ಟ್ರೀಯ ಸ್ತರದ ಸ್ಪರ್ಧೆಗಳಲ್ಲಿ ಆಯ್ಕೆಯಾದರು.
ಇಂತಹ ಹಲವಾರು ಸ್ಪರ್ಧೆಗಳಲ್ಲಿ ಅರುಣ ಯಶ-ಅಪಯಶಗಳನ್ನು ಸಹಿಸುತ್ತಾ ಅನೇಕ ಪದಕಗಳನ್ನು
ಗೆದ್ದುಕೊಂಡಿದ್ದಾರೆ. ಸದ್ಯಕ್ಕೆ ಸ್ಪರ್ಧೆಗಳ ತಯಾರಿ ಮಾಡಲು ನಾಶಿಕದಲ್ಲಿ ಪ್ರಾಕ್ಟೀಸ್
ಮಾಡುತ್ತಿದ್ದು ಬರುವ ಸಮಯದಲ್ಲಿ ಸೋಲಾಪುರ್ ಜಿಲ್ಲೆಯ ಹೆಸರು ವಿಶ್ವದೆಲ್ಲೆಡೆ ಸಾರುವ ಬಯಕೆ ಇದೆ
ಎಂದು ಅರುಣ ಹೇಳಿರುತ್ತಾನೆ.
“ಸೋಲಾಪುರದಲ್ಲಿ ಸಿಂಥೆಟಿಕ್ ಟ್ರಾಕ್ ಇಲ್ಲದಿರುವುದರಿಂದ ನನಗೆ ನಾಶಿಕದಲ್ಲಿ
ಪ್ರಾಕ್ಟೀಸ್ ಮಾಡಬೇಕಾಗಿದೆ. ಸೋಲಾಪುರಕ್ಕೆ ಸಿಂಥೆಟಿಕ್ ಟ್ರಾಕ್ ಮಂಜೂರಾಗಿದ್ದು ಅದನ್ನು
ಕಾರ್ಯರೂಪಕ್ಕೆ ಇನ್ನೂ ತಂದಿರುವುದಿಲ್ಲ. ಒಳ್ಳೆಯ ಟ್ರಾಕ್ ಇಲ್ಲದೆ ಒಳ್ಳೆಯ ಆಟದ ಪ್ರದರ್ಶನೆ
ಮಾಡಲು ಸಾಧ್ಯವಾಗುವುದಿಲ್ಲ. ಸಿಂಥೆಟಿಕ್ ಟ್ರಾಕ್ ಕೆಲಸವಾದರೆ ಅನೇಕ ಅಥ್ಲೆಟಿಕ್ಸ್ ಆಟಗಾರರ ಕನಸು
ನನಸಾಗುತ್ತದೆ. ನನ್ನ ತಾಯಿ ಇನ್ನೊಬ್ಬರ ಹೊಲಗಳಲ್ಲಿ ಕೂಲಿ ಮಾಡಿ ಇಲ್ಲಿಯವರೆಗೆ ನನಗೆ ಹಣ
ಪೂರೈಸುತ್ತಿದ್ದಾಳೆ. ತಿಂಗಳಿಗೆ 12-15ಸಾವಿರ ರೂ. ಖರ್ಚಿಗೆ ಬೇಕಾಗುತ್ತದೆ. ನಾನು ಸ್ವತ:
ಮ್ಯಾರೇಥಾನ್ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದು ಸ್ವಂತ ಖರ್ಚು ನೋಡಿಕೊಳ್ಳುತ್ತಿದ್ದೇನೆ. ಪ್ರಾಕ್ಟೀಸ್
ಗಾಗಿ ರವಿ ರಾಠೋಡ ಸರ್, ಶ್ರೀ. ಮೈತ್ರಿ ಸರ್, ಶ್ರೀ. ಚವ್ಹಾಣ ಸರ್, ಶ್ರೀ. ಪಾಟಿಲ್ ಸರ್, ಶ್ರೀ. ಮಹಾಬೋಲೆ ಸರ್, ಡಾ. ಬೋರಕರ್ ಸರ್, ಶ್ರೀ. ಗವಳಿ ಸರ್ ಇವರ ಸಹಕಾರ ಹಾಗೂ ಮಾರ್ಗದರ್ಶನ ದೊರೆಕಿರುತ್ತದೆ.”
-ಅರುಣ
ರಾಠೋಡ (ಅಥ್ಲೆಟಿಕ್ಸ್ ಆಟಗಾರ)
0 ಕಾಮೆಂಟ್‌ಗಳು
ಧನ್ಯವಾದಗಳು