ನಾಳೆಯಿಂದ ಅದ್ಧೂರಿಯಾಗಿ ಶಾಲೆಗಳು ಶುರು- ಶಾಲೆಯ ಪ್ರವೇಶೋತ್ಸವ 2025-26 ಆಯೋಜನೆ
ಮಹಾರಾಷ್ಟ್ರದಾದ್ಯಂತ ನಾಳೆ ದಿ. 16/06/2025 ರಿಂದ
ಶಾಲೆಗಳು ಆರಂಭವಾಗುತ್ತಿವೆ. ಒಂದನೆಯ ತರಗತಿಯಿಂದ 12ನೇ ತರಗತಿಯವರೆಗಿನ ವರ್ಗಗಳು ಆರಂಭವಾಗುತ್ತಿದ್ದು
ದೀರ್ಘ ಬಿಡುವಿನ ನಂತರ ಮಕ್ಕಳಿಗೆ ಶಾಲೆಯ ಆಕರ್ಷಣೆ ಹಾಗೂ ಕಲಿಕೆಯ ಬಗ್ಗೆ ಉತ್ಸಾಹ ನೀರ್ಮಾಣವಾಗಲೆಂದು
ಶಾಲೆಯ ಪ್ರಥಮ ದಿನದಂದು ಪ್ರವೇಶೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲು ಗ್ರಾಮದಲ್ಲಿ ಮಕ್ಕಳ ಪ್ರಭಾತ
ಫೇರಿ ನಡೆಯುವುದು. ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಎತ್ತಿನ ಬಂಡಿ ಇಲ್ಲವೇ ತತ್ಸಮ ವಾಹನಗಳಲ್ಲಿ
ಮೆರವಣಿಗೆ ಮಾಡುತ್ತಾ ಶಾಲೆಗೆ ತರಲಾಗುವುದು. ಪ್ರಥಮವಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ
ಶಾಲೆಯ ವತಿಯಿಂದ ಅಥವಾ ಶಾಲೆಯ ವ್ಯವಸ್ಥಾಪನೆಯ ಮೂಲಕ ಸ್ವಾಗತ ಮಾಡಲಾಗುತ್ತದೆ. ಒಂದನೆಯ ತರಗತಿಯ ಚಿಕ್ಕ
ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸುವುದರ ಜೊತೆಗೆ ಶಾಲೆಯ ಬಗ್ಗೆ ಉತ್ಸಾಹ ಹುಟ್ಟಲೆಂದು ಅನ್ಯ ಶೈಕ್ಷಣಿಕ
ಸಾಹಿತ್ಯಗಳನ್ನು ನೀಡಲಗುವುದು. ಮೊದಲು ಕೆಲವು ದಿನಗಳವರೆಗೆ ಆಟೋಟಗಳ ಆಯೋಜನೆ ಮಾಡಲಾಗುತ್ತದೆ. ಶಿಶುಗೀತೆಗಳು, rhyames ಹಾಡುಗಳನ್ನು ರಾಗಬಧ್ದವಾಗಿ ಹಾಡುವುದರೊಂದಿಗೆ, ಆಟಿಕೆಗಳನ್ನು ನೀಡಿ ಆಟಗಳನ್ನು ಆಡಿಸುತ್ತಾ ಮಕ್ಕಳಿಗೆ ಶಾಲೆಯಲ್ಲಿ ನೆಲೆಸುವಂತೆ ಮಾಡುವ
ಹರಸಾಹಸ ಶಿಕ್ಷಕರಿಗೆ ಮಾಡಬೇಕಾಗುತ್ತದೆ.
ಪ್ರಥಮ ದಿವಸ ಎಲ್ಲ ಶಾಲೆಗಳಲ್ಲಿ ಸಮವಸ್ತ್ರ(uiniform), ಶೂಜ್ ಹಾಗೂ ಸೋಕ್ಸ್ ಹಾಗೂ ಪಠ್ಯಪುಸ್ತಕಗಳ ವಿತರಣೆ ಮಾಡಲಾಗುವುದು. ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಶಾಸಕರು, ಪ್ರತಿಷ್ಠಿತ
ಜನಪ್ರತಿನಿಧಿಗಳು, ಹಾಗೂ ಶಾಸಕಿಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡುವ
ಮೂಲಕ ಶಾಲಾ ವ್ಯವಸ್ಥಾಪನೆಯನ್ನು ನೀರೀಕ್ಷಿಸಿ ಸಂಬೋಧನೆ ಮಾಡುವುದರ ಜೊತೆಗೆ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ
ಉತ್ಸಾಹ ತುಂಬಲಿದ್ದಾರೆ. ಅದಕ್ಕೂ ಮುಂಚೆ ನಾಳೆಯ ಶಾಲಾ ಪ್ರವೇಶೋತ್ಸವಕ್ಕೆಂದು ಎಲ್ಲ ಶಾಲೆಗಳು ತಳಿರು
ತೋರಣಗಳಿಂದ ಅಲಂಕೃತವಾಗಿ ಮಕ್ಕಳ ಬರುವಿಕೆಗಾಗಿ ಸ್ವಾಗತಕ್ಕೆ ನಿಂತಿವೆ. ಪ್ರಥಮ ಸಲ ಶಾಲೆಯ ಚೌಕಟ್ಟು
ದಾಟಿ ಒಳಬರುವ ಪುಟ್ಟ ಕಂದಮ್ಮಗಳಿಗೆ ಶಾಲೆ ಆತ್ಮೀಯವಾಗಿ ಸ್ವಾಗತಕ್ಕೆ ಸಜ್ಜಾಗಿದೆ. ಶಿಕ್ಷಕರೂ ತಮ್ಮ
ವಿದ್ಯಾರ್ಥಿಗಳ ಮುಖಚರ್ಯೆ ನೋಡಲು ಕಾತುರರಾಗಿದ್ದಾರೆ. ಮಧ್ಯಾಹ್ನ ಭೋಜನದಲ್ಲಿ ರುಚಿಕಟ್ಟದ ಅಡುಗೆ
ಸಹ ಒಂದು ಆಕರ್ಷಣೆಯಾಗಿರುವುದು ಒಂದು ವಿಶೇಷ.
ಹಾಗೇ ಸ್ನೇಹಿತರೇ, ನಿಮ್ಮ ಮನೆಯಲ್ಲಿ, ಪರಿಸರದಲ್ಲಿ, ಊರಿನಲ್ಲಿ
ಇರುವ ಆರು ವರ್ಷ ಪೂರ್ಣವಾದ ಮಕ್ಕಳಿಗೆ ನಾಳೆ ಜಿಲ್ಹಾ ಪರಿಷದ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ(ಸರಕಾರಿ
ಶಾಲೆಗಳಲ್ಲಿ) ಪ್ರವೇಶ ತೆಗೆದುಕೊಳ್ಳಲು ಪ್ರೇರಣೆ ಕೊಡುವುದರೊಂದಿಗೆ ಸರಕಾರಿ ಶಾಲೆಗಳನ್ನು ಉಳಿಸಿ
ಬೆಳೆಸಲು ಶಿಕ್ಷಕರೊಂದಿಗೆ ಸಹಕರಿಸಿರಿ ಎಂಬ ವಿನಂತಿಯೊಂದಿಗೆ ಈ ಲೇಖನ ಇಲ್ಲಿಗೆ ನಿಲ್ಲಿಸುತ್ತೇನೆ.
ನಾಳೆ ಶಾಲಾರಂಭವಾಗುವ ವಿವಿಧ ಶಾಲೆಗಳ ರಂಗುರಂಗಿನ ಪ್ರವೇಶೋತ್ಸವದ ಸುದ್ದಿಯೊಂದಿಗೆ ನಾಳೆ ಭೇಟಿಯಾಗುತ್ತೇನೆ.
ನಮಸ್ಕಾರಗಳು!
0 ಕಾಮೆಂಟ್‌ಗಳು
ಧನ್ಯವಾದಗಳು